[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 9ನೇ ಜುಲೈ 2021

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಆಫ್ರಿಕನ್ ಹಂದಿ ಜ್ವರ.

2. ಅಧಿಕೃತ ಆರ್ಥಿಕ ನಿರ್ವಾಹಕರ ಕಾರ್ಯಕ್ರಮ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಕೃಷಿ ಮೂಲಸೌಕರ್ಯ ನಿಧಿ.

2. ನಾಸಾದ ಕ್ಯಾಸಿನಿ ಬಾಹ್ಯಾಕಾಶ ನೌಕೆಯ ಇತ್ತೀಚಿನ ಸಂಶೋಧನೆಗಳು.

3. ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ WWF ಮತ್ತು UNEP ವರದಿ.

4. ರಾಷ್ಟ್ರೀಯ ಭದ್ರತಾ ಕಾಯ್ದೆ (NSA),1980.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಸ್ಪರ್ಶ [ಪಿಂಚಣಿ ಆಡಳಿತ ವ್ಯವಸ್ಥೆ (ರಕ್ಷಾ)].

2. dbGENVOC

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು:ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ಆಫ್ರಿಕನ್ ಹಂದಿ ಜ್ವರ:


(African Swine Fever)

 ಸಂದರ್ಭ:

ಏಷ್ಯಾದ ಸಣ್ಣ ಸಾಕಣೆ ಕೇಂದ್ರಗಳು ಆಫ್ರಿಕನ್ ಹಂದಿ ಜ್ವರದ (African Swine Fever) ಏಕಾಏಕಿ (ಔಟ್ ಬ್ರೇಕ್) ಹರಡುವಿಕೆಯಿಂದಾಗಿ ಹೆಚ್ಚು ಹಾನಿಗೆ ಒಳಗಾಗಿವೆ. ಏಕೆ?

  1. ಹಂದಿ ಸಾಕಣೆ ಕೇಂದ್ರಗಳು ಮುಖ್ಯವಾಗಿ ಸಣ್ಣ ರೈತರಿಗೆ ಸಂಬಂಧಿಸಿವೆ.
  2. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ, ಶೇಕಡಾ 70 ರಷ್ಟು ಹಂದಿ ಸಾಕಣೆ ಕೇಂದ್ರಗಳು ಸಣ್ಣ ಪ್ರಮಾಣದ ಹಿಡುವಳಿದಾರರ ಒಡೆತನದಲ್ಲಿವೆ.
  3. ಚೀನಾದಲ್ಲಿ ಒಟ್ಟು ಹಂದಿಮಾಂಸ ಉತ್ಪಾದನೆಯಲ್ಲಿ ಶೇ 98 ರಷ್ಟನ್ನು ಸಣ್ಣ ಪ್ರಮಾಣದ ರೈತರು ಮಾಡುತ್ತಾರೆ. ಈ ರೈತರು ಹೊಂದಿರುವ ಹಂದಿಗಳ ಸಂಖ್ಯೆ 100 ಕ್ಕಿಂತ ಕಡಿಮೆ ಇರುತ್ತವೆ.

 

ಭಾರತದಲ್ಲಿ ಇದರ ಪರಿಣಾಮ:

ಆಫ್ರಿಕನ್ ಹಂದಿ ಜ್ವರವು ಸುಮಾರು ಶತಮಾನದಷ್ಟು ಹಳೆಯದಾದ ಕಾಯಿಲೆಯಾಗಿದ್ದು, ಇದು ದೇಶೀಯ ಹಂದಿಗಳು ಮತ್ತು ಕಾಡುಹಂದಿಗಳಿಗೆ ಸೋಂಕು ತರುತ್ತದೆ, ಮತ್ತು ಸೋಂಕಿನಿಂದ ಸುಮಾರು 100 ಪ್ರತಿಶತದಷ್ಟು ಮರಣ ಪ್ರಮಾಣವನ್ನು ಹೊಂದಿದೆ. ಈ ರೋಗವು 2018 ರಿಂದ ವಿಶ್ವದ ಮೂರನೇ ಒಂದು ಭಾಗದಷ್ಟು ಹಂದಿಗಳನ್ನು ಬಲಿ ಪಡೆದಿದೆ.

  1. ಭಾರತವು ಈ ರೋಗದ ಇತ್ತೀಚಿನ ಬಲಿಪಶು. ಸೋಂಕಿತ ಪ್ರಕರಣಗಳು ಮೇ 2020 ರಿಂದ ಇಲ್ಲಿ ವರದಿಯಾಗುತ್ತಿದ್ದವು, ಆದರೆ ಕಳೆದ ಕೆಲವು ತಿಂಗಳುಗಳಲ್ಲಿ ಅವುಗಳ ಸಂಖ್ಯೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ.
  2. ಒಂದು ಅಂದಾಜಿನ ಪ್ರಕಾರ, ಆಫ್ರಿಕನ್ ಹಂದಿ ಜ್ವರ (ASF) ದಿಂದಾಗಿ, ಈಶಾನ್ಯ ರಾಜ್ಯಗಳಲ್ಲಿ ಹಂದಿಮಾಂಸದ ಉತ್ಪಾದನೆಯಲ್ಲಿ ಶೇಕಡಾ 50 ರಷ್ಟು ಇಳಿಕೆ ಕಂಡುಬಂದಿದೆ.

 

ಆಫ್ರಿಕನ್ ಹಂದಿ ಜ್ವರದ ಕುರಿತು:

  1. ASF ಹೆಚ್ಚು ಸಾಂಕ್ರಾಮಿಕ ಮತ್ತು ಮಾರಕ ಪ್ರಾಣಿಗಳ ಕಾಯಿಲೆಯಾಗಿದ್ದು ಅದು ಸಾಕು ಮತ್ತು ಕಾಡು ಹಂದಿಗಳಿಗೆ ಸೋಂಕು ತರುತ್ತದೆ. ಹಂದಿಗಳು ಅದರ ಸೋಂಕಿನಿಂದಾಗಿ ಒಂದು ರೀತಿಯ ತೀವ್ರವಾದ ರಕ್ತಸ್ರಾವದ ಜ್ವರದಿಂದ (Hemorrhagic Fever) ಬಳಲುತ್ತವೆ.
  2. ಇದನ್ನು 1920 ರಲ್ಲಿ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಹಚ್ಚಲಾಯಿತು.
  3. ಈ ರೋಗದಲ್ಲಿನ ಸಾವಿನ ಪ್ರಮಾಣವು ಶೇಕಡಾ 100 ರ ಹತ್ತಿರದಲ್ಲಿದೆ, ಮತ್ತು ಜ್ವರಕ್ಕೆ ಯಾವುದೇ ಚಿಕಿತ್ಸೆ ಇಲ್ಲದಿರುವುದರಿಂದ, ಪ್ರಾಣಿಗಳನ್ನು ಕೊಲ್ಲುವುದು ಸೋಂಕಿನ ಹರಡುವಿಕೆಯನ್ನು ತಡೆಯುವ ಏಕೈಕ ಮಾರ್ಗವಾಗಿದೆ.
  4. ಆಫ್ರಿಕನ್ ಹಂದಿ ಜ್ವರವು ಮನುಷ್ಯರಿಗೆ ಅಪಾಯವನ್ನುಂಟು ಮಾಡುವುದಿಲ್ಲ, ಏಕೆಂದರೆ ಇದು ಪ್ರಾಣಿಗಳಿಂದ ಪ್ರಾಣಿಗಳಿಗೆ ಮಾತ್ರ ಹರಡುತ್ತದೆ.
  5. FAO ಪ್ರಕಾರ, ಈ ರೋಗವು ಹೆಚ್ಚು ಸಾಂಕ್ರಾಮಿಕವಾಗಿದೆ ಮತ್ತು ಅದರ ಗಡಿಯಾಚೆಗಿನ ಸಾಂಕ್ರಾಮಿಕತೆಯ ಸಾಮರ್ಥ್ಯವು ಈ ಪ್ರದೇಶದ ಎಲ್ಲಾ ದೇಶಗಳನ್ನು ಅಪಾಯಕ್ಕೆ ಸಿಲುಕಿಸಿದೆ, ರೋಗದ ಭೀತಿಯು ಮತ್ತೊಮ್ಮೆ ಆಫ್ರಿಕಾದಿಂದ ಹೊರಗಿನ ದೇಶಗಳನ್ನು ತಲುಪಿದೆ. ಈ ರೋಗವು ಜಾಗತಿಕ ಆಹಾರ ಸುರಕ್ಷತೆ ಮತ್ತು ಕೌಟುಂಬಿಕ ಆದಾಯಕ್ಕೆ ಗಮನಾರ್ಹ ಅಪಾಯವನ್ನುಂಟುಮಾಡುತ್ತದೆ.
  6. ಈ ರೋಗದಲ್ಲಿನ ಮರಣ ಪ್ರಮಾಣವು ಶೇಕಡಾ 100 ರ ಹತ್ತಿರದಲ್ಲಿದೆ, ಮತ್ತು ಈ ಜ್ವರಕ್ಕೆ ಯಾವುದೇ ಚಿಕಿತ್ಸೆ ಇಲ್ಲದಿರುವುದರಿಂದ ಪ್ರಾಣಿಗಳನ್ನು ಕೊಲ್ಲುವುದೊಂದೆ ರೋಗ ಹರಡದಂತೆ ತಡೆಯಲು ಇರುವ ಏಕೈಕ ಮಾರ್ಗ.
  7. ಇದಕ್ಕಾಗಿ ಯಾವುದೇ ಮಾನ್ಯತೆ ಪಡೆದ ಲಸಿಕೆಯನ್ನು ಇನ್ನೂ ಕಂಡು ಹಿಡಿಯಲಾಗಿಲ್ಲ, ಅದಕ್ಕಾಗಿಯೇ ಸೋಂಕಿನ ಹರಡುವಿಕೆಯನ್ನು ತಡೆಗಟ್ಟಲು ಸೋಂಕಿತ ಪ್ರಾಣಿಗಳನ್ನು ಸಾಮಾಹಿಕವಾಗಿ ಕೊಲ್ಲಲಾಗುತ್ತದೆ.

 

ವಿಷಯಗಳು:ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಅಧಿಕೃತ ಆರ್ಥಿಕ ನಿರ್ವಾಹಕರ ಕಾರ್ಯಕ್ರಮ:


(Authorised Economic Operator programme)

ಸಂದರ್ಭ:

ಇತ್ತೀಚೆಗೆ, ‘‘ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಸೀಮಾ-ಸುಂಕ ಮಂಡಳಿ’- (Central Board of Indirect Taxes & Customs- CBIC)ಯು, ಅಧಿಕೃತ ಆರ್ಥಿಕ ನಿರ್ವಾಹಕರು’ (Authorised Economic Operator) ಅರ್ಜಿಗಳನ್ನು ಆನ್‌ಲೈನ್‌ನಲ್ಲಿ ಸಲ್ಲಿಸುವ ವ್ಯವಸ್ಥೆಯನ್ನು  ಪ್ರಾರಂಭಿಸಿವೆ.

  1. ಈ ವೆಬ್ ಅಪ್ಲಿಕೇಶನ್‌ನ ಹೊಸ ಆವೃತ್ತಿಯನ್ನು (V 0), ಸಮಯೋಚಿತ ಹಸ್ತಕ್ಷೇಪ ಮತ್ತು ಚುರುಕುಗೊಳಿಸುವ ಗುರಿಯೊಂದಿಗೆ ಭೌತಿಕವಾಗಿ ಸಲ್ಲಿಸಲಾದ ಅಪ್ಲಿಕೇಶನ್‌ಗಳ ನಿರಂತರ ಮತ್ತು ಡಿಜಿಟಲ್ ಮೇಲ್ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ.

 

ಅಧಿಕೃತ ಆರ್ಥಿಕ ನಿರ್ವಾಹಕರ ಕಾರ್ಯಕ್ರಮ:

(Authorised Economic Operator)

  1. AEO, ಎನ್ನುವುದು ಜಾಗತಿಕ ವ್ಯಾಪಾರವನ್ನು ಸುರಕ್ಷಿತಗೊಳಿಸಲು ಮತ್ತು ಸುಗಮಗೊಳಿಸಲು ವಿಶ್ವ ಕಸ್ಟಮ್ಸ್ ಸಂಸ್ಥೆಯ ಸುರಕ್ಷಿತ ಚೌಕಟ್ಟು’ (World Customs Organization SAFE Framework) ಮಾನದಂಡಗಳ ಆಶ್ರಯದಲ್ಲಿನ ಒಂದು ಕಾರ್ಯಕ್ರಮವಾಗಿದೆ.
  2. ಅಂತರರಾಷ್ಟ್ರೀಯ ಸರಬರಾಜು ಸರಪಳಿಗಳ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ಕಾನೂನುಬದ್ಧ ಸರಕುಗಳ ಚಲನೆಗೆ ಅನುಕೂಲವಾಗುವಂತೆ ಈ ಕಾರ್ಯಕ್ರಮವು ಉದ್ದೇಶಿಸಿದೆ.
  3. ಅಧಿಕೃತ ಆರ್ಥಿಕ ನಿರ್ವಾಹಕರ ಕಾರ್ಯಕ್ರಮ (AEO) ವು, ಸ್ವಯಂಪ್ರೇರಿತ ಅನುಸರಣೆ ಕಾರ್ಯಕ್ರಮವಾಗಿದೆ.

 

ಇದು ಹೇಗೆ ಕೆಲಸ ಮಾಡುತ್ತದೆ?

  1. ಈ ಕಾರ್ಯಕ್ರಮದಡಿಯಲ್ಲಿ, ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ತೊಡಗಿರುವ ಒಂದು ಘಟಕವನ್ನು ಸರಬರಾಜು / ಪೂರೈಕೆ ಸರಪಳಿ ಸುರಕ್ಷತಾ ಮಾನದಂಡಗಳಿಗೆ ಅನುಸಾರವಾಗಿ WCO ಅನುಮೋದಿಸುತ್ತದೆ ಮತ್ತು AEO ಸ್ಥಾನಮಾನ ಮತ್ತು ಕೆಲವು ಪ್ರಯೋಜನಗಳನ್ನು ನೀಡುತ್ತದೆ.
  2. AEO ಸ್ಥಾನಮಾನವನ್ನು ಪಡೆದ ನಂತರ ವ್ಯಾಪಾರ ಘಟಕಕ್ಕೆ ದೊರೆಯುವ ಲಾಭಗಳು, ತ್ವರಿತ ಕ್ಲಿಯರೆನ್ಸ್, ಕಡಿಮೆ ಮೇಲ್ವಿಚಾರಣೆ, ಉತ್ತಮ ಭದ್ರತೆ ಮತ್ತು ಪೂರೈಕೆ ಸರಪಳಿ ಪಾಲುದಾರರ ನಡುವಿನ ಸಂವಹನ ಇತ್ಯಾದಿಗಳನ್ನು ಒಳಗೊಂಡಿವೆ.

 

SAFE ಫ್ರೇಂವರ್ಕ್:

ವಿಶ್ವ ಕಸ್ಟಮ್ಸ್ ಸಂಸ್ಥೆ (WCO) ಕೌನ್ಸಿಲ್ 2005 ರ ಜೂನ್‌ನಲ್ಲಿ ಜಾಗತಿಕ ವ್ಯಾಪಾರವನ್ನು ಸುರಕ್ಷಿತ ಮತ್ತು ಸುಗಮಗೊಳಿಸುವ ಸಲುವಾಗಿ ಸ್ಟ್ಯಾಂಡರ್ಡ್ ಫ್ರೇಮ್‌ವರ್ಕ್’ (SAFE Frame work) ಅಂದರೆ ಸುರಕ್ಷಿತ ಚೌಕಟ್ಟನ್ನು ಜಾರಿಗೆ ತಂದಿತು. ಈ ಚೌಕಟ್ಟು ಅಂತರರಾಷ್ಟ್ರೀಯ ಭಯೋತ್ಪಾದನೆಗೆ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ, ಆದಾಯ ಸಂಗ್ರಹಣೆಯನ್ನು ಸುರಕ್ಷಿತಗೊಳಿಸುತ್ತದೆ ಮತ್ತು ಜಗತ್ತಿನಾದ್ಯಂತ ವ್ಯಾಪಾರ ಸೌಲಭ್ಯವನ್ನು ಉತ್ತೇಜಿಸುತ್ತದೆ.

  1. ಸುರಕ್ಷಿತ ಫ್ರೇಮ್ ವರ್ಕ್,ಪ್ರಪಂಚದಾದ್ಯಂತ ಪರೀಕ್ಷಿಸಿದ ಮತ್ತು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವ ಬೇಸ್ ಲೈನ್ ಮಾನದಂಡಗಳನ್ನು ಸೂಚಿಸುತ್ತದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ನೇರ ಮತ್ತು ಪರೋಕ್ಷ ಕೃಷಿ ಸಬ್ಸಿಡಿಗಳು ಮತ್ತು ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದ ವಿಷಯಗಳು; ಸಾರ್ವಜನಿಕ ವಿತರಣಾ ವ್ಯವಸ್ಥೆ – ಉದ್ದೇಶಗಳು, ಕಾರ್ಯಗಳು, ಮಿತಿಗಳು, ಸುಧಾರಣೆಗಳು; ಬಫರ್ ಸ್ಟಾಕ್ ಮತ್ತು ಆಹಾರ ಭದ್ರತೆಗೆ ಸಂಬಂಧಿಸಿದ ವಿಷಯಗಳು; ತಂತ್ರಜ್ಞಾನ ಮಿಷನ್; ಪಶುಸಂಗೋಪನೆಗೆ ಸಂಬಂಧಿಸಿದ ಅರ್ಥಶಾಸ್ತ್ರ.

ಕೃಷಿ ಮೂಲಸೌಕರ್ಯ ನಿಧಿ:


(Agriculture Infrastructure Fund)

ಸಂದರ್ಭ:

ಇತ್ತೀಚೆಗೆ, ‘ಕೃಷಿ ಮೂಲಸೌಕರ್ಯ ನಿಧಿ’ (Agriculture Infrastructure Fund – AIF) ಅಡಿಯಲ್ಲಿ ಹಣಕಾಸು ಸೌಲಭ್ಯದ ಕೇಂದ್ರ ವಲಯ ಯೋಜನೆಯಲ್ಲಿ ವಿವಿಧ ತಿದ್ದುಪಡಿಗಳಿಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.

ಇತ್ತೀಚಿನ ಪರಿಷ್ಕರಣೆ:

  1. ಯೋಜನೆಯಡಿ ಅರ್ಹತೆಯನ್ನು ವಿಸ್ತರಿಸುವುದು, ಇದರಲ್ಲಿ, ರಾಜ್ಯ ಏಜೆನ್ಸಿಗಳು / APMCಗಳು, ರಾಷ್ಟ್ರೀಯ ಮತ್ತು ರಾಜ್ಯ ಸಹಕಾರಿ ಸಂಘಗಳು, ರೈತ ಉತ್ಪಾದಕರ ಸಂಸ್ಥೆಗಳ ಒಕ್ಕೂಟಗಳು (FPOs) ಮತ್ತು ಸ್ವಸಹಾಯ ಗುಂಪುಗಳ ಒಕ್ಕೂಟಗಳು (SHGs) ಸಹ ಸೇರಿಕೊಂಡಿವೆ.
  2. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಿಗೆ (APMCs) ವಿವಿಧ ಮೂಲಸೌಕರ್ಯಗಳ ಪ್ರತಿ ಯೋಜನೆಗೆ 2 ಕೋಟಿ ರೂ. ವರೆಗೆ ಬಡ್ಡಿ ರಹಿತ ಸಾಲ ನೀಡಲಾಗುವುದು. ಉದಾಹರಣೆಗೆ ಒಂದೇ ಮಾರುಕಟ್ಟೆ ಸಂಕೀರ್ಣದೊಳಗೆ ಕೋಲ್ಡ್ ಸ್ಟೋರೇಜ್, ವಿಂಗಡಣೆ, ಶ್ರೇಣೀಕರಣ ಮತ್ತು ಮೌಲ್ಯಮಾಪನ ಘಟಕಗಳು, ಸಿಲೋಗಳಂತಹ ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು.
  3. ಕೃಷಿ ಮತ್ತು ರೈತ ಕಲ್ಯಾಣ ಸಚಿವರಿಗೆ, ಈ ಯೋಜನೆಯಲ್ಲಿ ಫಲಾನುಭವಿಯನ್ನು ಸೇರಿಸಲು ಅಥವಾ ತೆಗೆದುಹಾಕುವುದಕ್ಕೆ ಸಂಬಂಧಿಸಿದಂತೆ ಅಗತ್ಯ ಬದಲಾವಣೆಗಳನ್ನು ಮಾಡಲು ಅಧಿಕಾರ ನೀಡಲಾಗಿದೆ.
  4. ಹಣಕಾಸಿನ ಸೌಲಭ್ಯದ ಅವಧಿಯನ್ನು 2025-26 ರ ವರೆಗೆ ಅಂದರೆ,4 ವರ್ಷದಿಂದ 6 ವರ್ಷಗಳಿಗೆ ಹೆಚ್ಚಿಸಲಾಗಿದೆ, ಮತ್ತು ಯೋಜನೆಯ ಒಟ್ಟು ಅವಧಿಯನ್ನು 10 ರಿಂದ 13 ವರ್ಷಕ್ಕೆ ಹೆಚ್ಚಿಸಲಾಗಿದೆ, ಅಂದರೆ 2032-33ರವರೆಗೆ.

 

ಕೃಷಿ ಮೂಲಸೌಕರ್ಯ ನಿಧಿಯ ಕುರಿತು:

‘ಅಗ್ರಿಕಲ್ಚರ್ ಇನ್ಫ್ರಾಸ್ಟ್ರಕ್ಚರ್ ಫಂಡ್ / ಕೃಷಿ ಮೂಲಸೌಕರ್ಯ ನಿಧಿ ’ ಎಂಬುದು ಸುಗ್ಗಿಯ ನಂತರದ ನಿರ್ವಹಣಾ ಮೂಲಸೌಕರ್ಯ ಮತ್ತು ಸಮುದಾಯ ಕೃಷಿ ಸ್ವತ್ತುಗಳಿಗಾಗಿ ಬಡ್ಡಿ ಸಬ್‌ವೆನ್ಷನ್ ಮತ್ತು ಕ್ರೆಡಿಟ್ ಗ್ಯಾರಂಟಿ ಮೂಲಕ ಕಾರ್ಯಸಾಧ್ಯವಾದ ಯೋಜನೆಗಳಲ್ಲಿ ಹೂಡಿಕೆ ಮಾಡಲು ಮಧ್ಯಮ-ದೀರ್ಘಾವಧಿಯ ಸಾಲ ಹಣಕಾಸು ಸೌಲಭ್ಯವಾಗಿದೆ.

ಈ ಯೋಜನೆಯಡಿ, 1 ಲಕ್ಷ ಕೋಟಿ ರೂ.ಗಳನ್ನು ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು ಸಾಲ ರೂಪದಲ್ಲಿ ವಾರ್ಷಿಕ 3% ಬಡ್ಡಿ ಸಬ್ವೆನ್ಷನ್‌ನೊಂದಿಗೆ ಒದಗಿಸುತ್ತವೆ ಮತ್ತು CGTMSE ಅಡಿಯಲ್ಲಿ ರೂ .2 ಕೋಟಿ ವರೆಗಿನ ಸಾಲಗಳಿಗೆ ಕ್ರೆಡಿಟ್ ಗ್ಯಾರಂಟಿ ವ್ಯಾಪ್ತಿಯನ್ನು ನೀಡಲಾಗುವುದು.

 

ಅರ್ಹ ಫಲಾನುಭವಿಗಳು:

ಈ ಯೋಜನೆಯಡಿ ಅರ್ಹ ಫಲಾನುಭವಿಗಳಲ್ಲಿ ಪ್ರಾಥಮಿಕ ಕೃಷಿ ಸಾಲ ಸಂಘಗಳು (PAC), ಮಾರ್ಕೆಟಿಂಗ್ ಸಹಕಾರಿ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು (FPO), ಸ್ವಸಹಾಯ ಗುಂಪುಗಳು (SHGs), ರೈತರು, ಜಂಟಿ ಹೊಣೆಗಾರಿಕೆ ಗುಂಪುಗಳು (Joint Liability Groups- JLG), ವಿವಿಧೋದ್ದೇಶ ಸಹಕಾರಿಗಳು (Multipurpose Cooperative Societies), ಕೃಷಿ ಉದ್ಯಮಿಗಳು, ಉದ್ಯಮಗಳು ಮತ್ತು ಕೇಂದ್ರ / ರಾಜ್ಯ ಏಜೆನ್ಸಿಗಳು ಅಥವಾ ಸ್ಥಳೀಯ ಸಂಸ್ಥೆಯ ಪ್ರಾಯೋಜಿತ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಯೋಜನೆಗಳು ಇತ್ಯಾದಿಗಳನ್ನು ಸೇರಿಸಲಾಗಿದೆ.

 

ಬಡ್ಡಿ ಮನ್ನಾ:

ಈ ಹಣಕಾಸು ಸೌಲಭ್ಯದಡಿಯಲ್ಲಿ, ಎಲ್ಲಾ ರೀತಿಯ ಸಾಲಗಳಿಗೆ 3% ಬಡ್ಡಿ ಸಬ್ವೆನ್ಷನ್ ಸೌಲಭ್ಯವನ್ನು ವಾರ್ಷಿಕ 2 ಕೋಟಿ ರೂ. ವರೆಗಿನ ಸಾಲಕ್ಕೆ ನೀಡಲಾಗುವುದು. ಈ ವಿನಾಯಿತಿಯು ಗರಿಷ್ಠ 7 ವರ್ಷಗಳವರೆಗೆ ಲಭ್ಯವಿರುತ್ತದೆ.

ಸಾಲ ಖಾತರಿ:

  1. ‘ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ ಫಾರ್ ಮೈಕ್ರೋ ಅಂಡ್ ಸ್ಮಾಲ್ ಎಂಟರ್‌ಪ್ರೈಸಸ್’ (CGTMSE) ಯೋಜನೆಯಡಿ ಅರ್ಹ ಸಾಲಗಾರರಿಗೆ ಕ್ರೆಡಿಟ್ ಗ್ಯಾರಂಟಿ ವ್ಯಾಪ್ತಿಯು 2 ಕೋಟಿ ರೂ. ವರೆಗೆ ಇರುತ್ತದೆ.
  2. ಈ ವ್ಯಾಪ್ತಿಗೆ ಶುಲ್ಕವನ್ನು ಸರ್ಕಾರ ಪಾವತಿಸುತ್ತದೆ.
  3. ಎಫ್‌ಪಿಒ ಗಳ ಸಂದರ್ಭದಲ್ಲಿ, ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ (DACFW) ಎಫ್‌ಪಿಒ ಪ್ರಚಾರ ಯೋಜನೆಯಡಿ ರಚಿಸಲಾದ ಈ ಸೌಲಭ್ಯದಿಂದ ಸಾಲ ಖಾತರಿಯ ಲಾಭವನ್ನು ಪಡೆಯಬಹುದು.

 

ಕೃಷಿ ಮೂಲಸೌಕರ್ಯ ನಿಧಿಯ’ ನಿರ್ವಹಣೆ:

  1. ‘ಕೃಷಿ ಮೂಲಸೌಕರ್ಯ ನಿಧಿಯ’ ನಿರ್ವಹಣೆ ಮತ್ತು ಮೇಲ್ವಿಚಾರಣೆಯನ್ನು ಆನ್‌ಲೈನ್ ‘ಮ್ಯಾನೇಜ್‌ಮೆಂಟ್ ಇನ್ಫರ್ಮೇಷನ್ ಸಿಸ್ಟಮ್’ (Management Information System) ಪ್ಲಾಟ್‌ಫಾರ್ಮ್ ಮೂಲಕ ಮಾಡಲಾಗುತ್ತದೆ.
  2. ನೈಜ ಸಮಯದ ಮೇಲ್ವಿಚಾರಣೆ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಮಾನಿಟರಿಂಗ್ ಸಮಿತಿಗಳನ್ನು ರಚಿಸಲಾಗುವುದು.

  

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

ನಾಸಾದ ಕ್ಯಾಸಿನಿ ಬಾಹ್ಯಾಕಾಶ ನೌಕೆಯ ಇತ್ತೀಚಿನ ಸಂಶೋಧನೆಗಳು:


(Latest findings by NASA’s Cassini spacecraft)

 ಸಂದರ್ಭ:

ಇತ್ತೀಚೆಗೆ, ನಾಸಾದ ಕ್ಯಾಸಿನಿ ಬಾಹ್ಯಾಕಾಶ ನೌಕೆಯು (Cassini spacecraft)  ಶನಿಯ ಚಂದ್ರ(ಉಪಗ್ರಹ) ನ ‘ಪ್ಲುಮ್ಸ್’ (Plumes) ಮೂಲಕ ಹಾರುವಾಗ ಈ ಕೆಳಗಿನ ಆವಿಷ್ಕಾರಗಳನ್ನು ಮಾಡಿದೆ:

 

  1. ಶನಿಯ ಚಂದ್ರನಾದ ಟೈಟಾನ್‌ನ ವಾತಾವರಣದಲ್ಲಿ ಮೀಥೇನ್ ಅನಿಲವಿದೆ.
  2. ಎನ್ಸೆಲಾಡಸ್ (Enceladus) ಎಂಬ ಮತ್ತೊಂದು ಚಂದ್ರನ ಮೇಲೆ ದ್ರವ ಸಾಗರ’ ಅಸ್ತಿತ್ವದಲ್ಲಿದೆ, ಇದರಿಂದ ಅನಿಲ ಮತ್ತು ನೀರಿನ ‘ಪ್ಲುಮ್ಸ್’ ಸ್ಫೋಟಗೊಳ್ಳುತ್ತಲೇ ಇರುತ್ತದೆ.

ಸಂಶೋಧಕರು, ಅಪರಿಚಿತ ಮೀಥೇನ್ ಉತ್ಪಾದಿಸುವ ಪ್ರಕ್ರಿಯೆಗಳು ಸಂಶೋಧನೆಗಾಗಿ ಕಾಯುತ್ತಿರುವ ಎನ್‌ಸೆಲಾಡಸ್‌ನಲ್ಲೂ ಇವೆ ಎಂದು ತೀರ್ಮಾನಿಸಿದ್ದಾರೆ, ಮತ್ತು ಈ ವಿಷಯವನ್ನು ಅನ್ವೇಷಿಸಬೇಕಾಗಿದೆ.

 

ಭೂಮಿಯ ಮೇಲೆ ಮೀಥೇನ್ ಉತ್ಪಾದಿಸುವ ಜೀವಿಗಳು:

  1. ಭೂಮಿಯಲ್ಲಿ ಕಂಡುಬರುವ ಹೆಚ್ಚಿನ ಮೀಥೇನ್ ಜೈವಿಕ’ (Biological) ಮೂಲಗಳಿಂದ ಹುಟ್ಟಿಕೊಂಡಿದೆ. ಮೆಥನೋಜೆನ್ ಗಳು (Methanogens)  ಎಂದು ಕರೆಯಲ್ಪಡುವ ಸೂಕ್ಷ್ಮಜೀವಿಗಳು ಮೀಥೇನ್ ಅನ್ನು ಚಯಾಪಚಯ ಉಪಉತ್ಪನ್ನ’ (Metabolic Byproduct) ವಾಗಿ ಉತ್ಪಾದಿಸುವ ಸಾಮರ್ಥ್ಯ ಹೊಂದಿವೆ.
  2. ಈ ಜೀವಿಗಳು ಬದುಕಲು ಆಮ್ಲಜನಕದ ಅಗತ್ಯವಿಲ್ಲ ಮತ್ತು ಅವು ಪ್ರಕೃತಿಯಲ್ಲಿ ವ್ಯಾಪಕವಾಗಿ ಕಂಡುಬರುತ್ತವೆ.
  3. ಮೆಥನೋಜೆನ್ ಗಳು ಜೌಗು ಪ್ರದೇಶಗಳಲ್ಲಿ, ಸತ್ತ ಸಾವಯವ ಪದಾರ್ಥಗಳಲ್ಲಿ ಮತ್ತು ಮಾನವರ ಕರುಳಿನಲ್ಲಿ ಕಂಡುಬರುತ್ತವೆ.
  4. ಇವು ಹೆಚ್ಚಿನ ತಾಪಮಾನದಲ್ಲಿ ಬದುಕುಳಿಯುತ್ತವೆ ಮತ್ತು ಸಿಮ್ಯುಲೇಶನ್ ಅಧ್ಯಯನಗಳು ಈ ಸೂಕ್ಷ್ಮಾಣುಜೀವಿಗಳು ಮಂಗಳ ಗ್ರಹದಲ್ಲಿ ಇರುವ ಪರಿಸ್ಥಿತಿಗಳಲ್ಲಿ ಬದುಕುಳಿಯಲು ಸಮರ್ಥವಾಗಿವೆ ಎಂದು ತೋರಿಸಿದೆ.

 

ಎನ್ಸೆಲಾಡಸ್‌ನಲ್ಲಿ ಮೀಥೇನ್ ಅನ್ನು ಬೇರೆ ಯಾವ ರೀತಿಯಲ್ಲಿ ಉತ್ಪಾದಿಸಬಹುದು?

  1. ಎನ್ಸೆಲಾಡಸ್ ನ ಕೋರ್ ನಲ್ಲಿರುವ ಸಾವಯವ ವಸ್ತುಗಳ ರಾಸಾಯನಿಕ ವಿಸರ್ಜನೆಯಿಂದ ಮೀಥೇನ್ ರೂಪುಗೊಳ್ಳುತ್ತದೆ.
  2. ಈ ಚಂದ್ರನ ಮೇಲಿನ ಜಲತಾಪೀಯ (Hydrothermal Processes) ಪ್ರಕ್ರಿಯೆಗಳು ಇಂಗಾಲದ ಡೈಆಕ್ಸೈಡ್ ಮತ್ತು ಮೀಥೇನ್ ರಚನೆಗೆ ಸಹಕಾರಿಯಾಗಬಹುದು.

 

ಕ್ಯಾಸಿನಿ ಮಿಷನ್ (Cassini Mission ಬಗ್ಗೆ:

  1. ಕ್ಯಾಸಿನಿ ಮಿಷನ್ ಅನ್ನು 1997 ರಲ್ಲಿ ಪ್ರಾರಂಭಿಸಲಾಯಿತು.
  2. ಇದು ನಾಸಾ, ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (European Space Agency- ESA) ಮತ್ತು ಇಟಾಲಿಯನ್ ಬಾಹ್ಯಾಕಾಶ ಏಜೆನ್ಸಿಯ ಜಂಟಿ ಕಾರ್ಯಾಚರಣೆಯಾಗಿದೆ.
  3. ಈ ಮಿಷನ್ ಹೊರಗಿನ ಸೌರವ್ಯೂಹದಲ್ಲಿ ಮೊದಲ ಬಾರಿಗೆ ಇಳಿಯಿತು.
  4. ಕ್ಯಾಸಿನಿ ಶನಿಗ್ರಹದ ಕಕ್ಷೆ ತಲುಪಿದ ಮೊದಲ ಗಗನನೌಕೆ ಎಂಬ ಹೆಗ್ಗಳಿಕೆ ಹೊಂದಿದೆ.
  5. ಕ್ಯಾಸಿನಿ ಶನಿ ಗ್ರಹಕ್ಕೆ ಭೇಟಿ ನೀಡಿದ ನಾಲ್ಕನೇ ಬಾಹ್ಯಾಕಾಶ ನೌಕೆ ಮತ್ತು ಅದರ ಕಕ್ಷೆಗೆ ಪ್ರವೇಶಿಸಿದ ಮೊದಲನೆಯದು.
  6. ಇದರ ವಿನ್ಯಾಸವು ಸ್ಯಾಟರ್ನ್ ಆರ್ಬಿಟರ್’ ಮತ್ತು ‘ಟೈಟಾನ್ ಮೂನ್’ ಗಾಗಿ ಲ್ಯಾಂಡರ್ ಅನ್ನು ಒಳಗೊಂಡಿದೆ. ಹ್ಯೂಜೆನ್ಸ್ (Huygens) ಹೆಸರಿನ ಈ ಲ್ಯಾಂಡರ್ 2005 ರಲ್ಲಿ ಟೈಟಾನ್‌ಗೆ ಬಂದಿಳಿಯಿತು.

 

ಈ ಮಿಷನ್ ನ ಉದ್ದೇಶಗಳು:

  1. ಶನಿಯ ಉಂಗುರಗಳ ಮೂರು ಆಯಾಮದ ರಚನೆ ಮತ್ತು ಕ್ರಿಯಾತ್ಮಕ ಕಾರ್ಯಗಳನ್ನು ನಿರ್ಧರಿಸಲು.
  2. ಉಪಗ್ರಹ ಮೇಲ್ಮೈಗಳ ಸಂಯೋಜನೆ ಮತ್ತು ಪ್ರತಿ ದೇಹದ ಭೌಗೋಳಿಕ ಇತಿಹಾಸವನ್ನು ನಿರ್ಧರಿಸುವುದು.
  3. ಐಪೆಟಸ್ ಚಂದ್ರ(Iapetus Moon)ನ ಮುಖ್ಯ ಗೋಳಾರ್ಧದಲ್ಲಿ ‘ಡಾರ್ಕ್ ವಸ್ತುವಿನ’ ಸ್ವರೂಪ ಮತ್ತು ಮೂಲವನ್ನು ನಿರ್ಧರಿಸಲು.
  4. ಮ್ಯಾಗ್ನೆಟೋಸ್ಪಿಯರ್ (magnetosphere) ನ ಮೂರು ಆಯಾಮದ ರಚನೆ ಮತ್ತು ಕ್ರಿಯಾತ್ಮಕ ಕಾರ್ಯಗಳನ್ನು ನಿರ್ಣಯಿಸಲು.
  5. ಮೋಡದ ಮಟ್ಟದಲ್ಲಿ ಶನಿಯ ವಾತಾವರಣದ ಚಲನಶಾಸ್ತ್ರವನ್ನು ಅಧ್ಯಯನ ಮಾಡಲು.
  6. ಟೈಟಾನ್‌ನ ಮೋಡಗಳು ಮತ್ತು ಮಬ್ಬುಗಳ ಸಮಯ-ವ್ಯತ್ಯಾಸವನ್ನು ಅಧ್ಯಯನ ಮಾಡಲು.
  7. ಪ್ರಾದೇಶಿಕ ಮಟ್ಟದಲ್ಲಿ ‘ಟೈಟಾನ್’ ಮೇಲ್ಮೈ ಬಗ್ಗೆ ಮಾಹಿತಿ ಪಡೆಯಲು.

 

ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.

ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ WWF ಮತ್ತು UNEP ವರದಿ:


(WWF and UNEP report on Human-wildlife conflict)

 ಸಂದರ್ಭ:

ಇತ್ತೀಚೆಗೆ, ವಿಶ್ವ ವನ್ಯಜೀವಿ ನಿಧಿ ಸಂರಕ್ಷಣೆ (Worldwide Fund for Nature – WWF) ಮತ್ತು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UN Environment Programme – UNEP) ದ  ವತಿಯಿಂದ ‘ಎಲ್ಲರಿಗೂ ಉತ್ತಮ ಭವಿಷ್ಯ – ಮಾನವ-ವನ್ಯಜೀವಿ ಸಹಬಾಳ್ವೆಯ ಅವಶ್ಯಕತೆ’ (A future for all – the need for human-wildlife coexistence ) ಎಂಬ ಶೀರ್ಷಿಕೆಯ ವರದಿಯನ್ನು ಬಿಡುಗಡೆ ಮಾಡಲಾಗಿದೆ.

 

ವರದಿಯ ಪ್ರಮುಖ ಅಂಶಗಳು:

  1. ಮಾನವರು ಮತ್ತು ಪ್ರಾಣಿಗಳ ನಡುವಿನ ಸಂಘರ್ಷವು ವಿಶ್ವದ ಕೆಲವು ಅಪ್ರತಿಮ ಪ್ರಭೇದಗಳ ದೀರ್ಘಕಾಲೀನ ಅಸ್ತಿತ್ವಕ್ಕೆ / ಉಳಿವಿಗೆ ಒಂದು ಪ್ರಮುಖ ಬೆದರಿಕೆಯಾಗಿದೆ.
  2. ಜಾಗತಿಕವಾಗಿ, ಮಾನವ-ವನ್ಯಜೀವಿ ಸಂಘರ್ಷ ಸಾವುಗಳು ವಿಶ್ವದ 75 ಪ್ರತಿಶತ ಕಾಡು ಬೆಕ್ಕು ಜಾತಿಗಳ ಮೇಲೆ ಪರಿಣಾಮ ಬೀರುತ್ತವೆ. ಹಿಮಕರಡಿಗಳು, ಮೆಡಿಟರೇನಿಯನ್ ಮಾಂಕ್ ಸೀಲ್ ಗಳು ಮತ್ತು ಆನೆಗಳಂತಹ ದೊಡ್ಡ ಸಸ್ಯಹಾರಿ ಪ್ರಾಣಿಗಳು ಸಹ ಈ ಸಂಘರ್ಷದಿಂದ ಪ್ರಭಾವಿತವಾಗಿವೆ.
  3. ಜಾಗತಿಕ ವನ್ಯಜೀವಿ ಜನಸಂಖ್ಯೆಯು 1970 ರಿಂದ ಸರಾಸರಿ 68 ಪ್ರತಿಶತದಷ್ಟು ಕಡಿಮೆಯಾಗಿದೆ.

 

ಭಾರತೀಯ ಸನ್ನಿವೇಶ:

  1. 2014-2015 ಮತ್ತು 2018-2019ರ ನಡುವೆ 500 ಕ್ಕೂ ಹೆಚ್ಚು ಆನೆಗಳು ಕೊಲ್ಲಲ್ಪಟ್ಟವು. ಈ ಸಾವುಗಳಲ್ಲಿ ಹೆಚ್ಚಿನವು ಮಾನವ-ಆನೆಗಳ ಸಂಘರ್ಷದಿಂದಾಗಿವೆ.
  2. ಇದೇ ಅವಧಿಯಲ್ಲಿ ಮಾನವ-ಆನೆ ಸಂಘರ್ಷದ ಪರಿಣಾಮವಾಗಿ 2,361 ಜನರು ಸಾವನ್ನಪ್ಪಿದ್ದಾರೆ.
  3. ಮಾನವ-ವನ್ಯಜೀವಿ ಸಂಘರ್ಷದಿಂದ ಭಾರತದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ.ಏಕೆಂದರೆ ಇದು ವಿಶ್ವದ ಎರಡನೇ ಅತಿದೊಡ್ಡ ಮಾನವ ಜನಸಂಖ್ಯೆಗೆ ನೆಲೆಯಾಗಿದೆ, ಜೊತೆಗೆ ಹುಲಿಗಳು, ಏಷ್ಯನ್ ಆನೆಗಳು, ಒಂದು ಕೊಂಬಿನ ಖಡ್ಗಮೃಗಗಳು, ಏಷ್ಯಾಟಿಕ್ ಸಿಂಹಗಳು ಮತ್ತು ಇತರ ಜಾತಿಗಳ ದೊಡ್ಡ ಜನಸಂಖ್ಯೆಯನ್ನು ಹೊಂದಿದೆ.

 

ಈಗ ಮಾಡಬೇಕಿರುವುದು ಏನು?

 ಮಾನವ-ವನ್ಯಜೀವಿ ಸಂಘರ್ಷವನ್ನು ಸಂಪೂರ್ಣವಾಗಿ ತೊಡೆದುಹಾಕಲು ಸಾಧ್ಯವಿಲ್ಲ. ಆದರೆ ಅದರ ನಿರ್ವಹಣೆಗೆ ಯೋಜಿತ, ಸಮಗ್ರ ವಿಧಾನವು ಈ ಘರ್ಷಣೆಯನ್ನು ಕಡಿಮೆ ಮಾಡುತ್ತದೆ ಮತ್ತು ಮಾನವರು ಮತ್ತು ಪ್ರಾಣಿಗಳ ನಡುವೆ ಸಹಬಾಳ್ವೆಯನ್ನು ಸ್ಥಾಪಿಸುವಲ್ಲಿ ಯಶಸ್ವಿಯಾಗುತ್ತದೆ.

 

ಸೋನಿತ್‌ಪುರ ಮಾದರಿ:

  1. ಅಸ್ಸಾಂನ ಸೋನಿತ್ಪುರ ಜಿಲ್ಲೆಯಲ್ಲಿ, ಕಾಡುಗಳ ನಾಶವು ಆನೆಗಳನ್ನು ಬೆಳೆಗಳ ಮೇಲೆ ಆಕ್ರಮಣ ಮಾಡಲು ಒತ್ತಾಯಿಸಿತು, ಇದರಿಂದಾಗಿ ಆನೆಗಳು ಮತ್ತು ಮನುಷ್ಯರ ಜೀವಹಾನಿ ಸಂಭವಿಸಿತು.
  2. ಇದನ್ನು ಪರಿಹರಿಸಲು, ಡಬ್ಲ್ಯೂಡಬ್ಲ್ಯೂಎಫ್ ಇಂಡಿಯಾ 2003-2004ರ ಅವಧಿಯಲ್ಲಿ ‘ಸೋನಿತ್‌ಪುರ ಮಾದರಿಯನ್ನು’ ಅಭಿವೃದ್ಧಿಪಡಿಸಿತು, ಇದರಲ್ಲಿ ವಿವಿಧ ಸಮುದಾಯಗಳ ಸದಸ್ಯರನ್ನು ರಾಜ್ಯ ಅರಣ್ಯ ಇಲಾಖೆಯೊಂದಿಗೆ ಸಂಪರ್ಕಿಸಲಾಗಿದೆ.
  3. ಆನೆಗಳನ್ನು ಬೆಳೆಯಿರುವ ಹೊಲಗಳಿಂದ ಸುರಕ್ಷಿತವಾಗಿ ಓಡಿಸಲು ಈ ಜನರಿಗೆ ತರಬೇತಿ ನೀಡಲಾಯಿತು.
  4. ಡಬ್ಲ್ಯುಡಬ್ಲ್ಯುಎಫ್ ಭಾರತವು ಆನೆಗಳಿಂದ ಬೆಳೆಗಳ ರಕ್ಷಣೆಯನ್ನು ಸುಲಭಗೊಳಿಸಲು ಕಡಿಮೆ-ವೆಚ್ಚದ, ಒಂದೇ ಎಳೆಯನ್ನು ಹೊಂದಿರುವ, ಮಾರಕವಲ್ಲದ ವಿದ್ಯುತ್ ಫೆನ್ಸಿಂಗ್ ಅನ್ನು ಅಭಿವೃದ್ಧಿಪಡಿಸಿತು.
  5. ಈ ಮಾದರಿಯನ್ನು ಜಾರಿಗೆ ತಂದ ನಂತರ, ಆನೆಗಳಿಂದ ಬೆಳೆಗಳಿಗೆ ಆಗಿರುವ ಹಾನಿ ನಾಲ್ಕು ವರ್ಷಗಳಲ್ಲಿ ಶೂನ್ಯಕ್ಕೆ ಇಳಿಯಿತು. ಮತ್ತು ಈ ಕಾರಣದಿಂದಾಗಿ, ಸಂಘರ್ಷದಲ್ಲಿ ಮಾನವ ಮತ್ತು ಆನೆಗಳ ಸಾವು ಸಹ ಗಮನಾರ್ಹವಾಗಿ ಕಡಿಮೆಯಾಗಿದೆ.

 

ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ (SC-NBWL)ಯು ಅನುಮೋದಿಸಿದ ಮಾನವ-ವನ್ಯಜೀವಿ ಸಂಘರ್ಷ (HWC) ನಿರ್ವಹಣೆಗೆ ಸಲಹಾ ಸೂಚನೆಗಳು:

  1. ವನ್ಯಜೀವಿ (ಸಂರಕ್ಷಣೆ) ಕಾಯ್ದೆ, 1972 ರ ಪ್ರಕಾರ, ಸಮಸ್ಯಾತ್ಮಕ ಕಾಡು ಪ್ರಾಣಿಗಳನ್ನು ಎದುರಿಸಲು ಗ್ರಾಮ ಪಂಚಾಯಿತಿಗಳಿಗೆ ಅಧಿಕಾರ ನೀಡಬೇಕು.
  2.  ಮಾನವ-ವನ್ಯಜೀವಿ ಸಂಘರ್ಷ (HWC) ಯಿಂದಾದ ಬೆಳೆ ಹಾನಿಗೆ ಬೆಳೆ ಪರಿಹಾರವನ್ನು ಪಡೆಯಲು ಪ್ರಧಾನ್ ಮಂತ್ರಿ ಫಸಲ್ ಬೀಮಾ ಯೋಜನೆ ಅಡಿಯಲ್ಲಿ ಆಡ್-ಆನ್ ವ್ಯಾಪ್ತಿಯ (add-on coverage) ಬಳಕೆ ಮಾಡಿಕೊಳ್ಳುವುದು.
  3. ಅರಣ್ಯ ಪ್ರದೇಶಗಳಲ್ಲಿ ಮೇವು ಮತ್ತು ನೀರಿನ ಮೂಲಗಳನ್ನು ಹೆಚ್ಚಿಸಬೇಕು.
  4. ಇತರ ಕ್ರಮಗಳು: ಸ್ಥಳೀಯ / ರಾಜ್ಯ ಮಟ್ಟದಲ್ಲಿ ಅಂತರ-ವಿಭಾಗೀಯ ಸಮಿತಿಗಳೊಂದಿಗೆ ಮುಂಚಿನ ಎಚ್ಚರಿಕೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು, ಅಡೆತಡೆಗಳ ನಿರ್ಮಾಣ, 24X7 ಕೆಲಸ ಮಾಡುವ ಟೋಲ್ ಫ್ರೀ ಹಾಟ್‌ಲೈನ್ ಸಂಖ್ಯೆಗಳೊಂದಿಗೆ ಮೀಸಲಾದ ವಲಯವಾರು ನಿಯಂತ್ರಣ ಕೊಠಡಿಗಳನ್ನು ರಚಿಸಲು, ಸಲಹಾ ಕರೆ ನೀಡುತ್ತದೆ.

 

ದಯವಿಟ್ಟು ಗಮನಿಸಿ:

  1. ವನ್ಯಜೀವಿಗಳ ರಕ್ಷಣೆಯ ಕೆಲಸ ಅದರದ್ದೇ ಆದ ಬೆಲೆ ತೆರುತ್ತದೆ. ‘ಮಾನವ-ವನ್ಯಜೀವಿ ಸಂಘರ್ಷ’, ಸಂರಕ್ಷಣಾ ಸಾಹಿತ್ಯದಲ್ಲಿ ಪದೇಪದೇ ಇಣುಕುವ ನುಡಿಗಟ್ಟು, ಪ್ರಪಂಚದಾದ್ಯಂತ ಸರ್ಕಾರಗಳಿಗೆ, ಸಂರಕ್ಷಣಾವಾದಿಗಳಿಗೆ ಮತ್ತು ವಿಜ್ಞಾನಿಗಳಿಗೆ ದಿನೇ ದಿನೇ ಹೆಚ್ಚುತ್ತಿರುವ ಕಳವಳಕಾರಿ ವಿಷಯಗಳಲ್ಲೊಂದು. ಕಳಕಳಿಯ ಹೊರತಾಗಿಯೂ, ಮಾನವ-ವನ್ಯಜೀವಿ ಸಂಘರ್ಷದ ಸುತ್ತ ಹೆಣೆದಿರುವ ಕಥೆಗಳು ಅಭಿಪ್ರಾಯ ಭೇದಗಳನ್ನು ಹುಟ್ಟುಹಾಕುತ್ತಲೇ ಇವೆ. ಅಭಯಾರಣ್ಯಗಳ ಸುತ್ತಮುತ್ತಲೇ ವಾಸಿಸುವ ವ್ಯವಸಾಯ ಸಮುದಾಯಗಳು ಆಗಾಗ ಬೆಳೆ ಹಾನಿ ಮತ್ತು ಜಾನುವಾರು ನಷ್ಟ ಅನುಭವಿಸುವುದರಿಂದ, ದಕ್ಷಿಣ ಭಾರತದಲ್ಲಿ ಈ ಸಂಘರ್ಷ ಮತ್ತಷ್ಟು ಹೆಚ್ಚು.
  2. ವಾಸ್ತವವಾಗಿ, ‘ಮಾನವ-ವನ್ಯಜೀವಿ ಸಂಘರ್ಷ’ ಎಂಬ ನುಡಿಗಟ್ಟು ತಪ್ಪು ಹೆಸರಿನ ಪ್ರಯೋಗ ಎಂದು ಅಧ್ಯಯನಗಳು ಸೂಚಿಸಿವೆ, ಏಕೆಂದರೆ ಸಮಾಜದಲ್ಲಿರುವ ಕೆಲವು ಅತ್ಯಂತ ಮುಖ್ಯವಾದ ಸಮಸ್ಯೆಗಳ ಮೇಲೆ ಇದು ಪರದೆ ಎಳೆಯುತ್ತದೆ. ಭಾರತದ ರಾಜ್ಯಗಳಲ್ಲಿ ಅಭಯಾರಣ್ಯಗಳ ನಿರ್ವಹಣೆ ಮತ್ತು ಅಡಗಿರುವ ಆರ್ಥಿಕ ಶಕ್ತಿಗಳನ್ನು ವರದಿಗಳು ಹೇಗೆ ಅಲಕ್ಷ್ಯ ಮಾಡುತ್ತವೆ ಎಂದು ಇತ್ತೀಚಿಗೆ ಪ್ರಕಟವಾದ ಯೂನಿವರ್ಸಿಟಿ ಆಫ್ ಶೆಫ್ಫೀಲ್ಡ್ -ನ ಡಾ।। ಜೇರೆಡ್ ಮಾರ್ಗ್ಯುಲೀಸ್ ಮತ್ತು ಸೆಂಟರ್ ಫಾರ್ ವೈಲ್ಡ್ ಲೈಫ್ ಸ್ಟಡೀಸ್-ನ ಡಾ।। ಕೃತಿ ಕೆ. ಕಾರಂತ ಅವರ ಅಧ್ಯಯನವೊಂದು ತೋರಿಸಿಕೊಟ್ಟಿದೆ. ಮಾನವ-ನಿಸರ್ಗ ಅನುಭವಗಳನ್ನು ರೂಪಿಸುವ ಸಾಮಾಜಿಕ ಮತ್ತು ರಾಜಕೀಯ ಅಂಶಗಳ ಮೇಲೆ ಕೇಂದ್ರೀಕೃತವಾದ ರಾಜಕೀಯ ಪರಿಸರ ವಿಜ್ಞಾನದ ಚೌಕಟ್ಟನ್ನು ಲೇಖಕರು ಬಳಸಿದ್ದಾರೆ. ಹುಲಿ ಮತ್ತು ಆನೆಗಳ ಸಂಖ್ಯೆ ಹೋಲಿಕೆಯ ದೃಷ್ಟಿಯಿಂದ ಹೆಚ್ಚಾಗಿ ಇರುವ ಕರ್ನಾಟಕದ ಬಂಡೀಪುರ ಅಭಯಾರಣ್ಯದ ಸುತ್ತ ಇರುವ ಹಳ್ಳಿಗಳಲ್ಲಿ ಕಾಡುಪ್ರಾಣಿಗಳ ಬಗ್ಗೆ ಇರುವ ಸಹಿಷ್ಣುತೆಯನ್ನು ಈ ಅಧ್ಯಯನ ಪರಿಶೀಲಿಸಿದೆ.
  3. ಅನೌಪಚಾರಿಕ ಸಂದರ್ಶನಗಳು, ಹಳ್ಳಿಗಳ ಹಿರಿಯರ ಜೊತೆಗಿನ ಸಂಭಾಷಣೆಗಳು, ಜಾನುವಾರು ಮತ್ತು ಜನರ ಗಣತಿ, ಮತ್ತು ಪ್ರಾಣಿಜಾತಿಗಳ ನಿರ್ವಹಣಾ ಯೋಜನೆಗಳು, ಹೀಗೆ ವಿಜ್ಞಾನಿಗಳು ವಿಸ್ತಾರವಾದ ಮಾಹಿತಿ ಸಂಗ್ರಹ ಮಾಡಿದರು. ಸಂಘರ್ಷದ ಬಗ್ಗೆ ಅರಣ್ಯ ಇಲಾಖೆಯ ಗ್ರಹಿಕೆಗಳಿಗೂ ಮತ್ತು ಹಳ್ಳಿಯ ಜನರ ವಾಸ್ತವ ಅನುಭವಗಳಿಗೂ ವ್ಯತ್ಯಾಸವಿರುವುದನ್ನು ಅಧ್ಯಯನ ತೋರಿಸಿದೆ. ಹೆಚ್ಚುತ್ತಿರುವ ಅಭಿವೃದ್ಧಿ ಕೆಲಸಗಳು ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ಸಹಿಷ್ಣುತೆ ಕಡಿಮೆಯಾಗಿರುವುದಕ್ಕೆ ಕಾರಣ ಎಂದು ಸರ್ಕಾರಿ ಅಧಿಕಾರಿಗಳು ಹೇಳಿದರೆ, ಹಳ್ಳಿಗಳ ಜನ ನಿರ್ವಹಣಾ ಕಾರ್ಯಭಾರದ ಬಗ್ಗೆ ಹತಾಶೆ ವ್ಯಕ್ತಪಡಿಸಿದರು.
  4. ಇಂತಹ ಹತಾಶೆಗಳ ಹಿಂದಿನ ಕಥೆಗಳು ಸಂಕೀರ್ಣವಾದವು. ಆರ್ಥಿಕ ಹಿನ್ನೆಲೆಯಲ್ಲಿ, ಹಿಂದೆ ಜಾನುವಾರುಗಳ ಸಗಣಿಯನ್ನು ರಾಸಾಯನಿಕ ಗೊಬ್ಬರವಾಗಿ ಮಾರಾಟವಾಗುತ್ತಿದ್ದ ಪ್ರದೇಶಗಳಲ್ಲಿ ಈಗ ಜಾನುವಾರು ಪಾಲನೆ ಮಾಡುವ ರೈತರು ಮೇಲೆ ಕಾಫಿ ಉದ್ಯಮ ನೇರ ಪರಿಣಾಮ ಬೀರುತ್ತಿದೆ. 1990 ರ ದಶಕದಲ್ಲಿ ಸಗಣಿ ಗೊಬ್ಬರಕ್ಕೆ ಬೇಡಿಕೆ ಕಡಿಮೆಯಾಗಿ ಕಾಫಿ ಬೆಲೆ ಬಹಳವಾಗಿ ಏರಿದಾಗ ರೈತರು ತಮ್ಮ ಜಾನುವಾರುಗಳನ್ನು ಮೇಯುವುದಕ್ಕಾಗಿ ಅಭಯಾರಣ್ಯಗಳ ಒಳಗೆ ಕರೆದೊಯ್ಯುತ್ತಿದ್ದರು. ಇದರಿಂದ ಕೆಲವರು ಜಾನುವಾರು ನಷ್ಟ ಅನುಭವಿಸಿದರು ನಿಜ, ಆದರೆ ಆ ಪರಿಸ್ಥಿತಿಯಲ್ಲಿ ರೈತರ ಈ ನಿರ್ಧಾರ ನಿರೀಕ್ಷಿಸಿದ್ದೇ ಆಗಿತ್ತು. ಇಂದು, ಕಾಫಿ ಬೆಲೆ ಏರದೇ ಹೆಚ್ಚುಕಡಿಮೆ ಇದ್ದಷ್ಟೇ ಇದೆ, ಮತ್ತು ಕೆಲಸಗಾರರ ಕೆಲಸಕ್ಕೆ ಬೆಲೆ ಏರಿದೆ. ಇದರಿಂದ ಕಡೆಗೆ ಸಗಣಿ ಗೊಬ್ಬರದ ಮಾರುಕಟ್ಟೆ ಉಳಿಯಬಲ್ಲ ಸಂಭವವೇ ಇಲ್ಲದಾಯಿತು. ಅರಣ್ಯಾಧಿಕಾರಿಗಳ ಶಿಸ್ತಿನ ಕ್ರಮಗಳೂ ಇದಕ್ಕೆ ಸೇರಿದ್ದರಿಂದ, ರೈತರು ಸಗಣಿ ಗೊಬ್ಬರವನ್ನು ಬಿಟ್ಟು ಹೆಚ್ಚು ಹಾಲು ಉತ್ಪಾದನೆ ಮಾಡುವ ಆದರೆ ದುಬಾರಿಯಾದ ಯೂರೋಪಿಯನ್ ಜಾನುವಾರು ತಳಿಗಳ ಕಡೆ ಮುಖ ಮಾಡುತ್ತಿದ್ದಾರೆ.

 

ಈ ಆರ್ಥಿಕ ಬದಲಾವಣೆಯ ಫಲಿತಾಂಶವೇನು? ಬೇಟೆಪ್ರಾಣಿಗಳು ಈಗ ಹಳ್ಳಿಗಳ ಒಳಗೇ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿವೆ, ಮತ್ತು ಇದಕ್ಕೆ ತಕ್ಕಂತೆ ಜನರಲ್ಲಿ ಸಹಿಷ್ಣುತೆಯೂ ಕಡಿಮೆಯಾಗುತ್ತಿದೆ. ಒಂದು ಸಾಮಾಜಿಕ ಒಪ್ಪಂದದ ಉಲ್ಲಂಘನೆಯಾಗಿರುವಂತೆ, ಈ ರೀತಿಯ ವನ್ಯಜೀವಿಗಳ ಜೊತೆಗಿನ ಸೆಣಸಾಟ ಅವುಗಳ ಬಗ್ಗೆ ಮುಂಚೆಯಿದ್ದ ಮನಸ್ಥಿತಿಯನ್ನು ಬದಲಾಯಿಸಿದೆ. ಅಧ್ಯಯನದ ಲೇಖಕರು ಸರಿಯಾಗಿ ವರ್ಣಿಸಿರುವಂತೆ, “ಮಾನವ-ವನ್ಯಜೀವಿ ಮುಖಾಮುಖಿಯಾಗುವ ಕ್ಷೇತ್ರ ಬದಲಾಗಿದೆ.”

 

  1. ಎಲ್ಲಕ್ಕಿಂತ ಮುಖ್ಯವಾಗಿ ಈ ಅಧ್ಯಯನ ಒತ್ತಿ ಹೇಳುತ್ತಿರುವ ಅಂಶವೆಂದರೆ ನಾವು ಮಾನವ-ವನ್ಯಜೀವಿ ಸಂಘರ್ಷದ ಬಗ್ಗೆ ನಮ್ಮ ಗ್ರಹಿಕೆಗಳನ್ನು ಬದಲಾಯಿಸಿಕೊಳ್ಳುವ ತುರ್ತು ಅಗತ್ಯ. ವ್ಯಾಪಕವಾಗಿ ನಂಬಲಾಗಿರುವ ಕಾಡುಪ್ರಾಣಿಗಳ ಬಗ್ಗೆ ಅಸಹಿಷ್ಣುತೆಯ ಹಿಂದಿನ ಕಾರಣಗಳು, ಆರ್ಥಿಕ ಸಂಕಟಗಳ ನಿಜವಾದ ವಸ್ತುಸ್ಥಿತಿಯನ್ನು ಅರ್ಥಮಾಡಿಕೊಳ್ಳುವುದರಿಂದ ನಮ್ಮನ್ನು ವಿಚಲಿತರಾಗುವಂತೆ ಮಾಡಬಹುದು, ಹೀಗಾಗಿ ವಾಸ್ತವವನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ ಎಂದು ವಿಜ್ಞಾನಿಗಳು ಸೂಚಿಸಿದ್ದಾರೆ.
  2. ರಾಜಕೀಯ ಪರಿಸರ ವಿಜ್ಞಾನದ ಒಟ್ಟಾರೆ ಚೌಕಟ್ಟು ಮಾನವ-ವನ್ಯಜೀವಿ ಸಂಘರ್ಷವನ್ನು ಭೂಪ್ರದೇಶ ವ್ಯಾಪ್ತಿ, ರಾಜಕೀಯ ಮತ್ತು ಆರ್ಥಿಕ ಶಕ್ತಿಗಳ ಹಿನ್ನೆಲೆಯಲ್ಲಿ ಹೊಂದಿಸಿ ನೋಡಿದೆ. ಈ ಅರಿವಿನ ಆಧಾರದ ಮೇಲೆ, ಅಭಯಾರಣ್ಯಗಳ ನಿರ್ವಹಣೆಗೆ ಹೆಚ್ಚು ಬಂಡವಾಳ ಹೂಡುವುದಕ್ಕಿಂತ ಜಾನುವಾರು ಮೂಲಭೂತ ಸೌಕರ್ಯದ ಮೇಲೆ ಹೂಡಬೇಕು ಎಂದು ವಿಜ್ಞಾನಿಗಳು ಸಲಹೆ ನೀಡುತ್ತಾರೆ. ರಾಜಕೀಯ ಪರಿಸರ ವಿಜ್ಞಾನ ಸಂರಕ್ಷಣಾ ನಿರ್ವಹಣೆಗೂ ಕೊಡುಗೆ ನೀಡಿ, ನ್ಯಾಯ ಒದಗಿಸುವುದರ ಮೇಲೆ ವಿಸ್ತಾರವಾದ ದೃಷ್ಟಿಯನ್ನು ಹೊಂದಲು ಪ್ರೇರೇಪಿಸುತ್ತದೆ ಎಂದೂ ಅವರು ನಂಬುತ್ತಾರೆ. ಸಂರಕ್ಷಣೆಯನ್ನು ಹೇಗೆ ಅರ್ಥೈಸಿಕೊಂಡು ಅದರ ಬಗ್ಗೆ ಕೆಲಸಗಳ ನಿರ್ವಹಣೆಯಾಗುತ್ತಿದೆ ಎಂಬ ನಮ್ಮ ಗ್ರಹಿಕೆಯನ್ನು ಮತ್ತಷ್ಟು ಉತ್ತಮಗೊಳಿಸುವುದಕ್ಕಾಗಿ ಭಾರತದ ರಾಷ್ಟ್ರೀಯ ಹಾಗೂ ರಾಜ್ಯಗಳ ರಾಜಕೀಯ ವ್ಯವಸ್ಥೆಗಳ ಮೇಲೆ ಮತ್ತಷ್ಟು ಕೂಲಂಕಷವಾಗಿ ಅಧ್ಯಯನ ಮಾಡಬೇಕೆಂದೂ ಸೂಚಿಸಲಾಗಿದೆ.

 

ವಿಷಯಗಳು: ಸಂವಹನ ಜಾಲಗಳ ಮೂಲಕ ಆಂತರಿಕ ಭದ್ರತೆಗೆ ಸವಾಲು ಹಾಕುವುದು, ಆಂತರಿಕ ಭದ್ರತಾ ಸವಾಲುಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ, ಸೈಬರ್ ಭದ್ರತೆಯ ಮೂಲಭೂತ ಅಂಶಗಳು, ಅಕ್ರಮ ಹಣ ವರ್ಗಾವಣೆ ಮತ್ತು ಅದನ್ನು ತಡೆಯುವುದು.

ರಾಷ್ಟ್ರೀಯ ಭದ್ರತಾ ಕಾಯ್ದೆ (NSA),1980:


(National Security Act (NSA), 1980)

 

ಸಂದರ್ಭ:

ಇತ್ತೀಚೆಗೆ, ಮಾಜಿ ನಾಗರಿಕ ಸೇವೆಯ ಅಧಿಕಾರಿಗಳು ರಾಷ್ಟ್ರೀಯ ಭದ್ರತಾ ಕಾಯ್ದೆ (National Security Act) ಯನ್ನು ಕಠಿಣ ತಡೆಗಟ್ಟುವ ಬಂಧನ ಕಾನೂನು (draconian preventive detention law) ಎಂದು ಕರೆಯುವ ಮೂಲಕ ಅದರ ದುರುಪಯೋಗವನ್ನು ಕೊನೆಗೊಳಿಸಬೇಕೆಂಬ ಬೇಡಿಕೆ ಇಟ್ಟಿದ್ದಾರೆ.

 

ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಕುರಿತು:

‘ರಾಷ್ಟ್ರೀಯ ಭದ್ರತಾ ಕಾಯ್ದೆ’ NSA ಒಂದು ತಡೆಗಟ್ಟುವ ಬಂಧನ ಕಾನೂನು ಆಗಿದೆ.

ತಡೆಗಟ್ಟುವ ಬಂಧನವು (preventive detention) ವ್ಯಕ್ತಿಯನ್ನು ಭವಿಷ್ಯದಲ್ಲಿ ಅಪರಾಧ ಮಾಡುವುದನ್ನು ತಡೆಯಲು ಮತ್ತು / ಅಥವಾ ಭವಿಷ್ಯದಲ್ಲಿ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳದಂತೆ ತಡೆಯಲು ಬಂಧನ (ಜೈಲುವಾಸ) ವನ್ನು ಒಳಗೊಂಡಿರುತ್ತದೆ.

 

ಸಂವಿಧಾನದ 22 (3) (ಬಿ) ವಿಧಿಯು, ರಾಜ್ಯದ ಭದ್ರತೆ ಮತ್ತು ಸಾರ್ವಜನಿಕ ಸುವ್ಯವಸ್ಥೆಗೆ ಸಂಬಂಧಿಸಿದ ಕಾರಣಗಳಿಗಾಗಿ ತಡೆಗಟ್ಟುವ ಬಂಧನ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಮೇಲೆ ನಿರ್ಬಂಧಗಳನ್ನು ವಿಧಿಸಲು ಅನುಮತಿಸುತ್ತದೆ.

 

ಸಂವಿಧಾನದ ವಿಧಿ 22 (4) ಪ್ರಕಾರ:

ತಡೆಗಟ್ಟುವ ಬಂಧನಕ್ಕೆ ಯಾವುದೇ ಕಾನೂನು ಆಧಾರ ಒದಗಿಸದ ಹೊರತು ಯಾವುದೇ ವ್ಯಕ್ತಿಯನ್ನು ಮೂರು ತಿಂಗಳು ಮೀರಿದ ಅವಧಿಗೆ ಬಂಧಿಸಲು ಅಧಿಕಾರ ನೀಡುವುದಿಲ್ಲ. ಹೊರತು

ಮೂರು ತಿಂಗಳ ಅವಧಿಯನ್ನು ಮೀರಿ ಬಂಧನವನ್ನು ವಿಸ್ತರಿಸಲು ಸಲಹಾ ಮಂಡಳಿಯು ಸಾಕಷ್ಟು ಕಾರಣಗಳನ್ನು ವರದಿ ಮಾಡಬೇಕಾಗುತ್ತದೆ.

 

1978 ರ 44 ನೇ ತಿದ್ದುಪಡಿ ಕಾಯ್ದೆಯ ಪ್ರಕಾರ, ‘ಸಲಹಾ ಮಂಡಳಿಯ’ ಅಭಿಪ್ರಾಯವನ್ನು ಪಡೆಯದೆ ಬಂಧನದ ಅವಧಿಯನ್ನು ಮೂರು ತಿಂಗಳಿಂದ ಎರಡು ತಿಂಗಳಿಗೆ ಇಳಿಸಲಾಗಿದೆ. ಆದಾಗ್ಯೂ, ಈ ನಿಬಂಧನೆಯನ್ನು ಇನ್ನೂ ಜಾರಿಗೆ ತರಲಾಗಿಲ್ಲ, ಆದ್ದರಿಂದ, ಮೂರು ತಿಂಗಳ ಮೂಲ ಅವಧಿಯ ಅವಕಾಶ ಇನ್ನೂ ಜಾರಿಯಲ್ಲಿದೆ.

 

ಬಂಧನದ ಅವಧಿ:

  1. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ವ್ಯಕ್ತಿಯನ್ನು 12 ತಿಂಗಳವರೆಗೆ ಯಾವುದೇ ಆಧಾರವಿಲ್ಲದೆ ಬಂಧಿಸಬಹುದು. ಆದರೆ ಸರ್ಕಾರವು ಕೆಲವು ಹೊಸ ಪುರಾವೆಗಳನ್ನು ಪಡೆದುಕೊಂಡರೆ, ಈ ಅವಧಿಯನ್ನು ಮತ್ತಷ್ಟು ವಿಸ್ತರಿಸಬಹುದು.
  2. ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ, ಬಂಧನಕ್ಕೊಳಗಾದ ವ್ಯಕ್ತಿಯನ್ನು ತನ್ನ ವಿರುದ್ಧದ ಆರೋಪಗಳನ್ನು ಹೇಳದೆ 10 ದಿನಗಳ ಕಾಲ ಬಂಧಿಸಬಹುದು. ಬಂಧಿತ ವ್ಯಕ್ತಿಯು ಹೈಕೋರ್ಟ್‌ನ ಸಲಹಾ ಮಂಡಳಿಯ ಮುಂದೆ ಮೇಲ್ಮನವಿ ಸಲ್ಲಿಸಬಹುದು ಆದರೆ ವಿಚಾರಣೆಯ ಸಮಯದಲ್ಲಿ ಅವನಿಗೆ ವಕೀಲರ ಸಹಾಯವನ್ನು ಪಡೆಯಲು ಅನುಮತಿ ಇಲ್ಲ.

 

ಈ ಕಾನೂನಿನ ದುರುಪಯೋಗದ ಬಗ್ಗೆ ಕಳವಳಗಳು:

  1. ಭಾರತೀಯ ಸಂವಿಧಾನದ 22 (1) ನೇ ವಿಧಿಯ ಪ್ರಕಾರ, ಬಂಧಿಸಲ್ಪಟ್ಟ ಯಾವುದೇ ವ್ಯಕ್ತಿಯು ಸಮಾಲೋಚಿಸುವ ಹಕ್ಕನ್ನು ಕಳೆದುಕೊಳ್ಳುವುದಿಲ್ಲ ಅಥವಾ ಆತನ ಸಮಾಲೋಚಿಸುವ ಹಕ್ಕನ್ನು ನಿರಾಕರಿಸುವಂತಿಲ್ಲ ಮತ್ತು ಅವನ ಆಸಕ್ತಿಯ ವಕೀಲರಿಂದ ರಕ್ಷಿಸಲ್ಪಡುತ್ತಾನೆ.
  2. ಅಪರಾಧ ದಂಡ ಪ್ರಕ್ರಿಯೆ ಸಂಹಿತೆ (CRPC) ಸೆಕ್ಷನ್ 50 ರ ಪ್ರಕಾರ, ಬಂಧನಕ್ಕೊಳಗಾದ ಯಾವುದೇ ವ್ಯಕ್ತಿಗೆ ಆತನನ್ನು ಯಾವ ಆಧಾರದ ಮೇಲೆ ಬಂಧಿಸಲಾಗಿದೆ ಎಂದು ತಿಳಿಸಬೇಕು ಮತ್ತು ಆತನಿಗೆ ಜಾಮೀನು ಪಡೆಯುವ ಹಕ್ಕಿದೆ.

 

ಆದಾಗ್ಯೂ, ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ, ಬಂಧನಕ್ಕೊಳಗಾದ ವ್ಯಕ್ತಿಗೆ ಈ ಯಾವುದೇ ಹಕ್ಕುಗಳು  ಲಭ್ಯವಿಲ್ಲ. ಈ ಕಾನೂನಿನಡಿಯಲ್ಲಿ, ಸರ್ಕಾರವು ಮಾಹಿತಿಯನ್ನು ಬಹಿರಂಗಪಡಿಸುವುದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವೆಂದು ಪರಿಗಣಿಸಿದರೆ ಮಾಹಿತಿಯನ್ನು ತಡೆಹಿಡಿಯುವ ಅಥವಾ ಮರೆಮಾಚುವ ಹಕ್ಕನ್ನು ಸರ್ಕಾರ ಹೊಂದಿದೆ.   

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಸ್ಪರ್ಶ [ಪಿಂಚಣಿ ಆಡಳಿತ ವ್ಯವಸ್ಥೆ (ರಕ್ಷಾ)]:

(SPARSH [System for Pension Administration (Raksha)]

  1. ಇದು ರಕ್ಷಣಾ ಇಲಾಖೆಗೆ ಸಂಬಂಧಿಸಿದ ಪಿಂಚಣಿಗಳ ಮಂಜೂರಾತಿ ಮತ್ತು ವಿತರಣೆಯ ‘ಯಾಂತ್ರೀಕೃತಗೊಂಡ’ ಒಂದು ಸಂಯೋಜಿತ ವ್ಯವಸ್ಥೆಯಾಗಿದೆ.
  2. ಇದನ್ನು ರಕ್ಷಣಾ ಸಚಿವಾಲಯ ಜಾರಿಗೊಳಿಸಲಿದೆ.
  3. ಈ ವೆಬ್ ಆಧಾರಿತ ವ್ಯವಸ್ಥೆಯು ಪಿಂಚಣಿ ಹಕ್ಕುಗಳನ್ನು ಪ್ರಕ್ರಿಯೆಗೊಳಿಸುತ್ತದೆ ಮತ್ತು ಯಾವುದೇ ಬಾಹ್ಯ ಮಧ್ಯವರ್ತಿಯನ್ನು ಅವಲಂಬಿಸದೆ ಪಿಂಚಣಿಯನ್ನು ನೇರವಾಗಿ ರಕ್ಷಣಾ ಪಿಂಚಣಿದಾರರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡುತ್ತದೆ.

 

dbGENVOC:

  1. ಇದು,ಬಾಯಿಯ ಕ್ಯಾನ್ಸರ್ ನ ಜೀನೋಮಿಕ್ ರೂಪಾಂತರಗಳ ವಿಶ್ವದ ಮೊದಲ ಡೇಟಾಬೇಸ್ ಆಗಿದೆ.
  2. ಇದನ್ನು ಜೈವಿಕ ತಂತ್ರಜ್ಞಾನ ಇಲಾಖೆ, ಭಾರತ ಸರ್ಕಾರದಿಂದ ಧನಸಹಾಯ ಪಡೆದ ಸ್ವಾಯತ್ತ ಸಂಸ್ಥೆ,‘ಡಿಬಿಟಿ-ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಬಯೋಮೆಡಿಕಲ್ ಜೀನೋಮಿಕ್ಸ್’ (NIBMG), ಕಲ್ಯಾಣಿ ರಚಿಸಿದ್ದಾರೆ.