ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 2:
1. ಪೈಕಾ ದಂಗೆ.
2. ಸ್ಮಾರ್ಟ್ ಸಿಟೀಸ್ ಮಿಷನ್(ಯೋಜನೆ).
ಸಾಮಾನ್ಯ ಜ್ಞಾನ ಪತ್ರಿಕೆ 2:
1. ಜಾತಿ ಗಣತಿ.
2. ಋಣಾತ್ಮಕ/ನಕಾರಾತ್ಮಕ ಆಮದು ಪಟ್ಟಿ.
3. ಅಣೆಕಟ್ಟು ಸುರಕ್ಷತಾ ಮಸೂದೆ 2019.
ಸಾಮಾನ್ಯ ಜ್ಞಾನ ಪತ್ರಿಕೆ 3:
1. ಹೈಪರ್ಸಾನಿಕ್ ಆಯುಧಗಳು.
2. ಮುಖ ಗುರುತಿಸುವಿಕೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:
1. ಭಾರತೀಯ SARS-CoV-2 ಕನ್ಸೋರ್ಟಿಯಂ ಆನ್ ಜೀನೋಮಿಕ್ಸ್ (INSACOG).
2. ಮಾನವ ಹಕ್ಕುಗಳ ಹೈ ಕಮಿಷನರ್ ಕಚೇರಿ.
ಸಾಮಾನ್ಯ ಅಧ್ಯಯನ ಪತ್ರಿಕೆ : 1
ವಿಷಯಗಳು: 18ನೇ ಶತಮಾನದ ಮಧ್ಯಭಾಗದಿಂದ ಇಂದಿನವರೆಗೆ ಆಧುನಿಕ ಭಾರತದ ಇತಿಹಾಸ-ಮಹತ್ವದ ಘಟನೆಗಳು ವ್ಯಕ್ತಿಗಳು ಮತ್ತು ಸಮಸ್ಯೆಗಳು.
ಪೈಕಾ ದಂಗೆ:
(Paika Rebellion)
ಸಂದರ್ಭ:
ಇತ್ತೀಚೆಗೆ ‘ಪೈಕಾ ದಂಗೆ’ ಗೆ ಸಂಬಂಧಿಸಿದಂತೆ ಕೇಂದ್ರ ಸಂಸ್ಕೃತಿ ಸಚಿವರು ಈ ಕೆಳಗಿನ ಶಿಫಾರಸ್ಸು ಮಾಡಿದ್ದಾರೆ.
- “ಒಡಿಶಾದಲ್ಲಿ 1817 ರ ಪೈಕಾ ದಂಗೆಯನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆಯಲಾಗುವುದಿಲ್ಲ, ಆದರೆ ಈ ದಂಗೆಯನ್ನು ಬ್ರಿಟಿಷರ ವಿರುದ್ಧದ ಸಾಮೂಹಿಕ ದಂಗೆಯ ಪ್ರಾರಂಭವೆಂದು ಪರಿಗಣಿಸಿ, ‘ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ’NCERT) 8 ನೇ ತರಗತಿಯ (ಇತಿಹಾಸ ಪಠ್ಯಪುಸ್ತಕದಲ್ಲಿ ಕೇಸ್ ಸ್ಟಡಿಯಾಗಿ” ಸೇರಿಸಲಾಗುತ್ತದೆ.
‘ಪೈಕಾ’ ಗಳು ಯಾರು?
16 ನೇ ಶತಮಾನದಿಂದ, ಒಡಿಶಾದ ಅನೇಕ ರಾಜರು ‘ಪೈಕಾ’ಗಳು ಎಂದು ಕರೆಯಲ್ಪಡುವ ಸಮಾಜದ ವಿವಿಧ ಗುಂಪುಗಳಿಂದ ಜನರನ್ನು ಮಿಲಿಟರಿ ಸೇವೆಗಳನ್ನು ಒದಗಿಸಲು ನೇಮಿಸಿಕೊಂಡರು, ಇದಕ್ಕೆ ಬದಲಿಯಾಗಿ ಅವರಿಗೆ ‘ಬಾಡಿಗೆ-ಮುಕ್ತ ಭೂಮಿ’ (ನಿಷ್-ಕರ್ ಜಾಗೀರ್ / nish-kar jagirs) ಮತ್ತು ಉನ್ನತ ಪದವಿಗಳನ್ನು ನೀಡಲಾಗುತ್ತಿತ್ತು.
- ಒಡಿಶಾದ ಈ ಸಾಂಪ್ರದಾಯಿಕ ಭೂ ಒಡೆಯರು ನಾಗರಿಕ ಸೈನಿಕರಾಗಿದ್ದರು ಮತ್ತು ಯುದ್ಧದ ಸಮಯದಲ್ಲಿ ಯೋಧರಾಗಿ ಸೇವೆ ಸಲ್ಲಿಸಿದರು.
ಪೈಕಾ ದಂಗೆಯ ಪ್ರಾರಂಭ:
- 1803 ರಲ್ಲಿ ಈಸ್ಟ್ ಇಂಡಿಯಾ ಕಂಪನಿಯ ಸೈನ್ಯಗಳು ಒಡಿಶಾದ ಹೆಚ್ಚಿನ ಭಾಗವನ್ನು ಆಕ್ರಮಿಸಿಕೊಂಡಾಗ ಮತ್ತು ‘ಖೋರ್ಡಾ’ ರಾಜನ ಸೋಲಿನ ನಂತರ, ಪೈಕಾಗಳ ಶಕ್ತಿ ಮತ್ತು ಪ್ರತಿಷ್ಠೆ ಕುಸಿಯಲು ಪ್ರಾರಂಭಿಸಿತು, ಆದಕಾರಣ ಅವರು ಮತ್ತೆ ಬಂಡಾಯವೆದ್ದರು.
- ಬ್ರಿಟಿಷರು ಈ ಆಕ್ರಮಣಕಾರಿ ಮತ್ತು ಯುದ್ಧೋಚಿತ ಹೊಸ ವಿಷಯಗಳೊಂದಿಗೆ ಒಗ್ಗಿಕೊಂಡಿರಲಿಲ್ಲ ಮತ್ತು ಆರಾಮದಾಯಕವಾಗಿರಲಿಲ್ಲ ಮತ್ತು ಅವರು ಈ ವಿಷಯವನ್ನು ಪರಿಶೀಲಿಸಲು ‘ವಾಲ್ಟರ್ ಎವರ್’ ಅವರ ಅಧ್ಯಕ್ಷತೆಯಲ್ಲಿ ಆಯೋಗವನ್ನು ರಚಿಸಿದರು.
- ಈ ಆಯೋಗವು ಬ್ರಿಟಿಷ್ ಆಡಳಿತದಿಂದ ಪೈಕಾಗಳಿಗೆ ನೀಡಲಾದ ಪಾರಂಪರಿಕ ಬಾಡಿಗೆ-ಮುಕ್ತ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಶಿಫಾರಸು ಮಾಡಿತು ಮತ್ತು ಈ ಶಿಫಾರಸನ್ನು ಉತ್ಸಾಹದಿಂದ ಪಾಲಿಸಲಾಯಿತು.
- ಇದರ ನಂತರ ಬ್ರಿಟಿಷರು ಪೈಕಾಗಳ ಭೂಮಿಯನ್ನು ವಶಪಡಿಸಿಕೊಂಡರು ಮತ್ತು ಅವರನ್ನು ಕಂಪನಿಯ ಸರ್ಕಾರ ಮತ್ತು ಅದರ ಉದ್ಯೋಗಿಗಳು ಸುಲಿಗೆ ಮಾಡಿದರು ಮತ್ತು ಕಿರುಕುಳ ನೀಡಿದರು. ಇದಕ್ಕೆ ಪ್ರತಿಯಾಗಿ ಪೈಕಾ ಗಳು ದಂಗೆ ಎದ್ದರು.
- ದಂಗೆಯ ನೇತೃತ್ವವನ್ನು ಖೋರ್ಡಾದ ರಾಜಾ ಮುಕುಂದ ದೇವ್ II ರ ಜನರಲ್ ಆದ ಬಕ್ಷಿ ಜಗಬಂಧು ವಿದ್ಯಾಧರ್ ಮಹಾಪಾತ್ರ ಭರ್ಮಾರ್ಬರ್ ರಾಯ್ ವಹಿಸಿದ್ದರು.
- ಆದಾಗ್ಯೂ, ಉಪ್ಪಿನ ಬೆಲೆಯಲ್ಲಿನ ಏರಿಕೆ, ತೆರಿಗೆ ಪಾವತಿಗಾಗಿ ಕವಡೆ(ನಾಣ್ಯ)ಕರೆನ್ಸಿ ಯನ್ನು ರದ್ದುಗೊಳಿಸುವುದು ಮತ್ತು ಬಹಿರಂಗವಾಗಿ ಸುಲಿಗೆ ಮಾಡುವ ಭೂಕಂದಾಯ ನೀತಿಯು ದಂಗೆಗೆ ಇತರ ಮೂಲ ಕಾರಣಗಳಾಗಿವೆ.
ಫಲಿತಾಂಶ:
ಆರಂಭದಲ್ಲಿ ‘ಕಂಪನಿ’ ಈ ದಂಗೆಯನ್ನು ಎದುರಿಸಲು ಸಾಕಷ್ಟು ಕಷ್ಟಗಳನ್ನು ಎದುರಿಸಿತು, ಆದರೆ ಮೇ 1817 ರ ಹೊತ್ತಿಗೆ ದಂಗೆಯನ್ನು ಹತ್ತಿಕ್ಕುವಲ್ಲಿ ಅವರು ಯಶಸ್ವಿಯಾದರು.
ಅನೇಕ ಪೈಕಾ ನಾಯಕರನ್ನು ಗಲ್ಲಿಗೇರಿಸಲಾಯಿತು ಅಥವಾ ಗಡಿಪಾರು ಮಾಡಲಾಯಿತು. 1825 ರಲ್ಲಿ ಜಗಬಂಧು ಶರಣಾದರು.
ಪೈಕಾ ದಂಗೆ: ರಾಷ್ಟ್ರೀಯವಾದಿ ಚಳವಳಿಯೇ ಅಥವಾ ರೈತರ ಬಂಡಾಯವೇ?
‘ಪೈಕಾ ದಂಗೆ’ಯು ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಯು ತನ್ನ ಸೇನೆಯ ಬಲದಿಂದ ತನ್ನ ಪ್ರಭುತ್ವವನ್ನು ವಿಸ್ತರಿಸುವ ಸಮಯದಲ್ಲಿ ಭಾರತದಲ್ಲಿ ನಡೆದ ರೈತ ದಂಗೆಗಳಲ್ಲಿ ಇದು ಕೂಡ ಒಂದಾಗಿದೆ.
- ದಂಗೆಯು ಹಲವಾರು ಸಂದರ್ಭಗಳಲ್ಲಿ ಯುರೋಪಿಯನ್ ವಸಾಹತುಶಾಹಿಗಳು ಮತ್ತು ಮಿಷನರಿಗಳೊಂದಿಗೆ ಹಿಂಸಾತ್ಮಕ ಘರ್ಷಣೆಗಳಿಗೆ ಕಾರಣವಾಯಿತು; ಈ ಕಾರಣಕ್ಕಾಗಿ ಪೈಕಾಗಳ ಪ್ರತಿರೋಧವನ್ನು ಕೆಲವೊಮ್ಮೆ ವಸಾಹತುಶಾಹಿ ಆಳ್ವಿಕೆಯ ವಿರುದ್ಧದ ಪ್ರತಿರೋಧದ ಮೊದಲ ಅಭಿವ್ಯಕ್ತಿಯಾಗಿ ನೋಡಲಾಗುತ್ತದೆ – ಮತ್ತು ‘ಪೈಕಾ ಬಂಡಾಯ’ವನ್ನು ಸ್ವಭಾವದಲ್ಲಿ “ರಾಷ್ಟ್ರೀಯವಾದಿ” ಎಂದು ಪರಿಗಣಿಸಲಾಗುತ್ತದೆ.
ವಿಷಯಗಳು: ಜನಸಂಖ್ಯೆ ಮತ್ತು ಸಂಬಂಧಿತ ಸಮಸ್ಯೆಗಳು, ಬಡತನ ಮತ್ತು ಅಭಿವೃದ್ಧಿ ಸಮಸ್ಯೆಗಳು, ನಗರೀಕರಣ, ಅವುಗಳ ಸಮಸ್ಯೆ ಮತ್ತು ಪರಿಹಾರಗಳು.
ಸ್ಮಾರ್ಟ್ ಸಿಟೀಸ್ ಮಿಷನ್(ಯೋಜನೆ):
(Smart Cities Mission SCM)
ಸಂದರ್ಭ:
COVID-19 ಸಾಂಕ್ರಾಮಿಕ ರೋಗದಿಂದಾಗಿ ವಿಳಂಬಗಳು ಮತ್ತು ಆಗಸ್ಟ್‌ನಲ್ಲಿ NITI ಆಯೋಗ್ ಮಾಡಿದ ಶಿಫಾರಸಿನ ಆಧಾರದ ಮೇಲೆ, ‘ಸ್ಮಾರ್ಟ್ ಸಿಟೀಸ್ ಮಿಷನ್’ (SCM) ಅಡಿಯಲ್ಲಿ,ಯೋಜನೆಗಳನ್ನು ಪೂರ್ಣಗೊಳಿಸುವ ಗಡುವನ್ನು ‘ಭಾಗವಹಿಸುವ ಎಲ್ಲಾ 100 ನಗರಗಳಿಗೆ’, ಜೂನ್ 2023 ರವರೆಗೆ ವಿಸ್ತರಿಸಲಾಗಿದೆ.
ಸ್ಮಾರ್ಟ್ ಸಿಟೀಸ್ ಮಿಷನ್:
- ಸ್ಮಾರ್ಟ್ ಸಿಟಿ ಮಿಷನ್ (Smart Cities Mission) ಅನ್ನು ಭಾರತ ಸರ್ಕಾರವು 2015 ರಲ್ಲಿ ಪ್ರಾರಂಭಿಸಿತು.
- ಇದು ನಗರ ಕಾರ್ಯಗಳನ್ನು ಸಂಯೋಜಿಸುವುದು,ವಿರಳ ಸಂಪನ್ಮೂಲಗಳನ್ನು ಹೆಚ್ಚು ಪರಿಣಾಮಕಾರಿಯಾಗಿ ಬಳಸುವುದು ಮತ್ತು ನಾಗರಿಕರ ಜೀವನ ಮಟ್ಟವನ್ನು ಸುಧಾರಿಸುವ ಗುರಿ ಹೊಂದಿದೆ.
- ಮಿಷನ್ ಅಡಿಯಲ್ಲಿ ಯೋಜನೆಗಳನ್ನು ಪೂರ್ಣಗೊಳಿಸಲು ಆಯ್ದ ನಗರಗಳಿಗೆ ಐದು ವರ್ಷಗಳ ಕಾಲಾವಕಾಶ ನೀಡಲಾಯಿತು, ಇದರಲ್ಲಿ ಸ್ಮಾರ್ಟ್ ಸಿಟಿಯ ಮೊದಲ ಸೆಟ್ 2021 ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
- ಇದು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಅಡಿಯಲ್ಲಿನ ಒಂದು ನವೀನ ಕ್ರಮವಾಗಿದೆ.
- ಇದು ‘ಕೇಂದ್ರ ಪ್ರಾಯೋಜಿತ ಯೋಜನೆ’ಯಾಗಿದೆ.
ಸ್ಮಾರ್ಟ್ ಸಿಟಿ ಯೋಜನೆಯು ನಾಲ್ಕು ಸ್ತಂಭಗಳನ್ನು ಹೊಂದುವಂತೆ ಪರಿಕಲ್ಪಿಸಲಾಗಿದೆ:
- ಸಾಮಾಜಿಕ ಮೂಲಸೌಕರ್ಯ (Social Infrastructure).
- ಭೌತಿಕ ಮೂಲಸೌಕರ್ಯ (Physical Infrastructure)
- ಸಾಂಸ್ಥಿಕ ಮೂಲಸೌಕರ್ಯ (ಆಡಳಿತ ಸೇರಿದಂತೆ) (Institutional Infrastructure (including Governance).
- ಆರ್ಥಿಕ ಮೂಲಸೌಕರ್ಯ (Economic Infrastructure).
ಜೂನ್ 2021ರಂತೆ ಈ ಯೋಜನೆಯಡಿಯಲ್ಲಿ ಸಲ್ಲಿಸಲಾದ ಪ್ರಗತಿ:
- ಈ ಮಿಷನ್ ಅಡಿಯಲ್ಲಿ ಒಟ್ಟು ಪ್ರಸ್ತಾವಿತ ಯೋಜನೆಗಳ ಪೈಕಿ 5,924 ಯೋಜನೆಗಳಿಗೆ ಟೆಂಡರ್‌ಗಳನ್ನು ನೀಡಲಾಗಿದೆ, 5,236 ಯೋಜನೆಗಳಿಗೆ ವರ್ಕ್ ಆರ್ಡರ್‌ಗಳನ್ನು ನೀಡಲಾಗಿದೆ ಮತ್ತು 2,665 ಯೋಜನೆಗಳು ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿವೆ.
- 24,964 ಕೋಟಿ ಮೌಲ್ಯದ 212 ಖಾಸಗಿ-ಸಾರ್ವಜನಿಕ ಯೋಜನೆಗಳು ಪೂರ್ಣಗೊಂಡಿವೆ.
- 70 ಸ್ಮಾರ್ಟ್ ಸಿಟಿಗಳನ್ನು ಅಭಿವೃದ್ಧಿಪಡಿಸಲಾಗಿದೆ ಮತ್ತು ಇಂಟಿಗ್ರೇಟೆಡ್ ಕಮಾಂಡ್ ಮತ್ತು ಇವುಗಳಲ್ಲಿ ಇಂಟಿಗ್ರೇಟೆಡ್ ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್‌ಗಳು (Integrated Command and Control Centres – ICCCs) ಕಾರ್ಯನಿರ್ವಹಿಸಲು ಪ್ರಾರಂಭಿಸಿವೆ.
ಮುಂದಿರುವ ಸವಾಲುಗಳು:
- ಇಂಧನ ದಕ್ಷತೆಯ ಮತ್ತು ಹಸಿರು ಕಟ್ಟಡಗಳ ನಿರ್ಮಾಣದಲ್ಲಿ ಇನ್ನೂ ಹೆಚ್ಚಿನ ಪ್ರಗತಿಯನ್ನು ನಿರೀಕ್ಷಿಸಲಾಗಿದೆ.
- ನಗರ ಸಂಸ್ಥೆಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು.
- ಸಾರ್ವಜನಿಕ ಸಾರಿಗೆಯ ಪಾಲು ಕಡಿಮೆಯಾಗುತ್ತಿದೆ. ಹೆಚ್ಚುತ್ತಿರುವ ನಗರೀಕರಣದ ಅಗತ್ಯಗಳನ್ನು ಪೂರೈಸಲು ಇದನ್ನು ಹೆಚ್ಚಿಸಬೇಕಾಗಿದೆ.
- ಹೆಚ್ಚುತ್ತಿರುವ ನಗರೀಕರಣದಿಂದಾಗಿ, ವಾಯು ಮಾಲಿನ್ಯ ಮತ್ತು ರಸ್ತೆಗಳಲ್ಲಿ ವಾಹನ ದಟ್ಟಣೆಯು ಹೆಚ್ಚುತ್ತಿದೆ.
ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.
ಜಾತಿ ಗಣತಿ:
(Caste census)
ಸಂದರ್ಭ:
ಬಿಹಾರವು ರಾಜ್ಯ-ನಿರ್ದಿಷ್ಟ ಜಾತಿ ಆಧಾರಿತ ಜನಗಣತಿಯನ್ನು(State-specific caste-based exercise)ನಡೆಸಲು ಯೋಜಿಸುತ್ತಿದೆ. ಕೆಲ ದಿನಗಳ ಹಿಂದೆ ಮುಖ್ಯಮಂತ್ರಿ ನೇತೃತ್ವದ ಬಿಹಾರದ ನಾಯಕರ ನಿಯೋಗವು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ದೇಶದಲ್ಲಿ ಜಾತಿ ಗಣತಿ ನಡೆಸುವಂತೆ ಒತ್ತಾಯಿಸಿತ್ತು. ನಂತರ ಕೇಂದ್ರ ಸರ್ಕಾರ ಇದನ್ನು ಆಯೋಜಿಸಲು ನಿರಾಕರಿಸಿತು. ಇದಾದ ಬಳಿಕ ಬಿಹಾರ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.
ಏನಿದು ಪ್ರಕರಣ?
2011 ರ ಸಾಮಾಜಿಕ-ಆರ್ಥಿಕ ಜಾತಿ ಗಣತಿಯಲ್ಲಿ (Socio-Economic Caste Census – SECC) ಸಂಗ್ರಹಿಸಿದ ಜಾತಿ ಆಧಾರಿತ ದತ್ತಾಂಶವು “ನಿರುಪಯುಕ್ತ” ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ತಿಳಿಸಿತ್ತು. ಆದರೆ 2016 ರಲ್ಲಿ, ‘ಭಾರತದ ರಿಜಿಸ್ಟ್ರಾರ್-ಜನರಲ್ ಮತ್ತು ಜನಗಣತಿ ಆಯುಕ್ತರು’ (Registrar-General and Census Commissioner of India) ಗ್ರಾಮೀಣ ಅಭಿವೃದ್ಧಿಯ ಸಂಸದೀಯ ಸ್ಥಾಯಿ ಸಮಿತಿಗೆ ಮಾಹಿತಿ ನೀಡುವಾಗ, 98.87 ಪ್ರತಿಶತದಷ್ಟು ವೈಯಕ್ತಿಕ ಜಾತಿ ಮತ್ತು ಧರ್ಮದ ಕುರಿತ ಡೇಟಾವನ್ನು ದೋಷ ರಹಿತವಾಗಿ ಸಂಗ್ರಹಿಸಲಾಗಿದೆ ಎಂದು ಹೇಳಿದ್ದಾರೆ.
ಸರ್ಕಾರದ ಪ್ರಕಾರ ಈ ದತ್ತಾಂಶವು ಏಕೆ ನಿರುಪಯುಕ್ತ ವಾಗಿದೆ?
- ಸರ್ಕಾರದ ಪ್ರಕಾರ, 1931 ರಲ್ಲಿ ಸಮೀಕ್ಷೆ ಮಾಡಲಾದ ಒಟ್ಟು ಜಾತಿಗಳ ಸಂಖ್ಯೆ 4,147 ಆಗಿದ್ದು, ಸಾಮಾಜಿಕ-ಆರ್ಥಿಕ ಜಾತಿ ಗಣತಿಯ (ಎಸ್‌ಇಸಿಸಿ) ಮಾಹಿತಿಯ ಪ್ರಕಾರ ದೇಶದಲ್ಲಿ 46 ಲಕ್ಷಕ್ಕೂ ಹೆಚ್ಚು ವಿವಿಧ ಜಾತಿಗಳಿವೆ. ಕೆಲವು ಜಾತಿಗಳು ಉಪ-ಜಾತಿಗಳಾಗಿ ವಿಭಜನೆ ಗೊಂಡಿರಬಹುದು, ಆದರೆ ಅವುಗಳ ಒಟ್ಟು ಸಂಖ್ಯೆಯು ಇಷ್ಟರ ಮಟ್ಟಿಗೆ ಇರಲಾರದು ಎಂದು ಉಹಿಸಬಹುದಾಗಿದೆ.
- ಒಂದೇ ಜಾತಿಗೆ ವಿವಿಧ ಕಾಗುಣಿತಗಳನ್ನು ಗಣತಿದಾರರು ಬಳಸಿದ್ದರಿಂದ ಸಾಮಾಜಿಕ-ಆರ್ಥಿಕ ಜಾತಿ ಗಣತಿಯ ಸಂಪೂರ್ಣ ಕಾರ್ಯವು ನಿಷ್ಪ್ರಯೋಜಕವಾಗಿದೆ. ಅನೇಕ ಸಂದರ್ಭಗಳಲ್ಲಿ ಪ್ರತಿವಾದಿಗಳು ತಮ್ಮ ಜಾತಿಗಳನ್ನು ಬಹಿರಂಗಪಡಿಸಲು ನಿರಾಕರಿಸಿದ್ದಾರೆ ಎಂದು ಸರ್ಕಾರ ಹೇಳಿದೆ.
ಇಲ್ಲಿಯವರೆಗೆ ‘ಜಾತಿ-ಸಂಬಂಧಿತ’ ವಿವರಗಳನ್ನು ಸಂಗ್ರಹಿಸಿದ ವಿಧಾನ:
- ‘ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ’ ವಿವರಗಳನ್ನು ಗಣತಿದಾರರು ಜನಗಣತಿಯ ಭಾಗವಾಗಿ ಸಂಗ್ರಹಿಸುತ್ತಾರೆ, ಆದರೆ ಇದರ ಅಡಿಯಲ್ಲಿ, ಇತರ ಜಾತಿಗಳ ವಿವರಗಳನ್ನು ಅವರು ಸಂಗ್ರಹಿಸುವುದಿಲ್ಲ.
- ಜನಗಣತಿಯ ಮೂಲ ವಿಧಾನದ ಪ್ರಕಾರ, ಎಲ್ಲಾ ನಾಗರಿಕರು ಗಣತಿದಾರರಿಗೆ ‘ಸ್ವಯಂ ಘೋಷಿತ’ ಮಾಹಿತಿಯನ್ನು ಒದಗಿಸುತ್ತಾರೆ.
ಇಲ್ಲಿಯವರೆಗೆ, ಹಿಂದುಳಿದ ವರ್ಗಗಳ ಜನಸಂಖ್ಯೆಯನ್ನು ಕಂಡುಹಿಡಿಯಲು ವಿವಿಧ ರಾಜ್ಯಗಳಲ್ಲಿನ ‘ಹಿಂದುಳಿದ ವರ್ಗಗಳ ಆಯೋಗಗಳು’ ತಮ್ಮದೇ ಆದ ಲೆಕ್ಕಾಚಾರಗಳನ್ನು ಮಾಡುತ್ತಿದ್ದವು.
ಜನಗಣತಿಯಲ್ಲಿ ಯಾವ ರೀತಿಯ ಜಾತಿ ದತ್ತಾಂಶವನ್ನು ಪ್ರಕಟಿಸಲಾಗಿದೆ?
- ಸ್ವತಂತ್ರ ಭಾರತದಲ್ಲಿ, 1951 ಮತ್ತು 2011 ರ ನಡುವೆ ನಡೆಸಿದ ಪ್ರತಿ ಜನಗಣತಿಯಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಡೇಟಾವನ್ನು ಮಾತ್ರ ಪ್ರಕಟಿಸಲಾಗಿದೆ. ಇತರೆ ಜಾತಿಗಳ ವಿವರಗಳನ್ನು ಗಣತಿಯಲ್ಲಿ ಪ್ರಕಟಿಸಲಾಗಿಲ್ಲ.
- ಆದಾಗ್ಯೂ, ಇದಕ್ಕೂ ಮೊದಲು, 1931 ರವರೆಗೂ ನಡೆಸಲಾದ ಪ್ರತಿ ಜನಗಣತಿಯಲ್ಲಿ ಜಾತಿ ಡೇಟಾವನ್ನು ಪ್ರಕಟಿಸಲಾಗಿದೆ.
ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ (SECC) 2011 ಕುರಿತು:
2011 ರಲ್ಲಿ ನಡೆಸಿದ ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿಯು (Socio-Economic and Caste Census- SECC) ವಿವಿಧ ಸಮುದಾಯಗಳ ಸಾಮಾಜಿಕ-ಆರ್ಥಿಕ ಸ್ಥಿತಿಯ ಬಗ್ಗೆ ಮಾಹಿತಿ ಪಡೆಯಲು ಒಂದು ಪ್ರಮುಖ ಕಾರ್ಯಕ್ರಮವಾಗಿತ್ತು.
ಇದು ಎರಡು ಘಟಕಗಳನ್ನು ಹೊಂದಿತ್ತು: ಮೊದಲನೆಯದಾಗಿ, ಗ್ರಾಮೀಣ ಮತ್ತು ನಗರ ಮನೆಗಳ ಸಮೀಕ್ಷೆ ಮತ್ತು ಪೂರ್ವನಿರ್ಧರಿತ ನಿಯತಾಂಕಗಳ ಆಧಾರದ ಮೇಲೆ ಈ ಮನೆಗಳ ಶ್ರೇಯಾಂಕ, ಮತ್ತು ಎರಡನೆಯದಾಗಿ, ‘ಜಾತಿ ಗಣತಿ’.
ಆದಾಗ್ಯೂ, ಗ್ರಾಮೀಣ ಮತ್ತು ನಗರ ಮನೆಗಳಲ್ಲಿನ ಜನರ ಆರ್ಥಿಕ ಸ್ಥಿತಿಯ ವಿವರಗಳನ್ನು ಮಾತ್ರ ಸರ್ಕಾರ ಬಿಡುಗಡೆ ಮಾಡಿದೆ. ಜಾತಿ ಡೇಟಾವನ್ನು ಇಲ್ಲಿಯವರೆಗೆ ಬಿಡುಗಡೆ ಮಾಡಿಲ್ಲ.
ಸಾರ್ವತ್ರಿಕ ಜನಗಣತಿ ಮತ್ತು ಸಾಮಾಜಿಕ ಆರ್ಥಿಕ ಜಾತಿ ಗಣತಿ (SECC) ನಡುವಿನ ವ್ಯತ್ಯಾಸ:
- ಜನಗಣತಿಯು ಭಾರತದ ಜನಸಂಖ್ಯೆಯ ಚಿತ್ರಣವನ್ನು ಒದಗಿಸುತ್ತದೆ, ಆದರೆ ‘ಸಾಮಾಜಿಕ-ಆರ್ಥಿಕ ಮತ್ತು ಜಾತಿ ಗಣತಿ’ (SECC)ಯು ರಾಜ್ಯ-ಅನುದಾನಿತ ಫಲಾನುಭವಿಗಳನ್ನು ಗುರುತಿಸುವ ಸಾಧನವಾಗಿದೆ.
- ‘ಜನಗಣತಿ’ಯು’ 1948 ರ ಜನಗಣತಿ ಕಾಯ್ದೆ ‘ಅಡಿಯಲ್ಲಿ ಬರುತ್ತದೆ ಮತ್ತು ಅದರ ಎಲ್ಲಾ ಡೇಟಾವನ್ನು ಗೌಪ್ಯವೆಂದು ಪರಿಗಣಿಸಲಾಗುತ್ತದೆ, ಆದರೆ SECC ಅಡಿಯಲ್ಲಿ ಒದಗಿಸಲಾದ ಎಲ್ಲಾ ವೈಯಕ್ತಿಕ ಮಾಹಿತಿಯು ಸರ್ಕಾರಿ ಇಲಾಖೆಗಳಿಂದ ಕುಟುಂಬಗಳಿಗೆ ಪ್ರಯೋಜನಗಳನ್ನು ಒದಗಿಸಲು ಮತ್ತು/ಅಥವಾ ನಿರ್ಬಂಧಿಸಲು ಮುಖವಾಗಿರುತ್ತದೆ.
ಜಾತಿ ಗಣತಿಯ ಪ್ರಯೋಜನಗಳು:
ಎಲ್ಲರಿಗೂ ಸಮಾನವಾದ ಪ್ರಾತಿನಿಧ್ಯವನ್ನು ಖಚಿತಪಡಿಸಿಕೊಳ್ಳಲು ಪ್ರತಿ ಜಾತಿಯ ನಿಖರವಾದ ಜನಸಂಖ್ಯೆಯು ಮೀಸಲಾತಿ ನೀತಿಯನ್ನು ರೂಪಿಸುವಲ್ಲಿ ಸಹಾಯ ಮಾಡುತ್ತದೆ.
ಸಂಬಂಧಿತ ಕಾಳಜಿಗಳು:
- ಜಾತಿ ಗಣತಿಯು ಕೆಲವು ಸಮುದಾಯಗಳಲ್ಲಿ ಅಸಮಾಧಾನವನ್ನು ಸೃಷ್ಟಿಸುವ ಸಾಧ್ಯತೆಯಿದೆ ಮತ್ತು ಕೆಲವು ಸಮುದಾಯಗಳು ತಮಗಾಗಿ ಹೆಚ್ಚಿನ ಅಥವಾ ಪ್ರತ್ಯೇಕ ಕೋಟಾವನ್ನು ಕೋರುವ ಸಾಧ್ಯತೆ ಇರುತ್ತದೆ.
- ವ್ಯಕ್ತಿಗಳನ್ನು ನಿರ್ದಿಷ್ಟವಾಗಿ ಒಂದು ಜಾತಿಗೆ ಸೇರಿದವರು ಎಂದು ಹಣೆಪಟ್ಟಿ ಕಟ್ಟುವುದರಿಂದ, ಜಾತಿ ವ್ಯವಸ್ಥೆಯನ್ನು ಸಮಾಜದಲ್ಲಿ ಶಾಶ್ವತವಾಗಿ ಉಳಿಯುವಂತೆ ಮಾಡಬಲ್ಲದು ಎಂದು ನಂಬಲಾಗಿದೆ.
ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.
ರಕ್ಷಣಾ ಕ್ಷೇತ್ರದ ನಕಾರಾತ್ಮಕ ಆಮದು ಪಟ್ಟಿ ಎಂದರೇನು?(What is the negative imports list for defence?)
ಸಂದರ್ಭ:
ಸರ್ಕಾರವು ತನ್ನ ‘ಋಣಾತ್ಮಕ/ನಕಾರಾತ್ಮಕ ಆಮದು ಪಟ್ಟಿ ನೀತಿ’ಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿದೆ. ಇದರ ಅಡಿಯಲ್ಲಿ, ಕೆಳಗಿನ ಪ್ರಮುಖ ಬದಲಾವಣೆಗಳನ್ನು ಸೇರಿಸಲಾಗಿದೆ:
- ಹೊಸ ನಿಯಮಗಳ ಅಡಿಯಲ್ಲಿ, ಸಶಸ್ತ್ರ ಪಡೆಗಳು ಈಗ ಕೆಲವು ಸಂದರ್ಭಗಳಲ್ಲಿ ಕೆಲವೊಂದು ಉಪಕರಣಗಳು ನಕಾರಾತ್ಮಕ ಆಮದು ಪಟ್ಟಿಯಲ್ಲಿದ್ದರೂ ಸಹ, ರಕ್ಷಣಾ ಸಾಧನಗಳನ್ನು ಆಮದು ಮಾಡಿಕೊಳ್ಳಬಹುದು.
- “ತುರ್ತು ಅಗತ್ಯ” ದ ಸಂದರ್ಭದಲ್ಲಿ ದೇಶೀಯ ಉದ್ಯಮವು ಸರಬರಾಜು ಮಾಡಲು ಸಾಧ್ಯವಾಗದಂತಹ ಸನ್ನಿವೇಶಗಳನ್ನು ಇದು ಒಳಗೊಳ್ಳುತ್ತದೆ, ಅಥವಾ ಸ್ವದೇಶಿ ಉತ್ಪನ್ನಗಳ ಅಲಭ್ಯತೆಯಿಂದಾಗಿ ಸೈನಿಕರ ಸುರಕ್ಷತೆಯು ಅಪಾಯದಲ್ಲಿರುವಂತಹ ಸನ್ನಿವೇಶಗಳನ್ನು ಇದು ಒಳಗೊಂಡಿರುತ್ತದೆ.
- ಹೊಸ ನಿಯಮಗಳಲ್ಲಿ, ಆಗಸ್ಟ್ 2020 ರಲ್ಲಿ ಮೊದಲ ಬಾರಿಗೆ ಸಿದ್ಧಪಡಿಸಲಾದ ‘ಋಣಾತ್ಮಕ ಆಮದು ಪಟ್ಟಿ’ಯಲ್ಲಿ ಉಲ್ಲೇಖಿಸಲಾದ ಐಟಂಗಳನ್ನು ಪರಿಶೀಲಿಸಲು ಅಥವಾ ತೆಗೆದುಹಾಕಲು ಸಹ ನಿಬಂಧನೆಯನ್ನು ಮಾಡಲಾಗಿದೆ.
ಏನಿದು ಋಣಾತ್ಮಕ ಆಮದು ಪಟ್ಟಿ ನೀತಿ?
- ಈ ನೀತಿಯನ್ನು ಆಗಸ್ಟ್ 2020 ರಲ್ಲಿ ಪ್ರಾರಂಭಿಸಲಾಯಿತು. ‘ನಕಾರಾತ್ಮಕ ಆಮದು ಪಟ್ಟಿ’ ಎಂದರೆ ಈ ಪಟ್ಟಿಯಲ್ಲಿ ಸೇರ್ಪಡೆಗೊಂಡ ಸರಕುಗಳನ್ನು ಸಶಸ್ತ್ರ ಪಡೆಗಳು ಅಂದರೆ ಸೈನ್ಯ, ನೌಕಾಪಡೆ ಮತ್ತು ವಾಯುಪಡೆಯು ದೇಶೀಯ ಉತ್ಪಾದಕರಿಂದ ಮಾತ್ರ ಖರೀದಿಸಬೇಕಾಗುತ್ತದೆ.
- ಈ ದೇಶೀಯ ರಕ್ಷಣಾ ಸಾಮಗ್ರಿ ತಯಾರಕರು, ಖಾಸಗಿ ವಲಯ ಅಥವಾ ರಕ್ಷಣಾ ಸಾರ್ವಜನಿಕ ವಲಯದ ಸಂಸ್ಥೆಗಳು (Defence Public Sector Undertakings- DPSUs) ಆಗಿರಬಹುದು.
ಈ ನೀತಿಯ ಅಗತ್ಯತೆ ಮತ್ತು ಪರಿಣಾಮಗಳು:
ಸ್ಟಾಕ್ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ ಪ್ರಕಾರ, ಭಾರತವು 2014 ಮತ್ತು 2019 ರ ನಡುವೆ ಯುಎಸ್ $ 16.75 ಬಿಲಿಯನ್ ಮೊತ್ತದ ರಕ್ಷಣಾ ಸಂಬಂಧಿತ ವಸ್ತುಗಳನ್ನು ಆಮದು ಮಾಡಿಕೊಂಡಿದೆ ಮತ್ತು ಈ ಅವಧಿಯಲ್ಲಿ ವಿಶ್ವದ ಎರಡನೇ ಅತಿದೊಡ್ಡ ರಕ್ಷಣಾ ಸಾಮಗ್ರಿಗಳ ಆಮದುದಾರನಾಗಿದೆ.
- ರಕ್ಷಣಾ ಕ್ಷೇತ್ರದಲ್ಲಿ ಆಮದು ಮಾಡಿಕೊಳ್ಳುವ ಸರಕುಗಳ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡಲು ಮತ್ತು ದೇಶೀಯ ರಕ್ಷಣಾ ಉತ್ಪಾದನಾ ಉದ್ಯಮವನ್ನು ಉತ್ತೇಜಿಸಲು ಸರ್ಕಾರ ಬಯಸಿದೆ.
- ಋಣಾತ್ಮಕ ಆಮದು ಪಟ್ಟಿಯಲ್ಲಿ ಸೇರಿಸಲಾದ ವಸ್ತುಗಳನ್ನು ಆಮದು ಮಾಡಿಕೊಳ್ಳುವ ಸಾಧ್ಯತೆಯನ್ನು ನಿರಾಕರಿಸುವ ಮೂಲಕ ದೇಶೀಯ ರಕ್ಷಣಾ ಉದ್ಯಮಕ್ಕೆ ಭಾರತೀಯ ಸಶಸ್ತ್ರ ಪಡೆಗಳ ಅಗತ್ಯತೆಗಳನ್ನು ತಯಾರಿಸಲು, ಪೂರೈಸಲು ಮತ್ತು ಬೆಳೆಯಲು ಅವಕಾಶ ನೀಡಲಾಗಿದೆ.
2ನೇ ಪಟ್ಟಿ:
ರಕ್ಷಣಾ ಸಚಿವಾಲಯವು ಮೇ 2021 ರಲ್ಲಿ ಎರಡನೇ ಋಣಾತ್ಮಕ ಆಮದು ಪಟ್ಟಿ(negative import list)ಯನ್ನು ಅಧಿಸೂಚಿಸಿದೆ – ಈಗ ಅದನ್ನು ‘ಸಕಾರಾತ್ಮಕ ದೇಶೀಕರಣ ಪಟ್ಟಿ’(positive indigenisation list)ಎಂದು ಮರುನಾಮಕರಣ ಮಾಡಲಾಗಿದೆ – ಇದರಡಿಯಲ್ಲಿ 108 ರಕ್ಷಣಾ ಸಾಮಾಗ್ರಿಗಳನ್ನು ಈಗ ಸ್ಥಳೀಯ ಮೂಲಗಳಿಂದ ಮಾತ್ರ ಖರೀದಿಸಬಹುದು. ಹೊಸ ಪಟ್ಟಿಯು ಪಟ್ಟಿಯಲ್ಲಿರುವ ಸಾಮಗ್ರಿಗಳ ಒಟ್ಟು ಸಂಖ್ಯೆಯನ್ನು 209 ಕ್ಕೆ ಹೆಚ್ಚಿಸಿದೆ.
- ಈ ಹೊಸ ಪಟ್ಟಿಯು ಸಂಕೀರ್ಣ ವ್ಯವಸ್ಥೆಗಳು, ಸಂವೇದಕಗಳು, ಸಿಮ್ಯುಲೇಟರ್, ಶಸ್ತ್ರಾಸ್ತ್ರಗಳು ಮತ್ತು ಯುದ್ಧಸಾಮಗ್ರಿಗಳಾದ ಹೆಲಿಕಾಪ್ಟರ್‌ಗಳು, ಮುಂದಿನ ಪೀಳಿಗೆಯ ಕಾರ್ವೆಟ್ಗಳು(corvettes), ಏರ್ ಬಾರ್ನ್ ಅರ್ಲಿ ವಾರ್ನಿಂಗ್ ಅಂಡ್ ಕಂಟ್ರೋಲ್ (Air Borne Early Warning and Control) ವ್ಯವಸ್ಥೆಗಳು, ಮತ್ತು ಟ್ಯಾಂಕ್ ಎಂಜಿನ್ ಗಳನ್ನು ಒಳಗೊಂಡಿದೆ.
ಈ ನಡೆಯ ಮಹತ್ವ ಮತ್ತು ಪರಿಣಾಮಗಳು:
- ಸ್ಥಳೀಯ ರಕ್ಷಣಾ ಉದ್ದಿಮೆಗಳ ಸಾಮರ್ಥ್ಯವನ್ನು ಗುರುತಿಸುತ್ತದೆ.
- ತಂತ್ರಜ್ಞಾನ ಮತ್ತು ಉತ್ಪಾದನಾ ಸಾಮರ್ಥ್ಯಗಳಲ್ಲಿ ಹೊಸ ಹೂಡಿಕೆಯನ್ನು ಆಕರ್ಷಿಸುವ ಮೂಲಕ ದೇಶೀಯ ಸಂಶೋಧನೆ ಮತ್ತು ಅಭಿವೃದ್ಧಿಗೆ ಪ್ರಚೋದನೆಯನ್ನು ನೀಡುವುದು.
- ‘ಸ್ಟಾರ್ಟ್ ಅಪ್’ಗಳಿಗೆ ಹಾಗೂ ಸೂಕ್ಷ್ಮ,ಸಣ್ಣ ಮತ್ತು ಮಧ್ಯಮ ಪ್ರಮಾಣದ ಉದ್ಯಮಗಳಿಗೆ (MSME) ಅತ್ಯುತ್ತಮ ಅವಕಾಶವನ್ನು ಒದಗಿಸುತ್ತದೆ.
ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.
ಅಣೆಕಟ್ಟು ಸುರಕ್ಷತಾ ಮಸೂದೆ 2019:
(Dam Safety Bill 2019)
ಸಂದರ್ಭ:
ಇತ್ತೀಚೆಗೆ, ‘ಅಣೆಕಟ್ಟು ಸುರಕ್ಷತಾ ಮಸೂದೆ’ 2019 (Dam Safety Bill 2019) ಅನ್ನು ರಾಜ್ಯಸಭೆ ಅಂಗೀಕರಿಸಿತು, ಇದು ದೇಶದಲ್ಲಿ ಅಣೆಕಟ್ಟು ಸುರಕ್ಷತಾ ಕಾಯ್ದೆಯ ಅನುಷ್ಠಾನಕ್ಕೆ ದಾರಿ ಮಾಡಿಕೊಟ್ಟಿತು.
- ಈ ಮಸೂದೆಯನ್ನು ಲೋಕಸಭೆಯಲ್ಲಿ ಆಗಸ್ಟ್ 2, 2019 ರಂದು ಅಂಗೀಕರಿಸಲಾಯಿತು.
ಸಂಬಂಧಿತ ಕಾಳಜಿಗಳು:
- ಮಸೂದೆಯು ಅಣೆಕಟ್ಟುಗಳ ‘ಕಾರ್ಯಾಚರಣೆ ಸುರಕ್ಷತೆ’ಗಿಂತ ‘ರಚನಾತ್ಮಕ ಸುರಕ್ಷತೆ’ಗೆ ಹೆಚ್ಚಿನ ಗಮನವನ್ನು ನೀಡಿದೆ.
- ಅಣೆಕಟ್ಟುಗಳಿಂದ ಸಂತ್ರಸ್ತರಾದ ಜನರಿಗೆ ಸಮರ್ಪಕ ಪರಿಹಾರವನ್ನು ನೀಡಲಾಗುತ್ತದೆ.
- ಈ ಮಸೂದೆಯಲ್ಲಿ ಮಧ್ಯಸ್ಥಗಾರರ ನಿಖರವಾದ ವ್ಯಾಖ್ಯಾನಗಳೊಂದಿಗೆ ‘ಸ್ವತಂತ್ರ ನಿಯಂತ್ರಕ’ವನ್ನು ಒದಗಿಸುವ ಅಗತ್ಯವಿದೆ.
- ಅನೇಕ ರಾಜ್ಯಗಳು ಇದು ತಮ್ಮ ಅಣೆಕಟ್ಟುಗಳ ನಿರ್ವಹಣೆಗೆ ಸಂಬಂಧಿಸಿದಂತೆ ರಾಜ್ಯಗಳ ಸಾರ್ವಭೌಮತ್ವವನ್ನು ಉಲ್ಲಂಘಿಸುತ್ತದೆ ಮತ್ತು ಸಂವಿಧಾನದಲ್ಲಿ ಪ್ರತಿಪಾದಿಸಲಾದ ಫೆಡರಲಿಸಂನ ಅಥವಾ ಸಂಯುಕ್ತ ವ್ಯವಸ್ಥೆಯ ತತ್ವಗಳನ್ನು ಉಲ್ಲಂಘಿಸುತ್ತದೆ ಎಂದು ಹೇಳುತ್ತವೆ.ಈ ರಾಜ್ಯಗಳು ಇದನ್ನು ಭದ್ರತೆಗೆ ಸಂಬಂಧಿಸಿದ ಕಾಳಜಿಗಳ ನೆಪದಲ್ಲಿ ಅಧಿಕಾರವನ್ನು ಕ್ರೋಢೀಕರಿಸುವ ಕೇಂದ್ರದ ಪ್ರಯತ್ನವಾಗಿ ನೋಡುತ್ತವೆ.
ಕೇಂದ್ರ ಸರ್ಕಾರವು ಈ ಮಸೂದೆಯನ್ನು ಮಂಡಿಸಲು ಕಾರಣಗಳು:
ಈ ವಿಷಯವು ಸಂಸತ್ತಿನ ವ್ಯಾಪ್ತಿಗೆ ಬರುವುದಿಲ್ಲವಾದರೂ, ಕೇಂದ್ರ ಸರ್ಕಾರವು ಈ ಮಸೂದೆಯನ್ನು ಮಂಡಿಸಲು ನಿರ್ಧರಿಸಿದೆ ಏಕೆಂದರೆ ಮುಖ್ಯವಾಗಿ ‘ಅಣೆಕಟ್ಟು-ಸುರಕ್ಷತೆ’ ದೇಶದಲ್ಲಿ ಕಾಳಜಿಯ ವಿಷಯವಾಗಿದೆ. ಮತ್ತು, ಈ ವಿಷಯದಲ್ಲಿ ಯಾವುದೇ ಕಾನೂನು ಮತ್ತು ಸಾಂಸ್ಥಿಕ ಸುರಕ್ಷತೆಗಳು ಲಭ್ಯವಿಲ್ಲ.
ಅಣೆಕಟ್ಟು ಸುರಕ್ಷತಾ ಮಸೂದೆ 2019ರ ಪ್ರಮುಖ ಅಂಶಗಳು:
- ‘ಅಣೆಕಟ್ಟು ಸುರಕ್ಷತಾ ಮಸೂದೆ’ಯು ದೇಶದ ಎಲ್ಲಾ ಪ್ರಮುಖ ಅಣೆಕಟ್ಟುಗಳ ಮೇಲ್ವಿಚಾರಣೆ, ತಪಾಸಣೆ, ಕಾರ್ಯಾಚರಣೆ ಮತ್ತು ನಿರ್ವಹಣೆಗೆ ಸಾಕಷ್ಟು ಸೌಲಭ್ಯಗಳನ್ನು ಒದಗಿಸುತ್ತದೆ, ಇದರಿಂದಾಗಿ ಅಣೆಕಟ್ಟು ವೈಫಲ್ಯದ ಸಂದರ್ಭದಲ್ಲಿ ಉಂಟಾಗುವ ಅನಾಹುತವನ್ನು ತಡೆಯುತ್ತದೆ.
- ಅಣೆಕಟ್ಟುಗಳ ಸುರಕ್ಷಿತ ಕಾರ್ಯಾಚರಣೆಯನ್ನು ಖಚಿತಪಡಿಸಿಕೊಳ್ಳಲು ಅಗತ್ಯವಾದ ರಚನಾತ್ಮಕ ಮತ್ತು ರಚನಾತ್ಮಕವಲ್ಲದ ಕ್ರಮಗಳ ಕಡೆಗೆ ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸಾಂಸ್ಥಿಕ ಕಾರ್ಯವಿಧಾನವನ್ನು ಈ ಮಸೂದೆಯು ಒದಗಿಸುತ್ತದೆ.
- ಮಸೂದೆಯ ನಿಬಂಧನೆಯ ಪ್ರಕಾರ, ಏಕರೂಪದ ಅಣೆಕಟ್ಟು ಸುರಕ್ಷತೆ ನೀತಿಗಳು, ಪ್ರೋಟೋಕಾಲ್ / ಮಾರ್ಗಸೂಚಿಗಳು ಮತ್ತು ಕಾರ್ಯವಿಧಾನಗಳನ್ನು ಹಾಗೂ ಮಾನದಂಡಗಳನ್ನು ಅಭಿವೃದ್ಧಿಪಡಿಸಲು ಸಹಾಯ ಮಾಡಲು ‘ಅಣೆಕಟ್ಟು ಸುರಕ್ಷತೆಯ ರಾಷ್ಟ್ರೀಯ ಸಮಿತಿ’ (NCDS) ಯನ್ನು ರಚಿಸಲಾಗುತ್ತದೆ.
- ಅಣೆಕಟ್ಟು ಸುರಕ್ಷತಾ ನೀತಿಗಳು ಮತ್ತು ಮಾನದಂಡಗಳ ರಾಷ್ಟ್ರವ್ಯಾಪಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ನಿಯಂತ್ರಕ ಸಂಸ್ಥೆಯಾಗಿ ‘ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಪ್ರಾಧಿಕಾರ’ (NDSA) ಅನ್ನು ಸ್ಥಾಪಿಸಲು ಮಸೂದೆಯು ಒದಗಿಸುತ್ತದೆ.
- ಈ ಮಸೂದೆಯು ರಾಜ್ಯ ಮಟ್ಟದಲ್ಲಿ ‘ರಾಜ್ಯ ಅಣೆಕಟ್ಟು ಸುರಕ್ಷತೆಯ ಸಮಿತಿ’ (SCDS) ಮತ್ತು ರಾಜ್ಯ ಅಣೆಕಟ್ಟು ಸುರಕ್ಷತಾ ಸಂಸ್ಥೆಗಳನ್ನು ಸ್ಥಾಪಿಸಲು ಅವಕಾಶವನ್ನು ಒದಗಿಸುತ್ತದೆ.
ಪ್ರಾಮುಖ್ಯತೆ:
- ಅಣೆಕಟ್ಟು ಸುರಕ್ಷತಾ ಮಸೂದೆಯು ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಏಕರೂಪದ ಅಣೆಕಟ್ಟು ಸುರಕ್ಷತಾ ಕಾರ್ಯವಿಧಾನಗಳನ್ನು ಅಳವಡಿಸಿಕೊಳ್ಳಲು ಸಹಾಯ ಮಾಡುತ್ತದೆ, ಇದು ಅಣೆಕಟ್ಟುಗಳ ಸುರಕ್ಷತೆ ಮತ್ತು ಅಂತಹ ಅಣೆಕಟ್ಟುಗಳ ಪ್ರಯೋಜನಗಳನ್ನು ಖಚಿತಪಡಿಸುತ್ತದೆ. ಇದರಿಂದ ಮಾನವ ಜೀವ, ಜಾನುವಾರು, ಆಸ್ತಿ ರಕ್ಷಣೆಗೂ ಸಹ ಸಹಕಾರಿಯಾಗಲಿದೆ.
- ಅಣೆಕಟ್ಟುಗಳ ನಿಯಮಿತ ತಪಾಸಣೆ, ತುರ್ತು ಕ್ರಿಯಾ ಯೋಜನೆ, ಸಮಗ್ರ ಅಣೆಕಟ್ಟು ಸುರಕ್ಷತೆ ಪರಿಶೀಲನೆ, ಅಣೆಕಟ್ಟು ಸುರಕ್ಷತೆ, ಉಪಕರಣಗಳು ಮತ್ತು ಸಾಕಷ್ಟು ದುರಸ್ತಿ ಮತ್ತು ನಿರ್ವಹಣೆ ನಿಧಿಗಳು, ಉಪಕರಣಗಳು ಮತ್ತು ಸುರಕ್ಷತಾ ಕೈಪಿಡಿಗಳು ಸೇರಿದಂತೆ ಅಣೆಕಟ್ಟು ಸುರಕ್ಷತೆಗೆ ಸಂಬಂಧಿಸಿದ ಎಲ್ಲಾ ವಿಷಯಗಳ ಮೇಲೆ ಅಣೆಕಟ್ಟು ಸುರಕ್ಷತೆಗಾಗಿ ಮಸೂದೆಯಲ್ಲಿ ನಿಬಂಧನೆಗಳನ್ನು ಮಾಡಲಾಗಿದೆ.
- ಮಸೂದೆಯು ಅಣೆಕಟ್ಟಿನ ಮಾಲೀಕರ ಮೇಲೆ ‘ಅಣೆಕಟ್ಟು ಸುರಕ್ಷತೆ’ಯ ಜವಾಬ್ದಾರಿಯನ್ನು ಹೊರಿಸುತ್ತದೆ ಮತ್ತು ಕೆಲವು ಕಾರ್ಯಗಳನ್ನು ಮಾಡಲು ಮತ್ತು ಮಾಡಲಾದ ಯಾವುದೇ ಲೋಪಕ್ಕಾಗಿ ದಂಡದ ನಿಬಂಧನೆಗಳನ್ನು ಸಹ ಒದಗಿಸುತ್ತದೆ.
ಅವಶ್ಯಕತೆ:
- ಕಳೆದ ಐವತ್ತು ವರ್ಷಗಳಲ್ಲಿ, ಭಾರತದಲ್ಲಿ ಅಣೆಕಟ್ಟುಗಳು ಮತ್ತು ಸಂಬಂಧಿತ ಮೂಲಸೌಕರ್ಯಗಳಲ್ಲಿ ಗಣನೀಯ ಹೂಡಿಕೆಯನ್ನು ಮಾಡಲಾಗಿದೆ ಮತ್ತು ಭಾರತವು ಪ್ರಸ್ತುತ ಯುನೈಟೆಡ್ ಸ್ಟೇಟ್ಸ್ ಮತ್ತು ಚೀನಾದ ನಂತರ ದೊಡ್ಡ ಅಣೆಕಟ್ಟುಗಳ ಸಂಖ್ಯೆಯಲ್ಲಿ ಮೂರನೇ ಸ್ಥಾನದಲ್ಲಿದೆ. ಪ್ರಸ್ತುತ, ದೇಶದಲ್ಲಿ 5254 ಪ್ರಮುಖ ಅಣೆಕಟ್ಟುಗಳು ಕಾರ್ಯನಿರ್ವಹಿಸುತ್ತಿವೆ ಮತ್ತು 447 ಇತರ ಪ್ರಮುಖ ಅಣೆಕಟ್ಟುಗಳು ನಿರ್ಮಾಣ ಹಂತದಲ್ಲಿವೆ.
- ಇದಲ್ಲದೆ, ದೇಶದಲ್ಲಿ ಸಾವಿರಾರು ಮಧ್ಯಮ ಮತ್ತು ಸಣ್ಣ ಅಣೆಕಟ್ಟುಗಳಿವೆ.
- ಭಾರತದಲ್ಲಿ ಕ್ಷಿಪ್ರ ಮತ್ತು ಸುಸ್ಥಿರ ಕೃಷಿ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಅಣೆಕಟ್ಟುಗಳು ಪ್ರಮುಖ ಪಾತ್ರವನ್ನುವಹಿಸಿವೆಯಾದರೂ, ಅಣೆಕಟ್ಟು ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಏಕರೂಪದ ಶಾಸನ ಮತ್ತು ಆಡಳಿತಾತ್ಮಕ ಚೌಕಟ್ಟಿನ ಅಗತ್ಯವು ಬಹಳ ಹಿಂದಿನಿಂದಲೂ ಇದೆ.
- ಕೇಂದ್ರ ಜಲ ಆಯೋಗವು ‘ರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮಿತಿ’ (NCDS), ಕೇಂದ್ರ ಅಣೆಕಟ್ಟು ಸುರಕ್ಷತಾ ಸಂಸ್ಥೆ (CDSO) ಮತ್ತು ರಾಜ್ಯ ಅಣೆಕಟ್ಟು ಸುರಕ್ಷತಾ ಸಂಸ್ಥೆ (SDSO)ಗಳ ಮೂಲಕ ಈ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳನ್ನು ಮಾಡುತ್ತಿದೆ, ಆದರೆ ಈ ಸಂಸ್ಥೆಗಳಿಗೆ ಯಾವುದೇ ಶಾಸನಬದ್ಧ ಅಧಿಕಾರವಿಲ್ಲ ಮತ್ತು ಕೇವಲ ಸಲಹಾತ್ಮಕ ಸ್ವರೂಪದಲ್ಲಿವೆ.
- ಭಾರತದಲ್ಲಿ, ಸುಮಾರು 75 ಪ್ರತಿಶತದಷ್ಟು ಪ್ರಮುಖ ಅಣೆಕಟ್ಟುಗಳು 25 ವರ್ಷಗಳಿಗಿಂತ ಹೆಚ್ಚು ಹಳೆಯವು ಮತ್ತು ಸುಮಾರು 164 ಅಣೆಕಟ್ಟುಗಳು 100 ವರ್ಷಗಳಿಗಿಂತ ಹಳೆಯವು, ಆದ್ದರಿಂದ ಇದು ಕಳವಳಕಾರಿ ವಿಷಯವಾಗಿದೆ.
- ಕಳಪೆ ನಿರ್ವಹಣೆ, ಅಸುರಕ್ಷಿತ ಅಣೆಕಟ್ಟುಗಳು ಮಾನವ ಜೀವನ, ಸಸ್ಯ ಮತ್ತು ಪ್ರಾಣಿ, ಸಾರ್ವಜನಿಕ ಮತ್ತು ಖಾಸಗಿ ಆಸ್ತಿ ಮತ್ತು ಪರಿಸರಕ್ಕೆ ಅಪಾಯವನ್ನುಂಟುಮಾಡುತ್ತವೆ.
- ಈ ಹಿಂದೆ ಭಾರತದ 42 ಆಣೆಕಟ್ಟುಗಳು ವೈಫಲ್ಯತೆಯನ್ನು ಅನುಭವಿಸಿವೆ.
ಸಾಮಾನ್ಯ ಅಧ್ಯಯನ ಪತ್ರಿಕೆ : 3
ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.
ಹೈಪರ್ಸಾನಿಕ್ ಆಯುಧಗಳು:
(hypersonic weapons)
ಸಂದರ್ಭ:
ಚೀನಾದ ‘ಹೈಪರ್‌ಸಾನಿಕ್ ಶಸ್ತ್ರಾಸ್ತ್ರಗಳ’ ಅನ್ವೇಷಣೆಯು “ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸುತ್ತದೆ” ಎಂದು ಇತ್ತೀಚೆಗೆ ಯುಎಸ್ ಹೇಳಿದೆ ಮತ್ತು ಚೀನಾದಿಂದ ಉಂಟಾಗುವ ಸಂಭಾವ್ಯ ಬೆದರಿಕೆಗಳನ್ನು ತಡೆಯಲು ಅಮೆರಿಕ ಸಂಯುಕ್ತ ಸಂಸ್ಥಾನವು ತನ್ನ ಸಾಮರ್ಥ್ಯವನ್ನು ಉಳಿಸಿಕೊಳ್ಳುತ್ತದೆ ಎಂದು ಪ್ರತಿಜ್ಞೆ ಮಾಡಿದೆ.
ಏನಿದು ಸಮಸ್ಯೆ?
- ಚೀನಾದ ಹೆಚ್ಚುತ್ತಿರುವ ಮಿಲಿಟರಿ ಶಕ್ತಿ ಮತ್ತು ಏಷ್ಯಾದಲ್ಲಿ ಅಮೆರಿಕದ ಪ್ರಾಬಲ್ಯವನ್ನು ಕೊನೆಗೊಳಿಸಲು ಚೀನಾ ಆರಂಭಿಸಿರುವ ಅಭಿಯಾನವು ವಾಷಿಂಗ್ಟನ್‌ನಲ್ಲಿ ಅಸಮಾಧಾನವನ್ನು ಉಂಟುಮಾಡಿದೆ.
- ಜುಲೈನಲ್ಲಿ ‘ಹೈಪರ್ಸಾನಿಕ್ ಅಸ್ತ್ರ’ವನ್ನು ಪರೀಕ್ಷಿಸುವ ಮೂಲಕ ತನ್ನ ಮಿಲಿಟರಿ ಸಾಮರ್ಥ್ಯವನ್ನು ತ್ವರಿತವಾಗಿ ಹೆಚ್ಚಿಸುವ ಚೀನಾದ ಪ್ರಯತ್ನಗಳನ್ನು ಬಹಿರಂಗಪಡಿಸಲಾಯಿತು.ಈ ಆಯುಧವು ವಾತಾವರಣವನ್ನು ಪುನಃ ಪ್ರವೇಶಿಸುವ ಮೊದಲು ಇದು ತನ್ನ ಗುರಿಯನ್ನು ಹೊಡೆಯಲು ಕ್ರಿಯಾತ್ಮಕ ಮಾರ್ಗದಲ್ಲಿ ಜಾರುವ ಮೊದಲು ಭೂಮಿಯನ್ನು ಭಾಗಶಃ ಸುತ್ತುವ ಸಾಮರ್ಥ್ಯವನ್ನು ಹೊಂದಿದೆ.
ಚಿಂತೆಯ ಸಂಗತಿ:
ಯುಎಸ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ಈ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಸ್ಪಷ್ಟವಾಗಿ ವಿನ್ಯಾಸಗೊಳಿಸಲಾಗಿದೆ ಎಂದು ತಜ್ಞರು ಹೇಳುತ್ತಾರೆ. ಆದರೆ, ಚೀನಾ ತಾನು ಕ್ಷಿಪಣಿಯನ್ನು ಪರೀಕ್ಷಿಸಿಲ್ಲ ಆದರೆ ಮರುಬಳಕೆ ಮಾಡಬಹುದಾದ ಬಾಹ್ಯಾಕಾಶ ವಾಹನವನ್ನು ಪರೀಕ್ಷಿಸಿರುವುದಾಗಿ ಹೇಳಿಕೊಂಡಿದೆ.
‘ಹೈಪರ್ಸಾನಿಕ್ ವೇಗ’ ಎಂದರೇನು?
ಹೈಪರ್ಸಾನಿಕ್ ವೇಗ(Hypersonic speeds) ವು ಶಬ್ದದ ವೇಗಕ್ಕಿಂತ 5 ಪಟ್ಟು ಅಥವಾ ಅದಕ್ಕಿಂತ ಹೆಚ್ಚು ಪಟ್ಟು ವೇಗವನ್ನು ಹೊಂದಿರುತ್ತದೆ.
ಭಾರತ ಮತ್ತು ಪ್ರಪಂಚಕ್ಕೆ ಕಾಳಜಿಗಳು ಮತ್ತು ಪರಿಣಾಮಗಳು:
- ಸಿದ್ಧಾಂತದಲ್ಲಿ, ಈ ಆಯುಧವು ದಕ್ಷಿಣ ಧ್ರುವದ ಮೇಲೆ ಹಾರುವ ಸಾಮರ್ಥ್ಯವನ್ನು ಹೊಂದಿದೆ. ಯುಎಸ್ ಕ್ಷಿಪಣಿ ರಕ್ಷಣಾ ವ್ಯವಸ್ಥೆಯು ಉತ್ತರ ಧ್ರುವ ಮಾರ್ಗದಲ್ಲಿ ಕೇಂದ್ರೀಕೃತವಾಗಿರುವುದರಿಂದ, ಚೀನಾದ ಈ ಆಯುಧವು ಯುಎಸ್ ಮಿಲಿಟರಿಗೆ ಒಂದು ದೊಡ್ಡ ಸವಾಲಾಗಿ ಪರಿಣಮಿಸಬಹುದು.
- ಇತ್ತೀಚಿನ ದಿನಗಳಲ್ಲಿ ಚೀನಾದೊಂದಿಗಿನ ತನ್ನ ಸಂಬಂಧವನ್ನು ಗಮನಿಸಿದರೆ ಭಾರತವು ಇತ್ತೀಚಿನ ಬೆಳವಣಿಗೆಗಳ ಬಗ್ಗೆ ವಿಶೇಷವಾಗಿ ಕಾಳಜಿ ಹೊಂದಿದೆ. ಚೀನಾ ಹೊಂದಿರುವ ಇಂತಹ ಸಾಮರ್ಥ್ಯಗಳು ಭೂ ಮೇಲ್ಮೈ ಆಸ್ತಿಗಳಿಗೆ ಹಾಗೂ ನಮ್ಮ ಬಾಹ್ಯಾಕಾಶ ಆಸ್ತಿಗಳಿಗೆ ಬೆದರಿಕೆಯನ್ನು ಒಡ್ಡಬಹುದು.
ಬಳಸಿದ ತಂತ್ರಜ್ಞಾನ:
ಈ ನಿರ್ದಿಷ್ಟ ಪರೀಕ್ಷೆಯಲ್ಲಿ ಚೀನಾ ಬಳಸಿದ ತಂತ್ರಜ್ಞಾನದ ನಿಖರವಾದ ವಿವರಗಳು ಇನ್ನೂ ತಿಳಿದಿಲ್ಲ. ಆದರೆ ಹೆಚ್ಚಿನ ಹೈಪರ್ಸಾನಿಕ್ ವಾಹನಗಳು ಮುಖ್ಯವಾಗಿ ಸ್ಕ್ರಾಮ್ಜೆಟ್ ತಂತ್ರಜ್ಞಾನ (Scramjet Technology) ವನ್ನು ಬಳಸುತ್ತವೆ.
ಸ್ಕ್ರಾಮ್ಜೆಟ್ ತಂತ್ರಜ್ಞಾನ ಎಂದರೇನು?
‘ಸ್ಕ್ರಾಮ್‌ಜೆಟ್ (Scramjets) ಗಳು’ ಒಂದು ವರ್ಗದ ಎಂಜಿನ್‌ಗಳಾಗಿದ್ದು, ಶಬ್ದದ ವೇಗದ ಗುಣಕಗಳಲ್ಲಿ ವೇಗದ ಗಾಳಿಯ ಹರಿವನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾಗಿದೆ.
- ‘ಏರ್-ಬ್ರೀಥಿಂಗ್ ಸ್ಕ್ರಾಮ್ ಜೆಟ್ ಇಂಜಿನ್’ (Air-Breathing Scramjet Engine) ನಲ್ಲಿ, ವಾತಾವರಣದಿಂದ ಬರುವ ಗಾಳಿಯು ಮ್ಯಾಚ್ ಎರಡಕ್ಕಿಂತ ಹೆಚ್ಚಿನ ವೇಗದಲ್ಲಿ ಎಂಜಿನ್ನ ದಹನ ಕೊಠಡಿಯನ್ನು ಪ್ರವೇಶಿಸುತ್ತದೆ.
- ದಹನ ಕೊಠಡಿಯಲ್ಲಿ, ಈ ಗಾಳಿಯು ಅಲ್ಲಿರುವ ಇಂಧನದೊಂದಿಗೆ ಸೇರಿ ‘ಸೂಪರ್ಸಾನಿಕ್ ದಹನ’ (Supersonic Combustion) ಉತ್ಪಾದಿಸುತ್ತದೆ, ಆದರೆ, ಈ ತಂತ್ರದಲ್ಲಿ, ಕ್ರೂಸರ್‌ಗಳು ಹೈಪರ್‌ಸಾನಿಕ್ ವೇಗದಲ್ಲಿ ಆರರಿಂದ ಏಳು ಮ್ಯಾಕ್ (Mach) ವರೆಗೆ ಹಾರಬಲ್ಲವು. ಅದಕ್ಕಾಗಿಯೇ ಇದನ್ನು ‘ಸೂಪರ್ಸಾನಿಕ್ ದಹನ ರಾಮ್ ಜೆಟ್’ (Supersonic Combustion Ramjet) ಅಥವಾ ಸ್ಕ್ರಾಮ್ ಜೆಟ್ ಎಂದು ಕರೆಯಲಾಗುತ್ತದೆ.
ನೋಟ್:
ಸ್ಕ್ರಾಮ್ ಜೆಟ್ ಬಗ್ಗೆ:
ಸ್ಕ್ರಾಮ್ ಜೆಟ್ ಏರ್ ಬ್ರೆಥಿಂಗ್ ಪ್ರೊಪುಲ್ಶನ್ ಸಿಸ್ಟಮ್ (Air Breathing Propulsion System (ABPS))ಆಧಾರದ ಮೇಲೆ ಕಾರ್ಯನಿರ್ವಹಿಸಲಿದೆ. ಈ ತಂತ್ರಜ್ಞಾನದಲ್ಲಿ ರಾಕೆಟ್ ನಲ್ಲಿ ಬಳಸುವ ಇಂಧನವು ವಾತಾವರಣದಲ್ಲಿರುವ ಆಮ್ಲಜನಕವನ್ನು ಬಳಸಿ ದಹಿಸಲಿದೆ. ಆದ್ದರಿಂದ ಆಕ್ಸಿಡೈಸರ್ ಪ್ರಮಾಣ ಗಣನೀಯವಾಗಿ ತಗ್ಗಲಿದ್ದು, ಉಡಾವಣೆ ವೆಚ್ಚದಲ್ಲಿ ಸಾಕಷ್ಟು ಕಡಿಮೆಯಾಗಲಿದೆ.
ಉಪಯೋಗಗಳು:
- ದ್ರವೀಕೃತ ಆಮ್ಲಜನಕವನ್ನು ಒತ್ತೊಯ್ಯುವ ಅವಶ್ಯಕತೆ ಇಲ್ಲದಿರುವುದರಿಂದ ಉಡಾವಣ ತೂಕ ಗಣನೀಯವಾಗಿ ಕಡಿಮೆಯಾಗಲಿದೆ.
- ಇದರಿಂದ ರಾಕೆಟ್ ಕಾರ್ಯಕ್ಷಮತೆ ಹೆಚ್ಚಲಿದ್ದು, ಉಡಾವಣ ವೆಚ್ಚ ಕಡಿಮೆಯಾಗಲಿದೆ.
- ಈ ಎಂಜಿನ್ ನಲ್ಲಿ ತಿರುಗುವ ಭಾಗಗಳು ಇಲ್ಲದ ಕಾರಣ ವಿಫಲವಾಗುವ ಸಾಧ್ಯತೆ ತೀರಾ ಕಡಿಮೆ.
ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.
ಮುಖ ಚಹರೆ ಗುರುತಿಸುವಿಕೆ ತಂತ್ರಜ್ಞಾನ:
(Facial recognition technology)
ಸಂದರ್ಭ:
ಮೂರು ವರ್ಷಗಳ ವಿಳಂಬದ ನಂತರ, ಮಾರ್ಚ್ 2022 ರಲ್ಲಿ, ದೇಶದ ನಾಲ್ಕು ವಿಮಾನ ನಿಲ್ದಾಣಗಳಲ್ಲಿ ಪ್ರಯಾಣಿಕರು ತಮ್ಮ ಬೋರ್ಡಿಂಗ್ ಪಾಸ್ ಆಗಿ ‘ಫೇಸ್ ಸ್ಕ್ಯಾನ್’ ಅನ್ನು ಬಳಸಲು ಸಾಧ್ಯವಾಗುತ್ತದೆ.
- ಮುಖ ಗುರುತಿಸುವಿಕೆ ತಂತ್ರಜ್ಞಾನ ಆಧಾರಿತ ಬಯೋಮೆಟ್ರಿಕ್ ಬೋರ್ಡಿಂಗ್ ವ್ಯವಸ್ಥೆಯನ್ನು ಮೊದಲು ವಾರಣಾಸಿ, ಪುಣೆ, ಕೋಲ್ಕತ್ತಾ ಮತ್ತು ವಿಜಯವಾಡದ ವಿಮಾನ ನಿಲ್ದಾಣಗಳಲ್ಲಿ ಜಾರಿಗೊಳಿಸಲಾಗುವುದು ಮತ್ತು ಸೇವೆಯು ಮಾರ್ಚ್ 2022 ರಿಂದ ಪ್ರಯಾಣಿಕರಿಗೆ ಲಭ್ಯವಾಗಲಿದೆ.
- ನಂತರ, ಈ ತಂತ್ರಜ್ಞಾನವನ್ನು ದೇಶದ ವಿವಿಧ ವಿಮಾನ ನಿಲ್ದಾಣಗಳಿಗೆ ಹಂತ ಹಂತವಾಗಿ ವಿಸ್ತರಿಸಲಾಗುವುದು.
ಅನುಷ್ಠಾನ:
- ಈ ತಂತ್ರಜ್ಞಾನವನ್ನು ಅಳವಡಿಸುವ ಜವಾಬ್ದಾರಿಯನ್ನು ‘ಎನ್‌ಇಸಿ ಕಾರ್ಪೊರೇಷನ್ ಪ್ರೈವೇಟ್ ಲಿಮಿಟೆಡ್’ಗೆ ‘ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರ’ ‘ಡಿಜಿಯಾತ್ರಾ ನೀತಿ’ (DigiYatra Policy) ಯ ಭಾಗವಾಗಿ ವಹಿಸಿಕೊಟ್ಟಿದೆ. ಇದು ಕಾಗದರಹಿತ ವಿಮಾನ ಪ್ರಯಾಣ ಮತ್ತು ವಿಮಾನ ನಿಲ್ದಾಣವನ್ನು ಪ್ರವೇಶಿಸುವುದರಿಂದ ವಿಮಾನ ಹತ್ತುವವರೆಗೆ ತಡೆರಹಿತ ಪ್ರಯಾಣವನ್ನು ಸುಲಭಗೊಳಿಸುವ ಗುರಿಯನ್ನು ಹೊಂದಿದೆ.
- ನೀತಿಯನ್ನು ಅಕ್ಟೋಬರ್ 2018 ರಲ್ಲಿ ಅನಾವರಣಗೊಳಿಸಲಾಯಿತು ಮತ್ತು ಮೂಲ ಯೋಜನೆಯ ಪ್ರಕಾರ, ಏಪ್ರಿಲ್ 2019 ಕ್ಕೆ ಮುಖ ಗುರುತಿಸುವಿಕೆ ತಂತ್ರಜ್ಞಾನದ ರೋಲ್-ಔಟ್ ಅನ್ನು ನಿಗದಿಪಡಿಸಲಾಗಿದೆ.
ಮುಖಚಹರೆ ಗುರುತು ಪತ್ತೆ (Facial recognition) ಎಂದರೇನು?
ಮುಖ ಚಹರೆ ಗುರುತು ಪತ್ತೆ ಒಂದು ಬಯೋಮೆಟ್ರಿಕ್ ತಂತ್ರಜ್ಞಾನವಾಗಿದ್ದು ಅದು ವ್ಯಕ್ತಿಯನ್ನು ಗುರುತಿಸಲು ಮತ್ತು ಪ್ರತ್ಯೇಕಿಸಲು ಮುಖದ ಮೇಲಣ ವಿಶಿಷ್ಟ ಲಕ್ಷಣಗಳನ್ನು ಬಳಸುತ್ತದೆ.
- ಜನರ ಮುಖಗಳ ಫೋಟೋಗಳು ಮತ್ತು ವೀಡಿಯೊಗಳ ದೊಡ್ಡ ದತ್ತಾಂಶ ಸಂಗ್ರಹಣಾ ವ್ಯವಸ್ಥೆಯನ್ನು ನಿರ್ವಹಿಸುವ ಮೂಲಕ AFRS ಕಾರ್ಯನಿರ್ವಹಿಸುತ್ತದೆ. ನಂತರ, ಗುರುತಿಸಲಾಗದ ವ್ಯಕ್ತಿಯ ಹೊಸ ಚಿತ್ರವನ್ನು – ಸಿಸಿಟಿವಿ ದೃಶ್ಯಾವಳಿಗಳಿಂದ ತೆಗೆದುಕೊಂಡು – ಹೊಂದಾಣಿಕೆಯನ್ನು ಕಂಡುಹಿಡಿಯಲು ಮತ್ತು ವ್ಯಕ್ತಿಯನ್ನು ಗುರುತಿಸಲು ಅಸ್ತಿತ್ವದಲ್ಲಿರುವ ಡೇಟಾಬೇಸ್‌ನೊಂದಿಗೆ ಹೋಲಿಸಲಾಗುತ್ತದೆ.
- ನಮೂನೆಯೊಂದರ-ಶೋಧನೆ ಮತ್ತು ಹೋಲಿಕೆಗಾಗಿ ಬಳಸುವ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವನ್ನು “ನರ ಜಾಲಗಳು” “neural networks” ಎಂದು ಕರೆಯಲಾಗುತ್ತದೆ.
ಮುಖ ಗುರುತು ಪತ್ತೆ ತಂತ್ರಜ್ಞಾನದ ಪ್ರಯೋಜನಗಳು:
- ಅಪರಾಧ ಪತ್ತೆ ಮತ್ತು ಪರಿಶೀಲನೆಯ ಕ್ಷೇತ್ರದಲ್ಲಿ ಫಲಿತಾಂಶಗಳನ್ನು ಉತ್ತಮ ಪಡಿಸುತ್ತದೆ.
- ಜನಸಂದಣಿಯಲ್ಲಿ ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ.
- ಪೊಲೀಸ್ ಇಲಾಖೆಯ ಅಪರಾಧ ತನಿಖಾ ಸಾಮರ್ಥ್ಯಗಳನ್ನು ಉತ್ತಮ ಪಡಿಸುತ್ತದೆ.
- ಅಗತ್ಯವಿದ್ದಾಗ ನಾಗರಿಕರ ಪರಿಶೀಲನೆಗೆ ಸಹಾಯ ಮಾಡುತ್ತದೆ. ಹಾಗಾಗಿ ನಕಲಿ ಐಡಿ ಬಳಸಿ ಯಾರಿಗೂ ಪಾರಾಗಲು ಸಾಧ್ಯವಾಗುವುದಿಲ್ಲ.
ಸಂಬಂಧಿತ ಕಾಳಜಿಗಳೇನು?
- ನಿರ್ದಿಷ್ಟ ಕಾನೂನುಗಳು ಅಥವಾ ಮಾರ್ಗಸೂಚಿಗಳ ಅನುಪಸ್ಥಿತಿಯು ಖಾಸಗಿತನ ಮತ್ತು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೂಲಭೂತ ಹಕ್ಕುಗಳಿಗೆ ಭಾರಿ ಬೆದರಿಕೆಯನ್ನುಂಟುಮಾಡುತ್ತದೆ ಏಕೆಂದರೆ, ಅದು ಸುಪ್ರೀಂ ಕೋರ್ಟ್ ‘ನ್ಯಾಯಮೂರ್ತಿ ಕೆ.ಎಸ್. ಪುಟ್ಟಸ್ವಾಮಿ Vs ಯೂನಿಯನ್ ಆಫ್ ಇಂಡಿಯಾ ’ಪ್ರಕರಣ ದಲ್ಲಿ ಗೌಪ್ಯತೆ ಕುರಿತು ನೀಡಿದ ಹೆಗ್ಗುರುತು ತೀರ್ಪಿನ (Landmark privacy judgment) ಆಶಯವನ್ನು ಪೂರೈಸುವುದಿಲ್ಲ.
- ಮುಖ ಗುರುತಿಸುವಿಕೆ ವ್ಯವಸ್ಥೆಯನ್ನು (FRS) ಅಳವಡಿಸುವ ಮೊದಲು ಅನೇಕ ಸಂಸ್ಥೆಗಳು “ಗೌಪ್ಯತೆ ಪರಿಣಾಮದ ಮೌಲ್ಯಮಾಪನ” ನಡೆಸಿಲ್ಲ.
- ಫಂಕ್ಷನ್ ಕ್ರೀಪ್: ಮೂಲ ನಿಗದಿತ ಉದ್ದೇಶವನ್ನು ಹೊರತು ಪಡಿಸಿ ಬೇರೆ ಉದ್ದೇಶಕ್ಕಾಗಿ ಯಾರಾದರೂ ಮಾಹಿತಿಯನ್ನು ಬಳಸಿದಾಗ ಅತಿ ಗಾಬರಿ ಸಂಭವಿಸುತ್ತದೆ. (ಕಾಣೆಯಾದ ಮಕ್ಕಳನ್ನು ಪತ್ತೆಹಚ್ಚಲು ದೆಹಲಿ ಹೈಕೋರ್ಟ್‌ನ ಆದೇಶವು FRS ಬಳಸಲು ಪೊಲೀಸರಿಗೆ ಅನುಮತಿ ದೊರೆತಿದೆ ಆದರೆ ಅವರು ಈಗ ಅದನ್ನು ವ್ಯಾಪಕ ಭದ್ರತೆ ಮತ್ತು ಕಣ್ಗಾವಲು ಮತ್ತು ತನಿಖಾ ಉದ್ದೇಶಕ್ಕಾಗಿ ಬಳಸುತ್ತಿದ್ದಾರೆ, ಇದು ಒಂದು ಫಂಕ್ಷನ್ ಕ್ರೀಪ್ ಆಗಿದೆ.
- ಇದು ಒಂದು ಅತಿಯಾದ ಪೋಲಿಸ್ ಗಿರಿ ಸಮಸ್ಯೆಗೆ ಕಾರಣವಾಗುವುದಲ್ಲದೆ ಯಾವುದೇ ಕಾನೂನು ಬೆಂಬಲವಿಲ್ಲದ ಕೆಲವು ಅಲ್ಪಸಂಖ್ಯಾತರು ಏನಾಗುತ್ತಿದೆ ಎಂಬುದರ ಬಗ್ಗೆ ಯಾವುದೇ ಮೇಲ್ವಿಚಾರಣೆಯ ಅರಿವಿಲ್ಲದೆ ಸಮಸ್ಯೆಗಳಿಗೆ ಗುರಿಯಾಗುವ ಸಂಭವವಿದೆ.
- ಸಾಮೂಹಿಕ ಕಣ್ಗಾವಲು: ಯಾರಾದರೂ ಸರ್ಕಾರದ ವಿರುದ್ಧ ಪ್ರತಿಭಟನೆಗೆ ಹೋದರೆ, ಮತ್ತು ಪೊಲೀಸರು ಅಂತಹ ವ್ಯಕ್ತಿಯನ್ನು ಗುರುತಿಸಲು ಸಮರ್ಥರಾಗಿದ್ದರೆ, ಆಗ ವ್ಯತಿರಿಕ್ತ ಪರಿಣಾಮಗಳು ಉಂಟಾಗಬಹುದು.
- ಸ್ವಯಂಚಾಲಿತ ಮುಖ ಗುರುತಿಸುವಿಕೆ ವ್ಯವಸ್ಥೆಗೆ (AFRS) ಆಧಾರವು / ತಳಹದಿಯು 2009 ರ ಕ್ಯಾಬಿನೆಟ್ ಟಿಪ್ಪಣಿಯಾಗಿದೆ.ಆದರೆ ಕ್ಯಾಬಿನೆಟ್ ಟಿಪ್ಪಣಿಯು ಕಾನೂನುಬದ್ಧ ಪ್ರಕ್ರಿಯೆಯಲ್ಲ, ಇದು ಹೆಚ್ಚೆಂದರೆ ಒಂದು ಕಾರ್ಯವಿಧಾನದ ಟಿಪ್ಪಣಿಯಾಗಿರುವುದು.
ನೀಡ್ ಆಫ್ ದಿ ಅವರ್ : ಈ ಹೊತ್ತಿನ ಅವಶ್ಯಕತೆ:
ಸಾರ್ವಜನಿಕ ಸ್ಥಳಗಳಲ್ಲಿಯೂ ಸಹ ಗೌಪ್ಯತೆ/ ಖಾಸಗಿತನ ಎಂಬುದು ಮೂಲಭೂತ ಹಕ್ಕು ಎಂದು ಪುಟ್ಟಸ್ವಾಮಿ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ, ಮತ್ತು ಈ ಹಕ್ಕುಗಳನ್ನು ಉಲ್ಲಂಘಿಸಬೇಕಾದ ಪರಿಸ್ಥಿತಿ ಬಂದರೆ ಅಂತಹ ಕ್ರಮವನ್ನು ಕಾನೂನಿನಿಂದ ಅನುಮೋದಿಸಲಾಗಿದೆ ಎಂದು ಸರ್ಕಾರ ತೋರಿಸಬೇಕಾಗುತ್ತದೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
ಭಾರತೀಯ SARS-CoV-2 ಕನ್ಸೋರ್ಟಿಯಂ ಆನ್ ಜೀನೋಮಿಕ್ಸ್ (INSACOG):
- ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (Indian SARS-CoV-2 Consortium on Genomics – INSACOG) ಅನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ (DBT) ಜಂಟಿಯಾಗಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR) ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಜಂಟಿ ಸಹಯೋಗದಲ್ಲಿ ಆರಂಭಿಸಲಾಗಿದೆ.
- ಇದು SARS-CoV-2 ರಲ್ಲಿಯ ಜೀನೋಮಿಕ್ ವ್ಯತ್ಯಾಸಗಳನ್ನು ಮೇಲ್ವಿಚಾರಣೆ ಮಾಡಲು 28 ರಾಷ್ಟ್ರೀಯ ಪ್ರಯೋಗಾಲಯಗಳ ಒಕ್ಕೂಟವಾಗಿದೆ.
- ಇದು SARS-CoV-2 ವೈರಸ್‌ನ ಸಂಪೂರ್ಣ ಜೀನೋಮ್ ಸೀಕ್ವೆನ್ಸಿಂಗ್ ಅನ್ನು ದೇಶಾದ್ಯಂತ ನಡೆಸುತ್ತದೆ, ಇದು ವೈರಸ್ ಹರಡುವಿಕೆ ಮತ್ತು ವಿಕಸನವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
- ರೋಗದ ಚಲನಶೀಲತೆ ಮತ್ತು ತೀವ್ರತೆಯನ್ನು ಅರ್ಥಮಾಡಿಕೊಳ್ಳಲು ವೈದ್ಯಕೀಯ ಮಾದರಿಗಳನ್ನು ಅನುಕ್ರಮಗೊಳಿಸುವತ್ತ ಗಮನಹರಿಸುವ ಗುರಿಯನ್ನು INSACOG ಹೊಂದಿದೆ.
ಮಾನವ ಹಕ್ಕುಗಳ ಹೈ ಕಮಿಷನರ್ ಕಚೇರಿ:
- ಮಾನವ ಹಕ್ಕುಗಳ ಹೈ ಕಮಿಷನರ್ ಕಚೇರಿ (Office of the High Commissioner for Human Rights – OHCHR), ಇದನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಹೈ ಕಮಿಷನರ್ ಕಚೇರಿ ಎಂದೂ ಕರೆಯುತ್ತಾರೆ, ಇದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಸಂಸ್ಥೆಗಳಲ್ಲಿ ಒಂದಾಗಿದೆ.
- OHCHR ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿಯಿಂದ (UNGA) ವಿಶ್ವದಾದ್ಯಂತ ಎಲ್ಲರ ಮಾನವ ಹಕ್ಕುಗಳನ್ನು ರಕ್ಷಿಸುವ ಮತ್ತು ಉತ್ತೇಜಿಸುವ ಜವಾಬ್ದಾರಿಯನ್ನು ವಹಿಸಿದೆ.
- OHCHR ತಾಂತ್ರಿಕ ಪರಿಣತಿಯನ್ನು ಒದಗಿಸುತ್ತದೆ ಮತ್ತು ಮಾನವ ಹಕ್ಕುಗಳ ವಲಯದಲ್ಲಿ ‘ಜಾಗತಿಕ ಮಾನವ ಹಕ್ಕುಗಳ ಮಾನದಂಡಗಳ ಅನುಷ್ಠಾನ’ದಲ್ಲಿ ಸಹಾಯ ಮಾಡಲು ಸಾಮರ್ಥ್ಯ-ವರ್ಧನೆಯನ್ನು ಬೆಂಬಲಿಸುತ್ತದೆ.
- ಇದು ವಿಶ್ವಸಂಸ್ಥೆಯ ಸೆಕ್ರೆಟರಿಯೇಟ್‌ನ ಒಂದು ಭಾಗವಾಗಿದೆ ಮತ್ತು ಇದನ್ನು 1993 ರಲ್ಲಿ ಸ್ಥಾಪಿಸಲಾಯಿತು.
- ಇದು ಜಿನೀವಾ (ಸ್ವಿಟ್ಜರ್ಲೆಂಡ್) ನಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ ಮತ್ತು ಅನೇಕ ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ.
- OHCHR ‘ ಮಾನವ ಹಕ್ಕುಗಳ ಹೈ ಕಮಿಷನರ್’ ಅವರ ನೇತೃತ್ವದಲ್ಲಿದೆ.
OHCHR ಅನುದಾನಗಳು:‘ಮಾನವ ಹಕ್ಕುಗಳ ಹೈ ಕಮಿಷನರ್ ಕಚೇರಿ’ಗೆ ಸುಮಾರು 2/3 ಮೊತ್ತವು ದಾನಿಗಳು ಮತ್ತು ಸದಸ್ಯ ರಾಷ್ಟ್ರಗಳಿಂದ ಸ್ವಯಂಪ್ರೇರಿತ ಕೊಡುಗೆಗಳ ರೂಪದಲ್ಲಿ ಬರುತ್ತದೆ. ಉಳಿದ ಮೊತ್ತವನ್ನು ವಿಶ್ವಸಂಸ್ಥೆಯ ಸಾಮಾನ್ಯ ಬಜೆಟ್‌ನಿಂದ ಪೂರೈಸಲಾಗುತ್ತದೆ.