Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 25ನೇ ಮೇ 2021

 

ಪರಿವಿಡಿ:

ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಸೂರ್ಯನ ಪ್ರಭಾವಲಯ ಎಂದರೇನು?

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಲಕ್ಷದ್ವೀಪದಲ್ಲಿ ಜಾರಿಗೆ ತರಲಾದ ಮಾನದಂಡಗಳನ್ನು ಹಿಂಪಡೆಯಬೇಕೆಂಬ ಬೇಡಿಕೆ.

2. ಝೂನೋಟಿಕ್ ಕಾಯಿಲೆಗಳ ಹೆಚ್ಚಳದ ಕುರಿತು ತನಿಖೆ ನಡೆಸಲು ಮತ್ತು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು WHOದ ಸಮಿತಿ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಬನ್ನಿ ಹುಲ್ಲುಗಾವಲು ಪ್ರದೇಶದಲ್ಲಿನ ದನಗಾಹಿಗಳ ಹಕ್ಕುಗಳನ್ನು ಎತ್ತಿಹಿಡಿದ

 

ಸಾಮಾನ್ಯ ಅಧ್ಯಯನ ಪತ್ರಿಕೆ 4:

1. ಅತಂತ್ರ ಕಾರ್ಮಿಕರಿಗೆ ಆಹಾರ, ಪಡಿತರವನ್ನು ಒದಗಿಸಿ: ವರಿಷ್ಠ ನ್ಯಾಯಾಲಯ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಬೆಲಾರಸ್.

2. ಎಂಸಿಎ 21 ಆವೃತ್ತಿ 3.0.

3. ಶಾಹಿ ಲಿಚಿ.

4. ಯುವಾನ್ ಲಾಂಗ್ಪಿಂಗ್.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಭೂಕಂಪಗಳು, ಸುನಾಮಿ, ಜ್ವಾಲಾಮುಖಿ ಚಟುವಟಿಕೆಗಳು ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು, ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಸ್ಥಳ- ನಿರ್ಣಾಯಕ ಭೌಗೋಳಿಕ ವೈಶಿಷ್ಟ್ಯಗಳಲ್ಲಿನ ಬದಲಾವಣೆಗಳು (ಸಾಗರಗಳು ಮತ್ತು ಐಸ್-ಕ್ಯಾಪ್ಗಳು ಸೇರಿದಂತೆ) ಮತ್ತು ಸಸ್ಯ ಮತ್ತು ಪ್ರಾಣಿ ಮತ್ತು ಅಂತಹ ಬದಲಾವಣೆಗಳ ಪರಿಣಾಮಗಳು.

ಸೂರ್ಯನ ಪ್ರಭಾವಲಯ ಎಂದರೇನು?


(What is Sun’s halo?)

ಸಂದರ್ಭ:

ಇತ್ತೀಚೆಗೆ, ಬೆಂಗಳೂರಿನ ಬಾನಂಗಳದಲ್ಲಿ ಒಂದು ಮಂತ್ರಮುಗ್ಧಗೊಳಿಸುವ ಘಟನೆ ಜರುಗಿತು – ಸೂರ್ಯನ ಸುತ್ತ ಕಾಮನಬಿಲ್ಲಿನಂತಹ ರಚನೆಯನ್ನು ಗಮನಿಸಲಾಯಿತು. ಸೂರ್ಯನ ಸುತ್ತಲಿನ ಈ ವೃತ್ತಾಕಾರದ ಮಳೆಬಿಲ್ಲನ್ನು/ಕಾಮನಬಿಲ್ಲನ್ನು ‘ಸೂರ್ಯ ಪ್ರಭಾವಲಯ’ (Sun halo) ಎಂದು ಕರೆಯಲಾಗುತ್ತದೆ.

ಸೂರ್ಯ ಪ್ರಭಾವಲಯ’ ಎಂದರೇನು ಮತ್ತು ಅದು ಹೇಗೆ ರೂಪುಗೊಳ್ಳುತ್ತದೆ?

ಸೂರ್ಯನ ಸುತ್ತ ಗೋಚರಿಸುವ ಪ್ರಭಾವಲಯವು 22-ಡಿಗ್ರಿ ಉಂಗುರವಾಗಿದೆ,(ಏಕೆಂದರೆ ಈ ಉಂಗುರಗಳು ಸೂರ್ಯ ಅಥವಾ ಚಂದ್ರನ ಸುತ್ತ ಸುಮಾರು 22 ಡಿಗ್ರಿ ತ್ರಿಜ್ಯವನ್ನು ಹೊಂದಿರುತ್ತವೆ) ಇದು ಮೇಲ್ಮಟ್ಟದ ಸಿರಸ್ ಮೋಡಗಳಲ್ಲಿರುವ ಐಸ್ ಸ್ಫಟಿಕಗಳ ಅಥವಾ ಮಂಜಿನ ಹರಳುಗಳ ಮೂಲಕ ಬಿಳಿ ಬೆಳಕಿನ ಕಿರಣಗಳು ಹಾದುಹೋದಾಗ ಬೆಳಕಿನ ಚದುರುವಿಕೆಯಿಂದ ಗೋಚರಿಸುತ್ತದೆ.ಈ ಕಾರಣಕ್ಕಾಗಿ, ಕಾಮನಬಿಲ್ಲಿನ ಬಣ್ಣಗಳು ಪ್ರಭಾವಲಯದಲ್ಲಿ ಕಂಡುಬರುತ್ತವೆ.

 1. ಸೂರ್ಯನ ಸುತ್ತ ತೇಜೋಪುಂಜದಂತೆ ಕಾಣುವ ಈ ಉಂಗುರ ನಿರ್ಮಾಣ ಆಗಲು ಮುಖ್ಯ ಕಾರಣ ಬೆಳಕಿನ ವಕ್ರೀಭವನ. ವಾತಾವರಣದಲ್ಲಿ ಮಂಜಿನ ಹರಳುಗಳ ಮೇಲೆ ಸೂರ್ಯ ಕಿರಣಗಳು ಬಿದ್ದಾಗ, ಕಿರಣಗಳು ವಕ್ರೀಭವನ ಹೊಂದಿ ಬಾಗುತ್ತವೆ. ಬೆಳಕಿನ ಏಳು ಬಣ್ಣಗಳು ಪ್ರಕಟಗೊಳ್ಳುತ್ತದೆ. ಅತಿ ಸೂಕ್ಷ್ಮ ಸ್ವರೂಪದ ಮೋಡಗಳ ಇರುವಿಕೆಯಿಂದ ನೋಡುಗರ ಕಣ್ಣುಗಳಿಗೆ ಈ ನೈಸರ್ಗಿಕ ಕ್ರಿಯೆ ಉಂಗುರದಂತೆ ಗೋಚರಿಸುತ್ತದೆ. ಈ ಮೋಡಗಳು ಸುಮಾರು 20,000 ಅಡಿ ಎತ್ತರದಲ್ಲಿ ಸೃಷ್ಟಿಯಾಗಿರುತ್ತವೆ. ಮೋಡಗಳು ಕೋಟಿಗಟ್ಟಲೆ ಅತಿ ಸೂಕ್ಷ್ಮ ಮಂಜಿನ ಹರಳಗಳನ್ನು ಒಳಗೊಂಡಿರುತ್ತವೆ.
 2. ಮೋಡಗಳಲ್ಲಿ ಲಕ್ಷಾಂತರ ಸಣ್ಣ ಮಂಜಿನ ಹರಳುಗಳಿವೆ, ಅದರ ಮೂಲಕ ಬೆಳಕಿನ ವಕ್ರೀಭವನ, ಚದುರುವಿಕೆ ಮತ್ತು ಪ್ರತಿಫಲನ ಸಂಭವಿಸುತ್ತದೆ ಮತ್ತು ವೃತ್ತಾಕಾರದ ಮಳೆಬಿಲ್ಲಿನ ಉಂಗುರವು ಕಾಣಿಸಿಕೊಳ್ಳುತ್ತದೆ.
 3. ಪ್ರಭಾವಲಯವು ಕಾಣಿಸಿಕೊಳ್ಳಲು, ಈ ಮಂಜಿನ ಹರಳುಗಳು ದೃಷ್ಟಿಗೆ ಅನುಗುಣವಾಗಿ ಆಧಾರಿತವಾಗಿರಬೇಕು ಮತ್ತು ನೆಲೆಗೊಂಡಿರಬೇಕು. ಅಂದರೆ ಈ ಉಂಗುರವನ್ನು ವಿಭಿನ್ನ ಕೋನಗಳಲ್ಲಿ ನೋಡಿದಾಗ ಕೊಂಚ ಭಿನ್ನವಾಗಿ ಗೋಚರಿಸುತ್ತದೆ. ಸರಿಯಾದ ಕೋನದಲ್ಲಿ ನೋಡಿದಾಗ ಮಾತ್ರ ಕಾಮನಬಿಲ್ಲಿನ ಗೋಲದಂತೆ ಕಾಣಿಸುತ್ತದೆ ಇಲ್ಲವಾದರೆ ಕೇವಲ ಬಿಳಿ ಉಂಗುರದಂತೆ ಕಾಣಿಸುತ್ತದೆ.

 

ಅಂತೆಯೇ, ಚಂದ್ರ ಪ್ರಭಾವಲಯ ಎಂದರೇನು?

ಚಂದ್ರನ ಸುತ್ತಲೂ ಕಾಣುವ ‘ಚಂದ್ರನ ಪ್ರಭಾವಲಯವು’    ( lunar halos) ಹೆಚ್ಚಾಗಿ ಬಣ್ಣರಹಿತವಾಗಿರುತ್ತದೆ ಏಕೆಂದರೆ ಚಂದ್ರನ ಬೆಳಕು ಹೆಚ್ಚು ಪ್ರಕಾಶಮಾನವಾಗಿರುವುದಿಲ್ಲ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು – ರಚನೆ, ಕಾರ್ಯವೈಖರಿ, ವ್ಯವಹಾರದ ನಡಾವಳಿಗಳು, ಅಧಿಕಾರಗಳು ಮತ್ತು ಸವಲತ್ತುಗಳು ಮತ್ತು ಇವುಗಳಿಂದ ಉಂಟಾಗುವ ಸಮಸ್ಯೆಗಳು.

ಲಕ್ಷದ್ವೀಪದಲ್ಲಿ ಜಾರಿಗೆ ತರಲಾದ ಮಾನದಂಡಗಳನ್ನು ಹಿಂಪಡೆಯಬೇಕೆಂಬ ಬೇಡಿಕೆ:


ಸಂದರ್ಭ:

ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರು 2020 ರ ಡಿಸೆಂಬರ್‌ನಲ್ಲಿ ನೇಮಕಗೊಂಡಾಗಿನಿಂದ, ಅವರು ಪ್ರಾರಂಭಿಸಿದ ನೀತಿಗಳ ಬಗ್ಗೆ ಕೇಂದ್ರಾಡಳಿತ ಪ್ರದೇಶವಾದ ಲಕ್ಷದ್ವೀಪ ಮತ್ತು ನೆರೆಯ ರಾಜ್ಯ ಕೇರಳದ ನಿವಾಸಿಗಳು ಮತ್ತು ರಾಜಕಾರಣಿಗಳ ವಿರೋಧವನ್ನು ಎದುರಿಸಿದ್ದಾರೆ.

ವಿವಾದಾತ್ಮಕ ನಿಯಮಗಳು ಇಂತಿವೆ:

 1. ‘ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರ ನಿಯಂತ್ರಣ (Lakshadweep Development Authority Regulation – LDAR) ಕರಡು 2021 – ಇದರ ಅಡಿಯಲ್ಲಿ, ಯಾವುದೇ ಪಟ್ಟಣ ಯೋಜನೆ ಅಥವಾ ಇನ್ನಾವುದೇ ಅಭಿವೃದ್ಧಿ ಕಾರ್ಯಗಳಿಗಾಗಿ ದ್ವೀಪವಾಸಿಗಳನ್ನು ಅವರ ಸ್ವತ್ತಿನಿಂದ ಅಥವಾ ಆಸ್ತಿಯಿಂದ ಹೊರಹಾಕಲು ಅಥವಾ ಸ್ಥಳಾಂತರಿಸಲು ಆಡಳಿತಗಾರನಿಗೆ ಅಧಿಕಾರವನ್ನು ನೀಡುತ್ತದೆ.
 2. ಜನವರಿ 2021 ರಲ್ಲಿ, ‘ಸಾಮಾಜ ವಿರೋಧಿ ಚಟುವಟಿಕೆಗಳ ತಡೆಗಟ್ಟುವಿಕೆ ಕಾಯ್ದೆ- (Prevention of Anti-Social Activities Act- PASA) ಜಾರಿಗೆ ತರಲಾಗಿದ್ದು, ಇದರ ಅಡಿಯಲ್ಲಿ ಒಬ್ಬ ವ್ಯಕ್ತಿಯನ್ನು ಯಾವುದೇ ಸಾರ್ವಜನಿಕ ಪ್ರಕಟಣೆಯಿಲ್ಲದೆಯೆ ಒಂದು ವರ್ಷದ ವರೆಗೆ ಬಂಧಿಸಬಹುದು.
 3. ಪಂಚಾಯತ್ ಅಧಿಸೂಚನೆ ಕರಡು (panchayat notification) ಇದರ ಅಡಿಯಲ್ಲಿ, ಎರಡು ಮಕ್ಕಳಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ವ್ಯಕ್ತಿಯನ್ನು ಪಂಚಾಯತ್ ಸದಸ್ಯನಾಗುವುದರಿಂದ ಅನರ್ಹಗೊಳಿಸಲಾಗುತ್ತದೆ.

