Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 8ನೇ ಜೂನ್ 2021

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಅಕ್ರಮವಾಗಿ ಮಕ್ಕಳನ್ನು ದತ್ತು ಪಡೆಯುವುದನ್ನು ನಿಲ್ಲಿಸುವಂತೆ ಆಗ್ರಹಿಸಿದ ಸುಪ್ರೀಂಕೋರ್ಟ್.

2. G 7 ಕಾರ್ಪೊರೇಟ್ ತೆರಿಗೆ ಒಪ್ಪಂದ.

3. ಆಸಿಯಾನ್ ವಿದೇಶಾಂಗ ಮಂತ್ರಿಗಳ ಸಭೆ ಆಯೋಜಿಸಿದ ಚೀನಾ.

4. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಚುನಾವಣೆಯಲ್ಲಿ ವಿಜಯಶಾಲಿಯಾದ ಮಾಲ್ಡಿವ್ಸ್. ನಿಕಟ ಸಹಕಾರವನ್ನು ಬಯಸಿದ ಭಾರತ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ರಾಷ್ಟ್ರೀಯ ಆಸ್ತಿ ಪುನರ್ನಿರ್ಮಾಣ ಕಂಪನಿ ನಿಗಮಿತ. (NARCL).

2. ಟರ್ಕಿಯಲ್ಲಿ ‘ಸೀ ಸ್ನೋಟ್’(sea snot) ಔಟ್ ಬ್ರೇಕ್.

3. ಹರಿಯಾಣದ “ಪ್ರಾಣ ವಾಯು ದೇವತಾ ಪಿಂಚಣಿ ಯೋಜನೆ”, ಮತ್ತು ಆಕ್ಸಿ ವನ (ಆಮ್ಲಜನಕ ಅರಣ್ಯಗಳು).

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಅಕ್ರಮವಾಗಿ ಮಕ್ಕಳನ್ನು ದತ್ತು ಪಡೆಯುವುದನ್ನು ನಿಲ್ಲಿಸುವಂತೆ ಆಗ್ರಹಿಸಿದ ಸುಪ್ರೀಂಕೋರ್ಟ್:


(SC urged to stop illegal adoption)

 ಸಂದರ್ಭ:

COVID ಸಾಂಕ್ರಾಮಿಕ ರೋಗದ ಹೊಡೆತದಿಂದಾಗಿ ಅನಾಥರಾದ ಮಕ್ಕಳನ್ನು ಖಾಸಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳಿಂದ ಅಕ್ರಮವಾಗಿ ದತ್ತು ತೆಗೆದುಕೊಳ್ಳುತ್ತಿರುವ ಬಗ್ಗೆ ಹೆಚ್ಚಿನ ಸಂಖ್ಯೆಯ ದೂರುಗಳು ಬರುತ್ತಿವೆ, ಈ ವಿಷಯದ ಬಗ್ಗೆ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ (National Commission for Protection of Child Rights – NCPCR) ಎಚ್ಚರಿಕೆ ಗಂಟೆ ಮೊಳಗಿಸಿದ ನಂತರ ಅಂದರೆ ಈ ಕುರಿತು ಕಳವಳ ವ್ಯಕ್ತಪಡಿಸಿದ ನಂತರ ಈ ವಿಷಯದಲ್ಲಿ ಮಧ್ಯಪ್ರವೇಶಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.

 

ಏನಿದು ಸಮಸ್ಯೆ?

 ಮಕ್ಕಳ ಹಕ್ಕುಗಳ ಸಂರಕ್ಷಣೆಗಾಗಿ ರಾಷ್ಟ್ರೀಯ ಆಯೋಗದ (NCPCR) ಅಂಕಿಅಂಶಗಳ ಪ್ರಕಾರ, 2021 ರ ಏಪ್ರಿಲ್ 1 ರಿಂದ 2021 ರ ಜೂನ್ 5 ರವರೆಗೆ 3,621 ಮಕ್ಕಳು ಅನಾಥರಾಗಿದ್ದಾರೆ, 26,176 ಮಕ್ಕಳು ಪೋಷಕರನ್ನು ಕಳೆದುಕೊಂಡಿದ್ದಾರೆ ಮತ್ತು 274 ಮಕ್ಕಳು ಪರಿತ್ಯಕ್ತ ರಾಗಿದ್ದಾರೆ. ಈ ಅವಧಿಯಲ್ಲಿ ಸಾಂಕ್ರಾಮಿಕ ರೋಗದ ಎರಡನೇ ಅಲೆಯು ಅತ್ಯಂತ ಕೆಟ್ಟದಾಗಿತ್ತು ಮತ್ತು ಇದು ದೇಶಾದ್ಯಂತ ಸಾವಿನ ಕುರುಹುಗಳನ್ನು ಬಿಟ್ಟಿದೆ.

 1. ಮೇ ತಿಂಗಳಲ್ಲಿ, NCPCR ಗೆ, ಖಾಸಗಿ ವ್ಯಕ್ತಿಗಳು ಮತ್ತು ಸಂಸ್ಥೆಗಳು ಅನಾಥ ಮಕ್ಕಳನ್ನು ದತ್ತು ಪಡೆಯುವ ಉದ್ದೇಶದಿಂದ ಮಕ್ಕಳ ಕುಟುಂಬಗಳಿಗೆ ಮತ್ತು ಮಕ್ಕಳಿಗೆ ಸಹಾಯ ಮಾಡುವಂತೆ ನಟಿಸಿ ಈ ಮಕ್ಕಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿರುವ ಹಲವಾರು ದೂರುಗಳು ಬಂದಿವೆ.
 2. ಮಕ್ಕಳನ್ನು ದತ್ತು ಪಡೆಯುವುದಕ್ಕೆ ಸಂಬಂಧಿಸಿದ ಪೋಸ್ಟ್‌ಗಳನ್ನು ಸಾಮಾಜಿಕ ಮಾಧ್ಯಮ ಅಥವಾ ಜಾಲತಾಣದಲ್ಲಿ ಪ್ರಸಾರ ಮಾಡಲಾಗುತ್ತಿದೆ. ಇದು ಸ್ಪಷ್ಟವಾಗಿ ಕಾನೂನುಬಾಹಿರವಾಗಿದೆ ಮತ್ತು ಇದು ಬಾಲಾಪರಾಧಿ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ’ (Juvenile Justice (JJ) Act, 2015) ಅಂದರೆ ‘ಜೆಜೆ ಕಾಯ್ದೆ’ 2015 ರ ಉಲ್ಲಂಘನೆಯಾಗಿದೆ.
 3. ಈ ಕಾಯಿದೆಯಡಿ, ಮಕ್ಕಳ ಹೆಸರು, ಶಾಲೆ, ವಯಸ್ಸು, ವಿಳಾಸ ಸೇರಿದಂತೆ ಯಾವುದೇ ಅಗತ್ಯ ಮಾಹಿತಿಯನ್ನು ಬಹಿರಂಗಪಡಿಸುವುದನ್ನು ನಿಷೇಧಿಸಲಾಗಿದೆ.

 

ಅನಾಥ ಮಕ್ಕಳೊಂದಿಗೆ ಅನುಸರಿಸಬೇಕಾದ ವಿಧಾನ ಏನು?

 1. ಆಶ್ರಯದ ಅಗತ್ಯವಿರುವ ಮಗುವಿನ ಬಗ್ಗೆ ಯಾರಾದರೂ ಮಾಹಿತಿ ಹೊಂದಿದ್ದರೆ, ಅವರು ನಾಲ್ಕು ಏಜೆನ್ಸಿಗಳಲ್ಲಿ ಒಂದನ್ನು ಸಂಪರ್ಕಿಸಬೇಕು: ಮಕ್ಕಳ ಸಹಾಯವಾಣಿ ​​1098, ಅಥವಾ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ (CWC), ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ (DCPO) ಅಥವಾ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಇರುವ ರಾಜ್ಯ ಆಯೋಗದ ಸಹಾಯವಾಣಿ ಯನ್ನು ಸಂಪರ್ಕಿಸಿ ಮಾಹಿತಿ ನೀಡಬೇಕು.
 2. ಇದನ್ನು ಅನುಸರಿಸಿ, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ (CWC) ಮಗುವನ್ನು ಕೂಲಂಕಶವಾಗಿ ಪರಿಶೀಲಿಸುತ್ತದೆ ಮತ್ತು ಅವನ ಅಥವಾ ಅವಳನ್ನು ವಿಶೇಷ ದತ್ತು ಏಜೆನ್ಸಿಯ ತಕ್ಷಣದ ಆರೈಕೆಯಲ್ಲಿ ಇರಿಸುತ್ತದೆ.
 3. ಒಂದು ವೇಳೆ ಮಗುವಿಗೆ ಕುಟುಂಬ ಇಲ್ಲದಿದ್ದರೆ ಆಗ ರಾಜ್ಯವೆ ಅದರ ಪೋಷಕನ ಪಾತ್ರವನ್ನು ನಿರ್ವಹಿಸುತ್ತದೆ.

 

ಲಭ್ಯವಿರುವ ಇತರ ಶಿಶುಪಾಲನಾ ಆಯ್ಕೆಗಳು:

ದತ್ತು ಪ್ರಕ್ರಿಯೆಯು ಮಕ್ಕಳ ಪಾಲನೆಯಲ್ಲಿ ಇರುವ ಆಯ್ಕೆಗಳಲ್ಲಿ ಒಂದಾಗಿದೆ, ಆದರೆ, ಇದೊಂದೇ ಇರುವ ಆಯ್ಕೆಯಲ್ಲ. ಅಂತಹ ಮಕ್ಕಳಿಗೆ ಚಿಕ್ಕಪ್ಪ ಅಥವಾ ಚಿಕ್ಕಮ್ಮ ರಂತಹ ಸಂಬಂಧಿಕರು ಇದ್ದರೆ, ಅವರನ್ನು ನೋಡಿಕೊಳ್ಳಬಹುದು. ಮಕ್ಕಳು ತಮ್ಮ ಸ್ವಂತ ಕುಟುಂಬದೊಂದಿಗೆ ಸಂಪರ್ಕವನ್ನು ಬಯಸಬಹುದು ಮತ್ತು ಒಂದೇ ಪರಂಪರೆಯೊಳಗೆ ಉಳಿಯುವ ಆಯ್ಕೆಯನ್ನು ಹೊಂದಬಹುದು. ಅಂತಹ ಸಂದರ್ಭಗಳಲ್ಲಿ ಇಂತಹ ಸನ್ನಿವೇಶಕ್ಕೆ ಒಳಗಾಗಿರುವ ಮಕ್ಕಳ ಹಕ್ಕುಗಳನ್ನು ಕಾಪಾಡುವುದು ಬಹಳ ಮುಖ್ಯ.

 

ಈ ಸಮಯದ ಅವಶ್ಯಕತೆ:

ಇದು ರಕ್ತಸಂಬಂಧಿ ಆರೈಕೆಯತ್ತ ಗಮನ ಹರಿಸುವ ಸಮಯವಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಮತ್ತು ಎಲ್ಲಾ ಸಂಬಂಧಿತ ರಾಜ್ಯ ಇಲಾಖೆಗಳು ತಕ್ಷಣ ರಕ್ತಸಂಬಂಧಿ ಆರೈಕೆ ಕಾರ್ಯಕ್ರಮವನ್ನು ರೂಪಿಸಬೇಕು ಮತ್ತು ಅದನ್ನು ಬಾಲನ್ಯಾಯ (JJ) ಕಾಯ್ದೆಯಡಿ ಅನಾಥ ಮಕ್ಕಳ ಸಾಕಾಣಿಕೆಯ ಆರೈಕೆ ನಿಬಂಧನೆಗಳ ಭಾಗವಾಗಿಸಬೇಕು.

 

ಬಾಲನ್ಯಾಯ ಕಾಯ್ದೆ (JJ Act)ಯ ಕುರಿತು:

(Juvenile Justice (JJ) Act, 2015):

 1. ಗುರಿ: ಕಾನೂನಿನೊಂದಿಗೆ ಸಂಘರ್ಷದಲ್ಲಿರುವ ಮಕ್ಕಳನ್ನು ಮತ್ತು ಆರೈಕೆ ಹಾಗೂ ರಕ್ಷಣೆಯ ಅಗತ್ಯವಿರುವ ಮಕ್ಕಳನ್ನು ಸಮಗ್ರವಾಗಿ ನಿರ್ವಹಿಸುವುದು.
 2. ಪ್ರತಿ ಜಿಲ್ಲೆಯಲ್ಲೂ ಬಾಲಾಪರಾಧಿ ನ್ಯಾಯ ಮಂಡಳಿಗಳು ಮತ್ತು ಮಕ್ಕಳ ಕಲ್ಯಾಣ ಸಮಿತಿಗಳನ್ನು ಸ್ಥಾಪಿಸಲು ಇದು ಆದೇಶಿಸಿದೆ. ಈ ಎರಡೂ ಸಮಿತಿಗಳು ತಲಾ ಒಬ್ಬ ಮಹಿಳಾ ಸದಸ್ಯರನ್ನು ಹೊಂದಿರಬೇಕು.
 3. ಅಲ್ಲದೆ, ಕೇಂದ್ರ ದತ್ತು ಸಂಪನ್ಮೂಲ ಪ್ರಾಧಿಕಾರಕ್ಕೆ (CARA) ತನ್ನ ಕಾರ್ಯವನ್ನು ಹೆಚ್ಚು ಪರಿಣಾಮಕಾರಿಯಾಗಿ ನಿರ್ವಹಿಸಲು ಒಂದು ಶಾಸನಬದ್ಧ ಸಂಸ್ಥೆಯ ಸ್ಥಾನಮಾನವನ್ನು ನೀಡಲಾಗಿದೆ.
 4. ಈ ಕಾಯ್ದೆಯು ಮಕ್ಕಳ ವಿರುದ್ಧದ ಹಲವಾರು ಹೊಸ ಅಪರಾಧಗಳನ್ನು ಒಳಗೊಂಡಿದೆ (ಉದಾ:ಕಾನೂನುಬಾಹಿರ ದತ್ತುಗಳು, ಉಗ್ರಗಾಮಿ ಗುಂಪುಗಳಿಂದ ಮಕ್ಕಳ ಬಳಕೆ, ವಿಕಲಾಂಗ ಮಕ್ಕಳ ಮೇಲಿನ ದೌರ್ಜನ್ಯದ ಅಪರಾಧಗಳು, ಇತ್ಯಾದಿ) ಬೇರೆ ಯಾವುದೇ ಕಾನೂನಿನಡಿಯಲ್ಲಿ ಸಮರ್ಪಕವಾಗಿ ಒಳಗೊಂಡಿರದ ಇತರ ಅಪರಾಧಗಳು.
 5. ರಾಜ್ಯ ಸರ್ಕಾರದಿಂದ ಅಥವಾ ಸ್ವಯಂಪ್ರೇರಿತ ಅಥವಾ ಸರ್ಕಾರೇತರ ಸಂಸ್ಥೆಗಳಿಂದ ನಡೆಸಲ್ಪಡುತ್ತಿರುವ ಎಲ್ಲಾ ಮಕ್ಕಳ ಆರೈಕೆ ಅಥವಾ ಶಿಶುಪಾಲನಾ ಸಂಸ್ಥೆಗಳು, ಕಾಯಿದೆಯ ಪ್ರಾರಂಭದ ದಿನಾಂಕದಿಂದ 6 ತಿಂಗಳೊಳಗೆ ಬಾಲನ್ಯಾಯ ಕಾಯಿದೆಯಡಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.

 

Note:

‘ಮಕ್ಕಳ ಕಲ್ಯಾಣ ಸಮಿತಿಗಳ ಕಾರ್ಯನಿರ್ವಹಣೆಯಲ್ಲಿ ಇನ್ನಷ್ಟು ದಕ್ಷತೆಯನ್ನು ತರುವ ಉದ್ದೇಶದಿಂದ ಇಂಥ ಸಮಿತಿಗಳಿಗೆ ಸದಸ್ಯರಾಗಿ ಆಯ್ಕೆಯಾಗುವವರ ಹಿನ್ನೆಲೆಯನ್ನು ಪರೀಕ್ಷಿಸಲು ಸಹ ಅವಕಾಶ ನೀಡಲಾಗಿದೆ. ಪ್ರಸಕ್ತ ಅಂಥ ವ್ಯವಸ್ಥೆ ಇರುವುದಿಲ್ಲ.

‘ಮಕ್ಕಳ ಆರೈಕೆ ಕೇಂದ್ರದ ನೋಂದಣಿಗಾಗಿ ಸರ್ಕಾರಕ್ಕೆ ಶಿಫಾರಸು ಮಾಡುವುದಕ್ಕೂ ಮುನ್ನ, ಜಿಲ್ಲಾಧಿಕಾರಿಯು ಅಂಥ ಸಂಸ್ಥೆಯ ಹಿನ್ನೆಲೆ ಮತ್ತು ಅದರ ಸಾಮರ್ಥ್ಯವನ್ನು ಕುರಿತು ಪರಿಶೀಲನೆ ನಡೆಸಬೇಕಾಗುತ್ತದೆ. ಈಗಿರುವ ವ್ಯವಸ್ಥೆಯಲ್ಲಿ ಸಂಸ್ಥೆಯೊಂದರ ಸಾಮರ್ಥ್ಯ ಹಾಗೂ ಇತರ ಸೌಲಭ್ಯಗಳ ಪರಿಶೀಲನೆ ನಡೆಸಲು ಅವಕಾಶ ಇಲ್ಲ. ಮಕ್ಕಳ ಕಲ್ಯಾಣ ಸಮಿತಿಗಳು, ಬಾಲನ್ಯಾಯ ಪೊಲೀಸ್‌ ಘಟಕಗಳು ಹಾಗೂ ನೋಂದಾಯಿತ ಸಂಸ್ಥೆಗಳ ಕಾರ್ಯವೈಖರಿಯ ಬಗ್ಗೆಯೂ ಜಿಲ್ಲಾಧಿಕಾರಿ ಮೌಲ್ಯಮಾಪನ ಮಾಡಬಹುದು. ಮಾನವ ಕಳ್ಳಸಾಗಾಣಿಕೆ, ಮಾದಕ ವ್ಯಸನ, ಪಾಲಕರಿಂದ ತ್ಯಜಿಸಲ್ಪಟ್ಟವರು ಮತ್ತು ಬಾಲಕಾರ್ಮಿಕ ಪದ್ಧತಿಯಿಂದ ರಕ್ಷಣೆಗೆ ಒಳಗಾದ ಮಕ್ಕಳನ್ನು ‘ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳು’ ಎಂದು ಪರಿಗಣಿಸಲು ಸಾಧ್ಯವಾಗುವಂತೆ ಬಾಲನ್ಯಾಯ ಕಾಯ್ದೆಯ ವ್ಯಾಪ್ತಿಯನ್ನು ವಿಸ್ತರಿಸಲಾಗಿದೆ’.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

G 7 ಕಾರ್ಪೊರೇಟ್ ತೆರಿಗೆ ಒಪ್ಪಂದ:


(G7 corporate tax deal)

ಸಂದರ್ಭ:

ಇತ್ತೀಚಿಗೆ, ವಿಶ್ವದ ಏಳು ಶ್ರೀಮಂತ ಪ್ರಜಾಪ್ರಭುತ್ವ ರಾಷ್ಟ್ರಗಳ ಗುಂಪಾದ G7 ನ ಹಣಕಾಸು ಮಂತ್ರಿಗಳು ಹೊಸ ಜಾಗತಿಕ ಕಾರ್ಪೊರೇಟ್ ತೆರಿಗೆ (corporate tax deal) ಒಪ್ಪಂದವನ್ನು ಅನುಮೋದಿಸಿದ್ದಾರೆ.

ಜುಲೈನಲ್ಲಿ ನಡೆಯಲಿರುವ G20 ರಾಷ್ಟ್ರಗಳ ಹಣಕಾಸು ಮಂತ್ರಿಗಳು ಮತ್ತು ಕೇಂದ್ರಿಯ ಬ್ಯಾಂಕುಗಳ ಗವರ್ನರ್ ಗಳ ಸಭೆಯಲ್ಲಿ  ಈ ಕಾರ್ಪೊರೇಟ್ ತೆರಿಗೆ ಒಪ್ಪಂದದ ಕುರಿತು ವಿವರವಾಗಿ ಚರ್ಚಿಸಲಾಗುವುದು.

 

ಹೊಸ ಒಪ್ಪಂದದ ಮುಖ್ಯಾಂಶಗಳು:

 1. ಕಂಪೆನಿಗಳು ತಾವು ವ್ಯಾಪಾರ ಮಾಡುವ ದೇಶಗಳಲ್ಲಿ ತೆರಿಗೆ ಪಾವತಿಸುವಂತೆ ಮಾಡಲು ತೆರಿಗೆ ತಪ್ಪಿಸುವಿಕೆಯನ್ನು (Tax Avoidance) ತಡೆಗಟ್ಟುವುದು ಇದರ ಉದ್ದೇಶವಾಗಿದೆ.
 2. ಈ ಒಪ್ಪಂದವು ದೇಶಗಳು ಪರಸ್ಪರರ ಹಿತಾಸಕ್ತಿಗೆ ವಿರುದ್ಧವಾಗಿ ತೆರಿಗೆ ಕಡಿತಗೊಳಿಸುವುದನ್ನು ತಪ್ಪಿಸಲು ದೇಶಗಳನ್ನು ಜಾಗತಿಕ ಕನಿಷ್ಠ ಕಾರ್ಪೊರೇಟ್ ತೆರಿಗೆ ದರವಾದ 15% ಗೆ ಬದ್ಧವಾಗಿರುವಂತೆ ಒಪ್ಪಿಸುತ್ತದೆ.

 

ಕನಿಷ್ಠ ತೆರಿಗೆ ದರದ ಅವಶ್ಯಕತೆ:

 1. 15% ಕನಿಷ್ಠ ದರವನ್ನು ಅಂಗೀಕರಿಸುವ ನಿರ್ಧಾರವು ಅಮೆರಿಕಾ ಸಂಯುಕ್ತ ಸಂಸ್ಥಾನವು ಜಗತ್ತಿನಾದ್ಯಂತ ಇರುವ ಕಡಿಮೆ-ತೆರಿಗೆ ವಿಧಿಸುವ ಪ್ರದೇಶಗಳ (ಟ್ಯಾಕ್ಸ್ ಹೆವೆನ್ಸ್) ಮೇಲೆ ಯುದ್ಧ ಘೋಷಿಸಿದ ಅಂದರೆ ಪ್ರತಿಕ್ರಿಯಾತ್ಮಕ ಕ್ರಮಗಳನ್ನು ಕೈಗೊಳ್ಳುವುದಾಗಿ ಹೇಳಿದ ನಂತರ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ.
 2. ಈ ನಡೆಯ ಹಿಂದಿನ ತಾರ್ಕಿಕತೆಯೆಂದರೆ ಬಹುರಾಷ್ಟ್ರೀಯ ಕಂಪನಿಗಳ ಕಾರ್ಯಾಚರಣೆಗಳು ಮತ್ತು ಲಾಭಗಳನ್ನು ವಿದೇಶಕ್ಕೆ ವರ್ಗಾವಣೆ ಗೊಳ್ಳದಂತೆ ನಿರುತ್ಸಾಹಗೊಳಿಸುವುದಾಗಿದೆ.

 

ಈ ಯೋಜನೆಯ ಕೇಂದ್ರಬಿಂದು:

 1. ಡಿಜಿಟಲ್ ದೈತ್ಯ ಸಂಸ್ಥೆಗಳಾದ ಆಪಲ್, ಆಲ್ಫಾಬೆಟ್ ಮತ್ತು ಫೇಸ್‌ಬುಕ್ ಸೇರಿದಂತೆ ವಿಶ್ವದ ಕೆಲವು ದೊಡ್ಡ ಕಂಪನಿಗಳು ಪರಿಣಾಮಕಾರಿ ತೆರಿಗೆ ದರಗಳ ಪರಿವರ್ತನೆಯನ್ನು ಪರಿಹರಿಸಲು ಕನಿಷ್ಠ ತೆರಿಗೆ ದರವನ್ನು ನಿಗದಿಪಡಿಸಲಾಗಿದೆ.
 2. ಈ ಕಂಪನಿಗಳು ಸಾಮಾನ್ಯವಾಗಿ ವಿಶ್ವದ ಪ್ರಮುಖ ಮಾರುಕಟ್ಟೆಗಳಿಂದ ಗಳಿಸಿದ ಲಾಭವನ್ನು ಐರ್ಲೆಂಡ್ ಅಥವಾ ಕೆರಿಬಿಯನ್ ನಂತಹ ಕಡಿಮೆ-ತೆರಿಗೆ ದೇಶಗಳಿಗೆ ಸಾಗಿಸಲು ಅಂಗಸಂಸ್ಥೆಗಳ ಸಂಕೀರ್ಣ ಜಾಲವನ್ನು ಅವಲಂಬಿಸಿವೆ.

 

ಈ ಯೋಜನೆಗೆ ಸಂಬಂಧಿಸಿದ ಸಮಸ್ಯೆಗಳು / ವಿವಾದಗಳು:

 1. ಈ ಯೋಜನೆಯು ತಮ್ಮ ದೇಶದ ತೆರಿಗೆ ನೀತಿಯನ್ನು ನಿರ್ಧರಿಸಲು ಸಾರ್ವಭೌಮ ರಾಷ್ಟ್ರಗಳ ಹಕ್ಕನ್ನು ಅತಿಕ್ರಮಿಸುತ್ತದೆ.
 2. ‘ಜಾಗತಿಕ ಕನಿಷ್ಠ ದರ’ವು, ದೇಶಗಳು ತಮಗೆ ಅನುಕೂಲಕರವಾದ ನೀತಿಗಳನ್ನು ಅನುಸರಿಸಲು ಬಳಸುವ ಸಾಧನಗಳನ್ನು ಹೆಚ್ಚಾಗಿ ಕಸಿದುಕೊಳ್ಳುತ್ತದೆ.
 3. ಅಲ್ಲದೆ, ತೆರಿಗೆ ವಂಚನೆಯನ್ನು ನಿಭಾಯಿಸುವಲ್ಲಿ ‘ಜಾಗತಿಕ ಕನಿಷ್ಠ ತೆರಿಗೆ ದರ’ದ ಪಾತ್ರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇರುವುದಿಲ್ಲ ಅಂದರೆ ತೆರಿಗೆ ವಂಚನೆಯನ್ನು ತಡೆಯಲು ಇದು ನೀಡುವ ಕೊಡುಗೆ ನಗಣ್ಯ ವಾಗಿರುತ್ತದೆ.

 

ಇದು ‘ತೆರಿಗೆ ಧಾಮ’ ಗಳ (ಟ್ಯಾಕ್ಸ್ ಹೆವೆನ್ಸ್) ಅಂತ್ಯವೇ?

ಒಪ್ಪಂದವು ತೆರಿಗೆ ಧಾಮಗಳನ್ನು ಸಂಪೂರ್ಣವಾಗಿ ತೊಡೆದುಹಾಕದಿದ್ದರೆ, ಅದು ತಮ್ಮ ತೆರಿಗೆ ದರಗಳನ್ನು ಕಡಿತಗೊಳಿಸಲು ಬಯಸುವ ಕಂಪನಿಗಳಿಗೆ, ಖಂಡಿತವಾಗಿಯೂ ಈ ತೆರಿಗೆ ಧಾಮಗಳನ್ನು ಕಡಿಮೆ ಲಾಭದಾಯಕವಾಗಿಸುತ್ತದೆ ಮತ್ತು ಅದೇ ಸಮಯದಲ್ಲಿ, ಇದು ಪರಿಸರ, ಸಾಮಾಜಿಕ ಮತ್ತು ಸಾಂಸ್ಥಿಕ ಆಡಳಿತದ ಮೇಲೆ ಕೇಂದ್ರೀಕರಿಸುವ ಮೂಲಕ ಹೂಡಿಕೆದಾರರಲ್ಲಿ ಈ ಕಂಪನಿಗಳ ವಿಶ್ವಾಸಾರ್ಹತೆಯನ್ನು ಕಡಿಮೆ ಮಾಡುತ್ತದೆ.

 

ಭಾರತದ ಮೇಲೆ ಪರಿಣಾಮ:

 1. ಭಾರತದ ಪರಿಣಾಮಕಾರಿ ತೆರಿಗೆ ದರ ಜಾಗತಿಕ ಕನಿಷ್ಠ ತೆರಿಗೆ ದರಕ್ಕಿಂತ ಹೆಚ್ಚಿರುವುದರಿಂದ, ಇದು ಭಾರತದಲ್ಲಿ ವ್ಯಾಪಾರ ಮಾಡುವ ಕಂಪನಿಗಳ ಮೇಲೆ ಪರಿಣಾಮ ಬೀರುವುದಿಲ್ಲ.
 2. ಜಾಗತಿಕ ಕನಿಷ್ಠ ದರ ಕಡಿಮೆ ಜಾಗತಿಕ ತೆರಿಗೆ ವೆಚ್ಚವನ್ನು ಸಾಧಿಸಲು ಕಡಿಮೆ-ತೆರಿಗೆ ವ್ಯಾಪ್ತಿಯನ್ನು ಬಳಸುವ ಕಂಪನಿಗಳ ಮೇಲೆ ಪರಿಣಾಮ ಬೀರುತ್ತದೆ.
 3. ಇದರ ಜೊತೆಯಲ್ಲಿ, ಭಾರತವು ತನ್ನ ದೊಡ್ಡ ಆಂತರಿಕ ಮಾರುಕಟ್ಟೆ, ಸ್ಪರ್ಧಾತ್ಮಕ ದರದಲ್ಲಿ ಗುಣಮಟ್ಟದ ಕಾರ್ಮಿಕಬಲ, ರಫ್ತಿಗೆ ಕಾರ್ಯತಂತ್ರದ ಸ್ಥಳ ಮತ್ತು ಖಾಸಗಿ ವಲಯದ ಕಾರಣದಿಂದಾಗಿ ವಿದೇಶಿ ಹೂಡಿಕೆಯನ್ನು ಆಕರ್ಷಿಸುತ್ತದೆ.

 

ಏನಿದು G7 ?

 1. G7, ಮೂಲತಃ G8, ಆಗಿದ್ದು 1975 ರಲ್ಲಿ ವಿಶ್ವದ ಪ್ರಮುಖ ಕೈಗಾರಿಕಾ ರಾಷ್ಟ್ರಗಳ ನಾಯಕರನ್ನು ಒಟ್ಟುಗೂಡಿಸುವ ಅನೌಪಚಾರಿಕ ವೇದಿಕೆಯಾಗಿ ಇದನ್ನು ಸ್ಥಾಪಿಸಲಾಯಿತು.
 2. ಶೃಂಗಸಭೆಯು ಯುರೋಪಿಯನ್ ಒಕ್ಕೂಟ (EU) ಮತ್ತು ಈ ಕೆಳಗಿನ ದೇಶಗಳ ನಾಯಕರನ್ನು ಒಟ್ಟುಗೂಡಿಸುತ್ತದೆ: ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್.
 3. G7ರ ಪ್ರಮುಖ ಉದ್ದೇಶವೆಂದರೆ ಅಂತರರಾಷ್ಟ್ರೀಯ ಆರ್ಥಿಕ ವಿಷಯಗಳ ಬಗ್ಗೆ ಉದ್ದೇಶಪೂರ್ವಕವಾಗಿ ಚರ್ಚಿಸುವುದು ಮತ್ತು ಸಮಸ್ಯೆಗಳಿದ್ದರೆ ಪರಿಹರಿಸುವುದು. ಕೆಲವೊಮ್ಮೆ ಆರ್ಥಿಕ ಸಮಸ್ಯೆಗಳ ಮೇಲೆ ವಿಶೇಷ ಗಮನಹರಿಸಿ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಇದು ಸಹಾಯ ಮಾಡುತ್ತದೆ.

 

G 7 ಇದ್ದುದು G 8 ಹೇಗೆ ಆಯಿತು?

 1. ರಷ್ಯಾ ಅಧಿಕೃತವಾಗಿ 1998 ರಲ್ಲಿ ಈ ಗುಂಪನ್ನು ಸೇರಿಕೊಂಡಿತು, ಇದು ಜಿ 7 ಅನ್ನು ಜಿ 8 ಆಗಿ ಪರಿವರ್ತಿಸಲು ಕಾರಣವಾಯಿತು.
 2. ಆದಾಗ್ಯೂ, ರಷ್ಯಾದ ಸೈನ್ಯವನ್ನು ಪೂರ್ವ ಉಕ್ರೇನ್‌ಗೆ ನಿಯೋಜಿಸಿದ ಮತ್ತು 2014 ರಲ್ಲಿ ಕ್ರಿಮಿಯಾವನ್ನು ವಶಪಡಿಸಿಕೊಂಡ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಖಂಡನೀಯ ಕೃತ್ಯವು ಇತರ ಜಿ 8 ರಾಷ್ಟ್ರಗಳಿಂದ ಭಾರೀ ಟೀಕೆಗೆ ಗುರಿಯಾಯಿತು.
 3. ಈ ಗುಂಪಿನ ಇತರ ರಾಷ್ಟ್ರಗಳು ರಷ್ಯಾವನ್ನು ಅದರ ಕುಕೃತ್ಯಗಳ ಪರಿಣಾಮವಾಗಿ ಜಿ 8 ರಿಂದ ಅಮಾನತುಗೊಳಿಸಲು ನಿರ್ಧರಿಸಿದ್ದರಿಂದ ಮತ್ತೆ ಈ ಗುಂಪು 2014 ರಲ್ಲಿ ಜಿ 7 ಆಗಿ ಪರಿವರ್ತಿತವಾಯಿತು.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಆಸಿಯಾನ್ ವಿದೇಶಾಂಗ ಮಂತ್ರಿಗಳ ಸಭೆ ಆಯೋಜಿಸಲಿರುವ  ಚೀನಾ:


(China hosts ASEAN Foreign Ministers)

 

ಸಂದರ್ಭ:

ಇತ್ತೀಚೆಗೆ ಪ್ರಸ್ತಾವಿತ ಆಸಿಯಾನ್(ASEAN) ಗುಂಪಿನ ಹತ್ತು ದೇಶಗಳ ವಿದೇಶಾಂಗ ಮಂತ್ರಿಗಳ ಸಭೆಯನ್ನು ಚೀನಾ ಆಯೋಜಿಸುತ್ತಿದೆ. ಚೀನಾ ಮತ್ತು ಆಸಿಯಾನ್ ನಡುವಿನ 30 ವರ್ಷಗಳ ಸಂಬಂಧಗಳು ಪೂರ್ಣಗೊಂಡಿದ್ದನ್ನು ಸ್ಮರಿಸಲು ಈ ಸಭೆಯನ್ನು ಆಯೋಜಿಸಲಾಗುತ್ತಿದೆ.

 1. ಚೀನಾ ಮತ್ತು ಕ್ವಾಡ್ ಉಪಕ್ರಮಗಳು ಪರಸ್ಪರ ತಮ್ಮ ಪ್ರಭಾವವನ್ನು ತೋರಿಸಬಲ್ಲ ಪ್ರಮುಖ ವೇದಿಕೆಯಾಗಿ ಆಸಿಯಾನ್ ಅನ್ನು ನೋಡಲಾಗುತ್ತದೆ.

 

ಚೀನಾದ ಕಳವಳ:

 ಅಮೆರಿಕದ ಇಂಡೋ-ಪೆಸಿಫಿಕ್ ಕಾರ್ಯತಂತ್ರಕ್ಕೆ ಆಗ್ನೇಯ ಏಷ್ಯಾ ಬಹಳ ಮುಖ್ಯವಾದ ಕಾರಣ, ಕ್ವಾಡ್ ಸದಸ್ಯರು ಚೀನಾವನ್ನು ಎದುರಿಸಲು ತಮ್ಮ ಗುಂಪಿನಲ್ಲಿ ಆಸಿಯಾನ್ ರಾಷ್ಟ್ರಗಳನ್ನು ಸೇರಿಸಿಕೊಳ್ಳುವ ಸಾಧ್ಯತೆಯಿದೆ.

 1. ಇತ್ತೀಚೆಗೆ, ಚೀನಾ ಕ್ವಾಡ್(QUAD) ಉಪಕ್ರಮವನ್ನು ‘ಏಷ್ಯನ್ ನ್ಯಾಟೋ’(Asian NATO) ಎಂದೂ ಉಲ್ಲೇಖಿಸಿದೆ.

 

ASEAN ಎಂದರೇನು?

ಆಗ್ನೇಯ ಏಷ್ಯಾ ರಾಷ್ಟ್ರಗಳ ಸಂಘಟನೆ (Association of Southeast Asian Nations- ASEAN) ಒಂದು ಪ್ರಾದೇಶಿಕ ಸಂಘಟನೆಯಾಗಿದೆ.ಅದು ಏಷ್ಯಾ-ಪೆಸಿಫಿಕ್ ಪ್ರದೇಶದ ವಸಾಹತೋತ್ತರ ನಂತರದ ದೇಶಗಳ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ ರಾಜಕೀಯ ಮತ್ತು ಸಾಮಾಜಿಕ ಸ್ಥಿರತೆಯನ್ನು ಉತ್ತೇಜಿಸಲು ಇದನ್ನು ಸ್ಥಾಪಿಸಲಾಯಿತು.

 

ಆಸಿಯಾನ್‌ನ ಧ್ಯೇಯವಾಕ್ಯವೆಂದರೆ “ಒಂದು ದೃಷ್ಟಿ, ಒಂದು ಗುರುತು, ಒಂದು ಸಮುದಾಯ”(One Vision, One Identity, One Community).

ಆಸಿಯಾನ್‌ ನ ಸಚಿವಾಲಯ (Secretariat) ವು, ಇಂಡೋನೇಷ್ಯಾದ ಜಕಾರ್ತಾ ದಲ್ಲಿದೆ.

 

ಮೂಲ:

ಆಸಿಯಾನ್ ಅನ್ನು ಅದರ ಸ್ಥಾಪಕ ಸದಸ್ಯ ರಾಷ್ಟ್ರಗಳು 1967 ರಲ್ಲಿ ಆಸಿಯಾನ್ ಘೋಷಣೆಗೆ (ಬ್ಯಾಂಕಾಕ್ ಘೋಷಣೆ) ಸಹಿ ಹಾಕುವ ಮೂಲಕ ಸ್ಥಾಪಿಸಿದವು.

ಆಸಿಯಾನ್‌ ನ ಸ್ಥಾಪಕ ಸದಸ್ಯರು: ಇಂಡೋನೇಷ್ಯಾ, ಮಲೇಷ್ಯಾ, ಫಿಲಿಪೈನ್ಸ್, ಸಿಂಗಾಪುರ್ ಮತ್ತು ಥೈಲ್ಯಾಂಡ್.

ಆಸಿಯಾನ್‌ನ ಹತ್ತು ಸದಸ್ಯ ರಾಷ್ಟ್ರಗಳು: ಬ್ರೂನಿ, ಕಾಂಬೋಡಿಯಾ, ಇಂಡೋನೇಷ್ಯಾ, ಲಾವೋಸ್, ಮಲೇಷ್ಯಾ, ಮ್ಯಾನ್ಮಾರ್, ಫಿಲಿಪೈನ್ಸ್, ಸಿಂಗಾಪುರ್, ಥೈಲ್ಯಾಂಡ್ ಮತ್ತು ವಿಯೆಟ್ನಾಂ.

 

ಭಾರತಕ್ಕೆ ಆಸಿಯಾನ್‌ ಮಹತ್ವ:

 1. ಲಡಾಖ್ ಉದ್ವಿಗ್ನತೆ ಸೇರಿದಂತೆ ಚೀನಾದ ಆಕ್ರಮಣಕಾರಿ ಧೋರಣೆಯ ಹಿನ್ನೆಲೆಯಲ್ಲಿ, ಭಾರತವು ಆಸಿಯಾನ್’ ಅನ್ನು ಭಾರತದ ಆಕ್ಟ್ ಈಸ್ಟ್ / ಪೂರ್ವದತ್ತ ಕಾರ್ಯಾಚರಿಸು (India’s Act East policy) ನೀತಿಯ ಕೇಂದ್ರದಲ್ಲಿ ಇರಿಸಿದೆ. ಈ ಪ್ರದೇಶದ ಎಲ್ಲರ ಸುರಕ್ಷತೆ ಮತ್ತು ಅಭಿವೃದ್ಧಿಗೆ ಒಗ್ಗೂಡಿಸುವ ಮತ್ತು ಸ್ಪಂದಿಸುವ, ಜವಾಬ್ದಾರಿಯುತ ಆಸಿಯಾನ್ ಅಗತ್ಯ ಎಂದು ಭಾರತ ನಂಬಿದೆ.
 2. ಈ ‘ಪ್ರದೇಶದಲ್ಲಿನ ಎಲ್ಲರಿಗೂ ಸುರಕ್ಷತೆ ಮತ್ತು ಅಭಿವೃದ್ಧಿ’ ಗಾಗಿ (Security And Growth for All in the Region- SAGAR) ಎಂದರೆ

ಸಾಗರ್ ದೃಷ್ಟಿಕೋನದ ಯಶಸ್ಸಿಗೆ ಆಸಿಯಾನ್ ನ ಪಾತ್ರ ಬಹಳ ಮುಖ್ಯವಾದುದು.

 1. COVID-19 ಸಾಂಕ್ರಾಮಿಕ ರೋಗದ ಅಂತ್ಯದ ನಂತರ ಆರ್ಥಿಕ ಚೇತರಿಕೆಗಾಗಿ ಪೂರೈಕೆ ಸರಪಳಿಗಳ ವೈವಿಧ್ಯೀಕರಣ ಮತ್ತು ಸ್ಥಿತಿಸ್ಥಾಪಕತ್ವಕ್ಕೆ ಈ ವಲಯವು ನಿರ್ಣಾಯಕವಾಗಿ ಮಹತ್ವದ್ದಾಗಿದೆ.
 2. ASEANಭಾರತದ ನಾಲ್ಕನೇ ಅತಿದೊಡ್ಡ ವ್ಯಾಪಾರ ಪಾಲುದಾರನಾಗಿದ್ದು, ಇದರೊಂದಿಗೆ ಸುಮಾರು 86.9 ಬಿಲಿಯನ್ US ಡಾಲರ್ ವಹಿವಾಟು ನಡೆಸುತ್ತಿದೆ.

 

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಚುನಾವಣೆಯಲ್ಲಿ ವಿಜಯಶಾಲಿಯಾದ ಮಾಲ್ಡಿವ್ಸ್. ನಿಕಟ ಸಹಕಾರವನ್ನು ಬಯಸಿದ ಭಾರತ:

(Maldives wins UNGA election, India seeks close cooperation)

ಸಂದರ್ಭ:

ಮಾಲ್ಡೀವ್ಸ್ ವಿದೇಶಾಂಗ ಸಚಿವ ಅಬ್ದುಲ್ಲಾ ಶಾಹಿದ್ ಅವರು 2021-22ನೇ ಸಾಲಿನ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಮಾಲ್ಡೀವ್ಸ್‌ ಈ ಸಾಧನೆಯನ್ನು ಮೊದಲ ಬಾರಿಗೆ ಸಾಧಿಸಿದೆ.

ಗಮನಿಸಿ: ನಾವು ಇತ್ತೀಚೆಗೆ ಈ ವಿಷಯವನ್ನು ವಿವರವಾಗಿ ನೀಡಿದ್ದೇವೆ. ಇದಕ್ಕಾಗಿ ದಯವಿಟ್ಟು ನೋಡಿ: Click here

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಅಂತರ್ಗತ ಬೆಳವಣಿಗೆ ಮತ್ತು ಅದರಿಂದ ಉಂಟಾಗುವ ಸಮಸ್ಯೆಗಳು.

ರಾಷ್ಟ್ರೀಯ ಆಸ್ತಿ ಪುನರ್ನಿರ್ಮಾಣ ಕಂಪನಿ ನಿಗಮಿತ. (NARCL):


(National Asset Reconstruction Company Ltd.)

 

ಸಂದರ್ಭ:

 ಆರಂಭದಲ್ಲಿ 89,000 ಕೋಟಿ ರೂ. ಮೌಲ್ಯದ 22 ಕೆಟ್ಟ ಸಾಲ ಖಾತೆಗಳನ್ನು ಪ್ರಸ್ತಾವಿತ ರಾಷ್ಟ್ರೀಯ ಆಸ್ತಿ ಪುನರ್ನಿರ್ಮಾಣ ಕಂಪನಿ ಲಿಮಿಟೆಡ್‌ಗೆ (National Asset Reconstruction Company Ltd. – NARCL) ವರ್ಗಾಯಿಸಲು ಸಾಲದಾತರು ನಿರ್ಧರಿಸಿದ್ದಾರೆ.ಸಾಲ ನೀಡುವವರಿಗೆ (ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು) ಅವರ ಬ್ಯಾಲೆನ್ಸ್ ಶೀಟ್‌ಗಳನ್ನು ತೆರವುಗೊಳಿಸಲು ಇದು ಸಹಾಯ ಮಾಡುತ್ತದೆ.

 1. NARCL ಗೆ ವರ್ಗಾಯಿಸಬೇಕಾದ ಕೆಟ್ಟ ಸಾಲಗಳ ಒಟ್ಟು ಮೊತ್ತ ಸುಮಾರು ₹ 2 ಟ್ರಿಲಿಯನ್ ಆಗಿರುತ್ತದೆ.

 

ಏನಿದು ರಾಷ್ಟ್ರೀಯ ಆಸ್ತಿ ಪುನರ್ನಿರ್ಮಾಣ ಕಂಪನಿ ಲಿಮಿಟೆಡ್‌?

 1. ಸಾಲಗಾರರ ಒತ್ತಡದ ಸ್ವತ್ತುಗಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಉದ್ದೇಶಿತ ಕೆಟ್ಟ ಬ್ಯಾಂಕ್ ಅಥವಾ ಬ್ಯಾಡ್ ಬ್ಯಾಂಕ್ ಅಂದರೆ ‘ರಾಷ್ಟ್ರೀಯ ಆಸ್ತಿ ಪುನರ್ನಿರ್ಮಾಣ ಕಂಪನಿ ಲಿಮಿಟೆಡ್‌’ (NARCL) ಸ್ಥಾಪಿಸುವ ಪ್ರಸ್ತಾಪವನ್ನು 2021-22ರ ಕೇಂದ್ರ ಬಜೆಟ್ ಭಾಷಣದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದರು.
 2. ಪ್ರಕಟಣೆಯ ಪ್ರಕಾರ, 500 ಕೋಟಿ ಮತ್ತು ಅದಕ್ಕಿಂತ ಹೆಚ್ಚಿನ ಸಾಲವನ್ನು ನಿರ್ವಹಿಸಲು ಕೆಟ್ಟ ಬ್ಯಾಂಕ್ (Bad Bank) ಅನ್ನು ಸ್ಥಾಪಿಸಲಾಗುವುದು ಮತ್ತು ಇದು, ಆಸ್ತಿ ಪುನರ್ನಿರ್ಮಾಣ ಕಂಪನಿ (Asset Reconstruction Company- ARC)’ ಮತ್ತು ‘ಆಸ್ತಿ ನಿರ್ವಹಣಾ ಕಂಪನಿ’ (Asset Management Company- AMC) ಅನ್ನು ಒಳಗೊಂಡಿರುತ್ತದೆ. ಇಂತಹ ವ್ಯವಸ್ಥೆಯ ಮೂಲಕ ನಿಷ್ಪ್ರಯೋಜಕ ಸ್ವತ್ತು (dud assets) ಗಳನ್ನು ನಿರ್ವಹಿಸಲಾಗುತ್ತದೆ ಮತ್ತು ಮರುಪಡೆಯಲು ಪ್ರಯತ್ನಿಸಲಾಗುವುದುತ್ತದೆ.
 3. ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳ ಸಹಯೋಗದೊಂದಿಗೆ ಈ ಹೊಸ ಘಟಕವನ್ನು ಸ್ಥಾಪಿಸಲಾಗುತ್ತಿದೆ.

 

ಅಸ್ತಿತ್ವದಲ್ಲಿರುವ ಆಸ್ತಿ ಪುನರ್ರಚನೆ ಕಂಪನಿಗಳಿಂದ (ARC) NARCL ಹೇಗೆ ಭಿನ್ನವಾಗಿರುತ್ತದೆ?

 1. ಆಲೋಚನೆಯನ್ನು ಸರ್ಕಾರವು ಮುಂದಿಟ್ಟಿರುವುದರಿಂದ ಮತ್ತು ಹೆಚ್ಚಿನ ಮಾಲೀಕತ್ವವು ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳ ಬಳಿ ಇರುವ ಸಾಧ್ಯತೆ ಇರುವುದರಿಂದ, ಈ ಉದ್ದೇಶಿತ ಕೆಟ್ಟ ಬ್ಯಾಂಕಿನ ಸ್ವರೂಪವು ಸಾರ್ವಜನಿಕ ವಲಯದ್ದಾಗಿರುತ್ತದೆ.
 2. ಪ್ರಸ್ತುತ, ‘ಆಸ್ತಿ ಪುನರ್ರಚನೆ ಕಂಪನಿಗಳು’(ARC) ಸಾಮಾನ್ಯವಾಗಿ ಸಾಲಗಳ ಮೇಲೆ ಕಡಿದಾದ(ಹೆಚ್ಚಿನ) ರಿಯಾಯಿತಿಯನ್ನು ಬಯಸುತ್ತವೆ. ಇದು ಸರ್ಕಾರದ ಉಪಕ್ರಮವಾಗಿರುವುದರಿಂದ, ಉದ್ದೇಶಿತ ಕೆಟ್ಟ ಬ್ಯಾಂಕಿನೊಂದಿಗೆ ಯಾವುದೇ ಮೌಲ್ಯಮಾಪನ ಸಮಸ್ಯೆ ಇರುವುದಿಲ್ಲ.
 3. ಸರ್ಕಾರದ ಬೆಂಬಲಿತ ‘ಆಸ್ತಿ ಪುನರ್ರಚನೆ ಕಂಪನಿ’ ದೊಡ್ಡ ಖಾತೆಗಳನ್ನು ಖರೀದಿಸಲು ಸಾಕಷ್ಟು ಸಾಮರ್ಥ್ಯವನ್ನು ಹೊಂದಿರುತ್ತದೆ, ಆದ್ದರಿಂದ ಬ್ಯಾಂಕುಗಳು ಈ ಕೆಟ್ಟ ಖಾತೆಗಳನ್ನು ತಮ್ಮ ಖಾತೆ ಪುಸ್ತಕಗಳಲ್ಲಿ ಇಡುವುದರಿಂದ ಮುಕ್ತವಾಗಿರುತ್ತವೆ.

 

ಆಸ್ತಿ ಪುನರ್ ನಿರ್ಮಾಣ ಕಂಪನಿ (ARC) ಎಂದರೇನು?

ಆಸ್ತಿ ಪುನರ್ ನಿರ್ಮಾಣ ಕಂಪನಿಗಳು (ARC), ವಿಶೇಷ ಹಣಕಾಸು ಸಂಸ್ಥೆಗಳಾಗಿದ್ದು, ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿನ ‘ಕಾರ್ಯನಿರ್ವಹಿಸದ ಸ್ವತ್ತುಗಳನ್ನು ಅಥವಾ ವಸೂಲಾಗದ ಸಾಲಗಳನ್ನು’ (Non-Performing Assets- NPAs) ಖರೀದಿಸುತ್ತವೆ, ಇದರಿಂದ ಅವುಗಳು ತಮ್ಮ ಬ್ಯಾಲೆನ್ಸ್ ಶೀಟ್‌ಗಳನ್ನು ಸ್ವಚ್ಛಗೊಳಿಸಲು ಸಹಾಯಕವಾಗುತ್ತದೆ.

 1. ‘ಆಸ್ತಿ ಪುನರ್ನಿರ್ಮಾಣ ಕಂಪನಿ’ ಅಥವಾ ‘ARC’ ಅನ್ನು ಭಾರತೀಯ ರಿಸರ್ವ್ ಬ್ಯಾಂಕ್ ಅಡಿಯಲ್ಲಿ ನೋಂದಾಯಿಸಲಾಗಿದೆ.

 

ಕಾನೂನು ಆಧಾರಗಳು:

ಹಣಕಾಸು ಸ್ವತ್ತುಗಳ ಭದ್ರತೆ ಮತ್ತು ಪುನರ್ನಿರ್ಮಾಣ ಮತ್ತು ಭದ್ರತಾ ಆಸಕ್ತಿಯ ಜಾರಿ (Securitization and Reconstruction of Financial Assets and Enforcement of Security Interest –SARFAESI) ಕಾಯ್ದೆ 2002, ಭಾರತದಲ್ಲಿ’ ಆಸ್ತಿ ಪುನರ್ನಿರ್ಮಾಣ ಕಂಪನಿಗಳ ‘(ARC ಗಳು) ರಚನೆಗೆ ಶಾಸನಬದ್ಧ ಆಧಾರವನ್ನು ಒದಗಿಸುತ್ತದೆ.

 

ARC ಗಳಿಗೆ ಬಂಡವಾಳದ ಅಗತ್ಯತೆ:

 1. 2016 ರಲ್ಲಿ, SARFAESI ಕಾಯ್ದೆಯಲ್ಲಿ, ಮಾಡಿದ ತಿದ್ದುಪಡಿಗಳ ಪ್ರಕಾರ, ಆಸ್ತಿ ಪುನರ್ನಿರ್ಮಾಣ ಕಂಪನಿ’ಗಳು (ARCs) ಕನಿಷ್ಠ 2 ಕೋಟಿ ರೂ.ಗಳ ನಿವ್ವಳ ಸ್ವಾಮ್ಯದ ನಿಧಿಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಈ ಮೊತ್ತವನ್ನು ರಿಸರ್ವ್ ಬ್ಯಾಂಕ್ 2017 ರಲ್ಲಿ 100 ಕೋಟಿ ರೂ.ಗೆ ಹೆಚ್ಚಿಸಿದೆ.
 2. ARC ಗಳು ಅಪಾಯದ ತೂಕದ ಸ್ವತ್ತುಗಳ 15% ನಷ್ಟು ಬಂಡವಾಳದ ಸಮರ್ಪಕ ಅನುಪಾತವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯವಾಗಿದೆ.

 

ಇದರ ಅಗತ್ಯತೆ:

ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಒತ್ತಡದ ಸ್ವತ್ತುಗಳ ಒಟ್ಟು ಮೊತ್ತವು 15 ಲಕ್ಷ ಕೋಟಿ ರೂ.ಗಿಂತ ಅಧಿಕವಾಗಿದೆ. ಒತ್ತಡದ ಸ್ವತ್ತುಗಳು ಮತ್ತು ಸೀಮಿತ ಬಂಡವಾಳದಿಂದ ಬಳಲುತ್ತಿರುವ ಬ್ಯಾಂಕುಗಳು ‘ಕಾರ್ಯನಿರ್ವಹಿಸದ ಸ್ವತ್ತುಗಳನ್ನು’ (NPA) ನಿರ್ವಹಿಸುವುದು ಕಷ್ಟಕರವಾಗಿರುತ್ತದೆ. ಸರ್ಕಾರವು ಸೀಮಿತ ಬಂಡವಾಳವನ್ನು ಮಾತ್ರ ಒದಗಿಸಬಹುದು. ಆದ್ದರಿಂದ, ಅಂತಹ ಪರಿಸ್ಥಿತಿಯಲ್ಲಿ, ಕೆಟ್ಟ ಬ್ಯಾಂಕ್(ಬ್ಯಾಡ್ ಬ್ಯಾಂಕ್) ಮಾದರಿಯು ಸರ್ಕಾರ ಮತ್ತು ಬ್ಯಾಂಕುಗಳಿಗೆ ಸಹಾಯ ಮಾಡುತ್ತದೆ.

 

 ‘ಬ್ಯಾಡ್ ಬ್ಯಾಂಕ್’ ಪರಿಕಲ್ಪನೆ:

 1. ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳಿಂದ ವಸೂಲಾಗದ ಸಾಲ ಮತ್ತು ಇತರ ಅನುತ್ಪಾದಕ ಆಸ್ತಿಗಳನ್ನು ‘ಬ್ಯಾಡ್‌ ಬ್ಯಾಂಕ್’ ಖರೀದಿಸುತ್ತದೆ. ಬ್ಯಾಂಕ್‌ಗಳ ಬ್ಯಾಲೆನ್ಸ್‌ ಶೀಟ್‌ನಲ್ಲಿ ಲೆಕ್ಕಚುಕ್ತವಾಗುತ್ತದೆ.
 2. ಗಮನಾರ್ಹವಾದ ಲಾಭರಹಿತ ಸ್ವತ್ತುಗಳನ್ನು ಹೊಂದಿರುವ ಸಂಸ್ಥೆಯು ಈ ಹಿಡುವಳಿಗಳನ್ನು ಕೆಟ್ಟ ಬ್ಯಾಂಕ್‌ಗೆ ಮಾರುಕಟ್ಟೆ ಬೆಲೆಗೆ ಮಾರಾಟ ಮಾಡುತ್ತದೆ.
 3. ಅಂತಹ ಸ್ವತ್ತುಗಳನ್ನು ಕೆಟ್ಟ ಬ್ಯಾಂಕ್‌ಗೆ ವರ್ಗಾಯಿಸುವ ಮೂಲಕ, ಮೂಲ ಸಂಸ್ಥೆಯು ತನ್ನ ಬ್ಯಾಲೆನ್ಸ್ ಶೀಟ್ ಅನ್ನು ಸರಿಪಡಿಸಬಹುದು -ಆದರೂ ಅದನ್ನು ಬರೆಡಿದುವಂತೆ ಒತ್ತಾಯಿಸಲಾಗುತ್ತದೆ ಅಥವಾ ಆದರೂ ಅವರು ಸ್ವತ್ತುಗಳ ಅಂದಾಜು ಮೌಲ್ಯವನ್ನು ಕಡಿತಗೊಳಿಸಬೇಕಾಗುತ್ತದೆ.
 4. ಬ್ಯಾಡ್‌ ಬ್ಯಾಂಕ್‌ಗಳ ಪರಿಕಲ್ಪನೆ ಹೊಸತೇನೂ ಅಲ್ಲ. ಬ್ಯಾಂಕ್‌ಗಳು ದಿವಾಳಿಯಾಗುವ ಸ್ಥಿತಿ ಬಂದಾಗ ಮತ್ತು NPA ಪ್ರಮಾಣ ಹೆಚ್ಚಾದಾಗ ವಿಶ್ವದ ವಿವಿಧ ದೇಶಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿವೆ. ಆರ್ಥಿಕತೆ ಕುಸಿತದ ಹಾದಿಯಲ್ಲಿ ಇದ್ದಾಗ ಹಲವು ದೇಶಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿವೆ. ಈಗ ಭಾರತವೂ ಈ ಹಾದಿ ಹಿಡಿದಿದೆ.
 5. ಸರ್ಕಾರ ಬೆಂಬಲಿತ ಬ್ಯಾಡ್‌ ಬ್ಯಾಂಕ್‌ ವ್ಯವಸ್ಥೆ ಹೆಚ್ಚು ಪರಿಣಾಮಕಾರಿ ಎಂಬ ಅಭಿಪ್ರಾಯವಿದೆ. ಹೀಗಾಗಿ ಇಂತಹ ವ್ಯವಸ್ಥೆ ಹೆಚ್ಚು ಚಾಲ್ತಿಯಲ್ಲಿ ಇದೆ. ಭಾರತದಲ್ಲೂ ಈಗ ಇಂತಹದ್ದೇ ಬ್ಯಾಡ್‌ ಬ್ಯಾಂಕ್‌ ಸ್ಥಾಪಿಸಲು ಸರ್ಕಾರ ಚಿಂತನೆ ನಡೆಸಿದೆ.

ಉದಾ: ಸರಳ ಭಾಷೆಯಲ್ಲಿ ಹೇಳುವುದಾದರೆ (ಕೇವಲ ಪರಿಕಲ್ಪನೆ ಮಾತ್ರ) A ಎಂಬ ಬ್ಯಾಂಕ್‌ B ಎಂಬ ಕಾರ್ಪೊರೇಟ್ ಸಂಸ್ಥೆಗೆ ಸಾಲ ಕೊಟ್ಟಿದೆ ಎಂದುಕೊಳ್ಳೋಣ. B ಸಂಸ್ಥೆ ಸಾಲ ಮರುಪಾವತಿ ಮಾಡುವಲ್ಲಿ ವಿಫಲವಾಗುತ್ತದೆ. ಆಗ A ಎಂಬ ಬ್ಯಾಂಕ್‌ ತನ್ನ ಇಡೀ ಸಾಲವನ್ನು (ಅಕೌಂಟ್) ಬ್ಯಾಡ್‌ ಬ್ಯಾಂಕ್‌ಗೆ ಮಾರಿಬಿಡುತ್ತದೆ. ಅಲ್ಲಿಂದಾಚೆಗೆ B ಸಂಸ್ಥೆಯಿಂದ ಸಾಲ ವಸೂಲಿ ಮಾಡಿಕೊಳ್ಳುವುದು ಬ್ಯಾಡ್‌ ಬ್ಯಾಂಕ್‌ನ ಹೊಣೆಯಾಗುತ್ತದೆ. ಸಾಲ ಕೊಟ್ಟಿದ್ದ ಮೂಲ ಬ್ಯಾಂಕ್‌ನ ಲೆಕ್ಕದ ಪುಸ್ತಕಗಳಿಂದ NPA ಹೊಣೆಗಾರಿಕೆ ಮಾಯವಾಗುತ್ತದೆ.

 

ಕೆಟ್ಟ ಸಾಲಗಳ ಬಗ್ಗೆ ಏಕೆ ಕಾಳಜಿ ವಹಿಸಬೇಕು?

 1. ಭಾರತೀಯ ಬ್ಯಾಂಕುಗಳ ಕೆಟ್ಟ ಸಾಲಗಳ ರಾಶಿಯು ಆರ್ಥಿಕತೆಯ ಮೇಲೆ ಭಾರಿ ಒತ್ತಡವನ್ನು ಸೃಷ್ಟಿಸುತ್ತದೆ.
 2. ಇದು ಬ್ಯಾಂಕುಗಳ ಲಾಭದ ಸೋರಿಕೆಗೆ ಕಾರಣವಾಗುತ್ತದೆ ಹಾಗೂ ಲಾಭಾಂಶಗಳು ಕರಗುವುದರಿಂದ, ಕೆಟ್ಟ ಸಾಲಗಳ ಬಹುಪಾಲು ಹೊರೆಯನ್ನು ಹೊಂದಿರುವ ಸಾರ್ವಜನಿಕ ವಲಯದ ಬ್ಯಾಂಕುಗಳು (PSB) ತಮ್ಮ ಬೆಳವಣಿಗೆಯನ್ನು ವೃದ್ಧಿಸಲು ಸಾಕಷ್ಟು ಬಂಡವಾಳವನ್ನು ಸಂಗ್ರಹಿಸಲು ಸಾಧ್ಯವಾಗುವುದಿಲ್ಲ.
 3. ಸಾಲದ ಬೆಳವಣಿಗೆಯ ಅನುಪಸ್ಥಿತಿಯಲ್ಲಿ, ಆರ್ಥಿಕತೆಯು 8% ಬೆಳವಣಿಗೆಯ ದರವನ್ನು ಸಾಧಿಸಲು ಅಡ್ಡಿಯಾಗುತ್ತದೆ. ಆದ್ದರಿಂದ, ಕೆಟ್ಟ ಸಾಲಗಳ ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸಬೇಕಾಗಿದೆ. ಅಥವಾ, ಕೆಟ್ಟ ಸಾಲದ ಸಮಸ್ಯೆಗೆ ಪರಿಣಾಮಕಾರಿ ಪರಿಹಾರದ ಅಗತ್ಯವಿದೆ.

 

ಪ್ರಯೋಜನಗಳು:

 1. ಇದು ಬ್ಯಾಂಕುಗಳು ಅಥವಾ ಹಣಕಾಸು ಸಂಸ್ಥೆಗಳು ಕೆಟ್ಟ ಸಾಲಗಳನ್ನು ವರ್ಗಾವಣೆ ಮಾಡುವ ಮೂಲಕ ತಮ್ಮ ಬ್ಯಾಲೆನ್ಸ್ ಶೀಟ್‌ಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ ಮತ್ತು ಅವುಗಳು ತಮ್ಮ ಪ್ರಮುಖ ವ್ಯವಹಾರವಾದ ಸಾಲ ಚಟುವಟಿಕೆಗಳತ್ತ ಗಮನ ಹರಿಸಲು ಸಹಾಯಕವಾಗುತ್ತದೆ.
 2. ದೊಡ್ಡ ಸಾಲಗಾರರು ಅನೇಕ ಸಾಲಗಾರರನ್ನು ಹೊಂದಿದ್ದಾರೆ.ಆದ್ದರಿಂದ ಸಾಲಗಳು ಒಂದು ಏಜೆನ್ಸಿಯಲ್ಲಿ ಕೇಂದ್ರೀಕೃತವಾಗಿರುವುದರಿಂದ ಕೆಟ್ಟ ಬ್ಯಾಂಕ್ ಸಮನ್ವಯದ ಸಮಸ್ಯೆಯನ್ನು ಪರಿಹರಿಸಲು ಅನುವು ಮಾಡಿಕೊಡುತ್ತದೆ.
 3. ವಿವಿಧ ಬ್ಯಾಂಕುಗಳನ್ನು ಬೇರ್ಪಡಿಸುವ ಮೂಲಕ, ಕೆಟ್ಟ ಬ್ಯಾಂಕ್ ಸಾಲಗಾರರೊಂದಿಗೆ ವೇಗವಾಗಿ ರಾಜಿ ಮಾಡಿಕೊಳ್ಳಬಹುದು.
 4. ಇದು ಸಾಲಗಾರರೊಂದಿಗೆ ಉತ್ತಮ ಚೌಕಾಶಿ ಮಾಡಲು ಮತ್ತು ಅವರ ವಿರುದ್ಧ ಹೆಚ್ಚು ಕಠಿಣ ಕ್ರಮ ಕೈಗೊಳ್ಳಲು ಕಾರಣವಾಗಬಹುದು.
 5. ಇದು ಹಣಕ್ಕಾಗಿ ಸರ್ಕಾರದ ಕಡೆಗೆ ಮಾತ್ರ ನೋಡುವುದಕ್ಕಿಂತ ಸಾಂಸ್ಥಿಕ ಹೂಡಿಕೆದಾರರಿಂದ ಹಣವನ್ನು ಸಂಗ್ರಹಿಸಬಹುದು.

 

ಅಂತಹ ಬ್ಯಾಂಕುಗಳ ಕುರಿತ ಕಾಳಜಿಯ ವಿಷಯಗಳು ಅಥವಾ ದೋಷಗಳು ಯಾವುವು?

 1. ಉದಾಹರಣೆಗೆ, ಬ್ಯಾಂಕೊಂದು ಕೆಟ್ಟ ಸಾಲಗಳನ್ನು ಮಾರುತ್ತದೆ ಎಂದು ಭಾವಿಸೋಣ. ನಂತರ, ಇದು ಹಣದ ಕಡಿತವನ್ನು ಒಪ್ಪಿಕೊಳ್ಳಬೇಕಾಗುತ್ತದೆ.ಏಕೆಂದರೆ 100 ರೂ ಕೆಟ್ಟದಾದಾಗ, ಮರಳಿ ನಿರೀಕ್ಷಿಸಬಹುದಾದ ನಿಜವಾದ ಮೊತ್ತವು 100 ರೂ.ಗಿಂತ ಕಡಿಮೆಯಿರುತ್ತದೆ ಮತ್ತು ಅದು ಹಣದ ಕಡಿತಕ್ಕೆ ಕಾರಣವಾಗುತ್ತದೆ. ಅದು P&L (ಲಾಭ ಮತ್ತು ನಷ್ಟ) ಮೇಲೆ ಪರಿಣಾಮ ಬೀರುತ್ತದೆ.
 2. ಆದ್ದರಿಂದ, ಆ ನಿರ್ದಿಷ್ಟ ಸಮಸ್ಯೆಯನ್ನು ಪರಿಹರಿಸುವವರೆಗೆ, ಹೊಸ ರಚನೆಯನ್ನು ಅಸ್ತಿತ್ವಕ್ಕೆ ತರುವುದು ಸಮಸ್ಯೆಯನ್ನು ಪರಿಹರಿಸುವಲ್ಲಿ ಶಕ್ತಿಯುತವಾಗಿರುವುದಿಲ್ಲ,/ ಸಮರ್ಥವಾಗಿರುವುದಿಲ್ಲ ಎ೦ದು ಹೇಳಲಾಗುತ್ತಿದೆ.

 

ಮುಂದಿನ ದಾರಿ:

 1. ಚಿಲ್ಲರೆ ವಹಿವಾಟು, ಸಗಟು ವಹಿವಾಟು, ರಸ್ತೆಗಳು ಮತ್ತು ಜವಳಿ ಮುಂತಾದ ಕ್ಷೇತ್ರಗಳಲ್ಲಿನ ಕಂಪನಿಗಳು ಒತ್ತಡವನ್ನು ಎದುರಿಸುತ್ತಿವೆ ಎಂದು ಕೆ ವಿ ಕಾಮತ್ ಸಮಿತಿ ಹೇಳಿದೆ.
 2. ಕೋವಿಡ್‌ ಪೂರ್ವದಲ್ಲಿ ಒತ್ತಡದಲ್ಲಿದ್ದ ಕ್ಷೇತ್ರಗಳಲ್ಲಿ ಬ್ಯಾಂಕೇತರ ಹಣಕಾಸು ಸಂಸ್ಥೆಗಳು(NBFC), ವಿದ್ಯುತ್, ಉಕ್ಕು, ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ಕ್ಷೇತ್ರಗಳು ಸೇರಿವೆ.
 3. ಈ ಹಿನ್ನೆಲೆಯಲ್ಲಿ ಕೆಟ್ಟ ಬ್ಯಾಂಕನ್ನು ಸ್ಥಾಪಿಸುವುದು ನಿರ್ಣಾಯಕವೆಂದು ಪರಿಗಣಿಸಲಾಗಿದೆ.

 

ಇಲ್ಲೆಲ್ಲಾ ಈಗಾಗಲೇ ಬ್ಯಾಡ್‌ ಬ್ಯಾಂಕ್ ಇದೆ:

ಈಗಾಗಲೇ ಅಮೆರಿಕ, ಫಿನ್‌ಲೆಂಡ್, ಇಂಡೊನೇಷಿಯಾ, ಬೆಲ್ಜಿಯಂ ಮತ್ತು ಸ್ವಿಡನ್‌ಗಳಲ್ಲಿ ಈಗಾಗಲೇ ಅಂಥ ಬ್ಯಾಂಕ್‌ಗಳು ಅಸ್ತಿತ್ವದಲ್ಲಿವೆ. ಬ್ಯಾಡ್‌ ಬ್ಯಾಂಕ್‌ಗಳ ಯಶಸ್ಸಿಗೆ ಅನೇಕ ಅಂಶಗಳು ಕಾರಣವಾಗುತ್ತವೆ. ಅದರಲ್ಲಿ ಮುಖ್ಯವಾದುದು ಸರ್ಕಾರದ ಪಾತ್ರ. ನೀತಿ, ಲೆಕ್ಕಪತ್ರಗಳ ನಿರ್ವಹಣೆ ಮತ್ತು ಹಣಕಾಸು ನೆರವು ಸಹ ಪ್ರಮುಖ ಪಾತ್ರ ನಿರ್ವಹಿಸುತ್ತವೆ.

ಬ್ಯಾಡ್‌ ಬ್ಯಾಂಕ್‌ ಎಂದರೇನು?

ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳ ವಸೂಲಾಗದ ಸಾಲಗಳ (NPA) ನಿರ್ವಹಣೆ ಮಾಡಲೆಂದೇ ಸ್ಥಾಪಿಸುವ ಪ್ರತ್ಯೇಕ ಬ್ಯಾಂಕ್‌ ಅನ್ನುಬ್ಯಾಡ್‌ ಬ್ಯಾಂಕ್ ಎಂದು ಕರೆಯಲಾಗುತ್ತದೆ. ಬ್ಯಾಂಕ್‌ ಮತ್ತು ಹಣಕಾಸು ಸಂಸ್ಥೆಗಳ NPAಗಳನ್ನು ಈ ಬ್ಯಾಡ್‌ ಬ್ಯಾಂಕ್‌ಗಳಿಗೆ ವರ್ಗಾಯಿಸಲಾಗುತ್ತದೆ. ಹೀಗೆ ಮಾಡಿದಾಗ ಬ್ಯಾಂಕ್ ಮತ್ತು ಹಣಕಾಸು ಸಂಸ್ಥೆಗಳ ನಷ್ಟದ ಪ್ರಮಾಣ ಕಡಿಮೆಯಾಗುತ್ತದೆ. ಇದರಿಂದ ಸಾಲ ನೀಡಲು ಬ್ಯಾಂಕ್‌ಗಳ ಬಳಿ ಹಣ ಉಳಿಯುತ್ತದೆ. ಬ್ಯಾಂಕ್‌ಗಳು ತಮ್ಮ ಆರ್ಥಿಕ ಚಟುವಟಿಕೆಗಳನ್ನು ಸರಾಗವಾಗಿ ನಡೆಸಲು ಸಾಧ್ಯವಾಗುತ್ತದೆ.

 

ಎಲ್ಲೆಲ್ಲಿ ಬ್ಯಾಡ್‌ ಬ್ಯಾಂಕ್‌ ಇದೆ, ಸ್ಥಿತಿಗತಿ ಏನು?

 1. ಸದ್ಯ ವಿಶ್ವದಲ್ಲಿ ಎಲ್ಲಿಯೂ ಸರ್ಕಾರದ ಬೆಂಬಲದ ಬ್ಯಾಡ್‌ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಹಲವು ದೇಶಗಳ ಸರ್ಕಾರಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿ, ಆರ್ಥಿಕ ಬಿಕ್ಕಟ್ಟು ಪರಿಹಾರವಾದ ನಂತರ ಅವುಗಳನ್ನು ಮುಚ್ಚಿವೆ.
 2. 1980ರಲ್ಲಿ ಅಮೆರಿಕದ ಮೆಲ್ಲನ್ ಬ್ಯಾಂಕ್‌ ದಿವಾಳಿ ಹಂತ ತಲುಪಿದಾಗ ಬ್ಯಾಡ್‌ ಬ್ಯಾಂಕ್‌ ಅನ್ನು ಸ್ಥಾಪಿಸುವ ಪ್ರಸ್ತಾವವನ್ನು ಇಡಲಾಗಿತ್ತು. ಈ ಪ್ರಸ್ತಾವ ಕಾರ್ಯರೂಪಕ್ಕೆ ಬಂದಿದ್ದು, 1988ರಲ್ಲಿ. ಈ ಬ್ಯಾಡ್‌ ಬ್ಯಾಂಕ್‌ನ ಸ್ಥಾಪನೆಯ ಉದ್ದೇಶ ಈಡೇರಿದ ನಂತರ 1995ರಲ್ಲಿ ಅದನ್ನು ರದ್ದುಪಡಿಸಲಾಯಿತು. ಭಾರತದಲ್ಲಿ 2004ರಲ್ಲಿ IDBI ಅನ್ನು ಎನ್‌ಪಿಎ ಇಂದ ರಕ್ಷಿಸಲು ಮತ್ತು ಬ್ಯಾಂಕ್‌ ಆಗಿ ಪರಿವರ್ತಿಸಲು ‘ಸ್ಟ್ರೆಸ್ಡ್‌ ಅಸೆಟ್ಸ್ ಸ್ಟೆಬಿಲೈಸೇಷನ್‌ ಫಂಡ್‌’ ಅನ್ನು ಸ್ಥಾಪಿಸಲಾಗಿತ್ತು. ಈ ನಿಧಿಯ ಸ್ಥಾಪನೆಯಿಂದ ಐಡಿಬಿಐಗೆ ₹ 9,000 ಕೋಟಿ ಲಭ್ಯವಾಗಿತ್ತು.
 3. 2008ರ ಜಾಗತಿಕ ಆರ್ಥಿಕ ಹಿಂಜರಿತದ ಸಂದರ್ಭದಲ್ಲಿ ವಿಶ್ವದ ಹಲವು ದೇಶಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿದ್ದವು. ಕೆಲವು ಬ್ಯಾಂಕ್‌ಗಳು ತಮ್ಮದೇ ಪ್ರತ್ಯೇಕ ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿಕೊಂಡಿದ್ದವು. ಕೆಲವು ದೇಶಗಳಲ್ಲಿ ಸರ್ಕಾರಗಳೇ ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿದ್ದವು. ಬ್ಯಾಂಕ್‌ ಆಫ್ ಅಮೆರಿಕ, ಸಿಟಿಗ್ರೂಪ್ ಬ್ಯಾಂಕ್‌, ಸ್ವೀಡ್‌ಬ್ಯಾಂಕ್‌ಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿದ್ದವು. ಬೆಲ್ಜಿಯಂ, ಐರ್ಲೆಂಡ್‌, ಇಂಡೊನೇಷ್ಯಾ, ಜರ್ಮನಿ ಸೇರಿದಂತೆ ಹಲವು ದೇಶಗಳ ಸರ್ಕಾರಗಳು ಬ್ಯಾಡ್‌ ಬ್ಯಾಂಕ್‌ಗಳನ್ನು ಸ್ಥಾಪಿಸಿದ್ದವು. ಆರ್ಥಿಕತೆ ಪ್ರಗತಿಯತ್ತ ಹೊರಳಿದ ನಂತರ ಈ ಬ್ಯಾಡ್‌ ಬ್ಯಾಂಕ್‌ಗಳನ್ನು ಮುಚ್ಚಲಾಯಿತು.

 

ಭಾರತಕ್ಕೆ  ಬ್ಯಾಡ್‌ ಬ್ಯಾಂಕ್‌ನ ಅಗತ್ಯವಿದೆಯೇ?

 1. ಭಾರತದ ಈಗಿನ ಆರ್ಥಿಕ ಸ್ಥಿತಿಗತಿಯಲ್ಲಿ ಬ್ಯಾಡ್‌ ಬ್ಯಾಂಕ್‌ನ ಅವಶ್ಯಕತೆ ಇದೆ ಎಂದು ಭಾರತದ ಬ್ಯಾಂಕ್‌ಗಳು, ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್‌ಗೆ (RBI) ಸಲ್ಲಿಸಿರುವ ಮನವಿಯಲ್ಲಿ ವಿವರಿಸಿವೆ. ಬ್ಯಾಡ್‌ ಬ್ಯಾಂಕ್‌ ಸ್ಥಾಪನೆಯಿಂದ ಬ್ಯಾಂಕ್‌ಗಳ ಎನ್‌ಪಿಎ ಹೊರೆ ಕಡಿಮೆಯಾಗುತ್ತದೆ. ಬ್ಯಾಲೆನ್ಸ್ ಶೀಟ್‌ನಲ್ಲಿ ಸಮತೋಲನ ಇರುತ್ತದೆ. ಇದರಿಂದ ಬ್ಯಾಂಕ್‌ಗಳ ಸಾಲ ನೀಡಿಕೆ ಸಾಮರ್ಥ್ಯ ಉತ್ತಮವಾಗುತ್ತದೆ. ಸಾಲ ನೀಡಿಕೆಯಿಂದ ಆರ್ಥಿಕತೆಗೆ ಚಾಲನೆ ದೊರೆಯುತ್ತದೆ ಎಂದು ಬ್ಯಾಂಕ್‌ಗಳು ಪ್ರತಿಪಾದಿಸಿವೆ.
 2. ದೇಶದಲ್ಲಿ ಬ್ಯಾಡ್‌ ಬ್ಯಾಂಕ್‌ ಸ್ಥಾಪಿಸಲು ಕೇಂದ್ರ ಸರ್ಕಾರವೇ ಹಣ ಹೂಡಿಕೆ ಮಾಡಲಿದೆ. ಆರಂಭಿಕ ಹಂತದಲ್ಲಿ ಸರ್ಕಾರವು ₹ 10,000 ಕೋಟಿಯಿಂದ ₹15,000 ಕೋಟಿ ಅನುದಾನವನ್ನು ಬ್ಯಾಡ್‌ ಬ್ಯಾಂಕ್‌ಗೆ ನೀಡುವ ಸಾಧ್ಯತೆ ಇದೆ. ಇದು ತೆರಿಗೆದಾರರ ಹಣ. ಅಲ್ಲದೆ ಅಗತ್ಯವಿರುವ ಮತ್ತಷ್ಟು ಬಂಡವಾಳವನ್ನು ಬ್ಯಾಡ್‌ ಬ್ಯಾಂಕ್, ಮಾರುಕಟ್ಟೆಯಿಂದ ಸಂಗ್ರಹಿಸಲಿದೆ. ಈ ಬಂಡವಾಳದಿಂದಲೂ NPAಗಳನ್ನು ಖರೀದಿಸಲಾಗುತ್ತದೆ.
 3. NPA ಗಳು ವಸೂಲಿಯಾದರೆ ಸರ್ಕಾರ ಹೂಡಿರುವ ಬಂಡವಾಳ ಮತ್ತು ಹೂಡಿಕೆದಾರರ ಬಂಡವಾಳವು ವಾಪಸ್ ಆಗಲಿದೆ. ಎನ್‌ಪಿಎ ವಸೂಲಿ ಆಗದಿದ್ದರೆ, ತೆರಿಗೆದಾರರ ಹಣ ಮತ್ತು ಹೂಡಿಕೆದಾರರ ಹಣ ನಷ್ಟವಾಗಲಿದೆ. ಅಲ್ಲದೆ ಬ್ಯಾಡ್‌ ಬ್ಯಾಂಕ್‌, NPAಗಳ ಗೋದಾಮು ಆಗುವ ಅಪಾಯವೂ ಇದೆ.

 

ಬ್ಯಾಡ್ ಬ್ಯಾಂಕ್ ಕುರಿತ  ಪರ– ವಿರೋಧ ವಾದ:

 1. ಬ್ಯಾಡ್‌ ಬ್ಯಾಂಕ್‌ ಕಲ್ಪನೆಯ ಬಗ್ಗೆ ಪರ–ವಿರೋಧ ವಾದಗಳಿವೆ. ವಸೂಲಾಗದ ಸಾಲವನ್ನು ಬೇರೆಕಡೆಗೆ ಹಸ್ತಾಂತರಿಸಿದರೆ ಬ್ಯಾಂಕ್‌ಗಳು ತಮ್ಮ ಮೂಲ ಚಟುವಟಿಕೆಯಾದ ಸಾಲ ನೀಡಿಕೆಯ ಕಡೆಗೆ ಗಮನಹರಿಸಲು ಸಾಧ್ಯವಾಗುತ್ತದೆ. ಜತೆಗೆ ವಸೂಲಾತಿಯ ಹೊಣೆಯನ್ನು ತಜ್ಞರಿಗೆ ವಹಿಸಿದಂತಾಗುತ್ತದೆ. ಇದರಿಂದ ವಸೂಲಾತಿ ಪ್ರಮಾಣ ಹೆಚ್ಚಾಗುತ್ತದೆ ಎಂದು ಬ್ಯಾಡ್‌ ಬ್ಯಾಂಕ್‌ ಪರ ವಾದಿಸುವವರು ಹೇಳುತ್ತಾರೆ.
 2. ಬೇರೆಬೇರೆ ಬ್ಯಾಂಕ್‌ಗಳು ಸೇರಿ ನೀಡಿರುವ ಸಾಲವು ವಸೂಲಾಗದೆ ಇದ್ದಾಗ, ಸಾಲಗಾರರ ಆಸ್ತಿ ಮಾರಾಟ ಮಾಡಿ ಹಣ ವಸೂಲು ಮಾಡಲು ಅವಕಾಶ ಇದೆ. ಆದರೆ ಖರೀದಿದಾರರು ಎಲ್ಲಾ ಬ್ಯಾಂಕ್‌ಗಳ ಜತೆಗೆ ವ್ಯವಹಾರ ಮಾಡಬೇಕಾಗುತ್ತದೆ. ಬ್ಯಾಡ್‌ ಬ್ಯಾಂಕ್‌ ರಚನೆಯಾದರೆ ಖರೀದಿದಾರರು ಒಂದೇ ಸಂಸ್ಥೆಯ ಜತೆಗೆ ವ್ಯವಹರಿಸಬಹುದಾಗಿದೆ ಎಂದು ಇಂಥವರು ವಾದಿಸುತ್ತಾರೆ.
 3. ಆದರೆ, ‘ಒಂದು ಮಾದರಿಯ ಪರಿಹಾರವು ಎಲ್ಲಾ ಸಮಸ್ಯೆಗಳನ್ನು ಪರಿಹರಿಸಲು ಸಾಧ್ಯವಾಗಲಾರದು’ ಎಂದು ಬ್ಯಾಡ್‌ ಬ್ಯಾಂಕ್‌ ಚಿಂತನೆಯನ್ನು ವಿರೋಧಿಸುವವರು ಹೇಳುತ್ತಾರೆ.
 4. ರಘುರಾಂ ರಾಜನ್ ಅವರು RBI ಗವರ್ನರ್‌ ಆಗಿದ್ದ ಕಾಲದಲ್ಲೇ ‘ಬ್ಯಾಡ್‌ ಬ್ಯಾಂಕ್‌’ ಸ್ಥಾಪನೆಯ ಬಗ್ಗೆ ಚರ್ಚೆಗಳು ನಡೆದಿದ್ದವು. ಆದರೆ ಸ್ವತಃ ರಾಜನ್‌ ಅವರು ಈ ಚಿಂತನೆಯನ್ನು ಅಷ್ಟಾಗಿ ಒಪ್ಪಿಕೊಂಡಿರಲಿಲ್ಲ.

 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಟರ್ಕಿಯಲ್ಲಿ ‘ಸೀ ಸ್ನೋಟ್’(sea snot) ಔಟ್ ಬ್ರೇಕ್:


(‘Sea Snot’ outbreak in Turkey)

ಸಂದರ್ಭ:

ಕಪ್ಪು ಸಮುದ್ರವನ್ನು ಏಜಿಯನ್ ಸಮುದ್ರಕ್ಕೆ ಸಂಪರ್ಕಿಸುವ ಟರ್ಕಿಯ ಮರ್ಮರ ಸಮುದ್ರ(Sea of Marmara)ವು ಅತಿದೊಡ್ಡಸೀ ಸ್ನೋಟ್’ ಔಟ್ ಬ್ರೇಕ್ ಗೆ ಸಾಕ್ಷಿಯಾಗಿದೆ. ಈ ಸ್ನಿಗ್ಧತೆಯ ವಸ್ತು (mucilage) ಹತ್ತಿರದ ಕಪ್ಪು ಸಮುದ್ರ’ ಮತ್ತು ಏಜಿಯನ್ ಸಮುದ್ರದಲ್ಲಿಯೂ ಕಂಡುಬಂದಿದೆ.

ಸೀ ಸ್ನೋಟ್ ಎಂದರೇನು?

ಇದು ಬೂದು ಅಥವಾ ಹಸಿರು ಕೆಸರಿನ ಜಿಗುಟಾದ ಪದರವಾಗಿದ್ದು ಅದು ಸಮುದ್ರ ಪರಿಸರ ವ್ಯವಸ್ಥೆಗೆ ಗಮನಾರ್ಹ ಹಾನಿಯನ್ನುಂಟುಮಾಡುತ್ತದೆ.

 

 1. ಪಾಚಿಗಳಲ್ಲಿ ಪೋಷಕಾಂಶಗಳು ಮಿತಿಮೀರಿದಾಗ ಅದು ರೂಪುಗೊಳ್ಳುತ್ತದೆ.
 2. ಟರ್ಕಿಯಲ್ಲಿ ‘ಸೀ ಸ್ನೋಟ್’ ಏಕಾಏಕಿ(ಔಟ್ ಬ್ರೇಕ್) 2007 ರಲ್ಲಿ ಮೊದಲ ಬಾರಿಗೆ ದಾಖಲಾಗಿದೆ. ಅದೇ ಸಮಯದಲ್ಲಿ, ಗ್ರೀಸ್ ಬಳಿಯ ಏಜಿಯನ್ ಸಮುದ್ರದಲ್ಲಿಯೂ ‘ಸೀ ಸ್ನೋಟ್’ ಕಾಣಿಸಿಕೊಂಡಿತು.

 

ಪಾಚಿಗಳಲ್ಲಿನ ಪೋಷಕಾಂಶಗಳ ಅತಿಯಾದ ಪ್ರಮಾಣದ ಶೇಖರಣೆಯು, ಮುಖ್ಯವಾಗಿ ಜಾಗತಿಕ ತಾಪಮಾನ, ನೀರಿನ ಮಾಲಿನ್ಯ, ದೇಶೀಯ ಮತ್ತು ಕೈಗಾರಿಕಾ ತ್ಯಾಜ್ಯವನ್ನು ಸಾಗರಕ್ಕೆ ಅನಿಯಂತ್ರಿತವಾಗಿ ಬಿಡುಗಡೆ ಮಾಡುವುದು ಇತ್ಯಾದಿಗಳಿಂದ ಉಂಟಾಗುತ್ತದೆ.

 

ಪರಿಣಾಮ ಮತ್ತು ಕಳವಳಗಳು:

 1.  ‘ಸೀ ಸ್ನೋಟ್’ ಸಮುದ್ರದ ಮೂಲಕ ಇಸ್ತಾಂಬುಲ್‌ನ ದಕ್ಷಿಣಕ್ಕೆ ಹರಡಿತು ಮತ್ತು ಇದರ ಹರಡುವಿಕೆಯು ನಗರದ ಕಡಲತೀರಗಳು ಮತ್ತು ಬಂದರುಗಳನ್ನು ಒಳಗೊಂಡಿದೆ.
 2. ಇದು ದೇಶದ ಸಮುದ್ರ ಪರಿಸರ ವ್ಯವಸ್ಥೆಗೆ ಗಂಭೀರ ಬೆದರಿಕೆಗೆ ಕಾರಣವಾಗಿದೆ – ‘ಸಮುದ್ರ ಸ್ನೋಟ್’ ಹೆಚ್ಚಿನ ಸಂಖ್ಯೆಯ ಮೀನುಗಳು ಮತ್ತು ಹವಳಗಳು ಮತ್ತು ಸ್ಪಂಜುಗಳಂತಹ ಇತರ ಜಲಚರಗಳ ಸಾವಿಗೆ ಕಾರಣವಾಗಿದೆ.
 3. ಅದನ್ನು ಪರೀಕ್ಷಿಸದೆ ಬಿಟ್ಟರೆ, ಅದು ಸಮುದ್ರದ ತಳಭಾಗವನ್ನು ತಲುಪಿ, ಸಾಗರ ತಳವನ್ನು ಆವರಿಸಬಹುದು, ಇದರಿಂದಾಗಿ ಸಮುದ್ರ ಪರಿಸರ ವ್ಯವಸ್ಥೆಗಳಿಗೆ ವ್ಯಾಪಕ ಹಾನಿಯಾಗುತ್ತದೆ.
 4. ಕಾಲಾನಂತರದಲ್ಲಿ, ಮೀನು, ಏಡಿಗಳು, ಸಿಂಪಿ, ಮಸ್ಸೆಲ್ಸ್ ಮತ್ತು ಸಮುದ್ರ ಸ್ಟಾರ್ ಫಿಶ್ ಸೇರಿದಂತೆ ಎಲ್ಲಾ ಜಲಚರಗಳಿಗೆ ಇದು ವಿಷಕಾರಿಯಾಗಿದೆ.
 5. ಜಲಚರಗಳ ಮೇಲಿನ ಪರಿಣಾಮದ ಹೊರತಾಗಿ, ಸೀ ಸ್ನೋಟ್’ ಔಟ್ ಬ್ರೇಕ್ ವಿದ್ಯಮಾನವು ಮೀನುಗಾರರ ಜೀವನೋಪಾಯದ ಮೇಲೂ ಪರಿಣಾಮ ಬೀರಿದೆ.
 6. ಇದು ಇಸ್ತಾಂಬುಲ್‌ ನಂತಹ ನಗರಗಳಲ್ಲಿ ಕಾಲರಾದಂತಹ ನೀರಿನಿಂದ ಹರಡುವ ರೋಗಗಳ ಹರಡುವಿಕೆಗೆ ಕಾರಣವಾಗಬಹುದು.

 

‘ಸೀ ಸ್ನೋಟ್’ ಹರಡುವಿಕೆಯನ್ನು ತಡೆಯಲು ಟರ್ಕಿ ಕೈಗೊಂಡ ಕ್ರಮಗಳು:

 1. ಇಡೀ ಮರ್ಮರ ಸಮುದ್ರವನ್ನು ಸಂರಕ್ಷಿತ ಪ್ರದೇಶವೆಂದು ಘೋಷಿಸಲು ಟರ್ಕಿ ನಿರ್ಧರಿಸಿದೆ.
 2. ಕರಾವಳಿ ನಗರಗಳು ಮತ್ತು ಹಡಗುಗಳಿಂದ ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ತ್ಯಾಜ್ಯನೀರಿನ ಸಂಸ್ಕರಣೆಯನ್ನು ಸುಧಾರಿಸಲು ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತಿದೆ.
 3. ವಿಪತ್ತು ನಿರ್ವಹಣಾ ಯೋಜನೆಯನ್ನು ಸಿದ್ಧಪಡಿಸಲಾಗುತ್ತಿದೆ.

 

ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.

ಹರಿಯಾಣದ “ಪ್ರಾಣ ವಾಯು ದೇವತಾ ಪಿಂಚಣಿ ಯೋಜನೆ”, ಮತ್ತು ಆಕ್ಸಿ ವನ (ಆಮ್ಲಜನಕ ಅರಣ್ಯಗಳು)


ಸಂದರ್ಭ:

 “ಪ್ರಾಣ ವಾಯು ದೇವತಾ ಪಿಂಚಣಿ ಯೋಜನೆ”, ಮತ್ತು ಆಕ್ಸಿ ವನ (ಆಮ್ಲಜನಕ ಅರಣ್ಯಗಳು) ಯೋಜನೆ (Pran Vayu Devta Pension Scheme- PVDPS)ಯನ್ನು ಹರಿಯಾಣ ಸರ್ಕಾರವು ವಿಶ್ವ ಪರಿಸರ ದಿನಾಚರಣೆಯಂದು ಘೋಷಿಸಿತು.

 

ಏನಿದು PVDPS ಯೋಜನೆ?

 1.  ತಮ್ಮ ಜೀವನದುದ್ದಕ್ಕೂ ಆಮ್ಲಜನಕವನ್ನು ಉತ್ಪಾದಿಸುವ ಮೂಲಕ, ಮಾಲಿನ್ಯವನ್ನು ಕಡಿಮೆ ಮಾಡುವ ಮೂಲಕ, ನೆರಳು ನೀಡುವ ಮೂಲಕ ಮಾನವೀಯತೆಗೆ ಸೇವೆ ಸಲ್ಲಿಸಿದ 75 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಎಲ್ಲ ಮರಗಳನ್ನು ಗೌರವಿಸುವ ಉಪಕ್ರಮ ಇದು.
 2. ಅಂತಹ ಮರಗಳನ್ನು ರಾಜ್ಯಾದ್ಯಂತ ಗುರುತಿಸಲಾಗುವುದು ಮತ್ತು ಸ್ಥಳೀಯ ಜನರನ್ನು ಈ ಯೋಜನೆಯಲ್ಲಿ ಸೇರಿಸಿಕೊಳ್ಳುವ ಮೂಲಕ ಅವುಗಳನ್ನು ನೋಡಿಕೊಳ್ಳಲಾಗುವುದು.
 3. ಈ ಯೋಜನೆಯಡಿ 75 ವರ್ಷಕ್ಕಿಂತ ಮೇಲ್ಪಟ್ಟ ಮರಗಳ ನಿರ್ವಹಣೆಗಾಗಿ PVDPS ಹೆಸರಿನಲ್ಲಿ 2,500 ರೂ.ಗಳ ಪಿಂಚಣಿ ಮೊತ್ತವನ್ನು ನೀಡಲಾಗುವುದು. ವೃದ್ಧಾಪ್ಯ ಸಮ್ಮಾನ ಪಿಂಚಣಿ ಯೋಜನೆಯಂತೆಯೇ ಈ ‘ಮರದ ಪಿಂಚಣಿ’ ಪ್ರತಿವರ್ಷವೂ ಹೆಚ್ಚಾಗುತ್ತಲೇ ಇರುತ್ತದೆ.
 4. ಮರಗಳ ನಿರ್ವಹಣೆ, ಫಲಕಗಳ ಸ್ಥಾಪನೆ, ಗ್ರಿಲ್‌ಗಳು ಇತ್ಯಾದಿಗಳನ್ನು ಸ್ಥಾಪಿಸಲು ನಗರ ಸ್ಥಳೀಯ ಸಂಸ್ಥೆಗಳ (ULBs) ಇಲಾಖೆಗಳು ಈ ಪಿಂಚಣಿ ನೀಡಲಿವೆ.

 

ಆಕ್ಸಿ ವನ (ಆಮ್ಲಜನಕ ಅರಣ್ಯಗಳು) ಎಂದರೇನು?

 1.  ಆಕ್ಸಿವನ ಗಳು(Oxy Van) ಗುರುತಿಸಲ್ಪಟ್ಟ ಭೂಮಿಯ ಭಾಗವಾಗಿದ್ದು, ಅದರ ಮೇಲೆ 30 ದಶಲಕ್ಷ ಮರಗಳನ್ನು ನೆಡಲಾಗುತ್ತದೆ.
 2. ಹರಿಯಾಣದಾದ್ಯಂತ ಒಟ್ಟು 8 ಲಕ್ಷ ಹೆಕ್ಟೇರ್ ಭೂಮಿಯ 10 ಪ್ರತಿಶತದಷ್ಟು ಭೂಮಿಯಲ್ಲಿ ಆಕ್ಸಿವನ ಗಳನ್ನು ನಿರ್ಮಿಸಲಾಗುವುದು.
 3. ಈ ಆಕ್ಸಿವನ ಗಳಲ್ಲಿ ವಿವಿಧ ರೀತಿಯ ಸಸ್ಯಗಳು ಮತ್ತು ಮರಗಳನ್ನು ಕಾಣಬಹುದಾಗಿದೆ.