ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 2:
1. ಸಂವಿಧಾನದ 164 (3) ನೇ ವಿಧಿ.
2. PM-CARES ನಿಧಿ.
ಸಾಮಾನ್ಯ ಅಧ್ಯಯನ ಪತ್ರಿಕೆ 3:
1. 2016 ರಿಂದ ಭಾರತೀಯ ಉತ್ಪಾದನಾ ವಲಯದಲ್ಲಿ ಉದ್ಯೋಗ ಕಡಿತಕ್ಕೆ ಕಾರಣಗಳೇನು?
2. ಚೀನಾದ ‘ಝೂರಾಂಗ್’ ರೋವರ್.
3. ಜಿಯೋಲೈಟ್ ಕಾರ್ಗೋ ಫ್ಲೈಟ್ ಸೇವೆಯನ್ನು ಪ್ರಾರಂಭಿಸಿದ ಏರ್ ಇಂಡಿಯಾ.
4. 10 ವರ್ಷಗಳಲ್ಲಿ 186 ಆನೆಗಳು ರೈಲು ಅಪಘಾತಗಳಲ್ಲಿ ಸಾವನ್ನಪ್ಪಿವೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
1. ವಿಂಚ್‌ಕೋಂಬ್ ಎಂದರೇನು?
2. ಸಬ್ಡೊಲುಸೆಪ್ಸ್ ನೀಲಗಿರಿಯೆನ್ಸಿಸ್.
3. ಡೂಮ್ಸ್ ಡೇ ಸರ್ಫಿಂಗ್.
4. ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ.
ಸಾಮಾನ್ಯ ಅಧ್ಯಯನ ಪತ್ರಿಕೆ : 2
ವಿಷಯಗಳು: ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.
ಸಂವಿಧಾನದ 164 (3) ನೇ ವಿಧಿ:
ಸಂದರ್ಭ:
ಕೇರಳದಲ್ಲಿ ಹೊಸ ಸರ್ಕಾರಕ್ಕಾಗಿ ಆನ್‌ಲೈನ್ ಪ್ರಮಾಣವಚನದ ಬೇಡಿಕೆ ಹೆಚ್ಚಾಗುತ್ತಿದ್ದಂತೆ, ಸರ್ಕಾರವು ಆನ್‌ಲೈನ್ ಮೊಡ್ ಮೂಲಕ ಅಧಿಕಾರ ವಹಿಸಿಕೊಳ್ಳಲು ಕಾನೂನುಬದ್ಧವಾಗಿ ಯಾವುದೇ ನಿರ್ಬಂಧವಿಲ್ಲ ಎಂದು ನ್ಯಾಯಾಧೀಶರು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಇರುವ ಸಾಂವಿಧಾನಿಕ ನಿಬಂಧನೆಗಳು ಏನು?
ಸಂವಿಧಾನದ 164 (3) ನೇ ವಿಧಿಯ ಪ್ರಕಾರ, “ಒಬ್ಬ ಮಂತ್ರಿ ಅಧಿಕಾರ ವಹಿಸಿಕೊಳ್ಳುವ ಮೊದಲು, ರಾಜ್ಯಪಾಲರು ಸಂವಿಧಾನದ ಮೂರನೇ ಅನುಸೂಚಿಯಲ್ಲಿ ಈ ಉದ್ದೇಶಕ್ಕಾಗಿ ನಿಗದಿಪಡಿಸಿದ ಸ್ವರೂಪಗಳ ಪ್ರಕಾರ ಅವರಿಗೆ ಅಧಿಕಾರ ಮತ್ತು ಗೌಪ್ಯತೆಯ ಪ್ರಮಾಣವಚನವನ್ನು ನೀಡುತ್ತಾರೆ.”
- ಸಂವಿಧಾನದಲ್ಲಿ ಭೌತಿಕ ರೂಪದಲ್ಲಿಯೇ ಪ್ರಮಾಣವಚನ ಸ್ವೀಕರಿಸಬೇಕು ಎಂದು ಒತ್ತು ನೀಡಿರದ ಕಾರಣ ಆನ್‌ಲೈನ್ ಪ್ರಮಾಣವಚನಕ್ಕೆ ಯಾವುದೇ ನಿಷೇಧವಿಲ್ಲ.
ಅಗತ್ಯತೆ:
- ಕೋವಿಡ್ -19 ರ ಅಪಾಯಕಾರಿ ಪ್ರಸರಣವನ್ನು ದೃಷ್ಟಿಯಲ್ಲಿಟ್ಟುಕೊಂದು ಪ್ರಮಾಣವಚನ ಸ್ವೀಕರಿಸಲು ಭಾರತೀಯ ವೈದ್ಯಕೀಯ ಸಂಘ ಸೇರಿದಂತೆ ಹಲವಾರು ಸಂಸ್ಥೆಗಳು ಆನ್‌ಲೈನ್ ಮಾಧ್ಯಮವನ್ನು ಬೆಂಬಲಿಸಿವೆ.
- ಇದಲ್ಲದೆ, ಸಂವಿಧಾನದ ನಿರ್ಮಾತೃರು ‘ಆನ್‌ಲೈನ್’ ಪ್ರಪಂಚದ ಆಗಮನವನ್ನು ಊಹಿಸಿರಲಿಲ್ಲ ಆದ್ದರಿಂದ, ಸಂವಿಧಾನದಲ್ಲಿ, ಮಂತ್ರಿಗಳು ಹೇಗೆ ಅಧಿಕಾರ ವಹಿಸಿಕೊಳ್ಳಬೇಕೆಂಬುದರ ಬಗ್ಗೆ ಯಾವುದೇ ಉಲ್ಲೇಖವಿಲ್ಲ.
ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ, ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.
PM-CARES ನಿಧಿ:
ಸಂದರ್ಭ:
ಇತ್ತೀಚೆಗೆ, ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಲಾದ ಅರ್ಜಿಯಲ್ಲಿ, ಲಸಿಕೆಗಳನ್ನು ತ್ವರಿತವಾಗಿ ಸಂಗ್ರಹಿಸಲು ಮತ್ತು ಆಮ್ಲಜನಕ ಉತ್ಪಾದಕ ಸಾಧನಗಳನ್ನು ತಕ್ಷಣ ಖರೀದಿಸಲು ಅನುವಾಗುವಂತೆ ಮತ್ತು ದೇಶಾದ್ಯಂತ 738 ಜಿಲ್ಲಾ ಆಸ್ಪತ್ರೆಗಳಲ್ಲಿ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲು ಪಿಎಂ-ಕೇರ್ಸ್ ನಿಧಿಯನ್ನು ಬಳಸಿಕೊಳ್ಳಲು ನಿರ್ದೇಶನವನ್ನು ನೀಡುವಂತೆ ಕೋರಲಾಗಿದೆ.
- ಸರ್ಕಾರವು ತನ್ನ PM-CARES ನಿಧಿಯ ಪರ್ಸ್ ಅನ್ನು ಸಡಿಲಗೊಳಿಸುವ ಮೂಲಕ ಸಾಮಾನ್ಯ ಜನರಿಗೆ ವೈದ್ಯಕೀಯ ಆರೈಕೆ ಮತ್ತು ಆಮ್ಲಜನಕವನ್ನು ಪಡೆಯಲು ಸಹಾಯ ಮಾಡಬೇಕು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಇದರ ಅವಶ್ಯಕತೆ:
ದೇಶಾದ್ಯಂತದ ಪ್ರತಿ ಜಿಲ್ಲೆಯಲ್ಲೂ ಇರುವ ಸರ್ಕಾರಿ ಆಸ್ಪತ್ರೆಗಳು ಮೂಲಭೂತವಾಗಿ ಜೀವ ಉಳಿಸಲು ಬೆಂಬಲವಾಗಿರುವ ವೈದ್ಯಕೀಯ ಆಮ್ಲಜನಕದ ಅಗತ್ಯವಿರುವ ರೋಗಿಗಳಿಗೆ, ಯಾವುದೇ ವೆಚ್ಚವಿಲ್ಲದೆ ಸಾಮಾನ್ಯ ಜನರಿಗೆ ಸುಲಭವಾಗಿ ಲಭ್ಯವಿವೆ.
PM-CARES ನಿಧಿಯ ಕುರಿತು:
ಕೋವಿಡ್ -19 ಸಾಂಕ್ರಾಮಿಕ ಮತ್ತು ಇದೆ ರೀತಿಯ ಇತರ ತುರ್ತು ಪರಿಸ್ಥಿತಿಗಳಲ್ಲಿ ದೇಣಿಗೆ ಸ್ವೀಕರಿಸಲು ಮತ್ತು ಪರಿಹಾರವನ್ನು ಒದಗಿಸಲು ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪರಿಹಾರ (The Prime Minister’s Citizen Assistance and Relief in Emergency Situations – PM-CARES) ನಿಧಿಯನ್ನು ಸ್ಥಾಪಿಸಲಾಯಿತು.
PM-CARES ನಿಧಿ:
- ಮಾರ್ಚ್ 27, 2020 ರಂದು ‘ನೋಂದಣಿ ಕಾಯ್ದೆ, 1908’ ಅನ್ವಯ ಟ್ರಸ್ಟ್ ಉಯಿಲಿನೊಂದಿಗೆ ಪಿಎಂ-ಕೇರ್ಸ್ ಅನ್ನು ಸಾರ್ವಜನಿಕ ದತ್ತಿ ಟ್ರಸ್ಟ್ ಆಗಿ ಸ್ಥಾಪಿಸಲಾಯಿತು.
- ಇದು ವಿದೇಶಿ ಕೊಡುಗೆಯಿಂದ ಕೂಡ ದೇಣಿಗೆ ಪಡೆಯಬಹುದು ಮತ್ತು ಈ ನಿಧಿಗೆ ನೀಡುವ ದೇಣಿಗೆಯು 100% ತೆರಿಗೆ ವಿನಾಯಿತಿಯನ್ನು ಹೊಂದಿರುತ್ತದೆ.
- PM-CARES ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗಿಂತ (PMNRF) ಭಿನ್ನವಾಗಿದೆ.
PM-CARES ನಿಧಿಯನ್ನು ಯಾರು ನಿರ್ವಹಿಸುತ್ತಾರೆ?
ಪ್ರಧಾನ ಮಂತ್ರಿಯವರು ಪಿಎಂ ಕೇರ್ಸ್ ನಿಧಿಯ ಎಕ್ಸ್ ಆಫಿಸಿಯೊ ಚೇರ್ಮನ್ ಆಗಿದ್ದಾರೆ ಮತ್ತು ಭಾರತ ಸರ್ಕಾರದ ರಕ್ಷಣಾ ಸಚಿವರು, ಗೃಹ ವ್ಯವಹಾರಗಳ ಸಚಿವರು ಮತ್ತು ಹಣಕಾಸು ಸಚಿವರು, ಈ ನಿಧಿಯ ಎಕ್ಸ್-ಆಫಿಸಿಯೊ ಟ್ರಸ್ಟಿಗಳು ಆಗಿದ್ದಾರೆ.
ಸಾಮಾನ್ಯ ಅಧ್ಯಯನ ಪತ್ರಿಕೆ : 3
ವಿಷಯಗಳು: ಔದ್ಯೋಗಿಕ ಸಮಸ್ಯೆಗಳು.
2016 ರಿಂದ ಭಾರತೀಯ ಉತ್ಪಾದನಾ ವಲಯದಲ್ಲಿ ಉದ್ಯೋಗ ಕಡಿತಕ್ಕೆ ಕಾರಣಗಳೇನು?
(Why has Indian manufacturing been losing jobs since 2016?)
ಸಂದರ್ಭ:
ಆಗಾಗ್ಗೆ, “ಜೀವನ” ಮತ್ತು “ಜೀವನೋಪಾಯ” ಎಂಬ ಪದಗಳನ್ನು ಒಟ್ಟಿಗೆ ಉಲ್ಲೇಖಿಸಲಾಗುತ್ತದೆ. ಆದರೆ, ಪ್ರಸ್ತುತ ವ್ಯಾಪಕವಾಗಿ ಹರಡಿರುವ ಈ COVID 19 ಸಾಂಕ್ರಾಮಿಕವು ಈ ಎರಡು ಪದಗಳ ನಡುವೆ ವ್ಯತ್ಯಾಸವನ್ನುಂಟುಮಾಡಿದೆ: ಜೀವಗಳನ್ನು ಉಳಿಸುವ ಉದ್ದೇಶದಿಂದ ಕೈಗೊಂಡ ಕ್ರಮಗಳು ಜೀವನೋಪಾಯಕ್ಕೆ ಭಯಾನಕವೆಂದು ಸಾಬೀತಾಗಿವೆ.
ಪ್ರಸ್ತುತ ಸನ್ನಿವೇಶ ಹೇಗಿದೆ?
ಕೋವಿಡ್ ನ ಎರಡನೇ ಅಲೆಯು ಬರುವ ಮೊದಲು ಅಜೀಮ್ ಪ್ರೇಮ್‌ಜಿ ವಿಶ್ವವಿದ್ಯಾಲಯದ ‘ಉದ್ಯೋಗಸ್ಥ ಭಾರತದ ಸ್ಥಿತಿಗತಿ’ (State of Working India- SWI report 2021) ವರದಿ 2021 ರ ಪ್ರಕಾರ ಜೀವನೋಪಾಯದ ಮೇಲಿನ ಪರಿಣಾಮವು ಇಂತಿದೆ.
SWI ವರದಿಯ ಪ್ರಕಾರ:
- ಸಾಂಕ್ರಾಮಿಕ ರೋಗದಿಂದಾಗಿ, ಜನರು ತಮ್ಮ ಔಪಚಾರಿಕ ಉದ್ಯೋಗಗಳನ್ನು ಕಳೆದುಕೊಂಡಿದ್ದಾರೆ, ಮತ್ತು ಅನೌಪಚಾರಿಕ ಅಥವಾ ಪ್ರಾಸಂಗಿಕ ಕೆಲಸಗಳನ್ನು ಮಾಡಲು ಒತ್ತಾಯಿಸಲ್ಪಟ್ಟಿದ್ದಾರೆ, ಇದರಿಂದಾಗಿ ಅವರ ಆದಾಯದಲ್ಲಿ ಭಾರಿ ಇಳಿಕೆಯಾಗಿದೆ.
- ಕಳೆದ ಒಂದು ವರ್ಷದಲ್ಲಿ ಬಡತನದಲ್ಲಿನ ಹಠಾತ್ ಹೆಚ್ಚಳ ಕಂಡುಬಂದಿರುವುದರಲ್ಲಿ ಆಶ್ಚರ್ಯವೇನಿಲ್ಲ.
- ಮಹಾರಾಷ್ಟ್ರ, ಕೇರಳ, ತಮಿಳುನಾಡು, ಉತ್ತರ ಪ್ರದೇಶ ಮತ್ತು ದೆಹಲಿ ಉದ್ಯೋಗ ನಷ್ಟಕ್ಕೆ ಅಸಮಾನವಾಗಿ ಕೊಡುಗೆ ನೀಡಿವೆ.
‘ಭಾರತೀಯ ಆರ್ಥಿಕತೆಯ ಮೇಲ್ವಿಚಾರಣಾ ಕೇಂದ್ರ’ (Centre for Monitoring Indian Economy- CMIE) ಮತ್ತು ‘ಆರ್ಥಿಕ ದತ್ತಾಂಶ ಮತ್ತು ವಿಶ್ಲೇಷಣಾ ಕೇಂದ್ರ’ (Centre for Economic Data and Analysis- CEDA) ಗಳು ಜಂಟಿಯಾಗಿ ಸಿದ್ಧಪಡಿಸಿದ ವರದಿಯ ಪ್ರಕಾರ:
- ಕಳೆದ ಕೆಲವು ವರ್ಷಗಳಿಂದ, ಕೋವಿಡ್ ಇಲ್ಲದ ಸಂದರ್ಭದಲ್ಲಿಯೂ ಕೂಡ ಭಾರತೀಯ ಆರ್ಥಿಕತೆಯು ಹದಗೆಡುತ್ತಿದೆ.
- ಆರ್ಥಿಕತೆಯ ಉತ್ಪಾದನಾ ವಲಯದಲ್ಲಿ ಉದ್ಯೋಗಿಗಳ ಸಂಖ್ಯೆ 51 ದಶಲಕ್ಷದಿಂದ 27 ದಶಲಕ್ಷಕ್ಕೆ ಇಳಿದಿದೆ – ಅಂದರೆ, ಕೇವಲ ನಾಲ್ಕು ವರ್ಷಗಳ ಅವಧಿಯಲ್ಲಿ ಅರ್ಧದಷ್ಟು ಕಡಿತ!
- ಇದಲ್ಲದೆ, ಕೃಷಿಯಲ್ಲಿ ಉದ್ಯೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಅಷ್ಟೇ ನಿರಾಶಾದಾಯಕ ಸಂಗತಿಯೆಂದರೆ, ಹಣಕಾಸೇತರ ಸೇವೆಗಳಲ್ಲಿನ ಉದ್ಯೋಗವೂ ತೀವ್ರವಾಗಿ ಕುಸಿದಿದೆ.
ಉತ್ಪಾದನಾ ವಲಯದಲ್ಲಿ ಉದ್ಯೋಗದ ನಷ್ಟವು ಏಕೆ ಚಿಂತೆಯ ವಿಷಯವಾಗಿದೆ?
- ಸಾಂಪ್ರದಾಯಿಕವಾಗಿ, ದೇಶದ ಹೆಚ್ಚುವರಿ ಕಾರ್ಮಿಕ ಬಲವನ್ನು ಸದುಪಯೋಗಪಡಿಸಿಕೊಳ್ಳುವ ಉತ್ಪಾದನಾ ವಲಯವು ನಮ್ಮ ದೊಡ್ಡ ಆಶಯವಾಗಿದೆ ಎಂದು ಭಾರತೀಯ ನೀತಿ ನಿರೂಪಕರು ಅಭಿಪ್ರಾಯಪಟ್ಟಿದ್ದಾರೆ, ಇಲ್ಲದಿದ್ದರೆ ಈ ಹೆಚ್ಚುವರಿ ಕಾರ್ಮಿಕ ಬಲವು ಕೃಷಿಯಲ್ಲಿ ತೊಡಗಿರಬಹುದು.
- ಉತ್ಪಾದನಾ ವಲಯವು ಹೆಚ್ಚುವರಿ ಕಾರ್ಮಿಕ ಬಲವನ್ನು ನೇಮಿಸಿಕೊಳ್ಳಲು ಸಂಪೂರ್ಣವಾಗಿ ಸೂಕ್ತವಾಗಿರುತ್ತದೆ, ಏಕೆಂದರೆ, ಸೇವಾ ವಲಯಕ್ಕಿಂತ ಭಿನ್ನವಾಗಿ, ಉತ್ಪಾದನಾ ವಲಯದಲ್ಲಿ ಲಕ್ಷಾಂತರ ಕಡಿಮೆ ವಿದ್ಯಾವಂತ ಭಾರತೀಯ ಯುವಕರನ್ನು ನೇಮಿಸಿಕೊಳ್ಳಬಹುದು. ಸೇವಾ ವಲಯದಲ್ಲಿ ವಿದ್ಯಾವಂತ ಯುವಕರು ಉತ್ತಮ ಶಿಕ್ಷಣ ಮತ್ತು ಕೌಶಲ್ಯ ಮಟ್ಟವನ್ನು ಹೊಂದಿರುವುದು ಅಗತ್ಯವಾಗಿರುತ್ತದೆ.
ಭಾರತದ ಉತ್ಪಾದನಾ ವಲಯವು ಉದ್ಯೋಗಗಳನ್ನು ಸೃಷ್ಟಿಸುವಲ್ಲಿ ಏಕೆ ವಿಫಲವಾಗಿದೆ?
- ಉತ್ಪಾದನಾ ಘಟಕಗಳಿಗೆ, ಮೊದಲನೆಯದಾಗಿ ದೊಡ್ಡ ಪ್ರಮಾಣದ ಸ್ಥಿರ ಹೂಡಿಕೆಯ ಅಗತ್ಯವಿರುತ್ತದೆ.
- ಉತ್ಪಾದನಾ ವಲಯವು ಸಾಂಪ್ರದಾಯಿಕವಾಗಿ ಹೆಚ್ಚು ಅಪಾಯಕಾರಿಯಾದದ್ದು ಅಂದರೆ ಭಾರತೀಯ ಸರ್ಕಾರಗಳ ಹೆಚ್ಚು ಹಣದ ಬೇಡಿಕೆಯ (extractive nature)ಪ್ರವೃತ್ತಿಯು ಇದಕ್ಕೆ ಕಾರಣ, ಅರ್ಥಾತ್ ಭ್ರಷ್ಟಾಚಾರ, ಪೂರೈಕೆ ಕೊರತೆ ಇತ್ಯಾದಿ.
- ಅಲ್ಲದೆ, ಐತಿಹಾಸಿಕವಾಗಿ, ಭಾರತೀಯರು ಉತ್ಪಾದಿತ ಸರಕುಗಳನ್ನು ಯಾವಾಗಲೂ ಕಡಿಮೆ ಬಳಸುತ್ತಾರೆ ಮತ್ತು ತುಲನಾತ್ಮಕವಾಗಿ ಆಹಾರ ಮತ್ತು ಸೇವಾ ಕ್ಷೇತ್ರದ ಮೇಲೆ ಹೆಚ್ಚು ಖರ್ಚು ಮಾಡುತ್ತಾರೆ; (ಏಕೆಂದರೆ ಹೆಚ್ಚಿನ ಭಾರತೀಯರು ಸಾಕಷ್ಟು ಬಡವರಾಗಿದ್ದಾರೆ ಮತ್ತು ಅವರ ಹೆಚ್ಚಿನ ಆದಾಯವನ್ನು ಆಹಾರಕ್ಕಾಗಿ ಖರ್ಚು ಮಾಡಲಾಗುತ್ತದೆ, ಮೇಲಾಗಿ, ತಯಾರಿಸಿದ ವಸ್ತುಗಳ ದುರಸ್ತಿ ಮತ್ತು ನಿರ್ವಹಣೆಯ ವೆಚ್ಚವು ಹೆಚ್ಚು).
- ಭಾರತದ ನೀತಿಗಳಲ್ಲಿ, ಕಾರ್ಮಿಕ- ತೀವ್ರತೆಯ ಅಂದರೆ ಹೆಚ್ಚಿನ ಕಾರ್ಮಿಕ ಬಲವನ್ನು ಬಯಸುವ ಉತ್ಪಾದನಾ ಸಂಸ್ಥೆಗಳನ್ನು ಸಣ್ಣ ಪ್ರಮಾಣದ ಕೈಗಾರಿಕೆಗಳಾಗಿ ವರ್ಗೀಕರಿಸಲಾಗುತ್ತದೆ, ಇದರಿಂದಾಗಿ ಅವುಗಳ ಬೆಳವಣಿಗೆಗೆ ಅಡ್ಡಿ ಉಂಟಾಗುತ್ತದೆ.
- ರಫ್ತುಗಳಲ್ಲಿ ಆಕ್ರಮಣಶೀಲತೆಯನ್ನು ತೋರಿಸುವ ಮೂಲಕ ಭಾರತ ತನ್ನ ತೀವ್ರ-ಕಾರ್ಮಿಕ ತೀವ್ರ ಉತ್ಪಾದನಾ ಉತ್ಪನ್ನಗಳನ್ನು ಜಾಗತಿಕ ಪೂರೈಕೆ ಸರಪಳಿಗಳಲ್ಲಿ ಸಂಯೋಜಿಸಲು ಒತ್ತಾಯಿಸುತ್ತಿಲ್ಲ, ಬದಲಾಗಿ, ಸ್ವಾವಲಂಬನೆಯ ಹೆಸರಿನಲ್ಲಿ, ಆಮದನ್ನು ಬದಲಿಸುವ ಕಲ್ಪನೆಯನ್ನು ಜಾರಿಗೆ ತರಲಾಗುತ್ತಿದೆ.
ಮಹತ್ವಾಕಾಂಕ್ಷೆಯ ‘ಮೇಕ್ ಇನ್ ಇಂಡಿಯಾ’ (MII) ಉಪಕ್ರಮ ಮತ್ತು ಇತ್ತೀಚಿನ ಉತ್ಪಾದನಾ-ಸಂಬಂಧಿತ ಪ್ರೋತ್ಸಾಹಕ (PLI) ಯೋಜನೆಯ ಸಮಸ್ಯೆಗಳು:
ಈ ಉಪಕ್ರಮಗಳ ಉದ್ದೇಶವು ಮತ್ತೆ ಕಾರ್ಮಿಕ-ತೀವ್ರತೆಯ ಉತ್ಪಾದನೆಯಲ್ಲ, ಆದರೆ ಬಂಡವಾಳ-ತೀವ್ರತೆಯ ಉತ್ಪಾದನೆಯಾಗಿದೆ. ಇದಲ್ಲದೆ, ಇತ್ತೀಚಿನ ವರ್ಷಗಳಲ್ಲಿ, ಭಾರತವು ಸ್ವಯಂಪೂರ್ಣತೆಯನ್ನು ಅಥವಾ ಸ್ವಾವಲಂಬನೆಯನ್ನು ಸಾಧಿಸುವ ಉದ್ದೇಶದಿಂದ ಮತ್ತೊಮ್ಮೆ ರಕ್ಷಣಾತ್ಮಕ ವಿಧಾನಕ್ಕೆ ಮರಳುತ್ತಿದೆ.
ಸರಳವಾಗಿ ಹೇಳುವುದಾದರೆ:
ಉದ್ಯೋಗ ಸೃಷ್ಟಿಯ ದೃಷ್ಟಿಕೋಣದಿಂದ ಭಾರತವು ಎರಡು ರೀತಿಯ ಗಂಭೀರ ಮತ್ತು ಅಹಿತಕರ ಸನ್ನಿವೇಶವನ್ನು ಎದುರಿಸುತ್ತಿದೆ. ಉತ್ಪಾದನೆ ಮತ್ತು ನಿರ್ಮಾಣ ಕ್ಷೇತ್ರಗಳು ಉದ್ಯೋಗ ಸೃಷ್ಟಿಸುವ ಬದಲು ಅವುಗಳನ್ನು ಕಳೆದುಕೊಳ್ಳುತ್ತಿವೆ. ಇದಲ್ಲದೆ, ಕೋವಿಡ್‌ನಿಂದ ಉಂಟಾದ ಅಡೆತಡೆಗಳಿಂದಾಗಿ ಸೇವಾ ಉದ್ಯಮವು ದೊಡ್ಡ ಪ್ರಮಾಣದ ಉದ್ಯೋಗ ನಷ್ಟವನ್ನು ಅನುಭವಿಸಿದೆ, ಇದು ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಿದೆ.
ಈ ಸಮಯದ ಅವಶ್ಯಕತೆ:
ಭಾರತೀಯ ಉತ್ಪಾದನಾ ವಲಯವು ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಮತ್ತು ಕೃಷಿ ಕೆಲಸದಲ್ಲಿ ತೊಡಗಿರುವ ಹೆಚ್ಚುವರಿ ಕೌಶಲ್ಯರಹಿತ ಕಾರ್ಮಿಕ ಬಲವನ್ನು ಬಳಸಿಕೊಳ್ಳುವ ಭಾರತದ ಅತ್ಯುತ್ತಮ ಆಶಯವಾಗಿದೆ. ನೀತಿ ನಿರೂಪಕರು ಉತ್ಪಾದನಾ ವಲಯಕ್ಕೆ, ವಿಶೇಷವಾಗಿ ಅನೌಪಚಾರಿಕ ವಲಯದಲ್ಲಿ (ಉದಾ MSME) ಲಕ್ಷಾಂತರ ಹೊಸ ಉದ್ಯೋಗಗಳನ್ನು ಸೃಷ್ಟಿಸಲು ಹೆಚ್ಚಿನ ಕಾರ್ಮಿಕ ಬಲವನ್ನು ಬಯಸುವ ಕಾರ್ಮಿಕ-ತೀವ್ರ ಸಂಸ್ಥೆಗಳಿಗೆ (Labour intensive Firms) ಸಹಾಯ ಮಾಡಬೇಕಾಗುತ್ತದೆ ಮತ್ತು ಉತ್ತಮ ಮೂಲಸೌಕರ್ಯ ಮತ್ತು ಸುಲಭವಾದ ನಿಬಂಧನೆಗಳ / ನಿಯಂತ್ರಣಗಳ ಮೂಲಕ ಅವರಿಗೆ ಸಹಾಯ ಮಾಡಬೇಕಾಗುತ್ತದೆ.
ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.
ಚೀನಾದ ‘ಝೂರಾಂಗ್’ ರೋವರ್:
(China’s ‘Zhurong’ rover)
ಸಂದರ್ಭ:
ಇತ್ತೀಚೆಗೆ, ಚೀನಾದ ಮಾನವರಹಿತ ‘ಟಿಯಾನ್ವೆನ್1’ (Tianwen-1) ಬಾಹ್ಯಾಕಾಶ ನೌಕೆಯು ಮಂಗಳ ಗ್ರಹದ ಮೇಲ್ಮೈಗೆ ಸುರಕ್ಷಿತವಾಗಿ ಇಳಿದಿದೆ.
ಈ ಬಾಹ್ಯಾಕಾಶ ನೌಕೆ ಮಂಗಳ ಗ್ರಹದ ಉತ್ತರ ಗೋಳಾರ್ಧದಲ್ಲಿ ನೆಲೆಗೊಂಡಿರುವ ‘ಯುಟೋಪಿಯಾ ಪ್ಲಾನಿಟಿಯಾ’ (Utopia Planitia) ಎಂಬ ವಿಶಾಲ ಬಯಲಿನಲ್ಲಿ ಇಳಿದಿದೆ.
- ಇದಲ್ಲದೆ, ನಿಗೂಢ ಕೆಂಪು ಗ್ರಹವನ್ನು ಅನ್ವೇಷಿಸಲು ರೋವರ್ ಕಳುಹಿಸಿದ ಚೀನಾ, ವಿಶ್ವದ ಎರಡನೇ ದೇಶವಾಗಿದೆ.
- ಈ ಲ್ಯಾಂಡರ್ ನೊಂದಿಗೆ ಕಳುಹಿಸಲಾದ ‘ಝೂರಾಂಗ್’ ರೋವರ್ (‘Zhurong’ rover) ಅನ್ನು ಮಂಗಳ ಗ್ರಹದ ವಾತಾವರಣ ಮತ್ತು ಭೂವಿಜ್ಞಾನವನ್ನು ಅಧ್ಯಯನ ಮಾಡಲು ಶೀಘ್ರದಲ್ಲೇ ನಿಯೋಜಿಸಲಾಗುವುದು.
‘ಟಿಯಾನ್ವೆನ್1’ ಚೀನಾದ ಮಂಗಳ ಯೋಜನೆ:
ಜುಲೈ 2020 ರಲ್ಲಿ ಪ್ರಾರಂಭವಾದ ಈ ಯೋಜನೆಯು ಆರ್ಬಿಟರ್, ಲ್ಯಾಂಡರ್ ಮತ್ತು ಗಾಲ್ಫ್ ಕಾರ್ಟ್‌ನ ಗಾತ್ರದ ‘ಝೂರಾಂಗ್’ ರೋವರ್ ಅನ್ನು ಒಳಗೊಂಡಿದೆ.
ಈ ಬಾಹ್ಯಾಕಾಶ ನೌಕೆಯು ಈ ವರ್ಷದ ಫೆಬ್ರವರಿಯಲ್ಲಿ ಮಂಗಳ ಗ್ರಹದ ಕಕ್ಷೆಯನ್ನು ತಲುಪಿತು.
ಅಭಿಯಾನದ 5 ಪ್ರಮುಖ ವೈಜ್ಞಾನಿಕ ಉದ್ದೇಶಗಳು:
- ಮಂಗಳ ಗ್ರಹದ ಭೂವೈಜ್ಞಾನಿಕ ನಕ್ಷೆಯನ್ನು ರಚಿಸುವುದು.
- ಮಂಗಳ ಗ್ರಹದ ಮಣ್ಣಿನ ಗುಣಲಕ್ಷಣಗಳನ್ನು ಅನ್ವೇಷಿಸುವುದು ಮತ್ತು ನೀರು-ಮಂಜುಗಡ್ಡೆಯ ಸಂಭಾವ್ಯ ನಿಕ್ಷೇಪಗಳನ್ನು ಅನ್ವೇಷಿಸಲು.
- ಮಂಗಳ ಗ್ರಹದ ಮೇಲ್ಮೈ ವಸ್ತುವಿನ ಸಂಯೋಜನೆಯನ್ನು ವಿಶ್ಲೇಷಿಸುವುದು.
- ಮಂಗಳ ಗ್ರಹದ ವಾತಾವರಣ ಮತ್ತು ಹವಾಮಾನವನ್ನು ಮೇಲ್ಮೈಯಲ್ಲಿ ಪರಿಶೀಲಿಸುವುದು.
- ಮಂಗಳನ ವಿದ್ಯುತ್ಕಾಂತೀಯ ಮತ್ತು ಗುರುತ್ವಾಕರ್ಷಣ ಕ್ಷೇತ್ರಗಳನ್ನು ಅರ್ಥ ಮಾಡಿಕೊಳ್ಳಲು.
ಯಿಂಗ್ಹು -1 ಮಿಷನ್ (Yinghuo-1 mission)
ಚೀನಾ ಮಂಗಳ ಗ್ರಹಕ್ಕೆ ಬಾಹ್ಯಾಕಾಶ ನೌಕೆಯನ್ನು ಕಳುಹಿಸಲು ಪ್ರಯತ್ನಿಸುತ್ತಿರುವುದು ಇದೇ ಮೊದಲಲ್ಲ. ಇದಕ್ಕೂ ಮೊದಲು ಸುಮಾರು ಹತ್ತು ವರ್ಷಗಳ ಹಿಂದೆ ‘ಯಿಂಗ್ಹು-1 ಮಿಷನ್’ (Yinghuo-1 mission) ಮಿಷನ್ ಅನ್ನು ಚೀನಾ ಪ್ರಾರಂಭಿಸಿತ್ತು. ರಷ್ಯಾದ ರಾಕೆಟ್ ಸಾಗಿಸುತ್ತಿದ್ದ ಬಾಹ್ಯಾಕಾಶ ನೌಕೆಯು ಭೂಮಿಯ ವಾತಾವರಣದಲ್ಲಿದ್ದಾಗಲೆ ಸುಟ್ಟುಹೋದ ನಂತರ ಈ ಕಾರ್ಯಾಚರಣೆಯು ವಿಫಲವಾಯಿತು.
ಮುಂದಿನ ನಡೆ ಏನು?
‘ಝೂರಾಂಗ್’ ರೋವರ್ ತನ್ನ ಕಾರ್ಯಾಚರಣೆಯನ್ನು ಯಾವುದೇ ಅಡೆತಡೆಯಿಲ್ಲದೆ ಪ್ರಾರಂಭಿಸಿದರೆ, ಚೀನಾ ದೇಶವು, ಮಂಗಳವನ್ನು ಯಶಸ್ವಿಯಾಗಿ ಪರಿಭ್ರಮಿಸಿದ, ಅದರ ಮೇಲ್ಮೈಯಲ್ಲಿ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮತ್ತು ರೋವರ್ ಅನ್ನು ತನ್ನ ಮೊದಲ ಮಂಗಳ ಕಾರ್ಯಾಚರಣೆಯ ಸಮಯದಲ್ಲಿ ನಿಯೋಜಿಸಿದ (Offload) ಮೊದಲ ಯಶಸ್ವಿ ದೇಶವಾಗಲಿದೆ.
ಮಂಗಳಕ್ಕೆ ರೋವರ್ ಕಳುಹಿಸುವಲ್ಲಿ ಇತರ ಯಾವ ದೇಶಗಳು ಯಶಸ್ವಿಯಾಗಿವೆ?
ಚೀನಾದ ಹೊರತಾಗಿ, ಯುನೈಟೆಡ್ ಸ್ಟೇಟ್ಸ್ ಮಾತ್ರ ಕೆಂಪು ಗ್ರಹದ ಮೇಲ್ಮೈಯನ್ನು ಅಧ್ಯಯನ ಮಾಡಲು ರೋವರ್‌ಗಳನ್ನು ಯಶಸ್ವಿಯಾಗಿ ನಿಯೋಜಿಸಿದ ಸಮರ್ಥ ದೇಶವಾಗಿದೆ.
- ಜುಲೈ 1976 ರಲ್ಲಿ, ಮಂಗಳ ಗ್ರಹದ ಮೇಲೆ ಮೊದಲ ಯಶಸ್ವಿ ಲ್ಯಾಂಡಿಂಗ್ ಅನ್ನು ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಾದ ನಾಸಾ ಮಾಡಿದೆ. ಈ ಕಾರ್ಯಾಚರಣೆಯಲ್ಲಿ, ವೈಕಿಂಗ್ 1 ರೋವರ್ ಮಂಗಳನ ಮೇಲ್ಮೈಗೆ ಇಳಿಯಿತು.
- ಸ್ವಲ್ಪ ಸಮಯದ ನಂತರ, ವೈಕಿಂಗ್ 2 ಅನ್ನು ರೆಡ್ ಪ್ಲಾನೆಟ್ ಗೆ ಕಳುಹಿಸಲಾಯಿತು.
- ನಂತರದ ದಶಕಗಳಲ್ಲಿ, ಮಂಗಳ ಗ್ರಹವನ್ನು ಅನ್ವೇಷಿಸಲು ಅಮೆರಿಕಾ ಸಂಯುಕ್ತ ಸಂಸ್ಥಾನವು ಸ್ಪಿರಿಟ್ ಮತ್ತು ಆಪರ್ಚುನಿಟಿ ರೋವರ್‌ಗಳನ್ನು ಕಳುಹಿಸಿತು.
- ಈ ವರ್ಷದ ಫೆಬ್ರವರಿಯಲ್ಲಿ, ನಾಸಾದ ‘ಪರ್ಸೇವೆರನ್ಸ್ ರೋವರ್’ (Perseverance rover) ಮಂಗಳನ ಮೇಲ್ಮೈಯಲ್ಲಿರುವ ‘ಜೆಜೆರೊ ಕ್ರೇಟರ್’ (Jezero Crater) ಗೆ ಇಳಿಯಿತು ಮತ್ತು ಗ್ರಹದಲ್ಲಿ ಹಿಂದೆ ಇದ್ದಿರಬಹುದಾದ ಜೀವಿಗಳ ಕುರುಹುಗಳನ್ನು ಕಂಡುಹಿಡಿಯುವ ಕೆಲಸವನ್ನು ಪ್ರಾರಂಭಿಸಿದೆ.
ವಿಷಯಗಳು: ವಿಜ್ಞಾನ ಮತ್ತು ತಂತ್ರಜ್ಞಾನ- ಬೆಳವಣಿಗೆಗಳು ಮತ್ತು ಅವುಗಳ ಅನ್ವಯಗಳು ಮತ್ತು ದೈನಂದಿನ ಜೀವನದಲ್ಲಿ ಅವುಗಳ ಪರಿಣಾಮಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು; ತಂತ್ರಜ್ಞಾನದ ದೇಶೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು.
ಜಿಯೋಲೈಟ್ ಕಾರ್ಗೋ ಫ್ಲೈಟ್ ಸೇವೆಯನ್ನು ಪ್ರಾರಂಭಿಸಿದ ಏರ್ ಇಂಡಿಯಾ:
(Air India begins zeolite cargo flight service)
ಸಂದರ್ಭ:
ವೈದ್ಯಕೀಯ ಆಮ್ಲಜನಕ ಸ್ಥಾವರಗಳಲ್ಲಿ ಬಳಕೆಗಾಗಿ ವಿಶ್ವದಾದ್ಯಂತ ಜಿಯೋಲೈಟ್ ಅನ್ನು ಆಮದು ಮಾಡುವ ಪ್ರಕ್ರಿಯೆಯನ್ನು ಭಾರತ ಸರ್ಕಾರವು ಪ್ರಾರಂಭಿಸುವುದರೊಂದಿಗೆ ರಾಷ್ಟ್ರೀಯ ವಾಹಕ ಏರ್ ಇಂಡಿಯಾ ತನ್ನ ಮೊದಲ “ಜಿಯೋಲೈಟ್ ಸರಕು ಹಾರಾಟ” ಗಳನ್ನು ಭಾರತ ಸರ್ಕಾರದ ಸಹಯೋಗದಲ್ಲಿ ಪ್ರಾರಂಭಿಸಿದೆ.
ಈ ಸರಕುಗಳಿಗೆ ಚಾರ್ಟರ್ ಆಗಿ ಸರ್ಕಾರವು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಯನ್ನು ನೇಮಿಸಿದೆ.
ಪ್ರಧಾನಮಂತ್ರಿಯ ನಾಗರಿಕ ನೆರವು ಮತ್ತು ತುರ್ತು ಪರಿಸ್ಥಿತಿಗಳ ಪರಿಹಾರ (Prime Minister’s Citizen Assistance and Relief in Emergency Situations (PM CARES) ನಿಧಿಯಡಿಯಲ್ಲಿ DRDO ಈ ವೈದ್ಯಕೀಯ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸಲಿದೆ.
ವೈದ್ಯಕೀಯ ಆಮ್ಲಜನಕ ಘಟಕಗಳಲ್ಲಿ ಜಿಯೋಲೈಟ್ ಬಳಕೆ:
DRDO ಅಭಿವೃದ್ಧಿಪಡಿಸುತ್ತಿರುವ ತಂತ್ರಜ್ಞಾನವು ಆಮ್ಲಜನಕದ ಉತ್ಪಾದನೆಯಲ್ಲಿ ಒತ್ತಡದ ಸ್ವಿಂಗ್ ಹೊರಹೀರುವ ಪ್ರಕ್ರಿಯೆ ಮತ್ತು ಆಣ್ವಿಕ ಜರಡಿ ಜಿಯೋಲೈಟ್ (uses the pressure swing adsorption process and molecular sieve zeolite) ಅನ್ನು ಬಳಸುತ್ತದೆ.
- ಜಿಯೋಲೈಟ್‌ಗಳನ್ನು ಆಡ್ಸರ್ಬೆಂಟ್ ವಸ್ತುವಾಗಿ ಬಳಸಲಾಗುತ್ತದೆ.
- ಆಮ್ಲಜನಕದ ಸಾಂದ್ರಕವು (oxygen concentrator) ವಾತಾವರಣದಲ್ಲಿನ ಸಾರಜನಕವನ್ನು ಹೀರಿಕೊಳ್ಳಲು ಜಿಯೋಲೈಟ್ ಗಳನ್ನು ಬಳಸುತ್ತದೆ ಮತ್ತು ನಂತರ ಸಾರಜನಕವನ್ನು ಹೊರಹಾಕುತ್ತದೆ. ಇದು ರೋಗಿಗಳ ಬಳಕೆಗಾಗಿ ಆಮ್ಲಜನಕ ಅನಿಲವನ್ನು ಬಿಡುತ್ತದೆ.
- ಅಧಿಕ ಒತ್ತಡದಲ್ಲಿ, ಜಿಯೋಲೈಟ್ ಗಳ ಮೇಲ್ಮೈ ವಿಸ್ತೀರ್ಣವು ಹೆಚ್ಚಾಗುತ್ತದೆ ಮತ್ತು ಇದರಿಂದಾಗಿ ಇದು ಹೆಚ್ಚಿನ ಪ್ರಮಾಣದ ಸಾರಜನಕವನ್ನು ಹೀರಿಕೊಳ್ಳಲು ಸಾಧ್ಯವಾಗುತ್ತದೆ.
ಒತ್ತಡ / ಪ್ರೆಷರ್ ಸ್ವಿಂಗ್ ಹೊರಹೀರುವಿಕೆ: (Pressure Swing Adsorption)
ಪ್ರೆಷರ್ ಸ್ವಿಂಗ್ ಆಡ್ಸರ್ಪ್ಶನ್ (PSA) ಎನ್ನುವುದು ಕೆಲವು ಅನಿಲ ಪ್ರಭೇದಗಳನ್ನು ಒತ್ತಡದಲ್ಲಿರುವ ಅನಿಲಗಳ ಮಿಶ್ರಣದಿಂದ ಬೇರ್ಪಡಿಸಲು ಬಳಸುವ ತಂತ್ರಜ್ಞಾನವಾಗಿದೆ. ಇದು ಅವುಗಳ ಹೊರಹೀರುವ ವಸ್ತು ಮತ್ತು ಅನಿಲ ವರ್ಗದ ಆಣ್ವಿಕ ಗುಣಲಕ್ಷಣಗಳಿಗೆ ಹೋಲುತ್ತದೆ.
- PSAಸಮೀಪದ ತಾಪಮಾನದಲ್ಲಿ ಕಾರ್ಯನಿರ್ವಹಿಸುತ್ತದೆ ಅಥವಾ ಇದು ವಾತಾವರಣದ ಸರಿಸುಮಾರು ತಾಪಮಾನದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಅನಿಲ ವಿಭಜನೆಯ ಕ್ರಯೋಜೆನಿಕ್ ಬಟ್ಟಿ ಇಳಿಸುವಿಕೆಯ ತಂತ್ರಜ್ಞಾನಕ್ಕಿಂತ ಸಾಕಷ್ಟು ಭಿನ್ನವಾಗಿರುತ್ತದೆ
- ನಿರ್ದಿಷ್ಟ ಹೊರಹೀರುವ (Adsorbent) ವಸ್ತುಗಳನ್ನು (ಉದಾ., E ಜಿಯೋಲೈಟ್‌ಗಳು, ಸಕ್ರಿಯ ಇಂಗಾಲ, ಆಣ್ವಿಕ ಜರಡಿ, ಇತ್ಯಾದಿ) ಬಲೆಯಂತೆ (trap) ಬಳಸಲಾಗುತ್ತದೆ, ಇದು ಹೆಚ್ಚಿನ ಒತ್ತಡದಲ್ಲಿ ಉದ್ದೇಶಿತ ಅನಿಲ ಪ್ರಭೇದಗಳನ್ನು ಆದ್ಯತೆಯಾಗಿ ಹೀರಿಕೊಳ್ಳುತ್ತದೆ.
ಜಿಯೋಲೈಟ್‌ಗಳು ಎಂದರೇನು?
ಜಿಯೋಲೈಟ್‌ಗಳು ಮೈಕ್ರೋಪೋರಸ್ ಆಗಿದ್ದು ಅಲ್ಯೂಮಿನಿಯಂ ಸಿಲಿಕೇಟ್‌ನ ಸೂಕ್ಷ್ಮ, ಮೂರು ಆಯಾಮದ ಸ್ಫಟಿಕದಂತಹ ಘನವಸ್ತುಗಳಾಗಿವೆ. ಜಿಯೋಲೈಟ್‌ಗಳು ಸ್ಥಿರ ಗಾತ್ರದ ಸಣ್ಣ ರಂಧ್ರಗಳನ್ನು ಹೊಂದಿದ್ದು ಅದು ಸಣ್ಣ ಅಣುಗಳನ್ನು ಸುಲಭವಾಗಿ ಹಾದುಹೋಗಲು ಅನುವು ಮಾಡಿಕೊಡುತ್ತದೆ ಆದರೆ ದೊಡ್ಡ ಅಣುಗಳು ಅವುಗಳ ಮೂಲಕ ಹಾದುಹೋಗಲು ಸಾಧ್ಯವಿಲ್ಲ; ಅದಕ್ಕಾಗಿಯೇ ಅವುಗಳನ್ನು ಕೆಲವೊಮ್ಮೆ ಆಣ್ವಿಕ ಜರಡಿ (molecular sieve) ಎಂದು ಕರೆಯಲಾಗುತ್ತದೆ.
- ಜಿಯೋಲೈಟ್‌ಗಳು ನೈಸರ್ಗಿಕವಾಗಿ ರೂಪಗೊಳ್ಳಬಹುದು ಅಥವಾ ಸಂಶ್ಲೇಷಿಸಬಹುದು.
ಜಿಯೋಲೈಟ್‌ಗಳ ಗುಣಲಕ್ಷಣಗಳು:
- ವಿವಿಧ ಪರಿಸರ ಪರಿಸ್ಥಿತಿಗಳಲ್ಲಿ ಜಿಯೋಲೈಟ್‌ಗಳು ಸಾಕಷ್ಟು ಸ್ಥಿರವಾದ ಘನವಸ್ತುಗಳಾಗಿವೆ. ಜಿಯೋಲೈಟ್‌ನ ಕರಗುವ ಬಿಂದು ತುಂಬಾ ಹೆಚ್ಚಾಗಿದೆ, ಅಂದರೆ 1000° C.
- ಅವು ನೀರಿನಲ್ಲಿ ಅಥವಾ ಇತರ ಯಾವುದೇ ಅಜೈವಿಕ ದ್ರಾವಣದಲ್ಲಿ ಕರಗುವುದಿಲ್ಲ.
- ಅವು ಗಾಳಿಯ ಉಪಸ್ಥಿತಿಯಲ್ಲಿ ಆಕ್ಸಿಡೀಕರಣಗೊಳ್ಳುವುದಿಲ್ಲ.
- ಅಲ್ಯೂಮಿನಾ-ಸಮೃದ್ಧ ಜಿಯೋಲೈಟ್‌ಗಳು ನೀರಿನಂತಹ ಧ್ರುವೀಯ ಅಣುಗಳಿಗೆ (polar molecules) ಆಕರ್ಷಿತವಾಗಿದ್ದರೆ, ಸಿಲಿಕಾ-ಭರಿತ ಜಿಯೋಲೈಟ್‌ಗಳು ಧ್ರುವೇತರ ಅಣುಗಳ ಕಡೆಗೆ ಆಕರ್ಷಿತವಾಗುತ್ತವೆ.
- ಜಿಯೋಲೈಟ್‌ಗಳು ಪ್ರತಿಕ್ರಿಯಾತ್ಮಕವಾಗಿಲ್ಲ ಮತ್ತು ನೈಸರ್ಗಿಕವಾಗಿ ಕಂಡುಬರುವ ಖನಿಜಗಳಿಂದ ಪಡೆದಿರುವುದರಿಂದ, ಅವು ಯಾವುದೇ ಹಾನಿಕಾರಕ ಪರಿಸರ ಪರಿಣಾಮಗಳನ್ನು ಹೊಂದಿರುವುದಿಲ್ಲ; ಆದಾಗ್ಯೂ, ಚರ್ಮದ ಸಂಪರ್ಕಕ್ಕೆ ಬಂದಾಗ ಅಥವಾ ಉಸಿರಾಟದ ಮೂಲಕ ಮಾನವ ದೇಹಕ್ಕೆ ಪ್ರವೇಶಿಸಿದಾಗ ‘ಕ್ಯಾನ್ಸರ್’ ಬರುವ ಅಪಾಯವಿದೆ.
ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.:
10 ವರ್ಷಗಳಲ್ಲಿ 186 ಆನೆಗಳು ರೈಲು ಅಪಘಾತಗಳಿಂದಾಗಿ ಸಾವನ್ನಪ್ಪಿವೆ:
(186 elephants killed on rail tracks in over 10 years)
ಸಂದರ್ಭ:
ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ (MoEFCC) ಪ್ರಕಾರ, 2009-10 ಮತ್ತು 2020-21ರ ನಡುವೆ, ಭಾರತದಾದ್ಯಂತ ರೈಲುಗಳಿಗೆ ಡಿಕ್ಕಿಹೊಡೆದು ಒಟ್ಟು 186 ಆನೆಗಳು ಸಾವನ್ನಪ್ಪಿವೆ.
ಅಸ್ಸಾಂನಲ್ಲಿ, ರೈಲ್ವೆ ಹಳಿಗಳಲ್ಲಿ ಗರಿಷ್ಠ (62) ಆನೆಗಳ ಸಾವು ಸಂಭವಿಸಿದರೆ, ನಂತರದ ಸ್ಥಾನಗಳಲ್ಲಿ, ಪಶ್ಚಿಮ ಬಂಗಾಳ (57), ಮತ್ತು ಒಡಿಶಾ (27) ಗಳಿವೆ.
ತೆಗೆದುಕೊಳ್ಳಲಾದ ಪ್ರಮುಖ ಕ್ರಮಗಳು:
- ರೈಲ್ವೆ ಅಪಘಾತಗಳಿಂದ ಆನೆ ಸಾವು ಸಂಭವಿಸುವುದನ್ನು ತಡೆಗಟ್ಟಲು ರೈಲ್ವೆ ಸಚಿವಾಲಯ (ರೈಲ್ವೆ ಮಂಡಳಿ) ಮತ್ತು MoEFCC ನಡುವೆ ಶಾಶ್ವತ ಸಮನ್ವಯ ಸಮಿತಿಯನ್ನು ರಚಿಸುವುದು.
- ಲೊಕೊ ಪೈಲಟ್‌ಗಳಿಗೆ ಸ್ಪಷ್ಟವಾದ ನೋಟವನ್ನು ಒದಗಿಸಲು ರೈಲ್ವೆ ಹಳಿಗಳ ಉದ್ದಕ್ಕೂ ಇರುವ ಮರಗಳು ಮತ್ತು ಸಸ್ಯ ವರ್ಗವನ್ನು ತೆರವುಗೊಳಿಸುವುದು.
- ಲೊಕೊ ಪೈಲಟ್‌ಗಳಿಗಾಗಿ, ಆನೆಗಳ ಉಪಸ್ಥಿತಿಯನ್ನು ತಿಳಿಸಲು ಸೂಕ್ತ ಸ್ಥಳಗಳಲ್ಲಿ ಎಚ್ಚರಿಕೆ ಸೂಚನಾ ಫಲಕಗಳನ್ನು ಬಳಸುವುದು.
- ರೈಲ್ವೆ ಹಳಿಗಳ ಮೇಲೆ ಎತ್ತರದ ವಿಭಾಗಗಳ ಇಳಿಜಾರನ್ನು ನಿಯಂತ್ರಿಸುವುದು.
- ಆನೆಗಳ ಸುರಕ್ಷಿತ ಚಲನೆಗಾಗಿ ಅಂಡರ್‌ಪಾಸ್ / ಓವರ್‌ಪಾಸ್ ನಿರ್ಮಾಣ.
- ಆನೆ ಚಲನೆಯ (ಆನೆ ಕಾರಿಡಾರ್) ಸೂಕ್ಷ್ಮ ಭಾಗಗಳಲ್ಲಿ ಸೂರ್ಯಾಸ್ತದಿಂದ ಸೂರ್ಯೋದಯದವರೆಗೆ ರೈಲಿನ ವೇಗವನ್ನು ನಿಯಂತ್ರಿಸುವುದು.
- ಮುಂಚೂಣಿ ಸಿಬ್ಬಂದಿ ಮತ್ತು ಅರಣ್ಯ ಇಲಾಖೆಯ ವನ್ಯಜೀವಿ ಮೇಲ್ವಿಚಾರಕರಿಂದ ರೈಲ್ವೆ ಹಳಿಗಳ ಸೂಕ್ಷ್ಮ ವಿಭಾಗಗಳಲ್ಲಿ ನಿಯಮಿತವಾಗಿ ಗಸ್ತು ತಿರುಗುವುದು.
ಪರಿಹಾರವಾಗಿ ಪರಿಸರ ಸೇತುವೆಗಳು:
- ಪರಿಸರ ಸೇತುವೆಗಳು ಅಥವಾ ‘ (Eco-Bridges) ವನ್ಯಜೀವಿ ಕಾರಿಡಾರ್‌ಗಳಾಗಿವೆ, ಇದನ್ನು ವನ್ಯಜೀವಿ ಕ್ರಾಸಿಂಗ್‌ಗಳು ಎಂದೂ ಕರೆಯುತ್ತಾರೆ, ಇದೇ ರೀತಿಯ ವನ್ಯಜೀವಿ ಆವಾಸಸ್ಥಾನಗಳ ಎರಡು ದೊಡ್ಡ ಪ್ರದೇಶಗಳನ್ನು ಸಂಪರ್ಕಿಸುತ್ತದೆ. ಇವು ವನ್ಯಜೀವಿಗಳ ಆವಾಸಸ್ಥಾನಗಳ ನಡುವಿನ ಕೊಂಡಿಯಂತೆ ವರ್ತಿಸುತ್ತವೆ.
- ಪರಿಸರ-ಸೇತುವೆಗಳು ಮಾನವ ಚಟುವಟಿಕೆಗಳು ಅಥವಾ ರಸ್ತೆಗಳು ಮತ್ತು ಹೆದ್ದಾರಿಗಳು, ಇತರ ಮೂಲಸೌಕರ್ಯ ಅಭಿವೃದ್ಧಿ ಮತ್ತು ಕೃಷಿಯಂತಹ ರಚನೆಗಳಿಂದಾಗಿ ಪ್ರತ್ಯೇಕಿಸಲ್ಪಟ್ಟ ವನ್ಯಜೀವಿ ಜನಸಂಖ್ಯೆಯನ್ನು ಪರಸ್ಪರ ಜೋಡಿಸುತ್ತವೆ.
- ಪರಿಸರ ಸೇತುವೆಯ ಉದ್ದೇಶ ವನ್ಯಜೀವಿ ಸಂಪರ್ಕವನ್ನು ಹೆಚ್ಚಿಸುವುದು.
- ಪರಿಸರ ಸೇತುವೆಗಳನ್ನು ಸ್ಥಳೀಯ ಸಸ್ಯವರ್ಗದಿಂದ ನಿರ್ಮಿಸಲಾಗಿದೆ, ಅಂದರೆ, ಭೂದೃಶ್ಯವನ್ನು ಹತ್ತಿರದಿಂದ ನೋಡಲು ಸ್ಥಳೀಯ ಮರಗಳಿಂದ ಇದನ್ನು ತಯಾರಿಸಲಾಗುತ್ತದೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
ವಿಂಚ್‌ಕೋಂಬ್ ಎಂದರೇನು?
(What is Winchcombe?)
- ಇದು ಒಂದು ಉಲ್ಕಾಶಿಲೆ (Meteorite) ಆಗಿದೆ.
- ಫೆಬ್ರವರಿ 2021 ರಲ್ಲಿ, ಯುನೈಟೆಡ್ ಕಿಂಗ್ಡಮ್ ನ ಗ್ಲೌಸೆಸ್ಟರ್‌ಶೈರ್‌ನಲ್ಲಿರುವ ‘ವಿಂಚ್‌ಕಂಬ್’ (Winchcombe) ಎಂಬ ನಗರದ ಭೂ ಮೇಲ್ಮೈಯಲ್ಲಿ,
‘Winchcombe meteorite’ ನ ಒಂದು ಭಾಗವು ಬಿದ್ದಿತು.
- ಇದು ಮುಂದಿನ ವಾರದಿಂದ ರಾಷ್ಟ್ರೀಯ ಇತಿಹಾಸ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಗೊಳ್ಳಲಿದೆ.
ಉಲ್ಕೆ(Meteoroid), ಉಲ್ಕಾಶಿಲೆ(Meteor) ಮತ್ತು ಉಲ್ಕಾಶಿಲೆ (Meteorite) ನಡುವಿನ ವ್ಯತ್ಯಾಸವು ವಸ್ತು ಇರುವ ಸ್ಥಳವನ್ನು ಹೊರತುಪಡಿಸಿ ಬೇರೇನೂ ಅಲ್ಲ:
- ಉಲ್ಕೆಗಳು ಬಾಹ್ಯಾಕಾಶದಲ್ಲಿ ಇರುವ ವಸ್ತುಗಳಾಗಿದ್ದು ಅವು ಧೂಳಿನ ಕಣಗಳಿಂದ ಹಿಡಿದು ಕ್ಷುದ್ರಗ್ರಹ ಗಳವರೆಗೆ ವಿಸ್ತಾರವನ್ನು ಹೊಂದಿರುತ್ತವೆ ಮತ್ತು ಅವು ಸೂರ್ಯನ ಸುತ್ತ ಸುತ್ತುತ್ತವೆ.
- ಉಲ್ಕಾಶಿಲೆ ಭೂಮಿಯ ವಾತಾವರಣಕ್ಕೆ ಪ್ರವೇಶಿಸುವಾಗ ಉಲ್ಕೆ ಆವಿಯಾದಾಗ, ಆ ಸಮಯದಲ್ಲಿ ಸಂಭವಿಸುವ ಈ ಆಪ್ಟಿಕಲ್ ಘಟನೆಯನ್ನು ಉಲ್ಕಾಶಿಲೆ ಎಂದು ಕರೆಯಲಾಗುತ್ತದೆ, ಇದನ್ನು ‘ಬೀಳುವ ನಕ್ಷತ್ರ’ ಎಂದೂ ಕರೆಯುತ್ತಾರೆ.
- ಉಲ್ಕಾಶಿಲೆ, ಇದು ಭೂಮಿಯ ವಾತಾವರಣಕ್ಕೆ ಪ್ರವೇಶಿಸಿ ಭೂಮಿಯ ಮೇಲ್ಮೈಯಲ್ಲಿ ಅಪ್ಪಳಿಸಿದರೆ ಅದನ್ನು ಉಲ್ಕಾಶಿಲೆ ಎಂದು ಕರೆಯಲಾಗುತ್ತದೆ.
ಸಬ್ಡೊಲುಸೆಪ್ಸ್ ನೀಲಗಿರಿಯೆನ್ಸಿಸ್:
(Subdoluseps nilgiriensis)
ಇತ್ತೀಚೆಗೆ,ಕೊಯಮತ್ತೂರಿನ ಅನೈಕಟ್ಟಿ ಬೆಟ್ಟಗಳಲ್ಲಿ ಪತ್ತೆಯಾದ ಇದು ಏಷ್ಯನ್ ಗ್ರ್ಯಾಸಿಲ್ ಸ್ಕಿಂಕ್ (Asian gracile skink) ನ ಹೊಸ ಪ್ರಭೇದವಾಗಿದೆ.
- ಸ್ಕಿಂಕ್ (Skink), ಒಂದು ರೀತಿಯ ಸರೀಸೃಪ ಜೀವಿ, ಅದು ‘ಹಲ್ಲಿ ವರ್ಗ’ದ ಅಡಿಯಲ್ಲಿ ಬರುತ್ತದೆ.
- ಈ ಪ್ರಭೇದವು ಕಳೆದ ಸಹಸ್ರಮಾನದ ಅವಧಿಯಲ್ಲಿ ಭಾರತದ ಮುಖ್ಯ ಭೂಭಾಗದಲ್ಲಿ ಪತ್ತೆಯಾದ ಮೂರನೇ ಸ್ಕಿಂಕ್ ಪ್ರಭೇದವಾಗಿದೆ.
- ಈ ಸರೀಸೃಪವು, ಸುಮಾರು 7 ಸೆಂ.ಮೀ ತೆಳ್ಳಗಿನ ದೇಹವನ್ನು ಹೊಂದಿದೆ ಮತ್ತು ಇದು ಮರಳು ಕಂದು ಬಣ್ಣದ್ದಾಗಿದೆ. ಸ್ಕಿಂಕ್ ನ ಕೈ ಮತ್ತು ಕಾಲುಗಳು ಬಹುತೇಕ ಗೋಚರಿಸುವುದಿಲ್ಲ, ಆದ್ದರಿಂದ ಇದು ಹಾವಿನಂತೆ ಗೋಚರಿಸುತ್ತದೆ.
- ಹೆಚ್ಚಿನ ಸ್ಕಿಂಕ್ ಗಳು ದೈನಂದಿನ ಮತ್ತು ವಿಷಕಾರಿಯಲ್ಲ.
- ಸ್ಕಿಂಕ್ ಗಳು, ಗೆದ್ದಲುಹುಳು, ಸಣ್ಣ ಜೇಡಗಳು, ಸೀಗಡಿಗಳು ಇತ್ಯಾದಿಗಳನ್ನು ಆಹಾರವಾಗಿ ಸೇವಿಸುತ್ತವೆ.
- ಪ್ರಸ್ತುತ, ಇದನ್ನು ‘ಅಪಾಯಕ್ಕೊಳಗಾಗಬಲ್ಲ’ (Vulnerable) ಪ್ರಭೇದ ಎಂದು ವರ್ಗೀಕರಿಸಲಾಗಿದೆ.
ಡೂಮ್ಸ್ ಡೇ ಸರ್ಫಿಂಗ್:
(Doomsday Surfing)
‘ಡೂಮ್ಸ್ ಡೇ ಸರ್ಫಿಂಗ್’ ಎಂದರೆ ದಿನಪೂರ್ತಿ ಸರ್ಫಿಂಗ್ ಮಾಡುವುದು, ಸುದ್ದಿಗಳು ಎಷ್ಟೇ ದುರಂತಮಯ ಅಥವಾ ನಿರಾಶಾದಾಯಕವಾಗಿದ್ದರೂ ನಿರಂತರವಾಗಿ ಅಂತರ್ಜಾಲದಲ್ಲಿ ಕೆಟ್ಟ ಸುದ್ದಿಗಳನ್ನು ನೋಡುವುದು ಮತ್ತು ಹುಡುಕುವುದು ಎಂದರ್ಥ.
ಕಾಳಜಿಯ ವಿಷಯವೇನು?
ಕೋವಿಡ್ -19 ಬಗ್ಗೆ ಅನೇಕ ಜನರು ತಡೆರಹಿತವಾಗಿ ಅಥವ ನಿರಂತರವಾಗಿ ಕೆಟ್ಟ ಸುದ್ದಿಗಳನ್ನು ಓದುತ್ತಿದ್ದಾರೆ ಎಂದು ಕಂಡುಬಂದಿದೆ, ಈ ಪ್ರಕ್ರಿಯೆಯಲ್ಲಿ, ಅವರು ತಮ್ಮ ಅಮೂಲ್ಯವಾದ ನಿದ್ರೆಯ ಸಮಯ ಮತ್ತು ನಿರ್ಣಾಯಕವಾದ ಕೆಲಸದ ಸಮಯವನ್ನು ಸಹ ತ್ಯಾಗ ಮಾಡುತ್ತಿದ್ದಾರೆ.
ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ:
(National Crisis Management Committee- NCMC)
ನೈಸರ್ಗಿಕ ವಿಕೋಪಗಳ ಹಿನ್ನೆಲೆಯಲ್ಲಿ ಪರಿಹಾರ ಕ್ರಮಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ, ಭಾರತ ಸರ್ಕಾರವು ಕ್ಯಾಬಿನೆಟ್ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ಶಾಶ್ವತ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿಯನ್ನು ರಚಿಸಿದೆ.
- ಇತರ ಸದಸ್ಯರು: ಈ ಸಮಿತಿಯ ಸದಸ್ಯರು ಸಂಬಂಧಪಟ್ಟ ಎಲ್ಲಾ ಸಂಸ್ಥೆಗಳ ಮತ್ತು ಸಚಿವಾಲಯಗಳು/ಇಲಾಖೆಗಳ ಕಾರ್ಯದರ್ಶಿಗಳು.
- ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣಾ ಸಮಿತಿ (NCMC) ಅಗತ್ಯವಿದ್ದರೆ ‘ಕ್ರೈಸಿಸ್ ಮ್ಯಾನೇಜ್‌ಮೆಂಟ್ ಗ್ರೂಪ್’ (CMG) ಗೆ ನಿರ್ದೇಶನಗಳನ್ನು ನೀಡುತ್ತದೆ.