Print Friendly, PDF & Email

[Mission 2022] ದೈನಂದಿನ ಪ್ರಚಲಿತ ಘಟನೆಗಳು ದಿನಾಂಕ – 18ನೇ ಆಗಸ್ಟ್ 2021

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ನ್ಯಾಯಾಲಯಗಳಲ್ಲಿ ಹೆಚ್ಚುತ್ತಿರುವ ಖಾಲಿ ಹುದ್ದೆಗಳು.

2. ನ್ಯಾಯಾಂಗ, ನ್ಯಾಯಾಲಯಗಳನ್ನು ರಕ್ಷಿಸಲು ಪ್ರತ್ಯೇಕ ಭದ್ರತಾ ಪಡೆಯ ಅಗತ್ಯತೆ.

3. ಭಾರತದಲ್ಲಿ ಮರೆತುಹೋಗುವ ಹಕ್ಕು.

4. ವಿದೇಶಿಯರ ನ್ಯಾಯಮಂಡಳಿಗಳು ಯಾವುವು?

5. ರಫ್ತು ಉತ್ಪನ್ನಗಳ ಮೇಲಿನ ಸುಂಕ ಮತ್ತು ತೆರಿಗೆಗಳ ಪರಿಹಾರ (RODTEP) ಯೋಜನೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ನವದೆಹಲಿಯಲ್ಲಿ,ವಿಶ್ವದ ಎರಡನೇ ಅತಿದೊಡ್ಡ ನವೀಕರಿಸಿದ ಜೀನ್ ಬ್ಯಾಂಕ್.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಹಣಕಾಸು ಸೇರ್ಪಡೆ ಸೂಚಿಯನ್ನು ಅನಾವರಣಗೊಳಿಸಿದ

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ, ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.

ನ್ಯಾಯಾಲಯಗಳಲ್ಲಿ ಹೆಚ್ಚುತ್ತಿರುವ ಖಾಲಿ ಹುದ್ದೆಗಳ ಸಂಖ್ಯೆ:


(Increasing vacancies in courts)

ಸಂದರ್ಭ:

ಇತ್ತೀಚಿನ ದಿನಗಳಲ್ಲಿ, ಹೈಕೋರ್ಟ್‌ಗಳು ಮತ್ತು ನ್ಯಾಯಮಂಡಳಿಗಳಲ್ಲಿ ಹೆಚ್ಚುತ್ತಿರುವ ಖಾಲಿ ಹುದ್ದೆಗಳ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಧೋರಣೆಯ ಬಗ್ಗೆ ಸುಪ್ರೀಂ ಕೋರ್ಟ್ ಕಳವಳ ವ್ಯಕ್ತಪಡಿಸಿದೆ.

 1. ಆಗಸ್ಟ್ 1 ರಂತೆ, ಹೈಕೋರ್ಟ್‌ಗಳಲ್ಲಿ ಖಾಲಿ ಇರುವ ಹುದ್ದೆಗಳ ಸಂಖ್ಯೆ 455 ಕ್ಕೆ ತಲುಪಿದೆ.

 

ಕಳವಳಗಳು:

ಹೈಕೋರ್ಟ್‌ಗಳಿಗೆ ನೇಮಕಾತಿ ಮಾಡುವಲ್ಲಿ ಕೇಂದ್ರ ಸರ್ಕಾರ ವಿಳಂಬ ಮಾಡುವುದರಿಂದ ವಾಣಿಜ್ಯ ವಿಷಯಗಳಿಗೆ ಸಂಬಂಧಿಸಿದ ವಿವಾದಗಳ ತೀರ್ಪಿನ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ ಎಂದು ಕೋರ್ಟ್ ಈ ಸಂದರ್ಭದಲ್ಲಿ ಕಳವಳ ವ್ಯಕ್ತಪಡಿಸಿದೆ.

ಹೈಕೋರ್ಟ್‌ಗಳು ಮತ್ತು ಕೆಳ ನ್ಯಾಯಾಲಯಗಳಲ್ಲಿ ಖಾಲಿ ಹುದ್ದೆಗಳ ಸಂಖ್ಯೆಯಲ್ಲಿನ ಹೆಚ್ಚಳಕ್ಕೆ ಕಾರಣಗಳು:

 1. ಕೆಳ ನ್ಯಾಯಾಲಯಗಳಲ್ಲಿ ಹೆಚ್ಚುತ್ತಿರುವ ಖಾಲಿ ಹುದ್ದೆಗಳಿಗೆ ಒಂದು ಪ್ರಮುಖ ಕಾರಣವೆಂದರೆ ನೇಮಕಾತಿ ಪ್ರಕ್ರಿಯೆಯಲ್ಲಿನ ವ್ಯವಸ್ಥಿತ ದೋಷಗಳು.ಉದಾಹರಣೆಗೆ, ನ್ಯಾಯಾಲಯಗಳಲ್ಲಿ ಖಾಲಿ ಹುದ್ದೆಗಳು ಉಂಟಾದಾಗ, ಅವುಗಳನ್ನು ತುಂಬಲು ಸಾಕಷ್ಟು ಬಾರಿ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ, ಮತ್ತು ಪರೀಕ್ಷೆಯು ಮುಗಿದ ನಂತರವೂ, ಹೈಕೋರ್ಟ್‌ಗಳು ಖಾಲಿ ಹುದ್ದೆಗಳನ್ನು ಭರ್ತಿಮಾಡಲು ಜಾಹೀರಾತು ನೀಡಿದರು ಸಹ ಸಾಕಷ್ಟು ಅರ್ಹ ಅಭ್ಯರ್ಥಿಗಳನ್ನು ಹುಡುಕಲು ಸಾಧ್ಯವಾಗುವುದಿಲ್ಲ.
 2. ನೇಮಕಾತಿ ಪ್ರಕ್ರಿಯೆಯನ್ನು ಸಮಯಕ್ಕೆ ಸರಿಯಾಗಿ ನಡೆಸುವಲ್ಲಿ ಒಂದು ನಿಧಾನವಾದ / ಆಲಸ್ಯದ ವರ್ತನೆ ಕೂಡ ಖಾಲಿ ಹುದ್ದೆಗಳ ಸಂಖ್ಯೆಯಲ್ಲಿನ ಹೆಚ್ಚಳಕ್ಕೆ ಇನ್ನೊಂದು ಕಾರಣವಾಗಿದೆ.
 3. ಅಸ್ಪಷ್ಟ ನೇಮಕಾತಿ ಪ್ರಕ್ರಿಯೆ ಮತ್ತು ಹೈಕೋರ್ಟ್ ಮತ್ತು ರಾಜ್ಯ ಲೋಕಸೇವಾ ಆಯೋಗದ ನಡುವಿನ ಸಮನ್ವಯದಲ್ಲಿನ ತೊಂದರೆಗಳು ಆಗಾಗ್ಗೆ ನೇಮಕಾತಿ ವಿವಾದಗಳು ಮತ್ತು ವ್ಯಾಜ್ಯಗಳಿಗೆ ಕಾರಣವಾಗುತ್ತವೆ, ಇದರಿಂದಾಗಿ ನೇಮಕಾತಿ ಪ್ರಕ್ರಿಯೆಯು ಮತ್ತಷ್ಟು ಸ್ಥಗಿತಗೊಳ್ಳುತ್ತದೆ.
 4. ನೇಮಕಾತಿ ಪ್ರಕ್ರಿಯೆಯಲ್ಲಿ ಬಹಳ ಕಡಿಮೆ ಪರಿಮಾಣಾತ್ಮಕ ಮತ್ತು ಗುಣಾತ್ಮಕ ದತ್ತಾಂಶಗಳು ಲಭ್ಯವಿವೆ ಮತ್ತು ಈ ಪ್ರದೇಶದಲ್ಲಿ ಯಾವುದೇ ಪರಿಣಾಮಕಾರಿ ಸುಧಾರಣೆಯು ಹೊರಹೊಮ್ಮಿಲ್ಲ.
 5. ಇದಲ್ಲದೆ, ಸಮಸ್ಯೆಯ ಮೂಲವು ಸಾಮಾನ್ಯವಾಗಿ ನ್ಯಾಯಾಲಯದ ಕೋಣೆಗಳಿಂದ ಹಿಡಿದು ನ್ಯಾಯಾಧೀಶರ ನಿವಾಸಗಳವರೆಗೆ ಮೂಲಭೂತ ಸೌಕರ್ಯಗಳಲ್ಲಿ ಅಡಗಿದೆ ಎಂದು ಕಂಡುಬಂದಿದೆ.

 

ಮಹತ್ವ ಮತ್ತು ಪರಿಣಾಮಗಳು:

 1. ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳ.
 2. ಅಗತ್ಯ ಮಾನವ ಸಂಪನ್ಮೂಲಗಳು ಮತ್ತು ಹಣಕಾಸು ಸಂಪನ್ಮೂಲಗಳನ್ನು ಹಂಚುವಲ್ಲಿ ಯಾವುದೇ ವೈಫಲ್ಯವು ಅಧೀನ ನ್ಯಾಯಾಲಯಗಳಲ್ಲಿ ನ್ಯಾಯಾಂಗ ಕಾರ್ಯವನ್ನು ಕುಂಠಿತಗೊಳಿಸುತ್ತದೆ.
 3. ನ್ಯಾಯಾಲಯಗಳಲ್ಲಿನ ಖಾಲಿ ಹುದ್ದೆಗಳಿಂದ ಉಂಟಾಗುವ ನ್ಯಾಯದಾನದ ವಿಳಂಬದಿಂದಾಗಿ ಬಡ ದಾವೆದಾರರು ಮತ್ತು ವಿಚಾರಣಾಧೀನರನ್ನು ನಿರಾಶೆಗೊಳಗಾಗುತ್ತಾರೆ, ಅವರು ನ್ಯಾಯಾಂಗ ವಿಳಂಬದಿಂದಾಗಿ ಹೆಚ್ಚು ತೊಂದರೆ ಅನುಭವಿಸುತ್ತಾರೆ.
 4. ಖಾಲಿ ಹುದ್ದೆಗಳಿಂದಾಗಿ, ಜಿಲ್ಲೆಯಲ್ಲಿ ಕೆಲಸ ಮಾಡುವ ಉಳಿದ ನ್ಯಾಯಾಧೀಶರಿಗೆ ಹೆಚ್ಚಿನ ಕೆಲಸದ ಹೊರೆ ನೀಡಿದಂತಾಗುತ್ತದೆ.
 5. ಖಾಲಿ ಹುದ್ದೆಗಳಿಂದಾಗಿ ಪ್ರಕರಣಗಳ ಭಾರೀ ಹೊರೆಯಿಂದಾಗಿ, ನ್ಯಾಯಾಧೀಶರು ಪ್ರತ್ಯೇಕ ಪ್ರಕರಣಗಳನ್ನು ಪರಿಗಣಿಸಲು ಕಡಿಮೆ ಸಮಯವನ್ನು ಪಡೆಯುತ್ತಾರೆ, ಇದು ನ್ಯಾಯದ ಗುಣಮಟ್ಟದ ಮೇಲೆ ಆತಂಕಕಾರಿ ಪರಿಣಾಮವನ್ನು ಉಂಟುಮಾಡುತ್ತದೆ.

ಅವಶ್ಯಕತೆ:

 1. ಸಾರ್ವಜನಿಕ ಸೇವಾ ಆಯೋಗಗಳು ಈ ನ್ಯಾಯಾಧೀಶರಿಗೆ ಸಹಾಯ ಮಾಡಲು ಅಗತ್ಯ ಸಿಬ್ಬಂದಿಯನ್ನು ನೇಮಿಸಬೇಕು ಮತ್ತು ರಾಜ್ಯ ಸರ್ಕಾರಗಳು ಹೆಚ್ಚಿನ ನ್ಯಾಯಾಲಯಗಳನ್ನು ನಿರ್ಮಿಸಬೇಕು ಅಥವಾ ಹೊಸ ನ್ಯಾಯಾಧೀಶರಿಗೆ ಕೆಲಸದ ಸ್ಥಳಗಳನ್ನು ಒದಗಿಸಬೇಕು.
 2. ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ನ್ಯಾಯಾಧೀಶರ ನೇಮಕಾತಿಯನ್ನೂ ಗಂಭೀರವಾಗಿ ಆರಂಭಿಸಬೇಕು.
 3. ನೇಮಕಾತಿಗಳನ್ನು ಸುಗಮವಾಗಿ ಮತ್ತು ಸಮಯಕ್ಕೆ ಸಂಬಂಧಿಸಿದ ಪ್ರಕ್ರಿಯೆಗಾಗಿ, ಹೈಕೋರ್ಟ್‌ಗಳು ಮತ್ತು ರಾಜ್ಯ ಸಾರ್ವಜನಿಕ ಸೇವಾ ಆಯೋಗಗಳ ನಡುವೆ ನಿಕಟ ಸಮನ್ವಯದ ಅಗತ್ಯವಿದೆ.
 4. ಈ ಸಮನ್ವಯವನ್ನು ಆಯಾ ರಾಜ್ಯ ಸರ್ಕಾರಗಳು ಮತ್ತು ಹೈಕೋರ್ಟ್‌ಗಳು ಸಾಧ್ಯವಾದಷ್ಟು ಅತ್ಯುತ್ತಮ ರೀತಿಯಲ್ಲಿ ಜಾರಿಗೆ ತರಬೇಕು.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ನ್ಯಾಯಾಂಗ, ನ್ಯಾಯಾಲಯಗಳನ್ನು ರಕ್ಷಿಸಲು ಪ್ರತ್ಯೇಕ ಭದ್ರತಾ ಪಡೆಯ ಅಗತ್ಯತೆ:


(Need for a separate security force to protect judiciary, courts)

 ಸಂದರ್ಭ:

ನ್ಯಾಯಾಂಗ ಮತ್ತು ನ್ಯಾಯಾಲಯಗಳಲ್ಲಿ ಉತ್ತಮ ರಕ್ಷಣೆ ಕೋರಿ 2019 ರಿಂದ ಬಾಕಿ ಇರುವ ಅರ್ಜಿಗಳ ಜೊತೆಗೆ ನ್ಯಾಯಾಧೀಶರ ಮೇಲಿನ ಹಲ್ಲೆ ಪ್ರಕರಣಗಳ ಬಗ್ಗೆ ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ದಾಖಲಿಸಿಕೊಂಡಿದೆ.

 1. ಸುಪ್ರೀಂಕೋರ್ಟ್ ನ ಈ ನಿರ್ಧಾರಕ್ಕೆ ಮಹತ್ವದ ತಿರುವು ನೀಡಿದ ಪ್ರಕರಣವೆಂದರೆ, ಇತ್ತೀಚೆಗೆ ಜಾರ್ಖಂಡ್‌ನಲ್ಲಿ ಉತ್ತಮ್ ಆನಂದ್ ಎಂಬ ನ್ಯಾಯಾಧೀಶರನ್ನು ಹಗಲು ಹೊತ್ತಿನಲ್ಲಿ ಕೊಲೆ ಮಾಡಲಾಗಿತ್ತು.
 2. ನ್ಯಾಯಾಲಯಗಳು ಮತ್ತು ನ್ಯಾಯಾಧೀಶರಿಗೆ ಭದ್ರತೆ ಒದಗಿಸಲು ರೈಲ್ವೆ ರಕ್ಷಣಾ ಪಡೆ, CISF ಗಳ ರೀತಿಯಲ್ಲಿ ರಾಷ್ಟ್ರೀಯ ವಿಶೇಷ ಪಡೆಯನ್ನು ರಚಿಸಲು ಸಾಧ್ಯವೇ ಎಂದು ಕೇಂದ್ರದ ಅಭಿಪ್ರಾಯವನ್ನು ನ್ಯಾಯಾಲಯ ಕೇಳಿತ್ತು.

 

ಇತ್ತೀಚಿನ ಬೆಳವಣಿಗೆಗಳು:

ಇತ್ತೀಚಿನ ವಿಚಾರಣೆಯ ಸಮಯದಲ್ಲಿ, ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಹೀಗೆ ಹೇಳಿದೆ:

 1. ನಿರ್ದಿಷ್ಟ ಬೆದರಿಕೆ ಪ್ರಕರಣಗಳಿಗೆ ಸಂಬಂಧಿಸಿದಂತೆ ನ್ಯಾಯಾಧೀಶರು ಮತ್ತು ನ್ಯಾಯಾಲಯ ಸಂಕೀರ್ಣಗಳ ಭದ್ರತೆಗಾಗಿ ರಾಷ್ಟ್ರೀಯ ಮಟ್ಟದ ಭದ್ರತಾ ಪಡೆಯನ್ನು ನಿಯೋಜಿಸುವುದು ಸೂಕ್ತವಲ್ಲ. ಅದರ ಬದಲಿಗೆ ಸ್ಥಳೀಯ ಪೊಲೀಸರೇ ಸಮರ್ಪಕವಾಗಿ ಈ ಕಾರ್ಯ ನಿಭಾಯಿಸಬಲ್ಲರು ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮಂಗಳವಾರ ತಿಳಿಸಿದೆ.
 2. ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರು, ಈ ಸಂಬಂಧ ಕೇಂದ್ರ ಸರ್ಕಾರ 2007ರಲ್ಲಿ ಮಾರ್ಗಸೂಚಿ ಹೊರಡಿಸಿದೆ ಎಂದು ಮುಖ್ಯ ನ್ಯಾಯಮೂರ್ತಿ ಎನ್‌.ವಿ.ರಮಣ ಅವರ ನೇತೃತ್ವದ ಪೀಠದ ಗಮನಕ್ಕೆ ತಂದರು.
 3. ಈ ಕಾರ್ಯಕ್ಕಾಗಿ ವಿಶೇಷ ಪೊಲೀಸ್ ಪಡೆಯನ್ನು ನಿಯೋಜಿಸುವ ಬದಲಿಗೆ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಗೃಹ ಸಚಿವಾಲಯಗಳು ಕೇಂದ್ರದ ಮಾರ್ಗಸೂಚಿಯನ್ನು ಪೂರ್ಣವಾಗಿ ಅನುಷ್ಠಾನಗೊಳಿಸಿದರೆ ಸಾಕು ಎಂದರು.
 4. ಹಿಮಾಚಲ ಪ್ರದೇಶದಲ್ಲಿ ಎದುರಾಗುವ ಭದ್ರತಾ ಸಮಸ್ಯೆಗಳು ಜಾರ್ಖಂಡ್‌ಗಿಂತ ಭಿನ್ನವಾಗಿರಬಹುದು. ಆದ್ದರಿಂದ ನ್ಯಾಯಾಧೀಶರ ರಕ್ಷಣಾ ಕಾರ್ಯವನ್ನು ಕೇಂದ್ರದ ಬದಲಿಗೆ ಆಯಾ ರಾಜ್ಯಗಳೇ ನಿಭಾಯಿಸುವುದು ಸೂಕ್ತ ಎಂದು ಅವರು ಹೇಳಿದರು.
 5. ಮೇಲಾಗಿ ಪೊಲೀಸ್ ವಿಷಯವು ಸಂವಿಧಾನದ ಅಡಿಯಲ್ಲಿ ರಾಜ್ಯಗಳಿಗೆ ಸಂಬಂಧಿಸಿದ ವಿಷಯವಾಗಿದೆ.

 

ನ್ಯಾಯಾಲಯ ಮಾಡಿದ ಅವಲೋಕನಗಳು:

 1.  ಈ ಸಂಬಂಧ ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಮಾರ್ಗಸೂಚಿಗಳು ಪಾಲನೆ ಆಗುತ್ತಿವೆಯೇ ಅಥವಾ ಇಲ್ಲವೇ ಎಂದು ನ್ಯಾಯಪೀಠ ಇದೇ ವೇಳೆ ಕೇಳಿತು.
 2. ನ್ಯಾಯಾಧೀಶರ ರಕ್ಷಣೆಗೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಕುರಿತು ಪ್ರಮಾಣ ಪತ್ರ ಸಲ್ಲಿಸುವಂತೆ ಈ ಹಿಂದೆಯೇ ರಾಜ್ಯ ಸರ್ಕಾರಗಳಿಗೆ ಸೂಚಿಸಲಾಗಿತ್ತು. ಆದರೂ ಹಲವು ರಾಜ್ಯಗಳು ಪ್ರತಿಕ್ರಿಯಿಸಿಲ್ಲ ಎಂದು ಪೀಠ ಬೇಸರ ವ್ಯಕ್ತಪಡಿಸಿತು.
 3. ರಾಜ್ಯಗಳಿಗೆ ಈ ಕುರಿತು ಪ್ರತಿಕ್ರಿಯಿಸಲು 10 ದಿನಗಳ ಕಾಲಾವಕಾಶವನ್ನು ನೀಡಿದ ಪೀಠವು, ಪ್ರತಿಕ್ರಿಯಿಸಲು ವಿಫಲವಾದರೆ ಒಂದು ಲಕ್ಷ ರೂಪಾಯಿ ದಂಡ ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಸಿತು.
 4. ನ್ಯಾಯಾಲಯದ ಈ ಆದೇಶವನ್ನು ಪಾಲಿಸುವಲ್ಲಿ ವಿಫಲವಾದರೆ ಸಂಬಂಧಿಸಿದ ರಾಜ್ಯಗಳ ಮುಖ್ಯ ಕಾರ್ಯದರ್ಶಿಗಳನ್ನು ಕರೆಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಸಿದೆ.
 5. ಧನಬಾದ್‌ನ ಜಿಲ್ಲಾ ಸೆಷನ್ಸ್ ನ್ಯಾಯಾಧೀಶ ಉತ್ತಮ್ ಆನಂದ್ ಅವರ ಸಾವಿನ ನಂತರ ಸುಪ್ರೀಂ ಕೋರ್ಟ್‌, ನ್ಯಾಯಾಧೀಶರ ಭದ್ರತೆಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು, ವಿಚಾರಣೆ ನಡೆಸುತ್ತಿದೆ.

 

ಅವಶ್ಯಕತೆ:

ನ್ಯಾಯಾಂಗದ ಸ್ವಾತಂತ್ರ್ಯವು ನಮ್ಮ ಸಂವಿಧಾನದ ಮೂಲ ರಚನೆಯ ಅವಿಭಾಜ್ಯ ಅಂಗವಾಗಿದೆ. ನ್ಯಾಯಾಧೀಶರಿಗೆ ಜವಾಬ್ದಾರಿಯುತವಾದ ಕಠಿಣ ಕೆಲಸವನ್ನು ವಹಿಸಲಾಗಿದೆ.

 1. ನ್ಯಾಯವನ್ನು ಖಚಿತಪಡಿಸುವುದು ನ್ಯಾಯಾಧೀಶರ ಜವಾಬ್ದಾರಿಯಾಗಿದೆ.
 2. ಜನಪ್ರಿಯ ಭಾವನೆಗಳಿಗೆ ಅನುಗುಣವಾಗಿ, ನ್ಯಾಯಾಧೀಶರು ನ್ಯಾಯವನ್ನು ನೀಡುವ ರೀತಿಯಲ್ಲಿ ಕಾರ್ಯನಿರ್ವಹಿಸಬೇಕಾಗಿಲ್ಲ, ಆದರೆ ನ್ಯಾಯವನ್ನು ಒದಗಿಸಲಾಗಿದೆ ಎಂಬ ರೀತಿಯಲ್ಲಿ ಕಾರ್ಯನಿರ್ವಹಿಸುವ ಅಗತ್ಯತೆ ಇದೆ.
 3. ನ್ಯಾಯಾಧೀಶರು ದೊಡ್ಡ ಮತ್ತು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ,ಅವರು ನಿರ್ಭಯವಾಗಿ ಮತ್ತು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ನ್ಯಾಯಾಧೀಶರನ್ನು ಭಯಭೀತರಾಗಿದ್ದಾರೆ, ಅದು ಅವರ ಕಾರ್ಯ ಸಾಮರ್ಥ್ಯಕ್ಕೆ ಅಡ್ಡಿಯಾಗುತ್ತದೆ.
 4. ಪಕ್ಷಪಾತದ ಅನುಪಸ್ಥಿತಿಯು ನ್ಯಾಯಾಂಗ ಪ್ರಾಮಾಣಿಕತೆಗೆ / ಸಮಗ್ರತೆಗೆ ಮೂಲಭೂತ ಅಂಶವಾಗಿದೆ.
 5. ರಾಜ್ಯ ಅಥವಾ ವ್ಯಾಜ್ಯಗಾರರಿಂದ ನ್ಯಾಯಾಂಗದ ಮೇಲೆ ಯಾವುದೇ ರೀತಿಯ ಒತ್ತಡ ಹೇರಲ್ಪಟ್ಟರೆ ಅದು ನ್ಯಾಯದ ನ್ಯಾಯಯುತ ಆಡಳಿತದ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ.
 6. ಯಾವುದೇ ಒತ್ತಡಗಳು, ಪ್ರೇರಣೆ, ಪ್ರಚೋದನೆ ಅಥವಾ ಬೆದರಿಕೆಯಿಂದ ಮುಕ್ತವಾದ ‘ಸ್ವತಂತ್ರ ನ್ಯಾಯಾಂಗ’ವು ಯಾವುದೇ ಸಾಂವಿಧಾನಿಕ ಪ್ರಜಾಪ್ರಭುತ್ವದ ಮೂಲಾಧಾರವಾಗಿದೆ.

 

ಕಾಳಜಿ/ಸವಾಲುಗಳು:

ನ್ಯಾಯಾಧೀಶರು ತಮ್ಮ ನ್ಯಾಯಾಲಯದ ಒಳಗೆ ಮತ್ತು ಹೊರಗೆ ಭದ್ರತಾ ಬೆದರಿಕೆಗಳನ್ನು ಎದುರಿಸುತ್ತಾರೆ. ಅವರ ಕೆಲಸಕ್ಕಾಗಿ ಅವರು ಸಮಾಜ ವಿರೋಧಿ ಅಂಶಗಳನ್ನು ನಿಯಮಿತವಾಗಿ ಎದುರಿಸಬೇಕಾಗುತ್ತದೆ. ಇದು ಅವರು ಮತ್ತು ಅವರ ಕುಟುಂಬದ ಸದಸ್ಯರು ದಾಳಿಗೆ ಒಳಗಾಗುವ ಅಪಾಯವನ್ನುಂಟು ಮಾಡುತ್ತದೆ. ಜಾರ್ಖಂಡ್‌ನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಉತ್ತಮ್ ಆನಂದ್ ಅವರ ಇತ್ತೀಚಿನ ಕೊಲೆ ನ್ಯಾಯಾಂಗ ಅಧಿಕಾರಿಗಳ ದೌರ್ಬಲ್ಯ ಅಥವಾ ಅಸಹಾಯಕತೆಯನ್ನು ಬಹಿರಂಗಪಡಿಸುತ್ತದೆ.

 

ವಿಷಯಗಳು: ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

ಭಾರತದಲ್ಲಿ ‘ಮರೆತುಹೋಗುವ ಹಕ್ಕು’:


(The ‘Right to be Forgotten’ in India)

 

ಸಂದರ್ಭ:

ಇತ್ತೀಚೆಗೆ, ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರ ಮತ್ತು ಸರ್ಚ್ ಇಂಜಿನ್ ದೈತ್ಯ ಗೂಗಲ್ ಗೆ ಇಬ್ಬರು ಉದ್ಯಮಿಗಳು ಸಲ್ಲಿಸಿದ ‘ಮರೆತುಹೋಗುವ ಹಕ್ಕಿನ’ ಅರ್ಜಿಗೆ ಪ್ರತಿಕ್ರಿಯಿಸುವಂತೆ ಕೇಳಿದೆ. ಈ ಅರ್ಜಿಯಲ್ಲಿ, ಅರ್ಜಿದಾರರು ತಮ್ಮ ಮರೆತುಹೋಗುವ ಹಕ್ಕನ್ನು’ (Right to be Forgotten) ಉಲ್ಲೇಖಿಸಿ, ತಮ್ಮ ಮೇಲೆ ದಾಖಲಾಗಿರುವ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಲೇಖನಗಳನ್ನು ವಿವಿಧ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಿಂದ ತೆಗೆದುಹಾಕುವಂತೆ ಕೋರಿದ್ದಾರೆ.

 

 1. ಅರ್ಜಿದಾರರು ಪ್ರಕರಣದ ಸತ್ಯ ಮತ್ತು ಸನ್ನಿವೇಶಗಳ ಹಿನ್ನೆಲೆಯಲ್ಲಿ ತಾವು ಮರೆತುಹೋಗುವ ಹಕ್ಕು’ ಅಥವಾ “ಡಿಲಿಂಕ್ ಮಾಡುವ ಹಕ್ಕು” (right to delink) ಹೊಂದಿದ್ದೇವೆ ಎಂದು ವಾದಿಸಿದ್ದಾರೆ.

 

ಅವಶ್ಯಕತೆ:

ಅರ್ಜಿದಾರರು,“ಅರ್ಜಿದಾರರನ್ನು ಆಯಾ ಪ್ರಕರಣಗಳಲ್ಲಿ ಸೂಕ್ತ ನ್ಯಾಯಾಲಯಗಳು ಗೌರವಯುತವಾಗಿ ಖುಲಾಸೆಗೊಳಿಸಿವೆ, ಆದರೆ ಅವರ ವಿರುದ್ಧ ಆನ್‌ಲೈನ್‌ನಲ್ಲಿ ಲಭ್ಯವಿರುವ ಆಪಾದಿತ ಲೇಖನಗಳು ಮತ್ತು ಸುಳ್ಳು ಮಾಹಿತಿಗಳು ಅವರನ್ನು ಕಾಡುತ್ತಲೇ ಇವೆ” ಎಂದು ವಾದಿಸಿದ್ದಾರೆ.

 

ಭಾರತೀಯ ಸನ್ನಿವೇಶದಲ್ಲಿ ‘ಮರೆತುಹೋಗುವ ಹಕ್ಕು’:

 1. ‘ಮರೆತುಹೋಗುವ ಹಕ್ಕು’(Right to be Forgotten) ವ್ಯಕ್ತಿಯ ‘ಗೌಪ್ಯತೆಯ ಹಕ್ಕಿನ’ ವ್ಯಾಪ್ತಿಗೆ ಬರುತ್ತದೆ.
 2. 2017 ರಲ್ಲಿ, ‘ಗೌಪ್ಯತೆ ಹಕ್ಕನ್ನು’ ಸುಪ್ರೀಂ ಕೋರ್ಟ್ ತನ್ನ ಒಂದು ಹೆಗ್ಗುರುತು ತೀರ್ಪಿನಲ್ಲಿ (ಪುಟ್ಟಸ್ವಾಮಿ ಪ್ರಕರಣ) ‘ಮೂಲಭೂತ ಹಕ್ಕು’ (ಆರ್ಟಿಕಲ್ 21 ರ ಅಡಿಯಲ್ಲಿ) ಎಂದು ಘೋಷಿಸಿದೆ.

 

ಈ ಸಂದರ್ಭದಲ್ಲಿ ‘ವೈಯಕ್ತಿಕ ಡೇಟಾ ಸಂರಕ್ಷಣಾ ಮಸೂದೆ’ ಯ ಅಡಿಯಲ್ಲಿ ಮಾಡಲಾದ ನಿಬಂಧನೆಗಳು ಹೇಳುವುದೇನು?

‘ಗೌಪ್ಯತೆಯ ಹಕ್ಕು’,ಈ ಮಸೂದೆಯು ಸಂಸತ್ತಿನಲ್ಲಿ ಇನ್ನೂ ಅಂಗೀಕಾರಕ್ಕಾಗಿ ಬಾಕಿ ಉಳಿದಿದ್ದರೂ ಇದನ್ನು ‘ವೈಯಕ್ತಿಕ ದತ್ತಾಂಶ ಸಂರಕ್ಷಣಾ ಮಸೂದೆ’ (Personal Data Protection Bill) ಯು ನಿರ್ವಹಿಸುತ್ತದೆ.

ಈ ‘ಮಸೂದೆ’ ನಿರ್ದಿಷ್ಟವಾಗಿ “ಮರೆತುಹೋಗುವ ಹಕ್ಕಿನ” ಬಗ್ಗೆ ಹೇಳುತ್ತದೆ.

 1. ವಿಶಾಲವಾಗಿ ಹೇಳುವುದಾದರೆ, ‘ಮರೆತುಹೋಗುವ ಹಕ್ಕಿನ’ ಅಡಿಯಲ್ಲಿ, ಬಳಕೆದಾರರು ‘ಡೇಟಾ ವಿಶ್ವಾಸಾರ್ಹರ’ (data fiduciaries) ಹಿಡಿತದಲ್ಲಿರುವ ತಮ್ಮ ವೈಯಕ್ತಿಕ ಮಾಹಿತಿಯ ಬಹಿರಂಗಪಡಿಸುವಿಕೆಯನ್ನು ಡಿ-ಲಿಂಕ್ ಮಾಡಬಹುದು ಅಥವಾ ಮಿತಿಗೊಳಿಸಬಹುದು ಮತ್ತು ಮಾಹಿತಿಯನ್ನು ತಿದ್ದುಪಡಿಯೊಂದಿಗೆ ತೋರಿಸಲು ಅದನ್ನು ಸಂಪೂರ್ಣವಾಗಿ ತೆಗೆದುಹಾಕಬಹುದು ಅಥವಾ ಸರಿಪಡಿಸಬಹುದು.

ಮಸೂದೆಯಲ್ಲಿ ಈ ನಿಬಂಧನೆಗೆ ಸಂಬಂಧಿಸಿದ ಸಮಸ್ಯೆಗಳು:

ಈ ನಿಬಂಧನೆಯ ಮುಖ್ಯ ಸಮಸ್ಯೆ ಏನೆಂದರೆ, ವೈಯಕ್ತಿಕ ಡೇಟಾ ಮತ್ತು ಮಾಹಿತಿಯ ಸೂಕ್ಷ್ಮತೆಯನ್ನು ಸಂಬಂಧಪಟ್ಟ ವ್ಯಕ್ತಿಯಿಂದ ಸ್ವತಂತ್ರವಾಗಿ ನಿರ್ಧರಿಸಲಾಗುವುದಿಲ್ಲ, ಆದರೆ ಅದನ್ನು ದತ್ತಾಂಶ ಸಂರಕ್ಷಣಾ ಪ್ರಾಧಿಕಾರ (Data Protection Authority – DPA) ವು ನೋಡಿಕೊಳ್ಳುತ್ತದೆ ಎಂಬುದಾಗಿದೆ.

 1. ಇದರರ್ಥ, ಕರಡು ಮಸೂದೆಯಲ್ಲಿನ ನಿಬಂಧನೆಯ ಪ್ರಕಾರ, ಡೇಟಾ ಪ್ರೊಟೆಕ್ಷನ್ ಅಥಾರಿಟಿ (DPA) ಗಾಗಿ ಕೆಲಸ ಮಾಡುವ ನ್ಯಾಯಾಧೀಶರ ಅನುಮತಿಗೆ ಒಳಪಟ್ಟು, ಬಳಕೆದಾರನು ತನ್ನ ವೈಯಕ್ತಿಕ ಡೇಟಾವನ್ನು ಅಂತರ್ಜಾಲದಿಂದ ತೆಗೆದುಹಾಕಲು ಪ್ರಯತ್ನಿಸಬಹುದು.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ವಿದೇಶಿಯರ ನ್ಯಾಯಮಂಡಳಿಗಳು ಯಾವುವು?


(What are Foreigners’ Tribunals?)

 

ಸಂದರ್ಭ:

ಅಸ್ಸಾಂ ಸರ್ಕಾರದ ರಾಜಕೀಯ ಇಲಾಖೆಯಿಂದ ಅಧಿಸೂಚನೆ ಹೊರಡಿಸಲಾಗಿದ್ದು,ಇದರಲ್ಲಿ ಗೂರ್ಖಾಗಳ ವಿರುದ್ಧ ಯಾವುದೇ ಪ್ರಕರಣವನ್ನು ವಿದೇಶಿಯರ ಕಾಯ್ದೆ, 1946 ರ ( Foreigners Act, 1946 ) ಅಡಿಯಲ್ಲಿ ವಿದೇಶಿ ನ್ಯಾಯಮಂಡಳಿಗೆ (Foreigners’ Tribunal- FT) ಕಳುಹಿಸದಂತೆ ರಾಜ್ಯ ಪೊಲೀಸ್ ಗಡಿ ಶಾಖೆಗೆ ಆದೇಶಿಸಲಾಗಿದೆ.

 

ಹಿನ್ನೆಲೆ:

ರಾಜ್ಯ ಪೊಲೀಸರ ಗಡಿ ಶಾಖೆಯು ಶಂಕಿತ ಪೌರತ್ವ ಹೊಂದಿರುವ ಜನರನ್ನು ಗುರುತಿಸಲು ಮತ್ತು ಅವರನ್ನು ಅರೆ ನ್ಯಾಯಾಂಗ ಸಂಸ್ಥೆಯಾದ ‘ವಿದೇಶಿಯರ ನ್ಯಾಯಮಂಡಳಿಗೆ’ ಈ ಕುರಿತು ಕ್ರಮ ಕೈಗೊಳ್ಳಲು ವರದಿ ಮಾಡುವ ಕಾರ್ಯವನ್ನು ವಹಿಸಲಾಗಿದೆ.

 

ರಾಜ್ಯದಲ್ಲಿ ಗೂರ್ಖಾಗಳ ಸಂಖ್ಯೆ:

2011 ರ ಜನಗಣತಿಯ ಪ್ರಕಾರ, ಅಸ್ಸಾಂನಲ್ಲಿ 5 ಲಕ್ಷಕ್ಕೂ ಹೆಚ್ಚು ಗೂರ್ಖಾಗಳು ವಾಸಿಸುತ್ತಿದ್ದಾರೆ, ಅವರಲ್ಲಿ ಹೆಚ್ಚಿನವರು ಬ್ರಿಟಿಷ್ ಆಡಳಿತದ ಅಡಿಯಲ್ಲಿ ಸಶಸ್ತ್ರ ಪಡೆಗಳ ಸದಸ್ಯರಾಗಿ ರಾಜ್ಯಕ್ಕೆ ಬಂದಿದ್ದರು.

ಆಗಸ್ಟ್ 31, 2019 ರಂದು ಪ್ರಕಟವಾದ ರಾಷ್ಟ್ರೀಯ ಪೌರತ್ವ ನೋಂದಣಿ (National Register of Citizens – NRC) ಯ ಕರಡಿನಲ್ಲಿ ಸುಮಾರು 22,000 ಗೂರ್ಖಾಗಳನ್ನು ಸೇರಿಸಲಾಗಿಲ್ಲ.

 

ಇತ್ತೀಚಿನ ನಿರ್ಧಾರದ ಪರಿಣಾಮಗಳು:

ಅಸ್ಸಾಂನಲ್ಲಿ, ರಾಜ್ಯದಲ್ಲಿ ಸ್ಥಾಪಿಸಲಾಗಿರುವ 100 ‘ವಿದೇಶಿ ನ್ಯಾಯಮಂಡಳಿಗಳಲ್ಲಿ’ ಸುಮಾರು 2,500 ಗೂರ್ಖಾಗಳ ಪ್ರಕರಣಗಳು ಬಾಕಿ ಇವೆ. ಈ ಎಲ್ಲಾ ಪ್ರಕರಣಗಳನ್ನು ಹಿಂಪಡೆಯಲಾಗುವುದು.

 

ಘೋಷಿತ ವಿದೇಶಿಯ ಎಂದರೆ ಯಾರು?

‘ಘೋಷಿತ ವಿದೇಶಿಯರು’(Declared Foreigners-DF) ಎಂದರೆ ರಾಜ್ಯ ಪೊಲೀಸರ ಗಡಿ ಶಾಖೆಯಿಂದ ಅಕ್ರಮ ವಲಸಿಗರು ಎಂದು ಗುರುತಿಸಲ್ಪಟ್ಟ ನಂತರ, ತಮ್ಮ ಪೌರತ್ವದ ಪುರಾವೆಗಳನ್ನು ಒದಗಿಸಲು ವಿಫಲರಾದ ಆಧಾರದ ಮೇಲೆ ಅವರನ್ನು ಯಾವುದಾದರೂ ಒಂದು  ‘ವಿದೇಶಿ ನ್ಯಾಯಮಂಡಳಿ’ (Foreigners’ Tribunal- FT) ಯು ‘ವಿದೇಶಿ’ ಎಂದು ಘೋಷಿಸಲಾಗುತ್ತದೆ.

 

‘ವಿದೇಶಿ ನ್ಯಾಯಮಂಡಳಿ’ ಎಂದರೇನು?

 1.  ‘ವಿದೇಶಿಯರ ನ್ಯಾಯಮಂಡಳಿಗಳನ್ನು, ವಿದೇಶಿಯರ (ನ್ಯಾಯಮಂಡಳಿ) [Foreigners (Tribunals) Order]) ಆದೇಶ’ 1964 ರ ಅಡಿಯಲ್ಲಿ ಸ್ಥಾಪಿಸಲಾದ ಅರೆ-ನ್ಯಾಯಾಂಗ ಸಂಸ್ಥೆಗಳು ಆಗಿವೆ.
 2. ಈ ನ್ಯಾಯಮಂಡಳಿಗಳು ದೇಶದಲ್ಲಿ ಅಕ್ರಮವಾಗಿ ವಾಸಿಸುತ್ತಿರುವ ವ್ಯಕ್ತಿಯು “ವಿದೇಶಿ” ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುತ್ತದೆ.

 

ಸಂಯೋಜನೆ: ‘ವಿದೇಶಿ ನ್ಯಾಯಮಂಡಳಿಯ’ ಸದಸ್ಯರು ಕನಿಷ್ಠ ಏಳು ವರ್ಷಗಳ ವಕಾಲತ್ತು ಅನುಭವವನ್ನು ಹೊಂದಿರುವ 35 ವರ್ಷಕ್ಕಿಂತ ಕಡಿಮೆಯಲ್ಲದ ವಯಸ್ಸಿನ ವಕೀಲರು (ಅಥವಾ) ಅಸ್ಸಾಂ ನ್ಯಾಯಾಂಗ ಸೇವೆಯ ನಿವೃತ್ತ ನ್ಯಾಯಾಂಗ ಅಧಿಕಾರಿಗಳು, ಅರೆ ನ್ಯಾಯಾಂಗ ಸೇವೆಯಲ್ಲಿ ಅನುಭವ ಹೊಂದಿರುವ ನಾಗರಿಕ ಸೇವಕರನ್ನು (ಕಾರ್ಯದರ್ಶಿ ಅಥವಾ ಹೆಚ್ಚುವರಿ ಕಾರ್ಯದರ್ಶಿಯ ಶ್ರೇಣಿಗಿಂತ ಕೆಳಗಿಲ್ಲದ) ಒಳಗೊಂಡಿರುತ್ತದೆ.

 

ವಿದೇಶಿ ನ್ಯಾಯಮಂಡಳಿಗಳನ್ನು ಸ್ಥಾಪಿಸುವ ಅಧಿಕಾರ ಹೊಂದಿರುವವರು ಯಾರು?

ಗೃಹ ಸಚಿವಾಲಯವು (MHA) ವಿದೇಶಿಯರ (ನ್ಯಾಯಮಂಡಳಿ) ಆದೇಶ, 1964 ಕ್ಕೆ ತಿದ್ದುಪಡಿ ಮಾಡಿದ ನಂತರ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಪ್ರದೇಶಗಳಲ್ಲಿ ನ್ಯಾಯಮಂಡಳಿಗಳನ್ನು (ಅರೆ- ನ್ಯಾಯಿಕ ಪ್ರಾಧಿಕಾರಗಳನ್ನು) ಸ್ಥಾಪಿಸಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ನೀಡಲಾಗಿದೆ.

 1. ಈ ಮೊದಲು, ನ್ಯಾಯಮಂಡಳಿಗಳನ್ನು ಸ್ಥಾಪಿಸುವ ಅಧಿಕಾರವನ್ನು ಕೇಂದ್ರಕ್ಕೆ ಮಾತ್ರ ವಹಿಸಲಾಗಿತ್ತು.

‘ವಿದೇಶಿ ನ್ಯಾಯಮಂಡಳಿಗಳಿಗೆ’ ಮೇಲ್ಮನವಿ ಸಲ್ಲಿಸುವ ಹಕ್ಕು ಹೊಂದಿರುವವರು ಯಾರು?

 1. ತಿದ್ದುಪಡಿ ಮಾಡಿದ ಆದೇಶದ [ವಿದೇಶಿ (ನ್ಯಾಯಮಂಡಳಿ) 2019] ಅನ್ವಯ ನ್ಯಾಯಮಂಡಳಿಗಳಲ್ಲಿ ಮೇಲ್ಮನವಿ ಸಲ್ಲಿಸಲು ವ್ಯಕ್ತಿಗಳಿಗೆ ಅಧಿಕಾರ ನೀಡುತ್ತದೆ.
 2. ಇದಕ್ಕೂ ಮೊದಲು ರಾಜ್ಯ ಆಡಳಿತ ಮಾತ್ರ ಈ ನ್ಯಾಯಮಂಡಳಿಗಳಲ್ಲಿ ಶಂಕಿತನ ವಿರುದ್ಧ ಪ್ರಕರಣ ದಾಖಲಿಸಬಹುದಿತ್ತು.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ರಫ್ತು ಉತ್ಪನ್ನಗಳ ಮೇಲಿನ ಸುಂಕ ಮತ್ತು ತೆರಿಗೆಗಳ ಪರಿಹಾರ (RODTEP) ಯೋಜನೆ:


(Remission of Duties and Taxes on Export Products (RODTEP) scheme)

 

ಸಂದರ್ಭ:

‘ರಫ್ತು ಉತ್ಪನ್ನಗಳ ಮೇಲಿನ ಸುಂಕಗಳು ಮತ್ತು ತೆರಿಗೆಗಳ ವಿನಾಯಿತಿ’/ ಪರಿಹಾರ (Remission of Duties and Taxes on Export Products (RODTEP) scheme) ಯೋಜನೆಯಡಿ ರಫ್ತುದಾರರಿಗೆ ಪಾವತಿಸಬೇಕಾದ ಸುಂಕ ಮತ್ತು ತೆರಿಗೆಗಳ ವಿನಾಯಿತಿಗಾಗಿ ದರಗಳು ಮತ್ತು ನಿಯಮಗಳನ್ನು ಕೇಂದ್ರವು ಅಧಿಸೂಚಿಸಿದೆ.

ಈ ಯೋಜನೆಯ ಅಡಿಯಲ್ಲಿ 2021-22 ರ ಹಣಕಾಸು ವರ್ಷಕ್ಕೆ 12,454 ಕೋಟಿ ಬಜೆಟ್ ಹಂಚಿಕೆ ಮಾಡಲಾಗಿದೆ

ಇದು 8,555 ಸುಂಕದ ಸಾಲುಗಳನ್ನು ಒಳಗೊಂಡಿದೆ, ಇದು ಸುಮಾರು 75% ವ್ಯಾಪಾರದ ವಸ್ತುಗಳು ಮತ್ತು ಭಾರತದ 65% ರಫ್ತುಗಳನ್ನು ಹೊಂದಿದೆ.

 

ಯೋಜನೆಯ ಕುರಿತು:

 1. ವಿಶ್ವ ವಾಣಿಜ್ಯ ಸಂಸ್ಥೆಯ ನಿಯಮಗಳಿಗೆ ಅನುಸಾರವಾಗಿರದ ‘ಮರ್ಚಂಡೈಸ್ ಎಕ್ಸ್‌ಪೋರ್ಟ್ಸ್ ಫ್ರಮ್ ಇಂಡಿಯಾ ಸ್ಕೀಮ್’ (Merchandise Exports from India Scheme-MEIS) ಗೆ ಬದಲಿಯಾಗಿ ಈ ಯೋಜನೆಯನ್ನು 2020 ರಲ್ಲಿ ಘೋಷಿಸಲಾಯಿತು.
 2. ಯೋಜನೆಯಡಿಯಲ್ಲಿ, ರಫ್ತುದಾರರಿಗೆ ‘ರಫ್ತು ಉತ್ಪನ್ನಗಳ’ ಮೇಲಿನ ‘ಲಗತ್ತಿಸಲಾದ ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸುಂಕಗಳು ಅಥವಾ ತೆರಿಗೆಗಳನ್ನು’ ಮರುಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಈ ಮೊದಲು ರಫ್ತುದಾರರಿಗೆ ಈ ತೆರಿಗೆಗಳನ್ನು ಮರುಪಾವತಿ ಮಾಡುತ್ತಿರಲಿಲ್ಲ ಆದ್ದರಿಂದ ಭಾರತದ ರಫ್ತುಗಳನ್ನು ಪ್ರತಿಕೂಲ ಪರಿಸ್ಥಿತಿಯಲ್ಲಿರಿಸಿದೆ.

 

ಪ್ರಮುಖ ಲಕ್ಷಣಗಳು:

 1. ಈ ಯೋಜನೆಯಡಿ, ರಾಜ್ಯಗಳು ಮತ್ತು ಗ್ರಾಮ ಪಂಚಾಯತ್‌ಗಳಿಂದ ವಿಧಿಸಲಾದ ಎಲ್ಲಾ ತೆರಿಗೆಗಳನ್ನು ಮರುಪಾವತಿಸಲಾಗುತ್ತದೆ, ರಫ್ತುಗಳ ‘ಶೂನ್ಯ ರೇಟಿಂಗ್’ (zero rating of exports) ಅನ್ನು ಸಕ್ರಿಯಗೊಳಿಸಲು ಮತ್ತು ದೇಶೀಯ ತೆರಿಗೆಗಳನ್ನು ರಫ್ತು ಮಾಡದಂತೆ ಖಾತರಿ ಪಡಿಸುವ ಮೂಲಕ ನಿಷೇಧವನ್ನು ಖಾತ್ರಿಪಡಿಸುತ್ತದೆ.
 2. ‘ರಫ್ತು ಉತ್ಪನ್ನಗಳ ಮೇಲಿನ ಸುಂಕ ಮತ್ತು ತೆರಿಗೆಗಳ ವಿನಾಯಿತಿ’/ ಪರಿಹಾರ (RODTEP) ಯೋಜನೆಯ ಅಡಿಯಲ್ಲಿ ಈ ವಿನಾಯಿತಿಯನ್ನು ನೀಡಲಾಗಿದ್ದು, ‘ವಿಶ್ವ ವ್ಯಾಪಾರ ಸಂಸ್ಥೆ’ (ಡಬ್ಲ್ಯುಟಿಒ) ನೀಡಿದ ಕಾನೂನು ಸಲಹೆಗೆ ಅನುಸಾರವಾಗಿದೆ, ಇದರ ಅಡಿಯಲ್ಲಿ ದೇಶದಿಂದ ಸಾಗಿಸಲ್ಪಟ್ಟ ಸರಕುಗಳ ಮೇಲೆ 5% ರಿಂದ 4.3 % ವರೆಗಿನ ರಿಯಾಯಿತಿಗಳನ್ನು ನೀಡಬಹುದು.
 3. ಚಾಕೊಲೇಟ್, ಮಿಠಾಯಿ ಮತ್ತು ಸಕ್ಕರೆ ಮಿಠಾಯಿ ಗಳಂತಹ ವಸ್ತುಗಳಿಗೆ ಕಡಿಮೆ ದರದಲ್ಲಿ ರಿಯಾಯಿತಿ ನೀಡಲಾಗಿದ್ದು, ಕಚ್ಚಾ ನೂಲು ಮತ್ತು ನಾರುಗಳಿಗೆ ಅತ್ಯಧಿಕ ದರ ನಿಗದಿ ಮಾಡಲಾಗಿದೆ.
 4. ಸ್ಟೀಲ್, ಫಾರ್ಮಾ ಮತ್ತು ರಾಸಾಯನಿಕಗಳು ಈ ಯೋಜನೆಗೆ ಒಳಪಡುವುದಿಲ್ಲ ಏಕೆಂದರೆ ಅವುಗಳ ರಫ್ತುಗಳು ಯಾವುದೇ ಪ್ರೋತ್ಸಾಹವಿಲ್ಲದೆ ಉತ್ತಮವಾಗಿ ಕಾರ್ಯನಿರ್ವಹಿಸಿವೆ.

 

ಮಹತ್ವ:

 1. ಈ ಯೋಜನೆಯ ಮೂಲಕ, ಭಾರತೀಯ ರಫ್ತುದಾರರು ರಫ್ತಿಗೆ ಅಗತ್ಯವಾದ ಅಂತರರಾಷ್ಟ್ರೀಯ ಮಾನದಂಡಗಳನ್ನು ಪೂರೈಸಲು ಸಾಧ್ಯವಾಗುತ್ತದೆ. ಇದರ ಅಡಿಯಲ್ಲಿ, ಅಂತರರಾಷ್ಟ್ರೀಯ ಸಂಸ್ಥೆಗಳನ್ನು ಅವಲಂಬಿಸುವ ಬದಲು, ರಫ್ತುದಾರರಿಗೆ ದೇಶದೊಳಗೆ ಕೈಗೆಟಕುವ ದರದಲ್ಲಿ ಪರೀಕ್ಷೆ ಮತ್ತು ಪ್ರಮಾಣೀಕರಣ ಲಭ್ಯವಾಗಲಿದೆ.
 2. ಇದರ ಅಡಿಯಲ್ಲಿ, ರಫ್ತುದಾರರಿಗೆ ತೆರಿಗೆ ಮೌಲ್ಯಮಾಪನ ಪ್ರಕ್ರಿಯೆಯು ಸಂಪೂರ್ಣ ಸ್ವಯಂಚಾಲಿತವಾಗಿರುತ್ತದೆ. ಸ್ವಯಂಚಾಲಿತ ಮರುಪಾವತಿ ಮಾರ್ಗದ ಮೂಲಕ ವ್ಯಾಪಾರಗಳು GST ಮರುಪಾವತಿಗೆ ತಮ್ಮ ಪ್ರವೇಶವನ್ನು ಪಡೆಯುತ್ತವೆ.
 3. ಇದು ದೇಶದ ಆರ್ಥಿಕತೆ ಮತ್ತು ಉದ್ಯಮಗಳಿಗೆ ಕಾರ್ಯ ಬಂಡವಾಳವನ್ನು ಹೆಚ್ಚಿಸುತ್ತದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

ನವದೆಹಲಿಯಲ್ಲಿ,ವಿಶ್ವದ ಎರಡನೇ ಅತಿದೊಡ್ಡ ನವೀಕರಿಸಿದ ಜೀನ್ ಬ್ಯಾಂಕ್:


((World’s second-largest refurbished gene bank at New Delhi)

 

ಸಂದರ್ಭ:

ಇತ್ತೀಚೆಗೆ ವಿಶ್ವದ ಎರಡನೇ ಅತಿದೊಡ್ಡ ನವೀಕರಿಸಿದ ಅತ್ಯಾಧುನಿಕ ನ್ಯಾಷನಲ್ ಜೀನ್ ಬ್ಯಾಂಕ್ ಅನ್ನು ನವದೆಹಲಿಯ ಪೂಸಾದ ನ್ಯಾಷನಲ್ ಬ್ಯೂರೋ ಆಫ್ ಪ್ಲಾಂಟ್ ಜೆನೆಟಿಕ್ ರಿಸೋರ್ಸಸ್ (National Bureau of Plant Genetic Resources- NBPGR) ನಲ್ಲಿ ಉದ್ಘಾಟಿಸಲಾಗಿದೆ.

 

ಜೀನ್ ಬ್ಯಾಂಕ್‌ಗಳು’ ಎಂದರೇನು?

ತುರ್ತು ಸಂದರ್ಭಗಳಲ್ಲಿ, ಜನರು ತಮ್ಮ ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಮಾಡುವ ಮೂಲಕ ಉಳಿಸುತ್ತಾರೆ. ಅಪರೂಪದ ಸಸ್ಯಗಳು ಮತ್ತು ಪ್ರಾಣಿಗಳನ್ನು ಸಂರಕ್ಷಿಸಲು ಕೆಲಸ ಮಾಡುವ ರೈತರು ಮತ್ತು ವಿಜ್ಞಾನಿಗಳಿಗೆ ಜೆನೆಟಿಕ್ ಬ್ಯಾಂಕುಗಳು ಇದೇ ಉದ್ದೇಶವನ್ನು ಪೂರೈಸುತ್ತವೆ.

 

ಮಹತ್ವ:

 1. ಸಂಶೋಧಕರು ಅಥವಾ ರೈತರು ಈ “ಜೀನ್” ಬ್ಯಾಂಕುಗಳಲ್ಲಿರುವ ಮಾದರಿಗಳನ್ನು ಹಿಂತೆಗೆದುಕೊಳ್ಳಬಹುದು, ಇದು ಅಪರೂಪದ ಸಸ್ಯ ಪ್ರಭೇದಗಳು ಮತ್ತು ಪ್ರಾಣಿ ತಳಿಗಳ ಜನಸಂಖ್ಯೆಯನ್ನು ಪುನರುತ್ಪಾದಿಸಲು ಸಹಾಯ ಮಾಡುತ್ತದೆ ಅಥವಾ ವಿವಿಧ ಜಾತಿಗಳಲ್ಲಿ ಆನುವಂಶಿಕ ವೈವಿಧ್ಯತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
 2. ಜೀನ್ ಬ್ಯಾಂಕುಗಳು ಅಸಹಜ ಜೀನ್ ರೂಪಾಂತರಗಳನ್ನು ಹೊಂದಿರುವ ಜೀವಕೋಶಗಳು ಅಥವಾ ಜೀವಿಗಳನ್ನು ಸಂರಕ್ಷಿಸುತ್ತವೆ, ಅಂದರೆ ವಿಶೇಷ ಲಕ್ಷಣಗಳನ್ನು ಹೊಂದಿರುವ ಜೀನ್‌ಗಳು. ಸಾಂಕ್ರಾಮಿಕ ಸಂದರ್ಭದಲ್ಲಿ, ಹವಾಮಾನ ಬದಲಾವಣೆಯ ಸಂದರ್ಭದಲ್ಲಿ, ಅಥವಾ ಸಸ್ಯಗಳು ಅಥವಾ ಪ್ರಾಣಿಗಳ ಅಸ್ತಿತ್ವಕ್ಕೆ ಯಾವುದೇ ಇತರ ಅಂಶಗಳಿಂದ ಬೆದರಿಕೆಯಾದಾಗ ಈ ವಂಶವಾಹಿಗಳು ನಂತರ ಉಪಯುಕ್ತವೆಂದು ಸಾಬೀತಾಗಬಹುದು.
 3. ರೈತರು ತಮ್ಮ ಬೆಳೆಯಲ್ಲಿ ಆನುವಂಶಿಕ ವೈವಿಧ್ಯತೆಯನ್ನು ಪುನಃಸ್ಥಾಪಿಸಲು ಅಥವಾ ಇನ್ನೊಂದು ತಳಿಯ ಅಥವಾ ವೈವಿಧ್ಯತೆಯ ಲಕ್ಷಣಗಳನ್ನು ಆನುವಂಶಿಕವಾಗಿ ಪಡೆಯಲು ಬ್ಯಾಂಕಿನಲ್ಲಿ ಠೇವಣಿ ಮಾಡಿರುವ ‘ಸಂಗ್ರಹಿಸಿದ ಕೋಶಗಳು’ ಅಥವಾ ‘ಅಂಗಾಂಶಗಳನ್ನು’ ಬಳಸಬಹುದು.

 

ರಾಷ್ಟ್ರೀಯ ಜೀನ್ ಬ್ಯಾಂಕ್ ಕುರಿತು:

 1. ಭವಿಷ್ಯದ ಪೀಳಿಗೆಗೆ ಸಸ್ಯ ಅನುವಂಶಿಕ ಸಂಪನ್ಮೂಲಗಳ (Plant Genetic Resources – PGR) ಬೀಜಗಳನ್ನು ಸಂರಕ್ಷಿಸಲು ನ್ಯಾಷನಲ್ ಜೀನ್ ಬ್ಯಾಂಕ್ ಅನ್ನು 1996 ರಲ್ಲಿ ಸ್ಥಾಪಿಸಲಾಗಿದೆ.
 2. ಇದು ಬೀಜಗಳ ರೂಪದಲ್ಲಿ ಸುಮಾರು ಒಂದು ಮಿಲಿಯನ್ ಜರ್ಮ ಪ್ಲಾಸಂ ಅನ್ನು ಸಂರಕ್ಷಿಸುವ ಸಾಮರ್ಥ್ಯವನ್ನು ಹೊಂದಿದೆ.
 3. ಇದು ಸಿರಿಧಾನ್ಯಗಳು, ರಾಗಿಗಳು, ಔಷಧೀಯ ಮತ್ತು ಆರೊಮ್ಯಾಟಿಕ್ ಸಸ್ಯಗಳು ಮತ್ತು ಮಾದಕ ಪದಾರ್ಥಗಳಂತಹ ವಿವಿಧ ಬೆಳೆ ಗುಂಪುಗಳನ್ನು ಸಂಗ್ರಹಿಸುತ್ತದೆ.
 4. ಪ್ರಸ್ತುತ, ರಾಷ್ಟ್ರೀಯ ಜೀನ್ ಬ್ಯಾಂಕ್ 4.52 ಲಕ್ಷ ಪ್ರವೇಶಗಳನ್ನು ಸಂರಕ್ಷಿಸುತ್ತಿದೆ, ಅದರಲ್ಲಿ 2.7 ಲಕ್ಷ ಭಾರತೀಯ ಜರ್ಮ್‌ಪ್ಲಾಸಂ ಆಗಿದ್ದು ಉಳಿದವು ಇತರ ದೇಶಗಳಿಂದ ಆಮದು ಮಾಡಿಕೊಳ್ಳಲಾಗಿದೆ.

 

‘ರಾಷ್ಟ್ರೀಯ ಜೀನ್ ಬ್ಯಾಂಕ್’ ದೀರ್ಘಾವಧಿಯ ಹಾಗೂ ಮಧ್ಯಮ ಅವಧಿಯ ಸಂರಕ್ಷಣೆ ಅಗತ್ಯಗಳನ್ನು ಪೂರೈಸಲು ನಾಲ್ಕು ರೀತಿಯ ಸೌಲಭ್ಯಗಳನ್ನು ಹೊಂದಿದೆ: ಅವುಗಳೆಂದರೆ:

 1. ಸೀಡ್ ಜೀನ್ ಬ್ಯಾಂಕ್ (- 18 ° C)
 2. ಕ್ರಯೋ ಜೀನ್ ಬ್ಯಾಂಕ್ (-170 ° C ನಿಂದ -196 ° C)
 3. ಇನ್-ವಿಟ್ರೊ ಜೀನ್ ಬ್ಯಾಂಕ್ (25 ° C)
 4. ಫೀಲ್ಡ್ ಜೀನ್ ಬ್ಯಾಂಕ್.

 

ಜೀನ್ ಬ್ಯಾಂಕಿನ ಅವಶ್ಯಕತೆಗಳು:

ಇದು ದೇಶದ ರೈತರನ್ನು ಸ್ವಾವಲಂಬಿಗಳನ್ನಾಗಿಸುತ್ತದೆ ಮತ್ತು ಈ ದಿಶೆಯಲ್ಲಿ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಹಣಕಾಸು ಸೇರ್ಪಡೆ ಸೂಚಿಯನ್ನು ಅನಾವರಣಗೊಳಿಸಿದ RBI:

(RBI unveils financial inclusion index)

 ಇತ್ತೀಚೆಗೆ, ದೇಶಾದ್ಯಂತ ಹಣಕಾಸು ಸೇರ್ಪಡೆಯ ವ್ಯಾಪ್ತಿಯನ್ನು ಅಳೆಯಲು ಭಾರತೀಯ ರಿಸರ್ವ್ ಬ್ಯಾಂಕ್‌ನಿಂದ ಸಂಯೋಜಿತ ‘ಹಣಕಾಸು ಸೇರ್ಪಡೆ ಸೂಚ್ಯಂಕ’ (Financial Inclusion Index: FI-Index) ವನ್ನು ರಚಿಸಲಾಗಿದೆ.

ಮಾರ್ಚ್ 2021 ಕ್ಕೆ ಕೊನೆಗೊಂಡ ಅವಧಿಯ ವಾರ್ಷಿಕ ಎಫ್‌ಐ-ಸೂಚ್ಯಂಕವು 53.9 ಆಗಿದ್ದು, ಮಾರ್ಚ್ 2017 ಕ್ಕೆ ಕೊನೆಗೊಂಡ ಅವಧಿಗೆ 43.4 ರಷ್ಟಿತ್ತು.

ಸೂಚ್ಯಂಕದ ಕುರಿತು:

 1. ಪ್ರತಿ ವರ್ಷ ಜುಲೈನಲ್ಲಿ ಎಫ್ಐ-ಸೂಚಿಯನ್ನು ವಾರ್ಷಿಕ ಆಧಾರದ ಮೇಲೆ ಪ್ರಕಟಿಸಲಾಗುತ್ತದೆ.
 2. ಈ ಎಫ್‌ಐ-ಸೂಚಿಯನ್ನು ಬ್ಯಾಂಕಿಂಗ್, ಹೂಡಿಕೆ, ವಿಮೆ, ಅಂಚೆ ಹಾಗೂ ಪಿಂಚಣಿ ವಲಯದ ವಿವರಗಳನ್ನು ಒಳಗೊಂಡ ಸಮಗ್ರ ಸೂಚಿಯಾಗಿ ಪರಿಕಲ್ಪಿಸಲಾಗಿದೆ, ಇದನ್ನು ಸರ್ಕಾರ ಮತ್ತು ಸಂಬಂಧಿತ ವಲಯ ನಿಯಂತ್ರಕರೊಂದಿಗೆ ಸಮಾಲೋಚಿಸಿ ರಚಿಸಲಾಗಿದೆ.
 3. ಸೂಚ್ಯಂಕವು 0 ಮತ್ತು 100 ರ ನಡುವೆ ಒಂದೇ ಮೌಲ್ಯದಲ್ಲಿ ಹಣಕಾಸಿನ ಸೇರ್ಪಡೆಯ ವಿವಿಧ ಅಂಶಗಳ ಮಾಹಿತಿಯನ್ನು ಸೆರೆಹಿಡಿಯುತ್ತದೆ, ಅಲ್ಲಿ 0 ಸಂಪೂರ್ಣ ಆರ್ಥಿಕ ಹೊರಗಿಡುವಿಕೆಯನ್ನು ಪ್ರತಿನಿಧಿಸುತ್ತದೆ ಮತ್ತು 100 ಸಂಪೂರ್ಣ ಆರ್ಥಿಕ ಒಳಗೊಳ್ಳುವಿಕೆಯನ್ನು ಪ್ರತಿನಿಧಿಸುತ್ತದೆ.
 4. FI- ಸೂಚ್ಯಂಕವು ಮೂರು ವಿಶಾಲ ನಿಯತಾಂಕಗಳನ್ನು ಒಳಗೊಂಡಿದೆ, ಅವುಗಳೆಂದರೆ, ಪ್ರವೇಶ, ಬಳಕೆ ಮತ್ತು ಗುಣಮಟ್ಟ, ಇವುಗಳಲ್ಲಿ ಪ್ರತಿಯೊಂದೂ ವಿಭಿನ್ನ ಆಯಾಮಗಳನ್ನು ಒಳಗೊಂಡಿರುತ್ತದೆ, ಇವುಗಳನ್ನು ವಿವಿಧ ಸೂಚಕಗಳ ಆಧಾರದ ಮೇಲೆ ಲೆಕ್ಕಹಾಕಲಾಗುತ್ತದೆ.
 5. ಈ ಎಫ್‌ಐ-ಸೂಚಿಯನ್ನು ಯಾವುದೇ ‘ಮೂಲ ವರ್ಷ’(base year) ಇಲ್ಲದೆ ನಿರ್ಮಿಸಲಾಗಿದೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos