Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 23ನೇ ಏಪ್ರಿಲ್ 2021

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 1: 

1. ಭಾರತದಲ್ಲಿ ಲಿಂಗ ಪಕ್ಷಪಾತ ಮತ್ತು ಜಾಹೀರಾತಿನಲ್ಲಿ ಸೇರ್ಪಡೆ.

2. ಅರ್ಮೇನಿಯನ್ ಜನಾಂಗೀಯ ಹತ್ಯಾಕಾಂಡ.

  

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಹಂದಿ ಜ್ವರ.

2. ಮಸಾಲೆ ಮತ್ತು ಪಾಕಶಾಲೆಯ ಗಿಡಮೂಲಿಕೆಗಳ ಕೋಡೆಕ್ಸ್ ಸಮಿತಿಯ ಐದನೇ ಅಧಿವೇಶನ (CCSCH).

  

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಮಂಗಳ ಗ್ರಹದಲ್ಲಿ ಆಮ್ಲಜನಕವನ್ನು ಉತ್ಪಾದಿಸಿದ ನಾಸಾದ ಪರ್ಸಿವರನ್ಸ್ ಮಿಷನ್.

2. ಭೂ ದಿನ 2021

3. ವಾಟ್ಸಾಪ್ ನ ಗೌಪ್ಯತೆ ನೀತಿ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. FOSS4GOV ಇನ್ನೋವೇಶನ್ ಚಾಲೆಂಜ್.

2. ಕೆ.ಆರ್.ಐ.ನಂಗಲಾ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಮಹಿಳೆಯರಿಗೆ ಸಂಬಂಧಿಸಿದ ಸಮಸ್ಯೆಗಳು.

ಭಾರತದಲ್ಲಿ ಲಿಂಗ ಪಕ್ಷಪಾತ ಮತ್ತು ಜಾಹೀರಾತಿನಲ್ಲಿ ಸೇರ್ಪಡೆ:


(Gender bias and inclusion in advertising in India)

 ಸಂದರ್ಭ:

ಇತ್ತೀಚೆಗೆ, ಯುನಿಸೆಫ್ ಮತ್ತು ಗಿನಾ ಡೇವಿಸ್ ಇನ್ಸ್ಟಿಟ್ಯೂಟ್ ಆನ್ ಜೆಂಡರ್ ಇನ್ ಮೀಡಿಯಾ’ (Gender in Media on Gender in Media) ‘ಭಾರತದಲ್ಲಿ ಲಿಂಗ ಪಕ್ಷಪಾತ ಮತ್ತು ಜಾಹೀರಾತಿನಲ್ಲಿ ಸೇರ್ಪಡೆ’ (Gender bias and inclusion in advertising in India) ಎಂಬ ಶೀರ್ಷಿಕೆಯ ಅಧ್ಯಯನ ವರದಿಯನ್ನು ಬಿಡುಗಡೆ ಮಾಡಿವೆ.

ಈ ಸಂಶೋಧನಾ ಅಧ್ಯಯನದಲ್ಲಿ, ಭಾರತದಾದ್ಯಂತ ಪ್ರಸಾರವಾದ 1,000 ಕ್ಕೂ ಹೆಚ್ಚು ದೂರದರ್ಶನ ಮತ್ತು ಯೂಟ್ಯೂಬ್ (YOUTUBE) ಜಾಹೀರಾತುಗಳನ್ನು 2019 ರ ವರ್ಷದಲ್ಲಿ ಮೌಲ್ಯಮಾಪನ ಮಾಡಲಾಗಿದೆ. ಅಧ್ಯಯನದಲ್ಲಿ, ಹೆಚ್ಚು ಪ್ರವೇಶಿಸಬಹುದಾದ ಜಾಹೀರಾತುಗಳನ್ನು ವಿಶ್ಲೇಷಿಸಲಾಗಿದೆ.

 

ಪ್ರಮುಖ ಆವಿಷ್ಕಾರಗಳು (ಸಂಕ್ಷಿಪ್ತ ಅವಲೋಕನ)

 • ಪರದೆಯ ಮತ್ತು ಮಾತನಾಡುವ ಸಮಯದ ದೃಷ್ಟಿಯಿಂದ, ಹುಡುಗಿಯರು ಮತ್ತು ಮಹಿಳೆಯರ ಪ್ರಾತಿನಿಧ್ಯದಲ್ಲಿ ಸಮಾನತೆ ಇರುವುದರಿಂದ ಅವರು ಜಾಗತಿಕ ಮಾನದಂಡಗಳಿಗಿಂತ ಶ್ರೇಷ್ಠರಾಗಿದ್ದರು ಸಹ ಜಾಹೀರಾತುಗಳಲ್ಲಿ ಅವರ ಚಿತ್ರಣವು ಸಮಸ್ಯಾತ್ಮಕವಾಗಿದೆ ಏಕೆಂದರೆ ಅವುಗಳು ಲಿಂಗ ರೂಢಿಗತ ಸಂಕುಚಿತತೆಯನ್ನು ಉತ್ತೇಜಿಸುತ್ತವೆ.
 • ಈ ಜಾಹೀರಾತುಗಳಲ್ಲಿ, ಸ್ತ್ರೀ ಪಾತ್ರಗಳನ್ನು ಪುರುಷ ಪಾತ್ರಗಳಿಗಿಂತ, ವಿವಾಹಿತರೆಂದು ತೋರಿಸಲ್ಪಡುವ ಸಾಧ್ಯತೆ ಹೆಚ್ಚಿಗೆ ಇದೆ, ಸ್ತ್ರೀಯರನ್ನು ಕಡಿಮೆ ಆದಾಯ ಗಳಿಸುವ ಉದ್ಯೋಗದಲ್ಲಿ ತೋರಿಸಲಾಗಿದೆ, ಮತ್ತು ಅವರನ್ನು ಕಾಳಜಿ ವಹಿಸುವವರು ಮತ್ತು ಪೋಷಕರಾಗಿ’ ಹೆಚ್ಚಾಗಿ ಚಿತ್ರಿಸಲಾಗಿದೆ.
 •  ಪುರುಷ ಪಾತ್ರಗಳಿಗಿಂತ ಸ್ತ್ರೀ ಪಾತ್ರಗಳು ಈ ಕೆಳಗಿನ ಚಟುವಟಿಕೆಗಳನ್ನು ಮಾಡುವುದನ್ನು ತೋರಿಸಲಾಗುತ್ತದೆ – ಶಾಪಿಂಗ್ (ಪುರುಷ ಪಾತ್ರಗಳ M-3% ಗೆ ಹೋಲಿಸಿದರೆ F-4.1%); ಶುಚಿಗೊಳಿಸುವಿಕೆ (2.2% ಗೆ ಹೋಲಿಸಿದರೆ 4.8%); ಮತ್ತು ಆಹಾರವನ್ನು ತಯಾರಿಸುವುದು ಅಥವಾ ಸಾಮಗ್ರಿ ಖರೀದಿಯಲ್ಲಿ (3.9% ಗೆ ಹೋಲಿಸಿದರೆ 5.4%).
 •  ಹೆಚ್ಚು ಬುದ್ಧಿವಂತ ಎಂದು ತೋರಿಸಲಾದ ಜಾಹೀರಾತಿನ ಪಾತ್ರಗಳಲ್ಲಿ, ಪುರುಷ ಪಾತ್ರಗಳು ಸ್ತ್ರೀ ಪಾತ್ರಗಳಿಗಿಂತ ಚುರುಕಾಗಿರುತ್ತವೆ / ಸ್ಮಾರ್ಟ್ ಆಗಿರುವಂತೆ ತೋರಿಸಲಾಗುತ್ತದೆ. (ಆ ಪಾತ್ರಗಳಲ್ಲಿ ಚುರುಕುತನ M –2%, ಸ್ತ್ರೀ ಪಾತ್ರ 26.2%).
 • ಭಾರತೀಯ ಜಾಹೀರಾತುಗಳಲ್ಲಿ, ಮೂರನೇ ಎರಡರಷ್ಟು ಸ್ತ್ರೀ ಪಾತ್ರಗಳ (66.9%) ಚರ್ಮದ ಬಣ್ಣ ಬಿಳಿ ಅಥವಾ ಮಧ್ಯಮ-ಬಿಳಿ ಬಣ್ಣವನ್ನು ಹೊಂದಿರುತ್ತವೆ ಮತ್ತು ಸ್ತ್ರೀ ಪಾತ್ರಗಳು ಯಾವಾಗಲೂ ಏಕರೂಪವಾಗಿ ತೆಳ್ಳಗಿರುತ್ತವೆ.

 

ಸಂಬಂಧಿತ ಸಮಸ್ಯೆಗಳು ಮತ್ತು ಕಾಳಜಿಗಳು:

 • ಭಾರತೀಯ ಜಾಹೀರಾತುಗಳಲ್ಲಿ ಸ್ತ್ರೀ ಪ್ರಾತಿನಿಧ್ಯವು ಮೇಲುಗೈ ಸಾಧಿಸುತ್ತಿರುವುದನ್ನು ನಾವು ನೋಡುತ್ತಿದ್ದರೂ, ವರ್ಣಭೇದ ನೀತಿ, ಅತಿಯಾದ ಲಿಂಗೀಕರಣದಿಂದಾಗಿ ಮತ್ತು ಮನೆಯ ಹೊರಗೆ ತಮ್ಮ ವೃತ್ತಿಜೀವನವಿಲ್ಲದೆ ಅಥವಾ ಆಕಾಂಕ್ಷೆಗಳಿಲ್ಲದೆ ಇರುವುದರಿಂದ  ಅವರನ್ನು ಇನ್ನೂ ಈ ಕ್ಷೇತ್ರದಲ್ಲಿ ಅಂಚಿನಲ್ಲಿರಿಸಲಾಗಿದೆ.

ಜಾಹೀರಾತುಗಳಲ್ಲಿ ಮಹಿಳೆಯರ ತಪ್ಪು ನಿರೂಪಣೆ ಮತ್ತು ಹಾನಿಕಾರಕವಾದ ರೂಢಿಗತಗೊಳಿಸುವಿಕೆಯ ಪಾತ್ರಗಳಿಂದಾಗಿ ಮಹಿಳೆಯರು ಮತ್ತು ಯುವತಿಯರ  ಮೇಲೆ ಗಮನಾರ್ಹ ಪರಿಣಾಮ ಬೀರುತ್ತದೆ ಮತ್ತು ಸಮಾಜಕ್ಕೆ ಅವರು ನೀಡುವ ಮೌಲ್ಯಯುತ ಸಂದೇಶವೇನು ಎಂಬುದರ ಕುರಿತು ಅವರು ತಮ್ಮನ್ನು ತಾವು ಹೇಗೆ ಪರಾಮರ್ಶಿಸಿಕೊಳ್ಳುತ್ತಾರೆ ಎಂಬ ಕಾಳಜಿಯಿದೆ.

 • ಸಮತಾವಾದಿ ಸಮಾಜವನ್ನು ಖಚಿತಪಡಿಸಿಕೊಳ್ಳಲು ಈ ಅಸಮಾನತೆಯನ್ನು ಸಂಪೂರ್ಣವಾಗಿ ಪರಿಹರಿಸಬೇಕಾಗಿದೆ.

 

ವಿಷಯಗಳು: ಜಾಗತಿಕ ಇತಿಹಾಸ.

ಅರ್ಮೇನಿಯನ್ ಜನಾಂಗೀಯ ಹತ್ಯಾಕಾಂಡ:


(Armenian Genocide)

ಸಂದರ್ಭ:

ಯುಎಸ್ ಅಧ್ಯಕ್ಷ ಜೋ ಬೈಡನ್ ಅವರು ಅರ್ಮೇನಿಯನ್ ಜನಾಂಗೀಯ ಹತ್ಯೆಯನ್ನು” (Armenian Genocide)  ಔಪಚಾರಿಕವಾಗಿ ಅಂಗೀಕರಿಸಲು ಸಿದ್ಧತೆ ನಡೆಸಿದ್ದಾರೆ.

 • ಪ್ರತಿ ವರ್ಷ, ಏಪ್ರಿಲ್ 24 ಅನ್ನು ‘ಅರ್ಮೇನಿಯನ್ ಹತ್ಯಾಕಾಂಡದ ಸ್ಮರಣೆಯ ದಿನ’ ಎಂದು ಗುರುತಿಸಲಾಗುತ್ತದೆ.

ಅರ್ಮೇನಿಯನ್ ಜನಾಂಗೀಯ ಹತ್ಯಾಕಾಂಡ’ ಎಂದರೇನು?

ಮೊದಲನೆಯ ಮಹಾಯುದ್ಧದ ಸಮಯದಲ್ಲಿ, 1915 ಮತ್ತು 1922 ರ ನಡುವೆ, ಅರ್ಮೇನಿಯನ್ ಜನರನ್ನು ಪೂರ್ವ ಅನಾಟೋಲಿಯಾದಿಂದ ಒಟ್ಟೋಮನ್ ತುರ್ಕರು ಗಡೀಪಾರು ಮಾಡಿದ, ಈ ಸಮಯದಲ್ಲಿ ನಡೆದ  ‘ಅರ್ಮೇನಿಯನ್ ನರಮೇಧದಲ್ಲಿ’ ಕೊಲೆಗಳು, ಹಸಿವು ಮತ್ತು ಕಾಯಿಲೆಯಿಂದಾಗಿ ಸಾವಿರಾರು ಅರ್ಮೇನಿಯನ್ನರು ನಾಶವಾದರು. ಈ ಘಟನೆಯನ್ನು ಟರ್ಕಿ ಒಪ್ಪಿಕೊಳ್ಳುವುದಿಲ್ಲ ವಾದರೂ ಇತಿಹಾಸದ ಈ ವಿದ್ಯಮಾನದ ಬಗ್ಗೆ ಇತಿಹಾಸಕಾರರಲ್ಲಿ ಸರ್ವಸಮ್ಮತವಾದ ಒಮ್ಮತವಿದೆ.

 • ಈ ಘಟನೆಯಲ್ಲಿ 1 ಮಿಲಿಯನ್‌ಗಿಂತಲೂ ಹೆಚ್ಚು ಅರ್ಮೇನಿಯನ್ನರು ಸತ್ತಿರಬಹುದು ಎಂದು ಇಂಟರ್ನ್ಯಾಷನಲ್ ಅಸೋಸಿಯೇಶನ್ ಆಫ್ ಜಿನೊಸೈಡ್‌ನ ವಿದ್ವಾಂಸರು ಅಂದಾಜಿಸಿದ್ದಾರೆ.

ಅಮೆರಿಕ ಅಧ್ಯಕ್ಷರ ಈ ಅಂಗೀಕಾರವು ಏಕೆ ಅಷ್ಟೊಂದು ಮಹತ್ವದ್ದಾಗಿದೆ?

ಯು.ಎಸ್.ಎ  ಸರ್ಕಾರದ ಈ ಅಂಗೀಕಾರವು ಟರ್ಕಿಯ ಮುಜುಗರಕ್ಕೆ ಕಾರಣವಾಗುವುದನ್ನು ಹೊರತುಪಡಿಸಿ ಟರ್ಕಿಯ ಮೇಲೆ ಅಂತಹ ಯಾವುದೇ ಮಹತ್ತರ ಕಾನೂನು ಪರಿಣಾಮ ಬಿರುವುದಿಲ್ಲ, ಎಂದು ಸಂಶೋಧಕರು ಹೇಳುತ್ತಾರೆ. ಬಹುಶಃ ಅಮೆರಿಕದ ಈ ಕ್ರಮದಿಂದ, ಇತರ ದೇಶಗಳಿಗೆ ಈ ನರಮೇಧ’ವನ್ನು ಸ್ವೀಕರಿಸಲು ಪ್ರಚೋದನೆಯನ್ನು ನೀಡಬಹುದು.

 • ಆದಾಗ್ಯೂ, ಅಂತರರಾಷ್ಟ್ರೀಯ ಸಮುದಾಯದಲ್ಲಿ ಈ ಸ್ವೀಕಾರವು ಟರ್ಕಿಗೆ ಅನಪೇಕ್ಷಿತ ಮತ್ತು ಅಸಹ್ಯಕರವಾಗಿರಬಹುದು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಆರೋಗ್ಯ, ಶಿಕ್ಷಣ ಮತ್ತು ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ಸಾಮಾಜಿಕ ವಲಯ/ ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳು.

ಹಂದಿಜ್ವರ:


(swine fever)

ಸಂದರ್ಭ:

ಮಿಜೋರಾಂನ ನಾಲ್ಕು ಜಿಲ್ಲೆಗಳಲ್ಲಿನ ಕೆಲವು ಪ್ರದೇಶಗಳನ್ನು ಆಫ್ರಿಕನ್ ಹಂದಿ ಜ್ವರ (African swine fever- ASF) ದ ಕೇಂದ್ರಬಿಂದುಗಳು (Epicentres) ಎಂದು ಘೋಷಿಸಲಾಗಿದೆ. ಈ ಕಾಯಿದೆಯಿಂದಾಗಿ ಒಂದು ತಿಂಗಳಲ್ಲಿ 1,119 ಹಂದಿಗಳು ಸಾವನ್ನಪ್ಪಿವೆ.

ಆಫ್ರಿಕನ್ ಹಂದಿ ಜ್ವರದ ಕುರಿತು:

 • ASF ಹೆಚ್ಚು ಸಾಂಕ್ರಾಮಿಕ ಮತ್ತು ಮಾರಕ ಪ್ರಾಣಿಗಳ ಕಾಯಿಲೆಯಾಗಿದ್ದು ಅದು ಸಾಕು ಮತ್ತು ಕಾಡು ಹಂದಿಗಳಿಗೆ ಸೋಂಕು ತರುತ್ತದೆ. ಹಂದಿಗಳು ಅದರ ಸೋಂಕಿನಿಂದಾಗಿ ಒಂದು ರೀತಿಯ ತೀವ್ರವಾದ ರಕ್ತಸ್ರಾವದ ಜ್ವರದಿಂದ (Hemorrhagic Fever) ಬಳಲುತ್ತವೆ.
 • ಇದನ್ನು 1920 ರಲ್ಲಿ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಹಚ್ಚಲಾಯಿತು.
 • ಈ ರೋಗದಲ್ಲಿನ ಸಾವಿನ ಪ್ರಮಾಣವು ಶೇಕಡಾ 100 ರ ಹತ್ತಿರದಲ್ಲಿದೆ, ಮತ್ತು ಜ್ವರಕ್ಕೆ ಯಾವುದೇ ಚಿಕಿತ್ಸೆ ಇಲ್ಲದಿರುವುದರಿಂದ, ಪ್ರಾಣಿಗಳನ್ನು ಕೊಲ್ಲುವುದು ಸೋಂಕಿನ ಹರಡುವಿಕೆಯನ್ನು ತಡೆಯುವ ಏಕೈಕ ಮಾರ್ಗವಾಗಿದೆ.
 • ಆಫ್ರಿಕನ್ ಹಂದಿ ಜ್ವರವು ಮನುಷ್ಯರಿಗೆ ಅಪಾಯವನ್ನುಂಟು ಮಾಡುವುದಿಲ್ಲ, ಏಕೆಂದರೆ ಇದು ಪ್ರಾಣಿಗಳಿಂದ ಪ್ರಾಣಿಗಳಿಗೆ ಮಾತ್ರ ಹರಡುತ್ತದೆ.
 • FAO ಪ್ರಕಾರ, ಈ ರೋಗವು ಹೆಚ್ಚು ಸಾಂಕ್ರಾಮಿಕವಾಗಿದೆ ಮತ್ತು ಅದರ ಗಡಿಯಾಚೆಗಿನ ಸಾಂಕ್ರಾಮಿಕತೆಯ ಸಾಮರ್ಥ್ಯವು ಈ ಪ್ರದೇಶದ ಎಲ್ಲಾ ದೇಶಗಳನ್ನು ಅಪಾಯಕ್ಕೆ ಸಿಲುಕಿಸಿದೆ, ರೋಗದ ಭೀತಿಯು ಮತ್ತೊಮ್ಮೆ ಆಫ್ರಿಕಾದಿಂದ ಹೊರಗಿನ ದೇಶಗಳನ್ನು ತಲುಪಿದೆ. ಈ ರೋಗವು ಜಾಗತಿಕ ಆಹಾರ ಸುರಕ್ಷತೆ ಮತ್ತು ಮನೆಯ ಆದಾಯಕ್ಕೆ ಗಮನಾರ್ಹ ಅಪಾಯವನ್ನುಂಟುಮಾಡುತ್ತದೆ.

swine_fever

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಮಸಾಲೆ ಮತ್ತು ಪಾಕಶಾಲೆಯ ಗಿಡಮೂಲಿಕೆಗಳ ಕೋಡೆಕ್ಸ್ ಸಮಿತಿಯ’ ಐದನೇ ಅಧಿವೇಶನ,(CCSCH):


(Fifth session of the Codex Committee on Spices and Culinary Herbs -CCSCH)

ಸಂದರ್ಭ:

ಇತ್ತೀಚೆಗೆ, ಮಸಾಲೆಗಳು ಮತ್ತು ಪಾಕಶಾಲೆಯ ಗಿಡಮೂಲಿಕೆಗಳ ಕೋಡೆಕ್ಸ್ ಸಮಿತಿಯ ಐದನೇ ಅಧಿವೇಶನ (Codex Committee on Spices and Culinary Herbs- CCSCH) ವನ್ನು,ಆಹಾರ ಸುರಕ್ಷತೆ ಮತ್ತು ಗುಣಮಟ್ಟದ ಪ್ರಾಧಿಕಾರವು (FSSAI)  ಉದ್ಘಾಟಿಸಿತು.

 • ಕೋಡೆಕ್ಸ್ ಅಲಿಮೆಂಟೇರಿಯಸ್ ಕಮಿಷನ್ (CAC) ದ ಅಡಿಯಲ್ಲಿ ಮಸಾಲೆ ಮತ್ತು ಪಾಕಶಾಲೆಯ ಗಿಡಮೂಲಿಕೆಗಳ ಕೋಡೆಕ್ಸ್ ಸಮಿತಿಯನ್ನು (CCSCH) ಸ್ಥಾಪಿಸಲಾಗಿದೆ.

ಮಸಾಲೆ ಮತ್ತು ಪಾಕಶಾಲೆಯ ಗಿಡಮೂಲಿಕೆಗಳ ಕೋಡೆಕ್ಸ್ ಸಮಿತಿಯ ಕುರಿತು:

 • 2013 ರಲ್ಲಿ ರೂಪುಗೊಂಡಿದೆ.
 • ಸಂಪೂರ್ಣವಾಗಿ ಒಣಗಿದ, ನಿರ್ಜಲೀಕರಣಗೊಂಡ -ಸ್ಥಿತಿಯಲ್ಲಿ, ನೆಲ, ಬಿರುಕುಬಿಟ್ಟ ಮತ್ತು ಪುಡಿಮಾಡಿದ ರೂಪದಲ್ಲಿ ‘ಅಡುಗೆಯಲ್ಲಿ ಬಳಸುವ ಮಸಾಲೆಗಳು ಮತ್ತು ಗಿಡಮೂಲಿಕೆಗಳ’ ಕುರಿತು ವಿಶ್ವದಾದ್ಯಂತ ಮಾನದಂಡಗಳನ್ನು ವಿಸ್ತರಿಸುವುದು ಮತ್ತು ಉತ್ತೇಜಿಸುವುದು ಇದರ ಮುಖ್ಯ ಕಾರ್ಯವಾಗಿದೆ.
 • ಅಗತ್ಯವಿದ್ದರೆ, ಈ ಮಸಾಲೆಗಳು ಮತ್ತು ಗಿಡಮೂಲಿಕೆಗಳ ನಕಲು ಮಾಡುವಿಕೆಯನ್ನು ತಡೆಗಟ್ಟಲು ಮಾನದಂಡಗಳನ್ನು ಅಭಿವೃದ್ಧಿಪಡಿಸುವ ಪ್ರಕ್ರಿಯೆಯಲ್ಲಿ ಇದು ಇತರ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಸಮಾಲೋಚಿಸುತ್ತದೆ.
 • ಈ ಸಮಿತಿಯ ಅಧಿವೇಶನಗಳನ್ನು ಭಾರತದಲ್ಲಿ ಆಯೋಜಿಸಲಾಗಿತ್ತು, ಮತ್ತು ಭಾರತದ ಮಸಾಲೆ ಮಂಡಳಿಯು (ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ) ಈ ಸಮಿತಿಯ ಅಧಿವೇಶನಗಳನ್ನು ಆಯೋಜಿಸುವ ಕಾರ್ಯದರ್ಶಿಯ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

 

ಕೋಡೆಕ್ಸ್ ಎಲಿಮೆಂಟ್ರಿಸ್ ಕಮಿಷನ್’ (CAC) ಕುರಿತು:

 • ಕೋಡೆಕ್ಸ್ ಅಲಿಮೆಂಟರಿಯಸ್ ಕಮಿಷನ್ (Codex Alimentarius Commission-CAC) ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (FAO) ಮತ್ತು ವಿಶ್ವ ಆರೋಗ್ಯ ಸಂಸ್ಥೆ (WHO) ಜಂಟಿಯಾಗಿ 1963 ರಲ್ಲಿ ಜಂಟಿ ಆಹಾರ ಗುಣಮಟ್ಟ ಕಾರ್ಯಕ್ರಮದ ಚೌಕಟ್ಟಿನೊಳಗೆ ಸ್ಥಾಪಿಸಿದ ಅಂತರ್ ಸರ್ಕಾರಿ ಸಂಸ್ಥೆಯಾಗಿದೆ.
 • CACಯ ಸಚಿವಾಲಯವು ರೋಮ್‌ನಲ್ಲಿರುವ ‘ಆಹಾರ ಮತ್ತು ಕೃಷಿ ಸಂಸ್ಥೆ’ (ಎಫ್‌ಎಒ) ಕೇಂದ್ರ ಕಚೇರಿಯಿಂದ ಕಾರ್ಯನಿರ್ವಹಿಸುತ್ತದೆ.
 • ಗ್ರಾಹಕರ ಆರೋಗ್ಯವನ್ನು ಕಾಪಾಡಲು ಮತ್ತು ಆಹಾರ ವ್ಯವಹಾರದಲ್ಲಿ ನ್ಯಾಯಯುತ ವ್ಯವಹಾರವನ್ನು ಖಚಿತಪಡಿಸಿಕೊಳ್ಳಲು ಇದನ್ನು ಸ್ಥಾಪಿಸಲಾಗಿದೆ.
 • ಕೋಡೆಕ್ಸ್ ಎಲಿಮೆಂಟ್ರಿಸ್ ಆಯೋಗವು ಜಿನೀವಾ ಮತ್ತು ರೋಮ್‌ ಗಳ ನಡುವೆ ವರ್ಷಕ್ಕೊಮ್ಮೆ ಪರ್ಯಾಯವಾಗಿ ನಿಯಮಿತ ಸಭೆಗಳನ್ನು ನಡೆಸುತ್ತದೆ.
 • ಪ್ರಸ್ತುತ, ಇದು 189 ಕೋಡೆಕ್ಸ್ ಸದಸ್ಯರನ್ನು ಒಳಗೊಂಡಿದೆ.

 

ಕೋಡೆಕ್ಸ್ ಅಲಿಮೆಂಟರಿಯಸ್ :

 •  ಕೋಡೆಕ್ಸ್ ಅಲಿಮೆಂಟರಿಯಸ್ (Codex Alimentarius) ಎನ್ನುವುದು CAC ಅಳವಡಿಸಿಕೊಂಡ ಅಂತರರಾಷ್ಟ್ರೀಯ ಆಹಾರ ಮಾನದಂಡಗಳ ಸಂಗ್ರಹವಾಗಿದೆ.
 • ಈ ಮಾನದಂಡಗಳು ಎಲ್ಲಾ ಪ್ರಧಾನ ಆಹಾರಗಳನ್ನು ಒಳಗೊಂಡಿರುತ್ತವೆ (ಸಂಸ್ಕರಿಸಿದ, ಅರೆ-ಸಂಸ್ಕರಿಸಿದ, ಕಚ್ಚಾ ಅಥವಾ ಆಹಾರ ಉತ್ಪನ್ನಗಳನ್ನು ಮತ್ತಷ್ಟು ಸಂಸ್ಕರಣೆಯಲ್ಲಿ ಬಳಸಲಾಗುವ ವಸ್ತುಗಳು).
 • ಕೋಡೆಕ್ಸ್ ನಿಬಂಧನೆಗಳು ಸೂಕ್ಷ್ಮ ಜೀವವಿಜ್ಞಾನದ ಮಾನದಂಡಗಳು, ಆಹಾರ ಸೇರ್ಪಡೆಗಳು, ಕೀಟನಾಶಕಗಳು, ಪಶುವೈದ್ಯಕೀಯ ಔಷಧೀಯ ಉಳಿಕೆಗಳು, ಸೇರಿದಂತೆ ಆಹಾರದ ಆರೋಗ್ಯಕರ ಮತ್ತು ಪೌಷ್ಠಿಕಾಂಶದ ಗುಣಮಟ್ಟವನ್ನು ಒಳಗೊಂಡಿವೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಐಟಿ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಲ್ಲಿ ಜಾಗೃತಿ.

 ಮಂಗಳ ಗ್ರಹದಲ್ಲಿ ಆಮ್ಲಜನಕವನ್ನು ಉತ್ಪಾದಿಸಿದ ನಾಸಾದ ಪರ್ಸೇವೆರನ್ಸ್ ಮಿಷನ್:


(NASA’s Perseverance mission has extracted oxygen on Mars)

ಸಂದರ್ಭ:

ಇತ್ತೀಚೆಗೆ, ‘ಪರ್ಸೇವೆರನ್ಸ್ ರೋವರ್’ (Perseverance Rover) ನಲ್ಲಿ ಅಳವಡಿಸಲಾದ ಸಾಧನವು ಮೊದಲ ಬಾರಿಗೆ ಮಂಗಳನ ವಿರಳ ವಾತಾವರಣದಿಂದ ಆಮ್ಲಜನಕವನ್ನು ಉತ್ಪಾದಿಸುವಲ್ಲಿ ಯಶಸ್ವಿಯಾಯಿತು.

 • ಗಗನಯಾತ್ರಿಗಳು ಕಾರ್ಯಾಚರಣೆಯ ಸಮಯದಲ್ಲಿ ಉಸಿರಾಡಲು ಮತ್ತು ಭೂಮಿಗೆ ಮರಳಲು ಈ ತಂತ್ರಜ್ಞಾನವನ್ನು ಅವಲಂಬಿಸಬಹುದಾದ್ದರಿಂದ ಈ ಯಶಸ್ಸು ಮಾನವಸಹಿತ ಭವಿಷ್ಯದ ಕಾರ್ಯಾಚರಣೆಗಳಿಗೆ ಭರವಸೆಯನ್ನು ನೀಡುತ್ತದೆ.

 

ಮಂಗಳ ಗ್ರಹದ ವಾತಾವರಣದ ಸಂಯೋಜನೆ:

ಮಂಗಳ ಗ್ರಹದ ವಾತಾವರಣದಲ್ಲಿ ಕಂಡುಬರುವ ಒಟ್ಟು ಅನಿಲಗಳಲ್ಲಿ ಸುಮಾರು 96 ಪ್ರತಿಶತವನ್ನು ಇಂಗಾಲದ ಡೈಆಕ್ಸೈಡ್ ಒಂದೇ ಹೊಂದಿರುತ್ತದೆ ಮತ್ತು ಆಮ್ಲಜನಕದ ಪ್ರಮಾಣವು ಭೂಮಿಯ ವಾತಾವರಣದಲ್ಲಿರುವ 21% ಗೆ ಹೋಲಿಸಿದರೆ  ಕೇವಲ 0.13% ಮಾತ್ರ  ಕಂಡುಬರುತ್ತದೆ.

 

ಪರ್ಸೇವೆರನ್ಸ್ ರೋವರ್ ಮಂಗಳ ಗ್ರಹದಲ್ಲಿ ಆಮ್ಲಜನಕವನ್ನು ಹೇಗೆ ಉತ್ಪಾದಿಸಿತು?

ಮಾರ್ಸ್ ಆಕ್ಸಿಜನ್ ಇನ್-ಸಿಟು ರಿಸೋರ್ಸ್ ಯುಟಿಲೈಸೇಶನ್ ಎಕ್ಸ್ ಪೆರಿಮೆಂಟ್ (Mars Oxygen In-Situ Resource Utilization Experiment -MOXIE) ಮಂಗಳ ಗ್ರಹದ ವಾತಾವರಣದಲ್ಲಿ ಇಂಗಾಲದ ಡೈಆಕ್ಸೈಡ್‌ನಿಂದ 5 ಗ್ರಾಂ ಆಮ್ಲಜನಕವನ್ನು ಉತ್ಪಾದಿಸಿತು. ಗಗನಯಾತ್ರಿಗಳಿಗೆ 10 ನಿಮಿಷಗಳ ಕಾಲ ಉಸಿರಾಡಲು ಈ ಪ್ರಮಾಣ ಸಾಕು.

 • ಭೂಮಿಯ ಮೇಲಿನ ಮರದಂತೆ, MOXIE ಇಂಗಾಲದ ಡೈಆಕ್ಸೈಡ್ ಅನ್ನು ಹೀರಿಕೊಳ್ಳುತ್ತದೆ ಮತ್ತು ಆಮ್ಲಜನಕವನ್ನು ಹೊರಸೂಸುತ್ತದೆ.
 • ಆಮ್ಲಜನಕವನ್ನು ಉತ್ಪಾದಿಸಲು, MOXIE ಆಮ್ಲಜನಕದ ಪರಮಾಣುಗಳನ್ನು ಇಂಗಾಲದ ಡೈಆಕ್ಸೈಡ್ ಅಣುಗಳಿಂದ ಬೇರ್ಪಡಿಸುತ್ತದೆ. ಸುಮಾರು 800 ° C ತಾಪಮಾನದಲ್ಲಿ ಶಾಖವನ್ನು ಬಳಸಿ ಈ ಪ್ರಕ್ರಿಯೆಯನ್ನು ನಡೆಸಲಾಯಿತು.
 • ಈ ಪ್ರಕ್ರಿಯೆಯಲ್ಲಿ ಇದು ಕಾರ್ಬನ್ ಮೊನಾಕ್ಸೈಡ್ ಅನ್ನು ಒಂದು ತ್ಯಾಜ್ಯವಾಗಿ ಉತ್ಪಾದಿಸುವ ಮೂಲಕ ಮಂಗಳನ ವಾತಾವರಣಕ್ಕೆ ಬಿಡುಗಡೆ ಮಾಡುತ್ತದೆ.

 

MOXIE ಕುರಿತು:

 • ತಂತ್ರಜ್ಞಾನ ಪ್ರದರ್ಶಕ, MOXIE ಅನ್ನು ಗಂಟೆಗೆ 10 ಗ್ರಾಂ ಆಮ್ಲಜನಕವನ್ನು ಉತ್ಪಾದಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಲಾಗಿದೆ, ಮತ್ತು ಇದನ್ನು ಪರ್ಸೇವೆರನ್ಸ್ ರೋವರ್‌ನಲ್ಲಿ ಅಳವಡಿಸಲಾಗಿದೆ.
 • ಇದು ಒಂದು ಕಾರ್ ಬ್ಯಾಟರಿಯ ಗಾತ್ರದ್ದಾಗಿದ್ದು ಭೂಮಿಯ ಮೇಲೆ 37.7 ಪೌಂಡ್ (17.1 ಕೆಜಿ) ಮತ್ತು ಮಂಗಳನ ಅಂಗಳದಲ್ಲಿ  ಕೇವಲ 14 ಪೌಂಡ್ (6.41 ಕೆಜಿ) ತೂಗುತ್ತದೆ.
 • ಮುಂದಿನ ಎರಡು ವರ್ಷಗಳಲ್ಲಿ, MOXIE ಒಂಬತ್ತು ಬಾರಿ ಆಮ್ಲಜನಕವನ್ನು ಹೊರತೆಗೆಯುವ ನಿರೀಕ್ಷೆಯಿದೆ.

 

ಅಂಗಾರಕನ ಅಂಗಳದಲ್ಲಿ ಆಮ್ಲಜನಕದ ಉತ್ಪಾದನೆಯು ಏಕೆ ಅಷ್ಟೊಂದು ಮುಖ್ಯವಾಗಿದೆ?

 • ಮಂಗಳಕ್ಕೆ ಕಳುಹಿಸಲಾದ ಸಿಬ್ಬಂದಿ ಸೇರಿದಂತೆ ಅಂತರಿಕ್ಷದ ಕಾರ್ಯಾಚರಣೆಗಳಿಗೆ ಆಮ್ಲಜನಕದ ಪೂರೈಕೆ ಬಹಳ ಮುಖ್ಯ. ಗಗನಯಾತ್ರಿಗಳ ಉಸಿರಾಟದ ಜೊತೆಗೆ ರಾಕೆಟ್ ಗಳು ಭೂಮಿಗೆ ಹಿಂತಿರುಗುವಾಗ ಆಮ್ಲಜನಕವನ್ನು ರಾಕೆಟ್‌ಗಳಲ್ಲಿ ಇಂಧನವಾಗಿ ಬಳಸಲು ಅನುಕೂಲವಾಗುತ್ತದೆ.
 • ನಾಸಾದ ಪ್ರಕಾರ, ಭವಿಷ್ಯದ ಕಾರ್ಯಾಚರಣೆಯಲ್ಲಿ, ನಾಲ್ಕು ಗಗನಯಾತ್ರಿಗಳಿಗೆ ಮಂಗಳದಿಂದ ಹೊರಡಲು ಸುಮಾರು 7 ಮೆಟ್ರಿಕ್ ಟನ್ ರಾಕೆಟ್ ಇಂಧನ ಮತ್ತು 25 ಮೆಟ್ರಿಕ್ ಟನ್ ಆಮ್ಲಜನಕ ಅಗತ್ಯವಿರುತ್ತದೆ – ಇದು ಇಡೀ ಬಾಹ್ಯಾಕಾಶ ನೌಕೆಯ ತೂಕಕ್ಕೆ ಸಮನಾಗಿರುತ್ತದೆ.
 • ಇದಕ್ಕೆ ವ್ಯತಿರಿಕ್ತವಾಗಿ, ಮಂಗಳ ಗ್ರಹದಲ್ಲಿ ವಾಸಿಸುವ ಮತ್ತು ಕೆಲಸ ಮಾಡುವ ಗಗನಯಾತ್ರಿಗಳಿಗೆ ಉಸಿರಾಡಲು ಕಡಿಮೆ ಆಮ್ಲಜನಕದ ಅಗತ್ಯವಿರುತ್ತದೆ, ಬಹುಶಃ ಒಂದು ಮೆಟ್ರಿಕ್ ಟನ್‌ನಷ್ಟು.
 • ಆದ್ದರಿಂದ, ಹಿಂದಿರುಗುವ ಪ್ರಯಾಣಕ್ಕಾಗಿ, ಭೂಮಿಯಿಂದ ಮಂಗಳ ಗ್ರಹಕ್ಕೆ 25 ಮೆಟ್ರಿಕ್ ಟನ್ ಆಮ್ಲಜನಕವನ್ನು ಸಾಗಿಸುವುದು ಒಂದು ದೊಡ್ಡ ಸವಾಲಾಗಿದೆ, ಮತ್ತು ಕೆಂಪು ಗ್ರಹದಲ್ಲಿಯೇ ದ್ರವ ರೂಪದ ಆಮ್ಲಜನಕವನ್ನು ಉತ್ಪಾದಿಸಬಹುದಾದರೆ, ವಿಜ್ಞಾನಿಗಳ ಕೆಲಸವು ಹೆಚ್ಚು ಸುಲಭವಾಗುತ್ತದೆ.

 

ವಿಷಯಗಳು:ಸಂರಕ್ಷಣೆ,ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

ಭೂ ದಿನ 2021:


(Earth Day)

ಸಂದರ್ಭ:

ಇದನ್ನು ಪ್ರತಿ ವರ್ಷ ಏಪ್ರಿಲ್ 22 ರಂದು ಆಚರಿಸಲಾಗುತ್ತದೆ.

 • ಈ ವರ್ಷ, ಅಂದರೆ 22 ಏಪ್ರಿಲ್ 2021, ಭೂ ದಿನ’ದ 51 ನೇ ವಾರ್ಷಿಕೋತ್ಸವವಾಗಿದೆ.
 • ಭೂ ದಿನ 2021 ರ ವಿಷಯ: ‘ನಮ್ಮ ಭೂಮಿಯನ್ನು ಮರುಸ್ಥಾಪಿಸಿ’. (Restore Our Earth).

ಭೂ ದಿನ’ಕುರಿತು:

 • 1970 ರಲ್ಲಿ ಮೊದಲ ಬಾರಿಗೆ ಭೂ ದಿನವನ್ನು ಆಚರಿಸಲಾಯಿತು.
 • ಸಾಂತಾ ಬಾರ್ಬರಾ ತೈಲ ಸೋರಿಕೆ’ ಘಟನೆ ಮತ್ತು ಹೊಗೆ + ಮಂಜು = ಹೊಂಜು ಮತ್ತು ಕಲುಷಿತ ನದಿಗಳಂತಹ ಇತರ ಸಮಸ್ಯೆಗಳಿಂದಾಗಿ ಈ ಕಾರ್ಯಕ್ರಮವನ್ನು 1969 ರಲ್ಲಿ ಪ್ರಾರಂಭಿಸಲಾಯಿತು.
 • 2009 ರಲ್ಲಿ, ಏಪ್ರಿಲ್ 22 ಅನ್ನು ವಿಶ್ವಸಂಸ್ಥೆಯು ‘ಅಂತರರಾಷ್ಟ್ರೀಯ ಭೂ ತಾಯಿಯ ದಿನ’ (International Mother Earth Day) ಎಂದು ಗುರುತಿಸಿತು.
 • ಪ್ರಸ್ತುತ, ಭೂ ದಿನವನ್ನು ಜಾಗತಿಕವಾಗಿ ಲಾಭರಹಿತ ಸಂಸ್ಥೆಯಾದ ORG ಸಂಯೋಜಿಸುತ್ತಿದೆ.
 • ಪ್ಯಾರಿಸ್ ಒಪ್ಪಂದಕ್ಕೆ 2016 ರ ಭೂ ದಿನದಂದು ಸಹಿ ಹಾಕಲಾಯಿತು.

 

ವಿಷಯಗಳು: ಸಂವಹನ ನೆಟ್‌ವರ್ಕ್‌ಗಳ ಮೂಲಕ ಆಂತರಿಕ ಭದ್ರತೆಗೆ ಸವಾಲುಗಳು, ಆಂತರಿಕ ಭದ್ರತಾ ಸವಾಲುಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ, ಸೈಬರ್ ಸುರಕ್ಷತೆಯ ಮೂಲಗಳು; ಸೈಬರ್ ಭದ್ರತೆಗೆ ಸಂಬಂಧಿಸಿದ ಸಮಸ್ಯೆಗಳು ಅಕ್ರಮ ಹಣ ವರ್ಗಾವಣೆ ಮತ್ತು ಅದರ ತಡೆಗಟ್ಟುವಿಕೆ.

ವಾಟ್ಸಾಪ್ ನ ಗೌಪ್ಯತೆ ನೀತಿ:


(WhatsApp privacy policy)

 ಸಂದರ್ಭ:

ಇತ್ತೀಚೆಗೆ, ತನ್ನ ವಿವಾದಾತ್ಮಕ ಹೊಸ ಗೌಪ್ಯತೆ ನೀತಿಯ ಬಗ್ಗೆ ತನಿಖೆ ನಡೆಸಬೇಕೆಂದು ಭಾರತದ ಸ್ಪರ್ಧಾ ಆಯೋಗ (Competition Commission of india- CCI) ನೀಡಿದ ಆದೇಶವನ್ನು ಪ್ರಶ್ನಿಸಿ ತ್ವರಿತ ಮೆಸೇಜಿಂಗ್ ಆ್ಯಪ್ ವಾಟ್ಸಾಪ್ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ.

ಏನಿದು ಪ್ರಕರಣ?

ವಾಟ್ಸಾಪ್ ತನ್ನ ‘ಗೌಪ್ಯತೆ ನೀತಿ’ಯ ವಿಷಯವು ಸುಪ್ರೀಂಕೋರ್ಟ್ ಮುಂದೆ ವಿಚಾರಣೆಗೆ ಬಾಕಿ ಇರುವುದರಿಂದ, ಭಾರತದ ಸ್ಪರ್ಧಾ ಆಯೋಗ (CCI) ತನಿಖೆ ನಡೆಸಬೇಕೆಂದು ಆದೇಶಿಸುವ ಅಗತ್ಯವಿಲ್ಲ ಎಂದು ಅರ್ಜಿಯಲ್ಲಿ ವಾದಿಸಿದೆ. ‘ಭಾರತದ ಸ್ಪರ್ಧಾ ಆಯೋಗ’ದ ಈ ಆದೇಶವನ್ನು ಪ್ರಶ್ನಿಸಿ ವಾಟ್ಸಾಪ್ ಮಾಲೀಕ ಫೇಸ್‌ಬುಕ್ ಸಹ ಇದೇ ರೀತಿಯ ಅರ್ಜಿಯನ್ನು ಸಲ್ಲಿಸಿದೆ.

 

ಭಾರತದ ಸ್ಪರ್ಧಾ ಆಯೋಗವು (CCI) ಏನು ಹೇಳಿದೆ?

 • ಡೇಟಾದ ಪ್ರವೇಶವು ಪ್ರಬಲ ಸ್ಥಾನದ ದುರುಪಯೋಗಕ್ಕೆ ಕಾರಣವಾಗುತ್ತದೆಯೇ ಅಥವಾ ಅದನ್ನು ದುರುಪಯೋಗಪಡಿಸಿಕೊಳ್ಳಬಹುದೇ ಎಂದು ಕಂಡುಹಿಡಿಯಲು ತನಿಖೆಗೆ ಆದೇಶಿಸಲಾಗಿದೆ ಎಂದು CCI ವಾದಿಸಿದೆ.
 • ವಾಟ್ಸಾಪ್ ನ ಹೊಸ ಗೌಪ್ಯತೆ ನೀತಿಯು ವಿಪರೀತ ದತ್ತಾಂಶ ಸಂಗ್ರಹಣೆಯಿಂದ ಪ್ರಭಾವಿತವಾಗುತ್ತಿದೆ ಎಂದು ವರದಿಯಾಗಿದೆ ಮತ್ತು ಗ್ರಾಹಕರ ಅತಿಯಾದ ದತ್ತಾಂಶ ಸಂಗ್ರಹಣೆಯಿಂದ ಸ್ಪರ್ಧಾತ್ಮಕ-ವಿರೋಧಿ ಸಂದರ್ಭದಲ್ಲಿ ದತ್ತಾಂಶದ ಬಳಕೆ ಮತ್ತು ಹಂಚಿಕೆಗೆ ಕಾರಣವಾಗಬಹುದೆ ಎಂದು ಪರಿಶೀಲಿಸಬೇಕಾಗಿದೆ ಎಂದು ಹೇಳಿದೆ.

 

ಈ ನೀತಿಯ ಪ್ರಮುಖ ಅಂಶಗಳು:

 • ತೃತೀಯ ವ್ಯಕ್ತಿಯ ಸೇವೆಗಳೊಂದಿಗೆ ಮಾಹಿತಿಯನ್ನು ಹಂಚಿಕೊಳ್ಳುವುದು: ಬಳಕೆದಾರರು ಮೂರನೇ ವ್ಯಕ್ತಿಯ ಸೇವೆಗಳನ್ನು ಅಥವಾ ವಾಟ್ಸಾಪ್ ಸೇವೆಗಳೊಂದಿಗೆ ಸಂಯೋಜಿಸಲ್ಪಟ್ಟ ಇತರ ಫೇಸ್‌ಬುಕ್ ಕಂಪನಿ ಉತ್ಪನ್ನಗಳನ್ನು ಅವಲಂಬಿಸಿದಾಗ, ಬಳಕೆದಾರರ ಕುರಿತ ಅಥವಾ ನೀವು ಇತರರೊಂದಿಗೆ ಯಾವ ವಿಷಯವನ್ನು ಹಂಚಿಕೊಳ್ಳುತ್ತೀರಿ ಎಂಬ ಮಾಹಿತಿಯನ್ನು ಮೂರನೇ ವ್ಯಕ್ತಿಯ ಸೇವೆಗಳು ಪಡೆಯಬಹುದು.
 • ಹಾರ್ಡ್‌ವೇರ್ ಮಾಹಿತಿ: ಬಳಕೆದಾರರ ಸಾಧನಗಳ ಬ್ಯಾಟರಿ ಮಟ್ಟಗಳು, ಸಿಗ್ನಲ್ ಸಾಮರ್ಥ್ಯ, ಅಪ್ಲಿಕೇಶನ್ ಆವೃತ್ತಿ, ಬ್ರೌಸರ್ ಮಾಹಿತಿ, ಮೊಬೈಲ್ ನೆಟ್‌ವರ್ಕ್, ಸಂಪರ್ಕ ಮಾಹಿತಿ (ಫೋನ್ ಸಂಖ್ಯೆ, ಮೊಬೈಲ್ ಆಪರೇಟರ್ ಅಥವಾ ISP ಸೇರಿದಂತೆ) ಇತ್ಯಾದಿಗಳನ್ನು ವಾಟ್ಸಾಪ್ ಸಂಗ್ರಹಿಸುತ್ತದೆ.
 • ಖಾತೆಯನ್ನು ಅಳಿಸಲಾಗುತ್ತದೆ: ಅಪ್ಲಿಕೇಶನ್‌ನಲ್ಲಿ ನೀಡಿರುವ ಕಾರ್ಯವಿಧಾನವನ್ನು ಬಳಸದೆ ಬಳಕೆದಾರರು ತಮ್ಮ ಸಾಧನದಿಂದ ವಾಟ್ಸಾಪ್ ಅಪ್ಲಿಕೇಶನ್ ಅನ್ನು ತೆಗೆದುಹಾಕಿದರೆ, ಆ ಬಳಕೆದಾರರ ಮಾಹಿತಿಯನ್ನು ವಾಟ್ಸಾಪ್ ಪ್ಲಾಟ್‌ಫಾರ್ಮ್‌ನಲ್ಲಿ ಸಂಗ್ರಹಿಸಲಾಗುತ್ತದೆ.
 • ಡೇಟಾ ಸಂಗ್ರಹಣೆ: ಇದು ಫೇಸ್‌ಬುಕ್‌ನ ಜಾಗತಿಕ ಮೂಲಸೌಕರ್ಯ ಮತ್ತು ದತ್ತಾಂಶ ಕೇಂದ್ರಗಳನ್ನು ಬಳಸುತ್ತದೆ ಎಂದು ವಾಟ್ಸಾಪ್ ಹೇಳಿದೆ. ಕೆಲವು ಸಂದರ್ಭಗಳಲ್ಲಿ, ಬಳಕೆದಾರರ ಡೇಟಾವನ್ನು ಯುನೈಟೆಡ್ ಸ್ಟೇಟ್ಸ್ ಅಥವಾ ಫೇಸ್‌ಬುಕ್ ಅಂಗಸಂಸ್ಥೆಗಳನ್ನು ಹೊಂದಿರುವ ಸ್ಥಳಗಳಿಗೆ ವರ್ಗಾಯಿಸಬಹುದು ಎಂದು ಸಹ ಹೇಳಲಾಗಿದೆ.
 •   ಸ್ಥಳ: ಬಳಕೆದಾರರು ತಮ್ಮ ಸ್ಥಳ-ಸಂಬಂಧಿತ ವೈಶಿಷ್ಟ್ಯಗಳನ್ನು ಬಳಸದಿದ್ದರೂ ಸಹ, ವಾಟ್ಸಾಪ್ ಅವರ ಸಾಮಾನ್ಯ ಸ್ಥಳವನ್ನು (ನಗರ, ದೇಶ) ಅಂದಾಜು ಮಾಡಲು IP ವಿಳಾಸ ಮತ್ತು ಫೋನ್ ನಂಬರ್ ನ ಪ್ರದೇಶ ಕೋಡ್‌ನಂತಹ (Telephone Code) ಇತರ ಮಾಹಿತಿಯನ್ನು ಸಂಗ್ರಹಿಸುತ್ತದೆ.
 • ಪಾವತಿ ಸೇವೆ: ಯಾವುದೇ ಬಳಕೆದಾರರು ತಮ್ಮ ಪಾವತಿ ಸೇವೆಗಳನ್ನು ಬಳಸಿದರೆ ಅವರು ಪಾವತಿ ಖಾತೆ ಮತ್ತು ವಹಿವಾಟಿನ ಮಾಹಿತಿಯನ್ನು ಒಳಗೊಂಡಂತೆ ನಿಮ್ಮ ಬಗ್ಗೆ ಹೆಚ್ಚುವರಿ ಮಾಹಿತಿಯನ್ನು ಪ್ರಕ್ರಿಯೆಗೊಳಿಸುತ್ತಾರೆ ಎಂದು ವಾಟ್ಸಾಪ್ ಹೇಳುತ್ತದೆ.

 

ಸಂಬಂಧಿತ ಕಾಳಜಿಗಳು ಮತ್ತು ಸಮಸ್ಯೆಗಳು:

 • ವಾಟ್ಸಾಪ್ನ ಹೊಸ ನೀತಿಯು 2019 ರ ಡೇಟಾ ಸಂರಕ್ಷಣಾ ಮಸೂದೆಗೆ ಆಧಾರವನ್ನು ಒದಗಿಸುವ ‘ಶ್ರೀಕೃಷ್ಣ ಸಮಿತಿ’ ವರದಿಯ ಶಿಫಾರಸುಗಳನ್ನು ಕಡೆಗಣಿಸುತ್ತದೆ.
 • ಡೇಟಾ ಸ್ಥಳೀಕರಣದ ತತ್ವವು ವೈಯಕ್ತಿಕ ಡೇಟಾದ ಹೊರಗಿನ ವರ್ಗಾವಣೆಯನ್ನು ನಿಷೇಧಿಸುವ ಗುರಿಯನ್ನು ಹೊಂದಿದೆ, ಇದು ವಾಟ್ಸಾಪ್ ನ ಹೊಸ ಗೌಪ್ಯತೆ ನೀತಿಯೊಂದಿಗೆ ವಿರೋಧಾಭಾಸಕ್ಕೆ ಕಾರಣವಾಗಬಹುದು.
 • ಹೊಸ ಗೌಪ್ಯತೆ ನೀತಿ ಜಾರಿಗೆ ಬಂದಾಗ, ವಾಟ್ಸಾಪ್ ಬಳಕೆದಾರರ ಮೆಟಾಡೇಟಾವನ್ನು ಹಂಚಿಕೊಳ್ಳಬಹುದು, ಅಂದರೆ, ಸಂಭಾಷಣೆಯ ಮೂಲ ಸಂದೇಶಗಳನ್ನು ಹೊರತುಪಡಿಸಿ ಎಲ್ಲವನ್ನೂ ಹಂಚಿಕೊಳ್ಳಬಹುದು.
 • ಬಳಕೆದಾರರು ವಾಟ್ಸಾಪ್ ನ ನವೀಕರಿಸಿದ ಗೌಪ್ಯತೆ ನೀತಿಯನ್ನು ಒಪ್ಪದಿದ್ದರೆ, ಈ ಹೊಸ ನೀತಿ ಜಾರಿಗೆ ಬಂದ ನಂತರ ಅವರು ವಾಟ್ಸಾಪ್ ಅನ್ನು ಬಿಡಬೇಕಾಗುತ್ತದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


#FOSS4GOV ಇನ್ನೋವೇಶನ್ ಚಾಲೆಂಜ್:

(#FOSS4GOV Innovation Challenge)

 •  ಸರ್ಕಾರದಲ್ಲಿ ಉಚಿತ ಮತ್ತು ಮುಕ್ತ ಮೂಲ ಸಾಫ್ಟ್‌ವೇರ್’ (Free and Open Source Software- FOSS) ಅಳವಡಿಸಿಕೊಳ್ಳುವುದನ್ನು ವೇಗಗೊಳಿಸಲು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು # FOSS4GOV ಎಂಬ ಇನ್ನೋವೇಶನ್ ಚಾಲೆಂಜ್ ಅನ್ನು ಘೋಷಿಸಿದೆ.
 • # FOSS4GOV ಇನ್ನೋವೇಶನ್ ಚಾಲೆಂಜ್ ಅಡಿಯಲ್ಲಿ, ಆರೋಗ್ಯ, ಶಿಕ್ಷಣ, ಕೃಷಿ, ನಗರ ಆಡಳಿತ ಇತ್ಯಾದಿಗಳಲ್ಲಿ Govtech ನ ಸಂಭಾವ್ಯ ಅನ್ವಯಿಕೆಗಳೊಂದಿಗೆ ಕಾರ್ಯಗತಗೊಳಿಸಬಹುದಾದ ಮುಕ್ತ ಮೂಲ ಉತ್ಪನ್ನ ಆವಿಷ್ಕಾರಗಳನ್ನು ಅನ್ವೇಷಿಸಲು FOSS ನಾವೀನ್ಯಕಾರರು, ತಂತ್ರಜ್ಞಾನ ಉದ್ಯಮಿಗಳು ಮತ್ತು ಭಾರತೀಯ ಸ್ಟಾರ್ಟ್ ಅಪ್‌ಗಳಿಗೆ ಸಚಿವಾಲಯವು ಕರೆ ನೀಡಿದೆ.

ಕೆ.ಆರ್.ಐ.ನಂಗಲಾ:

(KRI Nanggala)

 •  ಇದು ಇಂಡೋನೇಷ್ಯಾದ ಜಲಾಂತರ್ಗಾಮಿ ನೌಕೆಯಾಗಿದ್ದು ಇತ್ತೀಚೆಗೆ ಕಾಣೆಯಾಗಿದೆ.
 • ವರದಿಗಳ ಪ್ರಕಾರ, ಈ ಜಲಾಂತರ್ಗಾಮಿ ನೌಕೆಯು ಬಾಲಿ ದ್ವೀಪದಿಂದ ಉತ್ತರಕ್ಕೆ 25 ಮೈಲಿ ದೂರದಲ್ಲಿ ಮಿಲಿಟರಿ ಅಭ್ಯಾಸದಲ್ಲಿ ತೊಡಗಿತ್ತು.
 • ಕಾಣೆಯಾದ ಜಲಾಂತರ್ಗಾಮಿ ನೌಕೆಯನ್ನು ಪತ್ತೆ ಹಚ್ಚಲು ಮತ್ತು ಇಂಡೋನೇಷ್ಯಾ ನೌಕಾಪಡೆಗೆ ಸಹಾಯ ಮಾಡಲು ಭಾರತೀಯ ನೌಕಾಪಡೆ ತನ್ನ ‘ಆಳ ಸಾಗರದಲ್ಲಿ ಮುಳುಗುವ (ಪಾರುಗಾಣಿಕಾ) ಸಂರಕ್ಷಣಾ’ ಹಡಗನ್ನು (deep submergence rescue vessel –DSRV) ವಿಶಾಖಪಟ್ಟಣಂನಿಂದ ರವಾನಿಸಿದೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos