Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 4ನೇ ಜೂನ್ 2021

 

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಹೊಣೆಗಾರಿಕೆಯಿಂದ ನಷ್ಟ ಪರಿಹಾರ.

2. ಜಾತಿ ವರ್ಗಗಳ ಆಧಾರದಲ್ಲಿ NREGS ವೇತನ ಪಾವತಿ.

3. ನಿವೃತ್ತ ಅಧಿಕಾರರಿಗಳನ್ನು ನೇಮಿಸಿಕೊಳ್ಳುವ ಮಾನದಂಡಗಳು ವ್ಯಾಖ್ಯಾನಿಸಲ್ಪಟ್ಟಿವೆ.

4. ಮತದಾನದಿಂದ ದೂರವುಳಿದ ಭಾರತವನ್ನು ತೀಕ್ಷ್ಣವಾಗಿ ಟೀಕಿಸಿದ ಪ್ಯಾಲೆಸ್ಟೈನ್ .

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಶುಕ್ರಗ್ರಹಕ್ಕೆ ನಾಸಾದ ಎರಡು ಹೊಸ ಯೋಜನೆಗಳ ಘೋಷಣೆ.

2. ಎಂಟನೇ ಜಾಗತಿಕ ಸಾರಜನಕ ಸಮ್ಮೇಳನ.

3. ಮುಳುಗುತ್ತಿರುವ ಸರಕುಸಾಗಣೆ ಹಡಗಿನಿಂದ ತೈಲ ಸೋರಿಕೆಯನ್ನು ತಡೆಯಲು ಪ್ರಯತ್ನಿಸುತ್ತಿರುವ ಶ್ರೀಲಂಕಾ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು:ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಹೊಣೆಗಾರಿಕೆಯ ವಿರುದ್ಧ ರಕ್ಷಣೆ:


(Indemnity from liability)

 ಸಂದರ್ಭ:

ದೇಶದಲ್ಲಿ ತೀವ್ರವಾದ ಲಸಿಕೆ ಬಿಕ್ಕಟ್ಟಿನ ಮಧ್ಯೆ, ಫಫಿಜರ್( Pfizer ) ಮತ್ತು ಮಾಡರ್ನಾ( Moderna) ಸೇರಿದಂತೆ ವಿದೇಶಿ ಲಸಿಕೆ ತಯಾರಕರಿಗೆ ಭಾರತವು ನಷ್ಟ ಪರಿಹಾರವನ್ನು ನೀಡುವ ಸಾಧ್ಯತೆ ಇದೆ, ಇದರಿಂದಾಗಿ ಅವರ ಕೋವಿಡ್ ಲಸಿಕೆಗಳು ಭಾರತಕ್ಕೆ ಬರುವುದು ಸುಲಭವಾಗುತ್ತದೆ.

ಈಗ, ಪುಣೆ ಮೂಲದ ಸೀರಮ್ ಇನ್ಸ್ಟಿಟ್ಯೂಟ್(Serum Institute) ಹೊಣೆಗಾರಿಕೆಯಿಂದ ನಷ್ಟ ಪರಿಹಾರವನ್ನು ಕೇಳುವ(Indemnity from liability) ಇತ್ತೀಚಿನ ಫಾರ್ಮಾ ಕಂಪನಿಯಾಗಿದೆ, ಎಲ್ಲಾ ಲಸಿಕೆ ತಯಾರಕರು, ಭಾರತೀಯರಾಗಲಿ ಅಥವಾ ವಿದೇಶಿಯರಾಗಲಿ ಯಾವುದೇ ತೀವ್ರ ಅಡ್ಡಪರಿಣಾಮಗಳಿಗೆ ಕಾನೂನು ಮೊಕದ್ದಮೆಗಳಿಂದ ರಕ್ಷಿಸಬೇಕೆಂದು ಹೇಳಿವೆ.

 

ನಷ್ಟ ಪರಿಹಾರದ ಷರತ್ತು ಎಂದರೇನು?

ಸರಳ ಭಾಷೆಯಲ್ಲಿ ಹೇಳುವುದಾದರೆ, ನಷ್ಟ ಪರಿಹಾರ (Indemnity) ಎಂದರೆ  ಯಾವುದೇ ನಷ್ಟ ಅಥವಾ ಇತರ ಆರ್ಥಿಕ ಒತ್ತಡದ ವಿರುದ್ಧ ಒದಗಿಸಲಾದ ರಕ್ಷಣೆ.

 1. ಕಾನೂನು ಪರಿಭಾಷೆಯಲ್ಲಿ, ಒಂದು ಪಕ್ಷವು ಮತ್ತೊಂದು ಪಕ್ಷಕ್ಕೆ ಉಂಟಾದ ಹಾನಿಯನ್ನು ಸರಿದೂಗಿಸಲು ಪರಿಹಾರವನ್ನು ನೀಡುವ ಒಪ್ಪಂದದ ಬಾಧ್ಯತೆಯಾಗಿದೆ.
 2. ನಷ್ಟ ಪರಿಹಾರದ ಷರತ್ತನ್ನು ಸಾಮಾನ್ಯವಾಗಿ ವಿಮಾ ಒಪ್ಪಂದಗಳಲ್ಲಿ ಬಳಸಲಾಗುತ್ತದೆ.

ಭಾರತದ ವಿಷಯದಲ್ಲಿ, ದೇಶದಲ್ಲಿ ತಮ್ಮ ಲಸಿಕೆಗಳನ್ನು ನೀಡಲು ಸರ್ಕಾರವು ವಿದೇಶಿ ಲಸಿಕೆ ತಯಾರಕರಿಗೆ ನಷ್ಟ ಪರಿಹಾರವನ್ನು ನೀಡಿದರೆ,  ಲಸಿಕೆ ಪಡೆದಿದ್ದರಿಂದಾಗಿ ಅಡ್ಡಪರಿಣಾಮಗಳು ಉಂಟಾಗಿವೆ ಎಂದು ಹೇಳಿಕೊಳ್ಳುವ ಯಾವುದೇ ನಾಗರಿಕನಿಗೆ ಪರಿಹಾರ ನೀಡಲು ಸರ್ಕಾರವು ಜವಾಬ್ದಾರನಾಗಿರುತ್ತದೆ ಹೊರತು ಲಸಿಕೆ ತಯಾರಿಕಾ ಕಂಪನಿಗಳಲ್ಲ.

 

ಬ್ರಿಡ್ಜಿಂಗ್ ಪ್ರಯೋಗಗಳು’ ಎಂದರೇನು?

‘ಬ್ರಿಡ್ಜಿಂಗ್ ಟ್ರಯಲ್ಸ್’(Bridging trial) ಸ್ಥಳೀಯವಾಗಿ ನಡೆಸಿದ ಕ್ಲಿನಿಕಲ್ ಪ್ರಯೋಗಗಳಾಗಿವೆ, ಇದು ವಿದೇಶಿ  ಔಷಧಿಗಳು / ಲಸಿಕೆಗಳನ್ನು ಬಳಸಿಕೊಂಡು ಸಾರ್ವತ್ರಿಕವಾಗಿ ಸಾರ್ವಜನಿಕ ಲಸಿಕಾಕರಣ ಪ್ರಕ್ರಿಯೆಯನ್ನು ಆರಂಭಿಸುವ ಮೊದಲು ಸ್ಥಳೀಯ ಜನಸಂಖ್ಯೆಯ ಮೇಲೆ ಅವುಗಳ ಪರಿಣಾಮಕ್ಕೆ ಸಂಬಂಧಿಸಿದ ದತ್ತಾಂಶವನ್ನು ಪಡೆಯುವುದಾಗಿದೆ. ಔಷಧ / ಲಸಿಕೆಗೆ ಸಂಬಂಧಿಸಿದ ಪರಿಣಾಮಕಾರಿತ್ವ ಮತ್ತು ಸಂಭಾವ್ಯ ಅಡ್ಡಪರಿಣಾಮಗಳನ್ನು ಕಂಡುಹಿಡಿಯುವಲ್ಲಿ ಈ ಪ್ರಯೋಗಗಳು ಮುಖ್ಯವಾಗಿವೆ.

 1. ನಷ್ಟ ಪರಿಹಾರದ ಷರತ್ತಿನ ಅನುಮೋದನೆಯ ಜೊತೆಗೆ, ಫಿಜರ್ ಮತ್ತು ಮೊಡೆರ್ನಾ ಸೇರಿದಂತೆ ವಿದೇಶಿ ಲಸಿಕೆ ತಯಾರಕರು ಅವರ ಲಸಿಕೆಗಳನ್ನು ಬ್ರಿಡ್ಜಿಂಗ್ ಟ್ರಯಲ್ಸ್ (ಔಷಧ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸುವ ನಿಯಮ) ಪ್ರಯೋಗದ ಅಗತ್ಯತೆಯ ಮೇಲೆ ವಿನಾಯಿತಿ ಕೋರಿದ್ದಾರೆ.

 

ನಷ್ಟ ಪರಿಹಾರಕ್ಕೆ ಯಾವುದೇ ವಿನಾಯಿತಿಗಳಿವೆಯೇ?

ನಷ್ಟ ಪರಿಹಾರಕ್ಕೆ(indemnification)  ಹಲವಾರು ಸಾಮಾನ್ಯ ಅಪವಾದ /ವಿನಾಯಿತಿಗಳಿವೆ.

ನಷ್ಟ ಪರಿಹಾರದ ನಿಬಂಧನೆಯು ನಷ್ಟ ಪರಿಹಾರ ಸ್ವೀಕರಿಸುವ ಪಕ್ಷದ ಈ ಕೆಳಗಿನ ಕ್ರಮಗಳಿಂದ ಉಂಟಾಗುವ ಹಕ್ಕುಗಳು ಅಥವಾ ನಷ್ಟಗಳಿಗೆ ನಷ್ಟ ಪರಿಹಾರವನ್ನು ನೀಡದೆ ಇರಬಹುದು:

 1. ನಿರ್ಲಕ್ಷ್ಯ ಅಥವಾ ಸಂಪೂರ್ಣ ನಿರ್ಲಕ್ಷ್ಯ.
 2. ಉತ್ಪನ್ನಗಳ ಅನುಚಿತ ಬಳಕೆ.
 3. ಒಪ್ಪಂದದಲ್ಲಿ ತನ್ನ ಜವಾಬ್ದಾರಿಗಳನ್ನು ಅನುಸರಿಸಲು ವಿಫಲವಾಗುವುದು.

 

ವಿಷಯಗಳು:ಶಾಸನಬದ್ಧ ನಿಯಂತ್ರಕ ಮತ್ತು ವಿವಿಧ ಅರೆ- ನ್ಯಾಯಿಕ ಸಂಸ್ಥೆಗಳು.

ನಿವೃತ್ತ ಅಧಿಕಾರರಿಗಳನ್ನು ನೇಮಿಸಿಕೊಳ್ಳುವ ಮಾನದಂಡಗಳು ವ್ಯಾಖ್ಯಾನಿಸಲ್ಪಟ್ಟಿವೆ:


(Norms for employing retired officials defined)

 ಸಂದರ್ಭ:

 ಕೇಂದ್ರ ವಿಚಕ್ಷಣ ಆಯೋಗವು (Central Vigilance Commission -CVC) ನಿವೃತ್ತ ಅಧಿಕಾರಿಯನ್ನು ಗುತ್ತಿಗೆ ಅಥವಾ ಸಲಹಾ ಆಧಾರದ ಮೇಲೆ ನೇಮಿಸುವ ಮೊದಲು ವಿಜಿಲೆನ್ಸ್ ಕ್ಲಿಯರೆನ್ಸ್ ಪಡೆಯಲು ಸರ್ಕಾರಿ ಸಂಸ್ಥೆಗಳು ಅನುಸರಿಸಬೇಕಾದ ಒಂದು ನಿರ್ದಿಷ್ಟ ಕಾರ್ಯವಿಧಾನವನ್ನು ರೂಪಿಸಿದೆ.

