ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 2 :
1. ನ್ಯಾಯಮಂಡಳಿ ಸುಧಾರಣೆಗಳ ಕಾಯ್ದೆ, 2021.
ಸಾಮಾನ್ಯ ಅಧ್ಯಯನ ಪತ್ರಿಕೆ:3
1. ನ್ಯಾಯಸಮ್ಮತ ಮತ್ತು ಪ್ರೋತ್ಸಾಹದಾಯಕ ದರ(FRP) ಎಂದರೇನು? ಅದನ್ನು ಹೇಗೆ ಪಾವತಿಸಲಾಗುತ್ತದೆ?
2. DRDO ಮತ್ತು IIT ದೆಹಲಿಯಿಂದ ‘ಕ್ವಾಂಟಮ್ ತಂತ್ರಜ್ಞಾನದ ಪ್ರದರ್ಶನ’.
3. NFT ಗಳು ಯಾವುವು?
4. ಕಾರ್ಡ್ ಬ್ಲಡ್ ಬ್ಯಾಂಕಿಂಗ್ ಮತ್ತು ಅದರ ಮಹತ್ವ.
5. ಅಕ್ರಮ ಹಣ ವರ್ಗಾವಣೆ ತಡೆಗಟ್ಟುವಿಕೆ ಕಾಯಿದೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:
1. ನರಸಿಂಹ ಮೆಹ್ತಾ.
2. ಅಂಗಾದಿಗಳು ಯಾರು?
3. ಪನ್ರುತಿ ಗೋಡಂಬಿ.
4. ಕರಕಟ್ಟಂ ನೃತ್ಯ.
ಸಾಮಾನ್ಯ ಅಧ್ಯಯನ ಪತ್ರಿಕೆ : 2
ವಿಷಯಗಳು: ಶಾಸನಬದ್ಧ ನಿಯಂತ್ರಕ ಮತ್ತು ವಿವಿಧ ಅರೆ- ನ್ಯಾಯಿಕ ಸಂಸ್ಥೆಗಳು.
ನ್ಯಾಯಮಂಡಳಿ ಸುಧಾರಣೆಗಳ ಕಾಯ್ದೆ, 2021:
(Tribunal Reforms Act of 2021)
ಸಂದರ್ಭ:
ಇತ್ತೀಚಿಗೆ, ಪ್ರಮುಖ ನ್ಯಾಯಮಂಡಳಿಗಳಿಗೆ ಸಂಬಂಧಿಸಿದಂತೆ ಕಾನೂನನ್ನು ಜಾರಿಗೊಳಿಸುವ ಸರ್ಕಾರದ ನಿರ್ಧಾರವು -ಅದೂ ಸಹ ನ್ಯಾಯಾಲಯವು ಮತ್ತೊಂದು ಅಂತಹುದೇ ಕಾನೂನನ್ನು ರದ್ದುಗೊಳಿಸಿದ ಕೆಲವು ದಿನಗಳ ನಂತರ-ಕೋರ್ಟ್ನ ತೀರ್ಪನ್ನು ಅವಮಾನಿಸಿದಂತಾಗಿದೆ ಎಂದು ಸುಪ್ರೀಂ ಕೋರ್ಟ್ ಗಮನಿಸಿದೆ.
ಏನಿದು ವಿವಾದ?
ಕಳೆದ ವರ್ಷ ಕೇಂದ್ರ ಸರ್ಕಾರ ಜಾರಿಗೆ ತಂದ ‘ನ್ಯಾಯಮಂಡಳಿ ಸುಧಾರಣೆಗಳ ಕಾಯ್ದೆ’, 2021 (Tribunal Reforms Act of 2021) ಅನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ.
ಪ್ರಮುಖ ನ್ಯಾಯಮಂಡಳಿಗಳ ಸದಸ್ಯರ ನೇಮಕಾತಿಗಳು, ಸೇವಾ ಷರತ್ತುಗಳು, ವೇತನಗಳು ಇತ್ಯಾದಿಗಳಿಗೆ ಸಂಬಂಧಿಸಿದಂತೆ ಕಾಯಿದೆಯು ಸರ್ಕಾರಕ್ಕೆ ವ್ಯಾಪಕ ಅಧಿಕಾರವನ್ನು ನೀಡುತ್ತದೆ, ಇದರಿಂದಾಗಿ ‘ನ್ಯಾಯಾಂಗ ಸ್ವಾತಂತ್ರ್ಯ’ಕ್ಕೆ ಗಂಭೀರ ಅಪಾಯವುಂಟಾಗುತ್ತದೆ ಎಂದು ಅರ್ಜಿದಾರರು ವಾದಿಸುತ್ತಾರೆ.
2021 ರಲ್ಲಿ ಪ್ರಕಟಿಸಲಾದ ನ್ಯಾಯಮಂಡಳಿ ಸುಧಾರಣೆಗಳು (ತಾರ್ಕಿಕಿಕರಣ ಮತ್ತು ಸೇವಾ ಷರತ್ತುಗಳು) ಸುಗ್ರೀವಾಜ್ಞೆಯನ್ನು (Tribunals Reforms (Rationalisation and Conditions of Service), Ordinance) ಸುಪ್ರೀಂ ಕೋರ್ಟ್ ರದ್ದುಗೊಳಿಸಿದ ಕೆಲವೇ ದಿನಗಳಲ್ಲಿ ಲೋಕಸಭೆಯಲ್ಲಿ ಈ ಕಾಯ್ದೆಯನ್ನು ಪರಿಚಯಿಸಲಾಯಿತು ಎಂದು ಅರ್ಜಿದಾರರು ಹೇಳುತ್ತಾರೆ. ಈ ಕಾಯಿದೆಯು ಸುಪ್ರಿಂ ಕೋರ್ಟ್ ಅಸಿಂಧು ಗೊಳಿಸಿದ ಸುಗ್ರೀವಾಜ್ಞೆಯ ಅದೇ ನಿಬಂಧನೆಗಳನ್ನು ಮರಳಿ ತಂದಿತು.
ವಿವಾದಾತ್ಮಕ ನಿಬಂಧನೆಗಳು:
ಕಳೆದ ವರ್ಷ ಸಂಸತ್ತಿನ ಉಭಯ ಸದನಗಳಲ್ಲಿ ‘ಟ್ರಿಬ್ಯೂನಲ್ಸ್ ರಿಫಾರ್ಮ್ಸ್ ಆಕ್ಟ್, 2021’ ಅನ್ನು ಅಂಗೀಕರಿಸಲಾಯಿತು. ಈ ಕಾಯಿದೆಯು ಶಾಸಕಾಂಗ ಮತ್ತು ನ್ಯಾಯಾಂಗದ ನಡುವೆ ‘ಕಾನೂನು ಮಾಡುವ ಅಧಿಕಾರಗಳು ಮತ್ತು ಮಿತಿಗಳ’ ಕುರಿತು ಹೊಸ ಬಿಕ್ಕಟ್ಟಿನ ಉದ್ಭವಕ್ಕೆ ಕಾರಣವಾಗಿದೆ.
- ಮಸೂದೆಯ ಪ್ರಕಾರ, ನ್ಯಾಯಾಧಿಕರಣಗಳ ಸದಸ್ಯರಾಗಿ ವಕೀಲರ ನೇಮಕಾತಿಗೆ ಕನಿಷ್ಠ ವಯಸ್ಸು 50 ವರ್ಷಗಳು ಮತ್ತು ಅಧಿಕಾರಾವಧಿ ನಾಲ್ಕು ವರ್ಷಗಳು.
- ನ್ಯಾಯಾಲಯದ ಪ್ರಕಾರ, ಈ ‘ನಿರ್ಧರಿತ ಗಡಿರೇಖೆ’ ಏಕಪಕ್ಷೀಯ ಮತ್ತು ಅನಿಯಂತ್ರಿತವಾಗಿದೆ. ಇದಕ್ಕೆ, ಈ ನಿಬಂಧನೆಯು ನ್ಯಾಯಮಂಡಳಿಗಳ ಸದಸ್ಯರ ಆಯ್ಕೆಗಾಗಿ ಪ್ರತಿಭಾನ್ವಿತ ವಕೀಲರ ಸಮೂಹವನ್ನು ಸೃಷ್ಟಿಸುತ್ತದೆ ಎಂದು ಸರ್ಕಾರವು ವಾದಿಸಿದೆ.
ಕಾಯಿದೆಯ ಸೆಕ್ಷನ್ 3(1), 3(7), 5 ಮತ್ತು 7(1) ಸಂವಿಧಾನದ 14, 21 ಮತ್ತು 50ನೇ ಪರಿಚ್ಛೇದದ ವ್ಯಾಪ್ತಿಯಿಂದ ಹೊರಗಿದೆ.
ಕಾಯಿದೆಯ ಸೆಕ್ಷನ್ 3(1) 50 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳನ್ನು ನ್ಯಾಯಮಂಡಳಿಗಳಿಗೆ ನೇಮಕ ಮಾಡುವುದನ್ನು ನಿಷೇಧಿಸುತ್ತದೆ.ಈ ನಿಬಂಧನೆಯು ಅಧಿಕಾರಾವಧಿ / ಸೇವಾಭದ್ರತೆಯನ್ನು ದುರ್ಬಲಗೊಳಿಸುತ್ತದೆ ಮತ್ತು ನ್ಯಾಯಾಂಗ ಸ್ವಾತಂತ್ರ್ಯ ಮತ್ತು ಅಧಿಕಾರಗಳ ಪ್ರತ್ಯೇಕತೆಯ ತತ್ವ ಎರಡನ್ನೂ ಉಲ್ಲಂಘಿಸುತ್ತದೆ.
ಕಾಯಿದೆಯ ಸೆಕ್ಷನ್ 3(7) ರ ಅಡಿಯಲ್ಲಿ ‘ಸರ್ಚ್-ಕಮ್-ಸೆಲೆಕ್ಷನ್ ಕಮಿಟಿ’ (Search-cum-Selection Committee) ಎರಡು ಹೆಸರುಗಳ ಒಂದು ಸಮಿತಿಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.ಈ ನಿಬಂಧನೆಯು ‘ಅಧಿಕಾರಗಳ ಪ್ರತ್ಯೇಕತೆ’ ಮತ್ತು ‘ನ್ಯಾಯಾಂಗ ಸ್ವಾತಂತ್ರ್ಯ’ ತತ್ವಗಳನ್ನು ಉಲ್ಲಂಘಿಸುತ್ತದೆ.
ನ್ಯಾಯಮಂಡಳಿಗಳ ಸುಧಾರಣೆ (ತರ್ಕಬದ್ಧ ಗೊಳಿಸುವಿಕೆ ಮತ್ತು ಸೇವಾ ಷರತ್ತುಗಳು) ಕಾಯಿದೆ, 2021 ರ ಪ್ರಮುಖ ಅಂಶಗಳು:
ಕಾಯಿದೆಯಲ್ಲಿ, ನ್ಯಾಯಮಂಡಳಿಯ ವಿವಿಧ ಸದಸ್ಯರಿಗೆ ಒಂದೇ ರೀತಿಯ ಸೇವಾ ನಿಯಮಗಳು ಮತ್ತು ಷರತ್ತುಗಳನ್ನು ಒದಗಿಸಲು ಪ್ರಯತ್ನಿಸಲಾಗಿದೆ. ಇದಲ್ಲದೆ, ಮಸೂದೆಯಲ್ಲಿ, ನ್ಯಾಯಮಂಡಳಿಗಳನ್ನು ತರ್ಕಬದ್ಧಗೊಳಿಸುವ ಪ್ರಯತ್ನವಾಗಿ, ಕೆಲವು ನ್ಯಾಯಮಂಡಳಿಗಳನ್ನು ರದ್ದುಗೊಳಿಸಲು ಪ್ರಸ್ತಾಪಿಸಲಾಗಿದೆ.
ಹಿನ್ನೆಲೆ:
ಮದ್ರಾಸ್ ಬಾರ್ ಅಸೋಸಿಯೇಷನ್ ಪ್ರಕರಣ’ದಲ್ಲಿ ಕಳೆದ ವರ್ಷ ಸುಪ್ರೀಂ ಕೋರ್ಟ್ ನೀಡಿರುವ ಸೂಚನೆಗಳನ್ನು ಆಧರಿಸಿ ಈ ಬದಲಾವಣೆಗಳನ್ನು ಮಾಡಲಾಗಿದೆ.
ಪ್ರಮುಖ ಬದಲಾವಣೆಗಳು:
- ಮಸೂದೆಯು, ಅಸ್ತಿತ್ವದಲ್ಲಿರುವ ಕೆಲವು ಮೇಲ್ಮನವಿ ನ್ಯಾಯಿಕ ಸಂಸ್ಥೆಗಳನ್ನು ವಿಸರ್ಜಿಸಲಾಗುವುದು, ಮತ್ತು ಅವುಗಳ ಕಾರ್ಯಗಳನ್ನು ಅಸ್ತಿತ್ವದಲ್ಲಿರುವ ಇತರ ನ್ಯಾಯಾಂಗ ಸಂಸ್ಥೆಗಳಿಗೆ ವರ್ಗಾಯಿಸಲು ಪ್ರಯತ್ನಿಸಲಾಗುತ್ತದೆ.