 

ಇತ್ತೀಚೆಗೆ ರೂಪಿಸಲಾದ ‘ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರ’ (LDA) ಸಂಬಂಧಿತ ವಿಷಯಗಳು:

 1. ಇತ್ತೀಚೆಗೆ ರಚಿಸಲಾದ ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರಕ್ಕೆ (Lakshadweep Development Authority- LDA) ವ್ಯಾಪಕ ಅಧಿಕಾರ ನೀಡಲಾಗಿದ್ದು, ಇದರ ಅಡಿಯಲ್ಲಿ ಭೂಮಾಲೀಕರನ್ನು ಸಹ ಹೊರಹಾಕಬಹುದು.
 2. ಇದೊಂದು ‘ರಿಯಲ್ ಎಸ್ಟೇಟ್ ಲಾಬಿ’ ಯಾಗಿದೆ ಮತ್ತು ದ್ವೀಪವಾಸಿಗಳ ಹಿತಾಸಕ್ತಿಗೆ ವಿರುದ್ಧವಾದ ಕ್ರಮವೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ.
 3. ಏಕೆಂದರೆ ಈ ಕಾನೂನಿನಿಂದ ಪ್ರಾಧಿಕಾರಕ್ಕೆ ವ್ಯಾಪಕ ಅಧಿಕಾರ ನೀಡಲಾಗಿದೆ, ಅದರ ಅಡಿಯಲ್ಲಿ ಯಾವುದೇ ಪ್ರದೇಶಕ್ಕೆ ಸಮಗ್ರ ಅಭಿವೃದ್ಧಿ ಯೋಜನೆಗಳನ್ನು ಸಿದ್ಧಪಡಿಸಬಹುದು ಮತ್ತು ಜನರನ್ನು ಸ್ಥಳಾಂತರಿಸಬಹುದು.

 

ನಿರ್ವಾಹಕರ ನೇಮಕಾತಿ, ಪಾತ್ರ ಮತ್ತು ಪ್ರಾಮುಖ್ಯತೆ:

 1. ಪ್ರಫುಲ್ ಪಟೇಲ್ ಅವರನ್ನು 2020 ರ ಡಿಸೆಂಬರ್‌ನಲ್ಲಿ ಲಕ್ಷದ್ವೀಪ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಯಿತು.
 2. ಸಾಮಾನ್ಯವಾಗಿ, ಐಎಎಸ್ ಅಧಿಕಾರಿಗಳನ್ನು ಮಾತ್ರ ನಿರ್ವಾಹಕ ಹುದ್ದೆಗೆ ನೇಮಿಸುವುದು ವಾಡಿಕೆ, ಆದರೆ ಪಟೇಲ್ ಅವರನ್ನು ಈ ಹಿಂದಿನ ಸಂಪ್ರದಾಯವನ್ನು ಮುರಿಯುವ ಮೂಲಕ ಈ ಕೇಂದ್ರಾಡಳಿತ ಪ್ರದೇಶದ ಆಡಳಿತಾಧಿಕಾರಿಯಾಗಿ ನೇಮಿಸಲಾಯಿತು.
 3. ಭಾರತದ ರಾಷ್ಟ್ರಪತಿಗಳು ನೇಮಕ ಮಾಡುವ ನಿರ್ವಾಹಕರ ಹುದ್ದೆಯು ಯಾವುದೇ ಕೇಂದ್ರಾಡಳಿತ ಪ್ರದೇಶಕ್ಕೆ ಮುಖ್ಯವಾಗಿದೆ, ಏಕೆಂದರೆ, ಆಡಳಿತಾಧಿಕಾರಿ ಹುದ್ದೆಗೆ ನೇಮಕಗೊಂಡ ವ್ಯಕ್ತಿಯು ಆ ಪ್ರದೇಶದ ಎಲ್ಲಾ ಕಾರ್ಯಗಳ ಉಸ್ತುವಾರಿ ವಹಿಸಿಕೊಳ್ಳುತ್ತಾನೆ ಮತ್ತು ಅಧ್ಯಕ್ಷರ ಪರವಾಗಿ ಕಾರ್ಯನಿರ್ವಹಿಸುತ್ತಾನೆ.

 

ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ಝೂನೋಟಿಕ್ ಕಾಯಿಲೆಗಳ ಹೆಚ್ಚಳದ ಕುರಿತು ತನಿಖೆ ನಡೆಸಲು ಮತ್ತು ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಲು WHOದ ಸಮಿತಿ:


(WHO panel to investigate rise in zoonotic diseases and build action plan)

 

ಸಂದರ್ಭ:

ಇತ್ತೀಚೆಗೆ, ವಿಶ್ವ ಆರೋಗ್ಯ ಸಂಸ್ಥೆ (WHO) ಯು, ಪಶು ಜನ್ಯ ಕಾಯಿಲೆಗಳು ಅಂದರೆ ಝೂನೋಟಿಕ್ ಕಾಯಿಲೆಗಳಾದ (Zoonotic Diseases) H5N1, ಏವಿಯನ್ ಇನ್ಫ್ಲುಯೆನ್ಸ, ಮಿಡಲ್ ಈಸ್ಟ್ ರೆಸ್ಪಿರೇಟರಿ ಸಿಂಡ್ರೋಮ್ (MERS), ಎಬೋಲಾ, ಜಿಕಾ(ZIKA)ಮತ್ತು ಬಹುಶಃ ನಾವೆಲ್ ಕೊರೊನಾವೈರಸ್ ಕಾಯಿಲೆ (COVID-19) ರೋಗಗಳ ಹೊರಹೊಮ್ಮುವಿಕೆ ಮತ್ತು ಹರಡುವಿಕೆಯನ್ನು ಅಧ್ಯಯನ ಮಾಡಲು ‘ಒನ್ ಹೆಲ್ತ್’  (One Health) ಎಂಬ ಉನ್ನತ ಮಟ್ಟದ ತಜ್ಞರ ಸಮಿತಿಯನ್ನು ರಚಿಸಿದೆ.

 

ಉಲ್ಲೇಖ ನಿಯಮಗಳು:

 1. ಈ ಸಮಿತಿಯು ಭವಿಷ್ಯದಲ್ಲಿ ಏಕಾಏಕಿಯಾಗಿ ಬಂದೆರಗುವ ವಿಶೇಷವಾಗಿ ಝೂನೋಟಿಕ್ ಕಾಯಿಲೆಗಳನ್ನು ಹೇಗೆ ತಪ್ಪಿಸಬಹುದು ಎಂಬುದರ ಕುರಿತು ಜಾಗತಿಕ ಏಜೆನ್ಸಿಗಳಿಗೆ ಸಲಹೆಯನ್ನು ನೀಡುತ್ತದೆ.
 2. ತಜ್ಞರ ಸಮಿತಿಯು ಇದಕ್ಕಾಗಿ ಮೇಲ್ವಿಚಾರಣಾ ಚೌಕಟ್ಟು ಮತ್ತು ಜಾಗತಿಕ ಕ್ರಿಯಾ ಯೋಜನೆಯನ್ನು ಸಹ ಅಭಿವೃದ್ಧಿಪಡಿಸುತ್ತದೆ.

 

ಹಿನ್ನೆಲೆ:

ಝೂನೋಟಿಕ್ ಕಾಯಿಲೆಗಳು-ಪ್ರಾಣಿಗಳಿಂದ ಮನುಷ್ಯರಿಗೆ ಹರಡುವ ರೋಗಕಾರಕ ಸೋಂಕುಗಳು ಗತಕಾಲದಲ್ಲಿ ಸಾಂಕ್ರಾಮಿಕ ರೋಗಗಳಾಗಿ ಹರಡಿವೆ –. ಪ್ರತಿ ನಾಲ್ಕು ಸಾಂಕ್ರಾಮಿಕ ಕಾಯಿಲೆಗಳಲ್ಲಿ ಮೂರು ‘ಝೂನೋಸಿಸ್’ ನಿಂದ ಉಂಟಾಗುತ್ತವೆ, ಅಂದರೆ ಪ್ರಾಣಿಗಳಿಂದ ಹರಡುವ ರೋಗಗಳು. ಕೋವಿಡ್ -19 ಸಾಂಕ್ರಾಮಿಕ ರೋಗವನ್ನು ವಿಶ್ವದ ಹೆಚ್ಚಿನ ವಿಜ್ಞಾನಿಗಳು  ‘ಝೂನೋಸಸ್’ (zoonosis)  ಎಂದು ಶಂಕಿಸಿದ್ದಾರೆ.

 

ಒಂದು ಆರೋಗ್ಯ ಪರಿಕಲ್ಪನೆ ಎಂದರೇನು?

(What is OneHealth concept?)

 1. ಒನ್ ಹೆಲ್ತ್ ಇನಿಶಿಯೇಟಿವ್ ಟಾಸ್ಕ್ ಫೋರ್ಸ್ ವ್ಯಾಖ್ಯಾನಿಸಿದಂತೆ ಜನರು, ಪ್ರಾಣಿಗಳು ಮತ್ತು ನಮ್ಮ ಪರಿಸರಕ್ಕೆ ಉತ್ತಮವಾದ ಸೂಕ್ತ ಆರೋಗ್ಯವನ್ನು ಪಡೆಯಲು ಸ್ಥಳೀಯವಾಗಿ, ರಾಷ್ಟ್ರೀಯವಾಗಿ ಮತ್ತು ಜಾಗತಿಕವಾಗಿ ಕೆಲಸ ಮಾಡುವ ಅನೇಕ ವಿಭಾಗಗಳ ಸಹಯೋಗದ ಪ್ರಯತ್ನಗಳನ್ನು ಒಂದು ಆರೋಗ್ಯ ಎನ್ನಲಾಗುತ್ತದೆ.
 2. ಒಂದು ಆರೋಗ್ಯ ಮಾದರಿಯು ಪ್ರಪಂಚದಲ್ಲಿ ಹೊಸದಾಗಿ ಉದಯಿಸುತ್ತಿರುವ ಮತ್ತು ಅಸ್ತಿತ್ವದಲ್ಲಿರುವ ಝೂನೋಟಿಕ್ ಬೆದರಿಕೆಗಳನ್ನು ನಿಯಂತ್ರಿಸಲು ರೋಗ ನಿಯಂತ್ರಣದಲ್ಲಿ ಅಂತರಶಿಸ್ತೀಯ ವಿಧಾನವನ್ನು ಸುಗಮಗೊಳಿಸುತ್ತದೆ.

 

ಈ ಕುರಿತು ಭಾರತದ ಯೋಜನೆಗಳು:

ಭಾರತದ ‘ಒನ್ ಹೆಲ್ತ್’ ದೃಷ್ಟಿಕೋನವು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (Food and Agriculture Organization of the United Nations -FAO)), ಪ್ರಾಣಿಗಳ ಆರೋಗ್ಯಕ್ಕಾಗಿ ವಿಶ್ವ ಸಂಸ್ಥೆ (the World Organisation for Animal Health -OIE)), ವಿಶ್ವ ಆರೋಗ್ಯ ಸಂಸ್ಥೆ (the World Health Organization – WHO) ಮತ್ತು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (the United Nations Environment Programme -UNEP) – ವಿಶ್ವಸಂಸ್ಥೆಯ ಮಕ್ಕಳ ನಿಧಿ (United Nations Children’s Fund -UNICEF) ಮತ್ತು ‘ಒಂದು ವಿಶ್ವ ಒಂದು ಆರೋಗ್ಯ’ (One World, One Health) ಕ್ಕೆ ಕೊಡುಗೆ ನೀಡುವ ಉದ್ದೇಶದ ವಿಶ್ವಬ್ಯಾಂಕ್ ಬೆಂಬಲಿಸುವ ಜಾಗತಿಕ ಉಪಕ್ರಮವನ್ನು ಒಳಗೊಂಡ ತ್ರಿಪಕ್ಷೀಯ-ಪ್ಲಸ್ ಮೈತ್ರಿಕೂಟದ (agreement between the tripartite-plus alliance) ನಡುವಿನ ಒಪ್ಪಂದದಿಂದ ತನ್ನ ನೀಲನಕ್ಷೆಯನ್ನು ಪಡೆದುಕೊಂಡಿದೆ.

 

 1. ದೀರ್ಘಕಾಲೀನ ಉದ್ದೇಶಗಳಿಗೆ ಅನುಗುಣವಾಗಿ, ಭಾರತವು ಝೂನೋಸಸ್ ಗಳ ಬಗ್ಗೆ ರಾಷ್ಟ್ರೀಯ ಸ್ಥಾಯಿ ಸಮಿತಿಯನ್ನು 1980 ರ ದಶಕದಷ್ಟು ಹಿಂದೆಯೇ ಸ್ಥಾಪಿಸಿತು.
 2. ಈ ವರ್ಷ, ನಾಗ್ಪುರದಲ್ಲಿ ‘ಆರೋಗ್ಯಕ್ಕಾಗಿ ಒಂದು ಕೇಂದ್ರ’(Centre for One Health) ವನ್ನು ಸ್ಥಾಪಿಸಲು ಹಣವನ್ನು ಮಂಜೂರು ಮಾಡಲಾಗಿದೆ.
 3. ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ (Department of Animal Husbandry and Dairying -DAHD) ಯು 2015 ರಿಂದ ಪ್ರಾಣಿಗಳ ಕಾಯಿಲೆಗಳ ಹರಡುವಿಕೆಯನ್ನು ತಗ್ಗಿಸಲು ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ, ಅದರೊಂದಿಗೆ ಧನಸಹಾಯವನ್ನು ನೀಡಲಾಗುತ್ತದೆ. ಧನಸಹಾಯದ ವಿಧಾನವು (ಕೇಂದ್ರ: ರಾಜ್ಯ) 60:40, ಈಶಾನ್ಯ ರಾಜ್ಯಗಳಿಗೆ 90:10, ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 100% ಧನಸಹಾಯ ನೀಡಲಾಗುತ್ತದೆ.

 

ಝೂನೋಟಿಕ್ ಕಾಯಿಲೆಗಳು ಯಾವುವು?

 1. ‘ಝೂನೋಸಿಸ್’ (Zoonosis) ಎಂಬ ಪದವನ್ನು ಮೊದಲ ಬಾರಿಗೆ ರುಡಾಲ್ಫ್ ವಿರ್ಚೋ(Rudolf Virchow) ಅವರು 1880 ರಲ್ಲಿ ಮಾನವರು ಮತ್ತು ಪ್ರಾಣಿಗಳಿಗೆ ಹರಡುವ ಪ್ರಕೃತಿಯಲ್ಲಿನ ಒಂದೇ ರೀತಿಯ ಕಾಯಿಲೆಗಳನ್ನು ಒಟ್ಟಾಗಿ ವ್ಯಕ್ತಪಡಿಸಲು ಬಳಸಿದರು.
 2. 1959 ರಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ನೀಡಿದ ವ್ಯಾಖ್ಯಾನದ ಪ್ರಕಾರ, ‘ಝೂನೋಸಸ್’ ಎಂಬುದು ಕಶೇರುಕ ಪ್ರಾಣಿಗಳು ಮತ್ತು ಮಾನವರ ನಡುವೆ ನೈಸರ್ಗಿಕವಾಗಿ ಹರಡುವ ರೋಗಗಳು ಮತ್ತು ಸೋಂಕುಗಳಾಗಿವೆ.
 3. ಈ ಝೂನೋಸಿಸ್ ರೋಗಗಳು ಸೂಕ್ಷ್ಮಜೀವಿಗಳು, ಯಾವುದೇ ಬ್ಯಾಕ್ಟೀರಿಯಾ, ವೈರಲ್ ಅಥವಾ ಪರಾವಲಂಬಿಗಳ ರೂಪದಲ್ಲಿ ಅಥವಾ ಯಾವುದೇ ಅಸಾಂಪ್ರದಾಯಿಕ ಏಜೆಂಟ್ ಗಳ ರೂಪದಲ್ಲಿರಬಹುದು.

 

ಸಂಬಂಧಿತ ಕಳವಳಗಳು:

ಸಾರ್ವಜನಿಕ ಆರೋಗ್ಯ ಸಮಸ್ಯೆಯ ಜೊತೆಗೆ, ಅನೇಕ ಪ್ರಮುಖ ಝೂನೋಟಿಕ್ಕಾಯಿಲೆಗಳು ಪ್ರಾಣಿ ಜನ್ಯ ಆಹಾರಗಳ ಉತ್ಪಾದನೆಯ ಮೇಲೂ ಗಣನೀಯ ಪರಿಣಾಮ ಬೀರುತ್ತವೆ, ಪ್ರಾಣಿ ಉತ್ಪನ್ನಗಳಲ್ಲಿ ಅಂತರರಾಷ್ಟ್ರೀಯ ವ್ಯಾಪಾರಕ್ಕೆ ಅಡೆತಡೆಗಳನ್ನು ಸೃಷ್ಟಿಸುತ್ತವೆ.

one_health

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು:

ಬನ್ನಿ ಹುಲ್ಲುಗಾವಲು ಪ್ರದೇಶದಲ್ಲಿನ ದನಗಾಹಿಗಳ ಹಕ್ಕುಗಳನ್ನು ಎತ್ತಿಹಿಡಿದ NGT:


(NGT upholds rights of pastoralists in Banni grasslands)

ಸಂದರ್ಭ:

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (National Green Tribunal – NGT) ಗುಜರಾತ್‌ನ ಬನ್ನಿ ಹುಲ್ಲುಗಾವಲು ಪ್ರದೇಶ (Banni grasslands) ದಿಂದ ಆರು ತಿಂಗಳೊಳಗೆ ಎಲ್ಲಾ ರೀತಿಯ ಅತಿಕ್ರಮಣವನ್ನು ತೆಗೆದುಹಾಕಲು ಆದೇಶಿಸಿದೆ.

 1. ಇದರೊಂದಿಗೆ, ಒಂದು ತಿಂಗಳಲ್ಲಿ ‘ಕ್ರಿಯಾ ಯೋಜನೆ’ ಸಿದ್ಧಪಡಿಸುವಂತೆ ನ್ಯಾಯಮಂಡಳಿ ಜಂಟಿ ಸಮಿತಿಗೆ ನಿರ್ದೇಶನ ನೀಡಿದೆ.
 2. ಅರಣ್ಯ ಹಕ್ಕು ಕಾಯ್ದೆ 2006 ರ ಸೆಕ್ಷನ್ 3 ರ ನಿಬಂಧನೆಗಳ ಪ್ರಕಾರ, ಮಾಲ್ಧಾರಿ ಸಮುದಾಯಕ್ಕಾಗಿ ನೀಡಲಾದ ಸಮುದಾಯ ಕಾಡುಗಳ ರಕ್ಷಣೆಯ ಹಕ್ಕು ಬದಲಾಗದೆ ಉಳಿಯುತ್ತದೆ ಅಥವಾ ಸಮುದಾಯ ಕಾಡುಗಳನ್ನು ರಕ್ಷಿಸುವ ಅವರ ಹಕ್ಕುಗಳು ಮುಂದುವರೆಯುತ್ತವೆ ಎಂದು ನ್ಯಾಯಾಲಯ ಹೇಳಿದೆ.

ಏನಿದು ಸಮಸ್ಯೆ?

ಮಾಲ್ಧಾರಿ ಸಮುದಾಯವು, ಪರಿಸರ ಸೂಕ್ಷ್ಮ ಪ್ರದೇಶ ವಾಗಿರುವ ಹುಲ್ಲುಗಾವಲು ಪ್ರದೇಶಗಳಲ್ಲಿನ ವ್ಯಾಪಕ ಅತಿಕ್ರಮಣದ ವಿರುದ್ಧ ಮೇ 2018 ರಲ್ಲಿ ಪ್ರಕರಣ ದಾಖಲಿಸಿತ್ತು.

 

ಮಾಲ್ಧಾರಿ’ಗಳು ಯಾರು?

ಮಾಲ್ಧಾರಿಗಳು (Maldharis)  ಎಂಬುದು ಬುಡಕಟ್ಟು ಕುರುಬ ಸಮುದಾಯವಾಗಿದ್ದು, ಇದು ಭಾರತದ ಗುಜರಾತ್‌ನಲ್ಲಿ ಕಂಡುಬರುತ್ತದೆ.

ಮಾಲ್ಧಾರಿ ಸಮುದಾಯವು ‘ಬನ್ನಿ ಎಮ್ಮೆ’ ಎಂಬ, ಈ ಪ್ರದೇಶದಲ್ಲಿ ಕಂಡುಬರುವ ಸ್ಥಳೀಯ ಎಮ್ಮೆ ಜಾತಿಯ ತಳಿಯ ಸಂರಕ್ಷಕರಾಗಿದ್ದಾರೆ. ಈ ಎಮ್ಮೆಗಳು ಕಚ್‌ನ ಬಿಸಿ ವಾತಾವರಣಕ್ಕೆ ಹೊಂದಿಕೊಳ್ಳುತ್ತವೆ.

 

ಬನ್ನಿ ಹುಲ್ಲುಗಾವಲು ಕುರಿತು:

 1. ಬನ್ನಿ ಹುಲ್ಲುಗಾವಲು ಪ್ರದೇಶ ಅಥವಾ ಚಾರಗಾಹ್ ಭೂಮಿಯು 2,618 ಕಿ.ಮೀ.ಗಿಂತಲೂ ಹೆಚ್ಚು ಪ್ರದೇಶದಲ್ಲಿ ವಿಸ್ತಾರವಾಗಿ ಹರಡಿದೆ, ಮತ್ತು ಇದು ಗುಜರಾತ್‌ನ ಒಟ್ಟು ಹುಲ್ಲುಗಾವಲು ಪ್ರದೇಶದ ಶೇಕಡಾ 45 ರಷ್ಟಿದೆ.
 2. ಈ ಹುಲ್ಲುಗಾವಲು ಪ್ರದೇಶವು 48 ಕುಗ್ರಾಮಗಳು / ಗ್ರಾಮಗಳನ್ನು ಹೊಂದಿದ್ದು,19 ಪಂಚಾಯಿತಿಗಳಲ್ಲಿ ಸಂಯೋಜಿಸಲಾಗಿದೆ, ಇವುಗಳ ಒಟ್ಟು ಜನಸಂಖ್ಯೆ ಸುಮಾರು 40,000.
 3. ಬನ್ನಿ ಪ್ರದೇಶವು ಎರಡು ಪರಿಸರ ವ್ಯವಸ್ಥೆಗಳನ್ನು ಹೊಂದಿದೆ, ಜೌಗುಪ್ರದೇಶಗಳು ಮತ್ತು ಹುಲ್ಲುಗಾವಲುಗಳು ಅವು ಪರಸ್ಪರ ಸಂಬಂಧ ಹೊಂದಿವೆ.
 4. ಈ ಪ್ರದೇಶವು ಸಸ್ಯ ಮತ್ತು ಪ್ರಾಣಿಗಳಿಂದ ಸಮೃದ್ಧವಾಗಿದೆ ಮತ್ತು 192 ಜಾತಿಯ ಸಸ್ಯವರ್ಗ, 262 ಜಾತಿಯ ಪಕ್ಷಿಗಳು, ಹಲವಾರು ಜಾತಿಯ ಸಸ್ತನಿಗಳು, ಸರೀಸೃಪಗಳು ಮತ್ತು ಉಭಯಚರಗಳನ್ನು ಒಳಗೊಂಡಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 4


 

ವಿಷಯಗಳು: ಸಾರ್ವಜನಿಕ ಸೇವೆಯ ಪರಿಕಲ್ಪನೆ; ಆಡಳಿತ ಮತ್ತು ಸಂಭವನೀಯತೆಯ ತಾತ್ವಿಕ ಆಧಾರ; ಮಾಹಿತಿ ಹಂಚಿಕೆ ಮತ್ತು ಸರ್ಕಾರದಲ್ಲಿ ಪಾರದರ್ಶಕತೆ.

ಅತಂತ್ರ ಕಾರ್ಮಿಕರಿಗೆ ಆಹಾರ, ಪಡಿತರವನ್ನು ಒದಗಿಸಿ: ವರಿಷ್ಠ ನ್ಯಾಯಾಲಯ:


(Provide food, rations to stranded workers: SC)

 

ಸಂದರ್ಭ:

ಇತ್ತೀಚೆಗೆ, ವರಿಷ್ಠ ನ್ಯಾಯಾಲಯವು, ದೇಶಾದ್ಯಂತದ ಎಲ್ಲಾ ರಾಜ್ಯಗಳಿಗೆ ಯಾವುದೇ ಪಡಿತರ ಚೀಟಿಗಳಿಲ್ಲದೆ ಅತಂತ್ರರಾಗಿರುವ ವಲಸೆ ಕಾರ್ಮಿಕರಿಗೆ ಒಣ ಪಡಿತರವನ್ನು ವಿತರಿಸಲು ಮತ್ತು ಅವರಿಗೆ ಸಮುದಾಯ ಅಡಿಗೆಮನೆಗಳನ್ನು ಪ್ರಾರಂಭಿಸಲು ಆದೇಶಿಸಿದೆ.

 

 1. ಇದಕ್ಕಾಗಿ ನ್ಯಾಯಾಲಯವು ‘ಆತ್ಮನಿರ್ಭರ ಭಾರತ ಯೋಜನೆ’ ಅಥವಾ ಕೇಂದ್ರ ಸರ್ಕಾರವು ಪ್ರಾರಂಭಿಸಿರುವ ಯಾವುದೇ ಪರ್ಯಾಯ ಯೋಜನೆಯನ್ನು ಬಳಸಲು ರಾಜ್ಯಗಳ ವಿವೇಚನೆಗೆ ಬಿಟ್ಟಿದೆ. ವಲಸೆ ಕಾರ್ಮಿಕರಿಗೆ ಒಣ ಪಡಿತರವನ್ನು ಒದಗಿಸಲು ‘ಆತ್ಮನಿರ್ಭರ ಭಾರತ ಯೋಜನೆ’ ಯನ್ನು 2020 ರ ಮೇ ಮತ್ತು ಜೂನ್‌ನಲ್ಲಿ ಪ್ರಾರಂಭಿಸಲಾಯಿತು.
 2. ವಲಸೆ ಕಾರ್ಮಿಕರಿಗಾಗಿ ವಿವಿಧ ಕಲ್ಯಾಣ ಯೋಜನೆಗಳು ಮತ್ತು ಸಮುದಾಯ ಅಡಿಗೆಮನೆಗಳ ಸ್ಥಳಗಳ ಬಗ್ಗೆ “ವ್ಯಾಪಕ ಪ್ರಚಾರ” ಮಾಡಬೇಕೆಂದು ಸುಪ್ರೀಂ ಕೋರ್ಟ್ ನ್ಯಾಯಪೀಠ ನಿರ್ದೇಶನ ನೀಡಿದೆ, ಇದರಿಂದಾಗಿ ಎಲ್ಲಾ ನಿರ್ಗತಿಕ ಜನರಿಗೆ ಸಂಪೂರ್ಣ ಪ್ರಯೋಜನ ದೊರೆಯುತ್ತದೆ.

 

ಹಿನ್ನೆಲೆ:

ದೇಶಾದ್ಯಂತ ವಲಸಿಗರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಸುಪ್ರೀಂ ಕೋರ್ಟ್ ಪ್ರಾರಂಭಿಸಿದ ಸ್ವಯಂ ಪ್ರೇರಿತ ವಿಚಾರಣೆಯ ಸಂದರ್ಭದಲ್ಲಿ ಈ ಆದೇಶಗಳನ್ನು ನೀಡಲಾಗಿದೆ.

 

ಇದರ ಅವಶ್ಯಕತೆ:

 1. ಇತ್ತೀಚೆಗೆ, ವಲಸೆ ಕಾರ್ಮಿಕರಿಗೆ ಸಹಾಯ ಮಾಡಲು ನಿಯಂತ್ರಣ ಕೊಠಡಿಗಳನ್ನು ತೆರೆಯಲಾಗಿದೆ ಎಂದು ಸರ್ಕಾರ ನ್ಯಾಯಾಲಯಕ್ಕೆ ತಿಳಿಸಿತು.ಆದರೆ ಸಿಕ್ಕಿಬಿದ್ದ ಅಥವಾ ಅತಂತ್ರ ವಲಸೆ ಕಾರ್ಮಿಕರಿಗೆ ಬೇಯಿಸಿದ ಆಹಾರವನ್ನು ಒದಗಿಸುವುದು ರಾಜ್ಯಗಳ ಜವಾಬ್ದಾರಿಯಾಗಿದೆ.
 2. ಈಗ ನಿಜವಾದ ಸಮಸ್ಯೆಯೆಂದರೆ, ಅಂತಹ ಕ್ರಮಗಳು ಆಹಾರ ಭದ್ರತಾ ಕಾಯ್ದೆಯಡಿ ಬರುವ ವ್ಯಕ್ತಿಗಳು, ಅಂದರೆ ಪಡಿತರ ಚೀಟಿ ಹೊಂದಿರುವವರನ್ನು ಮಾತ್ರ ಒಳಗೊಂಡಿರಬಹುದು.
 3. ಆದಾಗ್ಯೂ, ಕೆಲಸಕ್ಕಾಗಿ ಬೃಹತ್ ನಗರಗಳಲ್ಲಿ ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಅಲೆದಾಡುವ ಅಸಂಘಟಿತ ವಲಯದ ಕಾರ್ಮಿಕರಲ್ಲಿ ಪಡಿತರ ಚೀಟಿಗಳು ಇರಬೇಕು ಎಂಬುದನ್ನು ನಿರೀಕ್ಷಿಸಲಾಗುವುದಿಲ್ಲ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಬೆಲಾರಸ್:

ಬೆಲಾರಸ್ ಪೂರ್ವ ಯುರೋಪಿನಲ್ಲಿರುವ ಭೂ-ಆವೃತ ದೇಶವಾಗಿದೆ. ಇದು ಪೂರ್ವ ಮತ್ತು ಈಶಾನ್ಯದಲ್ಲಿ ರಷ್ಯಾದೊಂದಿಗೆ, ದಕ್ಷಿಣದಲ್ಲಿ ಉಕ್ರೇನ್, ಪಶ್ಚಿಮದಲ್ಲಿ ಪೋಲೆಂಡ್ ಮತ್ತು ವಾಯುವ್ಯದಲ್ಲಿ ಲಿಥುವೇನಿಯಾ ಮತ್ತು ಲಾಟ್ವಿಯಾ ದೇಶಗಳೊಂದಿಗೆ ಗಡಿಗಳನ್ನು ಹಂಚಿಕೊಂಡಿದೆ.

 

ಸುದ್ದಿಯಲ್ಲಿರಲು ಕಾರಣ?

ಇತ್ತೀಚೆಗೆ, ಗ್ರೀಸ್‌ನಿಂದ ಲಿಥುವೇನಿಯಾಗೆ ಹಾರಾಟ ನಡೆಸುತ್ತಿದ್ದ ವಾಣಿಜ್ಯ ವಿಮಾನವನ್ನು ಬೆಲಾರಸ್ ಆಡಳಿತವು ಬಾಂಬ್ ಬೆದರಿಕೆಯ ನೆಪದಲ್ಲಿ ತನ್ನ ಭೂಪ್ರದೇಶಕ್ಕೆ ಇಳಿಯುವಂತೆ ಒತ್ತಾಯಿಸಿತು. ವಿಮಾನದಲ್ಲಿದ್ದ ಭಿನ್ನಮತೀಯ ಪತ್ರಕರ್ತನನ್ನು ಬಂಧಿಸಲು   ಬೆಲಾರಸ್ ನಲ್ಲಿ ವಿಮಾನವನ್ನು ಇಳಿಸಲಾಯಿತು ಎಂದು ಹೇಳಲಾಗುತ್ತಿದೆ.

ಎಂಸಿಎ 21 ಆವೃತ್ತಿ 3.0:

(MCA21 Version 3.0)

 ಇತ್ತೀಚೆಗೆ, ಎಂಸಿಎ 21 ಆವೃತ್ತಿ 3.0 ರ ಮೊದಲ ಹಂತ ಅಂದರೆ V3.0  ಅನ್ನು ರಾಜ್ಯ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರು ಪ್ರಾರಂಭಿಸಿದರು.

ಎಂಸಿಎ 21 ಎಂದರೇನು?

ಎಂಸಿಎ 21 ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ (MCA) ಇ-ಆಡಳಿತ ಉಪಕ್ರಮವಾಗಿದ್ದು, ಇದು ಕಾರ್ಪೊರೇಟ್ ಘಟಕಗಳು, ವೃತ್ತಿಪರರು ಮತ್ತು ಭಾರತದ ನಾಗರಿಕರಿಗೆ ಎಂಸಿಎ ಸೇವೆಗಳಿಗೆ ಸುಲಭ ಮತ್ತು ಸುರಕ್ಷಿತ ಪ್ರವೇಶವನ್ನು ನೀಡುತ್ತದೆ. ಇದು ಭಾರತ ಸರ್ಕಾರದ ಮೊದಲ ಮಿಷನ್ ಮೋಡ್ ಇ-ಆಡಳಿತ ಯೋಜನೆಯಾಗಿದೆ.

MCA21 3.0:

ಎಂಸಿಎ 21 ವಿ 3 ತಂತ್ರಜ್ಞಾನ-ಚಾಲಿತ ಪ್ರವರ್ತಕ ಯೋಜನೆಯಾಗಿದೆ.

 1. ನಿಯಮ ಜಾರಿಗೊಳಿಸುವಿಕೆಯನ್ನು ಬಲಪಡಿಸಲು, ಸುಲಲಿತ ವ್ಯಾಪಾರವನ್ನು ಉತ್ತೇಜಿಸಲು, ಬಳಕೆದಾರರ ಅನುಭವವನ್ನು ಹೆಚ್ಚಿಸಲು ಮತ್ತು ನಿಯಂತ್ರಕರ ನಡುವೆ ತಡೆರಹಿತ ಏಕೀಕರಣ ಮತ್ತು ದತ್ತಾಂಶ ವಿನಿಮಯಕ್ಕೆ ಅನುಕೂಲವಾಗುವಂತೆ ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ.
 2. ಸುಧಾರಿತ ವಿಶ್ಲೇಷಣೆಗಾಗಿ ಹೆಚ್ಚಿನ ಸ್ಕೇಲೆಬಿಲಿಟಿ ಮತ್ತು ಸಾಮರ್ಥ್ಯಗಳೊಂದಿಗೆ ಮೈಕ್ರೊ-ಸೇವಾ ಕಾರ್ಯವಿಧಾನವನ್ನು ಯೋಜನೆಯು ರಚಿಸುತ್ತದೆ.
 3. ಇದು ಇ-ನಿರ್ಧಾರ(e-Adjudication),ಇ-ಕನ್ಸಲ್ಟೇಶನ್ ಮತ್ತು ಅನುಸರಣೆ ನಿರ್ವಹಣೆಗೆ ಹೆಚ್ಚುವರಿ ಮಾಡ್ಯೂಲ್‌ಗಳನ್ನು ಸಹ ಒಳಗೊಂಡಿರುತ್ತದೆ.

ಶಾಹಿ ಲಿಚಿ:

(Shahi litchi)

 ಜಿಐ-ಪ್ರಮಾಣೀಕೃತ ಉತ್ಪನ್ನಗಳ ರಫ್ತು ಹೆಚ್ಚಿಸಲು ಈ ಋತುವಿನ ರಾಯಲ್ ಲಿಚಿಯ ಮೊದಲ ಬ್ಯಾಚ್ ಅನ್ನು ಬಿಹಾರದಿಂದ ಯುನೈಟೆಡ್ ಕಿಂಗ್ಡಮ್ ಗೆ ರಫ್ತು ಮಾಡಲಾಗಿದೆ.

 1. ಜರದಾಲು ಮಾವು, ಕಾತಾರ್ನಿ ಅಕ್ಕಿ ಮತ್ತು ಮಗಾಹಿ ಪಾನ್ ನಂತರ 2018 ರಲ್ಲಿ ಜಿಐ ಪ್ರಮಾಣೀಕರಣವನ್ನು ಪಡೆದ ಶಾಹಿ ಲಿಚ್ಚಿಯು ಬಿಹಾರದ ನಾಲ್ಕನೇ ಕೃಷಿ ಉತ್ಪನ್ನವಾಗಿದೆ.
 2. ಚೀನಾ ನಂತರ ಭಾರತವು ಲಿಚಿ ಉತ್ಪಾದನೆಯಲ್ಲಿ ಎರಡನೇ ಸ್ಥಾನದಲ್ಲಿದೆ.

ಯುವಾನ್ ಲಾಂಗ್ ಪಿಂಗ್:

(Yuan Longping)

 ಚೀನಾದ ಖ್ಯಾತ ಕೃಷಿ ವಿಜ್ಞಾನಿ ಯುವಾನ್ ಲಾಂಗ್ಪಿಂಗ್ ಇತ್ತೀಚೆಗೆ ತಮ್ಮ 91 ನೇ ವಯಸ್ಸಿನಲ್ಲಿ ನಿಧನರಾದರು. ಹೈಬ್ರಿಡ್ ಅಕ್ಕಿ(Hybrid Rice) ಯ ಕುರಿತಾದ ಅವರ ಆವಿಷ್ಕಾರಗಳು ಚೀನಾಕ್ಕೆ ಆಹಾರ ಭದ್ರತೆಯನ್ನು ಒದಗಿಸಿದವು ಮತ್ತು ಪ್ರಪಂಚದಾದ್ಯಂತದ ಕೃಷಿಯ ಸ್ವರೂಪವನ್ನು ಬದಲಾಯಿಸಿದವು.

‘ಯುವಾನ್ ಲಾಂಗ್‌ಪಿಂಗ್’ ಅವರನ್ನು ಚೀನಾದಲ್ಲಿ ಕೃಷಿ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಹೈಬ್ರಿಡ್ ಅಕ್ಕಿಯ ಜನಕ” (father of hybrid rice)ಎಂದು ಕರೆಯಲಾಗುತ್ತದೆ.

 

 1. 1970 ರ ದಶಕದಲ್ಲಿ, ಅವರು ‘ನ್ಯಾನ್-ಯು ನಂ 2’ (Nan-you No. 2 ಎಂಬ ಮೊದಲ ಹೈಬ್ರಿಡ್ ಅಕ್ಕಿ ಸಂಯೋಜನೆಯನ್ನು ಅಭಿವೃದ್ಧಿಪಡಿಸಿದರು. ಈ ಪ್ರಕ್ರಿಯೆಯಡಿಯಲ್ಲಿ, ಎರಡು ವಿಭಿನ್ನ ಸಂತತಿಯ ಸಂಯೋಗದಿಂದ ಉಂಟಾಗುವ ಸಂತತಿಯು ಅವರ ಪೋಷಕರಿಗಿಂತ ವೇಗವಾಗಿ ಬೆಳೆಯುತ್ತದೆ, ಹೆಚ್ಚಿನ ಇಳುವರಿಯನ್ನು ನೀಡುತ್ತದೆ ಮತ್ತು ಬಾಹ್ಯ ಅಡೆತಡೆಗಳನ್ನು ಉತ್ತಮವಾಗಿ ವಿರೋಧಿಸುತ್ತದೆ.
 2. ಏಷ್ಯಾ, ಆಫ್ರಿಕಾ ಮತ್ತು ಅಮೆರಿಕಾದಾದ್ಯಂತ ಹೈಬ್ರಿಡ್ ಅಕ್ಕಿ ಹರಡಿದ್ದರಿಂದ, ಪ್ರಪಂಚದಾದ್ಯಂತದ ರೈತರು ಅವರ ತಂತ್ರಜ್ಞಾನಗಳಿಂದ ಪ್ರಯೋಜನಗಳನ್ನು ಪಡೆದಿದ್ದಾರೆ.
 3. 2004 ರಲ್ಲಿ, “ಹೆಚ್ಚಿನ ಇಳುವರಿ ನೀಡುವ ಹೈಬ್ರಿಡ್ ಅಕ್ಕಿ ಪ್ರಭೇದಗಳನ್ನು ಸಂತಾನೋತ್ಪತ್ತಿ ಮಾಡಲು ಅಗತ್ಯವಾದ ಆನುವಂಶಿಕ ವಸ್ತುಗಳು ಮತ್ತು ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಅವರು ಮಾಡಿದ ಅದ್ಭುತ ಸಾಧನೆಗಾಗಿ” ಅವರಿಗೆ ವಿಶ್ವ ಆಹಾರ ಪ್ರಶಸ್ತಿ ನೀಡಿ ಗೌರವಿಸಲಾಯಿತು.
 4. 2001 ರಲ್ಲಿ, ಅವರಿಗೆ ರಾಮನ್ ಮ್ಯಾಗ್ಸೆಸೆ ಪ್ರಶಸ್ತಿ ಪ್ರತಿಷ್ಠಾನವು ಪ್ರಶಸ್ತಿಯನ್ನು ನೀಡಿ ಗೌರವಿಸಿತ್ತು.


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos