Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 15ನೇ ಮೇ 2021

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಮಂಗೋಲಿಯನ್ ಕಾಂಜುರ್ ಹಸ್ತಪ್ರತಿಗಳು.

2. ಬಸವ ಜಯಂತಿ.

3. ‘ತೌಕ್ತೇ’ ಚಂಡಮಾರುತ.

 

ಸಾಮಾನ್ಯ ಅಧ್ಯಯನ ಪತ್ರಿಕೆ  2:

1. ಅಪರಾಧಿಗಳನ್ನು ಗೃಹಬಂಧನದಲ್ಲಿ ಏಕಿರಿಸಬಾರದು ಎಂದು ಪ್ರಶ್ನಿಸಿದ ಸುಪ್ರೀಂಕೋರ್ಟ್.

2. ಕೈಗೆಟುಕುವ ಮತ್ತು ಮಧ್ಯಮ-ಆದಾಯ ಗುಂಪಿನವರ ವಸತಿಗಾಗಿ ವಿಶೇಷ ವಿಂಡೋ (SWAMIH).

3. ಬ್ರಿಕ್ಸ್ ಔದ್ಯೋಗಿಕ ಕಾರ್ಯನಿರತ ಗುಂಪು (EWG) ಸಭೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. PM-ಕಿಸಾನ್ ಯೋಜನೆ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಭಾರತದ ಮೊದಲ ಒಲಿಂಪಿಕ್ ಬೌಂಡ್ ಫೆನ್ಸರ್ ಭವಾನಿ ದೇವಿ.

2. ಇಂಡಿಕೇಟಿವ್ ನೋಟ್ಸ್ (ಸೂಚಕ ಟಿಪ್ಪಣಿಗಳು).

3. ಪಂಜಾಬ್ ನ 23ನೇ ಜಿಲ್ಲೆಯಾಗಿ ಮಲೆರ್ ಕೋಟ್ಲಾ.

4. ಗೋವಾ ಮ್ಯಾರಿಟೈಮ್ ಸಿಂಪೋಸಿಯಮ್ (GMS) –

5. ಕೆಂಪು-ಕಿವಿಯ ಸ್ಲೈಡರ್ (ಆಮೆ).

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಕಲಾ ಪ್ರಕಾರಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

 ಮಂಗೋಲಿಯನ್ ಕಾಂಜುರ್ ಹಸ್ತಪ್ರತಿಗಳು.


((Mongolian Kanjur Manuscripts)

 ಸಂದರ್ಭ:

ಮುಂದಿನ ವರ್ಷದ ವೇಳೆಗೆ ಸುಮಾರು 100 ಸೆಟ್ ಗಳ ಪವಿತ್ರ ಮಂಗೋಲಿಯನ್ ಕಂಜೂರ್ ಹಸ್ತಪ್ರತಿಗಳು ಮಂಗೋಲಿಯಾದ, ಬೌದ್ಧ ಧರ್ಮದ ಪ್ರಮುಖ ಕೇಂದ್ರಗಳಿಗೆ ವಿತರಣೆಮಾಡಲು ಮರುಮುದ್ರಣಗೊಳ್ಳುವ ನಿರೀಕ್ಷೆಯಿದೆ ಎಂದು ಸಂಸ್ಕೃತಿ ಸಚಿವಾಲಯ ತಿಳಿಸಿದೆ.

 

ಮಂಗೋಲಿಯನ್ ಕಂಜೂರ್ ಎಂದರೇನು?

ಮಂಗೋಲಿಯನ್ ಭಾಷೆಯಲ್ಲಿ, ಕಂಜೂರ್’ (Kanjur) ಎಂದರೆ; ಸಂಕ್ಷಿಪ್ತ ಆದೇಶಗಳು -ವಿಶೇಷವಾಗಿ ಭಗವಾನ್ ಬುದ್ಧನ ಬೋಧನೆಗಳು.

 1. ಇವುಗಳು ಮಂಗೋಲಿಯನ್ ಬೌದ್ಧರಲ್ಲಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿವೆ ಮತ್ತು ಅವರು ದೇವಾಲಯಗಳಲ್ಲಿ ಕಂಜೂರ್ ಅನ್ನು ಪೂಜಿಸುತ್ತಾರೆ ಮತ್ತು ತಮ್ಮ ದೈನಂದಿನ ಜೀವನದಲ್ಲಿ ‘ಕಂಜೂರ್’ ನ ಸಾಲುಗಳನ್ನು ಧಾರ್ಮಿಕ ಪದ್ಧತಿಯಾಗಿ ಪಠಿಸುತ್ತಾರೆ.
 2. ಮಂಗೋಲಿಯನ್ ‘ಕಂಜೂರ್’ ಅನ್ನು ಟಿಬೆಟಿಯನ್ ಭಾಷೆಯಿಂದ ಅನುವಾದಿಸಲಾಗಿದೆ. ‘ಕಂಜೂರ್’ ಭಾಷೆ ಶಾಸ್ತ್ರೀಯ ಮಂಗೋಲಿಯನ್ ಆಗಿದೆ.

 

ಭಾರತ ಮತ್ತು ಮಂಗೋಲಿಯಾ ನಡುವಿನ ಐತಿಹಾಸಿಕ ಸಂಬಂಧಗಳು:

 1. ಭಾರತ ಮತ್ತು ಮಂಗೋಲಿಯಾ ನಡುವಿನ ಐತಿಹಾಸಿಕ ಸಂಬಂಧಗಳು ಶತಮಾನಗಳಷ್ಟು ಪುರಾತನವಾಗಿದೆ.
 2. ಮಂಗೋಲಿಯಾಕ್ಕೆ ಬೌದ್ಧಧರ್ಮವನ್ನು ಕ್ರಿ.ಶ.ದ ಆರಂಭದಲ್ಲಿ ಭಾರತೀಯ ಸಾಂಸ್ಕೃತಿಕ ಮತ್ತು ಧಾರ್ಮಿಕ ರಾಯಭಾರಿಗಳು ಸಾಗಿಸಿದರು.
 3. ಇದರ ಫಲವಾಗಿ, ಇಂದು ಮಂಗೋಲಿಯಾದಲ್ಲಿ ಬೌದ್ಧಧರ್ಮವು ಅತಿ ಹೆಚ್ಚು ಧಾರ್ಮಿಕ ಪ್ರಾಬಲ್ಯವನ್ನು ಹೊಂದಿದ ದೊಡ್ಡ ಧಾರ್ಮಿಕ ಪಂಗಡ ವಾಗಿದೆ.
 4. ಮಂಗೋಲಿಯಾದೊಂದಿಗೆ ಭಾರತದ ಔಪಚಾರಿಕ ರಾಜತಾಂತ್ರಿಕ ಸಂಬಂಧಗಳನ್ನು 1955 ರಲ್ಲಿ ಸ್ಥಾಪಿಸಲಾಯಿತು. ಅಂದಿನಿಂದ, ಉಭಯ ದೇಶಗಳ ನಡುವಿನ ನಿಕಟ ಸಂಬಂಧವು ಹೊಸ ಎತ್ತರವನ್ನು ತಲುಪಿದೆ.

 

ರಾಷ್ಟ್ರೀಯ ಹಸ್ತಪ್ರತಿಗಳ ಮಿಷನ್’ ಬಗ್ಗೆ:

ರಾಷ್ಟ್ರೀಯ ಹಸ್ತಪ್ರತಿಗಳ ಮಿಷನ್ (National Mission for Manuscripts- NMM) ಅನ್ನು ಫೆಬ್ರವರಿ 2003 ರಲ್ಲಿ ಭಾರತ ಸರ್ಕಾರದ ಪ್ರವಾಸೋದ್ಯಮ ಮತ್ತು ಸಂಸ್ಕೃತಿ ಸಚಿವಾಲಯ ಪ್ರಾರಂಭಿಸಿತು.

 1. ಇದರ ಕಾರ್ಯ, ಹಸ್ತಪ್ರತಿಗಳಲ್ಲಿ ಸಂರಕ್ಷಿಸಲಾಗಿರುವ ಜ್ಞಾನವನ್ನು ದಾಖಲಿಸುವುದು, ಸಂರಕ್ಷಿಸುವುದು ಮತ್ತು ಪ್ರಸಾರ ಮಾಡುವುದು.
 2. ಅಪರೂಪದ ಮತ್ತು ಅಪ್ರಕಟಿತ ಹಸ್ತಪ್ರತಿಗಳನ್ನು ಪ್ರಕಟಿಸುವ ಉದ್ದೇಶವನ್ನು ಈ ಮಿಷನ್ ಹೊಂದಿದೆ, ಇದರಿಂದಾಗಿ ಅವುಗಳಲ್ಲಿ ಸಂಗ್ರಹವಾದ ಜ್ಞಾನವನ್ನು ಸಂಶೋಧಕರು, ವಿದ್ವಾಂಸರು, ಸಾರ್ವಜನಿಕವಾಗಿ ಜನಸಾಮಾನ್ಯರ ನಡುವೆ ದೊಡ್ಡ ಪ್ರಮಾಣದಲ್ಲಿ ಪ್ರಸಾರ ಮಾಡಬಹುದು.

 

ಹಿನ್ನೆಲೆ:

ಭಾರತವು ಸುಮಾರು ಹತ್ತು ದಶಲಕ್ಷ ಹಸ್ತಪ್ರತಿಗಳನ್ನು ಹೊಂದಿದೆ, ಬಹುಶಃ ಇದು ವಿಶ್ವದ ಅತಿದೊಡ್ಡ ಸಂಗ್ರಹವಾಗಿದೆ. ಇವು ವಿವಿಧ ವಿಷಯಗಳು, ಸಂಗತಿಗಳು ಮತ್ತು ಸೌಂದರ್ಯಶಾಸ್ತ್ರ, ಲಿಪಿಗಳು, ಭಾಷೆಗಳು, ಕ್ಯಾಲಿಗ್ರಫಿ, ಮತ್ತು ವಿವರಣೆಯನ್ನು ಒಳಗೊಂಡಿವೆ.

 

ವಿಷಯಗಳು: ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಕಲಾ ಪ್ರಕಾರಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ಬಸವ ಜಯಂತಿ:


ಸಂದರ್ಭ:

ಬಸವಜಯಂತಿಯು,12 ನೇ ಶತಮಾನದ ಕವಿ-ದಾರ್ಶನಿಕ ಮತ್ತು ಲಿಂಗಾಯತ ಪಂಥದ ಸ್ಥಾಪಕ ಸಂತರಾದ ಬಸವಣ್ಣನವರ ಜನ್ಮದಿನಾಚರಣೆಯನ್ನು ಸಂಕೇತಿಸುತ್ತದೆ.

 1. ಈ ವರ್ಷ ಬಸವಜಯಂತಿಯನ್ನು 2021ರ ಮೇ 14 ರಂದು ಭಕ್ತಿಪೂರ್ವಕವಾಗಿ ಆಚರಿಸಲಾಯಿತು.

 

ಬಸವಣ್ಣ ,ಅವರ ಆಲೋಚನೆಗಳು ಮತ್ತು ಕೊಡುಗೆಗಳು:

 1. 12 ನೇ ಶತಮಾನದ ತತ್ವಜ್ಞಾನಿ, ರಾಜನೀತಜ್ಞ ಕನ್ನಡ ಕವಿ ಮತ್ತು ಸಾಮಾಜಿಕ ಸುಧಾರಕರಾದ ಬಸವಣ್ಣ ಕರ್ನಾಟಕದ ಕಲಚೂರಿ ರಾಜವಂಶದ ಅರಸ 1ನೆ ಬಿಜ್ಜಳನ ಆಳ್ವಿಕೆಯಲ್ಲಿ ಜೀವಿಸಿದ್ದರು.
 2. ಜನಪ್ರಿಯವಾಗಿ ವಚನಗಳು ಎಂದು ಕರೆಯವ ತಮ್ಮ ಕಾವ್ಯದ ಮೂಲಕ ಸಾಮಾಜಿಕ ಜಾಗೃತಿಯನ್ನು ಬಸವಣ್ಣನವರು ಹರಡಿದರು.
 3. ಬಸವಣ್ಣ ಲಿಂಗ ಅಥವಾ ಸಾಮಾಜಿಕ ತಾರತಮ್ಯ, ಮೂಢನಂಬಿಕೆಗಳು ಮತ್ತು ಆಚರಣೆಗಳನ್ನು ತಿರಸ್ಕರಿಸಿದರು.
 4. ಅವರು ಅನುಭವ ಮಂಟಪ (ಅಥವಾ “ಆಧ್ಯಾತ್ಮಿಕ ಅನುಭವದ ಸಭಾಂಗಣ”) ದಂತಹ ಹೊಸ ಸಾರ್ವಜನಿಕ ಸಂಸ್ಥೆಗಳನ್ನು ಪರಿಚಯಿಸಿದರು,ಇದು ಜೀವನದ ಆಧ್ಯಾತ್ಮಿಕ ಮತ್ತು ಲೌಕಿಕ ಪ್ರಶ್ನೆಗಳನ್ನು ಬಹಿರಂಗವಾಗಿ ಚರ್ಚಿಸಲು ಎಲ್ಲಾ ಸಾಮಾಜೋ-ಆರ್ಥಿಕ ಹಿನ್ನೆಲೆಯಿಂದ ಬಂದ ಪುರುಷರು ಮತ್ತು ಮಹಿಳೆಯರನ್ನು ಸ್ವಾಗತಿಸಿತು.
 5. ಒಬ್ಬ ನಾಯಕನಾಗಿ, ಅವರು ವಿರಶೈವರು ಅಥವಾ “ಶಿವನ ಉತ್ಸಾಹಭರಿತ, ಶ್ರೇಷ್ಠ ಆರಾಧಕರು”, ಎಂಬ ಹೆಸರಿನ ಹೊಸ ಭಕ್ತಿ ಚಳವಳಿಯಲ್ಲಿಯನ್ನು ಅಭಿವೃದ್ಧಿಪಡಿಸಿ, ಪ್ರೇರೇಪಿಸಿದರು. ಈ ಚಳುವಳಿಯು 7 ರಿಂದ 11 ನೇ ಶತಮಾನದಲ್ಲಿ ನಡೆಯುತ್ತಿದ್ದ ತಮಿಳು ಭಕ್ತಿ ಚಳವಳಿಯಲ್ಲಿ, ವಿಶೇಷವಾಗಿ ಶೈವ ನಾಯನಾರ್ ಸಂಪ್ರದಾಯಗಳಲ್ಲಿ ತನ್ನ ಮೂಲವನ್ನು ಹಂಚಿಕೊಂಡಿತ್ತು.
 6. ಬಸವಣ್ಣ ದೇವಾಲಯದ ಪೂಜೆ ಮತ್ತು ಬ್ರಾಹ್ಮಣರ ನೇತೃತ್ವದ ಆಚರಣೆಗಳನ್ನು ತಿರಸ್ಕರಿಸಿ ಭಕ್ತಿ ಪೂಜೆಯನ್ನು ಮುನ್ನಡೆಸಿದರು ಮತ್ತು ಅದನ್ನು ವೈಯಕ್ತಿಕವಾಗಿ ಧರಿಸುವ ವಸ್ತುಗಳಾದ ಇಷ್ಟ ಲಿಂಗದಂತಹ ಚಿಹ್ನೆಗಳ ಪೂಜಾಭ್ಯಾಸಗಳ ಮೂಲಕ ಶಿವನ ವೈಯಕ್ತಿಕ ನೇರ ಆರಾಧನೆಯೊಂದಿಗೆ ಬದಲಾಯಿಸಿದರು.
 7. ಅವರು ಅಧ್ಯಕ್ಷತೆ ವಹಿಸಿದ್ದ ಶರಣ ಚಳುವಳಿ ಎಲ್ಲಾ ಜಾತಿಯ ಜನರನ್ನು ಆಕರ್ಷಿಸಿತು, ಮತ್ತು ಭಕ್ತಿ ಚಳವಳಿಯ ಅನೇಕ ಎಳೆಗಳಂತೆ, ವೀರಶೈವ ಸಂತರ ಆಧ್ಯಾತ್ಮಿಕ ವಿಶ್ವವನ್ನು ಅನ್ವೇಷಿಸುವ ಸಾಹಿತ್ಯದ ಭಂಡಾರವಾದ ವಚನಗಳ ಸೃಷ್ಟಿಗೆ ಕಾರಣವಾಯಿತು ಮತ್ತು ವೀರಶೈವ ಸಂತರ ಆಧ್ಯಾತ್ಮಿಕ ವಿಶ್ವವನ್ನು ಅನಾವರಣಗೊಳಿಸಿತು.
 8. ಬಸವಣ್ಣನ ಶರಣ ಚಳವಳಿಯ ಸಮತಾವಾದವು ಆ ಕಾಲಕ್ಕೆ ತುಂಬಾ ಆಮೂಲಾಗ್ರವಾಗಿತ್ತು.
 9. ಅವರು ಸ್ಥಾಪಿಸಿದ ಅನುಭವ ಮಂಟಪದಲ್ಲಿ, ವಿವಿಧ ಜಾತಿ ಮತ್ತು ಸಮುದಾಯಗಳಿಂದ ಬಂದ ಶರಣರು ಒಟ್ಟುಗೂಡಿ, ಕಲಿಕೆ ಮತ್ತು ಚರ್ಚೆಗಳಲ್ಲಿ ತೊಡಗಿದರು.

 

ವಿಷಯಗಳು: ಭೂಕಂಪಗಳು, ಸುನಾಮಿ, ಜ್ವಾಲಾಮುಖಿ ಚಟುವಟಿಕೆಗಳು ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು, ಭೌಗೋಳಿಕ ಲಕ್ಷಣಗಳು ಮತ್ತು ಅವುಗಳ ಸ್ಥಳ- ನಿರ್ಣಾಯಕ ಭೌಗೋಳಿಕ ವೈಶಿಷ್ಟ್ಯಗಳಲ್ಲಿನ ಬದಲಾವಣೆಗಳು (ಸಾಗರಗಳು ಮತ್ತು ಐಸ್-ಕ್ಯಾಪ್ಗಳು ಸೇರಿದಂತೆ) ಮತ್ತು ಸಸ್ಯ ಮತ್ತು ಪ್ರಾಣಿ ಮತ್ತು ಅಂತಹ ಬದಲಾವಣೆಗಳ ಪರಿಣಾಮಗಳು.

‘ತೌಕ್ತೇ’ ಚಂಡಮಾರುತ:


(Cyclone ‘Tauktae’)

 ಸಂದರ್ಭ:

ಪ್ರಸ್ತುತ ಲಕ್ಷದ್ವೀಪದ ಮೇಲೆ ಕೇಂದ್ರೀಕೃತವಾಗಿರುವ ತೌಕ್ತೇ ಚಂಡಮಾರುತವು ‘ವಿನಾಶಕಾರಿ ಚಂಡಮಾರುತ’ವಾಗಿ ಬದಲಾಗಿದೆ.

 1. ಮುಂದಿನ 24 ಗಂಟೆಗಳಲ್ಲಿ ಇದು ಹೆಚ್ಚು ತೀವ್ರವಾದ, ಭೀಕರವಾದ ಚಂಡಮಾರುತವಾಗಿ ಬದಲಾಗುವ ಸಾಧ್ಯತೆಯಿದೆ.
 2. ಚಂಡಮಾರುತವು ವಾಯುವ್ಯ ದಿಕ್ಕಿನಲ್ಲಿ ಚಲಿಸುತ್ತಿದೆ ಮತ್ತು ಮೇ 18 ರೊಳಗೆ ಗುಜರಾತ್ ಕರಾವಳಿಯ ಸಮೀಪ ತಲುಪುವ ಸಾಧ್ಯತೆಯಿದೆ.

india_metrological_dep

ಹಿನ್ನೆಲೆ:

ವಿಶ್ವ ಹವಾಮಾನ ಸಂಸ್ಥೆ (World Meteorological Organisation- WMO) ಚಂಡಮಾರುತದ ಹೆಸರುಗಳ ಆವರ್ತನ ಪಟ್ಟಿಯನ್ನು ನಿರ್ವಹಿಸುತ್ತದೆ.

ಚಂಡಮಾರುತಕ್ಕೆ ‘ತೌಕ್ತೇ’ ಎಂಬ ಪದವನ್ನು ‘ಮ್ಯಾನ್ಮಾರ್’ ಸೂಚಿಸಿದೆ, ಇದರರ್ಥ ಬರ್ಮೀಸ್ ಭಾಷೆಯಲ್ಲಿ ವಿಶಿಷ್ಟವಾದ ಗಾಯನ ಹಲ್ಲಿ ‘ಗೆಕ್ಕೊ’ (Gecko) ಎಂದಾಗಿದೆ.

 1. ಕಳೆದ ವರ್ಷ ಭಾರತೀಯ ಹವಾಮಾನ ಇಲಾಖೆ (IMD) ಬಿಡುಗಡೆ ಮಾಡಿದ 169 ಚಂಡಮಾರುತಗಳ ಹೆಸರುಗಳ ಹೊಸ ಪಟ್ಟಿಯಲ್ಲಿ ಇದು ನಾಲ್ಕನೇ ಹೆಸರು.

 

ಚಂಡಮಾರುತಗಳ ನಾಮಕರಣ ಪ್ರಕ್ರಿಯೆ:

 1. 2000 ನೇ ವರ್ಷದಲ್ಲಿ ಒಮಾನ್‌ ಸುಲ್ತಾನೆಟ್, ಮಸ್ಕತ್‌,ನಲ್ಲಿ ಆಯೋಜಿಸಲಾದ WMO/ESCAP 27 ನೇ ಅಧಿವೇಶನದಲ್ಲಿ ಬಂಗಾಳಕೊಲ್ಲಿಯಲ್ಲಿ ಮತ್ತು ಅರೇಬಿಯನ್ ಸಮುದ್ರದಲ್ಲಿ ಉಗಮವಾಗುವ ಉಷ್ಣವಲಯದ ಚಂಡಮಾರುತಗಳನ್ನು ಹೆಸರಿಸಲು ಉಷ್ಣವಲಯದ ಚಂಡಮಾರುತಗಳ ಕುರಿತ ಸಮಿತಿಯು (Panel on Tropical Cyclones – PTC) ತಾತ್ವಿಕವಾಗಿ ಒಪ್ಪಿಕೊಂಡಿತು.
 2. WMO / ESCAP ಎಂದರೆ ‘ವಿಶ್ವ ಹವಾಮಾನ ಹವಾಮಾನ ಸಂಸ್ಥೆ’ (World Meteorological Organisation- WMO) ಮತ್ತು ‘ಏಷ್ಯಾ ಮತ್ತು ಪೆಸಿಫಿಕ್ ಗಾಗಿನವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗ’ (United Nations Economic and Social Commission for Asia and the Pacific) ವಾಗಿದೆ.
 3. ಉತ್ತರ ಹಿಂದೂ ಮಹಾಸಾಗರದಲ್ಲಿ ಹುಟ್ಟುವ ಉಷ್ಣವಲಯದ ಚಂಡಮಾರುತಗಳಿಗೆ ಹೆಸರನ್ನು ಇಡುವ ಸಂಪ್ರದಾಯವನ್ನು ಸೆಪ್ಟೆಂಬರ್ 2004 ರಲ್ಲಿ ಪ್ರಾರಂಭಿಸಲಾಯಿತು, ಆಗಿನ WMO / ESCAP PTCಯ ಎಂಟು ಸದಸ್ಯ ರಾಷ್ಟ್ರಗಳು: ಬಾಂಗ್ಲಾದೇಶದಿಂದ ಆರಂಭಗೊಂಡು, ಭಾರತ, ಮಾಲ್ಡೀವ್ಸ್, ಮ್ಯಾನ್ಮಾರ್, ಓಮನ್, ಪಾಕಿಸ್ತಾನ, ಶ್ರೀಲಂಕಾ ಮತ್ತು ಥೈಲ್ಯಾಂಡ್ ಪ್ರಸ್ತಾಪಿಸಿದ ಹೆಸರುಗಳನ್ನು ಚಂಡಮಾರುತಗಳಿಗೆ ಇಡಲಾಗುತ್ತದೆ. ಅಂದಿನಿಂದ, ಉಷ್ಣವಲಯದ ಚಂಡಮಾರುತಗಳ ಸಮಿತಿಗೆ (PTC)ಇತರ ಐದು ಸದಸ್ಯ ರಾಷ್ಟ್ರಗಳು ಸೇರಿವೆ.
 4. ನವದೆಹಲಿಯ ‘ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರ’ (Regional Specialised Meteorological Centre- RSMC), ಬಂಗಾಳಕೊಲ್ಲಿಯ ಮತ್ತು ಅರೇಬಿಯನ್ ಸಮುದ್ರದ ಮೇಲೆ ರೂಪುಗೊಳ್ಳುವ ಚಂಡಮಾರುತಗಳಿಗೆ ಅವುಗಳು ಸೂಕ್ತವಾದ ತೀವ್ರತೆಯನ್ನು ತಲುಪಿದಾಗ ಹೆಸರಿಸಲು ಜವಾಬ್ದಾರಿ ಹೊಂದಿದೆ.
 5. ವಿಶ್ವಾದ್ಯಂತ ಒಟ್ಟು ಆರು ‘ಪ್ರಾದೇಶಿಕ ವಿಶೇಷ ಹವಾಮಾನ ಕೇಂದ್ರಗಳು’ (RSMCs) ಇವೆ, ಇದರಲ್ಲಿ ‘ಭಾರತೀಯ ಹವಾಮಾನ ಇಲಾಖೆ’ (IMD) ಮತ್ತು ಐದು ಉಷ್ಣವಲಯದ ಚಂಡಮಾರುತ ಎಚ್ಚರಿಕೆ ಕೇಂದ್ರಗಳು ಸೇರಿವೆ.

 

ಚಂಡಮಾರುತದ ಉಗಮಕ್ಕೆ ಕಾರಣವಾದ ಅಂಶಗಳು:

 1. ಸಾಗರದ ಜಲರಾಶಿಯ ಮೇಲ್ಮೈ ಉಷ್ಣಾಂಶ > 27 ಡಿಗ್ರಿ ಸೆಲ್ಸಿಯಸ್.
 • ಸಾಗರಿಕ ಪ್ರವಾಹಗಳು
 • ಸಮುದ್ರದ ಗಾತ್ರ
 • ಉಷ್ಣ ಜಲರಾಶಿಯ ಆಳ (50-70 ಮೀ)
 1. ದ್ವೀಪಗಳ ಸಮೂಹ.
 1. ಭೂ-ಅಕ್ಷ ಭ್ರಮಣೀಯ ಬಲ (Corriolis Force).
 1. ಉನ್ನತ ಸ್ತರದಲ್ಲಿ ವಿಸರ್ಜನೆ.
 1. ಪ್ರಚಲನೆ ವಾಯುವಿನ ವೇಗದಲ್ಲಿ ಕನಿಷ್ಠ ಬದಲಾವಣೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ, ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.

ಅಪರಾಧಿಗಳನ್ನು ಗೃಹಬಂಧನದಲ್ಲಿ ಏಕಿರಿಸಬಾರದು ಎಂದು ಪ್ರಶ್ನಿಸಿದ ಸುಪ್ರೀಂಕೋರ್ಟ್:


(Why not place convicts under house arrest, asks SC)

ಸಂದರ್ಭ:

ಜೈಲುಗಳಲ್ಲಿ ಅತಿಯಾದ ದಟ್ಟಣೆ ತಪ್ಪಿಸಲು ಅಪರಾಧಿಗಳನ್ನು ಗೃಹಬಂಧನದಲ್ಲಿ ಇರಿಸುವ ವಿಚಾರವನ್ನು ಪರಿಗಣಿಸುವಂತೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಶಾಸಕಾಂಗವನ್ನು ಕೇಳಿದೆ.

 

ಹಿನ್ನೆಲೆ:

ಸ್ವಲ್ಪ ಸಮಯದ ಹಿಂದೆ, ಸಾಮಾಜಿಕ ಕಾರ್ಯಕರ್ತ ಗೌತಮ್ ನವಲಖಾ ಅವರು ಸುಪ್ರೀಂ ಕೋರ್ಟ್‌ನಲ್ಲಿ ಡೀಫಾಲ್ಟ್ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು.

ಅರ್ಜಿದಾರರು ಹಲವಾರು ದಿನಗಳ ಕಾಲ ಗೃಹಬಂಧನದಲ್ಲಿ ಇದ್ದ ಆಧಾರದ ಮೇಲೆ ‘ಡೀಫಾಲ್ಟ್ ಜಾಮೀನು’ ನೀಡಬೇಕು ಎಂದು ವಾದಿಸಿದ್ದರು.ಸುಪ್ರೀಂ ಕೋರ್ಟ್ ನೀಡಿದ 206 ಪುಟಗಳ ತೀರ್ಪು ಈ ಅರ್ಜಿಯನ್ನು ಆಧರಿಸಿದೆ.

 

ಇದರ ಅಗತ್ಯತೆ:

 1. ಜೈಲುಗಳಲ್ಲಿ ಅತಿಯಾದ ಜನದಟ್ಟಣೆ – ಅಂದರೆ, ಜೈಲುಗಳಲ್ಲಿ ವಾಸಿಸುವ ಕೈದಿಗಳ ಪ್ರಮಾಣವು 2019 ರಲ್ಲಿ 118.5% ಕ್ಕೆ ಏರಿತು.
 2. 2019 ರಲ್ಲಿ ವಿಚಾರಣಾಧೀನ ಕೈದಿಗಳ ಸಂಖ್ಯೆ 3,30,487 ಆಗಿದ್ದು, ಇದು ಒಟ್ಟು ಕೈದಿಗಳ ಸಂಖ್ಯೆಯಲ್ಲಿ 69.05% ಆಗಿದೆ.
 3. ಬಂದಿಖಾನೆ ಇಲಾಖೆಗೆ ಬಜೆಟ್‌ನಲ್ಲಿ ಬಹಳ ದೊಡ್ಡ ಮೊತ್ತವನ್ನು (₹ 6818.1 ಕೋಟಿ) ಮೀಸಲಿಡ ಬೇಕಾಗುತ್ತದೆ.
 4. ಕೋವಿಡ್ -19 ರ ಹರಡುವಿಕೆ.

 

ವಿಷಯಗಳು: ಕೇಂದ್ರ ಮತ್ತು ರಾಜ್ಯಗಳಿಂದ  ದುರ್ಬಲ ವರ್ಗದ ಜನಸಮುದಾಯದವರಿಗೆ ಇರುವ ಕಲ್ಯಾಣ ಯೋಜನೆಗಳು ಮತ್ತು ಈ ಯೋಜನೆಗಳ ಕಾರ್ಯಕ್ಷಮತೆ; ಕಾರ್ಯವಿಧಾನಗಳು,ಕಾನೂನುಗಳು, ಸಂಸ್ಥೆಗಳು ಮತ್ತು ಈ ದುರ್ಬಲ ವಿಭಾಗಗಳ ರಕ್ಷಣೆ ಮತ್ತು ಸುಧಾರಣೆಗಾಗಿ ರಚಿಸಲಾದ ಸಂಸ್ಥೆಗಳು.

ಕೈಗೆಟುಕುವ ಮತ್ತು ಮಧ್ಯಮ-ಆದಾಯ ಗುಂಪಿನವರ ವಸತಿಗಾಗಿ ವಿಶೇಷ ವಿಂಡೋ (SWAMIH):


(Special Window for Affordable & Mid-Income Housing)

 

ಸಂದರ್ಭ:

ಭಾರತ ಸರ್ಕಾರ ಪ್ರಾರಂಭಿಸಿದ ‘ಕೈಗೆಟುಕುವ ಮತ್ತು ಮಧ್ಯಮ ಆದಾಯದ ಗುಂಪಿನವರ ವಸತಿಗಾಗಿ ವಿಶೇಷ ವಿಂಡೋ’ (Special Window for Affordable & Mid-Income Housing- SWAMIH) ತನ್ನ ಮೊದಲ ವಸತಿ ಯೋಜನೆಯನ್ನು ಪೂರ್ಣಗೊಳಿಸಿದೆ.

 1. ಮುಂಬೈನ ಉಪನಗರದಲ್ಲಿರುವ ರಿವಾಲಿ ಪಾರ್ಕ್ ವಸತಿ ಯೋಜನೆಯ SWAMIH ನಿಧಿಯಡಿ ಹಣವನ್ನು ಪಡೆದ ಭಾರತದ ಮೊದಲ ವಸತಿ ಯೋಜನೆಯಾಗಿದೆ.

SWAMIH ನಿಧಿಯ ಬಗ್ಗೆ:

 ಕೈಗೆಟುಕುವ ಮತ್ತು ಮಧ್ಯಮ ಆದಾಯ ಗುಂಪು ವಸತಿಗಾಗಿ ವಿಶೇಷ ವಿಂಡೋಸ್ (SWAMIH) ನಿಧಿಯನ್ನು 2019 ರ ನವೆಂಬರ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಪ್ರಾರಂಭಿಸಿದರು.

 1. ನಿಧಿಯ ಕೊರತೆಯಿಂದಾಗಿ ಸ್ಥಗಿತಗೊಂಡಿರುವ ‘ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರಗಳು’ (RERA) ಅಡಿಯಲ್ಲಿ ನೋಂದಾಯಿಸಲಾದ ‘ಕೈಗೆಟುಕುವ ಮತ್ತು ಮಧ್ಯಮ-ಆದಾಯದವರ ವಸತಿ ಯೋಜನೆಗಳನ್ನು’ ನಿರ್ವಹಿಸಲು ‘SWAMIH ಹೂಡಿಕೆ ನಿಧಿ’ಯನ್ನು ರಚಿಸಲಾಗಿದೆ.
 2. ಭಾರತದ ಷೇರುಪೇಟೆ ನಿಯಂತ್ರಣ ಮಂಡಳಿಯಾದ SEBI ಯ ಅಡಿಯಲ್ಲಿ ನೋಂದಾಯಿಸಲಾದ ವರ್ಗ- II ಪರ್ಯಾಯ ಹೂಡಿಕೆ ನಿಧಿ (Alternate Investment Fund- AIF) ಯ ಸಾಲ ನಿಧಿಯಾಗಿ ಈ ನಿಧಿಯನ್ನು ಸ್ಥಾಪಿಸಲಾಯಿತು.
 3. SBICAP Ventures, SBI ನ ಕ್ಯಾಪಿಟಲ್ ಮಾರ್ಕೆಟ್‌ಗಳ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ನಿಧಿಯ ಹೂಡಿಕೆ ವ್ಯವಸ್ಥಾಪಕನಾಗಿದೆ. ‘SBI CAPITAL’ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾಗಿದೆ.
 4. ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿ ಈ ನಿಧಿಯ ಪ್ರಾಯೋಜಕರು ಅಥವಾ ಆರ್ಥಿಕ ಉಸ್ತುವಾರಿ ಆಗಿದ್ದಾರೆ.

 

ಈ ನಿಧಿಯ ಹೂಡಿಕೆದಾರರು ಯಾರು?

ವಿಶೇಷ ವಿಂಡೋ ಅಡಿಯಲ್ಲಿ, ರಚಿಸಲಾದ ಅಥವಾ ಧನಸಹಾಯ ಪಡೆದ ಸರ್ಕಾರ ಮತ್ತು ಇತರ ಖಾಸಗಿ ಹೂಡಿಕೆದಾರರಿಂದ ‘ಪರ್ಯಾಯ ಹೂಡಿಕೆ ನಿಧಿ’ ಅಡಿ (AIF)  SWAMIH ನಿಧಿಯಲ್ಲಿ ಹೂಡಿಕೆ ಮಾಡಲು ಒತ್ತಾಯಿಸಲಾಗುತ್ತದೆ. ಇತರ ಖಾಸಗಿ ಹೂಡಿಕೆದಾರರು ನಗದು ಸಮೃದ್ಧ ಹಣಕಾಸು ಸಂಸ್ಥೆಗಳು, ಸಾರ್ವಭೌಮ ಸಂಪತ್ತು ನಿಧಿಗಳು, ಸಾರ್ವಜನಿಕ ಮತ್ತು ಖಾಸಗಿ ಬ್ಯಾಂಕುಗಳು, ದೇಶೀಯ ಪಿಂಚಣಿ ಮತ್ತು ಭವಿಷ್ಯ ನಿಧಿಗಳು, ಜಾಗತಿಕ ಪಿಂಚಣಿ ನಿಧಿಗಳು ಮತ್ತು ಇತರ ಸಾಂಸ್ಥಿಕ ಹೂಡಿಕೆದಾರರನ್ನು ಒಳಗೊಂಡಿರುತ್ತದೆ.

 

 

ವಿಷಯಗಳು: ದ್ವಿಪಕ್ಷೀಯ, ಪ್ರಾದೇಶಿಕ ಮತ್ತು ಜಾಗತಿಕ ಗುಂಪುಗಳು ಮತ್ತು ಭಾರತಕ್ಕೆ ಸಂಬಂಧಿಸಿದ ಒಪ್ಪಂದಗಳು ಮತ್ತು / ಅಥವಾ ಭಾರತದ ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವ ಅಂಶಗಳು.

ಬ್ರಿಕ್ಸ್ ಔದ್ಯೋಗಿಕ ಕಾರ್ಯನಿರತ ಗುಂಪು (EWG) ಸಭೆ:


(BRICS Employment Working Group (EWG) Meeting)

 

ಸಂದರ್ಭ:

ಇತ್ತೀಚೆಗೆ, ಬ್ರಿಕ್ಸ್ ದೇಶಗಳ, ಬ್ರಿಕ್ಸ್ ಔದ್ಯೋಗಿಕ ಕಾರ್ಯನಿರತ ಸಮೂಹದ (BRICS Employment Working Group- EWG) ಮೊದಲ ಸಭೆ ನವದೆಹಲಿಯಲ್ಲಿ ವರ್ಚುವಲ್ ಸ್ವರೂಪದಲ್ಲಿ ನಡೆಯಿತು.

 1. ಈ ವರ್ಷ ಬ್ರಿಕ್ಸ್ ಸಮೂಹದ ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದೆ.

ಚರ್ಚೆಯ ಮುಖ್ಯ ಕಾರ್ಯಸೂಚಿಯಲ್ಲಿ ಒಳಗೊಂಡಿರುವ ವಿಷಯಗಳು:

ಬ್ರಿಕ್ಸ್ ರಾಷ್ಟ್ರಗಳ ನಡುವೆ ಸಾಮಾಜಿಕ ಭದ್ರತಾ ಒಪ್ಪಂದಗಳನ್ನು ಉತ್ತೇಜಿಸುವುದು,

ಕಾರ್ಮಿಕ ಮಾರುಕಟ್ಟೆಗಳ  ಔಪಚಾರಿಕೀಕರಣ,

ಕಾರ್ಮಿಕಶಕ್ತಿಯಾಗಿ ಮಹಿಳೆಯರ ಭಾಗವಹಿಸುವಿಕೆ, ಮತ್ತು

ಗಂಟೆಗಳಲ್ಲಿ ಕಾರ್ಮಿಕ ಮಾರುಕಟ್ಟೆಯಲ್ಲಿ ಗಿಗ್ ವರ್ಕರ್ಸ್ ಮತ್ತು ಪ್ಲಾಟ್‌ಫಾರ್ಮ್ ಕೆಲಸಗಾರರ ಪಾತ್ರ ಅಥವಾ ಕಾರ್ಮಿಕ ಮಾರುಕಟ್ಟೆಯಲ್ಲಿ ಅರೆಕಾಲಿಕ ಕೆಲಸಗಾರರ ಪಾತ್ರ.

ಸಭೆಯ ಫಲಿತಾಂಶಗಳು:

 1. ಸಾಮಾಜಿಕ ಭದ್ರತಾ ಒಪ್ಪಂದದ (Social Security Agreement- SSA) ವಿಷಯದಲ್ಲಿ, ಸದಸ್ಯ ರಾಷ್ಟ್ರಗಳು ತಮ್ಮ ನಡುವೆ ಸಂವಹನ ನಡೆಸಲು ಮತ್ತು ಚರ್ಚಿಸಲು ಮತ್ತು ಒಪ್ಪಂದಗಳಿಗೆ ಸಹಿ ಹಾಕುವತ್ತ ಹೆಜ್ಜೆ ಇಡಲು ಬದ್ಧತೆಯನ್ನು ನೀಡಲಾಯಿತು.
 2. ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆ (ILO) ಮತ್ತು ಅಂತರಾಷ್ಟ್ರೀಯ ಸಾಮಾಜಿಕ ಭದ್ರತಾ ಸಂಸ್ಥೆ (ISSA) ತಮ್ಮ ಕಡೆಯಿಂದ ಅಂತಹ ಒಪ್ಪಂದಗಳ ತೀರ್ಮಾನಕ್ಕೆ ಅನುಕೂಲವಾಗುವಂತೆ ತಾಂತ್ರಿಕ ನೆರವು ನೀಡುವ ಇಚ್ಛೆಯನ್ನು ವ್ಯಕ್ತಪಡಿಸಿದವು.

 

ಸಾಮಾಜಿಕ ಭದ್ರತಾ ಒಪ್ಪಂದ’ (SSA) ಎಂದರೇನು?

 1.  ಸಾಮಾಜಿಕ ಭದ್ರತಾ ಒಪ್ಪಂದ (SSA) ಭಾರತ ಮತ್ತು ಇತರ ಯಾವುದೇ ದೇಶಗಳ ನಡುವಿನ ದ್ವಿಪಕ್ಷೀಯ ಒಪ್ಪಂದವಾಗಿದ್ದು, ಗಡಿಯಾಚೆಗಿನ ಕಾರ್ಮಿಕರ ಹಿತಾಸಕ್ತಿಗಳನ್ನು ರಕ್ಷಿಸಲು ವಿನ್ಯಾಸಗೊಳಿಸಲಾಗಿದೆ.
 2. ಈ ಒಪ್ಪಂದವು ಕಾರ್ಮಿಕರ ರಕ್ಷಣೆಯ ವಿಷಯವಾಗಿ ‘ಡಬಲ್ ಕವರೇಜ್’ನಿಂದ ವಿನಾಯಿತಿ ಒದಗಿಸುತ್ತದೆ ಮತ್ತು ಸಾಮಾಜಿಕ ಭದ್ರತೆಯ ದೃಷ್ಟಿಯಿಂದ ಎರಡೂ ದೇಶಗಳ ಕಾರ್ಮಿಕರಿಗೆ ಸಮಾನ ಚಿಕಿತ್ಸೆ ನೀಡುವುದನ್ನು ಖಾತ್ರಿಗೊಳಿಸುತ್ತದೆ.

 

ಹಿನ್ನೆಲೆ:

ಇಲ್ಲಿಯವರೆಗೆ,18 ದೇಶಗಳೊಂದಿಗೆ ‘ಸಾಮಾಜಿಕ ಭದ್ರತಾ  ಒಪ್ಪಂದಕ್ಕೆ’ (SSA) ಭಾರತ ಸಹಿ ಮಾಡಿದೆ.

‘ಸಾಮಾಜಿಕ ಭದ್ರತಾ ಒಪ್ಪಂದ’ಗಳಿಂದ ಕೆಳಗಿನ 3 ಪ್ರಯೋಜನಗಳನ್ನು ಮುಖ್ಯವಾಗಿ ಪಡೆಯಲಾಗಿದೆ:

 1.  ಕಾರ್ಮಿಕರಿಂದ ಡಬಲ್ ಸಾಮಾಜಿಕ ಭದ್ರತೆ ಕೊಡುಗೆಗಳನ್ನು ನೀಡುವುದನ್ನು ತಪ್ಪಿಸುವುದು (ಬೇರ್ಪಡಿಸುವಿಕೆ)
 2. ಕಾರ್ಮಿಕರಿಗಾಗಿ ಪಡೆದ ಪ್ರಯೋಜನಗಳ ಸುಲಭ ರವಾನೆ (ರಫ್ತು ಸಾಮರ್ಥ್ಯ)
 3. ಪ್ರಯೋಜನಗಳ ನಷ್ಟವನ್ನು ತಡೆಗಟ್ಟಲು ಕೊಡುಗೆ ಅವಧಿಯನ್ನು (ಎರಡು ದೇಶಗಳಲ್ಲಿ) ಸೇರಿಸುವುದು (ಒಟ್ಟುಗೂಡಿಸುವುದು)
 4. ವಿದೇಶದಲ್ಲಿ ಕೆಲಸ ಮಾಡುವ ಭಾರತೀಯ ನಾಗರಿಕರಿಗೆ ಅಂಗವೈಕಲ್ಯ ವಿಮಾ ಸೌಲಭ್ಯಗಳನ್ನು ಒದಗಿಸುವುದು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ನೇರ ಮತ್ತು ಪರೋಕ್ಷ ಕೃಷಿ ಸಬ್ಸಿಡಿಗಳು ಮತ್ತು ಕನಿಷ್ಠ ಬೆಂಬಲ ಬೆಲೆಗಳಿಗೆ ಸಂಬಂಧಿಸಿದ ಸಮಸ್ಯೆಗಳು; ಸಾರ್ವಜನಿಕ ವಿತರಣಾ ವ್ಯವಸ್ಥೆಯ ಉದ್ದೇಶಗಳು, ಕಾರ್ಯನಿರ್ವಹಣೆ,ಮಿತಿಗಳು, ಪುನರುಜ್ಜೀವನಗೊಳಿಸುವಿಕೆ; ಬಫರ್ ಸ್ಟಾಕ್ಗಳು / ತುರ್ತು ಸಂಗ್ರಹ ವ್ಯವಸ್ಥೆ ಮತ್ತು ಆಹಾರ ಸುರಕ್ಷತೆಯ ಸಮಸ್ಯೆಗಳು; ತಂತ್ರಜ್ಞಾನ ಕಾರ್ಯಾಚರಣೆಗಳು.

PM – ಕಿಸಾನ್ ಯೋಜನೆ:


(PM-Kisan scheme)

ಸಂದರ್ಭ:

ಇತ್ತೀಚೆಗೆ, ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ (ಪಿಎಂ-ಕಿಸಾನ್) [Pradhan Mantri Kisan Samman Nidhi (PM-KISAN)] ಯೋಜನೆಯಡಿ ಎಂಟನೇ ಕಂತಿನ ಕನಿಷ್ಠ ಆರ್ಥಿಕ ಲಾಭಗಳನ್ನು ಬಿಡುಗಡೆ ಮಾಡಲಾಗಿದೆ.

 1. ಇದು,2021-22ರ ಹಣಕಾಸು ವರ್ಷಕ್ಕೆ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಮೊದಲ ಕಂತು ಆಗಿದೆ.

 

ಪ್ರಧಾನಮಂತ್ರಿ ಕಿಸಾನ್ ಸಮ್ಮನ್ ನಿಧಿಯ ಕುರಿತು:

 1. ಇದನ್ನು ಕೇಂದ್ರ ಪುರಸ್ಕೃತ ಯೋಜನೆಯಾಗಿ ಭಾರತ ಸರ್ಕಾರವು 100% ಧನ ಸಹಾಯದೊಂದಿಗೆ ಅನುಷ್ಠಾನಗೊಳಿಸಿದೆ.ಈ ಯೋಜನೆಯನ್ನು 2018 ರ ಡಿಸೆಂಬರ್ ನಲ್ಲಿ ಪ್ರಾರಂಭಿಸಲಾಯಿತು.
 2. ಅನೇಕ ಸಣ್ಣ ಮತ್ತು ಅಂಚಿನ ರೈತರ, ಆದಾಯದ ಮೂಲವನ್ನು ಹೆಚ್ಚಿಸಲು ಈ ಯೋಜನೆಯನ್ನು ಪರಿಚಯಿಸಲಾಯಿತು.
 3. ಈ ಯೋಜನೆಯಡಿಯಲ್ಲಿ ಹೆಚ್ಚಿನ ಆದಾಯದ ಸ್ಥಿತಿಗೆ ಸಂಬಂಧಿಸಿದ ಕೆಲವು ಮಾನದಂಡಗಳಿಗೆ ಒಳಪಟ್ಟು, ವರ್ಷಕ್ಕೆ ರೂ .6000 – ಮೊತ್ತವನ್ನು 3 ಕಂತುಗಳಲ್ಲಿ ನೇರವಾಗಿ ರೈತರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಲಾಗುತ್ತದೆ.
 4. ಫಲಾನುಭವಿಗಳನ್ನು ಗುರುತಿಸುವ ಅವರ ಪಟ್ಟಿಯನ್ನು ಕೇಂದ್ರದೊಂದಿಗೆ ಹಂಚಿಕೊಳ್ಳುವ ಸಂಪೂರ್ಣ ಜವಾಬ್ದಾರಿಯು ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳ ಮೇಲಿದೆ.

ವ್ಯಾಪ್ತಿ :

ಈ ಯೋಜನೆಯು ಆರಂಭದಲ್ಲಿ ದೇಶದಾದ್ಯಂತ 2 ಹೆಕ್ಟೇರ್ ವರೆಗೆ ಕೃಷಿ ಭೂಮಿಯನ್ನು ಹೊಂದಿರುವ  ಎಲ್ಲಾ ಸಣ್ಣ ಮತ್ತು ಅಂಚಿನ ರೈತ ಕುಟುಂಬಗಳಿಗೆ ಆದಾಯದ ಬೆಂಬಲವನ್ನು ನೀಡಿತ್ತು, ನಂತರ ಇದರ ವ್ಯಾಪ್ತಿಯನ್ನು 01.06.2019 ರಿಂದ ಜಮೀನುಗಳ ಗಾತ್ರವನ್ನು ಲೆಕ್ಕಿಸದೆ ದೇಶದ ಎಲ್ಲಾ ರೈತ ಕುಟುಂಬಗಳಿಗೆ  ವಿಸ್ತರಿಸಲಾಗಿದೆ.

ವಿನಾಯಿತಿಗಳು: / ಅಪವಾದಗಳು :

ಕಳೆದ ಆರ್ಥಿಕ ವರ್ಷದಲ್ಲಿ ಆದಾಯ ತೆರಿಗೆ ಪಾವತಿದಾರರಂತಹ ಶ್ರೀಮಂತ ರೈತರನ್ನು, ವೈದ್ಯರು, ಎಂಜಿನಿಯರ್‌ಗಳು, ವಕೀಲರು, ಚಾರ್ಟರ್ಡ್ ಅಕೌಂಟೆಂಟ್‌ಗಳು ಮುಂತಾದ ವೃತ್ತಿಪರರು ಮತ್ತು ತಿಂಗಳಿಗೆ ಕನಿಷ್ಠ ರೂ .10,000 / – ಪಿಂಚಣಿ ಪಡೆಯುವ ಪಿಂಚಣಿದಾರರನ್ನು (MTS / ಕ್ಲಾಸ್ IV / ಗ್ರೂಪ್ ಡಿ ಉದ್ಯೋಗಿಗಳನ್ನು ಹೊರತುಪಡಿಸಿ) ಯೋಜನೆಯಿಂದ ಹೊರಗಿಡಲಾಗಿದೆ.

 

ಇತರ ರಾಜ್ಯಗಳ ಇದೇ ರೀತಿಯ ಕಾರ್ಯಕ್ರಮಗಳು:

 1. ಭವಂತರ್ ಭುಗ್ತಾನ್ ಯೋಜನೆ- ಮಧ್ಯಪ್ರದೇಶ.
 2. ರೈತು ಬಂಧು ಯೋಜನೆ- ತೆಲಂಗಾಣ.
 3. ಜೀವನೋಪಾಯ ಮತ್ತು ಆದಾಯ ವೃದ್ಧಿಗೆ ಕ್ರುಶಕ್ ನೆರವು (ಕಾಲಿಯಾ) – ಒಡಿಶಾ.

Krushak Assistance for Livelihood and Income augmentation (KALIA) –  Odisha.

ಕರ್ನಾಟಕ:

ಭಾರತ ಸರಕಾರದ PM ಕಿಸಾನ್ ಯೋಜನೆಯಡಿ ಆರ್ಥಿಕ ನೆರವು ಪಡೆಯಲು ಅರ್ಹರಾಗಿರುವ ಕರ್ನಾಟಕ ರಾಜ್ಯದ ಎಲ್ಲಾ ರೈತರಿಗೆ  ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ರೂ.4000/-ಗಳನ್ನು ಎರಡು ಸಮಾನ ಕಂತುಗಳಲ್ಲಿ (ರೂ.2000/-ಪ್ರತಿ ಕಂತು) ನೇರ ನಗದು ವರ್ಗಾವಣೆ ಮುಖಾಂತರ ನೆರವು ನೀಡಲಾಗುವುದು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಭಾರತದ ಮೊದಲ ಒಲಿಂಪಿಕ್ ಬೌಂಡ್ ಫೆನ್ಸರ್ ಭವಾನಿ ದೇವಿ:

 1. ಸಬೆರ್ ಫೆನ್ಸರ್ (Sabre Fencer- ಕತ್ತಿವರಸೆ) ಭವಾನಿ ದೇವಿ ಒಲಿಂಪಿಕ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ ಮೊದಲ ಭಾರತೀಯ ಸಬೆರ್ ಫೆನ್ಸರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
 2. ಈ ವರ್ಷದ ಮಾರ್ಚ್‌ನಲ್ಲಿ ನಡೆದ ಬುಡಾಪೆಸ್ಟ್ ವಿಶ್ವಕಪ್ ನಂತರ, ಹೊಂದಾಣಿಕೆಯ ಅಧಿಕೃತ ಶ್ರೇಯಾಂಕ (Adjusted Official Ranking- AOR) ವಿಧಾನದ ಮೂಲಕ ಅವರು ಕೋಟಾವನ್ನು ಜಯಿಸಿದರು.

 ಇಂಡಿಕೇಟಿವ್ ನೋಟ್ಸ್ (ಸೂಚಕ ಟಿಪ್ಪಣಿಗಳು):

 1.  ಇದು ಸುಪ್ರೀಂ ಕೋರ್ಟ್ ವೆಬ್‌ಸೈಟ್‌ನಲ್ಲಿ ಪ್ರಾರಂಭಿಸಲಾದ ಹೊಸ ವೈಶಿಷ್ಟ್ಯವಾಗಿದೆ.
 2. ಐತಿಹಾಸಿಕ ನಿರ್ಧಾರಗಳ ಸಂಕ್ಷಿಪ್ತ ಸಾರಾಂಶವನ್ನು ‘ಸುಲಭವಾಗಿ ಅರ್ಥಮಾಡಿಕೊಳ್ಳುವ ಸ್ವರೂಪ’ದಲ್ಲಿ ಒದಗಿಸುವುದು ಇದರ ಉದ್ದೇಶವಾಗಿದೆ.
 3. ನ್ಯಾಯಾಲಯದ ತೀರ್ಪುಗಳ ಬಗ್ಗೆ ಉತ್ತಮ ಜ್ಞಾನವನ್ನು ಪಡೆಯಲು ಬಯಸುವ ಮಾಧ್ಯಮ ವ್ಯಕ್ತಿಗಳು ಮತ್ತು ಸಾರ್ವಜನಿಕರಿಗೆ ಇದು ಉಪಯುಕ್ತ ಸಂಪನ್ಮೂಲವಾಗಿ ಕಾರ್ಯನಿರ್ವಹಿಸುತ್ತದೆ.

ಪಂಜಾಬ್ ನ 23ನೇ ಜಿಲ್ಲೆಯಾಗಿ ಮಲೆರ್ ಕೋಟ್ಲಾ:

 ಮಲೆರ್ ಕೋಟ್ಲಾ ವನ್ನು ಸ್ವತಂತ್ರ ಜಿಲ್ಲೆ ಎಂದು ಘೋಷಿಸಬೇಕೆಂದು ನಗರದ ನಿವಾಸಿಗಳು ಮತ್ತು ಮುಸ್ಲಿಂ ಸಮುದಾಯದವರು ಬಹಳ ದಿನಗಳಿಂದ ಒತ್ತಾಯಿಸುತ್ತಿದ್ದರು. ನಗರದಲ್ಲಿ ಮುಸ್ಲಿಂ ಜನಸಂಖ್ಯೆ ಪ್ರಧಾನವಾಗಿದೆ.

ಗೋವಾ ಮ್ಯಾರಿಟೈಮ್ ಸಿಂಪೋಸಿಯಮ್ (GMS) – 2021:

(Goa Maritime Symposium)

 1.  ಇತ್ತೀಚೆಗೆ, ‘GMS -21’ ಅನ್ನು ಭಾರತೀಯ ನೌಕಾಪಡೆಯು ಗೋವಾದ ನೇವಲ್ ವಾರ್ ಕಾಲೇಜಿನ ಆಶ್ರಯದಲ್ಲಿ ಆಯೋಜಿಸಿತ್ತು.
 2. ಈ ಕಾರ್ಯಕ್ರಮವನ್ನು ವರ್ಚುವಲ್ ಮೋಡ್‌ನಲ್ಲಿ ನಡೆಸಲಾಯಿತು ಮತ್ತು ಹಿಂದೂ ಮಹಾಸಾಗರದ 13 ದೇಶಗಳ ನೌಕಾ ಪ್ರತಿನಿಧಿಗಳು ಆನ್‌ಲೈನ್‌ನಲ್ಲಿ ಭಾಗವಹಿಸಿದ್ದರು.
 3. ಕಾರ್ಯಕ್ರಮದಲ್ಲಿ ಭಾರತ, ಬಾಂಗ್ಲಾದೇಶ, ಕೊಮೊರೊಸ್, ಇಂಡೋನೇಷ್ಯಾ, ಮಡಗಾಸ್ಕರ್, ಮಲೇಷ್ಯಾ, ಮಾಲ್ಡೀವ್ಸ್, ಮಾರಿಷಸ್, ಮ್ಯಾನ್ಮಾರ್, ಸೀಶೆಲ್ಸ್, ಸಿಂಗಾಪುರ, ಶ್ರೀಲಂಕಾ ಮತ್ತು ಥೈಲ್ಯಾಂಡ್ ಸೇರಿವೆ.
 4. GMS-21 ರ ವಿಷಯವು “ಕಡಲ ಸುರಕ್ಷತೆ ಮತ್ತು ಉದಯೋನ್ಮುಖ ಸಾಂಪ್ರದಾಯಿಕವಲ್ಲದ ಬೆದರಿಕೆಗಳು: ಹಿಂದೂ ಮಹಾಸಾಗರ ಪ್ರದೇಶದಲ್ಲಿನ ನೌಕಾಪಡೆಗಳಿಗೆ ಸಕ್ರಿಯ ಪಾತ್ರ ವಹಿಸುವ ಪರಿಸ್ಥಿತಿಗಳು”.

ಮಹತ್ವ: ಹಿಂದೂ ಮಹಾಸಾಗರವು 21 ನೇ ಶತಮಾನದ ಕಾರ್ಯತಂತ್ರದ ಭೂದೃಶ್ಯದ ಕೇಂದ್ರಬಿಂದುವಾಗಿರುವುದರಿಂದ, ಈ ಸೆಮಿನಾರ್ ಕಡಲ ವಲಯದಲ್ಲಿ ಸಾಮಾನ್ಯ ಆಸಕ್ತಿಯ ವಿಷಯಗಳ ಕುರಿತು ಕಾರ್ಯತಂತ್ರಗಳು, ನೀತಿಗಳು ಮತ್ತು ಅನುಷ್ಠಾನ ಕಾರ್ಯವಿಧಾನಗಳನ್ನು ಅಭಿವೃದ್ಧಿಪಡಿಸುವಲ್ಲಿ ಪಾತ್ರ ಹೊಂದಿರುವ ಮಧ್ಯಸ್ಥಗಾರರನ್ನು ಒಟ್ಟುಗೂಡಿಸುವಲ್ಲಿ ರಚನಾತ್ಮಕ ಪಾತ್ರವನ್ನು ವಹಿಸುತ್ತದೆ.

 ಕೆಂಪು-ಕಿವಿಯ ಸ್ಲೈಡರ್:

(Red-eared slider)

 1.  ಕೆಂಪು ಕಿವಿಯ ಸ್ಲೈಡರ್ (ಆಮೆಯ) (ಟ್ರಾಚೆಮಿಸ್ ಸ್ಕ್ರಿಪ್ಟಾ ಎಲೆಗನ್ಸ್-Trachemys scripta elegans) ಈ ನಾಮಕರಣವನ್ನು ಅದರ ಕಿವಿಗಳ ಬಳಿ ಕಂಡುಬರುವ ಕೆಂಪು ಪಟ್ಟೆಗಳು ಮತ್ತು ಯಾವುದೇ ಮೇಲ್ಮೈಯಿಂದ ನೀರಿಗೆ ವೇಗವಾಗಿ ಚಲಿಸುವ ಸಾಮರ್ಥ್ಯದಿಂದಾಗಿ ಪಡೆದುಕೊಂಡಿದೆ.
 2. ಮೂಲತಃ ಯುಎಸ್ ಮತ್ತು ಉತ್ತರ ಮೆಕ್ಸಿಕೊದಲ್ಲಿ ಕಂಡುಬರುವ ಅಂದರೆ ಈ ದೇಶಗಳಿಗೆ ಸ್ಥಳೀಯವಾಗಿರುವ ಈ ಆಮೆ ಅದರ ಸಣ್ಣ ಗಾತ್ರ, ಸುಲಭ ನಿರ್ವಹಣೆ ಮತ್ತು ತುಲನಾತ್ಮಕವಾಗಿ ಕಡಿಮೆ ಬೆಲೆಯಿಂದಾಗಿ ಅತ್ಯಂತ ಜನಪ್ರಿಯ ಸಾಕು ಪ್ರಾಣಿ (Pet) ಆಗಿದೆ.
 3. ಈ ಆಮೆಗಳು ವೇಗವಾಗಿ ಬೆಳೆಯುತ್ತವೆ ಮತ್ತು ಸ್ಥಳೀಯ ಪ್ರಭೇದಗಳಿಗೆ ತಿನ್ನಲು ಏನನ್ನೂ ಬಿಡುವುದಿಲ್ಲ.

ಸಂದರ್ಭ:

ಆಕ್ರಮಣಕಾರಿಯಾದ ಕೆಂಪು ಕಿವಿಯ ಸ್ಲೈಡರ್ ಗಳನ್ನು ಮುದ್ದಾದ ಸಾಕುಪ್ರಾಣಿಗಳಾಗಿ ಇಟ್ಟುಕೊಳ್ಳುವ ಜನರು    ಈ ಆಮೆಗಳನ್ನು ನೈಸರ್ಗಿಕ ಜಲಮೂಲಗಳಲ್ಲಿ ಬಿಡುಗಡೆ ಮಾಡಿದಾಗ 29 ಸ್ಥಳೀಯ ಜಾತಿಯ ಆಮೆಗಳಿಗೆ ಅಪಾಯಕಾರಿಯಾಗಿ ಪರಿವರ್ತನಗೊಳ್ಳಬಹುದು ಎಂದು ಹರ್ಪೇಟೋಲಜಿಸ್ಟ್ ಗಳು ಅಂದರೆ ಸರಿಸೃಪ ತಜ್ಞರು (Herpetologists) ಎಚ್ಚರಿಸಿದ್ದಾರೆ.


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos