Print Friendly, PDF & Email

[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 28ನೇ ಅಕ್ಟೋಬರ್ 2021

 

 

ಪರಿವಿಡಿ:

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ರಾಷ್ಟ್ರೀಯ ಭದ್ರತೆ VS ನ್ಯಾಯಾಂಗ ವಿಮರ್ಶೆ.

2. ಜನನ ಮತ್ತು ಮರಣಗಳ ನೋಂದಣಿ ಕಾಯಿದೆ, 1969 ಕ್ಕೆ ತಿದ್ದುಪಡಿಗಳು.

3. ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ADB).

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಭಾರತೀಯ SARS-CoV-2 ಕನ್ಸೋರ್ಟಿಯಂ ಆನ್ ಜೀನೋಮಿಕ್ಸ್ (INSACOG).

2. ಪೆಗಾಸಸ್ ಸ್ನೂಪಿಂಗ್ ಕೇಸ್.

 

ಪೂರ್ವಭಾವಿ ಪರಿಸರ ಸಂಬಂಧಿಸಿದ ವಿದ್ಯಮಾನಗಳು:

1. ‘ನಾಕ್ ಎವರಿ ಡೋರ್’ ಅಭಿಯಾನ.

2. ‘ಟೈಮ್ ಫಾರ್ ಇಂಡಿಯಾ’ ಡ್ರೈವ್.

3. ಸಮಗ್ರ ಶಿಕ್ಷಕರ ಶಿಕ್ಷಣ ಕಾರ್ಯಕ್ರಮ.

4. ಅಗ್ನಿ 5 ಕ್ಷಿಪಣಿ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ, ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.

ರಾಷ್ಟ್ರೀಯ ಭದ್ರತೆ VS ನ್ಯಾಯಾಂಗ ವಿಮರ್ಶೆ:


(National Security vs Judicial Review)

ಸಂದರ್ಭ:

ಇತ್ತೀಚೆಗೆ ಸುಪ್ರೀಂ ಕೋರ್ಟ್, ದೇಶದ ‘ರಾಷ್ಟ್ರೀಯ ಭದ್ರತೆ’ಗೆ ಸಂಬಂಧಿಸಿದ ವಿಷಯಗಳಲ್ಲಿ ನ್ಯಾಯಾಂಗ ಪರಿಶೀಲನೆಅಥವಾ ವಿಮರ್ಶೆ(Judicial Review)ಯ ಅನ್ವಯದ ಬಗ್ಗೆ ಕೆಲವು ಅವಲೋಕನಗಳನ್ನು ಮಾಡಿದೆ.

ಸಂಬಂಧಿತ ಪ್ರಕರಣ:

ಇತ್ತೀಚೆಗೆ, ‘ಪೆಗಾಸಸ್ ಬೇಹುಗಾರಿಕೆ ಪ್ರಕರಣ’ದಲ್ಲಿ ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ಸಲ್ಲಿಸಿದ ಉತ್ತರಗಳಿಗೆ ಸುಪ್ರೀಂ ಕೋರ್ಟ್ ಪ್ರತಿಕ್ರಿಯಿಸಿತು.

ಬೇಹುಗಾರಿಕೆ ಆರೋಪಗಳಿಗೆ ಪ್ರತಿಕ್ರಿಯೆಯಾಗಿ ವಿವರವಾದ ಅಫಿಡವಿಟ್ ಅನ್ನು ಸಲ್ಲಿಸಲು ನ್ಯಾಯಾಲಯವು ಸರ್ಕಾರಕ್ಕೆ ನೀಡಿದ ಪುನರಾವರ್ತಿತ ಸಲಹೆಯನ್ನು ನಿರಾಕರಿಸುತ್ತ ಸರ್ಕಾರವು, ಕೆಲವು ಸಂಗತಿಗಳನ್ನು ಬಹಿರಂಗಪಡಿಸುವುದು ರಾಷ್ಟ್ರೀಯ ಭದ್ರತೆ ಮತ್ತು ರಾಷ್ಟ್ರದ ರಕ್ಷಣೆಯ ಮೇಲೆ ಪರಿಣಾಮ ಬೀರಬಹುದುಎಂದು ಹೇಳಿದೆ.

ನ್ಯಾಯಾಲಯ ಮಾಡಿದ ಅವಲೋಕನಗಳು:

ಕೇವಲ “ರಾಷ್ಟ್ರೀಯ ಭದ್ರತೆ” ಎಂದು ನಟಿಸುವ ಮೂಲಕ ರಾಜ್ಯವು ನ್ಯಾಯಾಲಯದಿಂದ ‘ರಹಸ್ಯ’ವನ್ನು ಬಚ್ಚಿಡಲು ಸಾಧ್ಯವಿಲ್ಲ ಮತ್ತು ನ್ಯಾಯಾಲಯವು ಮೂಕ ಪ್ರೇಕ್ಷಕರಾಗಿ ಉಳಿಯುತ್ತದೆ ಎಂದು ನಿರೀಕ್ಷಿಸಲು ಸಾಧ್ಯವಿಲ್ಲ.

ನ್ಯಾಯಾಲಯವು ಕೋರಿದ ಮಾಹಿತಿಯ ಬಹಿರಂಗಪಡಿಸುವಿಕೆಯು ರಾಷ್ಟ್ರೀಯ ಭದ್ರತೆಯ ಕಾಳಜಿಗಳ ಮೇಲೆ ಪರಿಣಾಮ ಬೀರುತ್ತದೆ, ಎಂಬುದನ್ನು ಸಮರ್ಥಿಸಲು ಪುರಾವೆಗಳನ್ನು ಪ್ರಸ್ತುತಪಡಿಸಬೇಕು.

‘ರಾಷ್ಟ್ರೀಯ ಭದ್ರತೆ’ ಎಂಬುದು ಅಂತಹ ದೋಷಾರೋಪಣೆಯಾಗಲು ಸಾಧ್ಯವಿಲ್ಲ, ಅದನ್ನು ಉಲ್ಲೇಖಿಸುವ ಮೂಲಕ ನ್ಯಾಯಾಂಗವನ್ನು ಅದರಿಂದ ದೂರವಿಡಲು ಸಾಧ್ಯವಿಲ್ಲ.

ಹೆಚ್ಚಿನ ಮಾಹಿತಿಗಾಗಿ:

ನ್ಯಾಯದಾನ ಆಗಬೇಕು ಮಾತ್ರವಲ್ಲ ನ್ಯಾಯದಾನ ಆಗಿರುವುದು ಸ್ಪಷ್ಟವಾಗಿ ಕಾಣಿಸಬೇಕು.

 1. ಬೇಹುಗಾರಿಕೆ ಆರೋಪಗಳು ದೇಶದ ಜನರ ಮೂಲಭೂತ ಹಕ್ಕುಗಳ ಸಂಪೂರ್ಣ ಉಲ್ಲಂಘನೆಗೆ ಸಂಬಂಧಿಸಿದ್ದಾಗಿದೆ. ಹಾಗಾಗಿ ಆರೋಪಗಳು ಸತ್ಯವೇ ಸುಳ್ಳೇ ಎಂಬುದರ ತನಿಖೆ ಮಹತ್ವದ್ದಾಗಿದೆ ಎಂದು ಪೀಠವು ಹೇಳಿದೆ.
 2. ಖಾಸಗಿತನದ ಹಕ್ಕನ್ನು ಇನ್ನಷ್ಟು ಗಟ್ಟಿಗೊಳಿಸಲು ಗೂಢಚರಿ ಗೆ ಸಂಬಂಧಿಸಿ ಹೊಸ ನಿಯಮಗಳನ್ನು ರೂಪಿಸಬೇಕು ಈಗ ಇರುವ ನಿಯಮಗಳಿಗೆ ತಿದ್ದುಪಡಿ ತರಬೇಕೇ ಎಂಬುದನ್ನು ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿ ಆರ್ ವಿ ರವೀಂದ್ರನ್ ವಸ್ತುವಾರಿ ಯಲ್ಲಿ ಪರಿಣಿತರ ಸಮಿತಿಯು ಪರಿಶೀಲಿಸಬೇಕು ಎಂದು ಕೋರ್ಟ್ ಸೂಚಿಸಿದೆ.
 3. ರಾಷ್ಟ್ರೀಯ ಭದ್ರತೆಯ ವಿಚಾರವನ್ನು ಮುಂದಿರಿಸಿ ನ್ಯಾಯಾಂಗವು ಹಿಂದೆ ಸರಿಯುವಂತೆ ಸರ್ಕಾರವು ಪ್ರತಿ ಬಾರಿಯೂ ಮಾಡುವುದು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಪೆಗಾಸಸ್‌ ಕುತಂತ್ರಾಂಶ ಬಳಸಿ ಬೇಹುಗಾರಿಕೆ ಪ್ರಕರಣದ ತನಿಖೆಗೆ ಮೂವರು ತಜ್ಞರ ಸಮಿತಿ ನೇಮಕದ ಆದೇಶ ಹೊರಡಿಸಿದ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ನೇತೃತ್ವದ ಪೀಠವು ಹೀಗೆ ಹೇಳಿದೆ.
 4. ‘ಪ್ರಜಾಪ್ರಭುತ್ವ ದೇಶದ ನಾಗರಿಕ ಸಮಾಜದ ಸದಸ್ಯರಿಗೆ ಖಾಸಗಿತನದ ಬಗ್ಗೆ ನಿರೀಕ್ಷೆಗಳು ಇರುತ್ತವೆ. ಖಾಸಗಿತನ ಎನ್ನುವುದು ಪತ್ರಕರ್ತರು ಅಥವಾ ಸಾಮಾಜಿಕ ಹೋರಾಟಗಾರರಿಗೆ ಸಂಬಂಧಿಸಿದ ವಿಚಾರ ಮಾತ್ರ ಅಲ್ಲ. ಖಾಸಗಿತನದ ಹಕ್ಕಿನ ಉಲ್ಲಂಘನೆಯಿಂದ ಭಾರತದ ಪ್ರತಿ ಪ‍್ರಜೆಗೂ ರಕ್ಷಣೆ ಕೊಡಬೇಕಿದೆ. ಈ ನಿರೀಕ್ಷೆಯ ನಮ್ಮ ಅಯ್ಕೆಗಳು ಮತ್ತು ಸ್ವಾತಂತ್ರ್ಯವನ್ನು ಚಲಾಯಿಸಲು ನಮ್ಮನ್ನು ಸಮರ್ಥರನ್ನಾಗಿಸುತ್ತದೆ’ ಎಂದು ಪೀಠವು ಹೇಳಿದೆ.
 5. ರಾಷ್ಟ್ರೀಯ ಭದ್ರತೆಗೆ ಅಪಾಯ ಎಂಬ ಸರ್ಕಾರದ ಹೇಳಿಕೆಯು ನ್ಯಾಯಾಂಗವನ್ನು ಮೂಕಪ್ರೇಕ್ಷಕ ಆಗಿಸುವುದು ಸಾಧ್ಯವಿಲ್ಲ. ಪ್ರಜಾಪ್ರಭುತ್ವ ದೇಶದಲ್ಲಿ ಜನರ ಮೇಲೆ ಬೇಕಾಬಿಟ್ಟಿ ಗೂಢಚರ್ಯೆಗೆ ಅವಕಾಶ ಇಲ್ಲ ಎಂದು ಕೋರ್ಟ್‌ ಸ್ಪಷ್ಟವಾಗಿ ಹೇಳಿದೆ.
 6. ರಾಷ್ಟ್ರೀಯ ಭದ್ರತೆಯು ಪರಿಗಣಿಸಬೇಕಾದ ವಿಚಾರ ಹೌದು. ಪ್ರಾಧಿಕಾರಗಳಿಗೆ ಕೆಲವು ಅಧಿಕಾರಗಳೂ ಇವೆ. ಇಂತಹ ವಿಚಾರಗಳಲ್ಲಿ ನ್ಯಾಯಾಂಗದ ಪರಿಶೀಲನೆಗೆ ಮಿತಿಯೂ ಇದೆ. ಹಾಗಿದ್ದರೂ ರಾಷ್ಟ್ರೀಯ ಭದ್ರತೆಯನ್ನು ಮುಂದಿಟ್ಟು ಸರ್ಕಾರವು ಏನು ಬೇಕಾದರೂ ಮಾಡಲು ಅವಕಾಶ ಇಲ್ಲ ಎಂದು ಆದೇಶದಲ್ಲಿ ಹೇಳಲಾಗಿದೆ.
 7. ಮಾಹಿತಿ ಕ್ರಾಂತಿ ಯುಗ: ಈಗ ಜನರು ಮಾಹಿತಿ ಕ್ರಾಂತಿಯ ಯುಗದಲ್ಲಿ ಬದುಕುತ್ತಿದ್ದಾರೆ. ಜನರ ಎಲ್ಲ ದತ್ತಾಂಶಗಳು ಅಂತರ್ಜಾಲದಲ್ಲಿ ಅಥವಾ ಡಿಜಿಟಲ್‌ ರೂಪದಲ್ಲಿ ಸಂಗ್ರಹವಾಗಿರುತ್ತವೆ. ವ್ಯಕ್ತಿಯ ಮೇಲೆ ಗೂಢಚರ್ಯೆ ಆರಂಭವಾದರೆ ಆ ವ್ಯಕ್ತಿಯ ಖಾಸಗಿತನದ ಹಕ್ಕು ಉಲ್ಲಂಘನೆಯಾಗುತ್ತದೆ ಎಂದು ಕೋರ್ಟ್‌ ಹೇಳಿದೆ.
 8. ತಂತ್ರಜ್ಞಾನವು ನಮ್ಮ ಜೀವನಮಟ್ಟವನ್ನು ಸುಧಾರಿಸಲು ಉಪಯುಕ್ತ ಎಂಬುದು ನಿಜ. ಅದೇ ಹೊತ್ತಿಗೆ, ವ್ಯಕ್ತಿಯ ಪವಿತ್ರವಾದ ಖಾಸಗಿತವನ್ನು ಉಲ್ಲಂಘಿಸುವುದಕ್ಕೂ ಇದನ್ನು ಬಳಸಿಕೊಳ್ಳಬಹುದಾಗಿದೆ ಎಂದು ಪೀಠ ಅಭಿಪ್ರಾಯಪಟ್ಟಿದೆ.
 9. ಎಲ್ಲ ಮೂಲಭೂತ ಹಕ್ಕುಗಳ ಹಾಗೆಯೇ ಖಾಸಗಿತನದ ಹಕ್ಕಿಗೂ ನಿರ್ದಿಷ್ಟ ಮಿತಿಗಳು ಇವೆ ಎಂಬುದು ನಿಜ. ಆದರೆ, ಹೀಗೆ ಹೇರಲಾಗುವ ಯಾವುದೇ ನಿರ್ಬಂಧವು ಸಾಂವಿಧಾನಿಕ ಪರಿಶೀಲನೆಯಲ್ಲಿ ಸಿಂಧು ಎಂದು ಪರಿಗಣಿತವಾಗಬೇಕು ಎಂದು ಪೀಠ ಹೇಳಿದೆ.

ಇದೇ ವೇಳೆ ವರಿಷ್ಠ ನ್ಯಾಯಾಲಯವು ಮಾಧ್ಯಮ ಪಾತ್ರದ ಬಗ್ಗೆ ಕೂಡ ತಿಳಿಸಿದೆ:

ಪತ್ರಿಕಾ ಸ್ವಾತಂತ್ರ್ಯವು ಪ್ರಜಾಪ್ರಭುತ್ವದ ‘ಮುಖ್ಯವಾದ ಸ್ತಂಭ’. ಪತ್ರಿಕಾ ಮೂಲಗಳನ್ನು ರಕ್ಷಿಸುವುದು ಮಹತ್ವದ್ದಾಗಿರುವುದರಿಂದ ಪೆಗಾಸಸ್‌ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದು ಅಗತ್ಯವಾಗಿದೆ. ಜತೆಗೆ, ಬೇಹುಗಾರಿಕೆಗೆ ಅನುಸರಿಸಲಾದ ತಂತ್ರಗಳು ವ್ಯಾಪಕ ಪರಿಣಾಮವನ್ನು ಬೀರುವ ಸಾಧ್ಯತೆಯೂ ಇದೆ ಎಂದು ಪೀಠ ಹೇಳಿದೆ. ವಾಕ್‌ಸ್ವಾತಂತ್ರ್ಯದ ಮೇಲೆ ಆಗುವ ಪ್ರತಿಕೂಲ ಪರಿಣಾಮವು ಸಾರ್ವಜನಿಕ ನಿಗಾ ವ್ಯವಸ್ಥೆಯಾದ ಮಾಧ್ಯಮದ ಪಾತ್ರವನ್ನೇ ದಮನ ಮಾಡುತ್ತದೆ. ಇದು ನಿಖರ ಮತ್ತು ವಿಶ್ವಾಸಾರ್ಹ ಸುದ್ದಿ ಕೊಡುವ ಮಾಧ್ಯಮದ ಸಾಮರ್ಥ್ಯವನ್ನೇ ಕುಗ್ಗಿಸಬಹುದು ಎಂದು ಕೋರ್ಟ್‌ ಅಭಿಪ್ರಾಯಪಟ್ಟಿದೆ.

ಕೃಪೆ: ಪ್ರಜಾವಾಣಿ.

ಪರಿಣಾಮಗಳು:

ಆದಾಗ್ಯೂ, ರಾಷ್ಟ್ರೀಯ ಭದ್ರತಾ ವಿಷಯಗಳಲ್ಲಿ ನ್ಯಾಯಾಂಗ ಪರಿಶೀಲನೆಯ ಪಾತ್ರ ಸೀಮಿತವಾಗಿದೆ ಎಂದು ನ್ಯಾಯಾಲಯ ಒಪ್ಪಿಕೊಂಡಿದೆ. ನ್ಯಾಯಾಲಯದ ನಮ್ರತೆ, ಆದಾಗ್ಯೂ, ‘ನ್ಯಾಯಾಂಗ ಪರಿಶೀಲನೆ’ ವಿರುದ್ಧ “ಸಾರ್ವತ್ರಿಕ ನಿಷೇಧ” ವಿಧಿಸಲು ಸರ್ಕಾರಕ್ಕೆ ಪರವಾನಗಿ ನೀಡುವುದಿಲ್ಲ.

ರಾಜ್ಯವು ‘ರಾಷ್ಟ್ರೀಯ ಭದ್ರತೆ’ಯನ್ನು ಆವಾಹನೆ ಮಾಡಿದರೆ, ನ್ಯಾಯಾಲಯವು ಕೇವಲ ಮೂಕ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ.

ನ್ಯಾಯಾಂಗ ಮರುಪರಿಶೀಲನೆ/ ವಿಮರ್ಶೆ ಎಂದರೇನು?

ನ್ಯಾಯಾಂಗ ವಿಮರ್ಶೆ ಎಂದರೆ ಶಾಸಕಾಂಗ ಮತ್ತು ಕಾರ್ಯಾಂಗಗಳ ಯಾವುದೇ ಕಾಯ್ದೆ ಅಥವಾ ಆದೇಶವನ್ನು ಪರಿಶೀಲಿಸುವ ಮತ್ತು ಪೀಡಿತ ವ್ಯಕ್ತಿಯಿಂದ ಪ್ರಶ್ನಿಸಲ್ಪಟ್ಟಾಗ ಆ ಕಾಯ್ದೆಯ ಸಾಂವಿಧಾನಿಕ ಸಿಂಧುತ್ವವನ್ನು ನಿರ್ಣಯಿಸುವ ನ್ಯಾಯಾಂಗದ ಅಧಿಕಾರವಾಗಿದೆ.

ಪ್ರಸ್ತುತ , ಭಾರತದಲ್ಲಿ ನ್ಯಾಯಾಂಗ ವಿಮರ್ಶೆ :

 1. ನ್ಯಾಯಾಂಗ ವಿಮರ್ಶೆಯ ಅಧಿಕಾರವು ಭಾರತದ ಸಂವಿಧಾನದಿಂದಲೇ ಪ್ರದತ್ತವಾಗಿದೆ.(ಸಂವಿಧಾನದ 13, 32, 136, 142 ಮತ್ತು 147 ನೇ ವಿಧಿಗಳಲ್ಲಿ ಅಡಕವಾಗಿದೆ).
 2. ಸಂವಿಧಾನದ ಭಾಗ III ರಲ್ಲಿ ಖಾತರಿಪಡಿಸಿದ ಮೂಲಭೂತ ಹಕ್ಕುಗಳನ್ನು ರಕ್ಷಿಸಲು ಮತ್ತು ಜಾರಿಗೊಳಿಸಲು ನ್ಯಾಯಾಂಗ ಪರಿಶೀಲನೆಯ ಅಧಿಕಾರವನ್ನು ಬಳಸಲಾಗುತ್ತದೆ.
 3. ಸಂವಿಧಾನದ 13 ನೇ ವಿಧಿಯು ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು ದೇಶದ ನಾಗರಿಕರಿಂದ“ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳುವ ಅಥವಾ ರದ್ದುಗೊಳಿಸುವ” ಕಾನೂನುಗಳನ್ನು ಮಾಡುವುದನ್ನು ನಿಷೇಧಿಸುತ್ತದೆ..
 4. ಆರ್ಟಿಕಲ್ 13 ರ ನಿಬಂಧನೆಗಳು ಮೂಲಭೂತ ಹಕ್ಕುಗಳ ರಕ್ಷಣೆಯನ್ನು ಖಚಿತಪಡಿಸುತ್ತವೆ ಮತ್ತು ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುವ ಅಥವಾ ಉಲ್ಲಂಘಿಸಿದಲ್ಲಿ ಯಾವುದೇ ಕಾನೂನನ್ನು “ಶೂನ್ಯ ಮತ್ತು ಅನೂರ್ಜಿತ” ಎಂದು ಪರಿಗಣಿಸುತ್ತವೆ.

ನ್ಯಾಯಾಂಗ ಕ್ರಿಯಾಶೀಲತೆ ಮತ್ತು ನ್ಯಾಯಾಂಗ ಸಂಯಮದ ನಡುವಿನ ವ್ಯತ್ಯಾಸವೇನು?

ನ್ಯಾಯಾಂಗ ಕ್ರಿಯಾಶೀಲತೆಯು ಸರ್ಕಾರದ ಕಾರ್ಯಗಳನ್ನು ನಿರ್ಧರಿಸಲು ನ್ಯಾಯಾಂಗ ವಿಮರ್ಶೆಯ ಅಧಿಕಾರದ ಹಕ್ಕು (ಅಥವಾ, ಕೆಲವೊಮ್ಮೆ, ಅನ್ಯಾಯದ ಹಕ್ಕು). ನ್ಯಾಯಾಂಗ ಸಂಯಮವು ಇಂತಹ ಕೃತ್ಯಗಳನ್ನು ಮಾಡಲು ನಿರಾಕರಿಸುವುದು, ಈ ವಿಷಯವನ್ನು ಶಾಸಕಾಂಗದ ಸುಪರ್ದಿಗೆ ಬಿಡುವುದಾಗಿದೆ.

judicial

 

 

ವಿಷಯಗಳುಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಜನನ ಮತ್ತು ಮರಣಗಳ ನೋಂದಣಿ ಕಾಯಿದೆ, 1969 ಕ್ಕೆ ತಿದ್ದುಪಡಿಗಳು:


(Amendments to the Registration of Births and Deaths Act, 1969)

ಸಂದರ್ಭ:

ಕೇಂದ್ರ ಸರ್ಕಾರವು ಜನನ ಮತ್ತು ಮರಣಗಳ ನೋಂದಣಿ ಕಾಯಿದೆ’, 1969 (Registration of Births and Deaths Act, 1969) ಕ್ಕೆ ತಿದ್ದುಪಡಿಗಳನ್ನು ಪ್ರಸ್ತಾಪಿಸಿದೆ. ಈ ತಿದ್ದುಪಡಿಯ ನಂತರ, ಕೇಂದ್ರ ಸರ್ಕಾರವು ಜನನ ಮತ್ತು ಮರಣ ನೋಂದಣಿಯ ಡೇಟಾಬೇಸ್ ಅನ್ನು ರಾಷ್ಟ್ರೀಯ ಮಟ್ಟದಲ್ಲಿ ನಿರ್ವಹಿಸುವ” ಅಧಿಕಾರವನ್ನು ಪಡೆಯುತ್ತದೆ.

current affairs

 

 1. ಪ್ರಸ್ತುತ, ಜನನ ಮತ್ತು ಮರಣಗಳ ನೋಂದಣಿಯನ್ನು ರಾಜ್ಯಗಳಿಂದ ನೇಮಿಸಲ್ಪಟ್ಟ ಸ್ಥಳೀಯ ರಿಜಿಸ್ಟ್ರಾರ್‌ಗಳು ಮಾಡುತ್ತಾರೆ.

ಈ ತಿದ್ದುಪಡಿಯ ಅಗತ್ಯತೆ:

ಈ ಡೇಟಾಬೇಸ್ ಅನ್ನು ಜನಸಂಖ್ಯಾ ನೋಂದಣಿ ಮತ್ತು ಚುನಾವಣಾ ನೋಂದಣಿ, ಮತ್ತು ಆಧಾರ್ ಕಾರ್ಡ್, ರೇಷನ್ ಕಾರ್ಡ್, ಪಾಸ್‌ಪೋರ್ಟ್ ಮತ್ತು ಡ್ರೈವಿಂಗ್ ಲೈಸೆನ್ಸ್ ಡೇಟಾಬೇಸ್ ಗಳನ್ನು ನವೀಕರಿಸಲು ಬಳಸಬಹುದು.

ಕೇಂದ್ರ ಪ್ರಸ್ತಾಪಿಸಿದ ತಿದ್ದುಪಡಿಗಳು:

 1. ರಾಜ್ಯ ಮಟ್ಟದಲ್ಲಿ, ‘ಮುಖ್ಯ ರಿಜಿಸ್ಟ್ರಾರ್‌ಗಳು’ (ರಾಜ್ಯಗಳಿಂದ ನೇಮಕಗೊಂಡವರು) ಏಕೀಕೃತ ಡೇಟಾಬೇಸ್ ಅನ್ನು ನಿರ್ವಹಿಸುತ್ತಾರೆ ಮತ್ತು ಈ ಡೇಟಾಬೇಸ್ ಅನ್ನು ಭಾರತೀಯ ರಿಜಿಸ್ಟ್ರಾರ್ ಜನರಲ್(Registrar General of India) ಅವರ ಮೇಲ್ವಿಚಾರಣೆಯಲ್ಲಿ “ರಾಷ್ಟ್ರೀಯ ಮಟ್ಟದಲ್ಲಿ” ನಿರ್ವಹಿಸುವ ಡೇಟಾದೊಂದಿಗೆ ಸಂಯೋಜಿಸುತ್ತಾರೆ. ಈ ತಿದ್ದುಪಡಿಗಳ ಅರ್ಥ ಕೇಂದ್ರ ಸರ್ಕಾರವು ಅಂತಹ ಡೇಟಾದ ಸಮಾನಾಂತರ ಭಂಡಾರವನ್ನು ಹೊಂದಿರುತ್ತದೆ ಎಂಬುದಾಗಿದೆ.
 2. ಯಾವುದೇ ವಿಪತ್ತಿನ ಸಂದರ್ಭದಲ್ಲಿ ವಿಶೇಷ ಉಪ-ನೋಂದಣಿದಾರರನ್ನು” ತಕ್ಷಣವೇ ಸ್ಥಳದಲ್ಲೇ ಸಾವಿನ ನೋಂದಣಿ ಮತ್ತು ಸಂಬಂಧಿತ ದಾಖಲೆಗಳ ವಿತರಣೆಗಾಗಿ ಅವನ ಅಥವಾ ಅವಳ ಕೆಲವು ಅಥವಾ ಎಲ್ಲಾ ಅಧಿಕಾರಗಳು ಮತ್ತು ಕರ್ತವ್ಯಗಳೊಂದಿಗೆ ನೇಮಿಸಲಾಗುತ್ತದೆ.

ಜನನ ಮತ್ತು ಮರಣ ನೋಂದಣಿಯ ಪ್ರಯೋಜನಗಳು:

ಜನನ ಪ್ರಮಾಣಪತ್ರವು ಮಗುವಿನ ಮೊದಲ ಹಕ್ಕು, ಮತ್ತು ಇದು ಅವನ ಗುರುತನ್ನು ಸ್ಥಾಪಿಸುವ ಮೊದಲ ಹೆಜ್ಜೆಯಾಗಿದೆ.

‘ಜನನ ಮತ್ತು ಮರಣ ಪ್ರಮಾಣಪತ್ರ’ದ ಪ್ರಮುಖ ಉಪಯೋಗಗಳು ಈ ಕೆಳಗಿನಂತಿವೆ:

 1. ಶಾಲೆಗಳಿಗೆ ಪ್ರವೇಶಕ್ಕಾಗಿ
 2. ಉದ್ಯೋಗಕ್ಕಾಗಿ ವಯಸ್ಸಿನ ಪುರಾವೆಯಾಗಿ
 3. ಮದುವೆಯ ಸಮಯದಲ್ಲಿ ವಯಸ್ಸಿನ ಪುರಾವೆಯಾಗಿ
 4. ಪೋಷಕರನ್ನು ಸಾಬೀತುಪಡಿಸಲು
 5. ಮತದಾರರ ಪಟ್ಟಿಯಲ್ಲಿ ನೋಂದಣಿಗೆ ವಯಸ್ಸನ್ನು ನಿರ್ಧರಿಸಲು
 6. ವಿಮಾ ಉದ್ದೇಶಗಳಿಗಾಗಿ ವಯಸ್ಸನ್ನು ನಿರ್ಧರಿಸಲು
 7. ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಯಲ್ಲಿ ನೋಂದಣಿಗಾಗಿ.
 8. ಆಸ್ತಿಯ ಉತ್ತರಾಧಿಕಾರದ ಉದ್ದೇಶಕ್ಕಾಗಿ ಮತ್ತು ವಿಮಾ ಕಂಪನಿಗಳು ಮತ್ತು ಇತರ ಕಂಪನಿಗಳಿಂದ ಬಾಕಿ ಮೊತ್ತವನ್ನು ಕ್ಲೈಮ್ ಮಾಡಲು ಮರಣ ಪ್ರಮಾಣಪತ್ರವನ್ನು ಪ್ರಸ್ತುತಪಡಿಸುವುದು ಕಡ್ಡಾಯವಾಗಿದೆ.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಏಷ್ಯ ಅಭಿವೃದ್ಧಿ ಬ್ಯಾಂಕ್ (ADB):


(Asian Development Bank)

ಸಂದರ್ಭ:

ಭಾರತ ಸರ್ಕಾರವು, 667 ಮಿಲಿಯನ್ ಡೋಸ್ ಕೋವಿಡ್-19 ಲಸಿಕೆಗಳನ್ನು ಖರೀದಿಸಲು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ (Asian Development Bank- ADB) ಮತ್ತು ಏಷ್ಯನ್ ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ (Asian Infrastructure Investment Bank – AIIB) ಯಿಂದ ಸಾಲಕ್ಕಾಗಿ ಅರ್ಜಿ ಸಲ್ಲಿಸಿದೆ.

ಮನಿಲಾ ಮೂಲದ ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ಮತ್ತು ಬೀಜಿಂಗ್ ಮೂಲದ ಏಷ್ಯನ್ ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ಸಾಲ ನೀಡುವಿಕೆಯನ್ನು ಪರಿಗಣಿಸುತ್ತಿವೆ. ‘ಏಷ್ಯನ್ ಇನ್‌ಫ್ರಾಸ್ಟ್ರಕ್ಚರ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್’ನಲ್ಲಿ ಚೀನಾ ಮತ್ತು ಭಾರತವು ಅತಿ ದೊಡ್ಡ ಷೇರುದಾರರಾಗಿದ್ದಾರೆ ಎಂಬುದನ್ನು ಗಮನಿಸಬೇಕು.

ಹಿನ್ನೆಲೆ:

COVID-19 ಗಾಗಿ ಲಸಿಕೆಯನ್ನು ಭಾರತ ಸರ್ಕಾರವು ಸ್ಪರ್ಧಾತ್ಮಕ ಪ್ರಕ್ರಿಯೆಯ ಮೂಲಕ ಸಂಗ್ರಹಿಸುತ್ತದೆ ಮತ್ತು ಸಂಗ್ರಹಣೆ ಪ್ರಕ್ರಿಯೆಯನ್ನು ಏಷ್ಯನ್ ಡೆವಲಪ್‌ಮೆಂಟ್ ಬ್ಯಾಂಕ್ ನಿರ್ವಹಿಸುತ್ತದೆ ಮತ್ತು ಇದನ್ನು ADB ಯ APVX ಅಥವಾ ಏಷ್ಯಾ-ಪೆಸಿಫಿಕ್ ಲಸಿಕೆ ಪ್ರವೇಶ ಸೌಲಭ್ಯ ವ್ಯವಸ್ಥೆಯ (Asia-Pacific Vaccine Access Facility) ಅಡಿಯಲ್ಲಿ ಕಾರ್ಯಗತಗೊಳಿಸುತ್ತದೆ.

ಏಷ್ಯ ಅಭಿವೃದ್ಧಿ ಬ್ಯಾಂಕ್ ಕುರಿತು:

 1. ಇದು ಒಂದು ಪ್ರಾದೇಶಿಕ ಅಭಿವೃದ್ಧಿ ಬ್ಯಾಂಕ್ ಆಗಿದೆ.
 2. ಇದನ್ನು 19 ಡಿಸೆಂಬರ್ 1966 ರಂದು ಸ್ಥಾಪಿಸಲಾಯಿತು.
 3. ಪ್ರಧಾನ ಕಚೇರಿ – ಮನಿಲಾ, ಫಿಲಿಪೈನ್ಸ್.
 4. ವಿಶ್ವಸಂಸ್ಥೆಯ ಅಧಿಕೃತ ವೀಕ್ಷಕ ಸ್ಥಾನಮಾನ ವನ್ನು ಪಡೆದಿದೆ.

ಯಾರು ಅದರ ಸದಸ್ಯರಾಗಬಹುದು?

ಏಷ್ಯಾ ಮತ್ತು ಪೆಸಿಫಿಕ್ ಗಾಗಿನ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗದ ಸದಸ್ಯರನ್ನು (United Nations Economic and Social Commission for Asia and the Pacific (UNESCAP, ಈ ಹಿಂದೆ ಇದನ್ನು ‘ಏಷ್ಯಾ  ಮತ್ತು ಫಾರ್ ಈಸ್ಟ್ ನ ಆರ್ಥಿಕ ಆಯೋಗ’ ಅಥವಾ the Economic Commission for Asia and the Far East or ECAFE ಎಂದು ಕರೆಯಲಾಗುತ್ತಿತ್ತು) ಮತ್ತು ಪ್ರಾದೇಶಿಕೇತರ ಅಭಿವೃದ್ಧಿ ಹೊಂದಿದ ದೇಶಗಳನ್ನು ADB ತನ್ನ ಸದಸ್ಯರನ್ನಾಗಿ ಅಂಗೀಕರಿಸುತ್ತದೆ.

 1. ADB, ಈಗ 68 ಸದಸ್ಯರನ್ನು ಹೊಂದಿದ್ದು, ಅದರಲ್ಲಿ 49 ದೇಶಗಳು ಏಷ್ಯಾಖಂಡದ್ದಾವಗಿವೆ.

ಮತದಾನದ ಹಕ್ಕು:

 1. ಇದು ವಿಶ್ವಬ್ಯಾಂಕಿನ ತದ್ರೂಪಿ ಮಾದರಿಯಂತಿದೆ. ಇಲ್ಲಿ, ವಿಶ್ವಬ್ಯಾಂಕ್ ನಂತೆ, ಬಂಡವಾಳದ ಪಾಲನ್ನು ಆಧರಿಸಿ ಮತಗಳನ್ನು ನಿಗದಿಪಡಿಸಲಾಗುತ್ತದೆ.
 2. 31 ಡಿಸೆಂಬರ್ 2019 ರ ಹೊತ್ತಿಗೆ, ADB ಯ ಐದು ಅತಿದೊಡ್ಡ ಷೇರುದಾರರು ಎಂದರೆ ಜಪಾನ್ ಮತ್ತು ಅಮೇರಿಕ ಸಂಯುಕ್ತ ಸಂಸ್ಥಾನ (ಈ ಎರಡೂ ದೇಶಗಳು ಒಟ್ಟು ಷೇರುಗಳಲ್ಲಿ ತಲಾ 15.6% ಪಾಲನ್ನು ಹೊಂದಿವೆ), ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (6.4%), ಭಾರತ (6.3%) ಮತ್ತು ಆಸ್ಟ್ರೇಲಿಯಾ (5.8%) ಕ್ರಮವಾಗಿ ನಂತರದ ಸ್ಥಾನದಲ್ಲಿವೆ.

ಪಾತ್ರಗಳು ಮತ್ತು ಕಾರ್ಯಗಳು:

 1. ಸಮಗ್ರ ಆರ್ಥಿಕ ಬೆಳವಣಿಗೆ, ಸುಸ್ಥಿರ ಪರಿಸರ ಬೆಳವಣಿಗೆ ಮತ್ತು ಪ್ರಾದೇಶಿಕ ಏಕೀಕರಣದ ಮೂಲಕ ಏಷ್ಯಾ ಮತ್ತು ಪೆಸಿಫಿಕ್‌ ಪ್ರದೇಶದಲ್ಲಿನ ಬಡತನವನ್ನು ಕಡಿಮೆ ಮಾಡಲು ಏಷ್ಯಾ ಅಭಿವೃದ್ಧಿ ಬ್ಯಾಂಕ್ ಅನ್ನು ಸಮರ್ಪಿಸಲಾಗಿದೆ.
 2. ಹೂಡಿಕೆ, ಸಾಲ, ಅನುದಾನ ಮತ್ತು ಮಾಹಿತಿ ಹಂಚಿಕೆ ರೂಪದಲ್ಲಿ – ಮೂಲಸೌಕರ್ಯ, ಆರೋಗ್ಯ ಸೇವೆಗಳು, ಹಣಕಾಸು ಮತ್ತು ಸಾರ್ವಜನಿಕ ಆಡಳಿತ ವ್ಯವಸ್ಥೆಗಳಲ್ಲಿ, ಹವಾಮಾನ ಬದಲಾವಣೆಯ ಪ್ರಭಾವಕ್ಕೆ ರಾಷ್ಟ್ರಗಳನ್ನು ತಯಾರು ಮಾಡಲು ಅಥವಾ ಅವುಗಳ ನೈಸರ್ಗಿಕ ಸಂಪನ್ಮೂಲಗಳನ್ನು ಮತ್ತು ಇತರ ಪ್ರದೇಶಗಳನ್ನು ಉತ್ತಮವಾಗಿ ನಿರ್ವಹಿಸಲು ರಾಷ್ಟ್ರಗಳಿಗೆ ಸಹಾಯ ಮಾಡುವುದರ ಮೂಲಕ ಇದನ್ನು ನಡೆಸಲಾಗುತ್ತದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

ಭಾರತೀಯ SARS-CoV-2 ಕನ್ಸೋರ್ಟಿಯಂ ಆನ್ ಜೀನೋಮಿಕ್ಸ್ (INSACOG):


(Indian SARS-CoV-2 Consortium on Genomics (INSACOG)

ಸಂದರ್ಭ:

ಭಾರತದಲ್ಲಿ 4 ನೋವೆಲ್ ಕೋರೋಣ ರೂಪಾಂತರಗಳನ್ನು ಒಳಗೊಂಡಂತೆ SARS-Cov-2 ನ ಒಟ್ಟು 108 ರೂಪಾಂತರಗಳನ್ನು ಭಾರತೀಯ SARS-CoV-2 ಕನ್ಸೋರ್ಟಿಯಂ ಆನ್ ಜೀನೋಮಿಕ್ಸ್ (INSACOG) ನೇತೃತ್ವದ ತಂಡವು ಡಿಸೆಂಬರ್ 2020 ಮತ್ತು ಏಪ್ರಿಲ್ 2021 ರ ನಡುವೆ ಪುಣೆ ನಗರದಿಂದ ಸಂಗ್ರಹಿಸಲಾದ ತ್ಯಾಜ್ಯನೀರಿನ ಮಾದರಿಗಳಲ್ಲಿ ಪತ್ತೆಹಚ್ಚಿದೆ.

ದೇಶಗಳು ನಿರಂತರವಾಗಿ ರೂಪಾಂತರಗಳನ್ನು ಮೇಲ್ವಿಚಾರಣೆ ಮಾಡುವುದು ಮತ್ತು ಉದಯೋನ್ಮುಖ ಜೀನೋಮಿಕ್ ಎಪಿಡೆಮಿಯಾಲಜಿಯನ್ನು ಅರ್ಥಮಾಡಿಕೊಳ್ಳುವುದು ಎಷ್ಟು ಮುಖ್ಯ?

ಜೀನೋಮಿಕ್ ಅನುಕ್ರಮವು ಇತರ ರೋಗಕಾರಕಗಳ ಔಟ್ ಬ್ರೆಕ್ ಅನ್ನು ಪತ್ತೆಹಚ್ಚಲು ಮತ್ತು ನಿಯಂತ್ರಿಸಲು ಪ್ರತಿ ದೇಶದ ವೈದ್ಯಕೀಯ ಅಭ್ಯಾಸದ ಪ್ರಮುಖ ಭಾಗವಾಗಿದೆ.

ಭಾರತದಲ್ಲಿ ಮತ್ತು ಪ್ರಪಂಚದಾದ್ಯಂತ, SARS-CoV-2 ರ ತ್ವರಿತ ಹರಡುವಿಕೆ ಮತ್ತು ಹೊಸ ರೂಪಗಳ ಹೊರಹೊಮ್ಮುವಿಕೆಯು ವೈರಲ್ ಮಾದರಿಗಳನ್ನು ಎಷ್ಟು ಸಂಗ್ರಹಿಸಲು, ಅನುಕ್ರಮಗೊಳಿಸಲು ಮತ್ತು ರಾಷ್ಟ್ರೀಯ ಮತ್ತು ಪ್ರಾದೇಶಿಕವಾಗಿ ಮಾಹಿತಿಯನ್ನು ಹಂಚಿಕೊಳ್ಳುವುದು ಎಷ್ಟು ಮುಖ್ಯ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಇದು ಸಾಂಕ್ರಾಮಿಕ ರೋಗಗಳ ಹರಡುವಿಕೆ, ರೋಗಕಾರಕ ಬದಲಾವಣೆಗಳು ಮತ್ತು ಜೀವ ಹಾನಿಯ ತಗ್ಗಿಸುವಿಕೆ ಮತ್ತು ಪ್ರತಿಮಾಪನ ತಂತ್ರಗಳ ಪರಿಣಾಮಕಾರಿತ್ವದ ಸ್ಪಷ್ಟ, ನಿಖರವಾದ ನೈಜ-ಸಮಯದ ಚಿತ್ರವನ್ನು ಒದಗಿಸುತ್ತದೆ.

‘ಜೀನೋಮ್ ಸೀಕ್ವೆನ್ಸಿಂಗ್’ ನ ಉದ್ದೇಶ:

 1. ‘ಜೀನೋಮ್ ಸೀಕ್ವೆನ್ಸಿಂಗ್’ ನ ಮುಖ್ಯ ಉದ್ದೇಶ ‘ಕಣ್ಗಾವಲು’. ಇದು ವೈರಸ್‌ನ ಪ್ರಚಲಿತ ರೂಪಾಂತರಗಳು, ಉದಯೋನ್ಮುಖ ರೂಪಾಂತರಗಳು (ಉದಾ. ಡೆಲ್ಟಾ) ಮತ್ತು ಮರು-ಸೋಂಕನ್ನು ಉಂಟುಮಾಡುವ ರೂಪಾಂತರಗಳ ನಿಖರವಾದ ಚಿತ್ರವನ್ನು ಪಡೆಯಲು ಸಹಾಯ ಮಾಡುತ್ತದೆ.
 2. ಪ್ರಸ್ತುತ, ವೈರಸ್‌ನ ನಾಲ್ಕು ‘ವೇರಿಯಂಟ್ಸ್ ಆಫ್ ಕನ್ಸರ್ನ್’ /ಕಾಳಜಿಯ ರೂಪಾಂತರಗಳು (VoCs) ಅನ್ನು ವಿಶ್ವದ ವಿವಿಧ ಭಾಗಗಳಲ್ಲಿ ಗಮನಿಸಲಾಗಿದೆ – ಆಲ್ಫಾ ರೂಪಾಂತರ (UK ಯಲ್ಲಿ ಮೊದಲು ನೋಡಲಾಗಿದೆ), ಬೀಟಾ ರೂಪಾಂತರ (ಬ್ರೆಜಿಲ್), ಗಾಮಾ ರೂಪಾಂತರ (ದಕ್ಷಿಣ ಆಫ್ರಿಕಾ) ಮತ್ತು ಡೆಲ್ಟಾ ರೂಪಾಂತರ (ಭಾರತ ).
 3. GISAID ನಂತಹ ಮುಕ್ತ-ಪ್ರವೇಶ ವೇದಿಕೆಯಲ್ಲಿ ‘ಸೀಕ್ವೆನ್ಸಿಂಗ್ ಡೇಟಾ’ವನ್ನು ಸಂಗ್ರಹಿಸುವುದರ ಮೇಲೆ ವಿಶ್ವ ಆರೋಗ್ಯ ಸಂಸ್ಥೆಯು ಒತ್ತು ನೀಡಿದೆ, ಇದರಿಂದಾಗಿ ಪ್ರಪಂಚದ ಒಂದು ಭಾಗದಲ್ಲಿ ನಿರ್ವಹಿಸಿದ ಅನುಕ್ರಮಗಳನ್ನು ಜಾಗತಿಕ ವೈಜ್ಞಾನಿಕ ಸಮುದಾಯವು ನೋಡಬಹುದು ಮತ್ತು ಅರ್ಥಮಾಡಿಕೊಳ್ಳಬಹುದಾಗಿದೆ.

ಜೀನ್ ಸೀಕ್ವೆನ್ಸಿಂಗ್ (Gene Sequencing) ಎಂದರೇನು?

 1. ಜೀನೋಮ್ (Genome) ಎನ್ನುವುದು ಡಿಎನ್ಎ ಅಥವಾ ಕೋಶದಲ್ಲಿನ ವಂಶವಾಹಿಗಳ ಅನುಕ್ರಮವಾಗಿದೆ. ಹೆಚ್ಚಿನ ಡಿಎನ್‌ಎ ನ್ಯೂಕ್ಲಿಯಸ್‌ನಲ್ಲಿರುತ್ತದೆ ಮತ್ತು ಕ್ರೋಮೋಸೋಮ್ (Chromosome) ಎಂಬ ಸಂಕೀರ್ಣ ರಚನೆಯಲ್ಲಿ ಹೆಣೆದುಕೊಂಡಿದೆ.
 2. ಪ್ರತಿಯೊಂದು ಮಾನವ ಜೀವಕೋಶವು ಒಂದು ಜೋಡಿ ವರ್ಣತಂತುಗಳನ್ನು ಹೊಂದಿರುತ್ತದೆ, ಪ್ರತಿಯೊಂದೂ ಮೂರು ಬಿಲಿಯನ್ ಬೇಸ್-ಜೋಡಿಗಳನ್ನು ಹೊಂದಿರುತ್ತದೆ, ಅಥವಾ ನಿರ್ದಿಷ್ಟವಾಗಿ ಜೋಡಿಸಲಾದ ನಾಲ್ಕು ಅಣುಗಳಲ್ಲಿ ಒಂದು ಅಣುವನ್ನು ಹೊಂದಿರುತ್ತದೆ.
 3. ಬೇಸ್ ಜೋಡಿಗಳ ಅನುಕ್ರಮ ಮತ್ತು ಈ ಅನುಕ್ರಮಗಳ ವಿಭಿನ್ನ ಉದ್ದಗಳು ‘ಜೀನ್’ಗಳನ್ನು ರೂಪಿಸುತ್ತವೆ.
 4. ಜೀನೋಮ್ ಸೀಕ್ವೆನ್ಸಿಂಗ್ ಎಂದರೆ ‘ಒಬ್ಬ ವ್ಯಕ್ತಿಯ ಬೇಸ್ ಜೋಡಿಯ ನಿಖರವಾದ ಅನುಕ್ರಮವನ್ನು ಅರ್ಥಮಾಡಿಕೊಳ್ಳುವುದು’. ಜೀನೋಮಿಕ್ ಸೀಕ್ವೆನ್ಸಿಂಗ್ ಎನ್ನುವುದು ಡಿಎನ್‌ಎ ಅಥವಾ ಆರ್‌ಎನ್‌ಎ ಯಲ್ಲಿ ಕಂಡುಬರುವ ಆನುವಂಶಿಕ ವಿವರಗಳನ್ನು ಓದಲು ಮತ್ತು ಅರ್ಥೈಸುವ ಒಂದು ತಂತ್ರವಾಗಿದೆ.

ಜೀನೋಮ್ ಸೀಕ್ವೆನ್ಸಿಂಗ್ ಅಗತ್ಯತೆ:

 1. ಭಾರತದ ಆನುವಂಶಿಕ ಪೂಲ್ನ ವೈವಿಧ್ಯತೆಯನ್ನು ಮ್ಯಾಪಿಂಗ್ ಮಾಡುವುದರಿಂದ ವ್ಯಕ್ತಿ ಆಧಾರಿತ ಔಷಧಿಗೆ ಅಡಿಪಾಯ ಹಾಕಲಾಗುತ್ತದೆ ಮತ್ತು ಜಾಗತಿಕ ಭೂಪಟದಲ್ಲಿ ಅದನ್ನು ತೋರಿಸಲಾಗುತ್ತದೆ.
 2. ನಮ್ಮ ದೇಶದಲ್ಲಿ ಜನಸಂಖ್ಯೆಯ ವೈವಿಧ್ಯತೆ ಮತ್ತು ಮಧುಮೇಹ, ಮಾನಸಿಕ ಆರೋಗ್ಯ ಸೇರಿದಂತೆ ಸಂಕೀರ್ಣ ಅಸ್ವಸ್ಥತೆಗಳ ಕಾಯಿಲೆಯ ಹೊರೆಗಳನ್ನು ಪರಿಗಣಿಸಿ, ಒಮ್ಮೆ ನಾವು ‘ಆನುವಂಶಿಕ ಆಧಾರ’ ಲಭ್ಯವಿದ್ದಲ್ಲಿ, ರೋಗದ ಆರಂಭದ ಮುನ್ನವೇ ನಿವಾರಣೋಪಾಯಗಳನ್ನು ಕೈಗೊಳ್ಳಲು ಸಾಧ್ಯವಿದೆ.

ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (INSACOG) ಕುರಿತು:

 1. ಭಾರತೀಯ SARS-CoV-2 ಜೀನೋಮಿಕ್ಸ್ ಕನ್ಸೋರ್ಟಿಯಂ (Indian SARS-CoV-2 Consortium on Genomics – INSACOG) ಅನ್ನು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ (DBT) ಜಂಟಿಯಾಗಿ ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ (CSIR) ಮತ್ತು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ICMR) ಜಂಟಿ ಸಹಯೋಗದಲ್ಲಿ ಆರಂಭಿಸಲಾಗಿದೆ.
 2. ಇದು SARS-CoV-2 ರಲ್ಲಿಯ ಜೀನೋಮಿಕ್ ವ್ಯತ್ಯಾಸಗಳನ್ನು ಮೇಲ್ವಿಚಾರಣೆ ಮಾಡಲು 28 ರಾಷ್ಟ್ರೀಯ ಪ್ರಯೋಗಾಲಯಗಳ ಒಕ್ಕೂಟವಾಗಿದೆ.
 3. ಇದು SARS-CoV-2 ವೈರಸ್‌ನ ಸಂಪೂರ್ಣ ಜೀನೋಮ್ ಸೀಕ್ವೆನ್ಸಿಂಗ್ ಅನ್ನು ದೇಶಾದ್ಯಂತ ನಡೆಸುತ್ತದೆ, ಇದು ವೈರಸ್ ಹರಡುವಿಕೆ ಮತ್ತು ವಿಕಸನವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
 4. ರೋಗದ ಚಲನಶೀಲತೆ ಮತ್ತು ತೀವ್ರತೆಯನ್ನು ಅರ್ಥಮಾಡಿಕೊಳ್ಳಲು ವೈದ್ಯಕೀಯ ಮಾದರಿಗಳನ್ನು ಅನುಕ್ರಮಗೊಳಿಸುವತ್ತ ಗಮನಹರಿಸುವ ಗುರಿಯನ್ನು INSACOG ಹೊಂದಿದೆ.

GISAID ಎಂದರೇನು?

 1. 2008 ರಲ್ಲಿ ನಡೆದ ವಿಶ್ವ ಆರೋಗ್ಯ ಅಸೆಂಬ್ಲಿಯ (World Health Assembly) 61 ನೇ ಸಮ್ಮೇಳನ ವೇದಿಕೆಯಲ್ಲಿ ‘ಏವಿಯನ್ ಇನ್ಫ್ಲುಯೆನ್ಸ ಡೇಟಾವನ್ನು ಹಂಚಿಕೊಳ್ಳುವ ಜಾಗತಿಕ ಉಪಕ್ರಮ’ (Global initiative on sharing avian influenza data – GISAID) ವೇದಿಕೆಯನ್ನು ಸ್ಥಾಪಿಸಲಾಯಿತು.
 2. ಇದು ವಿವಿಧ ದೇಶಗಳಿಗೆ ಜೀನೋಮಿಕ್ ಡೇಟಾವನ್ನು ಹಂಚಿಕೊಳ್ಳಲು ವಿಶ್ವ ಆರೋಗ್ಯ ಸಂಸ್ಥೆ (WHO) ಸ್ಥಾಪಿಸಿದ ಸಾರ್ವಜನಿಕ ವೇದಿಕೆಯಾಗಿದೆ.
 3. GISAID ಎಂಬುದು ಇನ್ಫ್ಲುಯೆನ್ಸ ವೈರಸ್‌ಗಾಗಿ ಜೀನೋಮಿಕ್ ಡೇಟಾದ ಮತ್ತು COVID-19 ಗೆ ಕಾರಣವಾದ ನೋವೆಲ್ ಕರೋನವೈರಸ್ ನ ಪ್ರಾಥಮಿಕ ಮೂಲವಾಗಿದೆ.
 4. ಸಂಗ್ರಹಿಸಿದ ದತ್ತಾಂಶವು ಇನ್ಫ್ಲುಯೆನ್ಸ ವೈರಸ್ ಅನುಕ್ರಮಗಳು, ಅವುಗಳ ಸಂಬಂಧಿತ ಕ್ಲಿನಿಕಲ್ ಮತ್ತು ಸಾಂಕ್ರಾಮಿಕ ರೋಗಶಾಸ್ತ್ರೀಯ ಡೇಟಾ, ಭೌಗೋಳಿಕ ಹಾಗೂ ಜಾತಿ-ನಿರ್ದಿಷ್ಟ ಡೇಟಾವನ್ನು ಒಳಗೊಂಡಿದೆ.

ಭಾರತದಲ್ಲಿ ಜಿನೊಮಿಕ್ಸ್ ಫಾರ್ ಪಬ್ಲಿಕ್ ಹೆಲ್ತ್ (IndiGen) ಕಾರ್ಯಕ್ರಮ:

 1. ಇಂಡಿಜೆನ್ ಕಾರ್ಯಕ್ರಮವನ್ನು (IndiGen Program) CSIR ಏಪ್ರಿಲ್ 2019 ರಲ್ಲಿ ಆರಂಭಿಸಿತು.
 2. ಇದು ಭಾರತದಲ್ಲಿ ವೈವಿಧ್ಯಮಯ ಜನಾಂಗೀಯ ಗುಂಪುಗಳನ್ನು ಪ್ರತಿನಿಧಿಸುವ ಸಾವಿರಾರು ವ್ಯಕ್ತಿಗಳ ಸಂಪೂರ್ಣ ಜೀನೋಮ್ ಅನುಕ್ರಮವನ್ನು ಕೈಗೊಳ್ಳುವ ಗುರಿಯನ್ನು ಹೊಂದಿದೆ.
 3. ಇದು ಆನುವಂಶಿಕ ಸಾಂಕ್ರಾಮಿಕ ರೋಗಶಾಸ್ತ್ರವನ್ನು ಸಕ್ರಿಯಗೊಳಿಸುವ ಮತ್ತು ಜನಸಂಖ್ಯೆಯ ಜೀನೋಮ್ ಡೇಟಾವನ್ನು ಬಳಸಿಕೊಂಡು ಸಾರ್ವಜನಿಕ ಆರೋಗ್ಯ ತಂತ್ರಜ್ಞಾನಗಳ ಅನ್ವಯಗಳನ್ನು / ಅಪ್ಲಿಕೇಶನ್ಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಹೊಂದಿದೆ.

current affairs

 

 

ವಿಷಯಗಳು: ಸಂವಹನ ಜಾಲಗಳ ಮೂಲಕ ಆಂತರಿಕ ಭದ್ರತೆಗೆ ಸವಾಲು ಹಾಕುವುದು, ಆಂತರಿಕ ಭದ್ರತಾ ಸವಾಲುಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ, ಸೈಬರ್ ಭದ್ರತೆಯ ಮೂಲಭೂತ ಅಂಶಗಳು, ಅಕ್ರಮ ಹಣ ವರ್ಗಾವಣೆ ಮತ್ತು ಅದನ್ನು ತಡೆಯುವುದು.

ಪೆಗಾಸಸ್ ಬೇಹುಗಾರಿಕೆ ಪ್ರಕರಣ:


(Pegasus snooping case)

ಸಂದರ್ಭ:

ರಾಷ್ಟ್ರೀಯ ಭದ್ರತೆಯ ಹೆಸರಿನಲ್ಲಿ ವ್ಯಕ್ತಿಗಳ “ಗೌರವಾನ್ವಿತ ಖಾಸಗಿ ಸ್ಥಳಗಳಲ್ಲಿ” ಇಣುಕಿ ನೋಡುವ ‘ರಾಜ್ಯ’ದ ಅಧಿಕಾರವು ‘ಸಂಪೂರ್ಣ’ ಅಲ್ಲ ಎಂದು ಸುಪ್ರೀಂ ಕೋರ್ಟ್ ಪ್ರತಿಪಾದಿಸಿದೆ. ಇಸ್ರೇಲ್‌ನ ಬೇಹುಗಾರಿಕೆ ಕುತಂತ್ರಾಂಶವಾದ ಪೆಗಾಸಸ್ ಬಳಸಿ ಬೇಹುಗಾರಿಕೆ ನಡೆಸಿರುವ ಆರೋಪದ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ ಮೂವರು ತಜ್ಞರ ಸಮಿತಿಯನ್ನು ನೇಮಿಸಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಆರ್‌.ವಿ.ರವೀಂದ್ರನ್ ಅವರು ಸಮಿತಿಯ ನೇತೃತ್ವ ವಹಿಸಲಿದ್ದಾರೆ.

ಈ ಸಮಿತಿಯು ಇಸ್ರೇಲಿ ಸಾಫ್ಟ್‌ವೇರ್ ಪೆಗಾಸಸ್ ಮೂಲಕ ನಾಗರಿಕರ ಮೇಲೆ ಬೇಹುಗಾರಿಕೆ ನಡೆಸುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಹೊರಿಸಲಾಗುತ್ತಿರುವ ಆರೋಪಗಳನ್ನು ತನಿಖೆ ಮಾಡುತ್ತದೆ.

current affairs

 

ಏನಿದು ಪ್ರಕರಣ?

ನಾಗರಿಕರ ಖಾಸಗಿತನದ ಹಕ್ಕನ್ನು ಉಲ್ಲಂಘಿಸಿ ಸ್ಪೈವೇರ್‌ನ ದುರುಪಯೋಗ ಅಥವಾ ಸಂಭವನೀಯ ದುರುಪಯೋಗದ ಕುರಿತು ಅರ್ಜಿದಾರರು ಸುಪ್ರೀಂ ಕೋರ್ಟ್‌ನಲ್ಲಿ ದೂರು ದಾಖಲಿಸಿದ್ದಾರೆ.

ಹಿನ್ನೆಲೆ:

ಕೆಲವು ಸಮಯದ ಹಿಂದೆ ಬಿಡುಗಡೆಯಾದ ತಾಜಾ ವರದಿಗಳು ‘ಪೆಗಾಸಸ್ ಸ್ಪೈವೇರ್’ (Pegasus spyware)ನ ನಿರಂತರ ಬಳಕೆಯನ್ನು ದೃಢಪಡಿಸಿದವು. ಈ ‘ಸ್ಪೈವೇರ್’ ಅನ್ನು ಇಸ್ರೇಲಿ ಕಂಪನಿಯು ವಿಶ್ವದ ಅನೇಕ ದೇಶಗಳ ಸರ್ಕಾರಗಳಿಗೆ ಮಾರಾಟ ಮಾಡುತ್ತದೆ. ಈ ‘ಪೆಗಾಸಸ್ ಸ್ಪೈವೇರ್’ ನಿಂದ ದಾಳಿಗೆ ಒಳಗಾಗುವ ಫೋನ್‌ಗಳಂತೆ, ಈ ‘ಸ್ಪೈವೇರ್’ ಕೂಡ ನವೀಕರಿಸಲ್ಪಡುತ್ತದೆ ಮತ್ತು ಈಗ ಹೊಸ ಕಣ್ಗಾವಲು ಸಾಮರ್ಥ್ಯಗಳೊಂದಿಗೆ ಬಂದಿದೆ.

‘ಪೆಗಾಸಸ್’ ಎಂದರೇನು?

ಇದು ‘NSO ಗ್ರೂಪ್’ ಎಂಬ ಇಸ್ರೇಲಿ ಸಂಸ್ಥೆಯು ಅಭಿವೃದ್ಧಿಪಡಿಸಿದ  ‘ಸ್ಪೈವೇರ್ ಟೂಲ್’ ಅಂದರೆ ಬೇಹುಗಾರಿಕೆ ಸಾಧನವಾಗಿದೆ.

 1. ಈ ಸ್ಪೈವೇರ್, ಜನರ ಮೇಲೆ ಅವರು ಬಳಸುವ ಫೋನ್‌ಗಳ ಮೂಲಕವೇ ಕಣ್ಣಿಡುತ್ತದೆ.
 2. ಪೆಗಾಸಸ್ ಬಳಕೆದಾರರ ಫೋನ್‌ಗೆ ‘ಎಕ್ಸ್ ಪ್ಲಾಯ್ಟ್ ಲಿಂಕ್’ (exploit link) ಅನ್ನು ಕಳುಹಿಸುತ್ತದೆ, ಮತ್ತು ಆ ಲಿಂಕ್‌ ಅನ್ನು ಆ ಗುರಿಯಾಗಿಸಲ್ಪಟ್ಟ ಬಳಕೆದಾರರು ಅಥವಾ ಉದ್ದೇಶಿತ ಬಳಕೆದಾರರು ಕ್ಲಿಕ್ ಮಾಡಿದರೆ, ಅವರ ಫೋನ್‌ಗೆ ‘ಮಾಲ್‌ವೇರ್’ (malware) ಅಥವಾ ‘ಬೇಹುಗಾರಿಕೆ-ಸಾಮರ್ಥ್ಯ’ ಕೋಡ್ ಸ್ಥಾಪನೆಯಾಗುತ್ತದೆ ಅಥವಾ ಇನ್ಸ್ಟಾಲ್ ಆಗುತ್ತದೆ.
 3. ಪೆಗಾಸಸ್ ಅನ್ನು ಸ್ಥಾಪಿಸಿದ ನಂತರ, ಆಕ್ರಮಣಕಾರನು ‘ಉದ್ದೇಶೀತ’ ಬಳಕೆದಾರರ ಫೋನ್‌ ಮೇಲೆ ನಿಯಂತ್ರಣ ಮತ್ತು ಪ್ರವೇಶವನ್ನು ಪಡೆಯುತ್ತಾನೆ.

ಪೆಗಾಸಸ್‌ನ ಸಾಮರ್ಥ್ಯಗಳು:

ಪೆಗಾಸಸ್, “ಜನಪ್ರಿಯ ಮೊಬೈಲ್ ಸಂದೇಶ ಅಪ್ಲಿಕೇಶನ್‌ಗಳಿಂದ, ಉದ್ದೇಶಿತ ಅಥವಾ ಗುರಿಯಾಗಿ ಸಲ್ಪಟ್ಟ ವ್ಯಕ್ತಿಯ ಖಾಸಗಿ ಡೇಟಾ, ಅವನ ಪಾಸ್‌ವರ್ಡ್, ಸಂಪರ್ಕ ಪಟ್ಟಿ, ಕ್ಯಾಲೆಂಡರ್ ಈವೆಂಟ್‌ಗಳು, ಪಠ್ಯ ಸಂದೇಶಗಳು, ಲೈವ್ ಧ್ವನಿ ಕರೆಗಳು ಇತ್ಯಾದಿಗಳನ್ನು ಆಕ್ರಮಣಕಾರರಿಗೆ ರವಾನಿಸಬಹುದು”.

ಇದು ಕಣ್ಗಾವಲಿನ ವ್ಯಾಪ್ತಿಯನ್ನು ವಿಸ್ತರಿಸುವ ಮೂಲಕ ಫೋನ್‌ನ ಸುತ್ತಲಿನ ಎಲ್ಲಾ ಚಲನೆಯನ್ನು ಸೆರೆಹಿಡಿಯಲು ಉದ್ದೇಶಿತ ವ್ಯಕ್ತಿಯ ಫೋನ್ ಕ್ಯಾಮೆರಾ ಮತ್ತು ಮೈಕ್ರೊಫೋನ್ ಅನ್ನು ಪ್ರಚೋದಿಸುತ್ತದೆ ಮತ್ತು ಆನ್ ಮಾಡುತ್ತದೆ.

‘ಶೂನ್ಯ ಕ್ಲಿಕ್’/ ಝೀರೋ ಕ್ಲಿಕ್ ದಾಳಿ ಎಂದರೇನು?

‘ಝೀರೋ ಕ್ಲಿಕ್ ದಾಳಿ’,(zero-click attack) ಪೆಗಾಸಸ್‌ನಂತಹ ಸ್ಪೈವೇರ್ ಯಾವುದೇ ಮಾನವ ಸಂವಹನ ಅಥವಾ ಮಾನವ ದೋಷವಿಲ್ಲದೆ ಗುರಿ ಯಾಗಿಸಲ್ಪಟ್ಟ ಸಾಧನದ ಮೇಲೆ ನಿಯಂತ್ರಣವನ್ನು ಸಾಧಿಸಲು ಸಹಾಯ ಮಾಡುತ್ತದೆ.

 1. ಆದ್ದರಿಂದ, ಸಾಧನವೇ ಉದ್ದೇಶಿತ ‘ಗುರಿ’ ಆಗಿರುವಾಗ (if the target is the system itself), ‘ಫಿಶಿಂಗ್ ದಾಳಿಯನ್ನು’ ತಪ್ಪಿಸುವುದು ಹೇಗೆ, ಅಥವಾ ಯಾವ ಲಿಂಕ್‌ಗಳನ್ನು ಕ್ಲಿಕ್ ಮಾಡಬಾರದು, ಈ ಬಗ್ಗೆ ಎಲ್ಲಾ ಅರಿವು ವ್ಯರ್ಥವಾಗಿದೆ ಎಂದು ಸಾಬೀತುಪಡಿಸುತ್ತದೆ.
 2. ಈ ಹೆಚ್ಚಿನ ದಾಳಿಗಳು ಇಮೇಲ್ ಕ್ಲೈಂಟ್‌ನಂತೆ ಬರುತ್ತಿರುವುದರಿಂದ ಅವು ವಿಶ್ವಾಸಾರ್ಹವೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ಮೊದಲೇ ಡೇಟಾವನ್ನು ಸ್ವೀಕರಿಸುವ ಸಾಫ್ಟ್‌ವೇರ್ ಅನ್ನು ಬಳಸಿಕೊಳ್ಳುತ್ತದೆ.

ಮಾಲ್ವೇರ್, ಟ್ರೋಜನ್, ವೈರಸ್ ಮತ್ತು ವರ್ಮ್ ನಡುವಿನ ವ್ಯತ್ಯಾಸ:

ಮಾಲ್ವೇರ್ ಎನ್ನುವುದು ಕಂಪ್ಯೂಟರ್ ನೆಟ್‌ವರ್ಕ್‌ಗಳ ಮೂಲಕ ಅನಗತ್ಯ ಕಾನೂನುಬಾಹಿರ ಕ್ರಮಗಳನ್ನು ನಿರ್ವಹಿಸಲು ವಿನ್ಯಾಸಗೊಳಿಸಲಾದ ಸಾಫ್ಟ್‌ವೇರ್ ಆಗಿದೆ. ಇದನ್ನು ದುರುದ್ದೇಶಪೂರಿತ ಉದ್ದೇಶದ ಸಾಫ್ಟ್‌ವೇರ್ ಎಂದೂ ವ್ಯಾಖ್ಯಾನಿಸಬಹುದು.

ಮಾಲ್ವೇರ್ ಅನ್ನು ಅವುಗಳ ಕಾರ್ಯಗತಗೊಳಿಸುವಿಕೆ, ಹರಡುವಿಕೆ ಮತ್ತು ಕಾರ್ಯಗಳ ಆಧಾರದ ಮೇಲೆ ವರ್ಗೀಕರಿಸಬಹುದು. ಅದರ ಕೆಲವು ಪ್ರಕಾರಗಳನ್ನು ಕೆಳಗೆ ಚರ್ಚಿಸಲಾಗಿದೆ.

 1. ವೈರಸ್(Virus): ಇದು ಸ್ವತಃ ಅಭಿವೃದ್ಧಿಪಡಿಸಿದ ನಕಲನ್ನು ಕಂಪ್ಯೂಟರ್ನಲ್ಲಿ ಸೇರಿಸುವ ಮೂಲಕ ಕಂಪ್ಯೂಟರ್‌ನಲ್ಲಿರುವ ಇತರ ಪ್ರೋಗ್ರಾಂಗಳನ್ನು ಮಾರ್ಪಡಿಸುವ ಮತ್ತು ಸೋಂಕು ತರುವಂತಹ ಒಂದು ಪ್ರೋಗ್ರಾಂ ಆಗಿದೆ.
 2. ವರ್ಮ್ಸ್(Worms): ಇವು ಕಂಪ್ಯೂಟರ್ ನೆಟ್‌ವರ್ಕ್‌ಗಳ ಮೂಲಕ ಹರಡುತ್ತವೆ. ಇದರಲ್ಲಿ, ಕಂಪ್ಯೂಟರ್ ವರ್ಮ್ ಗಳು, ವೈರಸ್‌ಗಳಿಗಿಂತ ಭಿನ್ನವಾಗಿ, ಕಾನೂನುಬದ್ಧ ಫೈಲ್‌ಗಳಿಗೆ ಒಳನುಸುಳುವ ಬದಲು ತಮ್ಮನ್ನು ಒಂದು ವ್ಯವಸ್ಥೆಯಿಂದ ಇನ್ನೊಂದಕ್ಕೆ ನಕಲಿಸುವ ದುರುದ್ದೇಶಪೂರಿತ ಕಾರ್ಯಕ್ರಮಗಳಾಗಿವೆ.
 3. ಟ್ರೋಜನ್‌ಗಳು(Trojans): ಟ್ರೋಜನ್ ಅಥವಾ ಟ್ರೋಜನ್ ಹಾರ್ಸ್ ಎನ್ನುವುದು ಒಂದು ವ್ಯವಸ್ಥೆಯಾಗಿದ್ದು ಅದು ಸಾಮಾನ್ಯವಾಗಿ ವ್ಯವಸ್ಥೆಯ ಸುರಕ್ಷತೆಯನ್ನು ಕುಂಠಿತಗೊಳಿಸುತ್ತದೆ ಅಥವಾ ತಡೆಯುತ್ತದೆ. ಸುರಕ್ಷಿತ ನೆಟ್‌ವರ್ಕ್‌ಗಳಿಗೆ ಸೇರಿದ ಕಂಪ್ಯೂಟರ್‌ಗಳಲ್ಲಿ ಹಿಂಬಾಗಿಲುಗಳನ್ನು ರಚಿಸಲು ಟ್ರೋಜನ್‌ಗಳನ್ನು ಬಳಸಲಾಗುತ್ತದೆ, ಇದರಿಂದಾಗಿ ಹ್ಯಾಕರ್‌ಗಳು ಸುರಕ್ಷಿತ ನೆಟ್‌ವರ್ಕ್‌ಗಳಿಗೆ ಪ್ರವೇಶವನ್ನು ಪಡೆಯಬಹುದು.
 4. ವಂಚನೆ(HOAX): ಇದು ಇ-ಮೇಲ್ ರೂಪದಲ್ಲಿರುತ್ತದೆ, ಮತ್ತು ತನ್ನ ಕಂಪ್ಯೂಟರ್‌ಗೆ ಹಾನಿ ಉಂಟಾಗುತ್ತಿರುವ ಬಗ್ಗೆ ನಿರ್ದಿಷ್ಟ ವ್ಯವಸ್ಥೆಯ ಬಳಕೆದಾರರಿಗೆ ಎಚ್ಚರಿಕೆ ನೀಡುತ್ತದೆ. ಅದರ ನಂತರ, ಈ ಇ-ಮೇಲ್ ಸಂದೇಶವು ಹಾನಿಗೊಳಗಾದ ವ್ಯವಸ್ಥೆಯನ್ನು ಸರಿಪಡಿಸಲು ‘ಪ್ರೋಗ್ರಾಂ’ ಅನ್ನು (ಸಾಮಾನ್ಯವಾಗಿ ಡೌನ್‌ಲೋಡ್ ಮಾಡಲು) ಪ್ರಾರಂಭಿಸಲು ಬಳಕೆದಾರರಿಗೆ ಸೂಚಿಸುತ್ತದೆ. ಈ ಪ್ರೋಗ್ರಾಂ ಅನ್ನು ಪ್ರಾರಂಭಿಸಿದ ತಕ್ಷಣ ಅಥವಾ ‘ರನ್’ ಮಾಡಿದ ನಂತರ, ಅದು ಸಿಸ್ಟಮ್ ಅನ್ನು ಆಕ್ರಮಿಸುತ್ತದೆ ಮತ್ತು ಪ್ರಮುಖ ಫೈಲ್‌ಗಳನ್ನು ಅಳಿಸುತ್ತದೆ.
 5. ಸ್ಪೈವೇರ್(Spyware): ಇವು ಕಂಪ್ಯೂಟರ್‌ಗಳ ಮೇಲೆ ಆಕ್ರಮಣ ಮಾಡುವ ಕಾರ್ಯಕ್ರಮಗಳು, ಮತ್ತು ಅದರ ಹೆಸರೇ ಸೂಚಿಸುವಂತೆ, ಬಳಕೆದಾರರ ಚಟುವಟಿಕೆಗಳನ್ನು ಒಪ್ಪಿಗೆಯಿಲ್ಲದೆ ಮೇಲ್ವಿಚಾರಣೆ ಮಾಡುತ್ತದೆ. ‘ಸ್ಪೈವೇರ್’ ಅನ್ನು ಸಾಮಾನ್ಯವಾಗಿ ನಿಜವಾದ ಇ-ಮೇಲ್ ಐಡಿ ಅಥವಾ ಬೋನಾಫೈಡ್ ಇ-ಮೇಲ್ನೊಂದಿಗೆ, ಅನುಮಾನಾಸ್ಪದ ಇ-ಮೇಲ್ ಮೂಲಕ ರವಾನಿಸಲಾಗುತ್ತದೆ. ಸ್ಪೈವೇರ್ ಪ್ರಪಂಚದಾದ್ಯಂತ ಲಕ್ಷಾಂತರ ಕಂಪ್ಯೂಟರ್‌ಗಳಿಗೆ ಸೋಂಕು ತಗುಲಿಸುತ್ತಿದೆ.

 

ಸ್ಪೈವೇರ್(Spyware): ಇವು ಕಂಪ್ಯೂಟರ್‌ಗಳ ಮೇಲೆ ಆಕ್ರಮಣ ಮಾಡುವ ಕಾರ್ಯಕ್ರಮಗಳು, ಮತ್ತು ಅದರ ಹೆಸರೇ ಸೂಚಿಸುವಂತೆ, ಬಳಕೆದಾರರ ಚಟುವಟಿಕೆಗಳನ್ನು ಒಪ್ಪಿಗೆಯಿಲ್ಲದೆ ಮೇಲ್ವಿಚಾರಣೆ ಮಾಡುತ್ತದೆ. ‘ಸ್ಪೈವೇರ್’ ಅನ್ನು ಸಾಮಾನ್ಯವಾಗಿ ನಿಜವಾದ ಇ-ಮೇಲ್ ಐಡಿ ಅಥವಾ ಬೋನಾಫೈಡ್ ಇ-ಮೇಲ್ನೊಂದಿಗೆ, ಅನುಮಾನಾಸ್ಪದ ಇ-ಮೇಲ್ ಮೂಲಕ ರವಾನಿಸಲಾಗುತ್ತದೆ. ಸ್ಪೈವೇರ್ ಪ್ರಪಂಚದಾದ್ಯಂತ ಲಕ್ಷಾಂತರ ಕಂಪ್ಯೂಟರ್‌ಗಳಿಗೆ ಸೋಂಕು ತಗುಲಿಸುತ್ತಿದೆ.

 

ಪೆಗಾಸಸ್‌ ಎಂಬ ಪೆಡಂಭೂತ:

ಇಸ್ರೇಲಿನ ಎನ್ಎಸ್ಒ ಗ್ರೂಪ್ ಟೆಕ್ನಾಲಜೀಸ್ ಎಂಬ ತಂತ್ರಜ್ಞಾನ ಕಂಪನಿಯೊಂದು ಹೊರಬಿಟ್ಟಿರುವ ತಂತ್ರಾಂಶವೇ ಪೆಗಾಸಸ್. ಕೇವಲ ಒಂದು ಮಿಸ್ಡ್ ಕಾಲ್ ಮೂಲಕವೇ (ಕರೆ ಸ್ವೀಕರಿಸಿದರೂ, ಸ್ವೀಕರಿಸದಿದ್ದರೂ) ವ್ಯಕ್ತಿಯೊಬ್ಬನ ಮೊಬೈಲ್ ಫೋನ್‌ನೊಳಗೆ ಕುಳಿತುಕೊಳ್ಳಬಲ್ಲ ಕು-ತಂತ್ರಾಂಶ (ಮಾಲ್‌ವೇರ್). ಸಂಪರ್ಕ ಸಂಖ್ಯೆಗಳು, ಕರೆ, ಎಸ್ಸೆಮ್ಮೆಸ್, ವಾಟ್ಸ್‌ಆ್ಯಪ್‌ ಸಂದೇಶಗಳು, ಫೋಟೊ-ವೀಡಿಯೊಗಳು ಮಾತ್ರವೇ ಅಲ್ಲ, ಆತನ ಮಾತುಗಳನ್ನು ಕೇಳಿಸಿಕೊಂಡು, ಎಲ್ಲಿ ಹೋದನೆಂಬುದನ್ನು ತಿಳಿದುಕೊಂಡು, ಎಲ್ಲ ಮಾಹಿತಿಯನ್ನು ನಿಗದಿತ ವ್ಯಕ್ತಿಗೆ ರವಾನಿಸುವ ಸಾಮರ್ಥ್ಯವುಳ್ಳ ಸ್ಪೈವೇರ್ ಅಥವಾ ಗೂಢಚರ್ಯೆ ತಂತ್ರಾಂಶವಿದು.

 1. ‘ಪೆಗಾಸಸ್’ ಗೂಢಚರ್ಯೆ ತಂತ್ರಾಂಶ ಬಳಸಿಕೊಂಡು 40 ಪತ್ರಕರ್ತರು ಹಾಗೂ ಭೀಮಾ ಕೋರೆಗಾಂವ್‌ ಪ್ರಕರಣದ ಆರೋಪಿಗಳು ಸೇರಿದಂತೆ 12 ಕಾರ್ಯಕರ್ತರ ಫೋನ್‌ಗಳನ್ನು ಹ್ಯಾಕ್‌ ಮಾಡಿ, ಅವರ ಮೇಲೆ ಕಣ್ಗಾವಲು ಇಡಲಾಗಿದೆ ಎಂಬ ಮಾಹಿತಿ ಬಹಿರಂಗವಾಗಿದೆ. ಸೈಬರ್‌ ಅಸ್ತ್ರಗಳನ್ನು ಸೃಷ್ಟಿಸುತ್ತಿರುವ ಇಸ್ರೇಲ್‌ ಮೂಲದ ಕಂಪನಿಯು ಪೆಗಾಸಸ್‌ ಕು–ತಂತ್ರಾಂಶವನ್ನೂ ಅಭಿವೃದ್ಧಿ ಪಡಿಸಿದೆ. 2016ರಿಂದ ಹೆಚ್ಚು ಚರ್ಚೆಗೆ ಬಂದಿರುವ ಆ ಸೈಬರ್‌ ಸೆಕ್ಯುರಿಟಿ ಕಂಪನಿಯ ಕುರಿತಾದ ವಿವರ ಇಲ್ಲಿದೆ.
 2. ಪೆಗಾಸಸ್! ಜಗತ್ತಿನಲ್ಲಿ ಇಂಟರ್ನೆಟ್ಟಿಗರನ್ನು ಪ್ರೈವೆಸಿ ಹೆಸರಲ್ಲಿ ಬೆಚ್ಚಿ ಬೀಳಿಸಿರುವ ಇನ್ನೊಂದು ಹೆಸರು. ಜಾಗತಿಕವಾಗಿ ರಾಜಕೀಯ ಮುಖಂಡರು, ಪತ್ರಕರ್ತರು, ಮಾನವ ಹಕ್ಕುಗಳ ಹೋರಾಟಗಾರರು ಮಾತ್ರವೇ ಅಲ್ಲ, ಉಗ್ರಗಾಮಿಗಳ ಕಿವಿ ಕೂಡ ಪೆಗಾಸಸ್ ಕಡೆ ನೆಟ್ಟಿರುವುದು ಸುಳ್ಳಲ್ಲ.
 3. ಇಸ್ರೇಲಿನ ಎನ್ಎಸ್ಒ ಗ್ರೂಪ್ ಟೆಕ್ನಾಲಜೀಸ್ ಎಂಬ ತಂತ್ರಜ್ಞಾನ ಕಂಪನಿಯೊಂದು ಹೊರಬಿಟ್ಟಿರುವ ತಂತ್ರಾಂಶವೇ ಪೆಗಾಸಸ್. ಕೇವಲ ಒಂದು ಮಿಸ್ಡ್ ಕಾಲ್ ಮೂಲಕವೇ (ಕರೆ ಸ್ವೀಕರಿಸಿದರೂ, ಸ್ವೀಕರಿಸದಿದ್ದರೂ) ವ್ಯಕ್ತಿಯೊಬ್ಬನ ಮೊಬೈಲ್ ಫೋನ್‌ನೊಳಗೆ ಕುಳಿತುಕೊಳ್ಳಬಲ್ಲ ಕು-ತಂತ್ರಾಂಶ (ಮಾಲ್‌ವೇರ್). ಸಂಪರ್ಕ ಸಂಖ್ಯೆಗಳು, ಕರೆ, ಎಸ್ಸೆಮ್ಮೆಸ್, ವಾಟ್ಸ್‌ಆ್ಯಪ್‌ ಸಂದೇಶಗಳು, ಫೋಟೊ-ವೀಡಿಯೊಗಳು ಮಾತ್ರವೇ ಅಲ್ಲ, ಆತನ ಮಾತುಗಳನ್ನು ಕೇಳಿಸಿಕೊಂಡು, ಎಲ್ಲಿ ಹೋದನೆಂಬುದನ್ನು ತಿಳಿದುಕೊಂಡು, ಎಲ್ಲ ಮಾಹಿತಿಯನ್ನು ನಿಗದಿತ ವ್ಯಕ್ತಿಗೆ ರವಾನಿಸುವ ಸಾಮರ್ಥ್ಯವುಳ್ಳ ಸ್ಪೈವೇರ್ ಅಥವಾ ಗೂಢಚರ್ಯೆ ತಂತ್ರಾಂಶವಿದು.
 4. ಜತೆಗೆ, ಕಳೆದ ವರ್ಷದ ಅ. 2ರಂದು ‘ವಾಷಿಂಗ್ಟನ್ ಪೋಸ್ಟ್’ ಪತ್ರಕರ್ತ ಜಮಾಲ್ ಅಹಮದ್ ಖಶೋಗಿಯು ಹತ್ಯೆಗೀಡಾಗಿರುವುದಕ್ಕೂ ಆತನ ಮೊಬೈಲ್‌ನೊಳಗೆ ಕುಳಿತಿದ್ದ ಪೆಗಾಸಸ್ ಪ್ರಭಾವ ಇತ್ತೆಂಬುದು ಮತ್ತೆ ಚರ್ಚೆಯಾಗತೊಡಗಿದೆ. ಈ ಪೆಗಾಸಸ್ ಖರೀದಿಸಿದ್ದು ಸೌದಿ ಸರಕಾರ.
 5. ನಮ್ಮದು ಎಂಡ್-ಟು-ಎಂಡ್ ಎನ್‌ಕ್ರಿಪ್ಷನ್ ಇರುವ ಸಂದೇಶವಾಹಕ ಸೇವೆ ಎಂದು ಹೇಳಿಕೊಳ್ಳುತ್ತಾ, ‘ನಿಮ್ಮ ಎಲ್ಲ ಸಂದೇಶಗಳು ಗೌಪ್ಯವಾಗಿಯೇ ರವಾನೆಯಾಗುತ್ತವೆ.ಮೂರನೇ ವ್ಯಕ್ತಿಗಳು ಇದನ್ನು ನೋಡಲು ಸಾಧ್ಯವೇ ಇಲ್ಲ’ ಎಂದು ಭರವಸೆ ನೀಡಿ ನಂಬಿಸಿದ್ದ ವಾಟ್ಸ್ ಆ್ಯಪ್ (ಫೇಸ್‌ಬುಕ್ ಮಾಲೀಕತ್ವ) ಕೂಡ ಒಮ್ಮೆಗೇ ಬೆಚ್ಚಿಬಿದ್ದು, ಕ್ಯಾಲಿಫೋರ್ನಿಯಾ ಫೆಡರಲ್ ನ್ಯಾಯಾಲಯಕ್ಕೆ ‘ನಮಗೇ ಗೊತ್ತಿಲ್ಲದಂತೆ ನಮ್ಮ ವೇದಿಕೆ ಬಳಸಿ ಗೂಢಚರ್ಯೆ ನಡೆಸಿದ್ದಾರೆ’ ಎಂದು ಎನ್‌ಎಸ್ಒ ವಿರುದ್ಧ ದೂರು ನೀಡಿದೆ ಅಂತಾದರೆ, ಇಂಟರ್ನೆಟ್ ಯುಗದಲ್ಲಿ ನಮ್ಮ ಖಾಸಗಿತನದ ರಕ್ಷಣೆ ಎಷ್ಟರ ಮಟ್ಟಿಗೆ ದುರ್ಬಲವಾಗಿದೆ ಎಂಬುದು ವೇದ್ಯವಾಗುತ್ತದೆ. ಈ ಡಿಜಿಟಲ್ ಯುಗದಲ್ಲಿ ತಂತ್ರಾಂಶಕ್ಕೆ ಪ್ರತಿಯಾಗಿ ಕುತಂತ್ರಾಂಶಗಳೂ ಬೆಳೆಯುತ್ತಿವೆ ಎಂಬುದು ಗಮನಿಸಬೇಕಾದ ವಿಚಾರ.
 6. ‘ಜಗತ್ತಿನಲ್ಲಿ ಸಾವಿರಾರು ಜನರ ರಕ್ಷಣೆಗಾಗಿ, ಭಯೋತ್ಪಾದನೆ ಮತ್ತು ಅಪರಾಧ ಕೃತ್ಯಗಳ ತಡೆ ಹಾಗೂ ತನಿಖೆಗಾಗಿ, ಸರಕಾರಿ ಏಜೆನ್ಸಿಗಳಿಗೆ ನೆರವಾಗಲು ನಾವು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುತ್ತಿದ್ದೇವೆ’ ಎಂಬುದು ಎನ್‌ಎಸ್ಒ ಗ್ರೂಪ್‌ನ ಘೋಷ ವಾಕ್ಯ. ಪೆಗಾಸಸ್ ವಿಚಾರ ಬಯಲಾದಾಗ, ‘ಅವುಗಳನ್ನು ಸರ್ಕಾರಿ ಏಜೆನ್ಸಿಗಳಿಗೆ ಮಾತ್ರವೇ ನಾವು ಮಾರಾಟ ಮಾಡುತ್ತೇವೆ’ ಅಂತ ಎನ್‌ಎಸ್ಒ ಹೇಳಿಕೆ ನೀಡಿ ಕೈತೊಳೆದುಕೊಂಡಿತು.
 7. ಈ ಇಸ್ರೇಲಿ ಕಂಪನಿಯ ಮೂಲ ಕೆದಕಿದರೆ ಭಾರತೀಯನ ಜಾಡು ಕೂಡ ಸಿಗುತ್ತದೆ. 1999ರಲ್ಲಿ ಭಾರತೀಯ ಮೂಲದ ದೀಪಾಂಜನ್ ‘ಡಿಜೆ’ ದೇಬ್, ಸ್ಯಾನ್‌ಫರ್ಡ್ ರಾಬರ್ಟ್‌ಸನ್, ಬೆಂಜಮಿನ್ ಬಾಲ್ ಹಾಗೂ ನೀಲ್ ಗಾರ್ಫಿಂಕೆಲ್ ಎಂಬವರು ಸೇರಿಕೊಂಡು, ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೊದಲ್ಲಿ, ಫ್ರಾನ್ಸಿಸ್ಕೊ ಪಾರ್ಟ್‌ನರ್ಸ್ ಎಂಬ ತಂತ್ರಜ್ಞಾನ ಕಂಪನಿಯೊಂದನ್ನು ಹುಟ್ಟು ಹಾಕುತ್ತಾರೆ. ಈ ಕಂಪನಿಯ ಮುಖ್ಯ ಉದ್ದೇಶವೆಂದರೆ, ತಂತ್ರಜ್ಞಾನವನ್ನು ವಿಶೇಷವಾಗಿ ಗೂಢಚರ್ಯೆ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವ ಸಣ್ಣಪುಟ್ಟ ಕಂಪನಿಗಳ ಕೈಹಿಡಿದು ಮೇಲೆತ್ತುವುದು ಅಂದರೆ, ತೀರಾ ಕಡಿಮೆ ಮೊತ್ತಕ್ಕೆ ಅವನ್ನು ಖರೀದಿಸಿ, ಬೆಳೆಸಿ, ಮರು ಮಾರಾಟ ಮಾಡುವುದು.
 8. ಈಕ್ವಿಟಿ ಕಂಪನಿಗಳಲ್ಲಿ ಇಂಥ ಪ್ರಕ್ರಿಯೆ ಸರ್ವೇಸಾಮಾನ್ಯ. 2010ರಲ್ಲಿ ಹುಟ್ಟಿಕೊಂಡು, ಪುಟ್ಟ ಕಂಪನಿಯಾಗಿದ್ದ ಎನ್‌ಎಸ್ಒ ಗ್ರೂಪ್ ಅನ್ನು ಫ್ರಾನ್ಸಿಸ್ಕೊ ಪಾರ್ಟ್‌ನರ್ಸ್ ಕಂಪನಿಯು 2014ರಲ್ಲಿ ಸುಮಾರು 12 ಕೋಟಿ ಡಾಲರ್‌ಗೆ ಖರೀದಿಸಿ, ಬೆಳೆಸಿತು. 2019ರ ಫೆಬ್ರವರಿ ತಿಂಗಳಲ್ಲಿ 100 ಕೋಟಿ ಡಾಲರ್‌ಗೆ ಅದೇ ಕಂಪನಿಯ ಸಹಸಂಸ್ಥಾಪಕರಾಗಿದ್ದ ಶಾಲೆವ್ ಹುಲಿಯೊ ಹಾಗೂ ಒಮ್ರಿ ಲಾವಿ ಅವರಿಗೆ ಮಾರಿತು. ಯೂರೋಪಿನ ಬಂಡವಾಳ ಕಂಪನಿ ನೋವಾಲ್ಪಿನಾ ಕ್ಯಾಪಿಟಲ್‌ನ ಹಣಕಾಸು ಬೆಂಬಲ ಇದಕ್ಕಿತ್ತು. ಎನ್‌ಎಸ್ಒ ಸಂಸ್ಥಾಪಕರಾದ ನಿವ್ ಕಾರ್ಮಿ, ಒಮ್ರಿ ಲಾವಿ ಹಾಗೂ ಶಾಲೊವ್ ಹುಲಿಯೊ ಅವರು, ಇಸ್ರೇಲ್ ರಕ್ಷಣಾ ಇಲಾಖೆಗಾಗಿ ಸಂಕೇತಾಕ್ಷರ ಗೂಢಚರ್ಯೆ ಸಂಗ್ರಹಿಸುವ ಹೊಣೆ ಹೊತ್ತಿದ್ದ ‘ಇಸ್ರೇಲಿ ಇಂಟಲಿಜೆನ್ಸ್ ಕಾರ್ಪ್ಸ್‌’ನ ಘಟಕವಾಗಿರುವ ‘ಯುನಿಟ್ 8200’ ಎಂಬ ಕಂಪನಿಯ ಸದಸ್ಯರಾಗಿದ್ದವರು ಎಂಬುದು ಗಮನಿಸಬೇಕಾದ ವಿಚಾರ.
 9. 25 ಮೊಬೈಲ್ ಫೋನ್‌ಗಳ ಮೇಲೆ ಹದ್ದಿನ ಕಣ್ಣಿಡಲು ಬಳಸುವ ಪೆಗಾಸಸ್‌ಗಾಗಿ ಎನ್‌ಎಸ್‌ಒ ಗ್ರೂಪ್‌ಗೆ ವರ್ಷವೊಂದಕ್ಕೆ ನೀಡಬೇಕಾಗಿರುವ ಹಣ ಸುಮಾರು 80 ಲಕ್ಷ ಡಾಲರ್. ಆದರೆ ಇಷ್ಟು ಮೊತ್ತ ನೀಡಿ ಇದನ್ನು ಭಯೋತ್ಪಾದಕರು, ಕ್ರಿಮಿನಲ್‌ಗಳು ವಶಪಡಿಸಿಕೊಳ್ಳಲಾರರು ಎಂಬುದಕ್ಕೇನಿದೆ ಗ್ಯಾರಂಟಿ? ಕಂಪನಿಯೊಳಗಿನವರೇ ಅಕ್ರಮವಾಗಿ ಮಾರಲು ಯತ್ನಿಸಿ ಸಿಕ್ಕಿಬಿದ್ದ ಘಟನೆ ಕಣ್ಣ ಮುಂದಿರುವಾಗ, ನಾವೆಷ್ಟು ಸುರಕ್ಷಿತರು? ಇವು ಉತ್ತರ ಸಿಗದ ಪ್ರಶ್ನೆಗಳು.
 10. ಈಗ, ಫೇಸ್‌ಬುಕ್ ಒಡೆತನದ ವಾಟ್ಸ್ಆ್ಯಪ್, ಕ್ಯಾಲಿಫೋರ್ನಿಯಾದ ಫೆಡರಲ್ ನ್ಯಾಯಾಲಯಕ್ಕೆ ದೂರು ನೀಡಿದೆ. ‘ಎನ್‌ಎಸ್ಒ ಗ್ರೂಪ್ ನಮ್ಮ ಆ್ಯಪ್ ಬಳಸಿ ನಮ್ಮ ಬಳಕೆದಾರರ ಮೇಲೆ ಗೂಢ ಚರ್ಯೆ ನಡೆಸುತ್ತಿದೆ’ ಅಂತ. ಆದರೆ ಇದನ್ನು ಖಡಾಖಂಡಿತವಾಗಿ ತಳ್ಳಿ ಹಾಕಿರುವ ಎನ್‌ಎಸ್ಒ ಗ್ರೂಪ್, ‘ನಾವು ಪರವಾನಗಿ ಪಡೆದಿರುವ ಅಧಿಕೃತ ಸರಕಾರಿ ಏಜೆನ್ಸಿಗಳಿಗೆ ಅಥವಾ ಗುಪ್ತಚರ ಸಂಸ್ಥೆಗಳಿಗೆ ಮಾತ್ರವೇ ಪೆಗಾಸಸ್ ಮಾರಾಟ ಮಾಡುತ್ತೇವೆ. ನಮ್ಮದೇನಿದ್ದರೂ ಭಯೋತ್ಪಾದನೆ ತಡೆ ಹಾಗೂ ಅಪರಾಧ ತಡೆಯಲು ಯತ್ನಿಸುವ ತಂತ್ರಾಂಶ ಅಭಿವೃದ್ಧಿಯ ಕೆಲಸ’ ಎಂದು ಹೇಳುತ್ತಿದೆ.
 11. 2016ರಲ್ಲಿ ಬೆಳಕಿಗೆ ಬಂದ ಈ ಪೆಗಾಸಸ್ ಎಂಬ ತಂತ್ರಜ್ಞಾನದ ಪಿಡುಗಿಗೆ 1400 ಮಂದಿ ಸಿಲುಕಿದ್ದಾರೆ ಎನ್ನುವುದು ವಾಟ್ಸ್ಆ್ಯಪ್ ಮೂಲಕ ಇನ್‌ಸ್ಟಾಲ್ ಆದ ಸ್ಮಾರ್ಟ್ ಫೋನ್‌ಗಳ ಲೆಕ್ಕಾಚಾರ ಮಾತ್ರ. ಒಟ್ಟು 45 ದೇಶಗಳಲ್ಲಿ ವಾಟ್ಸ್ಆ್ಯಪ್ ಮಾತ್ರವೇ ಅಲ್ಲದೆ ಟೆಲಿಗ್ರಾಂ, ಫೇಸ್‌ಬುಕ್ ಮುಂತಾದ ಇತರ ಸಂವಹನ ಆ್ಯಪ್‌ಗಳ ಮೂಲಕ ಈ ಗೂಢಚಾರಿ ತಂತ್ರಾಂಶ ಕಾರ್ಯ ನಿರ್ವಹಿಸುತ್ತಿದೆ ಎಂಬುದನ್ನು ಅಮೆರಿಕದ ಸಿಟಿಜನ್ ಲ್ಯಾಬ್ ಕಂಡುಕೊಂಡಿದೆ.
 12. ಪೆಗಾಸಸ್ ಇನ್‌ಸ್ಟಾಲ್ ಆದ ಬಳಿಕ ಐಒಎಸ್ ಹಾಗೂ ಗೂಗಲ್‌ನ ಆಂಡ್ರಾಯ್ಡ್ ಕಾರ್ಯಾಚರಣಾ ವ್ಯವಸ್ಥೆಗಳಿಗೆ ಸೆಕ್ಯುರಿಟಿ ಪ್ಯಾಚ್ (ಮಾಲ್‌ವೇರ್ ಬಾಧೆಗೆ ತಡೆಯೊಡ್ಡುವ ತಂತ್ರಾಂಶದ ಅಪ್‌ಡೇಟ್) ನೀಡಲಾಗಿದೆ. ಈ ಕಾರಣಕ್ಕಾಗಿ, ಯಾವುದೇ ಮಾಲ್‌ವೇರ್‌ಗಳು ನಮ್ಮನ್ನು ಬಾಧಿಸದಂತಿರಲು, ಕಾಲಕಾಲಕ್ಕೆ ಬರುವ ಸೆಕ್ಯುರಿಟಿ ಅಪ್‌ಡೇಟ್‌ಗಳನ್ನು ನಾವು ನಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬೇಕಾಗುತ್ತದೆ. ಸ್ವಲ್ಪ ಮಟ್ಟಿಗೆ ಇದರಿಂದ ಸುರಕ್ಷಿತವಾಗಿರಬಹುದು ನಾವು.

ಡಿಜಿಟಲ್ ಜಗತ್ತಿನಲ್ಲಿ ಯಾವುದೂ ಖಾಸಗಿಯಾಗಿ ಉಳಿದಿಲ್ಲ, ಉಳಿಯುವುದೂ ಇಲ್ಲ ಎಂಬುದಂತೂ ಅಲಿಖಿತ ವೇದವಾಕ್ಯ. ಹೀಗಿರುವಾಗ ನಮ್ಮ ಗೌಪ್ಯತೆ, ಖಾಸಗಿತನದ ರಕ್ಷಣೆ ನಮ್ಮದೇ ಕೈಯಲ್ಲಿದೆ ಎಂಬುದು ನಮಗೆ ಮನದಟ್ಟಾದರೆ ಸಾಕು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


‘ನಾಕ್ ಎವರಿ ಡೋರ್’ ಅಭಿಯಾನ.

(Knock every door’ campaign)

ಆರೋಗ್ಯ ಸಚಿವಾಲಯವು, ಕಡಿಮೆ ವ್ಯಾಕ್ಸಿನೇಷನ್ ದರವನ್ನು ಹೊಂದುವ ಮೂಲಕ ಕಳಪೆ ಪ್ರದರ್ಶನ ನೀಡಿರುವ ಜಿಲ್ಲೆಗಳಲ್ಲಿ ಕೋವಿಡ್ -19 ರ ಮನೆ-ಮನೆಗೆ ಹೋಗಿ ಲಸಿಕೆ ನೀಡಲು ಮುಂದಿನ ತಿಂಗಳಲ್ಲಿ ‘ಹರ್ ಘರ್ ದಸ್ತಕ್’ (ಪ್ರತಿ ಬಾಗಿಲು ಬಡಿಯಿರಿ) ಅಭಿಯಾನವನ್ನು ಪ್ರಾರಂಭಿಸಲು ಯೋಜಿಸುತ್ತಿದೆ.

ಜನರನ್ನು ಮಾರಣಾಂತಿಕ ವೈರಸ್‌ನಿಂದ ರಕ್ಷಿಸಲು ಸಂಪೂರ್ಣ ಲಸಿಕಾಕರಣಕ್ಕಾಗಿ ಪ್ರೇರೇಪಿಸುವುದು ಇದರ ಗುರಿಯಾಗಿದೆ.

 

‘ಟೈಮ್ ಫಾರ್ ಇಂಡಿಯಾ’ ಡ್ರೈವ್:

 1. ಸ್ವೀಡನ್,‘ಟೈಮ್ ಫಾರ್ ಇಂಡಿಯಾ ಡ್ರೈವ್’ (‘Time for India’ drive) ಅನ್ನು ಪ್ರಾರಂಭಿಸಲು ಯೋಜಿಸುತ್ತಿದೆ.
 2. ಇದು ‘ದ್ವಿಪಕ್ಷೀಯ ವ್ಯಾಪಾರವನ್ನು ಉತ್ತೇಜಿಸುವ’ ವ್ಯಾಪಾರ ಪ್ರಚಾರ ಕಾರ್ಯಕ್ರಮವಾಗಿದೆ.
 3. ಈ ಕಾರ್ಯಕ್ರಮದ ಅಡಿಯಲ್ಲಿ, ವ್ಯಾಪಾರಕ್ಕಾಗಿ ದೇಶವನ್ನು ಪ್ರವೇಶಿಸಲು ಲಸಿಕೆ ಹಾಕಿಸಿಕೊಂಡಿರುವ ಅಗತ್ಯವಿಲ್ಲ ಮತ್ತು ಯಾವುದೇ ಕ್ವಾರಂಟೈನ್‌ ವ್ಯವಸ್ಥೆ ಇರುವುದಿಲ್ಲ. ಆದರೆ ಪ್ರಯಾಣಿಕರು ದೇಶಕ್ಕೆ ಆಗಮಿಸಿದಾಗ ಕೋವಿಡ್ -19 ಪರೀಕ್ಷೆಗೆ ಒಳಗಾಗುವುದು ಕಡ್ಡಾಯವಾಗಿದೆ.

 

ಸಮಗ್ರ ಶಿಕ್ಷಕರ ಶಿಕ್ಷಣ ಕಾರ್ಯಕ್ರಮ:

(Integrated Teacher Education Programme)

ಶಿಕ್ಷಣದ ರಾಷ್ಟ್ರೀಯ ನೀತಿ (NEP) ಪ್ರಕಾರ, ಶಿಕ್ಷಣ ಸಚಿವಾಲಯವು ನಾಲ್ಕು ವರ್ಷಗಳ ಸಮಗ್ರ ಶಿಕ್ಷಕರ ಶಿಕ್ಷಣ ಕಾರ್ಯಕ್ರಮದ (Integrated Teacher Education Programme – ITEP) ಅಧಿಸೂಚನೆಯನ್ನು ಹೊರಡಿಸಿದೆ.

ಇದು ಡ್ಯುಯಲ್-ಮೇಜರ್ ಪದವಿಪೂರ್ವ ಪದವಿಯಾಗಿದ್ದು, ಅದರ ಅಡಿಯಲ್ಲಿ ಬಿ.ಎ. B.Ed./B.Sc.B.Ed, ಮತ್ತು ಬಿ.ಕಾಂ.B.Ed, ಕೋರ್ಸ್‌ಗಳನ್ನು ಒದಗಿಸಲಾಗುವುದು.

 1. 2022-23ರಲ್ಲಿ ದೇಶದಾದ್ಯಂತ ಸುಮಾರು 50 ಆಯ್ದ ಬಹುಶಿಸ್ತೀಯ ಸಂಸ್ಥೆಗಳಲ್ಲಿ ಪ್ರಾಯೋಗಿಕ ಯೋಜನೆಯಾಗಿ ಇದನ್ನು ಪ್ರಾರಂಭಿಸಲಾಗುವುದು.
 2. ರಾಷ್ಟ್ರೀಯ ಸಾಮಾನ್ಯ ಪ್ರವೇಶ ಪರೀಕ್ಷೆ (NET) ಮೂಲಕ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು(National Testing Agency) ಈ ಕೋರ್ಸ್‌ಗೆ ಪ್ರವೇಶವನ್ನು ನೀಡುತ್ತದೆ.

 

ಅಗ್ನಿ 5 ಕ್ಷಿಪಣಿ:

ಇತ್ತೀಚೆಗೆ ಭಾರತವು ಪರಮಾಣು ಸಾಮರ್ಥ್ಯದ ‘ಅಗ್ನಿ-V’ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು ಯಶಸ್ವಿಯಾಗಿ ಪರೀಕ್ಷಿಸಿದೆ.

 1. ಅಗ್ನಿ-V ಇಂಟರ್ಕಾಂಟಿನೆಂಟಲ್ ರೇಂಜ್ ಬ್ಯಾಲಿಸ್ಟಿಕ್ ಮಿಸೈಲ್ (ICBM) ಅನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಅಭಿವೃದ್ಧಿಪಡಿಸಿದೆ.
 2. ಇದರ ತೂಕ ಸುಮಾರು 50,000 ಕೆ.ಜಿ. ಕ್ಷಿಪಣಿಯು 1.75 ಮೀಟರ್ ಉದ್ದ ಮತ್ತು ಎರಡು ಮೀಟರ್ ವ್ಯಾಸವನ್ನು ಹೊಂದಿದೆ.
 3. ಘನ ಇಂಧನ ಎಂಜಿನ್ ಬಳಸುವ ಈ ಮೂರು ಹಂತದ ಕ್ಷಿಪಣಿಯು ಅತ್ಯಂತ ಹೆಚ್ಚಿನ ಮಟ್ಟದ ನಿಖರತೆಯೊಂದಿಗೆ 5,000 ಕಿಮೀವರೆಗಿನ ಗುರಿಗಳನ್ನು ಹೊಡೆಯುವ ಸಾಮರ್ಥ್ಯ ಹೊಂದಿದ್ದು 1500 ಕಿಲೋಗ್ರಾಂ ತೂಕದ ಸಿಡಿತಲೆಗಳನ್ನು ಹೊತ್ತೊಯ್ಯುತ್ತದೆ.
 4. ಈ ಕ್ಷಿಪಣಿ ಸಂಪೂರ್ಣ ಏಷ್ಯಾ, ಯುರೋಪ್ ಮತ್ತು ಆಫ್ರಿಕಾದ ಕೆಲವು ಭಾಗಗಳನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ. ಒಮ್ಮೆ ಇದರ ಸೇರ್ಪಡೆಯ ನಂತರ, ಅಗ್ನಿ-V ಕ್ಷಿಪಣಿಯನ್ನು ‘ಸ್ಟ್ರಾಟೆಜಿಕ್ ಫೋರ್ಸಸ್ ಕಮಾಂಡ್’ ನಿರ್ವಹಿಸುತ್ತದೆ.
 5. ಭಾರತವು ಈಗಾಗಲೇ 5000 ಕಿಲೋ ಮೀಟರ್ ಗಳ ವ್ಯಾಪ್ತಿಯನ್ನು ಹೊಂದಿರುವ ಅಗ್ನಿ-5 ಕ್ಷಿಪಣಿಯ ಏಳು ಪ್ರಯೋಗಗಳನ್ನು ನಡೆಸಿದೆ.

current affairs

 


Join our Official Telegram Channel HERE for Motivation and Fast Updates

Subscribe to our YouTube Channel HERE to watch Motivational and New analysis videos