Print Friendly, PDF & Email

[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 20ನೇ ಜನೇವರಿ 2022

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ  1 :

1. ಪಕ್ಷಾಂತರ ವಿರೋಧಿ ಕಾನೂನು.

2. ಹೌತಿಗಳು ಮತ್ತು ಯೆಮೆನ್ ಯುದ್ಧ.

3. ನುಸಂತಾರಾ ಇಂಡೋನೇಷ್ಯಾದ ಹೊಸ ರಾಜಧಾನಿ.

4. ಇಸ್ರೇಲ್-ಪ್ಯಾಲೆಸ್ತೀನ್ ಸಮಸ್ಯೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಔಷಧಿಗಳಿಗೆ ಬ್ಯಾಕ್ಟೀರಿಯಾದ ಪ್ರತಿರೋಧ.

2. ಚೀನಾದ ಕೃತಕ ಚಂದ್ರ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ಪೂರ್ವ ಜೌಗು ಜಿಂಕೆ / ಈಸ್ಟರ್ನ್ ಸ್ವಾಂಪ್ ಡೀರ್.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು:ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

ಪಕ್ಷಾಂತರ ನಿಷೇಧ ಕಾಯ್ದೆ:


(Anti-defection law)

 ಸಂದರ್ಭ:

ಇತ್ತೀಚೆಗೆ, ಬಹುಜನ ಸಮಾಜ ಪಕ್ಷದ (BSP) ಮುಖ್ಯಸ್ಥೆ ಮಾಯಾವತಿ ಅವರು ಮುಂದಿನ ತಿಂಗಳು ಪ್ರಾರಂಭವಾಗುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ರಾಜಕಾರಣಿಗಳ ಪಕ್ಷಾಂತರ ಪರ್ವವನ್ನು ಗಮನಿಸಿದ ನಂತರ ಹೆಚ್ಚು ಕಠಿಣವಾದ ಪಕ್ಷಾಂತರ ವಿರೋಧಿ ಕಾನೂನನ್ನು ಜಾರಿಗೊಳಿಸುವಂತೆ ಒತ್ತಾಯಿಸಿದ್ದಾರೆ.

ಏನಿದು ಪ್ರಕರಣ?

ಸರಿಯಾಗಿ ಚುನಾವಣೆಗೆ ಮುನ್ನವೇ ರಾಜಕಾರಣಿಗಳು ಪಕ್ಷ ಬದಲಾಯಿಸುವುದು ಅಸಾಮಾನ್ಯ ಘಟನೆಯೇನಲ್ಲ ಮತ್ತು ಪಕ್ಷಾಂತರದ ಘಟನೆಗಳು ನಡೆದಾಗಲೆಲ್ಲ, ಪಕ್ಷಾಂತರವನ್ನು ತಡೆಗಟ್ಟಲು ಶಾಸನ ರೂಪಿಸುವವರನ್ನು ವೈಯಕ್ತಿಕವಾಗಿ ಶಿಕ್ಷಿಸಲು ವಿನ್ಯಾಸಗೊಳಿಸಲಾದ ‘ಪಕ್ಷಾಂತರ ವಿರೋಧಿ ಕಾನೂನು’ (anti-defection law)  ಚರ್ಚೆಯ ಕೇಂದ್ರದಲ್ಲಿ ಬರುತ್ತದೆ.

ಭಾರತೀಯ ಸಂವಿಧಾನದ ಹತ್ತನೇ ಅನುಸೂಚಿ: ಪ್ರಸ್ತುತತೆ:

ಭಾರತೀಯ ಸಂವಿಧಾನದ ಹತ್ತನೇ ಶೆಡ್ಯೂಲ್ ಅನ್ನು ಜನಪ್ರಿಯವಾಗಿ ‘ಪಕ್ಷಾಂತರ ವಿರೋಧಿ ಕಾನೂನು’ ಎಂದು ಕರೆಯಲಾಗುತ್ತದೆ.

ಸಂಸದರು/ಶಾಸಕರು ರಾಜಕೀಯ ಪಕ್ಷಗಳ ಬದಲಾವಣೆಗೆ ಕಾನೂನಿನಡಿಯಲ್ಲಿ ಕ್ರಮ ಕೈಗೊಳ್ಳಬಹುದಾದ ಸಂದರ್ಭಗಳನ್ನು ಇದು ನಿರ್ದಿಷ್ಟಪಡಿಸುತ್ತದೆ.

ಈ ಅನುಸೂಚಿಯನ್ನು 52 ನೇ ತಿದ್ದುಪಡಿ ಕಾಯಿದೆಯಿಂದ ಸಂವಿಧಾನಕ್ಕೆ ಸೇರಿಸಲಾಗಿದೆ.

ಇದರಲ್ಲಿ,ಸ್ವತಂತ್ರ / ಪಕ್ಷೇತರ ಶಾಸಕರು ಚುನಾವಣೆಯ ನಂತರ ಪಕ್ಷಕ್ಕೆ ಸೇರುವ ಷರತ್ತುಗಳ ಬಗ್ಗೆಯೂ ನಿಬಂಧನೆಗಳನ್ನು ಮಾಡಲಾಗಿದೆ.

ಈ ಕಾಯಿದೆಯು ಸಂಸದ ಅಥವಾ ಶಾಸಕರಿಂದ ರಾಜಕೀಯ ಪಕ್ಷ ಬದಲಾವಣೆಗೆ ಸಂಬಂಧಿಸಿದಂತೆ ಈ ಕೆಳಗಿನ ಮೂರು ಸನ್ನಿವೇಶಗಳನ್ನು ನಿರ್ದಿಷ್ಟಪಡಿಸುತ್ತದೆ:

ಸದನದ ಸದಸ್ಯನೊಬ್ಬ ರಾಜಕೀಯ ಪಕ್ಷವೊಂದಕ್ಕೆ ಸೇರಿದವನಾಗಿದ್ದರೆ,

 1. ತನ್ನ ಮಾತೃಪಕ್ಷದ ಟಿಕೆಟ್ ನಿಂದ ಚುನಾಯಿತರಾದ ಸದಸ್ಯರು ಸ್ವಯಂಪ್ರೇರಣೆಯಿಂದ ತನ್ನ ರಾಜಕೀಯ ಪಕ್ಷದ ಸದಸ್ಯತ್ವವನ್ನು ತ್ಯಜಿಸಿದರೆ, ಅಥವಾ
 2. ಅವರು ತಮ್ಮ ರಾಜಕೀಯ ಪಕ್ಷದ ಸೂಚನೆಗಳಿಗೆ ವಿರುದ್ಧವಾಗಿ ಸದನದಲ್ಲಿ ಮತ ಚಲಾಯಿಸಿದರೆ.
 3. ಸ್ವತಂತ್ರ ಅಭ್ಯರ್ಥಿಯು ಚುನಾವಣೆಯ 6 ತಿಂಗಳ ನಂತರ ರಾಜಕೀಯ ಪಕ್ಷವೊಂದಕ್ಕೆ ಸೇರಿದರೆ.

ಮೇಲಿನ ಸಂದರ್ಭಗಳಲ್ಲಿ ಶಾಸಕರು ಪಕ್ಷವನ್ನು ಬದಲಾಯಿಸುವ ಅಥವಾ ಹೊಸ ಪಕ್ಷವನ್ನು ಸೇರುವ ಕಾರ್ಯ ಮಾಡಿದರೆ ಆಗ ಅವರು ತಮ್ಮ ಚುನಾಯಿತ ಶಾಸಕಾಂಗದ ಸ್ಥಾನವನ್ನು ಕಳೆದುಕೊಳ್ಳುತ್ತಾರೆ.

 1. ನಾಮನಿರ್ದೇಶಿತ ಸದಸ್ಯರೊಬ್ಬರು (ಸಂಸದರು ಅಥವಾ ವಿಧಾನಮಂಡಲ ಸದಸ್ಯರು) (Nominated Member) ಶಾಸಕಾಂಗದ/ ಸಂಸತ್ತಿನ  ಸದಸ್ಯರಾದ ಆರು ತಿಂಗಳ ಒಳಗೆ ಅವರು ರಾಜಕೀಯ ಪಕ್ಷವೊಂದನ್ನು ಸೇರಬಹುದು ಎಂದು ಕಾನೂನು ತಿಳಿಸುತ್ತದೆ ಅದರ ನಂತರ ಪಕ್ಷವೊಂದಕ್ಕೆ ಸೇರಿದರೆ ವಿಧಾನಮಂಡಲದಲ್ಲಿ ಅಥವಾ ಸಂಸತ್ತಿನಲ್ಲಿ ಆ ನಾಮನಿರ್ದೇಶಿತ ಸದಸ್ಯರು ತಮ್ಮ ಸ್ಥಾನವನ್ನು ಕಳೆದುಕೊಳ್ಳುತ್ತಾರೆ.

ಅನರ್ಹತೆಗೆ ಸಂಬಂಧಿಸಿದ ವಿಷಯಗಳು:

 1. ಪಕ್ಷಾಂತರ ನಿಷೇಧ ಕಾಯಿದೆಯಡಿ, ಸಂಸದ ಅಥವಾ ಶಾಸಕರ ಅನರ್ಹತೆ/ಅನರ್ಹತೆಯನ್ನು ನಿರ್ಧರಿಸುವ ಅಧಿಕಾರ ಶಾಸಕಾಂಗದ ಅಧ್ಯಕ್ಷರಿಗೆ ಇರುತ್ತದೆ.
 2. ಈ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲು ಕಾನೂನಿನಲ್ಲಿ ಯಾವುದೇ ಸಮಯದ ಮಿತಿಯನ್ನು ನಿರ್ದಿಷ್ಟಪಡಿಸಲಾಗಿಲ್ಲ.
 3. ಕಳೆದ ವರ್ಷ, ಸುಪ್ರೀಂ ಕೋರ್ಟ್ ಪಕ್ಷಾಂತರ ವಿರೋಧಿ ಪ್ರಕರಣಗಳನ್ನು ಮೂರು ತಿಂಗಳ ಅವಧಿಯಲ್ಲಿ ಶಾಸಕಾಂಗದ ಅಧ್ಯಕ್ಷರು ತೀರ್ಮಾನಿಸಬೇಕು ಎಂದು ಹೇಳಿತ್ತು.

ಕಾನೂನಿನ ಅಡಿಯಲ್ಲಿ ವಿನಾಯಿತಿಗಳು:

ಸದನದ ಸದಸ್ಯರು (ಸಂಸದರು/ಶಾಸಕರು) ಕೆಲವು ಸಂದರ್ಭಗಳಲ್ಲಿ ಅನರ್ಹತೆಯ ಅಪಾಯವಿಲ್ಲದೆ ತಮ್ಮ ಪಕ್ಷವನ್ನು ಬದಲಾಯಿಸಬಹುದು.

 1. ಒಂದು ರಾಜಕೀಯ ಪಕ್ಷದ ಕನಿಷ್ಠ ಮೂರನೇ ಎರಡರಷ್ಟು ಶಾಸಕರು ವಿಲೀನದ ಪರವಾಗಿದ್ದರೆ ಮತ್ತೊಂದು ಪಕ್ಷದೊಂದಿಗೆ ವಿಲೀನಗೊಳ್ಳಲು ಅವಕಾಶವಿದೆ ಮತ್ತು ಇದನ್ನು ಕಾನೂನು ಅನುಮತಿಸುತ್ತದೆ.
 2. ಅಂತಹ ಸನ್ನಿವೇಶದಲ್ಲಿ, ಇತರ ಪಕ್ಷದೊಂದಿಗೆ ವಿಲೀನಗೊಳ್ಳಲು ನಿರ್ಧರಿಸುವ ಸದಸ್ಯರು ಮತ್ತು ಮೂಲ ಪಕ್ಷದಲ್ಲಿ ಉಳಿಯುವ ಸದಸ್ಯರನ್ನು ಅನರ್ಹಗೊಳಿಸಲಾಗುವುದಿಲ್ಲ.
 3. ಲೋಕಸಭೆ ಅಥವಾ ವಿಧಾನಸಭೆಯ ಸದಸ್ಯನು ಲೋಕಸಭೆ ಅಥವಾ ವಿಧಾನಸಭೆಯ ಸಭಾಪತಿಯಾಗಿ ಆಯ್ಕೆಯಾದ ನಂತರ ಸ್ವಯಂಪ್ರೇರಣೆಯಿಂದ ತನ್ನ ಪಕ್ಷದ ಸದಸ್ಯತ್ವವನ್ನು ಬಿಟ್ಟುಕೊಟ್ಟರೆ ಅಥವಾ ಸಭಾಪತಿಯ ಹುದ್ದೆಯನ್ನು ತ್ಯಜಿಸಿದ ನಂತರ ಮರಳಿ ತನ್ನ ಮಾತೃ ಪಕ್ಷವನ್ನು ಸೇರಿಕೊಂಡರೆ ಆ ವ್ಯಕ್ತಿಯು ಪಕ್ಷಾಂತರ ನಿಷೇಧ ಕಾಯ್ದೆಯಡಿಯಲ್ಲಿ ಅನರ್ಹಗೊಳ್ಳುವುದಿಲ್ಲ.

ಈ ಕಾನೂನಿನಲ್ಲಿನ ಲೋಪ ದೋಷಗಳು:

ಈ ಕಾನೂನನ್ನು ವಿರೋಧಿಸುವವರು, ವ್ಯಕ್ತಿಗಳನ್ನು ಮತದಾರರು ಆಯ್ಕೆ ಮಾಡುತ್ತಾರೆಯೇ ಹೊರತು ಪಕ್ಷಗಳನ್ನಲ್ಲ ಮತ್ತು ಆದ್ದರಿಂದ ಪಕ್ಷಾಂತರ ವಿರೋಧಿ ಕಾನೂನು ನಿರರ್ಥಕವಾಗಿದೆ ಎಂದು ಹೇಳುತ್ತಾರೆ.

ಪಕ್ಷಾಂತರ ನಿಷೇಧ ಕಾನೂನು ಎಂದರೇನು?

(What is Anti-defection law?)

 1. 1985 ರಲ್ಲಿ, ಸಂವಿಧಾನ 52 ನೆಯ ತಿದ್ದುಪಡಿ ಕಾಯ್ದೆಯ ಮೂಲಕ 10 ನೇ ಅನುಸೂಚಿಯನ್ನು ಸಂವಿಧಾನದಲ್ಲಿ ಸೇರಿಸಲಾಯಿತು.
 2. ಇದರಲ್ಲಿ, ಸದನದ ಸದಸ್ಯರು ಒಂದು ರಾಜಕೀಯ ಪಕ್ಷದಿಂದ ಇನ್ನೊಂದಕ್ಕೆ ಸೇರಿದಾಗ ‘ಪಕ್ಷಾಂತರದ’ ಆಧಾರದ ಮೇಲೆ ಶಾಸಕರ / ಸಂಸದರ ಅನರ್ಹತೆಯ ಬಗ್ಗೆ ನಿರ್ಧರಿಸಲು ಅವಕಾಶ ಕಲ್ಪಿಸಲಾಗಿದೆ.
 3. ಸಂಸದರು ಮತ್ತು ಶಾಸಕರು ತಮ್ಮ ಮೂಲ ರಾಜಕೀಯ ಪಕ್ಷವನ್ನು ಅಂದರೆ ಯಾವ ಪಕ್ಷದ ಟಿಕೆಟ್ ಆಧರಿಸಿ ಆಯ್ಕೆಯಾಗಿರುತ್ತಾರೋ ಅದನ್ನು ಹೊರತುಪಡಿಸಿ ಬೇರೆ ಪಕ್ಷಗಳಿಗೆ ಸೇರುವುದನ್ನು ನಿಷೇಧಿಸುವ ಮೂಲಕ ಸರ್ಕಾರಗಳಲ್ಲಿ ಸ್ಥಿರತೆಯನ್ನು ತರುವುದು ಈ ತಿದ್ದುಪಡಿಯ ಉದ್ದೇಶವಾಗಿತ್ತು.
 4. ಇದರ ಅಡಿಯಲ್ಲಿ ರಾಜಕೀಯ ನಿಷ್ಠೆಯನ್ನು ಬದಲಿಸುವ ಸಂಸದರಿಗೆ ವಿಧಿಸುವ ದಂಡವೆಂದರೆ ಅವರನ್ನು ಸಂಸದೀಯ ಸದಸ್ಯತ್ವದಿಂದ ಅನರ್ಹಗೊಳಿಸುವುದು ಮತ್ತು ಮಂತ್ರಿಗಳಾಗದಂತೆ ನಿಷೇಧಿಸುವುದಾಗಿದೆ.
 5. ಸದನದ ಮತ್ತೊಬ್ಬ ಸದಸ್ಯರು ಸದನದ ಅಧ್ಯಕ್ಷರಿಗೆ ಪಕ್ಷಾಂತರದ ಕುರಿತು ಸಲ್ಲಿಸಿದ ಅರ್ಜಿಯ ಆಧಾರದ ಮೇಲೆ ಶಾಸಕರು ಮತ್ತು ಸಂಸದರನ್ನು ಅನರ್ಹಗೊಳಿಸುವ ಪ್ರಕ್ರಿಯೆಯನ್ನು ಇದು ತಿಳಿಸುತ್ತದೆ.
 6. ಪಕ್ಷಾಂತರ ವಿರೋಧಿ ಕಾನೂನನ್ನು ಜಾರಿಗೆ ತರುವ ಎಲ್ಲ ಅಧಿಕಾರಗಳನ್ನು ಸ್ಪೀಕರ್ ಅಥವಾ ಸದನದ ಅಧ್ಯಕ್ಷರಿಗೆ ನೀಡಲಾಗಿದೆ ಮತ್ತು ಅವರ ನಿರ್ಧಾರ ಅಂತಿಮವಾಗಿರುತ್ತದೆ.

ಪ್ರಿಸೈಡಿಂಗ್ ಅಧಿಕಾರಿಯ (ಸಭಾಧ್ಯಕ್ಷರು) ನಿರ್ಧಾರವು ನ್ಯಾಯಾಂಗದ ಪರಿಶೀಲನೆಗೆ ಒಳಪಟ್ಟಿರುತ್ತದೆ:

ಈ ಶಾಸನವು, ಆರಂಭದಲ್ಲಿ ಪ್ರಿಸೈಡಿಂಗ್ ಅಧಿಕಾರಿಯ ನಿರ್ಧಾರವು ನ್ಯಾಯಾಂಗ ಪರಿಶೀಲನೆಗೆ ಒಳಪಡುವುದಿಲ್ಲ ಎಂದು ಹೇಳಿತ್ತು. ಆದರೆ 1992 ರಲ್ಲಿ, ಸುಪ್ರೀಂ ಕೋರ್ಟ್ ಈ ನಿಬಂಧನೆಯನ್ನು ತಿರಸ್ಕರಿಸಿತು ಮತ್ತು ಈ ಸಂದರ್ಭದಲ್ಲಿ ಪ್ರಿಸೈಡಿಂಗ್ ಅಧಿಕಾರಿಯ ತೀರ್ಪಿನ ವಿರುದ್ಧ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿತು.

ಅಲ್ಲದೆ, ಪ್ರಿಸೈಡಿಂಗ್ ಅಧಿಕಾರಿಯು ತನ್ನ ಆದೇಶವನ್ನು ನೀಡುವವರೆಗೆ ನ್ಯಾಯಾಂಗದ ಹಸ್ತಕ್ಷೇಪ ಸಲ್ಲದು ಎಂದು ತೀರ್ಪು ನೀಡಿತು.

ಪಕ್ಷಾಂತರ ನಿಷೇಧ ಕುರಿತು ನಿರ್ಧಾರ ಕೈಗೊಳ್ಳಲು ಪ್ರಿಸೈಡಿಂಗ್ ಅಧಿಕಾರಿಗೆ ಯಾವುದೇ ಸಮಯದ ಮಿತಿ ನಿಗದಿ ಪಡಿಸಲಾಗಿದೆಯೇ?

ಕಾನೂನಿನ ಪ್ರಕಾರ, ಅನರ್ಹತೆ ಕುರಿತ ಅರ್ಜಿಯನ್ನು ನಿರ್ಧರಿಸಲು ಪ್ರಿಸೈಡಿಂಗ್ ಅಧಿಕಾರಿಗಳಿಗೆ ಯಾವುದೇ ಸಮಯ ಮಿತಿಯನ್ನು ನಿಗದಿಪಡಿಸಿಲ್ಲ. ‘ಪಕ್ಷಾಂತರ’ ಪ್ರಕರಣಗಳಲ್ಲಿ, ಯಾವುದೇ ನ್ಯಾಯಾಲಯವು ಅಧ್ಯಕ್ಷೀಯ ಅಧಿಕಾರಿಯು ನಿರ್ಧಾರ ತೆಗೆದುಕೊಂಡ ನಂತರವೇ ಮಧ್ಯಪ್ರವೇಶಿಸಬಹುದು, ಆದ್ದರಿಂದ ಅರ್ಜಿದಾರರ ಬಳಿ ಉಳಿದಿರುವ ಏಕೈಕ ಆಯ್ಕೆಯು ಈ ವಿಷಯವನ್ನು ನಿರ್ಧರಿಸುವವರೆಗೆ ಕಾಯುವುದು ಆಗಿದೆ.

ಈ ವಿಷಯದಲ್ಲಿ ನ್ಯಾಯಾಲಯಗಳು ಮಧ್ಯ ಪ್ರವೇಶಿಸಬಹುದೇ?

ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯಗಳು ಶಾಸಕಾಂಗದ ಕೆಲಸದಲ್ಲಿ ಮಧ್ಯಪ್ರವೇಶ ಮಾಡುತ್ತವೆ.

 1. 1992 ರಲ್ಲಿ, ಸುಪ್ರೀಂ ಕೋರ್ಟ್‌ನ ಐವರು ನ್ಯಾಯಾಧೀಶರ ಸಾಂವಿಧಾನಿಕ ಪೀಠವು ಸ್ಪೀಕರ್ ಮುಂದೆ ‘ಪಕ್ಷಾಂತರ-ವಿರೋಧಿ ಕಾನೂನಿಗೆ’ ಸಂಬಂಧಿಸಿದ ಪ್ರಕ್ರಿಯೆಗಳು ‘ನ್ಯಾಯಮಂಡಳಿ’ಗೆ ಸಮಾನವಾಗಿರುತ್ತದೆ ಮತ್ತು ಆದ್ದರಿಂದ ನ್ಯಾಯಾಂಗ ಪರಿಶೀಲನೆಗೆ ಒಳಪಡಿಸಬಹುದು ಎಂದು ಅಭಿಪ್ರಾಯಪಟ್ಟಿತು.
 2. 2020 ರ ಜನವರಿಯಲ್ಲಿ, ‘ಪಕ್ಷಾಂತರ ವಿರೋಧಿ ಕಾನೂನಿನ ಅಡಿಯಲ್ಲಿ ಶಾಸಕರನ್ನು ಅನರ್ಹಗೊಳಿಸಬೇಕೇ ಅಥವಾ ಅನರ್ಹಗೊಳಿಸಬೇಡವೇ’ ಎಂದು ನಿರ್ಧರಿಸುವ ವಿಶೇಷ ಅಧಿಕಾರವನ್ನು ವಿಧಾನಸಭೆಯ ಸ್ಪೀಕರ್‌ಗಳಿಂದ ಹಿಂಪಡೆಯಲು ಸಂವಿಧಾನವನ್ನು ತಿದ್ದುಪಡಿ ಮಾಡುವಂತೆ ಸುಪ್ರೀಂ ಕೋರ್ಟ್ ಸಂಸತ್ತಿಗೆ ಸೂಚಿಸಿತು.
 3. ಮಾರ್ಚ್ 2020 ರಲ್ಲಿ, ಸುಪ್ರೀಂ ಕೋರ್ಟ್ ಮಣಿಪುರದ ಸಚಿವ ತೌನೊಜಮ್ ಶ್ಯಾಮಕುಮಾರ್ ಸಿಂಗ್ ಅವರ ಸಚಿವ ಸ್ಥಾನವನ್ನು ರದ್ದುಗೊಳಿಸಿತು ಮತ್ತು “ಮುಂದಿನ ಆದೇಶದವರೆಗೆ ವಿಧಾನಸಭೆ ಪ್ರವೇಶಿಸದಂತೆ” ನಿರ್ಬಂಧಿಸಿತು. ತೌನೊಜಮ್ ಶ್ಯಾಮಕುಮಾರ್ ಸಿಂಗ್ ಅವರ ವಿರುದ್ಧದ ಅನರ್ಹತೆ ಅರ್ಜಿಗಳು 2017 ರಿಂದ ಸ್ಪೀಕರ್ ಮುಂದೆ ಬಾಕಿ ಉಳಿದಿವೆ.

 

ವಿಷಯಗಳು: ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಹೌತಿಗಳು ಮತ್ತು ಯೆಮೆನ್ ಯುದ್ಧ:


(Houthis and the war in Yemen)

ಸಂದರ್ಭ:

ಇತ್ತೀಚೆಗೆ, ಅಬುಧಾಬಿಯಲ್ಲಿ ಶಂಕಿತ ಡ್ರೋನ್ ದಾಳಿಯಲ್ಲಿ ಇಬ್ಬರು ಭಾರತೀಯರು ಸೇರಿದಂತೆ ಮೂವರು ಸಾವನ್ನಪ್ಪಿದ್ದರು. ಯೆಮೆನ್‌ನ ಹೌತಿ ಬಂಡುಕೋರರು (Houthi rebels) ಈ ಡ್ರೋನ್ ದಾಳಿಯ ಹೊಣೆ ಹೊತ್ತುಕೊಂಡಿದ್ದಾರೆ.

ಏನಿದು ಪ್ರಕರಣ?

ಅರಬ್ ಜಗತ್ತಿನ ಅತ್ಯಂತ ಬಡ ರಾಷ್ಟ್ರಗಳಲ್ಲಿ ಒಂದಾಗಿರುವ ಯೆಮೆನ್ ಸುಮಾರು ಏಳು ವರ್ಷಗಳಿಂದ ನಡೆಯುತ್ತಿರುವ ಅಂತರ್ಯುದ್ಧದಿಂದ ಧ್ವಂಸಗೊಂಡಿದೆ. ರಾಜಧಾನಿ ‘ಸನಾ’ (Sana’a) ವನ್ನು ‘ಹೌತಿ ಬಂಡುಕೋರರು’ ವಶಪಡಿಸಿಕೊಂಡ ನಂತರ, ಸೌದಿ ಅರೇಬಿಯಾ ನೇತೃತ್ವದ ಪಡೆಗಳು ದೇಶದಲ್ಲಿ ಇರಾನ್ ಪ್ರಭಾವವನ್ನು ಕೊನೆಗೊಳಿಸುವ ಮತ್ತು ಹಿಂದಿನ ಸರ್ಕಾರವನ್ನು ಮರುಸ್ಥಾಪಿಸುವ ಉದ್ದೇಶದಿಂದ ಬಂಡುಕೋರರ ವಿರುದ್ಧ ಯುದ್ಧವನ್ನು ನಡೆಸಿತು.

 1. ಯುನೈಟೆಡ್ ಅರಬ್ ಎಮಿರೇಟ್ಸ್ ಸಹ 2015 ರಲ್ಲಿ ಸೌದಿ ಅಭಿಯಾನಕ್ಕೆ ಸೇರಿಕೊಂಡಿತು ಮತ್ತು 2019 ಮತ್ತು 2020 ರಲ್ಲಿ ತನ್ನ ಪಡೆಗಳನ್ನು ಔಪಚಾರಿಕವಾಗಿ ಹಿಂತೆಗೆದುಕೊಳ್ಳುವ ಘೋಷಣೆಯ ಹೊರತಾಗಿಯೂ ಸಂಘರ್ಷದಲ್ಲಿ ಗಂಭೀರವಾಗಿ ತೊಡಗಿಸಿಕೊಂಡಿದೆ.

Current Affairs

 

ಹೌತಿಗಳು’ ಯಾರು?

 1. ಹೌತಿ (Houthi) ಯು 1990 ರ ದಶಕದಲ್ಲಿ ಯೆಮೆನ್‌ನ ಬಹುಸಂಖ್ಯಾತ ಶಿಯಾ ಸಮುದಾಯದ ಸದಸ್ಯರಾದ ಹುಸೇನ್ ಬದ್ರೆದ್ದೀನ್ ಅಲ್-ಹೌತಿ (Badreddin al-Houthi) ಸ್ಥಾಪಿಸಿದ ಸಶಸ್ತ್ರ ಬಂಡಾಯ ಸಂಘಟನೆಯಾಗಿದೆ.
 2. ಇದು ಸುಮಾರು 1,000 ವರ್ಷಗಳ ಕಾಲ ಈ ಪ್ರದೇಶದಲ್ಲಿ ರಾಜ್ಯವನ್ನು ಆಳಿದ ‘ಝೈದಿ ಶಿಯಾ ಪಂಥ’ (Zaidi Shia sect) ಕ್ಕೆ ಸೇರಿದ ಗುಂಪಾಗಿದೆ.

ಯಮನ್ ನಲ್ಲಿನ ಯುದ್ಧದ ಹಿನ್ನೆಲೆ:

 1. ಯೆಮನ್‌ನಲ್ಲಿ ನಡೆಯುತ್ತಿರುವ ಸಂಘರ್ಷದ ಬೇರುಗಳನ್ನು 2011 ರ ಅರಬ್ ವಸಂತ ಅಥವಾ ಅರಬ್ ದಂಗೆಯಲ್ಲಿ ಕಂಡುಹಿಡಿಯಬಹುದು. ಈ ಸಮಯದಲ್ಲಿ ನಡೆದ ಒಂದು ದಂಗೆಯು ದೀರ್ಘಕಾಲದವರೆಗೆ ದೇಶವನ್ನು ಆಳುತ್ತಿದ್ದ ಸರ್ವಾಧಿಕಾರಿ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೇಹ್ ಅವರಿಗೆ ತಮ್ಮ ಉಪಾಧ್ಯಕ್ಷ ಅಬ್ಡೆರಾಬು ಮನ್ಸೂರ್ ಹಾಡಿಗೆ ಅಧಿಕಾರವನ್ನು ಹಸ್ತಾಂತರಿಸುವಂತೆ ಒತ್ತಾಯಿಸಿತು.
 2. ಈ ರಾಜಕೀಯ ಬದಲಾವಣೆಯು ಮಧ್ಯಪ್ರಾಚ್ಯದ ಅತ್ಯಂತ ಬಡ ದೇಶಗಳಲ್ಲಿ ಒಂದಾದ ಯೆಮನ್‌ಗೆ ಸ್ಥಿರತೆಯನ್ನು ತಂದು ಕೊಡಬೇಕಾಗಿತ್ತು, ಆದರೆ ಅಧ್ಯಕ್ಷ ಹಾಡಿಗೆ ಭಯೋತ್ಪಾದಕ ದಾಳಿ, ಭ್ರಷ್ಟಾಚಾರ, ಆಹಾರ ಅಭದ್ರತೆ, ಮತ್ತು ಮಾಜಿ ಅಧ್ಯಕ್ಷ ಸಲೇಹ್‌ಗೆ ಅನೇಕ ಮಿಲಿಟರಿ ಅಧಿಕಾರಿಗಳ ನಿಷ್ಠೆ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಎದುರಿಸುವಲ್ಲಿಯೆ ಹೆಣಗಾಡಬೇಕಾಯಿತು.
 3. ಹೌತಿ ಶಿಯಾ ಮುಸ್ಲಿಂ ಬಂಡಾಯ ಆಂದೋಲನವು ಹೊಸ ಅಧ್ಯಕ್ಷರ ದೌರ್ಬಲ್ಯದ ಲಾಭವನ್ನು ಪಡೆದುಕೊಂಡು, ಉತ್ತರ ಸಾಡಾ (Saada province) ಪ್ರಾಂತ್ಯ ಮತ್ತು ಅದರ ನೆರೆಯ ಪ್ರದೇಶಗಳ ಮೇಲೆ ಹಿಡಿತ ಸಾಧಿಸಿದ ನಂತರ 2014 ರಲ್ಲಿ ಯೆಮನ್‌ನಲ್ಲಿ ಪ್ರಸ್ತುತ ಸಂಘರ್ಷವು ಪ್ರಾರಂಭವಾಯಿತು,
 4. ಹೌತಿ ಎಂಬುದು ಜೈದಿ ಶಿಯಾ ಮುಸ್ಲಿಮರ ಗುಂಪಾಗಿದ್ದು, ಇವರು ಈ ಪ್ರದೇಶದಲ್ಲಿ ಸುಮಾರು 1,000 ವರ್ಷಗಳ ಕಾಲ ರಾಜ್ಯಭಾರ ಮಾಡಿದ್ದರು.

ಯೆಮನ್‌ನಲ್ಲಿ ಸೌದಿ ಅರೇಬಿಯಾ ಹಸ್ತಕ್ಷೇಪಕ್ಕೆ ಕಾರಣವೇನು?

ಯೆಮೆನ್ ರಾಜಧಾನಿ ‘ಸನಾ’ವನ್ನು ಶಿಯಾ ಹೌತಿ ಬಂಡುಕೋರರು ವಶಪಡಿಸಿಕೊಂಡ ನಂತರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಪಡೆದ ಅಧ್ಯಕ್ಷ ಹಾಡಿ ಸರ್ಕಾರವನ್ನು ದೇಶದ ದಕ್ಷಿಣ ಭಾಗಕ್ಕೆ ಸೀಮಿತಗೊಳಿಸಿದ ನಂತರ ಸೌದಿ ಅರೇಬಿಯಾ ಯೆಮನ್‌ನಲ್ಲಿ ಮಧ್ಯಪ್ರವೇಶಿಸಿದೆ.

 1. ಯೆಮೆನ್‌ನಲ್ಲಿ ‘ಹೌತಿ ಬಂಡುಕೋರರ’ ಕ್ಷಿಪ್ರ ಬೆಳವಣಿಗೆಯು ಸೌದಿ ಅರೇಬಿಯಾದಲ್ಲಿ ಎಚ್ಚರಿಕೆಯ ಗಂಟೆಯನ್ನು ಬಾರಿಸಿತು, ಅದು ಹೌತಿ ಬಂಡುಕೋರರನ್ನು ಇರಾನ್‌ನ ಪ್ರಾಕ್ಸಿ ಎಂದು ಕಂಡಿತು.
 2. ಸೌದಿ ಅರೇಬಿಯಾ ಮಾರ್ಚ್ 2015 ರಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸುವುದಾಗಿ ಘೋಷಿಸಿತು. ಈ ಅಭಿಯಾನವು ‘ಹೌತಿ ಬಂಡುಕೋರರ’ ವಿರುದ್ಧ ತ್ವರಿತ ವಿಜಯಕ್ಕೆ ಕಾರಣವಾಗುತ್ತದೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಸೌದಿ ಅರೇಬಿಯಾದ ಮಿಂಚಿನ ವೈಮಾನಿಕ ದಾಳಿಯ ಹೊರತಾಗಿಯೂ, ‘ಹೌತಿ’ಗಳು ಸೋಲೊಪ್ಪಿಕೊಳ್ಳಲು ನಿರಾಕರಿಸಿದರು.
 3. ನೆಲದ ಮೇಲೆ ಯಾವುದೇ ಪರಿಣಾಮಕಾರಿ ಮಿತ್ರರಾಷ್ಟ್ರಗಳು ಮತ್ತು ಯಾವುದೇ ಮಾರ್ಗವನ್ನು ಕಂಡುಕೊಳ್ಳುವ ಯೋಜನೆ ಇಲ್ಲದೆ, ಸೌದಿ ನೇತೃತ್ವದ ಅಭಿಯಾನವು ಯಾವುದೇ ನಿರ್ದಿಷ್ಟ ಫಲಿತಾಂಶಗಳಿಲ್ಲದೆ ಕೊನೆಗೊಂಡಿತು. ಕಳೆದ ಆರು ವರ್ಷಗಳಲ್ಲಿ, ಸೌದಿ ವೈಮಾನಿಕ ದಾಳಿಗೆ ಪ್ರತಿಕಾರವಾಗಿ ಉತ್ತರ ಯೆಮೆನ್‌ನಿಂದ ಸೌದಿ ನಗರಗಳ ಮೇಲೆ ‘ಹೌತಿ ಬಂಡುಕೋರರು’ ಹಲವಾರು ದಾಳಿಗಳನ್ನು ನಡೆಸಿದ್ದಾರೆ.

ಯೆಮನ್‌ನಲ್ಲಿ ‘ಮಾನವೀಯ ಪರಿಸ್ಥಿತಿ’ ಎಷ್ಟು ಕೆಟ್ಟದಾಗಿದೆ?

ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 2015 ರಲ್ಲಿ ಸೌದಿ ಹಸ್ತಕ್ಷೇಪದ ನಂತರ ಯೆಮನ್‌ನಲ್ಲಿ ಕನಿಷ್ಠ 10,000 ಜನರು ಸಾವನ್ನಪ್ಪಿದ್ದಾರೆ. ಸಮ್ಮಿಶ್ರ ಪಡೆಗಳ ವಾಯುದಾಳಿಯು ದೇಶದ ಮೂಲಸೌಕರ್ಯಗಳಿಗೆ ವ್ಯಾಪಕ ಹಾನಿಯನ್ನುಂಟುಮಾಡಿದೆ ಮತ್ತು ದಿಗ್ಬಂಧನವು ಆಹಾರ ಮತ್ತು  ಔಷಧಿಗಳ ಪೂರೈಕೆಯನ್ನು ಕಡಿಮೆಗೊಳಿಸಿದೆ ಇದು ಯೆಮನ್‌ ಅನ್ನು ಮಾನವೀಯ ದುರಂತಕ್ಕೆ ತಳ್ಳಿದೆ. ಯಾವುದೇ ಸಹಾಯವು ಶೀಘ್ರದಲ್ಲೇ ಅವರನ್ನು ತಲುಪದಿದ್ದರೆ, ಸುಮಾರು 12 ಮಿಲಿಯನ್ ಜನರು ಹಸಿವಿನಿಂದ ಬಳಲುವ ಅಪಾಯಕ್ಕೊಳಗಾಗ ಬಲ್ಲವರಾಗಿದ್ದಾರೆ. ದೇಶವು ಭಾರಿ ಕಾಲರ ರೋಗವನ್ನು ಸಹ ಎದುರಿಸಿದೆ ತಡೆಗಟ್ಟಬಹುದಾದ ರೋಗಗಳಿಂದಲೂ ಸಹ ಯಮನ್ ನಲ್ಲಿ ಪ್ರತಿ ಹತ್ತು ನಿಮಿಷಕ್ಕೆ ಒಂದು ಮಗು ಸಾಯುತ್ತಿದೆ ಎಂದು ಯುನಿಸೆಫ್ ಹೇಳಿದೆ.

 

ವಿಷಯಗಳು: ಭಾರತ ಮತ್ತು ನೆರೆಹೊರೆಯ ದೇಶಗಳೊಂದಿಗೆ ಅದರ ಸಂಬಂಧಗಳು.

ನುಸಂತಾರಾ ಇಂಡೋನೇಷ್ಯಾದ ಹೊಸ ರಾಜಧಾನಿ:


(Nusantara the new capital of Indonesia)

ಸಂದರ್ಭ:

ಇಂಡೋನೇಷ್ಯಾ ತನ್ನ ರಾಜಧಾನಿಯನ್ನು ಜಕಾರ್ತ’ (Jakarta) ದಿಂದ ಪೂರ್ವ ಕಾಲಿಮಂಟನ್ಗೆ (East Kalimantan) ಬದಲಾಯಿಸುತ್ತಿದೆ ಮತ್ತು ಅದನ್ನು ‘ನುಸಂತಾರಾ’ (Nusantara) ಎಂಬ ಹೆಸರಿನಿಂದ ಕರೆಯಲಾಗುತ್ತದೆ. ‘ನುಸಂತಾರಾ ಬೋರ್ನಿಯೊ ದ್ವೀಪದ ಪೂರ್ವದಲ್ಲಿ ನೆಲೆಗೊಂಡಿದೆ.

Current Affairs

ರಾಜಧಾನಿ ಬದಲಾವಣೆಗೆ ಕಾರಣಗಳು:

 1. ಜಕಾರ್ತಾ ಪರಿಸರ ಮತ್ತು ಆರ್ಥಿಕ ಸಮಸ್ಯೆಗಳನ್ನು ಎದುರಿಸುತ್ತಿದೆ.
 2. ಆರ್ಥಿಕ ಅಸಮಾನತೆ.
 3. ಜಕಾರ್ತದಲ್ಲಿ ಹೆಚ್ಚುತ್ತಿರುವ ಜನಸಂಖ್ಯೆ.
 4. ಜಕಾರ್ತಾ ಮುಳುಗಡೆಯಾಗುವ ಸಾಧ್ಯತೆ ಹೆಚ್ಚಿದ್ದು, ಈ ನಿಟ್ಟಿನಲ್ಲಿ ಏನೂ ಮಾಡದಿದ್ದಲ್ಲಿ 2050ರ ವೇಳೆಗೆ ನಗರದ ಹಲವು ಭಾಗಗಳು ಮುಳುಗಡೆಯಾಗಲಿವೆ ಎಂದು ಹೇಳಲಾಗುತ್ತಿದೆ.
 5. ಜಕಾರ್ತಾ ಅನೇಕ ನದಿಗಳಿಂದ ಆವೃತವಾಗಿದೆ. ಈ ನದಿಗಳಲ್ಲಿ ಆಗಾಗ್ಗೆ ಪ್ರವಾಹಗಳು ಉಂಟಾಗುತ್ತವೆ.

ಪೂರ್ವ ಕಾಲಿಮಂಟನ್ ಎಲ್ಲಿದೆ?

ಪೂರ್ವ ಕಾಲಿಮಂಟನ್ ಬೋರ್ನಿಯೊ ದ್ವೀಪದ ಪೂರ್ವ ಭಾಗದಲ್ಲಿದೆ, ಜಕಾರ್ತದಿಂದ 2,300 ಕಿ.ಮೀ. ಬೊರ್ನಿಯೊ ದ್ವೀಪವು ವಿಶ್ವದ ಮೂರನೇ ಅತಿದೊಡ್ಡ ದ್ವೀಪವಾಗಿದೆ ಮತ್ತು ಏಷ್ಯಾದ ಅತಿದೊಡ್ಡ ದ್ವೀಪವಾಗಿದೆ. ಭೌಗೋಳಿಕವಾಗಿ ಇದು ಇಂಡೋನೇಷ್ಯಾ, ಮಲೇಷ್ಯಾ ಮತ್ತು ಬ್ರೂನಿ ದೇಶಗಳಲ್ಲಿ ಹಂಚಲ್ಪಟ್ಟಿದೆ. ಇಂಡೋನೇಷ್ಯಾ ಬೊರ್ನಿಯೊ ಪ್ರದೇಶದ ಸುಮಾರು 73% ನಷ್ಟು ಭಾಗವನ್ನು ಒಳಗೊಂಡಿದೆ.

ಪೂರ್ವ ಕಾಲಿಮಂಟನ್ ವಿಶಾಲವಾದ ಜಲ ಸಂಪನ್ಮೂಲಗಳು ಮತ್ತು ವಾಸಯೋಗ್ಯ ಭೂಮಿಯನ್ನು ಹೊಂದಿರುವ ಪ್ರದೇಶವಾಗಿದೆ. ಇಂಡೋನೇಷ್ಯಾದ ಹೊಸ ರಾಜಧಾನಿ ನುಸಂತಾರಾ, ಉತ್ತರ ಪೆನಜಮ್ ಪಾಸರ್ (Penajam Paser) ಮತ್ತು ಕುಟೈ ಕರ್ತನೆಗರ (Kutai Kartanegara) ಪ್ರದೇಶಗಳಲ್ಲಿ ನೆಲೆಸಲಿದೆ.

ಕಳವಳಗಳು:

ಪೂರ್ವ ಕಾಲಿಮಂಟನ್ ಸಸ್ಯ ಮತ್ತು ಪ್ರಾಣಿಗಳಿಂದ ಸಮೃದ್ಧವಾಗಿರುವ ಪ್ರದೇಶವಾಗಿದೆ.ಆದ್ದರಿಂದ, ಅನೇಕ ಪರಿಸರವಾದಿಗಳು ಮತ್ತು ಕಾರ್ಯಕರ್ತರು ರಾಜಧಾನಿಯನ್ನು ಪೂರ್ವ ಕಾಲಿಮಂಟನ್‌ಗೆ ಸ್ಥಳಾಂತರಿಸುವುದರಿಂದ ಭಾರಿ ಅರಣ್ಯನಾಶವಾಗುತ್ತದೆ, ಇದರ ಪರಿಣಾಮವಾಗಿ ಇಲ್ಲಿ ನೆಲೆಸಿರುವ ಜೀವಿಗಳ ಆವಾಸಸ್ಥಾನ ಮತ್ತು ವೃಕ್ಷ ಸಂಕುಲಕ್ಕೆ ಬೆದರಿಕೆ ಮತ್ತು ಪರಿಸರ ವ್ಯವಸ್ಥೆಗೆ ಹಾನಿಯಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ರಾಜಧಾನಿಯನ್ನು ಬದಲಾಯಿಸಿದ ಇತರ ದೇಶಗಳು ಯಾವುವು?

ಇಂಡೋನೇಷ್ಯಾ ತನ್ನ ರಾಜಧಾನಿಯನ್ನು ಬದಲಾಯಿಸಿದ ಮೊದಲ ದೇಶವೇನಲ್ಲ. ವಿವಿಧ ಕಾರಣಗಳಿಗಾಗಿ ತಮ್ಮ ರಾಜಧಾನಿಗಳನ್ನು ಬದಲಾಯಿಸಿದ ದೇಶಗಳ ದೊಡ್ಡ ಪಟ್ಟಿಯೇ ಇದೆ.

 1. 1960 ರಲ್ಲಿ, ಬ್ರೆಜಿಲ್ ತನ್ನ ರಾಜಧಾನಿಯನ್ನು ‘ರಿಯೊ ಡಿ ಜನೈರೊ’ದಿಂದ ‘ಬ್ರೆಸಿಲಿಯಾ’ಕ್ಕೆ ಸ್ಥಳಾಂತರಿಸಿತು, ಇದು ಬಹುತೇಕ ದೇಶದ ಮಧ್ಯಭಾಗದಲ್ಲಿದೆ.
 2. 1991 ರಲ್ಲಿ, ನೈಜೀರಿಯಾ ದೇಶದ ರಾಜಧಾನಿಯನ್ನು ಲಾಗೋಸ್‌ನಿಂದ ಅಬುಜಾಗೆ ಸ್ಥಳಾಂತರಿಸಿತು.
 3. ಕಝಾಕಿಸ್ತಾನ್ ತನ್ನ ರಾಜಧಾನಿಯನ್ನು ‘ಅಲ್ಮಾಟಿ’ಯಿಂದ ‘ನೂರ್-ಸುಲ್ತಾನ್’ ಗೆ 1997 ರಲ್ಲಿ ಸ್ಥಳಾಂತರಿಸಿತು. ‘ಅಲ್ಮಾಟಿ’ ಇನ್ನೂ ಕಝಾಕಿಸ್ತಾನ್‌ನ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ.
 4. ಮ್ಯಾನ್ಮಾರ್ ತನ್ನ ರಾಜಧಾನಿಯನ್ನು ರಂಗೂನ್‌ನಿಂದ ನೈಪಿಡಾವ್‌ಗೆ 2005 ರಲ್ಲಿ ಸ್ಥಳಾಂತರಿಸಿತು.

(ಗಮನಿಸಿ: ಮೇಲಿನ ದೇಶಗಳ ರಾಜಧಾನಿಗಳನ್ನು ನೆನಪಿಟ್ಟುಕೊಳ್ಳಿ ಮತ್ತು ಅವುಗಳನ್ನು ವಿಶ್ವ ಭೂಪಟದಲ್ಲಿ ಪತ್ತೆಹಚ್ಚಲು ಪ್ರಯತ್ನಿಸಿ. ಪೂರ್ವಭಾವಿ ಪರೀಕ್ಷೆಯಲ್ಲಿ ನಕ್ಷೆಗೆ ಸಂಬಂಧಿಸಿದ ಪ್ರಶ್ನೆಗಳನ್ನು ಪರಿಹರಿಸಲು ಇದು ನಿಮಗೆ ಸಹಾಯ ಮಾಡುತ್ತದೆ).

 

ವಿಷಯಗಳು:ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಇಸ್ರೇಲ್ ಪ್ಯಾಲೆಸ್ಟೀನ್ ಸಂಘರ್ಷ:


(Israel Palestine issue)

 ಸಂದರ್ಭ:

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಧ್ಯಪ್ರಾಚ್ಯದ ಕುರಿತು ಬಹಿರಂಗ ಚರ್ಚೆಯಲ್ಲಿ, ಪ್ಯಾಲೆಸ್ತೀನ್ ಸಮಸ್ಯೆಯ ಶಾಂತಿಯುತ ಇತ್ಯರ್ಥಕ್ಕೆ ಭಾರತವು ತನ್ನ ದೃಢ ಮತ್ತು ಅಚಲವಾದ ಬದ್ಧತೆಯನ್ನು ಪುನರುಚ್ಚರಿಸಿದೆ ಮತ್ತು ಎರಡು-ರಾಷ್ಟ್ರ (Two-State Solution) ಪರಿಹಾರದ ಕುರಿತು ಮಾತುಕತೆಗಳನ್ನು ಬೆಂಬಲಿಸಿದೆ.

 1. ಈ ಸಭೆಯಲ್ಲಿ, ‘ಎರಡು-ರಾಷ್ಟ್ರ ಪರಿಹಾರ’ದ ವೈಫಲ್ಯವನ್ನು ತಡೆಗಟ್ಟಲು ಅಂತರಾಷ್ಟ್ರೀಯ ಸಮುದಾಯದ ದೃಢವಾದ ಬದ್ಧತೆಯನ್ನು ಪುನರುಚ್ಚರಿಸಲು ಭದ್ರತಾ ಮಂಡಳಿಯು ನಿರ್ಣಯ 2334 ಅನ್ನು ಅಂಗೀಕರಿಸಿದೆ.

ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷ- ಐತಿಹಾಸಿಕ ಹಿನ್ನೆಲೆ:

 1. ಜೋರ್ಡಾನ್ ನದಿ ಮತ್ತು ಮೆಡಿಟರೇನಿಯನ್ ಸಮುದ್ರದ ನಡುವಿನ ತುಂಡು ಭೂಮಿಯಲ್ಲಿ ಯಹೂದಿಗಳು ಮತ್ತು ಅರಬ್ಬರ ನಡುವಿನ ಸಂಘರ್ಷಗಳು 100 ಕ್ಕೂ ಹೆಚ್ಚು ವರ್ಷಗಳಿಂದ ಮುಂದುವರೆದಿದೆ.
 2. 1882 ಮತ್ತು 1948 ರ ನಡುವೆ, ಪ್ರಪಂಚದಾದ್ಯಂತದ ಯಹೂದಿಗಳು ಪ್ಯಾಲೆಸ್ಟೈನ್‌ನಲ್ಲಿ ಒಟ್ಟುಗೂಡಿದರು. ಇತಿಹಾಸದಲ್ಲಿ, ಈ ಘಟನೆಯನ್ನು ಆಲಿಯಾಸ್ (Aliyahs) ಎಂದು ಕರೆಯಲಾಗುತ್ತದೆ.
 3. ನಂತರ 1917 ರಲ್ಲಿ, ಮೊದಲನೆಯ ಮಹಾಯುದ್ಧದ ನಂತರ ಒಟ್ಟೋಮನ್ ಸಾಮ್ರಾಜ್ಯ ಪತನಗೊಂಡಿತು ಮತ್ತು ಬ್ರಿಟನ್ ಪ್ಯಾಲೆಸ್ಟೀನ್ ಮೇಲೆ ಹಿಡಿತ ಸಾಧಿಸಿತು.
 4. ಅಲ್ಪಸಂಖ್ಯಾತ ಯಹೂದಿಗಳು ಮತ್ತು ಬಹುಸಂಖ್ಯಾತ ಅರಬ್ಬರು ಈ ಪ್ರದೇಶದಲ್ಲಿ ವಾಸಿಸುತ್ತಿದ್ದರು.
 5. ಈ ಪ್ರದೇಶವನ್ನು ಬ್ರಿಟನ್ ಸ್ವಾಧೀನಪಡಿಸಿಕೊಂಡ ನಂತರ, ಯಹೂದಿಗಳನ್ನು ಪ್ಯಾಲೆಸ್ಟೈನ್‌ನಲ್ಲಿ ನೆಲೆಗೊಳಿಸುವ ಉದ್ದೇಶದಿಂದ ಬಾಲ್ಫೋರ್ ಘೋಷಣೆ (Balfour Declaration) ಹೊರಡಿಸಲಾಯಿತು. ಆದರೆ, ಆ ಸಮಯದಲ್ಲಿ ಪ್ಯಾಲೆಸ್ಟೈನ್ ನಲ್ಲಿ ಅರಬ್ಬರು ಬಹುಸಂಖ್ಯಾತರಾಗಿದ್ದರು.
 6. ಯಹೂದಿಗಳು ಈ ‘ಬಾಲ್ಫೋರ್ ಘೋಷಣೆಯನ್ನು’ ಬೆಂಬಲಿಸಿದರೆ, ಪ್ಯಾಲೆಸ್ಟೀನಿಯಾದವರು ಅದನ್ನು ಸ್ವೀಕರಿಸಲು ನಿರಾಕರಿಸಿದರು.ಈ ಹತ್ಯಾಕಾಂಡದಲ್ಲಿ (Holocaust) ಸುಮಾರು 6 ಮಿಲಿಯನ್ ಯಹೂದಿಗಳು ಪ್ರಾಣ ಕಳೆದುಕೊಂಡರು, ಮತ್ತು ಈ ಘಟನೆಯು ಪ್ರತ್ಯೇಕ ಯಹೂದಿ ರಾಷ್ಟ್ರದ ಬೇಡಿಕೆಯನ್ನು ಹೆಚ್ಚಿಸಿತು.
 7. ಯಹೂದಿಗಳು ಪ್ಯಾಲೆಸ್ಟೈನ್ ಅನ್ನು ತಮ್ಮ ನೈಸರ್ಗಿಕ ಮಾತೃಭೂಮಿ ಎಂದು ಹೇಳಿಕೊಂಡರು, ಮತ್ತು ಇತರ ಅರಬ್ಬರು ಸಹ ತಮ್ಮ ಈ ಭೂಮಿಯನ್ನು ಬಿಟ್ಟುಕೊಡಲಿಲ್ಲ ಮತ್ತು ತಮ್ಮ ಹಕ್ಕನ್ನು ಉಳಿಸಿಕೊಂಡರು.
 8. ಅಂತರರಾಷ್ಟ್ರೀಯ ಸಮುದಾಯವು ಯಹೂದಿಗಳನ್ನು ಬೆಂಬಲಿಸಿತು.
 9. 1947 ರಲ್ಲಿ, ವಿಶ್ವಸಂಸ್ಥೆಯು ಪ್ಯಾಲೆಸ್ಟೈನ್ ಅನ್ನು ಪ್ರತ್ಯೇಕ ಯಹೂದಿ ದೇಶ ಮತ್ತು ಅರಬ್ ದೇಶವಾಗಿ ವಿಭಜಿಸುವ ಪರವಾಗಿ ಮತ ಚಲಾಯಿಸಿ, ಜೆರುಸಲೆಮ್ ಅನ್ನು ಅಂತರರಾಷ್ಟ್ರೀಯ ನಗರವನ್ನಾಗಿ ಮಾಡಿತು.
 10. ವಿಭಜನೆಯ ಈ ಯೋಜನೆಯನ್ನು ಯಹೂದಿ ನಾಯಕರು ಒಪ್ಪಿಕೊಂಡರು ಆದರೆ ಅರಬ್ ಕಡೆಯವರು ಅದನ್ನು ತಿರಸ್ಕರಿಸಿದರು ಮತ್ತು ಅದನ್ನು ಎಂದಿಗೂ ಅನುಷ್ಠಾನಗೊಳಿಸಲು ಮುಂದಾಗಲಿಲ್ಲ.

Current Affairs

ಇಸ್ರೇಲ್ ನ ಸೃಷ್ಟಿ ಮತ್ತು ದುರಂತ:

 1. 1948 ರಲ್ಲಿ ಬ್ರಿಟನ್ ಈ ಪ್ರದೇಶದ ಮೇಲಿನ ನಿಯಂತ್ರಣವನ್ನು ಹಿಂತೆಗೆದುಕೊಂಡಿತು ಮತ್ತು ಯಹೂದಿಗಳು ಇಸ್ರೇಲ್ ರಚನೆಯನ್ನು ಘೋಷಿಸಿದರು. ಆದಾಗ್ಯೂ, ಪ್ಯಾಲೆಸ್ಟೀನಿಯಾದವರು ಇದನ್ನು ವಿರೋಧಿಸಿದರು, ಆದರೆ ಯಹೂದಿಗಳು ಹಿಂದೆ ಸರಿಯಲಿಲ್ಲ ಮತ್ತು ಇದು ಇಬ್ಬರ ನಡುವೆ ಸಶಸ್ತ್ರ ಸಂಘರ್ಷಕ್ಕೆ ಕಾರಣವಾಯಿತು.
 2. ಏತನ್ಮಧ್ಯೆ, ನೆರೆಯ ಅರಬ್ ರಾಷ್ಟ್ರಗಳು ಸಹ ಈ ಪ್ರದೇಶದ ಮೇಲೆ ದಾಳಿ ಮಾಡಿದವು, ಆದರೆ ಇಸ್ರೇಲಿ ಸೈನಿಕರಿಂದ ಸೋಲಿಸಲ್ಪಟ್ಟವು. ಈ ಯುದ್ಧದ ನಂತರ ಸಾವಿರಾರು ಪ್ಯಾಲೆಸ್ಟೀನಿಯನ್ನರು ತಮ್ಮ ಮನೆಗಳಿಂದ ಪಲಾಯನ ಮಾಡಬೇಕಾಯಿತು. ಈ ವಿದ್ಯಮಾನವನ್ನು ‘ಅಲ್-ನಕ್ಬಾ’ (Al-Nakba) ಅಥವಾ “ದುರಂತ” ಎಂದು ಕರೆಯಲಾಗುತ್ತದೆ.
 3. ಹೋರಾಟದ ಅಂತ್ಯದ ನಂತರ, ಇಸ್ರೇಲ್ ಈ ಪ್ರದೇಶದ ಹೆಚ್ಚಿನ ಭೂಪ್ರದೇಶವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತು.
 4. ನಂತರ, ಜೋರ್ಡಾನ್ ಇಸ್ರೇಲ್ನೊಂದಿಗೆ ಯುದ್ಧವನ್ನು ನಡೆಸಿತು, ಇದರಲ್ಲಿ ಜೋರ್ಡಾನ್ ‘ವೆಸ್ಟ್ ಬ್ಯಾಂಕ್’ ಎಂದು ಕರೆಯಲ್ಪಡುವ ಪ್ರದೇಶವನ್ನು ಆಕ್ರಮಿಸಿಕೊಂಡಿತು ಮತ್ತು ಈಜಿಪ್ಟ್ ಗಾಜಾವನ್ನು ವಶಪಡಿಸಿಕೊಂಡಿತು.
 5. ಜೆರುಸಲೆಮ್ ನಗರವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ, ಅದರ ಪೂರ್ವ ಭಾಗದಲ್ಲಿ ಜೋರ್ಡಾನ್ ಪ್ರಾಬಲ್ಯ ಹೊಂದಿದ್ದರೆ, ಪಶ್ಚಿಮ ಭಾಗವನ್ನು ಇಸ್ರೇಲ್ ನಿಯಂತ್ರಿಸುತ್ತದೆ. ಆದಾಗ್ಯೂ, ಯಾವುದೇ ಔಪಚಾರಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗಿಲ್ಲ ಮತ್ತು ಈ ಪ್ರದೇಶದಲ್ಲಿನ ಉದ್ವಿಗ್ನತೆಗೆ ಎರಡು ಕಡೆಯವರು ಪರಸ್ಪರರನ್ನು ದೋಷಿಸುತ್ತಲೇ ಇದ್ದಾರೆ ಮತ್ತು ಈ ಪ್ರದೇಶದಲ್ಲಿ ಹೋರಾಟವು ಹಲವಾರು ಯುದ್ಧಗಳೊಂದಿಗೆ ಮುಂದುವರೆದಿದೆ.
 6. 1967 ರಲ್ಲಿ, ಇಸ್ರೇಲಿ ಸೈನ್ಯವು ಪೂರ್ವ ಜೆರುಸಲೆಮ್ ಮತ್ತು ಪಶ್ಚಿಮ ದಂಡೆ, ಸಿರಿಯಾದ ‘ಗೋಲನ್ ಹೈಟ್ಸ್’, ಗಾಜಾ ಮತ್ತು ಈಜಿಪ್ಟ್‌ನ ಸಿನಾಯ್ ಪರ್ಯಾಯ ದ್ವೀಪದ ವಿವಿಧ ಪ್ರದೇಶಗಳನ್ನು ವಶಪಡಿಸಿಕೊಂಡಿದೆ.

ಪ್ರಸ್ತುತ ಸನ್ನಿವೇಶ:

 1. ಇಸ್ರೇಲ್ ಇನ್ನೂ ಪಶ್ಚಿಮ ದಂಡೆಯನ್ನು ಆಕ್ರಮಿಸಿಕೊಂಡಿದೆ, ಮತ್ತು ಅದು ಗಾಜಾದ ಮೇಲಿನ ಅಧಿಕಾರವನ್ನು ತ್ಯಜಿಸಿದ್ದರೂ, ವಿಶ್ವಸಂಸ್ಥೆಯು ಈ ಭೂಮಿಯನ್ನು ಇನ್ನೂ ಆಕ್ರಮಿತ ಪ್ರದೇಶದ ಒಂದು ಭಾಗವೆಂದು ಪರಿಗಣಿಸುತ್ತದೆ.
 2. ಇಸ್ರೇಲ್ ಇಡೀ ಜೆರುಸಲೆಮ್ ಅನ್ನು ತನ್ನ ರಾಜಧಾನಿ ಎಂದು ಹೇಳಿಕೊಂಡರೆ, ಪ್ಯಾಲೆಸ್ತೀನಿಯರು ಪೂರ್ವ ಜೆರುಸಲೆಮ್ ಅನ್ನು ಭವಿಷ್ಯದ ಪ್ಯಾಲೇಸ್ಟಿನಿಯನ್ ರಾಷ್ಟ್ರದ ರಾಜಧಾನಿ ಎಂದು ಹೇಳಿಕೊಳ್ಳುತ್ತಾರೆ.
 3. ಇಡೀ ಜೆರುಸಲೆಮ್ ನಗರದ ಮೇಲೆ ಇಸ್ರೇಲ್ ನ ಹಕ್ಕನ್ನು ಮಾನ್ಯಮಾಡಿದ ಕೆಲವೇ ದೇಶಗಳಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನ ಕೂಡ ಒಂದಾಗಿದೆ.

ಪ್ರಸ್ತುತ ಅಲ್ಲಿ ಏನು ನಡೆಯುತ್ತಿದೆ?

 1. ಪೂರ್ವ ಜೆರುಸಲೆಮ್, ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿ ವಾಸಿಸುವ ಇಸ್ರೇಲಿಗಳು ಮತ್ತು ಪ್ಯಾಲೆಸ್ಟೀನಿಯಾದವರ ನಡುವೆ ಉದ್ವಿಗ್ನತೆ ಹೆಚ್ಚಾಗಿರುತ್ತದೆ.
 2. ಗಾಜಾವನ್ನು ‘ಹಮಾಸ್’ ಎಂಬ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಆಳುತ್ತದೆ, ಇದು ಇಸ್ರೇಲ್ನೊಂದಿಗೆ ಹಲವಾರು ಬಾರಿ ಘರ್ಷಣೆ ನಡೆಸಿದೆ. ಹಮಾಸ್‌ಗೆ ಶಸ್ತ್ರಾಸ್ತ್ರ ಸರಬರಾಜು ಆಗದಂತೆ ತಡೆಯಲು ಇಸ್ರೇಲ್ ಮತ್ತು ಈಜಿಪ್ಟ್ ಗಾಜಾದ ಗಡಿಯ ನಿಯಂತ್ರಣವನ್ನು ಗರಿಷ್ಠಮಟ್ಟದಲ್ಲಿ ಬಿಗಿಗೊಳಿಸಿವೆ.
 3. ಇಸ್ರೇಲ್ ನ ಕ್ರಮಗಳು ಮತ್ತು ನಿರ್ಬಂಧಗಳಿಂದಾಗಿ ತಾವು ಬಳಲುತ್ತಿರುವುದಾಗಿ ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿರುವ ಪ್ಯಾಲೆಸ್ಟೀನಿಯಾದವರು ಹೇಳುತ್ತಾರೆ. ಪ್ಯಾಲೇಸ್ಟಿನಿಯನ್ ಹಿಂಸಾಚಾರದಿಂದ ತನ್ನನ್ನು ರಕ್ಷಿಸಿಕೊಳ್ಳಲು ಮಾತ್ರ ಇಂತಹ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಇಸ್ರೇಲ್ ಹೇಳಿದೆ.
 4. 2021 ರ ಏಪ್ರಿಲ್ ಮಧ್ಯದಲ್ಲಿ ಪವಿತ್ರ ಮುಸ್ಲಿಂ ರಂಜಾನ್ ತಿಂಗಳ ಆರಂಭದಿಂದಲೂ, ಪೊಲೀಸರು ಮತ್ತು ಪ್ಯಾಲೆಸ್ಟೀನಿಯಾದ ನಡುವಿನ ರಾತ್ರಿಯ ಘರ್ಷಣೆಯೊಂದಿಗೆ ಉದ್ವಿಗ್ನತೆ ಹೆಚ್ಚಾಗಿದೆ.
 5. ಪೂರ್ವ ಜೆರುಸಲೆಮ್ ನಲ್ಲಿರುವ ಕೆಲವು ಪ್ಯಾಲೇಸ್ಟಿನಿಯನ್ ಕುಟುಂಬಗಳನ್ನು ಹೊರಹಾಕುವ ಬೆದರಿಕೆಗಳಿಂದ ಉದ್ವಿಗ್ನತೆ ಇನ್ನೂ ಹೆಚ್ಚುತ್ತಿದೆ.

ಮೊದಲನೆಯದಾಗಿ, ಗಾಜಾ ಪಟ್ಟಿ ಎಲ್ಲಿದೆ?

ಗಾಜಾಪಟ್ಟಿಯು (Gaza Strip) ಸಂಪೂರ್ಣವಾಗಿ ಕೃತಕವಾಗಿ ನಿರ್ಮಿಸಲಾದ ರಚನೆಯಾಗಿದ್ದು, ಅರಬ್ ಜನಸಂಖ್ಯೆಯನ್ನು ಸ್ಥಳಾಂತರಿಸಲು ವಿನ್ಯಾಸಗೊಳಿಸಲಾಗಿದೆ, 1948 ರಲ್ಲಿ, ಇಸ್ರೇಲ್ ರಚನೆಯ ಸಮಯದಲ್ಲಿ ಇಲ್ಲಿ ನೆಲೆಸಿದ್ದ  ಪ್ಯಾಲೆಸ್ಟೈನ್‌ನ ಮುಕ್ಕಾಲು ಭಾಗದಷ್ಟು ಅರಬ್ ಜನಸಂಖ್ಯೆಯನ್ನು ಈ ಪ್ರದೇಶದಿಂದ ಸ್ಥಳಾಂತರಿಸಲಾಯಿತು ಮತ್ತು ಕೆಲವು ಸಂದರ್ಭಗಳಲ್ಲಿ ಅವರನ್ನು ಒತ್ತಾಯಪೂರ್ವಕವಾಗಿ ಹೊರಹಾಕಲಾಯಿತು.

 1. ಈ ಸಮಯದಲ್ಲಿ, ಹೆಚ್ಚಿನ ನಿರಾಶ್ರಿತರು ನೆರೆಯ ರಾಷ್ಟ್ರಗಳಾದ ಜೋರ್ಡಾನ್, ಸಿರಿಯಾ ಮತ್ತು ಲೆಬನಾನ್‌ನಲ್ಲಿ ಚದುರಿಹೋದರು.
 2. ಕೆಲವು ನಿರಾಶ್ರಿತರ ಜನಸಂಖ್ಯೆಯು ‘ವೆಸ್ಟ್ ಬ್ಯಾಂಕ್’ (ಪಶ್ಚಿಮ ದಂಡೆ) ನಲ್ಲಿ ನೆಲೆಸಿತು, ಇದರ ಮೇಲೆ ಜೋರ್ಡಾನ್ 1948 ರ ನಂತರ ಅಧಿಕಾರವನ್ನು ಸ್ಥಾಪಿಸಿತು.
 3. ಈಜಿಪ್ಟ್ ಮತ್ತು ಇಂದಿನ ಇಸ್ರೇಲ್ ನಡುವಿನ ಕಿರಿದಾದ ಕರಾವಳಿ ಪ್ರದೇಶವಾದ ‘ಗಾಜಾ ಸ್ಟ್ರಿಪ್’ನಲ್ಲಿ ಹೆಚ್ಚಿನ ಸಂಖ್ಯೆಯ ಸ್ಥಳಾಂತರಗೊಂಡ ಜನಸಂಖ್ಯೆಯು ನೆಲೆಸಿದೆ.
 4. ಪ್ರಸ್ತುತ, ಗಾಜಾ ಪ್ರದೇಶದ ಒಟ್ಟು ಜನಸಂಖ್ಯೆಯ ಸುಮಾರು 70% ರಷ್ಟು ನಿರಾಶ್ರಿತರಾಗಿದ್ದಾರೆ.

‘ಗಾಜಾ ಪಟ್ಟಿ’ ಯ ಮೇಲೆ ಯಾರ ನಿಯಂತ್ರಣವಿದೆ?

2007 ರಲ್ಲಿ, ಹಮಾಸ್ (Hamas) ಗಾಜಾ ಪಟ್ಟಿಯ ಮೇಲೆ ಬಲವಂತವಾಗಿ ಹಿಡಿತ ಸಾಧಿಸಿತು. ಸ್ವಲ್ಪ ಸಮಯದ ನಂತರ, ಇಸ್ರೇಲ್ ಗಾಜಾದ ಗಡಿಗಳನ್ನು ಸಂಪೂರ್ಣವಾಗಿ ಮುಚ್ಚಿ ಗಾಜಾವನ್ನು ಶತ್ರು ಘಟಕವೆಂದು ಘೋಷಿಸಿತು. ಸಹಜವಾಗಿ ಗಾಜಾಪಟ್ಟಿಗೆ ಒಂದು ದೇಶದ ಸ್ಥಾನಮಾನವಿಲ್ಲ.

 1. ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಹೆಚ್ಚಿನ ಅಂತರರಾಷ್ಟ್ರೀಯ ಸಮುದಾಯವು ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆಯಾಗಿ ನೋಡುತ್ತದೆ, ಕಾರಣ ಅದು ನಾಗರಿಕರ ಮೇಲಿನ ದಾಳಿಯ ಸುದೀರ್ಘ ಇತಿಹಾಸವನ್ನು ಹೊಂದಿದೆ.

ವೆಸ್ಟ್ ಬ್ಯಾಂಕ್/ ಪಶ್ಚಿಮ ದಂಡೆ ಎಲ್ಲಿದೆ?

ಇದು ಪಶ್ಚಿಮ ಏಷ್ಯಾದ ಮೆಡಿಟರೇನಿಯನ್ ಕರಾವಳಿಯ ಸಮೀಪವಿರುವ ಭೂ ಆವೃತ ಪ್ರದೇಶವಾಗಿದ್ದು, ಪೂರ್ವಕ್ಕೆ ಜೋರ್ಡಾನ್ ಗಡಿಯಿದೆ ಮತ್ತು ಗ್ರೀನ್ ಲೈನ್ ಇದನ್ನು ಪ್ರತ್ಯೇಕಿಸುತ್ತದೆ ಮತ್ತು ದಕ್ಷಿಣ ಮತ್ತು ಪಶ್ಚಿಮ ಮತ್ತು ಉತ್ತರದಲ್ಲಿ ಇಸ್ರೇಲ್ ನಿಂದ ಆವರಿಸಲ್ಪಟ್ಟಿದೆ. ವೆಸ್ಟ್ ಬ್ಯಾಂಕ್ ಸಹ ಮೃತ ಸಮುದ್ರದ ಪಶ್ಚಿಮ ತೀರದ ಗಮನಾರ್ಹ ವಿಭಾಗವನ್ನು ಹೊಂದಿದೆ.

ಇಲ್ಲಿ ವಿವಾದಗಳ ವಸಾಹತುಗಳು ಮತ್ತು ಅಲ್ಲಿ ಯಾರು ವಾಸಿಸುತ್ತಾರೆ?

 1. 1948 ರ ಅರಬ್-ಇಸ್ರೇಲ್ ಯುದ್ಧದ ನಂತರ ಪಶ್ಚಿಮ ದಂಡೆಯನ್ನು ಜೋರ್ಡಾನ್ ವಶಪಡಿಸಿಕೊಂಡಿತು.
 2. 1967 ರ ಆರು ದಿನಗಳ ಯುದ್ಧದ ಸಮಯದಲ್ಲಿ ಇಸ್ರೇಲ್ ಅದನ್ನು ಮರಳಿ ವಶಪಡಿಸಿಕೊಂಡಿತು ಮತ್ತು ಅಂದಿನಿಂದಲೂ ಅದನ್ನು ಆಕ್ರಮಿಸಿಕೊಂಡಿದೆ. ಈ ಯುದ್ಧದ ಸಮಯದಲ್ಲಿ, ಇಸ್ರೇಲ್ ದೇಶವು ಈಜಿಪ್ಟ್, ಸಿರಿಯಾ ಮತ್ತು ಜೋರ್ಡಾನ್‌ನ ಸಂಯೋಜಿತ ಪಡೆಗಳನ್ನು ಸೋಲಿಸಿತು.
 3. ಇಸ್ರೇಲ್ ಪಶ್ಚಿಮ ದಂಡೆಯಲ್ಲಿ ಸುಮಾರು 130 ಅಧಿಕೃತ ನೆಲೆಗಳನ್ನು ನಿರ್ಮಿಸಿದೆ ಮತ್ತು ಕಳೆದ 20-25 ವರ್ಷಗಳಲ್ಲಿ ಇದೇ ರೀತಿಯ ಸಣ್ಣ, ಅನೌಪಚಾರಿಕ ವಸಾಹತುಗಳು ತಲೆಯೆತ್ತಿವೆ.
 4. ಸುಮಾರು 26 ಲಕ್ಷ ಪ್ಯಾಲೆಸ್ಟೀನಿಯನ್ನರೊಂದಿಗೆ, ಸುಮಾರು 4ಲಕ್ಷಕ್ಕೂ ಹೆಚ್ಚು ಇಸ್ರೇಲಿ ವಸಾಹತುಗಾರರು – ಅವರಲ್ಲಿ ಅನೇಕರು ಈ ಭೂಮಿಯ ಮೇಲೆ ಬೈಬಲ್ ನ ಜನ್ಮಸಿದ್ಧ ಹಕ್ಕುಗಳನ್ನು ಪ್ರತಿಪಾದಿಸುವ ಧಾರ್ಮಿಕ ಝಿಯಾನಿಸ್ಟ್‌ಗಳು (religious Zionists ) – ಈಗ ಇಲ್ಲಿ ವಾಸಿಸುತ್ತಿದ್ದಾರೆ.
 5. ಅಲ್ಲಿ ಹೆಚ್ಚಿನ ಸಂಖ್ಯೆಯ ಪ್ಯಾಲೆಸ್ಟೀನಿಯಾದ ಜನರು ವಾಸಿಸುತ್ತಿರುವುದರಿಂದ ಮತ್ತು ಈ ಭೂಮಿ ತಮ್ಮ ಭವಿಷ್ಯದ ದೇಶದ ಭಾಗವಾಗಲಿದೆ ಎಂಬ ಅವರ ಆಶಯದಿಂದಾಗಿ ಈ ಪ್ರದೇಶವು ಇನ್ನೂ ವಿವಾದ ಗ್ರಸ್ತವಾಗಿದೆ.
 6. 1967 ರಲ್ಲಿ ಇಸ್ರೇಲ್ ಈ ಭೂಮಿಯ ಮೇಲೆ ಹಿಡಿತ ಸಾಧಿಸಿದಾಗಿನಿಂದ ಅದು ಯಹೂದಿ ಜನರಿಗೆ ಅಲ್ಲಿ ಹೋಗಲು ಅವಕಾಶ ಮಾಡಿಕೊಟ್ಟಿತು,ಆದರೆ ಪ್ಯಾಲೆಸ್ಟೀನಿಯಾದವರು ವೆಸ್ಟ್ ಬ್ಯಾಂಕ್ ಅನ್ನು ಇಸ್ರೇಲ್ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ಯಾಲೇಸ್ಟಿನಿಯನ್ ಭೂಮಿಯೆಂದು ಪರಿಗಣಿಸುತ್ತಾರೆ.

ಈ ವಸಾಹತುಗಳ ಕಾನೂನು ಸ್ಥಿತಿ:

ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಅಂತರಾಷ್ಟ್ರೀಯ ನ್ಯಾಯಾಲಯದ ಪ್ರಕಾರ ಪಶ್ಚಿಮ ದಂಡೆಯಲ್ಲಿ ನಿರ್ಮಿಸಲ್ಪಟ್ಟ ಇಸ್ರೇಲಿ ವಸಾಹತುಗಳು ನಾಲ್ಕನೇ ಜಿನೀವಾ ಒಪ್ಪಂದ(Fourth Geneva Convention) ವನ್ನು ಉಲ್ಲಂಘಿಸುತ್ತವೆ ಎಂದು ಹೇಳಿವೆ.

 1. ನಾಲ್ಕನೇ ಜಿನೀವಾ ಸಮಾವೇಶ (1949)ದ ಪ್ರಕಾರ – ಯಾವುದೇ ಪ್ರದೇಶವನ್ನು ಆಕ್ರಮಿಸಿಕೊಂಡಿರುವ ಶಕ್ತಿಯು ತನ್ನ ನಾಗರಿಕ ಜನಸಂಖ್ಯೆಯ ಯಾವುದೇ ಭಾಗವನ್ನು ಆಕ್ರಮಿತ ಪ್ರದೇಶಕ್ಕೆ ಗಡೀಪಾರು ಮಾಡಬಾರದು ಅಥವಾ ವರ್ಗಾಯಿಸುವಂತಿಲ್ಲ.
 2. 1998 ರಲ್ಲಿ ಇಂಟರ್ನ್ಯಾಷನಲ್ ಕ್ರಿಮಿನಲ್ ಕೋರ್ಟ್ ಅನ್ನು ಸ್ಥಾಪಿಸಿದ ರೋಮ್ ಶಾಸನದ (Rome Statute) ಪ್ರಕಾರ– ಆಕ್ರಮಿತ ಶಕ್ತಿಯಿಂದ ಅಂತಹ ಯಾವುದೇ ವರ್ಗಾವಣೆಯು ‘ಯುದ್ಧಾಪರಾಧ’ಕ್ಕೆ ಸಮನಾಗಿರುತ್ತದೆ, ಇದರಲ್ಲಿ ಸಶಸ್ತ್ರ ಪಡೆಗಳಿಂದ ಅಕ್ರಮ ಮತ್ತು ದಯೆಯಿಲ್ಲದ ಹಾನಿ ಮತ್ತು ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

ಔಷಧಿಗಳಿಗೆ ಬ್ಯಾಕ್ಟೀರಿಯಾದ ಪ್ರತಿರೋಧ:


(Bacterial resistance to drugs)

ಸಂದರ್ಭ:

ಇತ್ತೀಚೆಗೆ, ‘ಆಂಟಿಮೈಕ್ರೊಬಿಯಲ್ ಪ್ರತಿರೋಧದ (Antimicrobial Resistance – AMR) ಜಾಗತಿಕ ಪ್ರಭಾವದ ಸಮಗ್ರ ಅಂದಾಜನ್ನು ‘ದಿ ಲ್ಯಾನ್ಸೆಟ್’ ಸಂಶೋಧನಾ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ. ವರದಿಯು 204 ದೇಶಗಳು ಮತ್ತು ಪ್ರಾಂತ್ಯಗಳನ್ನು ಒಳಗೊಂಡಿದೆ.

 1. ವರದಿಯ ಶೀರ್ಷಿಕೆಯು ಗ್ಲೋಬಲ್ ರಿಸರ್ಚ್ ಆನ್ ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ (Global Research on Antimicrobial Resistance (GRAM) report) ರಿಪೋರ್ಟ್ ಎಂಬುದಾಗಿದೆ.

ಮುಖ್ಯಾಂಶಗಳು:

 1. ‘ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್’ (AMR) ನ ನೇರ ಪರಿಣಾಮದಿಂದಾಗಿ, 2019 ರಲ್ಲಿ 27 ಮಿಲಿಯನ್ ಜನರು ಸಾವನ್ನಪ್ಪಿದ್ದಾರೆ.
 2. AMR ಈಗ ವಿಶ್ವದಾದ್ಯಂತ ಸಾವಿನ ಒಂದು ಪ್ರಮುಖ ಕಾರಣವಾಗಿದೆ. ಇದರಿಂದ ಸಾವನ್ನಪ್ಪಿದವರ ಸಂಖ್ಯೆ ಎಚ್ಐವಿ/ಏಡ್ಸ್ ಅಥವಾ ಮಲೇರಿಯಾದಿಂದ ಸಂಭಿವಿಸಿದ ಸಾವಿನ ಸಂಖ್ಯೆಯನ್ನು ಮೀರಿಸಿದೆ.
 3. ಇದಲ್ಲದೇ ಇನ್ನೂ 49.5 ಲಕ್ಷ ಸಾವುಗಳು ಪರೋಕ್ಷವಾಗಿ AMR ನಿಂದಾಗಿವೆ.(ಇದಕ್ಕೆ ಔಷಧ-ನಿರೋಧಕ ಸೋಂಕು ಕಾರಣವಾಗಿದೆ ಎಂದು ಭಾವಿಸಲಾಗಿದೆ, ಆದರೆ ‘ಔಷಧ ಪ್ರತಿರೋಧ’ ವು ಸ್ವತಃ ಸಾವಿಗೆ ನೇರ ಕಾರಣವಾಗಿರಬಹುದು ಅಥವಾ ಇಲ್ಲದಿರಬಹುದು).

ವಿಶ್ಲೇಷಿಸಲಾದ ರೋಗಕಾರಕಗಳು (Pathogens):

 1. ಅಧ್ಯಯನ ಮಾಡಿದ 23 ರೋಗಕಾರಕಗಳಲ್ಲಿ, ಆರು ರೋಗಕಾರಕಗಳು (ಇ. ಕೋಲಿ, ಎಸ್. ಔರೆಸ್, ಕೆ. ನ್ಯುಮೋನಿಯಾ, ಎಸ್. ನ್ಯುಮೋನಿಯಾ, ಎ. ಬೌಮನ್ನೀ ಮತ್ತು ಪಿ. ಏರುಗಿನೋಸಾ) ನೇರ ‘ಔಷಧ ಪ್ರತಿರೋಧ’ವನ್ನು ಹೊಂದಿದ್ದು, 9.29 ಮಿಲಿಯನ್ ಸಾವುಗಳಿಗೆ ಕಾರಣವಾಗಿವೆ ಮತ್ತು ಈ ‘ಪ್ರತಿರೋಧ’ ವು ಮತ್ತೊಂದು 3.57. ಮಿಲಿಯನ್ ಸಾವುಗಳಿಗೆ ಪರೋಕ್ಷವಾಗಿ ಸಂಬಂಧಿಸಿದೆ.
 2. ಮೆಥಿಸಿಲಿನ್-ನಿರೋಧಕ S ಔರೆಸ್,(Methicillin-Resistant S Aureus) ಅಥವಾ MRSA ಎಂಬ ರೋಗಕಾರಕ-ಔಷಧಗಳ ಸಂಯೋಜನೆಯು (pathogen-drug combination) ನೇರವಾಗಿ 1 ಲಕ್ಷಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗಿದೆ.
 3. ಎರಡು ವರ್ಗದ ಪ್ರತಿಜೀವಕಗಳು ಫ್ಲೋರೋಕ್ವಿನೋಲೋನ್ಗಳು ಮತ್ತು ಬೀಟಾ-ಲ್ಯಾಕ್ಟಮ್ ಪ್ರತಿಜೀವಕಗಳು – ಸಾಮಾನ್ಯವಾಗಿ ಗಂಭೀರತರದ ಸೋಂಕುಗಳ ವಿರುದ್ಧ ರಕ್ಷಣೆಯ ಮೊದಲ ಸಾಲು ಎಂದು ಪರಿಗಣಿಸಲಾಗುತ್ತದೆ. ಈ ಔಷಧಿಗಳ ಪ್ರತಿರೋಧವು AMR ನಿಂದಾಗಿ ಸಂಭವಿಸುವ 70% ಕ್ಕಿಂತ ಹೆಚ್ಚು ಸಾವುಗಳಿಗೆ ಕಾರಣವಾಗಿದೆ.

Current Affairs

 

ಆಂಟಿಬಯೋಟಿಕ್ ರೆಸಿಸ್ಟೆನ್ಸ್’/ಪ್ರತಿಜೀವಕ ನಿರೋಧಕತೆ ಎಂದರೇನು?

ಪ್ರತಿಜೀವಕ ನಿರೋಧಕತೆಯು ಸೂಕ್ಷ್ಮಜೀವಿಗಳಿಂದ ಅಭಿವೃದ್ಧಿಪಡಿಸಲಾದ ಔಷಧ ಪ್ರತಿರೋಧವಾಗಿದೆ (ಉದಾಹರಣೆಗೆ ಬ್ಯಾಕ್ಟೀರಿಯಾ, ವೈರಸ್ಗಳು ಮತ್ತು ಕೆಲವು ಪರಾವಲಂಬಿಗಳು), ಈ ಸೂಕ್ಷ್ಮಾಣುಜೀವಿಗಳು ಅವುಗಳ ವಿರುದ್ಧ ಕೆಲಸ ಮಾಡುವ ಆಂಟಿಮೈಕ್ರೊಬಿಯಲ್‌ಗಳನ್ನು ನಿಷ್ಪರಿಣಾಮಕಾರಿಯಾಗಿಸುತ್ತವೆ (ಉದಾಹರಣೆಗೆ ಪ್ರತಿಜೀವಕಗಳು, ಆಂಟಿವೈರಲ್‌ಗಳು ಮತ್ತು ಮಲೇರಿಯಾ ವಿರೋಧಿ ಏಜೆಂಟ್‌ಗಳು). ಪರಿಣಾಮವಾಗಿ, ಪ್ರಮಾಣಿತ ಚಿಕಿತ್ಸೆಗಳು ನಿಷ್ಪರಿಣಾಮಕಾರಿಯಾಗುತ್ತವೆ ಮತ್ತು ಸೋಂಕು ಇತರರಿಗೆ ಹರಡುತ್ತ ಮುಂದುವರಿಯುತ್ತದೆ.

Current Affairs

 

ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ (AMR) ಭವಿಷ್ಯಕ್ಕೆ ಮೂಕ/ನಿಶ್ಯಬ್ದ ಬೆದರಿಕೆ:

 1. ಪ್ರತಿಜೀವಕಗಳ ಮೂಲಕ ಇದುವರೆಗೆ ಲಕ್ಷಾಂತರ ಜೀವಗಳನ್ನು ಉಳಿಸಲಾಗಿದೆ. ಆದರೆ ದುರದೃಷ್ಟವಶಾತ್, ಈ ಔಷಧಿಗಳು ಈಗ ನಿಷ್ಪರಿಣಾಮಕಾರಿಯಾಗುತ್ತಿವೆ ಏಕೆಂದರೆ ಅನೇಕ ಸಾಂಕ್ರಾಮಿಕ ರೋಗಗಳು ಪ್ರತಿಜೀವಕಗಳಿಗೆ ಪ್ರತಿಕ್ರಿಯಿಸುವುದನ್ನು ನಿಲ್ಲಿಸಿವೆ.
 2. ಆಂಟಿಮೈಕ್ರೊಬಿಯಲ್ ರೆಸಿಸ್ಟೆನ್ಸ್ (AMR) ಒಂದು ನೈಸರ್ಗಿಕ ಪ್ರಕ್ರಿಯೆಯಾಗಿದ್ದರೂ, ಮಾನವರು ಮತ್ತು ಪ್ರಾಣಿಗಳಲ್ಲಿ ಪ್ರತಿಜೀವಕಗಳ ದುರುಪಯೋಗವು ಈ ಪ್ರಕ್ರಿಯೆಯನ್ನು ವೇಗಗೊಳಿಸುತ್ತಿದೆ.
 3. ಈ ಕಾರಣದಿಂದಾಗಿ, ಕ್ಷಯರೋಗ, ನ್ಯುಮೋನಿಯಾ ಮತ್ತು ಗೊನೊರಿಯಾದಂತಹ ಹೆಚ್ಚಿನ ಸಂಖ್ಯೆಯ ಸೋಂಕುಗಳಿಗೆ ಚಿಕಿತ್ಸೆ ನೀಡುವುದು ಹೆಚ್ಚು ಕಷ್ಟಕರವಾಗುತ್ತಿವೆ, ಏಕೆಂದರೆ ಅವುಗಳನ್ನು ಚಿಕಿತ್ಸೆಗಾಗಿ ಬಳಸುವ ಪ್ರತಿಜೀವಕಗಳು ಕಡಿಮೆ ಪರಿಣಾಮಕಾರಿಯಾಗುತ್ತಿವೆ.
 4. ಜಾಗತಿಕವಾಗಿ, ಪ್ರಾಣಿಗಳಲ್ಲಿ ಪ್ರತಿಜೀವಕಗಳ ಬಳಕೆಯು 2010 ರ ಮಟ್ಟದಿಂದ 2030 ರ ವೇಳೆಗೆ 67 ಪ್ರತಿಶತದಷ್ಟು ಹೆಚ್ಚಾಗುತ್ತದೆ ಎಂದು ಅಂದಾಜಿಸಲಾಗಿದೆ. ಸೂಕ್ಷ್ಮಜೀವಿಗಳಲ್ಲಿನ ಪ್ರತಿಜೀವಕ ಪ್ರತಿರೋಧವು ಮಾನವ ನಿರ್ಮಿತ ದುರಂತವಾಗಿದೆ.
 5. ಮಾನವನ ಆರೋಗ್ಯ, ಪ್ರಾಣಿಗಳ ಆರೋಗ್ಯ, ಮೀನುಗಾರಿಕೆ ಮತ್ತು ಕೃಷಿಯಲ್ಲಿ ಪ್ರತಿಜೀವಕಗಳನ್ನು ಬೇಜವಾಬ್ದಾರಿಯಿಂದ ದೊಡ್ಡ ಪ್ರಮಾಣದಲ್ಲಿ ಬಳಸಲಾಗುತ್ತಿದೆ.
 6. ಅಂಗಾಂಗ ಕಸಿ ಮತ್ತು ಕಾರ್ಡಿಯಾಕ್ ಬೈಪಾಸ್‌ನಂತಹ ಸಂಕೀರ್ಣವಾದ ಶಸ್ತ್ರಚಿಕಿತ್ಸೆಗಳನ್ನು ಕೈಗೊಳ್ಳುವುದು ಕಷ್ಟಕರ ವಾಗಬಹುದು, ಏಕೆಂದರೆ ಶಸ್ತ್ರಚಿಕಿತ್ಸೆಯ ನಂತರ ಸಾಂಕ್ರಾಮಿಕ ತೊಡಕುಗಳು ಉಂಟಾಗಬಹುದು, ಅದು ಚಿಕಿತ್ಸೆ ನೀಡಲು ಕಷ್ಟಕರವಾಗಿರುತ್ತದೆ.

 

ವಿಷಯಗಳು: ವಿಜ್ಞಾನ ಮತ್ತು ತಂತ್ರಜ್ಞಾನ- ಬೆಳವಣಿಗೆಗಳು ಮತ್ತು ಅವುಗಳ ಅನ್ವಯಗಳು ಮತ್ತು ದೈನಂದಿನ ಜೀವನದಲ್ಲಿ ಅವುಗಳ ಪರಿಣಾಮಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು; ತಂತ್ರಜ್ಞಾನದ ದೇಶೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು.

ಚೀನಾದ ಕೃತಕ ಚಂದ್ರ:


(China’s artificial moon)

ಸಂದರ್ಭ:

ಇತ್ತೀಚೆಗೆ ಚೀನಾ ‘ಕೃತಕ ಚಂದ್ರ ಸಂಶೋಧನಾ ಸೌಲಭ್ಯ’(artificial moon research facility) ವನ್ನು ನಿರ್ಮಿಸಿದೆ. ಈ ವೈಶಿಷ್ಟ್ಯವು ಕಾಂತೀಯತೆಯನ್ನು ಬಳಸಿಕೊಂಡು ಗುರುತ್ವಾಕರ್ಷಣೆಯ ಮಟ್ಟವನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

 1. ಈ ಸಂಶೋಧನಾ ಕೇಂದ್ರವನ್ನು/ಸೌಲಭ್ಯವನ್ನು ಬಹುಶಃ ಈ ವರ್ಷದ ಕೊನೆಯಲ್ಲಿ ಅಧಿಕೃತವಾಗಿ ಪ್ರಾರಂಭಿಸಲಾಗುವುದು.
 2. ಈ ಸಂಶೋಧನಾ ಕೇಂದ್ರವು/ಸೌಲಭ್ಯವು ವಿಶ್ವದಲ್ಲೇ ಮೊದಲನೆಯದು ಎಂದು ಹೇಳಲಾಗುತ್ತಿದೆ.

ಈ ಯೋಜನೆಯ ಉದ್ದೇಶ:

60 ಸೆಂ.ಮೀ ನಿರ್ವಾತ ಕೊಠಡಿಯೊಳಗೆ ಶಕ್ತಿಯುತ ಕಾಂತೀಯ ಕ್ಷೇತ್ರಗಳನ್ನು ಬಳಸಿಕೊಂಡು  ಗುರುತ್ವಾಕರ್ಷಣೆಯನ್ನು “ಅಂತ್ಯಗೊಳಿಸುವ” / “ಕಣ್ಮರೆಯಾಗುವಂತೆ” ಮಾಡುವ ಉದ್ದೇಶವನ್ನು ಈ ಯೋಜನೆಯು ಹೊಂದಿದೆ.

Current Affairs

ಮಿನಿ ಮೂನ್ ಕುರಿತು:

 1. ಈ ಕೃತಕ ಚಂದ್ರ ಅಥವಾ ‘ಮಿನಿ ಮೂನ್’ ನ ವ್ಯಾಸ ಸುಮಾರು ಎರಡು ಅಡಿ. ಅದರ ಕೃತಕ ಮೇಲ್ಮೈಯನ್ನು ಅಂತಹ ಬಂಡೆಗಳು ಮತ್ತು ಧೂಳಿನಿಂದ ಮಾಡಲಾಗಿದೆ.
 2. ಈ ಸಂಶೋಧನಾ ಕೇಂದ್ರವು ಚೀನಾದ ಜಿಯಾಂಗ್ಸು ಪ್ರಾಂತ್ಯದ ಪೂರ್ವ ನಗರವಾದ ಕ್ಸುಝಾವ್ (Xuzhou) ನಲ್ಲಿದೆ.

ಈ ಸಂಶೋಧನಾ ಕೇಂದ್ರದ ಉಪಯೋಗಗಳು, ಅನ್ವಯಗಳು ಮತ್ತು ಪ್ರಯೋಜನಗಳು:

 1. ಚಂದ್ರನಂತೆಯೇ ಕಡಿಮೆ ಗುರುತ್ವಾಕರ್ಷಣೆಯ ವಾತಾವರಣದಲ್ಲಿ ಉಪಕರಣಗಳು ಮತ್ತು ತಂತ್ರಜ್ಞಾನವನ್ನು ಪರೀಕ್ಷಿಸಲು ಮತ್ತು ಚಂದ್ರನ ಮೇಲ್ಮೈಯಲ್ಲಿ ಅದರ ಪ್ರಯೋಗಗಳು ಯಶಸ್ವಿ ಯಾಗುವ ಸಾಧ್ಯತೆಯನ್ನು ಪರೀಕ್ಷಿಸಲು ಚೀನಾ ಈ ಸಂಶೋಧನಾ ಕೇಂದ್ರವನ್ನು ಬಳಸಲು ಯೋಜಿಸಿದೆ.
 2. ಈ ಸಂಶೋಧನಾ ಕೇಂದ್ರವು ಚಂದ್ರನ ಮೇಲೆ ಮಾನವ ವಸಾಹತು ಅಥವಾ ಮಾನವನು ನೆಲೆಸುವ ಸಾಧ್ಯತೆಯನ್ನು ನಿರ್ಧರಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.

ಮ್ಯಾಗ್ನೆಟಿಕ್ ಲೆವಿಟೇಶನ್:

ಕೃತಕ ಚಂದ್ರನ ಕೇಂದ್ರ ಅಥವಾ ಸೌಲಭ್ಯವನ್ನು ಅಭಿವೃದ್ಧಿಪಡಿಸುವ ಕಲ್ಪನೆಯು ರಷ್ಯಾದ ಮೂಲದ ಭೌತಶಾಸ್ತ್ರಜ್ಞ ಆಂಡ್ರೆ ಗೀಮ್ (Andre Geim) ನಡೆಸಿದ ಪ್ರಯೋಗಗಳಲ್ಲಿ  ಬೇರುಗಳನ್ನು ಹೊಂದಿದೆ. ಅವರ ಪ್ರಯೋಗಗಳಲ್ಲಿ, ‘ಆಂಡ್ರೆ ಗೀಮ್’ ಅವರು ಆಯಸ್ಕಾಂತದ ಸಹಾಯದಿಂದ ಕಪ್ಪೆಯನ್ನು  ಮೇಲಕ್ಕೆ ಹಾರಿಸಲು ಪ್ರಯತ್ನಿಸಿದರು. ಈ ಅಭೂತಪೂರ್ವ ಪ್ರಯೋಗಕ್ಕಾಗಿ ಈ ಭೌತಶಾಸ್ತ್ರಜ್ಞನಿಗೆ ನಂತರ ನೊಬೆಲ್ ಪ್ರಶಸ್ತಿಯನ್ನು ನೀಡಲಾಯಿತು.

ಮ್ಯಾಗ್ನೆಟಿಕ್ ಲೆವಿಟೇಶನ್ (Magnetic levitation) ಖಂಡಿತವಾಗಿಯೂ ಆಂಟಿಗ್ರಾವಿಟಿಅಥವಾ ಗುರುತ್ವಾಪಕರ್ಷಣೆ, ಯಂತೆಯೇ ಅಲ್ಲ, ಆದರೆ ಆಯಸ್ಕಾಂತೀಯ ಕ್ಷೇತ್ರಗಳ ಮೂಲಕ ಸೂಕ್ಷ್ಮ ಗುರುತ್ವಾಕರ್ಷಣೆಯ ಅನುಕರಣೆಯು ಬಾಹ್ಯಾಕಾಶ ಸಂಶೋಧನೆಯಲ್ಲಿ ‘ಅನಿರೀಕ್ಷಿತವಾಗಿ ಏನಾದರೂ ಸಂಭವಿಸುವ ಸಾಧ್ಯತೆ’ಗೆ ಅಮೂಲ್ಯವಾದ ಅನೇಕ ಸಂದರ್ಭಗಳಿವೆ.

ಅಥವಾ

ಮ್ಯಾಗ್ನೆಟಿಕ್ ಲೆವಿಟೇಶನ್ ನಿಸ್ಸಂಶಯವಾಗಿ ಗುರುತ್ವಾಕರ್ಷಣೆಯಂತೆಯೇ ಅಲ್ಲ, ಆದರೆ ಬಾಹ್ಯಾಕಾಶ ಸಂಶೋಧನೆಯಲ್ಲಿ ಅನಿರೀಕ್ಷಿತತೆಯನ್ನು ನಿರೀಕ್ಷಿಸಲು ಕಾಂತೀಯ ಕ್ಷೇತ್ರಗಳಿಂದ ಮೈಕ್ರೊಗ್ರಾವಿಟಿಯನ್ನು ಅನುಕರಿಸುವುದು ಅಮೂಲ್ಯವಾದ ಸಂದರ್ಭಗಳಿವೆ.

ಮ್ಯಾಗ್ನೆಟಿಕ್ ಲೆವಿಟೇಶನ್ ಹಿಂದಿನ ಸಿದ್ಧಾಂತ:

ಯಾವುದೇ ಪರಮಾಣುಗಳು, ಪರಮಾಣು ನ್ಯೂಕ್ಲಿಯಸ್ ಗಳು ಮತ್ತು ಸಣ್ಣ ವೃತ್ತಾಕಾರದ ಪ್ರವಾಹಗಳಲ್ಲಿ ಅವುಗಳ ಸುತ್ತಲೂ ಸುತ್ತುವ ಸಣ್ಣ ಎಲೆಕ್ಟ್ರಾನ್ ಗಳಿಂದ ಮಾಡಲ್ಪಟ್ಟಿವೆ; ಈ ಚಲಿಸುವ ಪ್ರವಾಹಗಳು ಸಣ್ಣ ಕಾಂತೀಯ ಕ್ಷೇತ್ರಗಳನ್ನು ಪ್ರೇರೇಪಿಸುತ್ತವೆ.

 1. ಸಾಮಾನ್ಯವಾಗಿ, ವಸ್ತುವಿನಲ್ಲಿರುವ ಎಲ್ಲಾ ಪರಮಾಣುಗಳ ಯಾದೃಚ್ಛಿಕವಾಗಿ ಆಧಾರಿತ ಕಾಂತೀಯ ಕ್ಷೇತ್ರಗಳು, ಅವುಗಳ ನೀರಿನ ಒಂದು ಹನಿ ಅಥವಾ ಕಪ್ಪೆಗೆ ಸೇರಿರುತ್ತವೆ, ಪರಸ್ಪರ ಹಿಮ್ಮೆಟ್ಟಿಸುತ್ತವೆ ಮತ್ತು ಯಾವುದೇ ಭೌತಿಕ ರೂಪದಲ್ಲಿ ಯಾವುದೇ ಕಾಂತೀಯತೆಯು ಗೋಚರಿಸುವುದಿಲ್ಲ.
 2. ಆದಾಗ್ಯೂ, ಆ ಪರಮಾಣುಗಳಿಗೆ ಬಾಹ್ಯ ಕಾಂತೀಯ ಕ್ಷೇತ್ರವನ್ನು ಅನ್ವಯಿಸಿದಾಗ ಎಲ್ಲವೂ ಬದಲಾಗುತ್ತದೆ: ಎಲೆಕ್ಟ್ರಾನ್‌ಗಳು ತಮ್ಮ ಚಲನೆಯನ್ನು ಮಾರ್ಪಡಿಸುತ್ತವೆ, ಈ ಅನ್ವಯಿಕ ಕಾಂತೀಯ ಕ್ಷೇತ್ರವನ್ನು ಎದುರಿಸಲು ತಮ್ಮದೇ ಆದ ಕಾಂತೀಯ ಕ್ಷೇತ್ರವನ್ನು ರಚಿಸುತ್ತವೆ.
 3. ಒಂದು ವೇಳೆ ಬಾಹ್ಯ ಅಯಸ್ಕಾಂತವು ಸಾಕಷ್ಟು ಪ್ರಬಲವಾಗಿದ್ದರೆ, ಅದರ ಮತ್ತು ಪರಮಾಣುಗಳ ಕ್ಷೇತ್ರದ ನಡುವೆ ಉತ್ಪತ್ತಿಯಾಗುವ ವಿಕರ್ಷಣೆಯ ಕಾಂತೀಯ ಬಲವು ಗುರುತ್ವಾಕರ್ಷಣೆಯನ್ನು ತೊಡೆದುಹಾಕಲು ಮತ್ತು ಯಾವುದೇ ‘ವಸ್ತು’-ಇದು ಚಂದ್ರನ ತಂತ್ರಜ್ಞಾನದ ಮುಂದುವರಿದ ಭಾಗವಾಗಿರಲಿ ಅಥವಾ ಉಭಯಚರಗಳಾಗಿರಲಿ-ಅದನ್ನು ಗಾಳಿಯಲ್ಲಿ ತೇಲಿಸುವಷ್ಟು ಶಕ್ತಿಯುತವಾಗಿ ಬೆಳೆಯುತ್ತದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


 ಪೂರ್ವ ಜೌಗು ಜಿಂಕೆ / ಈಸ್ಟರ್ನ್ ಸ್ವಾಂಪ್ ಡೀರ್.

ದುರ್ಬಲ ವರ್ಗದಲ್ಲಿರುವ ಪೂರ್ವ ಜೌಗು ಜಿಂಕೆಗಳ (Eastern Swamp deer) ಸಂಖ್ಯೆಯು ದಕ್ಷಿಣ ಏಷ್ಯಾದ ಎಲ್ಲೆಡೆ ಅಳಿದುಹೋಗಿದೆ. ‘ಕಾಜಿರಂಗ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಸಹ ಇವುಗಳ ಸಂಖ್ಯೆಯು ಗಣನೀಯವಾಗಿ ಕಡಿಮೆಯಾಗಿದೆ.

2018ರಲ್ಲಿ ಈ ಜೀವಿಗಳ ಸಂಖ್ಯೆ 907 ಇತ್ತು, ಜನವರಿ 10 ಮತ್ತು ಜನವರಿ 11ರಂದು ನಡೆಸಿದ ಗಣತಿ ಪ್ರಕಾರ ಇವುಗಳ ಸಂಖ್ಯೆಯು 868ಕ್ಕೆ ಇಳಿಕೆಯಾಗಿದೆ. 2019 ಮತ್ತು 2020 ರ ಎರಡು ತೀವ್ರ ಪ್ರವಾಹಗಳು ‘ಈಸ್ಟರ್ನ್ ಸ್ವಾಂಪ್ ಡೀರ್’ ಗಳ ಸಂಖ್ಯೆಯಲ್ಲಿನ ಇಳಿಕೆಗೆ ಕಾರಣವೆಂದು ಅಧಿಕಾರಿಗಳು ತಿಳಿಸಿದ್ದಾರೆ.

ಈಸ್ಟರ್ನ್ ಸ್ವಾಂಪ್ ಡೀರ್ ಕುರಿತು:

ಜೌಗು ಜಿಂಕೆಯನ್ನು ಹಿಮಸಾರಂಗ ಅಥವಾ ಬಾರಸಿಂಗ ಎಂದೂ ಕರೆಯುತ್ತಾರೆ. ಈ ಜೀವಿ ‘ಕಾಜಿರಂಗ’ಕ್ಕೆ ಸ್ಥಳೀಯವಾಗಿದೆ.

ಪೂರ್ವ ಜೌಗು ಜಿಂಕೆಗಳು (ಪೂರ್ವ ಹಿಮಸಾರಂಗ) ಒಮ್ಮೆ ಕಾಜಿರಂಗದ ‘ಸೆಂಟ್ರಲ್ ಕೊಹೋರಾ’ ಮತ್ತು ‘ಬಾಗೋರಿ ಶ್ರೇಣಿಗಳಲ್ಲಿ’ ಗರಿಷ್ಠ ಸಂಖ್ಯೆಯಲ್ಲಿ  ಕಂಡುಬರುತ್ತಿದ್ದವು.

IUCN ಸ್ಥಿತಿ: ದುರ್ಬಲ/ ಅಪಾಯಕ್ಕೊಳಗಾಗಬಲ್ಲ (Vulnerable).

ಇದು ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದ ರಾಜ್ಯ ಪ್ರಾಣಿ ಕೂಡ ಆಗಿದೆ.

ವ್ಯಾಪ್ತಿ: ಮಧ್ಯ ಭಾರತದಿಂದ ಉತ್ತರ ಭಾರತ ಮತ್ತು ದಕ್ಷಿಣ ನೇಪಾಳದ ವರೆಗೆ.

ಭಾರತ: ಅಸ್ಸಾಂ, ಜಮ್ನಾ ನದಿ, ಗಂಗಾ ನದಿ, ಬ್ರಹ್ಮಪುತ್ರ ನದಿ, ಮಧ್ಯ ಪ್ರದೇಶ, ಉತ್ತರ ಪ್ರದೇಶ ಮತ್ತು ಅರುಣಾಚಲ ಪ್ರದೇಶ.

Current Affairs

 


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos