Print Friendly, PDF & Email

[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 12ನೇ ಫೆಬ್ರುವರಿ 2022

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ  1 :

 1. ಚಾರ್ ಧಾಮ್ ಯೋಜನೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

 1. ಪಕ್ಷಾಂತರ ವಿರೋಧಿ ಕಾನೂನು.

2. ಏಕರೂಪ ನಾಗರಿಕ ಸಂಹಿತೆ.

3. ಮೇಕೆದಾಟು ವಿವಾದ.

4. ಸಮಗ್ರ ಆರ್ಥಿಕ ಸಹಕಾರ ಒಪ್ಪಂದ (CECA).

5. ಸೊಸೈಟಿ ಫಾರ್ ವರ್ಲ್ಡ್‌ವೈಡ್ ಇಂಟರ್‌ಬ್ಯಾಂಕ್ ಫೈನಾನ್ಶಿಯಲ್ ಟೆಲಿಕಮ್ಯುನಿಕೇಷನ್ (SWIFT).

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1.  ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ (ILO).

2. ಮಿಲನ್ 2022.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಕಲಾ ಪ್ರಕಾರಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ಚಾರ್ ಧಾಮ್ ಯೋಜನೆ:


(Char Dham)

ಸಂದರ್ಭ:

 ಹಿರಿಯ ಪರಿಸರವಾದಿ ರವಿ ಚೋಪ್ರಾ ಅವರು ಚಾರ್ ಧಾಮ್ ಯೋಜನೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನ ಉನ್ನತ ಅಧಿಕಾರ ಸಮಿತಿಯ (High Powered Committee -HPC) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ, ಏಕೆಂದರೆ “HPC ಯು ಈ ದುರ್ಬಲವಾದ (ಹಿಮಾಲಯನ್) ಪರಿಸರವನ್ನು ರಕ್ಷಿಸುತ್ತದೆ ಎಂಬ ಅವರ ನಂಬಿಕೆಯು ಮುರಿದುಹೋಗಿದೆ” ಎಂದು ಅವರು ತಮ್ಮ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ.

 

ಏನಿದು ಸಮಸ್ಯೆ?

ಜನವರಿ 27 ರಂದು ಸುಪ್ರೀಂ ಕೋರ್ಟ್‌ನ ಪ್ರಧಾನ ಕಾರ್ಯದರ್ಶಿಗೆ ಸಲ್ಲಿಸಿದ ರಾಜೀನಾಮೆ ಪತ್ರದಲ್ಲಿ, ಚೋಪ್ರಾ ಅವರು ಸುಪ್ರೀಂ ಕೋರ್ಟ್‌ನ ಡಿಸೆಂಬರ್ 2021 ರ ಆದೇಶವನ್ನು ಉಲ್ಲೇಖಿಸಿದ್ದಾರೆ, ಸುಪ್ರೀಂ ಕೋರ್ಟ್ ‘ಚಾರ್ ಧಾಮ್ ರಸ್ತೆ ಯೋಜನೆಯ’ ಭಾಗವಾಗಿ, ರಕ್ಷಣಾ ಅಗತ್ಯಗಳನ್ನು ಪೂರೈಸಲು ಮೂರು ಹೆದ್ದಾರಿಗಳಲ್ಲಿ ನಾಲ್ಕು ಚಕ್ರದ ವಾಹನಗಳ ರಸ್ತೆ ಮಾರ್ಗವನ್ನು 10 ಮೀಟರ್‌ವರೆಗೆ ವಿಸ್ತರಿಸಲು ಅನುಮತಿ ನೀಡಿದೆ, ಈ ಹಿಂದೆ, HPC ಶಿಫಾರಸು ಮಾಡಿದಂತೆ ಸುಪ್ರೀಂ ಕೋರ್ಟ್ ಈ ರಸ್ತೆ ಅಗಲವನ್ನು 5.5 ಮೀಟರ್‌ಗೆ ಸೀಮಿತಗೊಳಿಸುವಂತೆ ತನ್ನ ಸೆಪ್ಟೆಂಬರ್ 2020 ರ ಆದೇಶದಲ್ಲಿ ಸೂಚಿಸಿತ್ತು.

 

ಸುಪ್ರೀಂ ಕೋರ್ಟ್ ಹೇಳಿದ್ದೇನು?

 1. ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠವು 2020 ರ ಸೆಪ್ಟೆಂಬರ್‌ನಲ್ಲಿ ಮತ್ತೊಂದು ತ್ರಿಸದಸ್ಯ ಪೀಠ ಹೊರಡಿಸಿದ ಆದೇಶವನ್ನು ತಿದ್ದುಪಡಿ ಮಾಡಿದೆ. ಇದರಲ್ಲಿ ಉತ್ತರಾಖಂಡದ 899 ಕಿ.ಮೀ ರಸ್ತೆ ಜಾಲದ ಭಾಗವಾಗಿ ನಿರ್ಮಿಸಲಾಗುತ್ತಿರುವ ಮೂರು ಹೆದ್ದಾರಿಗಳಲ್ಲಿ ನಾಲ್ಕು ಚಕ್ರದ ವಾಹನಗಳ ಮಾರ್ಗದ ಅಗಲ 5.5 ಮೀಟರ್ ಆಗಿರಬೇಕು ಎಂದು ನಿರ್ದೇಶನ ನೀಡಿತ್ತು.
 2. ನ್ಯಾಯಾಲಯದ ಈ ತೀರ್ಪನ್ನು ರಕ್ಷಣಾ ಸಚಿವಾಲಯವು ಪರಿಶೀಲಿಸುವಂತೆ ಕೋರಿತ್ತು, ನಂತರ ಸುಪ್ರೀಂ ಕೋರ್ಟ್ ಈಗ ಕೇಂದ್ರ ಸರ್ಕಾರದ ಬೇಡಿಕೆಯಂತೆ ರಸ್ತೆಗಳ ಅಗಲವನ್ನು 10 ಮೀಟರ್‌ಗೆ ಹೆಚ್ಚಿಸಲು ತೀರ್ಪು ನೀಡಿದೆ ಇದರಿಂದಾಗಿ ಈ ಹೆದ್ದಾರಿಗಳನ್ನು ‘ಡಬಲ್ ಲೇನ್’ / ದ್ವಿಪಥ ಮಾಡಲು ದಾರಿ ಮಾಡಿಕೊಡಲಾಗಿದೆ.
 3. ಚೀನಾ ಗಡಿಗೆ ಫೀಡರ್ ರಸ್ತೆಗಳಾಗಿ ಕಾರ್ಯನಿರ್ವಹಿಸುವ ಈ ಮೂರು ಹೆದ್ದಾರಿಗಳ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಒಪ್ಪಿಕೊಳ್ಳುವ ಸಂದರ್ಭದಲ್ಲಿ, ಪರಿಸರ ಕಾಳಜಿಯೊಂದಿಗೆ ಅಂತಹ ಆದ್ಯತೆಗಳನ್ನು ಸಮತೋಲನಗೊಳಿಸುವ ಅಗತ್ಯವನ್ನು ಸುಪ್ರೀಂ ಕೋರ್ಟ್ ಗಮನಿಸಿದೆ.
 4. ಸರ್ವೋಚ್ಚ ನ್ಯಾಯಾಲಯವು, ಈ ನಿಟ್ಟಿನಲ್ಲಿ ‘ಉನ್ನತ ಅಧಿಕಾರ ಸಮಿತಿ’ಯ ಶಿಫಾರಸುಗಳನ್ನು ಒಳಗೊಂಡಂತೆ ಪರಿಸರ ಪ್ರಜ್ಞೆಯ ರೀತಿಯಲ್ಲಿ ಕಾಮಗಾರಿಗಳನ್ನು ಕಾರ್ಯಗತಗೊಳಿಸುವುದನ್ನು ಖಚಿತಪಡಿಸಿಕೊಳ್ಳಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಕೆ ಸಿಕ್ರಿ ನೇತೃತ್ವದಲ್ಲಿ ‘ಮೇಲ್ವಿಚಾರಣಾ ಸಮಿತಿ’ಯನ್ನು ರಚಿಸುವಂತೆಯೂ ಆದೇಶಿಸಿದೆ.

 

ಚಾರ್‌ಧಾಮ್ ಯೋಜನೆಯಲ್ಲಿ ಇದುವರೆಗಿನ ಘಟನಾ ಕ್ರಮಗಳು:

 1. ಚಾರ್ ಧಾಮ್ ರಸ್ತೆ ಯೋಜನೆಯ ಶಂಕುಸ್ಥಾಪನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಡಿಸೆಂಬರ್ 2016 ರಲ್ಲಿ ನೆರವೇರಿಸಿದರು.
 2. ಆದರೆ, ಈ ಯೋಜನೆಯನ್ನು ಪರಿಸರದ ಆಧಾರದ ಮೇಲೆ ನ್ಯಾಯಾಲಯದಲ್ಲಿ ಪ್ರಶ್ನಿಸಲಾಯಿತು, ಅರ್ಜಿದಾರರು ಯೋಜನೆಗೆ ಪರಿಸರ ಅನುಮತಿ ನೀಡುವಲ್ಲಿ ಅವ್ಯವಹಾರ ನಡೆದಿದೆ ಮತ್ತು ಅಸ್ತಿತ್ವದಲ್ಲಿರುವ ನಿಯಮಗಳನ್ನು ಉಲ್ಲಂಘಿಸಿ ಯೋಜನೆಯಲ್ಲಿ ಕಾಮಗಾರಿಗಳನ್ನು ನಡೆಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.
 3. ಯೋಜನೆಗೆ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಯು ಸೆಪ್ಟೆಂಬರ್ 2018 ರಲ್ಲಿ ಅನುಮೋದನೆ ನೀಡಿತು. ಆದರೆ, ಪ್ರಕರಣದ ವಿಚಾರಣೆ ನಡೆಸುತ್ತಿರುವ ಪೀಠದ ಹೊರತಾಗಿ ಬೇರೆ ಪೀಠ ಈ ಆದೇಶವನ್ನು ಹೊರಡಿಸಿದ ಹಿನ್ನೆಲೆಯಲ್ಲಿ ಅದರ ಆದೇಶವನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು. ಅದರ ಮೇಲೆ ಸುಪ್ರೀಂ ಕೋರ್ಟ್ 2018 ರ ಅಕ್ಟೋಬರ್‌ನಲ್ಲಿ NGT ಆದೇಶಕ್ಕೆ ತಡೆ ನೀಡಿತು.
 4. ಸೆಪ್ಟೆಂಬರ್ 2020 ರಲ್ಲಿ, ಸುಪ್ರೀಂ ಕೋರ್ಟ್ ರಿಟ್ ಅರ್ಜಿಯ ವಿಚಾರಣೆ ನಡೆಸಿತು, ಕೇಂದ್ರ ರಸ್ತೆ ಸಾರಿಗೆ ಸಚಿವಾಲಯದ 2018 ರ ಸುತ್ತೋಲೆಯಲ್ಲಿ ಸೂಚಿಸಿದಂತೆ ‘ಚಾರ್ ಧಾಮ್ ಯೋಜನೆ’ಗೆ ಹೆದ್ದಾರಿಗಳ ಅಗಲವು 5.5 ಮೀಟರ್ ಮೀರಬಾರದು ಎಂದು ಆದೇಶವನ್ನು ನೀಡಿತು. ಆದರೆ ರಕ್ಷಣಾ ಸಚಿವಾಲಯ, ಅದೇ ವರ್ಷದ ಡಿಸೆಂಬರ್‌ನಲ್ಲಿ, ಹೆದ್ದಾರಿಗಳ ಅಗಲವನ್ನು 10 ಮೀಟರ್‌ಗೆ ಅನುಮತಿಸಲು ಆದೇಶವನ್ನು ತಿದ್ದುಪಡಿ ಮಾಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿತು.
 5. ಅದರ ನಂತರ, ಹೆದ್ದಾರಿಗಳ ಅಗಲದ ಕುರಿತು ಕೇಂದ್ರ ಸರ್ಕಾರ ಮಂಡಿಸಿದ ವಾದಗಳನ್ನು ಪರಿಶೀಲಿಸಲು ಸರ್ವೋಚ್ಚ ನ್ಯಾಯಾಲಯವು ‘ಉನ್ನತ ಅಧಿಕಾರ ಸಮಿತಿ’ (HPC) ಗೆ ಸೂಚಿಸಿದೆ.

 

ಉನ್ನತ ಅಧಿಕಾರ ಸಮಿತಿ (HPC) ಯು ಮಂಡಿಸಿದ ಸಂಶೋಧನೆಗಳು:

 1. ಈ ಹೆದ್ದಾರಿಗಳ ಆಯಕಟ್ಟಿನ ಪ್ರಾಮುಖ್ಯತೆಯನ್ನು ಪರಿಗಣಿಸಿ, ಅಗಲವನ್ನು 10 ಮೀಟರ್‌ಗೆ ವಿಸ್ತರಿಸಲು ಅನುಮತಿಸಬೇಕು.
 2. ಈಗಾಗಲೇ ಹೆದ್ದಾರಿಗಳ ಯಾವ ಭಾಗಗಳಲ್ಲಿ 10ಮೀಟರ್‌ ಅಗಲದಲ್ಲಿ ಕಾಮಗಾರಿ ಆರಂಭಿಸಲಾಗಿದೆಯೋ, ಅಲ್ಲೆಲ್ಲ ಪುನಃ ಅದರ ಅಗಲವನ್ನು 5.5 ಮೀಟರ್‌ಗೆ ಇಳಿಸಲು ಕೆಲಸ ಮಾಡುವುದು “ಪ್ರಾಯೋಗಿಕ” ಆಗುವುದಿಲ್ಲ.
 3. ರಸ್ತೆ ನಿರ್ಮಾಣಕ್ಕೆ ದಾರಿ ಮಾಡಿಕೊಡಲು ಮರಗಳನ್ನು ಕಡಿದ ಜಾಗಗಳಲ್ಲಿ ಮರಗಳನ್ನು ಮರು ನೆಡಲು ಸಾಧ್ಯವಾಗುವುದಿಲ್ಲ.

 

ಹೆದ್ದಾರಿಗಳ ಅಗಲವನ್ನು 10 ಮೀಟರ್‌ಗಳ ವರೆಗೆ ವಿಸ್ತರಿಸಬೇಕು ಎಂಬ ಬೇಡಿಕೆಗೆ ನೀಡಿದ ವಾದಗಳು:

ಭಾರೀ ವಾಹನಗಳು, ಯಂತ್ರೋಪಕರಣಗಳು, ಶಸ್ತ್ರಾಸ್ತ್ರಗಳು, ಕ್ಷಿಪಣಿಗಳು, ಟ್ಯಾಂಕ್‌ಗಳು, ಸಶಸ್ತ್ರ ಪಡೆಗಳು ಮತ್ತು ಆಹಾರ ಸರಬರಾಜುಗಳನ್ನು ತರಲು ಮತ್ತು ಸಾಗಿಸಲು ಮಿಲಿಟರಿ ಅಗತ್ಯವಿರುವ ಪ್ರದೇಶದಲ್ಲಿ ಅನೇಕ ಪ್ರವೇಶಿಸಲಾಗದ ದುರ್ಗಮ ಪ್ರದೇಶಗಳಿವೆ.

 

ಸಂಬಂಧಿತ ಪರಿಸರ ಕಾಳಜಿಗಳು:

 1. ಪರ್ವತ ಪ್ರದೇಶಗಳಲ್ಲಿ ದೊಡ್ಡ ಪ್ರಮಾಣದ ನಿರ್ಮಾಣ ಕಾರ್ಯವು ದುರಂತಕ್ಕೆ ಆಹ್ವಾನ ನೀಡಿದಂತಾಗುತ್ತದೆ ಮರಗಳನ್ನು ಕಡಿಯುವುದರಿಂದ ಮತ್ತು ಬಂಡೆಗಳನ್ನು ಸಡಿಲಗೊಳಿಸುವುದರಿಂದ, ಭೂಕುಸಿತದ ಅಪಾಯವು ಹೆಚ್ಚಾಗುತ್ತದೆ.
 2. ‘ಕಡ್ಡಾಯ ಪರಿಸರ ಅನುಮತಿ’ ಮತ್ತು ‘ಪರಿಸರ ಪ್ರಭಾವ ಮೌಲ್ಯಮಾಪನ (Environment Impact Assessment – EIA)’ ಕಾರ್ಯವಿಧಾನಗಳನ್ನು ಬೈಪಾಸ್ ಮಾಡಿ ಅಥವಾ ಉಲ್ಲಂಘನೆ ಮಾಡಿ ಯೋಜನೆಯನ್ನು ಕಾರ್ಯಗತಗೊಳಿಸಲಾಗುತ್ತಿದೆ.
 3. ಯೋಜನೆಯಡಿಯಲ್ಲಿ, ರಸ್ತೆಗಳನ್ನು ನಿರ್ಮಿಸಲು 25,000 ಮರಗಳನ್ನು ಕಡಿಯಲಾಗಿದೆ ಎಂದು ವರದಿಯಾಗಿದೆ ಇದು ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಗಂಭೀರ ಆತಂಕದ ವಿಷಯವಾಗಿದೆ.
 4. ನಾಲ್ಕು ಚಕ್ರದ ವಾಹನಗಳಿಗೆ ವಿಶಾಲವಾದ ಮಾರ್ಗಗಳನ್ನು ರಚಿಸಲು ಹೆಚ್ಚಿನ ಉತ್ಖನನ ಮತ್ತು ಸ್ಫೋಟಗಳನ್ನು ಮಾಡಬೇಕಾಗಿರುವುದರಿಂದ, ಈ ಪ್ರದೇಶದ ಸ್ಥಳಾಕೃತಿ / ಭೂ ರಚನೆಯು ಜಾರುವಿಕೆ ಮತ್ತು ಭೂಕುಸಿತಗಳಿಗೆ ಹೆಚ್ಚು ದುರ್ಬಲವಾಗಿರುತ್ತದೆ, ಪರಿಣಾಮವಾಗಿ ಸರ್ವಋತು ಹೆದ್ದಾರಿ ನಿರ್ಮಿಸುವ ಉದ್ದೇಶಕ್ಕೆ ಧಕ್ಕೆಯಾಗಬಹುದು.

 

‘ಚಾರ್ಧಾಮ್ ಪ್ರಾಜೆಕ್ಟ್’ ಕುರಿತು:

 1. 889 ಕಿಮೀ ಉದ್ದದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ ಮತ್ತು ಸುಧಾರಣೆಯನ್ನು ‘ಚಾರ್ಧಾಮ್ ಯೋಜನೆ’ ಒಳಗೊಂಡಿದೆ. ಈ ಯೋಜನೆಯ ಮೂಲಕ ಬದರಿನಾಥ ಧಾಮ, ಕೇದಾರನಾಥ ಧಾಮ, ಗಂಗೋತ್ರಿ, ಯಮುನೋತ್ರಿ ಮತ್ತು ಕೈಲಾಸ ಮಾನಸ ಸರೋವರ ಯಾತ್ರೆಗೆ ಹೋಗುವ ಮಾರ್ಗವನ್ನು ಸಂಪರ್ಕಿಸಲಾಗುವುದು.
 2. ಈ ಹೆದ್ದಾರಿಯನ್ನು ‘ಚಾರ್ ಧಾಮ್ ಮಹಾಮಾರ್ಗ’ (ಚಾರ್ ಧಾಮ್ ಹೆದ್ದಾರಿ) ಮತ್ತು ಈ ‘ಹೆದ್ದಾರಿ ನಿರ್ಮಾಣ ಯೋಜನೆ’ಯನ್ನು ‘ಚಾರ್ ಧಾಮ್ ಮಹಾಮಾರ್ಗ ವಿಕಾಸ ಯೋಜನೆ’ ಎಂದು ಕರೆಯಲಾಗುವುದು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು:ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

ಪಕ್ಷಾಂತರ ನಿಷೇಧ ಕಾಯ್ದೆ:


(Anti-defection law)

 

 ಸಂದರ್ಭ:

ಚುನಾವಣೆಯ ನಂತರ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಪಕ್ಷಾಂತರ ಮಾಡಿದ್ದಕ್ಕಾಗಿ ಪಕ್ಷಾಂತರ ನಿಷೇಧ ಕಾನೂನಿನ ಅಡಿಯಲ್ಲಿ ಮುಕುಲ್ ರಾಯ್ ಅವರನ್ನು ಶಾಸಕ ಸ್ಥಾನದಿಂದ ಅನರ್ಹಗೊಳಿಸುವಂತೆ ಕೋರಿ ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸಲ್ಲಿಸಿದ್ದ ಅರ್ಜಿಯನ್ನು ಪಶ್ಚಿಮ ಬಂಗಾಳ ವಿಧಾನಸಭಾ ಸ್ಪೀಕರ್ ಬಿಮನ್ ಬ್ಯಾನರ್ಜಿ ವಜಾಗೊಳಿಸಿದ್ದಾರೆ.

 1. ಬಿಜೆಪಿಯ ಮಾಜಿ ರಾಷ್ಟ್ರೀಯ ಉಪಾಧ್ಯಕ್ಷರಾಗಿದ್ದ ರಾಯ್ ಕಳೆದ ವರ್ಷ ಜೂನ್‌ನಲ್ಲಿ ಆಡಳಿತಾರೂಢ ಟಿಎಂಸಿಗೆ ಪಕ್ಷಾಂತರ ಮಾಡಿದ್ದರು.
 2. ವಿಧಾನಸಭಾ ಸ್ಪೀಕರ್ ಬಿಮನ್ ಬ್ಯಾನರ್ಜಿ ಅವರ ಈ ತೀರ್ಪಿನ ಹಿನ್ನೆಲೆಯಲ್ಲಿ ರಾಯ್ ಈಗ ಸದನದಲ್ಲಿ ಬಿಜೆಪಿ ಶಾಸಕರಾಗಿಯೇ ಮುಂದುವರಿಯಲಿದ್ದಾರೆ.

 

ಈ ಬಗ್ಗೆ ಹೈ ಕೋರ್ಟ್ ನೀಡಿದ ತೀರ್ಪು:

ರೈ ಅವರನ್ನು ಸದನದ ಸದಸ್ಯತ್ವದಿಂದ ಅನರ್ಹಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿಯ ಕುರಿತು ಅಕ್ಟೋಬರ್ 7ರೊಳಗೆ ತೀರ್ಮಾನ ಕೈಗೊಳ್ಳುವಂತೆ ಸ್ಪೀಕರ್‌ಗೆ ಹೈಕೋರ್ಟ್ ಸೂಚಿಸಿತ್ತು. ವಿಫಲವಾದಲ್ಲಿ ನ್ಯಾಯಾಲಯ ಈ ವಿಷಯದ ಕುರಿತು ಮಧ್ಯಪ್ರವೇಶಿಸಿ ನಿರ್ಧಾರ ತೆಗೆದುಕೊಳ್ಳುವುದಾಗಿ ಹೇಳಿದೆ.

ಅನರ್ಹತೆ ಅರ್ಜಿಯ ಬಗ್ಗೆ ಸ್ಪೀಕರ್ ಶೀಘ್ರದಲ್ಲೇ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸುಪ್ರೀಂ ಕೋರ್ಟ್ ಕೂಡ ಆಶಯ ವ್ಯಕ್ತಪಡಿಸಿತ್ತು.

 

ಭಾರತೀಯ ಸಂವಿಧಾನದ ಹತ್ತನೇ ಅನುಸೂಚಿ: ಪ್ರಸ್ತುತತೆ:

ಭಾರತೀಯ ಸಂವಿಧಾನದ ಹತ್ತನೇ ಶೆಡ್ಯೂಲ್ ಅನ್ನು ಜನಪ್ರಿಯವಾಗಿ ‘ಪಕ್ಷಾಂತರ ವಿರೋಧಿ ಕಾನೂನು’ ಎಂದು ಕರೆಯಲಾಗುತ್ತದೆ.

ಸಂಸದರು/ಶಾಸಕರು ರಾಜಕೀಯ ಪಕ್ಷಗಳ ಬದಲಾವಣೆಗೆ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಬಹುದಾದ ಸಂದರ್ಭಗಳನ್ನು ಇದು ನಿರ್ದಿಷ್ಟಪಡಿಸುತ್ತದೆ.

ಈ ಅನುಸೂಚಿಯನ್ನು 52 ನೇ ತಿದ್ದುಪಡಿ ಕಾಯಿದೆಯಿಂದ ಸಂವಿಧಾನಕ್ಕೆ ಸೇರಿಸಲಾಗಿದೆ.

ಇದರಲ್ಲಿ, ಸ್ವತಂತ್ರ / ಪಕ್ಷೇತರ ಶಾಸಕರು ಚುನಾವಣೆಯ ನಂತರ ಪಕ್ಷಕ್ಕೆ ಸೇರುವ ಷರತ್ತುಗಳ ಬಗ್ಗೆಯೂ ನಿಬಂಧನೆಗಳನ್ನು ಮಾಡಲಾಗಿದೆ.

ಈ ಕಾಯಿದೆಯು ಸಂಸದ ಅಥವಾ ಶಾಸಕರಿಂದ ರಾಜಕೀಯ ಪಕ್ಷ ಬದಲಾವಣೆಗೆ ಸಂಬಂಧಿಸಿದಂತೆ ಈ ಕೆಳಗಿನ ಮೂರು ಸನ್ನಿವೇಶಗಳನ್ನು ನಿರ್ದಿಷ್ಟಪಡಿಸುತ್ತದೆ:

 1. ಸದನದ ಸದಸ್ಯನೊಬ್ಬ ರಾಜಕೀಯ ಪಕ್ಷವೊಂದಕ್ಕೆ ಸೇರಿದವನಾಗಿದ್ದರೆ,
 2. ತನ್ನ ಮಾತೃಪಕ್ಷದ ಟಿಕೆಟ್ ನಿಂದ ಚುನಾಯಿತರಾದ ಸದಸ್ಯರು ಸ್ವಯಂಪ್ರೇರಣೆಯಿಂದ ತನ್ನ ರಾಜಕೀಯ ಪಕ್ಷದ ಸದಸ್ಯತ್ವವನ್ನು ತ್ಯಜಿಸಿದರೆ, ಅವರು ತಮ್ಮ ರಾಜಕೀಯ ಪಕ್ಷದ ಸೂಚನೆಗಳಿಗೆ ವಿರುದ್ಧವಾಗಿ ಸದನದಲ್ಲಿ ಮತ ಚಲಾಯಿಸಿದರೆ.
 3. ಸ್ವತಂತ್ರ ಅಭ್ಯರ್ಥಿಯು ಚುನಾವಣೆಯ 6 ತಿಂಗಳ ನಂತರ ರಾಜಕೀಯ ಪಕ್ಷವೊಂದಕ್ಕೆ ಸೇರಿದರೆ.

