Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 22ನೇ ಏಪ್ರಿಲ್ 2021

 

ಪರಿವಿಡಿ:

 ಸಾಮಾನ್ಯ ಅಧ್ಯಯನ ಪತ್ರಿಕೆ 1: 

1. ಅಮೇರಿಕಾದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಆಯೋಗದ (USCIRF) ವರದಿ.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಸಂವಿಧಾನದ 311 (2) (ಸಿ) ವಿಧಿ.

2. ಉಚ್ಚ ನ್ಯಾಯಾಲಯಗಳಲ್ಲಿ ತಾತ್ಕಾಲಿಕ ನ್ಯಾಯಾಧೀಶರ ನೇಮಕಾತಿಗೆ ಹಸಿರು ನಿಶಾನೆ ತೋರಿದ ಸುಪ್ರೀಂಕೋರ್ಟ್.

3. ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. 94ನೇ ವಯಸ್ಸಿನಲ್ಲಿ ನಿಧನರಾದ,ಬ್ಯಾಂಕಿಂಗ್ ಸುಧಾರಣೆಗಳ ಪಿತಾಮಹ: ಮಾಜಿ RBI ಗವರ್ನರ್ ಎಂ.ನರಸಿಂಹಮ್.

2. ಡ್ರಗ್ಸ್ ಪ್ರಕರಣಗಳ ಕುರಿತು ಪಂಜಾಬ್ ಸರ್ಕಾರದ ಪುರಸ್ಕಾರ ನೀತಿ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ನಾಗರಿಕ ಸೇವೆಗಳ ದಿನ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು: ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಅಮೇರಿಕಾದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಆಯೋಗದ (USCIRF) ವರದಿ:


(USCIRF report)

 ಸಂದರ್ಭ:

ಇತ್ತೀಚೆಗೆ, 2021 ರ ವಾರ್ಷಿಕ ವರದಿಯನ್ನು ಅಮೇರಿಕಾದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಆಯೋಗವು (United States Commission on International Religious Freedom-USCIRF) ಬಿಡುಗಡೆ ಮಾಡಿದೆ. USCIRF ಒಂದು, ಸ್ವತಂತ್ರ, ಎರಡು ಹಂತದ, ಫೆಡರಲ್ ಸರ್ಕಾರಿ ಆಯೋಗವಾಗಿದೆ.

ವರದಿಯ ಪ್ರಮುಖ ಅಂಶಗಳು:

 • ಈ ವರದಿಯು, 14 ದೇಶಗಳನ್ನು ನಿರ್ದಿಷ್ಟ ಕಾಳಜಿಯ ದೇಶಗಳು” (Countries of Particular Concern-CPC) ಎಂದು ಹೆಸರಿಸಬೇಕು ಎಂದು ಹೇಳುತ್ತದೆ.
 • ಈ ದೇಶಗಳ ಸರ್ಕಾರಗಳು ‘ಉತ್ತಮ ಯೋಜಿತ, ನಿರಂತರ ಮತ್ತು ಧಾರ್ಮಿಕ ಸ್ವಾತಂತ್ರ್ಯದ ಉಲ್ಲಂಘನೆಯನ್ನು’ ನಿರ್ಲಕ್ಷಿಸುತ್ತಿವೆ ಅಥವಾ ಸಹಿಸಿಕೊಳ್ಳುತ್ತಿವೆ. ಭಾರತವೂ ಕೂಡ ಇದರ ಭಾಗವಾಗಿದೆ ಎಂದು ವರದಿಯು ಹೇಳುತ್ತದೆ.

 

USCIRF ಭಾರತದಲ್ಲಿ ಧಾರ್ಮಿಕ ಸ್ವಾತಂತ್ರದ ಪರಿಸ್ಥಿತಿಗಳ ಬಗ್ಗೆ ಮಾಡಿದ ಅವಲೋಕನಗಳು:

 •  USCIRF ಭಾರತದಲ್ಲಿನ ಧಾರ್ಮಿಕ ಸ್ವಾತಂತ್ರ್ಯದ ಪರಿಸ್ಥಿತಿಗಳು ಈ ವರ್ಷವೂ “ನಕಾರಾತ್ಮಕ ಪಥದಲ್ಲಿ ಮುಂದುವರೆದಿವೆ” ಎಂದು ಹೇಳಿದೆ.
 • ಸರ್ಕಾರ ಉತ್ತೇಜಿಸಿದ ಹಿಂದೂ ರಾಷ್ಟ್ರೀಯತಾವಾದಿ ನೀತಿಗಳ ಪರಿಣಾಮವಾಗಿ, ಧಾರ್ಮಿಕ ಸ್ವಾತಂತ್ರ್ಯವು ‘ಯೋಜಿತ, ನಿರಂತರ ಮತ್ತು ಅತಿಯಾದ ಉಲ್ಲಂಘನೆಯೊಂದಿಗೆ’ ಮುಂದುವರೆದಿದೆ.
 • ಧಾರ್ಮಿಕವಾಗಿ ತಾರತಮ್ಯದ ಪೌರತ್ವ ತಿದ್ದುಪಡಿ ಕಾಯ್ದೆ (CAA)ಯ ಅಂಗೀಕಾರವನ್ನು ವರದಿಯಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಲಾಗಿದೆ.
 • ವರದಿಯಲ್ಲಿ, ಕಳೆದ ವರ್ಷ ನಡೆದ ದೆಹಲಿ ಗಲಭೆಯಲ್ಲಿ ಪೊಲೀಸರ ಸಹಭಾಗಿತ್ವವನ್ನು ಎತ್ತಿ ತೋರಿಸಲಾಗಿದೆ.
 • ಇದಲ್ಲದೆ, ಧಾರ್ಮಿಕ ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಮತ್ತು ಹಿಂಸಾಚಾರವನ್ನು ಹರಡುವವರೆಡೆಗೆ ಸರ್ಕಾರವು ನಿಷ್ಕ್ರಿಯತೆಯನ್ನು ತೋರಿಸಿದೆ.“ಬಾಬರಿ ಮಸೀದಿಯನ್ನು ನೆಲಸಮಗೊಳಿಸಿದ ಎಲ್ಲರನ್ನೂ ಖುಲಾಸೆಗೊಳಿಸಿರುವುದು” ಮತ್ತು  ಧಾರ್ಮಿಕ ಹಿಂಸಾಚಾರವನ್ನು ನಿಭಾಯಿಸುವಲ್ಲಿ ಸರ್ಕಾರದ ನಿಷ್ಕ್ರಿಯತೆಯಿಂದಾಗಿ ಇದನ್ನು “ಭಯವಿಲ್ಲದ ಸಂಸ್ಕೃತಿ” ಎಂದು ವರದಿ ಹೇಳಿದೆ.

 

USCIRF ಮಾಡಿದ ಶಿಫಾರಸುಗಳು:

 • ‘ಧಾರ್ಮಿಕ ಸ್ವಾತಂತ್ರ್ಯದ ಸಂಪೂರ್ಣ ಉಲ್ಲಂಘನೆ’ ಮಾಡುವ ಭಾರತೀಯ ವ್ಯಕ್ತಿಗಳು ಮತ್ತು ಸಂಸ್ಥೆಗಳ ಮೇಲೆ ಆಡಳಿತವು ಯೋಜಿತ ನಿರ್ಬಂಧಗಳನ್ನು ವಿಧಿಸಬೇಕು.
 • ಚತುರ್ಭುಜ ಕ್ವಾಡ್ ಗುಂಪಿನ ಸಚಿವರ-ಮಟ್ಟದ ಸಮ್ಮೇಳನದಂತಹ ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ವೇದಿಕೆಗಳಲ್ಲಿ ಅಂತರ-ಧಾರ್ಮಿಕ ಮಾತುಕತೆ ಮತ್ತು ಎಲ್ಲಾ ಸಮುದಾಯಗಳ ಹಕ್ಕುಗಳನ್ನು ಉತ್ತೇಜಿಸಬೇಕು.
 • ಈ ವಿಷಯಗಳನ್ನು, ಯುಎಸ್-ಇಂಡಿಯಾ ದ್ವಿಪಕ್ಷೀಯ ವೇದಿಕೆಗಳಲ್ಲಿ, ಇಂತಹ ವಿಷಯಗಳ ಬಗ್ಗೆ ವಿಚಾರಣೆಗಳನ್ನು ಆಯೋಜಿಸುವ ಮೂಲಕ, ಪತ್ರಗಳನ್ನು ಬರೆಯುವ ಮೂಲಕ ಮತ್ತು ಅಮೆರಿಕ ಸಂಸತ್ತಿನಿಂದ ನಿಯೋಗಗಳನ್ನು ರಚಿಸುವ ಮೂಲಕ ಎತ್ತಬೇಕು.

 

ಪರಿಣಾಮಗಳು:

USCIRF ನ ಶಿಫಾರಸುಗಳು ಬಾಧ್ಯಸ್ಥ ವಾಗಿರದಂತಹವು,(USCIRF recommendations are non-binding) ಮತ್ತು ಕಳೆದ ವರ್ಷ ಡಿಸೆಂಬರ್ ನಲ್ಲಿ  ತನ್ನದೆಯಾದ ನಿರ್ಣಯಗಳನ್ನು ಬಿಡುಗಡೆ ಮಾಡಿದ ಇದು ತನ್ನ ವರದಿಯಲ್ಲಿ ಭಾರತವನ್ನು “ನಿರ್ದಿಷ್ಟ ಕಾಳಜಿ ದೇಶ” (CPC) ಎಂದು ಹೆಸರಿಸಬೇಕೆಂದು ಮಾಡಿದ ಶಿಫಾರಸುಗಳನ್ನು, ಟ್ರಂಪ್ ಆಡಳಿತ ತಿರಸ್ಕರಿಸಿತ್ತು.

 

ಅಮೇರಿಕಾದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಆಯೋಗ (USCIRF) ಎಂದರೇನು?

 • ಅಮೇರಿಕಾದ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯಆಯೋಗ (USCIRF) ಅಮೆರಿಕ ಸಂಯುಕ್ತ ಸಂಸ್ಥಾನದ ಸ್ವತಂತ್ರ, ಎರಡು ಹಂತದ, ಫೆಡರಲ್ ಸರ್ಕಾರಿ ಆಯೋಗವಾಗಿದೆ. ಇದನ್ನು 1998 ರಲ್ಲಿ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ (International Religious Freedom Act- IRFA) ಅಡಿಯಲ್ಲಿ ಸ್ಥಾಪಿಸಲಾಯಿತು.
 • ಇದು ಧರ್ಮದ ಸ್ವಾತಂತ್ರ್ಯ ಮತ್ತು ಪ್ರಪಂಚದಲ್ಲಿನ ನಂಬಿಕೆಯ ಕುರಿತ ಸಾರ್ವತ್ರಿಕ ಹಕ್ಕನ್ನು ಮೇಲ್ವಿಚಾರಣೆ ಮಾಡುತ್ತದೆ.
 • USCIRF, ಜಾಗತಿಕವಾಗಿ, ಅಂತರರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸುತ್ತದೆ, ಧಾರ್ಮಿಕ ಸ್ವಾತಂತ್ರ್ಯ-ಸಂಬಂಧಿತ ಉಲ್ಲಂಘನೆಗಳನ್ನು ಮೇಲ್ವಿಚಾರಣೆ ಮಾಡುತ್ತದೆ ಮತ್ತು ಅಧ್ಯಕ್ಷರು, ವಿದೇಶಾಂಗ ಕಾರ್ಯದರ್ಶಿ ಮತ್ತು ಕಾಂಗ್ರೆಸ್ ಗೆ (ಅಮೆರಿಕದ ಸಂಸತ್ತು) ನೀತಿ ಶಿಫಾರಸುಗಳನ್ನು ಮಾಡುತ್ತದೆ.

 

ನಿರ್ದಿಷ್ಟ ಕಾಳಜಿ ದೇಶಗಳು” (CPC) ಎಂದರೇನು?

1998 ರ ಅಂತರರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯ (IRFA) ಅಡಿಯಲ್ಲಿ, ಧಾರ್ಮಿಕ ಸ್ವಾತಂತ್ರ್ಯದ ಸಂಪೂರ್ಣ ಉಲ್ಲಂಘನೆಗಾಗಿ ದೇಶವೊಂದನ್ನು ಅಪರಾಧಿ ಎಂದು ಘೋಷಿಸಲಾಗುತ್ತದೆ, ಆ ಮೂಲಕ ಆ ದೇಶವನ್ನು  ನಿರ್ದಿಷ್ಟ ಕಾಳಜಿ ದೇಶ”(CPC) ಎಂದು ಗೊತ್ತು ಪಡಿಸಲಾಗುತ್ತದೆ.‘ವಿಶೇಷವಾಗಿ ಧಾರ್ಮಿಕ ಸ್ವಾತಂತ್ರ್ಯದ ಸಂಪೂರ್ಣ / ತೀವ್ರ ಉಲ್ಲಂಘನೆ’ ಎಂದರೆ ‘ವ್ಯವಸ್ಥಿತವಾಗಿ, ನಿರಂತರವಾಗಿ ನಡೆಯುತ್ತಿರುವ ಧಾರ್ಮಿಕ ಸ್ವಾತಂತ್ರ್ಯದ ಸಂಪೂರ್ಣ ಉಲ್ಲಂಘನೆ’ ಯಾಗಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು:ಭಾರತೀಯ ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

ಸಂವಿಧಾನದ 311 (2) (ಸಿ) ವಿಧಿ:


(Article 311(2)(C) of the Constitution)

 

ಸಂದರ್ಭ:

ಇತ್ತೀಚೆಗೆ, ಜಮ್ಮು ಮತ್ತು ಕಾಶ್ಮೀರ ಸರ್ಕಾರವು ಭದ್ರತೆಗೆ ಧಕ್ಕೆ ತರುವ ಅಥವಾ ರಾಷ್ಟ್ರ ವಿರೋಧಿ ಚಟುವಟಿಕೆಗಳಿಗೆ ಸಂಬಂಧಿಸಿದ ಯಾವುದೇ ಪ್ರಕರಣಗಳಲ್ಲಿ ಭಾಗಿಯಾಗಿರುವ ಸರ್ಕಾರಿ ನೌಕರರನ್ನು ಗುರುತಿಸಿ ತನಿಖೆ ನಡೆಸಲು ವಿಶೇಷ ಕಾರ್ಯಪಡೆ’ (Special Task Force- STF) ಯನ್ನು ರಚಿಸಿದೆ.

 

ಸಂವಿಧಾನದ 311 (2) (ಸಿ) ವಿಧಿ ಅನ್ವಯ ಈ ‘ವಿಶೇಷ ಕಾರ್ಯಪಡೆ’ (STF), ಕ್ರಮ ತೆಗೆದುಕೊಳ್ಳುವ ಅಗತ್ಯವಿರುವ ಚಟುವಟಿಕೆಗಳಲ್ಲಿ ಭಾಗಿಯಾಗಿರಬಹುದೆಂದು ಶಂಕಿಸಲಾಗಿರುವ ನೌಕರರ ಪ್ರಕರಣಗಳನ್ನು ತನಿಖೆ ಮಾಡುತ್ತದೆ.

 

ಹಿನ್ನೆಲೆ:

ಸರ್ಕಾರವು,ಈ ಕ್ರಮವನ್ನು ಕೈಗೊಳ್ಳಲು ಕಾರಣವೆಂದರೆ  ಈ ಹಿಂದೆ ಅನೇಕ ಸರ್ಕಾರಿ ನೌಕರರು ಕಾಶ್ಮೀರದಲ್ಲಿ ನಡೆಯುತ್ತಿರುವ ಸಂಘರ್ಷದ ಬಗ್ಗೆ ತಮ್ಮ ರಾಜಕೀಯ ಅಭಿಪ್ರಾಯವನ್ನು ಸಾರ್ವಜನಿಕವಾಗಿ ವ್ಯಕ್ತಪಡಿಸುತ್ತಿದ್ದರು.

 • ಅಧಿಕೃತ ಅಂಕಿ ಅಂಶದ ಪ್ರಕಾರ, 2016 ರಲ್ಲಿ ಐದು ತಿಂಗಳ ಕಾಲ ನಡೆದ ಆಂದೋಲನದ ಸಂದರ್ಭದಲ್ಲಿ, ಅನೇಕ ಉದ್ಯೋಗಿಗಳು ಕಲ್ಲುತೂರಾಟ, ಭಾರತ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸುತ್ತಿರುವುದು ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಭಾರತ ವಿರೋಧಿ ಭಾವನೆಗಳನ್ನು ವ್ಯಕ್ತಪಡಿಸುತ್ತಿರುವುದು ಕಂಡುಬಂದಿದೆ.

 

ವಿಧಿ 311 (2) (ಸಿ) ಅಡಿಯಲ್ಲಿ:

 •  ಸಾರ್ವಜನಿಕ ಸೇವೆಯಲ್ಲಿ ವ್ಯಕ್ತಿಯನ್ನು ಉಳಿಸಿಕೊಳ್ಳುವುದು ರಾಜ್ಯದ ಭದ್ರತೆಯ ಹಿತದೃಷ್ಟಿಯಿಂದ ಪ್ರಯೋಜನಕಾರಿಯಲ್ಲ ಎಂದು ಅಧ್ಯಕ್ಷರು ತಿಳಿದಾಗ, ಆರ್ಟಿಕಲ್ 311 (2) ರಲ್ಲಿ ತಿಳಿಸಲಾದ ಸಾಮಾನ್ಯ ವಿಧಾನವನ್ನು ಅನುಸರಿಸದೆ ಅಂತಹವರ ಸೇವೆಗಳನ್ನು ಕೊನೆಗೊಳಿಸಬಹುದು.
 • ಈ ನಿಬಂಧನೆಯಲ್ಲಿ ಉಲ್ಲೇಖಿಸಲಾದ ‘ತೃಪ್ತಿ’ ಎಂದರೆ ರಾಜ್ಯ ಭದ್ರತೆಯ ಹಿತದೃಷ್ಟಿಯಿಂದ ಸಂಬಂಧಪಟ್ಟ ಉದ್ಯೋಗಿಗೆ ಅವಕಾಶ ನೀಡದಿರುವ ಬಗ್ಗೆ ‘ರಾಷ್ಟ್ರಪತಿಗಳ ವ್ಯಕ್ತಿನಿಷ್ಠ ತೃಪ್ತಿ’ ಯಾಗಿದೆ.
 • ಈ ಲೇಖನದ ಅಡಿಯಲ್ಲಿ, ‘ತೃಪ್ತಿ’ಯ ಕಾರಣಗಳನ್ನು ಲಿಖಿತವಾಗಿ ದಾಖಲಿಸುವುದು ಕಡ್ಡಾಯವಲ್ಲ. ಇದರರ್ಥ ರಾಷ್ಟ್ರಪತಿಗೆ ನೀಡಲಾಗಿರುವ ಈ ಅಧಿಕಾರವು ಅಡೆತಡೆಯಿಲ್ಲದ’ ಮತ್ತು ಅದನ್ನು ಸಮರ್ಥನೀಯ ವಿಷಯವಾಗಿ ಮಾಡಲು ಸಾಧ್ಯವಿಲ್ಲ ಮತ್ತು ಅದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುವುದು ಸಾಧ್ಯವಿಲ್ಲ. ಏಕೆಂದರೆ ಅದು ‘ರಾಷ್ಟ್ರಪತಿಗಳ ತೃಪ್ತಿ’ಯ ಬದಲಿಗೆ’ ನ್ಯಾಯಾಲಯದ ತೃಪ್ತಿಯನ್ನು ‘ಬದಲಿಸುತ್ತದೆ. (the satisfaction of the court in place of the satisfaction of the President).

 

ಅಮಾನತು ಅಥವಾ ಕಡ್ಡಾಯ ನಿವೃತ್ತಿಯು ಶಿಕ್ಷೆಯ ಒಂದು ರೂಪವೇ?

 • ಬನ್ಶ ಸಿಂಗ್ VS ಪಂಜಾಬ್ ರಾಜ್ಯ’ಪ್ರಕರಣದಲ್ಲಿ, ಸೇವೆಯಿಂದ ಅಮಾನತುಗೊಳಿಸುವುದು, ಅಥವಾ ವಜಾಗೊಳಿಸುವುದು ಅಥವಾ ಸೇವೆಯಿಂದ ಹೊರಹಾಕುವುದು ಅಥವಾ ಶ್ರೇಣಿಯನ್ನು ಕಡಿತಗೊಳಿಸುವುದು ಎಂದರ್ಥವಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಆದ್ದರಿಂದ ಸರ್ಕಾರಿ ನೌಕರರನ್ನು ಅಮಾನತುಗೊಳಿಸಿದರೆ ಅವರು ಸಂವಿಧಾನದ ಆರ್ಟಿಕಲ್ 311 ರ ಅಡಿಯಲ್ಲಿ ಸಾಂವಿಧಾನಿಕ ಖಾತರಿಯನ್ನು ಪಡೆಯಲು ಸಾಧ್ಯವಿಲ್ಲ.
 •  ಶ್ಯಾಮ್ ಲಾಲ್ VS ಉತ್ತರ ಪ್ರದೇಶದ ರಾಜ್ಯದ ಪ್ರಕರಣದಲ್ಲಿ, ಕಡ್ಡಾಯ ನಿವೃತ್ತಿಯು, ಸೇವೆಯಿಂದ ವಜಾಗೊಳಿಸುವ ಮತ್ತು ಸೇವೆಯಿಂದ ತೆಗೆದು ಹಾಕುವಿಕೆಗಿಂತ ಭಿನ್ನವಾಗಿದೆ, ಏಕೆಂದರೆ ಇದು ಯಾವುದೇ ದಂಡನಾತ್ಮಕ ಪರಿಣಾಮಗಳನ್ನು ಒಳಗೊಂಡಿರುವುದಿಲ್ಲ, ಮತ್ತು ‘ಕಡ್ಡಾಯ ನಿವೃತ್ತಿ’ ಗೆ ಒಳಪಟ್ಟ ನೌಕರರು ಸೇವೆಯ ಸಮಯದಲ್ಲಿ ಗಳಿಸಿದ ಪ್ರಯೋಜನಗಳನ್ನು ಯಾವುದೇ ರೂಪದಲ್ಲಿ ಕಳೆದುಕೊಳ್ಳುವುದಿಲ್ಲ, ಆದ್ದರಿಂದ ಆರ್ಟಿಕಲ್ 311 ರ ನಿಬಂಧನೆಗಳು ಇದಕ್ಕೆ ಅನ್ವಯಿಸುವುದಿಲ್ಲ.

 

ಸಾರ್ವಜನಿಕ ಸೇವಕರಿಗೆ ಇರುವ ಸುರಕ್ಷತೆಗಳು:

ವಿಧಿ 311 (1) ರ ಪ್ರಕಾರ: ಯಾವುದೇ ನಾಗರಿಕ ಸೇವಕನನ್ನು ನೇಮಕ ಮಾಡಿದ ಪ್ರಾಧಿಕಾರಕ್ಕೆ ಅಧೀನವಾಗಿರುವ ಯಾವುದೇ ಪ್ರಾಧಿಕಾರದಿಂದ ಅವರನ್ನು ವಜಾಗೊಳಿಸಲು ಅಥವಾ ತೆಗೆದುಹಾಕಲು ಸಾಧ್ಯವಿಲ್ಲ.

ವಿಧಿ 311 (2) ರ ಪ್ರಕಾರ: ನಾಗರಿಕ ಸೇವಕನೊಬ್ಬ ತನ್ನ ವಿರುದ್ಧದ ಆರೋಪಗಳಿಗೆ ಸಂಬಂಧಿಸಿದಂತೆ ಅವನ ವಿರುದ್ಧ ತೆಗೆದುಕೊಳ್ಳಲು ಉದ್ದೇಶಿಸಿರುವ ಕ್ರಮಗಳ ವಿರುದ್ಧ ವಿಚಾರಣೆಯ ಕುರಿತು ಸಮಂಜಸವಾದ ಅವಕಾಶವನ್ನು ನೀಡದ ಹೊರತು ಅವರನ್ನು ಕಚೇರಿಯಿಂದ ತೆಗೆದುಹಾಕಲಾಗುವುದಿಲ್ಲ ಅಥವಾ ವಜಾಗೊಳಿಸಲಾಗುವುದಿಲ್ಲ ಅಥವಾ ಅವರ ಶ್ರೇಣಿಯಲ್ಲಿ ಕಡಿತ ಮಾಡಲು ಸಾಧ್ಯವಿಲ್ಲ.

 

ವಿಷಯಗಳು: ವಿವಿಧ ಸಾಂವಿಧಾನಿಕ ಹುದ್ದೆಗಳಿಗೆ ನೇಮಕಾತಿ,ವಿವಿಧ ಸಾಂವಿಧಾನಿಕ ಸಂಸ್ಥೆಗಳ ಅಧಿಕಾರಗಳು, ಕಾರ್ಯಗಳು ಮತ್ತು ಜವಾಬ್ದಾರಿಗಳು.

ಉಚ್ಚ ನ್ಯಾಯಾಲಯಗಳಲ್ಲಿ ತಾತ್ಕಾಲಿಕ ನ್ಯಾಯಾಧೀಶರ ನೇಮಕಾತಿಗೆ ಹಸಿರು ನಿಶಾನೆ ತೋರಿದ ಸುಪ್ರೀಂಕೋರ್ಟ್:


(SC paves way for ad-hoc judges in HCs)

 

ಸಂದರ್ಭ:

 ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿರುವ ಸುಮಾರು 57 ಲಕ್ಷ ಪ್ರಕರಣಗಳನ್ನು “ಡಾಕೆಟ್ ಸ್ಫೋಟ” ಎಂದು ವಿವರಿಸಿರುವ ಸುಪ್ರೀಂ ಕೋರ್ಟ್, ಆರ್ಟಿಕಲ್ 224 A ಬಳಸಿ ನಿವೃತ್ತ ನ್ಯಾಯಾಧೀಶರನ್ನು ಎರಡರಿಂದ ಮೂರು ವರ್ಷಗಳ ಅವಧಿಗೆ ತಾತ್ಕಾಲಿಕಕ ನ್ಯಾಯಾಧೀಶರಾಗಿ ನೇಮಕ ಮಾಡಲು ದಾರಿ ಮಾಡಿಕೊಟ್ಟಿದೆ.

ಏಕೆಂದರೆ, ಬ್ಯಾಕ್ ಲಾಗ್ ಪ್ರಕರಣಗಳನ್ನು ತೆರವುಗೊಳಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಈ ನೇಮಕಾತಿಗಳನ್ನು ನಿಯಂತ್ರಿಸಲು ಮಾರ್ಗಸೂಚಿಗಳನ್ನು ಕೂಡ ನೀಡಿದೆ.

 

ಸಂವಿಧಾನದ 224 A ವಿಧಿ ಎಂದರೇನು?

ಸಂವಿಧಾನದ 224 ಎ ವಿಧಿಯು, ತಾತ್ಕಾಲಿಕ ನ್ಯಾಯಾಧೀಶರ (ad-hoc judges) ನೇಮಕಾತಿಗಾಗಿ ಸಾಂವಿಧಾನಿಕ ನಿಬಂಧನೆಗಳನ್ನು ಒದಗಿಸುತ್ತದೆ.

 • ಸಂವಿಧಾನದ 224 ಎ ವಿಧಿಯ ಪ್ರಕಾರ, ಒಂದು ರಾಜ್ಯದ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು, ಯಾವುದೇ ಸಮಯದಲ್ಲಿ, ರಾಷ್ಟ್ರಪತಿಗಳ ಪೂರ್ವಾನುಮತಿಯೊಂದಿಗೆ, ಅದೇ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಅಥವಾ ಯಾವುದೇ ಹೈಕೋರ್ಟ್ ನಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ ಯಾವುದೇ ವ್ಯಕ್ತಿಗೆ (ನಿವೃತ್ತ ನ್ಯಾಯಾಧೀಶರಿಗೆ) ಆ ರಾಜ್ಯದ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಬೇಕೆಂದು ವಿನಂತಿಸಬಹುದು.

 

ಪ್ರಕರಣಗಳು ಇಷ್ಟೊಂದುದೊಡ್ಡ ಪ್ರಮಾಣದಲ್ಲಿ ಬಾಕಿ ಉಳಿದಿರಲು ಕಾರಣಗಳು:

 • ಸರ್ಕಾರವೇ ಅತಿದೊಡ್ಡ ದಾವೆದಾರನಾಗಿದೆ.
 • ಕಡಿಮೆ ಬಜೆಟ್ ಹಂಚಿಕೆ: ನ್ಯಾಯಾಂಗಕ್ಕೆ ನಿಗದಿಪಡಿಸಿದ ಬಜೆಟ್ ಜಿಡಿಪಿಯ 0.08% ಮತ್ತು 0.09% ರ ನಡುವೆ ಇರುತ್ತದೆ.
 • ಮುಂದೂಡಿಕೆಯನ್ನು ಬಯಸುವ ಸಂಪ್ರದಾಯ.
 • ನ್ಯಾಯಾಂಗ ನೇಮಕಾತಿಗಳಲ್ಲಿನ ವಿಳಂಬ.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ:


(World Press Freedom Index)

 ಸಂದರ್ಭ:

ಇತ್ತೀಚೆಗೆ, ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ’ (World Press Freedom Index) 2021 ಅನ್ನು ಮೀಡಿಯಾ ವಾಚ್‌ಡಾಗ್ (ಮಾಧ್ಯಮ ಕಾವಲು ನಾಯಿ) ಗುಂಪಾದ ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ ಬಿಡುಗಡೆ ಮಾಡಿದೆ.

 

 • ಸತತ 5ನೇ ವರ್ಷವೂ ನಾರ್ವೆ ಸೂಚ್ಯಂಕದಲ್ಲಿ ಅಗ್ರಸ್ಥಾನದಲ್ಲಿದೆ.
 • ವರದಿಯು 132 ದೇಶಗಳನ್ನು “ಅತ್ಯಂತ ಕೆಟ್ಟ”, “ಕೆಟ್ಟ” ಅಥವಾ “ಸಮಸ್ಯಾತ್ಮಕ” ಗುಂಪುಗಳಾಗಿ ವರ್ಗೀಕರಿಸಿದೆ.
 • ಕೋವಿಡ್ -19 ರ ಕ್ಷಿಪ್ರ ಹರಡುವಿಕೆಯ ಬಗ್ಗೆ ಸರ್ಕಾರ ಪ್ರಾಯೋಜಿತ ಪ್ರಚಾರವನ್ನು ಉತ್ತೇಜಿಸಲು ಸಾಂಕ್ರಾಮಿಕ ರೋಗವನ್ನು ಬಳಸುವ ಮೂಲಕ ಪತ್ರಕರ್ತರಿಗೆ ಪ್ರವೇಶವನ್ನು ನಿರಾಕರಿಸಲಾಗಿದೆ ಎಂದು ವರದಿ ಹೇಳುತ್ತದೆ.

 

ಸೂಚ್ಯಂಕದಲ್ಲಿ ಭಾರತ ಮತ್ತು ನೆರೆಯ ರಾಷ್ಟ್ರಗಳ ಸಾಧನೆ:

 • 180 ದೇಶಗಳ ಪಟ್ಟಿಯಲ್ಲಿ ಭಾರತ 142 ನೇ ಸ್ಥಾನದಲ್ಲಿದೆ.
 • ಭಾರತವನ್ನು, ಬ್ರೆಜಿಲ್, ಮೆಕ್ಸಿಕೊ ಮತ್ತು ರಷ್ಯಾಗಳೊಂದಿಗೆ “ಕೆಟ್ಟ” ವಿಭಾಗದಲ್ಲಿ ಇರಿಸಲಾಗಿದೆ.
 • ತಮ್ಮ ಕೆಲಸವನ್ನು ಸರಿಯಾಗಿ ಮಾಡಲು ಪ್ರಯತ್ನಿಸುತ್ತಿರುವ ಪತ್ರಕರ್ತರಿಗೆ ಭಾರತವು ವಿಶ್ವದ ಅತ್ಯಂತ ಅಪಾಯಕಾರಿ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ವರದಿ ಹೇಳಿದೆ.
 • 2016 ರಲ್ಲಿ ಭಾರತವು 133 ನೇ ಸ್ಥಾನದಲ್ಲಿದ್ದು, ಇದು 2020 ರಲ್ಲಿ ತೀವ್ರವಾಗಿ 142ನೇ ಸ್ಥಾನಕ್ಕೆ ಕುಸಿದಿದೆ.
 • ಸರ್ಕಾರವನ್ನು ಟೀಕಿಸಲು ಧೈರ್ಯಮಾಡಿದ ಪತ್ರಕರ್ತರ ವಿರುದ್ಧ ‘ಸಾಮಾಜಿಕ ಮಾಧ್ಯಮದಲ್ಲಿ ಅತ್ಯಂತ ಹಿಂಸಾತ್ಮಕ ದ್ವೇಷ ಪ್ರಚಾರ ಅಭಿಯಾನಗಳನ್ನು’ ನಡೆಸಿದ್ದಕ್ಕಾಗಿ ಭಾರತವನ್ನು ತೀವ್ರವಾಗಿ ಟೀಕಿಸಲಾಗಿದೆ.
 • ಸೂಚ್ಯಂಕದಲ್ಲಿ, ದಕ್ಷಿಣ ಏಷ್ಯಾದಲ್ಲಿ, ನೇಪಾಳ 106, ಶ್ರೀಲಂಕಾ 127, ಮ್ಯಾನ್ಮಾರ್ 140, ಪಾಕಿಸ್ತಾನ 145 ಮತ್ತು ಬಾಂಗ್ಲಾದೇಶ 152 ನೇ ಸ್ಥಾನದಲ್ಲಿದೆ.
 • ಚೀನಾ 177 ಮತ್ತು ಅಮೆರಿಕ 44 ನೇ ಸ್ಥಾನದಲ್ಲಿದೆ.

 

ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕದ ಕುರಿತು:

 • 2002 ರಿಂದ ವಾರ್ಷಿಕವಾಗಿ ರಿಪೋರ್ಟರ್ಸ್ ವಿಥೌಟ್ ಬಾರ್ಡರ್ಸ್ (Reporters Without Borders) ನಿಂದ ಪ್ರಕಟವಾಗುವ ‘ವಿಶ್ವ ಪತ್ರಿಕಾ ಸ್ವಾತಂತ್ರ್ಯ ಸೂಚ್ಯಂಕ’ವು 180 ದೇಶಗಳಲ್ಲಿನ ಮಾಧ್ಯಮ ಸ್ವಾತಂತ್ರ್ಯದ ಮಟ್ಟವನ್ನು ನಿರ್ಣಯಿಸುತ್ತದೆ.
 • ಮಾಧ್ಯಮ ಸ್ವಾತಂತ್ರ್ಯದ ಮೌಲ್ಯಮಾಪನದ ಆಧಾರದ ಮೇಲೆ ಈ ಸೂಚಿಯನ್ನು ತಯಾರಿಸಲಾಗುತ್ತದೆ, ಇದರಲ್ಲಿ ಮಾಧ್ಯಮದಲ್ಲಿ ಬಹುತ್ವ, ಮಾಧ್ಯಮ ಸ್ವಾತಂತ್ರ್ಯ, ಕಾನೂನು ವ್ಯವಸ್ಥೆಯ ಗುಣಮಟ್ಟ ಮತ್ತು ಪತ್ರಕರ್ತರ ಸುರಕ್ಷತೆಯನ್ನು ನಿರ್ಣಯಿಸಲಾಗುತ್ತದೆ.
 • ಸೂಚ್ಯಂಕವು ಪ್ರತಿ ಪ್ರದೇಶದ ಮಾಧ್ಯಮ ಸ್ವಾತಂತ್ರ್ಯದ ಉಲ್ಲಂಘನೆಯ ಮಟ್ಟವನ್ನು ಸಹ ಒಳಗೊಂಡಿದೆ.
 • ವಿಶ್ವದಾದ್ಯಂತದ ತಜ್ಞರು 20 ಭಾಷೆಗಳಲ್ಲಿ ಸಿದ್ಧಪಡಿಸಿದ ಪ್ರಶ್ನಾವಳಿಯ ಮೂಲಕ ಸೂಚ್ಯಂಕವನ್ನು ಸಂಕಲಿಸಲಾಗಿದೆ.ಈ ಗುಣಾತ್ಮಕ ವಿಶ್ಲೇಷಣೆಯನ್ನು ಮೌಲ್ಯಮಾಪನ ಮಾಡಿದ ಅವಧಿಯಲ್ಲಿ ಪತ್ರಕರ್ತರ ಮೇಲಿನ ನಿಂದನೆ ಮತ್ತು ಹಿಂಸಾಚಾರದ ಪರಿಮಾಣಾತ್ಮಕ ದತ್ತಾಂಶದೊಂದಿಗೆ ಸಂಯೋಜಿಸಲಾಗಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಅಂತರ್ಗತ ಬೆಳವಣಿಗೆ ಮತ್ತು ಅದರಿಂದ ಉದ್ಭವಿಸುವ ಸಮಸ್ಯೆಗಳು.

94ನೇ ವಯಸ್ಸಿನಲ್ಲಿ ನಿಧನರಾದ, ಬ್ಯಾಂಕಿಂಗ್ ಸುಧಾರಣೆಗಳ ಪಿತಾಮಹ: ಮಾಜಿ ಆರ್‌ಬಿಐ ಗವರ್ನರ್ ಎಂ.ನರಸಿಂಹಮ್:


(Father of banking reforms’: Ex-RBI governor M Narasimham passes away at 94)

 

ಸಂದರ್ಭ:

 RBI ಮಾಜಿ ಗವರ್ನರ್ ಎಂ.ನರಸಿಂಹಂ ಅವರು ತಮ್ಮ 94 ನೇ ವಯಸ್ಸಿನಲ್ಲಿ ಮಂಗಳವಾರ ನಿಧನ ಹೊಂದಿದ್ದಾರೆ. ಎಂ.ನರಸಿಂಹಂ ಅವರನ್ನು ಭಾರತೀಯ ಬ್ಯಾಂಕಿಂಗ್ ಕ್ಷೇತ್ರದಲ್ಲಿನ ಸುಧಾರಣೆಗಳ ಹರಿಕಾರ ಎಂದು ಕರೆಯಲಾಗುತ್ತದೆ.

 

ಯಾರು ಈ M ನರಸಿಂಹಮ್?

ನರಸಿಂಹಂ ಅವರು ಬ್ಯಾಂಕಿಂಗ್ ಮತ್ತು ಹಣಕಾಸು ವಲಯದ ಸುಧಾರಣೆಗಳಿಗಾಗಿ  ನೇಮಿಸಲಾದ ಎರಡು ಉನ್ನತ- ಸಮಿತಿಗಳ ಅಧ್ಯಕ್ಷರಾಗಿದ್ದರು.

 ಎರಡೂ ನರಸಿಂಹಂ ಸಮಿತಿಗಳು ತುಂಬಾ ಮಹತ್ವದ್ದಾಗಿದ್ದು, ಇಂದಿಗೂ ಅವರ ಕೆಲವು ವಿಧಾನಗಳನ್ನು ಉಲ್ಲೇಖಿಸಲಾಗುತ್ತದೆ ಮತ್ತು ಬಳಸಿಕೊಳ್ಳಲಾಗುತ್ತದೆ. ಉದಾಹರಣೆಗೆ, ಬ್ಯಾಂಕುಗಳನ್ನು ವಿಲೀನಗೊಳಿಸುವ ಮತ್ತು ಬಲವಾದ ಮೆಗಾಬ್ಯಾಂಕ್ ರಚಿಸುವ ಕಲ್ಪನೆಯನ್ನು ಮೊದಲು ರೂಪಿಸಿದ್ದು ನರಸಿಂಹಂ ಸಮಿತಿ.

ನರಸಿಂಹಂ ಸಮಿತಿ ವರದಿ- I:

1991 ರಲ್ಲಿ ಸಲ್ಲಿಸಲಾಯಿತು.

 •  ನಾಲ್ಕು ಹಂತದ ಬ್ಯಾಂಕಿಂಗ್ ವ್ಯವಸ್ಥೆಯನ್ನು ರಚಿಸಲು ಈ ವರದಿಯು ಶಿಫಾರಸು ಮಾಡಿದೆ, ಇದರಲ್ಲಿ ಮೂರು ದೊಡ್ಡ ಬ್ಯಾಂಕುಗಳು ಮೇಲ್ಭಾಗದಲ್ಲಿರಲು ಸೂಚಿಸಲಾಗಿದೆ.
 • ಇದರಲ್ಲಿ, ‘ಗ್ರಾಮೀಣ ಪ್ರದೇಶ ಕೇಂದ್ರಿತ ಬ್ಯಾಂಕುಗಳಂತಹ’ ‘ಸ್ಥಳೀಯ ಪ್ರದೇಶ ಬ್ಯಾಂಕುಗಳು’ ಎಂಬ ಪರಿಕಲ್ಪನೆಯನ್ನು ಸಹ ಪರಿಚಯಿಸಿತು.
 • ಇದರಲ್ಲಿ, ಬ್ಯಾಂಕುಗಳಿಗೆ ‘ಕಡ್ಡಾಯ ಬಾಂಡ್ ಹೂಡಿಕೆ’ ಮತ್ತು ‘ನಗದು ಮೀಸಲು ಮಿತಿ’ ಯನ್ನು ಹಂತಹಂತವಾಗಿ ಕಡಿತಗೊಳಿಸುವ ಪ್ರಸ್ತಾಪವನ್ನು ನೀಡಿತು, ಇದರಿಂದಾಗಿ ಬ್ಯಾಂಕುಗಳಿಗೆ ಆರ್ಥಿಕತೆಯ ಇತರ ಉತ್ಪಾದಕ ಅಗತ್ಯಗಳಿಗೆ ಸಾಲ ನೀಡಲು ಸಾಧ್ಯವಾಗುತ್ತದೆ.
 • ಈ ಮೂಲಕ, ‘ಬಂಡವಾಳ ಸಮರ್ಪಕ ಅನುಪಾತ’ದ (Concept of Capital adequacy ratio) ಪರಿಕಲ್ಪನೆಯನ್ನು ಪರಿಚಯಿಸಿತು ಮತ್ತು ಶಾಖಾ ಪರವಾನಗಿ ನೀತಿಯನ್ನು ರದ್ದುಗೊಳಿಸಲು ಪ್ರಸ್ತಾಪಿಸಿತು.
 • ‘ಕಾರ್ಯನಿರ್ವಹಿಸದ ಸ್ವತ್ತುಗಳನ್ನು’ ವರ್ಗೀಕರಿಸಲು ಮತ್ತು ಖಾತೆಗಳ ಸಂಪೂರ್ಣ ಬಹಿರಂಗಪಡಿಸುವಿಕೆಯ ಪರಿಕಲ್ಪನೆಗಳನ್ನು ಶಿಫಾರಸು ಮಾಡಿದ ಮೊದಲ ಸಮಿತಿ ನರಸಿಂಹಂ ಸಮಿತಿಯಾಗಿದೆ.
 • ಬಡ್ಡಿದರಗಳನ್ನು ಕಡಿಮೆ ಮಾಡಲು ಪ್ರಸ್ತಾಪಿಸುವ ಮೂಲಕ, ಈ ಸಮಿತಿಯು ಬ್ಯಾಂಕುಗಳಲ್ಲಿ ಹೆಚ್ಚಿನ ಸ್ಪರ್ಧೆಯನ್ನು ಪರಿಚಯಿಸಿತು.
 • ಈ ಸಮಿತಿಯು ಕೆಟ್ಟ ಸಾಲಗಳನ್ನು ತೆಗೆದುಕೊಳ್ಳಲು ‘ಆಸ್ತಿ ಪುನರ್ ನಿರ್ಮಾಣ ನಿಧಿಯ’ ಪರಿಕಲ್ಪನೆಯನ್ನು ಪರಿಚಯಿಸಿತು.

 

ನರಸಿಂಹಂ ಸಮಿತಿ ವರದಿ II – 1998:

1998 ರಲ್ಲಿ ಶ್ರೀ ನರಸಿಂಹಂ ಅವರ ಅಧ್ಯಕ್ಷತೆಯಲ್ಲಿ ಸರ್ಕಾರ ಮತ್ತೊಂದು ಸಮಿತಿಯನ್ನು ರಚಿಸಿತು. ಇದನ್ನು ‘ಬ್ಯಾಂಕಿಂಗ್ ವಲಯ ಸಮಿತಿ’ ಎಂದು ಕರೆಯಲಾಗುತ್ತದೆ. ಬ್ಯಾಂಕಿಂಗ್ ಸುಧಾರಣೆಯ ಪ್ರಗತಿಯನ್ನು ಪರಿಶೀಲಿಸುವ ಮತ್ತು ಭಾರತದ ಹಣಕಾಸು ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ಕಾರ್ಯಕ್ರಮವನ್ನು ವಿನ್ಯಾಸಗೊಳಿಸುವ ಕೆಲಸವನ್ನು ಈ ಸಮಿತಿಗೆ ವಹಿಸಲಾಗಿತ್ತು. ಈ ಸಮಿತಿಯು ಬಂಡವಾಳದ ಸಮರ್ಪಕತೆ, ಬ್ಯಾಂಕುಗಳ ವಿಲೀನ, ಬ್ಯಾಂಕ್ ಶಾಸನ ಮುಂತಾದ ವಿವಿಧ ಕ್ಷೇತ್ರಗಳ ಮೇಲೆ ಕೇಂದ್ರೀಕರಿಸಿದೆ.

 

ವಿಷಯಗಳು: ಸಂವಹನ ನೆಟ್‌ವರ್ಕ್‌ಗಳ ಮೂಲಕ ಆಂತರಿಕ ಭದ್ರತೆಗೆ ಸವಾಲುಗಳು, ಆಂತರಿಕ ಭದ್ರತಾ ಸವಾಲುಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ, ಸೈಬರ್ ಸುರಕ್ಷತೆಯ ಮೂಲಗಳು; ಹಣ ವರ್ಗಾವಣೆ ಮತ್ತು ಅದರ ತಡೆಗಟ್ಟುವಿಕೆ.

ಡ್ರಗ್ಸ್ ವಿಷಯಗಳ ಕುರಿತು ಪಂಜಾಬ್ ಸರ್ಕಾರದ ಪುರಸ್ಕಾರ ನೀತಿ:


(Punjab okays reward policy for drug cases)

 

ಸಂದರ್ಭ:

ಔಷಧಿಗಳ(ಡ್ರಗ್ಸ್) ಚೇತರಿಕೆಗೆ ಮಾಹಿತಿ ಮತ್ತು ಮಾಹಿತಿಯ ವಿತರಣೆಯ ಒಳಹರಿವನ್ನು ಉತ್ತೇಜಿಸಲು ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್  ಸಬ್ಸ್ಟೆನ್ಸಸ್ ಆಕ್ಟ್’ (Narcotic Drugs And Psychotropic Substances Act) ಅಂದರೆ NDPS ಕಾಯ್ದೆಯಡಿ ಪಂಜಾಬ್ ಸರ್ಕಾರವು ಇತ್ತೀಚೆಗೆ ಪ್ರಶಸ್ತಿ / ಪುರಸ್ಕಾರ ನೀತಿಯನ್ನು ಅನುಮೋದಿಸಿದೆ.

ಪ್ರಮುಖಾಂಶಗಳು:

 • ಈ ನೀತಿಯಡಿಯಲ್ಲಿ, ಸರ್ಕಾರಿ ನೌಕರರು, ಮಾಹಿತಿದಾರರಿಗೆ, ಸಾಕಷ್ಟು ಪ್ರಮಾಣದಲ್ಲಿ ಮಾದಕ ಔಷಧಗಳನ್ನು ಸೆರೆಹಿಡಿಯಲು ಮಾಹಿತಿಯ ಮೂಲಗಳನ್ನು ಒದಗಿಸಲು ಕಾರಣವಾಗುವ ಅವರಿಗೆ ಮಾನ್ಯತೆ ನೀಡಲಾಗುವುದು ಮತ್ತು NDPS ಕಾಯ್ದೆ, 1985 ಮತ್ತು PIT NDPS ಕಾಯ್ದೆ, 1988 ರ ವಿವಿಧ ನಿಬಂಧನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವಲ್ಲಿ ಅವರು ವಹಿಸುವ ಪ್ರಮುಖ ಪಾತ್ರಕ್ಕಾಗಿ ಅವರನ್ನು ಗುರುತಿಸಲಾಗುತ್ತದೆ.
 • ಯಶಸ್ವಿ ತನಿಖೆ, ಕಾನೂನು ಕ್ರಮ ಜರುಗಿಸುವುದು, ಸ್ವಾಧೀನಪಡಿಸಿಕೊಂಡ ಅಕ್ರಮ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವುದು, ತಡೆಗಟ್ಟುವ ಬಂಧನ ಮತ್ತು ಇತರ ಪ್ರಮುಖ ಮಾದಕವಸ್ತುಗಳ ವಿರೋಧಿ ಕಾರ್ಯಗಳಿಗೆ ಪ್ರತಿಫಲ ಅಥವಾ ಪುರಸ್ಕಾರದ ಪ್ರಮಾಣವನ್ನು ಪ್ರತಿ ಪ್ರಕರಣದ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ.

 

ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್  ಸಬ್ಸ್ಟೆನ್ಸಸ್ ಆಕ್ಟ್ 1985:

 • ಮಾದಕ ದ್ರವ್ಯಗಳ ಕುರಿತಾದ ಏಕೈಕ ಸಮಾವೇಶವಾದ, ‘ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ ಆಕ್ಟ್’, ‘ಸೈಕೋಟ್ರೋಪಿಕ್ ವಸ್ತುಗಳ ಕನ್ವೆನ್ಷನ್’ ಮತ್ತು ‘ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ವಸ್ತುಗಳ ಕಳ್ಳ ಸಾಗಣೆ’ ವಿರುದ್ಧದ ವಿಶ್ವಸಂಸ್ಥೆಯ ಸಮಾವೇಶದ ಅಡಿಯಲ್ಲಿ ಭಾರತದ ಒಪ್ಪಂದದ ಜವಾಬ್ದಾರಿಗಳನ್ನು ಪೂರೈಸಲು ಈ ಕಾಯ್ದೆಯನ್ನು ವಿನ್ಯಾಸಗೊಳಿಸಲಾಗಿದೆ.
 • NDPS ಕಾಯ್ದೆ, 1985 ಭಾರತದಲ್ಲಿ ಮಾದಕವಸ್ತು ಕಾನೂನು ಜಾರಿಗಾಗಿ ಶಾಸನಬದ್ಧ ಚೌಕಟ್ಟನ್ನು ರೂಪಿಸುತ್ತದೆ.
 • ಕಾಯಿದೆಯಡಿ, ಕೃಷಿ ಉತ್ಪಾದನೆ, ಉತ್ಪಾದನೆ, ಮಾಲೀಕತ್ವ, ಮಾರಾಟ, ಖರೀದಿ, ಸಾರಿಗೆ, ಸಂಗ್ರಹಣೆ, ಬಳಕೆ, ಅಂತರರಾಜ್ಯ ಸಾಗಣೆ, ಟ್ರಾನ್ಸ್‌ಶಿಪ್ಮೆಂಟ್, ‘ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ’ ಆಮದು ಮತ್ತು ರಫ್ತು ನಿಷೇಧಿಸಲಾಗಿದೆ.
 • ಆದಾಗ್ಯೂ, ವೈದ್ಯಕೀಯ ಅಥವಾ ವೈಜ್ಞಾನಿಕ ಉದ್ದೇಶಗಳನ್ನು ಹೊರತುಪಡಿಸಿ, ಸರ್ಕಾರವು ನೀಡಿದ ಯಾವುದೇ ಪರವಾನಗಿ, ಅಥವಾ ಅಧಿಕಾರದ ನಿಯಮಗಳು ಮತ್ತು ಷರತ್ತುಗಳ ಪ್ರಕಾರ ಮೇಲಿನ ಪ್ರಕರಣಗಳಲ್ಲಿ ವಿನಾಯಿತಿ ನೀಡಲಾಗಿದೆ.
 • ಮಾದಕ ದ್ರವ್ಯಗಳು ಮತ್ತು ಸೈಕೋಟ್ರೋಪಿಕ್ ವಸ್ತುಗಳ ಕೃಷಿ, ಉತ್ಪಾದನೆ, ಆಮದು, ರಫ್ತು, ಮಾರಾಟ, ಬಳಕೆ, ಉಪಯೋಗ ಇತ್ಯಾದಿಗಳನ್ನು ನಿಯಂತ್ರಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ.
 • ರಾಜ್ಯ ಸರ್ಕಾರಗಳಿಗೆ, ಅಫೀಮು, ಗಸಗಸೆ, ಔಷಧೀಯ ಅಫೀಮು ಮತ್ತು ಹಶಿಶ್ ಹೊರತುಪಡಿಸಿ ಗಾಂಜಾ ಕೃಷಿ ಮತ್ತು ಅಫೀಮುಗಳ ಅಂತರ-ರಾಜ್ಯ ಚಟುವಟಿಕೆಗಳನ್ನು ಸ್ವಾಧೀನಪಡಿಸಿಕೊಳ್ಳಲು ಮತ್ತು ನಿಯಂತ್ರಿಸಲು ಅಧಿಕಾರ ನೀಡಲಾಗಿದೆ.
 • ಮಾದಕವಸ್ತು, ಔಷಧಗಳು ಮತ್ತು ಸೈಕೋಟ್ರೋಪಿಕ್ ಪದಾರ್ಥಗಳ ತಯಾರಿಕೆಯಲ್ಲಿ ಅದರ ಸಂಭಾವ್ಯ ಬಳಕೆಯ ಮೌಲ್ಯಮಾಪನದ ಆಧಾರದ ಮೇಲೆ ಕೇಂದ್ರ ಸರ್ಕಾರವು ಯಾವುದೇ ವಸ್ತುವನ್ನು ‘ನಿಯಂತ್ರಿತ ವಸ್ತು’ (controlled substance) ಎಂದು ಘೋಷಿಸುವ ಅಧಿಕಾರ ಹೊಂದಿದೆ.
 • ಕಾಯಿದೆಯ ಉದ್ದೇಶಗಳಿಗಾಗಿ, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಅಧಿಕಾರಿಗಳನ್ನು ನೇಮಿಸುವ ಅಧಿಕಾರವನ್ನು ಹೊಂದಿವೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ನಾಗರಿಕ ಸೇವೆಗಳ ದಿನ:

(Civil Services Day) 

 • ಪ್ರತಿವರ್ಷ, ಏಪ್ರಿಲ್ 21 ಅನ್ನು ಭಾರತ ಸರ್ಕಾರವು ‘ನಾಗರಿಕ ಸೇವೆಗಳ ದಿನ’ ಎಂದು ಆಚರಿಸುತ್ತದೆ.
 • ನಾಗರಿಕ ಸೇವಕರು ತಮ್ಮನ್ನು ನಾಗರಿಕರ ಸೇವೆಗೋಸ್ಕರ ತಮ್ಮನ್ನು ತಾವು ಸಮರ್ಪಿಸಿಸಿಕೊಳ್ಳುವುದು ಮತ್ತು ಸಾರ್ವಜನಿಕ ಸೇವೆ ಮತ್ತು ಕೆಲಸದಲ್ಲಿನ ಶ್ರೇಷ್ಠತೆಗೆ ತಮ್ಮ ಬದ್ಧತೆಗಳನ್ನು ನವೀಕರಿಸುವ ಸಂದರ್ಭವಾಗಿ ಈ ದಿನವನ್ನು ಆಚರಿಸಲಾಗುತ್ತದೆ.
 • 1947 ರಲ್ಲಿ, ದೆಹಲಿಯ ಮೆಟ್‌ಕಾಲ್ಫ್ ಹೌಸ್‌ನಲ್ಲಿ ಆಡಳಿತ ಸೇವೆಯ ಪ್ರೊಬೇಷನರ್‌ ಅಧಿಕಾರಿಗಳನ್ನು ಉದ್ದೇಶಿಸಿ ಸ್ವತಂತ್ರ ಭಾರತದ ಮೊದಲ ಗೃಹ ಸಚಿವ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಮಾತನಾಡಿದ ಸ್ಮರಣಾರ್ಥ ಈ ದಿನಾಂಕವನ್ನು ಆಯ್ಕೆ ಮಾಡಲಾಗಿದೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos