Print Friendly, PDF & Email

[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 16ನೇ ಫೆಬ್ರುವರಿ 2022

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ  2 :

1. ಗುಂಪು ಹತ್ಯೆ ವಿರೋಧಿ ಮಸೂದೆಗಳು.

2. ಇಸ್ಲಾಮಿಕ್ ಸಹಕಾರ ಸಂಘಟನೆ.

3. ರಷ್ಯಾ-ಉಕ್ರೇನ್ ಬಿಕ್ಕಟ್ಟು.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಸ್ವಾಮಿತ್ವ ಯೋಜನೆ.

2. ಚೀನಾ-ಸಂಬಂಧಿತ ಅಪ್ಲಿಕೇಶನ್‌ಗಳನ್ನು ಸರ್ಕಾರ ಏಕೆ ನಿಷೇಧಿಸಿದೆ?

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ಮೇಡಾರಂ ಜಾತ್ರೆ 2022.

2. ಡಾಕ್ಸಿಂಗ್.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

 ಗುಂಪು ಹತ್ಯೆ ವಿರೋಧಿ ಮಸೂದೆಗಳು:


(Anti-mob lynching bills)

ಸಂದರ್ಭ:

ಭಾರತೀಯ ದಂಡ ಸಂಹಿತೆಯ (IPC) ಅಡಿಯಲ್ಲಿ ಗುಂಪು ಹತ್ಯೆಯನ್ನು (mob lynching) ಅಪರಾಧ ಎಂದು ವ್ಯಾಖ್ಯಾನಿಸಲಾಗಿಲ್ಲ ಎಂಬ ಕೇಂದ್ರ ಸರ್ಕಾರದ ದೃಷ್ಟಿಕೋನದಿಂದಾಗಿ ಕನಿಷ್ಠ ನಾಲ್ಕು ರಾಜ್ಯಗಳು ಕಳೆದ ನಾಲ್ಕು ವರ್ಷಗಳಲ್ಲಿ ಗುಂಪು ಹತ್ಯೆಯ ವಿರುದ್ಧ ಅಂಗೀಕರಿಸಿದ ಮಸೂದೆಗಳನ್ನು ಜಾರಿಗೆ ತರುವಲ್ಲಿ ವಿಫಲವಾಗಿವೆ.

 1. ಈ ರಾಜ್ಯಗಳಲ್ಲಿ ಜಾರ್ಖಂಡ್, ರಾಜಸ್ಥಾನ, ಪಶ್ಚಿಮ ಬಂಗಾಳ ಮತ್ತು ಮಣಿಪುರ ಗಳು ಸೇರಿವೆ.

ಮಸೂದೆ ಅಂಗೀಕಾರದ ವಿಳಂಬಕ್ಕೆ ಕಾರಣಗಳು:

2019 ರಲ್ಲಿ, ರಾಜ್ಯ ಶಾಸಕಾಂಗಗಳು ಅಂಗೀಕರಿಸಿದ ಮಸೂದೆಗಳನ್ನು ರಾಜ್ಯಪಾಲರು ರಾಷ್ಟ್ರಪತಿಗಳ ಪರಿಗಣನೆಗೆ ಕಾಯ್ದಿರಿಸಿದ್ದಾರೆ ಎಂದು ಕೇಂದ್ರ ಗೃಹ ಮಂತ್ರಾಲಯವು (MHA) ಲೋಕಸಭೆಗೆ ಮಾಹಿತಿ ನೀಡಿದೆ.

 1. ಕೇಂದ್ರ ಗೃಹ ಮಂತ್ರಾಲಯವು ರಾಷ್ಟ್ರಪತಿಗಳಿಗೆ ಕಳುಹಿಸಿದ ಅಂತಹ ಶಾಸನಗಳ ಸಂದರ್ಭದಲ್ಲಿ, ಕೇಂದ್ರ ಮಂತ್ರಿಮಂಡಲ ನೀಡಿದ ಸಲಹೆಯೊಂದಿಗೆ ಅಧ್ಯಕ್ಷರು ಕಾರ್ಯ ನಿರ್ವಹಿಸಬೇಕಾಗುತ್ತದೆ.
 2. ಕೇಂದ್ರ ಗೃಹ ಮಂತ್ರಾಲಯವು ರಾಜ್ಯ ಶಾಸನಗಳನ್ನು ಮೂರು ಆಧಾರಗಳ ಮೇಲೆ ಪರಿಶೀಲಿಸುತ್ತದೆ– ಕೇಂದ್ರ ಕಾನೂನುಗಳೊಂದಿಗೆ ಅಸಮ್ಮತಿ, ರಾಷ್ಟ್ರೀಯ ಅಥವಾ ಕೇಂದ್ರ ನೀತಿಯಿಂದ ವಿಚಲನ ಮತ್ತು ಕಾನೂನು ಮತ್ತು ಸಾಂವಿಧಾನಿಕ ಸಿಂಧುತ್ವ.

 

ಇತ್ತೀಚಿನ ಗುಂಪು ಹತ್ಯೆ ಪ್ರಕರಣಗಳು:

 1. ಕಳೆದ ತಿಂಗಳು, ಅಸ್ಸಾಂನಲ್ಲಿ 23 ವರ್ಷದ ವಿದ್ಯಾರ್ಥಿ ನಾಯಕನನ್ನು ಗುಂಪೊಂದು ಹತ್ಯೆ ಮಾಡಿತ್ತು.
 2. ಅಕ್ಟೋಬರ್‌ನಲ್ಲಿ, ‘ಮೂರು ಕೃಷಿ ಕಾನೂನು’ಗಳ ವಿರುದ್ಧ ರೈತರ ಪ್ರತಿಭಟನೆಯ ಸ್ಥಳವಾದ ಸಿಂಘು ಗಡಿಯಲ್ಲಿ ಒಬ್ಬ ವ್ಯಕ್ತಿಯನ್ನು ಹೊಡೆದು ಕೊಂದು, ಅವನ ಕೈಕಾಲುಗಳನ್ನು ಕತ್ತರಿಸಿ ಸಾಯಲು ಬಿಡಲಾಯಿತು.
 3. ಆಗಸ್ಟ್‌ನಲ್ಲಿ, ಇಂದೋರ್‌ನಲ್ಲಿ ಬಳೆ ಮಾರಾಟಗಾರನೊಬ್ಬ ತನ್ನ ಗುರುತನ್ನು ಮರೆಮಾಚಿದ್ದಕ್ಕಾಗಿ ಗುಂಪೊಂದು ಥಳಿಸಿತ್ತು. ಆ ವ್ಯಕ್ತಿ ಹೇಗೋ ಬದುಕುಳಿದಿದ್ದು, ನಂತರ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
 4. ಈ ವರ್ಷದ ಮೇ ತಿಂಗಳಲ್ಲಿ, ಗುರುಗ್ರಾಮ್‌ನ 25 ವರ್ಷದ ವ್ಯಕ್ತಿಯೊಬ್ಬ ಔಷಧಿ ಖರೀದಿಸಲು ಹೊರಗೆ ಹೋಗಿದ್ದಾಗ ಅವರನ್ನು ಹತ್ಯೆ ಮಾಡಲಾಗಿತ್ತು.
 5. ಡಿಸೆಂಬರ್ 18 ರಂದು, ಅಮೃತಸರದ ಶ್ರೀ ಹರ್ಮಂದಿರ್ ಸಾಹಿಬ್ ಗುರುದ್ವಾರದಲ್ಲಿ (ಸ್ವರ್ಣಮಂದಿರ) ಸಿಖ್ ಧರ್ಮದ ಪವಿತ್ರ ಗ್ರಂಥವಾದ ಶ್ರೀ ಗುರು ಗ್ರಂಥ ಸಾಹಿಬ್ ಗೆ ಅಗೌರವ ತೋರಲು ಯತ್ನಿಸಿದ ಆರೋಪದ ಮೇಲೆ ಸಿಖ್ ಸಂಗತ್ (ಸಿಖ್ ಧರ್ಮದ ಭಕ್ತರು) ಒಬ್ಬ ವ್ಯಕ್ತಿಯನ್ನು  ಥಳಿಸಿ ಹತ್ಯೆ ಮಾಡಿದ್ದರು. ಕೊಲೆ ಮಾಡಿದ ಗುಂಪು ಹತ್ಯೆಗೀಡಾದ ವ್ಯಕ್ತಿಯು ಶ್ರೀ ಗುರು ಗ್ರಂಥ ಸಾಹಿಬ್ ಅನ್ನು ಅಪವಿತ್ರಗೊಳಿಸಲು ಪ್ರಯತ್ನಿಸುತ್ತಿದ್ದನು ಎಂದು ಆರೋಪಿಸಿದ್ದರು.

 

ಲಿಂಚಿಂಗ್ ಎಂದರೇನು?

