Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 26ನೇ ಏಪ್ರಿಲ್ 2021

 

ಪರಿವಿಡಿ:

ಸಾಮಾನ್ಯ ಅಧ್ಯಯನ ಪತ್ರಿಕೆ 1:

1. 1915 ರಲ್ಲಿ ಅರ್ಮೇನಿಯನ್ನರಿಗೆ ಏನಾಯಿತು?

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಪಿ.ಎಂ ಕೇರ್ಸ್ ನಿಧಿ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಸೈಬರ್ ಅಪರಾಧ ಸ್ವಯಂಸೇವಕ ಕಾರ್ಯಕ್ರಮ.

2. ಕಡ್ಡಾಯ ಪರವಾನಗಿ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಡೀಪ್ ಟೈಮ್ ಪ್ರಾಜೆಕ್ಟ್.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಜಾಗತಿಕ ಇತಿಹಾಸ.

1915 ರಲ್ಲಿ ಅರ್ಮೇನಿಯನ್ನರಿಗೆ ಏನಾಯಿತು?


(What happened to Armenians in 1915?)

 

ಸಂದರ್ಭ:

ಇತ್ತೀಚೆಗೆ, ಯುಎಸ್ ಅಧ್ಯಕ್ಷ ಜೋ ಬೈಡನ್ ರವರು 1915-16 ರಲ್ಲಿ ಒಟ್ಟೋಮನ್ ಟರ್ಕ್ ರಿಂದ ಆದ ಅರ್ಮೇನಿಯನ್ನರ ಸಾಮೂಹಿಕ ಹತ್ಯೆಗಳನ್ನು “ನರಮೇಧದ ಕೃತ್ಯಗಳು” ಎಂದು ಅಧಿಕೃತವಾಗಿ ಗುರುತಿಸಿದ್ದಾರೆ.

 

ಹಿನ್ನೆಲೆ:

ಮೊದಲನೆಯ ಮಹಾಯುದ್ಧದ ಆರಂಭಿಕ ಹಂತದಲ್ಲಿ, ಒಟ್ಟೋಮನ್ ಸಾಮ್ರಾಜ್ಯದ ಭೂಪ್ರದೇಶದೊಳಗೆ ಸುಮಾರು  1.5 ಮಿಲಿಯನ್ ಅರ್ಮೇನಿಯನ್ನರು ಕೊಲ್ಲಲ್ಪಟ್ಟರು ಎಂದು ಅಂದಾಜಿಸಲಾಗಿದೆ.

 

ಟರ್ಕಿಯ ಪ್ರತಿಕ್ರಿಯೆ:

ಅರ್ಮೇನಿಯನ್ನರ ವಿರುದ್ಧ  ಆದ ದೌರ್ಜನ್ಯವನ್ನು ಟರ್ಕಿ ಅಂಗೀಕರಿಸಿದೆ, ಆದರೆ ಇದು ಈ ಘಟನೆಗಳನ್ನು ‘ನರಮೇಧ’ ಎಂದು ಪರಿಗಣಿಸಲು ನಿರಾಕರಿಸುತ್ತದೆ (ಇದು ಕಾನೂನು ತೊಡಕುಗಳನ್ನು ಹೊಂದಿರುತ್ತದೆ) ಮತ್ತು 1.5 ದಶಲಕ್ಷ ಕೊಲೆಗಳ ಅಂದಾಜನ್ನು ಸಹ ಪ್ರಶ್ನಿಸುತ್ತದೆ.

 • ಟರ್ಕಿಯ ವಿದೇಶಾಂಗ ಸಚಿವಾಲಯವು ಯುಎಸ್ ಅಧ್ಯಕ್ಷ ಬೈಡನ್ ಅವರು ಈ ಸಂಬಂಧ ನೀಡಿದ ಹೇಳಿಕೆಯ ಬಗ್ಗೆ ಬಲವಾದ ವಿರೋಧವನ್ನು ವ್ಯಕ್ತಪಡಿಸಿದೆ, ಇದಕ್ಕೆ “ಯಾವುದೇ ವಿದ್ವತ್ಪೂರ್ಣ ಅಥವಾ ಕಾನೂನು ಆಧಾರಗಳಿಲ್ಲ, ಅಥವಾ ಅದನ್ನು ಸಾಬೀತುಪಡಿಸಲು ಯಾವುದೇ ಪುರಾವೆಗಳಿಲ್ಲ” ಎಂದು ಹೇಳಿದೆ.

 

ಅರ್ಮೇನಿಯನ್ ನರಮೇಧದ ಹಿಂದಿನ ಕಾರಣಗಳು ಯಾವುವು?

 • 19 ನೇ ಶತಮಾನದ ಉತ್ತರಾರ್ಧದಲ್ಲಿ ಮತ್ತು 20 ನೇ ಶತಮಾನದ ಆರಂಭದಲ್ಲಿ ಅರ್ಮೇನಿಯನ್ನರು ಪ್ರಮುಖ ಪಡೆಗಳ ನಡುವಿನ ಅಧಿಕಾರಕ್ಕಾಗಿ / ಗದ್ದುಗೆಗಾಗಿ ನಡೆದ ಹೋರಾಟದ ಬಲಿಪಶುಗಳಾಗಿದ್ದರು.
 • 19 ನೇ ಶತಮಾನದಲ್ಲಿ ಒಟ್ಟೋಮನ್ ಸಾಮ್ರಾಜ್ಯವು ಕ್ಷೀಣಿಸುತ್ತಿದ್ದಾಗ, ಕಾನ್‌ಸ್ಟಾಂಟಿನೋಪಲ್‌ನಲ್ಲಿ ಆಳ್ವಿಕೆ ನಡೆಸಿದವರು ಅರ್ಮೇನಿಯನ್ನರನ್ನು ‘ದೇಶದ್ರೋಹಿಗಳ ಗುಂಪು’ ಅಥವಾ ಐದನೇ ಅಂಕಣವೆಂದು (fifth column) ಪರಿಗಣಿಸಿದರು.
 • 1877-78ರ ರುಸ್ಸೋ-ಟರ್ಕಿಶ್ ಯುದ್ಧದಲ್ಲಿ ತುರ್ಕರು ತಮ್ಮ ಹೆಚ್ಚಿನ ಪ್ರದೇಶವನ್ನು ಕಳೆದುಕೊಂಡರು, ಆ ನಂತರ ಅರ್ಮೇನಿಯನ್ನರ ವಿರುದ್ಧ ಅವರ ಅಸಮಾಧಾನ ಹೆಚ್ಚಾಯಿತು.
 • ಯುದ್ಧಾನಂತರದ ಬರ್ಲಿನ್ ಒಪ್ಪಂದದಲ್ಲಿ, ಒಟ್ಟೋಮನ್ ಸಾಮ್ರಾಜ್ಯದ ಮೇಲೆ ಪ್ರಬಲ ಶಕ್ತಿಗಳು ಹಲವಾರು ಷರತ್ತುಗಳನ್ನು ವಿಧಿಸಿದವು, ಇದರ ಅಡಿಯಲ್ಲಿ, ಅರ್ಮೇನಿಯನ್ ಜನರು ವಾಸಿಸುವ ಪ್ರಾಂತ್ಯಗಳಲ್ಲಿ ಸುಧಾರಣೆಗಳನ್ನು ಜಾರಿಗೆ ತರಲು ಸುಲ್ತಾನ್ ಅಬ್ದುಲ್ ಹಮಿದ್ II (Sultan Abdülhamid II ) ಅವರ ಮೇಲೆ ಒತ್ತಡ ಹೇರಲಾಯಿತು. ಮತ್ತು ಅರ್ಮೇನಿಯನ್ನರಿಗೆ ಸರ್ಕಾಸಿಯನ್ನರು (Circassians) ಮತ್ತು ಕುರ್ದಿಗಳಿಂದ ರಕ್ಷಣೆ ಖಾತರಿಪಡಿಸುವಂತೆ ಒತ್ತಾಯಿಸಲಾಯಿತು.
 • ಅರ್ಮೇನಿಯನ್ನರು ಮತ್ತು ಇತರ ಶತ್ರು ರಾಷ್ಟ್ರಗಳ ನಡುವಿನ, ವಿಶೇಷವಾಗಿ ರಷ್ಯಾ ನಡುವಿನ ಸಂಬಂಧವನ್ನು ಬಲಪಡಿಸುವ ಸಂಕೇತವಾಗಿ ಸುಲ್ತಾನ್ ಇದನ್ನು ನೋಡಿದರು.
 • ನಂತರ, ಅಕ್ಟೋಬರ್ 1914 ರಲ್ಲಿ, ಟರ್ಕಿ ಜರ್ಮನಿಯ ಕೂಟವನ್ನು ಸೇರುವ ಮೂಲಕ ಮೊದಲ ವಿಶ್ವ ಯುದ್ಧದಲ್ಲಿ ಭಾಗವಹಿಸಿತು. ಜನವರಿ 1915 ರಲ್ಲಿ, ಸಾರಿಕಾಮಿಶ್ (Sarikamish) ಕದನದಲ್ಲಿ, ಒಟ್ಟೋಮನ್ನರು ರಷ್ಯಾದ ಸೈನ್ಯದಿಂದ ಹೀನಾಯ ಸೋಲನ್ನು ಅನುಭವಿಸಿದರು.
 • ಈ ಸೋಲಿಗೆ ಅರ್ಮೇನಿಯನ್ನರು ಎಸಗಿದ“ದ್ರೋಹ” ಅಥವಾ “ವಿಶ್ವಾಸಘಾತುಕತನ” ವೇ ಕಾರಣ ಎಂದು ತುರ್ಕರು ಆರೋಪಿಸಿದರು.
 • ತರುವಾಯ, ಅರ್ಮೇನಿಯನ್ನರ ಮೇಲೆ ಸರಣಿ ದಾಳಿಗಳು ಪ್ರಾರಂಭವಾದವು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.