ಕಾರ್ಯವಿಧಾನದ ಪ್ರಕಾರ:

 1. ಅನ್ವಯಿಸುವಿಕೆ: ಕೇಂದ್ರ ಸರ್ಕಾರದ ನಿವೃತ್ತ ಅಖಿಲ ಭಾರತ ಸೇವೆಗಳ ಮತ್ತು ಗ್ರೂಪ್ ಎ ಅಧಿಕಾರಿಗಳಿಗೆ ಅಥವಾ ಕೇಂದ್ರದ ಒಡೆತನದ ಅಥವಾ ನಿಯಂತ್ರಣ ಇರುವ ಇತರ ಸಂಸ್ಥೆಗಳಲ್ಲಿ ಅವರಿಗೆ ಸಹವರ್ತಿ ಉದ್ಯೋಗವನ್ನು ನೀಡುವ ಮೊದಲು, ಅಧಿಕಾರಿ ನಿವೃತ್ತರಾದ ಉದ್ಯೋಗದಾತ ಸಂಸ್ಥೆಯಿಂದ ಜಾಗರೂಕ ಅನುಮತಿ (vigilance clearance) ಪಡೆಯಬೇಕು.
 2. ಒಂದು ವೇಳೆ ನಿವೃತ್ತ ಅಧಿಕಾರಿಯೊಬ್ಬರು ಒಂದಕ್ಕಿಂತ ಹೆಚ್ಚು ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರೆ, ನಿವೃತ್ತಿಗೆ 10 ವರ್ಷಗಳ ಮೊದಲು ಈ ಅಧಿಕಾರಿಯು ಸೇವೆ ಮಾಡಿದ  ಎಲ್ಲಾ ಪೋಸ್ಟಿಂಗ್ ಸಂಸ್ಥೆಗಳಿಂದ ವಿಜಿಲೆನ್ಸ್ ಕ್ಲಿಯರೆನ್ಸ್  ಪಡೆಯಬೇಕು.
 3. ನಿರಪೇಕ್ಷಣಾ ಪತ್ರ ಕೋರುವ ಸಂವಹನದ ಒಂದು ಪ್ರತಿಯನ್ನು CVC ಗೆ ಕಳುಹಿಸಬೇಕು. ಸ್ಪೀಡ್ ಪೋಸ್ಟ್ ಮೂಲಕ ಸಂವಹನವನ್ನು ಕಳುಹಿಸಿದ 15 ದಿನಗಳಲ್ಲಿ ಹಿಂದಿನ ಉದ್ಯೋಗದಾತರಿಂದ ಯಾವುದೇ ಉತ್ತರವನ್ನು ಸ್ವೀಕರಿಸದಿದ್ದರೆ, ಜ್ಞಾಪನೆಯನ್ನು ಕಳುಹಿಸಬಹುದು. 21 ದಿನಗಳಲ್ಲಿ ಯಾವುದೇ ಪ್ರತಿಕ್ರಿಯೆ ಇಲ್ಲದಿದ್ದರೆ, ವಿಜಿಲೆನ್ಸ್ ಕ್ಲಿಯರೆನ್ಸ್ ನೀಡಲಾಗಿದೆ ಎಂದು ಪರಿಗಣಿಸಬೇಕು.
 4. ನೌಕರನು ಯಾವುದೇ ವಿಜಿಲೆನ್ಸ್-ಸಂಬಂಧಿತ ವಿಷಯದಲ್ಲಿ ಭಾಗಿಯಾಗಿದ್ದರೆ ಅಥವಾ ಜಾಗರೂಕ(ವಿಜಿಲೆನ್ಸ್) ತೆಯ ದೃಷ್ಟಿಕೋನದಲ್ಲಿ ಆತನು ನಿರ್ದೋಷಿಯೆಂದು ಘೋಷಿಸಲ್ಪಡದೆಹೋದರೆ, ಅದರಿಂದ ಉಂಟಾಗುವ ಎಲ್ಲಾ ಪರಿಣಾಮಕಾರಿ ಕ್ರಮಗಳಿಗೆ ಹಿಂದಿನ ಎಲ್ಲಾ ಉದ್ಯೋಗದಾತ ಸಂಸ್ಥೆಗಳು ಜವಾಬ್ದಾರನಾಗಿರುತ್ತವೆ.

 

ಈ ನಿಯಮಗಳ ಅವಶ್ಯಕತೆ:

 1. ಏಕರೂಪದ ಕಾರ್ಯವಿಧಾನದ ಅನುಪಸ್ಥಿತಿಯು ಕೆಲವೊಮ್ಮೆ ಕಳಂಕಿತ ಗತಕಾಲದ ಅಧಿಕಾರಿಗಳು ಅಥವಾ ಅವರ ವಿರುದ್ಧ ಪ್ರಕರಣಗಳು ಬಾಕಿ ಇರುವ ಅಧಿಕಾರಿಗಳನ್ನು ಸೇವೆಯಲ್ಲಿ ನೇಮಿಸಿಕೊಳ್ಳುವ ಪರಿಸ್ಥಿತಿ ಉದ್ಭವಿಸುತ್ತದೆ.
 2. ಅಂತಹ ಪರಿಸ್ಥಿತಿಯು ಅನಗತ್ಯ ದೂರುಗಳು / ಪಕ್ಷಪಾತದ ಆರೋಪಗಳಿಗೆ ಕಾರಣವಾಗುತ್ತದೆಯಲ್ಲದೆ, ಇದು ಸರ್ಕಾರಿ ಸಂಸ್ಥೆಗಳ ಕಾರ್ಯನಿರ್ವಹಣೆಯನ್ನು ನಿಯಂತ್ರಿಸುವ ಮೂಲ ತತ್ವಗಳಾದ ನ್ಯಾಯೋಚಿತತೆ ಮತ್ತು ಪ್ರಮಾಣಿಕತೆಯ ಮೂಲ ಸಿದ್ಧಾಂತಗಳಿಗೆ ವಿರುದ್ಧವಾಗಿದೆ.

 

ಕೇಂದ್ರ ವಿಚಕ್ಷಣಾ ಆಯೋಗ(CVC)ದ ಬಗ್ಗೆ:

 1. ಶ್ರೀ ಕೆ.ಸಂತನಂ ನೇತೃತ್ವದಲ್ಲಿ ಭ್ರಷ್ಟಾಚಾರ ತಡೆ ಸಮಿತಿಯ ಶಿಫಾರಸುಗಳ ಆಧಾರದ ಮೇರೆಗೆ 1964 ರ ಫೆಬ್ರವರಿಯಲ್ಲಿ CVC ಯನ್ನು ಸರ್ಕಾರ ಸ್ಥಾಪಿಸಿತು.
 2.  2003 ರಲ್ಲಿ, ಸಂಸತ್ತು ಕೇಂದ್ರ ವಿಚಕ್ಷಣಾ ಆಯೋಗಕ್ಕೆ ಶಾಸನಬದ್ಧ ಸ್ಥಾನಮಾನವನ್ನು ನೀಡುವ CVC ಕಾಯ್ದೆಯನ್ನು ಜಾರಿಗೆ ತಂದಿತು.
 3. CVC ಯು,ಯಾವುದೇ ಸಚಿವಾಲಯ / ಇಲಾಖೆಯಡಿ ಕಾರ್ಯನಿರ್ವಹಿಸುವುದಿಲ್ಲ. ಬದಲಾಗಿ, ಇದು ಸ್ವತಂತ್ರ ಸಂಸ್ಥೆಯಾಗಿದ್ದು ಅದು ಸಂಸತ್ತಿಗೆ ಮಾತ್ರ ಜವಾಬ್ದಾರವಾಗಿರುತ್ತದೆ.
 4. ಅದು ತನ್ನ ವರದಿಯನ್ನು ನೇರವಾಗಿ ಭಾರತದ ರಾಷ್ಟ್ರಪತಿಗೆ ಸಲ್ಲಿಸುತ್ತದೆ.
 5.  ಭ್ರಷ್ಟಾಚಾರ ತಡೆ ಕಾಯ್ದೆ, 1988 ರ ಅಡಿಯಲ್ಲಿ ಅಪರಾಧಗಳ ತನಿಖೆಗೆ ಸಂಬಂಧಿಸಿರುವುದರಿಂದ ದೆಹಲಿ ವಿಶೇಷ ಪೊಲೀಸ್ ಸ್ಥಾಪನೆ (CBI) ಯ ಕಾರ್ಯವೈಖರಿಯ ಮೇಲೆ ಇದು ಮೇಲ್ವಿಚಾರಣೆಯನ್ನು ಮಾಡುತ್ತದೆ.

ಕೇಂದ್ರ ವಿಚಕ್ಷಣಾ ಆಯೋಗದ- ಸಂಯೋಜನೆ ಮತ್ತು ಸದಸ್ಯರನ್ನು ತೆಗೆದುಹಾಕುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಇಲ್ಲಿ ಪಡೆಯಿರಿ,

 

ವಿಷಯಗಳು: ಕೇಂದ್ರ ಮತ್ತು ರಾಜ್ಯಗಳಿಂದ  ದುರ್ಬಲ ವರ್ಗದ ಜನಸಮುದಾಯದವರಿಗೆ ಇರುವ ಕಲ್ಯಾಣ ಯೋಜನೆಗಳು ಮತ್ತು ಈ ಯೋಜನೆಗಳ ಕಾರ್ಯಕ್ಷಮತೆ; ಕಾರ್ಯವಿಧಾನಗಳು,ಕಾನೂನುಗಳು, ಸಂಸ್ಥೆಗಳು ಮತ್ತು ಈ ದುರ್ಬಲ ವಿಭಾಗಗಳ ರಕ್ಷಣೆ ಮತ್ತು ಸುಧಾರಣೆಗಾಗಿ ರಚಿಸಲಾದ ಸಂಸ್ಥೆಗಳು.

ಜಾತಿ ವರ್ಗಗಳ ಆಧಾರದಲ್ಲಿ NREGS ವೇತನ ಪಾವತಿ:


(Caste categories for NREGS pay)

ಸಂದರ್ಭ:

ಕೇಂದ್ರ ಹಣಕಾಸು ಸಚಿವಾಲಯವು ಈ ಹಣಕಾಸು ವರ್ಷದಿಂದ ರಾಜ್ಯಗಳಿಗೆ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (Mahatma Gandhi National Rural Employment Guarantee Act (MGNREGA) ಯೋಜನೆಯಡಿ ವೇತನ ಪಾವತಿಗಳನ್ನು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಇತರ ಜಾತಿಗಳನ್ನು ಪ್ರತ್ಯೇಕ ವಿಭಾಗಗಳಾಗಿ ವಿಂಗಡಿಸುವ ಮೂಲಕ ವಿತರಿಸುವಂತೆ ಸೂಚಿಸಿದೆ.