 

ಮೇಲಿನ ಸಂದರ್ಭಗಳಲ್ಲಿ ಶಾಸಕರು ಪಕ್ಷವನ್ನು ಬದಲಾಯಿಸುವ ಅಥವಾ ಹೊಸ ಪಕ್ಷವನ್ನು ಸೇರುವ ಕಾರ್ಯ ಮಾಡಿದರೆ ಆಗ ಅವರು ತಮ್ಮ ಚುನಾಯಿತ ಶಾಸಕಾಂಗದ ಸ್ಥಾನವನ್ನು ಕಳೆದುಕೊಳ್ಳುತ್ತಾರೆ.

 1. ನಾಮನಿರ್ದೇಶಿತ ಸದಸ್ಯರೊಬ್ಬರು (Nominated Member) (ಸಂಸದರು ಅಥವಾ ವಿಧಾನಮಂಡಲ ಸದಸ್ಯರು) ಶಾಸಕಾಂಗದ/ ಸಂಸತ್ತಿನ  ಸದಸ್ಯರಾದ ಆರು ತಿಂಗಳ ಒಳಗೆ ಅವರು ರಾಜಕೀಯ ಪಕ್ಷವೊಂದನ್ನು ಸೇರಬಹುದು ಎಂದು ಕಾನೂನು ತಿಳಿಸುತ್ತದೆ ಅದರ ನಂತರ ಪಕ್ಷವೊಂದಕ್ಕೆ ಸೇರಿದರೆ ವಿಧಾನಮಂಡಲದಲ್ಲಿ ಅಥವಾ ಸಂಸತ್ತಿನಲ್ಲಿ ಆ ನಾಮನಿರ್ದೇಶಿತ ಸದಸ್ಯರು ತಮ್ಮ ಸ್ಥಾನವನ್ನು ಕಳೆದುಕೊಳ್ಳುತ್ತಾರೆ.

 

ಅನರ್ಹತೆಗೆ ಸಂಬಂಧಿಸಿದ ವಿಷಯಗಳು:

 1. ಪಕ್ಷಾಂತರ ನಿಷೇಧ ಕಾಯಿದೆಯಡಿ, ಸಂಸದ ಅಥವಾ ಶಾಸಕರ ಅನರ್ಹತೆ/ಅನರ್ಹತೆಯನ್ನು ನಿರ್ಧರಿಸುವ ಅಧಿಕಾರ ಶಾಸಕಾಂಗದ ಅಧ್ಯಕ್ಷರಿಗೆ ಇರುತ್ತದೆ.
 2. ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಕಾನೂನಿನಲ್ಲಿ ಯಾವುದೇ ಸಮಯದ ಮಿತಿಯನ್ನು ನಿರ್ದಿಷ್ಟಪಡಿಸಲಾಗಿಲ್ಲ.
 3. ಕಳೆದ ವರ್ಷ, ಸುಪ್ರೀಂ ಕೋರ್ಟ್ ಪಕ್ಷಾಂತರ ವಿರೋಧಿ ಪ್ರಕರಣಗಳನ್ನು ಮೂರು ತಿಂಗಳ ಅವಧಿಯಲ್ಲಿ ಶಾಸಕಾಂಗದ ಅಧ್ಯಕ್ಷರು ತೀರ್ಮಾನಿಸಬೇಕು ಎಂದು ಹೇಳಿತ್ತು.

 

ಕಾನೂನಿನ ಅಡಿಯಲ್ಲಿ ವಿನಾಯಿತಿಗಳು:

ಸದನದ ಸದಸ್ಯರು (ಸಂಸದರು/ಶಾಸಕರು) ಕೆಲವು ಸಂದರ್ಭಗಳಲ್ಲಿ ಅನರ್ಹತೆಯ ಅಪಾಯವಿಲ್ಲದೆ ತಮ್ಮ ಪಕ್ಷವನ್ನು ಬದಲಾಯಿಸಬಹುದು.

 1. ಒಂದು ರಾಜಕೀಯ ಪಕ್ಷದ ಕನಿಷ್ಠ ಮೂರನೇ ಎರಡರಷ್ಟು ಶಾಸಕರು ವಿಲೀನದ ಪರವಾಗಿದ್ದರೆ ಮತ್ತೊಂದು ಪಕ್ಷದೊಂದಿಗೆ ವಿಲೀನಗೊಳ್ಳಲು ಅವಕಾಶವಿದೆ ಮತ್ತು ಇದನ್ನು ಕಾನೂನು ಅನುಮತಿಸುತ್ತದೆ.
 2. ಅಂತಹ ಸನ್ನಿವೇಶದಲ್ಲಿ, ಇತರ ಪಕ್ಷದೊಂದಿಗೆ ವಿಲೀನಗೊಳ್ಳಲು ನಿರ್ಧರಿಸುವ ಸದಸ್ಯರು ಮತ್ತು ಮೂಲ ಪಕ್ಷದಲ್ಲಿ ಉಳಿಯುವ ಸದಸ್ಯರನ್ನು ಅನರ್ಹಗೊಳಿಸಲಾಗುವುದಿಲ್ಲ.
 3. ಲೋಕಸಭೆ ಅಥವಾ ವಿಧಾನಸಭೆಯ ಸದಸ್ಯನು ಲೋಕಸಭೆ ಅಥವಾ ವಿಧಾನಸಭೆಯ ಸಭಾಪತಿಯಾಗಿ ಆಯ್ಕೆಯಾದ ನಂತರ ಸ್ವಯಂಪ್ರೇರಣೆಯಿಂದ ತನ್ನ ಪಕ್ಷದ ಸದಸ್ಯತ್ವವನ್ನು ಬಿಟ್ಟುಕೊಟ್ಟರೆ ಅಥವಾ ಸಭಾಪತಿಯ ಹುದ್ದೆಯನ್ನು ತ್ಯಜಿಸಿದ ನಂತರ ಮರಳಿ ತನ್ನ ಮಾತೃ ಪಕ್ಷವನ್ನು ಸೇರಿಕೊಂಡರೆ ಆ ವ್ಯಕ್ತಿಯು ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ಅನರ್ಹಗೊಳ್ಳುವುದಿಲ್ಲ.

 

ಈ ಕಾನೂನಿನಲ್ಲಿನ ಲೋಪ ದೋಷಗಳು:

ಈ ಕಾನೂನನ್ನು ವಿರೋಧಿಸುವವರು, ವ್ಯಕ್ತಿಗಳನ್ನು ಮತದಾರರು ಆಯ್ಕೆ ಮಾಡುತ್ತಾರೆಯೇ ಹೊರತು ಪಕ್ಷಗಳನ್ನಲ್ಲ ಮತ್ತು ಆದ್ದರಿಂದ ಪಕ್ಷಾಂತರ ವಿರೋಧಿ ಕಾನೂನು ನಿರರ್ಥಕವಾಗಿದೆ ಎಂದು ಹೇಳುತ್ತಾರೆ.

 

ಪಕ್ಷಾಂತರ ನಿಷೇಧ ಕಾನೂನು ಎಂದರೇನು?

(What is Anti-defection law?)

 1. 1985 ರಲ್ಲಿ, ಸಂವಿಧಾನ 52 ನೆಯ ತಿದ್ದುಪಡಿ ಕಾಯ್ದೆಯ ಮೂಲಕ 10 ನೇ ಅನುಸೂಚಿಯನ್ನು ಸಂವಿಧಾನದಲ್ಲಿ ಸೇರಿಸಲಾಯಿತು.
 2. ಇದರಲ್ಲಿ, ಸದನದ ಸದಸ್ಯರು ಒಂದು ರಾಜಕೀಯ ಪಕ್ಷದಿಂದ ಇನ್ನೊಂದಕ್ಕೆ ಸೇರಿದಾಗ ‘ಪಕ್ಷಾಂತರದ’ ಆಧಾರದ ಮೇಲೆ ಶಾಸಕರ / ಸಂಸದರ ಅನರ್ಹತೆಯ ಬಗ್ಗೆ ನಿರ್ಧರಿಸಲು ಅವಕಾಶ ಕಲ್ಪಿಸಲಾಗಿದೆ.
 3. ಸಂಸದರು ಮತ್ತು ಶಾಸಕರು ತಮ್ಮ ಮೂಲ ರಾಜಕೀಯ ಪಕ್ಷವನ್ನು ಅಂದರೆ ಯಾವ ಪಕ್ಷದ ಟಿಕೆಟ್ ಆಧರಿಸಿ ಆಯ್ಕೆಯಾಗಿರುತ್ತಾರೋ ಅದನ್ನು ಹೊರತುಪಡಿಸಿ ಬೇರೆ ಪಕ್ಷಗಳಿಗೆ ಸೇರುವುದನ್ನು ನಿಷೇಧಿಸುವ ಮೂಲಕ ಸರ್ಕಾರಗಳಲ್ಲಿ ಸ್ಥಿರತೆಯನ್ನು ತರುವುದು ಈ ತಿದ್ದುಪಡಿಯ ಉದ್ದೇಶವಾಗಿತ್ತು.
 4. ಇದರ ಅಡಿಯಲ್ಲಿ ರಾಜಕೀಯ ನಿಷ್ಠೆಯನ್ನು ಬದಲಿಸುವ ಸಂಸದರಿಗೆ ವಿಧಿಸುವ ದಂಡವೆಂದರೆ ಅವರನ್ನು ಸಂಸದೀಯ ಸದಸ್ಯತ್ವದಿಂದ ಅನರ್ಹಗೊಳಿಸುವುದು ಮತ್ತು ಮಂತ್ರಿಗಳಾಗದಂತೆ ನಿಷೇಧಿಸುವುದಾಗಿದೆ.
 5. ಸದನದ ಮತ್ತೊಬ್ಬ ಸದಸ್ಯರು ಸದನದ ಅಧ್ಯಕ್ಷರಿಗೆ ಪಕ್ಷಾಂತರದ ಕುರಿತು ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಶಾಸಕರು ಮತ್ತು ಸಂಸದರನ್ನು ಅನರ್ಹಗೊಳಿಸುವ ಪ್ರಕ್ರಿಯೆಯನ್ನು ಇದು ತಿಳಿಸುತ್ತದೆ.
 6. ಪಕ್ಷಾಂತರ ವಿರೋಧಿ ಕಾನೂನನ್ನು ಜಾರಿಗೆ ತರುವ ಎಲ್ಲ ಅಧಿಕಾರಗಳನ್ನು ಸ್ಪೀಕರ್ ಅಥವಾ ಸದನದ ಅಧ್ಯಕ್ಷರಿಗೆ ನೀಡಲಾಗಿದೆ ಮತ್ತು ಅವರ ನಿರ್ಧಾರ ಅಂತಿಮವಾಗಿರುತ್ತದೆ.

 

ಪ್ರಿಸೈಡಿಂಗ್ ಅಧಿಕಾರಿಯ (ಸಭಾಧ್ಯಕ್ಷರು) ನಿರ್ಧಾರವು ನ್ಯಾಯಾಂಗದ ಪರಿಶೀಲನೆಗೆ ಒಳಪಟ್ಟಿರುತ್ತದೆ:

ಈ ಶಾಸನವು, ಆರಂಭದಲ್ಲಿ ಪ್ರಿಸೈಡಿಂಗ್ ಅಧಿಕಾರಿಯ ನಿರ್ಧಾರವು ನ್ಯಾಯಾಂಗ ಪರಿಶೀಲನೆಗೆ ಒಳಪಡುವುದಿಲ್ಲ ಎಂದು ಹೇಳಿತ್ತು. ಆದರೆ 1992 ರಲ್ಲಿ, ಸುಪ್ರೀಂ ಕೋರ್ಟ್ ಈ ನಿಬಂಧನೆಯನ್ನು ತಿರಸ್ಕರಿಸಿತು ಮತ್ತು ಈ ಸಂದರ್ಭದಲ್ಲಿ ಪ್ರಿಸೈಡಿಂಗ್ ಅಧಿಕಾರಿಯ ತೀರ್ಪಿನ ವಿರುದ್ಧ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿತು.

ಅಲ್ಲದೆ, ಪ್ರಿಸೈಡಿಂಗ್ ಅಧಿಕಾರಿಯು ತನ್ನ ಆದೇಶವನ್ನು ನೀಡುವವರೆಗೆ ನ್ಯಾಯಾಂಗದ ಹಸ್ತಕ್ಷೇಪ ಸಲ್ಲದು ಎಂದು ತೀರ್ಪು ನೀಡಿತು.

 

ಪಕ್ಷಾಂತರ ನಿಷೇಧ ಕುರಿತು ನಿರ್ಧಾರ ಕೈಗೊಳ್ಳಲು ಪ್ರಿಸೈಡಿಂಗ್ ಅಧಿಕಾರಿಗೆ ಯಾವುದೇ ಸಮಯದ ಮಿತಿ ನಿಗದಿ ಪಡಿಸಲಾಗಿದೆಯೇ?

