Print Friendly, PDF & Email

[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 7ನೇ ಡಿಸೆಂಬರ್ 2021

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. NDPS ಬಿಲ್, 2021.

2. ಭಾರತ- ರಷ್ಯಾ ವಾರ್ಷಿಕ ಶೃಂಗಸಭೆ.

 

ಸಾಮಾನ್ಯ ಜ್ಞಾನ ಪತ್ರಿಕೆ 3:

1. CAMPA

2. ‘ಗ್ರೇಟರ್ ಟಿಪ್ರಾಲ್ಯಾಂಡ್’ ಎಂದರೇನು?

3. ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (AFSPA)

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ಅಂತರರಾಷ್ಟ್ರೀಯ ವಸಾಹತುಗಳಿಗಾಗಿ ಬ್ಯಾಂಕ್.

2. ವ್ಯಾಪಾರ ನಡೆಸುವ ಸ್ವಾತಂತ್ರ್ಯ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

NDPS ಮಸೂದೆ, 2021:


(NDPS Bill, 2021)

 

ಸಂದರ್ಭ:

ಇತ್ತೀಚೆಗೆ,ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸ್ (ತಿದ್ದುಪಡಿ) ಮಸೂದೆ’ 2021 / (Narcotic Drugs and Psychotropic Substances (Amendment) Bill, 2021) ಅನ್ನು ಲೋಕಸಭೆಯಲ್ಲಿ ಪರಿಚಯಿಸಲಾಯಿತು.

 

ಈ ತಿದ್ದುಪಡಿ ಮಸೂದೆಯು ಈ ವರ್ಷ ಸೆಪ್ಟೆಂಬರ್ 30 ರಂದು ಘೋಷಿಸಲಾದ ಸುಗ್ರೀವಾಜ್ಞೆಯನ್ನು ಬದಲಿಸುತ್ತದೆ.

 

ಮಸೂದೆಯ ಉದ್ದೇಶ:

ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟನ್ಸ್ ಆಕ್ಟ್ (ಎನ್‌ಡಿಪಿಎಸ್) ಸೆಕ್ಷನ್ 27 ರ ನಿಬಂಧನೆಯಲ್ಲಿ ಕಂಡುಬಂದ ದೋಷವನ್ನು ಸರಿಪಡಿಸಲು ಸರ್ಕಾರವು ಮಸೂದೆಯನ್ನು ಪರಿಚಯಿಸಿದೆ. ಈ ದೋಷದಿಂದಾಗಿ, ಅಕ್ರಮ ಕಳ್ಳಸಾಗಣೆಗೆ ಹಣಕಾಸು ಒದಗಿಸಿದವರಿಗೆ ದಂಡ ವಿಧಿಸಲು ಕಾಯಿದೆಯ ಸೆಕ್ಷನ್ 27 ರ ನಿಬಂಧನೆಯು ನಿಷ್ಪರಿಣಾಮಕಾರಿಯಾಗುತ್ತಿತ್ತು.

 1. 2014 ರಲ್ಲಿ, ವೈದ್ಯಕೀಯ ಅಗತ್ಯಗಳಿಗಾಗಿ ನಾರ್ಕೋಟಿಕ್ ಡ್ರಗ್ಸ್’/ ‘ನಾರ್ಕೋಟಿಕ್ಸ್’ ಬಳಕೆಯನ್ನು ಸುಲಭಗೊಳಿಸುವ ಸಂಬಂಧ ‘ಕಾಯ್ದೆ’ಗೆ ತಿದ್ದುಪಡಿ ಮಾಡಲಾಗಿತ್ತು, ಆದರೆ ಅದಕ್ಕೆ ಅನುಗುಣವಾಗಿ ದಂಡದ ನಿಬಂಧನೆಯನ್ನು ತಿದ್ದುಪಡಿ ಮಾಡದ ಕಾರಣ ಈ ‘ದೋಷ’ ಉದ್ಭವಿಸಿದೆ.
 2. ಜೂನ್ 2021 ರಲ್ಲಿ, ತ್ರಿಪುರಾ ಹೈಕೋರ್ಟ್, ಕಾನೂನಿನ ಪರಿಶೀಲನೆಯ ನಂತರ, ಈ ದೋಷವನ್ನು ಪತ್ತೆ ಮಾಡಿತು ಮತ್ತು ಕಾಯಿದೆಯ ಸೆಕ್ಷನ್ 27 ರ ನಿಬಂಧನೆಗಳನ್ನು ತಿದ್ದುಪಡಿ ಮಾಡಲು ಕೇಂದ್ರ ಗೃಹ ಸಚಿವಾಲಯಕ್ಕೆ ನಿರ್ದೇಶನ ನೀಡಿತು.

ಈ ತಿದ್ದುಪಡಿಯ ಅವಶ್ಯಕತೆ:

‘ಸೆಕ್ಷನ್ 27ಎ’ ‘ಖಾಲಿ ಪಟ್ಟಿ’ (blank list) ಸಂಬಂಧಿಸಿರುವುದರಿಂದ, ತನ್ನ ವಿರುದ್ಧ ಅಪರಾಧದ ಆರೋಪ ಹೊರಿಸಲಾಗದು ಎಂದು ಆರೋಪಿಯೊಬ್ಬರು ತ್ರಿಪುರಾದ ವಿಶೇಷ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಿದಾಗ ಕಾಯ್ದೆಯ ಕರಡಿನಲ್ಲಿರುವ ಈ ದೋಷ ಬೆಳಕಿಗೆ ಬಂದಿದೆ. ನಂತರ ತ್ರಿಪುರಾ ಹೈಕೋರ್ಟ್, ಕಾನೂನನ್ನು ತಿದ್ದುಪಡಿ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು.

Current affairs

 

NDPS ಕಾಯಿದೆಯ ಸೆಕ್ಷನ್ 27 ರಲ್ಲಿ ದೋಷ:

2014 ರಲ್ಲಿ ನಾರ್ಕೋಟಿಕ್ ಡ್ರಗ್ಸ್ (Narcotic Drugs) ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್ (NDPS) ಕಾಯಿದೆಗೆ ತಿದ್ದುಪಡಿಯನ್ನು ಮಾಡಲಾಗಿದ್ದು, ‘ನಾರ್ಕೋಟಿಕ್ ಡ್ರಗ್ಸ್’ಗೆ ಉತ್ತಮ ವೈದ್ಯಕೀಯ ಪ್ರವೇಶವನ್ನು ಅನುಮತಿಸಲಾಗಿದೆ, ಇದರ ಅಡಿಯಲ್ಲಿ “ಅಗತ್ಯ ಮಾದಕ ದ್ರವ್ಯಗಳ” ಸಾಗಣೆ ಮತ್ತು ಪರವಾನಗಿಯಲ್ಲಿ ರಾಜ್ಯ ವಿಧಿಸಿದ ನಿರ್ಬಂಧಗಳನ್ನು ತೆಗೆದುಹಾಕಲಾಗಿದೆ. ಈ ತಿದ್ದುಪಡಿಯ ಕರಡಿನಲ್ಲಿ ಅಸಂಗತತೆಯನ್ನು ಸಹ ಸೇರಿಕೊಂಡಿತು.

 1. 2014 ರ ತಿದ್ದುಪಡಿಯ ಮೊದಲು, ಕಾಯಿದೆಯ ವಿಭಾಗ 2 ರ ಷರತ್ತುಗಳು (viiia) ಉಪ-ವಿಭಾಗಗಳು (i) ನಿಂದ (v) ರ ವರೆಗೆ ಒಳಗೊಂಡಿತ್ತು, ಇದರಲ್ಲಿ ‘ಅಕ್ರಮ ಸಂಚಾರ’ ಎಂಬ ಪದವನ್ನು ವ್ಯಾಖ್ಯಾನಿಸಲಾಗಿದೆ.
 2. ಈ ಷರತ್ತನ್ನು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟಾನ್ಸ್ (ತಿದ್ದುಪಡಿ) ಕಾಯಿದೆ, 2014 ಮೂಲಕ ಷರತ್ತು (viiib) ಆಗಿ ಬದಲಿಸಲಾಗಿದೆ.ಏಕೆಂದರೆ “ಅಗತ್ಯ ಮಾದಕ ದ್ರವ್ಯಗಳನ್ನು” ವ್ಯಾಖ್ಯಾನಿಸುವ ಕಾಯಿದೆಯ ವಿಭಾಗ 2 ರಲ್ಲಿ ಹೊಸ ಷರತ್ತು (viiia) ಅನ್ನು ಸೇರಿಸಲಾಗಿದೆ. ಆದಾಗ್ಯೂ, ಅಜಾಗರೂಕತೆಯಿಂದಾಗಿ, NDPS ಕಾಯಿದೆಯ ಸೆಕ್ಷನ್ 27A ಅನ್ನು ಈ ಪರಿಣಾಮದ ಬದಲಾವಣೆಗೆ ಸರಿಹೊಂದುವಂತೆ ತಿದ್ದುಪಡಿ ಮಾಡಲಾಗಿಲ್ಲ.

ಮಸೂದೆಯ ಬಗ್ಗೆ ಟೀಕೆಗಳು:

ಮಸೂದೆಯಲ್ಲಿ, 2014 ರಿಂದ ಮಾಡಿದ ಅಪರಾಧಗಳ ಮೇಲೆ ‘ಹಿಂದಿನ ಪರಿಣಾಮ’ದೊಂದಿಗೆ ಸಂಬಂಧಿತ ನಿಬಂಧನೆಯನ್ನು ಅನ್ವಯಿಸಲು ಪ್ರಸ್ತಾಪಿಸಲಾಗಿದೆ, ಆದ್ದರಿಂದ ಇದು ನಾಗರಿಕರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂದು ಕೆಲವು ತಜ್ಞರು ಹೇಳುತ್ತಾರೆ.

ಈ ಕಾನೂನು ಅನುಚ್ಛೇದ 21 ರಲ್ಲಿ ಒದಗಿಸಲಾದ ಮೂಲಭೂತ ಹಕ್ಕುಗಳನ್ನು ಸಹ ಉಲ್ಲಂಘಿಸುತ್ತದೆ, ಏಕೆಂದರೆ ಅಪರಾಧವು ಘಟಿಸಿದ ಸಮಯದಲ್ಲಿ ಅಸ್ತಿತ್ವದಲ್ಲಿದ್ದ ಕಾನೂನಿಗೆ ಅನುಗುಣವಾಗಿ ಮಾತ್ರ ಒಬ್ಬ ವ್ಯಕ್ತಿಯನ್ನು ಶಿಕ್ಷಿಸಬಹುದು.

current affairs

 

ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸಸ್ ಆಕ್ಟ್ / NDPS ಕಾಯ್ದೆ:

 1. ‘NDPS ಕಾಯಿದೆ’ಯ(NDPS Act) ಅಡಿಯಲ್ಲಿ, ಒಬ್ಬ ವ್ಯಕ್ತಿಯು, ಯಾವುದೇ ‘ನಾರ್ಕೋಟಿಕ್ ಡ್ರಗ್’ (narcotic Drug) ಅಥವಾ ‘ಸೈಕೋಟ್ರೋಪಿಕ್ ಸಬ್ಸ್ಟೆನ್ಸ್’(Psychotropic Substance) ಅನ್ನು ಉತ್ಪಾದಿಸುವುದು, ಹೊಂದುವುದು, ಮಾರಾಟ ಮಾಡುವುದು, ಖರೀದಿಸುವುದು, ಸಾಗಿಸುವುದು, ಸಂಗ್ರಹಿಸುವುದು ಮತ್ತು/ಅಥವಾ ಸೇವಿಸುವುದನ್ನು ನಿಷೇಧಿಸಲಾಗಿದೆ.
 2. NDPS ಕಾಯಿದೆ, 1985 ಅನ್ನು 1988, 2001 ಮತ್ತು 2014 ರಲ್ಲಿ ಇಲ್ಲಿಯವರೆಗೆ ಮೂರು ಬಾರಿ ತಿದ್ದುಪಡಿ ಮಾಡಲಾಗಿದೆ.
 3. ಈ ಕಾಯಿದೆಯು ಭಾರತದಾದ್ಯಂತ ಅನ್ವಯಿಸುತ್ತದೆ ಮತ್ತು ಭಾರತದ ಹೊರಗಿನ ಎಲ್ಲಾ ಭಾರತೀಯ ನಾಗರಿಕರಿಗೆ ಮತ್ತು ಭಾರತದಲ್ಲಿ ನೋಂದಾಯಿಸಲಾದ ಹಡಗುಗಳು ಮತ್ತು ವಿಮಾನದಲ್ಲಿರುವ ಎಲ್ಲ ವ್ಯಕ್ತಿಗಳಿಗೂ ಅನ್ವಯಿಸುತ್ತದೆ.

ಮಾದಕವಸ್ತು ಕಳ್ಳಸಾಗಣೆ ಸಮಸ್ಯೆಯನ್ನು ನಿಭಾಯಿಸಲು ಭಾರತ ಸರ್ಕಾರದ ನೀತಿಗಳು ಮತ್ತು ಉಪಕ್ರಮಗಳು:

 1. ವಿವಿಧ ಮೂಲಗಳಿಂದ ಲಭ್ಯವಿರುವ ಮಾಹಿತಿಯ ಆಧಾರದ ಮೇಲೆ, ‘ನಶಾ ಮುಕ್ತ ಭಾರತ್ ಅಭಿಯಾನ್’ ಅಥವಾ ‘ಡ್ರಗ್ಸ್-ಫ್ರೀ ಇಂಡಿಯಾ ಕ್ಯಾಂಪೇನ್’ ಅನ್ನು ಆಗಸ್ಟ್ 15, 2020 ರಂದು ದೇಶದ 272 ಜಿಲ್ಲೆಗಳಲ್ಲಿ ಆರಂಭ ಮಾಡಲಾಗಿದೆ.
 2. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 2018-2025ರ ಅವಧಿಗೆ ಔಷಧ ಬೇಡಿಕೆ ಕಡಿತಕ್ಕಾಗಿ ರಾಷ್ಟ್ರೀಯ ಕ್ರಿಯಾ ಯೋಜನೆ (National Action Plan for Drug Demand Reduction- NAPDDR)ಯ ಅನುಷ್ಠಾನವನ್ನು ಪ್ರಾರಂಭಿಸಿದೆ.
 3. 2016 ರ ನವೆಂಬರ್‌ನಲ್ಲಿ ಸರ್ಕಾರವು, ನಾರ್ಕೊ-ಸಮನ್ವಯ ಕೇಂದ್ರವನ್ನು (NCORD) ರಚಿಸಿದೆ.
 4. ಮಾದಕ ದ್ರವ್ಯಗಳ ಕಳ್ಳಸಾಗಣೆ, ವ್ಯಸನಿಗಳ ಪುನರ್ವಸತಿ, ಮತ್ತು ಮಾದಕ ದ್ರವ್ಯ ಸೇವನೆಯ ವಿರುದ್ಧ ಸಾರ್ವಜನಿಕರಿಗೆ ಶಿಕ್ಷಣ ನೀಡುವುದಕ್ಕಾಗಿ ಸರ್ಕಾರವು ಮಾಡಿದ ಖರ್ಚನ್ನು ಪೂರೈಸಲು “ಮಾದಕ ವಸ್ತುಗಳ ದುರುಪಯೋಗ ನಿಯಂತ್ರಣಕ್ಕಾಗಿ ರಾಷ್ಟ್ರೀಯ ನಿಧಿ” (National Fund for Control of Drug Abuse) ಎಂಬ ನಿಧಿಯನ್ನು ರಚಿಸಲಾಗಿದೆ.

 

ವಿಷಯಗಳುಭಾರತ ಮತ್ತು ಅದರ ನೆರೆಹೊರೆಯ ದೇಶಗಳೊಂದಿಗೆ ಸಂಬಂಧಗಳು.

ಭಾರತ- ರಷ್ಯಾ ವಾರ್ಷಿಕ ಶೃಂಗಸಭೆ:


(India- Russia Annual Summit)

 

ಸಂದರ್ಭ:

ಇತ್ತೀಚೆಗೆ, ಭಾರತ ಮತ್ತು ರಷ್ಯಾದ 21 ನೇ ವಾರ್ಷಿಕ ಶೃಂಗಸಭೆಯನ್ನು ಆಯೋಜಿಸಲಾಗಿತ್ತು. ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಭಾಗವಹಿಸಿದ್ದರು.

 1. ಇದರೊಂದಿಗೆ ಮೊದಲ ಬಾರಿಗೆ ಉಭಯ ದೇಶಗಳ ನಡುವೆ 2+2 ಸಚಿವರ ಮಟ್ಟದ ಸಭೆಯೂ ನಡೆಯಿತು.
 2. ಶೃಂಗಸಭೆಯಲ್ಲಿ, ‘ರಕ್ಷಣೆ, ಇಂಧನ, ಬಾಹ್ಯಾಕಾಶ ಪರಿಶೋಧನೆ, ವಿಜ್ಞಾನ ಮತ್ತು ತಂತ್ರಜ್ಞಾನ, ಭಾರೀ ಎಂಜಿನಿಯರಿಂಗ್, ವ್ಯಾಪಾರ ಮತ್ತು ಹೂಡಿಕೆ ಇತ್ಯಾದಿ ಕ್ಷೇತ್ರಗಳಲ್ಲಿ 28 ಒಪ್ಪಂದಗಳಿಗೆ ಸಹಿ ಹಾಕಲಾಯಿತು.

 

ಮುಖ್ಯ ಅಂಶಗಳು:

 1. ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು 2022 ರಲ್ಲಿ ಆಯೋಜಿಸಲಾಗುವ 22 ನೇ ಭಾರತ-ರಷ್ಯಾ ವಾರ್ಷಿಕ ಶೃಂಗಸಭೆಯಲ್ಲಿ ಭಾಗವಹಿಸಲು ರಷ್ಯಾಕ್ಕೆ ಭೇಟಿ ನೀಡುವಂತೆ ಪ್ರಧಾನಿ ಮೋದಿಯವರಿಗೆ ಆಹ್ವಾನ ನೀಡಿದರು.
 2. ಕೋವಿಡ್‌ನಿಂದ ಎದುರಾಗಿರುವ ಸವಾಲುಗಳ ನಡುವೆಯೂ ಉಭಯ ದೇಶಗಳ ನಡುವಿನ ವಿಶೇಷ ಮತ್ತು ವಿಶೇಷ ಕಾರ್ಯತಂತ್ರದ ಪಾಲುದಾರಿಕೆ’ಯಲ್ಲಿ ಮುಂದುವರಿದ ಪ್ರಗತಿಗೆ ಉಭಯ ನಾಯಕರು ತೃಪ್ತಿ ವ್ಯಕ್ತಪಡಿಸಿದರು.
 3. ಶೃಂಗಸಭೆಯಲ್ಲಿ ‘ಅಂತರರಾಷ್ಟ್ರೀಯ ಉತ್ತರ-ದಕ್ಷಿಣ ಸಾರಿಗೆ ಕಾರಿಡಾರ್’ (International North South Transport Corridor– INSTC) ಮತ್ತು ಪ್ರಸ್ತಾವಿತ ‘ಚೆನ್ನೈ-ವ್ಲಾಡಿವೋಸ್ಟಾಕ್ ಈಸ್ಟರ್ನ್ ಮ್ಯಾರಿಟೈಮ್ ಕಾರಿಡಾರ್’ (Chennai-Vladivostok Eastern Maritime Corridor) ಮೂಲಕ ಸಂಪರ್ಕದ ಪಾತ್ರದ ಕುರಿತು ಚರ್ಚಿಸಲಾಯಿತು.
 4. ರಷ್ಯಾದ ವಿವಿಧ ಪ್ರದೇಶಗಳು, ವಿಶೇಷವಾಗಿ ರಷ್ಯಾದ ದೂರದ ಪೂರ್ವ ಮತ್ತು ಭಾರತೀಯ ರಾಜ್ಯಗಳ ನಡುವೆ ಹೆಚ್ಚಿನ ಅಂತರ-ಪ್ರಾದೇಶಿಕ ಸಹಕಾರವನ್ನು ಉಭಯ ನಾಯಕರು ಎದುರು ನೋಡುತ್ತಿದ್ದರು.
 5. ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ಉಭಯ ದೇಶಗಳು ಒಂದೇ ರೀತಿಯ ದೃಷ್ಟಿಕೋನಗಳು ಮತ್ತು ಕಾಳಜಿಗಳನ್ನು ಹಂಚಿಕೊಳ್ಳುತ್ತವೆ ಎಂದು ಉಭಯ ನಾಯಕರು ಒಪ್ಪಿಕೊಂಡರು ಮತ್ತು ಅಫ್ಘಾನಿಸ್ತಾನದ ಕುರಿತು ಸಮಾಲೋಚನೆ ಮತ್ತು ಸಹಕಾರಕ್ಕಾಗಿ NSA ಮಟ್ಟದಲ್ಲಿ ರಚಿಸಲಾದ ದ್ವಿಪಕ್ಷೀಯ ಮಾರ್ಗಸೂಚಿಯನ್ನು ಶ್ಲಾಘಿಸಿದರು.

 

ಶೃಂಗಸಭೆಯ ಮಹತ್ವ:

ಭಾರತ ಮತ್ತು ರಷ್ಯಾ ‘1971 ರ ಶಾಂತಿ, ಸ್ನೇಹ ಮತ್ತು ಸಹಕಾರ ಒಪ್ಪಂದ’ (The 1971 Treaty of Peace, Friendship and Cooperation) ದ 5 ದಶಕಗಳನ್ನು ಮತ್ತು 2 ದಶಕಗಳ ‘ಕಾರ್ಯತಂತ್ರದ ಸಹಭಾಗಿತ್ವದ ಘೋಷಣೆ’ (Declaration on Strategic Partnership) ಯನ್ನು ಪೂರ್ಣಗೊಳಿಸಿವೆ. ಇದು ಪರಸ್ಪರ ನಂಬಿಕೆ, ಪರಸ್ಪರರ ಪ್ರಮುಖ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಗೌರವ ಮತ್ತು ವಿವಿಧ ಅಂತರರಾಷ್ಟ್ರೀಯ ಮತ್ತು ಪ್ರಾದೇಶಿಕ ವಿಷಯಗಳ ದೃಷ್ಟಿಕೋನಗಳ ಸಾಮಾನ್ಯತೆಯೊಂದಿಗೆ ದೀರ್ಘಕಾಲೀನ ಮತ್ತು ಸಮಯ-ಪರೀಕ್ಷಿತ ‘ಭಾರತ-ರಷ್ಯಾ ಸಂಬಂಧಗಳ’ ಸಂಕೇತವಾಗಿದೆ.

 

2+2 ಸಂವಾದ:

‘2+2 ಸಂವಾದ’ವು (2+2 dialogue), ಎರಡು ದೇಶಗಳ ವಿದೇಶಾಂಗ ಮಂತ್ರಿಗಳು ಮತ್ತು ರಕ್ಷಣಾ ಮಂತ್ರಿಗಳ ನಡುವೆ ನಡೆಯುತ್ತದೆ. ಇದು ಸಾಮಾನ್ಯವಾಗಿ ರಕ್ಷಣೆ, ಭದ್ರತೆ ಮತ್ತು ಗುಪ್ತಚರ ವ್ಯವಸ್ಥೆಯ ಹೆಚ್ಚಿನ ಏಕೀಕರಣ ಸೇರಿದಂತೆ ದ್ವಿಪಕ್ಷೀಯ ಸಂಬಂಧಗಳನ್ನು ವ್ಯೂಹಾತ್ಮಕವಾಗಿ ಗಾಢವಾಗಿಸುವ ಕಾರ್ಯವಿಧಾನವನ್ನು ರಚಿಸುವ ಗುರಿಯನ್ನು ಹೊಂದಿದೆ.

ಭಾರತಕ್ಕೆ ರಷ್ಯಾದ ಪ್ರಾಮುಖ್ಯತೆ:

 1. ಭಾರತವು ತನ್ನ ರಕ್ಷಣಾ ವ್ಯಾಪಾರ ಪಾಲುದಾರರನ್ನು ವೈವಿಧ್ಯಗೊಳಿಸುತ್ತಿದ್ದರೂ ಸಹ, ರಷ್ಯಾ ಇನ್ನೂ ಪ್ರಮುಖ ರಕ್ಷಣಾ ಪಾಲುದಾರನಾಗಿ ಉಳಿದಿದೆ, ಭಾರತೀಯ ರಕ್ಷಣಾ ದಾಸ್ತಾನುಗಳಲ್ಲಿ ರಷ್ಯಾ ಸುಮಾರು 70 ಪ್ರತಿಶತದಷ್ಟು ಪ್ರಾಬಲ್ಯವನ್ನು ಹೊಂದಿದೆ.
 2. ಪರಮಾಣು ಜಲಾಂತರ್ಗಾಮಿ ನೌಕೆಗಳಂತಹ ನಿರ್ಣಾಯಕ ತಂತ್ರಜ್ಞಾನಗಳನ್ನು ಭಾರತಕ್ಕೆ ಒದಗಿಸಲು ಇನ್ನೂ ಸಿದ್ಧವಾಗಿರುವ ಭಾರತದ ಏಕೈಕ ರಕ್ಷಣಾ ಪಾಲುದಾರ ದೇಶವಾಗಿದೆ ರಷ್ಯಾ.
 3. ರಷ್ಯಾ ಮತ್ತು ಚೀನಾ ನಡುವಿನ ಉದಯೋನ್ಮುಖ ಕಾರ್ಯತಂತ್ರದ ಸಂಬಂಧವು ಭಾರತಕ್ಕೆ ಪ್ರಮುಖ ಭದ್ರತಾ ಪರಿಣಾಮಗಳನ್ನು ಉಂಟುಮಾಡಬಹುದು.
 4. ವಿಶ್ವಸಂಸ್ಥೆಯ ವಿಸ್ತೃತ ಭದ್ರತಾ ಮಂಡಳಿಯಲ್ಲಿ ಖಾಯಂ ಸ್ಥಾನಕ್ಕಾಗಿ ಭಾರತಕ್ಕೆ ತನ್ನ “ದೃಢ ಬೆಂಬಲ”ವನ್ನು ರಷ್ಯಾ ಪುನರುಚ್ಚರಿಸಿದೆ.
 5. ಪರಮಾಣು ಪೂರೈಕೆದಾರರ ಗುಂಪಿನಲ್ಲಿ ಭಾರತದ ಸದಸ್ಯತ್ವಕ್ಕೆ ರಷ್ಯಾ ಕೂಡ ತನ್ನ ಬೆಂಬಲವನ್ನು ವ್ಯಕ್ತಪಡಿಸಿದೆ.
 6. ಭಯೋತ್ಪಾದನೆ, ಅಫ್ಘಾನಿಸ್ತಾನ, ಹವಾಮಾನ ಬದಲಾವಣೆಯ ವಿರುದ್ಧದ ಹೋರಾಟವನ್ನು ಬೆಂಬಲಿಸುವಲ್ಲಿ ಎರಡು ದೇಶಗಳು ಪರಸ್ಪರ ಪ್ರಯೋಜನಗಳನ್ನು ಹೊಂದಿವೆ; SCO, BRICS, G-20 ಮತ್ತು ASEAN ನಂತಹ ಸಂಸ್ಥೆಗಳು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

CAMPA ನಿಧಿ:


ಸಂದರ್ಭ:

ಇದುವರೆಗೆ ₹ 48,606 ಕೋಟಿ ಮೊತ್ತವನ್ನು ಪರಿಹಾರಾತ್ಮಕ ಅರಣ್ಯೀಕರಣ ನಿಧಿ ಮತ್ತು ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರವು (Compensatory Afforestation Fund and Compensatory Afforestation Fund Management and Planning Authority) 32 ರಾಜ್ಯಗಳಿಗೆ ವಿತರಿಸಿದೆ.

 1. CAMPA ನಿಧಿಯ ಅಡಿಯಲ್ಲಿ, ಗರಿಷ್ಠ ಮೊತ್ತವನ್ನು ಛತ್ತೀಸ್‌ಗಢ ಮತ್ತು ಒಡಿಶಾಗೆ ವರ್ಗಾಯಿಸಲಾಗಿದೆ, ಈ ಪ್ರತಿಯೊಂದು ರಾಜ್ಯವು ಕ್ರಮವಾಗಿ ಸುಮಾರು 5,700 ಕೋಟಿ ರೂ.ಗಳನ್ನು ಪಡೆದಿವೆ,ನಂತರದ ಸ್ಥಾನದಲ್ಲಿ ಜಾರ್ಖಂಡ್ ಮತ್ತು ಮಹಾರಾಷ್ಟ್ರ ಗಳಿದ್ದು, ಸುಮಾರು 3,000 ಕೋಟಿ ರೂ.ಗಳನ್ನು ಪಡೆಯುತ್ತಿವೆ.

CAMPA ನಿಧಿಗಳು ಯಾವುವು?

CAMPA ನಿಧಿಗಳು, ಕೈಗಾರಿಕೆಗಳು ತಮ್ಮ ವ್ಯಾಪಾರ ಯೋಜನೆಗಳಿಗಾಗಿ ಅರಣ್ಯ ಭೂಮಿಯನ್ನು ನಾಶಪಡಿಸಿದ್ದಕ್ಕಾಗಿ ಪರಿಸರ ಪರಿಹಾರವಾಗಿ ಅವುಗಳಿಂದ ಸುಮಾರು ಒಂದು ದಶಕದ ಅವಧಿಯಲ್ಲಿ ಸಂಗ್ರಹಿಸಲಾದ 54,000 ಕೋಟಿ ರೂ.‘ನಿಧಿ’ಯನ್ನು ‘ಕಾಂಪನ್ಸೇಟರಿ ಅರಣ್ಯೀಕರಣ ನಿಧಿ (Compensatory Afforestation Fund – CAF)’ ಯ ದೀರ್ಘ ಬಾಕಿಯಿಂದ ರಚಿಸಲಾಗಿದೆ.

CAMPA ಕುರಿತು:

ಪರಿಹಾರ ಅರಣ್ಯೀಕರಣ ನಿಧಿ ಕಾಯಿದೆ, 2016(Compensatory Afforestation Fund Act, 2016) ಅಥವಾ CAF ಕಾಯಿದೆ 2016 ಅಡಿಯಲ್ಲಿ ಸ್ವತಂತ್ರ ಪ್ರಾಧಿಕಾರ – ‘CAMPA ಫಂಡ್’ ಅನ್ನು ಕಾರ್ಯಗತಗೊಳಿಸಲು ಪರಿಹಾರ ಅರಣ್ಯೀಕರಣ ನಿಧಿ ನಿರ್ವಹಣೆ ಮತ್ತು ಯೋಜನಾ ಪ್ರಾಧಿಕಾರ’ (Compensatory Afforestation Fund Management and Planning Authority – CAMPA) ವನ್ನು ಸ್ಥಾಪಿಸಲಾಗಿದೆ.

 1. ಆದಾಗ್ಯು, ಕಳೆದ ಆಗಸ್ಟ್‌ವರೆಗೆ ನಿಧಿಯ ನಿರ್ವಹಣೆಯ ನಿಯಮಗಳಿಗೆ ಅಂತಿಮ ರೂಪ ನೀಡಲಾಗಿಲ್ಲ.

ಪರಿಹಾರ ಅರಣ್ಯೀಕರಣ ಎಂದರೇನು?

ಪರಿಹಾರಾತ್ಮಕ ಅರಣ್ಯೀಕರಣ ಎಂದರೆ ಪ್ರತಿ ಬಾರಿ ಅರಣ್ಯ ಭೂಮಿಯನ್ನು ಗಣಿಗಾರಿಕೆ ಅಥವಾ ಉದ್ಯಮದಂತಹ ಅರಣ್ಯೇತರ ಉದ್ದೇಶಗಳಿಗಾಗಿ ಬಳಸಲಾಗುತ್ತದೆ,

ಆಗ ಈ ಅರಣ್ಯ-ಭೂಮಿಗೆ ಸಮನಾದ   ಅರಣ್ಯೇತರ ಭೂಮಿಯಲ್ಲಿ ಅರಣ್ಯೀಕರಣವನ್ನು ಮಾಡಲು ಬಳಕೆದಾರ ಏಜೆನ್ಸಿಯು ಪಾವತಿಸಬೇಕಾಗುತ್ತದೆ, ಅಥವಾ ಅರಣ್ಯೇತರ ಭೂಮಿಯು ಇದಕ್ಕೆ ಲಭ್ಯವಿಲ್ಲದಿದ್ದಾಗ, ಪಾಳು ಬಿದ್ದ ಅರಣ್ಯ ಭೂಮಿಯ ದುಪ್ಪಟ್ಟು ವಿಸ್ತೀರ್ಣದ ಪ್ರದೇಶವನ್ನು ಪಾವತಿಸಬೇಕಾಗುತ್ತದೆ.

 

ನಿಧಿ ಹಂಚಿಕೆ:

ನಿಯಮಗಳ ಪ್ರಕಾರ, 90% ನಷ್ಟು ಪರಿಹಾರ ಅರಣ್ಯೀಕರಣ ನಿಧಿ (CAF) ಅನ್ನು ರಾಜ್ಯಗಳಿಗೆ ವಿತರಿಸಬೇಕು ಮತ್ತು 10% ಕೇಂದ್ರವು ಉಳಿಸಿಕೊಳ್ಳಬೇಕು.

 1. ಜಲಾನಯನ ಪ್ರದೇಶಗಳ ನಿರ್ವಹಣೆ, ನೈಸರ್ಗಿಕ ಪುನರುತ್ಪಾದನೆ, ಅರಣ್ಯ ನಿರ್ವಹಣೆ, ವನ್ಯಜೀವಿ ಸಂರಕ್ಷಣೆ ಮತ್ತು ನಿರ್ವಹಣೆ, ಸಂರಕ್ಷಿತ ಪ್ರದೇಶಗಳಿಂದ ಗ್ರಾಮಗಳ ಸ್ಥಳಾಂತರ, ಮಾನವ-ವನ್ಯಜೀವಿ ಸಂಘರ್ಷ ನಿರ್ವಹಣೆ, ತರಬೇತಿ ಮತ್ತು ಜಾಗೃತಿ ಮೂಡಿಸುವಿಕೆ, ಮರ ಉಳಿಸುವ ಉಪಕರಣಗಳ ಪೂರೈಕೆ ಮತ್ತು ಸಂಬಂಧಿತ ಚಟುವಟಿಕೆಗಳಿಗೆ ಈ ಮೊತ್ತವನ್ನು ಬಳಸಬಹುದು.

 

ವಿಷಯಗಳು:ಆಂತರಿಕ ಭದ್ರತೆಗೆ ಸವಾಲನ್ನು ಒಡ್ಡುವ ಆಡಳಿತ ವಿರೋಧಿ ಅಂಶಗಳ ಪಾತ್ರ.

ಏನಿದು ಗ್ರೇಟರ್ ಟಿಪ್ರಾಲ್ಯಾಂಡ್?


(What is the Greater Tipraland)

 

ಸಂದರ್ಭ:

ಇತ್ತೀಚೆಗೆ, ರಾಜ್ಯದಲ್ಲಿ ನಡೆದ ಹತ್ಯೆಗಳ ನಂತರ, ತ್ರಿಪುರಾದ ಹಲವಾರು ಬುಡಕಟ್ಟು ಸಂಘಟನೆಗಳು ಈ ಪ್ರದೇಶದ ಸ್ಥಳೀಯ ಸಮುದಾಯಗಳಿಗೆ ‘ಪ್ರತ್ಯೇಕ ರಾಜ್ಯದ ಬೇಡಿಕೆ’ಯನ್ನು ಮುಂದುವರಿಸಲು ಕೈಜೋಡಿಸಿವೆ.ರಾಜ್ಯದಲ್ಲಿನ ಸ್ಥಳೀಯ ಸಮುದಾಯಗಳ “ಜೀವನ ಮತ್ತು ಅಸ್ತಿತ್ವ” ಅಪಾಯದಲ್ಲಿದೆ ಎಂದು ಅವರು ವಾದಿಸುತ್ತಾರೆ.

current affairs

 

ಅವರ ಬೇಡಿಕೆ:

ಈಶಾನ್ಯ ರಾಜ್ಯದ ಸ್ಥಳೀಯ ಸಮುದಾಯಗಳಿಗೆ ಗ್ರೇಟರ್ ಟಿಪ್ರಾಲ್ಯಾಂಡ್’ ಹೆಸರಿನ ಪ್ರತ್ಯೇಕ ರಾಜ್ಯವನ್ನು ರಚಿಸುವಂತೆ ಬುಡಕಟ್ಟು ಸಂಘಟನೆಗಳು ಒತ್ತಾಯಿಸುತ್ತಿವೆ. ಸಂವಿಧಾನದ ಪರಿಚ್ಛೇದ 2 ಮತ್ತು ಪರಿಚ್ಛೇದ 3 ರ ಅಡಿಯಲ್ಲಿ ಸ್ಥಳೀಯ ಸಮುದಾಯಗಳಿಗೆ ಪ್ರತ್ಯೇಕ ರಾಜ್ಯವನ್ನು ಕೇಂದ್ರ ಸರ್ಕಾರ ರಚಿಸಬೇಕು ಎಂಬುದು ಅವರ ಬೇಡಿಕೆಯಾಗಿದೆ.

 

ಏನಿದು ಗ್ರೇಟರ್ ಟಿಪ್ರಾಲ್ಯಾಂಡ್?

 1. ‘ಗ್ರೇಟರ್ ಟಿಪ್ರಾಲ್ಯಾಂಡ್’ (Greater Tipraland), ಮೂಲತಃ ಆಡಳಿತಾರೂಢ ಮಿತ್ರ ಬುಡಕಟ್ಟು ಪಕ್ಷದಿಂದ ಟಿಪ್ರಾಲ್ಯಾಂಡ್’ ಬೇಡಿಕೆಯ ವಿಸ್ತರಣೆಯಾಗಿದೆ – ಇಂಡಿಜಿನಸ್ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರಾ (IPFT),ಇದರ ಅಡಿಯಲ್ಲಿ ತ್ರಿಪುರಾದ ಬುಡಕಟ್ಟು ಜನಾಂಗದವರಿಗೆ ಪ್ರತ್ಯೇಕ ರಾಜ್ಯವನ್ನು ರಚಿಸಲು ಪ್ರಯತ್ನಿಸಲಾಗುತ್ತಿದೆ.
 2. ಈ ಹೊಸ ಬೇಡಿಕೆಯಲ್ಲಿ, ಸ್ಥಳೀಯ ಪ್ರದೇಶಗಳಲ್ಲಿ ಅಥವಾ ಹಳ್ಳಿಗಳಲ್ಲಿ ವಾಸಿಸುವ ಹಾಗೂ ‘ತ್ರಿಪುರ ಬುಡಕಟ್ಟು ಪ್ರದೇಶ ಸ್ವಾಯತ್ತ ಜಿಲ್ಲಾ ಮಂಡಳಿ’ (TTAADC) ಯ ಹೊರಗಿನ ಪ್ರತಿಯೊಬ್ಬ ಬುಡಕಟ್ಟು ಜನಾಂಗದವರನ್ನು ಉದ್ದೇಶಿತ ಮಾದರಿಯಲ್ಲಿ ಸೇರಿಸಲು ಪ್ರಯತ್ನಿಸಲಾಗುತ್ತಿದೆ.
 3. ಆದಾಗ್ಯೂ, ಈ ಕಲ್ಪನೆಯು ತ್ರಿಪುರದ ಬುಡಕಟ್ಟು ಕೌನ್ಸಿಲ್ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ, ಆದರೆ ಭಾರತದ ವಿವಿಧ ರಾಜ್ಯಗಳಾದ ಅಸ್ಸಾಂ, ಮಿಜೋರಾಂ ಇತ್ಯಾದಿಗಳಲ್ಲಿ ವಾಸಿಸುವ, ಹಾಗೂ ಬಂಡಾರ್ಬನ್, ಚಿತ್ತಗಾಂಗ್, ಖಾಗ್ರಾಚಾರಿ ಯನ್ನು ಒಳಗೊಂಡ ಬಾಂಗ್ಲಾದೇಶದ ಇತರ ಗಡಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ತ್ರಿಪುರೈಸ್‌ನ ‘ತಿಪ್ರಸಾ’ (Tiprasa) ಗಳನ್ನೂ ಕೂಡ ಸೇರಿಸಲು ಪ್ರಯತ್ನಿಸುತ್ತದೆ.

ಏನಿದು ಸಮಸ್ಯೆ?

ತ್ರಿಪುರದಲ್ಲಿ ಎನ್‌ಆರ್‌ಸಿಯನ್ನು ಪರಿಷ್ಕರಿಸುವ ಬೇಡಿಕೆ ಈಡೇರಿಲ್ಲ ಮತ್ತು ಹಿಂದೆ ಸಂಭವಿಸಿದ CAA ಕುರಿತ ವಿರೋಧವು ‘ಗ್ರೇಟರ್ ಟಿಪ್ರಾಲ್ಯಾಂಡ್’ ಬೇಡಿಕೆಗೆ ಕಾರಣವಾಗಿದೆ ಎಂದು ಪ್ರಾದೇಶಿಕ ರಾಜಕೀಯ ಪಕ್ಷಗಳು ಹೇಳುತ್ತವೆ.

 

ವಿಷಯಗಳು: ಆಂತರಿಕ ಭದ್ರತೆಗೆ ಸವಾಲನ್ನು ಒಡ್ಡುವ ಆಡಳಿತ ವಿರೋಧಿ ಅಂಶಗಳ ಪಾತ್ರ.

ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ (AFSPA):


(Armed Forces (Special Powers) Act (AFSPA)

 

ಸಂದರ್ಭ:

ಇತ್ತೀಚೆಗೆ, ನಾಗಾಲ್ಯಾಂಡ್‌ನಲ್ಲಿ 14 ನಾಗರಿಕರ ಹತ್ಯೆಯ ನಂತರ, ಮುಖ್ಯಮಂತ್ರಿ ನೆಫಿಯು ರಿಯೊ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆಯನ್ನು (AFSPA) ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿದ್ದಾರೆ.

 

 1. ಶ್ರೀ ರಿಯೊ ಕೇಂದ್ರ ಸರ್ಕಾರವು ನಾಗಾಲ್ಯಾಂಡ್‌ಗೆ ನೀಡಿರುವ “ಅಶಾಂತಿಯ ಪ್ರದೇಶ” (disturbed area)ಎಂಬ ಟ್ಯಾಗ್ ಅನ್ನು ಪ್ರತಿ ವರ್ಷ ವಿಸ್ತರಿಸುವುದನ್ನು ಟೀಕಿಸಿದ್ದಾರೆ.
 2. ಈ ‘ಕಠಿಣ ಕಾಯ್ದೆ’ (“draconian Act”) ಯಿಂದಾಗಿ ವಿಶ್ವಮಟ್ಟದಲ್ಲಿ ಭಾರತವು ಟೀಕೆಗೆ ಒಳಗಾಗಿರುವ ಬಗ್ಗೆ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದಾರೆ.

ಏನಿದು ಪ್ರಕರಣ?

ಇತ್ತೀಚೆಗೆ, ನಾಗಾಲ್ಯಾಂಡ್‌ನ ತಮ್ಮ ಗ್ರಾಮಕ್ಕೆ ಹಿಂದಿರುಗುತ್ತಿದ್ದ ದಿನಗೂಲಿ ಕಾರ್ಮಿಕರ ಗುಂಪನ್ನು 21 ಪ್ಯಾರಾ ಕಮಾಂಡೋ ಘಟಕದ ಸಿಬ್ಬಂದಿ ಕೊಂದರು.ಈ ಪ್ರದೇಶದಿಂದ NSCN(K) ಭಯೋತ್ಪಾದಕರು ಪರಾರಿಯಾಗಿರುವ ಬಗ್ಗೆ ಸೇನೆಗೆ ಮಾಹಿತಿ ಲಭಿಸಿದೆ ಎಂದು ಹೇಳಲಾಗಿದೆ.

 

ಹಿನ್ನೆಲೆ:

ಜೂನ್ 2021 ರಲ್ಲಿ, ಗೃಹ ವ್ಯವಹಾರಗಳ ಸಚಿವಾಲಯವು ಮುಂದಿನ ಆರು ತಿಂಗಳ ಕಾಲ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆ (Armed Forces (Special Powers) Act – AFSPA) ಅಡಿಯಲ್ಲಿ ಇಡೀ ನಾಗಾಲ್ಯಾಂಡ್ ರಾಜ್ಯವನ್ನು ಅಶಾಂತ ಪ್ರದೇಶವೆಂದು ಘೋಷಿಸಿತು.

 1. ಗೃಹ ವ್ಯವಹಾರಗಳ ಸಚಿವಾಲಯದ ಪ್ರಕಾರ, ನಾಗಾಲ್ಯಾಂಡ್ ರಾಜ್ಯದ ಗಡಿಯೊಳಗೆ ಬರುವ ಸಂಪೂರ್ಣ ಪ್ರದೇಶವು ಎಷ್ಟು ಗೊಂದಲದ ಮತ್ತು ಅಪಾಯಕಾರಿ ಸ್ಥಿತಿಯಲ್ಲಿದೆ ಎಂದರೆ ಅಲ್ಲಿನ ನಾಗರಿಕ ಆಡಳಿತಕ್ಕೆ ಸಹಾಯ ಮಾಡಲು ಸಶಸ್ತ್ರ ಪಡೆಗಳನ್ನು ಬಳಸುವುದು ಅಗತ್ಯವಾಗಿದೆ.

 

AFSPA ಎಂದರೆ ಏನು?

ಸರಳವಾಗಿ ಹೇಳುವುದಾದರೆ, AFSPA ಸಶಸ್ತ್ರ ಪಡೆಗಳಿಗೆ “ಗಲಭೆಪೀಡಿತ ಪ್ರದೇಶಗಳಲ್ಲಿ” ಸಾರ್ವಜನಿಕ ಜೀವನಕ್ರಮವನ್ನು ಕಾಪಾಡುವ ಅಧಿಕಾರವನ್ನು ನೀಡುತ್ತದೆ.

 

ಸಶಸ್ತ್ರ ಪಡೆಗಳಿಗೆ ನೀಡಲಾದ ಅಧಿಕಾರಗಳು:

 1. ಸಶಸ್ತ್ರ ಪಡೆಗಳಿಗೆ ಒಂದು ಪ್ರದೇಶದಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಒಟ್ಟುಗೂಡುವುದನ್ನು ನಿಷೇಧಿಸುವ ಅಧಿಕಾರ ಇದ್ದು, ಒಬ್ಬ ವ್ಯಕ್ತಿಯು ಕಾನೂನಿಗೆ ವಿರುದ್ಧವಾಗಿ ವರ್ತಿಸುತ್ತಿರುವನು ಎಂದು ಭಾವಿಸಿದರೆ ಸರಿಯಾದ ಎಚ್ಚರಿಕೆ ನೀಡಿದ ನಂತರ ಬಲಪ್ರಯೋಗ ಮಾಡಬಹುದು ಅಥವಾ ಗುಂಡು ಹಾರಿಸಬಹುದಾಗಿದೆ.
 2. ಅನುಮಾನಕ್ಕೆ ಸಕಾರಣವಿದ್ದರೆ, ಸೈನ್ಯವು ವಾರಂಟ್ ಇಲ್ಲದೆ ಒಬ್ಬ ವ್ಯಕ್ತಿಯನ್ನು ಬಂಧಿಸಬಹುದು; ವಾರಂಟ್ ಇಲ್ಲದೆ ಆವರಣವನ್ನು ಪ್ರವೇಶಿಸಬಹುದು ಅಥವಾ ಹುಡುಕಬಹುದು; ಮತ್ತು ಬಂದೂಕುಗಳನ್ನು ಹೊಂದಿರುವುದನ್ನು ನಿಷೇಧಿಸ ಬಹುದಾಗಿದೆ.
 3. ಬಂಧನಕ್ಕೊಳಗಾದ ಯಾವುದೇ ವ್ಯಕ್ತಿಯನ್ನು ಹತ್ತಿರದ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿಗೆ ಬಂಧನಕ್ಕೆ ಕಾರಣವಾದ ಸಂದರ್ಭಗಳನ್ನು ವಿವರಿಸುವ ವರದಿಯೊಂದಿಗೆ ಹಸ್ತಾಂತರಿಸಬಹುದು.

“ಗಲಭೆಪೀಡಿತ ಪ್ರದೇಶ” ಎಂದರೇನು ಮತ್ತು ಅದನ್ನು ಘೋಷಿಸುವ ಅಧಿಕಾರ ಯಾರಿಗೆ ಇದೆ?

ಗಲಭೆಪೀಡಿತ ಪ್ರದೇಶವೆಂದರೆ AFSPA ಕಾಯ್ದೆಯ ಸೆಕ್ಷನ್ 3 ರ ಅಡಿಯಲ್ಲಿ ಘೋಷಿಸಲ್ಪಟ್ಟ ಪ್ರದೇಶವಾಗಿದೆ. ಸಮಾಜದ ವಿವಿಧ ಧಾರ್ಮಿಕ, ಜನಾಂಗೀಯ, ಭಾಷಿಕ ಅಥವಾ ಪ್ರಾದೇಶಿಕ ಗುಂಪುಗಳು ಅಥವಾ ಜಾತಿಗಳು ಅಥವಾ ಸಮುದಾಯಗಳ ಸದಸ್ಯರ ನಡುವಿನ ಭಿನ್ನಾಭಿಪ್ರಾಯಗಳು ಅಥವಾ ವಿವಾದಗಳಿಂದಾಗಿ ಪ್ರದೇಶವೊಂದು ತೊಂದರೆಗೊಳಗಾಗಬಹುದು.

 

 1. ಕೇಂದ್ರ ಸರ್ಕಾರ, ಅಥವಾ ರಾಜ್ಯದ ರಾಜ್ಯಪಾಲರು ಅಥವಾ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿಯು ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶದ ಸಂಪೂರ್ಣ ಅಥವಾ ಭಾಗಶಃ ಭಾಗವನ್ನು ಗಲಭೆಪೀಡಿತ ಪ್ರದೇಶವೆಂದು ಘೋಷಿಸಬಹುದು.

 

ಕಾಯಿದೆಯ ಕುರಿತು ಯಾವುದೇ ವಿಮರ್ಶೆ ನಡೆದಿದೆಯೇ?

ನವೆಂಬರ್ 19, 2004 ರಂದು, ಈಶಾನ್ಯ ರಾಜ್ಯಗಳಲ್ಲಿನ ಈ ಕಾಯಿದೆಯ ನಿಬಂಧನೆಗಳನ್ನು ಪರಿಶೀಲಿಸಲು ಕೇಂದ್ರ ಸರ್ಕಾರವು ನ್ಯಾಯಮೂರ್ತಿ ಬಿ ಪಿ ಜೀವನ್ ರೆಡ್ಡಿ ನೇತೃತ್ವದ ಐದು ಸದಸ್ಯರ ಸಮಿತಿಯನ್ನು ನೇಮಿಸಿತು.

 1. ಸಮಿತಿಯು 2005 ರಲ್ಲಿ ತನ್ನ ವರದಿಯನ್ನು ಸಲ್ಲಿಸಿದ್ದು ಅದರಲ್ಲಿ ಈ ಕೆಳಗಿನ ಶಿಫಾರಸ್ಸುಗಳು ಸೇರಿವೆ: (ಎ) AFSPA ವನ್ನು ರದ್ದುಪಡಿಸಬೇಕು ಮತ್ತು ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ,(Unlawful Activities (Prevention) Act) 1967 ರಲ್ಲಿ ಸೂಕ್ತವಾದ ನಿಬಂಧನೆಗಳನ್ನು ಸೇರಿಸಬೇಕು; (ಬಿ) ಸಶಸ್ತ್ರ ಪಡೆ ಮತ್ತು ಅರೆಸೈನಿಕ ಪಡೆಗಳ ಅಧಿಕಾರವನ್ನು ಸ್ಪಷ್ಟವಾಗಿ ತಿಳಿಸಲು ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆಯನ್ನು ಮಾರ್ಪಡಿಸಬೇಕು ಮತ್ತು (ಸಿ) ಸಶಸ್ತ್ರ ಪಡೆಗಳನ್ನು ನಿಯೋಜಿಸಲಾಗಿರುವ ಪ್ರತಿ ಜಿಲ್ಲೆಯಲ್ಲೂ ಕುಂದುಕೊರತೆ ಕೇಂದ್ರಗಳನ್ನು ಸ್ಥಾಪಿಸಬೇಕು.

ಎರಡನೇ ಆಡಳಿತ ಸುಧಾರಣಾ ಆಯೋಗದ 5 ನೇ ವರದಿಯು AFSPA ವನ್ನು ರದ್ದುಗೊಳಿಸುವಂತೆ ಶಿಫಾರಸು ಮಾಡಿದೆ.

 

ನಾಗಾ ಹತ್ಯೆಗಳು AFSPA ಕಾಯ್ದೆಯ ಅಪಾಯಗಳನ್ನು ಸೂಚಿಸುತ್ತವೆ:

ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯಿದೆ (AFSPA) ಸಶಸ್ತ್ರ ಪಡೆಗಳಿಗೆ ಕೊಲ್ಲಲು ಪರವಾನಗಿ ನೀಡುತ್ತದೆ. ಮತ್ತು ಸಶಸ್ತ್ರ ಪಡೆಗಳು ಬಹಳ ಹಿಂದಿನಿಂದಲೂ ನಡೆಯುತ್ತಿರುವಂತಹ ನಾಚಿಕೆಗೇಡಿನ ಕಾರ್ಯಾಚರಣೆಗಳನ್ನು ಸ್ಥಳೀಯ ಪೋಲೀಸರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ನಡೆಸಿದಾಗ, ನಾಗಾಲ್ಯಾಂಡ್‌ನಲ್ಲಿ ಶಾಂತಿ ಪ್ರಕ್ರಿಯೆಯ ಬಗ್ಗೆ ಕೇಂದ್ರವು ಕಾಳಜಿ ವಹಿಸುವುದಿಲ್ಲ ಎಂಬ ಸಂದೇಶವನ್ನು ರವಾನಿಸುತ್ತದೆ.

AFSPA ಬಳಕೆಗಾಗಿ ಮಾರ್ಗಸೂಚಿಗಳು:

‘ನಾಗಾ ಪೀಪಲ್ಸ್ ಮೂವ್‌ಮೆಂಟ್ ಫಾರ್ ಹ್ಯೂಮನ್ ರೈಟ್ಸ್ VS ಯೂನಿಯನ್ ಆಫ್ ಇಂಡಿಯಾ’ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ 1997 ರ ತೀರ್ಪು AFSPA ಬಳಕೆಗೆ ಮಾರ್ಗಸೂಚಿಗಳನ್ನು ಹಾಕಿದೆ:

 1. ಸಂವಿಧಾನ ಪೀಠವು ತನ್ನ 1997 ರ ತೀರ್ಪಿನಲ್ಲಿ, AFSPA ಕಾಯ್ದೆಯ ಸೆಕ್ಷನ್ 4(a) ಅಡಿಯಲ್ಲಿ ಮಾರಣಾಂತಿಕ ಬಲವನ್ನು ಬಳಸುವ ಅಧಿಕಾರವನ್ನು “ಕೆಲವು ಸಂದರ್ಭಗಳಲ್ಲಿ” ಮಾತ್ರ ಚಲಾಯಿಸಬೇಕು ಎಂದು ಹೇಳಿದೆ.
 2. “ಸಾವಿಗೆ ಕಾರಣವಾಗುವ ಅಧಿಕಾರವು ಪ್ರಕ್ಷುಬ್ಧ ಪ್ರದೇಶದಲ್ಲಿ ಸಾರ್ವಜನಿಕ ಸುವ್ಯವಸ್ಥೆಯ ನಿರ್ವಹಣೆಗೆ ಸಂಬಂಧಿಸಿದೆ ಮತ್ತು ಕೆಲವು ಸಂದರ್ಭಗಳಲ್ಲಿ ಮಾತ್ರ ಚಲಾಯಿಸಬೇಕು” ಎಂದು ನ್ಯಾಯಾಲಯವು ಗಮನಿಸಿದೆ.
 3. ಈ ಪೂರ್ವ-ಷರತ್ತುಗಳು ಒಂದು ಪ್ರದೇಶವು “ಗಲಭೆ ಪೀಡಿತ”ವಾಗಿದೆ ಎಂಬ ಉನ್ನತ ಮಟ್ಟದ ಪ್ರಾಧಿಕಾರದ ಘೋಷಣೆಯನ್ನು ಒಳಗೊಂಡಿರುತ್ತದೆ. ಸಾರ್ವಜನಿಕ ಸುವ್ಯವಸ್ಥೆಯನ್ನು ಕಾಪಾಡಲು ಮಾರಣಾಂತಿಕ ಬಲಪ್ರಯೋಗವೂ “ಅಗತ್ಯ” ಎಂಬುದನ್ನು ಸಂಬಂಧಪಟ್ಟ ಅಧಿಕಾರಿ ನಿರ್ಧರಿಸಬೇಕು. ಆದರೆ ಮಾರಣಾಂತಿಕ ಶಕ್ತಿಯನ್ನು ಬಳಸುವ ಮೊದಲು ಅವನು “ಸಮಂಜಸ/ಸೂಕ್ತವಾದ ಎಚ್ಚರಿಕೆಯನ್ನು” ನೀಡಬೇಕು.
 4. ಸಶಸ್ತ್ರ ಪಡೆಗಳಿಂದ ಯಾವುದೇ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕಾದರೆ ಆ ವ್ಯಕ್ತಿಗಳು,“ಪ್ರಚಲಿತ ಪ್ರದೇಶದಲ್ಲಿ ಸದ್ಯಕ್ಕೆ ಜಾರಿಯಲ್ಲಿರುವ ಯಾವುದೇ ಕಾನೂನು ಅಥವಾ ಸಾರ್ವಜನಿಕ ಸುವ್ಯವಸ್ಥೆಯ ಉಲ್ಲಂಘನೆ ಯಾಗಿರಬೇಕು”.

 

ದಯವಿಟ್ಟು ಗಮನಿಸಿ:

 ಸೇನೆಗೆ ನೀಡಿರುವ ವಿಶೇಷಾಧಿಕಾರವನ್ನು ವಾಪಸ್ ಪಡೆಯಬೇಕು ಎಂಬ ಕೂಗು, ನಾಗಾಲ್ಯಾಂಡ್‌ನಲ್ಲಿ ಸೈನಿಕರ ಗುಂಡಿಗೆ 14 ನಾಗರಿಕರು ಬಲಿಯಾದ ನಂತರ ಮತ್ತೆ ಮುನ್ನೆಲೆಗೆ ಬಂದಿದೆ. ಸೇನೆಗೆ ವಿಶೇಷಾಧಿಕಾರವನ್ನು ನೀಡುವ ‘ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ–1958’ ಅನ್ನು (ಆಫ್‌ಸ್ಪ) ರದ್ದುಪಡಿಸಬೇಕು ಎಂದು ನಾಗಾಲ್ಯಾಂಡ್‌, ಮಣಿಪುರದ ಮುಖ್ಯಮಂತ್ರಿಗಳು ಆಗ್ರಹಿಸಿದ್ದಾರೆ. ಆಫ್‌ಸ್ಪ ರದ್ದುಗೊಳಿಸಿ ಎಂದು ಈಶಾನ್ಯ ಭಾರತದ ರಾಜ್ಯಗಳ ಜನರು ಮತ್ತೆ ಬೀದಿಗಿಳಿದು ಹೋರಾಟ ಆರಂಭಿಸಿದ್ದಾರೆ.

1958ರ ಮೇನಲ್ಲಿ ಸುಗ್ರೀವಾಜ್ಞೆ ಹೊರಡಿಸುವ ಮೂಲಕ ಸೇನೆಗೆ ವಿಶೇಷಾಧಿಕಾರ ನೀಡಲಾಗಿತ್ತು. ನಂತರದ ಕೆಲವೇ ತಿಂಗಳಲ್ಲಿ ಸಂಸತ್ತಿನಲ್ಲಿ ಸಂಬಂಧಿತ ಮಸೂದೆಯನ್ನು ಮಂಡಿಸಿ, ಅನುಮೋದನೆ ಪಡೆಯಲಾಯಿತು. ಕಾಯ್ದೆ ತರುತ್ತಿರುವುದರ ಕಾರಣ ಮತ್ತು ಅಗತ್ಯವನ್ನು ಕಾಯ್ದೆಯ ಪೀಠಿಕೆಯಲ್ಲಿ ವಿವರಿಸಲಾಗಿದೆ.

‘ಈಶಾನ್ಯ ಭಾರತದ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಗಲಭೆ ಮತ್ತು ಹಿಂಸಾಚಾರವು ಸಾಮಾನ್ಯ ಎಂಬಂತಾಗಿದೆ. ಅಲ್ಲಿನ ರಾಜ್ಯಗಳ ಆಡಳಿತ ಯಂತ್ರಗಳು ಈ ಆಂತರಿಕ ಪ್ರಕ್ಷುಬ್ಧ ಸ್ಥಿತಿಯನ್ನು ನಿಯಂತ್ರಿಸುವ ಸಾಮರ್ಥ್ಯವನ್ನು ಹೊಂದಿಲ್ಲ. ಹೀಗಾಗಿ ಪ್ರಕ್ಷುಬ್ಧ ಪ್ರದೇಶದಲ್ಲಿ ಕಾರ್ಯನಿರ್ವಹಿಸುವ ಸೇನೆಯ ಅಧಿಕಾರಿಗಳಿಗೆ ಈ ಕಾಯ್ದೆಯ 4ನೇ ಸೆಕ್ಷನ್‌ ಅಡಿ ವಿಶೇಷ ಅಧಿಕಾರವನ್ನು ನೀಡಲಾಗುತ್ತದೆ. ಸೇನೆಯ ಅಧಿಕಾರಿಗಳಿಗೆ ವಿಶೇಷ ಅಧಿಕಾರದ ಜತೆಗೆ ನೀಡಲಾಗಿರುವ ನಿಬಂಧನೆಗಳನ್ನು ಕಾಯ್ದೆಯ 5ನೇ ಸೆಕ್ಷನ್‌ ಅಡಿ ವಿವರಿಸಲಾಗಿದೆ’ ಎಂದು ಆಫ್‌ಸ್ಪ ಕಾಯ್ದೆಯ ಪೀಠಿಕೆಯಲ್ಲಿ ವಿವರಿಸಲಾಗಿದೆ.

ಈ ಕಾಯ್ದೆಯನ್ನು ಜಾರಿಗೆ ತಂದಾಗ ಅಸ್ಸಾಂ ಮತ್ತು ಮಣಿಪುರವನ್ನು ಮಾತ್ರ ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಲಾಗಿತ್ತು. ನಂತರದ ವರ್ಷಗಳಲ್ಲಿ ಈಶಾನ್ಯ ಭಾರತದ ಎಲ್ಲಾ ರಾಜ್ಯಗಳನ್ನು ಹಂತಹಂತವಾಗಿ, ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಲಾಗಿತ್ತು. ಈಚಿನ ವರ್ಷಗಳಲ್ಲಿ ಕೆಲವು ರಾಜ್ಯಗಳನ್ನು ಈ ಪಟ್ಟಿಯಿಂದ ಹೊರಗಿಡಲಾಗಿದೆ.

ವಿಶೇಷಾಧಿಕಾರ:

ಸಶಸ್ತ್ರ ಪಡೆಯ ತುಕಡಿಗಳ ಮುಖ್ಯಸ್ಥ ಅಥವಾ ವಾರಂಟ್ ಅಧಿಕಾರಿ ಅಥವಾ ತುಕಡಿ ಮುಖ್ಯಸ್ಥನ ಅಧೀನ ಅಧಿಕಾರಿ ಅಥವಾ ಅದೇ ರ‍್ಯಾಂಕ್‌ನ ಬೇರೆ ಅಧಿಕಾರಿಗಳಿಗೆ, ಈ ಅಧಿಕಾರಗಳು ಅನ್ವಯವಾಗುತ್ತದೆ.

 

 1. ಈ ಕಾಯ್ದೆ ಅಡಿ ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಲಾದ ಪ್ರದೇಶದಲ್ಲಿ ಸಾರ್ವಜನಿಕ ಸುವ್ಯವಸ್ಥೆ ಕಾಪಾಡಲು ಅಗತ್ಯ ಎನಿಸಿದರೆ ಸೇನಾಧಿಕಾರಿ ಅಥವಾ ಸೈನಿಕರು ಎಚ್ಚರಿಕೆ ನೀಡಿ, ನಂತರ ಗುಂಡು ಹಾರಿಸಬಹುದು. ಗುಂಡು ಹಾರಿಸಿದ್ದರ ಪರಿಣಾಮ ಸಾವು ಸಂಭವಿಸುವ ಸಾಧ್ಯತೆ ಇದ್ದರೂ, ಗುಂಡು ಹಾರಿಸಬಹುದು. ಘೋಷಿತ ಪ್ರದೇಶದಲ್ಲಿನ ಯಾವುದೇ ವ್ಯಕ್ತಿಯು ಕಾನೂನನ್ನು ಉಲ್ಲಂಘಿಸಿದಾಗ ಅಥವಾ ಆ ಕ್ಷಣದಲ್ಲಿ ಜಾರಿಯಲ್ಲಿರುವ ಆದೇಶವನ್ನು ಉಲ್ಲಂಘಿಸಿದಾಗ ಇದು ಅನ್ವಯವಾಗುತ್ತದೆ. ಶಸ್ತ್ರಗಳನ್ನು ಸಾಗಿಸುವಾಗ ಅಥವಾ ಶಸ್ತ್ರಾಸ್ತ್ರವಾಗಿ ಬಳಸಬಹುದಾದ ವಸ್ತುಗಳನ್ನು ಸಾಗಿಸುವಾಗ ಅಥವಾ ಸ್ಫೋಟಕ ವಸ್ತುಗಳನ್ನು ಸಾಗಿಸುವಾಗಲೂ ಈ ಅಧಿಕಾರ ಅನ್ವಯವಾಗುತ್ತದೆ.
 2. ಮೇಲ್ನೋಟಕ್ಕೆ ಅಪರಾಧ ಎಂದು ಕಾಣಿಸುವ ಕೃತ್ಯ ಎಸಗಿರುವ ಅಥವಾ ಅಂತಹ ಕೃತ್ಯ ಎಸಗಿದ್ದಾನೆ ಎಂಬ ಶಂಕಿತ ವ್ಯಕ್ತಿಯನ್ನು ವಾರಂಟ್‌ ಇಲ್ಲದೆ ಬಂಧಿಸಬಹುದು. ಒಬ್ಬ ವ್ಯಕ್ತಿಯು ಇಂತಹ ಕೃತ್ಯ ಎಸಗಲಿದ್ದಾನೆ ಎಂಬ ಸೂಚನೆ ಸಿಕ್ಕಾಗಲೂ ಆ ವ್ಯಕ್ತಿಯನ್ನು ವಾರಂಟ್‌ ಇಲ್ಲದೆ ಬಂಧಿಸಬಹುದು. ಬಂಧನದ ವೇಳೆ ಅಗತ್ಯವಿದ್ದರೆ ಬಲವನ್ನು ಪ್ರಯೋಗಿಸಬಹುದು.
 3. ತಲೆಮರೆಸಿಕೊಂಡ ವ್ಯಕ್ತಿಯನ್ನು ಹುಡುಕಲು ಅಥವಾ ಕಳ್ಳತನ ಮಾಡಲಾದ ಸ್ವತ್ತನ್ನು ವಶಪಡಿಸಿಕೊಳ್ಳಲು ಅಥವಾ ಕಾನೂನುಬಾಹಿರವಾಗಿ ಇರಿಸಿಕೊಳ್ಳಲಾದ ಶಸ್ತ್ರ, ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲು ಸೇನಾಧಿಕಾರಿಗಳು ಯಾವುದೇ ಸ್ಥಿರಾಸ್ತಿಯನ್ನು ವಾರಂಟ್‌ ಇಲ್ಲದೆ ಪ್ರವೇಶಿಸಬಹುದು ಮತ್ತು ಅಲ್ಲಿ ಶೋಧಕಾರ್ಯ ನಡೆಸಬಹುದು. ಇಂತಹ ಕಾರ್ಯಾಚರಣೆ ವೇಳೆ ಅಗತ್ಯಬಿದ್ದರೆ ಬಲವನ್ನು ಪ್ರಯೋಗಿಸಬಹುದು

 

ಏನು ಮಾಡಿದರೂ ಕ್ರಮ ತೆಗೆದುಕೊಳ್ಳುವಂತಿಲ್ಲ:

ಈ ಕಾಯ್ದೆಯ ಅಡಿ ‘ಪ್ರಕ್ಷುಬ್ಧ ಪ್ರದೇಶ’ ಎಂದು ಘೋಷಿಸಲಾದ ಪ್ರದೇಶದಲ್ಲಿ ಕಾರ್ಯನಿರ್ವಹಿಸುವಾಗ ಸೇನೆಯ ಯಾವುದೇ ರ‍್ಯಾಂಕ್‌ನ ಅಧಿಕಾರಿಗಳು ನಡೆಸುವ, ಯಾವುದೇ ಕೃತ್ಯದ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದನ್ನು ಈ ಕಾಯ್ದೆಯು ನಿರ್ಬಂಧಿಸುತ್ತದೆ. ‘ಈ ಕಾಯ್ದೆ ಅಡಿ ನೀಡಲಾದ ಅಧಿಕಾರವನ್ನು ಚಲಾಯಿಸುವಾಗ ಸೇನೆಯ ಯಾವುದೇ ವ್ಯಕ್ತಿಯು ಎಸಗುವ ಯಾವುದೇ ಕೃತ್ಯದ ವಿರುದ್ಧ ವಿಚಾರಣೆ, ಪ್ರಕರಣ, ಕಾನೂನು ಪ್ರಕ್ರಿಯೆ ಆರಂಭಿಸಬಾರದು’ ಎಂದು ಕಾಯ್ದೆಯ 6ನೇ ಸೆಕ್ಷನ್‌ನಲ್ಲಿ ವಿವರಿಸಲಾಗಿದೆ.

‘ಈ ಕಾಯ್ದೆ ಅಡಿ ಸೇನಾಧಿಕಾರಿಗಳು ತಾವು ಬಂಧಿಸಿದ ವ್ಯಕ್ತಿಯನ್ನು ಹತ್ತಿರದ ಪೊಲೀಸ್ ಠಾಣೆಗೆ ತಕ್ಷಣವೇ ಹಸ್ತಾಂತರಿಸಬೇಕು’ ಎಂದು ಈ ಕಾಯ್ದೆಯ 5ನೇ ಸೆಕ್ಸನ್‌ನಲ್ಲಿ ವಿವರಿಸಲಾಗಿದೆ.

 

ತಕರಾರು ಮತ್ತು ಸೇನೆಯ ಸಮರ್ಥನೆ:

ಈ ಕಾಯ್ದೆಯ ಅಡಿ ನೀಡಲಾಗಿರುವ ವಿಶೇಷಾಧಿಕಾರವನ್ನು ‘ಕೊಲ್ಲುವ ಪರವಾನಗಿ’ ಎಂದು ಈಶಾನ್ಯ ಭಾರತದ ಜನರು ಕರೆಯುತ್ತಾರೆ. ‘ಈ ಕಾಯ್ದೆ ಅಡಿ ಕಾರ್ಯನಿರ್ವಹಿಸುವ ಸೈನಿಕರು, ಸೇನಾಧಿಕಾರಿಗಳು ಎಸಗುವ ಯಾವುದೇ ಕೃತ್ಯಕ್ಕೂ ಅವರನ್ನು ಹೊಣೆಗಾರರನ್ನಾಗಿ ಮಾಡಲು ಸಾಧ್ಯವಿಲ್ಲ. ಹೀಗಾಗಿ ಸೈನಿಕರು ಇಲ್ಲಿ ಮನಬಂದಂತೆ ವರ್ತಿಸುತ್ತಾರೆ. ಅಮಾಯಕರನ್ನು ಕೊಲ್ಲುತ್ತಾರೆ. ಅತ್ಯಾಚಾರ ಎಸಗುತ್ತಾರೆ. ಹೀಗೆ ಈ ಕಾಯ್ದೆ ದುರ್ಬಳಕೆಯಾಗುತ್ತಿದೆ. ಹೀಗಾಗಿ ಕಾಯ್ದೆಯನ್ನು ವಾಪಸ್ ಪಡೆಯಬೇಕು’ ಎಂಬುದು ಈಶಾನ್ಯ ಭಾರತದ ರಾಜ್ಯಗಳ ಮಾನವ ಹಕ್ಕುಗಳ ಹೋರಾಟಗಾರರು ಮತ್ತು ಜನರ ಆಗ್ರಹ. ಈ ಕಾಯ್ದೆಯನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿ ಮಣಿಪುರದ ಇರೋಮ್ ಶರ್ಮಿಳಾ ಚಾನು ಅವರು 16 ವರ್ಷ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಈ ಕಾಯ್ದೆಯ ವಿರುದ್ಧ ಆಗಾಗ ಹೋರಾಟಗಳು ನಡೆಯುತ್ತಲೇ ಇವೆ.

ಸೇನೆಗೆ ಈ ವಿಶೇಷ ಅಧಿಕಾರದ ಅಗತ್ಯವಿದೆ ಎಂದು ಸೇನೆಯು ಹಲವು ಬಾರಿ ಸಮರ್ಥಿಸಿಕೊಂಡಿದೆ. ಭಾನುವಾರವೂ ಸಹ, ‘ಈ ರಾಜ್ಯಗಳಲ್ಲಿ, ಗಡಿಯಾಚೆಯಿಂದ ಬೆಂಬಲ ಹೊಂದಿರುವ ಉಗ್ರರು ಸೃಷ್ಟಿಸುವ ಸನ್ನಿವೇಶಗಳನ್ನು ಎದುರಿಸಲು ವಿಶೇಷ ಅಧಿಕಾರ ಸೇನೆಗೆ ಬೇಕೇಬೇಕು’ ಎಂದು ಸೇನೆಯು ಹೇಳಿತ್ತು.

 

ಈಶಾನ್ಯ ರಾಜ್ಯಗಳಲ್ಲಿ ಆಫ್‌ಸ್ಪ ಹೆಜ್ಜೆಗುರುತು:

 ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಶಸ್ತ್ರ ಪಡೆಗಳ (ವಿಶೇಷ ಅಧಿಕಾರ) ಕಾಯ್ದೆ–1958 ಈಶಾನ್ಯ ಭಾಗದಲ್ಲಿ ಅಸ್ತಿತ್ವದಲ್ಲಿದೆ. ನಾಗಾಲ್ಯಾಂಡ್, ಮಣಿಪುರ ಮತ್ತು ಅಸ್ಸಾಂ ರಾಜ್ಯಗಳು ಇದರ ವ್ಯಾಪ್ತಿಯಲ್ಲಿವೆ. ಅರುಣಾಚಲ ಪ್ರದೇಶದ ಕೆಲವು ಜಿಲ್ಲೆಗಳಲ್ಲಿ ಕೇಂದ್ರೀಯ ಪಡೆಗಳು ಕಣ್ಗಾವಲು ಇಟ್ಟಿವೆ. ತ್ರಿಪುರಾ ಮತ್ತು ಮೇಘಾಲಯದಲ್ಲಿ ಇದನ್ನು ವಾಪಸ್ ಪಡೆಯಲಾಗಿದೆ.

ಮೇಘಾಲಯ:

ಮೇಘಾಲಯವನ್ನು ಸಂಪೂರ್ಣವಾಗಿ ಆಫ್‌ಸ್ಪ ವ್ಯಾಪ್ತಿಯಿಂದ ಕೈಬಿಡಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ 2018ರ ಏಪ್ರಿಲ್‌ನಲ್ಲಿ ಘೋಷಿಸಿತ್ತು.

ಮೇಘಾಲಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಹತೋಟಿಯಲ್ಲಿದೆ ಎಂಬ ಕಾರಣಕ್ಕೆ ಕಾಯ್ದೆಯನ್ನು ವಾಪಸ್‌ ಪಡೆಯಲಾಗಿದೆ.

ಉಲ್ಫಾ ಮೊದಲಾದ ಅಸ್ಸಾಂ ಮೂಲದ ಬಂಡುಕೋರ ಸಂಘಟನೆಗಳ ಉಪಟಳ ಹೆಚ್ಚಿದ್ದರಿಂದ 1991ರಲ್ಲಿ ರಾಜ್ಯದಲ್ಲಿ ಆಫ್‌ಸ್ಪಾ ತರಲಾಗಿತ್ತು.

ತ್ರಿಪುರಾ:

ನ್ಯಾಷನಲ್ ಲಿಬರೇಷನ್ ಫ್ರಂಟ್‌ನಿಂದ ಅಪಹರಣ ಹಾಗೂ ಹತ್ಯೆಗಳು ನಿರಂತರವಾಗಿ ನಡೆದಿದ್ದರಿಂದ 1997ರ ಫೆಬ್ರುವರಿಯಲ್ಲಿ ತ್ರಿಪುರಾ ರಾಜ್ಯದ ಮೇಲೆ ಆಫ್‌ಸ್ಪ ಹೇರಲಾಗಿತ್ತು.

ಆರಂಭದಲ್ಲಿ 42 ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಕೇಂದ್ರೀಯ ಪಡೆಗಳು ಕಣ್ಗಾವಲು ಹಾಕಿದ್ದವು. ಬಳಿಕ 26 ಪೊಲೀಸ್ ಠಾಣೆಗಳ ವ್ಯಾಪ್ತಿಗೆ ಇಳಿಸಲಾಗಿತ್ತು.

18 ವರ್ಷಗಳ ಬಳಿಕ, 2015ರಲ್ಲಿ ಕಾಯ್ದೆ ವಾಪಸ್ ಪಡೆಯಲಾಯಿತು.

ಅರುಣಾಚಲ ಪ್ರದೇಶ:

ಚಾಂಗ್‌ಲಾಂಗ್, ಲಾಂಗ್‌ಡಿಂಗ್ ಮತ್ತು ತಿರಪ್ ಜಿಲ್ಲೆಗಳಲ್ಲಿ ಕಾಯ್ದೆಯನ್ನು ಆರು ತಿಂಗಳವರೆಗೆ ವಿಸ್ತರಿಸಿ 2021ರ ಅಕ್ಟೋಬರ್ 1ರಂದು ಆದೇಶ ಹೊರಡಿಸಲಾಗಿತ್ತು. 2022ರ ಮಾರ್ಚ್ 31ರವರೆಗೆ ಇದು ಜಾರಿಯಲ್ಲಿರಲಿದೆ.

1991ರಲ್ಲಿ ಕಾಯ್ದೆಯನ್ನು ಇಡೀ ರಾಜ್ಯಕ್ಕೆ ವಿಸ್ತರಣೆ ಮಾಡಿದ್ದ ಕೇಂದ್ರದ ನಿರ್ಧಾರ ಖಂಡಿಸಿ ಪ್ರತಿಭಟನೆಗಳು ನಡೆದಿದ್ದರಿಂದ, ಕಾಯ್ದೆಯ ವ್ಯಾಪ್ತಿಯನ್ನು ಮೂರು ಜಿಲ್ಲೆಗಳಿಗೆ ಸೀಮಿತ ಮಾಡಲಾಗಿತ್ತು.

ಈ ಭಾಗಗಳಲ್ಲಿ ಬಂಡುಕೋರರ ಚಟುವಟಿಕೆಗಳು ನಡೆಯುತ್ತಿವೆ ಎಂಬ ಕಾರಣವನ್ನು ಕೇಂದ್ರ ಸರ್ಕಾರ ನೀಡಿದೆ‌. ನ್ಯಾಷನಲ್‌ ಡೆಮಾಕ್ರಾಟಿಕ್ ಫ್ರಂಟ್‌ ಆಫ್ ಬೊರೊಲ್ಯಾಂಡ್, ಉಲ್ಫಾ, ನ್ಯಾಷನಲ್ ಸೋಷಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್ ಸಂಘಟನೆಗಳು ಈ ಭಾಗದಲ್ಲಿ ಸಕ್ರಿಯವಾಗಿವೆ.

ಲೋಹಿತ್ ಜಿಲ್ಲೆಯ ಸನ್‌ಪುರ ಪೊಲೀಸ್ ಠಾಣೆ, ದಿಬಾಂಗ್ ಜಿಲ್ಲೆಯ ರೋಯಿಂಗ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪರಿಸ್ಥಿತಿ ಸುಧಾರಿಸಿದ್ದು, ಈ ಭಾಗದಲ್ಲಿ ಕಾಯ್ದೆಯನ್ನು ವಾಪಸ್ ಪಡೆಯಲಾಗಿದೆ

ನಾಗಾಲ್ಯಾಂಡ್:

ನಾಗಾಲ್ಯಾಂಡ್‌ನಲ್ಲಿ 2021ರ ಡಿಸೆಂಬರ್ 31ರವರೆಗೂ ಆಫ್‌ಸ್ಪ ಅಸ್ತಿತ್ವದಲ್ಲಿದೆ. ಆರು ತಿಂಗಳ ಅವಧಿಗೆ ಇದನ್ನು ವಿಸ್ತರಿಸಲಾಗಿತ್ತು.

1963ರಲ್ಲಿ ನಾಗಾಲ್ಯಾಂಡ್‌ ರಾಜ್ಯ ಅಸ್ತಿತ್ವಕ್ಕೆ ಬರುವ ಮುನ್ನ, ಅಸ್ಸಾಂಗೆ ಒಳಪಟ್ಟಿದ್ದ ನಾಗಾ ಹಿಲ್ಸ್‌ ವ್ಯಾಪ್ತಿಯಲ್ಲಿ ಈ ಕಾಯ್ದೆ ಜಾರಿಯಲ್ಲಿತ್ತು.

ನಾಗಾ ಬಂಡುಕೋರರಿಂದ ಎದುರಾಗಿದ್ದ ಚಟುವಟಿಕೆಗಳನ್ನು ನಿಗ್ರಹಿಸಲು ಸಶಸ್ತ್ರಪಡೆಗಳನ್ನು ನಿಯೋಜಿಸಲಾಗಿತ್ತು.

2015ರಲ್ಲಿ ಕೇಂದ್ರ ಸರ್ಕಾರದ ಜೊತೆ ನ್ಯಾಷನಲ್ ಸೋಷಲಿಸ್ಟ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್‌ ನಡುವೆ (ಎನ್‌ಎಸ್‌ಸಿಎನ್) ಒಪ್ಪಂದವಾಗಿತ್ತು. ಆದರೆ ಎನ್‌ಎಸ್‌ಸಿಎನ್–ಐಎಂ ಸಂಘಟನೆಯ ಮುಖ್ಯಸ್ಥ ಟಿ.ಮುಯಿವಾಹ್ ಅವರು ನಾಗಾಲ್ಯಾಂಡ್‌ಗೆ ಪ್ರತ್ಯೇಕ ಸಂವಿಧಾನ ಮತ್ತು ಧ್ವಜ ಬೇಕು ಎಂಬ ಬೇಡಿಕೆಯಿಟ್ಟಿದ್ದರಿಂದ ಸಂಘರ್ಷ ಮುಂದುವರಿದಿದೆ.

ಅಸ್ಸಾಂ:

1958ರಲ್ಲಿ ಆಫ್‌ಸ್ಪ ಕಾಯ್ದೆಯನ್ನು ಅಸ್ಸಾಂನಲ್ಲಿ ಮೊದಲ ಬಾರಿಗೆ ಜಾರಿ ಮಾಡಲಾಗಿತ್ತು. ಉಲ್ಫಾ, ಎನ್‌ಡಿಎಫ್‌ಬಿ ಮೊದಲಾದ ಸಂಘಟನೆಗಳು ಬಂಡುಕೋರ ಚಟುವಟಿಕೆ ನಡೆಸುತ್ತಿವೆ ಎಂಬ ಕಾರಣಕ್ಕೆ ಜಾರಿ ಮಾಡಲಾಗಿತ್ತು

1990ರಲ್ಲಿ ಅಸ್ಸಾಂನಲ್ಲಿ ಆಫ್‌ಸ್ಪ ಮರು ಜಾರಿಯಾಯಿತು. ರಾಜ್ಯದ ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ, ಪ್ರತೀ ಆರು ತಿಂಗಳಿಗೊಮ್ಮೆ ಇದನ್ನು ವಿಸ್ತರಿಸಲಾಗುತ್ತದೆ.

ಈ ಬಾರಿ ಅವಧಿ ವಿಸ್ತರಣೆಗೆ ನಿಖರ ಕಾರಣವನ್ನು ಸರ್ಕಾರ ನೀಡಿಲ್ಲ. ಕಾಯ್ದೆ ವಾಪಸ್ ಪಡೆಯುವಂತೆ ಮಾನವ ಹಕ್ಕು ಕಾರ್ಯಕರ್ತರು ಆಗ್ರಹಿಸಿದ್ದಾರೆ.

ಮಣಿಪುರ:

ಇಂಫಾಲ ಪುರಸಭೆ ಪ್ರದೇಶವನ್ನು ಹೊರತುಪಡಿಸಿ ಇಡೀ ಮೇಘಾಲಯ ರಾಜ್ಯವನ್ನು ಪ್ರಕ್ಷುಬ್ಧ ಪ್ರದೇಶ ಎಂದು ಘೋಷಿಸಿ ಆಫ್‌ಸ್ಪ ಹೇರಲಾಗಿದೆ.

2020ರ ಡಿಸೆಂಬರ್‌ 1ರಂದು ಒಂದು ವರ್ಷದ ಅವಧಿಗೆ ಕಾಯ್ದೆಯ ಅವಧಿಯನ್ನು ವಿಸ್ತರಿಸಲಾಗಿತ್ತು.

ರಾಜ್ಯದಲ್ಲಿ ವಿವಿಧ ಬಂಡುಕೋರ ಸಂಘಟನೆಗಳು ಸಕ್ರಿಯವಾಗಿವೆ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸುತ್ತಿದೆ.

(ಕೃಪೆ; ಪ್ರಜಾವಾಣಿ)

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಅಂತರರಾಷ್ಟ್ರೀಯ ವಸಾಹತುಗಳಿಗಾಗಿ ಬ್ಯಾಂಕ್:

(Bank for International Settlements)

ಬ್ಯಾಂಕ್ ಫಾರ್ ಇಂಟರ್‌ನ್ಯಾಶನಲ್ ಸೆಟಲ್‌ಮೆಂಟ್ಸ್ (BIS), ಭಾರತ ಸೇರಿದಂತೆ ಪ್ರಪಂಚದಾದ್ಯಂತದ ದೇಶಗಳನ್ನು ಪ್ರತಿನಿಧಿಸುವ 62-ಸದಸ್ಯ ಕೇಂದ್ರ ಬ್ಯಾಂಕ್‌ಗಳ ಒಡೆತನದ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ.

 1. ಜರ್ಮನಿ, ಬೆಲ್ಜಿಯಂ, ಫ್ರಾನ್ಸ್, ಯುನೈಟೆಡ್ ಕಿಂಗ್‌ಡಮ್, ಇಟಲಿ, ಜಪಾನ್, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಮತ್ತು ಸ್ವಿಟ್ಜರ್‌ಲ್ಯಾಂಡ್ ನಡುವಿನ ಅಂತರ ಸರ್ಕಾರಿ ಒಪ್ಪಂದದ ಅಡಿಯಲ್ಲಿ 1930 ರಲ್ಲಿ ಬ್ಯಾಂಕ್ ಫಾರ್ ಇಂಟರ್‌ನ್ಯಾಶನಲ್ ಸೆಟಲ್‌ಮೆಂಟ್ಸ್ (Bank For International Settlements – BIS) ಅನ್ನು ಸ್ಥಾಪಿಸಲಾಯಿತು.
 2. ಇದರ ಪ್ರಧಾನ ಕಛೇರಿ ಸ್ವಿಟ್ಜರ್ಲೆಂಡ್‌ನ ಬಾಸೆಲ್‌ನಲ್ಲಿದೆ.
 3. ಇದು ಅಂತರಾಷ್ಟ್ರೀಯ ವಿತ್ತೀಯ ಮತ್ತು ಆರ್ಥಿಕ ಸಹಕಾರವನ್ನು ಉತ್ತೇಜಿಸುತ್ತದೆ ಮತ್ತು ಕೇಂದ್ರ ಬ್ಯಾಂಕುಗಳಿಗೆ ಬ್ಯಾಂಕ್ ಆಗಿ ಕಾರ್ಯನಿರ್ವಹಿಸುತ್ತದೆ.
 4. ಇದು ತನ್ನ ಸಭೆಗಳು, ಈವೆಂಟ್‌ಗಳು ಮತ್ತು ಬಾಸೆಲ್ ಪ್ರಕ್ರಿಯೆಯ ಮೂಲಕ ತನ್ನ ಕಾರ್ಯಗಳನ್ನು ನಿರ್ವಹಿಸುತ್ತದೆ – ಜಾಗತಿಕ ಆರ್ಥಿಕ ಸ್ಥಿರತೆಯನ್ನು ಅನುಸರಿಸುವ ಅಂತರರಾಷ್ಟ್ರೀಯ ಗುಂಪುಗಳನ್ನು ಆಯೋಜಿಸುತ್ತದೆ ಮತ್ತು ಪರಸ್ಪರ ಕ್ರಿಯೆಯನ್ನು ಸುಗಮಗೊಳಿಸುತ್ತದೆ.

ವ್ಯಾಪಾರ ನಡೆಸುವ ಸ್ವಾತಂತ್ರ್ಯ:

(Freedom to Conduct Business)

ಸಾಂಕ್ರಾಮಿಕ ರೋಗದ ಎರಡನೇ ಅಲೆಯಲ್ಲಿ ‘ವೈಯಕ್ತಿಕ ರಕ್ಷಣಾ ಸಾಧನ’ (ಪಿಪಿಇ) ಕಿಟ್‌ಗಳ ರಫ್ತಿನ ಮೇಲೆ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ವಿಧಿಸಿದ ನಿಷೇಧವು ‘ಸಾಂವಿಧಾನಿಕ ಕ್ರಮಕ್ಕೆ ಅನುಗುಣವಾಗಿ’ ‘ಕಾನೂನುಬದ್ಧ’ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಇದು ವ್ಯಾಪಾರ ಮಾಡುವ ಸ್ವಾತಂತ್ರ್ಯದ ಸಾಂವಿಧಾನಿಕ ಹಕ್ಕನ್ನು ಕಡೆಗಣಿಸಲು/ಅಥವಾ ಅದರ ಮೇಲೆ ಮಿತಿಗಳನ್ನು ಹೇರಲು ಇದು ಸಾಕಷ್ಟು ಆಧಾರಗಳನ್ನು ಹೊಂದಿದೆ.

ಹಿನ್ನೆಲೆ: ಆರ್‌ಬಿಐ ನ್ಯಾಯಾಲಯಕ್ಕೆ, ದೇಶದಲ್ಲಿನ ಸಾಂಕ್ರಾಮಿಕ ಪರಿಸ್ಥಿತಿ ಮತ್ತು ಪಿಪಿಇ ಉತ್ಪನ್ನಗಳ ಸಾಕಷ್ಟು ದಾಸ್ತಾನು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಸವಿವರವಾಗಿ ತಿಳಿಸಿದೆ.

 1. ವ್ಯಾಪಾರ ಮತ್ತು ವ್ಯವಹಾರದ ಸ್ವಾತಂತ್ರ್ಯ’ದ ಹಕ್ಕು ಸಂವಿಧಾನದ 19(1)(ಜಿ) ಅಡಿಯಲ್ಲಿ ಖಾತರಿಪಡಿಸಿದ ಮೂಲಭೂತ ಹಕ್ಕು ಆಗಿದೆ.

 


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos