Print Friendly, PDF & Email

[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 4ನೇ ನವೆಂಬರ 2021

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ತುರ್ತು ಬಳಕೆಗಾಗಿ WHO ಅನುಮೋದನೆಯನ್ನು ಪಡೆದ ಭಾರತದ Covaxin ಲಸಿಕೆ.

2. ಭಾರತದ ಬೆಂಬಲ ಕೋರಿದ ಪ್ಯಾಲೆಸ್ತೀನ್ ಪ್ರಧಾನಿ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ಗಳು (InvITs) ಯಾವುವು?

2. ತೆರಿಗೆ ವಿವಾದವನ್ನು ಕೊನೆಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿದ ಕೈರ್ನ್.

3. ಪೊಲೀಸ್ ಸುಧಾರಣೆಗಳ ಕುರಿತು 2006 ರ ಸುಪ್ರೀಂ ಕೋರ್ಟ್ ತೀರ್ಪು.

 

ಸಾಮಾನ್ಯ ಅಧ್ಯಯನ ಪತ್ರಿಕೆ 4:

1. COP26 ಶೃಂಗಸಭೆಯಲ್ಲಿ, ಹವಾಮಾನ ವೈಪರೀತ್ಯವನ್ನು ತಡೆಗಟ್ಟಲು ತಕ್ಷಣವೇ ಕ್ರಮ ಕೈಗೊಳ್ಳಿ ಎಂದು ಜಾಗತಿಕ ನಾಯಕರಿಗೆ ತಮಿಳುನಾಡು ಬಾಲಕಿಯ ಸವಾಲು.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ಸಂಗತಿಗಳು:

ಕಾಮೆಂಗ್ ನದಿ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ತುರ್ತು ಬಳಕೆಗಾಗಿ WHO ಅನುಮೋದನೆಯನ್ನು ಪಡೆದ ಭಾರತದ Covaxin ಲಸಿಕೆ:


(Covaxin gets WHO nod for emergency use)

ಸಂದರ್ಭ:

ವಿಶ್ವ ಆರೋಗ್ಯ ಸಂಸ್ಥೆ (WHO) ಯು ಹೈದರಾಬಾದ್ ಮೂಲದ ಭಾರತ್ ಬಯೋಟೆಕ್‌ ತಯಾರಿಸಿದ ಕೋವಾಕ್ಸಿನ್ ಲಸಿಕೆಗೆ ಪೂರ್ವ ಅರ್ಹತೆ ಅಥವಾ Covaxin ಲಸಿಕೆಯನ್ನು ತುರ್ತು ಬಳಕೆ ಪಟ್ಟಿಗೆ ಸೇರಿಸಲು ಅನುಮತಿಯನ್ನು (Emergency Use Listing – EUL) ನೀಡಿದೆ.

ದಯವಿಟ್ಟು ಗಮನಿಸಿ:

 1. ವಿಶ್ವ ಆರೋಗ್ಯ ಸಂಸ್ಥೆಯ ಸ್ವತಂತ್ರ ತಾಂತ್ರಿಕ ಸಲಹಾ ಸಮಿತಿಯು (Technical Advisory Group-TAG) ಕೋವಾಕ್ಸಿನ್ ಅನ್ನು ತುರ್ತು ಬಳಕೆಯ ಪಟ್ಟಿಗೆ ಶಿಫಾರಸು ಮಾಡಿದ ಬೆನ್ನಲ್ಲೇ WHO ಈ ಅನುಮೋದನೆಯನ್ನು ನೀಡಿದೆಯೆಂದು ಭಾರತ್ ಬಯೋಟೆಕ್ ಕಂಪನಿಯು ತಿಳಿಸಿದೆ.
 2. ಕೋವಾಕ್ಸಿನ್ ಲಸಿಕೆಗೆ WHO ದ ಅನುಮೋದನೆಯನ್ನು ಅಕ್ಟೋಬರ್ 26ರಂದು ನಿರೀಕ್ಷಿಸಲಾಗಿತ್ತು ಆದರೆ ಈ ಲಸಿಕೆಯ ಅಂತಿಮ ಗುಣ ದೋಷಗಳನ್ನು ಕುರಿತು ಮೌಲ್ಯಮಾಪನಮಾಡಲು ಭಾರತ್ ಬಯೋಟೆಕ್‌ನಿಂದ ಹೆಚ್ಚುವರಿ ಸ್ಪಷ್ಟೀಕರಣಗಳನ್ನು ಕೋರಿ ತನ್ನ ನಿರ್ಧಾರವನ್ನು ಮುಂದೂಡಿತ್ತು.
 3. ಇದುವರೆಗೆ ಆರು ಲಸಿಕೆಗಳನ್ನು ವಿಶ್ವ ಆರೋಗ್ಯ ಸಂಸ್ಥೆಯ ‘ತುರ್ತು ಬಳಕೆ ಪಟ್ಟಿ’ (EUL) ಗೆ ಸೇರಿಸಲಾಗಿದೆ,ಅವುಗಳು: AstraZeneca’s Covishield, Moderna’s mRNA-1273, Sinopharm’s BBIBP-CorV, Sinovac’s CoronaVac, Pfizer/BioNTech’s Comirnaty, and Johnson & Johnson’s vaccine.

current affairs

 

ಹಿನ್ನೆಲೆ:

ಭಾರತದ ಸ್ಥಳೀಯ ಲಸಿಕೆ ‘ಕೋವಾಕ್ಸಿನ್’ ಗಾಗಿ ‘ತುರ್ತು ಬಳಕೆಯ ಹಕ್ಕುಗಳನ್ನು’ ಪಡೆಯುವಲ್ಲಿ ವಿಳಂಬವಾಗುತ್ತಿದೆ ಏಕೆಂದರೆ WHO ನಿಂದ  ‘ಕೋವಾಕ್ಸಿನ್’ ಕುರಿತು ಇನ್ನೂ ಕೆಲವು ಪ್ರಶ್ನೆಗಳನ್ನು ಎತ್ತಲಾಗಿದೆ ಮತ್ತು ಸ್ಪಷ್ಟೀಕರಣಕ್ಕಾಗಿ ಈ ಪ್ರಶ್ನೆಗಳನ್ನು ಭಾರತ್ ಬಯೋಟೆಕ್‌ಗೆ ಕಳುಹಿಸಲಾಗಿತ್ತು.

 1. ಲಸಿಕೆಯನ್ನು ಮೌಲ್ಯಮಾಪನ ಮಾಡುವ ಮೊದಲು, ‘ಹೈದರಾಬಾದ್ ಮೂಲದ ಜೈವಿಕ ತಂತ್ರಜ್ಞಾನ ಕಂಪನಿ’ ಯಿಂದ ಹೆಚ್ಚುವರಿ ಮಾಹಿತಿಗಾಗಿ ಕಾಯಲಾಗುತ್ತಿದೆ ಎಂದು ಈ ಮೊದಲು ವಿಶ್ವ ಆರೋಗ್ಯ ಸಂಸ್ಥೆಯು ಹೇಳಿತ್ತು.

WHO ಅನುಮೋದನೆಯ ಅಗತ್ಯತೆ:

 1. ‘ಭಾರತ್ ಬಯೋಟೆಕ್’ ತಯಾರಿಸಿದ ‘ಕೊವಾಕ್ಸಿನ್’ ಲಸಿಕೆಯು ‘ವಿಶ್ವ ಆರೋಗ್ಯ ಸಂಸ್ಥೆ’ಯ  ‘ಪೂರ್ವ-ಅರ್ಹತೆ’ ಅಥವಾ ‘ತುರ್ತು ಬಳಕೆಯ ಪಟ್ಟಿ’ (ಇಯುಎಲ್) ಅನುಮೋದನೆಯನ್ನು ಪಡೆದ ನಂತರ, ಈ ಲಸಿಕೆಯನ್ನು ಹಾಕಿಸಿಕೊಂಡ ವ್ಯಕ್ತಿಗಳಿಗೆ ಯಾವ ದೇಶದಲ್ಲಿ ಸಂಪೂರ್ಣವಾಗಿ ಲಸಿಕಾಕರಣಕ್ಕೆ ಒಳಪಟ್ಟ ಜನರಿಗೆ ಮಾತ್ರ ದೇಶವನ್ನು ಪ್ರವೇಶಿಸಲು ಅವಕಾಶವಿದೆಯೋ ಆ ದೇಶಗಳಿಗೆ ಪ್ರಯಾಣಿಸಲು ಅವಕಾಶವಿರುತ್ತದೆ.
 2. ಇದರ ಹೊರತಾಗಿ, WHO ನ ಅನುಮತಿಯನ್ನು ಪಡೆದ ನಂತರ, ‘ಭಾರತ್ ಬಯೋಟೆಕ್’ ತನ್ನ ಲಸಿಕೆಯನ್ನು WHO ಅನುಮೋದಿತ ಲಸಿಕೆಗಳನ್ನು ಮಾತ್ರ ಬಳಸುತ್ತಿರುವ ದೇಶಗಳಿಗೆ ರಫ್ತು ಮಾಡಬಹುದಾಗಿದೆ.
 3. ಯಾವುದೇ ಲಸಿಕೆ ಉತ್ಪಾದನಾ ಕಂಪನಿಯು ‘ಕೋವಾಕ್ಸ್’ (COVAX) ಅಥವಾ ‘ಇಂಟರ್ನ್ಯಾಷನಲ್ ಪ್ರೊಕ್ಯೂರ್ಮೆಂಟ್’ (International Procurement) ನಂತಹ ಜಾಗತಿಕ ಸೌಲಭ್ಯಗಳಿಗೆ ಲಸಿಕೆಗಳನ್ನು ಪೂರೈಸಲು, ಆ ಲಸಿಕೆಗಳು ವಿಶ್ವ ಆರೋಗ್ಯ ಸಂಸ್ಥೆ (WHO) ಯ‘ಪೂರ್ವ ಅರ್ಹತೆಗೆ’ ಒಳಪಟ್ಟಿರಬೇಕು ಅಥವಾ ವಿಶ್ವ ಆರೋಗ್ಯ ಸಂಸ್ಥೆಯ ‘ತುರ್ತು ಬಳಕೆ ಪಟ್ಟಿ (Emergency Use Listing – EUL)’ ಯಲ್ಲಿ ಸೇರಿರುವುದು ಕಡ್ಡಾಯವಾಗಿದೆ.

current affairs

 

‘ಕೊವಾಕ್ಸಿನ್’ ಲಸಿಕೆಯನ್ನು EUL ಪಟ್ಟಿಗೆ ಸೇರಿಸಿದ್ದರ ಮಹತ್ವ:

 1. ‘ಕೊವಾಕ್ಸಿನ್’ ಲಸಿಕೆಯನ್ನು18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ನಾಲ್ಕು ವಾರಗಳ ಅಂತರದಲ್ಲಿ ಎರಡು ಡೋಸ್‌ಗಳನ್ನು ನೀಡಲು ತುರ್ತು ಬಳಕೆ ಪಟ್ಟಿಗೆ ಸೇರಿಸಲು (EUL) ಅನುಮತಿಯನ್ನು ನೀಡಲಾಗಿದೆ.
 2. ಆದಾಗ್ಯೂ, ಈ Covaxin ಲಸಿಕೆಯನ್ನು ಮಕ್ಕಳಿಗೆ ನೀಡುವ ಕುರಿತು ಯಾವುದೇ ಶಿಫಾರಸು ಮಾಡಲಾಗಿಲ್ಲ ಮತ್ತು ಗರ್ಭಿಣಿ ಮಹಿಳೆಯರಿಗೆ ನೀಡಲು ಲಸಿಕೆಯ ಕುರಿತು ಲಭ್ಯವಿರುವ ದತ್ತಾಂಶವು ಅದರ ಸುರಕ್ಷತೆ ಅಥವಾ ಪರಿಣಾಮಕಾರಿತ್ವವನ್ನು ನಿರ್ಣಯಿಸಲು ಸಾಕಾಗುವುದಿಲ್ಲ.
 3. ಈ ಕ್ರಮವು Covaxin ಲಸಿಕೆಯನ್ನು ಪಡೆದ ಭಾರತೀಯರಿಗೆ ಅಂತರರಾಷ್ಟ್ರೀಯ ಪ್ರಯಾಣವನ್ನು ಸರಾಗಗೊಳಿಸುವ ನಿರೀಕ್ಷೆಯನ್ನು ಹೊಂದಿದೆ ಆದರೆ ತಮ್ಮ ನಿಯಂತ್ರಕ ಪ್ರಕ್ರಿಯೆಗಳ ಮೂಲಕ ಕೋವಾಕ್ಸಿನ್ ಲಸಿಕೆಗೆ ಮಾನ್ಯತೆ ನೀಡುವ ದೇಶಗಳ ಒಪ್ಪಿಗೆಗೆ ಇದು ಒಳಪಟ್ಟಿರುತ್ತದೆ ಎಂದು ತಜ್ಞರು ಹೇಳುತ್ತಾರೆ.

 

ಕೋವಿಡ್ 19 ವಿರುದ್ಧ Covaxin ಲಸಿಕೆಯ ಪರಿಣಾಮಕಾರತ್ವ:

Covaxin ಲಸಿಕೆಯು ಯಾವುದೇ ತೀವ್ರತೆಯ Covid-19 ವಿರುದ್ಧ 14 ಅಥವಾ ಅದಕ್ಕಿಂತ ಹೆಚ್ಚಿನ ದಿನಗಳ ಬಳಿಕ ನೀಡಲಾಗುವ ಎರಡನೇ ಡೋಸ್ ನಂತರ 78% ಪರಿಣಾಮಕಾರಿತ್ವವನ್ನು ಹೊಂದಿದೆ ಎಂದು ಕಂಡುಬಂದಿದೆ, ಮತ್ತು ಸುಲಭವಾದ ಶೇಖರಣಾ ಅವಶ್ಯಕತೆಗಳ ಕಾರಣದಿಂದಾಗಿ ಕಡಿಮೆ ಮತ್ತು ಮಧ್ಯಮ-ಆದಾಯದ ದೇಶಗಳಿಗೆ Covaxin ಲಸಿಕೆಯು ಅತ್ಯಂತ ಸೂಕ್ತವಾಗಿದೆ.

Covaxin ಲಸಿಕೆಯ ಕುರಿತು:

Covaxin SARS-CoV-2 ವಿರುದ್ಧ ಸಂಪೂರ್ಣ ವೈರಿಯನ್-ನಿಷ್ಕ್ರಿಯ ಲಸಿಕೆ (virion-inactivated vaccine) ಯಾಗಿದೆ, ಇದನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ ಮತ್ತು ಪುಣೆಯ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗಿದೆ.

 1. ಕೋವಾಕ್ಸಿನ್ ಅನ್ನು ಭಾರತ್ ಬಯೋಟೆಕ್ ಸಂಸ್ಥೆ ಅಭಿವೃದ್ಧಿಪಡಿಸಿದೆ ಮತ್ತು ಇದು ಕೋವಿಡ್ -19 ವಿರುದ್ಧ ಭಾರತದ ಮೊದಲ ಸ್ಥಳೀಯ ಲಸಿಕೆಯಾಗಿದೆ.
 2. ಭಾರತ್ ಬಯೋಟೆಕ್ ಈ ಲಸಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ಮತ್ತು ಪುಣೆ ಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.
 3. ಇದು ನಿಷ್ಕ್ರಿಯಗೊಳಿಸಿದ ಲಸಿಕೆಯಾಗಿದ್ದು, ರೋಗವನ್ನು ಉಂಟುಮಾಡುವ ಸಜೀವ ಸೂಕ್ಷ್ಮಾಣುಜೀವಿಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ (ಕೊಲ್ಲುವ) ಅಭಿವೃದ್ಧಿ ಪಡಿಸಲಾಗುತ್ತದೆ.
 4. ಇದುರೋಗಕಾರಕದ ಪುನರಾವರ್ತನೆಯ ಸಾಮರ್ಥ್ಯವನ್ನು ನಾಶಪಡಿಸುತ್ತದೆ ಆದರೆ ರೋಗನಿರೋಧಕ ವ್ಯವಸ್ಥೆಯು ಅದನ್ನು ಇನ್ನೂ ಗುರುತಿಸಲು ಸಾಧ್ಯವಾಗುವಂತೆ ಅದನ್ನು ಹಾಗೇ ಇಡುವ ಮೂಲಕ ಪ್ರತಿರಕ್ಷಣಾ ವ್ಯವಸ್ಥೆಯನ್ನು ರೂಪಿಸುತ್ತದೆ.

 

ತುರ್ತು ಬಳಕೆ ಅನುಮೋದನೆ (EUA) ಎಂದರೇನು?

ಲಸಿಕೆ ಪೂರೈಕೆಯಲ್ಲಿನ COVAX ಉಪಕ್ರಮಕ್ಕೆ EUL ಪೂರ್ವಾಪೇಕ್ಷಿತವಾಗಿದೆ ಮತ್ತು COVID-19 ಲಸಿಕೆಗಳನ್ನು ಆಮದು ಮಾಡಿಕೊಳ್ಳಲು ಮತ್ತು ನಿರ್ವಹಿಸಲು ದೇಶಗಳು ತಮ್ಮದೇ ಆದ ನಿಯಂತ್ರಕ ಅನುಮೋದನೆಯನ್ನು ತ್ವರಿತಗೊಳಿಸಲು ಅನುಮತಿಸುತ್ತದೆ.

 1. ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಯಿಂದ ಪೀಡಿತ ಜನರಿಗೆ ಈ ಉತ್ಪನ್ನಗಳ ಲಭ್ಯತೆಯನ್ನು ತ್ವರಿತಗೊಳಿಸುವ ಅಂತಿಮ ಗುರಿಯೊಂದಿಗೆ ಪರವಾನಗಿ ಪಡೆಯದ ಲಸಿಕೆಗಳು, ಚಿಕಿತ್ಸಕಗಳು ಮತ್ತು ಇನ್ ವಿಟ್ರೊ ಡಯಾಗ್ನೋಸ್ಟಿಕ್‌ಗಳನ್ನು ನಿರ್ಣಯಿಸಲು ಮತ್ತು ಪಟ್ಟಿ ಮಾಡಲು ಇದು ಅಪಾಯ-ಆಧಾರಿತ ಕಾರ್ಯವಿಧಾನವಾಗಿದೆ.

WHO ತುರ್ತು ಬಳಕೆ ಪಟ್ಟಿ (EUL) ಬಗ್ಗೆ:

ವಿಶ್ವ ಆರೋಗ್ಯ ಸಂಸ್ಥೆಯ ‘ತುರ್ತು ಬಳಕೆ ಪಟ್ಟಿ- EUL’, ಎನ್ನುವುದು, ಪರವಾನಗಿ ಪಡೆಯದ ಲಸಿಕೆಗಳು, ಚಿಕಿತ್ಸಕ ವಿಧಾನಗಳು (Therapeutics) ಮತ್ತು ದೇಹದ ಹೊರಗೆ ‘ಇನ್ ವಿಟ್ರೊ ಡಯಾಗ್ನೋಸ್ಟಿಕ್ಸ್’(in vitro diagnostics)  ಅನ್ನು ನಿರ್ಣಯಿಸಿ ಪಟ್ಟಿ ಮಾಡಲು ಅಪಾಯ ಆಧಾರಿತ ಕಾರ್ಯವಿಧಾನವಾಗಿದೆ. ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯಿಂದ ಬಳಲುತ್ತಿರುವ ಜನರಿಗೆ ಈ ಉತ್ಪನ್ನಗಳನ್ನು ಒದಗಿಸುವ ಪ್ರಕ್ರಿಯೆಯನ್ನು ತ್ವರಿತ ಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

 1. ಲಭ್ಯವಿರುವ ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಕಾರಿತ್ವ ಮತ್ತು ಕಾರ್ಯಕ್ಷಮತೆಯ ದತ್ತಾಂಶದ ಆಧಾರದ ಮೇಲೆ ನಿರ್ದಿಷ್ಟ ಉತ್ಪನ್ನಗಳನ್ನು ಬಳಸುವ ಸ್ವೀಕಾರಾರ್ಹತೆಯನ್ನು ನಿರ್ಧರಿಸಲು ಈ ಪಟ್ಟಿಯು ವಿಶ್ವಸಂಸ್ಥೆಯ ಆಸಕ್ತ ಖರೀದಿ ಏಜೆನ್ಸಿಗಳು ಮತ್ತು ಸದಸ್ಯ ರಾಷ್ಟ್ರಗಳಿಗೆ ಸಹಾಯ ಮಾಡುತ್ತದೆ.

‘ತುರ್ತು ಬಳಕೆ ಪಟ್ಟಿಗೆ’ ಸೇರ್ಪಡೆಗೊಳ್ಳುವದರಿಂದ ಆಗುವ ಪ್ರಯೋಜನಗಳು:

ವಿಶ್ವ ಆರೋಗ್ಯ ಸಂಸ್ಥೆಯ ‘ತುರ್ತು ಬಳಕೆ ಪಟ್ಟಿ (Emergency Use Listing- EUL)’ ಯಲ್ಲಿ ಕೋವಾಕ್ಸಿನ್ ಅನ್ನು ಪರಿಚಯಿಸುವುದರಿಂದ ಭಾರತವು ಅಭಿವೃದ್ಧಿಪಡಿಸಿದ ಮತ್ತು ಉತ್ಪಾದಿಸುವ ಲಸಿಕೆಗೆ ಸಾಕಷ್ಟು ಉತ್ತೇಜನ ಸಿಗುತ್ತದೆ, ಮತ್ತು ಈ ಪಟ್ಟಿಯಲ್ಲಿ ಸೇರ್ಪಡೆಗೊಂಡ ಭಾರತದ ಮೊದಲ ಲಸಿಕೆ ಎಂಬ ಹೆಗ್ಗಳಿಕೆ ಇದರದಾಗುತ್ತದೆ.

ಕ್ಯಾಂಡಿಡೇಟ್ ಉತ್ಪನ್ನಗಳ ಅರ್ಹತೆ:

 1. ‘ತುರ್ತು ಬಳಕೆ ಪಟ್ಟಿ’ (EUL)ಯು ಮೂರು ಉತ್ಪನ್ನಗಳೊಂದಿಗೆ (ಲಸಿಕೆ, ಚಿಕಿತ್ಸಕ ಮತ್ತು ಇನ್ ವಿಟ್ರೊ ಡಯಾಗ್ನೋಸ್ಟಿಕ್ಸ್) ವ್ಯವಹರಿಸುತ್ತದೆ.
 2. ‘ತುರ್ತು ಬಳಕೆ ಪಟ್ಟಿ’ ಪ್ರಕ್ರಿಯೆಯ ಅಡಿಯಲ್ಲಿ ಮೌಲ್ಯಮಾಪನಕ್ಕೆ ಅರ್ಹತೆ ಪಡೆಯಲು ಈ ಪ್ರತಿಯೊಂದು ವಿಭಾಗಗಳಿಗೆ ನಿರ್ದಿಷ್ಟ ಮಾನದಂಡಗಳನ್ನು ನಿಗದಿಪಡಿಸಲಾಗಿದೆ.

ಇದಕ್ಕಾಗಿ ಈ ಕೆಳಗಿನ ಮಾನದಂಡಗಳನ್ನು ಪೂರೈಸುವುದು ಅವಶ್ಯಕ:

 1. ‘ತುರ್ತು ಬಳಕೆಯ ಪಟ್ಟಿಯಲ್ಲಿ’ ಉತ್ಪನ್ನವನ್ನು ಸೇರಿಸಲು ಅನ್ವಯಿಸಲಾದ ರೋಗವು ಒಂದು ಗಂಭೀರ ರೋಗ, ತಕ್ಷಣದ ಮಾರಣಾಂತಿಕ, ಏಕಾಏಕಿ, ಸಾಂಕ್ರಾಮಿಕ ರೋಗ ಅಥವಾ ಸಾಂಕ್ರಾಮಿಕ ರೋಗವನ್ನು ಹರಡುವ ಸಾಮರ್ಥ್ಯವನ್ನು ಹೊಂದಿರಬೇಕು. ಹೆಚ್ಚುವರಿಯಾಗಿ, ರೋಗವು ವ್ಯವಹರಿಸುವಂತಹ ‘ತುರ್ತು ಬಳಕೆ ಪಟ್ಟಿ’ ಮೌಲ್ಯಮಾಪನಕ್ಕೆ ಪರಿಗಣಿಸಲು ಉತ್ಪನ್ನವು ಸಮಂಜಸವಾದ ಆಧಾರವನ್ನು ಹೊಂದಿರಬೇಕು, ಉದಾ, ಜನಸಂಖ್ಯೆಯ ಯಾವುದೇ ಉಪವಿಭಾಗಕ್ಕೆ (ಉದಾ., ಮಕ್ಕಳು) ಯಾವುದೇ ಪರವಾನಗಿ ಪಡೆದ ಉತ್ಪನ್ನಗಳು ಲಭ್ಯವಿಲ್ಲ.
 2. ಅಸ್ತಿತ್ವದಲ್ಲಿರುವ ಉತ್ಪನ್ನಗಳು ರೋಗವನ್ನು ನಿರ್ಮೂಲನೆ ಮಾಡುವಲ್ಲಿ ಅಥವಾ ಏಕಾಏಕಿ ತಡೆಯುವಲ್ಲಿ ವಿಫಲವಾಗಿವೆ (ಲಸಿಕೆಗಳು ಮತ್ತು ಔಷಧಿಗಳ ಸಂದರ್ಭದಲ್ಲಿ).
 3. ಔಷಧಗಳು ಮತ್ತು ಲಸಿಕೆಗಳ ವಿಷಯದಲ್ಲಿ ಪ್ರಸ್ತುತ ಉತ್ತಮ ಉತ್ಪಾದನಾ ಅಭ್ಯಾಸಗಳ (Good Manufacturing Practices- GMP) ಮತ್ತು ‘ಇನ್ ವಿಟ್ರೊ ಡಯಾಗ್ನೋಸ್ಟಿಕ್ಸ್’ (IVD) ಸಂದರ್ಭದಲ್ಲಿ ಕ್ರಿಯಾತ್ಮಕ ‘ಗುಣಮಟ್ಟ ನಿರ್ವಹಣಾ ವ್ಯವಸ್ಥೆ’ (Quality Management System (QMS) ಗೆ ಅನುಗುಣವಾಗಿ ಉತ್ಪನ್ನವನ್ನು ತಯಾರಿಸಲಾಗುತ್ತದೆ.
 4. ಉತ್ಪನ್ನದ ಅಭಿವೃದ್ಧಿಯನ್ನು ಪೂರ್ಣಗೊಳಿಸಲು ಅರ್ಜಿದಾರನು ಬದ್ಧನಾಗಿರಬೇಕು (IVD ಯ ಸಂದರ್ಭದಲ್ಲಿ ಉತ್ಪನ್ನದ ಪರಿಶೀಲನೆ ಮತ್ತು ಮೌಲ್ಯಮಾಪನ) ಮತ್ತು ಉತ್ಪನ್ನ ಪರವಾನಗಿ ಪಡೆದ ನಂತರ, ವಿಶ್ವ ಆರೋಗ್ಯ ಸಂಸ್ಥೆಯಿಂದ ಪೂರ್ವಭಾವಿತ್ವವನ್ನು (prequalification) ಪಡೆಯಲು ಉತ್ಪನ್ನಕ್ಕೆ ಅರ್ಜಿ ಸಲ್ಲಿಸುವುದು ಅವಶ್ಯಕ.

current affairs

 

ವಿಷಯಗಳು:ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಭಾರತದ ಬೆಂಬಲ ಕೋರಿದ ಪ್ಯಾಲೆಸ್ತೀನ್ ಪ್ರಧಾನಿ:


(Palestinian PM calls for Indian support)

ಸಂದರ್ಭ:

ಇತ್ತೀಚೆಗೆ, ಹವಾಮಾನ ವೈಪರಿತ್ಯದ ಕುರಿತ COP26 ಶೃಂಗಸಭೆಯ ಸಂದರ್ಭದಲ್ಲಿ ಭಾರತ ಮತ್ತು ಪ್ಯಾಲೆಸ್ತೀನ್ ಪ್ರಧಾನ ಮಂತ್ರಿಗಳು ಗ್ಲಾಸ್ಗೋದಲ್ಲಿ ದ್ವಿಪಕ್ಷೀಯ ಮಾತುಕತೆ(ಸಭೆ)ಗಳನ್ನು ನಡೆಸಿದರು.

ಸಭೆಯ ಫಲಿತಾಂಶಗಳು:

 1. “ಎಲ್ಲಾ ಸಂಬಂಧಿತ ಪಕ್ಷಗಳೊಂದಿಗೆ” ಸಹಕಾರವನ್ನು ಕಾಪಾಡಿಕೊಳ್ಳುವ ಮೂಲಕ ಪಶ್ಚಿಮ ಏಷ್ಯಾದಲ್ಲಿ ಸ್ಥಿರವಾದ ಪಾತ್ರವನ್ನು ವಹಿಸುವಂತೆ ಪ್ಯಾಲೆಸ್ತೀನ್ ಭಾರತವನ್ನು ಕೇಳಿಕೊಂಡಿದೆ.
 2. ಭಾರತವು ಪ್ಯಾಲೇಸ್ಟಿನಿಯನ್ ಜನರ ಹಕ್ಕುಗಳನ್ನು ಬೆಂಬಲಿಸುವ ಐತಿಹಾಸಿಕ ಸಂಪ್ರದಾಯವನ್ನು ಹೊಂದಿದೆ ಮತ್ತು ಅದರ ತಾಂತ್ರಿಕ ಬೆಂಬಲವು “ರಾಜಕೀಯ ಬೆಂಬಲಕ್ಕೆ ಸಮಾನಾಂತರವಾಗಿರಬೇಕು” ಎಂದು ಅದು ಹೇಳಿದೆ.
 3. ಭಾರತವು ಪ್ಯಾಲೆಸ್ತೀನ್ ಜನರ ಸ್ವ-ನಿರ್ಣಯದ ಹಕ್ಕನ್ನು ಮತ್ತು ಪ್ಯಾಲೆಸ್ತೀನ್ ಸ್ವತಂತ್ರ ರಾಷ್ಟ್ರದ ಸ್ಥಾಪನೆಯನ್ನು ಬೆಂಬಲಿಸಬೇಕು.

 

ಪ್ಯಾಲೆಸ್ತೀನ್ ಗೆ ಭಾರತದ ಬೆಂಬಲ ಏಕೆ ಮಹತ್ವದ್ದಾಗಿದೆ?

ಭಾರತವು 2021-22 ರ ಅವಧಿಗೆ ಭದ್ರತಾ ಮಂಡಳಿಯ ಖಾಯಂ ಅಲ್ಲದ ಸದಸ್ಯ ದೇಶವಾಗಿ ಸೇವೆ ಸಲ್ಲಿಸುತ್ತಿದೆ ಮತ್ತು 2022-24 ರ ಅವಧಿಗೆ ಮಾನವ ಹಕ್ಕುಗಳ ಮಂಡಳಿಗೆ ಮರು ಆಯ್ಕೆಯಾಗಿದೆ.

ಅಲ್ಲದೆ, ಇತ್ತೀಚಿನ ವರ್ಷಗಳಲ್ಲಿ, ಭಾರತವು ವಿಶ್ವಸಂಸ್ಥೆಯಲ್ಲಿ ಪ್ಯಾಲೆಸ್ತೀನ್ ಅನ್ನು ಬೆಂಬಲಿಸುವ ಸಂಪ್ರದಾಯವನ್ನು ಮುರಿದಿದೆ.

 1. 2019 ರಲ್ಲಿ, ಭಾರತವು ECOSOC (ಆರ್ಥಿಕ ಮತ್ತು ಸಾಮಾಜಿಕ ಮಂಡಳಿ) ಯಲ್ಲಿ ಇಸ್ರೇಲ್ ಪರವಾಗಿ ಮತ ಚಲಾಯಿಸುವ ಮೂಲಕ ಶಾಹೆದ್ (Shahed)ಎಂಬ ಪ್ಯಾಲೇಸ್ಟಿನಿಯನ್ ಸಂಘಟನೆಗೆ ವಿಶ್ವಸಂಸ್ಥೆಯ ವೀಕ್ಷಕ ಸ್ಥಾನಮಾನ ನೀಡುವುದನ್ನು ನಿರಾಕರಿಸಿತು.
 2. ಜೂನ್‌ನಲ್ಲಿ, ಮಾನವ ಹಕ್ಕುಗಳ ಮಂಡಳಿಯಲ್ಲಿ ಗಾಜಾ ಪಟ್ಟಿಯಲ್ಲಿ ಇಸ್ರೇಲ್ ಕ್ರಮಗಳ ತನಿಖೆಗೆ ಕರೆ ನೀಡುವ ನಿರ್ಣಯದ ಮೇಲಿನ ಮತದಾನದ ಸಮಯದಲ್ಲಿ ಭಾರತವು ಮತದಾನದಿಂದ ದೂರವುಳಿಯಿತು, ಇದು ಭಾರತದ ಗೈರುಹಾಜರಿಯನ್ನು ಟೀಕಿಸುವ ಪತ್ರವನ್ನು ಬರೆದ ಪ್ಯಾಲೆಸ್ತೀನ್ ವಿದೇಶಾಂಗ ಸಚಿವ ರಿಯಾದ್ ಅಲ್ ಮಾಲ್ಕಿಯಿಂದ ತೀವ್ರ ಪ್ರತಿಭಟನೆಗೆ ಕಾರಣವಾಯಿತು.

ಭಾರತ-ಪ್ಯಾಲೆಸ್ತೀನ್:

ಪ್ಯಾಲೇಸ್ಟಿನಿಯನ್ ಉದ್ದೇಶಕ್ಕಾಗಿ ಭಾರತದ ಬೆಂಬಲವು ನಮ್ಮ ರಾಷ್ಟ್ರದ ವಿದೇಶಾಂಗ ನೀತಿಯ ಅವಿಭಾಜ್ಯ ಅಂಗವಾಗಿದೆ.

1975 ರಲ್ಲಿ, ಭಾರತವು, ಪ್ಯಾಲೆಸ್ಟೈನ್ ಲಿಬರೇಶನ್ ಆರ್ಗನೈಜೇಷನ್ (PLO) ಅನ್ನು ಪ್ಯಾಲೇಸ್ಟಿನಿಯನ್ ಜನರ ಏಕೈಕ ಪ್ರತಿನಿಧಿಯಾಗಿ ಗುರುತಿಸಿದ ಮೊದಲ ಅರಬ್-ಅಲ್ಲದ ರಾಷ್ಟ್ರವಾಯಿತು. ಭಾರತವು PLO ಅನ್ನು ದೆಹಲಿಯಲ್ಲಿ ಕಚೇರಿ ತೆರೆಯಲು ಆಹ್ವಾನಿಸಿತು ಮತ್ತು ಐದು ವರ್ಷಗಳ ನಂತರ ಅದಕ್ಕೆ ರಾಜತಾಂತ್ರಿಕ ಸ್ಥಾನಮಾನವನ್ನು ನೀಡಿತು.

 1. ಪ್ಯಾಲೆಸ್ತೀನ್ ಕುರಿತ ಭಾರತದ ನಿಲುವು ಸ್ವತಂತ್ರ ಮತ್ತು ಸ್ಥಿರವಾಗಿದೆ. ಇದು ಭಾರತದ ಸ್ವತಂತ್ರ ದೃಷ್ಟಿಕೋನಗಳು ಮತ್ತು ಆಸಕ್ತಿಗಳಿಂದ ರೂಪುಗೊಂಡಿದೆ ಮತ್ತು ಯಾವುದೇ ಮೂರನೇ ದೇಶದಿಂದ ನಿರ್ಧರಿಸಲ್ಪಟ್ಟಿಲ್ಲ.

ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷ- ಐತಿಹಾಸಿಕ ಹಿನ್ನೆಲೆ:

 1. ಜೋರ್ಡಾನ್ ನದಿ ಮತ್ತು ಮೆಡಿಟರೇನಿಯನ್ ಸಮುದ್ರದ ನಡುವಿನ ತುಂಡು ಭೂಮಿಯಲ್ಲಿ ಯಹೂದಿಗಳು ಮತ್ತು ಅರಬ್ಬರ ನಡುವಿನ ಸಂಘರ್ಷಗಳು 100 ಕ್ಕೂ ಹೆಚ್ಚು ವರ್ಷಗಳಿಂದ ಮುಂದುವರೆದಿದೆ.
 2. 1882 ಮತ್ತು 1948 ರ ನಡುವೆ, ಪ್ರಪಂಚದಾದ್ಯಂತದ ಯಹೂದಿಗಳು ಪ್ಯಾಲೆಸ್ಟೈನ್‌ನಲ್ಲಿ ಒಟ್ಟುಗೂಡಿದರು. ಇತಿಹಾಸದಲ್ಲಿ, ಈ ಘಟನೆಯನ್ನು ಆಲಿಯಾಸ್ (Aliyahs) ಎಂದು ಕರೆಯಲಾಗುತ್ತದೆ.
 3. ನಂತರ 1917 ರಲ್ಲಿ, ಮೊದಲನೆಯ ಮಹಾಯುದ್ಧದ ನಂತರ ಒಟ್ಟೋಮನ್ ಸಾಮ್ರಾಜ್ಯ ಪತನಗೊಂಡಿತು ಮತ್ತು ಬ್ರಿಟನ್ ಪ್ಯಾಲೆಸ್ಟೀನ್ ಮೇಲೆ ಹಿಡಿತ ಸಾಧಿಸಿತು.
 4. ಅಲ್ಪಸಂಖ್ಯಾತ ಯಹೂದಿಗಳು ಮತ್ತು ಬಹುಸಂಖ್ಯಾತ ಅರಬ್ಬರು ಈ ಪ್ರದೇಶದಲ್ಲಿ ವಾಸಿಸುತ್ತಿದ್ದರು.
 5. ಈ ಪ್ರದೇಶವನ್ನು ಬ್ರಿಟನ್ ಸ್ವಾಧೀನಪಡಿಸಿಕೊಂಡ ನಂತರ, ಯಹೂದಿಗಳನ್ನು ಪ್ಯಾಲೆಸ್ಟೈನ್‌ನಲ್ಲಿ ನೆಲೆಗೊಳಿಸುವ ಉದ್ದೇಶದಿಂದ ಬಾಲ್ಫೋರ್ ಘೋಷಣೆ (Balfour Declaration) ಹೊರಡಿಸಲಾಯಿತು. ಆದರೆ, ಆ ಸಮಯದಲ್ಲಿ ಪ್ಯಾಲೆಸ್ಟೈನ್ ನಲ್ಲಿ ಅರಬ್ಬರು ಬಹುಸಂಖ್ಯಾತರಾಗಿದ್ದರು.
 6. ಯಹೂದಿಗಳು ಈ ‘ಬಾಲ್ಫೋರ್ ಘೋಷಣೆಯನ್ನು’ ಬೆಂಬಲಿಸಿದರೆ, ಪ್ಯಾಲೆಸ್ಟೀನಿಯಾದವರು ಅದನ್ನು ಸ್ವೀಕರಿಸಲು ನಿರಾಕರಿಸಿದರು.ಈ ಹತ್ಯಾಕಾಂಡದಲ್ಲಿ (Holocaust) ಸುಮಾರು 6 ಮಿಲಿಯನ್ ಯಹೂದಿಗಳು ಪ್ರಾಣ ಕಳೆದುಕೊಂಡರು, ಮತ್ತು ಈ ಘಟನೆಯು ಪ್ರತ್ಯೇಕ ಯಹೂದಿ ರಾಷ್ಟ್ರದ ಬೇಡಿಕೆಯನ್ನು ಹೆಚ್ಚಿಸಿತು.
 7. ಯಹೂದಿಗಳು ಪ್ಯಾಲೆಸ್ಟೈನ್ ಅನ್ನು ತಮ್ಮ ನೈಸರ್ಗಿಕ ಮಾತೃಭೂಮಿ ಎಂದು ಹೇಳಿಕೊಂಡರು, ಮತ್ತು ಇತರ ಅರಬ್ಬರು ಸಹ ತಮ್ಮ ಈ ಭೂಮಿಯನ್ನು ಬಿಟ್ಟುಕೊಡಲಿಲ್ಲ ಮತ್ತು ತಮ್ಮ ಹಕ್ಕನ್ನು ಉಳಿಸಿಕೊಂಡರು.
 8. ಅಂತರರಾಷ್ಟ್ರೀಯ ಸಮುದಾಯವು ಯಹೂದಿಗಳನ್ನು ಬೆಂಬಲಿಸಿತು.
 9. 1947 ರಲ್ಲಿ, ವಿಶ್ವಸಂಸ್ಥೆಯು ಪ್ಯಾಲೆಸ್ಟೈನ್ ಅನ್ನು ಪ್ರತ್ಯೇಕ ಯಹೂದಿ ದೇಶ ಮತ್ತು ಅರಬ್ ದೇಶವಾಗಿ ವಿಭಜಿಸುವ ಪರವಾಗಿ ಮತ ಚಲಾಯಿಸಿ, ಜೆರುಸಲೆಮ್ ಅನ್ನು ಅಂತರರಾಷ್ಟ್ರೀಯ ನಗರವನ್ನಾಗಿ ಮಾಡಿತು.
 10. ವಿಭಜನೆಯ ಈ ಯೋಜನೆಯನ್ನು ಯಹೂದಿ ನಾಯಕರು ಒಪ್ಪಿಕೊಂಡರು ಆದರೆ ಅರಬ್ ಕಡೆಯವರು ಅದನ್ನು ತಿರಸ್ಕರಿಸಿದರು ಮತ್ತು ಅದನ್ನು ಎಂದಿಗೂ ಅನುಷ್ಠಾನಗೊಳಿಸಲು ಮುಂದಾಗಲಿಲ್ಲ.

current affairs

 

ಮುಂದಿನ ದಾರಿ:

ಭಾರತದ ನಿರ್ಧಾರಗಳು ಇಸ್ರೇಲ್-ಪ್ಯಾಲೆಸ್ತೀನ್ ಸಮಸ್ಯೆಗಳ ಪ್ರೌಢ ತಿಳುವಳಿಕೆ ಮತ್ತು ಮೌಲ್ಯಮಾಪನವನ್ನು ಆಧರಿಸಿವೆ ಎಂಬ ಪ್ರವೃತ್ತಿ ಸ್ಪಷ್ಟವಾಗಿದೆ, ಮತ್ತು ಈಗ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಗಳು ಪರಸ್ಪರ ದಾಳಿ ಮತ್ತು ಪ್ರತಿದಾಳಿ ನಡೆಸುತ್ತಿರುವಾಗಲೂ ಇಸ್ರೇಲ್ ಮತ್ತು ಪ್ಯಾಲೆಸ್ತೀನ್ ಗಳ ವಿಷಯದಲ್ಲಿ  ಭಾರತವು ತನ್ನ ಅದೇ ಸಾಂಪ್ರದಾಯಿಕ ವಿಧಾನವನ್ನು ಅನುಸರಿಸುತ್ತಿದೆ. ಭಾರತವು ಯಾವುದೇ ಒಂದು ದೇಶದ ಪರ ನಿಲ್ಲಲು ನಿರಾಕರಿಸಿದೆ ಹಾಗೂ ಅವುಗಳಿಗೆ ಕದನ ವಿರಾಮವನ್ನು ಘೋಷಿಸಲು ಮತ್ತು ಮಾತುಕತೆಗೆ ಮುಂದಾಗಲು ಕರೆ ನೀಡಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು:ಹೂಡಿಕೆ ಮಾದರಿಗಳು.

ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ಗಳು (InvITs) ಯಾವುವು?


(What are Infrastructure investment trusts (InvITs)?

ಸಂದರ್ಭ:

ಕೆನಡಾದ ಪಿಂಚಣಿ ಯೋಜನೆ ಹೂಡಿಕೆ ಮಂಡಳಿ ಮತ್ತು ಒಂಟಾರಿಯೊ ಶಿಕ್ಷಕರ ಪಿಂಚಣಿ ಯೋಜನೆಯು ರಾಷ್ಟ್ರೀಯ ಹೆದ್ದಾರಿಗಳ ಪ್ರಾಧಿಕಾರದ (NHAI) ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ಗೆ (Infrastructure investment trusts-InvIT) ಆಧಾರ ಹೂಡಿಕೆದಾರರಾಗಿದ್ದು, ಪ್ರತಿಯೊಂದೂ 25% ಪಾಲನ್ನು ಪಡೆದುಕೊಳ್ಳುತ್ತದೆ.

ಜೊತೆಗೆ, NHAI ಕನಿಷ್ಠ 15% ಇಕ್ವಿಟಿಯನ್ನು ಉಳಿಸಿಕೊಳ್ಳುತ್ತದೆ ಮತ್ತು ಉಳಿದವುಗಳನ್ನು ದೇಶೀಯ ಸಾಂಸ್ಥಿಕ ಹೂಡಿಕೆದಾರರಿಗೆ ನೀಡಲಾಗುತ್ತದೆ.

ಹಿನ್ನೆಲೆ:

ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌(InvIT) ಆರಂಭದಲ್ಲಿ 390 ಕಿಲೋಮೀಟರ್‌ಗಳ ಒಟ್ಟು ಉದ್ದದೊಂದಿಗೆ ಐದು ಆಪರೇಟಿಂಗ್ ಟೋಲ್ ರಸ್ತೆಗಳ ಪೋರ್ಟ್‌ಫೋಲಿಯೊವನ್ನು ಹೊಂದಿರುತ್ತದೆ, ನಂತರ ಇದಕ್ಕೆ ಹೆಚ್ಚಿನ ರಸ್ತೆಗಳನ್ನು ಸೇರಿಸಲು ಯೋಜಿಸಲಾಗಿದೆ.

ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ಗಳು (InvITs) ಯಾವುವು?

InvITs ಗಳು ಮ್ಯೂಚುಯಲ್ ಫಂಡ್‌ಗಳಂತೆಯೇ ಇರುವ ಸಂಸ್ಥೆಗಳಾಗಿವೆ, ಇವು ವಿವಿಧ ವರ್ಗದ ಹೂಡಿಕೆದಾರರಿಂದ ಹೂಡಿಕೆಯನ್ನು ಸಂಗ್ರಹಿಸುತ್ತವೆ ಮತ್ತು ಅವುಗಳನ್ನು ಪೂರ್ಣಗೊಳಿಸಿದ ಮತ್ತು ಆದಾಯ-ಉತ್ಪಾದಿಸುವ ಮೂಲಸೌಕರ್ಯ ಯೋಜನೆಗಳಲ್ಲಿ ಹೂಡಿಕೆ ಮಾಡುತ್ತವೆ, ಆ ಮೂಲಕ ಹೂಡಿಕೆದಾರರಿಗೆ ಆದಾಯವನ್ನು ಸೃಷ್ಟಿಸುತ್ತವೆ.

ಅವುಗಳನ್ನು ಸೆಬಿ (ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ಗಳು) ನಿಯಮಗಳು, 2014 (Sebi (Infrastructure Investment Trusts) ಮತ್ತು ಇಂಡಿಯನ್ ಟ್ರಸ್ಟ್ ಆಕ್ಟ್, 1882 ರ ಅಡಿಯಲ್ಲಿ ನಿಯಂತ್ರಿಸಲಾಗುತ್ತದೆ.

InvITs ರಚನೆ:

ಅವುಗಳು ಟ್ರಸ್ಟಿ, ಪ್ರಾಯೋಜಕರು (ಗಳು), ಹೂಡಿಕೆ ವ್ಯವಸ್ಥಾಪಕ ಮತ್ತು ಯೋಜನಾ ವ್ಯವಸ್ಥಾಪಕರನ್ನು ಹೊಂದಿರುತ್ತವೆ.

ಟ್ರಸ್ಟಿ (Trustee) (ಸೆಬಿಯಿಂದ ಪ್ರಮಾಣೀಕರಿಸಲ್ಪಟ್ಟಿರುವ) InvIT ನ ಕಾರ್ಯಕ್ಷಮತೆಯನ್ನು ಪರಿಶೀಲಿಸುವ ಜವಾಬ್ದಾರಿಯನ್ನು ಹೊಂದಿರುತ್ತದೆ.

ಪ್ರಾಯೋಜಕರು(ಗಳು) Sponsor(s): InvIT ಅನ್ನು ಸ್ಥಾಪಿಸಿದ ಕಂಪನಿಯ ಪ್ರವರ್ತಕರು.

ಹೂಡಿಕೆ ವ್ಯವಸ್ಥಾಪಕರು (Investment manager): InvIT ನ ಸ್ವತ್ತುಗಳು ಮತ್ತು ಹೂಡಿಕೆಗಳನ್ನು ಮೇಲ್ವಿಚಾರಣೆ ಮಾಡುವ ಕಾರ್ಯವನ್ನು ಹೂಡಿಕೆ ವ್ಯವಸ್ಥಾಪಕರಿಗೆ ವಹಿಸಲಾಗಿದೆ.

ಪ್ರಾಜೆಕ್ಟ್ ಮ್ಯಾನೇಜರ್ ಯೋಜನೆಯನ್ನು ಅನುಷ್ಠಾನ ಗೊಳಿಸುವ ಜವಾಬ್ದಾರಿ ಹೊಂದಿರುತ್ತಾರೆ.

 

ಮೂಲಸೌಕರ್ಯ ಹೂಡಿಕೆ ಟ್ರಸ್ಟ್‌ಗಳ (InvITs) ಪ್ರಮುಖ ಲಕ್ಷಣಗಳು:

ಯೂನಿಟ್ ಹೂಡಿಕೆದಾರರಿಗೆ 90% ನಿವ್ವಳ ವಿತರಿಸಬಹುದಾದ ನಗದು ಹರಿವಿನ ಕಡ್ಡಾಯ ವಿತರಣೆ, ನಿವ್ವಳ ಆಸ್ತಿ ಮೌಲ್ಯದ ಮೇಲೆ 70% ನಷ್ಟು ಹತೋಟಿ ಕ್ಯಾಪ್, ಮತ್ತು ನಿರ್ಮಾಣ ಹಂತದಲ್ಲಿರುವ ಆಸ್ತಿಗಳಿಗೆ (ಸಾರ್ವಜನಿಕವಾಗಿ ಇರಿಸಲಾದ ಆಹ್ವಾನಗಳಿಗೆ) ಒಡ್ಡುವಿಕೆಯ ಮೇಲೆ ಮಿತಿ.

InvIT ನ ಪ್ರಾಯೋಜಕರು InvIT ಅನ್ನು ಸ್ಥಾಪಿಸಲು ಮತ್ತು ಟ್ರಸ್ಟಿಯನ್ನು ನೇಮಿಸಲು ಜವಾಬ್ದಾರರಾಗಿರುತ್ತಾರೆ.

ಪ್ರಾಯೋಜಕರು ಇನ್ವಿಟ್ ನೀಡಿದ ಘಟಕಗಳಲ್ಲಿ ಕನಿಷ್ಠ 15% ಅನ್ನು InvIT ನೀಡಿದ ದಿನಾಂಕದಿಂದ ಮೂರು ವರ್ಷಗಳ ಲಾಕ್-ಇನ್ ಅವಧಿಯೊಂದಿಗೆ ಹೊಂದಿರಬೇಕು.

ಇದು ಹೂಡಿಕೆದಾರರಿಗೆ ಹೇಗೆ ಪ್ರಯೋಜನವನ್ನು ನೀಡುತ್ತದೆ?

 1. InvIT ಗಳು ಹೂಡಿಕೆದಾರರಿಗೆ ತಮ್ಮ ಅಪಾಯದ ಹಂತವನ್ನು ಅವಲಂಬಿಸಿ ನಿಧಿಯಿಂದ ಮಾರಾಟವಾಗುವ ಘಟಕಗಳ ಒಂದು ಸಣ್ಣ ಭಾಗವನ್ನು ಖರೀದಿಸಲು ಅನುವು ಮಾಡಿಕೊಡುತ್ತವೆ.
 2. ಅಂತಹ ಟ್ರಸ್ಟ್‌ಗಳು ಸಕಾರಾತ್ಮಕ ನಗದು ಹರಿವಿನೊಂದಿಗೆ ಪೂರ್ಣಗೊಂಡ ಮತ್ತು ಕಾರ್ಯಾಚರಣೆಯ ಯೋಜನೆಗಳನ್ನು ಹೆಚ್ಚಾಗಿ ಒಳಗೊಂಡಿರುವುದರಿಂದ, ಅಪಾಯಗಳು ಸ್ವಲ್ಪಮಟ್ಟಿಗೆ ಒಳಗೊಂಡಿರುತ್ತವೆ.
 3. ಡಿವಿಡೆಂಡ್ ಆದಾಯದ ಮೇಲಿನ ವಿನಾಯಿತಿ ಮತ್ತು ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಘಟಕಗಳನ್ನು ಹೊಂದಿದ್ದರೆ ಯಾವುದೇ ಬಂಡವಾಳ ಲಾಭದ ತೆರಿಗೆ ಸೇರಿದಂತೆ ಅನುಕೂಲಕರ ತೆರಿಗೆ ನಿಯಮಗಳಿಂದ ಯುನಿಟ್ ಹೊಂದಿರುವವರು ಸಹ ಪ್ರಯೋಜನ ಪಡೆಯುತ್ತಾರೆ.

 

ಇದು NHAI ಗೆ ಹೇಗೆ ಸಹಾಯ ಮಾಡುತ್ತದೆ?

ಈ ಅನುಮತಿಯು ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಕ್ಕೆ ಕನಿಷ್ಠ ಒಂದು ವರ್ಷದ ಟೋಲ್ ಸಂಗ್ರಹ ದಾಖಲೆಯನ್ನು ಹೊಂದಿರುವ ತನ್ನ ಪೂರ್ಣಗೊಂಡ ರಾಷ್ಟ್ರೀಯ ಹೆದ್ದಾರಿಗಳನ್ನು ಹಣಗಳಿಸಲು ಅನುವು ಮಾಡಿಕೊಡುತ್ತದೆ.

ಇದು ದೇಶಾದ್ಯಂತ ಹೆಚ್ಚಿನ ರಸ್ತೆ ಅಭಿವೃದ್ಧಿಗೆ ಹಣವನ್ನು ಸಂಗ್ರಹಿಸಲು ಕಂಪನಿಗೆ ಸಹಾಯ ಮಾಡುತ್ತದೆ.

 

ವಿಷಯಗಳು: ಆರ್ಥಿಕತೆಯ ಮೇಲೆ ಉದಾರೀಕರಣದ ಪರಿಣಾಮ, ಕೈಗಾರಿಕಾ ನೀತಿಯಲ್ಲಿನ ಬದಲಾವಣೆಗಳು ಮತ್ತು ಕೈಗಾರಿಕಾ ಅಭಿವೃದ್ಧಿಯ ಮೇಲೆ ಅವುಗಳ ಪ್ರಭಾವ.

ತೆರಿಗೆ ವಿವಾದವನ್ನು ಕೊನೆಗೊಳಿಸುವ ಪ್ರಕ್ರಿಯೆಯನ್ನು ಆರಂಭಿಸಿದ ಕೈರ್ನ್:


(Cairn to begin process to end tax dispute)

ಸಂದರ್ಭ:

ಕೈರ್ನ್ ಎನರ್ಜಿಯು ಭಾರತದೊಂದಿಗೆ ತೆರಿಗೆ ವಿವಾದಕ್ಕೆ ಸಂಬಂಧಿಸಿದಂತೆ ಒಪ್ಪಂದಕ್ಕೆ ಬಂದಿದೆ, ಇದು ಬಿಲಿಯನ್-ಡಾಲರ್ ವಿವಾದದ ಅಡಿಯಲ್ಲಿ ತೆರಿಗೆಗಳನ್ನು ಮರುಪಾವತಿಸಲು ಅನುವು ಮಾಡಿಕೊಡುತ್ತದೆ.

ಏನಿದು ಪ್ರಕರಣ?

ಭಾರತ ಸರ್ಕಾರವು ಯುಕೆ-ಇಂಡಿಯಾ ದ್ವಿಪಕ್ಷೀಯ ಹೂಡಿಕೆ ಒಪ್ಪಂದವನ್ನು ಉಲ್ಲೇಖಿಸಿ, 2012 ರಲ್ಲಿ ಜಾರಿಗೆ ತರಲಾದ ಹಿಂದಿನ ತೆರಿಗೆ ಕಾನೂನು (retrospective tax law) ಬಳಸಿಕೊಂಡು  ಆಂತರಿಕ ವ್ಯವಹಾರ ಪುನರ್ರಚನೆಯ ಮೇಲೆ ತೆರಿಗೆಯನ್ನು ಕೋರಿತು, ಇದನ್ನು ಕೈರ್ನ್ ಎನರ್ಜಿ ಪ್ರಶ್ನಿಸಿತು.

 1. 2011 ರಲ್ಲಿ, ಕೈರ್ನ್ ಎನರ್ಜಿ, ಕೈರ್ನ್ ಇಂಡಿಯಾದಲ್ಲಿನ ತನ್ನ ಹೆಚ್ಚಿನ ಪಾಲನ್ನು ವೇದಾಂತ ಲಿಮಿಟೆಡ್‌ಗೆ ಮಾರಾಟ ಮಾಡಿತು, ಇದು ಭಾರತೀಯ ಕಂಪನಿಯಲ್ಲಿ ತನ್ನ ಪಾಲನ್ನು ಶೇಕಡಾ 10 ರಷ್ಟಕ್ಕೆ ಇಳಿಸಿತು.
 2. 2014 ರಲ್ಲಿ 10,247 ಕೋಟಿ ರೂಪಾಯಿಗಳನ್ನು ($4 ಬಿಲಿಯನ್) ಭಾರತೀಯ ತೆರಿಗೆ ಇಲಾಖೆಯು ತೆರಿಗೆಯಾಗಿ ಬೇಡಿಕೆ ಇಟ್ಟಿತ್ತು.
 3. 2015 ರಲ್ಲಿ, ಕೈರ್ನ್ ಎನರ್ಜಿ PLC ಭಾರತ ಸರ್ಕಾರದ ವಿರುದ್ಧ ಅಂತರಾಷ್ಟ್ರೀಯ ಮಧ್ಯಸ್ಥಿಕೆ ಕ್ರಮಗಳನ್ನು ಕೈಗೊಳ್ಳಲು ಆರಂಭಿಸಿತು.

 

ನ್ಯಾಯಮಂಡಳಿ ತೀರ್ಪು:

 1. ಕೈರ್ನ್ 2006-07ರಲ್ಲಿ ಭಾರತದಲ್ಲಿ ತನ್ನ ವ್ಯವಹಾರವನ್ನು ಆಂತರಿಕ ಪುನರ್ರಚನೆ ಮಾಡಿದರೆ ಹಿಂದಿನ ತೆರಿಗೆ ಕಾನೂನಿನ ಅನ್ವಯ ಭಾರತ ಸರ್ಕಾರದ 10,247 ಕೋಟಿ ರೂ.ಗಳ ತೆರಿಗೆ ಬೇಡಿಕೆಯ ಹಕ್ಕು ಮಾನ್ಯವಾಗಿರಲಿಲ್ಲ.
 2. ಬಾಕಿ ಹಣವನ್ನು ವಸೂಲಿ ಮಾಡಲು ವಶಪಡಿಸಿಕೊಂಡಿರುವ ಲಾಭಾಂಶ, ತೆರಿಗೆ ಮರುಪಾವತಿ ಮತ್ತು ಷೇರುಗಳ ಮಾರಾಟದಿಂದ ಬಂದ ತಡೆಹಿಡಿಯಲಾದ ಹಣವನ್ನು ಭಾರತವು ಬಡ್ಡಿ ಸಮೇತ ಸ್ಕಾಟಿಷ್ ತೈಲ ಪರಿಶೋಧನಾ ಕಂಪನಿಗೆ ಮರುಪಾವತಿಸಬೇಕು.
 3. ಯುಕೆ-ಇಂಡಿಯಾ ದ್ವಿಪಕ್ಷೀಯ ಹೂಡಿಕೆ ಒಪ್ಪಂದದಡಿಯಲ್ಲಿ ಕೈರ್ನ್‌ಗೆ ಭಾರತವು ತನ್ನ ಬಾಧ್ಯತೆಗಳನ್ನು ಉಲ್ಲಂಘಿಸಿದೆ.

ಈ ವಿಷಯವು ಮಧ್ಯಸ್ಥಿಕೆ ನ್ಯಾಯಮಂಡಳಿಗೆ ಹೇಗೆ ತಲುಪಿತು?

ಕೈರ್ನ್, ಯುಕೆ-ಇಂಡಿಯಾ ದ್ವಿಪಕ್ಷೀಯ ಹೂಡಿಕೆ ಒಪ್ಪಂದದ ನಿಯಮಗಳ ಅಡಿಯಲ್ಲಿ ಮಧ್ಯಸ್ಥಿಕೆ ನ್ಯಾಯಾಧಿಕರಣದಲ್ಲಿ ತಮ್ಮ ಹಕ್ಕನ್ನು ಸಲ್ಲಿಸಿತು. ನ್ಯಾಯಮಂಡಳಿಯ ಶಾಸನಬದ್ಧ ಪೀಠವು ನೆದರ್ಲೆಂಡ್ಸ್‌ನಲ್ಲಿದೆ ಮತ್ತು ಈ ಪ್ರಕರಣವನ್ನು ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯದ ನೋಂದಾವಣೆಯಡಿಯಲ್ಲಿ ವಿಚಾರಣೆ ನಡೆಸಲಾಯಿತು.

ಕೈರ್ನ್ ಎನರ್ಜಿ ಯು,ಭಾರತೀಯ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲು ಕಾರಣ?

ಡಿಸೆಂಬರ್ 2020 ರಲ್ಲಿ, ನೆದರ್ಲ್ಯಾಂಡ್ಸ್ ನಲ್ಲಿರುವ ಶಾಶ್ವತ ಮಧ್ಯಸ್ಥಿಕೆ ನ್ಯಾಯಾಲಯದ (Permanent Court of Arbitration -PCA) ಮೂರು ಸದಸ್ಯರ ‘ಅಂತರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಧಿಕರಣ’ ವು, ಸರ್ವಾನುಮತದಿಂದ ತೀರ್ಪು ನೀಡಿತು, ಅದರಲ್ಲಿ, ಭಾರತ ಸರ್ಕಾರವು ‘ಭಾರತ-ಯುಕೆ ದ್ವಿಪಕ್ಷೀಯ ಹೂಡಿಕೆ ಒಪ್ಪಂದ’ (India-UK Bilateral Investment Treaty) ಮತ್ತು ‘ನ್ಯಾಯಯುತ ಮತ್ತು ಸಮಾನ ಪರಿಹಾರದ ಖಾತರಿ’ ಯನ್ನು ಉಲ್ಲಂಘಿಸಿದೆ ಮತ್ತು ಬ್ರಿಟಿಷ್ ಎನರ್ಜಿ ಕಂಪನಿಗೆ ನಷ್ಟವನ್ನುಂಟು ಮಾಡಿದೆ ಎಂದು ಹೇಳಿತು.

ಇದಲ್ಲದೆ, ಕೈರ್ನ್ ಎನರ್ಜಿಗೆ $1.2 ಬಿಲಿಯನ್ ಪರಿಹಾರವನ್ನು ನೀಡುವಂತೆ ‘ಮಧ್ಯಸ್ಥಿಕೆ ನ್ಯಾಯಾಧಿಕರಣ’ ವು ಭಾರತ ಸರ್ಕಾರಕ್ಕೆ ಆದೇಶಿಸಿತು.

ಈ ಮಧ್ಯಸ್ಥಿಕೆ ನಿರ್ಧಾರವನ್ನು ಭಾರತ ಸರ್ಕಾರ ಇನ್ನೂ ಒಪ್ಪಿಕೊಂಡಿಲ್ಲ. ಈ ಪರಿಹಾರವನ್ನು ವಸೂಲಿ ಮಾಡಲು ಕೈರ್ನ್ ಎನರ್ಜಿ ವಿದೇಶದಲ್ಲಿರುವ ಭಾರತೀಯ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳಲು ಪ್ರಯತ್ನಿಸುತ್ತಿದೆ.

ಮುಂದಿನ ನಡೆ ಏನು?

ದಯವಿಟ್ಟು ಗಮನಿಸಿ: ತೆರಿಗೆ ಕಾನೂನುಗಳಿಗೆ ಭಾರತ ಸರ್ಕಾರದ ಇತ್ತೀಚಿನ ತಿದ್ದುಪಡಿಯು ಜನವರಿ 2016 ರಲ್ಲಿ ಕೇರ್ನ್ ವಿರುದ್ಧ ಮೂಲತಃ ವಿಧಿಸಲಾದ ತೆರಿಗೆ ಮೌಲ್ಯಮಾಪನವನ್ನು ರದ್ದುಗೊಳಿಸುತ್ತದೆ ಮತ್ತು ಆ ಮೌಲ್ಯಮಾಪನಕ್ಕೆ ಸಂಬಂಧಿಸಿದಂತೆ ಕೇರ್ನ್‌ನಿಂದ ಸಂಗ್ರಹಿಸಲಾದ ₹7,900 ಕೋಟಿಯ ಮರುಪಾವತಿಗೆ ಆದೇಶಿಸುತ್ತದೆ.

ಪೂರ್ವಾನ್ವಯ ತೆರಿಗೆ ಎಂದರೇನು?

 1. ಪೂರ್ವಾನ್ವಯ ತೆರಿಗೆ / ‘ರೆಟ್ರೋಸ್ಪೆಕ್ಟಿವ್ ಟ್ಯಾಕ್ಸೇಶನ್’ ಅಡಿಯಲ್ಲಿ, ಒಂದು ದೇಶವು ಕಾನೂನಿನ ಅಂಗೀಕಾರದ ದಿನಾಂಕದ ಮೊದಲು, ಕೆಲವು ಉತ್ಪನ್ನಗಳು, ಸರಕುಗಳು ಅಥವಾ ಸೇವೆಗಳು ಮತ್ತು ಡೀಲ್‌ಗಳ ಮೇಲೆ, ಕಂಪನಿಗಳ ಮೇಲೆ ಪೂರ್ವಾನ್ವಯ ತೆರಿಗೆ ಮತ್ತು ಪೂರ್ವಾನ್ವಯ ಶುಲ್ಕಗಳನ್ನು ವಿಧಿಸಲು ಅನುಮತಿಸುತ್ತದೆ.
 2. ವಿವಿಧ ದೇಶಗಳು ತಮ್ಮ ತೆರಿಗೆ ನೀತಿಗಳಲ್ಲಿನ ವ್ಯತ್ಯಾಸಗಳನ್ನು ಸರಿಪಡಿಸಲು ಈ ಮಾರ್ಗವನ್ನು ಬಳಸಿಕೊಳ್ಳುತ್ತಿದ್ದವು, ಈ ಹಿಂದೆ ‘ಕಂಪನಿಗಳು’ ಇಂತಹ ಲೋಪದೋಷಗಳ ಲಾಭವನ್ನು ಪಡೆಯಲು ಅವಕಾಶವನ್ನು ಹೊಂದಿದ್ದವು.
 3. ‘ರೆಟ್ರೋಸ್ಪೆಕ್ಟಿವ್ ಟ್ಯಾಕ್ಸೇಶನ್’ ದೇಶದ ತೆರಿಗೆ ನಿಯಮಗಳನ್ನು ತಿಳಿದೋ ತಿಳಿಯದೆಯೋ ವಿಭಿನ್ನವಾಗಿ ಅರ್ಥೈಸಿದ ಕಂಪನಿಗಳಿಗೆ ಹಾನಿ / ನೋವು ಉಂಟು ಮಾಡುತ್ತದೆ.

 

ಅಂತರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಮಂಡಳಿ:

 1. ಇದನ್ನು 1899 ರಲ್ಲಿ ಸ್ಥಾಪಿಸಲಾಯಿತು ಮತ್ತು ನೆದರ್‌ಲ್ಯಾಂಡ್ಸ್‌ನ ಹೇಗ್‌ನಲ್ಲಿ ಪ್ರಧಾನ ಕಛೇರಿಯನ್ನು ಹೊಂದಿದೆ.
 2. ಇದು ವಿವಾದ ಪರಿಹಾರದ ಕ್ಷೇತ್ರದಲ್ಲಿ ಅಂತರರಾಷ್ಟ್ರೀಯ ಸಮುದಾಯಕ್ಕೆ ಸೇವೆ ಸಲ್ಲಿಸಲು ಮತ್ತು ದೇಶಗಳ ನಡುವಿನ ಮಧ್ಯಸ್ಥಿಕೆ ಮತ್ತು ಇತರ ರೀತಿಯ ವಿವಾದ ಪರಿಹಾರಗಳನ್ನು ಸುಗಮಗೊಳಿಸಲು ಮೀಸಲಾಗಿರುವ ಅಂತರ್ ಸರ್ಕಾರಿ ಸಂಸ್ಥೆಯಾಗಿದೆ.
 3. ಪ್ರಶಸ್ತಿಗಳು” (awards) ಎಂದು ಕರೆಯಲ್ಪಡುವ ನ್ಯಾಯಮಂಡಳಿಯ ಎಲ್ಲಾ ತೀರ್ಪುಗಳು ವಿವಾದಕ್ಕೆ ಸಂಬಂಧಿಸಿದ ಎಲ್ಲಾ ಪಕ್ಷಗಳ ಮೇಲೆ ಬದ್ಧವಾಗಿರುತ್ತವೆ ಮತ್ತು ಈ ತೀರ್ಪುಗಳನ್ನು ಸಂಬಂಧಿಸಿದ ಪಕ್ಷಗಳು ಯಾವುದೇ ವಿಳಂಬವಿಲ್ಲದೆ ಅನುಷ್ಠಾನಗೊಳಿಸಲು ಕ್ರಮ ಕೈಗೊಳ್ಳಬೇಕು.

 

ವಿಷಯಗಳು: ಪ್ರಮುಖ ಭದ್ರತಾ ಪಡೆಗಳು ಮತ್ತು ಏಜೆನ್ಸಿಗಳು ಮತ್ತು ಅವುಗಳ ಆದೇಶಗಳು.

ಪೊಲೀಸ್ ಸುಧಾರಣೆಗಳ ಕುರಿತು 2006 ರ ಸುಪ್ರೀಂ ಕೋರ್ಟ್ ತೀರ್ಪು:


(The 2006 Supreme Court ruling on police reforms)

 ಸಂದರ್ಭ:

ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಸುಧಾರಣೆಗಳ ಕುರಿತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಪ್ರಮುಖ ಸಲಹಾ ಗುಂಪು ಗೃಹ ವ್ಯವಹಾರಗಳ ಸಚಿವಾಲಯಕ್ಕೆ ಈ ಕೆಳಗಿನ ಶಿಫಾರಸುಗಳನ್ನು ಮಾಡಿದೆ:

 1. ಕೇಂದ್ರ ಗೃಹ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳು ಪ್ರಕಾಶ್ ಸಿಂಗ್ VS ಯೂನಿಯನ್ ಆಫ್ ಇಂಡಿಯಾ, 2006 ರ ಪ್ರಕರಣದ ತೀರ್ಪಿನ ಪ್ರಕಾರ ಪೊಲೀಸ್ ದೂರು ಪ್ರಾಧಿಕಾರಗಳನ್ನು ಸ್ಥಾಪಿಸಬೇಕು.
 2. ಅನುಸರಣೆಯ ಸ್ಥಿತಿಯನ್ನು ಗೃಹ ಸಚಿವಾಲಯ ಮತ್ತು ರಾಜ್ಯ ಗೃಹ ಇಲಾಖೆಗಳ ವೆಬ್‌ಸೈಟ್‌ಗಳಲ್ಲಿ ಪ್ರದರ್ಶಿಸಬೇಕು.
 3. ಭಾರತೀಯ ಸಾಕ್ಷ್ಯ ಕಾಯಿದೆಗೆ ಸೆಕ್ಷನ್ 114 ಬಿ ಸೇರಿಸಲು ಕಾನೂನು ಆಯೋಗದ 113 ನೇ ವರದಿಯ ಶಿಫಾರಸುಗಳನ್ನು ಜಾರಿಗೊಳಿಸಲು ಕೇಂದ್ರ ಗೃಹ ಸಚಿವಾಲಯ ಮತ್ತು ಕಾನೂನು ಸಚಿವಾಲಯಗಳು ಪರಿಗಣಿಸಬೇಕು. ಕಸ್ಟಡಿಯಲ್ಲಿ ಒಬ್ಬ ವ್ಯಕ್ತಿಗೆ ಗಾಯಗಳಾಗಿದ್ದರೆ, ಆ ಗಾಯಗಳನ್ನು ಪೊಲೀಸರು ಉಂಟುಮಾಡಿದ್ದಾರೆ ಎಂದು ಊಹಿಸಬಹುದಾಗಿದೆ ಎಂದು ಇದು ಖಚಿತಪಡಿಸುತ್ತದೆ.
 4. ಅಪರಾಧ ನ್ಯಾಯ ವ್ಯವಸ್ಥೆಯನ್ನು ವೇಗಗೊಳಿಸಲು ಕಾನೂನು ಚೌಕಟ್ಟನ್ನು ತಂತ್ರಜ್ಞಾನ ಸ್ನೇಹಿಯನ್ನಾಗಿ ಮಾಡಿ.
 5. ಎಲ್ಲಾ ಪೊಲೀಸ್ ಠಾಣೆಗಳಲ್ಲಿ ರಾತ್ರಿ ದೃಷ್ಟಿಯೊಂದಿಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ಸುಪ್ರೀಂ ಕೋರ್ಟ್ ಡಿಸೆಂಬರ್ 2020 ರಲ್ಲಿ ನೀಡಿದ ಆದೇಶವನ್ನು ಹೊಣೆಗಾರಿಕೆಯನ್ನು ಖಚಿತಪಡಿಸಿಕೊಳ್ಳಲು “ತಕ್ಷಣವೇ ಕಾರ್ಯಗತಗೊಳಿಸಬೇಕು”.
 6. ಸಮುದಾಯ ಪೋಲೀಸಿಂಗ್‌ನ ಭಾಗವಾಗಿ ಪೊಲೀಸ್ ಠಾಣೆಗಳೊಂದಿಗೆ ತರಬೇತಿ ಪಡೆದ ಸಾಮಾಜಿಕ ಕಾರ್ಯಕರ್ತರು ಮತ್ತು ಕಾನೂನು ವಿದ್ಯಾರ್ಥಿಗಳನ್ನು ತೊಡಗಿಸಿಕೊಳ್ಳಿ ಮತ್ತು ಪೊಲೀಸ್ ಕೈಪಿಡಿಗಳು, ಕಾನೂನುಗಳು ಮತ್ತು ಸಲಹೆಗಳಲ್ಲಿ ಸಮುದಾಯ ಪೋಲೀಸಿಂಗ್ ಅನ್ನು ಸಂಯೋಜಿಸಿ.

‘ಪೊಲೀಸ್ ಸುಧಾರಣೆಗಳ ಕುರಿತು ಸುಪ್ರೀಂ ಕೋರ್ಟಿನ ಪ್ರಕಾಶ್ ಸಿಂಗ್  ತೀರ್ಪು’ ಎಂದರೇನು?

ಉತ್ತರ ಪ್ರದೇಶ ಪೊಲೀಸ್ ಮತ್ತು ಅಸ್ಸಾಂ ಪೊಲೀಸ್ ನ ಪೊಲೀಸ್ ಮಹಾ ನಿರ್ದೇಶಕರಾಗಿ (DGP) ಸೇವೆ ಸಲ್ಲಿಸಿದ ನಂತರ, ಇತರ ಹಲವು ಹುದ್ದೆಗಳನ್ನು ನಿರ್ವಹಿಸಿದ, ಪ್ರಕಾಶ್ ಸಿಂಗ್ ಅವರು ನಿವೃತ್ತಿಯ ನಂತರ 1996 ರಲ್ಲಿ ಪೊಲೀಸ್ ಸುಧಾರಣೆಗಳನ್ನು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದರು.

 1. ಸೆಪ್ಟೆಂಬರ್ 2006 ರಲ್ಲಿ, ಸುಪ್ರೀಂ ಕೋರ್ಟ್ ಈ ಅರ್ಜಿಯ ಬಗ್ಗೆ ಒಂದು ಮಹತ್ವದ ತೀರ್ಪು ನೀಡಿತು, ಪೊಲೀಸ್ ಸುಧಾರಣೆಗಳನ್ನು ಜಾರಿಗೆ ತರಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನಿರ್ದೇಶನ ನೀಡಿತು.

ವರಿಷ್ಠ ನ್ಯಾಯಾಲಯವು ಸೂಚಿಸಿದ ಕ್ರಮಗಳು ಯಾವುವು?

ಕೆಲವು ತಿಂಗಳುಗಳಲ್ಲಿ ನಿವೃತ್ತರಾಗುವ ಅಧಿಕಾರಿಗಳನ್ನು ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಹುದ್ದೆಗೆ ನೇಮಕ ಮಾಡುವಂತಹ ಪರಿಸ್ಥಿತಿಯನ್ನು ತಪ್ಪಿಸಲು DGP ಯ ಅಧಿಕಾರಾವಧಿಯ ನಿರ್ದಿಷ್ಟ ಕಾಲಾವಧಿ ಮತ್ತು ಆಯ್ಕೆ ಪ್ರಕ್ರಿಯೆಯನ್ನು ನಿಗದಿಪಡಿಸಬೇಕು.

 1. ರಾಜಕೀಯ ಹಸ್ತಕ್ಷೇಪವಿಲ್ಲ ಎಂದು ಖಚಿತಪಡಿಸಿಕೊಳ್ಳಲು, ‘ಪೊಲೀಸ್ ಇನ್ಸ್‌ಪೆಕ್ಟರ್ ಜನರಲ್’ಗೆ ಕನಿಷ್ಠ ಅವಧಿಯ ಅಧಿಕಾರವಧಿಯನ್ನು ನಿಗದಿಪಡಿಸಬೇಕು, ಇದರಿಂದಾಗಿ ಅವರನ್ನು ಸೇವಾವಧಿಯ ಮಧ್ಯದಲ್ಲಿಯೆ ವರ್ಗಾಯಿಸಲು ರಾಜಕಾರಣಿಗಳಿಗೆ ಸಾಧ್ಯವಾಗುವುದಿಲ್ಲ.
 2. ಅಧಿಕಾರಿಗಳ ಸ್ಥಳನಿಯುಕ್ತಿ ಮತ್ತು ವರ್ಗಾವಣೆಗೆ ಸಂಬಂಧಿಸಿದ ನಿರ್ಧಾರಗಳನ್ನು ಪೊಲೀಸ್ ಅಧಿಕಾರಿಗಳು ಮತ್ತು ಹಿರಿಯ ಅಧಿಕಾರಿಗಳನ್ನು ಒಳಗೊಂಡ ‘ಪೊಲೀಸ್ ಸ್ಥಾಪನಾ ಮಂಡಳಿ’ (Police Establishment Boards- PEB) ತೆಗೆದುಕೊಳ್ಳಬೇಕು, ರಾಜಕೀಯ ನಾಯಕರ ಕೈಯಿಂದ ಸ್ಥಳನಿಯುಕ್ತಿ ಮತ್ತು ವರ್ಗಾವಣೆ ಅಧಿಕಾರವನ್ನು ತೆಗೆದುಹಾಕಬೇಕು.
 3. ಪೊಲೀಸ್ ಕ್ರಮದಿಂದ ಬಳಲುತ್ತಿರುವ ಸಾಮಾನ್ಯ ಜನರ ಸಮಸ್ಯೆಗಳನ್ನು ಆಲಿಸಲು ‘ರಾಜ್ಯ ಪೊಲೀಸ್ ದೂರು ಪ್ರಾಧಿಕಾರ’ ವನ್ನು(State Police Complaints Authority- SPCA) ಸ್ಥಾಪಿಸಬೇಕು.
 4. ಪೊಲೀಸ್ ವ್ಯವಸ್ಥೆಯನ್ನು ಸುಧಾರಿಸಿ ಉತ್ತಮವಾದ ಪೊಲೀಸ್ ಸೇವೆಯನ್ನು ಒದಗಿಸಲು , ತನಿಖೆ ಮತ್ತು ಕಾನೂನು ಸುವ್ಯವಸ್ಥೆಗೆ ಸಂಬಂಧಿಸಿದ ಕೆಲಸಗಳನ್ನು ಬೇರ್ಪಡಿಸಬೇಕು.
 5. ನಾಗರಿಕ ಸಮಾಜದ ಸದಸ್ಯರನ್ನು ಒಳಗೊಂಡ ರಾಜ್ಯ ಭದ್ರತಾ ಆಯೋಗಗಳನ್ನು (State Security Commissions- SSC) ರಚಿಸಬೇಕು.
 6. ‘ರಾಷ್ಟ್ರೀಯ ಭದ್ರತಾ ಆಯೋಗ’ವನ್ನು(National Security Commission) ಸ್ಥಾಪಿಸಬೇಕು.

ನ್ಯಾಯಾಲಯದ ಈ ನಿರ್ದೇಶನ ಗಳಿಗೆ ರಾಜ್ಯಗಳು ಹೇಗೆ ಪ್ರತಿಕ್ರಿಯಿಸಿದವು?

 1. 2006 ರ ತೀರ್ಪಿನ ನಂತರ, ಯಾವುದೇ ಒಂದು ರಾಜ್ಯವು ಸಹ ಸುಪ್ರೀಂ ಕೋರ್ಟ್‌ನ ನಿರ್ದೇಶನಗಳನ್ನು ಸಂಪೂರ್ಣವಾಗಿ ಪಾಲಿಸಿಲ್ಲ.
 2. ಈ ಮಧ್ಯೆ 18 ರಾಜ್ಯಗಳು ತಮ್ಮ ಪೊಲೀಸ್ ಕಾಯ್ದೆಗಳನ್ನು ಅಂಗೀಕರಿಸಿವೆ ಅಥವಾ ತಿದ್ದುಪಡಿ ಮಾಡಿಲ್ಲ, ಆದರೆ ಈ ಯಾವುದೇ ಪೊಲೀಸ್ ಕಾಯ್ದೆಗಳು ಶಾಸಕಾಂಗ ಮಾದರಿಗೆ ಸಂಪೂರ್ಣವಾಗಿ ಅನುಗುಣವಾಗಿಲ್ಲ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 4


 

ವಿಷಯಗಳು: ಸಾರ್ವಜನಿಕ ಆಡಳಿತದಲ್ಲಿ ಸಾರ್ವಜನಿಕ / ನಾಗರಿಕ ಸೇವಾ ಮೌಲ್ಯಗಳು ಮತ್ತು ನೈತಿಕತೆ.

COP26 ಶೃಂಗಸಭೆಯಲ್ಲಿ, ಹವಾಮಾನ ವೈಪರೀತ್ಯವನ್ನು ತಡೆಗಟ್ಟಲು ತಕ್ಷಣವೇ ಕ್ರಮ ಕೈಗೊಳ್ಳಿ ಎಂದು ಜಾಗತಿಕ ನಾಯಕರಿಗೆ ತಮಿಳುನಾಡು ಬಾಲಕಿಯ ಸವಾಲು:


ಸಂದರ್ಭ:

ತಮಿಳುನಾಡಿನ ವಿನಿಶಾ ಉಮಾಶಂಕರ್ ಅವರು ಇತ್ತೀಚೆಗೆ ಗ್ಲಾಸ್ಗೋದಲ್ಲಿ 26 ನೇ ಯುಎನ್ ಕ್ಲೈಮೇಟ್ ಚೇಂಜ್ ಕಾನ್ಫರೆನ್ಸ್ ಆಫ್ ಪಾರ್ಟಿಸ್ (COP26) (26th UN Climate Change Conference of Parties (COP26)ಭಾಗವಾಗಿ ಸ್ವಚ್ಛ ತಂತ್ರಜ್ಞಾನ ಮತ್ತು ನಾವೀನ್ಯತೆ ಕುರಿತು ಚರ್ಚಿಸಿದ ಸಭೆಯಲ್ಲಿ ಶುದ್ಧ ಇಂಧನದ ಕುರಿತು ಮಾತನಾಡಿದರು.

 1. ಆಕೆಯ ಭಾಷಣವನ್ನು ಆಲಿಸಿದ ಪ್ರಮುಖರಲ್ಲಿ ಬ್ರಿಟಿಷ್ ಪ್ರಧಾನಿ ಬೋರಿಸ್ ಜಾನ್ಸನ್, ಯುಎಸ್ ಅಧ್ಯಕ್ಷ ಜೋ ಬಿಡೆನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವಾರು ವಿಶ್ವ ನಾಯಕರು ಇದ್ದರು.

ವಿನಿಶಾ ಉಮಾಶಂಕರ್ ಭಾಷಣ:

ಪೊಳ್ಳು ಭರವಸೆಗಳನ್ನು ನೀಡಿ ಈಡೇರಿಸಲು ವಿಫಲರಾದ ನಾಯಕರ ಮೇಲೆ ಯುವಕರು ಕೋಪಗೊಳ್ಳಲು ಮತ್ತು ಹತಾಶರಾಗಲು ಎಲ್ಲ ಕಾರಣಗಳಿವೆ. ಇಂದು ನಾವು ಚರ್ಚಿಸುವ ಯಾವುದೂ ನನಗೆ ಪ್ರಾಯೋಗಿಕವಾಗಿಲ್ಲ. ವಾಸಯೋಗ್ಯ ಜಗತ್ತಿನಲ್ಲಿ ಬದುಕಲು ಭರವಸೆಗಳಿಗಿಂತ ನಮಗೆ ಕ್ರಿಯೆಗಳ ಅಗತ್ಯವಿದೆ.

 1. ಹವಾಮಾನ ಬದಲಾವಣೆಯನ್ನು ನಿಭಾಯಿಸಲು ಬಂದಾಗ ತಕ್ಷಣವೇ “ಮಾತನಾಡುವುದನ್ನು ನಿಲ್ಲಿಸಿ ಮತ್ತು ಕಾರ್ಯನಿರ್ವಹಿಸಲು ಪ್ರಾರಂಭಿಸಿ” ಎಂದು ಅವರು ಎಲ್ಲರಿಗೂ – ವಿಶ್ವ ನಾಯಕರು, ವ್ಯಾಪಾರ ನಾಯಕರು, ಅಂತರರಾಷ್ಟ್ರೀಯ ಸಂಸ್ಥೆ ಮತ್ತು ನಾಗರಿಕ ಸಮಾಜವನ್ನು ಒತ್ತಾಯಿಸಿದರು.
 2. ನಮ್ಮ ಮುಂದಿರುವ ಬಹುದೊಡ್ಡ ಸವಾಲೇ ನಮ್ಮ ಮುಂದೆ ಇರುವ ಅತ್ಯಂತ ದೊಡ್ಡ ಅವಕಾಶವು ಆಗಿದೆ.ನಾವು ಇತರರನ್ನು ದೂರುವುದನ್ನು ಆಯ್ಕೆ ಮಾಡಿಕೊಂಡಿಲ್ಲ ಬದಲಿಗೆ ನಮ್ಮನ್ನು ಆರೋಗ್ಯವಂತರನ್ನಾಗಿಸುವ ಮತ್ತು ಸಂಪದ್ಭರಿತರನ್ನಾಗಿಸುವ ಹಾದಿಯನ್ನು ಆಯ್ಕೆ ಮಾಡಿಕೊಳ್ಳುತ್ತೇವೆ.
 3. ಹೆಚ್ಚುತ್ತಿರುವ ಈ ಸವಾಲುಗಳು ಹೊಸ ತಲೆಮಾರನ್ನು ರೂಪಿಸುತ್ತವೆ. ಆ ಹೊಸತಲೆಮಾರು ಮುಂದಿನ ಪೀಳಿಗೆಗಾಗಿ ಉತ್ತಮ ಜಗತ್ತನ್ನು ನಿರ್ಮಿಸಲಿದೆ.
 4. ಈ ಸವಾಲನ್ನು ಎದುರಿಸಲು ನಾವು ನಿಮಗಾಗಿ ಕಾಯುವುದಿಲ್ಲ. ಭವಿಷ್ಯವಾಗಿರುವ ನಾವೇ ನಾಯಕತ್ವವನ್ನು ವಹಿಸುತ್ತೇವೆ. ನೀವು ತಡಮಾಡಿದರೆ ಭೂತಕಾಲದಲ್ಲಿ ಉಳಿದರೆ ನಾವು ಮುನ್ನಡೆಯುತ್ತೇವೆ.ಆದರೆ ದಯವಿಟ್ಟು ನಮ್ಮ ಆಹ್ವಾನವನ್ನು ಸ್ವೀಕರಿಸಿ ಕಾರ್ಯತತ್ಪರರಾಗಿ, ಅದಕ್ಕಾಗಿ ನೀವು ಎಂದಿಗೂ ವಿಷಾದಿಸುವ ಪ್ರಮೇಯವೇ ಬರುವುದಿಲ್ಲ ಎಂದು ಹೇಳಿದ್ದಾಳೆ.
 5. ಮುಖ್ಯವಾಗಿ ತಾನು ಯಾವುದೇ ಒಂದು ದೇಶಕ್ಕೆ ಸೇರಿದವರು ಎನ್ನುವುದರ ಬದಲಾಗಿ ಈ ಭೂಮಿಗೆ ಸೇರಿದವಳು ಎಂದು ಹೇಳುವ ಮೂಲಕ ಜಾಗತಿಕ ನಾಯಕರ ಮೆಚ್ಚುಗೆಗೆ ಪಾತ್ರಳಾದಳು.
 6. ತನ್ನ ಭಾಷಣವನ್ನು ಮುಕ್ತಾಯಗೊಳಿಸುತ್ತಾ, “ಹವಾಮಾನ ಬದಲಾವಣೆಯ ವಿಷಯ ಬಂದಾಗ ಯಾವುದೇ ಸ್ಟಾಪ್ ಬಟನ್ ಇಲ್ಲ. ನಾವು ವಿರಾಮದ ಗುಂಡಿಯನ್ನು ಒತ್ತಲು ಅಥವಾ ರಿವೈಂಡ್ ಮಾಡಲು ಸಾಧ್ಯವಿಲ್ಲ. ನಾವು ಒಟ್ಟಿಗೆ ಭವಿಷ್ಯದ ಕಡೆಗೆ ಮಾತ್ರ ಚಲಿಸಬಹುದು ಆದ್ದರಿಂದ ನಾವು ಒಗ್ಗಟ್ಟಾಗಿ ಮುನ್ನಡೆದರೆ ಮತ್ತು ನಾವು ಖಂಡಿತವಾಗಿಯೂ ಒಟ್ಟಿಗೆ ಯಶಸ್ವಿಯಾಗುತ್ತೇವೆ.

current affairs

 

ವಿನಿಶಾ ಉಮಾಶಂಕರ್ ಯಾರು?

 1. ರಸ್ತೆಬದಿಯ ಇಸ್ತ್ರಿ ಅಂಗಡಿಯವರು ಬಳಸುವ ಇದ್ದಿಲಿನ ಇಸ್ತ್ರಿ ಪೆಟ್ಟಿಗೆ ಬದಲಾಗಿ, ಕಡಿಮೆ ವೆಚ್ಚದಲ್ಲಿ ಸೌರಶಕ್ತಿ ಚಾಲಿತ ಇಸ್ತ್ರಿಪೆಟ್ಟಿಗೆ ಬಂಡಿಯನ್ನು ವಿನ್ಯಾಸ ಮಾಡಿದ್ದಾರೆ. ಇದರಿಂದ ವಾಯುಮಾಲಿನ್ಯವನ್ನು ಕಡಿಮೆ ಮಾಡಬಹುದಾಗಿದೆ.
 2. ಅರ್ಥಶಾಟ್ ಪ್ರೈಜ್ ಸ್ಪರ್ಧೆಯ ‘ಶುದ್ಧಗಾಳಿ’ ವರ್ಗದಲ್ಲಿ ಈಕೆಯ ಅನ್ವೇಷಣೆಯು ಅಂತಿಮ ಸುತ್ತಿಗೆ ಆಯ್ಕೆಯಾಗಿತ್ತು.
 3. ಆಕೆಯ ಆವಿಷ್ಕಾರವು ನವೆಂಬರ್ 2021 ರಲ್ಲಿ ಪ್ರತಿಷ್ಠಿತ ಮಕ್ಕಳ ಹವಾಮಾನ ಪ್ರಶಸ್ತಿ ಸೇರಿದಂತೆ ಪ್ರಪಂಚದಾದ್ಯಂತದ ಹಲವಾರು ಪ್ರಶಸ್ತಿಗಳನ್ನು ಆಕೆಗೆ ತಂದುಕೊಟ್ಟಿತು.

ಪ್ರಸ್ತುತತೆ:

ಈ ಉದಾಹರಣೆಯು ನಾಗರಿಕ ಸೇವೆಗಾಗಿ ಯೋಗ್ಯತೆ ಮತ್ತು ಅಡಿಪಾಯದ ಮೌಲ್ಯಗಳು’ (Aptitude and foundational values for Civil Service)ವಿಷಯಕ್ಕೆ ಸಂಬಂಧಿಸಿದೆ. ಇದು ದುರ್ಬಲ ವರ್ಗಗಳ ಕಡೆಗೆ ಕರುಣೆ ಮತ್ತು ಸಹಾನುಭೂತಿಯಂತಹ ಮೌಲ್ಯಗಳ ಬಗ್ಗೆ ಮಾತನಾಡುತ್ತದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಕಾಮೆಂಗ್ ನದಿ:

ಚೀನಾ ಗಡಿಯ ಸಮೀಪದಲ್ಲಿ 3.4 ತೀವ್ರತೆಯ ಭೂಕಂಪದಿಂದ ಉಂಟಾದ ಭೂಕುಸಿತಗಳು ಅರುಣಾಚಲ ಪ್ರದೇಶದಲ್ಲಿ ಹರಿಯುವ ಕಮೆಂಗ್ ನದಿಯಲ್ಲಿ ಸಾಮೂಹಿಕ ಮೀನುಗಳ ಸಾವಿಗೆ ಕಾರಣವಾಗಿದೆ ಎಂದು ಅಧ್ಯಯನಗಳು ಸೂಚಿಸಿವೆ.

 1. ಭೂಕುಸಿತಗಳು ಹಲವಾರು ಟನ್‌ಗಳಷ್ಟು ಮಣ್ಣು ಮತ್ತು ಕಲ್ಲುಗಳನ್ನು ನದಿಗೆ ಸುರಿದು, ನೀರಿನ ಹರಿವನ್ನು ಗಣನೀಯವಾಗಿ ಕಡಿಮೆ ಮಾಡಿತು.
 2. ಅತಿ ಹೆಚ್ಚು ಪ್ರಕ್ಷುಬ್ಧತೆಯಿಂದಾಗಿ ನದಿಯು ಕಪ್ಪು ಬಣ್ಣಕ್ಕೆ ತಿರುಗಿತು, ಇದರ ಪರಿಣಾಮವಾಗಿ ನೀರಿನಲ್ಲಿ ಕಡಿಮೆ ಕರಗಿದ ಆಮ್ಲಜನಕವು ಮೀನುಗಳ ಸಾವಿಗೆ ಕಾರಣವಾಗಿದೆ.

ಕಮೆಂಗ್ ನದಿ:

 1. ಇದು ಬ್ರಹ್ಮಪುತ್ರ ನದಿಯ ಬಲದಂಡೆಯ ಉಪನದಿಯಾಗಿದೆ.
 2. ಇದು ಪೂರ್ವ ಹಿಮಾಲಯದ ತವಾಂಗ್ ಜಿಲ್ಲೆಯಲ್ಲಿ ಹುಟ್ಟುತ್ತದೆ. ಇದು ಅರುಣಾಚಲ ಪ್ರದೇಶದ ಪೂರ್ವ ಕಮೆಂಗ್ ಜಿಲ್ಲೆ ಮತ್ತು ಪಶ್ಚಿಮ ಕಮೆಂಗ್ ಜಿಲ್ಲೆಯ ನಡುವಿನ ಗಡಿಯನ್ನು ರೂಪಿಸುತ್ತದೆ.
 3. ಅಸ್ಸಾಂನ, ತೇಜ್‌ಪುರದಲ್ಲಿ ಬ್ರಹ್ಮಪುತ್ರ ನದಿಯನ್ನು ಸೇರುವ ಮೊದಲು ಸೋನಿತ್‌ಪುರ ಜಿಲ್ಲೆಯ ಮೂಲಕ ಹರಿಯುತ್ತದೆ.
 4. ಕಾಮೆಂಗ್ ನದಿಯು ಪಶ್ಚಿಮ ಮತ್ತು ಪೂರ್ವ ಎಂಬ ಎರಡು ವಿಭಾಗಗಳನ್ನು ಒಳಗೊಂಡಿದೆ- ಪಶ್ಚಿಮದಲ್ಲಿ ಅಕ್ಕ ಬೆಟ್ಟಗಳನ್ನು ಒಳಗೊಂಡಿದೆ ಮತ್ತು ಅಲ್ಲಿ ಅಕ್ಕ ಬುಡಕಟ್ಟು ಜನಾಂಗದವರು ವಾಸಿಸುತ್ತಾರೆ ಮತ್ತು ಪೂರ್ವದಲ್ಲಿ ಡಫ್ಲಾ ಬುಡಕಟ್ಟಿನ ಜನರು ವಾಸಿಸುವ ಡಫ್ಲಾ ಬೆಟ್ಟಗಳನ್ನು ಒಳಗೊಂಡಿದೆ.
 5. ಕಾಜಿರಂಗ ರಾಷ್ಟ್ರೀಯ ಉದ್ಯಾನವನ ಮತ್ತು ಪಖುಯಿ ವನ್ಯಜೀವಿ ಅಭಯಾರಣ್ಯವು ಕಾಮೆಂಗ್ ನದಿಯ ಸಮೀಪದಲ್ಲಿದೆ.

current affairs


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos