Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 17ನೇ ಏಪ್ರಿಲ್ 2021

 

ಪರಿವಿಡಿ :

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಸುಪ್ರೀಂ ಕೋರ್ಟ್‌ನ ವಿಶಾಲ ಅಧಿಕಾರ ವ್ಯಾಪ್ತಿ.

2. ಭಾರತವನ್ನು ಕರೆನ್ಸಿ ವೀಕ್ಷಣಾ ಪಟ್ಟಿಯಲ್ಲಿ ಇರಿಸಿದ ಯು.ಎಸ್. ಖಜಾನೆ ಇಲಾಖೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಆರ್‌ಬಿಐ ಮುಂದೆ ‘ಆನ್ ಟ್ಯಾಪ್’ ಪರವಾನಗಿ ಪಡೆಯಲು ಅರ್ಜಿ.

2. ಯುರೇನಿಯಂ ಅನ್ನು 60% ವರೆಗೆ ಸಮೃದ್ಧಗೊಳಿಸಲು ಪ್ರಾರಂಭಿಸಿರುವುದಾಗಿ ತಿಳಿಸಿದ ಇರಾನ್.

3. 99% ರಷ್ಟು ಸೂರ್ಯನ ಬೆಳಕನ್ನು ಪ್ರತಿಬಿಂಬಿಸಬಲ್ಲ ಸಾಮರ್ಥ್ಯ ಹೊಂದಿದ ‘ಇದುವರೆಗಿನ ಅತ್ಯಂತ ಬಿಳಿ ಬಣ್ಣ’.

4. ನೀರವ್ ಮೋದಿಯವರನ್ನು ಹಸ್ತಾಂತರಿಸಲು ಒಪ್ಪಿದ ಯುನೈಟೆಡ್ ಕಿಂಗ್ಡಮ್.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಈಟ್ ಸ್ಮಾರ್ಟ್ ಸಿಟಿಸ್ ಚಾಲೆಂಜ್.

2. ಎಲ್ಲರಿಗೂ ಸಾರಿಗೆ (ಟಿ 4 ಆಲ್) ಸವಾಲು.

3. ಲಿಂಗ ಸಂವಾದ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು:ಭಾರತೀಯ ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

ಸುಪ್ರೀಂ ಕೋರ್ಟ್‌ನ ವಿಶಾಲ ಅಧಿಕಾರ ವ್ಯಾಪ್ತಿ:


(Plenary jurisdiction of the Supreme Court)

ಸಂದರ್ಭ:

ಮಾಜಿ ಕಾನೂನು ಸಚಿವ ಅಶ್ವನಿ ಕುಮಾರ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿ (CJI) ಮತ್ತು ಸುಪ್ರೀಂ ಕೋರ್ಟ್‌ನ ಇತರ ನ್ಯಾಯಾಧೀಶರಿಗೆ ಪತ್ರ ಬರೆದಿದ್ದು, ಹದಗೆಡುತ್ತಿರುವ ಕೋವಿಡ್ -19 ರ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ರಾಜಕೀಯ ಸಮಾವೇಶಗಳನ್ನು, ಪ್ರತಿಭಟನಾ ಮೆರವಣಿಗೆಗಳನ್ನು ನಡೆಸಲು ಅವಕಾಶ ನೀಡದಂತೆ, ಮತ್ತು 50 ಕ್ಕೂ ಹೆಚ್ಚು ಜನರು ಸೇರುವ ಧಾರ್ಮಿಕ ಸಭೆಗಳು ಅಥವಾ ಉತ್ಸವಗಳು ಅಥವಾ ಹಬ್ಬಗಳನ್ನು ನಿಷೇಧಿಸಲು “ಸೂಕ್ತ ನಿರ್ದೇಶನಗಳನ್ನು” ನೀಡಬೇಕೆಂದು ಒತ್ತಾಯಿಸಿದ್ದಾರೆ.

 

ವರಿಷ್ಠ ನ್ಯಾಯಾಲಯವು ತನ್ನ ವಿಶಾಲ ಅಧಿಕಾರ ವ್ಯಾಪ್ತಿಯನ್ನು ಬಳಸಿಕೊಂಡು (142 ನೇ ವಿಧಿ ಅಡಿಯಲ್ಲಿ) ಸ್ವಯಂ ಪ್ರೇರಿತವಾಗಿ (suo-moto) ಸೂಕ್ತ ನಿರ್ದೇಶನಗಳನ್ನು ನೀಡುವಂತೆ ಅವರು ದೇಶದ ಉನ್ನತ ನ್ಯಾಯಾಲಯವನ್ನು ಕೋರಿದ್ದಾರೆ.

 

ಇದರ ಅಗತ್ಯತೆ:

ಪ್ರಸ್ತುತ, ದೇಶದಲ್ಲಿ ಕರೋನಾ ಪ್ರಕರಣಗಳ ಸಂಖ್ಯೆಯಲ್ಲಿನ ಮಾರಣಾಂತಿಕ ಹೆಚ್ಚಳವು ವಿಶ್ವದಲ್ಲೇ ಅತಿ ಹೆಚ್ಚು ಎಂದು ಅಧಿಕೃತವಾಗಿ ಅಂಗೀಕರಿಸಲ್ಪಟ್ಟಿದೆ ಮತ್ತು ವೈದ್ಯಕೀಯವಾಗಿ ದೃಢೀಕರಿಸಲಾಗಿದೆ. ಕರೋನಾ ರೋಗವು ವಿಪರೀತವಾಗಿ ಹರಡಲು ಕಾರಣೀಭೂತವಾದ ಅಂಶಗಳಾದ ರಾಜಕೀಯ ಸಮಾವೇಶಗಳು, ಧಾರ್ಮಿಕ ಉತ್ಸವಗಳು, ಮತ್ತು ಹಬ್ಬಗಳಿಂದಾಗಿ ಈ ರೋಗವು ಅತ್ಯುತ್ಸಾಹದಿಂದ ಮುನ್ನುಗ್ಗುತ್ತಿದೆ. ಸಂಪೂರ್ಣವಾದ ಲಾಕ್ಡೌನ್ ಮಾಡಲು ಸಾಧ್ಯವಾಗದಿದ್ದರೂ ಕೋವಿಡ್ 19 ಸೋಂಕು ಹರಡಲು ಕಾರಣವಾದ ಈ ಸಾಮೂಹಿಕ ಸಭೆ-ಸಮಾರಂಭಗಳು ಜರುಗದಂತೆ ತಡೆಯುವುದು ಅತ್ಯಗತ್ಯವಾಗಿದೆ.

 

ವಿಧಿ 142 ಏನು ಹೇಳುತ್ತದೆ?

ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ, ಪಕ್ಷಗಳ ನಡುವೆ ‘ಸಂಪೂರ್ಣ ನ್ಯಾಯ’ ದಾನ ಮಾಡುವ ವಿಶಿಷ್ಟ ಅಧಿಕಾರವನ್ನು ಸುಪ್ರೀಂ ಕೋರ್ಟ್‌ಗೆ ನೀಡಲಾಗಿದೆ, ಅಂದರೆ,ಸ್ಥಾಪಿತ ನಿಯಮಗಳು ಮತ್ತು ಕಾನೂನುಗಳ ಅಡಿಯಲ್ಲಿ ಪರಿಹಾರವು ಕಂಡುಬರದಿದ್ದಾಗ, ನ್ಯಾಯಾಲಯವು ಅಂತಹ ಸಂದರ್ಭದಲ್ಲಿ ಸಂಬಂಧಿಸಿದ ಪ್ರಕರಣದ ಸಂಗತಿಗಳನ್ನು ಗಮನದಲ್ಲಿಟ್ಟುಕೊಂಡು ಎರಡು ಪಕ್ಷಗಳಿಗೂ ಸರಿಹೊಂದುವ ಅಥವಾ ಸಮಾಧಾನ ತರುವ ರೀತಿಯಲ್ಲಿ ವಿವಾದದ ಬಗ್ಗೆ ‘ಅಂತಿಮ ತೀರ್ಪು’ ನೀಡುವುದಾಗಿದೆ. ಆ ಮೂಲಕ ಬಹು ಸಂಸ್ಕೃತಿ, ಬಹು ಭಾಷಿಕ ಹಾಗೂ ರೂಢಿಗತ ಸಂಪ್ರದಾಯ ಗಳನ್ನು ಹೊಂದಿರುವ ಈ ದೇಶದಲ್ಲಿ ಸಾರ್ವಜನಿಕ ಕಲ್ಯಾಣಕ್ಕಾಗಿ ಅನೇಕತೆಯಲ್ಲಿ ಏಕತೆ ಎಂಬ ತತ್ವವನ್ನು ಎತ್ತಿಹಿಡಿಯುವ ಜವಾಬ್ದಾರಿಯಾಗಿದೆ.

 

 • ಸಂವಿಧಾನದ 142 (1)ನೇ ವಿಧಿಯು ಹೇಳುವಂತೆ, “ಸುಪ್ರೀಂ ಕೋರ್ಟ್ ತನ್ನ ಅಧಿಕಾರ ವ್ಯಾಪ್ತಿಯಲ್ಲಿ, ಅಂತಹ ಒಂದು ತೀರ್ಪನ್ನು ಅಂಗೀಕರಿಸಬಹುದು ಅಥವಾ ಅದರ ಮುಂದೆ ಬಾಕಿ ಇರುವ ಯಾವುದೇ ಮೊಕದ್ದಮೆ ಅಥವಾ ವಿಷಯದಲ್ಲಿ ಸಂಪೂರ್ಣ ನ್ಯಾಯ ಒದಗಿಸಲು ಅಗತ್ಯವಾದ ಆದೇಶವನ್ನು ನೀಡಬಹುದು, ಮತ್ತು ಈ ರೀತಿ ಅಂಗೀಕರಿಸಲ್ಪಟ್ಟ ತೀರ್ಪು ಅಥವಾ ಅಂಗೀಕರಿಸಿದ ಆದೇಶವನ್ನು ಭಾರತದ ಭೂಪ್ರದೇಶದಾದ್ಯಂತ, ಸಂಸತ್ತು ಮಾಡಿದ ಯಾವುದೇ ಕಾನೂನಿನ ಪ್ರಕಾರ ಅಥವಾ ಅದರ ಅಡಿಯಲ್ಲಿ ಸೂಚಿ ಸ್ವಲ್ಪಡುವ ರೀತಿಯಲ್ಲಿ ಜಾರಿಗೊಳಿಸಲಾಗುತ್ತದೆ ಮತ್ತು ರಾಷ್ಟ್ರಪತಿಗಳ ಆದೇಶದಂತೆ, ಈ ಪರವಾಗಿ ಯಾವುದೇ ನಿಬಂಧನೆಗಳನ್ನು ಮಾಡುವವರೆಗೆ ದೇಶದಲ್ಲಿ ಎಲ್ಲೆಡೆ ಜಾರಿಯಲ್ಲಿರುತ್ತದೆ.

 

ವಿಷಯಗಳು: ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ಭಾರತವನ್ನು ಕರೆನ್ಸಿ ವೀಕ್ಷಣಾ ಪಟ್ಟಿಯಲ್ಲಿ ಇರಿಸಿದ ಯು.ಎಸ್. ಖಜಾನೆ ಇಲಾಖೆ:


(U.S. Treasury keeps India on currency watch list)

ಸಂದರ್ಭ:

ಇತ್ತೀಚೆಗೆ, ಯುಎಸ್ ಖಜಾನೆ ಇಲಾಖೆಯು ಯುನೈಟೆಡ್ ಸ್ಟೇಟ್ಸ್ ನ ಪ್ರಮುಖ ವ್ಯಾಪಾರ ಪಾಲುದಾರ ದೇಶಗಳ ಸ್ಥೂಲ ಆರ್ಥಿಕ ಮತ್ತು ವಿದೇಶಿ ವಿನಿಮಯ ನೀತಿಗಳ ಬಗ್ಗೆ ವರದಿಯನ್ನು ಬಿಡುಗಡೆ ಮಾಡಿದೆ.ಈ ಅರೆ-ವಾರ್ಷಿಕ ವರದಿಯ ಏಪ್ರಿಲ್ 2021 ಆವೃತ್ತಿಯು ಬೈಡನ್ ಆಡಳಿತದ ಮೊದಲ ವರದಿಯಾಗಿದೆ.

 • ವರದಿಯನ್ನು ಯುಎಸ್ ಕಾಂಗ್ರೆಸ್ ಗೆ ಪ್ರಸ್ತುತಪಡಿಸಲಾಗಿದೆ ಮತ್ತು ಅಮೆರಿಕದ 20 ಅತಿದೊಡ್ಡ ವ್ಯಾಪಾರ ಪಾಲುದಾರರ ಕರೆನ್ಸಿ ಅಭ್ಯಾಸಗಳನ್ನು ಪರಿಶೀಲಿಸುತ್ತದೆ.

ಪ್ರಮುಖ ವ್ಯಾಪಾರ ಪಾಲುದಾರರನ್ನು ಪರಿಶೀಲಿಸಲು ಮೂರು ಮಾನದಂಡಗಳನ್ನು ಬಳಸಲಾಗುತ್ತದೆ:

 • ಗಮನಾರ್ಹ (ಕನಿಷ್ಠ $ 20 ಬಿಲಿಯನ್) ದ್ವಿಪಕ್ಷೀಯ ವ್ಯಾಪಾರ ಹೆಚ್ಚುವರಿ.
 • ವಸ್ತು / ಸರಕುಗಳ ಚಾಲ್ತಿ ಖಾತೆ ಹೆಚ್ಚುವರಿ.
 • ವಿದೇಶಿ ವಿನಿಮಯ ಮಾರುಕಟ್ಟೆಗಳಲ್ಲಿ ನಿರಂತರ ಏಕಪಕ್ಷೀಯ ಹಸ್ತಕ್ಷೇಪ.

 

ಇತ್ತೀಚಿನ ವರದಿಯ ಪ್ರಮುಖ ಅಂಶಗಳು:

 • ಕರೆನ್ಸಿ ಕಾರ್ಯಗಳ ದೃಷ್ಟಿಯಿಂದ ‘ವೀಕ್ಷಣಾ ಪಟ್ಟಿಯಲ್ಲಿ’ ಸೇರಿಸಲಾದ 11 ದೇಶಗಳಲ್ಲಿ ಭಾರತವೂ ಒಂದು.
 • 2020 ರ ಡಿಸೆಂಬರ್‌ನಲ್ಲಿ ಬಿಡುಗಡೆಯಾದ ವರದಿಯಲ್ಲೂ ಭಾರತವನ್ನು ಈ ಪಟ್ಟಿಯಲ್ಲಿ ಸೇರಿಸಲಾಗಿತ್ತು.
 • ಭಾರತವನ್ನು ಹೊರತುಪಡಿಸಿ, ಚೀನಾ, ಜಪಾನ್, ಕೊರಿಯಾ, ಜರ್ಮನಿ, ಐರ್ಲೆಂಡ್, ಇಟಲಿ, ಮಲೇಷ್ಯಾ, ಸಿಂಗಾಪುರ್, ಥೈಲ್ಯಾಂಡ್ ಮತ್ತು ಮೆಕ್ಸಿಕೊ ಈ ಪಟ್ಟಿಯಲ್ಲಿ ಸೇರಿವೆ.
 • ಭಾರತವು ಮೂರು ಮಾನದಂಡಗಳಲ್ಲಿ ಎರಡನ್ನು ಪೂರೈಸುತ್ತದೆ – “ವ್ಯಾಪಾರ ಹೆಚ್ಚುವರಿ” ಮಾನದಂಡ ಮತ್ತು “ನಿರಂತರ, ಏಕಪಕ್ಷೀಯ ಹಸ್ತಕ್ಷೇಪ”ದ ಮಾನದಂಡ.

 

ಕರೆನ್ಸಿ ಮ್ಯಾನಿಪ್ಯುಲೇಷನ್’ ಎಂದರೇನು?

‘ಒಂದು ದೇಶವು’ “ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಅನ್ಯಾಯದ ಸ್ಪರ್ಧಾತ್ಮಕ ಲಾಭವನ್ನು ಪಡೆಯಲು” ‘ಅದರ ಕರೆನ್ಸಿ ಮತ್ತು ಯುಎಸ್ ಡಾಲರ್ ನಡುವಿನ ವಿನಿಮಯ ದರದ ಮೇಲೆ ಉದ್ದೇಶಪೂರ್ವಕವಾಗಿ ಪ್ರಭಾವ ಬೀರುವುದಾಗಿದೆ’ ಎಂದು ಯುಎಸ್ ಖಜಾನೆ ಇಲಾಖೆಯು ‘ಕರೆನ್ಸಿ ಮ್ಯಾನಿಪ್ಯುಲೇಷನ್’ ಅನ್ನು ವ್ಯಾಖ್ಯಾನಿಸಿದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ಅಂತರ್ಗತ ಬೆಳವಣಿಗೆ ಮತ್ತು ