Print Friendly, PDF & Email

[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 19ನೇ ಆಗಸ್ಟ್ 2021

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಸುಪ್ರೀಂ ಕೋರ್ಟ್ ಕೊಲಿಜಿಯಂ

2. ಕ್ರಿಮಿನಲ್ ನ್ಯಾಯ ಸುಧಾರಣೆಗಳು.

3. ಗುಜರಾತ್ ಮತಾಂತರ ವಿರೋಧಿ ಕಾನೂನು

4. ವಿದೇಶಿಯರ ಬಂಧನ ಕೇಂದ್ರಗಳು ಯಾವುವು?

5. ವಿಶ್ವಸಂಸ್ಥೆಯ ಶಾಂತಿಪಾಲಕರು.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಏಜೆನ್ಸಿ ಬ್ಯಾಂಕ್ ಎಂದರೇನು?

2. ಕ್ಯಾಟಲ್ ದ್ವೀಪ.

3. ಟ್ಯಾಂಕರ್‌ಗಳ ಮೂಲಕ ಪೂರೈಸುವ ಶುದ್ಧೀಕರಿಸಿದ ಕುಡಿಯುವ ನೀರಿಗೆ ತೆರಿಗೆ.

4. ತಿವಾ ಬುಡಕಟ್ಟು ಮತ್ತು ವಂಚುವ ಹಬ್ಬ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು : ವಿವಿಧ ಸಾಂವಿಧಾನಿಕ ಹುದ್ದೆಗಳಿಗೆ ನೇಮಕಾತಿ,ವಿವಿಧ ಸಾಂವಿಧಾನಿಕ ಸಂಸ್ಥೆಗಳ ಅಧಿಕಾರಗಳು, ಕಾರ್ಯಗಳು ಮತ್ತು ಜವಾಬ್ದಾರಿಗಳು.

ಸುಪ್ರೀಂ ಕೋರ್ಟ್ ಕೊಲಿಜಿಯಂ:


(Supreme Court Collegium)

ಸಂದರ್ಭ:

ಇತ್ತೀಚೆಗೆ ಸುಪ್ರೀಂ ಕೋರ್ಟ್ ಕೊಲಿಜಿಯಂ ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನಾಗಿ ನೇಮಕ ಮಾಡಲು ಒಂಬತ್ತು ಹೆಸರುಗಳನ್ನು ಸರ್ಕಾರಕ್ಕೆ ಶಿಫಾರಸು ಮಾಡಿದೆ, ಮತ್ತು ಈ ಪ್ರಕ್ರಿಯೆಯಲ್ಲಿ, ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಬಿ.ವಿ.ನಾಗರತ್ನ ಅವರ ಹೆಸರನ್ನು ಶಿಫಾರಸು ಮಾಡುವ ಮೂಲಕ ಕೊಲಿಜಿಯಂ ಇತಿಹಾಸ ಸೃಷ್ಟಿಸಿದೆ. ನ್ಯಾಯಮೂರ್ತಿ ಬಿ.ವಿ ನಾಗರತ್ನ ಅವರು ಕೆಲವು ವರ್ಷಗಳ ನಂತರ ಭಾರತದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಬಹುದು.

 

ಪ್ರಮುಖ ಶಿಫಾರಸುಗಳು:

 1. ಕೊಲಿಜಿಯಂ, ಇದೆ ಮೊದಲ ಬಾರಿಗೆ ಒಂದೇ ನಿರ್ಣಯದಲ್ಲಿ, ಮೂವರು ಮಹಿಳಾ ನ್ಯಾಯಾಧೀಶರನ್ನು ಶಿಫಾರಸು ಮಾಡಿದೆ. ಹೀಗಾಗಿ ಅತ್ಯುನ್ನತ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳಾ ಪ್ರಾತಿನಿಧ್ಯದ ಪರವಾಗಿ ಬಲವಾದ ಸಂಕೇತವನ್ನು ನೀಡಿದಂತಾಗಿದೆ.
 2. ಕೊಲಿಜಿಯಂ ‘ಸುಪ್ರೀಂ ಕೋರ್ಟ್ ಬಾರ್’ ನಿಂದ ‘ಕೋರ್ಟ್ ಆಫ್ ಬೆಂಚ್’ ಗೆ ನೇರ ನೇಮಕಾತಿಗಳನ್ನು ಶಿಫಾರಸು ಮಾಡುವ ಇತ್ತೀಚಿನ ಪ್ರವೃತ್ತಿಯನ್ನು ಮುಂದುವರಿಸಿದೆ.
 3. ತೆಲಂಗಾಣ ಹೈಕೋರ್ಟ್‌ ನ ನ್ಯಾಯಾಧೀಶರನ್ನಾಗಿ ನೇಮಕ ಮಾಡಲು ಇದು ಆರು ನ್ಯಾಯಾಂಗ ಅಧಿಕಾರಿಗಳು ಮತ್ತು ‘ಆದಾಯ ತೆರಿಗೆ ಮೇಲ್ಮನವಿ ನ್ಯಾಯಮಂಡಳಿಯ’ (Income Tax Appellate Tribunal) ಒಬ್ಬ ನ್ಯಾಯಾಂಗ ಸದಸ್ಯರನ್ನು ಶಿಫಾರಸು ಮಾಡಿದೆ.

ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಧೀಶರ ನೇಮಕ:

ಸುಪ್ರೀಂ ಕೋರ್ಟ್‌ಗೆ ನ್ಯಾಯಾಧೀಶರ ನೇಮಕಾತಿಯನ್ನು ಭಾರತದ ರಾಷ್ಟ್ರಪತಿಗಳು ಭಾರತದ ಸಂವಿಧಾನದ 124 ನೇ ವಿಧಿಯ ಕಲಂ (2) ರ ಪ್ರಕಾರ ನೀಡಲಾದ ಅಧಿಕಾರವನ್ನು ಬಳಸುವ ಮೂಲಕ ಮಾಡುತ್ತಾರೆ.

 1. ಸುಪ್ರೀಂ ಕೋರ್ಟ್‌ನ ಕೊಲಿಜಿಯಂನಿಂದ ನ್ಯಾಯಾಧೀಶರಾಗಿ ನೇಮಕಗೊಳ್ಳುವವರ ಹೆಸರುಗಳನ್ನು ಶಿಫಾರಸು ಮಾಡಲಾಗಿರುತ್ತದೆ.

 

ಸುಪ್ರೀಂಕೋರ್ಟ್ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಬೇಕಾದ ಅರ್ಹತೆ:

ಭಾರತೀಯ ಸಂವಿಧಾನದ 124 ನೇ ವಿಧಿಯು ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಳ್ಳಲು ಅರ್ಹತಾ ಮಾನದಂಡಗಳನ್ನು ವಿವರಿಸುತ್ತದೆ.

 1. ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರಾಗಲು, ಒಬ್ಬ ವ್ಯಕ್ತಿಯು ಭಾರತೀಯ ಪ್ರಜೆಯಾಗಿರಬೇಕು.
 2. ವಯಸ್ಸಿನ ದೃಷ್ಟಿಯಿಂದ, ವ್ಯಕ್ತಿಯ ವಯಸ್ಸು 65 ವರ್ಷಗಳಿಗಿಂತ ಹೆಚ್ಚಿರಬಾರದು.
 3. ವ್ಯಕ್ತಿಯು ಯಾವುದೇ ಒಂದು ಅಥವಾ ಹೆಚ್ಚಿನ ಹೈಕೋರ್ಟ್‌ಗಳ ನ್ಯಾಯಾಧೀಶರಾಗಿ (ನಿರಂತರವಾಗಿ) ಕನಿಷ್ಠ ಐದು ವರ್ಷಗಳ ಸೇವಾ ಅನುಭವ ಹೊಂದಿರಬೇಕು ಅಥವಾ ಹೈಕೋರ್ಟ್‌ನಲ್ಲಿ ವಕೀಲರಾಗಿ ಅಥವಾ ಪ್ರಖ್ಯಾತ ನ್ಯಾಯಶಾಸ್ತ್ರಜ್ಞರಾಗಿ ಕನಿಷ್ಠ 10 ವರ್ಷಗಳ ಸೇವಾ ಅನುಭವ ಹೊಂದಿರಬೇಕು.

 

ಕೊಲಿಜಿಯಂ ಮಾಡಿದ ಶಿಫಾರಸುಗಳು ಅಂತಿಮ ಮತ್ತು ಬಾಧ್ಯಕಾರಿ (binding) ಆಗಿವೆಯೇ?

ಕೊಲಿಜಿಯಂ ರೂಪಿಸಿದ ತನ್ನ ಅಂತಿಮ ಶಿಫಾರಸುಗಳನ್ನು ಭಾರತದ ರಾಷ್ಟ್ರಪತಿಗಳ ಅನುಮೋದನೆಗೆ ಕಳುಹಿಸುತ್ತದೆ. ಈ ಶಿಫಾರಸುಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ರಾಷ್ಟ್ರಪತಿಗೆ ಇದೆ. ಈ ಶಿಫಾರಸುಗಳನ್ನು ರಾಷ್ಟ್ರಪತಿಗಳು ತಿರಸ್ಕರಿಸಿದರೆ, ಅವುಗಳನ್ನು ಮತ್ತೆ ಕೊಲಿಜಿಯಂಗೆ ಕಳುಹಿಸಲಾಗುತ್ತದೆ. ಆದಾಗ್ಯೂ, ಕೊಲಿಜಿಯಂ ತನ್ನ ಶಿಫಾರಸುಗಳನ್ನು ಮತ್ತೊಮ್ಮೆ ರಾಷ್ಟ್ರಪತಿಗೆ ಕಳುಹಿಸಿದರೆ, ಅಧ್ಯಕ್ಷರು ಆ ಶಿಫಾರಸುಗಳಿಗೆ ಒಪ್ಪಿಗೆ ನೀಡಲೇ ಬೇಕಾಗುತ್ತದೆ.

 

ಕೊಲಿಜಿಯಂ ವ್ಯವಸ್ಥೆ (Collegium System) :

ಕೊಲಿಜಿಯಂ ವ್ಯವಸ್ಥೆಯು, ನ್ಯಾಯಾಧೀಶರ ನೇಮಕಾತಿ ಮತ್ತು ವರ್ಗಾವಣೆಗೆ ಸಂಬಂಧಿಸಿದ ವ್ಯವಸ್ಥೆಯಾಗಿದ್ದು ಇದು ವರಿಷ್ಠ ನ್ಯಾಯಾಲಯದ ತೀರ್ಪುಗಳ ಮೂಲಕ ವಿಕಸನಗೊಂಡಿದೆಯೆ ಹೊರತು ಸಾಂವಿಧಾನಿಕ ನಿಬಂಧನೆಯಿಂದಾಗಲಿ ಅಥವಾ ಸಂಸತ್ತು ರೂಪಿಸಿದ ಕಾಯ್ದೆಯಿಂದಾಗಲಿ  ಅಭಿವೃದ್ಧಿಗೊಂಡಿಲ್ಲ.

ಸುಪ್ರೀಂಕೋರ್ಟ್ ಕೊಲಿಜಿಯಂ: ಇದು ಭಾರತದ ಸರ್ವೋಚ್ಛ ನ್ಯಾಯಾಲಯ ಮುಖ್ಯ ನ್ಯಾಯಾಧೀಶರನ್ನು ಅಧ್ಯಕ್ಷರನ್ನಾಗಿ ಹಾಗೂ ಇತರ 4 ಹಿರಿಯ ನ್ಯಾಯಾಧೀಶರನ್ನು ಒಳಗೊಂಡಿರುತ್ತದೆ.

ಹೈಕೋರ್ಟ್ ಕೊಲಿಜಿಯಂ: ಇದರ ನೇತೃತ್ವವನ್ನು ಸಂಬಂಧಿಸಿದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ವಹಿಸಿರುತ್ತಾರೆ ಮತ್ತು ಇದು ಆ ಉಚ್ಚ ನ್ಯಾಯಾಲಯದ ಇತರ ನಾಲ್ವರು ಹಿರಿಯ ನ್ಯಾಯಾಧೀಶರನ್ನು ಒಳಗೊಂಡಿರುತ್ತದೆ.

 

ಕೊಲಿಜಿಯಂ ವ್ಯವಸ್ಥೆ (Collegium System) ಯ ವಿರುದ್ಧ ಮಾಡಲಾದ ಸಾಮಾನ್ಯ ವಿಮರ್ಶೆಗಳು:

 1. ಅಪಾರದರ್ಶಕತೆ ಮತ್ತು ಪಾರದರ್ಶಕತೆಯ ಕೊರತೆ.
 2. ಸ್ವಜನ ಪಕ್ಷಪಾತದ ವ್ಯಾಪ್ತಿ.
 3. ಸಾರ್ವಜನಿಕ ವಿವಾದಗಳಲ್ಲಿ ಸಿಲುಕುವುದು.
 4. ಹಲವಾರು ಪ್ರತಿಭಾವಂತ ನ್ಯಾಯವಾದಿಗಳು ಮತ್ತು ಕಿರಿಯ ನ್ಯಾಯಾಧೀಶರ ಕಡೆಗಣನೆ.

 

ಅಗತ್ಯ ಸುಧಾರಣೆಗಳು:

 1. ಸುಪ್ರೀಂ ಕೋರ್ಟ್‌ಗೆ ನ್ಯಾಯಾಧೀಶರ ನೇಮಕಾತಿಯು ಪಾರದರ್ಶಕ ಮತ್ತು ಭಾಗವಹಿಸುವಿಕೆಯ ಪ್ರಕ್ರಿಯೆಯಾಗಿರಬೇಕು, ಇದನ್ನು ಸ್ವತಂತ್ರವಾಗಿ ವಿಶಾಲ-ಆಧಾರಿತ ಸಾಂವಿಧಾನಿಕ ಸಂಸ್ಥೆಯು ಅನುಷ್ಠಾನಗೊಳಿಸುತ್ತದೆ. ಈ ಪ್ರಕ್ರಿಯೆಯಲ್ಲಿ ನ್ಯಾಯಿಕ ಪ್ರಾಧಾನ್ಯತೆಯನ್ನು ಖಾತರಿಪಡಿಸಬೇಕೆ ಹೊರತು ನ್ಯಾಯಾಂಗ ಪ್ರತ್ಯೇಕತೆಯನ್ನು ಅಲ್ಲ.
 2. ನ್ಯಾಯಾಧೀಶರ ಆಯ್ಕೆಯಲ್ಲಿ ಸ್ವಾತಂತ್ರ್ಯವನ್ನು ಖಚಿತಪಡಿಸಿಕೊಳ್ಳಬೇಕು, ವೈವಿಧ್ಯತೆಯನ್ನು ಪ್ರತಿಬಿಂಬಿಸಬೇಕು, ವೃತ್ತಿಪರ ಸಾಮರ್ಥ್ಯ ಮತ್ತು ಸಮಗ್ರತೆಯನ್ನು ಪ್ರದರ್ಶಿಸಬೇಕು.
 3. ನಿರ್ದಿಷ್ಟ ಸಂಖ್ಯೆಯ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಅಗತ್ಯವಿರುವ ನ್ಯಾಯಾಧೀಶರನ್ನು ಆಯ್ಕೆ ಮಾಡುವ ಬದಲು, ಕೊಲಿಜಿಯಂ ವ್ಯವಸ್ಥೆಯು ನ್ಯಾಯಾಧೀಶರ ನೇಮಕಾತಿಗಾಗಿ ಅಧ್ಯಕ್ಷರಿಗೆ ಸಂಭವನೀಯ ಹೆಸರುಗಳ ಪಟ್ಟಿಯನ್ನು ಆದ್ಯತೆ ಮತ್ತು ಇತರ ಮಾನ್ಯ ಮಾನದಂಡಗಳ ಪ್ರಕಾರ ಒದಗಿಸಬೇಕು.

current affairs

 

ವಿಷಯಗಳು:ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ, ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.

ಕ್ರಿಮಿನಲ್ ನ್ಯಾಯ ಸುಧಾರಣೆಗಳು:


(Criminal justice reforms)

 

ಸಂದರ್ಭ:

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (NHRC) ಅಡಿಯಲ್ಲಿ ತಜ್ಞರ ಗುಂಪಿನಿಂದ “ತ್ವರಿತ ನ್ಯಾಯವನ್ನು ಖಚಿತಪಡಿಸಿಕೊಳ್ಳಲು ಅಪರಾಧ ನ್ಯಾಯ ವ್ಯವಸ್ಥೆಯಲ್ಲಿನ ಸುಧಾರಣೆಗಳ ನಿಧಾನಗತಿಯ ಕುರಿತು ಗಂಭೀರ ಕಳವಳಗಳನ್ನು ವ್ಯಕ್ತಪಡಿಸಲಾಗಿದೆ”.

 

ಪ್ರಸ್ತುತ ಕಾಳಜಿಗಳು/ಸವಾಲುಗಳು:

 1. ಪ್ರಕರಣಗಳ ವಿಲೇವಾರಿಯಲ್ಲಿನ ವಿಳಂಬವು ವಿಚಾರಣಾಧೀನ ಕೈದಿಗಳ ಮತ್ತು ಅಪರಾಧಿಗಳ ಮಾನವ ಹಕ್ಕುಗಳ ಉಲ್ಲಂಘನೆಗೆ ಕಾರಣವಾಗುತ್ತದೆ.
 2. ಪೊಲೀಸ್ ಸುಧಾರಣೆಗಳ ಕುರಿತು ಸುಪ್ರೀಂ ಕೋರ್ಟ್‌ನ ನಿರ್ದೇಶನಗಳ ಹೊರತಾಗಿಯೂ, ಯಾವುದೇ ಬದಲಾವಣೆಗಳಾಗಿಲ್ಲ.
 3. ಒಬ್ಬ ವ್ಯಕ್ತಿಯನ್ನು ಅಪರಾಧಿ ಎಂದು ಪರಿಗಣಿಸುವ ನ್ಯಾಯಾಲಯದ ಆದೇಶಗಳು ಅನುಷ್ಠಾನಗೊಳ್ಳಲು ವರ್ಷಗಳನ್ನು ತೆಗೆದುಕೊಳ್ಳುತ್ತಿವೆ.

 

ಸೂಚಿಸಲಾದ ಸುಧಾರಣೆಗಳು:

 1. ಪ್ರತಿ ಪೊಲೀಸ್ ಠಾಣೆಯಲ್ಲಿನ ಪ್ರಕರಣಗಳ ದಟ್ಟಣೆಯನ್ನು ಕಡಿಮೆ ಮಾಡಲು, ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಕೆಲವು ಅಪರಾಧಗಳನ್ನು ವಿಶೇಷ ಕಾನೂನು ಮತ್ತು ತ್ವರಿತ ನ್ಯಾಯಾಲಯಗಳಲ್ಲಿ ಪರಿಗಣಿಸಬಹುದು.
 2. ದಾಖಲೆಗಳ ಡಿಜಿಟಲೀಕರಣವನ್ನು ಮಾಡಬೇಕು, ಇದು ತನಿಖೆ ಮತ್ತು ವಿಚಾರಣೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ.
 3. ಹೊಸ ಅಪರಾಧಗಳ ಸೃಷ್ಟಿ ಮತ್ತು ಅಪರಾಧಗಳ ಅಸ್ತಿತ್ವದಲ್ಲಿರುವ ವರ್ಗೀಕರಣಗಳ ನವೀಕರಣವು ಕಳೆದ ನಾಲ್ಕು ದಶಕಗಳಲ್ಲಿ ಗಣನೀಯವಾಗಿ ಬದಲಾಗಿರುವ ಕ್ರಿಮಿನಲ್ ನ್ಯಾಯಶಾಸ್ತ್ರದ ತತ್ವಗಳಿಂದ ಮಾರ್ಗದರ್ಶನ ಪಡೆಯಬೇಕು.
 4. ಅಪರಾಧಗಳ ವರ್ಗೀಕರಣವನ್ನು ಭವಿಷ್ಯದಲ್ಲಿ ಅಪರಾಧಗಳ ನಿರ್ವಹಣೆಗೆ ಅನುಕೂಲವಾಗುವ ರೀತಿಯಲ್ಲಿ ಮಾಡಬೇಕು.
 5. ಒಂದೇ ಸ್ವರೂಪದ ಅಪರಾಧಗಳಿಗೆ ವಿವಿಧ ಶಿಕ್ಷೆಗಳ ಪ್ರಮಾಣ ಮತ್ತು ಸ್ವರೂಪವನ್ನು ನಿರ್ಧರಿಸುವಲ್ಲಿ ನ್ಯಾಯಾಧೀಶರ ವಿವೇಚನೆಯೂ ನ್ಯಾಯಿಕ ಪೂರ್ವನಿದರ್ಶನದ ತತ್ತ್ವಗಳನ್ನು ಆಧರಿಸಿರಬೇಕು.

 

ಭಾರತದಲ್ಲಿ ಕ್ರಿಮಿನಲ್ ಕಾನೂನು:

 1. ಭಾರತದಲ್ಲಿ ಚಾಲ್ತಿಯಲ್ಲಿರುವ ಕ್ರಿಮಿನಲ್ ಕಾನೂನು ಹಲವಾರು ಮೂಲಗಳಲ್ಲಿ ಬೇರೂರಿದೆ –ಭಾರತೀಯ ದಂಡ ಸಂಹಿತೆ, 1860, ನಾಗರಿಕ ಹಕ್ಕುಗಳ ಕಾಯ್ದೆ, 1955, ವರದಕ್ಷಿಣೆ ನಿಷೇಧ ಕಾಯಿದೆ, 1961 ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯಿದೆ, 1989.
 2. ಕ್ರಿಮಿನಲ್ ನ್ಯಾಯ ವ್ಯವಸ್ಥೆಯು ಸ್ಥಾಪಿತ ಕಾನೂನುಗಳನ್ನು ಉಲ್ಲಂಘಿಸುವವರಿಗೆ ದಂಡ ವಿಧಿಸಬಹುದು.
 3. ಕ್ರಿಮಿನಲ್ ಕಾನೂನು ಮತ್ತು ಕ್ರಿಮಿನಲ್ ಪ್ರಕ್ರಿಯೆಯನ್ನು ಸಂವಿಧಾನದ ಏಳನೇ ಅನುಸೂಚಿಯ ಸಮವರ್ತಿ ಪಟ್ಟಿಯಲ್ಲಿ ಸೇರಿಸಲಾಗಿದೆ.
 4. ಲಾರ್ಡ್ ಥಾಮಸ್ ಬಾಬಿಂಗ್ಟನ್ ಮೆಕಾಲೆಯನ್ನು (Lord Thomas Babington Macaulay) ಭಾರತದಲ್ಲಿ ಕ್ರಿಮಿನಲ್ ಕಾನೂನುಗಳ ಕ್ರೋಡೀಕರಣದ ಮುಖ್ಯ ವಾಸ್ತುಶಿಲ್ಪಿ ಎಂದು ಹೇಳಲಾಗುತ್ತದೆ.

 

ಸುಧಾರಣೆಗಳ ಅಗತ್ಯತೆ:

 1. ವಸಾಹತುಶಾಹಿ ಯುಗದ ಕಾನೂನುಗಳು.
 2. ನಿಷ್ಫಲತೆ.
 3. ನ್ಯಾಯದಾನಕ್ಕಾಗಿ ಬಾಕಿ ಇರುವ ಪ್ರಕರಣಗಳ ಸಂಖ್ಯೆಯಲ್ಲಿನ ಹೆಚ್ಚಳ.
 4. ಬೃಹತ್ ವಿಚಾರಣಾ ವ್ಯಾಜ್ಯಗಳು.

 

ಕ್ರಿಮಿನಲ್ ಕಾನೂನಿನ ಸುಧಾರಣಾ ಸಮಿತಿ:

 1. ಕ್ರಿಮಿನಲ್ ಕಾನೂನನ್ನು ಸುಧಾರಿಸಲು ಗೃಹ ಸಚಿವಾಲಯವು (MHA) ರಾಷ್ಟ್ರೀಯ ಮಟ್ಟದ ಸಮಿತಿಯನ್ನು ರಚಿಸಿದೆ.
 2. ಈ ಸಮಿತಿಯ ಅಧ್ಯಕ್ಷರು ರಣಬೀರ್ ಸಿಂಗ್ (ಉಪಕುಲಪತಿ, ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ ದೆಹಲಿ).
 3. ಈ ಸಮಿತಿಯು ಸರ್ಕಾರಕ್ಕೆ ಸಲ್ಲಿಸುವ ವರದಿಗಾಗಿ ಆನ್‌ಲೈನ್‌ನಲ್ಲಿ ತಜ್ಞರೊಂದಿಗೆ ಸಮಾಲೋಚಿಸಿ ಅಭಿಪ್ರಾಯಗಳನ್ನು ಸಂಗ್ರಹಿಸುತ್ತದೆ ಮತ್ತು ಲಭ್ಯವಿರುವ ವಸ್ತುಗಳನ್ನು ಸಂಗ್ರಹಿಸುತ್ತದೆ.

 

ಕ್ರಿಮಿನಲ್  ಕಾನೂನುಗಳಿಗೆ ಸಂಬಂಧಿಸಿದಂತೆ ಈ ಹಿಂದಿನ ಸಮಿತಿಗಳು: 

ಮಾಧವ್ ಮೆನನ್ ಕಮಿಟಿ: ಇದು 2007 ರಲ್ಲಿ CJSI ನಲ್ಲಿನ ಸುಧಾರಣೆಗಳ ಕುರಿತು ವಿವಿಧ ಶಿಫಾರಸುಗಳನ್ನು ಸೂಚಿಸಿ ತನ್ನ ವರದಿಯನ್ನು ಸಲ್ಲಿಸಿತು.

ಮಳಿಮಠ ಸಮಿತಿ ವರದಿ: ಇದು 2003 ರಲ್ಲಿ ಕ್ರಿಮಿನಲ್ ಜಸ್ಟಿಸ್ ಸಿಸ್ಟಮ್ ಇನ್ ಇಂಡಿಯಾ (CJSI) ಕುರಿತು ತನ್ನ ವರದಿಯನ್ನು ಸಲ್ಲಿಸಿತು.

vsmallmath, current affairs

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಗುಜರಾತ್ ಮತಾಂತರ ವಿರೋಧಿ ಕಾನೂನು:


(Gujarat anti-conversion law)

 ಸಂದರ್ಭ:

ಇತ್ತೀಚೆಗೆ, ಗುಜರಾತ್ ಸರ್ಕಾರವು ತನ್ನ ಹೊಸ ಮತಾಂತರ ವಿರೋಧಿ ಕಾನೂನನ್ನು ಉಚ್ಚ ನ್ಯಾಯಾಲಯದಲ್ಲಿ ಸಮರ್ಥಿಸಿಕೊಂಡಿದೆ, ಹೈಕೋರ್ಟ್‌ಗೆ ಸಲ್ಲಿಸಿರುವ ಹೇಳಿಕೆಯಲ್ಲಿ ಮದುವೆಗಳು ಬಲವಂತದ ಮತಾಂತರ” ದ ಸಾಧನವಾಗಿರಬಾರದು ಎಂದು ಹೇಳಿದೆ.

 

ಏನಿದು ಪ್ರಕರಣ?

ಗುಜರಾತ್ ಹೈಕೋರ್ಟ್ ವಿವಾಹದ ಮೂಲಕ ಬಲವಂತದ ಮತಾಂತರಕ್ಕೆ ಸಂಬಂಧಿಸಿದ ಕಾನೂನಿಗೆ ಹೊಸದಾಗಿ ಜಾರಿಗೆ ತಂದಿರುವ ತಿದ್ದುಪಡಿಗಳನ್ನು ಪ್ರಶ್ನಿಸುವ ಅರ್ಜಿಗಳ ವಿಚಾರಣೆ ನಡೆಸುತ್ತಿದೆ.

 1. ವಿಚಾರಣೆಯ ಸಮಯದಲ್ಲಿ, ತಿದ್ದುಪಡಿ ಮಾಡಿದ ಕಾನೂನು ರಾಜ್ಯದಲ್ಲಿ ಅಂತರ್-ಧರ್ಮದ ವಿವಾಹಗಳಿಗೆ ಅನುಮತಿಸುವುದಿಲ್ಲ ಎಂಬ ಊಹೆಯನ್ನು ಸೃಷ್ಟಿಸುತ್ತದೆ ಮತ್ತು ಹೀಗಾಗಿ ಈ ತಿದ್ದುಪಡಿಯು ಅಂತರ್-ಧರ್ಮದ ದಂಪತಿಗಳ ಮೇಲೆ ತೂಗಾಡುತ್ತಿರುವ ಕತ್ತಿಯಂತಾಗಿದೆ ಎಂಬುದನ್ನು ನ್ಯಾಯಾಲಯವು ಗಮನಿಸಿದೆ.

 

ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ) ಕಾಯ್ದೆ, 2021

(Gujarat Freedom of Religion (Amendment) Act, 2021)

ಈ ಕಾಯಿದೆಯಡಿ, ವಿವಾಹದ ಮೂಲಕ ಬಲವಂತವಾಗಿ ಅಥವಾ ಮೋಸದ ಧಾರ್ಮಿಕ ಮತಾಂತರಕ್ಕಾಗಿ 3-10 ವರ್ಷಗಳ ಜೈಲು ಶಿಕ್ಷೆಯನ್ನು ಪ್ರಸ್ತಾಪಿಸಲಾಗಿದೆ.

ಈ ಕಾನೂನು ಗುಜರಾತ್ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ, 2003 ಕ್ಕೆ ತಿದ್ದುಪಡಿ ತರುತ್ತದೆ.

ಈ ತಿದ್ದುಪಡಿಯ ಗುರಿಯು, ಧಾರ್ಮಿಕ ಮತಾಂತರದ ಉದ್ದೇಶಕ್ಕಾಗಿ “ಮಹಿಳೆಯರನ್ನು ಮದುವೆಯ ಆಮಿಷಕ್ಕೆ ಒಡ್ಡುವ” ಉದಯೋನ್ಮುಖ ಪ್ರವೃತ್ತಿಯನ್ನು ಕಡಿಮೆ ಮಾಡುವುದಾಗಿದೆ.

 

ಹೊಸ ಕಾನೂನಿಗೆ ಸಂಬಂಧಿಸಿದ ಸಮಸ್ಯೆಗಳು:

 1. ತಿದ್ದುಪಡಿ ಮಾಡಿದ ಕಾನೂನು ಅಸ್ಪಷ್ಟ ನಿಯಮಗಳನ್ನು ಹೊಂದಿದೆ, ಮತ್ತು ಇದು ವಿವಾಹದ ಮೂಲತತ್ವಗಳಿಗೆ ವಿರುದ್ಧವಾಗಿದೆ ಹಾಗೂ ಸಂವಿಧಾನದ 25 ನೇ ಪರಿಚ್ಛೇದದಲ್ಲಿ ತಿಳಿಸಿರುವಂತೆ ಧರ್ಮವನ್ನು ಮುಕ್ತವಾಗಿ ಪ್ರತಿಪಾದಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ ಹಕ್ಕಿನ ಮತ್ತು ಆತ್ಮಸಾಕ್ಷಿಯ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿದೆ.
 2. ಈ ಹೊಸ ಕಾನೂನಿನಲ್ಲಿ, ದೂರದ ಕುಟುಂಬ ಸದಸ್ಯರು ಕೂಡ ಕ್ರಿಮಿನಲ್ ದೂರುಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.

 

ವಿಮರ್ಶಕರು ಹೇಳುವುದೇನು?

ಹಲವಾರು ಕಾನೂನು ಪಂಡಿತರು ‘ಲವ್ ಜಿಹಾದ್’ ಪರಿಕಲ್ಪನೆಗೆ ಯಾವುದೇ ಸಾಂವಿಧಾನಿಕ ಅಥವಾ ಕಾನೂನು ಆಧಾರಗಳಿಲ್ಲ ಎಂದು ವಾದಿಸಿ ಈ ಕಾನೂನನ್ನು ತೀವ್ರ ಟೀಕೆಗೆ ಗುರಿ ಪಡಿಸಿದ್ದಾರೆ.

 1. ಒಬ್ಬರು ತಮ್ಮ ಆಯ್ಕೆಯ ವ್ಯಕ್ತಿಯನ್ನು ಮದುವೆಯಾಗುವ ಹಕ್ಕನ್ನು ಖಾತರಿಪಡಿಸುವ ಸಂವಿಧಾನದ 21 ನೇ ವಿಧಿಯನ್ನು ಅವರು ಸೂಚಿಸಿದ್ದಾರೆ.
 2. ಅಲ್ಲದೆ, ಸಂವಿಧಾನದ 25 ನೆಯ ವಿಧಿಯು ಅಂತಃಸಾಕ್ಷಿ ಸ್ವಾತಂತ್ರ್ಯ ಮತ್ತು ಧರ್ಮದ ಅಭಾದಿತ ಅವಲಂಬನೆ, ಆಚರಣೆ ಮತ್ತು ಪ್ರಚಾರದ ಸ್ವಾತಂತ್ರ್ಯ ನೀಡುತ್ತದೆ.

 

ಮದುವೆ ಮತ್ತು ಮತಾಂತರದ ಕುರಿತು ಸುಪ್ರೀಂ ಕೋರ್ಟ್ ಅಭಿಪ್ರಾಯ:

 1. ಭಾರತದ ಸರ್ವೋಚ್ಚ ನ್ಯಾಯಾಲಯವು ತನ್ನ ಹಲವಾರು ತೀರ್ಪುಗಳಲ್ಲಿ, ಜೀವನ ಸಂಗಾತಿಯನ್ನು ಆಯ್ಕೆ ಮಾಡುಕೊಳ್ಳುವ ವಯಸ್ಕರ ಸಂಪೂರ್ಣ ಹಕ್ಕಿನ ಕುರಿತು ಮಧ್ಯಪ್ರವೇಶಿಸಿಸಲು ರಾಜ್ಯ ಮತ್ತು ನ್ಯಾಯಾಲಯಗಳಿಗೆ ಯಾವುದೇ ಅಧಿಕಾರವಿಲ್ಲ ಎಂದು ಅಭಿಪ್ರಾಯಪಟ್ಟಿದೆ.
 2. ಭಾರತದ ಸುಪ್ರೀಂ ಕೋರ್ಟ್, ಲಿಲಿ ಥಾಮಸ್ ಮತ್ತು ಸರಳಾ ಮುದ್ಗಲ್ ಎರಡೂ ಪ್ರಕರಣಗಳಲ್ಲಿ, ಧಾರ್ಮಿಕ ಮತಾಂತರಗಳು ನಂಬಿಕೆಯಿಲ್ಲದೆ ನಡೆದಿವೆ ಮತ್ತು ಕೆಲವು ಕಾನೂನು ಪ್ರಯೋಜನವನ್ನು ಪಡೆಯುವ ಏಕೈಕ ಉದ್ದೇಶಕ್ಕಾಗಿ ನಡೆದಿವೆ ಎಂದು ಹೇಳುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಹೇಳಿದೆ.
 3. ಅಲಹಾಬಾದ್ ಹೈಕೋರ್ಟ್, 2020 ರ ಸಾಲಮತ್ ಅನ್ಸಾರಿ-ಪ್ರಿಯಾಂಕ ಖರ್ವಾರ್ ಪ್ರಕರಣದ ತೀರ್ಪು ನೀಡುವಾಗ, ಸಂಗಾತಿಯನ್ನು ಆಯ್ಕೆ ಮಾಡುವ ಅಥವಾ ಆತನ/ಆಕೆಯ ಆಯ್ಕೆಯ ವ್ಯಕ್ತಿಯೊಂದಿಗೆ ಬದುಕುವ ಹಕ್ಕು ನಾಗರಿಕರ ‘ಜೀವನ ಮತ್ತು ಸ್ವಾತಂತ್ರ್ಯದ ಮೂಲಭೂತ ಹಕ್ಕಿ’ನ (ಆರ್ಟಿಕಲ್ 21) ಭಾಗವಾಗಿದೆ.

 

ಈ ಹೊತ್ತಿನ ಅವಶ್ಯಕತೆ:

 1. ಏಕರೂಪತೆಯ ಅವಶ್ಯಕತೆ: ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯ (UDHR) ಅನುಚ್ಛೇದ 18 ರ ಪ್ರಕಾರ, ಎಲ್ಲಾ ವ್ಯಕ್ತಿಗಳು ಮತಾಂತರದ ಹಕ್ಕು ಸೇರಿದಂತೆ ಧಾರ್ಮಿಕ ಸ್ವಾತಂತ್ರ್ಯದ ಹಕ್ಕನ್ನು ಹೊಂದಿದ್ದಾರೆ. ಇದು ರಾಜ್ಯ ವಿಷಯವಾಗಿರುವುದರಿಂದ, ಕೇಂದ್ರ ಸರ್ಕಾರವು ಈ ವಿಷಯದ ಕುರಿತು ಗುತ್ತಿಗೆ ಕೃಷಿಯ ಮಾದರಿ ಕಾನೂನಿನಂತೆ ಯಾವುದೇ ಒಂದು ಕಾನೂನು ಕಾನೂನನ್ನು ಮಾಡಬಹುದು.
 2. ಮತಾಂತರ ವಿರೋಧಿ ಕಾನೂನುಗಳನ್ನು ಜಾರಿಗೊಳಿಸುವಾಗ, ರಾಜ್ಯಗಳು ಸ್ವಯಂಪ್ರೇರಣೆಯಿಂದ ಮತಾಂತರಗೊಳ್ಳುವ ವ್ಯಕ್ತಿಗೆ ಯಾವುದೇ ಅಸ್ಪಷ್ಟ ಅಥವಾ ದ್ವಂದ್ವಾರ್ಥದ ನಿಬಂಧನೆಗಳನ್ನು ಹಾಕಬಾರದು.
 3. ಮತಾಂತರ-ವಿರೋಧಿ ಕಾನೂನುಗಳಲ್ಲಿ, ಅಲ್ಪಸಂಖ್ಯಾತ ಸಮುದಾಯ ಸಂಸ್ಥೆಗಳಿಂದ ಮತಾಂತರಕ್ಕೆ ಮಾನ್ಯವಾದ ಕಾನೂನು ಹಂತಗಳನ್ನು ನಮೂದಿಸುವ ಒಂದು ನಿಬಂಧನೆಯನ್ನು ಒಳಗೊಂಡಿರುವ ಅವಶ್ಯಕತೆಯೂ ಇದೆ.
 4. ಬಲವಂತದ ಮತಾಂತರಗಳು, ಪ್ರೇರಣೆ ಅಥವಾ ಪ್ರಚೋದನೆ ಇತ್ಯಾದಿಗಳಿಗೆ ಸಂಬಂಧಿಸಿದ ನಿಬಂಧನೆಗಳು ಮತ್ತು ವಿಧಾನಗಳ ಬಗ್ಗೆ ಜನರಿಗೆ ಶಿಕ್ಷಣ ನೀಡುವ ಅವಶ್ಯಕತೆಯೂ ಇದೆ.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ವಿದೇಶಿಯರ ಬಂಧನ ಕೇಂದ್ರಗಳು ಯಾವುವು?


(What are detention centres for foreigners?)

ಸಂದರ್ಭ:

ವಿಶೇಷ ನ್ಯಾಯಮಂಡಳಿಗಳಿಂದ ವಿದೇಶಿಗರೆಂದು ಘೋಷಿಸಲ್ಪಟ್ಟ ವಿದೇಶಿಯರು ಮತ್ತು ವಿದೇಶಿ ನಾಗರಿಕರಿಗಾಗಿ ಅಸ್ಸಾಂನಲ್ಲಿ ಸ್ಥಾಪಿಸಲಾದ ‘ಬಂಧನ ಕೇಂದ್ರಗಳನ್ನು’ (detention centres for foreigners)  ‘ಟ್ರಾನ್ಸಿಟ್ ಕ್ಯಾಂಪ್’ (Transit Camps) ಗಳೆಂದು ಮರುನಾಮಕರಣ ಗೊಳಿಸಲಾಗಿದೆ.

ದಯವಿಟ್ಟು ಗಮನಿಸಿ:

ಪ್ರಸ್ತುತ, ಅಸ್ಸಾಂನ ಆರು ಬಂಧನ ಕೇಂದ್ರಗಳಲ್ಲಿ (Detention Centre) 181 ಕೈದಿಗಳನ್ನು ಬಂಧಿಸಲಾಗಿದೆ, ಅದರಲ್ಲಿ 61 ಕೈದಿಗಳನ್ನು ವಿದೇಶಿ ಪ್ರಜೆಗಳೆಂದು ಘೋಷಿಸಲಾಗಿದೆ ಮತ್ತು ಶಿಕ್ಷೆಗೆ ಒಳಪಟ್ಟ 121 ವಿದೇಶಿ ಪ್ರಜೆಗಳು ತಮ್ಮ ಗಡೀಪಾರುಗಾಗಿ ಕಾಯುತ್ತಿದ್ದಾರೆ. ಇವೆರಡು ಕೇಂದ್ರಗಳಲ್ಲಿ, 22 ಮಕ್ಕಳನ್ನು ಅವರ “ವಿದೇಶಿ” ತಾಯಿಯೊಂದಿಗೆ ಬಂಧಿಸಲಾಗಿದೆ.

ಬಂಧನ ಕೇಂದ್ರಗಳ ಬಗ್ಗೆ:

ಅಧಿಕಾರಿಗಳು ಗುರುತಿಸಿದಂತೆ ಅಕ್ರಮ ವಲಸಿಗರನ್ನು (ಅಗತ್ಯ ದಾಖಲೆಗಳಿಲ್ಲದೆ ದೇಶವನ್ನು ಪ್ರವೇಶಿಸಿದ ಜನರು) ಹಿಡಿದಿಡಲು ಗೊತ್ತುಪಡಿಸಿದ ಸ್ಥಳಗಳಾಗಿವೆ. ಕಾನೂನುಬಾಹಿರ ವಲಸಿಗರನ್ನು ಅವರ ರಾಷ್ಟ್ರೀಯತೆಯನ್ನು ದೃಢಪಡಿಸುವವರೆಗೆ ಮತ್ತು ಅವರನ್ನು ತಮ್ಮ ಮೂಲ ದೇಶಕ್ಕೆ ಗಡೀಪಾರು ಮಾಡುವವರೆಗೆ ಈ ಕೇಂದ್ರಗಳಲ್ಲಿ ಇರಿಸಲಾಗುತ್ತದೆ.

 1. ವಿದೇಶಿಯರ ಕಾಯ್ದೆ, 1946 (Foreigners Act, 1946) ಮತ್ತು ವಿದೇಶಿಯರ (ನ್ಯಾಯಮಂಡಳಿ) ಆದೇಶ, 1948 ರ ನಿಯಮಗಳ ಅಡಿಯಲ್ಲಿ ಕೇಂದ್ರ ಸರ್ಕಾರವು ಬಂಧನ ಕೇಂದ್ರಗಳನ್ನು ಸ್ಥಾಪಿಸಲು ರಾಜ್ಯಕ್ಕೆ ಅಧಿಕಾರ ನೀಡಿದ ನಂತರ ಅಸ್ಸಾಂನಲ್ಲಿ ಇಂತಹ ಬಂಧನ ಕೇಂದ್ರಗಳನ್ನು ಸ್ಥಾಪಿಸಲಾಯಿತು.

 

ವಿದೇಶಿಯರ ಕಾಯಿದೆ, 1946:

 1. ಈ ಕಾಯಿದೆಯು ವಿದೇಶಿಯರ ಕಾಯ್ದೆ, 1940 (Foreigners Act, 1940)  ಅನ್ನು ಬದಲಿಸಿತು ಮತ್ತು ಅದರ ಅಡಿಯಲ್ಲಿ, ಎಲ್ಲಾ ವಿದೇಶಿಯರೊಂದಿಗೆ ವ್ಯವಹರಿಸಲು ಕೇಂದ್ರ ಸರ್ಕಾರಕ್ಕೆ ವಿಶಾಲ ಅಧಿಕಾರವನ್ನು ಒದಗಿಸಲಾಯಿತು.
 2. ಈ ಕಾಯಿದೆಯಲ್ಲಿ, ಅಕ್ರಮ ವಲಸಿಗರನ್ನು ತಡೆಯಲು ಬಲದ ಬಳಕೆ ಸೇರಿದಂತೆ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರಕ್ಕೆ ಅಧಿಕಾರ ನೀಡಲಾಗಿದೆ.
 3. ಕಾಯಿದೆಯ ಅಡಿಯಲ್ಲಿ, ಪುರಾವೆ ಹೊರೆ’ (burden of proof) ಯನ್ನು ಪ್ರಶ್ನಿಸಿದ ವ್ಯಕ್ತಿಯ ಮೇಲೆ ಹಾಕಲಾಗಿದೆ ಹೊರತು ಪ್ರಾಧಿಕಾರದ ಮೇಲಲ್ಲ.
 4. ಈ ಕಾಯಿದೆಯು ಮೂಲತಃ ಸಿವಿಲ್ ನ್ಯಾಯಾಲಯದಂತೆಯೇ ಅಧಿಕಾರವನ್ನು ಹೊಂದಿರುವ ನ್ಯಾಯಮಂಡಳಿಗಳನ್ನು ಸ್ಥಾಪಿಸಲು ಸರ್ಕಾರಕ್ಕೆ ಅಧಿಕಾರ ನೀಡಿದೆ.
 5. ವಿದೇಶಿಯರು (ನ್ಯಾಯಮಂಡಳಿಗಳು) ಆದೇಶ, 1964 ಕ್ಕೆ 2019 ರಲ್ಲಿ ಮಾಡಿದ ತಿದ್ದುಪಡಿಯ ಮೂಲಕ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಜಿಲ್ಲಾ ಮ್ಯಾಜಿಸ್ಟ್ರೇಟ್‌ಗಳಿಗೆ ಭಾರತದಲ್ಲಿ ಕಾನೂನುಬಾಹಿರವಾಗಿ ವಾಸಿಸುತ್ತಿರುವ ವ್ಯಕ್ತಿಯ ಪೌರತ್ವವನ್ನು ನಿರ್ಧರಿಸಲು ‘ನ್ಯಾಯಮಂಡಳಿ’ಗಳನ್ನು ಸ್ಥಾಪಿಸಲು ಅಧಿಕಾರ ನೀಡಲಾಗಿದೆ.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ವಿಶ್ವಸಂಸ್ಥೆಯ ಶಾಂತಿಪಾಲಕರು:


(UN peacekeepers)

 ಸಂದರ್ಭ:

ವಿಶ್ವಸಂಸ್ಥೆಯ ಸಹಭಾಗಿತ್ವದಲ್ಲಿ ವಿಶ್ವಸಂಸ್ಥೆಯ ಶಾಂತಿಪಾಲಕರ’ ಭದ್ರತೆಯನ್ನು ಹೆಚ್ಚಿಸಲು ಸಹಾಯ ಮಾಡಲು ‘ಯುಎನ್ ಯುನೈಟ್ ಅವೇರ್’ (‘UN – UNITE Aware’) ನ ಸಹಭಾಗಿತ್ವದಲ್ಲಿ ತಂತ್ರಜ್ಞಾನ ವೇದಿಕೆಯನ್ನು ಆರಂಭಿಸಲು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಕರೆ ನೀಡಿದ್ದಾರೆ. ಈ ವೇದಿಕೆಯನ್ನು ವಿಶ್ವಸಂಸ್ಥೆಯ 4 ಮಿಷನ್ ಗಳಲ್ಲಿ ಬಳಸಲಾಗುತ್ತಿದೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (UNSC) ‘ತಂತ್ರಜ್ಞಾನ ಮತ್ತು ಶಾಂತಿಪಾಲನೆ’ ವಿಷಯದ ಕುರಿತು ಇತ್ತೀಚೆಗೆ ನಡೆದ ಮುಕ್ತ ಚರ್ಚೆಯಲ್ಲಿ ಇದನ್ನು ಘೋಷಿಸಲಾಯಿತು.

ವಿದೇಶಾಂಗ ಸಚಿವರು ಶಾಂತಿಪಾಲಕರ ಭದ್ರತೆಗಾಗಿ ವಿವರಿಸಿದ ನಾಲ್ಕು ಅಂಶಗಳ ಚೌಕಟ್ಟು:

 1. ಅವುಗಳ ನಿರ್ಮಾಣದಲ್ಲಿ ಪರಿಸರ ಸ್ನೇಹಿ, ಉಪಯುಕ್ತತೆ-ಸಾಬೀತಾದ, ವೆಚ್ಚ-ಪರಿಣಾಮಕಾರಿ ಮತ್ತು ಕ್ಷೇತ್ರ-ಸೇವಾ ತಂತ್ರಜ್ಞಾನಗಳನ್ನು ನಿಯೋಜಿಸುವ ಅವಶ್ಯಕತೆ.
 2. ಶಾಂತಿಪಾಲಕರಿಗೆ ಉತ್ತಮ ಮಾಹಿತಿ ಮತ್ತು ಬುದ್ಧಿವಂತಿಕೆ ಅಗತ್ಯವಿದೆ.
 3. ನಿಖರವಾದ ಸ್ಥಾನೀಕರಣ ಮತ್ತು ಓವರ್ಹೆಡ್ ದೃಶ್ಯೀಕರಣದ ಅಗತ್ಯತೆ.
 4. ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಶಾಂತಿಪಾಲಕರ ಸಾಮರ್ಥ್ಯ ನಿರ್ಮಾಣ ಮತ್ತು ಶಾಂತಿಪಾಲಕರ ತರಬೇತಿಯಲ್ಲಿ ಹೂಡಿಕೆ.

 

ಸಭೆಯ ಫಲಿತಾಂಶಗಳು:

“ಶಾಂತಿಪಾಲನೆಯಲ್ಲಿ ತಂತ್ರಜ್ಞಾನದ ಪಾಲುದಾರಿಕೆ” ಉಪಕ್ರಮಕ್ಕಾಗಿ ಮತ್ತು UN C4ISR ಅಕಾಡೆಮಿ ಫಾರ್ ಪೀಸ್ (UNCAP) ಕಾರ್ಯಾಚರಣೆಯಲ್ಲಿ ಸಹಕಾರಕ್ಕಾಗಿ ಭಾರತ ಮತ್ತು ವಿಶ್ವಸಂಸ್ಥೆಯ ನಡುವೆ ಒಂದು ಒಪ್ಪಂದವನ್ನು ಘೋಷಿಸಲಾಗಿದೆ.

ಯುನೈಟ್ ಅವೇರ್ (UNITE AWARE)

UNITE AWARE ಎನ್ನುವುದು ವಿಶ್ವಸಂಸ್ಥೆಯ ಶಾಂತಿಪಾಲಕರಿಗೆ ಭೂಪ್ರದೇಶ ಸಂಬಂಧಿತ ಮಾಹಿತಿಯನ್ನು ಒದಗಿಸಲು ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಸಹಾಯ ಮಾಡಲು ಭಾರತವು ಅಭಿವೃದ್ಧಿಪಡಿಸಿದ ಮೊಬೈಲ್ ತಂತ್ರಜ್ಞಾನ ವೇದಿಕೆಯಾಗಿದೆ. ಇದನ್ನು ವಿಶ್ವಸಂಸ್ಥೆಯ “ಶಾಂತಿಪಾಲನಾ ಕಾರ್ಯಾಚರಣೆ ವಿಭಾಗ ಮತ್ತು ಕಾರ್ಯಾಚರಣೆಯ ಬೆಂಬಲ ಇಲಾಖೆ” ಯ ಸಹಭಾಗಿತ್ವದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ.

 1. ಈ ಯೋಜನೆಗಾಗಿ ಭಾರತದಿಂದ $64 ಮಿಲಿಯನ್  ಖರ್ಚು ಮಾಡಲಾಗಿದೆ.

 

ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ಧನಸಹಾಯದ ವಿಧಾನ:

 1. ಭದ್ರತಾ ಮಂಡಳಿಯು ಶಾಂತಿಪಾಲನಾ ಕಾರ್ಯಾಚರಣೆಗಳ ಆರಂಭ, ಮುಂದುವರಿಕೆ ಅಥವಾ ವಿಸ್ತರಣೆಯ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಂಡರೂ, ಈ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ಹಣಕಾಸು ಒದಗಿಸುವುದು ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳ ಸಾಮೂಹಿಕ ಜವಾಬ್ದಾರಿಯಾಗಿದೆ.
 2. ವಿಶ್ವಸಂಸ್ಥೆಯ ಚಾರ್ಟರ್ ನ ಅನುಚ್ಛೇದ 17 ರ ನಿಬಂಧನೆಗಳ ಪ್ರಕಾರ, ಪ್ರತಿ ಸದಸ್ಯ ರಾಷ್ಟ್ರವು ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ನಿರ್ದಿಷ್ಟ ಮೊತ್ತದ ತಮ್ಮ ಪಾಲನ್ನು ಪಾವತಿಸಲು ಕಾನೂನುಬದ್ಧವಾಗಿ ನಿರ್ಬಂಧವನ್ನು ಹೊಂದಿದೆ. ಅಥವಾ ಕಾನೂನುಬದ್ಧವಾಗಿ ಬಾಧ್ಯಸ್ಥವಾಗಿದೆ.

 

2020-2021 ನೇ ಸಾಲಿನ ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳಿಗೆ ಧನಸಹಾಯ ಮಾಡಿದ 5 ಪ್ರಮುಖ ಪೂರೈಕೆದಾರರು:

 1. ಯುನೈಟೆಡ್ ಸ್ಟೇಟ್ಸ್ (27.89%)
 2. ಚೀನಾ (15.21%)
 3. ಜಪಾನ್ (8.56%)
 4. ಜರ್ಮನಿ (6.09%)
 5. ಯುನೈಟೆಡ್ ಕಿಂಗ್‌ಡಮ್ (5.79%).

 

ಶಾಂತಿ ಪಾಲನೆ’ ಎಂದರೇನು?

 1. ವಿಶ್ವಸಂಸ್ಥೆಯ ಶಾಂತಿಪಾಲನೆ ಎನ್ನುವುದು ಶಾಂತಿ ಕಾರ್ಯಾಚರಣೆ ಇಲಾಖೆ’ ಮತ್ತು ‘ಕಾರ್ಯಾಚರಣೆ ಬೆಂಬಲ ಇಲಾಖೆ’ ಗಳ ಜಂಟಿ ಪ್ರಯತ್ನವಾಗಿದೆ.
 2. ಪ್ರತಿಯೊಂದು ‘ಶಾಂತಿಪಾಲನಾ ಮಿಷನ್’ ಅನ್ನು ‘ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು’ ಅನುಮೋದಿಸಲ್ಪಡುತ್ತದೆ.

 

ಸಂರಚನೆ:

 1. ವಿಶ್ವಸಂಸ್ಥೆಯ ಶಾಂತಿಪಾಲಕರು (ತಿಳಿ ನೀಲಿ ಬಣ್ಣದ ಬೆರೆಟ್ ಗಳು ಅಥವಾ ಹೆಲ್ಮೆಟ್ ಗಳ ಕಾರಣದಿಂದಾಗಿ ಈ ಪಡೆಯನ್ನು ಬ್ಲೂ ಬೆರೆಟ್ಸ್ ಅಥವಾ ಬ್ಲೂ ಹೆಲ್ಮೆಟ್ ಎಂದು ಕರೆಯಲಾಗುತ್ತದೆ) ಇದು ಸೈನಿಕರು, ಪೊಲೀಸ್ ಅಧಿಕಾರಿಗಳು ಮತ್ತು ನಾಗರಿಕ ಸಿಬ್ಬಂದಿಯನ್ನು ಒಳಗೊಂಡಿರಬಹುದು.
 2. ಸದಸ್ಯ ರಾಷ್ಟ್ರಗಳು ಸ್ವಯಂಪ್ರೇರಿತ ಆಧಾರದ ಮೇಲೆ ಶಾಂತಿಪಾಲಕರಿಗೆ / ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆಗೆ ಕೊಡುಗೆ ನೀಡುತ್ತವೆ.
 3. ಶಾಂತಿ ಕಾರ್ಯಾಚರಣೆಯ ನಾಗರಿಕ ನೌಕರರು ಅಂತರರಾಷ್ಟ್ರೀಯ ನಾಗರಿಕ ಸೇವಕರು, ವಿಶ್ವಸಂಸ್ಥೆಯ ಸಚಿವಾಲಯದಿಂದ ನೇಮಕಗೊಂಡು ನಿಯೋಜಿಸಲ್ಪಟ್ಟಿದ್ದಾರೆ.

 

ವಿಶ್ವಸಂಸ್ಥೆಯ ಶಾಂತಿಪಾಲನಾ ಕಾರ್ಯಾಚರಣೆಗಳನ್ನು ಮೂರು ಮೂಲ ತತ್ವಗಳಿಂದ ನಿರ್ದೇಶಿಸಲಾಗುತ್ತದೆ:

 1. ಪಕ್ಷಗಳ ಒಪ್ಪಿಗೆ.
 2. ನಿಷ್ಪಕ್ಷಪಾತ.
 3. ಜನಾದೇಶದ ರಕ್ಷಣೆ ಮತ್ತು ಆತ್ಮರಕ್ಷಣೆ ಸಂದರ್ಭಗಳನ್ನು ಹೊರತುಪಡಿಸಿ ಬಲ ಪ್ರಯೋಗವನ್ನು ಮಾಡದಿರುವುದು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಏಜೆನ್ಸಿ ಬ್ಯಾಂಕ್ ಎಂದರೇನು?

(What is an agency Bank?)

ಕೇರಳ ಮೂಲದ ಖಾಸಗಿ ವಲಯದ ಸಾಲ ನೀಡುವ ಸೌತ್ ಇಂಡಿಯನ್ ಬ್ಯಾಂಕ್ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ‘ಏಜೆನ್ಸಿ ಬ್ಯಾಂಕ್’ ಎಂದು ಪಟ್ಟಿ ಮಾಡಿದೆ.

ಈ ದಕ್ಷಿಣ ಭಾರತೀಯ ಬ್ಯಾಂಕ್ ಅನ್ನು ಒಮ್ಮೆ ‘ಏಜೆನ್ಸಿ ಬ್ಯಾಂಕ್’ ಎಂದು ಪಟ್ಟಿ ಮಾಡಲಾದ ನಂತರ, ಇದು ಭಾರತೀಯ ರಿಸರ್ವ್ ಬ್ಯಾಂಕ್ ಪರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಾಮಾನ್ಯ ಬ್ಯಾಂಕಿಂಗ್ ವ್ಯವಹಾರವನ್ನು ಕೈಗೊಳ್ಳಲು ಸಾಧ್ಯವಾಗುತ್ತದೆ.

 1. ಸೌತ್ ಇಂಡಿಯನ್ ಬ್ಯಾಂಕ್, ಈಗ ಸರ್ಕಾರಿ ವ್ಯವಹಾರಗಳಿಗೆ ಸಂಬಂಧಿಸಿದ ವಹಿವಾಟುಗಳಾದ ಕಂದಾಯ ರಸೀದಿಗಳು ಮತ್ತು ಕೇಂದ್ರ / ರಾಜ್ಯ ಸರ್ಕಾರಗಳ ಪರವಾಗಿ ಪಾವತಿಗಳು, ಕೇಂದ್ರ / ರಾಜ್ಯ ಸರ್ಕಾರಗಳಿಗೆ ಸಂಬಂಧಿಸಿದಂತೆ ಪಿಂಚಣಿ ಪಾವತಿಗಳು, ಸಣ್ಣ ಉಳಿತಾಯ ಯೋಜನೆಗಳಿಗೆ (SSS) ಸಂಬಂಧಿಸಿದ ಕೆಲಸಗಳನ್ನು,ಬೌತಿಕ ಮಾಧ್ಯಮ ಅಥವಾ ಇ-ಮೋಡ್ ಮೂಲಕ ಸ್ಟ್ಯಾಂಪ್ ಡ್ಯೂಟಿ ಇತ್ಯಾದಿಗಳನ್ನು ಸಂಗ್ರಹಿಸಲು ಅಧಿಕಾರವನ್ನು ಹೊಂದಿದೆ.

 

ಕ್ಯಾಟಲ್ ದ್ವೀಪ:

(Cattle Island)

 1. ಹಿರಾಕುಡ್ ಜಲಾಶಯದಲ್ಲಿರುವ ಮೂರು ದ್ವೀಪಗಳಲ್ಲಿ ದನಗಳ / ಜಾನುವಾರು ದ್ವೀಪವೂ ಒಂದಾಗಿದೆ.
 2. ಇತ್ತೀಚೆಗೆ ಇದನ್ನು ಒಡಿಶಾದ ಅರಣ್ಯ ಮತ್ತು ಪರಿಸರ ಇಲಾಖೆಯು ಪ್ರೇಕ್ಷಣೀಯ ಸ್ಥಳವಾಗಿ ಆಯ್ಕೆ ಮಾಡಿದೆ.
 3. ಈ ದ್ವೀಪವು ಮುಳುಗಿದ ಬೆಟ್ಟವಾಗಿದೆ, ಮತ್ತು ಇದು ಹಿರಾಕುಡ್ ಅಣೆಕಟ್ಟು ನಿರ್ಮಾಣದ ಮೊದಲು ಅಭಿವೃದ್ಧಿ ಹೊಂದಿದ ಗ್ರಾಮವಾಗಿತ್ತು.

ಇದರ ನಾಮಕರಣ:

1950 ರಲ್ಲಿ, ಮಹಾನದಿಗೆ ಅಡ್ಡಲಾಗಿ ಹಿರಾಕುಡ್ ಅಣೆಕಟ್ಟನ್ನು ನಿರ್ಮಿಸಿದಾಗ, ಹೆಚ್ಚಿನ ಸಂಖ್ಯೆಯ ಜನರು ತಮ್ಮ ಗ್ರಾಮಗಳಿಂದ ಸ್ಥಳಾಂತರಗೊಳ್ಳಬೇಕಾಯಿತು, ಮತ್ತು ಸ್ಥಳಾಂತರದ ಸಮಯದಲ್ಲಿ ಗ್ರಾಮಸ್ಥರು ತಮ್ಮ ಜಾನುವಾರುಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಹೋಗಲು ಸಾಧ್ಯವಾಗಲಿಲ್ಲ. ಅವರು ತಮ್ಮ ಜಾನುವಾರುಗಳನ್ನು ನಿರ್ಜನ ಹಳ್ಳಿಗಳಲ್ಲಿ ಬಿಟ್ಟು ಹೋದರು.

ಅಣೆಕಟ್ಟು ನಿರ್ಮಾಣದ ನಂತರ ಈ ಪ್ರದೇಶವು ಮುಳುಗಲು ಪ್ರಾರಂಭಿಸಿದ ನಂತರ, ಎಲ್ಲಾ ಜಾನುವಾರುಗಳು ಜಾರ್ಸುಗುಡ ಜಿಲ್ಲೆಯ ಲಖನಪುರ ಬ್ಲಾಕ್‌ನ ತೆಲಿಯ ಪಂಚಾಯತ್‌ನಲ್ಲಿರುವ ಭುಜಾಪಹಾರ್‌ಗೆ ಸ್ಥಳಾಂತರಗೊಂಡವು. ಇದಾದ ನಂತರ ಭೂಮಿಯ ಒಂದು ದೊಡ್ಡ  ತುಂಡು ನೀರಿನಿಂದ ಸುತ್ತುವರೆದ ನಂತರ ಈ ಬೆಟ್ಟವನ್ನು ‘ದನಗಳ ದ್ವೀಪ’ ಅಥವಾ ಜಾನುವಾರು ದ್ವೀಪ ಎಂದು ಕರೆಯಲಾಯಿತು.

ಹಿರಾಕುಡ್ ಆಣೆಕಟ್ಟಿನ ಕುರಿತು:

 1. ಇದು,ಮಹಾನದಿ ನದಿಯಲ್ಲಿ ಪದೇ ಪದೇ ವಿನಾಶಕಾರಿ ಪ್ರವಾಹಗಳು ಉಂಟಾದ ನಂತರ 1937 ರಲ್ಲಿ ಮಹಾನ್ ಎಂಜಿನಿಯರ್ ಸರ್.ಎಂ.ವಿಶ್ವೇಶ್ವರಯ್ಯ ಅವರು ರೂಪಿಸಿದ ವಿವಿಧೋದ್ದೇಶ ಯೋಜನೆಯಾಗಿದೆ.
 2. ಇದು ಭಾರತದ ಅತಿ ಉದ್ದದ ಅಣೆಕಟ್ಟು.

 

ಟ್ಯಾಂಕರ್‌ಗಳ ಮೂಲಕ ಪೂರೈಸುವ ಶುದ್ಧೀಕರಿಸಿದ ಕುಡಿಯುವ ನೀರಿಗೆ ತೆರಿಗೆ:

(Purified drinking water supply via tankers taxable)

ಇತ್ತೀಚೆಗೆ, ಅಡ್ವಾನ್ಸ್ ರೂಲಿಂಗ್ ಪ್ರಾಧಿಕಾರ (Authority for Advance Ruling – AAR) ವು ಪ್ರಕಟಿಸಿದ ತೀರ್ಪಿನ ಪ್ರಕಾರ, ಚಾರಿಟಬಲ್ ಸಂಸ್ಥೆಯೊಂದು ಕುಡಿಯುವ ನೀರಿನ ಸರಬರಾಜನ್ನು ಮೊಬೈಲ್ ಟ್ಯಾಂಕರ್‌ಗಳು ಅಥವಾ ವಿತರಕರ ಮೂಲಕ ಸಾರ್ವಜನಿಕರಿಗೆ ಜಿಎಸ್‌ಟಿ ಅಡಿಯಲ್ಲಿ 18% ತೆರಿಗೆ ವಿಧಿಸಲು ಯೋಗ್ಯವಾಗಿದೆ.

ಅಡ್ವಾನ್ಸ್ ರೂಲಿಂಗ್ ಮತ್ತು ಅಡ್ವಾನ್ಸ್ ರೂಲಿಂಗ್ ಪ್ರಾಧಿಕಾರದ (AAR) ಬಗ್ಗೆ:

ಅಡ್ವಾನ್ಸ್ ರೂಲಿಂಗ್ ಎಂದರೆ ಯಾವುದೇ ಪ್ರಸ್ತಾಪಿತ ಅಥವಾ ನಡೆಯುತ್ತಿರುವ ಕೈಗೆತ್ತಿಕೊಂಡಿರುವ ಅಥವಾ ಕೈಗೆತ್ತಿಕೊಳ್ಳಲು ಉದ್ದೇಶಿಸಿರುವ ವ್ಯವಹಾರದ ಮೇಲೆ ‘ತೆರಿಗೆ ಹೊಣೆಗಾರಿಕೆ’ಗೆ ಸಂಬಂಧಿಸಿದಂತೆ ಅರ್ಜಿದಾರರು ಮಾಡಿದ ಅರ್ಜಿಯಲ್ಲಿ ನಿರ್ದಿಷ್ಟಪಡಿಸಿದ ಕಾನೂನು ಅಥವಾ ವಾಸ್ತವಾಂಶದ ಪ್ರಶ್ನೆಯನ್ನು ನಿರ್ಧರಿಸುವುದು.

ಸಂಯೋಜನೆ: ಅಡ್ವಾನ್ಸ್ ರೂಲಿಂಗ್ ಪ್ರಾಧಿಕಾರವು  ಸುಪ್ರೀಂ ಕೋರ್ಟ್ ನ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿದೆ ಮತ್ತು ಭಾರತ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ದರ್ಜೆಯ ಇಬ್ಬರು ಸದಸ್ಯರನ್ನು ಒಳಗೊಂಡಿರುತ್ತದೆ. ಈ ಸದಸ್ಯರಲ್ಲಿ ಒಬ್ಬರನ್ನು ಭಾರತೀಯ ಕಂದಾಯ ಸೇವೆ ಮತ್ತು ಭಾರತೀಯ ಕಾನೂನು ಸೇವೆಯಿಂದ ಪಡೆಯಲಾಗಿರುತ್ತದೆ.

 

ತಿವಾ ಬುಡಕಟ್ಟು ಮತ್ತು ವಂಚುವ ಹಬ್ಬ:

(Tiwa tribe and Wanchuwa festival)

 1. ವಾಂಚುವ ಹಬ್ಬವನ್ನು (Wanchuwa festival) ತಿವಾ ಬುಡಕಟ್ಟು (Tiwa tribe) ಜನರು ಉತ್ತಮ ಸುಗ್ಗಿಯ ಫಸಲನ್ನು ಗುರುತಿಸಲು ಆಚರಿಸುತ್ತಾರೆ.
 2. ಈ ಹಬ್ಬದಂದು, ಸಮುದಾಯದ ಜನರು ತಮ್ಮ ಸಾಂಪ್ರದಾಯಿಕ ಉಡುಗೆ ಧರಿಸುತ್ತಾರೆ ಮತ್ತು ನೃತ್ಯ, ಹಾಡುಗಳು ಮತ್ತು ಆಚರಣೆಗಳನ್ನು ಆಯೋಜಿಸಲಾಗುತ್ತದೆ.
 3. ತಿವಾ ಬುಡಕಟ್ಟಿನ ಜನರು ಸಮೃದ್ಧವಾದ ಸುಗ್ಗಿಯನ್ನು ಪ್ರಕೃತಿಯ ಮಹಾ ಶಕ್ತಿಯ ಅನುಗ್ರಹದೊಂದಿಗಿನ  ಸಂಯೋಜನೆ ಎಂದು ಪರಿಗಣಿಸುತ್ತಾರೆ. ಈ ಜನರು ಹಂದಿಗಳ ತಲೆಬುರುಡೆ ಮತ್ತು ಮೂಳೆಗಳನ್ನು ದೇವರು ಮತ್ತು ದೇವತೆಗಳಾಗಿ ಸ್ಥಾಪಿಸುತ್ತಾರೆ ಮತ್ತು ಅವುಗಳನ್ನು ಹಲವು ತಲೆಮಾರುಗಳಿಂದ ರಕ್ಷಿಸುತ್ತಾರೆ.
 4. ತಿವಾ ಬುಡಕಟ್ಟು ಜನಾಂಗವನ್ನು ‘ಲಾಲುಂಗ್’ ಎಂದೂ ಕರೆಯುತ್ತಾರೆ ಮತ್ತು ಇದು ಅಸ್ಸಾಂ ಮತ್ತು ಮೇಘಾಲಯ ರಾಜ್ಯಗಳಲ್ಲಿ ವಾಸಿಸುವ ಸ್ಥಳೀಯ ಸಮುದಾಯವಾಗಿದೆ. ಅದರ ಜನಸಂಖ್ಯೆಯ ಕೆಲವು ಭಾಗವು ಅರುಣಾಚಲ ಪ್ರದೇಶ ಮತ್ತು ಮಣಿಪುರದ ಕೆಲವು ಭಾಗಗಳಲ್ಲಿಯೂ ಕಂಡುಬರುತ್ತದೆ.

current affairs


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos