ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 2:
1. ಸಮಗ್ರ ಆರ್ಥಿಕ ಸಹಕಾರ ಒಪ್ಪಂದ (CECA).
2. ಮ್ಯಾನ್ಮಾರ್‌ನಲ್ಲಿ ಆದಷ್ಟು ಬೇಗ ಪ್ರಜಾಪ್ರಭುತ್ವವು ಮರು ಸ್ಥಾಪನೆಯಾಗಬೇಕೆಂದು ಬಯಸಿದ ಭಾರತ.
3. ಚೀನಾ-ಹಾಂಗ್ ಕಾಂಗ್ ದ್ವಿಪಕ್ಷೀಯ ಸಂಬಂಧಗಳು.
ಸಾಮಾನ್ಯ ಅಧ್ಯಯನ ಪತ್ರಿಕೆ 3:
1. ‘ಮೀಂದುಂ ಮಂಜಪ್ಪೈ’ ಯೋಜನೆ.
2. ರಾಷ್ಟ್ರೀಯ ತನಿಖಾ ಸಂಸ್ಥೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
1. ತಬ್ಲೀಘಿ ಜಮಾತ್.
ಸಾಮಾನ್ಯ ಅಧ್ಯಯನ ಪತ್ರಿಕೆ : 2
ವಿಷಯಗಳು: ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಗುಂಪುಗಳು ಮತ್ತು ಭಾರತಕ್ಕೆ ಸಂಬಂಧಿಸಿದ ಒಪ್ಪಂದಗಳು ಮತ್ತು / ಅಥವಾ ಭಾರತದ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಅಂಶಗಳು.
ಸಮಗ್ರ ಆರ್ಥಿಕ ಸಹಕಾರ ಒಪ್ಪಂದ (CECA):
(Comprehensive Economic Cooperation Agreement (CECA)
ಸಂದರ್ಭ:
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ದ್ವಿಪಕ್ಷೀಯ ‘ಸಮಗ್ರ ಆರ್ಥಿಕ ಸಹಕಾರ ಒಪ್ಪಂದ’ (Comprehensive Economic Cooperation Agreement – CECA) ದ ಕುರಿತ ಮಾತುಕತೆಗಳು ತೀವ್ರಗತಿಯಲ್ಲಿ ನಡೆಯುತ್ತಿವೆ.
ಭಾರತ-ಆಸ್ಟ್ರೇಲಿಯಾ ದ್ವಿಪಕ್ಷೀಯ ವ್ಯಾಪಾರ:
- ಆರ್ಥಿಕ ವರ್ಷ(FY)2021 ರಲ್ಲಿ, ಭಾರತವು ಆಸ್ಟ್ರೇಲಿಯಾಕ್ಕೆ $4.04 ಶತಕೋಟಿ ಮೌಲ್ಯದ ವಸ್ತುಗಳನ್ನು ರಫ್ತು ಮಾಡಿದ್ದರೆ, ಆಸ್ಟ್ರೇಲಿಯಾದಿಂದ $8.24 ಶತಕೋಟಿ ಮೌಲ್ಯದ ವಸ್ತುಗಳನ್ನು ಆಮದು ಮಾಡಿಕೊಂಡಿದೆ.
- ಆಸ್ಟ್ರೇಲಿಯಾಕ್ಕೆ ರಫ್ತು ಮಾಡಲಾದ ಪ್ರಮುಖ ಸರಕುಗಳಲ್ಲಿ ಪೆಟ್ರೋಲಿಯಂ ಉತ್ಪನ್ನಗಳು, ಔಷಧಿಗಳು, ಪಾಲಿಶ್ ಮಾಡಿದ ವಜ್ರಗಳು, ಚಿನ್ನದ ಆಭರಣಗಳು, ಉಡುಪುಗಳು ಇತ್ಯಾದಿಗಳು ಸೇರಿವೆ, ಆದರೆ ಆಸ್ಟ್ರೇಲಿಯಾವು ಮುಖ್ಯವಾಗಿ ಕಲ್ಲಿದ್ದಲು, ದ್ರವ ಸಾರಜನಕ ಅನಿಲ (LNG), ಅಲ್ಯುಮಿನಾ ಮತ್ತು ನಾನ್-ಮಾನಿಟರಿ ಚಿನ್ನ, ಇತ್ಯಾದಿಗಳನ್ನು ಆಮದು ಮಾಡಿಕೊಳ್ಳುತ್ತದೆ.
- ಸೇವಾ ವಲಯದಲ್ಲಿ, ಭಾರತದ ರಫ್ತುಗಳಲ್ಲಿ ಪ್ರಯಾಣ, ದೂರಸಂಪರ್ಕ ಮತ್ತು ಕಂಪ್ಯೂಟರ್‌ಗಳು, ಸರ್ಕಾರ ಮತ್ತು ಹಣಕಾಸು ಸೇವೆಗಳು ಇತ್ಯಾದಿಗಳನ್ನು ಒಳಗೊಂಡಿದ್ದರೆ, ಆಸ್ಟ್ರೇಲಿಯಾದಿಂದ ಸೇವಾ ವಲಯದ ಆಮದುಗಳು ಮುಖ್ಯವಾಗಿ ಶಿಕ್ಷಣ ಮತ್ತು ಖಾಸಗಿ ಪ್ರಯಾಣವನ್ನು ಒಳಗೊಂಡಿವೆ.
- 2020 ರಲ್ಲಿ ಭಾರತವು ಮುಖ್ಯವಾಗಿ ಕಲ್ಲಿದ್ದಲಿನ ವ್ಯಾಪಾರ ಮತ್ತು ಅಂತರಾಷ್ಟ್ರೀಯ ಶಿಕ್ಷಣದ ಕಾರಣದಿಂದಾಗಿ, ಆಸ್ಟ್ರೇಲಿಯಾಗೆ ಏಳನೇ ಅತಿದೊಡ್ಡ ವ್ಯಾಪಾರ ಪಾಲುದಾರ ಮತ್ತು ಆರನೇ ಅತಿದೊಡ್ಡ ರಫ್ತು ತಾಣವಾಗಿತ್ತು.
ವಿಷಯಗಳು: ಭಾರತ ಮತ್ತು ನೆರೆಹೊರೆಯ ದೇಶಗಳೊಂದಿಗಿನ ಅದರ ಸಂಬಂಧಗಳು.
ಮ್ಯಾನ್ಮಾರ್‌ನಲ್ಲಿ ಆದಷ್ಟು ಬೇಗ ಪ್ರಜಾಪ್ರಭುತ್ವವು ಮರು ಸ್ಥಾಪನೆಯಾಗಬೇಕೆಂದು ಬಯಸಿದ ಭಾರತ:
(India seeks early return of democracy in Myanmar)
ಸಂದರ್ಭ:
ಇತ್ತೀಚೆಗೆ, ಭಾರತವು ಮ್ಯಾನ್ಮಾರ್‌ನಲ್ಲಿ ಆದಷ್ಟು ಬೇಗ ಪ್ರಜಾಪ್ರಭುತ್ವವು ಮರು ಸ್ಥಾಪನೆಯಾಗಬೇಕೆಂದು ಮ್ಯಾನ್ಮಾರ್‌ನ ಮಿಲಿಟರಿ ಆಡಳಿತಗಾರರಿಗೆ ತಿಳಿಸಿದೆ.
ಏನಿದು ಪ್ರಕರಣ?
ಪ್ರತಿಭಟನೆ ನಡೆಸುತ್ತಿರುವ ನಾಗರಿಕರ ಮೇಲೆ ಹಿಂಸಾತ್ಮಕ ದಬ್ಬಾಳಿಕೆಯಿಂದಾಗಿ ಮ್ಯಾನ್ಮಾರ್ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತ್ಯೇಕಗೊಂಡಿದೆ.
ಭಾರತದ ಬೇಡಿಕೆಗಳು:
- ಮ್ಯಾನ್ಮಾರ್‌ನಲ್ಲಿ ಅತಿಶೀಘ್ರವಾಗಿ ಪ್ರಜಾಪ್ರಭುತ್ವವು ಮರು ಸ್ಥಾಪನೆಯಾಗಬೇಕು ;
- ಬಂಧಿತ ವ್ಯಕ್ತಿಗಳು ಮತ್ತು ಕೈದಿಗಳ ಬಿಡುಗಡೆ;
- ಮಾತುಕತೆಯ ಮೂಲಕ ಸಮಸ್ಯೆಗಳಿಗೆ ಪರಿಹಾರ;
- ಎಲ್ಲಾ ರೀತಿಯ ಹಿಂಸೆಯ ಸಂಪೂರ್ಣ ನಿಲುಗಡೆ.
ಭಾರತದ ಈ ನಡೆಯ ಮಹತ್ವ:
ಫೆಬ್ರವರಿ 2 ರಿಂದ, ಮ್ಯಾನ್ಮಾರ್‌ನಲ್ಲಿ ಪ್ರಜಾಸತ್ತಾತ್ಮಕ ಅಂಶಗಳ ವಿರುದ್ಧ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯ ಬಗ್ಗೆ ಭಾರತವು ಕಳವಳ ವ್ಯಕ್ತಪಡಿಸಿದೆ. ಆದರೆ, ಇತ್ತೀಚಿನ ಈ ಹೇಳಿಕೆಯು ಹೆಚ್ಚುವರಿ ಮಹತ್ವವನ್ನು ಪಡೆದುಕೊಳ್ಳುತ್ತದೆ, ಮೊದಲ ಬಾರಿಗೆ, ಈ ಬಿಕ್ಕಟ್ಟನ್ನು ಕೊನೆಗೊಳಿಸಲು ವಿವಿಧ ಪಕ್ಷಗಳ ನಡುವೆ ಮಧ್ಯಸ್ಥಿಕೆ ವಹಿಸಲು ಭಾರತ ಸಿದ್ಧವಾಗಿದೆ ಎಂದು ಸರ್ಕಾರವು ಮೊದಲ ಬಾರಿಗೆ ಸುಳಿವು ನೀಡಿದೆ.
ಮ್ಯಾನ್ಮಾರ್‌ನಲ್ಲಿನ ಇತ್ತೀಚಿನ ಘಟನೆಗಳು:
ಈ ವರ್ಷ ಫೆಬ್ರವರಿ 1 ರಂದು ಮ್ಯಾನ್ಮಾರ್‌ನ ಮಿಲಿಟರಿಯು ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ನೊಬೆಲ್ ಪ್ರಶಸ್ತಿ ವಿಜೇತ ಆಂಗ್ ಸಾನ್ ಸೂಕಿ ಅವರ ಪಕ್ಷದ ಸರ್ಕಾರದ ವಿರುದ್ಧ ದಂಗೆಯನ್ನು ಪ್ರಾರಂಭಿಸಿ ದೇಶವನ್ನು ತನ್ನ ವಶಕ್ಕೆ ಪಡೆಯಿತು. ಕಳೆದ ವರ್ಷದ ನವೆಂಬರ್‌ನಲ್ಲಿ ನಡೆದ ಚುನಾವಣೆಯಲ್ಲಿ ಆಂಗ್ ಸಾನ್ ಸೂಕಿ ರವರ ಆಡಳಿತ ಪಕ್ಷವು ವಂಚನೆ ಎಸಗಿದೆ ಎಂದು ಮಿಲಿಟರಿ ಆರೋಪಿಸಿತ್ತು.
ಆದರೆ, ಸೇನೆಯು ಮಾಡಿದ ಈ ಆರೋಪವನ್ನು ದೇಶದ ಹಿಂದಿನ ಚುನಾವಣಾ ಆಯೋಗ ಮತ್ತು ಅಂತರರಾಷ್ಟ್ರೀಯ ಕಾವಲುಗಾರರು ತಿರಸ್ಕರಿಸಿದ್ದಾರೆ.
‘ಯುನೈಟೆಡ್ ನೇಷನ್ಸ್’ ನಲ್ಲಿ ಮ್ಯಾನ್ಮಾರ್ ಕುರಿತು ಭಾರತದ ದೃಷ್ಟಿಕೋನ:
ಇತ್ತೀಚೆಗೆ, ಮ್ಯಾನ್ಮಾರ್ ವಿರುದ್ಧ ಶಸ್ತ್ರಾಸ್ತ್ರ ನಿರ್ಬಂಧ ಹೇರುವ ನಿರ್ಣಯದ ಕುರಿತು ವಿಶ್ವಸಂಸ್ಥೆಯ ಸಾಮಾನ್ಯ ಸಭೆ (UNGA)ಯ ಮತದಾನದಲ್ಲಿ ಭಾರತ ಭಾಗವಹಿಸಲಿಲ್ಲ.
- ಈ ನಿರ್ಣಯದ ಪರವಾಗಿ 119 ದೇಶಗಳು ಮತ ಚಲಾಯಿಸಿದರೆ, ಮ್ಯಾನ್ಮಾರ್‌ನ ನೆರೆಯ ರಾಷ್ಟ್ರಗಳಾದ ಭಾರತ, ಬಾಂಗ್ಲಾದೇಶ, ಭೂತಾನ್, ಚೀನಾ, ನೇಪಾಳ, ಥೈಲ್ಯಾಂಡ್, ಲಾವೋಸ್, ಮತ್ತು ರಷ್ಯಾ ಸೇರಿದಂತೆ 36 ದೇಶಗಳು ಮತದಾನದಲ್ಲಿ ಭಾಗವಹಿಸಲಿಲ್ಲ. ನಿರ್ಣಯದ ವಿರುದ್ಧ ಮತ ಚಲಾಯಿಸಿದ ಏಕೈಕ ದೇಶ ಬೆಲಾರಸ್.
ಭಾರತದ ನಡೆಯ ಹಿಂದಿನ ತರ್ಕವೇನು?
- ‘ಸಾಮಾನ್ಯ ಸಭೆ’ ಅಂಗೀಕರಿಸುವ ಮೊದಲು ನಮ್ಮ ಅಭಿಪ್ರಾಯಗಳು ‘ಕರಡು ನಿರ್ಣಯ’ದಲ್ಲಿ ಪ್ರತಿಫಲಿಸಿದಂತೆ ಕಾಣಲಿಲ್ಲ ಎಂದು ಭಾರತ ಹೇಳುತ್ತದೆ.
- ಈ ಸಮಯದಲ್ಲಿ ಈ ನಿರ್ಣಯವನ್ನು ಒಪ್ಪಿಕೊಳ್ಳುವುದು ‘ಮ್ಯಾನ್ಮಾರ್‌ನಲ್ಲಿನ ಪ್ರಜಾಪ್ರಭುತ್ವ ಪ್ರಕ್ರಿಯೆಯನ್ನು ಬಲಪಡಿಸುವ ನಮ್ಮ ಜಂಟಿ ಪ್ರಯತ್ನಗಳಿಗೆ ಅನುಕೂಲಕರವಲ್ಲ’ ಎಂದು ಭಾರತ ನಂಬಿದೆ.
ವಿಶ್ವಸಂಸ್ಥೆಯ ನಿರ್ಣಯದ ಕುರಿತು:
- ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರದ ವಿರುದ್ಧ ವ್ಯಾಪಕ ಜಾಗತಿಕ ಪ್ರತಿಭಟನೆಯನ್ನು ವ್ಯಕ್ತಪಡಿಸುವ ನಿರ್ಣಯವನ್ನು ಅಂಗೀಕರಿಸುವ ಮೂಲಕ ದೇಶದ ಮಿಲಿಟರಿ ದಂಗೆಯನ್ನು ಖಂಡಿಸಿದೆ.
- ನಿರ್ಣಯದಲ್ಲಿ, ಮ್ಯಾನ್ಮಾರ್ ವಿರುದ್ಧ ಶಸ್ತ್ರಾಸ್ತ್ರ ನಿರ್ಬಂಧವನ್ನು ಕೋರಿದೆ ಮತ್ತು ಪ್ರಜಾಸತ್ತಾತ್ಮಕವಾಗಿ ಚುನಾಯಿತವಾದ ಸರ್ಕಾರವನ್ನು ಪುನಃಸ್ಥಾಪಿಸಲು ಕರೆ ನೀಡಿದೆ.
- 2020 ರ ನವೆಂಬರ್ 8 ರಂದು ನಡೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳಿಂದ ಮುಕ್ತವಾಗಿ ವ್ಯಕ್ತಪಡಿಸಿದ ಜನರ ಇಚ್ಛೆಯನ್ನು ಗೌರವಿಸುವಂತೆ ಮ್ಯಾನ್ಮಾರ್‌ನ ಸಶಸ್ತ್ರ ಪಡೆಗಳಿಗೆ ನಿರ್ಣಯವು ಕರೆ ನೀಡಿದೆ.
ಭಾರತವು,ಮ್ಯಾನ್ಮಾರ್‌ನ ಸಂದರ್ಭದಲ್ಲಿ ಆಸಿಯಾನ್‌ನ ಒಂದು ಉಪಕ್ರಮ ಮತ್ತು (Five-Point Consensus) ಐದು ಅಂಶಗಳ ಸಹಮತಿ’ ಇವುಗಳನ್ನು ಬೆಂಬಲಿಸುತ್ತಿದೆ:
ಇದು ಒಳಗೊಂಡಿರುವುದು:
- ಹಿಂಸಾಚಾರಕ್ಕೆ ತಕ್ಷಣದ ನಿಲುಗಡೆ.
- ಶಾಂತಿಯುತ ಪರಿಹಾರಕ್ಕಾಗಿ ಮ್ಯಾನ್ಮಾರ್‌ನ ಎಲ್ಲ ಪಾಲುದಾರರ ನಡುವೆ ಸಂವಾದ.
- ಮಧ್ಯಸ್ಥಿಕೆಗಾಗಿ ವಿಶೇಷ ಆಸಿಯಾನ್ ರಾಯಭಾರಿಯ ನೇಮಕ.
- ಮ್ಯಾನ್ಮಾರ್‌ಗೆ ನೆರವು ನೀಡುವುದು.
- ಆಸಿಯಾನ್ ಪ್ರತಿನಿಧಿಯಿಂದ ಮ್ಯಾನ್ಮಾರ್‌ಗೆ ಭೇಟಿ ನೀಡಿಕೆ.
ಮ್ಯಾನ್ಮಾರ್‌ನ ಪರಿಸ್ಥಿತಿಯ ಬಗ್ಗೆ ಭಾರತ ಏಕೆ ಕಾಳಜಿ ವಹಿಸಬೇಕು?
ಭಾರತಕ್ಕೆ ಸಂಬಂಧಿಸಿದಂತೆ, ಮ್ಯಾನ್ಮಾರ್‌ನ ಪರಿಸ್ಥಿತಿಯ ದೃಷ್ಟಿಯಿಂದ ಸಾಕಷ್ಟು ಅಪಾಯವಿದೆ, ಏಕೆಂದರೆ ಮ್ಯಾನ್ಮಾರ್‌ನೊಳಗಿನ ನಿರಂತರ ಅಸ್ಥಿರತೆಯು ದೇಶದ ಈಶಾನ್ಯ ಪ್ರದೇಶದ ಮೇಲೆ ಗಂಭೀರ ಪರಿಣಾಮಗಳನ್ನು ಬೀರಬಹುದು.
- ಗೆರಿಲ್ಲಾ ಗುಂಪುಗಳು ಮ್ಯಾನ್ಮಾರ್‌ನಲ್ಲಿ ತಮ್ಮ ಚಟುವಟಿಕೆಗಳನ್ನು ಪುನರಾರಂಭಿಸಿದ ವರದಿಗಳಿವೆ, ಮತ್ತು ಆ ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಉಲ್ಲಂಘನೆಯು ಈಶಾನ್ಯ ಭಾರತದಲ್ಲಿನ ಭಯೋತ್ಪಾದಕ ಗುಂಪುಗಳಿಗೆ ಪರಿಸ್ಥಿತಿಯ ಲಾಭವನ್ನು ಪಡೆಯುವ ಅವಕಾಶವನ್ನು ನೀಡುತ್ತದೆ.
ಭಾರತದ ಮುಂದಿನ ಪ್ರತಿಕ್ರಿಯೆ:
ಈ ಬಾರಿ ಭಾರತದ ಪ್ರತಿಕ್ರಿಯೆ ವಿಭಿನ್ನವಾಗಿರಬಹುದು. ಭಾರತವು ಮ್ಯಾನ್ಮಾರ್‌ನಲ್ಲಿ ಪ್ರಜಾಪ್ರಭುತ್ವದ ಬಗ್ಗೆ ಕಾಳಜಿ ವಹಿಸುತ್ತದೆ ಮತ್ತು ಅದರ ಪ್ರಾಮುಖ್ಯತೆಯನ್ನು ತಿಳಿದುಕೊಂಡಿದ್ದರೂ ಸಹ ಮಿಲಿಟರಿ ದಂಗೆಯನ್ನು ವಿರೋಧಿಸಲು ಭಾರತಕ್ಕೆ ಸಾಧ್ಯವಿಲ್ಲ. ಏಕೆಂದರೆ:
- ಮ್ಯಾನ್ಮಾರ್‌ನ ಮಿಲಿಟರಿಯೊಂದಿಗೆ ಭಾರತದ ಭದ್ರತಾ ಸಂಬಂಧಗಳು ಅತ್ಯಂತ ಗಾಢವಾಗಿವೆ, ಮತ್ತು ಮ್ಯಾನ್ಮಾರ್ ಮಿಲಿಟರಿಯು ಭಾರತದ ಈಶಾನ್ಯ ಗಡಿಗಳನ್ನು ದಂಗೆಕೋರ ಗುಂಪುಗಳಿಂದ ಭದ್ರಪಡಿಸಿಕೊಳ್ಳಲು ನೆರವು ನೀಡುವ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ‘ಸಂಬಂಧಗಳ ಸೇತುವೆಯನ್ನು’ ಸುಡುವುದು ಭಾರತಕ್ಕೆ ಕಷ್ಟಕರವಾಗಿರುತ್ತದೆ ಅಂದರೆ ಮ್ಯಾನ್ಮಾರ್ ನೊಂದಿಗಿನ ರಾಜತಾಂತ್ರಿಕ ಸಂಬಂಧಗಳನ್ನು ಕಡಿದುಕೊಳ್ಳುವುದು ಕಷ್ಟಕರವಾಗಿರುತ್ತದೆ.
- ಸ್ವತಃ ಆಂಗ್ ಸಾನ್ ಸೂಕಿ ಅವರ ಬದಲಾದ ವ್ಯಕ್ತಿತ್ವ ಚಿತ್ರಣ: ಪ್ರಜಾಪ್ರಭುತ್ವದ ಸಂಕೇತವಾದ ಮತ್ತು ಶಾಂತಿ ನೊಬೆಲ್ ಪ್ರಶಸ್ತಿ ವಿಜೇತರಾದ ಶ್ರೀಮತಿ ಸೂಕಿ ಅವರ ಚಿತ್ರಣ ಅವರ ಅಧಿಕಾರಾವಧಿಯಲ್ಲಿ ಕಳಂಕಿತಗೊಂಡಿದೆ. 2015 ರಲ್ಲಿ ತನ್ನ ಅಧಿಕಾರಾವಧಿಯಲ್ಲಿ, ಶ್ರೀಮತಿ ಸೂಕಿ ರಾಖೈನ್ ರಾಜ್ಯದ ರೋಹಿಂಗ್ಯಾ ಸಮುದಾಯದ ವಿರುದ್ಧ ಮಿಲಿಟರಿಯು ಕ್ರೂರವಾಗಿ ನಡೆದುಕೊಳ್ಳುತ್ತಿರುವುದನ್ನು ತಡೆಯುವಲ್ಲಿ ವಿಫಲರಾದರು ಮತ್ತು ಈ ಪ್ರಕರಣದಲ್ಲಿ ಸೈನ್ಯದ ಕ್ರಮವನ್ನು ಸಮರ್ಥಿಸಿಕೊಂಡರು.
- ಚೀನಾಕ್ಕೆ ಲಾಭ: ಅಮೆರಿಕದಂತೆಯೇ ಭಾರತದ ಕಠಿಣ ಪ್ರತಿಕ್ರಿಯೆಯು ಮುಖ್ಯವಾಗಿ ಚೀನಾಕ್ಕೆ ಪ್ರಯೋಜನವನ್ನು ನೀಡುತ್ತದೆ. ಮಿಲಿಟರಿ ಆಕ್ರಮಣವನ್ನು ಕೊನೆಗೊಳಿಸದಿದ್ದರೆ “ದಂಗೆ” ಗೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಅಮೆರಿಕ ಬೆದರಿಕೆ ಹಾಕಿದೆ.
- ಕಾರ್ಯತಂತ್ರದ ಕಾಳಜಿಗಳ ಹೊರತಾಗಿ, ಭಾರತವು ಮ್ಯಾನ್ಮಾರ್‌ನಲ್ಲಿ ಹಲವಾರು ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳಲ್ಲಿ ಹೂಡಿಕೆ ಮಾಡಿದೆ. ಭಾರತವು ಇವುಗಳನ್ನು ಪೂರ್ವದ ಮತ್ತು ‘ಆಸಿಯಾನ್ ದೇಶಗಳೆಡೆಗಿನ ಹೆಬ್ಬಾಗಿಲು’ ಎಂದು ನೋಡುತ್ತದೆ. (ಉದಾಹರಣೆಗೆ: ಭಾರತ-ಮ್ಯಾನ್ಮಾರ್-ಥೈಲ್ಯಾಂಡ್ ತ್ರಿಪಕ್ಷೀಯ ಹೆದ್ದಾರಿ ಮತ್ತು ಕಲಾದನ್ ಮಲ್ಟಿ-ಮೋಡಲ್ ಟ್ರಾನ್ಸಿಟ್ ಟ್ರಾನ್ಸ್‌ಪೋರ್ಟ್ ನೆಟ್‌ವರ್ಕ್, ಸಿಟ್ವೆ ಆಳ ನೀರಿನ ಬಂದರಿನಲ್ಲಿ (Sittwe deep-water port) ವಿಶೇಷ ಆರ್ಥಿಕ ವಲಯದ ಯೋಜನೆ).
- ಇದಲ್ಲದೆ, ಬಾಂಗ್ಲಾದೇಶಕ್ಕೆ ಪಲಾಯನ ಮಾಡಿದ ರೋಹಿಂಗ್ಯಾ ನಿರಾಶ್ರಿತರ ಸಮಸ್ಯೆಯನ್ನು ಬಗೆಹರಿಸಲು ಭಾರತ ಇನ್ನೂ ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ ಮತ್ತು ಈ ವಿಷಯದ ಬಗ್ಗೆ ಮ್ಯಾನ್ಮಾರ್ ಸರ್ಕಾರದೊಂದಿಗೆ ಮಾತುಕತೆ ಮುಂದುವರಿಸಲು ಬಯಸುತ್ತದೆ. ಕೆಲವು ರೋಹಿಂಗ್ಯಾ ನಿರಾಶ್ರಿತರು ಭಾರತಕ್ಕೆ ವಲಸೆ ಬಂದಿದ್ದಾರೆ.
ಮ್ಯಾನ್ಮಾರ್‌ನ ಮಿಲಿಟರಿ ಸಂವಿಧಾನ:
2008 ರಲ್ಲಿ ಮ್ಯಾನ್ಮಾರ್‌ನಲ್ಲಿ ಮಿಲಿಟರಿಯಿಂದ ಸಂವಿಧಾನವನ್ನು ರಚಿಸಲಾಯಿತು ಮತ್ತು ಈ ವರ್ಷದ ಏಪ್ರಿಲ್‌ನಲ್ಲಿ ಪ್ರಶ್ನಾರ್ಹವಾದ ಜನಾಭಿಪ್ರಾಯ ಸಂಗ್ರಹಿಸಲಾಯಿತು.
- ಈ ಸಂವಿಧಾನವು ಸೈನ್ಯವು ರಚಿಸಿದ ‘ಪ್ರಜಾಪ್ರಭುತ್ವಕ್ಕೆ ಮಾರ್ಗಸೂಚಿ’ ಆಗಿದ್ದು, ಇದನ್ನು ಪಾಶ್ಚಿಮಾತ್ಯ ದೇಶಗಳ ಒತ್ತಡದಿಂದಾಗಿ ಮ್ಯಾನ್ ಮಾರ್ ಸೈನ್ಯವು ಅಂಗೀಕರಿಸಿತು.
- ಇದಲ್ಲದೆ, ಮ್ಯಾನ್ಮಾರ್ ಅನ್ನು ಹೊರಗಿನ ಪ್ರಪಂಚಕ್ಕೆ ತೆರೆಯುವುದು ಇನ್ನು ಮುಂದೆ ಒಂದು ಆಯ್ಕೆಯಾಗಿಲ್ಲ ಆದರೆ ಗಂಭೀರವಾದ ಆರ್ಥಿಕ ಅಗತ್ಯವಾಗಿದೆ ಎಂಬುದು ಮಿಲಿಟರಿ ಆಡಳಿತಕ್ಕೂ ಅರಿವಾಯಿತು.
- ಆದರೆ ಸೇನೆಯು ಸಂವಿಧಾನದಲ್ಲಿ ತನ್ನ ಪಾತ್ರವನ್ನು ಮತ್ತು ರಾಷ್ಟ್ರೀಯ ವ್ಯವಹಾರಗಳಲ್ಲಿ ತನ್ನ ಶ್ರೇಷ್ಟತೆ ಅಥವಾ ಪ್ರಾಬಲ್ಯವನ್ನು ಖಚಿತಪಡಿಸಿಕೊಂಡಿತ್ತು.
- ಸಂವಿಧಾನದ ನಿಬಂಧನೆಗಳ ಪ್ರಕಾರ, ಸಂಸತ್ತಿನ ಉಭಯ ಸದನಗಳಲ್ಲಿ 25 ಪ್ರತಿಶತ ಸ್ಥಾನಗಳನ್ನು ಸೈನ್ಯಕ್ಕಾಗಿ ಕಾಯ್ದಿರಿಸಲಾಗಿದೆ, ಅದರ ಮೇಲೆ ಸೇವಾ ನಿರತ ಮಿಲಿಟರಿ ಅಧಿಕಾರಿಗಳನ್ನು ನಾಮನಿರ್ದೇಶನ ಮಾಡಲಾಗುತ್ತದೆ.
- ಅಲ್ಲದೆ, ಸೈನ್ಯದ ಪರವಾಗಿ ಚುನಾವಣೆಗಳಲ್ಲಿ ಭಾಗವಹಿಸುವ ಪ್ರತಿನಿಧಿ ರಾಜಕೀಯ ಪಕ್ಷವನ್ನು ರಚಿಸಲಾಯಿತು.
ವಿಷಯಗಳು: ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಗುಂಪುಗಳು ಮತ್ತು ಭಾರತಕ್ಕೆ ಸಂಬಂಧಿಸಿದ ಒಪ್ಪಂದಗಳು ಮತ್ತು / ಅಥವಾ ಭಾರತದ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಅಂಶಗಳು.
ಚೀನಾ-ಹಾಂಗ್ ಕಾಂಗ್ ದ್ವಿಪಕ್ಷೀಯ ಸಂಬಂಧಗಳು:
(China- Hong Kong Relations)
ಸಂದರ್ಭ:
ಇತ್ತೀಚೆಗೆ, ‘ಟಿಯಾನನ್ಮೆನ್ ಸ್ಕ್ವೇರ್ ಹತ್ಯಾಕಾಂಡ’ದಲ್ಲಿ ಬಲಿಯಾದವರ ನೆನಪಿಗಾಗಿ ನಿರ್ಮಿಸಲಾದ ‘ಪಿಲ್ಲರ್ ಆಫ್ ಶೇಮ್’ (Pillar of Shame) ಸ್ಮಾರಕವನ್ನು ಚೀನಾ ಧ್ವಂಸಗೊಳಿಸಿದೆ.
‘ಪಿಲ್ಲರ್ ಆಫ್ ಶೇಮ್’:
‘ಪಿಲ್ಲರ್ ಆಫ್ ಶೇಮ್’ ಟಿಯಾನನ್ಮೆನ್ ಹತ್ಯಾಕಾಂಡವನ್ನು ನೆನಪಿಸುವ ಎಂಟು ಮೀಟರ್ ಎತ್ತರದ ಕಲ್ಲಿನ ಪ್ರತಿಮೆಯಾಗಿದೆ. ಅದರ ಮೇಲೆ ಟೊಳ್ಳಾದ ಕಣ್ಣುಗಳು ಮತ್ತು ತೆರೆದ ಬಾಯಿಯೊಂದಿಗೆ ಹಲವಾರು ಹೆಣೆದುಕೊಂಡಿರುವ ಮಾನವ ದೇಹಗಳನ್ನು– ನರಳುತ್ತಿರುವ ಮಾನವೀಯತೆಯನ್ನು- ಕೆತ್ತಲಾಗಿದೆ. ಈ ಕಲಾಕೃತಿಯನ್ನು ಜೂನ್ 1989 ರಲ್ಲಿ ಟಿಯಾನನ್ಮೆನ್ ಸ್ಕ್ವೇರ್ ನಲ್ಲಿ ಚೀನಾದ ದಮನಕಾರಿ ಕೃತ್ಯಕ್ಕೆ ಬಲಿಯಾದ ಬಲಿಪಶುಗಳಿಗೆ ಶ್ರದ್ಧಾಂಜಲಿ ಸಲ್ಲಿಸುವ ರೂಪದಲ್ಲಿ ಡ್ಯಾನಿಶ್ ಕಲಾವಿದ ಜೆನ್ಸ್ ಗಾಲ್ಶಿಯೋಟ್ ಅವರು ರಚಿಸಿದ್ದಾರೆ.
ಏನಿದು ಪ್ರಕರಣ?
- ಪ್ರತಿಮೆಯು 1997 ರಿಂದ ಹಾಂಗ್ ಕಾಂಗ್ ವಿಶ್ವವಿದ್ಯಾಲಯದಲ್ಲಿ (HKU) ನೆಲೆಗೊಂಡಿದೆ, ಇದನ್ನು ಹಾಂಗ್ ಕಾಂಗ್‌ನಲ್ಲಿ ‘ಜೂನ್ ವಿಜಿಲ್ಸ್’ ಎಂಬ ವಾರ್ಷಿಕ ಕಾರ್ಯಕ್ರಮದ ನಂತರ ವಿಕ್ಟೋರಿಯಾ ಪಾರ್ಕ್‌ನಲ್ಲಿ ಸ್ಥಾಪಿಸಲಾಯಿತು. ‘ತಿಯಾನನ್ಮೆನ್ ಹತ್ಯಾಕಾಂಡ’ವನ್ನು ನೆನಪಿಸಿಕೊಳ್ಳಲು ಪ್ರತಿ ವರ್ಷ ಸಾವಿರಾರು ಜನರು ಈ ಉದ್ಯಾನವನದಲ್ಲಿ ಸೇರುತ್ತಾರೆ.
- ಈ ವಿಜಿಲ್ ಸ್ವತಃ “ಒಂದು ದೇಶ, ಎರಡು ಆಡಳಿತ ವ್ಯವಸ್ಥೆಗಳು” (One Country, Two Systems) ಮಾದರಿಯ ಅಡಿಯಲ್ಲಿ ಹಾಂಗ್ ಕಾಂಗ್‌ನ ವಿಶೇಷ ಸ್ಥಾನಮಾನವನ್ನು ಸಂಕೇತಿಸುತ್ತದೆ. ಚೀನಾದ ಮುಖ್ಯ ಭೂಭಾಗದಲ್ಲಿ ‘ಜೂನ್ 4’ ಘಟನೆಯ ನೆನಪಿಗಾಗಿ ಕಾರ್ಯಕ್ರಮಗಳನ್ನು ಆಯೋಜಿಸುವುದನ್ನು ನಿಷೇಧಿಸಲಾಗಿದೆ ಎಂಬುದನ್ನು ತಿಳಿದಿರಲಿ. ಹಾಂಗ್ ಕಾಂಗ್‌ಗೆ ‘ಒಂದು ದೇಶ, ಎರಡು ಆಡಳಿತ ವ್ಯವಸ್ಥೆಗಳು’ ಮಾದರಿಯ ಅಡಿಯಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲು ಸ್ವಾತಂತ್ರ್ಯವಿದೆ.
- ಈ ವರ್ಷದ ಜೂನ್‌ನಲ್ಲಿ, ಪೊಲೀಸರು ಉದ್ಯಾನಕ್ಕೆ ಮುತ್ತಿಗೆ ಹಾಕಿದ ಕಾರಣ ಮೊದಲ ಬಾರಿಗೆ ‘ಜೂನ್ ವಿಜಿಲ್’ ಕಾರ್ಯಕ್ರಮವು ನಡೆಯಲಿಲ್ಲ.
- ‘ವಿಜಿಲ್’ ಮೇಲೆ ವಿಧಿಸಲಾದ ನಿಷೇಧವು ‘ಹಾಂಗ್ ಕಾಂಗ್‌ನ ವಿಶೇಷ ಸ್ವಾತಂತ್ರ್ಯ’ಗಳಲ್ಲಿ ಒಂದರ ಅಂತ್ಯದ ಸಂಕೇತವೆಂದು ಪರಿಗಣಿಸಿದರೆ, ಈ ಪ್ರತಿಮೆಯನ್ನು ತೆಗೆದುಹಾಕುವುದನ್ನು ಈಗ ಈ ಪಟ್ಟಿಗೆ ಸೇರಿಸಬಹುದಾಗಿದೆ.
ಹಾಂಕಾಂಗ್ನಲ್ಲಿ ಇತ್ತೀಚಿನ ಬದಲಾವಣೆಗಳು:
- ಬೀಜಿಂಗ್ ಜೂನ್ 2020 ರಲ್ಲಿ ಹೊಸ ರಾಷ್ಟ್ರೀಯ ಭದ್ರತಾ ಕಾನೂನನ್ನು ಅಂಗೀಕರಿಸಿದ ನಂತರ,ಇತ್ತೀಚಿನ ತಿಂಗಳುಗಳಲ್ಲಿ, ಹಾಂಗ್ ಕಾಂಗ್‌ನಲ್ಲಿ ಪತ್ರಿಕೆಗಳ ಮುಚ್ಚುವಿಕೆ ಮತ್ತು ಶಾಲೆಗಳು ಮತ್ತು ಕಾಲೇಜುಗಳಲ್ಲಿನ ಪಠ್ಯಕ್ರಮದ ಒಟ್ಟಾರೆ ಬದಲಾವಣೆಗಳು ಇತ್ಯಾದಿಗಳನ್ನು ತೀವ್ರವಾಗಿ ಮತ್ತು ವೇಗವಾಗಿ ಮಾಡಲಾಗಿದೆ. ಹೊಸ ರಾಷ್ಟ್ರೀಯ ಭದ್ರತಾ ಕಾನೂನಿನಲ್ಲಿ, ದಂಗೆ ಅಥವಾ ವಿಧ್ವಂಸಕ ಕೃತ್ಯಗಳಿಗೆ ಕಠಿಣ ಶಿಕ್ಷೆಗೆ ಅವಕಾಶವಿದೆ.
- ಈ ಕಾನೂನಿನ ಅಂಗೀಕಾರದ ನಂತರ, ಹಾಂಗ್ ಕಾಂಗ್ 2019 ರಲ್ಲಿ ಪ್ರಜಾಪ್ರಭುತ್ವ ಪರ ಪ್ರತಿಭಟನೆಗಳಿಗೆ ಸಾಕ್ಷಿಯಾಯಿತು. ಇದರಲ್ಲಿ ‘ಮುಖ್ಯ ಕಾರ್ಯನಿರ್ವಹಣಾಧಿಕಾರಿ’ ಹುದ್ದೆಗೆ ನೇರ ಚುನಾವಣೆ ನಡೆಸಬೇಕು ಎಂಬ ಬೇಡಿಕೆ ಇತ್ತು. ಪ್ರಸ್ತುತ ಈ ‘ಮುಖ್ಯ ಕಾರ್ಯನಿರ್ವಾಹಕ’ ಹುದ್ದೆಗೆ ನಾಮನಿರ್ದೇಶನ ಮಾಡಲಾಗುತ್ತದೆ.
- ಬೀಜಿಂಗ್ ಕೂಡ ಚುನಾವಣಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಬದಲಾಯಿಸಿದೆ. ಇದರ ಅಡಿಯಲ್ಲಿ, ಹಾಂಗ್ ಕಾಂಗ್‌ನ ವಿಧಾನಪರಿಷತ್ (Legislative Council – LegCo) ನಲ್ಲಿ ನೇರವಾಗಿ ಚುನಾಯಿತರಾಗುವ ಪ್ರತಿನಿಧಿಗಳ ಪಾಲನ್ನು 50% ರಿಂದ 22% ಕ್ಕೆ ಇಳಿಸಲಾಗಿದೆ. ಹೊಸ ನಿಯಮಗಳ ಅಡಿಯಲ್ಲಿ, ‘ಪರಿಶೀಲನಾ ಸಮಿತಿ’ಯನ್ನು ರಚಿಸಲಾಗಿದೆ, ಇದು “ದೇಶಭಕ್ತ” ಅಭ್ಯರ್ಥಿಗಳು ಮಾತ್ರ ಒಂದು ಹುದ್ದೆಗೆ ಆಯ್ಕೆಯಾಗಲು ಚುನಾವಣೆಯಲ್ಲಿ ಸ್ಪರ್ಧಿಸುವುದನ್ನು ಖಚಿತಪಡಿಸುತ್ತದೆ.
ಹಾಂಗ್ ಕಾಂಗ್ ಅನ್ನು ಹೇಗೆ ನಿರ್ವಹಿಸಲಾಗುತ್ತದೆ?
ಹಾಂಗ್ ಕಾಂಗ್ ಅನ್ನು ‘ಒಂದು ದೇಶ, ಎರಡು ಆಡಳಿತ ವ್ಯವಸ್ಥೆಗಳು’ (One Country Two Systems) ಎಂಬ ವಿಧಾನದಿಂದ ಆಳಲ್ಪಡುತ್ತಿದೆ. ‘ಹಾಂಗ್ ಕಾಂಗ್’ ಮತ್ತು ‘ಮಕಾವು’ ವಿಶೇಷ ಆಡಳಿತ ಪ್ರದೇಶಗಳು ಮತ್ತು ಎರಡೂ ಹಿಂದಿನ ವಸಾಹತುಗಳು.
ನೀತಿಯ ಪ್ರಕಾರ, ಹಾಂಗ್ ಕಾಂಗ್ ಮತ್ತು ಮಕಾವು, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾದ ಭಾಗವಾಗಿದ್ದರೂ, ಮುಖ್ಯ ಭೂಭಾಗದ ಚೀನಾದ ನೀತಿಗಳಿಗಿಂತ ವಿಭಿನ್ನ ಆರ್ಥಿಕ ಮತ್ತು ರಾಜಕೀಯ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬಹುದು.
- ಹಾಂಗ್ ಕಾಂಗ್ ಜುಲೈ 1, 1997 ರಿಂದ ಚೀನಾದ ನಿಯಂತ್ರಣಕ್ಕೆ ಮರಳಿತು, ಮತ್ತು ಮಕಾವು ಸಾರ್ವಭೌಮತ್ವವನ್ನು ಡಿಸೆಂಬರ್ 20, 1999 ರಂದು ಚೀನಾಕ್ಕೆ ವರ್ಗಾಯಿಸಲಾಯಿತು.
- ಈ ಪ್ರದೇಶಗಳು ತಮ್ಮದೇ ಕರೆನ್ಸಿಗಳು, ಆರ್ಥಿಕ ಮತ್ತು ಕಾನೂನು ವ್ಯವಸ್ಥೆಗಳನ್ನು ಹೊಂದಿವೆ, ಆದರೆ ರಕ್ಷಣಾ ಮತ್ತು ರಾಜತಾಂತ್ರಿಕತೆಯನ್ನು ಬೀಜಿಂಗ್ ನಿರ್ಧರಿಸುತ್ತದೆ.
- ಅವರ ಅಲ್ಪಾವಧಿಯ ಸಂವಿಧಾನವು 50 ವರ್ಷಗಳವರೆಗೆ ಮಾನ್ಯವಾಗಿರುತ್ತದೆ-ಅಂದರೆ, ಹಾಂಗ್ ಕಾಂಗ್‌ಗೆ 2047 ಮತ್ತು ಮಕಾವುಗೆ 2049 ರವರೆಗೆ. ಈ ಅವಧಿಯ ನಂತರದ ವ್ಯವಸ್ಥೆ ಹೇಗಿರುತ್ತದೆ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಇಲ್ಲ.
ಹಿನ್ನೆಲೆ:
ಇತ್ತೀಚೆಗೆ, ಹಾಂಗ್ ಕಾಂಗ್ ನ ನಾಯಕಿ ‘ಕ್ಯಾರಿ ಲ್ಯಾಮ್’ ಹಾಂಗ್ ಕಾಂಗ್ ನಲ್ಲಿ ವಿದೇಶಿ ನಿರ್ಬಂಧಗಳಿಗೆ ಪ್ರತಿಕ್ರಿಯಿಸಲು ಚೀನಾ ಮುಖ್ಯ ಭೂಪ್ರದೇಶದ ಕಾನೂನಿನ ಅನುಷ್ಠಾನವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ. ಹಾಂಕಾಂಗ್ ನಗರವು ಈಗ ಚೀನೀ ಕಾನೂನನ್ನು ಅಳವಡಿಸಿಕೊಳ್ಳಲು ಸಿದ್ಧವಾಗಿದೆ ಎಂಬುದಕ್ಕೆ ಇದು ಸ್ಪಷ್ಟ ಸಂಕೇತವಾಗಿದೆ.
ವಿದೇಶಿ ನಿರ್ಬಂಧಗಳಿಗೆ ಪ್ರತಿಕ್ರಿಯಿಸಲು ಹಾಂಗ್ ಕಾಂಗ್ ನಲ್ಲಿ ಚೀನೀ ಕಾನೂನು:
ಈ ಕಾನೂನನ್ನು ಬೀಜಿಂಗ್‌ನ ಶಾಸಕಾಂಗದ ಬದಲು ಹಾಂಗ್ ಕಾಂಗ್‌ನ ಶಾಸಕಾಂಗದ ಮೂಲಕ ಪರಿಚಯಿಸಲು ಪ್ರಸ್ತಾಪಿಸಲಾಗಿದೆ. ಈ ಕಾನೂನನ್ನು ಹಾಂಗ್ ಕಾಂಗ್‌ನ ‘ಕಿರು ಸಂವಿಧಾನ’ದ ಅನುಬಂಧಕ್ಕೆ ಸೇರಿಸಲಾಗುತ್ತದೆ. ಹಾಂಗ್ ಕಾಂಗ್ ನ ‘ಮಿನಿ-ಕಾನ್ಸ್ಟಿಟ್ಯೂಷನ್’ ಅನ್ನು ‘ಬೇಸಿಕ್ ಲಾ’ ಅಥವಾ ಮೂಲ ಕಾನೂನು ಎಂದು ಕರೆಯಲಾಗುತ್ತದೆ.
ಏನಿದು ‘ಪ್ರಸ್ತಾವಿತ ಕಾನೂನು’?
- ಜೂನ್ ನಲ್ಲಿ ಬೀಜಿಂಗ್‌ನಿಂದ ಒಂದು ಕಾನೂನನ್ನು ಅಂಗೀಕರಿಸಲಾಯಿತು, ಅದರ ಅಡಿಯಲ್ಲಿ ತಾರತಮ್ಯ ಮಾಡುವ ಅಥವಾ ಚೀನಾದ ನಾಗರಿಕರು ಅಥವಾ ಘಟಕಗಳ ವಿರುದ್ಧ ತಾರತಮ್ಯದ ವಿಧಾನಗಳನ್ನು ಅನ್ವಯಿಸುವ ವ್ಯಕ್ತಿಗಳು ಅಥವಾ ಸಂಸ್ಥೆಗಳನ್ನು ಚೀನಾ ಸರ್ಕಾರದ ‘ನಿರ್ಬಂಧ-ವಿರೋಧಿ ಪಟ್ಟಿಯಲ್ಲಿ’ (anti-sanctions list) ಸೇರಿಸಬಹುದು.
- ಚೀನೀ ಕಾನೂನಿನ ಪ್ರಕಾರ, ಈ ಪಟ್ಟಿಯಲ್ಲಿರುವ ವ್ಯಕ್ತಿಗಳಿಗೆ ಚೀನಾ ಪ್ರವೇಶವನ್ನು ನಿರಾಕರಿಸಬಹುದು ಅಥವಾ ದೇಶದಿಂದ ಹೊರಹಾಕಬಹುದು.
- ಕಾನೂನಿನ ಪ್ರಕಾರ, ಚೀನಾದಲ್ಲಿ ಅಂತಹ ವ್ಯಕ್ತಿಗಳ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಬಹುದು ಅಥವಾ ನಿಷ್ಕ್ರಿಯಗೊಳಿಸಬಹುದು. ಅವರು ಚೀನೀ ಘಟಕಗಳು ಅಥವಾ ನಾಗರಿಕರೊಂದಿಗೆ ವ್ಯಾಪಾರ ಮಾಡುವುದನ್ನು ಸಹ ನಿಷೇಧಿಸಬಹುದು.
ಈ ಕಾನೂನನ್ನು ಅನ್ವಯಿಸುವ ಅವಶ್ಯಕತೆಗಳು:
ತಂತ್ರಜ್ಞಾನ, ಹಾಂಕಾಂಗ್ ಮತ್ತು ದೂರದ ಪಶ್ಚಿಮ ಪ್ರದೇಶವಾದ ಕ್ಸಿನ್ಜಿಯಾಂಗ್ ಮತ್ತು ವ್ಯಾಪಾರ ವಾಣಿಜ್ಯದ ಕುರಿತು ಚೀನಾದ ಮೇಲೆ, ಅಮೆರಿಕ ಮತ್ತು ಯುರೋಪಿಯನ್ ಒಕ್ಕೂಟದ ಒತ್ತಡದಿಂದಾಗಿ ಕಾನೂನನ್ನು ತರಲಾಗಿದೆ.
ಈ ಕಾನೂನಿಗೆ ಸಂಬಂಧಿಸಿದ ಕಾಳಜಿಗಳು ಮತ್ತು ಸಮಸ್ಯೆಗಳು:
ಹಾಂಗ್ ಕಾಂಗ್ ನಲ್ಲಿ ಈ ಕಾನೂನನ್ನು ಜಾರಿಗೊಳಿಸುವುದರಿಂದ ‘ಜಾಗತಿಕ ಹಣಕಾಸು ಕೇಂದ್ರ’ ಎಂಬ ಖ್ಯಾತಿಯನ್ನು ಅದು ಕಳೆದುಕೊಳ್ಳಬಹುದು ಎಂದು ವಿಮರ್ಶಕರು ಎಚ್ಚರಿಸಿದ್ದಾರೆ.
ಸಾಮಾನ್ಯ ಅಧ್ಯಯನ ಪತ್ರಿಕೆ : 3
ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.
‘ಮೀಂದುಂ ಮಂಜಪ್ಪೈ’ ಯೋಜನೆ:
(‘Meendum Manjappai’ scheme)
ಸಂದರ್ಭ:
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ‘ಸಿಂಗಲ್ ಯೂಸ್ ಪ್ಲಾಸ್ಟಿಕ್’ / ಏಕ ಬಳಕೆಯ ಪ್ಲಾಸ್ಟಿಕ್ ಬ್ಯಾಗ್‌ಗಳ ಬದಲಿಗೆ ಬಟ್ಟೆಯ ಚೀಲಗಳ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ‘ಮೀಂದುಂ ಮಂಜಪ್ಪೈ’(‘Meendum Manjappai’ scheme) ಅಭಿಯಾನವನ್ನು ಪ್ರಾರಂಭಿಸಿದ್ದಾರೆ.
ತಮಿಳುನಾಡು ಸರ್ಕಾರ ಈಗಾಗಲೇ 14 ಬಗೆಯ ಪ್ಲಾಸ್ಟಿಕ್ ವಸ್ತುಗಳನ್ನು ನಿಷೇಧಿಸಿದೆ.
ಅವಶ್ಯಕತೆ:
ಪ್ಲಾಸ್ಟಿಕ್ ವಸ್ತುಗಳ ಮೇಲಿನ ನಿಷೇಧ ಪರಿಣಾಮಕಾರಿಯಾಗಿರಲು ಈ ಅಭಿಯಾನವನ್ನು ಜಾರಿಗೊಳಿಸುವುದು ಅತ್ಯಗತ್ಯವಾಗಿದೆ.
- ಸರ್ಕಾರಕ್ಕೆ, ಪ್ಲಾಸ್ಟಿಕ್ ಪರ್ಯಾಯಗಳ ಬಳಕೆಯನ್ನು ನಿಯಂತ್ರಿಸಲು,ಮರುಬಳಕೆಯನ್ನು ಸುಧಾರಿಸಲು ಮತ್ತು ಉತ್ತಮ ತ್ಯಾಜ್ಯ ವಿಂಗಡಣೆ ನಿರ್ವಹಣೆಯಂತಹ ನೀತಿಗಳಂತಹ ನಿರ್ಣಾಯಕ ರಚನಾತ್ಮಕ ಸಮಸ್ಯೆಗಳನ್ನು ಪರಿಹರಿಸುವ ಅವಶ್ಯಕತೆಯಿದೆ.
- ಮರುಬಳಕೆಯ ಸಾಮರ್ಥ್ಯವನ್ನು ಸುಧಾರಿಸುವುದರ ಜೊತೆಗೆ, ಈ ಸಮಸ್ಯೆಯನ್ನು ನಿಭಾಯಿಸಲು ಇತರ ಪರ್ಯಾಯಗಳಿಗಾಗಿ ಸಂಶೋಧನೆ ಮತ್ತು ಅಭಿವೃದ್ಧಿಯಲ್ಲಿ ಹೂಡಿಕೆ ಮಾಡುವುದು ಸಹ ಆದ್ಯತೆಯಾಗಿರಬೇಕು.
‘ಏಕ-ಬಳಕೆಯ ಪ್ಲಾಸ್ಟಿಕ್’ / ಸಿಂಗಲ್ ಯೂಸ್ ಪ್ಲಾಸ್ಟಿಕ್ಎಂದರೇನು?
‘ಸಿಂಗಲ್-ಯೂಸ್ ಪ್ಲಾಸ್ಟಿಕ್’ ಎನ್ನುವುದು ಬಿಸಾಡಬಹುದಾದ ಪ್ಲಾಸ್ಟಿಕ್‌ನ ಒಂದು ರೂಪವಾಗಿದ್ದು ಅದನ್ನು ಕೇವಲ ಒಂದು ಬಾರಿ ಬಳಕೆ ಮಾಡಿ ಎಸೆಯಬಹುದು ಅಥವಾ ನೀರಿನ ಬಾಟಲ್, ಒಣಹುಲ್ಲಿನ, ಕಪ್ ಇತ್ಯಾದಿಗಳಂತೆ ಮರುಬಳಕೆ ಮಾಡಬಹುದು.
ಪ್ಲಾಸ್ಟಿಕ್ ಪ್ಯಾಕೇಜಿಂಗ್ ತ್ಯಾಜ್ಯ ತೆಗೆಯುವ ಉತ್ಪನ್ನಗಳಲ್ಲಿ ‘ಏಕ ಬಳಕೆ ಪ್ಲಾಸ್ಟಿಕ್ ವಸ್ತುಗಳನ್ನು’ ಇನ್ನೂ ಸೇರಿಸಲಾಗಿಲ್ಲ.
ಕೆಲವು ಗಮನಾರ್ಹ ಸಂಗತಿಗಳು:
- ಭಾರತದಲ್ಲಿ ತಲಾ ಪ್ಲಾಸ್ಟಿಕ್ ಬಳಕೆ ವರ್ಷಕ್ಕೆ 11 ಕೆಜಿ ಆಗಿದ್ದು, ಜಾಗತಿಕ ಸರಾಸರಿ ತಲಾ ಪ್ಲಾಸ್ಟಿಕ್ ಬಳಕೆ ವರ್ಷಕ್ಕೆ 28 ಕೆಜಿ ಗೆ ಹೋಲಿಸಿದರೆ,ಇದು ಇಂದಿಗೂ ವಿಶ್ವದಲ್ಲೇ ಅತ್ಯಂತ ಕಡಿಮೆ.
- ಭಾರತದಾದ್ಯಂತ ಪ್ರತಿದಿನ ಸುಮಾರು 26,000 ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ ಮತ್ತು ಸುಮಾರು 10,000 ಟನ್ ನಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಲಾಗುವುದಿಲ್ಲ.
ಪ್ಲಾಸ್ಟಿಕ್ ತಯಾರಿಸಲು ಬಳಸುವ ವಸ್ತುಗಳನ್ನು ನಿಷೇಧಿಸಲು ಕಾರಣಗಳು:
- ಪ್ಲಾಸ್ಟಿಕ್‌ಗಳು ಅಗ್ಗದ, ಹಗುರವಾದ ಮತ್ತು ಉತ್ಪಾದಿಸಲು ಸುಲಭವಾದ ಕಾರಣ, ಕಳೆದ ಶತಮಾನದಲ್ಲಿ ಅವುಗಳ ಉತ್ಪಾದನೆಯು ಗಮನಾರ್ಹವಾಗಿ ವೇಗಗೊಂಡಿದೆ. ವಿಶ್ವಸಂಸ್ಥೆಯ ಪ್ರಕಾರ, ಮುಂಬರುವ ದಶಕಗಳಲ್ಲಿ ಈ ಪ್ರವೃತ್ತಿ ಮುಂದುವರಿಯುವ ಸಾಧ್ಯತೆಯಿದೆ.
- ಆದರೆ, ಈಗ ಬಹುತೇಕ ಎಲ್ಲಾ ದೇಶಗಳು ತಮ್ಮಿಂದ ಉತ್ಪತ್ತಿಯಾಗುವ ಪ್ಲಾಸ್ಟಿಕ್ ತ್ಯಾಜ್ಯದ ಪ್ರಮಾಣವನ್ನು ನಿರ್ವಹಿಸಲು ಹೆಣಗಾಡುತ್ತಿವೆ.
ಭಾರತದಾದ್ಯಂತ, ಪ್ರತಿದಿನ ಸುಮಾರು 60% ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತದೆ – ಅಂದರೆ ಉಳಿದ 40% ಅಥವಾ 10,376 ಟನ್ ತ್ಯಾಜ್ಯವನ್ನು ಸಂಗ್ರಹಿಸಲಾಗುತ್ತಿಲ್ಲ.
ಹಿನ್ನೆಲೆ:
2019 ರ ವರ್ಷದಲ್ಲಿ, ದೇಶಾದ್ಯಂತ ‘ಏಕ-ಬಳಕೆಯ ಪ್ಲಾಸ್ಟಿಕ್’ ಬಳಕೆಯನ್ನು ನಿರುತ್ಸಾಹಗೊಳಿಸಲು, 2022 ರ ವೇಳೆಗೆ ಭಾರತವನ್ನು ‘ಏಕ-ಬಳಕೆಯ ಪ್ಲಾಸ್ಟಿಕ್’ನಿಂದ ಮುಕ್ತಗೊಳಿಸಲು ಕೇಂದ್ರ ಸರ್ಕಾರವು ಬಹು-ಮಂತ್ರಿ ಮಂಡಲ ಯೋಜನೆಯನ್ನು ಸಿದ್ಧಪಡಿಸಿತ್ತು.
ಕಾರ್ಯತಂತ್ರ:
ಸರ್ಕಾರಿ ಸಮಿತಿಯು,‘ಸಿಂಗಲ್ ಯೂಸ್ ಪ್ಲಾಸ್ಟಿಕ್’ (SUP) ಮೂಲಕ ತಯಾರಿಸಿದ ವಸ್ತುಗಳನ್ನು ಅವುಗಳ ಉಪಯುಕ್ತತೆ ಮತ್ತು ಪರಿಸರ ಪ್ರಭಾವದ ಸೂಚ್ಯಂಕದ ಆಧಾರದ ಮೇಲೆ ನಿಷೇಧಿಸಲು ಸೂಚಿಸಿದೆ ಎಂದು ಗುರುತಿಸಲಾಗಿದೆ. ಇದನ್ನು ಮೂರು ಹಂತಗಳಲ್ಲಿ ನಿಷೇಧಿಸಲು ಸಮಿತಿ ಪ್ರಸ್ತಾಪಿಸಿದೆ:
- ‘ಸಿಂಗಲ್ ಯೂಸ್ ಪ್ಲಾಸ್ಟಿಕ್’ ನಿಂದ ತಯಾರಿಸಿದ ಸರಕುಗಳ ಮೊದಲ ವರ್ಗವು ಬಲೂನುಗಳು, ಧ್ವಜಗಳು, ಕ್ಯಾಂಡಿ, ಐಸ್ ಕ್ರೀಮ್ ಮತ್ತು ‘ಇಯರ್ ಬಡ್ಸ್ ಗಳು’ ಮತ್ತು ಅಲಂಕಾರಗಳಲ್ಲಿ ಬಳಸುವ ಥರ್ಮೋಕೋಲ್ ನಲ್ಲಿ ಬಳಸುವ ಪ್ಲಾಸ್ಟಿಕ್ ತುಂಡುಗಳನ್ನು ಒಳಗೊಂಡಿದೆ.
- ಎರಡನೆಯ ವಿಭಾಗದಲ್ಲಿ, ಪ್ಲೇಟ್‌ಗಳು, ಕಪ್‌ಗಳು, ಕನ್ನಡಕ ಮತ್ತು ಕಟ್ಲರಿಗಳಾದ ಚಾಪ್‌ಸ್ಟಿಕ್‌ಗಳು, ಚಮಚಗಳು, ಸ್ಟ್ರಾಗಳು ಮತ್ತು ಟ್ರೇಗಳು; ಸಿಹಿ ಪೆಟ್ಟಿಗೆಗಳ ಪ್ಯಾಕಿಂಗ್‌ನಲ್ಲಿ ಬಳಸುವ ಚಿತ್ರಗಳು; ಆಮಂತ್ರಣ ಪತ್ರವನ್ನು; 100 ಮೈಕ್ರಾನ್‌ಗಳಿಗಿಂತ ಕಡಿಮೆ ದಪ್ಪವಿರುವ ಸಿಗರೆಟ್ ಪ್ಯಾಕೆಟ್‌ಗಳು ಮತ್ತು ಪ್ಲಾಸ್ಟಿಕ್ ಬ್ಯಾನರ್‌ಗಳು. 2022 ರ ಜುಲೈ 1 ರಿಂದ ಜಾರಿಗೆ ಬರುವಂತೆ ಈ ವರ್ಗದ ವಸ್ತುಗಳನ್ನು ನಿಷೇಧಿಸಲು ಉದ್ದೇಶಿಸಲಾಗಿದೆ.
- ನಿಷೇಧಿತ ‘ಸಿಂಗಲ್ ಯೂಸ್ ಪ್ಲಾಸ್ಟಿಕ್’ಗಳ ಮೂರನೇ ವರ್ಗದಲ್ಲಿ, 240 ಮೈಕ್ರಾನ್‌ಗಳಿಗಿಂತ ಕಡಿಮೆ ದಪ್ಪವಿರುವ ನೇಯದ ಚೀಲ (non-woven) ಗಳನ್ನು ಸೇರಿಸಲಾಗಿದೆ.ಇದನ್ನು ಮುಂದಿನ ವರ್ಷದ ಸೆಪ್ಟೆಂಬರ್‌ನಿಂದ ಪ್ರಾರಂಭಿಸಲು ಉದ್ದೇಶಿಸಲಾಗಿದೆ.
ಮುಂದಿರುವ ಸವಾಲುಗಳು:
- ಭಾರತದಾದ್ಯಂತ ದಿನಕ್ಕೆ ಸುಮಾರು 26,000 ಟನ್ ಪ್ಲಾಸ್ಟಿಕ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ, ಅದರಲ್ಲಿ 10,000 ಟನ್‌ಗಿಂತ ಹೆಚ್ಚಿನ ತ್ಯಾಜ್ಯವನ್ನು ಸಂಗ್ರಹಿಸಲಾಗುವುದಿಲ್ಲ; ಇದನ್ನು ಗಮನಿಸಿದಾಗ, ‘ಸಿಂಗಲ್ ಯೂಸ್ ಪ್ಲಾಸ್ಟಿಕ್’ ಅನ್ನು ನಿಷೇಧಿಸುವುದು ಸುಲಭದ ಕೆಲಸವಲ್ಲ.
- ನದಿಗಳು, ಸಾಗರಗಳು ಮತ್ತು ಬಂಜರು ಭೂಮಿಯಲ್ಲಿ ದೊಡ್ಡ ಪ್ರಮಾಣದ ಪ್ಲಾಸ್ಟಿಕ್ ಅನ್ನು ಎಸೆಯಲಾಗುತ್ತದೆ.
ಮುಂದೆ ಕೈಗೊಳ್ಳಬೇಕಿರುವ ಕ್ರಮಗಳೇನು?
- ಇದನ್ನು ಎದುರಿಸಲು ಸರ್ಕಾರವು ಮೊದಲು ಆರ್ಥಿಕ ಮತ್ತು ಪರಿಸರ ವೆಚ್ಚ-ಲಾಭದ ಬಗ್ಗೆ ಸಮಗ್ರ ವಿಶ್ಲೇಷಣೆ ಮಾಡಬೇಕು.
- ಈ ನಿಷೇಧ ಯಶಸ್ವಿಯಾಗಲು, ಯೋಜನೆಯು ಸಾಮಾಜಿಕ ಮತ್ತು ಆರ್ಥಿಕ ಪರಿಣಾಮಗಳನ್ನು ಗಣನೆಗೆ ತೆಗೆದುಕೊಳ್ಳಬೇಕು.
- ನಮಗೆ ಉತ್ತಮ ಮರುಬಳಕೆ ನೀತಿಗಳು ಬೇಕಾಗುತ್ತವೆ ಏಕೆಂದರೆ ನಾವು ಸಂಪನ್ಮೂಲಗಳ ಲಭ್ಯತೆಯು ಕಡಿಮೆ ಇದೆ, ಮತ್ತು ಮೇಲಾಗಿ, ಸಮಗ್ರ ಕಾರ್ಯತಂತ್ರದ ಅಗತ್ಯವಿದೆ.
ವಿಷಯಗಳು: ವಿವಿಧ ಭದ್ರತಾ ಪಡೆಗಳು ಮತ್ತು ಏಜೆನ್ಸಿಗಳು ಮತ್ತು ಅವುಗಳ ಆದೇಶಗಳು.
ರಾಷ್ಟ್ರೀಯ ತನಿಖಾ ಸಂಸ್ಥೆ:
(National Investigation Agency (NIA)
ಸಂದರ್ಭ:
ಈ ವರ್ಷದ ಜೂನ್‌ನಲ್ಲಿ ಜಮ್ಮು ಮತ್ತು ಕಾಶ್ಮೀರದ ಭಟಿಂಡಿಯಲ್ಲಿ ‘ಸುಧಾರಿತ ಸ್ಫೋಟಕ ಸಾಧನ’ (improvised explosive device – IED) ಮರುಪಡೆಯುವಿಕೆಗೆ ಸಂಬಂಧಿಸಿದಂತೆ ಮೂವರು ಆರೋಪಿಗಳ ವಿರುದ್ಧ ರಾಷ್ಟ್ರೀಯ ತನಿಖಾ ಸಂಸ್ಥೆ (National Investigation Agency- NIA) ಯು ಚಾರ್ಜ್‌ಶೀಟ್ ಸಲ್ಲಿಸಿದೆ.
ಹಿನ್ನೆಲೆ:
ತನಿಖೆಯ ವೇಳೆ, ಮೂವರು ಆರೋಪಿಗಳು ವಾಟ್ಸಾಪ್ ಮೂಲಕ ಪಾಕಿಸ್ತಾನ ಮೂಲದ ಹ್ಯಾಂಡ್ಲರ್‌ಗಳಿಂದ ಸೂಚನೆಗಳನ್ನು ಪಡೆಯುತ್ತಿದ್ದರು ಎಂದು ತಿಳಿದುಬಂದಿದೆ. ಭಾರತೀಯ ಸರ್ಕಾರದ ವಿರುದ್ಧ ಯುದ್ಧ ನಡೆಸಲು ಭದ್ರತಾ ಸಿಬ್ಬಂದಿ ಮತ್ತು ಸಾರ್ವಜನಿಕ ಸ್ಥಳಗಳನ್ನು ಗುರಿಯಾಗಿಸಿ ಕಾಶ್ಮೀರದಲ್ಲಿ ಹೆಚ್ಚಿನ ಸಂಖ್ಯೆಯ ತೀವ್ರಗಾಮಿ ಯುವಕರನ್ನು ಸಕ್ರಿಯಗೊಳಿಸುವ ಮತ್ತು ನೇಮಕ ಮಾಡುವ ಪ್ರಮುಖ ಪಿತೂರಿಯನ್ನು ತನಿಖೆಯು ಬಹಿರಂಗಪಡಿಸಿದೆ.
ರಾಷ್ಟ್ರೀಯ ತನಿಖಾ ಸಂಸ್ಥೆ (NIA):
ರಾಷ್ಟ್ರೀಯ ಅನ್ವೇಷಕ ಏಜೆನ್ಸಿ (National Investigation Agency- NIA) ಯನ್ನು ಸಾಮಾನ್ಯವಾಗಿ ‘ರಾಷ್ಟ್ರೀಯ ತನಿಖಾ ಸಂಸ್ಥೆ’ (NIA) ಎಂದು ಕರೆಯಲಾಗುತ್ತದೆ.
ಇದು ಈ ಕೆಳಗಿನ ಪ್ರಕರಣಗಳಲ್ಲಿನ ಅಪರಾಧಗಳ ತನಿಖೆ ಮಾಡುವ ಮತ್ತು ಕಾನೂನು ಕ್ರಮ ಜರುಗಿಸುವ ಕೇಂದ್ರೀಯ ಸಂಸ್ಥೆಯಾಗಿದೆ:
- ಭಾರತದ ಸಾರ್ವಭೌಮತ್ವ, ಭದ್ರತೆ ಮತ್ತು ಸಮಗ್ರತೆ, ರಾಜ್ಯದ ಭದ್ರತೆ, ವಿದೇಶಿ ರಾಜ್ಯಗಳೊಂದಿಗೆ ಸೌಹಾರ್ದ ಸಂಬಂಧಗಳ ಮೇಲೆ ಪರಿಣಾಮ ಬೀರುವ ಅಪರಾಧಗಳು.
- ಪರಮಾಣು ಮತ್ತು ಪರಮಾಣು ಸೌಲಭ್ಯಗಳ ವಿರುದ್ಧದ ಅಪರಾಧಗಳು.
- ಉತ್ತಮ ಗುಣಮಟ್ಟದ ನಕಲಿ ಭಾರತೀಯ ಕರೆನ್ಸಿಯ ಕಳ್ಳಸಾಗಣೆ.
ಇದಲ್ಲದೆ, NIA ಯು ‘ಕೇಂದ್ರೀಯ ಭಯೋತ್ಪಾದನೆ ನಿಗ್ರಹ ಕಾನೂನು ಜಾರಿ ಸಂಸ್ಥೆ’ (Central Counter Terrorism Law Enforcement Agency) ಯಾಗಿಯೂ ಕಾರ್ಯನಿರ್ವಹಿಸುತ್ತದೆ.
- ರಾಜ್ಯಗಳ ವಿಶೇಷ ಅನುಮತಿಯಿಲ್ಲದೆ, ರಾಜ್ಯಗಳಲ್ಲಿ ಭಯೋತ್ಪಾದನೆ ಸಂಬಂಧಿತ ಅಪರಾಧಗಳನ್ನು ತನಿಖೆ ಮಾಡುವ ಅಧಿಕಾರವನ್ನು ಹೊಂದಿದೆ.
- ರಾಷ್ಟ್ರೀಯ ತನಿಖಾ ಸಂಸ್ಥೆ ಕಾಯಿದೆ 2008 ರ ಅಡಿಯಲ್ಲಿ NIA ಯನ್ನು ಸ್ಥಾಪಿಸಲಾಗಿದೆ.
- ಇದು ಗೃಹ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.
ನ್ಯಾಯವ್ಯಾಪ್ತಿ:
ಎನ್‌ಐಎ ಕಾಯಿದೆಯ ವೇಳಾಪಟ್ಟಿಯಲ್ಲಿ ಒಳಗೊಂಡಿರುವ ಅಪರಾಧಗಳೊಳಗೆ ‘ಪ್ರಕರಣ’ ಬರುವುದಾದರೆ, ಪ್ರಕರಣದ ತನಿಖೆಯನ್ನು ಎನ್‌ಐಎಗೆ ಹಸ್ತಾಂತರಿಸುವಂತೆ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರವನ್ನು ಕೋರಬಹುದು.
ಭಾರತದಲ್ಲಿ ಎಲ್ಲಿಯಾದರೂ ಯಾವುದೇ ನಿಗದಿತ ಅಪರಾಧವನ್ನು ತನಿಖೆ ಮಾಡಲು ಕೇಂದ್ರ ಸರ್ಕಾರವು NIA ಗೆ ಆದೇಶಿಸಬಹುದು.
ಸಂರಚನೆ: ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ಅಧಿಕಾರಿಗಳನ್ನು ಭಾರತೀಯ ಪೊಲೀಸ್ ಸೇವೆ ಮತ್ತು ಭಾರತೀಯ ಕಂದಾಯ ಸೇವೆಯಿಂದ ಪಡೆಯಲಾಗುತ್ತದೆ.
NIA ವಿಶೇಷ ನ್ಯಾಯಾಲಯಗಳು:
ಕೇಂದ್ರ ಸರ್ಕಾರವು ಎನ್‌ಐಎ ಕಾಯಿದೆಯಡಿ ಹಲವು ವಿಶೇಷ ನ್ಯಾಯಾಲಯಗಳ ಸ್ಥಾಪನೆಗೆ ಅಧಿಸೂಚನೆ ಹೊರಡಿಸಿದೆ.
- ಯಾವುದೇ ನಿರ್ದಿಷ್ಟ ನ್ಯಾಯಾಲಯದ ವ್ಯಾಪ್ತಿಗೆ ಸಂಬಂಧಿಸಿದ ಯಾವುದೇ ಪ್ರಶ್ನೆಯನ್ನು ಕೇಂದ್ರ ಸರ್ಕಾರವು ನಿರ್ಧರಿಸುತ್ತದೆ.
- ಸಂಬಂಧಪಟ್ಟ ಪ್ರದೇಶದ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರ ಶಿಫಾರಸಿನ ಮೇರೆಗೆ ಕೇಂದ್ರ ಸರ್ಕಾರದಿಂದ ನೇಮಕಗೊಂಡ ನ್ಯಾಯಾಧೀಶರು ವಿಶೇಷ ನ್ಯಾಯಾಲಯದ ಅಧ್ಯಕ್ಷತೆ ವಹಿಸುತ್ತಾರೆ.
- ಭಾರತದ ಸರ್ವೋಚ್ಚ ನ್ಯಾಯಾಲಯವು ಯಾವುದೇ ವಿಶೇಷ ನ್ಯಾಯಾಲಯದ ಮುಂದೆ ಬಾಕಿ ಇರುವ ಯಾವುದೇ ಪ್ರಕರಣವನ್ನು ಆ ರಾಜ್ಯದ ಅಥವಾ ಯಾವುದೇ ರಾಜ್ಯದ ವಿಶೇಷ ನ್ಯಾಯಾಲಯಕ್ಕೆ ವರ್ಗಾಯಿಸುವ ಅಧಿಕಾರವನ್ನು ಹೊಂದಿದೆ.
NIA ವಿಶೇಷ ನ್ಯಾಯಾಲಯಗಳ ಅಧಿಕಾರಗಳು:
NIA ಯ ವಿಶೇಷ ನ್ಯಾಯಾಲಯಗಳು ಯಾವುದೇ ಅಪರಾಧವನ್ನು ವಿಚಾರಣೆ ಮಾಡಲು ಕ್ರಿಮಿನಲ್ ಪ್ರೊಸೀಜರ್ ಕೋಡ್, 1973 ರ ಅಡಿಯಲ್ಲಿ ಸೆಷನ್ಸ್ ನ್ಯಾಯಾಲಯಗಳ ಎಲ್ಲ ಅಧಿಕಾರಗಳನ್ನು ಹೊಂದಿವೆ.
ಅಪೀಲ್/ಮೇಲ್ಮನವಿಗಳು:
ವಿಶೇಷ ನ್ಯಾಯಾಲಯದ ಯಾವುದೇ ತೀರ್ಪು, ಶಿಕ್ಷೆ ಅಥವಾ ಆದೇಶದ ವಿರುದ್ಧ, ಸತ್ಯ ಮತ್ತು ಕಾನೂನಿನ ಆಧಾರದ ಮೇಲೆ, ಮೇಲ್ಮನವಿಯನ್ನು ಹೈಕೋರ್ಟ್‌ನಲ್ಲಿ ಸಲ್ಲಿಸಬಹುದು. ರಾಜ್ಯ ಸರ್ಕಾರಗಳು ತಮ್ಮ ರಾಜ್ಯಗಳಲ್ಲಿ ಒಂದು ಅಥವಾ ಹೆಚ್ಚಿನ ವಿಶೇಷ ನ್ಯಾಯಾಲಯಗಳನ್ನು ನೇಮಿಸುವ ಅಧಿಕಾರವನ್ನು ಹೊಂದಿವೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
ತಬ್ಲೀಘಿ ಜಮಾತ್:
(Tablighi Jamaat)
- ಅಕ್ಷರಶಃ, ‘ತಬ್ಲೀಘಿ ಜಮಾತ್’ ಎಂದರೆ ಧರ್ಮವನ್ನು ಪ್ರಸಾರ ಮಾಡುವ ಸಮಾಜ ಎಂದರ್ಥ ಅದೊಂದು ಸಂಪ್ರದಾಯವಾದಿ ಮುಸ್ಲಿಂ ಸಂಘಟನೆಯಾಗಿದೆ.
- ಅದೊಂದು ಸುನ್ನಿ ಇಸ್ಲಾಮಿಸ್ಟ್ ಪ್ರಸಾರ ಚಳುವಳಿಯಾಗಿದೆ. ಇದು ಸಾಮಾನ್ಯ ಮುಸ್ಲಿಮರನ್ನು ತಲುಪಲು ಮತ್ತು ವಿಶೇಷವಾಗಿ ಆಚರಣೆ, ಉಡುಗೆ ಮತ್ತು ವೈಯಕ್ತಿಕ ನಡವಳಿಕೆಯ ವಿಷಯಗಳಲ್ಲಿ ಅವರ ನಂಬಿಕೆಯನ್ನು ಪುನರುಜ್ಜೀವನಗೊಳಿಸುವ ಗುರಿಯನ್ನು ಹೊಂದಿದೆ.
- ಇದು ಬಾಂಗ್ಲಾದೇಶ, ಪಾಕಿಸ್ತಾನ, ಯುಎಸ್ಎ, ಯುಕೆ, ಇಂಡೋನೇಷ್ಯಾ, ಮಲೇಷ್ಯಾ ಮತ್ತು ಸಿಂಗಾಪುರ ಸೇರಿದಂತೆ ವಿವಿಧ ದೇಶಗಳಲ್ಲಿ ಗಮನಾರ್ಹ ನೆಲೆಯನ್ನು ಹೊಂದಿದೆ.
ಚಳುವಳಿಯ ಪ್ರಾರಂಭ:
- ‘ತಬ್ಲೀಘಿ ಜಮಾತ್’ ಅನ್ನು 1926 ರಲ್ಲಿ ಮೇವಾತ್ (ಹರಿಯಾಣ) ನಲ್ಲಿ ಪ್ರಮುಖ ಇಸ್ಲಾಮಿಕ್ ವಿದ್ವಾಂಸ ಮೌಲಾನಾ ಮುಹಮ್ಮದ್ ಇಲ್ಯಾಸ್ ಖಂಡ್ಲಾವ್ ಅವರು ಪ್ರಾರಂಭಿಸಿದರು.
- ಇದರ ಬೇರುಗಳು ಹನಾಫಿ ಪಂಥದ ನ್ಯಾಯಶಾಸ್ತ್ರದ ದೇವಬಂದಿ ಆವೃತ್ತಿಯಲ್ಲಿವೆ.
- ಮೌಲಾನಾ ಇಲ್ಯಾಜ್ ಅವರು ದೇವಬಂದ್ ಮತ್ತು ಸಹರಾನ್‌ಪುರದ ಅನೇಕ ಯುವಕರಿಗೆ ತರಬೇತಿ ನೀಡಿದರು ಮತ್ತು ಅವರನ್ನು ಮೇವಾತ್‌ಗೆ ಕಳುಹಿಸಿದರು, ಅಲ್ಲಿ ತಬ್ಲೀಘಿ ಜಮಾತ್‌ನಿಂದ ಮದರಸಾಗಳು ಮತ್ತು ಮಸೀದಿಗಳ ಜಾಲವನ್ನು ಸ್ಥಾಪಿಸಲಾಗಿದೆ.
ತಬ್ಲೀಘಿ ಜಮಾತ್ ಈ ಕೆಳಗಿನ ಆರು ತತ್ವಗಳನ್ನು ಆಧರಿಸಿದೆ:
- ಕಲಿಮಾ (Kalimah), ಎಂದರೆ ಧಾರ್ಮಿಕ ಪಠ್ಯ/ನಂಬಿಕೆಯ ಪಠ್ಯ, ಇದರಲ್ಲಿ ತಬ್ಲಿಘಿಯು ಅಲ್ಲಾನನ್ನು ಹೊರತುಪಡಿಸಿ ಯಾವುದೇ ದೇವರಿಲ್ಲ ಮತ್ತು ಪ್ರವಾದಿ ಮುಹಮ್ಮದ್ ಅವರ ಸಂದೇಶವಾಹಕ ಎಂದು ಒಪ್ಪಿಕೊಳ್ಳುತ್ತದೆ.
- ಸಲಾತ್ (Salaat), ಅಥವಾ ದಿನಕ್ಕೆ ಐದು ಬಾರಿ ಪ್ರಾರ್ಥನೆ.
- ಇಲ್ಮ್ (ILM) ಮತ್ತು ಧಿಕ್ರ್ (DHIKR), ಅಲ್ಲಾಹನನ್ನು ಸ್ಮರಿಸಿಕೊಳ್ಳುವುದು ಮತ್ತು ಆತನ ಬಗ್ಗೆ ಜ್ಞಾನ ಸಭೆಗಳನ್ನು ನಡೆಸುವುದು, ಹೀಗೆ ಸಮುದಾಯ ಮತ್ತು ಗುರುತಿನ ಪ್ರಜ್ಞೆಯನ್ನು ಬೆಳೆಸುವುದು.
- ಇಕ್ರಮ್-ಇ-ಮುಸ್ಲಿಂ (Ikram-i-Muslim) ಎಂದರೆ ಸಹ ಮುಸ್ಲಿಮರನ್ನು ಗೌರವದಿಂದ ನಡೆಸಿಕೊಳ್ಳುವುದು.
- ಇಖ್ಲಾಸ್-ಐ-ನಿಯತ್ (Ikhlas-i-niyat), ಅಥವಾ ಪ್ರಾಮಾಣಿಕ ಉದ್ದೇಶಗಳು.
- ದಾವತ್-ಒ-ತಬ್ಲಿಗ್ (Dawat-o-tabligh), ಅಥವಾ ಮತಾಂತರ.
ಅದರ ಕಾರ್ಯನಿರ್ವಹಣೆಯ ಟೀಕೆಗೆ ಕಾರಣ:
ಈ ಸಂಘಟನೆಯ ವ್ಯಾಪ್ತಿಯು ‘ಮುಸ್ಲಿಂ ನಂಬಿಕೆ’ಯ ಹರಡುವಿಕೆಗೆ ಸೀಮಿತವಾಗಿರುವಂತೆ ಕಂಡುಬಂದರೂ, ಈ ಗುಂಪು ಮೂಲಭೂತವಾದಿ ಸಂಘಟನೆಗಳೊಂದಿಗೆ ಸಂಪರ್ಕವನ್ನು ಹೊಂದಿದೆ ಎಂದು ಹಲವಾರು ಬಾರಿ ಆರೋಪಿಸಲಾಗಿದೆ.ಕೆಲವು ವೀಕ್ಷಕರ ಪ್ರಕಾರ, ಆಮೂಲಾಗ್ರ ಸಂಸ್ಥೆಗಳು ಅದರ ಮುಕ್ತ ಸಾಂಸ್ಥಿಕ ರಚನೆಯ ಲಾಭವನ್ನು ಪಡೆಯಬಹುದು.ಇದರ ಹೊರತಾಗಿ, ಈ ಸಂಸ್ಥೆಗಳು ತಮ್ಮ ಚಟುವಟಿಕೆಗಳ ವ್ಯಾಪ್ತಿ, ಸದಸ್ಯತ್ವ ಅಥವಾ ಅವರ ಹಣಕಾಸಿನ ಮೂಲದ ಬಗ್ಗೆ ಯಾವುದೇ ಮಾಹಿತಿಯನ್ನು ಪ್ರಕಟಿಸುವುದಿಲ್ಲ.ಆದಾಗ್ಯೂ, ‘ತಬ್ಲೀಘಿ ಜಮಾತ್’ ದೇಣಿಗೆಗಳ ಮೇಲೆ ಅವಲಂಬಿತವಾಗಿಲ್ಲ ಎಂದು ನಂಬಲಾಗಿದೆ ಮತ್ತು ಒಂದು ಹಂತದವರೆಗೆ, ಸಂಸ್ಥೆಯ ಹಿರಿಯ ಸದಸ್ಯರು ಅದಕ್ಕೆ ಹಣಕಾಸು ನೆರವು ನೀಡುತ್ತಾರೆ.
ಸುದ್ದಿಯಲ್ಲಿರಲು ಕಾರಣ?
ಮಾರ್ಚ್ 2020 ರಲ್ಲಿ, ದೆಹಲಿಯ ತಬ್ಲಿಘಿ ಜಮಾತ್‌ನ ಪ್ರಧಾನ ಕಛೇರಿಯಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಭಾಗವಹಿಸಿದ ಡಜನ್ಗಟ್ಟಲೆ ಜನರು COVID-19 ಪೀಡಿತರಾಗಿದ್ದಾರೆ ಎಂಬ ಸಕಾರಾತ್ಮಕ (“ಪಾಸಿಟಿವ್”) ವರದಿಯ ನಂತರ ಈ ಸಂಸ್ಥೆಯು ಭಾರತದಲ್ಲಿ ವಿವಾದದ ಕೇಂದ್ರಬಿಂದುವಾಗಿತ್ತು. ಇತ್ತೀಚೆಗೆ, ಸೌದಿ ಅರೇಬಿಯಾ ತನ್ನ ದೇಶದಲ್ಲಿ ಈ ಇಸ್ಲಾಮಿಕ್ ಮಿಷನರಿ ಸಂಘಟನೆಯನ್ನು ನಿಷೇಧಿಸಿದೆ, ಆದಕಾರಣ ಇದು ಮತ್ತೊಮ್ಮೆ ಚರ್ಚೆಯ ವಿಷಯವಾಗಿದೆ.