 1. ದಯವಿಟ್ಟು ಗಮನಿಸಿ, ಈ ಯೋಜನೆಯಡಿ ಪ್ರಸ್ತುತ ಅಸ್ತಿತ್ವದಲ್ಲಿರುವ ವ್ಯವಸ್ಥೆಯ ಅನ್ವಯ ವೇತನ ಪಾವತಿಸಲು ಕೇವಲ ಒಂದು ವಿಧಾನವನ್ನು ಅನುಸರಿಸಲಾಗುತ್ತಿದೆ, ಅಂದರೆ ವರ್ಗವಾರು ವೇತನ ಪಾವತಿಗೆ ಯಾವುದೇ ರೀತಿಯ ಅವಕಾಶವಿಲ್ಲ.

 

ಈ ನಡೆಯ ಹಿಂದಿನ ತರ್ಕ:

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕಡೆಗೆ ಬಜೆಟ್ ವಿನಿಯೋಗದಿಂದ ಹರಿಯುವ ಪ್ರಯೋಜನಗಳನ್ನು ನಿರ್ಣಯಿಸಲು ಮತ್ತು ಹೈಲೈಟ್ ಮಾಡಲು ಈ ನಿರ್ಧಾರವನ್ನು ಮಾಡಲಾಗಿದೆ.

 1. ಪರಿಶಿಷ್ಟ ಜಾತಿ(Scheduled Castes) ಮತ್ತು ಪರಿಶಿಷ್ಟ ಪಂಗಡದ (Scheduled Tribes) ಸಮುದಾಯಗಳ ಅಭ್ಯುದಯಕ್ಕೆ ಕೇಂದ್ರವು ಕೈಗೊಂಡಿರುವ ಕ್ರಮಗಳನ್ನು ಎತ್ತಿ ತೋರಿಸುವ ಗುರಿಯನ್ನು ಈ ನಿರ್ಣಯವು ಹೊಂದಿದೆ.

 

ಈ ನಿರ್ಧಾರದ ವಿರುದ್ಧದ ಕಳವಳಗಳು ಯಾವುವು?

 1. ಇದು ಪಾವತಿ ವ್ಯವಸ್ಥೆಯನ್ನು ಇನ್ನಷ್ಟು ಸಂಕೀರ್ಣಗೊಳಿಸಬಹುದು.
 2. ಇದು ಈ ಯೋಜನೆಗೆ ನೀಡುವ ಅನುದಾನವನ್ನು ಕಡಿಮೆ ಮಾಡಲು ಕಾರಣವಾಗಬಹುದು.
 3. ಇದು ವೇತನ ಪಾವತಿ ವಿಳಂಬಕ್ಕೆ ಕಾರಣವಾಗಬಹುದು.
 4. ಇದರಿಂದಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಜನಸಂಖ್ಯೆ ಹೆಚ್ಚಿಗೆ ಹೊಂದಿರುವ ಜಿಲ್ಲೆಗಳಿಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಸೀಮಿತಗೊಳ್ಳಬಹುದು ಅಥವಾ ಆ ಜಿಲ್ಲೆಗಳಲ್ಲಿಯೇ ಕೇಂದ್ರೀಕರಿಸಬಹುದು.

 

MGNREGA ಯೋಜನೆಯ ಕುರಿತು:

ಈ ಯೋಜನೆಯನ್ನು 2005 ರಲ್ಲಿ ಕೆಲಸದ ಹಕ್ಕನ್ನು”(Right to Work) ಖಾತರಿಪಡಿಸುವ ಸಾಮಾಜಿಕ ಕ್ರಮವಾಗಿ ಪರಿಚಯಿಸಲಾಯಿತು.

 1. ಸಾಮಾಜಿಕ ಅಳತೆ ಮತ್ತು ಕಾರ್ಮಿಕ ಕಾನೂನಿನ ಪ್ರಮುಖ ಸಿದ್ಧಾಂತವೆಂದರೆ ಗ್ರಾಮೀಣ ಭಾರತದಲ್ಲಿ ಸ್ಥಳೀಯ ಸರ್ಕಾರವು ಗ್ರಾಮೀಣ ಕೌಶಲ್ಯರಹಿತ ಜನರ ಜೀವನ ಮಟ್ಟವನ್ನು ಹೆಚ್ಚಿಸಲು ಕಾನೂನುಬದ್ಧವಾಗಿ ಕನಿಷ್ಠ 100 ದಿನಗಳ ವೇತನ ಉದ್ಯೋಗವನ್ನು ಒದಗಿಸಬೇಕಾಗುತ್ತದೆ.

 

ಪ್ರಮುಖ ಉದ್ದೇಶಗಳು:

 1. ಕೌಶಲ್ಯರಹಿತ ಕಾಮಗಾರಿಗಳನ್ನು ಮಾಡಲು ಸಿದ್ಧರಿರುವ ಪ್ರತಿ ಕುಟುಂಬದ ವಯಸ್ಕ ಕಾರ್ಮಿಕರಿಗೆ 100 ದಿನಗಳಿಗಿಂತ ಕಡಿಮೆಯಿಲ್ಲದ ಅಥವಾ ಕನಿಷ್ಠ 100 ದಿನಗಳ ಸಂಬಳ ಸಹಿತ ಗ್ರಾಮೀಣ ಉದ್ಯೋಗದ ಒದಗಿಸುವಿಕೆ.
 2. ಗ್ರಾಮೀಣ ಬಡವರ ಜೀವನೋಪಾಯವನ್ನು ಬಲಪಡಿಸುವ ಮೂಲಕ ಸಾಮಾಜಿಕ ಸೇರ್ಪಡೆಗಾಗಿ ಪೂರ್ವಭಾವಿಯಾಗಿ ಖಾತರಿನೀಡುವುದು.
 3. ಬಾವಿಗಳು, ಕೊಳಗಳು, ರಸ್ತೆಗಳು ಮತ್ತು ಕಾಲುವೆಗಳಂತಹ ಗ್ರಾಮೀಣ ಪ್ರದೇಶಗಳಲ್ಲಿ ಬಾಳಿಕೆ ಬರುವ ಸ್ಥಿರ ಆಸ್ತಿಗಳ ಸೃಷ್ಟಿ.
 4. ಗ್ರಾಮೀಣ ಪ್ರದೇಶಗಳಿಂದ ನಗರ ವಲಸೆಯನ್ನು ಕಡಿಮೆ ಮಾಡುವುದು.
 5. ತರಬೇತಿ ರಹಿತ ಗ್ರಾಮೀಣ ಕಾರ್ಮಿಕರನ್ನು ಬಳಸಿಕೊಂಡು ಗ್ರಾಮೀಣ ಮೂಲಸೌಕರ್ಯಗಳನ್ನು ರಚಿಸುವುದು.

 

MGNREGA ಯೋಜನೆಯಡಿ ಪ್ರಯೋಜನಗಳನ್ನು ಪಡೆಯುವ ಅರ್ಹತಾ ಮಾನದಂಡಗಳು ಈ ಕೆಳಗಿನಂತಿವೆ:

 1. MGNREGA ಯೋಜನೆಯ ಪ್ರಯೋಜನಗಳನ್ನು ಪಡೆಯಲು ಅವರು ಭಾರತದ ನಾಗರಿಕರಾಗಿರಬೇಕು.
 2. ಉದ್ಯೋಗಕ್ಕೆ ಅರ್ಜಿ ಸಲ್ಲಿಸುವ ಸಮಯದಲ್ಲಿ ಆ ವ್ಯಕ್ತಿಯು 18 ವರ್ಷಗಳನ್ನು ಪೂರೈಸಿರಬೇಕು.
 3. ಅರ್ಜಿದಾರನು ಸ್ಥಳೀಯ ಪ್ರದೇಶದ ಭಾಗವಾಗಿರಬೇಕು (ಅಂದರೆ ಸ್ಥಳೀಯ ಗ್ರಾಮ ಪಂಚಾಯಿತಿಯ ಮೂಲಕ ಅರ್ಜಿ ಸಲ್ಲಿಸಬೇಕು).
 4. ಅರ್ಜಿದಾರರು ಸ್ವಯಂಪ್ರೇರಣೆಯಿಂದ ಕೌಶಲ್ಯರಹಿತ ಕೆಲಸಗಳನ್ನು ಮಾಡಲು ಮುಂದೆ ಬರಬೇಕು.

 

ಯೋಜನೆಯ ಅನುಷ್ಠಾನ:

 1. ಕೆಲಸಕ್ಕಾಗಿ ಅರ್ಜಿಯನ್ನು ಸಲ್ಲಿಸಿದ 15 ದಿನಗಳಲ್ಲಿ ಅಥವಾ ಕೆಲಸಕ್ಕೆ ಅರ್ಜಿ ಸಲ್ಲಿಸಿದ ದಿನಾಂಕದಿಂದ, ಅರ್ಜಿದಾರರಿಗೆ ವೇತನ ಉದ್ಯೋಗವನ್ನು ಒದಗಿಸಲಾಗುತ್ತದೆ.
 2. ಉದ್ಯೋಗವು ಲಭ್ಯವಿಲ್ಲದಿದ್ದ ಸಂದರ್ಭದಲ್ಲಿ ಅರ್ಜಿಯನ್ನು ಸಲ್ಲಿಸಿದ ಹದಿನೈದು ದಿನಗಳಲ್ಲಿ ಅಥವಾ ಕೆಲಸ ಕೋರಿದ ದಿನಾಂಕದಿಂದ ಉದ್ಯೋಗವನ್ನು ಒದಗಿಸದಿದ್ದಲ್ಲಿ ನಿರುದ್ಯೋಗ ಭತ್ಯೆ ಪಡೆಯುವ ಹಕ್ಕು.
 3. MGNREGA ಕಾರ್ಯಚಟುವಟಿಕೆಗಳ ಸಾಮಾಜಿಕ ಲೆಕ್ಕಪರಿಶೋಧನೆಯು ಕಡ್ಡಾಯವಾಗಿದೆ, ಆ ಮೂಲಕ ಕಾರ್ಯಕ್ರಮದಲ್ಲಿ ಹೊಣೆಗಾರಿಕೆ ಮತ್ತು ಪಾರದರ್ಶಕತೆಯನ್ನು ಖಾತರಿ ಪಡಿಸಲಾಗಿದೆ.
 4. ವೇತನ ಪಡೆಯುವವರು ಧ್ವನಿ ಎತ್ತುವ ಮತ್ತು ದೂರುಗಳನ್ನು ಸಲ್ಲಿಸುವ ಪ್ರಮುಖ ವೇದಿಕೆ ಗ್ರಾಮಸಭೆಯಾಗಿದೆ.
 5. MGNREGA ಅಡಿಯಲ್ಲಿ ಮಾಡಲಾಗುವ ಕಾಮಗಾರಿಗಳಿಗೆ ಅನುಮೋದನೆ ನೀಡುವುದು ಮತ್ತು ಅವುಗಳಿಗೆ ಆದ್ಯತೆಯನ್ನು ನೀಡುವ ಜವಾಬ್ದಾರಿಯು ಗ್ರಾಮಸಭೆ ಮತ್ತು ಗ್ರಾಮ ಪಂಚಾಯಿತಿಗಳದಾಗಿರುತ್ತದೆ.

 

ವಿಷಯಗಳು:ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಮತದಾನದಿಂದ ದೂರವುಳಿದ ಭಾರತವನ್ನು ತೀಕ್ಷ್ಣವಾಗಿ ಟೀಕಿಸಿದ ಪ್ಯಾಲೆಸ್ಟೈನ್:


(Palestine flays India’s abstention from vote)

 ಸಂದರ್ಭ:

ಇಸ್ರೇಲ್ ಮತ್ತು ಪ್ಯಾಲೇಸ್ಟಿನಿಯನ್ ಪ್ರದೇಶಗಳ ಕರಾವಳಿ ಭಾಗವಾದ ಗಾಜಾ ಪಟ್ಟಿಯ ನಡುವಿನ ಇತ್ತೀಚಿನ ಸುತ್ತಿನ ಸಂಘರ್ಷದ ಹಿನ್ನೆಲೆಯಲ್ಲಿಪೂರ್ವ ಜೆರುಸಲೆಮ್ ಮತ್ತು ಇಸ್ರೇಲ್ ಸೇರಿದಂತೆ ಆಕ್ರಮಿತ ಪ್ಯಾಲೇಸ್ಟಿನಿಯನ್ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಮಾನವ ಹಕ್ಕುಗಳ ಕಾನೂನು ಮತ್ತು ಮಾನವೀಯ ಕಾನೂನಿಗೆ ಗೌರವವನ್ನು ಖಾತರಿಪಡಿಸುವುದು”(Ensuring respect for international human rights law and humanitarian law in Occupied Palestinian Territory including East Jerusalem and in Israel)  ಎಂಬ ಶೀರ್ಷಿಕೆಯ ನಿರ್ಣಯವನ್ನು ಇತ್ತೀಚೆಗೆ ಮಾನವ ಹಕ್ಕುಗಳ ಮಂಡಳಿಯಲ್ಲಿ [Human Rights Council -HRC] ಕೈಗೊಳ್ಳಲಾಯಿತು.

ಆದರೆ, ಈ ನಿರ್ಣಯದ ಕುರಿತು ನಡೆದ ಮತದಾನದಿಂದ ಭಾರತ ದೂರವುಳಿಯಿತು. ಈಗ, ಇದಕ್ಕೆ ಪ್ರತಿಕ್ರಿಯೆಯಾಗಿ, ಪ್ಯಾಲೆಸ್ಟೈನ್, ಭಾರತದಂತಹ ದೇಶವು ಮತದಾನ ಪ್ರಕ್ರಿಯೆಯಿಂದ ಹೊರಗುಳಿಯುವುದು (Abstention)  ಎಂದರೆ  ಎಲ್ಲ ಜನರ” ಮಾನವ ಹಕ್ಕುಗಳು ದಮನವಾದಂತೆ ಎಂದು ಪ್ರತಿಕ್ರಿಯಿಸಿದೆ.  

 

ಹಿನ್ನೆಲೆ:

24 ಸದಸ್ಯರು ನಿರ್ಣಯದ ಪರವಾಗಿ ಮತ ಚಲಾಯಿಸಿದರೆ ಒಂಬತ್ತು ರಾಷ್ಟ್ರಗಳು ವಿರುದ್ಧ ಮತ ಚಲಾಯಿಸಿದ್ದು, ಭಾರತ ಸೇರಿದಂತೆ 14 ರಾಷ್ಟ್ರಗಳು ಮತದಾನದಿಂದ ದೂರ ಉಳಿದವು. ಈ ನಿರ್ಣಯವನ್ನು ಅಂಗೀಕರಿಸಿದ ನಂತರ ಇಸ್ರೇಲ್ನಿಂದ ಅಂತರರಾಷ್ಟ್ರೀಯ ಕಾನೂನು ಉಲ್ಲಂಘನೆಯ ಬಗ್ಗೆ ತನಿಖೆ ನಡೆಸಲು ಸ್ವತಂತ್ರ ತನಿಖಾ ಆಯೋಗವನ್ನು ಸ್ಥಾಪಿಸಲಾಗುವುದು.

 

ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ಬಗ್ಗೆ ಭಾರತದ ನೀತಿ ಕಾಲಾನಂತರದಲ್ಲಿ ಹೇಗೆ ವಿಕಸನಗೊಂಡಿದೆ?

ವಿಶ್ವದ ದೀರ್ಘಾವಧಿಯ ಸಂಘರ್ಷದ ಕುರಿತಾದ ಭಾರತದ ನೀತಿಯು ಮೊದಲ ನಾಲ್ಕು ದಶಕಗಳಲ್ಲಿ ನಿಸ್ಸಂದಿಗ್ಧವಾಗಿ ಪ್ಯಾಲೆಸ್ಟೈನ್ ಪರವಾಗಿರುವುದರಿಂದ, ಇಸ್ರೇಲ್‌ನೊಂದಿಗಿನ ಮೂರು ದಶಕಗಳ ಹಳೆಯ ಸ್ನೇಹ ಸಂಬಂಧಗಳೊಂದಿಗೆ ಉದ್ವಿಗ್ನ ಸಮತೋಲನ ಕ್ರಿಯೆಯು( a tense balancing act) ಸಾಗಿದೆ. ಇತ್ತೀಚಿನ ವರ್ಷಗಳಲ್ಲಿ, ಭಾರತದ ಸ್ಥಾನವನ್ನು ಇಸ್ರೇಲ್ ಪರವೆಂದು ಗ್ರಹಿಸಲಾಗಿದೆ.

 

1948 ರ ನಂತರ ಭಾರತದ ನೀತಿ:

1948 ರಲ್ಲಿ, ಇಸ್ರೇಲ್ ಸೃಷ್ಟಿಗೆ ಕಾರಣವಾದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪ್ಯಾಲೆಸ್ಟೈನ್ ನ  ವಿಭಜನಾ ಯೋಜನೆಗೆ ವಿರುದ್ಧವಾಗಿ ಮತ ಚಲಾಯಿಸಿದ 13 ದೇಶಗಳಲ್ಲಿ ಭಾರತ ಮಾತ್ರ ಅರಬ್-ಅಲ್ಲದ ದೇಶವಾಗಿತ್ತು.

 

 1. 1975 ರಲ್ಲಿ, ಭಾರತವು, ಪ್ಯಾಲೆಸ್ಟೈನ್ ಲಿಬರೇಶನ್ ಆರ್ಗನೈಜೇಷನ್ (PLO) ಅನ್ನು ಪ್ಯಾಲೇಸ್ಟಿನಿಯನ್ ಜನರ ಏಕೈಕ ಪ್ರತಿನಿಧಿಯಾಗಿ ಗುರುತಿಸಿದ ಮೊದಲ ಅರಬ್-ಅಲ್ಲದ ರಾಷ್ಟ್ರವಾಯಿತು.ಭಾರತವು PLO ಅನ್ನು ದೆಹಲಿಯಲ್ಲಿ ಕಚೇರಿ ತೆರೆಯಲು ಆಹ್ವಾನಿಸಿತು ಮತ್ತು ಐದು ವರ್ಷಗಳ ನಂತರ ಅದಕ್ಕೆ ರಾಜತಾಂತ್ರಿಕ ಸ್ಥಾನಮಾನವನ್ನು ನೀಡಿತು.
 2. 1988 ರಲ್ಲಿ, PLO ಪೂರ್ವ ಜೆರುಸಲೆಮ್ ಅನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡು ಪ್ಯಾಲೆಸ್ಟೈನ್ ಸ್ವತಂತ್ರ ರಾಜ್ಯವೆಂದು ಘೋಷಿಸಿದಾಗ, ಭಾರತವು ತಕ್ಷಣವೇ ಮಾನ್ಯತೆಯನ್ನು ನೀಡಿತು.

 

1992 ರ ನಂತರ ಭಾರತದ ನೀತಿ:

1992 ರಲ್ಲಿ ಇಸ್ರೇಲ್‌ನೊಂದಿಗಿನ ಸಂಬಂಧವನ್ನು ಸಾಮಾನ್ಯಗೊಳಿಸುವ ಭಾರತದ ನಿರ್ಧಾರದೊಂದಿಗೆ ಸಮತೋಲನವು ಪ್ರಾರಂಭವಾಯಿತು, ಇದು ಸೋವಿಯತ್ ಒಕ್ಕೂಟದ ವಿಘಟನೆಯ ಹಿನ್ನೆಲೆಯಲ್ಲಿ ಬಂದಿತು ಮತ್ತು 1990 ರಲ್ಲಿ ನಡೆದ ಮೊದಲ ಕೊಲ್ಲಿ ಯುದ್ಧದ  ಕಾರಣದಿಂದಾಗಿ ಪಶ್ಚಿಮ ಏಷ್ಯಾದ ಭೌಗೋಳಿಕ ರಾಜಕೀಯದಲ್ಲಿ ಭಾರಿ ಬದಲಾವಣೆಗಳು ಸಂಭವಿಸಿದವು.

1992 ರ ಜನವರಿಯಲ್ಲಿ ಟೆಲ್ ಅವೀವ್‌ನಲ್ಲಿ ಭಾರತೀಯ ರಾಯಭಾರ ಕಚೇರಿಯನ್ನು ತೆರೆಯುವ ಮೂಲಕ ಭಾರತವು ತನ್ನ ಹಿಂದಿನ ನಿಲುವನ್ನು ಕೊನೆಗೊಳಿಸಿತು.

 

2017 ರವರೆಗೆ ಭಾರತದ ನೀತಿ:

ಭಾರತವು 2017 ರ ವರಗೆ “ಪ್ಯಾಲೇಸ್ಟಿನಿಯನ್ ಹೋರಾಟವನ್ನು ಬೆಂಬಲಿಸುತ್ತಲೇ ಇತ್ತು ಮತ್ತು ಸುರಕ್ಷಿತ ಮತ್ತು ಮಾನ್ಯತೆ ಪಡೆದ ಗಡಿಗಳ ಅಕ್ಕಪಕ್ಕದಲ್ಲಿ ಶಾಂತಿಯಿಂದ ಇಸ್ರೇಲ್ ನೊಂದಿಗೆ ಬದುಕುವುದು, ಇದರ ಪರಿಣಾಮವಾಗಿ ಸಾರ್ವಭೌಮ, ಸ್ವತಂತ್ರ, ಕಾರ್ಯಸಾಧ್ಯವಾದ ಮತ್ತು ಯುನೈಟೆಡ್ ಪ್ಯಾಲೆಸ್ಟೈನ್ ರಾಜ್ಯವನ್ನು ಪೂರ್ವ ಜೆರುಸಲೆಮ್ ಅದರ ರಾಜಧಾನಿಯಾಗಿ ಸ್ಥಾಪಿಸಲು ಸಂಧಾನದ ಮೂಲಕ ಪರಿಹಾರ ಕಂಡುಕೊಳ್ಳಲು ಕರೆ ನೀಡಿತು, ”- ಇದುವೇ ಎರಡು ರಾಷ್ಟ್ರಗಳ ಪರಿಹಾರ(two- state solution) ಆಗಿತ್ತು.

 1. ನಂತರ ಅಂದಿನ ಪ್ರಧಾನಿ ಮನಮೋಹನ್ ಸಿಂಗ್ ಅವರು 2013 ರ ನವೆಂಬರ್‌ನಲ್ಲಿ ಈ ನಿಲುವನ್ನು ಸ್ಪಷ್ಟಪಡಿಸಿದರು. ಅಂದಿನ ರಾಷ್ಟ್ರಪತಿಗಳಾದ ಪ್ರಣಬ್ ಮುಖರ್ಜಿ ಅವರು ಸಹ 2015 ರ ಅಕ್ಟೋಬರ್‌ನಲ್ಲಿ ಇದೇ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.

 

2017 ರ ನಂತರ ಭಾರತದ ನೀತಿ:

2017 ರಲ್ಲಿ ಪ್ಯಾಲೇಸ್ಟಿನಿಯನ್ ಪ್ರಾಧಿಕಾರದ ಅಧ್ಯಕ್ಷ ಮಹಮೂದ್ ಅಬ್ಬಾಸ್ ದೆಹಲಿಗೆ ಭೇಟಿ ನೀಡಿದಾಗ ಭಾರತ ಪೂರ್ವ ಜೆರುಸಲೆಮ್ ಮತ್ತು ಗಡಿಗಳ ಉಲ್ಲೇಖಗಳನ್ನು ಕೈಬಿಟ್ಟಿತು. 2018 ರಲ್ಲಿ,  ಮೋದಿ ಅವರು ರಮಲ್ಲಾಗೆ ಭೇಟಿ ನೀಡಿದಾಗ, ಗಡಿಗಳ ಬಗ್ಗೆ ಅಥವಾ ಜೆರುಸಲೆಮ್ ಬಗ್ಗೆ ಯಾವುದೇ ನೇರ ಉಲ್ಲೇಖವಿಲ್ಲದೆ ಅವರು ಅದೇ ವಿಚಾರವನ್ನು ಪುನರುಚ್ಚರಿಸಿದರು.

 

ಇದು ಏನನ್ನು ಸೂಚಿಸುತ್ತದೆ?

ಪ್ರವೃತ್ತಿ ಸ್ಪಷ್ಟವಾಗಿದೆ – ಭಾರತದ ನಿರ್ಧಾರಗಳು ಇಸ್ರೇಲ್-ಪ್ಯಾಲೆಸ್ಟೈನ್ ಸಮಸ್ಯೆಗಳ ಬಗ್ಗೆ ಪ್ರಬುದ್ಧ ತಿಳುವಳಿಕೆ ಮತ್ತು ಮೌಲ್ಯಮಾಪನವನ್ನು ಆಧರಿಸಿವೆ ಮತ್ತು ನವದೆಹಲಿ ಈಗ ಅದೇ ವಿಧಾನವನ್ನು ಅನುಸರಿಸುತ್ತಿದೆ ಇಸ್ರೇಲ್ ಮತ್ತು ಪ್ಯಾಲೆಸ್ಟೈನ್ ನಡುವೆ ಈಗ ರಾಕೆಟ್ ಪ್ರಯೋಗಗಳು ನಡೆಯುತ್ತಿದ್ದರೂ ಸಹ ಭಾರತವು ಯಾವುದೇ ಒಂದು ಪಕ್ಷವನ್ನು ಆಯ್ಕೆ ಮಾಡಲು ನಿರಾಕರಿಸಿದೆ ಮತ್ತು ಕದನವಿರಾಮ ನೀಡುವ ಮೂಲಕ ಎರಡು ಕಡೆಯವರು ಮಾತುಕತೆ ನಡೆಸುವಂತೆ ಕರೆ ನೀಡಿದೆ.

ಇಸ್ರೇಲ್- ಪ್ಯಾಲೆಸ್ಟೈನ್ ಸಂಘರ್ಷದ ಕುರಿತು ಹೆಚ್ಚಿನ ವಿವರಗಳಿಗಾಗಿ, ಓದಿ:

 

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

ಶುಕ್ರಗ್ರಹಕ್ಕೆ ನಾಸಾದ ಎರಡು ಹೊಸ ಯೋಜನೆಗಳ ಘೋಷಣೆ:


(NASA announces two new missions to Venus)

ಸಂದರ್ಭ:

ಮೆಗೆಲ್ಲನ್ ಆರ್ಬಿಟರ್(Magellan orbiter) 1990 ರಲ್ಲಿ, ಅಮೆರಿಕ ಸಂಯುಕ್ತ ಸಂಸ್ಥಾನವು ಶುಕ್ರ ಗ್ರಹಕ್ಕೆ ಕಳುಹಿಸಿದ ಕೊನೆಯ ‘ಅನ್ವೇಷಣಾ ನೌಕೆಯಾಗಿದೆ’.

 

ಈಗ, ನಾಸಾ ಶುಕ್ರ ಗ್ರಹಕ್ಕೆ ಎರಡು ಹೊಸ ಯೋಜನೆಗಳನ್ನು ಘೋಷಿಸಿದೆ.

ಈ ಎರಡು ಸಹಕಾರಿ ಕಾರ್ಯಾಚರಣೆಗಳು ಶುಕ್ರನು ಹೇಗೆ ತನ್ನ ಮೇಲ್ಮೈಯಲ್ಲಿ ಸೀಸವನ್ನು ಕರಗಿಸುವ ಸಾಮರ್ಥ್ಯವನ್ನು ಹೊಂದಿರುವ ನರಕದಂತಹ ಪ್ರಪಂಚವಾಯಿತು ಎಂಬುದನ್ನು ಅರ್ಥಮಾಡಿಕೊಳ್ಳುವ ಗುರಿಯನ್ನು ಹೊಂದಿದೆ.

ಇವುಗಳ ಒಳಗೊಂಡಿರುವುದು:

 1. ಡಾವಿನ್ಸಿ ಪ್ಲಸ್ (Davinci+):

ಡಾವಿನ್ಸಿ ಪ್ಲಸ್ ಎಂಬುದು, ಉದಾತ್ತ ಅನಿಲಗಳು, ರಸಾಯನಶಾಸ್ತ್ರ ಮತ್ತು ಚಿತ್ರಣಗಳ ಆಳವಾದ ವಾತಾವರಣ ಹೊಂದಿರುವ ಶುಕ್ರನ ಸಂಶೋಧನೆ (Deep Atmosphere Venus Investigation of Noble gases, Chemistry, and Imaging : Davinci+). ಮತ್ತು ಈ ಮಿಷನ್ ಈ ಕೆಳಗಿನ ಉದ್ದೇಶಗಳನ್ನು ಹೊಂದಿರುತ್ತದೆ:

 1. ಶುಕ್ರವು ಹೇಗೆ ರೂಪುಗೊಂಡಿತು ಮತ್ತು ವಿಕಸನಗೊಂಡಿತು ಎಂಬ ಬಗ್ಗೆ ಮಾಹಿತಿ ಪಡೆಯಲು ಗ್ರಹದ ವಾತಾವರಣವನ್ನು ನಿರ್ಣಯಿಸುವುದು.
 2. ಶುಕ್ರ ಗ್ರಹದಲ್ಲಿ ಎಂದಾದರೂ ಸಾಗರವು ಉಪಸ್ಥಿತಿಯನ್ನು ಹೊಂದಿತ್ತೆ ಎಂದು ನಿರ್ಧರಿಸಲು.
 3. ಗೋಳಾಕಾರದ ಆಕಾರ’ (Tesserae) ಹೊಂದಿರುವ ಶುಕ್ರನ ಭೌಗೋಳಿಕ ವೈಶಿಷ್ಟ್ಯಗಳ ಮೊದಲ ಉನ್ನತ-ರೆಸಲ್ಯೂಶನ್ ಚಿತ್ರಗಳನ್ನು ಕಳುಹಿಸುವುದು (ಈ ವೈಶಿಷ್ಟ್ಯಗಳು ಭೂಮಿಯ ಮೇಲಿನ ಖಂಡಗಳಿಗೆ ಹೋಲುತ್ತದೆ).

 

 1. ವೆರಿಟಾಸ್ (Veritas) ಎನ್ನುವುದು ಶುಕ್ರ ಹೊರಸೂಸುವಿಕೆ, ರೇಡಿಯೋ ವಿಜ್ಞಾನ, ಇಎನ್‌ಎಸ್ಎಆರ್, ಸ್ಥಳಾಕೃತಿ ಮತ್ತು ಸ್ಪೆಕ್ಟ್ರೋಸ್ಕೋಪಿ’ (Venus Emissivity, Radio Science, InSAR, Topography, and Spectroscopy : VERITAS) ಗೆ ಸಂಕ್ಷಿಪ್ತ ರೂಪವಾಗಿದೆ.

ಅದರ ಭೌಗೋಳಿಕ ಇತಿಹಾಸವನ್ನು ಅರ್ಥಮಾಡಿಕೊಳ್ಳಲು ಮತ್ತು ಗ್ರಹವು ಭೂಮಿಯಿಂದ ಹೇಗೆ ವಿಭಿನ್ನವಾಗಿ ವಿಕಸನಗೊಂಡಿತು ಎಂಬುದನ್ನು ಸಂಶೋಧನೆ ಮಾಡಲು ಈ ಕಾರ್ಯಾಚರಣೆಯು ಶುಕ್ರನ ಮೇಲ್ಮೈಯನ್ನು ಅಧ್ಯಯನ ಮಾಡುತ್ತದೆ.

 1. ಈ ಕಾರ್ಯಾಚರಣೆಯಲ್ಲಿ, ಗ್ರಹದ ಮೇಲ್ಮೈಯಲ್ಲಿರುವ ಎತ್ತರದ ಸ್ಥಳಗಳನ್ನು ಪಟ್ಟಿ ಮಾಡಲು ಮತ್ತು ಗ್ರಹದಲ್ಲಿ ಜ್ವಾಲಾಮುಖಿಗಳು ಮತ್ತು ಭೂಕಂಪಗಳು ಸಂಭವಿಸುತ್ತದೆಯೆ ಅಥವಾ ಇಲ್ಲವೇ ಎಂಬುದನ್ನು ಕಂಡುಹಿಡಿಯಲು ಒಂದು ರೀತಿಯ ರೇಡಾರ್ ಅನ್ನು ಬಳಸಲಾಗುತ್ತದೆ.

 

ಶುಕ್ರ ಗ್ರಹದ ಕುರಿತು:

 1. ಶುಕ್ರವು ಸೌರಮಂಡಲದ ಎರಡನೇ ಗ್ರಹವಾಗಿದೆ ಮತ್ತು ರಚನೆಯಲ್ಲಿ ಭೂಮಿಯನ್ನು ಹೋಲುತ್ತದೆ, ಆದರೆ ಗಾತ್ರದಲ್ಲಿ ಭೂಮಿಗಿಂತ ಸ್ವಲ್ಪ ಚಿಕ್ಕದಾಗಿದೆ.
 2. ಅದರ ನಿರೀಕ್ಷಿತ ಭೂದೃಶ್ಯದ ಮೇಲೆ ಸ್ಥೂಲ ಮತ್ತು ವಿಷಕಾರಿ ವಾತಾವರಣದ ಒಂದು ಪದರವಿದೆ, ಇದು ಮುಖ್ಯವಾಗಿ ಇಂಗಾಲದ ಡೈಆಕ್ಸೈಡ್ ಮತ್ತು ಸಲ್ಫ್ಯೂರಿಕ್ ಆಮ್ಲದ ಮೋಡದ ಹನಿಗಳಿಂದ ಕೂಡಿದೆ. ಆದ್ದರಿಂದ ಈ ಗ್ರಹವನ್ನು ಭೂಮಿಯಿಂದ ವೀಕ್ಷಿಸಬಹುದಾಗಿದೆ.
 3. ಅನಿಯಂತ್ರಿತ ಹಸಿರುಮನೆ ಪರಿಣಾಮವನ್ನು ಒಳಗೊಂಡಂತೆ, ಅದರ ಮೇಲ್ಮೈ ತಾಪಮಾನವು 880°F (471 ° C) ತಲುಪುತ್ತದೆ, ಇದು ಸೀಸವನ್ನು ಕರಗಿಸಲು ಬೇಕಾದ ಗರಿಷ್ಠ ತಾಪಮಾನವನ್ನು ಹೊಂದಿದೆ.
 4. ಪೂರ್ವದಿಂದ ಪಶ್ಚಿಮಕ್ಕೆ, ಅಂದರೆ ಅಪ್ರದಕ್ಷಿಣಾಕಾರವಾಗಿ ತಿರುಗುವ ಎರಡು ಗ್ರಹಗಳಲ್ಲಿ ಶುಕ್ರವು ಒಂದು. ನಮ್ಮ ಸೌರವ್ಯೂಹದ ಇತರ ಎಲ್ಲ ಗ್ರಹಗಳಲ್ಲಿ ಯುರೇನಸ್ ಮತ್ತು ಶುಕ್ರ ಮಾತ್ರ ವಿರುದ್ಧ ದಿಕ್ಕಿನಲ್ಲಿ ತಿರುಗುತ್ತವೆ.
 5. ಈ ಗ್ರಹದ ಮತ್ತೊಂದು ವಿಶಿಷ್ಟತೆಯೆಂದರೆ ಅದರ ಹಗಲು-ರಾತ್ರಿ ಚಕ್ರ, ಅಂದರೆ ‘ಒಂದು ಕ್ರಾಂತಿಯಲ್ಲಿ ತೆಗೆದುಕೊಂಡ ಸಮಯಕ್ಕೆ ವಿರುದ್ಧವಾಗಿ ಸತತ ಎರಡು ಸೂರ್ಯೋದಯಗಳ ನಡುವಿನ ಸಮಯ’. ಶುಕ್ರ ಗ್ರಹದ ಮೇಲೆ ಹಗಲು-ರಾತ್ರಿ ಚಕ್ರವನ್ನು ಪೂರ್ಣಗೊಳಿಸಲು ಭೂಮಿಯ 117 ದಿನಗಳನ್ನು ತೆಗೆದುಕೊಳ್ಳುತ್ತದೆ, ಏಕೆಂದರೆ ಅದು ಸೂರ್ಯನ ಸುತ್ತ ತನ್ನ ಕಕ್ಷೆಯ ಹಾದಿಯ ವಿರುದ್ಧ ದಿಕ್ಕಿನಲ್ಲಿ ತಿರುಗುತ್ತದೆ.
 6. ಶುಕ್ರ ಗ್ರಹದ ತನ್ನ ಸುತ್ತ ತಿರುಗುವಿಕೆಯು (ಅಕ್ಷಭ್ರಮಣ) ಭೂಮಿಯ 243.0226 ದಿನಗಳಲ್ಲಿ ಪೂರ್ಣಗೊಳ್ಳುತ್ತದೆ. ಇದರರ್ಥ ಶುಕ್ರ ಗ್ರಹದಲ್ಲಿ ಒಂದು ದಿನ ಗ್ರಹದ ಒಂದು ವರ್ಷಕ್ಕಿಂತ ಅಧಿಕವಾಗಿರುತ್ತದೆ. ಶುಕ್ರ ಗ್ರಹವು ಭೂಮಿಯ 225 ದಿನಗಳಲ್ಲಿ ಸೂರ್ಯನ ಸುತ್ತ ಸಂಪೂರ್ಣ ಪ್ರದಕ್ಷಿಣೆಯನ್ನು(ಪರಿಭ್ರಮಣ) ಪೂರ್ಣಗೊಳಿಸುತ್ತದೆ.
 7. ಶುಕ್ರ ಗ್ರಹದ ಕೋರ್ ನ ವ್ಯಾಸವು 4,360 ಮೈಲಿ (7,000 ಕಿಮೀ) ಆಗಿದೆ ಇದನ್ನು ಭೂಮಿಯ ಕೋರ್ ಗೆ ಹೋಲಿಸಬಹುದಾಗಿದೆ.
 8. ಅಧ್ಯಯನದಲ್ಲಿ ಮಾಡಿದ ಲೆಕ್ಕಾಚಾರಗಳ ಪ್ರಕಾರ, ಶುಕ್ರ ಗ್ರಹದ ಅಕ್ಷೀಯ ಇಳಿಜಾರು ಅಥವಾ ಓರೆಯಾಗಿರುವ ಪ್ರಮಾಣ ಸುಮಾರು64 ಡಿಗ್ರಿ. ಭೂಮಿಯ ಅಕ್ಷೀಯ ಓರೆಯು ಭೂ ಪಥ ಲಂಬಕ್ಕೆ ಸುಮಾರು 23.5 ಡಿಗ್ರಿ ಮತ್ತು ಭೂ ಪಥಕ್ಕೆ 5 ಡಿಗ್ರಿ.

 

ಶುಕ್ರ ಗ್ರಹಕ್ಕೆ ಕೈಗೊಳ್ಳಲಾದ ಐತಿಹಾಸಿಕ ಕಾರ್ಯಾಚರಣೆಗಳು:

 1. ಮೆಗೆಲ್ಲನ್ (Magellan)– ನಾಸಾ ಮಿಷನ್. ಇದು 1994 ರಲ್ಲಿ ಕೊನೆಗೊಂಡಿತು.
 2. ವೀನಸ್ ಎಕ್ಸ್‌ಪ್ರೆಸ್ (Venus Express) – ಯುರೋಪಿಯನ್ ಮಿಷನ್ – ವಾಯುಮಂಡಲದ ವಿಜ್ಞಾನದ ಮೇಲೆ ಕೇಂದ್ರೀಕರಿಸಿದೆ.
 3. ಅಕಾಟ್ಸುಕಿ (Akatsuki)– ಜಪಾನೀಸ್ ಬಾಹ್ಯಾಕಾಶ ನೌಕೆ- ವಾಯುಮಂಡಲದ ವಿಜ್ಞಾನದ ಮೇಲೆ ಕೇಂದ್ರೀಕರಿಸಿದೆ.

 

ಭವಿಷ್ಯದ ಕಾರ್ಯಚರಣೆಗಳು:

ಥೀಸಸ್(Theseus)  ಮತ್ತು ಸ್ಪಿಕಾ (Spica) ಎಂಬ ಎರಡು ಖಗೋಳ ಪ್ರಸ್ತಾಪಗಳನ್ನು ಮತ್ತು ಎನ್ವಿಷನ್’(EnVision) ಎಂಬ ವೀನಸ್ ಮಿಷನ್ ಅನ್ನು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ (ESA) ಪರಿಗಣಿಸುತ್ತಿದೆ. ಇತರ ಪರಿಕಲ್ಪನೆಗಳನ್ನು ನಾಸಾಗೆ ನೀಡಲಾಗುತ್ತಿದೆ.

 

ವಿಷಯಗಳು:ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಎಂಟನೇ ಜಾಗತಿಕ ಸಾರಜನಕ ಸಮ್ಮೇಳನ:


(Eighth Global Nitrogen Conference)

 ಸಂದರ್ಭ:

8 ನೇ ಅಂತರರಾಷ್ಟ್ರೀಯ ಸಾರಜನಕ ಉಪಕ್ರಮ ಸಮ್ಮೇಳನವನ್ನು (International Nitrogen Initiative Conference -INI2020) ಜರ್ಮನಿಯ ಬರ್ಲಿನ್‌ನಲ್ಲಿ 2020ರ ಮೇ 3-7 ರ ವರೆಗೆ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ, ಸಾಂಕ್ರಾಮಿಕ ರೋಗದಿಂದಾಗಿ ಇದನ್ನು ಕಳೆದ ವರ್ಷ ರದ್ದುಪಡಿಸಲಾಯಿತು ಮತ್ತು ಇತ್ತೀಚೆಗೆ ವರ್ಚುವಲ್ ಸ್ವರೂಪದಲ್ಲಿ ನಡೆಸಲಾಯಿತು.

 

ಅಂತರರಾಷ್ಟ್ರೀಯ ಸಾರಜನಕ ಉಪಕ್ರಮ ಸಮ್ಮೇಳನದ ಬಗ್ಗೆ:

 1. ಪರಿಸರದ ಸಮಸ್ಯೆಗಳ ವೈಜ್ಞಾನಿಕ ಸಮಿತಿಯ (Scientific Committee on Problems of the Environment -SCOPE) ಪ್ರಾಯೋಜಕತ್ವದಲ್ಲಿ ಮತ್ತು ಅಂತರರಾಷ್ಟ್ರೀಯ ಭೂಗೋಳ-ಜೀವಗೋಳ ಕಾರ್ಯಕ್ರಮದ (the International Geosphere-Biosphere Program -IGBP) ಮೂಲಕ 2003 ರಲ್ಲಿಅಂತರರಾಷ್ಟ್ರೀಯ ಸಾರಜನಕ ಉಪಕ್ರಮವನ್ನು ಸ್ಥಾಪಿಸಲಾಯಿತು.
 2. ಇದು ಒಂದು ತ್ರೈಮಾಸಿಕ ಕಾರ್ಯಕ್ರಮವಾಗಿದ್ದು, ಕೃಷಿ, ಕೈಗಾರಿಕೆ, ಸಂಚಾರ, ಮಣ್ಣು, ನೀರು ಮತ್ತು ಗಾಳಿಯಲ್ಲಿ ಪ್ರತಿಕ್ರಿಯಾತ್ಮಕ ಸಾರಜನಕ ಸಂಯುಕ್ತಗಳೊಂದಿಗೆ ವ್ಯವಹರಿಸುವ ವಿಶ್ವದಾದ್ಯಂತದ ವಿಜ್ಞಾನಿಗಳನ್ನು ಒಟ್ಟುಗೂಡಿಸುತ್ತದೆ.
 3. ಉದ್ದೇಶ: ಪ್ರತಿಕ್ರಿಯಾತ್ಮಕ ಸಾರಜನಕದ ಭವಿಷ್ಯದ ಸಮಗ್ರ ನಿರ್ವಹಣೆಯನ್ನು ಸುಧಾರಿಸಲು ನೀತಿ ನಿರೂಪಕರು ಮತ್ತು ಇತರ ಸಂಬಂಧಿತ ಮಧ್ಯಸ್ಥಗಾರರಲ್ಲಿ ಫಲಿತಾಂಶಗಳು, ಆಲೋಚನೆಗಳು ಮತ್ತು ದೃಷ್ಟಿಕೋನಗಳ ವಿನಿಮಯವನ್ನು ಉತ್ತೇಜಿಸುವುದು.
 4. ಈ ಕಾರ್ಯಕ್ರಮವು ಪ್ರಸ್ತುತ ಭವಿಷ್ಯದ ಭೂಮಿಯ ನಿರಂತರ ಪಾಲುದಾರನಾಗಿದೆ.

 

ಅಗತ್ಯ ಪೋಷಕಾಂಶವಾಗಿ ಸಾರಜನಕ:

 1. ಸಾರಜನಕವು ವಾತಾವರಣದಲ್ಲಿ ಹೆಚ್ಚು ಹೇರಳವಾಗಿರುವ ಅಂಶವಾಗಿದೆ ಮತ್ತು ಇದು ಹೆಚ್ಚಿನ ಸಸ್ಯಗಳಿಗೆ ಪ್ರಮುಖ ಮ್ಯಾಕ್ರೋನ್ಯೂಟ್ರಿಯೆಂಟ್ (Macronutrient) ಆಗಿದೆ.
 2. ಭೂಮಿಯ ವಾತಾವರಣದಲ್ಲಿ ಕಂಡುಬರುವ ಶುಷ್ಕ ಗಾಳಿಯಲ್ಲಿನ ಸಾರಜನಕದ ಪ್ರಮಾಣವು 78% ಕ್ಕಿಂತ ಸ್ವಲ್ಪ ಹೆಚ್ಚಾಗಿದೆ. ಆದರೆ ಈ ವಾತಾವರಣದ ಸಾರಜನಕ, ಅಥವಾ ಡೈನಿಟ್ರೋಜನ್ (dinitrogen) ನಿಷ್ಕ್ರಿಯವಾಗಿದೆ, ಮತ್ತು ಇದನ್ನು ಸಸ್ಯಗಳಿಂದ ನೇರವಾಗಿ ಬಳಸಲಾಗುವುದಿಲ್ಲ.
 3.  ಆದ್ದರಿಂದ, ಸಾರಜನಕ-ಫಿಕ್ಸಿಂಗ್ ರೈಜೋಬಿಯಾದಂತಹ ಬ್ಯಾಕ್ಟೀರಿಯಾಗಳು ಸಸ್ಯಗಳು ಮತ್ತು ಮಣ್ಣಿಗೆ ಸಾರಜನಕವನ್ನು ಅಮೋನಿಯಾ ಮತ್ತು ನೈಟ್ರೇಟ್‌ನಂತಹ ಪ್ರತಿಕ್ರಿಯಾತ್ಮಕ ಸಂಯುಕ್ತಗಳ ರೂಪದಲ್ಲಿ ಒದಗಿಸುತ್ತವೆ. ಸಾರಜನಕ-ಫಿಕ್ಸಿಂಗ್ ಬ್ಯಾಕ್ಟೀರಿಯಾವು ದ್ವಿದಳ ಧಾನ್ಯದ ಸಸ್ಯಗಳೊಂದಿಗೆ ಸಹಜೀವನ ನಡೆಸುತ್ತವೆ.

 

ಸಾರಜನಕವು ಪೋಷಕಾಂಶದಿಂದ ಮಾಲಿನ್ಯಕಾರಕಕ್ಕೆ ಹೇಗೆ ಬದಲಾಗುತ್ತದೆ ಮತ್ತು ಅದು ಆರೋಗ್ಯ ಮತ್ತು ಪರಿಸರದ ಮೇಲೆ ಹೇಗೆ ಪರಿಣಾಮ ಬೀರುತ್ತದೆ?

 1.  ಕೃಷಿ ಭೂಮಿಯಿಂದ ಬಿಡುಗಡೆಯಾಗುವ ಸಾರಜನಕ ಸಂಯುಕ್ತಗಳು ವಿಶ್ವಾದ್ಯಂತ ನೀರಿನ ಮಾಲಿನ್ಯದ ಸಮಸ್ಯೆಗಳನ್ನು ಉಂಟುಮಾಡುತ್ತವೆ, ಆದರೆ ಕೈಗಾರಿಕೆ, ಕೃಷಿ ಮತ್ತು ವಾಹನಗಳಿಂದ ಸಾರಜನಕ ಹೊರಸೂಸುವಿಕೆಯು ವಾಯುಮಾಲಿನ್ಯಕ್ಕೆ ದೊಡ್ಡ ಕೊಡುಗೆ ನೀಡುತ್ತದೆ.
 2. ಮಣ್ಣಿನಲ್ಲಿರುವ 80% ಕ್ಕಿಂತ ಹೆಚ್ಚು ಸಾರಜನಕವನ್ನು ಮಾನವರು ಬಳಸುವುದಿಲ್ಲ. ಆದರೆ ಪ್ರಾಣಿಗಳಿಗೆ ಆಹಾರಕ್ಕಾಗಿ ನಾಲ್ಕೈದು ಭಾಗದಷ್ಟು ಸಾರಜನಕವನ್ನು ಬಳಸಲಾಗುತ್ತದೆ. ಕೇವಲ ಆರು ಪ್ರತಿಶತದಷ್ಟು ಸಾರಜನಕವು ಮಾಂಸಾಹಾರಿ ಆಹಾರದ ಮೂಲಕ ಮನುಷ್ಯರನ್ನು ಸೇರುತ್ತದೆ, ಆದರೆ ಸಸ್ಯಾಹಾರಿ ಆಹಾರದ ಮೂಲಕ ಸುಮಾರು 20% ಸಾರಜನಕವನ್ನು ಮಾನವರು ಸೇವಿಸುತ್ತಾರೆ.

 ಸಾರಜನಕವನ್ನು ಪರಿಸರಕ್ಕೆ ಬಿಡುಗಡೆ ಮಾಡಿದಾಗ ಮತ್ತು ಇತರ ಸಾವಯವ ಸಂಯುಕ್ತಗಳೊಂದಿಗೆ ಪ್ರತಿಕ್ರಿಯಿಸಿದಾಗ ಅದು ಮಾಲಿನ್ಯಕಾರಕವಾಗಿ ಪರಿವರ್ತನೆಗೊಳ್ಳುತ್ತದೆ. ಸಾರಜನಕವು ಮಾಲಿನ್ಯಕಾರಕವಾಗಿ ವಾತಾವರಣಕ್ಕೆ ಬಿಡುಗಡೆಯಾಗುತ್ತದೆ, ನದಿಗಳು, ಸರೋವರಗಳು ಅಥವಾ ಅಂತರ್ಜಲದಂತಹ ನೀರಿನ ಮೂಲಗಳಲ್ಲಿ ಕರಗುತ್ತದೆ ಅಥವಾ ಮಣ್ಣಿನಲ್ಲಿ ಉಳಿಯುತ್ತದೆ.

 

ಪರಿಸರದ ಮೇಲೆ ಸಾರಜನಕ ಮಾಲಿನ್ಯದ ಪರಿಣಾಮ:

 1.  ಇದು ನಮ್ಮ ಜಲಮಾರ್ಗಗಳು ಮತ್ತು ಸಾಗರಗಳಲ್ಲಿ ಹಾನಿಕಾರಕ ಪಾಚಿ ಹೂವುಗಳ ಉತ್ಪಾದನೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ; ಈ ಪಾಚಿಗಳು ಮಾನವರಿಗೆ ಮತ್ತು ಜಲಚರಗಳಿಗೆ ಹಾನಿಕಾರಕ ಜೀವಾಣುಗಳನ್ನು ಉತ್ಪತ್ತಿ ಮಾಡುತ್ತವೆ ಮತ್ತು ಕರಾವಳಿ ಪ್ರದೇಶಗಳಲ್ಲಿನ ಮೀನುಗಾರಿಕೆ ಮತ್ತು ಜೀವವೈವಿಧ್ಯತೆಯ ಮೇಲೆ ಪರೋಕ್ಷವಾಗಿ ಪರಿಣಾಮ ಬೀರುತ್ತವೆ.
 2. ಕುಡಿಯುವ ನೀರಿನ ಮಾಲಿನ್ಯ: ಯುರೋಪಿನಲ್ಲಿ 10 ಮಿಲಿಯನ್ ಜನರು ಶಿಫಾರಸು ಮಾಡಿದ ನೈಟ್ರೇಟ್ ಸಾಂದ್ರತೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಕುಡಿಯುವ ನೀರಿಗೆ ಒಡ್ಡಿಕೊಳ್ಳುತ್ತಾರೆ. ಇದು ಮಾನವನ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
 3. ಆಹಾರ ಭದ್ರತೆ: ಸಾರಜನಕ ಗೊಬ್ಬರಗಳ ಅತಿಯಾದ ಬಳಕೆಯು ಮಣ್ಣಿನ ಪೋಷಕಾಂಶಗಳ ಸವಕಳಿಗೆ ಕಾರಣವಾಗುತ್ತದೆ. ಕೃಷಿಯೋಗ್ಯ ಭೂಮಿಯನ್ನು ಕಳೆದುಕೊಳ್ಳುವುದು ಒಂದು ಪ್ರಮುಖ ಜಾಗತಿಕ ಸಮಸ್ಯೆಯಾಗಿದೆ, ಏಕೆಂದರೆ ಹೆಚ್ಚುತ್ತಿರುವ ಜನಸಂಖ್ಯೆಯನ್ನು ಪೋಷಣೆ ಮಾಡಲು ಜಗತ್ತಿಗೆ ಹೆಚ್ಚಿನ ಆಹಾರ ಧಾನ್ಯಗಳು ಬೇಕಾಗುತ್ತವೆ.
 4. ನೈಟ್ರಸ್ ಆಕ್ಸೈಡ್ ಮೂಲಭೂತವಾಗಿ ಒಂದು ಹಸಿರುಮನೆ ಅನಿಲವಾಗಿದ್ದು ಅದರ ಬಿಡುಗಡೆಯು ಪರಿಸರಕ್ಕೆ ಹಾನಿಕಾರಕವಾಗಿದೆ.

 

 

 

ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಮುಳುಗುತ್ತಿರುವ ಸರಕುಸಾಗಣೆ ಹಡಗಿನಿಂದ ತೈಲ ಸೋರಿಕೆಯನ್ನು ತಡೆಯಲು ಪ್ರಯತ್ನಿಸುತ್ತಿರುವ ಶ್ರೀಲಂಕಾ:


ಸಂದರ್ಭ:

ರಾಸಾಯನಿಕಗಳು ಮತ್ತು ಪ್ಲಾಸ್ಟಿಕ್‌ಗಳಿಂದ ತುಂಬಿದ ಸಿಂಗಾಪುರ ನೋಂದಾಯಿತ MV X -ಪ್ರೆಸ್ ಪರ್ಲ್ ಎಂಬ ಸರಕುಸಾಗಣೆ ಹಡಗು ಬೆಂಕಿ ಹೊತ್ತುಕೊಂಡು ಮೇ 20 ರಂದು ಸ್ಫೋಟಿಸಿತು. ಈ ಘಟನೆಯ ನಂತರ, ಶ್ರೀಲಂಕಾದ ಕಡಲತೀರಗಳಲ್ಲಿ ಟನ್ಗಳಷ್ಟು ಪ್ಲಾಸ್ಟಿಕ್ ಉಂಡೆಗಳು (Pellet)  ಕಂಡುಬಂದಿವೆ.

 

ಸಿದ್ಧತೆಗಳು:

 ದೇಶದ ಸಮುದ್ರ ಪರಿಸರ ಸಂರಕ್ಷಣಾ ಪ್ರಾಧಿಕಾರವು (Marine Environment Protection Authority- MEPA) ಈ ಘಟನೆಯನ್ನು ಶ್ರೀಲಂಕಾದ ಇತಿಹಾಸದಲ್ಲಿ ಅತ್ಯಂತ ಭೀಕರ ಪರಿಸರ ವಿಪತ್ತುಗಳಲ್ಲಿ ಒಂದಾಗಿದೆ  ಎಂದು ಹೇಳಿದೆ. ಹಡಗಿನಿಂದ ಸಂಭವನೀಯ ಸೋರಿಕೆಯನ್ನು ಎದುರಿಸಲು MEPA ‘ತೈಲ ಸೋರಿಕೆ ಧಾರಕ ಬೂಮ್‌ಗಳನ್ನು’ ಸಿದ್ಧಪಡಿಸಿದೆ. ಅಧಿಕಾರಿಗಳ ಪ್ರಕಾರ, ಹಡಗಿನ ಇಂಧನ ಟ್ಯಾಂಕ್ 350 ಟನ್ ತೈಲವನ್ನು ಹೊಂದಿತ್ತು.

 

ತೈಲ ಸೋರಿಕೆ ಎಂದರೇನು?

‘ತೈಲ ಸೋರಿಕೆ’  (Oil Spill) ಯನ್ನು ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆ (OECD)ಯು, ಇದು ಆಕಸ್ಮಿಕವಾಗಿ ಅಥವಾ ಉದ್ದೇಶಪೂರ್ವಕವಾಗಿ ತೈಲದ ಹೊರಸೂಸುವಿಕೆಯಾಗಿದ್ದು, ಅದು ಜಲಮೂಲಗಳ ಮೇಲ್ಮೈಯಲ್ಲಿ ದ್ರವ್ಯರಾಶಿಯಾಗಿ ತೇಲುತ್ತದೆ ಮತ್ತು ಗಾಳಿ, ಪ್ರವಾಹಗಳು ಮತ್ತು ಉಬ್ಬರವಿಳಿತದ ಅಲೆಗಳೊಂದಿಗೆ ವಾತಾವರಣದಲ್ಲಿ ಸಾಗಿಸಲ್ಪಡುವ ತೈಲ ಎಂದು ವ್ಯಾಖ್ಯಾನಿಸಿದೆ.

 1. ತೈಲ ಸೋರಿಕೆಗಳು ಭೂಮಿ, ಗಾಳಿ ಮತ್ತು ನೀರನ್ನು ಕಲುಷಿತಗೊಳಿಸಬಹುದು, ಆದರೂ ಈ ಪದವನ್ನು ಹೆಚ್ಚಾಗಿ ಸಮುದ್ರದಲ್ಲಿ ಉಂಟಾಗುವ ತೈಲ ಸೋರಿಕೆಗಳನ್ನು ಉಲ್ಲೇಖಿಸಲು ಬಳಸಲಾಗುತ್ತದೆ.

 

ತೈಲ ಸೋರಿಕೆಯ ಪರಿಣಾಮಗಳು:

 1. ಪರಿಸರ ವ್ಯವಸ್ಥೆಗಳ ನಾಶ: ತೈಲ ಸೋರಿಕೆಯು ತಾತ್ಕಾಲಿಕ, ಆದರೆ ಪ್ರಾಣಿಗಳು ಮತ್ತು ಮೀನುಗಳಿಗೆ ಆವಾಸಸ್ಥಾನಗಳಿಗೆ ತೀವ್ರ ಹಾನಿಯನ್ನುಂಟುಮಾಡುತ್ತದೆ. ಭಾರೀ ತೈಲವು ಜೀವಿಗಳ ಅಗತ್ಯ ಕಾರ್ಯಗಳಾದ ಉಸಿರಾಟ, ಆಹಾರ ಮತ್ತು ಶಾಖ ನಿಯಂತ್ರಣದ ಮೇಲೆ ಪರಿಣಾಮ ಬೀರುತ್ತದೆ.
 2. ಕಲುಷಿತ ನೀರನ್ನು ಕುಡಿಯುವುದು ಅಥವಾ ಕಲುಷಿತ ಧೂಳಿನ ಕಣಗಳನ್ನು ಉಸಿರಾಡುವುದು ಮುಂತಾದ ಚದುರಿದ ತೈಲ ಘಟಕಗಳಿಂದ ಕಲುಷಿತಗೊಂಡ ಪರಿಸರಕ್ಕೆ ನೇರ ಒಡ್ಡಿಕೊಳ್ಳುವುದರಿಂದ ಜೀವಂತ ಜೀವಿಗಳ ಮೇಲೆ ಪರಿಣಾಮ ಬೀರುವ ಅಪಾಯವಿದೆ.
 3.  ಸಸ್ಯವರ್ಗದ ಮೇಲಿನ ಪರಿಣಾಮಗಳು: ತೈಲ ಸೋರಿಕೆಗಳು ಕರಾವಳಿ ಜೌಗು ಪ್ರದೇಶಗಳು, ಮ್ಯಾಂಗ್ರೋವ್ ಕಾಡುಗಳು ಅಥವಾ ಇತರ ಜೌಗು ಪ್ರದೇಶಗಳನ್ನು ತಲುಪಿದರೆ, ನಾರಿನ ಸಸ್ಯಗಳು ಮತ್ತು ಹುಲ್ಲುಗಳು ಈ ತೈಲವನ್ನು ಹೀರಿಕೊಳ್ಳುತ್ತವೆ, ಇದು ಸಸ್ಯಗಳನ್ನು ಹಾನಿಗೊಳಿಸುತ್ತದೆ ಮತ್ತು ಈ ಪ್ರದೇಶವನ್ನು ವನ್ಯಜೀವಿಗಳಿಗೆ ವಾಸಿಸಲು ಸೂಕ್ತವಲ್ಲದ ಆವಾಸಸ್ಥಾನವನ್ನಾಗಿ ಮಾಡುತ್ತದೆ.
 4. ಸಮುದ್ರ ಜೀವನದ ಮೇಲೆ: ತೈಲ ಸೋರಿಕೆಯು ಹೆಚ್ಚಾಗಿ ಸಮುದ್ರ ಸಸ್ತನಿಗಳಾದ ತಿಮಿಂಗಿಲಗಳು, ಡಾಲ್ಫಿನ್ಗಳು, ಸೀಲುಗಳು ಮತ್ತು ಸಮುದ್ರ ಒಟರ್ ಗಳ(sea otters) ಸಾವಿಗೆ ಕಾರಣವಾಗುತ್ತದೆ.
 5. ಪಕ್ಷಿಗಳ ಮೇಲೆ: ತೈಲ ಸೋರಿಕೆಯು ಪಕ್ಷಿಗಳ ಸಂತಾನೋತ್ಪತ್ತಿ ಸ್ಥಳಗಳನ್ನು ಸಹ ಹಾನಿಗೊಳಿಸುತ್ತದೆ, ಇದು ಇಡೀ ಪಕ್ಷಿ ಪ್ರಭೇದಗಳ ಮೇಲೆ ಗಂಭೀರ ಮತ್ತು ದೀರ್ಘಕಾಲೀನ ಪರಿಣಾಮಗಳನ್ನು ಬೀರುತ್ತದೆ.

 

ಆರ್ಥಿಕತೆಯ ಮೇಲೆ ತೈಲ ಸೋರಿಕೆಯ ಪರಿಣಾಮ:

 1. ತೈಲ ಸೋರಿಕೆಯು ಕಡಲತೀರಗಳು ಮತ್ತು ಜನರು ವಾಸಿಸುವ ಕರಾವಳಿ ಪ್ರದೇಶಗಳ ಮಾಲಿನ್ಯಕ್ಕೆ ಕಾರಣವಾಗುತ್ತದೆ, ಇದು ಪ್ರವಾಸೋದ್ಯಮ ಮತ್ತು ವಾಣಿಜ್ಯೋದ್ಯಮದ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ.
 2. ಸಮುದ್ರದ ನೀರಿನ ಮೇಲೆ ಅವಲಂಬಿತವಾಗಿರುವ ವಿದ್ಯುತ್ ಸ್ಥಾವರಗಳು ಮತ್ತು ಇತರ ಉಪಯುಕ್ತತೆಗಳು ತೈಲ ಸೋರಿಕೆಯಿಂದ ಗಂಭೀರವಾದ ಪರಿಣಾಮವನ್ನು ಎದುರಿಸುತ್ತವೆ.
 3. ದೊಡ್ಡ ಪ್ರಮಾಣದ ತೈಲ ಸೋರಿಕೆಯ ನಂತರ, ವಾಣಿಜ್ಯ ಮೀನುಗಾರಿಕೆಯನ್ನು ತಕ್ಷಣವೇ ಸ್ಥಗಿತಗೊಳಿಸಲಾಗುತ್ತದೆ.

 

ತೈಲ ಸೋರಿಕೆಯನ್ನು ಸ್ವಚ್ಛಗೊಳಿಸುವ ವಿಧಾನಗಳು:

 1. ಧಾರಕ ಬೂಮ್‌ಗಳು(Containment Booms): ತೈಲ ಹರಡುವಿಕೆಯನ್ನು ನಿರ್ಬಂಧಿಸಲು ಮತ್ತು ಅದನ್ನು ಚೇತರಿಸಿಕೊಳ್ಳಲು, ತೆಗೆದುಹಾಕಲು ಅಥವಾ ಚದುರಿಸಲು ಬೂಮ್ಸ್ ಎಂದು ಕರೆಯಲ್ಪಡುವ ತೇಲುವ ಅಡೆತಡೆಗಳನ್ನು ಬಳಸಲಾಗುತ್ತದೆ.
 2. ಸ್ಕಿಮ್ಮರ್‌ಗಳು (Skimmers): ಇವು ನೀರಿನ ಮೇಲ್ಮೈಯಿಂದ ಚೆಲ್ಲಿದ ಎಣ್ಣೆಯನ್ನು ಭೌತಿಕವಾಗಿ ಬೇರ್ಪಡಿಸಲು ಬಳಸುವ ಸಾಧನಗಳಾಗಿವೆ.
 3. ಸೋರ್ಬೆಂಟ್ಸ್(Sorbents): ನೀರಿನಿಂದ ತೈಲವನ್ನು ಹೀರಿಕೊಳ್ಳಲು ವಿವಿಧ ಸೋರ್ಬೆಂಟ್‌ಗಳನ್ನು (ಉದಾ., ಒಣಹುಲ್ಲಿನ, ಜ್ವಾಲಾಮುಖಿ ಬೂದಿ ಮತ್ತು ಪಾಲಿಯೆಸ್ಟರ್ ನಿರ್ಮಿತ ಪ್ಲಾಸ್ಟಿಕ್ ಜರಡಿ) ಬಳಸಲಾಗುತ್ತದೆ.
 4. ಚದುರಿಸುವ ಏಜೆಂಟ್‌ಗಳು (Dispersing agents): ಇವು ಎಣ್ಣೆಯಂತಹ ದ್ರವಗಳನ್ನು ಸಣ್ಣ ಹನಿಗಳಾಗಿ ಒಡೆಯಲು ಬಳಸುವ ಸರ್ಫ್ಯಾಕ್ಟಂಟ್ (surfactants) ಅಥವಾ ಸಂಯುಕ್ತಗಳಾಗಿವೆ. ಇವು ಸಾಗರದಲ್ಲಿ ತೈಲದ ನೈಸರ್ಗಿಕ ಪ್ರಸರಣವನ್ನು ವೇಗಗೊಳಿಸುತ್ತದೆ.
 5. ಜೈವಿಕ-ಏಜೆಂಟ್(Bio-agents): ಪೌಷ್ಟಿಕಾಂಶಗಳು, ಕಿಣ್ವಗಳು ಅಥವಾ ಸೂಕ್ಷ್ಮಾಣುಜೀವಿಗಳಾದ ಅಲ್ಕಾನಿವೊರಾಕ್ಸ್ ಬ್ಯಾಕ್ಟೀರಿಯಾ ಅಥವಾ ಮೆಥೈಲೊಸೆಲ್ಲಾ ಸಿಲ್ವೆಸ್ಟ್ರಿಸ್, ತೈಲದ ನೈಸರ್ಗಿಕ ಜೈವಿಕ ವಿಘಟನೆಯ ಪ್ರಮಾಣವನ್ನು ವೇಗಗೊಳಿಸುತ್ತದೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos