Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 24ನೇ ಮೇ 2021

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಯಾಸ್ ಚಂಡಮಾರುತ.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಕೋವಾಕ್ಸಿನ್‌ಗೆ WHO, ಯುರೋಪಿಯನ್ ಒಕ್ಕೂಟದಿಂದ ಅನುಮೋದನೆ ಪಡೆಯಲು ಭಾರತದ ಪ್ರಯತ್ನ.

2. ‘ಡಿಜಿಟಲ್ ಬಾರ್ಡರ್’ ಯೋಜನೆಗಳನ್ನು ಅನಾವರಣಗೊಳಿಸಲಿರುವ ಯು.ಕೆ.

3. ಚೀನಾದ 17 + 1 ಸಹಕಾರ ವೇದಿಕೆಯಿಂದ ಹೊರಬಂದ ಲಿಥುವೇನಿಯಾ.

4. ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಕಾಂಗೋದ ಮೌಂಟ್ ನೈರಾಗೊಂಗೊ.

2. ಕೇರಳ ರೈತ ಭಾರತ ಜೀವವೈವಿಧ್ಯ ಪ್ರಶಸ್ತಿ 2021 ಅನ್ನು ಪಡೆದಿದ್ದಾರೆ.

3. ಗಲ್ವಾನ್ ಕಣಿವೆ.

4. ಬ್ರಿಕ್ಸ್ ನ ಖಗೋಳವಿಜ್ಞಾನ ಕಾರ್ಯನಿರತ ಗುಂಪು (BAWG).

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು:ಭೂಕಂಪಗಳು, ಸುನಾಮಿ, ಜ್ವಾಲಾಮುಖಿ ಚಟುವಟಿಕೆಗಳು ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು, ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಸ್ಥಳ- ನಿರ್ಣಾಯಕ ಭೌಗೋಳಿಕ ವೈಶಿಷ್ಟ್ಯಗಳಲ್ಲಿನ ಬದಲಾವಣೆಗಳು (ಸಾಗರಗಳು ಮತ್ತು ಐಸ್-ಕ್ಯಾಪ್ಗಳು ಸೇರಿದಂತೆ) ಮತ್ತು ಸಸ್ಯ ಮತ್ತು ಪ್ರಾಣಿ ಮತ್ತು ಅಂತಹ ಬದಲಾವಣೆಗಳ ಪರಿಣಾಮಗಳು.

ಯಾಸ್ ಚಂಡಮಾರುತ:


(Cyclone Yaas)

ಸಂದರ್ಭ:

ಮೇ 22 ರ ಸುಮಾರಿಗೆ ಉತ್ತರ ಅಂಡಮಾನ್ ಸಮುದ್ರ ಮತ್ತು ಅದರ ಪಕ್ಕದ ಪೂರ್ವ-ಮಧ್ಯ ಬಂಗಾಳ ಕೊಲ್ಲಿ ಮೇಲೆ ಕಡಿಮೆ ಒತ್ತಡದ ಪ್ರದೇಶ ನಿರ್ಮಾಣಗೊಂಡಿದೆ ಎಂದು ಭಾರತ ಹವಾಮಾನ ಇಲಾಖೆ (IMD) ವರದಿ ಮಾಡಿದೆ.

ಮೇ 24 ರ ಹೊತ್ತಿಗೆ, ಈ ಕಡಿಮೆ ಒತ್ತಡದ ಪ್ರದೇಶವು ತೀವ್ರತರದ ವಿನಾಶಕಾರಿ ಚಂಡಮಾರುತವಾಗಿ ಪರಿವರ್ತನೆಗೊಳ್ಳುವ ನಿರೀಕ್ಷೆಯಿದೆ. ಈ ಚಂಡಮಾರುತಕ್ಕೆ ಯಾಸ್ ಚಂಡಮಾರುತ ಎಂದು ಹೆಸರಿಸಲಾಗಿದೆ.

 

ಯಾಸ್ ಎಂಬ ಹೆಸರನ್ನು ನೀಡಿದವರು ?

 1. ‘ಯಾಸ್’ ಎಂಬ ಹೆಸರನ್ನು ‘ಓಮನ್’ ಸೂಚಿಸಿದೆ ಮತ್ತು ಅದರ ಅರ್ಥ ‘ಪರಿಮಳಯುಕ್ತ ಮರ’ ಎಂದಾಗಿದೆ, ಮತ್ತು ಯಾಸ್ ಎಂಬ ಪದವು ಇಂಗ್ಲಿಷ್ ಭಾಷೆಯಲ್ಲಿನ ‘ಜಾಸ್ಮಿನ್’ ಎಂಬ ಪದವನ್ನು ಹೋಲುತ್ತದೆ.
 2. ಯಾಸ್ ಚಂಡಮಾರುತದ ನಂತರ ಮುಂಬರುವ ಚಂಡಮಾರುತವನ್ನು ಗುಲಾಬ್ ಎಂದು ಹೆಸರಿಸಲಾಗಿದ್ದು ಅದನ್ನು ಪಾಕಿಸ್ತಾನವು ಸೂಚಿಸಿದೆ.

 

ಚಂಡಮಾರುತಗಳು ಹೇಗೆ ರೂಪುಗೊಳ್ಳುತ್ತವೆ?

ಉಷ್ಣವಲಯದ ಪ್ರದೇಶಗಳಲ್ಲಿನ, ಸಮುದ್ರದ ನೀರಿನ ಮೇಲೆ ಚಂಡಮಾರುತಗಳು ರೂಪುಗೊಳ್ಳುತ್ತವೆ.

ಈ ಪ್ರದೇಶಗಳು ಹೆಚ್ಚಿನ ಪ್ರಮಾಣದ ಸೌರ ಬೆಳಕನ್ನು ಹೊಂದಿವೆ, ಇದು ಭೂಮಿಯ ಮತ್ತು ಜಲಭಾಗಗಳ   ಮೇಲ್ಮೈಯನ್ನು ಬಿಸಿಮಾಡುತ್ತದೆ ಅಥವಾ ಬೆಚ್ಚಗಾಗಿಸುತ್ತದೆ. ಮೇಲ್ಮೈ ಬಿಸಿಯಾಗುತ್ತಿದ್ದಂತೆ, ಸಮುದ್ರದ ಮೇಲಿರುವ ಬೆಚ್ಚಗಿನ ಆರ್ದ್ರ ಗಾಳಿಯು ಮೇಲಕ್ಕೆ ಏರಲು ಪ್ರಾರಂಭಿಸುತ್ತದೆ, ಅದರ ನಂತರ ತಂಪಾದ ಗಾಳಿಯು ಖಾಲಿ ಜಾಗಗಳನ್ನು ಅಥವಾ ನಿರ್ವಾತವನ್ನು ತುಂಬಲು ವೇಗವಾಗಿ ಧಾವಿಸುತ್ತದೆ, ನಂತರ ಅದುಕೂಡ ಬಿಸಿಯಾಗುವುದರ ಮೂಲಕ ಮೇಲಕ್ಕೆ ಏರುತ್ತದೆ ಮತ್ತು ಈ ಚಕ್ರವು ನಿರಂತರವಾಗಿ ಹೀಗೆಯೇ ಮುಂದುವರಿಯುತ್ತದೆ.

 

ಈ ಗಾಳಿಯ ಚಕ್ರವು ನಿರ್ಮಾಣಗೊಳ್ಳಲು ಕಾರಣ?

ಗಾಳಿ ಯಾವಾಗಲೂ ಅಧಿಕ ಒತ್ತಡದ ಪ್ರದೇಶದಿಂದ ಕಡಿಮೆ ಒತ್ತಡದ ಪ್ರದೇಶಗಳಿಗೆ ಬೀಸುತ್ತದೆ. ಶೀತ ಪ್ರದೇಶಗಳಲ್ಲಿ ಅಧಿಕ ಒತ್ತಡದ ಪ್ರದೇಶಗಳು ರೂಪುಗೊಳ್ಳುತ್ತವೆ, ಆದರೆ ಕಡಿಮೆ ಒತ್ತಡದ ಪರಿಸ್ಥಿತಿಗಳು ಬೆಚ್ಚಗಿನ ಅಥವಾ ಬಿಸಿ ಪ್ರದೇಶಗಳಲ್ಲಿ ರೂಪುಗೊಳ್ಳುತ್ತವೆ. ಧ್ರುವ ಪ್ರದೇಶಗಳಲ್ಲಿನ ಸೌರ ಬೆಳಕಿನ ಪ್ರಮಾಣವು ಉಷ್ಣವಲಯದ ಪ್ರದೇಶಗಳಿಗಿಂತ ತೀರಾ ಕಡಿಮೆ, ಆದ್ದರಿಂದ ಇವು ಸಾಮಾನ್ಯವಾಗಿ ಅಧಿಕ ಒತ್ತಡದ ಪ್ರದೇಶಗಳಾಗಿವೆ. ಆದ್ದರಿಂದಲೇ ಗಾಳಿಯು ಧ್ರುವ ಪ್ರದೇಶಗಳಿಂದ ಉಷ್ಣವಲಯದ ಪ್ರದೇಶಗಳಿಗೆ ಹೆಚ್ಚಾಗಿ ಬೀಸುತ್ತದೆ.

 1. ಇದರ ನಂತರ, ಭೂಮಿಯ ಚಲನೆಯು ಮಹತ್ವದ ಪಾತ್ರವನ್ನು ವಹಿಸುತ್ತದೆ, ಅದು ಪಶ್ಚಿಮದಿಂದ ಪೂರ್ವಕ್ಕೆ. ಭೂಮಿಯು ತನ್ನದೇ ಆದ ಅಕ್ಷದಲ್ಲಿ ಪರಿಭ್ರಮಿಸುತ್ತಿರುವುದರಿಂದ, ಎರಡೂ ಧ್ರುವಗಳಿಂದ ಬೀಸುವ ಗಾಳಿಯು ಉಷ್ಣವಲಯದಲ್ಲಿ ವಿಚಲಣೆ ಗೊಳ್ಳುತ್ತದೆ, ಏಕೆಂದರೆ ಭೂಮಿಯು ಗೋಳಾಕಾರ ವಾಗಿರುವುದರಿಂದ, ಧ್ರುವಗಳಿಗಿಂತ ಉಷ್ಣವಲಯದಲ್ಲಿ ಭೂಮಿಯ ತಿರುಗುವಿಕೆಯ ವೇಗ ಹೆಚ್ಚಿರುತ್ತದೆ. ಆರ್ಕ್ಟಿಕ್ ಪ್ರದೇಶದಿಂದ ಬರುವ ಗಾಳಿಯು ಬಲಕ್ಕೆ ತಿರುಗುತ್ತದೆ ಮತ್ತು ಅಂಟಾರ್ಕ್ಟಿಕ್ ಪ್ರದೇಶದಿಂದ ಬರುವ ಗಾಳಿಯು ಎಡಕ್ಕೆ ತಿರುಗುತ್ತದೆ.
 2. ಹೀಗಾಗಿ, ಈಗಾಗಲೇ ನಿರ್ದಿಷ್ಟ ದಿಕ್ಕುಗಳಲ್ಲಿ ಬೀಸುತ್ತಿರುವ ಗಾಳಿಯು, ಬೆಚ್ಚಗಿನ ಸ್ಥಳವನ್ನು ತಲುಪಿದ ನಂತರ,ಖಾಲಿ ಜಾಗವನ್ನು ತುಂಬಲು ತಂಪಾದ ಗಾಳಿಯು ಕೇಂದ್ರದ ಕಡೆಗೆ ಆಕರ್ಷಿತವಾಗಲು ಪ್ರಾರಂಭಿಸುತ್ತದೆ. ಕೇಂದ್ರದ ಕಡೆಗೆ ಚಲಿಸುವಾಗ, ತಂಪಾದ ಗಾಳಿಯು ಗಾಳಿಯ ಚಲನೆಯ ಪ್ರಸರಣದ ಪರಿಣಾಮವಾಗಿ ತಿರುಗುತ್ತಲೇ ಇರುತ್ತದೆ ಮತ್ತು ಇದು ಚಂಡಮಾರುತದ ತಾಣವನ್ನು ಮುಟ್ಟುವವರೆಗೂ ಅಂದರೆ ಹೀಗೆ ರೂಪುಗೊಳ್ಳುವ ಚಂಡಮಾರುತವು ಭೂಮಿಗೆ ಅಪ್ಪಳಿಸುವ ವರೆಗೆ ಈ ಪ್ರಕ್ರಿಯೆಯು ಮುಂದುವರಿಯುತ್ತದೆ.

 

ಚಂಡಮಾರುತವು ಭೂಮಿಗೆ ಅಪ್ಪಳಿಸಿದಾಗ ಆಗುವ ಪರಿಣಾಮಗಳು?

ಭೂಮಿಯನ್ನು ತಲುಪಿದ ನಂತರ ಅಥವಾ ಭೂಮಿಗೆ ಅಪ್ಪಳಿಸಿದ ನಂತರ ಚಂಡಮಾರುತವು ವಿಭಜನೆಗೊಂಡು ಕೊನೆಗೊಳ್ಳುತ್ತದೆ, ಏಕೆಂದರೆ ಬಿಸಿಯಾದನೀರು ಮೇಲಕ್ಕೇರುವ ಮೂಲಕ ತಂಪಾದ ನೀರಿಗೆ ಸ್ಥಳಾವಕಾಶವನ್ನು ಸೃಷ್ಟಿಸುತ್ತದೆ, ಆದರೆ ಆದರೆ ಭೂಮಿಯ ಮೇಲೆ ಸಾಕಷ್ಟು ಪ್ರಮಾಣದಲ್ಲಿ ತಂಪು ನೀರು ಲಭ್ಯವಿರುವುದಿಲ್ಲ, ಇದರ ಜೊತೆಗೆ ಎತ್ತರದ ಆರ್ದ್ರ(ತೇವಾಂಶಭರಿತ) ಗಾಳಿಯು ಮೋಡಗಳು ರೂಪುಗೊಳ್ಳಲು ಕಾರಣೀಭೂತವಾಗುತ್ತದೆ, ಇದು ಚಂಡಮಾರುತಗಳ ಸಮಯದಲ್ಲಿ ಬಲವಾದ ಗಾಳಿಯೊಂದಿಗೆ ತೀವ್ರವಾದ ಮಳೆಯಾಗಲು ಕಾರಣವಾಗುತ್ತದೆ.

 

ಚಂಡಮಾರುತಗಳು ಹೆಚ್ಚಲು ಕಾರಣಗಳೇನು?

 1. ಮುಂಗಾರು ಋತುವಿಗೆ ಮೊದಲು ಮತ್ತು ಮುಂಗಾರು ಋತುವಿನ ನಂತರ ಸಮುದ್ರದಲ್ಲಿ ಉಂಟಾಗುವ ಚಂಡಮಾರುತಗಳ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಹವಾಮಾನ ಬದಲಾವಣೆಯಿಂದಾಗಿ ಸಾಗರದ ಮೇಲ್ಮೈಯ ತಾಪದಲ್ಲಿ ಏರಿಕೆ ಇದಕ್ಕೆ ಮುಖ್ಯ ಕಾರಣ ಎಂದು ವಿಜ್ಞಾನಿಗಳು ಗುರುತಿಸಿದ್ದಾರೆ. 2014ರಲ್ಲಿ ನಡೆಸಿದ ಅಧ್ಯಯನದ ಪ್ರಕಾರ, ಹಿಂದೂ ಮಹಾಸಾಗರದ ಮೇಲ್ಮೈಯ ಸರಾಸರಿ ತಾಪವು 0.7 ಡಿಗ್ರಿ ಸೆಲ್ಸಿಯಸ್‌ನಷ್ಟು ಏರಿದೆ. ಇತರ ಸಾಗರಗಳಿಗೆ ಹೋಲಿಸಿದರೆ ಹಿಂದೂ ಮಹಾಸಾಗರವು ಹೆಚ್ಚು ತಂಪು. ಹಾಗಿದ್ದರೂ ಬೇಸಿಗೆಯ ಅವಧಿಯಲ್ಲಿ ಸಾಗರದ ಮೇಲ್ಮೈ ತಾಪವು 1.2 ಡಿಗ್ರಿ ಸೆಲ್ಸಿಯಸ್‌ ಏರಿಕೆಯಾಗಿತ್ತು.
 2. ಹಸಿರುಮನೆ ಅನಿಲಗಳು ಹೊರಸೂಸುವ ತಾಪದ ಶೇ 90ರಷ್ಟನ್ನು ಸಮುದ್ರವು ಹೀರಿಕೊಳ್ಳುತ್ತದೆ. ಮಾರುತಗಳಿಗೆ ಶಕ್ತಿ ನೀಡುವುದೇ ನೀರಿನ ತಾಪ. ಇತರ ಸಮುದ್ರಗಳಿಗೆ ಹೋಲಿಸಿದರೆ ಅರಬ್ಬಿಸಮುದ್ರದ ತಾಪವು ಅತ್ಯಂತ ವೇಗವಾಗಿ ಏರಿಕೆಯಾಗುತ್ತಿದೆ ಎಂದು ಗುರುತಿಸಲಾಗಿದೆ.
 3. ಹವಾಮಾನ ಬದಲಾವಣೆಯಿಂದಾಗಿ ಸಮುದ್ರ ಮಟ್ಟ ಏರಿಕೆಯಾಗುತ್ತದೆ ಮತ್ತು ಚಂಡಮಾರುತದ ವೇಗ ಹೆಚ್ಚಳವಾಗುತ್ತದೆ. ಇದು ಮಾರುತವು ಕರಾವಳಿಯನ್ನು ಪ್ರವೇಶಿಸಿದ ನಂತರ ಪರಿಣಾಮ ಬೀರುವ ಭೂ ಪ್ರದೇಶದ ವ್ಯಾಪ್ತಿಯನ್ನೂ ಹೆಚ್ಚಿಸುತ್ತದೆ. ಚಂಡಮಾರುತದ ಅವಧಿಯಲ್ಲಿ ಬೀಳುವ ಮಳೆಯ ಪ್ರಮಾಣ ಹೆಚ್ಚಳವಾಗಿ, ಜಲಾವೃತಗೊಳ್ಳುವ ಪ್ರದೇಶವೂ ಹೆಚ್ಚುತ್ತದೆ. ಯೋಜಿತವಲ್ಲದ ನಗರಾಭಿವೃದ್ಧಿ, ಕಾಂಡ್ಲಾವನಗಳ ನಾಶ ಚಂಡಮಾರುತಗಳ ಪರಿಣಾಮವನ್ನು ತೀವ್ರವಾಗಿಸುತ್ತವೆ ಎಂಬುದು ತಜ್ಞರ ವಿಶ್ಲೇಷಣೆ.
 4. ಬಂಗಾಳ ಕೊಲ್ಲಿ ಮತ್ತು ಅರಬ್ಬಿ ಸಮುದ್ರಗಳೆರಡಲ್ಲೂ ಚಂಡಮಾರುತಗಳು ಸೃಷ್ಟಿಯಾಗುತ್ತಿವೆ. ಬಂಗಾಳ ಕೊಲ್ಲಿಗೆ ಹೋಲಿಸಿದರೆ ಅರಬ್ಬಿ ಸಮುದ್ರದಲ್ಲಿ ಚಂಡಮಾರುತಗಳ ಸಂಖ್ಯೆ ಕಡಿಮೆ. 1891ರಿಂದ 2,000ದವರೆಗೆ ಬಂಗಾಳ ಕೊಲ್ಲಿಯಲ್ಲಿ 308 ಚಂಡಮಾರುತಗಳು ಸೃಷ್ಟಿ ಯಾಗಿವೆ. ಅವುಗಳ ಪೈಕಿ 103 ತೀವ್ರವಾಗಿದ್ದವು. ಅರಬ್ಬಿ ಸಮುದ್ರದಲ್ಲಿ ಸೃಷ್ಟಿಯಾದ 48 ಬಿರುಗಾಳಿಗಳಲ್ಲಿ 24 ತೀವ್ರ ಪರಿಣಾಮ ಉಂಟು ಮಾಡಿದ್ದವು.

 

ನಾಮಕರಣ ಹೇಗೆ?