- ಈ ಮೂಲಕ, ನ್ಯಾಯಮಂಡಳಿಯ ಸದಸ್ಯರ ಅರ್ಹತೆ, ನೇಮಕಾತಿ, ಅಧಿಕಾರಾವಧಿ, ಸಂಬಳ ಮತ್ತು ಭತ್ಯೆಗಳು, ರಾಜೀನಾಮೆ, ಉಚ್ಚಾಟನೆ ಮತ್ತು ಇತರ ಸೇವಾ ಪರಿಸ್ಥಿತಿಗಳಿಗೆ ಸಂಬಂಧಿಸಿದ ನಿಯಮಗಳನ್ನು ಮಾಡಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ.
- ಇದರ ಅಡಿಯಲ್ಲಿ, ಶೋಧ ಮತ್ತು ಆಯ್ಕೆಸಮಿತಿಯ(Search-cum-selection committee) ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರವು ನ್ಯಾಯಮಂಡಳಿಯ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಲು ಅವಕಾಶ ಕಲ್ಪಿಸಲಾಗಿದೆ.
- ಅದರ ನಿಬಂಧನೆಗಳ ಪ್ರಕಾರ, ಸಮಿತಿಯ ಅಧ್ಯಕ್ಷತೆಯನ್ನು ಭಾರತದ ಮುಖ್ಯ ನ್ಯಾಯಮೂರ್ತಿ ಅಥವಾ ಅವರು ನಾಮನಿರ್ದೇಶನ ಮಾಡಿದ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ವಹಿಸಲಿದ್ದಾರೆ.
- ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿಗಳಿಗೆ (State Tribunals), ಪ್ರತ್ಯೇಕ ‘ಶೋಧನಾ ಸಮಿತಿ’ ಇರುತ್ತದೆ.
- ಕೇಂದ್ರ ಸರ್ಕಾರವು ‘ಶೋಧ ಮತ್ತು ಆಯ್ಕೆ ಸಮಿತಿಗಳ’ ಸಲಹೆಗಳ ಮೇಲೆ ‘ಆದ್ಯತೆಯ’ ನಿರ್ಧಾರವನ್ನು ಮೂರು ತಿಂಗಳಲ್ಲಿ ತೆಗೆದುಕೊಳ್ಳಬೇಕು.
ಅಧಿಕಾರಾವಧಿ:
ನ್ಯಾಯಮಂಡಳಿಯ ಅಧ್ಯಕ್ಷರು 4 ವರ್ಷಗಳ ಅವಧಿಗೆ ಅಥವಾ ಅವರು 70 ವರ್ಷ ತುಂಬುವವರೆಗೆ, ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಅಧಿಕಾರದಲ್ಲಿರುತ್ತಾರೆ. ನ್ಯಾಯಮಂಡಳಿಯ ಇತರ ಸದಸ್ಯರು 4 ವರ್ಷ ಅಥವಾ 67 ವರ್ಷ ಪೂರ್ಣಗೊಳ್ಳುವವರೆಗೆ ಇಲ್ಲಿಯೂ ಕೂಡ ಯಾವುದು ಮೊದಲೋ ಅಲ್ಲಿಯವರೆಗೆ ಇವರು ತಮ್ಮ ಹುದ್ದೆಗಳಲ್ಲಿ ಸೇವೆ ಸಲ್ಲಿಸುತ್ತಾರೆ.
ಈ ಮಸೂದೆಯು ಈ ಕೆಳಕಂಡ ನ್ಯಾಯಾಧಿಕರಣಗಳ ರದ್ದು ಮಾಡುತ್ತದೆ.
ಮಸೂದೆಯ ಅಡಿಯಲ್ಲಿ, ಐದು ನ್ಯಾಯಪೀಠಗಳು – ‘ಚಲನಚಿತ್ರ ಪ್ರಮಾಣೀಕರಣ ಮೇಲ್ಮನವಿ ನ್ಯಾಯಾಧೀಕರಣ’(Film Certification Appellate Tribunal), ‘ವಿಮಾನ ನಿಲ್ದಾಣಗಳ ಮೇಲ್ಮನವಿ ನ್ಯಾಯಮಂಡಳಿ’(Airports Appellate Tribunal), ‘ ‘ಸುಧಾರಿತ ತೀರ್ಪುಗಳ ಪ್ರಾಧಿಕಾರ’(Authority for Advanced Rulings), ‘ಬೌದ್ಧಿಕ ಆಸ್ತಿ ಮೇಲ್ಮನವಿ ನ್ಯಾಯಮಂಡಳಿ’(Intellectual Property Appellate Board) ಮತ್ತು ‘ಸಸ್ಯ ವೈವಿಧ್ಯಗಳ ರಕ್ಷಣೆ ಮೇಲ್ಮನವಿ ನ್ಯಾಯಮಂಡಳಿ’(Plant Varieties Protection Appellate Tribunal) ಗಳನ್ನು ರದ್ದುಗೊಳಿಸಲಾಗುವುದು ಮತ್ತು ಅವುಗಳ ಕಾರ್ಯಗಳನ್ನು ಈಗಿರುವ ನ್ಯಾಯಾಂಗ ಸಂಸ್ಥೆಗಳಿಗೆ ವರ್ಗಾಯಿಸಲಾಗುವುದು.
ಮಸೂದೆಗೆ ಸಂಬಂಧಿಸಿದಂತೆ ನ್ಯಾಯಾಲಯದ ತೀರ್ಪು:
‘ಮದ್ರಾಸ್ ಬಾರ್ ಅಸೋಸಿಯೇಷನ್ VS ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲಿ, ಸುಪ್ರೀಂ ಕೋರ್ಟ್ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಗೆ ಕನಿಷ್ಠ 50 ವರ್ಷಗಳು ಮತ್ತು ನಾಲ್ಕು ವರ್ಷಗಳ ಅಧಿಕಾರ ಅವಧಿಯನ್ನು ಸೂಚಿಸುವ ನಿಬಂಧನೆಗಳನ್ನು ರದ್ದುಗೊಳಿಸಿತು.
ನ್ಯಾಯಾಲಯದ ಪ್ರಕಾರ- ಇಂತಹ ಷರತ್ತುಗಳು ಅಧಿಕಾರಗಳ ಬೇರ್ಪಡಿಕೆ ತತ್ವಗಳು, ನ್ಯಾಯಾಂಗದ ಸ್ವಾತಂತ್ರ್ಯ, ಕಾನೂನಿನ ನಿಯಮ ಮತ್ತು ಭಾರತದ ಸಂವಿಧಾನದ 14 ನೇ ವಿಧಿಯ ಉಲ್ಲಂಘನೆಯಾಗುತ್ತದೆ ಎಂದು ಹೇಳಲಾಗಿದೆ.
ಸಮಸ್ಯೆಗಳು:
ಮಸೂದೆಯು ಈ ಕೆಳಗಿನ ನಿಬಂಧನೆಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ತೀರ್ಪನ್ನು ರದ್ದುಗೊಳಿಸಲು ಪ್ರಯತ್ನಿಸುತ್ತದೆ:
- ಮಸೂದೆಯಲ್ಲಿ, 50 ವರ್ಷಗಳ ಕನಿಷ್ಠ ವಯಸ್ಸಿನ ಅವಶ್ಯಕತೆಯನ್ನು ಇನ್ನು ಇಡಲಾಗಿದೆ.
- ನ್ಯಾಯಾಧೀಕರಣದ ಅಧ್ಯಕ್ಷರು ಮತ್ತು ಸದಸ್ಯರ ಅಧಿಕಾರಾವಧಿಯು ನಾಲ್ಕು ವರ್ಷಗಳದ್ದಾಗಿರುತ್ತದೆ.
- ಪ್ರತಿ ಹುದ್ದೆಗೆ ನೇಮಕಾತಿ ಮಾಡಲು ‘ಶೋಧ ಮತ್ತು ಆಯ್ಕೆ ಸಮಿತಿಯಿಂದ’ ಎರಡು ಹೆಸರುಗಳನ್ನು ಶಿಫಾರಸು ಮಾಡಲಾಗುವುದು ಮತ್ತು ಸರ್ಕಾರವು ಮೂರು ತಿಂಗಳೊಳಗೆ ನಿರ್ಧಾರ ತೆಗೆದುಕೊಳ್ಳುವ ಅಗತ್ಯತೆಯಿದೆ.
ನ್ಯಾಯಮಂಡಳಿ/ನ್ಯಾಯಾಧಿಕರಣಗಳು ಎಂದರೇನು?
ನ್ಯಾಯಾಧಿಕರಣವು ಅರೆ-ನ್ಯಾಯಾಂಗ ಸಂಸ್ಥೆಯಾಗಿದ್ದು, ಆಡಳಿತಾತ್ಮಕ ಅಥವಾ ತೆರಿಗೆ-ಸಂಬಂಧಿತ ವಿವಾದ ಗಳಂತಹ ಸಮಸ್ಯೆಗಳನ್ನು ಪರಿಹರಿಸಲು ಇವನ್ನು ಸ್ಥಾಪಿಸಲಾಗಿದೆ. ಇದು ವಿವಾದಗಳನ್ನು ನಿರ್ಣಯಿಸುವುದು, ವಾದಿ – ಪ್ರತಿವಾದಿ ಪಕ್ಷಗಳ ನಡುವೆ ಹಕ್ಕುಗಳನ್ನು ನಿರ್ಧರಿಸುವುದು, ಆಡಳಿತಾತ್ಮಕ ನಿರ್ಧಾರ ತೆಗೆದುಕೊಳ್ಳುವುದು, ಅಸ್ತಿತ್ವದಲ್ಲಿರುವ ಆಡಳಿತಾತ್ಮಕ ನಿರ್ಧಾರವನ್ನು ಪರಿಶೀಲಿಸುವುದು ಮುಂತಾದ ಹಲವಾರು ಕಾರ್ಯಗಳನ್ನು ನಿರ್ವಹಿಸುತ್ತದೆ.
ಸಾಂವಿಧಾನಿಕ ನಿಬಂಧನೆಗಳು:
ಇವುಗಳು ಮೂಲತಃ ಸಂವಿಧಾನದ ಭಾಗವಾಗಿರಲಿಲ್ಲ.
ಸ್ವರ್ಣ ಸಿಂಗ್ ಸಮಿತಿಯ ಶಿಫಾರಸುಗಳಿಗೆ ಅನುಗುಣವಾಗಿ ಸಂವಿಧಾನದ 42 ನೇ ತಿದ್ದುಪಡಿ ಕಾಯ್ದೆಯು ಈ ನಿಬಂಧನೆಗಳನ್ನು ಪರಿಚಯಿಸಿತು.
ಈ ತಿದ್ದುಪಡಿಯು ಸಂವಿಧಾನಕ್ಕೆ ಭಾಗ XIV-A ಅನ್ನು ಸೇರಿಸಿತು, ಈ ಭಾಗವು ‘ನ್ಯಾಯಮಂಡಳಿಗಳೊಂದಿಗೆ’ ವ್ಯವಹರಿಸುತ್ತದೆ ಮತ್ತು ಸಂವಿಧಾನದ ಎರಡು ವಿಧಿಗಳನ್ನು ಒಳಗೊಂಡಿದೆ:
- ಸಂವಿಧಾನದ 323 A ವಿಧಿಯು ಆಡಳಿತಾತ್ಮಕ ನ್ಯಾಯಮಂಡಳಿಗಳೊಂದಿಗೆ ವ್ಯವಹರಿಸುತ್ತದೆ. ಇವು, ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ವ್ಯಕ್ತಿಗಳ ನೇಮಕಾತಿ ಮತ್ತು ಸೇವಾ ಪರಿಸ್ಥಿತಿಗಳಿಗೆ ಸಂಬಂಧಿಸಿದ ವಿವಾದಗಳನ್ನು ಬಗೆಹರಿಸುವ ಅರೆ-ನ್ಯಾಯಾಂಗ ಸಂಸ್ಥೆಗಳಾಗಿವೆ.
- ಸಂವಿಧಾನದ 323 B ವಿಧಿಯು ತೆರಿಗೆ, ಕೈಗಾರಿಕಾ ಮತ್ತು ಕಾರ್ಮಿಕ, ವಿದೇಶಿ ವಿನಿಮಯ, ಆಮದು ಮತ್ತು ರಫ್ತು, ಭೂ ಸುಧಾರಣೆಗಳು, ಆಹಾರ, ನಗರ ಆಸ್ತಿಯ ಮೇಲಿನ ಮಿತಿ ನಿಗದಿಪಡಿಸುವುದು, ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳಿಗೆ ಚುನಾವಣೆ, ಬಾಡಿಗೆ ಮತ್ತು ಬಾಡಿಗೆ ಹಕ್ಕುಗಳಂತಹ ಇತರ ವಿಷಯಗಳಿಗೆ ಸಂಬಂಧಿಸಿದಂತೆ ನ್ಯಾಯಮಂಡಳಿಯ ವ್ಯವಹರಿಸುತ್ತದೆ.
ವಿಷಯಗಳು: ನೇರ ಮತ್ತು ಪರೋಕ್ಷ ಕೃಷಿ ಸಬ್ಸಿಡಿಗಳು ಮತ್ತು ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದ ವಿಷಯಗಳು; ಸಾರ್ವಜನಿಕ ವಿತರಣಾ ವ್ಯವಸ್ಥೆ – ಉದ್ದೇಶಗಳು, ಕಾರ್ಯಗಳು, ಮಿತಿಗಳು, ಸುಧಾರಣೆಗಳು; ಬಫರ್ ಸ್ಟಾಕ್ ಮತ್ತು ಆಹಾರ ಭದ್ರತೆಗೆ ಸಂಬಂಧಿಸಿದ ವಿಷಯಗಳು; ತಂತ್ರಜ್ಞಾನ ಮಿಷನ್; ಪಶುಸಂಗೋಪನೆಗೆ ಸಂಬಂಧಿಸಿದ ಅರ್ಥಶಾಸ್ತ್ರ.
ನ್ಯಾಯಸಮ್ಮತ ಮತ್ತು ಪ್ರೋತ್ಸಾಹದಾಯಕ ದರ(FRP) ಎಂದರೇನು? ಅದನ್ನು ಹೇಗೆ ಪಾವತಿಸಲಾಗುತ್ತದೆ?
(What is fair and remunerative price (FRP)? How is it paid?)
ಸಂದರ್ಭ:
ಇತ್ತೀಚೆಗೆ, ಮಹಾರಾಷ್ಟ್ರ ಸರ್ಕಾರವು ಸರ್ಕಾರದ ಪ್ರಸ್ತಾವನೆಯನ್ನು ಹೊರಡಿಸಿದ್ದು, ಅದರ ಪ್ರಕಾರ ಸಕ್ಕರೆ ಕಾರ್ಖಾನೆಗಳು ಮೂಲ ನ್ಯಾಯಸಮ್ಮತ ಮತ್ತು ಪ್ರೋತ್ಸಾಹದಾಯಕ ದರ(FRP) ವನ್ನು ಎರಡು ಹಂತಗಳಲ್ಲಿ ಪಾವತಿಸಲು ಸಾಧ್ಯವಾಗುತ್ತದೆ.
- ಸರ್ಕಾರದ ಈ ಕ್ರಮವನ್ನು ಸಕ್ಕರೆ ಕಾರ್ಖಾನೆ ಮಾಲೀಕರು ಸ್ವಾಗತಿಸಿದ್ದಾರೆ. ಆದರೆ, ರೈತರು ಇದರಿಂದ ಸಂತಸಗೊಂಡಿಲ್ಲ.
ನ್ಯಾಯಸಮ್ಮತ ಮತ್ತು ಪ್ರೋತ್ಸಾಹದಾಯಕ ದರ(FRP) ಎಂದರೇನು?
- ನ್ಯಾಯಸಮ್ಮತ ಮತ್ತು ಪ್ರೋತ್ಸಾಹದಾಯಕ ದರ (Fair And Remunerative Price – FRP) ವು, ಸರ್ಕಾರವು ನಿರ್ಧರಿಸಿದ ಬೆಲೆ ಇದು ಸಕ್ಕರೆ ಕಾರ್ಖಾನೆಗಳು ರೈತರಿಂದ ಖರೀದಿಸುವ ಕಬ್ಬಿಗೆ ನೀಡುವ ಕಾನೂನು ಬದ್ಧವಾದ ಕನಿಷ್ಠ ದರವಾಗಿದೆ.
- ದೇಶದಾದ್ಯಂತ ಎಫ್‌ಆರ್‌ಪಿ ಪಾವತಿಯನ್ನು ಕಬ್ಬು ನಿಯಂತ್ರಣ ಆದೇಶ, 1966 ರಿಂದ ನಿಯಂತ್ರಿಸಲಾಗುತ್ತದೆ. ಈ ಆದೇಶದಂತೆ ಕಬ್ಬು ನುರಿಸಿದ 14 ದಿನದೊಳಗೆ ಕಡ್ಡಾಯವಾಗಿ ಹಣ ಪಾವತಿ ಮಾಡಬೇಕು.
FRP ಅನ್ನು ಹೇಗೆ ನಿರ್ಧರಿಸಲಾಗುತ್ತದೆ?
‘ನ್ಯಾಯಸಮ್ಮತ ಮತ್ತು ಲಾಭದಾಯಕ ಬೆಲೆ’ (FRP) ಕಬ್ಬಿನಿಂದ ಉತ್ಪಾದಿಸಲಾಗುವ ಸಕ್ಕರೆಯ ಮೇಲೆ ಆಧಾರಿತವಾಗಿದೆ. 2021-22 ರ ಸಕ್ಕರೆ ಋತುವಿನ ‘ನ್ಯಾಯಯುತ ಮತ್ತು ಲಾಭದಾಯಕ ಬೆಲೆ’ 10 ಶೇಕಡಾ ಮೂಲ ಚೇತರಿಕೆಯ ಆಧಾರದ ಮೇಲೆ ಪ್ರತಿ ಟನ್‌ಗೆ 2,900 ರೂ. ಎಂದು ನಿಗದಿಪಡಿಸಲಾಗಿದೆ.
- ಸಕ್ಕರೆ ಉತ್ಪಾದನೆಯು ‘ಪುಡಿಮಾಡಲಾದ ಕಬ್ಬು’ ಮತ್ತು ‘ಉತ್ಪಾದಿತ ಸಕ್ಕರೆ’ಯ ನಡುವಿನ ಅನುಪಾತವಾಗಿದೆ, ಇದನ್ನು ಶೇಕಡಾವಾರು ಪ್ರಮಾಣದಲ್ಲಿ ವ್ಯಕ್ತಪಡಿಸಲಾಗುತ್ತದೆ.
- ಹೆಚ್ಚಿನ ಸಕ್ಕರೆ ಪಡೆಯುವಿಕೆಯು, ಹೆಚ್ಚಿನ FRP ಮತ್ತು ಹೆಚ್ಚಿನ ಸಕ್ಕರೆ ಉತ್ಪಾದನೆಯಾಗುತ್ತದೆ.
FRP ಯ ಘೋಷಣೆ:
ಫೆಡರಲ್ / ಕೇಂದ್ರ ಸರ್ಕಾರವು ‘ನ್ಯಾಯಸಮ್ಮತ ಮತ್ತು ಲಾಭದಾಯಕ ಬೆಲೆ’ (FRP) ಅನ್ನು ಘೋಷಿಸುತ್ತದೆ. ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ(Commission for Agricultural Costs and Prices– CACP) ಶಿಫಾರಸುಗಳ ಆಧಾರದ ಮೇಲೆ ಪ್ರಧಾನಿ ನೇತೃತ್ವದ ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಇದನ್ನು ಘೋಷಿಸುತ್ತದೆ.
- ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಪ್ರಧಾನಮಂತ್ರಿಗಳ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತದೆ.
- ‘ನ್ಯಾಯಸಮ್ಮತ ಮತ್ತು ಲಾಭದಾಯಕ ಬೆಲೆ’ (FRP) ಯು ರಂಗರಾಜನ್ ಸಮಿತಿಯ ‘ಕಬ್ಬು ಉದ್ಯಮದ ಪುನರ್ರಚನೆ’ ವರದಿಯನ್ನು ಆಧರಿಸಿದೆ.
FRP ಯ ಪ್ರಾಮುಖ್ಯತೆ:
ಕಬ್ಬು ಬೆಳೆಯುವ ರೈತರಲ್ಲಿ ಕಬ್ಬು ಬೆಳೆ ಜನಪ್ರಿಯವಾಗಲು ಖಚಿತವಾದ ಪಾವತಿಯು (Assured payment), ಒಂದು ಪ್ರಮುಖ ಕಾರಣವಾಗಿದೆ.
- ಕಬ್ಬು ಬೆಳೆಯುವ ರೈತರಿಗೆ ಪಾವತಿ ವಿಳಂಬವು ವಾರ್ಷಿಕವಾಗಿ 15 ಪ್ರತಿಶತದವರೆಗೆ ಬಡ್ಡಿಯನ್ನು ಆಕರ್ಷಿಸಬಹುದು ಮತ್ತು ಸಕ್ಕರೆ ಆಯುಕ್ತರು ಮಿಲ್‌ಗಳ ಆಸ್ತಿಗಳನ್ನು ಲಗತ್ತಿಸುವ ಮೂಲಕ ಕಂದಾಯ ಸಂಗ್ರಹಣೆಯಲ್ಲಿ ಬಾಕಿಯಾಗಿ ಪಾವತಿಸದ ಎಫ್‌ಆರ್‌ಪಿಯನ್ನು ಮರುಪಡೆಯಬಹುದು.
ಮಹಾರಾಷ್ಟ್ರದ ಕಬ್ಬು ಬೆಳೆಗಾರರ ವಿರೋಧಕ್ಕೆ ಕಾರಣ?
- ಸರ್ಕಾರ ಪ್ರಸ್ತಾಪಿಸಿರುವ ಈ ವಿಧಾನವು ತಮ್ಮ ಆದಾಯದ ಮೇಲೆ ಪರಿಣಾಮ ಬೀರುತ್ತದೆ ಎಂಬುದು ರೈತರ ವಾದವಾಗಿದೆ. ಎಫ್‌ಆರ್‌ಪಿಯನ್ನು ಕಂತುಗಳಲ್ಲಿ ಪಾವತಿಸಲಾಗುವುದು ಮತ್ತು ಅಜ್ಞಾತ ವೇರಿಯಬಲ್‌ಗಳ ಮೇಲೆ ಅವಲಂಬಿತವಾಗಿರುತ್ತದೆ, ಅವರು ಎಂದಿನಂತೆ ಬ್ಯಾಂಕ್ ಸಾಲಗಳು ಮತ್ತು ಇತರ ವೆಚ್ಚಗಳನ್ನು ಪಾವತಿಸಬೇಕಾಗುತ್ತದೆ ಎಂದು ಅವರು ಹೇಳುತ್ತಾರೆ.
- ಅಲ್ಲದೆ, ರೈತರಿಗೆ ಹೆಚ್ಚಾಗಿ ಋತುವಿನ ಆರಂಭದಲ್ಲಿ (ಅಕ್ಟೋಬರ್-ನವೆಂಬರ್) ಹೆಚ್ಚಿನ ಮೊತ್ತದ ಅಗತ್ಯವಿರುತ್ತದೆ, ಏಕೆಂದರೆ ಅವರ ಮುಂದಿನ ಬೆಳೆ ಚಕ್ರವು ಅದರ ಮೇಲೆ ಅವಲಂಬಿತವಾಗಿರುತ್ತದೆ.
ಕಬ್ಬು:
ಕಬ್ಬು ಅತಿ ಉಪಯುಕ್ತ ಬಹುವಾರ್ಷಿಕ ದೈತ್ಯಾಕಾರದ ಹುಲ್ಲು.ಬೆಲ್ಲ ಮತ್ತು ಸಕ್ಕರೆ ಉತ್ಪಾದನೆಯಲ್ಲಿ ಬೇಕಾಗುವ ಕಚ್ಚಾ ವಸ್ತು. ಸಿಹಿ ಪದಾರ್ಥಗಳನೇಕವಿದ್ದರೂ ಮಾನವರಿಗೆ ಇಷ್ಟವಾದಂಥ ಸಿಹಿ ಪದಾರ್ಥಗಳನ್ನು ತಯಾರಿಸಲು ಬೆಲ್ಲ ಮತ್ತು ಸಕ್ಕರೆಯೇ ಮುಖ್ಯ. ಸಕ್ಕರೆ ಹೊಂದಿರುವ ಸಸ್ಯಗಳು ಹಲವು ಇವೆ. ಆದರೆ ಸಕ್ಕರೆಯ ಅಧಿಕ ಉತ್ಪನ್ನಕ್ಕೆ ಸಹಾಯಕವಾಗುವುದು ಕಬ್ಬು ಮತ್ತು ಸಕ್ಕರೆ ಬೀಟ್ ಗೆಡ್ಡೆಗಳು ಮಾತ್ರ. ತಾಳೆ, ತೆಂಗು ಮುಂತಾದ ಮರಗಳ ಹೊಂಬಾಳೆಗಳನ್ನು ಕಡಿದು, ರಸ ಶೇಖರಿಸಿ, ಅದರಿಂದಲೂ ಬೆಲ್ಲ ತಯಾರಿಸಲಾಗುತ್ತದೆಯಾದರೂ ಪರಿಮಾಣದಲ್ಲಿ ಅದು ಅತಿ ಸ್ವಲ್ಪ. ಪ್ರಪಂಚದ ಒಟ್ಟು ಸಕ್ಕರೆ ಉತ್ಪತ್ತಿಯ ಶೇ.67-68 ಭಾಗ ಕಬ್ಬಿನಿಂದಲೇ ಆಗುತ್ತದೆ.
ಸ್ಯಾಕರಮ್ ಪಂಗಡದ (ಪೋಯೇಸೀ ಕುಟುಂಬ.
- ತಾಪಮಾನ: ಬಿಸಿ ಮತ್ತು ಆರ್ದ್ರ ವಾತಾವರಣದೊಂದಿಗೆ 21-27 °C ನಡುವೆ.
- ಮಳೆಯ ಪ್ರಮಾಣ: ಸುಮಾರು 75-100 ಸೆಂ.ಮೀ.
- ಮಣ್ಣಿನ ವಿಧ: ಆಳವಾದ ಸಮೃದ್ಧ ಲೋಮಿ ಮಣ್ಣು.
- ಕಬ್ಬು ಉತ್ಪಾದಿಸುವ ಪ್ರಮುಖ ರಾಜ್ಯಗಳು: ಉತ್ತರ ಪ್ರದೇಶ > ಮಹಾರಾಷ್ಟ್ರ > ಕರ್ನಾಟಕ > ತಮಿಳುನಾಡು > ಬಿಹಾರ.
- ಕಬ್ಬು ಉತ್ಪಾದಿಸುವ ಪ್ರಮುಖ ದೇಶಗಳು:
ಬ್ರಜಿಲ್ ಭಾರತ, ಚೀನಾ, ಥೈಲೆಂಡ್ ಮತ್ತು ಪಾಕಿಸ್ತಾನ.
ವಿಷಯಗಳು: ವಿಜ್ಞಾನ ಮತ್ತು ತಂತ್ರಜ್ಞಾನ- ಬೆಳವಣಿಗೆಗಳು ಮತ್ತು ಅವುಗಳ ಅನ್ವಯಗಳು ಮತ್ತು ದೈನಂದಿನ ಜೀವನದಲ್ಲಿ ಅವುಗಳ ಪರಿಣಾಮಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು; ತಂತ್ರಜ್ಞಾನದ ದೇಶೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು.
DRDO ಮತ್ತು IIT ದೆಹಲಿಯಿಂದ ‘ಕ್ವಾಂಟಮ್ ತಂತ್ರಜ್ಞಾನದ ಪ್ರದರ್ಶನ’:
(What is quantum tech demo by DRDO and IIT Delhi all about?)
ಸಂದರ್ಭ:
ಇತ್ತೀಚೆಗೆ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (IIT) ದೆಹಲಿಯ ವಿಜ್ಞಾನಿಗಳ ಜಂಟಿ ತಂಡವು ದೇಶದಲ್ಲಿ ಮೊದಲ ಬಾರಿಗೆ 100 ಕಿ.ಮೀ.ಗೂ ಹೆಚ್ಚು ದೂರದ ‘ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಷನ್’ (QKD) ಸಂಪರ್ಕವನ್ನು ಯಶಸ್ವಿಯಾಗಿ ಪ್ರದರ್ಶಿಸಿದೆ.
ಇದರ ಪ್ರಾಮುಖ್ಯತೆ:
- ಈ ಯಶಸ್ಸಿನೊಂದಿಗೆ, ದೇಶವು ‘ಮಿಲಿಟರಿ ದರ್ಜೆಯ ಸಂವಹನ ಭದ್ರತಾ ಕೀ ಅನುಕ್ರಮವನ್ನು ಬೂಟ್‌ಸ್ಟ್ರ್ಯಾಪಿಂಗ್ ಮಾಡಲು’(Bootstrapping Military-Grade Communication Security Key Hierarchy) ‘ಸುರಕ್ಷಿತ ಕೀ ವರ್ಗಾವಣೆ’ (Secure Key Transfer) ಯ ಸ್ಥಳೀಯ ತಂತ್ರಜ್ಞಾನವನ್ನು ಪ್ರದರ್ಶಿಸಿದೆ.
- ಈ ತಂತ್ರಜ್ಞಾನವು ಸ್ಥಳೀಯ / ದೇಶೀಯ ತಂತ್ರಜ್ಞಾನದ ಬೆಂಬಲದೊಂದಿಗೆ ಸೂಕ್ತವಾದ ‘ಕ್ವಾಂಟಮ್ ಸಂವಹನ ಜಾಲ’ವನ್ನು ಯೋಜಿಸಲು ಭದ್ರತಾ ಏಜೆನ್ಸಿಗಳನ್ನು ಸಕ್ರಿಯಗೊಳಿಸುತ್ತದೆ.
‘ಕ್ವಾಂಟಮ್ ಕೀ ವಿತರಣೆ’ ಎಂದರೇನು?
ಕ್ವಾಂಟಮ್ ಕೀ ಡಿಸ್ಟ್ರಿಬ್ಯೂಷನ್ (QKD) ಕ್ವಾಂಟಮ್ ಮೆಕ್ಯಾನಿಕ್ಸ್‌ನ ವಿವಿಧ ಘಟಕಗಳನ್ನು ಬಳಸಿಕೊಂಡು ‘ಸುರಕ್ಷಿತ ಸಂವಹನ’ ವನ್ನು ಒದಗಿಸುತ್ತದೆ.
- ಈ ತಂತ್ರಜ್ಞಾನವು ಎರಡು ಪಕ್ಷಗಳಿಗೆ ಮಾತ್ರ ತಿಳಿದಿರುವ ‘ಹಂಚಿದ ಯಾದೃಚ್ಛಿಕ ರಹಸ್ಯ ಕೀ’ (Random Secret Key) ಯನ್ನು ರಚಿಸಲು ಶಕ್ತಗೊಳಿಸುತ್ತದೆ, ಆದ್ದರಿಂದ ಅವರು ಮಾತ್ರ ಸಂದೇಶಗಳನ್ನು ಎನ್‌ಕ್ರಿಪ್ಟ್ (Encrypt) ಮಾಡಲು ಮತ್ತು ಡೀಕ್ರಿಪ್ಟ್ (Decrypt) ಮಾಡಲು ಬಳಸ ಬಹುದಾಗಿದೆ. ಈ ರೀತಿಯಲ್ಲಿ ಎರಡೂ ಪಕ್ಷಗಳು ಪರಸ್ಪರ ಅತ್ಯಂತ ಸುರಕ್ಷಿತವಾಗಿ ಸಂವಹನ ನಡೆಸಬಹುದು.
ಅದರ ಕಾರ್ಯ ನಿರ್ವಹಣೆ:
ಕ್ವಾಂಟಮ್ ಕೀ ವಿತರಣೆ (QKD), ಫೈಬರ್ ಆಪ್ಟಿಕ್ ಕೇಬಲ್ ಮೂಲಕ ಒಂದು ಘಟಕದಿಂದ ಇನ್ನೊಂದಕ್ಕೆ ಲಕ್ಷಾಂತರ ಧ್ರುವೀಕೃತ ಬೆಳಕಿನ ಕಣಗಳನ್ನು (ಫೋಟಾನ್) ರವಾನಿಸುವ ಮೂಲಕ ಕಾರ್ಯನಿರ್ವಹಿಸುತ್ತದೆ.
- ಪ್ರತಿ ಫೋಟಾನ್ ಒಂದು ‘ಯಾದೃಚ್ಛಿಕ ಕ್ವಾಂಟಮ್ ಸ್ಥಿತಿ’ (Random Quantum State) ಯನ್ನು ಹೊಂದಿರುತ್ತದೆ ಮತ್ತು ಒಟ್ಟಾರೆಯಾಗಿ ಎಲ್ಲಾ ಫೋಟಾನ್‌ಗಳು ‘ಯೂನಿಟ್ ಮತ್ತು ಸೊನ್ನೆಗಳ’ (Ones and Zeros) ಒಂದು ‘ಬಿಟ್ ಸ್ಟ್ರೀಮ್’ ಅನ್ನು ರೂಪಿಸುತ್ತವೆ.
- ಫೋಟಾನ್ ತನ್ನ ರಿಸೀವರ್ ತುದಿಯನ್ನು ಸಮೀಪಿಸುತ್ತಿರುವಾಗ ‘ಬೀಮ್ ಸ್ಪ್ಲಿಟರ್’ ಮೂಲಕ ಪ್ರಯಾಣಿಸಿದಾಗ, ಈ ‘ಬೀಮ್ ಸ್ಪ್ಲಿಟರ್’ ಫೋಟಾನ್‌ಗಳನ್ನು ‘ಫೋಟಾನ್ ಕಲೆಕ್ಟರ್’ನಲ್ಲಿ ಯಾದೃಚ್ಛಿಕ ಮಾರ್ಗವನ್ನು ತೆಗೆದುಕೊಳ್ಳುವಂತೆ ಒತ್ತಾಯಿಸುತ್ತದೆ.
- ಸ್ವೀಕರಿಸುವವರು ನಂತರ ಕಳುಹಿಸಿದ ಫೋಟಾನ್‌ಗಳ ಅನುಕ್ರಮಕ್ಕೆ ಸಂಬಂಧಿಸಿದ ಡೇಟಾದೊಂದಿಗೆ ಮೂಲ ಕಳುಹಿಸುವವರಿಗೆ ಪ್ರತಿಕ್ರಿಯಿಸುತ್ತಾರೆ, ತದನಂತರ ಕಳುಹಿಸುವವರು ಈ ಪ್ರತಿಕ್ರಿಯೆಯನ್ನು ಪ್ರತಿ ಫೋಟಾನ್ ಅನ್ನು ಕಳುಹಿಸುವ ‘ಹೊರಸೂಸುವರ’ ಜೊತೆ ಹೋಲಿಸುತ್ತಾರೆ.
- ತಪ್ಪಾದ ‘ ಬೀಮ್ ಕಲೆಕ್ಟರ್’ನಲ್ಲಿನ ಫೋಟಾನ್‌ಗಳು ಪ್ರತ್ಯೇಕ ಗೊಳ್ಳುತ್ತವೆ ಮತ್ತು ‘ಬಿಟ್‌ಗಳ’ ನಿರ್ದಿಷ್ಟ ಅನುಕ್ರಮ ಮಾತ್ರ ಉಳಿದಿದೆ. ಈ ಬಿಟ್ ಅನುಕ್ರಮವನ್ನು ನಂತರ ‘ಡೇಟಾವನ್ನು ಎನ್‌ಕ್ರಿಪ್ಟ್ ಮಾಡಲು’ ಕೀಲಿಯಾಗಿ ಬಳಸಬಹುದು.
QKD ಯ ಅಭೇದ್ಯತೆಗೆ ಕಾರಣ:
QKD ಪ್ರಸರಣದ ಸಮಯದಲ್ಲಿ ಯಾವುದೇ ಅನಧಿಕೃತ ಪ್ರವೇಶವನ್ನು ಪತ್ತೆಹಚ್ಚುವ ಸಾಮರ್ಥ್ಯದಿಂದ ‘ಕ್ವಾಂಟಮ್ ಕೀ ವಿತರಣೆ’ಯ ಭದ್ರತೆಯನ್ನು ಹೆಚ್ಚಿಸಲಾಗಿದೆ. ಫೋಟಾನ್‌ನ ವಿಶಿಷ್ಟ ಮತ್ತು ದುರ್ಬಲವಾದ ಗುಣಲಕ್ಷಣಗಳಿಂದಾಗಿ, ಯಾವುದೇ ಮೂರನೇ ವ್ಯಕ್ತಿ (ಅಥವಾ ಕದ್ದಾಲಿಕೆ) ಫೋಟಾನ್ ಅನ್ನು ಯಾವುದೇ ರೀತಿಯಲ್ಲಿ ಓದಲು ಅಥವಾ ನಕಲಿಸಲು ಪ್ರಯತ್ನಿಸಿದಾಗ, ಫೋಟಾನ್‌ನ ಸ್ಥಿತಿ ಬದಲಾಗುತ್ತದೆ.
- ಫೋಟಾನ್‌ನ ಸ್ಥಾನದಲ್ಲಿನ ಬದಲಾವಣೆಯನ್ನು ಕಳುಹಿಸುವವರು ಮತ್ತು ಸ್ವೀಕರಿಸುವವರು ಸಂವಹನದ ತುದಿಗಳಲ್ಲಿ ಪತ್ತೆ ಮಾಡಲಾಗುತ್ತದೆ, ಮತ್ತು ಕೀಲಿಯನ್ನು ಹಾಳುಮಾಡಲಾಗಿದೆ ಎಂದು ತಿಳಿಸುತ್ತದೆ ಮತ್ತು ಅದನ್ನು ರದ್ದುಗೊಳಿಸಲು ಅವರಿಗೆ ಎಚ್ಚರಿಕೆ ನೀಡಲಾಗುತ್ತದೆ.
- ನಂತರ, ಹೊಸ ಕೀಲಿಯನ್ನು ರವಾನಿಸಲಾಗುತ್ತದೆ. ಇದಲ್ಲದೆ, ಹೊಸದಾಗಿ ರಚಿಸಲಾದ ಕೀಗಳು ನಿಜವಾಗಿಯೂ ಯಾದೃಚ್ಛಿಕವಾಗಿರುವುದರಿಂದ, ಭವಿಷ್ಯದ ಹ್ಯಾಕಿಂಗ್ ಪ್ರಯತ್ನಗಳಿಂದ ಅವುಗಳು ಸುರಕ್ಷಿತವಾಗಿರುತ್ತವೆ.
QKD ಯ ಅಗತ್ಯತೆ:
- ಪ್ರಸ್ತುತ ಸಂವಹನ ಜಾಲದ ಮೂಲಕ ವಿವಿಧ ನಿರ್ಣಾಯಕ ವಲಯಗಳಿಂದ ರವಾನೆಯಾಗುತ್ತಿರುವ ಡೇಟಾವನ್ನು ರಕ್ಷಿಸಲು ‘ಕ್ವಾಂಟಮ್ ಕಂಪ್ಯೂಟಿಂಗ್’ ನಲ್ಲಿನ ಕ್ಷಿಪ್ರ ಪ್ರಗತಿಯಿಂದ ಉಂಟಾಗುವ ಬೆದರಿಕೆಯನ್ನು ತಡೆಗಟ್ಟಲು QKD ಅತ್ಯಗತ್ಯವಾಗಿದೆ.
- QKD ಸ್ವದೇಶಿ ತಂತ್ರಜ್ಞಾನದ ಬೆಂಬಲದೊಂದಿಗೆ ಸೂಕ್ತವಾದ ಕ್ವಾಂಟಮ್ ಸಂವಹನ ಜಾಲವನ್ನು ಯೋಜಿಸಲು ಭದ್ರತಾ ಏಜೆನ್ಸಿಗಳನ್ನು ಸಮರ್ಥಗೊಳಿಸುತ್ತದೆ.
ವಿಷಯಗಳು: ವಿಜ್ಞಾನ ಮತ್ತು ತಂತ್ರಜ್ಞಾನ- ಬೆಳವಣಿಗೆಗಳು ಮತ್ತು ಅವುಗಳ ಅನ್ವಯಗಳು ಮತ್ತು ದೈನಂದಿನ ಜೀವನದಲ್ಲಿ ಅವುಗಳ ಪರಿಣಾಮಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು; ತಂತ್ರಜ್ಞಾನದ ದೇಶೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು.
NFT ಗಳು ಎಂದರೇನು?
(What are NFTs?)
ಸಂದರ್ಭ:
ನಾನ್-ಫಂಜಿಬಲ್ ಟೋಕನ್‌ಗಳು (Non-Fungible Token – NFT) ಈಗ ಭಾರೀ ಜನಪ್ರಿಯತೆಯನ್ನು ಗಳಿಸುತ್ತಿವೆ ಮತ್ತು ಡಿಜಿಟಲ್ ಕಲಾಕೃತಿಗಳನ್ನು ಪ್ರದರ್ಶಿಸಲು ಮತ್ತು ಮಾರಾಟ ಮಾಡಲು ಹೆಚ್ಚು ಜನಪ್ರಿಯ ಮಾರ್ಗವಾಗುತ್ತಿವೆ.
- 2015 ರಿಂದ ನಾನ್-ಫಂಜಿಬಲ್ ಟೋಕನ್‌ಗಳನ್ನು (NFT ಗಳು) ಪರಿಚಯಿಸಿದಾಗಿನಿಂದ ಶತಕೋಟಿ ಡಾಲರ್‌ಗಳನ್ನು ಖರ್ಚು ಮಾಡಲಾಗಿದೆ.
ನಾನ್ ಫಂಗಬಲ್ ಟೋಕನ್ (NFT) ಎಂದರೇನು?
NFT ಗಳು ಎಂದರೇನು?
‘ನಾನ್-ಫಂಜಿಬಲ್ ಟೋಕನ್’ (Non-Fungible Token – NFT) ಎಂಬುದು ಸಂಗೀತ, ಕಲಾಕೃತಿ, ಟ್ವೀಟ್‌ಗಳು ಮತ್ತು ಮೇಮ್‌ಗಳಂತಹ ಡಿಜಿಟಲ್ ಸ್ವತ್ತುಗಳ ಮಾಲೀಕತ್ವವನ್ನು ಸಾಬೀತುಪಡಿಸಲು ಬಳಸಬಹುದಾದ ಅನನ್ಯ, ಬದಲಿಸಲಾಗದ ಟೋಕನ್ ಆಗಿದೆ.
ಡಿಜಿಟಲ್ ರೂಪಕ್ಕೆ ಪರಿವರ್ತಿಸಬಹುದಾದ ಯಾವುದೇ ಆದರೂ ಅದು ‘ನಾನ್-ಫಂಜಿಬಲ್ ಟೋಕನ್’ (NFT) ಆಗಿರಬಹುದು.
ನಿಮ್ಮ ರೇಖಾಚಿತ್ರಗಳು, ಫೋಟೋಗಳು, ವೀಡಿಯೊಗಳು, GIF ಗಳು, ಸಂಗೀತ, ಆಟದಲ್ಲಿನ ಐಟಂಗಳು, ಸೆಲ್ಫಿಗಳು ಮತ್ತು ಟ್ವೀಟ್‌ನಿಂದ ಎಲ್ಲವನ್ನೂ ‘ವರ್ಚುವಲ್ ಟೋಕನ್’ ಆಗಿ ಪರಿವರ್ತಿಸಬಹುದು, ಅಂದರೆ ‘ನಾನ್-ಫಂಜಿಬಲ್ ಟೋಕನ್’ ಗಳಾಗಿ ಪರಿವರ್ತಿಸಬಹುದು ಮತ್ತು ನಂತರ ಅವುಗಳನ್ನು ಕ್ರಿಪ್ಟೋಕರೆನ್ಸಿಗಳನ್ನು ಬಳಸಿಕೊಂಡು ಆನ್‌ಲೈನ್‌ನಲ್ಲಿ ವ್ಯಾಪಾರ ಮಾಡಬಹುದು.
ಇತರ ಡಿಜಿಟಲ್ ರೂಪಗಳಿಗೆ ಹೋಲಿಸಿದರೆ NFT ಗಳ ಅನನ್ಯತೆಗೆ ಕಾರಣಗಳು:
‘ನಾನ್-ಫಂಜಿಬಲ್ ಟೋಕನ್‌ಗಳು’ (NFT ಗಳು) ಬ್ಲಾಕ್‌ಚೈನ್ ತಂತ್ರಜ್ಞಾನದಿಂದ (ವ್ಯವಸ್ಥಿತವಾಗಿ ಮಾಹಿತಿ ಸಂಗ್ರಹಿಸುವ ಕ್ರಮ) ಬೆಂಬಲಿತವಾಗಿದೆ.
NFT ವಹಿವಾಟುಗಳನ್ನು ಬ್ಲಾಕ್‌ಚೈನ್‌ನಲ್ಲಿ ದಾಖಲಿಸಲಾಗುತ್ತದೆ. ಬ್ಲಾಕ್‌ಚೈನ್ ಡಿಜಿಟಲ್ ಸಾರ್ವಜನಿಕ ಲೆಡ್ಜರ್ ಆಗಿದೆ, ಮತ್ತು ಹೆಚ್ಚಿನ NFT ಗಳು ‘Ethereum blockchain’ ನ ಭಾಗವಾಗಿದೆ.
NFT ಗಳ ಕಾರ್ಯ ನಿರ್ವಹಣೆ:
ನಾನ್-ಫಂಜಿಬಲ್ ಟೋಕನ್‌ಗಳು (NFT ಗಳು) ಬ್ಲಾಕ್‌ಚೈನ್‌ನಲ್ಲಿ ಕಾರ್ಯನಿರ್ವಹಿಸುತ್ತವೆ ಮತ್ತು ಇವು ಬಳಕೆದಾರರಿಗೆ ಅವರ ಡಿಜಿಟಲ್ ಸ್ವತ್ತುಗಳ ಸಂಪೂರ್ಣ ಮಾಲೀಕತ್ವವನ್ನು ನೀಡುತ್ತವೆ.
- ಉದಾಹರಣೆಗೆ, ನೀವು ಸ್ಕೆಚ್ ಕಲಾವಿದರಾಗಿದ್ದರೆ ಮತ್ತು ನಿಮ್ಮ ಡಿಜಿಟಲ್ ಸ್ವತ್ತುಗಳನ್ನು NFT ಗಳಾಗಿ ಪರಿವರ್ತಿಸಿದರೆ, ನಿಮಗೆ ‘ಬ್ಲಾಕ್‌ಚೇನ್’ ನಿಂದ ಪ್ರಾಯೋಜಿತವಾದ ಮಾಲೀಕತ್ವದ ಪುರಾವೆಯನ್ನು ಒದಗಿಸಲಾಗುತ್ತದೆ.
NFT ಗಳು ಮತ್ತು ಕ್ರಿಪ್ಟೋಕರೆನ್ಸಿಗಳ ನಡುವಿನ ವ್ಯತ್ಯಾಸ:
ಕ್ರಿಪ್ಟೋಕರೆನ್ಸಿ (Cryptocurrency) ಒಂದು ರೀತಿಯ ಕರೆನ್ಸಿಯಾಗಿದೆ ಮತ್ತು ಇದು ಕನ್ವರ್ಟಿಬಲ್ ಆಗಿದೆ, ಅಂದರೆ ಅದನ್ನು ಪರಸ್ಪರ ವಿನಿಮಯ ಮಾಡಿಕೊಳ್ಳಬಹುದು.
- ಉದಾಹರಣೆಗೆ, ನೀವು ಕ್ರಿಪ್ಟೋ ಟೋಕನ್ ಅನ್ನು ಹೊಂದಿದ್ದರೆ, ಒಂದು Ethereum ಎಂದು ಹೇಳಿ, ನೀವು ಹೊಂದುವ ಮುಂದಿನ Ethereum ಸಹ ಅದೇ ಮೌಲ್ಯದ್ದಾಗಿರುತ್ತದೆ. ಆದರೆ NFT ಗಳು ಫಂಜಿಬಲ್ ಅಲ್ಲ, ಇದರರ್ಥ ಒಂದು NFT ಮೌಲ್ಯವು ಇನ್ನೊಂದಕ್ಕೆ ಸಮನಾಗಿರುವುದಿಲ್ಲ. ಪ್ರತಿಯೊಂದು ಕಲೆಯು ಇನ್ನೊಂದಕ್ಕಿಂತ ಭಿನ್ನವಾಗಿರುತ್ತದೆ, ಅದು ಇದನ್ನು ನಾನ್-ಫಂಜಿಬಲ್ ಮತ್ತು ಅನನ್ಯವಾಗಿಸುತ್ತದೆ.
NFT ಗಳನ್ನು ಖರೀದಿಸುವುದರೊಂದಿಗೆ ಸಂಬಂಧಿಸಿದ ಅಪಾಯಗಳು:
- ಇತ್ತೀಚಿನ ದಿನಗಳಲ್ಲಿ, ‘ನಾನ್ ಫಂಜಿಬಲ್ ಟೋಕನ್’ ವಂಚನೆಯ ಹಲವಾರು ಘಟನೆಗಳು ವರದಿಯಾಗಿವೆ: ನಕಲಿ ಮಾರುಕಟ್ಟೆಗಳ ಏರಿಕೆ, ಪರಿಶೀಲಿಸದ ಮಾರಾಟಗಾರರು ಸಾಮಾನ್ಯವಾಗಿ ನಿಜವಾದ ಕಲಾವಿದರಂತೆ ನಟಿಸುತ್ತಾರೆ ಮತ್ತು ಅವರ ಕಲಾಕೃತಿಗಳ ಪ್ರತಿಗಳನ್ನು ಅರ್ಧ ಬೆಲೆಗೆ ಮಾರಾಟ ಮಾಡುತ್ತಾರೆ.
- ಜೊತೆಗೆ, NFT ಗಳು ನಿಸ್ಸಂದೇಹವಾಗಿ ಪರಿಸರದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತವೆ. ವಹಿವಾಟುಗಳನ್ನು ಮೌಲ್ಯೀಕರಿಸಲು, ಕ್ರಿಪ್ಟೋ ಗಣಿಗಾರಿಕೆಯನ್ನು ಮಾಡಲಾಗುತ್ತದೆ, ಇದಕ್ಕೆ ಹೆಚ್ಚಿನ ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುವ ಹೆಚ್ಚಿನ ಶಕ್ತಿಯ ಕಂಪ್ಯೂಟರ್‌ಗಳ ಅಗತ್ಯವಿರುತ್ತದೆ, ಇದು ಅಂತಿಮವಾಗಿ ಪರಿಸರದ ಮೇಲೆ ಪರಿಣಾಮ ಬೀರುತ್ತದೆ.
ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.
ಕಾರ್ಡ್ ಬ್ಲಡ್ ಬ್ಯಾಂಕಿಂಗ್ ಮತ್ತು ಅದರ ಮಹತ್ವ.
(Umbilical Cord blood and its significance)
ಸಂದರ್ಭ:
ಇತ್ತೀಚೆಗೆ ಅಮೆರಿಕದ ಮಹಿಳೆಯೊಬ್ಬರು ‘ಹೊಕ್ಕುಳಬಳ್ಳಿಯ ರಕ್ತ’ ದ (Umbilical Cord Blood) ಕಸಿ ಮಾಡಿಸಿಕೊಂಡು ‘HIV’ಯಿಂದ ಗುಣಮುಖರಾಗಿದ್ದಾರೆ.
ಈ ಮಹಿಳೆ ಎಚ್ಐವಿಯಿಂದ ಗುಣಮುಖರಾದ ವಿಶ್ವದ ಮೂರನೇ ವ್ಯಕ್ತಿ ಮತ್ತು ಮೊದಲ ಮಹಿಳೆಯಾಗಿದ್ದಾರೆ.
HIV ಎಂದರೇನು ಮತ್ತು ಅದು ಹೇಗೆ ಹರಡುತ್ತದೆ?
ಹ್ಯೂಮನ್ ಇಮ್ಯುನೊ ಡಿಫಿಷಿಯನ್ಸಿ ವೈರಸ್ ಅಥವಾ HIV (Human Immunodeficiency Virus – HIV) ಒಂದು ಸೋಂಕಾಗಿದೆ,
ಇದು CD4 ಎಂದು ಕರೆಯಲ್ಪಡುವ ರೋಗನಿರೋಧಕ ಕೋಶಗಳನ್ನು ನಾಶಪಡಿಸುವ ಮೂಲಕ ದೇಹದ ‘ಪ್ರತಿರಕ್ಷಣಾ ವ್ಯವಸ್ಥೆ’ ಯ ಮೇಲೆ ದಾಳಿ ಮಾಡುತ್ತದೆ.
ಎಚ್‌ಐವಿ ಒಮ್ಮೆ CD4 ಕೋಶಗಳ ಮೇಲೆ ದಾಳಿ ಮಾಡಿದರೆ, ಅದು ಜೀವಕೋಶಗಳನ್ನು ಪುನರಾವರ್ತಿಸಲು ಮತ್ತು ನಾಶಪಡಿಸಲು ಪ್ರಾರಂಭಿಸುತ್ತದೆ, ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ದುರ್ಬಲಗೊಳಿಸುತ್ತದೆ ಮತ್ತು ದುರ್ಬಲಗೊಂಡ ದೇಹವನ್ನು ಪ್ರತಿರಕ್ಷಣಾ ವ್ಯವಸ್ಥೆಯ ಪ್ರಯೋಜನವನ್ನು ಪಡೆಯುವ ಕೆಲವು “ಅವಕಾಶವಾದಿ ಸೋಂಕುಗಳಿಗೆ” ಹೆಚ್ಚು ದುರ್ಬಲಗೊಳಿಸುತ್ತದೆ.
ಈ ಘಟನೆಯ ಮಹತ್ವ:
- ಎಚ್‌ಐವಿ ರೋಗಿಯೊಬ್ಬರು ಹೊಕ್ಕುಳಬಳ್ಳಿಯ ರಕ್ತ ಕಸಿ (Umbilical Cord Blood Transplant) ಯಶಸ್ವಿಯಾಗಿ ನಡೆಸಿದ ಮೊದಲ ಘಟನೆ ಇದಾಗಿದೆ. ಈ ವಿಧಾನವು ಚಿಕಿತ್ಸೆಯನ್ನು ಹೆಚ್ಚು ವ್ಯಾಪಕವಾಗಿ ಲಭ್ಯವಾಗುವಂತೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.
- ಈ ‘ಯಶಸ್ವಿ ಚಿಕಿತ್ಸೆ’ಗೆ ದಾನಿ ಮತ್ತು ಸ್ವೀಕರಿಸುವವರ ನಡುವಿನ ‘ನಿಖರ ಹೊಂದಾಣಿಕೆ’ಯ ಬದಲು ಕೇವಲ ‘ಭಾಗಶಃ ಹೊಂದಾಣಿಕೆ’ ಅಗತ್ಯವಿರುವುದರಿಂದ, ಇದು ವೈವಿಧ್ಯಮಯ ಜನಾಂಗೀಯ ಹಿನ್ನೆಲೆಯ ಜನರಿಗೆ ಹೆಚ್ಚಿನ ಚಿಕಿತ್ಸೆಯ ಆಯ್ಕೆಗಳನ್ನು ತೆರೆಯುತ್ತದೆ.
‘ಗರ್ಭನಾಳ / ಹೊಕ್ಕುಳುಬಳ್ಳಿ ರಕ್ತ’ (Cord Blood) ಎಂದರೇನು?
‘ಗರ್ಭನಾಳ ರಕ್ತ’/ಹೊಕ್ಕಳು ಬಳ್ಳಿ, ಇದನ್ನು ಸಂಕ್ಷಿಪ್ತವಾಗಿ ಕಾರ್ಡ್ ಬ್ಲಡ್ ಎಂದು ಕರೆಯಲಾಗುತ್ತದೆ, ಇದು ಮಗುವಿನ ಜನನದ ನಂತರ ಹೊಕ್ಕುಳುಬಳ್ಳಿ (Umbilical Cord) ಮತ್ತು ಜರಾಯು (ಪ್ಲೆಸಂಟಾ- Placenta)ಗಳಲ್ಲಿ ಉಳಿದಿರುವ ರಕ್ತವಾಗಿದೆ.
- ಇದು ಕೆಲವು ರೀತಿಯ ರೋಗಗಳಿಗೆ ಚಿಕಿತ್ಸೆ ನೀಡಲು ಬಳಸಬಹುದಾದ ಹೆಮಟೊಪಯಟಿಕ್ ಸ್ಟೆಮ್ ಸೆಲ್ (Hematopoietic Stem Cells)ಎಂದು ಕರೆಯಲ್ಪಡುವ ವಿಶೇಷ ಕೋಶಗಳನ್ನು ಹೊಂದಿರುತ್ತದೆ.
‘ಕಾರ್ಡ್ ಬ್ಲಡ್ ಬ್ಯಾಂಕಿಂಗ್’ ಎಂದರೇನು?
ಇದು,ಭವಿಷ್ಯದ ವೈದ್ಯಕೀಯ ಬಳಕೆಗಾಗಿ ಹೆರಿಗೆಯ ನಂತರ ಮಗುವಿನ ಗರ್ಭನಾಳ/ಹೊಕ್ಕುಳುಬಳ್ಳಿ ಮತ್ತು ಪ್ಲೆಸಂಟಾಗಳಲ್ಲಿ ಉಳಿದಿರುವ ರಕ್ತವನ್ನು ಸಂಗ್ರಹಿಸುವ ಪ್ರಕ್ರಿಯೆಯಾಗಿದೆ, ಮತ್ತು ಕಾಂಡಕೋಶಗಳ ಹಾಗೂ ಪ್ರತಿರಕ್ಷಣಾ ವ್ಯವಸ್ಥೆಯ ಇತರ ಕೋಶಗಳನ್ನು ಹೊರತೆಗೆಯುವ ಮತ್ತು ಕ್ರಯೋಜೆನಿಕ್ ಆಗಿ ಘನೀಕರಿಸುವ (freezing) ಮತ್ತು ಸಂಗ್ರಹಿಸುವ ಪ್ರಕ್ರಿಯೆಯನ್ನು ಕಾರ್ಡ್ ಬ್ಲಡ್ ಬ್ಯಾಂಕಿಂಗ್ ಎಂದು ಕರೆಯಲಾಗುತ್ತದೆ.
- ಜಾಗತಿಕವಾಗಿ, ಹೊಕ್ಕಳು ಬಳ್ಳಿಯ ರಕ್ತ ಬ್ಯಾಂಕಿಂಗ್ ಬಳಕೆಯನ್ನು ಹೆಮಟೊಲಾಜಿಕಲ್ ಕ್ಯಾನ್ಸರ್ ಮತ್ತು ಅಸ್ವಸ್ಥತೆಗಳಲ್ಲಿ ಹೆಮಟೊಪಯಟಿಕ್ ಸ್ಟೆಮ್ ಸೆಲ್ ಟ್ರಾನ್ಸ್‌ಪ್ಲಾಂಟೇಶನ್ ನ ಮೂಲವಾಗಿ ಶಿಫಾರಸು ಮಾಡಲಾಗಿದೆ.
- ಇತರ ಸಂದರ್ಭಗಳಲ್ಲಿ,ಹೊಕ್ಕಳು ಬಳ್ಳಿಯ ರಕ್ತವನ್ನು ಕಾಂಡಕೋಶಗಳ ಮೂಲವಾಗಿ ಬಳಸುವುದನ್ನು ಇನ್ನೂ ದೃಢೀಕರಿಸಲಾಗಿಲ್ಲ.
‘ಕಾರ್ಡ್ ಬ್ಲಡ್’ ನ ಸಂಭವನೀಯ ಉಪಯೋಗಗಳು:
ಹೊಕ್ಕುಳಬಳ್ಳಿಯ ದ್ರವ (Umbilical Cord) ವು ಕಾಂಡಕೋಶಗಳಿಂದ ತುಂಬಿರುತ್ತದೆ.
- ಈ ಕಾಂಡಕೋಶಗಳು ಕ್ಯಾನ್ಸರ್, ರಕ್ತಹೀನತೆಯಂತಹ ರಕ್ತದ ಅಸ್ವಸ್ಥತೆಗಳು ಮತ್ತು ದೇಹದ ರಕ್ಷಣಾ ಪ್ರಕ್ರಿಯೆಗೆ ಅಡ್ಡಿಪಡಿಸುವ ಕೆಲವು ಪ್ರತಿರಕ್ಷಣಾ ವ್ಯವಸ್ಥೆಯ ಅಸ್ವಸ್ಥತೆಗಳಿಗೆ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ.
- ಹೊಕ್ಕುಳಬಳ್ಳಿಯ ದ್ರವವು ಸಂಗ್ರಹಿಸಲು ಸುಲಭವಾಗಿದೆ ಮತ್ತು ಮೂಳೆ ಮಜ್ಜೆಯಿಂದ ಸಂಗ್ರಹಿಸಿದ್ದಕ್ಕಿಂತ 10 ಪಟ್ಟು ಹೆಚ್ಚು ಕಾಂಡಕೋಶಗಳನ್ನು ಹೊಂದಿರುತ್ತದೆ.
- ‘ಕಾರ್ಡ್ ಬ್ಲಡ್’ ನ ಕಾಂಡಕೋಶಗಳು ಸಾಂಕ್ರಾಮಿಕ ರೋಗಗಳನ್ನು ಹರಡುವ ಸಾಧ್ಯತೆ ಕಡಿಮೆ.
‘ಸ್ಟೆಮ್ ಸೆಲ್ ಬ್ಯಾಂಕಿಂಗ್’ ಗೆ ಸಂಬಂಧಿಸಿದ ಕಾಳಜಿಗಳು:
- ‘ಸ್ಟೆಮ್ ಸೆಲ್ ಬ್ಯಾಂಕಿಂಗ್’ ನ ಮಾರ್ಕೆಟಿಂಗ್ ಕಳೆದ ಕೆಲವು ದಶಕಗಳಲ್ಲಿ ಅತ್ಯಂತ ವೇಗವಾಗಿ ವಿಕಸನಗೊಂಡಿದೆ, ಆದರೆ ಅದು ಪ್ರಸ್ತುತ ತನ್ನ ಬಳಕೆಯ ಪ್ರಾಯೋಗಿಕ ಹಂತಗಳನ್ನು ಹಾದುಹೋಗುತ್ತಿದೆ. ಆದರೆ, ಕೋಶಗಳನ್ನು ಸಂರಕ್ಷಿಸುವ ಹೆಸರಿನಲ್ಲಿ ಕಂಪನಿಗಳು ಪೋಷಕರಿಂದ ದುಬಾರಿ ಶುಲ್ಕ ಸಂಗ್ರಹಿಸುತ್ತಿವೆ.
- ಇಲ್ಲಿ ಕಾಳಜಿ ಏನೆಂದರೆ, ಕಂಪನಿಗಳು ಭಾವನಾತ್ಮಕ ಮಾರ್ಕೆಟಿಂಗ್ ಮೂಲಕ ಭವಿಷ್ಯದ ಚಿಕಿತ್ಸಕ ಬಳಕೆಯ ಕುರಿತು ಹೇಳುತ್ತಾ ಅನೇಕ ವರ್ಷಗಳ ವರೆಗೆ ತಮ್ಮ ಕೋಶಗಳನ್ನು ‘ಕಾರ್ಡ್ ಬ್ಲಡ್’ ಬ್ಯಾಂಕ್ ನಲ್ಲಿ ಸಂಗ್ರಹಿಸಿಡುವಂತೆ ಪೋಷಕರ ಮನವನ್ನು ಒಲಿಸುತ್ತವೆ.
- ‘ಕಾರ್ಡ್ ಬ್ಲಡ್’ ನ ಭವಿಷ್ಯದ ಬಳಕೆಗೆ ಯಾವುದೇ ಸ್ಥಾಪಿತ ವೈಜ್ಞಾನಿಕ ಆಧಾರವಿಲ್ಲದ ಕಾರಣ, ಇದು ನೈತಿಕವಾಗಿ ಮತ್ತು ಸಾಮಾಜಿಕವಾಗಿ ಕಾಳಜಿಯ ವಿಷಯವಾಗಿದೆ.
ವಿಷಯಗಳು: ಸಂವಹನ ಜಾಲಗಳ ಮೂಲಕ ಆಂತರಿಕ ಭದ್ರತೆಗೆ ಸವಾಲು ಹಾಕುವುದು, ಆಂತರಿಕ ಭದ್ರತಾ ಸವಾಲುಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ, ಸೈಬರ್ ಭದ್ರತೆಯ ಮೂಲಭೂತ ಅಂಶಗಳು, ಅಕ್ರಮ ಹಣ ವರ್ಗಾವಣೆ ಮತ್ತು ಅದನ್ನು ತಡೆಯುವುದು.
ಅಕ್ರಮ ಹಣ ವರ್ಗಾವಣೆ ತಡೆಗಟ್ಟುವಿಕೆ ಕಾಯಿದೆ:
(Prevention of Money Laundering Act)
ಸಂದರ್ಭ:
‘ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ’ (Prevention of Money Laundering Act – PMLA) ಅಡಿಯಲ್ಲಿ ರಾಜಕಾರಣಿಗಳು, ಅವರ ಸಂಬಂಧಿಕರು ಮತ್ತು ಕಾರ್ಯಕರ್ತರ ಮೇಲೆ ಸರಣಿ ದಾಳಿಗಳು ಮತ್ತು ಬಂಧನಗಳ ವಿವಾದದ ನಂತರ, ಈ ಕಾನೂನಿನ ದುರುಪಯೋಗದ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ‘ಸುಪ್ರೀಂ ಕೋರ್ಟ್’ ಮಧ್ಯಪ್ರವೇಶಿಸುವುದು ಅನಿವಾರ್ಯವಾಗಿದೆ.
ಏನಿದು ಪ್ರಕರಣ?
- ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಅಡಿಯಲ್ಲಿ ದಾಳಿಗಳು ಮತ್ತು ಬಂಧನಗಳ ಆವರ್ತನ ಮತ್ತು ಇಂತಹ ದಾಳಿಗಳ ಸಮಯವನ್ನು ಗಮನಿಸಿದರೆ, ಕಾಯಿದೆ ಮತ್ತು ಅದರ ಏಜೆನ್ಸಿಯಾದ ಜಾರಿ ನಿರ್ದೇಶನಾಲಯದ (Enforcement Directorate) ಸ್ವಾತಂತ್ರ್ಯದ ಬಗ್ಗೆ ಆತಂಕಕಾರಿ ಪ್ರಶ್ನೆಗಳು ಉದ್ಭವಿಸುತ್ತಿವೆ.
- ಕೆಲವು ಕಾರ್ಯಕರ್ತರ ಪ್ರಕಾರ, ರಾಜಕೀಯ ಮುಜುಗರದೊಂದಿಗೆ ವಿರೋಧ ಪಕ್ಷಗಳ ಮೇಲೆ ದಾಳಿ ಮಾಡಲು ಪಿಎಂಎಲ್‌ಎ ಮತ್ತು ಜಾರಿ ನಿರ್ದೇಶನಾಲಯವನ್ನು ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ.
ಪ್ರಮುಖ ಆರೋಪಗಳು:
- ಸ್ವಭಾವತಃ ಗಂಭೀರ ಸ್ವರೂಪದ ಈ ಕಾನೂನನ್ನು ಸಾಮಾನ್ಯ ಅಪರಾಧ ಪ್ರಕರಣಗಳಲ್ಲಿ ಬಳಸಲಾಗುತ್ತಿದೆ.
- ಪಾರದರ್ಶಕತೆ ಮತ್ತು ಸ್ಪಷ್ಟತೆಯ ಕೊರತೆ: ಎನ್‌ಫೋರ್ಸ್‌ಮೆಂಟ್ ಕೇಸ್ ಮಾಹಿತಿ ವರದಿ (Enforcement Case Information Report – ECIR) – ಇದು ಎಫ್‌ಐಆರ್‌ಗೆ ಸಮನಾಗಿರುತ್ತದೆ – ಇದನ್ನು “ಆಂತರಿಕ ದಾಖಲೆ” ಎಂದು ಪರಿಗಣಿಸಲಾಗುತ್ತದೆ ಮತ್ತು ಇದನ್ನು ಆರೋಪಿಗೆ ನೀಡಲಾಗುವುದಿಲ್ಲ.
ಹಣ ವರ್ಗಾವಣೆ (Money Laundering) ಎಂದರೇನು?
ಮನಿ ಲಾಂಡರಿಂಗ್ ಅನ್ನು ‘ಮಾದಕ ವಸ್ತು ಕಳ್ಳಸಾಗಣೆ ಅಥವಾ ಭಯೋತ್ಪಾದಕ ಹಣಕಾಸಿನಂತಹ ಅಪರಾಧ ಚಟುವಟಿಕೆಗಳ ಮೂಲಕ ಉತ್ಪತ್ತಿಯಾಗುವ ಹಣವನ್ನು ಕಾನೂನುಬದ್ಧ ಮೂಲದಿಂದ ಬಂದ ಹಣವಾಗಿ ಪರಿವರ್ತಿಸುವ ಕಾನೂನುಬಾಹಿರ ಪ್ರಕ್ರಿಯೆ’ ಎಂದು ವ್ಯಾಖ್ಯಾನಿಸಲಾಗಿದೆ.
ಅಪರಾಧ ಚಟುವಟಿಕೆಗಳಿಂದ ಗಳಿಸಿದ ಹಣವನ್ನು ‘ಕೊಳಕು’ (Dirty) ಎಂದು ಪರಿಗಣಿಸಲಾಗುತ್ತದೆ ಮತ್ತು ‘ಲಾಂಡರಿಂಗ್ ಪ್ರಕ್ರಿಯೆ’ ಈ ಹಣವನ್ನು ಶುದ್ಧಗೊಳಿಸುತ್ತದೆ.
ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ ಕುರಿತು:
ಅಕ್ರಮ ಹಣ ವರ್ಗಾವಣೆಯನ್ನು (ವಿಯೆನ್ನಾ ಒಪ್ಪಂದ ಸೇರಿದಂತೆ) ತಡೆಗಟ್ಟಲು ಭಾರತದ ಜಾಗತಿಕ ಬದ್ಧತೆಗೆ ಪ್ರತಿಕ್ರಿಯೆಯಾಗಿ ‘ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (Prevention of Money Laundering Act – PMLA)’ ಜಾರಿಗೊಳಿಸಲಾಗಿದೆ.
ಕಾಯಿದೆಯ ಉದ್ದೇಶಗಳು: 2002 ರಲ್ಲಿ ‘ಅಕ್ರಮ ಹಣ ವರ್ಗಾವಣೆ ತಡೆ ಕಾಯಿದೆ’ (PMLA) ಯನ್ನು ರೂಪಿಸಲಾಯಿತು ಮತ್ತು ಇದು 2005 ರಲ್ಲಿ ಜಾರಿಗೆ ಬಂದಿತು. ಇದು ಮನಿ ಲಾಂಡರಿಂಗ್ (ಕಪ್ಪು ಹಣವನ್ನು ಬಿಳಿಯಾಗಿ(ಕಾನೂನುಬದ್ಧ ಹಣವಾಗಿ) ಪರಿವರ್ತಿಸುವ ಪ್ರಕ್ರಿಯೆ) ಅನ್ನು ತಡೆಗಟ್ಟಲು ಮತ್ತು ಮನಿ ಲಾಂಡರಿಂಗ್ ಮೂಲಕ ಸಂಪಾದಿಸಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ನಿಬಂಧನೆಗಳನ್ನು ಮಾಡಲು ಪ್ರಯತ್ನಿಸುತ್ತದೆ.
PMLA ಯು ಮುಖ್ಯವಾಗಿ ಮೂರು ಉದ್ದೇಶಗಳನ್ನು ಹೊಂದಿದೆ:
- ಅಕ್ರಮ ಹಣ ವರ್ಗಾವಣೆಯನ್ನು ತಡೆಗಟ್ಟುವುದು ಮತ್ತು ನಿಯಂತ್ರಿಸುವುದು.
- ಲಪಟಾಯಿಸಿದ ಹಣದಿಂದ ಪಡೆದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಮತ್ತು ವಶ ಪಡಿಸಿಕೊಳ್ಳುವುದು.
- ಭಾರತದಲ್ಲಿ ಮನಿ ಲಾಂಡರಿಂಗ್‌ಗೆ ಸಂಬಂಧಿಸಿದ ಯಾವುದೇ ಇತರ ಸಮಸ್ಯೆಯೊಂದಿಗೆ ವ್ಯವಹರಿಸುವುದು.
ವಿವಾದ ಪರಿಹಾರ:
- ಈ ಕಾಯಿದೆಯ ಅಡಿಯಲ್ಲಿ, ‘ತೀರ್ಪು ನೀಡುವ ಪ್ರಾಧಿಕಾರ’ವನ್ನು ಕೇಂದ್ರ ಸರ್ಕಾರವು ನೇಮಿಸುತ್ತದೆ. ಈ ಪ್ರಾಧಿಕಾರವು ಲಗತ್ತಿಸಲಾದ ಅಥವಾ ಮುಟ್ಟುಗೋಲು ಹಾಕಿಕೊಂಡ ಆಸ್ತಿಯು ‘ಮನಿ ಲಾಂಡರಿಂಗ್’ಗೆ ಸಂಬಂಧಿಸಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ.
- ತೀರ್ಪು ನೀಡುವ ಪ್ರಾಧಿಕಾರವು ‘ಸಿವಿಲ್ ಪ್ರೊಸೀಜರ್ ಕೋಡ್, 1908’ ಮೂಲಕ ನಿಗದಿಪಡಿಸಿದ ಕಾರ್ಯವಿಧಾನಕ್ಕೆ ಬದ್ಧವಾಗಿರುವುದಿಲ್ಲ ಆದರೆ ನೈಸರ್ಗಿಕ ನ್ಯಾಯದ ತತ್ವಗಳಿಂದ ಮಾರ್ಗದರ್ಶಿಸಲ್ಪಡುತ್ತದೆ ಮತ್ತು PMLA ಯ ಇತರ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ.
ಮೇಲ್ಮನವಿ ನ್ಯಾಯಮಂಡಳಿ: ಸರ್ಕಾರದಿಂದ ನೇಮಕಗೊಂಡ ಮೇಲ್ಮನವಿ ನ್ಯಾಯಮಂಡಳಿಯು ತೀರ್ಪು ನೀಡುವ ಪ್ರಾಧಿಕಾರದ ಆದೇಶಗಳ ವಿರುದ್ಧ ಮೇಲ್ಮನವಿಗಳನ್ನು ವಿಚಾರಣೆ ಮಾಡಲು ಅಧಿಕಾರವನ್ನು ಹೊಂದಿದೆ. ನ್ಯಾಯಮಂಡಳಿಯ ಆದೇಶಗಳ ವಿರುದ್ಧ ಸೂಕ್ತ ಹೈಕೋರ್ಟ್ ನಲ್ಲಿ ಮೇಲ್ಮನವಿ ಸಲ್ಲಿಸಬಹುದು.
ವಿಶೇಷ ನ್ಯಾಯಾಲಯ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ, 2002 (ಪಿಎಂಎಲ್‌ಎ) ಅಡಿಯಲ್ಲಿ, ಕೇಂದ್ರ ಸರ್ಕಾರದಿಂದ ವಿಶೇಷ ನ್ಯಾಯಾಲಯ ಸ್ಥಾಪನೆಗೆ ಅವಕಾಶ ಕಲ್ಪಿಸಲಾಗಿದೆ.
ಅಕ್ರಮ ಹಣ ವರ್ಗಾವಣೆ ತಡೆಗಟ್ಟುವಿಕೆ (ತಿದ್ದುಪಡಿ) ಕಾಯಿದೆ, 2012:
- ತಿದ್ದುಪಡಿ ಕಾಯಿದೆಯಡಿಯಲ್ಲಿ, ಬ್ಯಾಂಕಿಂಗ್ ಕಂಪನಿ, ಹಣಕಾಸು ಸಂಸ್ಥೆ, ಮಧ್ಯವರ್ತಿ ಇತ್ಯಾದಿಗಳನ್ನು ಒಳಗೊಂಡಿರುವ ‘ವರದಿ ಮಾಡುವ ಘಟಕದ’ ಪರಿಕಲ್ಪನೆಯನ್ನು ಸಂಯೋಜಿಸಲಾಗಿದೆ.
- PMLA, 2002 ರ ಅಡಿಯಲ್ಲಿ, 5 ಲಕ್ಷದವರೆಗೆ ದಂಡವನ್ನು ವಿಧಿಸಲು ಅವಕಾಶವಿತ್ತು, ಆದರೆ ತಿದ್ದುಪಡಿ ಕಾಯಿದೆಯಿಂದ ಈ ಮೇಲಿನ ಮಿತಿಯನ್ನು ತೆಗೆದುಹಾಕಲಾಗಿದೆ.
- ತಿದ್ದುಪಡಿ ಕಾಯಿದೆಯಡಿಯಲ್ಲಿ, ಮನಿ ಲಾಂಡರಿಂಗ್ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಯಾವುದೇ ವ್ಯಕ್ತಿಯ ಆಸ್ತಿಯನ್ನು ತಾತ್ಕಾಲಿಕವಾಗಿ ಲಗತ್ತಿಸಲು ಮತ್ತು ಮುಟ್ಟುಗೋಲು ಹಾಕಿಕೊಳ್ಳಲು ಸಹ ಅವಕಾಶ ಕಲ್ಪಿಸಲಾಗಿದೆ.
ಸುಪ್ರೀಂ ಕೋರ್ಟ್ ನ ಅನಿಸಿಕೆ:
ಅಕ್ರಮ ಹಣ ವರ್ಗಾವಣೆ ತಡೆಗಟ್ಟುವಿಕೆ ಕಾಯಿದೆ (PMLA) ಯಲ್ಲಿನ ಮನಿ ಲಾಂಡರಿಂಗ್ ಅಪರಾಧದ ಪರಿಕಲ್ಪನೆಯು “ಬಹಳ ವಿಶಾಲವಾಗಿದೆ” ಎಂದು ವ್ಯಾಖ್ಯಾನಿಸುತ್ತದೆ ಮತ್ತು ಅಪರಾಧದ ಆದಾಯದೊಂದಿಗೆ ಸಂಬಂಧ ಹೊಂದಿರುವ ಯಾವುದೇ ಚಟುವಟಿಕೆಯು ಕಾನೂನಿನ ಅಡಿಯಲ್ಲಿ ಮನಿ ಲಾಂಡರಿಂಗ್ ವ್ಯಾಖ್ಯಾನಕ್ಕೆ ಒಳಪಟ್ಟಿರುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಅರ್ಜಿದಾರರ ಬೇಡಿಕೆ:
ಪಿಎಂಎಲ್‌ಎಯ ಸೆಕ್ಷನ್ 3 ಅನ್ನು ಕೇವಲ ಅಪರಾಧದ ಆದಾಯದ ಬಳಕೆ ಮತ್ತು ಕೇವಲ ಅದನ್ನು ಹೊಂದಿರುವುದು ‘ಹಣ ಲಾಂಡರಿಂಗ್’ಗೆ ಸಮನಾಗುವುದಿಲ್ಲ ಎಂಬ ಅರ್ಥದಲ್ಲಿ ಓದಬೇಕು ಎಂದು ಅರ್ಜಿದಾರರು ವಾದಿಸುತ್ತಾರೆ. ಅದರ ಅರ್ಥ ಮತ್ತು ವ್ಯಾಖ್ಯಾನವು ಬೇರೆಯೇ ಆಗಿರಬೇಕು ಮತ್ತು ಅದು ಉದ್ದೇಶವನ್ನು ಹೊಂದಿರಬೇಕು ಎಂದು ಆಗ್ರಹಿಸುತ್ತಾರೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:
ನರಸಿಂಹ ಮೆಹ್ತಾ:
- ಗುಜರಾತಿ ಸಾಹಿತ್ಯದಲ್ಲಿ ‘ನರಸಿಂಹ ಮೆಹ್ತಾ’ ಅಥವಾ ನರಸಿಂಗ್ ಮೆಹ್ತಾ ಅವರನ್ನು ಆದಿಕವಿ (ಮೊದಲ ಕವಿ) ಮತ್ತು ಭಕ್ತ ಕವಿ (ಭಕ್ತ ಕವಿ) ಎಂದು ಪರಿಗಣಿಸಲಾಗಿದೆ.
- ಅವರು 15 ನೇ ಶತಮಾನದ ಕವಿ ಮತ್ತು ಶ್ರೀಕೃಷ್ಣನ ಪರಮ ಭಕ್ತರಾಗಿದ್ದರು.
- ಅವರು ಬರೆದ ಕೀರ್ತನೆಗಳು ಆರು ಶತಮಾನಗಳ ನಂತರವೂ ಗುಜರಾತ್‌ನ ಸಾಂಸ್ಕೃತಿಕ ಜೀವನದ ಅವಿಭಾಜ್ಯ ಅಂಗವಾಗಿದೆ.
ಸುದ್ದಿಯಲ್ಲಿರಲು ಕಾರಣ:
ಇತ್ತೀಚೆಗಷ್ಟೇ ‘ಸ್ಪೈಡರ್’ / ಜೇಡದ ಜಾತಿಯೊಂದಕ್ಕೆ ನರಸಿಂಹ ಮೆಹ್ತಾ ಅವರ ಗೌರವಾರ್ಥ ನರಸಿಂಹಮೆಹತಾಯಿ (Narsinhmehtai) ಎಂದು ಹೆಸರಿಡುವ ವಿಷಯವು ವಿವಾದವಾಗಿ ಭುಗಿಲೆದ್ದಿದೆ.
- ಮೆಹ್ತಾ ಜನಿಸಿದ ಬ್ರಾಹ್ಮಣ ಸಮುದಾಯದ ನಾಗರ ಉಪ-ಜಾತಿ ಗುಂಪಿನ ಸದಸ್ಯರು ಮತ್ತು ಕವಿಯ ಅಭಿಮಾನಿಗಳು ಈ ನಾಮಕರಣವನ್ನು ವಿರೋಧಿಸಿದ್ದಾರೆ.‘ಕವಿ ನರಸಿಂಹ ಮೆಹ್ತಾ’ ಅವರ ಹೆಸರು ಈಗಾಗಲೇ ಜಗತ್ಪ್ರಸಿದ್ಧವಾಗಿದ್ದು, ಅವರ ಹೆಸರನ್ನು ಜೇಡದೊಂದಿಗೆ ಜೋಡಿಸುವ ಅಗತ್ಯವಿಲ್ಲ ಎಂದು ಅವರು ಹೇಳುತ್ತಾರೆ.
ಅಂಗಾದಿಗಳು ಯಾರು?
(Who are Angadias?)
ಅಂಗಾಡಿಯಾ ವ್ಯವಸ್ಥೆಯು ದೇಶದಲ್ಲಿ ಶತಮಾನಗಳಷ್ಟು ಹಳೆಯದಾದ ಸಮಾನಾಂತರ ಬ್ಯಾಂಕಿಂಗ್ ವ್ಯವಸ್ಥೆಯಾಗಿದೆ, ಇದರಲ್ಲಿ ವ್ಯಾಪಾರಿಗಳು ಸಾಮಾನ್ಯವಾಗಿ ‘ಅಂಗಡಿಯಾ’ ಎಂಬ ವ್ಯಕ್ತಿಯ ಮೂಲಕ ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಹಣವನ್ನು ವರ್ಗಾಯಿಸುತ್ತಾರೆ. ‘ಅಂಗಡಿಯಾ’ ಎಂದರೆ ‘ಮೆಸೆಂಜರ್’ / ಕೊರಿಯರ್(Courier).
- ಮುಂಬೈ ಮತ್ತು ಸೂರತ್ ನಡುವಿನ ‘ಆಭರಣ ವ್ಯಾಪಾರ’ದಲ್ಲಿ ‘ಅಂಗಡಿಯಾ’ಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಮುಂಬೈ ಮತ್ತು ಸೂರತ್ ಎರಡು ಪ್ರಮುಖ ವಜ್ರದ ವ್ಯಾಪಾರ ನಗರಗಳಾಗಿದ್ದು, ಮುಂಬೈ-ಸೂರತ್ ಮಾರ್ಗವು ಅತ್ಯಂತ ಜನಪ್ರಿಯ ಮಾರ್ಗವಾಗಿದೆ.
- ಈ ವ್ಯವಹಾರದಲ್ಲಿ ಒಳಗೊಂಡಿರುವ ನಗದು ತುಂಬಾ ದೊಡ್ಡ ಪ್ರಮಾಣದಲ್ಲಿದೆ ಮತ್ತು ಈ ಹಣವನ್ನು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ವರ್ಗಾಯಿಸುವ ಜವಾಬ್ದಾರಿಯನ್ನು ಅಂಗಾಡಿಯಾಗಳು ಹೊಂದಿದ್ದಾರೆ ಮತ್ತು ಈ ಸೇವೆಗಾಗಿ ಅವರು ಅತ್ಯಲ್ಪ ಶುಲ್ಕವನ್ನು ವಿಧಿಸುತ್ತಾರೆ.
- ಸಾಮಾನ್ಯವಾಗಿ, ಗುಜರಾತಿ, ಮಾರ್ವಾಡಿ ಮತ್ತು ಮಲ್ಬಾರಿ ಸಮುದಾಯಗಳು ಈ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ.
ಇದು ಕಾನೂನುಬದ್ಧವೇ?
ಅಂಗಾದಿಯ ವ್ಯವಸ್ಥೆಯು ಸ್ವತಃ ಕಾನೂನುಬದ್ಧವಾಗಿದ್ದರೂ, ಈ ಚಟುವಟಿಕೆಯು ಅನುಮಾನಾಸ್ಪದವಾಗಿ ಉಳಿದಿದೆ, ಏಕೆಂದರೆ ಇದನ್ನು ಕೆಲವೊಮ್ಮೆ ಲೆಕ್ಕವಿಲ್ಲದ ಹಣವನ್ನು ವರ್ಗಾಯಿಸಲು ಬಳಸಬಹುದಾಗಿದೆ.
ಪನ್ರುತಿ ಗೋಡಂಬಿ:
(Panruti Cashew)
ಪಂರುತಿ ಗೋಡಂಬಿ ಮುಖ್ಯವಾಗಿ ತಮಿಳುನಾಡಿನಲ್ಲಿ ಕಂಡುಬರುತ್ತದೆ. ಈ ಗೋಡಂಬಿ ಅದರ ರುಚಿ ಮತ್ತು ಗುಣಮಟ್ಟದಿಂದಾಗಿ ವಿಶಿಷ್ಟವಾಗಿದೆ.
ಈ ಗೋಡಂಬಿ ಗಾತ್ರದಲ್ಲಿ ಸ್ವಲ್ಪ ಚಿಕ್ಕದಾಗಿದ್ದರೂ, ಅವು ವಿಶಿಷ್ಟವಾದ ಮಾರುಕಟ್ಟೆ ಮೌಲ್ಯವನ್ನು ಹೊಂದಿವೆ. ಈ ಗೋಡಂಬಿಯನ್ನು ಸಾಮಾನ್ಯವಾಗಿ ತಮಿಳುನಾಡಿನ ಕಡಲೂರಿನ ‘ಚಿನ್ನದ ಗಣಿ’ ಎಂದು ಕರೆಯಲಾಗುತ್ತದೆ.
- ಇದನ್ನು ಸಾಮಾನ್ಯವಾಗಿ ಲ್ಯಾಟರೈಟ್ ಮತ್ತು ಕೆಂಪು ಮಣ್ಣಿನಲ್ಲಿ ಹಾಗೂ ಕರಾವಳಿಯ ಮರಳಿನಲ್ಲಿ ಬೆಳೆಸಲಾಗುತ್ತದೆ.
- ತಮಿಳುನಾಡು ಗೋಡಂಬಿ ಸಂಸ್ಕರಣೆ ಮತ್ತು ರಫ್ತುದಾರರ ಸಂಘ (TNCPEA) ‘ಪಂರುತಿ ಗೋಡಂಬಿ’ಗೆ ಭೌಗೋಳಿಕ ಸೂಚಕ (GI) ಟ್ಯಾಗ್‌ಗಾಗಿ ಅರ್ಜಿ ಸಲ್ಲಿಸಿದೆ.
ಕರಕಟ್ಟಂ ನೃತ್ಯ:
(Karakattam Dance)
- ಕರಕಟ್ಟಂ ಎಂಬುದು ತಮಿಳುನಾಡಿನ ಪುರಾತನ ಜಾನಪದ ನೃತ್ಯವಾಗಿದ್ದು, ಮಳೆದೇವತೆ ಮಾರಿಯಮ್ಮನನ್ನು ಸ್ತುತಿಸಿ ಪ್ರದರ್ಶಿಸಲಾಗುತ್ತದೆ.
- ಈ ನೃತ್ಯದ ಸಮಯದಲ್ಲಿ ಪ್ರದರ್ಶಕರು ತಮ್ಮ ತಲೆಯ ಮೇಲೆ ಮಡಕೆಯನ್ನು ಸಮತೋಲನಗೊಳಿಸುತ್ತಾರೆ.
ಸುದ್ದಿಯಲ್ಲಿರಲು ಕಾರಣ?
ಇತ್ತೀಚೆಗೆ, ಒಂದು ಸಂಘಟನೆಯು ‘ಕರಕಟ್ಟಂ’ ಅನ್ನು (ಕೆಲವು ಭಾಗಗಳಲ್ಲಿ ಕುಂಭಕಳಿ ಎಂದೂ ಕರೆಯುತ್ತಾರೆ) ಕೇರಳದ ‘ಕೃಷಿ ಕಲಾ ಪ್ರಕಾರ’ ಎಂದು ಗುರುತಿಸಬೇಕೆಂದು ಒತ್ತಾಯಿಸಿದೆ.