Print Friendly, PDF & Email

[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 6ನೇ ನವೆಂಬರ 2021

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಖಾಸಿ,ಆಸ್ತಿ ಉತ್ತರಾಧಿಕಾರ ವಿಧೇಯಕ, 2021.

2. ಚೀನಾ ತೈವಾನ್ ಸಂಬಂಧಗಳು.

3. ಹಮಾಸ್ ಮತ್ತು ಗಾಜಾ ಪಟ್ಟಿ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಖಾದ್ಯ ತೈಲ ಬೆಲೆಗಳು.

2. ತಾಂತ್ರಿಕ ಜವಳಿ ಎಂದರೇನು?

3. ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್.

4. ಇರಾನ್ ಮತ್ತು ಪುಷ್ಟೀಕರಿಸಿದ ಯುರೇನಿಯಂ.

5. ಸ್ಟಬಲ್ ಬರ್ನಿಂಗ್ ಮತ್ತು ಆರೋಗ್ಯದ ಮೇಲೆ ಅದರ ಪ್ರಭಾವ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

1. ವನ್ನಿಯಾರ್ ಗಳು ಎಂದರೆ ಯಾರು?

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಖಾಸಿ,ಆಸ್ತಿ ಉತ್ತರಾಧಿಕಾರ ವಿಧೇಯಕ/ಮಸೂದೆ, 2021.


(Khasi Inheritance of Property Bill, 2021)

ಸಂದರ್ಭ:

ಕಳೆದ ವಾರ, ಮೇಘಾಲಯರಾಜ್ಯದ ಜಿಲ್ಲಾ ಸ್ವಾಯತ್ತ ಮಂಡಳಿಯು ‘ಖಾಸಿ ಆಸ್ತಿ ಉತ್ತರಾಧಿಕಾರ ಮಸೂದೆ, 2021’ ಅಥವಾ ‘ಖಾಸಿ ಪಿತ್ರಾರ್ಜಿತ ಆಸ್ತಿ ಮಸೂದೆ’, 2021 (Khasi Inheritance of Property Bill, 2021) ಅನ್ನು ಪರಿಚಯಿಸುವುದಾಗಿ ಘೋಷಿಸಿತು.

 1. ಇದರ ಗುರಿ ಖಾಸಿ ಸಮುದಾಯದಲ್ಲಿನ ಜನರ ಒಡಹುಟ್ಟಿದವರ ನಡುವೆ ಪೂರ್ವಜರ ಆಸ್ತಿಯನ್ನು “ಸಮಾನವಾಗಿ ಹಂಚಿಕೆ” (“equitable distribution” of parental property) ಮಾಡುವುದಾಗಿದೆ.

ಪರಿಣಾಮಗಳು:

ಪ್ರಸ್ತಾವಿತ ಮಸೂದೆಯು ಅನುಷ್ಠಾನಗೊಂಡರೆ, ಖಾಸಿ ಬುಡಕಟ್ಟಿನ ಉತ್ತರಾಧಿಕಾರದ ಹಕ್ಕಿನ ತುಂಬ-ಹಳೆಯ ಸಾಂಪ್ರದಾಯಿಕ ವಿಧಾನವಾದ ಮಾತೃವಂಶ (matrilineal) ಪ್ರಧಾನತೆಯ ಸಂಪ್ರದಾಯದನ್ನು ಮಾರ್ಪಡಿಸುತ್ತದೆ. ಅಥವಾ

ಈ ಪ್ರಸ್ತಾವಿತ ಮಸೂದೆ ಜಾರಿಗೆ ಬಂದರೆ, ಖಾಸಿ ಬುಡಕಟ್ಟಿನ ಮಾತೃವಂಶದ ಉತ್ತರಾಧಿಕಾರದ ಶತಮಾನಗಳ ಹಿಂದಿನ ಪದ್ಧತಿಗೆ ತಿದ್ದುಪಡಿ ತರಲಿದೆ.

ಈ ಮಸೂದೆಯ ಗುರಿ ಮತ್ತು ಉದ್ದೇಶಗಳು:

 1. ಒಡಹುಟ್ಟಿದವರ ನಡುವೆ ಪೋಷಕರ ಆಸ್ತಿಯ ಸಮಾನ ಹಂಚಿಕೆ (ಗಂಡು ಮತ್ತು ಹೆಣ್ಣು ಇಬ್ಬರಿಗೂ).
 2. ತಮ್ಮ ಆಸ್ತಿಯನ್ನು ಯಾರಿಗೆ ಆನುವಂಶಿಕವಾಗಿ ನೀಡಬೇಕೆಂದು ನಿರ್ಧರಿಸುವ ಹಕ್ಕು ಪೋಷಕರಿಗೆ ಇರುತ್ತದೆ.
 3. ಒಡಹುಟ್ಟಿದ ಸಹೋದರ ಮತ್ತು ಸಹೋದರಿ ಯಾರೇ ಆಗಲಿ ಖಾಸಿಯೇತರ ವ್ಯಕ್ತಿಯನ್ನು ಮದುವೆಯಾಗುವುದು ಮತ್ತು ಸಂಗಾತಿಯ ಸಂಪ್ರದಾಯಗಳು ಮತ್ತು ಸಂಸ್ಕೃತಿಯನ್ನು ಒಪ್ಪಿಕೊಂಡು ಮುಂದುವರೆದರೆ ಅಂತಹವರು ಪೂರ್ವಜರ ಆಸ್ತಿಯನ್ನು ಹಂಚಿಕೊಳ್ಳದಂತೆ ನಿಷೇಧಿಸುವುದು.

ಈ ಮಸೂದೆಯ ಅಗತ್ಯತೆ:

ಅನೇಕ ಬಾರಿ ವಯಸ್ಕ ಪುರುಷರು ಮೇಲಾಧಾರವಾಗಿ ತೋರಿಸಲು ಯಾವುದೇ ಸ್ವತ್ತುಗಳನ್ನು ಹೊಂದಿಲ್ಲದ ಕಾರಣ ಸಾಲಗಳನ್ನು ತೆಗೆದುಕೊಳ್ಳುವಲ್ಲಿ ತೊಂದರೆಯನ್ನು ಎದುರಿಸುತ್ತಾರೆ.ದಂಪತಿಗಳಿಗೆ ಮಕ್ಕಳಿಲ್ಲದಿದ್ದಾಗ ಮತ್ತು ನಿಜವಾದ ವಾರಸುದಾರರು ಇಲ್ಲದಿದ್ದಾಗ, ಅವರ ಆಸ್ತಿಯ ಮೇಲೆ ಸಂಪ್ರದಾಯದಂತೆ ಅವರ ‘ಕುಲ’ವು ಅಧಿಕಾರ ಸ್ಥಾಪಿಸುತ್ತದೆ.ಇದೆಲ್ಲವೂ ಮಕ್ಕಳಿಂದ ಅವರ ಪೋಷಕರ ವಿರುದ್ಧ ಮೊಕದ್ದಮೆಗಳ ಹೂಡಿಕೆಗೆ ಕಾರಣವಾಗಿದೆ.

 

ಮೇಘಾಲಯದಲ್ಲಿ ಮಾತೃಪ್ರಧಾನ ವ್ಯವಸ್ಥೆ ಮತ್ತು ಮಹಿಳೆಯರ ಸಬಲೀಕರಣದಲ್ಲಿನ ವಿರೋಧಾಭಾಸ:

 1. ಆಸ್ತಿಯ ಮಾಲೀಕತ್ವವು ಕೇವಲ ಒಬ್ಬ ವ್ಯಕ್ತಿಗೆ, ಅಂದರೆ ಕುಟುಂಬದ ಕಿರಿಯ ಮಗಳಿಗೆ ಮಾತ್ರ ಎಂದು ಕಸ್ಟೋಡಿಯನ್ಶಿಪ್/ಸಂರಕ್ಷಕತ್ವ (Custodianship) ಅನ್ನು ಹೆಚ್ಚಾಗಿ ತಪ್ಪಾಗಿ ಅರ್ಥೈಸಲಾಗುತ್ತದೆ. ಆದರೆ, ಸಂರಕ್ಷಕತ್ವದ ಹಕ್ಕಿನೊಂದಿಗೆ, ವಯಸ್ಸಾದ ಪೋಷಕರು, ಅವಿವಾಹಿತ ಅಥವಾ ನಿರ್ಗತಿಕ ಒಡಹುಟ್ಟಿದವರು ಮತ್ತು ಕುಲದ ಇತರ ಸದಸ್ಯರನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಬರುತ್ತದೆ.
 2. ಇದಲ್ಲದೆ, ತನ್ನ ತಾಯಿಯ ತಮ್ಮ ಅಂದರೆ ಸೋದರ ಮಾವನ ಅನುಮತಿಯಿಲ್ಲದೆ ಭೂಮಿಯನ್ನು ಖರೀದಿಸುವ ಅಥವಾ ಮಾರಾಟ ಮಾಡುವ ಹಕ್ಕನ್ನು ಕಸ್ಟೋಡಿಯನ್ ಹೊಂದಿರುವುದಿಲ್ಲ.
 3. ಅಲ್ಲದೆ, ಪಾಲಕರ ವಶದಲ್ಲಿರುವ ಹೆಚ್ಚಿನ ಆಸ್ತಿಯು ಕುಲದ ಆಸ್ತಿ ಅಥವಾ ಸಮುದಾಯದ ಆಸ್ತಿಯಾಗಿದೆ.

 

ಮೇಘಾಲಯದಲ್ಲಿ ಮಾತೃಪ್ರಧಾನ ವ್ಯವಸ್ಥೆ:

ಮೇಘಾಲಯದ ಮೂರು ಬುಡಕಟ್ಟುಗಳು – ಖಾಸಿ, ಜೈನ್ತಿಯಾ ಮತ್ತು ಗಾರೋ – ಪರಂಪರೆಗೆ ಸಂಬಂಧಿಸಿದಂತೆ ‘ಮಾತೃವಂಶೀಯ ಪದ್ಧತಿ’ (Matrilineal System of Inheritance)ಯನ್ನು ಅನುಸರಣೆ ಮಾಡುತ್ತವೆ.ಈ ಪದ್ಧತಿಯಲ್ಲಿ ತಾಯಿಯ ವಂಶದ ಮೂಲಕ ಕುಲ ಮತ್ತು ವಂಶದ ಮಾಹಿತಿಯನ್ನು ಕಂಡುಹಿಡಿಯಲಾಗುತ್ತದೆ.

 1. ಈ ಸಂಪ್ರದಾಯದಲ್ಲಿ, ಮಕ್ಕಳು ತಾಯಿಯ ಉಪನಾಮವನ್ನು ಪಡೆಯುತ್ತಾರೆ, ಮದುವೆಯ ನಂತರ ಪತಿಯು ಪತ್ನಿಯೊಂದಿಗೆ ಆಕೆಯ ತವರುಮನೆಯಲ್ಲಿ ವಾಸಿಸಬೇಕು ಮತ್ತು ಕುಟುಂಬದ ಕಿರಿಯ ಮಗಳು (ಖತ್ದುಹ್-Khatduh) ಪೂರ್ವಜರ ಅಥವಾ ಕುಲದ ಆಸ್ತಿಯ ಸಂಪೂರ್ಣ ಪಾಲನ್ನು ಪಡೆಯುತ್ತಾಳೆ.
 2. ಸಂಪ್ರದಾಯದ ಪ್ರಕಾರ, ಖಟ್ದುಹ್’ ತನ್ನ ತಾಯಿಯ ಸಹೋದರನ ಅನುಮತಿಯಿಲ್ಲದೆ ತನ್ನ ಆಸ್ತಿಯನ್ನು ಮಾರಾಟ ಮಾಡುವಂತಿಲ್ಲ, ಅಂದರೆ ತಾಯಿಯ ಸಹೋದರನು ತಾಂತ್ರಿಕವಾಗಿ ಅವಳ ತಾಯಿಯ ಕುಲಕ್ಕೆ ಸಂಬಂಧಿಸಿದ್ದಾನೆ, ಅದರ ಮೂಲಕ ಅವಳ ಪೂರ್ವಜರನ್ನು /ಮೂಲವನ್ನು ಗುರುತಿಸಲಾಗುತ್ತದೆ.
 3. ಈ ಪಿತ್ರಾರ್ಜಿತ ಸಂಪ್ರದಾಯವು ವರ್ಷಗಳ ಕಾಲ ಕುಟುಂಬದ ಸ್ವಾಧೀನದಲ್ಲಿರುವ ಪೂರ್ವಜರ ಅಥವಾ ಕುಲ/ಸಮುದಾಯದ ಆಸ್ತಿಗೆ ಮಾತ್ರ ಅನ್ವಯಿಸುತ್ತದೆ.
 4. ಸಾಂಪ್ರದಾಯಿಕ ವ್ಯವಸ್ಥೆಯಲ್ಲಿ, ದಂಪತಿಗೆ ಹೆಣ್ಣು ಮಕ್ಕಳಿಲ್ಲದಿದ್ದರೆ, ಅವಳ ಆಸ್ತಿ ಹೆಂಡತಿ’ಯ ಅಕ್ಕ ಮತ್ತು ಅವಳ ಹೆಣ್ಣುಮಕ್ಕಳಿಗೆ ಹೋಗುತ್ತದೆ ಮತ್ತು ಹೆಂಡತಿಗೂ ಸಹೋದರಿಯರಿಲ್ಲದಿದ್ದರೆ, ಸಾಮಾನ್ಯವಾಗಿ ಕುಲವು ಆಸ್ತಿಯನ್ನು ಸ್ವಾಧೀನಪಡಿಸಿಕೊಳ್ಳುತ್ತದೆ.

 

ವಿಷಯಗಳು: ಭಾರತ ಮತ್ತು ಅದರ ನೆರೆಹೊರೆಯ ದೇಶಗಳೊಂದಿಗೆ ಸಂಬಂಧಗಳು.

ಚೀನಾ-ತೈವಾನ್ ಸಂಬಂಧಗಳು:


(China- Taiwan relations)

ಸಂದರ್ಭ:

ತೈವಾನ್‌ಗೆ ಯುರೋಪಿಯನ್ ಪಾರ್ಲಿಮೆಂಟ್‌ನ ಮೊದಲ ಅಧಿಕೃತ ನಿಯೋಗವು ತೈವಾನ್‌ಗೆ ಬೆಂಬಲವಾಗಿ ಬಂದಿದೆ ಮತ್ತು ರಾಜತಾಂತ್ರಿಕವಾಗಿ ಪ್ರತ್ಯೇಕವಾಗಿರುವ ದ್ವೀಪವು ಏಕಾಂಗಿಯಾಗಿಲ್ಲ ಎಂದು ಹೇಳಿದರು. ತೈಪೆಯು ಬೀಜಿಂಗ್‌ನಿಂದ ಹೆಚ್ಚಿನ ಒತ್ತಡವನ್ನು ಎದುರಿಸುತ್ತಿರುವ ಕಾರಣ EU-ತೈವಾನ್ ಸಂಬಂಧಗಳನ್ನು ಬಲಪಡಿಸಲು ದಿಟ್ಟ ಕ್ರಮಗಳನ್ನು ಕೈಗೊಳ್ಳಲು ಯುರೋಪಿಯನ್ ಪಾರ್ಲಿಮೆಂಟ್‌ನ ಮೊದಲ ಅಧಿಕೃತ ನಿಯೋಗವು ಕರೆ ನೀಡಿದೆ.

ಈ ನಡೆಯ ಅಗತ್ಯತೆ:

ಸಣ್ಣ ವ್ಯಾಟಿಕನ್ ನಗರವನ್ನು ಹೊರತುಪಡಿಸಿ ಯುರೋಪಿಯನ್ ಒಕ್ಕೂಟದ ಯಾವುದೇ ಸದಸ್ಯ ರಾಷ್ಟ್ರಗಳೊಂದಿಗೆ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳನ್ನು ಹೊಂದಿಲ್ಲದ ತೈವಾನ್, ಯುರೋಪಿಯನ್ ಒಕ್ಕೂಟದ ಸದಸ್ಯರೊಂದಿಗೆ ಸಂಬಂಧವನ್ನು ಗಾಢಗೊಳಿಸಲು ಉತ್ಸುಕವಾಗಿದೆ.

 1. ಅಲ್ಲದೆ, ಪ್ರಜಾಸತ್ತಾತ್ಮಕ ದ್ವೀಪವಾದ ತೈವಾನ್ ಬಳಿ ತನ್ನ ಯುದ್ಧವಿಮಾನಗಳ ಪುನರಾವರ್ತಿತ ಕಾರ್ಯಾಚರಣೆಗಳನ್ನು ಒಳಗೊಂಡಂತೆ ಮಿಲಿಟರಿ ಒತ್ತಡವನ್ನು ಚೀನಾವು ಹೆಚ್ಚಿಸಿದೆ, ಅಲ್ಲದೆ ಬೀಜಿಂಗ್ ತೈವಾನ್ ಅನ್ನು ತನ್ನದೇ ಎಂದು ಹೇಳಿಕೊಳ್ಳುತ್ತದೆ ಮತ್ತು ಬಲಪ್ರಯೋಗದ ಮೂಲಕವಾದರೂ ಸರಿ ಅದನ್ನು ವಶಕ್ಕೆ ಪಡೆಯುವುದರಿಂದ ಹಿಂಜರಿಯುವುದಿಲ್ಲ ಎಂದು ಹೇಳಿದೆ.

ಚೀನಾ ಮತ್ತು ತೈವಾನ್ ನಡುವಿನ ಇತ್ತೀಚಿನ ಘರ್ಷಣೆಗಳು:

ಏನಿದು ಪ್ರಕರಣ?

 1. ತನ್ನ ದೇಶದ ಸಾರ್ವಭೌಮತ್ವವನ್ನು ರಕ್ಷಿಸಲು ಮತ್ತು ತೈಪೆ ಮತ್ತು ವಾಷಿಂಗ್ಟನ್ ನಡೆಸುತ್ತಿರುವ “ಒಳಸಂಚು” ಗಳಿಗೆ ತಕ್ಕ ಉತ್ತರ ನೀಡಲು ಚೀನಾ ಈ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ವಿವರಿಸಿದೆ.
 2. ಚೀನಾ ತೈವಾನ್ ಮೇಲೆ ರಾಜತಾಂತ್ರಿಕ, ಆರ್ಥಿಕ ಮತ್ತು ಮಿಲಿಟರಿ ಒತ್ತಡವನ್ನು ಹೆಚ್ಚಿಸಿದೆ, ಆದರೆ ದ್ವೀಪರಾಷ್ಟ್ರದ ನಿವಾಸಿಗಳು ಚೀನಾ ಮುಖ್ಯ ಭೂಭಾಗದೊಂದಿಗೆ ರಾಜಕೀಯ ಏಕೀಕರಣಕ್ಕಾಗಿ ಬೀಜಿಂಗ್‌ನ ಬೇಡಿಕೆಯನ್ನು ಬಲವಾಗಿ ತಿರಸ್ಕರಿಸುತ್ತಾರೆ.
 3. ವಿಶ್ವಸಂಸ್ಥೆ ಮತ್ತು ಇತರ ಅಂತರಾಷ್ಟ್ರೀಯ ಸಂಸ್ಥೆಗಳಲ್ಲಿ ಭಾಗವಹಿಸದಂತೆ ಚೀನಾ ತೈವಾನ್ ಅನ್ನು ಬಹಳ ಹಿಂದಿನಿಂದಲೂ ನಿರ್ಬಂಧಿಸಿದೆ ಮತ್ತು 2016 ರಲ್ಲಿ ತೈವಾನ್ ಅಧ್ಯಕ್ಷರಾಗಿ ಸಾಯ್ ಇಂಗ್-ವೆನ್ (Tsai Ing-wen) ಆಯ್ಕೆಯಾದ ನಂತರ ಅಂತಹ ಒತ್ತಡವನ್ನು ಇನ್ನಷ್ಟು ಹೆಚ್ಚಿಸಿದೆ.
 4. ಚೀನಾ ಪ್ರಜಾಪ್ರಭುತ್ವ ತೈವಾನ್ ಅನ್ನು ತನ್ನ ಪ್ರತ್ಯೇಕ ಪ್ರಾಂತ್ಯವೆಂದು ನೋಡಿದರೆ, ತೈವಾನ್ ತನ್ನದೇ ಆದ ಸಂವಿಧಾನ ಮತ್ತು ಮಿಲಿಟರಿಯನ್ನು ಮತ್ತು ಚುನಾಯಿತ ನಾಯಕರನ್ನು ಹೊಂದಿರುವ ಸಾರ್ವಭೌಮ ರಾಷ್ಟ್ರವೆಂದು ಪರಿಗಣಿಸುತ್ತದೆ.

ಚೀನಾ- ತೈವಾನ್ ಸಂಬಂಧಗಳು-

ಹಿನ್ನೆಲೆ:

ಚೀನಾದ ಅಂತರ್ಯುದ್ಧದಲ್ಲಿ ಸೋಲಿಸಲ್ಪಟ್ಟ ರಾಷ್ಟ್ರೀಯವಾದಿಗಳನ್ನು 1949 ರಲ್ಲಿ  ತೈವಾನ್ ದ್ವೀಪಕ್ಕೆ ಒತ್ತಾಯಪೂರ್ವಕವಾಗಿ ಪಲಾಯನ ಮಾಡಿಸಿದಂದಿನಿಂದ ಚೀನಾ ತನ್ನ “ಒಂದು ಚೀನಾ” (One China) ನೀತಿಯ ಮೂಲಕ ತೈವಾನ್‌ ಮೇಲೆ ಹಕ್ಕು ಸಾಧಿಸುತ್ತಿದ್ದು, ಅಗತ್ಯವೆನಿಸಿದರೆ ಅದನ್ನು ಬಲಪ್ರಯೋಗದ ಮೂಲಕ ಬೀಜಿಂಗ್ ನ ಆಳ್ವಿಕೆಯ ಅಡಿಯಲ್ಲಿ ತರುವುದಾಗಿ ಶಪಥ ಮಾಡಿದೆ.

 1. ಚೀನಾ ತೈವಾನ್‌ನ ಉನ್ನತ ವ್ಯಾಪಾರ ಪಾಲುದಾರನಾಗಿದ್ದು, 2018 ರಲ್ಲಿ ವ್ಯಾಪಾರವು $ 226 ಬಿಲಿಯನ್ ಆಗಿದೆ. ತೈವಾನ್ ಚೀನಾದೊಂದಿಗೆ ದೊಡ್ಡ ವ್ಯಾಪಾರ ಕೊರತೆಯನ್ನು ಹೊ೦ದಿದೆ.
 2. ತೈವಾನ್ ಸ್ವಯಂ ಆಡಳಿತ ಹೊಂದಿದೆ (Taiwan is self-governed) ಮತ್ತು ವಾಸ್ತವಿಕವಾಗಿ ಸ್ವತಂತ್ರವಾಗಿದ್ದರೂ, ಅದು ಎಂದಿಗೂ ಔಪಚಾರಿಕವಾಗಿ ಚೀನಾ -ಮುಖ್ಯ ಭೂಭಾಗದಿಂದ ಸ್ವಾತಂತ್ರ್ಯವನ್ನು ಘೋಷಿಸಿಕೊಂಡಿಲ್ಲ.
 3. “ಒಂದು ದೇಶ, ಎರಡು ಆಡಳಿತ ವ್ಯವಸ್ಥೆಗಳು” ಸೂತ್ರದಡಿಯಲ್ಲಿ, (one country, two systems) ತೈವಾನ್‌ಗೆ ತನ್ನದೇ ಆದ ಆಡಳಿತ ವ್ಯವಹಾರಗಳನ್ನು ನಡೆಸುವ ಹಕ್ಕಿದೆ; ಇದೇ ರೀತಿಯ ವ್ಯವಸ್ಥೆಯನ್ನು ಹಾಂಗ್ ಕಾಂಗ್‌ನಲ್ಲಿಯೂ ಬಳಸಲಾಗುತ್ತದೆ.
 4. ತೈವಾನ್ ವಿವಿಧ ಹೆಸರುಗಳಲ್ಲಿ ವಿಶ್ವ ವ್ಯಾಪಾರ ಸಂಘಟನೆ , ಏಷ್ಯಾ-ಪೆಸಿಫಿಕ್ ಆರ್ಥಿಕ ಸಹಕಾರ ಮತ್ತು ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಗಳ ಸದಸ್ಯತ್ವ ವನ್ನು ಹೊಂದಿದೆ.
 5. ಪ್ರಸ್ತುತ, ತೈವಾನ್ ಮೇಲೆ ಚೀನಾ ಹಕ್ಕು ಸಾಧಿಸುತ್ತಿದೆ, ಅಲ್ಲದೆ ಈ ಪ್ರಜಾಪ್ರಭುತ್ವವಾದಿ ತೈವಾನ್ ಅನ್ನು ಗುರುತಿಸುವ ದೇಶಗಳೊಂದಿಗೆ ರಾಜತಾಂತ್ರಿಕ ಸಂಬಂಧವನ್ನು ಚೀನಾ ನಿರಾಕರಿಸುತ್ತದೆ.

ಇಂಡೋ- ತೈವಾನ್ ಸಂಬಂಧಗಳು:

 1. ಎರಡೂ ದೇಶಗಳ ಮಧ್ಯೆ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳಿಲ್ಲದಿದ್ದರೂ, ತೈವಾನ್ ಮತ್ತು ಭಾರತ ವಿವಿಧ ಕ್ಷೇತ್ರಗಳಲ್ಲಿ ಸಹಕರಿಸುತ್ತಿವೆ.
 2. 2010 ರಿಂದ “ಒಂದು-ಚೀನಾ” ನೀತಿಯನ್ನು ಅನುಮೋದಿಸಲು ಭಾರತ ನಿರಾಕರಿಸಿದೆ.

south_china_sea_2

 

 

ವಿಷಯಗಳು:ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಹಮಾಸ್ ಮತ್ತು ಗಾಜಾ ಪಟ್ಟಿ:


(Hamas and Gaza Strip)

ಸಂದರ್ಭ:

ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಬಂಡುಕೋರ ಗುಂಪು ಹಮಾಸ್ ನಡುವೆ ಕದನ ವಿರಾಮ ಒಪ್ಪಂದವನ್ನು ಏರ್ಪಡಿಸಲು ಈಜಿಪ್ಟ್ ಪ್ರಯತ್ನಿಸುತ್ತಿದೆ.

ಒಪ್ಪಂದದಲ್ಲಿ ಒಳಗೊಂಡಿರುವ ವಿಷಯಗಳು:

ದೀರ್ಘಾವಧಿಯ ಕದನ ವಿರಾಮ, ಖೈದಿಗಳ ವಿನಿಮಯ, ಗಾಜಾಕ್ಕೆ ಮಾನವೀಯ ನೆರವು ಮತ್ತು ಗಾಜಾದ ಪುನರ್ನಿರ್ಮಾಣ.

ಹಮಾಸ್ ಬಗ್ಗೆ:

ಹಮಾಸ್ ಪ್ಯಾಲೇಸ್ಟಿನಿಯನ್ ಇಸ್ಲಾಮಿಕ್ ರಾಜಕೀಯ ಸಂಘಟನೆ ಮತ್ತು ಭಯೋತ್ಪಾದಕ ಗುಂಪು. ಈ ಸಂಘಟನೆಯನ್ನು 1987 ರಲ್ಲಿ ಸ್ಥಾಪಿಸಲಾಯಿತು ಮತ್ತು ಅಂದಿನಿಂದ ಇದು ಆತ್ಮಹತ್ಯಾ ಬಾಂಬ್ ದಾಳಿ ಮತ್ತು ರಾಕೆಟ್ ದಾಳಿಗಳ ಮೂಲಕ ಇಸ್ರೇಲ್ ವಿರುದ್ಧ ಯುದ್ಧವನ್ನು ನಡೆಸುತ್ತಿದೆ.

 1. ಇಸ್ರೇಲ್ ನ ಸ್ಥಾನದಲ್ಲಿ ಪ್ಯಾಲೇಸ್ಟಿನಿಯನ್ ರಾಜ್ಯವನ್ನು ಸ್ಥಾಪಿಸಲು ಅದು ಬಯಸುತ್ತದೆ. ಹಮಾಸ್, ಪ್ಯಾಲೇಸ್ಟಿನಿಯನ್ ಆಡಳಿತದಿಂದ ಪ್ರತ್ಯೇಕವಾಗಿ, ಗಾಜಾ ಪಟ್ಟಿಯನ್ನು ಸ್ವತಂತ್ರವಾಗಿ ನಿಯಂತ್ರಿಸುತ್ತದೆ.

ಈ ಒಪ್ಪಂದದ ಅವಶ್ಯಕತೆ:

ಗಾಜಾ ಪಟ್ಟಿ ಪ್ರದೇಶವು 2007 ರಿಂದ ಇಸ್ರೇಲ್‌ನಿಂದ ಕಟ್ಟುನಿಟ್ಟಾದ ದಿಗ್ಬಂಧನದಲ್ಲಿದೆ, ಇದರಲ್ಲಿ ಹೆಚ್ಚಿನ ಮೂಲಭೂತ ಸರಕುಗಳು ಇನ್ನೂ ಹೆಚ್ಚು ನಿರ್ಬಂಧಿತ ಕ್ರಮಗಳ ಅಡಿಯಲ್ಲಿ ಪ್ರದೇಶವನ್ನು ಪ್ರವೇಶಿಸುತ್ತವೆ.

 1. ಮೇ ತಿಂಗಳಲ್ಲಿ, ಇಸ್ರೇಲ್ ನಡೆಸಿದ ದಾಳಿಯಲ್ಲಿ ಸುಮಾರು 260 ಪ್ಯಾಲೆಸ್ಟೀನಿಯನ್ನರು ಸತ್ತರು ಮತ್ತು ಸಾವಿರಾರು ಮಂದಿ ಗಾಯಗೊಂಡರು, ಇದು ಗಾಜಾದಲ್ಲಿ ವಿನಾಶದ ಒಂದು ದೊಡ್ಡ ಗುರುತನ್ನು ಮೂಡಿಸಿತು. ಇಸ್ರೇಲ್ ನಡೆಸಿದ ದಾಳಿಗೆ ಪ್ರತಿಕ್ರಿಯೆಯಾಗಿ, ಪ್ಯಾಲೇಸ್ಟಿನಿಯನ್ ಬಂಡುಕೋರ ಗುಂಪು ಇಸ್ರೇಲಿ ಪ್ರಾಂತ್ಯಗಳ ಮೇಲೆ ರಾಕೆಟ್ ಗಳ ಸುರಿಮಳೆ ಸುರಿಸಿದ ಪರಿಣಾಮವಾಗಿ, ಸುಮಾರು 13 ಇಸ್ರೇಲಿಗಳು ಅಸುನೀಗಿದರು.

ಮೊದಲನೆಯದಾಗಿ, ಗಾಜಾ ಪಟ್ಟಿ ಎಲ್ಲಿದೆ?

ಗಾಜಾಪಟ್ಟಿಯು (Gaza Strip) ಸಂಪೂರ್ಣವಾಗಿ ಕೃತಕವಾಗಿ ನಿರ್ಮಿಸಲಾದ ರಚನೆಯಾಗಿದ್ದು, ಅರಬ್ ಜನಸಂಖ್ಯೆಯನ್ನು ಸ್ಥಳಾಂತರಿಸಲು ವಿನ್ಯಾಸಗೊಳಿಸಲಾಗಿದೆ, 1948 ರಲ್ಲಿ, ಇಸ್ರೇಲ್ ರಚನೆಯ ಸಮಯದಲ್ಲಿ ಇಲ್ಲಿ ನೆಲೆಸಿದ್ದ  ಪ್ಯಾಲೆಸ್ಟೈನ್‌ನ ಮುಕ್ಕಾಲು ಭಾಗದಷ್ಟು ಅರಬ್ ಜನಸಂಖ್ಯೆಯನ್ನು ಈ ಪ್ರದೇಶದಿಂದ ಸ್ಥಳಾಂತರಿಸಲಾಯಿತು ಮತ್ತು ಕೆಲವು ಸಂದರ್ಭಗಳಲ್ಲಿ ಅವರನ್ನು ಒತ್ತಾಯಪೂರ್ವಕವಾಗಿ ಹೊರಹಾಕಲಾಯಿತು.

 1. ಈ ಸಮಯದಲ್ಲಿ, ಹೆಚ್ಚಿನ ನಿರಾಶ್ರಿತರು ನೆರೆಯ ರಾಷ್ಟ್ರಗಳಾದ ಜೋರ್ಡಾನ್, ಸಿರಿಯಾ ಮತ್ತು ಲೆಬನಾನ್‌ನಲ್ಲಿ ಚದುರಿಹೋದರು.
 2. ಕೆಲವು ನಿರಾಶ್ರಿತರ ಜನಸಂಖ್ಯೆಯು ‘ವೆಸ್ಟ್ ಬ್ಯಾಂಕ್’ (ಪಶ್ಚಿಮ ದಂಡೆ) ನಲ್ಲಿ ನೆಲೆಸಿತು, ಇದರ ಮೇಲೆ ಜೋರ್ಡಾನ್ 1948 ರ ನಂತರ ಅಧಿಕಾರವನ್ನು ಸ್ಥಾಪಿಸಿತು.
 3. ಈಜಿಪ್ಟ್ ಮತ್ತು ಇಂದಿನ ಇಸ್ರೇಲ್ ನಡುವಿನ ಕಿರಿದಾದ ಕರಾವಳಿ ಪ್ರದೇಶವಾದ ‘ಗಾಜಾ ಸ್ಟ್ರಿಪ್’ನಲ್ಲಿ ಹೆಚ್ಚಿನ ಸಂಖ್ಯೆಯ ಸ್ಥಳಾಂತರಗೊಂಡ ಜನಸಂಖ್ಯೆಯು ನೆಲೆಸಿದೆ.
 4. ಪ್ರಸ್ತುತ, ಗಾಜಾ ಪ್ರದೇಶದ ಒಟ್ಟು ಜನಸಂಖ್ಯೆಯ ಸುಮಾರು 70% ರಷ್ಟು ನಿರಾಶ್ರಿತರಾಗಿದ್ದಾರೆ.

‘ಗಾಜಾ ಪಟ್ಟಿ’ ಯ ಮೇಲೆ ಯಾರ ನಿಯಂತ್ರಣವಿದೆ? 

2007 ರಲ್ಲಿ, ಹಮಾಸ್ (Hamas) ಗಾಜಾ ಪಟ್ಟಿಯ ಮೇಲೆ ಬಲವಂತವಾಗಿ ಹಿಡಿತ ಸಾಧಿಸಿತು. ಸ್ವಲ್ಪ ಸಮಯದ ನಂತರ, ಇಸ್ರೇಲ್ ಗಾಜಾದ ಗಡಿಗಳನ್ನು ಸಂಪೂರ್ಣವಾಗಿ ಮುಚ್ಚಿ ಗಾಜಾವನ್ನು ಶತ್ರು ಘಟಕವೆಂದು ಘೋಷಿಸಿತು. ಸಹಜವಾಗಿ ಗಾಜಾಪಟ್ಟಿಗೆ ಒಂದು ದೇಶದ ಸ್ಥಾನಮಾನವಿಲ್ಲ.

 1. ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಹೆಚ್ಚಿನ ಅಂತರರಾಷ್ಟ್ರೀಯ ಸಮುದಾಯವು ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆಯಾಗಿ ನೋಡುತ್ತದೆ, ಕಾರಣ ಅದು ನಾಗರಿಕರ ಮೇಲಿನ ದಾಳಿಯ ಸುದೀರ್ಘ ಇತಿಹಾಸವನ್ನು ಹೊಂದಿದೆ.

current affairs

 

ಪ್ರಸ್ತುತ ಸನ್ನಿವೇಶ:

 1. ಇಸ್ರೇಲ್ ಇನ್ನೂ ಪಶ್ಚಿಮ ದಂಡೆಯನ್ನು ಆಕ್ರಮಿಸಿಕೊಂಡಿದೆ, ಮತ್ತು ಅದು ಗಾಜಾದ ಮೇಲಿನ ಅಧಿಕಾರವನ್ನು ತ್ಯಜಿಸಿದ್ದರೂ, ವಿಶ್ವಸಂಸ್ಥೆಯು ಈ ಭೂಮಿಯನ್ನು ಇನ್ನೂ ಆಕ್ರಮಿತ ಪ್ರದೇಶದ ಒಂದು ಭಾಗವೆಂದು ಪರಿಗಣಿಸುತ್ತದೆ.
 2. ಇಸ್ರೇಲ್ ಇಡೀ ಜೆರುಸಲೆಮ್ ಅನ್ನು ತನ್ನ ರಾಜಧಾನಿ ಎಂದು ಹೇಳಿಕೊಂಡರೆ, ಪ್ಯಾಲೆಸ್ತೀನಿಯರು ಪೂರ್ವ ಜೆರುಸಲೆಮ್ ಅನ್ನು ಭವಿಷ್ಯದ ಪ್ಯಾಲೇಸ್ಟಿನಿಯನ್ ರಾಷ್ಟ್ರದ ರಾಜಧಾನಿ ಎಂದು ಹೇಳಿಕೊಳ್ಳುತ್ತಾರೆ.
 3. ಇಡೀ ಜೆರುಸಲೆಮ್ ನಗರದ ಮೇಲೆ ಇಸ್ರೇಲ್ ನ ಹಕ್ಕನ್ನು ಮಾನ್ಯಮಾಡಿದ ಕೆಲವೇ ದೇಶಗಳಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನ ಕೂಡ ಒಂದಾಗಿದೆ.

ಪ್ರಸ್ತುತ ಅಲ್ಲಿ ಏನು ನಡೆಯುತ್ತಿದೆ?

 1. ಪೂರ್ವ ಜೆರುಸಲೆಮ್, ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿ ವಾಸಿಸುವ ಇಸ್ರೇಲಿಗಳು ಮತ್ತು ಪ್ಯಾಲೆಸ್ಟೀನಿಯಾದವರ ನಡುವೆ ಉದ್ವಿಗ್ನತೆ ಹೆಚ್ಚಾಗಿರುತ್ತದೆ.
 2. ಗಾಜಾವನ್ನು ‘ಹಮಾಸ್’ ಎಂಬ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಆಳುತ್ತದೆ, ಇದು ಇಸ್ರೇಲ್ನೊಂದಿಗೆ ಹಲವಾರು ಬಾರಿ ಘರ್ಷಣೆ ನಡೆಸಿದೆ. ಹಮಾಸ್‌ಗೆ ಶಸ್ತ್ರಾಸ್ತ್ರ ಸರಬರಾಜು ಆಗದಂತೆ ತಡೆಯಲು ಇಸ್ರೇಲ್ ಮತ್ತು ಈಜಿಪ್ಟ್ ಗಾಜಾದ ಗಡಿಯ ನಿಯಂತ್ರಣವನ್ನು ಗರಿಷ್ಠಮಟ್ಟದಲ್ಲಿ ಬಿಗಿಗೊಳಿಸಿವೆ.
 3. ಇಸ್ರೇಲ್ ನ ಕ್ರಮಗಳು ಮತ್ತು ನಿರ್ಬಂಧಗಳಿಂದಾಗಿ ತಾವು ಬಳಲುತ್ತಿರುವುದಾಗಿ ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿರುವ ಪ್ಯಾಲೆಸ್ಟೀನಿಯಾದವರು ಹೇಳುತ್ತಾರೆ. ಪ್ಯಾಲೇಸ್ಟಿನಿಯನ್ ಹಿಂಸಾಚಾರದಿಂದ ತನ್ನನ್ನು ರಕ್ಷಿಸಿಕೊಳ್ಳಲು ಮಾತ್ರ ಇಂತಹ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಇಸ್ರೇಲ್ ಹೇಳಿದೆ.
 4. 2021 ರ ಏಪ್ರಿಲ್ ಮಧ್ಯದಲ್ಲಿ ಪವಿತ್ರ ಮುಸ್ಲಿಂ ರಂಜಾನ್ ತಿಂಗಳ ಆರಂಭದಿಂದಲೂ, ಪೊಲೀಸರು ಮತ್ತು ಪ್ಯಾಲೆಸ್ಟೀನಿಯಾದ ನಡುವಿನ ರಾತ್ರಿಯ ಘರ್ಷಣೆಯೊಂದಿಗೆ ಉದ್ವಿಗ್ನತೆ ಹೆಚ್ಚಾಗಿದೆ.
 5. ಪೂರ್ವ ಜೆರುಸಲೆಮ್ ನಲ್ಲಿರುವ ಕೆಲವು ಪ್ಯಾಲೇಸ್ಟಿನಿಯನ್ ಕುಟುಂಬಗಳನ್ನು ಹೊರಹಾಕುವ ಬೆದರಿಕೆಗಳಿಂದ ಉದ್ವಿಗ್ನತೆ ಇನ್ನೂ ಹೆಚ್ಚುತ್ತಿದೆ.

ವೆಸ್ಟ್ ಬ್ಯಾಂಕ್/ ಪಶ್ಚಿಮ ದಂಡೆ ಎಲ್ಲಿದೆ?

ಇದು ಪಶ್ಚಿಮ ಏಷ್ಯಾದ ಮೆಡಿಟರೇನಿಯನ್ ಕರಾವಳಿಯ ಸಮೀಪವಿರುವ ಭೂ ಆವೃತ ಪ್ರದೇಶವಾಗಿದ್ದು, ಪೂರ್ವಕ್ಕೆ ಜೋರ್ಡಾನ್ ಗಡಿಯಿದೆ ಮತ್ತು ಗ್ರೀನ್ ಲೈನ್ ಇದನ್ನು ಪ್ರತ್ಯೇಕಿಸುತ್ತದೆ ಮತ್ತು ದಕ್ಷಿಣ ಮತ್ತು ಪಶ್ಚಿಮ ಮತ್ತು ಉತ್ತರದಲ್ಲಿ ಇಸ್ರೇಲ್ ನಿಂದ ಆವರಿಸಲ್ಪಟ್ಟಿದೆ. ವೆಸ್ಟ್ ಬ್ಯಾಂಕ್ ಸಹ ಮೃತ ಸಮುದ್ರದ ಪಶ್ಚಿಮ ತೀರದ ಗಮನಾರ್ಹ ವಿಭಾಗವನ್ನು ಹೊಂದಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಪ್ರಮುಖ ಬೆಳೆಗಳು – ದೇಶದ ವಿವಿಧ ಭಾಗಗಳಲ್ಲಿನ ಬೆಳೆಗಳ ಮಾದರಿ – ವಿವಿಧ ರೀತಿಯ ನೀರಾವರಿ ಮತ್ತು ನೀರಾವರಿ ವ್ಯವಸ್ಥೆ.

ಖಾದ್ಯ ತೈಲ ಬೆಲೆಗಳು:


(Edible Oil Prices)

ಸಂದರ್ಭ:

ದೀಪಾವಳಿ ಹಬ್ಬ ಸಮೀಪಿಸುವ ವೇಳೆಗೆ, ದೇಶಾದ್ಯಂತ ಪ್ರಮುಖ ಅಡುಗೆ ಎಣ್ಣೆಗಳ ಬೆಲೆಗಳು ಕುಸಿದಿವೆ ಮತ್ತು ಸ್ಥಿರವಾಗಿವೆ.

ಬೆಲೆ ಕುಸಿತಕ್ಕೆ ಕಾರಣಗಳು:

 1. ಜಾಗತಿಕ ಬೆಲೆಗಳ ಸ್ಥಿರೀಕರಣ
 2. ಸುಂಕದಲ್ಲಿ ಕಡಿತ
 3. ಪ್ರಮುಖ ಖಾಸಗಿ ಕಂಪನಿಗಳು ಸಗಟು ಬೆಲೆಗಳನ್ನು ಕಡಿತಗೊಳಿಸಿವೆ
 4. ‘ಅಗತ್ಯ ಸರಕುಗಳ ಕಾಯಿದೆ’ಯ ನಿಬಂಧನೆಗಳನ್ನು ಬಳಸಿಕೊಂಡು ಕೇಂದ್ರವು ‘ಸಂಗ್ರಹಣೆ’ ಮೇಲೆ ಹೇರಿದ ಮಿತಿಗಳು.

ಖಾದ್ಯ ತೈಲದ ಬೆಲೆ ಏರಿಕೆಗೆ ಕಾರಣಗಳು:

ಕಳೆದ ವರ್ಷ, ಕಡಲೆಕಾಯಿ, ಸಾಸಿವೆ, ವನಸ್ಪತಿ, ಸೋಯಾ, ಸೂರ್ಯಕಾಂತಿ ಮತ್ತು ಪಾಮ್/ತಾಳೆ ಎಣ್ಣೆ ಈ ಆರು ಖಾದ್ಯ ತೈಲಗಳ ಚಿಲ್ಲರೆ ಬೆಲೆಗಳು ಶೇಕಡಾ 48 ರಷ್ಟು ಹೆಚ್ಚಾಗಿತ್ತು. ಇದಕ್ಕೆ ಕಾರಣಗಳು ಈ ಕೆಳಗಿನಂತಿದ್ದವು:

 1. ಜಾಗತಿಕ ಬೆಲೆಗಳಲ್ಲಿ ಜಿಗಿತ, ಮತ್ತು ಸೋಯಾಬೀನ್‌ ನ ಕಡಿಮೆ ದೇಶೀಯ ಉತ್ಪಾದನೆ. ಸೋಯಾಬೀನ್ ಭಾರತದ ಅತಿದೊಡ್ಡ ಎಣ್ಣೆಬೀಜದ ಬೆಳೆಯಾಗಿದೆ.
 2. ಚೀನಾದಿಂದ ಖಾದ್ಯ ತೈಲದ ಅತಿಯಾದ ಖರೀದಿ.
 3. ಜೈವಿಕ ಇಂಧನ ನೀತಿಗಳನ್ನು ಅನೇಕ ಪ್ರಮುಖ ತೈಲ ಉತ್ಪಾದಕರು ಆಕ್ರಮಣಕಾರಿಯಾಗಿ ಅನುಸರಿಸುತ್ತಿದ್ದಾರೆ, ಖಾದ್ಯ ತೈಲ ಬೆಳೆಗಳನ್ನು ಬಳಸಿ ‘ಜೈವಿಕ ಇಂಧನ’ ವನ್ನುಉತ್ಪಾದಿಸುತ್ತಿದ್ದಾರೆ.
 4. ಸರ್ಕಾರಿ ತೆರಿಗೆಗಳು ಮತ್ತು ಸುಂಕಗಳು ಭಾರತದಲ್ಲಿ ಖಾದ್ಯ ತೈಲಗಳ ಚಿಲ್ಲರೆ ಬೆಲೆಯ ಪ್ರಮುಖ ಭಾಗವಾಗಿದೆ.

ಖಾದ್ಯ ತೈಲ ಆಮದಿನ ಮೇಲೆ ಭಾರತದ ಅವಲಂಬನೆ:

 1. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಸಸ್ಯಜನ್ಯ ಎಣ್ಣೆಯನ್ನು ಆಮದು ಮಾಡಿಕೊಳ್ಳುವ ದೇಶವಾಗಿದೆ.
 2. ಭಾರತವು ತನ್ನ ಖಾದ್ಯ ತೈಲ ಅಗತ್ಯತೆಗಳ ಸುಮಾರು 60% ಅನ್ನು ಆಮದು ಮಾಡಿಕೊಳ್ಳುತ್ತದೆ, ಇದರಿಂದಾಗಿ ದೇಶದಲ್ಲಿ ಖಾದ್ಯ ತೈಲದ ಚಿಲ್ಲರೆ ಬೆಲೆಗಳು ಅಂತರಾಷ್ಟ್ರೀಯ ಮಾರುಕಟ್ಟೆಯ ಒತ್ತಡಗಳಿಗೆ ಗುರಿಯಾಗುತ್ತವೆ.
 3. ದೇಶವು ಮುಖ್ಯವಾಗಿ ಇಂಡೋನೇಷ್ಯಾ ಮತ್ತು ಮಲೇಷಿಯಾದಿಂದ ತಾಳೆ ಎಣ್ಣೆ, ಬ್ರೆಜಿಲ್ ಮತ್ತು ಅರ್ಜೆಂಟೀನಾದಿಂದ ಸೋಯಾ ಎಣ್ಣೆ ಮತ್ತು ರಷ್ಯಾ ಮತ್ತು ಉಕ್ರೇನ್ ನಿಂದ ಸೂರ್ಯಕಾಂತಿ ಎಣ್ಣೆಯನ್ನು ಆಮದು ಮಾಡಿಕೊಳ್ಳುತ್ತದೆ.

ಖಾದ್ಯ ತೈಲಗಳ ಬಗ್ಗೆ ಸಂಗತಿಗಳು:

 1. ಖಾದ್ಯ ಎಣ್ಣೆಯ ಪ್ರಾಥಮಿಕ ಮೂಲಗಳು ಸೋಯಾಬೀನ್, ಬಿಳಿ ಸಾಸಿವೆ (ರಾಪ್ಸೀಡ್) ಮತ್ತು ಸಾಸಿವೆ, ನೆಲಗಡಲೆ, ಸೂರ್ಯಕಾಂತಿ, ಕುಸುಬೆ ಮತ್ತು ನೈಜರ್.
 2. ಖಾದ್ಯ ತೈಲದ ದ್ವಿತೀಯ ಮೂಲಗಳು ‘ತಾಳೆ ಎಣ್ಣೆ’, ತೆಂಗಿನಕಾಯಿ, ಅಕ್ಕಿ ಹೊಟ್ಟು, ಹತ್ತಿ ಬೀಜಗಳು ಮತ್ತು ಮರದಿಂದ ಉತ್ಪನ್ನವಾಗುವ ಎಣ್ಣೆಬೀಜಗಳು (Tree Borne Oilseeds).

ಭಾರತದಲ್ಲಿ ಎಣ್ಣೆಕಾಳು ಉತ್ಪಾದನೆಯಲ್ಲಿ ಪ್ರಮುಖ ಸವಾಲುಗಳು:

 1. ಎಣ್ಣೆಕಾಳುಗಳನ್ನು ಮುಖ್ಯವಾಗಿ ‘ಮಳೆಯಾಶ್ರಿತ’ ಪ್ರದೇಶಗಳಲ್ಲಿ ಉತ್ಪಾದಿಸಲಾಗುತ್ತದೆ (ಸುಮಾರು 70% ಪ್ರದೇಶ),
 2. ಬೀಜಗಳಿಗೆ ಹೆಚ್ಚಿನ ಬೆಲೆ (ಕಡಲೆಕಾಯಿ ಮತ್ತು ಸೋಯಾಬೀನ್),
 3. ಸೀಮಿತ ಸಂಪನ್ಮೂಲಗಳೊಂದಿಗೆ ಸಣ್ಣ ಹಿಡುವಳಿಗಳು,
 4. ಕಡಿಮೆ ಬೀಜ ಬದಲಿ ದರ ಮತ್ತು ಕಡಿಮೆ ಉತ್ಪಾದಕತೆ.

 

ಇತ್ತೀಚೆಗೆ, ದೇಶೀಯ ಎಣ್ಣೆಕಾಳು ಉತ್ಪಾದನೆಯನ್ನು ಉತ್ತೇಜಿಸಲು ಮತ್ತು ದೇಶವನ್ನು ‘ಅಡುಗೆ ಎಣ್ಣೆಯಲ್ಲಿ’ ಸ್ವಾವಲಂಬಿಯನ್ನಾಗಿ ಮಾಡಲು ಸರ್ಕಾರವು ‘ ರಾಷ್ಟ್ರೀಯ ಖಾದ್ಯ ತೈಲ ಮಿಷನ್ ಆಯಿಲ್ ಪಾಮ್’ (National Mission on Edible Oil-Oil Palm – NMEO-OP) ಅನ್ನು ಪ್ರಾರಂಭಿಸಿದೆ.

 

 

ವಿಷಯಗಳು: ವಿಜ್ಞಾನ ಮತ್ತು ತಂತ್ರಜ್ಞಾನ- ಬೆಳವಣಿಗೆಗಳು ಮತ್ತು ಅವುಗಳ ಅನ್ವಯಗಳು ಮತ್ತು ದೈನಂದಿನ ಜೀವನದಲ್ಲಿ ಅವುಗಳ ಪರಿಣಾಮಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು;ತಂತ್ರಜ್ಞಾನದ ದೇಸೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು.

ತಾಂತ್ರಿಕ ಜವಳಿ ಎಂದರೇನು?


(What are Technical Textiles?)

ಸಂದರ್ಭ:

ಮುಂದಿನ ಮೂರು ವರ್ಷಗಳಲ್ಲಿ ತಾಂತ್ರಿಕ ಜವಳಿ (Technical Textiles) ರಫ್ತನ್ನು ಐದು ಪಟ್ಟು ಹೆಚ್ಚಿಸುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ.

ತಾಂತ್ರಿಕ ಜವಳಿ ಮಾರುಕಟ್ಟೆ ಮತ್ತು ಅದರಲ್ಲಿ ಭಾರತದ ಪಾಲು:

 1. ತಾಂತ್ರಿಕ ಜವಳಿಗಳ ಪ್ರಸ್ತುತ ಜಾಗತಿಕ ಮಾರುಕಟ್ಟೆ $250 ಬಿಲಿಯನ್ (18 ಲಕ್ಷ ಕೋಟಿ) ಆಗಿದೆ ಮತ್ತು ಅದರಲ್ಲಿ ಭಾರತದ ಪಾಲು $19 ಬಿಲಿಯನ್ ಆಗಿದೆ.
 2. ಭಾರತವು (ಶೇ 8 ರಷ್ಟು ಪಾಲು) $40 ಶತಕೋಟಿಯೊಂದಿಗೆ ಈ ಮಾರುಕಟ್ಟೆಯಲ್ಲಿ ಮಹತ್ವಾಕಾಂಕ್ಷೆಯ ಪಾಲುದಾರನಾಗಿದೆ.
 3. ಇದರಲ್ಲಿ ಅತಿ ಹೆಚ್ಚು ಪಾಲು ಹೊಂದಿರುವವರು ಯುಎಸ್, ಪಶ್ಚಿಮ ಯುರೋಪ್, ಚೀನಾ ಮತ್ತು ಜಪಾನ್.

ಈ ನಿಟ್ಟಿನಲ್ಲಿ ಭಾರತ ಸರ್ಕಾರದ ಪ್ರಯತ್ನಗಳು:

 1. ಜನವರಿ 2019 ರಲ್ಲಿ, ಭಾರತದಲ್ಲಿ ಮೊದಲ ಬಾರಿಗೆ ತಾಂತ್ರಿಕ ಜವಳಿ/ ವಸ್ತ್ರಗಳಿಗಾಗಿ 207 HSN ಕೋಡ್‌ (HSN Codes for technical textiles) ಗಳನ್ನು ನೀಡಲಾಯಿತು ಮತ್ತು ಎರಡು ವರ್ಷಗಳಿಗಿಂತಲೂ ಕಡಿಮೆ ಅವಧಿಯಲ್ಲಿ ಭಾರತವು ತಾಂತ್ರಿಕ ಜವಳಿಗಳ ನಿವ್ವಳ ರಫ್ತುದಾರನಾಗಿ ಮಾರ್ಪಟ್ಟಿದೆ.
 2. ಕಳೆದ ವರ್ಷ ಫೆಬ್ರವರಿಯಲ್ಲಿ ಭಾರತ ಸರ್ಕಾರವು ರಾಷ್ಟ್ರೀಯ ತಾಂತ್ರಿಕ ಜವಳಿ ಮಿಷನ್ ಅನ್ನು ಸಹ ಅನಾವರಣಗೊಳಿಸಿತು.
 3. ಕೃಷಿ/ತೋಟಗಾರಿಕೆ, ಹೆದ್ದಾರಿಗಳು, ರೈಲ್ವೆಗಳು, ಜಲಸಂಪನ್ಮೂಲಗಳು, ವೈದ್ಯಕೀಯ ಅನ್ವಯಿಕೆಗಳನ್ನು ಒಳಗೊಂಡಿರುವ ಸರ್ಕಾರಿ ಸಂಸ್ಥೆಗಳ ಬಳಕೆಗಾಗಿ 92 ಜವಳಿ ವಸ್ತುಗಳನ್ನು ಕಡ್ಡಾಯಗೊಳಿಸಲಾಗಿದೆ.

ರಾಷ್ಟ್ರೀಯ ತಾಂತ್ರಿಕ ಜವಳಿ ಮಿಷನ್ ಕುರಿತು:

ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (CCEA) 2020 ರಲ್ಲಿ ಒಟ್ಟು 1,480 ಕೋಟಿ ರೂ.ಗಳ ವೆಚ್ಚದಲ್ಲಿ ರಾಷ್ಟ್ರೀಯ ತಾಂತ್ರಿಕ ಜವಳಿ ಮಿಷನ್ ಸ್ಥಾಪಿಸಲು ಅನುಮೋದನೆ ನೀಡಿತ್ತು.

ಗುರಿ:

ತಾಂತ್ರಿಕ ಜವಳಿ ಕ್ಷೇತ್ರದಲ್ಲಿ ದೇಶವನ್ನು ಜಾಗತಿಕ ನಾಯಕನನ್ನಾಗಿ ಮಾಡುವುದು ಮತ್ತು ದೇಶೀಯ ಮಾರುಕಟ್ಟೆಯಲ್ಲಿ ತಾಂತ್ರಿಕ ಜವಳಿಗಳ ಬಳಕೆಯನ್ನು ಹೆಚ್ಚಿಸುವುದು.

2020-2021 ರಿಂದ ಪ್ರಾರಂಭವಾಗುವ ಈ ಮಿಷನ್  ನಾಲ್ಕು ವರ್ಷಗಳ ಅವಧಿಗೆ ಕಾರ್ಯಗತಗೊಳ್ಳಲಿದೆ ಮತ್ತು ನಾಲ್ಕು ಅಂಶಗಳನ್ನು ಹೊಂದಿರುತ್ತದೆ:

 1. ಮೊದಲ ಘಟಕವು ‘ಸಂಶೋಧನೆ, ನಾವೀನ್ಯತೆ ಮತ್ತು ಅಭಿವೃದ್ಧಿ’ಗಳ ಮೇಲೆ ಕೇಂದ್ರೀಕರಿಸುತ್ತದೆ ಮತ್ತು ಈ ಘಟಕವು 1,000 ಕೋಟಿ ರೂ.ವೆಚ್ಚವನ್ನು ಹೊಂದಿರುತ್ತದೆ. ಇದು ಫೈಬರ್ ಮತ್ತು ಜಿಯೋಟೆಕ್ಸ್ಟೈಲ್ಸ್, ಕೃಷಿ-ಜವಳಿ, ವೈದ್ಯಕೀಯ-ಜವಳಿ, ಮೊಬೈಲ್-ಜವಳಿ ಮತ್ತು ಕ್ರೀಡಾ-ಜವಳಿಗಳ ಅಭಿವೃದ್ಧಿಯ ಆಧಾರದ ಮೇಲೆ ಎರಡೂ ಸಂಶೋಧನಾ ಅನ್ವಯಿಕೆಗಳನ್ನು ಒಳಗೊಂಡಿರುತ್ತದೆ ಮತ್ತು ಜೈವಿಕ ವಿಘಟನೀಯ ತಾಂತ್ರಿಕ ಜವಳಿಗಳನ್ನು ಅಭಿವೃದ್ಧಿಪಡಿಸುತ್ತದೆ.
 2. ಎರಡನೆಯ ಅಂಶವು ತಾಂತ್ರಿಕ ಜವಳಿಗಳ ಪ್ರಚಾರ ಮತ್ತು ಮಾರುಕಟ್ಟೆ ಅಭಿವೃದ್ಧಿಯ ಮೇಲೆ ಕೇಂದ್ರೀಕರಿಸುತ್ತದೆ. ಈ ಘಟಕದ ಅಡಿಯಲ್ಲಿ, 2024 ರ ವೇಳೆಗೆ ದೇಶೀಯ ಮಾರುಕಟ್ಟೆಯ ಗಾತ್ರವನ್ನು $ 40 ಬಿಲಿಯನ್‌ ನಿಂದ $ 50 ಬಿಲಿಯನ್‌ಗೆ ಹೆಚ್ಚಿಸುವ ಗುರಿಯನ್ನು ಹೊಂದಿದೆ.
 3. ಮೂರನೆಯ ಅಂಶವು ರಫ್ತು ಉತ್ತೇಜನಕ್ಕೆ ಒತ್ತು ನೀಡಲಿದ್ದು, ಇದರ ಅಡಿಯಲ್ಲಿ ದೇಶದಲ್ಲಿ ತಾಂತ್ರಿಕ ಜವಳಿ ರಫ್ತು 2021-2022ರ ವೇಳೆಗೆ 14,000 ಕೋಟಿಯಿಂದ 20,000 ಕೋಟಿ ರೂ.ಗೆ ಹೆಚ್ಚಿಸಲಾಗುವುದು ಮತ್ತು ಮಿಷನ್ ಮುಗಿಯುವವರೆಗೆ ಪ್ರತಿವರ್ಷ 10% ಸರಾಸರಿ ಬೆಳವಣಿಗೆಯನ್ನು ಖಚಿತಪಡಿಸುತ್ತದೆ.
 4. ಅಂತಿಮ ಅಂಶವು ಶಿಕ್ಷಣ, ತರಬೇತಿ ಮತ್ತು ಕೌಶಲ್ಯ ಅಭಿವೃದ್ಧಿಗೆ ಒತ್ತು ನೀಡುತ್ತದೆ.

 

ತಾಂತ್ರಿಕ ಜವಳಿ ಯಾವುವು?

ತಾಂತ್ರಿಕ ಜವಳಿಗಳನ್ನು ಪ್ರಾಥಮಿಕವಾಗಿ ಜವಳಿ ವಸ್ತುಗಳು ಮತ್ತು ಸೌಂದರ್ಯದ ವೈಶಿಷ್ಟ್ಯಗಳಿಗಿಂತ ಮುಖ್ಯವಾಗಿ ಅವುಗಳ ತಾಂತ್ರಿಕ ಕಾರ್ಯಕ್ಷಮತೆ ಮತ್ತು ಕ್ರಿಯಾತ್ಮಕ ಗುಣಲಕ್ಷಣಗಳಿಗಾಗಿ ತಯಾರಿಸಿದ ಜವಳಿ ವಸ್ತುಗಳು ಮತ್ತು ಉತ್ಪನ್ನಗಳು ಎಂದು ವ್ಯಾಖ್ಯಾನಿಸಲಾಗಿದೆ.

ತಾಂತ್ರಿಕ ಜವಳಿ ಉತ್ಪನ್ನಗಳನ್ನು ಅವುಗಳ ಅನ್ವಯಿಕ ಕ್ಷೇತ್ರಗಳ ಆಧಾರದ ಮೇಲೆ 12 ವಿಶಾಲ ವರ್ಗಗಳಾಗಿ ವಿಂಗಡಿಸಲಾಗಿದೆ: ಅಗ್ರೊಟೆಕ್, ಬಿಲ್ಡ್‌ಟೆಕ್, ಕ್ಲಾತ್‌ಟೆಕ್, ಜಿಯೋಟೆಕ್, ಹೋಮ್‌ಟೆಕ್, ಇಂಡೂಟೆಕ್, ಮೊಬಿಲ್ಟೆಕ್, ಮೆಡಿಟೆಕ್, ಪ್ರೊಟೆಕ್, ಸ್ಪೋರ್ಟ್‌ಸ್ಟೆಕ್, ಒಯೆಕೊಟೆಕ್, ಪ್ಯಾಕ್‌ಟೆಕ್.

 

ವಿಷಯಗಳು: ಭಾರತೀಯ ಆರ್ಥಿಕತೆ ಮತ್ತು ಯೋಜನೆ, ಸಂಪನ್ಮೂಲಗಳ ಕ್ರೋಡೀಕರಣ , ಪ್ರಗತಿ, ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು.

ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ (ITC) ಎಂದರೇನು?


(What is Input Tax Credit (ITC)?

ಸಂದರ್ಭ:

ಕೇಂದ್ರೀಯ ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಮಂಡಳಿ (Central Board of Indirect Taxes and Customs – CBIC) ಜಿಎಸ್‌ಟಿ ಕ್ಷೇತ್ರಾಧಿಕಾರಿಗಳಿಂದ ತೆರಿಗೆ ಕ್ರೆಡಿಟ್ ಅನ್ನು ನಿರ್ಬಂಧಿಸುವ ನಿಯಮಗಳೊಂದಿಗೆ ಹೊರಬಂದಿದೆ. CBIC ಪ್ರಕಾರ, ಅಂತಹ ತೆರಿಗೆ ಕ್ರೆಡಿಟ್ ತಡೆಹಿಡಿಯುವಿಕೆಯು ಕೇವಲ ‘ಸಂಶಯ’ಕ್ಕಿಂತ ಹೆಚ್ಚಾಗಿ ‘ಭೌತಿಕ ಸಾಕ್ಷ್ಯ’ಗಳ ಆಧಾರದ ಮೇಲೆ ಇರಬೇಕು.

ಹೊಸ ಮಾನದಂಡ:

 1. ಹೊಸ ನಿಯಮಗಳ ಅಡಿಯಲ್ಲಿ, ಹಿರಿಯ ತೆರಿಗೆ ಅಧಿಕಾರಿಯಿಂದ ಅಂತಹ ಕ್ರೆಡಿಟ್ ಅನ್ನು ನಿರ್ಬಂಧಿಸಲು ಐದು ನಿರ್ದಿಷ್ಟ ಸಂದರ್ಭಗಳನ್ನು ಸೂಚಿಸಲಾಗಿದೆ. ಇವುಗಳಲ್ಲಿ ಮಾರಾಟಗಾರರಿಂದ ಪಾವತಿಸದ GST ಇನ್‌ವಾಯ್ಸ್‌ಗಳು ಸೇರಿವೆ.
 2. ಕಮಿಷನರ್ ಅಥವಾ ಅವರಿಂದ ಅಧಿಕಾರ ಪಡೆದ ಯಾವುದೇ ಅಧಿಕಾರಿ, ಸಹಾಯಕ ಕಮಿಷನರ್ ಶ್ರೇಣಿಗಿಂತ ಕಡಿಮೆ ಶ್ರೇಣಿಯನ್ನು ಹೊಂದಿರದ ಅಧಿಕಾರಿ, ‘ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್’ (ITC) ಅನ್ನು ನಿರ್ಬಂಧಿಸುವ ಯಾವುದೇ ನಿರ್ಧಾರವನ್ನು ಈ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಸಂಗತಿಗಳನ್ನು ಪರಿಗಣಿಸಿ ‘ಸೂಕ್ತ ಪರಿಗಣನೆಯ’ ನಂತರವೇ ತೆಗೆದುಕೊಳ್ಳಲಾಗುತ್ತದೆ.

ಹಿನ್ನೆಲೆ:

ಡಿಸೆಂಬರ್ 2019 ರಲ್ಲಿ, ಕೇಂದ್ರ ಸರ್ಕಾರವು ‘GST ನಿಯಮಗಳಲ್ಲಿ’ ಹೊಸ ನಿಯಮ 86A ಅನ್ನು ಸೇರಿಸಿತ್ತು,   ತೆರಿಗೆದಾರರಿಗೆ ‘ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್’ (ITC) ವಂಚನೆಯಿಂದ ಲಾಭವಾಗಿದೆ ಎಂದು ತೆರಿಗೆ ಅಧಿಕಾರಿಯು ತೃಪ್ತಿಪಟ್ಟರೆ,ತೆರಿಗೆದಾರರ ಎಲೆಕ್ಟ್ರಾನಿಕ್ ಕ್ರೆಡಿಟ್ ಲೆಡ್ಜರ್‌ನಲ್ಲಿರುವ ‘ಐಟಿಸಿ’ ಅನ್ನು ನಿರ್ಬಂಧಿಸಬಹುದು, ಎಂಬ ಅಧಿಕಾರವನ್ನು ಹೊಸ ನಿಯಮ 86Aಯು ಅಧಿಕಾರಿಗೆ ನೀಡಿತ್ತು.

‘ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್’ (ಐಟಿಸಿ) ಎಂದರೇನು?

 1. ಇದು ಸರಕುಗಳ ‘ಖರೀದಿ’ಯ ಮೇಲೆ ವ್ಯಾಪಾರವು ಪಾವತಿಸುವ’ ತೆರಿಗೆ ‘, ಮತ್ತು ಸರಕುಗಳ ಮಾರಾಟದ ಮೇಲಿನ’ ತೆರಿಗೆ ಹೊಣೆಗಾರಿಕೆ (Tax Liability) ಯನ್ನು ‘ಕಡಿಮೆ ಮಾಡಲು ಇದನ್ನು ಬಳಸಬಹುದು.
 2. ಸರಳವಾಗಿ ಹೇಳುವುದಾದರೆ, ಇನ್ಪುಟ್ ಕ್ರೆಡಿಟ್ ಎಂದರೆ ಔಟ್ಪುಟ್ ಮೇಲೆ ತೆರಿಗೆ ಪಾವತಿಸುವ ಸಮಯದಲ್ಲಿ ಪಾವತಿಸಿದ ಮೊತ್ತವು ಇನ್ಪುಟ್ಗಳ ಮೇಲೆ ಕಡಿಮೆ ತೆರಿಗೆಯನ್ನು ಪಾವತಿಸುತ್ತದೆ.

current affairs

 

ವಿನಾಯಿತಿ: ‘ಸಂಯೋಜನೆ ಯೋಜನೆ’ ಅಡಿಯಲ್ಲಿ ವ್ಯಾಪಾರವು ಇನ್ಪುಟ್ ತೆರಿಗೆ ಕ್ರೆಡಿಟ್ ಅನ್ನು ಪಡೆಯಲು ಸಾಧ್ಯವಿಲ್ಲ. ‘ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್’ (ಐಟಿಸಿ) ಅನ್ನು ವೈಯಕ್ತಿಕ ಬಳಕೆಗಾಗಿ ಅಥವಾ ವಿನಾಯಿತಿ ಪಡೆದ ಸರಕುಗಳ ಮೇಲೆ ಕ್ಲೇಮ್ ಮಾಡಲು ಬಳಸಲಾಗುವುದಿಲ್ಲ.

ಇದರ ದುರುಪಯೋಗದ ಬಗ್ಗೆ ಕಾಳಜಿ:

 1. ಕೇವಲ ತೆರಿಗೆ ಕ್ರೆಡಿಟ್‌ಗಳನ್ನು ಪಡೆಯಲು ನಕಲಿ ಇನ್‌ವಾಯ್ಸ್‌ಗಳನ್ನು ರಚಿಸುವ ಮೂಲಕ ನಿರ್ಲಜ್ಜ ವ್ಯವಹಾರಗಳಿಂದ ಅವಕಾಶವನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆಗಳಿರಬಹುದು.
 2. ಒಟ್ಟು GST ಹೊಣೆಗಾರಿಕೆಯ 80% ವರೆಗೆ ಐಟಿಸಿ ಮೂಲಕ ಇತ್ಯರ್ಥವಾಗುತ್ತಿದೆ ಮತ್ತು ಕೇವಲ 20% ಮಾತ್ರ ನಗದು ರೂಪದಲ್ಲಿ ಜಮಾ ಮಾಡಲಾಗುತ್ತಿದೆ.
 3. ಪ್ರಸ್ತುತ ಆಡಳಿತದ ಅಡಿಯಲ್ಲಿ, ಏಕಕಾಲದಲ್ಲಿ ತೆರಿಗೆ ಮತ್ತು ಐಟಿಸಿ ಕ್ಲೈಮ್‌ಗಳಿಗೆ ಇನ್ಪುಟ್ ಪೂರೈಕೆದಾರರು ಈಗಾಗಲೇ ಪಾವತಿಸಿದ ತೆರಿಗೆಗಳೊಂದಿಗೆ ಯಾವುದೇ ಅವಕಾಶವಿಲ್ಲ.
 4. ಪ್ರಸ್ತುತ, ಐಟಿಸಿ ಕ್ಲೇಮ್ ಮತ್ತು ಪೂರೈಕೆದಾರರು ಪಾವತಿಸುವ ತೆರಿಗೆಗಳೊಂದಿಗೆ ಹೊಂದಾಣಿಕೆ ಮಾಡುವುದರ ನಡುವೆ ಸಮಯದ ಅಂತರವಿದೆ. ಆದ್ದರಿಂದ, ನಕಲಿ ಚಲನ್ ಆಧಾರದ ಮೇಲೆ ಐಟಿಸಿ ಕ್ಲೇಮ್ ಪಡೆಯುವ ಸಾಧ್ಯತೆಗಳು ಹೆಚ್ಚಿವೆ.

 

ವಿಷಯಗಳು:ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಇರಾನ್ ಮತ್ತು ಪುಷ್ಟೀಕರಿಸಿದ ಯುರೇನಿಯಂ:


(Iran and enriched uranium)

ಸಂದರ್ಭ:

ಇರಾನ್‌ನ 20% ಪುಷ್ಟೀಕರಿಸಿದ ಯುರೇನಿಯಂ (20% enriched uranium) 210 ಕೆಜಿಯನ್ನು ಮೀರಿದೆ. ಇದು ಪಾಶ್ಚಿಮಾತ್ಯ ದೇಶಗಳೊಂದಿಗೆ ಮುಂಬರುವ ಪರಮಾಣು ಮಾತುಕತೆಗಳ ಮುಂದಿರುವ ಇತ್ತೀಚಿನ ನಿರ್ಲಕ್ಷ್ಯದ ಕ್ರಮವಾಗಿ ಕಂಡುಬರುತ್ತದೆ.

 1. ಅಲ್ಲದೆ, ಇರಾನ್‌ನ ಪರಮಾಣು ಸಂಸ್ಥೆಯು 25 ಕೆಜಿ ‘60% ಪುಷ್ಟೀಕರಿಸಿದ ಯುರೇನಿಯಂ’ ಅನ್ನು ಸಹ ಉತ್ಪಾದಿಸಿದೆ. ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಿರುವ ದೇಶಗಳು ಮಾತ್ರ ಈ ಮಟ್ಟದ ‘ಪುಷ್ಟೀಕರಿಸಿದ ಯುರೇನಿಯಂ’ ಅನ್ನು ಉತ್ಪಾದಿಸುವ ಭೌತಿಕ ಸಾಮರ್ಥ್ಯವನ್ನು ಹೊಂದಿವೆ.

ಪ್ರಸ್ತುತ ಕಾಳಜಿಗೆ ಕಾರಣ:

 1. ಇರಾನ್ ಮತ್ತು ವಿಶ್ವ ಶಕ್ತಿಗಳ ನಡುವೆ 2015 ರಲ್ಲಿ ಸಹಿ ಮಾಡಿದ ಐತಿಹಾಸಿಕ ಪರಮಾಣು ಒಪ್ಪಂದದ ಅಡಿಯಲ್ಲಿ, ಇರಾನ್ 3.67% ಕ್ಕಿಂತ ಹೆಚ್ಚು ಯುರೇನಿಯಂ ಅನ್ನು ಸಮೃದ್ಧಗೊಳಿಸುವುದನ್ನು / ಪುಷ್ಟೀಕರಿಸುವುದನ್ನು /ಸಂವರ್ಧನೆ ಮಾಡುವುದನ್ನು ನಿಷೇಧಿಸಲಾಗಿದೆ.
 2. 2018 ರಲ್ಲಿ ಆಗಿನ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದಲ್ಲಿ ಅಮೆರಿಕಾವು ಏಕಪಕ್ಷೀಯವಾಗಿ ಪರಮಾಣು ಒಪ್ಪಂದದಿಂದ ಹಿಂದೆ ಸರಿಯಿತು, ಆದರೆ ಈ ಒಪ್ಪಂದವನ್ನು ಉಳಿಸಿಕೊಳ್ಳಲು ಬ್ರಿಟನ್, ಫ್ರಾನ್ಸ್, ಜರ್ಮನಿ, ಚೀನಾ ಮತ್ತು ರಷ್ಯಾ ಪ್ರಯತ್ನಗಳನ್ನು ಮಾಡುತ್ತಿವೆ.

ದಯವಿಟ್ಟು ಗಮನಿಸಿ: 90% ಕ್ಕಿಂತ ಹೆಚ್ಚು ‘ಪುಷ್ಟೀಕರಿಸಿದ ಯುರೇನಿಯಂ’ ಅನ್ನು ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆಗೆ ಬಳಸಬಹುದು.

ಹಿನ್ನೆಲೆ:

ಅಂತಾರಾಷ್ಟ್ರೀಯ ಅಣುಶಕ್ತಿ ಸಂಸ್ಥೆ (ಐಎಇಎ) ಬಿಡುಗಡೆ ಮಾಡಿದ ವರದಿಯ ಪ್ರಕಾರ, ಇರಾನ್‌ನ ಯುರೇನಿಯಂ ನಿಕ್ಷೇಪಗಳು ಸೆಪ್ಟೆಂಬರ್‌ನಲ್ಲಿ ಸುಮಾರು 84.3 ಕೆಜಿ (185 ಪೌಂಡ್) ಯುರೇನಿಯಂ ಅನ್ನು 20%ವರೆಗಿನ ಬಿರುಕು ಶುದ್ಧತೆಯೊಂದಿಗೆ ಒಳಗೊಂಡಿತ್ತು, ಮೂರು ತಿಂಗಳ ಹಿಂದೆ ಇದರ ಪರಿಮಾಣ ಸುಮಾರು 62.8 ಕೆಜಿ (138 ಪೌಂಡ್) ಆಗಿತ್ತು.

ಜಂಟಿ ಸಮಗ್ರ ಕ್ರಿಯಾ ಯೋಜನೆ(JCPOA) ಯ ಕುರಿತು:

ಇದನ್ನು,ಇರಾನ್ ಪರಮಾಣು ಒಪ್ಪಂದ ಎಂದು ಕರೆಯಲಾಗುತ್ತದೆ.

ಈ ಒಪ್ಪಂದ, ಅಂದರೆ ‘ಜಂಟಿ ಸಮಗ್ರ ಕ್ರಿಯಾ ಯೋಜನೆ’, 2013 ರಿಂದ 2015 ರವರೆಗೆ ಇರಾನ್ ಮತ್ತು ಪಿ 5 + 1 (ಚೀನಾ, ಫ್ರಾನ್ಸ್, ರಷ್ಯಾ, ಯುನೈಟೆಡ್ ಕಿಂಗ್‌ಡಮ್, ಯುನೈಟೆಡ್ ಸ್ಟೇಟ್ಸ್ ಮತ್ತು ಜರ್ಮನಿ ಮತ್ತು ಯುರೋಪಿಯನ್ ಯೂನಿಯನ್) ನಡುವಿನ ಸುದೀರ್ಘ ಮಾತುಕತೆಗಳ ಫಲಿತಾಂಶವಾಗಿದೆ.

 1. 2015 ರಲ್ಲಿ ಸಹಿ ಮಾಡಲಾದ ಪರಮಾಣು ಒಪ್ಪಂದದ ಅಡಿಯಲ್ಲಿ ಇರಾನ್ ತನ್ನ ಪರಮಾಣು ಕಾರ್ಯಕ್ರಮಗಳನ್ನು ಸೀಮಿತಗೊಳಿಸಿದರೆ ಅದಕ್ಕೆ ಪ್ರತಿಯಾಗಿ ಆರ್ಥಿಕ ಪ್ರೋತ್ಸಾಹವನ್ನು ನೀಡಲು ಒಪ್ಪಿಕೊಳ್ಳಲಾಗಿದೆ. ಒಟ್ಟಿನಲ್ಲಿ ಈ ಒಪ್ಪಂದದ ಉದ್ದೇಶ ಇರಾನ್ ಪರಮಾಣು ಬಾಂಬನ್ನು ತಯಾರಿಸಿದಂತೆ ತಡೆಯುವುದಾಗಿದೆ.
 2. ಜಂಟಿ ಸಮಗ್ರ ಕ್ರಿಯಾ ಯೋಜನೆ (JCPOA) ಅಡಿಯಲ್ಲಿ, ಟೆಹ್ರಾನ್ ಮಧ್ಯಮ-ಪುಷ್ಟೀಕರಿಸಿದ ಯುರೇನಿಯಂನ ಸಂಗ್ರಹವನ್ನು ಸಂಪೂರ್ಣವಾಗಿ ತೆಗೆದುಹಾಕುತ್ತದೆ, ಕಡಿಮೆ-ಸಮೃದ್ಧ ಯುರೇನಿಯಂನ ಶೇಖರಣೆಯನ್ನು 98% ರಷ್ಟು ಕಡಿಮೆ ಮಾಡುತ್ತದೆ ಮತ್ತು ಮುಂದಿನ 13 ವರ್ಷಗಳಲ್ಲಿ ಅದರ ಮೂರನೇ ಎರಡರಷ್ಟು ಅನಿಲ ಕೇಂದ್ರಾಪಗಾಮಿಗಳನ್ನು ಕಡಿಮೆ ಮಾಡಲು ಒಪ್ಪಿಕೊಂಡಿತು.
 3. ಒಪ್ಪಂದದ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡಲು ಜಂಟಿ ಆಯೋಗವನ್ನು ಸ್ಥಾಪಿಸಲಾಯಿತು.
 4. ಅಮೆರಿಕಾದ ಮಾಜಿ ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಅವರು 2018 ರಲ್ಲಿ ಇರಾನ್ ನೊಂದಿಗಿನ (ಜಂಟಿ ಸಮಗ್ರ ಕ್ರಿಯಾಯೋಜನೆ- JCPOA) ಒಪ್ಪಂದವನ್ನು ಏಕಪಕ್ಷೀಯವಾಗಿ ರದ್ದುಗೊಳಿಸಿದರು ಆದರೆ ಬ್ರಿಟನ್, ಫ್ರಾನ್ಸ್, ಜರ್ಮನಿ, ಚೀನಾ ಮತ್ತು ರಷ್ಯಾ ಒಪ್ಪಂದವನ್ನು ಉಳಿಸಿಕೊಳ್ಳಲು ಪ್ರಯತ್ನಿಸಿವೆ.
 5. ವಿಶ್ವ ಶಕ್ತಿಗಳೊಂದಿಗಿನ ಈ ಒಪ್ಪಂದದಲ್ಲಿ, ಇರಾನ್ ತನ್ನ ಸಂಶೋಧನಾ ರಿಯಾಕ್ಟರ್‌ಗೆ ಅಗತ್ಯವಿರುವ 20% ಪುಷ್ಟೀಕರಿಸಿದ ಯುರೇನಿಯಂ ಅನ್ನು ಒದಗಿಸಲು ಈ ಒಪ್ಪಂದಕ್ಕೆ ಸಹಿ ಹಾಕಿದ ಇತರ ದೇಶಗಳು ಒಪ್ಪಿಕೊಂಡವು.
 6. ಪರಮಾಣು ಒಪ್ಪಂದದ ನಿಯಮಗಳ ಅಡಿಯಲ್ಲಿ, ಇರಾನ್ ತನ್ನ ಸಂಶೋಧನಾ ರಿಯಾಕ್ಟರ್ ಚಟುವಟಿಕೆಗಳನ್ನು ಹೊರತುಪಡಿಸಿ, 3.67% ಕ್ಕಿಂತ ಹೆಚ್ಚು ಸಮೃದ್ಧ ಯುರೇನಿಯಂ ಉತ್ಪಾದಿಸುವುದನ್ನು ನಿಷೇಧಿಸಲಾಗಿದೆ.

current affairs

 

ಯುರೇನಿಯಂ ಪುಷ್ಟೀಕರಣದ ಗುರಿ ಏನು?

ಅಪರೂಪದ ವಿಕಿರಣಶೀಲ ಐಸೊಟೋಪ್ ಆದ ‘U -235’ ಯುರೇನಿಯಂನಲ್ಲಿ ಕಂಡುಬರುತ್ತದೆ, ಇದನ್ನು ಕಡಿಮೆ ಪುಷ್ಟೀಕರಣ ಮಟ್ಟದಲ್ಲಿ ಪರಮಾಣು ರಿಯಾಕ್ಟರ್‌ಗಳಿಗೆ ಇಂಧನವಾಗಿ ಮತ್ತು ಹೆಚ್ಚಿನ ಪುಷ್ಟೀಕರಣ ಮಟ್ಟದಲ್ಲಿ ಪರಮಾಣು ಬಾಂಬ್‌ಗಳಿಗೆ ಇಂಧನವಾಗಿ ಬಳಸಬಹುದು.

 1. ಯುರೇನಿಯಂ ಪುಷ್ಟೀಕರಣವು U-235 ರ ಶೇಕಡಾವಾರು ಮಟ್ಟವನ್ನು ಹೆಚ್ಚಿಸಲು ಉದ್ದೇಶಿಸಿದೆ, ಸಾಮಾನ್ಯವಾಗಿ ಇದನ್ನು ಕೇಂದ್ರಾಪಗಾಮಿಗಳ ಮೂಲಕ ಮಾಡಲಾಗುತ್ತದೆ. ಕೇಂದ್ರಾಪಗಾಮಿಗಳು (Centrifuges) ಒಂದು ರೀತಿಯ ಸಂಸ್ಕರಿಸದ ಯುರೇನಿಯಂ ಅನ್ನು ಹೆಚ್ಚಿನ ವೇಗದಲ್ಲಿ ತಿರುಗಿಸುವ ಯಂತ್ರಗಳಾಗಿವೆ.

ಪ್ರಸ್ತುತ ಇರಾನ್ ಹೊಂದಿರುವ ಸಮೃದ್ಧಿಕರಿಸಿದ ಯುರೇನಿಯಂ ಪ್ರಮಾಣ ಎಷ್ಟು?

ವಿಶ್ವಸಂಸ್ಥೆಯ ಪರಮಾಣು-ಮೇಲ್ವಿಚಾರಣಾ ಅಂಗವಾದ ಅಂತರಾಷ್ಟ್ರೀಯ ಅಣುಶಕ್ತಿ ಇಂಧನ ಸಂಸ್ಥೆಯ (the International Atomic Energy Agency) ಪ್ರಕಾರ, ಫೆಬ್ರವರಿ ತಿಂಗಳ ವೇಳೆಗೆ ಇರಾನ್ 2,967.8 ಕಿಲೋಗ್ರಾಂಗಳಷ್ಟು ಯುರೇನಿಯಂ ಅನ್ನು ಸಂಗ್ರಹಿಸಿದೆ. ಇದು ಪರಮಾಣು ಒಪ್ಪಂದದ ಅಡಿಯಲ್ಲಿ ನಿಗದಿಪಡಿಸಿದ ಮಿತಿಯ ಸುಮಾರು 14 ಪಟ್ಟು ಹೆಚ್ಚಿಗೆ ಇರುತ್ತದೆ, ಮತ್ತು ಅದನ್ನು ಶಸ್ತ್ರಾಸ್ತ್ರ ದರ್ಜೆಗೆ ಪರಿಷ್ಕರಿಸಿದರೆ, ಮೂರು ಪರಮಾಣು ಬಾಂಬುಗಳನ್ನು ನಿರ್ಮಿಸಲು ಸಾಕಾಗುವಷ್ಟು ಆಗಿರುತ್ತದೆ.

ಅಲ್ಲದೆ, ಈ ದಾಸ್ತಾನು,20 ಪ್ರತಿಶತದವರೆಗೆ ಪುಷ್ಟೀಕರಿಸಿದ, 17.6 ಕೆಜಿ ಯಷ್ಟು ಯುರೇನಿಯಂ ಅನ್ನು ಹೊಂದಿದೆ. ಆದರೂ, ಈ ರೀತಿ ಮಾಡುವುದನ್ನು ಪರಮಾಣು ಒಪ್ಪಂದದಡಿ 2030 ರ ವರೆಗೆ ನಿಷೇಧಿಸಲಾಗಿದೆ.

ಪ್ರಸ್ತುತ, ಇರಾನ್ ಅತಿ ಹೆಚ್ಚು ಸಮೃದ್ಧ ಯುರೇನಿಯಂ ಅನ್ನು ಹೊಂದಿರಲು ಕಾರಣವೇನು?

ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಅವರು 2018 ರಲ್ಲಿ ಇರಾನ್ ನೊಂದಿಗಿನ (ಜಂಟಿ ಸಮಗ್ರ ಕ್ರಿಯಾಯೋಜನೆ- JCPOA) ಒಪ್ಪಂದವನ್ನು ರದ್ದುಗೊಳಿಸಿದ ನಂತರ ಮತ್ತು ಇರಾನ್ ಮೇಲೆ ಆರ್ಥಿಕ ನಿರ್ಬಂಧಗಳು ಮತ್ತು ಇತರ ದಂಡನೆ ಗಳನ್ನು ವಿಧಿಸಿದ ನಂತರ, ಪ್ರತೀಕಾರದ ಕ್ರಮವಾಗಿ ಇರಾನ್ ಈ ಒಪ್ಪಂದದಿಂದ ಹಿಂದೆ ಸರಿಯಿತು – ಉದಾಹರಣೆಗೆ ಯುರೇನಿಯಂ ಪೂರೈಕೆಯಲ್ಲಿ 3.67 ಪ್ರತಿಶತದಷ್ಟು ಹೆಚ್ಚಳ ಮಾಡಿತು, ಯುರೇನಿಯಂ ಶುದ್ಧತೆಯ ಮಟ್ಟವನ್ನು ಶೇಕಡಾ 20 ರಷ್ಟು ಹೆಚ್ಚಿಸಿತು ಮತ್ತು ಕೆಲವು ಪರಮಾಣು ತಾಣಗಳಿಗೆ ಅಂತರರಾಷ್ಟ್ರೀಯ ತನಿಖಾಧಿಕಾರಿಗಳ ಪ್ರವೇಶವನ್ನು ನಿರ್ಬಂಧಿಸಿತು. ಆದಾಗ್ಯೂ, ಆಶ್ಚರ್ಯದ ವಿಷಯವೆಂದರೆ ಇರಾನ್ ಈ ಎಲ್ಲಾ ಕ್ರಿಯೆಗಳನ್ನು ಸುಲಭವಾಗಿ ರದ್ದುಗೊಳಿಸಬಹುದಾದ ಕ್ರಮಗಳು ಎಂದು ಬಣ್ಣಿಸಿದೆ.

ಪ್ರಸ್ತುತದ ಚಿಂತೆಯ ವಿಷಯವೇನು?

60 ಪ್ರತಿಶತದಷ್ಟು ಪುಷ್ಟೀಕರಣದ ಮಟ್ಟವು ವಿಶೇಷವಾಗಿ ಅಪಾಯಕಾರಿಯಾಗಿಸುವ ಸಂಗತಿ ಎಂದರೆ ‘ಪುಷ್ಟೀಕರಣದ ಟ್ರಿಕಿ ಪ್ರಕ್ರಿಯೆ’, ಇದರ ಅಡಿಯಲ್ಲಿ ಶುದ್ಧತೆಯ ಮಟ್ಟವು ಹೆಚ್ಚಾದಂತೆ, ಪುಷ್ಟೀಕರಣ ಪ್ರಕ್ರಿಯೆಯು ಸುಲಭವಾಗುತ್ತದೆ ಮತ್ತು ಅದಕ್ಕೆ ಅಗತ್ಯವಾದ ಕೇಂದ್ರಾಪಗಾಮಿಗಳ ಸಂಖ್ಯೆಯೂ ಕಡಿಮೆಯಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, 90 ಪ್ರತಿಶತ ಶುದ್ಧತೆಯನ್ನು ಪಡೆಯುವುದು 20 ಪ್ರತಿಶತ ಶುದ್ಧತೆಯ ಮಟ್ಟದಿಂದ ಪುಷ್ಟೀಕರಣವನ್ನು ಪ್ರಾರಂಭಿಸುವುದಕ್ಕಿಂತ ಸುಲಭ, ಮತ್ತು 60 ಪ್ರತಿಶತ ಶುದ್ಧತೆಯ ಮಟ್ಟದಲ್ಲಿ ಪ್ರಾರಂಭಿಸುವುದಕ್ಕಿಂತಲೂ ಸುಲಭವಾಗಿದೆ.

ಭಾರತಕ್ಕೆ ಈ ಒಪ್ಪಂದದ ಮಹತ್ವ:

 1. ಇರಾನ್ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕುವುದರೊಂದಿಗೆ, ಚಬಹಾರ್ ಬಂದರು, ಬಂದರ್ ಅಬ್ಬಾಸ್ ಬಂದರು ಮತ್ತು ಪ್ರಾದೇಶಿಕ ಸಂಪರ್ಕಗಳನ್ನು ಒಳಗೊಂಡ ಇತರ ಯೋಜನೆಗಳಲ್ಲಿನ ಭಾರತದ ಹಿತಾಸಕ್ತಿಗಳನ್ನು ಪುನರುಜ್ಜೀವನಗೊಳಿಸಬಹುದು.
 2. ಇದು ಪಾಕಿಸ್ತಾನದ ಗ್ವಾದರ್ ಬಂದರಿನಲ್ಲಿ ಚೀನಾದ ಉಪಸ್ಥಿತಿಯನ್ನು ತಟಸ್ಥಗೊಳಿಸಲು ಭಾರತಕ್ಕೆ ಸಹಾಯ ಮಾಡುತ್ತದೆ.
 3. ಅಮೆರಿಕ ಮತ್ತು ಇರಾನ್ ನಡುವಿನ ಸಂಬಂಧಗಳ ಪುನಃ ಸ್ಥಾಪನೆಯು ಇರಾನ್‌ನಿಂದ ಅಗ್ಗದ ದರದಲ್ಲಿ ತೈಲವನ್ನು ಖರೀದಿಸಲು ಮತ್ತು ಇಂಧನ ಸುರಕ್ಷತೆಯನ್ನು ಸಾಧಿಸಲು ಭಾರತಕ್ಕೆ ಸಹಾಯ ಮಾಡುತ್ತದೆ.

centrifuge

 

 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಸ್ಟಬಲ್ ಬರ್ನಿಂಗ್ ಮತ್ತು ಆರೋಗ್ಯದ ಮೇಲೆ ಅದರ ಪ್ರಭಾವ:


(Stubble Burning and its impact on health)

ಸಂದರ್ಭ:

ಇತ್ತೀಚೆಗೆ, ಪಂಜಾಬ್‌ನ ಪಟಿಯಾಲ ಜಿಲ್ಲೆಯ ಆರು ಗ್ರಾಮಗಳಲ್ಲಿ ಹುಲ್ಲು ಸುಡುವಿಕೆ ಮತ್ತು ಆರೋಗ್ಯದ ಪರಿಣಾಮಗಳ ಕುರಿತು ಅಧ್ಯಯನವನ್ನು ನಡೆಸಲಾಯಿತು.

ಅಧ್ಯಯನದ ಪ್ರಮುಖ ಸಂಶೋಧನೆಗಳು:

 1. ಸ್ಟಬಲ್ ಸುಡುವಿಕೆಯಿಂದ ಉಂಟಾಗುವ ಮಾಲಿನ್ಯವು ಶ್ವಾಸಕೋಶದ ಕಾರ್ಯವನ್ನು ಗಣನೀಯವಾಗಿ ಕಡಿಮೆಗೊಳಿಸಿದೆ ಮತ್ತು ವಿಶೇಷವಾಗಿ ಗ್ರಾಮೀಣ ಮಹಿಳೆಯರಿಗೆ ಹಾನಿಕಾರಕವಾಗಿದೆ.
 2. ಅಧ್ಯಯನದ ಎರಡು ಹಂತಗಳ ನಡುವೆ, ಉಸಿರಾಟ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕವೆಂದು ಪರಿಗಣಿಸಲಾದ ಸುಡದ ಕಾರ್ಬನ್ ಕಣಗಳ ವರ್ಗವಾದ 5 ನ ಸಾಂದ್ರತೆಗಳು ಎರಡು ಹಂತಗಳ ನಡುವೆ 100 g/m3 ರಿಂದ 250 g/m3 ವರೆಗೆ ಎರಡು ಪಟ್ಟು ಹೆಚ್ಚಾಗುವುದು ಕಂಡುಬಂದಿದೆ.
 3. ಬೆಳೆ ತ್ಯಾಜ್ಯವನ್ನು ಸುಡುವ ಅವಧಿಯಲ್ಲಿ, ಎಲ್ಲಾ ವಯಸ್ಸಿನ ಗುಂಪುಗಳಲ್ಲಿ (10-60 ವರ್ಷಗಳು) ಉಸಿರಾಟದ ರೋಗಲಕ್ಷಣಗಳಲ್ಲಿ ಎರಡರಿಂದ ಮೂರು ಪಟ್ಟು ಹೆಚ್ಚಳ ಕಂಡುಬಂದಿದೆ. ಈ ರೋಗಲಕ್ಷಣಗಳಲ್ಲಿ ಉಬ್ಬಸ, ಕೆಲಸ ಮಾಡುವ ವೇಳೆ ಉಸಿರಾಟದಲ್ಲಿ ತೊಂದರೆ, ಬೆಳಿಗ್ಗೆ ಮತ್ತು ರಾತ್ರಿ ಕೆಮ್ಮು, ಚರ್ಮದ ದದ್ದು, ಮೂಗು ಸೋರುವಿಕೆ ಅಥವಾ ಕಣ್ಣುಗಳು ತುರಿಕೆ ಇತ್ಯಾದಿ.
 4. ವಯೋವೃದ್ಧರ ಜನಸಂಖ್ಯೆ (> 40-60) ಮತ್ತು ಕಡಿಮೆ ವಯಸ್ಸಿನವರು (> 10-18) ಬೆಳೆ ತ್ಯಾಜ್ಯವನ್ನು ಸುಡುವ ಸಮಯದಲ್ಲಿ ಹೆಚ್ಚಿನ ಸಂಖ್ಯೆಯ ಉಸಿರಾಟದ ದೂರುಗಳನ್ನು ವರದಿ ಮಾಡಿದ್ದಾರೆ.
 5. ಅಡುಗೆ ಇಂಧನ, ವೆಂಟಿಲೇಶನ್, ರಸ್ತೆಯಿಂದ ದೂರ, ಇತ್ಯಾದಿಗಳಂತಹ ಹಲವಾರು ಇತರ ಅಪಾಯಕಾರಿ ಅಂಶಗಳನ್ನು ನಿಯಂತ್ರಿಸಿದ ನಂತರವೂ, ಎಲ್ಲಾ ವಯೋಮಾನದವರಲ್ಲಿ 5 ಸಾಂದ್ರತೆಯ ಹೆಚ್ಚಳದೊಂದಿಗೆ ಶ್ವಾಸಕೋಶದ ಕಾರ್ಯದಲ್ಲಿ ಕುಸಿತ ಕಂಡುಬಂದಿದೆ.

‘ಸ್ಟಬಲ್ ಬರ್ನಿಂಗ್’ (stubble Burning) ಎಂದರೇನು?

ಭತ್ತದ ಕಟಾವು ಮತ್ತು ಗೋಧಿ ಬಿತ್ತನೆ ನಡುವೆ ಬಹಳ ಕಡಿಮೆ ಸಮಯವಿರುವುದರಿಂದ ನವೆಂಬರ್‌ನಲ್ಲಿ ಗೋಧಿ ಬಿತ್ತನೆಗಾಗಿ ಹೊಲಗಳನ್ನು ಸಿದ್ದಪಡಿಸುವಾಗ ರೈತರು ‘ಪರಾಲಿ ದಹನ್’ ಅಥವಾ ಕೃಷಿ ತ್ಯಾಜ್ಯ ಸುಡುವುದು ಅಥವಾ ಸ್ಟಬ್ಬಲ್ ಸುಡುವುದು ಸಾಮಾನ್ಯ ಅಭ್ಯಾಸವಾಗಿದೆ.

ಪರಿಣಾಮ: ಸ್ಟಬ್ಬಲ್ ಸುಡುವಿಕೆಯು ಹಾನಿಕಾರಕ ಅನಿಲಗಳಾದ ಕಾರ್ಬನ್ ಡೈಆಕ್ಸೈಡ್, ಸಲ್ಫರ್ ಡೈಆಕ್ಸೈಡ್, ನೈಟ್ರೋಜನ್ ಡೈಆಕ್ಸೈಡ್ ಹಾಗೂ ಕಣಕಣಗಳನ್ನು ಹೊರಸೂಸುತ್ತದೆ.

ರೈತರು ‘ಸ್ಟಬಲ್ ಬರ್ನಿಂಗ್’ ಅನ್ನು ಆಯ್ಕೆ ಮಾಡಲು ಕಾರಣಗಳು:

 1. ರೈತರಿಗೆ ಅವುಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಪರ್ಯಾಯ ಆಯ್ಕೆಗಳಿಲ್ಲ.
 2. ತ್ಯಾಜ್ಯ ವಸ್ತುಗಳನ್ನು ವಿಲೇವಾರಿ ಮಾಡಲು ಲಭ್ಯವಿರುವ ಹೊಸ ತಂತ್ರಜ್ಞಾನವನ್ನು ಪಡೆಯಲು ಸಾಧ್ಯವಾಗದ ಕಾರಣ ರೈತರು ಈ ಕೃಷಿ ತ್ಯಾಜ್ಯವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ.
 3. ಸಾಮಾನ್ಯವಾಗಿ, ಬೆಳೆ ವೈಫಲ್ಯದಿಂದಾಗಿ ರೈತನ ಆದಾಯದ ಮೇಲೆ ಮಹತ್ವದ ಪರಿಣಾಮ ಉಂಟಾಗುತ್ತದೆ, ಈ ಸಂದರ್ಭದಲ್ಲಿ ರೈತರು ವೆಚ್ಚವನ್ನು ಕಡಿತಗೊಳಿಸುವ ಬದಲು ಮತ್ತು ಹೊಟ್ಟು ನಿರ್ವಹಣೆಯ ವೈಜ್ಞಾನಿಕ ವಿಧಾನಗಳ ಮೇಲೆ ಖರ್ಚು ಮಾಡುವ ಬದಲು ಹೊಲದಲ್ಲಿ ಭತ್ತದ ಹುಲ್ಲನ್ನು ಸುಡುವ ಅವಕಾಶವನ್ನು ಆಯ್ಕೆ ಮಾಡಿಕೊಳ್ಳುತ್ತಾರೆ.

ಸ್ಟಬಲ್ ಅನ್ನು ಸುಡುವುದರಿಂದ ದೊರೆಯುವ ಪ್ರಯೋಜನಗಳು:

 1. ಇದು ಜಾಗವನ್ನು ತ್ವರಿತವಾಗಿ ಸ್ವಚ್ಛಗೊಳಿಸುತ್ತದೆ ಮತ್ತು ಅಗ್ಗದ ಪರ್ಯಾಯ ಆಯ್ಕೆಯಾಗಿದೆ.
 2. ಕಳೆ ನಾಶಕ ನಿರೋಧಕವಾಗಿದೆ.
 3. ಗೊಂಡೆ ಹುಳುಗಳು ಮತ್ತು ಇತರ ಕೀಟಗಳು ಸಾಯುತ್ತವೆ.
 4. ಸಾರಜನಕ ಬಂಧಗಳು ದುರ್ಬಲಗೊಳ್ಳುತ್ತವೆ.

ಸ್ಟಬಲ್ ಸುಡುವಿಕೆಯ ಪರಿಣಾಮಗಳು:

ಮಾಲಿನ್ಯ: ತೆರೆದ ಸ್ಟಬ್ಬಲ್ ಸುಡುವಿಕೆಯು ಹೆಚ್ಚಿನ ಪ್ರಮಾಣದ ವಿಷಕಾರಿ ಮಾಲಿನ್ಯಕಾರಕಗಳನ್ನು ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ, ಇದರಲ್ಲಿ ಮೀಥೇನ್ (CH4), ಕಾರ್ಬನ್ ಮಾನಾಕ್ಸೈಡ್ (CO), ಬಾಷ್ಪಶೀಲ ಸಾವಯವ ಸಂಯುಕ್ತಗಳು (VOCs) ಮತ್ತು ಕಾರ್ಸಿನೋಜೆನಿಕ್ ಪಾಲಿಸೈಕ್ಲಿಕ್ ಆರೊಮ್ಯಾಟಿಕ್ ಹೈಡ್ರೋಕಾರ್ಬನ್‌ಗಳು ಸೇರಿವೆ. ಅಂತಿಮವಾಗಿ ಇವು ಹೊಗೆ ಉಂಟುಮಾಡಲು ಕಾರಣವಾಗುತ್ತವೆ.

ಮಣ್ಣಿನ ಫಲವತ್ತತೆ: ಗದ್ದೆಯಲ್ಲಿ ಹೊಟ್ಟನ್ನು ಸುಡುವುದರಿಂದ ಮಣ್ಣಿನ ಪೋಷಕಾಂಶಗಳು ನಾಶವಾಗುತ್ತವೆ, ಇದು ಕಡಿಮೆ ಫಲವತ್ತತೆಯನ್ನು ನೀಡುತ್ತದೆ.

ಶಾಖದ ನುಗ್ಗುವಿಕೆ: ಸ್ಟಬ್ಬಲ್ ಸುದುವಿಕೆಯಿಂದ ಉಂಟಾಗುವ ಶಾಖವು ಮಣ್ಣನ್ನು ಪ್ರವೇಶಿಸುತ್ತದೆ, ಇದು ಮಣ್ಣಿನ ತೇವಾಂಶ ಮತ್ತು ಪ್ರಯೋಜನಕಾರಿ ಬ್ಯಾಕ್ಟೀರಿಯಾವನ್ನು ನನಾಶಪಡಿಸುತ್ತದೆ.

current affairs

 

ಸ್ಟಬಲ್ ಸುಡುವುದನ್ನು ತಪ್ಪಿಸಲು ಇರುವ ಪರ್ಯಾಯ ಪರಿಹಾರ ಕ್ರಮಗಳು:

 1. ಭತ್ತದ ಹುಲ್ಲು ಆಧಾರಿತ ವಿದ್ಯುತ್ ಸ್ಥಾವರಗಳ ಪ್ರಚಾರ. ಇದು ಉದ್ಯೋಗ ಅವಕಾಶಗಳನ್ನು ಕೂಡ ಸೃಷ್ಟಿಸುತ್ತದೆ.
 2. ಬೆಳೆ ಉಳಿಕೆಗಳನ್ನು ಮಣ್ಣಿನಲ್ಲಿ ಸೇರಿಸುವುದರಿಂದ ಮಣ್ಣಿನ ತೇವಾಂಶವನ್ನು ಸುಧಾರಿಸಬಹುದು ಮತ್ತು ಉತ್ತಮ ಸಸ್ಯ ಬೆಳವಣಿಗೆಗೆ ಮಣ್ಣಿನ ಸೂಕ್ಷ್ಮಜೀವಿಗಳ ಬೆಳವಣಿಗೆಯನ್ನು ಸಕ್ರಿಯಗೊಳಿಸಲು ಸಹಾಯ ಮಾಡಬಹುದು.
 3. ಕೃಷಿ-ಅವಶೇಷಗಳನ್ನು ಗೊಬ್ಬರದ ಮೂಲಕ ಸಮೃದ್ಧ ಸಾವಯವ ಗೊಬ್ಬರವಾಗಿ ಪರಿವರ್ತಿಸಬಹುದು.
 4. ‘ಯೀಸ್ಟ್ ಪ್ರೋಟೀನ್‌ಗಳ ಹೊರತೆಗೆಯುವಿಕೆ’ಯಂತಹ ಕೈಗಾರಿಕಾ ಬಳಕೆಗೆ ಹೊಸ ಅವಕಾಶಗಳನ್ನು ವೈಜ್ಞಾನಿಕ ಸಂಶೋಧನೆಯ ಮೂಲಕ ಕಂಡುಹಿಡಿಯಬಹುದು.

ಅವಶ್ಯಕತೆ: ಸುಪ್ರೀಂ ಕೋರ್ಟ್ ಮಾಡಿದ ಪ್ರತಿಕ್ರಿಯೆಗಳು?

 1. ಹುಲ್ಲನ್ನು ಸುಡದವರಿಗೆ ಪ್ರೋತ್ಸಾಹಧನ ನೀಡಬಹುದು ಮತ್ತು ಈ ಅಭ್ಯಾಸವನ್ನು ಮುಂದುವರಿಸಿದವರಿಗೆ ಶಿಕ್ಷೆ ವಿಧಿಸಬಹುದು.
 2. ಈಗಿರುವ ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯನ್ನು ಸಂಬಂಧಿತ ರಾಜ್ಯಗಳು ಕೃಷಿ ತ್ಯಾಜ್ಯವನ್ನು ಸುಡುವುದನ್ನು ಮುಂದುವರಿಸುವ ಯಾರಿಗೆ ಎಂಎಸ್‌ಪಿಯ ಪ್ರಯೋಜನಗಳಿಂದ ಸಂಪೂರ್ಣವಾಗಿ ಅಥವಾ ಭಾಗಶಃ ವಂಚಿಸುವ ರೀತಿಯಲ್ಲಿ ಅರ್ಥೈಸಬೇಕು.

ಛತ್ತೀಸಗಡ ಮಾದರಿ:

ಛತ್ತೀಸಗಡ ಸರ್ಕಾರವು ‘ಗೌತನ್’ ಗಳನ್ನು ಸ್ಥಾಪಿಸುವ ಮೂಲಕ ಒಂದು ವಿನೂತನ ಪ್ರಯೋಗವನ್ನು ಮಾಡಿದೆ.

 1. ‘ಗೌತನ್ಸ್’, ಪ್ರತಿ ಹಳ್ಳಿಯ ಐದು ಎಕರೆಗಳ ಸಾಮೂಹಿಕ ಪ್ರದೇಶವಾಗಿದೆ, ಅಲ್ಲಿ ಹಳ್ಳಿಯ ಎಲ್ಲಾ ಜನರು ತಮ್ಮ ತಮ್ಮ ಬಳಕೆಯಾಗದ ಸ್ಟಬಲ್ ಅನ್ನು ಸಂಗ್ರಹಿಸುತ್ತಾರೆ ಮತ್ತು ಹಸುವಿನ ಸಗಣಿ ಮತ್ತು ಕೆಲವು ನೈಸರ್ಗಿಕ ಕಿಣ್ವಗಳನ್ನು ಸೇರಿಸುವ ಮೂಲಕ ಈ ಹುಲ್ಲನ್ನು ಸಾವಯವ ಗೊಬ್ಬರವಾಗಿ ಪರಿವರ್ತಿಸುತ್ತಾರೆ.
 2. ಈ ಯೋಜನೆಯು ಗ್ರಾಮೀಣ ಯುವಕರಿಗೆ ‘ಉದ್ಯೋಗ’ ಸೃಷ್ಟಿಸುತ್ತದೆ.
 3. ಜಮೀನಿನಿಂದ ಹತ್ತಿರದ ಗೌತನ್‌ಗೆ ‘ಪರಾಲಿ’ಯನ್ನು ಸಾಗಿಸಲು ಸರ್ಕಾರದಿಂದ ಸಹಾಯವನ್ನು ಒದಗಿಸಲಾಗುತ್ತದೆ.
 4. ಛತ್ತೀಸಗಡದಲ್ಲಿ ಇದುವರೆಗೆ 2,000 ಗೌತನ್‌ಗಳನ್ನು ಯಶಸ್ವಿಯಾಗಿ ಅಭಿವೃದ್ಧಿಪಡಿಸಲಾಗಿದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ವನ್ನಿಯಾರ್ ಗಳು ಎಂದರೆ ಯಾರು?

(Who are the Vanniyars?)

ತಮಿಳುನಾಡಿನಲ್ಲಿ ವನ್ನಿಯಾರ್‌ಗಳು ಅತಿ ದೊಡ್ಡ ಮತ್ತು ಅತ್ಯಂತ ಸಂಘಟಿತ ಹಿಂದುಳಿದ ಸಮುದಾಯಗಳಲ್ಲಿ ಒಂದಾಗಿದೆ. 1980 ರ ದಶಕದ ಮಧ್ಯಭಾಗದಲ್ಲಿ ಸಮುದಾಯವು ರಾಜ್ಯದಲ್ಲಿ 20% ಮತ್ತು ಕೇಂದ್ರ ಸೇವೆಗಳಲ್ಲಿ 2% ಮೀಸಲಾತಿಗೆ ಒತ್ತಾಯಿಸಿ ಬೃಹತ್ ಪ್ರತಿಭಟನೆಗಳನ್ನು ನಡೆಸಿತು.

ಸುದ್ದಿಯಲ್ಲಿರಲು ಕಾರಣ?

ತಮಿಳುನಾಡು ಸರ್ಕಾರವು ‘ಅತ್ಯಂತ ಹಿಂದುಳಿದ ಜಾತಿ (Most Backward Caste – MBC) ವನ್ನಿಯಾರ್’ಗೆ ಒದಗಿಸಿದ 10.5% ವಿಶೇಷ ಆಂತರಿಕ ಮೀಸಲಾತಿಯನ್ನು ಮದ್ರಾಸ್ ಹೈಕೋರ್ಟ್ ರದ್ದುಗೊಳಿಸಿದೆ.

 1. ಈ ಮೀಸಲಾತಿ ನೀಡಿಕೆಯು ಸಂವಿಧಾನದ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ನ್ಯಾಯಾಲಯ ಹೇಳಿದೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos