Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 21ನೇ ಏಪ್ರಿಲ್ 2021

 

ಪರಿವಿಡಿ :

 ಸಾಮಾನ್ಯ ಅಧ್ಯಯನ ಪತ್ರಿಕೆ 2: 

1. ಅಮೇರಿಕಾದ ಕರೆನ್ಸಿ ನಿಗಾ ಪಟ್ಟಿಯು ಅಧಿಕೃತ ನೀತಿಗಳಲ್ಲಿ ಸೂಕ್ತವಲ್ಲದ ಹಸ್ತಕ್ಷೇಪವಾಗಿದೆ: ಅಧಿಕಾರಿ.

2. ಪ್ರಯಾಣ ಬಬಲ್.

3. ದಕ್ಷಿಣ ಚೀನಾ ಸಮುದ್ರ ವಿವಾದ.

4. ಬೋವಾ ಫೋರಂ.

5. ಜಾಗತಿಕ ಯುವ ಸಜ್ಜುಗೊಳಿಸುವಿಕೆ ಸ್ಥಳೀಯ ಪರಿಹಾರಗಳ ಅಭಿಯಾನ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. 2025 ರಲ್ಲಿ ತನ್ನದೇ ಆದ ಬಾಹ್ಯಾಕಾಶ ಕೇಂದ್ರವನ್ನು ಪ್ರಾರಂಭಿಸಲಿರುವ ರಷ್ಯಾ.

2. ಅಂತರ್ಜಾಲದಿಂದ ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕುವ ಕುರಿತು ದೆಹಲಿ ಹೈಕೋರ್ಟ್ ನ ಮಾರ್ಗಸೂಚಿಗಳು.

 

ಸಾಮಾನ್ಯ ಅಧ್ಯಯನ ಪತ್ರಿಕೆ 4:

1. ಮಂಗಗಳ ಭ್ರೂಣಗಳಲ್ಲಿ ಬೆಳೆದ ಮಾನವ ಜೀವಕೋಶಗಳು: ನೈತಿಕ ಚರ್ಚೆಗೆ ನಾಂದಿ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಐರೋಪ್ಯ ಒಕ್ಕೂಟದ ಮಂಡಳಿ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು:ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಅಮೇರಿಕಾದ ಕರೆನ್ಸಿ ನಿಗಾ ಪಟ್ಟಿಯು ಅಧಿಕೃತ ನೀತಿಗಳಲ್ಲಿ ಸೂಕ್ತವಲ್ಲದ ಹಸ್ತಕ್ಷೇಪವಾಗಿದೆ: ಅಧಿಕಾರಿ:


(U.S. currency watchlist an intrusion into policy: official)

 

ಸಂದರ್ಭ:

ಭಾರತವನ್ನು ‘ಕರೆನ್ಸಿ-ಮ್ಯಾನಿಪ್ಯುಲೇಟಿಂಗ್ ದೇಶಗಳ  (Currency Manipulators) ನಿಗಾ ಪಟ್ಟಿ ಅಥವಾ ಕಾವಲು ಪಟ್ಟಿಯಲ್ಲಿ ಸೇರಿಸುವ ಅಮೆರಿಕ ಸರ್ಕಾರದ ನಿರ್ಧಾರದ ಹಿಂದಿನ ತಾರ್ಕಿಕತೆಯನ್ನು ಭಾರತೀಯ ವಾಣಿಜ್ಯ ಕಾರ್ಯದರ್ಶಿ ಅನೂಪ್ ವಾಧವನ್ ಪ್ರಶ್ನಿಸಿದ್ದಾರೆ.

ಇದಲ್ಲದೆ, ಈ ಪಟ್ಟಿಯು ವಿಶ್ವದಾದ್ಯಂತದ ಕೇಂದ್ರೀಯ ಬ್ಯಾಂಕುಗಳು ತಮ್ಮ ಆದೇಶಗಳನ್ನು ಪೂರೈಸಲು ಅಗತ್ಯವಾದ ನೀತಿ ವಿಸ್ತರಣೆಯಲ್ಲಿ ಅನುಚಿತವಾದ ಹಸ್ತಕ್ಷೇಪವನ್ನು ಮಾಡುತ್ತದೆ.

 

ಏನಿದು ಸಮಸ್ಯೆ?

ಇತ್ತೀಚೆಗೆ, ಯುಎಸ್ ಖಜಾನೆ ಇಲಾಖೆ ಯುಎಸ್ ಕಾಂಗ್ರೆಸ್ ಗೆ ಸಲ್ಲಿಸಿದ ವರದಿಯಲ್ಲಿ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ (RBI) ಬೃಹತ್ ಮೊತ್ತದ ಡಾಲರ್ ಖರೀದಿಯನ್ನು (ಒಟ್ಟುಜಿಡಿಪಿಯ ಸುಮಾರು 5% ರಷ್ಟು) ಉಲ್ಲೇಖಿಸುವ ಮೂಲಕ ಭಾರತವನ್ನು ಕರೆನ್ಸಿ ಮ್ಯಾನಿಪ್ಯುಲೇಟರ್ಗಳ ವೀಕ್ಷಣಾ ಪಟ್ಟಿಯಲ್ಲಿ ಉಳಿಸಿಕೊಂಡಿದೆ.

ಭಾರತವನ್ನು ಕರೆನ್ಸಿ ಕಾವಲು ಪಟ್ಟಿಯಲ್ಲಿ ಸೇರ್ಪಡೆಗೊಳಿಸಲು ಮತ್ತೊಂದು ಕಾರಣವೆಂದರೆ,

20 ಬಿಲಿಯನ್ ಡಾಲರ್ ಅಥವಾ ಅದಕ್ಕಿಂತ ಹೆಚ್ಚಿನ ವ್ಯಾಪಾರದ ಹೆಚ್ಚುವರಿ ಮೊತ್ತ.

 

ಹಿನ್ನೆಲೆ:

ಕೇಂದ್ರೀಯ ಬ್ಯಾಂಕಿನ ಪ್ರಮುಖ ಆದೇಶಗಳಲ್ಲಿ ‘ಕರೆನ್ಸಿಯಲ್ಲಿ ಸ್ಥಿರತೆಯನ್ನು’ ತರುವುದಾಗಿರುವುದರಿಂದ, ಕೇಂದ್ರ ಬ್ಯಾಂಕುಗಳು ವಿದೇಶಿ ಕರೆನ್ಸಿಯನ್ನು ಖರೀದಿಸಿ ಮಾರಾಟ ಮಾಡುತ್ತವೆ.

 

‘ಕರೆನ್ಸಿ ಮ್ಯಾನಿಪ್ಯುಲೇಷನ್’ ಎಂದರೇನು?

‘ಒಂದು ದೇಶವು’ “ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಅನ್ಯಾಯದ ಸ್ಪರ್ಧಾತ್ಮಕ ಲಾಭವನ್ನು ಪಡೆಯಲು” ‘ಅದರ ಕರೆನ್ಸಿ ಮತ್ತು ಯುಎಸ್ ಡಾಲರ್ ನಡುವಿನ ವಿನಿಮಯ ದರದ ಮೇಲೆ ಉದ್ದೇಶಪೂರ್ವಕವಾಗಿ ಪ್ರಭಾವ ಬೀರುವುದಾಗಿದೆ’ ಎಂದು ಯುಎಸ್ ಖಜಾನೆ ಇಲಾಖೆಯು ‘ಕರೆನ್ಸಿ ಮ್ಯಾನಿಪ್ಯುಲೇಷನ್’ ಅನ್ನು ವ್ಯಾಖ್ಯಾನಿಸಿದೆ.

 

ವಿಷಯಗಳು:ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಪ್ರಯಾಣ ಬಬಲ್:


(Travel bubble)

 ಸಂದರ್ಭ:

ಭಾರತದಲ್ಲಿ ಇತ್ತೀಚೆಗೆ ಕೋವಿಡ್ -19 ಪ್ರಕರಣಗಳ ಏರಿಕೆಯ ಹಿನ್ನೆಲೆಯಲ್ಲಿ, ಶ್ರೀಲಂಕಾವು ಭಾರತದೊಂದಿಗೆ ಉದ್ದೇಶಿತ ‘ಪ್ರಯಾಣ ಬಬಲ್’ / ಟ್ರಾವೆಲ್ ಬಬಲ್ (Travel bubble) ಅನ್ನು ಪರಿಚಯಿಸುವ ನಿರ್ಧಾರವನ್ನು ಮುಂದೂಡಿದೆ.

 

ಟ್ರಾವೆಲ್ ಬಬಲ್’ ಎಂದರೇನು?

 • ‘ಟ್ರಾವೆಲ್ ಬಬಲ್’ ವ್ಯವಸ್ಥೆಯಡಿಯಲ್ಲಿ, ದೇಶೀಯ ಮಟ್ಟದಲ್ಲಿ ಕರೋನವೈರಸ್ ಸಾಂಕ್ರಾಮಿಕ ರೋಗವನ್ನು ನಿಯಂತ್ರಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುವ ದೇಶಗಳು ಅಥವಾ ರಾಜ್ಯಗಳ ನಡುವೆ ಮರುಸಂಪರ್ಕ ಏರ್ಪಡಿಸುವುದನ್ನು ಒಳಗೊಂಡಿರುತ್ತದೆ.
 • ಈ ರೀತಿಯ ಟ್ರಾವೆಲ್ ಬಬಲ್ ನಲ್ಲಿ, ದೇಶಗಳ ನಡುವಿನ ಪರಸ್ಪರ ವ್ಯಾಪಾರ ಸಂಬಂಧಗಳನ್ನು ಪುನರುಜ್ಜೀವನಗೊಳಿಸಲು ಮತ್ತು ಪ್ರಯಾಣ ಮತ್ತು ಪ್ರವಾಸೋದ್ಯಮದಂತಹ ಕಿಕ್‌ಸ್ಟಾರ್ಟ್ ಕ್ಷೇತ್ರಗಳನ್ನು (kickstart sectors) ಮತ್ತೆ ತೆರೆಯಲು ಈ ಗುಂಪು ಅನುಮತಿಸುತ್ತದೆ.

 

ಪ್ರಾಮುಖ್ಯತೆ ಮತ್ತು ನಿರೀಕ್ಷೆಗಳು:

ವಿಶ್ವದಾದ್ಯಂತ ಉತ್ತಮವಾಗಿ ಕಾರ್ಯನಿರ್ವಹಿಸುವ ದೇಶಗಳಲ್ಲಿ ಸಂಭಾವ್ಯ ‘ಟ್ರಾವೆಲ್ ಬಬಲ್’ ಗಾತ್ರವು ಜಾಗತಿಕ ಜಿಡಿಪಿಯ ಸುಮಾರು 35 ಪ್ರತಿಶತಕ್ಕೆ ಸಮಾನವಾಗಿರುತ್ತದೆ. ಅಂತಹ ವ್ಯವಸ್ಥೆಯನ್ನು ವಿಶೇಷವಾಗಿ ಸಣ್ಣ ದೇಶಗಳು ಇಷ್ಟಪಡುತ್ತವೆ, ಇದರ ಅಡಿಯಲ್ಲಿ ಈ ದೇಶಗಳು ಮತ್ತೆ ದೊಡ್ಡ ಪಾಲುದಾರರೊಂದಿಗೆ ವ್ಯಾಪಾರ ಮಾಡಲು ಸಾಧ್ಯವಾಗುತ್ತದೆ, ಇದರ ಪರಿಣಾಮವಾಗಿ ಅವುಗಳು ಹೆಚ್ಚಿನ ಲಾಭವನ್ನು ಪಡೆಯಲು ಸಾಧ್ಯವಾಗುತ್ತದೆ.

 

ವಿಷಯಗಳು:ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ದಕ್ಷಿಣ ಚೀನಾ ಸಮುದ್ರ ವಿವಾದ:


(South China Sea Dispute)

 ಸಂದರ್ಭ:

ದಕ್ಷಿಣ ಚೀನಾ ಸಮುದ್ರದ ನೀರಿನ ವಿವಾದಿತ ಪ್ರದೇಶದಲ್ಲಿ ಸಂಗ್ರಹವಾದ ತೈಲ ನಿಕ್ಷೇಪಗಳ ಮೇಲೆ ಹಕ್ಕು ಸಾಧಿಸಲು ಫಿಲಿಪೈನ್ಸ್ ದಕ್ಷಿಣ ಚೀನಾ ಸಮುದ್ರದಲ್ಲಿ ಮಿಲಿಟರಿ ಹಡಗುಗಳನ್ನು ನಿಯೋಜಿಸಲು ಯೋಜಿಸುತ್ತಿದೆ.

 

ಹಿನ್ನೆಲೆ:

ಫಿಲಿಪೈನ್ಸ್ ಅಧ್ಯಕ್ಷ ರೊಡ್ರಿಗೋ ಡುಟರ್ಟೆ (Rodrigo Duterte) ಅವರು ಫಿಲಿಪೈನ್ಸ್ ಹಕ್ಕು ಪ್ರತಿಪಾದಿಸಿದ ದಕ್ಷಿಣ ಚೀನಾ ಸಮುದ್ರದ ನೀರಿನಲ್ಲಿ ಚೀನಾದ ಚಟುವಟಿಕೆಗಳನ್ನು ಎದುರಿಸಲು ಹಿಂಜರಿಯುತ್ತಿರುವುದಕ್ಕೆ ದೇಶದಲ್ಲಿ ಟೀಕೆಗಳನ್ನು ಎದುರಿಸುತ್ತಿದ್ದಾರೆ.

 

ದಕ್ಷಿಣ ಚೀನಾ ಸಮುದ್ರದ ವಿವಾದದ ಕುರಿತು:

ದಕ್ಷಿಣ ಚೀನಾ ಸಮುದ್ರ ಮತ್ತು ಈ ಪ್ರದೇಶದಲ್ಲಿ ನೆಲೆಗೊಂಡಿರುವ ಇತರ ದೇಶಗಳೊಂದಿಗೆ ಚೀನಾದ ಗಡಿ ಮತ್ತು ಕಡಲ ವಿವಾದವು ಕಡಲ ಪ್ರದೇಶಗಳ ಮೇಲೆ ಚೀನಾವು ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸುವುದಕ್ಕೆ ಸಂಬಂಧಿಸಿದೆ.

 

ದಕ್ಷಿಣ ಚೀನಾ ಸಮುದ್ರ ಎಲ್ಲಿದೆ?

 • ದಕ್ಷಿಣ ಚೀನಾ ಸಮುದ್ರವು ಆಗ್ನೇಯ ಏಷ್ಯಾದ ಪಶ್ಚಿಮ ಪೆಸಿಫಿಕ್ ಮಹಾಸಾಗರದ ಒಂದು ಭಾಗವಾಗಿದೆ.
 • ಇದು ಚೀನಾದ ದಕ್ಷಿಣಕ್ಕೆ, ವಿಯೆಟ್ನಾಂನ ಪೂರ್ವ ಮತ್ತು ದಕ್ಷಿಣಕ್ಕೆ, ಫಿಲಿಪೈನ್ಸ್‌ನ ಪಶ್ಚಿಮಕ್ಕೆ ಮತ್ತು ಬೊರ್ನಿಯೊ ದ್ವೀಪದ ಉತ್ತರಕ್ಕೆ ಇದೆ.
 • ಇದು ತೈವಾನ್ ಜಲಸಂಧಿಯಿಂದ ‘ಪೂರ್ವ ಚೀನಾ ಸಮುದ್ರ’ಕ್ಕೆ ಮತ್ತು ಲುಝೋನ್ ಜಲಸಂಧಿಯ ಮೂಲಕ’ ಫಿಲಿಪೈನ್ ಸಮುದ್ರ’ಕ್ಕೆ ಸಂಪರ್ಕ ಹೊಂದಿದೆ.
 • ಗಡಿ ದೇಶಗಳು ಮತ್ತು ಪ್ರಾಂತ್ಯಗಳು: ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ, ರಿಪಬ್ಲಿಕ್ ಆಫ್ ಚೀನಾ (ತೈವಾನ್), ಫಿಲಿಪೈನ್ಸ್, ಮಲೇಷ್ಯಾ, ಬ್ರೂನಿ, ಇಂಡೋನೇಷ್ಯಾ, ಸಿಂಗಾಪುರ್ ಮತ್ತು ವಿಯೆಟ್ನಾಂ.

 

ಕಾರ್ಯತಂತ್ರದ ಪ್ರಮುಖ್ಯತೆ:

 •  ‘ದಕ್ಷಿಣ ಚೀನಾ ಸಮುದ್ರ’ ವು, ಹಿಂದೂ ಮಹಾಸಾಗರ ಮತ್ತು ಪೆಸಿಫಿಕ್ ಮಹಾಸಾಗರದ (ಮಲಕ್ಕಾ ಜಲಸಂಧಿ) ನಡುವಿನ ಕೊಂಡಿಯಾಗಿದ್ದು, ಅದರ ಆಯಕಟ್ಟಿನ ಸ್ಥಳದಿಂದಾಗಿ ಅಪಾರವಾದ ಕಾರ್ಯತಂತ್ರದ ಮಹತ್ವವನ್ನು ಹೊಂದಿದೆ.
 • ವಿಶ್ವಸಂಸ್ಥೆಯ ವ್ಯಾಪಾರ ಮತ್ತು ಅಭಿವೃದ್ಧಿ ಸಮಾವೇಶ’ ದ (United Nations Conference on Trade And Development- UNCTAD) ಪ್ರಕಾರ, ಜಾಗತಿಕ ಹಡಗು ಸಾಗಾಟದ ಮೂರನೇ ಒಂದು ಭಾಗವು ‘ದಕ್ಷಿಣ ಚೀನಾ ಸಮುದ್ರ’ದ ಮೂಲಕ ಹಾದುಹೋಗುತ್ತದೆ, ಇದರ ಮೂಲಕ $ ಟ್ರಿಲಿಯನ್ ಗಟ್ಟಲೆ ವ್ಯಾಪಾರ ನಡೆಯುವುದರಿಂದಾಗಿ ಇದು ಒಂದು ಪ್ರಮುಖ ಭೌಗೋಳಿಕ ರಾಜಕೀಯ ಜಲ (geopolitical water body) ಘಟಕವಾಗಿದೆ.

 

ದಕ್ಷಿಣ ಚೀನಾ ಸಮುದ್ರದಲ್ಲಿರುವ ದ್ವೀಪಗಳಮೇಲೆ ವಿವಿಧ ದೇಶಗಳ ಸ್ಪರ್ಧಾತ್ಮಕ ಹಕ್ಕುಗಳು:

 • ಪ್ಯಾರಾಸೆಲ್ ದ್ವೀಪಗಳ’ (Paracels Islands) ಮೇಲೆ ಚೀನಾ, ತೈವಾನ್ ಮತ್ತು ವಿಯೆಟ್ನಾಂ ಹಕ್ಕು ಸಾಧಿಸಿವೆ.
 • ಸ್ಪ್ರಾಟ್ಲಿ ದ್ವೀಪಗಳನ್ನು (Spratley Islands) ಚೀನಾ, ತೈವಾನ್, ವಿಯೆಟ್ನಾಂ, ಬ್ರೂನಿ ಮತ್ತು ಫಿಲಿಪೈನ್ಸ್ ತಮ್ಮವೆಂದು ಹಕ್ಕು ಸಾಧಿಸಿವೆ.
 • ಸ್ಕಾರ್ಬರೋ ಶೋಲ್ (Scarborough Shoal) ಮೇಲೆ ಫಿಲಿಪೈನ್ಸ್, ಚೀನಾ ಮತ್ತು ತೈವಾನ್ ಗಳು ಹಕ್ಕು ಸಾಧಿಸಿವೆ.
 • 2010 ರಿಂದೀಚೆಗೆ, ಚೀನಾವು ನಿರ್ಜನ ದ್ವೀಪಗಳನ್ನು ವಿಶ್ವಸಂಸ್ಥೆಯ ಸಮುದ್ರ ಕಾನೂನಿನ (United Nations Convention on the Law of the Sea- UNCLOS) ಅಡಿಯಲ್ಲಿ ತರಲು ಅವುಗಳನ್ನು ಕೃತಕ ದ್ವೀಪಗಳನ್ನಾಗಿ ಪರಿವರ್ತಿಸುತ್ತಿದೆ. (ಉದಾಹರಣೆಗೆ, ಹೆವೆನ್ ರೀಫ್, ಜಾನ್ಸನ್ ಸೌತ್ ರೀಫ್ ಮತ್ತು ಫೈರಿ ಕ್ರಾಸ್ ರೀಫ್).

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಬೋವಾ ಫೋರಂ:


(Boao Forum)

 ಸಂದರ್ಭ:

ದಕ್ಷಿಣ ಚೀನಾದ ಹೈನಾನ್ ಪ್ರಾಂತ್ಯದ ಬೋವಾದಲ್ಲಿ  ಏಷ್ಯಾಗಾಗಿ ಬೋವಾ ಶೃಂಗಸಭೆ 2021 ರ ವಾರ್ಷಿಕ ಸಮ್ಮೇಳನದ ಉದ್ಘಾಟನಾ ಸಮಾರಂಭ ನಡೆಯಿತು.

 • ಈ ವರ್ಷದ ಸಮ್ಮೇಳನದಲ್ಲಿ 60 ಕ್ಕೂ ಹೆಚ್ಚು ದೇಶಗಳು ಮತ್ತು ಪ್ರದೇಶಗಳಿಂದ 2,600 ಕ್ಕೂ ಹೆಚ್ಚು ಅತಿಥಿಗಳು ಭಾಗವಹಿಸಿದ್ದರು.
 • ಥೀಮ್/ವಿಷಯ:“ಬದಲಾಗುತ್ತಿರುವ ಜಗತ್ತಿನಲ್ಲಿ: ಜಗತಿಕ ಆಡಳಿತ ಮತ್ತು ಬೆಲ್ಟ್ ಮತ್ತು ರಸ್ತೆ ಸಹಕಾರವನ್ನು ಬಲಪಡಿಸಲು ಕೈಜೋಡಿಸಿ.”

(“A World in Change: Join Hands to Strengthen Global Governance and Advance Belt and Road Cooperation.”)

 

ಈ ಸಂದರ್ಭದಲ್ಲಿ, BFA ಏಷ್ಯಾದ ಆರ್ಥಿಕತೆಯ ಕುರಿತು ವಾರ್ಷಿಕ ವರದಿಯನ್ನು ಬಿಡುಗಡೆ ಮಾಡಿತು. ಪ್ರಮುಖ ಆವಿಷ್ಕಾರಗಳು:

 • ಉಪಭೋಗದ (ಕೊಳ್ಳುವ) ಶಕ್ತಿಯ ಸಮಾನತೆಯ ವಿಷಯದಲ್ಲಿ, 2019 ರಿಂದ 0.9 ಶೇಕಡಾ ಅಂಕಗಳ ಏರಿಕೆಯೊಂದಿಗೆ, 2020 ರಲ್ಲಿ ಜಾಗತಿಕ ಆರ್ಥಿಕತೆಯ ಒಟ್ಟು ಮೊತ್ತದಲ್ಲಿ ಏಷ್ಯಾದ ಪಾಲು 47.3 ಪ್ರತಿಶತವನ್ನು ತಲುಪಿದೆ, ಇದು ಜಾಗತಿಕ ಆರ್ಥಿಕತೆಯಲ್ಲಿ ಹೆಚ್ಚುತ್ತಿರುವ ಏಷ್ಯಾದ ಪಾತ್ರವನ್ನು ಸೂಚಿಸುತ್ತದೆ.
 • ಏಷ್ಯಾದ ಎಲ್ಲಾ ಆರ್ಥಿಕತೆಗಳ ಆರ್ಥಿಕ ಏಕೀಕರಣವು ವೇಗವನ್ನು ಪಡೆಯುತ್ತಿದೆ. ಫೆಬ್ರವರಿ 2021 ರ ಹೊತ್ತಿಗೆ, ಏಷ್ಯಾದ ಒಳಗೆ ಮತ್ತು ಹೊರಗೆ 186 ಪ್ರಾದೇಶಿಕ ವ್ಯಾಪಾರ ಒಪ್ಪಂದಗಳು ಜಾರಿಯಲ್ಲಿದ್ದವು, ಇದು ವಿಶ್ವದಾದ್ಯಂತದ ಒಟ್ಟು ಪ್ರಾದೇಶಿಕ ಒಪ್ಪಂದಗಳಲ್ಲಿ 54.9 ಪ್ರತಿಶತದಷ್ಟಾಗುತ್ತದೆ.
 • ನಿರ್ದಿಷ್ಟವಾಗಿ ಹೇಳುವುದಾದರೆ, 2020 ರ ನವೆಂಬರ್‌ನಲ್ಲಿ ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದಕ್ಕೆ (Regional Comprehensive Economic Partnership Agreement –RCEP)) ಸಹಿ ಹಾಕಿದ ನಂತರ ಪ್ರಾದೇಶಿಕ ಮತ್ತು ಜಾಗತಿಕ ಆರ್ಥಿಕ ಬೆಳವಣಿಗೆಗೆ ಬಲವಾದ ಆವೇಗವನ್ನು ನೀಡಿದೆ, ಇದು ಏಷ್ಯಾದಲ್ಲಿ ಮುಕ್ತ ವ್ಯಾಪಾರ ಒಪ್ಪಂದಗಳ ಮಾತುಕತೆಯನ್ನು ಇನ್ನಷ್ಟು ವೇಗಗೊಳಿಸಲು ಹೊಸ ಪ್ರಚೋದನೆಯನ್ನು ನೀಡುತ್ತದೆ ಎಂದು ನಿರೀಕ್ಷಿಸಲಾಗಿದೆ.

 

ಬೋವಾ ಫೋರಂ’ ಬಗ್ಗೆ:

 • ಬೋವಾ ಫೋರಮ್ ಫಾರ್ ಏಷ್ಯಾ (BFA) ಅನ್ನು 2001 ರಲ್ಲಿ 25 ಏಷ್ಯಾದ ದೇಶಗಳು ಮತ್ತು ಆಸ್ಟ್ರೇಲಿಯಾ ಪ್ರಾರಂಭಿಸಿತು. 2006 ರಲ್ಲಿ, ಅದರ ಸದಸ್ಯರ ಸಂಖ್ಯೆ 28 ಕ್ಕೆ ಏರಿತು.
 • ಇದು ಲಾಭೋದ್ದೇಶವಿಲ್ಲದ ಸಂಸ್ಥೆಯಾಗಿದೆ.
 • ಇದು ಏಷ್ಯಾ ಮತ್ತು ವಿಶ್ವದ ರಾಜಕೀಯ, ವ್ಯವಹಾರ ಮತ್ತು ಶೈಕ್ಷಣಿಕ ಮುಖಂಡರಿಗೆ ಉನ್ನತ ಮಟ್ಟದ ವೇದಿಕೆಯನ್ನು ಒದಗಿಸಿದೆ.
 • ಇದು ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ವಾರ್ಷಿಕವಾಗಿ ನಡೆಯುವ ‘ವಿಶ್ವ ಆರ್ಥಿಕ ವೇದಿಕೆಯ’ ಮಾದರಿಯಲ್ಲಿ ರೂಪುಗೊಂಡಿದೆ.
 • ಪ್ರಾದೇಶಿಕ ಆರ್ಥಿಕ ಏಕೀಕರಣವನ್ನು ಉತ್ತೇಜಿಸಲು ಮತ್ತು ಏಷ್ಯಾದ ದೇಶಗಳನ್ನು ತಮ್ಮ ಅಭಿವೃದ್ಧಿ ಗುರಿಗಳಿಗೆ ಇನ್ನಷ್ಟು ಹತ್ತಿರ ತರಲು ಈ ವೇದಿಕೆ ಬದ್ಧವಾಗಿದೆ.
 • ಪ್ರಾದೇಶಿಕ ಆರ್ಥಿಕ ಏಕೀಕರಣ, ಸಾಮಾನ್ಯ ಅಭಿವೃದ್ಧಿ ಮತ್ತು ಹೆಚ್ಚು ಸಮೃದ್ಧ ಮತ್ತು ಸಾಮರಸ್ಯದ ಏಷ್ಯಾದ ನಿರ್ಮಾಣಕ್ಕೆ ಈ ವೇದಿಕೆಯು ಸಕಾರಾತ್ಮಕವಾದ ಕೊಡುಗೆಗಳನ್ನು ನೀಡಿದೆ.

 

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಜಾಗತಿಕ ಯುವ ಸಜ್ಜುಗೊಳಿಸುವಿಕೆ ಸ್ಥಳೀಯ ಪರಿಹಾರಗಳ ಅಭಿಯಾನ:


(Global Youth Mobilization Local Solutions campaign)

 ಸಂದರ್ಭ:

ನಾವೆಲ್ ಕೊರೊನೊವೈರಸ್ ಕಾಯಿಲೆ ಎಂಬ

(COVID -19) ಸಾಂಕ್ರಾಮಿಕ ರೋಗದಿಂದ ಬಳಲುತ್ತಿರುವ ಜಗತ್ತಿನ ಯುವಕರ ಜೀವನವನ್ನು ಪುನರುಜ್ಜೀವನಗೊಳಿಸಲು ವಿಶ್ವದಾದ್ಯಂತ ಇರುವ ಈ ಯುವಕರ ಜೀವನವನ್ನು ಮತ್ತೆ ದಾರಿಗೆ ತರಲು ವಿಶ್ವಸಂಸ್ಥೆಯ ವಿವಿಧ ಸಂಸ್ಥೆಗಳು ಮತ್ತು ಯುವ ಸಂಘಟನೆಗಳು ಒಂದು ವಿಶಿಷ್ಟ ಅಭಿಯಾನವನ್ನು ಪ್ರಾರಂಭಿಸಿವೆ.

 

ಜಾಗತಿಕ ಯುವ ಸಜ್ಜುಗೊಳಿಸುವಿಕೆ ಸ್ಥಳೀಯ ಪರಿಹಾರಗಳ’ ಅಭಿಯಾನದ ಬಗ್ಗೆ:

 •  ಅಭಿಯಾನವನ್ನು ಏಪ್ರಿಲ್ 19, 2021 ರಂದು ಪ್ರಾರಂಭಿಸಲಾಗಿದೆ.
 • ಸಾಂಕ್ರಾಮಿಕ ರೋಗದಿಂದ ಪೀಡಿತರಾದ ಸಮುದಾಯಗಳಲ್ಲಿನ ಯುವಕರಿಗೆ ಜೀವನವನ್ನು ಪುನರ್ ನಿರ್ಮಿಸಲು ಒಂದು ನವೀನ ಕಾರ್ಯಕ್ರಮವನ್ನು ಪ್ರಾರಂಭಿಸಲು ಆರ್ಥಿಕ ನೆರವು ನೀಡುವುದು ಈ ಅಭಿಯಾನದ ಉದ್ದೇಶವಾಗಿದೆ.
 • ಇದರ ಅಡಿಯಲ್ಲಿ, ಆರಂಭಿಕವಾಗಿ $ 2 ಮಿಲಿಯನ್ (ಅಂದಾಜು 15 ಕೋಟಿ ರೂ.) ಹಣವು ನಾಲ್ಕು ಹಂತಗಳಲ್ಲಿ $ 500 ರಿಂದ $ 5,000 ನೆರವಿನಂತೆ ಒದಗಿಸಲಾಗುವುದು ಮತ್ತು “ವೇಗವರ್ಧಕ” ಕಾರ್ಯಕ್ರಮವು ಅತ್ಯಂತ ಭರವಸೆಯ ಪರಿಹಾರಗಳನ್ನು ನಿರ್ಣಯಿಸುತ್ತದೆ ಮತ್ತು ಮುಂಬರುವ ತಿಂಗಳುಗಳಲ್ಲಿ ಹೆಚ್ಚಿನ ಹಣವನ್ನು ಪೂರೈಸುವ ಮೂಲಕ ಅವುಗಳನ್ನು ಪುನರಾವರ್ತಿಸಲಾಗುತ್ತದೆ.

 

ಈ ಅಭಿಯಾನವನ್ನು ವಿಶ್ವದ ಆರು ದೊಡ್ಡ ಯುವ ಸಂಘಟನೆಗಳು ಬೆಂಬಲಿಸುತ್ತಿವೆ:

 • ವರ್ಲ್ಡ್ ಅಲಯನ್ಸ್ ಆಫ್ ಯಂಗ್ ಮೆನ್ಸ್ ಕ್ರಿಶ್ಚಿಯನ್ ಅಸೋಸಿಯೇಷನ್ಸ್.
 • ವಿಶ್ವ ಯುವ ಮಹಿಳಾ ಕ್ರಿಶ್ಚಿಯನ್ ಸಂಘ.
 • ಸ್ಕೌಟ್ ಚಳವಳಿಯ ವಿಶ್ವ ಸಂಸ್ಥೆ.
 • ವರ್ಲ್ಡ್ ಅಸೋಸಿಯೇಶನ್ ಆಫ್ ಗರ್ಲ್ ಗೈಡ್ಸ್ ಮತ್ತು ಗರ್ಲ್ ಸ್ಕೌಟ್ಸ್.
 • ಇಂಟರ್ನ್ಯಾಷನಲ್ ಫೆಡರೇಶನ್ ಆಫ್ ರೆಡ್ ಕ್ರಾಸ್ ಮತ್ತು ರೆಡ್ ಕ್ರೆಸೆಂಟ್ ಸೊಸೈಟಿಗಳು
 • ಡ್ಯೂಕ್ ಆಫ್ ಎಡಿನ್ಬರ್ಗ್ ಅಂತರರಾಷ್ಟ್ರೀಯ ಪ್ರಶಸ್ತಿ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಾಗೃತಿ.

2025 ರಲ್ಲಿ  ತನ್ನದೇ ಆದ ಬಾಹ್ಯಾಕಾಶ ಕೇಂದ್ರವನ್ನು ಪ್ರಾರಂಭಿಸಲಿರುವ ರಷ್ಯಾ:


(Russia to launch its own space station in 2025)

 ಸಂದರ್ಭ:

ರಷ್ಯಾದ ಬಾಹ್ಯಾಕಾಶ ಸಂಸ್ಥೆ 2025 ರಲ್ಲಿ ತನ್ನದೇ ಆದ ಕಕ್ಷೀಯ ಕೇಂದ್ರ’ವನ್ನು ಪ್ರಾರಂಭಿಸಲು ಯೋಜಿಸುತ್ತಿದೆ.

 

ಹಿನ್ನೆಲೆ:

 ತನ್ನದೇ ಆದ ಬಾಹ್ಯಾಕಾಶ ಕೇಂದ್ರವನ್ನು ಪ್ರಾರಂಭಿಸಲು ಉದ್ದೇಶಿಸಿರುವ ರಷ್ಯಾ, ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (International Space Station- ISS) ಕಾರ್ಯಕ್ರಮದಿಂದ ಹಿಂದೆ ಸರಿಯುವ ಬಗ್ಗೆ ಯೋಚಿಸುತ್ತಿದೆ.

 ಅಮೇರಿಕಾದ “ಸ್ಪೇಸ್ ಎಕ್ಸ್” ಕಂಪನಿಯ  ಮೊದಲ ಯಶಸ್ವಿ ಕಾರ್ಯಾಚರಣೆಯ ನಂತರ, ಕಳೆದ ವರ್ಷ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ (ಐಎಸ್ಎಸ್) ಕಳುಹಿಸಲಾಗುವ ಮಾನವಸಹಿತ ಬಾಹ್ಯಾಕಾಶ ಉಡಾವಣೆಗಳ ವಿಷಯದಲ್ಲಿ ರಷ್ಯಾದ ಏಕಸ್ವಾಮ್ಯ ಕೊನೆಗೊಂಡಿತು.

 

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ ಕುರಿತು:

ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಅನ್ನು 1998 ರಲ್ಲಿ ಪ್ರಾರಂಭಿಸಲಾಯಿತು ಮತ್ತು ಇದು ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆ ಸೇರಿದಂತೆ ರಷ್ಯಾ, ಯುನೈಟೆಡ್ ಸ್ಟೇಟ್ಸ್, ಕೆನಡಾ, ಜಪಾನ್‌ನ ಬಾಹ್ಯಾಕಾಶ ಏಜೆನ್ಸಿಗಳನ್ನು ಒಳಗೊಂಡಿದೆ. ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ (ISS) ಮಾನವ ಇತಿಹಾಸದಲ್ಲಿ ಅತ್ಯಂತ ಮಹತ್ವಾಕಾಂಕ್ಷೆಯ ಅಂತರರಾಷ್ಟ್ರೀಯ ಸಹಯೋಗವಾಗಿದೆ.

 • ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣವು ‘(ISS) ಭೂಮಿಯ ಕೆಳ ಕಕ್ಷೆಯಲ್ಲಿರುವ’(ನಿಕಟವರ್ತಿ ಕಕ್ಷೆಯಲ್ಲಿ) ಮಾಡ್ಯುಲರ್ ಬಾಹ್ಯಾಕಾಶ ನಿಲ್ದಾಣ ‘(ವಾಸಯೋಗ್ಯ ಕೃತಕ ಉಪಗ್ರಹ) ವಾಗಿದೆ.
 • ISS ಮೈಕ್ರೊಗ್ರಾವಿಟಿ (ಸೂಕ್ಷ್ಮಗುರುತ್ವ) ಮತ್ತು ಬಾಹ್ಯಾಕಾಶ ಪರಿಸರ ಸಂಶೋಧನಾ ಪ್ರಯೋಗಾಲಯವಾಗಿ ಕಾರ್ಯನಿರ್ವಹಿಸುತ್ತದೆ, ಅದರ ಮೇಲೆ ಖಗೋಳ ಜೀವವಿಜ್ಞಾನ, ಖಗೋಳವಿಜ್ಞಾನ, ಹವಾಮಾನಶಾಸ್ತ್ರ, ಭೌತಶಾಸ್ತ್ರ ಮತ್ತು ಇತರ ಕ್ಷೇತ್ರಗಳಿಗೆ ಸಂಬಂಧಿಸಿದ ವೈಜ್ಞಾನಿಕ ಪ್ರಯೋಗಗಳನ್ನು ನಡೆಸಲಾಗುತ್ತದೆ.
 • ISS ಸುಮಾರು 93 ನಿಮಿಷಗಳಲ್ಲಿ ಭೂಮಿಯನ್ನು ಒಂದು ಸುತ್ತು ಸುತ್ತುತ್ತದೆ ಮತ್ತು ದಿನಕ್ಕೆ 15.5 ಕಕ್ಷೆಗಳನ್ನು ಪೂರ್ಣಗೊಳಿಸುತ್ತದೆ.
 • ಬಾಹ್ಯಾಕಾಶ ನೌಕೆಯ ವ್ಯವಸ್ಥೆಗಳ ಪರೀಕ್ಷೆಗಾಗಿ ನಿಲ್ದಾಣವು ವಿಶಿಷ್ಟ ವಾತಾವರಣವನ್ನು ಒದಗಿಸುತ್ತದೆ. ಇಂತಹ ವ್ಯವಸ್ಥೆಗಳು ಚಂದ್ರ ಮತ್ತು ಮಂಗಳದ ಯಾತ್ರೆಗೆ ಅಗತ್ಯವಾಗಿವೆ.
 • ಸೋವಿಯತ್ ಒಕ್ಕೂಟದ ನಂತರ ರಷ್ಯಾ ಕಳುಹಿಸಿದ ಸ್ಯಾಲ್ಯುಟ್ (Salyut), ಅಲ್ಮಾಜ್ (Almaz) ಮತ್ತು ಮಿರ್ (Mir) ನಿಲ್ದಾಣಗಳು ಮತ್ತು ಅಮೇರಿಕಾ ಕಳುಹಿಸಿದ ‘ಸ್ಕೈಲ್ಯಾಬ್’(Skylab)  ಅನ್ನು ಅನುಸರಿಸಿ ಸಿಬ್ಬಂದಿ ವಾಸಿಸುವ ಒಂಬತ್ತನೇ ಬಾಹ್ಯಾಕಾಶ ನಿಲ್ದಾಣ ವಾಗಿದೆ ಈ

 

ವಿಷಯಗಳು: ಸಂವಹನ ನೆಟ್‌ವರ್ಕ್‌ಗಳ ಮೂಲಕ ಆಂತರಿಕ ಭದ್ರತೆಗೆ ಸವಾಲುಗಳು, ಆಂತರಿಕ ಭದ್ರತಾ ಸವಾಲುಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ, ಸೈಬರ್ ಸುರಕ್ಷತೆಯ ಮೂಲಗಳು; ಹಣ ವರ್ಗಾವಣೆ ಮತ್ತು ಅದರ ತಡೆಗಟ್ಟುವಿಕೆ.

ಅಂತರ್ಜಾಲದಿಂದ ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕುವ ಕುರಿತು ದೆಹಲಿ ಹೈಕೋರ್ಟ್ ನ ಮಾರ್ಗಸೂಚಿಗಳು:


(Delhi High Court guidelines on removing offending content from the internet)

 

ಸಂದರ್ಭ:

 ಇಂಟರ್ನೆಟ್ ಎಂದಿಗೂ ನಿದ್ರಿಸುವುದಿಲ್ಲ ಮತ್ತು ಎಂದಿಗೂ ಮರೆಯುವುದಿಲ್ಲ’ ಎಂದು ಗಮನಿಸಿದ ದೆಹಲಿ ಹೈಕೋರ್ಟ್ ಅಶ್ಲೀಲ ವೆಬ್‌ಸೈಟ್‌ಗಳಿಂದ ಅಶ್ಲೀಲ ಫೋಟೋಗಳು ಮತ್ತು ವೀಡಿಯೊಗಳಂತಹ ನಿಂದನೀಯ ಮತ್ತು ಆಕ್ಷೇಪಾರ್ಹ ವಿಷಯವನ್ನು ತೆಗೆದುಹಾಕುವಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಹಲವಾರು ನಿರ್ದೇಶನಗಳನ್ನು ನೀಡಿದೆ.

 

ಏನಿದು ಪ್ರಕರಣ?

 ಮಹಿಳೆಯೊಬ್ಬರು ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಈ ಮಹಿಳೆ ಅರ್ಜಿಯಲ್ಲಿ, ತನ್ನ ಅಶ್ಲೀಲ ಅಥವಾ ಆಕ್ಷೇಪಾರ್ಹವಲ್ಲದ ಕೆಲವು ಚಿತ್ರಗಳನ್ನು ತನ್ನ ಒಪ್ಪಿಗೆಯಿಲ್ಲದೆ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಮ್ ಖಾತೆಯಿಂದ ತೆಗೆದುಕೊಳ್ಳಲಾಗಿದೆಯಲ್ಲದೆ ಅವುಗಳನ್ನು ಅವಹೇಳನಕಾರಿ ಶೀರ್ಷಿಕೆಯೊಂದಿಗೆ ಅಶ್ಲೀಲ ವೆಬ್‌ಸೈಟ್‌ ನಲ್ಲಿ ಅಪ್‌ಲೋಡ್ ಮಾಡಲಾಗಿದೆ ಎಂದು  ಹೇಳಿದ್ದಾರೆ.

 

ನ್ಯಾಯಾಲಯ ನೀಡಿದ ನಿರ್ದೇಶನಗಳು:

 • ಯಾವುದೇ ಸಂತ್ರಸ್ತರು, ನ್ಯಾಯಾಲಯವನ್ನು ಅಂತಹ ದೂರುಗಳೊಂದಿಗೆ ಸಂಪರ್ಕಿಸಿದಾಗ, ಆ ನ್ಯಾಯಾಲಯವು, ಆಕ್ಷೇಪಾರ್ಹ ವಿಷಯವನ್ನು ಪ್ರದರ್ಶಿಸುವ ವೆಬ್‌ಸೈಟ್ ಅಥವಾ ಆನ್‌ಲೈನ್ ಪ್ಲಾಟ್‌ಫಾರ್ಮ್ ಗಳಿಗೆ, ಅಂತಹ ವಿಷಯವನ್ನು ತೆಗೆದುಹಾಕಲು ತಕ್ಷಣ ನಿರ್ದೇಶನವನ್ನು ನೀಡಬೇಕು. ಮತ್ತು ಯಾವುದೇ ಸಂದರ್ಭದಲ್ಲಿ, ನ್ಯಾಯಾಲಯದ ಆದೇಶ ಬಂದ 24 ಗಂಟೆಗಳ ಒಳಗೆ ಆಕ್ಷೇಪಾರ್ಹ ವಿಷಯಗಳನ್ನು ತೆಗೆದುಹಾಕಬೇಕು.
 • ಆಕ್ಷೇಪಾರ್ಹ ವಿಷಯವನ್ನು ಪ್ರದರ್ಶಿಸುವ ವೆಬ್‌ಸೈಟ್ ಅಥವಾ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗೆ, ಆಕ್ಷೇಪಾರ್ಹ ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿ ಮತ್ತು ಸಂಬಂಧಿತ ದಾಖಲೆಗಳನ್ನು ಕನಿಷ್ಠ 180 ದಿನಗಳವರೆಗೆ ತನಿಖೆಗೆ ಬಳಸಲು ಕಡ್ಡಾಯವಾಗಿ  ಸಂರಕ್ಷಿಸಿಡಲು ನಿರ್ದೇಶನಗಳನ್ನು ನೀಡಿಬೇಕೆಂದು ಆದೇಶಿಸಲಾಗಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 4


 

ವಿಷಯಗಳು: ನೈತಿಕತೆ, ಸಮಗ್ರತೆ ಮತ್ತು ಅಭಿಕ್ಷಮತೆ.

ಮಂಗಗಳ ಭ್ರೂಣಗಳಲ್ಲಿ ಬೆಳೆಯುತ್ತಿರುವ ಮಾನವ ಜೀವಕೋಶಗಳು: ನೈತಿಕ ಚರ್ಚೆಗೆ ನಾಂದಿ:


(Why human cells grown in monkey embryos sparked ethics debate?)

 

ಸಂದರ್ಭ:

ಇತ್ತೀಚೆಗೆ, ಅಮೆರಿಕಾದ ಸಂಶೋಧಕರು ಮೊದಲ ಬಾರಿಗೆ ಮಾನವ ಕೋಶಗಳನ್ನು ಮಂಗಗಳ ಭ್ರೂಣಗಳಲ್ಲಿ ಅಭಿವೃದ್ಧಿಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

 • ಮಾನವ ಜೀವಕೋಶಗಳನ್ನು ಮಕಾಕ್ ಮಂಕಿ ಭ್ರೂಣಗಳಲ್ಲಿ ಸಂಯೋಜಿಸುವ ಮೂಲಕ, ಸಂಶೋಧಕರು ಅಸಂಭವನೀಯ ಕಾಲ್ಪನಿಕ ಸಾಧನ’ (Chimeric Tool) ವನ್ನು ರಚಿಸಿದ್ದಾರೆ.
 • ಚಿಮೆರಾಗಳು’ (Chimeras) ಎಂದು ಕರೆಯಲ್ಪಡುವ ಈ ಜೀವಿಗಳು ಎರಡು ವಿಭಿನ್ನ ಪ್ರಭೇದಗಳ ಜೀವ ಕೋಶಗಳಿಂದ ಕೂಡಿದ ಜೀವಿಗಳಾಗಿವೆ. ಈ ಸಂದರ್ಭದಲ್ಲಿ, ಈ ‘ಚಿಮೆರಾಗಳು’ ಮಾನವ ಮತ್ತು ಮಂಗ ಪ್ರಭೇದಗಳಿಂದ ಕೂಡಿದೆ.

 

ಈ ಚಿಮೇರಿಕ್ ಸಂಶೋಧನೆಯ ಉದ್ದೇಶವೇನು?

 •  ಎರಡು ವಿಭಿನ್ನ ಪ್ರಭೇದಗಳ ಕೋಶಗಳನ್ನು ಏಕಕಾಲದಲ್ಲಿ ಬೆಳೆಸುವ ಈ ಸಾಮರ್ಥ್ಯವು ವಿಜ್ಞಾನಿಗಳಿಗೆ ಸಂಶೋಧನೆ ಮತ್ತು ಚಿಕಿತ್ಸೆಯ ಅಥವಾ ಔಷಧ ಕ್ಷೇತ್ರದಲ್ಲಿ ಪ್ರಬಲ ಸಾಧನವನ್ನು ಒದಗಿಸುತ್ತದೆ, ಇದು ಆರಂಭಿಕ ಮಾನವ ಬೆಳವಣಿಗೆಗೆ, ರೋಗಗಳ ಹೊರಹೊಮ್ಮುವಿಕೆ, ವಿಕಸನ ಅನುಕ್ರಮ ಮತ್ತು ವಯಸ್ಸಾಗುವಿಕೆಯ ಬಗ್ಗೆ ಪ್ರಸ್ತುತವಿರುವ ತಿಳುವಳಿಕೆಯನ್ನು ಹೆಚ್ಚಿಸುತ್ತದೆ ಎಂದು ಸಂಶೋಧಕರು ನಂಬಿದ್ದಾರೆ.  
 • ಇದಲ್ಲದೆ, ಅಂತಹ ಸಂಶೋಧನೆಯು ಔಷಧಿಗಳ ಮೌಲ್ಯಮಾಪನಕ್ಕೆ ಸಹಾಯ ಮಾಡುತ್ತದೆ ಮತ್ತು ಅಂಗಾಂಗ ಕಸಿ ಮಾಡುವಂತಹ ಪ್ರಮುಖ ಅಗತ್ಯಗಳನ್ನು ಪರಿಹರಿಸುತ್ತದೆ.

 

ಇದರ ಬಗ್ಗೆ ಇರುವ ನೈತಿಕ ಕಾಳಜಿಯ ವಿಷಯಗಳಾವವು?

 • ವಿಶಿಷ್ಟವಾಗಿ, ವಿಭಿನ್ನ ಪ್ರಭೇದಗಳು ಪರಸ್ಪರ ಅಡ್ಡ-ಸಂತಾನೋತ್ಪತ್ತಿ ಮಾಡುವುದಿಲ್ಲ, ಮತ್ತು ಅವು ಹಾಗೆ ಮಾಡಿದರೆ, ಉತ್ಪತ್ತಿಯಾಗುವ ಸಂತತಿಯು ಹೆಚ್ಚು ಕಾಲ ಬದುಕುವುದಿಲ್ಲ ಮತ್ತು ಈ ಪ್ರಕ್ರಿಯೆಯು ಬಂಜೆತನಕ್ಕೆ ಕಾರಣವಾಗುತ್ತದೆ. ಆದಾಗ್ಯೂ, ಕೆಲವು ಅಪರೂಪದ ಮಿಶ್ರತಳಿಗಳು ನೈಸರ್ಗಿಕವಾಗಿ ಅಸ್ತಿತ್ವದಲ್ಲಿವೆ ಎಂದು ಕಂಡುಬಂದಿದೆ ಮತ್ತು ಇದು ಬಹುಶಃ ವಿವಿಧ ಜಾತಿಗಳ ಜೀವಿಗಳ ನಡುವೆ ಆದ ಉದ್ದೇಶಪೂರ್ವಕವಲ್ಲದ ಅಥವಾ ಅಜಾಗರೂಕ ಅಡ್ಡ-ಸಂತಾನೋತ್ಪತ್ತಿಯ ಪರಿಣಾಮವಾಗಿರಬಹುದು.
 • ‘ಚಿಮೆರಾಗಳ’ ಕುರಿತು ಹೆಚ್ಚಿನ ಸಂಶೋಧನೆಗಳು ಪ್ರಗತಿಗೆ ಕಾರಣವಾಗಬಹುದಾದರೂ, ಇದರರ್ಥ, ಅವುಗಳನ್ನು ಮಾನವರಿಗೆ ಅಂಗಗಳ ಮೂಲವಾಗಿ ಬಳಸಬಹುದು. ಅದೇನೇ ಇದ್ದರೂ, ಈ ‘ಚಿಮೆರಾಗಳು’ ಮಾನವ ಮತ್ತು ಮಾನವೇತರ ಕೋಶಗಳ ಮಿಶ್ರಣವಾಗಿರುತ್ತದೆ, ಈ ಆಲೋಚನೆಯು ಅನೇಕ ಜನರಿಗೆ ಅನನುಕೂಲವನ್ನುಂಟು ಮಾಡಬಹುದು.
 • ಈ ಸಂಶೋಧನೆಯು, “ನಾವು ಇತರ ಜೀವರಾಶಿಗಳನ್ನು ಹೇಗೆ ನೋಡಿಕೊಳ್ಳಬೇಕು? ಎಂಬ ತಾತ್ವಿಕ ಮತ್ತು ನೈತಿಕ ಸ್ಥಾನಮಾನದ ಸಮಸ್ಯೆಯನ್ನು ಹುಟ್ಟುಹಾಕುತ್ತದೆ:”.
 • ಈ ಸಂಶೋಧನೆಯ ವಿರೋಧಿಗಳು ‘ಚಿಮೆರಾ ಸಂಶೋಧನೆಯು’ ಪ್ರಾಣಿಗಳಿಗೆ ಮಾಡಿದ ಅನ್ಯಾಯವನ್ನು ಇನ್ನಷ್ಟು ಹದಗೆಡಿಸುತ್ತದೆ ಮತ್ತು  ಮಾನವ ಅಗತ್ಯಗಳನ್ನು ಪೂರೈಸಲು ಮಾನವ-ಪ್ರಾಣಿ ಅಂಗಗಳನ್ನು ಬಳಸುವಲ್ಲಿ ಸಮರ್ಥನೆಯನ್ನು ಸೂಚಿಸುತ್ತದೆ ಎಂದು ವಾದಿಸುತ್ತಾರೆ.

 

 ಇದೇ ರೀತಿಯ ಹಿಂದಿನ ಪ್ರಕರಣಗಳು:  

 • 2018 ರಲ್ಲಿ, ಡಾ. ಹಿ ಜಿಯಾಂಕುಯಿ (He Jiankui) ಅವರು ‘CRISPR’ ಎಂಬ ಜೀನ್ ಎಡಿಟಿಂಗ್ ತಂತ್ರವನ್ನು ಬಳಸಿಕೊಂಡು ತಳೀಯವಾಗಿ ಮಾರ್ಪಡಿಸಿದ ಶಿಶುಗಳನ್ನು (Modified Babies) ಉತ್ಪಾದಿಸಿರುವುದಾಗಿ ಹೇಳಿಕೊಂಡರು.
 • ಡಾ. ಜಿಯಾಂಕುಯಿ ಅವರು ಮಾನವ ಭ್ರೂಣದ ವಂಶವಾಹಿಗಳನ್ನು ಪರಿವರ್ತಿಸಿರುವುದಾಗಿ ಹೇಳಿಕೊಂಡರು, ಇದರ ಪರಿಣಾಮವಾಗಿ ನಿರ್ದಿಷ್ಟ ಅಪೇಕ್ಷಿತ ಗುಣಲಕ್ಷಣಗಳನ್ನು ಹೊಂದಿದ ಅವಳಿ ಹುಡುಗಿಯರ ಜನನಕ್ಕೆ ಕಾರಣವಾಯಿತು. ಬಹುಶಃ ಈ ಘಟನೆಯನ್ನು ಮಾನವ ಸಂತತಿಯ ಈ ರೀತಿಯ ಉತ್ಪತ್ತಿಗೆ ಮೊದಲ ಉದಾಹರಣೆಯಾಗಿದೆಯೆಂದು ಪರಿಗಣಿಸಲಾಗಿದೆ.
 • ಭಾರತದಂತಹ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ, ತಳೀಯವಾಗಿ ಮಾರ್ಪಡಿಸಿದ ಬೆಳೆಗಳು ಸಹ ವಿವಾದಾತ್ಮಕ ವಿಷಯವಾಗಿದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಐರೋಪ್ಯ ಒಕ್ಕೂಟದ ಮಂಡಳಿ:

(Council of the European Union)

 •  ಯುರೋಪಿಯನ್ ಒಕ್ಕೂಟವನ್ನು (European Union) ಒಳಗೊಂಡಿರುವ ಒಪ್ಪಂದದಲ್ಲಿ ಪಟ್ಟಿ ಮಾಡಲಾದ ಯುರೋಪಿಯನ್ ಒಕ್ಕೂಟದ, ಏಳು ಸಂಸ್ಥೆಗಳಲ್ಲಿ ಮೂರನೇ ಸ್ಥಾನದಲ್ಲಿ ‘ಯುರೋಪಿಯನ್ ಕೌನ್ಸಿಲ್’ ಅಥವಾ ‘ಐರೋಪ್ಯ ಒಕ್ಕೂಟದ ಮಂಡಳಿ’ (European Council) ಇದೆ.
 • ಇದು ಯುರೋಪಿಯನ್ ಒಕ್ಕೂಟದ ಮೂರು ಶಾಸಕಾಂಗ ಸಂಸ್ಥೆಗಳಲ್ಲಿ ಒಂದಾಗಿದೆ ಮತ್ತು ಯುರೋಪಿಯನ್ ಕಮಿಷನ್ ಪರಿಚಯಿಸಿದ ಶಾಸಕಾಂಗ ಉಪಕ್ರಮಗಳಿಗೆ ಸಂಬಂಧಿಸಿದ ಪ್ರಸ್ತಾಪಗಳನ್ನು ತಿದ್ದುಪಡಿ ಮಾಡಲು ಮತ್ತು ಅನುಮೋದಿಸಲು ಯುರೋಪಿಯನ್ ಸಂಸತ್ತಿನೊಂದಿಗೆ ಕೆಲಸ ಮಾಡುತ್ತದೆ.

 

ಇದನ್ನು 1 ಜುಲೈ 1967 ರಂದು ಸ್ಥಾಪಿಸಲಾಯಿತು.

 • ಈ ಮಂಡಳಿಯ ಪ್ರಾಥಮಿಕ ಉದ್ದೇಶ ಯುರೋಪಿಯನ್ ಒಕ್ಕೂಟದ ಶಾಸಕಾಂಗ ಶಾಖೆಯ ಎರಡು ವೀಟೋ ಸಂಸ್ಥೆಗಳಲ್ಲಿ ಒಂದಾಗಿ ಕಾರ್ಯನಿರ್ವಹಿಸುವುದು. ಯುರೋಪಿಯನ್ ಪಾರ್ಲಿಮೆಂಟ್ ಯುರೋಪಿಯನ್ ಒಕ್ಕೂಟದ ಶಾಸಕಾಂಗ ಶಾಖೆಯ ಎರಡನೇ ವೀಟೋ ಸಂಸ್ಥೆಯಾಗಿದೆ.
 • ಈ ಎರಡು ಸಂಸ್ಥೆಗಳು ಒಟ್ಟಾಗಿ ಯುರೋಪಿಯನ್ ಆಯೋಗದ ಪ್ರಸ್ತಾಪಗಳನ್ನು ಮಾರ್ಪಡಿಸಲು, ಅನುಮೋದಿಸಲು ಅಥವಾ ತಿರಸ್ಕರಿಸಲು ಕಾರ್ಯನಿರ್ವಹಿಸುತ್ತವೆ. ಯುರೋಪಿಯನ್ ಒಕ್ಕೂಟದಲ್ಲಿ ಕಾನೂನುಗಳನ್ನು ಪ್ರಸ್ತಾಪಿಸುವ ಅಧಿಕಾರ ಹೊಂದಿರುವ ಏಕೈಕ ಸಂಸ್ಥೆ ಯುರೋಪಿಯನ್ ಕಮಿಷನ್.
 • ಯುರೋಪಿಯನ್ ಸಂಸತ್ತಿನೊಂದಿಗೆ ಜಂಟಿಯಾಗಿ, ಈ ಯುರೋಪಿಯನ್ ಕೌನ್ಸಿಲ್ ಯುರೋಪಿಯನ್ ಒಕ್ಕೂಟದ ಬಜೆಟ್ ಅಧಿಕಾರವನ್ನು ಹೊಂದಿದೆ.


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos