Print Friendly, PDF & Email

[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 11ನೇ ಜನೇವರಿ 2022

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಕೃಷ್ಣಾ ನದಿ ನೀರು ವಿವಾದ

2. ಚುನಾವಣಾ ಚಿಹ್ನೆಗಳು.

3. ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ (WTO) ‘ಅಭಿವೃದ್ಧಿಶೀಲ ರಾಷ್ಟ್ರ’ವಾಗಿ ಚೀನಾದ ಸ್ಥಾನಮಾನ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಪ್ರಧಾನ ಮಂತ್ರಿ ಜನ ಧನ ಯೋಜನೆ.

2. ಸೆಮಿಕಂಡಕ್ಟರ್ ಚಿಪ್ ಕೊರತೆ.

3. ನಾಸಾ-ಇಸ್ರೋ ನಿಸಾರ್ ಮಿಷನ್.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ಭಾರತದಲ್ಲಿ ಸಾರ್ವತ್ರಿಕ ಪ್ರವೇಶ.

2. ಭುಂಗ್ಲೋಟಿ.

3. ವಿಸ್ತೃತ ನಿರ್ಮಾಪಕ ಜವಾಬ್ದಾರಿ /ಎಕ್ಸ್ಟೆಂಡೆಡ್ ಪ್ರೊಡ್ಯೂಸರ್ ರೆಸ್ಪಾನ್ಸಿಬಿಲಿಟಿ.

4. ಜಗನ್ನಾಥ ದೇವಾಲಯ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಕೃಷ್ಣಾ ನದಿ ನೀರು ವಿವಾದ:


(Krishna River water dispute)

ಸಂದರ್ಭ:

ಕರ್ನಾಟಕ ಸೇರಿದಂತೆ ದಕ್ಷಿಣದ ನಾಲ್ಕು ರಾಜ್ಯಗಳ ನಡುವಿನ ಕೃಷ್ಣಾ ನದಿ ಜಲವಿವಾದ (Krishna River water dispute) ಕುರಿತ ಪ್ರಕರಣದ ವಿಚಾರಣೆಯಿಂದ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ್‌ ಮತ್ತು ಎ.ಎಸ್‌.ಬೋಪಣ್ಣ ಅವರು ಹಿಂದೆ ಸರಿದಿದ್ದಾರೆ.

 1. ಪ್ರಕರಣವು ವಿಚಾರಣೆಗೆ ಬರುತ್ತಿದ್ದಂತೆ ನ್ಯಾಯಮೂರ್ತಿ ಚಂದ್ರಚೂಡ್‌ ಅವರು, ‘ನಾವು ಮೂಲತಃ ಕ್ರಮವಾಗಿ ಮಹಾರಾಷ್ಟ್ರ ಮತ್ತು ಕರ್ನಾಟಕದವರು’ ಎಂಬುದನ್ನು ಉಲ್ಲೇಖಿಸಿದರು. ಇದೇ ಕಾರಣದಿಂದಾಗಿ ಈ ಹಿಂದೆ ನ್ಯಾಯಮೂರ್ತಿಗಳಾದ ಎ.ಎಂ.ಖಾನ್‌ವಿಲ್ಕರ್‌ ಮತ್ತು ಮೋಹನ್‌ ಎಂ.ಶಾಂತನಗೌಡರ್‌ ಅವರು ವಿಚಾರಣೆಯಿಂದ ಹಿಂದೆ ಸರಿದಿದ್ದರು ಎಂಬುದನ್ನು ನೆನಪಿಸಿದರು.
 2. ಕರ್ನಾಟಕ, ಆಂಧ್ರಪ್ರದೇಶ, ಮಹಾರಾಷ್ಟ್ರ ಮತ್ತು ತೆಲಂಗಾಣ ನಡುವೆ ಕೃಷ್ಣಾ ನದಿ ಜಲವಿವಾದವಿದೆ.

ಅಗತ್ಯತೆ:

ನ್ಯಾಯಾಧೀಶರು,“ಭಯ ಅಥವಾ ಪಕ್ಷಪಾತ” ದ ಧೋರಣೆ ಇಲ್ಲದೆ ನ್ಯಾಯದಾನ ಮಾಡುವುದಾಗಿ ಪ್ರಮಾಣ ವಚನ ಸಸ್ವೀಕರಿಸಿದರೂ ಸಹ, ಈ ಇಬ್ಬರೂ ನ್ಯಾಯಮೂರ್ತಿಗಳು ‘ಅವಹೇಳನಕಾರಿ’ ಅಥವಾ ‘ನಿಂದನೀಯ’ ಟೀಕೆಗಳಿಗೆ ಹೆದರಿ ‘ಕೃಷ್ಣಾ ಜಲ ವಿವಾದ’ ಪ್ರಕರಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.

ನ್ಯಾಯಾಲಯದಲ್ಲಿ ವಿವಾದ:

ನವೆಂಬರ್ 16, 2011 ರಂದು ಸುಪ್ರೀಂ ಕೋರ್ಟ್ ನೀಡಿದ ಆದೇಶದಿಂದ ವಿನಾಯಿತಿ ನೀಡುವಂತೆ ಕರ್ನಾಟಕ ಕೋರಿತ್ತು. ಈ ಆದೇಶದಲ್ಲಿ, ನ್ಯಾಯಾಲಯವು ‘ಕೃಷ್ಣ ಜಲ ವಿವಾದಗಳ ನ್ಯಾಯಮಂಡಳಿ II’ ( Krishna Water Disputes Tribunal II (KWDT) ಯು ಡಿಸೆಂಬರ್ 2010 ರಲ್ಲಿ, ಕರ್ನಾಟಕ, ಹಿಂದಿನ ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಕೃಷ್ಣಾ ನದಿಯಿಂದ ನೀರು ಹಂಚಿಕೆ ಮಾಡುವ ಕುರಿತು ಹೊರಡಿಸಿದ ಅಂತಿಮ ಆದೇಶವನ್ನು ಅಂತರ-ರಾಜ್ಯ ಜಲ ವಿವಾದಗಳ ಕಾಯಿದೆ., 1956 ರ ಸೆಕ್ಷನ್ 6(1) ಅಡಿಯಲ್ಲಿ, ಕೇಂದ್ರ ಸರ್ಕಾರವು ಅಧಿಕೃತ ಗೆಜೆಟ್‌ನಲ್ಲಿ ಪ್ರಕಟಿಸದಂತೆ ನಿರ್ಬಂಧಿಸಲಾಗಿದೆ.

 1. ನ್ಯಾಯಾಧಿಕರಣದ ಆದೇಶವನ್ನು ಪ್ರಕಟಿಸುವುದು ಅದರ ಅನುಷ್ಠಾನಕ್ಕೆ ಅತ್ಯಗತ್ಯವಾದ ಒಂದು ಪೂರ್ವ ಷರತ್ತಾಗಿದೆ.
 2. KWDT ನವೆಂಬರ್ 29, 2013 ರಂದು ಕರ್ನಾಟಕ, ಮಹಾರಾಷ್ಟ್ರ ಮತ್ತು ಹಿಂದಿನ ಆಂಧ್ರಪ್ರದೇಶ ರಾಜ್ಯಕ್ಕೆ ಈಗಾಗಲೇ ಹಂಚಿಕೆ ಮಾಡಿದ 2130 ಟಿಎಂಸಿ ಅಡಿ ನೀರಿನ ಹಂಚಿಕೆಯನ್ನು ಸಂರಕ್ಷಿಸುವುದರೊಂದಿಗೆ ತನ್ನ ಅಂತಿಮ ಆದೇಶ ಮತ್ತು ಹೆಚ್ಚುವರಿ ನೀರನ್ನು ಹಂಚಿಕೆ ಮಾಡುವ ಕುರಿತ ತನ್ನ ವರದಿಯನ್ನು ಪರಿಷ್ಕರಿಸಿತು.

ಏನಿದು ಪ್ರಕರಣ?

ನ್ಯಾಯಾಧಿಕರಣದ ಆದೇಶವನ್ನು ಪ್ರಕಟಿಸುವುದು ಅದರ ಅನುಷ್ಠಾನಕ್ಕೆ ಅಗತ್ಯವಾದ ಪೂರ್ವ ಷರತ್ತಾಗಿದೆ. ಆದರೆ, ಆಂಧ್ರಪ್ರದೇಶ ವಿಭಜನೆಯ ನಂತರ ತೆಲಂಗಾಣ ಮತ್ತು ಆಂಧ್ರಪ್ರದೇಶಗಳು ಕೆಡಬ್ಲ್ಯುಡಿಟಿ ಮಾಡಿದ ನೀರು ಹಂಚಿಕೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದವು.

ಈಗ ಮಾಡಬೇಕಿರುವುದೇನು?

ಕರ್ನಾಟಕವು 2011 ರ ಸುಪ್ರಿಂ ಕೋರ್ಟ್‌ನ ಆದೇಶದ ಕಾರಣ, ‘ಅಂತರ-ರಾಜ್ಯ ಜಲ ವಿವಾದಗಳ ಕಾಯ್ದೆ 1956’ ಸೆಕ್ಷನ್ 6 ರ ಅಡಿಯಲ್ಲಿ ಅಧಿಕೃತ ಗೆಜೆಟ್‌ನಲ್ಲಿ ‘ಕೃಷ್ಣ ಜಲ ವಿವಾದಗಳ ನ್ಯಾಯಮಂಡಳಿ II’ ಅಂತಿಮ ಆದೇಶದ ಪ್ರಕಟಣೆಯನ್ನು ತಡೆಹಿದಿದಿರುವ ಕಾರಣ, ರಾಜ್ಯ ಅಣೆಕಟ್ಟುಗಳು ಮತ್ತು ರಾಜ್ಯದ ಉತ್ತರ ಭಾಗದ ಒಣ ಪ್ರದೇಶಗಳಿಗೆ ನೀರು ಒದಗಿಸುವ ಸಾವಿರಾರು ಕೋಟಿ ರೂಪಾಯಿಗಳ ನೀರಾವರಿ ಯೋಜನೆಗಳು ಸ್ಥಗಿತಗೊಂಡಿವೆ.

 1. ಆಂಧ್ರಪ್ರದೇಶ ಮತ್ತು ತೆಲಂಗಾಣ ಎತ್ತಿರುವ ವಿವಾದ ತಮ್ಮ ನಡುವೆಯೇ ಇದ್ದು, ಕರ್ನಾಟಕಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ ಎಂಬುದು ಕರ್ನಾಟಕ ವಾದವಾಗಿದೆ.

ಕರ್ನಾಟಕದ ಮುಂದಿರುವ ಸವಾಲುಗಳು:

 1. KWDT ಯ ನಿರ್ಧಾರವನ್ನು 2050 ರ ವರೆಗೆ ಮಾತ್ರ ಜಾರಿಗೊಳಿಸಬಹುದಾಗಿದೆ, ನಂತರ ಈ ನಿರ್ಧಾರವನ್ನು ಪರಿಶೀಲಿಸಲು ಅಥವಾ ತಿದ್ದುಪಡಿ ಮಾಡಲು ಅವಕಾಶವಿದೆ. 2010 ರಿಂದ ವ್ಯಾಜ್ಯದಲ್ಲಿ ಹತ್ತು ವರ್ಷಗಳ ಅವಧಿ ಈಗಾಗಲೇ ಕಳೆದು ಹೋಗಿದೆ. ಕರ್ನಾಟಕ ತನ್ನ ವಿವಿಧ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸಲು ಕನಿಷ್ಠ 10 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಈ ಯೋಜನೆಗಳ ವೆಚ್ಚ 2014-15ರಲ್ಲಿ 60,000 ಕೋಟಿ ರೂ. ಗಳಷ್ಟಿತ್ತು.
 2. ಈ ಅವಧಿಯಲ್ಲಿ ಈ ಯೋಜನೆಗಳ ವೆಚ್ಚವು ವಾರ್ಷಿಕವಾಗಿ 10% ರಿಂದ 15% ರಷ್ಟು ಹೆಚ್ಚಾಗುತ್ತದೆ. ನೀರಾವರಿ ಯೋಜನೆಗಳು 10 ವರ್ಷಗಳಲ್ಲಿ ಪೂರ್ಣಗೊಂಡರೂ, ಕೇಂದ್ರ ಜಲ ಆಯೋಗದ ಅನುಮೋದನೆ ಪಡೆಯಲು ಇನ್ನೂ ಸಮಯ ತೆಗೆದುಕೊಳ್ಳುತ್ತದೆ.

ಸಂಬಂಧಿತ ವಿವಾದಗಳು / ಕೃಷ್ಣ ಜಲ ವಿವಾದಗಳ ನ್ಯಾಯಮಂಡಳಿಯ ತೀರ್ಪು:

ಕೃಷ್ಣಾ ನದಿ ನೀರಿನ ವಿವಾದವು ಹಿಂದಿನ ರಾಜಮನೆತನದ ಹೈದರಾಬಾದ್ ಮತ್ತು ಮೈಸೂರು ರಾಜ್ಯಗಳ ನಡುವೆ ಪ್ರಾರಂಭವಾಯಿತು ಮತ್ತು ನಂತರದ ರಾಜ್ಯಗಳಾದ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣಗಳ ನಡುವೆ ಮುಂದುವರಿಯುತ್ತಿದೆ.

ಕೃಷ್ಣಾ ಜಲ ವಿವಾದಗಳ ನ್ಯಾಯಾಧಿಕರಣ (Krishna Water Disputes Tribunal- KWDT) ವನ್ನು 1969 ರಲ್ಲಿ ಅಂತರ-ರಾಜ್ಯ ನದಿ ನೀರಿನ ವಿವಾದಗಳ ಕಾಯಿದೆ, 1956 ರ ಅಡಿಯಲ್ಲಿ ಸ್ಥಾಪಿಸಲಾಯಿತು, ಅದು ತನ್ನ ವರದಿಯನ್ನು 1973 ರಲ್ಲಿ ಸಲ್ಲಿಸಿತು.

1976 ರಲ್ಲಿ ಪ್ರಕಟವಾದ ಕೃಷ್ಣಾ ನದಿ ನೀರಿನ ವಿವಾದಗಳ ನ್ಯಾಯಮಂಡಳಿಯ ವರದಿಯು 2060 TMC (ಸಾವಿರ ಮಿಲಿಯನ್ ಘನ ಅಡಿ) ಕೃಷ್ಣಾ ನದಿ ನೀರನ್ನು 75 ಪ್ರತಿಶತ ಅವಲಂಬನೆಯ ಆಧಾರದ ಮೇಲೆ ಮೂರು ಭಾಗಗಳಾಗಿ ವಿಂಗಡಿಸಿದೆ:

 1. ಮಹಾರಾಷ್ಟ್ರಕ್ಕೆ 560 ಟಿ.ಎಂ.ಸಿ
 2. ಕರ್ನಾಟಕಕ್ಕೆ 700 ಟಿ.ಎಂ.ಸಿ
 3. ಆಂಧ್ರಪ್ರದೇಶಕ್ಕೆ 800 ಟಿ.ಎಂ.ಸಿ

ಪರಿಷ್ಕೃತ ಆದೇಶ:

ರಾಜ್ಯಗಳಲ್ಲಿ ಅಸಮಾಧಾನ ವ್ಯಕ್ತವಾದ ನಂತರ 2004ರಲ್ಲಿ ಎರಡನೇ ಕೃಷ್ಣಾ ಜಲ ವಿವಾದ ನ್ಯಾಯಾಧಿಕರಣದ (KWDT) ರಚನೆಯಾಯಿತು.

 1. ಎರಡನೇ KWDT ತನ್ನ ಅಂತಿಮ ವರದಿಯನ್ನು 2010 ರಲ್ಲಿ ಸಲ್ಲಿಸಿತು. ಈ ವರದಿಯಲ್ಲಿ ಕೃಷ್ಣಾ ನದಿಯ ಹೆಚ್ಚುವರಿ ನೀರನ್ನು ಮಹಾರಾಷ್ಟ್ರಕ್ಕೆ 81 ಟಿಎಂಸಿ, ಕರ್ನಾಟಕಕ್ಕೆ 177 ಟಿಎಂಸಿ ಮತ್ತು ಆಂಧ್ರಪ್ರದೇಶಕ್ಕೆ 190 ಟಿಎಂಸಿ ಶೇ.65 ಅವಲಂಬನೆ ಆಧಾರದ ಮೇಲೆ ಹಂಚಿಕೆ ಮಾಡಲಾಗಿದೆ.

ಅಂತಿಮ ಆದೇಶವನ್ನು ಇನ್ನು ಏಕೆ ಪ್ರಕಟಿಸಲಾಗಿಲ್ಲ?

2014ರಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯವಾದ ನಂತರ ಆಂಧ್ರಪ್ರದೇಶ ಕೆಡಬ್ಲ್ಯುಡಿಟಿಯಲ್ಲಿ ತೆಲಂಗಾಣವನ್ನು ಪ್ರತ್ಯೇಕ ಪಕ್ಷವಾಗಿ ಸೇರಿಸಿಕೊಳ್ಳಬೇಕು ಮತ್ತು ಕೃಷ್ಣಾ ನದಿ ನೀರನ್ನು ಮೂರು ರಾಜ್ಯಗಳಿಗೆ ಬದಲಾಗಿ ನಾಲ್ಕು ರಾಜ್ಯಗಳಿಗೆ ಹಂಚಿಕೆ ಮಾಡಬೇಕೆಂದು ಒತ್ತಾಯಿಸುತ್ತಿದೆ.

ನ್ಯಾಯಾಧೀಶರು ವಿಚಾರಣೆಯಿಂದ ಹಿಂದೆ ಸರಿಯುವಿಕೆ / ಹಿಂಪಡೆಯುವಿಕೆ ಎಂದರೇನು? ಅಥವಾ

‘ನ್ಯಾಯಾಂಗ ಅನರ್ಹತೆ’ ಅಥವಾ ‘ವಿಚಾರಣೆಯ ನಿರಾಕರಣೆ’ ಎಂದರೇನು?

(What is Judicial Disqualification or Recusal?)

ಹಿತಾಸಕ್ತಿಯ ಸಂಘರ್ಷದಿಂದಾಗಿ ವಿಚಾರಣೆಯ ಪೀಠ ಅಲಂಕರಿಸುವ ನ್ಯಾಯಾಂಗ ಅಧಿಕಾರಿ ಅಥವಾ ಆಡಳಿತಾಧಿಕಾರಿಯು ಯಾವುದೇ ನ್ಯಾಯಾಂಗ ವಿಚಾರಣೆಯಲ್ಲಿ ಅಥವಾ ಅಧಿಕೃತ ಕ್ರಿಯೆಯಲ್ಲಿ ಭಾಗವಹಿಸುವಿಕೆಯಿಂದ ದೂರವಿರುವುದನ್ನು ಅಥವಾ ಹಿಂದೆ ಸರಿಯುವುದನ್ನು ನ್ಯಾಯಾಂಗ ಅನರ್ಹತೆ (Judicial disqualification), ‘ವಿಚಾರಣೆಯ ನಿರಾಕರಣೆ’ ಅಥವಾ ‘ಮರುಪಡೆಯುವಿಕೆ’ (Recusal) ಎಂದು ಕರೆಯಲಾಗುತ್ತದೆ.

ಯಾವುದೇ ಪ್ರಕರಣದ ವಿಚಾರಣೆಯಿಂದ ನ್ಯಾಯಮೂರ್ತಿಗಳು ಹಿಂದೆ ಸರಿಯುವುದಕ್ಕೆ ಇಂಗ್ಲಿಷ್‌ನಲ್ಲಿ ‘Recuse’ (ರೆಕ್ಯೂಸ್) ಎಂದು ಕರೆಯುತ್ತಾರೆ. ‘ಪ್ರಕರಣದ ಬಗ್ಗೆ ಪರ– ವಿರುದ್ಧದ ನಿಲುವು ಹೊಂದಿದ್ದರೆ ಅವುಗಳ ವಿಚಾರಣೆ ನಿರಾಕರಿಸಬೇಕು’ ಎಂಬುದು ಇದರರ್ಥ.

‘ವಿಚಾರಣೆಯ ನಿರಾಕರಣೆ’ಗೆ ಸಾಮಾನ್ಯ ಆಧಾರಗಳು:

 1. ನ್ಯಾಯಾಧೀಶರು ಒಂದು ಪಕ್ಷದ ಬಗ್ಗೆ ಉತ್ತಮ ನಂಬಿಕೆ, ಅಥವಾ ಇತರ ಪಕ್ಷದ ಬಗ್ಗೆ ಪ್ರತಿಕೂಲ ಧೋರಣೆ ಹೊಂದಿದ್ದರೆ ಅಥವಾ ನ್ಯಾಯಾಧೀಶರು ಯಾರೋ ಒಬ್ಬರ ಬಗ್ಗೆ ಸಮಂಜಸವಾಗಿ ಪಕ್ಷಪಾತ ಹೊಂದಿರಬಹುದು ಎಂದು ನಿಷ್ಪಕ್ಷಪಾತ ಅಥವಾ ವಸ್ತುನಿಷ್ಠ ವೀಕ್ಷಕನು ಭಾವಿಸಿದರೆ.
 2. ನ್ಯಾಯಾಧೀಶರು ಪ್ರಕರಣದಲ್ಲಿ ವೈಯಕ್ತಿಕ ಹಿತಾಸಕ್ತಿಯನ್ನು ಹೊಂದಿದ್ದರೆ ಅಥವಾ ಪ್ರಕರಣದಲ್ಲಿ ವೈಯಕ್ತಿಕ ಹಿತಾಸಕ್ತಿಯನ್ನು ಹೊಂದಿರುವ ಯಾವುದೇ ವ್ಯಕ್ತಿಯೊಂದಿಗೆ ಸಂಬಂಧ ಹೊಂದಿದ್ದರೆ.
 3. ನ್ಯಾಯಾಧೀಶರ ಹಿನ್ನೆಲೆ ಅಥವಾ ಅನುಭವ, ಉದಾಹರಣೆಗೆ ನ್ಯಾಯಾಧೀಶರಾಗುವುದಕ್ಕಿಂತ ಮುಂಚೆ ವಕೀಲರಾಗಿ ಮಾಡಿದ ಕೆಲಸ.
 4. ವಾದಿ ಮತ್ತು ಪ್ರತಿವಾದಿಗಳ ಕುರಿತು ಹೊಂದಿರುವ ವೈಯಕ್ತಿಕ ತಿಳುವಳಿಕೆ ಅಥವಾ ಪ್ರಕರಣದ ಸಂಗತಿಗಳ ಕುರಿತ ಜ್ಞಾನ.
 5. ವಕೀಲರು ಅಥವಾ ವಕೀಲರಲ್ಲದವರೊಂದಿಗೆ ಏಕಪಕ್ಷೀಯ/ಖಾಸಗಿ ಸಂವಾದ.
 6. ನ್ಯಾಯಾಧೀಶರ ತೀರ್ಪುಗಳು, ಪ್ರತಿಕ್ರಿಯೆಗಳು ಅಥವಾ ನಡವಳಿಕೆ.

ಈ ನಿಟ್ಟಿನಲ್ಲಿ ಯಾವುದೇ ಕಾನೂನುಗಳಿವೆಯೇ?

ನ್ಯಾಯಾಧೀಶರು ‘ವಿಚಾರಣೆಯನ್ನು ನಿರಾಕರಿಸಲು’ ಅಥವಾ ವಿಚಾರಣೆಯಿಂದ ಹಿಂದೆ ಸರಿಯಲು ಯಾವುದೇ ನಿರ್ದಿಷ್ಟ ನಿಯಮಗಳಿಲ್ಲ.

 1. ಆದಾಗ್ಯೂ, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳ ನ್ಯಾಯಾಧೀಶರು ಪ್ರಮಾಣವಚನ ಸ್ವೀಕರಿಸುವ ಸಮಯದಲ್ಲಿ,ತಮ್ಮ ಕರ್ತವ್ಯಗಳನ್ನು ನಿರ್ವಹಿಸಲು, ನ್ಯಾಯದಾನ ಮಾಡಲು, ಭಯ ಅಥವಾ ಅನುಗ್ರಹವಿಲ್ಲದೆ, ವಾತ್ಸಲ್ಯ ಅಥವಾ ಬಾಂಧವ್ಯಕ್ಕೆ ಒಳಗಾಗದೆ ಅಥವಾ ತಿರಸ್ಕಾರವಿಲ್ಲದೆ ಅಥವಾ ಯಾವುದೇ ದುರುದ್ದೇಶವಿಲ್ಲದೆ ತಮ್ಮ ಕರ್ತವ್ಯಗಳನ್ನು ಪ್ರಾಮಾಣಿಕವಾಗಿ ಮತ್ತು ನಿಷ್ಪಕ್ಷಪಾತವಾಗಿ ನಿರ್ವಹಿಸುವ ವಚನವನ್ನು ನೀಡುತ್ತಾರೆ.

ಈ ಕುರಿತು ಸುಪ್ರೀಂ ಕೋರ್ಟ್ ಹೇಳಿರುವುದೇನು?

ರಂಜಿತ್ ಠಾಕೂರ್ VS ಯೂನಿಯನ್ ಆಫ್ ಇಂಡಿಯಾ (1987) ಪ್ರಕರಣದಲ್ಲಿ, ಪಕ್ಷದ ಮನಸ್ಸಿನಲ್ಲಿರುವ ಆತಂಕವನ್ನು ಗಮನದಲ್ಲಿಟ್ಟುಕೊಂಡು ಪಕ್ಷಪಾತದ ಸಾಧ್ಯತೆಯ ಬಗ್ಗೆ ತನಿಖೆ ಸಮರ್ಥನೀಯ ಮತ್ತು ಸಮಂಜಸವಾಗಿದೆ ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿದೆ. ನ್ಯಾಯಾಧೀಶರು ತಮ್ಮ ಮುಂದೆ ನಿಂತಿರುವ ಪಕ್ಷದ ಮನಸ್ಸಿನಲ್ಲಿ ನಡೆಯುತ್ತಿರುವ ಆಲೋಚನೆಗಳನ್ನು ಗಮನಿಸಬೇಕು ಮತ್ತು ಅವರು ಪಕ್ಷಪಾತ ಹೊಂದಿದ್ದಾರೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸಬೇಕು.

ನ್ಯಾಯಮೂರ್ತಿ ಜೆ. ಚೆಲಮೇಶ್ವರ್ ಅವರು ಸುಪ್ರೀಂ ಕೋರ್ಟ್ ಅಡ್ವೊಕೇಟ್ಸ್-ಆನ್-ರೆಕಾರ್ಡ್ ಅಸೋಸಿಯೇಶನ್ VS ಯೂನಿಯನ್ ಆಫ್ ಇಂಡಿಯಾ (2015) ಪ್ರಕರಣದ ತೀರ್ಪು ನೀಡುವಾಗ ನ್ಯಾಯಾಧೀಶರು “ಆರ್ಥಿಕ ಹಿತಾಸಕ್ತಿಯನ್ನು ಹೊಂದಿರುವುದು ಕಂಡು ಬಂದರೆ ಅದು ಪಕ್ಷಪಾತದ ಕುರಿತ ‘ನಿಜವಾದ ಅಪಾಯ’ ಅಥವಾ ಆಗ ‘ಸಮಂಜಸವಾದ ಅನುಮಾನ’ ಇದೆಯೇ ಎಂಬ ಬಗ್ಗೆ ಹೆಚ್ಚಿನ ತನಿಖೆ ನಡೆಸುವ ಅಗತ್ಯವಿಲ್ಲ” ಎಂದು ಅಭಿಪ್ರಾಯಪಟ್ಟಿದ್ದಾರೆ.

ವಿಚಾರಣೆಯಿಂದ ಹಿಂದೆ ಸರಿಯುವಿಕೆಗೆ ಸಂಬಂಧಿಸಿದ ಕಾಳಜಿಗಳು ಅಥವಾ ಸಮಸ್ಯೆಗಳು:

 1. ನ್ಯಾಯಾಧೀಶರು ‘ವಿಚಾರಣೆಯಿಂದ ಹಿಂದೆ ಸರಿಯುವುದು’ ನ್ಯಾಯ ಬಯಸಿ ಬಂದ ಪಕ್ಷಗಳಿಗೆ ತಮ್ಮ ಆಯ್ಕೆಯ ನ್ಯಾಯಾಂಗ ಪೀಠವನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವನ್ನು ನೀಡುತ್ತದೆ, ಇಲ್ಲವಾದರೆ, ಇದು ನ್ಯಾಯಾಂಗದ ನಿಷ್ಪಕ್ಷಪಾತದ ಉಲ್ಲಂಘನೆಗೆ ಕಾರಣವಾಗಬಹುದು.
 2. ಇದು ನ್ಯಾಯಾಧೀಶರ ಸ್ವಾತಂತ್ರ್ಯವನ್ನು ದುರ್ಬಲಗೊಳಿಸುತ್ತದೆ ಮತ್ತು ನ್ಯಾಯಾಧೀಶರ ನಿಷ್ಪಕ್ಷಪಾತದ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ.
 3. ನ್ಯಾಯಾಧೀಶರು ‘ವಿಚಾರಣೆಯನ್ನು ನಿರಾಕರಿಸಲು’ ಅಥವಾ ವಿಚಾರಣೆಯಿಂದ ಹಿಂದೆ ಸರಿಯಲು ಯಾವುದೇ ನಿರ್ದಿಷ್ಟ ನಿಯಮಗಳಿಲ್ಲ.ಈ ಸಂದರ್ಭದಲ್ಲಿ, ಒಂದೇ ಸನ್ನಿವೇಶದ ವಿಭಿನ್ನ ವ್ಯಾಖ್ಯಾನಗಳು ಮಾತ್ರ ಇವೆ.
 4. ನ್ಯಾಯಾಧೀಶರು ‘ವಿಚಾರಣೆಯಿಂದ ಹಿಂದೆ ಸರಿಯುವುದರಿಂದ’ ನ್ಯಾಯಾಲಯದ ವಿಚಾರಣೆಗೆ ಅಡ್ಡಿಯಾಗಬಹುದು ಮತ್ತು ವಿಚಾರಣೆಗಳನ್ನು ವಿಳಂಬ ಗೊಳಿಸಬಹುದು.

 

ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ, ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.

ರಾಜಕೀಯ ಪಕ್ಷಗಳ ಚಿಹ್ನೆಗಳನ್ನು ಚುನಾವಣಾ ಆಯೋಗ ಹೇಗೆ ನಿರ್ಧರಿಸುತ್ತದೆ?


(How Election Commission decides on party symbols?)

ಸಂದರ್ಭ:

ಪಂಜಾಬ್ ನ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಹೊಸದಾಗಿ ರಚಿಸಿದ ಪಕ್ಷವಾದ ಪಂಜಾಬ್ ಲೋಕ ಕಾಂಗ್ರೆಸ್ ಗೆ ಭಾರತೀಯ ಚುನಾವಣಾ ಆಯೋಗವು ಅದರ ಚಿಹ್ನೆಯಾಗಿ ಹಾಕಿ ಸ್ಟಿಕ್ ಮತ್ತು ಬಾಲ್ ಅನ್ನು ನೀಡಿದೆ.

current Affairs

 

ರಾಜಕೀಯ ಪಕ್ಷಗಳಿಗೆ ಚಿಹ್ನೆಗಳನ್ನು ಹೇಗೆ ನೀಡಲಾಗುತ್ತದೆ?

ಚುನಾವಣಾ ಆಯೋಗದ ಮಾರ್ಗಸೂಚಿಗಳ ಪ್ರಕಾರ – ರಾಜಕೀಯ ಪಕ್ಷಕ್ಕೆ ಚುನಾವಣಾ ಚಿಹ್ನೆಯನ್ನು ಹಂಚಿಕೊಳ್ಳಲು ಈ ಕೆಳಗಿನ ವಿಧಾನವನ್ನು ಅನುಸರಿಸಲಾಗುತ್ತದೆ:

 1. ನಾಮಪತ್ರ ಸಲ್ಲಿಸುವ ಸಮಯದಲ್ಲಿ, ರಾಜಕೀಯ ಪಕ್ಷ / ಅಭ್ಯರ್ಥಿಯು ಚುನಾವಣಾ ಆಯೋಗದ ಉಚಿತ ಚಿಹ್ನೆಗಳ ಪಟ್ಟಿಯಿಂದ ಮೂರು ಚಿಹ್ನೆಗಳನ್ನು ಒದಗಿಸಬೇಕಾಗುತ್ತದೆ.
 2. ಅವುಗಳಲ್ಲಿ, ರಾಜಕೀಯ ಪಕ್ಷ / ಅಭ್ಯರ್ಥಿಗೆ ‘ಮೊದಲು ಬಂದವರಿಗೆ ಮೊದಲ ಆದ್ಯತೆ’ ಆಧಾರದ ಮೇಲೆ ಚುನಾವಣಾ ಚಿಹ್ನೆ ನೀಡಲಾಗುತ್ತದೆ.
 3. ಮಾನ್ಯತೆ ಪಡೆದ ರಾಜಕೀಯ ಪಕ್ಷವು ವಿಭಜನೆ ಗೊಂಡಾಗ, ಪಕ್ಷಕ್ಕೆ ನಿಗದಿಪಡಿಸಿದ ಚಿಹ್ನೆ / ಚುನಾವಣಾ ಚಿಹ್ನೆಯನ್ನು ನಿಯೋಜಿಸುವ ನಿರ್ಧಾರವನ್ನು ಚುನಾವಣಾ ಆಯೋಗ ತೆಗೆದುಕೊಳ್ಳುತ್ತದೆ.

ಚುನಾವಣಾ ಆಯೋಗದ ಅಧಿಕಾರಗಳು:

ಚುನಾವಣಾ ಗುರುತುಗಳು (ಮೀಸಲಾತಿ ಮತ್ತು ಹಂಚಿಕೆ) ಆದೇಶ, 1968 ರ ಅಡಿಯಲ್ಲಿ, ರಾಜಕೀಯ ಪಕ್ಷಗಳನ್ನು ಗುರುತಿಸಲು ಮತ್ತು ಚಿಹ್ನೆಗಳನ್ನು ಹಂಚಲು ಚುನಾವಣಾ ಆಯೋಗಕ್ಕೆ ಅಧಿಕಾರ ನೀಡಲಾಗಿದೆ.

 1. ಆದೇಶದ 15 ನೇ ಪ್ಯಾರಾಗ್ರಾಫ್ ಅಡಿಯಲ್ಲಿ, ಪಕ್ಷದ ಹೆಸರು ಮತ್ತು ಚಿಹ್ನೆಗೆ ಸಂಬಂಧಿಸಿದ ಹಕ್ಕುಗಳ ಪ್ರಕರಣಗಳನ್ನು ಚುನಾವಣಾ ಆಯೋಗವು ಪ್ರತಿಸ್ಪರ್ಧಿ ಗುಂಪುಗಳು ಅಥವಾ ಮಾನ್ಯತೆ ಪಡೆದ ರಾಜಕೀಯ ಪಕ್ಷದ ಬಣಗಳಿಂದ ನಿರ್ಧರಿಸಬಹುದು.
 2. ರಾಜಕೀಯ ಪಕ್ಷಗಳ ಯಾವುದೇ ವಿವಾದ ಅಥವಾ ವಿಲೀನದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವ ಏಕೈಕ ಪ್ರಾಧಿಕಾರ ಚುನಾವಣಾ ಆಯೋಗವಾಗಿದೆ. ಸಾದಿಕ್ ಅಲಿ ಮತ್ತು ಇತರರು VS ಭಾರತದ ಚುನಾವಣಾ ಆಯೋಗ (ECI) ಪ್ರಕರಣದಲ್ಲಿ (1971) ಸುಪ್ರೀಂ ಕೋರ್ಟ್ ಅದರ ಸಿಂಧುತ್ವವನ್ನು ಎತ್ತಿಹಿಡಿದಿದೆ.

ಚುನಾವಣಾ ಚಿಹ್ನೆಗಳ ವಿಧಗಳು:

ಚುನಾವಣಾ ಗುರುತುಗಳು (ಮೀಸಲಾತಿ ಮತ್ತು ಹಂಚಿಕೆ) (ತಿದ್ದುಪಡಿ) ಆದೇಶ, 2017 ರ ಪ್ರಕಾರ, ರಾಜಕೀಯ ಪಕ್ಷಗಳ ಚಿಹ್ನೆಗಳು ಈ ಕೆಳಗಿನಂತೆ ಎರಡು ಪ್ರಕಾದವುಗಳಾಗಿವೆ:

 1. ಕಾಯ್ದಿರಿಸಲಾಗಿದೆ (Reserved): ದೇಶಾದ್ಯಂತ ಎಂಟು ರಾಷ್ಟ್ರೀಯ ಪಕ್ಷಗಳು ಮತ್ತು 64 ರಾಜ್ಯ ಪಕ್ಷಗಳಿಗೆ / ಪ್ರಾದೇಶಿಕ ಪಕ್ಷಗಳಿಗೆ ‘ಕಾಯ್ದಿರಿಸಿದ’ ಚಿಹ್ನೆಗಳನ್ನು ನೀಡಲಾಗಿದೆ.
 2. ಉಚಿತ (Free): ಚುನಾವಣಾ ಆಯೋಗವು ಸುಮಾರು 200 ‘ಉಚಿತ’ ಚಿಹ್ನೆಗಳ ಸಂಗ್ರಹವನ್ನು ಹೊಂದಿದೆ, ಇವುಗಳನ್ನು ಗುರುತಿಸಲಾಗದ ಸಾವಿರಾರು ಪ್ರಾದೇಶಿಕ ಪಕ್ಷಗಳಿಗೆ ಹಂಚಿಕೆ ಮಾಡಲಾಗಿದೆ.

ರಾಜಕೀಯ ಪಕ್ಷದ ವಿಭಜನೆಯ ಸಂದರ್ಭದಲ್ಲಿ ‘ಚುನಾವಣಾ ಚಿಹ್ನೆ’ಗೆ ಸಂಬಂಧಿಸಿದಂತೆ ವಿವಾದದ ಕುರಿತು ಚುನಾವಣಾ ಆಯೋಗದ ಅಧಿಕಾರಗಳು:

ಶಾಸಕಾಂಗದ ಹೊರಗೆ ರಾಜಕೀಯ ಪಕ್ಷದ ವಿಭಜನೆಯ ಸಂದರ್ಭದಲ್ಲಿ, ‘ಚುನಾವಣಾ ಚಿಹ್ನೆಗಳು (ಮೀಸಲಾತಿ ಮತ್ತು ಹಂಚಿಕೆ) ಆದೇಶದ ಪ್ಯಾರಾ 15, 1968 ಹೀಗೆ ಹೇಳುತ್ತದೆ:

“ಗುರುತಿಸಲ್ಪಟ್ಟ ರಾಜಕೀಯ ಪಕ್ಷದಲ್ಲಿ ಎರಡು ಅಥವಾ ಹೆಚ್ಚು ಪ್ರತಿಸ್ಪರ್ಧಿ ವರ್ಗಗಳು ಅಥವಾ ಗುಂಪುಗಳಿವೆ ಎಂದು ಚುನಾವಣಾ ಆಯೋಗವು ತೃಪ್ತಿಗೊಂಡಾಗ ಮತ್ತು ಪ್ರತಿಸ್ಪರ್ಧಿ ವರ್ಗ ಅಥವಾ ಗುಂಪು ಆ ‘ರಾಜಕೀಯ ಪಕ್ಷ’ ಕ್ಕಾಗಿ ಹಕ್ಕು ಸಾಧಿಸುತ್ತಿರುವ, ಅಂತಹ ಸಂದರ್ಭದಲ್ಲಿ, ಚುನಾವಣಾ ಆಯೋಗವು ಈ ಪ್ರತಿಸ್ಪರ್ಧಿ ವರ್ಗಗಳು ಅಥವಾ ಗುಂಪುಗಳಲ್ಲಿ ಯಾವುದನ್ನಾದರೂ ‘ರಾಜಕೀಯ ಪಕ್ಷ’ ಎಂದು ಗುರುತಿಸಬೇಕೇ ಅಥವಾ ಅವುಗಳಲ್ಲಿ ಯಾವುದನ್ನೂ ಗುರುತಿಸಬಾರದೆ ಎಂದು ನಿರ್ಧರಿಸುವ ಅಧಿಕಾರ ಹೊಂದಿರುತ್ತದೆ, ಮತ್ತು ಆಯೋಗದ ನಿರ್ಧಾರವು ಈ ಎಲ್ಲಾ ಪ್ರತಿಸ್ಪರ್ಧಿ ವರ್ಗಗಳು ಅಥವಾ ಗುಂಪುಗಳ ಮೇಲೆ ಬದ್ಧವಾಗಿರುತ್ತದೆ.

 1. ಈ ನಿಬಂಧನೆಯು ಎಲ್ಲಾ ರಾಷ್ಟ್ರೀಯ ಮತ್ತು ರಾಜ್ಯ ಪಕ್ಷಗಳ (ಮಾನ್ಯತೆ ಪಡೆದ) ನಡುವಿನ ವಿವಾದಗಳಿಗೂ ಅನ್ವಯಿಸುತ್ತದೆ (ಈ ಸಂದರ್ಭದಲ್ಲಿ LJP ಪಕ್ಷದಂತೆ).
 2. ನೋಂದಾಯಿತ ಆದರೆ ಚುನಾವಣಾ ಆಯೋಗದಿಂದ ಗುರುತಿಸದ ಪಕ್ಷಗಳ ನಡುವೆ ವಿಭಜನೆಯ ಸಂದರ್ಭದಲ್ಲಿ,ಚುನಾವಣಾ ಆಯೋಗವು ಸಾಮಾನ್ಯವಾಗಿ ಸಂಘರ್ಷದ ಬಣಗಳಿಗೆ ತಮ್ಮ ಭಿನ್ನಾಭಿಪ್ರಾಯಗಳನ್ನು ಆಂತರಿಕವಾಗಿ ಪರಿಹರಿಸಿಕೊಳ್ಳಲು ಅಥವಾ ನ್ಯಾಯಾಲಯವನ್ನು ಸಂಪರ್ಕಿಸಲು ಸಲಹೆ ನೀಡುತ್ತದೆ.

ದಯವಿಟ್ಟು ಗಮನಿಸಿ: 1968 ಕ್ಕಿಂತ ಮೊದಲು, ಅಧಿಸೂಚನೆಗಳು ಮತ್ತು ಕಾರ್ಯಕಾರಿ ಆದೇಶಗಳನ್ನು ಚುನಾವಣಾ ಆಯೋಗವು ‘ಚುನಾವಣಾ ನಡವಳಿಕೆ ನಿಯಮಗಳು’, 1961 ರ ಅಡಿಯಲ್ಲಿ ನೀಡುತ್ತಿತ್ತು.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ (WTO) ‘ಅಭಿವೃದ್ಧಿಶೀಲ ರಾಷ್ಟ್ರ’ವಾಗಿ ಚೀನಾದ ಸ್ಥಾನಮಾನ:


(China’s status as a ‘developing country’ at the World Trade Organization (WTO)

ಸಂದರ್ಭ:

ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ (World Trade Organization -WTO) ‘ಅಭಿವೃದ್ಧಿಶೀಲ ರಾಷ್ಟ್ರ’ವಾಗಿ ಚೀನಾದ ಸ್ಥಾನಮಾನವು ವಿವಾದಾಸ್ಪದ ವಿಷಯವಾಗಿದೆ, ಏಕೆಂದರೆ, ಹಲವಾರು ದೇಶಗಳು ಉನ್ನತ ಮಧ್ಯಮ-ಆದಾಯದ ರಾಷ್ಟ್ರವಾದ ಚೀನಾ WTO ಮಾನದಂಡಗಳ ಅಡಿಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಕಾಯ್ದಿರಿಸಲಾದ ಪ್ರಯೋಜನಗಳನ್ನು ಪಡೆಯುತ್ತಿದೆ ಎಂದು ಕಳವಳವನ್ನು ವ್ಯಕ್ತಪಡಿಸಿವೆ.

 1. ಇದಲ್ಲದೆ, ‘ಕಡಿಮೆ ಅಭಿವೃದ್ಧಿ ಹೊಂದಿದ ದೇಶ’ (least developed country-LDC) ಸ್ಥಾನಮಾನದ ಬಗ್ಗೆ ಕೂಡ ಕಳವಳ ವ್ಯಕ್ತಪಡಿಸಲಾಗಿದೆ, ಕಾರಣ ತಲಾವಾರು GDP ಬೆಳವಣಿಗೆಯಲ್ಲಿ ಭಾರತಕ್ಕಿಂತ ಉತ್ತಮ ಸಾಧನೆ ತೋರಿದ ನಂತರ ಬಾಂಗ್ಲಾದೇಶವು ಸಂಭಾವ್ಯವಾಗಿ ಈ ಸ್ಥಾನಮಾನ (LDC) ವನ್ನು ಕಳೆದುಕೊಳ್ಳುವ ಅಪಾಯವನ್ನು ಎದುರಿಸುತ್ತಿದೆ.

 

WTO ನಲ್ಲಿ ಅಭಿವೃದ್ಧಿ ಹೊಂದುತ್ತಿರುವ ದೇಶದ ಸ್ಥಾನಮಾನ:

“ಅಭಿವೃದ್ಧಿ ಹೊಂದಿದ” ಮತ್ತು “ಅಭಿವೃದ್ಧಿಶೀಲ” ದೇಶಗಳ ಕುರಿತು ವಿಶ್ವ ವ್ಯಾಪಾರ ಸಂಸ್ಥೆಯ (WTO) ಯಾವುದೇ ವ್ಯಾಖ್ಯಾನಗಳಿಲ್ಲ.

 

WTO ಸದಸ್ಯ ರಾಷ್ಟ್ರಗಳು ತಾವೇ ಸ್ವತಃ ‘ಅಭಿವೃದ್ಧಿ ಹೊಂದಿದ’ ಹಾಗೂ ‘ಅಭಿವೃದ್ಧಿಶೀಲ’ ರಾಷ್ಟ್ರಗಳು ಎಂದು ಘೋಷಿಸಿಕೊಳ್ಳುತ್ತವೆ.

 

 1. ಆದಾಗ್ಯೂ, ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಲಭ್ಯವಿರುವ ನಿಬಂಧನೆಗಳನ್ನು ಬಳಸಿಕೊಳ್ಳುವ ಯಾವುದೇ ದೇಶದ ನಿರ್ಧಾರವನ್ನು WTO ದ ಇತರ ಸದಸ್ಯ ರಾಷ್ಟ್ರಗಳು ಪ್ರಶ್ನಿಸಬಹುದು.

 

ಅಭಿವೃದ್ಧಿಶೀಲ ರಾಷ್ಟ್ರ” ಸ್ಥಾನಮಾನದ ಪ್ರಯೋಜನಗಳು ಯಾವುವು?

ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ‘ಅಭಿವೃದ್ಧಿಶೀಲ ರಾಷ್ಟ್ರ’ ಸ್ಥಾನಮಾನ ಹೊಂದಿರುವ ದೇಶಗಳಿಗೆ ಕೆಲವು ವಿಶೇಷ ಹಕ್ಕುಗಳು ಲಭ್ಯವಿವೆ. ಅಭಿವೃದ್ಧಿಶೀಲ ರಾಷ್ಟ್ರದ ಸ್ಥಾನಮಾನವು ಕೆಲವು ವಿಶೇಷ ಮತ್ತು ಪಕ್ಷಪಾತದಿಂದ ಕೂಡಿದ ಅನುಕೂಲಗಳನ್ನು ಒದಗಿಸುತ್ತದೆ (Special and Differential Treatment – S&DT) ಅಥವಾ, ವ್ಯಾಪಾರದ ಅವಕಾಶಗಳನ್ನು ಹೆಚ್ಚಿಸುವ ಕ್ರಮಗಳನ್ನು ಒಳಗೊಂಡಂತೆ, ಅವರ ವ್ಯಾಪಾರದ ಹಿತಾಸಕ್ತಿಗಳನ್ನು ರಕ್ಷಿಸುತ್ತದೆ ಮತ್ತು ವಿವಾದಗಳನ್ನು ನಿರ್ವಹಿಸಲು ಮತ್ತು ತಾಂತ್ರಿಕ ಮಾನದಂಡಗಳನ್ನು ಕಾರ್ಯಗತಗೊಳಿಸುವ ಸಾಮರ್ಥ್ಯವನ್ನು ನಿರ್ಮಿಸಲು ಬೆಂಬಲವನ್ನು ನೀಡುವುದು ಹಾಗೂ ವ್ಯಾಪಾರದ ಒಪ್ಪಂದಗಳು ಮತ್ತು ಬದ್ಧತೆಗಳನ್ನು ಕಾರ್ಯಗತಗೊಳಿಸಲು ಅವರಿಗೆ ಹೆಚ್ಚಿನ ಸಮಯವನ್ನು ಅನುಮತಿಸುವ ನಿಬಂಧನೆಗಳನ್ನು ಖಾತ್ರಿಗೊಳಿಸುತ್ತದೆ. ಅಥವಾ

ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ‘ಅಭಿವೃದ್ಧಿಶೀಲ ರಾಷ್ಟ್ರ’ ಸ್ಥಾನಮಾನ ಹೊಂದಿರುವ ದೇಶಗಳಿಗೆ ಕೆಲವು ವಿಶೇಷ ಹಕ್ಕುಗಳು ಲಭ್ಯವಿವೆ.ಅಭಿವೃದ್ಧಿಶೀಲ ರಾಷ್ಟ್ರದ ಸ್ಥಾನಮಾನವು ರಾಷ್ಟ್ರಗಳಿಗೆ ‘ವಿಶೇಷ ಮತ್ತು ವಿಭಿನ್ನ ಚಿಕಿತ್ಸೆ’ (S&DT) ಅಥವಾ ಇತರ ನಿರ್ದಿಷ್ಟ ನಿಬಂಧನೆಗಳನ್ನು ಖಚಿತಪಡಿಸುತ್ತದೆ, ಒಪ್ಪಂದಗಳು ಮತ್ತು ಬದ್ಧತೆಗಳನ್ನು ಕಾರ್ಯಗತಗೊಳಿಸಲು ಅವರಿಗೆ ಹೆಚ್ಚಿನ ಸಮಯವನ್ನು ನೀಡುತ್ತದೆ.ಈ ನಿಬಂಧನೆಗಳ ಅಡಿಯಲ್ಲಿ, ‘ಅಭಿವೃದ್ಧಿಶೀಲ ರಾಷ್ಟ್ರಗಳಿಗೆ’ ವ್ಯಾಪಾರದ ಅವಕಾಶಗಳನ್ನು ಹೆಚ್ಚಿಸಲು, ಅವರ ವ್ಯಾಪಾರ ಹಿತಾಸಕ್ತಿಗಳನ್ನು ರಕ್ಷಿಸಲು ಮತ್ತು ವಿವಾದಗಳನ್ನು ಪರಿಹರಿಸಲು ಮತ್ತು ತಾಂತ್ರಿಕ ಮಾನದಂಡಗಳನ್ನು ಕಾರ್ಯಗತಗೊಳಿಸಲು ಸಾಮರ್ಥ್ಯ ನಿರ್ಮಾಣದಲ್ಲಿ ಸಹಾಯ ಮಾಡಲು ಕ್ರಮಗಳನ್ನು ಒದಗಿಸಲಾಗಿದೆ.

ಅಭಿವೃದ್ಧಿ ಹೊಂದಿದ, ಅಭಿವೃದ್ಧಿ ಹೊಂದುತ್ತಿರುವ ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳ ಗುರುತಿಸುವಿಕೆಗಾಗಿ WTO ಮಾನದಂಡಗಳು:

 1. ‘WTO ವ್ಯವಸ್ಥೆ’ ಅಡಿಯಲ್ಲಿ, ಸಾಮಾನ್ಯವಾಗಿ, ದೇಶಗಳನ್ನು ಅಭಿವೃದ್ಧಿ ಹೊಂದಿದ (Developed), ಅಭಿವೃದ್ಧಿ ಹೊಂದುತ್ತಿರುವ (Developing) ಮತ್ತು ‘ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳು’ (LDC) ಎಂದು ಗೊತ್ತುಪಡಿಸಲಾಗುತ್ತದೆ.
 2. ವಿಶ್ವ ವ್ಯಾಪಾರ ಸಂಸ್ಥೆಯಲ್ಲಿ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ನಡುವಿನ ಅಸಮಾನ ಮಟ್ಟದ ಅಭಿವೃದ್ಧಿಯು ಚೆನ್ನಾಗಿ ತಿಳಿದಿರುವ ಸಂಗತಿಯಾಗಿದೆ.
 3. ಸುಂಕ ಮತ್ತು ವ್ಯಾಪಾರದ ಮೇಲಿನ ಸಾಮಾನ್ಯ ಒಪ್ಪಂದದ (General Agreement on Tariffs and Trade – GATT) ಆರ್ಟಿಕಲ್ XVIII, ಈ ಒಪ್ಪಂದದ ಉದ್ದೇಶಗಳನ್ನು ಸಾಧಿಸಲು,ಕಡಿಮೆ ಮಟ್ಟದ ಅಭಿವೃದ್ಧಿಯನ್ನು ಮಾತ್ರ ಸಾಧಿಸುವ ಮತ್ತು ಅಭಿವೃದ್ಧಿಯ ಆರಂಭಿಕ ಹಂತಗಳ ಮೂಲಕ ಹಾದುಹೋಗುವ ಸಾಮರ್ಥ್ಯವಿರುವ ದೇಶಗಳ ಪ್ರಗತಿಪರ ಅಭಿವೃದ್ಧಿಯನ್ನು ಬೆಂಬಲಿಸುವುದು ಅಗತ್ಯವಾಗಿದೆ ಎಂದು ಗುರುತಿಸುತ್ತದೆ.
 4. ಅಂತೆಯೇ, ‘WTO ಒಪ್ಪಂದಗಳಲ್ಲಿ’ GATT ನ ಆರ್ಟಿಕಲ್ XVIII ಮತ್ತು ಇತರ ‘ವಿಶೇಷ ಮತ್ತು ವಿಭಿನ್ನ /ಭೇದಾತ್ಮಕ ಚಿಕಿತ್ಸೆ (S&DT) ನಿಬಂಧನೆಗಳಂತಹ ಮಾನದಂಡಗಳ ಲಾಭ ಪಡೆಯಲು ಈ ದೇಶಗಳು ತಮ್ಮನ್ನು ತಾವು ‘ಅಭಿವೃದ್ಧಿಶೀಲ ರಾಷ್ಟ್ರಗಳು’ ಎಂದು ಘೋಷಿಸಿಕೊಳ್ಳುತ್ತವೆ.
 5. ಈ ನಿಬಂಧನೆಗಳ ಉದ್ದೇಶವು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ವ್ಯಾಪಾರ ಅವಕಾಶಗಳನ್ನು ಹೆಚ್ಚಿಸುವುದು, WTO ಕಟ್ಟುಪಾಡುಗಳನ್ನು ಅನುಸರಿಸಲು ದೀರ್ಘವಾದ ಪರಿವರ್ತನೆಯ ಅವಧಿಯನ್ನು ಖಚಿತಪಡಿಸುವುದು ಮತ್ತು ಇತರ ವಿಷಯಗಳ ಜೊತೆಗೆ ದೇಶಗಳಿಗೆ ತಾಂತ್ರಿಕ ಸಹಾಯವನ್ನು ಒದಗಿಸುವುದು.

ವಿಶೇಷ ಮತ್ತು ವಿಭಿನ್ನ ಚಿಕಿತ್ಸೆ” ನಿಬಂಧನೆಗಳು ಯಾವುವು?

 1. ಒಪ್ಪಂದಗಳು ಮತ್ತು ಬದ್ಧತೆಗಳನ್ನು ಕಾರ್ಯಗತಗೊಳಿಸಲು ಹೆಚ್ಚಿನ ಸಮಯವನ್ನು ನೀಡುವುದು.
 2. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ವ್ಯಾಪಾರ ಅವಕಾಶಗಳನ್ನು ಹೆಚ್ಚಿಸುವ ಕ್ರಮಗಳು.
 3. ಅಭಿವೃದ್ಧಿಶೀಲ ರಾಷ್ಟ್ರಗಳ ವ್ಯಾಪಾರ ಹಿತಾಸಕ್ತಿಗಳನ್ನು ರಕ್ಷಿಸಲು ‘WTO’ ನ ಎಲ್ಲಾ ಸದಸ್ಯರು ಮಾಡಬೇಕಾದ ನಿಬಂಧನೆಗಳು.
 4. ಡಬ್ಲ್ಯುಟಿಒ ಸೂಚಿಸಿದ ಕಾರ್ಯಗಳನ್ನು ನಿರ್ವಹಿಸಲು, ವಿವಾದಗಳನ್ನು ಪರಿಹರಿಸಲು ಮತ್ತು ತಾಂತ್ರಿಕ ಮಾನದಂಡಗಳನ್ನು ಕಾರ್ಯಗತಗೊಳಿಸಲು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಸಾಮರ್ಥ್ಯವನ್ನು ನಿರ್ಮಿಸಲು ಸಹಾಯ ಮಾಡುವ ನಿಬಂಧನೆಗಳು.
 5. WTO ದ ಕಡಿಮೆ ಅಭಿವೃದ್ಧಿ ಹೊಂದಿದ ಸದಸ್ಯ ರಾಷ್ಟ್ರಗಳಿಗೆ (LDCs) ಸಂಬಂಧಿಸಿದ ನಿಬಂಧನೆಗಳು.
 6. ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ‘ಪರಸ್ಪರವಲ್ಲದ ಆದ್ಯತೆಯ ಚಿಕಿತ್ಸೆ’ ಪರಿಕಲ್ಪನೆಯ ಅನುಷ್ಠಾನ – (non-reciprocal preferential treatment) ಅಭಿವೃದ್ಧಿ ಹೊಂದಿದ ದೇಶಗಳು,ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ವ್ಯಾಪಾರ ರಿಯಾಯಿತಿಗಳನ್ನು ನೀಡುವಾಗ ಅಭಿವೃದ್ಧಿ ಹೊಂದಿದ ದೇಶಗಳು ಪ್ರತಿಯಾಗಿ ಇದೇ ರೀತಿಯ ರಿಯಾಯಿತಿಗಳನ್ನು ಅಭಿವೃದ್ಧಿಶೀಲ ರಾಷ್ಟ್ರಗಳಿಂದ ನಿರೀಕ್ಷಿಸಬಾರದು.

ಅಭಿವೃದ್ಧಿ ಹೊಂದಿದ ದೇಶಗಳ ಬೇಡಿಕೆಗಳು:

 1. ಕೆಲಕಾಲದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಂದ, ಮುಖ್ಯವಾಗಿ ಅಮೆರಿಕದಿಂದ ‘ಡಬ್ಲ್ಯುಟಿಒ’ನಿಂದ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ನೀಡಲಾಗುತ್ತಿರುವ ಪ್ರಯೋಜನಗಳನ್ನು ಕೊನೆಗಾಣಿಸುವಂತೆ ಒತ್ತಡವಿದೆ.
 2. ಪ್ರಸ್ತುತ, ವಿಶ್ವ ವ್ಯಾಪಾರ ಸಂಘಟನೆಯ (WTO) ಸದಸ್ಯರಲ್ಲಿ ಮೂರನೇ ಎರಡರಷ್ಟು ಸದಸ್ಯರು ತಮ್ಮನ್ನು ತಾವು ‘ಅಭಿವೃದ್ಧಿಶೀಲ ರಾಷ್ಟ್ರಗಳು’ ಎಂದು ಘೋಷಿಸಿಕೊಳ್ಳುವ ಮೂಲಕ WTO ಚೌಕಟ್ಟಿನ ಅಡಿಯಲ್ಲಿ ಸುಲಭವಾದ ಬದ್ಧತೆಗಳನ್ನು ಸ್ವೀಕರಿಸುತ್ತಾರೆ ಮತ್ತು ‘ವಿಶೇಷ ಚಿಕಿತ್ಸೆಗಳ’ ಲಾಭವನ್ನು ಪಡೆಯಲು ಸಮರ್ಥರಾಗಿದ್ದಾರೆ.

Current Affairs

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳುಭಾರತೀಯ ಆರ್ಥಿಕತೆ ಮತ್ತು ಯೋಜನೆ, ಸಂಪನ್ಮೂಲಗಳ ಕ್ರೋಡೀಕರಣ , ಪ್ರಗತಿ, ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು.

ಪ್ರಧಾನ ಮಂತ್ರಿ ಜನ ಧನ ಯೋಜನೆ:


ಸಂದರ್ಭ:

ಹಣಕಾಸು ಸಚಿವಾಲಯಕ್ಕೆ ಲಬಿಸಿರುವ ಅಂಕಿಅಂಶಗಳ ಪ್ರಕಾರ, ‘ಪ್ರಧಾನ ಮಂತ್ರಿ ಜನ-ಧನ ಯೋಜನೆ’ (PMJDY)ಯ ಅಡಿಯಲ್ಲಿ ತೆರೆಯಲಾದ ಬ್ಯಾಂಕ್ ಖಾತೆಗಳಲ್ಲಿನ ಠೇವಣಿಯು 1.5 ಲಕ್ಷ ಕೋಟಿ ರೂಪಾಯಿಗಳನ್ನು ದಾಟಿದೆ.

ಯೋಜನೆಯ ಕಾರ್ಯಕ್ಷಮತೆ (2021 ವರೆಗೆ):

 1. ‘ಪ್ರಧಾನ ಮಂತ್ರಿ ಜನ್-ಧನ್ ಯೋಜನೆ’ (PMJDY) ಖಾತೆಗಳ ಒಟ್ಟು ಸಂಖ್ಯೆ 44 ಕೋಟಿ ದಾಟಿದೆ.
 2. ಗ್ರಾಮೀಣ ಮತ್ತು ಅರೆ ನಗರ ಬ್ಯಾಂಕ್ ಶಾಖೆಗಳಲ್ಲಿ 29.54 ಕೋಟಿ ಜನ್ ಧನ್ ಖಾತೆಗಳನ್ನು ತೆರೆಯಲಾಗಿದೆ.
 3. ಡಿಸೆಂಬರ್ 29, 2021 ರಂತೆ ಯೋಜನೆಯಡಿಯಲ್ಲಿ ಮಹಿಳಾ ಖಾತೆದಾರರ ಸಂಖ್ಯೆ ಸುಮಾರು 24.61 ಕೋಟಿ.

ಠೇವಣಿ ಮಾಡಬೇಕಾದ ಮೊತ್ತವನ್ನು ಹೊರತುಪಡಿಸಿ, ವಿದ್ಯಾರ್ಥಿವೇತನಗಳು, ಸಬ್ಸಿಡಿಗಳು, ಪಿಂಚಣಿಗಳು ಮತ್ತು COVID ಪರಿಹಾರ ನಿಧಿಗಳಂತಹ ಪ್ರಯೋಜನಗಳನ್ನು ‘ನೇರ ಲಾಭ ವರ್ಗಾವಣೆ (DBT)’ ಮೂಲಕ ‘ಜನ್ ಧನ್ ಬ್ಯಾಂಕ್ ಖಾತೆಗಳಿಗೆ’ ಜಮಾ ಮಾಡಲಾಗುತ್ತದೆ.

PMJDY ಕುರಿತು:

‘ಪ್ರಧಾನ ಮಂತ್ರಿ ಜನ್ ಧನ್ ಯೋಜನೆ’ (PMJDY) 15 ಆಗಸ್ಟ್ 2014 ರಂದು ಘೋಷಿಸಲಾದ ‘ಆರ್ಥಿಕ ಸೇರ್ಪಡೆಗಾಗಿ ರಾಷ್ಟ್ರೀಯ ಮಿಷನ್’ (National Mission for Financial Inclusion) ಆಗಿದೆ. ಇದು ಹಣಕಾಸಿನ ಸೇವೆಗಳು, ಬ್ಯಾಂಕಿಂಗ್/ಉಳಿತಾಯ ಮತ್ತು ಠೇವಣಿ ಖಾತೆಗಳು, ಹಣ ರವಾನೆ, ಸಾಲಗಳು, ವಿಮೆ, ಪಿಂಚಣಿಗಳಿಗೆ ಕೈಗೆಟುಕುವ ರೀತಿಯಲ್ಲಿ ಪ್ರವೇಶವನ್ನು ಖಚಿತಪಡಿಸುತ್ತದೆ.

ಉದ್ದೇಶಗಳು:

 1. ಕೈಗೆಟುಕುವ ವೆಚ್ಚದಲ್ಲಿ ಹಣಕಾಸಿನ ಉತ್ಪನ್ನಗಳು ಮತ್ತು ಸೇವೆಗಳಿಗೆ ಪ್ರವೇಶವನ್ನು ಖಚಿತಪಡಿಸಿಕೊಳ್ಳುವುದು.
 2. ಕಡಿಮೆ ವೆಚ್ಚ ಮತ್ತು ವ್ಯಾಪಕ ವ್ಯಾಪ್ತಿಯ ತಂತ್ರಜ್ಞಾನದ ಬಳಕೆ.

ಯೋಜನೆಯ ಮೂಲಭೂತ ತತ್ವಗಳು:

ಬ್ಯಾಂಕಿಂಗ್ ವ್ಯವಸ್ಥೆಗೆ ಒಳಪಡದವರಿಗೆ  ಬ್ಯಾಂಕಿಂಗ್ ಸೌಲಭ್ಯ ಒದಗಿಸುವುದು (Banking the unbanked) – ಕನಿಷ್ಠ ದಾಖಲೆಗಳೊಂದಿಗೆ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ (Basic Savings Bank Deposit- BSBD) ಖಾತೆ ತೆರೆಯುವುದು, ಸುಲಭ KYC, e-KYC, ಕ್ಯಾಂಪಿಂಗ್ ಖಾತೆ ತೆರೆಯುವಿಕೆ, ಶೂನ್ಯ ಬ್ಯಾಲೆನ್ಸ್ ಮತ್ತು ಶೂನ್ಯ ಶುಲ್ಕಗಳು.

ಅಸುರಕ್ಷಿತರನ್ನು ಸುರಕ್ಷಿತಗೊಳಿಸುವುದು (Securing the unsecured) – ರೂ.2 ಲಕ್ಷದ ಉಚಿತ ಅಪಘಾತ ವಿಮಾ ರಕ್ಷಣೆಯೊಂದಿಗೆ ವ್ಯಾಪಾರಿ ಸ್ಥಳಗಳಲ್ಲಿ ನಗದು ಹಿಂಪಡೆಯುವಿಕೆ ಮತ್ತು ಪಾವತಿಗಳಿಗಾಗಿ ಸ್ಥಳೀಯ ಡೆಬಿಟ್ ಕಾರ್ಡ್‌ನ ವಿತರಣೆ.

ಆರ್ಥಿಕ ಸಹಾಯ ಒದಗಿಸುವುದು (Funding the unfunded) – ಮೈಕ್ರೋ-ವಿಮೆ, ಬಳಕೆಗಾಗಿ ಓವರ್‌ಡ್ರಾಫ್ಟ್, ಮೈಕ್ರೋ-ಪಿಂಚಣಿ ಮತ್ತು ಮೈಕ್ರೋ-ಕ್ರೆಡಿಟ್‌ನಂತಹ ಇತರ ಹಣಕಾಸು ಉತ್ಪನ್ನಗಳು.

ಯೋಜನೆಯು ಈ ಕೆಳಗಿನ 6 ಸ್ತಂಭಗಳನ್ನು ಆಧರಿಸಿದೆ:

 1. ಬ್ಯಾಂಕಿಂಗ್ ಸೇವೆಗಳಿಗೆ ಸಾರ್ವತ್ರಿಕ ಪ್ರವೇಶ – ಶಾಖೆ ಮತ್ತು ಬ್ಯಾಂಕಿಂಗ್ ಫೆಸಿಲಿಟೇಟರ್‌ಗಳು/ಅನುಕೂಲಕರು, ಪ್ರತಿನಿಧಿಗಳು.
 2. ಪ್ರತಿ ಕುಟುಂಬಕ್ಕೆ 10,000/-. ರೂ.ಗಳ ಓವರ್‌ಡ್ರಾಫ್ಟ್ ಸೌಲಭ್ಯದೊಂದಿಗೆ (OD) ಮೂಲ ಉಳಿತಾಯ ಬ್ಯಾಂಕ್ ಖಾತೆ.
 3. ಆರ್ಥಿಕ ಸಾಕ್ಷರತಾ ಕಾರ್ಯಕ್ರಮ – ಉಳಿತಾಯವನ್ನು ಉತ್ತೇಜಿಸುವುದು, ಎಟಿಎಂ ಬಳಕೆ, ಸಾಲ ಪಡೆಯುವ ಮಾಹಿತಿ, ವಿಮೆ ಮತ್ತು ಪಿಂಚಣಿ ಪ್ರಯೋಜನಗಳು, ಬ್ಯಾಂಕಿಂಗ್‌ಗಾಗಿ ಮೊಬೈಲ್ ಫೋನ್‌ಗಳನ್ನು ಬಳಸುವುದು.
 4. ಕ್ರೆಡಿಟ್ ಗ್ಯಾರಂಟಿ ಫಂಡ್ ರಚನೆ – ಪಾವತಿಯಲ್ಲಿ ಡೀಫಾಲ್ಟ್ ಆಗಿದ್ದಲ್ಲಿ ಬ್ಯಾಂಕ್‌ಗಳಿಗೆ ಗ್ಯಾರಂಟಿ ಒದಗಿಸಲು.
 5. ವಿಮೆ – ಆಗಸ್ಟ್ 15, 2014 ರಿಂದ ಜನವರಿ 31, 2015 ರ ನಡುವೆ ತೆರೆಯಲಾದ ಖಾತೆಗಳ ಮೇಲೆ ರೂ.1 ಲಕ್ಷದವರೆಗಿನ ಅಪಘಾತ ವಿಮೆ ಮತ್ತು ಪ್ರಧಾನ ಮಂತ್ರಿ ಜನ್ ಧನ್ ಯೋಜನೆ ಅಡಿಯಲ್ಲಿ ರೂ 30,000 ರ ಜೀವ ವಿಮೆಯನ್ನು ಫಲಾನುಭವಿಗೆ ಅವನ ಮರಣದ ಸಾಮಾನ್ಯ ಪರಿಸ್ಥಿತಿಗಳ ಮರುಪಾವತಿಯ ಮೇಲೆ ಪಾವತಿಸಲಾಗುತ್ತದೆ.
 6. ಅಸಂಘಟಿತ ವಲಯಕ್ಕೆ ಪಿಂಚಣಿ ಯೋಜನೆ.

ಹೊಸ ವೈಶಿಷ್ಟ್ಯಗಳೊಂದಿಗೆ PMJDY ವಿಸ್ತರಣೆ:

 1. ಯೋಜನೆಯಡಿಯಲ್ಲಿ, ಪ್ರತಿ ಮನೆಯಲ್ಲೂ ಬ್ಯಾಂಕ್ ಖಾತೆಯನ್ನು ಹೊಂದುವ ಬದಲು ಖಾತೆಯನ್ನು ಹೊಂದಿರದ ಪ್ರತಿಯೊಬ್ಬ ವಯಸ್ಕ ವ್ಯಕ್ತಿಗೆ ಮುಖ್ಯ ಗಮನ ನೀಡಲಾಗುತ್ತದೆ.
 2. ರುಪೇ ಕಾರ್ಡ್ ವಿಮೆ– ಆಗಸ್ಟ್ 28, 2018 ರ ನಂತರ ತೆರೆಯಲಾದ PMJDY ಖಾತೆಗಳಿಗೆ ರುಪೇ ಕಾರ್ಡ್‌ನಲ್ಲಿ 1 ಲಕ್ಷದಿಂದ 2 ಲಕ್ಷದವರೆಗೆ ಉಚಿತ ಅಪಘಾತ ವಿಮಾ ರಕ್ಷಣೆ ಒದಗಿಸಲಾಗುವುದು.
 3. ಓವರ್‌ಡ್ರಾಫ್ಟ್ ಸೌಲಭ್ಯಗಳಲ್ಲಿ ಹೆಚ್ಚಳ – ಓವರ್‌ಡ್ರಾಫ್ಟ್ ಸೌಲಭ್ಯಗಳ ಮಿತಿಯಲ್ಲಿ ರೂ.5,000 ರಿಂದ ರೂ.10,000 ಕ್ಕೆ ಎರಡು ಪಟ್ಟು ಹೆಚ್ಚಳ; ರೂ.2,000 ವರೆಗಿನ ಓವರ್‌ಡ್ರಾಫ್ಟ್‌ನ ಬೇಷರತ್ತಾದ ಸೌಲಭ್ಯ. ಓವರ್‌ಡ್ರಾಫ್ಟ್ ಸೌಲಭ್ಯಗಳಿಗೆ ಗರಿಷ್ಠ ವಯೋಮಿತಿಯನ್ನು 60 ರಿಂದ 65 ವರ್ಷಗಳಿಗೆ ಹೆಚ್ಚಿಸಲಾಗಿದೆ.

Current Affairs

 

ವಿಷಯಗಳು: ವಿಜ್ಞಾನ ಮತ್ತು ತಂತ್ರಜ್ಞಾನ- ಬೆಳವಣಿಗೆಗಳು ಮತ್ತು ಅವುಗಳ ಅನ್ವಯಗಳು ಮತ್ತು ದೈನಂದಿನ ಜೀವನದಲ್ಲಿ ಅವುಗಳ ಪರಿಣಾಮಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು; ತಂತ್ರಜ್ಞಾನದ ದೇಶೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು.

ಸೆಮಿಕಂಡಕ್ಟರ್ ಚಿಪ್ ಕೊರತೆ.


ತಜ್ಞರು ನೀಡಿದ ಎಚ್ಚರಿಕೆಗಳ ಪ್ರಕಾರ, COVID-19 ನ ಓಮಿಕ್ರಾನ್ ರೂಪಾಂತರವು ಪ್ರಪಂಚದಾದ್ಯಂತ ವೇಗವಾಗಿ ಹರಡಿದ ನಂತರ, ಸೆಮಿಕಂಡಕ್ಟರ್ ಚಿಪ್‌ಗಳ ಕೊರತೆಯು ಜಾಗತಿಕವಾಗಿ ಮುಂದುವರಿಯುತ್ತದೆ. ಆದಾಗ್ಯೂ, ಚಿಪ್ ಪೂರೈಕೆ ಸರಪಳಿಯ ಮೇಲೆ ಓಮಿಕ್ರಾನ್ ರೂಪಾಂತರಿಯ ಔಟ್ ಬ್ರೆಕ್ ನ ಪರಿಣಾಮವು ಸೌಮ್ಯವಾಗಿರುತ್ತದೆ, ಆದ್ದರಿಂದ 2022 ರಲ್ಲಿ ‘ಸೆಮಿಕಂಡಕ್ಟರ್ ಚಿಪ್ಸ್’ ಪೂರೈಕೆಯಲ್ಲಿ ಯಾವುದೇ ಅಡ್ಡಿ ಉಂಟಾಗುವುದಿಲ್ಲ.

ಮುಂದಿನ ನಡೆ ಏನು?

ಒಳ್ಳೆಯ ಸುದ್ದಿ ಏನೆಂದರೆ, ಕಂಪನಿಗಳು ‘ಬಫರ್ ದಾಸ್ತಾನು’ ರಚಿಸುವ ಮೂಲಕ ಮತ್ತು ಪರಿಸ್ಥಿತಿಯನ್ನು ನಿಭಾಯಿಸಲು ‘ಪರ್ಯಾಯ ಮೂಲಗಳನ್ನು ಅನ್ವೇಷಿಸುವ’ ಮೂಲಕ ‘ಸೆಮಿಕಂಡಕ್ಟರ್ ಚಿಪ್‌ಗಳ’ ಹೆಚ್ಚುತ್ತಿರುವ ಸಾಮಾನ್ಯ ಕೊರತೆಯನ್ನು ಹೇಗೆ ಎದುರಿಸಬೇಕೆಂದು ಕಲಿಯಲು ಪ್ರಾರಂಭಿಸಿವೆ.

ಸೆಮಿಕಂಡಕ್ಟರ್ ಚಿಪ್ಸ್ ಗಳ ಕುರಿತು:

ಸೆಮಿಕಂಡಕ್ಟರ್‌ಗಳನ್ನು – ಇಂಟಿಗ್ರೇಟೆಡ್ ಸರ್ಕ್ಯೂಟ್‌ಗಳು (integrated circuits-ICs), ಅಥವಾ ಮೈಕ್ರೋಚಿಪ್‌ಗಳು ಎಂದೂ ಸಹ ಕರೆಯುತ್ತಾರೆ – ಇವುಗಳನ್ನು ಹೆಚ್ಚಾಗಿ ಸಿಲಿಕಾನ್ ಅಥವಾ ಜರ್ಮೇನಿಯಮ್ ಅಥವಾ ಗ್ಯಾಲಿಯಂ ಆರ್ಸೆನೈಡ್‌ನಂತಹ ಸಂಯುಕ್ತದಿಂದ ತಯಾರಿಸಲಾಗುತ್ತದೆ.

ಸೆಮಿಕಂಡಕ್ಟರ್ ಚಿಪ್ಸ್ ಗಳ ಮಹತ್ವ:

 1. ಇದು ಎಲೆಕ್ಟ್ರಾನಿಕ್ ವಸ್ತುಗಳನ್ನು ಸ್ಮಾರ್ಟ್ ಮತ್ತು ವೇಗ ಗೊಳಿಸುವ ವಸ್ತುವಾಗಿದೆ.
 2. ಸಾಮಾನ್ಯವಾಗಿ ಸಿಲಿಕಾನ್ ಎಂಬ ವಸ್ತುವಿನಿಂದ ತಯಾರಿಸಲಾಗುವ ಸೆಮಿ ಕಂಡಕ್ಟರ್ ಗಳು, ವಿದ್ಯುಚ್ಛಕ್ತಿಯನ್ನು “ಸೆಮಿ ಕಂಡಕ್ಟ” ಮಾಡುತ್ತವೆ ಆಗ ಚಿಪ್ ಗಳು ವಿವಿಧ ಕಾರ್ಯಗಳನ್ನು ನಿರ್ವಹಿಸುತ್ತದೆ.
 3. ಪ್ರೋಗ್ರಾಂಗಳನ್ನು ರನ್ ಮಾಡುವ ಮತ್ತು ಎಲೆಕ್ಟ್ರಾನಿಕ್ ಸಾಧನದ ಮೆದುಳಿನಂತೆ ಕಾರ್ಯನಿರ್ವಹಿಸುವ ಲಾಜಿಕ್ ಚಿಪ್ ಗಳು ಹೆಚ್ಚು ಸಂಕೀರ್ಣ ಮತ್ತು ದುಬಾರಿಯಾಗಿವೆ.
 4. ಡೇಟಾವನ್ನು ಸಂಗ್ರಹಿಸುವ ಮೆಮೊರಿ ಚಿಪ್‌ಗಳು ತುಲನಾತ್ಮಕವಾಗಿ ಸರಳ ಸಾಧನವಾಗಿವೆ ಮತ್ತು ಅವುಗಳನ್ನು ಸರಕುಗಳಂತೆ ವ್ಯಾಪಾರ ಮಾಡಲಾಗುತ್ತದೆ.
 5. ಈ ಚಿಪ್‌ಗಳು ಈಗ ಸಮಕಾಲೀನ ಆಟೋಮೊಬೈಲ್‌ಗಳು, ಹೋಮ್ ಗ್ಯಾಜೆಟ್‌ಗಳು ಮತ್ತು ಇಸಿಜಿ ಯಂತ್ರಗಳಂತಹ ಅಗತ್ಯ ವೈದ್ಯಕೀಯ ಸಲಕರಣೆಗಳ ಅವಿಭಾಜ್ಯ ಅಂಗವಾಗಿದೆ.

ಇತ್ತೀಚಿನ ಬೇಡಿಕೆಯಲ್ಲಿನ ಬೆಳವಣಿಗೆ:

COVID-19 ಸಾಂಕ್ರಾಮಿಕ ರೋಗದಿಂದಾಗಿ, ದಿನನಿತ್ಯದ ಆರ್ಥಿಕ ಮತ್ತು ಅಗತ್ಯ ಚಟುವಟಿಕೆಗಳನ್ನು ಆನ್‌ಲೈನ್ ಅಥವಾ ಡಿಜಿಟಲ್ ಆಗಿ ಸಕ್ರಿಯಗೊಳಿಸುವ ಒತ್ತಡವು ಜನರ ಜೀವನದಲ್ಲಿ ಚಿಪ್-ಚಾಲಿತ ಕಂಪ್ಯೂಟರ್‌ಗಳು ಮತ್ತು ಸ್ಮಾರ್ಟ್‌ಫೋನ್‌ಗಳ ‘ಕೇಂದ್ರೀಯತೆ’ಯನ್ನು ಎತ್ತಿ ತೋರಿಸಿದೆ.

 1. ಪ್ರಪಂಚದಾದ್ಯಂತದ ಸಾಂಕ್ರಾಮಿಕ ಮತ್ತು ನಂತರದ ಲಾಕ್‌ಡೌನ್‌ಗಳು ಜಪಾನ್, ದಕ್ಷಿಣ ಕೊರಿಯಾ, ಚೀನಾ ಮತ್ತು ಯುಎಸ್ ಸೇರಿದಂತೆ ದೇಶಗಳಲ್ಲಿ ‘ನಿರ್ಣಾಯಕ ಚಿಪ್ ತಯಾರಿಕೆ ಸೌಲಭ್ಯಗಳನ್ನು’ ಮುಚ್ಚಲು ಕಾರಣವಾಯಿತು.
 2. ‘ಸೆಮಿಕಂಡಕ್ಟರ್ ಚಿಪ್ಸ್’ ಕೊರತೆಯು ವ್ಯಾಪಕವಾದ ಅನುಸರಣೆಯನ್ನು ಹೊಂದಿದೆ. ಮೊದಲನೆಯದಾಗಿ, ‘ಚಿಪ್ಸ್’ ಅನ್ನು ಹೆಚ್ಚಿನ ಪ್ರಮಾಣದಲ್ಲಿ ಸಂಗ್ರಹಿಸುವ ಮೂಲಕ ಬೇಡಿಕೆಯಲ್ಲಿ ಹೆಚ್ಚಳವಾಗಿದೆ, ಇದು ನಂತರ ಪೂರೈಕೆಯಲ್ಲಿನ ಕೊರತೆಗೆ ಕಾರಣವಾಗುತ್ತದೆ.

 

ಭಾರತದ ಸೆಮಿಕಂಡಕ್ಟರ್ ಬೇಡಿಕೆ ಮತ್ತು ಸಂಬಂಧಿತ ಉಪಕ್ರಮಗಳು:

 1. ಭಾರತದಲ್ಲಿ, ಪ್ರಸ್ತುತ ಎಲ್ಲಾ ರೀತಿಯ ಚಿಪ್‌ಗಳನ್ನು ಆಮದು ಮಾಡಿಕೊಳ್ಳಲಾಗುತ್ತದೆ ಮತ್ತು 2025 ರ ವೇಳೆಗೆ ಈ ಮಾರುಕಟ್ಟೆಯು $24 ಶತಕೋಟಿಯಿಂದ $100 ಶತಕೋಟಿಗೆ ತಲುಪುವ ನಿರೀಕ್ಷೆಯಿದೆ.
 2. ಇತ್ತೀಚೆಗೆ, ಕೇಂದ್ರ ಸಚಿವ ಸಂಪುಟವು ‘ಸೆಮಿಕಂಡಕ್ಟರ್‌ಗಳು ಮತ್ತು ಡಿಸ್‌ಪ್ಲೇ ಮ್ಯಾನುಫ್ಯಾಕ್ಚರಿಂಗ್ ಇಕೋಸಿಸ್ಟಮ್’ (Semiconductors and Display Manufacturing Ecosystem) ಅಭಿವೃದ್ಧಿಗೆ ಬೆಂಬಲ ನೀಡಲು ₹76,000 ಕೋಟಿಗಳನ್ನು ಹಂಚಿಕೆ ಮಾಡಿದೆ.
 3. ಭಾರತವು ಎಲೆಕ್ಟ್ರಾನಿಕ್ ಘಟಕಗಳು ಮತ್ತು ಸೆಮಿಕಂಡಕ್ಟರ್‌ಗಳ ತಯಾರಿಕೆಯ ಉತ್ತೇಜನಕ್ಕಾಗಿ ಯೋಜನೆ (Scheme for Promotion of Manufacturing of Electronic Components and Semiconductors) ಯನ್ನು ಪ್ರಾರಂಭಿಸಿದೆ. ಇದರ ಅಡಿಯಲ್ಲಿ ಎಲೆಕ್ಟ್ರಾನಿಕ್ಸ್ ಘಟಕಗಳು ಮತ್ತು ಸೆಮಿಕಂಡಕ್ಟರ್‌ಗಳ ತಯಾರಿಕೆಗಾಗಿ ಎಂಟು ವರ್ಷಗಳ ಅವಧಿಯಲ್ಲಿ 3,285 ಕೋಟಿ ರೂಪಾಯಿಗಳ ಬಜೆಟ್ ವೆಚ್ಚವನ್ನು ಅನುಮೋದಿಸಲಾಗಿದೆ.

ಮುಂದಿರುವ ಸವಾಲುಗಳು:

 1. ಹೆಚ್ಚಿನ ಹೂಡಿಕೆಯ ಅವಶ್ಯಕತೆ
 2. ಸರ್ಕಾರದಿಂದ ಕನಿಷ್ಠ ಆರ್ಥಿಕ ನೆರವು
 3. ಸಂರಚನಾ (ಫ್ಯಾಬ್) ಸಾಮರ್ಥ್ಯಗಳ ಕೊರತೆ
 4. ಪಿಎಲ್‌ಐ ಯೋಜನೆಯಡಿ ಅಸಮರ್ಪಕ ಅನುದಾನ.
 5. ಸಂಪನ್ಮೂಲ ಅಸಮರ್ಥ ವಲಯ.

 

 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ಜಾಗೃತಿ.

ಏನಿದು ನಾಸಾ ಮತ್ತು ಇಸ್ರೋದ ಜಂಟಿ ಭೂ- ವೀಕ್ಷಣಾ/ ಕಣ್ಗಾವಲು ನಿಸಾರ್ ಯೋಜನೆ?


(What is NISAR, the joint Earth-Observing mission of NASA and ISRO?)

ಸಂದರ್ಭ:

‘NASA-ISRO ಸಿಂಥೆಟಿಕ್ ಅಪರ್ಚರ್ ರಾಡಾರ್ ಉಪಗ್ರಹ’ ಅಂದರೆ ‘NISAR’ ಮಿಷನ್ ಅನ್ನು NASA ಮತ್ತು ISRO 2023 ರಲ್ಲಿ ಉಡಾವಣೆ ಮಾಡಲಿವೆ.

 1. ‘NISAR ಮಿಷನ್’ [NASA-ISRO SAR] ಗಾಗಿ ISRO ಈಗಾಗಲೇ S-ಬ್ಯಾಂಡ್ SAR ಪೇಲೋಡ್‌ಗಳನ್ನು NASA ಗೆ ತಲುಪಿಸಿದೆ.

NISAR ಮಿಷನ್ ಕುರಿತು:

 1. NISAR ಉಪಗ್ರಹವು ಅಪಾಯಗಳು ಮತ್ತು ಜಾಗತಿಕ ಪರಿಸರ ಬದಲಾವಣೆಯ ಅಧ್ಯಯನಕ್ಕಾಗಿ ಹೊಂದುವಂತೆ ಮಾಡಲಾಗಿದೆ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಉತ್ತಮವಾಗಿ ನಿರ್ವಹಿಸಲು ಸಹಾಯ ಮಾಡುತ್ತದೆ ಜೊತೆಗೆ, ಹವಾಮಾನ ಬದಲಾವಣೆಯ ಪರಿಣಾಮಗಳು ಮತ್ತು ವೇಗವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಇದು ವಿಜ್ಞಾನಿಗಳಿಗೆ ಮಾಹಿತಿಯನ್ನು ಒದಗಿಸುತ್ತದೆ.
 2. 2023 ರಲ್ಲಿ ಭಾರತದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಧ್ರುವೀಯ ಕಕ್ಷೆಗೆ (near-polar orbit) ಈ ಉಪಗ್ರಹವನ್ನು ಉಡಾಯಿಸಲಾಗುವುದು.
 3. ಈ ಉಪಗ್ರಹವು ತನ್ನ ಮೂರು ವರ್ಷಗಳ ಕಾರ್ಯಾಚರಣೆಯಲ್ಲಿ ಪ್ರತಿ 12 ದಿನಗಳಿಗೊಮ್ಮೆ ಇಡೀ ಭೂ ಗ್ರಹವನ್ನು ನಿಕಟವಾಗಿ ಸ್ಕ್ಯಾನ್ ಮಾಡುತ್ತದೆ. ಭೂಮಿಯ ಮೇಲಿನ ಭೂಮಿ/ನೆಲ, ಐಸ್ ಶೀಟ್‌ಗಳು ಮತ್ತು ಸಮುದ್ರದ ಮಂಜುಗಡ್ಡೆಯನ್ನು ಚಿತ್ರಿಸುವ ಮೂಲಕ ಉಪಗ್ರಹವು ತನ್ನ ಕಾರ್ಯಾಚರಣೆಯ ಸಮಯದಲ್ಲಿ ಗ್ರಹದ ‘ಅಭೂತಪೂರ್ವ’ ನೋಟವನ್ನು ಒದಗಿಸುತ್ತದೆ.
 4. ಈ ಉಪಗ್ರಹವು ಟೆನಿಸ್ ಕೋರ್ಟ್‌ನ ಅರ್ಧದಷ್ಟು ಗಾತ್ರದ ಯಾವುದೇ ಪ್ರದೇಶದಲ್ಲಿನ ಗ್ರಹದ ಮೇಲ್ಮೈ ನಲ್ಲಿನ ಯಾವುದೇ ಚಟುವಟಿಕೆಯನ್ನು 0.4 ಇಂಚುಗಳಷ್ಟು ಚಿಕ್ಕದಾಗಿದ್ದರೂ ಪತ್ತೆ ಮಾಡುತ್ತದೆ.
 5. ನಾಸಾ ಈ ಉಪಗ್ರಹಕ್ಕಾಗಿ ಒಂದು ರಾಡಾರ್, ವಿಜ್ಞಾನ ದತ್ತಾಂಶಕ್ಕಾಗಿ ಹೆಚ್ಚಿನ ದರದ ಸಂವಹನ ಉಪವ್ಯವಸ್ಥೆ, ಜಿಪಿಎಸ್ ರಿಸೀವರ್ ಮತ್ತು ಪೇಲೋಡ್ ಡೇಟಾ ಉಪವ್ಯವಸ್ಥೆಯನ್ನು ಒದಗಿಸುತ್ತದೆ.
 6. ಇಸ್ರೋ ಬಾಹ್ಯಾಕಾಶ ನೌಕೆ ಬಸ್ಸುಗಳು, ಇತರ ರೀತಿಯ ರಾಡಾರ್‌ಗಳು (ಎಸ್-ಬ್ಯಾಂಡ್ ರಾಡಾರ್‌ಗಳು), ಉಡಾವಣಾ ವಾಹನಗಳು ಮತ್ತು ಉಡಾವಣಾ ಸೇವೆಗಳನ್ನು ಒದಗಿಸುತ್ತದೆ.
 7. ನಿಸಾರ್ ಉಪಗ್ರಹವು ನಾಸಾ ಆರಂಭ ಮಾಡಿದ ಅತಿದೊಡ್ಡ ಪ್ರತಿಫಲಕ ಆಂಟೆನಾವನ್ನು ಹೊಂದಿರುತ್ತದೆ, ಮತ್ತು ಇದರ ಮುಖ್ಯ ಉದ್ದೇಶ ಭೂಮಿಯ ಮೇಲ್ಮೈಯಲ್ಲಿ ಸೂಕ್ಷ್ಮ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡುವುದು, ಜ್ವಾಲಾಮುಖಿ ಸ್ಫೋಟಗಳ ಬಗ್ಗೆ ಎಚ್ಚರಿಕೆ ಸಂಕೇತಗಳನ್ನು ಕಳುಹಿಸುವುದು, ಅಂತರ್ಜಲ ಸರಬರಾಜನ್ನು ಮೇಲ್ವಿಚಾರಣೆ ಮಾಡುವುದು, ಐಸ್ ಶೀಟ್‌ಗಳ ಕರಗುವಿಕೆಯ ದರವನ್ನು ಪತ್ತೆ ಹಚ್ಚಲು ಸಹಾಯ ಮಾಡುವುದು ಇತ್ಯಾದಿಗಳು ಇದರ ಪ್ರಮುಖ ಗುರಿಗಳಾಗಿವೆ.

‘ಸಿಂಥೆಟಿಕ್ ಅಪರ್ಚರ್ ರಾಡಾರ್’:

ನಿಸಾರ್ (NISAR) ಎಂಬುದು ‘ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ ನ [NASA-ISRO Synthetic Aperture Radar satellite (SAR)] ಸಂಕ್ಷಿಪ್ತ ರೂಪವಾಗಿದೆ. ಭೂಮಿಯ ಮೇಲ್ಮೈಯಲ್ಲಿನ ಬದಲಾವಣೆಗಳನ್ನು ಅಳೆಯಲು ನಾಸಾ ಬಳಸುವ ಸಂಶ್ಲೇಷಿತ ದ್ಯುತಿ ರಂಧ್ರ ರೆಡಾರ್ ಅನ್ನು ಇಲ್ಲಿ SAR (ಸಿಂಥೆಟಿಕ್ ಅಪರ್ಚರ್ ರಾಡಾರ್) ಎಂಬುದು ಸೂಚಿಸುತ್ತದೆ.

 1. ಸಿಂಥೆಟಿಕ್ ಅಪರ್ಚರ್ ರೇಡಾರ್ (SAR) ಮುಖ್ಯವಾಗಿ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಸೆರೆಹಿಡಿಯುವ ತಂತ್ರವನ್ನು ಸೂಚಿಸುತ್ತದೆ. ಹೆಚ್ಚಿನ ನಿಖರತೆಯಿಂದಾಗಿ, ಇದು ರಾಡಾರ್, ಮೋಡಗಳು ಮತ್ತು ಕತ್ತಲೆಯನ್ನು ಸಹ ಭೇದಿಸುತ್ತದೆ, ಅಂದರೆ ಇದು ಹಗಲು ರಾತ್ರಿ ಎನ್ನದೆ ಯಾವುದೇ ಋತುವಿನಲ್ಲೂ ಅಥವಾ ಯಾವುದೇ ಹವಾಮಾನ ಪರಿಸ್ಥಿತಿಯಲ್ಲೂ ಕೂಡ  ಡೇಟಾವನ್ನು ಸಂಗ್ರಹಿಸುತ್ತದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


 ಭಾರತದಲ್ಲಿ ಸಾರ್ವತ್ರಿಕ ಪ್ರವೇಶ:

(Universal Accessibility in India)

ಕೇಂದ್ರ ಲೋಕೋಪಯೋಗಿ ಇಲಾಖೆಯು (CPWD) “ಭಾರತದಲ್ಲಿ ಸಾರ್ವತ್ರಿಕ ಪ್ರವೇಶಕ್ಕಾಗಿ ಸಮನ್ವಯಗೊಳಿಸಿದ ಮಾರ್ಗಸೂಚಿಗಳು ಮತ್ತು ಮಾನದಂಡಗಳನ್ನು”) ಬಿಡುಗಡೆ ಮಾಡಿದೆ.

ಮುಖ್ಯ ಅಂಶಗಳು:

 1. ಹೊಸ ಮಾರ್ಗಸೂಚಿಗಳು ವಿನ್ಯಾಸ ಯೋಜನೆಯಿಂದ ಅದರ ಅನುಷ್ಠಾನದವರೆಗೆ ಪರಿಸರ ವ್ಯವಸ್ಥೆಯನ್ನು ರಚಿಸುವ ಹಲವು ಅಂಶಗಳನ್ನು ಒಳಗೊಂಡಿದೆ.
 2. ಹೊಸ ಮಾರ್ಗಸೂಚಿಗಳ ಪ್ರಕಾರ, ಸುಗಮ ಚಲನಶೀಲತೆ ಆಯ್ಕೆಗಳನ್ನು ಒದಗಿಸಲು ‘ರಾಂಪ್‌ಗಳು’ ಮುಖ್ಯವಾಗಿವೆ. ಆದರೆ ಇದಕ್ಕಾಗಿ ಮಾರ್ಗಸೂಚಿಗಳನ್ನು ಅನುಸರಿಸಬೇಕು.
 3. ಇದರ ಅಡಿಯಲ್ಲಿ, ವಿಕಲಾಂಗ ವ್ಯಕ್ತಿಗಳೊಂದಿಗೆ (PwD),ಸರ್ಕಾರಿ ಕಟ್ಟಡಗಳ ನಿರ್ಮಾಣದಿಂದ ಹಿಡಿದು ಮಾಸ್ಟರ್-ಪ್ಲಾನಿಂಗ್ ನಗರಗಳವರೆಗೆ ಎಲ್ಲಾ ಯೋಜನೆಗಳಲ್ಲಿ ತೊಡಗಿಸಿಕೊಂಡಿರುವವರಿಗೆ ಮಾರ್ಗಸೂಚಿಗಳನ್ನು ಒದಗಿಸಲಾಗಿದೆ.
 4. ಭಾರತದಲ್ಲಿ ಯೂನಿವರ್ಸಲ್ ಆಕ್ಸೆಸಿಬಿಲಿಟಿ (Universal Accessibility in India) ಯ ಅಡಿಯಲ್ಲಿ, ಇತರ ಬಳಕೆದಾರರ ಗುಂಪುಗಳ ಚಿಹ್ನೆಗಳಲ್ಲಿ ವಿಕಲಾಂಗ ವ್ಯಕ್ತಿಗಳು, ಕುಟುಂಬ-ಸ್ನೇಹಿ ಸೌಲಭ್ಯಗಳು ಮತ್ತು ಲೈಂಗಿಕ ಅಲ್ಪಸಂಖ್ಯಾತರಿಗೆ ಪ್ರವೇಶ ಚಿಹ್ನೆಗಳನ್ನು ಸೇರಿಸುವ ಅಗತ್ಯವನ್ನು ಒತ್ತಿಹೇಳಲಾಗಿದೆ.

  

ಭುಂಗ್ಲೋಟಿ:

 1. ಭುಂಗ್ಲೋಟಿ (Bhungloti) ಒಂದು ಬಳ್ಳಿಯಾಗಿದ್ದು, ಹಲಸಿನ ಮರದ ಬೇರುಗಳೊಂದಿಗೆ ಬೆರೆಸಿದಾಗ ಅದು ‘ಕೇಸರಿ ಬಣ್ಣವನ್ನು’ ನೀಡುತ್ತದೆ.
 2. ಇದನ್ನು ಮುಖ್ಯವಾಗಿ ಅಸ್ಸಾಂನಲ್ಲಿ ಬೌದ್ಧ ಸನ್ಯಾಸಿಗಳು ಬಳಸುತ್ತಿದ್ದರು.
 3. ಪೂರ್ವ ಅಸ್ಸಾಂನ ಚರೈಡಿಯೊ ಜಿಲ್ಲೆಯ (Charaideo district) ‘ಬೌದ್ಧ ಗ್ರಾಮ’ದಿಂದ ಇದನ್ನು ಸಂರಕ್ಷಿಸಲು ಸಮೀಪದ ಅರಣ್ಯವನ್ನು – ಚಲ್ ಮೀಸಲು ಅರಣ್ಯ’ ದತ್ತು ತೆಗೆದುಕೊಳ್ಳಲಾಗಿದೆ.

 

ವಿಸ್ತೃತ ನಿರ್ಮಾಪಕ ಜವಾಬ್ದಾರಿ /ಎಕ್ಸ್ಟೆಂಡೆಡ್ ಪ್ರೊಡ್ಯೂಸರ್ ರೆಸ್ಪಾನ್ಸಿಬಿಲಿಟಿ:

(Extended Producer Responsibility)

ಇತ್ತೀಚೆಗೆ, ಪರಿಸರ ಸಚಿವಾಲಯವು ‘ತ್ಯಾಜ್ಯ ಟೈರ್‌ಗಳ ನಿರ್ವಹಣೆ’ಗಾಗಿ ‘ವಿಸ್ತೃತ ಉತ್ಪಾದಕರ ಜವಾಬ್ದಾರಿ (Extended Producer Responsibility – EPR) ಅನ್ನು ಜಾರಿಗೆ ತರಲು ಕರಡು ಅಧಿಸೂಚನೆಯನ್ನು ಹೊರಡಿಸಿದೆ.

 1. EPR ನ ಈ ವಿಸ್ತರಣೆಯ ಅಡಿಯಲ್ಲಿ, ಗ್ರಾಹಕರು ಬಳಸಿದ ನಂತರ ಟೈರ್‌ಗಳ ತಯಾರಕರು ಮತ್ತು ಆಮದುದಾರರು ಅವುಗಳ ವಿಲೇವಾರಿಯನ್ನೂ ನಿರ್ವಹಿಸಬೇಕಾಗುತ್ತದೆ.

ಅವಶ್ಯಕತೆ:

ಭಾರತವು ನೈಸರ್ಗಿಕ ರಬ್ಬರ್‌ ನ ವಿಶ್ವದ ಮೂರನೇ ಅತಿದೊಡ್ಡ ಉತ್ಪಾದಕ ಮತ್ತು ನಾಲ್ಕನೇ ಅತಿದೊಡ್ಡ ಗ್ರಾಹಕವಾಗಿದೆ. ದೇಶದೊಳಗೆ, ಆಟೋಮೊಬೈಲ್ ಉದ್ಯಮವು, ನೈಸರ್ಗಿಕ ರಬ್ಬರ್ ನ, ಅತಿದೊಡ್ಡ ಗ್ರಾಹಕ ಉದ್ಯಮವಾಗಿದೆ.

 1. ಆಟೋಮೊಬೈಲ್ ಉದ್ಯಮದ ಬೆಳವಣಿಗೆಯೊಂದಿಗೆ, ನೈಸರ್ಗಿಕ ರಬ್ಬರ್ ಬಳಕೆ ಹೆಚ್ಚಾಗುತ್ತದೆ. 2017 ರಲ್ಲಿ ‘ಚಿಂತನ್’ ಎಂಬ ಹೆಸರಿನ “ಪರಿಸರ ಸಂಶೋಧನೆ ಮತ್ತು ಕಾರ್ಯ ಗುಂಪು” ಒದಗಿಸಿದ ಮಾಹಿತಿಯ ಪ್ರಕಾರ, 2035 ರ ವೇಳೆಗೆ ಸುಮಾರು 1 ಮಿಲಿಯನ್ ಪ್ರಯಾಣಿಕ ವಾಹನಗಳು (ಕಾರುಗಳು ಮತ್ತು ಯುಟಿಲಿಟಿ ವಾಹನಗಳು) ಮತ್ತು 236.4 ಮಿಲಿಯನ್ ದ್ವಿಚಕ್ರ ವಾಹನಗಳು ರಸ್ತೆಗಿಳಿಯಲಿವೆ.

ಈ ಎಲ್ಲಾ ಮೂಲಗಳಿಂದ ಉಂಟಾಗುವ ಮಾಲಿನ್ಯವು ಅತ್ಯಂತ ಕಳವಳಕಾರಿ ವಿಷಯವಾಗಿದೆ.

EPR ಎಂದರೇನು?

ವಿಸ್ತೃತ ನಿರ್ಮಾಪಕ ಜವಾಬ್ದಾರಿ/ವಿಸ್ತೃತ ನಿರ್ಮಾಪಕ ಜವಾಬ್ದಾರಿ (EPR) ಒಂದು ನೀತಿ ವಿಧಾನವಾಗಿದೆ, ಇದರ ಅಡಿಯಲ್ಲಿ ಉತ್ಪಾದಕರಿಗೆ ಆರ್ಥಿಕವಾಗಿ/ಭೌತಿಕವಾಗಿ ಬಳಸಿದ ಉತ್ಪನ್ನಗಳನ್ನು ಸಂಸ್ಕರಿಸಲು ಅಥವಾ ವಿಲೇವಾರಿ ಮಾಡಲು ಮಹತ್ವದ ಜವಾಬ್ದಾರಿಯನ್ನು ನೀಡಲಾಗುತ್ತದೆ.

EPR, ಸರ್ಕ್ಯುಲರ್ ಏಕಾನಮಿಯನ್ನು ಮುನ್ನಡೆಸಲು ಸಹಾಯ ಮಾಡುತ್ತದೆ ಮತ್ತು ಉತ್ಪನ್ನ ಮತ್ತು ಅದರ ಪ್ಯಾಕೇಜಿಂಗ್‌ನ ಪರಿಸರ ಪರಿಣಾಮವನ್ನು ಕಡಿಮೆ ಮಾಡುತ್ತದೆ, ಹಾಗೆಯೇ ಉತ್ಪನ್ನದ ಸಂಪೂರ್ಣ ಜೀವನಚಕ್ರಕ್ಕೆ ತಯಾರಕರನ್ನು ಹೊಣೆಗಾರರನ್ನಾಗಿ ಮಾಡುವ ಮೂಲಕ “ಮಾಲಿನ್ಯಕಾರಕರು ಪಾವತಿಸುತ್ತಾರೆ” ಎಂಬ ತತ್ವವನ್ನು ಉತ್ತೇಜಿಸುತ್ತದೆ.

 1. ಭಾರತದಲ್ಲಿ, ಪ್ಲಾಸ್ಟಿಕ್ ತ್ಯಾಜ್ಯ (ನಿರ್ವಹಣೆ ಮತ್ತು ಹ್ಯಾಂಡ್ಲಿಂಗ್) ನಿಯಮಗಳು, 2011 ಮತ್ತು ಇ-ತ್ಯಾಜ್ಯ ನಿರ್ವಹಣೆ ಮತ್ತು ನಿರ್ವಹಣೆ ನಿಯಮಗಳು, 2011 ರ ಅಡಿಯಲ್ಲಿ 2011 ರಲ್ಲಿ ವಿಸ್ತೃತ ಉತ್ಪಾದಕರ ಜವಾಬ್ದಾರಿ (EPR) ಅನ್ನು ಮೊದಲ ಬಾರಿಗೆ ಪರಿಚಯಿಸಲಾಯಿತು.
 2. ಭಾರತದಲ್ಲಿ, ಪ್ಲಾಸ್ಟಿಕ್ ತ್ಯಾಜ್ಯ (ನಿರ್ವಹಣೆ ಮತ್ತು ಹ್ಯಾಂಡ್ಲಿಂಗ್) ನಿಯಮಗಳು, 2011 ಮತ್ತು ಇ-ತ್ಯಾಜ್ಯ ನಿರ್ವಹಣೆ ಮತ್ತು ಹ್ಯಾಂಡ್ಲಿಂಗ್ ನಿಯಮಗಳು, 2011 ರ ಅಡಿಯಲ್ಲಿ 2011 ರಲ್ಲಿ ವಿಸ್ತೃತ ಉತ್ಪಾದಕರ ಜವಾಬ್ದಾರಿ (EPR) ಅನ್ನು ಮೊದಲ ಬಾರಿಗೆ ಪರಿಚಯಿಸಲಾಯಿತು.

 

ಜಗನ್ನಾಥ ದೇವಾಲಯ:

ಇತ್ತೀಚೆಗೆ, ಒಡಿಶಾ ರಾಜ್ಯ ಸಚಿವ ಸಂಪುಟವು 1954ರಶ್ರೀ ಜಗನ್ನಾಥ ದೇವಾಲಯ ಕಾಯಿದೆ’, (Sri Jagannath Temple Act of 1954) ಗೆ ತಿದ್ದುಪಡಿಯನ್ನು ಅನುಮೋದಿಸಿದೆ.

 1. ಜಗನ್ನಾಥ ದೇವಾಲಯದ ಒಡೆತನದ ಜಮೀನಿಗೆ ಸಂಬಂಧಿಸಿದ ವಿವಾದಗಳನ್ನು ಬಗೆರಿಸಲು ಒಡಿಶಾ ಸರ್ಕಾರ ಈ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ.
 2. ಈ ತಿದ್ದುಪಡಿಯಲ್ಲಿ, ದೇವಾಲಯದ ಆಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳಿಗೆ ಈಗ ರಾಜ್ಯ ಸರ್ಕಾರದ ಅನುಮೋದನೆಯಿಲ್ಲದೆ ದೇವಾಲಯದ ಭೂಮಿಯನ್ನು ಮಾರಾಟ ಮಾಡಲು ಅಥವಾ ಗುತ್ತಿಗೆಗೆ ನೀಡಲು ಅಧಿಕಾರ ನೀಡಲಾಗಿದೆ.

ಜಗನ್ನಾಥ ದೇವಾಲಯದ ಬಗ್ಗೆ:

 1. ಇದು ಒಡಿಶಾದ ಪುರಿಯಲ್ಲಿರುವ ಶ್ರೀ ಕೃಷ್ಣನ ರೂಪವಾದ ಜಗನ್ನಾಥನಿಗೆ ಸಮರ್ಪಿತವಾದ ಪ್ರಮುಖ ವೈಷ್ಣವ ದೇವಾಲಯವಾಗಿದೆ.
 2. ಈ ದೇವಾಲಯವನ್ನು 12 ನೇ ಶತಮಾನದಲ್ಲಿ ಪೂರ್ವ ಗಂಗ ರಾಜವಂಶದ ರಾಜ ಅನತವರ್ಮನ್ ಚೋಡಗಂಗಾ ದೇವ (Anatavarman Chodaganga Deva)ನಿಂದ ನಿರ್ಮಿಸಲಾಗಿದೆ ಎಂದು ನಂಬಲಾಗಿದೆ.

ವಾಸ್ತುಶಿಲ್ಪ:

 1. ಈ ದೇವಾಲಯವು ನಾಲ್ಕು ದ್ವಾರಗಳನ್ನು ಹೊಂದಿದೆ – ಪೂರ್ವದ ‘ಸಿಂಹದ್ವಾರ’ ಇದು ಮುಖ್ಯ ದ್ವಾರ ವಾಗಿದೆ, ಅದರ ಮೇಲೆ ಎರಡು ಬಾಗಿದ ಸಿಂಹಗಳನ್ನು ಕೆತ್ತಲಾಗಿದೆ, ದಕ್ಷಿಣದ ದ್ವಾರವನ್ನು ‘ಅಶ್ವದ್ವಾರ’ ಎಂದು ಕರೆಯಲಾಗುತ್ತದೆ, ಪಶ್ಚಿಮ ದ್ವಾರವನ್ನು ‘ವ್ಯಾಘ್ರ ದ್ವಾರ’ ಮತ್ತು ಉತ್ತರದ ದ್ವಾರವನ್ನು ‘ಹಸ್ತಿದ್ವಾರ’ ಎಂದು ಕರೆಯಲಾಗುತ್ತದೆ.
 2. ಜಗನ್ನಾಥ ಪುರಿ ದೇವಸ್ಥಾನವನ್ನು ‘ಯಮನಿಕ ತೀರ್ಥ’ (Yamanika Tirtha) ಎಂದು ಕರೆಯಲಾಗುತ್ತದೆ, ಅಲ್ಲಿ ಹಿಂದೂ ನಂಬಿಕೆಗಳ ಪ್ರಕಾರ, ಪುರಿಯಲ್ಲಿ ಮೃತ್ಯು ದೇವತೆಯಾದ ‘ಯಮ’ನ ಶಕ್ತಿ, ಜಗನ್ನಾಥನ ಉಪಸ್ಥಿತಿಯಿಂದಾಗಿ ಶೂನ್ಯ ಗೊಂಡಿರುತ್ತದೆ.
 3. ಈ ದೇವಾಲಯವನ್ನು “ವೈಟ್ ಪಗೋಡ” ಎಂದು ಕರೆಯಲಾಗುತ್ತದೆ ಮತ್ತು ಇದು ಚಾರ್ ಧಾಮ್ ತೀರ್ಥಯಾತ್ರೆಗಳ ಭಾಗವಾಗಿದೆ (ಬದ್ರಿನಾಥ್, ದ್ವಾರಕಾ, ಪುರಿ, ರಾಮೇಶ್ವರಂ).
 4. ದೇವಾಲಯದ ಮೇಲ್ಭಾಗದಲ್ಲಿ ನೆಲೆಗೊಂಡಿರುವ ‘ನೀಲಚಕ್ರ’; – ಅಥವಾ ‘ನೀಲಿ ಚಕ್ರ’ ಎಂಟು ಧಾತುಗಳು ಅಥವಾ ಅಷ್ಟಧಾತುಗಳಿಂದ ಮಾಡಲ್ಪಟ್ಟಿದೆ.
 5. ಪ್ರವೇಶದ್ವಾರದ ಮುಂಭಾಗದಲ್ಲಿ, ಅರುಣ್ ಸ್ತಂಭ (ಸೂರ್ಯ ಸ್ತಂಭ) ವಿದೆ. ಈ ಕಂಬವು ಮೂಲತಃ ಕೋನಾರ್ಕ್‌ನ ಸೂರ್ಯ ದೇವಾಲಯದಲ್ಲಿತ್ತು.
 6. ಪುರಿ ದೇವಸ್ಥಾನವು ವಾರ್ಷಿಕ ರಥ ಯಾತ್ರೆ ಅಥವಾ ರಥೋತ್ಸವಕ್ಕೆ ಹೆಸರುವಾಸಿಯಾಗಿದೆ, ಇದರಲ್ಲಿ ಮೂರು ಪ್ರಮುಖ ದೇವತೆಗಳನ್ನು ಬೃಹತ್ ಮತ್ತು ವಿಸ್ತಾರವಾಗಿ ಅಲಂಕರಿಸಿದ ದೇವಾಲಯದ ರಥಗಳಲ್ಲಿ ಕುಳ್ಳಿರಿಸಿ ಸೇವೆ ಸಲ್ಲಿಸಲಾಗುತ್ತದೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos