Print Friendly, PDF & Email

[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 2ನೇ ಮಾರ್ಚ್ 2022

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ  2 :

1. ಯುದ್ಧಾಪರಾಧ ಎಂದರೆ ಏನು?

2. CAATSA ವಿನಾಯಿತಿ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ನಾಸಾದ ಪ್ರಥಮ ಆರ್ಟೆಮಿಸ್ ಮೂನ್ ಲ್ಯಾಂಡಿಂಗ್.

2. ರಷ್ಯಾ-ಉಕ್ರೇನ್ ಬಿಕ್ಕಟ್ಟು ಜಾಗತಿಕ ಚಿಪ್ ಕೊರತೆಯನ್ನು ಇನ್ನಷ್ಟು ಹದಗೆಡಿಸಬಹುದು.

3. IPCC ಯ ವರದಿ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ಪಾರ್ಟಿಸಿಪೇಟರಿ ನೋಟ್ಸ್ ಎಂದರೇನು?

2. ಸೂಯೆಜ್ ಕಾಲುವೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು:ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

 ಯುದ್ಧಾಪರಾಧ ಎಂದರೆ ಏನು?


(What constitutes a war crime?)

 ಸಂದರ್ಭ:

ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (International Criminal Court) ನ ಪ್ರಾಸಿಕ್ಯೂಟರ್ ರಷ್ಯಾದ ಆಕ್ರಮಣದ ನಂತರ “ಉಕ್ರೇನ್‌ನಲ್ಲಿನ ಪರಿಸ್ಥಿತಿ” ಯ ಕುರಿತು ತನಿಖೆಯನ್ನು ಪ್ರಾರಂಭಿಸಿದ್ದಾರೆ.

 1. 2014 ರಿಂದ ಉಕ್ರೇನ್‌ನಲ್ಲಿ  ನಡೆಯುತ್ತಿರುವ ಯುದ್ಧ ಅಪರಾಧಗಳು  (War Crimes) ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳು (Crimes Against Humanity) ಎರಡನ್ನೂ ಮಾಡಲಾಗಿದೆ ಎಂದು ನಂಬಲು ಸಮಂಜಸವಾದ ಆಧಾರಗಳಿವೆ ಎಂದು ಹೇಳಿದ್ದಾರೆ.

 

ಏನಿದು ಪ್ರಕರಣ?

ಅಂತರಾಷ್ಟ್ರೀಯ ಅಪರಾಧಿಕ ನ್ಯಾಯಾಲಯವು (ICC) ಇಂತಹ “ಆಕ್ರಮಣಶೀಲತೆಯ ಅಪರಾಧಕ್ಕೆ ಸಂಬಂಧಿಸಿದಂತೆ” ಹಲವು ಸವಾಲುಗಳನ್ನು ಸ್ವೀಕರಿಸಿದೆ ಆದರೆ ಅಂತರಾಷ್ಟ್ರೀಯ ಕ್ರಿಮಿನಲ್ ನ್ಯಾಯಾಲಯದ (ಐಸಿಸಿ) ಸಂಸ್ಥಾಪಕ ರೋಮ್ ಶಾಸನಕ್ಕೆ ರಷ್ಯಾ ಅಥವಾ ಉಕ್ರೇನ್ ಸಹಿ ಹಾಕದ ಕಾರಣ “ಈ ಆಪಾದಿತ ಅಪರಾಧದ ಮೇಲೆ ನ್ಯಾಯವ್ಯಾಪ್ತಿಯನ್ನು” ಅಥವಾ ಅಧಿಕಾರವನ್ನು ಚಲಾಯಿಸಲು ICC ಗೆ ಸಾಧ್ಯವಿಲ್ಲ.

 1. ಈ ನ್ಯಾಯಾಲಯವು ಈ ವಿಷಯದಲ್ಲಿ ತನ್ನ ಅಧಿಕಾರವನ್ನು ಚಲಾಯಿಸಲು ಅಧಿಕಾರವನ್ನು ಹೊಂದಿದೆ ಎಂದು ನಂಬುತ್ತದೆ, ಏಕೆಂದರೆ ಉಕ್ರೇನ್ ಎರಡು ಬಾರಿ ಅಂತರಾಷ್ಟ್ರೀಯ ಅಪರಾಧ ನ್ಯಾಯಾಲಯದ ಆದೇಶವನ್ನು ಅಂಗೀಕರಿಸಿದೆ – ಒಮ್ಮೆ 2014 ರಲ್ಲಿ ರಷ್ಯಾ ಕ್ರೈಮಿಯಾವನ್ನು ಸ್ವಾಧೀನಪಡಿಸಿಕೊಂಡ ನಂತರ ಮತ್ತು 2015 ರಲ್ಲಿ ಉಕ್ರೇನ್ ಎರಡನೇ ಬಾರಿಗೆ “ಅನಿರ್ದಿಷ್ಟ ಅವಧಿಗೆ” ನ್ಯಾಯಾಲಯದ ನ್ಯಾಯವ್ಯಾಪ್ತಿಯನ್ನು ಗುರುತಿಸಿದಾಗ.

 

ರಷ್ಯಾ ಯುಕ್ರೇನ್ ನಲ್ಲಿ ಯುದ್ಧ ಅಪರಾಧವನ್ನು ಮಾಡಿದೆಯೇ?

 1. ಫೆಬ್ರವರಿ 28 ರ ಬೆಳಿಗ್ಗೆ, ರಷ್ಯಾದ ಗ್ರಾಡ್ ಕ್ಷಿಪಣಿಗಳು ಉಕ್ರೇನ್‌ನ ಎರಡನೇ ಅತಿದೊಡ್ಡ ನಗರವಾದ ಖಾರ್ಕಿವ್‌ನ ಮಧ್ಯಭಾಗದಲ್ಲಿ ವಿನಾಶವನ್ನುಂಟುಮಾಡಿದವು.
 2. ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಪ್ರಕಾರ, ಕ್ಷಿಪಣಿಗಳು ಉದ್ದೇಶಪೂರ್ವಕವಾಗಿ ನಾಗರಿಕರನ್ನು ಗುರಿಯಾಗಿಸಿಕೊಂಡಿವೆ ಮತ್ತು ದಾಳಿಯು “ಯುದ್ಧ ಅಪರಾಧ”ವಾಗಿದೆ.

 

‘ಯುದ್ಧ ಅಪರಾಧ’ ಎಂದರೇನು?

ವಿಶ್ವಸಂಸ್ಥೆಯ ಪ್ರಕಾರ, ಯುದ್ಧ ಅಪರಾಧವು (War Crime) ಅಂತರರಾಷ್ಟ್ರೀಯ ಅಥವಾ ದೇಶೀಯ ಸಶಸ್ತ್ರ ಸಂಘರ್ಷದ ಸಮಯದಲ್ಲಿ ನಾಗರಿಕರು ಅಥವಾ “ಶತ್ರು ಹೋರಾಟಗಾರರ” ವಿರುದ್ಧದ ಅಂತರರಾಷ್ಟ್ರೀಯ ಕಾನೂನಿನ ಗಂಭೀರ ಉಲ್ಲಂಘನೆಯಾಗಿದೆ.

 1. ನರಮೇಧ ಮತ್ತು ಮಾನವೀಯತೆಯ ವಿರುದ್ಧದ ಅಪರಾಧಗಳಿಗೆ ವ್ಯತಿರಿಕ್ತವಾಗಿ, ಯುದ್ಧ ಅಪರಾಧಗಳು ಸಶಸ್ತ್ರ ಸಂಘರ್ಷದ ಸಂದರ್ಭದಲ್ಲಿ ಸಂಭವಿಸಿದ ಅಪರಾಧಗಳನ್ನು ಒಳಗೊಂಡಿರುತ್ತವೆ.

 

ಜಿನೀವಾ ಸಮಾವೇಶಗಳು:

1949 ರಲ್ಲಿ ಸಹಿ ಮಾಡಿದ ನಾಲ್ಕು ಜಿನೀವಾ ಸಮಾವೇಶಗಳಲ್ಲಿ (Geneva Conventions) ಯುದ್ಧ ಅಪರಾಧಗಳ ಅರ್ಥವನ್ನು ಸ್ಪಷ್ಟಪಡಿಸಲಾಯಿತು.

 1. ನಾಲ್ಕನೇ ಜಿನೀವಾ ಸಮಾವೇಶದ 147 ನೇ ವಿಧಿಯು ಯುದ್ಧ ಅಪರಾಧಗಳನ್ನು “ಉದ್ದೇಶಪೂರ್ವಕವಾಗಿ ಕೊಲ್ಲುವುದು, ಚಿತ್ರಹಿಂಸೆ ಅಥವಾ ತೀವ್ರವಾಗಿ ನೋವು ಉಂಟುಮಾಡುವ ಅಮಾನವೀಯವಾದ ಕೃತ್ಯ” ಎಂದು ವ್ಯಾಖ್ಯಾನಿಸುತ್ತದೆ, ಇದರಲ್ಲಿ ಉದ್ದೇಶಪೂರ್ವಕವಾಗಿ ದೊಡ್ಡ ನೋವು ಅಥವಾ ದೇಹ ಅಥವಾ ಆರೋಗ್ಯಕ್ಕೆ ಗಂಭೀರವಾದ ಗಾಯ ಉಂಟು ಮಾಡುವುದು, ಕಾನೂನುಬಾಹಿರ ಗಡೀಪಾರು ಅಥವಾ ವರ್ಗಾವಣೆ ಅಥವಾ ಸಂರಕ್ಷಿತ ವ್ಯಕ್ತಿಯನ್ನು ಒತ್ತೆಯಾಳನ್ನಾಗಿಸುವುದು, ಅಕ್ರಮ ಜೈಲು ಶಿಕ್ಷೆ, ವ್ಯಾಪಕ ವಿನಾಶವನ್ನು ಮಾಡುವುದು ಮತ್ತು ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುವುದು, ಎಂದು ಹೇಳುತ್ತದೆ. ಇದರಲ್ಲಿ ಮಿಲಿಟರಿ ಅವಶ್ಯಕತೆಯ ಅಡಿಯಲ್ಲಿ ತರ್ಕಬದ್ಧವಲ್ಲದ ಮತ್ತು ಕಾನೂನುಬಾಹಿರವಾದ ಹಾಗೂ ಉದ್ದೇಶಪೂರ್ವಕ ಮತ್ತು ನಿರ್ದಯ ಕ್ರಮಗಳು ಸೇರಿವೆ ”.

 

ಅಂತಾರಾಷ್ಟ್ರೀಯ ಅಪರಾಧ ನ್ಯಾಯಾಲಯದ (ICC) ಬೆಳವಣಿಗೆಗಳು:

ಅಂತರಾಷ್ಟ್ರೀಯ ಅಪರಾಧ ನ್ಯಾಯಾಲಯದ ರೋಮ್ ಶಾಸನವು (Rome Statute) ಯುದ್ಧ ಅಪರಾಧಗಳನ್ನು ಒಳಗೊಂಡಿರುವ ಅಪರಾಧಗಳ ಪಟ್ಟಿಯನ್ನು ವಿಸ್ತರಿಸಿದೆ. ರೋಮ್ ಶಾಸನವು ಬಲವಂತದ ಗರ್ಭಧಾರಣೆಯನ್ನು ಯುದ್ಧ ಅಪರಾಧವೆಂದು ಗುರುತಿಸುತ್ತದೆ.

 

ಪ್ರಮಾಣಾನುಗುಣತೆ, ಭಿನ್ನತೆ ಮತ್ತು ಮುನ್ನೆಚ್ಚರಿಕೆ:

ಮಾನವೀಯ ಕಾನೂನಿನ ಮೂರು ಪ್ರಮುಖ ಸ್ತಂಭಗಳು, ಪ್ರಮಾಣಾನುಗುಣತೆ (Proportionality)   ಭಿನ್ನತೆ (distinction) ಮತ್ತು ಮುನ್ನೆಚ್ಚರಿಕೆ (precaution) ಯ ತತ್ವಗಳಾಗಿವೆ. ಇವುಗಳಲ್ಲಿ ಯಾವುದೇ ಒಂದು ತತ್ವ ಅಥವಾ ಎಲ್ಲಾ ತತ್ವಗಳನ್ನು ಉಲ್ಲಂಘಿಸಿದರೆ, ಯುದ್ಧ ಅಪರಾಧವೆಂದು ಪರಿಗಣಿಸಲಾಗುತ್ತದೆ.

 

ವಿಷಯಗಳು:ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

CAATSA ವಿನಾಯಿತಿ:


(CAATSA waiver)

 ಸಂದರ್ಭ:

ಪ್ರಸ್ತುತ ಜಾರಿಯಲ್ಲಿರುವ ‘ಉಕ್ರೇನ್ ಬಿಕ್ಕಟ್ಟಿನ’ ಕುರಿತು ರಷ್ಯಾ ಮತ್ತು ಪಾಶ್ಚಿಮಾತ್ಯ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಗಳಿಂದಾಗಿ, ಭಾರತವು ‘S-400’ ಒಪ್ಪಂದವನ್ನು ಒಳಗೊಂಡಂತೆ, ಮುಂದಿನ ದಿನಗಳಲ್ಲಿ ರಕ್ಷಣಾ ಸಲಕರಣೆಗಳ ಸಮಯೋಚಿತ ವಿತರಣೆಗಳ ಮೇಲೆ ಅನಿಶ್ಚಿತತೆಯನ್ನು ಎದುರಿಸುತ್ತಿದೆ ಮತ್ತು  ‘ನಿರ್ಬಂಧಗಳ ಕಾಯಿದೆ ಮೂಲಕ ಅಮೆರಿಕದ ವಿರೋಧಿಗಳನ್ನು ಎದುರಿಸುವುದು’ (Countering America’s Adversaries Through Sanctions Act – CAATSA) ರ ಅಡಿಯಲ್ಲಿ ಅಮೆರಿಕದಿಂದ ನಿರ್ಬಂಧಗಳನ್ನು ಹೇರಬಹುದು ಎಂಬ ಬೆದರಿಕೆಯನ್ನು ಸಹ ಎದುರಿಸುತ್ತಿದೆ. ಭಾರತವು ಮಾಸ್ಕೋ ಮತ್ತು ಕೀವ್ ಎರಡರೊಂದಿಗೂ ಪ್ರಮುಖ ರಕ್ಷಣಾ ಸಹಕಾರ ಸಂಬಂಧಗಳನ್ನು ಹೊಂದಿದೆ ಎಂಬುದನ್ನು ಗಮನಿಸಬೇಕಾದ ಅಂಶವಾಗಿದೆ.

 

ಪ್ರಸ್ತುತದ ಕಳವಳ:

ಈ ಹಿಂದೆ, ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯುತ್ತಿರುವ ಉದ್ವಿಗ್ನತೆಯಿಂದಾಗಿ ಭಾರತೀಯ ವಾಯುಪಡೆಯ (IAF) AN-32 ಸಾರಿಗೆ ನೌಕಾಪಡೆಯ ಆಧುನೀಕರಣವು ಗಣನೀಯವಾಗಿ ವಿಳಂಬವಾಗಿದೆ.

 1. ಆದ್ದರಿಂದ, ಇತ್ತೀಚಿನ ಆತಂಕವೆಂದರೆ ಈ ಯುದ್ಧದ ಪರಿಣಾಮವಾಗಿ, ರಷ್ಯಾದ ಸ್ವಂತ ದೇಶೀಯ ಬದ್ಧತೆಗಳು ಮತ್ತು ಪಶ್ಚಿಮದಿಂದ ವಿಧಿಸಲಾದ ನಿರ್ಬಂಧಗಳ ಕಾರಣದಿಂದಾಗಿ ರಷ್ಯಾದಿಂದ ಭಾರತಕ್ಕೆ S-400 ವಿಮಾನ ವಿರೋಧಿ ಕ್ಷಿಪಣಿ  ರಕ್ಷಣಾ ವ್ಯವಸ್ಥೆಯನ್ನು ಪೂರೈಸುವುದು ವಿಳಂಬವಾಗಬಹುದು.

 

ಇಂಡೋ-ರಷ್ಯನ್ ಮಿಲಿಟರಿ ವ್ಯಾಪಾರದ ಅವಲೋಕನ:

ರಷ್ಯಾ ಭಾರತಕ್ಕೆ ಸಾಂಪ್ರದಾಯಿಕ ಮಿಲಿಟರಿ ಪೂರೈಕೆದಾರ ದೇಶವಾಗಿದ್ದು, ವಿವಿಧ ವೇದಿಕೆಗಳು ಮತ್ತು ತಂತ್ರಜ್ಞಾನಗಳನ್ನು ಹಂಚಿಕೊಳ್ಳುತ್ತಿದೆ- ಆದರೆ ಇತರ ದೇಶಗಳು ಇಂತಹ ಮಿಲಿಟರಿ ತಂತ್ರಜ್ಞಾನವನ್ನು ಹಂಚಿಕೊಳ್ಳಲು ನಿರಾಕರಿಸಿವೆ. ಇತ್ತೀಚಿನ ವರ್ಷಗಳಲ್ಲಿ, ಭಾರತ-ರಷ್ಯಾ- ನಡುವೆ ಸಹಕಾರ ಸಂಬಂಧಗಳು ಮತ್ತಷ್ಟು ಗಾಢವಾಗಿವೆ.

 

 1. ಉದಾಹರಣೆಗೆ, ಭಾರತ-ರಷ್ಯಾ ನಡುವಿನ ರಕ್ಷಣಾ ವ್ಯಾಪಾರವು $ 5.43 ಶತಕೋಟಿ ಮೊತ್ತದ S-400 ವಾಯು ರಕ್ಷಣಾ ವ್ಯವಸ್ಥೆ ಒಪ್ಪಂದ ಮತ್ತು ಇತರ ಪ್ರಮುಖ ವ್ಯವಹಾರಗಳೊಂದಿಗೆ 2018 ರಿಂದ $ 15 ಶತಕೋಟಿ ಗಡಿಯನ್ನು ದಾಟಿದೆ.
 2. ಇಂದಿಗೂ, ಭಾರತೀಯ ಸೇನಾ ದಾಸ್ತಾನುಗಳ 60% ಕ್ಕಿಂತ ಹೆಚ್ಚು-ವಿಶೇಷವಾಗಿ ಯುದ್ಧವಿಮಾನಗಳು, ಟ್ಯಾಂಕ್‌ಗಳು, ಹೆಲಿಕಾಪ್ಟರ್‌ಗಳು ಮತ್ತು ಜಲಾಂತರ್ಗಾಮಿಗಳು-ಉಪಕರಣಗಳು ರಷ್ಯಾದ ಮೂಲದವುಗಳಾಗಿವೆ. ಇದಲ್ಲದೇ ಹಲವು ಪ್ರಮುಖ ಒಪ್ಪಂದಗಳ ಕುರಿತು ಮಾತುಕತೆಗಳು ನಡೆಯುತ್ತಿವೆ.
 3. ಯುದ್ಧನೌಕೆಗಳಿಗಾಗಿ ಎಂಟು ‘ಝೋರಿಯಾ-ಮ್ಯಾಶ್‌ಪ್ರೋಕ್ಟ್ (Zorya-Mashproekt) ಗ್ಯಾಸ್ ಟರ್ಬೈನ್ ಎಂಜಿನ್’ಗಳಿಗಾಗಿ ಭಾರತವು ಉಕ್ರೇನ್‌ನೊಂದಿಗೆ ಪ್ರತ್ಯೇಕ ಒಪ್ಪಂದಕ್ಕೆ ಸಹಿ ಹಾಕಿದೆ.
 4. ಉಕ್ರೇನ್ 2009 ರಲ್ಲಿ ಅಂತಿಮಗೊಂಡ ಒಪ್ಪಂದದ ಅಡಿಯಲ್ಲಿ IAF ನ 100 ಕ್ಕೂ ಹೆಚ್ಚು An-32 ಸಾರಿಗೆ ವಿಮಾನಗಳನ್ನು ನವೀಕರಿಸುತ್ತಿದೆ.

S-400 ವಾಯು ರಕ್ಷಣಾ ವ್ಯವಸ್ಥೆ ಎಂದರೇನು ಮತ್ತು ಭಾರತಕ್ಕೆ ಅದರ ಅವಶ್ಯಕತೆ ಎಷ್ಟಿದೆ?

S-400 ಟ್ರಯಂಫ್ ಎಂಬುದು, ರಷ್ಯಾ ವಿನ್ಯಾಸಗೊಳಿಸಿದ ಮೊಬೈಲ್ (ಸುಲಭವಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಾಗಿಸಬಹುದಾದ), ಭೂ ಮೇಲ್ಮೈಯಿಂದ ಆಕಾಶಕ್ಕೆ ಸಿಡಿಸುವ ಕ್ಷಿಪಣಿ ವ್ಯವಸ್ಥೆ (surface-to-air missile system- SAM) ಆಗಿದೆ.

ಇದು ವಿಶ್ವದ ಅತ್ಯಂತ ಅಪಾಯಕಾರಿ, ಆಧುನಿಕ ಮತ್ತು ಕಾರ್ಯಾಚರಣೆಯ ದೀರ್ಘ-ಶ್ರೇಣಿಯ ಭೂ ಮೇಲ್ಮೈಯಿಂದ ಗಾಳಿಗೆ ಸಿಡಿಸುವ (SAM) ಕ್ಷಿಪಣಿ ವ್ಯವಸ್ಥೆಯಾಗಿದೆ (modern long-range SAM -MLR SAM) , ಇದು, ಅಮೇರಿಕಾ ಅಭಿವೃದ್ಧಿಪಡಿಸಿದ ಥಾಡ್ ಗಿಂತ, (Terminal High Altitude Area Defense system –THAAD) ಹೆಚ್ಚು ಆಧುನಿಕ ಮತ್ತು ಮುಂದುವರಿದ ಕ್ಷಿಪಣಿ ವ್ಯವಸ್ಥೆಯಾಗಿದೆ.

current affairs

 

CAATSA ಎಂದರೇನು? ಮತ್ತು S-400 ಒಪ್ಪಂದವು ಈ ಕಾಯ್ದೆಯ ವ್ಯಾಪ್ತಿಗೆ ಹೇಗೆ ಬಂದಿತು?

 1. CAATSA ಎಂದರೆ, ‘ನಿರ್ಬಂಧಗಳ ಕಾಯ್ದೆಯ ಮೂಲಕ ಅಮೇರಿಕದ ವಿರೋಧಿಗಳನ್ನು ಎದುರಿಸುವುದು’ (CAATSA) ಇದರ ಮುಖ್ಯ ಉದ್ದೇಶವೆಂದರೆ ದಂಡನಾತ್ಮಕ ಕ್ರಮಗಳ ಮೂಲಕ ಇರಾನ್, ಉತ್ತರ ಕೊರಿಯಾ ಮತ್ತು ರಷ್ಯಾ ಗಳನ್ನು ಎದುರಿಸುವುದು.
 2. ಇದನ್ನು 2017 ರಲ್ಲಿ ಜಾರಿಗೆ ತರಲಾಯಿತು.
 3. ಇದರ ಅಡಿಯಲ್ಲಿ, ರಷ್ಯಾದ ರಕ್ಷಣಾ ಮತ್ತು ಗುಪ್ತಚರ ಕ್ಷೇತ್ರಗಳೊಂದಿಗೆ ಪ್ರಮುಖ ವಹಿವಾಟು ನಡೆಸುವ ದೇಶಗಳ ವಿರುದ್ಧ ನಿರ್ಬಂಧಗಳನ್ನು ವಿಧಿಸಲಾಗುತ್ತದೆ.

Current Affairs

 

ವಿಧಿಸಲಾಗುವ ನಿರ್ಬಂಧಗಳು ಯಾವುವು?

 1. ಗೊತ್ತುಪಡಿಸಿದ ವ್ಯಕ್ತಿಗೆ ಸಾಲಗಳ ಮೇಲಿನ ನಿರ್ಬಂಧಗಳು.
 2. ಅನುಮೋದಿತ ವ್ಯಕ್ತಿಗಳಿಗೆ ರಫ್ತು ಮಾಡಲು ‘ರಫ್ತು-ಆಮದು ಬ್ಯಾಂಕ್’ ನೆರವು ನಿಷೇಧ.
 3. ಯುನೈಟೆಡ್ ಸ್ಟೇಟ್ಸ್ ಸರ್ಕಾರವು ನಿರ್ಬಂಧಕ್ಕೊಳಪಟ್ಟ ವ್ಯಕ್ತಿಯಿಂದ ಸರಕು ಅಥವಾ ಸೇವೆಗಳ ಖರೀದಿಗೆ ನಿರ್ಬಂಧಗಳು.
 4. ನಿರ್ಬಂಧಿತ ವ್ಯಕ್ತಿಯೊಂದಿಗೆ ನಿಕಟ ಸಂಬಂಧ ಹೊಂದಿರುವ ವ್ಯಕ್ತಿಗಳಿಗೆ ವೀಸಾ ನಿರಾಕರಣೆ.

Current Affairs

 

ಈ ಒಪ್ಪಂದದ ಮಹತ್ವ:

S-400 ರಕ್ಷಣಾ ವ್ಯವಸ್ಥೆ ಒಪ್ಪಂದದ ನಿರ್ಧಾರವು ಅಂತರರಾಷ್ಟ್ರೀಯ ಪಾಲುದಾರರನ್ನು ಆಯ್ಕೆಮಾಡುವಾಗ, ವಿಶೇಷವಾಗಿ ರಾಷ್ಟ್ರೀಯ ಹಿತಾಸಕ್ತಿ ಮತ್ತು ರಾಷ್ಟ್ರೀಯ ಭದ್ರತೆಯ ವಿಷಯಗಳಲ್ಲಿ ನಮ್ಮ ರಕ್ಷಣೆ ಮತ್ತು ಕಾರ್ಯತಂತ್ರದ ಪಾಲುದಾರಿಕೆ ಎಷ್ಟು ಮುಂದುವರಿದಿದೆ ಮತ್ತು ಭಾರತೀಯ ಸಾರ್ವಭೌಮತ್ವ ಎಷ್ಟು ಪ್ರಬಲವಾಗಿದೆ ಎಂಬುದಕ್ಕೆ ಒಂದು ಬಲವಾದ ಉದಾಹರಣೆಯಾಗಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಾಗೃತಿ.

ನಾಸಾದ ಪ್ರಥಮ ಆರ್ಟೆಮಿಸ್ ಮೂನ್ ಲ್ಯಾಂಡಿಂಗ್:


(NASA’s 1st Artemis moon landing)

ಚಂದ್ರನ ಮೇಲೆ, ನಾಸಾದ ಆರ್ಟೆಮಿಸ್ ಕಾರ್ಯಕ್ರಮದ (Artemis Program) ಮೊದಲ ಕ್ರೂ (ಸಿಬ್ಬಂದಿ) ಲ್ಯಾಂಡಿಂಗ್ ಅನ್ನು 2026 ರಲ್ಲಿ ಜರುಗಲಿದೆ ಎಂದು ನಿರೀಕ್ಷಿಸಲಾಗಿದೆ. ಏತನ್ಮಧ್ಯೆ, ಆರ್ಟೆಮಿಸ್ 1 (Artemis 1) ಅನ್ನು ನಾಸಾ ಮೇ 2022 ರಲ್ಲಿ ಉಡಾವಣೆ ಮಾಡಲಿದೆ.

 

ವಿಳಂಬಕ್ಕೆ ಕಾರಣಗಳು: ನಾಸಾ ಪ್ರಕಾರ, ಹ್ಯೂಮನ್ ಲ್ಯಾಂಡಿಂಗ್ ಸಿಸ್ಟಮ್ (Human Landing System) ಮತ್ತು ನಾಸಾದ ಮುಂದಿನ ಪೀಳಿಗೆಯ ಬಾಹ್ಯಾಕಾಶ ಸೂಟ್‌ಗಳನ್ನು ಅಭಿವೃದ್ಧಿಪಡಿಸಲು ಮತ್ತು ಪರೀಕ್ಷಿಸಲು ಹೆಚ್ಚಿನ ಸಮಯ ಬೇಕಾಗುತ್ತದೆ.

ಆರ್ಟೆಮಿಸ್ ಎಂದರೇನು?

ARTEMIS ನ ಪೂರ್ಣ ಹೆಸರು “ಸೂರ್ಯನೊಂದಿಗೆ ಚಂದ್ರನ ಪರಸ್ಪರ ಕ್ರಿಯೆಯ ವೇಗವರ್ಧನೆ, ಮರುಸಂಪರ್ಕ, ಪ್ರಕ್ಷುಬ್ಧತೆ ಮತ್ತು ಎಲೆಕ್ಟ್ರೋಡೈನಾಮಿಕ್ಸ್” (Acceleration, Reconnection, Turbulence and Electrodynamics of Moon’s Interaction with the Sun) ಆಗಿದೆ.

 1. ಇದು ನಾಸಾ ಚಂದ್ರನತ್ತ ಕಳುಹಿಸಲು ಉದ್ದೇಶಿಸಿರುವ ಮುಂದಿನ ಕಾರ್ಯಾಚರಣೆಯಾಗಿದೆ.

 

ಉದ್ದೇಶ:

ಚಂದ್ರನ ಕಲ್ಲಿನ ಮೇಲ್ಮೈ ಮೇಲೆ ಅಲ್ಲಿ ಅದನ್ನು ರಕ್ಷಿಸಲು ಯಾವುದೇ ಕಾಂತೀಯ ಕ್ಷೇತ್ರವಿಲ್ಲ -ಸೂರ್ಯನ ವಿಕಿರಣವು ಬಿದ್ದಾಗ ಆಗುವ ಘರ್ಷಣೆಯ ಪರಿಣಾಮವನ್ನು ಅಳೆಯುವುದು ಇದರ ಉದ್ದೇಶವಾಗಿದೆ.

 1. ಗ್ರೀಕ್ ಪುರಾಣದಲ್ಲಿ, ‘ಆರ್ಟೆಮಿಸ್’ ಅಪೊಲೊ ಅವರ ಅವಳಿ ಸಹೋದರಿ ಮತ್ತು ಚಂದ್ರ ದೇವತೆ.

ಮಿಷನ್ ಪ್ರಾಮುಖ್ಯತೆ:

ಆರ್ಟೆಮಿಸ್ ಕಾರ್ಯಕ್ರಮದ ಅಡಿಯಲ್ಲಿ, NASA 2024 ರ ವೇಳೆಗೆ ಚಂದ್ರನ ಮೇಲ್ಮೈಯಲ್ಲಿ ಮೊದಲ ಮಹಿಳೆ ಮತ್ತು ಮುಂದಿನ ಪುರುಷನನ್ನು ಇಳಿಸುತ್ತದೆ.

ಮಿಷನ್ ವಿವರಣೆಗಳು:

 1. ಬಾಹ್ಯಾಕಾಶ ಉಡಾವಣಾ ವ್ಯವಸ್ಥೆ (ಎಸ್‌ಎಲ್‌ಎಸ್) ಎಂಬ ನಾಸಾದ ಶಕ್ತಿಶಾಲಿ ಹೊಸ ರಾಕೆಟ್ ‘ಓರಿಯನ್ ಬಾಹ್ಯಾಕಾಶ ನೌಕೆ’ಯಲ್ಲಿ ಗಗನಯಾತ್ರಿಗಳನ್ನು ಭೂಮಿಯಿಂದ ಸುಮಾರು 1.25 ಮಿಲಿಯನ್ ಮೈಲುಗಳಷ್ಟು ದೂರದಲ್ಲಿರುವ ಚಂದ್ರನ ಕಕ್ಷೆಗೆ ಕಳುಹಿಸಲಾಗುತ್ತದೆ.
 2. ಗಗನಯಾತ್ರಿಗಳು ಗೇಟ್‌ವೇ (Gateway) ನಲ್ಲಿ ‘ಓರಿಯನ್’ ಅನ್ನು ಡಾಕ್ ಮಾಡುತ್ತಾರೆ ಮತ್ತು ಚಂದ್ರನ ಮೇಲ್ಮೈಗೆ ಕಾರ್ಯಾಚರಣೆಗಾಗಿ ಮಾನವ ಲ್ಯಾಂಡಿಂಗ್ ಸಿಸ್ಟಮ್‌ಗೆ ಆಗಮಿಸುತ್ತಾರೆ.
 3. ಕಾರ್ಯಾಚರಣೆಯ ಕೊನೆಯಲ್ಲಿ, ಗಗನಯಾತ್ರಿಗಳು ಭೂಮಿಗೆ ಸುರಕ್ಷಿತವಾಗಿ ಮರಳಲು ಮತ್ತೊಮ್ಮೆ ಓರಿಯನ್ ಹತ್ತಲು ‘ಕಕ್ಷೆಯ ಹೊರಠಾಣೆ’ (orbital outpost)ಗೆ ಹಿಂತಿರುಗುತ್ತಾರೆ.

 

ನಾಸಾದ ‘ಗೇಟ್‌ವೇ ಲೂನಾರ್ ಆರ್ಬಿಟ್ ಔಟ್‌ಪೋಸ್ಟ್’ ಎಂದರೇನು?

ಗೇಟ್‌ವೇ ಒಂದು ಸಣ್ಣ ಬಾಹ್ಯಾಕಾಶ ನೌಕೆಯಾಗಿದ್ದು ಅದು ಚಂದ್ರನನ್ನು ಸುತ್ತುತ್ತದೆ. ಇದು ಗಗನಯಾತ್ರಿಗಳನ್ನು ಚಂದ್ರನತ್ತ ಕೊಂಡೊಯ್ಯುತ್ತದೆ ಮತ್ತು ನಂತರ ಅದನ್ನು ಮಂಗಳಯಾನಕ್ಕಾಗಿ ಬಳಸಲಾಗುತ್ತದೆ.

ಇದು ಭೂಮಿಯಿಂದ ಸುಮಾರು 250,000 ಮೈಲುಗಳಷ್ಟು ದೂರದಲ್ಲಿರುವ ಗಗನಯಾತ್ರಿಗಳಿಗೆ ತಾತ್ಕಾಲಿಕ ಕಚೇರಿ ಮತ್ತು ನಿವಾಸವಾಗಿ ಕಾರ್ಯನಿರ್ವಹಿಸುತ್ತದೆ.

ಈ ಗಗನನೌಕೆಯಲ್ಲಿ ಗಗನಯಾತ್ರಿಗಳಿಗೆ ಕ್ವಾರ್ಟರ್ಸ್,ವಿಜ್ಞಾನ ಮತ್ತು ಸಂಶೋಧನೆಗಾಗಿ ಪ್ರಯೋಗಾಲಯಗಳು ಮತ್ತು ಮುಂಬರುವ ಬಾಹ್ಯಾಕಾಶ ನೌಕೆಗಳಿಗೆ ಡಾಕಿಂಗ್ ಪೋರ್ಟ್ (docking ports) ಗಳು ಇರುತ್ತವೆ.

ಅಂತರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ISS) ಹೋಲಿಸಿದರೆ,ಈ ಗೇಟ್ ವೇ ತುಂಬಾ ಚಿಕ್ಕದಾಗಿದೆ.

 

ಆರ್ಟೆಮಿಸ್ 1vs. 2vs. 3:

ನಾಸಾ ತನ್ನ ಆಳವಾದ ಬಾಹ್ಯಾಕಾಶ ಪರಿಶೋಧನಾ ವ್ಯವಸ್ಥೆಯನ್ನು ಪರೀಕ್ಷಿಸಲು ಚಂದ್ರನ ಸುತ್ತ ಎರಡು ಮಿಶನ್ ಗಳನ್ನು ಕಳುಹಿಸುತ್ತದೆ.

 1. ಆರ್ಟೆಮಿಸ್ 1 (Artemis 1) ರ ಗುರಿಯು, ಒಂದು ಬಾರಿ ಹಾರಾಡಿದ ಓರಿಯನ್ ಬಾಹ್ಯಾಕಾಶ ನೌಕೆಯೊಂದಿಗೆ ಇನ್ನೂ ಒಮ್ಮೆಯೂ ಹಾರಾಟ ನಡೆಸದ ‘ಸ್ಪೇಸ್ ಲಾಂಚ್ ಸಿಸ್ಟಮ್ ರಾಕೆಟ್’ ಸಂಯೋಜನೆಯನ್ನು ಬಳಸಿಕೊಂಡು ಚಂದ್ರನ ಸುತ್ತಲೂ ಮಾನವರಹಿತ ಬಾಹ್ಯಾಕಾಶ ನೌಕೆಯನ್ನು ಕಳುಹಿಸುವುದು ಇದರ ಉದ್ದೇಶವಾಗಿದೆ.
 2. ಆರ್ಟೆಮಿಸ್ 2 (Artemis 2): 2024 ರಲ್ಲಿ ಚಂದ್ರನ ಕಕ್ಷೆಯನ್ನು ಸುತ್ತುವ ಆರ್ಟೆಮಿಸ್ 2 ಮಿಷನ್ ಅನ್ನು ಪ್ರಾರಂಭಿಸುವುದರೊಂದಿಗೆ, ಆರ್ಟೆಮಿಸ್ ಕಾರ್ಯಕ್ರಮವನ್ನು ವಿಸ್ತರಿಸಲು NASA ಯೋಜಿಸಿದೆ. 2020 ರ ದಶಕದ ಆರಂಭದಲ್ಲಿ ಇತರ ಅಂತರಿಕ್ಷಯಾನಿಗಳೊಂದಿಗೆ ಮಿಷನ್‌ಗಳನ್ನು ಕಳುಹಿಸಲಾಗುವುದು ಅದಕ್ಕೂ ಮುಂಚೆ 2025 ರಲ್ಲಿ ಆರ್ಟೆಮಿಸ್ 3 ಮಿಷನ್  ಅನ್ನು ಕಳುಹಿಸಲಾಗುವುದು.

 

ವೈಜ್ಞಾನಿಕ ಉದ್ದೇಶಗಳು:

 1. ದೀರ್ಘಾವಧಿಯ ಪರಿಶೋಧನೆಯ ಸಮಯದಲ್ಲಿ ಅಗತ್ಯವಿರುವ ನೀರು ಮತ್ತು ಇತರ ಪ್ರಮುಖ ಸಂಪನ್ಮೂಲಗಳನ್ನು ಕಂಡುಹಿಡಿಯುವುದು ಮತ್ತು ಉಪಯೋಗಿಸುವುದು.
 2. ಚಂದ್ರನ ರಹಸ್ಯಗಳನ್ನು ತನಿಖೆ ಮಾಡಲು ಮತ್ತು ಭೂಮಿ ಮತ್ತು ಬ್ರಹ್ಮಾಂಡದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಸಂಗ್ರಹಿಸಲು.
 3. ಕೇವಲ ಮೂರು ದಿನಗಳ ಅಂತರದಲ್ಲಿ ಮತ್ತೊಂದು ಆಕಾಶಕಾಯದ ಮೇಲ್ಮೈಯಲ್ಲಿ ಗಗನಯಾತ್ರಿಗಳು ಹೇಗೆ ವಾಸಿಸುತ್ತಿದ್ದರು ಮತ್ತು ಕೆಲಸ ಮಾಡಿದರು ಎಂಬುದರ ಕುರಿತು ಮಾಹಿತಿಯನ್ನು ಸಂಗ್ರಹಿಸುವುದು.
 4. ಮಂಗಳಯಾನಕ್ಕೆ ಗಗನಯಾತ್ರಿಗಳನ್ನು ಕಳುಹಿಸುವ ಮೊದಲು ನಮಗೆ ಅಗತ್ಯವಿರುವ ತಂತ್ರಜ್ಞಾನಗಳನ್ನು ಮೌಲ್ಯೀಕರಿಸುವುದು. ಮಂಗಳಯಾನವು ಮೂರು ವರ್ಷಗಳವರೆಗೆ ಸಮಯವನ್ನು ತೆಗೆದುಕೊಳ್ಳಬಹುದು.

Current Affairs

 

ಚಂದ್ರಾನ್ವೇಷಣೆ:

 1. 1959 ರಲ್ಲಿ, ಸೋವಿಯತ್ ಒಕ್ಕೂಟದ ಲೂನಾ 1 ಮತ್ತು ಲೂನಾ 2 ಸಿಬ್ಬಂದಿ ಇಲ್ಲದೆ (Uncrewed) ಚಂದ್ರನ ಮೇಲೆ ಹೋದ ಮೊದಲ ರೋವರ್‌ಗಳು.
 2. USA ಚಂದ್ರನಿಗೆ ಅಪೊಲೊ 11 ಮಿಷನ್ ಅನ್ನು ಕಳುಹಿಸುವ ಮೊದಲು ಮತ್ತು 1961 ಮತ್ತು 1968 ರ ನಡುವೆ ಮೂರು ವರ್ಗಗಳ ರೋಬೋಟಿಕ್ ಕಾರ್ಯಾಚರಣೆಗಳನ್ನು ಚಂದ್ರನಲ್ಲಿಗೆ ಕಳುಹಿಸಿತು.
 3. ಜುಲೈ 1969 ರಿಂದ 1972 ರವರೆಗೆ, 12 ಅಮೇರಿಕನ್ ಗಗನಯಾತ್ರಿಗಳು ಚಂದ್ರನ ಮೇಲ್ಮೈಯಲ್ಲಿ ಪರ್ಯಟನೆ ಮಾಡಿದರು.
 4. 1990 ರ ದಶಕದಲ್ಲಿ, ರೋಬೋಟಿಕ್ ಕಾರ್ಯಾಚರಣೆಗಳಾದ ಕ್ಲೆಮೆಂಟೈನ್ ಮತ್ತು ಲೂನಾರ್ ಪ್ರಾಸ್ಪೆಕ್ಟರ್‌ನೊಂದಿಗೆ USA ಚಂದ್ರನ ಪರಿಶೋಧನೆಯನ್ನು ಪುನರಾರಂಭಿಸಿತು.
 5. 2009 ರಲ್ಲಿ, USA ಚಂದ್ರನ ವಿಚಕ್ಷಣ ಆರ್ಬಿಟರ್ (Lunar Reconnaissance Orbiter – LRO) ಮತ್ತು ಲೂನಾರ್ ಕ್ರೇಟರ್ ಅಬ್ಸರ್ವೇಶನ್ ಅಂಡ್ ಸೆನ್ಸಿಂಗ್ ಸ್ಯಾಟಲೈಟ್ (LCROSS) ಉಡಾವಣೆಯೊಂದಿಗೆ ‘ರೊಬೊಟಿಕ್ ಚಂದ್ರನ ಕಾರ್ಯಾಚರಣೆಗಳ’ ಹೊಸ ಸರಣಿಯನ್ನು ಪ್ರಾರಂಭಿಸಿತು.
 6. 2011 ರಲ್ಲಿ, ನಾಸಾ ARTEMIS ಮಿಷನ್ ಅನ್ನು ಪ್ರಾರಂಭಿಸಿತು.
 7. 2012 ರಲ್ಲಿ, ಗ್ರಾವಿಟಿ ರಿಕವರಿ ಮತ್ತು ಇಂಟೀರಿಯರ್ ಲ್ಯಾಬೊರೇಟರಿ (GRAIL) ಬಾಹ್ಯಾಕಾಶ ನೌಕೆಯು ಚಂದ್ರನ ಗುರುತ್ವಾಕರ್ಷಣೆಯನ್ನು ಅಧ್ಯಯನ ಮಾಡಿತು.
 8. ಯುಎಸ್ಎ ಅನ್ನು ಹೊರತುಪಡಿಸಿ, ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ, ಜಪಾನ್, ಚೀನಾ ಮತ್ತು ಭಾರತವು ಚಂದ್ರನ ಅನ್ವೇಷಣೆಗಾಗಿ ವಿವಿಧ ಕಾರ್ಯಾಚರಣೆ ಅಥವಾ ಮಿಶನ್ ಗಳನ್ನು ಕಳುಹಿಸಿದೆ. ಚೀನಾ ಚಂದ್ರನ ಮೇಲ್ಮೈಯಲ್ಲಿ ಎರಡು ರೋವರ್‌ಗಳನ್ನು ಇಳಿಸಿದೆ, ಇದರಲ್ಲಿ 2019 ರಲ್ಲಿ ಚಂದ್ರನ ದೂರದ ಭಾಗದಲ್ಲಿ ಯಶಸ್ವಿಯಾಗಿ ಮಾಡಲಾದ ಮೊದಲ ಲ್ಯಾಂಡಿಂಗ್ ಅನ್ನು ಒಳಗೊಂಡಿದೆ.

 

ವಿಷಯಗಳು:ವಿಜ್ಞಾನ ಮತ್ತು ತಂತ್ರಜ್ಞಾನ- ಬೆಳವಣಿಗೆಗಳು ಮತ್ತು ಅವುಗಳ ಅನ್ವಯಗಳು ಮತ್ತು ದೈನಂದಿನ ಜೀವನದಲ್ಲಿ ಅವುಗಳ ಪರಿಣಾಮಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು; ತಂತ್ರಜ್ಞಾನದ ದೇಶೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು.

ರಷ್ಯಾ-ಉಕ್ರೇನ್ ಬಿಕ್ಕಟ್ಟು ಜಾಗತಿಕ ಚಿಪ್ ಕೊರತೆಯನ್ನು ಇನ್ನಷ್ಟು ಹದಗೆಡಿಸಬಹುದು:


(Russia-Ukraine crisis may worsen global chip shortage)

 ಸಂದರ್ಭ:

ರಷ್ಯಾ ಮತ್ತು ಉಕ್ರೇನ್ ಗಳು ಜಾಗತಿಕ ಮಟ್ಟದಲ್ಲಿ ‘ಸೆಮಿಕಂಡಕ್ಟರ್ ಪೂರೈಕೆ ಸರಪಳಿ ಯ’ (Semiconductor Supply Chain) ಪ್ರಮುಖ ಕೇಂದ್ರಗಳಾಗಿವೆ. ಈ ಎರಡು ದೇಶಗಳು ಉದ್ಯಮಕ್ಕೆ ಅಗತ್ಯವಿರುವ ಅಪರೂಪದ ಲೋಹಗಳಾದ ‘ಪಲ್ಲಾಡಿಯಮ್’ ಮತ್ತು ‘ನಿಯಾನ್’ ನಂತಹ ಅನಿಲಗಳನ್ನು ಒದಗಿಸುತ್ತವೆ, ಇವುಗಳನ್ನು ಬಹುತೇಕ ಎಲ್ಲಾ ಆಧುನಿಕ ಉಪಕರಣಗಳು ಮತ್ತು ಉಪಕರಣಗಳಲ್ಲಿ ಸಿಲಿಕಾನ್ ವೇಫರ್‌ಗಳ ಉತ್ಪಾದನೆಯಲ್ಲಿ ಬಳಸಲಾಗುತ್ತದೆ.

 1. ಪ್ರಸ್ತುತ ರಷ್ಯಾ-ಉಕ್ರೇನ್ ಬಿಕ್ಕಟ್ಟಿನ ಮಧ್ಯೆ, ಯುದ್ಧದ ಪರಿಸ್ಥಿತಿಯು ‘ಸೆಮಿಕಂಡಕ್ಟರ್ ಚಿಪ್‌ಗಳ ಜಾಗತಿಕ ಕೊರತೆ’ಯನ್ನು ಇನ್ನಷ್ಟು ಹದಗೆಡಿಸಬಹುದು ಎಂದು ನಿರೀಕ್ಷಿಸಲಾಗಿದೆ.

 

ಏನಿದು ವಿವಾದ?

ಜಾಗತಿಕ ಸೆಮಿಕಂಡಕ್ಟರ್ / ಅರೆವಾಹಕ (Semiconductor Industry) ಉದ್ಯಮಕ್ಕೆ ರಷ್ಯಾ ಅಪರೂಪದ ಲೋಹಗಳನ್ನು ಪೂರೈಸುವಂತೆಯೇ, ಉಕ್ರೇನ್ ಚಿಪ್ ತಯಾರಿಕಾ ಉದ್ಯಮಕ್ಕೆ ಅಗತ್ಯ ಅನಿಲಗಳನ್ನು ಪೂರೈಸುತ್ತದೆ. ಹೀಗಾಗಿ, ಅರೆವಾಹಕಗಳ ಪೂರೈಕೆ ಸರಪಳಿಯಲ್ಲಿ ಒತ್ತಡವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ವಾಹನ ತಯಾರಿಕೆ ಮತ್ತು ಇತರ ಎಲೆಕ್ಟ್ರಾನಿಕ್ ಘಟಕಗಳ ತಯಾರಿಕೆಗೆ ಸೆಮಿಕಂಡಕ್ಟರ್ ಚಿಪ್ಸ್ ಗಳು ಅತ್ಯಗತ್ಯವಾಗಿವೆ.

Current Affairs

 

ಸೆಮಿಕಂಡಕ್ಟರ್ ಚಿಪ್ಸ್ ಗಳ ಕುರಿತು:

ಸೆಮಿಕಂಡಕ್ಟರ್‌ಗಳನ್ನು – ಇಂಟಿಗ್ರೇಟೆಡ್ ಸರ್ಕ್ಯೂಟ್‌ಗಳು (integrated circuits-ICs), ಅಥವಾ ಮೈಕ್ರೋಚಿಪ್‌ಗಳು ಎಂದೂ ಸಹ ಕರೆಯುತ್ತಾರೆ – ಇವುಗಳನ್ನು ಹೆಚ್ಚಾಗಿ ಸಿಲಿಕಾನ್ ಅಥವಾ ಜರ್ಮೇನಿಯಮ್ ಅಥವಾ ಗ್ಯಾಲಿಯಂ ಆರ್ಸೆನೈಡ್‌ನಂತಹ ಸಂಯುಕ್ತದಿಂದ ತಯಾರಿಸಲಾಗುತ್ತದೆ.

 

ಸೆಮಿಕಂಡಕ್ಟರ್ ಚಿಪ್ಸ್ ಗಳ ಮಹತ್ವ:

 1. ಇದು ಎಲೆಕ್ಟ್ರಾನಿಕ್ ವಸ್ತುಗಳನ್ನು ಸ್ಮಾರ್ಟ್ ಮತ್ತು ವೇಗ ಗೊಳಿಸುವ ವಸ್ತುವಾಗಿದೆ.
 2. ಸಾಮಾನ್ಯವಾಗಿ ಸಿಲಿಕಾನ್ ಎಂಬ ವಸ್ತುವಿನಿಂದ ತಯಾರಿಸಲಾಗುವ ಸೆಮಿ ಕಂಡಕ್ಟರ್ ಗಳು, ವಿದ್ಯುಚ್ಛಕ್ತಿಯನ್ನು “ಸೆಮಿ ಕಂಡಕ್ಟ” ಮಾಡುತ್ತವೆ ಆಗ ಚಿಪ್ ಗಳು ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತದೆ.
 3. ಪ್ರೋಗ್ರಾಂಗಳನ್ನು ರನ್ ಮಾಡುವ ಮತ್ತು ಎಲೆಕ್ಟ್ರಾನಿಕ್ ಸಾಧನದ ಮೆದುಳಿನಂತೆ ಕಾರ್ಯನಿರ್ವಹಿಸುವ ಲಾಜಿಕ್ ಚಿಪ್ ಗಳು ಹೆಚ್ಚು ಸಂಕೀರ್ಣ ಮತ್ತು ದುಬಾರಿಯಾಗಿವೆ.
 4. ಡೇಟಾವನ್ನು ಸಂಗ್ರಹಿಸುವ ಮೆಮೊರಿ ಚಿಪ್‌ಗಳು ತುಲನಾತ್ಮಕವಾಗಿ ಸರಳ ಸಾಧನವಾಗಿವೆ ಮತ್ತು ಅವುಗಳನ್ನು ಸರಕುಗಳಂತೆ ವ್ಯಾಪಾರ ಮಾಡಲಾಗುತ್ತದೆ.
 5. ಈ ಚಿಪ್‌ಗಳು ಈಗ ಸಮಕಾಲೀನ ಆಟೋಮೊಬೈಲ್‌ಗಳು, ಹೋಮ್ ಗ್ಯಾಜೆಟ್‌ಗಳು ಮತ್ತು ಇಸಿಜಿ ಯಂತ್ರಗಳಂತಹ ಅಗತ್ಯ ವೈದ್ಯಕೀಯ ಸಲಕರಣೆಗಳ ಅವಿಭಾಜ್ಯ ಅಂಗವಾಗಿದೆ.

 

ಬೇಡಿಕೆಯಲ್ಲಿನ ಇತ್ತೀಚಿನ ಬೆಳವಣಿಗೆ:

 1. COVID-19 ಸಾಂಕ್ರಾಮಿಕ ರೋಗದಿಂದಾಗಿ, ದಿನನಿತ್ಯದ ಆರ್ಥಿಕ ಮತ್ತು ಅಗತ್ಯ ಚಟುವಟಿಕೆಗಳನ್ನು ಆನ್‌ಲೈನ್ ಅಥವಾ ಡಿಜಿಟಲ್ ಆಗಿ ಸಕ್ರಿಯಗೊಳಿಸುವ ಒತ್ತಡವು ಜನರ ಜೀವನದಲ್ಲಿ ಚಿಪ್-ಚಾಲಿತ ಕಂಪ್ಯೂಟರ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳ ‘ಕೇಂದ್ರೀಯತೆ’ಯನ್ನು ಎತ್ತಿ ತೋರಿಸಿದೆ.
 2. ಪ್ರಪಂಚದಾದ್ಯಂತದ ಸಾಂಕ್ರಾಮಿಕ ಮತ್ತು ನಂತರದ ಲಾಕ್‌ಡೌನ್‌ಗಳು ಜಪಾನ್, ದಕ್ಷಿಣ ಕೊರಿಯಾ, ಚೀನಾ ಮತ್ತು ಯುಎಸ್ ಸೇರಿದಂತೆ ದೇಶಗಳಲ್ಲಿ ‘ನಿರ್ಣಾಯಕ ಚಿಪ್ ತಯಾರಿಕೆ ಸೌಲಭ್ಯಗಳನ್ನು’ ಮುಚ್ಚಲು ಕಾರಣವಾಯಿತು.
 3. ‘ಸೆಮಿಕಂಡಕ್ಟರ್ ಚಿಪ್ಸ್’ ಕೊರತೆಯು ವ್ಯಾಪಕವಾದ ಅನುಸರಣೆಯನ್ನು ಹೊಂದಿದೆ. ಮೊದಲನೆಯದಾಗಿ, ‘ಚಿಪ್ಸ್’ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸುವ ಮೂಲಕ ಬೇಡಿಕೆಯಲ್ಲಿ ಹೆಚ್ಚಳವಾಗಿದೆ, ಇದು ನಂತರ ಪೂರೈಕೆಯಲ್ಲಿನ ಕೊರತೆಗೆ ಕಾರಣವಾಗುತ್ತದೆ.

 

ಭಾರತದ ಸೆಮಿಕಂಡಕ್ಟರ್ ಬೇಡಿಕೆ ಮತ್ತು ಸಂಬಂಧಿತ ಉಪಕ್ರಮಗಳು:

ಭಾರತದಲ್ಲಿ, ಪ್ರಸ್ತುತ ಎಲ್ಲಾ ರೀತಿಯ ಚಿಪ್‌ಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ ಮತ್ತು 2025 ರ ವೇಳೆಗೆ ಈ ಮಾರುಕಟ್ಟೆಯು $24 ಶತಕೋಟಿಯಿಂದ $100 ಶತಕೋಟಿಗೆ ತಲುಪುವ ನಿರೀಕ್ಷೆಯಿದೆ.

 

ಈ ಕೊರತೆಯನ್ನು ನೀಗಿಸಲು ಸರ್ಕಾರ ಕೈಗೊಂಡಿರುವ ಕ್ರಮಗಳು:

 1. ಸೆಮಿಕಂಡಕ್ಟರ್ ಮತ್ತು ಡಿಸ್ಪ್ಲೇ ತಯಾರಿಕಾ ವಿಭಾಗಕ್ಕೆ ಸರ್ಕಾರ 76,000 ಕೋಟಿ ರೂ.ಗಳನ್ನು ಮೀಸಲಿಟ್ಟಿದೆ.
 2. ಅರೆವಾಹಕಗಳ ಉತ್ಪಾದನೆಯನ್ನು ಉತ್ತೇಜಿಸಲು ಉತ್ಪಾದನೆ ಆಧಾರಿತ ಉತ್ತೇಜನ (PLI) ಯೋಜನೆಗಳು ಮತ್ತು ಇತರ ಯೋಜನೆಗಳನ್ನು ಪ್ರಾರಂಭಿಸಲಾಗಿದೆ. ಇದು ಕೇವಲ ದೇಶೀಯ ಕಂಪನಿಗಳಿಗೆ COVID-19 ಒಡ್ಡುವ ಸವಾಲುಗಳನ್ನು ಜಯಿಸಲು ಮಾತ್ರ ಸಹಾಯ ಮಾಡದೆ, ವಿಶೇಷವಾಗಿ ಚಿಪ್ ತಯಾರಿಕೆಯಲ್ಲಿ ಜಾಗತಿಕವಾಗಿ ಸ್ಪರ್ಧಾತ್ಮಕವಾಗಲು ಸಹಾಯ ಮಾಡುತ್ತದೆ.
 3. ಎಲೆಕ್ಟ್ರಾನಿಕ್ಸ್ ವಲಯಕ್ಕೆ ಸಂಬಂಧಿಸಿದಂತೆ ಸರ್ಕಾರವು ಇತ್ತೀಚೆಗೆ ವಿಷನ್ ಡಾಕ್ಯುಮೆಂಟ್ ಅನ್ನು ಬಿಡುಗಡೆ ಮಾಡಿದೆ. ಇದರಲ್ಲಿ 2026 ರ ವೇಳೆಗೆ ಸುಮಾರು 22 ಲಕ್ಷ ಕೋಟಿ ರೂಪಾಯಿಗಳಷ್ಟು ದೇಶೀಯ ಎಲೆಕ್ಟ್ರಾನಿಕ್ ಉತ್ಪಾದನೆಯನ್ನು ತಲುಪಲು ಯೋಜಿಸಲಾಗಿದೆ.
 4. ಭಾರತವು ಎಲೆಕ್ಟ್ರಾನಿಕ್ ಘಟಕಗಳು ಮತ್ತು ಸೆಮಿಕಂಡಕ್ಟರ್‌ಗಳ ತಯಾರಿಕೆಯ ಉತ್ತೇಜನಕ್ಕಾಗಿ ಯೋಜನೆ (Scheme for Promotion of Manufacturing of Electronic Components and Semiconductors) ಯನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ಎಲೆಕ್ಟ್ರಾನಿಕ್ಸ್ ಘಟಕಗಳು ಮತ್ತು ಸೆಮಿಕಂಡಕ್ಟರ್‌ಗಳ ತಯಾರಿಕೆಗಾಗಿ ಎಂಟು ವರ್ಷಗಳ ಅವಧಿಯಲ್ಲಿ 3,285 ಕೋಟಿ ರೂಪಾಯಿಗಳ ಬಜೆಟ್ ವೆಚ್ಚವನ್ನು ಅನುಮೋದಿಸಲಾಗಿದೆ.

 

ಮುಂದಿರುವ ಸವಾಲುಗಳು:

 1. ಹೆಚ್ಚಿನ ಹೂಡಿಕೆಯ ಅವಶ್ಯಕತೆ
 2. ಸರ್ಕಾರದಿಂದ ಕನಿಷ್ಠ ಆರ್ಥಿಕ ನೆರವು
 3. ಸಂರಚನಾ (ಫ್ಯಾಬ್) ಸಾಮರ್ಥ್ಯಗಳ ಕೊರತೆ
 4. ಪಿಎಲ್‌ಐ ಯೋಜನೆಯಡಿ ಅಸಮರ್ಪಕ ಅನುದಾನ.
 5. ಸಂಪನ್ಮೂಲ ಅಸಮರ್ಥ ವಲಯ.

 

ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.

IPCC ಯ ವರದಿ:


 ಸಂದರ್ಭ:

ಇತ್ತೀಚೆಗಷ್ಟೇ, ಹವಾಮಾನ ಬದಲಾವಣೆಯ ಕುರಿತ ಅಂತರ್ ಸರ್ಕಾರಿ ಸಮಿತಿಯ (Intergovernmental Panel on Climate Change- IPCC) ಆರನೇ ಮೌಲ್ಯಮಾಪನ ವರದಿಯ (Sixth Assessment Report) ಎರಡನೇ ಭಾಗವನ್ನು ಬಿಡುಗಡೆ ಮಾಡಲಾಗಿದೆ.

 

 1. ವರದಿಯ ಈ ಎರಡನೇ ಭಾಗವು ಹವಾಮಾನ ಬದಲಾವಣೆ ಮತ್ತು ಹೊಂದಾಣಿಕೆಯ ಆಯ್ಕೆಗಳ ಪರಿಣಾಮಗಳು, ಅಪಾಯಗಳು ಮತ್ತು ದುರ್ಬಲತೆಗಳನ್ನು ನಿರ್ಣಯಿಸುತ್ತದೆ.
 2. ಕಳೆದ ವರ್ಷ ಆಗಸ್ಟ್‌ನಲ್ಲಿ ‘ಹವಾಮಾನ ಬದಲಾವಣೆ 2021: ಭೌತಿಕ ವಿಜ್ಞಾನ’ ಎಂಬ ಶೀರ್ಷಿಕೆಯಡಿಯಲ್ಲಿ ಬಿಡುಗಡೆಯಾದ ವರದಿಯ ಮೊದಲ ಭಾಗವು ಹವಾಮಾನ ಬದಲಾವಣೆಯ ವೈಜ್ಞಾನಿಕ ಆಧಾರದ ಮೇಲೆ ಕೇಂದ್ರೀಕೃತವಾಗಿತ್ತು.

 

‘ಆರನೇ ಮೌಲ್ಯಮಾಪನ ವರದಿ’ (AR6) ಎಂದರೇನು?

ಹವಾಮಾನ ಬದಲಾವಣೆಗೆ ಸಂಬಂಧಿಸಿದ ವೈಜ್ಞಾನಿಕ, ತಾಂತ್ರಿಕ ಮತ್ತು ಸಾಮಾಜಿಕ-ಆರ್ಥಿಕ ಮಾಹಿತಿಯನ್ನು ಮೌಲ್ಯಮಾಪನ ಮಾಡುವ ಗುರಿಯನ್ನು ಹೊಂದಿರುವ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆಯ ಕುರಿತ ಅಂತಾರಾಷ್ಟ್ರೀಯ ಸಮಿತಿಯ (IPCC) ಆರನೇ ಮೌಲ್ಯಮಾಪನ ವರದಿಯ ಸರಣಿಯಲ್ಲಿ (AR6) ಆರನೆಯದು.

 1. ಈ ವರದಿಯು ಹವಾಮಾನ ಬದಲಾವಣೆಯ ಭೌತಶಾಸ್ತ್ರವನ್ನು ಭೂತಕಾಲದ, ವರ್ತಮಾನದ ಮತ್ತು ಭವಿಷ್ಯದ ಹವಾಮಾನಗಳನ್ನು ಅವಲೋಕಿಸುವ ಮೂಲಕ ಮೌಲ್ಯಮಾಪನ ಮಾಡುತ್ತದೆ.
 2. ಈ ವರದಿಯಲ್ಲಿ, ಮಾನವನಿಂದ ಉಂಟಾಗುವ ಹೊರಸೂಸುವಿಕೆಯ ಪರಿಣಾಮವಾಗಿ ನಮ್ಮ ಗ್ರಹದಲ್ಲಿ ಆಗುತ್ತಿರುವ ಬದಲಾವಣೆಗಳು ಮತ್ತು ನಮ್ಮ ಸಾಮೂಹಿಕ ಭವಿಷ್ಯಕ್ಕಾಗಿ ಅದರ ಪರಿಣಾಮಗಳನ್ನು ವಿವರಿಸಲಾಗಿದೆ.

 

ಆರನೇ ಮೌಲ್ಯಮಾಪನ ವರದಿಯ ಪ್ರಮುಖ ಅಂಶಗಳು (AR6):

 1. ಹವಾಮಾನ ಮತ್ತು ಹವಾಮಾನ ಘಟನೆಗಳು – ಹವಾಮಾನ ಬದಲಾವಣೆಯಿಂದಾಗಿ, ಹವಾಮಾನ ಮತ್ತು ಹವಾಮಾನ ಸಂಬಂಧಿತ ಘಟನೆಗಳಾದ ವಿಪರೀತ ಶಾಖ, ಭಾರೀ ಮಳೆ, ಬೆಂಕಿ ಪರಿಸ್ಥಿತಿಗಳು ಮತ್ತು ಬರಗಾಲಗಳು ಹೆಚ್ಚು ತೀವ್ರವಾಗಿ ಮತ್ತು ನಿಯಮಿತವಾಗಿ ಆಗುತ್ತಿವೆ.
 2. ವರದಿಯ ಪ್ರಕಾರ, ನಾವು ಈಗಾಗಲೇ 1.5 ° C ಜಾಗತಿಕ ತಾಪಮಾನಕ್ಕೆ ಹತ್ತಿರದಲ್ಲಿದ್ದೇವೆ ಮತ್ತು ಪ್ರತಿದಿನ ಹೊರಸೂಸುವಿಕೆಯೊಂದಿಗೆ, ಹವಾಮಾನ ಬದಲಾವಣೆಯ ಅತ್ಯಂತ ಅಪಾಯಕಾರಿ ಪರಿಣಾಮಗಳನ್ನು ತಪ್ಪಿಸುವ ಸಾಧ್ಯತೆಗಳು ಮಂದವಾಗುತ್ತಿವೆ.
 3. ಎಲ್ಲಾ ಹಸಿರುಮನೆ ಅನಿಲ ಹೊರಸೂಸುವಿಕೆ ಸನ್ನಿವೇಶಗಳಲ್ಲಿ, ಇಂಗಾಲದ ಡೈಆಕ್ಸೈಡ್ ಜಾಗತಿಕ ತಾಪಮಾನ ಏರಿಕೆಗೆ ಪ್ರಮುಖ ಕಾರಣವಾಗಿದೆ.
 4. ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು 2030 ರ ವೇಳೆಗೆ ಮತ್ತು 2050 ರ ವೇಳೆಗೆ ನಿವ್ವಳ ಶೂನ್ಯವನ್ನು ಅರ್ಧಕ್ಕೆ ಇಳಿಸಿದರೆ ಜಾಗತಿಕ ತಾಪಮಾನವನ್ನು ನಿಲ್ಲಿಸಬಹುದು ಎಂದು ವರದಿ ಹೇಳಿದೆ.
 5. ಅದೇ ಸಮಯದಲ್ಲಿ, IPCC ವರದಿಯು ಐತಿಹಾಸಿಕವಾಗಿ ಹೆಚ್ಚುತ್ತಿರುವ ಹೊರಸೂಸುವಿಕೆಗಳು ವಿಶ್ವವು ಇಂದು ಎದುರಿಸುತ್ತಿರುವ ಹವಾಮಾನ ಬಿಕ್ಕಟ್ಟಿನ ಮೂಲವಾಗಿದೆ ಎಂಬ ಭಾರತದ ದೃಷ್ಟಿಕೋನವನ್ನು ಪುನರುಚ್ಚರಿಸುತ್ತದೆ.

 

ಪ್ರಮುಖ ಕಾಳಜಿಗಳು:

ಮಾನವನಿಂದಾಗುವ ಕ್ರಿಯೆಗಳಿಂದಾಗಿ ನಮ್ಮ ಹವಾಮಾನವು ವೇಗವಾಗಿ ಬದಲಾಗುತ್ತಿದೆ ಮತ್ತು ಈಗಾಗಲೇ ನಮ್ಮ ಗ್ರಹದಲ್ಲಿ ಭಾರೀ ಬದಲಾವಣೆಗಳನ್ನು ಉಂಟುಮಾಡಿದೆ ಎಂದು ವರದಿಯು ಎತ್ತಿ ತೋರಿಸುತ್ತದೆ-

 1. ಆರ್ಕ್ಟಿಕ್‌ನಲ್ಲಿ ಸಮುದ್ರದ ಮಂಜುಗಡ್ಡೆಯು 150 ವರ್ಷಗಳಿಗಿಂತಲೂ ಕಡಿಮೆ ಮಟ್ಟದಲ್ಲಿದೆ;
 2. ಕಳೆದ 3,000 ವರ್ಷಗಳಲ್ಲಿ ಸಮುದ್ರ ಮಟ್ಟವು ಇತರ ಯಾವುದೇ ಅವಧಿಗಿಂತ ವೇಗವಾಗಿ ಏರುತ್ತಿದೆ; ಮತ್ತು
 3. ಕಳೆದ 2,000 ವರ್ಷಗಳ ಅವಧಿಗೆ ಹೋಲಿಸಿದರೆ ಹಿಮನದಿಗಳು ಪ್ರಸ್ತುತ ಅಭೂತಪೂರ್ವ ದರದಲ್ಲಿ ಕಡಿಮೆಯಾಗುತ್ತಿವೆ.

ಅವಶ್ಯಕತೆ:

ತುರ್ತಾಗಿ ಬೇಕಾಗಿರುವುದು ಎಲ್ಲ ದೇಶಗಳು – ವಿಶೇಷವಾಗಿ ಪ್ರಮುಖ ಆರ್ಥಿಕತೆಗಳು – ಜಾಗತಿಕ ತಾಪಮಾನ ಏರಿಕೆಯನ್ನು 1.5 ° C ಗೆ ಸೀಮಿತಗೊಳಿಸುವ ಗುರಿಯನ್ನು ಸಾಧಿಸಲು ಜಗತ್ತನ್ನು ಟ್ರ್ಯಾಕ್‌ನಲ್ಲಿಡಲು ಈ 2020 ರ ನಿರ್ಣಾಯಕ ದಶಕದಲ್ಲಿ ತಮ್ಮ ಪಾತ್ರವನ್ನು ವಹಿಸುತ್ತವೆ.

ಈ ಕಾರಣಕ್ಕಾಗಿ, ಯುನೈಟೆಡ್ ಸ್ಟೇಟ್ಸ್ ತನ್ನ ಹೊರಸೂಸುವಿಕೆಯನ್ನು 2005 ರಿಂದ 2030 ರ ವೇಳೆಗೆ 50-52 ಪ್ರತಿಶತದಷ್ಟು ಕಡಿತಗೊಳಿಸಲು ಬದ್ಧವಾಗಿದೆ ಮತ್ತು ಹವಾಮಾನ ಬಿಕ್ಕಟ್ಟನ್ನು ಎದುರಿಸಲು ಇಡೀ ಫೆಡರಲ್ ಸರ್ಕಾರವನ್ನು ಸಿದ್ಧಪಡಿಸುತ್ತಿದೆ.

ಗ್ಲಾಸ್ಗೊದಲ್ಲಿ, 26 ನೇ ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮಾವೇಶಕ್ಕೆ  (COP26) ದೇಶಗಳು ನಡೆಸುತ್ತಿರುವ ಸಿದ್ಧತೆಗಳ ನಡುವೆ, ವಿಜ್ಞಾನ ಆಧಾರಿತ ಕ್ರಮಗಳನ್ನು ನಾವು ತೆಗೆದುಕೊಳ್ಳಬೇಕು ಎಂದು ಈ ವರದಿಯು ನಮಗೆ ನೆನಪಿಸುತ್ತದೆ.

ಪ್ರಸ್ತುತ, ವಿಶ್ವ ನಾಯಕರು, ಖಾಸಗಿ ವಲಯ ಮತ್ತು ವ್ಯಕ್ತಿಗಳು ತುರ್ತಾಗಿ, ಒಟ್ಟಾಗಿ ಕಾರ್ಯನಿರ್ವಹಿಸಬೇಕು ಮತ್ತು ಈ ದಶಕದಲ್ಲಿ ನಮ್ಮ ಗ್ರಹ ಮತ್ತು ನಮ್ಮ ಭವಿಷ್ಯವನ್ನು ರಕ್ಷಿಸಲು ಅಗತ್ಯವಿರುವ ಎಲ್ಲವನ್ನೂ ಅದಕ್ಕೂ ಮೀರಿ ಮಾಡಬೇಕಾಗಿದೆ.

ಆರೋಗ್ಯದ ಮೇಲೆ ಪರಿಣಾಮಗಳು:

ಮೊದಲ ಬಾರಿಗೆ, IPCC ವರದಿಯು ಹವಾಮಾನ ಬದಲಾವಣೆಯ ಆರೋಗ್ಯದ ಪರಿಣಾಮಗಳನ್ನು ನೋಡುತ್ತದೆ.

 1. ವರದಿಯ ಪ್ರಕಾರ, ಹವಾಮಾನ ಬದಲಾವಣೆಯು-ವಿಶೇಷವಾಗಿ ಏಷ್ಯಾದ ಉಪೋಷ್ಣವಲಯದ ಪ್ರದೇಶಗಳಲ್ಲಿ-ಮಲೇರಿಯಾ ಮತ್ತು ಡೆಂಗ್ಯೂ ಮುಂತಾದ ವಾಹಕಗಳಿಂದ ಹರಡುವ ಮತ್ತು ನೀರಿನಿಂದ ಹರಡುವ ರೋಗಗಳ ಹೆಚ್ಚಳಕ್ಕೆ ಕಾರಣವಾಗುತ್ತದೆ.
 2. ತಾಪಮಾನ ಹೆಚ್ಚಾದಂತೆ, ರಕ್ತಪರಿಚಲನೆ, ಉಸಿರಾಟ, ಮಧುಮೇಹ ಮತ್ತು ಸಾಂಕ್ರಾಮಿಕ ರೋಗಗಳಿಗೆ ಸಂಬಂಧಿಸಿದ ಸಾವುಗಳೊಂದಿಗೆ ಶಿಶು ಮರಣವು ಹೆಚ್ಚಾಗುವ ಸಾಧ್ಯತೆಯಿದೆ.
 3. ಉಷ್ಣ(ಶಾಖದ) ಅಲೆಗಳು, ಪ್ರವಾಹಗಳು ಮತ್ತು ಅನಾವೃಷ್ಟಿಗಳಂತಹ ಹವಾಮಾನ ವೈಪರೀತ್ಯಗಳ ಹೆಚ್ಚುತ್ತಿರುವ ಆವರ್ತನ, ಮತ್ತು ವಾಯು ಮಾಲಿನ್ಯವು ಅಪೌಷ್ಟಿಕತೆ, ಅಲರ್ಜಿಯ ಕಾಯಿಲೆಗಳು ಮತ್ತು ‘ಮಾನಸಿಕ ಅಸ್ವಸ್ಥತೆಗಳಿಗೆ’ ಕೊಡುಗೆ ನೀಡುತ್ತಿದೆ.

 

ಭಾರತ ನಿರ್ದಿಷ್ಟ ಅಧ್ಯಯನಗಳು:

ವರದಿಯು ಭಾರತವನ್ನು ದುರ್ಬಲ ಹಾಟ್‌ಸ್ಪಾಟ್ಗಳಲ್ಲಿ ಒಂದು ಎಂದು ಗುರುತಿಸಿದೆ, ಅನೇಕ ಪ್ರದೇಶಗಳು ಮತ್ತು ಪ್ರಮುಖ ನಗರಗಳು ಪ್ರವಾಹಗಳು, ಸಮುದ್ರ ಮಟ್ಟ ಏರಿಕೆ ಮತ್ತು ಶಾಖದ / ಬಿಸಿ ಗಾಳಿಯ ಅಲೆಗಳಂತಹ ಹವಾಮಾನ ವಿಪತ್ತುಗಳ ಹೆಚ್ಚಿನ ಅಪಾಯವನ್ನು ಎದುರಿಸುತ್ತಿವೆ.

 1. ಮುಂಬೈ ಮಹಾ ನಗರವು ಸಮುದ್ರ ಮಟ್ಟದಲ್ಲಿ ಏರಿಕೆ ಮತ್ತು ಪ್ರವಾಹದ ಹೆಚ್ಚಿನ ಅಪಾಯವನ್ನು ಎದುರಿಸುತ್ತಿದೆ.
 2. ಅಹಮದಾಬಾದ್ ಬಿಸಿಗಾಳಿಯ ಗಂಭೀರ ಅಪಾಯವನ್ನು ಎದುರಿಸುತ್ತಿದೆ.
 3. ಚೆನ್ನೈ, ಭುವನೇಶ್ವರ್, ಪಾಟ್ನಾ ಮತ್ತು ಲಕ್ನೋ ಸೇರಿದಂತೆ ಹಲವಾರು ನಗರಗಳು ಶಾಖ ಮತ್ತು ಆರ್ದ್ರತೆಯ ಅಪಾಯಕಾರಿ ಮಟ್ಟವನ್ನು ಸಮೀಪಿಸುತ್ತಿವೆ.
 4. ಸಾರಿಗೆ, ನೀರು, ನೈರ್ಮಲ್ಯ ಮತ್ತು ಇಂಧನ ವ್ಯವಸ್ಥೆಗಳು ಸೇರಿದಂತೆ ಮೂಲಸೌಕರ್ಯಗಳು ತೀವ್ರವಾದ ಮತ್ತು ನಿಧಾನಗತಿಯ ಹವಾಮಾನ ಘಟನೆಗಳಿಂದ ಹಾನಿಗೊಳಗಾಗುತ್ತಿವೆ, ಇದರ ಪರಿಣಾಮವಾಗಿ ಆರ್ಥಿಕ ನಷ್ಟಗಳು, ಸೇವೆಗಳ ಅಡ್ಡಿ ಮತ್ತು ಸಾರ್ವಜನಿಕ ಕಲ್ಯಾಣದ ಮೇಲೆ ಪರಿಣಾಮ ಬೀರುತ್ತದೆ.
 5. 2050 ರ ವೇಳೆಗೆ 877 ಮಿಲಿಯನ್ ಯೋಜಿತ ಜನಸಂಖ್ಯೆಯೊಂದಿಗೆ ನಗರ ಭಾರತವು – 2020 ರಲ್ಲಿ ಹೊಂದಿದ್ದ 480 ಮಿಲಿಯನ್ ಜನಸಂಖ್ಯೆಯ ಸುಮಾರು ಎರಡು ಪಟ್ಟು – ದೇಶದ ಇತರ ಪ್ರದೇಶಗಳಿಗಿಂತ ಹೆಚ್ಚಿನ ಅಪಾಯದಲ್ಲಿದೆ.
 6. IPCC ಪ್ರಕಾರ, ಪ್ರಸ್ತುತ, ಭಾರತದಲ್ಲಿ ‘ವೆಟ್ -ಬಲ್ಬ್ ತಾಪಮಾನ’ ಅಪರೂಪವಾಗಿ 31°c ಅನ್ನು ಮೀರಿದೆ. ಸಾಮಾನ್ಯವಾಗಿ, ದೇಶದ ಹೆಚ್ಚಿನ ಭಾಗಗಳಲ್ಲಿ ಗರಿಷ್ಠ ವೆಟ್-ಬಲ್ಬ್ ತಾಪಮಾನವು 25-30 ಡಿಗ್ರಿ ಸೆಲ್ಸಿಯಸ್ ಆಗಿದೆ.

 

IPCC ವರದಿಯ ಮಹತ್ವ:

‘ಹವಾಮಾನ ಬದಲಾವಣೆಯ ಕುರಿತ ಅಂತರ ಸರ್ಕಾರಿ ಸಮಿತಿ’ (IPCC) ವರದಿಯು ಹವಾಮಾನ ಬದಲಾವಣೆಯನ್ನು ಎದುರಿಸಲು ವಿಶ್ವದ ರಾಷ್ಟ್ರಗಳು ಮಾಡಿದ ನೀತಿಗಳಿಗೆ ‘ವೈಜ್ಞಾನಿಕ ಆಧಾರ’ವನ್ನು ಒದಗಿಸುತ್ತದೆ.

 1. IPCC ವರದಿಗಳು ಸ್ವತಃ ನೀತಿ ನಿರ್ದೇಶನವಲ್ಲ; ಈ ವರದಿಗಳಲ್ಲಿ, ದೇಶಗಳು ಅಥವಾ ಸರ್ಕಾರಗಳು ಏನು ಮಾಡಬೇಕು ಮತ್ತು ಮಾಡಬಾರದು ಎಂದು ಹೇಳಲಾಗಿದೆ. ಈ ವರದಿಗಳು ಸಾಧ್ಯವಾದಷ್ಟು ವೈಜ್ಞಾನಿಕ ಪುರಾವೆಗಳೊಂದಿಗೆ ವಾಸ್ತವಿಕ ಸ್ಥಾನಗಳನ್ನು ಮಾತ್ರ ಪ್ರಸ್ತುತಪಡಿಸುತ್ತವೆ.
 2. ಮತ್ತು ಇನ್ನೂ, ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಕ್ರಿಯಾ ಯೋಜನೆಯನ್ನು ರೂಪಿಸುವಲ್ಲಿ ಈ ವರದಿಗಳು ತುಂಬಾ ಸಹಾಯಕವಾಗಬಹುದು.
 3. ಈ ವರದಿಗಳು ಜಾಗತಿಕ ಮಟ್ಟದಲ್ಲಿ ವಿವಿಧ ದೇಶಗಳ ಪ್ರತಿಕ್ರಿಯೆಗಳನ್ನು ನಿರ್ಧರಿಸಲು ‘ಅಂತರರಾಷ್ಟ್ರೀಯ ಹವಾಮಾನ ಬದಲಾವಣೆಯ ಮಾತುಕತೆ’ಗೆ ಆಧಾರವಾಗಿದೆ.ಈ ಮಾತುಕತೆಗಳ ಅಡಿಯಲ್ಲಿ ಪ್ಯಾರಿಸ್ ಒಪ್ಪಂದ ಮತ್ತು ಮೊದಲ ಕ್ಯೋಟೋ ಶಿಷ್ಟಾಚಾರವನ್ನು ರಚಿಸಲಾಗಿದೆ.

 

ಹವಾಮಾನ ಬದಲಾವಣೆ ಕುರಿತ ಅಂತರಸರ್ಕಾರಿ ಸಮಿತಿ (IPCC) ಕುರಿತು:

 1. ಹವಾಮಾನ ಬದಲಾವಣೆ ಕುರಿತ ಅಂತರಸರ್ಕಾರಿ ಸಮಿತಿ (IPCC) ಎಂಬುದು ವಿಶ್ವಸಂಸ್ಥೆಯ ಒಂದು ಅಂತರಸರ್ಕಾರಿ ಸಂಸ್ಥೆಯಾಗಿದ್ದು, ಮಾನವ-ಪ್ರೇರಿತ ಹವಾಮಾನ ಬದಲಾವಣೆಯ ಕುರಿತು ಮಾಹಿತಿ ಮತ್ತು ಜ್ಞಾನವನ್ನು ಹೆಚ್ಚಿಸುವ ಜವಾಬ್ದಾರಿಯನ್ನು ಹೊಂದಿದೆ.
 2. ಇದನ್ನು 1988 ರಲ್ಲಿ ವಿಶ್ವ ಹವಾಮಾನ ಸಂಸ್ಥೆ (WMO) ಮತ್ತು ಯುನೈಟೆಡ್ ನೇಷನ್ಸ್ ಎನ್ವಿರಾನ್ಮೆಂಟ್ ಪ್ರೋಗ್ರಾಂ (UNEP) ಸ್ಥಾಪಿಸಿದವು.
 3. ಪ್ರಧಾನ ಕಛೇರಿ: ಜಿನೀವಾ, ಸ್ವಿಟ್ಜರ್ಲೆಂಡ್.
 4. ಕಾರ್ಯ: ಹವಾಮಾನ ಬದಲಾವಣೆಯ ವೈಜ್ಞಾನಿಕ ತಳಹದಿ, ಅದರ ಪರಿಣಾಮಗಳು ಮತ್ತು ಭವಿಷ್ಯದ ಅಪಾಯಗಳು ಮತ್ತು ಹೊಂದಾಣಿಕೆ ಮತ್ತು ತಗ್ಗಿಸುವಿಕೆಯ ಆಯ್ಕೆಗಳ ನಿಯಮಿತ ಮೌಲ್ಯಮಾಪನದೊಂದಿಗೆ ನೀತಿ ನಿರೂಪಕರಿಗೆ ಒದಗಿಸುವುದು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:


 ಪಾರ್ಟಿಸಿಪೇಟರಿ ನೋಟ್ಸ್ ಎಂದರೇನು?

ಭಾರತದ ಷೇರುಪೇಟೆಯಲ್ಲಿ ಹಣ ತೊಡಗಿಸಲು ನೇರವಾಗಿ ನೋಂದಾಯಿಸಿಕೊಳ್ಳದ ವಿದೇಶಿ ಹೂಡಿಕೆದಾರರಿಗೆ ಸಾಗರೋತ್ತರ ನೋಂದಾಯಿತ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಈ ‘ಪಿ–ನೋಟ್ಸ್‌’ಗಳನ್ನು ವಿತರಿಸುತ್ತಾರೆ. ಕೆಲವರು ಇವುಗಳನ್ನು ಬಳಸಿ ಭಾರತೀಯ ಷೇರುಪೇಟೆ ನಿಯಂತ್ರಣ ಮಂಡಳಿಯಲ್ಲಿ ನೋಂದಾಯಿಸಿದೆ ಭಾರತೀಯ ಷೇರು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡುತ್ತಾರೆ.

 1. ಪಿ-ನೋಟ್ಸ್ ಕಡಲಾಚೆಯ ಉತ್ಪನ್ನ ಸಾಧನಗಳು (ODIಗಳು) ಅಥವಾ ಇಕ್ವಿಟಿ ಷೇರುಗಳನ್ನು ಒಳಗೊಂಡಂತೆ ಆಧಾರವಾಗಿರುವ ಸ್ವತ್ತುಗಳ ರೂಪದಲ್ಲಿನ ಸಾಲ ಭದ್ರತೆಗಳಾಗಿವೆ.
 2. ಅವರು ಹೂಡಿಕೆದಾರರಿಗೆ ದ್ರವ್ಯತೆಯನ್ನು ಒದಗಿಸುತ್ತಾರೆ ಮತ್ತು ಅವರು ಮಾಲೀಕತ್ವವನ್ನು ಅನುಮೋದನೆ ಮತ್ತು ವಿತರಣೆಯ ಮೂಲಕ ವರ್ಗಾಯಿಸಬಹುದು.
 3. ಆದಾಗ್ಯೂ, ಎಲ್ಲಾ ವಿದೇಶಿ ಸಾಂಸ್ಥಿಕ ಹೂಡಿಕೆದಾರರು ( Foreign Institutional Investors -FIIs) ಪ್ರತಿ ತ್ರೈಮಾಸಿಕದಲ್ಲಿ ಇಂತಹ ಎಲ್ಲಾ ಹೂಡಿಕೆಗಳನ್ನು ಸೆಬಿಗೆ ವರದಿ ಮಾಡಬೇಕಾಗುತ್ತದೆ, ಆದರೆ ಅವರು ನಿಜವಾದ ಹೂಡಿಕೆದಾರರ ಗುರುತನ್ನು ಬಹಿರಂಗಪಡಿಸುವ ಅಗತ್ಯವಿಲ್ಲ.

 

ಸೂಯೆಜ್ ಕಾಲುವೆ:

 1. ಸೂಯೆಜ್ ಕಾಲುವೆಯು ಈಜಿಪ್ಟ್‌ನಲ್ಲಿರುವ ಕೃತಕ ಸಮುದ್ರಮಟ್ಟದ ಜಲಮಾರ್ಗವಾಗಿದೆ. ಈ ಕಾಲುವೆ ಸೂಯೆಜ್‌ನ ಇಸ್ತಮಸ್ (ಭೂಸಂಧಿ/ಭೂಕಂಠ) ಮೂಲಕ ಉತ್ತರ-ದಕ್ಷಿಣ ದಿಕ್ಕಿನಲ್ಲಿ ಹರಿಯುತ್ತದೆ.
 2. ಇದು ಆಫ್ರಿಕಾ ಮತ್ತು ಏಷ್ಯಾವನ್ನು ವಿಭಜಿಸುತ್ತದೆ ಮತ್ತು ಮೆಡಿಟರೇನಿಯನ್ ಸಮುದ್ರವನ್ನು ಕೆಂಪು ಸಮುದ್ರದೊಂದಿಗೆ ಸಂಪರ್ಕಿಸುತ್ತದೆ.
 3. ಇದು ಯುರೋಪ್, ಹಿಂದೂ ಮಹಾಸಾಗರ ಮತ್ತು ಪಶ್ಚಿಮ ಪೆಸಿಫಿಕ್ ಮಹಾಸಾಗರದ ಸುತ್ತಮುತ್ತಲಿನ ದೇಶಗಳ ನಡುವಿನ ಕಡಿಮೆ ದೂರದ ಸಮುದ್ರ ಮಾರ್ಗವಾಗಿದೆ.
 4. ಇದು ವಿಶ್ವದಲ್ಲಿ ಅತಿ ಹೆಚ್ಚು ಬಳಕೆಯಾಗುವ ಹಡಗು ಮಾರ್ಗಗಳಲ್ಲಿ ಒಂದಾಗಿದೆ, ಮತ್ತು ವಿಶ್ವ ವ್ಯಾಪಾರದ 12% ಕ್ಕಿಂತ ಹೆಚ್ಚು ಪಾಲನ್ನು ಹೊಂದಿದೆ.

ಸುದ್ದಿಯಲ್ಲಿರಲು ಕಾರಣ?

ನಗದು ಕೊರತೆಯನ್ನು ಎದುರಿಸುತ್ತಿರುವ ಈಜಿಪ್ಟ್ ಇತ್ತೀಚೆಗೆ, ಸೂಯೆಜ್ ಕಾಲುವೆಯ ಮೂಲಕ ಹಾದುಹೋಗುವ ಹಡಗುಗಳಿಗೆ ವಿಧಿಸಲಾಗುವ ಸಾರಿಗೆ ಶುಲ್ಕವನ್ನು 10% ವರೆಗೆ ಹೆಚ್ಚಿಸಿದೆ.

current affairs

 


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos