ಪರಿವಿಡಿ:
ಸಾಮಾನ್ಯ ಅಧ್ಯಯನ ಪತ್ರಿಕೆ 2:
1. ಸಂವಿಧಾನದ 223 ನೇ ವಿಧಿ.
2. ಸಪ್ಲೈ ಚೈನ್ ರೆಸಿಲಿಯನ್ಸ್ ಇನಿಶಿಯೇಟಿವ್
(SCRI).
3. ಜಾಗತಿಕವಾಗಿ ಮಿಲಿಟರಿ ವೆಚ್ಚದಲ್ಲಿನ ಪ್ರವೃತ್ತಿಗಳ ಕುರಿತ ವರದಿ.
4. ಹ್ಯೂಮನ್ ರೈಟ್ಸ್ ವಾಚ್.
ಸಾಮಾನ್ಯ ಅಧ್ಯಯನ ಪತ್ರಿಕೆ 3:
1. ವಿಶಾಲ ಪ್ರದೇಶ ಪ್ರಮಾಣೀಕರಣ ’ಯೋಜನೆ.
2. ‘ಪೈರಸೋಲ್’ ಯೋಜನೆ.
ಸಾಮಾನ್ಯ ಅಧ್ಯಯನ ಪತ್ರಿಕೆ : 2
ವಿಷಯಗಳು:ವಿವಿಧ ಸಾಂವಿಧಾನಿಕ ಹುದ್ದೆಗಳಿಗೆ ನೇಮಕಾತಿ,ವಿವಿಧ ಸಾಂವಿಧಾನಿಕ ಸಂಸ್ಥೆಗಳ ಅಧಿಕಾರಗಳು, ಕಾರ್ಯಗಳು ಮತ್ತು ಜವಾಬ್ದಾರಿಗಳು.
ಸಂವಿಧಾನದ 223 ನೇ ವಿಧಿ:
(Article 223 of the Constitution)
ಸಂದರ್ಭ:
ಭಾರತದ ಸಂವಿಧಾನದ 223 ನೇ ವಿಧಿಯಿಂದ ಪ್ರದತ್ತವಾಗಿರುವ ಅಧಿಕಾರವನ್ನು ಬಳಸಿಕೊಂಡು ಭಾರತದ ರಾಷ್ಟ್ರಪತಿಗಳು,ಕಲ್ಕತ್ತಾ ಹೈಕೋರ್ಟ್‌ನ ಹಿರಿಯ-ನ್ಯಾಯಾಧೀಶರಾದ ನ್ಯಾಯಮೂರ್ತಿ ರಾಜೇಶ್ ಬಿಂದಾಲ್ ಅವರನ್ನು ಅದೇ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಕಚೇರಿಯ ಕರ್ತವ್ಯಗಳನ್ನು ನಿರ್ವಹಿಸಲು ನೇಮಕ ಮಾಡಿದರು.
ಸಂವಿಧಾನದ 223 ನೇ ವಿಧಿ ಕುರಿತು:
“ಹಂಗಾಮಿ ಮುಖ್ಯ ನ್ಯಾಯಮೂರ್ತಿಗಳ ನೇಮಕಾತಿ”
(“Appointment of acting Chief Justice”)
ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರ ಕಚೇರಿ ಖಾಲಿ ಉಳಿದರೆ ಅಥವಾ ಅಂತಹ ಯಾವುದೇ ಮುಖ್ಯ ನ್ಯಾಯಮೂರ್ತಿಗಳು ಗೈರುಹಾಜರಿಯ ಕಾರಣದಿಂದ ನ್ಯಾಯಾಲಯಕ್ಕೆ ಲಭ್ಯವಿಲ್ಲದಿದ್ದರೆ ಅಥವಾ ಅವರ ಕಚೇರಿಯ ಕರ್ತವ್ಯಗಳನ್ನು ನಿರ್ವಹಿಸಲು ಸಾಧ್ಯವಾಗದಿದ್ದಾಗ, ಕಚೇರಿಯ ಕರ್ತವ್ಯಗಳನ್ನು ನಿರ್ವಹಿಸಲು ಸಂಬಂಧಿಸಿದ ಉಚ್ಚ ನ್ಯಾಯಾಲಯದ ಇತರ ನ್ಯಾಯಾಧೀಶರಲ್ಲಿ ಓರ್ವ ನ್ಯಾಯಮೂರ್ತಿಗಳನ್ನು ಮುಖ್ಯ ನ್ಯಾಯಾಧೀಶರ ಕಚೇರಿಯ ಕರ್ತವ್ಯಗಳನ್ನು ನಿರ್ವಹಿಸಲು (ಹಂಗಾಮಿ ಮುಖ್ಯ ನ್ಯಾಯಾಧೀಶರಾಗಿ) ರಾಷ್ಟ್ರಪತಿಗಳು ನೇಮಿಸಬಹುದು.
ವಿಷಯಗಳು: ಭಾರತವನ್ನು ಒಳಗೊಂಡ ದ್ವೀಪಕ್ಷೀಯ ಪ್ರಾದೇಶಿಕ ಮತ್ತು ಜಾಗತಿಕ ಒಕ್ಕೂಟಗಳು ಮತ್ತು ಒಪ್ಪಂದಗಳು ಹಾಗೂ ಅವುಗಳಿಂದ ಭಾರತದ ಹಿತಾಸಕ್ತಿಯ ಮೇಲೆ ಉಂಟಾಗುವ ಪರಿಣಾಮಗಳು.
ಸರಬರಾಜು ಸರಪಳಿ ಸ್ಥಿತಿಸ್ಥಾಪಕತ್ವ ಉಪಕ್ರಮ /
ಸಪ್ಲೈ ಚೈನ್ ರೆಸಿಲಿಯನ್ಸ್ ಇನಿಶಿಯೇಟಿವ್ (SCRI):
(Supply Chain Resilience Initiative)
ಸಂದರ್ಭ:
ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಚೀನಾದ ಪೂರೈಕೆ ಸರಪಳಿಯ ಪ್ರಾಬಲ್ಯವನ್ನು ಎದುರಿಸುವ ಕ್ರಮವಾಗಿ, ಭಾರತ, ಜಪಾನ್ ಮತ್ತು ಆಸ್ಟ್ರೇಲಿಯಾದ ವಾಣಿಜ್ಯ ಮಂತ್ರಿಗಳು ಔಪಚಾರಿಕವಾಗಿ ಸರಬರಾಜು ಸರಪಳಿ ಸ್ಥಿತಿಸ್ಥಾಪಕತ್ವ ಉಪಕ್ರಮವನ್ನು (Supply Chain Resilience Initiative) ಪ್ರಾರಂಭಿಸಿದ್ದಾರೆ.
ಹಾಗೆಂದರೇನು?
- ಸರಬರಾಜು ಸರಪಳಿ ಸ್ಥಿತಿಸ್ಥಾಪಕತ್ವ ಉಪಕ್ರಮ /
ಸಪ್ಲೈ ಚೈನ್ ರೆಸಿಲಿಯನ್ಸ್ ಇನಿಶಿಯೇಟಿವ್ (SCRI) ಈ ಪ್ರದೇಶದಲ್ಲಿ ಬಲವಾದ, ಸುಸ್ಥಿರ, ಸಮತೋಲಿತ ಮತ್ತು ಅಂತರ್ಗತ ಬೆಳವಣಿಗೆಯನ್ನು ಅಂತಿಮವಾಗಿ ಸಾಧಿಸುವ ಉದ್ದೇಶದಿಂದ ಪೂರೈಕೆ ಸರಪಳಿಯಲ್ಲಿ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸುವ ಪರಿಣಾಮಕಾರಿ ಚಕ್ರವನ್ನು ಸೃಷ್ಟಿಸುವ ಗುರಿಯನ್ನು ಹೊಂದಿದೆ.
- ಆರಂಭದಲ್ಲಿ, SCRI ಅಡಿಯಲ್ಲಿ, ಖರೀದಿದಾರ-ಮಾರಾಟಗಾರರನ್ನು ಸಂಘಟಿಸುವತ್ತ ಗಮನ ಹರಿಸಲಾಗುವುದು ನಂತರ ಸಮ್ಮೇಳನ ಕಾರ್ಯಕ್ರಮಗಳು ಪೂರೈಕೆ ಸರಪಳಿ ನಿರ್ಮೂಲನೆ, ಹೂಡಿಕೆ-ಪ್ರೋತ್ಸಾಹಕ ಕಾರ್ಯಕ್ರಮಗಳು ಮತ್ತು ಮಧ್ಯಸ್ಥಗಾರರಲ್ಲಿ ತಮ್ಮ ಪೂರೈಕೆ ಸರಪಳಿಗಳನ್ನು ವೈವಿಧ್ಯಗೊಳಿಸುವ ಸಾಧ್ಯತೆಯನ್ನು ಅನ್ವೇಷಿಸಲು ಉತ್ತಮ ಅಭ್ಯಾಸಗಳನ್ನು ಹಂಚಿಕೊಳ್ಳಲು ವಿನ್ಯಾಸಗೊಳಿಸಲಾಗಿದೆ.
ಈ ಉಪಕ್ರಮದ ಅಡಿಯಲ್ಲಿ ಒಳಗೊಂಡಿರುವ ಸಂಭವನೀಯ ನೀತಿ ಕ್ರಮಗಳು:
- ಡಿಜಿಟಲ್ ತಂತ್ರಜ್ಞಾನದ ವರ್ಧಿತ ಬಳಕೆಯನ್ನು ಬೆಂಬಲಿಸುವುದು ಮತ್ತು
- ವ್ಯಾಪಾರ ಮತ್ತು ಹೂಡಿಕೆಯ ವೈವಿಧ್ಯೀಕರಣಕ್ಕೆ ಒತ್ತು ನೀಡುವುದು.
ಪ್ರಾಮುಖ್ಯತೆ:
- ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಪೂರೈಕೆ ಸರಪಳಿಯನ್ನು ಪುನರಾರಂಭಿಸುವ ನಿರೀಕ್ಷೆಯ ನಡುವೆ ಚೀನಾದ ಮೇಲಿನ ಅವಲಂಬನೆಯನ್ನು ಕಡಿಮೆ ಮಾಡುವುದು ‘ಸಪ್ಲೈ ಚೈನ್ ರೆಸಿಲಿಯನ್ಸ್ ಇನಿಶಿಯೇಟಿವ್’ ನ ಉದ್ದೇಶವಾಗಿದೆ.
- ಆಸಿಯಾನ್-ಜಪಾನ್ ಆರ್ಥಿಕ ಸ್ಥಿತಿಸ್ಥಾಪಕತ್ವ ಕ್ರಿಯಾ ಯೋಜನೆ (Asean-Japan Economic Resilience Action Plan) ಮತ್ತು ಭಾರತ-ಜಪಾನ್ ಕೈಗಾರಿಕಾ ಸ್ಪರ್ಧಾತ್ಮಕತೆ ಸಹಭಾಗಿತ್ವದಂತಹ ಅಸ್ತಿತ್ವದಲ್ಲಿರುವ ದ್ವಿಪಕ್ಷೀಯ ಚೌಕಟ್ಟನ್ನು ನಿರ್ಮಿಸುವುದು ಮತ್ತು ಈ ಪ್ರದೇಶದಲ್ಲಿ ವಿದೇಶಿ ನೇರ ಹೂಡಿಕೆಯನ್ನು ಆಕರ್ಷಿಸುವುದು ಇದರ ಉದ್ದೇಶವಾಗಿದೆ.
ವಿಷಯಗಳು: ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.
ಜಾಗತಿಕವಾಗಿ ಮಿಲಿಟರಿ ವೆಚ್ಚದಲ್ಲಿನ ಪ್ರವೃತ್ತಿಗಳ ಕುರಿತ ವರದಿ:
(Report on trends in global military expenditure)
ಸಂದರ್ಭ:
2020 ರಲ್ಲಿ ಜಾಗತಿಕ ಮಿಲಿಟರಿ ವೆಚ್ಚದ ಪ್ರವೃತ್ತಿಗಳ ಕುರಿತಾದ ವರದಿಯನ್ನು ಸ್ಟಾಕ್‌ಹೋಮ್ ಅಂತರರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ – ಸಿಪ್ರಿ (The Stockholm International Peace Research Institute -SIPRI) ಬಿಡುಗಡೆ ಮಾಡಿದೆ.
ಪ್ರಮುಖ ಸಂಶೋಧನೆಗಳು:
- 2020 ರಲ್ಲಿ, ಮಿಲಿಟರಿ ಉದ್ದೇಶಗಳಿಗಾಗಿ ಅತಿ ಹೆಚ್ಚು ಖರ್ಚು ಮಾಡಿರುವ 5 ದೇಶಗಳೆಂದರೆ, ಕ್ರಮವಾಗಿ ಯುನೈಟೆಡ್ ಸ್ಟೇಟ್ಸ್, ಚೀನಾ, ಭಾರತ, ರಷ್ಯಾ ಮತ್ತು ಯುನೈಟೆಡ್ ಕಿಂಗ್‌ಡಮ್. ಈ ದೇಶಗಳು ಒಟ್ಟು ಜಾಗತಿಕ ಮಿಲಿಟರಿ ವೆಚ್ಚದ 62% ರಷ್ಟು ಪಾಲನ್ನು ಹೊಂದಿವೆ.
- 2019 ರ ವರ್ಷದೊಂದಿಗೆ ಹೋಲಿಸಿ ನೋಡಿದರು ಸಹ ಸಾಂಕ್ರಾಮಿಕ ವರ್ಷದ ಸಮಯದಲ್ಲಿ ಕೂಡ ವಿಶ್ವದಲ್ಲಿ ಮಿಲಿಟರಿಗಾಗಿ ಅತಿ ಹೆಚ್ಚು ಖರ್ಚು ಮಾಡುವ ದೇಶಗಳು ಹೆಚ್ಚಿನ ಮಿಲಿಟರಿ ವೆಚ್ಚವನ್ನು ಮಾಡಿವೆ.
- 2020 ರಲ್ಲಿ ಯುಎಸ್ ಒಟ್ಟು $ 778 ಬಿಲಿಯನ್, ಚೀನಾ $ 252 ಬಿಲಿಯನ್ ಮತ್ತು ಭಾರತ $ 72.9 ಬಿಲಿಯನ್ ಮಿಲಿಟರಿಗಾಗಿ ಖರ್ಚು ಮಾಡಿವೆ.
- ಒಟ್ಟಾರೆಯಾಗಿ, ಜಾಗತಿಕ ಮಿಲಿಟರಿ ವೆಚ್ಚವು ಕಳೆದ ವರ್ಷ $ 1981 ಬಿಲಿಯನ್ಗೆ ಏರಿತು, ಇದು 2019 ರ ಮಿಲಿಟರಿ ವೆಚ್ಚಕ್ಕಿಂತ 2.6 ಶೇಕಡಾ ಹೆಚ್ಚಾಗಿದೆ.
SIPRI ಕುರಿತು:
- ಸ್ವೀಡನ್ ಮೂಲದ ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್ಸ್ಟಿಟ್ಯೂಟ್ (SIPRI) ಒಂದು ಸ್ವತಂತ್ರ ಅಂತರರಾಷ್ಟ್ರೀಯ ಸಂಸ್ಥೆಯಾಗಿದ್ದು, ಯುದ್ಧ ಮತ್ತು ಸಂಘರ್ಷ, ಯುದ್ಧಸಾಮಗ್ರಿಗಳು, ಶಸ್ತ್ರಾಸ್ತ್ರ ನಿಯಂತ್ರಣ ಮತ್ತು ನಿಶ್ಯಸ್ತ್ರೀಕರಣ ಕ್ಷೇತ್ರಗಳಲ್ಲಿ ಸಂಶೋಧನೆಗೆ ಮೀಸಲಾಗಿರುತ್ತದೆ.
- 1966 ರಲ್ಲಿ, ಇದನ್ನು ಸ್ವೀಡಿಷ್ ಸಂಸತ್ತಿನ ನಿರ್ಣಯದ ಆಧಾರದ ಮೇಲೆ ಸ್ಥಾಪಿಸಲಾಯಿತು ಮತ್ತು ಸ್ವೀಡಿಷ್ ಸರ್ಕಾರದಿಂದ ವಾರ್ಷಿಕ ಅನುದಾನದ ರೂಪದಲ್ಲಿ ಅದರ ಒಟ್ಟು ನಿಧಿಯ ಬಹುಪಾಲು ಭಾಗವನ್ನು ಪಡೆಯುತ್ತದೆ.
ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.
ಹ್ಯೂಮನ್ ರೈಟ್ಸ್ ವಾಚ್ / ಮಾನವ ಹಕ್ಕುಗಳ ಕಾವಲು ಸಂಸ್ಥೆ:
(Human Rights Watch)
ಸಂದರ್ಭ:
ಪ್ಯಾಲೆಸ್ಟೀನಿಯಾದ ಮತ್ತು ಅದರ ಅರಬ್ ಜನಸಂಖ್ಯೆಯ ಮೇಲೆ “ಯಹೂದಿ ಪ್ರಾಬಲ್ಯ” ವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಇಸ್ರೇಲ್ ನಿಂದ “ವರ್ಣಭೇದ ನೀತಿ”ಯ ಅಪರಾಧಗಳನ್ನು ಮಾಡಲಾಗುತ್ತಿದೆ ಎಂದು ಇತ್ತೀಚೆಗೆ ಅಂತಾರಾಷ್ಟ್ರೀಯ ಸರ್ಕಾರೇತರ ಸಂಸ್ಥೆ ‘ಹ್ಯೂಮನ್ ರೈಟ್ಸ್ ವಾಚ್’ ಹೇಳಿದೆ.
- ಸಂಚಾರದ ಮೇಲಿನ ನಿರ್ಬಂಧಗಳು, ಭೂ ಮುಟ್ಟುಗೋಲು, ಬಲವಂತದ ಜನಸಂಖ್ಯೆ ವರ್ಗಾವಣೆ, ವಾಸಮಾಡುವ ಹಕ್ಕುಗಳ ನಿರಾಕರಣೆ ಮತ್ತು ನಾಗರಿಕ ಹಕ್ಕುಗಳ ಅಮಾನತು ಒಳಗೊಂಡಂತೆ ಹಲವಾರು ಕ್ರಮಗಳನ್ನು ಹ್ಯೂಮನ್ ರೈಟ್ಸ್ ವಾಚ್ ಸೂಚಿಸಿದೆ.
- ಜೋರ್ಡಾನ್ ನದಿ ಮತ್ತು ಮೆಡಿಟರೇನಿಯನ್ ಸಮುದ್ರದ ನಡುವಿನ ಪ್ರದೇಶವು ಇಸ್ರೇಲಿ ಸರ್ಕಾರದ ಏಕಮಾತ್ರ ನಿಯಂತ್ರಣದಲ್ಲಿದೆ ಎಂದು ಅದರ ವರದಿಯು ಕಂಡುಹಿಡಿದಿದೆ.
ಇಸ್ರೇಲ್ ನ ಪ್ರತಿಕ್ರಿಯೆ ಏನು?
‘ಹ್ಯೂಮನ್ ರೈಟ್ಸ್ ವಾಚ್’ (HRW) ಆರೋಪವನ್ನು ‘ಪೂರ್ವಗ್ರಹಪೀಡಿತ ಮತ್ತು ಸುಳ್ಳು’ ಎಂದು ಇಸ್ರೇಲ್ ತಳ್ಳಿಹಾಕಿದೆ, ಇದು ‘ದೀರ್ಘಕಾಲದವರೆಗೆ ಇಸ್ರೇಲ್ ವಿರೋಧಿ ಕಾರ್ಯಸೂಚಿಯನ್ನು’ ಹೊಂದಿದೆ ಎಂದು ಆರೋಪಿಸಿದೆ. ಪ್ರಸ್ತುತ, ಇಸ್ರೇಲ್ ವಿರುದ್ಧದ ಯುದ್ಧ ಅಪರಾಧಗಳ ಆರೋಪಗಳನ್ನು ಅಂತರರಾಷ್ಟ್ರೀಯ ಕ್ರಿಮಿನಲ್ ಕೋರ್ಟ್ (ICC) ತನಿಖೆ ನಡೆಸುತ್ತಿದೆ.
ಮಾನವ ಹಕ್ಕುಗಳ ಕಾವಲು ಸಂಸ್ಥೆಯ ಕುರಿತು:
(Human Rights Watch)
- 1978 ರಲ್ಲಿ ಸ್ಥಾಪನೆಯಾದ ಇದು ಒಂದು ಸರ್ಕಾರೇತರ ಸಂಸ್ಥೆಯಾಗಿದೆ. ಇದು ನ್ಯೂಯಾರ್ಕ್ ನಗರದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿದೆ ಮತ್ತು ಮಾನವ ಹಕ್ಕುಗಳ ಕುರಿತ ಸಂಶೋಧನೆಯನ್ನು ಬೆಂಬಲಿಸುತ್ತದೆ ಮತ್ತು ವಕಾಲತ್ತುಗಳನ್ನು ವಹಿಸುತ್ತದೆ.
- ಈ ಗುಂಪು ಮಾನವ ಹಕ್ಕುಗಳನ್ನು ಗೌರವಿಸಲು ವಿವಿಧ ಸರ್ಕಾರಗಳು, ನೀತಿ ನಿರೂಪಕರು, ಕಂಪನಿಗಳು ಮತ್ತು ಮಾನವ ಹಕ್ಕುಗಳನ್ನು ಖಾಸಗಿಯಾಗಿ ಉಲ್ಲಂಘಿಸುವವರ ಮೇಲೆ ಒತ್ತಡ ಹೇರುತ್ತದೆ, ಮತ್ತು ಈ ಗುಂಪು ಆಗಾಗ್ಗೆ, ನಿರಾಶ್ರಿತರು, ಮಕ್ಕಳು, ವಲಸಿಗರು ಮತ್ತು ರಾಜಕೀಯ ಕೈದಿಗಳ ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತದೆ.
- ಪ್ರಧಾನ ಕಾರ್ಯಾಲಯ :ನ್ಯೂಯಾರ್ಕ್.
ಸಾಮಾನ್ಯ ಅಧ್ಯಯನ ಪತ್ರಿಕೆ : 2
ವಿಷಯಗಳು:ದೇಶದ ವಿವಿಧ ಭಾಗಗಳಲ್ಲಿ ಪ್ರಮುಖ ಬೆಳೆಗಳು, ಬೆಳೆ ಮಾದರಿಗಳು, ವಿವಿಧ ರೀತಿಯ ನೀರಾವರಿ ಮತ್ತು ನೀರಾವರಿ ವ್ಯವಸ್ಥೆಗಳ ಸಂಗ್ರಹಣೆ, ಕೃಷಿ ಉತ್ಪನ್ನಗಳ ಸಾಗಣೆ ಮತ್ತು ಮಾರುಕಟ್ಟೆ ಮತ್ತು ಸಮಸ್ಯೆಗಳು ಮತ್ತು ಸಂಬಂಧಿತ ನಿರ್ಬಂಧಗಳು; ರೈತರ ನೆರವಿನಲ್ಲಿ ಇ-ತಂತ್ರಜ್ಞಾನ.
‘ವಿಶಾಲ ಪ್ರದೇಶ ಪ್ರಮಾಣೀಕರಣ ’ಯೋಜನೆ:
(Large Area Certification’ scheme)
ಸಂದರ್ಭ:
ಕೇಂದ್ರಾಡಳಿತ ಪ್ರದೇಶವಾದ ಅಂಡಮಾನ್ ಮತ್ತು ನಿಕೋಬಾರ್ ನ 14,491 ಹೆಕ್ಟೇರ್ ಪ್ರದೇಶವು ವಿಶಾಲ ಪ್ರದೇಶ ಪ್ರಮಾಣೀಕರಣ ಯೋಜನೆಯಡಿಯಲ್ಲಿ ‘ಸಾವಯವ ಪ್ರಮಾಣೀಕರಣ’ (large contiguous territory) ಸಾಧಿಸಿದ ಮೊದಲ ದೊಡ್ಡ ಪ್ರದೇಶವಾಗಿದೆ.
‘ವಿಶಾಲ ಪ್ರದೇಶ ಪ್ರಮಾಣೀಕರಣ ಯೋಜನೆ’ ಬಗ್ಗೆ:
- ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ತನ್ನ ಪ್ರಮುಖ ಯೋಜನೆಯಾದ ‘ಪರಂಪರಾಗತ ಕೃಷಿ ವಿಕಾಸ ಯೋಜನೆ’ (PKVY) ಯ ಅಡಿಯಲ್ಲಿ, ಈ ಸಂಭಾವ್ಯ ಪ್ರದೇಶಗಳನ್ನು ಬಳಸಲು ಅನನ್ಯ ವೇಗವರ್ಧಿತ ಪ್ರಮಾಣೀಕರಣ ಕಾರ್ಯಕ್ರಮ ‘ವಿಶಾಲ ಪ್ರದೇಶ ಪ್ರಮಾಣೀಕರಣ’ (Large Area Certification) ಅನ್ನು ಪ್ರಾರಂಭಿಸಿದೆ.
- LAC ಅಡಿಯಲ್ಲಿ, ಈ ಪ್ರದೇಶದ ಪ್ರತಿಯೊಂದು ಹಳ್ಳಿಯನ್ನು ಒಂದು ಕ್ಲಸ್ಟರ್ / ಗುಂಪು ಎಂದು ಪರಿಗಣಿಸಲಾಗುತ್ತದೆ.
- ತಮ್ಮದೇ ಆದ ಖಾಸಗಿ ಕೃಷಿಭೂಮಿ ಮತ್ತು ಜಾನುವಾರುಗಳನ್ನು ಹೊಂದಿರುವ ಎಲ್ಲಾ ರೈತರು ಪ್ರಮಾಣಿತ ಅವಶ್ಯಕತೆಗಳನ್ನು ಅನುಸರಿಸಬೇಕಾಗುತ್ತದೆ / ಪ್ರಮಾಣಿತ ಅವಶ್ಯಕತೆಗಳಿಗೆ ಬದ್ಧವಾಗಿರಬೇಕಾಗುತ್ತದೆ ಮತ್ತು ಪರಿಶೀಲಿಸಿದ ನಂತರ ಒಮ್ಮೆ ಪ್ರಮಾಣೀಕರಿಸಿದ ಮೇಲೆ ಪರಿವರ್ತನೆಯ ಅಡಿಯಲ್ಲಿ ಹೋಗಬೇಕಾದ ಅಗತ್ಯವಿಲ್ಲ ವಾದ್ದರಿಂದ ಬದಲಾವಣೆಯ ಅವಧಿಯವರೆಗೆ ಕಾಯಬೇಕಾಗಿಲ್ಲ.
- PGS-ಇಂಡಿಯಾದ ಪ್ರಕಾರ, ಪೀರ್ ಮೌಲ್ಯಮಾಪನಗಳ ಪ್ರಕ್ರಿಯೆಯಿಂದ ವಾರ್ಷಿಕ ಪರಿಶೀಲನೆಯ ಮೂಲಕ ಪ್ರಮಾಣೀಕರಣವನ್ನು ವಾರ್ಷಿಕ ಆಧಾರದ ಮೇಲೆ ನವೀಕರಿಸಲಾಗುತ್ತದೆ.
‘ವಿಶಾಲ ಪ್ರದೇಶ ಪ್ರಮಾಣೀಕರಣ ’ಯೋಜನೆಯ ಪ್ರಯೋಜನಗಳು:
- ಸಾವಯವ ಉತ್ಪಾದನೆಯ ಪ್ರಮಾಣಿತ ನಿಯಮದಡಿಯಲ್ಲಿ, ರಾಸಾಯನಿಕ ಬಳಸಿದ ಪ್ರದೇಶಗಳು ಸಾವಯವವಾಗಿ ಅರ್ಹತೆ ಪಡೆಯಲು ಕನಿಷ್ಠ 2-3 ವರ್ಷಗಳ ಪರಿವರ್ತನೆಯ ಅವಧಿಗೆ ಒಳಗಾಗಬೇಕಾಗುತ್ತದೆ.
- ಈ ಅವಧಿಯಲ್ಲಿ, ರೈತರು ಪ್ರಮಾಣಿತ ಸಾವಯವ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಳ್ಳಬೇಕು ಮತ್ತು ಪ್ರಮಾಣೀಕರಣ ಪ್ರಕ್ರಿಯೆಯಲ್ಲಿ ತಮ್ಮ ಹೊಲಗಳನ್ನು ನಿರ್ವಹಿಸಬೇಕು. ಯಶಸ್ವಿಯಾಗಿ ಪೂರ್ಣಗೊಂಡ ನಂತರ, ಅಂತಹ ಹೊಲಗಳನ್ನು 2-3 ವರ್ಷಗಳ ನಂತರ ಸಾವಯವ ಎಂದು ಪ್ರಮಾಣೀಕರಿಸಬಹುದು.
- ಪ್ರಮಾಣೀಕರಣ ಪ್ರಕ್ರಿಯೆಗೆ ಪ್ರಮಾಣೀಕರಣ ಅಧಿಕಾರಿಗಳಿಂದ ವಿವರವಾದ ದಸ್ತಾವೇಜನ್ನು ಮತ್ತು ಕಾಲಕಾಲಕ್ಕೆ ಅಥವಾ ಆವರ್ತಕ ಪರಿಶೀಲನೆಯ ಅಗತ್ಯವಿರುತ್ತದೆ.
- LAC ಅಡಿಯಲ್ಲಿ ಅಗತ್ಯವಿರುವ ಕಾರ್ಯವಿಧಾನವು ತುಂಬಾ ಸರಳವಾಗಿದೆ ಮತ್ತು ಪ್ರದೇಶವನ್ನು ತಕ್ಷಣವೇ ಪ್ರಮಾಣೀಕರಿಸಬಹುದು.
ವಿಷಯಗಳು: ಸಂರಕ್ಷಣೆ ಮತ್ತು ಜೀವವೈವಿಧ್ಯತೆಗೆ ಸಂಬಂಧಿತ ಸಮಸ್ಯೆಗಳು.
‘ಪೈರಸೋಲ್’ ಯೋಜನೆ:
(Project ‘Pyrasol’)
ಸಂದರ್ಭ:
ಇತ್ತೀಚೆಗೆ, ಚೆನ್ನೈನಲ್ಲಿ, ಇಂಟಿಗ್ರೇಟೆಡ್ ಸೋಲಾರ್ ಡ್ರೈಯರ್ ಮತ್ತು ಪೈರೋಲಿಸಿಸ್ ಪೈಲಟ್ (Integrated Solar Dryer and Pyrolysis pilot) ಸ್ಥಾವರಕ್ಕೆ ಶಂಕುಸ್ಥಾಪನೆ ನೆರವೇರಿಸಲಾಯಿತು.
- ಪೈಲಟ್, ಇಂಡೋ-ಜರ್ಮನ್ ಯೋಜನೆಯ ‘ಪೈರಾಸೋಲ್’ ನ ಭಾಗವಾಗಿದೆ, ಇದನ್ನು ಸ್ಮಾರ್ಟ್ ಸಿಟಿಗಳ ನಗರ ಸಾವಯವ ತ್ಯಾಜ್ಯವನ್ನು ಬಯೋಚಾರ್ ಮತ್ತು ಶಕ್ತಿಯನ್ನಾಗಿ ಪರಿವರ್ತಿಸಲು ಪ್ರಾರಂಭಿಸಲಾಗಿದೆ.
- ಈ ‘ಪೈರಸೋಲ್’ ಯೋಜನೆಯನ್ನು CSIR-CLRI ಗೆ ಇಂಡೋ-ಜರ್ಮನ್ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರವು ನೀಡಿತು.
- ಈ ಯೋಜನೆಯು ಅಂತಿಮವಾಗಿ ಇಂಧನ ಚೇತರಿಕೆ, ಇಂಗಾಲದ ಅನುಕ್ರಮ ಮತ್ತು ಪರಿಸರ ಸುಧಾರಣೆಗೆ ಸಂಬಂಧಿಸಿದ ಹೆಚ್ಚು ಉಪಯುಕ್ತವಾದ ಬಯೋಚಾರ್ ಮತ್ತು ನೈರ್ಮಲ್ಯ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸುತ್ತದೆ, ಜೊತೆಗೆ ಭಾರತೀಯ ಸ್ಮಾರ್ಟ್‌ನಗರಗಳ ‘ಫ್ಯಾಬ್ರಿಕ್ಸ್ ಆರ್ಗ್ಯಾನಿಕ್ ವೇಸ್ಟ್’ (FOW) ಮತ್ತು ‘ಚರಂಡಿ ಕೆಸರು’ (SS) ಜಂಟಿ ಸಂಸ್ಕರಣೆಗಾಗಿ ತಂತ್ರಜ್ಞಾನ ಅಭಿವೃದ್ಧಿಗೆ ಕಾರಣವಾಗಲಿದೆ.
ಪೈರಸೋಲ್ ಯೋಜನೆ ಕುರಿತು:
ಈ ಯೋಜನೆಯು ನಗರ ತ್ಯಾಜ್ಯ ಸಂಗ್ರಹ, ಸಂಸ್ಕರಣೆ ಮತ್ತು ವಿಲೇವಾರಿ ವ್ಯವಸ್ಥೆಗಳನ್ನು ಭಾರತೀಯ ಸ್ಮಾರ್ಟ್ ನಗರಗಳಲ್ಲಿ ಮತ್ತು ಇತರ ನಗರ ಕೇಂದ್ರಗಳಲ್ಲಿ ಸಮಗ್ರ ಮತ್ತು ಸಂವಾದಾತ್ಮಕ ವಿಧಾನದೊಂದಿಗೆ ನಿರ್ವಹಿಸುವುದು ಮತ್ತು ಸಂಘಟಿಸುವುದರ ಕಡೆಗೆ ಗಮನ ಕೇಂದ್ರೀಕರಿಸುತ್ತದೆ.
ಇಂಡೋ-ಜರ್ಮನ್ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದ ಬಗ್ಗೆ (IGSTC):
- ಇಂಡೋ-ಜರ್ಮನ್ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರವನ್ನು (IGSTC) ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ (DST), ಭಾರತ ಸರ್ಕಾರ ಮತ್ತು ಜರ್ಮನ್ ಸರ್ಕಾರ ಸ್ಥಾಪಿಸಿದವು.
- ಇಂಡೋ-ಜರ್ಮನ್ ಸಂಶೋಧನೆ ಮತ್ತು ತಂತ್ರಜ್ಞಾನ ನೆಟ್‌ವರ್ಕಿಂಗ್ ಬಳಸಿ ಅನ್ವಯಿಕ ಸಂಶೋಧನೆ ಮತ್ತು ತಂತ್ರಜ್ಞಾನ ಅಭಿವೃದ್ಧಿಗೆ ಅನುಕೂಲಕರವಾಗಿಸುವುದು ಮತ್ತು ಉದ್ಯಮದಲ್ಲಿ ಭಾಗವಹಿಸುವಿಕೆಗೆ ಒತ್ತು ನೀಡುವುದು ಇದರ ಉದ್ದೇಶ.
IGSTC ತನ್ನ ಪ್ರಮುಖ ಕಾರ್ಯಕ್ರಮ ‘2 + 2 ಯೋಜನೆಗಳು’ ಮೂಲಕ, ಭಾರತ ಮತ್ತು ಜರ್ಮನಿಯಿಂದ ಸಂಶೋಧನೆ ಮತ್ತು ಶೈಕ್ಷಣಿಕ ಸಂಸ್ಥೆಗಳು ಮತ್ತು ಸಾರ್ವಜನಿಕ / ಖಾಸಗಿ ಕೈಗಾರಿಕೆಗಳ ಸಾಮರ್ಥ್ಯವನ್ನು ಸಂಯೋಜಿಸುವ ಮೂಲಕ ನಾವೀನ್ಯತೆ-ಕೇಂದ್ರಿತ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ವೇಗವರ್ಧಿಸುತ್ತದೆ.