 1. ಧರ್ಮ, ಜನಾಂಗ, ಜಾತಿ, ಲಿಂಗ, ಹುಟ್ಟಿದ ಸ್ಥಳ, ಭಾಷೆ, ಆಹಾರ ಪದ್ಧತಿಗಳು, ಲೈಂಗಿಕ ದೃಷ್ಟಿಕೋನ, ರಾಜಕೀಯ ಸಂಬಂಧ, ಜನಾಂಗೀಯತೆ ಅಥವಾ ಯಾವುದೇ ಇತರ ಸಂಬಂಧಿತ ಆಧಾರಗಳ ಮೇಲೆ ಯಾವುದೇ ಕೃತ್ಯ ಅಥವಾ ಸರಣಿಯ ಹಿಂಸಾಚಾರ ದಂತಹ ಕೃತ್ಯ/ಕೃತ್ಯಗಳಿಗೆ ಕುಮ್ಮಕ್ಕು ನೀಡುವುದು, ಸ್ವಯಂಪ್ರೇರಿತವಾಗಿ ಅಥವಾ ಯೋಜಿತವಾಗಿ, ಸಹಾಯ ಮಾಡುವುದು (ಪ್ರೋತ್ಸಾಹಿಸುವುದು) ಲಿಂಚಿಂಗ್ ಅಥವಾ ಗುಂಪು ಹತ್ಯೆ ಆಗಿದೆ.
 2. ಇದರಲ್ಲಿ, ತಪ್ಪಿತಸ್ಥನು ತನ್ನ ಅಪರಾಧಕ್ಕಾಗಿ ಅನಿಯಂತ್ರಿತ ಜನಸಮೂಹದಿಂದ ಶಿಕ್ಷೆಗೊಳಗಾಗುತ್ತಾನೆ ಅಥವಾ ಕೆಲವೊಮ್ಮೆ ಕೇವಲ ವದಂತಿಗಳ ಆಧಾರದ ಮೇಲೆ, ಅಪರಾಧ ಮಾಡದೆ ಇದ್ದರೂ ಸಹ ತಕ್ಷಣ ಶಿಕ್ಷೆಗೊಳಗಾಗುತ್ತಾನೆ, ಅಥವಾ ಅವನನ್ನು ಹೊಡೆದು ಸಾಯಿಸಲಾಗುತ್ತದೆ.

 

ಈ ಪ್ರಕರಣಗಳನ್ನು ಹೇಗೆ ನಿರ್ವಹಿಸಲಾಗುತ್ತದೆ?

ಅಸ್ತಿತ್ವದಲ್ಲಿರುವ ಭಾರತೀಯ ದಂಡ ಸಂಹಿತೆ (ಐಪಿಸಿ) ಯ ಅಡಿಯಲ್ಲಿ ಇಂತಹ ಘಟನೆಗಳಿಗೆ “ಪ್ರತ್ಯೇಕ” ವ್ಯಾಖ್ಯಾನವಿಲ್ಲ. ಹತ್ಯೆ ಘಟನೆಗಳನ್ನು ಐಪಿಸಿ ಸೆಕ್ಷನ್ 300 ಮತ್ತು 302 ರ ಅಡಿಯಲ್ಲಿ ವ್ಯವಹರಿಸಲಾಗುತ್ತದೆ.

IPC ಸೆಕ್ಷನ್ 302 ಪ್ರಕಾರ ಕೊಲೆ ಮಾಡಿದವರಿಗೆ ಮರಣದಂಡನೆ ಅಥವಾ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ ಮತ್ತು ದಂಡವನ್ನು ಸಹ ವಿಧಿಸಬಹುದಾಗಿದೆ. ಕೊಲೆ ಅಪರಾಧವು ಒಂದು ಕಾಗ್ನಿಜಬಲ್, ಜಾಮೀನು ರಹಿತ ಮತ್ತು ಸಂಯುಕ್ತವಲ್ಲದ ಅಪರಾಧವಾಗಿದೆ.

 

ಸುಪ್ರೀಮ್ ಕೋರ್ಟ್ ಮಾರ್ಗಸೂಚಿಗಳು:

 1. ಹತ್ಯೆಗೆ “ಪ್ರತ್ಯೇಕ ಅಪರಾಧ” ಸಂಹಿತೆ ಇರಬೇಕು ಮತ್ತು ವಿಚಾರಣಾ ನ್ಯಾಯಾಲಯಗಳು ಸಾಮಾನ್ಯವಾಗಿ ಗುಂಪು ಹಿಂಸಾಚಾರದ ಪ್ರಕರಣಗಳಲ್ಲಿ ಕಠಿಣ ಉದಾಹರಣೆ ನೀಡಲು ಆರೋಪಿತ ವ್ಯಕ್ತಿಗೆ ಅಥವಾ ವ್ಯಕ್ತಿಗಳ ಗುಂಪಿಗೆ ಗರಿಷ್ಠ ಶಿಕ್ಷೆಯನ್ನು ನೀಡಬೇಕು.
 2. ಗುಂಪು ಹಿಂಸೆ ಮತ್ತು ಹತ್ಯಾಕಾಂಡದ ಘಟನೆಗಳನ್ನು ತಡೆಯಲು ರಾಜ್ಯ ಸರ್ಕಾರಗಳು ಪ್ರತಿ ಜಿಲ್ಲೆಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಯನ್ನು ನೇಮಿಸಬೇಕು.
 3. ರಾಜ್ಯ ಸರ್ಕಾರಗಳು ಇತ್ತೀಚಿನ ದಿನಗಳಲ್ಲಿ ಹತ್ಯಾಕಾಂಡ ಮತ್ತು ಗುಂಪು ಹಿಂಸಾಚಾರದ ಪ್ರಕರಣಗಳು ವರದಿಯಾಗಿರುವ ಜಿಲ್ಲೆಗಳು, ಉಪ ವಿಭಾಗಗಳು ಮತ್ತು ಹಳ್ಳಿಗಳನ್ನು ಗುರುತಿಸಬೇಕು.
 4. ಲಿಂಚಿಂಗ್ ಮತ್ತು ಗುಂಪು ಹಿಂಸೆ ಸಂಬಂಧಿತ ಸಮಸ್ಯೆಗಳನ್ನು ನಿಭಾಯಿಸಲು ಕಾರ್ಯತಂತ್ರ ರೂಪಿಸಲು ಯಾವುದೇ ಅಂತರ್ ಜಿಲ್ಲಾ ಸಮನ್ವಯ ಸಮಸ್ಯೆಗಳ ಕುರಿತು ನೋಡಲ್ ಅಧಿಕಾರಿಗಳು ಡಿಜಿಪಿಯ ಗಮನಕ್ಕೆ ತರಬೇಕು.
 5. ಪ್ರತಿಯೊಬ್ಬ ಪೊಲೀಸ್ ಅಧಿಕಾರಿಯು ಜಾಗರೂಕತೆಯಿಂದ ಮಾರು ವೇಷದಲ್ಲಿ ಹಿಂಸೆಯನ್ನು ಉಂಟುಮಾಡುವ ಪ್ರವೃತ್ತಿಯನ್ನು ಹೊಂದಿರುವ ಗುಂಪುಗಳನ್ನು ಚದುರಿಸಲು ಕ್ರಮ ಕೈಗೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು.
 6. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೇಡಿಯೋ, ದೂರದರ್ಶನ ಮತ್ತು ಇತರ ಮಾಧ್ಯಮ ವೇದಿಕೆಗಳಲ್ಲಿ ಗುಂಪು ಹತ್ಯೆ ಮತ್ತು ಗುಂಪು ಹಿಂಸೆಯ ಗಂಭೀರ ಪರಿಣಾಮಗಳ ಬಗ್ಗೆ ಪ್ರಸಾರ ಮಾಡಬೇಕು.
 7. ರಾಜ್ಯ ಪೊಲೀಸರು ತೆಗೆದುಕೊಂಡ ಕ್ರಮಗಳ ಹೊರತಾಗಿಯೂ, ಹತ್ಯೆ ಅಥವಾ ಗುಂಪು ಹಿಂಸಾಚಾರದಂತಹ ಕಳವಳಕಾರಿ ಘಟನೆಗಳು ಸ್ಥಳೀಯ ಪೊಲೀಸರ ಗಮನಕ್ಕೆ ಬಂದರೆ, ನ್ಯಾಯವ್ಯಾಪ್ತಿಯ ಪೊಲೀಸ್ ಠಾಣೆಯು ತಕ್ಷಣವೇ FIR ಅನ್ನು ದಾಖಲಿಸಬೇಕು.
 8. ರಾಜ್ಯ ಸರ್ಕಾರಗಳು CRPCಯ ಸೆಕ್ಷನ್ 357 A ಯ ನಿಬಂಧನೆಗಳ ಅಡಿಯಲ್ಲಿ ಹತ್ಯೆ/ಗುಂಪು ಹತ್ಯೆಯ ಸಂತ್ರಸ್ತರಿಗೆ ಪರಿಹಾರ ಯೋಜನೆಯನ್ನು ಸಿದ್ಧಪಡಿಸಬೇಕು.
 9. ಯಾವುದೇ ಒಬ್ಬ ಪೊಲೀಸ್ ಅಧಿಕಾರಿ ಅಥವಾ ಜಿಲ್ಲಾಡಳಿತದ ಅಧಿಕಾರಿ ತನ್ನ ಕರ್ತವ್ಯವನ್ನು ನಿರ್ವಹಿಸಲು ವಿಫಲವಾದಲ್ಲಿ, ಅದನ್ನು ಉದ್ದೇಶಪೂರ್ವಕ ನಿರ್ಲಕ್ಷ್ಯದ ಕ್ರಮವೆಂದು ಪರಿಗಣಿಸಲಾಗುತ್ತದೆ.

 

ಈ ಸಮಯದ ಅವಶ್ಯಕತೆ:

 1. ಪ್ರತಿ ಬಾರಿಯೂ ಮರ್ಯಾದಾ ಹತ್ಯೆ, ದ್ವೇಷದ ಅಪರಾಧಗಳು, ಮಾಟಗಾತಿ ಹತ್ಯೆ ಅಥವಾ ಗುಂಪು ಹತ್ಯೆಯ ಪ್ರಕರಣಗಳು ವರದಿಯಾದಾಗ ಈ ಅಪರಾಧಗಳನ್ನು ಎದುರಿಸಲು ವಿಶೇಷ ಕಾನೂನಿನ ಬೇಡಿಕೆಗಳನ್ನು ಎತ್ತಲಾಗುತ್ತದೆ.
 2. ಆದರೆ, ಈ ಅಪರಾಧಗಳು ಕೊಲೆಗಳಲ್ಲದೆ ಬೇರೇನೂ ಅಲ್ಲ ಮತ್ತು ಐಪಿಸಿ ಮತ್ತು ಸಿಆರ್‌ಪಿಸಿ ಅಡಿಯಲ್ಲಿ ಈಗ ಅಸ್ತಿತ್ವದಲ್ಲಿರುವ ನಿಬಂಧನೆಗಳು ಇಂತಹ ಅಪರಾಧಗಳನ್ನು ನಿಭಾಯಿಸಲು ಸಾಕಾಗುತ್ತದೆ ಎಂಬುದು ವಾಸ್ತವವಾಗಿದೆ.
 3. ಪೂನಾವಾಲಾ ಪ್ರಕರಣದಲ್ಲಿ ನೀಡಲಾದ ಮಾರ್ಗಸೂಚಿಗಳೊಂದಿಗೆ ಸೇರಿಕೊಂಡು, ಗುಂಪು ಹತ್ಯೆಯನ್ನು ಎದುರಿಸಲು ಸರ್ಕಾರವು ಸಾಕಷ್ಟು ಶ್ರಮ ವಹಿಸುತ್ತಿದೆ. ಆದಾಗ್ಯೂ, ನಮ್ಮಲ್ಲಿ ಕೊರತೆಯಿರುವುದು ಅಸ್ತಿತ್ವದಲ್ಲಿರುವ ಕಾನೂನುಗಳ ಸರಿಯಾದ ಜಾರಿ ಮತ್ತು ಜಾರಿ ಸಂಸ್ಥೆಗಳ ಜವಾಬ್ದಾರಿಯುತ ಹೊಣೆಗಾರಿಕೆ.

 

ಈ ನಿಟ್ಟಿನಲ್ಲಿ ವಿವಿಧ ರಾಜ್ಯಗಳ ಪ್ರಯತ್ನಗಳು:

 1. ಮಣಿಪುರ ಸರ್ಕಾರವು 2018 ರಲ್ಲಿ ಗುಂಪು ಹತ್ಯಾಕಾಂಡದ ವಿರುದ್ಧ ಒಂದು ಮಸೂದೆಯನ್ನು ಮಂಡಿಸಿತು, ಇದು ಕೆಲವು ತಾರ್ಕಿಕ ಮತ್ತು ಸಂಬಂಧಿತ ನಿಬಂಧನೆಗಳನ್ನು ಒಳಗೊಂಡಿದೆ.
 2. ರಾಜಸ್ಥಾನ ಸರ್ಕಾರವು 2019 ರ ಆಗಸ್ಟ್ ನಲ್ಲಿ ಹತ್ಯಾಕಾಂಡದ ವಿರುದ್ಧ ಮಸೂದೆಯನ್ನು ಅಂಗೀಕರಿಸಿತು.
 3. ಪಶ್ಚಿಮ ಬಂಗಾಳವು ಗುಂಪು ಹತ್ಯೆಯ ವಿರುದ್ಧ ಹೆಚ್ಚು ಕಠಿಣ ನಿಬಂಧನೆಗಳನ್ನು ಹೊಂದಿರುವ ವಿಧೇಯಕವನ್ನು ಜಾರಿಗೊಳಿಸಿತು.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಇಸ್ಲಾಮಿಕ್ ಸಹಕಾರ ಸಂಘಟನೆ:


(Organization of Islamic Cooperation)

 

ಸಂದರ್ಭ:

ಇಸ್ಲಾಮಿಕ್ ಸಹಕಾರ ಸಂಘಟನೆ ಭಾರತದಲ್ಲಿನ ಇತ್ತೀಚಿನ ಬೆಳವಣಿಗೆಗಳನ್ನು ಗಮನದಲ್ಲಿಟ್ಟುಕೊಂಡು “ಭಾರತದಲ್ಲಿ ಮುಸ್ಲಿಮರ ಮೇಲಿನ ನಿರಂತರ ದಾಳಿ” ಎಂದು ಕರೆದು ಈ ಬಗ್ಗೆ ಆಳವಾದ ಕಳವಳ ವ್ಯಕ್ತಪಡಿಸಿದೆ ಮತ್ತು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿತ್ತು, ಆದರೆ,ಇಸ್ಲಾಮಿಕ್ ಸಹಕಾರ ಸಂಘಟನೆಯು (OIC) ನೀಡಿದ “ಪ್ರಚೋದಿತ ಮತ್ತು ತಪ್ಪುದಾರಿಗೆಳೆಯುವ ಹೇಳಿಕೆಯನ್ನು” ಭಾರತವು ತೀಕ್ಷ್ಣವಾಗಿ ಖಂಡಿಸಿದೆ.

 

ಏನಿದು ಪ್ರಕರಣ?

ಇತ್ತೀಚೆಗೆ, ಉತ್ತರಾಖಂಡ ರಾಜ್ಯದ ಹರಿದ್ವಾರದಲ್ಲಿ ‘ಹಿಂದುತ್ವ’ ಸಿದ್ಧಾಂತದ ಪ್ರತಿಪಾದಕರು ಮುಸ್ಲಿಮರ ಹತ್ಯಾಕಾಂಡದ ಕುರಿತು ನೀಡಿದ ಸಾರ್ವಜನಿಕ ಹೇಳಿಕೆಗಳ ಬಗ್ಗೆ ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಮುಸ್ಲಿಂ ಮಹಿಳೆಯರಿಗೆ ಕಿರುಕುಳ ನೀಡುವ ಘಟನೆಗಳನ್ನು ಉಲ್ಲೇಖಿಸಿ ಮತ್ತು ಮುಸ್ಲಿಂ ವಿದ್ಯಾರ್ಥಿನಿಯರು ಶಾಲೆಗಳಲ್ಲಿ ಹಿಜಾಬ್ ಧರಿಸುವುದನ್ನು ಕರ್ನಾಟಕ ರಾಜ್ಯದಲ್ಲಿ

ನಿಷೇಧಿಸಿರುವ ಕುರಿತು OIC ತೀವೃ ಕಳವಳ ವ್ಯಕ್ತಪಡಿಸಿದೆ.

 

ಭಾರತದ ಪ್ರತಿಕ್ರಿಯೆ:

ಭಾರತದಲ್ಲಿನ ಸಮಸ್ಯೆಗಳನ್ನು ನಮ್ಮ ಸಾಂವಿಧಾನಿಕ ಚೌಕಟ್ಟು ಮತ್ತು ಕಾರ್ಯವಿಧಾನಗಳು, ಹಾಗೆಯೇ ಪ್ರಜಾಪ್ರಭುತ್ವದ ನೀತಿ ಮತ್ತು ರಾಜಕೀಯ ವ್ಯವಸ್ಥೆಗೆ ಅನುಗುಣವಾಗಿ ಪರಿಗಣಿಸಲಾಗುತ್ತದೆ ಮತ್ತು ಪರಿಹರಿಸಲಾಗುತ್ತದೆ ಎಂದು ಭಾರತವು OIC ಗೆ ತನ್ನ ಪ್ರತಿಕ್ರಿಯೆ ನೀಡಿದೆ.

 

OIC ಮಾಡಿದ ಟೀಕೆಗಳ ಬಗ್ಗೆ ಕಳವಳಗಳು:

ಭಾರತದ ಆಂತರಿಕ ವಿಷಯಗಳ ಬಗ್ಗೆ OIC ಟೀಕೆ  ಮಾಡಿರುವುದು ಇದೇ ಮೊದಲೇನಲ್ಲ.

 1. ವಿಶ್ವಸಂಸ್ಥೆಯ 76 ನೇ ಸಾಮಾನ್ಯ ಸಭೆಯ ಸಂದರ್ಭದಲ್ಲಿ, ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನವನ್ನು ನೀಡುವ 370 ನೇ ವಿಧಿಯನ್ನು ರದ್ದುಗೊಳಿಸಿರುವ ತನ್ನ ನಿರ್ಧಾರವನ್ನು ಹಿಂತೆಗೆದುಕೊಳ್ಳುವಂತೆ OIC ಭಾರತವನ್ನು ಆಗ್ರಹಿಸಿತ್ತು.

 

ಇಸ್ಲಾಮಿಕ್ ಸಹಕಾರ ಸಂಘಟನೆಯ ಕುರಿತು:

 1. OIC,1969 ರಲ್ಲಿ ಸ್ಥಾಪಿಸಲಾದ ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು, ಪ್ರಸ್ತುತ 57 ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ.
 2. ಇದು ವಿಶ್ವಸಂಸ್ಥೆಯ ನಂತರ ಎರಡನೇ ಅತಿ ದೊಡ್ಡ ಅಂತರ್–ಸರ್ಕಾರಿ ಸಂಸ್ಥೆಯಾಗಿದೆ.
 3. ಸಂಘಟನೆಯು ಇದು “ಮುಸ್ಲಿಂ ಪ್ರಪಂಚದ ಸಾಮೂಹಿಕ ಧ್ವನಿ” ಎಂದು ಹೇಳುತ್ತದೆ, ಮತ್ತು ಇದು ಅಂತರರಾಷ್ಟ್ರೀಯ ಶಾಂತಿ ಮತ್ತು ಸೌಹಾರ್ದತೆಯನ್ನು ಉತ್ತೇಜಿಸುವ ಜೊತೆಗೆ ವಿಶ್ವದ ಮುಸ್ಲಿಂ ಸಮುದಾಯಗಳ ಹಿತಾಸಕ್ತಿಗಳನ್ನು ಕಾಪಾಡುವ ಮತ್ತು ಸಂರಕ್ಷಿಸುವ ಗುರಿಯನ್ನು ಹೊಂದಿದೆ.
 4. OIC ವಿಶ್ವಸಂಸ್ಥೆ ಮತ್ತು ಯುರೋಪಿಯನ್ ಒಕ್ಕೂಟಕ್ಕೆ ಶಾಶ್ವತ ನಿಯೋಗಗಳನ್ನು ಹೊಂದಿದೆ.
 5. ಇದರ ಶಾಶ್ವತ ಸಚಿವಾಲಯವು ಸೌದಿ ಅರೇಬಿಯಾದ ಜೆಡ್ಡಾದಲ್ಲಿದೆ.

 

ಭಾರತಕ್ಕೆ OIC ಯ ಮಹತ್ವ:

ಇತ್ತೀಚಿನ ದಿನಗಳಲ್ಲಿ ಭಾರತ ಮತ್ತು OIC ನಡುವೆ ಬೆಳೆಯುತ್ತಿರುವ ಆರ್ಥಿಕ ಮತ್ತು ಇಂಧನದ ಪರಸ್ಪರ ಅವಲಂಬನೆಯು ವಿಶೇಷವಾಗಿ ಮಹತ್ವದ್ದಾಗಿದೆ.

 1. ವೈಯಕ್ತಿಕವಾಗಿ, ಭಾರತವು OICಯ ಬಹುತೇಕ ಎಲ್ಲಾ ಸದಸ್ಯ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ವಿಶೇಷವಾಗಿ ಇತ್ತೀಚಿನ ವರ್ಷಗಳಲ್ಲಿ ಯುಎಇ ಮತ್ತು ಸೌದಿ ಅರೇಬಿಯಾದೊಂದಿಗಿನ ಸಂಬಂಧಗಳು, ಗಮನಾರ್ಹವಾಗಿ ಸುಧಾರಿಸಿದೆ.
 2. OICಯು ಭಾರತದ ಎರಡು ಹತ್ತಿರದ ನೆರೆಹೊರೆಯ ದೇಶಗಳಾದ ಬಾಂಗ್ಲಾದೇಶ ಮತ್ತು ಮಾಲ್ಡೀವ್ಸ್‌ಗಳನ್ನು ಒಳಗೊಂಡಿದೆ.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ರಷ್ಯಾ-ಉಕ್ರೇನ್ ಬಿಕ್ಕಟ್ಟು:


ಸಂದರ್ಭ:

ಫೆಬ್ರವರಿ 16 ರಂದು ರಷ್ಯಾ, ಉಕ್ರೇನ್‌ ಮೇಲೆ ದಾಳಿ ಮಾಡಬಹುದಾದ ಸಂಭಾವ್ಯ ದಿನಾಂಕವಾಗಿದೆ ಎಂದು ಯುಎಸ್ ಅಧಿಕಾರಿಗಳು ಮಾಹಿತಿ ನೀಡಿದ್ದರಿಂದ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ (Volodymyr Zelensky) ಅವರು ಫೆಬ್ರವರಿ 16 ಅನ್ನು “ರಾಷ್ಟ್ರೀಯ ಏಕತೆಯ” (a day of “national unity”) ದಿನವೆಂದು ಘೋಷಿಸಿರುವುದಾಗಿ ಹೇಳಿದ್ದಾರೆ.

 

 1. ಆದರೆ ರಷ್ಯಾ, ಉಕ್ರೇನ್ ಮೇಲೆ ಆಕ್ರಮಣ ಮಾಡುವ ಯಾವುದೇ ಯೋಜನೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ರಷ್ಯಾದ ಬೇಡಿಕೆಗಳೇನು?

 1. NATO ವಿಸ್ತರಣೆಯ ಕುರಿತ ಹಿಂದಿನ ಬದ್ಧತೆಗಳ ಅನುಷ್ಠಾನವನ್ನು ಚರ್ಚಿಸಲು ಮಾತುಕತೆ ನಡೆಸುವುದು.
 2. NATO ಪಡೆಗಳು ಸೋವಿಯತ್ ಒಕ್ಕೂಟದ ವಿಘಟನೆಯ ನಂತರ ಅಸ್ತಿತ್ವಕ್ಕೆ ಬಂದ ರಾಜ್ಯಗಳಿಂದ ಹೊರಬರುವುದು.
 3. ಉಕ್ರೇನ್‌ಗೆ NATO ಸದಸ್ಯತ್ವವನ್ನು ನೀಡಲಾಗುವುದಿಲ್ಲ ಎಂಬ ಬದ್ಧತೆಯನ್ನು NATO ಪ್ರದರ್ಶಿಸಬೇಕು.
 4. ಭವಿಷ್ಯಕ್ಕಾಗಿ ಈ ಪ್ರದೇಶದಲ್ಲಿ ಭದ್ರತಾ ಖಾತರಿಗಳು.

 

ಅಮೆರಿಕ ನೇತೃತ್ವದ ನ್ಯಾಟೋ ಬೇಡಿಕೆಗಳು:

 1. ರಷ್ಯಾ – ಉಕ್ರೇನ್ ಗಡಿಯಿಂದ ರಷ್ಯಾದ ಪಡೆಗಳು ಹಿಂದೆ ಸರಿಯಬೇಕು.
 2. ಬೆಲಾರಸ್‌ನಂತಹ ನೆರೆಯ ದೇಶಗಳಲ್ಲಿ ಸಾಮರಿಕ ಆಟಗಳನ್ನು ರಷ್ಯಾ ನಿಲ್ಲಿಸಬೇಕು.
 3. ತಾನು ಭದ್ರತಾ ಖಾತರಿಗಳನ್ನು ಚರ್ಚಿಸಲು ಸಿದ್ಧ ಎಂದು NATO ತಿಳಿಸಿದೆ, ಆದರೆ ನ್ಯಾಟೋಗೆ ಸೇರುವ ಸ್ವತಂತ್ರ ರಾಜ್ಯಗಳ ಬಗ್ಗೆ ಯಾವುದೇ ಬದ್ಧತೆಯನ್ನು ಪ್ರದರ್ಶಿಸುವುದಿಲ್ಲ – ಸ್ಪ್ಯಾನಿಷ್ ಪತ್ರಿಕೆಗೆ ಸೋರಿಕೆಯಾದ ಪತ್ರದ ಪ್ರಕಾರ.
 4. ರಷ್ಯಾವು ಉಕ್ರೇನ್‌ನ ಮೇಲೆ ಆಕ್ರಮಣ ಮಾಡುವುದಿಲ್ಲ ಎಂಬ ಖಾತರಿಯನ್ನು ನೀಡಬೇಕು- ರಷ್ಯಾ ತನಗೆ ಅಂತಹ ಯಾವುದೇ ಉದ್ದೇಶವಿಲ್ಲ ಎಂದು ಹೇಳಿದೆ – ಆದರೆ ಗಡಿಯಲ್ಲಿ ಜಮಾವಣೆಗೊಂಡ ರಷ್ಯನ್ ಸೈನಿಕ ಪಡೆಗಳು ತೀವ್ರ ಕಳವಳಕ್ಕೆ ಕಾರಣವಾಗಿದೆ.

 

ಭಾರತದ ಪ್ರಮುಖ ಕಳವಳಗಳು:

ವಿಶ್ವಯುದ್ಧದ ಸನ್ನಿವೇಶ: ಯಾವುದೇ ಸಂಘರ್ಷ- ರಷ್ಯಾ ವಿರುದ್ಧ ಯುಎಸ್ ಮತ್ತು ಅದರ ಯುರೋಪಿಯನ್ ಮಿತ್ರರಾಷ್ಟ್ರಗಳು ಕೈಗೊಳ್ಳುವ ಯಾವುದೇ ಸೈನಿಕ ಕ್ರಮಗಳು ಇಡೀ ಪ್ರಪಂಚದ ಮೇಲೆ ಆರ್ಥಿಕವಾಗಿ ಮತ್ತು ಭದ್ರತೆಯ ವಿಷಯದಲ್ಲಿ ಪರಿಣಾಮ ಬೀರುತ್ತವೆ ಮತ್ತು ಭಾರತವು ಮಾಸ್ಕೋ ಮತ್ತು ವಾಷಿಂಗ್ಟನ್ ಎರಡಕ್ಕೂ ಮೈತ್ರಿಕ ಪಾಲುದಾರನಾಗಿರುವುದರಿಂದ ಯಾವುದಾದರೂ ಒಂದು ಬಣವನ್ನು ಸೇರಿಕೊಳ್ಳಬೇಕಾಗುತ್ತದೆ, ಅಥವಾ ಎರಡೂ ಬಣಗಳ ಕಡೆಯಿಂದ ಅಸಮಾಧಾನವನ್ನು ಎದುರಿಸಲು ಸಿದ್ಧವಾಗಬೇಕಾಗುತ್ತದೆ.

 

S-400 ಸರಬರಾಜು ಮತ್ತು US ನ ವಿನಾಯಿತಿ: ರಷ್ಯಾದ S-400 ಕ್ಷಿಪಣಿ ವ್ಯವಸ್ಥೆಯನ್ನು ಭಾರತವು ಖರೀದಿಸುವ ಹಂತದಲ್ಲಿರುವುದರಿಂದ ಈ ಬಿಕ್ಕಟ್ಟು ನಿಖರವಾಗಿ ಬರುತ್ತದೆ- ಮತ್ತು ನವ ದೆಹಲಿಯು S-400 ಕ್ಷಿಪಣಿ ವ್ಯವಸ್ಥೆಯ ಖರೀದಿಯ ಮೇಲೆ ವಿಧಿಸಲಾಗುವ ಅಮೆರಿಕಾದ ನಿರ್ಬಂಧಗಳಿಂದ ವಿನಾಯತಿ ಸಿಗುವ ಆಶಯವನ್ನು ವ್ಯಕ್ತ ಪಡಿಸಿದೆ.  ಆದರೆ, ಈ ಸಂಘರ್ಷವು S-400 ಕ್ಷಿಪಣಿ ವ್ಯವಸ್ಥೆಯ ಸರಬರಾಜು ಮತ್ತು ಅದಕ್ಕೆ ಅಮೇರಿಕಾದ ಅಧ್ಯಕ್ಷೀಯ ವಿನಾಯಿತಿ ಸಿಗುವ ಎರಡೂ ಸಾಧ್ಯತೆಗಳನ್ನು ಸಂಕೀರ್ಣಗೊಳಿಸುತ್ತದೆ.

 

ಚೀನಾದ ಮೇಲಿನ ಗಮನವನ್ನು ಬೇರೆಡೆಗೆ ತಿರುಗಿಸುತ್ತದೆ: US ಮತ್ತು ಯುರೋಪ್ ಭಾರತವನ್ನು ಕೇಂದ್ರ-ಹಂತದಲ್ಲಿ ಇರಿಸುವ ತಮ್ಮ ಇಂಡೋ-ಪೆಸಿಫಿಕ್ ಕಾರ್ಯತಂತ್ರದ ಮೇಲೆ ಹೆಚ್ಚು ಗಮನಹರಿಸಿದಂತೆಯೇ ಮತ್ತು ಭಾರತವು ಚೀನಾದ ಆಕ್ರಮಣಶೀಲತೆ ಮತ್ತು ವಾಸ್ತವಿಕ ನಿಯಂತ್ರಣ ರೇಖೆಯ ಉದ್ದಕ್ಕೂ  ಭೂ-ಆಕ್ರಮಣವನ್ನು ಎದುರಿಸುತ್ತಿದೆ ಮತ್ತು ಗಡಿಯ ಎರಡೂ ಕಡೆಯಲ್ಲಿ 100,000 ಸೈನಿಕರ ಜಮಾವಣೆಯೊಂದಿಗೆ ವಿಶ್ವದ ಗಮನವನ್ನು ಸೆಳೆದಿತ್ತು ಆದರೆ ಈಗ ಪ್ರಪಂಚದ ಗಮನವು ಚೀನಾದಿಂದ ರಷ್ಯಾಕ್ಕೆ ಬದಲಾಗಿದೆ.

 

ರಷ್ಯಾ ಮತ್ತು ಚೀನಾವನ್ನು ನಿಕಟ ಗೊಳಿಸುತ್ತದೆ: ಈ ಬಿಕ್ಕಟ್ಟು ಮಾಸ್ಕೋವನ್ನು ಚೀನಾದಂತಹ ಸ್ನೇಹಿತರ ಮೇಲೆ ಹೆಚ್ಚು ಅವಲಂಬನೆ ಯಾಗುವಂತೆ ಮಾಡುತ್ತದೆ ಮತ್ತು ಭಾರತವು ಭಾಗವಾಗಿರದ ಪ್ರಾದೇಶಿಕ ಗುಂಪಿನ ರಚನೆಗೆ ಕಾರ್ಣವಾಗುತ್ತದೆ. ಈ ವಾರ ಬೀಜಿಂಗ್‌ನಲ್ಲಿ, ಭವಿಷ್ಯವು ಸ್ಪಷ್ಟವಾಗಿ ಕಾಣುತ್ತದೆ- ಭಾರತವು ಒಲಿಂಪಿಕ್ ಕ್ರೀಡಾಕೂಟಗಳ ರಾಜತಾಂತ್ರಿಕ ಮತ್ತು ರಾಜಕೀಯ ಬಹಿಷ್ಕಾರವನ್ನು ಘೋಷಿಸಿತ್ತು, ಆದರೆ ಪುಟಿನ್, ಮಧ್ಯ ಏಷ್ಯಾ ರಾಷ್ಟ್ರಗಳ ಅಧ್ಯಕ್ಷರು ಮತ್ತು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಎಲ್ಲರೂ ಬೀಜಿಂಗ್‌ನಲ್ಲಿ ಚೀನಾ ಅಧ್ಯಕ್ಷ  ಕ್ಸಿ ಜಿನ್‌ಪಿಂಗ್‌ ಗೆ ಬೆಂಬಲವಾಗಿ ನಿಂತಿದ್ದರು.

ಇಂಧನ ಬಿಕ್ಕಟ್ಟು: ಯಾವುದೇ ಸಂಘರ್ಷವು- ಯುರೋಪ್ ಗೆ ರಶಿಯಾವು ಅನಿಲ ಮತ್ತು ತೈಲ ಪೂರೈಕೆಗಳನ್ನು ಕಡಿತಗೊಳಿಸುತ್ತದೆ ಎಂದು ಚಿಂತೆ ವ್ಯಕ್ತಪಡಿಸಿವೆ- ಇದು ಇಂಧನ ಬೆಲೆಗಳ ಹೆಚ್ಚಳಕ್ಕೆ  ಕಾರಣವಾಗುತ್ತದೆ. ಈಗಿನ ಉದ್ವಿಗ್ನತೆಗಳು ಕಳೆದ ತಿಂಗಳಲ್ಲಿ ತೈಲ ಬೆಲೆಗಳಲ್ಲಿ 14% ರಷ್ಟು ಹೆಚ್ಚಳ ದೊಂದಿಗೆ ಕಚ್ಚಾತೈಲದ ಪ್ರತಿ ಬ್ಯಾರೆಲ್ ಬೆಲೆಯನ್ನು $90 ಕ್ಕಿಂತ ಹೆಚ್ಚಾಗಿಸಿವೆ ಮತ್ತು ಪರಿಸ್ಥಿತಿಯು ಸುಧಾರಿಸದಿದ್ದರೆ ಪ್ರತಿ ಬ್ಯಾರೆಲ್ ಗೆ ಕಚ್ಚಾ ತೈಲ ಬೆಲೆಯು $ 125 ತಲುಪಬಹುದು ಎಂದು ವಿಶ್ಲೇಷಕರು ಹೇಳುತ್ತಾರೆ.

 

ಏನಿದು ಸಂಘರ್ಷ/ ವಿವಾದ?

 1. ಹಿಂದಿನ ಸೋವಿಯತ್ ಒಕ್ಕೂಟದ ಭಾಗವಾಗಿದ್ದ ಉಕ್ರೇನ್ ಮತ್ತು ರಷ್ಯಾ ನಡುವಿನ ಉದ್ವಿಗ್ನತೆಗಳು 2013 ರ ಕೊನೆಯಲ್ಲಿ “ಐರೋಪ್ಯ ಒಕ್ಕೂಟದೊಂದಿಗಿನ ಐತಿಹಾಸಿಕ ರಾಜಕೀಯ ಮತ್ತು ವ್ಯಾಪಾರ ಒಪ್ಪಂದ” ದ ಮೇಲೆ ಉಲ್ಬಣಗೊಂಡವು. ಉಕ್ರೇನ್‌ನ ಅಂದಿನ ರಷ್ಯಾದ ಪರ-ಅಧ್ಯಕ್ಷ ವಿಕ್ಟರ್ ಯಾನುಕೋವಿಚ್ ಮಾತುಕತೆಗಳನ್ನು ರದ್ದುಗೊಳಿಸಿದ ನಂತರ, ರಾಜಧಾನಿ ಕೀವ್ ವಾರಗಳ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು, ಅದು ಹಿಂಸಾಚಾರಕ್ಕೆ ತಿರುಗಿತು.
 2. ನಂತರ, ಮಾರ್ಚ್ 2014 ರಲ್ಲಿ, ರಷ್ಯಾ ತನ್ನ ಹಿತಾಸಕ್ತಿಗಳನ್ನು ಮತ್ತು ರಷ್ಯನ್ ಭಾಷೆ ಮಾತನಾಡುವ ನಾಗರಿಕರ ಹಿತಾಸಕ್ತಿಗಳನ್ನು ರಕ್ಷಿಸುವ ನೆಪದಲ್ಲಿ ತನ್ನ ಪ್ರಬಲ ನಿಷ್ಠಾವಂತರ ಸಹಾಯದಿಂದ ದಕ್ಷಿಣ ಉಕ್ರೇನ್‌ನ ಸ್ವಾಯತ್ತ ಕ್ರಿಮಿಯನ್ ಪರ್ಯಾಯ ದ್ವೀಪವನ್ನು ಸ್ವಾಧೀನಪಡಿಸಿಕೊಂಡಿತು.
 3. ಸ್ವಲ್ಪ ಸಮಯದ ನಂತರ, ಉಕ್ರೇನ್‌ನ ಡೊನೆಟ್ಸ್ಕ್ ಮತ್ತು ಲುಹಾನ್ಸ್ಕ್ ಪ್ರದೇಶಗಳಲ್ಲಿ ರಷ್ಯಾದ ಪರ ಪ್ರತ್ಯೇಕತಾವಾದಿಗಳು ಕೀವ್‌ನಿಂದ ತಮ್ಮ ಸ್ವಾತಂತ್ರ್ಯವನ್ನು ಘೋಷಿಸಿದರು, ನಂತರ ತಿಂಗಳುಗಟ್ಟಲೆ ಭಾರೀ ಹೋರಾಟಗಳು ನಡೆದವು. 2015 ರಲ್ಲಿ, ಫ್ರಾನ್ಸ್ ಮತ್ತು ಜರ್ಮನಿ ಗಳ ಮಧ್ಯಸ್ತಿಕೆಯಲ್ಲಿ ‘ಮಿನ್ಸ್ಕ್’ ನಲ್ಲಿ ‘ಕೀವ್’ ಮತ್ತು ‘ಮಾಸ್ಕೋ’ ನಡುವೆ ಶಾಂತಿ ಒಪ್ಪಂದ ಏರ್ಪಟ್ಟಿತು, ಇದರ ಹೊರತಾಗಿಯೂ ‘ಉಕ್ರೇನ್’ ಮತ್ತು ‘ರಷ್ಯಾ’ ನಡುವೆ ಪದೇ ಪದೇ ಕದನ ವಿರಾಮ ಉಲ್ಲಂಘನೆ ಪ್ರಕರಣಗಳು ನಡೆಯುತ್ತಿವೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ದೇಶದ ವಿವಿಧ ಭಾಗಗಳಲ್ಲಿ ಪ್ರಮುಖ ಬೆಳೆ ಬೆಳೆ ವಿಧಾನಗಳು, ವಿವಿಧ ರೀತಿಯ ನೀರಾವರಿ ಮತ್ತು ನೀರಾವರಿ ವ್ಯವಸ್ಥೆಗಳ ಸಂಗ್ರಹಣೆ, ಕೃಷಿ ಉತ್ಪನ್ನಗಳ ಸಾಗಣೆ ಮತ್ತು ಮಾರುಕಟ್ಟೆ ಮತ್ತು ಸಮಸ್ಯೆಗಳು ಮತ್ತು ಸಂಬಂಧಿತ ಅಡೆತಡೆಗಳು; ರೈತರ ನೆರವಿನಲ್ಲಿ ಇ-ತಂತ್ರಜ್ಞಾನ.

ಸ್ವಾಮಿತ್ವ ಯೋಜನೆ:


(SWAMITVA SCHEME)

 

ಸಂದರ್ಭ:

ಸರ್ಕಾರವು ತನ್ನ ಎಲ್ಲಾ 6,00,000 ಹಳ್ಳಿಗಳ ಡಿಜಿಟಲ್ ನಕ್ಷೆಗಳನ್ನು ತಯಾರಿಸಲು ಯೋಜಿಸಿದೆ ಮತ್ತು SVAMITVA ಯೋಜನೆಯಡಿಯಲ್ಲಿ 100 ನಗರಗಳಿಗೆ ಪ್ಯಾನ್-ಇಂಡಿಯಾ 3D ನಕ್ಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಹೇಳಿದೆ.

 1. ಇಲ್ಲಿಯವರೆಗೆ ಸುಮಾರು 1,00,000 ಹಳ್ಳಿಗಳ ಡ್ರೋನ್ ಸಮೀಕ್ಷೆಗಳನ್ನು ಪೂರ್ಣಗೊಳಿಸಲಾಗಿದೆ ಮತ್ತು 77,527 ಗ್ರಾಮಗಳ ನಕ್ಷೆಗಳನ್ನು ರಾಜ್ಯಗಳಿಗೆ ಹಸ್ತಾಂತರಿಸಲಾಗಿದೆ.
 2. ಸುಮಾರು 27,000 ಗ್ರಾಮಗಳಿಗೆ ಆಸ್ತಿ ಕಾರ್ಡ್‌ (Property cards)ಗಳನ್ನು ವಿತರಿಸಲಾಗಿದೆ.

‘ಸ್ವಾಮಿತ್ವ ಯೋಜನೆ’ (SVAMITVA-ಗ್ರಾಮಗಳ ಸಮೀಕ್ಷೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ಮ್ಯಾಪಿಂಗ್ ಮಾಡುವುದು) ಯ ಅವಲೋಕನ ಮತ್ತು ಪ್ರಮುಖ ಲಕ್ಷಣಗಳು:

 1. ಈ ಯೋಜನೆಯನ್ನು ಪಂಚಾಯತಿ ರಾಜ್ ದಿನ ಅಂದರೆ (ಏಪ್ರಿಲ್ 24, 2020) ರಂದು ಪ್ರಾರಂಭಿಸಲಾಯಿತು, ಆರಂಭಿಕವಾಗಿ ಈ ಯೋಜನೆಯು ಒಂಬತ್ತು ರಾಜ್ಯಗಳನ್ನು ಮಾತ್ರ ಒಳಗೊಂಡಿತ್ತು. ಕಳೆದ ವರ್ಷ SWAMITVA ಯೋಜನೆಯನ್ನು ದೇಶದ ಎಲ್ಲ ರಾಜ್ಯಗಳಿಗೂ ವಿಸ್ತರಿಸಲಾಗಿದೆ.
 2. ಯೋಜನೆಯಡಿ, ಡ್ರೋನ್‌ಗಳಂತಹ ಸುಧಾರಿತ ತಂತ್ರಜ್ಞಾನಗಳ ಬಳಕೆಯ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿನ ವಸತಿ ಜಮೀನುಗಳ ಭೂ ಮಾಲೀಕತ್ವವನ್ನು ನಕ್ಷೆ ಮಾಡಲಾಗುತ್ತದೆ.
 3. ಈ ಯೋಜನೆಯು ಭಾರತದಲ್ಲಿ ‘ಆಸ್ತಿ ದಾಖಲೆ ನಿರ್ವಹಣೆ’ಯಲ್ಲಿ ಕ್ರಾಂತಿಯನ್ನುಂಟು ಮಾಡುವ ಗುರಿಯನ್ನು ಹೊಂದಿದೆ.
 4. ಈ ಯೋಜನೆಯನ್ನು ಪ್ರಾಯೋಗಿಕವಾಗಿ ‘ಪಂಚಾಯತಿ ರಾಜ್ ಸಚಿವಾಲಯ’ ವು ನಿರ್ವಹಿಸುತ್ತಿದೆ.
 5. ಯೋಜನೆಯಡಿ, ಹಳ್ಳಿಗಳಲ್ಲಿನ ವಸತಿ ಭೂಮಿಯ ವಿವಾದಾಸ್ಪದವಲ್ಲದ ದಾಖಲೆಗಳನ್ನು ರಚಿಸಲು ಡ್ರೋನ್‌ಗಳನ್ನು ಬಳಸಿ ಭೂಮಿಯನ್ನು ಅಳೆಯಲಾಗುತ್ತದೆ.
 6. ರಾಜ್ಯಗಳಿಂದ ಡ್ರೋನ್-ಮ್ಯಾಪಿಂಗ್ ಮೂಲಕ ನಿಖರವಾದ ಅಳತೆಗಳನ್ನು ಬಳಸಿಕೊಂಡು ಗ್ರಾಮದ ಪ್ರತಿಯೊಂದು ಆಸ್ತಿಗೆ ‘ಆಸ್ತಿ ಕಾರ್ಡ್‌’ ಗಳನ್ನು ತಯಾರಿಸಲಾಗುತ್ತದೆ. ಈ ಕಾರ್ಡ್‌ಗಳನ್ನು ಆಸ್ತಿ ಮಾಲೀಕರಿಗೆ ಹಸ್ತಾಂತರಿಸಲಾಗುವುದು ಮತ್ತು ಅದನ್ನು ಭೂ ಕಂದಾಯ ದಾಖಲೆಗಳ ಇಲಾಖೆಯು ಗುರುತಿಸುತ್ತದೆ.

 

ಯೋಜನೆಯ ಲಾಭಗಳು:

 1. ಈ ಯೋಜನೆಯಡಿ ಪಡೆದ ಅಧಿಕೃತ ಪ್ರಮಾಣಪತ್ರದ ಮೂಲಕ, ಆಸ್ತಿ ಮಾಲೀಕರು ತಮ್ಮ ಆಸ್ತಿಯ ಮೇಲೆ ಬ್ಯಾಂಕ್ ಸಾಲ ಮತ್ತು ಇತರ ಆಸ್ತಿ ಸಂಬಂಧಿತ ಯೋಜನೆಗಳನ್ನು ಪಡೆಯಲು ಸಾಧ್ಯವಾಗುತ್ತದೆ.
 2. ಗ್ರಾಮದ ಆಸ್ತಿಗಳಿಗೆ ಸಂಬಂಧಿಸಿದ ಈ ದಾಖಲೆಗಳನ್ನು ಪಂಚಾಯತ್ ಮಟ್ಟದಲ್ಲಿಯೂ ನಿರ್ವಹಿಸಲಾಗುವುದು, ಆ ಮೂಲಕ ಆಸ್ತಿ ಮಾಲೀಕರಿಂದ ತೆರಿಗೆಗಳನ್ನು ಸಂಗ್ರಹಿಸಲು ಅನುವು ಮಾಡಿಕೊಡುತ್ತದೆ. ಈ ಸ್ಥಳೀಯ ತೆರಿಗೆಗಳಿಂದ ಪಡೆದ ಹಣವನ್ನು ಗ್ರಾಮೀಣ ಮೂಲಸೌಕರ್ಯ ಮತ್ತು ಸೌಲಭ್ಯಗಳನ್ನು ನಿರ್ಮಿಸಲು ಬಳಸಲಾಗುತ್ತದೆ.
 3. ಭೂ ಮಾಲೀಕತ್ವ ವಿವಾದಗಳಿಂದ ಭೂಮಿ ಮತ್ತು ವಸತಿ ಆಸ್ತಿಗಳನ್ನು ಮುಕ್ತಗೊಳಿಸುವುದರಿಂದ ಮತ್ತು ಅಧಿಕೃತ ದಾಖಲೆಯನ್ನು ಸಿದ್ಧಪಡಿಸಿದ ಪರಿಣಾಮವಾಗಿ, ಆಸ್ತಿಗಳ ಮಾರುಕಟ್ಟೆ ಮೌಲ್ಯವು ಹೆಚ್ಚಾಗುವ ಸಾಧ್ಯತೆಯಿದೆ.
 4. ತೆರಿಗೆ ಸಂಗ್ರಹಣೆ, ಹೊಸ ಕಟ್ಟಡ ಮತ್ತು ಮೂಲಸೌಕರ್ಯ ನಿರ್ಮಾಣ ಯೋಜನೆಗಳು, ಪರವಾನಗಿಗಳನ್ನು ನೀಡುವುದು ಮತ್ತು ಆಸ್ತಿಯನ್ನು ಅಕ್ರಮವಾಗಿ ಆಕ್ರಮಿಸಿಕೊಳ್ಳುವ ಪ್ರಯತ್ನಗಳನ್ನು ತಡೆಯಲು ನಿಖರವಾದ ಆಸ್ತಿ ದಾಖಲೆಗಳನ್ನು ಬಳಸಬಹುದು.

 

ಯೋಜನೆಯ ಅಗತ್ಯತೆ ಮತ್ತು ಪ್ರಾಮುಖ್ಯತೆ:

ಗ್ರಾಮೀಣ ಪ್ರದೇಶಗಳಲ್ಲಿ, ಅನೇಕ ಗ್ರಾಮಸ್ಥರು ತಮ್ಮ ಜಮೀನಿನ ಮಾಲೀಕತ್ವವನ್ನು ಸಾಬೀತುಪಡಿಸುವ ಅಧಿಕೃತ ದಾಖಲೆಗಳನ್ನು ಹೊಂದಿಲ್ಲ, ಇದನ್ನು ಗಮನದಲ್ಲಿಟ್ಟುಕೊಂಡು, ಈ ಯೋಜನೆಯ ಅಗತ್ಯವನ್ನು ಮನಗಾಣಲಾಯಿತು. ಹೆಚ್ಚಿನ ರಾಜ್ಯಗಳಲ್ಲಿ, ಹಳ್ಳಿಗಳಲ್ಲಿನ ಆಸ್ತಿಗಳ ಪರಿಶೀಲನೆ / ದೃಢೀಕರಣದ ಉದ್ದೇಶಕ್ಕಾಗಿ ಜನಸಂಖ್ಯೆಯ ಪ್ರದೇಶಗಳನ್ನು ಸಮೀಕ್ಷೆ ಮಾಡಿ ಅಳೆಯಲಾಗಿಲ್ಲ. ಈ ಹೊಸ ಯೋಜನೆಯು ಆಸ್ತಿಯ ಕುರಿತ ಭಿನ್ನಾಭಿಪ್ರಾಯಗಳಿಂದಾಗಿ ಉಂಟಾಗುವ ಸಾಮಾಜಿಕ ಸಂಘರ್ಷಗಳನ್ನು ಕಡಿಮೆ ಮಾಡಲು ಸಮರ್ಥವಾಗಿದೆ, ಇದು ಸಬಲೀಕರಣ ಮತ್ತು ಅರ್ಹತೆಯ ಸಾಧನವಾಗಿದೆ.

 

ವಿಷಯಗಳು: ಸಂವಹನ ಜಾಲಗಳ ಮೂಲಕ ಆಂತರಿಕ ಭದ್ರತೆಗೆ ಸವಾಲು ಹಾಕುವುದು, ಆಂತರಿಕ ಭದ್ರತಾ ಸವಾಲುಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ, ಸೈಬರ್ ಭದ್ರತೆಯ ಮೂಲಭೂತ ಅಂಶಗಳು, ಅಕ್ರಮ ಹಣ ವರ್ಗಾವಣೆ ಮತ್ತು ಅದನ್ನು ತಡೆಯುವುದು.

ಸರ್ಕಾರವು, ಚೀನಾ-ಸಂಬಂಧಿತ ಅಪ್ಲಿಕೇಶನ್‌ಗಳನ್ನು ಏಕೆ ನಿಷೇಧಿಸಿದೆ?


(Why did the govt ban more China-linked apps?)

 

ಸಂದರ್ಭ:

ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು (MeitY) ಚೀನಾದಲ್ಲಿ ರೂಪಿಸಿದ ಅಥವಾ ಕೆಲವು ಚೀನೀ ಸಂಪರ್ಕವನ್ನು ಹೊಂದಿರುವ 54 ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ.

 1. ದೇಶದ ಭದ್ರತೆಗೆ ಅಪಾಯ ಇರುವ ಕಾರಣ ಚೀನಾದ 54 ಆ್ಯಪ್‌ಗಳನ್ನು ಕೇಂದ್ರ ಸರ್ಕಾರವು ನಿಷೇಧಿಸಿದೆ.

 

ಈ ಸಂಬಂಧಿತ ನಿಬಂಧನೆಗಳು:

ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69 ರ ಅಡಿಯಲ್ಲಿ ತುರ್ತು ಅಧಿಕಾರವನ್ನು ಬಳಸಿಕೊಂಡು ಹೊಸ ಅಪ್ಲಿಕೇಶನ್‌ಗಳನ್ನು ನಿಷೇಧಿಸಲಾಗಿದೆ. ಈ ಹೆಚ್ಚಿನ ಅಪ್ಲಿಕೇಶನ್‌ಗಳು ಈ ಹಿಂದೆ ಸರ್ಕಾರವು ನಿಷೇಧಿಸಿದ ಅಪ್ಲಿಕೇಶನ್‌ಗಳ ಕ್ಲೋನ್ ಅಥವಾ ನಕಲು ಅಪ್ಲಿಕೇಶನ್‌ಗಳಾಗಿ ಕಾರ್ಯನಿರ್ವಹಿಸುತ್ತಿವೆ.

 

ಈ ಹಿಂದೆ ಸರ್ಕಾರವು ಇತರ ಯಾವ ಅಪ್ಲಿಕೇಶನ್‌ಗಳನ್ನು ನಿಷೇಧಿಸಿದೆ?

ಒಟ್ಟಾರೆಯಾಗಿ ಇದುವರೆಗೆ ಸುಮಾರು 300 ಆಪ್‌ಗಳು ಮತ್ತು ಅವುಗಳ ಪ್ರಾಕ್ಸಿಗಳನ್ನು ಐಟಿ ಸಚಿವಾಲಯ ನಿಷೇಧಿಸಿದೆ.

ಈ ಅಪ್ಲಿಕೇಶನ್‌ಗಳು “ಭಾರತದ ಸಾರ್ವಭೌಮತೆ ಮತ್ತು ಸಮಗ್ರತೆ, ಭಾರತದ ರಕ್ಷಣೆ, ದೇಶದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಯ ಸುರಕ್ಷತೆಗೆ ಅಪಾಯಕಾರಿಯಾಗಿವೆ” ಎಂದು ಸಚಿವಾಲಯವು ತನ್ನ ತರ್ಕದಲ್ಲಿ ಹೇಳಿದೆ.

 

ಈ ಕ್ರಮದ ಅಗತ್ಯತೆ? (ಸರ್ಕಾರದ ವಾದಗಳು):

 1. ಆಂಡ್ರಾಯ್ಡ್ ಮತ್ತು ಐಒಎಸ್ ಪ್ಲಾಟ್‌ಫಾರ್ಮ್‌ಗಳಲ್ಲಿ ಲಭ್ಯವಿರುವ ಕೆಲವು ಮೊಬೈಲ್ ಅಪ್ಲಿಕೇಶನ್‌ಗಳ ದುರುಪಯೋಗದ ಕುರಿತು ಮತ್ತು ಭಾರತದ ಹೊರಗಿನ ಸ್ಥಳಗಳಲ್ಲಿರುವ ಸರ್ವರ್‌ಗಳಿಗೆ ಬಳಕೆದಾರರ ಡೇಟಾವನ್ನು ಅನಧಿಕೃತ ರೀತಿಯಲ್ಲಿ ಕದಿಯುವ  ಮತ್ತು ರಹಸ್ಯವಾಗಿ ರವಾನಿಸುವ ಹಲವಾರು ವರದಿಗಳು ಸೇರಿದಂತೆ ವಿವಿಧ ಮೂಲಗಳಿಂದ ಸರ್ಕಾರವು ಹಲವು ದೂರುಗಳನ್ನು ಸ್ವೀಕರಿಸಿದೆ.
 2. ಈ ದತ್ತಾಂಶಗಳ ಒಟ್ಟುಗೂಡಿಸುವಿಕೆ / ಕಂಪೈಲೇಶನ್, ಅದರ ಗಣಿಗಾರಿಕೆ ಮತ್ತು ಭಾರತದ ರಾಷ್ಟ್ರೀಯ ಭದ್ರತೆ ಮತ್ತು ರಕ್ಷಣೆಗೆ ಪ್ರತಿಕೂಲವಾದ ಅಂಶಗಳಿಂದ ಪ್ರೊಫೈಲಿಂಗ್ ಮಾಡುವುದು, ಇದು ಅಂತಿಮವಾಗಿ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆಯ ಮೇಲೆ ಪರಿಣಾಮ ಬೀರುವ ಕಾರಣ, ಇದು ತುರ್ತು ಕ್ರಮಗಳ ಅಗತ್ಯವಿರುವ ಅತ್ಯಂತ ಆಳವಾದ ಮತ್ತು ತಕ್ಷಣದ ಕಾಳಜಿಯ ವಿಷಯವಾಗಿದೆ.
 3. ಗೃಹ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರವು ಈ ದುರುದ್ದೇಶಪೂರಿತ ಅಪ್ಲಿಕೇಶನ್‌ಗಳನ್ನು ನಿರ್ಬಂಧಿಸಲು ಸಮಗ್ರ ಶಿಫಾರಸನ್ನು ಕಳುಹಿಸಿದೆ.

 

IT ಕಾಯ್ದೆಯ ಸೆಕ್ಷನ್ 69A:

ಐಟಿ ಕಾಯಿದೆಯ ಸೆಕ್ಷನ್ 69A, ದೇಶದ ರಕ್ಷಣೆ, ಅದರ ಸಾರ್ವಭೌಮತೆ ಮತ್ತು ಸಮಗ್ರತೆ, ರಾಜ್ಯದ ಭದ್ರತೆ, ವಿದೇಶಿ ರಾಜ್ಯಗಳೊಂದಿಗೆ ಸೌಹಾರ್ದ ಸಂಬಂಧಗಳ ಹಿತದೃಷ್ಟಿಯಿಂದ ಕೆಲವು ವೆಬ್‌ಸೈಟ್‌ಗಳು ಮತ್ತು ಕಂಪ್ಯೂಟರ್ ಮೂಲಗಳಿಗೆ ಪ್ರವೇಶವನ್ನು ನಿರ್ಬಂಧಿಸಿ ಆದೇಶಿಸಲು ಮತ್ತು  ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡಲು ಅಥವಾ ಅಪರಾಧ ನಡೆಯದಂತೆ ತಡೆಗಟ್ಟಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುತ್ತದೆ.

 

ಈ ಕ್ರಮದ ಪರಿಣಾಮಗಳು:

ನೂರಕ್ಕೂ ಹೆಚ್ಚು ಚೀನೀ ಮೊಬೈಲ್ ಅಪ್ಲಿಕೇಶನ್‌ಗಳ ನಿರ್ಬಂಧವು ಅಪಾಯಕಾರಿ ಭೌಗೋಳಿಕ ರಾಜಕೀಯ ಸಮಸ್ಯೆಗಳನ್ನು ನಿಭಾಯಿಸುವಾಗ ತಂತ್ರಜ್ಞಾನದ ಬೃಹತ್ ಮಾರುಕಟ್ಟೆಯಾಗಿ ತನ್ನ ಸ್ಥಾನದ ಲಾಭದಾಯಕ ಸ್ಥಾನವನ್ನು ಬಳಸಿಕೊಳ್ಳುವುದರಿಂದ ಹಿಂಜರಿಯುವುದಿಲ್ಲ  ಎಂದು ಭಾರತ ಸರ್ಕಾರವು   ಸ್ಪಷ್ಟಪಡಿಸಲು ಬಯಸುತ್ತದೆ ಎಂದು ಈ ಕ್ರಮವು ತೋರಿಸುತ್ತದೆ.

 

ಈ ನಿಷೇಧಕ್ಕೆ ಚೀನಾದ ಪ್ರತಿಕ್ರಿಯೆ:

ಭಾರತದ ಈ ಕ್ರಮಗಳು ವಿಶ್ವ ವ್ಯಾಪಾರ ಸಂಸ್ಥೆ ಯ (WTO) ನಿಯಮಗಳ ಉಲ್ಲಂಘನೆಯಾಗಿರಬಹುದು ಎಂದು ಚೀನಾ ಹೇಳಿದೆ.

 1. ಚೀನಾ ಸರ್ಕಾರವು, “ಭಾರತದ ಕ್ರಮಗಳು ಕೆಲವು ಚೀನೀ ಅಪ್ಲಿಕೇಶನ್‌ಗಳನ್ನು ಅಸ್ಪಷ್ಟ ಮತ್ತು ದೂರಾಲೋಚನೆಯ ಆಧಾರದ ಮೇಲೆ ಆಯ್ದ ಮತ್ತು ತಾರತಮ್ಯದಿಂದ ಗುರಿಯಾಗಿಸುತ್ತದೆ, ನ್ಯಾಯಯುತ ಮತ್ತು ಪಾರದರ್ಶಕ ಪ್ರಕ್ರಿಯೆಯ ಅಗತ್ಯತೆಗಳ ವಿರುದ್ಧವಾಗಿವೆ, ರಾಷ್ಟ್ರೀಯ ಭದ್ರತಾ ವಿನಾಯಿತಿಗಳನ್ನು ದುರುಪಯೋಗಪಡಿಸಿಕೊಳ್ಳುತ್ತವೆ ಮತ್ತು WTO ನಿಯಮಗಳನ್ನು ಉಲ್ಲಂಘಿಸುತ್ತವೆ ” (ಸಂಶಯವಿದೆ) ಎಂದು ಹೇಳಿದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:


  ಮೇಡಾರಂ ಜಾತ್ರೆ 2022:

(Medaram Jathara 2022)

ಬುಡಕಟ್ಟು ವ್ಯವಹಾರಗಳ ಸಚಿವಾಲಯವು 2022 ರ ಮೇಡಾರಂ ಜಾತ್ರೆಗೆ ಸಂಬಂಧಿಸಿದ ವಿವಿಧ ಚಟುವಟಿಕೆಗಳಿಗಾಗಿ ₹ 2.26 ಕೋಟಿಗಳನ್ನು ಮಂಜೂರು ಮಾಡಿದೆ.

 1. ಮೇಡಾರಂ ಜಾತ್ರೆಯು ಕುಂಭಮೇಳದ ನಂತರ ಭಾರತದ ಎರಡನೇ ಅತಿ ದೊಡ್ಡ ಜಾತ್ರೆಯಾಗಿದೆ, ಇದನ್ನು ತೆಲಂಗಾಣದ ಎರಡನೇ ಅತಿ ದೊಡ್ಡ ಬುಡಕಟ್ಟು ಸಮುದಾಯದ ಕೋಯಾ ಬುಡಕಟ್ಟು (Koya tribe) ಜನಾಂಗದವರು ನಾಲ್ಕು ದಿನಗಳ ಕಾಲ ಆಚರಿಸುತ್ತಾರೆ.
 2. ಉತ್ಸವದ ಆಗಮನ ಮತ್ತು ಅದರ ಮಂಗಳಕರ ಮಹತ್ವವನ್ನು ಪರಿಗಣಿಸಿ, ಈ ಜಾತ್ರೆಯನ್ನು 1996 ರಲ್ಲಿ ನಾಡ ಹಬ್ಬ ಎಂದು ಘೋಷಿಸಲಾಯಿತು.
 3. ಜಾತ್ರೆಯನ್ನು ಸಮ್ಮಕ್ಕ, ಸರಳಮ್ಮ ಜಾತ್ರೆ (Sammakka Saralamma Jatara) ಎಂದೂ ಕರೆಯುತ್ತಾರೆ.
 4. ಇದು,ಅನ್ಯಾಯದ ಕಾನೂನಿಗೆ ವಿರುದ್ಧವಾಗಿ ಆಳುವ ದೊರೆಗಳೊಂದಿಗೆ ಸಮ್ಮಕ್ಕ ಮತ್ತು ಸರಳಮ್ಮ, ಎಂಬ ತಾಯಿ ಮತ್ತು ಮಗಳ ಹೋರಾಟವನ್ನು ಗೌರವಿಸುವ ಬುಡಕಟ್ಟು ಹಬ್ಬವಾಗಿದೆ.
 5. ಮೇದಾರಂ ಎಂಬ ಸ್ಥಳವು ಎತುರ್ನಗರಂ ವನ್ಯಜೀವಿ ಅಭಯಾರಣ್ಯದಲ್ಲಿನ (Eturnagaram Wildlife Sanctuary) ಒಂದು ದೂರದ ಸ್ಥಳವಾಗಿದೆ, ಎತುರ್ನಗರಂ ಅಭಯಾರಣ್ಯವು ಈ ಪ್ರದೇಶದ ಅತಿದೊಡ್ಡ ಅರಣ್ಯ ಪ್ರದೇಶವಾದ ದಂಡಕಾರಣ್ಯದ ಒಂದು ಭಾಗವಾಗಿದೆ.

Current Affairs

ಡಾಕ್ಸಿಂಗ್:

(Doxxing)

Doxxing ಎಂಬುದು ಇಂಟರ್ನೆಟ್‌ನಲ್ಲಿ ಇತರರ ವೈಯಕ್ತಿಕ ಮಾಹಿತಿಯನ್ನು ದುರುದ್ದೇಶದಿಂದ ಪ್ರಕಟಿಸುವುದು ಮತ್ತು ವಿಶ್ಲೇಷಿಸುವುದಾಗಿದೆ, ಅದು ವ್ಯಕ್ತಿಯ ನಿಜವಾದ ಗುರುತನ್ನು ಬಹಿರಂಗಪಡಿಸಬಹುದು ಮತ್ತು ಅವರನ್ನು ಕಿರುಕುಳ ಮತ್ತು ಸೈಬರ್ ದಾಳಿಗೆ ಬಲಿಯಾಗುವಂತೆ ಮಾಡುತ್ತದೆ.

 1. ಮೆಟಾದ (Meta’s) ಮೇಲ್ವಿಚಾರಣಾ ಮಂಡಳಿಯು ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಗಳಿಗೆ ಕಟ್ಟುನಿಟ್ಟಾದ ಡಾಕಿಂಗ್ ನಿಯಮಗಳನ್ನು ರೂಪಿಸಲು ಸೂಚಿಸಿದೆ.

Current Affairs

 


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos