ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 1:
1. ವೀರ್ ಸಾವರ್ಕರ್.
2.ವಸಾಹತುಶಾಹಿ ಅವಧಿಯಲ್ಲಿ ನಮೀಬಿಯಾದಲ್ಲಿ ನಡೆದ ನರಮೇಧವನ್ನು ಅಂಗೀಕರಿಸಿದ ಜರ್ಮನಿ.
3. ವರದಕ್ಷಿಣೆ ಸಾವುಗಳಿಗೆ ಸಂಬಂಧಿಸಿದ ಸೆಕ್ಷನ್ 304-B ಯ ವ್ಯಾಪ್ತಿಯನ್ನು ವಿಸ್ತರಿಸಿದ ಸುಪ್ರೀಮ್ ಕೋರ್ಟ್.
ಸಾಮಾನ್ಯ ಅಧ್ಯಯನ ಪತ್ರಿಕೆ 2:
1. ಭಾರತೀಯ ಆಡಳಿತ ಸೇವೆ (ಕೇಡರ್) ನಿಯಮಗಳ, 1954 ರ ನಿಯಮ 6 (I).
2. ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಮಕ್ಕಳಿಗೆ ನಗದು ನೆರವು.
3. ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆಗಳು ಯಾವುವು?
4. ವೈರಸ್ ನ ಮೂಲದ ಬಗ್ಗೆ ತನಿಖೆ ನಡೆಸಲು ಆದೇಶ ನೀಡಿದ ಬೈಡನ್.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
1. ಜಯಂತಿ (ಜೀರುಂಡೆ).
ಸಾಮಾನ್ಯ ಅಧ್ಯಯನ ಪತ್ರಿಕೆ : 1
ವಿಷಯಗಳು: ಆಧುನಿಕ ಭಾರತದ ಇತಿಹಾಸ- ಹದಿನೆಂಟನೇ ಶತಮಾನದ ಮಧ್ಯಭಾಗದಿಂದ ಇಂದಿನವರೆಗಿನ- ಮಹತ್ವದ ಘಟನೆಗಳು, ವ್ಯಕ್ತಿತ್ವಗಳು, ಸಮಸ್ಯೆಗಳು.
ವೀರ್ ಸಾವರ್ಕರ್:
ಸಂದರ್ಭ:
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಹಿಂದುತ್ವ ಸಿದ್ಧಾಂತದ ಪ್ರವರ್ತಕರಾದ ವೀರ ಸಾವರ್ಕರ್ ಅವರ ಜನ್ಮಜಯಂತಿಯಾದ ಮೇ 28ರಂದು ಸಾವರ್ಕರ್ ಅವರಿಗೆ ಗೌರವ ಸಲ್ಲಿಸಿದರು.
ವೀರ್ ಸಾವರ್ಕರ್ & ಅವರ ಕೊಡುಗೆಗಳ ಕುರಿತು:
- 1883 ರ ಮೇ 28 ರಂದು ಮಹಾರಾಷ್ಟ್ರದ ನಾಸಿಕ್‌ನ ಭಾಗೂರ್ ಎಂಬ ನಗರದಲ್ಲಿ ಜನಿಸಿದರು.
- ವಿದೇಶಿ ವಸ್ತುಗಳ ಬಳಕೆಯ ವಿರೋಧಿಯಾಗಿದ್ದ ಅವರು ಸ್ವದೇಶಿ ಕಲ್ಪನೆಯನ್ನು ಪ್ರಚುರಪಡಿಸಿದರು ಹಾಗೂ 1905 ರಲ್ಲಿ ದಸರಾ ಆಚರಣೆಯ ಸಂದರ್ಭದಲ್ಲಿ ವಿದೇಶಿ ವಸ್ತುಗಳನ್ನು ಸುಟ್ಟುಹಾಕಿದರು.
ಸಾಮಾಜಿಕ ಸುಧಾರಣೆಗಳು:
- ಅವರು ನಾಸ್ತಿಕತೆ ಮತ್ತು ವೈಚಾರಿಕತೆಯನ್ನು ಸಾಧಿಸಿದರು ಮತ್ತು ಸಾಂಪ್ರದಾಯಿಕ ಹಿಂದೂ ನಂಬಿಕೆಯನ್ನು ಸಹ ತಿರಸ್ಕರಿಸಿದರು. ವಾಸ್ತವವಾಗಿ, ಅವರು ಗೋವಿನ ಪೂಜೆ ಅಥವಾ ಆರಾಧನೆಯನ್ನು ಮೂಢ ನಂಬಿಕೆ ಎಂದು ನಿರಾಕರಿಸಿದರು.
- ರತ್ನಗಿರಿಯಲ್ಲಿ ಅಸ್ಪೃಶ್ಯತೆಯನ್ನು ತೊಡೆದುಹಾಕುವ ದಿಸೆಯಲ್ಲಿ ಸಾವರ್ಕರ್ ಅವರು ಅವಿರತವಾಗಿ ಶ್ರಮಿಸಿದರು.
- ಪ್ರಮುಖವಾಗಿ, ಅವರು ಮಾಡಿದ ಕಾರ್ಯಗಳನ್ನು ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ್ ಅಂಬೇಡ್ಕರ್ ರವರು ಭಗವಾನ್ ಬುದ್ಧರ ಕಾರ್ಯಗಳಿಗೆ ಹೋಲಿಸಿದ್ದಾರೆ.
ಅವರು ನಿಕಟವಾಗಿ ಸಂಬಂಧ ಹೊಂದಿದ್ದ ಕೆಲವು ಸಂಘಟನೆಗಳು:
- ವಿನಾಯಕ ಸಾವರ್ಕರ್ ರವರು 1937 ರಿಂದ 1943 ರ ವರೆಗೆ ಹಿಂದೂ ಮಹಾಸಭಾದ ಅಧ್ಯಕ್ಷರಾಗಿದ್ದರು.
1939 ರ ಅಕ್ಟೋಬರ್ 22 ರಂದು ಕಾಂಗ್ರೆಸ್ ಸಚಿವರು ರಾಜೀನಾಮೆ ನೀಡಿದಾಗ, ಹಿಂದೂ ಮಹಾಸಭಾ ಅವರ ನಾಯಕತ್ವದಲ್ಲಿ ಸಿಂಧ್, ಬಂಗಾಳ ಮತ್ತು NWFP (ವಾಯವ್ಯ ಗಡಿ ಪ್ರಾಂತ್ಯಗಳು) ಸೇರಿದಂತೆ ಮುಂತಾದ ಪ್ರಾಂತ್ಯಗಳಲ್ಲಿ ಸರ್ಕಾರ ರಚಿಸಲು ಮುಸ್ಲಿಂ ಲೀಗ್‌ನೊಂದಿಗೆ ಸಹಕರಿಸಿದರು.
- ಪುಣೆಯಲ್ಲಿ, ಸಾವರ್ಕರ್ ಅವರು “ಅಭಿನವ್ ಭಾರತ್ ಸೊಸೈಟಿ” ಯನ್ನು ಸ್ಥಾಪಿಸಿದರು.
- ಅವರು,ಸ್ವದೇಶಿ ಚಳವಳಿಯಲ್ಲಿ ಭಾಗಿಯಾಗಿದ್ದರು ಮತ್ತು ತಿಲಕರ ಸ್ವರಾಜ್ ಪಕ್ಷ ವನ್ನು ಸೇರಿದರು. ಅವರ ಪ್ರಚೋದನಾತ್ಮಕ ಭಾಷಣಗಳು ಹಾಗೂ ದೇಶಭಕ್ತಿಯ ಚಟುವಟಿಕೆಗಳಿಂದ ಕೆರಳಿದ ಬ್ರಿಟೀಷ್ ಸರ್ಕಾರವು ಅವರಿಗೆ ನೀಡಿದ್ದ ಬಿ.ಎ ಪದವಿಯನ್ನು ಅನೂರ್ಜಿತಗೊಳಿಸಿತು.
- ಅವರು ಫ್ರೀ ಇಂಡಿಯಾ ಸೊಸೈಟಿಯನ್ನು ಸ್ಥಾಪಿಸಿದರು. ಈ ಸೊಸೈಟಿಯು ಉತ್ಸವಗಳು, ಸ್ವಾತಂತ್ರ್ಯ ಚಳುವಳಿಯ ಹೆಗ್ಗುರುತುಗಳು ಸೇರಿದಂತೆ ಭಾರತೀಯ ಕ್ಯಾಲೆಂಡರ್‌ನಲ್ಲಿನ ಪ್ರಮುಖ ದಿನಗಳನ್ನು ಆಚರಿಸಿತು ಮತ್ತು ಇದು ಭಾರತೀಯ ಸ್ವಾತಂತ್ರ್ಯದ ಕುರಿತ ಹೆಚ್ಚಿನ ಚರ್ಚೆಗೆ ಮೀಸಲಾಗಿತ್ತು.
- ವಿನಾಯಕ್ ದಾಮೋದರ್ ಸಾವರ್ಕರ್ ಹಾಗೂ ಗಣೇಶ್ ಸಾವರ್ಕರ್ ರವರು ರಾಷ್ಟ್ರೀಯ ಮತ್ತು ಕ್ರಾಂತಿಕಾರಿ ವಿಚಾರಗಳನ್ನು ತರಲು ಯುವ ಕ್ರಾಂತಿಕಾರಿ ರಹಸ್ಯ ಸಂಘಟನೆಯಾದ ಮಿತ್ರಮೇಳ ವನ್ನು 1899 ರಲ್ಲಿ ನಾಸಿಕ್ ನಲ್ಲಿ ಆರಂಭಿಸಿದರು.
ಅವರ ಪ್ರಮುಖ ಕೃತಿಗಳು:
- ಪುಸ್ತಕ- ಭಾರತೀಯ ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸ, ಇದರಲ್ಲಿ ಸಾವರ್ಕರ್ ಅವರು 1857 ರ ಸಿಪಾಯಿ ದಂಗೆಯಲ್ಲಿ ಉಪಯೋಗಿಸಿದ ಗೆರಿಲ್ಲಾ ಯುದ್ಧ ತಂತ್ರಗಳ (guerilla warfare tricks) ಬಗ್ಗೆ ವಿವರಿಸಿದ್ದಾರೆ.
- ಈ ಪುಸ್ತಕವನ್ನು ಬ್ರಿಟಿಷರು ನಿಷೇಧಿಸಿದರು, ಆದರೆ ಮೇಡಮ್ ಭಿಕಾಜಿ ಕಾಮಾ (Madam Bhikaji Cama) ಅವರು ನೆದರ್ಲ್ಯಾಂಡ್ಸ್, ಜರ್ಮನಿ ಮತ್ತು ಫ್ರಾನ್ಸ್ ನಲ್ಲಿ ಈ ಪುಸ್ತಕವನ್ನು ಪ್ರಕಟಿಸಿದರು, ಅದು ಅಂತಿಮವಾಗಿ ಅನೇಕ ಭಾರತೀಯ ಕ್ರಾಂತಿಕಾರಿಗಳನ್ನು ತಲುಪಿತು.
- ಅವರ ‘ಹಿಂದುತ್ವ’ ಎಂಬ ಪುಸ್ತಕದಲ್ಲಿ ಎರಡು ರಾಷ್ಟ್ರಗಳ ಸಿದ್ಧಾಂತದ ವಿಚಾರಧಾರೆಯಿದೆ. ಇದರಲ್ಲಿ ಅವರು ಹಿಂದೂಗಳನ್ನು ಮತ್ತು ಮುಸ್ಲಿಮರನ್ನು ಎರಡು ಪ್ರತ್ಯೇಕ ರಾಷ್ಟ್ರಗಳೆಂದು ಕರೆದಿದ್ದಾರೆ. 1937 ರಲ್ಲಿ ಹಿಂದೂ ಮಹಾಸಭಾ ಇದನ್ನು ನಿರ್ಣಯವಾಗಿ ಅಂಗೀಕರಿಸಿತು.
- ಮಾರ್ಲೆ-ಮಿಂಟೋ ಸುಧಾರಣೆಗಳ ವಿರುದ್ಧ ಸಶಸ್ತ್ರ ದಂಗೆ.
ವಿಷಯಗಳು: ಜಾಗತಿಕ ಇತಿಹಾಸದಲ್ಲಿ 18ನೇ ಶತಮಾನ ಮತ್ತು ನಂತರದ ಘಟನಾವಳಿಗಳು ಕೈಗಾರಿಕಾ ಕ್ರಾಂತಿ, ವಿಶ್ವ ಸಮರ.
ವಸಾಹತುಶಾಹಿ ಅವಧಿಯಲ್ಲಿ ನಮೀಬಿಯಾದಲ್ಲಿ ನಡೆದ ನರಮೇಧವನ್ನು ಅಂಗೀಕರಿಸಿದ ಜರ್ಮನಿ:
ಸಂದರ್ಭ:
ತೀರಾ ಇತ್ತೀಚಿಗೆ, ಜರ್ಮನಿಯು, ಒಂದು ಶತಮಾನದ ಹಿಂದೆ ತನ್ನ ವಸಾಹತುಶಾಹಿ ಆಳ್ವಿಕೆಯಲ್ಲಿ ಇಂದಿನ ನಮೀಬಿಯಾದ ಹೆರೆರೊ (Herero) ನಾಮಾ (Nama) ಸಮುದಾಯಗಳ ಜನರ ವಿರುದ್ಧ ನಡೆಸಿದ ನರಮೇಧವನ್ನು ಮೊದಲ ಬಾರಿಗೆ ಅಂಗೀಕರಿಸಿದೆ.
ಈ ಒಪ್ಪಿಗೆಯ ಜೊತೆಗೆ, ನಮೀಬಿಯಾದ ಸಮುದಾಯ ಯೋಜನೆಗಳಿಗೆ ನೆರವಾಗಲು ಜರ್ಮನಿ € 1.1 ಬಿಲಿಯನ್ ($ 1.2 ಬಿಲಿಯನ್) ನಷ್ಟು ಮೊತ್ತದ ನೆರವನ್ನು ಘೋಷಿಸಿದೆ.
ನರಮೇಧದ ಬಗ್ಗೆ- ಆಗ ನಡೆದ ತತಕ್ಷಣದ ಘಟನೆಗಳು:
- 1904 ಮತ್ತು 1908 ರ ನಡುವೆ, ಜರ್ಮನ್ ವಸಾಹತುಶಾಹಿ ಆಡಳಿತಗಾರರು ಅಂದಿನ ಜರ್ಮನ್ ಸೌತ್ ವೆಸ್ಟ್ ಆಫ್ರಿಕಾ ಎಂದು ಕರೆಯಲ್ಪಡುತ್ತಿದ್ದ ಪ್ರದೇಶದ ವಸಾಹತುಶಾಹಿ ಆಡಳಿತದ ವಿರುದ್ಧ ದಂಗೆ ಎದ್ದ ಹೆರೆರೊ ಮತ್ತು ನಾಮಾ ಬುಡಕಟ್ಟು ಜನಾಂಗದ ಹತ್ತಾರು ಸಾವಿರ ಪುರುಷರು, ಮಹಿಳೆಯರು ಮತ್ತು ಮಕ್ಕಳನ್ನು ನಿರ್ದಯವಾಗಿ ಹತ್ಯೆ ಮಾಡಿದರು.
- ದಂಗೆಗೆ ಕಾರಣಗಳು: ಸ್ಥಳೀಯ ಬುಡಕಟ್ಟು ಜನಾಂಗದವರಿಗೆ ಜರ್ಮನ್ ವಸಾಹತುಗಾರರು ತಮ್ಮ ಭೂಮಿ ಮತ್ತು ಸಂಪನ್ಮೂಲಗಳಿಗೆ ಕಂಟಕರಂತೆ ಕಂಡುಬಂದರು.
- ಪ್ರಮುಖ ಘಟನೆಗಳು- ವಾಟರ್‌ಬರ್ಗ್ ಕದನ (Battle of Waterberg): ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಸುಮಾರು 80,000 ಹೆರೆರೊಗಳನ್ನು ಜರ್ಮನ್ ಪಡೆಗಳು ಮರುಭೂಮಿಯಾದ್ಯಂತ ಬೆನ್ನಟ್ಟಿದವು. ಅದರಲ್ಲಿ ಕೇವಲ 15,000 ಜನರು ಬದುಕುಳಿದರು.
ಇಂದಿನ ನಮೀಬಿಯಾ ಎಷ್ಟು ಸಮಯದವರೆಗೆ ಜರ್ಮನ್ನರ ನಿಯಂತ್ರಣದಲ್ಲಿತ್ತು?
- 1884 ಮತ್ತು 1890 ರ ನಡುವೆ, ಜರ್ಮನಿ ಇಂದಿನ ನಮೀಬಿಯಾದ ಕೆಲವು ಭಾಗಗಳನ್ನು ಔಪಚಾರಿಕವಾಗಿ ವಸಾಹತುವನ್ನಾಗಿ ಮಾಡಿಕೊಂಡಿತ್ತು.
- 1915 ರವರೆಗೆ ಜರ್ಮನ್ನರು ಈ ಪ್ರದೇಶವನ್ನು ಆಳುತ್ತಲೇ ಇದ್ದರು, ಅದರ ನಂತರ ಅದು 75 ವರ್ಷಗಳ ವರಗೆ ದಕ್ಷಿಣ ಆಫ್ರಿಕಾದ ನಿಯಂತ್ರಣದಲ್ಲಿತ್ತು.
- ನಮೀಬಿಯಾ ಅಂತಿಮವಾಗಿ 1990 ರಲ್ಲಿ ಸ್ವಾತಂತ್ರ್ಯ ಗಳಿಸಿತು.
ಆದ್ದರಿಂದ, ಈಗ ಜರ್ಮನಿಯ ನಡೆ ಏನು?
- ಈ ದೌರ್ಜನ್ಯವನ್ನು ಕೆಲವು ಇತಿಹಾಸಕಾರರು 20 ನೇ ಶತಮಾನದ ಮೊದಲ ನರಮೇಧ / ಹತ್ಯಾಕಾಂಡ ಎಂದು ಬಣ್ಣಿಸಿದ್ದಾರೆ.
- ಈ ಹತ್ಯಾಕಾಂಡವನ್ನು ಇತ್ತೀಚಿಗೆ ಒಪ್ಪಿಕೊಂಡ ನಂತರ, ಜರ್ಮನಿಯಿಂದ ಈ ಘೋಷಣೆಗೆ ಸಹಿ ಮಾಡಲಾಗುವುದು, ನಂತರ ಅದನ್ನು ಎರಡೂ ದೇಶಗಳ ಸಂಸತ್ತು ಅಂಗೀಕರಿಸಲಿವೆ.
- ಜರ್ಮನಿ ಮಾಡಿದ ಅಪರಾಧಗಳಿಗೆ ಅಧಿಕೃತವಾಗಿ ಜರ್ಮನ್ ಅಧ್ಯಕ್ಷ ಫ್ರಾಂಕ್-ವಾಲ್ಟರ್ ಸ್ಟೇನ್‌ಮೇಯರ್ (President Frank-Walter Steinmeier) ಅವರು ನಮೀಬಿಯಾದ ಸಂಸತ್ತಿನ ಮುಂದೆ ಕ್ಷಮೆಯಾಚಿಸುವ ನಿರೀಕ್ಷೆಯಿದೆ.
ವಿಷಯಗಳು: ಮಹಿಳೆಯರು ಮತ್ತು ಮಹಿಳಾ ಸಂಘಟನೆಯ ಪಾತ್ರ, ಜನಸಂಖ್ಯೆ ಮತ್ತು ಸಂಬಂಧಿತ ಸಮಸ್ಯೆಗಳು, ಬಡತನ ಮತ್ತು ಅಭಿವೃದ್ಧಿ ಸಮಸ್ಯೆಗಳು, ನಗರೀಕರಣ, ಅವುಗಳ ಸಮಸ್ಯೆಗಳು ಮತ್ತು ಪರಿಹಾರಗಳು.
ವರದಕ್ಷಿಣೆ ಸಾವುಗಳಿಗೆ ಸಂಬಂಧಿಸಿದ ಸೆಕ್ಷನ್ 304-B ಯ ವ್ಯಾಪ್ತಿಯನ್ನು ವಿಸ್ತರಿಸಿದ ಸುಪ್ರೀಮ್ ಕೋರ್ಟ್:
(Scope of Section 304-B in dowry deaths widened by SC)
ಸಂದರ್ಭ:
ಸುಪ್ರೀಂ ಕೋರ್ಟ್ ವರದಕ್ಷಿಣೆ ಕಿರುಕುಳವನ್ನು “ರೋಗ ಪ್ರಸಾರಕ / ಸಾಂಕ್ರಾಮಿಕ” (pestiferous) ಅಪರಾಧ ಎಂದು ಕರೆದಿದೆ, ಅಲ್ಲಿ ಮಹಿಳೆಯರು “ದುರಾಸೆಯ” ಗಂಡ ಮತ್ತು ಗಂಡನ ಮನೆಯವರ ಕ್ರೌರ್ಯಕ್ಕೆ ಬಲಿಯಾಗುತ್ತಾರೆ.
ಅಲ್ಲದೆ, ಅದೇ ಸಮಯದಲ್ಲಿ ನ್ಯಾಯಾಲಯವು ತನ್ನ ತೀರ್ಪಿನಲ್ಲಿ ವರದಕ್ಷಿಣೆ ಹತ್ಯೆಯ ದಂಡನಾತ್ಮಕ ನಿಬಂಧನೆಗಳಿಗೆ ಸಂಬಂಧಿಸಿದ ಸೆಕ್ಷನ್ 304-B ಯ ಒಂದು ಸ್ಪಷ್ಟವಾದ ಮತ್ತು ಅಕ್ಷರಶಃ ವ್ಯಾಖ್ಯಾನವು, “ದೀರ್ಘಕಾಲದ ಸಾಮಾಜಿಕ ಪಿಡುಗನ” ವಿರುದ್ಧದ ಹೋರಾಟದ ತೀಕ್ಷ್ಣತೆಯನ್ನು ಮೊಂಡಾಗಿಸಿದೆ ಎಂದು ಸೂಚಿಸಿದೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304-B ಬಗ್ಗೆ:
ಸೆಕ್ಷನ್ 304-B ಪ್ರಕಾರ, ವರದಕ್ಷಿಣೆ ಸಾವಿನ ಪ್ರಕರಣವನ್ನು ರೂಪಿಸಲು, ಮಹಿಳೆ ಮದುವೆಯಾದ ಏಳು ವರ್ಷಗಳಲ್ಲಿ ಸುಟ್ಟಗಾಯಗಳಿಂದ ಅಥವಾ ಯಾವುದೇ ರೀತಿಯ ದೈಹಿಕ ಗಾಯಗಳಿಂದ ಅಥವಾ “ಅಸಾಮಾನ್ಯ ಪರಿಸ್ಥಿತಿಗಳಲ್ಲಿ” ಸಾವನ್ನಪ್ಪಿರಬೇಕು. ಅಲ್ಲದೆ, ವರದಕ್ಷಿಣೆ ಬೇಡಿಕೆಗೆ ಸಂಬಂಧಿಸಿದಂತೆ ಅವಳು “ಅವಳ ಸಾವಿಗೆ ಸ್ವಲ್ಪ ಮುಂಚೆ” ತನ್ನ ಪತಿ ಅಥವಾ ಅವರ ಮನೆಯವರಿಂದ ಕ್ರೌರ್ಯ ಅಥವಾ ಕಿರುಕುಳ ಅನುಭವಿಸಬೇಕು.
ವಿಭಾಗ 304-ಗೆ ಸಂಬಂಧಿಸಿದ ಸಮಸ್ಯೆಗಳು:
ನ್ಯಾಯಾಲಯಗಳು ಸೆಕ್ಷನ್ 304-B ಗೆ ಸಂಬಂಧಿಸಿದಂತೆ ಸಂಕುಚಿತ ದೃಷ್ಟಿಕೋನದ ತೀರ್ಪನ್ನು ಬಳಸುತ್ತವೆ.
ಉದಾಹರಣೆಗೆ:
- ನ್ಯಾಯಾಲಯಗಳು ಸೆಕ್ಷನ್ 304-B ಯ ವ್ಯಾಖ್ಯಾನವನ್ನು, ಸಾವಿಗೆ ಮೊದಲು (soon before) ಎಂಬ ಪದವನ್ನು ತಕ್ಷಣದ ಮೊದಲು (immediately before) ಎಂದು ವ್ಯಾಖ್ಯಾನಿಸುತ್ತವೆ. ಅಂದರೆ ಈ ವ್ಯಾಖ್ಯಾನದ ಅಡಿಯಲ್ಲಿ ಮಹಿಳೆಯು ಸಾವಿನ ಮುಂಚಿನ ಕ್ಷಣಗಳಲ್ಲಿ ಕಿರುಕುಳಕ್ಕೆ ಅಥವಾ ಪೀಡನೆಗೆ ಒಳಗಾಗಿರುವುದು ಕಡ್ಡಾಯವಾಗುತ್ತದೆ.
- ಈ ವಿಭಾಗದಲ್ಲಿ ಬಳಸಲಾದ “ಸಾಮಾನ್ಯ ಸಂದರ್ಭ ಗಳಿಗಿಂತ” (otherwise than under normal circumstances) ಎಂಬ ನುಡಿಗಟ್ಟು ವಿಸ್ತೃತ, ಉದಾರವಾದ ವ್ಯಾಖ್ಯಾನವನ್ನು ಸಹ ಬಯಸುತ್ತದೆ.
ಭಾರತದಲ್ಲಿ ವರದಕ್ಷಿಣೆ ಸಂಬಂಧಿತ ಸಾವುಗಳು- ತ್ವರಿತ ನೋಟ:
- ದೇಶದಲ್ಲಿ,1999 ರಿಂದ 2018 ರ ನಡುವಿನ ದಶಕಗಳಲ್ಲಿ ಸಂಭವಿಸಿದ ಒಟ್ಟು ಕೌಟುಂಬಿಕ ಹತ್ಯೆಗಳಲ್ಲಿ ವರದಕ್ಷಿಣೆ ಸಂಬಂಧಿತ ಸಾವುಗಳ ಪ್ರಮಾನ 40% ರಿಂದ 50% ರಷ್ಟಿದೆ.
- 2019 ರಲ್ಲಿ ಮಾತ್ರ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304-ಬಿ ಅಡಿಯಲ್ಲಿ ವರದಕ್ಷಿಣೆ ಸಾವಿನ 7,115 ಪ್ರಕರಣಗಳು ದಾಖಲಾಗಿವೆ.
ಈ ಸಮಯದ ಅವಶ್ಯಕತೆ:
- ವರದಕ್ಷಿಣೆ ಮತ್ತು ವಧುವಿನ ಸುಡುವಿಕೆಯನ್ನು ಶಿಕ್ಷಿಸುವ ಕಾನೂನಿನ ಉದ್ದೇಶವನ್ನು ಗಮನದಲ್ಲಿಟ್ಟುಕೊಂಡು ನ್ಯಾಯಾಲಯಗಳು ಸೆಕ್ಷನ್ 304-ಬಿ ಅನ್ನು ಧಾರಾಳವಾಗಿ ವ್ಯಾಖ್ಯಾನಿಸಬೇಕು.
- ಅಸಂಬದ್ಧ ವ್ಯಾಖ್ಯಾನಗಳನ್ನು ತಪ್ಪಿಸಬೇಕು. ಬದಲಾಗಿ, ನ್ಯಾಯಾಲಯಗಳು ಕಿರುಕುಳ ಮತ್ತು ಅವಳ ಸಾವಿನ ನಡುವಿನ “ನಿಕಟ ಮತ್ತು ನೇರ ಸಂಪರ್ಕ” ವನ್ನು ಮಾತ್ರ ಅವಲೋಕಿಸಬೇಕು.
- ನ್ಯಾಯಾಲಯವು ಆರೋಪಿಗಳ ಮುಂದೆ ಅವರನ್ನು ಆರೋಪಗಳಲ್ಲಿ ಸಿಲುಕಿಸುವ ಸಂದರ್ಭಗಳನ್ನು ಇಡಬೇಕು ಮತ್ತು ಆತನ ಪ್ರತಿಕ್ರಿಯೆಯನ್ನು ಪಡೆಯಬೇಕು. ಪ್ರಕರಣದ ಕುರಿತು ತನ್ನ ಅಹವಾಲನ್ನು ಮಂಡಿಸಲು ಆರೋಪಿಗಳಿಗೆ ಸಾಕಷ್ಟು ಅವಕಾಶ ನೀಡಬೇಕು.
ವರದಕ್ಷಿಣೆ ಮತ್ತು ಸಂಬಂಧಿತ ದೌರ್ಜನ್ಯಕ್ಕೆ ಕಾರಣಗಳು:
- ದುರಾಶೆ: ವಧುವಿನ ಕುಟುಂಬದಿಂದ ವಸ್ತು ಪ್ರಯೋಜನಗಳ ನಿರೀಕ್ಷೆ.
- ಅನಕ್ಷರತೆ: ಕಾನೂನುಗಳು ಮತ್ತು ಶಾಸನಗಳ ಬಗ್ಗೆ ಜ್ಞಾನವಿಲ್ಲದ ಸಮುದಾಯಗಳು ವರದಕ್ಷಿಣೆ ನೀಡುವ ಪದ್ಧತಿಗಳ ಕಾರಣದಿಂದಾಗಿ ಹಲವಾರು ದೌರ್ಜನ್ಯಗಳನ್ನು ಎದುರಿಸುತ್ತವೆ.
- ಕಾನೂನುಗಳನ್ನು ಪಾಲಿಸುವಲ್ಲಿನ ಇಚ್ಛಾಶಕ್ತಿಯ ಕೊರತೆ.
ಪರಿಹಾರಗಳು:
- ಹೆಣ್ಣು ಮಕ್ಕಳ ಶಿಕ್ಷಣವನ್ನು ಪ್ರೋತ್ಸಾಹಿಸುವುದು.
- ಸರ್ಕಾರದ ಉಪಕ್ರಮಗಳು ಮತ್ತು ಕಾನೂನುಗಳ ಸರಿಯಾದ ಅನುಷ್ಠಾನ.
- ಸಮೂಹ ಮಾಧ್ಯಮಗಳಿಂದ ಪ್ರಚಾರ ಅಭಿಯಾನಗಳನ್ನು ಪ್ರಾರಂಭಿಸುವುದು.
ಸಾಮಾನ್ಯ ಅಧ್ಯಯನ ಪತ್ರಿಕೆ : 2
ವಿಷಯಗಳು: ಪ್ರಜಾಪ್ರಭುತ್ವದಲ್ಲಿ ನಾಗರಿಕ ಸೇವೆಗಳ ಪಾತ್ರ.
ಭಾರತೀಯ ಆಡಳಿತ ಸೇವೆ (ಕೇಡರ್) ನಿಯಮಗಳ, 1954 ರ ನಿಯಮ 6 (I):
(Rule 6(I) of the Indian Administrative Service (cadre) Rules, 1954)
ಸಂದರ್ಭ:
ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (DoPT) ಯು ತನ್ನ ಒಂದು ಅಭೂತಪೂರ್ವ ಆದೇಶದಲ್ಲಿ, 1954 ರ ಭಾರತೀಯ ಆಡಳಿತ ಸೇವೆ (ಕೇಡರ್) ನಿಯಮಗಳ ನಿಯಮ 6 (I){Rule 6(1) of the Indian Administrative Service (cadre) rules, 1954} ಅನ್ನು ಅನ್ವಯಿಸುವ ಮೂಲಕ ಪಶ್ಚಿಮ ಬಂಗಾಳದ ಮುಖ್ಯ ಕಾರ್ಯದರ್ಶಿ ಅಲಾಪನ್ ಬಂಡೋಪಾಧ್ಯಾಯರನ್ನು ಭಾರತ ಸರ್ಕಾರದ ಸೇವೆಯ ಅಡಿಯಲ್ಲಿ ನೇಮಿಸಲು ಆದೇಶ ಹೊರಡಿಸಿದೆ.
ಭಿನ್ನಾಭಿಪ್ರಾಯದ ಸಂದರ್ಭದಲ್ಲಿ ಏನಾಗುತ್ತದೆ?
ನಿಯಮ 6 (I) ಹೇಳುವಂತೆ “ಯಾವುದೇ ಭಿನ್ನಾಭಿಪ್ರಾಯಗಳಿದ್ದಲ್ಲಿ, ಈ ಪ್ರಕರಣವನ್ನು ಕೇಂದ್ರ ಸರ್ಕಾರವು ನಿರ್ಧರಿಸುತ್ತದೆ ಮತ್ತು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ನಿರ್ಧಾರವನ್ನು ಜಾರಿಗೆ ತರಬೇಕಾಗುತ್ತದೆ.”
ಪ್ರಸ್ತುತದ ಕಾಳಜಿ / ಸಮಸ್ಯೆ ಏನು?
ಈ ನಿಯಮವನ್ನು “ಅಧಿಕಾರದ ಸಂಪೂರ್ಣ ದುರುಪಯೋಗ ಮತ್ತು ರಾಜ್ಯದ ಅಧಿಕಾರ ವ್ಯಾಪ್ತಿಯನ್ನು ಅತಿಕ್ರಮಿಸುವ ಪ್ರಯತ್ನ” ಎಂದು ಕರೆಯಲಾಗುತ್ತದೆ.
ಇಂತಹ ಪ್ರಕರಣಗಳಲ್ಲಿ ವರಿಷ್ಠ ನ್ಯಾಯಾಲಯದ ತೀರ್ಪುಗಳು:
- ಇದಕ್ಕೂ ಮೊದಲು 2020 ರ ಡಿಸೆಂಬರ್‌ನಲ್ಲಿ ಗೃಹ ಸಚಿವಾಲಯವು ಪಶ್ಚಿಮ ಬಂಗಾಳದ ಕೇಡರ್‌ನ ಮೂವರು ಭಾರತೀಯ ಪೊಲೀಸ್ ಸೇವಾ (IPS) ಅಧಿಕಾರಿಗಳನ್ನು ಪ್ರತಿ ನಿಯುಕ್ತಿಯ ಮೇಲೆ ಅಂದರೆ ಡೆಪ್ಯೂಟೇಶನ್ ಮೇಲೆ ಕರೆಸಿಕೊಂಡಿತ್ತು. ಆದರೆ ರಾಜ್ಯ ಸರ್ಕಾರ ಅವರನ್ನು ರಾಜ್ಯ ಸೇವೆಯಿಂದ ಮುಕ್ತಗೊಳಿಸಲಿಲ್ಲ.
- ಇದನ್ನು ಅನುಸರಿಸಿ, ನ್ಯಾಯಾಲಯದಲ್ಲಿ ಒಂದು ಅರ್ಜಿಯನ್ನು ಸಲ್ಲಿಸಲಾಯಿತು, ಅದರಲ್ಲಿ ಚಾಲ್ತಿಯಲ್ಲಿರುವ ಕಾನೂನುಗಳಲ್ಲಿ ವಿಶಿಷ್ಟ ದ್ವಂದ್ವತೆಯಿದೆ ಮತ್ತು ಸ್ವಯಂ-ವಿರೋಧಾಭಾಸದಿಂದ ಕೂಡಿದೆ ಮತ್ತು ಇದು ಸಂವಿಧಾನದ ಆರ್ಟಿಕಲ್ 14 ರ ಉಲ್ಲಂಘನೆಯಾಗಿದೆ ಎಂದು ಒತ್ತಿಹೇಳಲಾಯಿತು.
- ಈ ನಿಯಮವು ರಾಜ್ಯಗಳ ಕಾನೂನು ಮತ್ತು ಸುವ್ಯವಸ್ಥೆಯಲ್ಲಿ ಮತ್ತು ಸಂಬಂಧಪಟ್ಟ ರಾಜ್ಯ ಸರ್ಕಾರಗಳ ಆಡಳಿತ ರಚನೆಯಲ್ಲಿ ಹಾನಿ ಉಂಟುಮಾಡಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಆದರೆ, ಈ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ.
ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಯ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.
ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ಮಕ್ಕಳಿಗೆ ನಗದು ನೆರವು:
(Children under mid-day meal scheme to get aid)
ಸಂದರ್ಭ:
ಸರ್ಕಾರಿ ಶಾಲೆಗಳಲ್ಲಿ 1 ರಿಂದ 8 ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಮಧ್ಯಾಹ್ನ ಬಿಸಿಯೂಟ ಯೋಜನೆಯ ಫಲಾನುಭವಿಗಳಾದ ಮಕ್ಕಳಿಗೆ ತಲಾ ₹ 100ಗಳ ನೆರವು ನೀಡಲು ಕೇಂದ್ರ ಸರಕಾರ ನಿರ್ಧರಿಸಿದೆ.
- ಒಟ್ಟು ₹ 1200 ಕೋಟಿ ಹಣವನ್ನು 11.8 ಕೋಟಿ ಮಕ್ಕಳಿಗೆ ನೇರ ಲಾಭ ವರ್ಗಾವಣೆಯ ಮೂಲಕ ಒಂದು ಬಾರಿ ಪಾವತಿಯಾಗಿ ನೀಡಲಾಗುವುದು.
ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿ ನಗದು ಪಾವತಿ:
- ಹಣವನ್ನು ಮಧ್ಯಾಹ್ನದ ಬಿಸಿಯೂಟ ಯೋಜನೆಯಡಿಯಲ್ಲಿ ಅಡುಗೆ ವೆಚ್ಚದ ಘಟಕದಿಂದ ನೀಡಲಾಗುವುದು.
- ದಯವಿಟ್ಟು ಗಮನಿಸಿ 2021-22ರಲ್ಲಿ ಅಡುಗೆ ವೆಚ್ಚಗಳು ಮಧ್ಯಾಹ್ನದ ಬಿಸಿಯೂಟ ಯೋಜನೆಗೆ ಕೇಂದ್ರ ಹಂಚಿಕೆಯ ಅತಿದೊಡ್ಡ ಅಂಶವಾಗಿದೆ.
- ಇದು ದ್ವಿದಳ ಧಾನ್ಯಗಳು, ತರಕಾರಿಗಳು, ಅಡುಗೆ ಎಣ್ಣೆ, ಉಪ್ಪು ಮತ್ತು ಕಾಂಡಿಮೆಂಟ್ಸ್‌ನಂತಹ ಪದಾರ್ಥಗಳ ಬೆಲೆಗಳನ್ನು ಒಳಗೊಂಡಿದೆ.
ಈಗಿನ ಸಮಸ್ಯೆ ಏನು?
- ಕೆಲವು ಸ್ಥಳಗಳಲ್ಲಿ ಮಧ್ಯಾಹ್ನದ ಬಿಸಿಯೂಟಕ್ಕೆ ಅಂದರೆ ಮಿಡ್- ಡೇ- ಮೀಲ್ ಗೆ ಬದಲಾಗಿ ಮಕ್ಕಳಿಗೆ ನಗದು ಮತ್ತು ಇತರ ಕಡೆಗಳಲ್ಲಿ ಒಣ ಪಡಿತರವನ್ನು ನೀಡಲಾಗುತ್ತಿದೆ.
- ಯಾವುದೇ ರೀತಿಯಲ್ಲಿ, ನೋಡಿದರು ಈ ಪ್ರಮಾಣಗಳು/ಮೊತ್ತವು ದಿನಕ್ಕೆ ಒಂದು ಪೌಷ್ಟಿಕ ಆಹಾರಕ್ಕೆ ಸಮಾನವಾಗಿರಲು ಸಾಧ್ಯವಿಲ್ಲ. ಪ್ರತಿ ಮಗುವಿಗೆ ಮಾಸಿಕ ₹ 100 ಪಾವತಿಸುವ ಮೊತ್ತದ ಪ್ರಕಾರ ದಿನಕ್ಕೆ ₹ 4 ಕ್ಕಿಂತ ಕಡಿಮೆ ಸಿಗುತ್ತದೆ.
- ಆದ್ದರಿಂದ, ಪೌಷ್ಠಿಕಾಂಶದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ಸರ್ಕಾರವು ಮೊಟ್ಟೆ, ತರಕಾರಿಗಳು, ಹಣ್ಣುಗಳು, ದ್ವಿದಳ ಧಾನ್ಯಗಳು, ಎಣ್ಣೆ ಸೇರಿದಂತೆ ಮನೆಗೆ ಕೊಂಡೊಯ್ಯುವ ವರ್ಧಿತ ಪಡಿತರವನ್ನು ಒದಗಿಸಬೇಕು.
ಮಧ್ಯಾಹ್ನದ ಬಿಸಿಯೂಟ ಯೋಜನೆಯ ಕುರಿತು:
ಸಮಾಗ್ರ ಶಿಕ್ಷಣದಡಿಯಲ್ಲಿ,ಈ ಯೋಜನೆಯು ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ ಮತ್ತು ಮದರಸಾಗಳಲ್ಲಿನ ಎಲ್ಲಾ ಮಕ್ಕಳಿಗೆ ಒಂದು ಬಾರಿಯ ಊಟವನ್ನು ಖಾತರಿಪಡಿಸುತ್ತದೆ.
- ಈ ಯೋಜನೆಯಡಿಯಲ್ಲಿ ಎಂಟನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ವರ್ಷದಲ್ಲಿ ಕನಿಷ್ಠ 200 ದಿನಗಳ ವರೆಗೆಯಾದರೂ ಒಂದು ಪೌಷ್ಠಿಕಾಂಶದ ಬೇಯಿಸಿದ ಊಟವನ್ನು ಖಾತರಿಪಡಿಸಲಾಗುತ್ತದೆ.
- ಈ ಯೋಜನೆಯು ಮಾನವ ಸಂಪನ್ಮೂಲ ಸಚಿವಾಲ (ಶಿಕ್ಷಣ ಸಚಿವಾಲಯ)ಯದ ವ್ಯಾಪ್ತಿಗೆ ಬರುತ್ತದೆ.
- ಇದನ್ನು ಕೇಂದ್ರ ಸರ್ಕಾರದ ಪ್ರಯೋಜಿತ ರಾಷ್ಟ್ರೀಯ ಶಿಕ್ಷಣ ಕಾರ್ಯಕ್ರಮವಾದ ಪ್ರಾಥಮಿಕ ಶಿಕ್ಷಣಕ್ಕೆ ಪೌಷ್ಟಿಕಾಂಶದ ಬೆಂಬಲಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ (National Programme of Nutritional Support to Primary Education (NP – NSPE) ಎಂಬ ಹೆಸರಿನಲ್ಲಿ 1995 ರಲ್ಲಿ ಪ್ರಾರಂಭಿಸಲಾಯಿತು. 2004 ರಲ್ಲಿ, ಈ ಯೋಜನೆಯನ್ನು ಮಧ್ಯಾಹ್ನದ ಬಿಸಿಯೂಟ ಯೋಜನೆ ಎಂದು ಪುನರಾರಂಭಿಸಲಾಯಿತು.
- ಈ ಯೋಜನೆಯನ್ನು ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ, 2013 ರ ವ್ಯಾಪ್ತಿಗೆ ಒಳಪಡಿಸಲಾಗಿದೆ.
ಉದ್ದೇಶಗಳು:
ಹಸಿವು ಮತ್ತು ಅಪೌಷ್ಟಿಕತೆಯನ್ನು ಪರಿಹರಿಸಿ, ಶಾಲೆಯಲ್ಲಿ ದಾಖಲಾತಿ ಮತ್ತು ಹಾಜರಾತಿಯನ್ನು ಹೆಚ್ಚಿಸಿ,ವಿವಿಧ ಜಾತಿಗಳ ನಡುವೆ ಸಾಮಾಜಿಕೀಕರಣವನ್ನು ಸುಧಾರಿಸಿ, ತಳಮಟ್ಟದಲ್ಲಿ ಉದ್ಯೋಗವನ್ನು ಒದಗಿಸುವುದು, ವಿಶೇಷವಾಗಿ ಮಹಿಳೆಯರಿಗೆ ಒದಗಿಸುವುದು.
ಮಧ್ಯಾಹ್ನದ ಬಿಸಿಯೂಟ ಯೋಜನೆ (MDM) ನಿಯಮಗಳು 2015 ರ ಪ್ರಕಾರ:
- ಮಕ್ಕಳಿಗೆ ಶಾಲೆಯಲ್ಲಿ ಮಾತ್ರ ಊಟ ಬಡಿಸಲಾಗುವುದು.
- ಆಹಾರ ಧಾನ್ಯಗಳು ಲಭ್ಯವಿಲ್ಲದ ಕಾರಣ ಅಥವಾ ಬೇರೆ ಯಾವುದೇ ಕಾರಣಗಳಿಂದಾಗಿ ಯಾವುದೇ ಶಾಲಾ ದಿನದಂದು ಮಧ್ಯಾಹ್ನದ ಊಟವನ್ನು ಶಾಲೆಯಲ್ಲಿ ಒದಗಿಸದಿದ್ದರೆ, ಮುಂದಿನ ತಿಂಗಳು 15 ರೊಳಗೆ ರಾಜ್ಯ ಸರ್ಕಾರವು ಆಹಾರ ಭದ್ರತಾ ಭತ್ಯೆಯನ್ನು ಪಾವತಿಸಬೇಕು.
- ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ 2009 ರ ಅಡಿಯಲ್ಲಿ ಕಡ್ಡಾಯವಾಗಿರುವ ಶಾಲಾ ನಿರ್ವಹಣಾ ಸಮಿತಿಯು ಸಹ ಮಧ್ಯಾಹ್ನದ ಬಿಸಿಯೂಟ ಯೋಜನೆಯ ಅನುಷ್ಠಾನವನ್ನು ಮೇಲ್ವಿಚಾರಣೆ ಮಾಡುತ್ತದೆ.
ಪೌಷ್ಟಿಕಾಂಶದ ಮಾನದಂಡಗಳು:
- ಮಧ್ಯಾಹ್ನದ ಬಿಸಿಯೂಟ ಯೋಜನೆಯ ಮಾರ್ಗಸೂಚಿಗಳ ಪ್ರಕಾರ, ಕ್ಯಾಲೊರಿ ಸೇವನೆಯ ವಿಷಯದಲ್ಲಿ, ಕಿರು ಪ್ರಾಥಮಿಕ ಶಾಲೆಗಳಲ್ಲಿನ ಮಕ್ಕಳಿಗೆ MDM ಮೂಲಕ ದಿನಕ್ಕೆ ಕನಿಷ್ಠ 450 ಕ್ಯಾಲೊರಿಗಳನ್ನು 12 ಗ್ರಾಂ ಪ್ರೋಟೀನ್‌ನೊಂದಿಗೆ ಒದಗಿಸಬೇಕು ಮತ್ತು ಹಿರಿಯ ಪ್ರಾಥಮಿಕ ಶಾಲೆಗಳಲ್ಲಿನ ಮಕ್ಕಳು 20 ಗ್ರಾಂ ಪ್ರೋಟೀನ್‌ನೊಂದಿಗೆ 700 ಕ್ಯಾಲೊರಿಗಳನ್ನು ಒದಗಿಸಬೇಕು.
- ಪ್ರಾಥಮಿಕ ತರಗತಿಗಳ ಮಕ್ಕಳ ಪ್ರತಿ ಊಟದಲ್ಲಿ, ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ನಿಗದಿಪಡಿಸಿದಂತೆ 100 ಗ್ರಾಂ ಆಹಾರ ಧಾನ್ಯಗಳು, 20 ಗ್ರಾಂ ದ್ವಿದಳ ಧಾನ್ಯಗಳು, 50 ಗ್ರಾಂ ತರಕಾರಿಗಳು ಮತ್ತು 5 ಗ್ರಾಂ ತೈಲಗಳು ಮತ್ತು ಕೊಬ್ಬುಗಳನ್ನು ಒಳಗೊಂಡಿರಬೇಕು. ಹಿರಿಯ-ಪ್ರಾಥಮಿಕ ಶಾಲೆಗಳ ಮಕ್ಕಳ ಊಟದಲ್ಲಿ ಕಡ್ಡಾಯವಾಗಿ 150 ಗ್ರಾಂ ಆಹಾರ ಧಾನ್ಯಗಳು, 30 ಗ್ರಾಂ ದ್ವಿದಳ ಧಾನ್ಯಗಳು, 75 ಗ್ರಾಂ ತರಕಾರಿಗಳು ಮತ್ತು 7.5 ಗ್ರಾಂ ತೈಲಗಳು ಮತ್ತು ಕೊಬ್ಬುಗಳಿರಬೇಕು.
ವಿಷಯಗಳು: ಆರೋಗ್ಯ, ಶಿಕ್ಷಣ, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.
ಮೊನೊಕ್ಲೋನಲ್ ಆಂಟಿಬಾಡಿ ಚಿಕಿತ್ಸೆಗಳು ಯಾವುವು?
(What are monoclonal antibody therapies?)
ಸಂದರ್ಭ:
ಸೌಮ್ಯ ಲಕ್ಷಣಗಳು ಮತ್ತು ಕೊಮೊರ್ಬಿಡಿಟಿ ಅಂದರೆ
ಸಹ- ಅಸ್ವಸ್ಥತೆ(comorbidities)ಗಳನ್ನು ಹೊಂದಿರುವ COVID-19 ರೋಗಿಗಳಿಗೆ ದೆಹಲಿಯ ಅಪೊಲೊ ಆಸ್ಪತ್ರೆಯು “ಪ್ರತಿಕಾಯ ಕಾಕ್ಟೈಲ್ ಚಿಕಿತ್ಸೆ”(antibody cocktail treatment) ಯನ್ನು ಪ್ರಾರಂಭಿಸಿದೆ. ಈ ವೈದ್ಯಕೀಯ ವಿಧಾನವು ಮೊನೊಕ್ಲೋನಲ್ ಪ್ರತಿಕಾಯಗಳನ್ನು ತಟಸ್ಥಗೊಳಿಸುವುದನ್ನೂ ಒಳಗೊಂಡಿರುತ್ತದೆ.
ಮೊನೊಕ್ಲೋನಲ್ ಪ್ರತಿಕಾಯಗಳು (Monoclonal antibodies- mAbs) ಎಂದರೇನು?
- ಇವು ದೇಹದ ‘ನೈಸರ್ಗಿಕ ಪ್ರತಿರಕ್ಷಣಾ ವ್ಯವಸ್ಥೆಗೆ’ ಸಹಾಯ ಮಾಡುವ ಉದ್ದೇಶದಿಂದ ಕೃತಕವಾಗಿ ಉತ್ಪತ್ತಿಮಾಡಿದ ಪ್ರತಿಕಾಯಗಳಾಗಿವೆ.
- ಮೊನೊಕ್ಲೋನಲ್ ಪ್ರತಿಕಾಯಗಳು ನಿರ್ದಿಷ್ಟ ಪ್ರತಿಜನಕವನ್ನು ಗುರಿಯಾಗಿಸುತ್ತವೆ. ಈ ವಿಶೇಷ ಪ್ರತಿಜನಕವು ರೋಗನಿರೋಧಕ ಪ್ರತಿಕ್ರಿಯೆಯನ್ನು ಉಂಟುಮಾಡುವ ಸೂಕ್ಷ್ಮಾಣುಜೀವಿಗಳ ‘ಪ್ರೋಟೀನ್’ ಆಗಿದೆ.
‘ಮೊನೊಕ್ಲೋನಲ್ ಪ್ರತಿಕಾಯಗಳನ್ನು’ ಹೇಗೆ ಉತ್ಪತ್ತಿ ಮಾಡಲಾಗುತ್ತದೆ?
ಪ್ರಯೋಗಾಲಯದಲ್ಲಿ, ಬಿಳಿ ರಕ್ತ ಕಣಗಳನ್ನು ನಿರ್ದಿಷ್ಟ ಪ್ರತಿಜನಕಕ್ಕೆ ಒಡ್ಡುವ ಮೂಲಕ ಮೊನೊಕ್ಲೋನಲ್ ಪ್ರತಿಕಾಯಗಳನ್ನು ಉತ್ಪಾದಿಸಬಹುದು.
- ಹೆಚ್ಚಿನ ಪ್ರತಿಕಾಯಗಳನ್ನು ಉತ್ಪಾದಿಸಲು, ಒಂದೇ ಬಿಳಿರಕ್ತಕಣ ವನ್ನು ಅಬೀಜ ಸಂತಾನೋತ್ಪತ್ತಿ ಮಾಡಲಾಗುತ್ತದೆ. ಪ್ರತಿಕಾಯದ ಒಂದೇ ರೀತಿಯ ಪ್ರತಿಗಳನ್ನು ಉತ್ಪಾದಿಸಲು ಒಂದೇ ಬಿಳಿ ರಕ್ತ ಕಣ ಮಾದರಿಯನ್ನು (Clone) ಬಳಸಲಾಗುತ್ತದೆ.
- ಕೋವಿಡ್ -19 ರ ಸಂದರ್ಭದಲ್ಲಿ, ವಿಜ್ಞಾನಿಗಳು ಸಾಮಾನ್ಯವಾಗಿ ‘ಮೊನೊಕ್ಲೋನಲ್ ಪ್ರತಿಕಾಯಗಳನ್ನು’ ಉತ್ಪಾದಿಸಲು SARS-CoV-2 ವೈರಸ್‌ನ ಸ್ಪೈಕ್ ಪ್ರೋಟೀನ್ ಅನ್ನು ಬಳಸುತ್ತಾರೆ. ಈ ‘ಸ್ಪೈಕ್ ಪ್ರೋಟೀನ್’ ವೈರಸ್ ಅನ್ನು ಆತಿಥೇಯ ಕೋಶಕ್ಕೆ ಪ್ರವೇಶಿಸಲು ಸಹಾಯ ಮಾಡುತ್ತದೆ.
‘ಮೊನೊಕ್ಲೋನಲ್ ಪ್ರತಿಕಾಯಗಳ’ ಅವಶ್ಯಕತೆ:
ಆರೋಗ್ಯಕರ ದೇಹದಲ್ಲಿ, ಅದರ ‘ಪ್ರತಿರಕ್ಷಣಾ ವ್ಯವಸ್ಥೆ’ (Immune System) ಪ್ರತಿಕಾಯಗಳನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ.
- ಈ ಪ್ರತಿಕಾಯಗಳು ನಮ್ಮ ರಕ್ತದಲ್ಲಿನ ವೈ-ಆಕಾರದ (Y-shape) ಸೂಕ್ಷ್ಮ ಪ್ರೋಟೀನ್‌ಗಳಾಗಿವೆ, ಈ ಸೂಕ್ಷ್ಮ ಪ್ರೋಟೀನ್ಗಳು ಶತ್ರು ಸೂಕ್ಷ್ಮಜೀವಿಗಳನ್ನು ಗುರುತಿಸುತ್ತವೆ ಮತ್ತು ಬಂಧಿಸುತ್ತವೆ ಮತ್ತು ಈ ರೋಗಕಾರಕ ಸೂಕ್ಷ್ಮಜೀವಿಗಳ ಮೇಲೆ ದಾಳಿ ಮಾಡಲು ಪ್ರತಿರಕ್ಷಣಾ ವ್ಯವಸ್ಥೆಯನ್ನು ಸಂಕೇತಿಸುತ್ತವೆ.
- ಆದಾಗ್ಯೂ, ಈ ಪ್ರತಿಕಾಯಗಳನ್ನು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದಿಸಲು ಸಾಧ್ಯವಾಗದ ರೋಗನಿರೋಧಕ ವ್ಯವಸ್ಥೆ ಹೊಂದಿರುವ ಜನರಿಗೆ ಸಹಾಯ ಮಾಡಲು ವಿಜ್ಞಾನಿಗಳು ‘ಮೊನೊಕ್ಲೋನಲ್ ಪ್ರತಿಕಾಯಗಳನ್ನು’ ಕಂಡುಹಿಡಿದಿದ್ದಾರೆ.
ಇತಿಹಾಸ:
ನೊಬೆಲ್ ಪ್ರಶಸ್ತಿ ಪುರಸ್ಕೃತ ಜರ್ಮನ್ ರೋಗನಿರೋಧಕ ತಜ್ಞ (Immunologist) ಪಾಲ್ ಎಲ್ರಿಚ್ ( Paul Ehrlich) ‘ಜೋಬರ್ ಕುಗೆಲ್’ (Zauberkugel) ಅಂದರೆ ‘ಮ್ಯಾಜಿಕ್ ಬುಲೆಟ್’ ಎಂಬ ಕಲ್ಪನೆಯನ್ನು 1900 ರ ದಶಕದಲ್ಲಿ ಒಂದು ರೋಗದ ಚಿಕಿತ್ಸೆಗಾಗಿ ಪ್ರತಿಕಾಯಗಳನ್ನು ನೀಡುವ ಕಲ್ಪನೆಯನ್ನು ಪ್ರಸ್ತಾಪಿಸಿದ್ದರು. ಜೋಬರ್ ಕುಗೆಲ್ ಒಂದು ಆಯ್ದ ರೋಗಕಾರಕ ಸೂಕ್ಷ್ಮಾಣುಜೀವಿಯನ್ನು ಗುರಿಯಾಗಿಸುವ ಒಂದು ಸಂಯೋಜಕವಾಗಿದೆ.
- ಅಂದಿನಿಂದ, ವಿಶ್ವದ ಮೊದಲ ಮೊನೊಕ್ಲೋನಲ್ ಪ್ರತಿಕಾಯವಾದ ‘ಮುರೊಮೊನಾಬ್-ಸಿಡಿ 3’ (Muromonab-CD3) ಅನ್ನು ಮಾನವರ ಮೇಲೆ ಕ್ಲಿನಿಕಲ್ ಬಳಕೆಗಾಗಿ ಅನುಮೋದಿಸುವವರೆಗೆ ಎಂಟು ದಶಕಗಳನ್ನು ಸಂಶೋಧನೆಗಾಗಿ ತೆಗೆದುಕೊಂಡಿತು.
- ಮುರೊಮೊನಾಬ್-ಸಿಡಿ 3 ಒಂದು ರೋಗನಿರೋಧಕ ಔಷಧಿಯಾಗಿದ್ದು (Immunosuppressant drug) ‘ಅಂಗಾಂಗ ಕಸಿ’ ರೋಗಿಗಳಲ್ಲಿ ತೀವ್ರವಾದ ನಿರಾಕರಣೆಯನ್ನು (Acute Rejection) ಕಡಿಮೆ ಮಾಡಲು ಇದನ್ನು ನೀಡಲಾಗುತ್ತದೆ.
ಅನ್ವಯಗಳು:
ಮೊನೊಕ್ಲೋನಲ್ ಪ್ರತಿಕಾಯಗಳು ಈಗ ತುಲನಾತ್ಮಕವಾಗಿ ಸಾಮಾನ್ಯವಾಗಿದೆ. ಎಬೋಲಾ, ಎಚ್‌ಐವಿ, ಚರ್ಮ ರೋಗಗಳು (psoriasis) ಇತ್ಯಾದಿಗಳ ಚಿಕಿತ್ಸೆಯಲ್ಲಿ ಅವುಗಳನ್ನು ಬಳಸಲಾಗುತ್ತದೆ.
ವಿಷಯಗಳು:ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.
ವೈರಸ್ ನ ಮೂಲದ ಬಗ್ಗೆ ತನಿಖೆ ನಡೆಸಲು ಆದೇಶ ನೀಡಿದ ಬೈಡನ್:
(Biden orders probe into virus origins)
ಸಂದರ್ಭ:
ಅಮೇರಿಕಾ ಅಧ್ಯಕ್ಷ ಜೋ ಬೈಡನ್ ಅಮೆರಿಕನ್ ಗುಪ್ತಚರ ಸಂಸ್ಥೆಗಳಿಗೆ COVID-19 ನ ಮೂಲವನ್ನು ವಿಶ್ಲೇಷಿಸಲು, ಮಾಡಲಾಗುತ್ತಿರುವ ತಮ್ಮ ಸತ್ಯ ಪತ್ತೆಹಚ್ಚುವ ಪ್ರಯತ್ನಗಳನ್ನು “ದ್ವಿಗುಣಗೊಳಿಸಲು” ಆದೇಶಿಸಿದ್ದಾರೆ. ಏಕೆಂದರೆ ಈ ಕರೋನ ವೈರಸ್ ಮಾನವ-ಪ್ರಾಣಿಗಳ ಪರಸ್ಪರ ಸಂಪರ್ಕದಿಂದ ಹುಟ್ಟಿದೆಯೋ ಅಥವಾ ಪ್ರಯೋಗಾಲಯದಲ್ಲಿನ ಆಕಸ್ಮಿಕ ಸೋರಿಕೆಯ ಮೂಲಕ ಹೊರಹೊಮ್ಮಿದೆಯೋ ಎಂದು ನಿರ್ಧರಿಸಲು ಅವರು ಬಯಸಿದ್ದಾರೆ.
ಸಮಗ್ರ, ಪಾರದರ್ಶಕ, ಸಾಕ್ಷ್ಯ ಆಧಾರಿತ ಅಂತರರಾಷ್ಟ್ರೀಯ ತನಿಖೆಯಲ್ಲಿ ಭಾಗವಹಿಸಲು ಮತ್ತು ಎಲ್ಲಾ ಸಂಬಂಧಿತ ದತ್ತಾಂಶ ಮತ್ತು ಪುರಾವೆಗಳಿಗೆ ಪ್ರವೇಶವನ್ನು ಒದಗಿಸಲು ಚೀನಾದ ಮೇಲೆ ಒತ್ತಡ ಹೇರಲು ವಿಶ್ವದಾದ್ಯಂತ ಸಮಾನ ಮನಸ್ಕ ಪಾಲುದಾರರೊಂದಿಗೆ ಕೆಲಸ ಮಾಡುವುದನ್ನು ಇದು ಮುಂದುವರಿಸುತ್ತದೆ ಎಂದು ಯುನೈಟೆಡ್ ಸ್ಟೇಟ್ಸ್ ಹೇಳಿದೆ.
ಈ ನಡೆಯ ಪರಿಣಾಮಗಳು:
ಈ ಪ್ರಕಟಣೆಯು SARS-COV-2 ವೈರಸ್‌ನ ಉಗಮದ ಬಗ್ಗೆ ಹೆಚ್ಚು ಮುಕ್ತವಾಗಿರಲು ಚೀನಾದ ಮೇಲೆ ಈಗಾಗಲೇ ಹೆಚ್ಚುತ್ತಿರುವ ಒತ್ತಡವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ, 2020 ರ ಆರಂಭದಲ್ಲಿ ಕರೋನ ವೈರಸ್ ಏಕಾಏಕಿಯಾಗಿ ಚೀನಾದ ನಗರವಾದ ವುಹಾನ್‌ನಲ್ಲಿ ಮೊದಲು ಹರಡಿತು, ವಿಶೇಷವೆಂದರೆ, ವೈರಾಣುಗಳನ್ನು ಪೋಷಿಸಿ, ಛೇಧಿಸಿ, ಪರೀಕ್ಷಿಸುವಲ್ಲಿ ವಿಶ್ವಖ್ಯಾತಿ ಪಡೆದ ಘೋರಭದ್ರ ವೈರಾಣು ಸಂಶೋಧನಾ ಸಂಸ್ಥೆಯಾದ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (WIV) ಯು ಇರುವುದು ವುಹಾನ್ ನಗರದಲ್ಲಿಯೇ.
ವುಹಾನ್‌ನಲ್ಲಿನ ಲ್ಯಾಬ್ ಮೇಲೆಯೇ ಏಕೆ ಗಮನ ಕೇಂದ್ರೀಕರಿಸಲಾಗಿದೆ?
ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (WIV) ಯು ಪ್ರಯೋಗಕ್ಕಾಗಿ ವನ್ಯಜೀವಿಗಳಿಂದ ಆನುವಂಶಿಕ ವಸ್ತುಗಳನ್ನು ಸಂಗ್ರಹಿಸುತ್ತದೆ.
- 2002 ರಲ್ಲಿ SARS-CoV-1 ವೈರಸ್ ನ ಅಂತರರಾಷ್ಟ್ರೀಯ ಏಕಾಏಕಿ ಹರಡುವಿಕೆಯು ಚೀನಾದಲ್ಲಿ ಪ್ರಾರಂಭವಾಯಿತು. ಆ ನಂತರ ಈ ಪ್ರಯೋಗಾಲಯದಲ್ಲಿ ಭಾವಲಿಗಳಿಂದ ಹರಡುವ ವೈರಸ್‌ಗಳ ಬಗ್ಗೆ ವ್ಯಾಪಕವಾದ ಸಂಶೋಧನೆಗಳನ್ನು ಮಾಡಲಾಗಿದೆ.
- ಅದರ ಮೂಲದ ಹುಡುಕಾಟವು ವರ್ಷಗಳ ವರಗೆ ನಡೆಯಿತು ನಂತರ ನೈರುತ್ಯ ಚೀನಾದಲ್ಲಿರುವ ಬ್ಯಾಟ್ ಗುಹೆಯಲ್ಲಿ (Bat Cave) SARS ತರಹದ ವೈರಸ್‌ಗಳ ಆವಿಷ್ಕಾರಕ್ಕೆ ಕಾರಣವಾಯಿತು.
ಈ ಲ್ಯಾಬ್‌ನಿಂದ ವೈರಸ್ ಹೇಗೆ ಸೋರಿಕೆಯಾಗಿರಬಹುದು?
- ಮಾನವನ ಸೂಕ್ಷ್ಮತೆಯನ್ನು ಅಳೆಯಲು ಅಂದರೆ ಮಾನವನು ವೈರಸ್ ದಾಳಿಗೆ ಒಳಗಾಗುವುದನ್ನು ಕಂಡುಹಿಡಿಯಲು, ಸಂಶೋಧಕರು ಪ್ರಾಣಿಗಳ ಮೇಲೆ ಜೀವಂತ ವೈರಸ್‌ಗಳನ್ನು ಪ್ರಯೋಗಿಸುತ್ತಾರೆ. ಯಾವುದೇ ಲೋಪದೋಷದ ಮೂಲಕ ಅಥವಾ ಆಕಸ್ಮಿಕವಾಗಿಯೂ ರೋಗಕಾರಕಗಳು ಪ್ರಯೋಗಾಲಯದಿಂದ ತಪ್ಪಿಸಿಕೊಳ್ಳದಂತೆ ಅಥವಾ ಬಿಡುಗಡೆಯಾಗುವ ಅಪಾಯವನ್ನು ಕಡಿಮೆ ಮಾಡಲು, ರಕ್ಷಣಾತ್ಮಕ ಪೋಷಾಕುಗಳು ಮತ್ತು ಸೂಪರ್ ಏರ್ ಫಿಲ್ಟರೇಶನ್ (air filtration) ನಂತಹ ಕಠಿಣ ಸುರಕ್ಷತಾ ಪ್ರೋಟೋಕಾಲ್ ಗಳಂತಹ ಸೌಲಭ್ಯಗಳನ್ನು ಪ್ರಯೋಗಾಲಯದಲ್ಲಿ ಅಳವಡಿಸಲಾಗಿರುತ್ತದೆ. ಆದರೆ ಕಟ್ಟುನಿಟ್ಟಾದ ಕ್ರಮಗಳು ಸಹ ಕೆಲವೊಮ್ಮೆ ಅಂತಹ ಅಪಾಯಗಳನ್ನು ತಡೆಗಟ್ಟಲು ಸಾಧ್ಯವಾಗುವುದಿಲ್ಲ. ಆದ್ದರಿಂದ, ಈ ವೈರಸ್ ಪ್ರಯೋಗಾಲಯದಲ್ಲಿ ಹುಟ್ಟಿಕೊಂಡಿರಬಹುದು ಎಂದು ನಂಬಲು ಒಂದು ಕಾರಣವಿದೆ.
- ಹೆಚ್ಚುವರಿಯಾಗಿ, ಈ ಪ್ರಯೋಗಾಲಯವು ವುಹಾನ್ ನ ಸೀಫುಡ್ ಮಾರುಕಟ್ಟೆಗೆ(Huanan Seafood Market) ಸಮೀಪದಲ್ಲಿದೆ, ಆರೋಗ್ಯ ಬಿಕ್ಕಟ್ಟಿನ ಅಥವಾ ಸಾಂಕ್ರಾಮಿಕ ಆರಂಭದಲ್ಲಿ ವೈರಸ್ ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ಸಾಧ್ಯತೆ ಇರುವ ಸ್ಥಳವೆಂದು ಉಲ್ಲೇಖಿಸಲಾಗಿದೆ. ತಿಳಿದಿರುವಂತೆ,ಈ ಮಾರುಕಟ್ಟೆಯು ಕೂಡ ಮೊದಲ ಬಾರಿಗೆ COVID-19 ರ ವೇಗವಾಗಿ ಹರಡುವ ಘಟನೆ ನಡೆದ ಸೂಪರ್‌ಸ್ಪ್ರೆಡರ್ ತಾಣವಾಗಿತ್ತು.
- ಎಲ್ಲಕ್ಕಿಂತ ಮಿಗಿಲಾಗಿ ಹೇಳುವುದಾದರೆ, ಲ್ಯಾಬ್ ನಿಂದ ವೈರಸ್ ಸೋರಿಕೆಯ ಸನ್ನಿವೇಶವನ್ನು ಸಮಗ್ರವಾಗಿ ತನಿಖೆ ಮಾಡಲು ಅವಕಾಶ ನೀಡಲು ಚೀನಾ ಸರ್ಕಾರ ನಿರಾಕರಿಸುವುದು ಈ ಸಿದ್ಧಾಂತಗಳಿಗೆ ಇನ್ನಷ್ಟು ಬಲವನ್ನು ನೀಡುತ್ತದೆ.
ವೈರಸ್ ನ ನೈಸರ್ಗಿಕ ಮೂಲದ ಉಗಮವನ್ನು ಬೆಂಬಲಿಸುವ ವಿಜ್ಞಾನಿಗಳ ವಾದವೇನು?
- ವನ್ಯಜೀವಿಗಳು ಮತ್ತು ಸಾಕು ಪ್ರಾಣಿಗಳೊಂದಿಗಿನ ಮಾನವ ಸಂವಹನಗಳನ್ನು ಗುರುತಿಸಲಾದ ಕಳೆದ ಶತಮಾನದ ಕೆಲವು ಮಾರಕ ಹೊಸ ಕಾಯಿಲೆಗಳು ಎಂದರೆ, ಮೊದಲ SARS ಸಾಂಕ್ರಾಮಿಕ (ಬಾವಲಿಗಳು), MERS-CoV (ಒಂಟೆಗಳು), ಎಬೋಲಾ (ಬಾವಲಿಗಳು ಅಥವಾ ಮಾನವೇತರ ಸಸ್ತನಿಗಳು) ಮತ್ತು ನಿಫಾ ವೈರಸ್ (ಬಾವಲಿಗಳು) ಗಳನ್ನು ಒಳಗೊಂಡಿವೆ.
- COVID-19 ವೈರಸ್ ನ ಉಗಮಕ್ಕೆ ಕಾರಣವಾದ ಯಾವುದೇ ಪ್ರಾಣಿ ಮೂಲವನ್ನು ಇಲ್ಲಿಯವರೆಗೆ ಗುರುತಿಸಲಾಗಿಲ್ಲವಾದರೂ, ವುಹಾನ್‌ನಲ್ಲಿನ ವನ್ಯಜೀವಿ ಮಾರುಕಟ್ಟೆಯ ವನ್ಯಜೀವಿ ವಿಭಾಗದಲ್ಲಿನ ಅಂಗಡಿಗಳಿಂದ ಪಡೆದ ಮಾದರಿಗಳನ್ನು ಪರೀಕ್ಷಿಸಿದ ನಂತರ ಸಕಾರಾತ್ಮಕ / ಪಾಸಿಟಿವ್ ಫಲಿತಾಂಶಗಳು ಕಂಡುಬಂದಿವೆ.ಇದು ಸೋಂಕಿತ ಪ್ರಾಣಿ ಅಥವಾ ಅವುಗಳನ್ನು ನೋಡಿಕೊಳ್ಳುವ ವ್ಯಕ್ತಿಯಿಂದ ಸಾಂಕ್ರಾಮಿಕವು ಏಕಾಏಕಿಯಾಗಿ ಹರಡಿರುವುದನ್ನು ಸೂಚಿಸುತ್ತದೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
ಜಯಂತಿ (ಜೀರುಂಡೆ):
(Jayanti)
ಜಯಂತಿ 1897 ರ ಅರಾಕ್ನೋಮಿಮಸ್ ಸಾಸುರೆ (Arachnomimus Saussure) ಕುಲದ ಅಡಿಯಲ್ಲಿ ಗುರುತಿಸಲ್ಪಟ್ಟ ಜೀರುಂಡೆಯ(Cricket) ಹನ್ನೆರಡನೆಯ ಉಪವರ್ಗ ಅಥವಾ ಪ್ರಜಾತಿಯಾಗಿದೆ.
- ಜೀರುಂಡೆಯ ಈ ಪ್ರಜಾತಿಯನ್ನು 2021 ರ ಏಪ್ರಿಲ್‌ನಲ್ಲಿ ಛತ್ತೀಸಗಡ ಕುರ್ರಾ ಗುಹೆಗಳಲ್ಲಿ (Kurra Caves) ಪ್ರಾಣಿಶಾಸ್ತ್ರಜ್ಞರ ತಂಡ ಕಂಡುಹಿಡಿದಿದೆ.
- ಈ ಸಂಶೋಧನಾ ತಂಡಕ್ಕೆ ಸಹಾಯ ಮಾಡಿದ ದೇಶದ ಪ್ರಮುಖ ಗುಹೆ ಪರಿಶೋಧಕರಲ್ಲಿ ಒಬ್ಬರಾದ ಪ್ರೊಫೆಸರ್ ಜಯಂತ್ ಬಿಸ್ವಾಸ್ ಅವರ ಗೌರವಾರ್ಥ ಅವರ ಹೆಸರನ್ನು ಇದಕ್ಕೆ ಜಯಂತಿ ಎಂಬ ಹೆಸರಿನಿಂದ ನಾಮಕರಣ ಮಾಡಲಾಗಿದೆ.
- ಅತ್ಯಂತ ಕುತೂಹಲಕಾರಿಯಾದ ಅಂಶವೆಂದರೆ, ಹೊಸ ಜಯಂತಿ ಪ್ರಜಾತಿಯ ಗಂಡು ಜೀರುಂಡೆಗಳು ಶಬ್ದವನ್ನು ಉತ್ಪಾದಿಸಲು ಸಾಧ್ಯವಿಲ್ಲ ಮತ್ತು ಅವುಗಳ ಹೆಣ್ಣು ಜೀರುಂಡೆಗಳಿಗೆ ಕಿವಿ ಇರುವುದಿಲ್ಲ.
1878 ರಲ್ಲಿ ಜೇಡಗಳನ್ನು ಹೋಲುವ ಜೀರುಂಡೆ (ಕ್ರಿಕೆಟ್) ಗಳಿಗೆ ಅರಾಕ್ನೋಮಿಮಸ್ (Arachnomimus) ಎಂಬ ಕುಲ (genus) ನಾಮವನ್ನು ಸ್ವಿಸ್ ಕೀಟಶಾಸ್ತ್ರಜ್ಞ (Entomologist) ಹೆನ್ರಿ ಲೂಯಿಸ್ ಫ್ರೆಡೆರಿಕ್ ಡಿ ಸಾಸುರೆ (Henri Louis Frédéric de Saussure) ಯವರು ನೀಡಿದರು.