Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 29ನೇ ಏಪ್ರಿಲ್ 2021

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಸರ್ಕಾರಿ ನೌಕರರಿಗೆ ಎರಡು ಮಕ್ಕಳ ನೀತಿ: ಮಹಾರಾಷ್ಟ್ರ.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಭಾರತದ ಸಂವಿಧಾನದ 217 ನೇ ವಿಧಿ.

2. ಸಂಸದೀಯ ಸದನ ಸಮಿತಿಗಳ ಸಭೆ ಆಯೋಜಿಸುವಂತೆ ಕರೆನೀಡಿದ ನಾಯಕರು.

3. ವಾಹನ ಗುಜರಿ ನೀತಿ.

  

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಕೃಷಿ ಮೂಲಸೌಕರ್ಯ ನಿಧಿ.

2. ಆದಿತ್ಯ-ಎಲ್ 1 ಸಪೋರ್ಟ್ ಸೆಲ್.

3. ಅಸ್ಸಾಂ ಭೂಕಂಪನ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಕೋವಿನ್.

2. ವರುಣ ಸಮರಾಭ್ಯಾಸ 2021.

3. ಪೈಥಾನ್ -5.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಮಹಿಳಾ ಸಂಬಂಧಿತ ಸಮಸ್ಯೆಗಳು.

ಸರ್ಕಾರಿ ನೌಕರರಿಗೆ ಎರಡು ಮಕ್ಕಳ ನೀತಿ: ಮಹಾರಾಷ್ಟ್ರ:


(Maharashtra’s two-child norm for govt employees)

ಸಂದರ್ಭ:

ಇತ್ತೀಚೆಗೆ, ಮಹಾರಾಷ್ಟ್ರ ಜೈಲು / ಕಾರಾಗೃಹ ಇಲಾಖೆಯ ಮಹಿಳಾ ಅಧಿಕಾರಿಯನ್ನು ಸೇವೆಯಿಂದ ವಜಾಗೊಳಿಸಲಾಗಿದೆ, ಕಾರಣ ಅವರು ತಮಗಿರುವ ಮೂವರು ಮಕ್ಕಳ ಮಾಹಿತಿಯನ್ನು ತಮ್ಮ ನೇಮಕಾತಿ ಪ್ರಾಧಿಕಾರದಿಂದ ಮುಚ್ಚಿಟ್ಟಿದ್ದರು. ಆನಂತರ ಇಲಾಖಾ ತನಿಖೆಯಿಂದ ಮಹಿಳಾ ಅಧಿಕಾರಿ ಮಹಾರಾಷ್ಟ್ರ ನಾಗರಿಕ ಸೇವೆ’ಗಳ (ಸಣ್ಣ ಕುಟುಂಬದ ಘೋಷಣೆ) ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ತಿಳಿದುಬಂದಕಾರಣ ಈ ಕ್ರಮ ಕೈಗೊಳ್ಳಲಾಗಿದೆ.

 

ಮಹಾರಾಷ್ಟ್ರ ಸರ್ಕಾರಿ ನೌಕರರಿಗೆ ‘ಇಬ್ಬರು ಮಕ್ಕಳ’ ಸೇವಾ ನಿಯಮ ಯಾವುದು?

2005 ರ ಮಹಾರಾಷ್ಟ್ರ ನಾಗರಿಕ ಸೇವೆ (ಸಣ್ಣ ಕುಟುಂಬದ ಘೋಷಣೆ) ನಿಯಮಗಳ ಪ್ರಕಾರ, ‘ಒಂದು ಸಣ್ಣ ಕುಟುಂಬ’ವನ್ನು ಗಂಡ, ಹೆಂಡತಿ ಮತ್ತು ಇಬ್ಬರು ಮಕ್ಕಳು ಎಂದು ವ್ಯಾಖ್ಯಾನಿಸಲಾಗಿದೆ.

 • 2005 ರ ನಂತರ ಒಬ್ಬ ವ್ಯಕ್ತಿಗೆ ಇಬ್ಬರಿಗಿಂತ ಹೆಚ್ಚು ಮಕ್ಕಳಿದ್ದರೆ, ಆ ವ್ಯಕ್ತಿಗೆ ಮಹಾರಾಷ್ಟ್ರ ಸರ್ಕಾರದ ಅಡಿಯಲ್ಲಿ ಉದ್ಯೋಗ ಪಡೆಯಲು ಅರ್ಹತೆ ಇರುವುದಿಲ್ಲ ಎಂದು ಅದು ಹೇಳುತ್ತದೆ.
 • ಈ ನಿಯಮಗಳ ಅಡಿಯಲ್ಲಿ ಮಕ್ಕಳ ವ್ಯಾಖ್ಯಾನದಲ್ಲಿ ದತ್ತು ಮಕ್ಕಳನ್ನು ಸೇರಿಸಲಾಗಿಲ್ಲ.

 

ಹಿನ್ನೆಲೆ:

ಸರ್ಕಾರಿ ಉದ್ಯೋಗಗಳ ನೇಮಕಾತಿ ಮತ್ತು ಸ್ಥಳೀಯ ಸರ್ಕಾರಿ ಸಂಸ್ಥೆಗಳ ಚುನಾವಣೆಗಳಲ್ಲಿ ‘ಎರಡು ಮಕ್ಕಳ’ ನೀತಿಯನ್ನು ಹೊಂದಿರುವ ದೇಶದ ಕೆಲವೇ ರಾಜ್ಯಗಳಲ್ಲಿ ಮಹಾರಾಷ್ಟ್ರವೂ ಒಂದು. ರಾಜಸ್ಥಾನ, ಮಧ್ಯಪ್ರದೇಶ, ಆಂಧ್ರಪ್ರದೇಶ ಮತ್ತು ತೆಲಂಗಾಣ, ಗುಜರಾತ್, ಒಡಿಶಾ, ಉತ್ತರಾಖಂಡ್ ಮತ್ತು ಅಸ್ಸಾಂ ‘ಎರಡು ಮಕ್ಕಳ ನೀತಿ’ ಜಾರಿಗೆ ತರುವ ಇತರ ರಾಜ್ಯಗಳು. ಅಸ್ಸಾಂನಲ್ಲಿ, ಈ ನೀತಿಯನ್ನು 2019 ರಲ್ಲಿ ಜಾರಿಗೆ ತರಲಾಯಿತು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು:ಭಾರತೀಯ ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

ಭಾರತದ ಸಂವಿಧಾನದ 217 ನೇ ವಿಧಿ:


(Article 217 of the Constitution of India)

 

ಸಂದರ್ಭ:

ಭಾರತದ ರಾಷ್ಟ್ರಪತಿಗಳು, ಸಂವಿಧಾನದ ಪರಿಚ್ಛೇದ 217  (1) ರ ಪ್ರಕಾರ ಅಧಿಕಾರವನ್ನು ಚಲಾಯಿಸಿ, ಛತ್ತೀಸಗಡ  ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶರಾದ ಶ್ರೀಮತಿ ವಿಮಲಾ ಸಿಂಗ್ ಕಪೂರ್ ಅವರನ್ನು ಛತ್ತೀಸಗಡ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರನ್ನಾಗಿ ನೇಮಕ ಮಾಡಿದ್ದಾರೆ.

 

ಆರ್ಟಿಕಲ್ 217 (1) ರ ಅವಲೋಕನ:

ಹೈಕೋರ್ಟ್ ನ್ಯಾಯಾಧೀಶರ ಕಚೇರಿಯ ನೇಮಕಾತಿ ಮತ್ತು ಷರತ್ತುಗಳು:

 1. ಭಾರತದ ಸಂವಿಧಾನದ 217 ವಿಧಿಯ ಪ್ರಕಾರ ಭಾರತದ ರಾಷ್ಟ್ರಪತಿಗಳು ಹೈಕೋರ್ಟ್ ಗಳ ನ್ಯಾಯಾಧೀಶರನ್ನು ವರಿಷ್ಠ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳೊಂದಿಗೆ ಮತ್ತು ಸಂಬಂಧಿಸಿದ ರಾಜ್ಯದ ರಾಜ್ಯಪಾಲರೊಂದಿಗೆ ಸಮಾಲೋಚಿಸಿದ ನಂತರ ನೇಮಕ ಮಾಡುತ್ತಾರೆ. ಒಂದು ವೇಳೆ ಹೈಕೋರ್ಟ್ ಗಳ ಮುಖ್ಯ ನ್ಯಾಯಾಧೀಶರನ್ನು ಹೊರತುಪಡಿಸಿ ಹೈಕೋರ್ಟ್ ನ ಇತರೆ ನ್ಯಾಯಾಧೀಶರನ್ನು ನೇಮಕ ಮಾಡುವ ಸಂದರ್ಭದಲ್ಲಿ ಸಂಬಂಧಿಸಿದ ಹೈಕೋರ್ಟ್ ನ ಮುಖ್ಯನ್ಯಾಯಮೂರ್ತಿಯವರೊಂದಿಗೆ ಕೂಡ ಸಮಾಲೋಚಿಸಿ ತಮ್ಮ ಸಹಿ ಹಾಗೂ ಮುದ್ರೆ ಹೊಂದಿದ ಆದೇಶದ ಮೂಲಕ (by warrant under his hand and seal) ನೇಮಕ ಮಾಡುತ್ತಾರೆ. ಹಂಗಾಮಿ ಅಥವಾ ಕಾರ್ಯನಿರ್ವಾಹಕ ನ್ಯಾಯಾಧೀಶರು, ಆರ್ಟಿಕಲ್ 224 ರಲ್ಲಿ ಒದಗಿಸಿರುವಂತೆ ಮತ್ತು ಇನ್ನಾವುದೇ ಪ್ರಕರಣದಲ್ಲಿ ಒದಗಿಸಿದಂತೆ 62 ವರ್ಷ ತುಂಬುವವರೆಗೆ ಅಧಿಕಾರದಲ್ಲಿ ಮುಂದುವರೆಯಬೇಕು.
 • ನ್ಯಾಯಾಧೀಶರು ತಮ್ಮ ಹಸ್ತಾಕ್ಷರದೊಂದಿಗೆ ರಾಷ್ಟ್ರಪತಿಗಳನ್ನು ಉದ್ದೇಶಿಸಿ ಪತ್ರ ಬರೆಯುವ ಮೂಲಕ ರಾಜೀನಾಮೆ ನೀಡಬಹುದು.
 • ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರನ್ನು ತೆಗೆದುಹಾಕಲು ಸಂವಿಧಾನ ವಿಧಿ 124 ರ (4) ನೆ ಉಪ ವಿಧಿಯಲ್ಲಿ ಉಲ್ಲೇಖಿಸಿರುವ ರೀತಿಯಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರನ್ನು ಅವರ ಕಚೇರಿಯಿಂದ ತೆಗೆದುಹಾಕಬಹುದು.
 • ಅಧ್ಯಕ್ಷರು ಹೈಕೋರ್ಟ್ ನ್ಯಾಯಾಧೀಶರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರನ್ನಾಗಿ ಪದೋನ್ನತಿಗೊಳಿಸಿ ನೇಮಿಸಿದಾಗ ಅಥವಾ ಭಾರತದ ಭೂಪ್ರದೇಶದಲ್ಲಿರುವ ಬೇರೆ ಯಾವುದೇ ಹೈಕೋರ್ಟ್‌ಗೆ ಅವರನ್ನು ರಾಷ್ಟ್ರಪತಿಗಳು ವರ್ಗಾಯಿಸಿದರೆ ನ್ಯಾಯಾಧೀಶರ ಹುದ್ದೆ ಖಾಲಿಯಾಗುತ್ತದೆ.

 

ವಿಷಯಗಳು: ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು – ರಚನೆ, ಕಾರ್ಯವೈಖರಿ, ವ್ಯವಹಾರದ ನಡಾವಳಿಗಳು, ಅಧಿಕಾರಗಳು ಮತ್ತು ಸವಲತ್ತುಗಳು ಮತ್ತು ಇವುಗಳಿಂದ ಉಂಟಾಗುವ ಸಮಸ್ಯೆಗಳು.

ಸಂಸದೀಯ ಸದನ ಸಮಿತಿಗಳ ಸಭೆ ಆಯೋಜಿಸುವಂತೆ ಕರೆನೀಡಿದ ನಾಯಕರು:


(Leaders call for House panels’ meet)

ಸಂದರ್ಭ:

ಸಂಸದೀಯ ಸದನ ಸಮಿತಿಗಳ ವರ್ಚುವಲ್ ಸಭೆಗಳನ್ನು ನಡೆಸಲು ಅವಕಾಶ ನೀಡುವಂತೆ ಸಂಸತ್ ಸದಸ್ಯರು ರಾಜ್ಯಸಭಾ ಅಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಮತ್ತು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರಿಗೆ ಮನವಿ ಮಾಡಿದ್ದಾರೆ.

ಹಿನ್ನೆಲೆ:

ದೇಶದಲ್ಲಿ ನಡೆಯುತ್ತಿರುವ ಕೋವಿಡ್ -19 ಸಾಂಕ್ರಾಮಿಕ ರೋಗದ ತೀವ್ರತರವಾದ ಎರಡನೇ ಅಲೆಯ ಸಂದರ್ಭದಲ್ಲಿ, ಸಂಸತ್ತಿನ ಸ್ಥಾಯಿ ಸಮಿತಿಗಳು ಒಂದು ತಿಂಗಳಿಗಿಂತ ಹೆಚ್ಚು ಕಾಲ ಸಭೆ ಸೇರಿಲ್ಲ.

 

ಸಂಸದೀಯ ಸಮಿತಿಗಳು ಯಾವುವು?

ಲೋಕಸಭಾ ವೆಬ್‌ಸೈಟ್‌ನ ಪ್ರಕಾರ, ಸಂಸದೀಯ ಸಮಿತಿ (Parliamentary Committee) ಎಂದರೆ “ಸದನದಿಂದ ನೇಮಕಗೊಂಡ ಅಥವಾ ಚುನಾಯಿತವಾದ ಅಥವಾ ಸ್ಪೀಕರ್ ರವರಿಂದ ನಾಮನಿರ್ದೇಶನಗೊಂಡಿರುವ ಮತ್ತು ಸ್ಪೀಕರ್ ನಿರ್ದೇಶನದಂತೆ ಕಾರ್ಯನಿರ್ವಹಿಸುವ ಮತ್ತು ಅದರ ವರದಿಯನ್ನು ಸದನಕ್ಕೆ ಅಥವಾ ಸ್ಪೀಕರ್‌ಗೆ ಮತ್ತು ಸಚಿವಾಲಯಕ್ಕೆ ನೀಡುವ ಸಮಿತಿ” ಯಾಗಿದೆ.

ಸಂಸದೀಯ ಸಮಿತಿಗಳು ಎರಡು ಬಗೆಯದಾಗಿವೆ :ಸ್ಥಾಯಿ ಸಮಿತಿಗಳು ಮತ್ತು ತಾತ್ಕಾಲಿಕ ಸಮಿತಿಗಳು ಅಥವಾ ಆಯ್ದ ಸಮಿತಿಗಳು.

ಸ್ಥಾಯಿ ಸಮಿತಿಗಳು  (Standing Committees), ನಿರಂತರ ಸ್ವರೂಪವನ್ನು ಹೊಂದಿವೆ, ಅಂದರೆ, ಅವುಗಳ ಕಾರ್ಯವು ಸಾಮಾನ್ಯವಾಗಿ ನಿರಂತರವಾಗಿ ನಡೆಯುತ್ತದೆ. ಅಂತಹ ಸಮಿತಿಗಳನ್ನು ವಾರ್ಷಿಕ ಆಧಾರದ ಮೇಲೆ ನಿಯತಕಾಲಿಕವಾಗಿ ಆಯ್ಕೆ ಮಾಡಲಾಗುತ್ತದೆ.

ತಾತ್ಕಾಲಿಕ ಸಮಿತಿಗಳನ್ನು (ad hoc Committees), ನಿರ್ದಿಷ್ಟ ಉದ್ದೇಶಕ್ಕಾಗಿ ನೇಮಿಸಲಾಗುತ್ತದೆ ಮತ್ತು ಅವುಗಳು ತಮ್ಮ ಕೆಲಸವನ್ನು ಮುಗಿಸಿ ವರದಿಯನ್ನು ಸಲ್ಲಿಸಿದ ನಂತರ ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತವೆ.

ಸಾಂವಿಧಾನಿಕ ನಿಬಂಧನೆಗಳು:

ಸಂಸದೀಯ ಸಮಿತಿಗಳು ತಮ್ಮ ಅಧಿಕಾರವನ್ನು ಆರ್ಟಿಕಲ್ 105 ರಿಂದ (ಸಂಸತ್ತಿನ ಸದಸ್ಯರ ಸವಲತ್ತುಗಳು) ಮತ್ತು 118 ನೇ ವಿಧಿ (ಸಂಸತ್ತಿನ ಕಾರ್ಯವಿಧಾನ ಮತ್ತು ನಡಾವಳಿಗಳ ನಿಯಮಗಳನ್ನು ರೂಪಿಸುವ ಸಂಸತ್ತಿನ ಅಧಿಕಾರ) ಮೂಲಕ ಪಡೆದಿವೆ.

 

ಇಲಾಖಾ ಸಂಬಂಧಿತ ಸ್ಥಾಯಿ ಸಮಿತಿಗಳ ರಚನೆ (DRSCs):

ಇಲಾಖೆಗಳಿಗೆ 24 ಸ್ಥಾಯಿ ಸಮಿತಿಗಳನ್ನು ಜೋಡಿಸಲಾಗಿದೆ, ಅವರ ವ್ಯಾಪ್ತಿಯಲ್ಲಿ ಭಾರತ ಸರ್ಕಾರದ ಎಲ್ಲಾ ಸಚಿವಾಲಯಗಳು / ಇಲಾಖೆಗಳು ಬರುತ್ತವೆ.

 • 13 ನೇ ಲೋಕಸಭೆಯ ಹೊತ್ತಿಗೆ, ಪ್ರತಿ DRSC ಗಳಲ್ಲಿ 45 ಸದಸ್ಯರಿದ್ದರು – ಈ ಪೈಕಿ 30 ಸದಸ್ಯರನ್ನು ಲೋಕಸಭೆಯಿಂದ ಮತ್ತು 15 ಸದಸ್ಯರನ್ನು ರಾಜ್ಯಸಭೆಯಿಂದ ನಾಮನಿರ್ದೇಶನ ಮಾಡಲಾಗಿದೆ.
 • ಜುಲೈ 2004 ರಲ್ಲಿ ಇಲಾಖೆಗಳ ಸ್ಥಾಯಿ ಸಮಿತಿಗಳ ಮರುಸಂಘಟನೆಯ ನಂತರ, ಈ ಪ್ರತಿಯೊಂದು ಸಮಿತಿಗಳು 31 ಸದಸ್ಯರನ್ನು ಒಳಗೊಂಡಿವೆ – ಲೋಕಸಭೆಯಿಂದ 21 ಮತ್ತು ರಾಜ್ಯಸಭೆಯಿಂದ 10 ಸದಸ್ಯರನ್ನು ಕ್ರಮವಾಗಿ ಲೋಕಸಭೆಯ ಸ್ಪೀಕರ್ ಮತ್ತು ರಾಜ್ಯಸಭೆಯ ಅಧ್ಯಕ್ಷರು ನಾಮಕರಣ ಮಾಡುತ್ತಾರೆ.
 • ಈ ಸಮಿತಿಗಳನ್ನು ಗರಿಷ್ಠ ಒಂದು ವರ್ಷದವರೆಗೆ ರಚಿಸಲಾಗುತ್ತದೆ ಮತ್ತು ಪ್ರತಿವರ್ಷ ಸಮಿತಿಗಳ ಪುನರ್ರಚನೆಯಲ್ಲಿ ಎಲ್ಲಾ ಪಕ್ಷಗಳ ಸದಸ್ಯರಿಗೂ ಪ್ರಾತಿನಿಧ್ಯ ನೀಡಲಾಗುತ್ತದೆ.

 

ಹಣಕಾಸು ಸಮಿತಿಗಳ ಸಂಯೋಜನೆ:

 • ಅಂದಾಜು ಸಮಿತಿಯು 30 ಸದಸ್ಯರನ್ನು ಒಳಗೊಂಡಿದೆ ಮತ್ತು ಎಲ್ಲಾ ಸದಸ್ಯರನ್ನು ಲೋಕಸಭೆಯಿಂದ ನಾಮನಿರ್ದೇಶನ ಮಾಡಲಾಗುತ್ತದೆ.
 • ಸಾರ್ವಜನಿಕ ಲೆಕ್ಕಪತ್ರ ಸಮಿತಿ ಮತ್ತು ಸಾರ್ವಜನಿಕ ವ್ಯವಹಾರ ಸಮಿತಿ ಎರಡೂ 22 ಸದಸ್ಯರನ್ನು ಹೊಂದಿವೆ – ಅವರಲ್ಲಿ 15 ಮಂದಿ ಲೋಕಸಭೆಯಿಂದ ಮತ್ತು 7 ಮಂದಿ ರಾಜ್ಯಸಭೆಯಿಂದ ನಾಮನಿರ್ದೇಶನ ಗೊಳ್ಳುತ್ತಾರೆ.

  

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ವಾಹನ ಗುಜರಿ ನೀತಿ:


(Vehicle Scrappage Policy)

 ಸಂದರ್ಭ:

ರೇಟಿಂಗ್ ನೀಡುವ ಸಂಸ್ಥೆಯಾದ ‘ಕ್ರಿಸ್ಸಿಲ್’ (CRISIL)  ನಡೆಸಿದ ಸಂಶೋಧನಾ ವಿಶ್ಲೇಷಣೆಯು, ಸರಕು ಸಾಗಣೆದಾರರು ಹಳೆಯ ವಾಹನಗಳನ್ನು ಕೇಂದ್ರ ಸರ್ಕಾರದ ‘ವಾಹನ ಗುಜರಿ ನೀತಿ’ (Vehicle Scrappage Policy) ಯೊಂದಿಗೆ ಬದಲಿಸಲು ಸರದಿಯಲ್ಲಿ ನಿಲ್ಲುವ ಸಾಧ್ಯತೆ ಇಲ್ಲ ಎಂದು ತಿಳಿಸುತ್ತದೆ. ಈ ನೀತಿಯು, ಬಸ್ಸುಗಳು, ಪ್ರಯಾಣಿಕರ ವಾಹನಗಳು ಮತ್ತು ದ್ವಿಚಕ್ರ ವಾಹನಗಳ ಸ್ಕ್ರ್ಯಾಪೇಜ್ ಪರಿಮಾಣವನ್ನು ಸೀಮಿತಗೊಳಿಸುವುದು.

 

ಹೊಸ ನೀತಿಯೊಂದಿಗಿನ ಸಮಸ್ಯೆಗಳು:  

 •  ಟ್ರಕ್‌ಗಳಿಗೆ ಸೀಮಿತ ಪ್ರೋತ್ಸಾಹ ಮತ್ತು ಕಳಪೆ ವೆಚ್ಚದ ಅರ್ಥಶಾಸ್ತ್ರ / ಟ್ರಕ್‌ಗಳಿಗೆ ಕಡಿಮೆ ಮೊತ್ತದ ಬೆಲೆ ನೀಡುವ ವ್ಯವಹಾರವಾಗಿ ನೋಡಲಾಗುತ್ತಿದೆ.
 • ಪತ್ತೆಹಚ್ಚಬಹುದಾದ ಇತರ ವರ್ಗದ ವಾಹನಗಳ ಸಂಖ್ಯೆ ಕಡಿಮೆಯಾಗಿದೆ.
 • 15 ವರ್ಷ ಹಳೆಯದಾದ ಆರಂಭಿಕ ದರ್ಜೆಯ ಸಣ್ಣ ಕಾರನ್ನು ಸ್ಕ್ರ್ಯಾಪ್ ಮಾಡುವುದರಿಂದ ಸಿಗುವ ಲಾಭ ಸುಮಾರು 70,000 ರೂ., ಆದರೆ ಅದನ್ನು ಮರುಮಾರಾಟ ಮಾಡುವುದರಿಂದ ಸಿಗುವ ಹಣ ಸುಮಾರು 95,000 ರೂ. ಆಗಿರುವುದರಿಂದ ಇದು ಸ್ಕ್ರ್ಯಾಪಿಂಗ್ ಅನ್ನು ಆಕರ್ಷಕವಲ್ಲದಂತೆ ಮಾಡುತ್ತದೆ.

 

ಈ ಹೊತ್ತಿನ ಅವಶ್ಯಕತೆ:

ಈ ಎಲ್ಲಾ ಕಾರಣಗಳನ್ನು ಗಮನದಲ್ಲಿಟ್ಟುಕೊಂಡು, ಸ್ಕ್ರ್ಯಾಪಿಂಗ್ ನೀತಿಯನ್ನು ಸಂಪೂರ್ಣವಾಗಿ ಜಾರಿಗೆ ತರಲು, ನಾವು ಜೀವಿತಾವಧಿ ಮುಗಿದಿರುವ ವಾಹನಗಳನ್ನು ರಸ್ತೆಯಿಂದ ತೆಗೆದುಹಾಕಲು ಸಮಗ್ರ ಯೋಜನೆಯನ್ನು ರೂಪಿಸಬೇಕಾಗಿದೆ, ಅಂದರೆ ‘ಎಂಡ್ ಆಫ್ ಲೈಫ್ ವೆಹಿಕಲ್ಸ್’ (ELV). ಸರಕು ಸಾಗಣೆದಾರರಿಗೆ ಸಮರ್ಪಕ ಮತ್ತು ಉತ್ಸಾಹಭರಿತ ಆರ್ಥಿಕ ನೆರವು ನೀಡುವ ಅವಶ್ಯಕತೆಯಿದೆ. ಆದಾಗ್ಯೂ, ಹಳೆಯ ವಾಹನಗಳ ಸಮೂಹವನ್ನು ರಸ್ತೆಯಿಂದ ತೆಗೆದುಹಾಕುವವರೆಗೆ, ಬಿಎಸ್-6 (BS-VI)  ವಾಹನಗಳನ್ನು ಕಾರ್ಯಗತಗೊಳಿಸುವುದರಿಂದ ಆಗುವ ಪ್ರಯೋಜನಗಳನ್ನು ಸಂಪೂರ್ಣವಾಗಿ ಪಡೆಯಲಾಗುವುದಿಲ್ಲ.

 

ವಾಹನಗಳ ಸ್ಕ್ರ್ಯಾಪೇಜ್ ನೀತಿ ಕುರಿತು:

 • ಈ ನೀತಿಯ ಪ್ರಕಾರ, ಹಳೆಯ ವಾಹನಗಳನ್ನು ಮರು ನೋಂದಣಿ ಮಾಡುವ ಮೊದಲು ಅವುಗಳು ಫಿಟ್‌ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು ಮತ್ತು 15 ವರ್ಷಕ್ಕಿಂತ ಮೇಲ್ಪಟ್ಟ ಸರ್ಕಾರಿ ವಾಹನಗಳು ಮತ್ತು 20 ವರ್ಷಕ್ಕಿಂತ ಮೇಲ್ಪಟ್ಟ ಖಾಸಗಿ ವಾಹನಗಳನ್ನು ಗುಜರಿಗೆ ಹಾಕಲಾಗುತ್ತದೆ.
 • ಈ ನೀತಿಯ ಪ್ರಕಾರ ಹಳೆಯ ವಾಹನಗಳ ಬಳಕೆಯನ್ನು ನಿರುತ್ಸಾಹ ಗೊಳಿಸುವ ನಿಟ್ಟಿನಲ್ಲಿ, 15 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ವಯಸ್ಸಿನ ವಾಹನಗಳ ಮರು-ನೋಂದಣಿಗೆ ಅವುಗಳ ಆರಂಭಿಕ ನೋಂದಣಿ ಶುಲ್ಕಕ್ಕಿಂತ ಹೆಚ್ಚಿನ ಶುಲ್ಕ ವಿಧಿಸಲಾಗುವುದು.
 • ನೀತಿಯಡಿಯಲ್ಲಿ, ಹಳೆಯ ಮತ್ತು ಅದಕ್ಷ ವಾಹನಗಳನ್ನು ರಸ್ತೆಯಿಂದ ತೆಗೆದುಹಾಕಲು ಹಳೆಯ ವಾಹನಗಳ ಮಾಲೀಕರನ್ನು ಉತ್ತೇಜಿಸಲು ಅವರಿಗೆ ಪ್ರೋತ್ಸಾಹಧನ ನೀಡುವ ಸಲುವಾಗಿ ವೈಯಕ್ತಿಕ ಖಾಸಗಿ ವಾಹನಗಳಿಗೆ 25% ಮತ್ತು ವಾಣಿಜ್ಯ ವಾಹನಗಳಿಗೆ 15% ವರೆಗೆ ರಸ್ತೆ-ತೆರಿಗೆ ವಿನಾಯಿತಿ ನೀಡುವಂತೆ ರಾಜ್ಯ ಸರ್ಕಾರಗಳನ್ನು ಕೇಳಬಹುದು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

 ವಿಷಯಗಳು: ನೇರ ಮತ್ತು ಪರೋಕ್ಷ ಕೃಷಿ ನೆರವು ಮತ್ತು ಕನಿಷ್ಠ ಬೆಂಬಲ ಬೆಲೆಗೆ ಸಂಬಂಧಿಸಿದ ವಿಷಯಗಳು; ಸಾರ್ವಜನಿಕ ವಿತರಣಾ ವ್ಯವಸ್ಥೆ – ಉದ್ದೇಶಗಳು, ಕಾರ್ಯಗಳು, ಮಿತಿಗಳು, ಸುಧಾರಣೆಗಳು; ಬಫರ್ ಸ್ಟಾಕ್ ಮತ್ತು ಆಹಾರ ಭದ್ರತೆಗೆ ಸಂಬಂಧಿಸಿದ ವಿಷಯಗಳು; ತಂತ್ರಜ್ಞಾನ ಮಿಷನ್; ಪಶುಸಂಗೋಪನೆಗೆ ಸಂಬಂಧಿಸಿದ ಅರ್ಥಶಾಸ್ತ್ರ.

 ಕೃಷಿ ಮೂಲಸೌಕರ್ಯ ನಿಧಿ:


(Agriculture Infrastructure Fund)

 ಸಂದರ್ಭ:

ಕೃಷಿ ಮೂಲಸೌಕರ್ಯ ನಿಧಿಯು (Agriculture Infrastructure Fund- AIF) 8,216 ಕೋಟಿ ಮೌಲ್ಯದ 8,665 ಅರ್ಜಿಗಳನ್ನು ಸ್ವೀಕರಿಸಿದ ನಂತರ 8000 ಕೋಟಿ ರೂ. ಗಳ ಗಡಿಯನ್ನು ದಾಟಿದೆ.

ಇದರಲ್ಲಿ ಅತಿದೊಡ್ಡ ಪಾಲು 58% ಪ್ರಾಥಮಿಕ ಕೃಷಿ ಸಾಲ ಸಂಘಗಳು (PACS) ಹೊಂದಿದ್ದರೆ, ನಂತರದ ಸ್ಥಾನದಲ್ಲಿ 24 ಪ್ರತಿಶತ ದೊಂದಿಗೆ ಕೃಷಿ-ಉದ್ಯಮಿಗಳು ಮತ್ತು 13 ಪ್ರತಿಶತದಷ್ಟು ರೈತರು ವೈಯಕ್ತಿಕವಾಗಿ ಕೊಡುಗೆ ನೀಡಿದ್ದಾರೆ.

 

ಕೃಷಿ ಮೂಲಸೌಕರ್ಯ ನಿಧಿ’ ಬಗ್ಗೆ:

 •  ಕೃಷಿ ಮೂಲಸೌಕರ್ಯ ನಿಧಿ, ಬಡ್ಡಿ ಮನ್ನಾ ಮತ್ತು ಕ್ರೆಡಿಟ್ ಗ್ಯಾರಂಟಿ ಮೂಲಕ ಸುಗ್ಗಿಯ ನಂತರದ ನಿರ್ವಹಣೆ ಮೂಲಸೌಕರ್ಯ ಮತ್ತು ಸಮುದಾಯ ಕೃಷಿ ಸ್ವತ್ತುಗಳಿಗಾಗಿ ಕಾರ್ಯಸಾಧ್ಯವಾದ ಯೋಜನೆಗಳಲ್ಲಿ ಹೂಡಿಕೆ ಮಾಡಲು ಮಧ್ಯಮ-ದೀರ್ಘಾವಧಿಯ ಹಣಕಾಸು ಸಾಲ ಸೌಲಭ್ಯವಾಗಿದೆ.
 • ಇದು ಸಂಪೂರ್ಣವಾಗಿ ಕೇಂದ್ರ ಪುರಸ್ಕೃತ ಯೋಜನೆಯಾಗಿದೆ.
 • ಯೋಜನೆಯ ಅವಧಿ ಹಣಕಾಸು ವರ್ಷ2020 ರಿಂದ FY2029 ರವರೆಗೆ (10 ವರ್ಷಗಳು).
 • ಈ ಯೋಜನೆಯಡಿ, ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳು 1 ಲಕ್ಷ ಕೋಟಿ ರೂ. ಗಳ ಸಾಲವನ್ನು ವಾರ್ಷಿಕ ಶೇಕಡಾ 3ರ ಬಡ್ಡಿ ರಿಯಾಯಿತಿಯೊಂದಿಗೆ ನೀಡುತ್ತವೆ ಮತ್ತು 2 ಕೋಟಿ ರೂ.ವರೆಗಿನ ಸಾಲವನ್ನು CGTMSE ಅಡಿಯಲ್ಲಿ ಕ್ರೆಡಿಟ್ ಗ್ಯಾರಂಟಿ / ಸಾಲ ಖಾತರಿ ವ್ಯಾಪ್ತಿಯಲ್ಲಿ ನೀಡಲಾಗುವುದು.

 

ಅರ್ಹ ಫಲಾನುಭವಿಗಳು:

ಈ ಯೋಜನೆಯಡಿ ಪ್ರಾಥಮಿಕ ಕೃಷಿ ಸಾಲ ಸಂಘಗಳು (PACS), ಮಾರ್ಕೆಟಿಂಗ್ ಸಹಕಾರಿ ಸಂಘಗಳು, ರೈತ ಉತ್ಪಾದಕ ಸಂಸ್ಥೆಗಳು (FPOs), ಸ್ವ-ಸಹಾಯ ಗುಂಪುಗಳು (SHG), ರೈತರು, ಜಂಟಿ ಹೊಣೆಗಾರಿಕೆ ಗುಂಪುಗಳು (JLG) ವಿವಿಧೋದ್ದೇಶ ಸಹಕಾರಿ ಸಂಸ್ಥೆಗಳು, ಕೃಷಿ ಉದ್ಯಮಿಗಳು, ಆರಂಭಿಕ ಉದ್ಯಮಗಳಿಗೆ ಮತ್ತು ಕೇಂದ್ರ / ರಾಜ್ಯ ಏಜೆನ್ಸಿಗಳು ಅಥವಾ ಸ್ಥಳೀಯ ಸಂಸ್ಥೆ ಪ್ರಾಯೋಜಿತ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಯೋಜನೆಗಳು, ಬ್ಯಾಂಕುಗಳಿಂದ ಹಣಕಾಸು ಸೌಲಭ್ಯ ಪಡೆಯಲು ಅರ್ಹವಾಗಿವೆ.

 

ಬಡ್ಡಿ ರಿಯಾಯಿತಿ:

ಈ ಹಣಕಾಸು ಸೌಲಭ್ಯದಡಿಯಲ್ಲಿ, ವರ್ಷಕ್ಕೆ 2 ಕೋಟಿ ರೂ.ಗಳ ಮಿತಿಯವರೆಗಿನ ಎಲ್ಲಾ ರೀತಿಯ ಸಾಲಗಳಿಗೆ 3% ರಂತೆ ಬಡ್ಡಿ ರಿಯಾಯಿತಿ ನೀಡಲಾಗುವುದು. ಈ ರಿಯಾಯಿತಿಯು ಗರಿಷ್ಠ 7 ವರ್ಷಗಳವರೆಗೆ ಲಭ್ಯವಿರುತ್ತದೆ.

 

ಸಾಲ ಖಾತರಿ:

 • ಕ್ರೆಡಿಟ್ ಗ್ಯಾರಂಟಿ ಫಂಡ್ ಟ್ರಸ್ಟ್ ಫಾರ್ ಮೈಕ್ರೋ ಅಂಡ್ ಸ್ಮಾಲ್ ಎಂಟರ್‌ಪ್ರೈಸಸ್ (CGTMSE) ಯೋಜನೆಯಡಿ ಈ ಹಣಕಾಸು ಸೌಲಭ್ಯದ ಮೂಲಕ ಅರ್ಹ ಸಾಲಗಾರರಿಗೆ ಕ್ರೆಡಿಟ್ ಗ್ಯಾರಂಟಿ ವ್ಯಾಪ್ತಿಯು 2 ಕೋಟಿ ರೂ. ವರೆಗೆ ಇರುತ್ತದೆ.
 • ಈ ಸಾಲ ಖಾತರಿ ವ್ಯಾಪ್ತಿಗೆ ಶುಲ್ಕವನ್ನು ಸರ್ಕಾರ  ಪಾವತಿಸಲಿದೆ.
 • ರೈತ ಉತ್ಪಾದಕ ಸಂಸ್ಥೆಗಳ ಅಥವಾ FPOಗಳ ಸಂದರ್ಭದಲ್ಲಿ, ಕೃಷಿ, ಸಹಕಾರ ಮತ್ತು ರೈತರ ಕಲ್ಯಾಣ ಇಲಾಖೆಯ (DACFW) FPO ಪ್ರಚಾರ ಯೋಜನೆಯಡಿ ರಚಿಸಲಾದ ಈ ಸೌಲಭ್ಯದಿಂದ ಸಾಲ ಖಾತರಿಯ ಲಾಭವನ್ನು ಪಡೆಯಬಹುದು.

 

ಕೃಷಿ ಮೂಲಸೌಕರ್ಯ ನಿಧಿಯ’ ನಿರ್ವಹಣೆ:

 •  ‘ಕೃಷಿ ಮೂಲಸೌಕರ್ಯ ನಿಧಿಯನ್ನು’ ಆನ್‌ಲೈನ್ ನಿರ್ವಹಣಾ ಮಾಹಿತಿ ವ್ಯವಸ್ಥೆ (MIS) ವೇದಿಕೆಯ ಮೂಲಕ ನಿರ್ವಹಿಸಲಾಗುತ್ತದೆ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತದೆ.
 • ನೈಜ – ಸಮಯದ ಮೇಲ್ವಿಚಾರಣೆ ಮತ್ತು ಪರಿಣಾಮಕಾರಿ ಪ್ರತಿಕ್ರಿಯೆಯನ್ನು ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ರಾಷ್ಟ್ರೀಯ, ರಾಜ್ಯ ಮತ್ತು ಜಿಲ್ಲಾ ಮಟ್ಟದಲ್ಲಿ ಮಾನಿಟರಿಂಗ್ ಸಮಿತಿಗಳನ್ನು ರಚಿಸಲಾಗುವುದು.

  

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಾಗೃತಿ.

ಆದಿತ್ಯ-ಎಲ್ 1 ಸಪೋರ್ಟ್ ಸೆಲ್:


(Aditya-L1 Support Cell)

ಸಂದರ್ಭ:

‘ಆದಿತ್ಯ-ಎಲ್ 1 ಸಪೋರ್ಟ್ ಸೆಲ್’ ಎನ್ನುವುದು ಸಿಂಗಲ್ ವೆಬ್ ಇಂಟರ್ಫೇಸ್‌ನಲ್ಲಿ ಭಾರತದ ಮೊದಲ ಸೌರ ಬಾಹ್ಯಾಕಾಶ ಕಾರ್ಯಾಚರಣೆಗೆ ಡೇಟಾವನ್ನು ಸಂಗ್ರಹಿಸಲು ಸ್ಥಾಪಿಸಲಾದ ಸಮುದಾಯ ಸೇವಾ ಕೇಂದ್ರವಾಗಿದೆ.

 • ಇದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಮತ್ತು ಆರ್ಯಭಟ ರಿಸರ್ಚ್ ಇನ್ಸ್ಟಿಟ್ಯೂಟ್ ಆಫ್ ಅಬ್ಸರ್ವೇಷನಲ್ ಸೈನ್ಸ್ (ARIIS) ನ ಜಂಟಿ ಪ್ರಯತ್ನವಾಗಿದೆ.
 • ಇದು ವೈಜ್ಞಾನಿಕ ದತ್ತಾಂಶವನ್ನು ವಿಶ್ಲೇಷಿಸಲು ಪ್ರತಿಯೊಬ್ಬ ಆಸಕ್ತ ವ್ಯಕ್ತಿಗೆ ಅನುವು ಮಾಡಿಕೊಡುತ್ತದೆ.

 

ಆದಿತ್ಯ-ಎಲ್ 1 ಯೋಜನೆಯ ಕುರಿತು:

 • ಇದು ಭಾರತದ ಮೊದಲ ಸೌರ ಮಿಷನ್. ಇದನ್ನು ಎಕ್ಸ್‌ಎಲ್ ಕಾನ್ಫಿಗರೇಶನ್‌ನಲ್ಲಿ (XL configuration) ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ಮೂಲಕ ಉಡಾವಣೆ ಮಾಡಲಾಗುವುದು.
 • ಈ ಉಪಗ್ರಹ ಉಡಾವಣಾ ವಾಹನವು ಏಳು ಪೇಲೋಡ್‌ಗಳನ್ನು (instruments) ಹೊಂದಿರುತ್ತದೆ.
 • ಸೂರ್ಯನ ಕರೋನಾ, ಸೌರ ಹೊರಸೂಸುವಿಕೆ, ಸೌರ ಮಾರುತಗಳು ಮತ್ತು ಜ್ವಾಲೆಗಳು ಮತ್ತು ಸೂರ್ಯನ ಕರೋನಲ್ ನಿಂದ ಹೊರಡುವ ಸೌರಶಕ್ತಿ (Coronal Mass Ejections- CMEs) ಗಳನ್ನು ಅಧ್ಯಯನ ಮಾಡುವುದು ಇದರ ಉದ್ದೇಶವಾಗಿದೆ, ಮತ್ತು 24 ಗಂಟೆಗಳ ಕಾಲವೂ ಸೂರ್ಯನ ಚಿತ್ರಗಳನ್ನು ತೆಗೆದುಕೊಳ್ಳಲು ಗಡಿಯಾರದಂತೆ ಬಿಡುವಿಲ್ಲದೆ ಕೆಲಸ ಮಾಡುತ್ತದೆ.

 

ಈ ಕಾರ್ಯಾಚರಣೆಯ ಮಹತ್ವ:

ಆದಿತ್ಯ ಮಿಷನ್‌ ನಿಂದ ಪಡೆಯುವ ದತ್ತಾಂಶವು, ಸೌರ ಬಿರುಗಾಳಿಗಳ ಮೂಲಕ್ಕೆ ಸಂಬಂಧಿಸಿದ ವಿವಿಧ ಮಾದರಿಗಳ ನಡುವಿನ ವ್ಯತ್ಯಾಸವನ್ನು ಸ್ಪಷ್ಟಪಡಿಸಲು, ಸೌರ ಬಿರುಗಾಳಿಗಳು ಹೇಗೆ ವಿಕಸನಗೊಳ್ಳುತ್ತದೆ ಅಥವಾ ಅವುಗಳ ಮೂಲವನ್ನು ಪರೀಕ್ಷಿಸಲು ಮತ್ತು ಸೂರ್ಯನಿಂದ ಭೂಮಿಗೆ ಹೋಗುವ ದೂರದಲ್ಲಿ ಹಾದುಹೋಗುವ ಖಗೋಳ ಮಾರ್ಗ ಗಳ ಬಗ್ಗೆ ತಿಳಿದುಕೊಳ್ಳಲು ಬಹಳ ಸಹಾಯಕವಾಗಲಿದೆ.

ಉಪಗ್ರಹ ಸ್ಥಾಪನೆ:

ಸೂರ್ಯನ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು, ಯಾವುದೇ ಅಡತಡೆ / ಗ್ರಹಣಗಳಿಲ್ಲದೆ ಸೂರ್ಯನನ್ನು ನಿರಂತರವಾಗಿ ಗಮನಿಸುವುದು ಮುಖ್ಯವಾಗಿದೆ, ಆದ್ದರಿಂದ, ಆದಿತ್ಯ-ಎಲ್ 1 ಉಪಗ್ರಹವನ್ನು ಸೂರ್ಯ-ಭೂಮಿಯ ವ್ಯವಸ್ಥೆಯ ಲಗ್ರಾಂಜಿಯನ್ ಪಾಯಿಂಟ್ -1 (Lagrangian point 1) ಸುತ್ತಲಿನ ಹಾಲೋ ಕಕ್ಷೆಯಲ್ಲಿ ಸ್ಥಾಪಿಸಲಾಗುತ್ತದೆ.

 

ಸೂರ್ಯ ಮತ್ತು ಸೌರ ಮಾರುತಗಳನ್ನು ಅಧ್ಯಯನ ಮಾಡಲು ಕಾರಣಗಳೇನು?

 • ನಾವು ಹತ್ತಿರದಿಂದ ಅಧ್ಯಯನ ಮಾಡುವ ಏಕೈಕ ನಕ್ಷತ್ರ ಸೂರ್ಯ. ನಾವು ವಾಸಿಸುವ ಈ ನಕ್ಷತ್ರ ವ್ಯವಸ್ಥೆಯನ್ನು ಅಧ್ಯಯನ ಮಾಡುವುದರಿಂದ, ಇಡೀ ಬ್ರಹ್ಮಾಂಡದ ನಕ್ಷತ್ರಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತದೆ.
 • ಸೂರ್ಯನು ಭೂಮಿಯ ಮೇಲಿನ ಜೀವಕ್ಕೆ ಬೆಳಕು ಮತ್ತು ಶಾಖದ ಮೂಲವಾಗಿದೆ. ನಾವು ಅದರ ಬಗ್ಗೆ ಹೆಚ್ಚು ತಿಳಿದುಕೊಂಡಂತೆ, ಭೂಮಿಯ ಮೇಲಿನ ಜೀವನದ ಅಭಿವೃದ್ಧಿಯು ಹೇಗಾಯಿತು ಎಂಬುದನ್ನು ಹೆಚ್ಚಿನ ಮಟ್ಟದಲ್ಲಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ.
 • ಇದು ಸೌರ ಮಾರುತಗಳ ಮೂಲವಾಗಿದೆ; ಸೂರ್ಯನಿಂದ ಅಯಾನೀಕರಿಸಿದ ಅನಿಲಗಳ ಹರಿವು, ಅಂದರೆ ಈ ಸೌರ ಮಾರುತಗಳ ಹರಿವು ಪ್ರತಿ ಸೆಕೆಂಡಿಗೆ 500 ಕಿ.ಮೀ ಗಿಂತ ಹೆಚ್ಚು ವೇಗದಲ್ಲಿ (ಪ್ರತಿ ಗಂಟೆಗೆ ಒಂದು ಮಿಲಿಯನ್ ಮೈಲಿಗಳ ವೇಗ) ಭೂಮಿಯ ಕಡೆಗೆ ಹರಿಯುತ್ತವೆ.
 • ಸೌರ ಮಾರುತಗಳಲ್ಲಿನ ಅಡಚನೆಗಳು ಭೂಮಿಯ ಕಾಂತಕ್ಷೇತ್ರವನ್ನು ಅಸ್ಥಿರಗೊಳಿಸುತ್ತದೆ ಮತ್ತು ವಿಕಿರಣ ಪಟ್ಟಿಗಳಲ್ಲಿ ಶಕ್ತಿಯನ್ನು ಹೊರಸೂಸುತ್ತದೆ, ಇದು ಭೂಮಿಯ ಸಮೀಪವಿರುವ ಜಾಗದಲ್ಲಿ ಬದಲಾವಣೆಗಳನ್ನು ಉಂಟುಮಾಡುತ್ತದೆ, ಹಾಗೂ ಈ ಜಾಗವನ್ನು ಬಾಹ್ಯಾಕಾಶ ಹವಾಮಾನ ಎಂದೂ ಕರೆಯುತ್ತಾರೆ.
 • ಉಪಗ್ರಹಗಳ ಮೇಲೆ ಪರಿಣಾಮ: ಬಾಹ್ಯಾಕಾಶ ಹವಾಮಾನದಿಂದಾಗಿ ಉಪಗ್ರಹಗಳ ಕಕ್ಷೆಯಲ್ಲಿ ಬದಲಾವಣೆಗಳು ಉಂಟಾಗಬಹುದು, ಅವುಗಳ ಜೀವಿತಾವಧಿಯು ಕಡಿಮೆಯಾಗಬಹುದು ಅಥವಾ ಅವುಗಳ ಮೇಲೆ ಸ್ಥಾಪಿಸಲಾದ ಎಲೆಕ್ಟ್ರಾನಿಕ್ಸ್ ಉಪಕರಣಗಳು ಹಾನಿಗೊಳಗಾಗಬಹುದು. ಬಾಹ್ಯಾಕಾಶ ಹವಾಮಾನ ಉಂಟಾಗಲು  ಕಾರಣಗಳೇನು ಎಂಬ ಮಾಹಿತಿ, ಅದನ್ನು ಹೇಗೆ ಊಹಿಸುವುದು ಮತ್ತು ಆ ಮೂಲಕ ನಾವು ಹೆಚ್ಚಾಗಿ ಅವಲಂಬಿತವಾಗಿರುವ ನಮ್ಮ ಉಪಯುಕ್ತ ಕೃತಕ ಉಪಗ್ರಹಗಳನ್ನು ನಾವು ರಕ್ಷಿಸಬಹುದು .
 • ಸುರಕ್ಷತೆ ಮತ್ತು ಸನ್ನದ್ಧತೆ: ಸೌರ ಮಾರುತಗಳು ಬಾಹ್ಯಾಕಾಶ ಪರಿಸರದಲ್ಲಿ ಪ್ರಾಬಲ್ಯ ಹೊಂದಿವೆ. ನಾವು ನಮ್ಮ ಬಾಹ್ಯಾಕಾಶ ನೌಕೆ ಮತ್ತು ಗಗನಯಾತ್ರಿಗಳನ್ನು ಭೂಮಿಯಿಂದ ದೂರ ಕಳುಹಿಸಿದಾಗ, ಆರಂಭಿಕ ಹಂತದಲ್ಲಿ ಸಮುದ್ರ ಯಾನಿಗಳು ಸಾಗರವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿದಂತೆಯೆ ನಾವು ಬಾಹ್ಯಾಕಾಶ ಪರಿಸರವನ್ನು ಅದೇ ರೀತಿಯಲ್ಲಿ ಅರ್ಥಮಾಡಿಕೊಳ್ಳಬೇಕು.

 

ವಿಷಯಗಳು: ಸಂರಕ್ಷಣೆ ಮತ್ತು ವಿಪತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳು.

ಅಸ್ಸಾಂ ಭೂಕಂಪನ:


(Assam earthquake)

ಸಂದರ್ಭ:

ಇತ್ತೀಚೆಗೆ, ಈಶಾನ್ಯ ಭಾರತದ ಅಸ್ಸಾಂ ರಾಜ್ಯದಲ್ಲಿ ರಿಕ್ಟರ್ ಮಾಪಕದಲ್ಲಿ 6.4 ತೀವ್ರತೆಯ ಭೂಕಂಪನ ಸಂಭವಿಸಿದೆ.

ಭೂಕಂಪದ ಕೇಂದ್ರ ಬಿಂದು(Epicentre):

 • ಪೂರ್ವಭಾವಿ ವಿಶ್ಲೇಷಣೆಯು ಭೂಕಂಪದ ಕೇಂದ್ರಬಿಂದುವು ಹಿಮಾಲಯನ್ ಫ್ರಂಟಲ್ ಥ್ರಸ್ಟ್ ಗೆ (Himalayan Frontal Thrust – HFT) ಹತ್ತಿರ ಇರುವ ಕೋಪಿಲಿ ಫಾಲ್ಟ್ (Kopili Fault) ಎಂದು ಸೂಚಿಸುತ್ತದೆ.
 • ಈ ಪ್ರದೇಶವು ಭೂಕಂಪನದಿಂದ ಅತ್ಯಂತ ಸಕ್ರಿಯವಾಗಿದೆ ಮತ್ತು ಟೆಕ್ಟೋನಿಕ್ ಪ್ಲೇಟ್‌ಗಳ ಘರ್ಷಣೆ ವಲಯಕ್ಕೆ ಸಂಬಂಧಿಸಿದ ಅತ್ಯಧಿಕ ಭೂಕಂಪನ ಅಪಾಯ ವಲಯ V (Seismic Hazard zone V) ಕ್ಕೆ ಸೇರಿದೆ, ಅಲ್ಲಿ ಯುರೇಷಿಯನ್ ಪ್ಲೇಟ್‌ನ ಕೆಳಗೆ ಭಾರತೀಯ ಪ್ಲೇಟ್ ಪ್ರತಿಬಂಧಿಸುತ್ತದೆ.

 

ಏನಿದು ಹಿಮಾಲಯನ್ ಫ್ರಂಟಲ್ ಥ್ರಸ್ಟ್?

ಹಿಮಾಲಯನ್ ಫ್ರಂಟಲ್ ಥ್ರಸ್ಟ್ (HFT) ಅನ್ನು ಮುಖ್ಯ ಫ್ರಂಟಲ್ ಥ್ರಸ್ಟ್ (Main Frontal Thrust -MFT) ಎಂದೂ ಕರೆಯುತ್ತಾರೆ. ಇದು ಭಾರತೀಯ ಮತ್ತು ಯುರೇಷಿಯನ್ ಟೆಕ್ಟೋನಿಕ್ ಪ್ಲೇಟ್ ( ಪ್ಲೇಟ್= ಶೀಲಾರಾಶಿ/ಭೂಫಲಕ) ಗಳ ಗಡಿಯುದ್ದಕ್ಕೂ ಇರುವ ಭೌಗೋಳಿಕ ಸ್ತರಭಂಗ ವಾಗಿದೆ.

 

ಸ್ತರಭಂಗ (fault) ಎಂದರೇನು?

ಭೂ ಸ್ತರಗಳ ವಿಸ್ತರಣೆಯಿಂದ ಅಥವಾ ಸಂಕೋಚನೆ ಯಿಂದ ಉಂಟಾಗುವ ಅಸ್ಥಿರತೆಯಿಂದ ಶಿಲಾಸ್ತರಗಳು ಮುರಿದು ಬಿದ್ದು ಸ್ತರಭಂಗ ಉಂಟಾಗುತ್ತದೆ. ಈ ಭೂಫಲಕದ ಯಾವುದಾದರೊಂದು ಭಾಗವು ಕೆಳಗೆ ಸರಿಯುವುದರಿಂದ ಅಥವಾ ಮೇಲಕ್ಕೆ ಎತ್ತಲ್ಪಡುವುದರಿಂದ ಅಥವಾ ಮತ್ತೊಂದು ಕಡೆಗೆ ತಿರುಗುವುದರಿಂದ ಒಂದು ಬದಿಯಲ್ಲಿ ಕಡಿದಾದ ಏಣುಗಳನ್ನು ಹೊಂದಿದ ಪರ್ವತಗಳು ನಿರ್ಮಾಣವಾಗುತ್ತವೆ. ಈ ವಿದ್ಯಮಾನವನ್ನು ಸ್ತರಭಂಗ ಎನ್ನುವರು.

ಈ ಸಮಯದ ಅವಶ್ಯಕತೆ:

ಭಾರತದ ಈಶಾನ್ಯ ಭಾಗವು ಅತಿ ಹೆಚ್ಚು ಭೂಕಂಪನ ವಲಯದಲ್ಲಿದೆ, ಆದ್ದರಿಂದ ನಾವು ಎಲ್ಲಾ ಹಂತಗಳಲ್ಲಿ ಭೂಕಂಪಗಳಿಗೆ ನಿರಂತರ ಸಿದ್ಧತೆಯನ್ನು ಹೊಂದಿರಬೇಕು. ನಿರ್ದಿಷ್ಟವಾಗಿ ಹೇಳುವುದಾದರೆ, ನಿರ್ದಿಷ್ಟವಾಗಿ ಸ್ತರಭಂಗ ರೇಖೆಯುದ್ದಕ್ಕೂ ಟೆಕ್ಟೋನಿಕ್ ಒತ್ತಡವು ನಿರಂತರವಾಗಿ ಹೆಚ್ಚುತ್ತಿದೆ.

 

ಹಿನ್ನೆಲೆ:

ಐತಿಹಾಸಿಕ ಮತ್ತು ಯಾಂತ್ರಿಕವಾಗಿ ದಾಖಲಾದ ಭೂಕಂಪನ ದತ್ತಾಂಶವು ಈ ಪ್ರದೇಶವು ಹಲವಾರು “ಮಧ್ಯಮದಿಂದ (ದೊಡ್ಡ) ವಿನಾಶಕಾರಿ ಭೂಕಂಪಗಳನ್ನು” ಕಂಡಿದೆ ಎಂದು ಸೂಚಿಸುತ್ತದೆ. ಈ ಪೈಕಿ 1950 ರಲ್ಲಿ ಸ್ವಾತಂತ್ರ್ಯ ದಿನಾಚರಣೆಯಂದು ಸಂಭವಿಸಿದ ದಿ ಗ್ರೇಟ್  ಅಸ್ಸಾಂ-ಟಿಬೆಟ್ ಭೂಕಂಪವು ಅತ್ಯಂತ ತೀವ್ರವಾಗಿತ್ತು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಕೋವಿನ್ (CoWIN):

 • ಭಾರತದಲ್ಲಿ ಕೋವಿಡ್ -19 ವ್ಯಾಕ್ಸಿನೇಷನ್ ಯೋಜನೆ, ಅನುಷ್ಠಾನ, ಮೇಲ್ವಿಚಾರಣೆ ಮತ್ತು ಮೌಲ್ಯಮಾಪನಕ್ಕಾಗಿ ಇದು ಕ್ಲೌಡ್ / ತಂತ್ರಜ್ಞಾನ ಆಧಾರಿತ IT ಪರಿಹಾರವಾಗಿದೆ.
 • Co-WIN ವೇದಿಕೆಯು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಅಡಿಯಲ್ಲಿ ಕಾರ್ಯನಿರ್ವಹಿಸುತ್ತದೆ.

 

ವರುಣ ಸಮರಾಭ್ಯಾಸ 2021:

 •  ಇದು ಭಾರತೀಯ ಮತ್ತು ಫ್ರೆಂಚ್ ನೌಕಾಪಡೆಯ ನಡುವೆ ವಾರ್ಷಿಕವಾಗಿ ನಡೆಯುವ ದ್ವಿಪಕ್ಷೀಯ ನೌಕಾ ಸಮರಾಭ್ಯಾಸವಾಗಿದೆ.
 • ವರುಣ – 2021, ನೌಕಾ ಸಮರಾಭ್ಯಾಸದ 19 ನೇ ಆವೃತ್ತಿಯಾಗಿದ್ದು, ಅರೇಬಿಯನ್ ಸಮುದ್ರದಲ್ಲಿ ನಡೆಯಿತು.

 

ಪೈಥಾನ್ -5: (Python-5)

 •  ಇತ್ತೀಚೆಗೆ, ಗಾಳಿಯಿಂದ ಗಾಳಿಗೆ ಅಥವಾ ಆಕಾಶದಿಂದ ಆಕಾಶಕ್ಕೆ ಚಿಮ್ಮಿಸಬಹುದಾದ / ಉಡಾಯಿಸ ಬಹುದಾದ ಐದನೇ ಪೀಳಿಗೆಯ ಶಸ್ತ್ರಾಸ್ತ್ರ ಕ್ಷಿಪಣಿ ಪೈಥಾನ್ -5 ರ ಪ್ರ ಪ್ರಥಮ ಪ್ರಯೋಗವನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ನಡೆಸಿತು.
 • ಪೈಥಾನ್ ಇಸ್ರೇಲಿ ಶಸ್ತ್ರಾಸ್ತ್ರ ತಯಾರಕ ರಾಫೆಲ್ ಅಡ್ವಾನ್ಸ್ಡ್ ಡಿಫೆನ್ಸ್ ಸಿಸ್ಟಮ್ಸ್ ತಯಾರಿಸಿದ ಗಾಳಿಯಿಂದ ಗಾಳಿಗೆ ಚಿಮ್ಮಿಸಬಹುದಾದ ಕ್ಷಿಪಣಿಗಳ (AAMs)ಕುಟುಂಬಕ್ಕೆ ಸೇರಿದ ಕ್ಷಿಪಣಿಯಾಗಿದೆ.
 • ಪೈಥಾನ್ 5 ಶತ್ರು ವಿಮಾನಗಳನ್ನು ಬಹಳ ಕಡಿಮೆ ದೂರದಲ್ಲಿಯೇ ಗುರುತಿಸಿ ಅವುಗಳೊಡನೆ ದ್ವಂದ್ವ ನಡೆಸಲು ಮತ್ತು ದೃಷ್ಟಿಗೋಚರ ವ್ಯಾಪ್ತಿಯನ್ನು ಮೀರಿ ಶೂಟ್ ಮಾಡಲು ಸಮರ್ಥವಾಗಿದೆ.

 


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos