Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 4ನೇ ಮೇ 2021

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಇತ್ತೀಚಿಗೆ ಏಕಾಏಕಿ ಕಾಣಿಸಿಕೊಂಡಿದ್ದ ಎಬೋಲಾ ಪ್ರಕರಣಗಳು ಅಂತ್ಯಗೊಂಡಿವೆ ಎಂದು ಘೋಷಿಸಿದ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ.

2. ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ (UNHCR).

3. ಏಷ್ಯ ಅಭಿವೃದ್ಧಿ ಬ್ಯಾಂಕ್ (ADB).

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಪಾರ್ಕರ್ ಸೋಲಾರ್ ಪ್ರೊಬ್.

 

ಸಾಮಾನ್ಯ ಅಧ್ಯಯನ ಪತ್ರಿಕೆ 4:

1. COVID ಪೀಡಿತ ಮನೆಯ ಮಕ್ಕಳಿಗೆ ಪೊಲೀಸರ ಸಹಾಯ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಕಚಿನ್ ಜನತೆ (Kachin People).

2. ಸೂತ್ರ ಮಾದರಿ (SUTRA model).

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಆರೋಗ್ಯ, ಶಿಕ್ಷಣ ಮತ್ತು ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ಸಾಮಾಜಿಕ ವಲಯ/ ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳು.

ಇತ್ತೀಚಿಗೆ ಏಕಾಏಕಿ ಕಾಣಿಸಿಕೊಂಡಿದ್ದ ಎಬೋಲಾ ಪ್ರಕರಣಗಳು ಅಂತ್ಯಗೊಂಡಿವೆ ಎಂದು ಘೋಷಿಸಿದ ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ:


 

(Congo Declares End Of Latest Ebola Outbreak)

 

ಸಂದರ್ಭ:

ಇತ್ತೀಚಿಗೆ,ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ (DRC)ದಲ್ಲಿ ಏಕಾಏಕಿ ಕಾಣಿಸಿಕೊಂಡಿದ್ದ 12 ನೇ ಸುತ್ತಿನ ಎಬೋಲಾ ಪ್ರಕರಣಗಳು ಅಂತ್ಯಗೊಂಡಿವೆ ಎಂದು ಸರ್ಕಾರದಿಂದ ಅಧಿಕೃತವಾಗಿ ಘೋಷಿಸಲಾಗಿದೆ.

 1. ಫೆಬ್ರುವರಿ 7 2021 ರಂದು ಏಕಾಏಕಿ ಎಬೋಲಾ ಪ್ರಕರಣಗಳನ್ನು ಘೋಷಿಸಿದಾಗಿನಿಂದ ಇಲ್ಲಿಯವರೆಗೆ ಒಟ್ಟು 12 ಪ್ರಕರಣಗಳು ವರದಿಯಾಗಿವೆ.
 2. ಎಬೋಲಾ ಸಾಂಕ್ರಾಮಿಕದ ಘೋಷಣೆಯ ಮೂರು ತಿಂಗಳ ಒಳಗೆ ಅದನ್ನು ನಿಯಂತ್ರಣಕ್ಕೆ ತಂದ ಕಾಂಗೋ ಪ್ರಜಾಸತಾತ್ಮಕ ಗಣರಾಜ್ಯದ ಅನುಭವಿ ಪ್ರತಿಕ್ರಿಯೆ ತಂಡ ಮತ್ತು ಆರೋಗ್ಯ ಪಾಲುದಾರರಿಗೆ ಧನ್ಯವಾದಗಳನ್ನು ಅರ್ಪಿಸಲಾಗಿದೆ.

 

ಎಬೋಲಾ ಸಾಂಕ್ರಾಮಿಕದ ಕುರಿತು:

ಎಬೋಲಾ ವೈರಸ್ ಕಾಯಿಲೆ- (Ebola virus disease– EVD) ಮನುಷ್ಯರಿಗೆ ಹರಡುವ ಮಾರಕ ರೋಗ. ಇದಕ್ಕಾಗಿ ಇದನ್ನು ಈ ಹಿಂದೆ ಎಬೋಲಾ ಹೆಮರಾಜಿಕ್ ಜ್ವರ (Ebola haemorrhagic fever) ಎಂದು ಕರೆಯಲಾಗುತ್ತಿತ್ತು.

ಎಬೊಲದ ಹರಡುವಿಕೆ: ಈ ವೈರಸ್ ವನ್ಯಜೀವಿಗಳಿಂದ ಮನುಷ್ಯರಿಗೆ ಮತ್ತು ನಂತರ ಮಾನವನಿಂದ ಮಾನವನಿಗೆ ಹರಡುವ ಮೂಲಕ ಇಡೀ ಮನುಕುಲಕ್ಕೆ ಹರಡುತ್ತದೆ.

ಸರಾಸರಿ, ಎಬೋಲಾ ವೈರಸ್ ಕಾಯಿಲೆ (ಇವಿಡಿ) ಪ್ರಕರಣಗಳು ಸುಮಾರು 50% ರಷ್ಟು ಮರಣ ಪ್ರಮಾಣವನ್ನು ಹೊಂದಿವೆ. ಹಿಂದಿನ ಏಕಾಏಕಿ ರೋಗದ ಸಮಯದಲ್ಲಿ, ಸೋಂಕಿತ ಪ್ರಕರಣಗಳಲ್ಲಿನ ಮರಣ ಪ್ರಮಾಣವು 25% ರಿಂದ 90% ವರೆಗೆ ಬದಲಾಗಿದೆ.

ತಡೆಗಟ್ಟುವಿಕೆ: ಈ ರೋಗವನ್ನು ಏಕಾಏಕಿ ಯಶಸ್ವಿಯಾಗಿ ನಿಯಂತ್ರಿಸಲು ಸಮುದಾಯದ ಸಹಭಾಗಿತ್ವ ಬಹಳ ಮುಖ್ಯ. ಏಕಾಏಕಿ ಉತ್ತಮ ನಿಯಂತ್ರಣ, ಸೋಂಕಿತ ಪ್ರಕರಣಗಳ ನಿರ್ವಹಣೆ, ಸಂಪರ್ಕಕ್ಕೆ ಬರುವ ಜನರ ಮೇಲ್ವಿಚಾರಣೆ ಮತ್ತು ಗುರುತಿಸುವಿಕೆ ಸೂಕ್ತ ಪ್ರಯೋಗಾಲಯ ಸೇವೆಗಳು ಮತ್ತು ಸಾಮಾಜಿಕ ಜಾಗೃತಿಯನ್ನು ಅವಲಂಬಿಸಿರುತ್ತದೆ.

ಚಿಕಿತ್ಸೆ: ಪುನರ್ಜಲೀಕರಣದೊಂದಿಗೆ ಆರಂಭಿಕ ಬೆಂಬಲ ಆರೈಕೆ, ರೋಗಲಕ್ಷಣದ ಚಿಕಿತ್ಸೆಯು ಬದುಕುಳಿಯುವಿಕೆಯನ್ನು ಸುಧಾರಿಸುತ್ತದೆ. ವೈರಸ್ ಅನ್ನು ತಟಸ್ಥಗೊಳಿಸಲು ಇನ್ನೂ ಯಾವುದೇ ಲಸಿಕೆ ಬಂದಿಲ್ಲ:

 

ಲಸಿಕೆಗಳು :

 1. 2015 ರಲ್ಲಿ, ಎಬೋಲಾ ವೈರಸ್ ಕಾಯಿಲೆ (ಇವಿಡಿ) ವಿರುದ್ಧ ಗಿನಿಯಾ ಗಣರಾಜ್ಯದಲ್ಲಿ ನಡೆಸಿದ ಪ್ರಮುಖ ಪ್ರಯೋಗದ ಸಮಯದಲ್ಲಿrVSV’ – ZEBOV ಎಂಬ ಪ್ರಾಯೋಗಿಕ ಎಬೋಲಾ ಲಸಿಕೆ ಸಾಕಷ್ಟು ಪರಿಣಾಮಕಾರಿ ಎಂದು ಸಾಬೀತಾಯಿತು. ಪರವಾನಗಿ ಚಿಕಿತ್ಸೆಯು ಸಾಬೀತಾಗಿಲ್ಲ ಆದರೆ ರಕ್ತ, ರೋಗನಿರೋಧಕ ಶಕ್ತಿ ಮತ್ತು ಔಷಧ ಚಿಕಿತ್ಸೆಗಳ ವ್ಯಾಪ್ತಿಯು ಅಭಿವೃದ್ಧಿಯ ಹಂತದಲ್ಲಿದೆ.
 2. ‘ ‘rVSV’ – ZEBOV’ ಲಸಿಕೆಯನ್ನು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದಲ್ಲಿ 2018–2019 ಎಬೋಲಾ ಹರಡಿದ ಸಂದರ್ಭದಲ್ಲಿ ಏಕಾಏಕಿ ಬಳಸಲಾಯಿತು. ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರಿಗೆ ಸಾಮಾನ್ಯ ಜನಸಂಖ್ಯೆಯಂತೆಯೇ ಲಸಿಕೆ ನೀಡಬೇಕು.
 3. ಜನರ ಅಪನಂಬಿಕೆ ಮತ್ತು ಭಯೋತ್ಪಾದಕ ದಾಳಿಯಿಂದಾಗಿ, ಆರೋಗ್ಯ ಕಾರ್ಯಕರ್ತರು ಪ್ರವೇಶಿಸಲಾಗದ ಪ್ರದೇಶಗಳಲ್ಲಿ ಲಸಿಕೆ ನೀಡುವಲ್ಲಿ ತೊಂದರೆ ಅನುಭವಿಸುತ್ತಿದ್ದಾರೆ.

Ebola

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ (UNHCR):


(United Nations High Commissioner for Refugees (UNHCR)

 

ಸಂದರ್ಭ:

ಮ್ಯಾನ್ಮಾರ್ ನಲ್ಲಿ ಫೆಬ್ರವರಿಯಲ್ಲಿ ನಡೆದ ಮಿಲಿಟರಿ ದಂಗೆಯ ನಂತರ ರಹಸ್ಯವಾಗಿ ಭಾರತಕ್ಕೆ ಪ್ರವೇಶಿಸಿದ ಏಳು ಜನ ಮ್ಯಾನ್ಮಾರ್ ಪ್ರಜೆಗಳಿಗೆ ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ (United Nations High Commissioner for Refugees-UNHCR) ನಿಂದ ರಕ್ಷಣೆ ಪಡೆಯುವುದಕ್ಕೋಸ್ಕರ ನವದೆಹಲಿಗೆ ಪ್ರಯಾಣಿಸಲು ಮಣಿಪುರದ ಹೈಕೋರ್ಟ್ ಅನುಮತಿ ನೀಡಿದೆ.

 

ನ್ಯಾಯಾಲಯ ಮಾಡಿದ ಅವಲೋಕನಗಳು:

 1.  ಭಾರತವು ವಿಶ್ವಸಂಸ್ಥೆಯ ನಿರಾಶ್ರಿತರ ಸಮಾವೇಶದ ಒಂದು ಪಕ್ಷ ಅಥವಾ ಸದಸ್ಯವಲ್ಲವಾದರೂ, ದೇಶವು 1948 ರ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ (Universal Declaration of Human Rights- UDHR) ಮತ್ತು 1966 ರ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಅಂತರರಾಷ್ಟ್ರೀಯ ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಅದರ (International Covenant on Civil and Political Rights) ಒಂದು ಪಕ್ಷವಾಗಿದೆ.
 2. ನಮ್ಮ ಸಂವಿಧಾನದ 21 ನೇ ಅನುಚ್ಛೇದ ದಿಂದ ನೀಡಲ್ಪಟ್ಟ ಜೀವಿಸುವ ಹಕ್ಕು, ಕಾಲಕಾಲಕ್ಕೆ ಮತ್ತು ಸಂದರ್ಭಕ್ಕೆ ತಕ್ಕಂತೆ ನಮ್ಮ ಸುಪ್ರೀಂ ಕೋರ್ಟ್ ನಿಂದ ವ್ಯಾಖ್ಯಾನಿಸಲ್ಪಟ್ಟಿದೆ ಮತ್ತು ಸಂಯೋಜಿಸಲ್ಪಟ್ಟಿದೆ, ಹಾಗು ಇದು ಮರುಪಾವತಿ ಮಾಡದಿರುವ ಹಕ್ಕನ್ನು (‘ನಿರಾಶ್ರಿತರನ್ನು ತಮ್ಮ ಮೂಲ ದೇಶಕ್ಕೆ ವಾಪಸ್ ಕಳುಹಿಸದಿರುವ’ ಹಕ್ಕು) ನಿಸ್ಸಂದೇಹವಾಗಿ ಒಳಗೊಳ್ಳುತ್ತದೆ.

 

ಮರುಪಾವತಿ ಮಾಡದಿರುವುದು ಎಂದರೇನು?

ತನ್ನ ಮಾತೃ ದೇಶದಲ್ಲಿ ನೀಡಲಾದ ಕಿರುಕುಳದಿಂದ ಪಲಾಯನ ಮಾಡಿದ ವ್ಯಕ್ತಿಯನ್ನು ಮರಳಿ ತನ್ನ ದೇಶಕ್ಕೆ ಬರುವಂತೆ ಒತ್ತಾಯಿಸಬಾರದು ಎಂಬುದು ಅಂತರರಾಷ್ಟ್ರೀಯ ಕಾನೂನಿನ ತತ್ವವಾಗಿದೆ.

 

ವಿಶ್ವಸಂಸ್ಥೆಯ ನಿರಾಶ್ರಿತರ ಹೈ ಕಮಿಷನರ್ (UNHCR) ಕುರಿತು:

 1. ಇದು ವಿಶ್ವಸಂಸ್ಥೆಯ ನಿರಾಶ್ರಿತರ ಸಂಸ್ಥೆಯಾಗಿದೆ ಮತ್ತು ನಿರಾಶ್ರಿತರ ಜೀವಗಳನ್ನು ಉಳಿಸಲು, ಹಕ್ಕುಗಳನ್ನು ರಕ್ಷಿಸಲು ಮತ್ತು ಬಲವಂತವಾಗಿ ಸ್ಥಳಾಂತರಿಸಲ್ಪಟ್ಟ ಸಮುದಾಯಗಳಿಗೆ ಮತ್ತು ತಮ್ಮದೇ ಆದ ಸ್ವಂತ ದೇಶವಿಲ್ಲದ ಜನರಿಗೆ ಉತ್ತಮ ಭವಿಷ್ಯವನ್ನು ನಿರ್ಮಿಸಲು ಮೀಸಲಾಗಿರುವ ಜಾಗತಿಕ ಸಂಘಟನೆಯಾಗಿದೆ.
 2. ತಮ್ಮ ದೇಶದಿಂದ ಪಲಾಯನ ಮಾಡಿದ ಅಥವಾ ಮನೆಗಳನ್ನು / ಕುಟುಂಬಗಳನ್ನು ಕಳೆದುಕೊಂಡ ಲಕ್ಷಾಂತರ ಯುರೋಪಿಯನ್ನರಿಗೆ ಸಹಾಯ ಮಾಡಲು ಇದನ್ನು 1950 ರಲ್ಲಿ ರಚಿಸಲಾಯಿತು.
 3. ಇದರ ಪ್ರಧಾನ ಕಚೇರಿ ಸ್ವಿಟ್ಜರ್ಲೆಂಡ್‌ನ ಜಿನೀವಾದಲ್ಲಿದೆ.

  

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಏಷ್ಯ ಅಭಿವೃದ್ಧಿ ಬ್ಯಾಂಕ್ (ADB):


(Asian Development Bank)

ಸಂದರ್ಭ:

ಭಾರತದಿಂದ ಏಷ್ಯಾ ಅಭಿವೃದ್ಧಿ ಬ್ಯಾಂಕಿನ ಗವರ್ನರ್ ಕೂಡ ಆಗಿರುವ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವರಾದ ಶ್ರೀಮತಿ ನಿರ್ಮಲಾ ಸೀತಾರಾಮನ್ ರವರು ಇತ್ತೀಚಿಗೆ ಸ್ಥಿತಿಸ್ಥಾಪಕ ಭವಿಷ್ಯಕ್ಕಾಗಿ ಸಹಕಾರ” (Cooperation for a Resilient Future)ಎಂಬ ವಿಷಯದ ಕುರಿತು ಏಷ್ಯಾ ಅಭಿವೃದ್ಧಿ ಬ್ಯಾಂಕಿನ 2021 ರ ವಾರ್ಷಿಕ ಸಭೆಯ ಅಂಗವಾಗಿ ಆಯೋಜಿಸಲಾಗಿದ್ದ ADB ಗವರ್ನರ್ ಗಳ ಸೆಮಿನಾರ್ ನಲ್ಲಿ ಭಾಗವಹಿಸಿದ್ದರು.

 1. ನಿರ್ಮಲಾ ಸೀತಾರಾಮನ್ ರವರು ಕೋವಿಡ್ ಮತ್ತು ಕೋವಿಡೇತರ ಯೋಜನೆಗಳಿಗೆ ಸಕಾಲಿಕ ಆರ್ಥಿಕ ನೆರವು ನೀಡಿದ್ದಕ್ಕಾಗಿ ಏಷ್ಯಾ ಅಭಿವೃದ್ಧಿ ಬ್ಯಾಂಕ್ ಅನ್ನು ಶ್ಲಾಘಿಸಿದರು.

 

ಏಷ್ಯ ಅಭಿವೃದ್ಧಿ ಬ್ಯಾಂಕ್ ಕುರಿತು:

 1. ಇದು ಒಂದು ಪ್ರಾದೇಶಿಕ ಅಭಿವೃದ್ಧಿ ಬ್ಯಾಂಕ್ ಆಗಿದೆ.
 2. ಇದನ್ನು 19 ಡಿಸೆಂಬರ್ 1966 ರಂದು ಸ್ಥಾಪಿಸಲಾಯಿತು.
 3. ಪ್ರಧಾನ ಕಚೇರಿ – ಮನಿಲಾ, ಫಿಲಿಪೈನ್ಸ್.
 4. ವಿಶ್ವಸಂಸ್ಥೆಯ ಅಧಿಕೃತ ವೀಕ್ಷಕ ಸ್ಥಾನಮಾನ ವನ್ನು ಪಡೆದಿದೆ.

 

ಯಾರು ಅದರ ಸದಸ್ಯರಾಗಬಹುದು?

ಏಷ್ಯಾ ಮತ್ತು ಪೆಸಿಫಿಕ್ ಗಾಗಿನ ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ಆಯೋಗದ ಸದಸ್ಯರನ್ನು (United Nations Economic and Social Commission for Asia and the Pacific (UNESCAP, ಈ ಹಿಂದೆ ಇದನ್ನು ‘ಏಷ್ಯಾ  ಮತ್ತು ಫಾರ್ ಈಸ್ಟ್ ನ ಆರ್ಥಿಕ ಆಯೋಗ’ ಅಥವಾ the Economic Commission for Asia and the Far East or ECAFE ಎಂದು ಕರೆಯಲಾಗುತ್ತಿತ್ತು) ಮತ್ತು ಪ್ರಾದೇಶಿಕೇತರ ಅಭಿವೃದ್ಧಿ ಹೊಂದಿದ ದೇಶಗಳನ್ನು ADB ತನ್ನ ಸದಸ್ಯರನ್ನಾಗಿ ಅಂಗೀಕರಿಸುತ್ತದೆ.

 1. ADB, ಈಗ 68 ಸದಸ್ಯರನ್ನು ಹೊಂದಿದ್ದು, ಅದರಲ್ಲಿ 49 ದೇಶಗಳು ಏಷ್ಯಾದವಾಗಿವೆ.

 

ಮತದಾನದ ಹಕ್ಕು:

 1. ಇದು ವಿಶ್ವಬ್ಯಾಂಕಿನ ತದ್ರೂಪಿ ಮಾದರಿಯಂತಿದೆ. ಇಲ್ಲಿ, ವಿಶ್ವಬ್ಯಾಂಕ್ ನಂತೆ, ಬಂಡವಾಳದ ಪಾಲನ್ನು ಆಧರಿಸಿ ಮತಗಳನ್ನು ನಿಗದಿಪಡಿಸಲಾಗುತ್ತದೆ.
 2. 31 ಡಿಸೆಂಬರ್ 2019 ರ ಹೊತ್ತಿಗೆ, ADB ಯ ಐದು ಅತಿದೊಡ್ಡ ಷೇರುದಾರರು ಎಂದರೆ ಜಪಾನ್ ಮತ್ತು ಅಮೇರಿಕ ಸಂಯುಕ್ತ ಸಂಸ್ಥಾನ (ಈ ಎರಡೂ ದೇಶಗಳು ಒಟ್ಟು ಷೇರುಗಳಲ್ಲಿ ತಲಾ 15.6% ಪಾಲನ್ನು ಹೊಂದಿವೆ), ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (6.4%), ಭಾರತ (6.3%) ಮತ್ತು ಆಸ್ಟ್ರೇಲಿಯಾ (5.8%) ಕ್ರಮವಾಗಿ ನಂತರದ ಸ್ಥಾನದಲ್ಲಿವೆ.

 

ಪಾತ್ರಗಳು ಮತ್ತು ಕಾರ್ಯಗಳು:

 1. ಸಮಗ್ರ ಆರ್ಥಿಕ ಬೆಳವಣಿಗೆ, ಸುಸ್ಥಿರ ಪರಿಸರ ಬೆಳವಣಿಗೆ ಮತ್ತು ಪ್ರಾದೇಶಿಕ ಏಕೀಕರಣದ ಮೂಲಕ ಏಷ್ಯಾ ಮತ್ತು ಪೆಸಿಫಿಕ್‌ ಪ್ರದೇಶದಲ್ಲಿನ ಬಡತನವನ್ನು ಕಡಿಮೆ ಮಾಡಲು ಏಷ್ಯಾ ಅಭಿವೃದ್ಧಿ ಬ್ಯಾಂಕ್ ಅನ್ನು ಸಮರ್ಪಿಸಲಾಗಿದೆ.
 2. ಹೂಡಿಕೆ, ಸಾಲ, ಅನುದಾನ ಮತ್ತು ಮಾಹಿತಿ ಹಂಚಿಕೆ ರೂಪದಲ್ಲಿ – ಮೂಲಸೌಕರ್ಯ, ಆರೋಗ್ಯ ಸೇವೆಗಳು, ಹಣಕಾಸು ಮತ್ತು ಸಾರ್ವಜನಿಕ ಆಡಳಿತ ವ್ಯವಸ್ಥೆಗಳಲ್ಲಿ, ಹವಾಮಾನ ಬದಲಾವಣೆಯ ಪ್ರಭಾವಕ್ಕೆ ರಾಷ್ಟ್ರಗಳನ್ನು ತಯಾರು ಮಾಡಲು ಅಥವಾ ಅವುಗಳ ನೈಸರ್ಗಿಕ ಸಂಪನ್ಮೂಲಗಳನ್ನು ಮತ್ತು ಇತರ ಪ್ರದೇಶಗಳನ್ನು ಉತ್ತಮವಾಗಿ ನಿರ್ವಹಿಸಲು ರಾಷ್ಟ್ರಗಳಿಗೆ ಸಹಾಯ ಮಾಡುವುದರ ಮೂಲಕ ಇದನ್ನು ನಡೆಸಲಾಗುತ್ತದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

ಪಾರ್ಕರ್ ಸೋಲಾರ್ ಪ್ರೊಬ್:


(Parker Solar Probe)

 

ಸಂದರ್ಭ:

ಶುಕ್ರ ಗ್ರಹದಲ್ಲಿ ಅಲ್ಪಾವಧಿಯ ಹೊಯ್ದಾಟದ ಸಮಯದಲ್ಲಿ, ನಾಸಾದ ಪಾರ್ಕರ್ ಸೋಲಾರ್ ಪ್ರೋಬ್ ನೈಸರ್ಗಿಕ ರೇಡಿಯೊ ಸಿಗ್ನಲ್ ಅನ್ನು ಕಂಡುಹಿಡಿದಿದೆ, ಇದರಿಂದಾಗಿ ಬಾಹ್ಯಾಕಾಶ ನೌಕೆ ಗ್ರಹದ ಮೇಲಿನ ಅಥವಾ ಮೇಲ್ಮೈ ವಾತಾವರಣದ ಮೂಲಕ ಹಾರಿಹೋಗಿದೆ ಎಂದು ಬಹಿರಂಗಪಡಿಸಿತು. ಇದು ಸುಮಾರು 30 ವರ್ಷಗಳಲ್ಲಿ ಶುಕ್ರ ಗ್ರಹದ ವಾತಾವರಣದ ಕುರಿತ ಮೊದಲ ನೇರ ಮಾಪನ / ಸಾಕ್ಷ್ಯವಾಗಿದೆ.

 

ಸಂಶೋಧನೆಗಳು:

ಭೂಮಿಯಂತೆ, ವಿದ್ಯುದಾವೇಶದ ಪದರವು ಶುಕ್ರ ಗ್ರಹದ ವಾತಾವರಣದ ಮೇಲಿನ ಭಾಗದಲ್ಲಿ ಕಂಡುಬರುತ್ತದೆ, ಇದನ್ನು ಅಯೋನೋಸ್ಪಿಯರ್ (Ionosphere)  ಎಂದು ಕರೆಯಲಾಗುತ್ತದೆ. ಚಾರ್ಜ್ಡ್ ಅನಿಲಗಳ ಈ ಸಮುದ್ರ ಅಥವಾ ಪ್ಲಾಸ್ಮಾ ನೈಸರ್ಗಿಕವಾಗಿ ರೇಡಿಯೋ ತರಂಗಗಳನ್ನು ಹೊರಸೂಸುತ್ತದೆ.

 

ಪರಿಣಾಮಗಳು:

ಈ ಆವಿಷ್ಕಾರವು ಶುಕ್ರನ ಮೇಲ್ಭಾಗದ ವಾತಾವರಣವು ‘ಸೌರ ಚಕ್ರ’(ಸೂರ್ಯನ 11 ವರ್ಷಗಳ ಚಟುವಟಿಕೆಯ ಚಕ್ರ) ದ ಸಮಯದಲ್ಲಿ ಸಂಕೀರ್ಣ ಬದಲಾವಣೆಗಳಿಗೆ ಒಳಗಾಗುತ್ತದೆ ಎಂದು ಖಚಿತಪಡಿಸುತ್ತದೆ.

 1. ಸೌರಚಕ್ರವು ಪ್ರತಿ 11 ವರ್ಷಗಳಿಗೊಮ್ಮೆ ಸೂರ್ಯನ ಚಟುವಟಿಕೆಯ ಚಕ್ರವಾಗಿದೆ.
 2. ಇದು ಶುಕ್ರ ಮತ್ತು ಭೂಮಿಯ ನಡುವಿನ ವ್ಯತ್ಯಾಸಗಳು ಮತ್ತು ಕಾರಣಗಳನ್ನು ತಿಳಿಯಲು ಇವು ಇತ್ತೀಚಿನ ಸೂಚನೆಗಳಾಗಿವೆ.

 

ಹಿನ್ನೆಲೆ:

ಒಂದೇ ರೀತಿಯ ಪ್ರಕ್ರಿಯೆಗಳಿಂದ ಮಾಡಲ್ಪಟ್ಟ ಭೂಮಿ ಮತ್ತು ಶುಕ್ರ ಗ್ರಹಗಳನ್ನು ಅವಳಿ ಗ್ರಹಗಳು ಎಂದು ಕರೆಯಲಾಗುತ್ತದೆ. ಎರಡೂ ಗ್ರಹಗಳ ಕಲ್ಲಿನ ಮೇಲ್ಮೈ, ಒಂದೇ ಗಾತ್ರ ಮತ್ತು ರಚನೆಯನ್ನು ಹೊಂದಿವೆ. ಆದಾಗ್ಯೂ, ಎರಡು ಗ್ರಹಗಳ ಮಾರ್ಗಗಳು ಅವುಗಳು ಹುಟ್ಟಿದ ಸಮಯದಿಂದ ಭಿನ್ನವಾಗಿದೆ. ಶುಕ್ರ ಗ್ರಹವು ಕಾಂತೀಯ ಕ್ಷೇತ್ರವನ್ನು ಹೊಂದಿರುವುದಿಲ್ಲ, ಮತ್ತು ಅದರ ಮೇಲ್ಮೈ ತಾಪಮಾನವು ಸೀಸವನ್ನು ಕರಗಿಸಲು ಬೇಕಾದ ತಾಪಮಾನಕ್ಕಿಂತ ಹೆಚ್ಚಾಗಿರುತ್ತದೆ.

 

ಪಾರ್ಕರ್ ಸೋಲಾರ್ ಪ್ರೋಬ್ ಮಿಷನ್’ ಬಗ್ಗೆ:

 1. ನಾಸಾದ ಐತಿಹಾಸಿಕ ಪಾರ್ಕರ್ ಸೋಲಾರ್ ಪ್ರೋಬ್ ಮಿಷನ್ ಸೂರ್ಯನ ಬಗ್ಗೆ ನಾವು ಇಲ್ಲಿಯವರೆಗೆ ತಿಳಿದಿರುವ ಮಾಹಿತಿಯಲ್ಲಿ ಕ್ರಾಂತಿಯನ್ನುಂಟು ಮಾಡುತ್ತದೆ, ಅಲ್ಲಿ ಬದಲಾಗುತ್ತಿರುವ ಪರಿಸ್ಥಿತಿಗಳು ಸೌರಮಂಡಲದಾದ್ಯಂತ ಹರಡುತ್ತವೆ, ಇದು ಭೂಮಿ ಮತ್ತು ಇತರ ಪ್ರಪಂಚಗಳ ಮೇಲೆ ಪರಿಣಾಮ ಬೀರುತ್ತದೆ.
 2. ಪಾರ್ಕರ್ ಸೋಲಾರ್ ಪ್ರೋಬ್ ಸೂರ್ಯನ ವಾತಾವರಣದ ಮೂಲಕ ಚಲಿಸುತ್ತದೆ. ಈ ಪಾರ್ಕರ್ ಸೋಲಾರ್ ಪ್ರೋಬ್ ಬಾಹ್ಯಾಕಾಶ ನೌಕೆಯು ಯಾವುದೇ ಬಾಹ್ಯಾಕಾಶ ನೌಕೆಯು ತಡೆದುಕೊಳ್ಳುವುದಕ್ಕಿಂತ ಹೆಚ್ಚಿನ ಶಾಖ ಮತ್ತು ವಿಕಿರಣವನ್ನು ಸೂರ್ಯನ ಮೇಲ್ಮೈ ವಾತಾವರಣಕ್ಕೆ ಹತ್ತಿರದಲ್ಲಿದ್ದು ತಡೆದುಕೊಳ್ಳುತ್ತದೆ  ಮತ್ತು ಅಂತಿಮವಾಗಿ ನಕ್ಷತ್ರದ ಹತ್ತಿರದ ವೀಕ್ಷಣೆಯ ಅವಲೋಕನಗಳನ್ನು ಮನುಕುಲಕ್ಕೆ ಒದಗಿಸುತ್ತದೆ.

 

ಪ್ರಯಾಣ:

 1.  ಸೂರ್ಯನ ವಾತಾವರಣದ ರಹಸ್ಯಗಳನ್ನು ಬಹಿರಂಗಪಡಿಸುವ ಸಲುವಾಗಿ, ಪಾರ್ಕರ್ ಸೋಲಾರ್ ಪ್ರೋಬ್ ಸುಮಾರು ಏಳು ವರ್ಷಗಳಲ್ಲಿ ಏಳು ಪ್ರಯಾಣದ ಸಮಯದಲ್ಲಿ ಶುಕ್ರನ ಗುರುತ್ವಾಕರ್ಷಣೆಯನ್ನು ಬಳಸುತ್ತದೆ ಮತ್ತು ಕ್ರಮೇಣ ಸೂರ್ಯನ ಹತ್ತಿರ ತನ್ನ ಕಕ್ಷೆಯನ್ನು ಸ್ಥಾಪಿಸುತ್ತದೆ.
 2. ಪಾರ್ಕರ್ ಸೋಲಾರ್ ಪ್ರೋಬ್ ಬಾಹ್ಯಾಕಾಶ ನೌಕೆಯು ಸೂರ್ಯನ ವಾತಾವರಣದ ಮೂಲಕ ಸೂರ್ಯನ ಮೇಲ್ಮೈಯಿಂದ 3.9 ದಶಲಕ್ಷ ಮೈಲುಗಳಷ್ಟು ದೂರದಲ್ಲಿ ಹಾದುಹೋಗುತ್ತದೆ ಮತ್ತು ಬುಧದ ಕಕ್ಷೆಯೊಳಗೆ ಕೂಡ ಮತ್ತು ಇಲ್ಲಿಯವರೆಗೂ ಯಾವುದೇ ಬಾಹ್ಯಾಕಾಶ ನೌಕೆಯು ಬಂದಿರುವ ಹತ್ತಿರ ಕ್ಕಿಂತ 7 ಪಟ್ಟು ಹೆಚ್ಚು ಹತ್ತಿರದಲ್ಲಿದೆ.

 

ಪಾರ್ಕರ್ ಸೋಲಾರ್ ಪ್ರೋಬ್ ಮಿಷನ್ ನ ಗುರಿ:

ಪಾರ್ಕರ್ ಸೋಲಾರ್ ಪ್ರೋಬ್ ಮಿಷನ್ ಮೂರು ವಿಶಾಲ ವೈಜ್ಞಾನಿಕ ಉದ್ದೇಶಗಳನ್ನು ಹೊಂದಿದೆ:

 1. ಸೌರ ಕರೋನಾ ಮತ್ತು ಸೌರ ಮಾರುತವನ್ನು ಬಿಸಿಮಾಡುವ ಮತ್ತು ವೇಗಗೊಳಿಸುವ ಶಕ್ತಿಯ ಹರಿವನ್ನು ಕಂಡುಹಿಡಿಯುವುದು.
 2. ಸೌರ ಮಾರುತ ಮೂಲಗಳಲ್ಲಿ ಪ್ಲಾಸ್ಮಾ ಮತ್ತು ಕಾಂತೀಯ ಕ್ಷೇತ್ರಗಳ ರಚನೆ ಮತ್ತು ಚಲನಶಾಸ್ತ್ರವನ್ನು ನಿರ್ಧರಿಸುವುದು.
 3. ಶಕ್ತಿಯುತ ಕಣಗಳನ್ನು ವೇಗಗೊಳಿಸುವ ಮತ್ತು ಸಾಗಿಸುವ ವ್ಯವಸ್ಥೆಯನ್ನು ಅನ್ವೇಷಣೆ ಮಾಡುವುದು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 4


 

ವಿಷಯಗಳು: ಖಾಸಗಿ ಮತ್ತು ಸಾರ್ವಜನಿಕ ಸಂಬಂಧಗಳಲ್ಲಿ ನೈತಿಕತೆ.

COVID ಪೀಡಿತ ಮನೆಯ ಮಕ್ಕಳಿಗೆ ಪೊಲೀಸರ ಸಹಾಯ:


(Kids from COVID-affected households get police help)

 

ಸಂದರ್ಭ:

ಗೌತಮ್ ಬುದ್ಧ ನಗರದಲ್ಲಿ ಕೋವಿಡ್ -19 ಸಾಂಕ್ರಾಮಿಕದ ಭೀಕರ ಹಾವಳಿ ಮುಂದುವರೆದಿದೆ ಆ ಮೂಲಕ ಸಾವಿರಾರು ಕುಟುಂಬಗಳ ಮೇಲೆ ಅನೇಕ ರೀತಿಯಲ್ಲಿ ಪರಿಣಾಮ ಉಂಟಾಗುತ್ತಿದೆ.

 

 1. ಅದರಂತೆ, ಯುವ IPS ಅಧಿಕಾರಿಯೊಬ್ಬರು ನೋಯ್ಡಾದಲ್ಲಿ ಮಹಿಳಾ ಸುರಕ್ಷತೆಯ ಉಸ್ತುವಾರಿ ಹೊತ್ತಿರುವ, ಪೊಲೀಸ್ ಉಪ ಆಯುಕ್ತ (ಮಹಿಳಾ ಸುರಕ್ಷತೆ) ವೃಂದಾ ಶುಕ್ಲಾ – ತಮ್ಮ ವ್ಯಾಪ್ತಿಯಲ್ಲಿರುವ ಸಂಪನ್ಮೂಲಗಳನ್ನು ಕೋವಿಡ್ ಪೀಡಿತ ಕುಟುಂಬಗಳ ಮಕ್ಕಳಿಗೆ ಸಹಾಯ ಮಾಡಲು ಬಳಸುತ್ತಿದ್ದಾರೆ. ಏಕೆಂದರೆ ಕುಟುಂಬದಲ್ಲಿ ಅಸಹಾಯಕರಾಗಿ ಉಳಿದಿರುವ ಮಕ್ಕಳು ತಮ್ಮನ್ನು ತಾವೇ ಸಂರಕ್ಷಿಸಿಕೊಳ್ಳಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ.
 2. ಜಿಲ್ಲಾಸ್ಪತ್ರೆಗಳಲ್ಲಿ, ಕೋವಿಡ್ 19 ಪರೀಕ್ಷೆ ಮಾಡಿಸಿಕೊಳ್ಳಲು ಮನೆಯಲ್ಲಿ ಪ್ರತ್ಯೇಕವಾಸ ದಲ್ಲಿರುವ ಪೋಷಕರ ಮಕ್ಕಳನ್ನು ಕರೆತರುವಂತೆ ಅಧಿಕಾರಿಗಳ ತಂಡವನ್ನು ಕಳುಹಿಸಿದ್ದಾರೆ, ಮಕ್ಕಳಿಗೆ ದಿನಕ್ಕೆ ಮೂರು ಹೊತ್ತು ಊಟ ಒದಗಿಸುವುದಲ್ಲದೆ ಅವರ ಶೈಕ್ಷಣಿಕ ಭವಿಷ್ಯವನ್ನು ಕಾಪಾಡುತ್ತಿದ್ದಾರೆ ಮತ್ತು ಈ ಸಾಂಕ್ರಾಮಿಕದಿಂದಾಗಿ ಪೋಷಕರನ್ನು ಕಳೆದುಕೊಂಡ ಮಕ್ಕಳ ದತ್ತು ಸ್ವೀಕಾರಕ್ಕೆ ಸಹ ವ್ಯವಸ್ಥೆ ಮಾಡಿದ್ದಾರೆ.
 3. ಅಂತಹ ಕುಟುಂಬಗಳಿಗೆ ಸಹಾಯ ಮಾಡಲು ಮುಂದೆ ಬರಬೇಕೆಂದು ಸಾಮಾಜಿಕ ಮಾಧ್ಯಮಗಳ ಮೂಲಕ ಶ್ರೀಮತಿ ಶುಕ್ಲಾ ಸ್ವಯಂಸೇವಕರನ್ನು ವಿನಂತಿಸುತ್ತಿದ್ದಾರೆ. ಅವರ ಮನವಿಗೆ ಹಲವು ಜನರು ಸ್ಪಂದಿಸಿದ್ದು ಆ ನಂತರ, ಈಗ ಅವರು ಅಂತಹ 35 ಸ್ವಯಂಸೇವಕರ ತಂಡವನ್ನು ರಚಿಸಿದ್ದಾರೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಕಚಿನ್ ಜನತೆ (Kachin People):

 1. ಅವರು ಉತ್ತರ ಮ್ಯಾನ್ಮಾರ್‌ನ ಕಚಿನ್ ರಾಜ್ಯದ ಕಚಿನ್ ಬೆಟ್ಟಗಳಲ್ಲಿ ಮತ್ತು ನೆರೆಯ ಚೀನಾದ ಯುನ್ನಾನ್ ಪ್ರಾಂತ್ಯ ಮತ್ತು ಈಶಾನ್ಯ ಭಾರತದ ಅಸ್ಸಾಂ, ಅರುಣಾಚಲ ಪ್ರದೇಶ ಗಳಲ್ಲಿ ವಾಸಿಸುವ ಜನಾಂಗೀಯ ಗುಂಪುಗಳ ಒಕ್ಕೂಟವಾಗಿದ್ದಾರೆ.
 2. ‘ಕಾಚಿನ್ ಜನತೆ’ ಎಂಬ ಪದವನ್ನು ಹೆಚ್ಚಾಗಿ ಚೀನಾದ ಜಿಂಗ್‌ಪೋ (Jingpo) ಜನರ ಮುಖ್ಯ ಉಪ ವರ್ಗದೊಂದಿಗೆ ವಿನಿಮೇಯವಾಗಿ (interchangeably) ಬಳಸಲಾಗುತ್ತದೆ.

 

ಸುದ್ದಿಯಲ್ಲಿರಲು ಕಾರಣ?

ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರದ ವಿರುದ್ಧದ ಪ್ರತಿಭಟನೆಗಳು ಕಾಚಿನ್ ರಾಜ್ಯ ಮತ್ತು ದೇಶದ ಇತರೆಡೆಗಳಲ್ಲಿ ಮುಂದುವರೆದಿದೆ.

 

ಸೂತ್ರ ಮಾದರಿ (SUTRA model):

 

ಭಾರತದಲ್ಲಿ ಕೋವಿಡ್-ಪಥವನ್ನು ಊಹಿಸಲು ಕಾನ್ಪುರ ಮತ್ತು ಹೈದರಾಬಾದ್‌ನ ಐಐಟಿ ವಿಜ್ಞಾನಿಗಳು ಒಳಗಾಗುವ (susceptible),ಪತ್ತೆಹಚ್ಚಲಾಗದ (Undetected), ಪರೀಕ್ಷಿಸಿದ (Tested), (ಪಾಸಿಟಿವ್) ಮತ್ತು ತೆಗೆದುಹಾಕಲಾದ ವಿಧಾನ’ (Removed Approach) (SUTRA) ಮಾದರಿಯನ್ನು ಬಳಸಿದ್ದಾರೆ.

ಕೋವಿಡ್ ಸಾಂಕ್ರಾಮಿಕದ -ಪಥವನ್ನು ಊಹಿಸಲು ಈ ಮಾದರಿಯು ಮೂರು ಮುಖ್ಯ ನಿಯತಾಂಕಗಳನ್ನು ಬಳಸುತ್ತದೆ.

 1. ಮೊದಲ ಮಾನದಂಡವನ್ನು ಬೀಟಾ (beta) ಅಥವಾ ಸಂಪರ್ಕ ದರ ಎಂದು ಕರೆಯಲಾಗುತ್ತದೆ, ಇದು ಸೋಂಕಿತ ವ್ಯಕ್ತಿಯು ಒಂದು ದಿನಕ್ಕೆ ಎಷ್ಟು ಜನರಿಗೆ ಸೋಂಕು ಹಾಡುತ್ತಾನೆ ಎಂಬುದನ್ನು ಅಳೆಯುತ್ತದೆ. ಇದು R0 ಮೌಲ್ಯಕ್ಕೆ ಸಂಬಂಧಿಸಿದೆ, ಇದು ಸೋಂಕಿತ ವ್ಯಕ್ತಿಯಿಂದ ಸೋಂಕಿನ ಸಮಯದಲ್ಲಿ ವೈರಸ್ ಸೋಂಕಿಗೆ ಒಳಗಾದ ಇತರ ಜನರ ಸಂಖ್ಯೆ.
 2. ಎರಡನೆಯ ಮಾನದಂಡವೆಂದರೆ ‘ಪ್ರವೇಶ’ / ತಲುಪುವುದು ಇದು ಸಾಂಕ್ರಾಮಿಕ ರೋಗಕ್ಕೆ ಒಡ್ಡಿಕೊಳ್ಳುವ ಜನಸಂಖ್ಯೆಯ ಮಟ್ಟವನ್ನು ಅಳೆಯುತ್ತದೆ.
 3. ಮೂರನೆಯ ಮಾನದಂಡವೆಂದರೆ ‘ಎಪ್ಸಿಲಾನ್’ (epsilon), ಇದು ಪತ್ತೆಯಾದ ಮತ್ತು ಪತ್ತೆಯಾಗದ ಪ್ರಕರಣಗಳ ಅನುಪಾತವಾಗಿದೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos