Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 10ನೇ ಮೇ 2021

 

ಪರಿವಿಡಿ:  

ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಮಹಾರಾಣಾ ಪ್ರತಾಪ್

2. ಗೋಪಾಲಕೃಷ್ಣ ಗೋಖಲೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಕಪ್ಪು ಶಿಲೀಂಧ್ರ.

2. ಆರ್ಕ್ಟಿಕ್ ವಿಜ್ಞಾನ ಮಂತ್ರಿಗಳ ಸಭೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಮಾಲ್ಡೀವ್ಸ್ ಬಳಿಯ ಹಿಂದೂ ಮಹಾಸಾಗರದಲ್ಲಿ ಬಿದ್ದ ಚೀನಾ ರಾಕೆಟ್ ನ ಅವಶೇಷಗಳು.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಸಿನಾಬಂಗ್ ಪರ್ವತ.

2. ಬದ್ರಿನಾಥ್ ಧಾಮ್.

3. ಡ್ರಗ್ 2-ಡಿಯೋಕ್ಸಿ-ಡಿ-ಗ್ಲೂಕೋಸ್ (2-DG).

4. ಶುವುಯಾ ಮರುಭೂಮಿ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಭಾರತೀಯ ಸಂಸ್ಕೃತಿಯು ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ಕಲಾ ಪ್ರಕಾರಗಳು, ಸಾಹಿತ್ಯ ಮತ್ತು ವಾಸ್ತುಶಿಲ್ಪದ ಪ್ರಮುಖ ಅಂಶಗಳನ್ನು ಒಳಗೊಂಡಿದೆ.

ಮಹಾರಾಣಾ ಪ್ರತಾಪ್:


ಸಂದರ್ಭ:

ಮೇ 9 ರಂದು ಮೇವಾರ್ ನ 13 ನೇ ರಜಪೂತ ದೊರೆ ಮಹಾರಾಣಾ ಪ್ರತಾಪ್ ಅವರ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಮಹಾರಾಣಾ ಪ್ರತಾಪ್ 1540 ರಲ್ಲಿ ಜನಿಸಿದರು ಮತ್ತು 1597 ರಲ್ಲಿ ತಮ್ಮ 56 ನೇ ವಯಸ್ಸಿನಲ್ಲಿ ನಿಧನರಾದರು.

 1. ಅವರು ಉದಯಪುರ ನಗರದ ಸಂಸ್ಥಾಪಕ ರಾಣಾ ಉದೈ ಸಿಂಗ್ II ರ ಹಿರಿಯ ಮಗ.

ಹಳದಿಘಾಟ್ ಕದನ:

ಮಹಾರಾಣಾ ಪ್ರತಾಪ್ ಹಳದಿಘಾಟ್ ಯುದ್ಧದಲ್ಲಿ ತೋರಿದ ಶೌರ್ಯಕ್ಕೆ ಹೆಸರುವಾಸಿಯಾಗಿದ್ದಾರೆ.

 1. 1576 ರಲ್ಲಿ ಮಹಾರಾಣಾ ಪ್ರತಾಪ್ ಮತ್ತು ಅಕ್ಬರ್ ಪಡೆಗಳ ನಡುವೆ ಈ ಯುದ್ಧ ನಡೆಯಿತು, ಇದರಲ್ಲಿ ಮೊಘಲ್ ಸೈನ್ಯದ ನೇತೃತ್ವವನ್ನು ಅಂಬರ್ ನ ದೊರೆ ರಾಜಾ ಮಾನ್ ಸಿಂಗ್ ವಹಿಸಿದ್ದರು.
 2.  ಈ ಯುದ್ಧದಲ್ಲಿ 6 ಗಂಟೆಗಳಲ್ಲಿ ಮಹಾರಾಣಾ ರ ಪಡೆಗಳನ್ನು ಸೋಲಿಸಲಾಯಿತು, ಆದರೆ ಮೊಘಲರು ಅವರನ್ನು ಹಿಡಿಯುವಲ್ಲಿ ವಿಫಲರಾದರು.
 3. ಮಹಾರಾಣಾ ಪ್ರತಾಪ್ ತನ್ನ ಸೈನ್ಯವನ್ನು ಮತ್ತೆ ಒಟ್ಟುಗೂಡಿಸಿದನು ಮತ್ತು ಆರು ವರ್ಷಗಳ ನಂತರ, 1582 ರಲ್ಲಿ ಮೊಘಲರೊಂದಿಗೆ ಹೋರಾಡಿ ಗೆದ್ದನು.ಈ ಹೀನಾಯ ಸೋಲಿನ ನಂತರ, ಅಕ್ಬರ್ ಮೇವಾರ್ ವಿರುದ್ಧದ ಮಿಲಿಟರಿ ಕಾರ್ಯಾಚರಣೆಯನ್ನು ನಿಲ್ಲಿಸಿದರು.

 

ಪಪರಂಪರೆ (Legacy):

 1. ರಾಣಾ ಪ್ರತಾಪ್ ಬಹುತೇಕ ಏಕಾಂಗಿಯಾಗಿ ಪ್ರಬಲ ಮೊಘಲ್ ಸಾಮ್ರಾಜ್ಯಕ್ಕೆ ಸವಾಲು ಹಾಕಿದರು ಆದರೆ ಬೇರೆ ಯಾವುದೇ ರಜಪೂತ ಆಡಳಿತಗಾರರಿಂದ ಸಹಾಯ ಸಿಗಲಿಲ್ಲ. ಇದು ರಜಪೂತ ಶೌರ್ಯದ ಅದ್ಭುತ ಕಥೆಯ ಅತ್ಯುತ್ತಮ ಉದಾಹರಣೆಯಾಗಿದೆ ಮತ್ತು ಅದರ ತತ್ವಗಳಿಗೆ ಸ್ವಯಂ ತ್ಯಾಗದ ಮನೋಭಾವವನ್ನು ಹೊಂದಿದೆ.
 2. ರಾಣಾ ಪ್ರತಾಪ್ ಅವರ ಯುದ್ಧದಲ್ಲಿ ದಾಳಿಮಾಡುವ ತಂತ್ರಗಳನ್ನು ನಂತರದ ಕಾಲದಲ್ಲಿ ಡೆಕ್ಕನ್ ಕಮಾಂಡರ್‌ ಆದ ಮಲಿಕ್ ಅಂಬರ್ ಮತ್ತು ಶಿವಾಜಿ ಮಹಾರಾಜ್ ಅವರು ಮುಂದಕ್ಕೆ ಸಾಗಿಸಿದರು.

 

ವಿಷಯಗಳು: ಆಧುನಿಕ ಭಾರತದ ಇತಿಹಾಸ- ಹದಿನೆಂಟನೇ ಶತಮಾನದ ಮಧ್ಯಭಾಗದಿಂದ ಇಂದಿನವರೆಗಿನ- ಮಹತ್ವದ ಘಟನೆಗಳು, ವ್ಯಕ್ತಿತ್ವಗಳು, ಸಮಸ್ಯೆಗಳು.

ಗೋಪಾಲಕೃಷ್ಣ ಗೋಖಲೆ:


ಸಂದರ್ಭ:

ಪ್ರಧಾನಿ, ‘ಗೋಪಾಲ್ ಕೃಷ್ಣ ಗೋಖಲೆ’ ಅವರ ಜನ್ಮದಿನಾಚರಣೆಯಂದು ಅವರಿಗೆ ಗೌರವ ನಮನ ಸಲ್ಲಿಸಿದರು. ಅವರು 9 ಮೇ 1866 ರಂದು ಜನಿಸಿದರು.

ಭಾರತದ ಸ್ವಾತಂತ್ರ್ಯ ಚಳವಳಿಯಲ್ಲಿ ಗೋಪಾಲ್ ಕೃಷ್ಣ ಗೋಖಲೆಯವರ ಕೊಡುಗೆಗಳು:

 1. ಅವರು ಡೆಕ್ಕನ್ ಎಜುಕೇಶನ್ ಸೊಸೈಟಿಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದರು.
 2. ಅವರು 1894 ರಲ್ಲಿ ಐರ್ಲೆಂಡ್‌ಗೆ ಭೇಟಿ ನೀಡಿ ಐರಿಶ್ ರಾಷ್ಟ್ರೀಯವಾದಿ ಆಲ್ಫ್ರೆಡ್ ವೆಬ್ ಅವರನ್ನು ಇಂಡಿಯನ್ ನ್ಯಾಷನಲ್ ಕಾಂಗ್ರೆಸ್’ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಲು ವ್ಯವಸ್ಥೆ ಮಾಡಿದರು.
 3. ಗೋಖಲೆ ಅವರು ಜ್ಞಾನಪ್ರಕಾಶ್ ಎಂಬ ದಿನಪತ್ರಿಕೆಯನ್ನು ಪ್ರಕಟಿಸಿದರು, ಅದರ ಮೂಲಕ ಅವರು ರಾಜಕೀಯ ಮತ್ತು ಸಮಾಜದ ಬಗ್ಗೆ ತಮ್ಮ ಸುಧಾರಣಾವಾದಿ ಅಭಿಪ್ರಾಯಗಳನ್ನು ಪ್ರಚಾರ ಮಾಡಿದರು.
 4. ನಂತರ, 1903 ರಲ್ಲಿ, ಅವರು ಭಾರತದ ಗವರ್ನರ್ ಜನರಲ್ ಅವರ ಕೌನ್ಸಿಲ್ ಆಫ್ ಇಂಡಿಯಾದ ಸದಸ್ಯರಾಗಿ ಆಯ್ಕೆಯಾದರು.
 5. ಅವರನ್ನು 1904 ರ ಹೊಸ ವರ್ಷದ ಗೌರವ ಪಟ್ಟಿಯಲ್ಲಿ ಭಾರತೀಯ ಸಾಮ್ರಾಜ್ಯದ ಒಡನಾಡಿಯಾಗಿ ಅಥವಾ ಕಂಪ್ಯಾನಿಯನ್ ಆಫ್ ದಿ ಆರ್ಡರ್ ಆಫ್ ದಿ ಇಂಡಿಯನ್ ಎಂಪೈರ್ ಆಗಿ ನೇಮಿಸಲಾಯಿತು.
 6. 1905 ರಲ್ಲಿ, ಅವರು ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯನ್ನು ಸ್ಥಾಪಿಸಿದರು, ಅದರ ಮೂಲಕ ಜನರಿಗೆ ನಿಸ್ವಾರ್ಥ ಸೇವೆ ಮಾಡಲು ತರಬೇತಿ ನೀಡಲಾಯಿತು ಇದರ ಉದ್ದೇಶ ಸಾಮಾನ್ಯ ಜನರ ಒಳಿತಿಗಾಗಿ ಕೆಲಸ ಮಾಡುವುದಾಗಿತ್ತು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ನ ಅಧ್ಯಕ್ಷರಾಗಿಯೂ ಆಯ್ಕೆಯಾದರು.
 7. 1909 ರ ಮಿಂಟೋ-ಮಾರ್ಲೆ ಸುಧಾರಣೆಗಳನ್ನು ರೂಪಿಸುವಲ್ಲಿ ಅವರು ಪ್ರಮುಖ ಪಾತ್ರ ವಹಿಸಿದರು, ಅಂತಿಮವಾಗಿ ಇದನ್ನು ಶಾಸನದ ರೂಪದಲ್ಲಿ ಜಾರಿಗೆ ತರಲಾಯಿತು.
 8. ಗೋಖಲೆ ಯವರು, ಮೊಹಮ್ಮದ್ ಜಿನ್ನಾ ಮತ್ತು ಮಹಾತ್ಮ ಗಾಂಧಿ ಇಬ್ಬರಿಗೂ ಗುರು ಅಥವಾ ಮಾರ್ಗದರ್ಶಕರಾಗಿದ್ದರು. ಮಹಾತ್ಮ ಗಾಂಧಿಯವರು ಗೋಖಲೆ, ನನ್ನ ರಾಜಕೀಯ ಗುರು’ ಎಂಬ ಪುಸ್ತಕವನ್ನೂ ಬರೆದಿದ್ದಾರೆ.
 9. ಎಲ್ಲಾ ಭಾರತೀಯರಿಗೆ ರಾಜಕೀಯ ಸ್ವಾತಂತ್ರ್ಯ, ಸಾಮಾಜಿಕ ಸುಧಾರಣೆ ಮತ್ತು ಆರ್ಥಿಕ ಪ್ರಗತಿಯ ಮಹತ್ವದ ಬಗ್ಗೆ ಅವರ ಮೂಲಭೂತ ಪರಿಕಲ್ಪನೆಗಳು ನಮ್ಮ ಕಾಲಕ್ಕೆ ಇಂದಿಗೂ ಪ್ರಸ್ತುತವಾಗಿವೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ಕಪ್ಪು ಶಿಲೀಂದ್ರ:


(Black fungus)

ಸಂದರ್ಭ:

ಭಾರತದಲ್ಲಿ ವೇಗವಾಗಿ ಹರಡುತ್ತಿರುವ ಕರೋನಾ ಸಾಂಕ್ರಾಮಿಕದೊಂದಿಗೆ  ಕಪ್ಪು ಶಿಲೀಂಧ್ರ ಎಂದೂ ಕರೆಯಲ್ಪಡುವ ಹೊಸ ಮತ್ತು ಅಪರೂಪದ ಕಾಯಿಲೆ ಮುಂಚೂಣಿಗೆ ಬಂದಿದೆ.

ಕೋವಿಡ್ -19 ಸೋಂಕಿತ ರೋಗಿಗಳಲ್ಲಿ ಈ ರೋಗವು ಭಾರತದ ಕೆಲವು ರಾಜ್ಯಗಳಲ್ಲಿ ಆಗಾಗ್ಗೆ ಕಂಡುಬರುತ್ತದೆ.

 

ಕಪ್ಪು ಶಿಲೀಂದ್ರ ಕಾಯಿಲೆಯ ಕುರಿತು:

 1. ಇದು ಅಪರೂಪದ ಮತ್ತು ಗಂಭೀರವಾದ ಶಿಲೀಂಧ್ರಗಳ ಸೋಂಕು ಆಗಿದೆ (fungal infection).
 2. ಇದನ್ನು ‘ಮ್ಯೂಕೋರಮೈಕೋಸಿಸ್’ (Mucormycosis) ಎಂದೂ ಕರೆಯುತ್ತಾರೆ.
 3. ಈ ರೋಗವು ಸಾಮಾನ್ಯವಾಗಿ ಚರ್ಮದ ಮೇಲೆ ಕಾಣಿಸಿಕೊಳ್ಳುತ್ತದೆ ಮತ್ತು ರೋಗಿಯ ಶ್ವಾಸಕೋಶ ಮತ್ತು ಮೆದುಳಿನ ಮೇಲೂ ಪರಿಣಾಮ ಬೀರುತ್ತದೆ.
 4. ಪರಿಸರದಲ್ಲಿ ನೈಸರ್ಗಿಕವಾಗಿ ಕಂಡುಬರುವ ‘ಮ್ಯೂಕೋರುಮಾಸೆಟ್ಸ್’ (mucormycetes) ಎಂಬ ಶಿಲೀಂಧ್ರದಿಂದ ಕಪ್ಪು ಶಿಲೀಂಧ್ರ ರೋಗ ಉಂಟಾಗುತ್ತದೆ.

 

ದುರ್ಬಲತೆ: (Vulnerability)

ಈ ರೋಗವು ಮುಖ್ಯವಾಗಿ ಆರೋಗ್ಯ ಸಮಸ್ಯೆಗಳಿಗೆ  ಔಷಧಗಳನ್ನು ತೆಗೆದುಕೊಳ್ಳುವ ಜನರ ಮೇಲೆ ಪರಿಣಾಮ ಬೀರುತ್ತದೆ, ಇದು ಪರಿಸರ ರೋಗಕಾರಕಗಳ ವಿರುದ್ಧ ಅವರ ಹೋರಾಡುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ.

 

ಲಕ್ಷಣಗಳು:

 1. ಅಂತಹ ವ್ಯಕ್ತಿಗಳಿಂದ ಉಸಿರಾಡುವಾಗ, ಶಿಲೀಂಧ್ರ ಬ್ಯಾಕ್ಟೀರಿಯಾಗಳು (fungal spores) ಅವುಗಳ ಉಸಿರಾಟದ ರಂಧ್ರಗಳು ಅಥವಾ ಸೈನಸ್‌ಗಳು ಮತ್ತು ಶ್ವಾಸಕೋಶಗಳನ್ನು ತಲುಪಿ ಅವುಗಳ ಮೇಲೆ ಪರಿಣಾಮ ಬೀರುತ್ತವೆ.
 2. ಸೋಂಕಿನ ಎಚ್ಚರಿಕೆಯ ಸಂಕೇತವಾಗಿ, ಜ್ವರ, ತಲೆನೋವು, ಕೆಮ್ಮು, ಉಸಿರಾಟದ ತೊಂದರೆ, ರಕ್ತಸಿಕ್ತ ವಾಂತಿ ಮತ್ತು ಬದಲಾಗುತ್ತಿರುವ ಮಾನಸಿಕ ಸ್ಥಿತಿ ಮತ್ತು ಕಣ್ಣು ಮತ್ತು ಮೂಗಿನ ಸುತ್ತಲೂ ಕೆಂಪು ಮತ್ತು ನೋವುಗಳ ಚಿನ್ಹೆಗಳನ್ನು ಒಳಗೊಂಡಿದೆ.

 

ಚಿಕಿತ್ಸೆ ಏನು?

 1. ಆಂಟಿಫಂಗಲ್ ಚಿಕಿತ್ಸೆಯನ್ನು (antifungal) ನೀಡಲಾಗುತ್ತದೆ.
 2. ತೀವ್ರ ಸೋಂಕಿಗೆ ಶಸ್ತ್ರಚಿಕಿತ್ಸೆ ಅಗತ್ಯವಾಗಬಹುದು.
 3. ಈ ರೋಗದ ಚಿಕಿತ್ಸೆಗಾಗಿ, ಮಧುಮೇಹವನ್ನು ನಿಯಂತ್ರಿಸುವುದು, ಸ್ಟೀರಾಯ್ಡ್‌ಗಳ ಬಳಕೆಯನ್ನು ಕಡಿಮೆ ಮಾಡುವುದು ಮತ್ತು ಇಮ್ಯುನೊಮಾಡ್ಯುಲೇಟಿಂಗ್ (immunomodulating) ಔಷಧಗಳನ್ನು ನಿಲ್ಲಿಸುವುದು ಬಹಳ ಮಹತ್ವದಾಗಿದೆ.

 

ತಡೆಗಟ್ಟುವಿಕೆ:

ನೀವು ಧೂಳಿನಿಂದ ಕೂಡಿದ ಕಟ್ಟಡ ನಿರ್ಮಾಣ ತಾಣಗಳಿಗೆ ಭೇಟಿ ನೀಡುತ್ತಿದ್ದರೆ ಮುಖವಾಡವನ್ನು ಬಳಸಿ. ತೋಟಗಾರಿಕೆ ಮಾಡುವಾಗ ಬೂಟುಗಳು, ಉದ್ದವಾದ ಪ್ಯಾಂಟ್, ಉದ್ದನೆಯ ತೋಳಿನ ಶರ್ಟ್ ಮತ್ತು ಕೈಗವಸುಗಳನ್ನು ಧರಿಸಿ. ಸಂಪೂರ್ಣ ಸ್ನಾನ (Scrub bath) ಸೇರಿದಂತೆ ವೈಯಕ್ತಿಕ ನೈರ್ಮಲ್ಯವನ್ನು ಕಾಪಾಡಿಕೊಳ್ಳಿ.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಆರ್ಕ್ಟಿಕ್ ವಿಜ್ಞಾನ ಮಂತ್ರಿಗಳ ಸಭೆ:


(Arctic Science Ministerial)

ಸಂದರ್ಭ:

ಆರ್ಕ್ಟಿಕ್ ಪ್ರದೇಶದಲ್ಲಿ ಸಂಶೋಧನೆ ಮತ್ತು ಸಹಕಾರ ಕುರಿತು ಚರ್ಚಿಸಲು ಭಾರತ ಮೂರನೇ ಆರ್ಕ್ಟಿಕ್ ವಿಜ್ಞಾನ ಮಂತ್ರಿ (3rd Arctic Science Ministerial- ASM3) ಜಾಗತಿಕ ವೇದಿಕೆ ಸಭೆಯಲ್ಲಿ ಭಾಗವಹಿಸುತ್ತಿದೆ.

 

ಪ್ರಮುಖ ಅಂಶಗಳು:

 1. ಮೊದಲ ಎರಡು ಸಭೆಗಳಾದ ASM 1 ಮತ್ತು ASM 2 ಕ್ರಮವಾಗಿ ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿ 2016 ಮತ್ತು ಜರ್ಮನಿಯಲ್ಲಿ 2018 ರಲ್ಲಿ ನಡೆದಿದ್ದವು.
 2. ASM3,ಅನ್ನು ಐಸ್ಲ್ಯಾಂಡ್ ಮತ್ತು ಜಪಾನ್ ಜಂಟಿಯಾಗಿ ಆಯೋಜಿಸುತ್ತಿದ್ದು, ಏಷ್ಯಾದಲ್ಲಿ ನಡೆಯುತ್ತಿರುವ ಮೊದಲ ಆರ್ಕ್ಟಿಕ್ ವಿಜ್ಞಾನ ಮಂತ್ರಿ ಸಭೆ ಇದಾಗಿದೆ.
 3. ಆರ್ಕ್ಟಿಕ್ ಪ್ರದೇಶದ ಬಗ್ಗೆ ಸಾಮೂಹಿಕ ತಿಳುವಳಿಕೆಯನ್ನು ಹೆಚ್ಚಿಸುವ ಮತ್ತು ಅದರ ನಿರಂತರ ಮೇಲ್ವಿಚಾರಣೆಯ ದೃಷ್ಟಿಯಿಂದ ಶಿಕ್ಷಣ ತಜ್ಞರು, ಸ್ಥಳೀಯ ಸಮುದಾಯಗಳು, ಸರ್ಕಾರಗಳು ಮತ್ತು ನೀತಿ ನಿರೂಪಕರು ಸೇರಿದಂತೆ ವಿವಿಧ ಪಾಲುದಾರರಿಗೆ ಈ ದಿಕ್ಕಿನಲ್ಲಿ ಅವಕಾಶವನ್ನು ಒದಗಿಸಲು ಸಭೆಯನ್ನು ಆಯೋಜಿಸಲಾಗಿದೆ.
 4. ಈ ವರ್ಷದ ಥೀಮ್ / ವಿಷಯ ‘ಸುಸ್ಥಿರ ಆರ್ಕ್ಟಿಕ್ ಗಾಗಿ ಜ್ಞಾನ’ (‘Knowledge for a Sustainable Arctic’).

 

ಆರ್ಕ್ಟಿಕ್ ಪ್ರದೇಶವನ್ನು ಕಾಪಾಡಿಕೊಳ್ಳಲು ಅಂತರರಾಷ್ಟ್ರೀಯ ಸಹಯೋಗ ಮತ್ತು ಸಹಕಾರದ ಅವಶ್ಯಕತೆ:

 1. ಆರ್ಕ್ಟಿಕ್ ಪ್ರದೇಶದಲ್ಲಿ ಹೆಚ್ಚುತ್ತಿರುವ ತಾಪಮಾನ ಮತ್ತು ಅದರ ಹಿಮದ ಕರಗುವಿಕೆಯು ಜಾಗತಿಕ ಕಾಳಜಿಯಾಗಿದೆ ಏಕೆಂದರೆ ಅವು ಹವಾಮಾನ, ಸಮುದ್ರ ಮಟ್ಟವನ್ನು ನಿಯಂತ್ರಿಸುವಲ್ಲಿ ಮತ್ತು ಜೀವವೈವಿಧ್ಯತೆಯನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ.
 2. ಇದರ ಜೊತೆಯಲ್ಲಿ, ಆರ್ಕ್ಟಿಕ್ ಮತ್ತು ಹಿಂದೂ ಮಹಾಸಾಗರದ ನಡುವಿನ ಸಂಪರ್ಕ ಹೆಚ್ಚುತ್ತಿದೆ ಎಂಬುದಕ್ಕೆ ಪುರಾವೆಗಳಿವೆ (ಇದು ಭಾರತೀಯ ಮಾನ್ಸೂನ್ ಅನ್ನು ನಿಯಂತ್ರಿಸುತ್ತದೆ / ಮಾರ್ಪಡಿಸುತ್ತದೆ).
 3. ಆದ್ದರಿಂದ, ಭೌತಿಕ ಪ್ರಕ್ರಿಯೆಗಳ ತಿಳುವಳಿಕೆಯನ್ನು ಸುಧಾರಿಸುವುದು ಮತ್ತು ಭಾರತೀಯ ಬೇಸಿಗೆ ಮಾನ್ಸೂನ್ ಮೇಲೆ ಆರ್ಕ್ಟಿಕ್ ಹಿಮ ಕರಗುವಿಕೆಯ ಪರಿಣಾಮವನ್ನು ಕಡಿಮೆ ಮಾಡುವುದು ಬಹಳ ಮುಖ್ಯ.

 

ಭಾರತ ಮತ್ತು ಆರ್ಕ್ಟಿಕ್:

 1. 2013 ರಿಂದ ಭಾರತವು ಆರ್ಕ್ಟಿಕ್ ಕೌನ್ಸಿಲ್ನಲ್ಲಿ ಇತರ ಹನ್ನೆರಡು ದೇಶಗಳೊಂದಿಗೆ (ಜಪಾನ್, ಚೀನಾ, ಫ್ರಾನ್ಸ್, ಜರ್ಮನಿ, ಯುಕೆ, ಇಟಲಿ, ಸ್ವಿಟ್ಜರ್ಲೆಂಡ್, ಪೋಲೆಂಡ್, ಸ್ಪೇನ್, ನೆದರ್ಲ್ಯಾಂಡ್ಸ್, ಸಿಂಗಾಪುರ್ ಮತ್ತು ದಕ್ಷಿಣ ಕೊರಿಯಾ) ವೀಕ್ಷಕ ಸ್ಥಾನಮಾನವನ್ನು ಹೊಂದಿದೆ.
 2. 1920 ರಲ್ಲಿ ಪ್ಯಾರಿಸ್‌ನ ಸ್ವಾಲ್ಬಾರ್ಡ್ ಒಪ್ಪಂದಕ್ಕೆ (Svalbard Treaty) ಸಹಿ ಹಾಕಿದಾಗಿನಿಂದ ಭಾರತವು ಆರ್ಕ್ಟಿಕ್‌ನೊಂದಿಗೆ ಸಂಬಂಧ ಹೊಂದಿದೆ.
 3. ಜುಲೈ 2008 ರಿಂದ, ಭಾರತವು ಆರ್ಕ್ಟಿಕ್‌ನ ನಾರ್ವೆಯ ಸ್ವಾಲ್ಬಾರ್ಡ್ ಪ್ರದೇಶದಲ್ಲಿ ನೈಲೆಸುಂಡ್ (NyAlesund, Svalbard Area) ನಲ್ಲಿ ಹಿಮಾದ್ರಿ ಎಂಬ ಶಾಶ್ವತ ಸಂಶೋಧನಾ ಕೇಂದ್ರವನ್ನು ಹೊಂದಿದೆ.
 4. ಭಾರತವು ಜುಲೈ 2014 ರಿಂದ ಕಾಂಗ್ಸ್‌ಜೋರ್ಡೆನ್ ಫೋರ್ಡ್ (Kongsfjorden fjord) ನಲ್ಲಿ ಇಂಡಾರ್ಕ್ ಎಂಬ ಮಲ್ಟಿ-ಸೆನ್ಸರ್ ಮೂರ್ಡ್ ವೀಕ್ಷಣಾಲಯವನ್ನು (multi-sensor moored observatory) ನಿಯೋಜಿಸಿದೆ.
 5. ಆರ್ಕ್ಟಿಕ್ ಪ್ರದೇಶದಲ್ಲಿನ ಭಾರತದ ಸಂಶೋಧನಾ ಕಾರ್ಯಾಚರಣೆಗಳನ್ನು ಭಾರತ ಸರ್ಕಾರದ ಭೂ ವಿಜ್ಞಾನ ಸಚಿವಾಲಯದ ಅಡಿಯಲ್ಲಿ ಗೋವಾದಲ್ಲಿ ನೆಲೆಗೊಂಡಿರುವ ‘ರಾಷ್ಟ್ರೀಯ ಧ್ರುವ ಮತ್ತು ಸಾಗರ ಸಂಶೋಧನಾ ಕೇಂದ್ರ’ (National Centre for Polar and Ocean Research- NCPOR) ಸಂಘಟಿಸುತ್ತದೆ, ನಡೆಸುತ್ತದೆ ಮತ್ತು ಪ್ರಸಾರ ಮಾಡುತ್ತದೆ.

 

ಭಾರತದಿಂದ ಇತರ ಕೊಡುಗೆಗಳು:

 1. ಆರ್ಕ್ಟಿಕ್‌ನಲ್ಲಿನ ಸ್ಥಳ ಮತ್ತು ದೂರಸ್ಥ ಸಂವೇದನಾ ವೀಕ್ಷಣಾ ವ್ಯವಸ್ಥೆಗಳಿಗೆ ಕೊಡುಗೆ ನೀಡುವ ಯೋಜನೆಯನ್ನು ಭಾರತ ಹಂಚಿಕೊಂಡಿದೆ.
 2. ಸಾಗರದ ಮೇಲಿನ ಅಂಶಗಳು ಮತ್ತು ಸಾಗರ ಹವಾಮಾನ ನಿಯತಾಂಕಗಳ ದೀರ್ಘಕಾಲೀನ ಮೇಲ್ವಿಚಾರಣೆಗಾಗಿ ಭಾರತವು ಆರ್ಕ್ಟಿಕ್‌ನಲ್ಲಿ ತೆರೆದ ಸಮುದ್ರ ಮೂರಿಂಗ್ ಅನ್ನು ನಿಯೋಜಿಸುತ್ತದೆ.
 3. ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ (NISER) ಉಪಗ್ರಹ ಕಾರ್ಯಾಚರಣೆಯನ್ನು ಯುಎಸ್ಎ ಸಹಯೋಗದೊಂದಿಗೆ ಉಡಾವಣೆ ಮಾಡಲಾಗುತ್ತಿದೆ. ಸುಧಾರಿತ ರಾಡಾರ್ ಇಮೇಜಿಂಗ್ ಬಳಸಿ ಭೂ ಮೇಲ್ಮೈ ಬದಲಾವಣೆಗಳ ಕಾರಣಗಳು ಮತ್ತು ಪರಿಣಾಮಗಳನ್ನು ಜಾಗತಿಕವಾಗಿ ಅಳೆಯುವ ಉದ್ದೇಶವನ್ನು NISER ಹೊಂದಿದೆ.
 4. ಸುಸ್ಥಿರ ಆರ್ಕ್ಟಿಕ್ ಕಣ್ಗಾವಲು / ವೀಕ್ಷಣಾ ಜಾಲಕ್ಕೆ (Sustained Arctic Observational Network- SAON) ಭಾರತದ ಕೊಡುಗೆಗಳು ಮುಂದುವರಿಯಲಿವೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

ಮಾಲ್ಡೀವ್ಸ್ ಬಳಿಯ ಹಿಂದೂ ಮಹಾಸಾಗರದಲ್ಲಿ ಬಿದ್ದ ಚೀನಾ ರಾಕೆಟ್ ನ ಅವಶೇಷಗಳು:


(China rocket debris falls in Indian Ocean near Maldives)

 

ಸಂದರ್ಭ:

ಇತ್ತೀಚೆಗೆ, ಚೀನಾದ ರಾಕೆಟ್ ಲಾಂಗ್ ಮಾರ್ಚ್ (Long March rocket) ನ ಕೊನೆಯ ಹಂತದ ಅವಶೇಷಗಳು ಮಾಲ್ಡೀವ್ಸ್ ನ ಪಶ್ಚಿಮಕ್ಕೆ ಹಿಂದೂ ಮಹಾಸಾಗರಕ್ಕೆ ಬಿದ್ದವು. ಕಳೆದ ತಿಂಗಳು, ನಿರ್ಮಾಣ ಹಂತದಲ್ಲಿದ್ದ ಅದರ ಬಾಹ್ಯಾಕಾಶ ಕೇಂದ್ರದ ಪ್ರಮುಖ ಅಂಶಗಳನ್ನು ಈ ರಾಕೆಟ್‌ನಿಂದ ಚೀನಾ ಬಾಹ್ಯಾಕಾಶಕ್ಕೆ ಕಳುಹಿಸಿತ್ತು.

 

ಪ್ರಮುಖ ಅಂಶಗಳು:

 1. ಚೀನಾದ ಬಾಹ್ಯಾಕಾಶ ಕೇಂದ್ರವನ್ನು ನಿರ್ಮಿಸಲು ಲಾಂಗ್ ಮಾರ್ಚ್ -5 ಬಿ ವೈ 2 (Long March-5B Y2) ರಾಕೆಟ್ ‘ಟಿಯಾನ್ಹೆ’ ಮಾಡ್ಯೂಲ್ (Tianhe module), ಅಂದರೆ ‘ದೇವಲೋಕದ ಅರಮನೆ‘ ಎಂದರ್ಥದ’ (Heavenly Harmony) ಮೊದಲ ಘಟಕವನ್ನು ಹೊತ್ತೊಯ್ಯುತ್ತಿತ್ತು. ಚೀನಾದ ಬಾಹ್ಯಾಕಾಶ ಕೇಂದ್ರದ ನಿರ್ಮಾಣ ಮುಂದಿನ ವರ್ಷದ ಅಂತ್ಯದ ವೇಳೆಗೆ ಪೂರ್ಣಗೊಳ್ಳಲಿದೆ.
 2. ಟಿಯಾನ್ಹೆ ಮಾಡ್ಯೂಲ್ ಟಿಯಾಂಗಾಂಗ್ (Tiangong) ಬಾಹ್ಯಾಕಾಶ ಕೇಂದ್ರದ ನಿರ್ವಹಣೆ ಮತ್ತು ನಿಯಂತ್ರಣ ಕೇಂದ್ರವಾಗಿ ಕಾರ್ಯನಿರ್ವಹಿಸುತ್ತದೆ.
 3. ಟಿಯಾಂಗಾಂಗ್, ಇದು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ISS) ನಂತರ ಎರಡನೇ ಬಾಹ್ಯಾಕಾಶ ನಿಲ್ದಾಣವಾಗಲಿದೆ. ಇದು 10 ವರ್ಷಗಳ ಜೀವಿತಾವಧಿಯೊಂದಿಗೆ ವಿನ್ಯಾಸಗೊಳಿಸಲಾಗಿದ್ದರೂ ಇದು 15 ವರ್ಷಗಳವರೆಗೆ ಅಥವಾ 2037 ರವರೆಗೆ ಕಾರ್ಯನಿರ್ವಹಿಸಬಹುದಾಗಿದೆ.

 

ಸಂಬಂಧಿತ ಕಾಳಜಿಗಳು ಮತ್ತು ಸಮಸ್ಯೆಗಳು:

 1. ಭೂಮಿಯ ವಾತಾವರಣಕ್ಕೆ ಈ ರಾಕೆಟ್‌ನ ಮರು ಪ್ರವೇಶವನ್ನು (re-entry)ಖಗೋಳಶಾಸ್ತ್ರಜ್ಞರು ಇತಿಹಾಸದಲ್ಲಿ ನಾಲ್ಕನೇ ಅತಿದೊಡ್ಡ ಅನಿಯಂತ್ರಿತ ಮರು ಪ್ರವೇಶ ಎಂದು ಬಣ್ಣಿಸಿದ್ದಾರೆ. ಈ ರಾಕೆಟ್ ಭೂಮಿಯ ಮೇಲೆ ಬೀಳಬೇಕಾದರೆ, ಇತ್ತೀಚಿನ ದಿನಗಳಲ್ಲಿ ಅದು ಎಷ್ಟು ಹಾನಿಯನ್ನುಂಟುಮಾಡುತ್ತದೆ ಎಂಬ ಆತಂಕಗಳಿವೆ.
 2.  ಯುಎಸ್ ನ್ಯಾಷನಲ್ ಏರೋನಾಟಿಕ್ಸ್ ಅಂಡ್ ಸ್ಪೇಸ್ ಅಡ್ಮಿನಿಸ್ಟ್ರೇಷನ್ (NASA) ವು, ಚೀನಾವು “ಜವಾಬ್ದಾರಿಯುತ ಮಾನದಂಡಗಳನ್ನು ಪೂರೈಸುವಲ್ಲಿ ವಿಫಲವಾಗಿದೆ” ಎಂದು ಟೀಕಿಸಿದೆ.
 3. ಈ ಅವಶೇಷಗಳ ಹೆಚ್ಚಿನ ಭಾಗಗಳು ಭೂಮಿಯ ವಾತಾವರಣವನ್ನು ಪ್ರವೇಶಿಸುವ ಸಮಯದಲ್ಲಿ ಉರಿಯುತ್ತಿರುವುದರಿಂದ ಮನುಷ್ಯರಿಗೆ ಹಾನಿ ಉಂಟು ಮಾಡಬಹುದು ಎಂಬ ಭಯವನ್ನು ಕೆಲವರು ವ್ಯಕ್ತಪಡಿಸಿದ್ದಾರೆ. ಭೂಮಿಯ ಬಹುಪಾಲು ಭಾಗವು ಸಾಗರಗಳಿಂದ ಆವೃತವಾಗಿದೆ, ಮತ್ತು ವಿಶಾಲವಾದ ಭೂಪ್ರದೇಶಗಳು ಜನವಸತಿ ಹೊಂದಿಲ್ಲ ಎಂಬ ಅಂಶವೂ ಇದೆ.

 

ಈ ಸಮಯದ ಅವಶ್ಯಕತೆ:

ಬಾಹ್ಯಾಕಾಶಯಾನ ಕೈಗೊಳ್ಳುವ ದೇಶಗಳು (Spacefaring nations), ಭೂಮಿಯ ವಾತಾವರಣಕ್ಕೆ ಬಾಹ್ಯಾಕಾಶ ನೌಕೆಯ ವಸ್ತುಗಳು ಮರು ಪ್ರವೇಶಿಸುವಾಗ ಭೂಮಿಯ ನಿವಾಸಿಗಳು ಮತ್ತು ಆಸ್ತಿಗೆ ಹಾನಿಯಾಗುವ ಅಪಾಯವನ್ನು ಕಡಿಮೆ ಮಾಡಬೇಕು ಮತ್ತು ಈ ಕ್ರಿಯೆಗಳ ಬಗ್ಗೆ ಗರಿಷ್ಠ ಪಾರದರ್ಶಕತೆಯನ್ನು ತೋರಬೇಕು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಸಿನಾಬಂಗ್ ಪರ್ವತ (Mount Sinabung):

 ಈ ಪರ್ವತವು ಇಂಡೋನೇಷ್ಯಾದಲ್ಲಿದೆ. ಸುಮಾರು 400 ವರ್ಷಗಳ ಕಾಲ ಸುಪ್ತವಾಗಿದ್ದ ಜ್ವಾಲಾಮುಖಿಯು ನಂತರ 2010 ರಲ್ಲಿ ಇದು ಸ್ಫೋಟಗೊಂಡಿತು, ಅಂದಿನಿಂದ ಇದು ಸಕ್ರಿಯ ಜ್ವಾಲಾಮುಖಿಯಾಗಿದೆ.

ಸುದ್ದಿಯಲ್ಲಿರಲು ಕಾರಣ?

ಇತ್ತೀಚೆಗೆ, ಸಿನಾಬಂಗ್ ಪರ್ವತ ಸ್ಫೋಟಗೊಂಡಿದೆ.

ಹಿನ್ನೆಲೆ:

ಇಂಡೋನೇಷ್ಯಾವು, “ರಿಂಗ್ ಆಫ್ ಫೈರ್” ಅಥವಾ ‘ಪೆಸಿಫಿಕ್ ಸಾಗರ ಪಟ್ಟಿ’(Circum-Pacific Belt) ಯಲ್ಲಿರುವ ಕಾರಣದಿಂದಾಗಿ ಅನೇಕ ಸಕ್ರಿಯ ಜ್ವಾಲಾಮುಖಿಗಳು ಇಲ್ಲಿ ಕಂಡುಬರುತ್ತವೆ. ಇದಲ್ಲದೆ, ಈ ಪ್ರದೇಶವು ಭೂಕಂಪ ಪೀಡಿತ ಪ್ರದೇಶದ ಅಡಿಯಲ್ಲಿ ಬರುತ್ತದೆ.

ಬದ್ರಿನಾಥ್ ಧಾಮ್:

ಉತ್ತರಾಖಂಡದ ಬದ್ರಿನಾಥ್ ಧಾಮ್ ಅನ್ನು ಸ್ಮಾರ್ಟ್ ಆಧ್ಯಾತ್ಮಿಕ ನಗರ (spiritual smart city) ವನ್ನಾಗಿ ಅಭಿವೃದ್ಧಿಪಡಿಸಲು ಸಾರ್ವಜನಿಕ ವಲಯದ 5 ತೈಲ ಸಂಸ್ಥೆಗಳು (PSUs) 100 ಕೋಟಿ ರೂ. ನೀಡುವುದಾಗಿ ತಿಳಿಸಿವೆ.

 1. ಅಭಿವೃದ್ಧಿ ಚಟುವಟಿಕೆಗಳಲ್ಲಿ ನದಿ ಒಡ್ಡುಗಳ ನಿರ್ಮಾಣ, ಎಲ್ಲಾ ಪ್ರದೇಶಗಳಲ್ಲಿ ವಾಹನ ಮಾರ್ಗಗಳ ನಿರ್ಮಾಣ, ಸೇತುವೆ ನಿರ್ಮಾಣ, ಅಸ್ತಿತ್ವದಲ್ಲಿರುವ ಸೇತುವೆಗಳ ಸುಂದರೀಕರಣ, ವಸತಿ ಸೌಕರ್ಯಗಳೊಂದಿಗೆ ಗುರುಕುಲ ಸೌಲಭ್ಯಗಳ ಸ್ಥಾಪನೆಮಾಡುವುದು ಇತ್ಯಾದಿಗಳು ಸೇರಿವೆ.
 2. ಈ ಕಾರ್ಯಗಳ ವೆಚ್ಚವನ್ನು ಕಂಪನಿಗಳು ತಮ್ಮ ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ (CSR) ನಿಧಿಯಿಂದ ಭರಿಸುತ್ತವೆ.

ಬದ್ರಿನಾಥ್ ಧಾಮ್ ನ ಭೌಗೋಳಿಕತೆ:

ಬದ್ರಿನಾಥ್ ಅಲಕಾನಂದ ನದಿಯ ದಡದಲ್ಲಿರುವ ಗರ್ವಾಲ್ ಹಿಮಾಲಯದಲ್ಲಿದೆ. ನಗರವು ನೀಲಕಂಠ ಶಿಖರದಿಂದ 9 ಕಿ.ಮೀ ಪೂರ್ವಕ್ಕೆ (6,596 ಮೀ), ನರ್ ಮತ್ತು ನಾರಾಯಣ್ ಪರ್ವತಗಳ ನಡುವೆ ಇದೆ. ಬದ್ರಿನಾಥ್ ನಂದಾ ದೇವಿ ಶಿಖರದಿಂದ ವಾಯುವ್ಯಕ್ಕೆ 62 ಕಿ.ಮೀ ಮತ್ತು  ರಿಷಿಕೇಶದಿಂದ 301 ಕಿ.ಮೀ ದೂರದಲ್ಲಿದೆ.

 ಡ್ರಗ್ 2-ಡಿಯೋಕ್ಸಿ-ಡಿ-ಗ್ಲೂಕೋಸ್ (2-DG):

(Drug 2-deoxy-D-glucose (2-DG)

 1.  ಇತ್ತೀಚೆಗೆ, ಭಾರತೀಯ ಔಷಧ ಮಹಾ ನಿಯಂತ್ರಕರು (Drug Controller General of India– DCGI) ಡಿಆರ್‌ಡಿಒನ 2-ಡಿಜಿ ಔಷಧಿಯನ್ನು ಸಾಮಾನ್ಯದಿಂದ ಗಂಭೀರವಾದ ಪರಿಸ್ಥಿತಿಯನ್ನು ಹೊಂದಿರುವ ಕೋವಿಡ್ -19 ರೋಗಿಗಳಿಗೆ ಸಹಾಯಕ ಚಿಕಿತ್ಸೆಯಾಗಿ ತುರ್ತು ಬಳಕೆಗೆ ಅನುಮತಿ ನೀಡಿದೆ.
 2. 2-ಡಿಜಿ ಆಸ್ಪತ್ರೆಗೆ ದಾಖಲಾದ ರೋಗಿಗಳಿಗೆ ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಪೂರಕ ಆಮ್ಲಜನಕದ ವಿತರಣೆಯ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುತ್ತದೆ.
 3. 2-ಡಿಯೋಕ್ಸಿ-ಡಿ-ಗ್ಲೂಕೋಸ್ (2-ಡಿಜಿ) ಔಷಧಿಯನ್ನು ಹೈದರಾಬಾದ್ ಮೂಲದ ಡಾ.ರೆಡ್ಡಿಸ್ ಪ್ರಯೋಗಾಲಯಗಳ ಸಹಯೋಗದೊಂದಿಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಯ (DRDO) ಪ್ರಯೋಗಾಲಯವಾದ ನ್ಯೂಕ್ಲಿಯರ್ ಮೆಡಿಸಿನ್ ಮತ್ತು ಅಲೈಡ್ ಸೈನ್ಸಸ್ (Institute of Nuclear Medicine and Allied Sciences (INMAS) ಅಭಿವೃದ್ಧಿಪಡಿಸಿದೆ.

ಶುವುಯಾ  ಡೆಸರ್ಟಿ:

(Shuvuuia deserti)

 1.  ಇದು 70 ದಶಲಕ್ಷ ವರ್ಷಗಳ ಹಿಂದೆ ಜೀವಿಸಿದ್ದ ಸಣ್ಣ ಹಕ್ಕಿಯಂತಹ ರಾತ್ರಿಯ ಡೈನೋಸಾರ್‌ ಆಗಿದೆ.
 2. ಇದು ಕ್ರಿಟೇಶಿಯಸ್ ಅವಧಿಯಲ್ಲಿ ಕಂಡುಬರುವ ಫೆಸೆಂಟ್ ಆಕಾರದ, ಎರಡು ಕಾಲಿನ ಡೈನೋಸಾರ್ ಆಗಿತ್ತು ಮತ್ತು ಇದು ಒಂದು ಸಣ್ಣ ಸಾಕು ಬೆಕ್ಕಿನ ಗಾತ್ರದಷ್ಟು ತೂಗುತ್ತಿತ್ತು.
 3. ಇದು ಬದುಕಲು ಅತ್ಯುತ್ತಮ ರಾತ್ರಿ ದೃಷ್ಟಿ ಮತ್ತು ಅತ್ಯುತ್ತಮ ಶ್ರವಣ ಸಾಮರ್ಥ್ಯವನ್ನು ಬಳಸಿಕೊಂಡಿತ್ತು.
 4. ಅದರಲ್ಲಿ, ಮಾಂಸಾಹಾರಿ ಡೈನೋಸಾರ್‌ಗಳಂತೆ, ಬಲವಾದ ದವಡೆಗಳು ಮತ್ತು ಮೊನಚಾದ ಹಲ್ಲುಗಳು ಕಂಡುಬಂದಿಲ್ಲ, ಮತ್ತು ಇದು ವಿಶೇಷವಾಗಿ ಹಕ್ಕಿಯಂತಹ ತೆಳುವಾದ ತಲೆಬುರುಡೆ ಮತ್ತು ಅಕ್ಕಿ ಧಾನ್ಯಗಳಂತಹ ಅನೇಕ ಸಣ್ಣ ಹಲ್ಲುಗಳನ್ನು ಹೊಂದಿತ್ತು.


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos