[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 2ನೇ ಡಿಸೆಂಬರ್ 2021

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಭಾರತೀಯ ಪೌರತ್ವವನ್ನು ತ್ಯಜಿಸುವುದು.

2. ರಾಷ್ಟ್ರೀಯ ರಫ್ತು ವಿಮಾ ಖಾತೆ (NEIA).

3. ಮಿಷನ್ ಇಂದ್ರಧನುಷ್ (IMI) 3.0.

4. ಅಂತರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳು (IFSC) ಎಂದರೇನು?

 

ಸಾಮಾನ್ಯ ಜ್ಞಾನ ಪತ್ರಿಕೆ 3:

1. 5G ತಂತ್ರಜ್ಞಾನ.

2. ಪಾರ್ಕರ್ ಸೋಲಾರ್ ಪ್ರೋಬ್.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ಬಾರ್ಬಡೋಸ್.

2. ಪರಾಗ್ ಅಗರವಾಲ್.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

ಭಾರತೀಯ ಪೌರತ್ವವನ್ನು ತ್ಯಜಿಸುವುದು:


(Renunciation of Indian citizenship)

ಸಂದರ್ಭ:

ಕೇಂದ್ರ ಗೃಹ ಸಚಿವಾಲಯ (MHA), ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಕಳೆದ ಐದು ವರ್ಷಗಳಲ್ಲಿ ಆರು ಲಕ್ಷಕ್ಕೂ ಹೆಚ್ಚು ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಿದ್ದಾರೆ ಎಂದು ಮಾಹಿತಿ ನೀಡಿದೆ.

  1. ನೀಡಲಾದ ಈ ಉತ್ತರದಲ್ಲಿ ಇಷ್ಟು ದೊಡ್ಡ ಸಂಖ್ಯೆಯ ಭಾರತೀಯರು ತಮ್ಮ ಪೌರತ್ವವನ್ನು ತ್ಯಜಿಸಲು ಕಾರಣವನ್ನು ತಿಳಿಸಲಾಗಿಲ್ಲ.

ಪೌರತ್ವದ ತ್ಯಜಿಸುವಿಕೆ:

ಪೌರತ್ವ ಕಾಯಿದೆ, 1955’ (Citizenship Act, 1955) ಸಾಂವಿಧಾನಿಕ ವ್ಯವಸ್ಥೆಯ ಪ್ರಕಾರ ಭಾರತೀಯ ಪೌರತ್ವವನ್ನು ಕಳೆದುಕೊಳ್ಳುವ ಮೂರು ಮಾರ್ಗಗಳನ್ನು ಸೂಚಿಸುತ್ತದೆ:

ತ್ಯಜಿಸುವ ಮೂಲಕ (By renunciation):

ಪೂರ್ಣ ವಯಸ್ಸನ್ನು ತಲುಪಿದ ಮತ್ತು ಸ್ವ- ಸಾಮರ್ಥ್ಯದ ಭಾರತದ ಯಾವುದೇ ನಾಗರಿಕನು, ನಿಗದಿತ ರೀತಿಯಲ್ಲಿ, ಭಾರತೀಯ ಪೌರತ್ವವನ್ನು ತ್ಯಜಿಸುವ ಘೋಷಣೆಯನ್ನು ಮಾಡಬಹುದು.

ಭಾರತವು ಯುದ್ಧದಲ್ಲಿ ತೊಡಗಿರುವಾಗ, ಅಂತಹ ಘೋಷಣೆಯನ್ನು ಸ್ವೀಕರಿಸಲಾಗುವುದಿಲ್ಲ.

ಒಬ್ಬ ವ್ಯಕ್ತಿಯು ತನ್ನ ಪೌರತ್ವವನ್ನು ತ್ಯಜಿಸಿದಾಗ, ಆ ವ್ಯಕ್ತಿಯ ಅಪ್ರಾಪ್ತ ಮಕ್ಕಳ ಭಾರತೀಯ ಪೌರತ್ವವೂ ಕೊನೆಗೊಳ್ಳುತ್ತದೆ. ಆದಾಗ್ಯೂ, ಅಂತಹ ಮಕ್ಕಳು ಹದಿನೆಂಟು ವರ್ಷ ವಯಸ್ಸಾದ ಮೇಲೆ ಭಾರತೀಯ ನಾಗರಿಕರಾಗಬಹುದು.

ಮುಕ್ತಾಯದ ಮೂಲಕ (By Termination):

ಭಾರತದ ಪ್ರಜೆಯು ಸ್ವಯಂಪ್ರೇರಣೆಯಿಂದ ಬೇರೆ ಯಾವುದೇ ದೇಶದ ಪೌರತ್ವವನ್ನು ಪಡೆದರೆ, ಅವನ ಭಾರತೀಯ ಪೌರತ್ವವು ಸ್ವಯಂಚಾಲಿತವಾಗಿ ಸ್ಥಗಿತಗೊಳ್ಳುತ್ತದೆ. ಆದಾಗ್ಯೂ, ಈ ನಿಬಂಧನೆಯು ಭಾರತವು ಯುದ್ಧದಲ್ಲಿ ತೊಡಗಿರುವ ಸಮಯದಲ್ಲಿ ಅನ್ವಯಿಸುವುದಿಲ್ಲ.

ವಂಚಿತರನ್ನಾಗಿಸುವ ಮೂಲಕ (By deprivation):

ಈ ಕೆಳಗಿನ ಸಂದರ್ಭಗಳಲ್ಲಿ ವ್ಯಕ್ತಿಯ ಭಾರತೀಯ ಪೌರತ್ವವನ್ನು ರದ್ದುಗೊಳಿಸುವುದು ಕೇಂದ್ರ ಸರ್ಕಾರಕ್ಕೆ ಕಡ್ಡಾಯವಾಗಿದೆ:

  1. ವಂಚನೆಯ ಮೂಲಕ ಪೌರತ್ವವನ್ನು ಪಡೆದಿದ್ದರೆ.
  2. ಪ್ರಜೆಯು ಭಾರತದ ಸಂವಿಧಾನಕ್ಕೆ ನಿಷ್ಠೆಯನ್ನು ತೋರದಿದ್ದರೆ.
  3. ನಾಗರಿಕನು ಯುದ್ಧದ ಸಮಯದಲ್ಲಿ ಶತ್ರುಗಳೊಂದಿಗೆ ಕಾನೂನುಬಾಹಿರವಾಗಿ ವ್ಯವಹಾರ ಸಂಬಂಧವನ್ನು ಸ್ಥಾಪಿಸಿದ್ದರೆ ಅಥವಾ ಶತ್ರುವಿಗೆ ಯಾವುದೇ ದೇಶ ವಿರೋಧಿ ಮಾಹಿತಿಯನ್ನು ನೀಡಿದ್ದರೆ.
  4. ನೋಂದಣಿ ಅಥವಾ ನೈಸರ್ಗಿಕವಾಗಿ ಪೌರತ್ವ ಪಡೆದ 5 ವರ್ಷಗಳ ಒಳಗೆ, ಹೇಳಲಾದ ನಾಗರಿಕನನ್ನು ಯಾವುದೇ ದೇಶದಲ್ಲಿ ಎರಡು ವರ್ಷಗಳ ಕಾಲ ಜೈಲಿನಲ್ಲಿರಿಸಲಾಗುತ್ತದೆ.
  5. ನಾಗರಿಕರು ಸಾಮಾನ್ಯವಾಗಿ ಏಳು ವರ್ಷಗಳ ಕಾಲ ಭಾರತದ ಹೊರಗೆ ವಾಸಿಸುತ್ತಿದ್ದರೆ.

current affairs

 

ಭಾರತೀಯ ಪೌರತ್ವವನ್ನು ಪಡೆಯುವ ಮತ್ತು ನಿರ್ಧರಿಸುವ ಅಂಶಗಳು:

ಭಾರತದ ಪೌರತ್ವ ಅಥವಾ ನಾಗರಿಕತ್ವವನ್ನು ಪಡೆಯಲು 4 ವಿಧಾನಗಳನ್ನು ತಿಳಿಸಲಾಗಿದೆ, ಅವುಗಳು: ಭಾರತದಲ್ಲಿ ಜನನ, ಆನುವಂಶಿಕತೆ, ನೋಂದಣಿ, ನೈಸರ್ಗಿಕಿಕರಣ ಮತ್ತು ಭೂಪ್ರದೇಶವೊಂದನ್ನು ಭಾರತಕ್ಕೆ ಸೇರ್ಪಡೆ ಗೊಳಿಸುವುದರ ಆಧಾರದ ಮೇಲೆ ಪೌರತ್ವ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ನೋಂದಣಿ ಮೂಲಕ (By Registration):

ನೋಂದಣಿ ಮೂಲಕವೂ ಪೌರತ್ವವನ್ನು ಪಡೆಯಬಹುದು. ಕೆಲವು ಕಡ್ಡಾಯ ನಿಯಮಗಳು ಹೀಗಿವೆ:

  1. ನೋಂದಣಿಗೆ ಅರ್ಜಿ ಸಲ್ಲಿಸುವ ಮೊದಲು 7 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ವ್ಯಕ್ತಿಯು ನೋಂದಣಿ ಮೂಲಕವೂ ಪೌರತ್ವವನ್ನು ಪಡೆಯಬಹುದು.
  2. ಅವಿಭಜಿತ ಭಾರತದ ಹೊರಗಿನ ಯಾವುದೇ ದೇಶದ ನಿವಾಸಿಯಾಗಿರುವ ಭಾರತೀಯ ಮೂಲದ ವ್ಯಕ್ತಿ.
  3. ಭಾರತೀಯ ನಾಗರಿಕನನ್ನು ಮದುವೆಯಾಗಿ ನೋಂದಣಿಗೆ ಅರ್ಜಿ ಸಲ್ಲಿಸುವ ಮೊದಲು 7 ವರ್ಷಗಳ ಕಾಲ ಸಾಮಾನ್ಯವಾಗಿ ಭಾರತದಲ್ಲಿ ವಾಸಿಸುತ್ತಿರುವ ವ್ಯಕ್ತಿ.
  4. ಭಾರತದ ನಾಗರಿಕತ್ವವನ್ನು ಪಡೆದಿರುವ ವ್ಯಕ್ತಿಗಳ ಚಿಕ್ಕ ಮಕ್ಕಳು.

ನೈಸರ್ಗಿಕಿಕರಣದ ಮೂಲಕ (By Naturalisation):

ಒಬ್ಬ ವ್ಯಕ್ತಿಯು ಅವನು / ಅವಳು ಸಾಮಾನ್ಯವಾಗಿ 12 ವರ್ಷಗಳ ಕಾಲ (ಪೌರತ್ವಕ್ಕಾಗಿ ಅರ್ಜಿಯನ್ನು ಸಲ್ಲಿಸುವ ದಿನಾಂಕಕ್ಕಿಂತ ಮುಂಚಿನ 12 ತಿಂಗಳುಗಳು ಮತ್ತು ಒಟ್ಟು 11 ವರ್ಷಗಳು) ಭಾರತದ ನಿವಾಸಿಗಳಾಗಿದ್ದರೆ ಮತ್ತು ಪೌರತ್ವ ಕಾಯ್ದೆಯ ಮೂರನೇ ಅನುಸೂಚಿಯಲ್ಲಿನ ಎಲ್ಲಾ ಅರ್ಹತೆಗಳನ್ನು ಪೂರೈಸಿದರೆ ಸ್ವಾಭಾವಿಕೀಕರಣದ ಅಥವಾ ನೈಸರ್ಗಿಕರಣದ ಮೂಲಕ ಭಾರತದ ಪೌರತ್ವವನ್ನು ಪಡೆಯಬಹುದು.

 

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ರಾಷ್ಟ್ರೀಯ ರಫ್ತು ವಿಮಾ ಖಾತೆ (NEIA) :


(National Export Insurance Account (NEIA)

ಸಂದರ್ಭ:

2021-22 ರಿಂದ 2025-26 ರವರೆಗಿನ ಅವಧಿಗೆ ‘ರಾಷ್ಟ್ರೀಯ ರಫ್ತು ವಿಮಾ ಖಾತೆ’ ಟ್ರಸ್ಟ್‌  (National Export Insurance Account Trust – NEIA Trust)ಗೆ ಆರ್ಥಿಕ ನೆರವು ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

‘ರಾಷ್ಟ್ರೀಯ ರಫ್ತು ವಿಮಾ ಖಾತೆ’ ಯ ಕುರಿತು:

  1. ರಾಷ್ಟ್ರೀಯ ರಫ್ತು ವಿಮಾ ಖಾತೆಯು (National Export Insurance Account – NEIA) ವಾಣಿಜ್ಯ ಸಚಿವಾಲಯದಿಂದ ಸ್ಥಾಪಿಸಲ್ಪಟ್ಟ ಟ್ರಸ್ಟ್ ಆಗಿದೆ ಮತ್ತು ಇದನ್ನು ರಫ್ತು ಕ್ರೆಡಿಟ್ ಮತ್ತು ಗ್ಯಾರಂಟಿ ಕಾರ್ಪೊರೇಷನ್ ಆಫ್ ಇಂಡಿಯಾ (Export Credit & Guarantee Corporation of India – ECGC) ನಿರ್ವಹಿಸುತ್ತದೆ.
  2. ‘ರಾಷ್ಟ್ರೀಯ ರಫ್ತು ವಿಮಾ ಖಾತೆ’ ಟ್ರಸ್ಟ್ (NEIA Trust) ಅನ್ನು 2006 ರಲ್ಲಿ ಕಾರ್ಯತಂತ್ರ ಮತ್ತು ರಾಷ್ಟ್ರೀಯ ಪ್ರಾಮುಖ್ಯತೆಯ ದೃಷ್ಟಿಯಿಂದ ಭಾರತದಿಂದ ‘ಯೋಜನಾ ರಫ್ತು’ ಗಳನ್ನು ಉತ್ತೇಜಿಸಲು ಸ್ಥಾಪಿಸಲಾಯಿತು.
  3. ರಾಷ್ಟ್ರೀಯ ರಫ್ತು ವಿಮಾ ಖಾತೆ, ಅರ್ಹ ರಫ್ತುದಾರರಿಗೆ ರಕ್ಷಣೆಯನ್ನು ಒದಗಿಸುವಲ್ಲಿ ECGC ಲಿಮಿಟೆಡ್‌ನ ಮಿತಿಗಳನ್ನು, ಮರುವಿಮೆಯ ಅಲಭ್ಯತೆಯನ್ನು ಪರಿಗಣಿಸಿ, ಭಾರತ ಸರ್ಕಾರದಿಂದ ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ‘ಮಧ್ಯಮ ಮತ್ತು ದೀರ್ಘಾವಧಿಯ ರಫ್ತು’ಗಳನ್ನು ಸುಗಮಗೊಳಿಸುತ್ತದೆ.
  4. ರಾಷ್ಟ್ರೀಯ ರಫ್ತು ವಿಮಾ ಖಾತೆ,ಮರುವಿಮೆ ಲಭ್ಯವಿಲ್ಲದಿರುವುದನ್ನು ಪರಿಗಣಿಸಿ, ಅರ್ಹವಾದ ರಫ್ತುದಾರರಿಗೆ ರಕ್ಷಣೆ ಒದಗಿಸುವಲ್ಲಿ ಇಸಿಜಿಸಿ ಲಿಮಿಟೆಡ್‌ನ ಮಿತಿಗಳನ್ನು ಭಾರತ ಸರ್ಕಾರವು ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ‘ಮಧ್ಯಮ ಮತ್ತು ದೀರ್ಘಾವಧಿಯ ರಫ್ತು’ಗಳನ್ನು ಸುಲಭಗೊಳಿಸಲು ಸ್ಥಾಪಿಸಿದೆ.
  5. ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಅಪೇಕ್ಷಣೀಯವಾದ ಯೋಜನೆಗಳು ಮತ್ತು ಇತರ ಹೆಚ್ಚಿನ ಮೌಲ್ಯದ ರಫ್ತುಗಳಿಗೆ ಕೆಲವು ಷರತ್ತುಗಳಿಗೆ ಒಳಪಟ್ಟು ಕ್ರೆಡಿಟ್ ರಿಸ್ಕ್ ಕವರ್ ಲಭ್ಯತೆಯನ್ನು ಖಚಿತಪಡಿಸುವುದು NEIA ಯ ಉದ್ದೇಶವಾಗಿದೆ.

ಉದ್ದೇಶ:

‘ರಾಷ್ಟ್ರೀಯ ರಫ್ತು ವಿಮಾ ಖಾತೆ’ ಟ್ರಸ್ಟ್ (NEIA Trust) ಉದ್ದೇಶವು ಯೋಜನೆಗಳು ಮತ್ತು ಇತರ ಹೆಚ್ಚಿನ ಮೌಲ್ಯದ ರಫ್ತುಗಳಿಗೆ ಕ್ರೆಡಿಟ್ ರಿಸ್ಕ್ ಕವರ್ ಲಭ್ಯತೆಯನ್ನು ಖಚಿತಪಡಿಸುವುದು ರಾಷ್ಟ್ರೀಯ ಹಿತಾಸಕ್ತಿಯ ದೃಷ್ಟಿಯಿಂದ ಅಪೇಕ್ಷಣೀಯವಾಗಿದೆ, ಆದರೆ ಸಾಮರ್ಥ್ಯದ ನಿರ್ಬಂಧಗಳು ಅಥವಾ ವ್ಯತ್ಯಾಸದಿಂದಾಗಿ ಪಾಲಿಸಿಗಳು ಇಸಿಜಿಸಿ ಅವರಿಗೆ ವಿಮಾ ರಕ್ಷಣೆಯನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ.

Current affairs

 

NEIA ಟ್ರಸ್ಟ್‌ನ ಕಾರ್ಯಗಳು:

  1. NEIA ಟ್ರಸ್ಟ್ ಮಧ್ಯಮ ಮತ್ತು ದೀರ್ಘಾವಧಿಯ (MLT) / ‘ಯೋಜನೆಯ ರಫ್ತು’ಗಳನ್ನು ಉತ್ತೇಜಿಸುತ್ತದೆ,ಭಾರತದಿಂದ ಪ್ರಾಜೆಕ್ಟ್ ರಫ್ತುಗಳಿಗೆ (ಭಾಗಶಃ / ಪೂರ್ಣ) ಸಹಾಯವನ್ನು ಒದಗಿಸುವ ಮೂಲಕ ‘ರಫ್ತು ಕ್ರೆಡಿಟ್ ಗ್ಯಾರಂಟಿ ಕಾರ್ಪೊರೇಷನ್’ (ECGC) ಮೂಲಕ MLT / ‘ಪ್ರಾಜೆಕ್ಟ್ ರಫ್ತು’ ಗೆ ಸಹಾಯವನ್ನು ಒದಗಿಸಲಾಗುತ್ತದೆ.
  2. ಈ ಯೋಜನೆಯು ಭಾರತದಿಂದ ರಫ್ತಿಗೆ ಸಂಬಂಧಿಸಿದೆ. Exim ಬ್ಯಾಂಕ್ ಫಾರ್ ಬಯರ್ಸ್ ಕ್ರೆಡಿಟ್ (BC-NEIA) ಗೆ ಭಾರತದಿಂದ ಕ್ರೆಡಿಟ್ ರಫ್ತುಗಳಿಗೆ ಬೆಂಬಲವನ್ನು ಸಹ ಒದಗಿಸುತ್ತದೆ.

ಭಾರತ ಸರ್ಕಾರ ಕೈಗೊಂಡ ಇತ್ತೀಚಿನ ಕ್ರಮಗಳು:

ಇತ್ತೀಚೆಗೆ, ಕೇಂದ್ರ ಸರ್ಕಾರವು ರಾಷ್ಟ್ರೀಯ ರಫ್ತು ವಿಮಾ ಖಾತೆ (National Export Insurance Account – NEIA) ಯೋಜನೆ ಮುಂದುವರಿಸಲು ತೀರ್ಮಾನ ಕೈಗೊಂಡಿದೆ ಮತ್ತು ಈ ಯೋಜನೆಗೆ ಮುಂದಿನ 5 ವರ್ಷಗಳಲ್ಲಿ ರೂ .1650 ಕೋಟಿ ಅನುದಾನವನ್ನು ಒದಗಿಸಲು ತೀರ್ಮಾನಿಸಿದೆ.

ಸರ್ಕಾರದ ಈ ನಡೆಯ ಮಹತ್ವ:

NEIA ಟ್ರಸ್ಟ್‌ನಲ್ಲಿ ಬಂಡವಾಳದ ಒಳಹರಿವು ಭಾರತೀಯ ಪ್ರಾಜೆಕ್ಟ್ ರಫ್ತುದಾರರಿಗೆ (IPEs) ಗೊತ್ತುಪಡಿಸಿದ ಮಾರುಕಟ್ಟೆಯಲ್ಲಿ ಯೋಜನೆಯ ರಫ್ತುಗಳ ಬೃಹತ್ ಸಾಮರ್ಥ್ಯವನ್ನು ಬಳಸಿಕೊಳ್ಳಲು ಸಹಾಯ ಮಾಡುತ್ತದೆ.

  1. ದೇಶದಾದ್ಯಂತ,ಭಾರತೀಯ ಮೂಲಗಳಿಂದ ಸಂಗ್ರಹಿಸಿದ ವಸ್ತುಗಳೊಂದಿಗೆ ಯೋಜನೆಯ ರಫ್ತಿಗೆ ಈ ಬೆಂಬಲವು ಭಾರತದಲ್ಲಿ ಉತ್ಪಾದನೆಗೆ ಉತ್ತೇಜನ ನೀಡುತ್ತದೆ.
  2. 1,650 ಕೋಟಿ ರೂಪಾಯಿಗಳ ಕೊಡುಗೆಯು ಟ್ರಸ್ಟ್‌ನ ಅಪಾಯವನ್ನು ಎದುರಿಸುವ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
  3. ಇದು ಪೂರ್ಣ ಸಾಮರ್ಥ್ಯದ ಬಳಕೆಯೊಂದಿಗೆ 33,000 ಕೋಟಿ ರೂಪಾಯಿ ಮೌಲ್ಯದ ಪ್ರಾಜೆಕ್ಟ್ ರಫ್ತುಗಳನ್ನು ಬೆಂಬಲಿಸಲು NEIA ಗೆ ಅನುವು ಮಾಡಿಕೊಡುತ್ತದೆ.
  4. ಇದರ ಪರಿಣಾಮವಾಗಿ, ಈ ಬೆಂಬಲವು ಅಂದಾಜು 25,000 ಕೋಟಿ ರೂ. ಗಳಷ್ಟು ದೇಶೀಯವಾಗಿ ತಯಾರಿಸಿದ ಸರಕುಗಳ ಉತ್ಪಾದನೆಗೆ ಬೆಂಬಲ ನೀಡುತ್ತದೆ.
  5. NEIA ಗೆ ಬಂಡವಾಳ ಒದಗಿಸುವ ಕ್ರಮದಿಂದ 2.6ಲಕ್ಷ ಹೊಸ ಉದ್ಯೋಗ ಸೃಷ್ಟಿಗೆ ಸಹಾಯ ಆಗಲಿದೆ.ಇದರಲ್ಲಿ 12ಸಾವಿರ ಉದ್ಯೋಗಗಳು ಸಂಘಟಿತ ವಲಯದಲ್ಲಿ ಸೃಷ್ಟಿಯಾಗಲಿದೆ.

 

NEIA – ಕಾರ್ಯಕ್ಷಮತೆಯ ಪ್ರಮುಖ ಅಂಶಗಳು:

  1. ಸಾಲ ಮತ್ತು ರಾಜಕೀಯ ಭದ್ರತೆಯನ್ನು ಒದಗಿಸುವ ಮೂಲಕ ಮಧ್ಯಮ ಮತ್ತು ದೀರ್ಘಾವಧಿಯ (MLT)/ಯೋಜನೆಯ ರಫ್ತುಗಳನ್ನು ಉತ್ತೇಜಿಸಲು 2006 ರಲ್ಲಿ NEIA ಟ್ರಸ್ಟ್ ಅನ್ನು ಸ್ಥಾಪಿಸಲಾಯಿತು.
  2. NEIA ವಾಣಿಜ್ಯಿಕವಾಗಿ ಕಾರ್ಯಸಾಧ್ಯವಾದ ಮತ್ತು ಕಾರ್ಯತಂತ್ರವಾಗಿ ಮುಖ್ಯವಾದ ಯೋಜನೆಗಳನ್ನು ಬೆಂಬಲಿಸುತ್ತದೆ.
  3. ಭಾರತ ಸರ್ಕಾರವು ಇದಕ್ಕಾಗಿ 4,000 ಕೋಟಿ ರೂ.ಗಳ ಬದ್ಧತೆಯನ್ನು ಮಾಡಿದೆ ಮತ್ತು ನಿಜವಾದ ಕಾರ್ಪಸ್‌ನ 20 ಪಟ್ಟು ಗರಿಷ್ಠ ಹೊಣೆಗಾರಿಕೆಯನ್ನು ಮಂಜೂರು ಮಾಡಿದೆ.
  4. ಹಲವಾರು ವರ್ಷಗಳಿಂದ ಭಾರತ ಸರ್ಕಾರದಿಂದ ಪಡೆದ ಕೊಡುಗೆಯು ಮಾರ್ಚ್ 31, 2021 ರಂತೆ 3,091 ಕೋಟಿ ರೂ. ಗಳಷ್ಟಾಗಿದೆ.
  5. ಪ್ರಾರಂಭದಿಂದಲೂ, NEIA ಆಗಸ್ಟ್ 31, 2021 ರವರೆಗೆ 53,000 ಕೋಟಿ ರೂ.ಗಳ ಏಕೀಕೃತ ಯೋಜನೆಯ ಮೌಲ್ಯದೊಂದಿಗೆ 213 ಕವರ್‌ಗಳನ್ನು ನೀಡಿದೆ.
  6. ಪ್ರಾಜೆಕ್ಟ್ ರಫ್ತುಗಳನ್ನು ಸಕ್ರಿಯಗೊಳಿಸುವ ದೃಷ್ಟಿಯಿಂದ ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದಲ್ಲಿ ಇದರ ಪ್ರಭಾವವು ಅತ್ಯಂತ ಮಹತ್ವದ್ದಾಗಿದೆ.

ರಫ್ತು ಸಂಬಂಧಿತ ಯೋಜನೆಗಳು ಮತ್ತು ಸರ್ಕಾರವು ಕಳೆದ ಕೆಲವು ವರ್ಷಗಳಲ್ಲಿ ಆರಂಭಿಸಿದ ಉಪಕ್ರಮಗಳು:

  1. ವಿದೇಶಿ ವ್ಯಾಪಾರ ನೀತಿ (2015-20): COVID-19 ಸಾಂಕ್ರಾಮಿಕ ಪರಿಸ್ಥಿತಿಯಿಂದಾಗಿ, ವಿದೇಶಿ ವ್ಯಾಪಾರ ನೀತಿಯನ್ನು (2015-20) 30 ಸೆಪ್ಟೆಂಬರ್ 2021 ರವರೆಗೆ ವಿಸ್ತರಿಸಲಾಗಿದೆ. ಇದು 2019-20ರ ವೇಳೆಗೆ ವಿದೇಶಿ ಮಾರಾಟವನ್ನು $ 900 ಶತಕೋಟಿಗೆ ದ್ವಿಗುಣಗೊಳಿಸುವ ಗುರಿಯನ್ನು ಹೊಂದಿದೆ.
  2. ಕೋವಿಡ್ -19 ಸಮಯದಲ್ಲಿ ಲಿಕ್ವಿಡಿಟಿ /ದ್ರವ್ಯತೆಯನ್ನು ಒದಗಿಸಲು ಎಲ್ಲಾ ಸ್ಕ್ರಿಪ್ಟ್ ಆಧಾರಿತ ಯೋಜನೆಗಳ ಅಡಿಯಲ್ಲಿ ಬಾಕಿ ಇರುವ ಬಾಕಿಗಳನ್ನು ತೆರವುಗೊಳಿಸಲು ಸೆಪ್ಟೆಂಬರ್, 2021 ರಲ್ಲಿ 56,027 ಕೋಟಿ ಬಿಡುಗಡೆಮಾಡಲಾಯಿತು.
  3. ಹೊಸ ಯೋಜನೆ – ‘Remission of Duties and Taxes and Exported Products ’(RoDTEP) ಎಂಬ ಹೊಸ ಯೋಜನೆಯನ್ನು ಆರಂಭಿಸಲಾಯಿತು. 2021-22ರ ಆರ್ಥಿಕ ವರ್ಷದಲ್ಲಿ ಈ ಯೋಜನೆಗೆ ರೂ 12,454 ಕೋಟಿಗಳನ್ನು ಅನುಮೋದಿಸಲಾಗಿದೆ. ಇದು ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಮಟ್ಟದಲ್ಲಿ ಬೇರೆ ಯಾವುದೇ ಕಾರ್ಯವಿಧಾನದ ಅಡಿಯಲ್ಲಿ ಮರುಪಾವತಿ ಮಾಡಲಾಗದ ತೆರಿಗೆಗಳು/ಸುಂಕಗಳು/ಸುಂಕಗಳ ಮರುಪಾವತಿಗೆ WTO ಸ್ನೇಹಿ ಕಾರ್ಯವಿಧಾನವಾಗಿದೆ.
  4. ROSCTL ಯೋಜನೆಯ ಮೂಲಕ ಕೇಂದ್ರ/ರಾಜ್ಯ ತೆರಿಗೆಗಳಿಂದ ವಿನಾಯಿತಿ ನೀಡುವ ಮೂಲಕ ಜವಳಿ ಕ್ಷೇತ್ರಕ್ಕೆ ಬೆಂಬಲವನ್ನು ವಿಸ್ತರಿಸಲಾಗಿದೆ, ಈಗ ಇದನ್ನು 2024ರ ಮಾರ್ಚ್ ವರೆಗೆ ವಿಸ್ತರಿಸಲಾಗಿದೆ.
  5. ಮೂಲ ಪ್ರಮಾಣಪತ್ರಕ್ಕಾಗಿ ಸಾಮಾನ್ಯ ಡಿಜಿಟಲ್ ಪ್ಲಾಟ್‌ಫಾರ್ಮ್ ಅನ್ನು ವ್ಯಾಪಾರಕ್ಕೆ ಅನುಕೂಲವಾಗುವಂತೆ ಮತ್ತು ರಫ್ತುದಾರರಿಂದ ಎಫ್‌ಟಿಎ ಬಳಕೆಯನ್ನು ಹೆಚ್ಚಿಸುವ ಉದ್ದೇಶದಿಂದ ಪ್ರಾರಂಭಿಸಲಾಗಿದೆ.
  6. ರಫ್ತು ಯೋಜನೆಗಾಗಿ ವ್ಯಾಪಾರ ಮೂಲಸೌಕರ್ಯ (TIES), ಮಾರುಕಟ್ಟೆ ಪ್ರವೇಶ ಉಪಕ್ರಮ (MAI) ಯೋಜನೆ ಮತ್ತು ಸಾರಿಗೆ ಮೂಲಸೌಕರ್ಯ ಮತ್ತು ವ್ಯಾಪಾರ ಮೂಲಸೌಕರ್ಯ ಮತ್ತು ಮಾರ್ಕೆಟಿಂಗ್ ಅನ್ನು ಉತ್ತೇಜಿಸಲು ಮಾರ್ಕೆಟಿಂಗ್ ಸಹಾಯ (TMA) ಯೋಜನೆಗಳು.

 

ವಿಷಯಗಳುಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ಮಿಷನ್ ಇಂದ್ರಧನುಷ್ (IMI) 3.0:


(Mission Indradhanush (IMI) 3.0)

ಸಂದರ್ಭ:

ಇತ್ತೀಚೆಗೆ, 29 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳ 250 ಜಿಲ್ಲೆಗಳಲ್ಲಿ ವಾಡಿಕೆಯ ಪ್ರತಿರಕ್ಷಣೆ ಕಾರ್ಯಕ್ರಮಗಳ ಅಡಿಯಲ್ಲಿ ಲಸಿಕೆಗಳನ್ನು ತಪ್ಪಿಸಿಕೊಂಡ ಗರ್ಭಿಣಿಯರು ಮತ್ತು ಮಕ್ಕಳನ್ನು ತಲುಪಲು, 15-ದಿನಗಳ ದೀರ್ಘಾವಧಿಯ ಎರಡು ಸುತ್ತಿನ ಇಂಟೆನ್ಸಿಫೈಡ್ ಮಿಷನ್ ಇಂದ್ರಧನುಷ್ 3.0 (IMI 3.0) ಅನ್ನು ನಡೆಸಲಾಯಿತು.

  1. ಇಂಟೆನ್ಸಿಫೈಡ್ ಮಿಷನ್ ಇಂದ್ರಧನುಷ್ (ಐಎಂಐ) 3.0 ರ ಅವಧಿಯಲ್ಲಿ ಸುಮಾರು 9.5 ಲಕ್ಷ ಮಕ್ಕಳು ಮತ್ತು 2.2 ಲಕ್ಷ ಗರ್ಭಿಣಿಯರಿಗೆ ಲಸಿಕೆ ನೀಡಲಾಗಿದೆ.
  2. ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ತೀವ್ರತರ ಮಿಷನ್ ಇಂದ್ರಧನುಷ್ 3.0 ಅನುಷ್ಠಾನವನ್ನು ಪ್ರಾರಂಭಿಸಲಾಗಿದೆ.

ಇಂದ್ರಧನುಷ್ 3.0 ಕುರಿತು:

ಇಂಟೆನ್ಸಿಫೈಡ್ ಮಿಷನ್ ಇಂದ್ರಧನುಷ್ (IMI) 3.0 ಅಥವಾ ವಾಡಿಕೆಯ ರೋಗನಿರೋಧಕ/ ಪ್ರತಿರಕ್ಷಣೆ ಕಾರ್ಯಕ್ರಮದಿಂದ ವಂಚಿತರಾದ ಅಥವಾ ಹೊರಗುಳಿದಿರುವ ಮಕ್ಕಳು ಮತ್ತು ಗರ್ಭಿಣಿಯರನ್ನು ತಲುಪುವ ಅಭಿಯಾನವಾಗಿದೆ.

  1. ಮಿಷನ್ ಮೋಡ್‌ನಲ್ಲಿ ಮಧ್ಯಸ್ಥಿಕೆಗಳ ಮೂಲಕ ಮಕ್ಕಳು ಮತ್ತು ಗರ್ಭಿಣಿಯರಿಗೆ ಸಂಪೂರ್ಣ ಪ್ರತಿರಕ್ಷಣೆಯನ್ನು ವೇಗಗೊಳಿಸಲು ಇದು ಗುರಿಯನ್ನು ಹೊಂದಿದೆ.
  2. ಇದರ ಮೊದಲ ಹಂತವನ್ನು 22 ಫೆಬ್ರವರಿ 2021 ರಿಂದ 15 ದಿನಗಳವರೆಗೆ ಪ್ರಾರಂಭಿಸಲಾಗಿದೆ.
  3. ಈ ಅಭಿಯಾನವನ್ನು ದೇಶದ 29 ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಲ್ಲಿ ಮೊದಲೇ ಗುರುತಿಸಲಾದ 250 ಜಿಲ್ಲೆಗಳು/ನಗರ ಪ್ರದೇಶಗಳಲ್ಲಿ ನಡೆಸಲಾಗುತ್ತಿದೆ.
  4. ಇದರ ಅಡಿಯಲ್ಲಿ, ಕೋವಿಡ್ -19 ಸಮಯದಲ್ಲಿ ಲಸಿಕೆಯಿಂದ ವಂಚಿತರಾದ ವಲಸೆ ವ್ಯಕ್ತಿಗಳು ಮತ್ತು ತಲುಪಲು ದುರ್ಗಮ ಪ್ರದೇಶಗಳ ಫಲಾನುಭವಿಗಳನ್ನು ತಲುಪಲು ಗುರಿಯನ್ನು ನಿಗದಿಪಡಿಸಲಾಗಿದೆ.

ಜಿಲ್ಲೆಗಳ ವರ್ಗೀಕರಣ:

IMI 3.0 ಗಾಗಿ ಜಾರಿಗೊಳಿಸಲಾದ ಮಾರ್ಗಸೂಚಿಗಳ ಪ್ರಕಾರ, ಜಿಲ್ಲೆಗಳನ್ನು 313 ಕಡಿಮೆ ಅಪಾಯ, 152 ಮಧ್ಯಮ ಅಪಾಯ ಮತ್ತು 250 ಹೆಚ್ಚಿನ ಅಪಾಯದ ಜಿಲ್ಲೆಗಳಾಗಿ ವರ್ಗೀಕರಿಸಲಾಗಿದೆ.

ಏನಿದು ಮಿಷನ್ ಇಂದ್ರಧನುಷ್ ?

ಭಾರತ ಸರ್ಕಾರವು, 2014 ರ ಡಿಸೆಂಬರ್‌ 25ರಂದು, “ಮಿಷನ್ ಇಂದ್ರಧನುಷ್” ಲಸಿಕಾ ಅಭಿಯಾನವನ್ನು, ಈ ಲಸಿಕಾ ಕಾರ್ಯಕ್ರಮವನ್ನು ಬಲಪಡಿಸಲು ಮತ್ತು ಪುನಃ ಶಕ್ತಿಯುತ ಗೂಳಿಸಲು ಮತ್ತು ಎಲ್ಲಾ ಮಕ್ಕಳು ಹಾಗೂ ಗರ್ಭಿಣಿಯರಿಗೆ ಏಳು ರೋಗಗಳು ಬಾರದಂತೆ ತಡೆಯಲು ತ್ವರಿತಗತಿಯಲ್ಲಿ ಸಂಪೂರ್ಣ ರೋಗನಿರೋಧಕ (ಪ್ರತಿರಕ್ಷಣೆ) ವ್ಯಾಪ್ತಿಯನ್ನು ಸಾಧಿಸಲು, ಪ್ರಾರಂಭಿಸಿತು.

ಇಂದ್ರಧನುಷ್ ಲಸಿಕಾ ಅಭಿಯಾನದ ಗುರಿ:

ಎರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಹಾಗೂ ಗರ್ಭಿಣಿಯರಿಗೆ ಲಭ್ಯವಿರುವ ಎಲ್ಲಾ ಲಸಿಕೆಗಳೊಂದಿಗೆ ಸಂಪೂರ್ಣ ರೋಗನಿರೋಧಕ ಲಸಿಕೆಯ ನೀಡುವಿಕೆಯನ್ನು (ಪ್ರತಿರಕ್ಷಣೆಯನ್ನು) ಖಚಿತಪಡಿಸುವುದು ಈ ಅಭಿಯಾನದ ಅಂತಿಮ ಗುರಿಯಾಗಿದೆ.

  1. ಈವರೆಗೆ ತಲುಪಲಾಗದ ಪ್ರದೇಶಗಳನ್ನು ಗುರಿಯಾಗಿಟ್ಟು, ವಲಸಿಗರನ್ನು ಹೊಂದಿದ ಕೊಳಗೇರಿಗಳು, ಇಟ್ಟಿಗೆ ಸುಡುವ ಜಾಗ, ಅಲೆಮಾರಿಗಳು ವಾಸಿಸುವ ಸ್ಥಳ, ಕಟ್ಟಡ ನಿರ್ಮಾಣ ಸ್ಥಳ ಮತ್ತಿತರ ಕಡೆಗಳಲ್ಲಿ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಲಸಿಕೆ ನೀಡಲಾಗುವುದು.

ಒಳಗೊಂಡಿರುವ ರೋಗಗಳು:

ಇದು ಲಸಿಕೆ ಮೂಲಕ- ತಡೆಗಟ್ಟಬಹುದಾದ 12 ರೋಗಗಳ (Vaccine-Preventable Diseases (VPD) ವಿರುದ್ಧ ರಕ್ಷಣೆಯನ್ನು ನೀಡುತ್ತದೆ, ಅಂದರೆ ಡಿಫ್ತಿರಿಯಾ, ನಾಯಿ ಕೆಮ್ಮು, ಧನುರ್ವಾಯು, ಪೋಲಿಯೊ, ಕ್ಷಯ, ಹೆಪಟೈಟಿಸ್ ಬಿ, ಮೆನಿಂಜೈಟಿಸ್ ಮತ್ತು ನ್ಯುಮೋನಿಯಾ, ಹಿಮೋಫಿಲಸ್ ಇನ್ಫ್ಲುಯೆನ್ಸ ಟೈಪ್ ಬಿ ಸೋಂಕುಗಳು, ಜಪಾನೀಸ್ ಎನ್ಸೆಫಾಲಿಟಿಸ್ (JE), ರೋಟವೈರಸ್ ಲಸಿಕೆ, ನ್ಯುಮೋಕೊಕಲ್ ಕಾಂಜುಗೇಟ್ ಲಸಿಕೆ (PCV) ಮತ್ತು ದಡಾರ-ರುಬೆಲ್ಲಾ (MR).

  1. ಆದಾಗ್ಯೂ, ದೇಶದ ಆಯ್ದ ಜಿಲ್ಲೆಗಳಲ್ಲಿ ಮಾತ್ರ ಜಪಾನೀಸ್ ಎನ್ಸೆಫಾಲಿಟಿಸ್ ಮತ್ತು ಹೆಮೋಫಿಲಸ್ ಇನ್ಫ್ಲುಯೆನ್ಸ ಟೈಪ್ ಬಿ ವಿರುದ್ಧ ಲಸಿಕೆ ನೀಡಲಾಗುತ್ತಿದೆ.

ತೀವ್ರತರ ಮಿಷನ್ ಇಂದ್ರಧನುಷ್  (IMI):

ಈ ರೋಗನಿರೋಧಕ ಕಾರ್ಯಕ್ರಮವನ್ನು ಇನ್ನಷ್ಟು ತ್ವರಿತ ಗೊಳಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಅಕ್ಟೋಬರ್ 8, 2017 ರಂದು ತೀವ್ರತರ ಮಿಷನ್ ಇಂದ್ರಧನುಷ್ ಅನ್ನು(IMI) ಅನ್ನು ಪ್ರಾರಂಭಿಸಿದರು.

ಈ ಮೂಲಕ, ಭಾರತ ಸರ್ಕಾರವು, ವಾಡಿಕೆಯ ರೋಗನಿರೋಧಕ ಲಸಿಕಾ ಕಾರ್ಯಕ್ರಮದಿಂದ  (uncovered under the routine immunization programme/UIP) ಹೊರಗುಳಿದಿರುವ  ಎರಡು ವರ್ಷ ವಯಸ್ಸಿನ ವರೆಗಿನ ಪ್ರತಿ ಮಗುವನ್ನು ಮತ್ತು ಎಲ್ಲ ಗರ್ಭಿಣಿಯರನ್ನು ತಲುಪಲು ಉದ್ದೇಶಿಸಿದೆ.

  1. ಆಯ್ದ ಜಿಲ್ಲೆಗಳು ಮತ್ತು ನಗರಗಳಲ್ಲಿ ರೋಗನಿರೋಧಕತೆಯ ವ್ಯಾಪ್ತಿಯನ್ನು ಸುಧಾರಿಸುವತ್ತ ಗಮನ ಹರಿಸುವುದು ಮತ್ತು 2018 ರ ಡಿಸೆಂಬರ್ ವೇಳೆಗೆ 90% ಕ್ಕಿಂತ ಹೆಚ್ಚಿನ ರೋಗನಿರೋಧಕವನ್ನು / ಪ್ರತಿರಕ್ಷಣೆಯನ್ನು ಸಾಧಿಸುವುದು ಈ ವಿಶೇಷ ಅಭಿಯಾನದ ಉದ್ದೇಶವಾಗಿದೆ.
  2. ಮಿಷನ್ ಇಂದ್ರಧನುಷ್ ಮುಖ್ಯವಾಗಿ ಕಾಮನಬಿಲ್ಲಿನಲ್ಲಿರುವ ಏಳು ಬಣ್ಣಗಳಂತೆ , 2020 ರ ಹೊತ್ತಿಗೆ ಎಲ್ಲಾ ಮಕ್ಕಳು ಏಳು ರೋಗಗಳಾದ ಸಿಡುಬು, ಡಿಫ್ತೀರಿಯಾ , ನಾಯಿಕೆಮ್ಮು, ಧನುರ್ವಾಯು, ಪೋಲಿಯೊ , ಕ್ಷಯರೋಗ, ದಡಾರ ಮತ್ತು ಹೆಪಟೈಟಿಸ್ B ಗಳಂತಹ ತಡೆಗಟ್ಟಬಹುದಾದ ಏಳು ರೋಗಗಳಿಗೆ ಲಸಿಕೆಯನ್ನು ಹಾಕುವ ಗುರಿ ಹೊಂದಿದೆ.

ತೀವ್ರತರ ಮಿಷನ್ ಇಂದ್ರಧನುಷ್  (IMI)2.0:

31 ಅಕ್ಟೋಬರ್ 2019 ರಂದು ತೀವ್ರತರ ಮಿಷನ್ ಇಂದ್ರಧನುಷ್ 2.0 ಅನ್ನು ಪ್ರಾರಂಭಿಸಲಾಯಿತು.

ದೇಶದಲ್ಲಿ ಒಂದು ಮಗುವೂ ಲಸಿಕೆಯ ಪಡೆಯುವಿಕೆಯಿಂದ ಹೊರಗುಳಿಯದಂತೆ ನೋಡಿಕೊಳ್ಳುವುದು ಇದರ ಉದ್ದೇಶವಾಗಿತ್ತು.

ಇದು “ಕಡಿಮೆ” ಪ್ರತಿರಕ್ಷಣೆ ಹೊಂದಿರುವ ಪ್ರದೇಶಗಳಲ್ಲಿ ವ್ಯಾಪ್ತಿಯನ್ನು ಸುಧಾರಿಸಲು ವಿಶೇಷ ಗಮನವನ್ನು ಕೇಂದ್ರೀಕರಿಸಿದೆ.

‘IMI 2.0’ ಮೂಲಕ, ಭಾರತ ಸರ್ಕಾರದ ಆರೋಗ್ಯ ಸಚಿವಾಲಯವು, ದೇಶದ 271 ಜಿಲ್ಲೆಗಳಲ್ಲಿ ವಾಡಿಕೆಯ ರೋಗನಿರೋಧಕ ಲಸಿಕಾ ಕಾರ್ಯಕ್ರಮದಿಂದ  (uncovered under the routine immunization programme/UIP) ಹೊರಗುಳಿದಿರುವ / ಭಾಗಶಃ ಲಸಿಕಾಕರಣಕ್ಕೆ ಒಳಪಟ್ಟಿರುವ  ಎರಡು ವರ್ಷ ವಯಸ್ಸಿನ ವರೆಗಿನ ಪ್ರತಿ ಮಗುವನ್ನು ಮತ್ತು ಎಲ್ಲ ಗರ್ಭಿಣಿಯರನ್ನು ತಲುಪಲು ಉದ್ದೇಶಿಸಿದೆ.

mission_indradhanush

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಅಂತರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳು (IFSC) ಎಂದರೇನು?


(What are International Financial Services Centres(IFSC)?)

ಸಂದರ್ಭ:

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಡಿಸೆಂಬರ್ 3 ರಂದು ಫಿನ್-ಟೆಕ್ ಕುರಿತ ಚಿಂತನ-ಮಂಥನ ವೇದಿಕೆಯಾದ ಇನ್ಫಿನಿಟಿ ಫೋರಂ ಅನ್ನು ಉದ್ಘಾಟಿಸಲಿದ್ದಾರೆ.

  1. ಈ ಕಾರ್ಯಕ್ರಮವನ್ನು GIFT-City (ಗುಜರಾತ್ ಇಂಟರ್‌ನ್ಯಾಶನಲ್ ಫೈನಾನ್ಸ್ ಟೆಕ್-ಸಿಟಿ) ಮತ್ತು ಬ್ಲೂಮ್‌ಬರ್ಗ್ ನ ಸಹಯೋಗದೊಂದಿಗೆ ಭಾರತ ಸರ್ಕಾರದ ಆಶ್ರಯದಲ್ಲಿ ‘ಅಂತರರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರ ಪ್ರಾಧಿಕಾರ’ (IFSCA) ಆಯೋಜಿಸುತ್ತಿದೆ.
  2. ಫೋರಮ್‌ನ ಮೊದಲ ಆವೃತ್ತಿಯಲ್ಲಿ ಇಂಡೋನೇಷ್ಯಾ, ದಕ್ಷಿಣ ಆಫ್ರಿಕಾ ಮತ್ತು ಯುಕೆ ಪಾಲುದಾರ ರಾಷ್ಟ್ರಗಳಾಗಿ ಭಾಗವಹಿಸುತ್ತಿವೆ.

ಇನ್ಫಿನಿಟಿ ಫೋರಮ್ ಬಗ್ಗೆ:

ಇಂಟರ್ನ್ಯಾಷನಲ್ ಫೈನಾನ್ಷಿಯಲ್ ಸರ್ವೀಸಸ್ ಸೆಂಟರ್ಸ್ ಅಥಾರಿಟಿಯ (IFSCA) ಪ್ರಮುಖವಾದ ಇನ್ಫಿನಿಟಿ ಫೋರಮ್ ಫಿನ್ಟೆಕ್ ಮತ್ತು ಜಾಗತಿಕ ನಾಯಕತ್ವದ ಸಮ್ಮೇಳನವಾಗಿದ್ದು, ಇಲ್ಲಿ ಜಗತ್ತಿನಾದ್ಯಂತ ಇರುವ ಸಮಸ್ಯೆಗಳು, ಪ್ರಗತಿಪರ ವಿಚಾರಗಳು, ನವೀನ ತಂತ್ರಜ್ಞಾನಗಳನ್ನು ಕಂಡುಹಿಡಿಯಲಾಗುತ್ತದೆ ಮತ್ತು ಚರ್ಚಿಸಲಾಗುತ್ತದೆ.

  1. ಇನ್ಫಿನಿಟಿ-ಫೋರಮ್ ಮೂಲಕ, ನೀತಿ, ವ್ಯಾಪಾರ ಮತ್ತು ತಂತ್ರಜ್ಞಾನದಲ್ಲಿ ವಿಶ್ವ-ಪ್ರಸಿದ್ಧ ಪ್ರತಿಭೆಗಳು ಒಟ್ಟಾಗಿ ಸೇರಿ ಮತ್ತು ಫಿನ್-ಟೆಕ್‌ನಲ್ಲಿ ತಂತ್ರಜ್ಞಾನ ಮತ್ತು ನಾವೀನ್ಯತೆಗಳನ್ನು ಹೇಗೆ ಬಳಸಿಕೊಳ್ಳಬೇಕು ಮತ್ತು ಎಲ್ಲರಿಗೂ ಸಮಗ್ರವಾಗಿ ಪ್ರಯೋಜನವನ್ನು ಪಡೆಯಲು ಮತ್ತು ಅದನ್ನು ಉದ್ಯಮದಲ್ಲಿ ಹೇಗೆ ಬಳಸಬಹುದು ಎಂಬುದನ್ನು ಚರ್ಚಿಸುತ್ತಾರೆ.
  2. ಫೋರಂನ ಕಾರ್ಯಸೂಚಿಯು “ಬಿಯಾಂಡ್” ಎಂಬ ವಿಷಯದ ಮೇಲೆ ಕೇಂದ್ರೀಕೃತವಾಗಿದೆ. ಇದು ‘ಫಿನ್-ಟೆಕ್ ಬಿಯಾಂಡ್ ಬೌಂಡರೀಸ್,’ (ಹಣಕಾಸು-ತಂತ್ರಜ್ಞಾನವು ಸರ್ವೋಚ್ಚ ಹಂತದವರೆಗೆ), ‘ಫಿನ್-ಟೆಕ್ ಬಿಯಾಂಡ್ ಫೈನಾನ್ಸ್’ (ಹಣಕಾಸು-ತಂತ್ರಜ್ಞಾನವು ಸರ್ವೋಚ್ಚ ಹಣಕಾಸು ಹಂತದವರೆಗೆ) ಇತ್ಯಾದಿಗಳಂತಹ ವಿವಿಧ ಉಪ-ಥೀಮ್‌ಗಳನ್ನು ಒಳಗೊಂಡಿದೆ.
  3. 70ಕ್ಕೂ ಹೆಚ್ಚು ದೇಶಗಳು ಈ ವೇದಿಕೆಯಲ್ಲಿ ಭಾಗವಹಿಸಲಿವೆ.

IFSCA ಕುರಿತು:

ಅಂತರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರ ಪ್ರಾಧಿಕಾರವು (International Financial Services Centres Authority -IFSCA) ಗುಜರಾತಿನ ಗಾಂಧಿನಗರದ GIFT-ಸಿಟಿಯಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ.

  1. ಇದನ್ನು ಅಂತರರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರ ಪ್ರಾಧಿಕಾರ ಕಾಯಿದೆ’, 2019 ರ ಅಡಿಯಲ್ಲಿ ಸ್ಥಾಪಿಸಲಾಗಿದೆ.
  2. ಈ ಸಂಸ್ಥೆಯು ಭಾರತದಲ್ಲಿನ ಅಂತರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರದಲ್ಲಿ ಹಣಕಾಸು ಉತ್ಪನ್ನಗಳು, ಹಣಕಾಸು ಸೇವೆಗಳು ಮತ್ತು ಹಣಕಾಸು ಸಂಸ್ಥೆಗಳ ನಿಯಂತ್ರಣ ಮತ್ತು ಅಭಿವೃದ್ಧಿಗಾಗಿ ಏಕೀಕೃತ ಪ್ರಾಧಿಕಾರವಾಗಿ ಕಾರ್ಯನಿರ್ವಹಿಸುತ್ತದೆ.
  3. ಪ್ರಸ್ತುತ GIFT – IFSCA ಭಾರತದಲ್ಲಿನ ಮೊದಲ ಅಂತಾರಾಷ್ಟ್ರೀಯ ಹಣಕಾಸು ಸೇವೆಗಳ ಕೇಂದ್ರವಾಗಿದೆ.

ಅಂತರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರದ (IFSC) ಕುರಿತು:

ಅಂತರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳು (International Financial Services Centres – IFSC) ದೇಶೀಯ ಆರ್ಥಿಕತೆಯ ವ್ಯಾಪ್ತಿಯ ಹೊರಗಿನ ಗ್ರಾಹಕರ ಹಣಕಾಸಿನ ಅಗತ್ಯಗಳನ್ನು ಪೂರೈಸುತ್ತವೆ.

  1. IFSC ಗಡಿಯಾಚೆಗಿನ ಹಣಕಾಸು ಹರಿವುಗಳು, ಹಣಕಾಸು ಉತ್ಪನ್ನಗಳು ಮತ್ತು ಸೇವೆಗಳೊಂದಿಗೆ ವ್ಯವಹರಿಸುತ್ತದೆ.
  2. ಲಂಡನ್, ನ್ಯೂಯಾರ್ಕ್ ಮತ್ತು ಸಿಂಗಾಪುರಗಳನ್ನು ಜಾಗತಿಕ ಹಣಕಾಸು ಕೇಂದ್ರಗಳೆಂದು ಪರಿಗಣಿಸಬಹುದು.

IFSC ಒದಗಿಸುವ ಸೇವೆಗಳು:

  1. ವ್ಯಕ್ತಿಗಳು, ನಿಗಮಗಳು ಮತ್ತು ಸರ್ಕಾರಗಳಿಗೆ ನಿಧಿ ಸಂಗ್ರಹಿಸುವ ಸೇವೆಗಳು.
  2. ಪಿಂಚಣಿ ನಿಧಿಗಳು, ವಿಮಾ ಕಂಪನಿಗಳು ಮತ್ತು ಮ್ಯೂಚುವಲ್ ಫಂಡ್‌ಗಳಿಂದ ಆಸ್ತಿ ನಿರ್ವಹಣೆ (Asset management) ಮತ್ತು ಜಾಗತಿಕ ಪೋರ್ಟ್‌ಫೋಲಿಯೊ ವೈವಿಧ್ಯೀಕರಣವನ್ನು (Global Portfolio Diversification) ಕೈಗೊಳ್ಳಲಾಗುತ್ತದೆ.
  3. ಆರ್ಥಿಕ ನಿರ್ವಹಣೆ (Wealth management).
  4. ಜಾಗತಿಕ ತೆರಿಗೆ ನಿರ್ವಹಣೆ ಮತ್ತು ಕ್ರಾಸ್-ಬಾರ್ಡರ್ ತೆರಿಗೆ ಹೊಣೆಗಾರಿಕೆ ಆಪ್ಟಿಮೈಸೇಶನ್ (Cross-Border Tax Liability Optimization), ಇದು ಹಣಕಾಸಿನ ಮಧ್ಯವರ್ತಿಗಳು, ಲೆಕ್ಕಪರಿಶೋಧಕರು ಮತ್ತು ಕಾನೂನು ಸಂಸ್ಥೆಗಳಿಗೆ ವ್ಯಾಪಾರ ಅವಕಾಶವನ್ನು ಒದಗಿಸುತ್ತದೆ.
  5. ಜಾಗತಿಕ ಮತ್ತು ಪ್ರಾದೇಶಿಕ ಕಾರ್ಪೊರೇಟ್ ಖಜಾನೆ ನಿರ್ವಹಣಾ ಕಾರ್ಯಾಚರಣೆಗಳು, ನಿಧಿ ಸಂಗ್ರಹಣೆ, ದ್ರವ್ಯತೆ ಹೂಡಿಕೆ ಮತ್ತು ನಿರ್ವಹಣೆ, ಮತ್ತು ಆಸ್ತಿ-ಬಾಧ್ಯತೆಯ ಹೊಂದಾಣಿಕೆಯನ್ನು ಒಳಗೊಂಡಿರುತ್ತದೆ.
  6. ವಿಮೆ ಮತ್ತು ಮರುವಿಮೆಯಂತಹ ಅಪಾಯ ನಿರ್ವಹಣೆ ಕಾರ್ಯಾಚರಣೆಗಳು.
  7. ಅಂತರಾಷ್ಟ್ರೀಯ ಸಂಸ್ಥೆಗಳ ನಡುವೆ ವಿಲೀನ ಮತ್ತು ಸ್ವಾಧೀನ ಚಟುವಟಿಕೆಗಳು.

IFSC ಅನ್ನು ‘ವಿಶೇಷ ಆರ್ಥಿಕ ವಲಯ’ (SEZ) ನಲ್ಲಿ ಸ್ಥಾಪಿಸಬಹುದೇ?

SEZ ಕಾಯಿದೆ, 2005 ರಲ್ಲಿ ಕೇಂದ್ರ ಸರ್ಕಾರದ ಅನುಮೋದನೆಯ ನಂತರ ‘ವಿಶೇಷ ಆರ್ಥಿಕ ವಲಯ’ (Special Economic Zone- SEZ) ದಲ್ಲಿ ಅಥವಾ SEZ ರೂಪದಲ್ಲಿ ಅಂತರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರವನ್ನು (IFSC) ಸ್ಥಾಪಿಸಲು ಅನುಮತಿ ನೀಡಲಾಗಿದೆ.

ಭಾರತದಲ್ಲಿ ಅಂತರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರಗಳು:

ಭಾರತದಲ್ಲಿ ಮೊದಲ ಅಂತರಾಷ್ಟ್ರೀಯ ಹಣಕಾಸು ಸೇವಾ ಕೇಂದ್ರವನ್ನು (IFSC) ಗಾಂಧಿನಗರದಲ್ಲಿರುವ ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ  (Gujarat International Finance Tec-City) GIFT ಸಿಟಿಯಲ್ಲಿ ಸ್ಥಾಪಿಸಲಾಗಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು:ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

5G-ತಂತ್ರಜ್ಞಾನ:


(5G technology)

ಸಂದರ್ಭ:

ಇತ್ತೀಚೆಗೆ ಬಿಡುಗಡೆಯಾದ ‘ಎರಿಕ್ಸನ್ ಮೊಬಿಲಿಟಿ ವರದಿ’ ಪ್ರಕಾರ:

  1. ಭಾರತದಲ್ಲಿ ಐದನೇ ತಲೆಮಾರಿನ ಟೆಲಿಕಾಂ ಸೇವೆಗಳ ಮೊಬೈಲ್ ಸೇವಾ ಬಳಕೆದಾರರ ಸಂಖ್ಯೆ 2027 ರ ಅಂತ್ಯದ ವೇಳೆಗೆ 39% ಅಥವಾ ಸುಮಾರು 500 ಮಿಲಿಯನ್ ಚಂದಾದಾರಿಕೆಗಳನ್ನು ಹೊಂದುವ ನಿರೀಕ್ಷೆಯಿದೆ.
  2. 2021 ರ ಅಂತ್ಯದ ವೇಳೆಗೆ ಸ್ಮಾರ್ಟ್‌ಫೋನ್ ಬಳಕೆದಾರರ ಒಟ್ಟು ಸಂಖ್ಯೆ 810 ಮಿಲಿಯನ್ ಆಗುವ ನಿರೀಕ್ಷೆಯಿದೆ ಮತ್ತು 2027 ರ ವೇಳೆಗೆ 7% ನ ಸಂಯುಕ್ತ ವಾರ್ಷಿಕ ಬೆಳವಣಿಗೆ ದರದಲ್ಲಿ 1.2 ಶತಕೋಟಿಗೂ ಮೀರಿ ಬೆಳೆಯುವ ನಿರೀಕ್ಷೆಯಿದೆ.
  3. 2021 ರಲ್ಲಿ, 68% ಜನರು 4G ಸೇವೆಯನ್ನು ಬಳಸುತ್ತಿದ್ದಾರೆ, ಇದು ಮೊಬೈಲ್ ಸೇವಾ ಬಳಕೆದಾರರು 5G ಸೇವೆಯನ್ನು ಅಳವಡಿಸಿಕೊಳ್ಳುವುದರಿಂದ 2027 ರಲ್ಲಿ 4G ಸೇವೆಯನ್ನು ಬಳಸುವವರ ಸಂಖ್ಯೆಯು 55% ಕ್ಕೆ ಇಳಿಯುವ ನಿರೀಕ್ಷೆಯಿದೆ.

5 G ಎಂದರೇನು?

  1. 5G ಎಂಬುದು ಐದನೇ ತಲೆಮಾರಿನ ಸೆಲ್ಯುಲಾರ್ ತಂತ್ರಜ್ಞಾನ. ವೇಗ ಮತ್ತು ಹೆಚ್ಚು ವಿಶ್ವಾಸಾರ್ಹ ಸಂವಹನವನ್ನು ಈ ತಂತ್ರಜ್ಞಾನ ಒದಗಿಸುತ್ತದೆ. 5ಜಿ ಗರಿಷ್ಠ ನೆಟ್‌ವರ್ಕ್ ಡೇಟಾ ವೇಗವು ಸೆಕೆಂಡಿಗೆ 2ರಿಂದ 20 ಗಿಗಾಬೈಟ್ (GBPS) ಇರಲಿದೆ ಎಂದು ಹೇಳಲಾಗುತ್ತಿದೆ.
  2. 5G ತಂತ್ರಜ್ಞಾನವು ಮುಂದಿನ ಪೀಳಿಗೆಯ ಮೊಬೈಲ್ ಬ್ರಾಡ್‌ಬ್ಯಾಂಡ್ ಆಗಿದೆ. ಈ ತಂತ್ರಜ್ಞಾನವು ಅಂತಿಮವಾಗಿ 4G LTE ಸಂಪರ್ಕಗಳನ್ನು ಬದಲಾಯಿಸುತ್ತದೆ ಅಥವಾ ಗಮನಾರ್ಹವಾಗಿ ಹೆಚ್ಚಿಸುತ್ತದೆ.
  3. 5G ಸೂಪರ್ ಫಾಸ್ಟ್ ಡೌನ್‌ಲೋಡ್ ಮತ್ತು ಅಪ್‌ಲೋಡ್ ವೇಗವನ್ನು ನೀಡುತ್ತದೆ.
  4. 5G ಮಲ್ಟಿ-ಜಿಬಿಪಿಎಸ್ ಗರಿಷ್ಠ ದರಗಳು, ಅಲ್ಟ್ರಾ- ಲೋ ಲೇಟೆನ್ಸಿ, ಬೃಹತ್ ಸಾಮರ್ಥ್ಯ ಮತ್ತು ಹೆಚ್ಚು ಏಕರೂಪದ ಬಳಕೆದಾರ ಅನುಭವವನ್ನು ನೀಡುತ್ತದೆ.

5G ತಂತ್ರಜ್ಞಾನದ ವೈಶಿಷ್ಟಗಳು ಮತ್ತು ಪ್ರಯೋಜನಗಳು:

  1. ಈ ತಂತ್ರಜ್ಞಾನವು ‘ಮಿಲಿಮೀಟರ್ ವೇವ್ ಸ್ಪೆಕ್ಟ್ರಮ್’ (30-300 GHz) ನಲ್ಲಿ ಕಾರ್ಯನಿರ್ವಹಿಸುತ್ತದೆ, ಇದರ ಮೂಲಕ ಹೆಚ್ಚಿನ ಪ್ರಮಾಣದ ಡೇಟಾವನ್ನು ಅತಿ ಹೆಚ್ಚಿನ ವೇಗದಲ್ಲಿ ಕಳುಹಿಸಬಹುದು.
  2. 5 ಜಿ ತಂತ್ರಜ್ಞಾನವು ಕಡಿಮೆ, ಮಧ್ಯಮ ಮತ್ತು ಹೆಚ್ಚಿನ ಆವರ್ತನ ವರ್ಣಪಟಲ( frequency spectrum) ಎಂಬ ಮೂರು ಬ್ಯಾಂಡ್‌ಗಳಲ್ಲಿ ಕಾರ್ಯನಿರ್ವಹಿಸುತ್ತದೆ.
  3. ಕಡಿಮೆ ಬ್ಯಾಂಡ್ ತರಂಗಾಂತರವು ಇಂಟರ್ನೆಟ್ ಮತ್ತು ಡೇಟಾ ವಿನಿಮಯದ ವ್ಯಾಪ್ತಿ ಮತ್ತು ವೇಗದ ದೃಷ್ಟಿಯಿಂದ ಉತ್ತಮ ಎನಿಸಿದೆ. ಇದರ ಗರಿಷ್ಠ ವೇಗವನ್ನು 100 ಎಂಬಿಪಿಎಸ್‌ಗೆ ಸೀಮಿತಗೊಳಿಸಲಾಗಿದೆ. ಅತಿಹೆಚ್ಚು ಇಂಟರ್ನೆಟ್ ವೇಗ ಅಗತ್ಯವಿಲ್ಲದ ಮೊಬೈಲ್ ಬಳಕೆದಾರರಿಗೆ ಇದನ್ನು ನೀಡಬಹುದು. ಉದ್ಯಮದ ವಿಶೇಷ ಅಗತ್ಯಗಳಿಗೆ ಇದು ಸೂಕ್ತವಲ್ಲ.
  4. ಮಧ್ಯಮ ಬ್ಯಾಂಡ್ ತರಂಗಾಂತರವು ಕಡಿಮೆ ಬ್ಯಾಂಡ್‌ಗೆ ಹೋಲಿಸಿದರೆ ಅಧಿಕ ವೇಗವನ್ನು ಹೊಂದಿದೆ. ಆದರೆ ವ್ಯಾಪ್ತಿ ಮತ್ತು ಸಂಕೇತಗಳ ನುಗ್ಗುವಿಕೆಯ (ಪೆನಿಟ್ರೇಷನ್) ವಿಷಯದಲ್ಲಿ ಮಿತಿಗಳಿವೆ. ಈ ಬ್ಯಾಂಡ್ ಅನ್ನು ಕೈಗಾರಿಕೆಗಳಲ್ಲಿ ಬಳಸಬಹುದು. ನಿರ್ದಿಷ್ಟ ಉದ್ಯಮದ ಅಗತ್ಯಗಳಿಗೆ ತಕ್ಕಂತೆ ರೂಪಿಸಬಹುದು.
  5. ಅಧಿಕ ಬ್ಯಾಂಡ್ ತರಂಗಾಂತರವು ಹೆಚ್ಚಿನ ವೇಗಕ್ಕೆ ಹೆಸರಾಗಿದೆ. ಆದರೆ ಅತ್ಯಂತ ಸೀಮಿತ ವ್ಯಾಪ್ತಿ ಮತ್ತು ಸಂಕೇತ ನುಗ್ಗುವ ಹೆಚ್ಚು ಸಾಮರ್ಥ್ಯ ಹೊಂದಿದೆ. ಈ ವಿಭಾಗದಲ್ಲಿ ಇಂಟರ್ನೆಟ್ ವೇಗವು 20 ಜಿಬಿಪಿಎಸ್ ಎಂದು ಪರೀಕ್ಷಿಸಲಾಗಿದೆ. 4ಜಿಯಲ್ಲಿ ಗರಿಷ್ಠ ಇಂಟರ್ನೆಟ್ ಡೇಟಾ ವೇಗ 1 ಜಿಬಿಪಿಎಸ್‌ ಮಾತ್ರ.
  6. ಮಲ್ಟಿ-GBPS ವರ್ಗಾವಣೆ ದರಗಳು ಮತ್ತು ಅಲ್ಟ್ರಾ-ಲೋ ಲೇಟೆನ್ಸಿ(ultra-low latency) 5 ಜಿ ತಂತ್ರಜ್ಞಾನ, ಇಂಟರ್ನೆಟ್ ಆಫ್ ಥಿಂಗ್ಸ್ (IoT) ಮತ್ತು ಕೃತಕ ಬುದ್ಧಿಮತ್ತೆಯ ಶಕ್ತಿಯನ್ನು ಬಳಸಿಕೊಳ್ಳುವ ಅಪ್ಲಿಕೇಶನ್‌ಗಳನ್ನು ಬೆಂಬಲಿಸುತ್ತದೆ.
  7. 5 ಜಿ ನೆಟ್‌ವರ್ಕ್‌ಗಳ ಹೆಚ್ಚಿದ ಸಾಮರ್ಥ್ಯವು ಕ್ರೀಡಾಕೂಟಗಳು ಮತ್ತು ಸುದ್ದಿ ಪ್ರಸಾರದ ಸಮಯದಲ್ಲಿ ಸಂಭವಿಸುವಂತಹ ಲೋಡ್ ಸ್ಪೈಕ್‌ಗಳ ಪ್ರಭಾವವನ್ನು ಕಡಿಮೆ ಮಾಡುತ್ತದೆ.

5g

 

ತಂತ್ರಜ್ಞಾನದ ಮಹತ್ವ:

ಭಾರತದ ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿ (National Digital Communications Policy) 2018, 5 ಜಿ ಯ ಮಹತ್ವವನ್ನು ಎತ್ತಿ ತೋರಿಸುತ್ತದೆ, 5 ಜಿ, ಕ್ಲೌಡ್, ಇಂಟರ್ನೆಟ್ ಆಫ್ ಥಿಂಗ್ಸ್ (IoT) ಮತ್ತು ಡೇಟಾ ಅನಾಲಿಟಿಕ್ಸ್ ಸೇರಿದಂತೆ ಹೆಚ್ಚುತ್ತಿರುವ ಸ್ಟಾರ್ಟ್ ಅಪ್ ಸಮುದಾಯವು ಅವಕಾಶಗಳ ಹೊಸ ದಿಗಂತವನ್ನು ತೆರೆಯುತ್ತದೆ ಮತ್ತು ಡಿಜಿಟಲ್ ಬಳಕೆಯನ್ನು ತೀವ್ರಗೊಳಿಸುವ ಮತ್ತು ಗಾಢವಾಗಿಸುವ ಭರವಸೆ ನೀಡುತ್ತದೆ.

5G ಯಿಂದ ಆರೋಗ್ಯದ ಅಪಾಯಗಳು:

ಇಲ್ಲಿಯವರೆಗೆ, ಮತ್ತು ಸಾಕಷ್ಟು ಸಂಶೋಧನೆಗಳನ್ನು ಮಾಡಿದ ನಂತರ, ವೈರ್‌ಲೆಸ್ ತಂತ್ರಜ್ಞಾನಗಳಿಗೆ ಒಡ್ಡಿಕೊಳ್ಳುವುದರಿಂದ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮ ಬೀರುವುದಿಲ್ಲ ಎಂದು ತಿಳಿದುಬಂದಿದೆ.

  1. ಅಂಗಾಂಶ ತಾಪನ(Tissue heating)ವು, ರೇಡಿಯೊಫ್ರೀಕ್ವೆನ್ಸಿ ಕ್ಷೇತ್ರಗಳು ಮತ್ತು ಮಾನವ ದೇಹದ ನಡುವಿನ ಪರಸ್ಪರ ಕ್ರಿಯೆಯ ಮುಖ್ಯ ಕಾರ್ಯವಿಧಾನವಾಗಿದೆ. ಪ್ರಸ್ತುತ ತಂತ್ರಜ್ಞಾನಗಳ ರೇಡಿಯೊಫ್ರೀಕ್ವೆನ್ಸಿ ಮಟ್ಟಕ್ಕೆ ಒಡ್ಡಿಕೊಳ್ಳುವುದರಿಂದ ಮಾನವ ದೇಹದ ಉಷ್ಣಾಂಶದಲ್ಲಿ ನಗಣ್ಯ ಹೆಚ್ಚಳಕ್ಕೆ ಕಾರಣವಾಗುತ್ತವೆ.
  2. ರೇಡಿಯೊ ಆವರ್ತನ ಹೆಚ್ಚಾದಂತೆ, ದೇಹದ ಅಂಗಾಂಶಗಳಿಗೆ ಅದರ ನುಗ್ಗುವಿಕೆ ಕಡಿಮೆಯಾಗುತ್ತದೆ ಮತ್ತು ಶಕ್ತಿಯ ಹೀರಿಕೊಳ್ಳುವಿಕೆಯು ದೇಹದ ಮೇಲ್ಮೈಗೆ (ಚರ್ಮ ಮತ್ತು ಕಣ್ಣುಗಳು) ಸೀಮಿತವಾಗಿರುತ್ತದೆ.
  3. ರೇಡಿಯೊಫ್ರೀಕ್ವೆನ್ಸಿ ಮಟ್ಟಗಳಿಗೆ ಒಟ್ಟಾರೆ ಒಡ್ಡಿಕೊಳ್ಳುವುದು ಅಂತರರಾಷ್ಟ್ರೀಯ ಮಾರ್ಗಸೂಚಿಗಳಿಗಿಂತ ಕಡಿಮೆಯಿದ್ದರೆ, ಸಾರ್ವಜನಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿಲ್ಲ.

‘ಅಂತರರಾಷ್ಟ್ರೀಯ ಮಾನ್ಯತೆ ಮಾರ್ಗಸೂಚಿಗಳು’ ಯಾವುವು?

ವಿದ್ಯುತ್ಕಾಂತೀಯ ಕ್ಷೇತ್ರಗಳಿಗೆ ಮಾನ್ಯತೆ ಮಾರ್ಗಸೂಚಿಗಳನ್ನು ಎರಡು ಅಂತರರಾಷ್ಟ್ರೀಯ ಸಂಸ್ಥೆಗಳು ಸಿದ್ಧಪಡಿಸುತ್ತವೆ. ಪ್ರಸ್ತುತ ಅನೇಕ ದೇಶಗಳು ಅವುಗಳು ಸೂಚಿಸಿದ ಮಾರ್ಗಸೂಚಿಗಳನ್ನು ಅನುಸರಿಸುತ್ತವೆ:

  1. ಅಯಾನೀಕರಿಸದ ವಿಕಿರಣ ಸಂರಕ್ಷಣೆಯ ಅಂತರರಾಷ್ಟ್ರೀಯ ಆಯೋಗ(International Commission on Non-Ionizing Radiation Protection)
  2. ವಿದ್ಯುತ್ಕಾಂತೀಯ ಸುರಕ್ಷತೆಯ ಅಂತರರಾಷ್ಟ್ರೀಯ ಸಮಿತಿಯ ಮೂಲಕ ವಿದ್ಯುತ್ ಮತ್ತು ಎಲೆಕ್ಟ್ರಾನಿಕ್ಸ್ ಎಂಜಿನಿಯರ್‌ಗಳ ಸಂಸ್ಥೆ.(Institute of Electrical and Electronics Engineers)
  3. ಈ ಮಾರ್ಗಸೂಚಿಗಳು ತಂತ್ರಜ್ಞಾನ-ನಿರ್ದಿಷ್ಟವಾಗಿಲ್ಲ. ಅವು 300 GHz ವರೆಗಿನ ರೇಡಿಯೊಫ್ರೀಕ್ವೆನ್ಸಿಯನ್ನು ಒಳಗೊಂಡಿರುತ್ತವೆ, ಇದು 5G ತಂತ್ರಜ್ಞಾನಕ್ಕೆ ಸಂಬಂಧಿಸಿದ ಆವರ್ತನಗಳನ್ನು ಸಹ ಒಳಗೊಂಡಿದೆ.

ಅಂತರರಾಷ್ಟ್ರೀಯ ಪ್ರಯತ್ನಗಳು – ಅಂತರರಾಷ್ಟ್ರೀಯ ವಿದ್ಯುತ್ಕಾಂತೀಯ ಕ್ಷೇತ್ರಗಳು (EMF) ಯೋಜನೆ:

ಅಂತರರಾಷ್ಟ್ರೀಯ ವಿದ್ಯುತ್ಕಾಂತೀಯ ಕ್ಷೇತ್ರಗಳು  (Electromagnetic Fields- EMF) ಯೋಜನೆಯನ್ನು WHO 1996 ರಲ್ಲಿ ಆರಂಭಿಸಿತು. ಈ ಯೋಜನೆಯು 0-300 GHz ಆವರ್ತನ ವ್ಯಾಪ್ತಿಯಲ್ಲಿ ವಿದ್ಯುತ್ ಮತ್ತು ಕಾಂತೀಯ ಕ್ಷೇತ್ರಗಳಿಗೆ ಒಡ್ಡಿಕೊಳ್ಳುವುದರಿಂದ ಉಂಟಾಗುವ ಆರೋಗ್ಯದ ಪರಿಣಾಮಗಳನ್ನು ತನಿಖೆ ಮಾಡುತ್ತದೆ ಮತ್ತು EMF ವಿಕಿರಣ ಸಂರಕ್ಷಣೆ ಕುರಿತು ರಾಷ್ಟ್ರೀಯ ಅಧಿಕಾರಿಗಳಿಗೆ ಸಲಹೆ ನೀಡುತ್ತದೆ.

5G ತಂತ್ರಜ್ಞಾನದ ಓಟದಲ್ಲಿ ಭಾರತದ ಸ್ಥಾನ?

  1. ಮೂರು ಖಾಸಗಿ ದೂರವಾಣಿ ಕಂಪೆನಿಗಳಾದ, ರಿಲಯನ್ಸ್ ಜಿಯೋ ಇನ್ಫೋಕಾಮ್, ಭಾರ್ತಿ ಏರ್ಟೆಲ್ ಮತ್ತು ವಿ (Vi) ಗಳು ಸ್ಪೆಕ್ಟ್ರಮ್ ಹಂಚಿಕೆ ಮತ್ತು 5 ಜಿ ಫ್ರೀಕ್ವೆನ್ಸಿ ಬ್ಯಾಂಡ್‌ಗಳ ಸ್ಪಷ್ಟ ಮಾರ್ಗಸೂಚಿಯನ್ನು ರೂಪಿಸುವಂತೆ ದೂರಸಂಪರ್ಕ ಇಲಾಖೆಯನ್ನು ಒತ್ತಾಯಿಸುತ್ತಿವೆ.ಇದರಿಂದ ಅವುಗಳು ತಮ್ಮ ಸೇವೆಗಳನ್ನು ಅದಕ್ಕೆ ತಕ್ಕಂತೆ ಯೋಜಿಸಲು ಸಾಧ್ಯವಾಗುತ್ತದೆ.
  2. ಆದಾಗ್ಯೂ, ಒಂದು ಪ್ರಮುಖ ಅಡಚಣೆಯೆಂದರೆ, ಮೂರು ಕಂಪೆನಿಗಳಲ್ಲಿ ಕನಿಷ್ಠ ಎರಡು ಕಂಪೆನಿಗಳಾದ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾಗಳು ಸಾಕಷ್ಟು ಬಂಡವಾಳದ ಕೊರತೆಯನ್ನು ಎದುರಿಸುತ್ತಿವೆ.
  3. ಮತ್ತೊಂದೆಡೆ, ರಿಲಯನ್ಸ್ ಜಿಯೋ ದೇಶಕ್ಕಾಗಿ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ 5 ಜಿ ನೆಟ್‌ವರ್ಕ್ ಅನ್ನು ಈ ವರ್ಷದ ದ್ವಿತೀಯಾರ್ಧದಲ್ಲಿ ಪ್ರಾರಂಭಿಸಲು ಯೋಜನೆ ರೂಪಿಸಿದೆ.

5 ಜಿ ತಂತ್ರಜ್ಞಾನ ದಲ್ಲಿ ಜಾಗತಿಕ ಪ್ರಗತಿ ಏನು?

ಸರ್ಕಾರಗಳಿಗಿಂತ ಹೆಚ್ಚಾಗಿ, ಜಾಗತಿಕ ಟೆಲಿಕಾಂ ಕಂಪನಿಗಳು 5 ಜಿ ನೆಟ್‌ವರ್ಕ್‌ಗಳನ್ನು ರೂಪಿಸಲು ಪ್ರಾರಂಭಿಸಿವೆ ಮತ್ತು ಅವುಗಳನ್ನು ಪ್ರಾಯೋಗಿಕ ಆಧಾರದ ಮೇಲೆ ತಮ್ಮ ಗ್ರಾಹಕರಿಗೆ ನೀಡಲು ಪ್ರಾರಂಭಿಸಿವೆ. ಅಮೇರಿಕಾ ದ೦ತಹ ದೇಶಗಳಲ್ಲಿ, AT&T, T-Mobile, and Verizon ನಂತಹ ಕಂಪನಿಗಳು ತಮ್ಮ ಬಳಕೆದಾರರಿಗಾಗಿ ವಾಣಿಜ್ಯ 5 ಜಿ ಸೇವೆಯನ್ನು ಒದಗಿಸುವಲ್ಲಿ ಮಂಚೂಣಿಯಲ್ಲಿವೆ.

ತರಂಗಾಂತರ ಕೊರತೆ ಸರಿದೂಗಿಸುವ ಸಮಸ್ಯೆ

  1. 5ಜಿ ಮೊಬೈಲ್‌ ಸೇವೆಗೆ ಭಾರತ ಸಿದ್ಧವಾಗುತ್ತಿದ್ದರೂ ಖಾಸಗಿ ಸಂಸ್ಥೆಗಳಿಗೆ ನೀಡಲು ಬೇಕಾದಷ್ಟು ತರಂಗಾಂತರ ಇದೆಯೇ ಎಂಬುದು ದೊಡ್ಡ ಪ್ರಶ್ನೆಯಾಗಿದೆ. ಲಭ್ಯವಿರುವ 300 ಮೆಗಾಹರ್ಟ್ಸ್‌ ತರಂಗಾಂತರದಲ್ಲಿ 25 ಮೆಗಾಹರ್ಟ್ಸ್‌ ತರಂಗಾಂತರವನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಗೆ ನೀಡಬೇಕು. ಉಪಗ್ರಹಗಳ ಬಳಕೆಗಾಗಿ ಇದು ಅಗತ್ಯ. 100 ಮೆಗಾಹರ್ಟ್ಸ್‌ನಷ್ಟು ತರಂಗಾಂತರವನ್ನು ರಕ್ಷಣಾ ಕ್ಷೇತ್ರಕ್ಕೆ ನೀಡಬೇಕಾಗಿದೆ.
  2. ಆದ್ದರಿಂದ, ಹರಾಜಿಗೆ ಲಭ್ಯವಾಗುವುದು 175 ಮೆಗಾಹರ್ಟ್ಸ್‌ ಮಾತ್ರ. ಪ್ರಸಕ್ತ ದೇಶದಲ್ಲಿ ಮೊಬೈಲ್ ಸೇವೆಗಳನ್ನು ನೀಡುತ್ತಿರುವ ಸಂಸ್ಥೆಗಳಲ್ಲಿ ಇದನ್ನು ಹಂಚಿಕೆ ಮಾಡಬಾಕಾಗಿದೆ.

ದುಬಾರಿ ದರ?

  1. ಪ್ರತಿ ಗಿಗಾಹರ್ಟ್ಸ್‌ ತರಂಗಾಂತರಕ್ಕೆ ₹492 ಕೋಟಿ ನಿಗದಿ ಮಾಡಬಹುದು ಎಂದು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರವು (ಟ್ರಾಯ್‌) ಸರ್ಕಾರಕ್ಕೆ ಶಿಫಾರಸು ಮಾಡಿದೆ ಎಂಬುದನ್ನು ಭಾರತದ ದೂರಸಂಪರ್ಕ ಸೇವಾದಾತರ ಸಂಘಟನೆಯು (ಸಿಒಎಐ) ಟ್ರಾಯ್‌ಗೆ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಿದೆ.
  2. ಭಾರತ ಮತ್ತು ಇತರ ದೇಶಗಳಲ್ಲಿನ ತರಂಗಾಂತರ ದರವನ್ನು ಈ ವರದಿಯಲ್ಲಿ ಹೋಲಿಕೆ ಮಾಡಲಾಗಿದೆ. ಭಾರತದ ದರವು ಆಸ್ಟ್ರಿಯಾದ ದರಕ್ಕೆ ಹೋಲಿಸಿದರೆ 74 ಪಟ್ಟು, ಸ್ಪೇನ್‌ನಲ್ಲಿನ ದರಕ್ಕೆ ಹೋಲಿಸಿದರೆ 35 ಪಟ್ಟು ಮತ್ತು ಆಸ್ಟ್ರೇಲಿಯಾದಲ್ಲಿನ ದರಕ್ಕೆ ಹೋಲಿಸಿದರೆ 14 ಪಟ್ಟು ಹೆಚ್ಚು ಎಂದು ಹೇಳಲಾಗಿದೆ. ಇದೇ ದರವನ್ನು ದೂರಸಂಪರ್ಕ ಸೇವಾ ಕಂಪನಿಗಳು ಪಾವತಿಸಬೇಕು ಎಂದಾದರೆ ಬಳಕೆದಾರರಿಂದ ದುಬಾರಿ ಶುಲ್ಕವನ್ನು ವಸೂಲಿ ಮಾಡಬೇಕಾಗುತ್ತದೆ.

 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

ಪಾರ್ಕರ್ ಸೋಲಾರ್ ಪ್ರೊಬ್:


(Parker Solar Probe)

ಸಂದರ್ಭ:

ಇತ್ತೀಚೆಗಷ್ಟೇ ನಾಸಾದ ಪಾರ್ಕರ್ ಸೋಲಾರ್ ಪ್ರೋಬ್ ಸೂರ್ಯನಿಗೆ ಅತ್ಯಂತ ಸಮೀಪದಲ್ಲಿ ಹಾದು ಹೋಗಿತ್ತು. ‘ಪಾರ್ಕರ್ ಸೋಲಾರ್ ಪ್ರೋಬ್ ’ 363,660 mph ನ ಅಚ್ಚರಿಯ ಹಾಗೂ ಗರಿಷ್ಠ ವೇಗದಲ್ಲಿ ಸೂರ್ಯನ ಮೇಲ್ಮೈಯಿಂದ ಕೇವಲ 5.3 ಮಿಲಿಯನ್ ಮೈಲುಗಳಷ್ಟು ದೂರದಲ್ಲಿ ಸಾಗಿತು. ಇದರ ನಂತರ, ಪಾರ್ಕರ್ ಸೋಲಾರ್ ಪ್ರೋಬ್ ಇಷ್ಟು ಗರಿಷ್ಠ ವೇಗದಲ್ಲಿ ಚಲಿಸುವ ಅತ್ಯಂತ ವೇಗದ ಕೃತಕ ವಸ್ತುವಾಗಿದೆ.

  1. ಇದರ ಜೊತೆಗೆ ಪಾರ್ಕರ್ ಸೋಲಾರ್ ಪ್ರೋಬ್, ಸೂರ್ಯನಿಗೆ ಅತ್ಯಂತ ಸಮೀಪವಾಗಿ ಹಾದು ಹೋದರು ಸುರಕ್ಷಿತವಾಗಿ ಉಳಿದ ಉಪಗ್ರಹ ಎಂಬ ದಾಖಲೆಯನ್ನು ಸಹ ಬರೆದಿದೆ.

ಮುಂದಿನ ನಡೆ?

ಪಾರ್ಕರ್ ಸೋಲಾರ್ ಪ್ರೋಬ್ ಸೂರ್ಯನನ್ನು ಸುತ್ತುವುದನ್ನು ಮುಂದುವರಿಸುತ್ತದೆ ಮತ್ತು ಸೂರ್ಯನಿಗೆ ಹತ್ತಿರವಾಗುತ್ತದೆ, ಅಂತಿಮವಾಗಿ ಸೂರ್ಯನ ಮೇಲ್ಮೈಯಿಂದ 4.3 ಮಿಲಿಯನ್ ಮೈಲುಗಳ ಒಳಗೆ 430,000 mph ವೇಗದಲ್ಲಿ ಚಲಿಸುತ್ತದೆ.

  1. ಪ್ರತಿ ಬಾರಿ ಅದು ಸೂರ್ಯನ ಹತ್ತಿರದಿಂದ ಹಾದುಹೋಗುವಾಗ, ಪಾರ್ಕರ್ ಸೋಲಾರ್ ಪ್ರೋಬ್ ನಮ್ಮ ನಕ್ಷತ್ರದ ಬಗ್ಗೆ ಅಮೂಲ್ಯವಾದ ಡೇಟಾವನ್ನು ಸಂಗ್ರಹಿಸುತ್ತದೆ ಮತ್ತು ಈ ಮಾಹಿತಿಯನ್ನು ಭೂಮಿಯ ಮೇಲಿನ ವಿಜ್ಞಾನಿಗಳಿಗೆ ಅರ್ಥೈಸಲು ರವಾನಿಸುತ್ತದೆ.
  2. ಪಾರ್ಕರ್ ಸೋಲಾರ್ ಪ್ರೋಬ್ ಪ್ರಾಥಮಿಕವಾಗಿ ಸೌರ ಮಾರುತ ಮತ್ತು ಆ ಪ್ರದೇಶದಲ್ಲಿನ ಧೂಳಿನ ಕಣಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುತ್ತದೆ.

‘ಪಾರ್ಕರ್ ಸೋಲಾರ್ ಪ್ರೋಬ್ ಮಿಷನ್’ ಬಗ್ಗೆ:

current affairs

 

  1. ನಾಸಾದ ಐತಿಹಾಸಿಕ ಪಾರ್ಕರ್ ಸೋಲಾರ್ ಪ್ರೋಬ್ ಮಿಷನ್ ಸೂರ್ಯನ ಬಗ್ಗೆ ನಾವು ಇಲ್ಲಿಯವರೆಗೆ ತಿಳಿದಿರುವ ಮಾಹಿತಿಯಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ, ಅಲ್ಲಿ ಬದಲಾಗುತ್ತಿರುವ ಪರಿಸ್ಥಿತಿಗಳು ಸೌರಮಂಡಲದಾದ್ಯಂತ ಹರಡುತ್ತವೆ, ಇದು ಭೂಮಿ ಮತ್ತು ಇತರ ಪ್ರಪಂಚಗಳ ಮೇಲೆ ಪರಿಣಾಮ ಬೀರುತ್ತದೆ.
  2. ಪಾರ್ಕರ್ ಸೋಲಾರ್ ಪ್ರೋಬ್ ಸೂರ್ಯನ ವಾತಾವರಣದ ಮೂಲಕ ಚಲಿಸುತ್ತದೆ. ಈ ಪಾರ್ಕರ್ ಸೋಲಾರ್ ಪ್ರೋಬ್ ಬಾಹ್ಯಾಕಾಶ ನೌಕೆಯು ಯಾವುದೇ ಬಾಹ್ಯಾಕಾಶ ನೌಕೆಯು ತಡೆದುಕೊಳ್ಳುವುದಕ್ಕಿಂತ ಹೆಚ್ಚಿನ ಶಾಖ ಮತ್ತು ವಿಕಿರಣವನ್ನು ಸೂರ್ಯನ ಮೇಲ್ಮೈ ವಾತಾವರಣಕ್ಕೆ ಹತ್ತಿರದಲ್ಲಿದ್ದು ತಡೆದುಕೊಳ್ಳುತ್ತದೆ ಮತ್ತು ಅಂತಿಮವಾಗಿ ನಕ್ಷತ್ರದ ಹತ್ತಿರದ ವೀಕ್ಷಣೆಯ ಅವಲೋಕನಗಳನ್ನು ಮನುಕುಲಕ್ಕೆ ಒದಗಿಸುತ್ತದೆ.

ಪ್ರಯಾಣ:

  1. ಸೂರ್ಯನ ವಾತಾವರಣದ ರಹಸ್ಯಗಳನ್ನು ಬಹಿರಂಗಪಡಿಸುವ ಸಲುವಾಗಿ, ಪಾರ್ಕರ್ ಸೋಲಾರ್ ಪ್ರೋಬ್ ಸುಮಾರು ಏಳು ವರ್ಷಗಳಲ್ಲಿ ಏಳು ಪ್ರಯಾಣದ ಸಮಯದಲ್ಲಿ ಶುಕ್ರನ ಗುರುತ್ವಾಕರ್ಷಣೆಯನ್ನು ಬಳಸುತ್ತದೆ ಮತ್ತು ಕ್ರಮೇಣ ಸೂರ್ಯನ ಹತ್ತಿರ ತನ್ನ ಕಕ್ಷೆಯನ್ನು ಸ್ಥಾಪಿಸುತ್ತದೆ.
  2. ಪಾರ್ಕರ್ ಸೋಲಾರ್ ಪ್ರೋಬ್ ಬಾಹ್ಯಾಕಾಶ ನೌಕೆಯು ಸೂರ್ಯನ ವಾತಾವರಣದ ಮೂಲಕ ಸೂರ್ಯನ ಮೇಲ್ಮೈಯಿಂದ 3.9 ದಶಲಕ್ಷ ಮೈಲುಗಳಷ್ಟು ದೂರದಲ್ಲಿ ಹಾದುಹೋಗುತ್ತದೆ ಮತ್ತು ಬುಧದ ಕಕ್ಷೆಯೊಳಗೆ ಕೂಡ ಮತ್ತು ಇಲ್ಲಿಯವರೆಗೂ ಯಾವುದೇ ಬಾಹ್ಯಾಕಾಶ ನೌಕೆಯು ಬಂದಿರುವ ಹತ್ತಿರ ಕ್ಕಿಂತ 7 ಪಟ್ಟು ಹೆಚ್ಚು ಹತ್ತಿರದಲ್ಲಿದೆ.

ಪಾರ್ಕರ್ ಸೋಲಾರ್ ಪ್ರೋಬ್ ಮಿಷನ್ ನ ಉದ್ದೇಶಗಳು:

ಪಾರ್ಕರ್ ಸೋಲಾರ್ ಪ್ರೋಬ್ ಮಿಷನ್ ಮೂರು ವಿಶಾಲ ವೈಜ್ಞಾನಿಕ ಉದ್ದೇಶಗಳನ್ನು ಹೊಂದಿದೆ:

  1. ಸೌರ ಕರೋನಾ ಮತ್ತು ಸೌರ ಮಾರುತವನ್ನು ಬಿಸಿಮಾಡುವ ಮತ್ತು ವೇಗಗೊಳಿಸುವ ಶಕ್ತಿಯ ಹರಿವನ್ನು ಕಂಡುಹಿಡಿಯುವುದು.
  2. ಸೌರ ಮಾರುತ ಮೂಲಗಳಲ್ಲಿ ಪ್ಲಾಸ್ಮಾ ಮತ್ತು ಕಾಂತೀಯ ಕ್ಷೇತ್ರಗಳ ರಚನೆ ಮತ್ತು ಚಲನಶಾಸ್ತ್ರವನ್ನು ನಿರ್ಧರಿಸುವುದು.
  3. ಶಕ್ತಿಯುತ ಕಣಗಳನ್ನು ವೇಗಗೊಳಿಸುವ ಮತ್ತು ಸಾಗಿಸುವ ವ್ಯವಸ್ಥೆಯನ್ನು ಅನ್ವೇಷಣೆ ಮಾಡುವುದು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಬಾರ್ಬಡೋಸ್:

  1. ಕೆರಿಬಿಯನ್ ದ್ವೀಪದ ವಸಾಹತುಶಾಹಿ ಗತಕಾಲವನ್ನು ತೊಡೆದುಹಾಕುವ ನಿರ್ಣಾಯಕ ನಿರ್ಧಾರವನ್ನು ತೆಗೆದುಕೊಂಡಿರುವ ಬಾರ್ಬಡೋಸ್, ಯುನೈಟೆಡ್ ಕಿಂಗ್‌ಡಂನ ರಾಣಿ ಎಲಿಜಬೆತ್ ಅವರನ್ನು ತನ್ನ ರಾಷ್ಟ್ರದ ಮುಖ್ಯಸ್ಥರ ಹುದ್ದೆಯಿಂದ ಕೆಳಗಿಳಿಸಿ ತನ್ನದೇ ದೇಶದ ಮೊದಲ ಅಧ್ಯಕ್ಷರನ್ನು ಆಯ್ಕೆ ಮಾಡಿದೆ.
  2. ಇದರೊಂದಿಗೆ, ಬಾರ್ಬಡೋಸ್ ಬ್ರಿಟಿಷ್ ವಸಾಹತು ಆಗಿ ಸುಮಾರು 400 ವರ್ಷಗಳ ನಂತರ ವಿಶ್ವದ ಹೊಸ ಗಣರಾಜ್ಯವಾಗಿ ರೂಪುಗೊಂಡಿದೆ.
  3. ಬಾರ್ಬಡೋಸ್ ಹಿಂದಿನ ಬ್ರಿಟಿಷ್ ವಸಾಹತು ಆಗಿದ್ದು ಅದು 1966 ರಲ್ಲಿ ಸ್ವಾತಂತ್ರ್ಯವನ್ನು ಗಳಿಸಿತು, 300,000 ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಈ ರಾಷ್ಟ್ರವು ಬ್ರಿಟಿಷ್ ರಾಜಪ್ರಭುತ್ವದೊಂದಿಗೆ ದೀರ್ಘಕಾಲದವರೆಗೆ ಸಂಬಂಧವನ್ನು ಉಳಿಸಿಕೊಂಡಿದೆ.ಆದರೆ ಇತ್ತೀಚಿನ ವರ್ಷಗಳಲ್ಲಿ ಸಂಪೂರ್ಣ ಸಾರ್ವಭೌಮತ್ವ ಮತ್ತು ಸ್ವದೇಶಿ ನಾಯಕತ್ವಕ್ಕಾಗಿನ ಕೂಗು ಹೆಚ್ಚಾಗಿ ಕೇಳಿಬರುತ್ತಿತ್ತು.
  4. ಬಾರ್ಬಡೋಸ್ ಅನ್ನು 1625 ರಲ್ಲಿ ಬ್ರಿಟಿಷರು ವಶ ಪಡಿಸಿಕೊಂಡಿದ್ದರು. ಬ್ರಿಟಿಷ್ ಪದ್ಧತಿಗಳನ್ನು ಅನುಸರಿಸುವಲ್ಲಿ ತೋರಿದ ನಿಷ್ಠೆಗಾಗಿ ಇದನ್ನು ಕೆಲವೊಮ್ಮೆ “ಲಿಟಲ್ ಇಂಗ್ಲೆಂಡ್” ಎಂದು ಕರೆಯಲಾಗುತ್ತದೆ.
  5. ಆದಾಗ್ಯೂ, ಬಾರ್ಬಡೋಸ್ 54 ಕಾಮನ್‌ವೆಲ್ತ್ ರಾಷ್ಟ್ರಗಳಲ್ಲಿ ಒಂದಾಗಿ ಮುಂದುವರಿಯುತ್ತದೆ.

ಬಾರ್ಬಡೋಸ್ ಕುರಿತು:

ಇದು ಕೆರಿಬಿಯನ್‌ ದ್ವೀಪಗಳ ಅತ್ಯಂತ ಪೂರ್ವ ದಿಕ್ಕಿನಲ್ಲಿರುವ ದ್ವೀಪವಾಗಿದೆ.

 

ಪರಾಗ್ ಅಗರವಾಲ್:

ಸಾಮಾಜಿಕ ಮಾಧ್ಯಮ ದೈತ್ಯ ಟ್ವಿಟರ್ ಸಹ-ಸಂಸ್ಥಾಪಕ ಜಾಕ್ ಡೋರ್ಸೆ ರಾಜೀನಾಮೆ ನೀಡಿದ ನಂತರ ಭಾರತೀಯ ಮೂಲದ ‘ತಂತ್ರಜ್ಞಾನ ಕಾರ್ಯನಿರ್ವಾಹಕ’ ಪರಾಗ್ ಅಗರ್ವಾಲ್ ಅವರನ್ನು ಟ್ವಿಟರ್‌ನ ಹೊಸ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ನೇಮಿಸಲಾಗಿದೆ.


  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos