Print Friendly, PDF & Email

“ATTEMPT (ಪ್ರಯತ್ನ)” [ಕನ್ನಡ ಆವೃತ್ತಿ] – ಎಲ್ಲಾ ಯುಪಿಎಸ್ಸಿ ಆಕಾಂಕ್ಷಿಗಳ ಸ್ಥೈರ್ಯ ಮತ್ತು ಸಧೃಡವಾದ ಸಂಕಲ್ಪವನ್ನು ಅಭಿನಂದಿಸುತ್ತಾ.

 

Insights ಐಎಎಸ್ ಎಲ್ಲಾ ಯುಪಿಎಸ್ಸಿ ಆಕಾಂಕ್ಷಿಗಳ ಸ್ಥೈರ್ಯ ಮತ್ತು ಸಧೃಡವಾದ ಸಂಕಲ್ಪವನ್ನು ಗೌರವಿಸುತ್ತದೆ!

ಪ್ರತಿಯೊಬ್ಬ ಯುಪಿಎಸ್ಸಿ ಆಕಾಂಕ್ಷಿಯ ಸ್ಥೈರ್ಯ ಮತ್ತು ಸಧೃಡವಾದ ಸಂಕಲ್ಪದ ಬಗೆಗಿನನ ನಮ್ಮ ಗೌರವದ ಸಂಕೇತವಾಗಿ ನಾವು Insights ಐಎಎಸ್ ನಲ್ಲಿ ಒಂದು ಕಿರುಚಿತ್ರವನ್ನು ಬಿಡುಗಡೆ ಮಾಡಿದ್ದೇವೆ. ನಿಮ್ಮ ಸಹನೆಯನ್ನು ಅಭಿನಂದಿಸಲು ಮತ್ತು ನೀವು ಎಂತಹ ಕಷ್ಟಗಳನ್ನು ಎದುರಿಸುತ್ತಿದ್ದರೂ ನಿಮ್ಮ ಗುರಿಯನ್ನು ಎಂದೂ ಬಿಟ್ಟುಕೊಡದಂತೆ ನಿಮ್ಮನ್ನು ಪ್ರೇರೇಪಿಸಲು ಈ ಚಲನಚಿತ್ರ ಪ್ರಯತ್ನಿಸುತ್ತದೆ.

“ATTEMPT(ಪ್ರಯತ್ನ)” ಕಿರುಚಿತ್ರವನ್ನು ಈಗ ನಾವು ಕನ್ನಡ ಭಾಷೆಯ ಆವೃತ್ತಿಯಲ್ಲಿ ಬಿಡುಗಡೆ ಮಾಡುತ್ತಿದ್ದೇವೆ.

ಸಕಲ ವಿದ್ಯಾರ್ಥಿ ವೃಂದಕ್ಕೆ ಅವರ ನಂಬಿಕೆಯನ್ನು ಪುನಃಶ್ಚೇತನ ಗೊಳಿಸುವ ಸಲುವಾಗಿ ಇದನ್ನು ನಾವು ಸಮರ್ಪಿಸುತ್ತಿದ್ದೇವೆ.

ಈ ಕಿರುಚಿತ್ರವನ್ನು ನಿಮ್ಮ ಸಾಧನೆಯ ಹಾದಿಯಲ್ಲಿ ಬಂದೊದಗುವ ಕಷ್ಟಗಳಿಗೆ ಕುಗ್ಗದೆ ಮುನ್ನಡೆಯಲು ಸಹಾಯವಾಗುವಂತೆ ನಿಯೋಜಿಸಲಾಗಿದೆ. ಈ ಕಿರುಚಿತ್ರವು ಅದರ ಸದುದ್ದೇಶವನ್ನು ಸಾಕಾರಗೊಳಿಸುತ್ತದೆ ಎಂದು ನಾವು ಭಾವಿಸುತ್ತೇವೆ.

ನಿಮ್ಮ ನಿರಂತರವಾದ ಸಹಕಾರಕ್ಕೆ ಧನ್ಯವಾದಗಳು.