Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 7ನೇ ಜೂನ್ 2021

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ದೀರ್ಘಕಾಲೀನ ವೀಸಾ ಪಡೆಯಲು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಸ್ಲಿಪ್‌ಗಳು ಮಾನ್ಯವಾಗಿರುತ್ತವೆ.

2. ಶಿಕ್ಷಣ ಸೂಚ್ಯಂಕ ಶ್ರೇಯಾಂಕ.

3. ಕೋವಾಕ್ಸಿನ್ ಗಿಂತ ಹೆಚ್ಚಿನ ಪ್ರತಿಕಾಯಗಳನ್ನು ಉತ್ಪಾದಿಸಿದ ಕೋವಿಶೀಲ್ಡ್ ಲಸಿಕೆ: ಒಂದು ಅಧ್ಯಯನ.

4. ಸಿರಿಯಾ 17 ಬಾರಿ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸಿದೆ: ರಾಸಾಯನಿಕ ಶಸ್ತ್ರಾಸ್ತ್ರಗಳ ನಿಷೇಧ ಸಂಸ್ಥೆ.

5. ವಿಶ್ವಸಂಸ್ಥೆಯ CEO ವಾಟರ್ ಮ್ಯಾಂಡೇಟ್ ಅನ್ನು ಸೇರಿದ ರಾಷ್ಟ್ರೀಯ ಉಷ್ಣ ವಿದ್ಯುಚ್ಛಕ್ತಿ ನಿಗಮ(NTPC).

 

ಸಾಮಾನ್ಯ ಅಧ್ಯಯನ ಪತ್ರಿಕೆ 4:

1. ಪಂಚಾಯಿತಿ ಗಳಿಗೆ ಮಾದರಿ ನಾಗರಿಕ ಚಾರ್ಟರ್.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಟಿಯಾನನ್ಮೆನ್ ಸ್ಕ್ವೇರ್ ಹತ್ಯಾಕಾಂಡ.

2. ವಿಶ್ವ ಪರಿಸರ ದಿನ.

3. ಯೂನ್ ಟ್ಯಾಬ್ ಯೋಜನೆ.

4. ಶಾಲೆಗಳಲ್ಲಿ ಕೋಡಿಂಗ್ ಮತ್ತು ಡೇಟಾ ವಿಜ್ಞಾನವನ್ನು ಪರಿಚಯಿಸಲು ಮೈಕ್ರೋಸಾಫ್ಟ್‌ನೊಂದಿಗೆ ಸಹಕರಿಸಲಿರುವ

5. ಐ-ಫ್ಯಾಮಿಲಿಯಾ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ದೀರ್ಘಕಾಲೀನ ವೀಸಾ ಪಡೆಯಲು ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಸ್ಲಿಪ್‌ಗಳು ಮಾನ್ಯವಾಗಿರುತ್ತವೆ:


ಸಂದರ್ಭ:

ಇತ್ತೀಚಿಗೆ ಕೇಂದ್ರ ಗೃಹ ಸಚಿವಾಲಯವು ಅಪಘಾನಿಸ್ತಾನ, ಪಾಕಿಸ್ತಾನ ಮತ್ತು ಬಾಂಗ್ಲಾದೇಶದಿಂದ ವಲಸೆ ಬಂದಿರುವ 6 ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ವಲಸಿಗರು ದೀರ್ಘಾವಧಿ ವಿಸಾ(long-term visas -LTVs) ಪಡೆಯಲು ಅರ್ಜಿ ಸಲ್ಲಿಸುವಾಗ ರಾಷ್ಟ್ರೀಯ ಜನಸಂಖ್ಯೆ ನೋಂದಣಿಯ (National Population Register -NPR) ದಾಖಲಾತಿ ಸ್ಲಿಪ್ ಅಥವಾ ಚೀಟಿ ಗಳನ್ನು ಭಾರತದಲ್ಲಿ ಅವರ ವಾಸ್ತವ್ಯದ ಅವಧಿಯ ಪುರಾವೆಯಾಗಿ ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಿದೆ.

 

ಹಿನ್ನೆಲೆ:

ರಾಷ್ಟ್ರೀಯ ಜನಸಂಖ್ಯೆ ನೋಂದಣಿ (NPR) ಸಂಖ್ಯೆಯು ದೀರ್ಘಾವಧಿ ವಿಸಾಗೆ ಅರ್ಜಿ ಸಲ್ಲಿಸಲು ಒದಗಿಸಬಹುದಾದ 10 ಕ್ಕೂ ಹೆಚ್ಚು ದಾಖಲೆಗಳ ವಿವರಣಾತ್ಮಕ ಪಟ್ಟಿಯ ಭಾಗವಾಗಿದೆ, ಇದು ಮೂರು ದೇಶಗಳಿಂದ ಬರುವ ಆರು ಅಲ್ಪಸಂಖ್ಯಾತ ಸಮುದಾಯಗಳಾದ ಹಿಂದೂಗಳು, ಸಿಖ್ಖರು, ಜೈನರು, ಪಾರ್ಸಿಗಳು, ಕ್ರಿಶ್ಚಿಯನ್ನರು ಮತ್ತು ಬೌದ್ಧರಿಗೆ  1955 ರ ಪೌರತ್ವ ಕಾಯ್ದೆಯ ಸೆಕ್ಷನ್ 5 ಮತ್ತು 6 ರ ಅಡಿಯಲ್ಲಿ ನೈಸರ್ಗಿಕೀಕರಣ ಅಥವಾ ನೋಂದಣಿಯ ಮೂಲಕ ಭಾರತೀಯ ಪೌರತ್ವವನ್ನು ಪಡೆದುಕೊಳ್ಳುವ ಪೂರ್ವಸೂಚಕವಾಗಿದೆ.

 1. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಿಂದ ಬರುವ ಹಿಂದೂಗಳು ಮತ್ತು ಸಿಖ್ಖರಿಗೆ ದೀರ್ಘಾವಧಿ ವಿಸಾ(long-term visas -LTVs) ಒದಗಿಸುವ ವಿಶೇಷ ನಿಬಂಧನೆಯನ್ನು ಮೊದಲ ಬಾರಿಗೆ 2011 ರಲ್ಲಿ ಮಾಡಲಾಯಿತು.

 

ದೀರ್ಘಾವಧಿ ವಿಸಾ(LTV) ಎಂದರೇನು?

ಭಾರತೀಯ ಮೂಲದವರಲ್ಲದ ವಿದೇಶಿಯರಿಗೆ ಭಾರತದಲ್ಲಿ 180 ದಿನಗಳಿಗಿಂತ(6 ತಿಂಗಳು) ಹೆಚ್ಚಿಗೆ ನಿರಂತರವಾಗಿ ವಾಸಿಸಲು ಪರವಾನಿಗೆ ನೀಡುವ ಪತ್ರವಾಗಿ ದೀರ್ಘಾವಧಿ ವೀಸಾವನ್ನು ವರ್ಗೀಕರಿಸಲಾಗಿದೆ. ಈ ಸೌಲಭ್ಯವನ್ನು ಒದಗಿಸುವ ಮುಖ್ಯವಾದ ವಿಧಗಳೆಂದರೆ ಉದ್ಯೋಗ ವೀಸಾ, ಪ್ರವೇಶ ವೀಸಾ ಮತ್ತು ವಿದ್ಯಾರ್ಥಿ ವೀಸಾಗಳು.

 

ದೀರ್ಘಾವಧಿ ವಿಸಾ(LTV)ದ ಪ್ರಯೋಜನಗಳು:

 1. ದೀರ್ಘಾವಧಿ ವಿಸಾ(LTV) ಹೊಂದಿರುವ ನೆರೆಯ ರಾಷ್ಟ್ರಗಳ ಅಲ್ಪಸಂಖ್ಯಾತ ಸಮುದಾಯಗಳಿಗೆ ಸೇರಿದ ಜನರು ತಮ್ಮ ಕುಟುಂಬಕ್ಕಾಗಿ ಸಣ್ಣ ಮನೆ ಖರೀದಿಸಲು ಅವಕಾಶವಿದೆ ಮತ್ತು ಅವರು ಇಲ್ಲಿ ತಮ್ಮದೇಯಾದ ವ್ಯವಹಾರವನ್ನು ಸಹ ಸ್ಥಾಪಿಸಬಹುದು.
 2. ಅವರು ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್ ಮತ್ತು ಚಾಲನಾ ಪರವಾನಗಿ ಪಡೆಯಲು ಅರ್ಹರು. LTV ಅವರಿಗೆ ಆಸ್ತಿ ಖರೀದಿಸಲು ಸಹ ಅವಕಾಶ ನೀಡುತ್ತದೆ.

 

‘ರಾಷ್ಟ್ರೀಯ ಜನಸಂಖ್ಯಾ ನೋಂದಣಿ’ (NPR) ಎಂದರೇನು?

ಅದು ‘ದೇಶದ ಸಾಮಾನ್ಯ ನಿವಾಸಿಗಳ’ ಪಟ್ಟಿ / ರಿಜಿಸ್ಟರ್ ಆಗಿದೆ.

ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಅನ್ನು ಮೊದಲು 2010 ರಲ್ಲಿ  ದಶಕದ ಜನಗಣತಿ ಪ್ರಕ್ರಿಯೆಯೊಂದಿಗೆ ಸಂಗ್ರಹಿಸಲಾಯಿತು ಮತ್ತು ನಂತರ ಅದನ್ನು 2015 ರಲ್ಲಿ ನವೀಕರಿಸಲಾಯಿತು.

 1. ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಸಾಮಾನ್ಯ ನಿವಾಸಿಗಳ ನೋಂದಣಿಯಾಗಿದ್ದು, ಸ್ಥಳ ವಿವರಗಳೊಂದಿಗೆ ಗ್ರಾಮ ಮಟ್ಟಕ್ಕೆ ಸಂಬಂಧಿಸಿದೆ ಮತ್ತು ಇದನ್ನು ನಿಯತಕಾಲಿಕವಾಗಿ “ಜನನ, ಮರಣ ಮತ್ತು ವಲಸೆಯ ಕಾರಣದಿಂದಾಗಿ ಆದ ಬದಲಾವಣೆಗಳನ್ನು ಸಂಯೋಜಿಸಲು” ನವೀಕರಿಸಲಾಗುತ್ತದೆ.
 2. ಎನ್‌ಪಿಆರ್‌ ನ ಮುಂದಿನ ಹಂತವು ತಂದೆ ಮತ್ತು ತಾಯಿಗಳ ಹುಟ್ಟಿದ ದಿನಾಂಕ ಮತ್ತು ಹುಟ್ಟಿದ ಸ್ಥಳ, ಕೊನೆಯ ವಾಸಸ್ಥಳ ಮತ್ತು ಮಾತೃಭಾಷೆಯ ಕುರಿತ ವಿವಾದಾತ್ಮಕ ಪ್ರಶ್ನೆಗಳನ್ನು ಒಳಗೊಂಡಿರುತ್ತದೆ ಎಂದು ನಿರೀಕ್ಷಿಸಲಾಗಿದೆ.
 3. ಮುಂದಿನ ಹಂತವನ್ನು 2021 ರ ಮನೆಗಳ ಸಂಖ್ಯಾ ಗಣತಿ ಮತ್ತು ವಸತಿ ಗಣತಿಯೊಂದಿಗೆ ಏಕಕಾಲದಲ್ಲಿ ನವೀಕರಿಸಬೇಕಾಗಿತ್ತು ಆದರೆ COVID-19 ಸಾಂಕ್ರಾಮಿಕ ರೋಗದಿಂದಾಗಿ ಅನಿರ್ದಿಷ್ಟವಾಗಿ ಮುಂದೂಡಲ್ಪಟ್ಟಿದೆ.
 4. ರಾಷ್ಟ್ರೀಯ ಜನಸಂಖ್ಯಾ ನೋಂದಣಿ (NPR) ಪೌರತ್ವ ಕಾಯ್ದೆ, 1955 ಮತ್ತು ಪೌರತ್ವ (ನಾಗರಿಕರ ನೋಂದಣಿ ಮತ್ತು ರಾಷ್ಟ್ರೀಯ ಗುರುತಿನ ಚೀಟಿಗಳ ವಿತರಣೆ) ನಿಯಮಗಳು, 2003 ರ ನಿಬಂಧನೆಗಳಿಗೆ ಅನುಗುಣವಾಗಿ ಸ್ಥಳೀಯ ಗ್ರಾಮ / ಉಪ ಪಟ್ಟಣ, ಉಪ-ಜಿಲ್ಲೆ, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಇದನ್ನು ಸಿದ್ಧಪಡಿಸಲಾಗುತ್ತಿದೆ.
 5. ಭಾರತದ ಪ್ರತಿಯೊಬ್ಬ ‘ಸಾಮಾನ್ಯ ನಿವಾಸಿ’ಗಳಿಗೆ ರಾಷ್ಟ್ರೀಯ ಜನಸಂಖ್ಯಾ ನೋಂದಣಿಯಲ್ಲಿ (NPR) ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

 

ಉದ್ದೇಶ:

ದೇಶದ ಪ್ರತಿಯೊಬ್ಬ ಸಾಮಾನ್ಯ ನಾಗರಿಕರ ವಿವರವಾದ ಗುರುತಿನ ದತ್ತಸಂಚಯವನ್ನು (comprehensive identity database) ರಚಿಸುವುದು.

 

 ‘ದೇಶದ ಸಾಮಾನ್ಯ ನಿವಾಸಿ’ ಯಾರು?

ಗೃಹ ಸಚಿವಾಲಯದ ಪ್ರಕಾರ, ‘ದೇಶದ ಸಾಮಾನ್ಯ ನಿವಾಸಿ’ ಯನ್ನು ಈ ಕೆಳಗಿನವರುಗಳೆಂದು ವ್ಯಾಖ್ಯಾನಿಸಲಾಗಿದೆ – ಕನಿಷ್ಠ ಆರು ತಿಂಗಳ ಕಾಲ ಸ್ಥಳೀಯ ಪ್ರದೇಶದಲ್ಲಿ ವಾಸವಾಗಿರುವ ವ್ಯಕ್ತಿ  ಅಥವಾ ಮುಂದಿನ ಆರು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಒಂದು ನಿರ್ದಿಷ್ಟ ಸ್ಥಳ ಅಥವಾ ಪ್ರದೇಶದಲ್ಲಿ ವಾಸಿಸಲು ಉದ್ದೇಶಿಸಿರುವ ವ್ಯಕ್ತಿಯನ್ನು ಈ ದೇಶದ ಸಾಮಾನ್ಯ ನಿವಾಸಿ ಎಂದು NPR ಉದ್ದೇಶಗಳಿಗಾಗಿ ವ್ಯಾಖ್ಯಾನಿಸಲಾಗಿದೆ.

 

ಭಾರತೀಯ ಪೌರತ್ವವನ್ನು ಪಡೆಯುವ ಮತ್ತು ನಿರ್ಧರಿಸುವ ಅಂಶಗಳು:

ಭಾರತದ ಪೌರತ್ವ ಅಥವಾ ನಾಗರಿಕತ್ವವನ್ನು ಪಡೆಯಲು 4 ವಿಧಾನಗಳನ್ನು ತಿಳಿಸಲಾಗಿದೆ, ಅವುಗಳು: ಭಾರತದಲ್ಲಿ ಜನನ, ಆನುವಂಶಿಕತೆ, ನೋಂದಣಿ, ನೈಸರ್ಗಿಕಿಕರಣ ಮತ್ತು ಭೂಪ್ರದೇಶವೊಂದನ್ನು ಭಾರತಕ್ಕೆ ಸೇರ್ಪಡೆ ಗೊಳಿಸುವುದರ ಆಧಾರದ ಮೇಲೆ ಪೌರತ್ವ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ನೋಂದಣಿ ಮೂಲಕ (By Registration):

ನೋಂದಣಿ ಮೂಲಕವೂ ಪೌರತ್ವವನ್ನು ಪಡೆಯಬಹುದು. ಕೆಲವು ಕಡ್ಡಾಯ ನಿಯಮಗಳು ಹೀಗಿವೆ:

 1. ನೋಂದಣಿಗೆ ಅರ್ಜಿ ಸಲ್ಲಿಸುವ ಮೊದಲು 7 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿರುವ ಭಾರತೀಯ ಮೂಲದ ವ್ಯಕ್ತಿಯು ನೋಂದಣಿ ಮೂಲಕವೂ ಪೌರತ್ವವನ್ನು ಪಡೆಯಬಹುದು.
 2. ಅವಿಭಜಿತ ಭಾರತದ ಹೊರಗಿನ ಯಾವುದೇ ದೇಶದ ನಿವಾಸಿಯಾಗಿರುವ ಭಾರತೀಯ ಮೂಲದ ವ್ಯಕ್ತಿ.
 3. ಭಾರತೀಯ ನಾಗರಿಕನನ್ನು ಮದುವೆಯಾಗಿ ನೋಂದಣಿಗೆ ಅರ್ಜಿ ಸಲ್ಲಿಸುವ ಮೊದಲು 7 ವರ್ಷಗಳ ಕಾಲ ಸಾಮಾನ್ಯವಾಗಿ ಭಾರತದಲ್ಲಿ ವಾಸಿಸುತ್ತಿರುವ ವ್ಯಕ್ತಿ.
 4. ಭಾರತದ ನಾಗರಿಕತ್ವವನ್ನು ಪಡೆದಿರುವ ವ್ಯಕ್ತಿಗಳ ಚಿಕ್ಕ ಮಕ್ಕಳು.

 

ನೈಸರ್ಗಿಕಿಕರಣದ ಮೂಲಕ (By Naturalisation):

ಒಬ್ಬ ವ್ಯಕ್ತಿಯು ಅವನು / ಅವಳು ಸಾಮಾನ್ಯವಾಗಿ 12 ವರ್ಷಗಳ ಕಾಲ (ಪೌರತ್ವಕ್ಕಾಗಿ ಅರ್ಜಿಯನ್ನು ಸಲ್ಲಿಸುವ ದಿನಾಂಕಕ್ಕಿಂತ ಮುಂಚಿನ 12 ತಿಂಗಳುಗಳು ಮತ್ತು ಒಟ್ಟು 11 ವರ್ಷಗಳು) ಭಾರತದ ನಿವಾಸಿಗಳಾಗಿದ್ದರೆ ಮತ್ತು ಪೌರತ್ವ ಕಾಯ್ದೆಯ ಮೂರನೇ ಅನುಸೂಚಿಯಲ್ಲಿನ ಎಲ್ಲಾ ಅರ್ಹತೆಗಳನ್ನು ಪೂರೈಸಿದರೆ ಸ್ವಾಭಾವಿಕೀಕರಣದ ಅಥವಾ ನೈಸರ್ಗಿಕರಣದ ಮೂಲಕ ಭಾರತದ ಪೌರತ್ವವನ್ನು ಪಡೆಯಬಹುದು.

 

ಪೌರತ್ವ (ತಿದ್ದುಪಡಿ) ಕಾಯ್ದೆ, 2019 (CAA):

ಪೌರತ್ವ (ತಿದ್ದುಪಡಿ) ಕಾಯ್ದೆ, 2019 (CAA) ಅನ್ನು ಡಿಸೆಂಬರ್ 12, 2019 ರಂದು ಅಧಿಸೂಚಿಸಲಾಯಿತು ಮತ್ತು 2020 ರ ಜನವರಿ 10 ರಿಂದ ಜಾರಿಗೆ ಬಂದಿತು.

 1. ಪೌರತ್ವ (ತಿದ್ದುಪಡಿ) ಕಾಯ್ದೆ, 2019 ರ ಪ್ರಕಾರ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನದಲ್ಲಿ ಕಿರುಕುಳಕ್ಕೊಳಗಾಗಿ ಅಲ್ಲಿಂದ ಬಂದ ಅಲ್ಪಸಂಖ್ಯಾತರಾದ – ಹಿಂದೂಗಳು, ಸಿಖ್ಖರು, ಜೈನರು, ಬೌದ್ಧರು, ಪಾರ್ಸಿಗಳು ಮತ್ತು ಕ್ರಿಶ್ಚಿಯನ್ನರಿಗೆ ಭಾರತೀಯ ಪೌರತ್ವ ನೀಡುವ ಉದ್ದೇಶವನ್ನು CAA ಹೊಂದಿದೆ.
 2.  ಈ ಸಮುದಾಯಗಳಲ್ಲಿ ಮೇಲ್ಕಾಣಿಸಿದ ದೇಶಗಳಲ್ಲಿ ಧಾರ್ಮಿಕತೆಯ ಆಧಾರದ ಮೇಲೆ ಕಿರುಕುಳ ಅನುಭವಿಸಿ 2014 ರ ಡಿಸೆಂಬರ್ 31ಕ್ಕಿಂತ ಮುಂಚಿತವಾಗಿ ಭಾರತವನ್ನು ಪ್ರವೇಶಿಸಿದ ವ್ಯಕ್ತಿಗಳನ್ನು ಅಕ್ರಮ ವಲಸಿಗರೆಂದು ಪರಿಗಣಿಸಲಾಗುವುದಿಲ್ಲ ಆದರೆ ಅವರಿಗೆ ಭಾರತೀಯ ಪೌರತ್ವ ನೀಡಲಾಗುವುದು.

 

ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ಶಿಕ್ಷಣ ಶ್ರೇಯಾಂಕ ಸೂಚ್ಯಂಕ:


(Education index ranking)

ಸಂದರ್ಭ:

ಶಿಕ್ಷಣ ಸಚಿವಾಲಯವು, 2019–20ನೇ ಸಾಲಿನ ಕಾರ್ಯಕ್ಷಮತೆ ಶ್ರೇಣಿಕೃತ ಸೂಚ್ಯಂಕ”(Performance Grading Index-PGI) ವರದಿಯನ್ನು ಬಿಡುಗಡೆ ಮಾಡಿದೆ.

 

ಕಾರ್ಯಕ್ಷಮತೆ ಶ್ರೇಣಿಕೃತ ಸೂಚ್ಯಂಕದ (PGI) ಕುರಿತು:

 1. ಕಾರ್ಯಕ್ಷಮತೆ ಶ್ರೇಣಿಕೃತ ಸೂಚ್ಯಂಕ(PGI)ವು, ಶಾಲಾ ಶಿಕ್ಷಣದ 70 ಸೂಚಕಗಳ ಕುರಿತು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಅವುಗಳ ಕಾರ್ಯಕ್ಷಮತೆಯ ಮೇಲೆ ಶ್ರೇಣೀಕರಿಸುವ ಸಾಧನವಾಗಿದೆ.
 2. 2017–18ನೇ ಶೈಕ್ಷಣಿಕ ವರ್ಷವನ್ನು ಆಧಾರವಾಗಿಟ್ಟುಕೊಂಡು, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ PGI ವರದಿಯನ್ನು 2019 ರಲ್ಲಿ ಮೊದಲ ಬಾರಿ ಬಿಡುಗಡೆ ಮಾಡಲಾಗಿತ್ತು.
 3. ಸೂಚಕಗಳನ್ನು 2 ವರ್ಗಗಳಾಗಿ ವಿಂಗಡಿಸಲಾಗಿದೆ – 4 ಡೊಮೇನ್‌ಗಳೊಂದಿಗೆ, ಫಲಿತಾಂಶಗಳು ಮತ್ತು ಆಡಳಿತ ಮತ್ತು ನಿರ್ವಹಣೆಯನ್ನು ಮೊದಲ ವರ್ಗದ ಅಡಿಯಲ್ಲಿ ಮತ್ತು 1 ಅಂಶವನ್ನು ಎರಡನೆಯ ವಿಭಾಗದ ಅಡಿಯಲ್ಲಿ ಸೇರಿಸಲಾಗಿದೆ.
 4. ಉದ್ದೇಶ: ಆನ್‌ಲೈನ್ ವೇದಿಕೆ ಮೂಲಕ ಶಿಕ್ಷಕರ ನೇಮಕಾತಿ ಮತ್ತು ವರ್ಗಾವಣೆ ಮಾಡುವುದು, ವಿದ್ಯಾರ್ಥಿಗಳು ಮತ್ತು ಶಿಕ್ಷಕರ ಹಾಜರಾತಿಯನ್ನು ಎಲೆಕ್ಟ್ರಾನಿಕ್ ವಿಧಾನದ ಮೂಲಕ ಪಡೆಯುವಂತಹ ಮುಂತಾದ ಉತ್ತಮ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಪ್ರೋತ್ಸಾಹಿಸುವುದು.
 5. ಮಹತ್ವ: ಗ್ರೇಡಿಂಗ್ ವ್ಯವಸ್ಥೆಯಿಂದಾಗಿ, ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಸೂಚ್ಯಂಕದ ಆಧಾರದ ಮೇಲೆ ಕೊರತೆಗಳನ್ನು ವಸ್ತುನಿಷ್ಠವಾಗಿ ಮತ್ತು ನಿಯಮಿತವಾಗಿ ಪರಿಶೀಲಿಸಿ ನಿವಾರಿಸಿಕೊಳ್ಳಬಹುದು. ಜತೆಗೆ ಯಾವ ವಲಯಕ್ಕೆ ಆದ್ಯತೆ ನೀಡಬೇಕು ಎನ್ನುವುದು ಸಹ ಅವುಗಳಿಗೆ ತಿಳಿಯಲಿದೆ’.

 

ಇತ್ತೀಚಿನ ಸಂಶೋಧನೆಗಳು:

 1. 2019-20 ರಲ್ಲಿ,ಶಾಲಾ ಶಿಕ್ಷಣದ ಗುಣಮಟ್ಟ ಗುರುತಿಸುವ ‘ಕಾರ್ಯಕ್ಷಮತೆ ಶ್ರೇಣಿಕೃತ ಸೂಚ್ಯಂಕ’ದಲ್ಲಿ (PGI) ಪಂಜಾಬ್‌, ತಮಿಳುನಾಡು, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು ಹಾಗೂ ಕೇರಳ ಎ++ ಶ್ರೇಯಾಂಕ ಪಡೆದಿವೆ.
 2. ದೆಹಲಿ, ಗುಜರಾತ್‌, ಹರಿಯಾಣ, ರಾಜಸ್ಥಾನ, ಪುದುಚೇರಿ, ದಾದ್ರಾ ಮತ್ತು ನಗರ ಹವೇಲಿ ಎ+ ವಿಭಾಗದಲ್ಲಿ ಸ್ಥಾನ ಪಡೆದಿವೆ.
 3. ಆಡಳಿತ ಮತ್ತು ನಿರ್ವಹಣೆಯಲ್ಲಿ ಪಂಜಾಬ್‌ ಗರಿಷ್ಠ ಅಂಕಗಳನ್ನು ಪಡೆದಿದೆ.
 4. ಮೂಲಸೌಕರ್ಯಗಳು ಮತ್ತು ಸೌಲಭ್ಯಗಳ ವಿಷಯದಲ್ಲಿ ಬಿಹಾರ ಮತ್ತು ಮೇಘಾಲಯ ಅತಿ ಕಡಿಮೆ ಅಂಕಗಳನ್ನು ಪಡೆದಿವೆ.
 5. ಕರ್ನಾಟಕದ ಶಿಕ್ಷಣ ಗುಣಮಟ್ಟ ಹಿಂದಿನ ವರ್ಷಗಳಿಗೆ ಹೋಲಿಸಿದಾಗ ಅಲ್ಪಮಟ್ಟಿಗೆ ಸುಧಾರಣೆ ಕಂಡಿದ್ದು, ‘ಎ’ ಸೂಚ್ಯಂಕ ಪಡೆದಿದೆ. ಅಂದರೆ, ಗ್ರೇಡ್‌ 1ರಲ್ಲಿ ಸ್ಥಾನ ಪಡೆದಿದೆ.
 6. 13 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಮೂಲಸೌಕರ್ಯಗಳು ಮತ್ತು ಇತರ ಸೌಲಭ್ಯಗಳನ್ನು ಕಲ್ಪಿಸುವಲ್ಲಿ ಶೇಕಡ 10ರಷ್ಟು ಸುಧಾರಣೆಯಾಗಿವೆ. ಅದರಲ್ಲೂ, ಅಂಡಮಾನ್‌ ಮತ್ತು ನಿಕೋಬಾರ್‌ ದ್ವೀಪಗಳು ಹಾಗೂ ಒಡಿಶಾ ಮೂಲಸೌಕರ್ಯಗಳನ್ನು ಕಲ್ಪಿಸುವಲ್ಲಿ ಮಹತ್ವದ ಸುಧಾರಣೆ ಕ್ರಮಗಳನ್ನು ಕೈಗೊಂಡಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
 7. 19 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಆಡಳಿತ ಪ್ರಕ್ರಿಯೆಯಲ್ಲಿ ಶೇಕಡ 10ರಷ್ಟು ಮಾತ್ರ ಸುಧಾರಣೆ ಕ್ರಮಗಳನ್ನು ಕೈಗೊಂಡಿವೆ ಎಂದು ತಿಳಿಸಿದೆ.
 8. ಶಿಕ್ಷಕರು, ಪ್ರಾಂಶುಪಾಲರು ಮತ್ತು ಆಡಳಿತ ಸಿಬ್ಬಂದಿ ಕೊರತೆ, ನಿಯಮಿತವಾಗಿ ಶಾಲೆಗಳ ತಪಾಸಣೆ ಮಾಡದಿರುವುದು, ಸಕಾಲಕ್ಕೆ ಹಣಕಾಸು ಲಭ್ಯವಾಗದಿರುವುದು ಸೇರಿದಂತೆ ಹಲವು ಸಮಸ್ಯೆಗಳಿಂದ ದೇಶದ ಶಿಕ್ಷಣ ವ್ಯವಸ್ಥೆಯ ಸುಧಾರಣೆಗೆ ಅಡ್ಡಿಯಾಗಿವೆ’ ಎಂದು ವರದಿಯಲ್ಲಿ ವಿಶ್ಲೇಷಿಸಲಾಗಿದೆ.
 9. ಈ ಹಿಂದಿನ ವರ್ಷಗಳಿಗೆ ಹೋಲಿಸಿದರೆ ಬಹುತೇಕ ರಾಜ್ಯಗಳು ಸೂಚ್ಯಂಕದಲ್ಲಿ ಸುಧಾರಣೆ ಕಂಡಿವೆ.

 

ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ಕೋವಾಕ್ಸಿನ್ ಗಿಂತ ಹೆಚ್ಚಿನ ಪ್ರತಿಕಾಯಗಳನ್ನು ಉತ್ಪಾದಿಸಿದ ಕೋವಿಶೀಲ್ಡ್ ಲಸಿಕೆ: ಒಂದು ಅಧ್ಯಯನ.


(More antibodies produced by Covishield than Covaxin: study)

ಸಂದರ್ಭ:

ಇತ್ತೀಚೆಗೆ, ಭಾರತದಲ್ಲಿ ಲಸಿಕಾಕರಣದ (ವ್ಯಾಕ್ಸಿನೇಷನ್‌ ) ನೈಜ ಪರಿಣಾಮಕಾರಿತ್ವವನ್ನು ಅಧ್ಯಯನ ಮಾಡಲು ಸಂಶೋಧನೆ ನಡೆಸಲಾಯಿತು. ಈ ಸಂಶೋಧನಾ ಅಧ್ಯಯನವನ್ನು ಆರೋಗ್ಯ ಕಾರ್ಯಕರ್ತರ ಮೇಲೆ (HCW) ನಡೆಸಲಾಯಿತು.

ಈ ಸಂಶೋಧನೆಯ ಸಮಯದಲ್ಲಿ, 2021 ರ ಜನವರಿಯಿಂದ ಮೇ ವರೆಗೆ 13 ರಾಜ್ಯಗಳ 22 ನಗರಗಳಲ್ಲಿನ 515 ಆರೋಗ್ಯ ಕಾರ್ಯಕರ್ತರನ್ನು ಮೌಲ್ಯಮಾಪನ ಮಾಡಲಾಗಿದೆ.

 

ಪ್ರಮುಖ ಆವಿಷ್ಕಾರಗಳು:

 1. ಕೋವಿಶೀಲ್ಡ್ ಲಸಿಕೆ ಕೋವಾಕ್ಸಿನ್ ಗಿಂತ ಹೆಚ್ಚು ಪ್ರತಿಕಾಯಗಳನ್ನು ಉತ್ಪಾದಿಸಿತು.
 2. ಮೊದಲ ಡೋಸ್ ನಂತರ,ಕೋವಿಶೀಲ್ಡ್ ಲಸಿಕೆ ಪಡೆದ ವ್ಯಕ್ತಿಗಳಲ್ಲಿ ಕೋವಾಕ್ಸಿನ್ ಪಡೆದವರಿಗಿಂತ ಆಂಟಿ-ಸ್ಪೈಕ್ ಪ್ರತಿಕಾಯಗಳಿಗೆ ಸಂಬಂಧಿಸಿದ ಸಿರೊಪೊಸಿಟಿವಿಟಿ (Seropositivity rates) ದರಗಳು ಗಮನಾರ್ಹವಾಗಿ ಹೆಚ್ಚಿವೆ.
 3. ಕೋವಿಶೀಲ್ಡ್ ತೆಗೆದುಕೊಳ್ಳುವ ವ್ಯಕ್ತಿಗಳು ಕೊವಾಕ್ಸಿನ್ ತೆಗೆದುಕೊಳ್ಳುವವರಿಗಿಂತ ಗಮನಾರ್ಹವಾಗಿ ಹೆಚ್ಚಿನ ಪ್ರತಿಕ್ರಿಯೆ ದರ ಮತ್ತು ಆಂಟಿ-ಸ್ಪೈಕ್ ಪ್ರತಿಕಾಯಗಳಲ್ಲಿ ಸರಾಸರಿ ವೃದ್ಧಿ ದರವನ್ನು ಹೊಂದಿದ್ದರು.

 

ಲಸಿಕೆ (Vaccine) ಎಂದರೇನು?

ಲಸಿಕೆಗಳು,ವ್ಯಕ್ತಿಯು ಸೋಂಕಿಗೆ ಒಳಗಾಗುವ ಮೊದಲೆ, ದೇಹವನ್ನು ‘ರೋಗಕಾರಕ ಏಜೆಂಟ್’ ಅಂದರೆ ರೋಗಾಣುಗಳ ವಿರುದ್ಧ ಹೋರಾಡಲು, ದೇಹದ ಪ್ರತಿರಕ್ಷಣಾ ವ್ಯವಸ್ಥೆಗೆ ತರಬೇತಿ ನೀಡುತ್ತವೆ. ಲಸಿಕೆಗಳು ಭವಿಷ್ಯದಲ್ಲಿ ರೋಗಕಾರಕಗಳ ವಿರುದ್ಧ ರಕ್ಷಿಸಿಕೊಳ್ಳಲು ದೇಹವನ್ನು ಸಿದ್ಧಪಡಿಸುತ್ತವೆ.

 

ಲಸಿಕೆ ಕಾರ್ಯವಿಧಾನ:

 1. ಲಸಿಕೆಗಳು ಆಂಟಿಜೆನ್ ಅಥವಾ ಪ್ರತಿಜನಕ ಎಂಬ ಘಟಕವನ್ನು ಹೊಂದಿರುತ್ತವೆ, ಇದು ಸಾಮಾನ್ಯವಾಗಿ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿರುವ ರೋಗಕಾರಕದ ಒಂದು ಅಂಶವಾಗಿದೆ.
 2. ಮಾನವ ದೇಹದಲ್ಲಿ ಒಮ್ಮೆ ಪರಿಚಯಿಸಲ್ಪಟ್ಟ ಪ್ರತಿಜನಕಗಳು ರೋಗವನ್ನು ಉಂಟುಮಾಡದೆ ರಕ್ಷಣಾತ್ಮಕ ಪ್ರತಿಕಾಯಗಳನ್ನು(antibodies) ಅಭಿವೃದ್ಧಿಪಡಿಸಲು ದೇಹದ ಪ್ರತಿರಕ್ಷಣಾ ವ್ಯವಸ್ಥೆಯನ್ನು ಸಕ್ರಿಯಗೊಳಿಸುತ್ತವೆ.
 3. ಹೀಗಾಗಿ, ಒಬ್ಬ ವ್ಯಕ್ತಿಯು ಸಂಪೂರ್ಣವಾಗಿ ಲಸಿಕೆ ಹಾಕಿದ ನಂತರ, ಅವನು ತನ್ನ ದೇಹದ ಪ್ರತಿಕಾಯಗಳನ್ನು ಅಭಿವೃದ್ಧಿಪಡಿಸುತ್ತಾನೆ ಮತ್ತು ರೋಗದಿಂದ ರಕ್ಷಿಸಲ್ಪಡುತ್ತಾನೆ.

 

ಕೋವಿಶಿeಲ್ಡ್ VS ಕೋವ್ಯಾಕ್ಸಿನ್:

ಕೋವಿಶಿeಲ್ಡ್:

ಕೋವಿಶೀಲ್ಡ್, ಲಸಿಕೆಯನ್ನು ಆಸ್ಟ್ರಾಜೆನೆಕಾ ಸಹಯೋಗದೊಂದಿಗೆ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯ ಅಭಿವೃದ್ಧಿಪಡಿಸಿದೆ.

ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಅದರ ಉತ್ಪಾದನೆ ಮತ್ತು ಪ್ರಯೋಗಗಳ ಪಾಲುದಾರನಾಗಿದೆ.

ಸಾಮಾನ್ಯ ಶೀತ ವೈರಸ್ ನ  ದುರ್ಬಲಗೊಂಡ ಆವೃತ್ತಿಯನ್ನು ಆಧರಿಸಿ ಇದು ಪುನರಾವರ್ತನೆಯ-ಕೊರತೆಯಿರುವ ಚಿಂಪಾಂಜಿ ವೈರಲ್ ವೆಕ್ಟರ್ ಅನ್ನು ಬಳಸುತ್ತದೆ.

ಈ ವೈರಸ್ ಚಿಂಪಾಂಜಿಗಳಲ್ಲಿ ಸೋಂಕನ್ನು ಉಂಟುಮಾಡುತ್ತದೆ ಮತ್ತು SARS-CoV-2 ವೈರಸ್ ನ ಸ್ಪೈಕ್ ಪ್ರೋಟೀನ್‌ನ ಆನುವಂಶಿಕ ಅಂಶಗಳನ್ನು ಹೊಂದಿರುತ್ತದೆ.

 

ಕೋವಾಕ್ಸಿನ್:

ಕೋವಾಕ್ಸಿನ್, ಅನ್ನು ಭಾರತ್ ಬಯೋಟೆಕ್  ಸಂಸ್ಥೆ ಅಭಿವೃದ್ಧಿಪಡಿಸಿದೆ ಮತ್ತು ಇದು ಕೋವಿಡ್ -19 ವಿರುದ್ಧ ಭಾರತದ ಮೊದಲ ಸ್ಥಳೀಯ ಲಸಿಕೆಯಾಗಿದೆ.

ಭಾರತ್ ಬಯೋಟೆಕ್ ಈ ಲಸಿಕೆಯನ್ನು ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್ ಮತ್ತು  ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಯ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಿದೆ.

ಇದು ನಿಷ್ಕ್ರಿಯಗೊಳಿಸಿದ ಲಸಿಕೆಯಾಗಿದ್ದು, ರೋಗವನ್ನು ಉಂಟುಮಾಡುವ ಸಜೀವ ಸೂಕ್ಷ್ಮಾಣುಜೀವಿಗಳನ್ನು ನಿಷ್ಕ್ರಿಯಗೊಳಿಸುವ ಮೂಲಕ (ಕೊಲ್ಲುವ) ಅಭಿವೃದ್ಧಿ ಪಡಿಸಲಾಗುತ್ತದೆ.

ಇದು ರೋಗಕಾರಕದ ಪುನರಾವರ್ತನೆಯ ಸಾಮರ್ಥ್ಯವನ್ನು ನಾಶಪಡಿಸುತ್ತದೆ ಆದರೆ  ರೋಗನಿರೋಧಕ ವ್ಯವಸ್ಥೆಯು ಅದನ್ನು ಇನ್ನೂ ಗುರುತಿಸಲು ಸಾಧ್ಯವಾಗುವಂತೆ ಅದನ್ನು ಹಾಗೇ ಇಡುವ ಮೂಲಕ ಪ್ರತಿರಕ್ಷಣಾ ವ್ಯವಸ್ಥೆಯನ್ನು ರೂಪಿಸುತ್ತದೆ.

 

ವೈರಲ್-ವೆಕ್ಟರ್ಡ್ (Viral-Vectored Vaccines) ಲಸಿಕೆಗಳು ಯಾವುವು?

ಸಾಂಕ್ರಾಮಿಕ ರೋಗ ಜೀವಶಾಸ್ತ್ರದಲ್ಲಿ, ವೆಕ್ಟರ್ (vector) ರೋಗಕಾರಕ ರೋಗಾಣುಗಳ ಸಾಗಣೆಗೆ ವಾಹನವಾಗಿ ಕಾರ್ಯನಿರ್ವಹಿಸುತ್ತದೆ. ಉದಾಹರಣೆಗೆ, ಸೊಳ್ಳೆಗಳು ಮಲೇರಿಯಾವನ್ನು ಹರಡುವ ಪ್ಲಾಸ್ಮೋಡಿಯಂ (Plasmodium) ಎಂಬ ಪರಾವಲಂಬಿಯ ವಾಹಕಗಳಾಗಿವೆ.

ವೈರಲ್-ವೆಕ್ಟರ್ಡ್ ಲಸಿಕೆಗಳಲ್ಲಿ, ವೈರಸ್ ಅನ್ನು ಮಾನವ ಜೀವಕೋಶಗಳಲ್ಲಿ ಗುರಿ ಪ್ರತಿಜನಕ ಜೀನ್ ಅನ್ನು ಪರಿಚಯಿಸಲು ವಾಹಕವಾಗಿ ಬಳಸಲಾಗುತ್ತದೆ.

 1. ಹೀಗಾಗಿ, ವಿಭಿನ್ನ ಪ್ರಯೋಜನಗಳನ್ನು ಹೊಂದಿರುವ ಅನೇಕ ವೈರಲ್ ವಾಹಕಗಳು ಇವೆ. ಇವುಗಳಲ್ಲಿ, ಅಡೆನೊವೈರಸ್ ವಾಹಕ(Adenovirus Vectors)ಗಳನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ, ಆದರೂ ಅವು ಮಾನವರಲ್ಲಿ ತುಂಬಾ ಸೌಮ್ಯವಾದ ಶೀತ ಅಥವಾ ಲಕ್ಷಣರಹಿತ ಸೋಂಕಿನ (asymptomatic infections) ಲಕ್ಷಣಗಳನ್ನು ಉಂಟುಮಾಡಬಹುದು.
 2. ಕೋವಿಶಿeಲ್ಡ್ ‘ಚಿಂಪಾಂಜಿ ಅಡೆನೊವೈರಸ್’ (AZD1222 ಅಥವಾ ChAdOx1) ಅನ್ನು ಮಾನವ ಜೀವಕೋಶಗಳಲ್ಲಿ SARS-CoV-2 ಸ್ಪೈಕ್ ಪ್ರೋಟೀನ್ ಅನ್ನು ಪರಿಚಯಿಸಲು ಬಳಸಲಾಗುತ್ತದೆ.
 3. ಈ ಅಡೆನೊವೈರಸ್ ವಿರುದ್ಧ ಮಾನವರು ಈಗಾಗಲೇ ಪ್ರತಿಕಾಯಗಳನ್ನು ಹೊಂದಿರದ ಕಾರಣ ಚಿಂಪಾಂಜಿ ಅಡೆನೊವೈರಸ್ (chimpanzee adenovirus) ಅನ್ನು ಬಳಸಲಾಗುತ್ತದೆ.

 

ನಿಷ್ಕ್ರಿಯಗಳಿಸಿದ(Inactivated)ಅಥವಾ ಕೊಲ್ಲಲ್ಪಟ್ಟ (Killed) ಲಸಿಕೆಗಳು ಯಾವುವು?

 ತಮ್ಮದೇ ಆದ ಪ್ರತಿಗಳನ್ನು ಮಾಡಲು ಸಾಧ್ಯವಾಗದ ರೋಗಕಾರಕಗಳು (ವೈರಸ್‌ಗಳು ಅಥವಾ ಬ್ಯಾಕ್ಟೀರಿಯಾಗಳು) ರೋಗವನ್ನು ಉಂಟುಮಾಡುವುದಿಲ್ಲ. ಆದ್ದರಿಂದ, ಫಾರ್ಮಾಲಿನ್ ನಂತಹ ರಾಸಾಯನಿಕಗಳನ್ನು ಬಳಸುವ ಮೂಲಕ ವೈರಸ್ ಅಥವಾ ಬ್ಯಾಕ್ಟೀರಿಯಾಗಳನ್ನು ನಿಷ್ಕ್ರಿಯಗೊಳಿಸಬಹುದು ಮತ್ತು ಅವುಗಳನ್ನುಸುರಕ್ಷಿತ ಇಮ್ಯುನೊಜೆನ್ (Immunogen)  ಗಳಾಗಿ ಪರಿವರ್ತಿಸಬಹುದು.

 1. ನಿಷ್ಕ್ರಿಯಗೊಂಡ ವೈರಸ್‌ಗಳು ಅಥವಾ ಬ್ಯಾಕ್ಟೀರಿಯಾಗಳು ತಮ್ಮದೇ ಆದ ಪುನರಾವರ್ತಿತ ಪ್ರತಿಗಳನ್ನು ಸಾಧ್ಯವಿಲ್ಲದ ಕಾರಣ, ನಮಗೆ ಈ ಲಸಿಕೆಗಳ ಅನೇಕ ಪ್ರಮಾಣಗಳು ಬೇಕಾಗಬಹುದು, ಮತ್ತು ಪ್ರತಿರಕ್ಷಣಾ ಪ್ರತಿಕ್ರಿಯೆಯನ್ನು ಸುಧಾರಿಸಲು ಮತ್ತೊಂದು ವಸ್ತುವನ್ನು ಬಯಸಬಹುದು – ಇದನ್ನು ‘ಸಹಾಯಕ’ (Adjuvant) ಎಂದು ಕರೆಯಲಾಗುತ್ತದೆ.
 2. ‘ಆಲಮ್’ (alum) ಅನ್ನು ಸಾಮಾನ್ಯವಾಗಿ ‘ಸಹಾಯಕ’(Adjuvant) ವಸ್ತುವಾಗಿ ಬಳಸಲಾಗುತ್ತದೆ, ಜೊತೆಗೆ, ಶಾರ್ಕ್ ಲಿವರ್ ಎಣ್ಣೆ, ಮತ್ತು ಇತರ ಕೆಲವು ವಸ್ತುಗಳನ್ನು ‘ಸಹಾಯಕ’ ದ ರೂಪದಲ್ಲಿ ಬಳಸಲಾಗುತ್ತದೆ.
 3. ಭಾರತದ ಕೋವಾಕ್ಸಿನ್ ಮತ್ತು ಅನೇಕ ಚೀನೀ ಲಸಿಕೆಗಳನ್ನು ‘ನಿಷ್ಕ್ರಿಯ ಪ್ಲಾಟ್ಫಾರ್ಮ್’ (inactivated platform) ಗಳಲ್ಲಿ ಅಭಿವೃದ್ಧಿಪಡಿಸಲಾಗಿದೆ.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಆದೇಶ.

ಸಿರಿಯಾ 17 ಬಾರಿ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸಿದೆ: ರಾಸಾಯನಿಕ ಶಸ್ತ್ರಾಸ್ತ್ರಗಳ ನಿಷೇಧ ಸಂಸ್ಥೆ:


(Syria has likely used chemical weapons 17 times: OPCW)

 

ಸಂದರ್ಭ:

ರಾಸಾಯನಿಕ ಶಸ್ತ್ರಾಸ್ತ್ರಗಳ ನಿಷೇಧದ ಸಂಘಟನೆಯ (Organisation for the Prohibition of Chemical Weapons) ಮುಖ್ಯಸ್ಥ ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಸಲ್ಲಿಸಿದ ವರದಿಯಲ್ಲಿ  ತನ್ನ ತಜ್ಞರು ಸಿರಿಯಾ ವಿರುದ್ಧದ 77 ಆರೋಪಗಳ ಬಗ್ಗೆ ತನಿಖೆ ನಡೆಸಿದ್ದಾರೆ ಅದರಲ್ಲಿ 17 ಪ್ರಕರಣಗಳಲ್ಲಿ ಸಿರಿಯಾ ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ಬಳಸಿರಬಹುದು ಅಥವಾ ಖಂಡಿತವಾಗಿ ಬಳಸಿದೆ ಎಂದು ತೀರ್ಮಾನಿಸಿದ್ದಾರೆ ಎಂದು ಹೇಳಿದ್ದಾರೆ.

 

ಹಿನ್ನೆಲೆ:

ಮಾರಣಾಂತಿಕ ರಾಸಾಯನಿಕ ಶಸ್ತ್ರಾಸ್ತ್ರಗಳ ದಾಳಿಯ ಕುರಿತು ಡಮಾಸ್ಕಸ್ ಮೇಲೆ ಪಶ್ಚಿಮದ ದೇಶಗಳು ದೋಷಾರೋಪಣೆ ಮಾಡಿದ ನಂತರ 2013 ರ ಸೆಪ್ಟೆಂಬರ್ ನಲ್ಲಿ ಸಿರಿಯಾವನ್ನು ಅದರ ನಿಕಟ ಮಿತ್ರ ದೇಶವಾದ ರಷ್ಯಾ, ರಾಸಾಯನಿಕ ಶಸ್ತ್ರಾಸ್ತ್ರಗಳ ಸಮಾವೇಶಕ್ಕೆ (Chemical Weapons Convention) ಸೇರುವಂತೆ ಒತ್ತಾಯಿಸಿತು.

 

OPCW ಕುರಿತು:

 1. ಇದು,‘ಪರಮಾಣು ಪ್ರಸರಣ ನಿಷೇಧ ಒಪ್ಪಂದ’ (Non-Proliferation Treaty- NPT) ದ ನಿಯಮಗಳನ್ನು ಜಾರಿಗೆ ತರಲು ಮತ್ತು ಕಾರ್ಯಗತಗೊಳಿಸಲು 1997ರ ‘ರಾಸಾಯನಿಕ ಶಸ್ತ್ರಾಸ್ತ್ರಗಳ ಸಮಾವೇಶದ’ ಅಡಿಯಲ್ಲಿ (Chemical Weapons Convention- CWC) ಸ್ಥಾಪಿಸಿದ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ.
 2. ‘ಪರಮಾಣು ಪ್ರಸರಣ ನಿಷೇಧ ಒಪ್ಪಂದ’ ದ(NPT) ಅಡಿಯಲ್ಲಿ, ಒಪ್ಪಂದಕ್ಕೆ ಸಹಿ ಹಾಕುವ ದೇಶಗಳಿಗೆ ರಾಸಾಯನಿಕ ಶಸ್ತ್ರಾಸ್ತ್ರಗಳ ಬಳಕೆ, ಸಂಗ್ರಹಣೆ ಅಥವಾ ವರ್ಗಾವಣೆಯನ್ನು ನಿಷೇಧಿಸಲಾಗಿದೆ.
 3.  OPCW ಮತ್ತು ವಿಶ್ವಸಂಸ್ಥೆಯ ನಡುವಿನ 2001 ರ ಸಂಬಂಧಗಳ ಒಪ್ಪಂದದಡಿಯಲ್ಲಿ, OPCW ತನ್ನ ಮೇಲ್ವಿಚಾರಣೆ/ತಪಾಸಣೆ ಮತ್ತು ಇತರ ಕ್ರಮಗಳ ಬಗ್ಗೆ ವಿಶ್ವಸಂಸ್ಥೆಗೆ ವರದಿಯನ್ನು ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿಗಳ ಕಚೇರಿಯ ಮೂಲಕ ಮಾಡುತ್ತದೆ.
 4. ರಾಸಾಯನಿಕ ಶಸ್ತ್ರಾಸ್ತ್ರಗಳನ್ನು ನಿರ್ಮೂಲನೆ ಮಾಡುವ ವ್ಯಾಪಕ ಪ್ರಯತ್ನಗಳಿಗಾಗಿ ಈ ಸಂಸ್ಥೆಗೆ 2013 ರ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಯಿತು.

 

ಅಧಿಕಾರಗಳು:

 ಈ NPT ಒಪ್ಪಂದಕ್ಕೆ ಸಹಿ ಹಾಕಿದ ದೇಶಗಳು ‘ಒಪ್ಪಂದ’ದ ಅನುಸರಣೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿವೆಯೇ ಎಂದು ಪರಿಶೀಲಿಸಲು ಮತ್ತು ತಪಾಸಣೆ ನಡೆಸಲು OPCW ಗೆ ಅಧಿಕಾರವಿದೆ.

 

ಕಾರ್ಯಕಾರಿ ಮಂಡಳಿಯ ಕುರಿತು:

ಇದು ‘ರಾಸಾಯನಿಕ ಶಸ್ತ್ರಾಸ್ತ್ರಗಳ ನಿಷೇಧದ ಸಂಸ್ಥೆ’ (OPCW) ನ ಆಡಳಿತ ಮಂಡಳಿ (governing body) ಯಾಗಿದೆ.

 1. ಈ ‘ಕಾರ್ಯಕಾರಿ ಮಂಡಳಿಯು’ 41 OPCW ಸದಸ್ಯ ರಾಷ್ಟ್ರಗಳನ್ನು ಒಳಗೊಂಡಿದೆ, ಅವುಗಳನ್ನು ಸದಸ್ಯ ರಾಷ್ಟ್ರಗಳ ಸಮ್ಮೇಳನದಲ್ಲಿ ಮಾತುಕತೆಯ ಮೂಲಕ ಆಯ್ಕೆ ಮಾಡಲಾಗುತ್ತದೆ ಮತ್ತು ಪ್ರತಿ ಎರಡು ವರ್ಷಗಳಿಗೊಮ್ಮೆ ಈ ಪ್ರಕ್ರಿಯೆಯು ಪುನರಾವರ್ತನೆಗೊಳ್ಳುತ್ತದೆ.
 2. ಈ ಮಂಡಳಿಯು, ತಾಂತ್ರಿಕ ಸಚಿವಾಲಯದ ಕಾರ್ಯಕ್ರಮಗಳನ್ನು ನೋಡಿಕೊಳ್ಳುತ್ತದೆ ಮತ್ತು ಸಮಾವೇಶದ ಪರಿಣಾಮಕಾರಿ ಅನುಷ್ಠಾನ ಮತ್ತು ಅನುಸರಣೆಯನ್ನು ಉತ್ತೇಜಿಸುವ ಜವಾಬ್ದಾರಿಯನ್ನು ಹೊಂದಿದೆ.
 3. ಕಾರ್ಯನಿರ್ವಾಹಕ ಮಂಡಳಿಗೆ ಅನುಕ್ರಮದ ಆಧಾರದ ಮೇಲೆ ಆಯ್ಕೆಯಾಗುವ ಮೂಲಕ ಸೇವೆ ಸಲ್ಲಿಸುವ ಹಕ್ಕು ಪ್ರತಿ ಸದಸ್ಯ ರಾಷ್ಟ್ರಕ್ಕೂ ಇದೆ.

 

ರಾಸಾಯನಿಕ ಶಸ್ತ್ರಾಸ್ತ್ರಗಳ ಸಮಾವೇಶದಿಂದ ಈ ಕೆಳಗಿನ ಕೃತ್ಯಗಳನ್ನು ನಿಷೇಧಿಸಲಾಗಿದೆ:

 1. ರಾಸಾಯನಿಕ ಶಸ್ತ್ರಾಸ್ತ್ರಗಳ ಅಭಿವೃದ್ಧಿ, ಉತ್ಪಾದನೆ, ಸ್ವಾಧೀನ, ಸಂಗ್ರಹಣೆ ಅಥವಾ ಉಳಿಸಿಕೊಳ್ಳುವುದು.
 2. ರಾಸಾಯನಿಕ ಶಸ್ತ್ರಾಸ್ತ್ರಗಳ ನೇರ ಅಥವಾ ಪರೋಕ್ಷ ವರ್ಗಾವಣೆ.
 3. ರಾಸಾಯನಿಕ ಶಸ್ತ್ರಾಸ್ತ್ರಗಳ ಬಳಕೆ ಅಥವಾ ಬಳಕೆಗೆ ಮಿಲಿಟರಿ ಸಿದ್ಧತೆ.
 4. CWC-ನಿಷೇಧಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಇತರ ದೇಶಗಳಿಗೆ ಸಹಾಯ ಮಾಡಲು, ಪ್ರೋತ್ಸಾಹಿಸಲು ಅಥವಾ ಪ್ರೇರೇಪಿಸಲು ಕಾರ್ಯ ನಿರ್ವಹಿಸುವುದು.
 5. ‘ಗಲಭೆ ನಿಯಂತ್ರಣ ಏಜೆಂಟ್‌ಗಳನ್ನು’ ಯುದ್ಧದ ವಿಧಾನವಾಗಿ ಬಳಸುವುದು.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ವಿಶ್ವಸಂಸ್ಥೆಯ CEO ವಾಟರ್ ಮ್ಯಾಂಡೇಟ್ ಅನ್ನು ಸೇರಿದ ರಾಷ್ಟ್ರೀಯ ಉಷ್ಣ ವಿದ್ಯುಚ್ಛಕ್ತಿ ನಿಗಮ (NTPC):


(NTPC joins UN’s CEO Water mandate)

 

ಸಂದರ್ಭ:

ಭಾರತದ ಅತಿದೊಡ್ಡ ವಿದ್ಯುತ್ ಉತ್ಪಾದನಾ ಕಂಪನಿಯಾದ NTPC ಲಿಮಿಟೆಡ್ ಪ್ರತಿಷ್ಠಿತ ‘ವಿಶ್ವಸಂಸ್ಥೆಯ ಗ್ಲೋಬಲ್ ಕಾಂಪ್ಯಾಕ್ಟ್’ ನ CEO ವಾಟರ್ ಮ್ಯಾಂಡೇಟ್‌ (UN Global Compact’s CEO Water Mandate) ಗೆ ಸಹಿ ಹಾಕಿದೆ.

 

ಏನಿದು ಸಿಇಒ ವಾಟರ್ ಮ್ಯಾಂಡೇಟ್?

 1.  ಸಿಇಒ ವಾಟರ್ ಮ್ಯಾಂಡೇಟ್ ವಿಶ್ವಸಂಸ್ಥೆಯ ಗ್ಲೋಬಲ್ ಕಾಂಪ್ಯಾಕ್ಟ್ (UN Global Compact) ಉಪಕ್ರಮವಾಗಿದ್ದು, ನೀರು, ನೈರ್ಮಲ್ಯ ಮತ್ತು ಸುಸ್ಥಿರ ಅಭಿವೃದ್ಧಿ ಗುರುಗಳಿಗೆ ಅನುಗುಣವಾಗಿ ನೀರು ಮತ್ತು ನೈರ್ಮಲ್ಯ ಕಾರ್ಯಸೂಚಿಯನ್ನು ಸುಧಾರಿಸಲು ಕಂಪನಿಗಳ ಬದ್ಧತೆ ಮತ್ತು ಪ್ರಯತ್ನಗಳನ್ನು ಇದು ಪ್ರದರ್ಶಿಸುತ್ತದೆ.
 2. ಸಿಇಒ ವಾಟರ್ ಮ್ಯಾಂಡೇಟ್ ಅನ್ನು ಸಮಗ್ರ ನೀರಿನ ತಂತ್ರಗಳು ಮತ್ತು ನೀತಿಗಳ ಅಭಿವೃದ್ಧಿ, ಅನುಷ್ಠಾನ ಮತ್ತು ಬಹಿರಂಗಪಡಿಸುವಿಕೆಯಲ್ಲಿ ಕಂಪನಿಗಳಿಗೆ ಸಹಾಯ ಮಾಡಲು ವಿನ್ಯಾಸಗೊಳಿಸಲಾಗಿದೆ.
 3.  ಇದು, ಕಂಪೆನಿಗಳಿಗೆ ಸಮಾನ ಮನಸ್ಕ ವ್ಯವಹಾರಗಳು, ವಿಶ್ವಸಂಸ್ಥೆಯ ಏಜೆನ್ಸಿಗಳು, ಸಾರ್ವಜನಿಕ ಅಧಿಕಾರಿಗಳು, ನಾಗರಿಕ ಸಮಾಜ ಸಂಸ್ಥೆಗಳು ಮತ್ತು ಇತರ ಪ್ರಮುಖ ಪಾಲುದಾರರೊಂದಿಗೆ ಸಂಪರ್ಕ ಹೊಂದಲು ಒಂದು ವೇದಿಕೆಯನ್ನು ಒದಗಿಸುತ್ತದೆ.

 

ಯುನೈಟೆಡ್ ನೇಷನ್ಸ್ ಗ್ಲೋಬಲ್ ಕಾಂಪ್ಯಾಕ್ಟ್ ಇನಿಶಿಯೇಟಿವ್’ ಎಂದರೇನು?

(Why is UN Global Compact initiative?)

 1.  ಇದು ವಿಶ್ವದಾದ್ಯಂತದ ವ್ಯವಹಾರಗಳು ಮತ್ತು ಸಂಸ್ಥೆಗಳನ್ನು ಸುಸ್ಥಿರ ಮತ್ತು ಸಾಮಾಜಿಕವಾಗಿ ಜವಾಬ್ದಾರಿಯುತ ನೀತಿಗಳನ್ನು ಅಳವಡಿಸಿಕೊಳ್ಳಲು ಮತ್ತು ಅವುಗಳ ಅನುಷ್ಠಾನದ ಬಗ್ಗೆ ವರದಿ ಮಾಡಲು ಪ್ರೋತ್ಸಾಹಿಸಲು ಇರುವ ಯಾವುದೇ ಬಂಧನ ಕಾರಿಯಲ್ಲದ ಅಥವಾ ಯಾವುದೇ ಬಾಧ್ಯತೆಯನ್ನು ಹೊಂದಿರದ (non-binding) ವಿಶ್ವಸಂಸ್ಥೆಯ ಒಪ್ಪಂದವಾಗಿದೆ.
 2. ಇದನ್ನು 2000 ನೇ ಇಸವಿಯಲ್ಲಿ ಪ್ರಾರಂಭಿಸಲಾಯಿತು.
 3. ಇದು ವ್ಯವಹಾರಗಳಿಗೆ ತತ್ವ ಆಧಾರಿತ ಚೌಕಟ್ಟಾಗಿದ್ದು (principle-based framework), ಮಾನವ ಹಕ್ಕುಗಳು, ಕಾರ್ಮಿಕ, ಪರಿಸರ ಮತ್ತು ಭ್ರಷ್ಟಾಚಾರ-ವಿರೋಧಿ ಕ್ಷೇತ್ರಗಳಲ್ಲಿ ಹತ್ತು ತತ್ವಗಳನ್ನು ರೂಪಿಸುತ್ತದೆ.
 4. ಗ್ಲೋಬಲ್ ಕಾಂಪ್ಯಾಕ್ಟ್ ಅಡಿಯಲ್ಲಿ, ಕಂಪನಿಗಳನ್ನು ವಿಶ್ವಸಂಸ್ಥೆಯ ಏಜೆನ್ಸಿಗಳು, ಕಾರ್ಮಿಕ ಗುಂಪುಗಳು ಮತ್ತು ನಾಗರಿಕ ಸಮಾಜದೊಂದಿಗೆ ಒಟ್ಟುಗೂಡಿ ಸಲಾಗುತ್ತದೆ.
 5. ದಿ ಸಿಟೀಸ್ ಪ್ರೋಗ್ರಾಂ’ (the Cities Programme) ಮೂಲಕ ವಿಶ್ವದ ನಗರಗಳು ‘ಗ್ಲೋಬಲ್ ಕಾಂಪ್ಯಾಕ್ಟ್’ ಗೆ ಸೇರಬಹುದು.

 

NTPC ಯ ವಿಜನ್:

 1. NTPC ಈಗಾಗಲೇ ತನ್ನ ವಿದ್ಯುತ್ ಉತ್ಪಾದನಾ ಸ್ಥಳಗಳಲ್ಲಿ ಸರಿಯಾದ ನೀರಿನ ನಿರ್ವಹಣೆ ಕುರಿತು ಹಲವಾರು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ.
 2. NTPC, ವಿದ್ಯುತ್ ಉತ್ಪಾದನೆಯ ಪ್ರಮುಖ ವ್ಯವಹಾರ ಚಟುವಟಿಕೆಯನ್ನು ನಿರ್ವಹಿಸುವಾಗ, ನೀರಿನ ಸಂರಕ್ಷಣೆ ಮತ್ತು ನಿರ್ವಹಣೆಗೆ 3 ಆರ್ (ಕಡಿಮೆಬಳಕೆ, ಮರುಬಳಕೆ, ಪುನರ್ಬಳಕೆ– reduce, reuse, recycle) ಗೆ ಹೆಚ್ಚಿನ ಒತ್ತು ನೀಡುತ್ತದೆ.

 

ಭಾರತದಲ್ಲಿ ನೀರಿನ ಬಿಕ್ಕಟ್ಟಿನ ಸಮಸ್ಯೆ ಎಷ್ಟರ ಮಟ್ಟಿಗೆ ಇದೆ?

 1. ಕಾಂಪೋಸಿಟ್ ವಾಟರ್ ಮ್ಯಾನೇಜ್‌ಮೆಂಟ್ ಇಂಡೆಕ್ಸ್ (2018)’ ಕುರಿತ ನೀತಿ ಆಯೋಗದ ವರದಿಯ ಪ್ರಕಾರ, 600 ದಶಲಕ್ಷಕ್ಕೂ ಹೆಚ್ಚು ಭಾರತೀಯರು ತೀವ್ರ ನೀರಿನ ಒತ್ತಡವನ್ನು ಎದುರಿಸುತ್ತಿದ್ದಾರೆ.
 2. ವಿಶ್ವಬ್ಯಾಂಕ್ ವರದಿಯ ಪ್ರಕಾರ, 2030 ರ ವೇಳೆಗೆ ತಲಾ ನೀರಿನ ಲಭ್ಯತೆಯು ವರ್ಷಕ್ಕೆ 1,588 ಘನ ಮೀಟರ್‌ಗಿಂತ ಅರ್ಧಕ್ಕಿಂತ ಕಡಿಮೆಯಾಗುತ್ತದೆ. ಇದು ಭಾರತದ ಹೆಚ್ಚಿನ ಸಂಖ್ಯೆಯ ಜನರಿಗೆ ಊಸಹಿಸಲಸಾಧ್ಯ ಅನಾಹುತದ ಸೃಷ್ಟಿಗೆ ಕಾರಣವಾಗುತ್ತದೆ.

ವಿಶ್ವದ ಒಟ್ಟು ಲಭ್ಯವಿರುವ ಸಿಹಿ ನೀರಿನಲ್ಲಿ ಭಾರತವು 4% ರಷ್ಟು ಪಾಲನ್ನು ಹೊಂದಿದ್ದು, ಇದು ವಿಶ್ವದ 17% ರಷ್ಟು ಜನಸಂಖ್ಯೆಯ ಅಗತ್ಯಗಳನ್ನು ಪೂರೈಸುತ್ತದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 4


 

ವಿಷಯ: ನಾಗರಿಕರ ಚಾರ್ಟರ್, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಮತ್ತು ಸಾಂಸ್ಥಿಕ ಮತ್ತು ಇತರ ಕ್ರಮಗಳು.

ಪಂಚಾಯಿತಿಗಳಿಗೆ ಮಾದರಿ ನಾಗರಿಕ ಚಾರ್ಟರ್:


(A Model Panchayat Citizens Charter)

 

ಸಂದರ್ಭ:

ಇತ್ತೀಚೆಗೆ, ಸುಸ್ಥಿರ ಅಭಿವೃದ್ಧಿ ಗುರಿಗಳೊಂದಿಗೆ (SDGs) ಸ್ಥಳೀಕರಿಸಿದ ಕ್ರಿಯೆಗಳನ್ನು ಜೋಡಿಸಲು 29 ಪ್ರದೇಶಗಳಲ್ಲಿ ಸೇವೆಗಳನ್ನು ತಲುಪಿಸಲು ಮಾದರಿ ಪಂಚಾಯತ್ ನಾಗರಿಕರ ಚಾರ್ಟರ್ (A Model Panchayat Citizens Charter) ಚೌಕಟ್ಟನ್ನು / ರೂಪುರೇಖೆಯನ್ನು  ಜಾರಿಗೊಳಿಸಲಾಗಿದೆ.

 1. ಇದನ್ನು ಪಂಚಾಯತಿ ರಾಜ್ (MoPR) ಸಚಿವಾಲಯವು ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತಿ ರಾಜ್ ಸಂಸ್ಥೆಯ (National Institute of Rural Development & Panchayati Raj- NIRDPR) ಸಹಯೋಗದೊಂದಿಗೆ ಸಿದ್ಧಪಡಿಸಿದೆ.

 

ಮಹತ್ವ:

ಈ ನಾಗರಿಕರ ಘೋಷಣೆಯು ಸೇವೆಗಳನ್ನು ವಿನ್ಯಾಸಗೊಳಿಸುವಾಗ ಮತ್ತು ತಲುಪಿಸುವಾಗ ಸುಸ್ಥಿರ ಅಭಿವೃದ್ಧಿಗಾಗಿ ಸಾರ್ವಜನಿಕ ಸೇವೆಗಳ ಪಾರದರ್ಶಕ ಮತ್ತು ಪರಿಣಾಮಕಾರಿ ವಿತರಣೆಯನ್ನು ಖಚಿತಪಡಿಸುತ್ತದೆ ಮತ್ತು ವೈವಿಧ್ಯಮಯ ದೃಷ್ಟಿಕೋನಗಳನ್ನು ಸೇರಿಸುವ ಮೂಲಕ ಜವಾಬ್ದಾರಿಯುತ ಸ್ಥಳೀಯ ಸರ್ಕಾರಗಳ ಒಳಗೊಳ್ಳುವಿಕೆ ಮತ್ತು ಹೊಣೆಗಾರಿಕೆಯನ್ನು ಹೆಚ್ಚಿಸುತ್ತದೆ.

 

ಅಗತ್ಯತೆ:

ಗ್ರಾಮೀಣ ಪ್ರದೇಶಗಳಲ್ಲಿ ಪಂಚಾಯಿತಿಗಳು ಮೂರನೇ ಹಂತದ ಸರ್ಕಾರ ವಾಗಿದ್ದರೆ ಮತ್ತು ಭಾರತೀಯ ಜನಸಂಖ್ಯೆಯ ಶೇಕಡಾ 60 ಕ್ಕಿಂತ ಹೆಚ್ಚು ಜನರಿಗೆ ಮೊದಲ ಹಂತದ ಸರ್ಕಾರದೊಂದಿಗೆ ಸಂಪರ್ಕವನ್ನು ಏರ್ಪಡಿಸುತ್ತವೆ.

ಭಾರತ ಸಂವಿಧಾನದ ಆರ್ಟಿಕಲ್ 243 G ಯಲ್ಲಿ ಸೂಚಿಸಿರುವಂತೆ ಪಂಚಾಯಿತಿಗಳು ಮೂಲಭೂತ ಸೇವೆಗಳನ್ನು, ನಿರ್ದಿಷ್ಟವಾಗಿ ಆರೋಗ್ಯ ಮತ್ತು ನೈರ್ಮಲ್ಯ ಕ್ಷೇತ್ರ, ಶಿಕ್ಷಣ, ಪೋಷಣೆ, ಕುಡಿಯುವ ನೀರು ಒದಗಿಸುವ ಜವಾಬ್ದಾರಿಯನ್ನು ಹೊಂದಿವೆ.

 

ನಾಗರಿಕ ಚಾರ್ಟರ್ ಕುರಿತು:

 1. ಸಾರ್ವಜನಿಕ ಸೇವೆಗಳನ್ನು ಒದಗಿಸುವ ಸಂಸ್ಥೆಗಳೊಂದಿಗೆ ವ್ಯವಹರಿಸುವಾಗ ನಾಗರಿಕರು ಎದುರಿಸುತ್ತಿರುವ ದಿನನಿತ್ಯದ ಸಮಸ್ಯೆಗಳಿಗೆ ಪರಿಹಾರವನ್ನು ಒದಗಿಸಲು ನಾಗರಿಕ ಚಾರ್ಟರ್ (Citizens’ Charters) ಉಪಕ್ರಮವು ಒಂದು ಉತ್ತಮವಾದ ಪ್ರತಿಕ್ರಿಯೆಯಾಗಿದೆ.
 2. ನಾಗರಿಕ ಚಾರ್ಟರ್ ಪರಿಕಲ್ಪನೆಯು ಸೇವಾ ಪೂರೈಕೆದಾರ ಮತ್ತು ಅದರ ಬಳಕೆದಾರರ ನಡುವಿನ ವಿಶ್ವಾಸವನ್ನು ಖಚಿತಪಡಿಸುತ್ತದೆ.
 3. ಈ ಪರಿಕಲ್ಪನೆಯನ್ನು ಮೊದಲು 1991 ರಲ್ಲಿ ಯುನೈಟೆಡ್ ಕಿಂಗ್‌ಡಂನಲ್ಲಿ ಪರಿಚಯಿಸಲಾಯಿತು ಮತ್ತು ಕಾರ್ಯಗತಗೊಳಿಸಲಾಯಿತು.

 

ಮೂಲತಃ ‘ನಾಗರಿಕರ ಚಾರ್ಟರ್’ ಚಳವಳಿಯಲ್ಲಿ ರೂಪಿಸಲ್ಪಟ್ಟು, ಸೇರಿಸಲಾದ ಆರು ತತ್ವಗಳು ಇಂತಿವೆ:

 1. ಗುಣಮಟ್ಟ: ಸೇವೆಗಳ ಗುಣಮಟ್ಟವನ್ನು ಸುಧಾರಿಸುವುದು.
 2. ಆಯ್ಕೆ: ಸಾಧ್ಯವಾದಲ್ಲೆಲ್ಲಾ.
 3. ಮಾನದಂಡಗಳು: ಮಾನದಂಡಗಳನ್ನು ಪೂರೈಸದಿದ್ದರೆ ಏನನ್ನು ನಿರೀಕ್ಷಿಸಬಹುದು ಮತ್ತು ಹೇಗೆ ಪ್ರತಿಕ್ರಿಯಿಸಬೇಕು ಎಂಬುದನ್ನು ನಿರ್ದಿಷ್ಟಪಡಿಸಿ.
 4. ಮೌಲ್ಯ: ತೆರಿಗೆದಾರರ ಹಣದ ಮೌಲ್ಯ ಎಂದು ತಿಳಿಯುವುದು.
 5. ಹೊಣೆಗಾರಿಕೆ: ವ್ಯಕ್ತಿಗಳು ಮತ್ತು ಸಂಸ್ಥೆಗಳು.
 6. ಪಾರದರ್ಶಕತೆ.

 

ಭಾರತದಲ್ಲಿ:

ನಾಗರಿಕರ ಚಾರ್ಟರ್ ಪರಿಕಲ್ಪನೆಯನ್ನು ಮೊದಲ ಬಾರಿಗೆ 1997 ರ ಮೇ ತಿಂಗಳಲ್ಲಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ವಿವಿಧ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಸಮಾವೇಶದಲ್ಲಿ’ ಅಂಗೀಕರಿಸಲಾಯಿತು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಟಿಯಾನನ್ಮೆನ್ ಸ್ಕ್ವೇರ್ ಹತ್ಯಾಕಾಂಡ:

(Tiananmen square massacre)

 ಸಂದರ್ಭ: ಇತ್ತೀಚೆಗೆ ಟಿಯಾನನ್ಮೆನ್ ಸ್ಕ್ವೇರ್ ಹತ್ಯಾಕಾಂಡದ 32 ನೇ ವಾರ್ಷಿಕೋತ್ಸವವನ್ನು ಆಚರಿಸಲಾಯಿತು.

ಈ ಹತ್ಯಾಕಾಂಡದ ಬಗ್ಗೆ:

 ಜೂನ್ 4, 1989 ರಂದು, ಚೀನಾದ ಸೈನ್ಯವು ಬೀಜಿಂಗ್‌ನ ಟಿಯಾನನ್‌ಮೆನ್ ಚೌಕದ ಸುತ್ತ ಪ್ರಜಾಪ್ರಭುತ್ವ ಪರ ಪ್ರತಿಭಟನಾಕಾರರನ್ನು ನಿರ್ದಯವಾಗಿ ದಮನಮಾಡಿತು.

 1.  ಸಾವುಗಳ ಕುರಿತ ಯಾವುದೇ ಅಧಿಕೃತ ಅಂಕಿ ಸಂಖ್ಯೆಯನ್ನು ಬಿಡುಗಡೆ ಮಾಡಲಾಗಿಲ್ಲ, ಆದರೆ ಮಾನವ ಹಕ್ಕುಗಳ ಗುಂಪುಗಳು ಚೀನಾದ ಸೈನ್ಯದಿಂದ ನೂರಾರು ಇಲ್ಲದಿದ್ದರೆ ಸಾವಿರಾರು ಜನರನ್ನು ಕೊಲ್ಲಲಾಗಿದೆ ಎಂದು ಅಂದಾಜಿಸಿವೆ.
 2. ಈ ಪ್ರತಿಭಟನೆಯಲ್ಲಿ ಭಾಗವಹಿಸಿದವರು ಮುಖ್ಯವಾಗಿ ವಿದ್ಯಾರ್ಥಿಗಳು, ಅವರು ಚೀನಾದಲ್ಲಿ ಪ್ರಜಾಪ್ರಭುತ್ವ ಸ್ಥಾಪನೆಗೆ, ವಾಕ್ ಸ್ವಾತಂತ್ರ್ಯ ಮತ್ತು ಪತ್ರಿಕಾ ಸ್ವಾತಂತ್ರ್ಯಕ್ಕಾಗಿ ಒತ್ತಾಯಿಸುತ್ತಿದ್ದರು.

 ವಿಶ್ವ ಪರಿಸರ ದಿನ:

 ಪರಿಸರ ಜಾಗೃತಿ ಮತ್ತು ಸಂರಕ್ಷಣೆಯನ್ನು ಉತ್ತೇಜಿಸಲು ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲಾಗುತ್ತದೆ.

 1. ಮಾನವ ಪರಿಸರ ಕುರಿತ ಸ್ಟಾಕ್‌ಹೋಮ್‌ ಸಮ್ಮೇಳನದ ಮೊದಲ ದಿನದಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 5 ಜೂನ್ 1972 ರಂದು ವಿಶ್ವ ಪರಿಸರ ದಿನವನ್ನು ಆಚರಿಸಲು ಘೋಷಿಸಿತು.
 2.  ಆದಾಗ್ಯೂ, ಇದನ್ನು ಮೊದಲು ಯುನೈಟೆಡ್ ಸ್ಟೇಟ್ಸ್ ನಲ್ಲಿ 1974 ರಲ್ಲಿ ‘ಓನ್ಲಿ ಒನ್ ಅರ್ಥ್’(ONLY ONE EARTH) ಎಂಬ ವಿಷಯದೊಂದಿಗೆ ಆಚರಿಸಲಾಯಿತು.
 3. 2021 ರ ವಿಶ್ವ ಪರಿಸರ ದಿನಾಚರಣೆಯ ವಿಷಯವೆಂದರೆ ರೀಮ್ಯಾಜಿನ್, ರಿಕ್ರಿಯೇಟ್, ರಿಸ್ಟೋರ್”( Recreate. Restore).ಈ ವರ್ಷ ವಿಶ್ವಸಂಸ್ಥೆ ಪ್ರಾರಂಭಿಸಿದ ವಿಶ್ವಸಂಸ್ಥೆಯ ‘ಪರಿಸರ ವ್ಯವಸ್ಥೆಗಳ ಪುನರುಜ್ಜೀವನ ದಶಕ’ ವನ್ನು ಈ ಥೀಮ್/ ವಿಷಯವು ಆಧರಿಸಿದೆ.
 4. ಇದನ್ನು ಪ್ರತಿವರ್ಷ ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (UNEP) ಆಯೋಜಿಸುತ್ತದೆ. ಪ್ರತಿ ವರ್ಷ ವಿವಿಧ ದೇಶಗಳು ವಿಶ್ವ ಪರಿಸರ ದಿನವನ್ನು ಆಯೋಜಿಸುತ್ತವೆ.
 5. ಪಾಕಿಸ್ತಾನವು 2021 ರ ವಿಶ್ವ ಪರಿಸರ ದಿನದ ಜಾಗತಿಕ ಆತಿಥೇಯವಾಗಲಿದೆ.

 ಯೂನ್ ಟ್ಯಾಬ್ ಯೋಜನೆ:

(YounTab scheme)

 ಕೇಂದ್ರಾಡಳಿತ ಪ್ರದೇಶವಾದ ಲಡಾಕ್‌ನಲ್ಲಿ, ಲೆಫ್ಟಿನೆಂಟ್ ಗವರ್ನರ್ ರವರು ಅಲ್ಲಿನ ವಿದ್ಯಾರ್ಥಿಗಳಲ್ಲಿ ಡಿಜಿಟಲ್ ಶಿಕ್ಷಣವನ್ನು ಉತ್ತೇಜಿಸಲು YounTab ಯೋಜನೆಯನ್ನು ಪ್ರಾರಂಭಿಸಿದ್ದಾರೆ.

 1. ಈ ಯೋಜನೆಯಡಿ, 6 ರಿಂದ 12 ನೇ ತರಗತಿಯ ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕಗಳು, ವಿಡಿಯೋ ಉಪನ್ಯಾಸಗಳು ಮತ್ತು ಆನ್‌ಲೈನ್ ತರಗತಿಗಳ ಅರ್ಜಿಗಳು ಸೇರಿದಂತೆ ಮೊದಲೇ ಲೋಡ್ ಮಾಡಲಾದ ಆನ್‌ಲೈನ್ ಮತ್ತು ಆಫ್‌ಲೈನ್ ವಿಷಯವನ್ನು ಹೊಂದಿರುವ 12,300 ಟ್ಯಾಬ್ಲೆಟ್‌ಗಳನ್ನು ವಿತರಿಸಲಾಗುವುದು.

 ಶಾಲೆಗಳಲ್ಲಿ ಕೋಡಿಂಗ್ ಮತ್ತು ಡೇಟಾ ವಿಜ್ಞಾನವನ್ನು ಪರಿಚಯಿಸಲು ಮೈಕ್ರೋಸಾಫ್ಟ್‌ನೊಂದಿಗೆ ಸಹಕರಿಸಲಿರುವ CBSE.

 1.  6 ರಿಂದ 12 ನೇ ತರಗತಿಗಳ ವಿದ್ಯಾರ್ಥಿಗಳಿಗೆ ಶಾಲೆಗಳಲ್ಲಿ ಕೋಡಿಂಗ್ ಮತ್ತು ಡೇಟಾ ವಿಜ್ಞಾನವನ್ನು ಪರಿಚಯಿಸಲು ಸಿಬಿಎಸ್‌ಇ ಮೈಕ್ರೋಸಾಫ್ಟ್ ಜೊತೆ ಪಾಲುದಾರಿಕೆ ಹೊಂದಿದೆ.
 2. ಈ ಹೊಸ ವಿಷಯಗಳನ್ನು 2021-22ರ ಶೈಕ್ಷಣಿಕ ಅವಧಿಯಲ್ಲಿ ಪರಿಚಯಿಸಲಾಗುವುದು.

 ಐ-ಫ್ಯಾಮಿಲಿಯಾ:

(I-Familia)

 1. ಕಾಣೆಯಾದವರನ್ನು ಗುರುತಿಸಲು ಇದು ಜಾಗತಿಕ ದತ್ತ ಸಂಚಯವಾಗಿದೆ.
 2. ಇದನ್ನು ಇಂಟರ್ಪೋಲ್ ಪ್ರಾರಂಭಿಸಿದೆ.
 3. ಇದು ಕುಟುಂಬ ಡಿಎನ್‌ಎ ಮೂಲಕ ಕಾಣೆಯಾದವರನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ ಮತ್ತು ಸದಸ್ಯ ರಾಷ್ಟ್ರಗಳಲ್ಲಿನ ಸಂಕೀರ್ಣ ಪ್ರಕರಣಗಳನ್ನು(cold cases) ಪರಿಹರಿಸಲು ಪೊಲೀಸರಿಗೆ ಸಹಾಯ ಮಾಡುತ್ತದೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos