Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 19ನೇ ಮೇ 2021

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಸಂವಿಧಾನದ 311 ನೇ ವಿಧಿ.

2. ಹೃದ್ರೋಗದಿಂದ ಸಾವುಗಳ ಹೆಚ್ಚಳಕ್ಕೆ ಕಾರಣವಾದ ದೀರ್ಘ ಕೆಲಸದ ಸಮಯ : ವರದಿ.

3. ಚುನಾವಣಾ ಬಾಂಡ್‌ಗಳು.

4. ಇಸ್ರೇಲ್ ಪ್ಯಾಲೆಸ್ಟೈನ್ ಸಂಘರ್ಷ.

5. ಆರ್ಕ್ಟಿಕ್‌ನ ಮಿಲಿಟರೀಕರಣಕ್ಕೆ ಅಮೇರಿಕಾದ ವಿರೋಧ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಹಿಮ ಚಿರತೆ ಕುರಿತ WWF ನ ವರದಿ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನ 2021.

2. ಸುದ್ದಿ ಪ್ರದರ್ಶನ.

3. ಕೊಲಂಬೊ ಪೋರ್ಟ್ ಸಿಟಿ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು:ಭಾರತೀಯ ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

ಸಂವಿಧಾನದ 311 ನೇ ವಿಧಿ:


ಸಂದರ್ಭ:

ಸೇವೆಯಿಂದ ಅಮಾನತುಗೊಂಡಿದ್ದ ಮಹಾರಾಷ್ಟ್ರ ಪೊಲೀಸ್ ಅಧಿಕಾರಿಯನ್ನು ಮುಂಬೈ ಪೊಲೀಸ್ ಆಯುಕ್ತರು ಭಾರತೀಯ ಸಂವಿಧಾನದ 311 (2) (ಬಿ) ಉಪವಿಧಿಯ ಅಡಿಯಲ್ಲಿ ಇಲಾಖಾ ವಿಚಾರಣೆಯಿಲ್ಲದೆ ಸೇವೆಯಿಂದ ವಜಾಗೊಳಿಸಿದ್ದಾರೆ.

 

ಸಾರ್ವಜನಿಕ ಸೇವಕರಿಗೆ ಇರುವ ಸುರಕ್ಷತೆಗಳು:

ವಿಧಿ 311 (1) ರ ಪ್ರಕಾರ: ಯಾವುದೇ ನಾಗರಿಕ ಸೇವಕನನ್ನು ನೇಮಕ ಮಾಡಿದ ಪ್ರಾಧಿಕಾರಕ್ಕೆ ಅಧೀನವಾಗಿರುವ ಯಾವುದೇ ಪ್ರಾಧಿಕಾರದಿಂದ ಅವರನ್ನು ವಜಾಗೊಳಿಸಲು ಅಥವಾ ತೆಗೆದುಹಾಕಲು ಸಾಧ್ಯವಿಲ್ಲ.

ವಿಧಿ 311 (2) ರ ಪ್ರಕಾರ: ನಾಗರಿಕ ಸೇವಕನೊಬ್ಬ ತನ್ನ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಅವನ ವಿರುದ್ಧ ತೆಗೆದುಕೊಳ್ಳಲು ಉದ್ದೇಶಿಸಿರುವ ಕ್ರಮಗಳ ವಿರುದ್ಧ ವಿಚಾರಣೆಯ ಕುರಿತು ಸಮಂಜಸವಾದ ಅವಕಾಶವನ್ನು ನೀಡದ ಹೊರತು ಅವರನ್ನು ಕಚೇರಿಯಿಂದ ತೆಗೆದುಹಾಕಲಾಗುವುದಿಲ್ಲ ಅಥವಾ ವಜಾಗೊಳಿಸಲಾಗುವುದಿಲ್ಲ ಅಥವಾ ಅವರ ಶ್ರೇಣಿಯಲ್ಲಿ ಕಡಿತ ಮಾಡಲು ಸಾಧ್ಯವಿಲ್ಲ.

 

ಸಂವಿಧಾನದ 311 ನೇ ವಿಧಿಯ ಅಡಿಯಲ್ಲಿ ಸುರಕ್ಷತೆಗಳು:

ಆರ್ಟಿಕಲ್ 311 ನಾಗರಿಕ ಸೇವಕರಿಗೆ ಸುರಕ್ಷತೆಯ ಗುರಾಣಿಯಾಗಿ ಕಾರ್ಯನಿರ್ವಹಿಸಲು ಉದ್ದೇಶಿಸಿದೆ, ಅದು ವಿಚಾರಣೆಯ ಸಮಯದಲ್ಲಿ ಆರೋಪಗಳಿಗೆ ಪ್ರತಿಕ್ರಿಯೆಯನ್ನು ನೀಡಲು ಅವಕಾಶವನ್ನು ನೀಡುತ್ತದೆ, ಇದರಿಂದ ಅವನು ಅಥವಾ ಅವಳನ್ನು ನಿರಂಕುಶವಾಗಿ ಅಥವಾ ಏಕಪಕ್ಷೀಯವಾಗಿ ಸೇವೆಯಿಂದ ವಜಾಗೊಳಿಸಲಾಗುವುದಿಲ್ಲ. ಅಥವಾ ವಿಚಾರಣೆಯ ಕುರಿತು ಸಮಂಜಸವಾದ ಅವಕಾಶವನ್ನು ನೀಡದ ಹೊರತು ಅವರನ್ನು ಕಚೇರಿಯಿಂದ ವಜಾಗೊಳಿಸಲಾಗುವುದಿಲ್ಲ ಎಂಬ ಸುರಕ್ಷತೆಯನ್ನು ಖಾತರಿಪಡಿಸುತ್ತದೆ. ಆದರೆ,

ಸಂವಿಧಾನದ 311 (2) (ಬಿ) ಉಪವಿಧಿಯ ಅಡಿಯಲ್ಲಿ ಈ ಸುರಕ್ಷತೆಗಳಿಗೆ ವಿನಾಯಿತಿ(exceptions)ಗಳನ್ನು ನೀಡಲಾಗಿದೆ.

ಅದು ಹೀಗೆ ಹೇಳುತ್ತದೆ, “ನಾಗರಿಕ ಸೇವೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಯನ್ನು ವಜಾಗೊಳಿಸುವುದು ಅಥವಾ ತೆಗೆದುಹಾಕುವುದು ಅಥವಾ ಆ ವ್ಯಕ್ತಿಯ ಸೇವಾ ಶ್ರೇಣಿಯಲ್ಲಿ ಕಡಿತಗೊಳಿಸುವ ಅಧಿಕಾರ ಹೊಂದಿರುವ ನಿರ್ದಿಷ್ಟ ಪ್ರಾಧಿಕಾರವು ಕೆಲವು ಕಾರಣಗಳಿಂದ ವಜಾಗೊಳಿಸುವಿಕೆಯ ನಿರ್ಧಾರವು ಸಮಂಜಸವಾಗಿದೆ ಎಂದು ತೃಪ್ತಿಪಟ್ಟರೆ ತನ್ನ ನಿರ್ಧಾರವನ್ನು ಆ ಪ್ರಾಧಿಕಾರವು ಲಿಖಿತವಾಗಿ ದಾಖಲಿಸಬೇಕು ಮತ್ತು ಅಂತಹ ವಿಚಾರಣೆಯನ್ನು ನಡೆಸುವುದು ಸಮಂಜಸವಾಗಿ ಪ್ರಾಯೋಗಿಕವಲ್ಲ” ಎಂದು ಹೇಳುತ್ತದೆ ಅಥವಾ ಆರೋಪಿತ ನಾಗರಿಕ ಸೇವಕನ ವಿರುದ್ಧದ ಆರೋಪಗಳ ಕುರಿತು ವಿಚಾರಣೆ ನಡೆಸುವುದನ್ನು ಬಿಟ್ಟುಬಿಡಬಹುದು ಎಂದು ಹೇಳುತ್ತದೆ.

 

ಸೆಕ್ಷನ್ 311 (2) ರ ಅಡಿಯಲ್ಲಿ ವಜಾಗೊಳಿಸುವಿಕೆಯ ನಿರ್ಧಾರವನ್ನು ಸರ್ಕಾರಿ ನೌಕರನು ಪ್ರಶ್ನಿಸಬಹುದೇ?

ಹೌದು, ಈ ನಿಬಂಧನೆಗಳ ಅಡಿಯಲ್ಲಿ ವಜಾಗೊಳಿಸಲಾದ ಸರ್ಕಾರಿ ನೌಕರನು ರಾಜ್ಯ ಆಡಳಿತ ನ್ಯಾಯಮಂಡಳಿ ಅಥವಾ ಕೇಂದ್ರ ಆಡಳಿತ ನ್ಯಾಯಮಂಡಳಿ (CAT) ಅಥವಾ ನ್ಯಾಯಾಲಯಗಳಲ್ಲಿ ಈ ವಜಾಗೊಳಿಸುವಿಕೆಯ ನಿರ್ಧಾರದ ವಿರುದ್ಧ ಮೇಲ್ಮನವಿ ಸಲ್ಲಿಸುವ ಮೂಲಕ ಪ್ರಶ್ನಿಸಬಹುದು.

 

ವಿಷಯಗಳು: ಆಡಳಿತ, ಪಾರದರ್ಶಕತೆ ಮತ್ತು ಹೊಣೆಗಾರಿಕೆ, ಇ-ಆಡಳಿತ – ಅನ್ವಯಗಳು, ಮಾದರಿಗಳು, ಯಶಸ್ಸುಗಳು, ಮಿತಿಗಳು ಮತ್ತು ಭವಿಷ್ಯದ ಪ್ರಮುಖ ಅಂಶಗಳು; ನಾಗರಿಕರ ಚಾರ್ಟರ್, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಮತ್ತು ಸಾಂಸ್ಥಿಕ ಮತ್ತು ಇತರ ಕ್ರಮಗಳು.

ಚುನಾವಣಾ ಬಾಂಡುಗಳು:


ಸಂದರ್ಭ:

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಏಪ್ರಿಲ್ 1 ರಿಂದ 10 ರವರೆಗೆ ₹ 695.34 ಕೋಟಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡಿತು, ಆ ಸಮಯದಲ್ಲಿ ತಮಿಳುನಾಡು, ಪುದುಚೇರಿ, ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ಕೇರಳ ವಿಧಾನಸಭೆಗಳಿಗೆ ಚುನಾವಣೆಯು ಭರದಿಂದ ಸಾಗಿತ್ತು.

 

2018 ರಲ್ಲಿ ಯೋಜನೆ ಪ್ರಾರಂಭವಾದಾಗಿನಿಂದ ಯಾವುದೇ ವಿಧಾನಸಭೆ ಚುನಾವಣೆಗಳಲ್ಲಿ ಮಾರಾಟವಾದ ಅತಿಹೆಚ್ಚಿನ ಮೊತ್ತವಾಗಿದೆ.

ಚುನಾವಣಾ ಬಾಂಡುಗಳು ಎಂದರೇನು?

 1. ಈ ಯೋಜನೆಯನ್ನು 2017 ರ ಕೇಂದ್ರ ಬಜೆಟ್ ನಲ್ಲಿ ಘೋಷಿಸಲಾಯಿತು. ಚುನಾವಣಾ ಬಾಂಡ್ (electoral bond) ಯೋಜನೆಯು ಬಡ್ಡಿರಹಿತ ಧಾರಕ ಹಣವನ್ನು (Interest-Free Bearer Instrument) ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ದೇಣಿಗೆ ನೀಡುವ ಆರ್ಥಿಕ ಸಾಧನವಾಗಿದೆ ಅಥವಾ ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ಹಣ ಒದಗಿಸಲು ಬಳಸುವ ಬಡ್ಡಿರಹಿತ ವಿಶೇಷ ಪಾವತಿ ಸಾಧನಗಳಾಗಿವೆ.
 2. ಬಾಂಡ್ ಗಳ ರೂಪದಲ್ಲಿ ಆರ್ಥಿಕ ಸಹಾಯ ಪಡೆಯುವವರನ್ನು (ಮುಖ್ಯವಾಗಿ ರಾಜಕೀಯ ಪಕ್ಷ) ಅದರ ಮಾಲೀಕರು ಎಂದು ಭಾವಿಸಲಾಗುತ್ತದೆ.
 3. ಈ ಬಾಂಡ್‌ಗಳಿಗೆ 1,000 ರೂ, 10,000 ರೂ, 1 ಲಕ್ಷ, 10 ಲಕ್ಷ ಮತ್ತು 1 ಕೋಟಿ ರೂ.ಗಳಂತೆ ದ್ವಿಗುಣ ರೂಪದಲ್ಲಿ ನೀಡಲಾಗುತ್ತದೆ ಮತ್ತು ಇದಕ್ಕಾಗಿ ಗರಿಷ್ಠ ಮಿತಿಯನ್ನು ನಿಗದಿಪಡಿಸಲಾಗಿಲ್ಲ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ (SBI) ಮಾತ್ರ ಈ ಬಾಂಡ್ ಗಳನ್ನು ಮಾರಾಟ ಮಾಡಲು ಅಧಿಕಾರ ಹೊಂದಿರುವ ಏಕೈಕ ಬ್ಯಾಂಕ್ ಆಗಿದೆ.
 4. ಈ ಬಾಂಡ್‌ಗಳನ್ನು ವಿತರಿಸಲು ಮತ್ತು ಎನ್ ಕ್ಯಾಶ್ ಮಾಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಅಧಿಕಾರ ನೀಡಲಾಗಿದೆ.ಈ ಬಾಂಡ್‌ಗಳು ವಿತರಣೆಯ ದಿನಾಂಕದಿಂದ ಹದಿನೈದು ದಿನಗಳವರೆಗೆ ಮಾನ್ಯವಾಗಿರುತ್ತವೆ.
 5. ದಾನಿಗಳು ಈ ಬಾಂಡ್ ಗಳನ್ನು ಖರೀದಿಸಿ ರಾಜಕೀಯ ಪಕ್ಷಗಳಿಗೆ ದಾನ ಮಾಡಬಹುದು ಮತ್ತು ದಾನವಾಗಿ ಪಡೆದ ರಾಜಕೀಯ ಪಕ್ಷವು ಅದರ ಅಧಿಕೃತ/ಗೊತ್ತುಪಡಿಸಿದ ಖಾತೆಯ ಮೂಲಕ 15 ದಿನಗಳೊಳಗೆ ಎನ್ ಕ್ಯಾಶ್ ಮಾಡಿಕೊಳ್ಳಬಹುದು ಅಥವಾ ಈ ಬಾಂಡ್‌ಗಳನ್ನು ನಗದೀಕರಿಸಿ ಕೊಳ್ಳಬಹುದಾಗಿದೆ.
 6. ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯು ಎಷ್ಟು ಬೇಕಾದರೂ ಬಾಂಡ್ ಗಳನ್ನು ಖರೀದಿಸಬಹುದು ಇದಕ್ಕೆ ಯಾವುದೇ ಮಿತಿಯಿಲ್ಲ.
 7. ಒಂದು ವೇಳೆ ರಾಜಕೀಯ ಪಕ್ಷವೂ 15 ದಿನಗಳೊಳಗಾಗಿ ಈ ಬಾಂಡುಗಳನ್ನು ನಗದೀಕರಿಸಿ ಕೊಳ್ಳದಿದ್ದರೆ ಭಾರತೀಯ ಸ್ಟೇಟ್ ಬ್ಯಾಂಕ್ ಇವುಗಳನ್ನು ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ಜಮೆ ಮಾಡುತ್ತದೆ.
 8. ಬಾಂಡ್‌ಗಳಲ್ಲಿ ದಾನಿಗಳ ಹೆಸರನ್ನಾಗಲಿ ಪಡೆಯುವವರ ಹೆಸರನ್ನಾಗಲಿ ಉಲ್ಲೇಖಿಸಲಾಗುವ ದಿಲ್ಲ.

 

ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ಹೃದ್ರೋಗದಿಂದ ಸಾವುಗಳ ಹೆಚ್ಚಳಕ್ಕೆ ಕಾರಣವಾದ ದೀರ್ಘ ಕೆಲಸದ ಸಮಯ : ವರದಿ:


(Long working hours are increasing deaths from heart disease: Report)

ಸಂದರ್ಭ:

ಇತ್ತೀಚೆಗೆ, ವಿಶ್ವ ಆರೋಗ್ಯ ಸಂಸ್ಥೆ (WHO) ಮತ್ತು ಅಂತರರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ಗಳು ದೀರ್ಘಾವಧಿಯ ಕೆಲಸ ಮತ್ತು ಅದರ ಪರಿಣಾಮಗಳ ಕುರಿತು ವರದಿಯನ್ನು ಪ್ರಕಟಿಸಿವೆ.

 

ವರದಿಯ ಪ್ರಮುಖ ಆವಿಷ್ಕಾರಗಳು:

 1. ವಾರಕ್ಕೆ 55 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕೆಲಸ ಮಾಡುವುದು ಆರೋಗ್ಯಕ್ಕೆ ಮಾರಕವಾಗಿದೆ.
 2. 2016 ರಲ್ಲಿ, ಅತಿಯಾದ ಕೆಲಸದ ಸಮಯದಿಂದಾಗಿ, ಪಾರ್ಶುವಾಯು ಮತ್ತು ರಕ್ತಕೊರತೆಯ ಹೃದಯ ಕಾಯಿಲೆ (Ischemic Heart Disease) ಗಳಿಂದ 745,000 ಸಾವುಗಳು ಸಂಭವಿಸಿವೆ, ಇದು 2000ನೇ ವರ್ಷದಿಂದ 29% ರಷ್ಟು ಹೆಚ್ಚಾಗಿದೆ.
 3. ಅಧ್ಯಯನದ ಆವಿಷ್ಕಾರಗಳ ಪ್ರಕಾರ, ವಾರಕ್ಕೆ 55 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕೆಲಸ ಮಾಡುವವರು ವಾರಕ್ಕೆ 35-40 ಗಂಟೆಗಳ ಕಾಲ ಕೆಲಸ ಮಾಡುವವರಿಗಿಂತ ಹೃದಯಾಘಾತದಿಂದ ಅಂದರೆ ಇಸ್ಕೆಮಿಕ್ ಹೃದಯ ಕಾಯಿಲೆಯಿಂದ ಸಾಯುವ ಸಾಧ್ಯತೆ 17% ಹೆಚ್ಚಾಗಿದ್ದರೆ, ಪಾರ್ಶ್ವವಾಯು ಪೀಡಿತರಾಗುವ ಸಾಧ್ಯತೆ ಶೇಕಡ 35 ರಷ್ಟು ಹೆಚ್ಚು ಎಂದು ತಿಳಿದುಬಂದಿದೆ.

 

ಹೆಚ್ಚು ದುರ್ಬಲ ಗುಂಪುಗಳು:

 1.  ಪಶ್ಚಿಮ ಪೆಸಿಫಿಕ್ ಮತ್ತು ಆಗ್ನೇಯ ಏಷ್ಯಾ ಪ್ರದೇಶಗಳಲ್ಲಿ ವಾಸಿಸುವ ಜನರು, ಮತ್ತು ಮಧ್ಯವಯಸ್ಕ ಅಥವಾ ವಯಸ್ಸಾದ ಕಾರ್ಮಿಕರು, ವಿಶೇಷವಾಗಿ ಪುರುಷರು (ಸುಮಾರು 72% ಪುರುಷರಲ್ಲಿ ಸಾವು) ಕೆಲಸ-ಸಂಬಂಧಿತ ಕಾಯಿಲೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ.
 2. ವರದಿಯ ಪ್ರಕಾರ, 60-79 ವರ್ಷ ವಯಸ್ಸಿನವರಲ್ಲಿ ಅತಿ ಹೆಚ್ಚು ಸಾವುಗಳು ದಾಖಲಾಗಿವೆ. ವಾರಕ್ಕೆ 55 ಗಂಟೆ ಅಥವಾ ಅದಕ್ಕಿಂತ ಹೆಚ್ಚು ಕಾಲ ಕೆಲಸ ಮಾಡಿದವರ ಸಂಖ್ಯೆ 45 ರಿಂದ 74 ವರ್ಷ ವಯಸ್ಸಿನವರಾಗಿತ್ತು.

 

ಮುಂದಿನ ಕಾಳಜಿಗಳು:

 1. ದೀರ್ಘಕಾಲ ಕೆಲಸ ಮಾಡುವುದನ್ನು ಪ್ರಸ್ತುತ ಕೆಲಸ-ಸಂಬಂಧಿತ ಕಾಯಿಲೆಗಳ ಒಟ್ಟು ಅಂದಾಜು ಹೊರೆಯ ಮೂರನೇ ಒಂದು ಭಾಗದಷ್ಟು ಎಂದು ಪರಿಗಣಿಸಲಾಗಿದೆ ಮತ್ತು ಔದ್ಯೋಗಿಕ ಕಾಯಿಲೆ-ಸಂಬಂಧಿತ ಅಪಾಯಗಳ ಅತಿದೊಡ್ಡ ಮುನ್ಸೂಚಕ ಎಂದು ದೀರ್ಘಾವಧಿಯ ಕೆಲಸವನ್ನು ತೋರಿಸಲಾಗಿದೆ.
 2. ಈ ಕಾರಣದಿಂದಾಗಿ, ಆಲೋಚನೆಯ ದಿಕ್ಕುನ್ನು ತುಲನಾತ್ಮಕವಾಗಿ ಆರೋಗ್ಯಕ್ಕೆ ಹೊಸ ಮತ್ತು ಹೆಚ್ಚು ಮಾನಸಿಕ-ಸಾಮಾಜಿಕ ಉದ್ಯೋಗದ ಅಪಾಯಗಳ ಅಂಶದ ಕಡೆಗೆ ವರ್ಗಾಯಿಸಿದೆ.
 3. ಇದಲ್ಲದೆ, ದೀರ್ಘಕಾಲ ಕೆಲಸ ಮಾಡುವ ಜನರ ಸಂಖ್ಯೆ ಹೆಚ್ಚುತ್ತಿದೆ ಮತ್ತು ಈಗ ಅದು ಜಾಗತಿಕವಾಗಿ ಒಟ್ಟು ಜನಸಂಖ್ಯೆಯ 9% ಆಗಿದೆ. ಈ ಪ್ರವೃತ್ತಿಯು ಹೆಚ್ಚಿನ ಜನರನ್ನು ಕೆಲಸ-ಸಂಬಂಧಿತ ಅಂಗವೈಕಲ್ಯ ಮತ್ತು ಅಕಾಲಿಕ ಮರಣದ ಅಪಾಯಕ್ಕೆ ದೂಡುತ್ತಿದೆ.

 

ಸಾಂಕ್ರಾಮಿಕದ ಪರಿಣಾಮ:

 1. ಪ್ರಸ್ತುತ ನಡೆಯುತ್ತಿರುವ ಸಾಂಕ್ರಾಮಿಕವು  ಅಭಿವೃದ್ಧಿಯ ಓಟವನ್ನು ವೇಗ ಗೊಳಿಸುತ್ತಿದೆ, ಇದು ದೀರ್ಘಾವಧಿಯ ಕೆಲಸದ ಪ್ರವೃತ್ತಿಯನ್ನು ಪೋಷಸುತ್ತಿದೆ.
 2. ಟೆಲಿ-ವರ್ಕಿಂಗ್ ಅನೇಕ ಕೈಗಾರಿಕೆಗಳಲ್ಲಿ ಸಾಮಾನ್ಯ ಅಭ್ಯಾಸವಾಗಿ ಮಾರ್ಪಟ್ಟಿದೆ, ಆಗಾಗ್ಗೆ ಮನೆ ಮತ್ತು ಕೆಲಸದ ನಡುವಿನ ಗಡಿಯನ್ನು ಮರೆಮಾಡುತ್ತದೆ.
 3. ಇದಲ್ಲದೆ, ಅನೇಕ ವ್ಯವಹಾರಗಳು ತಮ್ಮ ಕೆಲಸವನ್ನು ಕಡಿಮೆಗೊಳಿಸಲು ಅಥವಾ ಹಣವನ್ನು ಉಳಿಸಲು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುತ್ತಿವೆ, ಮತ್ತು ಇನ್ನೂ ಮಾಸಿಕ ಸಂಬಳ ಪಡೆಯುತ್ತಿರುವವರು ಹೆಚ್ಚು ದೀರ್ಘಾವಧಿಯ ಕೆಲಸ ಮಾಡುತ್ತಿದ್ದಾರೆ.

 

ಮಾಡಬೇಕಿರುವುದೇನು?

 1. ಯಾವುದೇ ಕೆಲಸವು ಪಾರ್ಶ್ವವಾಯು ಅಥವಾ ಹೃದಯ ಕಾಯಿಲೆಯ ಅಪಾಯಕ್ಕೆ ಯೋಗ್ಯವಾಗಿಲ್ಲ. ಕಾರ್ಮಿಕರ ಆರೋಗ್ಯವನ್ನು ಕಾಪಾಡಲು ಕೆಲಸದ ಸಮಯದ ಮಿತಿಗಳನ್ನು ನಿಗದಿಪಡಿಸಲು ಸರ್ಕಾರಗಳು, ಉದ್ಯೋಗದಾತರು ಮತ್ತು ಕಾರ್ಮಿಕರು ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ.
 2. ಕಡ್ಡಾಯ ಅಧಿಕ ಸಮಯದ ಕೆಲಸದ ಅವಧಿಯನ್ನು ನಿಷೇಧಿಸುವ ಮತ್ತು ಕೆಲಸದ ಸಮಯದ ಮೇಲೆ ಗರಿಷ್ಠ ಮಿತಿಗಳನ್ನು ಖಾತರಿಪಡಿಸುವ ಕಾನೂನುಗಳನ್ನು ಸರ್ಕಾರ ಜಾರಿಗೊಳಿಸಬಹುದು.

 

ವಿಷಯಗಳು:ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಇಸ್ರೇಲ್ ಪ್ಯಾಲೆಸ್ಟೀನ್ ಸಂಘರ್ಷ:


(Israel Palestine conflict)

 ಸಂದರ್ಭ:

ಇತ್ತೀಚೆಗೆ, ವಿಶ್ವಸಂಸ್ಥೆಯ ಭದ್ರತಾಮಂಡಳಿಯಲ್ಲಿ, ಭಾರತವು ಪ್ಯಾಲೇಸ್ಟಿನಿಯನ್ ಪರವಾದ ತನ್ನ ಬಲವಾದ ಬೆಂಬಲವನ್ನು ಮತ್ತು ‘ಎರಡು ರಾಷ್ಟ್ರಗಳ ಪರಿಹಾರ’ ಕ್ಕಾಗಿನ (Two-State Solution) ತನ್ನ ಅಚಲವಾದ ಬದ್ಧತೆಯನ್ನು ಪುನರುಚ್ಚರಿಸಿದೆ.

 

ಹಿನ್ನೆಲೆ:

ಪ್ರಸ್ತುತ, ಇಸ್ರೇಲ್ ಮತ್ತು ಗಾಜಾಪಟ್ಟಿ ಪ್ರದೇಶದಲ್ಲಿ ಹೋರಾಟ ನಿರಂತರವಾಗಿ ಮುಂದುವರೆದಿದೆ. ಈ ಹೋರಾಟದಲ್ಲಿ ಸುಮಾರು 200 ಪ್ಯಾಲೆಸ್ಟೀನಿಯಾದ ಜನರು ಸಾವನ್ನಪ್ಪಿದ್ದಾರೆ ಮತ್ತು ಅವರಲ್ಲಿ ಅರ್ಧದಷ್ಟು ಮಹಿಳೆಯರು ಮತ್ತು ಮಕ್ಕಳು ಎಂದು ಅಧಿಕಾರಿಗಳು ಹೇಳುತ್ತಾರೆ. ಇಸ್ರೇಲ್‌ನಲ್ಲಿ ಕನಿಷ್ಠ 10 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.

 ಇಸ್ರೇಲ್ ಮತ್ತು ಪ್ಯಾಲೆಸ್ಟೀನಿಯಾದವರ ನಡುವೆ ಹೆಚ್ಚುತ್ತಿರುವ ಸಂಘರ್ಷವನ್ನು ಗಮನಿಸಿದರೆ, ಇದು ಪೂರ್ಣ ಪ್ರಮಾಣದ ಯುದ್ಧ’ವಾಗಿ ಪರಿವರ್ತನೆಗೊಳ್ಳುವ ಸಂಭವವಿದೆ ಎಂದು ವಿಶ್ವಸಂಸ್ಥೆಯು ಎಚ್ಚರಿಕೆ ನೀಡಿದೆ.

 

ಮೊದಲನೆಯದಾಗಿ, ಗಾಜಾ ಪಟ್ಟಿ ಎಲ್ಲಿದೆ?

ಗಾಜಾಪಟ್ಟಿಯು (Gaza Strip) ಸಂಪೂರ್ಣವಾಗಿ ಕೃತಕವಾಗಿ ನಿರ್ಮಿಸಲಾದ ರಚನೆಯಾಗಿದ್ದು, ಅರಬ್ ಜನಸಂಖ್ಯೆಯನ್ನು ಸ್ಥಳಾಂತರಿಸಲು ವಿನ್ಯಾಸಗೊಳಿಸಲಾಗಿದೆ, 1948 ರಲ್ಲಿ, ಇಸ್ರೇಲ್ ರಚನೆಯ ಸಮಯದಲ್ಲಿ ಇಲ್ಲಿ ನೆಲೆಸಿದ್ದ  ಪ್ಯಾಲೆಸ್ಟೈನ್‌ನ ಮುಕ್ಕಾಲು ಭಾಗದಷ್ಟು ಅರಬ್ ಜನಸಂಖ್ಯೆಯನ್ನು ಈ ಪ್ರದೇಶದಿಂದ ಸ್ಥಳಾಂತರಿಸಲಾಯಿತು ಮತ್ತು ಕೆಲವು ಸಂದರ್ಭಗಳಲ್ಲಿ ಅವರನ್ನು ಒತ್ತಾಯಪೂರ್ವಕವಾಗಿ ಹೊರಹಾಕಲಾಯಿತು.

 1. ಈ ಸಮಯದಲ್ಲಿ, ಹೆಚ್ಚಿನ ನಿರಾಶ್ರಿತರು ನೆರೆಯ ರಾಷ್ಟ್ರಗಳಾದ ಜೋರ್ಡಾನ್, ಸಿರಿಯಾ ಮತ್ತು ಲೆಬನಾನ್‌ನಲ್ಲಿ ಚದುರಿಹೋದರು.
 2. ಕೆಲವು ನಿರಾಶ್ರಿತರ ಜನಸಂಖ್ಯೆಯು ವೆಸ್ಟ್ ಬ್ಯಾಂಕ್’ (ಪಶ್ಚಿಮ ದಂಡೆ) ನಲ್ಲಿ ನೆಲೆಸಿತು, ಇದರ ಮೇಲೆ ಜೋರ್ಡಾನ್ 1948 ರ ನಂತರ ಅಧಿಕಾರವನ್ನು ಸ್ಥಾಪಿಸಿತು.
 3. ಈಜಿಪ್ಟ್ ಮತ್ತು ಇಂದಿನ ಇಸ್ರೇಲ್ ನಡುವಿನ ಕಿರಿದಾದ ಕರಾವಳಿ ಪ್ರದೇಶವಾದ ‘ಗಾಜಾ ಸ್ಟ್ರಿಪ್’ನಲ್ಲಿ ಹೆಚ್ಚಿನ ಸಂಖ್ಯೆಯ ಸ್ಥಳಾಂತರಗೊಂಡ ಜನಸಂಖ್ಯೆಯು ನೆಲೆಸಿದೆ.
 4. ಪ್ರಸ್ತುತ, ಗಾಜಾ ಪ್ರದೇಶದ ಒಟ್ಟು ಜನಸಂಖ್ಯೆಯ ಸುಮಾರು 70% ರಷ್ಟು ನಿರಾಶ್ರಿತರಾಗಿದ್ದಾರೆ.

  

ಗಾಜಾ ಪಟ್ಟಿ’ ಯ ಮೇಲೆ ಯಾರ ನಿಯಂತ್ರಣವಿದೆ?  

2007 ರಲ್ಲಿ, ಹಮಾಸ್ (Hamas) ಗಾಜಾ ಪಟ್ಟಿಯ ಮೇಲೆ ಬಲವಂತವಾಗಿ ಹಿಡಿತ ಸಾಧಿಸಿತು. ಸ್ವಲ್ಪ ಸಮಯದ ನಂತರ, ಇಸ್ರೇಲ್ ಗಾಜಾದ ಗಡಿಗಳನ್ನು ಸಂಪೂರ್ಣವಾಗಿ ಮುಚ್ಚಿ ಗಾಜಾವನ್ನು ಶತ್ರು ಘಟಕವೆಂದು ಘೋಷಿಸಿತು. ಸಹಜವಾಗಿ ಗಾಜಾಪಟ್ಟಿಗೆ ಒಂದು ದೇಶದ ಸ್ಥಾನಮಾನವಿಲ್ಲ.

 1. ಇಸ್ರೇಲ್ ಮತ್ತು ಯುನೈಟೆಡ್ ಸ್ಟೇಟ್ಸ್ ಸೇರಿದಂತೆ ಹೆಚ್ಚಿನ ಅಂತರರಾಷ್ಟ್ರೀಯ ಸಮುದಾಯವು ಹಮಾಸ್ ಅನ್ನು ಭಯೋತ್ಪಾದಕ ಸಂಘಟನೆಯಾಗಿ ನೋಡುತ್ತದೆ, ಕಾರಣ ಅದು ನಾಗರಿಕರ ಮೇಲಿನ ದಾಳಿಯ ಸುದೀರ್ಘ ಇತಿಹಾಸವನ್ನು ಹೊಂದಿದೆ.

 

ಇಸ್ರೇಲ್-ಪ್ಯಾಲೆಸ್ಟೈನ್ ಸಂಘರ್ಷ- ಐತಿಹಾಸಿಕ ಹಿನ್ನೆಲೆ:

 1. ಜೋರ್ಡಾನ್ ನದಿ ಮತ್ತು ಮೆಡಿಟರೇನಿಯನ್ ಸಮುದ್ರದ ನಡುವಿನ ತುಂಡು ಭೂಮಿಯಲ್ಲಿ ಯಹೂದಿಗಳು ಮತ್ತು ಅರಬ್ಬರ ನಡುವಿನ ಸಂಘರ್ಷಗಳು 100 ಕ್ಕೂ ಹೆಚ್ಚು ವರ್ಷಗಳಿಂದ ಮುಂದುವರೆದಿದೆ.
 2. 1882 ಮತ್ತು 1948 ರ ನಡುವೆ, ಪ್ರಪಂಚದಾದ್ಯಂತದ ಯಹೂದಿಗಳು ಪ್ಯಾಲೆಸ್ಟೈನ್‌ನಲ್ಲಿ ಒಟ್ಟುಗೂಡಿದರು. ಇತಿಹಾಸದಲ್ಲಿ, ಈ ಘಟನೆಯನ್ನು ಆಲಿಯಾಸ್ (Aliyahs) ಎಂದು ಕರೆಯಲಾಗುತ್ತದೆ.
 3. ನಂತರ 1917 ರಲ್ಲಿ, ಮೊದಲನೆಯ ಮಹಾಯುದ್ಧದ ನಂತರ ಒಟ್ಟೋಮನ್ ಸಾಮ್ರಾಜ್ಯ ಪತನಗೊಂಡಿತು ಮತ್ತು ಬ್ರಿಟನ್ ಪ್ಯಾಲೆಸ್ಟೀನ್ ಮೇಲೆ ಹಿಡಿತ ಸಾಧಿಸಿತು.
 4. ಅಲ್ಪಸಂಖ್ಯಾತ ಯಹೂದಿಗಳು ಮತ್ತು ಬಹುಸಂಖ್ಯಾತ ಅರಬ್ಬರು ಈ ಪ್ರದೇಶದಲ್ಲಿ ವಾಸಿಸುತ್ತಿದ್ದರು.
 5. ಈ ಪ್ರದೇಶವನ್ನು ಬ್ರಿಟನ್ ಸ್ವಾಧೀನಪಡಿಸಿಕೊಂಡ ನಂತರ, ಯಹೂದಿಗಳನ್ನು ಪ್ಯಾಲೆಸ್ಟೈನ್‌ನಲ್ಲಿ ನೆಲೆಗೊಳಿಸುವ ಉದ್ದೇಶದಿಂದ ಬಾಲ್ಫೋರ್ ಘೋಷಣೆ (Balfour Declaration) ಹೊರಡಿಸಲಾಯಿತು. ಆದರೆ, ಆ ಸಮಯದಲ್ಲಿ ಪ್ಯಾಲೆಸ್ಟೈನ್ ನಲ್ಲಿ ಅರಬ್ಬರು ಬಹುಸಂಖ್ಯಾತರಾಗಿದ್ದರು.
 6. ಯಹೂದಿಗಳು ಈ ‘ಬಾಲ್ಫೋರ್ ಘೋಷಣೆಯನ್ನು’ ಬೆಂಬಲಿಸಿದರೆ, ಪ್ಯಾಲೆಸ್ಟೀನಿಯಾದವರು ಅದನ್ನು ಸ್ವೀಕರಿಸಲು ನಿರಾಕರಿಸಿದರು.ಈ ಹತ್ಯಾಕಾಂಡದಲ್ಲಿ (Holocaust) ಸುಮಾರು 6 ಮಿಲಿಯನ್ ಯಹೂದಿಗಳು ಪ್ರಾಣ ಕಳೆದುಕೊಂಡರು, ಮತ್ತು ಈ ಘಟನೆಯು ಪ್ರತ್ಯೇಕ ಯಹೂದಿ ರಾಷ್ಟ್ರದ ಬೇಡಿಕೆಯನ್ನು ಹೆಚ್ಚಿಸಿತು.
 7. ಯಹೂದಿಗಳು ಪ್ಯಾಲೆಸ್ಟೈನ್ ಅನ್ನು ತಮ್ಮ ನೈಸರ್ಗಿಕ ಮಾತೃಭೂಮಿ ಎಂದು ಹೇಳಿಕೊಂಡರು, ಮತ್ತು ಇತರ ಅರಬ್ಬರು ಸಹ ತಮ್ಮ ಈ ಭೂಮಿಯನ್ನು ಬಿಟ್ಟುಕೊಡಲಿಲ್ಲ ಮತ್ತು ತಮ್ಮ ಹಕ್ಕನ್ನು ಉಳಿಸಿಕೊಂಡರು.
 8. ಅಂತರರಾಷ್ಟ್ರೀಯ ಸಮುದಾಯವು ಯಹೂದಿಗಳನ್ನು ಬೆಂಬಲಿಸಿತು.
 9. 1947 ರಲ್ಲಿ, ವಿಶ್ವಸಂಸ್ಥೆಯು ಪ್ಯಾಲೆಸ್ಟೈನ್ ಅನ್ನು ಪ್ರತ್ಯೇಕ ಯಹೂದಿ ದೇಶ ಮತ್ತು ಅರಬ್ ದೇಶವಾಗಿ ವಿಭಜಿಸುವ ಪರವಾಗಿ ಮತ ಚಲಾಯಿಸಿ, ಜೆರುಸಲೆಮ್ ಅನ್ನು ಅಂತರರಾಷ್ಟ್ರೀಯ ನಗರವನ್ನಾಗಿ ಮಾಡಿತು.
 10. ವಿಭಜನೆಯ ಈ ಯೋಜನೆಯನ್ನು ಯಹೂದಿ ನಾಯಕರು ಒಪ್ಪಿಕೊಂಡರು ಆದರೆ ಅರಬ್ ಕಡೆಯವರು ಅದನ್ನು ತಿರಸ್ಕರಿಸಿದರು ಮತ್ತು ಅದನ್ನು ಎಂದಿಗೂ ಅನುಷ್ಠಾನಗೊಳಿಸಲು ಮುಂದಾಗಲಿಲ್ಲ.

ಇಸ್ರೇಲ್ ನ ಸೃಷ್ಟಿ ಮತ್ತು ದುರಂತ:

 1. 1948 ರಲ್ಲಿ ಬ್ರಿಟನ್ ಈ ಪ್ರದೇಶದ ಮೇಲಿನ ನಿಯಂತ್ರಣವನ್ನು ಹಿಂತೆಗೆದುಕೊಂಡಿತು ಮತ್ತು ಯಹೂದಿಗಳು ಇಸ್ರೇಲ್ ರಚನೆಯನ್ನು ಘೋಷಿಸಿದರು. ಆದಾಗ್ಯೂ, ಪ್ಯಾಲೆಸ್ಟೀನಿಯಾದವರು ಇದನ್ನು ವಿರೋಧಿಸಿದರು, ಆದರೆ ಯಹೂದಿಗಳು ಹಿಂದೆ ಸರಿಯಲಿಲ್ಲ ಮತ್ತು ಇದು ಇಬ್ಬರ ನಡುವೆ ಸಶಸ್ತ್ರ ಸಂಘರ್ಷಕ್ಕೆ ಕಾರಣವಾಯಿತು.
 2. ಏತನ್ಮಧ್ಯೆ, ನೆರೆಯ ಅರಬ್ ರಾಷ್ಟ್ರಗಳು ಸಹ ಈ ಪ್ರದೇಶದ ಮೇಲೆ ದಾಳಿ ಮಾಡಿದವು, ಆದರೆ ಇಸ್ರೇಲಿ ಸೈನಿಕರಿಂದ ಸೋಲಿಸಲ್ಪಟ್ಟವು. ಈ ಯುದ್ಧದ ನಂತರ ಸಾವಿರಾರು ಪ್ಯಾಲೆಸ್ಟೀನಿಯನ್ನರು ತಮ್ಮ ಮನೆಗಳಿಂದ ಪಲಾಯನ ಮಾಡಬೇಕಾಯಿತು. ಈ ವಿದ್ಯಮಾನವನ್ನು ಅಲ್-ನಕ್ಬಾ’ (Al-Nakba) ಅಥವಾ “ದುರಂತ” ಎಂದು ಕರೆಯಲಾಗುತ್ತದೆ.
 3. ಹೋರಾಟದ ಅಂತ್ಯದ ನಂತರ, ಇಸ್ರೇಲ್ ಈ ಪ್ರದೇಶದ ಹೆಚ್ಚಿನ ಭೂಪ್ರದೇಶವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿತು.
 4. ನಂತರ, ಜೋರ್ಡಾನ್ ಇಸ್ರೇಲ್ನೊಂದಿಗೆ ಯುದ್ಧವನ್ನು ನಡೆಸಿತು, ಇದರಲ್ಲಿ ಜೋರ್ಡಾನ್ ‘ವೆಸ್ಟ್ ಬ್ಯಾಂಕ್’ ಎಂದು ಕರೆಯಲ್ಪಡುವ ಪ್ರದೇಶವನ್ನು ಆಕ್ರಮಿಸಿಕೊಂಡಿತು ಮತ್ತು ಈಜಿಪ್ಟ್ ಗಾಜಾವನ್ನು ವಶಪಡಿಸಿಕೊಂಡಿತು.
 5. ಜೆರುಸಲೆಮ್ ನಗರವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ, ಅದರ ಪೂರ್ವ ಭಾಗದಲ್ಲಿ ಜೋರ್ಡಾನ್ ಪ್ರಾಬಲ್ಯ ಹೊಂದಿದ್ದರೆ, ಪಶ್ಚಿಮ ಭಾಗವನ್ನು ಇಸ್ರೇಲ್ ನಿಯಂತ್ರಿಸುತ್ತದೆ. ಆದಾಗ್ಯೂ, ಯಾವುದೇ ಔಪಚಾರಿಕ ಶಾಂತಿ ಒಪ್ಪಂದಕ್ಕೆ ಸಹಿ ಹಾಕಲಾಗಿಲ್ಲ ಮತ್ತು ಈ ಪ್ರದೇಶದಲ್ಲಿನ ಉದ್ವಿಗ್ನತೆಗೆ ಎರಡು ಕಡೆಯವರು ಪರಸ್ಪರರನ್ನು ದೋಷಿಸುತ್ತಲೇ ಇದ್ದಾರೆ ಮತ್ತು ಈ ಪ್ರದೇಶದಲ್ಲಿ ಹೋರಾಟವು ಹಲವಾರು ಯುದ್ಧಗಳೊಂದಿಗೆ ಮುಂದುವರೆದಿದೆ.
 6. 1967 ರಲ್ಲಿ, ಇಸ್ರೇಲಿ ಸೈನ್ಯವು ಪೂರ್ವ ಜೆರುಸಲೆಮ್ ಮತ್ತು ಪಶ್ಚಿಮ ದಂಡೆ, ಸಿರಿಯಾದ ‘ಗೋಲನ್ ಹೈಟ್ಸ್’, ಗಾಜಾ ಮತ್ತು ಈಜಿಪ್ಟ್‌ನ ಸಿನಾಯ್ ಪರ್ಯಾಯ ದ್ವೀಪದ ವಿವಿಧ ಪ್ರದೇಶಗಳನ್ನು ವಶಪಡಿಸಿಕೊಂಡಿದೆ.

 

ಪ್ರಸ್ತುತ ಸನ್ನಿವೇಶ:

 1. ಇಸ್ರೇಲ್ ಇನ್ನೂ ಪಶ್ಚಿಮ ದಂಡೆಯನ್ನು ಆಕ್ರಮಿಸಿಕೊಂಡಿದೆ, ಮತ್ತು ಅದು ಗಾಜಾದ ಮೇಲಿನ ಅಧಿಕಾರವನ್ನು ತ್ಯಜಿಸಿದ್ದರೂ, ವಿಶ್ವಸಂಸ್ಥೆಯು ಈ ಭೂಮಿಯನ್ನು ಇನ್ನೂ ಆಕ್ರಮಿತ ಪ್ರದೇಶದ ಒಂದು ಭಾಗವೆಂದು ಪರಿಗಣಿಸುತ್ತದೆ.
 2. ಇಸ್ರೇಲ್ ಇಡೀ ಜೆರುಸಲೆಮ್ ಅನ್ನು ತನ್ನ ರಾಜಧಾನಿ ಎಂದು ಹೇಳಿಕೊಂಡರೆ, ಪ್ಯಾಲೆಸ್ತೀನಿಯರು ಪೂರ್ವ ಜೆರುಸಲೆಮ್ ಅನ್ನು ಭವಿಷ್ಯದ ಪ್ಯಾಲೇಸ್ಟಿನಿಯನ್ ರಾಷ್ಟ್ರದ ರಾಜಧಾನಿ ಎಂದು ಹೇಳಿಕೊಳ್ಳುತ್ತಾರೆ.
 3. ಇಡೀ ಜೆರುಸಲೆಮ್ ನಗರದ ಮೇಲೆ ಇಸ್ರೇಲ್ ನ ಹಕ್ಕನ್ನು ಮಾನ್ಯಮಾಡಿದ ಕೆಲವೇ ದೇಶಗಳಲ್ಲಿ ಅಮೇರಿಕ ಸಂಯುಕ್ತ ಸಂಸ್ಥಾನ ಕೂಡ ಒಂದಾಗಿದೆ.

 

ಪ್ರಸ್ತುತ ಅಲ್ಲಿ ಏನು ನಡೆಯುತ್ತಿದೆ?

 1. ಪೂರ್ವ ಜೆರುಸಲೆಮ್, ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿ ವಾಸಿಸುವ ಇಸ್ರೇಲಿಗಳು ಮತ್ತು ಪ್ಯಾಲೆಸ್ಟೀನಿಯಾದವರ ನಡುವೆ ಉದ್ವಿಗ್ನತೆ ಹೆಚ್ಚಾಗಿರುತ್ತದೆ.
 2. ಗಾಜಾವನ್ನು ‘ಹಮಾಸ್’ ಎಂಬ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಆಳುತ್ತದೆ, ಇದು ಇಸ್ರೇಲ್ನೊಂದಿಗೆ ಹಲವಾರು ಬಾರಿ ಘರ್ಷಣೆ ನಡೆಸಿದೆ. ಹಮಾಸ್‌ಗೆ ಶಸ್ತ್ರಾಸ್ತ್ರ ಸರಬರಾಜು ಆಗದಂತೆ ತಡೆಯಲು ಇಸ್ರೇಲ್ ಮತ್ತು ಈಜಿಪ್ಟ್ ಗಾಜಾದ ಗಡಿಯ ನಿಯಂತ್ರಣವನ್ನು ಗರಿಷ್ಠಮಟ್ಟದಲ್ಲಿ ಬಿಗಿಗೊಳಿಸಿವೆ.
 3. ಇಸ್ರೇಲ್ ನ ಕ್ರಮಗಳು ಮತ್ತು ನಿರ್ಬಂಧಗಳಿಂದಾಗಿ ತಾವು ಬಳಲುತ್ತಿರುವುದಾಗಿ ಗಾಜಾ ಮತ್ತು ಪಶ್ಚಿಮ ದಂಡೆಯಲ್ಲಿರುವ ಪ್ಯಾಲೆಸ್ಟೀನಿಯಾದವರು ಹೇಳುತ್ತಾರೆ. ಪ್ಯಾಲೇಸ್ಟಿನಿಯನ್ ಹಿಂಸಾಚಾರದಿಂದ ತನ್ನನ್ನು ರಕ್ಷಿಸಿಕೊಳ್ಳಲು ಮಾತ್ರ ಇಂತಹ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ಇಸ್ರೇಲ್ ಹೇಳಿದೆ.
 4. 2021 ರ ಏಪ್ರಿಲ್ ಮಧ್ಯದಲ್ಲಿ ಪವಿತ್ರ ಮುಸ್ಲಿಂ ರಂಜಾನ್ ತಿಂಗಳ ಆರಂಭದಿಂದಲೂ, ಪೊಲೀಸರು ಮತ್ತು ಪ್ಯಾಲೆಸ್ಟೀನಿಯಾದ ನಡುವಿನ ರಾತ್ರಿಯ ಘರ್ಷಣೆಯೊಂದಿಗೆ ಉದ್ವಿಗ್ನತೆ ಹೆಚ್ಚಾಗಿದೆ.
 5. ಪೂರ್ವ ಜೆರುಸಲೆಮ್ ನಲ್ಲಿರುವ ಕೆಲವು ಪ್ಯಾಲೇಸ್ಟಿನಿಯನ್ ಕುಟುಂಬಗಳನ್ನು ಹೊರಹಾಕುವ ಬೆದರಿಕೆಗಳಿಂದ ಉದ್ವಿಗ್ನತೆ ಇನ್ನೂ ಹೆಚ್ಚುತ್ತಿದೆ.

 

ವೆಸ್ಟ್ ಬ್ಯಾಂಕ್/ ಪಶ್ಚಿಮ ದಂಡೆ ಎಲ್ಲಿದೆ?

ಇದು ಪಶ್ಚಿಮ ಏಷ್ಯಾದ ಮೆಡಿಟರೇನಿಯನ್ ಕರಾವಳಿಯ ಸಮೀಪವಿರುವ ಭೂ ಆವೃತ ಪ್ರದೇಶವಾಗಿದ್ದು, ಪೂರ್ವಕ್ಕೆ ಜೋರ್ಡಾನ್ ಗಡಿಯಿದೆ ಮತ್ತು ಗ್ರೀನ್ ಲೈನ್ ಇದನ್ನು ಪ್ರತ್ಯೇಕಿಸುತ್ತದೆ ಮತ್ತು ದಕ್ಷಿಣ ಮತ್ತು ಪಶ್ಚಿಮ ಮತ್ತು ಉತ್ತರದಲ್ಲಿ ಇಸ್ರೇಲ್ ನಿಂದ ಆವರಿಸಲ್ಪಟ್ಟಿದೆ. ವೆಸ್ಟ್ ಬ್ಯಾಂಕ್ ಸಹ ಮೃತ ಸಮುದ್ರದ ಪಶ್ಚಿಮ ತೀರದ ಗಮನಾರ್ಹ ವಿಭಾಗವನ್ನು ಹೊಂದಿದೆ.

 

ಇಲ್ಲಿ ವಿವಾದಗಳ ಇತ್ಯರ್ಥ ಮತ್ತು ಅಲ್ಲಿ ಯಾರು ವಾಸಿಸುತ್ತಾರೆ?

 1. 1948 ರ ಅರಬ್-ಇಸ್ರೇಲ್ ಯುದ್ಧದ ನಂತರ ಪಶ್ಚಿಮ ದಂಡೆಯನ್ನು ಜೋರ್ಡಾನ್ ವಶಪಡಿಸಿಕೊಂಡಿತು.
 2. 1967 ರ ಆರು ದಿನಗಳ ಯುದ್ಧದ ಸಮಯದಲ್ಲಿ ಇಸ್ರೇಲ್ ಅದನ್ನು ಮರಳಿ ವಶಪಡಿಸಿಕೊಂಡಿತು ಮತ್ತು ಅಂದಿನಿಂದಲೂ ಅದನ್ನು ಆಕ್ರಮಿಸಿಕೊಂಡಿದೆ. ಈ ಯುದ್ಧದ ಸಮಯದಲ್ಲಿ, ಇಸ್ರೇಲ್ ದೇಶವು ಈಜಿಪ್ಟ್, ಸಿರಿಯಾ ಮತ್ತು ಜೋರ್ಡಾನ್‌ನ ಸಂಯೋಜಿತ ಪಡೆಗಳನ್ನು ಸೋಲಿಸಿತು.
 3. ಇಸ್ರೇಲ್ ಪಶ್ಚಿಮ ದಂಡೆಯಲ್ಲಿ ಸುಮಾರು 130 ಅಧಿಕೃತ ನೆಲೆಗಳನ್ನು ನಿರ್ಮಿಸಿದೆ ಮತ್ತು ಕಳೆದ 20-25 ವರ್ಷಗಳಲ್ಲಿ ಇದೇ ರೀತಿಯ ಸಣ್ಣ, ಅನೌಪಚಾರಿಕ ವಸಾಹತುಗಳು ತಲೆಯೆತ್ತಿವೆ.
 4. ಸುಮಾರು 26 ಲಕ್ಷ ಪ್ಯಾಲೆಸ್ಟೀನಿಯನ್ನರೊಂದಿಗೆ, ಸುಮಾರು 4ಲಕ್ಷಕ್ಕೂ ಹೆಚ್ಚು ಇಸ್ರೇಲಿ ವಸಾಹತುಗಾರರು – ಅವರಲ್ಲಿ ಅನೇಕರು ಈ ಭೂಮಿಯ ಮೇಲೆ ಬೈಬಲ್ ನ ಜನ್ಮಸಿದ್ಧ ಹಕ್ಕುಗಳನ್ನು ಪ್ರತಿಪಾದಿಸುವ ಧಾರ್ಮಿಕ ಝಿಯಾನಿಸ್ಟ್‌ಗಳು (religious Zionists ) – ಈಗ ಇಲ್ಲಿ ವಾಸಿಸುತ್ತಿದ್ದಾರೆ.
 5. ಅಲ್ಲಿ ಹೆಚ್ಚಿನ ಸಂಖ್ಯೆಯ ಪ್ಯಾಲೆಸ್ಟೀನಿಯಾದ ಜನರು ವಾಸಿಸುತ್ತಿರುವುದರಿಂದ ಮತ್ತು ಈ ಭೂಮಿ ತಮ್ಮ ಭವಿಷ್ಯದ ದೇಶದ ಭಾಗವಾಗಲಿದೆ ಎಂಬ ಅವರ ಆಶಯದಿಂದಾಗಿ ಈ ಪ್ರದೇಶವು ಇನ್ನೂ ವಿವಾದ ಗ್ರಸ್ತವಾಗಿದೆ.
 6. 1967 ರಲ್ಲಿ ಇಸ್ರೇಲ್ ಈ ಭೂಮಿಯ ಮೇಲೆ ಹಿಡಿತ ಸಾಧಿಸಿದಾಗಿನಿಂದ ಅದು ಯಹೂದಿ ಜನರಿಗೆ ಅಲ್ಲಿ ಹೋಗಲು ಅವಕಾಶ ಮಾಡಿಕೊಟ್ಟಿತು,ಆದರೆ ಪ್ಯಾಲೆಸ್ಟೀನಿಯಾದವರು ವೆಸ್ಟ್ ಬ್ಯಾಂಕ್ ಅನ್ನು ಇಸ್ರೇಲ್ ಅಕ್ರಮವಾಗಿ ಆಕ್ರಮಿಸಿಕೊಂಡಿರುವ ಪ್ಯಾಲೇಸ್ಟಿನಿಯನ್ ಭೂಮಿಯೆಂದು ಪರಿಗಣಿಸುತ್ತಾರೆ.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಆರ್ಕ್ಟಿಕ್‌ನ ಮಿಲಿಟರೀಕರಣಕ್ಕೆ ಅಮೇರಿಕಾದ ವಿರೋಧ:


(U.S. against militarisation of the Artic)

 

ಸಂದರ್ಭ:

ಆರ್ಕ್ಟಿಕ್ ಕೌನ್ಸಿಲ್ ವಿದೇಶಾಂಗ ಮಂತ್ರಿಗಳ ಸಭೆಯ ಮುನ್ನಾದಿನದಂದು, ಆರ್ಕ್ಟಿಕ್ ಪ್ರದೇಶದಲ್ಲಿ ಮಿಲಿಟರಿ ಚಟುವಟಿಕೆಯ ಹೆಚ್ಚಳದ ಬಗ್ಗೆ ಅಮೆರಿಕ ಕಳವಳ ವ್ಯಕ್ತಪಡಿಸಿದೆ.

ಈ ಕಾರ್ಯತಂತ್ರದ ಪ್ರದೇಶದಲ್ಲಿ ರಷ್ಯಾ ತನ್ನ ಮಿಲಿಟರಿ ಚಟುವಟಿಕೆಗಳನ್ನು ಸಮರ್ಥಿಸಿಕೊಂಡ ನಂತರ ಈ ವಿಷಯವನ್ನು ಅಮೆರಿಕ ಮುನ್ನೆಲೆಗೆ ತಂದಿದೆ.

 

ಸಂಬಂಧಿತ ಕಾಳಜಿಗಳು ಯಾವುವು?:

ಆರ್ಕ್ಟಿಕ್ ಪ್ರದೇಶದಲ್ಲಿ ಮಿಲಿಟರಿ ಚಟುವಟಿಕೆಯ ಹೆಚ್ಚಳವು ಸಂಭವನೀಯ ಅಪಘಾತಗಳ ಅಪಾಯವನ್ನು ಹೆಚ್ಚಿಸುತ್ತದೆ ಮತ್ತು ಈ ಪ್ರದೇಶದಲ್ಲಿ ಶಾಂತಿಯುತ ಮತ್ತು ಸುಸ್ಥಿರ ಭವಿಷ್ಯದ ಸಾಮಾನ್ಯ ಗುರಿಯನ್ನು ದುರ್ಬಲಗೊಳಿಸುತ್ತದೆ.

 

ಹಿನ್ನೆಲೆ:

ಇತ್ತೀಚಿನ ವರ್ಷಗಳಲ್ಲಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಷ್ಯಾದ ಆರ್ಕ್ಟಿಕ್ ಪ್ರದೇಶವನ್ನು ಆಯಕಟ್ಟಿನ ಆದ್ಯತೆಯನ್ನಾಗಿ ಮಾಡಿದ್ದಾರೆ ಮತ್ತು ಮಿಲಿಟರಿ ಮೂಲಸೌಕರ್ಯ ಮತ್ತು ಖನಿಜ ಹೊರತೆಗೆಯುವಿಕೆಗೆ ಹೂಡಿಕೆ ಮಾಡಲು ಆದೇಶಿಸಿದ್ದಾರೆ, ಇದು ಆರ್ಕ್ಟಿಕ್ ಕೌನ್ಸಿಲ್ ಸದಸ್ಯರೊಂದಿಗಿನ ಉದ್ವಿಗ್ನತೆಗೆ ಕಾರಣವಾಗಿದೆ.

 

ಆರ್ಕ್ಟಿಕ್ ಕೌನ್ಸಿಲ್’ ಬಗ್ಗೆ:

 1. ಆರ್ಕ್ಟಿಕ್ ಕೌನ್ಸಿಲ್ (Arctic council)ಆರ್ಕ್ಟಿಕ್ ಪ್ರದೇಶದ ರಾಷ್ಟ್ರಗಳ ಸರ್ಕಾರಗಳು ಮತ್ತು ಈ ಪ್ರದೇಶದಲ್ಲಿ ವಾಸಿಸುವ ಜನರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸುವ ಅಂತರ-ಸರ್ಕಾರಿ ವೇದಿಕೆಯಾಗಿದೆ.
 2. ಇದು ಒಪ್ಪಂದವನ್ನು ಆಧರಿಸಿದ ಅಂತರರಾಷ್ಟ್ರೀಯ ಸಂಘಟನೆಯಲ್ಲ, ಬದಲಾಗಿ ಒಮ್ಮತದ ಆಧಾರದ ಮೇಲೆ ಕಾರ್ಯನಿರ್ವಹಿಸುವ ಅಂತರರಾಷ್ಟ್ರೀಯ ವೇದಿಕೆಯಾಗಿದೆ.
 3. ‘ಆರ್ಕ್ಟಿಕ್ ಕೌನ್ಸಿಲ್’ನ ನಿರ್ಧಾರಗಳು, ಶಿಫಾರಸುಗಳು ಅಥವಾ ಮಾರ್ಗಸೂಚಿಗಳು ಜಾರಿಗೊಳಿಸಲಾಗದವು ಮತ್ತು ಅವು ಸಂಪೂರ್ಣವಾಗಿ ರಾಷ್ಟ್ರವೊಂದರ ವಿವೇಚನೆಗೆ ಬಿಟ್ಟ ಅಧಿಕಾರ.
 4. ಇದರ ಆದೇಶವು ಮಿಲಿಟರಿ ಭದ್ರತೆಯನ್ನು’ ಸ್ಪಷ್ಟವಾಗಿ ಹೊರಗಿಡುತ್ತದೆ.

 

ಇದರಲ್ಲಿ ಭಾಗವಹಿಸುವ ರಾಷ್ಟ್ರಗಳು ಯಾವುವು?

1996 ರ ಒಟ್ಟಾವಾ ಘೋಷಣೆಯು ಈ ಕೆಳಗಿನ ದೇಶಗಳನ್ನು ಆರ್ಕ್ಟಿಕ್ ಕೌನ್ಸಿಲ್ನ ಸದಸ್ಯರನ್ನಾಗಿ ಪಟ್ಟಿ ಮಾಡುತ್ತದೆ: ಕೆನಡಾ, ಡೆನ್ಮಾರ್ಕ್, ಫಿನ್ಲ್ಯಾಂಡ್, ಐಸ್ಲ್ಯಾಂಡ್, ನಾರ್ವೆ, ರಷ್ಯಾದ ಒಕ್ಕೂಟ, ಸ್ವೀಡನ್ ಮತ್ತು ಯುನೈಟೆಡ್ ಸ್ಟೇಟ್ಸ್.

ಇದಲ್ಲದೆ, ಆರ್ಕ್ಟಿಕ್‌ನ ಸ್ಥಳೀಯ ಜನರನ್ನು ಪ್ರತಿನಿಧಿಸುವ ಆರು ಸಂಸ್ಥೆಗಳು ಶಾಶ್ವತ ಭಾಗವಹಿಸುವವರು (Permanent Participants) ಎಂಬ ಸ್ಥಾನಮಾನವನ್ನು ಹೊಂದಿವೆ.

ಈ ಸಂಸ್ಥೆಗಳಲ್ಲಿ ಆಲುಟ್ ಇಂಟರ್ನ್ಯಾಷನಲ್ ಅಸೋಸಿಯೇಶನ್ (Aleut International Association), ಆರ್ಕ್ಟಿಕ್ ಅಥಾಬಾಸ್ಕನ್ ಕೌನ್ಸಿಲ್ (the Arctic Athabaskan Council), ಗ್ವಿಚ್’ಇನ್ ಕೌನ್ಸಿಲ್ ಇಂಟರ್ನ್ಯಾಷನಲ್ (Gwich’in Council International), ಇನ್ಯೂಟ್ ಪೆರಿಫೆರಲ್ ಕೌನ್ಸಿಲ್ (the Inuit Circumpolar Council), ರಷ್ಯಾದ ಉತ್ತರಭಾಗದ ಮೂಲನಿವಾಸಿಗಳ ಸಂಘ (Russian Association of Indigenous Peoples of the North) ಮತ್ತು ಸಾಮಿ ಕೌನ್ಸಿಲ್ (the Saami Council).

ಆರ್ಕ್ಟಿಕ್ ಕೌನ್ಸಿಲ್ನಲ್ಲಿ ವೀಕ್ಷಕ ಸ್ಥಾನಮಾನವು ಆರ್ಕ್ಟಿಕ್ ಅಲ್ಲದ ರಾಜ್ಯಗಳಿಗೆ ಹಾಗೂ ಅಂತರ-ಸರ್ಕಾರಿ, ಅಂತರ-ಸಂಸದೀಯ, ಜಾಗತಿಕ, ಪ್ರಾದೇಶಿಕ ಮತ್ತು ಸರ್ಕಾರೇತರ ಸಂಸ್ಥೆಗಳಿಗೆ ಮುಕ್ತವಾಗಿದೆ. ವೀಕ್ಷಕ ಸದಸ್ಯತ್ವವನ್ನು, ಆರ್ಕ್ಟಿಕ್ ಪ್ರದೇಶಕ್ಕೆ ಆಯಾ ದೇಶಗಳು ನೀಡುವ ಕೊಡುಗೆಯನ್ನು ಪರಿಗಣಿಸುವ ಮೂಲಕ, ಕೌನ್ಸಿಲ್ ವು ಸದಸ್ಯತ್ವ ನೀಡುವ ಕುರಿತು ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ.

 

ಆರ್ಕ್ಟಿಕ್ ಕೌನ್ಸಿಲ್ ಕಾರ್ಯಕಾರಿ ಗುಂಪು:

 1. ಆರ್ಕ್ಟಿಕ್ ಮಾಲಿನ್ಯಕಾರಕ ಕ್ರಿಯಾ ಕಾರ್ಯಕ್ರಮ (Arctic Contaminants Action Program- ACAP) – ಮಾಲಿನ್ಯಕಾರಕಗಳ ಹೊರಸೂಸುವಿಕೆಯನ್ನು ಕಡಿಮೆ ಮಾಡಲು ರಾಷ್ಟ್ರೀಯ ಕಾರ್ಯಕ್ರಮಗಳನ್ನು ಪ್ರೋತ್ಸಾಹಿಸುವ ಕಾರ್ಯವಿಧಾನಗಳನ್ನು ಬಲಪಡಿಸುವುದು ಮತ್ತು ಬೆಂಬಲಿಸುವುದು.
 2. ಆರ್ಕ್ಟಿಕ್ ಮಾನಿಟರಿಂಗ್ ಮತ್ತು ಅಸೆಸ್ಮೆಂಟ್ ಪ್ರೋಗ್ರಾಂ (Arctic Monitoring and Assessment Programme- AMAP – ಇದು ಆರ್ಕ್ಟಿಕ್ ಪರಿಸರ, ಪರಿಸರ ವ್ಯವಸ್ಥೆಗಳು ಮತ್ತು ಮಾನವ ಜನಸಂಖ್ಯೆಯನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಮಾಲಿನ್ಯ ಮತ್ತು ಹವಾಮಾನ ಬದಲಾವಣೆಯ ದುಷ್ಪರಿಣಾಮಗಳನ್ನು ಎದುರಿಸಲು ಸರ್ಕಾರಗಳಿಗೆ ವೈಜ್ಞಾನಿಕ ಸಲಹೆಯನ್ನು ನೀಡುತ್ತದೆ.
 3. ಆರ್ಕ್ಟಿಕ್ ಸಸ್ಯ ಮತ್ತು ಪ್ರಾಣಿ ಸಂಕುಲಗಳ ಸಂರಕ್ಷಣೆ (Conservation of Arctic Flora and Fauna- CAFF) – ಇದು ಆರ್ಕ್ಟಿಕ್ ಜೀವವೈವಿಧ್ಯತೆಯ ಸಂರಕ್ಷಣೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಹರಿಸುತ್ತದೆ ಮತ್ತು ಆರ್ಕ್ಟಿಕ್‌ನ ಜೀವ ಸಂಪನ್ಮೂಲಗಳ ಸುಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ಕೆಲಸ ಮಾಡುತ್ತದೆ.
 4. ತುರ್ತು ತಡೆಗಟ್ಟುವಿಕೆ, ಪೂರ್ವಸಿದ್ಧತೆ ಮತ್ತು ಪ್ರತಿಕ್ರಿಯೆ (Emergency Prevention, Preparedness and Response- EPPR) – ಇದು ಮಾಲಿನ್ಯಕಾರಕಗಳು ಅಥವಾ ರೇಡಿಯೊನ್ಯೂಕ್ಲೈಡ್‌ಗಳು ಆಕಸ್ಮಿಕವಾಗಿ ಬಿಡುಗಡೆಯಾಗುವ ಅಪಾಯ ಮತ್ತು ಅದರ ಪರಿಣಾಮಗಳಿಂದ ಆರ್ಕ್ಟಿಕ್ ಪರಿಸರವನ್ನು ರಕ್ಷಿಸುತ್ತದೆ.
 5. ಆರ್ಕ್ಟಿಕ್ ಸಮುದ್ರ ಪರಿಸರದ ರಕ್ಷಣೆ (Protection of the Arctic Marine Environment -PAME) – ಇದು ಆರ್ಕ್ಟಿಕ್ ಸಮುದ್ರ ಪರಿಸರದ ಸಂರಕ್ಷಣೆ ಮತ್ತು ಸುಸ್ಥಿರ ಬಳಕೆಯನ್ನು ಖಾತ್ರಿಗೊಳಿಸುತ್ತದೆ.
 6. ಸುಸ್ಥಿರ ಅಭಿವೃದ್ಧಿ ಕಾರ್ಯನಿರತ ಗುಂಪು (Sustainable Development Working Group – SDWG) – ಆರ್ಕ್ಟಿಕ್ ಪ್ರದೇಶದಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಹೆಚ್ಚಿಸಲು ಮತ್ತು ಒಟ್ಟಾರೆ ಆರ್ಕ್ಟಿಕ್ ಸಮುದಾಯಗಳ ಪರಿಸ್ಥಿತಿಗಳನ್ನು ಸುಧಾರಿಸಲು ಕೆಲಸ ಮಾಡುತ್ತದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.:

ಹಿಮ ಚಿರತೆ ಕುರಿತ WWF ನ ವರದಿ:


(WWF report on snow leopard)

ಸಂದರ್ಭ:

ಇತ್ತೀಚೆಗೆ, ಪ್ರಕೃತಿ ಸಂರಕ್ಷಣೆಗಾಗಿ ವಿಶ್ವ ವನ್ಯಜೀವಿ ನಿಧಿ’ (Worldwide Fund for Nature-WWF) “ಸುಮಾರು 100 ವರ್ಷಗಳ ಹಿಮ ಚಿರತೆ ಸಂಶೋಧನೆ – ಹಿಮ ಚಿರತೆ ಪ್ರದೇಶದಲ್ಲಿನ ಮಾಹಿತಿ ಸ್ಥಿತಿಯ ಕುರಿತು ಪ್ರಾದೇಶಿಕ ಸ್ಪಷ್ಟವಾದ ವಿಮರ್ಶೆ” (Over 100 Years of Snow Leopard Research — A spatially explicit review of the state of knowledge in the snow leopard range) ಎಂಬ ಶೀರ್ಷಿಕೆಯ ವರದಿಯನ್ನು ಬಿಡುಗಡೆ ಮಾಡಿದೆ.

ವರದಿಯ ಪ್ರಮುಖ ಆವಿಷ್ಕಾರಗಳು:

 1. ಏಷ್ಯಾದ 12 ಕ್ಕೂ ಹೆಚ್ಚು ದೇಶಗಳಲ್ಲಿ, ಶೇಕಡಾ 70 ಕ್ಕೂ ಹೆಚ್ಚು ಹಿಮ ಚಿರತೆ ಆವಾಸಸ್ಥಾನಗಳನ್ನು ಸಂಶೋಧಿಸಲಾಗಿಲ್ಲ.
 2. ಹಿಮ ಚಿರತೆ ಕುರಿತು ಹೆಚ್ಚಿನ ಸಂಶೋಧನೆಗಳನ್ನು ನೇಪಾಳ, ಭಾರತ ಮತ್ತು ಚೀನಾ ನಡೆಸಿದ್ದು, ನಂತರದಲ್ಲಿ ಮಂಗೋಲಿಯಾ ಮತ್ತು ಪಾಕಿಸ್ತಾನಗಳು ಇವೆ.
 3. ಹಿಮ ಚಿರತೆ ಜನಸಂಖ್ಯೆಯ ಅಂದಾಜುಗಳು ಇಲ್ಲಿಯವರೆಗಿನ ಸಂಶೋಧನೆಯ ಮುಖ್ಯ ಕೇಂದ್ರವಾಗಿದೆ, ಇದರ ಹೊರತಾಗಿಯೂ, ಈ ದೊಡ್ಡ  ಬೆಕ್ಕಿನ ಪ್ರಭೇದಗಳ ಒಟ್ಟು ಪ್ರದೇಶದ, ಮೂರು ಪ್ರತಿಶತಕ್ಕಿಂತ ಕಡಿಮೆ ಪ್ರದೇಶವು ಇವುಗಳ ಬಗ್ಗೆ ಹೇರಳವಾದ ದತ್ತಾಂಶವನ್ನು ಹೊಂದಿದೆ.
 4. ಜಾಗತಿಕವಾಗಿ, ಏಷ್ಯಾದ ಎತ್ತರದ ಪರ್ವತಗಳಲ್ಲಿ ಕೇವಲ 4,000 ಹಿಮ ಚಿರತೆಗಳು ಮಾತ್ರ ಉಳಿದಿವೆ ಮತ್ತು ಈ ಉಳಿದ ಜನಸಂಖ್ಯೆಯು ನಿರಂತರ ಮತ್ತು ಹೊಸ ಬೆದರಿಕೆಗಳನ್ನು ಎದುರಿಸುತ್ತಿವೆ.

 

ಹಿಮ ಚಿರತೆಗಳ ಉಳಿವಿಗೆ ಎದುರಾಗಿರುವ ಬೆದರಿಕೆಗಳು ಇಂತಿವೆ:

ಅವರ ಆವಾಸಸ್ಥಾನಗಳ ನಾಶ ಮತ್ತು ಆವಾಸಸ್ಥಾನಗಳ ಅವನತಿ, ಬೇಟೆಯಾಡುವುದು, ಮಾನವ ಸಮುದಾಯಗಳೊಂದಿಗೆ ಸಂಘರ್ಷ ಹೆಚ್ಚಾಗುವುದು ಇತ್ಯಾದಿ.

 

ಭಾರತದಲ್ಲಿನ ಆವಾಸಸ್ಥನಗಳು:

 1. ಹಿಮ ಚಿರತೆಗಳು, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ್, ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶ ಈ ಐದು ರಾಜ್ಯಗಳಲ್ಲಿ ಉನ್ನತ ಹಿಮಾಲಯ ಮತ್ತು ಟ್ರಾನ್ಸ್-ಹಿಮಾಲಯನ್ ಭೂದೃಶ್ಯದಲ್ಲಿ ವಾಸಿಸುತ್ತವೆ.
 2. ಹಿಮಾಚಲ ಪ್ರದೇಶದಲ್ಲಿ, ಹಿಮ ಚಿರತೆಯ ಆವಾಸಸ್ಥಾನವು ಲಾಹೌಲ್-ಸ್ಪಿತಿ ಮತ್ತು ಕಿನ್ನೌರ್ ಜಿಲ್ಲೆಗಳ ಬಹುತೇಕ ಭಾಗವನ್ನು ಒಳಗೊಂಡಿದೆ.
 3. ಇದರ ಸಂಭಾವ್ಯ ಆವಾಸಸ್ಥಾನವು ಶಿಮ್ಲಾ, ಕುಲ್ಲು, ಚಂಬಾ ಮತ್ತು ಕಾಂಗ್ರಾ ಜಿಲ್ಲೆಗಳ ಎತ್ತರದ / ಉನ್ನತ ಪ್ರದೇಶಗಳಿಗೂ ವ್ಯಾಪಿಸಿದೆ.
 4. ಈ ಪ್ರದೇಶಗಳಲ್ಲಿ ಹೆಚ್ಚಿನವು ದೂರಸ್ಥವಾಗಿದ್ದು, (remote) ಚಳಿಗಾಲದಲ್ಲಿ ಈ ಪ್ರದೇಶಗಳಿಗೆ ಹೋಗಲು ಸೀಮಿತ ಪ್ರವೇಶದ ಅವಕಾಶವಿರುವುದು ಒಂದು ಹೆಚ್ಚುವರಿ ಸವಾಲಾಗಿದೆ.

 

ಭಾರತದಲ್ಲಿ ಹಿಮ ಚಿರತೆ ಸಂರಕ್ಷಣೆ:

 1. ಹಿಮಚಿರತೆ ಯೋಜನೆ (PSL) ಮೂಲಕ ಭಾರತ ಹಿಮ ಚಿರತೆ ಮತ್ತು ಅದರ ಆವಾಸಸ್ಥಾನವನ್ನು ಸಂರಕ್ಷಿಸುತ್ತಿದೆ.
 2. ಭಾರತವು 2013 ರಿಂದ ಜಾಗತಿಕ ಹಿಮ ಚಿರತೆ ಮತ್ತು ಪರಿಸರ ವ್ಯವಸ್ಥೆ ಸಂರಕ್ಷಣೆ (Global Snow Leopard and Ecosystem Protection -GSLEP) ಕಾರ್ಯಕ್ರಮದ ಪಕ್ಷವಾಗಿದೆ / ಸದಸ್ಯನಾಗಿದೆ.
 3.  ಸಂರಕ್ಷಣೆಗಾಗಿ, ಭಾರತವು ಮೂರು ದೊಡ್ಡ ಭೂದೃಶ್ಯಗಳನ್ನು ಗುರುತಿಸಿದೆ, ಅವುಗಳೆಂದರೆ, ಲಡಾಕ್ ಮತ್ತು ಹಿಮಾಚಲ ಪ್ರದೇಶದಾದ್ಯಂತ ಹೆಮಿಸ್-ಸ್ಪಿಟಿ; ಉತ್ತರಾಖಂಡದಲ್ಲಿ ನಂದಾದೇವಿ – ಗಂಗೋತ್ರಿ; ಮತ್ತು ಸಿಕ್ಕಿಂ ಮತ್ತು ಅರುಣಾಚಲ ಪ್ರದೇಶದಾದ್ಯಂತ, ಕಾಂಚೆನ್ ಜೊಂಗಾ – ತವಾಂಗ್.
 4. ಅಂತರ್ಗತ ಮತ್ತು ಭಾಗವಹಿಸುವ ವಿಧಾನವನ್ನು ಉತ್ತೇಜಿಸುವ ಮೂಲಕ ಹಿಮ ಚಿರತೆಗಳನ್ನು ಮತ್ತು ಅವುಗಳ ಆವಾಸಸ್ಥಾನವನ್ನು ಸಂರಕ್ಷಿಸಲು ಹಿಮ ಚಿರತೆ ಯೋಜನೆ ಯನ್ನು (PSL) 2009 ರಲ್ಲಿ ಪ್ರಾರಂಭಿಸಲಾಯಿತು.
 5.  ಪರಿಸರ ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಚೇತರಿಕೆ ಕಾರ್ಯಕ್ರಮದಡಿಯಲ್ಲಿ ಹಿಮ ಚಿರತೆಯು 21 ಅತ್ಯಂತ ಅಳಿವಿನಂಚಿನಲ್ಲಿರುವ ಪ್ರಬೇಧಗಳ ಪಟ್ಟಿಯಲ್ಲಿದೆ.

 

ಸಂರಕ್ಷಣೆ:

 1. ಹಿಮ ಚಿರತೆಗಳನ್ನು IUCN ‘ ಅಪಾಯಕ್ಕೆ ಒಳಗಾಗಬಲ್ಲ’ (Vulnerable) ಪ್ರಾಣಿ ಎಂದು ವರ್ಗೀಕರಿಸಿದ್ದು ಮತ್ತು ಇದನ್ನು ಭಾರತೀಯ ವನ್ಯಜೀವಿ (ಸಂರಕ್ಷಣೆ) ಕಾಯ್ದೆ 1972 ರ ಅನುಸೂಚಿ I ರಲ್ಲಿ ಸೇರಿಸಲಾಗಿದೆ.
 2. ಜಾಗತಿಕವಾಗಿ ಮತ್ತು ಭಾರತದಲ್ಲಿ ಈ ಪ್ರಭೇದಗಳಿಗೆ ಅತ್ಯುನ್ನತ ಸಂರಕ್ಷಣಾ ಸ್ಥಾನಮಾನವನ್ನು ಒದಗಿಸುವ ಅಗತ್ಯವನ್ನು ದೃಷ್ಟಿಯಲ್ಲಿಟ್ಟುಕೊಂಡು ಅಳಿವಿನಂಚಿನಲ್ಲಿರುವ ಪ್ರಭೇದಗಳ ಅಂತರರಾಷ್ಟ್ರೀಯ ವ್ಯಾಪಾರ ಸಮಾವೇಶದ (Convention on International Trade in Endangered Species –CITES) ಮತ್ತು ವಲಸೆ ಪ್ರಭೇದಗಳ ಸಮಾವೇಶ (Convention on Migratory Species –CMS) ಗಳ ಅನುಬಂಧ I ರಲ್ಲಿ ಇವುಗಳನ್ನು ಪಟ್ಟಿಮಾಡಲಾಗಿದೆ.

 

ಭಾರತ ಪ್ರಾರಂಭಿಸಿದ ಸಂರಕ್ಷಣಾ ಪ್ರಯತ್ನಗಳು ಹೀಗಿವೆ:

 1. ಹಿಮ ಚಿರತೆ ಯೋಜನೆ (PSL): ಇದು ಸ್ಥಳೀಯ ಸಮುದಾಯಗಳನ್ನು ಸಂಪೂರ್ಣವಾಗಿ ಒಳಗೊಂಡು, ಹಿಮ ಚಿರತೆಗಳ ಸಂರಕ್ಷಣೆಗೆ ಒಂದು ಅಂತರ್ಗತ ಮತ್ತು ಭಾಗವಹಿಸುವ ವಿಧಾನವನ್ನು ಉತ್ತೇಜಿಸುತ್ತದೆ.
 2. ಸುರಕ್ಷಿತ ಹಿಮಾಲಯ: ಜಾಗತಿಕ ಪರಿಸರ ಸೌಲಭ್ಯ (Global Environment Facility – GEF)– ಮತ್ತು ವಿಶ್ವ ಸಂಸ್ಥೆಯ ಅಭಿವೃದ್ಧಿ ಕಾರ್ಯಕ್ರಮ (UNDP) ಈ ಯೋಜನೆಗೆ, ಹೆಚ್ಚಿನ ಉನ್ನತ ಪ್ರದೇಶದ ಜೀವವೈವಿಧ್ಯತೆಯ ಸಂರಕ್ಷಣೆ ಮತ್ತು ನೈಸರ್ಗಿಕ ಪರಿಸರ ವ್ಯವಸ್ಥೆಯ ಮೇಲೆ ಸ್ಥಳೀಯ ಸಮುದಾಯಗಳ ಅವಲಂಬನೆಯನ್ನು ಕಡಿಮೆ ಮಾಡುವ ಉದ್ದೇಶಕ್ಕಾಗಿ ಧನಸಹಾಯ ಮಾಡುತ್ತಿವೆ. ಈ ಯೋಜನೆಯು ಈಗ ಹಿಮ ಚಿರತೆ ವ್ಯಾಪ್ತಿಯ ನಾಲ್ಕು ರಾಜ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದೆ, ಅವುಗಳೆಂದರೆ, ಜಮ್ಮು ಮತ್ತು ಕಾಶ್ಮೀರ, ಹಿಮಾಚಲ ಪ್ರದೇಶ, ಉತ್ತರಾಖಂಡ್ ಮತ್ತು ಸಿಕ್ಕಿಂ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನ 2021:

(International Museum Day)

 1.  ಪ್ರತಿ ವರ್ಷ ಮೇ 18 ರಂದು ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನವನ್ನು ಆಚರಿಸಲಾಗುತ್ತದೆ.
 2. 2021 ರ ವಿಷಯ ಹೀಗಿದೆ: ‘ವಸ್ತುಸಂಗ್ರಹಾಲಯಗಳ ಭವಿಷ್ಯ: ಮರುಪಡೆಯುವಿಕೆ ಮತ್ತು ಮರು ಕಲ್ಪನೆ’ (The Future of Museums: Recover and Reimagine).
 3. “ವಸ್ತುಸಂಗ್ರಹಾಲಯಗಳು ಸಾಂಸ್ಕೃತಿಕ ವಿನಿಮಯ, ಸಂಸ್ಕೃತಿಗಳ ಪುಷ್ಟೀಕರಣ ಮತ್ತು ಪರಸ್ಪರ ತಿಳುವಳಿಕೆ, ಜನರ ನಡುವಿನ ಸಹಕಾರ ಮತ್ತು ಶಾಂತಿಗೆ ಪ್ರಮುಖ ಸಾಧನವಾಗಿದೆ” ಎಂಬ ಅಂಶದ ಬಗ್ಗೆ ಜಾಗೃತಿ ಮೂಡಿಸುವುದು ಅಂತರರಾಷ್ಟ್ರೀಯ ವಸ್ತುಸಂಗ್ರಹಾಲಯ ದಿನದ ಉದ್ದೇಶವಾಗಿದೆ.

 ಸುದ್ದಿ ಪ್ರದರ್ಶನ:

(News Showcase)

 1.  ಇತ್ತೀಚೆಗೆ, ಗೂಗಲ್ ಭಾರತದಲ್ಲಿ ರಾಷ್ಟ್ರೀಯ, ಪ್ರಾದೇಶಿಕ ಮತ್ತು ಸ್ಥಳೀಯ ಸುದ್ದಿ ಸಂಸ್ಥೆಗಳು ಸೇರಿದಂತೆ 30 ಸುದ್ದಿ ಪ್ರಕಾಶಕರೊಂದಿಗೆ ‘ನ್ಯೂಸ್ ಶೋಕೇಸ್’ ಅಂದರೆ ‘ಸುದ್ದಿ ಪ್ರದರ್ಶನ’ ವನ್ನು ಪ್ರಾರಂಭಿಸುವುದಾಗಿ ಘೋಷಿಸಿದೆ.
 2. ಈ ‘ನ್ಯೂಸ್ ಶೋಕೇಸ್’ ಪಾಲುದಾರ ಪ್ರಕಾಶಕರಿಗೆ Google ನ ಸುದ್ದಿ ಮತ್ತು ಹುಡುಕಾಟ ಪ್ಲ್ಯಾಟ್‌ಫಾರ್ಮ್‌ಗಳಲ್ಲಿ ‘ಸ್ಟೋರಿ ಪ್ಯಾನಲ್’ ಆಗಿ ಪ್ರದರ್ಶಿಸಲಾಗುವ ವಿಷಯವನ್ನು ಸಂಗ್ರಹಿಸಲು ಅನುಮತಿಸುತ್ತದೆ.
 3. ಈ ನಿಟ್ಟಿನಲ್ಲಿ, ತಂತ್ರಜ್ಞಾನ ಸಂಸ್ಥೆಗಳು ಪ್ರಕಾಶಕರಿಗೆ ಗೋಡೆಯ ಮೇಲೆ ಪ್ರದರ್ಶಿಸಲಾಗುವ ವಿಷಯಕ್ಕೆ ಪರವಾನಗಿ ನೀಡಲು ಪಾವತಿಸುತ್ತದೆ ಮತ್ತು ಓದುಗರಿಗೆ ಪಾವತಿಸಲಾದ ವಿಷಯಕ್ಕೆ ಸೀಮಿತ ಪ್ರವೇಶವನ್ನು ಒದಗಿಸುತ್ತದೆ.
 4. ಜಾಗತಿಕವಾಗಿ, ಜರ್ಮನಿ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜಪಾನ್, ಯು.ಕೆ., ಆಸ್ಟ್ರೇಲಿಯಾ, ಇಟಲಿ ಮತ್ತು ಅರ್ಜೆಂಟೀನಾ ದೇಶಗಳಲ್ಲಿ 700 ಕ್ಕೂ ಹೆಚ್ಚು ಸುದ್ದಿ ಪ್ರಕಟಣೆಗಳು ‘ಗೂಗಲ್ ನ್ಯೂಸ್ ಶೋಕೇಸ್’ ಗಾಗಿನ ಒಪ್ಪಂದಗಳಿಗೆ ಸಹಿ ಹಾಕಿವೆ.

ಕೊಲಂಬೊ ಪೋರ್ಟ್ ಸಿಟಿ:

(Colombo Port City)

 1. ಇದು ಚೀನಾ ಅನುದಾನಿತ, ತೆರಿಗೆ-ವಿನಾಯಿತಿ ಹೊಂದಿದ ವಿದೇಶಿ ಎನ್ಕ್ಲೇವ್ (Enclave) ಆಗಿದೆ, ಇದನ್ನು ದುಬೈ ಮತ್ತು ಸಿಂಗಾಪುರದ ಮಾರ್ಗಗಳಲ್ಲಿ ಶ್ರೀಲಂಕಾ ಪರಿಚಯಿಸಿದೆ.
 2. ಇದು ಶ್ರೀಲಂಕಾದ ಅತಿದೊಡ್ಡ ಏಕ ವಿದೇಶಿ ಹೂಡಿಕೆ ಮತ್ತು ಚೀನಾದಿಂದ ಧನಸಹಾಯ ಪಡೆದ ಏಷ್ಯಾದ ಹಲವಾರು ಅತಿದೊಡ್ಡ ಮೂಲಸೌಕರ್ಯ ಯೋಜನೆಗಳಲ್ಲಿ ಒಂದಾಗಿದೆ. ಈ ಮೂಲಕ ಚೀನಾ ತನ್ನ ಪ್ರಾದೇಶಿಕ ಅಸ್ತಿತ್ವವನ್ನು ಬಲಪಡಿಸಿಕೊಂಡಿದೆ.
 3. ಇದಕ್ಕಾಗಿ ಶ್ರೀಲಂಕಾದ ಸಂಸತ್ತಿನಲ್ಲಿ ಮಸೂದೆಯನ್ನು ಪರಿಚಯಿಸಲಾಗಿದೆ, ಅದರ ಅಂಗೀಕಾರದ ಆಧಾರದ ಮೇಲೆ, ಈ ಬಂದರು ನಗರವನ್ನು ಆಯೋಗವು ನಿರ್ವಹಿಸುತ್ತದೆ. ಹೂಡಿಕೆ-ಅನುಮೋದನೆ ಪ್ರಕ್ರಿಯೆಯನ್ನು ತ್ವರಿತಗೊಳಿಸಲು ಈ ಆಯೋಗಕ್ಕೆ ವಿಶೇಷ ಅಧಿಕಾರ ನೀಡಲಾಗುವುದು.
 4. ಪೋರ್ಟ್ ಸಿಟಿಯೊಳಗಿನ ವಹಿವಾಟುಗಳನ್ನು ವಿದೇಶಿ ಕರೆನ್ಸಿಯಲ್ಲಿ ಕೈಗೊಳ್ಳಲಾಗುವುದು ಮತ್ತು ಯಾವುದೇ ಉದ್ಯೋಗಿ ಗಳಿಸುವ ಸಂಬಳವು ತೆರಿಗೆ ವಿನಾಯಿತಿಯನ್ನು ಹೊಂದಿರುತ್ತದೆ.


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos