Print Friendly, PDF & Email

[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 9ನೇ ನವೆಂಬರ 2021

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಸಂಸತ್ತಿನ ಅಧಿವೇಶನಗಳು.

2. ಮುಲ್ಲಪೆರಿಯಾರ್ ಅಣೆಕಟ್ಟು ವಿವಾದ.

3. ಭಾರತದ ಸ್ಪರ್ಧಾ ಆಯೋಗ.

4. ಡೆಂಗ್ಯೂ ಜ್ವರ.

5. ಝಿಕಾ ವೈರಸ್.

6. UNESCO ಸೃಜನಶೀಲ ನಗರಗಳ ಜಾಲ (UCCN).

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ಗೋವಾ ಮೆರಿಟೈಮ್ ಕಾನ್ಕ್ಲೇವ್.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು – ರಚನೆ, ಕಾರ್ಯವೈಖರಿ, ವ್ಯವಹಾರದ ನಡಾವಳಿಗಳು, ಅಧಿಕಾರಗಳು ಮತ್ತು ಸವಲತ್ತುಗಳು ಮತ್ತು ಇವುಗಳಿಂದ ಉಂಟಾಗುವ ಸಮಸ್ಯೆಗಳು.

ಸಂಸತ್ತಿನ ಅಧಿವೇಶನಗಳು.


(Sessions of Parliament)

ಸಂದರ್ಭ:

ಇತ್ತೀಚೆಗೆ ಸಂಸದೀಯ ವ್ಯವಹಾರಗಳ ಸಂಪುಟ ಸಮಿತಿಯು (Cabinet Committee on Parliament Affairs – CCPA) ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ನವೆಂಬರ್ 29 ರಿಂದ ಡಿಸೆಂಬರ್ 23 ರವರೆಗೆ ನಡೆಸಲು ಶಿಫಾರಸು ಮಾಡಿದೆ.

 1. ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ, ಕಳೆದ ವರ್ಷ ಸಂಸತ್ತಿನ ಚಳಿಗಾಲದ ಅಧಿವೇಶನವನ್ನು ನಡೆಸಲು ಸಾಧ್ಯವಾಗಲಿಲ್ಲ ಮತ್ತು ಬಜೆಟ್ ಅಧಿವೇಶನ ಮತ್ತು ಮುಂಗಾರು ಅಧಿವೇಶನವನ್ನು ಸಹ ಮೊಟಕುಗೊಳಿಸಲಾಯಿತು.
 2. ಸಾಂವಿಧಾನಿಕ ಮಾನದಂಡಗಳ ಪ್ರಕಾರ ಎರಡು ಸಂಸತ್ ಅಧಿವೇಶನಗಳ ನಡುವಿನ ಅಂತರ ಆರು ತಿಂಗಳಿಗಿಂತ ಅಧಿಕವಾಗಿ ಇರಬಾರದು ಎಂಬ ನಿಬಂಧನೆ ಇದೆ.

ಸಂವಿಧಾನದ ನಿಬಂಧನೆ ಏನು?

 1. ಭಾರತೀಯ ಸಂವಿಧಾನದ 85 ನೇ ವಿಧಿ ಪ್ರಕಾರ, ಸಂಸತ್ತಿನ ಎರಡು ಅಧಿವೇಶನಗಳ ನಡುವೆ ಆರು ತಿಂಗಳಿಗಿಂತ ಹೆಚ್ಚು ಅಂತರವಿರಬಾರದು.
 2. ದಯವಿಟ್ಟು ಗಮನಿಸಿ:ಸಂಸತ್ತಿನ ಅಧಿವೇಶನಗಳನ್ನು ಯಾವಾಗ ಮತ್ತು ಎಷ್ಟು ದಿನಗಳವರೆಗೆ ನಡೆಸಬೇಕು ಎಂದು ಸಂವಿಧಾನವು ನಿರ್ದಿಷ್ಟಪಡಿಸಿಲ್ಲ. ಅಥವಾ
 3. ಸಂವಿಧಾನವು, ಸಂಸತ್ತು ಯಾವಾಗ ಅಥವಾ ಎಷ್ಟು ದಿನಗಳವರೆಗೆ ಸಭೆ ಸೇರಬೇಕು ಎಂಬುದರ ಕುರಿತು ಸ್ಪಷ್ಟನೆ ನೀಡಿಲ್ಲ.
 4. ಸಂಸತ್ತಿನ ಎರಡು ಅಧಿವೇಶನಗಳ ನಡುವಿನ ಗರಿಷ್ಠ ಮಧ್ಯಂತರವು ಆರು ತಿಂಗಳುಗಳನ್ನು ಮೀರಬಾರದು. ಅಂದರೆ, ಸಂಸತ್ತು ವರ್ಷಕ್ಕೆ ಎರಡು ಬಾರಿಯಾದರೂ ಸಭೆ ನಡೆಸುವುದು ಕಡ್ಡಾಯ.
 5. ಸಂಸತ್ತಿನ ‘ಅಧಿವೇಶನ’ ಎನ್ನುವುದು ಸದನದ ಮೊದಲ ಸಭೆ ಮತ್ತು ಅದರ ಅಧಿಕಾರಾವಧಿಯ ನಡುವಿನ ಅವಧಿಯಾಗಿದೆ.

ಸಂಸತ್ ಅಧಿವೇಶನವನ್ನು ಕರೆಯುವವರು ಯಾರು?

 1. ಭಾರತದ ಸಂವಿಧಾನದ ವಿಧಿ 85 ರ ಪ್ರಕಾರ, ರಾಷ್ಟ್ರಪತಿಗಳು ಕಾಲಕಾಲಕ್ಕೆ, ಪ್ರತಿ ಸಂಸತ್ತಿನ ಅಧಿವೇಶನವನ್ನು ಕರೆಯಬಹುದು. ಹೀಗಾಗಿ, ಸರ್ಕಾರದ ಶಿಫಾರಸಿನ ಮೇರೆಗೆ ಸಂಸತ್ತಿನ ಅಧಿವೇಶನವನ್ನು ಕರೆಯಬಹುದು ಮತ್ತು ಅಧಿವೇಶನದ ದಿನಾಂಕ ಮತ್ತು ಅವಧಿಯನ್ನು ಸರ್ಕಾರವೇ ನಿರ್ಧರಿಸುತ್ತದೆ.
 2. ಮುಖ್ಯವಾಗಿ, ಸಂಸದೀಯ ವ್ಯವಹಾರಗಳ ಕ್ಯಾಬಿನೆಟ್ ಸಮಿತಿಯು ಸಂಸತ್ ಅಧಿವೇಶನವನ್ನು ಕರೆಯುವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ. ಈ ಸಮಿತಿಯ ನಿರ್ಧಾರವನ್ನು ರಾಷ್ಟ್ರಪತಿಗಳು ಔಪಚಾರಿಕವಾಗಿ ಮಂಡಿಸುತ್ತಾರೆ. ಹೀಗೆ ರಾಷ್ಟ್ರಪತಿಗಳ ಹೆಸರಿನಲ್ಲಿ ಸಂಸತ್ ಸದಸ್ಯರು ಅಧಿವೇಶನದಲ್ಲಿ ಭಾಗಿಯಾಗುತ್ತಾರೆ.
 3. ಪ್ರಧಾನಮಂತ್ರಿಯ ನೇತೃತ್ವದ ಕಾರ್ಯಕಾರಿಣಿಗೆ ಸಂಸತ್ತಿನ ಅಧಿವೇಶನವನ್ನು ಕರೆಯುವ ಬಗ್ಗೆ ರಾಷ್ಟ್ರಪತಿಗೆ ಸಲಹೆ ನೀಡುವ ಅಧಿಕಾರವಿದೆ. ಒಟ್ಟಿನಲ್ಲಿ ಸಂಸತ್ತಿನ ಅಧಿವೇಶನವನ್ನು ಕರೆಯುವ ಅಧಿಕಾರವು ಮೂಲತಃ ಸರ್ಕಾರದಲ್ಲಿ ಅಂತರ್ಗತವಾಗಿದೆ.

ಸಂಸತ್ತಿನ ಅಧಿವೇಶನವು ಏಕೆ ಇಷ್ಟೊಂದು ಪ್ರಮುಖವಾಗಿದೆ?

 1. ಕಾನೂನು/ಕಾಯ್ದೆಯ ರಚನೆಯು ಸಂಸತ್ತು ಯಾವಾಗ ಸಭೆ ಸೇರುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.
 2. ಅಲ್ಲದೆ, ಸರ್ಕಾರದ ಕಾರ್ಯವೈಖರಿಗಳ ಕೂಲಂಕಷ ಪರಿಶೀಲನೆ ಮತ್ತು ರಾಷ್ಟ್ರೀಯ ವಿಷಯಗಳ ಬಗ್ಗೆ ಸಮಗ್ರವಾಗಿ ಚರ್ಚಿಸುವುದು ಉಭಯ ಸದನಗಳು ಅಧಿವೇಶನದಲ್ಲಿದ್ದಾಗ ಮಾತ್ರ ಸಾಧ್ಯಗುತ್ತದೆ.
 3. ಸಂಸತ್ತಿನ ಕಾರ್ಯ ಚಟುವಟಿಕೆಗಳಲ್ಲಿ ಉತ್ತಮವಾಗಿ ಮತ್ತು ಸಕ್ರಿಯವಾಗಿ ಭಾಗವಹಿಸುವುದು ಉತ್ತಮ ಪ್ರಜಾಪ್ರಭುತ್ವದ ಪ್ರಮುಖ ಲಕ್ಷಣವಾಗಿದೆ. ಅಂದರೆ, ಉತ್ತಮವಾಗಿ ಕಾರ್ಯನಿರ್ವಹಿಸುವ ಪ್ರಜಾಪ್ರಭುತ್ವಕ್ಕೆ ಸಂಸತ್ತಿನ ಕಾರ್ಯಚಟುವಟಿಕೆಯ ಅಗತ್ಯವಿದೆ.

 

ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.

ಮುಲ್ಲಪೆರಿಯಾರ್ ಆಣೆಕಟ್ಟು ವಿವಾದ:


(Mullaperiyar Dam Issue)

ಸಂದರ್ಭ:

ಇತ್ತೀಚೆಗಷ್ಟೇ ಅಣೆಕಟ್ಟು ರಚನೆಯನ್ನು ಬಲಪಡಿಸುವ ಪ್ರಯತ್ನಗಳ ಭಾಗವಾಗಿ ಮುಲ್ಲಪೆರಿಯಾರ್ ಜಲಾಶಯದ ಮೇಲಿನ ಬೇಬಿ ಅಣೆಕಟ್ಟಿನ ಕೆಳಭಾಗದಲ್ಲಿರುವ 15 ಮರಗಳನ್ನು ಕಡಿಯಲು ತಮಿಳುನಾಡಿಗೆ ಅನುಮತಿ ನೀಡುವ ನಿರ್ಧಾರವನ್ನು ಕೇರಳ ಸರ್ಕಾರ ಹಿಂತೆಗೆದುಕೊಂಡಿದೆ.ಇದಕ್ಕೆ ಅನುಮತಿ ನೀಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ರಾಜ್ಯ ಸರ್ಕಾರ ತಿಳಿಸಿದೆ.

current affairs

 

ಪ್ರಸ್ತುತ ವಿವಾದ:

ದಯವಿಟ್ಟು ಗಮನಿಸಿ, ಅಣೆಕಟ್ಟು ರಚನೆಯ ಸ್ಥಿರತೆಯ ಕುರಿತು ಕೇರಳ ಮತ್ತು ತಮಿಳುನಾಡು ಎರಡೂ ರಾಜ್ಯಗಳ ನಡುವೆ ವಿವಾದವಿದೆ. ಹೊಸ ಅಣೆಕಟ್ಟು ನಿರ್ಮಾಣಕ್ಕೆ ಕೇರಳ ಒತ್ತಾಯಿಸುತ್ತಿದ್ದು, ಹೊಸ ಅಣೆಕಟ್ಟು ಅಗತ್ಯವಿಲ್ಲ ಎಂದು ತಮಿಳುನಾಡು ಹೇಳುತ್ತಿದೆ. ಜತೆಗೆ, ಅಣೆಕಟ್ಟಿನ ಸ್ಥಿರತೆಯನ್ನು ಮುಂದಿಟ್ಟುಕೊಂಡು ನೀರಿನ ಮಟ್ಟ ಹೆಚ್ಚಿಸುವುದನ್ನು ವಿರೋಧಿಸಿ ಕೇರಳ ಪ್ರತಿಭಟನೆ ನಡೆಸುತ್ತಿದೆ.

ಹಿನ್ನೆಲೆ:

ಕಳೆದ ತಿಂಗಳು ಕೇರಳದಲ್ಲಿ ನಿರಂತರವಾಗಿ ಸುರಿಯುತ್ತಿದ್ದ ಧಾರಾಕಾರ ಮಳೆಯನ್ನು ಗಮನದಲ್ಲಿಟ್ಟುಕೊಂಡು, ಮುಲ್ಲಪೆರಿಯಾರ್ ಅಣೆಕಟ್ಟಿನಲ್ಲಿ ಕಾಯ್ದುಕೊಳ್ಳಬಹುದಾದ  ಗರಿಷ್ಠ ನೀರಿನ ಮಟ್ಟದ ವಿಷಯದ ಬಗ್ಗೆ ತಕ್ಷಣದ ಮತ್ತು ದೃಢವಾದ ನಿರ್ಧಾರವನ್ನು ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್ ‘ಮೇಲ್ವಿಚಾರಣಾ ಸಮಿತಿ’(Supervisory Committee) ಗೆ ಸೂಚಿಸಿದೆ.

2014 ರಲ್ಲಿ, ಮುಲ್ಲಪೆರಿಯಾರ್ ಅಣೆಕಟ್ಟೆಗೆ ಸಂಬಂಧಿಸಿದ ಎಲ್ಲಾ ವಿಷಯಗಳನ್ನು ಮೇಲ್ವಿಚಾರಣೆ ಮಾಡಲು ಸುಪ್ರೀಂ ಕೋರ್ಟ್ ಶಾಶ್ವತ ‘ಮೇಲ್ವಿಚಾರಣಾ ಸಮಿತಿ’ಯನ್ನು ರಚಿಸಿತ್ತು. ಈ ಅಣೆಕಟ್ಟು ತಮಿಳುನಾಡು ಮತ್ತು ಕೇರಳ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ.

current affairs

 

ಜಲಾಶಯದಲ್ಲಿ ನೀರಿನ ಗರಿಷ್ಠ ಸಂಗ್ರಹ ಮಟ್ಟದ ಕುರಿತ ವಿವಾದ:

 1. ಅಣೆಕಟ್ಟಿನ ನೀರಿನ ಮಟ್ಟ 139 ಅಡಿಗಿಂತ ಮೇಲಕ್ಕೆ ಹೋಗಬಾರದು ಎಂದು ಕೇರಳ ಹೇಳುತ್ತದೆ. ಕಾರಣ 2018 ರಲ್ಲಿ ರಾಜ್ಯವು ಪ್ರವಾಹದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾಗ, 2018ರ ಆಗಸ್ಟ್ 24ರಂದು ನೀರಿನ ಗರಿಷ್ಠ ಸಂಗ್ರಹ ಮಟ್ಟ 139 ಅಡಿ ಗಿಂತ ಹೆಚ್ಚಿಗೆ ಇರಬಾರದು ಎಂದು ನ್ಯಾಯಾಲಯವು ಆದೇಶವನ್ನು ಸಹ ನೀಡಿತ್ತು. ಇದಕ್ಕೆ ಕಾರಣ, ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಮಟ್ಟವನ್ನು ಇದಕ್ಕಿಂತ ಹೆಚ್ಚು ಮಾಡಿದರೆ, ಅದು 5 ಮಿಲಿಯನ್ ಜನರ ಜೀವಕ್ಕೆ ಅಪಾಯವನ್ನುಂಟುಮಾಡುತ್ತದೆ ಎಂದು ಹೇಳಿತ್ತು.
 2. ಆದರೆ, ಸುಪ್ರೀಂ ಕೋರ್ಟ್ ನೀಡಿದ ಹಿಂದಿನ ತೀರ್ಪುಗಳನ್ನು ಉಲ್ಲೇಖಿಸುವ ಮೂಲಕ, ಕೇರಳದ ಈ ನಿರ್ಧಾರಕ್ಕೆ ತಮಿಳುನಾಡು ಆಕ್ಷೇಪ ವ್ಯಕ್ತಪಡಿಸಿದೆ. 2006 ಮತ್ತು 2014ರಲ್ಲಿ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನಲ್ಲಿ ನೀರಿನ ಗರಿಷ್ಠ ಸಂಗ್ರಹ ಮಟ್ಟವನ್ನು 142 ಅಡಿಗಳಿಗೆ ನಿಗದಿಪಡಿಸಲಾಗಿತ್ತು.

‘ರೂಲ್ ಕರ್ವ್’ ಎಂದರೇನು?

ಅಣೆಕಟ್ಟೆಯ / ಜಲಾಶಯದಲ್ಲಿನ ನೀರಿನ ಏರಿಳಿತದ ಶೇಖರಣಾ ಮಟ್ಟವನ್ನು ನಿಯಮ ಕರ್ವ್ (rule curve) ನಿರ್ಧರಿಸುತ್ತದೆ. ಅಣೆಕಟ್ಟೆಯ ಗೇಟ್ ತೆರೆಯುವ ವೇಳಾಪಟ್ಟಿಯು ‘ರೂಲ್ ಕರ್ವ್’ ಅನ್ನು ಆಧರಿಸಿದೆ. ಇದು ಅಣೆಕಟ್ಟೆಯ ‘ಮುಖ್ಯ ರಕ್ಷಣೆ’ ಕಾರ್ಯವಿಧಾನದ ಭಾಗವಾಗಿದೆ.

Mullaperiyar_Dam

 

ಮುಲ್ಲಪೆರಿಯಾರ್ ಆಣೆಕಟ್ಟೆಯ ಕುರಿತು ತಿಳಿದುಕೊಳ್ಳಬೇಕಾದ ಸಂಗತಿಗಳೇನು?

 1. ಮುಲ್ಲಾಪೇರಿಯಾರ್ ಅಣೆಕಟ್ಟು ಕೇರಳದಲ್ಲಿದ್ದರೂ, 1886 ರ ಗುತ್ತಿಗೆ ಒಪ್ಪಂದದ ನಂತರ ಪೆರಿಯಾರ್ ನೀರಾವರಿ ಕಾರ್ಯಗಳಿಗಾಗಿ 999 ವರ್ಷಗಳ ಗುತ್ತಿಗೆ ಅವಧಿಗೆ (lease indenture),  ಇದನ್ನು ತಮಿಳುನಾಡು ನಿರ್ವಹಿಸುತ್ತದೆ. ಇದನ್ನು “ಪೆರಿಯಾರ್ ಸರೋವರ ಗುತ್ತಿಗೆ ಒಪ್ಪಂದ” ಎಂದೂ ಕರೆಯುತ್ತಾರೆ, ಇದು 1886 ರಲ್ಲಿ  ತಿರುವಾಂಕೂರಿನ ಮಹಾರಾಜ ಮತ್ತು ಭಾರತದ ರಾಜ್ಯ ಕಾರ್ಯದರ್ಶಿ ನಡುವೆ ಆದ ಒಪ್ಪಂದವಾಗಿದೆ.
 2. ಈ ಅಣೆಕಟ್ಟೆಯನ್ನು 1887 ಮತ್ತು 1895 ರ ನಡುವೆ ನಿರ್ಮಿಸಲಾಗಿದ್ದು ಅರೇಬಿಯನ್ ಸಮುದ್ರದ ಕಡೆಗೆ ಹರಿಯುವ ಹೊಳೆಯನ್ನು ಬಂಗಾಳಕೊಲ್ಲಿಯ ಕಡೆಗೆ
 3. ತಿರುಗಿಸಲಾಯಿತು. ಆ ಮೂಲಕ ಮದ್ರಾಸ್ ಪ್ರೆಸಿಡೆನ್ಸಿಯ ಮಧುರೈನ ಒಣ ಮಳೆ ಪ್ರದೇಶಕ್ಕೆ ಅಥವಾ ಮಳೆಯಾಶ್ರಿತ ಪ್ರದೇಶಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸುವ ಉದ್ದೇಶವನ್ನು ಹೊಂದಿತ್ತು.
 4. ಈ ಅಣೆಕಟ್ಟು ಕೇರಳದ ಇಡುಕ್ಕಿ ಜಿಲ್ಲೆಯ ಮುಲ್ಲಯಾರ್ ಮತ್ತು ಪೆರಿಯಾರ್ ನದಿಗಳ ಸಂಗಮ ಸ್ಥಳದಲ್ಲಿದೆ.

ತಮಿಳುನಾಡು ಹೇಳುವುದೇನು?

ಅಣೆಕಟ್ಟೆಯನ್ನು ಬಲಪಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಮಿಳುನಾಡು ಹೇಳುತ್ತದೆ, ಆದರೆ ಕೇರಳ ಸರ್ಕಾರವು ಜಲಾಶಯದ ನೀರಿನ ಮಟ್ಟವನ್ನು ಹೆಚ್ಚಿಸುವ ತನ್ನ ಪ್ರಯತ್ನಗಳಿಗೆ ನಿರ್ಬಂಧ ಉಂಟುಮಾಡುತ್ತಿದೆ ಆ ಮೂಲಕ, ಮಧುರೈನ ರೈತರಿಗೆ ನಷ್ಟ ಉಂಟಾಗುತ್ತಿದೆ ಎಂದು ಬಲವಾಗಿ ಹೇಳುತ್ತಿದೆ.

ಕೇರಳದ ವಾದವೇನು?

 1. ಅಣೆಕಟ್ಟೆಯ ಕೆಳಪಾತ್ರದಲ್ಲಿನ ಭೂಕಂಪ ಪೀಡಿತ ಜಿಲ್ಲೆಯಾದ ಇಡುಕ್ಕಿ ಜಿಲ್ಲೆಯ ನಿವಾಸಿಗಳ ವಿನಾಶದ ಅಥವಾ ಪ್ರಾಣಹಾನಿಯ ಸಾಧ್ಯತೆಯ ಬಗ್ಗೆ ಕೇರಳ ಚಿಂತಿಸುತ್ತಿದೆ.
 2. ಭೂಕಂಪನವು ಈ ಪ್ರದೇಶದಲ್ಲಿ ರಿಕ್ಟರ್ ಮಾಪಕದಲ್ಲಿ ಆರು ಅಳತೆಗಳನ್ನು ಮೀರಿದರೆ, ಮೂರು ದಶಲಕ್ಷಕ್ಕೂ ಹೆಚ್ಚು ಜನರ ಜೀವವು ಗಂಭೀರ ಅಪಾಯಕ್ಕೆ ಸಿಲುಕುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ವಾದಿಸುತ್ತಾರೆ.

 

ವಿಷಯಗಳು: ಶಾಸನಬದ್ಧ, ನಿಯಂತ್ರಕ ಮತ್ತು ವಿವಿಧ ಅರೆ-ನ್ಯಾಯಾಂಗ ಸಂಸ್ಥೆಗಳು.

ಭಾರತದ ಸ್ಪರ್ಧಾ ಆಯೋಗ:


(Competition Commission of India)

ಸಂದರ್ಭ:

ನ್ಯಾಯಯುತ ವ್ಯಾಪಾರ ನಿಯಂತ್ರಕ ಭಾರತದ ಸ್ಪರ್ಧಾ ಆಯೋಗ’ (Competition Commission of India-CCI) ನಡೆಸಿದ ಮಾರುಕಟ್ಟೆ ಅಧ್ಯಯನದ ಫಲಿತಾಂಶಗಳನ್ನು ವಿಶ್ಲೇಷಿಸಿದ ನಂತರ, ಔಷಧಿಗಳ ಕೈಗೆಟುಕುವಿಕೆಯನ್ನು ಖಚಿತಪಡಿಸಿಕೊಳ್ಳಲು ದೇಶದ ಔಷಧೀಯ ವಲಯದಲ್ಲಿ ಸ್ಪರ್ಧೆಯನ್ನು ಹೆಚ್ಚಿಸಲು ಕ್ರಮಗಳನ್ನು ಗುರುತಿಸಲಾಗುವುದು.

ಅಗತ್ಯತೆ:

‘ಗ್ರಾಹಕರಿಗೆ ಪರಿಣಾಮಕಾರಿ ಪರ್ಯಾಯ ಆಯ್ಕೆಗಳ ಕೊರತೆ’ಯಂತಹ ಸಮಸ್ಯೆಗಳ ದೃಷ್ಟಿಯಿಂದ ಭಾರತೀಯ ಸ್ಪರ್ಧಾತ್ಮಕ ಆಯೋಗವು (CCI) ಮಾರುಕಟ್ಟೆಯ ಅಧ್ಯಯನವನ್ನು ಪ್ರಾರಂಭಿಸಿದೆ.

 1. ಪ್ರಸ್ತುತ ಔಷಧಿಗಳ ವಿಷಯಕ್ಕೆ ಬಂದಾಗ, ಸ್ಪರ್ಧೆಯು ಪ್ರಾಥಮಿಕವಾಗಿ ಬೆಲೆಗಳ ಆಧಾರದ ಮೇಲೆ ಬದಲಿಗೆ ಬ್ರ್ಯಾಂಡ್ಗಳ ಮೇಲೆ ಆಧಾರಿತವಾಗಿದೆ ಎಂದು ಪ್ರಸ್ತುತ ಕಂಡುಬರುತ್ತದೆ. ‘ಸ್ಪರ್ಧಾತ್ಮಕ ಆಯೋಗ’ದ ಈ ಅಧ್ಯಯನವು ಔಷಧಿಗಳ ಕೈಗೆಟುಕುವಿಕೆಯನ್ನು ಖಚಿತಪಡಿಸಿಕೊಳ್ಳಲು ‘ಸ್ಪರ್ಧೆ’ ಯನ್ನು ಹೆಚ್ಚಿಸುವ ಕ್ರಮಗಳನ್ನು ಗುರುತಿಸುತ್ತದೆ.

ಭಾರತದ ಔಷಧ ಉದ್ಯಮ:

 1. ಜಾಗತಿಕವಾಗಿ, ಭಾರತವು ಜೆನೆರಿಕ್ ಔಷಧಗಳ ಅತಿದೊಡ್ಡ ಪೂರೈಕೆದಾರನಾಗಿರುವುದರಿಂದ ಭಾರತವು ಜಾಗತಿಕ ಔಷಧಿ ಕ್ಷೇತ್ರದಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ.
 2. ಭಾರತೀಯ ಔಷಧಿ ಉದ್ಯಮವು ವಿವಿಧ ಲಸಿಕೆಗಳ ಜಾಗತಿಕ ಬೇಡಿಕೆಯ 50%, ಅಮೇರಿಕಾದ ಸಾಮಾನ್ಯ ಜನರಿಕ್ ಬೇಡಿಕೆಯ 40% ಮತ್ತು ಯುನೈಟೆಡ್ ಕಿಂಗ್ಡಮ್ ನ ಎಲ್ಲಾ ರೀತಿಯ 25% ಔಷಧಿಗಳನ್ನು ಪೂರೈಸುತ್ತದೆ.
 3. ಪ್ರಸ್ತುತ, ಏಡ್ಸ್ (Acquired Immune Deficiency Syndrome – AIDS) ವಿರುದ್ಧ ಹೋರಾಡಲು ಬಳಸುವ 80% ಕ್ಕಿಂತ ಹೆಚ್ಚಿನ ಆಂಟಿರೆಟ್ರೋವೈರಲ್ ಔಷಧಗಳನ್ನು ಭಾರತೀಯ ಔಷಧ ಕಂಪನಿಗಳು ಜಾಗತಿಕವಾಗಿ ಪೂರೈಸುತ್ತವೆ.
 4. ಭಾರತೀಯ ಔಷಧ ಮಾರುಕಟ್ಟೆಯು ಪರಿಮಾಣದ ದೃಷ್ಟಿಯಿಂದ ವಿಶ್ವದ ಮೂರನೇ ಅತಿ ದೊಡ್ಡ ಹಾಗೂ ಮೌಲ್ಯದ ದೃಷ್ಟಿಯಿಂದ ವಿಶ್ವದ ಹದಿಮೂರನೇ ಅತಿದೊಡ್ಡ ಮಾರುಕಟ್ಟೆಯಾಗಿದೆ. ಇದು ಜಾಗತಿಕ ಉತ್ಪಾದನಾ ಮತ್ತು ಸಂಶೋಧನಾ ಕೇಂದ್ರವಾಗಿ ತನ್ನನ್ನು ತಾನು ಸ್ಥಾಪಿಸಿಕೊಂಡಿದೆ.
 5. ಭಾರತವು ವಿಶ್ವದ ಅತ್ಯಂತ ಕಡಿಮೆ ಉತ್ಪಾದನಾ ವೆಚ್ಚವನ್ನು ಹೊಂದಿದೆ – ಅಮೆರಿಕ ಗಿಂತ ಕಡಿಮೆ ಮತ್ತು ಯುರೋಪಿನ ವೆಚ್ಚದ ಬಹುತೇಕ ಅರ್ಧದಷ್ಟು ಉತ್ಪಾದನಾ ವೆಚ್ಚವನ್ನು ಹೊಂದಿದೆ.

ಗಮನಿಸಲೇ ಬೇಕಾದ ಸವಾಲುಗಳು:

ಅವಲಂಬನೆ: ಭಾರತೀಯ  ಔಷಧೀಯ ಉದ್ಯಮವು,  ಔಷಧದ ಕಚ್ಚಾ ಸಾಮಗ್ರಿಗಳಿಗಾಗಿ ಚೀನಾವನ್ನು ಅತೀ ಹೆಚ್ಚು ಅವಲಂಬಿಸಿದೆ. ಈ ಕಚ್ಚಾ ವಸ್ತುಗಳನ್ನು ಸಕ್ರಿಯ  ಔಷಧ ಪದಾರ್ಥಗಳು (Active Pharmaceutical Ingredients –API) ಎಂದು ಕರೆಯಲಾಗುತ್ತದೆ, ಇದನ್ನು ಬೃಹತ್ ಗಾತ್ರದ ಔಷಧಗಳು ಎಂದೂ ಕೂಡ ಕರೆಯುತ್ತಾರೆ. ಭಾರತದ  ಔಷಧ ತಯಾರಕರು ತಮ್ಮ ಒಟ್ಟು ಬೃಹತ್  ಔಷಧೀಯ ಅಗತ್ಯತೆಗಳಲ್ಲಿ 70% ರಷ್ಟು ಔಷಧೀಯ ಕಚ್ಚಾ ಸಾಮಗ್ರಿಯನ್ನು ಚೀನಾದಿಂದ ಆಮದು ಮಾಡಿಕೊಳ್ಳುತ್ತಾರೆ.

ಮತ್ತೊಂದು ಪ್ರಮುಖ ಸವಾಲು ಎಂದರೆ, ಭಾರತದಲ್ಲಿನ ಹೆಚ್ಚಿನ ಮೌಲ್ಯದ ಬ್ರಾಂಡ್‌ಗಳ ಔಷಧ ಕಂಪನಿಗಳ ಹೆಚ್ಚಿನ ವೆಚ್ಚ ಅಥವಾ ನಕಲಿ ಆವೃತ್ತಿಗಳು ಅವರ ವ್ಯವಹಾರದ ಕಾರ್ಯಕ್ಷಮತೆಯ ಮೇಲೆ ಪ್ರತಿಕೂಲವಾಗಿ ಪರಿಣಾಮ ಬೀರುತ್ತವೆ. ಇದು ಋಣಾತ್ಮಕ ಪರಿಣಾಮವನ್ನು ಹೊಂದಿದ್ದು ಅಂತಿಮ ಗ್ರಾಹಕರ ಆರೋಗ್ಯದ ಮೇಲೆ ದೊಡ್ಡ ಅಪಾಯವನ್ನುಂಟು ಮಾಡುತ್ತದೆ.

ಹಾಗಾದರೆ, ಭಾರತ ಏನು ಮಾಡುತ್ತಿದೆ?

ಹೆಚ್ಚಿನ ಸ್ವಾವಲಂಬನೆಗಾಗಿ ಕರೆ: ಈ ಬಾರಿ ಜೂನ್ ನಲ್ಲಿ, ದೇಶದಲ್ಲಿ ಮೂರು ಬೃಹತ್ ಔಷಧೀಯ ಉದ್ಯಾನವನಗಳ ಪ್ರಚಾರಕ್ಕಾಗಿ ಔಷಧ ಇಲಾಖೆಯು ಯೋಜನೆಯನ್ನು ಘೋಷಿಸಿತು.

 1. ಬೃಹತ್ ಔಷಧೀಯ ಉದ್ಯಾನವನಗಳು API ಗಳು,DI ಗಳು ಅಥವಾ KSM ಗಳ ವಿಶೇಷ ತಯಾರಿಕೆಗಾಗಿ ಸಾಮಾನ್ಯ ಮೂಲ ಸೌಕರ್ಯ ಸೌಲಭ್ಯಗಳನ್ನು ಹೊಂದಿರುವ ಒಂದು ಗೊತ್ತುಪಡಿಸಿದ ಭೂಪ್ರದೇಶವನ್ನು ಹೊಂದಿರುತ್ತವೆ ಮತ್ತು ಸಾಮಾನ್ಯ ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯನ್ನು ಸಹ ಹೊಂದಿರುತ್ತವೆ.
 2. ಈ ಉದ್ಯಾನವನಗಳು ದೇಶದಲ್ಲಿ ಬೃಹತ್ ಔಷಧಿಗಳ ಉತ್ಪಾದನಾ ವೆಚ್ಚವನ್ನು ತಗ್ಗಿಸುವ ಮತ್ತು ದೇಶಿಯ ಬೃಹತ್ ಔಷಧ ಉದ್ಯಮದಲ್ಲಿ ಸ್ಪರ್ಧಾತ್ಮಕತೆಯನ್ನು ಹೆಚ್ಚಿಸುವ ನಿರೀಕ್ಷೆ ಇದೆ.

ಭಾರತದ ಸ್ಪರ್ಧಾತ್ಮಕ ಆಯೋಗದ ಬಗ್ಗೆ:

ಭಾರತ ಸ್ಪರ್ಧಾತ್ಮಕ ಆಯೋಗ (CCI) ವು ಭಾರತ ಸರ್ಕಾರದ ಶಾಸನಬದ್ಧ ಸಂಸ್ಥೆಯಾಗಿದೆ. ಕಾಯಿದೆಯ ಆಡಳಿತ, ಅನುಷ್ಠಾನ ಮತ್ತು ಜಾರಿಗಾಗಿ ಇದನ್ನು ಸ್ಪರ್ಧಾತ್ಮಕ ಕಾಯ್ದೆ 2002 (Competition Act, 2002) ರ ಅಡಿಯಲ್ಲಿ ಸ್ಥಾಪಿಸಲಾಯಿತು ಮತ್ತು ಇದನ್ನು ಮಾರ್ಚ್ 2009 ರಲ್ಲಿ ಸರಿಯಾಗಿ ರಚಿಸಲಾಯಿತು. ಇದರ ಅಧ್ಯಕ್ಷರು ಮತ್ತು ಸದಸ್ಯರನ್ನು ಕೇಂದ್ರ ಸರ್ಕಾರ ನೇಮಿಸುತ್ತದೆ.

CCI ನ ಕಾರ್ಯಗಳು:

 1. ಸ್ಪರ್ಧೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಅಭ್ಯಾಸಗಳನ್ನು ತೊಡೆದುಹಾಕುವುದು, ಸ್ಪರ್ಧೆಯನ್ನು ಉತ್ತೇಜಿಸುವುದು ಮತ್ತು ಮುಂದುವರಿಸುವುದು, ಗ್ರಾಹಕರ ಹಿತಾಸಕ್ತಿಗಳನ್ನು ರಕ್ಷಿಸುವುದು ಮತ್ತು ಭಾರತೀಯ ಮಾರುಕಟ್ಟೆಗಳಲ್ಲಿ ವ್ಯಾಪಾರದ ಸ್ವಾತಂತ್ರ್ಯವನ್ನು ಖಚಿತಪಡಿಸುವುದು ಭಾರತದ ಸ್ಪರ್ಧಾ ಆಯೋಗದ ಕರ್ತವ್ಯವಾಗಿದೆ.
 2. ಆಯೋಗವು ಯಾವುದೇ ಕಾನೂನಿನಡಿಯಲ್ಲಿ ಸ್ಥಾಪಿಸಲಾದ ಯಾವುದೇ ಶಾಸನಬದ್ಧ ಪ್ರಾಧಿಕಾರದಿಂದ ಪಡೆದ ಉಲ್ಲೇಖಗಳ ಮೇಲೆ, ಸ್ಪರ್ಧೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಲಹೆಗಳನ್ನು ನೀಡುತ್ತದೆ ಮತ್ತು ಸ್ಪರ್ಧೆಯ ಮನೋಭಾವವನ್ನು ಕಾಪಾಡಿಕೊಳ್ಳುತ್ತದೆ.
 3. ಇದಲ್ಲದೆ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಮತ್ತು ಸ್ಪರ್ಧೆಯ ವಿಷಯಗಳ ಬಗ್ಗೆ ತರಬೇತಿ ನೀಡುವುದು ಸಹ ಆಯೋಗದಿಂದ ಒದಗಿಸಲ್ಪಟ್ಟಿದೆ.

ಸ್ಪರ್ಧಾ ಕಾಯ್ದೆ:

(The Competition Act)

ರಾಘವನ್ ಸಮಿತಿಯ ಶಿಫಾರಸುಗಳ ಮೇರೆಗೆ, ‘ಏಕಸ್ವಾಮ್ಯ ಮತ್ತು ನಿರ್ಬಂಧಿತ ವ್ಯಾಪಾರ ಅಭ್ಯಾಸ ಕಾಯ್ದೆ’, 1969 (Monopolies and Restrictive Trade Practices Act, 1969) ಅಂದರೆ MRTP ಕಾಯ್ದೆಯನ್ನು ರದ್ದುಪಡಿಸಲಾಯಿತು ಮತ್ತು ‘ಸ್ಪರ್ಧಾ ಕಾಯ್ದೆ’, 2002 ರಿಂದ ಬದಲಾಯಿಸಲಾಯಿತು.

 1. ಸ್ಪರ್ಧಾತ್ಮಕ ಕಾಯ್ದೆ, 2002 ರ ತಿದ್ದುಪಡಿ ರೂಪವಾದ ಸ್ಪರ್ಧೆ (ತಿದ್ದುಪಡಿ) ಕಾಯ್ದೆ 2007, ಸ್ಪರ್ಧಾತ್ಮಕ-ವಿರೋಧಿ ಒಪ್ಪಂದಗಳನ್ನು ನಿಷೇಧಿಸುತ್ತದೆ, ಉದ್ಯಮಗಳಿಂದ ಪ್ರಾಬಲ್ಯದ ಸ್ಥಾನವನ್ನು ದುರುಪಯೋಗಪಡಿಸಿ ಕೊಳ್ಳುವುದನ್ನು ನಿಷೇಧಿಸುತ್ತದೆ ಮತ್ತು ಸಂಯೋಜನೆಗಳನ್ನು ನಿಯಂತ್ರಿಸುತ್ತದೆ (M&A ಸ್ವಾಧೀನ, ನಿಯಂತ್ರಣ ಮತ್ತು ಸ್ವಾಧೀನ);ಈ ಸಂಯೋಜನೆಗಳು ಭಾರತದಲ್ಲಿನ ಸ್ಪರ್ಧೆಯ ಮೇಲೆ ಹೆಚ್ಚು ವ್ಯತಿರಿಕ್ತ ಪರಿಣಾಮ ಬೀರಬಹುದು ಅಥವಾ ಉಂಟುಮಾಡಬಹುದು.

 

ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ಡೆಂಗ್ಯೂ ಜ್ವರ:


(Dengue fever)

ಸಂದರ್ಭ:

ದೆಹಲಿಯಲ್ಲಿ ಡೆಂಗ್ಯೂ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿದ್ದು, ನವೆಂಬರ್ ಮೊದಲ ವಾರದಲ್ಲಿ ಒಟ್ಟು 1,171 ಡೆಂಗ್ಯೂ ಜ್ವರ ಪ್ರಕರಣಗಳು ವರದಿಯಾಗಿವೆ. ಅಕ್ಟೋಬರ್ ತಿಂಗಳಿನಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ 1,196 ರಷ್ಟಿದೆ.

current affairs

 

ತೆಗೆದುಕೊಂಡ ಕ್ರಮಗಳು:

ದೆಹಲಿಯಾದ್ಯಂತ ಡೆಂಗ್ಯೂ, ಮಲೇರಿಯಾ ಮತ್ತು ಚಿಕೂನ್‌ಗುನ್ಯಾ ಪ್ರಕರಣಗಳ ಹೆಚ್ಚಳದ ದೃಷ್ಟಿಯಿಂದ, ಸ್ಥಳೀಯ ಸಂಸ್ಥೆಗಳು ಮತ್ತು ಅಧಿಕಾರಿಗಳು ತಮ್ಮ ಫಾಗಿಂಗ್ ಮತ್ತು ಸಿಂಪಡಣೆ ಅಭಿಯಾನಗಳನ್ನು ತೀವ್ರಗೊಳಿಸುತ್ತಿದ್ದಾರೆ. ನಾಗರಿಕರಿಗೆ ತಮ್ಮ ಮನೆಗಳಲ್ಲಿ ಅಥವಾ ಸಮೀಪದಲ್ಲಿ ನೀರು ನಿಲ್ಲದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ನೀರಿನ ಸಂಗ್ರಹಣೆಯು ಈ ರೋಗಗಳ ಸಂತಾನೋತ್ಪತ್ತಿಗೆ ಸ್ಥಳವನ್ನು ಒದಗಿಸುತ್ತದೆ.

current affairs

 

ಡೆಂಗ್ಯೂ ಬಗ್ಗೆ:

ಹೆಣ್ಣು ಈಡಿಸ್ ಸೊಳ್ಳೆ (Aedes mosquito) ಕಚ್ಚುವುದರಿಂದ ಡೆಂಗ್ಯೂ ವೈರಸ್ (Dengue virus) ಹರಡುತ್ತದೆ.

ಈಡಿಸ್ ಸೊಳ್ಳೆಗಳು ಹಗಲಿನಲ್ಲಿ ಮಾತ್ರ ಕಚ್ಚುತ್ತವೆ ಮತ್ತು 400 ಮೀಟರ್ ದೂರದವರೆಗೆ ಹಾರಬಲ್ಲ ಸಾಮರ್ಥ್ಯಹೊಂದಿವೆ.

ಹೆಣ್ಣು ಈಡಿಸ್ ಕಚ್ಚುವಿಕೆಯು ಸಾಮಾನ್ಯವಾಗಿ ಸೌಮ್ಯವಾದ ಅನಾರೋಗ್ಯವನ್ನು ಉಂಟುಮಾಡುತ್ತದೆ. ಆದರೆ ಗಂಭೀರವಾದ ಡೆಂಗ್ಯೂ ಸೋಂಕು ಕೆಲವೊಮ್ಮೆ ಮಾರಣಾಂತಿಕವಾಗಬಹುದು.

ವಿಶ್ವ ಆರೋಗ್ಯ ಸಂಸ್ಥೆ (WHO) ಅಂದಾಜಿನ ಪ್ರಕಾರ ಪ್ರತಿ ವರ್ಷ 100-400 ಮಿಲಿಯನ್ ಡೆಂಗ್ಯೂ ಸೋಂಕುಗಳು ವಾರ್ಷಿಕವಾಗಿ ಸಂಭವಿಸುತ್ತವೆ,ಇದರ ಜಾಗತಿಕ ಘಟನೆಗಳು “ಇತ್ತೀಚಿನ ದಶಕಗಳಲ್ಲಿ” ನಾಟಕೀಯವಾಗಿ ಹೆಚ್ಚಾಗಿದೆ.

ಒಂದು ಗಂಟೆಯೊಳಗೆ ಡೆಂಗ್ಯೂ ರೋಗನಿರ್ಣಯ ಮಾಡುವ ಸಾಧನ:

(Device to diagnose dengue within an hour)

ಸಂದರ್ಭ:

ದೆಹಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆಯ (IIT-D) ಸಂಶೋಧಕರು ಕೈಯಲ್ಲಿ ಹಿಡಿಯುವ ‘ಮೇಲ್ಮೈ-ವರ್ಧಿತ ರಾಮನ್ ಸ್ಪೆಕ್ಟ್ರೋಸ್ಕೋಪಿ’ ಅನ್ನು ಅಭಿವೃದ್ಧಿಪಡಿಸಿದ್ದಾರೆ, ಅಂದರೆ ಡೆಂಗ್ಯೂ ರೋಗದ ಆರಂಭಿಕ ರೋಗನಿರ್ಣಯಕ್ಕಾಗಿ ಮೇಲ್ಮೈ ವರ್ಧಿತ ರಾಮನ್ ಸ್ಪೆಕ್ಟ್ರೋಸ್ಕೋಪಿ (Surface Enhanced Raman Spectroscopy -SERS) ಆಧಾರಿತ ವೇದಿಕೆಯನ್ನು ಅಭಿವೃದ್ಧಿಪಡಿಸಿದ್ದಾರೆ. ಈ ಸಾಧನವು ಒಂದು ಗಂಟೆಯೊಳಗೆ ಡೆಂಗ್ಯೂ ಪರೀಕ್ಷಾ ಫಲಿತಾಂಶಗಳನ್ನು (ತ್ವರಿತ ರೋಗನಿರ್ಣಯ) ಒದಗಿಸುತ್ತದೆ.

ಈ ಸಂಶೋಧನಾ ಕಾರ್ಯಕ್ಕೆ ಶಿಕ್ಷಣ ಸಚಿವಾಲಯದ ಇಂಪ್ರಿಂಟ್ ಇಂಡಿಯಾ ಕಾರ್ಯಕ್ರಮವು (IMPRINT India programme) ಧನಸಹಾಯ ನೀಡಿದೆ.

ಆರಂಭಿಕ ರೋಗನಿರ್ಣಯದ ಅವಶ್ಯಕತೆ:

ರೋಗಿಯ ಆರೋಗ್ಯವು ಹದಗೆಡದಂತೆ ತಡೆಯಲು ಡೆಂಗ್ಯೂವಿನ ಆರಂಭಿಕ ರೋಗನಿರ್ಣಯವು ಬಹಳ ಮುಖ್ಯವಾದುದು. ಆದಾಗ್ಯೂ, ‘ರಿವರ್ಸ್ ಟ್ರಾನ್ಸ್‌ಸ್ಕ್ರಿಪ್ಟೇಸ್ ಪಾಲಿಮರೇಸ್ ಚೈನ್ ರಿಯಾಕ್ಷನ್’ (RT-PCR) ಅನ್ನು ಬಳಸುವ ನ್ಯೂಕ್ಲಿಯಿಕ್ ಆಸಿಡ್ ಪತ್ತೆಹಚ್ಚುವಿಕೆಯಂತಹ ಸಾಂಪ್ರದಾಯಿಕ ರೋಗನಿರ್ಣಯ ಕಾರ್ಯವಿಧಾನಗಳು ಬಹಳ ಸಮಯ ತೆಗೆದುಕೊಳ್ಳುತ್ತದೆ ಮತ್ತು ಡೆಂಗ್ಯೂ ರೋಗನಿರ್ಣಯಕ್ಕೆ ದುಬಾರಿ ಉಪಕರಣಗಳು ಮತ್ತು ಕಾರಕಗಳ (expensive equipment and reagents) ಅಗತ್ಯವಿರುತ್ತದೆ.

SERS ಎಂದರೇನು?

ಲೋಹೀಯ ಮೇಲ್ಮೈಗಳಲ್ಲಿ ಅಣುಗಳನ್ನು ಹೀರಿಕೊಳ್ಳುವ ಮೂಲಕ ಅಥವಾ ಪ್ಲಾಸ್ಮೋನಿಕ್-ಮ್ಯಾಗ್ನೆಟಿಕ್ ಸಿಲಿಕಾ ನ್ಯಾನೊಟ್ಯೂಬ್‌ಗಳಂತಹ ಸೂಕ್ಷ್ಮ ರಚನೆಗಳಿಂದ ರಾಮನ್ ಚದುರುವಿಕೆಯನ್ನು ಹೆಚ್ಚಿಸಲು ಒರಟಾದ ಲೋಹದ ಮೇಲ್ಮೈ ಸೂಕ್ಷ್ಮ ತಂತ್ರವಾಗಿದೆ.

ಡೆಂಗ್ಯೂ ಸ್ಥಿತಿ:

 1. ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಇತ್ತೀಚಿನ ದಶಕಗಳಲ್ಲಿ ಪ್ರಪಂಚದಾದ್ಯಂತ ಡೆಂಗ್ಯೂ-ಸಂಬಂಧಿತ ಘಟನೆಗಳು ನಾಟಕೀಯವಾಗಿ ಹೆಚ್ಚಾಗಿದೆ, ಹೆಚ್ಚಿನ ಪ್ರಕರಣಗಳು ಕಡಿಮೆ ವರದಿಯಾಗುತ್ತಿವೆ.
 2. WHO ಅಂದಾಜಿನ ಪ್ರಕಾರ ಪ್ರತಿ ವರ್ಷ 39 ಕೋಟಿ ಡೆಂಗ್ಯೂ ವೈರಸ್ ಸೋಂಕಿನ ಪ್ರಕರಣಗಳು ಇವೆ, ಅದರಲ್ಲಿ 9.6 ಕೋಟಿ ಪ್ರಕರಣಗಳು ರೋಗಲಕ್ಷಣಗಳನ್ನು ತೋರಿಸುತ್ತವೆ.
 3. ರೋಗವಾಹಕಗಳಿಂದ ಹರಡುವ ರೋಗ ನಿಯಂತ್ರಣದ ರಾಷ್ಟ್ರೀಯ ಕಾರ್ಯಕ್ರಮದ (National Vector-Borne Disease Control Programme – NVBDCP) ಪ್ರಕಾರ, 2019 ರಲ್ಲಿ 1.5 ಲಕ್ಷಕ್ಕೆ ಹೋಲಿಸಿದರೆ 2018 ರಲ್ಲಿ 1 ಲಕ್ಷಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗಿವೆ.

ಬ್ಯಾಕ್ಟೀರಿಯಾದ ಮೂಲಕ ಡೆಂಗ್ಯೂ ನಿಯಂತ್ರಣ:

ಇತ್ತೀಚೆಗೆ, ವಿಶ್ವ ಸೊಳ್ಳೆ ಕಾರ್ಯಕ್ರಮದ  (World Mosquito Program) ಸಂಶೋಧಕರು ಇಂಡೋನೇಷ್ಯಾದಲ್ಲಿ ಡೆಂಗ್ಯೂವನ್ನು ಯಶಸ್ವಿಯಾಗಿ ನಿಯಂತ್ರಿಸಲು ‘ವೋಲ್ಬಾಚಿಯಾ ಬ್ಯಾಕ್ಟೀರಿಯಾ’ (Wolbachia bacteria) ಸೋಂಕಿತ ಸೊಳ್ಳೆಗಳನ್ನು ಬಳಸಿದರು.

 1. ವಿಜ್ಞಾನಿಗಳು ಕೆಲವು ಸೊಳ್ಳೆಗಳಿಗೆ ‘ವೋಲ್ಬಾಚಿಯಾ ಬ್ಯಾಕ್ಟೀರಿಯಾ’ ದಿಂದ ಸೋಂಕು ತಗುಲಿಸಿದರು ಮತ್ತು ನಂತರ ಅವುಗಳನ್ನು ನಗರದಲ್ಲಿ ಬಿಡುಗಡೆ ಮಾಡಿದರು, ಅಲ್ಲಿ ಈ ಸೋಂಕಿತ ಸೊಳ್ಳೆಗಳು ಸ್ಥಳೀಯ ಹೆಣ್ಣು ಸೊಳ್ಳೆಗಳೊಂದಿಗೆ ಸಂತಾನೋತ್ಪತ್ತಿ ಮಾಡುತ್ತವೆ, ಇದರ ಪರಿಣಾಮವಾಗಿ ಆ ಪ್ರದೇಶದಲ್ಲಿನ ಬಹುತೇಕ ಎಲ್ಲಾ ಸೊಳ್ಳೆಗಳು ವೊಲ್ಬಾಚಿಯಾ ಬ್ಯಾಕ್ಟೀರಿಯಾದಿಂದ ಸೋಂಕಿಗೆ ಒಳಗಾಗುತ್ತವೆ. ಈ ವಿಧಾನವನ್ನು ಜನಸಂಖ್ಯೆಯ ಬದಲಿ ತಂತ್ರ’ (Population Replacement Strategy) ಎಂದು ಕರೆಯಲಾಗುತ್ತದೆ.
 2. 27 ತಿಂಗಳ ನಂತರ, ಇತರ ಪ್ರದೇಶಗಳಿಗೆ ಹೋಲಿಸಿದರೆ ವೊಲ್ಬಾಚಿಯಾ-ಸೋಂಕಿತ ಸೊಳ್ಳೆಗಳು ಬಿಡುಗಡೆಯಾಗುವ ಪ್ರದೇಶಗಳಲ್ಲಿ ಡೆಂಗ್ಯೂ ಪ್ರಕರಣಗಳಲ್ಲಿ 77% ಇಳಿಕೆ ಕಂಡುಬಂದಿದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

 

ವಿಷಯಗಳು:ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ಝೀಕಾ ವೈರಸ್:


(Zika Virus)

ಸಂದರ್ಭ:

ಉತ್ತರ ಪ್ರದೇಶದಲ್ಲಿ ಝಿಕಾ ವೈರಸ್ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಈ ವೈರಸ್ ಪ್ರಕರಣಗಳು ಕಂಡುಬಂದಿರುವ ಸ್ಥಳಗಳಿಗೆ ಅನಿವಾರ್ಯವಲ್ಲದ ಎಲ್ಲ ಪ್ರಯಾಣವನ್ನು ಕೈಗೊಳ್ಳಬಾರದು ಎಂದು ವೈದ್ಯರು ಜನರಿಗೆ ಸಲಹೆ ನೀಡಿದ್ದಾರೆ. ಪ್ರಸ್ತುತ, ರಾಜ್ಯದಲ್ಲಿ 17 ಮಕ್ಕಳು ಸೇರಿದಂತೆ ಸುಮಾರು 90 ಜನರು ‘ಜಿಕಾ ವೈರಸ್’ ಸೋಂಕಿಗೆ ಒಳಗಾಗಿದ್ದಾರೆ.

ಕಾಳಜಿಯ ವಿಷಯ:

ವಿಶ್ವ ಆರೋಗ್ಯ ಸಂಸ್ಥೆ (WHO) ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ, Zika ವೈರಸ್ ಸೋಂಕಿಗೆ ಒಳಗಾದ ಹೆಚ್ಚಿನ (80% ವರೆಗೆ) ಜನರು ಲಕ್ಷಣರಹಿತರಾಗಿರುತ್ತಾರೆ ಅಥವಾ ಜ್ವರ, ದದ್ದು, ಕಾಂಜಂಕ್ಟಿವಿಟಿಸ್, ದೇಹದ ನೋವು, ಕೀಲು ನೋವು ಮುಂತಾದ ಸೌಮ್ಯ ಲಕ್ಷಣಗಳನ್ನು ಹೊಂದಿರುತ್ತಾರೆ.

ಝೀಕಾ ವೈರಸ್ ಕುರಿತು:

 1. ಜಿಕಾ ವೈರಸ್, ಮುಖ್ಯವಾಗಿ ಈಡಿಸ್ ಜಾತಿಯ (Aedes genus) ಸೋಂಕಿತ ಸೊಳ್ಳೆಗಳು, ಅದರಲ್ಲೂ ಮುಖ್ಯವಾಗಿ ಈಡಿಸ್ ಈಜಿಪ್ಟಿ (Aedes aegypti) ಸೊಳ್ಳೆಯಿಂದ ಹರಡುತ್ತದೆ.
 2. ಈ ಈಡಿಸ್ ಈಜಿಪ್ಟಿ ಸೊಳ್ಳೆಗಳಿಂದಾಗಿ ಡೆಂಗ್ಯೂ, ಚಿಕುನ್‌ಗುನ್ಯಾ ಮತ್ತು ‘ಹಳದಿ ಜ್ವರ’ (Yellow Fever) ಕೂಡ ಹರಡುತ್ತವೆ. ಈ ಸೊಳ್ಳೆಗಳು ಸಾಮಾನ್ಯವಾಗಿ ಹಗಲಿನಲ್ಲಿ ಕಚ್ಚುತ್ತವೆ, ಹೆಚ್ಚಾಗಿ ಮುಂಜಾನೆ ಅಥವಾ ಮಧ್ಯಾಹ್ನದ ಸಮಯದಲ್ಲಿ.
 3. ಸೊಳ್ಳೆಗಳ ಹೊರತಾಗಿ, ಈ ವೈರಸ್ ಸೋಂಕಿತ ವ್ಯಕ್ತಿಯಿಂದಲೂ ಹರಡಬಹುದು. ಜಿಕಾ ವೈರಸ್ ಗರ್ಭಿಣಿ ಮಹಿಳೆಯಿಂದ ಅವಳ ಭ್ರೂಣಕ್ಕೆ, ಲೈಂಗಿಕ ಸಂಪರ್ಕ, ರಕ್ತ ಮತ್ತು ರಕ್ತ ಉತ್ಪನ್ನಗಳ ವರ್ಗಾವಣೆಯ ಮೂಲಕ ಮತ್ತು ಅಂಗಾಂಗ ಕಸಿ ಮೂಲಕವೂ ಹರಡಬಹುದು.
 4. ಜಿಕಾ ವೈರಸ್ ಅನ್ನು ಮೊದಲು ಉಗಾಂಡಾದ ಕೋತಿಗಳಲ್ಲಿ 1947 ರಲ್ಲಿ ಗುರುತಿಸಲಾಯಿತು. ತರುವಾಯ, 1952 ರಲ್ಲಿ, ಉಗಾಂಡಾ ಮತ್ತು ಯುನೈಟೆಡ್ ರಿಪಬ್ಲಿಕ್ ಆಫ್ ಟಾಂಜಾನಿಯಾದಲ್ಲಿ ಮಾನವರಲ್ಲಿ ಈ ವೈರಸ್ ಕಂಡುಬಂದಿದೆ.

ಜಿಕಾ ವೈರಸ್ ಸೋಂಕಿನ ಲಕ್ಷಣಗಳು:

 1. ಜಿಕಾ ವೈರಸ್ ಸೋಂಕಿನ ಲಕ್ಷಣಗಳು ಸೌಮ್ಯವಾಗಿದ್ದರೂ, ರೋಗಲಕ್ಷಣಗಳು ಕೆಟ್ಟದಾಗಿದ್ದರೆ,ಆಗ ತಕ್ಷಣದಲ್ಲಿ ವೈದ್ಯಕೀಯ ಚಿಕಿತ್ಸೆಯನ್ನು ಪಡೆಯಲು ಸೂಚಿಸಲಾಗುತ್ತದೆ. ರೋಗಲಕ್ಷಣಗಳಲ್ಲಿ ಸಾಮಾನ್ಯವಾಗಿ ಜ್ವರ, ದದ್ದು, ಉರಿಯುವುದು ಮತ್ತು ಕಣ್ಣುಗಳ ಊತ (conjunctivitis)), ಸ್ನಾಯು ಮತ್ತು ಕೀಲು ನೋವು ಅಥವಾ ತಲೆನೋವು ಸೇರಿವೆ. ಈ ಲಕ್ಷಣಗಳು ಎರಡರಿಂದ ಏಳು ದಿನಗಳವರೆಗೆ ಇರುತ್ತದೆ. ಕೆಲವೊಮ್ಮೆ ಸೋಂಕಿಗೆ ಒಳಗಾದ ಹೆಚ್ಚಿನ ಜನರಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬರುವುದಿಲ್ಲ.
 2. ಗರ್ಭಾವಸ್ಥೆಯಲ್ಲಿ ‘ಝೀಕಾ ವೈರಸ್’ ಸೋಂಕಿನಿಂದ ಮಕ್ಕಳು ‘ಮೈಕ್ರೊಸೆಫಾಲಿ’ (Microcephaly ಅಂದರೆ ‘ಮಗುವಿನ ತಲೆಯ ಸಾಮಾನ್ಯ ಗಾತ್ರಕ್ಕಿಂತ ಚಿಕ್ಕದಾಗಿದೆ’) ಮತ್ತು ಇತರ ಜನ್ಮಜಾತ ವಿರೂಪಗಳೊಂದಿಗೆ ಜನಿಸಬಹುದು. ಇದನ್ನು ಜನ್ಮಜಾತ ಝೀಕಾ ಸಿಂಡ್ರೋಮ್ ಎಂದು ಕರೆಯಲಾಗುತ್ತದೆ.

ಚಿಕಿತ್ಸೆ:

ವಿಶ್ವ ಆರೋಗ್ಯ ಸಂಸ್ಥೆ (WHO) ಪ್ರಕಾರ, ಜಿಕಾ ವೈರಸ್‌ಗೆ ಪ್ರಸ್ತುತ ಯಾವುದೇ ಚಿಕಿತ್ಸೆ ಅಥವಾ ಲಸಿಕೆ ಲಭ್ಯವಿಲ್ಲ. ಈ ಕಾಯಿಲೆಯಿಂದ ಶೀಘ್ರವಾಗಿ ಚೇತರಿಸಿಕೊಳ್ಳಲು, ನೋವು ನಿವಾರಕ ಮತ್ತು ಜ್ವರ ನಿವಾರಕ  ಔಷಧಿಗಳ ಜೊತೆಗೆ ಸಾಕಷ್ಟು ದ್ರವ ಪದಾರ್ಥಗಳನ್ನು ಸೇವಿಸಲು WHO ಶಿಫಾರಸು ಮಾಡಿದೆ.

current affairs

 

ದಯವಿಟ್ಟು ಗಮನಿಸಿ:

ದೇಶದಲ್ಲಿ ಕೋವಿಡ್‌ – 19 ಸಾಂಕ್ರಾಮಿಕಕ್ಕೆ ಜನ ನಲುಗಿ ಹೋಗುತ್ತಿದ್ದರೆ, ಈ ನಡುವೆ ಕೇರಳ ಮತ್ತು ಮಹಾರಾಷ್ಟ್ರದಲ್ಲಿ ಜಿಕಾ ವೈರಸ್ ಕಾಯಿಲೆ ಪತ್ತೆಯಾಗಿರುವುದು ಮತ್ತಷ್ಟು ಆತಂಕಕ್ಕೀಡು ಮಾಡಿದೆ. 24 ವರ್ಷದ ಗರ್ಭಿಣಿಯಲ್ಲಿ ಈ ವರ್ಷದ ಮೊದಲ ಪ್ರಕರಣ ಪತ್ತೆಯಾಗಿದ್ದರೆ, ನಂತರ ಮತ್ತೆ 13 ಜಿಕಾ ವೈರಸ್‌ ಪ್ರಕರಣಗಳು ಸಹ ಪತ್ತೆಯಾಗಿದೆ. ಈ ಎಲ್ಲಾ ಮಾದರಿಗಳನ್ನು ಈಗ ಎನ್ಐವಿ ಪುಣೆಗೆ ಕಳುಹಿಸಲಾಗಿದೆ ಎಂದು ಕೇರಳ ಆರೋಗ್ಯ ಸಚಿವೆ ಮಾಹಿತಿ ನೀಡಿದ್ದಾರೆ. ಅಂದ ಹಾಗೆ, ಭಾರತದಲ್ಲಿ ಜಿಕಾ ವೈರಸ್ ಪ್ರಕರಣಗಳು ವರದಿಯಾಗುತ್ತಿರುವುದು ಇದೇ ಮೊದಲಲ್ಲ. 2018 ರಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಮತ್ತು ಗುಜರಾತ್ ಸೇರಿದಂತೆ ಭಾರತದ ಹಲವಾರು ರಾಜ್ಯಗಳು ಜಿಕಾ ವೈರಸ್ ಪ್ರಕರಣಗಳು ವರದಿಯಾಗಿದ್ದವು. ಸೆಪ್ಟೆಂಬರ್ ನಿಂದ ನವೆಂಬರ್ 2018 ರವರೆಗೆ ಭಾರತದ ಮೂರು ರಾಜ್ಯಗಳಿಂದ ಎರಡು ಸಾವುಗಳು ಸೇರಿದಂತೆ 280 ಕ್ಕೂ ಹೆಚ್ಚು ಜಿಕಾ ವೈರಸ್ ಸೋಂಕು ಪ್ರಕರಣಗಳು ವರದಿಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯವು ಸಂಸತ್ತಿಗೆ ತಿಳಿಸಿದೆ.

ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ಗಮನಿಸಿ:

ಜಿಕಾ ವೈರಸ್ ಎಂದರೇನು?

ಜಿಕಾ ವೈರಸ್ ಕಾಯಿಲೆ ಸೊಳ್ಳೆಗಳ ಮೂಲಕ ಹರಡುತ್ತದೆ. ಈ ಈಡಿಸ್ ಈಜಿಪ್ಟಿ, ಫ್ಲೇವಿ ವೈರಸ್‌ ಸಾಗಿಸುವ ಸೊಳ್ಳೆಗಳು ಮನುಷ್ಯರನ್ನು ಕಚ್ಚಿದಾಗ, ವೈರಸ್ ಮನುಷ್ಯರಿಗೆ ಹರಡುತ್ತದೆ. ಈ ಈಡಿಸ್ ಸೊಳ್ಳೆಗಳು ಹಗಲಿನ ವೇಳೆಯಲ್ಲಿ ಕಚ್ಚುತ್ತವೆ ಹಾಗೂ ಹೆಚ್ಚಾಗಿ ಉಷ್ಣವಲಯದ ಮತ್ತು ಉಪೋಷ್ಣವಲಯದ ಪ್ರದೇಶಗಳಲ್ಲಿ ಕಂಡುಬರುತ್ತದೆ. ಡೆಂಗ್ಯೂ, ಚಿಕೂನ್‌ ಗುನ್ಯಾ ಮತ್ತು ಹಳದಿ ಜ್ವರವನ್ನು ಹರಡುವ ಸೊಳ್ಳೆಯೂ ಸಹ ಈಡಿಸ್‌ ಈಜಿಪ್ಟಿ ಮೂಲಕ ಆಗಿದೆ.

 1. ಜಿಕಾ ವೈರಸ್ ಕೇವಲ ಸೊಳ್ಳೆ ಕಡಿತದಿಂದ ಮಾತ್ರವಲ್ಲ, ರಕ್ತದ ವರ್ಗಾವಣೆ, ಅಸುರಕ್ಷಿತ ಲೈಂಗಿಕತೆ ಮುಂತಾದ ದೇಹದ ದ್ರವಗಳ ವಿನಿಮಯದ ಮೂಲಕವೂ ಸೋಂಕಿತ ಪಾಲುದಾರರ ನಡುವೆ ಹರಡುತ್ತದೆ. ಹಾಗೂ, ಕೇವಲ ಸೊಳ್ಳೆ ಕಡಿತದಿಂದ ಮಾತ್ರವಲ್ಲ, ರಕ್ತದ ವರ್ಗಾವಣೆ, ಅಸುರಕ್ಷಿತ ಲೈಂಗಿಕತೆ ಮುಂತಾದ ದೇಹದ ದ್ರವಗಳ ವಿನಿಮಯದ ಮೂಲಕವೂ ಸೋಂಕಿತ ಪಾಲುದಾರರ ನಡುವೆ ಹರಡುತ್ತದೆ ಮತ್ತು ಇನ್ನೊಬ್ಬರು ಸೋಂಕಿಗೆ ಒಳಗಾಗುವುದಿಲ್ಲ. ಗರ್ಭಿಣಿಗೆ ಝೀಕಾ ವೈರಸ್ ಸೋಂಕಿಗೆ ಒಳಗಾಗಿದ್ದರೆ ಹುಟ್ಟಲಿರುವ ಮಗುವಿಗೆ ಸೋಂಕು ರವಾನಿಸಬಹುದು.
 2. ಈ ವೈರಸ್ ಸೋಂಕಿತ ಸೊಳ್ಳೆಯಿಂದ ಕಚ್ಚಿದ ಯಾರಿಗಾದರೂ ಸೋಂಕನ್ನು ಉಂಟುಮಾಡಬಹುದಾದರೂ, ಇದು ಗರ್ಭಿಣಿಯರು, ಸಹ ಅಸ್ವಸ್ಥತೆ ಹೊಂದಿರುವ ಜನರು ಮತ್ತು ರಾಜಿ ಮಾಡಿಕೊಂಡ ರೋಗನಿರೋಧಕ ಶಕ್ತಿ ಹೊಂದಿರುವವರು ಹೆಚ್ಚು ಜಾಗರೂಕರಾಗಿರಬೇಕು. ದುರ್ಬಲರಿಗೆ ಮಾರಣಾಂತಿಕ ತೊಂದರೆಗಳನ್ನು ಉಂಟುಮಾಡುವ ಸಾಧ್ಯತೆಯಿದೆ.

ಗರ್ಭಿಣಿ ಮತ್ತು ಹುಟ್ಟಲಿರುವ ಮಗು ಈ ಬೆದರಿಕೆಗಳನ್ನು ಎದುರಿಸುತ್ತಿದ್ದಾರೆ:

 1. ಅವಧಿಪೂರ್ವ ಜನನ ಅಥವಾ ಗರ್ಭಪಾತ
 2. ಇತರ ತೀವ್ರ ಭ್ರೂಣದ ಮೆದುಳಿನ ದೋಷಗಳು
 3. ಜನ್ಮಜಾತ ಜಿಕಾ ಸಿಂಡ್ರೋಮ್
 4. ಝೀಕಾ ವೈರಸ್ ಸೋಂಕು ವಿಶೇಷವಾಗಿ ವಯಸ್ಕರು ಮತ್ತು ಹಿರಿಯ ಮಕ್ಕಳಲ್ಲಿ ಗುಯಿಲಿನ್-ಬಾರ್ ಸಿಂಡ್ರೋಮ್, ನರರೋಗ ಮತ್ತು ಮೈಲೈಟಿಸ್ ಅನ್ನು ಪ್ರಚೋದಿಸುತ್ತದೆ.

ಜಿಕಾ ವೈರಸ್ ಕಾಯಿಲೆಯ ಚಿಹ್ನೆಗಳು ಮತ್ತು ಲಕ್ಷಣಗಳು:

 1. ಸೌಮ್ಯ ಜ್ವರ
 2. ರ‍್ಯಾಶ್‌
 3. ಕೆಂಪು ಕಣ್ಣು ಅಥವಾ ಕಾಂಜಂಕ್ಟಿವಿಟಿಸ್
 4. ಸ್ನಾಯು ಮತ್ತು ಕೀಲು ನೋವು
 5. ತಲೆನೋವು
 6. ಆಯಾಸ ಅಥವಾ ಅಸ್ವಸ್ಥತೆಯ ಸಾಮಾನ್ಯ ಭಾವನೆ
 7. ಹೊಟ್ಟೆ ನೋವು.

ಈ ರೋಗಲಕ್ಷಣಗಳು ಸಾಮಾನ್ಯವಾಗಿ 2-7 ದಿನಗಳವರೆಗೆ ಇರುತ್ತವೆ. ಆದರೆ ಒಮ್ಮೊಮ್ಮೆ ಯಾವುದೇ ರೋಗ ಲಕ್ಷಣಗಳು ಕಾಣಿಸಿಕೊಳ್ಳದಿರಬಹುದು.

ಜಿಕಾ ವೈರಸ್‌ಗೆ ಲಸಿಕೆ:

ಜಿಕಾ ವೈರಸ್ ತಡೆಗಟ್ಟಲು ಯಾವುದೇ ಲಸಿಕೆಗಳು ಇನ್ನೂ ಲಭ್ಯವಿಲ್ಲ. ಜಿಕಾ ಲಸಿಕೆ ಪೂರ್ವಭಾವಿ ಅಧ್ಯಯನದಲ್ಲಿದೆ ಎಂದು ಕನೆಕ್ಟಿಕಟ್ ವಿಶ್ವವಿದ್ಯಾಲಯವು ಏಪ್ರಿಲ್ 1, 2021 ರಂದು ಪ್ರಕಟಿಸಿದೆ. ವ್ಯಾಕ್ಸಿನೇಷನ್ ನಂತರ ವೈರಸ್‌ಗೆ ಒಡ್ಡಿಕೊಂಡ ಸವಾಲಿನ ಇಲಿಗಳ ರಕ್ತದಲ್ಲಿ ಜಿಕಾ ವೈರಸ್ ಬಗ್ಗೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ. ಆದರೆ ಯುಎಸ್-ಸಿಡಿಸಿ ಮತ್ತು ಡಬ್ಲ್ಯುಎಚ್‌ಒ ಅನುಮೋದಿಸಿದ ಮತ್ತು ಜಾಗತಿಕವಾಗಿ ವಾಣಿಜ್ಯಿಕವಾಗಿ ಲಸಿಕೆ ಸದ್ಯಕ್ಕೆ ಲಭ್ಯವಾಗಲ್ಲ.

ಚಿಕಿತ್ಸೆ:

ಯುಎಸ್‌ನ ಮೇಯೋ ಕ್ಲಿನಿಕ್ ಪ್ರಕಾರ, ಜಿಕಾ ವೈರಸ್ ಸೋಂಕಿಗೆ ನಿರ್ದಿಷ್ಟ ಚಿಕಿತ್ಸೆ ಇಲ್ಲ. ರೋಗಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡಲು, ನಿರ್ಜಲೀಕರಣವನ್ನು ತಡೆಗಟ್ಟಲು ಸಾಕಷ್ಟು ವಿಶ್ರಾಂತಿ ಪಡೆಯಿರಿ ಮತ್ತು ಸಾಕಷ್ಟು ದ್ರವಾಹಾರ ಸೇವಿಸಿ. ಅಸೆಟಾಮಿನೋಫೆನ್ ಔಷಧಿ ಕೇವಲ ಕೀಲು ನೋವು ಮತ್ತು ಜ್ವರವನ್ನು ನಿವಾರಿಸಲು ಸಹಾಯ ಮಾಡುತ್ತದೆ. ಆದರೆ ಸ್ವಯಂ ರೋಗನಿರ್ಣಯ ಮಾಡಬೇಡಿ ಹಾಗೂ ಸ್ವಯಂ ಔಷಧ ಬೇಡ. ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಮಾತ್ರ ನಿಗದಿತ ಚಿಕಿತ್ಸೆ ತೆಗೆದುಕೊಳ್ಳಿ.

ರೋಗನಿರ್ಣಯದ ವಿಧಾನ:

ನಿಮ್ಮ ವೈದ್ಯರು ನಿಮಗೆ ಜಿಕಾ ವೈರಸ್ ಸೋಂಕು ಹೊಂದಿರಬಹುದೆಂದು ಅನುಮಾನಿಸಿದರೆ, ರೋಗನಿರ್ಣಯವನ್ನು ದೃಢೀಕರಿಸಲು ಅವರು ರಕ್ತ ಅಥವಾ ಮೂತ್ರ ಪರೀಕ್ಷೆಯನ್ನು ಶಿಫಾರಸು ಮಾಡಬಹುದು. ರಕ್ತ ಅಥವಾ ಮೂತ್ರದ ಮಾದರಿಗಳನ್ನು ಇತರ, ಇದೇ ರೀತಿಯ ಸೊಳ್ಳೆಯಿಂದ ಹರಡುವ ರೋಗಗಳನ್ನು ಪರೀಕ್ಷಿಸಲು ಸಹ ಬಳಸಬಹುದು.

ಸೋಂಕು ತಡೆಯುವುದು ಹೇಗೆ?

ಜಿಕಾ ವೈರಸ್ ಅನ್ನು ಹೊತ್ತಿರುವ ಈಡಿಸ್ ಈಜಿಪ್ಟಿ ಸೊಳ್ಳೆ ಮುಂಜಾನೆಯಿಂದ ಸಂಜೆಯವರೆಗೆ ಕಚ್ಚುತ್ತದೆ. ಗರ್ಭಿಣಿಯರು, ಸಂತಾನೋತ್ಪತ್ತಿ ವಯಸ್ಸಿನ ಯುವತಿಯರು ಮತ್ತು ಚಿಕ್ಕ ಮಕ್ಕಳಲ್ಲಿ ಸೊಳ್ಳೆ ಕಡಿತವನ್ನು ತಡೆಗಟ್ಟುವಲ್ಲಿ ವಿಶೇಷ ಗಮನ ಹರಿಸುವಾಗ ಹಗಲಿನಲ್ಲಿ ಸೊಳ್ಳೆ ಕಡಿತದಿಂದ ದೇಹವನ್ನು ರಕ್ಷಿಸುವ ಮೂಲಕ ಇದನ್ನು ತಡೆಗಟ್ಟಬಹುದು. ಲೈಂಗಿಕ ಪ್ರಸರಣದ ಮೂಲಕ ವೈರಸ್ ಹರಡುವುದನ್ನು ತಡೆಗಟ್ಟಲು ತಡೆಗೋಡೆ ಗರ್ಭನಿರೋಧಕಗಳನ್ನು ಬಳಸುವುದನ್ನು ಅಳವಡಿಸಿಕೊಳ್ಳಬಹುದು.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

UNESCO ಸೃಜನಶೀಲ ನಗರಗಳ ಜಾಲ (UCCN):


(UNESCO creative cities network – UCCN)

ಸಂದರ್ಭ:

ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (UNESCO) ಶ್ರೀನಗರವನ್ನು 49 ನಗರಗಳಲ್ಲಿ ಸೃಜನಶೀಲ ನಗರಗಳ ಜಾಲದ ಭಾಗವಾಗಿ ಕರಕುಶಲ ಮತ್ತು ಜಾನಪದ ಕಲೆಗಳ ವರ್ಗ(Crafts and Folk Arts category) ಅಡಿಯಲ್ಲಿ ಆಯ್ಕೆ ಮಾಡಿದೆ.

 1. ಶ್ರೀನಗರವನ್ನು ‘ಕಲೆ ಮತ್ತು ಕರಕುಶಲತೆಯ ಸೃಜನಶೀಲ ನಗರಗಳ ಜಾಲ’ದಲ್ಲಿ ಸೇರಿಸುವುದರಿಂದ ನಗರವು ಯುನೆಸ್ಕೋ ಮೂಲಕ ಜಾಗತಿಕವಾಗಿ ತನ್ನ ಕರಕುಶಲತೆಯನ್ನು ಪ್ರತಿನಿಧಿಸಲು ದಾರಿ ಮಾಡಿಕೊಡುತ್ತದೆ.

UNESCO ಸೃಜನಶೀಲ ನಗರಗಳ ಜಾಲದ ಕುರಿತು:

UNESCO ಕ್ರಿಯೇಟಿವ್ ಸಿಟಿ ನೆಟ್‌ವರ್ಕ್ (UNESCO creative cities network) 2004 ರಲ್ಲಿ ರೂಪುಗೊಂಡಿತು ಮತ್ತು ನಗರಗಳ ನಡುವೆ ಸಹಕಾರವನ್ನು ಉತ್ತೇಜಿಸಲು ‘ಸೃಜನಶೀಲತೆ’ಯನ್ನು ಸಮರ್ಥನೀಯ ನಗರ ಅಭಿವೃದ್ಧಿಗೆ ಕಾರ್ಯತಂತ್ರದ ಭಾಗವಾಗಿ ಗುರುತಿಸಲಾಗಿದೆ.

ಉದ್ದೇಶ: ಸ್ಥಳೀಯ ಮಟ್ಟದಲ್ಲಿ ತಮ್ಮ ಅಭಿವೃದ್ಧಿ ಯೋಜನೆಗಳ ಕೇಂದ್ರದಲ್ಲಿ ಸೃಜನಶೀಲತೆ ಮತ್ತು ಸಾಂಸ್ಕೃತಿಕ ಕೈಗಾರಿಕೆಗಳನ್ನು ಇರಿಸಲು ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಕ್ರಿಯವಾಗಿ ಸಹಕರಿಸಲು.

ನೆಟ್‌ವರ್ಕ್ ಏಳು ಸೃಜನಶೀಲ ಕ್ಷೇತ್ರಗಳನ್ನು ಒಳಗೊಂಡಿದೆ: ಕರಕುಶಲ ಮತ್ತು ಜಾನಪದ ಕಲೆಗಳು, ಮಾಧ್ಯಮ ಕಲೆಗಳು, ಚಲನಚಿತ್ರ, ವಿನ್ಯಾಸ, ಗ್ಯಾಸ್ಟ್ರೊನೊಮಿ, ಸಾಹಿತ್ಯ ಮತ್ತು ಸಂಗೀತ.

ನೆಟ್‌ವರ್ಕ್‌ಗೆ ಸೇರಿದ ನಂತರ, ನಗರಗಳು ತಮ್ಮ ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ಮತ್ತು ಸಾರ್ವಜನಿಕ ಮತ್ತು ಖಾಸಗಿ ವಲಯಗಳು ಮತ್ತು ‘ನಾಗರಿಕ ಸಮಾಜ’ವನ್ನು ಒಳಗೊಂಡಿರುವ ಈ ಕೆಳಗಿನ ಉದ್ದೇಶಗಳನ್ನು ಪೂರೈಸಲು ಪಾಲುದಾರಿಕೆಯನ್ನು ಅಭಿವೃದ್ಧಿಪಡಿಸಲು ಬದ್ಧವಾಗಿರುತ್ತವೆ.

 1. ಸಾಂಸ್ಕೃತಿಕ ಚಟುವಟಿಕೆಗಳು, ಸರಕು ಮತ್ತು ಸೇವೆಗಳ ರಚನೆ, ಉತ್ಪಾದನೆ, ವಿತರಣೆ ಮತ್ತು ಪ್ರಸರಣವನ್ನು ಬಲಪಡಿಸುವುದು;
 2. ಸೃಜನಶೀಲತೆ ಮತ್ತು ನಾವೀನ್ಯತೆಯ ಕೇಂದ್ರಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಸಾಂಸ್ಕೃತಿಕ ವಲಯದಲ್ಲಿ ಸೃಷ್ಟಿಕರ್ತರು ಮತ್ತು ವೃತ್ತಿಪರರಿಗೆ ಅವಕಾಶಗಳನ್ನು ವಿಸ್ತರಿಸುವುದು;
 3. ವಿಶೇಷವಾಗಿ ಅಂಚಿನಲ್ಲಿರುವ ಅಥವಾ ದುರ್ಬಲ ಗುಂಪುಗಳು ಮತ್ತು ವ್ಯಕ್ತಿಗಳಿಗೆ ಸಾಂಸ್ಕೃತಿಕ ಜೀವನದಲ್ಲಿ ಪ್ರವೇಶ ಮತ್ತು ಭಾಗವಹಿಸುವಿಕೆಯನ್ನು ಸುಧಾರಿಸಿ;
 4. ಸುಸ್ಥಿರ ಅಭಿವೃದ್ಧಿ ಯೋಜನೆಗಳಲ್ಲಿ ಸಂಸ್ಕೃತಿ ಮತ್ತು ಸೃಜನಶೀಲತೆಯ ಸಂಪೂರ್ಣ ಸಂಯೋಜನೆ.

ನವೆಂಬರ್ 2019 ರ ಹೊತ್ತಿಗೆ, ಯುನೆಸ್ಕೋ ಕ್ರಿಯೇಟಿವ್ ಸಿಟೀಸ್ ನೆಟ್‌ವರ್ಕ್ (UCCN) ನಲ್ಲಿ ಒಳಗೊಂಡಿರುವ ಐದು ಭಾರತೀಯ ನಗರಗಳು:

 1. ಜೈಪುರ-ಕರಕುಶಲ ಮತ್ತು ಜಾನಪದ ಕಲೆ (2015)
 2. ವಾರಣಾಸಿ-ಸೃಜನಶೀಲ ಸಂಗೀತದ ನಗರ (2015)
 3. ಚೆನ್ನೈ-ಕ್ರಿಯೇಟಿವ್ ಸಿಟಿ ಆಫ್ ಮ್ಯೂಸಿಕ್ (2017)
 4. ಮುಂಬೈ – ಚಲನಚಿತ್ರ (2019)
 5. ಹೈದರಾಬಾದ್ – ಗ್ಯಾಸ್ಟ್ರೋನಮಿ (2019)

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಗೋವಾ ಮೆರಿಟೈಮ್ ಕಾನ್ಕ್ಲೇವ್:

 1. ಗೋವಾ ಮ್ಯಾರಿಟೈಮ್ ಕಾನ್‌ಕ್ಲೇವ್‌ನ ಮೂರನೇ ಆವೃತ್ತಿ 2021 (Goa Maritime Conclave – GMC) ಯನ್ನು ಭಾರತೀಯ ನೌಕಾಪಡೆಯು ಗೋವಾದ ನೇವಲ್ ವಾರ್ ಕಾಲೇಜಿನ ಆಶ್ರಯದಲ್ಲಿ ಆಯೋಜಿಸಿದೆ.
 2. GMC ಯ ಈ ವರ್ಷದ ಆವೃತ್ತಿಯ ಥೀಮ್: “ಮೆರಿಟೈಮ್ ಸೆಕ್ಯುರಿಟಿ ಮತ್ತು ಎಮರ್ಜಿಂಗ್ ನಾನ್-ಟ್ರೆಡಿಷನಲ್ ಥ್ರೆಟ್ಸ್: ಎ ಕೇಸ್ ಫಾರ್ ಆಕ್ಟಿವ್ ರೋಲ್ ಫಾರ್ ಐಒಆರ್ ನೆವಿಜ್”, ಎಂದಾಗಿದೆ. ಕಡಲ ಡೊಮೇನ್‌ನಲ್ಲಿ ‘ದೈನಂದಿನ ಶಾಂತಿ’ ಅಗತ್ಯವನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ.
 3. GMC 2021 ರಲ್ಲಿ, ಹಿಂದೂ ಮಹಾಸಾಗರದ ಪ್ರದೇಶದ 12 ದೇಶಗಳ ನೌಕಾ ಸಿಬ್ಬಂದಿ / ಸಾಗರ ಪಡೆಗಳ ಮುಖ್ಯಸ್ಥರು ಸಮ್ಮೇಳನದಲ್ಲಿ ಭಾಗವಹಿಸಿದರು.
 4. ‘ಗೋವಾ ಮ್ಯಾರಿಟೈಮ್ ಕಾನ್ಕ್ಲೇವ್’ ಬಹುರಾಷ್ಟ್ರೀಯ ವೇದಿಕೆಯಾಗಿದ್ದು, ಅಂತಾರಾಷ್ಟ್ರೀಯ ಕಡಲ ಭದ್ರತಾ ಪೂರೈಕೆದಾರರು ಒಟ್ಟಾಗಿ ಜ್ಞಾನ ಮತ್ತು ಅನುಭವವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ವಿಷಯ ತಜ್ಞರು ಮತ್ತು ಪ್ರಖ್ಯಾತ ಭಾಷಣಕಾರರೊಂದಿಗೆ ಸಂವಾದದಿಂದ ಕಾನ್ಕ್ಲೇವ್ ನಲ್ಲಿ ಭಾಗವಹಿಸುವವರು ಪ್ರಯೋಜನ ಪಡೆಯುತ್ತಾರೆ.

 


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos