Print Friendly, PDF & Email

[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 16ನೇ ಡಿಸೆಂಬರ್ 2021

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಯುನೆಸ್ಕೋದ ‘ಅಮೂರ್ತ ಸಾಂಸ್ಕೃತಿಕ ಪರಂಪರೆ’ ಪಟ್ಟಿಗೆ ಸೇರ್ಪಡೆಗೊಂಡ ದುರ್ಗಾ ಪೂಜೆ.

2. ಸಾಲಾರ್ ಮಸೂದ್ ಮತ್ತು ರಾಜಾ ಸುಹಲ್ದೇವ್ ನಡುವಿನ ಯುದ್ಧ.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಬಿಹಾರಕ್ಕೆ ವಿಶೇಷ ವರ್ಗದ ರಾಜ್ಯದ ಸ್ಥಾನಮಾನ.

2. ಸರ್ಕಾರಿ ಏಜೆನ್ಸಿ ವ್ಯವಹಾರ ನಡೆಸಲು ಪಾವತಿ ಬ್ಯಾಂಕ್‌ಗಳು, ಕಿರು ಹಣಕಾಸು ಸಂಸ್ಥೆ ಗಳಿಗೆ ಅವಕಾಶ ನೀಡಿದ

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಪರಿಷ್ಕೃತ ‘ತ್ವರಿತ ಸರಿಪಡಿಸುವ ಕ್ರಿಯಾ’ ಕಾರ್ಯವಿಧಾನ (PCA) ಚೌಕಟ್ಟನ್ನು ನೀಡಿದ RBI.

2. ಪಾರ್ಕರ್ ಸೋಲಾರ್ ಪ್ರೋಬ್.

3. ಹವಾಮಾನ ಬದಲಾವಣೆಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಒಯ್ಯುವ ಪ್ರಸ್ತಾಪಕ್ಕೆ ಭಾರತ, ರಷ್ಯಾ ಗಳ ವಿರೋಧ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ರಾಜಾ ಚೈತ್ ಸಿಂಗ್

2. ರಾಣಿ ಭಬಾನಿ.

3. SGTF ಪರೀಕ್ಷಾ ಕಿಟ್‌ಗಳು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳುಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಕಲಾ ಪ್ರಕಾರಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ಯುನೆಸ್ಕೋದ ‘ಅಮೂರ್ತ ಸಾಂಸ್ಕೃತಿಕ ಪರಂಪರೆ’ ಪಟ್ಟಿಗೆ ಸೇರ್ಪಡೆಗೊಂಡ ದುರ್ಗಾ ಪೂಜೆ:


(Durga Puja inscribed on UNESCO’s ‘Intangible Cultural Heritage’ list)

ಸಂದರ್ಭ:

ಅಮೂರ್ತ ಸಾಂಸ್ಕೃತಿಕ ಪರಂಪರೆಯ ಸಂರಕ್ಷಣೆಗಾಗಿ ಅಂತರ್-ಸರ್ಕಾರಿ ಸಮಿತಿಯು ‘ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ’ಯ (Intangible Cultural Heritage of Humanity) ಪ್ರಾತಿನಿಧಿಕ ಪಟ್ಟಿಯಲ್ಲಿ ‘ಕೋಲ್ಕತ್ತಾದಲ್ಲಿನ ದುರ್ಗಾ ಪೂಜೆ’ ಯನ್ನು ಸೇರಿಸಿದೆ.

ಇಲ್ಲಿಯವರೆಗೆ ಒಟ್ಟಾರೆಯಾಗಿ, ಭಾರತದ 14 ಇಂಟಾಂಜಿಬಲ್ ಕಲ್ಚರಲ್ ಹೆರಿಟೇಜ್ ಎಲಿಮೆಂಟ್ಸ್’ ಅಥವಾ ಅಮೂರ್ತ ಸಾಂಸ್ಕೃತಿಕ ಪರಂಪರೆಯ (Intangible Cultural Heritage elements) ಅಂಶಗಳನ್ನು  ಯುನೆಸ್ಕೋದ ಪ್ರಾತಿನಿಧಿಕ ಪಟ್ಟಿಯಲ್ಲಿ ಸೇರಿಸಲಾಗಿದೆ.

 

ಪರಿಣಾಮಗಳು:

ದುರ್ಗಾಪೂಜೆಯನ್ನು UNESCO ‘ಇಂಟ್ಯಾಂಜಿಬಲ್ ಕಲ್ಚರಲ್ ಹೆರಿಟೇಜ್’ ಪಟ್ಟಿಯಲ್ಲಿ ಸೇರಿಸುವುದರಿಂದ, ಎಲ್ಲಾ ಸಾಂಪ್ರದಾಯಿಕ ಕುಶಲಕರ್ಮಿಗಳು, ವಿನ್ಯಾಸಕರು, ಕಲಾವಿದರು ಮತ್ತು ದೊಡ್ಡ ಪ್ರಮಾಣದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಸಂಘಟಕರು ಸೇರಿದಂತೆ ದುರ್ಗಾಪೂಜೆಯನ್ನು ಆಚರಿಸುವ ಸ್ಥಳೀಯ ಸಮುದಾಯಗಳನ್ನು ಉತ್ತೇಜಿಸಲಾಗುವುದು ಹಾಗೂ ಪ್ರವಾಸಿಗರು ಮತ್ತು ಎಲ್ಲವನ್ನು ಒಳಗೊಂಡ ಹಬ್ಬವಾದ ‘ದುರ್ಗಾಪೂಜೆ’ಯ ಆಚರಣೆಯಲ್ಲಿ ಭಾಗವಹಿಸುವ ಎಲ್ಲ ಪ್ರವಾಸಿಗರನ್ನು ಪ್ರೋತ್ಸಾಹಿಸಲಾಗುವುದು.

ದುರ್ಗಾ ಪೂಜೆ’ಯ ಕುರಿತು:

‘ದುರ್ಗಾ ಪೂಜೆ’ ಐದು ದಿನಗಳ ಹಬ್ಬವಾಗಿದ್ದು, ಇದು ಒಂಬತ್ತು ದಿನಗಳ ನವರಾತ್ರಿ ಉತ್ಸವದ ಐದನೇ ರಾತ್ರಿ ಪ್ರಾರಂಭವಾಗುತ್ತದೆ ಮತ್ತು ಹತ್ತನೇ ದಿನ ಅಂದರೆ ದಶಮಿಯಂದು ಕೊನೆಗೊಳ್ಳುತ್ತದೆ.ಈ ಅವಧಿಯಲ್ಲಿ, ಜನರು ಸಾಮೂಹಿಕವಾಗಿ ಬ್ರಹ್ಮಾಂಡದ ಸ್ತ್ರೀ ಶಕ್ತಿ ಎಂದು ಪರಿಗಣಿಸಲಾಗುವ ಶಕ್ತಿ-ರೂಪದ ದೇವತೆ ದುರ್ಗಾ ದೇವಿಯನ್ನು ಪೂಜಿಸುತ್ತಾರೆ ಮತ್ತು ಆವಾಹಿಸುತ್ತಾರೆ.

 1. ಈ ಹಬ್ಬವು ‘ಪಶ್ಚಿಮ ಬಂಗಾಳ’ದಲ್ಲಿ ತನ್ನ ಮೂಲವನ್ನು ಹೊಂದಿದ್ದರೂ, ಈ ಹಬ್ಬವನ್ನು ಭಾರತ ಮತ್ತು ಪ್ರಪಂಚದ ಇತರ ಭಾಗಗಳಲ್ಲಿ ಆಚರಿಸಲಾಗುತ್ತದೆ.
 2. ಅನೇಕರು ಇದನ್ನು ಹಬ್ಬಕ್ಕಿಂತ ಹೆಚ್ಚಾಗಿ ಭಾವನೆ’ ಎಂದು ನೋಡುತ್ತಾರೆ.
 3. ‘ದುರ್ಗಾ ಪೂಜೆ’ಯು ಧರ್ಮ ಮತ್ತು ಸಂಸ್ಕೃತಿಯ ಪರಿಪೂರ್ಣ ಸಮ್ಮಿಲನವಾಗಿದೆ.

Current Affairs

 

ಅಮೂರ್ತ ಸಾಂಸ್ಕೃತಿಕ ಪರಂಪರೆ ಎಂದರೇನು?

UNESCO ಪ್ರಕಾರ, ಅಮೂರ್ತ ಸಾಂಸ್ಕೃತಿಕ ಪರಂಪರೆ ಯಲ್ಲಿ ನಮ್ಮ ಪೂರ್ವಜರಿಂದ ಆನುವಂಶಿಕವಾಗಿ ಪಡೆದ ಸಂಪ್ರದಾಯಗಳು ಅಥವಾ ಜೀವಂತ ಅಭಿವ್ಯಕ್ತಿಗಳನ್ನು ಒಳಗೊಂಡಿದೆ, ಉದಾಹರಣೆಗೆ ಮೌಖಿಕ ಸಂಪ್ರದಾಯಗಳು, ಪ್ರದರ್ಶನ ಕಲೆಗಳು, ಸಾಮಾಜಿಕ ಪದ್ಧತಿಗಳು, ಆಚರಣೆಗಳು, ಹಬ್ಬಗಳು ಮತ್ತು ಆಚರಣೆಗಳು, ಅಭ್ಯಾಸಗಳು ಅಥವಾ ಪ್ರಕೃತಿ ಮತ್ತು ವಿಶ್ವಕ್ಕೆ ಸಂಬಂಧಿಸಿದ ಜ್ಞಾನ, ಮತ್ತು ಸಾಂಪ್ರದಾಯಿಕ ಕರಕುಶಲ ಕೌಶಲ್ಯಗಳನ್ನು ಒಳಗೊಂಡಿದೆ.

 1. ವಿಶ್ವದ ಪ್ರಮುಖ ಅಮೂರ್ತ ಸಾಂಸ್ಕೃತಿಕ ಪರಂಪರೆಯ ತಾಣಗಳ ಉತ್ತಮ ರಕ್ಷಣೆಯನ್ನು ಖಾತ್ರಿಪಡಿಸುವ ಮತ್ತು ಅವುಗಳ ಪ್ರಾಮುಖ್ಯತೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಯುನೆಸ್ಕೋದಿಂದ ‘ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿ’ಯನ್ನು ರಚಿಸಲಾಗಿದೆ.
 2. 2003 ರ ಅಮೂರ್ತ ಸಾಂಸ್ಕೃತಿಕ ಪರಂಪರೆ ಸಂರಕ್ಷಣಾ ಸಮಾವೇಶವು ಜಾರಿಗೆ ಬಂದ ನಂತರ ಈ ಪಟ್ಟಿಯನ್ನು 2008 ರಲ್ಲಿ ರಚಿಸಲಾಗಿದೆ.

2010 ರ ಹೊತ್ತಿಗೆ, ಈ ಕಾರ್ಯಕ್ರಮದ ಅಡಿಯಲ್ಲಿ ಎರಡು ಪಟ್ಟಿಗಳನ್ನು ಸಂಕಲಿಸಲಾಗಿದೆ:

 1. ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆಯ ದೀರ್ಘ, ಪ್ರಾತಿನಿಧಿಕ ಪಟ್ಟಿಯು ಸಾಂಸ್ಕೃತಿಕ “ಆಚರಣೆಗಳು ಮತ್ತು ಅಭಿವ್ಯಕ್ತಿಗಳನ್ನು ಒಳಗೊಂಡಿದೆ, [ಇದು] ಈ ಪರಂಪರೆಯ ವೈವಿಧ್ಯತೆಯನ್ನು ಪ್ರದರ್ಶಿಸಲು ಮತ್ತು ಅದರ ಪ್ರಾಮುಖ್ಯತೆಯ ಕುರಿತು ಅರಿವು ಮೂಡಿಸಲು ಸಹಾಯ ಮಾಡುತ್ತದೆ.”
 2. ತಕ್ಷಣದ ರಕ್ಷಣೆಯ ಅಗತ್ಯವಿರುವ ಅಮೂರ್ತ ಸಾಂಸ್ಕೃತಿಕ ಪರಂಪರೆಗಳ ಕಿರು ಪಟ್ಟಿಯು, ಸಂಬಂಧಿಸಿದ ಸಮುದಾಯಗಳು ಮತ್ತು ದೇಶಗಳು ಅವುಗಳನ್ನು ಸಂರಕ್ಷಿಸಲು / ಜೀವಂತವಾಗಿಡಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವನ್ನು ಪರಿಗಣಿಸುವ ಸಾಂಸ್ಕೃತಿಕ ಅಂಶಗಳನ್ನು ಒಳಗೊಂಡಿದೆ.

 

ವಿಷಯಗಳು: ಭಾರತದ ಇತಿಹಾಸ; ಸ್ವಾತಂತ್ರ್ಯ ಹೋರಾಟ –  ಅದರ ವಿವಿಧ ಹಂತಗಳು ಮತ್ತು ದೇಶದ ವಿವಿಧ ಭಾಗಗಳಿಂದ ಪ್ರಮುಖ ಕೊಡುಗೆದಾರರು ಮತ್ತು ಅವರ ಕೊಡುಗೆಗಳು.

ಸಲಾರ್ ಮಸೂದ್ ಮತ್ತು ರಾಜಾ ಸುಹಲ್ದೇವ್ ನಡುವಿನ ಯುದ್ಧ:


(Salar Masud-Raja Suhaldev battle)

ಸಂದರ್ಭ:

ವಾರಣಾಸಿಯಲ್ಲಿ ಕಾಶಿ ವಿಶ್ವನಾಥ್ ಧಾಮ್ ಕಾರಿಡಾರ್ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಸಲಾರ್ ಮಸೂದ್ ಮತ್ತು ರಾಜಾ ಸುಹಲ್‌ದೇವ್ ನಡುವಿನ ಹೋರಾಟವನ್ನು ಉಲ್ಲೇಖಿಸಿದ್ದಾರೆ.

ಯಾರು ಈ ಸಾಲಾರ್ ಮಸೂದ್?

 1. ಘಾಜಿ ಮಿಯಾನ್ ಎಂದೂ ಕರೆಯಲ್ಪಡುವ ಸಲಾರ್ ಮಸೂದ್ (Salar Masud) 12 ನೇ ಶತಮಾನದಲ್ಲಿ ಒಬ್ಬ ಶ್ರೇಷ್ಟ ಯೋಧನಾಗಿ ಪ್ರಸಿದ್ಧನಾಗಿದ್ದನು.
 2. ಅವನು 11 ನೇ ಶತಮಾನದ ಒಟ್ಟೋಮನ್ ಆಕ್ರಮಣಕಾರ ಮಹಮೂದ್ ಘಜ್ನಿಯ ಸೋದರಳಿಯರಾಗಿದ್ದನು.
 3. ಅವನ ಸಮಾಧಿ ಉತ್ತರ ಪ್ರದೇಶದ ಬಹ್ರೈಚ್‌ನಲ್ಲಿದೆ, ಅದು ಹೆಚ್ಚಿನ ಸಂಖ್ಯೆಯ ಮುಸ್ಲಿಮರು ಮತ್ತು ಹಿಂದೂಗಳಿಗೆ ತೀರ್ಥಯಾತ್ರೆಯ ಕ್ಷೇತ್ರವಾಗಿದೆ.
 4. ಕಥಿಯಾವಾರ್‌ನಲ್ಲಿರುವ ಸೋಮನಾಥ ದೇವಾಲಯದ ಮೇಲಿನ ದಾಳಿ ಸೇರಿದಂತೆ ಘಜ್ನಿಯ ಎಲ್ಲಾ ಕಾರ್ಯಾಚರಣೆಗಳಲ್ಲಿ ಸಲಾರ್ ಮಸೂದ್ ಮಹಮೂದ್‌ನ ಜೊತೆಗಿದ್ದನು. ಸೋಮನಾಥನ ಪ್ರಸಿದ್ಧ ವಿಗ್ರಹವನ್ನು ಒಡೆದು ಹಾಕಲು ‘ಮಸೂದ್’ ತನ್ನ ಚಿಕ್ಕಪ್ಪ ‘ಗಜಿನಿ’ ಯ ಮನವೊಲಿಸಿದ್ದಾನೆ ಎಂದು ಹೇಳಲಾಗುತ್ತದೆ. ಈ ಕಾರ್ಯವನ್ನು ಪರ್ಷಿಯನ್ ಕಾವ್ಯದಲ್ಲಿ ಒಂದು ದೊಡ್ಡ ಸಾಧನೆ ಎಂದು ಪದೇ ಪದೇ ವೈಭವೀಕರಿಸಲಾಗಿದೆ.
 5. ‘ಘಾಜಿ ಮಿಯಾನ್’ ಬಗ್ಗೆ ಮಾಹಿತಿಯ ಅತ್ಯಂತ ಸಮಗ್ರ ಮೂಲವೆಂದರೆ ಮಿರಾತ್-ಎ-ಮಸೌದ್’ (Mirat-e-Masaud). ಇದು ಚಿಶ್ತಿ ಸಂಪ್ರದಾಯದ ಸೂಫಿ ಸಂತ ಅಬ್ದುರ್ ರೆಹಮಾನ್ ಚಿಶ್ತಿ ಅವರಿಂದ ಸಂಯೋಜಿಸಲ್ಪಟ್ಟ 17 ನೇ ಶತಮಾನದ ಪರ್ಷಿಯನ್ ಹ್ಯಾಜಿಯೋಗ್ರಫಿ (Hagiography) ಯಾಗಿದೆ.
 6. ಮೊಘಲ್ ಚಕ್ರವರ್ತಿ ಅಕ್ಬರ್ 1571 ರಲ್ಲಿ ಘಾಜಿ ಮಿಯಾನ್ ದರ್ಗಾದ ನಿರ್ವಹಣೆಗಾಗಿ ಭೂಮಿಯನ್ನು ದಾನ ಮಾಡಿದನೆಂದು ಹೇಳಲಾಗುತ್ತದೆ.

ಸಲಾರ್ ಮಸೂದ್ ಮತ್ತು ರಾಜಾ ಸುಹಲ್ದೇವ್:

ಸಲಾರ್ ಮಸೂದ್ ಮತ್ತು ರಾಜ ಸುಹಲ್ದೇವ್ ನಡುವಿನ ಯುದ್ಧವು ಇತಿಹಾಸ ಮತ್ತು ಪುರಾಣ ಎರಡರ ಮಿಶ್ರಣವಾಗಿದೆ.

ದಾಖಲೆಗಳ ಪ್ರಕಾರ, ಬಹ್ರೈಚ್‌ನಲ್ಲಿ, ಕ್ರಿ.ಶ. 1034 ರಲ್ಲಿ ನಡೆದ ಯುದ್ಧದಲ್ಲಿ, ಸ್ಥಳೀಯ ರಾಜ ಮಸೂದ್ ಮತ್ತು ಸುಹಲ್‌ದೇವ್ ಮುಖಾಮುಖಿಯಾದರು.

ಯುದ್ಧದ ಸಮಯದಲ್ಲಿ, ಮಸೂದ್ ಬಾಣದಿಂದ ಗಾಯಗೊಂಡು ಅಸುನೀಗಿದನು.

ಮಸೂದ್ ಒಬ್ಬ ಯೋಧನಾಗಿ ತನ್ನ ಕರ್ತವ್ಯಗಳ ನೆರವೇರಿಕೆಯ ಸಮಯದಲ್ಲಿ ಮರಣ ಹೊಂದಿದ ಕಾರಣ, ಅವನಿಗೆ ಹುತಾತ್ಮನ ಸ್ಥಾನಮಾನವನ್ನು ಮತ್ತು ಘಾಜಿ ಮಿಯಾನ್ ಎಂಬ ಬಿರುದನ್ನು ನೀಡಲಾಯಿತು.

ರಾಜಾ ಸುಹಲ್ದೇವ್:

‘ಸುಹಲ್ದೇವ್’ ಶ್ರಾವಸ್ತಿಯ (ಇಂದಿನ ಈಶಾನ್ಯ ಉತ್ತರ ಪ್ರದೇಶದಲ್ಲಿ) ಒಬ್ಬ ಪ್ರಸಿದ್ಧ ರಾಜ. ‘ಸುಹಲ್ದೇವ್’ ಭರ್ ಸಮುದಾಯ’ (Bhar community) ದ ರಾಜನ ಹಿರಿಯ ಮಗ ಎಂದು ನಂಬಲಾಗಿದೆ. ‘ಭರ್ ಸಮುದಾಯ’ದಿಂದಲೇ, ಈ ಪ್ರದೇಶದ ದಲಿತ ಜಾತಿಯ ಒಂದು  ಗುಂಪಾದ ಪಾಸಿ ಸಮುದಾಯದ ಉದಯವಾಗಿದೆ.

 1. ಈ ಪ್ರದೇಶದ ಚಾಲ್ತಿಯಲ್ಲಿರುವ ಇತಿಹಾಸದಲ್ಲಿ, ಅವರನ್ನು ಸುಹಲ್ದೇವ್, ಸಾಕಾರ್ದೇವ್, ಸಹರ್ದೇವ್ ಮತ್ತು ಸುಹಿಲ್ದೇವ್ ಸೇರಿದಂತೆ ಹಲವು ಹೆಸರುಗಳಿಂದ ಕರೆಯಲಾಗುತ್ತದೆ. ಆದಾಗ್ಯೂ, ಸಮಕಾಲೀನ ಮುದ್ರಣ ಸಂಪ್ರದಾಯದಲ್ಲಿ, ಅವರನ್ನು ರಾಜಾ ಸುಹಲ್ದೇವ್ ಎಂದು ಕರೆಯಲಾಗುತ್ತದೆ.

current affairs

 

ಈ ವ್ಯಕ್ತಿಗಳ ಬಗೆಗಿನ ವಿವಾದಗಳು:

 1. ಗಾಜಿ ಮಿಯಾನ್‌ನನ್ನು ಪೂಜಿಸುವ ಕೆಲವರು ‘ಸುಹಲ್‌ದೇವ್’ ಅನ್ನು ಸ್ಥಳೀಯ ಬುಡಕಟ್ಟಿನ ಜನರು ರಾಜನಂತೆ ನೋಡುತ್ತಾರೆ. ಈ ಜನರಲ್ಲಿ ಹೆಚ್ಚಿನವರು ಮುಸ್ಲಿಮರು, ಮತ್ತು ಈ ಜನರು ‘ರಾಜಾ ಸುಹಲ್ದೇವ್’ ಅವರನ್ನು ದುರಾಚಾರಿ ಮತ್ತು ದಬ್ಬಾಳಿಕೆಯ ರಾಜ ಎಂದು ಪರಿಗಣಿಸುತ್ತಾರೆ.
 2. ಆದಾಗ್ಯೂ, ‘ರಾಜಾ ಸುಹಲ್‌ದೇವ್’ ಒಬ್ಬ ವೀರ ಯೋಧ ಎಂದು ಪರಿಗಣಿಸಲ್ಪಟ್ಟಿದ್ದಾನೆ ಮತ್ತು ಹಿಂದೂಗಳನ್ನು (ಅಥವಾ, ಭಾರತೀಯ-ಧರ್ಮ ಮತ್ತು ಸಂಸ್ಕೃತಿಯನ್ನು) ನಾಶಮಾಡಲು ಪ್ರಯತ್ನಿಸುವ ವಿದೇಶಿ ಆಕ್ರಮಣಕಾರನ (ಘಾಜಿ ಮಿಯಾನ್) ವಿರುದ್ಧ ಹೋರಾಡಿದ ಸಂರಕ್ಷಕನಾಗಿ ಪರಿಗಣಿಸಲ್ಪಟ್ಟಿದ್ದಾನೆ.

ಇಂದು,‘ಮಹಾರಾಜ ಸುಹಲ್‌ದೇವ್’ ಸ್ಮರಣಾರ್ಥ ಸಂಭ್ರಮಾಚರಣೆ ಮಾಡಲಾಗುತ್ತಿದೆ.

 1. ಫೆಬ್ರವರಿ 2016 ರಲ್ಲಿ, ಆಗಿನ ಬಿಜೆಪಿ ಅಧ್ಯಕ್ಷ ಅಮಿತ್ ಶಾ ಅವರು ಸುಹಲ್ದೇವ್ ಅವರನ್ನು ರಾಷ್ಟ್ರೀಯ ನಾಯಕ ಎಂದು ಶ್ಲಾಘಿಸಿದರು ಮತ್ತು ಬಹ್ರೈಚ್‌ನಲ್ಲಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಿದರು.
 2. ಭಾರತೀಯ ರೈಲ್ವೇಯು ಗಾಜಿಪುರದಿಂದ ‘ಸುಹಲ್‌ದೇವ್ ಎಕ್ಸ್‌ಪ್ರೆಸ್’ ಅನ್ನು ಪ್ರಾರಂಭಿಸಿದೆ.
 3. 2017 ರಲ್ಲಿ, ಉತ್ತರ ಪ್ರದೇಶ ಸರ್ಕಾರವು ಲಕ್ನೋದಲ್ಲಿ ಸುಹಲ್‌ದೇವ್ ಪ್ರತಿಮೆಯನ್ನು ಸ್ಥಾಪಿಸುವ ಯೋಜನೆಯನ್ನು ಘೋಷಿಸಿತು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಬಿಹಾರಕ್ಕೆ ವಿಶೇಷ ವರ್ಗದ ರಾಜ್ಯದ ಸ್ಥಾನಮಾನ:


(Special status for Bihar)

ಸಂದರ್ಭ:

ನಿತೀಶ್ ಕುಮಾರ್ ಅವರು ಬಿಹಾರಕ್ಕೆ ವಿಶೇಷ ವರ್ಗದ ರಾಜ್ಯ (Special Category State – SCS)ಸ್ಥಾನಮಾನ ನೀಡುವಂತೆ ತಮ್ಮ ಸುಮಾರು 15 ವರ್ಷಗಳ ಬೇಡಿಕೆಯನ್ನು ಮತ್ತೊಮ್ಮೆ ಎತ್ತಿದ್ದಾರೆ. ನಿತೀಶ್ ಕುಮಾರ್ ಅವರು 2007 ರಿಂದ ಬಿಹಾರಕ್ಕೆ ‘ವಿಶೇಷ ಪ್ರವರ್ಗದ ರಾಜ್ಯ’ ದ ಸ್ಥಾನಮಾನವನ್ನು ನೀಡುವಂತೆ ಒತ್ತಾಯಿಸುತ್ತಿದ್ದಾರೆ.

ಇತರ ರಾಜ್ಯಗಳೊಂದಿಗೆ ಬಿಹಾರದ ಅಭಿವೃದ್ಧಿಯ ಹೋಲಿಕೆ:

 1. ಇತ್ತೀಚಿನ NITI ಆಯೋಗದ ವರದಿಯಲ್ಲಿ, ಬೆಳವಣಿಗೆ ದರ ಮತ್ತು ಮಾನವ ಅಭಿವೃದ್ಧಿ ಸೂಚ್ಯಂಕಗಳ ವಿಷಯದಲ್ಲಿ ಬಿಹಾರವು ಅತ್ಯಂತ ಕೆಳಭಾಗದ ರಾಜ್ಯಗಳ ಸಾಲಿನಲ್ಲಿ ಸ್ಥಾನ ಪಡೆದಿದೆ.
 2. ಬಿಹಾರದ ವಾರ್ಷಿಕ ತಲಾ ಆದಾಯವು ರೂ 50,735 ಆಗಿದೆ, ಇದು ರಾಷ್ಟ್ರೀಯ ತಲಾ ಆದಾಯವಾದ ರೂ 1,34,432  ಗಳಿಗಿಂತ ಕಡಿಮೆಯಾಗಿದೆ.
 3. ವರದಿಯ ಪ್ರಕಾರ, ರಾಜ್ಯದ ಜನಸಂಖ್ಯೆಯ 51.91 ಪ್ರತಿಶತ ಜನರು ದೇಶದಲ್ಲೇ ಅತಿ ಹೆಚ್ಚು ಬಡತನ ರೇಖೆಗಿಂತ ಕೆಳಗೆ ವಾಸಿಸುತ್ತಿದ್ದಾರೆ.
 4. ಶಾಲೆ ಬಿಟ್ಟ ಮಕ್ಕಳು, ಮಕ್ಕಳ ಅಪೌಷ್ಟಿಕತೆ, ತಾಯಿಯ ಆರೋಗ್ಯ ಮತ್ತು ಶಿಶು ಮರಣದ ವಿಷಯದಲ್ಲಿಯೂ ಬಿಹಾರ ಕಳಪೆ ಸಾಧನೆ ಮಾಡಿದೆ.

Current Affairs

 

ವಿಶೇಷ ವರ್ಗದ ರಾಜ್ಯ ಸ್ಥಾನ ಎಂದರೇನು?

 1. ಯಾವುದೇ ರಾಜ್ಯಕ್ಕೆ ವಿಶೇಷ ವರ್ಗದ ಸ್ಥಾನಮಾನ’ (Special Category Status – SCS) ನೀಡುವ ಸಂಬಂಧ ಸಂವಿಧಾನದಲ್ಲಿ ಯಾವುದೇ ಪ್ರಾವಧಾನವಿಲ್ಲ; ಇತರ ರಾಜ್ಯಗಳಿಗೆ ಹೋಲಿಸಿದರೆ ಪ್ರತಿಕೂಲ ಪರಿಸ್ಥಿತಿಗಳನ್ನು ಹೊಂದಿರುವ ರಾಜ್ಯಗಳಿಗೆ ಕೇಂದ್ರ ಸರ್ಕಾರದಿಂದ ಹಣಕಾಸಿನ ನೆರವು ನೀಡಲಾಗುತ್ತದೆ.
 2. ಈ ಸ್ಥಾನವು ಭೌಗೋಳಿಕ ಮತ್ತು ಸಾಮಾಜಿಕ-ಆರ್ಥಿಕ ಹಿಂದುಳಿದಿರುವ ರಾಜ್ಯಗಳ ಅಭಿವೃದ್ಧಿಗೆ ಸಹಾಯ ಮಾಡಲು ಕೇಂದ್ರ ಸರ್ಕಾರವು ಮಾಡಿದ ವರ್ಗೀಕರಣವಾಗಿದೆ.

ಈ ವರ್ಗೀಕರಣವನ್ನು 1969 ರಲ್ಲಿ ಐದನೇ ಹಣಕಾಸು ಆಯೋಗದ ಶಿಫಾರಸುಗಳ ಆಧಾರದ ಮೇಲೆ ಮಾಡಲಾಯಿತು.

ಈ ವರ್ಗೀಕರಣವು ಗಾಡ್ಗೀಳ್ ಸೂತ್ರವನ್ನು ಆಧರಿಸಿದೆ, ಇದು ವಿಶೇಷ ವರ್ಗದ ರಾಜ್ಯ ಸ್ಥಾನಮಾನಕ್ಕಾಗಿ ಈ ಕೆಳಗಿನ ಮಾನದಂಡಗಳನ್ನು ನಿಗದಿಪಡಿಸಿದೆ:

 1. ಪರ್ವತ/ಗುಡ್ಡಗಾಡು ಪ್ರದೇಶಗಳು;
 2. ಕಡಿಮೆ ಜನಸಂಖ್ಯಾ ಸಾಂದ್ರತೆ ಮತ್ತು/ಅಥವಾ ಬುಡಕಟ್ಟು ಜನಸಂಖ್ಯೆಯ ದೊಡ್ಡ ಪ್ರಮಾಣ;
 3. ನೆರೆಯ ದೇಶಗಳೊಂದಿಗೆ ಗಡಿಯುದ್ದಕ್ಕೂ ಕಾರ್ಯತಂತ್ರದ ಸ್ಥಾನ;
 4. ಆರ್ಥಿಕ ಮತ್ತು ಮೂಲ ಸೌಕರ್ಯಗಳ ಹಿಂದುಳಿದಿರುವಿಕೆ; ಮತ್ತು
 5. ರಾಜ್ಯ ಹಣಕಾಸುಗಳ ಅಸಮರ್ಥ ಸ್ವರೂಪ.

ವಿಶೇಷ ವರ್ಗದ ರಾಜ್ಯ ಸ್ಥಾನಮಾನ ಪಡೆಯಲು ಕೆಲವು ಪ್ರಮುಖ ಮಾರ್ಗಸೂಚಿಗಳು:

 1. ಕಳಪೆ ಮೂಲಸೌಕರ್ಯದಿಂದ ರಾಜ್ಯ ಆರ್ಥಿಕವಾಗಿ ಹಿಂದುಳಿದಿರಬೇಕು.
 2. ರಾಜ್ಯಗಳು ಗುಡ್ಡಗಾಡು ಮತ್ತು ಸವಾಲಿನ ಭೂಪ್ರದೇಶಗಳಲ್ಲಿ ನೆಲೆಗೊಳ್ಳಬೇಕು.
 3. ರಾಜ್ಯಗಳು ಕಡಿಮೆ ಜನಸಂಖ್ಯಾ ಸಾಂದ್ರತೆಯನ್ನು ಹೊಂದಿರಬೇಕು ಮತ್ತು ಗಮನಾರ್ಹವಾಗಿ ಬುಡಕಟ್ಟು ಜನಸಂಖ್ಯೆಯನ್ನು ಹೊಂದಿರಬೇಕು.
 4. ರಾಜ್ಯವು ನೆರೆಯ ದೇಶಗಳ ಗಡಿಗಳಿಗೆ ಸಮೀಪದಲ್ಲಿ ಆಯಕಟ್ಟಿನ ಸ್ಥಳದಲ್ಲಿರಬೇಕು.

ವಿಶೇಷ ವರ್ಗದ ರಾಜ್ಯದ ಸ್ಥಾನಮಾನವನ್ನು ಯಾರು ನೀಡುತ್ತಾರೆ?

ಈ ಹಿಂದೆ, ವಿಶೇಷ ಗಮನದ ಅಗತ್ಯವಿರುವ ರಾಜ್ಯಗಳಿಗೆ ‘ಯೋಜನೆ ಸಹಾಯ’ಕ್ಕಾಗಿ ‘ರಾಷ್ಟ್ರೀಯ ಅಭಿವೃದ್ಧಿ ಮಂಡಳಿ’ಯು ‘ವಿಶೇಷ ವರ್ಗ’ ದ ಸ್ಥಾನಮಾನವನ್ನು ನೀಡುತ್ತಿತ್ತು.

 1. ಈಗ ಅಂತಹ ರಾಜ್ಯಗಳಿಗೆ ಕೇಂದ್ರವು ‘ವಿಶೇಷ ವರ್ಗದ ರಾಜ್ಯ’ ದ ಸ್ಥಾನಮಾನವನ್ನು ನೀಡುತ್ತದೆ.

ಪ್ರಯೋಜನಗಳು:

ತೆರಿಗೆಗಳಿಂದ ವಿನಾಯಿತಿ ಮತ್ತು ಇತರ ಪ್ರಯೋಜನಗಳ ಜೊತೆಗೆ,‘ವಿಶೇಷ ವರ್ಗದ ಸ್ಥಾನ’ ಹೊಂದಿರುವ ರಾಜ್ಯಕ್ಕೆ, ಕೇಂದ್ರ ಪ್ರಾಯೋಜಿತ ಯೋಜನೆಗಳ ಒಟ್ಟು ವೆಚ್ಚದ 90% ಕೇಂದ್ರ ಅನುದಾನವಾಗಿ ಪಾವತಿಸಲಾಗುತ್ತದೆ ಮತ್ತು ಉಳಿದ 10% ಅನ್ನು ಶೂನ್ಯ ಬಡ್ಡಿದರದಲ್ಲಿ ಸಾಲವಾಗಿ ನೀಡಲಾಗುತ್ತದೆ.

ಸಂಬಂಧಿತ ಕಾಳಜಿಗಳು:

ಯಾವುದೇ ಹೊಸ ರಾಜ್ಯಕ್ಕೆ ‘ವಿಶೇಷ ಸ್ಥಾನಮಾನ’ ನೀಡುವುದನ್ನು ಪರಿಗಣಿಸಿದರೆ, ಇತರ ರಾಜ್ಯಗಳ ಬೇಡಿಕೆಗಳು ಹೆಚ್ಚಾಗುತ್ತವೆ ಮತ್ತು ಪರಿಣಾಮವಾಗಿ, ಅದರಿಂದ ಉಂಟಾಗುವ ಪ್ರಯೋಜನಗಳು ಮತ್ತಷ್ಟು ದುರ್ಬಲಗೊಳ್ಳುತ್ತವೆ. ಪ್ರಸ್ತುತ ವಿತರಣಾ ವ್ಯವಸ್ಥೆಯಲ್ಲಿ ಅದರ ಪ್ರಯೋಜನಗಳು ತೀರಾ ಕಡಿಮೆ ಇರುವ ಕಾರಣ ರಾಜ್ಯಗಳು ‘ವಿಶೇಷ ಸ್ಥಾನಮಾನ’ವನ್ನು ಕೋರುವುದು ಆರ್ಥಿಕವಾಗಿ ಪ್ರಯೋಜನಕಾರಿಯಲ್ಲ. ಆದ್ದರಿಂದ ವಿಶೇಷ ಸಮಸ್ಯೆಗಳನ್ನು ಎದುರಿಸುತ್ತಿರುವ ರಾಜ್ಯಗಳು ‘ವಿಶೇಷ ಪ್ಯಾಕೇಜ್’ಗೆ ಬೇಡಿಕೆ ಮಂಡಿಸುವುದು ಉತ್ತಮ.

ಪ್ರಸ್ತುತ ಸ್ಥಿತಿ:

14 ನೇ ಹಣಕಾಸು ಆಯೋಗವು, ಈಶಾನ್ಯ ಮತ್ತು ಮೂರು ಗುಡ್ಡಗಾಡು ರಾಜ್ಯಗಳನ್ನು ಹೊರತುಪಡಿಸಿ ಇತರ ರಾಜ್ಯಗಳಿಗೆ ‘ವಿಶೇಷ ವರ್ಗದ ಸ್ಥಾನಮಾನ’ವನ್ನು ರದ್ದುಗೊಳಿಸಿದೆ.

 1. ಇದರ ಬದಲಿಗೆ, ಆಯೋಗವು ಪ್ರತಿ ರಾಜ್ಯದ ‘ಸಂಪನ್ಮೂಲ ಅಂತರ’ವನ್ನು ‘ತೆರಿಗೆ ಹಂಚಿಕೆ’ ಮೂಲಕ ತುಂಬಲು ಸಲಹೆ ನೀಡಿದೆ ಮತ್ತು ತೆರಿಗೆ ಆದಾಯದಲ್ಲಿ ರಾಜ್ಯಗಳ ಪಾಲನ್ನು 32% ರಿಂದ 42% ಕ್ಕೆ ಹೆಚ್ಚಿಸುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿತು.ಇದು 2015 ರಿಂದ ಜಾರಿಗೆ ಬಂದಿದೆ.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಸರ್ಕಾರಿ ಏಜೆನ್ಸಿ ವ್ಯವಹಾರ ನಡೆಸಲು ಪಾವತಿ ಬ್ಯಾಂಕ್‌ಗಳು, ಕಿರು ಹಣಕಾಸು ಸಂಸ್ಥೆ ಗಳಿಗೆ ಅವಕಾಶ ನೀಡಿದ RBI:


(RBI allows Payments Banks, SFBs to conduct Govt agency business)

ಸಂದರ್ಭ:

ಇತ್ತೀಚೆಗೆ, ಪಾವತಿ ಬ್ಯಾಂಕ್‌ಗಳು (Payments Banks) ಮತ್ತು ಕಿರು ಹಣಕಾಸು ಬ್ಯಾಂಕ್‌ (Small Finance Banks)ಗಳಿಗೆ ‘ಸರ್ಕಾರಿ ಏಜೆನ್ಸಿ ವ್ಯವಹಾರ’ (Govt agency business) ನಡೆಸಲು ಭಾರತೀಯ ರಿಸರ್ವ್ ಬ್ಯಾಂಕ್ ಅನುಮತಿ ನೀಡಿದೆ.

 1. ಇದಕ್ಕಾಗಿ, ಸಂಬಂಧಿಸಿದ ಬ್ಯಾಂಕ್ ತ್ವರಿತ ಸರಿಪಡಿಸುವ ಕ್ರಿಯಾ’ ಕಾರ್ಯವಿಧಾನ (Prompt Corrective Action – PCA) ದ ಚೌಕಟ್ಟು ಅಥವಾ ಮೊರಟೋರಿಯಂ ಅಡಿಯಲ್ಲಿ ಇರಬಾರದು ಎಂಬ ಷರತ್ತನ್ನು ಹಾಕಲಾಗಿದೆ.

ಏಜೆನ್ಸಿ ಬ್ಯಾಂಕ್’ ಗೆ ಮಾನ್ಯತೆ ನೀಡುವ ಅಧಿಕಾರ:

ನಿರ್ದಿಷ್ಟ ‘ಸರ್ಕಾರಿ ಏಜೆನ್ಸಿ ವ್ಯವಹಾರ’ಕ್ಕಾಗಿ ‘ಏಜೆನ್ಸಿ ಬ್ಯಾಂಕ್‌ಗಳನ್ನು’ (ನಿಗದಿತ ಖಾಸಗಿ ವಲಯದ ಏಜೆನ್ಸಿ ಬ್ಯಾಂಕ್‌ಗಳನ್ನು ಒಳಗೊಂಡಂತೆ) ಮಾನ್ಯತೆ ನೀಡುವ ಆಯ್ಕೆಯು ಸಂಪೂರ್ಣವಾಗಿ ಕೇಂದ್ರ ಸರ್ಕಾರ / ರಾಜ್ಯ ಸರ್ಕಾರಗಳ ಸಂಬಂಧಿತ ಇಲಾಖೆಗಳಲ್ಲಿದೆ.

ಪರಿಣಾಮಗಳು:

 1. ಈ ವ್ಯವಸ್ಥೆಯನ್ನು ಅನುಸರಿಸಿ, ಬ್ಯಾಂಕುಗಳು ಈಗ ‘ಮಾರ್ಜಿನಲ್ ಸ್ಟ್ಯಾಂಡಿಂಗ್ ಫೆಸಿಲಿಟಿ (Marginal Standing Facility – MSF)’ ಯೊಂದಿಗೆ, ಪ್ರಾಥಮಿಕ ಹರಾಜು, ಸ್ಥಿರ ದರ ಮತ್ತು ವೇರಿಯಬಲ್ ರೆಪೋ ದರ, ಮತ್ತು ರಿವರ್ಸ್ ರೆಪೋ, ಮತ್ತು ಸರ್ಕಾರ ಮತ್ತು ಇತರ ದೊಡ್ಡ ನಿಗಮಗಳು ನೀಡಿದ ಪ್ರಸ್ತಾವನೆಗಳಿಗಾಗಿ ವಿನಂತಿ (Request for Proposals) ಯಲ್ಲಿ ಭಾಗವಹಿಸಬಹುದು.
 2. ಅಲ್ಲದೆ, ಬ್ಯಾಂಕ್‌ಗಳು ಈಗ ಸರ್ಕಾರ ನಡೆಸುವ ಹಣಕಾಸು ಸೇರ್ಪಡೆ ಯೋಜನೆಗಳಲ್ಲಿ ಪಾಲುದಾರರಾಗಲು ಅರ್ಹತೆ ಪಡೆಯುತ್ತವೆ.

 

ಕಿರು ಹಣಕಾಸು ಬ್ಯಾಂಕ್ ಗಳ ಕುರಿತು:

 1. ‘ಸಣ್ಣ ಹಣಕಾಸು ಬ್ಯಾಂಕುಗಳು’ (Small Finance Bank – SFBs) ದೇಶದ ಕನಿಷ್ಠ ಪ್ರಮಾಣದಲ್ಲಿ ಬ್ಯಾಂಕಿಂಗ್ ಸೌಲಭ್ಯ ಪಡೆದ ಮತ್ತು ಬ್ಯಾಂಕಿಂಗ್ ಸೌಲಭ್ಯ ರಹಿತ ಪ್ರದೇಶಗಳಿಗೆ ಹಣಕಾಸು ಸೇವೆಗಳನ್ನು ಒದಗಿಸುವ ಹಣಕಾಸು ಸಂಸ್ಥೆಗಳಾಗಿವೆ.
 2. ‘ಸಣ್ಣ ಹಣಕಾಸು ಬ್ಯಾಂಕ್‌ಗಳು’ (SFBs) ‘ಕಂಪನಿಗಳ ಕಾಯಿದೆ,’ 2013 ರ ಅಡಿಯಲ್ಲಿ ‘ಪಬ್ಲಿಕ್ ಲಿಮಿಟೆಡ್ ಕಂಪನಿ’ ಎಂದು ನೋಂದಾಯಿಸಲಾಗಿದೆ.
 3. ಈ ಬ್ಯಾಂಕುಗಳು, ಇತರ ವಾಣಿಜ್ಯ ಬ್ಯಾಂಕುಗಳಂತೆ, ಎಲ್ಲಾ ಮೂಲಭೂತ ಬ್ಯಾಂಕಿಂಗ್ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು, ಉದಾಹರಣೆಗೆ ಸಾಲ ನೀಡುವುದು ಮತ್ತು ಠೇವಣಿಗಳನ್ನು ಸ್ವೀಕರಿಸುವುದು.
 4. ಹಣಕಾಸು ಸೇರ್ಪಡೆ ಕುರಿತು ರಚಿಸಲಾದ ನಚಿಕೇತ್ ಮೋರ್ ಸಮಿತಿ’ಯಿಂದ ‘ಸಣ್ಣ ಹಣಕಾಸು ಬ್ಯಾಂಕ್’ಗಳ ಸ್ಥಾಪನೆಗೆ ಸಲಹೆ ನೀಡಲಾಗಿದೆ.
 5. ಸಣ್ಣ ಹಣಕಾಸು ಬ್ಯಾಂಕ್‌ಗಳು’ ದೊಡ್ಡ ಮೊತ್ತದ ಸಾಲ ನೀಡಲು ಸಾಧ್ಯವಿಲ್ಲ. ಹೆಚ್ಚುವರಿಯಾಗಿ,ಅವರು ಹೈಟೆಕ್ ಉತ್ಪನ್ನಗಳಲ್ಲಿ ಅಂಗಸಂಸ್ಥೆಗಳನ್ನು ಸ್ಥಾಪಿಸಲು ಅಥವಾ ವ್ಯಾಪಾರ ಮಾಡಲು ಸಾಧ್ಯವಿಲ್ಲ.

ಪಾವತಿ ಬ್ಯಾಂಕುಗಳ (Payments Banks) ಕುರಿತು:

ಪಾವತಿ ಬ್ಯಾಂಕ್‌ಗಳನ್ನು, ವಲಸಿಗ ಕಾರ್ಮಿಕರು, ಕಡಿಮೆ ಆದಾಯದ ಕುಟುಂಬಗಳು, ಸಣ್ಣ ಉದ್ಯಮಗಳು, ಇತರ ಅಸಂಘಟಿತ ವಲಯದ ಘಟಕಗಳು ಮತ್ತು ಇತರ ಬಳಕೆದಾರರಿಗೆ ಸಣ್ಣ ಉಳಿತಾಯ ಖಾತೆಗಳು ಮತ್ತು ಪಾವತಿ/ರವಾನೆ ಸೇವೆಗಳನ್ನು ಒದಗಿಸುವ ಮೂಲಕ ಹಣಕಾಸಿನ ಸೇರ್ಪಡೆಯನ್ನು ಉತ್ತೇಜಿಸಲು ಸ್ಥಾಪಿಸಲಾಗಿದೆ.

 1. ಪಾವತಿ ಬ್ಯಾಂಕ್‌ಗಳು ನಿರ್ದಿಷ್ಟ ಮಿತಿಯವರೆಗೆ ಠೇವಣಿಗಳನ್ನು ಸ್ವೀಕರಿಸಬಹುದು. ಪ್ರಸ್ತುತ, ಠೇವಣಿಗಳನ್ನು ಸ್ವೀಕರಿಸಲು ಗರಿಷ್ಠ ಮಿತಿಯು ಪ್ರತಿ ವ್ಯಕ್ತಿಗೆ ರೂ 200,000 ಆಗಿದೆ, ಆದರೆ ಭವಿಷ್ಯದಲ್ಲಿ ಇದನ್ನು ಹೆಚ್ಚಿಸಬಹುದು.
 2. ಈ ಬ್ಯಾಂಕ್‌ಗಳು ಸಾಲ ಅಥವಾ ಕ್ರೆಡಿಟ್ ಕಾರ್ಡ್‌ಗಳನ್ನು ನೀಡಲು ಸಾಧ್ಯವಿಲ್ಲ. ಆದಾಗ್ಯೂ, ಅಂತಹ ಬ್ಯಾಂಕುಗಳು ‘ಚಾಲ್ತಿ’ ಮತ್ತು ‘ಉಳಿತಾಯ’ ಖಾತೆಗಳನ್ನು ನಿರ್ವಹಿಸಬಹುದು.
 3. ಪಾವತಿ ಬ್ಯಾಂಕ್‌ಗಳು ATM ಮತ್ತು ಡೆಬಿಟ್ ಕಾರ್ಡ್‌ಗಳು ಹಾಗೂ ಆನ್‌ಲೈನ್ ಮತ್ತು ಮೊಬೈಲ್ ಬ್ಯಾಂಕಿಂಗ್ ಸೌಲಭ್ಯಗಳನ್ನು ನೀಡಬಹುದು.

ದಯವಿಟ್ಟು ಗಮನಿಸಿ:

ಪೇಮೆಂಟ್ಸ್‌ ಬ್ಯಾಂಕ್‌:

ನಮ್ಮಲ್ಲಿ ಬ್ಯಾಂಕುಗಳಿಗೇನೂ ಕೊರತೆಯಿಲ್ಲ. ಆದರೂ ದೇಶದ ಎಲ್ಲ ಸ್ತರದ ಜನರಿಗೂ ಬ್ಯಾಂಕಿಂಗ್ ಸೌಲಭ್ಯ ಇನ್ನೂ ಕೈಗೆಟುಕಿಲ್ಲ. ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಬ್ಯಾಂಕುಗಳು ಮಹತ್ವದ ಪಾತ್ರ ನಿರ್ವಹಿಸುತ್ತವೆ.

ಬ್ಯಾಂಕುಗಳ ರಾಷ್ಟ್ರೀಕರಣ,  ಗ್ರಾಮೀಣ ಬ್ಯಾಂಕುಗಳ ಸ್ಥಾಪನೆ,  ಹೊಸ ಪೀಳಿಗೆಯ ಖಾಸಗಿ ಬ್ಯಾಂಕುಗಳ ಸ್ಥಾಪನೆಗೆ ಮನ್ನಣೆ, ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಉತ್ತೇಜನ, ಸಹಕಾರಿ ಬ್ಯಾಂಕುಗಳ ಕಾರ್ಯಕ್ಷಮತೆಯ ಹೆಚ್ಚಳಕ್ಕೆ ನೆರವು, ‘ಗರೀಬಿ ಹಟಾವೊ’ ಘೋಷಣೆಯೊಂದಿಗೆ ಆರ್ಥಿಕವಾಗಿ ಹಿಂದುಳಿದವರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆಯ ಅನುಷ್ಠಾನ, ಜನರಲ್ಲಿ ಬ್ಯಾಂಕಿಂಗ್ ಮತ್ತು ಹಣಕಾಸು ವ್ಯವಹಾರದ ಬಗ್ಗೆ ಅರಿವು ಮೂಡಿಸಲು ‘ಹಣಕಾಸು ಸಾಕ್ಷರತೆ’ ಗೆ ಚಾಲನೆ, ‘ಜನಧನ ಖಾತೆ’ ತೆರೆಯುವ ಆಂದೋಲನ, ನೇರ ನಗದು ಜಮಾ ಮತ್ತಿತರ ಬೆಳವಣಿಗೆಗಳು ಈ ಕ್ಷೇತ್ರದಲ್ಲಿ ನಡೆದಿವೆ.

ಸುಧಾರಣೆಯ ಪ್ರತಿಯೊಂದು ಹಂತದಲ್ಲಿಯೂ  ಬ್ಯಾಂಕಿಂಗ್ ಉದ್ಯಮವು ಅನೇಕರಿಗೆ ಉಳಿತಾಯ, ಹೂಡಿಕೆ ಮತ್ತು ಆರ್ಥಿಕ ನೆಮ್ಮದಿ ನೀಡಲು ನೆರವಾಗಿದೆ. ಬ್ಯಾಂಕಿಂಗ್ ಕ್ಷೇತ್ರದಲ್ಲಿ ಸುಧಾರಣೆ ಎಂದರೆ ನಿಂತ ನೀರಲ್ಲ, ಅದೊಂದು ಹರಿಯುವ ನದಿ ಇದ್ದಂತೆ.

ಬೃಹತ್‌ ಪ್ರಮಾಣದಲ್ಲಿ ವಹಿವಾಟು ವಿಸ್ತರಿಸಿರುವ ದೊಡ್ಡ ಬ್ಯಾಂಕುಗಳಿಗೆ ಸಣ್ಣ ಸಣ್ಣ ಠೇವಣಿದಾರರೆಂದರೆ ಅಷ್ಟಕ್ಕಷ್ಟೆ ಎಂಬಂತಾಗಿದೆ. ಈ ಸಮಸ್ಯೆಯನ್ನು ನೀಗಿಸಲು ಇದೀಗ ಬಂದಿವೆ ‘ಪಾವತಿ ಬ್ಯಾಂಕುಗಳು’ ಅಂದರೆ ‘ಪೇಮೆಂಟ್ ಬ್ಯಾಂಕ್ಸ್’. ಇದುವರೆಗೂ ಬರೀ ಕಾಗದ ಹೊತ್ತು ಮನೆ ಬಾಗಿಲಿಗೆ ಬರುತ್ತಿದ್ದ ‘ಅಂಚೆಯ ಅಣ್ಣ’ ಇನ್ನು ಮೇಲೆ ನಿಮ್ಮ ಮನೆಯಲ್ಲೇ ಬ್ಯಾಂಕ್ ಖಾತೆ ತೆರೆಯುತ್ತಾನೆ, ಖಾತೆಗೆ ಹಣ ಜಮಾ ಮಾಡುತ್ತಾನೆ, ನೀವು ಹಿಂದೆ ಪಡೆಯುವ ನಗದು ಹಣ ನೀಡುತ್ತಾನೆ. ನೀವು ಬ್ಯಾಂಕ್ ಶಾಖೆ ಹಾಗಿರಲಿ, ಎಟಿಎಂವರೆಗೂ ಹೋಗಿ ಹಣವಿಲ್ಲ ಎಂದು ಪೆಚ್ಚು ಮೋರೆ ಹಾಕಿಕೊಂಡು ಹಿಂತಿರುಗಬೇಕಿಲ್ಲ.

ಏನಿದು ‘ಪಾವತಿ ಬ್ಯಾಂಕು’

‘ಪಾವತಿ ಬ್ಯಾಂಕುಗಳ ಪರಿಕಲ್ಪನೆ’ಯ ಗರಿಮೂಡಿದ್ದು ತೀರಾ ಇತ್ತೀಚೆಗೆ. ಭಾರತೀಯ ರಿಸರ್ವ್ ಬ್ಯಾಂಕು, ಸಣ್ಣ ವ್ಯಾಪಾರಿಗಳು ಮತ್ತು ಕಡಿಮೆ ಆದಾಯದ ಕುಟುಂಬಗಳಿಗೆ ಸಮಗ್ರ ಹಣಕಾಸು ಸೇವಾ ಸೌಲಭ್ಯ ಒದಗಿಸುವ ಬಗ್ಗೆ ಅಧ್ಯಯನ ನಡೆಸಲು ನೇಮಿಸಿದ ನಚಿಕೇತ್ ಕೌರ್ ಸಮಿತಿಯು ಮಾಡಿದ ಶಿಫಾರಸುಗಳ ಫಲಶೃತಿಯೇ ಇವುಗಳ ಸ್ಥಾಪನೆಗೆ ಬುನಾದಿಯಾಗಿದೆ. ವಲಸೆ ಕಾರ್ಮಿಕರು, ಕಡಿಮೆ ಆದಾಯದ ಕುಟುಂಬಗಳು, ಸಣ್ಣ ವ್ಯಾಪಾರಸ್ಥರು, ಇತರ ಅಸಂಘಟಿತ ವಲಯದವರು ಮುಂತಾದವರಿಗೆ ಸಣ್ಣ ಉಳಿತಾಯ ಖಾತೆ ಹಾಗೂ ಪಾವತಿ ಮತ್ತು ಹಣ ವರ್ಗಾವಣೆ ಸೌಲಭ್ಯವನ್ನು ಒದಗಿಸುವುದೇ ಪಾವತಿ ಬ್ಯಾಂಕುಗಳ ಪ್ರಮುಖ ಧ್ಯೇಯ. ಇದು ಕೇಂದ್ರ ಸರ್ಕಾರದ ಜನಪ್ರಿಯ ‘ಆರ್ಥಿಕ ಸೇರ್ಪಡೆ’ ಕಾರ್ಯಕ್ರಮದ ಒಂದು ಭಾಗವಾಗಿದೆ.

ಇವುಗಳ ವಿಶೇಷತೆ ಏನೆಂದರೆ ಅವು ಠೇವಣಿಗಳನ್ನು ಸ್ವೀಕರಿಸುತ್ತವೆಯೇ ಹೊರತು ಸಾಲವನ್ನು ನೀಡುವುದಿಲ್ಲ. ಆರ್‌ಬಿಐ ಮಾರ್ಗಸೂಚಿಯ ಅನ್ವಯ ಪಾವತಿ ಬ್ಯಾಂಕುಗಳು ಪ್ರಾರಂಭಿಕ ಹಂತದಲ್ಲಿ ತನ್ನ ಪ್ರತಿ ಗ್ರಾಹಕರಿಂದ ಗರಿಷ್ಠ ₹1 ಲಕ್ಷದವರೆಗೆ ಮಾತ್ರ ಠೇವಣಿ ಸ್ವೀಕರಿಸಲು(ಪ್ರಸ್ತುತ ಎರಡು ಲಕ್ಷದವರೆಗೆ) ಅವಕಾಶವಿದೆ. ಎಟಿಎಂ, ಪಾಯಿಂಟ್ ಆಫ್ ಸೇಲ್ ಯಂತ್ರ, ಮೊಬೈಲ್ ಬ್ಯಾಂಕಿಂಗ್ ಮೂಲಕ ಪಾವತಿ ಮತ್ತು ಹಣ ವರ್ಗಾವಣೆ ಸೇವೆ ಒದಗಿಸುವಿಕೆ, ನಷ್ಟ ಸಂಭಾವ್ಯತೆಯಲ್ಲಿ ಭಾಗಿಯಾಗಲು ಎಡೆಮಾಡಿಕೊಡದಂತಹ ಸರಳ ಹಣಕಾಸು ಉತ್ಪನ್ನಗಳಾದ ಮ್ಯೂಚುವಲ್ ಫಂಡ್‍ ಮತ್ತು ವಿಮಾ ಉತ್ಪನ್ನಗಳ ವಿತರಣೆ ಹಾಗೂ ಬೇರೊಂದು ಬ್ಯಾಂಕಿನ ವ್ಯವಹಾರ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುವಿಕೆ – ಇವು ಪಾವತಿ ಬ್ಯಾಂಕುಗಳ ಕಾರ್ಯವ್ಯಾಪ್ತಿಗೆ ಒಳಪಡುತ್ತವೆ.

ಇವುಗಳು ಗ್ರಾಹಕರಿಗೆ ಎಟಿಎಂ ಕಾರ್ಡು ಅಥವಾ ಡೆಬಿಟ್ ಕಾರ್ಡುಗಳನ್ನು ನೀಡಬಹುದೇ ಹೊರತು ಕ್ರೆಡಿಟ್ ಕಾರ್ಡುಗಳನ್ನು ನೀಡುವಂತಿಲ್ಲ. ಏಕೆಂದರೆ ಸಾಲ ನೀಡುವುದು ಇವುಗಳ ಕಕ್ಷೆಗೇ ಬರುವುದಿಲ್ಲ.

ಇವುಗಳು ಕೆಲವು ಇತಿಮಿತಿಗಳಿಗೆ ಒಳಪಟ್ಟಿದ್ದರೂ, ಇತರ ಬ್ಯಾಂಕುಗಳಂತೆ ಶಾಖಾ ಜಾಲದ ವಿಸ್ತರಣೆ, ಎಟಿಎಂಗಳ ಸ್ಥಾಪನೆ, ವ್ಯವಹಾರ ಪ್ರತಿನಿಧಿಗಳ ನೇಮಕಾತಿ, ಅಂತರ್ಜಾಲ ಬ್ಯಾಂಕಿಂಗ್ ವ್ಯವಸ್ಥೆ, ಬಿಲ್ ಪಾವತಿ ಸೇವೆ ಮತ್ತು ಮೊಬೈಲ್ ಬ್ಯಾಂಕಿಂಗ್ ಸೇವೆಗಳನ್ನು ಒದಗಿಸಲು ಯಾವುದೇ ಅಭ್ಯಂತರವಿರುವುದಿಲ್ಲ. ಇಂತಹ ಬಹುತೇಕ ಬ್ಯಾಂಕುಗಳು ಭೌತಿಕ ಶಾಖೆಗಳನ್ನು ತೆರೆಯುವುದಕ್ಕಿಂತ ಡಿಜಿಟಲ್ ಬ್ಯಾಂಕಿಂಗ್‌ಗೆ ಹೆಚ್ಚು ಒತ್ತು ಕೊಟ್ಟು, ಚಿಲ್ಲರೆ ವ್ಯಾಪಾರ ಮಳಿಗೆಗಳು, ಪೆಟ್ರೋಲ್ ಬಂಕುಗಳು ಮುಂತಾದ ವ್ಯವಹಾರ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಗ್ರಾಹಕರು ಬಯಸಿದರೆ ಕೇವಲ ಒಂದು ಫೋನ್ ಮಾಡಿದರೆ ಸಾಕು, ಬ್ಯಾಂಕಿನ ಪ್ರತಿನಿಧಿಗಳು ಮನೆ ಬಾಗಿಲಿಗೇ ಬಂದು ಸೇವೆ ನೀಡುತ್ತಾರೆ. ಇವುಗಳ ಗ್ರಾಹಕರಿಗೆ ವ್ಯವಹಾರದ ವೇಳೆ, ರಜಾ ದಿನ ಮುಂತಾದ ಸಮಸ್ಯೆಗಳಿರುವುದಿಲ್ಲ.

ಮೊದಲ ಪಾವತಿ ಬ್ಯಾಂಕು:

22ನೇ ನವೆಂಬರ್ 2016ರಂದು ಏರ್‌ಟೆಲ್‌ ಪೇಮೆಂಟ್ ಬ್ಯಾಂಕು ರಾಜಸ್ಥಾನದಲ್ಲಿ ಪ್ರಾಯೋಗಿಕವಾಗಿ ತನ್ನ ಕಾರ್ಯಾಚರಣೆಯನ್ನು ಪ್ರಾರಂಭಿಸುವುದರೊಂದಿಗೆ ದೇಶದ ಮೊದಲ ಪಾವತಿ ಬ್ಯಾಂಕ್ ಆಗಿ ಜನ್ಮ ತಾಳಿತು. ಭಾರ್ತಿ ಏರ್‌ಟೆಲ್‌ ಮತ್ತು ಕೋಟಕ್ ಮಹೀಂದ್ರಾ ಬ್ಯಾಂಕಿನ ಜಂಟಿ ಬಂಡವಾಳದೊಂದಿಗೆ ಸ್ಥಾಪಿತವಾದ ಈ ಪಾವತಿ ಬ್ಯಾಂಕು, ಕ್ರಮೇಣ ಏರ್‌ಟೆಲ್‌ ರಿಟೇಲ್‌ ಮಳಿಗೆಗಳನ್ನು ಬ್ಯಾಂಕಿನ ವ್ಯವಹಾರ ಕೇಂದ್ರಗಳನ್ನಾಗಿ ಪರಿವರ್ತಿಸಿತು.

ಈ ಕೇಂದ್ರಗಳಲ್ಲಿ ಮೂಲ ಬ್ಯಾಂಕಿಂಗ್ ಸೇವೆಗಳಾದ ಖಾತೆ ತೆರೆಯುವಿಕೆ, ನಗದು ಜಮಾ ಮತ್ತು ಹಿಂದೆ ಪಡೆಯುವ ಸೇವಾ ಸೌಲಭ್ಯವನ್ನು ನೀಡಲಾಗುತ್ತಿದೆ. ಈ ಪೇಮೆಂಟ್ ಬ್ಯಾಂಕಿನ ವಿಶೇಷತೆ ಎಂದರೆ ಏರ್‌ಟೆಲ್‌ ಗ್ರಾಹಕರ ಮೊಬೈಲ್ ಸಂಖ್ಯೆಯನ್ನೇ ಬ್ಯಾಂಕಿನ ಖಾತಾ ಸಂಖ್ಯೆಯನ್ನಾಗಿ ಪರಿಗಣಿಸಿ, ಮೊಬೈಲ್ ಬ್ಯಾಂಕಿಂಗಿಗೆ ಉತ್ತೇಜನ ನೀಡುತ್ತಿರುವುದು. ಹೀಗಾಗಿ ಲಕ್ಷಾಂತರ ಗ್ರಾಮೀಣ ಭಾಗದ ಜನರು ಏರ್‌ಟೆಲ್‌ ಪಾವತಿ ಬ್ಯಾಂಕಿನ ಮೂಲಕ ಪ್ರಥಮ ಬಾರಿಗೆ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳ ಅನುಭವ ಪಡೆಯುತ್ತಿದ್ದಾರೆ. ಈ   ಬ್ಯಾಂಕು 4 ಲಕ್ಷಕ್ಕೂ ಹೆಚ್ಚು ಬ್ಯಾಂಕಿಂಗ್ ವ್ಯವಹಾರ ಕೇಂದ್ರಗಳನ್ನು ಹೊಂದಿದೆ.

ಅನುಮತಿ ಪಡೆದ ಉಳಿದ ಹತ್ತು ಬ್ಯಾಂಕುಗಳ ಪೈಕಿ ನಾಲ್ಕು ಬ್ಯಾಂಕುಗಳು ಈಗಾಗಲೇ ಕಾರ್ಯಾರಂಭ ಮಾಡಿವೆ. ಅಂಚೆ ಇಲಾಖೆಯ ಪಾವತಿ ಬ್ಯಾಂಕು ಶೀಘ್ರದಲ್ಲಿಯೇ ಪ್ರಾರಂಭವಾಗಲಿದೆ. ಪೇಟಿಎಂ ಪೇಮೆಂಟ್ ಬ್ಯಾಂಕು, ಫಿನೋ ಟೆಕ್ ಪೇಮೆಂಟ್ ಬ್ಯಾಂಕು ಮತ್ತು ಆದಿತ್ಯ ಬಿರ್ಲಾ ಪೇಮೆಂಟ್ ಬ್ಯಾಂಕ್ ಲಿಮಿಟೆಡ್ ಈಗಾಗಲೇ ಕಾರ್ಯಾರಂಭ ಮಾಡಿರುವ ಇತರ ಪಾವತಿ ಬ್ಯಾಂಕುಗಳು. ಇದಲ್ಲದೆ ರಿಲಯನ್ಸ್ ಇಂಡಸ್ಟ್ರೀಸ್ ಮತ್ತು ಭಾರತೀಯ ಸ್ಟೇಟ್ ಬ್ಯಾಂಕಿನ ಜಂಟಿ ಸಹಭಾಗಿತ್ವದಲ್ಲಿ ಜಿಯೋ ಪೇಮೆಂಟ್ ಬ್ಯಾಂಕು ಸಹಾ ಕಾರ್ಯಾರಂಭ ಮಾಡಲಿದೆ. ಜಿಯೊ ಪೇಮೆಂಟ್ ಬ್ಯಾಂಕು, ತನ್ನ ಗ್ರಾಹಕರಿಗೆ ಎಸ್‌ಬಿಐ ಮೂಲಕ ಸಾಲ ಒದಗಿಸಿಕೊಡುವ ಆಲೋಚನೆ ಹೊಂದಿದೆ.

ಭಾರತೀಯ ಅಂಚೆ ಪಾವತಿ ಬ್ಯಾಂಕು:

ಕಾರ್ಯಾರಂಭ ಮಾಡಿರುವ  ಬ್ಯಾಂಕುಗಳೆಲ್ಲ ಖಾಸಗಿ ವಲಯದಲ್ಲಿವೆ. ಭಾರತೀಯ ಅಂಚೆ ಪಾವತಿ ಬ್ಯಾಂಕು, ಸಂಪೂರ್ಣ ಸರ್ಕಾರಿ ಸ್ವಾಮ್ಯದಲ್ಲಿ ಸ್ಥಾಪನೆಯಾಗಲಿರುವ ಮೊದಲ ಪಾವತಿ ಬ್ಯಾಂಕು. ಸದ್ಯದಲ್ಲಿಯೇ 650 ಶಾಖೆಗಳನ್ನು ತೆರೆಯುವುದರೊಂದಿಗೆ ದೇಶದ ಎಲ್ಲಾ ಜಿಲ್ಲೆಗಳಿಗೂ ತನ್ನ ಶಾಖಾ ಜಾಲ ವಿಸ್ತರಿಸಲು ಉದ್ದೇಶಿಸಿದೆ. ವಿವಿಧ ಅಂಚೆ ಕಛೇರಿಗಳಲ್ಲಿ 3250 ಪ್ರವೇಶ ಕೇಂದ್ರಗಳನ್ನು (ಆಕ್ಸೆಸ್ ಪಾಯಿಂಟ್ಸ್) ಸ್ಥಾಪಿಸುವ ಉದ್ದೇಶವಿದೆ. ಒಂದೂವರೆ ಲಕ್ಷಕ್ಕೂ ಹೆಚ್ಚು ಅಂಚೆ ಕಚೇರಿಗಳಿಗೆ ಸಂಪರ್ಕ ಕಲ್ಪಿಸಿ ಭಾರತೀಯ ಅಂಚೆ ಪಾವತಿ ಬ್ಯಾಂಕಿನ ಸೇವೆಯನ್ನು ಬ್ಯಾಂಕಿಂಗ್ ವ್ಯವಸ್ಥೆಯಿಂದ ವಂಚಿತವಾಗಿರುವ ಕುಗ್ರಾಮಗಳಿಗೂ ವಿಸ್ತರಿಸುವ ಬಗ್ಗೆ ಸರ್ಕಾರ ಚಿಂತನೆ ನಡೆಸುತ್ತಿದೆ. ಇದು ಸಾಧ್ಯವಾದಲ್ಲಿ ಭಾರತೀಯ ಅಂಚೆ ಪಾವತಿ ಬ್ಯಾಂಕು ‘ದೇಶದ ಅತಿ ದೊಡ್ಡ ಬ್ಯಾಂಕಿಂಗ್ ನೆಟ್‍ವರ್ಕ್ ಹೊಂದಿದ ಬ್ಯಾಂಕು’ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಇದರ ಘೋಷವಾಕ್ಯ ‘ನಿಮ್ಮ ಬ್ಯಾಂಕು, ನಿಮ್ಮ ಬಾಗಿಲಿನಲ್ಲಿ’.

ಈ ಬ್ಯಾಂಕು ತನ್ನ ಘೋಷವಾಕ್ಯಕ್ಕೆ ತಕ್ಕಂತೆ ಗ್ರಾಹಕರ ಮನೆ ಬಾಗಿಲಿನಲ್ಲಿಯೇ ತತ್‍ಕ್ಷಣದ ಕಾಗದರಹಿತ ಖಾತೆ ತೆರೆಯುವ, ಹಣ ಜಮಾ ಮಾಡುವ, ಹಣ ಹಿಂಪಡೆಯುವ ಮತ್ತು ವಿವಿಧ ಬಿಲ್‍ಗಳನ್ನು ಪಾವತಿ ಮಾಡುವ ಅವಕಾಶವನ್ನೂ ಕಲ್ಪಿಸಲಿದೆ. ಮನೆ ಬಾಗಿಲ ಬಳಿಯ ಸೇವೆ ಸಲ್ಲಿಸಲು ದೇಶದಾದ್ಯಂತ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 11,000ಕ್ಕೂ ಹೆಚ್ಚು ಪೋಸ್ಟ್‌ಮ್ಯಾನ್‍ಗಳು ನಿಯುಕ್ತರಾಗಲಿದ್ದಾರೆ.

ಈ ಬ್ಯಾಂಕ್‌ ಖಾತೆಯಲ್ಲಿ ಗರಿಷ್ಠ ₹1 ಲಕ್ಷದವರೆಗೆ ಠೇವಣಿ ಇಡಬಹುದು. ಒಂದುವೇಳೆ ಯಾವುದೇ ಸಂದರ್ಭದಲ್ಲಿ ಉಳಿತಾಯದ ಹಣ ₹1 ಲಕ್ಷ ಮೀರಿದರೆ,  ಹೆಚ್ಚುವರಿ ಮೊತ್ತವನ್ನು ತಕ್ಷಣವೇ ಆಯಾ ಗ್ರಾಹಕರು ಅಂಚೆ ಕಚೇರಿಯಲ್ಲಿ ಹೊಂದಿರುವ ಉಳಿತಾಯ ಖಾತೆಗೆ ತನ್ನಿಂತಾನೇ ವರ್ಗಾವಣೆ ಮಾಡುವಂತಹ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ.

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಇವುಗಳು ಒಂದಿಷ್ಟು ಕ್ರಾಂತಿಯನ್ನುಂಟು ಮಾಡುವುದಂತೂ ಸಹಜ. ಆದರೆ ಇವುಗಳ ದೈನಂದಿನ ಕಾರ್ಯನಿರ್ವಹಣೆಯಲ್ಲಿ ಪಾಲ್ಗೊಳ್ಳುವ ರೀಟೇಲ್ ಮಳಿಗೆಗಳು, ಮನೆ ಬಾಗಿಲಿನಲ್ಲಿ ಸೇವೆ ಸಲ್ಲಿಸುವ ಏಜೆಂಟರು ಮತ್ತಿತರ ಸಿಬ್ಬಂದಿ, ತಮ್ಮ ಗ್ರಾಹಕರ ವ್ಯವಹಾರ ಗೌಪ್ಯತೆ ಕಾಯ್ದುಕೊಳ್ಳುವುದು, ‘ನಿಮ್ಮ ಗ್ರಾಹಕರನ್ನು ತಿಳಿಯಿರಿ’ (ಕೆವೈಸಿ) ನಿಯಮಗಳು, ಆರ್‌ಬಿಐ ನಿರ್ದೇಶನಗಳನ್ನು ಎಷ್ಟರಮಟ್ಟಿಗೆ ಕರಾರವಾಕ್ಕಾಗಿ ಪಾಲಿಸುತ್ತವೆ ಎಂಬುದರ ಮೇಲೆ ಇವುಗಳ ಯಶಸ್ಸು ಅವಲಂಬಿಸಿದೆ. ಈ ನಿಟ್ಟಿನಲ್ಲಿ ಸ್ವಲ್ಪ ಎಚ್ಚರ ತಪ್ಪಿದರೂ ಪಾವತಿ ಬ್ಯಾಂಕುಗಳು ಬಹಳ ಬೆಲೆ ತೆರಬೇಕಾದೀತು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಭಾರತೀಯ ಆರ್ಥಿಕತೆ ಮತ್ತು ಯೋಜನೆ, ಸಂಪನ್ಮೂಲಗಳ ಕ್ರೋಡೀಕರಣ, ಪ್ರಗತಿ, ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು.

ಬ್ಯಾಂಕೇತರ ಹಣಕಾಸು ಸಂಸ್ಥೆಗಳಿಗೆ ಪರಿಷ್ಕೃತ ‘ತ್ವರಿತ ಸರಿಪಡಿಸುವ ಕ್ರಿಯಾ’ ಕಾರ್ಯವಿಧಾನ (PCA) ಚೌಕಟ್ಟನ್ನು ನೀಡಿದ RBI:


(RBI introduces prompt corrective action framework for NBFCs)

ಸಂದರ್ಭ:

ಇತ್ತೀಚೆಗೆ, ‘ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ’ (NBFCs) ತ್ವರಿತ ಸರಿಪಡಿಸುವ ಕ್ರಿಯಾ’ ಕಾರ್ಯವಿಧಾನ / ‘ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್ (Prompt Corrective Action – PCA) ಚೌಕಟ್ಟನ್ನು ಭಾರತೀಯ ರಿಸರ್ವ್ ಬ್ಯಾಂಕ್ (RBI) ಬಿಡುಗಡೆ ಜಾರಿಗೊಳಿಸಿದೆ.

 1. ಮಾರ್ಚ್ 31 ರಂದು ಅಥವಾ ನಂತರ NBFC ಗಳ ಹಣಕಾಸಿನ ಸ್ಥಿತಿಯನ್ನು ಆಧರಿಸಿ NBFC ಗಳಿಗೆ PCA ಫ್ರೇಮ್‌ವರ್ಕ್ ಅಕ್ಟೋಬರ್ 1, 2022 ರಿಂದ ಜಾರಿಗೆ ಬರಲಿದೆ.

ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್ (PCA) ಫ್ರೇಮ್‌ವರ್ಕ್ ಅಥವಾ ತ್ವರಿತ ಸರಿಪಡಿಸುವ/ತಿದ್ದುಪಡಿ ಕ್ರಿಯಾ’ ಕಾರ್ಯವಿಧಾನ ಚೌಕಟ್ಟು ಕುರಿತು:

ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್ (PCA) ಒಂದು ಚೌಕಟ್ಟಾಗಿದ್ದು, ಇದರ ಮೂಲಕ ದುರ್ಬಲ ಹಣಕಾಸು ಸೂಚಕಗಳನ್ನು ಹೊಂದಿರುವ ಬ್ಯಾಂಕ್‌ಗಳ ಮೇಲೆ ಆರ್‌ಬಿಐ ನಿಗಾ ಇಡುತ್ತದೆ.

ಸಕಾಲಿಕ ಮೇಲ್ವಿಚಾರಣಾ ಹಸ್ತಕ್ಷೇಪವನ್ನು ಸಕ್ರಿಯಗೊಳಿಸುವುದು ಇದರ ಉದ್ದೇಶವಾಗಿದೆ. ಅದರ ಆರ್ಥಿಕ ಸ್ಥಿತಿಯನ್ನು ಪುನಃಸ್ಥಾಪಿಸಲು ಸಮಯೋಚಿತವಾಗಿ ಪರಿಹಾರ ಕ್ರಮಗಳನ್ನು ಪ್ರಾರಂಭಿಸಲು ಮತ್ತು ಕಾರ್ಯಗತಗೊಳಿಸಲು ಮೇಲ್ವಿಚಾರಣೆಯ ಘಟಕದ ಅಗತ್ಯವಿದೆ. PCA ಫ್ರೇಮ್‌ವರ್ಕ್ ಪರಿಣಾಮಕಾರಿ ಮಾರುಕಟ್ಟೆ ಶಿಸ್ತಿನ ಸಾಧನವಾಗಿ ಕಾರ್ಯನಿರ್ವಹಿಸಲು ಉದ್ದೇಶಿಸಿದೆ.

ಅನ್ವಯಿಸುವಿಕೆ:

 1. ಎಲ್ಲಾ ಠೇವಣಿ ಸ್ವೀಕರಿಸುವ ‘ಬ್ಯಾಂಕೇತರ ಹಣಕಾಸು ಕಂಪನಿಗಳು’ (NBFC ಗಳು), ಹೂಡಿಕೆ ಮತ್ತು ಕ್ರೆಡಿಟ್ ಕಂಪನಿಗಳು, ಪ್ರಮುಖ ಹೂಡಿಕೆ ಕಂಪನಿಗಳು, ಮೂಲಸೌಕರ್ಯ ಸಾಲ ನಿಧಿಗಳು, ಮೂಲಸೌಕರ್ಯ ಹಣಕಾಸು ಕಂಪನಿಗಳು ಮತ್ತು ‘ಮೈಕ್ರೋ ಫೈನಾನ್ಸ್ ಸಂಸ್ಥೆಗಳು’ ಸೇರಿದಂತೆ, ಮೇಲಿನ ಮತ್ತು ಅಪೆಕ್ಸ್ ಮಟ್ಟದಲ್ಲಿ ಎಲ್ಲಾ ಠೇವಣಿ ರಹಿತ NBFC ಗಳಿಗೆ PCA ಫ್ರೇಮ್‌ವರ್ಕ್ ಅನ್ವಯಿಸುತ್ತದೆ.
 2. ಆದಾಗ್ಯೂ, ಪಿಸಿಎ ಚೌಕಟ್ಟಿನಲ್ಲಿ, ಸಾರ್ವಜನಿಕ ನಿಧಿಗಳು, ಸರ್ಕಾರಿ ಸ್ವಾಮ್ಯದ ಘಟಕಗಳು, ಪ್ರಾಥಮಿಕ ವಿತರಕರು ಮತ್ತು ವಸತಿ ಹಣಕಾಸು ಕಂಪನಿಗಳಿಂದ ಹಣವನ್ನು ಸ್ವೀಕರಿಸದ ‘ಬ್ಯಾಂಕೇತರ ಹಣಕಾಸು ಕಂಪನಿಗಳನ್ನು’ ಹೊರಗಿಡಲಾಗಿದೆ.

ಬ್ಯಾಂಕಿಂಗ್ ಅಲ್ಲದ ಹಣಕಾಸು ಕಂಪನಿಗಳಿಗೆ’ ಪಿಸಿಎ ಚೌಕಟ್ಟಿನ ಅನುಷ್ಠಾನಕ್ಕೆ ಸೂಚಕಗಳು:

PCA ಚೌಕಟ್ಟಿನ ಅಡಿಯಲ್ಲಿ, ಕೇಂದ್ರ ಬ್ಯಾಂಕ್ ಮೂರು ಸೂಚಕಗಳನ್ನು ಮೇಲ್ವಿಚಾರಣೆ ಮಾಡುತ್ತದೆ – ಬಂಡವಾಳದಿಂದ ಅಪಾಯ-ತೂಕದ ಸ್ವತ್ತುಗಳ ಅನುಪಾತ (capital to risk-weighted assets ratio – CRAR), ಶ್ರೇಣಿ I ಅನುಪಾತ ಮತ್ತು ‘ಕಾರ್ಯ ನಿರ್ವಹಿಸದ ಹೂಡಿಕೆಗಳು’ (NPIs) ಸೇರಿದಂತೆ ನಿವ್ವಳ ಅನುತ್ಪಾದಕ ಆಸ್ತಿಗಳು (NNPAs).

 1. ಕೋರ್ ಇನ್ವೆಸ್ಟ್‌ಮೆಂಟ್ ಕಂಪನಿಗಳ (CICs) ಸಂದರ್ಭದಲ್ಲಿ, ಆರ್‌ಬಿಐ ಹೊಂದಾಣಿಕೆ ಮಾಡಲಾದ ನಿವ್ವಳ ಮೌಲ್ಯ/ಒಟ್ಟು ಅಪಾಯ-ತೂಕದ ಸ್ವತ್ತುಗಳು, ಡಿವಿಡೆಂಡ್ ಅನುಪಾತ ಮತ್ತು ನಿವ್ವಳ ಅನುತ್ಪಾದಕ ಆಸ್ತಿಗಳನ್ನು (NNPAs) ‘ ಕಾರ್ಯ ನಿರ್ವಹಿಸದ ಹೂಡಿಕೆಗಳು’ ಸೇರಿದಂತೆ ಮೇಲ್ವಿಚಾರಣೆ ಮಾಡುತ್ತದೆ.
 2. ಮೇಲಿನ ಸೂಚಕಗಳ ಅಡಿಯಲ್ಲಿ, ಮೂರು ಅಪಾಯದ ಮಿತಿಗಳಲ್ಲಿ ಯಾವುದಾದರೂ ಒಂದನ್ನು ಉಲ್ಲಂಘಿಸಲಾಗಿದೆ ಎಂದು ಕಂಡುಬಂದರೆ PCA ಫ್ರೇಮ್‌ವರ್ಕ್ ಅನ್ನು ಆಹ್ವಾನಿಸಬಹುದು ಅಥವಾ ಜಾರಿಗೊಳಿಸಬಹುದು.

ಅವಶ್ಯಕತೆ:

IL&FS, DHFL, SREI ಮತ್ತು ರಿಲಯನ್ಸ್ ಕ್ಯಾಪಿಟಲ್ ಎಂಬ ನಾಲ್ಕು ದೊಡ್ಡ ಹಣಕಾಸು ಸಂಸ್ಥೆಗಳು ಕಟ್ಟುನಿಟ್ಟಾದ ಹಣಕಾಸು ವಲಯದ ಕಣ್ಗಾವಲು ಹೊರತಾಗಿಯೂ ಕಳೆದ ಮೂರು ವರ್ಷಗಳಲ್ಲಿ ಸ್ಥಿರ ಠೇವಣಿ ಮತ್ತು ಪರಿವರ್ತಿಸಲಾಗದ ಡಿಬೆಂಚರ್‌ಗಳ ಮೂಲಕ ಸಾರ್ವಜನಿಕ ಹಣವನ್ನು ಸಂಗ್ರಹಿಸಿದ ನಂತರ  ‘ಬ್ಯಾಂಕೇತರ ಹಣಕಾಸು ಕಂಪನಿಗಳಿಗೆ’ PCA ಫ್ರೇಮ್‌ವರ್ಕ್ ಅನ್ನು ಜಾರಿಗೊಳಿಸಲಾಗಿದೆ. ಈ ಕಂಪನಿಗಳು ಒಟ್ಟಾರೆಯಾಗಿ ಹೂಡಿಕೆದಾರರಿಗೆ 1 ಲಕ್ಷ ಕೋಟಿ ರೂ. ನಷ್ಟು ಬಾಕಿ ನೀಡಬೇಕಿದೆ.

NBFC ಗಳ ಮೇಲೆ PCA ಚೌಕಟ್ಟನ್ನು ಅನುಷ್ಠಾನ ಮಾಡಿದರೆ  ಅವುಗಳ ಸ್ಥಿತಿ:

 1. ಅಪಾಯದ ಮಿತಿಯನ್ನು ಅವಲಂಬಿಸಿ, ಭಾರತೀಯ ರಿಸರ್ವ್ ಬ್ಯಾಂಕ್ ಎನ್‌ಬಿಎಫ್‌ಸಿಗಳಿಗೆ ಕಡ್ಡಾಯವಾದ ಸರಿಪಡಿಸುವ ಕ್ರಮಗಳನ್ನು ಸೂಚಿಸಬಹುದು, ಉದಾಹರಣೆಗೆ ಡಿವಿಡೆಂಡ್ ವಿತರಣೆ/ಲಾಭಗಳ ರವಾನೆಯ ಮೇಲೆ ನಿರ್ಬಂಧ ಮತ್ತು ಪ್ರವರ್ತಕರು/ಷೇರುದಾರರಿಗೆ ತಮ್ಮ ಇಕ್ವಿಟಿಯನ್ನು ಕೊನೆಗೊಳಿಸಲು ಮತ್ತು ಡಿವಿಡೆಂಡ್‌ಗಳನ್ನು / ಲಾಭಗಳನ್ನು ಕಡಿಮೆ ಮಾಡಲು RBI ನಿರ್ದೇಶನ ನೀಡಬಹುದಾಗಿದೆ.
 2. RBI ಗುಂಪು ಕಂಪನಿಗಳ ಪರವಾಗಿ (CIC ಗಳಿಗೆ ಮಾತ್ರ) ಗ್ಯಾರಂಟಿಗಳನ್ನು ನೀಡುವುದನ್ನು ಅಥವಾ ಇತರ ಅನಿಶ್ಚಿತ ಹೊಣೆಗಾರಿಕೆಗಳನ್ನು ತೆಗೆದುಕೊಳ್ಳುವುದನ್ನು ನಿಷೇಧಿಸಬಹುದು.
 3. ಇದರ ಜೊತೆಗೆ, ಕೇಂದ್ರ ಬ್ಯಾಂಕ್‌ನಿಂದ ಶಾಖೆಯ ವಿಸ್ತರಣೆಯ ಮೇಲೆ ನಿರ್ಬಂಧಗಳನ್ನು ವಿಧಿಸಬಹುದು, ಬೋರ್ಡ್-ಅನುಮೋದಿತ ಮಿತಿಗಳಲ್ಲಿ ತಾಂತ್ರಿಕ ಉನ್ನತೀಕರಣವನ್ನು ಹೊರತುಪಡಿಸಿ ಬಂಡವಾಳ ವೆಚ್ಚದ ಮೇಲಿನ ನಿರ್ಬಂಧಗಳನ್ನು ವಿಧಿಸಬಹುದು ಮತ್ತು ವೇರಿಯಬಲ್ ನಿರ್ವಹಣಾ ವೆಚ್ಚಗಳನ್ನು ಮಿತಿಗೊಳಿಸಬಹುದು/ನೇರವಾಗಿ ಕಡಿಮೆ ಮಾಡಬಹುದು.

‘ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್’ (PCA) ಎಂದರೇನು?

 1. ‘ಕ್ಷಿಪ್ರ ಸರಿಪಡಿಸುವ ಕ್ರಮ’ (PCA) ಎನ್ನುವುದು ಆರ್‌ಬಿಐ, ದುರ್ಬಲ ಆರ್ಥಿಕ ಮಾಪನಗಳನ್ನು ಹೊಂದಿರುವ ಬ್ಯಾಂಕುಗಳನ್ನು ತನ್ನ ಕಾವಲಿನಲ್ಲಿಟ್ಟುಕೊಳ್ಳುವ ಕಾರ್ಯವಿಧಾನವಾಗಿದೆ.
 2. ಆರ್‌ಬಿಐ ‘ಪ್ರಾಂಪ್ಟ್ ಕರೆಕ್ಟಿವ್ ಆಕ್ಷನ್’ ಯಾಂತ್ರಿಕ ವ್ಯವಸ್ಥೆಯನ್ನು 2002 ರಲ್ಲಿ ಪರಿಚಯಿಸಿತು, ಬ್ಯಾಂಕುಗಳಿಗೆ ರಚನಾತ್ಮಕ ಆರಂಭಿಕ ಹಸ್ತಕ್ಷೇಪ ಯಾಂತ್ರಿಕ ವ್ಯವಸ್ಥೆ (structured early-intervention mechanism) ಕಳಪೆ ಆಸ್ತಿ ಗುಣಮಟ್ಟ ಅಥವಾ ಲಾಭವನ್ನು ನೀಡುವ ಸಾಮರ್ಥ್ಯದ ಕೊರತೆಯಿಂದಾಗಿ ‘ಬಂಡವಾಳದ ಕೊರತೆ’ (undercapitalised) ಆಗಿ ಮಾರ್ಪಟ್ಟಿದೆ.
 3. ಇದು ಭಾರತೀಯ ಬ್ಯಾಂಕಿಂಗ್ ಕ್ಷೇತ್ರದಲ್ಲಿ ನಿಷ್ಕ್ರಿಯ ಆಸ್ತಿಗಳ / ವಸೂಲಾಗದ ಸಾಲದ ಸರಾಸರಿ ಪ್ರಮಾಣದ (NPA) ಸಮಸ್ಯೆಯನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ.
 4. 2017 ರಲ್ಲಿ, ಹಣಕಾಸು ಸ್ಥಿರತೆ ಮತ್ತು ಅಭಿವೃದ್ಧಿ ಮಂಡಳಿಯ ಕಾರ್ಯನಿರತ ಗುಂಪು ಮತ್ತು ಭಾರತದ ಹಣಕಾಸು ಸಂಸ್ಥೆಗಳ ರೆಸಲ್ಯೂಶನ್ ಅಡ್ಮಿನಿಸ್ಟ್ರೇಷನ್ ಕುರಿತ ಹಣಕಾಸು ವಲಯದ ಶಾಸನ ಸುಧಾರಣಾ ಆಯೋಗದ ಶಿಫಾರಸುಗಳ ಆಧಾರದ ಮೇಲೆ ಈ ಕಾರ್ಯವಿಧಾನವನ್ನು ಪರಿಶೀಲಿಸಲಾಗಿದೆ.

 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

ಪಾರ್ಕರ್ ಸೋಲಾರ್ ಪ್ರೊಬ್:


(Parker Solar Probe)

ಸಂದರ್ಭ:

ನಾಸಾದಿಂದ ಉಡಾವಣೆಗೊಂಡ ಪಾರ್ಕರ್ ಸೋಲಾರ್ ಪ್ರೋಬ್ (Parker Solar Probe) ಸೂರ್ಯನ ಹೊರಗಿನ ವಾತಾವರಣವಾದ ಕರೋನಾ’ (CORONA) ಮೂಲಕ ಹಾರುವ ಮೊದಲ ಬಾಹ್ಯಾಕಾಶ ನೌಕೆಯಾಗಿದೆ.

ಇತ್ತೀಚೆಗೆ, ಬಾಹ್ಯಾಕಾಶ ನೌಕೆಯು ಕರೋನಾ ಮೂಲಕ ಹಾರಿ ಅದರ ಕಾಂತೀಯ ಕ್ಷೇತ್ರ ಮತ್ತು ಕಣಗಳ ಮಾದರಿಗಳನ್ನು ಸಂಗ್ರಹಿಸಿದೆ.

ಪ್ರಾಮುಖ್ಯತೆ:

ಈ ಸಾಧನೆಯು ವಿಜ್ಞಾನಿಗಳಿಗೆ ಸೂರ್ಯನ ಬಗ್ಗೆ ನಿರ್ಣಾಯಕವಾದ ಮತ್ತು ನಮ್ಮ ಸೌರವ್ಯೂಹದ ಮೇಲೆ ಅದರ ಪ್ರಭಾವದ ಬಗ್ಗೆ ಮಹತ್ವಪೂರ್ಣವಾದ ಮಾಹಿತಿಯನ್ನು ಪಡೆಯಲು ಸಹಾಯ ಮಾಡುತ್ತದೆ.

Current affairs

 

‘ಪಾರ್ಕರ್ ಸೋಲಾರ್ ಪ್ರೋಬ್ ಮಿಷನ್’ ಬಗ್ಗೆ:

 1. ನಾಸಾದ ಐತಿಹಾಸಿಕ ಪಾರ್ಕರ್ ಸೋಲಾರ್ ಪ್ರೋಬ್ ಮಿಷನ್ ಸೂರ್ಯನ ಬಗ್ಗೆ ನಾವು ಇಲ್ಲಿಯವರೆಗೆ ತಿಳಿದಿರುವ ಮಾಹಿತಿಯಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ, ಅಲ್ಲಿ ಬದಲಾಗುತ್ತಿರುವ ಪರಿಸ್ಥಿತಿಗಳು ಸೌರಮಂಡಲದಾದ್ಯಂತ ಹರಡುತ್ತವೆ, ಇದು ಭೂಮಿ ಮತ್ತು ಇತರ ಪ್ರಪಂಚಗಳ ಮೇಲೆ ಪರಿಣಾಮ ಬೀರುತ್ತದೆ.
 2. ಪಾರ್ಕರ್ ಸೋಲಾರ್ ಪ್ರೋಬ್ ಸೂರ್ಯನ ವಾತಾವರಣದ ಮೂಲಕ ಚಲಿಸುತ್ತದೆ. ಈ ಪಾರ್ಕರ್ ಸೋಲಾರ್ ಪ್ರೋಬ್ ಬಾಹ್ಯಾಕಾಶ ನೌಕೆಯು ಯಾವುದೇ ಬಾಹ್ಯಾಕಾಶ ನೌಕೆಯು ತಡೆದುಕೊಳ್ಳುವುದಕ್ಕಿಂತ ಹೆಚ್ಚಿನ ಶಾಖ ಮತ್ತು ವಿಕಿರಣವನ್ನು ಸೂರ್ಯನ ಮೇಲ್ಮೈ ವಾತಾವರಣಕ್ಕೆ ಹತ್ತಿರದಲ್ಲಿದ್ದು ತಡೆದುಕೊಳ್ಳುತ್ತದೆ ಮತ್ತು ಅಂತಿಮವಾಗಿ ನಕ್ಷತ್ರದ ಹತ್ತಿರದ ವೀಕ್ಷಣೆಯ ಅವಲೋಕನಗಳನ್ನು ಮನುಕುಲಕ್ಕೆ ಒದಗಿಸುತ್ತದೆ.

ಪ್ರಯಾಣ:

 1. ಸೂರ್ಯನ ವಾತಾವರಣದ ರಹಸ್ಯಗಳನ್ನು ಬಹಿರಂಗಪಡಿಸುವ ಸಲುವಾಗಿ, ಪಾರ್ಕರ್ ಸೋಲಾರ್ ಪ್ರೋಬ್ ಸುಮಾರು ಏಳು ವರ್ಷಗಳಲ್ಲಿ ಏಳು ಪ್ರಯಾಣದ ಸಮಯದಲ್ಲಿ ಶುಕ್ರನ ಗುರುತ್ವಾಕರ್ಷಣೆಯನ್ನು ಬಳಸುತ್ತದೆ ಮತ್ತು ಕ್ರಮೇಣ ಸೂರ್ಯನ ಹತ್ತಿರ ತನ್ನ ಕಕ್ಷೆಯನ್ನು ಸ್ಥಾಪಿಸುತ್ತದೆ.
 2. ಪಾರ್ಕರ್ ಸೋಲಾರ್ ಪ್ರೋಬ್ ಬಾಹ್ಯಾಕಾಶ ನೌಕೆಯು ಸೂರ್ಯನ ವಾತಾವರಣದ ಮೂಲಕ ಸೂರ್ಯನ ಮೇಲ್ಮೈಯಿಂದ 3.9 ದಶಲಕ್ಷ ಮೈಲುಗಳಷ್ಟು ದೂರದಲ್ಲಿ ಹಾದುಹೋಗುತ್ತದೆ ಮತ್ತು ಬುಧದ ಕಕ್ಷೆಯೊಳಗೆ ಕೂಡ ಮತ್ತು ಇಲ್ಲಿಯವರೆಗೂ ಯಾವುದೇ ಬಾಹ್ಯಾಕಾಶ ನೌಕೆಯು ಬಂದಿರುವ ಹತ್ತಿರ ಕ್ಕಿಂತ 7 ಪಟ್ಟು ಹೆಚ್ಚು ಹತ್ತಿರದಲ್ಲಿದೆ.

ಪಾರ್ಕರ್ ಸೋಲಾರ್ ಪ್ರೋಬ್ ಮಿಷನ್ ನ ಉದ್ದೇಶಗಳು:

ಪಾರ್ಕರ್ ಸೋಲಾರ್ ಪ್ರೋಬ್ ಮಿಷನ್ ಮೂರು ವಿಶಾಲ ವೈಜ್ಞಾನಿಕ ಉದ್ದೇಶಗಳನ್ನು ಹೊಂದಿದೆ:

 1. ಸೌರ ಕರೋನಾ ಮತ್ತು ಸೌರ ಮಾರುತವನ್ನು ಬಿಸಿಮಾಡುವ ಮತ್ತು ವೇಗಗೊಳಿಸುವ ಶಕ್ತಿಯ ಹರಿವನ್ನು ಕಂಡುಹಿಡಿಯುವುದು.
 2. ಸೌರ ಮಾರುತ ಮೂಲಗಳಲ್ಲಿ ಪ್ಲಾಸ್ಮಾ ಮತ್ತು ಕಾಂತೀಯ ಕ್ಷೇತ್ರಗಳ ರಚನೆ ಮತ್ತು ಚಲನಶಾಸ್ತ್ರವನ್ನು ನಿರ್ಧರಿಸುವುದು.
 3. ಶಕ್ತಿಯುತ ಕಣಗಳನ್ನು ವೇಗಗೊಳಿಸುವ ಮತ್ತು ಸಾಗಿಸುವ ವ್ಯವಸ್ಥೆಯನ್ನು ಅನ್ವೇಷಣೆ ಮಾಡುವುದು.

ಸೂರ್ಯನ ಕರೋನಾ ಅಧ್ಯಯನಕ್ಕೆ ಕಾರಣ:

ಕರೋನದ ಉಷ್ಣತೆಯು ಸೂರ್ಯನ ಮೇಲ್ಮೈಗಿಂತ ಹೆಚ್ಚು. ಕರೋನಾ ಸೌರವ್ಯೂಹದಲ್ಲಿ ಚಾರ್ಜ್ಡ್ ಕಣಗಳ ನಿರಂತರ ಹರಿವಿಗೆ ಕಾರಣವಾಗುತ್ತದೆ, ಅಂದರೆ ಸೌರ ಮಾರುತಗಳ ಉಗಮಕ್ಕೆ ಕಾರಣ ವಾಗುತ್ತದೆ. ಈ ಅನಿರೀಕ್ಷಿತ ಸೌರ ಮಾರುತಗಳು ನಮ್ಮ ಗ್ರಹದ ಕಾಂತಕ್ಷೇತ್ರದಲ್ಲಿ ಅಡಚಣೆಗಳನ್ನು ಉಂಟುಮಾಡುತ್ತವೆ ಮತ್ತು ಭೂಮಿಯ ಮೇಲಿನ ಸಂವಹನ ತಂತ್ರಜ್ಞಾನವನ್ನು ನಾಶಮಾಡುವ ಸಾಮರ್ಥ್ಯವನ್ನು ಹೊಂದಿವೆ. ಈ ಸಂಶೋಧನೆಗಳು ವಿಜ್ಞಾನಿಗಳಿಗೆ ಭೂಮಿಯ ಬಾಹ್ಯಾಕಾಶ ಪರಿಸರದಲ್ಲಿನ ಬದಲಾವಣೆಗಳನ್ನು ಊಹಿಸಲು ಸಹಾಯ ಮಾಡುತ್ತದೆ ಎಂದು NASA ಭಾವಿಸುತ್ತದೆ.

 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಹವಾಮಾನ ಬದಲಾವಣೆಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಒಯ್ಯುವ ಪ್ರಸ್ತಾಪಕ್ಕೆ ಭಾರತ, ರಷ್ಯಾ ಗಳ ವಿರೋಧ:


(Why India, Russia blocked move to take climate change to UNSC?)

ಸಂದರ್ಭ:

ಇತ್ತೀಚೆಗೆ, ಪ್ರಸ್ತಾವನೆಯೊಂದನ್ನು ಭಾರತ ಮತ್ತು ರಷ್ಯಾ ನಿರ್ಬಂಧಿಸಿವೆ, ಕಾರಣ ಇದರಲ್ಲಿ ಹವಾಮಾನ ಸಂಬಂಧಿತ ಸಮಸ್ಯೆಗಳನ್ನು ಚರ್ಚಿಸುವ ಅಧಿಕಾರವನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ (United Nations Security Council – UNSC) ನೀಡಲು ಅವಕಾಶ ಕಲ್ಪಿಸಲಾಗಿದೆ.

ಏನಿದು ಪ್ರಕರಣ?

ಐರ್ಲೆಂಡ್ ಮತ್ತು ನೈಜರ್ ಸಲ್ಲಿಸಿದ ಕರಡು ನಿರ್ಣಯವು, “ಹವಾಮಾನ ಬದಲಾವಣೆ” ಮತ್ತು “ಅಂತರರಾಷ್ಟ್ರೀಯ ಭದ್ರತೆಯ ಮೇಲೆ ಅದರ ಪರಿಣಾಮಗಳನ್ನು” ಚರ್ಚಿಸಲು ಭದ್ರತಾ ಮಂಡಳಿಯಲ್ಲಿ ಔಪಚಾರಿಕ ಸ್ಥಳವನ್ನು ರಚಿಸಲು ಕೋರಿದೆ.

 1. ನಿರ್ಣಯದಲ್ಲಿ, ಸಂಘರ್ಷಗಳನ್ನು ತಡೆಗಟ್ಟಲು ಹವಾಮಾನ ಬದಲಾವಣೆಯಿಂದ ಉಂಟಾಗುವ ಅಪಾಯಗಳನ್ನು ಪರಿಹರಿಸಲು ನಿಯತಕಾಲಿಕ ವರದಿಗಳನ್ನು ಸಲ್ಲಿಸುವಂತೆಯೂ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿಯವರನ್ನು  ಕೇಳಲಾಯಿತು.

ಭಾರತ ಹೇಳಿದ್ದೇನು?

ಹವಾಮಾನ ಕ್ರಮ ಮತ್ತು ಹವಾಮಾನ ನ್ಯಾಯದ ವಿಷಯದಲ್ಲಿ ಭಾರತವು ಯಾರಿಗಿಂತಲೂ ಹಿಂದುಳಿಯುವುದಿಲ್ಲ. ಆದರೆ ‘ಯುನೈಟೆಡ್ ನೇಷನ್ಸ್ ಸೆಕ್ಯುರಿಟಿ ಕೌನ್ಸಿಲ್’ (UNSC) ಈ ಎರಡೂ ವಿಷಯಗಳನ್ನು ಚರ್ಚಿಸಲು ಸೂಕ್ತ ವೇದಿಕೆಯಲ್ಲ. ವಾಸ್ತವವಾಗಿ, ಅಂತಹ ಪ್ರಯತ್ನವು, ಸೂಕ್ತವಾದ ವೇದಿಕೆಯಲ್ಲಿ ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುವ ಬಯಕೆಯಿಂದ ಪ್ರೇರೇಪಿಸಲ್ಪಟ್ಟಿದೆ ಮತ್ತು ಯುಎನ್ ಸೆಕ್ಯುರಿಟಿ ಕೌನ್ಸಿಲ್ ಜವಾಬ್ದಾರಿಯನ್ನು ಹೊಂದಿರುವ ವಿಷಯಗಳ ಬಗ್ಗೆ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಷ್ಟವಿಲ್ಲದಿರುವುದು ಪ್ರಪಂಚದ ಗಮನವನ್ನು ಬೇರೆಡೆಗೆ ತಿರುಗಿಸುವ ಬಯಕೆಯಿಂದ ಪ್ರೇರೇಪಿಸಲ್ಪಟ್ಟಿದೆ.

ಪ್ರಸ್ತಾಪದ ಬಗ್ಗೆ ಕಾಳಜಿ:

 1. ಹವಾಮಾನ ಬದಲಾವಣೆಯನ್ನು ಅಂತರರಾಷ್ಟ್ರೀಯ ಭದ್ರತೆಗೆ ಬೆದರಿಕೆಯಾಗಿ ಪ್ರಸ್ತುತಪಡಿಸುವುದು ಕೌನ್ಸಿಲ್‌ನ ಕಾರ್ಯಸೂಚಿಯಲ್ಲಿರುವ ದೇಶಗಳ ನಡುವೆ ನಡೆಯುತ್ತಿರುವ ಸಂಘರ್ಷದ ನೈಜ, ಗಂಭೀರ ಕಾರಣಗಳಿಂದ ಭದ್ರತಾ ಮಂಡಳಿಯ ಗಮನವನ್ನು ಬೇರೆಡೆಗೆ ತಿರುಗಿಸುತ್ತದೆ.
 2. ಘರ್ಷಣೆಗಳನ್ನು ಸೃಷ್ಟಿಸಲು ಸಕ್ರಿಯವಾಗಿ ಸಹಾಯ ಮಾಡುವ ದೇಶಗಳಿಗೆ ಹವಾಮಾನ ಬದಲಾವಣೆಯನ್ನು ಸುರಕ್ಷಿತಗೊಳಿಸುವುದು ಹೆಚ್ಚಾಗಿ ಅನುಕೂಲಕರವಾಗಿರುತ್ತದೆ, ಅಥವಾ ಭದ್ರತಾ ಮಂಡಳಿಯನ್ನು ಅದರ ಕಾರ್ಯಚಟುವಟಿಕೆಗಳಿಂದ ದೂರವಿಡಲು ಮಿಲಿಟರಿ ಚಟುವಟಿಕೆಗಳನ್ನು ನಡೆಸುತ್ತಿರುವ ಅಥವಾ ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಅಗತ್ಯ ನೆರವು ನೀಡಲು ಬಯಸದ ದೇಶಗಳಿಗೆ ಹವಾಮಾನ ಬದಲಾವಣೆಯನ್ನು ಸುರಕ್ಷಿತಗೊಳಿಸುವುದು ಹೆಚ್ಚಾಗಿ ಅನುಕೂಲಕರವಾಗಿರುತ್ತದೆ.
 3. ನಿರ್ಣಯದ ಭಾಗವಾಗಿ ತೆಗೆದುಕೊಳ್ಳಬೇಕಾದ ಕ್ರಮಗಳು ಪಳೆಯುಳಿಕೆ-ಸಮೃದ್ಧ ರಾಷ್ಟ್ರಗಳ ಮೇಲೆ ನಿರ್ಬಂಧಗಳನ್ನು ಹೇರುವುದರಿಂದ ಹಿಡಿದು ಹವಾಮಾನ ಬದಲಾವಣೆಯಿಂದ ಉಂಟಾದ ದೇಶೀಯ ಸಂಘರ್ಷಗಳಲ್ಲಿ ಯುಎನ್ ಮಿಲಿಟರಿ ಹಸ್ತಕ್ಷೇಪದವರೆಗೆ ಸಂಭಾವ್ಯವಾಗಿ ವ್ಯಾಪ್ತಿಯಿರಬಹುದು.

ಮುಂದಿನ ನಡೆ?

ಹವಾಮಾನ ಬದಲಾವಣೆಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಚರ್ಚಿಸಲು ವಿಶ್ವಸಂಸ್ಥೆಯು ಈಗಾಗಲೇ, ಯುನೈಟೆಡ್ ನೇಷನ್ಸ್ ಫ್ರೇಮ್‌ವರ್ಕ್ ಕನ್ವೆನ್ಷನ್ ಆನ್ ಕ್ಲೈಮೇಟ್ ಚೇಂಜ್ (United Nations Framework Convention on Climate Change- UNFCCC) ಎಂಬ ವಿಶೇಷವಾದ ಏಜೆನ್ಸಿಯನ್ನು ಹೊಂದಿದೆ.

 1. UNFCCC 190 ಕ್ಕೂ ಹೆಚ್ಚು ದೇಶಗಳನ್ನು ಒಳಗೊಂಡಿದೆ, ಮತ್ತು ಅದು ವಾರ್ಷಿಕವಾಗಿ ಹಲವಾರು ಬಾರಿ ಸಭೆ ಸೇರುತ್ತದೆ. ಇದರ ಅಡಿಯಲ್ಲಿ, ಇತ್ತೀಚೆಗೆ, ಗ್ಲಾಸ್ಗೋದಲ್ಲಿ ವರ್ಷದ ಕೊನೆಯ ಸಭೆಯನ್ನು ಆಯೋಜಿಸಲಾಗಿತ್ತು. ಎರಡು ವಾರಗಳ ಕಾಲ ನಡೆದ ಈ ಸಭೆಯಲ್ಲಿ ಹವಾಮಾನ ಬದಲಾವಣೆಯನ್ನು ಎದುರಿಸುವ ಜಾಗತಿಕ ದೃಷ್ಟಿಕೋನದ ಕುರಿತು ಚರ್ಚಿಸಲಾಯಿತು.
 2. ಈ ಪ್ರಕ್ರಿಯೆಯೇ, ‘ಪ್ಯಾರಿಸ್ ಒಪ್ಪಂದ ಮತ್ತು ಅದರ ಹಿಂದಿನ ಕ್ಯೋಟೋ ಶಿಷ್ಟಾಚಾರದ ಹುಟ್ಟಿಗೆ ಕಾರಣವಾಯಿತು. ಈ ಒಪ್ಪಂದಗಳು ಹವಾಮಾನ ಬದಲಾವಣೆಯ ಬಿಕ್ಕಟ್ಟಿಗೆ ಪ್ರತಿಕ್ರಿಯಿಸಲು ವಿನ್ಯಾಸಗೊಳಿಸಲಾದ ಅಂತರರಾಷ್ಟ್ರೀಯ ಸಾಧನಗಳಾಗಿವೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ರಾಜಾ ಚೈತ್ ಸಿಂಗ್:

ಸಂದರ್ಭ: ಮೋದಿಯವರು ತಮ್ಮ ಕಾಶಿ ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

 1. 18 ನೇ ಶತಮಾನದ ಅಂತ್ಯದ ವೇಳೆಗೆ, ಬನಾರಸ್ ಅವಧ್ ನವಾಬನಿಂದ ತನ್ನ ಸ್ವಾತಂತ್ರ್ಯವನ್ನು ಘೋಷಿಸಿತು.
 2. 1771 ರಲ್ಲಿ, ಮಹಾರಾಜ ಚೈತ್ ಸಿಂಗ್ ಬ್ರಿಟಿಷ್ ಅಧಿಕಾರಿಗಳ ಸಹಾಯದಿಂದ ಬನಾರಸ್ ಸಿಂಹಾಸನವನ್ನು ಪಡೆದರು.
 3. ಎರಡು ವರ್ಷಗಳ ನಂತರ, ಮಹಾರಾಜರು ತಮ್ಮ ಅಧಿಕಾರ ವ್ಯಾಪ್ತಿಯನ್ನು ಹೇಸ್ಟಿಂಗ್ಸ್ ನಿಯಂತ್ರಣದಲ್ಲಿ ಈಸ್ಟ್ ಇಂಡಿಯಾ ಕಂಪನಿಗೆ ವರ್ಗಾಯಿಸಿದರು.
 4. ಹೈದರ್ ಅಲಿ ವಿರುದ್ಧ ಮೈಸೂರು ಯುದ್ಧದಲ್ಲಿ ಹೋರಾಡಲು ಸಂಪನ್ಮೂಲಗಳ ಅಗತ್ಯವನ್ನು ಎದುರಿಸಿದಾಗ, ಹೇಸ್ಟಿಂಗ್ಸ್ 1778 ಮತ್ತು 1779 ರಲ್ಲಿ ಹೆಚ್ಚುವರಿ ಆದಾಯ ಪಾವತಿಸಲು ಮತ್ತು ಸೈನಿಕ ಪಡೆಗಳನ್ನು ಪೂರೈಕೆ ಮಾಡಲು ಮಹಾರಾಜ ಚೈತ್ ಸಿಂಗ್ ಮೇಲೆ ಒತ್ತಡ ಹೇರಿದ.
 5. ಬ್ರಿಟಿಷರ ಬೇಡಿಕೆಯನ್ನು ಪೂರೈಸಲು ವಿಫಲವಾದ ಚೈತ್ ಸಿಂಗ್ ಮೇಲೆ ಹೇಸ್ಟಿಂಗ್ಸ್ ದಾಳಿ ಮಾಡಿದ.
 6. ಈ ಯುದ್ಧದಲ್ಲಿ ಹೇಸ್ಟಿಂಗ್ಸ್‌ನ ಅನೇಕ ಸೈನಿಕರು ಕೊಲ್ಲಲ್ಪಟ್ಟರು ಮತ್ತು ಬೇರೆ ಆಯ್ಕೆಯಿಲ್ಲದೆ ಉಳಿದಾಗ, ಗವರ್ನರ್-ಜನರಲ್ ಹಿಮ್ಮೆಟ್ಟುವಂತೆ ಒತ್ತಾಯಿಸಲಾಯಿತು.
 7. ಜನಪ್ರಿಯ ಕಥೆಯ ಪ್ರಕಾರ ಹೇಸ್ಟಿಂಗ್ಸ್ ರಾತ್ರಿಯಲ್ಲಿ ಆನೆಯ ಮೇಲೆ ಬನಾರಸ್ ಬಳಿ ಇರುವ ‘ಚುನಾರ್ ಕೋಟೆ’ಗೆ ತರಾತುರಿಯಲ್ಲಿ ಹೊರಟರು. ಈ ಘಟನೆಯು ಬನಾರಸ್‌ನಲ್ಲಿ ಜನಪ್ರಿಯ ಗಾದೆ ಮಾತುಗಳಿಗೆ ಕಾರಣವಾಯಿತು ಎಂದು ನಂಬಲಾಗಿದೆ:“ಕುದುರೆಯ ಮೇಲೆ ಅಂಬಾರಿ, ಆನೆಯ ಮೇಲೆ ಜೀನ್ (ಕುದುರೆ ಸವಾರಿಗೆ ಬಳಸುವ ಸಾಧನ), ವಾರೆನ್ ಹೇಸ್ಟಿಂಗ್ಸ್ ಕಾಶಿಯಿಂದ ಓಡಿಹೋದ”.(ಘೋಡೆ ಪರ್ ಹೌದಾ, ಹಾಥಿ ಪರ್ ಜೀನ್, ಕಾಶಿ ಸೆ ಭಾಗಾ ವಾರೆನ್ ಹೇಸ್ಟಿಂಗ್ಸ್).

Current Affairs

 

ರಾಣಿ ಭಬಾನಿ:

(Rani Bhabani)

ಮೋದಿ ತಮ್ಮ ಭಾಷಣದಲ್ಲಿ ನಗರದ ಅಭಿವೃದ್ಧಿಯಲ್ಲಿ ಬಂಗಾಳದ ‘ರಾಣಿ ಭಬಾನಿ’ ಅವರು ನಿರ್ವಹಿಸಿದ ಪಾತ್ರದ ಮೇಲೆ ಬೆಳಕು ಚೆಲ್ಲಿದರು.

ರಾಜಶಾಹಿಯ (ಇಂದಿನ ಬಾಂಗ್ಲಾದೇಶ) ನೋಟೋರ್ ಎಸ್ಟೇಟ್‌ನ ಭೂಮಾಲೀಕ ರಾಜಾ ರಾಮ್ಕಾಂತ ರೇ ಅವರನ್ನು ಭಬಾನಿ ವಿವಾಹವಾದರು. 1748 ರಲ್ಲಿ ಅವಳ ಗಂಡನ ಮರಣದ ನಂತರ, ಜಮೀನ್ದಾರಿ ಹಕ್ಕು ಭಬಾನಿಯ ಕೈಗೆ ಹಸ್ತಾಂತರವಾಯಿತು. ಆ ಸಮಯದಲ್ಲಿ ದೇಶದಲ್ಲಿ ಇದ್ದ ಕೆಲವೇ ಕೆಲವು ಮಹಿಳಾ ಭೂಮಾಲೀಕರಲ್ಲಿ ಇವರು ಒಬ್ಬರಾಗಿದ್ದರು.

ಕೊಡುಗೆಗಳು:

 1. ರಾಣಿ ಭಬಾನಿ ಅವರು ತಮ್ಮ ಪರೋಪಕಾರಿ ಪ್ರಯತ್ನಗಳಿಂದಾಗಿ ಜನಮಾನಸದ ನೆನಪಿನಲ್ಲಿ ಉಳಿದಿದ್ದಾರೆ.
 2. ಅವರು ರಾಜಶಾಹಿ ಜಿಲ್ಲೆಯಲ್ಲಿ ಅನೇಕ ಶಾಲೆಗಳನ್ನು ನಿರ್ಮಿಸಿದರು ಮತ್ತು ಅನೇಕ ನಿರ್ಗತಿಕರಿಗೆ ಅನೇಕ ವಿದ್ಯಾರ್ಥಿವೇತನವನ್ನು ನೀಡಿದರು.
 3. ಅವರು ದೇಶದ ವಿವಿಧ ಭಾಗಗಳಲ್ಲಿ 350 ಕ್ಕೂ ಹೆಚ್ಚು ದೇವಾಲಯಗಳು ಮತ್ತು ಸಾರಾಯಿಗಳನ್ನು ನಿರ್ಮಿಸಿದರು ಮತ್ತು ರಸ್ತೆಮಾರ್ಗಗಳು ಮತ್ತು ಕೆರೆಕಟ್ಟೆಗಳ ನಿರ್ಮಾಣದಲ್ಲಿ ಹೆಚ್ಚು ಹೂಡಿಕೆ ಮಾಡಿದರು.
 4. ವಾರಣಾಸಿಯಲ್ಲಿ ದುರ್ಗಾ ಕುಂಡ್ ದೇವಾಲಯವನ್ನು ನಿರ್ಮಿಸಿದರು.
 5. 1755 ರಲ್ಲಿ ಅವರು ಮುರ್ಷಿದಾಬಾದ್‌ನ ಬರೋನಗರದಲ್ಲಿ ಒಂದು ಡಜನ್ ದೇವಾಲಯಗಳ ಒಂದು ಸಂಕೀರ್ಣವನ್ನು ನಿರ್ಮಿಸಿದರು.

 

SGTF ಪರೀಕ್ಷಾ ಕಿಟ್‌ಗಳು:

ಔಪಚಾರಿಕವಾಗಿ ‘S-ಜೀನ್ ಟಾರ್ಗೆಟ್ ಫೇಲ್ಯೂರ್ (S-gene Target Failure – SGTF) ಪರೀಕ್ಷೆ’ ಎಂದು ಕರೆಯಲಾಗುತ್ತದೆ, ಈ ಪ್ರಾಕ್ಸಿ ಪರೀಕ್ಷೆಯನ್ನು ‘Omicron’ ರೂಪಾಂತರಗಳ ಆರಂಭಿಕ ಪತ್ತೆಗಾಗಿ ಬಳಸಬಹುದು.

ಈ ಪರೀಕ್ಷೆಯಲ್ಲಿ, ‘S-ಜೀನ್ಇಲ್ಲದಿರುವುದನ್ನು ಪತ್ತೆಮಾಡಲಾಗುತ್ತದೆ, ಇದು ಕೋವಿಡ್ ಸೋಂಕಿತ ರೋಗಿಯಲ್ಲಿ‘ ‘ಓಮಿಕ್ರಾನ್ ರೂಪಾಂತರ ಇರುವಿಕೆಯನ್ನು ಸೂಚಿಸುತ್ತದೆ.

S-ಜೀನ್, ‘ಓಮಿಕ್ರಾನ್ ರೂಪಾಂತರ’ ದಲ್ಲಿ ಕಂಡುಬರುವುದಿಲ್ಲ.ಇದು ಓಮಿಕ್ರಾನ್ ರೂಪಾಂತರಿಯು ಈಗಾಗಲೇ ಹಲವಾರು ರೂಪಾಂತರಗಳನ್ನು ಕಂಡಿದೆ ಎಂಬುದರ ಫಲಿತಾಂಶವಾಗಿದೆ. ಈ ಹೊಸ ವೇರಿಯಂಟ್ನಲ್ಲಿ ಅಥವಾ ರೂಪಾಂತರಿಯಲ್ಲಿ S ಜೀನ್ ಕಣ್ಮರೆಯಾಗಿರುವುದು ಅದನ್ನು ಗುರುತಿಸಲು ಇರುವ ಒಂದು ಚಿಹ್ನೆಯಾಗಿದೆ.


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos