[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 2ನೇ ನವೆಂಬರ 2021

 

 

ಪರಿವಿಡಿ:

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. 2070 ರ ವೇಳೆಗೆ ನಿವ್ವಳ ಇಂಗಾಲ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸಲಿರುವ ಭಾರತ.

2. COP26 ಹವಾಮಾನ ಸಮ್ಮೇಳನ.

3. ಪಟಾಕಿಗಳ ಮೇಲೆ ಪೂರ್ಣ ಪ್ರಮಾಣದ ನಿಷೇಧದ ಸಾಧ್ಯತೆ.

4. ಬಾಟಮ್ ಟ್ರಾಲಿಂಗ್ ಮತ್ತು ಸಂಬಂಧಿತ ಸಮಸ್ಯೆಗಳು.

5. ಗಿನ್ನೆಸ್ ದಾಖಲೆಯಲ್ಲಿ ಗಂಗಾ ಮಿಷನ್.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಗಂಗಾ ನದಿ ಡಾಲ್ಫಿನ್‌ ಗಳಿಗಾಗಿ ಸಂರಕ್ಷಣಾ ಮಾರ್ಗದರ್ಶಿ ಸೂತ್ರಗಳು.

2. BASIC ದೇಶಗಳು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಸಂರಕ್ಷಣೆ ಮತ್ತು ಮಾಲಿನ್ಯ ಸಂಬಂಧಿತ ಸಮಸ್ಯೆಗಳು.

2070 ರ ವೇಳೆಗೆ ನಿವ್ವಳ ಇಂಗಾಲ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸಲಿರುವ ಭಾರತ:


(India will achieve net zero emissions by 2070)

ಸಂದರ್ಭ:

ಹವಾಮಾನ ಬದಲಾವಣೆಯ ವಿರುದ್ಧ ಹೋರಾಡುವ ಪ್ರಯತ್ನದಲ್ಲಿ, ಗ್ಲಾಸ್ಗೋದಲ್ಲಿ ನಡೆಯುತ್ತಿರುವ COP26 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಅವರು ಈ ಕೆಳಗಿನ ಘೋಷಣೆಗಳನ್ನು ಮಾಡಿದ್ದಾರೆ:

  1. ಭಾರತವು 2070 ರ ವೇಳೆಗೆ ನಿವ್ವಳ ಶೂನ್ಯ ಹೊರಸೂಸುವಿಕೆಯನ್ನು ಸಾಧಿಸುತ್ತದೆ.
  2. 2030 ರ ವೇಳೆಗೆ, ಭಾರತವು ತನ್ನ ಶಕ್ತಿ / ಇಂಧನ ಅಗತ್ಯತೆಯ 50% ಅನ್ನು ನವೀಕರಿಸಬಹುದಾದ ಮೂಲಗಳಿಂದ ಪಡೆಯುವುದನ್ನು ಖಚಿತಪಡಿಸುತ್ತದೆ.
  3. ಭಾರತವು ತನ್ನ ಇಂಗಾಲದ ಹೊರಸೂಸುವಿಕೆಯನ್ನು 2030 ರವರೆಗೆ ಒಂದು ಬಿಲಿಯನ್ ಟನ್‌ಗಳಷ್ಟು ಕಡಿಮೆ ಮಾಡುತ್ತದೆ.
  4. ಇದು ಜಿಡಿಪಿಯ ಪ್ರತಿ ಯೂನಿಟ್‌ಗೆ ಅದರ ಹೊರಸೂಸುವಿಕೆಯ ತೀವ್ರತೆಯನ್ನು 45% ಕ್ಕಿಂತ ಕಡಿಮೆಗೊಳಿಸುತ್ತದೆ.
  5. ಭಾರತವು 2030 ರ ವೇಳೆಗೆ 500 ಗಿಗಾವ್ಯಾಟ್ ನವೀಕರಿಸಬಹುದಾದ ಶಕ್ತಿಯನ್ನು ಉತ್ಪಾದಿಸುವ ವ್ಯವಸ್ಥೆಯನ್ನು ಸ್ಥಾಪಿಸುತ್ತದೆ, ಇದು ಪ್ರಸ್ತುತ ಭಾರತವು ಹಾಕಿಕೊಂಡಿರುವ ಗುರಿಗಿಂತ 50 GW ಹೆಚ್ಚಳವಾಗಿದೆ.

 

ಭಾರತ ಮತ್ತು ‘ನೆಟ್-ಝೀರೋ’ ಗುರಿ:

  1. ಅಮೇರಿಕಾ ಮತ್ತು ಚೀನಾ ನಂತರ, ಭಾರತವು ಹಸಿರುಮನೆ ಅನಿಲಗಳನ್ನು ಹೊರಸೂಸುವ ವಿಶ್ವದ ಮೂರನೇ ಅತಿದೊಡ್ಡ ದೇಶವಾಗಿದೆ ಮತ್ತು ‘ನಿವ್ವಳ-ಶೂನ್ಯ’ ಗುರಿಯ ಹೊರಗೆ ಉಳಿದಿರುವ ಏಕೈಕ ಪ್ರಮುಖ ದೇಶವಾಗಿದೆ.
  2. ಭಾರತದ ವಾದವೇನೆಂದರೆ, ‘ಪ್ಯಾರಿಸ್ ಒಪ್ಪಂದ’ ಚೌಕಟ್ಟಿನ ಹೊರಗೆ ನಿವ್ವಳ-ಶೂನ್ಯ ಗುರಿಗಳ ಮೇಲೆ ಸಮಾನಾಂತರ ಚರ್ಚೆಯನ್ನು ಆರಂಭಿಸುವ ಬದಲು, ಎಲ್ಲ ದೇಶಗಳು ತಾವು ಈಗಾಗಲೇ ಭರವಸೆ ನೀಡಿದ ಗುರಿಗಳನ್ನು ಪೂರೈಸುವತ್ತ ಗಮನ ಹರಿಸಬೇಕು ಎಂಬುದಾಗಿದೆ.
  3. ಭಾರತ ಮಾತ್ರ ಈ ಗುರಿಯನ್ನು ವಿರೋಧಿಸುತ್ತದೆ ಏಕೆಂದರೆ ಅದು ಭಾರತದ ಮೇಲೆ ಹೆಚ್ಚು ಪರಿಣಾಮ ಬೀರುವ ಸಾಧ್ಯತೆಯಿದೆ.

ಭಾರತದ ಮುಂದಿರುವ ವಿಶಿಷ್ಟ ಕಾಳಜಿಗಳು:

  1. ಮುಂದಿನ ಎರಡು ಮೂರು ದಶಕಗಳಲ್ಲಿ, ಭಾರತದ ಇಂಗಾಲ ಹೊರಸೂಸುವಿಕೆಯು ವಿಶ್ವದಲ್ಲಿ ಅತ್ಯಂತ ವೇಗದಲ್ಲಿ ಹೆಚ್ಚಾಗುವ ಸಾಧ್ಯತೆಯಿದೆ, ಏಕೆಂದರೆ ಭಾರತದಲ್ಲಿ, ಲಕ್ಷಾಂತರ ಜನರನ್ನು ಬಡತನದಿಂದ ಮೇಲಕ್ಕೆತ್ತಲು ಹೆಚ್ಚಿನ ಬೆಳವಣಿಗೆಗೆ ಒತ್ತು ನೀಡಲಾಗುತ್ತಿದೆ.
  2. ಹೆಚ್ಚಿದ ಹೊರಸೂಸುವಿಕೆಯನ್ನು ಯಾವುದೇ ಅರಣ್ಯೀಕರಣ ಅಥವಾ ಮರು ಅರಣ್ಯೀಕರಣವು ಸರಿದೂಗಿಸುವುದಿಲ್ಲ.
  3. ಪ್ರಸ್ತುತ, ಹೆಚ್ಚಿನ ಇಂಗಾಲ-ಹೊರತೆಗೆಯುವ ತಂತ್ರಜ್ಞಾನಗಳು (carbon removal technologies) ವಿಶ್ವಾಸಾರ್ಹವಾಗಿಲ್ಲ ಅಥವಾ ತುಂಬಾ ದುಬಾರಿಯಾಗಿವೆ.

ಈಗ ಮಾಡಬೇಕಿರುವುದೇನು?/ಭಾರತದ ಸಲಹೆಗಳು:

  1. ಹವಾಮಾನ ನ್ಯಾಯದ ಉತ್ಸಾಹದಲ್ಲಿ, ಶ್ರೀಮಂತ ಅಭಿವೃದ್ಧಿ ಹೊಂದಿದ ದೇಶಗಳು ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಮತ್ತು ಹವಾಮಾನ ವೈಪರೀತ್ಯವನ್ನು ಎದುರಿಸಲು ಹೆಚ್ಚು ದುರ್ಬಲತೆ ಹೊಂದಿರುವ ರಾಷ್ಟ್ರಗಳಿಗೆ ಸಹಾಯ ಮಾಡಲು ಕನಿಷ್ಠ $1 ಟ್ರಿಲಿಯನ್ ಹವಾಮಾನ ಹಣಕಾಸು ಒದಗಿಸಬೇಕು.
  2. ಇಕ್ವಿಟಿ ತತ್ವ ಮತ್ತು ಸಾಮಾನ್ಯ ಆದರೆ ವಿಭಿನ್ನ ಜವಾಬ್ದಾರಿಗಳು ಮತ್ತು ಆಯಾ ಸಾಮರ್ಥ್ಯಗಳ ತತ್ವಗಳು (Differentiated Responsibilities and Respective Capabilities) ಮತ್ತು, ದೇಶಗಳ ವಿಭಿನ್ನ ರಾಷ್ಟ್ರೀಯ ಸಂದರ್ಭಗಳ ಗುರುತಿಸುವಿಕೆಯನ್ನು ಗೌರವಿಸಬೇಕು.
  3. ಕೆಲವು ಸಾಂಪ್ರದಾಯಿಕ ಸಮುದಾಯಗಳಲ್ಲಿ ಅಭ್ಯಾಸ ಮಾಡುವ ಸುಸ್ಥಿರ ಜೀವನ ವಿಧಾನಗಳನ್ನು ಶಾಲಾ ಪಠ್ಯಕ್ರಮದ ಭಾಗವಾಗಿ ಮಾಡಬೇಕು.
  4. ಜಲ ಜೀವನ್ ಮಿಷನ್, ಸ್ವಚ್ ಭಾರತ್ ಮಿಷನ್ ಮತ್ತು ಮಿಷನ್ ಉಜ್ವಲದಂತಹ ಕಾರ್ಯಕ್ರಮಗಳನ್ನು ಅಳವಡಿಸಿಕೊಂಡಿರುವ ಭಾರತದ ಪ್ರಯತ್ನಗಳಿಂದ ಕಲಿತ ಪಾಠಗಳನ್ನು ಜಾಗತಿಕವಾಗಿ ಜನಪ್ರಿಯಗೊಳಿಸಬೇಕು.
  5. ಇಂಗಾಲ ಹೊರಸೂಸುವಿಕೆಯನ್ನು ತಗ್ಗಿಸುವಿಕೆಯಷ್ಟೇ ಮುಖ್ಯವಾಗಿ ಹವಾಮಾನದ ಹೊಂದಾಣಿಕೆಯತ್ತಲೂ ಗಮನಹರಿಸಬೇಕು.

current affairs

 

ನೆಟ್ ಜೀರೋ ಗುರಿಗೆ ಬದ್ಧವಾಗಿರುವ ಇತರ ದೇಶಗಳು:

  1. ನ್ಯೂಜಿಲ್ಯಾಂಡ್ ಸರ್ಕಾರವು 2019 ರಲ್ಲಿ ‘ಜೀರೋ ಕಾರ್ಬನ್ ಆಕ್ಟ್’ ಅನ್ನು ಅಂಗೀಕರಿಸಿತು ಮತ್ತು ಇದರ ಅಡಿಯಲ್ಲಿ ದೇಶವು 2050 ರ ವೇಳೆಗೆ ‘ಶೂನ್ಯ ಕಾರ್ಬನ್ ಎಮಿಷನ್’ ಗುರಿಯನ್ನು ಸಾಧಿಸಲು ಬದ್ಧವಾಗಿದೆ.
  2. ಯುಕೆ ಸಂಸತ್ತಿನಿಂದ ಈ ನಿಟ್ಟಿನಲ್ಲಿ ಕಾನೂನನ್ನು ಅಂಗೀಕರಿಸಲಾಗಿದೆ, ಅದರ ಅಡಿಯಲ್ಲಿ ಯುನೈಟೆಡ್ ಕಿಂಗ್‌ಡಂನಲ್ಲಿ ಹಸಿರುಮನೆ ಅನಿಲಗಳ ನಿವ್ವಳ ಹೊರಸೂಸುವಿಕೆಯನ್ನು 100 ಪ್ರತಿಶತದಷ್ಟು ಕಡಿಮೆ ಮಾಡುವ ಜವಾಬ್ದಾರಿಯನ್ನು ಸರ್ಕಾರಕ್ಕೆ ವಹಿಸಲಾಗಿದೆ.
  3. ಯುಎಸ್ ಅಧ್ಯಕ್ಷ ಜೋ ಬಿಡೆನ್ 2030 ರ ವೇಳೆಗೆ ದೇಶದ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು 2005 ರ ಮಟ್ಟಕ್ಕಿಂತ ಕನಿಷ್ಠ 50 ಪ್ರತಿಶತದಷ್ಟು ಕಡಿತಗೊಳಿಸುವುದಾಗಿ ಘೋಷಿಸಿದ್ದಾರೆ.
  4. ಹವಾಮಾನ ಬದಲಾವಣೆಯ ಬಗ್ಗೆ ಇಷ್ಟವಿಲ್ಲದ ಮಿತ್ರರನ್ನು ಒಟ್ಟುಗೂಡಿಸಲು ಮತ್ತು 2050 ರ ವೇಳೆಗೆ ದೇಶದಲ್ಲಿ ‘ನಿವ್ವಳ-ಶೂನ್ಯ’ ಇಂಗಾಲದ ಹೊರಸೂಸುವಿಕೆಯ ಗುರಿಯನ್ನು ತಲುಪಲು ‘ವರ್ಲ್ಡ್ ವಾರ್ ಝೀರೋ’ ಅನ್ನು 2019 ರಲ್ಲಿ ಪ್ರಾರಂಭಿಸಲಾಯಿತು.
  5. ಯುರೋಪಿಯನ್ ಒಕ್ಕೂಟದ ‘ಫಿಟ್ ಫಾರ್ 55’ ಯೋಜನೆ: ಇದರ ಅಡಿಯಲ್ಲಿ, ಯುರೋಪಿಯನ್ ಆಯೋಗವು ತನ್ನ 27 ಸದಸ್ಯ ರಾಷ್ಟ್ರಗಳನ್ನು 2030 ರ ವೇಳೆಗೆ 1990 ರ ಹೊರಸೂಸುವಿಕೆ ಮಟ್ಟಕ್ಕಿಂತ 55 ಪ್ರತಿಶತದಷ್ಟು ಹೊರಸೂಸುವಿಕೆಯನ್ನು ಕಡಿತಗೊಳಿಸುವಂತೆ ಕೇಳಿದೆ.
  6. ಚೀನಾ 2060 ರ ವೇಳೆಗೆ ‘ನೆಟ್-ಝೀರೋ’ ಸಾಧಿಸುವ ಗುರಿಯನ್ನು ಘೋಷಿಸಿದೆ ಮತ್ತು 2030 ರ ಮಟ್ಟಕ್ಕೆ ತನ್ನ ಹೊರಸೂಸುವಿಕೆಯನ್ನು ಸೀಮಿತಗೊಳಿಸುವ ಬಗ್ಗೆ ಮಾತನಾಡಿದೆ.

ಹವಾಮಾನ ಬದಲಾವಣೆಯನ್ನು ಎದುರಿಸಲು ಆಯ್ಕೆಗಳು:

ಜಾಗತಿಕ ತಾಪಮಾನವನ್ನು 1.5 ಡಿಗ್ರಿ ಸೆಲ್ಸಿಯಸ್ ಗಿಂತ ಕಡಿಮೆ ಮಾಡಲು ಮತ್ತು ಹವಾಮಾನ ಬದಲಾವಣೆಯಿಂದ ಬದಲಾಯಿಸಲಾಗದ ಹಾನಿಯನ್ನು ತಡೆಗಟ್ಟಲು, ಇಡೀ ಪ್ರಪಂಚವು ಒಟ್ಟಾರೆಯಾಗಿ ಒಂದು ಟ್ರ್ಯಾಕ್ ನಲ್ಲಿರಬೇಕು. ಮತ್ತು 2010 ರಿಂದ 2030 ರ ವೇಳೆಗೆ ಹೊರಸೂಸುವಿಕೆ ಮಟ್ಟವನ್ನು 45 ಪ್ರತಿಶತದಷ್ಟು ಕಡಿತಗೊಳಿಸುವ ಗುರಿಯನ್ನು ಹೊಂದಬೇಕು, ಇದರಲ್ಲಿ ಅತಿ ಹೆಚ್ಚು ಹೊರಸೂಸುವಿಕೆಯನ್ನು ಹೊಂದಿರುವ ದೇಶಗಳು ಹೆಚ್ಚಿನ ಕೊಡುಗೆಯನ್ನು ನೀಡಬೇಕಾಗುತ್ತದೆ.

ನಿವ್ವಳ ಶೂನ್ಯ / ನೆಟ್ ಜೀರೋ ಎಂದರೇನು?

ಇಂಗಾಲ-ತಟಸ್ಥತೆ(Carbon neutrality) ಎಂದೂ ಕರೆಯಲ್ಪಡುವ ನೆಟ್- ಜೀರೋ, ಒಂದು ದೇಶವು ತನ್ನ ಒಟ್ಟು ಹೊರಸೂಸುವಿಕೆಯನ್ನು ಶೂನ್ಯಕ್ಕೆ ತಗ್ಗಿಸುತ್ತದೆ ಎಂದಲ್ಲ. ಬದಲಾಗಿ, ‘ನಿವ್ವಳ-ಶೂನ್ಯ’ ಎನ್ನುವುದು ದೇಶದ ಹೊರಸೂಸುವಿಕೆಯನ್ನು ‘ವಾತಾವರಣದಿಂದ ಹಸಿರುಮನೆ ಅನಿಲಗಳ ಹೀರಿಕೊಳ್ಳುವಿಕೆ ಮತ್ತು ತಟಸ್ಥಗೊಳಿಸುವಿಕೆಯಿಂದ’ ಸರಿದೂಗಿಸುವ (compensated) ಸನ್ನಿವೇಶವಾಗಿದೆ.

ಹೊರಸೂಸುವಿಕೆಯ ಹೀರಿಕೊಳ್ಳುವಿಕೆಯನ್ನು ಹೆಚ್ಚಿಸಲು ಕಾಡುಗಳಂತಹ ಹೆಚ್ಚಿನ ಸಂಖ್ಯೆಯ ಇಂಗಾಲದ ಸಿಂಕ್‌ಗಳನ್ನು ನಿರ್ಮಿಸಬಹುದು, ಆದರೆ ವಾತಾವರಣದಿಂದ ತೆಗೆದುಹಾಕುವ ಹಸಿರುಮನೆ ಅನಿಲಗಳಿಗೆ ಇಂಗಾಲದ ಸೆರೆಹಿಡಿಯುವಿಕೆ (Carbon Capture) ಮತ್ತು ಸಂಗ್ರಹಣೆಯಂತಹ ಅತ್ಯಾಧುನಿಕ ತಂತ್ರಜ್ಞಾನಗಳು ಬೇಕಾಗುತ್ತವೆ.

ನಿವ್ವಳ-ಶೂನ್ಯದ ಅವಶ್ಯಕತೆ:

ಕಳೆದ ಎರಡು ವರ್ಷಗಳಿಂದ, 2050 ರ ವೇಳೆಗೆ ‘ನೆಟ್- ಜೀರೋ’ ಗುರಿಯನ್ನು ಸಾಧಿಸಲು ಈ ಅಭಿಯಾನಕ್ಕೆ ಸಹಿ ಮಾಡುವಂತೆ ಪ್ರತಿ ದೇಶವನ್ನು ಮನವೊಲಿಸುವ ಸಾಕಷ್ಟು ಸಕ್ರಿಯ ಅಭಿಯಾನ ನಡೆಯುತ್ತಿದೆ.

2050 ರ ಹೊತ್ತಿಗೆ, ‘ಪ್ಯಾರಿಸ್ ಒಪ್ಪಂದ’ದ ಅಡಿಯಲ್ಲಿ ನಿರ್ಧರಿಸಲ್ಪಟ್ಟ ಜಾಗತಿಕ’ ಇಂಗಾಲದ ತಟಸ್ಥತೆ ಅಥವಾ ಕಾರ್ಬನ್-ನ್ಯೂಟ್ರಾಲಿಟಿ ಯನ್ನು ‘, ಕೈಗಾರಿಕೆ ಪೂರ್ವದ ಅವಧಿಗೆ ಹೋಲಿಸಿದರೆ ಜಾಗತಿಕ ತಾಪಮಾನ ಏರಿಕೆಯನ್ನು 2°C ಒಳಗಡೆಗೆ ಸೀಮಿತಗೊಳಿಸುವ ಗುರಿಯನ್ನು ಸಾಧಿಸುವ ಏಕ ಮಾತ್ರ ಮಾರ್ಗವಾಗಿದೆ ಎಂದು ವಾದಿಸಲಾಗುತ್ತಿದೆ.

  1. ‘ನಿವ್ವಳ-ಶೂನ್ಯ’ ಸೂತ್ರೀಕರಣವು ಯಾವುದೇ ದೇಶದ ಮೇಲೆ ಯಾವುದೇ ಹೊರಸೂಸುವಿಕೆ-ಕಡಿತದ ಗುರಿಗಳನ್ನು ನಿಯೋಜಿಸುವುದಿಲ್ಲ.

ನೆಟ್ ಜೀರೋ ಮತ್ತು ಪ್ಯಾರಿಸ್ ಒಪ್ಪಂದ:

  1. ಹವಾಮಾನ ಬದಲಾವಣೆಯನ್ನು ಎದುರಿಸಲು ರಚನೆಯಾಗಿರುವ ಹೊಸ ಜಾಗತಿಕ ಉಪ ಕ್ರಮವಾದ 2015 ರ ಪ್ಯಾರಿಸ್ ಒಪ್ಪಂದದಲ್ಲಿ, ‘ನಿವ್ವಳ-ಶೂನ್ಯ’ ಗುರಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
  2. ಪ್ಯಾರಿಸ್ ಒಪ್ಪಂದದ ಪ್ರಕಾರ, ಸಹಿ ಮಾಡುವ ಪ್ರತಿಯೊಂದು ಜವಾಬ್ದಾರಿಯುತ ದೇಶವು ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಅತ್ಯಂತ ಸೂಕ್ತವಾದ ಹವಾಮಾನ ಕ್ರಮವನ್ನು ತೆಗೆದುಕೊಳ್ಳುವುದು ಕಡ್ಡಾಯವಾಗಿದೆ.
  3. ಇದರ ಅಡಿಯಲ್ಲಿ, ಎಲ್ಲಾ ದೇಶಗಳು ತಮಗಾಗಿ ಐದು ಅಥವಾ ಹತ್ತು ವರ್ಷಗಳ ಹವಾಮಾನ ಗುರಿಗಳನ್ನು ನಿಗದಿಪಡಿಸಬೇಕು ಮತ್ತು ಅವುಗಳ ಸಾಧನೆಯನ್ನು ಪ್ರದರ್ಶಿಸಬೇಕಾಗುತ್ತದೆ.
  4. ಇತರ ಅವಶ್ಯಕತೆಗಳ ಅಡಿಯಲ್ಲಿ, ಪ್ರತಿ ಗಡುವಿನ ನಂತರದ ಹೊಸ ಅವಧಿಗೆ ನಿಗದಿಪಡಿಸಿದ ಗುರಿಗಳು ಪೂರ್ವ-ಅವಧಿಯ ಗುರಿಗಳಿಗಿಂತ ಹೆಚ್ಚು ಮಹತ್ವಾಕಾಂಕ್ಷೆಯದಾಗಿರಬೇಕು.

 

ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.

COP26 ಹವಾಮಾನ ಸಮಾವೇಶ:


(COP26 climate conference)

ಸಂದರ್ಭ:

ವಿಶ್ವಸಂಸ್ಥೆಯ ಹವಾಮಾನ ಬದಲಾವಣೆ ಸಮ್ಮೇಳನ COP 26’ ಯುನೈಟೆಡ್ ಕಿಂಗ್‌ಡಂನ ಅಧ್ಯಕ್ಷತೆಯಲ್ಲಿ 31 ಅಕ್ಟೋಬರ್ ನಿಂದ 12 ನವೆಂಬರ್ ವರೆಗೆ ನಡೆಯಲಿದೆ.

  1. ಇದು ‘ಪಕ್ಷಗಳ 26 ನೇ ಸಮ್ಮೇಳನ’ ಆಗಿರುತ್ತದೆ, ಆದ್ದರಿಂದ ಇದಕ್ಕೆ ‘COP26’ ಎಂದು ಹೆಸರು.
  2. ಗ್ಲ್ಯಾಸ್ಗೋದಲ್ಲಿನ ಸ್ಕಾಟಿಷ್ ಈವೆಂಟ್ ಕ್ಯಾಂಪಸ್‌ನಲ್ಲಿ ‘COP26’ ನಡೆಯಲಿದೆ.

 

ಪಕ್ಷಗಳ ಸಮ್ಮೇಳನ (ಕಾನ್ಫರೆನ್ಸ್ ಆಫ್ ಪಾರ್ಟೀಸ್) ಎಂದರೇನು?

‘ಪಾರ್ಟಿಗಳ ಸಮ್ಮೇಳನ’ (Conference of Parties – COP) 1994 ರಲ್ಲಿ ಸ್ಥಾಪನೆಯಾದ ‘ಹವಾಮಾನ ಬದಲಾವಣೆಯ ಮೇಲೆ ವಿಶ್ವಸಂಸ್ಥೆಯ ಚೌಕಟ್ಟಿನ ಸಮಾವೇಶ’ (United Nations Framework Convention on Climate Change – UNFCCC)ದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

  1. UNFCCC “ವಾತಾವರಣದಲ್ಲಿ ಹಸಿರುಮನೆ ಅನಿಲಗಳ ಸಾಂದ್ರತೆಯನ್ನು ಸ್ಥಿರಗೊಳಿಸುವ” ಕಡೆಗೆ ಕೆಲಸ ಮಾಡಲು ಸ್ಥಾಪಿಸಲಾಯಿತು.
  2. 1995 ರಿಂದ COP ಸದಸ್ಯರು ಪ್ರತಿವರ್ಷ ಸಭೆಯನ್ನು ಆಯೋಜಿಸುತ್ತಿದ್ದಾರೆ. ಮೊದಲ ‘ಪಕ್ಷಗಳ ಸಮ್ಮೇಳನ’ (ಸಿಒಪಿ) 1995 ರಲ್ಲಿ ಬರ್ಲಿನ್ ನಲ್ಲಿ ನಡೆಯಿತು.

ಮೊದಲ ‘ಪಕ್ಷಗಳ ಸಮ್ಮೇಳನ’ (COP1) ಸದಸ್ಯ ರಾಷ್ಟ್ರಗಳ ಜವಾಬ್ದಾರಿಗಳ ಪಟ್ಟಿಯನ್ನು ಸಿದ್ಧಪಡಿಸಿದೆ, ಅವುಗಳೆಂದರೆ:

  1. ಹವಾಮಾನ ಬದಲಾವಣೆಯನ್ನು ಕಡಿಮೆ ಮಾಡಲು ಕ್ರಮಗಳನ್ನು ಅಭಿವೃದ್ಧಿಪಡಿಸುವುದು.
  2. ಹವಾಮಾನ ಬದಲಾವಣೆಯ ಪ್ರಭಾವಕ್ಕೆ ‘ಹೊಂದಿಕೊಳ್ಳುವ’ ಸಿದ್ಧತೆಯಲ್ಲಿ ಸಹಾಯ ಮಾಡಲು.
  3. ಹವಾಮಾನ ಬದಲಾವಣೆಗೆ ಸಂಬಂಧಿಸಿದ ಶಿಕ್ಷಣ, ತರಬೇತಿ ಮತ್ತು ಸಾರ್ವಜನಿಕ ಜಾಗೃತಿಯನ್ನು ಉತ್ತೇಜಿಸಲು.

UNFCCC ಪ್ರಕಾರ, COP26 ನಾಲ್ಕು ಗುರಿಗಳನ್ನು ಪೂರೈಸಲು ಕಾರ್ಯ ಮಾಡುತ್ತದೆ:

  1. ಶತಮಾನದ ಮಧ್ಯಭಾಗದಲ್ಲಿ ಜಾಗತಿಕವಾಗಿ ‘ನಿವ್ವಳ-ಶೂನ್ಯ’ ಹೊರಸೂಸುವಿಕೆಯನ್ನು ಖಾತ್ರಿಪಡಿಸುವುದು ಮತ್ತು 1.5 ° C ತಾಪಮಾನದ ಗುರಿಯ ಸಾಧನೆಯನ್ನು ಕೈಗೆಟುಕುವಂತೆ ಮಾಡುವುದು.
  2. ಸಮುದಾಯಗಳು ಮತ್ತು ನೈಸರ್ಗಿಕ ಆವಾಸಸ್ಥಾನಗಳನ್ನು ರಕ್ಷಿಸಲು ಸಾಮರಸ್ಯವನ್ನು ಸ್ಥಾಪಿಸುವುದು.
  3. ಹಣಕಾಸು ಹಂಚಿಕೆ: ಮೊದಲ ಎರಡು ಗುರಿಗಳನ್ನು ಪೂರೈಸಲು, ಅಭಿವೃದ್ಧಿ ಹೊಂದಿದ ದೇಶಗಳು 2020 ರ ವೇಳೆಗೆ ಪ್ರತಿ ವರ್ಷ ಕನಿಷ್ಠ 100 ಬಿಲಿಯನ್ ಡಾಲರ್ ಹವಾಮಾನ ಹಣಕಾಸು ಸಂಗ್ರಹಿಸುವ ಭರವಸೆಯನ್ನು ಪೂರೈಸಬೇಕು.
  4. ‘ಪ್ಯಾರಿಸ್ ರೂಲ್ ಬುಕ್ ಅನ್ನು ಅಂತಿಮಗೊಳಿಸುವುದು’: ಪ್ಯಾರಿಸ್ ಒಪ್ಪಂದವನ್ನು ಪೂರ್ಣಗೊಳಿಸಲು ನೆರವಾಗುವ ನಿಯಮಗಳ ಸಮಗ್ರ ಪಟ್ಟಿಯನ್ನು ತಯಾರಿಸಲು ಜಾಗತಿಕ ನಾಯಕರು ಒಟ್ಟಾಗಿ ಕೆಲಸ ಮಾಡಬೇಕು.

ಭಾರತವು ತನ್ನ ಗುರಿಯನ್ನು ಸಾಧಿಸಲು ಕೈಗೊಳ್ಳಬೇಕಾದ ಕ್ರಮಗಳು:

  1. ಭಾರತವು ತನ್ನ ರಾಷ್ಟ್ರೀಯವಾಗಿ ನಿರ್ಧರಿಸಿದ ಕೊಡುಗೆಯನ್ನು (Nationally Determined Contribution- NDC) ನವೀಕರಿಸುವ ಸಮಯ ಬಂದಿದೆ. (NDC ಯು, ರಾಷ್ಟ್ರೀಯ ಹೊರಸೂಸುವಿಕೆಯನ್ನು ಕಡಿತಗೊಳಿಸಲು ಪ್ರತಿ ದೇಶವು ಮಾಡಿದ ವಿವಿಧ ಪ್ರಯತ್ನಗಳ ವಿವರಣೆಯಾಗಿದೆ).
  2. ದೇಶದಲ್ಲಿ ಅಭಿವೃದ್ಧಿಯ ವೇಗವನ್ನು ಹೆಚ್ಚಿಸಲು, ‘ವಲಯವಾರು’ ಯೋಜನೆಗಳನ್ನು ರೂಪಿಸುವ ಅವಶ್ಯಕತೆಯಿದೆ. ನಾವು ವಿದ್ಯುತ್ ಮತ್ತು ಸಾರಿಗೆ ವಲಯವನ್ನು ಡಿಕಾರ್ಬೊನೈಸ್ ಮಾಡಬೇಕು.
  3. ಕಲ್ಲಿದ್ದಲು ವಲಯವನ್ನು ಹೇಗೆ ಬದಲಾಯಿಸಬಹುದು? ಇದಕ್ಕಾಗಿ, ಆಕ್ರಮಣಕಾರಿ ಆಧಾರದ ಮೇಲೆ ಪ್ರಯತ್ನಗಳನ್ನು ಮಾಡಬೇಕು. ಭಾರತವು ಈಗಿರುವ ಸ್ಥಾವರಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳನ್ನು ನಿರ್ಮಿಸುವುದಿಲ್ಲ ಎಂದು ಘೋಷಿಸುವ ಸಮಯ ಬಂದಿದೆ. ಭಾರತವು ತನ್ನ ಹವಾಮಾನ ಬದಲಾವಣೆಯ ಕಾನೂನು ಮತ್ತು ಸಾಂಸ್ಥಿಕ ಚೌಕಟ್ಟನ್ನು ವೇಗಗೊಳಿಸಬೇಕಾಗಿದೆ.

 

UNFCCC ಕುರಿತು:

  1. UNFCCC ಅನ್ನು 1992 ರಲ್ಲಿ ರಿಯೊ ಅರ್ಥ್ ಶೃಂಗಸಭೆಯಲ್ಲಿ ಅಳವಡಿಸಿಕೊಳ್ಳಲಾಯಿತು, ಇದು ಹವಾಮಾನ ಬದಲಾವಣೆಯ ಸಮಸ್ಯೆಯನ್ನು ಎದುರಿಸಲು ಅಂತರಾಷ್ಟ್ರೀಯ ಸಮುದಾಯದ ಮೊದಲ ಸಂಘಟಿತ ಪ್ರಯತ್ನದ ಆರಂಭವನ್ನು ಗುರುತಿಸಿತು.
  2. ರಿಯೊ ಕನ್ವೆನ್ಷನ್ ಎಂದೂ ಕರೆಯಲ್ಪಡುವ, UNFCCC ಭೂಮಿಯ ವಾತಾವರಣದಲ್ಲಿ ಹಸಿರುಮನೆ ಅನಿಲಗಳ ಸಾಂದ್ರತೆಯನ್ನು ಸ್ಥಿರಗೊಳಿಸಲು ಕ್ರಮಕ್ಕಾಗಿ ಚೌಕಟ್ಟನ್ನು ಸ್ಥಾಪಿಸಿತು.
  3. UNFCCC 1994 ರಲ್ಲಿ ಜಾರಿಗೆ ಬಂದಿತು ಮತ್ತು ಪ್ರಪಂಚದ ಬಹುತೇಕ ಎಲ್ಲಾ ರಾಷ್ಟ್ರಗಳು ಈಗ ಇದಕ್ಕೆ ಸಹಿ ಹಾಕಿವೆ.
  4. ಇದು 2015 ರ ಪ್ಯಾರಿಸ್ ಒಪ್ಪಂದದ ಮೂಲ ಒಪ್ಪಂದವಾಗಿದೆ. ಅದೇ ರೀತಿ ಇದು 1997 ರ ಕ್ಯೋಟೋ ಶಿಷ್ಟಾಚಾರದ (1997 Kyoto Protocol)ಮೂಲ ಒಪ್ಪಂದ ಕೂಡ ಆಗಿದೆ.

 

ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.

ಪಟಾಕಿಗಳ ಮೇಲೆ ಪೂರ್ಣ ಪ್ರಮಾಣದ ನಿಷೇಧದ ಸಾಧ್ಯತೆ:


(Feasibility of a blanket ban on firecrackers)

ಸಂದರ್ಭ:

ಪಟಾಕಿ ಮೇಲೆ ಪೂರ್ಣ ಪ್ರಮಾಣದ ನಿಷೇಧ ಹೇರಿ ಆದೇಶ ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

  1. ಅಕ್ಟೋಬರ್ 29 ರಂದು ಪಟಾಕಿ ಸುಡುವಿಕೆಯನ್ನು ಸಂಪೂರ್ಣವಾಗಿ ನಿಷೇಧಿಸಿ ಆದೇಶ ನೀಡಿದ್ದ ಕಲ್ಕತ್ತಾ ಹೈಕೋರ್ಟ್ ಆದೇಶವನ್ನು ವರಿಷ್ಠ ನ್ಯಾಯಾಲಯವು ಅಸಿಂಧುಗೊಳಿಸಿದೆ.

ಸುಪ್ರೀಂ ಕೋರ್ಟ್ ಹೇಳಿದ್ದೇನು?

  1. ಪಟಾಕಿ ಬಳಕೆಯ ದುರುಪಯೋಗವನ್ನು ನಿಲ್ಲಿಸಲು ಕಾರ್ಯವಿಧಾನವನ್ನು ಬಲಪಡಿಸಿ.
  2. ಪಟಾಕಿಯಲ್ಲಿ ವಿಷಕಾರಿ ರಾಸಾಯನಿಕಗಳನ್ನು ಬಳಸದಂತೆ ಕ್ರಮ ಕೈಗೊಳ್ಳಬೇಕು.
  3. ಯಾವುದೇ ರಾಜ್ಯಗಳಲ್ಲಿ ನಿಷೇಧಿತ ಪಟಾಕಿಗಳ ಯಾವುದೇ ವಿಧದ ಬಳಕೆಯು ಕಂಡುಬಂದಲ್ಲಿ ಮುಖ್ಯ ಕಾರ್ಯದರ್ಶಿಗಳು, ಉನ್ನತ ಆಡಳಿತ ವ್ಯವಸ್ಥೆ ಮತ್ತು ಪೊಲೀಸ್ ಅಧಿಕಾರಿಗಳು ವೈಯಕ್ತಿಕವಾಗಿ ಜವಾಬ್ದಾರರಾಗಿರುತ್ತಾರೆ ಎಂದು ಸುಪ್ರೀಂ ಕೋರ್ಟ್ ತನ್ನ ಅಕ್ಟೋಬರ್ 29 ರ ಆದೇಶದಲ್ಲಿ ತಿಳಿಸಿತ್ತು.

ಸುಪ್ರೀಂ ಕೋರ್ಟ್ ತೀರ್ಪು: (ಅರ್ಜುನ್ ಗೋಪಾಲ ಪ್ರಕರಣ)

2018 ರ ಅಕ್ಟೋಬರ್ 23 ರಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ, ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ಪಟಾಕಿಗಳ ಮಾರಾಟ ಮತ್ತು ಉತ್ಪಾದನೆಯನ್ನು ನಿಷೇಧಿಸಿತು ಮತ್ತು ದೇಶಾದ್ಯಂತ ಪಟಾಕಿಗಳ ಬಳಕೆಯನ್ನು ನಿಯಂತ್ರಿಸಿತು.

  1. ನಿರ್ದಿಷ್ಟವಾಗಿ ‘ಬೇರಿಯಂ’ ಆಧಾರಿತ ಪಟಾಕಿಗಳ ಮೇಲೆ ನಿಷೇಧ ಹೇರಲಾಯಿತು.
  2. ಪಟಾಕಿಗಳ ಆನ್‌ಲೈನ್ ಮಾರಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ವಾಯು ಮಾಲಿನ್ಯವನ್ನು ತಡೆಗಟ್ಟಲು ದೇಶಾದ್ಯಂತ ಪಟಾಕಿಗಳ ತಯಾರಿಕೆ ಮತ್ತು ಮಾರಾಟವನ್ನು ನಿಷೇಧಿಸುವಂತೆ ಕೋರಿ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಂತರ ನ್ಯಾಯಾಲಯವು ಈ ನಿರ್ಧಾರಕ್ಕೆ ಬಂದಿತು.

ಪಟಾಕಿಗಳ ಬಳಕೆಯ ಕುರಿತು ಸುಪ್ರೀಂ ಕೋರ್ಟ್‌ನ ಇತ್ತೀಚಿನ ಅವಲೋಕನಗಳು:

  1. ಪಟಾಕಿಗಳ ನಿಷೇಧವನ್ನು ಪರಿಗಣಿಸುವಾಗ, ಸುಪ್ರೀಂ ಕೋರ್ಟ್ “ಕೆಲವರ ಉದ್ಯೋಗದ ನೆಪದಲ್ಲಿ” ಇತರ ನಾಗರಿಕರ ಬದುಕುವ ಹಕ್ಕನ್ನು ಉಲ್ಲಂಘಿಸಲು ಸಾಧ್ಯವಿಲ್ಲ ಎಂದು ಹೇಳಿದೆ.
  2. ಉದ್ಯೋಗ, ನಿರುದ್ಯೋಗ ಮತ್ತು ಬದುಕುವ ಹಕ್ಕಿನ ನಡುವೆ ಸಮತೋಲನ ಸಾಧಿಸಬೇಕು.

ಪಟಾಕಿಯ ಕಾರ್ಯ ವಿಧಾನ:

ಪಟಾಕಿಗಳು (Firecrackers) ದಹನ ಕ್ರಿಯೆಯನ್ನು ಉತ್ಪಾದಿಸಲು ‘ಇಂಧನ’ ಮತ್ತು ‘ಆಕ್ಸಿಡೈಸರ್’ಗಳನ್ನು ಬಳಸುತ್ತವೆ, ಮತ್ತು ಈ ಪಟಾಕಿಗಳ ಸ್ಫೋಟದಿಂದಾಗಿ ಪಟಾಕಿಯಲ್ಲಿ ತುಂಬಿದ ವಸ್ತುಗಳು ಅತ್ಯಂತ ಬಿಸಿಯಾಗುವ ಮೂಲಕ ಹರಡುತ್ತವೆ, ವಾತಾವರಣದಲ್ಲಿ ವಿಭಜನೆಯಾಗುತ್ತವೆ. ಲೋಹದ ಕಣಗಳನ್ನು ಸ್ಫೋಟಕ ಮಿಶ್ರಣಕ್ಕೆ ಸೇರಿಸಲಾಗುತ್ತದೆ ಮತ್ತು ಉಬ್ಬುತ್ತದೆ ಮತ್ತು ಬೆಳಕನ್ನು ಹೊರಸೂಸುತ್ತದೆ.

ಏನಿದು ವಿವಾದ?

ಪಟಾಕಿಗಳ ಸ್ಫೋಟಕ ಮಿಶ್ರಣಕ್ಕೆ ಸೇರಿಸಿದ ಲೋಹೀಯ ಕಣಗಳು ಅವುಗಳ ನ್ಯೂಕ್ಲಿಯಸ್‌ಗಳ ಹೊರ ಕವಚದಲ್ಲಿ ಎಲೆಕ್ಟ್ರಾನ್‌ಗಳ ವಿಭಿನ್ನ ವ್ಯವಸ್ಥೆಯನ್ನು ಹೊಂದಿವೆ.ಪಟಾಕಿಗಳ ಪ್ರತಿಕ್ರಿಯೆಯಲ್ಲಿ ಬೆಳಕಿನ ವಿವಿಧ ತರಂಗಾಂತರಗಳನ್ನು ಉತ್ಪಾದಿಸಲಾಗುತ್ತದೆ,ಇದು ಅದ್ಭುತ ಬಣ್ಣಗಳನ್ನು ತರುತ್ತದೆ. ಆದರೆ, ಅನೇಕ ಅಧ್ಯಯನಗಳು ತೋರಿಸಿದಂತೆ,ಪಟಾಕಿಗಳನ್ನು ಸುಡುವುದು ಕಣಗಳು ಮತ್ತು ಅನಿಲಗಳಿಂದ ಉಂಟಾಗುವ ಮಾಲಿನ್ಯದ ಅಸಾಮಾನ್ಯ ಮತ್ತು ವಿಪರೀತ ಮೂಲವಾಗಿದೆ.

  1. ಇಟಾಲಿಯನ್ ನಗರವಾದ ಮಿಲಾನ್‌ನಲ್ಲಿ ನಡೆಸಲಾದ ಅಧ್ಯಯನದಲ್ಲಿ, ಪಟಾಕಿಗಳನ್ನು ಹಚ್ಚಿದಾಗ ಒಂದು ಗಂಟೆಯಲ್ಲಿ ಗಾಳಿಯಲ್ಲಿರುವ ಹಲವಾರು ಅಂಶಗಳ ಪ್ರಮಾಣವು ಹೆಚ್ಚಾಗುವುದು ಅಂದರೆ- 120 ಪಟ್ಟು ಸ್ಟ್ರೋನ್ಷಿಯಂ, 22 ಪಟ್ಟು ಮೆಗ್ನೀಸಿಯಮ್, 12 ಪಟ್ಟು ಬೇರಿಯಂ, 11 ಪಟ್ಟು ಪೊಟ್ಯಾಸಿಯಮ್ ಮತ್ತು ತಾಮ್ರದ ಆರು ಪಟ್ಟು ಹೆಚ್ಚಳವನ್ನು ಅಂದಾಜಿಸಲಾಗಿದೆ.
  2. ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು 2016 ರಲ್ಲಿ ದೆಹಲಿಯಲ್ಲಿ ಒಂದು ಅಧ್ಯಯನವನ್ನು ನಡೆಸಿತು, ಅದರ ಪ್ರಕಾರ ದೀಪಾವಳಿ ರಾತ್ರಿ ಗಾಳಿಯಲ್ಲಿ ಅಲ್ಯೂಮಿನಿಯಂ, ಬೇರಿಯಂ, ಪೊಟ್ಯಾಸಿಯಮ್, ಸಲ್ಫರ್, ಕಬ್ಬಿಣ ಮತ್ತು ಸ್ಟ್ರಾಂಟಿಯಂ ಗಳ ಪ್ರಮಾಣವು ‘ಕಡಿಮೆ ನಿಂದ ಅತಿ ಹೆಚ್ಚು’ ಪ್ರಮಾಣದಲ್ಲಿ ತ್ವರಿತ ಏರಿಕೆ ಕಂಡುಬಂದಿದೆ.
  3. ಚೀನಾ ಮತ್ತು ಯುನೈಟೆಡ್ ಕಿಂಗ್‌ಡಂನಲ್ಲಿ ಇದೇ ರೀತಿಯ ಪಟಾಕಿ ಸಂಬಂಧಿತ ಹೆಚ್ಚಳಗಳನ್ನು ವರದಿ ಮಾಡಲಾಗಿದೆ. ಪಟಾಕಿಗಳ ಮಾಲಿನ್ಯವು ಜನರು ಮತ್ತು ಪ್ರಾಣಿಗಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ ಮತ್ತು ಭಾರತೀಯ ನಗರಗಳಲ್ಲಿ ಈಗಾಗಲೇ ಇರುವ ಕಳಪೆ ವಾತಾವರಣದ ಗಾಳಿಯ ಗುಣಮಟ್ಟವನ್ನು ಇದು ಇನ್ನಷ್ಟು ಹದಗೆಡಿಸುತ್ತದೆ.
  4. ಇದು ಪಟಾಕಿಗಳನ್ನು ಸಂಪೂರ್ಣವಾಗಿ ನಿಷೇಧಿಸುವಂತೆ ಕೋರಿ ನ್ಯಾಯಾಲಯದಲ್ಲಿ ಅರ್ಜಿಗಳನ್ನು ಸಲ್ಲಿಸಲು ಕಾರಣವಾಗಿದೆ. ಮತ್ತು ನ್ಯಾಯಾಲಯವು ತನ್ನ ಆದೇಶದಲ್ಲಿ, ಪಟಾಕಿಯಲ್ಲಿ ಬಳಸುವ ರಾಸಾಯನಿಕಗಳ ಪ್ರಕಾರ ಹಾಗೂ ಅವುಗಳ ಪ್ರಮಾಣವನ್ನು ನಿರ್ಬಂಧಿಸಲು ಆದೇಶಿಸಿದೆ. ಅನೇಕ ಕ್ರ್ಯಾಕರ್‌ಗಳು ಶಬ್ದಮಾಲಿನ್ಯದ ಮೇಲಿನ ಕಾನೂನು ಮಿತಿಯನ್ನು ಉಲ್ಲಂಘಿಸುತ್ತವೆ.

ಹಸಿರು ಪಟಾಕಿಗಳು ವ್ಯತ್ಯಾಸವನ್ನು ಮಾಡಬಹುದೇ?

ಪಟಾಕಿಗಳಿಗೆ ಪರ್ಯಾಯವನ್ನು ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯು ‘ನ್ಯಾಷನಲ್ ಎನ್ವಿರಾನ್ಮೆಂಟಲ್ ಇಂಜಿನಿಯರಿಂಗ್ ರಿಸರ್ಚ್ ಇನ್ಸ್ಟಿಟ್ಯೂಟ್’ (CSIR-NEERI) ನಾಗಪುರ ಮೂಲಕ ಪರಿಚಯಿಸಿದೆ, ಇದು ಕಡಿಮೆ ಪ್ರಮಾಣದ ಬೆಳಕು ಮತ್ತು ಶಬ್ದವನ್ನು ಹೊರಸೂಸುತ್ತದೆ ಮತ್ತು ಪೊಟ್ಯಾಸಿಯಮ್ ನೈಟ್ರೇಟ್ ಅನ್ನು ಆಕ್ಸಿಡೆಂಟ್ ಆಗಿ ಬಳಸುತ್ತದೆ. ಈ ಕಾರಣದಿಂದಾಗಿ ಹೊರಸೂಸುವ ಕಣಗಳ ಪ್ರಮಾಣವು 30%ವರೆಗೆ ಕಡಿಮೆಯಾಗುತ್ತದೆ.

  1. ಈ ಪಟಾಕಿಗಳಿಗೆ ‘ಸೇಫ್ ವಾಟರ್ ರಿಲೀಸರ್’ ಎಂದು ಹೆಸರಿಡಲಾಗಿದೆ ಮತ್ತು ಅವುಗಳು ಕಡಿಮೆ ಪೊಟ್ಯಾಸಿಯಮ್ ನೈಟ್ರೇಟ್ ಮತ್ತು ಸಲ್ಫರ್ ಅನ್ನು ಬಳಸುತ್ತವೆ, ಆದರೆ ಅವುಗಳು ಹೊರಸೂಸುವ ಶಬ್ದವು ಸಾಂಪ್ರದಾಯಿಕ ಪಟಾಕಿಗಳ ಶಬ್ದದ ತೀವ್ರತೆಯನ್ನು ಹೋಲುತ್ತದೆ. ಅಲ್ಯೂಮಿನಿಯಂ ಬಳಕೆಯು ತುಂಬಾ ಕಡಿಮೆ ಮತ್ತು ಸುರಕ್ಷಿತ ಮಿತಿಯಲ್ಲಿದೆ, ಮತ್ತು ಅವುಗಳು ಕಡಿಮೆ ಪ್ರಮಾಣದ ಪೊಟ್ಯಾಸಿಯಮ್ ನೈಟ್ರೇಟ್ ಮತ್ತು ಸಲ್ಫರ್ ಹೊಂದಿರುವ ಸುರಕ್ಷಿತ ಥರ್ಮೈಟ್ ಪಟಾಕಿ ಗಳಾಗಿವೆ.

ಈ ಸಮಯದ ಅವಶ್ಯಕತೆ:

ಪಟಾಕಿಗಳನ್ನು ನಿಷೇಧಿಸಲು ನಿರ್ಧರಿಸುವಾಗ, ಪಟಾಕಿ ತಯಾರಕರ ‘ಜೀವನೋಪಾಯದ ಮೂಲಭೂತ ಹಕ್ಕನ್ನು’ ಮತ್ತು ದೇಶದ 1.3 ಶತಕೋಟಿಗೂ ಹೆಚ್ಚು ಜನರ ‘ಆರೋಗ್ಯದ ಹಕ್ಕನ್ನು’ ಪರಿಗಣಿಸುವುದು ಅತ್ಯಗತ್ಯವಾಗಿದೆ.

current affairs

 

 

ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.

ಬಾಟಮ್ ಟ್ರಾಲಿಂಗ್ ಮತ್ತು ಸಂಬಂಧಿತ ಸಮಸ್ಯೆಗಳು:


(Bottom trawling and associated issues)

ಸಂದರ್ಭ:

ಕೊಲಂಬೊದಲ್ಲಿರುವ ಭಾರತೀಯ ಹೈಕಮಿಷನರ್ ಪಾಕ್ ಜಲಸಂಧಿಯಲ್ಲಿ ಭಾರತೀಯ ಮೀನುಗಾರರು ನಡೆಸುತ್ತಿರುವ ಬಾಟಮ್ ಟ್ರಾಲಿಂಗ್ ಬಗ್ಗೆ ಶ್ರೀಲಂಕಾದ ಉತ್ತರ ಭಾಗದ ಮೀನುಗಾರರ ಕಳವಳವನ್ನು ನವದೆಹಲಿ ಮತ್ತು ತಮಿಳುನಾಡು ಎರಡಕ್ಕೂ ತಿಳಿಸುವುದಾಗಿ ಮತ್ತು ಈ ಸಮಸ್ಯೆಯನ್ನು ಪರಿಹರಿಸಲು ಕೆಲವು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿಳಿಸುವುದಾಗಿ ಶ್ರೀಲಂಕಾದ ಮೀನುಗಾರರಿಗೆ ಭರವಸೆ ನೀಡಿದ್ದಾರೆ.

ಏನಿದು ಪ್ರಕರಣ?

ಭಾರತದ ಕಡೆಯವರು ಎರಡು ಬಾರಿ – 2010 ಮತ್ತು 2016 ರಲ್ಲಿ – ಹಂತಹಂತವಾಗಿ ಬಾಟಮ್ ಟ್ರಾಲಿಂಗ್ ವಿಧಾನದ ಮೂಲಕ ಮೀನುಗಾರಿಕೆಯನ್ನು ಕೊನೆಗೊಳಿಸಲು ಒಪ್ಪಿಕೊಂಡರು. ಆದರೆ ಈ ರೀತಿಯ ಪದ್ಧತಿಯು ಇನ್ನೂ ಕೊನೆಗೊಂಡಿಲ್ಲ.

ಬಾಟಮ್-ಟ್ರಾಲಿಂಗ್ (Bottom-Trawling) ಎಂದರೇನು?

ಬಾಟಮ್ ಟ್ರಾಲಿಂಗ್ ಒಂದು ವಿನಾಶಕಾರಿ ಮೀನುಗಾರಿಕೆ ಪದ್ಧತಿಯಾಗಿದ್ದು ಅದು ಸಮುದ್ರ ಪರಿಸರ ವ್ಯವಸ್ಥೆಯ ಮೇಲೆ ತೀವ್ರತರನಾದ ಹಾನಿಕಾರಕ ಪರಿಣಾಮ ಬೀರುತ್ತದೆ. ಈ ವಿಧಾನದಲ್ಲಿ, ತೂಕದ ಬಲೆಗಳನ್ನು ಹೊಂದಿದ ದೊಡ್ಡ ಗಾತ್ರದ ಟ್ರಾಲರ್‌ಗಳನ್ನು ಸಮುದ್ರದ ತಳಕ್ಕೆ ಎಸೆಯಲಾಗುತ್ತದೆ, ಎಲ್ಲಾ ರೀತಿಯ ಸಮುದ್ರ ಜೀವಿಗಳನ್ನು ಬಲೆಗೆ ಬೀಳಿಸುತ್ತದೆ, ಈ ಬಲೆಗಳನ್ನು ಟ್ರಾಲರ್ ಮೂಲಕ ಎಳೆಯಲಾಗುತ್ತದೆ.ಈ ವಿಧಾನದಿಂದಾಗಿ, ಈ ಪ್ರದೇಶದಲ್ಲಿ ಮೀನುಗಾರಿಕೆ ಸಂಪನ್ಮೂಲಗಳ ಕೊರತೆಯುಂಟಾಗುತ್ತದೆ.ಈ ಮೀನುಗಾರಿಕಾ ಪದ್ಧತಿಯನ್ನು ನಿಷೇಧಿಸುವುದು ಭವಿಷ್ಯದ ದೃಷ್ಟಿಯಿಂದ ಪ್ರಯೋಜನಕಾರಿಯಾಗಿದೆ.

‘ಬಾಟಮ್ ಟ್ರೋಲಿಂಗ್’ನ ಸಮಸ್ಯೆ:

  1. ಬಾಟಮ್ ಟ್ರಾಲಿಂಗ್, ಒಂದು ಪರಿಸರವಿಜ್ಞಾನದ ವಿನಾಶಕಾರಿ ಅಭ್ಯಾಸ, ಟ್ರಾಲರ್‌ಗಳು ಸಮುದ್ರದ ತಳದಲ್ಲಿ ತೂಕದ ಬಲೆಗಳನ್ನು ಎಳೆಯುವುದನ್ನು ಒಳಗೊಂಡಿರುತ್ತದೆ, ಇದು ಜಲ ಸಂಪನ್ಮೂಲಗಳ ದೊಡ್ಡ ಸವಕಳಿಗೆ ಕಾರಣವಾಗುತ್ತದೆ.
  2. ಬಾಟಮ್ ಟ್ರಾಲಿಂಗ್‌ನಲ್ಲಿ, ಮರಿ ಮೀನುಗಳು ಸಹ ಸಿಕ್ಕಿಬೀಳುತ್ತವೆ, ಇದು ಸಮುದ್ರ ಸಂಪನ್ಮೂಲಗಳ ಸವಕಳಿಗೆ ಕಾರಣವಾಗುತ್ತದೆ ಮತ್ತು ಸಮುದ್ರ ಸಂರಕ್ಷಣೆಯ ಪ್ರಯತ್ನಗಳ ಮೇಲೆ ಪರಿಣಾಮ ಬೀರುತ್ತದೆ. ಈ ವಿಧಾನವನ್ನು ತಮಿಳುನಾಡಿನ ಮೀನುಗಾರರು ಪಾಕ್ ಕೊಲ್ಲಿಯಲ್ಲಿ ಪರಿಚಯಿಸಿದರು ಮತ್ತು ಇದನ್ನು ಶ್ರೀಲಂಕಾದ ಅಂತರ್ಯುದ್ಧದ ಸಮಯದಲ್ಲಿ ಗರಿಷ್ಠ ಪ್ರಮಾಣದಲ್ಲಿ ಬಳಸಲಾಯಿತು.

ಬಾಟಮ್ ಟ್ರಾಲಿಂಗ್ ‘ಸಮಸ್ಯೆಗೆ ಆಳ ಸಮುದ್ರ ಮೀನುಗಾರಿಕೆ’ಯಲ್ಲಿ’ ಪರಿಹಾರವಿದೆ:

  1. ಸಮುದ್ರ/ಸಾಗರದ ಒಳಭಾಗದಲ್ಲಿ ವಾಸಿಸುವ ಮೀನುಗಳನ್ನು ಹಿಡಿಯುವ ಚಟುವಟಿಕೆಗಳನ್ನು ‘ಆಳ ಸಮುದ್ರ ಮೀನುಗಾರಿಕೆ’ ಅಥವಾ ‘ಡೀಪ್ ಸೀ ಫಿಶಿಂಗ್’ ಎಂದು ಕರೆಯಲಾಗುತ್ತದೆ.
  2. ಇದಕ್ಕಾಗಿ ಮೀನುಗಾರರು ಸಮುದ್ರದ ಒಳಭಾಗ ಮತ್ತು ಮೀನು ಪ್ರಭೇದಗಳನ್ನು ಸುಲಭವಾಗಿ ಪ್ರವೇಶಿಸುವ ರೀತಿಯಲ್ಲಿ ದೋಣಿಗಳನ್ನು ವಿನ್ಯಾಸಗೊಳಿಸಲಾಗಿರುತ್ತದೆ.
  3. ಈ ವಿಧಾನವನ್ನು ಪ್ರಪಂಚದಾದ್ಯಂತ ಅನುಸರಿಸಲಾಗುತ್ತದೆ, ವಿಶೇಷವಾಗಿ ಕರಾವಳಿ ಪ್ರದೇಶಗಳಲ್ಲಿ ಪರಿಸರ ವ್ಯವಸ್ಥೆಗೆ ಯಾವುದೇ ಹಾನಿ ಉಂಟಾಗದಂತೆ ಬಳಸಲಾಗುತ್ತದೆ.
  4. ನೀರಿನ ಆಳ ಕನಿಷ್ಠ 30 ಮೀಟರ್ ಇರುವ ಪ್ರದೇಶಗಳನ್ನು ‘ಆಳ ಸಮುದ್ರ ಮೀನುಗಾರಿಕೆ’ ಪ್ರದೇಶಗಳೆಂದು ಪರಿಗಣಿಸಲಾಗುತ್ತದೆ.

 

‘ಪಾಕ್ ಕೊಲ್ಲಿ(Palk Bay) ಯೋಜನೆ’ಯ ಕುರಿತು:

  1. ಜುಲೈ 2017 ರಲ್ಲಿ ‘ನೀಲಿ ಕ್ರಾಂತಿ ಕಾರ್ಯಕ್ರಮ’ ದ ಅಡಿಯಲ್ಲಿ ‘ಪಾಕ್ ಬೇ ಸ್ಕೀಮ್’(Palk Bay scheme) ಅನ್ನು ಪ್ರಾರಂಭಿಸಲಾಯಿತು.
  2. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಫಲಾನುಭವಿಗಳ ಸಹಭಾಗಿತ್ವದೊಂದಿಗೆ ಯೋಜನೆಗೆ ಹಣಕಾಸು ಒದಗಿಸುತ್ತವೆ.
  3. ಇದರ ಅಡಿಯಲ್ಲಿ, ರಾಜ್ಯದ ಮೀನುಗಾರರಿಗೆ ಮೂರು ವರ್ಷಗಳಲ್ಲಿ 2,000 ಹಡಗುಗಳನ್ನು ಒದಗಿಸಲು ಮತ್ತು ‘ಬಾಟಮ್ ಟ್ರಾಲಿಂಗ್’ ವಿಧಾನವನ್ನು ತ್ಯಜಿಸಲು ಅವರನ್ನು ಪ್ರೇರೇಪಿಸಲು ಯೋಜಿಸಲಾಗಿದೆ.

 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಗಿನ್ನೆಸ್ ದಾಖಲೆಯಲ್ಲಿ ಗಂಗಾ ಮಿಷನ್:


(Ganga Mission in Guinness records)

ಸಂದರ್ಭ:

ರಾಷ್ಟ್ರೀಯ ಸ್ವಚ್ಛ ಗಂಗಾ ಮಿಷನ್‌ (National Mission for Clean Ganga) ಗಂಗಾ ಉತ್ಸವದ ಮೊದಲ ದಿನವೇ ಫೇಸ್‌ಬುಕ್‌ನಲ್ಲಿ ಒಂದು ಗಂಟೆಯಲ್ಲಿ ಅತಿ ಹೆಚ್ಚು ಕೈಬರಹದ ಫೋಟೋಗಳನ್ನು ಅಪ್‌ಲೋಡ್ ಮಾಡಿ ಗಿನ್ನೆಸ್ ವಿಶ್ವ ದಾಖಲೆ ನಿರ್ಮಿಸಿದೆ.

ಹಿನ್ನೆಲೆ:

ಗಂಗಾ ಪುನರುಜ್ಜೀವನದ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಉತ್ಸವದ ವ್ಯಾಪ್ತಿಯನ್ನು ವಿಸ್ತರಿಸಲು ಈ ಕಾರ್ಯಕ್ರಮವನ್ನು ನಡೆಸಲಾಯಿತು.

ನಮಾಮಿ ಗಂಗೆ ಫೇಸ್‌ಬುಕ್ ಪುಟದಲ್ಲಿ ಜನರು ‘ಗಂಗಾ ಮಾತೆ’ (Maa Ganga) ಕುರಿತು ಕವನಗಳು ಅಥವಾ ಲೇಖನಗಳನ್ನು ಪೋಸ್ಟ್ ಮಾಡಿದ್ದಾರೆ.

ಗಂಗಾ ನದಿಯ ಸಂರಕ್ಷಣೆಯ ಬಗ್ಗೆ ರಾಷ್ಟ್ರೀಯ ಸ್ವಚ್ಛ ಗಂಗಾ ಮಿಷನ್‌ ನ ನೀತಿ ದಾಖಲೆ:

  1. ಗಂಗಾ ನದಿ ದಡದಲ್ಲಿರುವ ನಗರಗಳು ತಮ್ಮ ಮಾಸ್ಟರ್ ಪ್ಲಾನ್‌ಗಳನ್ನು ಸಿದ್ಧಪಡಿಸುವಾಗ ನದಿ ಸಂರಕ್ಷಣಾ ಯೋಜನೆಗಳನ್ನು ಅಳವಡಿಸಿಕೊಳ್ಳಬೇಕು.
  2. ಈ “ನದಿ-ಸೂಕ್ಷ್ಮ” ಯೋಜನೆಗಳು ಕಡ್ಡಾಯವಾಗಿ ಪ್ರಾಯೋಗಿಕವಾಗಿರಬೇಕು ಮತ್ತು ಅತಿಕ್ರಮಣ ಮತ್ತು ಭೂ ಮಾಲೀಕತ್ವದ ಪ್ರಶ್ನೆಗಳನ್ನು ಪರಿಗಣಿಸಬೇಕು.
  3. ಸ್ಥಳಾಂತರ ಕಾರ್ಯತಂತ್ರದ ಜೊತೆಗೆ ಪರ್ಯಾಯ ಜೀವನೋಪಾಯದ ಆಯ್ಕೆಗಳಿಗೆ ಒತ್ತು ನೀಡುವ ಇಂತಹ ಅತಿಕ್ರಮಣ ಘಟಕಗಳಿಗೆ ವ್ಯವಸ್ಥಿತ ಪುನರ್ವಸತಿ ಯೋಜನೆಯ ಅವಶ್ಯಕತೆಯಿದೆ.
  4. ಮಾಸ್ಟರ್ ಪ್ಲಾನ್ ನಿರ್ದಿಷ್ಟ ತಂತ್ರಜ್ಞಾನಗಳನ್ನು ಕಡ್ಡಾಯಗೊಳಿಸಬಾರದು, ಆದರೆ ನದಿ ನಿರ್ವಹಣೆಗಾಗಿ ದೇಶೀಯವಾಗಿ ಅಭಿವೃದ್ಧಿಪಡಿಸಿದ ಅತ್ಯಾಧುನಿಕ ತಂತ್ರಜ್ಞಾನಗಳನ್ನು (ಈ ತಂತ್ರಜ್ಞಾನವನ್ನು ಒದಗಿಸುವವರ ಹೆಸರನ್ನು ಬಹಿರಂಗ ಪಡಿಸದೆ) ಬಳಸಲು ಅನುಕೂಲವಾಗುವಂತೆ “ಪರಿಸರವನ್ನು ನಿರ್ಮಿಸಬಹುದು”.

ಅನ್ವಯಿಸುವಿಕೆ:

ಪ್ರಸ್ತುತ ಈ ಶಿಫಾರಸುಗಳು ಗಂಗಾ ನದಿಯ ಮುಖ್ಯ ಹರಿವಿನ ಪ್ರದೇಶದಲ್ಲಿ ನೆಲೆಸಿರುವ ಪಟ್ಟಣಗಳಿಗೆ ಅನ್ವಯಿಸುತ್ತವೆ. ಅವುಗಳಲ್ಲಿ 97 ನಗರಗಳು 5 ರಾಜ್ಯಗಳಲ್ಲಿ-ಉತ್ತರಾಖಂಡ, ಉತ್ತರ ಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳ ಗಳಲ್ಲಿ ಹರಡಿವೆ.

ರಾಷ್ಟ್ರೀಯ ಸ್ವಚ್ಚ ಗಂಗಾ ಮಿಷನ್‌ ನ (NMCG)ಕುರಿತು:

NMCGಯನ್ನು, 2011 ರ ಆಗಸ್ಟ್ 12 ರಂದು ಸೊಸೈಟಿ ಗಳ ನೋಂದಣಿ ಕಾಯ್ದೆ 1860 ರ ಅಡಿಯಲ್ಲಿ ಸೊಸೈಟಿಯಾಗಿ ನೋಂದಾಯಿಸಲಾಗಿದೆ.

ಇದು ಪರಿಸರ (ಸಂರಕ್ಷಣೆ) ಕಾಯ್ದೆ (EPA), 1986 ರ ನಿಬಂಧನೆಗಳ ಅಡಿಯಲ್ಲಿ ರೂಪುಗೊಂಡ ರಾಷ್ಟ್ರೀಯ ಗಂಗಾ ನದಿ ಜಲಾನಯನ ಪ್ರಾಧಿಕಾರದ (NGRBA) ಅನುಷ್ಠಾನಗೊಳಿಸುವ ಅಂಗವಾಗಿ ಕಾರ್ಯನಿರ್ವಹಿಸಿತು.

ದಯವಿಟ್ಟು ಗಮನಿಸಿ: ‘ರಾಷ್ಟ್ರೀಯ ಗಂಗಾ ನದಿ ಜಲಾನಯನ ಪ್ರಾಧಿಕಾರ’ (NGRBA) ವನ್ನು, ‘ರಾಷ್ಟ್ರೀಯ ಗಂಗಾ ಕೌನ್ಸಿಲ್’ (National Ganga Council – NGC) ಎಂದೂ ಕರೆಯಲ್ಪಡುವ ‘ಗಂಗಾ ನದಿಯ ಪುನರುಜ್ಜೀವನಗೊಳಿಸುವಿಕೆ, ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ರಾಷ್ಟ್ರೀಯ ಮಂಡಳಿ’ (National Council for Rejuvenation, Protection and Management of River Ganga) ಯ ರಚನೆ ಮಾಡಿದ ನಂತರ, 2016 ರ ಅಕ್ಟೋಬರ್ 7 ರಂದು ‘ರಾಷ್ಟ್ರೀಯ ಗಂಗಾ ನದಿ ಜಲಾನಯನ ಪ್ರಾಧಿಕಾರ’ (NGRBA) ವನ್ನು ವಿಸರ್ಜಿಸಲಾಯಿತು.

ಅಥವಾ

‘ರಾಷ್ಟ್ರೀಯ ಗಂಗಾ ಕೌನ್ಸಿಲ್’ ಎಂದೂ ಕರೆಯಲ್ಪಡುವ ‘ಗಂಗಾ ನದಿಯ ಪುನರುಜ್ಜೀವನಗೊಳಿಸುವಿಕೆ, ಸಂರಕ್ಷಣೆ ಮತ್ತು ನಿರ್ವಹಣೆಗಾಗಿ ರಾಷ್ಟ್ರೀಯ ಮಂಡಳಿ’ ಯ ರಚನೆಯಾದ ನಂತರ ರಾಷ್ಟ್ರೀಯ ಗಂಗಾ ನದಿ ಜಲಾನಯನ ಪ್ರಾಧಿಕಾರವನ್ನು ಅಕ್ಟೋಬರ್ 7, 2016 ರಂದು ವಿಸರ್ಜಿಸಲಾಯಿತು.

ಗಂಗಾ ನದಿಗೆ ಸಂಬಂಧಿಸಿದ ಕೆಲವು ಸಂಗತಿಗಳು:

  1. ಗಂಗಾ ನದಿಯು ನೀರಿನ ಹರಿವಿನ ದೃಷ್ಟಿಯಿಂದ ವಿಶ್ವದ ಮೂರನೇ ಅತಿದೊಡ್ಡ ನದಿಯಾಗಿದೆ.
  2. ಗಂಗಾ ನದಿಯು ಸಮುದ್ರವನ್ನು ಸೇರುವ ಸ್ಥಳದಲ್ಲಿ ಸುಂದರ್ಬನ್ಸ್ ಎಂದು ಕರೆಯಲ್ಪಡುವ ಪ್ರಪಂಚದ ಅತಿದೊಡ್ಡ ಡೆಲ್ಟಾವನ್ನು / ನದಿ ಮುಖಜ ಭೂಮಿಯನ್ನು ನಿರ್ಮಿಸುತ್ತದೆ ಮತ್ತು 1997 ರಲ್ಲಿ ಇದು UNESCO ದಿಂದ ವಿಶ್ವ ಪರಂಪರೆಯ ತಾಣವೆಂದು ಘೋಷಿಸಲ್ಪಟ್ಟಿದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಗಂಗಾ ನದಿ ಡಾಲ್ಫಿನ್‌ ಗಳಿಗಾಗಿ ಸಂರಕ್ಷಣಾ ಮಾರ್ಗದರ್ಶಿ ಸೂತ್ರಗಳು:

(Rescue guide for Ganges River Dolphin)

ಗಂಗಾನದಿಯಲ್ಲಿ ಸಿಲುಕಿರುವ ಡಾಲ್ಫಿನ್‌ಗಳನ್ನು ಸುರಕ್ಷಿತವಾಗಿ ರಕ್ಷಿಸಿ ಬಿಡುಗಡೆ ಮಾಡಲು ಜಲಶಕ್ತಿ ಸಚಿವಾಲಯವು ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆ ಮಾಡಿದೆ.

  1. ಈ ದಾಖಲೆಯನ್ನು ಟರ್ಟಲ್ ​​ಸರ್ವೈವಲ್ ಅಲೈಯನ್ಸ್ (Turtle Survival Alliance) ಮತ್ತು ಉತ್ತರ ಪ್ರದೇಶ ಸರ್ಕಾರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಇಲಾಖೆ (EFCCD) ಸಿದ್ಧಪಡಿಸಿದೆ.
  2. ಈ ಕೈಪಿಡಿಯನ್ನು IUCN Cetacean ಸ್ಪೆಷಲಿಸ್ಟ್ ಗ್ರೂಪ್ (IUCN Cetacean Specialist Group) ಅನುಮೋದಿಸಿದೆ.

ಗಂಗಾ ನದಿ ಡಾಲ್ಫಿನ್ ಬಗ್ಗೆ:

  1. ಗಂಗಾ ನದಿ ಡಾಲ್ಫಿನ್ ಭಾರತದ ರಾಷ್ಟ್ರೀಯ ಜಲಚರ (national aquatic animal) ಪ್ರಾಣಿಯಾಗಿದೆ.
  2. ಇದನ್ನು IUCN ರೆಡ್ ಲಿಸ್ಟ್ ಅಸೆಸ್‌ಮೆಂಟ್‌ಗಳ ಅಡಿಯಲ್ಲಿ ‘ಅಳಿವಿನಂಚಿನಲ್ಲಿರುವ’ (endangered) ಎಂದು ಮತ್ತು ಭಾರತೀಯ ವನ್ಯಜೀವಿ (ಸಂರಕ್ಷಣೆ) ಕಾಯಿದೆಯ (1972) ಅನುಸೂಚಿ I ಹಾಗೂ ಅಳಿವಿನಂಚಿನಲ್ಲಿರುವ ಕಾಡು ಪ್ರಾಣಿ ಮತ್ತು ಸಸ್ಯಗಳ ಪ್ರಭೇದಗಳ (Convention on International Trade in Endangered Species of Wild Fauna and Flora-CITES) ಅಂತರರಾಷ್ಟ್ರೀಯ ವ್ಯಾಪಾರದ ಸಮಾವೇಶದ ಅನುಬಂಧ I ರಲ್ಲಿ ಸಹ ‘ಅಳಿವಿನಂಚಿನಲ್ಲಿರುವ’ ಎಂದು ಪಟ್ಟಿ ಮಾಡಲಾಗಿದೆ.
  3. ಈ ಪ್ರಜಾತಿಯ ಜಾಗತಿಕ ಜನಸಂಖ್ಯೆಯು 4,000 ಎಂದು ಅಂದಾಜಿಸಲಾಗಿದೆ, ಈ ಜಾತಿಗಳು ಹೆಚ್ಚಾಗಿ ಭಾರತೀಯ ಉಪಖಂಡದಲ್ಲಿ ಕಂಡುಬರುತ್ತವೆ.
  4. ಗಂಗಾನದಿ ಡಾಲ್ಫಿನ್ ಸಿಹಿನೀರಿನಲ್ಲಿ ಮಾತ್ರ ಬದುಕಬಲ್ಲದು ಮತ್ತು ಮೂಲತಃ ಇದು ಕುರುಡಾಗಿರುತ್ತದೆ.

ಬೆದರಿಕೆಗಳು:

ಈ ಗಂಗಾ ನದಿ ಡಾಲ್ಫಿನ್‌ಗಳು ಆಗಾಗ್ಗೆ ಆಕಸ್ಮಿಕವಾಗಿ ಉತ್ತರ ಭಾರತದಲ್ಲಿ ಕಾಲುವೆಗಳನ್ನು ಪ್ರವೇಶಿಸುತ್ತವೆ ಮತ್ತು ಗ್ರೇಡಿಯಂಟ್ ವಿರುದ್ಧ ಈಜಲು ಸಾಧ್ಯವಾಗುವುದಿಲ್ಲ. ಕೆಲವೊಮ್ಮೆ ಇವುಗಳು ಜನರಿಂದ ಸಹ ಸಂಕಷ್ಟಕ್ಕೆ ಒಳಗಾಗುತ್ತವೆ.

 

BASIC ದೇಶಗಳು:

  1. ನವೆಂಬರ್ 28, 2009 ರಂದು ನಾಲ್ಕು ದೇಶಗಳು ಸಹಿ ಮಾಡಿದ ಒಪ್ಪಂದದ ಪರಿಣಾಮವಾಗಿ BASIC ದೇಶಗಳ ಗುಂಪನ್ನು ರಚಿಸಲಾಯಿತು.
  2. ಅವು ಬ್ರೆಜಿಲ್, ದಕ್ಷಿಣ ಆಫ್ರಿಕಾ, ಭಾರತ ಮತ್ತು ಚೀನಾ ಎಂಬ ಹೊಸದಾಗಿ ಕೈಗಾರಿಕೀಕರಣಗೊಂಡ ನಾಲ್ಕು ದೊಡ್ಡ ದೇಶಗಳ ಗುಂಪಾಗಿದೆ.
  3. ಅಭಿವೃದ್ಧಿ ಹೊಂದಿದ ರಾಷ್ಟ್ರಗಳು ತಮ್ಮ ಸಾಮಾನ್ಯ ಕನಿಷ್ಠ ಬೇಡಿಕೆಗಳನ್ನು ಪೂರೈಸದಿದ್ದರೆ ಶೃಂಗಸಭೆಯಿಂದ ಒಟ್ಟಾಗಿ ಹೊರನಡೆಯುವ ಸಂಭವನೀಯತೆಯೂ ಸೇರಿದಂತೆ ಕೋಪನ್ ಹ್ಯಾಗನ್ ಹವಾಮಾನ ಶೃಂಗಸಭೆಯಲ್ಲಿ ಜಂಟಿಯಾಗಿ ಕಾರ್ಯನಿರ್ವಹಿಸಲು ನಾಲ್ಕು ದೇಶಗಳು ಬದ್ಧವಾಗಿವೆ.
  4. ಈ ಉದಯೋನ್ಮುಖ ಭೌಗೋಳಿಕ ರಾಜಕೀಯ ಮೈತ್ರಿಯು (geopolitical alliance) ಚೀನಾದ ನೇತೃತ್ವದಲ್ಲಿ ಪ್ರಾರಂಭವಾಯಿತು ಮತ್ತು ನಂತರ ಯುನೈಟೆಡ್ ಸ್ಟೇಟ್ಸ್‌ನೊಂದಿಗಿನ ಅಂತಿಮ ಕೋಪನ್‌ಹೇಗನ್ ಒಪ್ಪಂದಕ್ಕೆ ಮಧ್ಯಸ್ಥಿಕೆ ವಹಿಸಿತು.
  5. ತರುವಾಯ, ಇಂಗಾಲ ಹೊರಸೂಸುವಿಕೆ ಕಡಿತ ಮತ್ತು ಹವಾಮಾನ ನೆರವು ಹಣದ ಮೇಲೆ ಸಾಮಾನ್ಯ ಸ್ಥಾನವನ್ನು ವ್ಯಾಖ್ಯಾನಿಸಲು ಈ ಗುಂಪು ಕೆಲಸ ಮಾಡುತ್ತಿದೆ ಮತ್ತು ಕೋಪನ್ ಹ್ಯಾಗನ್ ಒಪ್ಪಂದ (Copenhagen Accord)ಕ್ಕೆ ಸಹಿ ಮಾಡುವಂತೆ ಇತರ ದೇಶಗಳನ್ನು ಮನವೊಲಿಸಲು ಪ್ರಯತ್ನಿಸುತ್ತದೆ.

  • Join our Official Telegram Channel HERE for Motivation and Fast Updates
  • Subscribe to our YouTube Channel HERE to watch Motivational and New analysis videos