 ಪಿ.ಎಂ ಕೇರ್ಸ್ ನಿಧಿ:


(PM CARES)

 ಸಂದರ್ಭ:

ಇತ್ತೀಚೆಗೆ, ದೇಶಾದ್ಯಂತದ ‘ಸಾರ್ವಜನಿಕ ಆರೋಗ್ಯ ಸೌಲಭ್ಯ’ಗಳಲ್ಲಿ 551 ಒತ್ತಡ-ಬದಲಾವಣೆ ಹೊರಹೀರುವಿಕೆ / ಪ್ರೆಷರ್ ಸ್ವಿಂಗ್ ಅಡ್ಸಾರ್ಪ್ಶನ್ (Pressure Swing Adsorption- PSA) ವೈದ್ಯಕೀಯ ಆಮ್ಲಜನಕ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಪಿಎಂ ಕೇರ್ಸ್ ನಿಧಿಯು (PM CARES) ಅನುಮೋದನೆ ನೀಡಿದೆ.

ಇದಕ್ಕೂ ಮುನ್ನ, ಅಂತಹ 162 ಸ್ಥಾವರಗಳ ಸ್ಥಾಪನೆಗೆ ಈ ನಿಧಿಯಿಂದ 201.58 ಕೋಟಿ ರೂ. ಗಳನ್ನು ನಿಗದಿಪಡಿಸಲಾಗಿತ್ತು.

ಪ್ರೆಷರ್ ಸ್ವಿಂಗ್ ಅಡ್ಸಾರ್ಪ್ಶನ್ (PSA) ಎಂದರೇನು?

 • ಪ್ರೆಶರ್ ಸ್ವಿಂಗ್ ಆಡ್ಸರ್ಪ್ಶನ್- PSA ಎನ್ನುವುದು ಕೆಲವು ಅನಿಲ ಪ್ರಭೇದಗಳನ್ನು ಅನಿಲಗಳ ಮಿಶ್ರಣದಿಂದ ಒತ್ತಡದ ಮೂಲಕ ಬೇರ್ಪಡಿಸಲು ಬಳಸುವ ಒಂದು ತಂತ್ರವಾಗಿದೆ, ಅವುಗಳ ಹೊರಹೀರುವ ವಸ್ತು ಮತ್ತು ಅನಿಲ ವರ್ಗದ ಆಣ್ವಿಕ ಗುಣಲಕ್ಷಣಗಳಿಗೆ ಹೋಲುತ್ತದೆ.
 • ಇದು ವಾತಾವರಣದ ಸರಿಸುಮಾರು ತಾಪಮಾನದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು ಅನಿಲ ವಿಭಜನೆಯ ಕ್ರಯೋಜೆನಿಕ್ ಬಟ್ಟಿ ಇಳಿಸುವಿಕೆಯ ತಂತ್ರಕ್ಕಿಂತ ಸಾಕಷ್ಟು ಭಿನ್ನವಾಗಿರುತ್ತದೆ.
 • ನಿರ್ದಿಷ್ಟ ಆಡ್ಸರ್ಬೆಂಟ್ (Adsorbent) ವಸ್ತುಗಳನ್ನು (ಜಿಯೋಲೈಟ್‌ಗಳು, ಸಕ್ರಿಯ ಇಂಗಾಲ, ಆಣ್ವಿಕ ಜರಡಿ, ಇತ್ಯಾದಿ) ಹೆಚ್ಚಿನ ಒತ್ತಡದಲ್ಲಿ ಉದ್ದೇಶಿತ ಅನಿಲ ಪ್ರಭೇದವನ್ನು ಹೊರ ಹೀರಿಕೊಳ್ಳುವ ಬಲೆಯಂತೆ (trap) ಬಳಸಲಾಗುತ್ತದೆ.
 • ಇದರ ನಂತರ, ಪ್ರಕ್ರಿಯೆಯನ್ನು ಬದಲಾಯಿಸುವ ಮೂಲಕ ಕಡಿಮೆ ಒತ್ತಡದಲ್ಲಿ ವಸ್ತುಗಳನ್ನು ಹೀರಿಕೊಳ್ಳಲು ಪ್ರಕ್ರಿಯೆಯನ್ನು ನಿರ್ಜಲಿಕರಣ ಗೊಳಿಸಲಾಗುತ್ತದೆ.

 

154 ಟನ್ ಸಾಮರ್ಥ್ಯ:

PM CARES ಅಡಿಯಲ್ಲಿ ಸ್ಥಾಪಿಸಲಾಗುತ್ತಿರುವ ಈ 162 PSA ಆಮ್ಲಜನಕ ಘಟಕಗಳ ಒಟ್ಟು ಸಾಮರ್ಥ್ಯ 154 ಟನ್.

PSA ಘಟಕಗಳು ಅನಿಲ ಸ್ವರೂಪದ ಆಮ್ಲಜನಕವನ್ನು ಮಾತ್ರ ತಯಾರಿಸುತ್ತವೆ. ಈ ಘಟಕಗಳ ಸಾಮರ್ಥ್ಯವನ್ನು ‘ಪ್ರತಿ ನಿಮಿಷಕ್ಕೆ ಲೀಟರ್‌’ನಂತೆ  (ಲೀಟರ್ ಪರ್ ಮಿನಿಟ್‌-ಎಲ್‌ಪಿಎಂ) ಲೆಕ್ಕಹಾಕಲಾಗುತ್ತದೆ. 24 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಮತ್ತು ಸಾಮಾನ್ಯ ಒತ್ತಡದಲ್ಲಿ ಒಂದು ಲೀಟರ್‌ ಅನಿಲ ಆಮ್ಲಜನಕದ ತೂಕ 1.43 ಗ್ರಾಂ ಮಾತ್ರ.

 • ಈ ಎಲ್ಲಾ ಘಟಕಗಳು ದಿನದ 24 ಗಂಟೆಯೂ ಶೇ 100ರಷ್ಟು ಕಾರ್ಯದಕ್ಷತೆಯಲ್ಲಿ ಕೆಲಸ ಮಾಡಿದರೆ, ದಿನಕ್ಕೆ ಗರಿಷ್ಠ 11.5 ಕೋಟಿ ಲೀಟರ್ ಅನಿಲ ಆಮ್ಲಜನಕವನ್ನು ತಯಾರಿಸುತ್ತವೆ. ಈ ಅನಿಲ ಆಮ್ಲಜನಕವನ್ನು ದ್ರವೀಕೃತ ಆಮ್ಲಜನಕವಾಗಿ ಪರಿವರ್ತಿಸಿದರೆ, ಒಟ್ಟು 154 ಟನ್‌ ದ್ರವೀಕೃತ ಆಮ್ಲಜನಕ ಲಭ್ಯವಾಗುತ್ತದೆ.

 

ಪಿ.ಎಂ ಕೇರ್ಸ್ ನಿಧಿಯ ಕುರಿತು:

ಕೋವಿಡ್ -19 ಸಾಂಕ್ರಾಮಿಕ ಮತ್ತು ಇದೆ ರೀತಿಯ ಇತರ ತುರ್ತು ಪರಿಸ್ಥಿತಿಗಳಲ್ಲಿ ದೇಣಿಗೆ ಸ್ವೀಕರಿಸಲು ಮತ್ತು ಪರಿಹಾರವನ್ನು ಒದಗಿಸಲು ಪ್ರಧಾನ ಮಂತ್ರಿ ನಾಗರಿಕ ಸಹಾಯ ಮತ್ತು ತುರ್ತು ಪರಿಸ್ಥಿತಿಗಳಲ್ಲಿ ಪರಿಹಾರ (The Prime Minister’s Citizen Assistance and Relief in Emergency Situations – PM-CARES) ನಿಧಿಯನ್ನು ಸ್ಥಾಪಿಸಲಾಯಿತು.

 

PM-CARES ನಿಧಿ:

 • ಮಾರ್ಚ್ 27, 2020 ರಂದು ‘ನೋಂದಣಿ ಕಾಯ್ದೆ, 1908’ ಅನ್ವಯ ಟ್ರಸ್ಟ್ ಉಯಿಲಿನೊಂದಿಗೆ ಪಿಎಂ-ಕೇರ್ಸ್ ಅನ್ನು ಸಾರ್ವಜನಿಕ ದತ್ತಿ ಟ್ರಸ್ಟ್ ಆಗಿ ಸ್ಥಾಪಿಸಲಾಯಿತು.
 • ಇದು ವಿದೇಶಿ ಕೊಡುಗೆಯಿಂದ ಕೂಡ ದೇಣಿಗೆ ಪಡೆಯಬಹುದು ಮತ್ತು ಈ ನಿಧಿಗೆ ನೀಡುವ ದೇಣಿಗೆಯು 100% ತೆರಿಗೆ ವಿನಾಯಿತಿಯನ್ನು ಹೊಂದಿರುತ್ತದೆ.
 • PM-CARES ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಗಿಂತ (PMNRF) ಭಿನ್ನವಾಗಿದೆ.

 

PM-CARES ನಿಧಿಯನ್ನು ಯಾರು ನಿರ್ವಹಿಸುತ್ತಾರೆ?

ಪ್ರಧಾನ ಮಂತ್ರಿಯವರು ಪಿಎಂ ಕೇರ್ಸ್ ನಿಧಿಯ ಎಕ್ಸ್ ಆಫಿಸಿಯೊ ಚೇರ್ಮನ್ ಆಗಿದ್ದಾರೆ ಮತ್ತು ಭಾರತ ಸರ್ಕಾರದ ರಕ್ಷಣಾ ಸಚಿವರು, ಗೃಹ ವ್ಯವಹಾರಗಳ ಸಚಿವರು ಮತ್ತು ಹಣಕಾಸು ಸಚಿವರು, ಈ ನಿಧಿಯ ಎಕ್ಸ್-ಆಫಿಸಿಯೊ ಟ್ರಸ್ಟಿಗಳು ಆಗಿದ್ದಾರೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ಸೈಬರ್ ಅಪರಾಧ ಸ್ವಯಂಸೇವಕ ಕಾರ್ಯಕ್ರಮ:


(Cybercrime volunteer programme)

 

ವಿಷಯಗಳು: ಸಂವಹನ ನೆಟ್‌ವರ್ಕ್‌ಗಳ ಮೂಲಕ ಆಂತರಿಕ ಭದ್ರತೆಗೆ ಸವಾಲುಗಳು, ಆಂತರಿಕ ಭದ್ರತಾ ಸವಾಲುಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ, ಸೈಬರ್ ಸುರಕ್ಷತೆಯ ಮೂಲಗಳು; ಸೈಬರ್ ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳು ಅಕ್ರಮ ಹಣ ವರ್ಗಾವಣೆ ಮತ್ತು ಅದರ ತಡೆಗಟ್ಟುವಿಕೆ.

ಸಂದರ್ಭ:

ಪೊಲೀಸ್’ ಸಂವಿಧಾನದ ಏಳನೇ ಅನುಸೂಚಿಯಡಿಯಲ್ಲಿ “ರಾಜ್ಯ ಪಟ್ಟಿಯ ವಿಷಯ” ವಾಗಿರುವುದರಿಂದ ಸೈಬರ್ ಅಪರಾಧ ಸ್ವಯಂಸೇವಕ ಕಾರ್ಯಕ್ರಮದಡಿ ನೊಂದಾಯಿತರಾದ ಸ್ವಯಂಸೇವಕರ ಕೇಂದ್ರೀಕೃತ ಪಟ್ಟಿಯನ್ನು ನಿರ್ವಹಿಸುವುದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಹೇಳಿದೆ.

ಹಿನ್ನೆಲೆ:

ಇತ್ತೀಚೆಗೆ, ಮಾಹಿತಿ ಹಕ್ಕು ಕಾಯ್ದೆ (RTI) ಅಡಿಯಲ್ಲಿ ಸಲ್ಲಿಸಲಾದ ಅರ್ಜಿಯು ರಾಷ್ಟ್ರೀಯ ಸೈಬರ್ ಅಪರಾಧ ವರದಿ ಪೋರ್ಟಲ್‌ನ ಸೈಬರ್ ಅಪರಾಧ ಸ್ವಯಂಸೇವಕ ಕಾರ್ಯಕ್ರಮದಡಿ ಅರ್ಜಿ ಸಲ್ಲಿಸಿರುವ ಒಟ್ಟು ಸ್ವಯಂಸೇವಕರ ಸಂಖ್ಯೆಯ ಬಗ್ಗೆ ಮಾಹಿತಿ ಕೋರಿತು. ಈ RTI ಗೆ ಪ್ರತಿಕ್ರಿಯೆಯಾಗಿ ಗೃಹ ಸಚಿವಾಲಯವು ಈ ಬಗ್ಗೆ ಮಾಹಿತಿಯನ್ನು ನೇರವಾಗಿ ಸಂಬಂಧಿತ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಪಡೆಯಬಹುದು ಎಂದು ತಿಳಿಸಿದೆ.

 

ಸೈಬರ್ ಅಪರಾಧ ಸ್ವಯಂಸೇವಕ ಕಾರ್ಯಕ್ರಮದ ಕುರಿತು:

ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (Indian Cyber Crime Coordination Centre- I4C) ದೇಶಕ್ಕೆ ಸೇವೆ ಸಲ್ಲಿಸುವ ಉತ್ಸಾಹ ಹೊಂದಿರುವ ನಾಗರಿಕರನ್ನು ಒಟ್ಟುಗೂಡಿಸಲು ಮತ್ತು ದೇಶದಲ್ಲಿ ಸೈಬರ್ ಅಪರಾಧದ ವಿರುದ್ಧದ ಹೋರಾಟದಲ್ಲಿ ಸಹಕರಿಸಲು ‘ಸೈಬರ್ ಅಪರಾಧ ಸ್ವಯಂಸೇವಕ ಕಾರ್ಯಕ್ರಮ’ವನ್ನು ಕೈಗೆತ್ತಿಕೊಂಡಿದೆ.

ನೋಂದಾಯಿತರಾದ ಸ್ವಯಂಸೇವಕರ ಸೇವೆಗಳನ್ನು ಆಯಾ ರಾಜ್ಯ / ಕೇಂದ್ರಾಡಳಿತಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಬಳಸಿಕೊಳ್ಳುತ್ತವೆ.

 • ಅಂತರ್ಜಾಲದಲ್ಲಿನ ಅಕ್ರಮ ಹಾಗೂ ಕಾನೂನುಬಾಹಿರ ವಿಷಯವನ್ನು ಗುರುತಿಸಲು ಸುಮಾರು 500 ವ್ಯಕ್ತಿಗಳನ್ನು ತೊಡಗಿಸಿಕೊಳ್ಳುವ ಉದ್ದೇಶವನ್ನು ಈ ಕಾರ್ಯಕ್ರಮ ಹೊಂದಿದೆ.

 

ಪಾತ್ರಗಳು ಮತ್ತು ಕಾರ್ಯಗಳು:

 • ಸ್ವಯಂಸೇವಕರು “ನಿಯೋಜಿಸಲಾದ / ಮಾಡಿದ ಕೆಲಸದ ಕಟ್ಟುನಿಟ್ಟಾದ ಗೌಪ್ಯತೆಯನ್ನು ಕಾಪಾಡಿಕೊಳ್ಳುವ ಅಗತ್ಯವಿದೆ”.
 • ನಿಯಮಗಳು ಮತ್ತು ಷರತ್ತುಗಳನ್ನು ಉಲ್ಲಂಘಿಸಿದಲ್ಲಿ, ರಾಜ್ಯ / ಕೇಂದ್ರಾಡಳಿತ ಪ್ರದೇಶಗಳ ರಾಜ್ಯ ನೋಡಲ್ ಅಧಿಕಾರಿಗೆ ಸ್ವಯಂಸೇವಕರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಹಕ್ಕಿದೆ.
 • ಯೋಜನೆಯಡಿಯಲ್ಲಿ, ಸ್ವಯಂಸೇವಕರು ಈ ಕಾರ್ಯಕ್ರಮದೊಂದಿಗಿನ ತಮ್ಮ ಸಂಬಂಧದ ಬಗ್ಗೆ ಯಾವುದೇ ಸಾರ್ವಜನಿಕ ಹೇಳಿಕೆ ನೀಡುವುದನ್ನು ನಿಷೇಧಿಸಲಾಗಿದೆ, ಮತ್ತು ಯಾವುದೇ ಸಾಮಾಜಿಕ ಮಾಧ್ಯಮ ಅಥವಾ ಸಾರ್ವಜನಿಕ ವೇದಿಕೆಯಲ್ಲಿ ಗೃಹ ಸಚಿವಾಲಯದ ಹೆಸರನ್ನು ಬಳಸುವುದು ಮತ್ತು ಸಚಿವಾಲಯದೊಂದಿಗೆ ಯಾವುದೇ ಪ್ರಕಾರದ ಒಡನಾಟವನ್ನು ಹೊಂದಿರುವುದಾಗಿ ಹೇಳಿಕೊಳ್ಳುವುದನ್ನು ‘ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ’.

 

ಸಂಬಂಧಿತ ಕಾಳಜಿಗಳು:

 •  ವೈಯಕ್ತಿಕ ಅಥವಾ ರಾಜಕೀಯ ಪ್ರತೀಕಾರಗಳನ್ನು ತೀರಿಸಿಕೊಳ್ಳಲು ದಾರಿ ತಪ್ಪಿದ ವ್ಯಕ್ತಿಯಿಂದ ಈ ಯೋಜನೆಯನ್ನು ದುರುಪಯೋಗಪಡಿಸಿಕೊಳ್ಳದಂತೆ ಸಚಿವಾಲಯ ಹೇಗೆ ತಡೆಯುತ್ತದೆ ಎಂಬುದರ ಕುರಿತು  ಯಾವುದೇ ಮಾಹಿತಿ ಲಭ್ಯವಿಲ್ಲ.
 • ಕಾರ್ಯಕ್ರಮದ ಅಡಿಯಲ್ಲಿ, ಒಮ್ಮೆ ದೂರು ನೀಡಿದ ನಂತರ, ಅದನ್ನು ಹಿಂತೆಗೆದುಕೊಳ್ಳುವ ಯಾವುದೇ ವಿಧಾನವು ಇಲ್ಲ.
 • “ರಾಷ್ಟ್ರ ವಿರೋಧಿ” ಚಟುವಟಿಕೆಗಳಿಗೆ ಸಂಬಂಧಿಸಿದ ಕಾನೂನುಬಾಹಿರ ವಿಷಯ ಯಾವುದು ಎಂಬುದಕ್ಕೆ ಸ್ಪಷ್ಟ ವ್ಯಾಖ್ಯಾನವಿಲ್ಲ.
 • ಇದರ ಅಡಿಯಲ್ಲಿ, ಶ್ರೇಯಾ ಸಿಂಘಾಲ್ VS ಯೂನಿಯನ್ ಆಫ್ ಇಂಡಿಯಾ (2013) ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪನ್ನು ಇದು ಉಲ್ಲಂಘಿಸಬಹುದು. ಈ ನಿರ್ಧಾರವು ಆನ್‌ಲೈನ್ ಭಾಷಣಗಳಿಗೆ ವಿಧಿಸಲಾದ ನಿರ್ಬಂಧಗಳನ್ನು ಅಂತರ್ಜಾಲದಲ್ಲಿ ‘ವಾಕ್ಚಾತುರ್ಯ’ (free speech) ವನ್ನು ಅಪರಾಧೀಕರಿಸುವ ಸಾಧನವಾಗಿ ರಾಜ್ಯವು ಬಳಸುವುದಿಲ್ಲ ಎಂದು ಖಚಿತಪಡಿಸಿಕೊಳ್ಳುವ ಅಗತ್ಯವನ್ನು ಎತ್ತಿ ತೋರಿಸುತ್ತದೆ.

 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಾಗೃತಿ.

ಕಡ್ಡಾಯ ಪರವಾನಗಿ:


(Compulsory license)

ಸಂದರ್ಭ:

ಭಾರತದ ಅನೇಕ ಭಾಗಗಳಲ್ಲಿ ವಿದ್ವಾಂಸವನ್ನುಂಟು ಮಾಡುತ್ತಿರುವ ಕೊರೊನೊವೈರಸ್ ಸಾಂಕ್ರಾಮಿಕದ ಚಿಕಿತ್ಸೆಗಾಗಿ ಕೋವಿಡ್ ಸಂಬಂಧಿತ ಬೆಂಬಲ ಸೇರಿದಂತೆ ಅಗತ್ಯ ನೆರವು ಒದಗಿಸಲು ಆಮ್ಲಜನಕ ಉತ್ಪಾದನಾ ಸಾಧನಗಳು ಮತ್ತು ಸಾಂದ್ರಕಗಳು ಮತ್ತು  ಔಷಧಿಗಳನ್ನು ಒಳಗೊಂಡ ವಿಶೇಷ ವಿಮಾನಗಳನ್ನು ಕಳುಹಿಸಲು ರಷ್ಯಾ ಯೋಜಿಸುತ್ತಿದೆ.

 • ಆದಾಗ್ಯೂ, ಯುಎಸ್ ಪೇಟೆಂಟ್ ಹಿನ್ನೆಲೆಯಲ್ಲಿ ರೆಮ್ಡಿ ಸಿವಿರ್ (Remdesivir)  ಔಷಧಿಯನ್ನು ಕಳುಹಿಸುವುದನ್ನು ರಷ್ಯಾ ತಡೆಹಿಡಿಯಬೇಕಾಗಬಹುದು.

 

ಏನಿದು ಸಮಸ್ಯೆ ?

ರೆಮೆಡಿಸ್ವಿರ್ ಅನ್ನು ರಫ್ತು ಮಾಡುವವರು ಕ್ಯಾಲಿಫೋರ್ನಿಯಾ ಮೂಲದ ಗಿಲ್ಯಾಡ್ ಸೈನ್ಸಸ್ ಇಂಕ್ (Gilead Sciences)  ಯು.ಎಸ್ ಪರವಾನಗಿ ಕಾನೂನುಗಳನ್ನು ಜಾರಿಗೊಳಿಸುವುದರೊಂದಿಗೆ ಕಾನೂನು ತೊಂದರೆಗಳನ್ನು ಎದುರಿಸಬೇಕಾಗುತ್ತದೆ, ಗಿಲ್ಯಾಡ್ ಸೈನ್ಸಸ್ ಇಂಕ್ ರೆಮ್ಡೆಸಿವಿರ್ ಅನ್ನು ಅಭಿವೃದ್ಧಿಪಡಿಸಿದೆ.

 • ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ಕೋವಿಡ್ -19 ಚಿಕಿತ್ಸೆಗಾಗಿ ರೆಮ್ಡಿ ಸಿವಿರ್ ಅನ್ನು  ಅಕ್ಟೋಬರ್ 2020 ರಲ್ಲಿ ಅನುಮೋದಿಸಿತು.
 • ಗಿಲ್ಯಾಡ್‌ನ ಅಂತರರಾಷ್ಟ್ರೀಯ ಪೇಟೆಂಟ್ ಅನ್ನು ಕಡೆಗಣಿಸಿದ ರಷ್ಯಾ ತನ್ನ ದೇಶದ ಕಂಪನಿಯಾದ ಫಾರ್ಮಸಿಂಟೆಜ್ (Pharmasyntez)ಗೆ ‘ಕಡ್ಡಾಯ ಪರವಾನಗಿ’ (Compulsory Licence) ಅಡಿಯಲ್ಲಿ ರೆಮ್ಡಿ ಸಿವಿರ್ ಅನ್ನು  ತಯಾರಿಸಲು ಅನುಮತಿ ನೀಡುವ ಸುಗ್ರೀವಾಜ್ಞೆಯನ್ನು ಹೊರಡಿಸಿ ದೇಶದಲ್ಲಿ ತಯಾರಿಸಲು ನಿರ್ಧರಿಸಿತು.

 

ಕಡ್ಡಾಯ ಪರವಾನಗಿ ಎಂದರೇನು?

 • ಕಡ್ಡಾಯ ಪರವಾನಗಿ ಎನ್ನುವುದು ಮೂಲ ಮಾಲೀಕರ ಅನುಮತಿಯನ್ನು ಪಡೆಯದೆ ಪರವಾನಿಗೆಗಾಗಿ ಪೂರ್ವನಿರ್ಧರಿತ ಶುಲ್ಕವನ್ನು ಕೂಡ ಪಾವತಿಸದೆ ಇತರರ ಬೌದ್ಧಿಕ ಹಕ್ಕುಸ್ವಾಮ್ಯವನ್ನು ಬಳಸಲು ಬಯಸುವ (ಪೇಟೆಂಟ್ ಹೊಂದಿರುವ ವಸ್ತುವಿನ ತಯಾರಿಕೆ ಬಳಕೆ ಮತ್ತು ಮಾರಾಟ ಅಥವಾ ಪೇಟೆಂಟ್ ಪಡೆದ ಪ್ರಕ್ರಿಯೆಯನ್ನು ಬಳಸುವುದು) ಒಂದು ಕಂಪನಿ ಅಥವಾ ಖಾಸಗಿ ವ್ಯಕ್ತಿಗೆ / ಅರ್ಜಿದಾರರಿಗೆ ಒಂದು ದೇಶದ ಸರ್ಕಾರವು ನೀಡುವ / ಅಧಿಕೃತಗೊಳಿಸಿದ ಪರವಾನಗಿಯಾಗಿದೆ.
 • ಕಡ್ಡಾಯ ಪರವಾನಗಿಯನ್ನು ಭಾರತೀಯ ಪೇಟೆಂಟ್ ಕಾಯ್ದೆ 1970 ರ ಅಧ್ಯಾಯ XVI ಮತ್ತು ‘ಬೌದ್ಧಿಕ ಆಸ್ತಿಯ ಹಕ್ಕುಗಳ ವ್ಯಾಪಾರ-ಸಂಬಂಧಿತ ಅಂಶಗಳು’ (Trade Related Aspects of Intellectual Property Rights-TRIPS) ಒಪ್ಪಂದದ ಅಡಿಯಲ್ಲಿ ವ್ಯವಹರಿಸಲಾಗುತ್ತದೆ.
 • ಒಂದು ಉತ್ಪನ್ನಕ್ಕಾಗಿ ಪೇಟೆಂಟ್ ಪಡೆದ ದಿನಾಂಕದಿಂದ 3 ವರ್ಷಗಳ ನಂತರ ಯಾವುದೇ ಸಮಯದಲ್ಲಿ ಕಡ್ಡಾಯ ಪರವಾನಗಿಯನ್ನು ಅನ್ವಯಿಸಬಹುದು / ನೀಡಬಹುದು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಡೀಪ್ ಟೈಮ್ ಪ್ರಾಜೆಕ್ಟ್:

(Deep Time Project)

 •  ಫ್ರಾನ್ಸ್‌ನ ಲೋಂಬ್ರೈವ್ಸ್ (Lombrives) ಎಂಬ ಗುಹೆಯಲ್ಲಿನ ಆಳವಾದ ಸಮಯದ ಯೋಜನೆ(Deep Time Project) ಕೊನೆಗೊಂಡಿದೆ. ಈ ಯೋಜನೆಯಡಿಯಲ್ಲಿ, 15 ಜನರ ಗುಂಪು ಗುಹೆಯೊಳಗೆ 40 ಹಗಲು ಮತ್ತು 40 ರಾತ್ರಿಗಳವರೆಗೆ ಇದ್ದು ಅನ್ವೇಷಣೆ ನಡೆಸಿತು.
 • ಈ ಜನರು ಡೇರೆಗಳಲ್ಲಿ ಮಲಗಿದ್ದರು ಮತ್ತು ತಮ್ಮದೇ ಆದ ವಿದ್ಯುತ್ ತಯಾರಿಸಿದರು ಮತ್ತು ಹೊರಗಿನ ಪ್ರಪಂಚದೊಂದಿಗೆ ಯಾವುದೇ ಸಂಪರ್ಕವನ್ನು ಹೊಂದಿರಲಿಲ್ಲ.
 • ಡೀಪ್ ಟೈಮ್ ಪ್ರಾಜೆಕ್ಟ್ ಅಡಿಯಲ್ಲಿ, ಬಾಹ್ಯ ಸಂಪರ್ಕವಿಲ್ಲದಿದ್ದಾಗ ವ್ಯಕ್ತಿಯ ಸಮಯದ ಪರಿಕಲ್ಪನೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಅಧ್ಯಯನ ಮಾಡಲಾಗಿದೆ.
 • ಜನರು ತಮ್ಮ ಜೀವನ ಪರಿಸ್ಥಿತಿಗಳು ಮತ್ತು ಪರಿಸರದಲ್ಲಿನ ನಾಟಕೀಯ ಬದಲಾವಣೆಗಳಿಗೆ ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದನ್ನು ಪರೀಕ್ಷಿಸುವುದು ಇದರ ಉದ್ದೇಶವಾಗಿತ್ತು.
 • $ 1.5 ಮಿಲಿಯನ್ ವೆಚ್ಚದ “ಡೀಪ್ ಟೈಮ್” ಯೋಜನೆಗೆ ನೇತೃತ್ವ ವಹಿಸಿದ ಹ್ಯೂಮನ್ ಅಡಾಪ್ಷನ್ ಇನ್ಸ್ಟಿಟ್ಯೂಟ್ನ (Human Adaption Institute) ವಿಜ್ಞಾನಿಗಳು, ಜನರು ಜೀವನದಲ್ಲಿನ ಮತ್ತು ಪರಿಸರದಲ್ಲಿನ ಮಹತ್ತರ ಬದಲಾವಣೆಗಳಿಗೆ ಹೇಗೆ ಹೊಂದಿಕೊಳ್ಳುತ್ತಾರೆ ಎಂದು ಚೆನ್ನಾಗಿ ಅರ್ಥಮಾಡಿಕೊಳ್ಳಲು ಈ ಪ್ರಯೋಗವು ಅವರಿಗೆ ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos