Print Friendly, PDF & Email

[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 10ನೇ ನವೆಂಬರ 2021

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಮಧ್ಯಾಹ್ನದ ಬಿಸಿಯೂಟ ಯೋಜನೆ.

2. ಸ್ಮೈಲ್ ಯೋಜನೆ.

3. ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್.

4. ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆಯ ಸಹಾಯ ಮಿಷನ್ (UNAMA).

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಸಂಯೋಜಿತ ಥಿಯೇಟರ್ ಕಮಾಂಡ್ಸ್.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ಯುಕ್ತಧಾರಾ.

2. ಇಸ್ಲಾಮಿಕ್ ಸ್ಟೇಟ್ ಖೊರಾಸನ್ ಪ್ರಾಂತ್ಯ.

3. ಡಿಯಾಗೋ ಗಾರ್ಸಿಯಾ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಮಧ್ಯಾಹ್ನದ ಬಿಸಿಯೂಟ ಯೋಜನೆ:


(midday meal scheme)

ಸಂದರ್ಭ:

ಮಕ್ಕಳಲ್ಲಿ ಅಪೌಷ್ಟಿಕತೆ ಮತ್ತು ರಕ್ತಹೀನತೆಯ “ನಿರ್ಣಾಯಕ” ಮಟ್ಟವನ್ನು ತೊಡೆದು ಹಾಕಲು ನಿರ್ಧರಿಸಿರುವ ಮಾಡುವ ಕೇಂದ್ರ ಸರ್ಕಾರವು, ಈಗ PM ಪೋಶನ್ (PM Poshan) ಎಂದು ಕರೆಯಲ್ಪಡುವ ಮಧ್ಯಾಹ್ನದ ಊಟ ಯೋಜನೆ  (Mid-Day Meal Scheme) ಯಲ್ಲಿ ಸಿರಿ ಧಾನ್ಯಗಳನ್ನು ಪರಿಚಯಿಸುವ ಸಾಧ್ಯತೆಯನ್ನು ಅನ್ವೇಷಿಸಲು ರಾಜ್ಯಗಳನ್ನು ಒತ್ತಾಯಿಸಿದೆ.

ಅಗತ್ಯ ಮತ್ತು ಮಹತ್ವ:

ಜೋಳ, ಬಜ್ರಾ ಮತ್ತು ರಾಗಿಯನ್ನು ಒಳಗೊಂಡಿರುವ ಸಿರಿ ಧಾನ್ಯ ಅಥವಾ ನ್ಯೂಟ್ರಿ-ಧಾನ್ಯಗಳು ಅಥವಾ ಒರಟು ಧಾನ್ಯಗಳು ಖನಿಜಗಳು ಮತ್ತು ಬಿ-ಕಾಂಪ್ಲೆಕ್ಸ್ ವಿಟಮಿನ್‌ಗಳು, ಹಾಗೆಯೇ ಪ್ರೋಟೀನ್‌ಗಳು ಮತ್ತು ಉತ್ಕರ್ಷಣ ನಿರೋಧಕಗಳಿಂದ ಸಮೃದ್ಧವಾಗಿವೆ, ಇದು ಮಕ್ಕಳ ಪೌಷ್ಟಿಕಾಂಶದ ಫಲಿತಾಂಶವನ್ನು ಸುಧಾರಿಸಲು ಸೂಕ್ತವಾದ ಆಯ್ಕೆಯಾಗಿದೆ.

ಮಧ್ಯಾಹ್ನದ ಬಿಸಿಯೂಟ ಯೋಜನೆಯ ಕುರಿತು:

ಈ ಯೋಜನೆಯು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ ಮತ್ತು ಮದರಸಾಗಳಲ್ಲಿನ ಎಲ್ಲಾ ಮಕ್ಕಳಿಗೆ ಒಂದು ಬಾರಿಯ  ಊಟವನ್ನು ಸಮಗ್ರ ಶಿಕ್ಷಣ ಯೋಜನೆಯಡಿಯಲ್ಲಿ,ಖಾತರಿಪಡಿಸುತ್ತದೆ.

 1. ಈ ಯೋಜನೆಯಡಿಯಲ್ಲಿ ಎಂಟನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ವರ್ಷದಲ್ಲಿ ಕನಿಷ್ಠ 200 ದಿನಗಳ ವರೆಗೆಯಾದರೂ ಒಂದು ಪೌಷ್ಠಿಕಾಂಶದ ಬೇಯಿಸಿದ ಊಟವನ್ನು ಖಾತರಿಪಡಿಸಲಾಗುತ್ತದೆ.
 2. ಈ ಯೋಜನೆಯು ಮಾನವ ಸಂಪನ್ಮೂಲ ಸಚಿವಾಲ (ಶಿಕ್ಷಣ ಸಚಿವಾಲಯ)ಯದ ವ್ಯಾಪ್ತಿಗೆ ಬರುತ್ತದೆ.
 3. ಇದನ್ನು ಕೇಂದ್ರ ಸರ್ಕಾರದ ಪ್ರಯೋಜಿತ ರಾಷ್ಟ್ರೀಯ ಶಿಕ್ಷಣ ಕಾರ್ಯಕ್ರಮವಾದ ಪ್ರಾಥಮಿಕ ಶಿಕ್ಷಣಕ್ಕೆ ಪೌಷ್ಟಿಕಾಂಶದ ಬೆಂಬಲಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ (National Programme of Nutritional Support to Primary Education (NP – NSPE) ಎಂಬ ಹೆಸರಿನಲ್ಲಿ 1995 ರಲ್ಲಿ ಪ್ರಾರಂಭಿಸಲಾಯಿತು. 2004 ರಲ್ಲಿ, ಈ ಯೋಜನೆಯನ್ನು ಮಧ್ಯಾಹ್ನದ ಬಿಸಿಯೂಟ ಯೋಜನೆ ಎಂದು ಪುನರಾರಂಭಿಸಲಾಯಿತು.
 4. ಈ ಯೋಜನೆಯನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013 ರ ವ್ಯಾಪ್ತಿಗೆ ಒಳಪಡಿಸಲಾಗಿದೆ.

ಉದ್ದೇಶಗಳು:

ಹಸಿವು ಮತ್ತು ಅಪೌಷ್ಟಿಕತೆಯನ್ನು ಪರಿಹರಿಸಿ, ಶಾಲೆಯಲ್ಲಿ ದಾಖಲಾತಿ ಮತ್ತು ಹಾಜರಾತಿಯನ್ನು ಹೆಚ್ಚಿಸಿ,ವಿವಿಧ ಜಾತಿಗಳ ನಡುವೆ ಸಾಮಾಜಿಕೀಕರಣವನ್ನು ಸುಧಾರಿಸಿ, ತಳಮಟ್ಟದಲ್ಲಿ ಉದ್ಯೋಗವನ್ನು ಒದಗಿಸುವುದು, ವಿಶೇಷವಾಗಿ ಮಹಿಳೆಯರಿಗೆ ಒದಗಿಸುವುದು.

ಮಧ್ಯಾಹ್ನದ ಬಿಸಿಯೂಟ ಯೋಜನೆ (MDM) ನಿಯಮಗಳು 2015 ರ ಪ್ರಕಾರ:

 1. ಮಕ್ಕಳಿಗೆ ಶಾಲೆಯಲ್ಲಿ ಮಾತ್ರ ಊಟ ಬಡಿಸಲಾಗುವುದು.
 2. ಆಹಾರ ಧಾನ್ಯಗಳು ಲಭ್ಯವಿಲ್ಲದ ಕಾರಣ ಅಥವಾ ಬೇರೆ ಯಾವುದೇ ಕಾರಣಗಳಿಂದಾಗಿ ಯಾವುದೇ ಶಾಲಾ ದಿನದಂದು ಮಧ್ಯಾಹ್ನದ ಊಟವನ್ನು ಶಾಲೆಯಲ್ಲಿ ಒದಗಿಸದಿದ್ದರೆ, ಮುಂದಿನ ತಿಂಗಳು 15 ರೊಳಗೆ ರಾಜ್ಯ ಸರ್ಕಾರವು ಆಹಾರ ಭದ್ರತಾ ಭತ್ಯೆಯನ್ನು ಪಾವತಿಸಬೇಕು.
 3. ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2009 ರ ಅಡಿಯಲ್ಲಿ ಕಡ್ಡಾಯವಾಗಿರುವ ಶಾಲಾ ನಿರ್ವಹಣಾ ಸಮಿತಿಯು ಸಹ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ.

ಪೌಷ್ಟಿಕಾಂಶದ ಮಾನದಂಡಗಳು:

 1. ಮಧ್ಯಾಹ್ನದ ಬಿಸಿಯೂಟ ಯೋಜನೆಯ ಮಾರ್ಗಸೂಚಿಗಳ ಪ್ರಕಾರ, ಕ್ಯಾಲೊರಿ ಸೇವನೆಯ ವಿಷಯದಲ್ಲಿ, ಕಿರು ಪ್ರಾಥಮಿಕ ಶಾಲೆಗಳಲ್ಲಿನ ಮಕ್ಕಳಿಗೆ MDM ಮೂಲಕ ದಿನಕ್ಕೆ ಕನಿಷ್ಠ 450 ಕ್ಯಾಲೊರಿಗಳನ್ನು 12 ಗ್ರಾಂ ಪ್ರೋಟೀನ್‌ನೊಂದಿಗೆ ಒದಗಿಸಬೇಕು ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನ ಮಕ್ಕಳು 20 ಗ್ರಾಂ ಪ್ರೋಟೀನ್‌ನೊಂದಿಗೆ 700 ಕ್ಯಾಲೊರಿಗಳನ್ನು ಒದಗಿಸಬೇಕು.
 2. ಪ್ರಾಥಮಿಕ ತರಗತಿಗಳ ಮಕ್ಕಳ ಪ್ರತಿ ಊಟದಲ್ಲಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ನಿಗದಿಪಡಿಸಿದಂತೆ 100 ಗ್ರಾಂ ಆಹಾರ ಧಾನ್ಯಗಳು, 20 ಗ್ರಾಂ ದ್ವಿದಳ ಧಾನ್ಯಗಳು, 50 ಗ್ರಾಂ ತರಕಾರಿಗಳು ಮತ್ತು 5 ಗ್ರಾಂ ತೈಲಗಳು ಮತ್ತು ಕೊಬ್ಬುಗಳನ್ನು ಒಳಗೊಂಡಿರಬೇಕು. ಹಿರಿಯ-ಪ್ರಾಥಮಿಕ ಶಾಲೆಗಳ ಮಕ್ಕಳ ಊಟದಲ್ಲಿ ಕಡ್ಡಾಯವಾಗಿ 150 ಗ್ರಾಂ ಆಹಾರ ಧಾನ್ಯಗಳು, 30 ಗ್ರಾಂ ದ್ವಿದಳ ಧಾನ್ಯಗಳು, 75 ಗ್ರಾಂ ತರಕಾರಿಗಳು ಮತ್ತು 7.5 ಗ್ರಾಂ ತೈಲಗಳು ಮತ್ತು ಕೊಬ್ಬುಗಳಿರಬೇಕು.

food_norms

 

ವಿಷಯಗಳು: ಸಮಾಜದ ದುರ್ಬಲ ವರ್ಗದವರಿಗೆ ಯೋಜನೆಗಳು.

ಸ್ಮೈಲ್ ಯೋಜನೆ:


(SMILE Scheme)

 ಸಂದರ್ಭ:

ಭಾರತ ಸರ್ಕಾರದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು (Ministry of Social Justice and Empowerment) ಸಮಾಜದ ಅಂಚಿನಲ್ಲಿರುವ ವ್ಯಕ್ತಿಗಳಿಗೆ ಬೆಂಬಲ ನೀಡುವುದಕ್ಕಾಗಿ ಈ ಯೋಜನೆಯನ್ನು ರೂಪಿಸಿದೆ.

SMILE ಯೋಜನೆಯ ಕುರಿತು:

 1. “ಸ್ಮೈಲ್ ಎಂದರೆ ಜೀವನೋಪಾಯ ಮತ್ತು ಉದ್ಯಮಕ್ಕಾಗಿ ಅಂಚಿನಲ್ಲಿರುವ ವ್ಯಕ್ತಿಗಳಿಗೆ ಬೆಂಬಲ” (SMILE stands for Support for Marginalized Individuals).
 2. ಯೋಜನೆಯ ಗಮನ: ಪುನರ್ವಸತಿ, ವೈದ್ಯಕೀಯ ಸೌಲಭ್ಯಗಳು, ಸಮಾಲೋಚನೆ, ಮೂಲ ದಸ್ತಾವೇಜು, ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಆರ್ಥಿಕ ಸಂಪರ್ಕ ಇತ್ಯಾದಿಗಳ ಮೇಲೆ ಯೋಜನೆಯು ಗಮನ ಹರಿಸಿದೆ.
 3. ಇದು, ‘ಭಿಕ್ಷಾಟನೆಯಲ್ಲಿ ತೊಡಗಿರುವ ವ್ಯಕ್ತಿಗಳ ಸಮಗ್ರ ಪುನರ್ವಸತಿಗಾಗಿ ಕೇಂದ್ರ ವಲಯ ಯೋಜನೆ’ ಯ ಉಪ ಯೋಜನೆಯನ್ನು (Central Sector Scheme for Comprehensive Rehabilitation of persons engaged in the act of Begging) ಒಳಗೊಂಡಿದೆ.
 4. ಈ ಯೋಜನೆಯನ್ನು ರಾಜ್ಯ ಸರ್ಕಾರಗಳು / ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು / ನಗರ ಸ್ಥಳೀಯ ಸಂಸ್ಥೆಗಳು, ಸ್ವಯಂಸೇವಾ ಸಂಸ್ಥೆಗಳು, ಸಮುದಾಯ ಆಧಾರಿತ ಸಂಸ್ಥೆಗಳು (Community Based Organizations -CBOs), ಸಂಸ್ಥೆಗಳು ಮತ್ತು ಇತರರ ಬೆಂಬಲದೊಂದಿಗೆ  ಅನುಷ್ಠಾನಗೊಳಿಸಲಾಗುವುದು.

ಭಾರತದಲ್ಲಿ ಭಿಕ್ಷುಕರ ಸಂಖ್ಯೆ:

 1. 2011 ರ ಜನಗಣತಿ ಪ್ರಕಾರ ಭಾರತದಲ್ಲಿ ಒಟ್ಟು ಭಿಕ್ಷುಕರ ಸಂಖ್ಯೆ 4,13,670 (2,21,673 ಪುರುಷರು ಮತ್ತು 1,91,997 ಮಹಿಳೆಯರು ಸೇರಿದಂತೆ) ಮತ್ತು 2001 ರ ಜನಗಣತಿಗೆ ಹೋಲಿಸಿದರೆ ಈ ಸಂಖ್ಯೆ ಹೆಚ್ಚಾಗಿದೆ.
 2. ಪಟ್ಟಿಯಲ್ಲಿ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದ್ದರೆ ಉತ್ತರ ಪ್ರದೇಶ ಮತ್ತು ಬಿಹಾರ ಕ್ರಮವಾಗಿ ಎರಡು ಮತ್ತು ಮೂರು ಸ್ಥಾನದಲ್ಲಿದೆ. 2011 ರ ಜನಗಣತಿಯ ಪ್ರಕಾರ ಲಕ್ಷದ್ವೀಪ ಕೇವಲ ಇಬ್ಬರು ಭಿಕ್ಷಾಟನೆ ಮಾಡುವ ವ್ಯಕ್ತಿಗಳನ್ನು ಹೊಂದಿದೆ.
 3. ಕೇಂದ್ರಾಡಳಿತ ಪ್ರದೇಶಗಳಲ್ಲಿ, ನವದೆಹಲಿಯು ಅತಿ ಹೆಚ್ಚು ಭಿಕ್ಷುಕರನ್ನು (2,187) ಹೊಂದಿದ್ದರೆ, ಚಂಡೀಗಡದಲ್ಲಿ 121 ಮಂದಿ ಬಿಕ್ಷುಕರು ಇದ್ದಾರೆ.
 4. ಈಶಾನ್ಯ ರಾಜ್ಯಗಳ ಪೈಕಿ, ಅಸ್ಸಾಂ 22,116 ಭಿಕ್ಷುಕರೊಂದಿಗೆ ಅಗ್ರಸ್ಥಾನದಲ್ಲಿದ್ದರೆ, ಮಿಜೋರಾಂ 53 ಭಿಕ್ಷುಕರೊಂದಿಗೆ ಅತ್ಯಂತ ಕೆಳಗಿನ ಸ್ಥಾನದಲ್ಲಿದೆ.

 

ವಿಷಯಗಳು: ಭಾರತ ಮತ್ತು ಅದರ ನೆರೆಹೊರೆಯ ದೇಶಗಳೊಂದಿಗಿನ ಸಂಬಂಧಗಳು.

ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC):


(China-Pakistan Economic Corridor (CPEC)

ಸಂದರ್ಭ:

CPEC ಅಥವಾ ಚೀನಾ ಪಾಕಿಸ್ತಾನ್ ಆರ್ಥಿಕ ಕಾರಿಡಾರ್ ಯೋಜನೆಯಲ್ಲಿ ಕೆಲಸ ಮಾಡುತ್ತಿರುವ ಚೀನೀ ಸೈನಿಕರು ಮತ್ತು ನಾಗರಿಕರ ಬಗ್ಗೆ ಸ್ಥಳೀಯ ಪಾಕಿಸ್ತಾನಿಗಳು ಅತೃಪ್ತಿ ಹೊಂದಿರುವುದರಿಂದ ಈ ಯೋಜನೆಯನ್ನು ನಿರ್ವಹಿಸಲು ಹೆಚ್ಚು ಕಷ್ಟಕರವಾಗುತ್ತಿದೆ. ಹೀಗಾಗಿ ಈ ಪ್ರದೇಶದಲ್ಲಿ ಹೆಚ್ಚಿನ ಸೈನಿಕರನ್ನು ನಿಯೋಜಿಸುವಂತೆ ಪಾಕಿಸ್ತಾನಕ್ಕೆ ಒತ್ತಾಯಿಸಲಾಗಿದೆ.

 1. ಭಾಷಾ ಅಣೆಕಟ್ಟು (Bhasha Dam) ಕಾಮಗಾರಿಯಲ್ಲಿ ಕೆಲಸ ಮಾಡುತ್ತಿರುವ ಚೀನೀ ಇಂಜಿನಿಯರ್‌ಗಳು ಮತ್ತು ಇತರರ ಭದ್ರತೆಗಾಗಿ, ಪಾಕಿಸ್ತಾನ ಸೇನೆಯು 34 ವಿಶೇಷ ಭದ್ರತಾ ವಿಭಾಗದ 340 ಪದಾತಿ ದಳವನ್ನು ನಿಯೋಜಿಸಿದೆ. CPEC ಯನ್ನು ಭದ್ರತೆಗಾಗಿ ಮತ್ತೊಂದು ಭದ್ರತಾ ವಿಭಾಗವನ್ನು ರಚಿಸಲು ಪಾಕಿಸ್ತಾನವನ್ನು ಒತ್ತಾಯಿಸಲಾಯಿತು.

CPEC ಕುರಿತು:

ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC)ವು ಬಹು-ಶತಕೋಟಿ-ಡಾಲರ್ ಮೊತ್ತದ ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್ (BRI) ನ ಪ್ರಮುಖ ಯೋಜನೆಯಾಗಿದೆ, ಚೀನಾ ಅನುದಾನಿತ ಮೂಲಸೌಕರ್ಯ ಯೋಜನೆಗಳ ಮೂಲಕ ವಿಶ್ವದಾದ್ಯಂತ ಬೀಜಿಂಗ್‌ನ ಪ್ರಭಾವವನ್ನು ಹೆಚ್ಚಿಸುವ ಗುರಿಯನ್ನು ಹೊಂದಿದ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಮಹತ್ವಾಕಾಂಕ್ಷಿ ಯೋಜನೆಯಾಗಿದೆ.

 1. 3,000 ಕಿ.ಮೀ ಉದ್ದದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (CPEC) ಹೆದ್ದಾರಿಗಳು, ರೈಲ್ವೆಜಾಲಗಳು ಮತ್ತು ಪೈಪ್‌ಲೈನ್‌ಗಳನ್ನು ಒಳಗೊಂಡಿದೆ.
 2. ಈ ಯೋಜನೆಯು ಅಂತಿಮವಾಗಿ ಪಾಕಿಸ್ತಾನದ ನೈಋತ್ಯ ಭಾಗದಲ್ಲಿರುವ ಗ್ವಾದರ್ ನಗರವನ್ನು ಚೀನಾದ ವಾಯುವ್ಯ ಪ್ರಾಂತ್ಯವಾದ ಕ್ಸಿನ್‌ಜಿಯಾಂಗ್‌ಗೆ ಹೆದ್ದಾರಿಗಳು ಮತ್ತು ರೈಲ್ವೆಗಳ ವಿಶಾಲ ಜಾಲದ ಮೂಲಕ ಸಂಪರ್ಕಿಸುವ ಗುರಿಯನ್ನು ಹೊಂದಿದೆ.
 3. ಪ್ರಸ್ತಾವಿತ ಯೋಜನೆಗೆ ಹಣಕಾಸಿನ ನೆರವನ್ನು ಚೀನಿ ಬ್ಯಾಂಕು ಗಳು ಭಾರಿ ಸಬ್ಸಿಡಿ ರೂಪದ ಸಾಲದ ಮೂಲಕ ಪಾಕಿಸ್ತಾನ ಸರ್ಕಾರಕ್ಕೆ ವಿವರಿಸುತ್ತೇವೆ.

current affairs

 

ಆದರೆ, ಇದು ಭಾರತಕ್ಕೆ ಏಕತೆ ಕಳವಳ ಕಾರಿ ವಿಷಯವಾಗಿದೆ?

ಇದು ಪಾಕಿಸ್ತಾನ ಆಕ್ರಮಿತ ಕಾಶ್ಮೀರದ (PoK)ಮೂಲಕ ಹಾದು ಹೋಗುತ್ತದೆ.

 1. ಹಿಂದೂ ಮಹಾಸಾಗರದಲ್ಲಿ ಹೆಚ್ಚಿನ ಉಪಸ್ಥಿತಿಯೊಂದಿಗೆ ಗ್ವಾದರ್ ಬಂದರಿನ ಮೂಲಕ ತನ್ನ ಸರಬರಾಜು ಮಾರ್ಗಗಳನ್ನು ಸುರಕ್ಷಿತ ಮತ್ತು ಕಡಿಮೆ ಅಂತರದನ್ನಾಗಿ ಮಾಡಿಕೊಳ್ಳಲು ಚೀನಾ CPEC ಯೋಜನೆಯನ್ನು ಅವಲಂಬಿಸಿದೆ. ಆದ್ದರಿಂದ, CPEC ಯಶಸ್ಸಿನ ನಂತರ, ವ್ಯಾಪಕವಾದ ಚೀನೀ ಉಪಸ್ಥಿತಿಯಿಂದಾಗಿ ಹಿಂದೂ ಮಹಾಸಾಗರದಲ್ಲಿ ಭಾರತದ ಪ್ರಭಾವವನ್ನು ಕಡಿಮೆ ಮಾಡುತ್ತದೆ ಎಂದು ವ್ಯಾಪಕವಾಗಿ ನಂಬಲಾಗಿದೆ.
 2. CPEC ಯು ಪಾಕಿಸ್ತಾನದ ಆರ್ಥಿಕತೆಯನ್ನು ಯಶಸ್ವಿಯಾಗಿ ಪರಿವರ್ತಿಸಿದರೆ ಅದು ಭಾರತಕ್ಕೆ (red rag) ಪ್ರಕೋಪದಾಯಕವಾಗಬಹುದು, ಮತ್ತು ಭಾರತವು ಶ್ರೀಮಂತ ಮತ್ತು ಪ್ರಬಲವಾದ ಪಾಕಿಸ್ತಾನದ ಮುಂದೆ ಕೈ ಚಾಚುವ ಸ್ಥಿತಿಯಲ್ಲಿ ಉಳಿಯಬಹುದು ಎಂದು ವಾದಿಸಲಾಗುತ್ತಿದೆ.
 3. ಇದಲ್ಲದೆ,ಭಾರತವು ಚೀನಾ ಮತ್ತು ಪಾಕಿಸ್ತಾನದೊಂದಿಗೆ ಹೆಚ್ಚಿನ ವಿಶ್ವಾಸಾರ್ಹತೆಯನ್ನು ಹೊಂದಿಲ್ಲ ಮತ್ತು ಎರಡರೊಂದಿಗೂ ಸಂಘರ್ಷದ ಇತಿಹಾಸವನ್ನು ಹೊಂದಿದೆ. ಪರಿಣಾಮವಾಗಿ, ಯೋಜನೆಯನ್ನು ಪ್ರಾಯೋಗಿಕವಾಗಿ ಮರು-ಸಂಪರ್ಕಿಸಲು ಸಲಹೆಗಳನ್ನು ನೀಡಲಾಗಿದ್ದರೂ, ಚೀನಾ ಮತ್ತು ಪಾಕಿಸ್ತಾನದೊಂದಿಗಿನ ಭಾರತದ ಸಮೀಕರಣಗಳನ್ನು ಮುಂದುವರೆಸಬೇಕಾಗಿರುವುದರಿಂದ ವಿವಾದದ ತತ್ವಗಳನ್ನು ಯಾವುದೇ ವಕೀಲರು ರದ್ದುಗೊಳಿಸಿಲ್ಲ.

current affairs

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆಯ ಸಹಾಯ ಮಿಷನ್ (UNAMA):


UN Assistance Mission in Afghanistan (UNAMA)

ಸಂದರ್ಭ:

ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆಯ ಸಹಾಯ ಮಿಷನ್ (UN Assistance Mission in Afghanistan – UNAMA) ಇತ್ತೀಚೆಗೆ ಮಹಿಳಾ ಕಾರ್ಯಕರ್ತರೊಂದಿಗೆ ಸಭೆ ನಡೆಸಿತು ಮತ್ತು ಅವರ ಧೈರ್ಯವನ್ನು ಶ್ಲಾಘಿಸಿತು ಮತ್ತು UN ಅಫ್ಘಾನಿಸ್ತಾನದ ಜನರ ಪರವಾಗಿ ನಿಲ್ಲುವುದನ್ನು ಮುಂದುವರಿಸುತ್ತದೆ ಎಂದು ದೃಢಪಡಿಸಿತು.

ಏನಿದು ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆಯ ಸಹಾಯ (UNAMA) ಮಿಷನ್?

 1. UNAMA ಅನ್ನು 28 ಮಾರ್ಚ್ 2002 ರಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ರೆಸಲ್ಯೂಶನ್ 1401 ಮೂಲಕ ಸ್ಥಾಪಿಸಲಾಯಿತು.
 2. ಇದನ್ನು ಮೂಲತಃ ಅಫ್ಘಾನಿಸ್ತಾನ ಮತ್ತು ಅದರ ನಾಗರಿಕರಿಗೆ ದೇಶದಲ್ಲಿ ಶಾಶ್ವತ ಶಾಂತಿ ಮತ್ತು ಅಭಿವೃದ್ಧಿಗೆ ಅಡಿಪಾಯ ಹಾಕಲು ಸಹಾಯ ಮಾಡಲು ಸ್ಥಾಪಿಸಲಾಯಿತು.
 3. ಡಿಸೆಂಬರ್ 2001 ರ ಬಾನ್ ಒಪ್ಪಂದದ (Bonn Agreement) ಅನುಷ್ಠಾನವನ್ನು ಬೆಂಬಲಿಸುವುದು ಇದರ ಮೂಲ ಆದೇಶವಾಗಿತ್ತು.
 4. ಅಫ್ಘಾನಿಸ್ತಾನದಲ್ಲಿ ವಿಶ್ವಸಂಸ್ಥೆಯ ಸಹಾಯ ಮಿಷನ್ ಅನ್ನು ವಾರ್ಷಿಕವಾಗಿ ಪರಿಶೀಲಿಸಲಾಗುತ್ತದೆ ಮತ್ತು ದೇಶದ ಅಗತ್ಯಗಳನ್ನು ಗಣನೆಗೆ ತೆಗೆದುಕೊಂಡು ಅದರ ಆದೇಶವು ಕಾಲಕಾಲಕ್ಕೆ ಬದಲಾಗುತ್ತದೆ.
 5. ಉನಾಮಾ (UNAMA) ಒಂದು ಸಮಗ್ರ ಕಾರ್ಯಾಚರಣೆಯಾಗಿದೆ. ಇದರರ್ಥ ವಿಶೇಷ ರಾಜಕೀಯ ಮಿಷನ್, ಎಲ್ಲಾ ಯುಎನ್ ಏಜೆನ್ಸಿಗಳು, ನಿಧಿಗಳು ಮತ್ತು ಕಾರ್ಯಕ್ರಮಗಳು, ರಾಷ್ಟ್ರೀಯವಾಗಿ ವ್ಯಾಖ್ಯಾನಿಸಲಾದ ಆದ್ಯತೆಗಳ ಪ್ರಕಾರ ಅಫ್ಘಾನಿಸ್ತಾನಕ್ಕೆ ಉತ್ತಮ ಸಹಾಯ ಮಾಡಲು ಬಹುಆಯಾಮದಲ್ಲಿ ಮತ್ತು ಸಮಗ್ರ ರೀತಿಯಲ್ಲಿ ಕೆಲಸ ಮಾಡುತ್ತವೆ.

ಬಾನ್ ಒಪ್ಪಂದ ಎಂದರೇನು?

 1. ಬಾನ್ ಒಂದು ಮುಚ್ಚಿದ ಬಾಗಿಲಿನ ಮಾತುಕತೆ; ಭಾಗವಹಿಸುವವರನ್ನು ಪ್ರತ್ಯೇಕಿಸಲಾಯಿತು, ಮಾತುಕತೆಯ ಸಮಯದಲ್ಲಿ ಹೊರಗಿನ ಸಂಪರ್ಕವನ್ನು ಸೀಮಿತಗೊಳಿಸಲಾಗಿತ್ತು ಮತ್ತು ಒಪ್ಪಂದಕ್ಕೆ ಸಹಿ ಹಾಕುವವರೆಗೂ ಯಾವುದೇ ಮಾಹಿತಿಯನ್ನು ಪ್ರಕಟಿಸಲಿಲ್ಲ.
 2. ಪ್ರಸ್ತುತ ಆಫ್ಘಾನಿಸ್ತಾನದ ನಾಮಮಾತ್ರದ ರಾಷ್ಟ್ರನಾಯಕ (ರಬ್ಬಾನಿ) ಅವರನ್ನು ದೂರವಿಡಲಾಯಿತು ಮತ್ತು ಅವರು ಮಾತುಕತೆಯಲ್ಲಿ ಭಾಗವಹಿಸಲಿಲ್ಲ, ಮತ್ತು ತಾಲಿಬಾನರನ್ನು ಬಾನ್ ಮಾತುಕತೆಯಿಂದ ಸಂಪೂರ್ಣವಾಗಿ ಹೊರಗಿಡಲಾಯಿತು.
 3. ವಿಶ್ವಸಂಸ್ಥೆ ಮತ್ತು ಹಲವಾರು ಇತರ ಅಂತಾರಾಷ್ಟ್ರೀಯ ಏಜೆನ್ಸಿಗಳು ಮಾತುಕತೆಗಳನ್ನು ಮುಂದುವರೆಸುವಲ್ಲಿ ಪ್ರಮುಖ ಪಾತ್ರ ವಹಿಸಿದವು, ಮತ್ತು ಬಾನ್ ಒಪ್ಪಂದವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಂಪೂರ್ಣ ಬೆಂಬಲವನ್ನು ಹೊಂದಿದೆ.

ಬಾನ್ ಒಪ್ಪಂದವು ಮಹತ್ವಾಕಾಂಕ್ಷೆಯ ಮೂರು ವರ್ಷಗಳ ರಾಜಕೀಯ ಮತ್ತು ಆಡಳಿತಾತ್ಮಕ ಮಾರ್ಗಸೂಚಿಯನ್ನು ಹೊಂದಿದ್ದು, ಇದನ್ನು ಇಲ್ಲಿಯವರೆಗೂ ಅನುಸರಿಸಲಾಯಿತು:

 1. ಜೂನ್ 2002 ರ ಎಮರ್ಜೆನ್ಸಿ ಲೋಯಾ ಜಿರ್ಗಾ (ಗ್ರ್ಯಾಂಡ್ ಕೌನ್ಸಿಲ್) ಪರಿವರ್ತನಾ ಆಡಳಿತವನ್ನು ಸ್ಥಾಪಿಸಿತು, ಹೊಸ ಸಂವಿಧಾನವನ್ನು 2004 ರ ಆರಂಭದಲ್ಲಿ ಅಂಗೀಕರಿಸಲಾಯಿತು, ಮತ್ತು ಅಧ್ಯಕ್ಷೀಯ ಮತ್ತು ಸಂಸತ್ತಿನ ಚುನಾವಣೆಗಳನ್ನು 2004 ಮತ್ತು 2005 ರಲ್ಲಿ ನಡೆಸಲಾಯಿತು.

ವಿಶ್ವಸಂಸ್ಥೆಯ ವಿಶೇಷ ರಾಜಕೀಯ ಕಾರ್ಯಗಳು ಯಾವುವು?

‘ವಿಶೇಷ ರಾಜಕೀಯ ಮಿಷನ್’ ಎಂಬ ಪದವು ರಾಜಕೀಯ ಮತ್ತು ಶಾಂತಿ ನಿರ್ಮಾಣ ವ್ಯವಹಾರಗಳಿಂದ (Department of Political and Peacebuilding Affairs -DPPA) ನಿರ್ವಹಿಸದ ಅಥವಾ ನಿರ್ದೇಶಿಸದ ಘಟಕಗಳನ್ನು ಒಳಗೊಂಡಿದೆ, ಉದಾಹರಣೆಗೆ ನರಮೇಧ ತಡೆಗಟ್ಟುವಿಕೆಯ ವಿಶೇಷ ಸಲಹೆಗಾರರ ​​ಕಚೇರಿ ಇತರ ಹಲವು ಅಂತಾರಾಷ್ಟ್ರೀಯ ಏಜೆಂಟರನ್ನು ಒಳಗೊಂಡಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ವಿವಿಧ ಭದ್ರತಾ ಪಡೆಗಳು ಮತ್ತು ಏಜೆನ್ಸಿಗಳು ಮತ್ತು ಅವುಗಳ ಆದೇಶಗಳು.

ಸಂಯೋಜಿತ ಥಿಯೇಟರ್ ಕಮಾಂಡ್ಸ್.


(Integrated theatre commands)

 ಸಂದರ್ಭ:

ಮುಂದಿನ ಯುದ್ಧಗಳನ್ನು ಸಮಗ್ರ ರೀತಿಯಲ್ಲಿ ಹೋರಾಡಲು ಥಿಯೇಟರ್ ಕಮಾಂಡ್‌ಗಳ ರಚನೆಗೆ ಹೊಸ ಉತ್ತೇಜನದಲ್ಲಿ, ರಕ್ಷಣಾ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುವ ಮಿಲಿಟರಿ ವ್ಯವಹಾರಗಳ ಇಲಾಖೆಯು (Department of Military Affairs -DMA) ಮೂರು ಸೇವೆ (ಭೂ- ವಾಯು – ನೌಕೆ) ಗಳಿಗೆ ಹೊಸ ರಚನೆಗಳನ್ನು ನಿರ್ಮಿಸುವ ಬಗ್ಗೆ ಅಧ್ಯಯನಗಳನ್ನು ನಡೆಸಲು ಮತ್ತು ಮುಂದಿನ ವರ್ಷ ಏಪ್ರಿಲ್‌ನೊಳಗೆ ತಮ್ಮ ವರದಿಗಳನ್ನು ಸಲ್ಲಿಸಲು ಕೇಳಿದೆ.

ಹಿನ್ನೆಲೆ:

 1. ಪ್ರಸ್ತುತ, ಭಾರತವು ಮೂರು ಸಶಸ್ತ್ರ ಪಡೆಗಳಿಂದ 19 ಮಿಲಿಟರಿ ಕಮಾಂಡ್ ಗಳನ್ನು ಹೊಂದಿದ್ದು, ಅವುಗಳಲ್ಲಿ 17 ಸೇವಾ ಆಧಾರಿತವಾಗಿವೆ. ಸೇನೆ ಮತ್ತು ವಾಯುಪಡೆ ತಲಾ ಏಳು ಕಮಾಂಡ್ ಗಳನ್ನು ಹೊಂದಿವೆ ಮತ್ತು  ಮೂರು ಕಮಾಂಡ್ ಗಳು ನೌಕಾಪಡೆಯ ಅಡಿಯಲ್ಲಿವೆ.
 2. ಭಾರತವು ಅಂಡಮಾನ್ ಮತ್ತು ನಿಕೋಬಾರ್ ಕಮಾಂಡ್, ಟ್ರೈ-ಸರ್ವೀಸ್ ಕಮಾಂಡ್ ಅನ್ನು ಹೊಂದಿದೆ ಇದರ ಜೊತೆಗೆ ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್ (Strategic Forces Command – SFC) , ಅನ್ನು ಹೊಂದಿದ್ದು ಈ ಕಮಾಂಡ್ ದೇಶದ ಪರಮಾಣು ದಾಸ್ತಾನುಗಳನ್ನು ನೋಡಿಕೊಳ್ಳುತ್ತದೆ.

‘ಇಂಟಿಗ್ರೇಟೆಡ್ ಥಿಯೇಟರ್ ಕಮಾಂಡ್’ ಎಂದರೇನು?

 1. ‘ಇಂಟಿಗ್ರೇಟೆಡ್ ಥಿಯೇಟರ್ ಕಮಾಂಡ್ಸ್’ (Integrated Theatre Commands- ITC) ಅಡಿಯಲ್ಲಿ, ಏಕೈಕ ಕಮಾಂಡರ್ ಅಡಿಯಲ್ಲಿ ಮೂರು ಸೇವೆಗಳ ಏಕೀಕೃತ ಕಮಾಂಡ್ ಅನ್ನು ಕಾರ್ಯತಂತ್ರದ ಮತ್ತು ಭದ್ರತೆಗಾಗಿ ಆಯಕಟ್ಟಿನ ಪ್ರಮುಖ ಭೌಗೋಳಿಕ ಪ್ರದೇಶಗಳಿಗಾಗಿ ಕಲ್ಪಿಸಲಾಗಿದೆ.
 2. ಅಂತಹ ಒಂದು ಪಡೆಯ ಕಮಾಂಡರ್ ತನ್ನ ವಿವೇಚನೆಯಿಂದ ಸೇನೆ, ಭಾರತೀಯ ವಾಯುಪಡೆ ಮತ್ತು ನೌಕಾಪಡೆಯ ಎಲ್ಲಾ ಸಂಪನ್ಮೂಲಗಳನ್ನು ನಿರಂತರ ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಅಧಿಕಾರ ಹೊಂದಿರುತ್ತಾರೆ.
 3. ಇಂಟಿಗ್ರೇಟೆಡ್ ಥಿಯೇಟರ್ ಕಮಾಂಡರ್ ಯಾವುದೇ ಒಂದು ವೈಯಕ್ತಿಕ ಸೇವೆಗೆ(will not be answerable to individual Services) ಜವಾಬ್ದಾರರಾಗಿರುವುದಿಲ್ಲ.

ಭಾರತಕ್ಕೆ ‘ಥಿಯೇಟರ್ ಕಮಾಂಡ್’ ನ ಅವಶ್ಯಕತೆ:

 1. ಥಿಯೇಟರ್ ಕಮಾಂಡ್ ಉತ್ತಮ ಯೋಜನೆ ಮತ್ತು ಮಿಲಿಟರಿ ಪ್ರತಿಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮಿಲಿಟರಿ ವೆಚ್ಚವನ್ನು ಕಡಿಮೆ ಮಾಡುತ್ತದೆ.
 2. ಏಕೆಂದರೆ, ಎಲ್ಲಾ ಥಿಯೇಟರ್ ಕಮಾಂಡ್ ಗಳು ಸಾಕಷ್ಟು ಮಿಲಿಟರಿ ಉಪಕರಣಗಳು ಮತ್ತು ವ್ಯವಸ್ಥೆಗಳನ್ನು ಹೊಂದಿರಬೇಕು, ಅದರಿಂದಾಗಿ ಮುಂಬರುವ ದಿನಗಳಲ್ಲಿ, ಮಿಲಿಟರಿ ವೆಚ್ಚದಲ್ಲಿ ಹೆಚ್ಚಳವಾಗುವ ಸಾಧ್ಯತೆಯಿದೆ. ಆದಾಗ್ಯೂ, ಎಲ್ಲಾ ಸ್ವಾಧೀನಗಳನ್ನು ಒಂದೇ ‘ಥಿಯೇಟರ್ ಕಮಾಂಡ್’ ಅಡಿಯಲ್ಲಿ ಸಂಯೋಜಿಸಲಾಗುತ್ತದೆ, ಆದ್ದರಿಂದ ದೀರ್ಘಾವಧಿಯಲ್ಲಿ ಇದು ವೆಚ್ಚ-ಪರಿಣಾಮಕಾರಿ ಎಂದು ಸಾಬೀತಾಗುತ್ತದೆ.
 3. ‘ಥಿಯೇಟರ್ ಕಮಾಂಡ್’ ಯಾವುದೇ ಭವಿಷ್ಯದ ಯುದ್ಧದಲ್ಲಿ ಹೋರಾಡಲು ‘ಸಮಗ್ರ ವಿಧಾನ’ವನ್ನು ಒದಗಿಸುತ್ತದೆ.

ಈ ನಿಟ್ಟಿನಲ್ಲಿ ಪ್ರಸ್ತಾವನೆಗಳು:

 1. 1999 ರಲ್ಲಿ ಕಾರ್ಗಿಲ್ ಯುದ್ಧದ ನಂತರ, ಅದರ ಬಗ್ಗೆ ನಡೆದ ಚರ್ಚೆಯ ಸಮಯದಲ್ಲಿ, ಯುದ್ಧದಲ್ಲಿ ಹೋರಾಡಲು ಒಂದು ಸಮಗ್ರ / ಏಕೀಕೃತ ವಿಧಾನದ ಅಗತ್ಯವನ್ನು ಮನಗಾಣಲಾಯಿತು.
 2. ‘ಕಾರ್ಗಿಲ್ ರಿವ್ಯೂ ಕಮಿಟಿ’ ಮತ್ತು ‘ನರೇಶ್ ಚಂದ್ರ ಕಮಿಟಿ’ ಸೇರಿದಂತೆ ಅಂದಿನ ‘ಮಂತ್ರಿಗಳ ಗುಂಪು’‘ಉನ್ನತ ಮಟ್ಟದಲ್ಲಿ ರಕ್ಷಣಾ ನಿರ್ವಹಣೆಯಲ್ಲಿ ರಚನಾತ್ಮಕ ಬದಲಾವಣೆಗೆ’ ಕರೆ ನೀಡಿದ್ದವು.
 3. ಶೇಕತ್ಕರ್ ಸಮಿತಿಯಿಂದ (Shekatkar Committee) ಕೂಡ ಆಂತರಿಕ ಮತ್ತು ಬಾಹ್ಯ ಬೆದರಿಕೆಗಳನ್ನು ಎದುರಿಸಲು ಚೀನಾದ ಗಡಿಗಾಗಿ – ಉತ್ತರ ಕಮಾಂಡ್, ಪಾಕಿಸ್ತಾನದ ಗಡಿಯಲ್ಲಿ– ಪಶ್ಚಿಮ ಕಮಾಂಡ್, ಮತ್ತು ಕಡಲ ಕಾರ್ಯಾಚರಣೆಗಳಿಗೆ – ಮೂರು ಸಂಯೋಜಿತ ಥಿಯೇಟರ್ ಕಮಾಂಡ್ ಗಳನ್ನು ಸ್ಥಾಪಿಸುವ ಸಂದರ್ಭದಲ್ಲಿ ಈ ಶಿಫಾರಸನ್ನು ಮಾಡಲಾಗಿದೆ.
 4. ಶೆಕೆತ್ಕರ್ ಸಮಿತಿಯು ‘ಚೀಫ್ ಆಫ್ ಡಿಫೆನ್ಸ್ ಸ್ಟಾಫ್’ (CDS) ಹುದ್ದೆಯನ್ನು ರಚಿಸಲು ಶಿಫಾರಸು ಮಾಡಿತ್ತು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಯುಕ್ತಧಾರ:

(Yuktdhara)

 1. MGNREGA ಅಡಿಯಲ್ಲಿ ಗ್ರಾಮ ಪಂಚಾಯತ್ ಮಟ್ಟದಲ್ಲಿ ಯೋಜನೆಯನ್ನು ಸುಲಭಗೊಳಿಸಲು ಇದು ‘ಜಿಯೋಸ್ಪೇಷಿಯಲ್ ಪ್ಲಾನಿಂಗ್ ಪೋರ್ಟಲ್’(Geospatial Planning Portal) ಆಗಿದೆ. ಇದು ಇಸ್ರೋದ ಜಿಯೋಪೋರ್ಟಲ್ ‘ಭುವನ್’ ಅಡಿಯಲ್ಲಿ ಕೆಲಸ ಮಾಡುತ್ತದೆ.
 2. ಭುವನ್ “ಯುಕ್ತಧಾರ” ಪೋರ್ಟಲ್ ಅನ್ನು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವಾಲಯವು ಆರಂಭಿಸಿದೆ.
 3. ಈ ವೇದಿಕೆಯು, ವಿವಿಧ ರಾಷ್ಟ್ರೀಯ ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮಗಳ ಅಡಿಯಲ್ಲಿ ರಚಿಸಲಾದ ಸ್ವತ್ತುಗಳ (ಜಿಯೋಟ್ಯಾಗ್) ಭಂಡಾರವಾಗಿ ಕಾರ್ಯನಿರ್ವಹಿಸುತ್ತದೆ ಅಂದರೆ MGNREGA, ಇಂಟಿಗ್ರೇಟೆಡ್ ವಾಟರ್‌ಶೆಡ್ ಮ್ಯಾನೇಜ್‌ಮೆಂಟ್ ಪ್ರೋಗ್ರಾಂ, ಪರ್ ಡ್ರಾಪ್ ಮೋರ್ ಕ್ರಾಪ್ ಮತ್ತು ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ ಇತ್ಯಾದಿ.

 

ಇಸ್ಲಾಮಿಕ್ ಸ್ಟೇಟ್ ಖೋರಾಸನ್ ಪ್ರಾಂತ್ಯ:

(Islamic State Khorasan Province)

 1. IS-K ಅಥವಾ ‘ಇಸ್ಲಾಮಿಕ್ ಸ್ಟೇಟ್ ಖೋರಾಸನ್ ಪ್ರಾಂತ್ಯ’ (Islamic State Khorasan Province – IS-K) ‘ಇಸ್ಲಾಮಿಕ್ ಸ್ಟೇಟ್’ ಗುಂಪಿನ ಪ್ರಾದೇಶಿಕ ಅಂಗಸಂಸ್ಥೆಯಾಗಿದೆ.
 2. ಇದು ಅಫ್ಘಾನಿಸ್ತಾನದಲ್ಲಿರುವ ಎಲ್ಲಾ ಜಿಹಾದಿ ಭಯೋತ್ಪಾದಕ ಗುಂಪುಗಳ ಅತ್ಯಂತ ಉಗ್ರಗಾಮಿ ಮತ್ತು ಹಿಂಸಾತ್ಮಕ ಸಂಘಟನೆಯಾಗಿದೆ.
 3. ಇರಾಕ್ ಮತ್ತು ಸಿರಿಯಾದಲ್ಲಿ ಇಸ್ಲಾಮಿಕ್ ಸ್ಟೇಟ್ (IS) ಅಧಿಕಾರದ ಉತ್ತುಂಗದಲ್ಲಿ ಜನವರಿ 2015 ರಲ್ಲಿ IS-K ಅನ್ನು ಸ್ಥಾಪಿಸಲಾಯಿತು. ನಂತರ, ಅದರ ಸ್ವಯಂ ಘೋಷಿತ ಕ್ಯಾಲಿಫೇಟ್ ಅನ್ನು ಯುಎಸ್ ನೇತೃತ್ವದ ಒಕ್ಕೂಟವು ಸೋಲಿಸಿತು ಮತ್ತು ನಾಶಪಡಿಸಿತು.
 4. “ಖೋರಾಸನ್” ಒಂದು ಐತಿಹಾಸಿಕ ಪ್ರದೇಶವಾಗಿದ್ದು ಅದು ಆಧುನಿಕ ಅಫ್ಘಾನಿಸ್ತಾನ ಮತ್ತು ಪಾಕಿಸ್ತಾನದ ಭಾಗಗಳನ್ನು ಒಳಗೊಂಡಿದೆ. ಆರಂಭದಲ್ಲಿ, IS-K ಗುಂಪನ್ನು ಪಾಕಿಸ್ತಾನದಲ್ಲಿ ವಿಸ್ತರಿಸಲಾಯಿತು, ಆದರೆ ಮೇ 2019 ರಲ್ಲಿ, ‘ಇಸ್ಲಾಮಿಕ್ ಸ್ಟೇಟ್’ ಪಾಕಿಸ್ತಾನದಲ್ಲಿ ಪ್ರತ್ಯೇಕ ಗುಂಪಾಯಿತು.

 

ಡಿಯಾಗೋ ಗಾರ್ಸಿಯಾ:

(Diego Garcia)

 1. ಇದು ಬ್ರಿಟಿಷ್ ಹಿಂದೂ ಮಹಾಸಾಗರ ಪ್ರದೇಶದ ದ್ವೀಪವಾಗಿದ್ದು ಯುನೈಟೆಡ್ ಕಿಂಗ್‌ಡಮ್‌ನ ಸಾಗರೋತ್ತರ ಪ್ರದೇಶವಾಗಿದೆ.
 2. ಚಾಗೋಸ್ ದ್ವೀಪಸಮೂಹದ 60 ಸಣ್ಣ ದ್ವೀಪಗಳಲ್ಲಿ ಇದು ದೊಡ್ಡದಾಗಿದೆ.
 3. ದ್ವೀಪವನ್ನು ಕಂಡುಹಿಡಿದ ಮೊದಲ ಯುರೋಪಿಯನ್ನರು ಪೋರ್ಚುಗೀಸರು, ಮತ್ತು ನಂತರ 1790 ರ ದಶಕದಲ್ಲಿ ಈ ದ್ವೀಪದಲ್ಲಿ ಫ್ರೆಂಚರು ನೆಲೆಸಿದರು ಮತ್ತು ನೆಪೋಲಿಯನ್ ಯುದ್ಧಗಳ ನಂತರ ಇದನ್ನು ಬ್ರಿಟಿಷ್ ಆಳ್ವಿಕೆಗೆ ವರ್ಗಾಯಿಸಲಾಯಿತು.
 4. 1965 ರಲ್ಲಿ, ಬ್ರಿಟನ್ ಚಾಗೋಸ್ ದ್ವೀಪಗಳನ್ನು ಮಾರಿಷಸ್ ನಿಂದ ಬೇರ್ಪಡಿಸಿತು ಮತ್ತು ಡಿಯಾಗೋ ಗಾರ್ಸಿಯಾದಲ್ಲಿ ಅಮೆರಿಕದೊಂದಿಗೆ ಜಂಟಿ ಸೇನಾ ನೆಲೆಯನ್ನು ಸ್ಥಾಪಿಸಿತು.
 5. ಈ ದ್ವೀಪಸಮೂಹವು ಲಂಡನ್‌ನ ಆಸ್ತಿಯಾಗಿದೆ ಎಂದು ಬ್ರಿಟನ್ ಸಮರ್ಥಿಸುತ್ತದೆ ಮತ್ತು ಇತ್ತೀಚೆಗೆ, ಡಿಯಾಗೋ ಗಾರ್ಸಿಯಾವನ್ನು 2036 ರವರೆಗೆ ಬಳಸಲು ಅಮೆರಿಕದೊಂದಿಗೆ ಗುತ್ತಿಗೆ ಒಪ್ಪಂದವನ್ನು ಬ್ರಿಟನ್ ನವೀಕರಿಸಿದೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos