ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 2:
1. ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ. (PM-JAY).
2. ಒಪೆಕ್ + ಎಂದರೇನು?
3. ಶಾಂಘೈ ಸಹಕಾರ ಸಂಘಟನೆ.
4. ಇಂಟರ್ ಪೋಲ್.
ಸಾಮಾನ್ಯ ಜ್ಞಾನ ಪತ್ರಿಕೆ 3:
1. ಗ್ರೀನ್ ಬಾಂಡ್ಸ್ ಎಂದರೇನು?
2. GM ಆಹಾರಕ್ಕಾಗಿ ಕರಡು ನಿಯಮಾವಳಿಗಳನ್ನು ಬಿಡುಗಡೆ ಮಾಡಿದ FSSAI.
3. MGNREGS ಗಾಗಿ ಹೆಚ್ಚುವರಿಯಾಗಿ ₹10,000 ಕೋಟಿ.ಗಳ ಹಂಚಿಕೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:
1. ಇಂಗ್ಲೀಷ್ ಚಾನೆಲ್.
2. ಸುಬನ್ಸಿರಿ ಜಲವಿದ್ಯುತ್ ಯೋಜನೆ (LSHP).
ಸಾಮಾನ್ಯ ಅಧ್ಯಯನ ಪತ್ರಿಕೆ : 2
ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.
ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ. (PM-JAY):
(Ayushman Bharat Pradhan Mantri Jan Arogya Yojana (AB-PMJAY)
ಸಂದರ್ಭ:
ಇತ್ತೀಚೆಗೆ ಬಿಡುಗಡೆಯಾದ ‘ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ’ಯ ಐದನೇ ಆವೃತ್ತಿಯ ಸಂಶೋಧನೆಗಳಲ್ಲಿ, ಸಮೀಕ್ಷೆಗೆ ಒಳಗಾದ 41% ಕುಟುಂಬಗಳು ಹಿಂದಿನ ಆವೃತ್ತಿಗಿಂತ 12.3 ಶೇಕಡಾ ಹೆಚ್ಚಳವನ್ನು ತೋರಿಸಿವೆ.ಇದು ಸರ್ಕಾರದ ಪ್ರಮುಖ ಯೋಜನೆಯಾದ ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆಯ ಪರಿಣಾಮವನ್ನು ಸೂಚಿಸುತ್ತದೆ: AB-PMJAY, ಅನ್ನು ಸೆಪ್ಟೆಂಬರ್ 2018 ರಲ್ಲಿ ಪ್ರಾರಂಭಿಸಲಾಯಿತು.
ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (Pradhan Mantri Jan Arogya Yojana) ಯ ಪ್ರಮುಖ ಲಕ್ಷಣಗಳು:
- ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನೆ (PM-JAY), ಇದು ವಿಶ್ವದಲ್ಲೇ ಅತಿ ದೊಡ್ಡ ಆರೋಗ್ಯ ವಿಮೆ / ಖಾತರಿ ಯೋಜನೆಯಾಗಿದ್ದು ಸರ್ಕಾರದಿಂದ ಸಂಪೂರ್ಣ ಧನಸಹಾಯ ಪಡೆದಿದೆ ಅಥವಾ ಸಂಪೂರ್ಣವಾಗಿ ಸರ್ಕಾರಿ ಪುರಸ್ಕೃತ ಯೋಜನೆಯಾಗಿದೆ.
- ಈ ಯೋಜನೆಯು ಭಾರತದ ಸಾರ್ವಜನಿಕ ಮತ್ತು ಪಟ್ಟಿಮಾಡಿದ ಖಾಸಗಿ ಆಸ್ಪತ್ರೆಗಳಲ್ಲಿ ದ್ವಿತೀಯ ಮತ್ತು ತೃತೀಯ ಹಂತದ ಆರೋಗ್ಯ ಚಿಕಿತ್ಸೆಗಾಗಿ ಪ್ರತಿ ಅರ್ಹ ಕುಟುಂಬಕ್ಕೆ ವರ್ಷಕ್ಕೆ 5 ಲಕ್ಷ ರೂ.ಗಳ ನೆರವನ್ನು ಒದಗಿಸುತ್ತದೆ.
- ವ್ಯಾಪ್ತಿ: 10.74 ಕೋಟಿಗೂ ಹೆಚ್ಚು ಬಡ ಮತ್ತು ಅಸಹಾಯಕ ಕುಟುಂಬಗಳು (ಅಂದಾಜು 50 ಕೋಟಿ ಫಲಾನುಭವಿಗಳು) ಈ ಪ್ರಯೋಜನಗಳನ್ನು ಪಡೆಯಲು ಅರ್ಹರಾಗಿದ್ದಾರೆ.
- ಈ ಯೋಜನೆಯಡಿ, ಆಸ್ಪತ್ರೆಗಳಲ್ಲಿ ಫಲಾನುಭವಿಗೆ ನಗದು ರಹಿತ ಆರೋಗ್ಯ ಸೇವೆಗಳನ್ನು ಲಭ್ಯವಾಗುವಂತೆ ಮಾಡಲಾಗುತ್ತದೆ.
- ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರ (NHA) ದೇಶಾದ್ಯಂತ AB-PMJAY ಯೋಜನೆಯ ಅನುಷ್ಠಾನಮಾಡುವ ಮತ್ತು ಅನುಷ್ಠಾನಕ್ಕೆ ನೋಡಲ್ ಏಜೆನ್ಸಿಯಾಗಿದೆ.
- ಈ ಯೋಜನೆಯು ಕೆಲವು ಕೇಂದ್ರ ವಲಯದ ಘಟಕಗಳೊಂದಿಗೆ ಕೇಂದ್ರ ಪ್ರಾಯೋಜಿತ ಯೋಜನೆಯಾಗಿದೆ.
ಅರ್ಹತೆ:
- ಈ ಯೋಜನೆಯಡಿ ಚಿಕಿತ್ಸೆ ನೀಡುವಾಗ ಕುಟುಂಬದ ಗಾತ್ರ, ವಯಸ್ಸು ಅಥವಾ ಲಿಂಗ ಎಂಬ ಯಾವುದೇ ಮಿತಿಯಿಲ್ಲ.
- ಈ ಯೋಜನೆಯಡಿಯಲ್ಲಿ, ಚಿಕಿತ್ಸೆ ನೀಡುವಾಗ ಮೊದಲಿನಿಂದಲೂ ಅಸ್ತಿತ್ವದಲ್ಲಿರುವ ವಿವಿಧ ವೈದ್ಯಕೀಯ ಸಮಸ್ಯೆಗಳು ಮತ್ತು ಗಂಭೀರ ಕಾಯಿಲೆಗಳನ್ನು ಮೊದಲ ದಿನದಿಂದಲೇ ಈ ಯೋಜನೆಯು ಒಳಗೊಳ್ಳುತ್ತದೆ. ಅಂದರೆ ಯೋಜನೆಗೆ ಸೇರುವ ಮೊದಲೇ ಇದ್ದಂತಹ ವೈದ್ಯಕೀಯ ಸಮಸ್ಯೆಗಳಿಗೂ ಯಾವುದೇ ಭೇದವಿಲ್ಲದೆ ಚಿಕಿತ್ಸೆಯನ್ನು ನೀಡಲಾಗುತ್ತದೆ.
- ಈ ಯೋಜನೆಯು, ಆಸ್ಪತ್ರೆಗೆ ದಾಖಲಾಗುವ 3 ದಿನಗಳ ಮೊದಲು ಮತ್ತು ಆಸ್ಪತ್ರೆಗೆ ದಾಖಲಾದ ನಂತರದ 15 ದಿನಗಳವರೆಗಿನ ಆರೋಗ್ಯ ಚಿಕಿತ್ಸೆ ಮತ್ತು ಔಷಧಿಗಳ ಖರ್ಚುವೆಚ್ಚವನ್ನು ಒಳಗೊಂಡಿದೆ.
- ಇದೊಂದು ಸರಳ-ಸುಲಭ (ಪೋರ್ಟಬಲ್), ಯೋಜನೆಯಾಗಿದೆ. ಅಂದರೆ ಫಲಾನುಭವಿಗಳು ದೇಶಾದ್ಯಂತದ ಯಾವುದೇ ಸಾರ್ವಜನಿಕ ಅಥವಾ ಪಟ್ಟಿಮಾಡಿದ ಖಾಸಗಿ ಆಸ್ಪತ್ರೆಯಲ್ಲಿ ಉಚಿತ ಚಿಕಿತ್ಸೆಯನ್ನು ಪಡೆಯಬಹುದು.
- ಈ ಯೋಜನೆಯು, ಔಷಧಗಳ ಸರಬರಾಜು, ರೋಗನಿರ್ಣಯ ಸೇವೆಗಳು, ವೈದ್ಯರ ಶುಲ್ಕಗಳು, ಕೊಠಡಿ ಶುಲ್ಕಗಳು, ಶಸ್ತ್ರಚಿಕಿತ್ಸಕರ ಶುಲ್ಕಗಳು, ಶಸ್ತ್ರ ಚಿಕಿತ್ಸಾ ಕೊಠಡಿ (OT ) ಮತ್ತು ತೀವ್ರ ಚಿಕಿತ್ಸಾ ಘಟಕಗಳ (ICU) ಶುಲ್ಕಗಳು ಸೇರಿದಂತೆ ಚಿಕಿತ್ಸೆಗೆ ಸಂಬಂಧಿಸಿದ ಎಲ್ಲಾ ವೆಚ್ಚಗಳನ್ನು ಒಳಗೊಂಡಿರುವ ಸರಿಸುಮಾರು 1,393 ಕಾರ್ಯವಿಧಾನ ಸೇವೆಗಳನ್ನು ಒಳಗೊಂಡಿದೆ.
- ಸಾರ್ವಜನಿಕ ಆಸ್ಪತ್ರೆಗಳಿಗೂ ಕೂಡ ನೀಡಿದ ಆರೋಗ್ಯ ಸೇವೆಗಳಿಗಾಗಿ ಖಾಸಗಿ ಆಸ್ಪತ್ರೆಗಳಿಗೆ ಸಮನಾಗಿ ಮರುಪಾವತಿ ಮಾಡಲಾಗುತ್ತದೆ.
ಇತ್ತೀಚಿನ ಆರ್ಥಿಕ ಸಮೀಕ್ಷೆಯ ಪ್ರಕಾರ:
- ಪ್ರಧಾನಮಂತ್ರಿ ಜನ ಆರೋಗ್ಯ ಯೋಜನೆ (PM-JAY) ಕಾರ್ಯಕ್ರಮವನ್ನು ಜಾರಿಗೆ ತಂದಿರುವ ರಾಜ್ಯಗಳಲ್ಲಿ ಆರೋಗ್ಯದ ಫಲಿತಾಂಶಗಳಲ್ಲಿ ಗಮನಾರ್ಹ ಸುಧಾರಣೆಗಳು ಕಂಡುಬಂದಿವೆ.
- PM-JAY ಅನ್ನು ಅನುಷ್ಠಾನಗೊಳಿಸಿರುವ ರಾಜ್ಯಗಳು, ಆರೋಗ್ಯ ವಿಮೆಯ ಹೆಚ್ಚಿನ ವಿಸ್ತರಣೆ, ಶಿಶು ಮತ್ತು ಮಕ್ಕಳ ಮರಣ ಪ್ರಮಾಣದಲ್ಲಿನ ಕಡಿತ, ಕುಟುಂಬ ಯೋಜನೆ ಸೇವೆಗಳ ಬಳಕೆಯಲ್ಲಿ ಸುಧಾರಣೆ ಮತ್ತು ಎಚ್‌ಐವಿ / ಏಡ್ಸ್ ಬಗ್ಗೆ ಹೆಚ್ಚಿನ ಅರಿವನ್ನು ಪಡೆದುಕೊಂಡಿರುವುದು,ಈ ಯೋಜನೆಯಿಂದ ಹೊರಗಿರುವ ರಾಜ್ಯಗಳಿಗೆ ಹೋಲಿಸಿದರೆ ಅನುಭವ ವೇದ್ಯವಾಗಿದೆ.
- PM-JAY ಅನುಷ್ಠಾನಗೊಳಿಸಿರುವ ರಾಜ್ಯಗಳಲ್ಲಿ ಆರೋಗ್ಯ ವಿಮೆ ಹೊಂದಿರುವ ಕುಟುಂಬಗಳ ಪ್ರಮಾಣವು 54% ಹೆಚ್ಚಾಗಿದ್ದರೆ ಈ ಯೋಜನೆಯಿಂದ ಪ್ರತ್ಯೇಕವಾಗಿ ಉಳಿದಿರುವ ರಾಜ್ಯಗಳಲ್ಲಿ ಆರೋಗ್ಯ ವಿಮೆ ಹೊಂದಿರುವ ಕುಟುಂಬಗಳ ಪ್ರಮಾಣವು 10% ರಷ್ಟು ಕುಸಿತವನ್ನು ದಾಖಲಿಸಿದೆ.
ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.
ಆರ್ಥಿಕತೆ-ಚೇತರಿಕೆಯ ಮೇಲೆ OPEC + ನಿರ್ಧಾರದ ಪರಿಣಾಮ:
ಸಂದರ್ಭ:
ವಿಶ್ವದ ಅತಿದೊಡ್ಡ ಕಚ್ಚಾ ತೈಲ ಆಮದುದಾರ ಚೀನಾ, ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಕೋರಿಕೆಯ ಮೇರೆಗೆ ತನ್ನ ತೈಲ ನಿಕ್ಷೇಪಗಳಿಂದ ಸ್ವಲ್ಪ ಪ್ರಮಾಣದ ತೈಲವನ್ನು ಬಿಡುಗಡೆ ಮಾಡುವ ತನ್ನ ಉದ್ದೇಶಗಳಿಗೆ ಯಾವುದೇ ಬದ್ಧತೆಯನ್ನು ಮಾಡಿಲ್ಲ.
ಮತ್ತೊಂದೆಡೆ, ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (OPEC) ಮತ್ತು ಅದರ ಮಿತ್ರರಾಷ್ಟ್ರಗಳು, US ತೆಗೆದುಕೊಂಡ ಈ ನಿರ್ಧಾರದ ದೃಷ್ಟಿಯಿಂದ, ತಮ್ಮ ಕಾರ್ಯತಂತ್ರದಲ್ಲಿ ಬದಲಾವಣೆಯನ್ನು ಪರಿಗಣಿಸುತ್ತಿಲ್ಲ.
ಏನಿದು ಪ್ರಕರಣ?
US ಅಧ್ಯಕ್ಷ ಜೋ ಬಿಡೆನ್ ಅವರ ಆಡಳಿತದ ಸಂಘಟಿತ ಪ್ರಯತ್ನದಲ್ಲಿ, ಜಾಗತಿಕ ಕಚ್ಚಾ ತೈಲ ಬೆಲೆಗಳನ್ನು ಕಡಿಮೆ ಮಾಡುವ ಪ್ರಯತ್ನದ ಭಾಗವಾಗಿ, ಚೀನಾ, ಭಾರತ ಮತ್ತು ಜಪಾನ್ ಸೇರಿದಂತೆ ಇತರ ಅತಿದೊಡ್ಡ ತೈಲ- ಗ್ರಾಹಕ ದೇಶಗಳಿಂದ ಸಂಘಟಿತ ಪ್ರಯತ್ನದಲ್ಲಿ ಲಕ್ಷಾಂತರ ಬ್ಯಾರೆಲ್ ತೈಲವನ್ನು ಆಯಕಟ್ಟಿನ ತೈಲ ದಾಸ್ತಾನುಗಳಿಂದ ಬಿಡುಗಡೆ ಮಾಡುವ ಯೋಜನೆಗಳನ್ನು ಘೋಷಿಸಲಾಯಿತು. US ನಲ್ಲಿ, ಪೆಟ್ರೋಲ್ ಬೆಲೆಗಳು ಕಳೆದ ವರ್ಷದಲ್ಲಿ 60% ಕ್ಕಿಂತ ಹೆಚ್ಚು ಏರಿಕೆಯಾಗಿದೆ, ಇದು 2000 ನೇ ವರ್ಷದ ನಂತರದ ಅತ್ಯಧಿಕ ಏರಿಕೆಯಾಗಿದೆ.
- ವಾಷಿಂಗ್ಟನ್‌ನ ಕ್ರಮವು ಪೆಟ್ರೋಲಿಯಂ ರಫ್ತು ಮಾಡುವ ದೇಶಗಳ ಸಂಘಟನೆ (OPEC) ಮತ್ತು ಒಟ್ಟಾರೆಯಾಗಿ OPEC Plus (OPEC +) ಎಂದು ಕರೆಯಲಾಗುವ ಅದರ ಮಿತ್ರರಾಷ್ಟ್ರಗಳು ದಿನಕ್ಕೆ 4,00,000 ಬ್ಯಾರೆಲ್‌ಗಳಂತೆ ಪ್ರತಿ ತಿಂಗಳು ತೈಲ ಉತ್ಪಾದಿಸುವ ಅದರ ಅಸ್ತಿತ್ವದಲ್ಲಿರುವ ಒಪ್ಪಂದವನ್ನು ತಡೆಹಿಡಿಯುವ ಸಂಭವವಿದೆ, ಆದರೆ ಈ ಸಂಘಟನೆಯು ಅದನ್ನು ಪರಿಗಣಿಸುತ್ತಿಲ್ಲ.
ಒಪೆಕ್ + ಎಂದರೇನು?
(ಒಪೆಕ್ ರಾಷ್ಟ್ರಗಳು ಹಾಗೂ ಆ ರಾಷ್ಟ್ರಗಳ ಮಿತ್ರ ರಾಷ್ಟ್ರಗಳ ಒಕ್ಕೂಟ)
- ಒಪೆಕ್ + ಕಚ್ಚಾತೈಲ ಉತ್ಪಾದಕರ ಮೈತ್ರಿಕೂಟ ವನ್ನು ಅಥವಾ ಒಕ್ಕೂಟವನ್ನು ಸೂಚಿಸುತ್ತದೆ, ಅವರು 2017 ರಿಂದ ತೈಲ ಮಾರುಕಟ್ಟೆಗಳಲ್ಲಿ ಪೂರೈಕೆಯಲ್ಲಿ ನಿಯಂತ್ರಣಗಳನ್ನು ಮಾಡುತ್ತಿದ್ದಾರೆ.
- ಒಪೆಕ್ ಪ್ಲಸ್ ದೇಶಗಳಲ್ಲಿ ಅಜೆರ್ಬೈಜಾನ್, ಬಹ್ರೇನ್, ಬ್ರೂನಿ, ಕಝಾಕಿಸ್ತಾನ್, ಮಲೇಷ್ಯಾ, ಮೆಕ್ಸಿಕೊ, ಓಮನ್, ರಷ್ಯಾ, ದಕ್ಷಿಣ ಸುಡಾನ್ ಮತ್ತು ಸುಡಾನ್ ದೇಶಗಳು ಸೇರಿವೆ.
ಒಪೆಕ್ ಎಂದರೇನು?
- ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್, ಇರಾಕ್, ಕುವೈತ್, ಸೌದಿ ಅರೇಬಿಯಾ ಮತ್ತು ವೇನಿಜುವೆಲಾ ಎಂಬ ಈ ಐದು ದೇಶಗಳು 1960 ಸೆಪ್ಟೆಂಬರ್ ನಲ್ಲಿ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಪೆಟ್ರೋಲಿಯಂ ಉತ್ಪನ್ನಗಳ ರಫ್ತು ದೇಶಗಳ ಸಂಘಟನೆಯನ್ನು (Organization of the Petroleum Exporting Countries -OPEC) ಇರಾಕ್ ನ ಬಾಗ್ದಾದ್ ನಲ್ಲಿ ಸ್ಥಾಪಿಸಿದವು. ಇವು ಈ ಸಂಘಟನೆಯ ಸ್ಥಾಪಕ ಸದಸ್ಯ ದೇಶಗಳಾಗಿವೆ.
- ಪೆಟ್ರೋಲಿಯಂ ಉತ್ಪಾದಕ ದೇಶಗಳು ನ್ಯಾಯಯುತ ಮತ್ತು ಸ್ಥಿರವಾದ ಬೆಲೆಗಳನ್ನು ಪಡೆಯುವಂತಾಗಲು ಸದಸ್ಯ ರಾಷ್ಟ್ರಗಳಲ್ಲಿ ಪೆಟ್ರೋಲಿಯಂ ನೀತಿಗಳನ್ನು ಸಮನ್ವಯಗೊಳಿಸುವುದು ಮತ್ತು ಏಕೀಕರಿಸುವುದು ಒಪೆಕ್‌ನ ಉದ್ದೇಶವಾಗಿದೆ; ಗ್ರಾಹಕ ರಾಷ್ಟ್ರಗಳಿಗೆ ಪೆಟ್ರೋಲಿಯಂನ ದಕ್ಷ, ಆರ್ಥಿಕ ಮಿತವ್ಯಯಕಾರಿ ಮತ್ತು ನಿಯಮಿತ ಪೂರೈಕೆ; ಮತ್ತು ಉದ್ಯಮದಲ್ಲಿ ಹೂಡಿಕೆ ಮಾಡುವವರಿಗೆ ಬಂಡವಾಳದ ಮೇಲೆ ನ್ಯಾಯಯುತ ಲಾಭ ದೊರೆಯುವಂತೆ ಮಾಡುವುದು ಸಹ ಇದರ ಉದ್ದೇಶ ಗಳಲ್ಲೊಂದಾಗಿದೆ.
- ಒಪೆಕ್ ಒಂದು ಶಾಶ್ವತ, ಅಂತರ್ ಸರ್ಕಾರಿ ಸಂಘಟನೆಯಾಗಿದೆ.
- ಇದರ ಪ್ರಧಾನ ಕಚೇರಿಯು ಆಸ್ಟ್ರಿಯಾದ ವಿಯೆನ್ನಾದಲ್ಲಿದೆ.
- ಗಣನೀಯ ಪ್ರಮಾಣದಲ್ಲಿ ತೈಲ ರಫ್ತು ಮಾಡುವ ಮತ್ತು ಸಂಘಟನೆಯ ಆದರ್ಶಗಳನ್ನು ಹಂಚಿಕೊಳ್ಳುವ ಯಾವುದೇ ದೇಶಕ್ಕೆ ಒಪೆಕ್ ನ ಸದಸ್ಯತ್ವವು ಮುಕ್ತವಾಗಿದೆ.
ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.
ಶಾಂಘೈ ಸಹಕಾರ ಸಂಘಟನೆ:
(Shanghai Cooperation Organisation (SCO)
ಸಂದರ್ಭ:
ಇತ್ತೀಚೆಗೆ ನಡೆದ ಶಾಂಘೈ ಸಹಕಾರ ಸಂಘಟನೆ ಮಂಡಳಿಯ ರಾಜ್ಯ ಮುಖ್ಯಸ್ಥರ 20 ನೇ ಸಭೆಯಲ್ಲಿ,ಕೌನ್ಸಿಲ್‌ನಲ್ಲಿ ದ್ವಿಪಕ್ಷೀಯ ವಿಷಯಗಳನ್ನು ಪ್ರಸ್ತಾಪಿಸುವುದು ಶಾಂಘೈ ಸಹಕಾರ ಸಂಘಟನೆಯ (Shanghai Cooperation Organisation – SCO) ಸ್ಪೂರ್ತಿಗೆ ವಿರುದ್ಧವಾಗಿದೆ ಎಂದು ಭಾರತ ಹೇಳಿದೆ.
ಏನಿದು ಪ್ರಕರಣ?
ಚೀನಾ ಮತ್ತು ಪಾಕಿಸ್ತಾನ ಉದ್ದೇಶಪೂರ್ವಕವಾಗಿ ಶಾಂಘೈ ಸಹಕಾರ ಸಂಘಟನೆಯ ವೇದಿಕೆಗೆ (SCO) ದ್ವಿಪಕ್ಷೀಯ ಸಮಸ್ಯೆಗಳನ್ನು ತರಲು ಪ್ರಯತ್ನಿಸುತ್ತಿವೆ. ಇದು SCO ಚಾರ್ಟರ್‌ನ ಸುಸ್ಥಾಪಿತ ತತ್ವಗಳು ಮತ್ತು ಮಾನದಂಡಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಇಂತಹ ಕ್ರಮಗಳು ಈ ಸಂಘಟನೆಯನ್ನು ವ್ಯಾಖ್ಯಾನಿಸುವ ‘ಒಮ್ಮತ ಮತ್ತು ಸಹಕಾರದ ಮನೋಭಾವ’ ಕ್ಕೆ ವಿರುದ್ಧವಾಗಿವೆ ಮತ್ತು ಅದನ್ನು ಖಂಡಿಸಬೇಕಾಗಿದೆ.
ಶಾಂಘೈ ಸಹಕಾರ ಸಂಘಟನೆಯ ಬಗ್ಗೆ:
ಶಾಂಘೈ ಸಹಕಾರ ಸಂಸ್ಥೆ (SCO) ಒಂದು ಶಾಶ್ವತ ಅಂತರ್ ಸರ್ಕಾರಿ ಅಂತರರಾಷ್ಟ್ರೀಯ ಸಂಘಟನೆಯಾಗಿದೆ.
- SCO ರಚನೆಯನ್ನು 15 ಜೂನ್ 2001 ರಂದು ಶಾಂಘೈ (ಚೀನಾ) ದಲ್ಲಿ ಕಜಕಿಸ್ತಾನ ಗಣರಾಜ್ಯ, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ, ಕಿರ್ಗಿಜ್ ಗಣರಾಜ್ಯ, ರಷ್ಯಾದ ಒಕ್ಕೂಟ, ತಜಿಕಿಸ್ತಾನ್ ಗಣರಾಜ್ಯ ಮತ್ತು ಉಜ್ಬೇಕಿಸ್ತಾನ್ ಗಣರಾಜ್ಯ ಗಳು ಘೋಷಿಸಿದವು.
- ಜೂನ್ 2002 ರಲ್ಲಿ, ಸೇಂಟ್ ಪೀಟರ್ಸ್ಬರ್ಗ್ SCO ರಾಜ್ಯ ಮುಖ್ಯಸ್ಥರ ಸಭೆಯಲ್ಲಿ ಶಾಂಘೈ ಸಹಕಾರ ಸಂಸ್ಥೆಯ ಚಾರ್ಟರ್ಗೆ ಸಹಿ ಹಾಕಲಾಯಿತು ಮತ್ತು ಚಾರ್ಟರ್ 19 ಸೆಪ್ಟೆಂಬರ್ 2003 ರಂದು ಜಾರಿಗೆ ಬಂದಿತು.
- ಇದನ್ನು ‘ಶಾಂಘೈ -5’ ಹೆಸರಿನ ಸಂಘಟನೆಯ ಸ್ಥಾನದಲ್ಲಿ ರಚಿಸಲಾಯಿತು.
- SCO ದ ಅಧಿಕೃತ ಭಾಷೆಗಳು ರಷ್ಯನ್ ಮತ್ತು ಚೈನೀಸ್.
SCO ದ ಪ್ರಮುಖ ಗುರಿಗಳು:
- ಸದಸ್ಯ ರಾಷ್ಟ್ರಗಳಲ್ಲಿ ಪರಸ್ಪರ ನಂಬಿಕೆ ಮತ್ತು ಸದ್ಭಾವನೆಯನ್ನು ಬಲಪಡಿಸುವುದು.
- ರಾಜಕೀಯ, ವ್ಯವಹಾರ, ಆರ್ಥಿಕತೆ, ಸಂಶೋಧನೆ ಮತ್ತು ತಂತ್ರಜ್ಞಾನ ಮತ್ತು ಸಂಸ್ಕೃತಿಯಲ್ಲಿ ಪರಿಣಾಮಕಾರಿ ಸಹಕಾರವನ್ನು ಉತ್ತೇಜಿಸುವುದು.
- ಶಿಕ್ಷಣ ಇಂಧನ ಸಾರಿಗೆ ಪ್ರವಾಸೋದ್ಯಮ ಪರಿಸರ ಸಂರಕ್ಷಣೆ ಮತ್ತು ಸಂಬಂಧಪಟ್ಟ ಇತರ ಕ್ಷೇತ್ರಗಳಲ್ಲಿ ಶಾಂತಿ, ಸುರಕ್ಷತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳಲು ಮತ್ತು ಖಚಿತಪಡಿಸಿಕೊಳ್ಳಲು ಜಂಟಿ ಪ್ರಯತ್ನಗಳನ್ನು ಮಾಡುವುದು.
- ಪ್ರಜಾಪ್ರಭುತ್ವ, ನ್ಯಾಯಯುತ ಮತ್ತು ತರ್ಕಬದ್ಧ ನವ-ಅಂತರರಾಷ್ಟ್ರೀಯ ರಾಜಕೀಯ ಮತ್ತು ಆರ್ಥಿಕ ವ್ಯವಸ್ಥೆಯನ್ನು ಸ್ಥಾಪಿಸುವುದು.
ಸದಸ್ಯತ್ವ:
SCO ಎಂಟು ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ – ಅವುಗಳೆಂದರೆ, ರಿಪಬ್ಲಿಕ್ ಆಫ್ ಇಂಡಿಯಾ, ರಿಪಬ್ಲಿಕ್ ಆಫ್ ಕಜಾಕಸ್ಥಾನ್, ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ, ಕಿರ್ಗಿಜ್ ರಿಪಬ್ಲಿಕ್, ಇಸ್ಲಾಮಿಕ್ ರಿಪಬ್ಲಿಕ್ ಆಫ್ ಪಾಕಿಸ್ತಾನ್, ರಷ್ಯನ್ ಫೆಡರೇಶನ್, ರಿಪಬ್ಲಿಕ್ ಆಫ್ ತಜಕಿಸ್ತಾನ್ ಮತ್ತು ರಿಪಬ್ಲಿಕ್ ಆಫ್ ಉಜ್ಬೇಕಿಸ್ತಾನ್.
ಹಿನ್ನೆಲೆ:
- 2001 ರಲ್ಲಿ SCO ಸ್ಥಾಪನೆಯ ಮೊದಲು, ಕಝಾಕಿಸ್ತಾನ್, ಚೀನಾ, ಕಿರ್ಗಿಸ್ತಾನ್, ರಷ್ಯಾ ಮತ್ತು ತಜಿಕಿಸ್ತಾನ್ ಗಳು ‘ಶಾಂಘೈ ಫೈವ್’ ಗುಂಪಿನ ಸದಸ್ಯರಾಗಿದ್ದರು.
- ‘ಶಾಂಘೈ ಫೈವ್’ (1996) ನ ಉಗಮವು ಗಡಿಗಳಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ನಾಲ್ಕು ಹಿಂದಿನ ಸೋವಿಯತ್ ಗಣರಾಜ್ಯಗಳು ಮತ್ತು ಚೀನಾ ನಡುವಿನ ಗಡಿ ಗುರುತಿಸುವಿಕೆ ಮತ್ತು ಈ ಪ್ರದೇಶದಲ್ಲಿ ಮಿಲಿಟರಿ ಕರಣವನ್ನು ಕಡಿಮೆ ಮಾಡುವ ಮಾತುಕತೆಗಳ ಸರಣಿಯಿಂದ ಹುಟ್ಟಿಕೊಂಡಿತು.
- 2001 ರಲ್ಲಿ, ಉಜ್ಬೇಕಿಸ್ತಾನ್ ‘ಶಾಂಘೈ ಫೈವ್’ ಸಂಸ್ಥೆಗೆ ಸೇರಿದ ನಂತರ, ಅದರ ಹೆಸರನ್ನು ‘ಶಾಂಘೈ ಸಹಕಾರ ಸಂಸ್ಥೆ’ (SCO) ಎಂದು ಮರುನಾಮಕರಣ ಮಾಡಲಾಯಿತು.
- 2017 ರಲ್ಲಿ, ಭಾರತ ಮತ್ತು ಪಾಕಿಸ್ತಾನಕ್ಕೆ ‘ಶಾಂಘೈ ಸಹಕಾರ ಸಂಘಟನೆ’ಯ ಸದಸ್ಯತ್ವವನ್ನು ನೀಡಲಾಯಿತು.
ಭಾರತಕ್ಕೆ ‘ಶಾಂಘೈ ಸಹಕಾರ ಸಂಘಟನೆಯ’ ಮಹತ್ವ:
ಭಾರತಕ್ಕಾಗಿ ಶಾಂಘೈ ಸಹಕಾರ ಸಂಘಟನೆಯ ಪ್ರಾಮುಖ್ಯತೆಯು ಯುರೇಷಿಯನ್ ರಾಜ್ಯಗಳೊಂದಿಗಿನ ಅದರ ಆರ್ಥಿಕ ಮತ್ತು ಭೌಗೋಳಿಕ ರಾಜಕೀಯ ಸಂಬಂಧಗಳಲ್ಲಿದೆ.
- ‘ಶಾಂಘೈ ಸಹಕಾರ ಸಂಸ್ಥೆ’ ಭಾರತದ ‘ಮಧ್ಯ ಏಷ್ಯಾ ಸಂಪರ್ಕ ನೀತಿ’(Connect Central Asia policy) ಯನ್ನು ಮುನ್ನಡೆಸಲು ಪ್ರಬಲ ವೇದಿಕೆಯಾಗಿದೆ. SCO ದ ಸದಸ್ಯ ರಾಷ್ಟ್ರಗಳು ಭಾರತದ ನೆರೆಯ ಪ್ರದೇಶಗಳ ಗಡಿಯಲ್ಲಿರುವ ವಿಶಾಲವಾದ ಭೂಪ್ರದೇಶದಲ್ಲಿವೆ, ಭಾರತದ ಆರ್ಥಿಕ ಮತ್ತು ಕಾರ್ಯತಂತ್ರದ ಹಿತಾಸಕ್ತಿಗಳೆರಡೂ ಈ ಕ್ಷೇತ್ರಗಳೊಂದಿಗೆ ಸಂಬಂಧ ಹೊಂದಿವೆ.
- ಅಫ್ಘಾನಿಸ್ತಾನದಲ್ಲಿ ಸ್ಥಿರತೆಗಾಗಿ ‘ಶಾಂಘೈ ಸಹಕಾರ ಸಂಘಟನೆ-ಅಫ್ಘಾನಿಸ್ತಾನ’ ಸಂಪರ್ಕ ಗುಂಪು ಬಹಳ ಮುಖ್ಯವೆಂದು ಸಾಬೀತುಪಡಿಸಬಹುದು. ಶಾಂಘೈ ಸಹಕಾರ ಸಂಘಟನೆಯ ಸದಸ್ಯತ್ವವು ಭಾರತಕ್ಕೆ ಅದು ಸದಸ್ಯರಾಗಿರುವ ಇತರ ಕೆಲವು ಸಂಸ್ಥೆಗಳಲ್ಲಿ ಪ್ರಮುಖ ಪಾತ್ರವನ್ನು ಒದಗಿಸುತ್ತದೆ.
- SCO, ಭಾರತಕ್ಕೆ ತನ್ನ ನೆರೆಯ ದೇಶಗಳಾದ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದೊಂದಿಗೆ ವ್ಯವಹರಿಸಲು ಮತ್ತು ಸಂಬಂಧವನ್ನು ಸುಧಾರಿಸಲು ಏಕೈಕ ಬಹುಪಕ್ಷೀಯ ವೇದಿಕೆಯನ್ನು ಒದಗಿಸುತ್ತದೆ.
ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.
ಇಂಟರ್ ಪೋಲ್:
(Interpol)
ಸಂದರ್ಭ:
ಇತ್ತೀಚೆಗೆ, ಕೇಂದ್ರೀಯ ತನಿಖಾ ದಳದ (Central Bureau of Investigation – CBI) ವಿಶೇಷ ನಿರ್ದೇಶಕ ಪ್ರವೀಣ್ ಸಿನ್ಹಾ ಅವರನ್ನು ಇಂಟರ್‌ಪೋಲ್ ತನ್ನ ಕಾರ್ಯಕಾರಿ ಸಮಿತಿಯಲ್ಲಿ ಏಷ್ಯಾದ ಪ್ರತಿನಿಧಿಯಾಗಿ ಆಯ್ಕೆ ಮಾಡಿದೆ.
ಇಂಟರ್ಪೋಲ್ ನ ಕಾರ್ಯಕಾರಿ ಸಮಿತಿಯ ಬಗ್ಗೆ:
ಇಂಟರ್‌ಪೋಲ್‌ನ ‘ಕಾರ್ಯಕಾರಿ ಸಮಿತಿ’ (Executive Committee)ಯು ವಿವಿಧ ದೇಶಗಳ 13 ಸದಸ್ಯರನ್ನು ಒಳಗೊಂಡಿದೆ; ಅದರಲ್ಲಿ ಒಬ್ಬರು ಇಂಟರ್‌ಪೋಲ್‌ನ ಅಧ್ಯಕ್ಷರು, ಇಬ್ಬರು ಉಪಾಧ್ಯಕ್ಷರು ಮತ್ತು ಒಂಬತ್ತು ಪ್ರತಿನಿಧಿ ಸದಸ್ಯರು ಇರುತ್ತಾರೆ.
- ಈ ಸಮಿತಿಯು ಇಂಟರ್‌ಪೋಲ್ ಜನರಲ್ ಅಸೆಂಬ್ಲಿಯ ನಿರ್ಧಾರಗಳನ್ನು ಮತ್ತು ಅದರ ಮುಖ್ಯ ಕಾರ್ಯದರ್ಶಿಯ ಆಡಳಿತ ಮತ್ತು ಕಾರ್ಯಗಳನ್ನು ಕಾರ್ಯಗತಗೊಳಿಸುವುದನ್ನು ಮೇಲ್ವಿಚಾರಣೆ ಮಾಡುತ್ತದೆ.
- ‘ಕಾರ್ಯಕಾರಿ ಸಮಿತಿ’ ವರ್ಷಕ್ಕೆ ಮೂರು ಬಾರಿ ಸಭೆ ಸೇರುತ್ತದೆ, ಇದರಲ್ಲಿ ಸಾಂಸ್ಥಿಕ ನೀತಿ ಮತ್ತು ನಿರ್ದೇಶನವನ್ನು ನಿರ್ಧರಿಸಲಾಗುತ್ತದೆ.
ಇಂಟರ್ಪೋಲ್ ಎಂದರೇನು?
- ಇಂಟರ್ ಪೋಲ್ ಒಂದು ಅಂತರರಾಷ್ಟ್ರೀಯ ಅಪರಾಧಗಳ ಪೋಲಿಸ್ ಸಂಸ್ಥೆ ಯಾಗಿದೆ, (International Criminal Police Organisation, or Interpol) ಅಥವಾ ಇದೊಂದು 194 ಸದಸ್ಯರ ಅಂತರ್ ಸರ್ಕಾರಿ ಸಂಸ್ಥೆಯಾಗಿದೆ.
- ಇದರ ಕೇಂದ್ರ ಕಚೇರಿಯು ಫ್ರಾನ್ಸ್ ನ ಲಿಯಾನ್ (Lyon) ನಲ್ಲಿದೆ.
- ಇದನ್ನು,1923 ರಲ್ಲಿ ಅಂತರರಾಷ್ಟ್ರೀಯ ಅಪರಾಧ ಪೊಲೀಸ್ ಆಯೋಗವಾಗಿ ಸ್ಥಾಪಿಸಲಾಯಿತು ಮತ್ತು 1956 ರಲ್ಲಿ ಇಂಟರ್ಪೋಲ್ ಎಂದು ಕರೆಯಲು ಪ್ರಾರಂಭಿಸಲಾಯಿತು.
- ಭಾರತವು 1949 ರಲ್ಲಿ ಈ ಸಂಸ್ಥೆಗೆ ಸೇರಿತು ಮತ್ತು ಇದರ ಹಳೆಯ ಸದಸ್ಯರಲ್ಲಿ ಒಂದಾಗಿದೆ.
ಇಂಟರ್ಪೋಲ್ ಘೋಷಿಸಿದ ಜಾಗತಿಕ ಪೊಲೀಸ್ ಗುರಿಗಳು ಈ ಕೆಳಗಿನಂತಿವೆ:
ಭಯೋತ್ಪಾದನೆಯನ್ನು ಎದುರಿಸುವುದು, ವಿಶ್ವಾದ್ಯಂತ ಗಡಿಗಳ ಸಮಗ್ರತೆಯನ್ನು ಉತ್ತೇಜಿಸುವುದು, ದುರ್ಬಲ ಸಮುದಾಯಗಳ ರಕ್ಷಣೆ, ಜನರು ಮತ್ತು ವ್ಯವಹಾರಗಳಿಗೆ ಸುರಕ್ಷಿತ ಸೈಬರ್‌ಪೇಸ್ ಒದಗಿಸುವುದು, ಅಕ್ರಮ ಮಾರುಕಟ್ಟೆಗಳನ್ನು ನಿಗ್ರಹಿಸುವುದು, ಪರಿಸರ ಸುರಕ್ಷತೆಯನ್ನು ಬೆಂಬಲಿಸುವುದು ಮತ್ತು ಜಾಗತಿಕ ಸಮಗ್ರತೆ / ಏಕತೆಯನ್ನು ಉತ್ತೇಜಿಸುವುದು.
ಇಂಟರ್ಪೋಲ್ ಸಾಮಾನ್ಯ ಸಭೆ ಎಂದರೇನು?
- ಇದು ಇಂಟರ್ಪೋಲ್ ನ ಸರ್ವೋಚ್ಚ ಆಡಳಿತ ಮಂಡಳಿಯಾಗಿದೆ ಮತ್ತು ಅದರ ಎಲ್ಲಾ ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳನ್ನು ಒಳಗೊಂಡಿದೆ.
- ಇದು ತನ್ನ ಕಾರ್ಯಚಟುವಟಿಕೆಗಳ ಮತ್ತು ನೀತಿಯ ಮೇಲೆ ಮತ ಚಲಾಯಿಸಲು ಸುಮಾರು ನಾಲ್ಕು ದಿನಗಳ ವರೆಗೆ ನಡೆಯುವ ಅಧಿವೇಶನದಲ್ಲಿ ವಾರ್ಷಿಕವಾಗಿ ಭೇಟಿಯಾಗುತ್ತದೆ.
- ಇಂಟರ್ ಪೋಲ್ ನ ಸಾಮಾನ್ಯ ಸಭೆಯು ಪ್ರತಿಯೊಂದು ದೇಶದಿಂದ ಒಬ್ಬರು ಅಥವಾ ಹೆಚ್ಚಿನ ಪ್ರತಿನಿಧಿಗಳಿಂದ ಪ್ರತಿನಿಧಿಸಲ್ಪಡುತ್ತದೆ, ಮತ್ತು ಈ ಪ್ರತಿನಿಧಿಗಳು ಸಾಮಾನ್ಯವಾಗಿ ಅವರವರ ದೇಶಗಳ ಕಾನೂನು ಜಾರಿ ಸಂಸ್ಥೆಗಳ ಮುಖ್ಯಸ್ಥರಾಗಿರುತ್ತಾರೆ.
- ಸಾಮಾನ್ಯ ಸಭೆಯು ತನ್ನ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಆಯ್ಕೆ ಮಾಡುತ್ತದೆ. ಕಾರ್ಯಕಾರಿ ಸಮಿತಿಯು, “ಅಧಿವೇಶನಗಳ ನಡುವೆ ಇಂಟರ್ ಪೋಲ್ ಗೆ ಮಾರ್ಗದರ್ಶನ ಮತ್ತು ನಿರ್ದೇಶನವನ್ನು ಒದಗಿಸುತ್ತದೆ.”
ಸಾಮಾನ್ಯ ಅಧ್ಯಯನ ಪತ್ರಿಕೆ : 3
ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.
ಗ್ರೀನ್ ಬಾಂಡ್ಸ್ ಎಂದರೇನು?
(Green Bonds)
ಸಂದರ್ಭ:
ದೇಶದ ಅತಿದೊಡ್ಡ ವಾಣಿಜ್ಯ ಬ್ಯಾಂಕ್ ‘ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ’ ತನ್ನ $650 ಮಿಲಿಯನ್ ‘ಗ್ರೀನ್ ಬಾಂಡ್’ ಅನ್ನು ‘ಇಂಡಿಯಾ ಇಂಟರ್‌ನ್ಯಾಶನಲ್ ಎಕ್ಸ್‌ಚೇಂಜ್’ (India INX) ಮತ್ತು ‘ಲಕ್ಸೆಂಬರ್ಗ್ ಸ್ಟಾಕ್ ಎಕ್ಸ್‌ಚೇಂಜ್’ (LuxSE) ನಲ್ಲಿ ಏಕಕಾಲದಲ್ಲಿ ಡ್ಯುಯಲ್ ಪಟ್ಟಿಮಾಡಿದೆ.
ಇಂಟರ್ನ್ಯಾಷನಲ್ ಫೈನಾನ್ಷಿಯಲ್ ಸರ್ವೀಸಸ್ ಸೆಂಟರ್ ಅಥಾರಿಟಿ (IFSCA) ಪ್ರಕಾರ ಈ ಡಬಲ್ ಲಿಸ್ಟಿಂಗ್,ಈ ವರ್ಷದ ‘ವಿಶ್ವ ಹೂಡಿಕೆದಾರರ ಸಪ್ತಾಹ’ದ ಥೀಮ್ ಆದ ‘ಸಸ್ಟೈನಬಲ್ ಫೈನಾನ್ಸ್’(Sustainable Finance) ಗೆ ಅನುಗುಣವಾಗಿದೆ.
‘ಗ್ರೀನ್ ಬಾಂಡ್ಸ್’ ಎಂದರೇನು?
‘ಗ್ರೀನ್ ಬಾಂಡ್‌ಗಳು’ ಒಂದು ರೀತಿಯ ‘ಸ್ಥಿರ ಆದಾಯ’ ಸಾಧನವಾಗಿದ್ದು, ಹವಾಮಾನ ಮತ್ತು ಪರಿಸರ ಸಂಬಂಧಿತ ಯೋಜನೆಗಳಿಗೆ ಹಣವನ್ನು ಸಂಗ್ರಹಿಸಲು ನಿರ್ದಿಷ್ಟವಾಗಿ ಮೀಸಲಿಡಲಾಗಿದೆ.
ಈ ಬಾಂಡ್‌ಗಳು ಸಾಮಾನ್ಯವಾಗಿ ಆಸ್ತಿಗೆ ಲಿಂಕ್ ಆಗಿರುತ್ತವೆ ಮತ್ತು ವಿತರಿಸುವ ಘಟಕದ ಬ್ಯಾಲೆನ್ಸ್ ಶೀಟ್‌ನಿಂದ ಬೆಂಬಲಿತವಾಗಿದೆ, ಆದ್ದರಿಂದ ಈ ಬಾಂಡ್‌ಗಳಿಗೆ ವಿತರಕರ ಇತರ ಸಾಲದ ಬಾಧ್ಯತೆಗಳಂತೆಯೇ ಅದೇ ‘ಕ್ರೆಡಿಟ್ ರೇಟಿಂಗ್’ ನೀಡಲಾಗುತ್ತದೆ.
- ಗ್ರೀನ್ ಬಾಂಡ್’ಗಳಲ್ಲಿ ಹೂಡಿಕೆ ಮಾಡಲು ಹೂಡಿಕೆದಾರರನ್ನು ಆಕರ್ಷಿಸಲು ಪ್ರೋತ್ಸಾಹಕವಾಗಿ ‘ತೆರಿಗೆ’ ವಿನಾಯಿತಿಗಳಂತಹ ಕೆಲವು ಪ್ರೋತ್ಸಾಹಕಗಳನ್ನು ಸಹ ನೀಡಬಹುದು.
- ವಿಶ್ವ ಬ್ಯಾಂಕ್ ‘ಹಸಿರು ಬಾಂಡ್‌ಗಳು’ / ಗ್ರೀನ್ ಬಾಂಡ್‌ಗಳ ಪ್ರಮುಖ ವಿತರಕವಾಗಿದೆ. ಇದು 2008 ರಿಂದ 164 ‘ಗ್ರೀನ್ ಬಾಂಡ್’ಗಳನ್ನು ಬಿಡುಗಡೆ ಮಾಡಿದೆ, ಇದರ ಒಟ್ಟು ಮೌಲ್ಯ $14.4 ಬಿಲಿಯನ್.‘ಕ್ಲೈಮೇಟ್ ಬಾಂಡ್ ಇನಿಶಿಯೇಟಿವ್’ ಪ್ರಕಾರ, 2020 ರಲ್ಲಿ ಸುಮಾರು $270 ಬಿಲಿಯನ್ ಮೌಲ್ಯದ ಹಸಿರು ಬಾಂಡ್‌ಗಳನ್ನು ವಿತರಿಸಲಾಗಿದೆ.
‘ಗ್ರೀನ್ ಬಾಂಡ್’ ಕಾರ್ಯನಿರ್ವಹಣೆ:
ಹಸಿರು ಬಾಂಡ್‌ಗಳು ಇತರ ಯಾವುದೇ ಕಾರ್ಪೊರೇಟ್ ಬಾಂಡ್ ಅಥವಾ ಸರ್ಕಾರಿ ಬಾಂಡ್‌ಗಳಂತೆಯೇ ಕಾರ್ಯನಿರ್ವಹಿಸುತ್ತವೆ.
- ಪರಿಸರ ವ್ಯವಸ್ಥೆಯ ಮರುಸ್ಥಾಪನೆ ಅಥವಾ ಮಾಲಿನ್ಯದ ತಗ್ಗಿಸುವಿಕೆಯಂತಹ ‘ಸಕಾರಾತ್ಮಕ ಪರಿಸರ ಪ್ರಭಾವ’ವನ್ನು ಹೊಂದಿರುವ ಯೋಜನೆಗಳಿಗೆ ‘ಹಣಕಾಸು’ ಒದಗಿಸುವಿಕೆಯನ್ನು ಸುರಕ್ಷಿತಗೊಳಿಸಲು ಸಾಲಗಾರರಿಂದ ಈ ಭದ್ರತೆಗಳನ್ನು ನೀಡಲಾಗುತ್ತದೆ.
- ಈ ಬಾಂಡ್‌ಗಳನ್ನು ಖರೀದಿಸುವ ಹೂಡಿಕೆದಾರರು ತಮ್ಮ ಬಾಂಡ್ಗಳ ಅವಧಿಯ ಮುಕ್ತಾಯದ ಮೇಲೆ ಸಮಂಜಸವಾದ ಲಾಭವನ್ನು ಪಡೆಯುವುದನ್ನು ನಿರೀಕ್ಷಿಸಬಹುದು.
- ಹೆಚ್ಚುವರಿಯಾಗಿ, ಹಸಿರು ಬಾಂಡ್‌ಗಳಲ್ಲಿ ಹೂಡಿಕೆ ಮಾಡುವುದು ಸಾಮಾನ್ಯವಾಗಿ ‘ತೆರಿಗೆ’ ಪ್ರಯೋಜನಗಳೊಂದಿಗೆ ಬರುತ್ತದೆ.
ಗ್ರೀನ್ ಬಾಂಡ್ Vs ಬ್ಲೂ ಬಾಂಡ್:
‘ಬ್ಲೂ ಬಾಂಡ್‌ಗಳು’ (Blue Bonds)ಸಾಗರ ಮತ್ತು ಸಂಬಂಧಿತ ಪರಿಸರ ವ್ಯವಸ್ಥೆಗಳನ್ನು ರಕ್ಷಿಸುವ ಯೋಜನೆಗಳಿಗೆ ಹಣಕಾಸು ನೀಡಲು ಒದಗಿಸಲಾದ ‘ಸುಸ್ಥಿರತೆಯ ಬಾಂಡ್‌ಗಳು’.
- ಸಮರ್ಥನೀಯ ಮೀನುಗಾರಿಕೆ, ಹವಳದ ಬಂಡೆಗಳು ಮತ್ತು ಇತರ ದುರ್ಬಲ ಪರಿಸರ ವ್ಯವಸ್ಥೆಗಳನ್ನು ರಕ್ಷಿಸಲು ಅಥವಾ ಮಾಲಿನ್ಯ ಮತ್ತು ಆಮ್ಲೀಕರಣವನ್ನು ಕಡಿಮೆ ಮಾಡುವ ಯೋಜನೆಗಳಿಗೆ ಈ ಬಾಂಡ್‌ಗಳನ್ನು ನೀಡಬಹುದಾಗಿದೆ.
- ಎಲ್ಲಾ ನೀಲಿ ಬಾಂಡ್ ಗಳು ‘ಹಸಿರು ಬಾಂಡ್ ಗಳು ಆದರೆ ಎಲ್ಲಾ ‘ಹಸಿರು ಬಾಂಡ್ ಗಳು ನೀಲಿ ಬಾಂಡ್ಗಳಲ್ಲ.
‘ಗ್ರೀನ್ ಬಾಂಡ್‌ಗಳು VS ಕ್ಲೈಮೇಟ್ ಬಾಂಡ್‌ಗಳು’:
“ಹಸಿರು ಬಾಂಡ್‌ಗಳು” ಮತ್ತು “ಕ್ಲೈಮೇಟ್ ಬಾಂಡ್‌ಗಳನ್ನು” ಕೆಲವೊಮ್ಮೆ ಒಂದನ್ನು ಮತ್ತೊಂದರ ಪರ್ಯಾಯದಂತೆ ಬಳಸಲಾಗುತ್ತದೆ, ಆದರೆ ‘ಹವಾಮಾನ ಬಾಂಡ್ ಗಳು’ ಎಂಬ ಪದವನ್ನು ಕೆಲವು ಅಧಿಕಾರಿಗಳು ನಿರ್ದಿಷ್ಟವಾಗಿ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಅಥವಾ ಹವಾಮಾನ ಬದಲಾವಣೆಯ ಪರಿಣಾಮಗಳನ್ನು ತಗ್ಗಿಸುವ ಯೋಜನೆಗಳಿಗೆ ಬಳಸುತ್ತಾರೆ.
ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ಜಾಗೃತಿ.
GM ಆಹಾರಕ್ಕಾಗಿ ಕರಡು ನಿಯಮಾವಳಿಗಳನ್ನು ಬಿಡುಗಡೆ ಮಾಡಿದ FSSAI:
(FSSAI releases draft regulations for GM foods)
ಸಂದರ್ಭ:
ಇತ್ತೀಚೆಗೆ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (Food Safety and Standards Authority of India – FSSAI) ವು ‘ಅನುವಂಶಿಕವಾಗಿ/ತಳೀಯವಾಗಿ ಮಾರ್ಪಡಿಸಿದ ಆಹಾರ ಪದಾರ್ಥಗಳ’ (Genetically Modified foods – GM foods) ಕರಡು ನಿಯಮಗಳನ್ನು ಬಿಡುಗಡೆ ಮಾಡಿದೆ.
ಕರಡಿ(ಡ್ರಾಫ್ಟ್)ನ ಅವಲೋಕನ:
- ಪೂರ್ವಾನುಮತಿ ಇಲ್ಲದೆ ‘ತಳೀಯವಾಗಿ ಮಾರ್ಪಡಿಸಿದ ಜೀವಿಗಳಿಂದ’ (GMO ಗಳು) ಪಡೆದ ಯಾವುದೇ ಆಹಾರ ಉತ್ಪನ್ನಗಳು ಅಥವಾ ಆಹಾರ ಪದಾರ್ಥಗಳನ್ನು ಯಾರೂ ತಯಾರಿಸುವಂತಿಲ್ಲ ಅಥವಾ ಮಾರಾಟ ಮಾಡುವಂತಿಲ್ಲ.
- GM ಆಹಾರಗಳನ್ನು ಪರೀಕ್ಷಿಸಲು ಪ್ರಯೋಗಾಲಯಗಳು ಅನುಸರಿಸಬೇಕಾದ ಕೆಲವು ಮಾನದಂಡಗಳನ್ನು ಕರಡು ನಿರ್ದಿಷ್ಟಪಡಿಸುತ್ತದೆ.
- ಪ್ರಸ್ತಾವಿತ ನಿಯಮಗಳು “ಜೆನೆಟಿಕಲಿ/ ತಳೀಯವಾಗಿ ಮಾರ್ಪಡಿಸಿದ ಜೀವಿಗಳು (Genetically Modified Organisms -GMOs) ಅಥವಾ ತಳೀಯವಾಗಿ ಅಭಿವೃದ್ಧಿಪಡಿಸಿದ ಜೀವಿಗಳು (Genetically Engineered Organisms -GEOs) ಅಥವಾ ಆಹಾರವಾಗಿ ಅಥವಾ ಸಂಸ್ಕರಣೆಗಾಗಿ ನೇರ ಬಳಕೆಗಾಗಿ ಉದ್ದೇಶಿಸಲಾದ ‘’ಜೀವಂತ ಮಾರ್ಪಡಿಸಿದ ಜೀವಿಗಳಿಗೆ’ (Living Modified Organism -LMOs) ಅನ್ವಯಿಸುತ್ತದೆ.”
- ಅಂತಿಮ ಉತ್ಪನ್ನದಲ್ಲಿ ಯಾವುದೇ GM ಪದಾರ್ಥಗಳು ಇಲ್ಲದಿದ್ದರೂ ಸಹ, ನಿಯಮಗಳ ವ್ಯಾಪ್ತಿಯು GMO ಗಳಿಂದ ಪಡೆದ ಆಹಾರ ಪದಾರ್ಥಗಳು ಅಥವಾ ಸಂಸ್ಕರಣೆಯನ್ನು ಬಳಸಿಕೊಂಡು ತಯಾರಿಸಲಾದ ಎಲ್ಲಾ ಆಹಾರ ಉತ್ಪನ್ನಗಳನ್ನು ಒಳಗೊಂಡಿರುತ್ತದೆ.
- ಶಿಶು ಆಹಾರ ಉತ್ಪನ್ನಗಳಲ್ಲಿ, ತಳೀಯವಾಗಿ ಮಾರ್ಪಡಿಸಿದ ಜೀವಿಗಳು (GMO ಗಳು) ಅಥವಾ ತಳೀಯವಾಗಿ ಅಭಿವೃದ್ಧಿಪಡಿಸಿದ ಜೀವಿಗಳನ್ನು (GEOs) “ಒಂದು ಘಟಕಾಂಶವಾಗಿ ಬಳಸಲಾಗುವುದಿಲ್ಲ”.
- ಕರಡಿನಲ್ಲಿ, ಶೇಕಡಾ ಒಂದು ಅಥವಾ ಅದಕ್ಕಿಂತ ಹೆಚ್ಚಿನ GMO ವಿಷಯವನ್ನು ಹೊಂದಿರುವ ಆಹಾರ ಉತ್ಪನ್ನಗಳಿಗೆ ‘ಲೇಬಲಿಂಗ್ ನಿಯಮಗಳಿಗೆ’ (labelling norms) ಅವಕಾಶ ಕಲ್ಪಿಸಲಾಗಿದೆ.
ಭಾರತದಲ್ಲಿ GMO ನಿಯಂತ್ರಣ:
ಆಮದು ಮಾಡಿದ ಸರಕುಗಳಲ್ಲಿ ಜಿಎಂಒ ಮಟ್ಟವನ್ನು ನಿಯಂತ್ರಿಸುವುದನ್ನು ಆರಂಭದಲ್ಲಿ ಕೇಂದ್ರ ಪರಿಸರ ಸಚಿವಾಲಯದ ಅಧೀನದಲ್ಲಿರುವ ಜೆನೆಟಿಕ್ ಎಂಜಿನಿಯರಿಂಗ್ ಮೌಲ್ಯಮಾಪನ ಸಮಿತಿ (Genetic Engineering Appraisal Committee- GEAC) ಅಧೀನದಲ್ಲಿತ್ತು.
- ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006 ರ ಜಾರಿಗೆ ಬಂದ ನಂತರ, ಅದರ ಪಾತ್ರವನ್ನು ಕಡಿಮೆಗೊಳಿಸಲಾಯಿತು ಮತ್ತು ಬದಲಾಗಿ ಆಮದು ಮಾಡಿದ ವಸ್ತುಗಳನ್ನು ಅನುಮೋದಿಸಲು FSSAI ಗೆ ಸೂಚಿಸಲಾಯಿತು.
ತಳೀಯವಾಗಿ ಮಾರ್ಪಡಿಸಿದ ಜೀವಿಗಳು ( ಕುಲಾಂತರಿ ತಳಿಗಳು) ಯಾವುವು?
ತಳೀಯವಾಗಿ ಮಾರ್ಪಡಿಸಿದ ಜೀವಿಗಳಲ್ಲಿ (GMO ಗಳು), ಆನುವಂಶಿಕ ವಸ್ತುವನ್ನು (DNA) ಆನುವಂಶಿಕ ಎಂಜಿನಿಯರಿಂಗ್ ತಂತ್ರಗಳನ್ನು ಬಳಸಿ ಪರಿವರ್ತಿಸಲಾಗುತ್ತದೆ ಅಥವಾ ಕೃತಕವಾಗಿ ಮತ್ತೊಂದು ಬ್ಯಾಕ್ಟೀರಿಯಂಗೆ ಪರಿಚಯಿಸಲಾಗುತ್ತದೆ.
ಆನುವಂಶಿಕ ಮಾರ್ಪಾಡು ಪ್ರಕ್ರಿಯೆಯು ವಂಶವಾಹಿಗಳ ರೂಪಾಂತರ, ಅಳವಡಿಕೆ ಅಥವಾ ಅಳಿಸುವಿಕೆಯನ್ನು ಒಳಗೊಂಡಿರುತ್ತದೆ.
- ಚುಚ್ಚುಮದ್ದಿನ ಜೀನ್‌ಗಳನ್ನು ಸಾಮಾನ್ಯವಾಗಿ ಮತ್ತೊಂದು ಬ್ಯಾಕ್ಟೀರಿಯಂನಿಂದ ಪಡೆಯಲಾಗುತ್ತದೆ (ಬಿಟಿ ಹತ್ತಿಯಂತೆ, ಬ್ಯಾಸಿಲಸ್ ಥುರಿಂಜಿಯೆನ್ಸಿಸ್ (Bacillus thuringiensis- Bt) ಬ್ಯಾಕ್ಟೀರಿಯಂನ ಜೀನ್‌ಗಳನ್ನು ಸೇವಿಸಲಾಗುತ್ತದೆ).
- ಪ್ರಭೇದಗಳಲ್ಲಿ ಆನುವಂಶಿಕ ಮಾರ್ಪಾಡನ್ನು, ಪ್ರಭೇದಗಳಲ್ಲಿ ಸ್ವಾಭಾವಿಕವಾಗಿ ಇಲ್ಲದಿರುವ ಅಪೇಕ್ಷಣೀಯ ಹೊಸ ವೈಶಿಷ್ಟ್ಯವನ್ನು ವೇಗವರ್ಧಿಸಲು ಮಾಡಲಾಗುತ್ತದೆ.
GM ತಂತ್ರಗಳ ಬಳಕೆ:
- ಜೈವಿಕ ಮತ್ತು ವೈದ್ಯಕೀಯ ಸಂಶೋಧನೆ,
- ಔಷಧಿಗಳ ಉತ್ಪಾದನೆಯಲ್ಲಿ,
- ಪ್ರಾಯೋಗಿಕ ಚಿಕಿತ್ಸೆ (ಉದಾ. ಜೀನ್ ಚಿಕಿತ್ಸೆ),
- ಕೃಷಿ (ಉದಾ. ಗೋಲ್ಡನ್ ರೈಸ್, ಬಿಟಿ ಹತ್ತಿ ಇತ್ಯಾದಿ),
- ತಳೀಯವಾಗಿ ಮಾರ್ಪಡಿಸಿದ ಬ್ಯಾಕ್ಟೀರಿಯಾದಿಂದ ಪ್ರೋಟೀನ್ ಇನ್ಸುಲಿನ್ ಉತ್ಪಾದಿಸಲು,
- ಜಿಎಂ ಬ್ಯಾಕ್ಟೀರಿಯಾ ಇತ್ಯಾದಿಗಳಿಂದ ಜೈವಿಕ ಇಂಧನಗಳನ್ನು ಉತ್ಪಾದಿಸಲು.
ವಿಷಯಗಳು: ಕೇಂದ್ರ ಮತ್ತು ರಾಜ್ಯಗಳಿಂದ ದುರ್ಬಲ ವರ್ಗದ ಜನಸಮುದಾಯದವರಿಗೆ ಇರುವ ಕಲ್ಯಾಣ ಯೋಜನೆಗಳು ಮತ್ತು ಈ ಯೋಜನೆಗಳ ಕಾರ್ಯಕ್ಷಮತೆ; ಕಾರ್ಯವಿಧಾನಗಳು,ಕಾನೂನುಗಳು, ಸಂಸ್ಥೆಗಳು ಮತ್ತು ಈ ದುರ್ಬಲ ವಿಭಾಗಗಳ ರಕ್ಷಣೆ ಮತ್ತು ಸುಧಾರಣೆಗಾಗಿ ರಚಿಸಲಾದ ಸಂಸ್ಥೆಗಳು.
MGNREGS ಗಾಗಿ ಹೆಚ್ಚುವರಿಯಾಗಿ ₹10,000 ಕೋಟಿ.ಗಳ ಹಂಚಿಕೆ:
(₹10,000 cr. More allotted for MGNREGS)
ಸಂದರ್ಭ:
ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆ (MGNREGA) ಯೋಜನೆಗೆ ಕೇಂದ್ರ ಬಜೆಟ್‌ನಲ್ಲಿ ನಿಗದಿಪಡಿಸಿದ ಮೊತ್ತವು ಖಾಲಿಯಾದ ನಂತರ, MGNREGS ಗಾಗಿ ಮಧ್ಯಂತರ ಕ್ರಮವಾಗಿ ಹಣಕಾಸು ಸಚಿವಾಲಯವು ₹ 10,000 ಕೋಟಿ ಹೆಚ್ಚುವರಿ ಮೊತ್ತವನ್ನು ನಿಗದಿಪಡಿಸಿದೆ.
ಅವಶ್ಯಕತೆ:
ಸರ್ಕಾರವು ನೀಡಿದ ತನ್ನದೇ ಆದ ಹಣಕಾಸು ಹೇಳಿಕೆ (financial statement)ಯ ಪ್ರಕಾರ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯಿದೆ (MGNREGA) ಯೋಜನೆಗೆ ಕಾಯ್ದಿರಿಸಿದ ಹಣವು ಈ ಆರ್ಥಿಕ ವರ್ಷದ ಅರ್ಧದಲ್ಲೇ ಖಾಲಿಯಾಗಿದೆ ಮತ್ತು ಈ ಬಿಕ್ಕಟ್ಟಿನಿಂದ ಯೋಜನೆಯನ್ನು ಹೊರತರಲು ‘ಪೂರಕ ಬಜೆಟ್ ಹಂಚಿಕೆ’ ಮುಂದಿನ ಸಂಸತ್ತಿನ ಅಧಿವೇಶನ ಪ್ರಾರಂಭವಾಗುವ ಮೊದಲು ಮಾಡಲಾಗುವುದಿಲ್ಲ. ಮುಂದಿನ ಸಂಸತ್ ಅಧಿವೇಶನ ಆರಂಭವಾಗಲು ಇನ್ನೂ ಕನಿಷ್ಠ ಒಂದು ತಿಂಗಳು ಬಾಕಿ ಇದೆ.
ಪರಿಣಾಮಗಳು:
- ಇದರರ್ಥ,ರಾಜ್ಯಗಳು ತಮ್ಮ ಸ್ವಂತ ನಿಧಿಯಿಂದ ಹಣವನ್ನು ಬಿಡುಗಡೆ ಮಾಡದ ಹೊರತು MGNREGA ಕಾರ್ಮಿಕರ ವೇತನ ಪಾವತಿಗಳು ಮತ್ತು ಬಳಸಿದ ಸಲಕರಣೆ ವೆಚ್ಚಗಳು ವಿಳಂಬವಾಗುತ್ತವೆ.
- ಆರ್ಥಿಕ ಸಂಕಷ್ಟದ ಸಮಯದಲ್ಲಿ ವೇತನ ಪಾವತಿಯನ್ನು ವಿಳಂಬ ಮಾಡುವ ಮೂಲಕ ಕೇಂದ್ರವು ಕಾರ್ಮಿಕರನ್ನು “ಬಲವಂತದ ದುಡಿಮೆಗೆ” ಒಳಪಡಿಸುತ್ತಿದೆ ಎಂದು ಕಾರ್ಯಕರ್ತರು ಹೇಳುತ್ತಾರೆ.
MGNREGA ಯೋಜನೆಯ ಕುರಿತು:
ಈ ಯೋಜನೆಯನ್ನು 2005 ರಲ್ಲಿ “ಕೆಲಸದ ಹಕ್ಕನ್ನು”(Right to Work) ಖಾತರಿಪಡಿಸುವ ಸಾಮಾಜಿಕ ಕ್ರಮವಾಗಿ ಪರಿಚಯಿಸಲಾಯಿತು.
- ಈ ಸಾಮಾಜಿಕ ಅಳತೆ ಮತ್ತು ಕಾರ್ಮಿಕ ಕಾನೂನಿನ ಪ್ರಮುಖ ಸಿದ್ಧಾಂತವೆಂದರೆ ಗ್ರಾಮೀಣ ಭಾರತದಲ್ಲಿ ಸ್ಥಳೀಯ ಸರ್ಕಾರವು ಗ್ರಾಮೀಣ ಕೌಶಲ್ಯರಹಿತ ಜನರ ಜೀವನ ಮಟ್ಟವನ್ನು ಹೆಚ್ಚಿಸಲು ಕಾನೂನುಬದ್ಧವಾಗಿ ಕನಿಷ್ಠ 100 ದಿನಗಳ ವೇತನ ಉದ್ಯೋಗವನ್ನು ಒದಗಿಸಬೇಕಾಗುತ್ತದೆ.
ಪ್ರಮುಖ ಉದ್ದೇಶಗಳು:
- ಕೌಶಲ್ಯರಹಿತ ಕಾಮಗಾರಿಗಳನ್ನು ಮಾಡಲು ಸಿದ್ಧರಿರುವ ಪ್ರತಿ ಕುಟುಂಬದ ವಯಸ್ಕ ಕಾರ್ಮಿಕರಿಗೆ 100 ದಿನಗಳಿಗಿಂತ ಕಡಿಮೆಯಿಲ್ಲದ ಅಥವಾ ಕನಿಷ್ಠ 100 ದಿನಗಳ ಸಂಬಳ ಸಹಿತ ಗ್ರಾಮೀಣ ಉದ್ಯೋಗದ ಒದಗಿಸುವಿಕೆ.
- ಗ್ರಾಮೀಣ ಬಡವರ ಜೀವನೋಪಾಯವನ್ನು ಬಲಪಡಿಸುವ ಮೂಲಕ ಸಾಮಾಜಿಕ ಸೇರ್ಪಡೆಗಾಗಿ ಪೂರ್ವಭಾವಿಯಾಗಿ ಖಾತರಿನೀಡುವುದು.
- ಬಾವಿಗಳು, ಕೊಳಗಳು, ರಸ್ತೆಗಳು ಮತ್ತು ಕಾಲುವೆಗಳಂತಹ ಗ್ರಾಮೀಣ ಪ್ರದೇಶಗಳಲ್ಲಿ ಬಾಳಿಕೆ ಬರುವ ಸ್ಥಿರ ಆಸ್ತಿಗಳ ಸೃಷ್ಟಿ.
- ಗ್ರಾಮೀಣ ಪ್ರದೇಶಗಳಿಂದ ನಗರ ವಲಸೆಯನ್ನು ಕಡಿಮೆ ಮಾಡುವುದು.
- ತರಬೇತಿ ರಹಿತ ಗ್ರಾಮೀಣ ಕಾರ್ಮಿಕರನ್ನು ಬಳಸಿಕೊಂಡು ಗ್ರಾಮೀಣ ಮೂಲಸೌಕರ್ಯಗಳನ್ನು ರಚಿಸುವುದು.
MGNREGA ಯೋಜನೆಯಡಿ ಪ್ರಯೋಜನಗಳನ್ನು ಪಡೆಯುವ ಅರ್ಹತಾ ಮಾನದಂಡಗಳು ಈ ಕೆಳಗಿನಂತಿವೆ:
- MGNREGA ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅವರು ಭಾರತದ ನಾಗರಿಕರಾಗಿರಬೇಕು.
- ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಆ ವ್ಯಕ್ತಿಯು 18 ವರ್ಷಗಳನ್ನು ಪೂರೈಸಿರಬೇಕು.
- ಅರ್ಜಿದಾರನು ಸ್ಥಳೀಯ ಪ್ರದೇಶದ ಭಾಗವಾಗಿರಬೇಕು (ಅಂದರೆ ಸ್ಥಳೀಯ ಗ್ರಾಮ ಪಂಚಾಯಿತಿಯ ಮೂಲಕ ಅರ್ಜಿ ಸಲ್ಲಿಸಬೇಕು).
- ಅರ್ಜಿದಾರರು ಸ್ವಯಂಪ್ರೇರಣೆಯಿಂದ ಕೌಶಲ್ಯರಹಿತ ಕೆಲಸಗಳನ್ನು ಮಾಡಲು ಮುಂದೆ ಬರಬೇಕು.
ಯೋಜನೆಯ ಅನುಷ್ಠಾನ:
- ಕೆಲಸಕ್ಕಾಗಿ ಅರ್ಜಿಯನ್ನು ಸಲ್ಲಿಸಿದ 15 ದಿನಗಳಲ್ಲಿ ಅಥವಾ ಕೆಲಸಕ್ಕೆ ಅರ್ಜಿ ಸಲ್ಲಿಸಿದ ದಿನಾಂಕದಿಂದ, ಅರ್ಜಿದಾರರಿಗೆ ವೇತನ ಉದ್ಯೋಗವನ್ನು ಒದಗಿಸಲಾಗುತ್ತದೆ.
- ಉದ್ಯೋಗವು ಲಭ್ಯವಿಲ್ಲದಿದ್ದ ಸಂದರ್ಭದಲ್ಲಿ ಅರ್ಜಿಯನ್ನು ಸಲ್ಲಿಸಿದ ಹದಿನೈದು ದಿನಗಳಲ್ಲಿ ಅಥವಾ ಕೆಲಸ ಕೋರಿದ ದಿನಾಂಕದಿಂದ ಉದ್ಯೋಗವನ್ನು ಒದಗಿಸದಿದ್ದಲ್ಲಿ ನಿರುದ್ಯೋಗ ಭತ್ಯೆ ಪಡೆಯುವ ಹಕ್ಕು.
- MGNREGA ಕಾರ್ಯಚಟುವಟಿಕೆಗಳ ಸಾಮಾಜಿಕ ಲೆಕ್ಕಪರಿಶೋಧನೆಯು ಕಡ್ಡಾಯವಾಗಿದೆ, ಆ ಮೂಲಕ ಕಾರ್ಯಕ್ರಮದಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಖಾತರಿ ಪಡಿಸಲಾಗಿದೆ.
- ವೇತನ ಪಡೆಯುವವರು ಧ್ವನಿ ಎತ್ತುವ ಮತ್ತು ದೂರುಗಳನ್ನು ಸಲ್ಲಿಸುವ ಪ್ರಮುಖ ವೇದಿಕೆ ಗ್ರಾಮಸಭೆಯಾಗಿದೆ.
- MGNREGA ಅಡಿಯಲ್ಲಿ ಮಾಡಲಾಗುವ ಕಾಮಗಾರಿಗಳಿಗೆ ಅನುಮೋದನೆ ನೀಡುವುದು ಮತ್ತು ಅವುಗಳಿಗೆ ಆದ್ಯತೆಯನ್ನು ನೀಡುವ ಜವಾಬ್ದಾರಿಯು ಗ್ರಾಮಸಭೆ ಮತ್ತು ಗ್ರಾಮ ಪಂಚಾಯಿತಿಗಳದಾಗಿರುತ್ತದೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
ಇಂಗ್ಲೀಷ್ ಚಾನೆಲ್:
- ‘ಇಂಗ್ಲಿಷ್ ಚಾನೆಲ್’(English Channel) ಅಟ್ಲಾಂಟಿಕ್ ಸಾಗರದ ಒಂದು ಭಾಗವಾಗಿದೆ.
- ಇದು ಉತ್ತರ ಫ್ರಾನ್ಸ್‌ನಿಂದ ಬ್ರಿಟನ್ ದ್ವೀಪವನ್ನು (ಯುನೈಟೆಡ್ ಕಿಂಗ್‌ಡಮ್‌ನ ಭಾಗ) ಪ್ರತ್ಯೇಕಿಸುತ್ತದೆ ಮತ್ತು ಉತ್ತರ ಸಮುದ್ರವನ್ನು ಅಟ್ಲಾಂಟಿಕ್ ಸಾಗರದೊಂದಿಗೆ ಸಂಪರ್ಕಿಸುತ್ತದೆ.
- ಇದರ ಉದ್ದ ಸುಮಾರು 350 ಮೈಲುಗಳು ಮತ್ತು ಇದು ‘ಡೋವರ್ ಸ್ಟ್ರೈಟ್ಸ್’ ಅಥವಾ ಡೋವರ್ ಜಲಾಂಧಿ ಯಲ್ಲಿ ಅತ್ಯಂತ ಕಿರಿದಾಗಿದೆ.
ಸುಬನ್ಸಿರಿ ಜಲವಿದ್ಯುತ್ ಯೋಜನೆ (LSHP):
(Subansiri Hydroelectric Project)
- ಸುಬಾನ್ಸಿರಿ ಲೋವರ್ ಹೈಡ್ರೋಎಲೆಕ್ಟ್ರಿಕ್ ಪ್ರಾಜೆಕ್ಟ್ (Subansiri Lower Hydroelectric Project – SLHEP) ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಗಡಿಯಲ್ಲಿ ಹರಿಯುವ ಸುಬನ್ಸಿರಿ ನದಿಯಲ್ಲಿ ನಿರ್ಮಾಣ ಹಂತದಲ್ಲಿರುವ ಗುರುತ್ವಾಕರ್ಷಣೆಯ ಅಣೆಕಟ್ಟಾಗಿದೆ.
- ಸುಬನ್ಸಿರಿ ನದಿ (ಸ್ವರ್ಣ ನದಿ), ಟಿಬೆಟಿಯನ್ ಪ್ರಸ್ಥಭೂಮಿಯಲ್ಲಿ ಹುಟ್ಟಿ ಅರುಣಾಚಲ ಪ್ರದೇಶದ ಮಿರಿ ಬೆಟ್ಟಗಳ ಮೂಲಕ ಹರಿದು ಭಾರತವನ್ನು ಪ್ರವೇಶಿಸುತ್ತದೆ.
- ಇದು ಬ್ರಹ್ಮಪುತ್ರ ನದಿಯ ಅತಿದೊಡ್ಡ ಉಪನದಿ ಯಾಗಿದೆ.
- ಈ ಯೋಜನೆಯನ್ನು ರಾಜ್ಯದ ರಾಷ್ಟ್ರೀಯ ಜಲ ವಿದ್ಯುತ್ ನಿಗಮ (NHPC) ಅಭಿವೃದ್ಧಿಪಡಿಸುತ್ತಿದೆ.
- ಇದು ಪೂರ್ಣಗೊಂಡಾಗ, ಇದು ಭಾರತದ ಏಕೈಕ ‘ಅತಿದೊಡ್ಡ ಜಲವಿದ್ಯುತ್ ಸ್ಥಾವರ’ ಆಗಿರಲಿದೆ. ಯೋಜನೆಯು 2023 ರಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.