ಕಾನೂನಿನ ಪ್ರಕಾರ, ಅನರ್ಹತೆ ಕುರಿತ ಅರ್ಜಿಯನ್ನು ನಿರ್ಧರಿಸಲು ಪ್ರಿಸೈಡಿಂಗ್ ಅಧಿಕಾರಿಗಳಿಗೆ ಯಾವುದೇ ಸಮಯ ಮಿತಿಯನ್ನು ನಿಗದಿಪಡಿಸಿಲ್ಲ. ‘ಪಕ್ಷಾಂತರ’ ಪ್ರಕರಣಗಳಲ್ಲಿ, ಯಾವುದೇ ನ್ಯಾಯಾಲಯವು ಅಧ್ಯಕ್ಷೀಯ ಅಧಿಕಾರಿಯು ನಿರ್ಧಾರ ತೆಗೆದುಕೊಂಡ ನಂತರವೇ ಮಧ್ಯಪ್ರವೇಶಿಸಬಹುದು, ಆದ್ದರಿಂದ ಅರ್ಜಿದಾರರ ಬಳಿ ಉಳಿದಿರುವ ಏಕೈಕ ಆಯ್ಕೆಯು ಈ ವಿಷಯವನ್ನು ನಿರ್ಧರಿಸುವವರೆಗೆ ಕಾಯುವುದು ಆಗಿದೆ.

 

ಈ ವಿಷಯದಲ್ಲಿ ನ್ಯಾಯಾಲಯಗಳು ಮಧ್ಯ ಪ್ರವೇಶಿಸಬಹುದೇ?

ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ಶಾಸಕಾಂಗದ ಕೆಲಸದಲ್ಲಿ ಮಧ್ಯಪ್ರವೇಶ ಮಾಡುತ್ತವೆ.

 1. 1992 ರಲ್ಲಿ, ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಸ್ಪೀಕರ್ ಮುಂದೆ ಇರುವ ‘ಪಕ್ಷಾಂತರ-ವಿರೋಧಿ ಕಾನೂನಿಗೆ’ ಸಂಬಂಧಿಸಿದ ಪ್ರಕ್ರಿಯೆಗಳು ‘ನ್ಯಾಯಮಂಡಳಿ’ಗೆ ಸಮಾನವಾಗಿರುತ್ತದೆ ಮತ್ತು ಆದ್ದರಿಂದ ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಬಹುದು ಎಂದು ಅಭಿಪ್ರಾಯಪಟ್ಟಿತು.
 2. 2020 ರ ಜನವರಿಯಲ್ಲಿ, ‘ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಶಾಸಕರನ್ನು ಅನರ್ಹಗೊಳಿಸಬೇಕೇ ಅಥವಾ ಅನರ್ಹಗೊಳಿಸಬೇಡವೇ’ ಎಂದು ನಿರ್ಧರಿಸುವ ವಿಶೇಷ ಅಧಿಕಾರವನ್ನು ವಿಧಾನಸಭೆಯ ಸ್ಪೀಕರ್‌ಗಳಿಂದ ಹಿಂಪಡೆಯಲು ಸಂವಿಧಾನವನ್ನು ತಿದ್ದುಪಡಿ ಮಾಡುವಂತೆ ಸುಪ್ರೀಂ ಕೋರ್ಟ್ ಸಂಸತ್ತಿಗೆ ಸೂಚಿಸಿತು.
 3. ಮಾರ್ಚ್ 2020 ರಲ್ಲಿ, ಸುಪ್ರೀಂ ಕೋರ್ಟ್ ಮಣಿಪುರದ ಸಚಿವ ತೌನೊಜಮ್ ಶ್ಯಾಮಕುಮಾರ್ ಸಿಂಗ್ ಅವರ ಸಚಿವ ಸ್ಥಾನವನ್ನು ರದ್ದುಗೊಳಿಸಿತು ಮತ್ತು “ಮುಂದಿನ ಆದೇಶದವರೆಗೆ ವಿಧಾನಸಭೆ ಪ್ರವೇಶಿಸದಂತೆ” ನಿರ್ಬಂಧಿಸಿತು. ತೌನೊಜಮ್ ಶ್ಯಾಮಕುಮಾರ್ ಸಿಂಗ್ ಅವರ ವಿರುದ್ಧದ ಅನರ್ಹತೆ ಅರ್ಜಿಗಳು 2017 ರಿಂದ ಸ್ಪೀಕರ್ ಮುಂದೆ ಬಾಕಿ ಉಳಿದಿವೆ.

 

ವಿಷಯಗಳು:ಭಾರತೀಯ ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

ಏಕರೂಪ ನಾಗರಿಕ ಸಂಹಿತೆ:


(Uniform Civil Code)

ಸಂದರ್ಭ:

ದೇಶದ ಹಲವು ಭಾಗಗಳಲ್ಲಿ ನಡೆಯುತ್ತಿರುವ ಹಿಜಾಬ್ ಪರ-ವಿರೋಧ ಚರ್ಚೆ ಮತ್ತು ಸಂಬಂಧಿತ ಪ್ರತಿಭಟನೆಗಳ ನಡುವೆ, ಭಾರತೀಯ ಜನತಾ ಪಕ್ಷದ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್  ಏಕರೂಪ ನಾಗರಿಕ ಸಂಹಿತೆಯು (Uniform Civil Code) “ಈ ಸಮಯದ ಅಗತ್ಯ” (need of the hour) ಎಂದು ಹೇಳಿದ್ದಾರೆ. ದೇಶಕ್ಕೆ ಎಲ್ಲ ಸಮುದಾಯಗಳಿಗೂ ಅನ್ವಯವಾಗುವ ಒಂದೇ ಕಾನೂನು ಅಗತ್ಯವಿದೆ ಎಂದಿದ್ದಾರೆ.

ಏಕರೂಪ ನಾಗರಿಕ ಸಂಹಿತೆ ಇಂದಿನ ಅಗತ್ಯವಾಗಿದೆ, ದೇಶ ಒಂದೇ ಆದ್ದರಿಂದ ಎಲ್ಲರಿಗೂ ಒಂದೇ ಕಾನೂನು ಇರಬೇಕು ಎಂದರು.

ಏಕರೂಪ ನಾಗರಿಕ ಸಂಹಿತೆಯು ವಿಭಿನ್ನ ನಂಬಿಕೆಗಳ ಜನರಿಗೆ ವಿಭಿನ್ನ ವೈಯಕ್ತಿಕ ಕಾನೂನುಗಳನ್ನು ಅನುಮತಿಸುವ ಬದಲು ಮದುವೆ, ವಿಚ್ಛೇದನ, ಉತ್ತರಾಧಿಕಾರ ಮತ್ತು ದತ್ತು ಮತ್ತು ಇತರ ವೈಯಕ್ತಿಕ ವಿಷಯಗಳನ್ನು ನಿಯಂತ್ರಿಸುವ ಕಾನೂನುಗಳ ಸಾಮಾನ್ಯ ಗುಂಪಾಗಿದೆ. ಸಮಾನತೆಯನ್ನು ಖಚಿತಪಡಿಸುವುದು ಗುರಿಯಾಗಿದೆ.

“ಏಕರೂಪ ನಾಗರಿಕ ಸಂಹಿತೆಯು (Uniform Civil Code) ಎಂಬ ಪರಿಸ್ಥಿತಿಯನ್ನು ರಚಿಸಲಾಗುತ್ತಿದೆ” ಎಂದು ಹೇಳಿದ ಅವರು , “ಒಂದು ರಾಷ್ಟ್ರ, ಒಂದು ಕಾನೂನು” ಜಾರಿಗೆ ಕರೆ ನೀಡಿದರು.

 

ಏನಿದು ಪ್ರಕರಣ?

ಹಿಜಾಬ್ ಗಲಾಟೆಯು ಡಿಸೆಂಬರ್ ಅಂತ್ಯದಲ್ಲಿ ಕೆಲವು ವಿದ್ಯಾರ್ಥಿಗಳು ಹಿಜಾಬ್ ಧರಿಸಿ ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಬರಲು ಪ್ರಾರಂಭಿಸಿದಾಗಿನಿಂದ ಪ್ರಾರಂಭವಾಯಿತು. ಇದನ್ನು ಪ್ರತಿಭಟಿಸಲು ಕೆಲವು ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಬರಲಾರಂಭಿಸಿದರು.

ಈ ವಿವಾದವು ರಾಜ್ಯದ ವಿವಿಧ ಭಾಗಗಳಲ್ಲಿನ ಇತರ ಶಿಕ್ಷಣ ಸಂಸ್ಥೆಗಳಿಗೆ ಹರಡಿತು ಮತ್ತು ಈ ವಾರದ ಆರಂಭದಲ್ಲಿ ನಡೆದ ಪ್ರತಿಭಟನೆಗಳು ಕೆಲವು ಸ್ಥಳಗಳಲ್ಲಿ ಹಿಂಸಾತ್ಮಕ ತಿರುವು ಪಡೆದುಕೊಂಡ ಪರಿಣಾಮ, ಸರ್ಕಾರವು ಶಿಕ್ಷಣ ಸಂಸ್ಥೆಗಳಿಗೆ ಮೂರು ದಿನಗಳ ರಜೆಯನ್ನು ಘೋಷಿಸಬೇಕಾಯಿತು.

ಮುಸ್ಲಿಮ್ ಹುಡುಗಿಯರು ಕಾಲೇಜಿಗೆ ಹಿಜಾಬ್ ಧರಿಸದೇ ಬರಲು ನಿರಾಕರಿಸಿದ್ದರಿಂದ ಹಿಜಾಬ್ ನಿಷೇಧದ ವಿಷಯವು ಇನ್ನೂ ಜೀವಂತವಾಗಿದೆ.

ಹಿಜಾಬ್ ನಿಷೇಧವು, ಸಂವಿಧಾನದಲ್ಲಿ ನೀಡಲಾಗಿರುವ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಮುಸ್ಲಿಂ ಧರ್ಮಗುರುಗಳು ವಾದಿಸುತ್ತಾರೆ.

 

ಹಿನ್ನೆಲೆ:

ಭಾರತದ ಸಂವಿಧಾನದ ಭಾಗ IV ರಲ್ಲಿನ 44 ನೇ ವಿಧಿಯ ಅಡಿಯಲ್ಲಿನ ರಾಜ್ಯ ನೀತಿಯ ನಿರ್ದೇಶಕ ತತ್ವಗಳೊಂದಿಗೆ ವ್ಯವಹರಿಸುವಾಗ  ಸಂವಿಧಾನದ ನಿರ್ಮಾತೃರು  ಭಾರತದ ಪ್ರಾಂತ್ಯ / ಪ್ರದೇಶಗಳಾದ್ಯಂತ ತನ್ನ ಎಲ್ಲ ನಾಗರಿಕರಿಗೆ ಏಕರೂಪದ ನಾಗರಿಕ ಸಂಹಿತೆಯನ್ನು ಖಚಿತಪಡಿಸಲು ರಾಜ್ಯವು ಪ್ರಯತ್ನಿಸಬೇಕು ಎಂದು ನಿರೀಕ್ಷಿಸಿ, ಆಶಿಸಿದ್ದರು ಆದರೆ,ಈ ನಿಟ್ಟಿನಲ್ಲಿ ಇಲ್ಲಿಯವರೆಗೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ.

 

ಏಕರೂಪ ನಾಗರಿಕ ಸಂಹಿತೆ ಎಂದರೇನು?

ಯಾವುದೇ ಧರ್ಮವನ್ನು ಪರಿಗಣನೆಗೆ ತೆಗೆದುಕೊಳ್ಳದೆ ಪ್ರತಿಯೊಬ್ಬ ನಾಗರಿಕನಿಗೂ ಅನ್ವಯಿಸುವ ಒಂದು ಸಾಮಾನ್ಯ ಆಡಳಿತ ಕಾನೂನು.

 

ಸಂವಿಧಾನ ಏನು ಹೇಳುತ್ತದೆ?

ಸಂವಿಧಾನದ 44 ನೇ ವಿಧಿಯು, ಏಕರೂಪ ನಾಗರಿಕ ಸಂಹಿತೆ ಇರಬೇಕು ಎಂದು ಹೇಳುತ್ತದೆ. ಈ ಲೇಖನದ ಪ್ರಕಾರ, “ಭಾರತದ ಭೂಪ್ರದೇಶದಾದ್ಯಂತ ಎಲ್ಲ ನಾಗರಿಕರಿಗೆ ಏಕರೂಪ ನಾಗರಿಕ ಸಂಹಿತೆಯನ್ನು ಖಚಿತಪಡಿಸಲು ರಾಜ್ಯವು ಪ್ರಯತ್ನಿಸಬೇಕು”. ಆದರೆ ರಾಜ್ಯನೀತಿಯ ನಿರ್ದೇಶಕ ತತ್ವಗಳು ಕೇವಲ ಮಾರ್ಗಸೂಚಿ ಅಥವಾ ಸಲಹಾತ್ಮಕ ಸ್ವರೂಪದಲ್ಲಿ ಇರುವುದರಿಂದ, ಅವುಗಳನ್ನು ಕಡ್ಡಾಯವಾಗಿ ಜಾರಿಗೊಳಿಸಲು ಸಾಧ್ಯವಿಲ್ಲ ಹಾಗೂ ಇವುಗಳಿಗೆ ನ್ಯಾಯಾಲಯದ ರಕ್ಷಣೆ ಕೂಡ ಇಲ್ಲ.

 

ಭಾರತಕ್ಕೆ ಏಕರೂಪದ ನಾಗರಿಕ ಸಂಹಿತೆಯ ಈ ಕೆಳಗಿನ ಕಾರಣಗಳಿಗಾಗಿ ಅವಶ್ಯಕವಾಗಿದೆ:

 1. ಜಾತ್ಯತೀತ ಗಣರಾಜ್ಯವೊಂದಕ್ಕೆ ಧರ್ಮದ ಅಥವಾ ಧಾರ್ಮಿಕ ಆಚರಣೆಗಳ ಆಧಾರದ ಮೇಲೆ ಇರುವ ವಿಭಿನ್ನ ನಿಯಮಗಳಿಗಿಂತ ಎಲ್ಲ ನಾಗರಿಕರಿಗೂ ಅನ್ವಯಿಸುವ ಸಾಮಾನ್ಯ ಕಾನೂನಿನ ಅಗತ್ಯವಿದೆ.
 2. ಲಿಂಗಾಧಾರಿತ ನ್ಯಾಯ (Gender Justice): ಹಿಂದೂ ಅಥವಾ ಮುಸ್ಲಿಂ ಯಾವುದೇ ಧರ್ಮ ವಾಗಿರಲಿ, ಸಾಮಾನ್ಯವಾಗಿ ಧಾರ್ಮಿಕ ಕಾನೂನಿನಡಿಯಲ್ಲಿ ಮಹಿಳೆಯರ ಹಕ್ಕುಗಳು ಸೀಮಿತಗೊಂಡಿರುತ್ತವೆ . ಧಾರ್ಮಿಕ ಸಂಪ್ರದಾಯದಿಂದ ನಿಯಂತ್ರಿಸಲ್ಪಡುವ ಅನೇಕ ರೂಢಿ, ಸಂಪ್ರದಾಯ ಮತ್ತು ಆಚರಣೆಗಳು ಭಾರತೀಯ ಸಂವಿಧಾನವು ಖಾತರಿಪಡಿಸಿದ ಮೂಲಭೂತ ಹಕ್ಕುಗಳಿಗೆ ವಿರುದ್ಧವಾಗಿವೆ.
 3. ಷಾ ಬಾನೊ ಪ್ರಕರಣದ ( the Shah Bano case) ತೀರ್ಪು ಸೇರಿದಂತೆ ತಮ್ಮ ಅನೇಕ ತೀರ್ಪುಗಳಲ್ಲಿ ನ್ಯಾಯಾಲಯಗಳು ಏಕರೂಪ ನಾಗರಿಕ ಸಂಹಿತೆಯನ್ನು  ಅನುಷ್ಠಾನಗೊಳಿಸಲು ಸರ್ಕಾರ ಪ್ರಯತ್ನಿಸಬೇಕೆಂದು ತಿಳಿಸಿವೆ.

 

ಭಾರತವು,ನಾಗರಿಕ ವಿಷಯಗಳಲ್ಲಿ ಈಗಾಗಲೇ ಏಕರೂಪದ ಸಂಹಿತೆಯನ್ನು ಹೊಂದಿಲ್ಲವೇ?

ಭಾರತೀಯ ಕಾನೂನುಗಳು ಹೆಚ್ಚಿನ ನಾಗರಿಕ ವಿಷಯಗಳಲ್ಲಿ ಏಕರೂಪದ ಸಂಹಿತೆಯನ್ನು ಅನುಸರಿಸುತ್ತವೆ – ಅವುಗಳೆಂದರೆ, ಭಾರತೀಯ ಗುತ್ತಿಗೆ ಕಾಯ್ದೆ, ನಾಗರಿಕ ದಂಡ ಸಂಹಿತೆ (Civil Procedure code),ಸರಕುಗಳ ಮಾರಾಟ ಕಾಯ್ದೆ (Sale of Goods Act) ,ಆಸ್ತಿ ವರ್ಗಾವಣೆ ಕಾಯ್ದೆ ( Transfer of Property Act), ಸಹಭಾಗಿತ್ವ / ಪಾಲುದಾರ ಕಾಯ್ದೆ ( Partnership Act) ,ಸಾಕ್ಷ್ಯಾಧಾರ ಕಾಯ್ದೆ ( Evidence Act) ಇತ್ಯಾದಿಗಳು. ಆದಾಗ್ಯೂ, ರಾಜ್ಯಗಳು ಈ ಕಾನೂನುಗಳಿಗೆ ನೂರಾರು ತಿದ್ದುಪಡಿಗಳನ್ನು ಮಾಡಿವೆಯಾದ್ದರಿಂದ ಈ ಜಾತ್ಯತೀತ ನಾಗರಿಕ ಕಾನೂನುಗಳ ಅಡಿಯಲ್ಲಿಯೂ, ಕೆಲವು ವಿಷಯಗಳಲ್ಲಿ ವೈವಿಧ್ಯತೆ ಇದೆ.

 

ಈ ಸಮಯದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು (UCC) ಜಾರಿಗೊಳಿಸುವುದು  ಏಕೆ ಅಷ್ಟೊಂದು ಅಪೇಕ್ಷಣೀಯವಲ್ಲ?

 1. ಜಾತ್ಯತೀತತೆಯ ತತ್ವವು ದೇಶದಲ್ಲಿ ಚಾಲ್ತಿಯಲ್ಲಿರುವ ಬಹುತ್ವದ ತತ್ವಕ್ಕೆ ವಿರುದ್ಧವಾಗಿರಲು ಸಾಧ್ಯವಿಲ್ಲ.
 2. ಏಕರೂಪತೆಗಾಗಿನ ನಮ್ಮ ಹಕ್ಕೊತ್ತಾಯವು ರಾಷ್ಟ್ರದ ಪ್ರಾದೇಶಿಕ ಸಮಗ್ರತೆಯನ್ನು ಅಪಾಯಕ್ಕೆ ಒಡ್ಡುವ ಮಟ್ಟಿಗೆ ಸಾಂಸ್ಕೃತಿಕ ವೈವಿಧ್ಯತೆಯಲ್ಲಿ ರಾಜಿ ಮಾಡಲು ಸಾಧ್ಯವಿಲ್ಲ.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಮೇಕೆದಾಟು ವಿವಾದ:


(Mekedatu issue)

 

 ಸಂದರ್ಭ:

ಕರ್ನಾಟಕ ಪ್ರಸ್ತಾಪಿಸಿರುವ ಮೇಕೆದಾಟು ಸಮತೋಲನ ಜಲಾಶಯ-ಕುಡಿಯುವ ನೀರಿನ ಯೋಜನೆ (Mekedatu Balancing Reservoir-cum-Drinking Water Project) ಕುರಿತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery Water Management Authority -CWMA) ನಡೆಸಲು ಉದ್ದೇಶಿಸಿರುವ ವಿಶೇಷ ಚರ್ಚೆಯ ಕಲ್ಪನೆಯನ್ನು ತಮಿಳುನಾಡು ತಿರಸ್ಕರಿಸಿದೆ.

ಈ ವಿಷಯದ ಬಗ್ಗೆ ಯಾವುದೇ ಚರ್ಚೆ ಬೇಡ ಎಂದು ತಮಿಳುನಾಡು ತನ್ನ ನಿಲುವನ್ನು ಪುನರುಚ್ಚರಿಸಿತು, ಏಕೆಂದರೆ ಅದು ಈಗಾಗಲೇ ವಿಚಾರಣೆಯಲ್ಲಿದೆ.

 

ಏನಿದು ಪ್ರಕರಣ? ಯೋಜನೆಯ ವಿಳಂಬಕ್ಕೆ ಕಾರಣವೇನು?

ಮೇಕೆದಾಟು ಎಂಬಲ್ಲಿ ಕಾವೇರಿ ನದಿಗೆ ಜಲಾಶಯ ನಿರ್ಮಿಸುವ ಕರ್ನಾಟಕದ ಕ್ರಮವನ್ನು ವಿರೋಧಿಸಿ ತಮಿಳುನಾಡು ಪ್ರತಿಭಟನೆ ನಡೆಸುತ್ತಿದೆ.  67 ಸಾವಿರ ಮಿಲಿಯನ್ ಘನ ಅಡಿ (tmc ft) ಸಂಗ್ರಹ ಸಾಮರ್ಥ್ಯದ ಜಲಾಶಯದಿಂದ 4.75 ಸಾವಿರ ಮಿಲಿಯನ್ ಘನ ಅಡಿ  (4.75 tmc ft) ನೀರನ್ನು ಕುಡಿಯುವ ಉದ್ದೇಶಕ್ಕಾಗಿ ಬಳಸಿಕೊಳ್ಳಲು ಕರ್ನಾಟಕ ಬಯಸುತ್ತಿದೆ, ಇದು ತಮಿಳುನಾಡು ರಾಜ್ಯಕ್ಕೆ “ಸ್ವೀಕಾರಾರ್ಹವಾಗಿಲ್ಲ”.

 1. ಆದಾಗ್ಯೂ, ಕರ್ನಾಟಕ ಸರ್ಕಾರವು ‘ಮೇಕೆದಾಟು ಯೋಜನೆ’ಯಲ್ಲಿ ಯಾವುದೇ “ರಾಜಿ” ಇಲ್ಲ ಎಂದು ಪ್ರತಿಪಾದಿಸಿದೆ ಮತ್ತು ರಾಜ್ಯವು ಈ ಯೋಜನೆಯನ್ನು ಆದ್ಯತೆಯ ವಿಷಯವಾಗಿ ಕೈಗೆತ್ತಿಕೊಳ್ಳುತ್ತದೆ ಎಂದು ತಿಳಿಸಿದೆ.
 2. ಈ ಯೋಜನೆಯು ಬೆಂಗಳೂರಿನ ನೀರಿನ ಸಮಸ್ಯೆಯನ್ನು ಪರಿಹರಿಸಲು ಸಹಾಯ ಮಾಡುತ್ತದೆ ಎಂದು ಕರ್ನಾಟಕವು ತನ್ನ ವಾದವನ್ನು ಗಟ್ಟಿಯಾಗಿ ಮಂಡಿಸುತ್ತಿದೆ.

Current Affairs

 

ಕರ್ನಾಟಕ ಮತ್ತು ತಮಿಳುನಾಡು ನಡುವೆ ನೀರು ಹಂಚಿಕೆ:

ಹಂಚಿಕೆಯ ಪ್ರಕಾರ, ಕರ್ನಾಟಕವು ಮೂರು ಮೂಲಗಳಿಂದ ಕಾವೇರಿ ನದಿಯ ನೀರನ್ನು ಬಿಡುಗಡೆ ಮಾಡಬೇಕಿದೆ:

 1. ಒಂದು, ಕಬಿನಿ ನದಿಯ ಕೆಳಭಾಗದಲ್ಲಿ ಹರಿಯುವ ನೀರು, ಕೃಷ್ಣರಾಜಸಾಗರ ಜಲಾಶಯದ ಜಲಾನಯನ ಪ್ರದೇಶ, ಶಿಂಷಾ, ಅರ್ಕಾವತಿ ಮತ್ತು ಸುವರ್ಣಾವತಿ ನದಿಗಳ ಉಪ ಜಲಾನಯನ ಪ್ರದೇಶಗಳು ಮತ್ತು ಸಣ್ಣ ನದಿಗಳ ನೀರು.
 2. ಎರಡನೆಯದು, ಕಬಿನಿ ಅಣೆಕಟ್ಟಿನಿಂದ ಬಿಡಲಾಗುವ ನೀರು.
 3. ಮೂರನೆಯದು ಕೃಷ್ಣರಾಜಸಾಗರ ಅಣೆಕಟ್ಟೆಯಿಂದ ಹರಿಸಲಾಗುವ ನೀರು.

 

ಕರ್ನಾಟಕದ ಅಧೀನದಲ್ಲಿರುವ ಎರಡು ಮತ್ತು ಮೂರನೇ ಮೂಲಗಳ ಸಂದರ್ಭದಲ್ಲಿ ರಾಜ್ಯದ ಬಳಕೆಗೆ ಸಾಕಷ್ಟು ನೀರನ್ನು ಸಂಗ್ರಹಿಸಿದ ನಂತರವೇ ತಮಿಳುನಾಡಿಗೆ ನೀರು ಬಿಡಲಾಗುತ್ತದೆ.

 1. ಮೊದಲ ಮೂಲದಲ್ಲಿ ಯಾವುದೇ ಅಣೆಕಟ್ಟು ಇಲ್ಲದಿರುವುದರಿಂದ ಈ ಪ್ರದೇಶಗಳ ನೀರು ಯಾವುದೇ ಅಡೆತಡೆಯಿಲ್ಲದೆ ತಮಿಳುನಾಡಿಗೆ ಮುಕ್ತವಾಗಿ ಹರಿಯುತ್ತದೆ.
 2. ಆದರೆ ಈಗ ಮೇಕೆದಾಟು ಅಣೆಕಟ್ಟಿನ ಮೂಲಕ ಈ ಮೂಲವನ್ನು ತಡೆಯಲು ಕರ್ನಾಟಕವು “ಪಿತೂರಿ” ನಡೆಸುತ್ತಿದೆ ಎಂದು ತಮಿಳುನಾಡು ರಾಜ್ಯ ಸರ್ಕಾರವು ಭಾವಿಸಿದೆ.
 3. ಮೇಕೆದಾಟು ವಲಯವು ಕಾವೇರಿ ನದಿಯ ನೀರು ಮೇಲ್ಭಾಗದ ಕರ್ನಾಟಕದಿಂದ ಕೆಳಭಾಗದ ತಮಿಳುನಾಡು ರಾಜ್ಯಕ್ಕೆ ಅನಿಯಂತ್ರಿತವಾಗಿ ಹರಿಯುವ ಕೊನೆಯ ಮುಕ್ತ ಪಾಯಿಂಟ್ ಆಗಿದೆ.

Current Affairs

ಮೇಕೆದಾಟು ಯೋಜನೆ ಕುರಿತು:

 1. ಮೇಕೆದಾಟು ಒಂದು ಬಹುಪಯೋಗಿ (ಕುಡಿಯುವ ನೀರು ಮತ್ತು ಜಲ ವಿದ್ಯುತ್) ಯೋಜನೆಯಾಗಿದೆ.
 2. ಯೋಜನೆಯ ಅಡಿಯಲ್ಲಿ, ಕರ್ನಾಟಕದ ರಾಮನಗರ ಜಿಲ್ಲೆಯ ಕನಕಪುರದ ಬಳಿ ‘ಸಮತೋಲನ ಜಲಾಶಯ’ (Balancing Reservoir) ನಿರ್ಮಿಸಲು ಉದ್ದೇಶಿಸಲಾಗಿದೆ.
 3. ಈ ಯೋಜನೆಯ ಉದ್ದೇಶ ಬೆಂಗಳೂರು ನಗರ ಮತ್ತು ಅದರ ಪಕ್ಕದ ಪ್ರದೇಶಗಳಿಗೆ ಕುಡಿಯುವ ನೀರನ್ನು (4.75 ಟಿಎಂಸಿ) ಸಂಗ್ರಹಿಸುವುದು ಮತ್ತು ಪೂರೈಸುವುದಾಗಿದೆ. ಈ ಯೋಜನೆಯ ಮೂಲಕ ಸುಮಾರು 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಲು ಕೂಡ ಪ್ರಸ್ತಾಪಿಸಲಾಗಿದೆ.
 4. ಯೋಜನೆಯ ಅಂದಾಜು ವೆಚ್ಚ 9,000 ಕೋಟಿ ರೂ.ಗಳು.

Current Affairs

 

ತಮಿಳುನಾಡು, ಈ ಯೋಜನೆಯನ್ನು ವಿರೋಧಿಸಲು ಕಾರಣಗಳು:

 1. ‘ಸುಪ್ರೀಂ ಕೋರ್ಟ್’ ಮತ್ತು ‘ಕಾವೇರಿ ನದಿ ನೀರು ವಿವಾದ ಪ್ರಾಧಿಕಾರ’ (CWDT) ‘’ ಕಾವೇರಿ ಜಲಾನಯನ ಪ್ರದೇಶದಲ್ಲಿ ಲಭ್ಯವಿರುವ ನೀರು ಸಂಗ್ರಹಣೆ ಮತ್ತು ವಿತರಣೆಗೆ ಶೇಖರಣಾ ಸೌಲಭ್ಯಗಳು ಸಾಕಷ್ಟಿವೆ, ಹಾಗಾಗಿ ಕರ್ನಾಟಕದ ಈ ಪ್ರಸ್ತಾವನೆ ಸಮರ್ಥನೀಯವಲ್ಲ ಅದರಿಂದ ಯೋಜನೆಯನ್ನು ಸಾರಾಸಗಟಾಗಿ ತಿರಸ್ಕರಿಸಲಾಗುವುದು ಎಂದು ತಮಿಳುನಾಡು ಹೇಳುತ್ತದೆ.
 2. ತಮಿಳುನಾಡಿನ ಪ್ರಕಾರ- ಉದ್ದೇಶಿತ ಜಲಾಶಯದ ನಿರ್ಮಾಣವು ಕೇವಲ ಕುಡಿಯುವ ನೀರಿಗಾಗಿ ಮಾತ್ರ ವಾಗಿರದೆ, ನಿರಾವರಿ ಕ್ಷೇತ್ರದ ಪ್ರಮಾಣವನ್ನು ಹೆಚ್ಚಿಸಲು ಸಹ ನಿರ್ಮಿಸಲಾಗುತ್ತದೆ,ಇದು ‘ಕಾವೇರಿ ಜಲ ವಿವಾದ ತೀರ್ಪಿನ’ ಸ್ಪಷ್ಟ ಉಲ್ಲಂಘನೆಯಾಗಿದೆ ಎಂಬುದು ಅದರ ವಾದವಾಗಿದೆ.

ನ್ಯಾಯಮಂಡಳಿ ಮತ್ತು ಸುಪ್ರೀಂ ಕೋರ್ಟ್ ನೀಡಿದ ತೀರ್ಪುಗಳು:

ಕಾವೇರಿ ಜಲವಿವಾದ ಇತ್ಯರ್ಥಕ್ಕೆ ಸಂಬಂಧಿಸಿದಂತೆ ‘ಕಾವೇರಿ ಜಲವಿವಾದ ನ್ಯಾಯಮಂಡಳಿ’ (CWDT) ಯನ್ನು 1990 ರಲ್ಲಿ ಸ್ಥಾಪಿಸಲಾಗಿತ್ತು ಮತ್ತು ಅದು 2007ರಲ್ಲಿ ತನ್ನ ಅಂತಿಮ ಐತೀರ್ಪು ಪ್ರಕಟಿಸಿ ಶೇ.30ರ ಅವಲಂಬನಾ ಸೂತ್ರದಡಿ ಕಾವೇರಿ ನದಿ ನೀರಿನ ಒಟ್ಟು ಪ್ರಮಾಣವನ್ನು 740 ಟಿಎಂಸಿ ಎಂದು ಲೆಕ್ಕ ಹಾಕಿತ್ತು. ಬಳಿಕ ತಮಿಳುನಾಡಿಗೆ 419 ಟಿಎಂಸಿ, ಕರ್ನಾಟಕಕ್ಕೆ 270 ಟಿಎಂಸಿ, ಕೇರಳ ರಾಜ್ಯಕ್ಕೆ 30 ಟಿಎಂಸಿ, ಪಾಂಡಿಚೇರಿಗೆ 7 ಟಿಎಂಸಿ ಹಾಗೂ ಉಳಿದಂತೆ 17 ಟಿಎಂಸಿ ನೀರನ್ನು ಪರಿಸರ ಬಳಕೆ, ಆವಿಯಾಗುವಿಕೆ ಮುಂದಾದವುಗಳಿಗೆ ಹಂಚಿಕೆ ಮಾಡಿತ್ತು.

ಆದಾಗ್ಯೂ, ತಮಿಳುನಾಡು ಮತ್ತು ಕರ್ನಾಟಕ ಎರಡೂ ರಾಜ್ಯಗಳು ಈ ನದಿ ನೀರು ಹಂಚಿಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದವು ಮತ್ತು ನೀರು ಹಂಚಿಕೆಗಾಗಿ ಎರಡೂ ರಾಜ್ಯಗಳಲ್ಲಿ ಪ್ರತಿಭಟನೆಗಳು ಮತ್ತು ಹಿಂಸಾಚಾರಗಳು ನಡೆದವು. ಇದರ ನಂತರ ಈ ವಿಷಯವನ್ನು ಕೈಗೆತ್ತಿಕೊಂಡ ಸುಪ್ರೀಂ ಕೋರ್ಟ್  ತನ್ನ 2018 ರ ತೀರ್ಪಿನಲ್ಲಿ, ತಮಿಳುನಾಡಿನ ಈ ಹಿಂದಿನ ಪಾಲನ್ನು ವಿಭಜಿಸಿ, 14.75 ಟಿಎಂಸಿ ಅಡಿ ನೀರನ್ನು ಹೆಚ್ಚುವರಿಯಾಗಿ ಕರ್ನಾಟಕಕ್ಕೆ ಹಂಚಿಕೆ ಮಾಡಿತು.

 1. ಹೀಗಾಗಿ, ಹೊಸದಾಗಿ ಮಾಡಲಾದ ಹಂಚಿಕೆಯ ಪ್ರಕಾರ, ತಮಿಳುನಾಡಿಗೆ 404.25 ಟಿಎಂಸಿ ಅಡಿ ನೀರು ಸಿಕ್ಕಿತು ಮತ್ತು ಕರ್ನಾಟಕಕ್ಕೆ 284.75 ಟಿಎಂಸಿ ಅಡಿ ನೀರನ್ನು ನೀಡಲಾಗಿದೆ. ಕೇರಳ ಮತ್ತು ಪುದುಚೇರಿಯ ಪಾಲು ಬದಲಾಗದೆ ಉಳಿದಿದೆ.

Current Affairs

 

ಈ ವಿವಾದಕ್ಕೆ ಪರಿಹಾರ:

ಮೇಕೆದಾಟು ಯೋಜನೆ ಆರಂಭಿಸಲು ಕರ್ನಾಟಕ ಸರ್ಕಾರ ಸಲ್ಲಿಸಿರುವ ಸಮಗ್ರ ಯೋಜನಾ ವರದಿ (ಡಿಪಿಆರ್‌)ಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಅನುಮತಿಯ ಅಗತ್ಯವಿದೆ. ಅಲ್ಲದೆ, ಯೋಜನೆಗೆ ಕಾವೇರಿ ಕಣಿವೆಯ ಕೆಳಹಂತದ ರಾಜ್ಯಗಳ ಸಮ್ಮತಿಯೂ ಬೇಕು ಎಂದು ಕೇಂದ್ರ ಸರ್ಕಾರ ತಿಳಿಸಿದೆ.

 1. ಕರ್ನಾಟಕ ಸಲ್ಲಿಸಿರುವ ‘ಸಮಗ್ರ ಯೋಜನಾ ವರದಿಯನ್ನು (Detail Project Report – DPR) ಅನುಮೋದನೆಗಾಗಿ ಹಲವು ಬಾರಿ CWMA ಮುಂದೆ ಇಡಲಾಗಿದೆ, ಆದರೆ ವಿವಾದಕ್ಕೆ ಸಂಬಂಧಿಸಿದ ರಾಜ್ಯಗಳಾದ, ಕರ್ನಾಟಕ ಮತ್ತು ತಮಿಳುನಾಡು ನಡುವೆ ಒಮ್ಮತದ ಕೊರತೆಯಿಂದಾಗಿ ಈ ವಿಷಯದ ಕುರಿತು ಯಾವುದೇ ನಿರ್ಧಾರ ಕೈಗೊಳ್ಳಲು ಸಾಧ್ಯವಾಗಲಿಲ್ಲ.
 2. ‘ಅನುಮತಿ ಕೋರಿ ಅರ್ಜಿ ಸಲ್ಲಿಸಿದ 6 ತಿಂಗಳೊಳಗೆ ಕೇಂದ್ರ ಸರ್ಕಾರ ಪ್ರತಿಕ್ರಿಯೆ ನೀಡದಿದ್ದರೆ, ತಾತ್ವಿಕ ಒಪ್ಪಿಗೆ ದೊರೆತಿದೆ ಎಂದು ಭಾವಿಸಬಹುದಲ್ಲವೇ?’ ಎಂಬ ಪ್ರಶ್ನೆಗೆ ಉತ್ತರಿಸಿದ ಕೇಂದ್ರ ಸರ್ಕಾರವು, ತಾತ್ವಿಕ ಒಪ್ಪಿಗೆ ದೊರೆತಿದೆ ಎಂದು ಭಾವಿಸುವುದು ಸಹಜ. ಆದರೆ, ಕಾವೇರಿ ಜಲವಿವಾದ ನ್ಯಾಯಮಂಡಳಿ ನೀಡಿದ್ದ ಐತೀರ್ಪನ್ನು ಪ್ರಶ್ನಿಸಿ ಕಣಿವೆ ರಾಜ್ಯಗಳು ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿ ಸುಪ್ರೀಂ ಕೋರ್ಟ್‌ ನೀಡಿರುವ ಅಂತಿಮ ತೀರ್ಪಿನ ಅನ್ವಯ, ಯಾವುದೇ ಯೋಜನೆಗೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅನುಮತಿ ಪೂರ್ವಾಪೇಕ್ಷಿತವಾಗಿದೆ ಎಂದು ಸ್ಪಷ್ಟಪಡಿಸಿದೆ.

ಈ ಯೋಜನೆಯನ್ನು ಅಂತಾರಾಜ್ಯ ನದಿಗೆ ಅಡ್ಡಲಾಗಿ ಪ್ರಸ್ತಾಪಿಸಲಾಗಿರುವುದರಿಂದ, ಅಂತಾರಾಜ್ಯ ಜಲ ವಿವಾದ ಕಾಯಿದೆಯ ಪ್ರಕಾರ, ಕಣಿವೆಯ ಕೆಳಹಂತದ ರಾಜ್ಯಗಳಾದ ತಮಿಳುನಾಡು ಮತ್ತು ಪುದುಚೇರಿ ಸರ್ಕಾರಗಳ ಸಮ್ಮತಿ ಪಡೆಯುವುದು ಅಗತ್ಯ ಎಂದು ಕರ್ನಾಟಕವು ಡಿಪಿಆರ್ ಸಲ್ಲಿಸಿದಾಗಲೇ ತಿಳಿಸಲಾಗಿದೆ ಎಂದೂ ಸರ್ಕಾರವು ಲೋಕಸಭೆಗೆ ತಿಳಿಸಿದೆ.

 

ವಿಷಯಗಳು: ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಗುಂಪುಗಳು ಮತ್ತು ಭಾರತಕ್ಕೆ ಸಂಬಂಧಿಸಿದ ಒಪ್ಪಂದಗಳು ಮತ್ತು / ಅಥವಾ ಭಾರತದ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಅಂಶಗಳು.

ಸಮಗ್ರ ಆರ್ಥಿಕ ಸಹಕಾರ ಒಪ್ಪಂದ (CECA):


(Comprehensive Economic Cooperation Agreement (CECA)

 ಸಂದರ್ಭ:

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮಧ್ಯಂತರ ವ್ಯಾಪಾರ ಒಪ್ಪಂದವು ಎರಡೂ ಕಡೆಯವರು “ಸೂಕ್ಷ್ಮ” ಎಂದು ಪರಿಗಣಿಸುವ ವಸ್ತುಗಳನ್ನು ಒಳಗೊಂಡಿರುವ ಸಾಧ್ಯತೆಯಿಲ್ಲ.

 1. ಭಾರತ ಮತ್ತು ಆಸ್ಟ್ರೇಲಿಯನ್ ಸಮಾಲೋಚಕರು ಅಂತಿಮ “ಮಧ್ಯಂತರ ಒಪ್ಪಂದ”ವನ್ನು 30 ದಿನಗಳಲ್ಲಿ ಸಿದ್ಧಪಡಿಸುತ್ತಾರೆ ಮತ್ತು ಒಪ್ಪಂದವು “ಯಶಸ್ವೀ” ದಾಖಲೆಯಾಗಲಿದೆ.

 

ಹಿನ್ನೆಲೆ:

ಎರಡೂ ಕಡೆಯವರು ಸಮಗ್ರ ಮುಕ್ತ ವ್ಯಾಪಾರ ಒಪ್ಪಂದಕ್ಕೆ (comprehensive Free Trade Agreement — CECA) ಸಹಿ ಹಾಕುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು – ಸಮಗ್ರ ಆರ್ಥಿಕ ಸಹಕಾರ ಒಪ್ಪಂದ CECA – ಮತ್ತು “ಮಧ್ಯಂತರ ಒಪ್ಪಂದ” ವು ಅಂತಿಮ CECA ಮೇಲಿನ ಮಾತುಕತೆಗಳು ಪೂರ್ಣಗೊಳ್ಳುವ ಮೊದಲು ದ್ವಿಪಕ್ಷೀಯ ವ್ಯಾಪಾರವನ್ನು ಉತ್ತೇಜಿಸುವ ಗುರಿಯನ್ನು ಹೊಂದಿರುವ “ಮುಂಚಿನ ಫಲಪ್ರದ ಒಪ್ಪಂದ” (early harvest deal) ಎಂದು ವಾದಿಸಿದ್ದಾರೆ.

Current Affairs

 

ಭಾರತ-ಆಸ್ಟ್ರೇಲಿಯಾ ದ್ವಿಪಕ್ಷೀಯ ವ್ಯಾಪಾರ:

 1. ಆರ್ಥಿಕ ವರ್ಷ(FY)2021 ರಲ್ಲಿ, ಭಾರತವು ಆಸ್ಟ್ರೇಲಿಯಾಕ್ಕೆ $4.04 ಶತಕೋಟಿ ಮೌಲ್ಯದ ವಸ್ತುಗಳನ್ನು ರಫ್ತು ಮಾಡಿದ್ದರೆ, ಆಸ್ಟ್ರೇಲಿಯಾದಿಂದ $8.24 ಶತಕೋಟಿ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದೆ.
 2. ಆಸ್ಟ್ರೇಲಿಯಾಕ್ಕೆ ರಫ್ತು ಮಾಡಲಾದ ಪ್ರಮುಖ ಸರಕುಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳು, ಔಷಧಿಗಳು, ಪಾಲಿಶ್ ಮಾಡಿದ ವಜ್ರಗಳು, ಚಿನ್ನದ ಆಭರಣಗಳು, ಉಡುಪುಗಳು ಇತ್ಯಾದಿಗಳು ಸೇರಿವೆ, ಆದರೆ ಆಸ್ಟ್ರೇಲಿಯಾವು ಮುಖ್ಯವಾಗಿ ಕಲ್ಲಿದ್ದಲು, ದ್ರವ ಸಾರಜನಕ ಅನಿಲ (LNG), ಅಲ್ಯುಮಿನಾ ಮತ್ತು ನಾನ್-ಮಾನಿಟರಿ ಚಿನ್ನ, ಇತ್ಯಾದಿಗಳನ್ನು ಆಮದು ಮಾಡಿಕೊಳ್ಳುತ್ತದೆ.
 3. ಸೇವಾ ವಲಯದಲ್ಲಿ, ಭಾರತದ ರಫ್ತುಗಳಲ್ಲಿ ಪ್ರಯಾಣ, ದೂರಸಂಪರ್ಕ ಮತ್ತು ಕಂಪ್ಯೂಟರ್‌ಗಳು, ಸರ್ಕಾರ ಮತ್ತು ಹಣಕಾಸು ಸೇವೆಗಳು ಇತ್ಯಾದಿಗಳನ್ನು ಒಳಗೊಂಡಿದ್ದರೆ, ಆಸ್ಟ್ರೇಲಿಯಾದಿಂದ ಸೇವಾ ವಲಯದ ಆಮದುಗಳು ಮುಖ್ಯವಾಗಿ ಶಿಕ್ಷಣ ಮತ್ತು ಖಾಸಗಿ ಪ್ರಯಾಣವನ್ನು ಒಳಗೊಂಡಿವೆ.
 4. 2020 ರಲ್ಲಿ ಭಾರತವು ಮುಖ್ಯವಾಗಿ ಕಲ್ಲಿದ್ದಲಿನ ವ್ಯಾಪಾರ ಮತ್ತು ಅಂತರಾಷ್ಟ್ರೀಯ ಶಿಕ್ಷಣದ ಕಾರಣದಿಂದಾಗಿ, ಆಸ್ಟ್ರೇಲಿಯಾಗೆ ಏಳನೇ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ಆರನೇ ಅತಿದೊಡ್ಡ ರಫ್ತು ತಾಣವಾಗಿತ್ತು.

 

ಭಾರತಕ್ಕೆ ಒಪ್ಪಂದದ ಮಹತ್ವ:

 1. ಮಧ್ಯಂತರ ಒಪ್ಪಂದವು ಮುಂಬರುವ ವರ್ಷದಲ್ಲಿ ಭಾರತವು ಸಾಧಿಸಲು ಉದ್ದೇಶಿಸಿರುವ ಮುಕ್ತ ವ್ಯಾಪಾರ ಒಪ್ಪಂದ (FTA) ಗಳ ಒಂದು ಹಂತದ ಆರಂಭವನ್ನು ಗುರುತಿಸುತ್ತದೆ.
 2. ಆಸ್ಟ್ರೇಲಿಯಾದ ಹೊರತಾಗಿ, ಭಾರತವು ಇಸ್ರೇಲ್, ಕೆನಡಾ, ಯುರೋಪಿಯನ್ ಯೂನಿಯನ್ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನೊಂದಿಗೆ ಇದೇ ರೀತಿಯ ಮುಕ್ತ ವ್ಯಾಪಾರ ಒಪ್ಪಂದ (FTA) ಗಳನ್ನು ಮತ್ತು ಆರಂಭಿಕ ಫಲಪ್ರದ ಒಪ್ಪಂದಗಳನ್ನು ಅಂತಿಮಗೊಳಿಸಲು ಮಾತುಕತೆ ನಡೆಸುತ್ತಿದೆ.
 3. ಆರು ದೇಶಗಳ ಸಂಘಟನೆಯಾದ ಗಲ್ಫ್ ಸಹಕಾರ ಮಂಡಳಿಯು (GCC) ಸಹ ಭಾರತದೊಂದಿಗೆ FTA ಗಳನ್ನು ಅಂತಿಮಗೊಳಿಸಲು ಆಸಕ್ತಿ ತೋರಿಸಿದೆ. ಗಲ್ಫ್ ಸಹಕಾರ ಮಂಡಳಿಯು (GCC) ಬಹ್ರೇನ್, ಕುವೈತ್, ಓಮನ್, ಕತಾರ್, ಸೌದಿ ಅರೇಬಿಯಾ ಮತ್ತು UAE ಗಳನ್ನು ಒಳಗೊಂಡಿದೆ.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಸೊಸೈಟಿ ಫಾರ್ ವರ್ಲ್ಡ್‌ವೈಡ್ ಇಂಟರ್‌ಬ್ಯಾಂಕ್ ಫೈನಾನ್ಶಿಯಲ್ ಟೆಲಿಕಮ್ಯುನಿಕೇಷನ್ (SWIFT):


(Society for Worldwide Interbank Financial Telecommunication (SWIFT)

 

ಸಂದರ್ಭ:

ಉಕ್ರೇನ್‌ನಲ್ಲಿ ವಾಷಿಂಗ್ಟನ್ ಮತ್ತು ಮಾಸ್ಕೋ ನಡುವೆ ಉದ್ವಿಗ್ನತೆ ಉಲ್ಬಣಗೊಳ್ಳುತ್ತಿರುವಂತೆ, ಅಮೆರಿಕ ಸಂಯುಕ್ತ ಸಂಸ್ಥಾನವು, ತನ್ನ ಕೊನೆಯ ಅಸ್ತ್ರವಾಗಿ, ಸೊಸೈಟಿ ಫಾರ್ ವರ್ಲ್ಡ್‌ವೈಡ್ ಇಂಟರ್‌ಬ್ಯಾಂಕ್ ಫೈನಾನ್ಶಿಯಲ್ ಟೆಲಿಕಮ್ಯುನಿಕೇಷನ್ (SWIFT) ನಿಂದ ರಷ್ಯಾವನ್ನು ಹೊರಹಾಕಬಹುದು ಎಂದು ರಾಜಕೀಯ ವಿಮರ್ಶಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.

 

SWIFT ನಿಂದ ಹೊರಗಿಟ್ಟರೆ ಆಗುವ ಪರಿಣಾಮಗಳು:

ಒಂದು ದೇಶವನ್ನು ಹೆಚ್ಚು ಭಾಗವಹಿಸುವ ಹಣಕಾಸು ಸೌಲಭ್ಯದ ವೇದಿಕೆಯಿಂದ ಹೊರಗಿಟ್ಟರೆ, ಅದರ ವಿದೇಶಿ ನಿಧಿಯ ಮೇಲೆ ಪರಿಣಾಮ ಉಂಟಾಗುತ್ತದೆ,ಆಗ ಅದು ಸಂಪೂರ್ಣವಾಗಿ ದೇಶೀಯ ಹೂಡಿಕೆದಾರರ ಮೇಲೆ ಅವಲಂಬಿತವಾಗ ಬೇಕಾಗುತ್ತದೆ. ಸಾಂಸ್ಥಿಕ ಹೂಡಿಕೆದಾರರು ನಿರಂತರವಾಗಿ ಹೊಸ ಪ್ರದೇಶಗಳಲ್ಲಿ ಹೊಸ ಮಾರುಕಟ್ಟೆಗಳನ್ನು ಹುಡುಕುತ್ತಿರುವಾಗ ವಿಶೇಷವಾಗಿ ಇದು ತೊಂದರೆದಾಯಕವಾಗಿದೆ.

Current Affairs

 

SWIFT ಎಂದರೇನು?

ಇದು ಒಂದು ಮೆಸೇಜಿಂಗ್ ನೆಟ್‌ವರ್ಕ್ ಆಗಿದ್ದು, ಹಣಕಾಸು ಸಂಸ್ಥೆಗಳು ಪ್ರಮಾಣಿತ ಕೋಡ್‌ಗಳ ಮೂಲಕ ಮಾಹಿತಿ ಮತ್ತು ಸೂಚನೆಗಳನ್ನು ಸುರಕ್ಷಿತವಾಗಿ ರವಾನಿಸಲು ಬಳಸುತ್ತವೆ. SWIFT ಅಡಿಯಲ್ಲಿ, ಪ್ರತಿ ಹಣಕಾಸು ಸಂಸ್ಥೆಯು ಪಾವತಿಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಬಳಸುವ ವಿಶಿಷ್ಟ ಕೋಡ್ ಅನ್ನು ಹೊಂದಿದೆ.

 1. SWIFT ಹಣಕಾಸು ವರ್ಗಾವಣೆಯ ಸೌಲಭ್ಯವನ್ನು ಒದಗಿಸುವುದಿಲ್ಲ: ಬದಲಿಗೆ, ಇದು ಪೇಮೆಂಟ್ ಆರ್ಡರ್ ಗಳನ್ನು ಕಳುಹಿಸುತ್ತದೆ, ಇದನ್ನು ಸಂಸ್ಥೆಗಳು ಪರಸ್ಪರ ಹೊಂದಿರುವ ವರದಿಗಾರ ಖಾತೆಗಳಿಂದ ಇತ್ಯರ್ಥಗೊಳಿಸಬೇಕು.
 2. SWIFT ಒಂದು ಸುರಕ್ಷಿತ ಹಣಕಾಸು ಸಂದೇಶ ವಾಹಕವಾಗಿದೆ – ಬೇರೆ ಮಾತುಗಳಲ್ಲಿ ಹೇಳುವುದಾದರೆ, ಇದು ಒಂದು ಬ್ಯಾಂಕ್‌ನಿಂದ ಅದರ ಉದ್ದೇಶಿತ ಬ್ಯಾಂಕ್ ನ ಸ್ವೀಕೃತರಿಗೆ ಸಂದೇಶಗಳನ್ನು ರವಾನಿಸುತ್ತದೆ.
 3. ಸುರಕ್ಷಿತ ಪ್ರಸರಣ ಚಾನಲ್ ಅನ್ನು ಒದಗಿಸುವುದು ಇದರ ಪ್ರಮುಖ ಉದ್ದೇಶವಾಗಿದೆ, ಇದರಿಂದಾಗಿ ಬ್ಯಾಂಕ್ A ಗೆ ತಾನು ಬ್ಯಾಂಕ್ B ಗೆ ಕಳುಹಿಸುವ ಸಂದೇಶವು  ಬ್ಯಾಂಕ್ B ಗೆ ಹೋಗುತ್ತದೆಯೇ ಹೊರತು ಬೇರೆ ಯಾರಿಗೂ ಹೋಗುವುದಿಲ್ಲ ಎಂದು ತಿಳಿಯುತ್ತದೆ. ಬ್ಯಾಂಕ್ B ಕೂಡ ಬ್ಯಾಂಕ್ A ಹೊರತುಪಡಿಸಿ ಬೇರೆ ಯಾರೂ ಸಂದೇಶವನ್ನು ಕಳುಹಿಸಲು, ಓದಲು ಅಥವಾ  ಬದಲಾಯಿಸಲು ಸಾಧ್ಯವಿಲ್ಲ ಎಂದು ತಿಳಿದಿರುತ್ತದೆ. ಬ್ಯಾಂಕ್‌ಗಳು, ನಿಜವಾಗಿ ಸಂದೇಶಗಳನ್ನು ಕಳುಹಿಸುವ ಮೊದಲು ಗೌಪ್ಯತಾ ಪರಿಶೀಲನೆಯನ್ನು ಮಾಡಿಕೊಳ್ಳಬೇಕು.

 

ಅದು ಎಲ್ಲಿದೆ?

ಬೆಲ್ಜಿಯಂನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿರುವ SWIFT 200 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರಾಂತ್ಯಗಳಲ್ಲಿ 11,000 ಕ್ಕೂ ಹೆಚ್ಚು ಬ್ಯಾಂಕಿಂಗ್ ಮತ್ತು ಸೆಕ್ಯುರಿಟೀಸ್ ಸಂಸ್ಥೆಗಳೊಂದಿಗೆ ಸಹಯೋಗವನ್ನು ಹೊಂದಿದೆ.

 

ಅದನ್ನು ಹೇಗೆ ನಿರ್ವಹಿಸಲಾಗುತ್ತದೆ?

 1. ಇದು ಯುರೋಪಿಯನ್ ಸೆಂಟ್ರಲ್ ಬ್ಯಾಂಕ್ ಜೊತೆಗೆ ಬೆಲ್ಜಿಯಂ, ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ನೆದರ್ಲ್ಯಾಂಡ್ಸ್, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್, ಸ್ವಿಟ್ಜರ್ಲೆಂಡ್ ಮತ್ತು ಸ್ವೀಡನ್‌ನ G-10 ದೇಶಗಳ ಕೇಂದ್ರ ಬ್ಯಾಂಕ್‌ಗಳಿಂದ ನಿಯಂತ್ರಿಸಲ್ಪಡುತ್ತದೆ. ಇದರ ಪ್ರಮುಖ ಮೇಲ್ವಿಚಾರಕರು ನ್ಯಾಷನಲ್ ಬ್ಯಾಂಕ್ ಆಫ್ ಬೆಲ್ಜಿಯಂ ಆಗಿದೆ.
 2. SWIFT ಮೇಲ್ವಿಚಾರಣಾ ವೇದಿಕೆಯನ್ನು 2012 ರಲ್ಲಿ ಸ್ಥಾಪಿಸಲಾಯಿತು. G-10 ಭಾಗಿದಾರರನ್ನು ಭಾರತ, ಆಸ್ಟ್ರೇಲಿಯಾ, ರಷ್ಯಾ, ದಕ್ಷಿಣ ಕೊರಿಯಾ, ಸೌದಿ ಅರೇಬಿಯಾ, ಸಿಂಗಾಪುರ್, ದಕ್ಷಿಣ ಆಫ್ರಿಕಾ, ರಿಪಬ್ಲಿಕ್ ಆಫ್ ಟರ್ಕಿ ಮತ್ತು ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಕೇಂದ್ರೀಯ ಬ್ಯಾಂಕ್‌ಗಳ ಪ್ರತಿನಿಧಿಗಳು ಸೇರಿಕೊಳ್ಳುತ್ತಾರೆ.

 

SWIFT ಇಂಡಿಯಾ:

SWIFT ಇಂಡಿಯಾ ಭಾರತೀಯ ಸಾರ್ವಜನಿಕ ಮತ್ತು ಖಾಸಗಿ ವಲಯದ ಉತ್ಕೃಷ್ಟ ಬ್ಯಾಂಕ್‌ಗಳ ಜಂಟಿ ಉದ್ಯಮವಾಗಿದೆ ಮತ್ತು SWIFT (ವಿಶ್ವಾದ್ಯಂತ ಇಂಟರ್‌ಬ್ಯಾಂಕ್ ಫೈನಾನ್ಷಿಯಲ್ ಟೆಲಿಕಮ್ಯುನಿಕೇಷನ್‌ಗಾಗಿ ಸೊಸೈಟಿ). ಭಾರತೀಯ ಹಣಕಾಸು ಸಮುದಾಯಕ್ಕೆ ಉತ್ತಮ ಗುಣಮಟ್ಟದ ದೇಶೀಯ ಹಣಕಾಸು ಸಂದೇಶ ಸೇವೆಗಳನ್ನು ತಲುಪಿಸಲು ಕಂಪನಿಯನ್ನು ರೂಪಿಸಲಾಗಿದೆ. ಈ ಸಾಹಸೋದ್ಯಮವು ಅನೇಕ ಡೊಮೇನ್‌ಗಳಲ್ಲಿ ಆರ್ಥಿಕ ಸಮುದಾಯಕ್ಕೆ ಗಣನೀಯ ಕೊಡುಗೆ ನೀಡುವ ದೊಡ್ಡ ಸಾಮರ್ಥ್ಯವನ್ನು ಹೊಂದಿದೆ ಎಂದು ಭಟ್ಟಾಚಾರ್ಯ ಹೇಳಿದ್ದಾರೆ.

 

SWIFT ನ ಮಹತ್ವ:

 1. SWIFT ನ ಗ್ರಾಹಕರು ಕಳುಹಿಸುವ ಸಂದೇಶಗಳನ್ನು ಅದರ ವಿಶೇಷ ಭದ್ರತೆ ಮತ್ತು ಗುರುತಿನ ತಂತ್ರಜ್ಞಾನವನ್ನು ಬಳಸಿಕೊಂಡು ದೃಢೀಕರಿಸಲಾಗುತ್ತದೆ.
 2. ಸಂದೇಶಗಳು ಗ್ರಾಹಕ ಪರಿಸರವನ್ನು ಬಿಟ್ಟು SWIFT ಪರಿಸರವನ್ನು ಸೇರುವುದರಿಂದ Encryption ಅನ್ನು ಸೇರಿಸಲಾಗುತ್ತದೆ.
 3. ಸಂದೇಶಗಳು ಸಂರಕ್ಷಿತ SWIFT ಪರಿಸರದಲ್ಲಿ ಉಳಿಯುತ್ತವೆ, ಅದರ ಎಲ್ಲಾ ಗೌಪ್ಯತೆ ಮತ್ತು ಸಮಗ್ರತೆಯ ಬದ್ಧತೆಗಳಿಗೆ ಒಳಪಟ್ಟಿರುತ್ತದೆ, ಪ್ರಸರಣ ಪ್ರಕ್ರಿಯೆಯ ಉದ್ದಕ್ಕೂ ಅವುಗಳನ್ನು ಪ್ರಕ್ರಿಯೆಗೊಳಿಸಲಾದ ಆಪರೇಟಿಂಗ್ ಸೆಂಟರ್‌ಗಳಿಗೆ (OPCs) ರವಾನಿಸಲಾಗುತ್ತದೆ – ಅವುಗಳನ್ನು ಸುರಕ್ಷಿತವಾಗಿ ಸ್ವೀಕರಿಸುವವರಿಗೆ ತಲುಪಿಸುವವರೆಗೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:


  ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆ (ILO):

 

 1. ಮೊದಲ ವಿಶ್ವಯುದ್ಧದ ನಂತರ ಲೀಗ್ ಆಫ್ ನೇಷನ್ಸ್‌ನ ಏಜೆನ್ಸಿಯಾಗಿ ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ಯನ್ನು ಸ್ಥಾಪಿಸಲಾಯಿತು.
 2. ಇದನ್ನು ವರ್ಸೈಲ್ಸ್ ಒಪ್ಪಂದದ ಪ್ರಕಾರ (Treaty of Versailles) 1919 ರಲ್ಲಿ ಸ್ಥಾಪಿಸಲಾಯಿತು.
 3. ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆಯು 1946 ರಲ್ಲಿ ವಿಶ್ವಸಂಸ್ಥೆಯ ಮೊದಲ ವಿಶೇಷ ಸಂಸ್ಥೆಯಾಯಿತು.
 4. ಇದಕ್ಕೆ 1969 ರಲ್ಲಿ ಶಾಂತಿ ನೊಬೆಲ್ ಪ್ರಶಸ್ತಿ ನೀಡಲಾಯಿತು.
 5. ಇದು ವಿಶ್ವಸಂಸ್ಥೆಯ ಏಕೈಕ ತ್ರಿಪಕ್ಷೀಯ ಏಜೆನ್ಸಿಯಾಗಿದ್ದು, ಇದರಲ್ಲಿ ಸರ್ಕಾರಗಳು, ಉದ್ಯೋಗದಾತರು ಮತ್ತು ಕಾರ್ಮಿಕರು ಒಟ್ಟಾಗಿ ತೊಡಗಿಸಿಕೊಂಡಿದ್ದಾರೆ.
 6. ಪ್ರಧಾನ ಕಚೇರಿ: ಜಿನೀವಾ, ಸ್ವಿಟ್ಜರ್ಲೆಂಡ್.

 

ಪ್ರಮುಖ ವರದಿಗಳು:

 1. ವಿಶ್ವ ಉದ್ಯೋಗ ಮತ್ತು ಸಾಮಾಜಿಕ ದೃಷ್ಟಿಕೋನ (World Employment and Social Outlook).
 2. ಜಾಗತಿಕ ವೇತನ ವರದಿ (Global Wage Report).

Current Affairs 

 

 

ಮಿಲನ್ 2022:

 1. ಮಿಲನ್, ಭಾರತವು ಆಯೋಜಿಸಿರುವ ಬಹುಪಕ್ಷೀಯ ನೌಕಾ ಸಮರಾಭ್ಯಾಸವಾಗಿದೆ, ನಾಲ್ಕು  ನೌಕಾಪಡೆಗಳ ಭಾಗವಹಿಸುವಿಕೆಯೊಂದಿಗೆ 1995 ರಲ್ಲಿ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಅಸಾಧಾರಣ ಆರಂಭವನ್ನು ಮಾಡಿತು.
 2. ಕಳೆದ ಎರಡೂವರೆ ದಶಕಗಳಲ್ಲಿ ಸೌಹಾರ್ದ ನೌಕಾಪಡೆಗಳ ಈ ದ್ವೈವಾರ್ಷಿಕ ನೌಕಾ ಸಮರಾಭ್ಯಾಸವು 2018 ರಲ್ಲಿ ನಡೆದ ಕೊನೆಯ ಆವೃತ್ತಿಯಲ್ಲಿ 17 ದೇಶಗಳು ಭಾಗವಹಿಸುವುದರೊಂದಿಗೆ ಹಂತಹಂತವಾಗಿ ಬೆಳೆದಿದೆ.
 3. ಮಿಲನ್ 2022 ಅನ್ನು ಮೊದಲ ಬಾರಿಗೆ ಡೆಸ್ಟಿನಿ ನಗರವಾದ ವಿಶಾಖಪಟ್ಟಣದಲ್ಲಿ ನಿಗದಿಪಡಿಸಲಾಗಿದೆ. ಮಿಲನ್ 2022 ಈವೆಂಟ್‌ನ ಹನ್ನೊಂದನೇ ಆವೃತ್ತಿಯಾಗಿದೆ ಮತ್ತು ಪೂರ್ವ ನೇವಲ್ ಕಮಾಂಡ್‌ನ ಸಹಯೋಗದಲ್ಲಿ ನಡೆಯಲಿದೆ.
 4. ಇಲ್ಲಿಯವರೆಗೆ, ಮಿಲನ್ ಸಮರಾಭ್ಯಾಸವನ್ನು ‘ಪೋರ್ಟ್ ಬ್ಲೇರ್’ ನಲ್ಲಿ ನಡೆಸಲಾಗುತ್ತಿತ್ತು, ಆದರೆ ಈಗ ಅದನ್ನು ಹೆಚ್ಚು ವಿಶಾಲವಾದ ಮತ್ತು ಅತ್ಯಾಧುನಿಕ ಸೌಲಭ್ಯವುಳ್ಳ ವಿಶಾಖಪಟ್ಟಣಕ್ಕೆ ಸ್ಥಳಾಂತರಿಸಲಾಗುತ್ತಿದೆ.

Current Affairs

 


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos