Print Friendly, PDF & Email

[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 25ನೇ ಡಿಸೆಂಬರ್ 2021

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ವಿಶೇಷ ವರ್ಗದ ಸ್ಥಾನಮಾನ.

2. ಯುಎಇ ಗೋಲ್ಡನ್ ವೀಸಾ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ರಾಷ್ಟ್ರೀಯ ಗಣಿತ ದಿನ.

2. ಫ್ಲೆಕ್ಸ್ ಇಂಧನ ವಾಹನಗಳು.

3. ಬಾಟಮ್ ಟ್ರಾಲಿಂಗ್.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ಪಿ.ಎನ್. ಪಣಿಕ್ಕರ್.

2. ಅಭ್ಯಾಸ್.

3. ಆಲಿವ್ ರಿಡ್ಲಿ ಆಮೆಗಳು.

4. UNSC ರೆಸಲ್ಯೂಶನ್ 2615.

5. ಪ್ರಳಯ ಕ್ಷಿಪಣಿ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ವಿಶೇಷ ವರ್ಗದ ಸ್ಥಾನಮಾನ:


(Special Category Status)

ಸಂದರ್ಭ:

ಆಂಧ್ರಪ್ರದೇಶಕ್ಕೆ ವಿಶೇಷ ವರ್ಗದ ಸ್ಥಾನಮಾನ (Special Category Status (SCS) to Andhra Pradesh) ದ ಅಡಿ ಬಾಕಿ ಇರುವ ವಿಶೇಷ ಪ್ಯಾಕೇಜ್ ಸೌಲಭ್ಯವನ್ನು ವಿಸ್ತರಿಸಲಾಗಿದೆ ಎಂದು ಕೇಂದ್ರ ಸರ್ಕಾರವು ಲೋಕಸಭೆಗೆ ತಿಳಿಸಿದೆ.

ನೀಡಲಾದ ನೆರವು:

 1. ಆಂಧ್ರ ಪ್ರದೇಶ ಮರುಸಂಘಟನೆ ಕಾಯಿದೆ, (Andhra Pradesh Reorganisation Act, 2014) 2014 ರ ಅಡಿಯಲ್ಲಿ ₹19,846.199 ಕೋಟಿ ಮೊತ್ತ ನೀಡಲಾಗಿದೆ.
 2. ಪ್ರತಿಯೊಂದು ಹಣಕಾಸು ಆಯೋಗಗಳು ಮಾಡಿದ ಶಿಫಾರಸುಗಳ ಪ್ರಕಾರ, 2015-20ಕ್ಕೆ ₹ 22,112 ಕೋಟಿ ಮತ್ತು 2020-21 ಕ್ಕೆ ₹ 5,897 ಕೋಟಿ ಆದಾಯ ಕೊರತೆ ಅನುದಾನವನ್ನು ಬಿಡುಗಡೆ ಮಾಡಲಾಗಿದೆ.

ಮಹತ್ವ:

ವಿಶೇಷ ನೆರವಿನ ಕ್ರಮವು 2015-16 ರಿಂದ 2019-20 ರ ಅವಧಿಯಲ್ಲಿ ರಾಜ್ಯವು ಪಡೆದಿರಬಹುದಾದ ಹೆಚ್ಚುವರಿ ಕೇಂದ್ರ ಪಾಲನ್ನು ಸರಿದೂಗಿಸುತ್ತದೆ, ಕೇಂದ್ರ ಪ್ರಾಯೋಜಿತ ಯೋಜನೆಗಳ (CSS) ನಿಧಿಯನ್ನು ಕೇಂದ್ರ ಮತ್ತು ರಾಜ್ಯದ ನಡುವೆ 90:10 ಅನುಪಾತದಲ್ಲಿ ಹಂಚಬೇಕಾಗುತ್ತದೆ.

ಏನಿದು ಪ್ರಕರಣ?

ಆಂಧ್ರ ಪ್ರದೇಶವು ವಿಶೇಷ ವರ್ಗದ ಸ್ಥಾನಮಾನದ (SCS) ಬೇಡಿಕೆಯನ್ನು ಪುನರುಜ್ಜೀವನಗೊಳಿಸಿದೆ.

 1. ಇದು ಆಂಧ್ರಪ್ರದೇಶ ರಾಜ್ಯದ ವಿಭಜನೆಯ ಸಂದರ್ಭದಲ್ಲಿ ನೀಡಲಾದ ಭರವಸೆಯಾಗಿದೆ ಮತ್ತು 15ನೇ ಹಣಕಾಸು ಆಯೋಗದ ವರದಿಯಲ್ಲಿ ‘ವಿಶೇಷ ವರ್ಗದ ಸ್ಥಾನಮಾನ’ದ (SCS) ಅನುದಾನ ನೀಡಿಕೆಯು ಕೇಂದ್ರದ ಕೈಯಲ್ಲಿದೆ’ ಎಂದು ಹೇಳಲಾಗಿತ್ತು. ತೆಲಂಗಾಣ ರಚನೆಗೆ ಕಾರಣವಾದ ಆಂಧ್ರಪ್ರದೇಶ ರಾಜ್ಯ ವಿಭಜನೆಯ ಸಮಯದಲ್ಲಿ 2014 ರಲ್ಲಿ ಕೇಂದ್ರದಲ್ಲಿ ಆಗಿನ ಕಾಂಗ್ರೆಸ್ ಸರ್ಕಾರ ಆಂಧ್ರಪ್ರದೇಶಕ್ಕೆ ‘ವಿಶೇಷ ವರ್ಗದ ಸ್ಥಾನಮಾನ’ ನೀಡುವುದಾಗಿ (SCS) ಭರವಸೆ ನೀಡಿತ್ತು.
 2. ಅಂದು ವಿರೋಧ ಪಕ್ಷದ ಸ್ಥಾನದಲ್ಲಿದ್ದ ಬಿಜೆಪಿ ಕೂಡ ಈ ಯೋಜನೆಯನ್ನು ಒಪ್ಪಿಕೊಂಡಿತು ಮತ್ತು ಒಂದು ವೇಳೆ ತಾನು ಅಧಿಕಾರಕ್ಕೆ ಬಂದರೆ ‘ವಿಶೇಷ ವರ್ಗದ ಸ್ಥಾನಮಾನ’ ದ ಪ್ಯಾಕೆಜ್ ಅನ್ನು ಇನ್ನೂ ಐದು ವರ್ಷಗಳವರೆಗೆ ವಿಸ್ತರಿಸಲಾಗುವುದು ಎಂದು ಹೇಳಿತು.

‘ವಿಶೇಷ ವರ್ಗದ ರಾಜ್ಯ ಸ್ಥಾನ’ ಎಂದರೇನು?

ಯಾವುದೇ ರಾಜ್ಯಕ್ಕೆ ‘ವಿಶೇಷ ವರ್ಗದ ಸ್ಥಾನಮಾನ’ (Special Category Status – SCS) ನೀಡುವ ಸಂಬಂಧ ಸಂವಿಧಾನದಲ್ಲಿ ಯಾವುದೇ ಪ್ರಾವಧಾನವಿಲ್ಲ; ಇತರ ರಾಜ್ಯಗಳಿಗೆ ಹೋಲಿಸಿದರೆ ಪ್ರತಿಕೂಲ ಪರಿಸ್ಥಿತಿಗಳನ್ನು ಹೊಂದಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಹಣಕಾಸಿನ ನೆರವು ನೀಡಲಾಗುತ್ತದೆ.

ಈ ಸ್ಥಾನವು ಭೌಗೋಳಿಕ ಮತ್ತು ಸಾಮಾಜಿಕ-ಆರ್ಥಿಕ ಹಿಂದುಳಿದಿರುವ ರಾಜ್ಯಗಳ ಅಭಿವೃದ್ಧಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರವು ಮಾಡಿದ ವರ್ಗೀಕರಣವಾಗಿದೆ.

ಈ ವರ್ಗೀಕರಣವನ್ನು 1969 ರಲ್ಲಿ ಐದನೇ ಹಣಕಾಸು ಆಯೋಗದ ಶಿಫಾರಸುಗಳ ಆಧಾರದ ಮೇಲೆ ಮಾಡಲಾಯಿತು.

ಈ ವರ್ಗೀಕರಣವು ಗಾಡ್ಗೀಳ್ ಸೂತ್ರವನ್ನು ಆಧರಿಸಿದೆ, ಇದು ವಿಶೇಷ ವರ್ಗದ ರಾಜ್ಯ ಸ್ಥಾನಮಾನಕ್ಕಾಗಿ ಈ ಕೆಳಗಿನ ಮಾನದಂಡಗಳನ್ನು ನಿಗದಿಪಡಿಸಿದೆ:

 1. ಪರ್ವತ/ಗುಡ್ಡಗಾಡು ಪ್ರದೇಶಗಳು;
 2. ಕಡಿಮೆ ಜನಸಂಖ್ಯಾ ಸಾಂದ್ರತೆ ಮತ್ತು/ಅಥವಾ ಬುಡಕಟ್ಟು ಜನಸಂಖ್ಯೆಯ ದೊಡ್ಡ ಪ್ರಮಾಣ;
 3. ನೆರೆಯ ದೇಶಗಳೊಂದಿಗೆ ಗಡಿಯುದ್ದಕ್ಕೂ ಕಾರ್ಯತಂತ್ರದ ಸ್ಥಾನ;
 4. ಆರ್ಥಿಕ ಮತ್ತು ಮೂಲ ಸೌಕರ್ಯಗಳ ಹಿಂದುಳಿದಿರುವಿಕೆ; ಮತ್ತು
 5. ರಾಜ್ಯ ಹಣಕಾಸುಗಳ ಅಸಮರ್ಥ ಸ್ವರೂಪ.

‘ವಿಶೇಷ ವರ್ಗದ ರಾಜ್ಯ ಸ್ಥಾನಮಾನ’ ಪಡೆಯಲು ಕೆಲವು ಪ್ರಮುಖ ಮಾರ್ಗಸೂಚಿಗಳು:

 1. ಕಳಪೆ ಮೂಲಸೌಕರ್ಯದಿಂದ ರಾಜ್ಯ ಆರ್ಥಿಕವಾಗಿ ಹಿಂದುಳಿದಿರಬೇಕು.
 2. ರಾಜ್ಯಗಳು ಗುಡ್ಡಗಾಡು ಮತ್ತು ಸವಾಲಿನ ಭೂಪ್ರದೇಶಗಳಲ್ಲಿ ನೆಲೆಗೊಳ್ಳಬೇಕು.
 3. ರಾಜ್ಯಗಳು ಕಡಿಮೆ ಜನಸಂಖ್ಯಾ ಸಾಂದ್ರತೆಯನ್ನು ಹೊಂದಿರಬೇಕು ಮತ್ತು ಗಮನಾರ್ಹವಾಗಿ ಬುಡಕಟ್ಟು ಜನಸಂಖ್ಯೆಯನ್ನು ಹೊಂದಿರಬೇಕು.
 4. ರಾಜ್ಯವು ನೆರೆಯ ದೇಶಗಳ ಗಡಿಗಳಿಗೆ ಸಮೀಪದಲ್ಲಿ ಆಯಕಟ್ಟಿನ ಸ್ಥಳದಲ್ಲಿರಬೇಕು.

‘ವಿಶೇಷ ವರ್ಗದ ರಾಜ್ಯದ ಸ್ಥಾನ–ಮಾನವನ್ನು ಯಾರು ನೀಡುತ್ತಾರೆ?

ಈ ಹಿಂದೆ, ವಿಶೇಷ ಗಮನದ ಅಗತ್ಯವಿರುವ ರಾಜ್ಯಗಳಿಗೆ ‘ಯೋಜನೆ ಸಹಾಯ’ಕ್ಕಾಗಿ ‘ರಾಷ್ಟ್ರೀಯ ಅಭಿವೃದ್ಧಿ ಮಂಡಳಿ’ಯು ‘ವಿಶೇಷ ವರ್ಗ’ ದ ಸ್ಥಾನಮಾನವನ್ನು ನೀಡುತ್ತಿತ್ತು.

 1. ಈಗ ಅಂತಹ ರಾಜ್ಯಗಳಿಗೆ ಕೇಂದ್ರವು ‘ವಿಶೇಷ ವರ್ಗದ ರಾಜ್ಯ’ ದ ಸ್ಥಾನಮಾನವನ್ನು ನೀಡುತ್ತದೆ.

ಪ್ರಯೋಜನಗಳು:

ತೆರಿಗೆಗಳಿಂದ ವಿನಾಯಿತಿ ಮತ್ತು ಇತರ ಪ್ರಯೋಜನಗಳ ಜೊತೆಗೆ,‘ವಿಶೇಷ ವರ್ಗದ ಸ್ಥಾನ’ ಹೊಂದಿರುವ ರಾಜ್ಯಕ್ಕೆ, ಕೇಂದ್ರ ಪ್ರಾಯೋಜಿತ ಯೋಜನೆಗಳ ಒಟ್ಟು ವೆಚ್ಚದ 90% ಕೇಂದ್ರ ಅನುದಾನವಾಗಿ ಪಾವತಿಸಲಾಗುತ್ತದೆ ಮತ್ತು ಉಳಿದ 10% ಅನ್ನು ಶೂನ್ಯ ಬಡ್ಡಿದರದಲ್ಲಿ ಸಾಲವಾಗಿ ನೀಡಲಾಗುತ್ತದೆ.

ಸಂಬಂಧಿತ ಕಾಳಜಿಗಳು:

ಯಾವುದೇ ಹೊಸ ರಾಜ್ಯಕ್ಕೆ ‘ವಿಶೇಷ ಸ್ಥಾನಮಾನ’ ನೀಡುವುದನ್ನು ಪರಿಗಣಿಸಿದರೆ, ಇತರ ರಾಜ್ಯಗಳ ಬೇಡಿಕೆಗಳು ಹೆಚ್ಚಾಗುತ್ತವೆ ಮತ್ತು ಪರಿಣಾಮವಾಗಿ, ಅದರಿಂದ ಉಂಟಾಗುವ ಪ್ರಯೋಜನಗಳು ಮತ್ತಷ್ಟು ದುರ್ಬಲಗೊಳ್ಳುತ್ತವೆ. ಪ್ರಸ್ತುತ ವಿತರಣಾ ವ್ಯವಸ್ಥೆಯಲ್ಲಿ ಅದರ ಪ್ರಯೋಜನಗಳು ತೀರಾ ಕಡಿಮೆ ಇರುವ ಕಾರಣ ರಾಜ್ಯಗಳು ‘ವಿಶೇಷ ಸ್ಥಾನಮಾನ’ವನ್ನು ಕೋರುವುದು ಆರ್ಥಿಕವಾಗಿ ಪ್ರಯೋಜನಕಾರಿಯಲ್ಲ. ಆದ್ದರಿಂದ ವಿಶೇಷ ಸಮಸ್ಯೆಗಳನ್ನು ಎದುರಿಸುತ್ತಿರುವ ರಾಜ್ಯಗಳು ‘ವಿಶೇಷ ಪ್ಯಾಕೇಜ್’ಗೆ ಬೇಡಿಕೆ ಮಂಡಿಸುವುದು ಉತ್ತಮ.

ಪ್ರಸ್ತುತ ಸ್ಥಿತಿ:

14 ನೇ ಹಣಕಾಸು ಆಯೋಗವು, ಈಶಾನ್ಯ ಮತ್ತು ಮೂರು ಗುಡ್ಡಗಾಡು ರಾಜ್ಯಗಳನ್ನು ಹೊರತುಪಡಿಸಿ ಇತರ ರಾಜ್ಯಗಳಿಗೆ ‘ವಿಶೇಷ ವರ್ಗದ ಸ್ಥಾನಮಾನ’ವನ್ನು ರದ್ದುಗೊಳಿಸಿದೆ.

 1. ಇದರ ಬದಲಿಗೆ, ಆಯೋಗವು ಪ್ರತಿ ರಾಜ್ಯದ ‘ಸಂಪನ್ಮೂಲ ಅಂತರ’ವನ್ನು ‘ತೆರಿಗೆ ಹಂಚಿಕೆ’ ಮೂಲಕ ತುಂಬಲು ಸಲಹೆ ನೀಡಿದೆ ಮತ್ತು ತೆರಿಗೆ ಆದಾಯದಲ್ಲಿ ರಾಜ್ಯಗಳ ಪಾಲನ್ನು 32% ರಿಂದ 42% ಕ್ಕೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತು.ಇದು 2015 ರಿಂದ ಜಾರಿಗೆ ಬಂದಿದೆ.

 

ವಿಷಯಗಳು:ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

UAEಯ ಗೋಲ್ಡನ್ ವೀಸಾ ಯೋಜನೆ:


(UAE’s Golden Visa)

ಸಂದರ್ಭ:

ಬಾಲಿವುಡ್ ನಟ ತುಷಾರ್ ಕಪೂರ್ ಇತ್ತೀಚೆಗೆ ಸಂಯುಕ್ತ ಅರಬ್ ಒಕ್ಕೂಟ (United Arab Emirates- UAE) ಸರ್ಕಾರದಿಂದ ಗೋಲ್ಡನ್ ವೀಸಾ ಪಡೆದಿದ್ದಾರೆ.

 1. ಗೋಲ್ಡನ್ ವೀಸಾ ಪಡೆದಿರುವ ಮೋಹನ್‌ಲಾಲ್ ಮತ್ತು ಶಾರುಖ್ ಖಾನ್ ಸೇರಿದಂತೆ ಭಾರತೀಯ ಚಲನಚಿತ್ರ ತಾರೆಯರ ಬೆಳೆಯುತ್ತಿರುವ ಪಟ್ಟಿಗೆ ತುಷಾರ್ ಕಪೂರ್ ಕೂಡ ಸೇರಿದ್ದಾರೆ, ಈ ಗೋಲ್ಡನ್ ವೀಸಾ ಅವರಿಗೆ 10 ವರ್ಷಗಳ ದೀರ್ಘಾವಧಿಯ ರೆಸಿಡೆನ್ಸಿಯನ್ನು ಅನುಮತಿಸುತ್ತದೆ.

ಏನದು ಗೋಲ್ಡನ್ ವೀಸಾ?

2019 ರಲ್ಲಿ, ಯುನೈಟೆಡ್ ಅರಬ್ ಎಮಿರೇಟ್ಸ್ (UAE) ದೀರ್ಘಾವಧಿಯ ನಿವಾಸ ವೀಸಾಗಳಿಗಾಗಿ ಹೊಸ ವ್ಯವಸ್ಥೆಯನ್ನು ಪರಿಚಯಿಸಿದೆ, ಇದರ ಅಡಿಯಲ್ಲಿ ವಿದೇಶಿ ಪ್ರಜೆಗಳು ಯಾವುದೇ ರಾಷ್ಟ್ರೀಯ ಪ್ರಾಯೋಜಕರ ಅಗತ್ಯವಿಲ್ಲದೆ ಯುಎಇಯಲ್ಲಿ ವಾಸಿಸಲು, ಕೆಲಸ ಮಾಡಲು ಮತ್ತು ಅಧ್ಯಯನ ಮಾಡಲು ಅವಕಾಶ ನೀಡಲಾಗಿದೆ ಮತ್ತು ಇದರ ಹೊರತಾಗಿ ಈ ಹೊಸ ವ್ಯವಸ್ಥೆಯಡಿಯಲ್ಲಿ ವಿದೇಶಿ ಪ್ರಜೆಗಳು ವ್ಯವಹಾರದ ಶೇಕಡಾ 100 ರಷ್ಟು ಮಾಲೀಕತ್ವದೊಂದಿಗೆ ವ್ಯಾಪಾರ-ವಹಿವಾಟು ನಡೆಸಲು ಸೌಲಭ್ಯವನ್ನು ನೀಡಲಾಗುತ್ತದೆ.

ಗೋಲ್ಡನ್ ವೀಸಾ ಅಡಿಯಲ್ಲಿ ನೀಡಲಾಗುವ ಕೊಡುಗೆಗಳು:

ಗೋಲ್ಡನ್ ವೀಸಾ ವ್ಯವಸ್ಥೆಯು ಮುಖ್ಯವಾಗಿ ಈ ಕೆಳಗಿನ ಗುಂಪುಗಳಿಗೆ ಸೇರಿದ ಜನರಿಗೆ ದೀರ್ಘಾವಧಿಯ ನಿವಾಸದ (5 ಮತ್ತು 10 ವರ್ಷಗಳು) ಅವಕಾಶಗಳನ್ನು ನೀಡುತ್ತದೆ:

 1. ಹೂಡಿಕೆದಾರರು, ಉದ್ಯಮಿಗಳು, ಅತ್ಯುತ್ತಮ ಪ್ರತಿಭೆ ಹೊಂದಿರುವ ವ್ಯಕ್ತಿಗಳು ಸಂಶೋಧಕರು, ವೈದ್ಯಕೀಯ ವೃತ್ತಿಪರರು ಮತ್ತು ವೈಜ್ಞಾನಿಕ ಮತ್ತು ಜ್ಞಾನ ಕ್ಷೇತ್ರಗಳಲ್ಲಿರುವ ಪ್ರತಿಭಾವಂತರು ಮತ್ತು ಅಸಾಧಾರಣ ವಿದ್ಯಾರ್ಥಿಗಳು.

Eligibility requirements (Have a brief overview; need not mug up):

ಅರ್ಹತಾ ಅವಶ್ಯಕತೆಗಳು (ಸಂಕ್ಷಿಪ್ತ ಅವಲೋಕನವನ್ನು ಮಾಡಿರಿ; ಕಂಠ ಪಾಠ ಮಾಡಬೇಕಾಗಿಲ್ಲ):

ಹೂಡಿಕೆದಾರರಿಗೆ:

 1. ಕನಿಷ್ಠ 10 ಮಿಲಿಯನ್ AED ಠೇವಣಿ (ಯುನೈಟೆಡ್ ಅರಬ್ ಎಮಿರೇಟ್ಸ್ ದಿರ್ಹಾಮ್) ಹೂಡಿಕೆ ನಿಧಿ ಅಥವಾ ಕಂಪನಿಯ ರೂಪದಲ್ಲಿ 10 ಮಿಲಿಯನ್ ಮೌಲ್ಯದ ಸಾರ್ವಜನಿಕ ಬಂಡವಾಳ ಹೂಡಿಕೆ.
 2. ಒಟ್ಟು ಹೂಡಿಕೆಯ 60% ರಿಯಲ್ ಎಸ್ಟೇಟ್ ರೂಪದಲ್ಲಿ ಇರಬಾರದು. ಅಂದರೆ ಸ್ಥಿರಾಸ್ತಿಯ ರೂಪದಲ್ಲಿ ಇರಬಾರದು.
 3. ಹೂಡಿಕೆ ಮಾಡಲಾದ ಮೊತ್ತವನ್ನು ಸಾಲವಾಗಿ ನೀಡಬಾರದು, ಅಥವಾ ಸ್ವತ್ತುಗಳ ಸಂದರ್ಭದಲ್ಲಿ, ಹೂಡಿಕೆದಾರರು ಪೂರ್ಣ ಮಾಲೀಕತ್ವವನ್ನು ಪಡೆದುಕೊಳ್ಳಬೇಕು.
 4. ಹೂಡಿಕೆದಾರರು ಕನಿಷ್ಠ ಮೂರು ವರ್ಷಗಳವರೆಗೆ ಹೂಡಿಕೆಯನ್ನು ಉಳಿಸಿಕೊಳ್ಳಲು ಶಕ್ತರಾಗಿರಬೇಕು.
 5. ವ್ಯಾಪಾರ ಪಾಲುದಾರರನ್ನು ಸೇರಿಸಲು ಗೋಲ್ಡನ್ ವಿಸಾ ಅನ್ನು ವಿಸ್ತರಿಸಬಹುದು, ಮತ್ತು ಭಾಗವಹಿಸುವ ಪ್ರತಿ ಪಾಲುದಾರನು 10 ಮಿಲಿಯನ್ AED ಕೊಡುಗೆ ನೀಡುತ್ತಾನೆ.
 6. ಗೋಲ್ಡನ್ ವಿಸಾ ಹೊಂದಿರುವವರು ತಮ್ಮ ಸಂಗಾತಿ ಮತ್ತು ಮಕ್ಕಳನ್ನು, ಒಬ್ಬ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಒಬ್ಬ ಸಲಹೆಗಾರರನ್ನು ಸಹ ಈ ವೀಸಾ ಸೌಲಭ್ಯಕ್ಕೆ ಸೇರಿಸಿಕೊಳ್ಳಬಹುದು.

ವಿಶೇಷ ಪ್ರತಿಭೆ ಹೊಂದಿರುವ ವ್ಯಕ್ತಿಗಳಿಗೆ:

ಈ ವರ್ಗದಲ್ಲಿ ವೈದ್ಯರು, ಸಂಶೋಧಕರು, ವಿಜ್ಞಾನಿಗಳು, ಹೂಡಿಕೆದಾರರು ಮತ್ತು ಕಲಾವಿದರು ಸೇರಿದ್ದಾರೆ. ಈ ವ್ಯಕ್ತಿಗಳಿಗೆ ಆಯಾ ಇಲಾಖೆಗಳು ಮತ್ತು ಕ್ಷೇತ್ರಗಳು ಮಾನ್ಯತೆ ನೀಡಿದ ನಂತರ 10 ವರ್ಷಗಳ ವೀಸಾ ನೀಡಬಹುದು. ಈ ವೀಸಾವು, ಅವರ ಸಂಗಾತಿಗಳು ಮತ್ತು ಮಕ್ಕಳಿಗೂ ವಿಸ್ತರಣೆಯಾಗುತ್ತದೆ.

5 ವರ್ಷಗಳ ವೀಸಾಕ್ಕೆ ಅರ್ಹತೆ:

 1. ಹೂಡಿಕೆದಾರರು ಕನಿಷ್ಠ 5 ಮಿಲಿಯನ್ AED ಯ ಒಟ್ಟು ಮೌಲ್ಯದ ಸ್ವತ್ತುಗಳಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.
 2. ರಿಯಲ್ ಎಸ್ಟೇಟ್ನಲ್ಲಿ ಹೂಡಿಕೆ ಮಾಡಿದ ಮೊತ್ತವು ಸಾಲದ ಆಧಾರದ ಮೇಲೆ ಇರಬಾರದು.
 3. ಆಸ್ತಿಯನ್ನು ಕನಿಷ್ಠ ಮೂರು ವರ್ಷಗಳವರೆಗೆ ಉಳಿಸಿಕೊಳ್ಳಬೇಕು.

ಅತ್ಯುತ್ತಮ ವಿದ್ಯಾರ್ಥಿಗಳಿಗಾಗಿ:

 1. ಸರ್ಕಾರಿ ಮತ್ತು ಖಾಸಗಿ ಮಾಧ್ಯಮಿಕ ಶಾಲೆಗಳಲ್ಲಿ ಕನಿಷ್ಠ 95% ದರ್ಜೆಯನ್ನು ಸಾಧಿಸುವಅತ್ಯುತ್ತಮ ವಿದ್ಯಾರ್ಥಿಗಳು.
 2. ದೇಶಿಯ ಮತ್ತು ವಿದೇಶಿ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳು ಪದವಿ ಪಡೆದ ನಂತರ ಕನಿಷ್ಠ 3.75 ಜಿಪಿಎ ಹೊಂದಿರಬೇಕು.

ಈ ನಡೆಯ ಹಿಂದಿನ ಕಾರಣಗಳು:

ಕೋವಿಡ್ -19 ಸಾಂಕ್ರಾಮಿಕ ಮತ್ತು ತೈಲ ಬೆಲೆಗಳ ಕುಸಿತದಿಂದಾಗಿ ಯುಎಇಯ ಆರ್ಥಿಕತೆಯು ತೀವ್ರವಾಗಿ ತತ್ತರಿಸಿದೆ, ಇದು ಅನೇಕ ವಲಸಿಗರು UAE ಯನ್ನು ತೊರೆಯಲು ಕಾರಣವಾಗಿದೆ.

 1. UAE ಸರ್ಕಾರದ ಈ ಕ್ರಮವು ವಲಸೆ ಹೋದವರನ್ನು ಮರಳಿ ಕರೆತರುವುದು ಮತ್ತು ಗಲ್ಫ್ ದೇಶದಲ್ಲಿ “ಪ್ರತಿಭಾವಂತ ಜನರು ಮತ್ತು ಉತ್ಕೃಷ್ಟ ಮನಸ್ಸಿನ ಜನರನ್ನು” ಉಳಿಸಿಕೊಳ್ಳುವ ಮತ್ತು ರಾಷ್ಟ್ರ ನಿರ್ಮಾಣಕ್ಕೆ ಸಹಾಯ ಮಾಡಲು ಉದ್ದೇಶಿಸಿದೆ.
 2. UAE ಸರ್ಕಾರದ ಈ ವಿನಾಯಿತಿಗಳು, ಪರಿಣತಿಯ ವಿವಿಧ ಕ್ಷೇತ್ರಗಳಿಂದ ಪ್ರತಿಭಾನ್ವಿತ ವೃತ್ತಿಪರರನ್ನು ಆಕರ್ಷಿಸುತ್ತವೆ ಮತ್ತು ನಾವೀನ್ಯತೆ, ಸೃಜನಶೀಲತೆ ಮತ್ತು ಅನ್ವಯಿಕ ಸಂಶೋಧನೆಗಳನ್ನು ಮತ್ತಷ್ಟು ಪ್ರೋತ್ಸಾಹಿಸುತ್ತವೆ,ಯುಎಇ ಯಲ್ಲಿ ವೃತ್ತಿಜೀವನವನ್ನು ಆರಂಭಿಸಲು ವಿಶ್ವದ ಅತ್ಯಂತ ಪ್ರತಿಭಾವಂತ ಮನಸ್ಸುಗಳಿಗೆ ಮನವಿಯನ್ನು ಮಾಡುತ್ತದೆ.

ಭಾರತಕ್ಕೆ ಮಹತ್ವ:

 1. ಈ ಹೊಸ ನಿಯಮಗಳು ಗಲ್ಫ್ ರಾಷ್ಟ್ರಕ್ಕೆ ಹೆಚ್ಚಿನ ಭಾರತೀಯ ವೃತ್ತಿಪರರು ಮತ್ತು ಉದ್ಯಮಿಗಳನ್ನು ಆಕರ್ಷಿಸುತ್ತದೆ ಮತ್ತು ಭಾರತ-ಯುಎಇ ಸಂಬಂಧಗಳನ್ನು ಬಲಪಡಿಸುತ್ತದೆ.
 2. ಕೋವಿಡ್ -19 ಸಂಬಂಧಿತ ನಿರ್ಬಂಧಗಳನ್ನು ಸಡಿಲಿಸಿದ ನಂತರ ಕೆಲಸ ಪುನರಾರಂಭಿಸಲು ಬಯಸುವ ಮಹತ್ವಾಕಾಂಕ್ಷೆಯ ಭಾರತೀಯರು UAE ಗೆ ಮರಳಲು ಸಹ ಈ ನಿಯಮಗಳು ಅನುಕೂಲಕರವಾಗಿವೆ, ಇದಕ್ಕಾಗಿ ಭಾರತವು 2020 ರ ನವೆಂಬರ್ ಆರಂಭದಲ್ಲಿ ಗಲ್ಫ್ ಸಹಕಾರ ಮಂಡಳಿಯ (GCC) ಸದಸ್ಯರಲ್ಲಿ ವಿನಂತಿಸಿಕೊಂಡಿತ್ತು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ರಾಷ್ಟ್ರೀಯ ಗಣಿತ ದಿನ:


(National Mathematics Day)

ಸಂದರ್ಭ:

ರಾಷ್ಟ್ರೀಯ ಗಣಿತ ದಿನವನ್ನು ಪ್ರತಿ ವರ್ಷ ಡಿಸೆಂಬರ್ 22 ರಂದು ಆಚರಿಸಲಾಗುತ್ತದೆ.

 1. ಗಣಿತಶಾಸ್ತ್ರದ ವಿಶ್ಲೇಷಣೆ, ಸಂಖ್ಯೆ ಸಿದ್ಧಾಂತ, ಅನಂತ ಸರಣಿ ಮತ್ತು ಮುಂದುವರಿದ ಭಿನ್ನರಾಶಿಗಳಿಗೆ ಹೆಚ್ಚಿನ ಕೊಡುಗೆ ನೀಡಿದ ಪ್ರಸಿದ್ಧ ಗಣಿತಜ್ಞ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನವನ್ನು ಗೌರವಿಸಲು ಇದನ್ನು ಆಚರಿಸಲಾಗುತ್ತದೆ.
 2. 2021 ಡಾ. ರಾಮಾನುಜನ್ ಅವರ 134 ನೇ ಜನ್ಮ ವಾರ್ಷಿಕೋತ್ಸವವಾಗಿದೆ.

 

ಶ್ರೀನಿವಾಸ ರಾಮಾನುಜನ್ ಅವರ ಜೀವನದ ಮುಖ್ಯಾಂಶಗಳು:

 1. 1911 ರಲ್ಲಿ, ರಾಮಾನುಜನ್ ಅವರು ತಮ್ಮ ಮೊದಲ ಲೇಖನಗಳನ್ನು ಇಂಡಿಯನ್ ಮ್ಯಾಥಮೆಟಿಕಲ್ ಸೊಸೈಟಿಯ ಜರ್ನಲ್‌ನಲ್ಲಿ ಪ್ರಕಟಿಸಿದರು.
 2. ರಾಮಾನುಜನ್ ಅವರು 1914 ರಲ್ಲಿ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದರು, ಅಲ್ಲಿ ಅವರಿಗೆ ಹಾರ್ಡಿ ಎಂಬ ಗಣಿತಜ್ಞ ಶಿಕ್ಷಣ ನೀಡಿದರು ಮತ್ತು ಕೆಲವು ಸಂಶೋಧನೆಗಳಲ್ಲಿ ರಾಮಾನುಜನ್ ಅವರೊಂದಿಗೆ ಸಹಕರಿಸಿದರು.
 3. ಅವರು ರೀಮನ್ ಸರಣಿಗಳು, ಎಲ್ಲಿಪ್ಟಿಕ್ ಇಂಟೆಗ್ರಲ್ಸ್, ಹೈಪರ್ಜಿಯೊಮೆಟ್ರಿಕ್ ಸರಣಿಗಳು, ಝೀಟಾ ಕ್ರಿಯೆಯ ಕ್ರಿಯಾತ್ಮಕ ಸಮೀಕರಣಗಳು ಮತ್ತು ವಿಭಿನ್ನ ಸರಣಿಗಳ ತನ್ನದೇ ಆದ ಸಿದ್ಧಾಂತವನ್ನು ರೂಪಿಸಿದರು
 4. (The Riemann series, the elliptic integrals, hypergeometric series, the functional equations of the zeta function, and his own theory of divergent series).
 5. ಆಸ್ಪತ್ರೆಯಲ್ಲಿ ರಾಮಾನುಜನ್ ಅವರನ್ನು ನೋಡಲು ಹಾರ್ಡಿಯವರು ನೀಡಿದ ಪ್ರಸಿದ್ಧ ಭೇಟಿಯ ನಂತರ 1729 ಸಂಖ್ಯೆಯನ್ನು ಹಾರ್ಡಿ-ರಾಮಾನುಜನ್ ಸಂಖ್ಯೆ ಎಂದು ಕರೆಯಲಾಗುತ್ತದೆ. ಇದು ಎರಡು ವಿಭಿನ್ನ ಘನಗಳ ಮೊತ್ತವನ್ನು ಎರಡು ವಿಭಿನ್ನ ರೀತಿಯಲ್ಲಿ ವ್ಯಕ್ತಪಡಿಸಬಹುದಾದ ಚಿಕ್ಕ ಸಂಖ್ಯೆಯಾಗಿದೆ.
 6. ಹಾರ್ಡಿ ಅವರು ರಾಮಾನುಜನ್ ಅವರ ಕೆಲಸವನ್ನು ಪ್ರಾಥಮಿಕವಾಗಿ ಇತರ ಶುದ್ಧ ಗಣಿತಜ್ಞರು ಕೂಡ ಕಡಿಮೆ ತಿಳಿದಿರುವ ಕ್ಷೇತ್ರಗಳನ್ನು ಒಳಗೊಂಡಿರುವುದನ್ನು ಗಮನಿಸಿದರು.
 7. ರಾಮಾನುಜನ್ ಅವರ ತವರು ರಾಜ್ಯವಾದ ತಮಿಳುನಾಡು ಡಿಸೆಂಬರ್ 22 ಅನ್ನು ರಾಜ್ಯ ಐಟಿ ದಿನ ಎಂದು ಆಚರಿಸುತ್ತದೆ, ಇದು ತಮಿಳುನಾಡು ಮೂಲದ ವ್ಯಕ್ತಿ ಮತ್ತು ಅವರ ಸಾಧನೆಗಳನ್ನು ಸ್ಮರಿಸುತ್ತದೆ.
 8. ರಾಮಾನುಜನ್ ಅವರು ಸಮೀಕರಣಗಳು ಮತ್ತು ಗುರುತುಗಳನ್ನು ಒಳಗೊಂಡಿರುವ ಸುಮಾರು 3,900 ಫಲಿತಾಂಶಗಳನ್ನು ಸಂಗ್ರಹಿಸಿದ್ದಾರೆ. ಪೈ (Pi) ಗಾಗಿ ಅವರ ಅನಂತ ಸರಣಿಯು ಅವರ ಅತ್ಯಂತ ಅಮೂಲ್ಯವಾದ ಸಂಶೋಧನೆಗಳಲ್ಲಿ ಒಂದಾಗಿದೆ.

ದೇವ್ ಪಟೇಲ್ ಅಭಿನಯದ ದಿ ಮ್ಯಾನ್ ಹೂ ನ್ಯೂ ಇನ್ಫಿನಿಟಿ’ 2015 (The Man Who Knew Infinity) ಚಲನ ಚಿತ್ರವು ಮಹಾನ್ ಗಣಿತಶಾಸ್ತ್ರಜ್ಞರಾದ ರಾಮಾನುಜನ್ ಅವರ ಜೀವನಚರಿತ್ರೆಯಾಗಿದೆ.

 

ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.

ಫ್ಲೆಕ್ಸ್ ಇಂಧನ ವಾಹನಗಳು:


(Flex Fuel Vehicles)

ಸಂದರ್ಭ:

ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಅವರು ಭಾರತದಲ್ಲಿ ಮಾರಾಟವಾಗುವ ಕಾರುಗಳು ಮತ್ತು ಮೋಟಾರ್‌ಸೈಕಲ್‌ಗಳಿಗೆ ಇಂಧನವಾಗಿ ಫ್ಲೆಕ್ಸ್-ಇಂಧನವನ್ನು ಬಳಸುವಂತೆ ಬಹಳ ಹಿಂದಿನಿಂದಲೂ ಒತ್ತಾಯಿಸುತ್ತಿದ್ದಾರೆ.

ಇತ್ತೀಚೆಗೆ, ಕೈಗಾರಿಕೋದ್ಯಮಿಗಳ ಕಾರ್ಯಕ್ರಮವೊಂದರಲ್ಲಿ, ಸಾರಿಗೆ ಸಚಿವರು ಕಾರು ತಯಾರಿಕಾ ಕಂಪನಿಗಳು ತಾವು ಉತ್ಪಾದಿಸುವ ವಾಹನಗಳಲ್ಲಿ ಫ್ಲೆಕ್ಸ್-ಇಂಧನದ ಎಂಜಿನ್‌ಗಳನ್ನು ಪರಿಚಯಿಸುವಂತೆ ಎಲ್ಲಾ ಕಾರು ತಯಾರಕರಿಗೆ ಸಲಹೆಯನ್ನು ನೀಡಿರುವುದಾಗಿ ತಿಳಿಸಿದ್ದಾರೆ.

ಸರ್ಕಾರ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ:

 1. ಫ್ಲೆಕ್ಸ್-ಇಂಧನ ಎಂಜಿನ್‌ಗಳನ್ನು ಪರಿಚಯಿಸಲು ಕಾರು ತಯಾರಕರಿಗೆ ಆರು ತಿಂಗಳ ಕಾಲಾವಕಾಶವನ್ನು ನೀಡಲಾಗುತ್ತದೆ.
 2. ತಯಾರಕರು ಫ್ಲೆಕ್ಸ್ ಫ್ಯುಯೆಲ್ ಸ್ಟ್ರಾಂಗ್ ಹೈಬ್ರಿಡ್ ವಾಹನಗಳನ್ನು ಉತ್ಪಾದಿಸಬೇಕು ಮತ್ತು ಎರಡೂ ವಿಧದ ವಾಹನಗಳು BS-6 ಎಮಿಷನ್ ಮಾನದಂಡಗಳನ್ನು ಅನುಸರಿಸಬೇಕು.

ಹೊಂದಿಕೊಳ್ಳುವ ಇಂಧನ ವಾಹನಗಳು (FFVs) ಯಾವುವು?

 1. FFV ಎನ್ನುವುದು ವಿವಿಧ ಹಂತದ ಎಥೆನಾಲ್ ಮಿಶ್ರಣಗಳೊಂದಿಗೆ ಗ್ಯಾಸೋಲಿನ್ ಮತ್ತು ಸಂಯೋಜಿತ ಪೆಟ್ರೋಲ್ ಎರಡರಲ್ಲೂ ಚಲಿಸಬಲ್ಲ ವಾಹನಗಳ ಮಾರ್ಪಡಿಸಿದ ಆವೃತ್ತಿಯಾಗಿದೆ.
 2. ಫ್ಲೆಕ್ಸಿಬಲ್ ಫ್ಯೂಯಲ್ ವೆಹಿಕಲ್ ಗಳು, ವಾಹನಗಳಿಗೆ ಎಲ್ಲಾ ರೀತಿಯ ಮಿಶ್ರ ಇಂಧನಗಳನ್ನು ಬಳಸಲು ಅನುವು ಮಾಡಿಕೊಡುತ್ತದೆ ಮತ್ತು ಮಿಶ್ರ ಇಂಧನವಿಲ್ಲದೆ ಎರಡರಲ್ಲೂ ಚಲಾಯಿಸಲು ಅನುವು ಮಾಡಿಕೊಡುತ್ತವೆ.
 3. FFVಗಳು ಶೇಕಡಾ 84 ಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಿತ ಪೆಟ್ರೋಲ್‌ನಲ್ಲಿ ಕಾರ್ಯನಿರ್ವಹಿಸಲು ಸಾಮರ್ಥ್ಯ ಹೊಂದಿರುವ ಎಂಜಿನ್‌ಗಳನ್ನು ಹೊಂದಿವೆ.

ಪ್ರಯೋಜನಗಳು:

 1. FVVಗಳು ಮಾಲಿನ್ಯಕಾರಕಗಳಾದ ಪಳೆಯುಳಿಕೆ ಇಂಧನಗಳ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಹಾನಿಕಾರಕ ಹೊರಸೂಸುವಿಕೆಯನ್ನು ಕಡಿತಗೊಳಿಸುವ ಗುರಿಯನ್ನು ಹೊಂದಿವೆ.
 2. ಪ್ರಸ್ತುತ,ಪರ್ಯಾಯ ಇಂಧನವಾದ ಎಥೆನಾಲ್ ಬೆಲೆ ಪ್ರತಿ ಲೀಟರ್‌ಗೆ 60-62 ರೂ. ಆಗಿದ್ದರೆ ದೇಶದ ಹಲವು ಭಾಗಗಳಲ್ಲಿ ಪೆಟ್ರೋಲ್ ಪ್ರತಿ ಲೀಟರ್‌ಗೆ 100 ರೂ.ಗಿಂತ ಹೆಚ್ಚಾಗಿದೆ, ಆದ್ದರಿಂದ ಎಥೆನಾಲ್ ಬಳಸುವ ಮೂಲಕ ಭಾರತೀಯರು ಪ್ರತಿ ಲೀಟರ್‌ಗೆ 30-35 ರೂ.ಗಳಷ್ಟು ಮೊತ್ತವನ್ನು ಉಳಿತಾಯ ಮಾಡಬಹುದು.
 3. ಭಾರತದಲ್ಲಿ, FVVಗಳು ಮತ್ತೊಂದು ವಿಶೇಷ ಪ್ರಯೋಜನವನ್ನು ಹೊಂದಿದ್ದು, ಇದು ದೇಶದ ವಿವಿಧ ಭಾಗಗಳಲ್ಲಿ ಲಭ್ಯವಿರುವ ವಿವಿಧ ಮಿಶ್ರಣಗಳ ಎಥೆನಾಲ್ ಮಿಶ್ರಿತ ಪೆಟ್ರೋಲ್ ಅನ್ನು ಬಳಸಲು ವಾಹನಗಳಿಗೆ ಅನುವು ಮಾಡಿಕೊಡುತ್ತದೆ.
 4. ಅಲ್ಲದೆ, ಈ ವಾಹನಗಳು ಜನವರಿ 2003 ರಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಪ್ರಾರಂಭಿಸಿದ ಎಥೆನಾಲ್ ಬ್ಲೆಂಡೆಡ್ ಪೆಟ್ರೋಲ್ (Ethanol Blended Petrol -EBP) ಕಾರ್ಯಕ್ರಮದ ತಾರ್ಕಿಕ ವಿಸ್ತರಣೆಯಾಗಿದೆ.
 5. ಭಾರತದಲ್ಲಿ ಜೋಳ, ಸಕ್ಕರೆ ಮತ್ತು ಗೋಧಿಯ ಹೆಚ್ಚುವರಿ ಪ್ರಮಾಣದಲ್ಲಿ ಉತ್ಪತ್ತಿಯಾಗುವುದರಿಂದ, ಎಥೆನಾಲ್ ಕಾರ್ಯಕ್ರಮದ ಕಡ್ಡಾಯ ಮಿಶ್ರಣವು ರೈತರಿಗೆ ಹೆಚ್ಚಿನ ಆದಾಯವನ್ನು ಗಳಿಸಲು ಸಹಾಯ ಮಾಡುತ್ತದೆ.
 6. ಒಟ್ಟಾರೆ ಭಾರತೀಯ ಆರ್ಥಿಕತೆಗೆ, ಎಥೆನಾಲ್ ಅನ್ನು ವಾಹನ ಇಂಧನವಾಗಿ ಬಳಸುವುದರಿಂದ ಆಮದು ವೆಚ್ಚವನ್ನು ಉಳಿಸಲು ಸಹಾಯ ಮಾಡುತ್ತದೆ, ಏಕೆಂದರೆ ದೇಶವು ತನ್ನ ಕಚ್ಚಾ ತೈಲದ ಅಗತ್ಯತೆಗಳಲ್ಲಿ ಶೇಕಡಾ 80 ಕ್ಕಿಂತಲೂ ಹೆಚ್ಚಿನ ಪ್ರಮಾಣವನ್ನು ಆಮದು ಮೂಲಕ ಪೂರೈಸಿಕೊಳ್ಳುತ್ತದೆ.

ಎಫ್‌ಎಫ್‌ವಿಗಳನ್ನು (FFVs) ಬಳಸುವ ಅನನುಕೂಲಗಳು / ಸವಾಲುಗಳು:

 1. ಗ್ರಾಹಕರ ಸ್ವೀಕಾರ:100 ಪ್ರತಿಶತದಷ್ಟು ಪೆಟ್ರೋಲ್ ಬಳಸಿ ಚಾಲನೆಗೊಳ್ಳುವ ಪೆಟ್ರೋಲ್ ವಾಹನಗಳಿಗೆ ಹೋಲಿಸಿದರೆ FVV ಗಳ, ಮಾಲೀಕತ್ವದ ವೆಚ್ಚ ಮತ್ತು ಚಲಾಯಿಸುವ ವೆಚ್ಚವು ತುಂಬಾ ಹೆಚ್ಚಾಗುವುದರಿಂದ ಗ್ರಾಹಕರ ಸ್ವೀಕಾರವು (Customer acceptance) ಒಂದು ದೊಡ್ಡ ಸವಾಲಾಗಿದೆ.
 2. ಅಧಿಕ ಚಾಲನಾ ವೆಚ್ಚ: ವಾಹನವು, 100 ರಷ್ಟು ಎಥೆನಾಲ್ (E 100) ಬಳಸಿ ಚಾಲನೆಯಲ್ಲಿರುವಾಗ ಅದರ ಚಾಲನಾ ವೆಚ್ಚವು (ಕಡಿಮೆ ಇಂಧನ ದಕ್ಷತೆಯಿಂದಾಗಿ) ಶೇಕಡಾ 30 ಕ್ಕಿಂತ (100% ಪೆಟ್ರೋಲ್ ವಾಹನಗಳಿಗೆ ಹೋಲಿಸಿದರೆ) ಅಧಿಕವಾಗಿರುತ್ತದೆ.
 3. ಫ್ಲೆಕ್ಸ್ ಇಂಧನ ಎಂಜಿನ್‌ಗಳು ಹೆಚ್ಚು ವೆಚ್ಚದಾಯಕ: ಪೆಟ್ರೋಲ್‌ಗಿಂತ ಎಥೆನಾಲ್ ವಿಭಿನ್ನ ರಾಸಾಯನಿಕ ಗುಣಲಕ್ಷಣಗಳನ್ನು ಹೊಂದಿರುವುದರಿಂದ ಫ್ಲೆಕ್ಸ್ ಇಂಧನ ಎಂಜಿನ್‌ಗಳು ಹೆಚ್ಚು ವೆಚ್ಚದಾಯಕವಾಗಿರುತ್ತವೆ. ಗ್ಯಾಸೋಲಿನ್‌ಗೆ ಹೋಲಿಸಿದರೆ ಎಥೆನಾಲ್ ತುಂಬಾ ಕಡಿಮೆ (40 ಪ್ರತಿಶತ) ಕ್ಯಾಲೋರಿಫಿಕ್ ಮೌಲ್ಯವನ್ನು ಹೊಂದಿದೆ,ಮತ್ತು ಆವಿಯಾಗುವಿಕೆಯ ‘ಸುಪ್ತ ಶಾಖ’ ತುಂಬಾ ಹೆಚ್ಚಾಗಿದೆ.
 4. ಎಥೆನಾಲ್ ಸಹ ದ್ರಾವಕವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ಎಂಜಿನ್‌ನೊಳಗಿನ ರಕ್ಷಣಾತ್ಮಕ ತೈಲ ಪದರವನ್ನು ನಾಶಪಡಿಸುತ್ತದೆ ಮತ್ತು ಇದರಿಂದಾಗಿ ಎಂಜಿನ್ ಒಡೆಯಬಹುದು ಅಥವಾ ಹಾಳಾಗಬಹುದು.

 

ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.

ಬಾಟಮ್ ಟ್ರಾಲಿಂಗ್ ಮತ್ತು ಸಂಬಂಧಿತ ಸಮಸ್ಯೆಗಳು:


(Bottom trawling and associated issues)

ಸಂದರ್ಭ:

ಡಿಸೆಂಬರ್ 18 ಮತ್ತು 20 ರ ನಡುವೆ ಶ್ರೀಲಂಕಾದ ಅಧಿಕಾರಿಗಳು ಪ್ರಾದೇಶಿಕ ನೀರಿನಲ್ಲಿ (territorial waters) “ಮೀನುಗಾರಿಕೆ” ನಡೆಸಲು ಭಾರತೀಯ ಮೀನುಗಾರರು ಬಳಸಿದ 10 ದೋಣಿಗಳನ್ನು ವಶಪಡಿಸಿಕೊಂಡಿರುವುದು ಭಾರತೀಯ ಮೀನುಗಾರರ ಭವಿಷ್ಯದ ಬಗ್ಗೆ ಮತ್ತೊಮ್ಮೆ ಕಳವಳ ವ್ಯಕ್ತವಾಗಿದೆ.

ಏನಿದು ಪ್ರಕರಣ?

ಶ್ರೀಲಂಕಾದ ಅಧಿಕಾರಿಗಳು ತಮಿಳುನಾಡಿನ ಮೀನುಗಾರರನ್ನು ಬಂಧಿಸಿ ನಂತರ ಬಿಡುಗಡೆ ಮಾಡುವುದು ಮಾಮೂಲಿ ಸಂಗತಿಯಾಗಿದೆ, ಆದರೆ ಕೆಲವೊಂದು ಸಾವಿನ ಪ್ರಕರಣಗಳು ವರದಿಯಾಗಿವೆ.

 1. ತಮಿಳುನಾಡು ಮೀನುಗಾರರು ಬಾಟಮ್ ಟ್ರಾಲರ್‌ಗಳನ್ನು ಬಳಸುತ್ತಿರುವುದು ಉಭಯ ದೇಶಗಳ ನಡುವಿನ ವಿವಾದದ ಕೇಂದ್ರ ಬಿಂದುವಾಗಿದೆ,ಶ್ರೀಲಂಕಾದ ಉತ್ತರ ಪ್ರಾಂತ್ಯದಲ್ಲಿ ಬಾಟಮ್ ಟ್ರಾಲಿಂಗ್ ವಿಧಾನವನ್ನು ವಿರೋಧಿಸಲಾಗುತ್ತದೆ ಕಾರಣ ಈ ಪದ್ಧತಿಯು ಸಮುದ್ರ ಪರಿಸರ ವ್ಯವಸ್ಥೆಯನ್ನು ಹಾನಿಗೊಳಿಸುತ್ತದೆ ಎಂಬುದಾಗಿದೆ.
 2. ಶ್ರೀಲಂಕಾದಲ್ಲಿ ಈ ಪದ್ಧತಿಯನ್ನು ನಿಷೇಧಿಸಲಾಗಿದೆ ಮತ್ತು ಇದನ್ನು ನಿಷೇಧಿಸುವ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಹೋರಾಟಗಳು ನಡೆಯುತ್ತಿವೆ.

ಭಾರತದ ಕಡೆಯವರು ಎರಡು ಬಾರಿ – 2010 ಮತ್ತು 2016 ರಲ್ಲಿ – ಹಂತಹಂತವಾಗಿ ಬಾಟಮ್ ಟ್ರಾಲಿಂಗ್ ವಿಧಾನದ ಮೂಲಕ ಮಾಡಲಾಗುವ ಮೀನುಗಾರಿಕೆಯನ್ನು ಕೊನೆಗೊಳಿಸಲು ಒಪ್ಪಿಕೊಂಡರು. ಆದರೆ ಈ ರೀತಿಯ ಪದ್ಧತಿಯು ಇನ್ನೂ ಕೊನೆಗೊಂಡಿಲ್ಲ.

ಬಾಟಮ್-ಟ್ರಾಲಿಂಗ್ (Bottom-Trawling) ಎಂದರೇನು?

ಬಾಟಮ್ ಟ್ರಾಲಿಂಗ್ ಒಂದು ವಿನಾಶಕಾರಿ ಮೀನುಗಾರಿಕೆ ಪದ್ಧತಿಯಾಗಿದ್ದು ಅದು ಸಮುದ್ರ ಪರಿಸರ ವ್ಯವಸ್ಥೆಯ ಮೇಲೆ ತೀವ್ರತರನಾದ ಹಾನಿಕಾರಕ ಪರಿಣಾಮ ಬೀರುತ್ತದೆ. ಈ ವಿಧಾನದಲ್ಲಿ, ತೂಕದ ಬಲೆಗಳನ್ನು ಹೊಂದಿದ ದೊಡ್ಡ ಗಾತ್ರದ ಟ್ರಾಲರ್‌ಗಳನ್ನು ಸಮುದ್ರದ ತಳಕ್ಕೆ ಎಸೆಯಲಾಗುತ್ತದೆ, ಎಲ್ಲಾ ರೀತಿಯ ಸಮುದ್ರ ಜೀವಿಗಳನ್ನು ಬಲೆಗೆ ಬೀಳಿಸುತ್ತದೆ, ಈ ಬಲೆಗಳನ್ನು ಟ್ರಾಲರ್ ಮೂಲಕ ಎಳೆಯಲಾಗುತ್ತದೆ.ಈ ವಿಧಾನದಿಂದಾಗಿ, ಈ ಪ್ರದೇಶದಲ್ಲಿ ಮೀನುಗಾರಿಕೆ ಸಂಪನ್ಮೂಲಗಳ ಕೊರತೆಯುಂಟಾಗುತ್ತದೆ.ಈ ಮೀನುಗಾರಿಕಾ ಪದ್ಧತಿಯನ್ನು ನಿಷೇಧಿಸುವುದು ಭವಿಷ್ಯದ ದೃಷ್ಟಿಯಿಂದ ಪ್ರಯೋಜನಕಾರಿಯಾಗಿದೆ.

‘ಬಾಟಮ್ ಟ್ರೋಲಿಂಗ್’ನ ಸಮಸ್ಯೆ:

 1. ಬಾಟಮ್ ಟ್ರಾಲಿಂಗ್, ಒಂದು ಪರಿಸರವಿಜ್ಞಾನದ ವಿನಾಶಕಾರಿ ಅಭ್ಯಾಸ, ಟ್ರಾಲರ್‌ಗಳು ಸಮುದ್ರದ ತಳದಲ್ಲಿ ತೂಕದ ಬಲೆಗಳನ್ನು ಎಳೆಯುವುದನ್ನು ಒಳಗೊಂಡಿರುತ್ತದೆ, ಇದು ಜಲ ಸಂಪನ್ಮೂಲಗಳ ದೊಡ್ಡ ಸವಕಳಿಗೆ ಕಾರಣವಾಗುತ್ತದೆ.
 2. ಬಾಟಮ್ ಟ್ರಾಲಿಂಗ್‌ನಲ್ಲಿ, ಮರಿ ಮೀನುಗಳು ಸಹ ಸಿಕ್ಕಿಬೀಳುತ್ತವೆ, ಇದು ಸಮುದ್ರ ಸಂಪನ್ಮೂಲಗಳ ಸವಕಳಿಗೆ ಕಾರಣವಾಗುತ್ತದೆ ಮತ್ತು ಸಮುದ್ರ ಸಂರಕ್ಷಣೆಯ ಪ್ರಯತ್ನಗಳ ಮೇಲೆ ಪರಿಣಾಮ ಬೀರುತ್ತದೆ. ಈ ವಿಧಾನವನ್ನು ತಮಿಳುನಾಡಿನ ಮೀನುಗಾರರು ಪಾಕ್ ಕೊಲ್ಲಿಯಲ್ಲಿ ಪರಿಚಯಿಸಿದರು ಮತ್ತು ಇದನ್ನು ಶ್ರೀಲಂಕಾದ ಅಂತರ್ಯುದ್ಧದ ಸಮಯದಲ್ಲಿ ಗರಿಷ್ಠ ಪ್ರಮಾಣದಲ್ಲಿ ಬಳಸಲಾಯಿತು.

current affairs

 

ಬಾಟಮ್ ಟ್ರಾಲಿಂಗ್ ‘ಸಮಸ್ಯೆಗೆ ಆಳ ಸಮುದ್ರ ಮೀನುಗಾರಿಕೆ’ಯಲ್ಲಿ’ ಪರಿಹಾರವಿದೆ:

 1. ಸಮುದ್ರ/ಸಾಗರದ ಒಳಭಾಗದಲ್ಲಿ ವಾಸಿಸುವ ಮೀನುಗಳನ್ನು ಹಿಡಿಯುವ ಚಟುವಟಿಕೆಗಳನ್ನು ‘ಆಳ ಸಮುದ್ರ ಮೀನುಗಾರಿಕೆ’ ಅಥವಾ ‘ಡೀಪ್ ಸೀ ಫಿಶಿಂಗ್’ ಎಂದು ಕರೆಯಲಾಗುತ್ತದೆ.
 2. ಇದಕ್ಕಾಗಿ ಮೀನುಗಾರರು ಸಮುದ್ರದ ಒಳಭಾಗ ಮತ್ತು ಮೀನು ಪ್ರಭೇದಗಳನ್ನು ಸುಲಭವಾಗಿ ಪ್ರವೇಶಿಸುವ ರೀತಿಯಲ್ಲಿ ದೋಣಿಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ.
 3. ಈ ವಿಧಾನವನ್ನು ಪ್ರಪಂಚದಾದ್ಯಂತ ಅನುಸರಿಸಲಾಗುತ್ತದೆ, ವಿಶೇಷವಾಗಿ ಕರಾವಳಿ ಪ್ರದೇಶಗಳಲ್ಲಿ ಪರಿಸರ ವ್ಯವಸ್ಥೆಗೆ ಯಾವುದೇ ಹಾನಿ ಉಂಟಾಗದಂತೆ ಬಳಸಲಾಗುತ್ತದೆ.
 4. ನೀರಿನ ಆಳ ಕನಿಷ್ಠ 30 ಮೀಟರ್ ಇರುವ ಪ್ರದೇಶಗಳನ್ನು ‘ಆಳ ಸಮುದ್ರ ಮೀನುಗಾರಿಕೆ’ ಪ್ರದೇಶಗಳೆಂದು ಪರಿಗಣಿಸಲಾಗುತ್ತದೆ.

 

 

‘ಪಾಕ್ ಕೊಲ್ಲಿ(Palk Bay) ಯೋಜನೆ’ಯ ಕುರಿತು:

 1. ಜುಲೈ 2017 ರಲ್ಲಿ ‘ನೀಲಿ ಕ್ರಾಂತಿ ಕಾರ್ಯಕ್ರಮ’ ದ ಅಡಿಯಲ್ಲಿ ‘ಪಾಕ್ ಬೇ ಸ್ಕೀಮ್’(Palk Bay scheme) ಅನ್ನು ಪ್ರಾರಂಭಿಸಲಾಯಿತು.
 2. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಫಲಾನುಭವಿಗಳ ಸಹಭಾಗಿತ್ವದೊಂದಿಗೆ ಯೋಜನೆಗೆ ಹಣಕಾಸು ಒದಗಿಸುತ್ತವೆ.
 3. ಇದರ ಅಡಿಯಲ್ಲಿ, ರಾಜ್ಯದ ಮೀನುಗಾರರಿಗೆ ಮೂರು ವರ್ಷಗಳಲ್ಲಿ 2,000 ಹಡಗುಗಳನ್ನು ಒದಗಿಸಲು ಮತ್ತು ‘ಬಾಟಮ್ ಟ್ರಾಲಿಂಗ್’ ವಿಧಾನವನ್ನು ತ್ಯಜಿಸಲು ಅವರನ್ನು ಪ್ರೇರೇಪಿಸಲು ಯೋಜಿಸಲಾಗಿದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಪಿ.ಎನ್. ಪಣಿಕ್ಕರ್:

(P.N. Panicker)

ಭಾರತದ ರಾಷ್ಟ್ರಪತಿಗಳು ಇತ್ತೀಚೆಗೆ ಶ್ರೀ ಪಿ.ಎನ್ ಪಣಿಕ್ಕರ್,ಅವರ ಪ್ರತಿಮೆಯನ್ನು ತಿರುವನಂತಪುರಂನ ಪೂಜಾಪುರದಲ್ಲಿ (Poojappura, Thiruvananthapuram) ಅನಾವರಣಗೊಳಿಸಿದರು.

ಪಿ.ಎನ್. ಪಣಿಕ್ಕರ್ (1909-1995) ಕುರಿತು:

 1. ಪುತುವಾಯಿಲ್ ನಾರಾಯಣ ಪಣಿಕ್ಕರ್ ಅವರನ್ನು ಕೇರಳದ ಗ್ರಂಥಾಲಯ ಚಳವಳಿಯ ಪಿತಾಮಹ (Father of the Library Movement) ಎಂದು ಕರೆಯಲಾಗುತ್ತದೆ.
 2. ಅವರ ಮರಣ ವಾರ್ಷಿಕೋತ್ಸವವಾದ ಜೂನ್ 19 ಅನ್ನು, 1996 ರಿಂದ ಕೇರಳದಲ್ಲಿ ವಯನಾದಿನಂ (ಓದುವ ದಿನ) (Vayanadinam (Reading Day) ಎಂದು ಆಚರಿಸಲಾಗುತ್ತದೆ.
 3. 2017 ರಲ್ಲಿ, ದೇಶದ ಪ್ರಧಾನಮಂತ್ರಿಗಳು, ಕೇರಳದಲ್ಲಿ ಆಚರಿಸಲಾಗುವ ಓದುವ ದಿನ ಜೂನ್ 19 ಅನ್ನು ಭಾರತದಲ್ಲಿ ರಾಷ್ಟ್ರೀಯ ಓದುವ ದಿನ ಎಂದು ಘೋಷಿಸಿದರು ಮತ್ತು ಆ ತಿಂಗಳನ್ನು ಭಾರತದಲ್ಲಿ ರಾಷ್ಟ್ರೀಯ ಓದುವ ತಿಂಗಳು ಎಂದು ಸಹ ಆಚರಿಸಲಾಗುತ್ತದೆ.
 4. ಪಣಿಕ್ಕರ್ ಅವರು 1945 ರಲ್ಲಿ 47 ಗ್ರಾಮೀಣ ಗ್ರಂಥಾಲಯಗಳೊಂದಿಗೆ ತಿರುವಿತಾಂಕೂರ್ ಗ್ರಂಥಶಾಲಾ ಸಂಘಮ್ (Thiruvithaamkoor Granthasala Sangham (Travancore Library Association) ರಚನೆಯ ನೇತೃತ್ವ ವಹಿಸಿದರು. ‘ಓದಿರಿ ಬೆಳೆಯಿರಿ’ (Read and Grow) ಎಂಬುದು ಸಂಘಟನೆಯ ಘೋಷವಾಕ್ಯವಾಗಿತ್ತು.
 5. ಗ್ರಂಥಶಾಲಾ ಸಂಘಮ್ ಸಂಘಟನೆಯು 1975 ರಲ್ಲಿ ಯುನೆಸ್ಕೋದಿಂದ ಪ್ರತಿಷ್ಠಿತ ಕೃಪ್ಸಕಾಯ ಪ್ರಶಸ್ತಿ’ (Krupsakaya Award)ಯನ್ನು ಗೆದ್ದುಕೊಂಡಿತು.

 

ಅಭ್ಯಾಸ್:

ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (DRDO) ದೇಶೀಯವಾಗಿ ಅಭಿವೃದ್ಧಿಪಡಿಸಿದ ಹೈಸ್ಪೀಡ್ ಎಕ್ಸ್‌ಪೆಂಡಬಲ್ ಏರಿಯಲ್ ಟಾರ್ಗೆಟ್ (high-speed expendable Aerial Target (HEAT) ಪ್ರಯೋಗಿಕ ಪರೀಕ್ಷಾರ್ಥ ಹಾರಾಟವನ್ನು ಯಶಸ್ವಿಯಾಗಿ ನಡೆಸಿದೆ.

 1. ಇದು ದೇಶೀಯವಾಗಿ ಅಭಿವೃದ್ಧಿಪಡಿಸಿದ ಮಾನವರಹಿತ ವೈಮಾನಿಕ ಗುರಿ ವ್ಯವಸ್ಥೆಯಾಗಿದೆ.

 

ಆಲಿವ್ ರಿಡ್ಲಿ ಆಮೆಗಳು:

ಝೂಲಾಜಿಕಲ್ ಸರ್ವೆ ಆಫ್ ಇಂಡಿಯಾ (Zoological Survey of India -ZSI) ದ ಸಂಶೋಧಕರು ಒಡಿಶಾದ ಗಂಜಾಂ ಜಿಲ್ಲೆಯ ಋಶಿಕುಲ್ಯ ನದಿ ತಟದಲ್ಲಿ ಆಲಿವ್ ರಿಡ್ಲಿ ಸಮುದ್ರ ಆಮೆಗಳ ಟ್ಯಾಗಿಂಗ್ ಪ್ರಕ್ರಿಯೆ ಆರಂಭಿಸಿದ್ದಾರೆ. ಈ ಆಮೆಗಳು ವಾರ್ಷಿಕ ಮಿಲನ ಮತ್ತು ಗೂಡುಕಟ್ಟಲು ಗಹಿರ್ಮಾತಾ ದೇವಿ ನದಿ ಮತ್ತು ಋಶಿಕುಲ್ಯ ನದಿ ತಟಕ್ಕೆ ಬರುತ್ತವೆ.

ಈ ಟ್ಯಾಗಿಂಗ್ ಪ್ರಕ್ರಿಯೆಯು ಸಮುದ್ರ ಸರೀಸೃಪಗಳು ಭೇಟಿ ನೀಡುವ ವಲಸೆ ಮಾರ್ಗ ಮತ್ತು ಅವುಗಳು ಭೇಟಿ ನೀಡಿದ ಸ್ಥಳಗಳನ್ನು ಗುರುತಿಸಲು ಸಂಶೋಧಕರಿಗೆ ಸಹಾಯ ಮಾಡುತ್ತದೆ.

ಪ್ರಮುಖ ಅಂಶಗಳು:

ಆಲಿವ್ ರಿಡ್ಲಿ ಆಮೆಗಳು ಗಾತ್ರದಲ್ಲಿ ಪ್ರಪಂಚದಲ್ಲಿ ಕಂಡುಬರುವ ಎಲ್ಲಾ ಸಮುದ್ರ ಆಮೆಗಳಲ್ಲಿ ಚಿಕ್ಕದಾಗಿದೆ ಮತ್ತು ಹೆಚ್ಚು ಹೇರಳವಾಗಿವೆ.

ಅವರು ಪೆಸಿಫಿಕ್, ಅಟ್ಲಾಂಟಿಕ್ ಮತ್ತು ಹಿಂದೂ ಮಹಾ ಸಾಗರಗಳ ಬೆಚ್ಚಗಿನ ನೀರಿನಲ್ಲಿ ವಾಸಿಸುತ್ತವೆ.

ಈ ಆಮೆಗಳು, ತಮ್ಮ ಸೋದರಸಂಬಂಧಿ ಕೆಂಪ್ಸ್ ರಿಡ್ಲಿ ಆಮೆ (Kemps ridley turtle) ಗಳೊಂದಿಗೆ, ಅರಿಬಾಡಾ (Arribada) ಎಂಬ ವಿಶಿಷ್ಟವಾದ ಸಾಮೂಹಿಕ ಗೂಡುಕಟ್ಟುವ ವಿದ್ಯಮಾನಕ್ಕೆ ಹೆಸರುವಾಸಿಯಾಗಿದೆ, ಅಲ್ಲಿ ಸಾವಿರಾರು ಹೆಣ್ಣು ಆಮೆಗಳು ಮೊಟ್ಟೆಗಳನ್ನು ಇಡಲು ಒಂದೇ ಕಡಲತೀರದಲ್ಲಿ ಒಟ್ಟಿಗೆ ಸೇರುತ್ತವೆ.

ಒಡಿಶಾದ ಗಂಜಾಮ್ ಜಿಲ್ಲೆಯ ರುಶಿಕುಲ್ಯ ರೂಕೆರಿ ಕರಾವಳಿ, ಗಹಿರ್ಮಾತಾ ಬೀಚ್ ಮತ್ತು ದೇಬಿ ನದಿಯ ಮುಖವು ಒಡಿಶಾದ ಪ್ರಮುಖ ಗೂಡುಕಟ್ಟುವ ತಾಣಗಳಾಗಿವೆ.

IUCN ಸ್ಥಿತಿ: ಅಪಾಯಕ್ಕೊಳಗಾಗಬಲ್ಲ (Vulnerable).

ಪ್ರತಿ ವರ್ಷ, ಭಾರತೀಯ ಕೋಸ್ಟ್ ಗಾರ್ಡ್‌ನ ಆಪರೇಷನ್ ಒಲಿವಿಯಾ”(Operation Olivia), 1980 ರ ದಶಕದ ಆರಂಭದಲ್ಲಿ ಪ್ರಾರಂಭವಾಯಿತು, ಈ ಕಾರ್ಯಾಚರಣೆಯು ಆಲಿವ್ ರಿಡ್ಲಿ ಆಮೆಗಳು ಒಡಿಶಾ ಕರಾವಳಿಯುದ್ದಕ್ಕೂ ಸಂತಾನೋತ್ಪತ್ತಿ ಮತ್ತು ಗೂಡುಕಟ್ಟುವಿಕೆಗಾಗಿ ನವೆಂಬರ್‌ನಿಂದ ಡಿಸೆಂಬರ್‌ವರೆಗೆ ಒಟ್ಟುಗೂಡಿದಾಗ ಅವುಗಳನ್ನು ರಕ್ಷಿಸಲು ಸಹಾಯ ಮಾಡುತ್ತದೆ.

 

UNSC ರೆಸಲ್ಯೂಶನ್ 2615:

ಅಫ್ಘಾನಿಸ್ತಾನಕ್ಕೆ ಮಾನವೀಯ ನೆರವನ್ನು ತಲುಪಿಸಲು ಅನುಕೂಲವಾಗುವಂತೆ ತಾಲಿಬಾನ್ ವಿರುದ್ಧದ ನಿರ್ಬಂಧಗಳನ್ನು ತೆರವು ಗೊಳಿಸುವ ಸಂಬಂಧ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC) ಯು ಸರ್ವಾನುಮತದಿಂದ   ನಿರ್ಣಯವನ್ನು ಅಂಗೀಕರಿಸಿದೆ.

 1. ಈ ಕಾರ್ವ್-ಔಟ್ ತುರ್ತು ಅಗತ್ಯವಿರುವ ಮಾನವೀಯ ನೆರವು ಮತ್ತು ಅಫ್ಘಾನಿಸ್ತಾನದಲ್ಲಿ ಮೂಲಭೂತ ಮಾನವ ಅಗತ್ಯಗಳನ್ನು ಬೆಂಬಲಿಸುವ ಇತರ ಚಟುವಟಿಕೆಗಳನ್ನು ಒಳಗೊಂಡಿದೆ.
 2. ಈ ರೆಸಲ್ಯೂಶನ್ (2615) ಪ್ರತಿ ಆರು ತಿಂಗಳಿಗೊಮ್ಮೆ ಕಾರ್ವ್-ಔಟ್ ನ ಪರಿಶೀಲನೆಯನ್ನು ಕಡ್ಡಾಯಗೊಳಿಸುತ್ತದೆ.
 3. ತುರ್ತು ಪರಿಹಾರ ಸಂಯೋಜಕರು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಗೆ ಪ್ರತಿ ಆರು ತಿಂಗಳಿಗೊಮ್ಮೆ ಮಾನವೀಯ ನೆರವಿನ ವಿತರಣೆ ಮತ್ತು ಅನುಷ್ಠಾನಕ್ಕೆ ಎದುರಾಗುವ ಯಾವುದೇ ಅಡೆತಡೆಗಳ ಕುರಿತು ವಿವರಿಸಬೇಕೆಂದು ಇದು ವಿನಂತಿಸುತ್ತದೆ.
 4. ಇದು ಮಾನವ ಹಕ್ಕುಗಳನ್ನು ಗೌರವಿಸಲು ಮತ್ತು ಅಂತರರಾಷ್ಟ್ರೀಯ ಮಾನವೀಯ ಕಾನೂನನ್ನು ಗೌರವಿಸಲು ಸಂಭವಿಸಿದ “ಎಲ್ಲಾ ಪಕ್ಷಗಳಿಗೆ ಕರೆ ನೀಡುತ್ತದೆ”.

 

ಪ್ರಳಯ ಕ್ಷಿಪಣಿ:

ದೇಶಿಯವಾಗಿ ಅಭಿವೃದ್ಧಿಪಡಿಸಿರುವ, ಲಂಬವಾಗಿ ಭೂಮಿಯಿಂದ ಗಗನಮುಖಿಯಾಗಿ ಉಡಾವಣೆ ಮಾಡಬಹುದಾದ ನೂತನ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಭಾರತ ಮಂಗಳವಾರ ಯಶಸ್ವಿಯಾಗಿ ನಡೆಸಿತು.

 1. ನೌಕಾಪಡೆಗಾಗಿ ಅಭಿವೃದ್ಧಿಪಡಿಸಲಾಗಿರುವ ಈ ಕ್ಷಿಪಣಿಯ ಪರೀಕ್ಷೆಯನ್ನು ಒಡಿಶಾದ ಕರಾವಳಿ ಭಾಗದ ಚಾಂಡಿಪುರ್‌ನಲ್ಲಿ ನಡೆಸಲಾಯಿತು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ತಿಳಿಸಿದೆ.
 2. ಕ್ಷಿಪಣಿಯ ವೇಗದ ಗತಿಯನ್ನು ಗಮನಿಸಲು ಹಲವು ಕಣ್ಗಾವಲು ಪರಿಕರಗಳನ್ನು ಬಳಸಲಾಗಿತ್ತು. ಸ್ವದೇಶಿ ನಿರ್ಮಿತ, ಗರಿಷ್ಠ 500 ಕಿ.ಮೀ ಅಂತರದ ಗುರಿಯನ್ನು ತಲುಪಬಲ್ಲ, ನೆಲದಿಂದ ನೆಲಕ್ಕೆ ಉಡಾಯಿಸುವ ‘ಪ್ರಳಯ’ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ನಡೆಸಲಾಯಿತು ಎಂದು ಡಿಆರ್‌ಡಿಒ ತಿಳಿಸಿದೆ.
 3. ಕಡಿಮೆ ಸಾಂದ್ರತೆಯ ವಿದ್ಯುನ್ಮಾನ ಗುರಿಯನ್ನು ಕೇಂದ್ರೀಕರಿಸಿ ಪರೀಕ್ಷೆ ನಡೆಸಲಾಯಿತು. ಕ್ಷಿಪಣಿಯನ್ನು ಯುದ್ಧನೌಕೆಗಳಿಗೆ ಅಳವಡಿಸಲಾಗುವುದು ಎಂದು ಡಿಆರ್‌ಡಿಒ ತಿಳಿಸಿದೆ.
 4. ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯು (ಡಿಆರ್‌ಡಿಒ) ಇದನ್ನು ಅಭಿವೃದ್ಧಿಪಡಿಸಿದ್ದು, ದೃಢ ಮತ್ತು ಹೆಚ್ಚು ಸಾಮರ್ಥ್ಯದ ಮೋಟರ್, ಹೊಸ ತಂತ್ರಜ್ಞಾನ ಅಳವಡಿಸಲಾಗಿದೆ. ಅತ್ಯಾಧುನಿಕ ದಿಕ್ಸೂಚಿ ಮತ್ತು ಇತರೆ ಸೌಲಭ್ಯಗಳನ್ನು ಈ ಕ್ಷಿಪಣೆ ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.
 5. ವ್ಯಾಪ್ತಿ: ಕ್ಷಿಪಣಿಯು 150-500 ಕಿಲೋಮೀಟರ್ ವ್ಯಾಪ್ತಿಯನ್ನು ಹೊಂದಿದೆ ಮತ್ತು ಇದನ್ನು ಮೊಬೈಲ್ ಲಾಂಚರ್‌ನಿಂದ ಉಡಾವಣೆ ಮಾಡಬಹುದು.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos