Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 5ನೇ ಮೇ 2021

 

ಪರಿವಿಡಿ: 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಪಶ್ಚಿಮ ಬಂಗಾಳ ಜಾರಿಗೆ ತಂದ ರಿಯಲ್ ಎಸ್ಟೇಟ್ ನಿಯಂತ್ರಣ ಕಾನೂನನ್ನು ಅಸಿಂಧುಗೊಳಿಸಿದ ಸುಪ್ರೀಂಕೋರ್ಟ್.

2. ಆಮ್ಲಜನಕ ಪೂರೈಕೆ ಕುರಿತು ದೆಹಲಿ ಹೈಕೋರ್ಟ್‌ ಜಾರಿಗೊಳಿಸಿದ ನ್ಯಾಯಾಂಗ ನಿಂದನೆ ಅರ್ಜಿಯ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋದ ಕೇಂದ್ರ.

3. ಮತಗಳ ಮರುಎಣಿಕೆ ಕುರಿತು ಚುನಾವಣಾ ಅಧಿಕಾರಿಯ ನಿರ್ಣಯವೇ ಅಂತಿಮ.

4. ಜನರು, ಪ್ರಾಣಿಗಳನ್ನು ಗುರಿಯಾಗಿಸುವ ‘ಒಂದು ಆರೋಗ್ಯ’ ವಿಧಾನ.

5. ಚೀನಾವನ್ನು ಎದುರಿಸಲು ಸಾಮಾನ ನಿಲುವುಗಳನ್ನು ಹೊಂದಲು ಬಯಸಿದ

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಉಪಯೋಗಿಸಿದ ಅಡುಗೆ ಎಣ್ಣೆ ಮೂಲಕ ಬಯೋಡೀಸಲ್ ತಯಾರಿ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಮೂರ್ಹೆನ್ ಯೋಗ ಮ್ಯಾಟ್.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ, ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.

ಪಶ್ಚಿಮ ಬಂಗಾಳ ಜಾರಿಗೆ ತಂದ ರಿಯಲ್ ಎಸ್ಟೇಟ್ ನಿಯಂತ್ರಣ ಕಾನೂನನ್ನು ಅಸಿಂಧುಗೊಳಿಸಿದ ಸುಪ್ರೀಂಕೋರ್ಟ್:


(Supreme Court strikes down W.B. law on regulating real estate)

 ಸಂದರ್ಭ:

ರಾಜ್ಯದಲ್ಲಿ ರಿಯಲ್ ಎಸ್ಟೇಟ್ ಕ್ಷೇತ್ರವನ್ನು ನಿಯಂತ್ರಿಸಲು ಪಶ್ಚಿಮ ಬಂಗಾಳವು ಜಾರಿಗೆ ತಂದ ಕಾನೂನನ್ನು ಸುಪ್ರೀಂ ಕೋರ್ಟ್ ಅಸಿಂಧುಗೊಳಿಸಿದೆ ಮತ್ತು ಕೇಂದ್ರದ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) (Centre’s Real Estate (Regulation and Development) Act) ಕಾಯ್ದೆಯನ್ನು ಪಶ್ಚಿಮ ಬಂಗಾಳದ ಕಾನೂನು ಉಲ್ಲಂಘಿಸುವುದರಿಂದ ಇದನ್ನು “ಅಸಂವಿಧಾನಿಕ” ಎಂದು ಸಹ ಘೋಷಿಸಿದೆ.

 1. ಅಲ್ಲದೆ, ವಿಧಿ 142 ರ ಅಡಿಯಲ್ಲಿ ನ್ಯಾಯವ್ಯಾಪ್ತಿಯನ್ನು ಚಲಾಯಿಸುವಾಗ, ರಾಜ್ಯದ ಕಾನೂನಿನ ಅಸಿಂಧುಗೊಳಿಸುವಿಕೆಯು ಈ ತೀರ್ಪಿನ ದಿನಾಂಕಕ್ಕೆ ಮುಂಚಿತವಾಗಿ ರಾಜ್ಯ ಕಾಯ್ದೆಯ ಅಡಿಯಲ್ಲಿ ನೀಡಲಾದ ನೋಂದಣಿ, ನಿರ್ಬಂಧಗಳು ಮತ್ತು ಅನುಮತಿಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ನ್ಯಾಯಾಲಯವು ನಿರ್ದೇಶಿಸಿತು.

 

ನ್ಯಾಯಾಲಯವು ಪಶ್ಚಿಮ ಬಂಗಾಳದ ಕಾಯ್ದೆಯನ್ನು ಅಸಿಂಧುಗೊಳಿಸಲು ಕಾರಣವೇನು?

 1. ಪಶ್ಚಿಮ ಬಂಗಾಳ ವಸತಿ ಉದ್ಯಮ ನಿಯಂತ್ರಣ ಕಾಯ್ದೆ (West Bengal Housing Industry Regulation Act -WB-HIRA), 2017 ಅನ್ನು ಜಾರಿಗೆ ತರುವ ಮೂಲಕ, ರಾಜ್ಯದ ಶಾಸಕಾಂಗವು ಕೇಂದ್ರದ ಕಾಯ್ದೆ ಯೊಂದಿಗೆ “ಸಮಾನಾಂತರ ಆಡಳಿತ” ವನ್ನು ಒಳಗೊಂಡ ಸಮಾನಾಂತರ ಶಾಸನವನ್ನು ಸ್ಥಾಪಿಸಲು ಪ್ರಯತ್ನಿಸಿದೆ ಎಂದು ಉನ್ನತ ನ್ಯಾಯಾಲಯ ಹೇಳಿದೆ.
 2. ಏಳನೇ ಅನುಸೂಚಿಯ ಸಮವರ್ತಿ ಪಟ್ಟಿಗೆ ಸೇರುವ ವಿಷಯಗಳ ವ್ಯಾಪ್ತಿಯಲ್ಲಿ ಪ್ರಾಬಲ್ಯ ಹೊಂದಿರುವ ಸಂಸತ್ತಿನ ಶಾಸನ ರಚನಾ ಅಧಿಕಾರವನ್ನು ಪಶ್ಚಿಮ ಬಂಗಾಳ ರಾಜ್ಯ ಶಾಸಕಾಂಗವು ಅತಿಕ್ರಮಿಸಿದೆ ಎಂದು ವರಿಷ್ಠ ನ್ಯಾಯಾಲಯವು ಹೇಳಿದೆ.

 

ಸಂವಿಧಾನ ಹೇಳುವುದೇನು?

ಭಾರತದ ಸಂವಿಧಾನದ 1949 ರ 254(1) ನೇ ವಿಧಿ:

 1. ಒಂದು ರಾಜ್ಯದ ಶಾಸಕಾಂಗವು ಮಾಡಿದ ಕಾನೂನಿನ ಯಾವುದೇ ನಿಬಂಧನೆಯು ಸಂಸತ್ತು ಜಾರಿಗೆ ತರಲು ಸಮರ್ಥವಾಗಿರುವ ಅಥವಾ ಸಂಸತ್ತು ಮಾಡಿದ ಕಾನೂನಿನ ಯಾವುದೇ ನಿಬಂಧನೆಗೆ ವ್ಯತಿರಿಕ್ತವಾಗಿದ್ದರೆ, ಅಥವಾ ಸಮವರ್ತಿ ಪಟ್ಟಿಯಲ್ಲಿ ನಮೂದಿಸಲಾದ ವಿಷಯಗಳಲ್ಲಿ ಒಂದಕ್ಕೆ ಸಂಬಂಧಿಸಿದಂತೆ ಅಸ್ತಿತ್ವದಲ್ಲಿರುವ ಕಾನೂನಿನ ಯಾವುದೇ ನಿಬಂಧನೆಗೆ, ಮತ್ತು, ಷರತ್ತು (2) ರ ನಿಬಂಧನೆಗಳಿಗೆ ಒಳಪಟ್ಟಿರುತ್ತದೆ, ಸಂಸತ್ತು ಮಾಡಿದ ಕಾನೂನು, ಯಾವುದೇ ರಾಜ್ಯ ಶಾಸಕಾಂಗವು ಅಂಗೀಕರಿಸಿದ ಕಾಯ್ದೆಗೆ ಮೊದಲು ಅಥವಾ ನಂತರ ಅಂಗೀಕರಿಸಲ್ಪಟ್ಟರೂ ಸಹ ಸಂಸತ್ತು ಮಾಡಿದ ಕಾನೂನು ರಾಜ್ಯವಿಧಾನ ಮಂಡಲಗಳು ಮಾಡಿದ ಕಾನೂನನ್ನು ಅತಿ ಕ್ರಮಿಸಬಹುದು ಎಂಬುದು ಅಂಗೀಕೃತ ನಿಯಮವಾಗಿದೆ ಮತ್ತು ರಾಜ್ಯ ಶಾಸಕಾಂಗವು ಮಾಡಿದ ಕಾನೂನು, ತನ್ನಷ್ಟಕ್ಕೆ ತಾನೇ ಅನುರ್ಜಿತಗೊಳ್ಳುತ್ತದೆ.

 

Note- ಆದರೂ ಈ ನಿಯಮಕ್ಕೊಂದು ಅಪವಾದವಿದೆ,ಅಂದರೆ ರಾಜ್ಯದ ವಿಧೇಯಕವು ಮೀಸಲಿಡಲ್ಪಟ್ಟಿದ್ದು ರಾಷ್ಟ್ರಪತಿಯವರ ಅಂಗೀಕಾರ ಪಡೆದರೆ ಆಗ ರಾಜ್ಯ ಶಾಸಕಾಂಗವು ಮಾಡಿದ ಕಾನೂನು ಸಂಸತ್ತಿನ ಕಾನೂನಿಗಿಂತ ಪ್ರಭಾವಶಾಲಿಯಾಗುತ್ತದೆ.

 

ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ, ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.

ಆಮ್ಲಜನಕ ಪೂರೈಕೆ ಕುರಿತು ದೆಹಲಿ ಹೈಕೋರ್ಟ್‌ ಜಾರಿಗೊಳಿಸಿದ ನ್ಯಾಯಾಂಗ ನಿಂದನೆ ಅರ್ಜಿಯ ವಿರುದ್ಧ ಸುಪ್ರೀಂಕೋರ್ಟ್ ಮೊರೆ ಹೋದ ಕೇಂದ್ರ:


(Centre moves SC against Delhi HC’s contempt notice over oxygen supply)

ಸಂದರ್ಭ:

ರಾಷ್ಟ್ರ ರಾಜಧಾನಿಯಲ್ಲಿ COVID-19 ರೋಗಿಗಳಿಗೆ ಚಿಕಿತ್ಸೆ ನೀಡಲು ಆಮ್ಲಜನಕದ ಪೂರೈಕೆ ಮಾಡುವಂತೆ ನೀಡಿದ ನಿರ್ದೇಶನವನ್ನು ಪಾಲಿಸದಿದ್ದಕ್ಕಾಗಿ ದೆಹಲಿ ಹೈಕೋರ್ಟ್ ಜಾರಿಗೊಳಿಸಿದ ನ್ಯಾಯಾಂಗ ನಿಂದನೆ ಆದೇಶ ಮತ್ತು ತನ್ನ ಅಧಿಕಾರಿಗಳ ವೈಯಕ್ತಿಕ ಹಾಜರಾತಿಯನ್ನು ಬಯಸಿದ ಆದೇಶದ ವಿರುದ್ಧ ಕೇಂದ್ರ ಸರ್ಕಾರ ಸಲ್ಲಿಸಿದ ಮನವಿಯನ್ನು ಆಲಿಸಲು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿದೆ.

ಏನಿದು ಸಮಸ್ಯೆ?

ರಾಷ್ಟ್ರ ರಾಜಧಾನಿಯಲ್ಲಿ COVID-19 ರೋಗಿಗಳಿಗೆ ಚಿಕಿತ್ಸೆ ನೀಡಲು ಅಗತ್ಯವಾದ ಆಮ್ಲಜನಕವನ್ನು ಪೂರೈಸಲು ವಿಫಲವಾಗಿರುವ ಕೇಂದ್ರ ಸರ್ಕಾರದ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣವನ್ನು ಏಕೆ ದಾಖಲಿಸ ಬಾರದು ಎಂದು ದೆಹಲಿ ಉಚ್ಚ ನ್ಯಾಯಾಲಯವು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ.

ನ್ಯಾಯಾಂಗ ನಿಂದನೆ: ಎರಡು ವಿಧಗಳು.

ನ್ಯಾಯಾಲಯಗಳ ನಿಂದನೆ ಕಾಯ್ದೆ 1971 ನಾಗರಿಕ ಮತ್ತು ಕ್ರಿಮಿನಲ್ ನ್ಯಾಯಾಂಗ ನಿಂದನೆ ಯನ್ನು ವ್ಯಾಖ್ಯಾನಿಸುತ್ತದೆ, ಮತ್ತು ನ್ಯಾಯಾಲಯಗಳು ನಿಂದನೆ ಮಾಡಿದ್ದಕ್ಕೆ ಶಿಕ್ಷೆ ವಿಧಿಸುವ ಅಧಿಕಾರಗಳು ಮತ್ತು ಕಾರ್ಯವಿಧಾನಗಳನ್ನು ಮತ್ತು ನ್ಯಾಯಾಲಯಗಳ ಘನತೆಗೆ ಧಕ್ಕೆ ತಂದ ಅಪರಾಧಕ್ಕೆ ಶಿಕ್ಷೆಯನ್ನು ವಿಧಿಸಬಹುದು.

 1. ನಾಗರಿಕ / ಸಿವಿಲ್: ನ್ಯಾಯಾಲಯದ ಯಾವುದೇ ತೀರ್ಪು, ಆದೇಶ, ನಿರ್ದೇಶನ, ರಿಟ್ ಅಥವಾ ಇತರ ಕಾರ್ಯವಿಧಾನಗಳ ಉದ್ದೇಶಪೂರ್ವಕ ಉಲ್ಲಂಘನೆಯನ್ನು ನಾಗರಿಕ ನ್ಯಾಯಾಂಗ ನಿಂದನೆಗೆ ಒಳಪಡಿಸಲಾಗುತ್ತದೆ.
 2. ಕ್ರಿಮಿನಲ್ /Criminal: ಯಾವುದೇ ವಿಷಯವನ್ನು ಪ್ರಕಟಿಸುವ ಮೂಲಕ (ಮೌಖಿಕ ಅಥವಾ ಲಿಖಿತ ಪದಗಳು, ಚಿಹ್ನೆಗಳು, ದೃಶ್ಯ ಪ್ರತಿಫಲನಗಳು ಅಥವಾ ಇನ್ನಾವುದೇ ರೀತಿಯಲ್ಲಿ) ನ್ಯಾಯಾಲಯವನ್ನು ದೂಷಿಸುವ ಅಥವಾ ನ್ಯಾಯಾಂಗ ವಿಚಾರಣೆಯಲ್ಲಿ ಹಸ್ತಕ್ಷೇಪ ಮಾಡುವ ಅಥವಾ ತಡೆಯುವ ಯಾವುದೇ ಪ್ರಯತ್ನವನ್ನು ಒಳಗೊಂಡಿರುವ ಅಪರಾಧವು ಕ್ರಿಮಿನಲ್ ನ್ಯಾಯಾಂಗ ನಿಂದನೆ ವ್ಯಾಪ್ತಿಗೆ ಬರುತ್ತದೆ.

 

ಸಂಬಂಧಿತ ನಿಬಂಧನೆಗಳು:

 1. ನ್ಯಾಯಾಲಯದ ನಿಂದನೆ ಮಾಡಿದ್ದಕ್ಕಾಗಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಭಾರತದ ಸಂವಿಧಾನದ 129 ಮತ್ತು 215 ನೇ ವಿಧಿಗಳು ಕ್ರಮವಾಗಿ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್‌ ಗಳಿಗೆ ಅಧಿಕಾರ ನೀಡಿವೆ.
 2. 1971 ರ ನ್ಯಾಯಾಂಗ ನಿಂದನೆ ಕಾಯ್ದೆಯ ಸೆಕ್ಷನ್ 10 ಹೈಕೋರ್ಟ್ ಗಳಿಗೆ ತನ್ನ ಅಧೀನ ನ್ಯಾಯಾಲಯಗಳ ನ್ಯಾಯಾಂಗ ನಿಂದನೆ ಕಾರ್ಯವೈಖರಿಗೆ ಶಿಕ್ಷಿಸುವ ಅಧಿಕಾರವನ್ನು ವ್ಯಾಖ್ಯಾನಿಸುತ್ತದೆ.
 3. ಸಾರ್ವಜನಿಕ ಸುವ್ಯವಸ್ಥೆ ಮತ್ತು ಮಾನಹಾನಿಯಂತಹ ಅಂಶಗಳೊಂದಿಗೆ,ಸಂವಿಧಾನವು 19 ನೇ ವಿಧಿ ಅಡಿಯಲ್ಲಿ ನೀಡಲಾಗಿರುವ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ಸಮಂಜಸವಾದ ನಿರ್ಬಂಧವಾಗಿ ನ್ಯಾಯಾಂಗ ನಿಂದನೆಯನ್ನು ಅಡಕಗೊಳಿಸಿದೆ.

 

ದಯವಿಟ್ಟು ಗಮನಿಸಿ:

ಸುಪ್ರೀಂ ಕೋರ್ಟಿಗೆ ಕ್ರಿಮಿನಲ್ ನ್ಯಾಯಾಂಗ ನಿಂದನೆಯ ವಿಚಾರಣೆಯನ್ನು ಪ್ರಾರಂಭಿಸಲು ಅಟಾರ್ನಿ ಜನರಲ್ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ.ಏಕೆಂದರೆ ನ್ಯಾಯಾಲಯವು ನ್ಯಾಯಾಂಗದ ನಿಂದನೆಗಾಗಿ ಶಿಕ್ಷೆ ವಿಧಿಸಲು ಸಂವಿಧಾನ ದತ್ತವಾಗಿ ನೀಡಲಾಗಿರುವ ತನ್ನ ಅಂತರ್ಗತ ಅಧಿಕಾರವನ್ನು ಚಲಾಯಿಸುತ್ತದೆ ಮತ್ತು ಅಂತಹ ಸಾಂವಿಧಾನಿಕ ಅಧಿಕಾರಗಳನ್ನು ನಿರ್ಬಂಧಿಸಲಾಗುವುದಿಲ್ಲ. ಆದ್ದರಿಂದ ಸಂವಿಧಾನವು ನೀಡಿರುವ ಅಧಿಕಾರಗಳನ್ನು ಚಲಾಯಿಸಿ ‘ಶೋ ಕಾಸ್’ ನೋಟಿಸ್ ನೀಡುವ ಮೂಲಕ ವರಿಷ್ಠ ನ್ಯಾಯಾಲಯ ಕ್ರಿಮಿನಲ್ ನ್ಯಾಯಾಂಗ ನಿಂದನೆಯ ವಿಚಾರಣೆಯನ್ನು ಪ್ರಾರಂಭಿಸಬಹುದು.

 

ವಿಷಯಗಳು: ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಪ್ರಮುಖ ಲಕ್ಷಣಗಳು.

ಮತಗಳ ಮರುಎಣಿಕೆ ಕುರಿತು ಚುನಾವಣಾ ಅಧಿಕಾರಿಯ ನಿರ್ಣಯವೇ ಅಂತಿಮ:


(Returning officer has final say in recount of votes)

 

ಸಂದರ್ಭ:

ಭಾರತದ ಚುನಾವಣಾ ಆಯೋಗವು ಇತ್ತೀಚೆಗೆ ಪಶ್ಚಿಮ ಬಂಗಾಳದ ನಂದಿಗ್ರಾಮ್ ವಿಧಾನಸಭಾ ಕ್ಷೇತ್ರದಲ್ಲಿ ಚಲಾವಣೆಗೊಂಡ ಮತಗಳ ಮರುಎಣಿಕೆ ಕುರಿತು ಮಾಧ್ಯಮ ವರದಿಗಳನ್ನು ಅರಿತುಕೊಂಡಿದ್ದು, ಆಯೋಗದ ಮತದಾನದ ಸಮಿತಿಯಿಂದ ನೇಮಕಗೊಂಡ ಚುನಾವಣಾ ಅಧಿಕಾರಿಯು( the returning officer) ಕಾನೂನಿನ ಅಡಿಯಲ್ಲಿ ಅಂತಹ ವಿಷಯಗಳ ಬಗ್ಗೆ ನಿರ್ಣಯ ತೆಗೆದುಕೊಳ್ಳುವ ಅಂತಿಮ ಅಧಿಕಾರ ಹೊಂದಿದ್ದಾರೆ ಎಂದು ಸ್ಪಷ್ಟಪಡಿಸಿದೆ.

 

ಏನಿದು ಸಮಸ್ಯೆ?

 ನಂದಿಗ್ರಾಮ್ ವಿಧಾನಸಭಾ ಕ್ಷೇತ್ರವು, ಪಶ್ಚಿಮ ಬಂಗಾಳದ ಹಾಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅವರ ಮಾಜಿ ಸಹಾಯಕ ಭಾರತೀಯ ಜನತಾ ಪಕ್ಷದ (BJP) ಮುಖಂಡ ಸುವೇಂದು ಅಧಿಕಾರಿಯ ನಡುವೆ ಕಠಿಣ, ಜಿದ್ದಾಜಿದ್ದಿನ ಪೈಪೋಟಿಯನ್ನು ಕಂಡಿತು.

ಅಂತಿಮವಾಗಿ, ಚುನಾವಣಾ ಆಯೋಗವು ಸುವೇಂದು ಅಧಿಕಾರಿ ಯವರು 1,956 ಮತಗಳ ಅಂತರದಿಂದ ಜಯಶಾಲಿಗಳಾಗಿದ್ದಾರೆ ಎಂದು ಘೋಷಿಸಿತು.ತಕ್ಷಣ ಮಮತಾ ಬ್ಯಾನರ್ಜಿ ಅವರ ಪಕ್ಷ ತೃಣಮೂಲ ಕಾಂಗ್ರೆಸ್ ಮತಗಳ ಮರುಎಣಿಕೆ ಮಾಡುವಂತೆ ಕೋರಿತು ಆದರೆ ಅದನ್ನು ಚುನಾವಣಾ ಆಯೋಗವು ತಿರಸ್ಕರಿಸಿತು.

 

ಪ್ರಜಾ ಪ್ರಾತಿನಿಧ್ಯ ಕಾಯ್ದೆ, 1951 ರ ಅಡಿಯಲ್ಲಿ ಚುನಾವಣಾ ಅಧಿಕಾರಿಯ ಪಾತ್ರಗಳು ಮತ್ತು ಅಧಿಕಾರಗಳು:

 1. ವಿಧಾನಸಭಾ ಕ್ಷೇತ್ರದ ರಿಟರ್ನಿಂಗ್ ಆಫೀಸರ್ ಅಥವಾ ಚುನಾವಣಾ ಅಧಿಕಾರಿಯು 1951 ರ ಪ್ರಜಾ ಪ್ರಾತಿನಿಧ್ಯ ಕಾಯ್ದೆ ಅಡಿಯಲ್ಲಿ ಶಾಸನಬದ್ಧ ಕಾರ್ಯಗಳನ್ನು ಅರೆ-ನ್ಯಾಯಾಂಗ ಪ್ರಾಧಿಕಾರದ ಸಾಮರ್ಥ್ಯದಲ್ಲಿ ( in quasi-judicial capacity) ನಿರ್ವಹಿಸುತ್ತಾರೆ.
 2.  ಇದು ನಾಮನಿರ್ದೇಶನ, ಮತದಾನ ಅಥವಾ ಮತಗಳ ಎಣಿಕೆಯಾಗಿರಲಿ, ಸಂಬಂಧಿಸಿದ ಚುನಾವಣಾಧಿಕಾರಿಯು ಅಸ್ತಿತ್ವದಲ್ಲಿರುವ ಭಾರತದ ಚುನಾವಣಾ ಆಯೋಗದ ಚುನಾವಣಾ ಕಾನೂನುಗಳು, ಸೂಚನೆಗಳು ಮತ್ತು ಮಾರ್ಗಸೂಚಿಗಳಿಗೆ ಅನುಸಾರವಾಗಿ ಕಟ್ಟುನಿಟ್ಟಾಗಿ ಕಾರ್ಯನಿರ್ವಹಿಸುತ್ತಾರೆ.
 3. ಮತಗಳ ಮರು ಎಣಿಕೆಗಾಗಿ ಅರ್ಜಿಯನ್ನು ಸಲ್ಲಿಸಿದಾಗ ಚುನಾವಣಾ ಅಧಿಕಾರಿಯು ಈ ವಿಷಯವನ್ನು ನಿರ್ಧರಿಸಬೇಕು ಮತ್ತು ಅರ್ಜಿಯನ್ನು ಸಂಪೂರ್ಣ ಅಥವಾ ಭಾಗಶಃ ಅನುಮತಿಸಬಹುದು ಅಥವಾ ಅದು ಕ್ಷುಲ್ಲಕ ಅಥವಾ ಅಸಮಂಜಸವೆಂದು ತೋರುತ್ತಿದ್ದರೆ ಅದನ್ನು ಸಂಪೂರ್ಣವಾಗಿ ತಿರಸ್ಕರಿಸಬಹುದು.

 

ಮುಂದಿನ ನಡೆ ಏನು?

ಅಂತಹ ಸಂದರ್ಭದಲ್ಲಿ, ಹೈಕೋರ್ಟ್ ಮುಂದೆ ಎಲೆಕ್ಷನ್ ಪಿಟಿಷನ್ (ಚುನಾವಣಾ ಅರ್ಜಿ) ಸಲ್ಲಿಸುವುದೊಂದೆ ಉಳಿದಿರುವ ಏಕ ಮಾತ್ರ ಕಾನೂನು ಪರಿಹಾರವಾಗಿದೆ.

 1. ಜನ ಪ್ರಾತಿನಿಧ್ಯ ಕಾಯ್ದೆ 1951 ರ ನಿಬಂಧನೆಗಳ ಪ್ರಕಾರ, ಚುನಾವಣಾ ಅಧಿಕಾರಿಯ ನಿರ್ಧಾರವನ್ನು ಕಾಯಿದೆಯ ಸೆಕ್ಷನ್ 80 ರ ಅಡಿಯಲ್ಲಿ ಚುನಾವಣಾ ಅರ್ಜಿಯ ಮೂಲಕ ಮಾತ್ರ ಪ್ರಶ್ನಿಸಬಹುದಾಗಿದೆ.

 

ವಿಷಯಗಳು: ಆರೋಗ್ಯ, ಶಿಕ್ಷಣ, ಸಾಮಾಜಿಕ ವಲಯ / ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಮಾನವ ಸಂಪನ್ಮೂಲ ಸಂಬಂಧಿತ ವಿಷಯಗಳು.

ಜನರು, ಪ್ರಾಣಿಗಳನ್ನು ಗುರಿಯಾಗಿಸುವ ‘ಒಂದು ಆರೋಗ್ಯ’ ವಿಧಾನ:


(A ‘One Health’ approach that targets people, animals)

 

ಸಂದರ್ಭ:

ಅಸ್ತಿತ್ವದಲ್ಲಿರುವ ಮತ್ತು ಬೆಳಕಿಗೆ ಬರುತ್ತಿರುವ ಸಾಂಕ್ರಾಮಿಕ ರೋಗಗಳ ಮೂರನೇ ಎರಡರಷ್ಟು ಭಾಗವು   ಝೂನೋಟಿಕ್ ಆಗಿವೆ, ಅಥವಾ ಪ್ರಾಣಿಗಳಿಂದ ಮನುಷ್ಯರಿಗೆ ಮತ್ತು ಮನುಷ್ಯರಿಂದ ಪ್ರಾಣಿಗಳಿಗೆ ಪರಸ್ಪರ ವರ್ಗಾವಣೆಗೊಳ್ಳುವಂತಹವಾಗಿವೆ ಎಂದು ವಿವಿಧ ಅಧ್ಯಯನಗಳು ಸೂಚಿಸುತ್ತವೆ, ಮತ್ತು ಪ್ರತಿಯಾಗಿ, ಪ್ರಶ್ನೆಯಲ್ಲಿರುವ ರೋಗಕಾರಕವು ಯಾವುದೇ ಜೀವ ರೂಪದಲ್ಲಿ ಹುಟ್ಟಿದರೂ ಪ್ರತಿಬಂಧವನ್ನು ಕಡಿಮೆ ಮಾಡುತ್ತದೆ.

 

ಇತ್ತೀಚಿನ ವರ್ಷಗಳಲ್ಲಿ ವೈರಾಣುಗಳ ಏಕಾಏಕಿ ಸ್ಫೋಟದ ಟ್ರಾನ್ಸ್ ಬೌಂಡರಿ ಪರಿಣಾಮಗಳಾದ ಉದಾಹರಣೆಗೆ  ನಿಫಾ ವೈರಸ್, ಎಬೋಲಾ, ತೀವ್ರ ಉಸಿರಾಟದ ಸಿಂಡ್ರೋಮ್ (Severe Acute Respiratory Syndrome -SARS)), ಮಧ್ಯಪ್ರಾಚ್ಯ ಉಸಿರಾಟದ ಸಿಂಡ್ರೋಮ್ (Middle East Respiratory Syndrome -MERS) ಮತ್ತು ಏವಿಯನ್ ಇನ್ಫ್ಲುಯೆನ್ಸವು (Avian Influenza) ಪರಿಸರ, ಪ್ರಾಣಿಗಳು ಮತ್ತು ಮಾನವ ಆರೋಗ್ಯದ ನಡುವಿನ ಸಂಪರ್ಕಗಳನ್ನು ಸ್ಥಿರವಾಗಿ ದಾಖಲಿಸುವ ಅಗತ್ಯವನ್ನು ಮತ್ತಷ್ಟು ಬಲಪಡಿಸಿದೆ.

 

ಇದು, ಪ್ರಾಣಿಗಳು, ಮಾನವರು ಮತ್ತು ಪರಿಸರದ ನಡುವಿನ ಪರಸ್ಪರ ಸಂಬಂಧವನ್ನು ಅಂಗೀಕರಿಸಲು ನಮ್ಮನ್ನು ಒತ್ತಾಯಿಸುತ್ತದೆ, ಈ ವಿಧಾನವನ್ನು “ಒಂದು ಆರೋಗ್ಯ” (One Health) ಎಂದು ಕರೆಯಲಾಗುತ್ತದೆ.

 

ಒಂದು ಆರೋಗ್ಯ ಪರಿಕಲ್ಪನೆ ಎಂದರೇನು?

(What is OneHealth concept?)

 1. ಒನ್ ಹೆಲ್ತ್ ಇನಿಶಿಯೇಟಿವ್ ಟಾಸ್ಕ್ ಫೋರ್ಸ್ ವ್ಯಾಖ್ಯಾನಿಸಿದಂತೆ ಜನರು, ಪ್ರಾಣಿಗಳು ಮತ್ತು ನಮ್ಮ ಪರಿಸರಕ್ಕೆ ಉತ್ತಮವಾದ ಸೂಕ್ತ ಆರೋಗ್ಯವನ್ನು ಪಡೆಯಲು ಸ್ಥಳೀಯವಾಗಿ, ರಾಷ್ಟ್ರೀಯವಾಗಿ ಮತ್ತು ಜಾಗತಿಕವಾಗಿ ಕೆಲಸ ಮಾಡುವ ಅನೇಕ ವಿಭಾಗಗಳ ಸಹಯೋಗದ ಪ್ರಯತ್ನಗಳನ್ನು ಒಂದು ಆರೋಗ್ಯ ಎನ್ನಲಾಗುತ್ತದೆ.
 2. ಒಂದು ಆರೋಗ್ಯ ಮಾದರಿಯು ಪ್ರಪಂಚದಲ್ಲಿ ಹೊಸದಾಗಿ ಉದಯಿಸುತ್ತಿರುವ ಮತ್ತು ಅಸ್ತಿತ್ವದಲ್ಲಿರುವ ಝೂನೋಟಿಕ್ ಬೆದರಿಕೆಗಳನ್ನು ನಿಯಂತ್ರಿಸಲು ರೋಗ ನಿಯಂತ್ರಣದಲ್ಲಿ ಅಂತರಶಿಸ್ತೀಯ ವಿಧಾನವನ್ನು ಸುಗಮಗೊಳಿಸುತ್ತದೆ.

 

ಈ ಕುರಿತು ಭಾರತದ ಯೋಜನೆಗಳು:

ಭಾರತದ ‘ಒನ್ ಹೆಲ್ತ್’ ದೃಷ್ಟಿಕೋನವು ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (Food and Agriculture Organization of the United Nations -FAO)), ಪ್ರಾಣಿಗಳ ಆರೋಗ್ಯಕ್ಕಾಗಿ ವಿಶ್ವ ಸಂಸ್ಥೆ (the World Organisation for Animal Health -OIE)), ವಿಶ್ವ ಆರೋಗ್ಯ ಸಂಸ್ಥೆ (the World Health Organization – WHO) ಮತ್ತು ವಿಶ್ವಸಂಸ್ಥೆಯ ಪರಿಸರ ಕಾರ್ಯಕ್ರಮ (the United Nations Environment Programme -UNEP) – ವಿಶ್ವಸಂಸ್ಥೆಯ ಮಕ್ಕಳ ನಿಧಿ (United Nations Children’s Fund -UNICEF) ಮತ್ತು ಒಂದು ವಿಶ್ವ ಒಂದು ಆರೋಗ್ಯ’ (One World, One Health) ಕ್ಕೆ ಕೊಡುಗೆ ನೀಡುವ ಉದ್ದೇಶದ ವಿಶ್ವಬ್ಯಾಂಕ್ ಬೆಂಬಲಿಸುವ ಜಾಗತಿಕ ಉಪಕ್ರಮವನ್ನು ಒಳಗೊಂಡ ತ್ರಿಪಕ್ಷೀಯ-ಪ್ಲಸ್ ಮೈತ್ರಿಕೂಟದ (agreement between the tripartite-plus alliance) ನಡುವಿನ ಒಪ್ಪಂದದಿಂದ ತನ್ನ ನೀಲನಕ್ಷೆಯನ್ನು ಪಡೆದುಕೊಂಡಿದೆ.

 1. ದೀರ್ಘಕಾಲೀನ ಉದ್ದೇಶಗಳಿಗೆ ಅನುಗುಣವಾಗಿ, ಭಾರತವು ಝೂನೋಸಸ್ ಗಳ ಬಗ್ಗೆ ರಾಷ್ಟ್ರೀಯ ಸ್ಥಾಯಿ ಸಮಿತಿಯನ್ನು 1980 ರ ದಶಕದಷ್ಟು ಹಿಂದೆಯೇ ಸ್ಥಾಪಿಸಿತು.
 2. ಈ ವರ್ಷ, ನಾಗ್ಪುರದಲ್ಲಿ ‘ಆರೋಗ್ಯಕ್ಕಾಗಿ ಒಂದು ಕೇಂದ್ರ’(Centre for One Health) ವನ್ನು ಸ್ಥಾಪಿಸಲು ಹಣವನ್ನು ಮಂಜೂರು ಮಾಡಲಾಗಿದೆ.
 3. ಪಶುಸಂಗೋಪನೆ ಮತ್ತು ಹೈನುಗಾರಿಕೆ ಇಲಾಖೆ (Department of Animal Husbandry and Dairying -DAHD) ಯು 2015 ರಿಂದ ಪ್ರಾಣಿಗಳ ಕಾಯಿಲೆಗಳ ಹರಡುವಿಕೆಯನ್ನು ತಗ್ಗಿಸಲು ಹಲವಾರು ಯೋಜನೆಗಳನ್ನು ಪ್ರಾರಂಭಿಸಿದೆ, ಅದರೊಂದಿಗೆ ಧನಸಹಾಯವನ್ನು ನೀಡಲಾಗುತ್ತದೆ. ಧನಸಹಾಯದ ವಿಧಾನವು (ಕೇಂದ್ರ: ರಾಜ್ಯ) 60:40, ಈಶಾನ್ಯ ರಾಜ್ಯಗಳಿಗೆ 90:10, ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 100% ಧನಸಹಾಯ ನೀಡಲಾಗುತ್ತದೆ.

 

ಸಮನ್ವಯದ ಅವಶ್ಯಕತೆ:

ವಿಜ್ಞಾನಿಗಳು, 1.7 ದಶಲಕ್ಷಕ್ಕೂ ಹೆಚ್ಚು ವೈರಸ್‌ಗಳು ವನ್ಯಜೀವಿ ಆವಾಸಸ್ಥಾನಗಳಲ್ಲಿ ಪಸರಿಸುತ್ತಿವೆ ಎಂದು ಗಮನಿಸಿದ್ದಾರೆ, ಮತ್ತು ಅವುಗಳಲ್ಲಿ ಹೆಚ್ಚಿನವು  ಝೂನೋಟಿಕ್ ಆಗಿರುವ ಸಾಧ್ಯತೆಯಿದೆ, ಇವುಗಳನ್ನು ಸಮಯೋಚಿತವಾಗಿ ಪತ್ತೆ ಮಾಡದೇ ಹೋದರೆ, ಮುಂಬರುವ ದಿನಗಳಲ್ಲಿ ಭಾರತವು ಇನ್ನೂ ಅನೇಕ ಸಾಂಕ್ರಾಮಿಕ ರೋಗಗಳನ್ನು ಎದುರಿಸಬೇಕಾಗುತ್ತದೆ ಎಂಬುದನ್ನು ಇದು ಸೂಚಿಸುತ್ತದೆ.

 

ಈಗ ಮಾಡಬೇಕಿರುವುದೇನು?

 1. ಅಸ್ತಿತ್ವದಲ್ಲಿರುವ ಪ್ರಾಣಿಗಳ ಆರೋಗ್ಯ ಮತ್ತು ರೋಗ ಕಣ್ಗಾವಲು ವ್ಯವಸ್ಥೆಗಳನ್ನು ಕ್ರೋಡೀಕರಿಸುವುದು – ಉದಾ., ಪ್ರಾಣಿಗಳ ಉತ್ಪಾದಕತೆ ಮತ್ತು ಆರೋಗ್ಯಕ್ಕಾಗಿ ರಾಷ್ಟ್ರೀಯ ಪ್ರಾಣಿ ರೋಗ ವರದಿ ಮಾಡುವ ಮಾಹಿತಿ ಜಾಲ ವ್ಯವಸ್ಥೆ ಸ್ಥಾಪಿಸುವುದು.
 2. ಅನೌಪಚಾರಿಕ ಮಾರುಕಟ್ಟೆ ಮತ್ತು ಕಸಾಯಿಖಾನೆ ಕಾರ್ಯಾಚರಣೆಗಾಗಿ ಉತ್ತಮ-ಅಭ್ಯಾಸ ಮಾರ್ಗಸೂಚಿಗಳನ್ನು ಅಭಿವೃದ್ಧಿಪಡಿಸುವುದು (ಉದಾ., ತಪಾಸಣೆ, ರೋಗ ಹರಡುವಿಕೆಯ ಮೌಲ್ಯಮಾಪನಗಳು).
 3. ಗ್ರಾಮೀಣ ಮಟ್ಟದವರೆಗೆ ಪ್ರತಿ ಹಂತದಲ್ಲೂ ‘ಒಂದು ಆರೋಗ್ಯ’ ವ್ಯವಸ್ಥೆಯನ್ನು ಕಾರ್ಯಗತಗೊಳಿಸಲು ಕಾರ್ಯವಿಧಾನಗಳನ್ನು ರಚಿಸುವುದು.

one_health

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಚೀನಾವನ್ನು ಎದುರಿಸಲು ಸಾಮಾನ ನಿಲುವುಗಳನ್ನು ಹೊಂದಲು ಬಯಸಿದ G7 :


(G7 seeks common front on China)

ಸಂದರ್ಭ:

ಎರಡು ವರ್ಷಗಳಲ್ಲಿ ಮೊದಲ ಬಾರಿಗೆ ನಡೆದ ವಿದೇಶಾಂಗ ಸಚಿವರ ವ್ಯಕ್ತಿಗತ ಮಾತುಕತೆಯಲ್ಲಿ (first in-person talks) ವಿಶ್ವದ ಏಳು ಶ್ರೀಮಂತ ಪ್ರಜಾಪ್ರಭುತ್ವ ರಾಷ್ಟ್ರಗಳ ಗುಂಪಾದ G7 ಆಕ್ರಮಣಶೀಲ ಮನೋಭಾವದ ಚೀನಾವನ್ನು ಎದುರಿಸಲು ಸಮಾನವಾದ ವೇದಿಕೆಯನ್ನು ಹೇಗೆ ರಚಿಸುವುದು ಎಂಬ ವಿಷಯದ ಕುರಿತು ಸಮಾಲೋಚನೆ ನಡೆಸಿದವು.

 1. ಇತ್ತೀಚಿನ G7 ರಾಷ್ಟ್ರಗಳ ವಿದೇಶಾಂಗ ಸಚಿವರ ಸಭೆಯು ಇರಾನ್ ಮತ್ತು ಉತ್ತರ ಕೊರಿಯಾದ ಪರಮಾಣು ಕಾರ್ಯಕ್ರಮಗಳ ಕುರಿತು ಸಹ ಗಮನಹರಿಸಿತು.

 

ಏನಿದು ಸಮಸ್ಯೆ?

ಚೀನಾದ ಬೆಳೆಯುತ್ತಿರುವ ಮಿಲಿಟರಿ ಮತ್ತು ಆರ್ಥಿಕ ಪ್ರಭಾವ ಹಾಗೂ ದೇಶ-ವಿದೇಶಗಳಲ್ಲಿ ತನ್ನ ಪ್ರಭಾವವನ್ನು ಹೆಚ್ಚಿಸಬೇಕೆಂಬ ಅದರ ಮಹತ್ವಾಕಾಂಕ್ಷೆಯು ಪಾಶ್ಚಿಮಾತ್ಯ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ನಡುಕವನ್ನುಂಟು ಮಾಡಿದೆ.

 

G7 ಸಭೆಯ ಫಲಿತಾಂಶಗಳು:

 1. ವಾಷಿಂಗ್ಟನ್‌ನಿಂದ ನರಮೇಧ ಎಂದು ಹಣೆಪಟ್ಟಿ ಕಟ್ಟಲ್ಪಟ್ಟಿರುವ ಕ್ಸಿನ್‌ಜಿಯಾಂಗ್ ಪ್ರಾಂತ್ಯದಲ್ಲಿ ಒಂದು ಮಿಲಿಯನ್ ಗೂ ಅಧಿಕ ಉಯಿಘರ್ ಮತ್ತು ಇತರ ಮುಸ್ಲಿಮರನ್ನು ಬಂಧನದಲ್ಲಿರಿಸಿರುವುದರ ಕುರಿತು ಮತ್ತು ಹಾಂಗ್ ಕಾಂಗ್‌ನಲ್ಲಿ ನಾಗರಿಕ ಹಕ್ಕುಗಳ ವಿರುದ್ಧದ ದಮನಕಾರಿ ನೀತಿಯ ಕುರಿತು ಚೀನಾದ ಮೇಲೆ ಒತ್ತಡ ಹೇರಲು ಅಮೆರಿಕವು ಬ್ರಿಟನ್‌ನೊಂದಿಗೆ “ದೃಢವಾದ ಸಹಕಾರ” ನೀಡುವ ವಾಗ್ದಾನ ಮಾಡಿತು.
 2. 1997 ರಲ್ಲಿ ಲಂಡನ್ ಹಾಂಗ್ ಕಾಂಗ್ ವಸಾಹತುವನ್ನು ಚೀನಾಗೆ ಹಸ್ತಾಂತರಿಸುವ ಮೊದಲು ಹಾಂಗ್ ಕಾಂಗ್ ನಲ್ಲಿ ಪ್ರತ್ಯೇಕ ವ್ಯವಸ್ಥೆಯನ್ನು ಮುಂದುವರೆಸುವ ಕುರಿತಂತೆ ನೀಡಿದ್ದ ಭರವಸೆ ಸೇರಿದಂತೆ “ಚೀನಾ ಮಾಡಿದ ಇತರ ಬದ್ಧತೆಗಳಿಗೆ ಬೀಜಿಂಗ್ ಅನ್ನು ಬಾಧ್ಯಸ್ಥ ವನ್ನಾಗಿಸಲು” ಬ್ರಿಟನ್ ಕರೆ ನೀಡಿತು.
 3. ಹವಾಮಾನ ವೈಪರೀತ್ಯವನ್ನು ಒಳಗೊಂಡಂತೆ “ಚೀನಾದೊಂದಿಗೆ ಸಂವೇದನಾಶೀಲ ಮತ್ತು ಸಕಾರಾತ್ಮಕ ರೀತಿಯಲ್ಲಿ ಕೆಲಸ ಮಾಡಲು ರಚನಾತ್ಮಕ ಮಾರ್ಗಗಳನ್ನು ಕಂಡುಹಿಡಿಯಬೇಕು” ಎಂದು ದೇಶಗಳು ಕರೆ ನೀಡಿವೆ.

 

ಏನಿದು G7 ?

 1. G7, ಮೂಲತಃ G8, ಆಗಿದ್ದು 1975 ರಲ್ಲಿ ವಿಶ್ವದ ಪ್ರಮುಖ ಕೈಗಾರಿಕಾ ರಾಷ್ಟ್ರಗಳ ನಾಯಕರನ್ನು ಒಟ್ಟುಗೂಡಿಸುವ ಅನೌಪಚಾರಿಕ ವೇದಿಕೆಯಾಗಿ ಇದನ್ನು ಸ್ಥಾಪಿಸಲಾಯಿತು.
 2. ಶೃಂಗಸಭೆಯು ಯುರೋಪಿಯನ್ ಒಕ್ಕೂಟ (EU) ಮತ್ತು ಈ ಕೆಳಗಿನ ದೇಶಗಳ ನಾಯಕರನ್ನು ಒಟ್ಟುಗೂಡಿಸುತ್ತದೆ: ಕೆನಡಾ, ಫ್ರಾನ್ಸ್, ಜರ್ಮನಿ, ಇಟಲಿ, ಜಪಾನ್, ಯುನೈಟೆಡ್ ಕಿಂಗ್‌ಡಮ್ ಮತ್ತು ಯುನೈಟೆಡ್ ಸ್ಟೇಟ್ಸ್.
 3. ಜಿ -7 ರ ಪ್ರಮುಖ ಉದ್ದೇಶವೆಂದರೆ ಅಂತರರಾಷ್ಟ್ರೀಯ ಆರ್ಥಿಕ ವಿಷಯಗಳ ಬಗ್ಗೆ ಉದ್ದೇಶಪೂರ್ವಕವಾಗಿ ಚರ್ಚಿಸುವುದು ಮತ್ತು ಸಮಸ್ಯೆಗಳಿದ್ದರೆ ಪರಿಹರಿಸುವುದು. ಕೆಲವೊಮ್ಮೆ ಆರ್ಥಿಕ ಸಮಸ್ಯೆಗಳ ಮೇಲೆ ವಿಶೇಷ ಗಮನಹರಿಸಿ ಜಾಗತಿಕ ಸಮಸ್ಯೆಗಳನ್ನು ಪರಿಹರಿಸಲು ಇದು ಸಹಾಯ ಮಾಡುತ್ತದೆ.

 

G 7 ಇದ್ದುದು G 8 ಹೇಗೆ ಆಯಿತು?

 1. ರಷ್ಯಾ ಅಧಿಕೃತವಾಗಿ 1998 ರಲ್ಲಿ ಈ ಗುಂಪನ್ನು ಸೇರಿಕೊಂಡಿತು, ಇದು ಜಿ 7 ಅನ್ನು ಜಿ 8 ಆಗಿ ಪರಿವರ್ತಿಸಲು ಕಾರಣವಾಯಿತು.
 2. ಆದಾಗ್ಯೂ, ರಷ್ಯಾದ ಸೈನ್ಯವನ್ನು ಪೂರ್ವ ಉಕ್ರೇನ್‌ಗೆ ನಿಯೋಜಿಸಿದ ಮತ್ತು 2014 ರಲ್ಲಿ ಕ್ರಿಮಿಯಾವನ್ನು ವಶಪಡಿಸಿಕೊಂಡ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಖಂಡನೀಯ ಕೃತ್ಯವು ಇತರ ಜಿ 8 ರಾಷ್ಟ್ರಗಳಿಂದ ಭಾರೀ ಟೀಕೆಗೆ ಗುರಿಯಾಯಿತು.
 3. ಈ ಗುಂಪಿನ ಇತರ ರಾಷ್ಟ್ರಗಳು ರಷ್ಯಾವನ್ನು ಅದರ ಕುಕೃತ್ಯಗಳ ಪರಿಣಾಮವಾಗಿ ಜಿ 8 ರಿಂದ ಅಮಾನತುಗೊಳಿಸಲು ನಿರ್ಧರಿಸಿದ್ದರಿಂದ ಮತ್ತೆ ಈ ಗುಂಪು 2014 ರಲ್ಲಿ ಜಿ 7 ಆಗಿ ಪರಿವರ್ತಿತವಾಯಿತು.

g20_g8_g7

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.

ಉಪಯೋಗಿಸಿದ ಅಡುಗೆ ಎಣ್ಣೆ ಮೂಲಕ ಬಯೋಡೀಸಲ್ ತಯಾರಿ:


(Biodiesel from Used Cooking Oil)

 

ಸಂದರ್ಭ:

ಜೈವಿಕ ಡೀಸೆಲ್ ಮಿಶ್ರಣ ಇರುವ ಡೀಸೆಲ್‌ ಪೂರೈಕೆಗೆ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು ಹಸಿರು ನಿಶಾನೆ ತೋರಿದರು. ‘ಜೈವಿಕ ಡೀಸೆಲ್‌ ಮಿಶ್ರಣದ ಡೀಸೆಲ್ ಬಳಕೆಯು ಪರಿಸರದ ಮೇಲೆ ಪೂರಕ ಪರಿಣಾಮ ಬೀರಲಿದೆ.

ಹಿನ್ನೆಲೆ:

UCO (ಉಪಯೋಗಿಸಿದ ಅಡುಗೆ ಎಣ್ಣೆ) ವನ್ನು ಜೈವಿಕ ಡೀಸೆಲ್ ಆಗಿ ಪರಿವರ್ತಿಸಲು ಮತ್ತು ಸಂಗ್ರಹಕ್ಕಾಗಿ ಪರಿಸರ ವ್ಯವಸ್ಥೆಯನ್ನು ರಚಿಸಲು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವರು 2019 ರ ಆಗಸ್ಟ್ 10 ರಂದು ವಿಶ್ವ ಜೈವಿಕ ಇಂಧನ ದಿನಾಚರಣೆಯ ಸಂದರ್ಭದಲ್ಲಿ “ಉಪಯೋಗಿಸಿದ ಅಡುಗೆ ಎಣ್ಣೆಯಿಂದ ಉತ್ಪತ್ತಿಯಾಗುವ ಜೈವಿಕ ಡೀಸೆಲ್ ಖರೀದಿ” ಗಾಗಿ ಆಸಕ್ತಿಯ ಅಭಿವ್ಯಕ್ತಿಗಳನ್ನು ಪ್ರಾರಂಭಿಸಿದ್ದರು.

 

 1. ಈ ಉಪಕ್ರಮದಡಿಯಲ್ಲಿ, OMCಗಳು ಐದು ವರ್ಷಗಳ ಆವರ್ತಕ ಬೆಲೆ ಹೆಚ್ಚಳವನ್ನು ಖಾತರಿಪಡಿಸುತ್ತವೆ ಮತ್ತು ಸಂಭಾವ್ಯ ಉದ್ಯಮಿಗಳಿಗೆ ಹತ್ತು ವರ್ಷಗಳ ಕಾಲ ಆಫ್-ಟೇಕ್ ಗ್ಯಾರಂಟಿ ನೀಡುತ್ತವೆ.

 

ಉಪಯೋಗಿಸಿದ ಅಡುಗೆ ಎಣ್ಣೆಯ(UCO) ಸೇವನೆಗೆ ಸಂಬಂಧಿಸಿದ ಕಳವಳಗಳು:

 1. ಹುರಿಯುವ ಸಮಯದಲ್ಲಿ, ಎಣ್ಣೆಯ ಅನೇಕ ಗುಣಲಕ್ಷಣಗಳನ್ನು ಬದಲಾಯಿಸಲಾಗುತ್ತದೆ, ಪುನರಾವರ್ತಿತ ಹುರಿಯುವಿಕೆಯ ಮೇಲೆ ಒಟ್ಟು ಧ್ರುವೀಯ ಸಂಯುಕ್ತಗಳು (Total Polar Compounds TPC) ರೂಪುಗೊಳ್ಳುತ್ತವೆ.
 2. ಈ ಸಂಯುಕ್ತಗಳ ವಿಷತ್ವವು ಅಧಿಕ ರಕ್ತದೊತ್ತಡ, ಅಪಧಮನಿ ಕಾಠಿಣ್ಯ, ಅಲ್ಜಮೈರ್ ಕಾಯಿಲೆ, ಯಕೃತ್ತಿನ ಕಾಯಿಲೆಗಳಂತಹ ಅನೇಕ ಕಾಯಿಲೆಗಳಿಗೆ ಸಂಬಂಧಿಸಿದೆ.

 

ಗಮನಿಸಿ:

 1. ವಿಶ್ವದಲ್ಲಿ ಅತಿ ಹೆಚ್ಚು ಕಚ್ಚಾತೈಲ ಬಳಸುತ್ತಿರುವ ರಾಷ್ಟ್ರಗಳ ಪೈಕಿ ಭಾರತ 3ನೇ ಸ್ಥಾನದಲ್ಲಿ ಇದೆ. ಶೇ85ರಷ್ಟು ಇಂಧನ ಉತ್ಪನ್ನಗಳನ್ನು ದೇಶ ಆಮದು ಮಾಡಿಕೊಳ್ಳುತ್ತಿದೆ. ಒಟ್ಟು 761 ದಶಲಕ್ಷ ಟನ್‌ಗಳಷ್ಟು ತೈಲ ನಿಕ್ಷೇಪವಿದ್ದು, ಪ್ರತಿ ವರ್ಷ 38 ದಶಲಕ್ಷ ಟನ್ ತೈಲೋತ್ಪನ್ನ ಹೊರ ತೆಗೆಯಲಾಗುತ್ತಿದೆ. ಇದೇ ರೀತಿ ಮುಂದುವರಿದರೆ ಇನ್ನು 20 ವರ್ಷಗಳಲ್ಲಿ ತೈಲ ನಿಕ್ಷೇಪ ಖಾಲಿಯಾಗಲಿದೆ.
 2. ತೈಲಕ್ಕೆ ಪರ್ಯಾಯವಾಗಿ ಸಸ್ಯಜನ್ಯ ಇಂಧನ ಅಭಿವೃದ್ಧಿಪಡಿಸಿ ಕಚ್ಚಾತೈಲದ ಮೇಲಿನ ಅವಲಂಬನೆ ತಗ್ಗಿಸಬೇಕು. ಕೃಷಿ ವಲಯದ ಮೂಲಕ ಇಂಧನದ ಭದ್ರತೆ ಬಲಪಡಿಸುವ ನಿಟ್ಟಿನಲ್ಲಿ ವಿಶ್ವ ಜೈವಿಕ ಇಂಧನ ದಿನಾಚರಣೆ ಮಹತ್ವದ್ದಾಗಿದೆ. ಜೈವಿಕ ಇಂಧನ ಸಸ್ಯಗಳಾದ ಹೊಂಗೆ, ಬೇವು, ಹಿಪ್ಪೆ, ಸಿಮರುಬಾ, ಜಟ್ರೋಫಾ, ಸುರಹೊನ್ನೆ ಗಿಡಗಳನ್ನು ಬರಡು ಭೂಮಿ, ರಸ್ತೆಯ ಬದಿಯಲ್ಲಿ ಬೆಳೆಸುವುದರ ಮುಖಾಂತರ ಜೈವಿಕ ಇಂಧನವನ್ನು ಭವಿಷ್ಯದ ಇಂಧನವಾಗಿ ಮಾರ್ಪಾಡು ಮಾಡಬೇಕಾಗಿದೆ.
 3. ಜೈವಿಕ ಇಂಧನ ಯೋಜನೆಗಳ ಅನುಷ್ಠಾನಕ್ಕಾಗಿ ಸರ್ಕಾರ ಹಸಿರು ಕ್ರಾಂತಿ, ಬರಡು ಬಂಗಾರ, ಸುವರ್ಣಭೂಮಿ ಯೋಜನೆಗಳನ್ನು ಜಾರಿಗೆ ತಂದಿದ್ದು, ನಿರಂತರ ಇಂಧನ ಸೌಲಭ್ಯಕ್ಕೆ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಲ್ಲಿ ಕ್ರಿಯಾ ಯೋಜನೆ ರಚಿಸುವ ಮೂಲಕ ಜೈವಿಕ ಇಂಧನಕ್ಕೆ ಹೆಚ್ಚಿನ ಒತ್ತು ನೀಡಬೇಕಾಗಿದೆ.
 4. ಅಭಿವೃದ್ಧಿ ಹೆಸರಿನಲ್ಲಿ ಪರಿಸರದ ನಾಶ ಹಾಗೂ ದುರ್ಬಳಕೆ ನಡೆಯುತ್ತಿದ್ದು, ವಾತಾವರಣದ ವೈಪರಿತ್ಯದಿಂದಾಗಿ ಮುಂದಿನ ದಿನಗಳಲ್ಲಿ ಏನು? ಎಂಬಂತಹ ವಾತಾವರಣ ನಿರ್ಮಾಣವಾಗಿದೆ. ಇದೆಲ್ಲದಕ್ಕೂ ಜೈವಿಕ ಇಂಧನ ಅಭಿವೃದ್ಧಿಯೇ ಪರಿಹಾರ ಎಂದರೆ ಅತಿಶಯೋಕ್ತಿ ಆಗಲಾರದು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಮೂರ್ಹೆನ್ ಯೋಗ ಮ್ಯಾಟ್:

(Moorhen Yoga Mat)

 1.  ಇದು ಜೈವಿಕವಾಗಿ ವಿಘಟಿಸಲ್ಪಡುವ ಮತ್ತು ಸಾವಯವ ಗೊಬ್ಬರವಾಗಿ ಪರಿವರ್ತಿತವಾಗುವ ಯೋಗ ಮ್ಯಾಟ್ (ಚಾಪೆ) ಆಗಿದ್ದು ಇದನ್ನು ನೀರಿನಲ್ಲಿ ಬೆಳೆಯುವ ಹಯಸಿಂತ (water hyacinth) ಎಂಬ ಸಸ್ಯದಿಂದ ಅಸ್ಸಾಂ ರಾಜ್ಯದ ಮೀನುಗಾರಿಕಾ ಸಮುದಾಯದ 6 ಜನ ಯುವತಿಯರು ಅಭಿವೃದ್ಧಿಪಡಿಸಿದ್ದಾರೆ.
 2. ಇದು ಈ ಜಲ ಸಸ್ಯವನ್ನು ನಿರುಪಯುಕ್ತ ವಸ್ತುವಿನಿಂದ ಒಂದು ಸಂಪತ್ತಾಗಿ ಪರಿವರ್ತಿಸಬಲ್ಲದು.

 

ಹಿನ್ನೆಲೆ:

ಹಯಸಿಂತ್ ಜಲ ಸಸ್ಯಗಳಿಂದ ಸಂಪತ್ತನ್ನು ಸೃಷ್ಟಿಸಲು 6 ಹುಡುಗಿಯರ ನೇತೃತ್ವದ ಕನಸು ಎಂಬ ಅರ್ಥವನ್ನು ಹೊಂದಿರುವ ‘ಸಿಮಾಂಗ್’ (Simang) ಎಂಬ ಸಾಮೂಹಿಕ ಸಂಬಂಧ ಹೊಂದಿರುವ ಇಡೀ ಮಹಿಳಾ ಸಮುದಾಯವನ್ನು ಒಳಗೊಳ್ಳುಲು, ಭಾರತ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ (DST) ಅಧೀನದಲ್ಲಿರುವ ಸ್ವಾಯತ್ತ ಸಂಸ್ಥೆಯಾದ ನಾರ್ತ್ ಈಸ್ಟ್ ಸೆಂಟರ್ ಫಾರ್ ಟೆಕ್ನಾಲಜಿ ಅಪ್ಲಿಕೇಷನ್ ಅಂಡ್ ರೀಚ್ (North East Centre for Technology Application and Reach -NECTAR) ನ ಉಪಕ್ರಮದ ಮೂಲಕ ಈ ಕಾರ್ಯಕ್ರಮವನ್ನು ಆರಂಭಿಸಲಾಯಿತು.

 


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos