Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 26ನೇ ಜುಲೈ 2021

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ವಿಶ್ವ ಪರಂಪರೆಯ ಸ್ಥಾನಮಾನ ಪಡೆದ ರಾಮಪ್ಪ ದೇವಸ್ಥಾನ.

2. ಚಂದ್ರ ಶೇಖರ್ ಆಜಾದ್.

 

ಸಾಮಾನ್ಯ ಅಧ್ಯಯನ ಪತ್ರಿಕೆ  2:

1. ಸಾಗರೋತ್ತರ ಭಾರತೀಯ ನಾಗರಿಕ ಕಾರ್ಡ್ ಹೊಂದಿರುವವರು.

2. ‘ಮಕ್ಕಳ ಸಬಲೀಕರಣ’ಕ್ಕಾಗಿ-PM CARES ಯೋಜನೆ.

3. ಚೀನಾ ಮತ್ತು ಪಾಕಿಸ್ತಾನದಿಂದ, ಅಫ್ಘಾನಿಸ್ತಾನದ ಕಾರ್ಯತಂತ್ರಗಳಿಗೆ ಅನುಗುಣವಾಗಿ ‘ಜಂಟಿ ಕ್ರಮ’ದ ಚೌಕಟ್ಟು.

4. ಚೀನಾದ ವೂಲ್ಫ್ ವಾರಿಯರ್ ರಾಜತಾಂತ್ರಿಕತೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಜಲ ಜೀವನ್ ಮಿಷನ್ (JJM).

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಕೃಷಿ ಉತ್ಪನ್ನ ರಫ್ತುದಾರ ರಾಷ್ಟ್ರಗಳ ಟಾಪ್ 10 ಪಟ್ಟಿಯಲ್ಲಿ ಭಾರತ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಕಲಾ ಪ್ರಕಾರಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ವಿಶ್ವ ಪರಂಪರೆಯ ಸ್ಥಾನಮಾನ ಪಡೆದ ರಾಮಪ್ಪ ದೇವಸ್ಥಾನ:


(Ramappa temple gets World Heritage tag)

 ಸಂದರ್ಭ:

ಇತ್ತೀಚೆಗೆ, ತೆಲಂಗಾಣದ ವಾರಂಗಲ್‌ನ ಪಾಲಂಪೆಟ್‌ನಲ್ಲಿರುವ 13 ನೇ ಶತಮಾನದ ರಾಮಪ್ಪ ದೇವಸ್ಥಾನ’ವನ್ನು ವಿಶ್ವ ಪರಂಪರೆ ಸಮಿತಿಯು (World Heritage Committee – WHC) ಯುನೆಸ್ಕೋದ’ ವಿಶ್ವ ಪರಂಪರೆಯ ತಾಣ ‘ಎಂದು ಘೋಷಿಸಿದೆ.

ಹಿನ್ನೆಲೆ:

ರಾಮಪ್ಪ ದೇವಸ್ಥಾನವನ್ನು ‘ವಿಶ್ವ ಪರಂಪರೆಯ ತಾಣ’ ಗಳ ಪಟ್ಟಿಯಲ್ಲಿ ಸೇರಿಸುವ ಮೊದಲು, 2019 ರಲ್ಲಿ ಮೊದಲ ಬಾರಿಗೆ ಈ ದೇವಾಲಯವನ್ನು, ಸ್ಮಾರಕಗಳು ಮತ್ತು ತಾಣಗಳ ಅಂತರರಾಷ್ಟ್ರೀಯ ಮಂಡಳಿ’ (International Council on Monuments and Sites- ICOMOS) ಯು ಸಂದರ್ಶಿಸಿತ್ತು ಮತ್ತು ಅದರಲ್ಲಿ ಒಂಬತ್ತು ನ್ಯೂನತೆಗಳನ್ನು ಉಲ್ಲೇಖಿಸಿತ್ತು.

  1. ಈ ದೇವಾಲಯಕ್ಕೆ ‘ವಿಶ್ವ ಪರಂಪರೆಯ ತಾಣ’ ದ ಸ್ಥಾನಮಾನ ನೀಡುವುದನ್ನು ವಿರೋಧಿಸಿದ ಏಕೈಕ ದೇಶ ನಾರ್ವೆ. ಈ ಕ್ರಮವನ್ನು ವಿರೋಧಿಸಲು ICOMOS ನ ಸಂಶೋಧನೆಗಳನ್ನು ನಾರ್ವೆ ಉಲ್ಲೇಖಿಸಿದೆ.

 

ರಾಮಪ್ಪ ದೇವಸ್ಥಾನದ ಕುರಿತು:

  1. ರಾಮಪ್ಪ ದೇವಾಲಯವನ್ನು 13 ನೇ ಶತಮಾನದಲ್ಲಿ ಕಾಕತೀಯ ರಾಜ ಗಣಪತಿದೇವನ ಸೇನಾಧಿಪತಿ ರಾಚೆರ್ಲಾ ರುದ್ರಯ್ಯ (Racherla Rudrayya) ನಿರ್ಮಿಸಿದನು.
  2. ದೇವಾಲಯದ ಅಡಿಪಾಯವನ್ನು ಸ್ಯಾಂಡ್‌ಬಾಕ್ಸ್ ತಂತ್ರ” (Sandbox Technique) ದಿಂದ ನಿರ್ಮಿಸಲಾಗಿದೆ, ಅದರ ನೆಲಹಾಸನ್ನು ಗ್ರಾನೈಟ್‌ನಿಂದ ಮತ್ತು ಕಂಬಗಳನ್ನು ಬಸಾಲ್ಟ್ ಕಲ್ಲಿನಿಂದ ನಿರ್ಮಿಸಲಾಗಿದೆ.
  3. ದೇವಾಲಯದ ಕೆಳಗಿನ ಭಾಗವು ಕೆಂಪು ಮರಳುಗಲ್ಲಿನಿಂದ ಮಾಡಲ್ಪಟ್ಟಿದ್ದರೆ, ಅದರ ಬಿಳಿ ಬಣ್ಣದ ‘ಗೋಪುರವು’ ಕಡಿಮೆ ತೂಕದ ತೆಳುವಾದ ಇಟ್ಟಿಗೆಗಳಿಂದ ಮಾಡಲ್ಪಟ್ಟಿದೆ. ಈ ಇಟ್ಟಿಗೆಗಳು ನೀರಿನ ಮೇಲೆ ತೇಲುತ್ತವೆ ಎಂದು ವರದಿಯಾಗಿದೆ.

 

ಸ್ಯಾಂಡ್‌ಬಾಕ್ಸ್ ತಂತ್ರಜ್ಞಾನ’ ಎಂದರೇನು?

‘ಸ್ಯಾಂಡ್‌ಬಾಕ್ಸ್‌ಗಳು’ ಕಟ್ಟಡದ ನಿರ್ಮಾಣಕ್ಕೆ ಮುಂಚಿತವಾಗಿ ಸಿದ್ಧಪಡಿಸಿದ ಒಂದು ರೀತಿಯ ಅಡಿಪಾಯ. ಸ್ಯಾಂಡ್‌ಬಾಕ್ಸ್ ತಂತ್ರದಲ್ಲಿ, ಅಡಿಪಾಯವನ್ನು ತಯಾರಿಸಲು ಅಗೆದ ಹಳ್ಳವನ್ನು ಮರಳು ಸುಣ್ಣ (Sand Lime) ಮತ್ತು ಬೆಲ್ಲ ಮತ್ತು ಕರಕ್ಕಾಯಾ (ಕಪ್ಪು ಮಿರ್ಟಲ್ ಹಣ್ಣು) ಮಿಶ್ರಣದಿಂದ (ಹಿಡಿತವನ್ನು ಬಿಗಿಗೊಳಿಸಲು) ತುಂಬಿಸಲಾಗುತ್ತದೆ.

  1. ಭೂಕಂಪಗಳ ಸಂದರ್ಭದಲ್ಲಿ, ಅಡಿಪಾಯದಲ್ಲಿರುವ ಸ್ಯಾಂಡ್‌ಬಾಕ್ಸ್‌ಗಳು ‘ಕುಶನ್’ ರೀತಿಯಲ್ಲಿ ಕಾರ್ಯನಿರ್ವಹಿಸುತ್ತವೆ.

ವಿಶ್ವ ಪರಂಪರೆಯ ಸಮಿತಿ:

(World Heritage Committee)

  1. ‘ವಿಶ್ವ ಪರಂಪರೆ ಸಮಿತಿ’ ವರ್ಷಕ್ಕೊಮ್ಮೆ ಸಭೆ ಸೇರುತ್ತದೆ ಮತ್ತು ‘ಪಾರ್ಟಿ ಟು ದಿ ಕನ್ವೆನ್ಷನ್’ ದೇಶಗಳ 21 ಪ್ರತಿನಿಧಿಗಳನ್ನು (ಈ ಸಮಾವೇಶಕ್ಕೆ ಸಹಿಹಾಕಿದ 21 ದೇಶಗಳ ಪ್ರತಿನಿಧಿಗಳನ್ನು ಒಒಳಗೊಂಡಿರುತ್ತದೆ) ಒಳಗೊಂಡಿದೆ. ಈ ಪ್ರತಿನಿಧಿ ಸದಸ್ಯರನ್ನು ‘ಆರು ವರ್ಷಗಳ’ ಅವಧಿಗೆ ಆಯ್ಕೆ ಮಾಡಲಾಗುತ್ತದೆ.
  2. ಈ ಸಮಿತಿಯ ಮುಖ್ಯ ಕಾರ್ಯವೆಂದರೆ ‘ವಿಶ್ವ ಪರಂಪರೆಯ ಸಮಾವೇಶ’ವನ್ನು ಜಾರಿಗೆ ತರುವುದು ಮತ್ತು ವಿಶ್ವ ಪರಂಪರೆಯ ನಿಧಿಯಿಂದ ಹಣಕಾಸಿನ ನೆರವು ನೀಡುವುದು. ‘ವಿಶ್ವ ಪರಂಪರೆಯ ಪಟ್ಟಿಯಲ್ಲಿ’ ‘ಯಾವುದೇ ತಾಣದ’ ಸೇರ್ಪಡೆಗೆ ಸಂಬಂಧಿಸಿದಂತೆ ವಿಶ್ವ ಪರಂಪರೆಯ ಸಮಿತಿಯ ನಿರ್ಧಾರವೇ ಅಂತಿಮವಾಗಿರುತ್ತದೆ.
  3. ಈ ಸಮಿತಿಯು ‘ವಿಶ್ವ ಪರಂಪರೆಯ ಪಟ್ಟಿಯಲ್ಲಿ’ ಸೇರ್ಪಡೆಗೊಂಡಿರುವ ತಾಣಗಳ ಸಂರಕ್ಷಣೆಯ ಸ್ಥಿತಿಯ ವರದಿಯನ್ನು ಪರಿಶೀಲಿಸುತ್ತದೆ ಮತ್ತು ‘ವಿಶ್ವ ಪರಂಪರೆಯ ಅಪಾಯ’ (World Heritage in Danger) ದ ಪಟ್ಟಿಯಲ್ಲಿ ಈ ತಾಣಗಳನ್ನು ಇರಿಸುವ ಅಥವಾ ತೆಗೆದುಹಾಕುವ ವಿಷಯದ ಬಗ್ಗೆ ನಿರ್ಧರಿಸುತ್ತದೆ.

 

ವಿಶ್ವ ಪರಂಪರೆಯ ತಾಣಗಳ’ ಸಂರಕ್ಷಣೆ:

  1. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (United Nations Educational, Scientific and Cultural Organization- UNESCO) ಅಂದರೆ ‘ಯುನೆಸ್ಕೋ’ ದ ಮುಖ್ಯ ಉದ್ದೇಶವು, ಮಾನವೀಯತೆಗೆ ಮಹೋನ್ನತವೆಂದು ಪರಿಗಣಿಸಲ್ಪಟ್ಟಿರುವ ವಿಶ್ವದಾದ್ಯಂತದ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯ ತಾಣಗಳನ್ನು ಗುರುತಿಸುವುದು, ರಕ್ಷಿಸುವುದು ಮತ್ತು ರಕ್ಷಣೆಯನ್ನು ಪ್ರೋತ್ಸಾಹಿಸುವ ಗುರಿಯನ್ನು ಹೊಂದಿದೆ.

ಅಥವಾ

  1. ವಿಶ್ವಸಂಸ್ಥೆಯ ಶೈಕ್ಷಣಿಕ, ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಸಂಸ್ಥೆ (ಯುನೆಸ್ಕೋ) ಯ ಉದ್ದೇಶವು ಮಾನವೀಯತೆಗೆ ಮುಖ್ಯವೆಂದು ಪರಿಗಣಿಸಲ್ಪಟ್ಟಿರುವ ವಿಶ್ವದಾದ್ಯಂತ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯ ತಾಣಗಳ ಗುರುತಿಸುವಿಕೆ, ರಕ್ಷಣೆ ಮತ್ತು ಸಂರಕ್ಷಣೆಯನ್ನು ಉತ್ತೇಜಿಸುವುದು.
  2. ‘ವಿಶ್ವ ಪರಂಪರೆಯ ತಾಣಗಳ ರಕ್ಷಣೆ’ ಯು,‘ವಿಶ್ವ ಸಾಂಸ್ಕೃತಿಕ ಮತ್ತು ನೈಸರ್ಗಿಕ ಪರಂಪರೆಯ ಸಂರಕ್ಷಣೆಗೆ ಸಂಬಂಧಿಸಿದ ಸಮಾವೇಶ’(Convention concerning the Protection of the World Cultural and Natural Heritage) ಎಂಬ ಅಂತರರಾಷ್ಟ್ರೀಯ ಒಪ್ಪಂದದಲ್ಲಿ ಸಾಕಾರಗೊಂಡಿದೆ. ಈ ಒಪ್ಪಂದವನ್ನು ಯುನೆಸ್ಕೋ 1972 ರಲ್ಲಿ ಅಂಗೀಕರಿಸಿತು.

 

ವಿಶ್ವ ಪರಂಪರೆಯ ತಾಣ’ಕ್ಕೆ ನಾಮನಿರ್ದೇಶನ ಪ್ರಕ್ರಿಯೆ:

  1. ಮೊದಲನೆಯದಾಗಿ, ಒಂದು ದೇಶವು ತನ್ನ ಪ್ರಮುಖ ಸಾಂಸ್ಕೃತಿಕ ಮತ್ತು ನೈಸರ್ಗಿಕ ತಾಣಗಳನ್ನು ಡಾಕ್ಯುಮೆಂಟ್‌ನಲ್ಲಿ ಅಥವಾ ದಾಖಲೆಯಲ್ಲಿ ಪಟ್ಟಿ ಮಾಡಬೇಕು, ಈ ‘ಡಾಕ್ಯುಮೆಂಟ್’ ಅನ್ನು ‘ತಾತ್ಕಾಲಿಕ ಪಟ್ಟಿ’ ಎಂದು ಕರೆಯಲಾಗುತ್ತದೆ.
  2. ಇದರ ನಂತರ, ಈ ಪಟ್ಟಿಯಿಂದ ಕೆಲವು ಸೈಟ್‌ಗಳನ್ನು ಆಯ್ಕೆಮಾಡಲಾಗುತ್ತದೆ ಮತ್ತು ಅವುಗಳನ್ನು ‘ನಾಮನಿರ್ದೇಶನ ಫೈಲ್’ (Nomination File) ನಲ್ಲಿ ಇರಿಸಲಾಗುತ್ತದೆ. ನಂತರ, ‘ನಾಮನಿರ್ದೇಶನ ಕಡತ’ದಲ್ಲಿ ಸೇರಿಸಲಾದ ತಾಣಗಳನ್ನು’ ಸ್ಮಾರಕಗಳು ಮತ್ತು ತಾಣಗಳ ಅಂತರರಾಷ್ಟ್ರೀಯ ಮಂಡಳಿ ಮತ್ತು ‘ವಿಶ್ವ ಸಂರಕ್ಷಣಾ ಒಕ್ಕೂಟ’ (World Conservation Union) ಗಳು ನಿರ್ಣಯಿಸುತ್ತವೆ ಅಥವಾ ಮೌಲ್ಯಮಾಪನ ಮಾಡುತ್ತವೆ.
  3. ಯಾವುದೇ ದೇಶದಿಂದ, ತಾತ್ಕಾಲಿಕ ಪಟ್ಟಿಯಲ್ಲಿ ಸೇರಿಸಲಾಗಿರುವ ತಾಣಗಳನ್ನು (ಸೈಟ್‌ಗಳನ್ನು) ಹೊರತುಪಡಿಸಿ ಇತರ ಸೈಟ್‌ಗಳನ್ನು ನಾಮನಿರ್ದೇಶನ ಮಾಡಲಾಗುವುದಿಲ್ಲ.
  4. ಮೌಲ್ಯಮಾಪನದ ನಂತರ, ಈ ಸಂಸ್ಥೆಗಳು ತಮ್ಮ ಶಿಫಾರಸುಗಳನ್ನು ‘ವಿಶ್ವ ಪರಂಪರೆಯ ಸಮಿತಿಗೆ’ ಸಲ್ಲಿಸುತ್ತವೆ.

 

ವಿಷಯಗಳು: 18ನೇ ಶತಮಾನದ ಮಧ್ಯಭಾಗದಿಂದ ಇಂದಿನವರೆಗೆ ಆಧುನಿಕ ಭಾರತದ ಇತಿಹಾಸ-ಮಹತ್ವದ ಘಟನೆಗಳು ವ್ಯಕ್ತಿಗಳು ಮತ್ತು ಸಮಸ್ಯೆಗಳು.

ಚಂದ್ರಶೇಖರ್ ಆಜಾದ್:


(Chandra Shekhar Azad)

ಸಂದರ್ಭ:

ಚಂದ್ರಶೇಖರ್ ಆಜಾದ್ ರವರ ಜನ್ಮ ಜಯಂತಿಯನ್ನು ಜುಲೈ 23ರಂದು ಆಚರಿಸಲಾಯಿತು.

 

ಚಂದ್ರಶೇಖರ್ ಆಜಾದ್ ರವರ ಕುರಿತು:

  1. ಅವರು 1906 ರ ಜುಲೈ 23 ರಂದು ಇಂದಿನ ಮಧ್ಯಪ್ರದೇಶದ ಅಲಿರಾಜ್‌ಪುರ ಜಿಲ್ಲೆಯ ಭಾವ್ರಾದಲ್ಲಿ ಜನಿಸಿದರು.
  2. 15 ನೇ ವಯಸ್ಸಿನಲ್ಲಿ ‘ಚಂದ್ರಶೇಖರ್ ಆಜಾದ್’ ಅಸಹಕಾರ ಚಳುವಳಿಯಲ್ಲಿ ಪಾಲ್ಗೊಂಡರು.
  3. ಗಾಂಧೀಜಿಯವರು 1922 ರಲ್ಲಿ ‘ಅಸಹಕಾರ ಚಳವಳಿ’ಯನ್ನು ಕೊನೆಗೊಳಿಸಿದ ನಂತರ, ಚಂದ್ರಶೇಖರ್ ಅವರು ‘ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್’ (HRA) ಗೆ ಸೇರಿದರು.
  4. ‘ಹಿಂದೂಸ್ತಾನ್ ರಿಪಬ್ಲಿಕನ್ ಅಸೋಸಿಯೇಷನ್’ ಅನ್ನು 1928 ರಲ್ಲಿ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ್ ಆರ್ಮಿ’ (HSRA) ಎಂದು ಮರುಸಂಘಟಿಸಲಾಯಿತು.
  5. ಆಜಾದ್ 1925 ರ ಕಾಕೋರಿ ಪಿತೂರಿಯಲ್ಲಿ ಭಾಗಿಯಾಗಿದ್ದರು.
  6. ಅವರು ಫೆಬ್ರವರಿ 27, 1931 ರಂದು ಅಲಹಾಬಾದ್‌ನ ಆಜಾದ್ ಪಾರ್ಕ್‌ನಲ್ಲಿ ನಿಧನರಾದರು.
  7. ಆಜಾದ್, 1926 ರಲ್ಲಿ ವೈಸ್ರಾಯ್ ರೈಲನ್ನು ಸ್ಫೋಟಿಸುವ ಪ್ರಯತ್ನ ಮತ್ತು ಜೆ.ಪಿ. ಸಾಂಡರ್ಸ್ (J P Saunders)ನ ಹತ್ಯಾಕಾಂಡದಲ್ಲಿ ಭಾಗಿಯಾಗಿದ್ದ. ಲಾಲಾ ಲಜಪತ್ ರಾಯ್ ಅವರ ಸಾವಿಗೆ ಪ್ರತೀಕಾರ ತೀರಿಸಿಕೊಳ್ಳಲು ಸೌಂಡರ್ಸ್‌ನನ್ನು ಹತ್ಯೆ ಮಾಡಲಾಯಿತು.

 

ಅವರನ್ನು “ಆಜಾದ್” ಎಂದು ಏಕೆ ಕರೆಯಲಾಗುತ್ತದೆ?

‘ಅಸಹಕಾರ ಚಳವಳಿಯಲ್ಲಿ’ ಭಾಗವಹಿಸಿದ್ದಕ್ಕಾಗಿ ಅವರನ್ನು ಬ್ರಿಟಿಷ್ ಪೊಲೀಸರು ಬಂಧಿಸಿರುತ್ತಾರೆ.ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿದ ನಂತರ, ಅವರು ಹೆಮ್ಮೆಯಿಂದ ತಮ್ಮ ಹೆಸರನ್ನು ‘ಆಜಾದ್’, ಅವರ ತಂದೆಯ ಹೆಸರು ‘ಸ್ವತಂತ್ರ’ ಮತ್ತು ಅವರ ವಾಸಸ್ಥಳವನ್ನು ‘ಜೈಲು’ ಎಂದು ಘೋಷಿಸಿದರು. ಅಂದಿನಿಂದಲೇ ‘ಆಜಾದ್’ ಎಂಬ ಹೆಸರು ಅವರೊಂದಿಗೆ ಅನ್ವರ್ಥವಾಗಿತ್ತು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಭಾರತೀಯ ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

ಸಾಗರೋತ್ತರ ಭಾರತೀಯ ನಾಗರಿಕ ಕಾರ್ಡ್ ಹೊಂದಿರುವವರು:


(OCI Card Holders)

 

ಸಂದರ್ಭ:

ಇತ್ತೀಚೆಗೆ, ದೆಹಲಿ ಹೈಕೋರ್ಟ್, ದಂಪತಿಗಳ ಪೈಕಿ ಒಬ್ಬರ ಸಾಗರೋತ್ತರ ಭಾರತೀಯ ನಾಗರಿಕತ್ವ (Citizenship of India – OCI) ಕಾರ್ಡ್ ಅರ್ಜಿಯನ್ನು ಪ್ರಕ್ರಿಯೆಗೊಳಿಸಲು, ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ’ (Foreigners Regional Registration Office – FRRO) ಯು ಇಬ್ಬರೂ ಸಂಗಾತಿಗಳು ಅಥವಾ ದಂಪತಿಗಳು ಭೌತಿಕವಾಗಿ ಅಥವಾ ವರ್ಚುವಲ್ (ಜಾಲ ಗೋಷ್ಠಿ) ರೂಪದಲ್ಲಿ ಉಪಸ್ಥಿತರಿರಬೇಕು ಎಂದು ಒತ್ತಾಯಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟಿದೆ.

 

ಏನಿದು ಸಮಸ್ಯೆ?

ಇರಾನಿನ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯ ವೇಳೆ ಹೈಕೋರ್ಟ್ ಈ ಆದೇಶ ನೀಡಿದೆ. ಅರ್ಜಿಯಲ್ಲಿ, ಮಹಿಳೆಯು ತನ್ನ OCI ಕಾರ್ಡ್ ಅರ್ಜಿಯನ್ನು ಸ್ವೀಕರಿಸಲು ನ್ಯಾಯಾಲಯವು ‘ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ’ (FRRO) ಗೆ ನಿರ್ದೇಶನ ನೀಡಬೇಕೆಂದು ಕೋರಿದ್ದರು. ಭಾರತೀಯ ಪ್ರಜೆಯಾದ ಪತಿಯೊಂದಿಗಿನ ತನ್ನ ಸಂಬಂಧ ಹಳಸಿದ ನಂತರ ಈ ಮಹಿಳೆಯು ಬೆಂಗಳೂರಿನಲ್ಲಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಾಳೆ.

 

ಸಾಗರೋತ್ತರ ಭಾರತೀಯ ನಾಗರಿಕತ್ವ (OCI) ಕಾರ್ಡ್ ಹೊಂದಿರುವವರು ಯಾರು?

 ಸಾಗರೋತ್ತರ ಭಾರತೀಯ ನಾಗರಿಕರು (OCI) ಎಂದರೆ ಯಾರು?

ಭಾರತ ಸರ್ಕಾರವು 2005 ರಲ್ಲಿ, ಪೌರತ್ವ ಕಾಯ್ದೆ 1955 ಕ್ಕೆ ತಿದ್ದುಪಡಿ ಮಾಡುವ ಮೂಲಕ ‘ಸಾಗರೋತ್ತರ ಭಾರತೀಯ ನಾಗರಿಕತ್ವ ಯೋಜನೆ’ ಯನ್ನು ಪ್ರಾರಂಭಿಸಿತು.

 2015 ರ ಜನವರಿ 09 ರಂದು ಭಾರತ ಸರ್ಕಾರವು ಭಾರತೀಯ ಮೂಲದ ಜನರು (PIO) ಕಾರ್ಡ್ ನ ಬಳಕೆಯನ್ನು ಸಾಗರೋತ್ತರ ಭಾರತೀಯ ನಾಗರಿಕರು (OCI) ಕಾರ್ಡ್ ನೊಂದಿಗೆ ವಿಲೀನಗೊಳಿಸುವ ಮೂಲಕ ಸ್ಥಗಿತಗೊಳಿಸಿತು.

ಅರ್ಹತೆ: ಇದಕ್ಕೆ ಅರ್ಜಿ ಸಲ್ಲಿಸಲು ಈ ಕೆಳಗಿನ ವರ್ಗದ ವಿದೇಶಿ ಪ್ರಜೆಗಳಿಗೆ ಭಾರತ ಸರ್ಕಾರ ಅವಕಾಶ ನೀಡಿದೆ.

ವಿನಾಯಿತಿಗಳು:

  1. OCIಗೆ ಅರ್ಜಿ ಸಲ್ಲಿಸುವ ಯಾರಾದರೂ ವಿದೇಶದಲ್ಲಿ ಮಾನ್ಯವಾದ ಪಾಸ್‌ಪೋರ್ಟನ್ನು ಹೊಂದಿರಬೇಕು.
  2. ಬೇರೆ ಯಾವುದೇ ದೇಶದ ಪೌರತ್ವ ಹೊಂದಿರದ ವ್ಯಕ್ತಿಗಳು OCI ಸ್ಥಾನಮಾನ ಪಡೆಯಲು ಅರ್ಹರಲ್ಲ.
  3. ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ಪೌರತ್ವ ಹೊಂದಿರುವ ಪೋಷಕರ ಮಕ್ಕಳು ಅರ್ಜಿ ಸಲ್ಲಿಸಲು ಅರ್ಹರಲ್ಲ.

 

OCI ಕಾರ್ಡ ಹೊಂದಿದವರಿಗೆ ದೊರೆಯುವ ಪ್ರಯೋಜನಗಳು:

  1. ಭಾರತಕ್ಕೆ ಹಲವು ಬಾರಿ ಭೇಟಿ ನೀಡಲು ಜೀವಮಾನದ ವೀಸಾ. (ಭಾರತದಲ್ಲಿ ಸಂಶೋಧನಾ ಕಾರ್ಯಗಳನ್ನು ಕೈಗೊಳ್ಳಲು ವಿಶೇಷ ಅನುಮತಿಯ ಅಗತ್ಯವಿದೆ).
  2. ಅನಿರ್ದಿಷ್ಟಾಧಿವರೆಗೆ ಭಾರತದಲ್ಲಿ ವಾಸ್ತವ್ಯ ಹೂಡಲು ವಿದೇಶಿಯರ ಪ್ರಾದೇಶಿಕ ನೋಂದಣಿ ಅಧಿಕಾರಿ (FRRO) ಅಥವಾ ವಿದೇಶಿಯರ ನೋಂದಣಿ ಅಧಿಕಾರಿ (FRO) ಯಲ್ಲಿ ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ.
  3. ಕೃಷಿ ಮತ್ತು ತೋಟದ ಆಸ್ತಿಗಳನ್ನು ಸ್ವಾಧೀನಪಡಿಸಿಕೊಳ್ಳುವುದನ್ನು/ ಖರೀದಿಸುವುದನ್ನು ಹೊರತುಪಡಿಸಿ, OCI ಸ್ಥಾನಮಾನ ಹೊಂದಿರುವವರು ಆರ್ಥಿಕ, ಹಣಕಾಸು ಮತ್ತು ಶೈಕ್ಷಣಿಕ ಕ್ಷೇತ್ರಗಳಲ್ಲಿ NRI ಗಳೊಂದಿಗೆ ಸಮಾನ ಸೌಲಭ್ಯಗಳನ್ನು ಹೊಂದಿದ್ದಾರೆ.
  4. ಭಾರತೀಯ ಮಕ್ಕಳನ್ನು ಅಂತರ್-ದೇಶಿಯ ದತ್ತು ತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಅನಿವಾಸಿ ಭಾರತೀಯರಂತೆಯೇ (NRI) ಸೌಲಭ್ಯವನ್ನು ಹೊಂದಿದ್ದಾರೆ.
  5. ರಾಷ್ಟ್ರೀಯ ಸ್ಮಾರಕಗಳಿಗೆ ಪ್ರವೇಶ ಶುಲ್ಕ, ವೈದ್ಯರು, ದಂತವೈದ್ಯರು, ದಾದಿಯರು, ವಕೀಲರು, ವಾಸ್ತುಶಿಲ್ಪಿಗಳು, ಚಾರ್ಟರ್ಡ್ ಅಕೌಂಟೆಂಟ್ಸ್ ಮತ್ತು ಔಷಧಿಕಾರರಂತಹ ವೃತ್ತಿಗಳ ಅಭ್ಯಾಸಕ್ಕೆ / ವೃತ್ತಿಗಳನ್ನು ಕೈಗೊಳ್ಳುವುದಕ್ಕೆ ಸಂಬಂಧಿಸಿದಂತೆ NRI ಗಳಂತೆ ಸಮಾನ ಅವಕಾಶ ಮತ್ತು ಸೌಲಭ್ಯವನ್ನು ಹೊಂದಿರುವರು.
  6. ಅಖಿಲ ಭಾರತ ಪೂರ್ವ ವೈದ್ಯಕೀಯ ಪರೀಕ್ಷೆಗಳಲ್ಲಿ ಭಾಗವಹಿಸಲು ಅನಿವಾಸಿ ಭಾರತೀಯರಿಗೆ (NRI) ಸಮಾನರಾಗಿರುವರು.
  7. ಭಾರತದ ದೇಶೀಯ ವಲಯಗಳಲ್ಲಿನ ವಿಮಾನಯಾನ ದಟ್ಟಣೆಯ ವಿಷಯಗಳಲ್ಲಿ ಪಾವತಿಸಬೇಕಾದ ಟಿಕೆಟ್ ಶುಲ್ಕಕ್ಕೆ ಸಂಬಂಧಿಸಿದಂತೆ ಭಾರತೀಯ ನಾಗರಿಕರೊಂದಿಗೆ (Indian citizens) ಸಮಾನವಾಗಿ ಪರಿಗಣಿಸಲಾಗುತ್ತದೆ.
  8. ಭಾರತದ ರಾಷ್ಟ್ರೀಯ ಉದ್ಯಾನವನಗಳು ಮತ್ತು ವನ್ಯಜೀವಿ ಅಭಯಾರಣ್ಯಗಳಿಗೆ ಪ್ರವೇಶಿಸುವ ಸಂದರ್ಭದಲ್ಲಿ ಇವರಿಗೆ ಕೂಡ ಭಾರತೀಯರಿಗೆ ನಿಗಧಿಪಡಿಸಿದ ಶುಲ್ಕವನ್ನೇ ವಿಧಿಸಲು ಅವಕಾಶ ಮಾಡಿಕೊಡಲಾಗಿದೆ.
  9. ಸೇವೆಗಳನ್ನು ಪಡೆಯಲು ಗುರುತು ಪತ್ರವಾಗಿ OCI ಕಿರುಪುಸ್ತಕವನ್ನು ಬಳಸಬಹುದು. ಸ್ಥಳೀಯ ವಿಳಾಸವನ್ನು ವಸತಿ ಪುರಾವೆಯಾಗಿ ಅಫಿಡವಿಟ್ ನೊಂದಿಗೆ ಲಗತ್ತಿಸಬಹುದು.

 

OCI ಕಾರ್ಡ ಹೊಂದಿದವರಿಗೆ ಇರುವ ಕೆಲವು ನಿರ್ಬಂಧಗಳು:

  1. ಅವರಿಗೆ ಮತದಾನದ ಹಕ್ಕಿಲ್ಲ.
  2. ಯಾವುದೇ ಸಾರ್ವಜನಿಕ ಸೇವೆ / ಸರ್ಕಾರಿ ಉದ್ಯೋಗ ಪಡೆಯುವ ಹಕ್ಕಿಲ್ಲ.
  3. ಪ್ರಧಾನ ಮಂತ್ರಿ, ರಾಷ್ಟ್ರಪತಿ, ಉಪರಾಷ್ಟ್ರಪತಿ, ವರಿಷ್ಠ ನ್ಯಾಯಾಲಯದ ಮತ್ತು ಉಚ್ಚ ನ್ಯಾಯಾಲಯದ ನ್ಯಾಯಾಧೀಶರ, ಸಂಸತ್ತಿನ ಸದಸ್ಯ ಅಥವಾ ರಾಜ್ಯ ವಿಧಾನಮಂಡಲದ ಕಚೇರಿಗಳನ್ನು ಅಲಂಕರಿಸಲು ಸಾಧ್ಯವಿಲ್ಲ.
  4. ಕೃಷಿ ಆಸ್ತಿಯನ್ನು ಹೊಂದಲು ಸಾಧ್ಯವಿಲ್ಲ.

 

OCI ಕಾರ್ಡ್ ಹೊಂದುವಲ್ಲಿನ ಇತ್ತೀಚಿನ ಬದಲಾವಣೆಗಳ ಪ್ರಕಾರ:

  1. ಒಬ್ಬ ವ್ಯಕ್ತಿಯು 20 ವರ್ಷ ತುಂಬುವ ಮೊದಲು OCI ಕಾರ್ಡ್ ಹೋಲ್ಡರ್ ಆಗಿ ನೋಂದಾಯಿಸಿಕೊಂಡಿದ್ದರೆ, ಅವನು/ಅವಳು 20 ವರ್ಷವನ್ನು ಪೂರೈಸಿದ ನಂತರ, ಹೊಸ ಪಾಸ್ಪೋರ್ಟ್ ನೀಡುವಾಗ ಒಮ್ಮೆ ಮಾತ್ರ ಒಸಿಐ ಕಾರ್ಡ್ ಅನ್ನು ಮರು ನೀಡಲಾಗುತ್ತದೆ / ಮರುಹಂಚಿಕೆ ಮಾಡಲಾಗುತ್ತದೆ. ಇದರೊಂದಿಗೆ ಅವನು/ಅವಳು ವಯಸ್ಕ ರಾಗಿರುವುದನ್ನು ಖಚಿತಪಡಿಸಿಕೊಳ್ಳಲು ಅವರ ಮುಖದ ರೂಪರೇಖೆಯನ್ನು / ಲಕ್ಷಣಗಳನ್ನು ದಾಖಲಿಸಲಾಗುತ್ತದೆ.
  2. ಒಬ್ಬ ವ್ಯಕ್ತಿಯು 20 ವರ್ಷದ ನಂತರ OCI ಕಾರ್ಡ್ ಹೋಲ್ಡರ್ ಆಗಿ ನೋಂದಾಯಿಸಿಕೊಂಡರೆ, OCI ಕಾರ್ಡ್ ಅನ್ನು ಮರುಹಂಚಿಕೆ ಮಾಡುವ ( there will be no requirement of reissue of the OCI card) ಯಾವುದೇ ಅಗತ್ಯವಿಲ್ಲ.

 

ವಿಷಯಗಳು: ಕೇಂದ್ರ ಮತ್ತು ರಾಜ್ಯಗಳಿಂದ  ದುರ್ಬಲ ವರ್ಗದ ಜನಸಮುದಾಯದವರಿಗೆ ಇರುವ ಕಲ್ಯಾಣ ಯೋಜನೆಗಳು ಮತ್ತು ಈ ಯೋಜನೆಗಳ ಕಾರ್ಯಕ್ಷಮತೆ; ಕಾರ್ಯವಿಧಾನಗಳು,ಕಾನೂನುಗಳು, ಸಂಸ್ಥೆಗಳು ಮತ್ತು ಈ ದುರ್ಬಲ ವಿಭಾಗಗಳ ರಕ್ಷಣೆ ಮತ್ತು ಸುಧಾರಣೆಗಾಗಿ ರಚಿಸಲಾದ ಸಂಸ್ಥೆಗಳು.

ಮಕ್ಕಳ ಸಬಲೀಕರಣ’ಕ್ಕಾಗಿ-PM CARES ಯೋಜನೆ:


(‘PM CARES for Children’ scheme)

 

ಸಂದರ್ಭ:

ಇತ್ತೀಚೆಗೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯವು,‘ಪಿಎಂ ಕೇರ್ಸ್ ಫಾರ್ ಚಿಲ್ಡ್ರನ್’ (PM CARES for Children) ಯೋಜನೆಯಡಿ ನೆರವು ಪಡೆಯಲು ಅರ್ಜಿಗಳನ್ನು ಸಲ್ಲಿಸಲು ಮತ್ತು ಅರ್ಹ ಮಕ್ಕಳನ್ನು ಗುರುತಿಸಲು ಅನುಕೂಲವಾಗುವಂತೆ ವೆಬ್ ಆಧಾರಿತ ಪೋರ್ಟಲ್ pmcaresforchildren.in ಅನ್ನು ಪ್ರಾರಂಭಿಸಿದೆ.

 

PM CARES for Children ಯೋಜನೆಯ ಕುರಿತು:

 ಕೋವಿಡ್ ಪೀಡಿತ ಮಕ್ಕಳಿಗೆ ಸಹಾಯ ಮಾಡಲು ಮತ್ತು ಸಬಲೀಕರಣಗೊಳಿಸಲು ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.

 

ಅರ್ಹತೆ: COVID 19 ರ ಕಾರಣದಿಂದಾಗಿ ಪೋಷಕರನ್ನು ಅಥವಾ ಪಾಲಕರನ್ನು ಕಳೆದುಕೊಂಡಿರುವ ಎಲ್ಲ ಮಕ್ಕಳಿಗೆ ಅಥವಾ ಉಳಿದಿರುವ ಪೋಷಕರು ಅಥವಾ ಕಾನೂನು ಪಾಲಕರು / ದತ್ತು ಪಡೆದ ಪೋಷಕರ ‘ಮಕ್ಕಳಿಗಾಗಿ ಪಿಎಂ-ಕೇರ್ಸ್ ಫಾರ್ ಚಿಲ್ಡ್ರನ್’ (PM CARES for Children) ಯೋಜನೆಯಡಿ ಸಹಾಯ ನೀಡಲಾಗುವುದು.

 

ಈ ಯೋಜನೆಯ ಪ್ರಮುಖ ವೈಶಿಷ್ಟ್ಯಗಳು:

  1. ಇಂಥ ಮಕ್ಕಳ ಹೆಸರಿನಲ್ಲಿ ಸರ್ಕಾರ ನಿಶ್ಚಿತ ಠೇವಣಿ: ಮಕ್ಕಳಿಗೆ (ಗಂಡು/ಹೆಣ್ಣು) 18 ವರ್ಷ ತುಂಬುವವರೆಗೆ ವಾರ್ಷಿಕ ₹5 ಲಕ್ಷದಷ್ಟು ಆರೋಗ್ಯ ವಿಮೆ, 18 ವರ್ಷ ತುಂಬಿದ ಬಳಿಕ ಪ್ರತಿ ತಿಂಗಳು ಆರ್ಥಿಕ ನೆರವು, 23 ವರ್ಷ ತುಂಬಿದಾಗ ₹10 ಲಕ್ಷ ಹಣಕಾಸಿನ ನೆರವು, ಉನ್ನತ ಶಿಕ್ಷಣಕ್ಕೆ ಸಾಲ ಸೌಲಭ್ಯ ನೀಡಲಾಗುವುದು.
  2. ಶಾಲಾ ಶಿಕ್ಷಣ: 10 ವರ್ಷದೊಳಗಿನ ಮಕ್ಕಳಿಗೆ: ಸಮೀಪದ ಕೇಂದ್ರೀಯ ವಿದ್ಯಾಲಯದಲ್ಲಿ ಅಥವಾ ಖಾಸಗಿ ಶಾಲೆಯಲ್ಲಿ ದಾಖಲಾತಿ.
  3. ಶಾಲಾ ಶಿಕ್ಷಣ: 11–18 ವರ್ಷದೊಳಗಿನ ಮಕ್ಕಳಿಗೆ: ಕೇಂದ್ರ ಸರ್ಕಾರದ ವಸತಿಸಹಿತ ಸೈನಿಕ ಶಾಲೆ ಅಥವಾ ನವೋದಯ ವಿದ್ಯಾಲಯಗಳಲ್ಲಿ ಪ್ರವೇಶ.
  4. ಉನ್ನತ ಶಿಕ್ಷಣಕ್ಕೆ ನೆರವು: ಅಸ್ತಿತ್ವದಲ್ಲಿರುವ ಶಿಕ್ಷಣ ಸಾಲದ ಮಾನದಂಡಗಳ ಪ್ರಕಾರ ಭಾರತದಲ್ಲಿ ವೃತ್ತಿಪರ ಶಿಕ್ಷಣ / ಉನ್ನತ ಶಿಕ್ಷಣಕ್ಕಾಗಿ ಶಿಕ್ಷಣ ಸಾಲವನ್ನು ಪಡೆಯಲು ಮಗುವಿಗೆ ಸಹಾಯ ಮಾಡಲಾಗುವುದು.
  5. ಆರೋಗ್ಯ ವಿಮೆ: ಅಂತಹ ಎಲ್ಲ ಮಕ್ಕಳನ್ನು ‘ಆಯುಷ್ಮಾನ್ ಭಾರತ್ ಯೋಜನೆ’ (PM-JAY) ಅಡಿಯಲ್ಲಿ 5 ಲಕ್ಷ ರೂ. ಗಳ ಆರೋಗ್ಯ ವಿಮಾ ರಕ್ಷಣೆಯೊಂದಿಗೆ ಫಲಾನುಭವಿಗಳಾಗಿ ದಾಖಲಿಸಲಾಗುವುದು.
  6. ಮಗುವನ್ನು ಖಾಸಗಿ ಶಾಲೆಯಲ್ಲಿ ಸೇರಿಸಿದ್ದಲ್ಲಿ, ಶಿಕ್ಷಣ ಹಕ್ಕು ಕಾಯ್ದೆಯ ಮಾನದಂಡಗಳ ಪ್ರಕಾರ ನಿಗದಿತ ಶುಲ್ಕವನ್ನು ಪಿಎಂ- ಕೇರ್ಸ್ ನಿಧಿಯಿಂದ ನೀಡಲಾಗುವುದು.
  7. ವಿದ್ಯಾರ್ಥಿ ವೇತನ:ಪದವಿಪೂರ್ವ ಮತ್ತು ವೃತ್ತಿಪರ ಕೋರ್ಸ್‌ಗಳಿಗೆ ಕೋರ್ಸ್ ಶುಲ್ಕಕ್ಕೆ ಸಮಾನವಾದ ವಿದ್ಯಾರ್ಥಿ ವೇತನ.
  8. ಹಾಲಿ ವಿದ್ಯಾರ್ಥಿವೇತನ ಯೋಜನೆಗಳ ಅಡಿಯಲ್ಲಿ ಅರ್ಹತೆ ಪಡೆಯದ ಮಕ್ಕಳಿಗೆ, ಪಿಎಂ ಕೇರ್ಸ್ ವಿದ್ಯಾರ್ಥಿ ವೇತನ ನೀಡಲಿದೆ.

 

ಈ ಕ್ರಮಗಳ ಅವಶ್ಯಕತೆ:

  1. ಭಾರತವು ಪ್ರಸ್ತುತ COVID-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯನ್ನು ಎದುರಿಸುತ್ತಿರುವ ಸಂದರ್ಭದಲ್ಲಿ  ಈ ಸಾಂಕ್ರಾಮಿಕ ರೋಗದಿಂದಾಗಿ ಅನೇಕ ಮಕ್ಕಳು ತಮ್ಮ ಪೋಷಕರನ್ನು ಕಳೆದುಕೊಂಡ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ.
  2. ಇದರೊಂದಿಗೆ, ಈ ಮಕ್ಕಳನ್ನು ದತ್ತು ಪಡೆಯುವ ಸೋಗಿನಲ್ಲಿ ಮಕ್ಕಳ ಕಳ್ಳಸಾಗಣೆ ಸಾಧ್ಯತೆಯೂ ಹೆಚ್ಚಾಗಿದೆ.
  3. ಕೋವಿಡ್ -19 ರ ಕಾರಣದಿಂದಾಗಿ ಜಾರಿಗೆ ಬಂದ ಲಾಕ್‌ಡೌನ್ ಸಮಯದಲ್ಲಿ ‘ಬಾಲ್ಯ ವಿವಾಹ’ ಸಂಬಂಧಿತ ಪ್ರಕರಣಗಳ ಸಂಖ್ಯೆಯಲ್ಲಿಯೂ ಹೆಚ್ಚಳ ಕಂಡುಬಂದಿದೆ.

 

ದಯವಿಟ್ಟು ಗಮನಿಸಿ:

“ಮುಖ್ಯಮಂತ್ರಿ ಬಾಲಸೇವಾ ಯೋಜನೆ”

  1. ಕೋವಿಡ್‌ನಿಂದ ತಂದೆ-ತಾಯಿಯರನ್ನು ಕಳೆದುಕೊಂಡು ಅನಾಥರಾದ ಮಕ್ಕಳಿಗಾಗಿ ಕರ್ನಾಟಕ ರಾಜ್ಯ ಸರ್ಕಾರವು ‘ಮುಖ್ಯಮಂತ್ರಿ ಬಾಲಸೇವಾ ಯೋಜನೆ’ ಜಾರಿಗೆ ತರಲಿದ್ದು, ತಿಂಗಳಿಗೆ ₹3,500 ನೀಡಲಾಗುವುದು ಎಂದು ಕರ್ನಾಟಕ ಸರ್ಕಾರವು ತಿಳಿಸಿದೆ.
  2. ಕೊರೊನಾದಿಂದ ಅನಾಥರಾಗಿರುವ ಮಕ್ಕಳ ಉತ್ತಮ ಭವಿಷ್ಯ ರೂಪಿಸುವ ದೃಷ್ಟಿಯಿಂದ ಕೇಂದ್ರ ಸರ್ಕಾರದ ಮಾದರಿಯಲ್ಲಿ ‘ಮುಖ್ಯಮಂತ್ರಿ ಬಾಲಸೇವಾ ಯೋಜನೆ’ಯನ್ನು ಕರ್ನಾಟಕದಲ್ಲಿ ಜಾರಿಗೆ ತರಲಾಗಿದೆ’.
  3. ‘ಕೋವಿಡ್‌ನಿಂದ ಅನಾಥರಾದ 10 ವರ್ಷದೊಳಗಿನ ಮಕ್ಕಳ ಪೋಷಣೆ ಮತ್ತು ಉತ್ತಮ ಶಿಕ್ಷಣ ಒದಗಿಸುವ ದೃಷ್ಟಿಯಿಂದ ಅಂತಹ ಮಕ್ಕಳನ್ನು ಸರ್ಕಾರಿ ಸ್ವಾಮ್ಯದ ಮಾದರಿ ವಸತಿ ಶಾಲೆಗಳಲ್ಲಿ ದಾಖಲು ಮಾಡಿಕೊಳ್ಳಲಾಗುವುದು. 10ನೇ ತರಗತಿ ಪೂರೈಸಿದ ಮಕ್ಕಳಿಗೆ ಉಚಿತ ಲ್ಯಾಪ್‌ಟಾಪ್ ನೀಡಲಾಗುವುದು’ ಎಂದು ಸರ್ಕಾರ ತಿಳಿಸಿದೆ.
  4. ’21 ವರ್ಷ ತುಂಬಿರುವ ಹೆಣ್ಣುಮಕ್ಕಳಿಗೆ ಉನ್ನತ ಶಿಕ್ಷಣ ಸೇರಿದಂತೆ ಮುಂದಿನ ಜೀವನಕ್ಕೆ ಅನುಕೂಲ ಕಲ್ಪಿಸಲು ₹1 ಲಕ್ಷ ನೆರವು ನೀಡಲಾಗುವುದು. ರಕ್ಷಣೆಗೆ ಯಾರೂ ಇಲ್ಲದಂತಹ ಅನಾಥ ಮಕ್ಕಳನ್ನು ನೋಡಿಕೊಳ್ಳಲು ಸರ್ಕಾರದಿಂದ ಮಾರ್ಗದರ್ಶಿ ಅಥವಾ ಹಿತೈಷಿಗಳನ್ನು ನೇಮಿಸಲಾಗುವುದು.

 

ಯೋಜನೆಯ ಸಮಗ್ರ ವಿವರಗಳು:

  1. ವಿಸ್ತೃತ ಕುಟುಂಬದ ಸದಸ್ಯರ ಆರೈಕೆಯಲ್ಲಿರುವ ಮಕ್ಕಳಿಗೆ ಪ್ರತಿ ತಿಂಗಳು ₹3500.
  2. 10 ವರ್ಷದೊಳಗಿನ ಮಕ್ಕಳ ಪಾಲನೆಗೆ ವಿಸ್ತೃತ ಕುಟುಂಬದ ಸದಸ್ಯರು ಇಲ್ಲದಿದ್ದಲ್ಲಿ ಅಂತಹ ಮಕ್ಕಳನ್ನು ನೋಂದಾಯಿತ ಮಕ್ಕಳ ಪಾಲನಾ ಕೇಂದ್ರಕ್ಕೆ ದಾಖಲಿಸಿ ಆರೈಕೆ ಮಾಡಲಾಗುವುದು.
  3. ಅನಾಥ ಮಕ್ಕಳಿಗೆ ಕಸ್ತೂರಬಾ ಗಾಂಧಿ ವಸತಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಮತ್ತು ಮುರಾರ್ಜಿ ದೇಸಾಯಿ ವಸತಿ ಶಾಲೆ ಗಳಂತಹ ಮಾದರಿ ವಸತಿ ಶಾಲೆಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲಾಗುವುದು.
  4. SSLC ಪೂರ್ಣಗೊಳಿಸಿದ ಮಕ್ಕಳಿಗೆ ಉನ್ನತ ಶಿಕ್ಷಣ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ಲ್ಯಾಪ್ಟಾಪ್ ಅಥವಾ ಟ್ಯಾಬ್ ವಿತರಣೆ.
  5. ಕೋವಿಡ್ ನಿಂದ ಅನಾಥರಾದ ಮಕ್ಕಳಿಗೆ ಒಬ್ಬ ಮಾರ್ಗದರ್ಶಿ ಅಥವಾ ಹಿತೈಷಿಯನ್ನು ನೇಮಿಸಿ ಮಗುವಿನ ಸರ್ವತೋಮುಖ ಬೆಳವಣಿಗೆಯನ್ನು ಪ್ರೋತ್ಸಾಹಿಸುವುದು.

 

ವಿಷಯಗಳು: ಭಾರತ ಮತ್ತು ನೆರೆಹೊರೆಯ ದೇಶಗಳೊಂದಿಗೆ ಅದರ ಸಂಬಂಧಗಳು.

ಚೀನಾ ಮತ್ತು ಪಾಕಿಸ್ತಾನದಿಂದ, ಅಫ್ಘಾನಿಸ್ತಾನದ ಕಾರ್ಯತಂತ್ರಗಳಿಗೆ ಅನುಗುಣವಾಗಿ ‘ಜಂಟಿ ಕ್ರಮ’ದ ಚೌಕಟ್ಟು:


ಸಂದರ್ಭ:

ಅಫ್ಘಾನಿಸ್ತಾನದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯ ಮಧ್ಯೆ, ಚೀನಾ ಮತ್ತು ಪಾಕಿಸ್ತಾನಗಳು ಅಫಘಾನಿಸ್ತಾನದಲ್ಲಿ ನಿಕಟ ಸಹಕಾರವನ್ನು ಹೊಂದುವ ಮೂಲಕ ಒಟ್ಟಾಗಿ ಕೆಲಸ  ಮಾಡುವುದಾಗಿ ಘೋಷಿಸಿವೆ.

 

ಹಿನ್ನೆಲೆ:

ಚೀನಾ ಮತ್ತು ಪಾಕಿಸ್ತಾನ ಎರಡೂ ಅಫ್ಘಾನಿಸ್ತಾನದ ನೆರೆಯ ಮತ್ತು ಅಫ್ಘಾನಿಸ್ತಾನದ ಪರಿಸ್ಥಿತಿಯಿಂದ ಹೆಚ್ಚು ಪರಿಣಾಮಕ್ಕೊಳಗಾಗಬಹುದಾದ ರಾಷ್ಟ್ರಗಳಾಗಿವೆ. ಆದ್ದರಿಂದ, ಅಫ್ಘಾನಿಸ್ತಾನದಲ್ಲಿ ಬದಲಾಗುತ್ತಿರುವ ಪರಿಸ್ಥಿತಿಯನ್ನು ಎದುರಿಸಲು ಎರಡೂ ದೇಶಗಳಿಗೆ ಪರಸ್ಪರ ಸಹಕಾರವನ್ನು ಬಲಪಡಿಸುವುದು ಬಹಳ ಮುಖ್ಯವಾಗಿದೆ.

ಈ ನಿಟ್ಟಿನಲ್ಲಿ, ಈ ಎರಡು ದೇಶಗಳು ಅಫ್ಘಾನಿಸ್ತಾನದಲ್ಲಿ ಕೆಲಸ ಮಾಡಲು ಐದು ಅಂಶಗಳ ಜಂಟಿ ಯೋಜನೆಯನ್ನು ರೂಪಿಸಿವೆ. ಇವು ಈ ಕೆಳಗಿನ ಅಂಶಗಳನ್ನು  ಒಳಗೊಂಡಿವೆ:

 

  1. ಯುದ್ಧದ ಉಲ್ಬಣವನ್ನು ತಪ್ಪಿಸುವುದು ಮತ್ತು ಅಫ್ಘಾನಿಸ್ತಾನನ್ನು ಪೂರ್ಣಪ್ರಮಾಣದ ಅಂತರ್ಯುದ್ಧದಲ್ಲಿ ತೊಡಗದಂತೆ ತಡೆಯುವುದು.
  2. ಕಾಬೂಲ್ ಮತ್ತು ತಾಲಿಬಾನ್ ನಡುವೆ ‘ಅಂತರ್-ಅಫಘಾನ (intra-Afghan negotiations) ಮಾತುಕತೆಗಳನ್ನು ಉತ್ತೇಜಿಸುವುದು ‘ಸಮಗ್ರ ಮತ್ತು ಅಂತರ್ಗತ ರಾಜಕೀಯ ಚೌಕಟ್ಟನ್ನು’ ಸ್ಥಾಪಿಸುವುದು.
  3. ಭಯೋತ್ಪಾದಕ ಪಡೆಗಳನ್ನು ದೃಢವಾಗಿ ಎದುರಿಸುವುದು.
  4. ಅಪಘಾನಿಸ್ತಾನದ ನೆರೆಯ ರಾಷ್ಟ್ರಗಳಲ್ಲಿ ಸಹಕಾರವನ್ನು ಉತ್ತೇಜಿಸುವುದು ಮತ್ತು ಅವುಗಳಲ್ಲಿ ಪರಸ್ಪರ ಸಹಕಾರಕ್ಕಾಗಿ ಒಂದು ವೇದಿಕೆಯನ್ನು ನಿರ್ಮಾಣಮಾಡುವ ಸಾಧ್ಯತೆಯನ್ನು ಅನ್ವೇಷಿಸುವುದು.
  5. ಅಫಘಾನ್ ವಿಷಯದ ಬಗ್ಗೆ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಒಟ್ಟಾಗಿ ಮತ್ತು ನಿಕಟವಾಗಿ ಕೆಲಸ ಮಾಡುವುದು.

 

ಅಫ್ಘಾನಿಸ್ತಾನದ ಪ್ರಸ್ತುತ ಪರಿಸ್ಥಿತಿಯ ಹಿನ್ನೆಲೆ:

ಅಫ್ಘಾನಿಸ್ತಾನದಿಂದ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವುದಾಗಿ ಅಮೆರಿಕ ಘೋಷಿಸಿದ ನಂತರ ಇತ್ತೀಚೆಗೆ ತಾಲಿಬಾನ್ ದೇಶದ ಹಲವು ಭಾಗಗಳ ಮೇಲೆ ಹಿಡಿತ ಸಾಧಿಸಲು ಪ್ರಾರಂಭಿಸಿದೆ.

ಅಮೆರಿಕದ ಸೈನ್ಯವನ್ನು ತರಾತುರಿಯಲ್ಲಿ ಹಿಂತೆಗೆದುಕೊಳ್ಳುವುದನ್ನು ವಿಶ್ವದ ಅನೇಕ ದೇಶಗಳು ಟೀಕಿಸಿವೆ, ಈ ದೇಶಗಳು ಭಯೋತ್ಪಾದನೆಯ ವಿರುದ್ಧ ಹೋರಾಡುವ ಯಾವುದೇ ಉದ್ದೇಶವನ್ನು ಅಮೆರಿಕವು ಈಡೇರಿಸಿಲ್ಲ ಅಥವಾ ಅಫ್ಘಾನಿಸ್ತಾನದಲ್ಲಿ ಶಾಂತಿ ಸ್ಥಾಪನೆ ಎಂದು ಹೇಳುತ್ತವೆ. ಆದರೆ ತನ್ನ ಸೈನ್ಯವನ್ನು ಹಿಂತೆಗೆದುಕೊಳ್ಳುವ ಮೂಲಕ, ಅದು ಖಂಡಿತವಾಗಿಯೂ ಅಫ್ಘಾನಿಸ್ತಾನದಲ್ಲಿ ಭದ್ರತೆಯ ಹೊಸ ಕಾರ್ಮೋಡವನ್ನು ಸೃಷ್ಟಿಸಿದೆ.

 

ಅಫ್ಘಾನಿಸ್ತಾನದಲ್ಲಿ ಇಲ್ಲಿಯವರೆಗೆ ನಡೆದ ಘಟನೆಗಳು:

  1. 9/11 ದಾಳಿಯ ಒಂದು ತಿಂಗಳ ನಂತರ, ಆಪರೇಷನ್ ಎಂಡ್ಯೂರಿಂಗ್ ಫ್ರೀಡಂ’ (Operation Enduring Freedom) ನ ಭಾಗವಾಗಿ ಅಫ್ಘಾನಿಸ್ತಾನದ ವಿರುದ್ಧ ಅಮೆರಿಕ ಸಂಯುಕ್ತ ಸಂಸ್ಥಾನವು ವೈಮಾನಿಕ ದಾಳಿ ನಡೆಸಿತು.
  2. ಈ ದಾಳಿಯ ನಂತರ, ಅಫ್ಘಾನಿಸ್ತಾನದೊಂದಿಗೆ ನ್ಯಾಟೋ ಸಮ್ಮಿಶ್ರ ಪಡೆಗಳು ಯುದ್ಧವನ್ನು ಘೋಷಿಸಿದವು.
  3. ಯುಎಸ್ ತಾಲಿಬಾನ್ ಆಡಳಿತವನ್ನು ಪದಚ್ಯುತಗೊಳಿಸಿತು ಮತ್ತು ಅಫ್ಘಾನಿಸ್ತಾನದಲ್ಲಿ ಪರಿವರ್ತನಾ ಸರ್ಕಾರವನ್ನು ಸ್ಥಾಪಿಸಿತು.
  4. ಈಗ, ಜುಲೈ 2021 ರಲ್ಲಿ, ಯುಎಸ್ ಸೈನ್ಯವು 20 ವರ್ಷಗಳ ಸುದೀರ್ಘ ಯುದ್ಧದ ನಂತರ ಅಫ್ಘಾನಿಸ್ತಾನದ ಅತಿದೊಡ್ಡ ವಾಯು ನೆಲೆಯಿಂದ ನಿರ್ಗಮಿಸಿತು, ಅಫಘಾನಿಸ್ತಾನದಲ್ಲಿ ಯುಎಸ್ ಮಿಲಿಟರಿ ಕಾರ್ಯಾಚರಣೆಯನ್ನು ಪರಿಣಾಮಕಾರಿಯಾಗಿ ಕೊನೆಗೊಳಿಸಿತು.

 

ಭಾರತಕ್ಕೆ ಮುಂದಿನ ಹಾದಿ?

  1. ಪ್ರಸ್ತುತ ಭಾರತದ ಅಫಘಾನ್ ನೀತಿಯ ನಿರ್ಣಾಯಕ ಅಡ್ಡಹಾದಿಯನ್ನು ತಲುಪಿದೆ; ಅಫ್ಘಾನಿಸ್ತಾನದಲ್ಲಿ ತನ್ನ ನಾಗರಿಕ ಸ್ವತ್ತುಗಳನ್ನು ರಕ್ಷಿಸುವುದರ ಜೊತೆಗೆ, ಅಫಘಾನಿಸ್ತಾನದಲ್ಲಿ ಮತ್ತು ಸುತ್ತಮುತ್ತ ನಡೆಯುತ್ತಿರುವ ‘ಪ್ರಧಾನ ಆಟ’ದಲ್ಲಿ ಪ್ರಸ್ತುತವಾಗಲು, ಭಾರತವು ತನ್ನ ಅಫ್ಘಾನಿಸ್ತಾನ ನೀತಿಯನ್ನು ಆಮೂಲಾಗ್ರವಾಗಿ ಮರುಹೊಂದಿಸಬೇಕಾಗುತ್ತದೆ.
  2. ಭಾರತವು ತನ್ನ ರಾಷ್ಟ್ರೀಯ ಹಿತದೃಷ್ಟಿಯಿಂದ ತಾಲಿಬಾನ್ ಜೊತೆ ಇನ್ನೂ ತಡವಾಗುವ ಮುನ್ನ ‘ಮುಕ್ತ ಮಾತುಕತೆ’ಗಳನ್ನು ಪ್ರಾರಂಭಿಸಬೇಕು. ಹಿಂಜರಿಯುವ, ಹಿಂಭಾಗದ ಹಾದಿಯಿಂದ ನಡೆಯುವ ಅರೆಮನಸ್ಸಿನ ಮಾತುಕತೆಯ ಸಮಯ ಮುಗಿದಿದೆ.
  3. ಭಾರತವು ಅಫ್ಘಾನಿಸ್ತಾನದಲ್ಲಿ ಈಗಲಾದರೂ ಸಕ್ರಿಯವಾಗದಿದ್ದರೆ, ಆಗ ರಷ್ಯಾ, ಇರಾನ್, ಪಾಕಿಸ್ತಾನ ಮತ್ತು ಚೀನಾ ಅಫ್ಘಾನಿಸ್ತಾನದ ರಾಜಕೀಯ ಮತ್ತು ಭೌಗೋಳಿಕ ರಾಜಕೀಯ ಭವಿಷ್ಯದ ವಾಸ್ತುಶಿಲ್ಪಿಗಳಾಗಿ ಹೊರಹೊಮ್ಮಲಿದ್ದು, ಇದು ಭವಿಷ್ಯದಲ್ಲಿ ಖಂಡಿತವಾಗಿಯೂ ಭಾರತೀಯ ಹಿತಾಸಕ್ತಿಗಳಿಗೆ ಹಾನಿಕಾರಕವಾಗಿದೆ.

 

ವಿಷಯಗಳು: ಭಾರತ ಮತ್ತು ನೆರೆಹೊರೆಯ ದೇಶಗಳೊಂದಿಗೆ ಅದರ ಸಂಬಂಧಗಳು.

ಚೀನಾದ ವೂಲ್ಫ್ ವಾರಿಯರ್ ರಾಜತಾಂತ್ರಿಕತೆ:


(China’s wolf warrior diplomacy)

ಸಂದರ್ಭ:

‘ಕ್ಸಿ ಜಿನ್‌ಪಿಂಗ್’ ಆಡಳಿತಾವಧಿಯಲ್ಲಿ, ಚೀನಾದ ಧೋರಣೆಯ ಹೊಸ ರಾಜತಾಂತ್ರಿಕ ವಿಧಾನವನ್ನು “ವೂಲ್ಫ್ ವಾರಿಯರ್ ರಾಜತಾಂತ್ರಿಕತೆ” (wolf warrior diplomacy) ಎಂದು ಕರೆಯಲಾಗುತ್ತದೆ.ಇದು ಚೀನಾದ ಹಿತಾಸಕ್ತಿಗಳನ್ನು ಮುನ್ನಡೆಸುವಲ್ಲಿನ ‘ಪ್ರಬಲ ಹಾವಭಾವ’ ದಿಂದ ಸ್ಪಷ್ಟವಾಗಿದೆ.

 

ವುಲ್ಫ್ ವಾರಿಯರ್ ಡಿಪ್ಲೊಮಸಿ’ ಅಥವಾ ಅಪ್ರೋಚ್ ಎಂದರೇನು?

  1. ‘ವೂಲ್ಫ್ ವಾರಿಯರ್ ರಾಜತಾಂತ್ರಿಕತೆ’ (ತೋಳ ಯೋಧ ರಾಜತಾಂತ್ರಿಕತೆ) ಯ ಈ ಹೆಸರು, ಚೀನೀ ರಾಜತಾಂತ್ರಿಕತೆಗೆ ಸಂಬಂಧಿಸಿದಂತೆ ಚೀನಾದ ಪ್ರಸಿದ್ಧ ಚಲನಚಿತ್ರಗಳ ಹೆಸರನ್ನು ಇಡಲಾಗಿದೆ, ಮತ್ತು ಚೀನಾದ ರಾಷ್ಟ್ರೀಯ ಹಿತಾಸಕ್ತಿಗಳನ್ನು ರಕ್ಷಿಸಲು ಚೀನಾದ ರಾಜತಾಂತ್ರಿಕರ ಆಕ್ರಮಣಕಾರಿ ಮನೋಭಾವವನ್ನು ಇದು ಹೆಚ್ಚಾಗಿ ಮುಖಾಮುಖಿ ವಿಧಾನಗಳಲ್ಲಿ ವ್ಯಕ್ತಪಡಿಸುತ್ತದೆ.
  2. ಚೀನಾದ ರಾಜತಾಂತ್ರಿಕತೆಯ ದೃಷ್ಟಿಕೋನವು ಸಂಪ್ರದಾಯವಾದಿ, ನಿಷ್ಕ್ರಿಯ ಮತ್ತು ಕಡಿಮೆ-ಧೋರಣೆಯ ವಿಧಾನದಿಂದ ದೃಢವಾದ, ಹೈಪರ್-ಆಕ್ಟಿವ್ ಮತ್ತು ಉನ್ನತ ಪ್ರೊಫೈಲ್‌ಗೆ ಬದಲಾಗುವುದನ್ನು ಇದು ದೃಢಪಡಿಸುತ್ತದೆ.

ಉದಾಹರಣೆ:

  1. ಕಳೆದ ಒಂದು ವರ್ಷದಲ್ಲಿ, ಚೀನಾ ವಿದೇಶಾಂಗ ಸಚಿವಾಲಯವು ಯುನೈಟೆಡ್ ಸ್ಟೇಟ್ಸ್, ಭಾರತ, ಆಸ್ಟ್ರೇಲಿಯಾ ಮತ್ತು ಇತರ ದೇಶಗಳ ವಿರುದ್ಧ ಕಠಿಣ ನಿಲುವನ್ನು ತೆಗೆದುಕೊಂಡಿದೆ.
  2. ಕಳೆದ ವರ್ಷ ಏಪ್ರಿಲ್ ನಲ್ಲಿ , ಚೀನೀ ಕೋಸ್ಟ್ ಗಾರ್ಡ್ ಹಡಗು ಪ್ಯಾರಾಸೆಲ್ ದ್ವೀಪಗಳ ಬಳಿ ವಿಯೆಟ್ನಾಂ ಮೀನುಗಾರಿಕೆ ಟ್ರಾಲರ್ ಅನ್ನು ಮುಳುಗಿಸಿತು ಎಂದು ವರದಿಯಾಗಿದೆ. ವಿಯೆಟ್ನಾಂ ಪ್ರತಿಭಟಿಸಿದಾಗ, ಚೀನಾದ ವಿದೇಶಾಂಗ ಸಚಿವಾಲಯವು ಈ ಪ್ರದೇಶದಲ್ಲಿ ವಿಯೆಟ್ನಾಂನ ಹಕ್ಕುಗಳು “ಕಾನೂನುಬಾಹಿರ” ಎಂದು ಹೇಳಿದೆ.
  3. ನಂತರ, ಚೀನಾ ದಕ್ಷಿಣ ಚೀನಾ ಸಮುದ್ರದಲ್ಲಿ 80 ದ್ವೀಪಗಳು, ಬಂಡೆಗಳು, ಸೀಮೌಂಟ್ಗಳು, ಷೋಲಾಗಳು ಮತ್ತು ರೇಖೆಗಳ ಮರುನಾಮಕರಣವನ್ನು ಘೋಷಿಸಿತು, ಇದು ಈ ರಚನೆಗಳಿಗೆ ಇತರ ಹಕ್ಕುದಾರರ ಕೋಪದ ಪ್ರತಿಭಟನೆಗೆ ಕಾರಣವಾಯಿತು.
  4. ಚೀನಾ ಕೂಡ ವಿವಿಧ ಸ್ಥಳಗಳಲ್ಲಿ ಭಾರತವನ್ನು ಪ್ರವೇಶಿಸಲು ಪ್ರಯತ್ನಿಸಿದೆ.

 

ಚೀನಾ ‘ವುಲ್ಫ್ ವಾರಿಯರ್ ಡಿಪ್ಲೊಮಸಿ’ ಅಳವಡಿಸಿಕೊಳ್ಳಲು ಕಾರಣವೇನು?

  1. ಉದಯೋನ್ಮುಖ ರಾಷ್ಟ್ರೀಯತೆ: 2010 ರಿಂದ, ಚೀನಾದ ಜಿಡಿಪಿ ಜಪಾನ್ ಅನ್ನು ಹಿಂದಿಕ್ಕಿ ವಿಶ್ವದ ಎರಡನೇ ಅತಿದೊಡ್ಡ ಆರ್ಥಿಕತೆಯಾದಾಗಿನಿಂದ, ಚೀನಾದ ವಿಶ್ವಾಸವು ಗಮನಾರ್ಹವಾಗಿ ಬೆಳೆದಿದೆ ಮತ್ತು ಚೀನಾದ ವಿದೇಶಾಂಗ ನೀತಿ ಹೆಚ್ಚು ದೃಢವಾಗಿದೆ.
  2. ಚೀನಾ, ಒಂದು ಪ್ರಮುಖ ಶಕ್ತಿಯಾಗಿ: ಚೀನಾದ ಇತ್ತೀಚಿನ ರಾಜತಾಂತ್ರಿಕ ಆಕ್ರಮಣವು ಸಹ, COVID-19 ವಿರುದ್ಧದ ಜಾಗತಿಕ ಹೋರಾಟದಲ್ಲಿ ಚೀನಾವನ್ನು ಪ್ರಮುಖ ಶಕ್ತಿಯಾಗಿ ನಿರೂಪಿಸುವ ಅಧಿಕೃತ ಪ್ರಯತ್ನದ ಭಾಗವಾಗಿದೆ. ಸಾಂಕ್ರಾಮಿಕ-ಬಿಕ್ಕಟ್ಟಿನ ಸಂದರ್ಭದ, ಆರಂಭಿಕ ಹಂತದಲ್ಲಿ COVID-19 ಔಟ್ ಬ್ರೆಕ್ ಅನ್ನು ನಿಭಾಯಿಸಿದ ರೀತಿಯಿಂದಾಗಿ ಚೀನಾದ ಚಿತ್ರಣವು ಕಳಂಕಿತವಾಯಿತು.
  3. ತನ್ನ ದೃಢವಾದ ಮತ್ತು ಮಹತ್ವಾಕಾಂಕ್ಷೆಯ ‘ಬೆಲ್ಟ್ ಮತ್ತು ರೋಡ್ ಇನಿಶಿಯೇಟಿವ್’ ಮತ್ತು ‘ಮ್ಯಾರಿಟೈಮ್ ಸಿಲ್ಕ್ ರೋಡ್’ ಯೋಜನೆಗಳೊಂದಿಗೆ, ಚೀನಾ ಭಾರತದ ನೆರೆಯ ರಾಷ್ಟ್ರಗಳ ಮೇಲೆ ತನ್ನ ಪ್ರಭಾವವನ್ನು ಬಲಪಡಿಸಿಕೊಂಡಿದೆ. ಭೂತಾನ್ ಹೊರತುಪಡಿಸಿ, ಭಾರತದ ಬಹುತೇಕ ಎಲ್ಲಾ ನೆರೆಯ ರಾಷ್ಟ್ರಗಳು ಈ ಯೋಜನೆಗಳಲ್ಲಿ ತೊಡಗಿಸಿಕೊಳ್ಳಲು ತೀವ್ರ ಆಸಕ್ತಿ ತೋರಿಸಿವೆ.

 

ಒಟ್ಟಾರೆಯಾಗಿ ಈ ವಿಧಾನವು ಎಷ್ಟು ಯಶಸ್ವಿಯಾಗಿದೆ?

  1. ಈ ‘ವುಲ್ಫ್ ವಾರಿಯರ್ ಡಿಪ್ಲೊಮಸಿ’ ಈಗಾಗಲೇ ಚೀನಾದ ವಿದೇಶಾಂಗ ನೀತಿಯನ್ನು ನಷ್ಟಕ್ಕೆ ದೂಡುತ್ತಿದೆ. ಈ ಕಾರಣದಿಂದಾಗಿ ಅನೇಕ ಋಣಾತ್ಮಕ ‘ಪುಷ್‌ಬ್ಯಾಕ್’ ಅನ್ನು ಸೃಷ್ಟಿಸಿದೆ. ಚೀನಾ ವಿರುದ್ಧವಾಗಿ, ಆಸ್ಟ್ರೇಲಿಯಾವು ಕರೋನ ವೈರಸ್ ಮೂಲದ ಬಗ್ಗೆ ಸ್ವತಂತ್ರ ತನಿಖೆಗೆ ಕರೆ ನೀಡಿದೆ.
  2. ಚೀನಾದ ಮೃದು ಶಕ್ತಿ ಜಾಗತಿಕವಾಗಿ ದುರ್ಬಲವಾಗಿದೆ; ಚೀನಾದ ಈ ಆಕ್ರಮಣಕಾರಿ ವರ್ತನೆಯು ಅದರ ಜಾಗತಿಕ ಚಿತ್ರಣವನ್ನು ಇನ್ನಷ್ಟು ಹಾನಿಗೊಳಿಸುತ್ತದೆ.
  3. ಚೀನಾ-ಭಾರತ ಗಡಿಯಲ್ಲಿ ಗಮನಾರ್ಹ ಮಿಲಿಟರಿ ಒತ್ತಡವನ್ನು ಒಳಗೊಂಡಂತೆ ‘ವುಲ್ಫ್ ವಾರಿಯರ್ ರಾಜತಾಂತ್ರಿಕತೆ’ ಯಿಂದಾಗಿ, ಭಾರತವು ಅಮೆರಿಕಕ್ಕೆ ಬಹಳ ಹತ್ತಿರ ಬಂದಿದೆ ಮತ್ತು ಒಂದು ಶತಕೋಟಿಗೂ ಹೆಚ್ಚು ಜನರನ್ನು ಚೀನಾದ ಆರ್ಥಿಕತೆಯಿಂದ ದೂರ ಮಾಡುತ್ತಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.

ಜಲ ಜೀವನ್ ಮಿಷನ್ (JJM):


(Jal Jeevan Mission (JJM)

 

ಸಂದರ್ಭ:

‘ಜಲ ಜೀವನ್ ಮಿಷನ್’ ಅಡಿಯಲ್ಲಿ, ಅಕ್ಟೋಬರ್ 2, 2020 ರಂದು, ಸರ್ಕಾರಿ ಶಾಲೆಗಳು ಮತ್ತು ಅಂಗನವಾಡಿಗಳಿಗೆ ಕೊಳವೆ ನೀರು ಒದಗಿಸಲು 100 ದಿನಗಳ ಅಭಿಯಾನವನ್ನು ಪ್ರಾರಂಭಿಸಲಾಯಿತು.

ಆದಾಗ್ಯೂ, ಮೂರನೇ ಒಂದು ಭಾಗದಷ್ಟು ಸರ್ಕಾರಿ ಶಾಲೆಗಳು ಮತ್ತು ಅಂಗನವಾಡಿಗಳು ಇನ್ನೂ ಸಮರ್ಪಕ ನಲ್ಲಿ ನೀರಿನ ಸೌಲಭ್ಯವನ್ನು ಹೊಂದಿಲ್ಲ.

ಇದಲ್ಲದೆ, ವಿವಿಧ ರಾಜ್ಯಗಳ ನಡುವೆ ವ್ಯಾಪಕ ಅಸಮಾನತೆಯಿದೆ.ಒಂಬತ್ತು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಈಗಾಗಲೇ ‘ಜಲ್ ಜೀವನ್ ಮಿಷನ್’ ಅಡಿಯಲ್ಲಿ 100% ವ್ಯಾಪ್ತಿಯನ್ನು ಸಾಧಿಸಲಾಗಿದೆ ಎಂಬ ವಾಸ್ತವದ ಹೊರತಾಗಿಯೂ, ಕೆಲವು ಹಿಂದುಳಿದ ರಾಜ್ಯಗಳಿಂದಾಗಿ ರಾಷ್ಟ್ರೀಯ ಸರಾಸರಿ ಕಡಿಮೆಯಾಗುತ್ತಿದೆ.

ಹಿನ್ನೆಲೆ:

‘ಜಲ ಜೀವನ್ ಅಭಿಯಾನ’ವು, 100% ವ್ಯಾಪ್ತಿಯನ್ನು ಸಾಧಿಸುವ ಗುರಿ ಹೊಂದಿದೆ ಮತ್ತು ಪ್ರತಿ ಶಾಲೆ, ಅಂಗನವಾಡಿ ಮತ್ತು ಆಶ್ರಮಶಾಲಾ ಅಥವಾ ವಸತಿ ಬುಡಕಟ್ಟು ಶಾಲೆಯಲ್ಲಿ ಕುಡಿಯಲು ಮತ್ತು ಅಡುಗೆ ಮಾಡಲು, ಯೋಗ್ಯವಾದ ನೀರಿನ ಪೂರೈಕೆಗಾಗಿ, ಮತ್ತು ಶೌಚಾಲಯದಲ್ಲಿ ಕೈ ತೊಳೆಯಲು ಟ್ಯಾಪ್ ವಾಟರ್ ಒದಗಿಸುವ ಉದ್ದೇಶವನ್ನು ಹೊಂದಿದೆ.

ಜಲ ಜೀವನ್ ಮಿಷನ್ ಬಗ್ಗೆ:

2024 ರ ವೇಳೆಗೆ ಪ್ರತಿ ಗ್ರಾಮೀಣ ಕುಟುಂಬದ ಪ್ರತಿ ವ್ಯಕ್ತಿಗೆ ದಿನಕ್ಕೆ 55 ಲೀಟರ್ ನೀರನ್ನು ಮನೆಗಳಿಗೆ ಕ್ರಿಯಾತ್ಮಕ ನಲ್ಲಿ ಸಂಪರ್ಕದ (Functional Household Tap Connections -FHTC) ಮೂಲಕ ಪೂರೈಸಲು JJM ಉದ್ದೇಶಿಸಿದೆ.

ಇದು ಜಲಶಕ್ತಿ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

ಇದು ಒಳಗೊಂಡಿರುವುದು:

  1. ಗುಣಮಟ್ಟದ ಕೊರತೆ ಇರುವ ಪ್ರದೇಶಗಳಲ್ಲಿ, ಬರ ಪೀಡಿತ ಮತ್ತು ಮರುಭೂಮಿ ಪ್ರದೇಶಗಳಲ್ಲಿನ ಗ್ರಾಮಗಳು, ಸಂಸದ ಆದರ್ಶ ಗ್ರಾಮ ಯೋಜನೆ (SAGY) ಅಡಿಯಲ್ಲಿರುವ ಗ್ರಾಮಗಳು, ಇತ್ಯಾದಿಗಳಲ್ಲಿ ಮನೆಗಳಿಗೆ ಕ್ರಿಯಾತ್ಮಕ ನಲ್ಲಿ ಸಂಪರ್ಕದ (FHTCs) ಜೋಡಣೆಗೆ ಆದ್ಯತೆ ನೀಡುವುದು.
  2. ಶಾಲೆಗಳು, ಅಂಗನವಾಡಿ ಕೇಂದ್ರಗಳು, ಗ್ರಾಮ ಪಂಚಾಯಿತಿ ಕಟ್ಟಡಗಳು, ಆರೋಗ್ಯ ಕೇಂದ್ರಗಳು, ಕಲ್ಯಾಣ ಕೇಂದ್ರಗಳು ಮತ್ತು ಸಮುದಾಯ ಕಟ್ಟಡಗಳಿಗೆ ಕ್ರಿಯಾತ್ಮಕ ಟ್ಯಾಪ್ / ನಲ್ಲಿ ಸಂಪರ್ಕವನ್ನು ಒದಗಿಸುವುದು.
  3. ನೀರಿನ-ಗುಣಮಟ್ಟದ ಸಮಸ್ಯೆಗೆ ಕಾರಣವಾದ ಮಾಲಿನ್ಯಕಾರಕಗಳನ್ನು ತೆಗೆದುಹಾಕಲು ತಂತ್ರಜ್ಞಾನದ ಉಪಯೋಗ ಮಾಡುವುದು.

 

ಅನುಷ್ಠಾನ:

  1. ‘ಜಲ ಜೀವನ್ ಮಿಷನ್’ ನೀರಿನ ಸಮುದಾಯ ವಿಧಾನವನ್ನು ಆಧರಿಸಿದೆ ಮತ್ತು ವ್ಯಾಪಕವಾದ ಮಾಹಿತಿ, ಶಿಕ್ಷಣ ಮತ್ತು ಸಂವಹನವನ್ನು ಮಿಷನ್‌ನ ಪ್ರಮುಖ ಅಂಶವಾಗಿ ಒಳಗೊಂಡಿದೆ.
  2. ನೀರಿಗಾಗಿ ಜನಾಂದೋಲನವನ್ನು ರೂಪಿಸುವುದು ಈ ಕಾರ್ಯಾಚರಣೆಯ ಉದ್ದೇಶವಾಗಿದೆ, ಅದರ ಮೂಲಕ ಅದು ಎಲ್ಲರ ಆದ್ಯತೆಯಾಗುವಂತೆ ಮಾಡುವುದಾಗಿದೆ.
  3. ಈ ಜಲಜೀವನ್ ಮಿಷನ್ ಗಾಗಿ, ಕೇಂದ್ರ ರಾಜ್ಯಗಳ ನಡುವೆ ಅನುದಾನದ ಹಂಚಿಕೆಯ ಅನುಪಾತವು ಹಿಮಾಲಯನ್ ಮತ್ತು ಈಶಾನ್ಯ ರಾಜ್ಯಗಳಿಗೆ 90:10 ಇದ್ದರೆ, ಇತರ ರಾಜ್ಯಗಳಿಗೆ 50:50 ಅನುಪಾತದಲ್ಲಿದೆ; ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಸರ್ಕಾರವು 100% ಆರ್ಥಿಕ ನೆರವು ನೀಡಲಿದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಕೃಷಿ ಉತ್ಪನ್ನ ರಫ್ತುದಾರ ರಾಷ್ಟ್ರಗಳ ಟಾಪ್ 10 ಪಟ್ಟಿಯಲ್ಲಿ ಭಾರತ:

(India in top 10 list of agri produce exporters)

 ಕಳೆದ 25 ವರ್ಷಗಳಲ್ಲಿ ವಿಶ್ವ ಕೃಷಿ ವ್ಯಾಪಾರದ ಪ್ರವೃತ್ತಿಗಳ ಕುರಿತು ವಿಶ್ವ ವ್ಯಾಪಾರ ಸಂಸ್ಥೆ (WTO) ಬಿಡುಗಡೆ ಮಾಡಿದ ವರದಿಯ ಪ್ರಕಾರ:

  1. 2019 ರಲ್ಲಿ ಕೃಷಿ ಉತ್ಪನ್ನ ರಫ್ತು ಮಾಡುವ ದೇಶಗಳ ಟಾಪ್ 10 ಪಟ್ಟಿಯಲ್ಲಿ ಭಾರತ ಸೇರಿಕೊಂಡಿದೆ.
  2. ಜಾಗತಿಕ ಕೃಷಿ ರಫ್ತುಗಳಲ್ಲಿ ಭಾರತ ಮತ್ತು ಮೆಕ್ಸಿಕೊ ಕ್ರಮವಾಗಿ 3.1% ಮತ್ತು 3.4% ರಷ್ಟಿದೆ, ಮತ್ತು ಇದರೊಂದಿಗೆ, ಈ ಎರಡೂ ದೇಶಗಳು ಕ್ರಮವಾಗಿ ನ್ಯೂಜಿಲೆಂಡ್ (9 ನೇ ಸ್ಥಾನ) ಮತ್ತು ಮಲೇಷ್ಯಾ (7 ನೇ ಸ್ಥಾನ) ಗಳನ್ನು ವಿಶ್ವದ ಅತಿದೊಡ್ಡ ರಫ್ತುದಾರ ದೇಶಗಳ ಸ್ಥಾನದಿಂದ ಬದಲಾಯಿಸಿವೆ.
  3. 2019 ರಲ್ಲಿ ಭಾರತವು ವಿಶ್ವದ ಮೂರನೇ ಅತಿದೊಡ್ಡ ಹತ್ತಿ ರಫ್ತುದಾರ (7.6%) ಮತ್ತು ನಾಲ್ಕನೇ ಅತಿದೊಡ್ಡ ಆಮದುದಾರ (10%) ದೇಶ ಕೂಡ ಆಗಿತ್ತು.
  4. ಆದಾಗ್ಯೂ, ವಿಶ್ವ ಕೃಷಿ ರಫ್ತಿಗೆ ‘ಮೌಲ್ಯವರ್ಧಿತ ನೀಡುವ ಕೊಡುಗೆ’ ನೀಡುವಲ್ಲಿ ಭಾರತ ಹಿಂದುಳಿದಿದೆ.
  5. 1995 ರಲ್ಲಿ, ಯುಎಸ್ (22.2%) ವಿಶ್ವ ಕೃಷಿ ರಫ್ತು ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು, ಆದರೆ 2019 ರಲ್ಲಿ ಯುರೋಪಿಯನ್ ಒಕ್ಕೂಟವು (16.1%) ಅದನ್ನು ಹಿಂದಿಕ್ಕಿದೆ.
  6. 1995 ರಲ್ಲಿ ವಿಶ್ವ ಕೃಷಿ ರಫ್ತು ಪಟ್ಟಿಯಲ್ಲಿ ಚೀನಾ ಆರನೇ ಸ್ಥಾನದಲ್ಲಿತ್ತು (4%), ಮತ್ತು ಈಗ ಅದು 2019 ರಲ್ಲಿ ನಾಲ್ಕನೇ ಸ್ಥಾನಕ್ಕೆ (5.4%) ಏರಿದೆ.
  7. 1995 ಮತ್ತು 2019 ರ ವರ್ಷಗಳಲ್ಲಿ, ಜಾಗತಿಕವಾಗಿ ಅಗ್ರ 10 ರಫ್ತುದಾರರು ಒಟ್ಟು ಕೃಷಿ ರಫ್ತಿನಲ್ಲಿ 96% ಕ್ಕಿಂತ ಹೆಚ್ಚು ಪಾಲನ್ನು ಹೊಂದಿದ್ದಾರೆ.

Join our Official Telegram Channel HERE for Motivation and Fast Updates

Subscribe to our YouTube Channel HERE to watch Motivational and New analysis videos