 1. ಚಂಡಮಾರುತಗಳು ಒಂದು ವಾರ ಅಥವಾ ಅದಕ್ಕಿಂತ ಹೆಚ್ಚು ಸಮಯ ಇರಬಹುದು. ಹಾಗಾಗಿ, ಒಂದೇ ಸಮಯದಲ್ಲಿ ಒಂದಕ್ಕಿಂತ ಹೆಚ್ಚು ಚಂಡಮಾರುತ ಬೀಸುವ ಸಾಧ್ಯತೆ ಇದೆ. ಹಾಗಾದಾಗ ಗೊಂದಲ ಸಹಜ. ಈ ಗೊಂದಲ ನಿವಾರಣೆಗಾಗಿ ಚಂಡಮಾರುತಗಳಿಗೆ ಹೆಸರು ಇರಿಸುವ ಪರಿಪಾಟ ಶುರುವಾಯಿತು. ಪ್ರಾದೇಶಿಕವಾಗಿ ಒಪ್ಪಿತವಾದ ನಿಯಮಾನುಸಾರ ಹೆಸರು ಇರಿಸಲಾಗುತ್ತದೆ.
 2. ಚಂಡಮಾರುತಗಳ ಮೇಲೆ ನಿಗಾ ಇರಿಸುವ ಆರು ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರಗಳು (RSMC) ಮತ್ತು ಐದು ಪ್ರಾದೇಶಿಕ ಚಂಡಮಾರುತ ಎಚ್ಚರಿಕೆ ಕೇಂದ್ರಗಳು (TCWC) ಇವೆ. ಚಂಡಮಾರುತದ ಮುನ್ನೆಚ್ಚರಿಕೆ ನೀಡುವುದು ಮತ್ತು ಹೆಸರು ಇರಿಸುವುದು ಈ ಕೇಂದ್ರಗಳ ಹೊಣೆಯಾಗಿದೆ. ಹಿಂದೂ ಮಹಾಸಾಗರ ಪ್ರದೇಶದ 13 ದೇಶಗಳಿಗೆ ಚಂಡಮಾರುತ ಎಚ್ಚರಿಕೆ ನೀಡುವುದು ದೆಹಲಿಯಲ್ಲಿರುವ ಆರ್‌ಎಸ್‌ಎಂಸಿಯ ಜವಾಬ್ದಾರಿ. ಈ 13 ದೇಶಗಳೆಂದರೆ, ಬಾಂಗ್ಲಾದೇಶ, ಭಾರತ, ಇರಾನ್‌, ಮಾಲ್ಡೀವ್ಸ್‌, ಮ್ಯಾನ್ಮಾರ್‌, ಒಮಾನ್‌, ಪಾಕಿಸ್ತಾನ, ಕತಾರ್‌, ಸೌದಿ ಅರೇಬಿಯಾ, ಶ್ರೀಲಂಕಾ, ಥಾಯ್ಲೆಂಡ್‌, ಅರಬ್‌ ಸಂಯುಕ್ತ ಸಂಸ್ಥಾನ ಮತ್ತು ಯೆಮನ್‌.
 3. ಅರಬ್ಬಿ ಸಮುದ್ರ ಮತ್ತು ಬಂಗಾಳ ಕೊಲ್ಲಿಯಲ್ಲಿ ಸೃಷ್ಟಿಯಾಗುವ ಚಂಡಮಾರುತಳಿಗೆ ಹೆಸರು ಇರಿಸುವುದು ಕೂಡ ದೆಹಲಿಯ ಆರ್‌ಎಸ್‌ಎಂಸಿಯ ಹೊಣೆ. ಈ ಪ್ರದೇಶದ ದೇಶಗಳು ಸೂಚಿಸಿದ ಹೆಸರುಗಳನ್ನು ಪಟ್ಟಿ ಮಾಡಿ ಇರಿಸಲಾಗುತ್ತದೆ. ಈ ಪಟ್ಟಿಯಲ್ಲಿರುವ ಹೆಸರುಗಳನ್ನು ಸರದಿಯಂತೆ ಇರಿಸಬೇಕಾಗುತ್ತದೆ. ಚಂಡಮಾರುತ ಸೃಷ್ಟಿಯಾಗುವುದಕ್ಕೆ ಎಷ್ಟೋ ವರ್ಷ ಮೊದಲೇ ಹೆಸರು ನಿರ್ಧಾರ ಆಗಿರುತ್ತದೆ.
 4. 2004ರಲ್ಲಿ ರೂಪಿಸಿದ್ದ 64 ಹೆಸರುಗಳ ಪಟ್ಟಿಯಲ್ಲಿದ್ದ ಕೊನೆಯ ಹೆಸರನ್ನು ಕಳೆದ ವರ್ಷ ಬೀಸಿದ ಆಂಫನ್‌ ಚಂಡಮಾರುತಕ್ಕೆ ಇರಿಸಲಾಗಿದೆ.
 5. ಭಾರತೀಯ ಹವಾಮಾನ ಇಲಾಖೆಯು 2020ರಲ್ಲಿ ಹೊಸ ಪಟ್ಟಿ ರೂಪಿಸಿದೆ. 13 ದೇಶಗಳು ಸೂಚಿಸಿದ ತಲಾ 13 ಹೆಸರುಗಳು ಹೊಸ ಪಟ್ಟಿಯಲ್ಲಿ ಸೇರಿವೆ. ಒಟ್ಟು 169 ಹೆಸರುಗಳಿವೆ. ಈಗ ಹೊಸ ಪಟ್ಟಿಯಲ್ಲಿರುವ ಹೆಸರುಗಳನ್ನು ಬಳಸಲಾಗುತ್ತಿದೆ. ಈ ವಾರ ಅಪ್ಪಳಿಸಲಿರುವ ಚಂಡಮಾರುತ ‘ಯಸ್‌’ ಹೆಸರನ್ನು ಒಮಾನ್‌ ಸೂಚಿಸಿದೆ. ಮುಂದಿನ ಚಂಡಮಾರುತದ ಹೆಸರು ‘ಗುಲಾಬ್‌’, ಇದನ್ನು ‍ಪಾಕಿಸ್ತಾನ ಸೂಚಿಸಿದೆ.

 

ಇತ್ತೀಚಿನ ಕೆಲವು ಚಂಡಮಾರುತಗಳು:

 1. ಕಳೆದ ವರ್ಷ ಬಂಗಾಳ ಕೊಲ್ಲಿಗೆ ಅಪ್ಪಳಿಸಿ ಅತಿಹೆಚ್ಚು ಹಾನಿ ಮಾಡಿದ ಆಂಪನ್ ಚಂಡಮಾರುತವು ‘ಸೂಪರ್ ಸೈಕ್ಲೋನ್’ ಎಂದು ಕರೆಸಿಕೊಂಡಿತು. ಬಂಗಾಳದಲ್ಲಿ 72 ಜನರು, ಬಾಂಗ್ಲಾದೇಶದಲ್ಲಿ 12 ಜನರು ಇದಕ್ಕೆ ಬಲಿಯಾಗಿದ್ದರು. ಬಂಗಾಳದಲ್ಲಿ 1.40 ಕೋಟಿ ಜನರು ವಿದ್ಯುತ್‌ ಸಂಪರ್ಕ ಕಳೆದುಕೊಂಡಿದ್ದರು. ಗಂಟೆಗೆ 160 ಕಿಲೋಮೀಟರ್ ವೇಗದಲ್ಲಿ ಬೀಸಿದ ಇದು, ಒಟ್ಟು ₹95,000 ಕೋಟಿ ನಷ್ಟ ಉಂಟು ಮಾಡಿತ್ತು ಎಂದು ಅಂದಾಜಿಸಲಾಗಿದೆ.
 2. ಕಳೆದ ವರ್ಷ ಅರಬ್ಬೀ ಸಮುದ್ರದ ಮೂಲಕ ‘ನಿಸರ್ಗ’ ಚಂಡಮಾರುತವು ಮುಂಬೈ ಕರಾವಳಿಗೆ ಅಪ್ಪಳಿಸಿತ್ತು. ಆಗ ಮುಂಬೈನಲ್ಲಿ ಕೋವಿಡ್‌ನ ಮೊದಲ ಅಲೆ ಭಾರಿ ಜೋರಾಗಿತ್ತು. ಆದರೆ ಚಂಡಮಾರುತ ಒಮಾನ್ ಕಡೆಗೆ ದಿಕ್ಕು ಬದಲಿಸಿದ್ದರಿಂದ, ಭಾರಿ ಪ್ರಮಾಣದ ಹಾನಿ ತಪ್ಪಿತು.
 3. ‘ಫನಿ’ ಚಂಡಮಾರುತವು 1998ರ ಒಡಿಶಾ ಚಂಡಮಾರುತದ ನಂತರ ಒಡಿಶಾಗೆ ಅಪ್ಪಳಿಸಿದ ಪ್ರಬಲ ಉಷ್ಣವಲಯದ ಚಂಡಮಾರುತವಾಗಿದೆ. 2019ರಲ್ಲಿ ಒಡಿಶಾ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ ಮತ್ತು ಪೂರ್ವ ಭಾರತದಲ್ಲಿ ಭಾರಿ ಪ್ರಮಾಣದ ಜೀವ ಮತ್ತು ಆಸ್ತಿ ನಷ್ಟ ಉಂಟುಮಾಡಿತು. ಬಾಂಗ್ಲಾದೇಶ, ಭೂತಾನ್ ಮತ್ತು ಶ್ರೀಲಂಕಾಗೂ ಅಪ್ಪಳಿಸಿತ್ತು.
 4. ‘ನಿವಾರ್’ ಚಂಡಮಾರುತವು 2020ರಲ್ಲಿ ತಮಿಳುನಾಡು, ಪುದುಚೇರಿಗೆ ಅಪ್ಪಳಿಸಿ ರೌದ್ರಾವತಾರ ತೋರಿತ್ತು. ಮುಂಜಾಗ್ರತಾ ಕ್ರಮ ತೆಗೆದುಕೊಂಡಿದ್ದರಿಂದ ಹೆಚ್ಚಿನ ಸಾವುನೋವು ಉಂಟಾಗದಿದ್ದರೂ, ರೈತಾಪಿ ವರ್ಗ ಕಷ್ಟ ಅನುಭವಿಸಿತು.
 5. 2019ರಲ್ಲಿ ‘ಬುಲ್‌ಬುಲ್’ ಚಂಡಮಾರುತವು ಭಾರತದ ಪಶ್ಚಿಮ ಬಂಗಾಳವನ್ನು ಅಪ್ಪಳಿಸಿದ ತೀವ್ರ ಸ್ವರೂಪದ ಚಂಡಮಾರುತವಾಗಿತ್ತು. ಇದು ಭಾರಿ ಮಳೆ, ಪ್ರವಾಹ ಇತ್ಯಾದಿಗಳಿಗೆ ಕಾರಣವಾಯಿತು. ಇದರಿಂದಾಗಿ ಜೀವ ಮತ್ತು ಆಸ್ತಿ ನಾಶವಾಯಿತು. ಭಾರತದ ಹೊರಗೆ ಅದು ಬಾಂಗ್ಲಾದೇಶಕ್ಕೂ ತೊಂದರೆ ಕೊಟ್ಟಿತ್ತು.
 6. ‘ವಾಯು’ ಚಂಡಮಾರುತವು ಅರಬ್ಬೀ ಸಮುದ್ರದ ಮೂಲಕ ಅಪ್ಪಳಿಸಿ ಗುಜರಾತ್ ರಾಜ್ಯದಲ್ಲಿ ಜೀವ ಮತ್ತು ಆಸ್ತಿಗೆ ಒಂದಿಷ್ಟು ಹಾನಿಯನ್ನುಂಟುಮಾಡಿತು. ಇದು 1998ರ ಗುಜರಾತ್ ಚಂಡಮಾರುತದ ನಂತರ ರಾಜ್ಯಕ್ಕೆ ಅಪ್ಪಳಿಸಿದ ಪ್ರಬಲ ಚಂಡಮಾರುತವಾಗಿತ್ತು. ಇದು ಮಾಲ್ಡೀವ್ಸ್, ಪಾಕಿಸ್ತಾನ ಮತ್ತು ಒಮಾನ್‌ಗಳ ಮೇಲೂ ಪರಿಣಾಮ ಬೀರಿತು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಕೋವಾಕ್ಸಿನ್‌ಗೆ WHO, ಯುರೋಪಿಯನ್ ಒಕ್ಕೂಟದಿಂದ ಅನುಮೋದನೆ ಪಡೆಯಲು ಭಾರತದ ಪ್ರಯತ್ನ:


(India to push for WHO, EU approval for Covaxin)

ಸಂದರ್ಭ:

ಕೋವಾಕ್ಸಿನ್ (Covaxin) ಲಸಿಕೆಗಳನ್ನು ವಿಶ್ವ ಆರೋಗ್ಯ ಸಂಸ್ಥೆಯ ‘ತುರ್ತು ಬಳಕೆ ಪಟ್ಟಿ’ (Emergency Use List (EUL) ಯಲ್ಲಿ ಇನ್ನೂ ಸೇರಿಸಲಾಗಿಲ್ಲ, ಆದ್ದರಿಂದ ಕೋವಾಕ್ಸಿನ್ ಲಸಿಕೆ ಪಡೆದ ಭಾರತೀಯರು ವಿದೇಶ ಪ್ರವಾಸಕ್ಕೆ ಹೆಚ್ಚು ಸಮಯ ಕಾಯಬೇಕಾಗಬಹುದು. ಅಥವಾ ಅಂತರಾಷ್ಟ್ರೀಯ ಪ್ರಯಾಣದ ನಿರ್ಬಂಧಗಳಿಂದ ವಿನಾಯಿತಿ ಪಡೆಯದಿರಬಹುದು.

ಆದ್ದರಿಂದ ಹೈದರಾಬಾದ್ ಮೂಲದ ಭಾರತ್ ಬಯೋಟೆಕ್‌ಗೆ ‘ವಿಶ್ವ ಆರೋಗ್ಯ ಸಂಸ್ಥೆ’ (WHO) ಮತ್ತು ನಂತರ ಯುರೋಪಿಯನ್ ಒಕ್ಕೂಟದ ‘ಯುರೋಪಿಯನ್ ಮೆಡಿಸಿನ್ ಏಜೆನ್ಸಿ’ (European Medicines Agency (EMA) ಎರಡರಿಂದಲೂ ಅನುಮೋದನೆ ಪಡೆಯಲು ಸಹಾಯ ಮಾಡಲು ಭಾರತ ಸರ್ಕಾರ ನಿರ್ಧರಿಸಿದೆ.

ಈ ಪ್ರಕರಣವನ್ನು ಅಧ್ಯಯನ ಮಾಡಲು ಮತ್ತು ಕೋವಾಕ್ಸಿನ್‌ಗೆ ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಬಳಕೆ ಪಟ್ಟಿಯಲ್ಲಿ (EUL) ಸ್ಥಾನ ಪಡೆಯುವ ವಿಷಯದಲ್ಲಿ ಸಹಾಯ ಮಾಡಲು ವಿದೇಶಾಂಗ ಸಚಿವಾಲಯಕ್ಕೆ (Ministry of External Affairs (MEA) ಹೊಣೆ ವಹಿಸಲಾಗಿದೆ.

 

ಅಗತ್ಯತೆ:

ಇತ್ತೀಚೆಗೆ, ಯುರೋಪಿಯನ್ ಒಕ್ಕೂಟದ ಸದಸ್ಯ ರಾಷ್ಟ್ರಗಳು ಯುರೋಪಿನ ಹೊರಗಿನ ದೇಶಗಳಿಂದ “ಸಂಪೂರ್ಣವಾಗಿ ಲಸಿಕೆ ಹಾಕಿದ” ಪ್ರವಾಸಿಗರಿಗೆ ಕೆಲವು ಷರತ್ತುಗಳಿಗೆ ಒಳಪಟ್ಟು ತಮ್ಮ ದೇಶಗಳಿಗೆ ಪ್ರವೇಶಿಸಲು ಅವಕಾಶ ನೀಡುವ ಪ್ರಸ್ತಾಪವನ್ನು ಅಂಗೀಕರಿಸಲಾಗಿದೆ.

ಭಾರತದಿಂದ ಪ್ರಯಾಣ ಸೇವೆಗಳನ್ನು ಸ್ವೀಕರಿಸಿದರೆ, ಅಸ್ಟ್ರಾಜೆನೆಕಾದ ಕೋವಿಶೀಲ್ಡ್ ಲಸಿಕೆ ಪಡೆದಿರುವ ಪ್ರಯಾಣಿಕರನ್ನು WHO ಮತ್ತು ಯುರೋಪಿಯನ್ ಯೂನಿಯನ್ ಪಟ್ಟಿಗಳಲ್ಲಿ ಸೇರಿಸಲಾಗುವುದು, ಆದರೆ ಕೊವಾಕ್ಸಿನ್ ಲಸಿಕೆ ಪಡೆದವರನ್ನು ಈ ಪ್ರಯಾಣ ಪಟ್ಟಿಯಲ್ಲಿ ಸೇರಿಸದೆ ಇರಬಹುದು.

 

ತುರ್ತು ಬಳಕೆ ಪಟ್ಟಿಗೆ’ ಸೇರ್ಪಡೆಗೊಳ್ಳುವದರಿಂದ ಆಗುವ ಪ್ರಯೋಜನಗಳು:

ವಿಶ್ವ ಆರೋಗ್ಯ ಸಂಸ್ಥೆಯ ‘ತುರ್ತು ಬಳಕೆ ಪಟ್ಟಿ (Emergency Use Listing- EUL)’ ಯಲ್ಲಿ ಕೋವಾಕ್ಸಿನ್ ಅನ್ನು ಪರಿಚಯಿಸುವುದರಿಂದ ಭಾರತವು ಅಭಿವೃದ್ಧಿಪಡಿಸಿದ ಮತ್ತು ಉತ್ಪಾದಿಸುವ ಲಸಿಕೆಗೆ ಸಾಕಷ್ಟು ಉತ್ತೇಜನ ಸಿಗುತ್ತದೆ, ಮತ್ತು ಈ ಪಟ್ಟಿಯಲ್ಲಿ ಸೇರ್ಪಡೆಗೊಂಡ ಭಾರತದ ಮೊದಲ ಲಸಿಕೆ ಎಂಬ ಹೆಗ್ಗಳಿಕೆ ಇದರದಾಗುತ್ತದೆ.

 

WHO ತುರ್ತು ಬಳಕೆ ಪಟ್ಟಿ (EUL) ಬಗ್ಗೆ:

ವಿಶ್ವ ಆರೋಗ್ಯ ಸಂಸ್ಥೆಯ ‘ತುರ್ತು ಬಳಕೆ ಪಟ್ಟಿ- EUL’, ಎನ್ನುವುದು, ಪರವಾನಗಿ ಪಡೆಯದ ಲಸಿಕೆಗಳು, ಚಿಕಿತ್ಸಕ ವಿಧಾನಗಳು (Therapeutics) ಮತ್ತು ದೇಹದ ಹೊರಗೆ ‘ಇನ್ ವಿಟ್ರೊ ಡಯಾಗ್ನೋಸ್ಟಿಕ್ಸ್’(in vitro diagnostics)  ಅನ್ನು ನಿರ್ಣಯಿಸಿ ಪಟ್ಟಿ ಮಾಡಲು ಅಪಾಯ ಆಧಾರಿತ ಕಾರ್ಯವಿಧಾನವಾಗಿದೆ. ಸಾರ್ವಜನಿಕ ಆರೋಗ್ಯ ತುರ್ತು ಪರಿಸ್ಥಿತಿಯಿಂದ ಬಳಲುತ್ತಿರುವ ಜನರಿಗೆ ಈ ಉತ್ಪನ್ನಗಳನ್ನು ಒದಗಿಸುವ ಪ್ರಕ್ರಿಯೆಯನ್ನು ತ್ವರಿತ ಗೊಳಿಸುವುದು ಇದರ ಮುಖ್ಯ ಉದ್ದೇಶವಾಗಿದೆ.

 1. ಲಭ್ಯವಿರುವ ಗುಣಮಟ್ಟ, ಸುರಕ್ಷತೆ ಮತ್ತು ಪರಿಣಾಮಕಾರಿತ್ವ ಮತ್ತು ಕಾರ್ಯಕ್ಷಮತೆಯ ದತ್ತಾಂಶದ ಆಧಾರದ ಮೇಲೆ ನಿರ್ದಿಷ್ಟ ಉತ್ಪನ್ನಗಳನ್ನು ಬಳಸುವ ಸ್ವೀಕಾರಾರ್ಹತೆಯನ್ನು ನಿರ್ಧರಿಸಲು ಈ ಪಟ್ಟಿಯು ವಿಶ್ವಸಂಸ್ಥೆಯ ಆಸಕ್ತ ಖರೀದಿ ಏಜೆನ್ಸಿಗಳು ಮತ್ತು ಸದಸ್ಯ ರಾಷ್ಟ್ರಗಳಿಗೆ ಸಹಾಯ ಮಾಡುತ್ತದೆ.

 

ಕ್ಯಾಂಡಿಡೇಟ್ ಉತ್ಪನ್ನಗಳ ಅರ್ಹತೆ:

‘ತುರ್ತು ಬಳಕೆ ಪಟ್ಟಿ’ (EUL)ಯು ಮೂರು ಉತ್ಪನ್ನಗಳೊಂದಿಗೆ (ಲಸಿಕೆ, ಚಿಕಿತ್ಸಕ ಮತ್ತು ಇನ್ ವಿಟ್ರೊ ಡಯಾಗ್ನೋಸ್ಟಿಕ್ಸ್) ವ್ಯವಹರಿಸುತ್ತದೆ.

‘ತುರ್ತು ಬಳಕೆ ಪಟ್ಟಿ’ ಪ್ರಕ್ರಿಯೆಯ ಅಡಿಯಲ್ಲಿ ಮೌಲ್ಯಮಾಪನಕ್ಕೆ ಅರ್ಹತೆ ಪಡೆಯಲು ಈ ಪ್ರತಿಯೊಂದು ವಿಭಾಗಗಳಿಗೆ ನಿರ್ದಿಷ್ಟ ಮಾನದಂಡಗಳನ್ನು ನಿಗದಿಪಡಿಸಲಾಗಿದೆ.

 

ಇದಕ್ಕಾಗಿ ಈ ಕೆಳಗಿನ ಮಾನದಂಡಗಳನ್ನು ಪೂರೈಸುವುದು ಅವಶ್ಯಕ:

 1. ‘ತುರ್ತು ಬಳಕೆಯ ಪಟ್ಟಿಯಲ್ಲಿ’ ಉತ್ಪನ್ನವನ್ನು ಸೇರಿಸಲು ಅನ್ವಯಿಸಲಾದ ರೋಗವು ಒಂದು ಗಂಭೀರ ರೋಗ, ತಕ್ಷಣದ ಮಾರಣಾಂತಿಕ, ಏಕಾಏಕಿ, ಸಾಂಕ್ರಾಮಿಕ ರೋಗ ಅಥವಾ ಸಾಂಕ್ರಾಮಿಕ ರೋಗವನ್ನು ಹರಡುವ ಸಾಮರ್ಥ್ಯವನ್ನು ಹೊಂದಿರಬೇಕು. ಹೆಚ್ಚುವರಿಯಾಗಿ, ರೋಗವು ವ್ಯವಹರಿಸುವಂತಹ ‘ತುರ್ತು ಬಳಕೆ ಪಟ್ಟಿ’ ಮೌಲ್ಯಮಾಪನಕ್ಕೆ ಪರಿಗಣಿಸಲು ಉತ್ಪನ್ನವು ಸಮಂಜಸವಾದ ಆಧಾರವನ್ನು ಹೊಂದಿರಬೇಕು, ಉದಾ, ಜನಸಂಖ್ಯೆಯ ಯಾವುದೇ ಉಪವಿಭಾಗಕ್ಕೆ (ಉದಾ., ಮಕ್ಕಳು) ಯಾವುದೇ ಪರವಾನಗಿ ಪಡೆದ ಉತ್ಪನ್ನಗಳು ಲಭ್ಯವಿಲ್ಲ.
 2. ಅಸ್ತಿತ್ವದಲ್ಲಿರುವ ಉತ್ಪನ್ನಗಳು ರೋಗವನ್ನು ನಿರ್ಮೂಲನೆ ಮಾಡುವಲ್ಲಿ ಅಥವಾ ಏಕಾಏಕಿ ತಡೆಯುವಲ್ಲಿ ವಿಫಲವಾಗಿವೆ (ಲಸಿಕೆಗಳು ಮತ್ತು ಔಷಧಿಗಳ ಸಂದರ್ಭದಲ್ಲಿ).
 3. ಔಷಧಗಳು ಮತ್ತು ಲಸಿಕೆಗಳ ವಿಷಯದಲ್ಲಿ ಪ್ರಸ್ತುತ ಉತ್ತಮ ಉತ್ಪಾದನಾ ಅಭ್ಯಾಸಗಳ (Good Manufacturing Practices- GMP) ಮತ್ತು ‘ಇನ್ ವಿಟ್ರೊ ಡಯಾಗ್ನೋಸ್ಟಿಕ್ಸ್’ (IVD) ಸಂದರ್ಭದಲ್ಲಿ ಕ್ರಿಯಾತ್ಮಕ ‘ಗುಣಮಟ್ಟ ನಿರ್ವಹಣಾ ವ್ಯವಸ್ಥೆ’ (Quality Management System (QMS) ಗೆ ಅನುಗುಣವಾಗಿ ಉತ್ಪನ್ನವನ್ನು ತಯಾರಿಸಲಾಗುತ್ತದೆ.
 4. ಉತ್ಪನ್ನದ ಅಭಿವೃದ್ಧಿಯನ್ನು ಪೂರ್ಣಗೊಳಿಸಲು ಅರ್ಜಿದಾರನು ಬದ್ಧನಾಗಿರಬೇಕು (IVD ಯ ಸಂದರ್ಭದಲ್ಲಿ ಉತ್ಪನ್ನದ ಪರಿಶೀಲನೆ ಮತ್ತು ಮೌಲ್ಯಮಾಪನ) ಮತ್ತು ಉತ್ಪನ್ನ ಪರವಾನಗಿ ಪಡೆದ ನಂತರ, ವಿಶ್ವ ಆರೋಗ್ಯ ಸಂಸ್ಥೆಯಿಂದ ಪೂರ್ವಭಾವಿತ್ವವನ್ನು (prequalification) ಪಡೆಯಲು ಉತ್ಪನ್ನಕ್ಕೆ ಅರ್ಜಿ ಸಲ್ಲಿಸುವುದು ಅವಶ್ಯಕ.

 

ವಿಷಯಗಳು:ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

‘ಡಿಜಿಟಲ್ ಬಾರ್ಡರ್’ ಯೋಜನೆಗಳನ್ನು ಅನಾವರಣಗೊಳಿಸಲಿರುವ ಯು.ಕೆ.:


(U.K. to unveil plans for ‘digital border’)

ಸಂದರ್ಭ:

ತನ್ನ ಗಡಿಗಳನ್ನು ‘ಸಂಪೂರ್ಣವಾಗಿ ಡಿಜಿಟಲ್’ ಎಂದು ಘೋಷಿಸಲು ಬ್ರಿಟನ್ ಯೋಜನೆಯನ್ನು ರೂಪಿಸುತ್ತಿದೆ.

ಈ ಯೋಜನೆ ದೇಶದ ವಲಸೆ ವ್ಯವಸ್ಥೆಯಲ್ಲಿ ಕೈಗೊಳ್ಳುತ್ತಿರುವ ವಿಶಾಲ ಸುಧಾರಣೆಗಳ ಭಾಗವಾಗಿದೆ ಮತ್ತು ಅಂಕ ಆಧಾರಿತ ವಲಸೆ ವ್ಯವಸ್ಥೆಯನ್ನು (points-based migration system) ಸಹ ಪರಿಚಯಿಸುತ್ತದೆ.

 

ಡಿಜಿಟಲ್ ಬಾರ್ಡರ್’ ಎಂದರೇನು ಮತ್ತು ಅದು ಹೇಗಿರುತ್ತದೆ?

 1. ಈ ಕ್ರಮವು ಯುಎಸ್ ನಲ್ಲಿ ನೀಡಲಾದ ವ್ಯವಸ್ಥೆಯಂತೆ ವೀಸಾ ಅಥವಾ ವಲಸೆ ಸ್ಥಾನಮಾನ(Immigration status) ಇಲ್ಲದೆ ಯುನೈಟೆಡ್ ಕಿಂಗ್ಡಮ್ ಗೆ ಬರುವ ಜನರು ‘ಎಲೆಕ್ಟ್ರಾನಿಕ್ ಟ್ರಾವೆಲ್ ಆಥರೈಜೇಶನ್’(Electronic Travel Authorisation) ಪಡೆಯುವ ಅಗತ್ಯವಿರುತ್ತದೆ. ಈ ನಿಬಂಧನೆಗಳು 2025 ರ ಅಂತ್ಯದ ವೇಳೆಗೆ ಜಾರಿಗೆ ತರಬೇಕಾದ ಯೋಜನೆಗಳ ಒಂದು ಭಾಗವಾಗಿದೆ.
 2. ವೀಸಾ ಅರ್ಜಿ ಕೇಂದ್ರಗಳಿಗೆ ಭೇಟಿ ನೀಡುವ ಅಗತ್ಯವನ್ನು ಕಡಿಮೆ ಮಾಡಲು ಈ ಡಿಜಿಟಲ್ ಗುರುತಿನ ಪರಿಶೀಲನೆಯನ್ನು ಸಹ ಬಳಸಲಾಗುತ್ತದೆ.
 3. ಗಡಿಯನ್ನು ಡಿಜಿಟಲೀಕರಣಗೊಳಿಸುವುದರಿಂದ ಅಧಿಕಾರಿಗಳು ‘ಈಗ ದೇಶಕ್ಕೆ ಬರುವವರನ್ನು ಮತ್ತು ದೇಶದಿಂದ ಹೊರಹೋಗುವವರನ್ನು ಲೆಕ್ಕ ಇಡಬಹುದು’ ಮತ್ತು ಇದರೊಂದಿಗೆ ಬರುವವರಿಗೆ ದೇಶದಲ್ಲಿ ಉಳಿಯಲು ಅನುಮತಿ ಇದೆಯೇ ಎಂದು ಸಹ ಪರಿಶೀಲಿಸಬಹುದು.

 

ಇದರ ಪ್ರಯೋಜನಗಳು ಯಾವುವು?

ಈ ವಿಧಾನದಿಂದ, ಸಂಭಾವ್ಯ ಬೆದರಿಕೆಗಳು ಗಡಿಗಳನ್ನು ತಲುಪುವ ಮೊದಲು ಅವುಗಳನ್ನು ಗುರುತಿಸುವುದು ಸುಲಭವಾಗುತ್ತದೆ.

 

ಇದರ ಅಗತ್ಯತೆ:

ಕಳೆದ ವರ್ಷ, ಸುಮಾರು 8,500 ಜನರು ಅಪಾಯಕಾರಿ ಸಮುದ್ರಯಾನ ಮಾಡುವ ಮೂಲಕ ಬ್ರಿಟನ್‌ಗೆ ಪ್ರವೇಶಿಸಿದರು, ಸಣ್ಣ ದೋಣಿಗಳಲ್ಲಿ ವಿಶ್ವದ ಅತ್ಯಂತ ಜನನಿಬಿಡ ಹಡಗು ಮಾರ್ಗದ ಮೂಲಕ ಈ ಅಪಾಯಕಾರಿ ಕಾಲುವೆಯನ್ನು ದಾಟಿದ್ದಾರೆ.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಚೀನಾದ 17 + 1 ಸಹಕಾರ ವೇದಿಕೆಯಿಂದ ಹೊರಬಂದ ಲಿಥುವೇನಿಯಾ:


(Lithuania quits China’s 17+1 cooperation forum)

ಸಂದರ್ಭ:

ಇತ್ತೀಚೆಗೆ, ಲಿಥುವೇನಿಯಾ ಚೀನಾದ 17 + 1 ಸಹಕಾರ ವೇದಿಕೆಯಿಂದ (17+1 cooperation forum) ಹೊರಬಂದಿದೆ. ವೇದಿಕೆಯು ಮಧ್ಯ ಮತ್ತು ಪೂರ್ವ ಯುರೋಪಿಯನ್ ರಾಷ್ಟ್ರಗಳನ್ನು ಮತ್ತು ಯುರೋಪಿಯನ್ ಒಕ್ಕೂಟದ ಇತರ ಕೆಲವು ಸದಸ್ಯರನ್ನು ಒಳಗೊಂಡಿದೆ.

 

ಹೊರಬರಲು ಕಾರಣ?

ಲಿಥುವೇನಿಯಾ ವೇದಿಕೆಯನ್ನು “ವಿಭಜಕ” ಎಂದು ಬಣ್ಣಿಸಿದೆ. ಅದೇ ಸಮಯದಲ್ಲಿ, ಲಿಥುವೇನಿಯಾ ಯುರೋಪಿಯನ್ ಒಕ್ಕೂಟದ ಸಹ ಸದಸ್ಯ ರಾಷ್ಟ್ರಗಳನ್ನು ‘ಹೆಚ್ಚು ಪರಿಣಾಮಕಾರಿಯಾದ’ 27 + 1 ವಿಧಾನ ‘(27+1 approach) ಮತ್ತು ಚೀನಾದೊಂದಿಗೆ ಸಂವಹನವನ್ನು ಮುಂದುವರೆಸಬೇಕೆಂದು ಒತ್ತಾಯಿಸಿದೆ.

 

ಏನಿದು 17 + 1 ಉಪಕ್ರಮ?

’17 +1 ‘ಉಪಕ್ರಮವು, ಚೀನಾದ ನಾಯಕತ್ವದಲ್ಲಿ ರೂಪುಗೊಂಡ ಒಂದು ವೇದಿಕೆಯಾಗಿದ್ದು, ಇದನ್ನು 2012 ರಲ್ಲಿ ಬುಡಾಪೆಸ್ಟ್‌ನಲ್ಲಿ ಸ್ಥಾಪಿಸಲಾಯಿತು.

ಮಧ್ಯ ಮತ್ತು ಪೂರ್ವ ಯುರೋಪಿಯನ್(Central and Eastern European- CEE)  ಪ್ರದೇಶದ ಅಭಿವೃದ್ಧಿಗೆ ಹೂಡಿಕೆ ಮತ್ತು ವ್ಯಾಪಾರಕ್ಕಾಗಿ ‘ಮಧ್ಯ ಮತ್ತು ಪೂರ್ವ ಯುರೋಪ್’ ಸದಸ್ಯ ರಾಷ್ಟ್ರಗಳು ಮತ್ತು ಬೀಜಿಂಗ್‌ನ ನಡುವೆ ಸಹಕಾರವನ್ನು ವಿಸ್ತರಿಸುವುದು ಇದರ ಉದ್ದೇಶವಾಗಿತ್ತು.

 1. ಈ ಚೌಕಟ್ಟಿನಡಿಯಲ್ಲಿ, ಸೇತುವೆಗಳ ಆಧುನೀಕರಣ, ಮೋಟಾರು ಮಾರ್ಗಗಳು, ರೈಲ್ವೆ ಮಾರ್ಗಗಳು ಮತ್ತು ಸಹ ಸದಸ್ಯ ರಾಷ್ಟ್ರಗಳಲ್ಲಿನ ಬಂದರುಗಳ ಆಧುನೀಕರಣದ ಬಗ್ಗೆಯೂ ಮೂಲಸೌಕರ್ಯ ಯೋಜನೆಗಳು ಕೇಂದ್ರೀಕೃತವಾಗಿವೆ.
 2. ಈ ವೇದಿಕೆಯು ಚೀನಾದ ಮಹತ್ವಾಕಾಂಕ್ಷೆಯ ಬೆಲ್ಟ್ ಮತ್ತು ರಸ್ತೆ ಉಪಕ್ರಮ (Belt and Road initiative- BRI)  ಯೋಜನೆಯ ವಿಸ್ತರಣೆಯಾಗಿ ವ್ಯಾಪಕವಾಗಿ ನೋಡಲಾಗುತ್ತಿದೆ.
 3. ಚೀನಾದ ಪ್ರಕಾರ, 17 + 1 ಉಪಕ್ರಮವನ್ನು ಪಾಶ್ಚಿಮಾತ್ಯ ಯುರೋಪಿಯನ್ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ಅಭಿವೃದ್ಧಿ ಹೊಂದಿದ ಯುರೋಪಿಯನ್ ದೇಶಗಳೊಂದಿಗಿನ ತನ್ನ ಸಂಬಂಧವನ್ನು ಸುಧಾರಿಸಲು ಪ್ರಾರಂಭಿಸಲಾಗಿದೆ ಎಂಬುದು ಅದರ ವಾದವಾಗಿದೆ.

 

ಸಂಯೋಜನೆ:

ಈ ಉಪಕ್ರಮವು ಹನ್ನೆರಡು ಐರೋಪ್ಯ ಒಕ್ಕೂಟದ ಸದಸ್ಯ ರಾಷ್ಟ್ರಗಳು ಮತ್ತು ಐದು ಬಾಲ್ಕನ್ ರಾಷ್ಟ್ರಗಳನ್ನು ಒಳಗೊಂಡಿದೆ – ಅಲ್ಬೇನಿಯಾ, ಬೋಸ್ನಿಯಾ ಮತ್ತು ಹರ್ಜೆಗೋವಿನಾ, ಬಲ್ಗೇರಿಯಾ, ಕ್ರೊಯೇಷಿಯಾ, ಜೆಕ್ ರಿಪಬ್ಲಿಕ್, ಎಸ್ಟೋನಿಯಾ, ಗ್ರೀಸ್, ಹಂಗೇರಿ, ಲಾಟ್ವಿಯಾ, ಲಿಥುವೇನಿಯಾ, ಮ್ಯಾಸೆಡೋನಿಯಾ, ಮಾಂಟೆನೆಗ್ರೊ, ಪೋಲೆಂಡ್, ರೊಮೇನಿಯಾ, ಸೆರ್ಬಿಯಾ, ಸ್ಲೋವಾಕಿಯಾ ಮತ್ತು ಸ್ಲೊವೇನಿಯಾ ಗಳನ್ನು ಒಳಗೊಂಡಿದೆ.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಅಂತರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ:


(International Atomic Energy Agency)

ಸಂದರ್ಭ:

ಇತ್ತೀಚೆಗೆ, ಇರಾನ್ ಸಂಸತ್ತಿನ ಸ್ಪೀಕರ್ ರವರು, ಟೆಹ್ರಾನ್ ಮತ್ತು ವಿಶ್ವಸಂಸ್ಥೆಯ ಪರಮಾಣು ಕಾವಲು ಸಂಸ್ಥೆಯಾದ ‘ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ’ (IAEA) ನಡುವಿನ ಮೂರು ತಿಂಗಳ ಮೇಲ್ವಿಚಾರಣಾ ಒಪ್ಪಂದದ ಅವಧಿ ಪೂರ್ಣಗೊಂಡಿದೆ ಮತ್ತು ಇದರೊಂದಿಗೆ ಇರಾನಿನ ಕೆಲವು ಪರಮಾಣು ತಾಣಗಳೊಳಗಿನ ಚಿತ್ರಗಳವರೆಗಿನ ಅದರ ಪ್ರವೇಶವು / ಮೇಲ್ವಿಚಾರಣೆಯೂ ಸಹ ಕೊನೆಗೊಳ್ಳುತ್ತದೆ.

ಈ ಪ್ರಕಟಣೆಯ ನಂತರ, 2015 ರ ಇರಾನ್ ಪರಮಾಣು ಒಪ್ಪಂದವನ್ನು ಪುನರುಜ್ಜೀವನಗೊಳಿಸಲು ಯುನೈಟೆಡ್ ಸ್ಟೇಟ್ಸ್ ಮತ್ತು ಇರಾನ್ ನಡುವೆ ನಡೆಯುತ್ತಿರುವ ಪರೋಕ್ಷ ಮಾತುಕತೆಗಳ ಭವಿಷ್ಯದ ಬಗ್ಗೆ ಹೆಚ್ಚಿನ ಪ್ರಶ್ನೆಗಳನ್ನು ಹುಟ್ಟುಹಾಕಿದೆ.

 

ಏನಿದು ಒಪ್ಪಂದ?

 1. ಫೆಬ್ರವರಿಯಲ್ಲಿ, ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಮತ್ತು ಟೆಹ್ರಾನ್ ನಡುವೆ ಮೂರು ತಿಂಗಳ ಮೇಲ್ವಿಚಾರಣಾ ಒಪ್ಪಂದಕ್ಕೆ ಸಹಿ ಹಾಕಲಾಯಿತು.
 2. ಇರಾನ್ ಏಜೆನ್ಸಿಯೊಂದಿಗಿನ ಸಹಕಾರವನ್ನು ಮೊಟಕುಗೊಳಿಸುವುದರಿಂದ ಉಂಟಾದ ಹಿನ್ನಡೆಗಳಿಗೆ ಪರಿಹಾರ ನೀಡುವುದು ಒಪ್ಪಂದದ ಉದ್ದೇಶವಾಗಿತ್ತು.
 3. ಒಪ್ಪಂದದ ಪ್ರಕಾರ, ಇರಾನ್‌ನ ಕೆಲವು ಚಟುವಟಿಕೆಗಳನ್ನು ಮೇಲ್ವಿಚಾರಣೆ ಮಾಡಲು ಏಜೆನ್ಸಿಗೆ ಅನುಮತಿ ನೀಡಲಾಯಿತು, ಹಾಗೆ ಮಾಡಲು ವಿಫಲವಾದರೆ ಈ ಚಟುವಟಿಕೆಗಳನ್ನು ನಿರ್ಬಂಧಿಸಬಹುದಿತ್ತು.

 

ಹಿನ್ನೆಲೆ:

ಏಪ್ರಿಲ್ ಮಧ್ಯಭಾಗದಿಂದ ಆಸ್ಟ್ರಿಯಾದ ವಿಯೆನ್ನಾದಲ್ಲಿ ಇರಾನ್ ಮತ್ತು ಜಾಗತಿಕ ಶಕ್ತಿಗಳ ನಡುವೆ ಹಲವಾರು ಸುತ್ತಿನ ಮಾತುಕತೆಗಳು ನಡೆದಿವೆ.

 1. ಇದರ ಅಡಿಯಲ್ಲಿ, ಪರಮಾಣು ಒಪ್ಪಂದದ ಸಂಪೂರ್ಣ ಅನುಸರಣೆಗೆ ಮರಳಲು ಟೆಹ್ರಾನ್ ಮತ್ತು ವಾಷಿಂಗ್ಟನ್ ನಿರ್ಬಂಧಗಳು ಮತ್ತು ಪರಮಾಣು ಚಟುವಟಿಕೆಗಳ ಬಗ್ಗೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಕಾರ್ಯನಿರ್ವಹಿಸುತ್ತಿವೆ.
 2. ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು 2018 ರಲ್ಲಿ ಒಪ್ಪಂದದಿಂದ ಅಮೆರಿಕವನ್ನು ಬೇರ್ಪಡಿಸಿ ಮತ್ತೆ ನಿರ್ಬಂಧಗಳನ್ನು ಜಾರಿಗೊಳಿಸಿದಾಗಿನಿಂದ ಇರಾನ್ ವಿಶ್ವ ಶಕ್ತಿಗಳೊಂದಿಗಿನ 2015 ರ ಒಪ್ಪಂದದ ನಿಯಮಗಳನ್ನು ನಿಧಾನವಾಗಿ ಉಲ್ಲಂಘಿಸಲು ಪ್ರಾರಂಭಿಸಿತು.

 

ಅಂತರರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ ಅಥವಾ ಇಂಧನ ಸಂಸ್ಥೆಯ (IAEA) ಕುರಿತು:

 1. ಅಂತರರಾಷ್ಟ್ರೀಯ ಪರಮಾಣು ಶಕ್ತಿ ಏಜೆನ್ಸಿಯನ್ನು 1957 ರಲ್ಲಿ ವಿಶ್ವಸಂಸ್ಥೆಯ ಕುಟುಂಬದಲ್ಲಿ ಒಂದಾಗಿ ‘ಜಾಗತಿಕ ಶಾಂತಿಗಾಗಿ ಪರಮಾಣು ಸಂಸ್ಥೆ’ ಎಂಬ ಸಂಘಟನೆಯಾಗಿ ಸ್ಥಾಪಿಸಲಾಯಿತು. ಇದೊಂದು ಅಂತರರಾಷ್ಟ್ರೀಯ ಸ್ವಾಯತ್ತ ಸಂಸ್ಥೆ ಯಾಗಿದೆ.
 2. ಜಗತ್ತಿನಲ್ಲಿ ಪರಮಾಣು ಶಕ್ತಿಯ ಶಾಂತಿಯುತ ಬಳಕೆಯನ್ನು ಖಚಿತಪಡಿಸಿಕೊಳ್ಳುವ ಗುರಿ ಹೊಂದಿದೆ. ಪರಮಾಣು ಶಕ್ತಿಯನ್ನು ಮಿಲಿಟರಿ ಬಳಕೆಯನ್ನು ಯಾವುದೇ ರೀತಿಯಲ್ಲಿ ತಡೆಯಲು ಅದು ಶ್ರಮಿಸುತ್ತದೆ.
 3. IAEA ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಮತ್ತು ಭದ್ರತಾ ಮಂಡಳಿ ಎರಡಕ್ಕೂ ವರದಿ ಮಾಡುತ್ತದೆ.
 4. ಪ್ರಧಾನ ಕಛೇರಿ ಆಸ್ಟ್ರಿಯಾದ ವಿಯನ್ನಾ ದಲ್ಲಿದೆ.

 

ಕಾರ್ಯಗಳು:

 1. ಪರಮಾಣು ತಂತ್ರಜ್ಞಾನಗಳ ಸುರಕ್ಷಿತ, ನಿರ್ಭೀತ ಮತ್ತು ಶಾಂತಿಯುತ ಬಳಕೆಯನ್ನು ಉತ್ತೇಜಿಸಲು IAEA ತನ್ನ ಸದಸ್ಯ ರಾಷ್ಟ್ರಗಳು ಮತ್ತು ವಿವಿಧ ಪಾಲುದಾರರೊಂದಿಗೆ ಕೆಲಸ ಮಾಡುತ್ತದೆ.
 2. ಪರಮಾಣು ಶಕ್ತಿಯ ಶಾಂತಿಯುತ ಬಳಕೆಯನ್ನು ಉತ್ತೇಜಿಸುವುದು ಮತ್ತು ಪರಮಾಣು ಶಸ್ತ್ರಾಸ್ತ್ರಗಳು ಸೇರಿದಂತೆ ಯಾವುದೇ ಮಿಲಿಟರಿ ಉದ್ದೇಶಕ್ಕಾಗಿ ಅದರ ಬಳಕೆಯನ್ನು ತಡೆಯುವುದು ಇದರ ಉದ್ದೇಶವಾಗಿದೆ.

 

ಆಡಳಿತ ಮಂಡಳಿ:

 1. 22 ಸದಸ್ಯ ರಾಷ್ಟ್ರಗಳು (ಪ್ರತಿಯೊಬ್ಬರಿಂದ ನಿರ್ಧರಿಸಲ್ಪಟ್ಟ ಭೌಗೋಳಿಕ ವೈವಿಧ್ಯತೆಯನ್ನು ಪ್ರತಿನಿಧಿಸುತ್ತವೆ) – ಸಾಮಾನ್ಯ ಸಮ್ಮೇಳನದ ಮೂಲಕ ಚುನಾವಣೆ (ಪ್ರತಿ ವರ್ಷ 11 ಸದಸ್ಯರು) – 2 ವರ್ಷಗಳ ಅವಧಿಗೆ ಆಯ್ಕೆ.
 2. ಕನಿಷ್ಠ 10 ಸದಸ್ಯ ರಾಷ್ಟ್ರಗಳು – ಹೊರಹೋಗುವ ಮಂಡಳಿಯಿಂದ ನಾಮನಿರ್ದೇಶನಗೊಳ್ಳುತ್ತವೆ.

 

IAEA ಪಾತ್ರಗಳು:

 1. IAEA, ಚಟುವಟಿಕೆಗಳು ಮತ್ತು ಬಜೆಟ್ ಕುರಿತು ಸಾಮಾನ್ಯ ಸಮಾವೇಶಕ್ಕೆ ಶಿಫಾರಸುಗಳನ್ನು ಮಾಡುತ್ತದೆ.
 2. IAEA, ಮಾನದಂಡಗಳನ್ನು ಪ್ರಕಟಿಸುವ ಜವಾಬ್ದಾರಿ ಹೊಂದಿದೆ.
 3. IAEA, ಸಂಸ್ಥೆಯ ಹೆಚ್ಚಿನ ನೀತಿಗಳ ಸೂತ್ರೀಕರಣ ಮಾಡುತ್ತದೆ.
 4. ಸಾಮಾನ್ಯ ಸಮ್ಮೇಳನದ ಅನುಮೋದನೆಯೊಂದಿಗೆ ಮಹಾನಿರ್ದೇಶಕರನ್ನು ನೇಮಿಸುತ್ತದೆ.

 

IAEA, ನಡೆಸುವ ಕಾರ್ಯಕ್ರಮಗಳು:

 1. ಕ್ಯಾನ್ಸರ್ ಥೆರಪಿಗಾಗಿ ಕ್ರಿಯಾ ಕಾರ್ಯಕ್ರಮ- (Program of Action for Cancer Therapy- PACT).
 2. ಮಾನವ ಆರೋಗ್ಯ ಕಾರ್ಯಕ್ರಮ.
 3. ನೀರಿನ ಲಭ್ಯತೆ ವರ್ಧನೆ ಯೋಜನೆ.
 4. ನವೀನ ಪರಮಾಣು ರಿಯಾಕ್ಟರ್‌ಗಳು ಮತ್ತು ಇಂಧನ ಚಕ್ರಗಳ ಕುರಿತಾದ ಅಂತರರಾಷ್ಟ್ರೀಯ ಯೋಜನೆ, 2000.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಕಾಂಗೋದ ಮೌಂಟ್ ನೈರಾಗೊಂಗೊ:

 1.  ಇತ್ತೀಚೆಗೆ, ಕಾಂಗೋದ ‘ಮೌಂಟ್ ನೈರಾಗೊಂಗೊ’ ಜ್ವಾಲಾಮುಖಿಯು ರಾತ್ರಿವೇಳೆಯಲ್ಲಿ ಸ್ಫೋಟಗೊಂಡಿದೆ, ಮತ್ತು ಸಾವಿರಾರು ಜನರು ಅದರಿಂದ ಭಯಭೀತರಾಗಿ ತಮ್ಮ ಮನೆಗಳನ್ನು ಬಿಟ್ಟು ಓಡಿಹೋಗಿದ್ದಾರೆ.
 2. ಮೌಂಟ್ ನೈರಾಗೊಂಗೊ ಆಲ್ಬರ್ಟೈನ್ ಬಿರುಕಿನೊಂದಿಗೆ (Albertine Rift) ಸಂಬಂಧಿಸಿದ ವಿರುಂಗಾ ಪರ್ವತಗಳಲ್ಲಿ 3,470 ಮೀಟರ್ ಎತ್ತರದಲ್ಲಿನ ಸಕ್ರಿಯ ಸ್ಟ್ರಾಟೊ ಜ್ವಾಲಾಮುಖಿ (stratovolcano)ಆಗಿದೆ.
 3. ಈ ಜ್ವಾಲಾಮುಖಿ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ವಿರುಂಗಾ ರಾಷ್ಟ್ರೀಯ ಉದ್ಯಾನವನದಲ್ಲಿದೆ.
 4. ಆಫ್ರಿಕಾದಲ್ಲಿನ 40 ಪ್ರತಿಶತದಷ್ಟು ಐತಿಹಾಸಿಕ ಜ್ವಾಲಾಮುಖಿ ಸ್ಫೋಟಗಳಿಗೆ ನೈರಾಗೊಂಗೊ ಮತ್ತು ಅದರ ಪಕ್ಕದ ‘ನ್ಯಾಮುರಗೀರಾ’ ಒಟ್ಟಾಗಿ ಕಾರಣವಾಗಿವೆ.

ಕೇರಳದ ರೈತ ಭಾರತ ಜೀವವೈವಿಧ್ಯ ಪ್ರಶಸ್ತಿ 2021 ಅನ್ನು ಪಡೆದಿದ್ದಾರೆ:

ಇತ್ತೀಚೆಗೆ, ಕೇರಳದ ರೈತ ಶಾಜಿ ಎನ್‌.ಎಂ ಅವರಿಗೆ ‘ಸಾಕು ಪ್ರಾಣಿಗಳ ಸಂರಕ್ಷಣೆ’ ಎಂಬ ವೈಯಕ್ತಿಕ ವಿಭಾಗದಲ್ಲಿ ಭಾರತ ಜೀವವೈವಿಧ್ಯ ಪ್ರಶಸ್ತಿ’ 2021 ನೀಡಲಾಗಿದೆ. ಶಾಜಿ ಎನ್.ಎಂ. ಇವರನ್ನು ಕೇರಳದ ಟ್ಯೂಬರ್ ಮ್ಯಾನ್’(Tuber Man) ಎಂದು ಪ್ರೀತಿಯಿಂದ ಕರೆಯಲಾಗುತ್ತದೆ.

 1. ದೊಡ್ಡ ಅರೇಬಿಕ್ (Yam), ಸಣ್ಣ ಅರೇಬಿಕ್, Up, ಆನೆಕಾಲು ಯಾಮ್, ಬಾಣದ ರೂಟ್, ಕೊಲೊಕಾಸಿಯ ಸಿಹಿ ಆಲೂಗಡ್ಡೆ, ಕಸಾವ ಮತ್ತು ಚೀನೀ ಆಲೂಗಡ್ಡೆ ಸೇರಿದಂತೆ ಸುಮಾರು 200 ಟ್ಯೂಬರ್ ಬೆಳೆಗಳನ್ನು(tuber crops) ಶಾಜಿ ಎನ್.ಎಂ ರವರು ಸಂರಕ್ಷಿಸಿದ್ದಾರೆ.
 2. ನವದೆಹಲಿಯ PPV&FR ಪ್ರಾಧಿಕಾರವು ಸ್ಥಾಪಿಸಿದ ‘ಪ್ಲಾಂಟ್ ಜೀನೋಮ್ ಸೇವಿಯರ್ ರಿವಾರ್ಡ್’ 2015 ಸೇರಿದಂತೆ ಹಲವಾರು ರಾಜ್ಯ ಪ್ರಶಸ್ತಿಗಳನ್ನು ಅವರು ಪಡೆದಿದ್ದಾರೆ.

ಭಾರತ ಜೀವವೈವಿಧ್ಯ ಪ್ರಶಸ್ತಿ’ ಬಗ್ಗೆ:

 1. ಜೀವವೈವಿಧ್ಯ ಸಂರಕ್ಷಣೆ, ಸುಸ್ಥಿರ ಬಳಕೆ ಮತ್ತು ಆಡಳಿತದ ತಳಮಟ್ಟದ ಮಾದರಿಗಳನ್ನು ಗುರುತಿಸಲು ಮತ್ತು ಗೌರವಿಸಲು ಭಾರತ ಸರ್ಕಾರವು, UNDP ಭಾರತದ ಸಹಭಾಗಿತ್ವದಲ್ಲಿ 2012 ರಲ್ಲಿ ಭಾರತ ಜೀವವೈವಿಧ್ಯ ಪ್ರಶಸ್ತಿಯನ್ನು ಪ್ರಾರಂಭಿಸಿತು.
 2. ಪ್ರಶಸ್ತಿಯು ₹ 2 ಲಕ್ಷ ನಗದು ಬಹುಮಾನ ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ.

ಗಲ್ವಾನ್ ಕಣಿವೆ:

 ಮೇ ಮೊದಲ ವಾರದಲ್ಲಿ, ಪೂರ್ವ ಲಡಾಖ್‌ನ ಗಾಲ್ವಾನ್ ಕಣಿವೆಯ ‘ಗಸ್ತು ನಿಷಿದ್ಧ ವಲಯ’ದಲ್ಲಿ ಭಾರತೀಯ ಮತ್ತು ಚೀನಾದ ಸೈನಿಕರ ನಡುವೆ ಸಣ್ಣಪುಟ್ಟ ಮಾತಿನ ಚಕಮಕಿ ನಡೆದಿದೆ.

ಹಿನ್ನೆಲೆ:

ಜೂನ್ 15, 2020 ರಂದು, 20 ಭಾರತೀಯ ಸೈನಿಕರು ಚೀನಾದೊಂದಿಗಿನ ಮುಖಾಮುಖಿ ಸಂಘರ್ಷದಲ್ಲಿ ಹುತಾತ್ಮರಾದ ನಂತರ, ಗಾಲ್ವಾನ್ ಕಣಿವೆಯ ವೈ-ಜಂಕ್ಷನ್ (Y-junction) ಬಳಿ ಘರ್ಷಣೆ ನಡೆದ ಸ್ಥಳದ ಎರಡೂ ಬದಿಯಲ್ಲಿ ಸುಮಾರು 1.5 ಕಿ.ಮೀ. 3 ಕಿಮೀ ವರಗೆ ನೋ-ಪೆಟ್ರೋಲಿಂಗ್ ವಲಯ ‘ರಚಿಸಲಾಗಿದೆ. ಇದರ ನಂತರ, ಈ ಪ್ರದೇಶದಲ್ಲಿ ‘ಕಾಲು ಗಸ್ತು’ ತಿರುಗಲು 30 ದಿನಗಳ ವಿರಾಮವನ್ನು ಸಹ ಜಾರಿಗೆ ತರಲಾಯಿತು. ಈ ವಿರಾಮ ಅಥವಾ ನಿಷೇಧವನ್ನು ವಿಸ್ತರಿಸಲಾಗಿದೆಯೇ ಎಂಬ ಕುರಿತು ತಿಳಿದಿಲ್ಲ.

ಗಲ್ವಾನ್ ಕಣಿವೆ ಎಲ್ಲಿದೆ?

 1.  ಗಾಲ್ವಾನ್ ವ್ಯಾಲಿ ಪ್ರದೇಶವು ಲಡಾಖ್ ಮತ್ತು ಅಕ್ಸಾಯ್ ಚೀನಾ ನಡುವಿನ ಇಂಡೋ-ಚೀನಾ ಗಡಿಗೆ ಹತ್ತಿರದಲ್ಲಿದೆ. ಈ ಪ್ರದೇಶದಲ್ಲಿ, ಅಕ್ಸೈನ ವಾಸ್ತವ ನಿಯಂತ್ರಣ ರೇಖೆ ಚೀನಾವನ್ನು ಭಾರತದಿಂದ ವಿಭಜಿಸುತ್ತದೆ.
 2. ಗಾಲ್ವಾನ್ ನದಿಯ ಮೂಲವು ನಿಯಂತ್ರಣ ಗಡಿಯುದ್ದಕ್ಕೂ ಚೀನಾದ ಕಡೆಗೆ ಇರುವ ಅಕ್ಸಾಯ್ ಚಿನ್‌ನಲ್ಲಿದೆ ಮತ್ತು ಪೂರ್ವಕ್ಕೆ ಲಡಾಖ್‌ಗೆ ಹರಿಯುತ್ತದೆ, ಮತ್ತು ಇದು ನಿಯಂತ್ರಣ ಗಡಿಯನ್ನು ದಾಟಿ ಭಾರತದ ಕಡೆಗೆ ಇರುವ ಶಿಯೋಕ್ ನದಿಯನ್ನು  ಸೇರುತ್ತದೆ.
 3. ಗಾಲ್ವಾನ್ ಕಣಿವೆ ಪಶ್ಚಿಮದಲ್ಲಿ ಲಡಾಖ್ ಮತ್ತು ಪೂರ್ವದಲ್ಲಿ ಅಕ್ಸಾಯ್ ಚಿನ್ ನಡುವೆ ಇದೆ (ಪ್ರಸ್ತುತ ಚೀನಾದಿಂದ ನಿಯಂತ್ರಿಸಲ್ಪಡುತ್ತದೆ).
 4. ಅದರ ಪಶ್ಚಿಮ ತುದಿಯಲ್ಲಿ ಶ್ಯೋಕ್ ನದಿ ಮತ್ತು ದಾರ್ಬುಕ್-ಶ್ಯೋಕ್-ದೌಲತ್ ಬೇಗ್ ಓಲ್ಡಿ’ (DSDBO) ರಸ್ತೆ ಇದೆ.

galwan_valley

 ಬ್ರಿಕ್ಸ್ ನ ಖಗೋಳವಿಜ್ಞಾನ ಕಾರ್ಯನಿರತ ಗುಂಪು (BAWG):

ಸಂದರ್ಭ:

ಇತ್ತೀಚೆಗೆ, ವಿಜ್ಞಾನ, ತಂತ್ರಜ್ಞಾನ ಮತ್ತು ನಾವೀನ್ಯತೆಯ ದಿಕ್ಕಿನಲ್ಲಿ ಬ್ರಿಕ್ಸ್ 2021 ಕುರಿತ ಬ್ರಿಕ್ಸ್ ಖಗೋಳವಿಜ್ಞಾನ ಕಾರ್ಯನಿರತ ಗುಂಪಿನ (BRICS Astronomy Working Group- BAWG) 7 ನೇ ಸಭೆಯನ್ನು ಭಾರತ ವರ್ಚುವಲ್ ರೂಪದಲ್ಲಿ ಆಯೋಜಿಸಿತ್ತು.

BAWG ಬಗ್ಗೆ:

 1. ಬ್ರಿಕ್ಸ್ ಖಗೋಳವಿಜ್ಞಾನ ಕಾರ್ಯನಿರತ ಗುಂಪು (BAWG) ಬ್ರಿಕ್ಸ್ ಸದಸ್ಯ ರಾಷ್ಟ್ರಗಳಿಗೆ ಖಗೋಳವಿಜ್ಞಾನ ಕ್ಷೇತ್ರದಲ್ಲಿ ಸಹಕರಿಸಲು ಒಂದು ವೇದಿಕೆಯನ್ನು ಒದಗಿಸುತ್ತದೆ.
 2. ಪ್ರತಿ ದೇಶವು ನಡೆಸುತ್ತಿರುವ ವೈಜ್ಞಾನಿಕ ಕಾರ್ಯಗಳ ವೈಜ್ಞಾನಿಕ ಫಲಿತಾಂಶಗಳನ್ನು ಪ್ರಸ್ತುತಪಡಿಸಬೇಕು ಎಂದು ಅದು ಶಿಫಾರಸು ಮಾಡುತ್ತದೆ.
 3. ಪರಿಣಾಮವಾಗಿ, ಬ್ರಿಕ್ಸ್ ಧನಸಹಾಯ ಸಂಸ್ಥೆಗಳು ಧನಸಹಾಯದ ಅವಕಾಶಗಳನ್ನು ಘೋಷಿಸಿದಾಗಲೆಲ್ಲಾ, ಪ್ರಮುಖ ಯೋಜನೆಯನ್ನು ಪ್ರಾರಂಭಿಸಲು ಹಣಕಾಸಿನ ಬೆಂಬಲವನ್ನು ಪಡೆಯಲು ಇದು ಸಹಾಯಕವಾಗಿರುತ್ತದೆ.

ಸಭೆಯ ಫಲಿತಾಂಶಗಳು:

ಬ್ರಿಕ್ಸ್ ದೇಶಗಳ ಖಗೋಳಶಾಸ್ತ್ರಜ್ಞರಲ್ಲಿ ಸಹಕಾರವನ್ನು ಹೆಚ್ಚಿಸುವ ಮಹತ್ವವನ್ನು BAWG ಒಪ್ಪಿಕೊಂಡಿದೆ ಮತ್ತು ಸದಸ್ಯ ರಾಷ್ಟ್ರಗಳಲ್ಲಿ ದೂರದರ್ಶಕದ ನೆಟ್‌ವರ್ಕಿಂಗ್ ಮತ್ತು ಪ್ರಾದೇಶಿಕ ದತ್ತಾಂಶ ಜಾಲವನ್ನು ರಚಿಸಲು ಶಿಫಾರಸು ಮಾಡಿದೆ.


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos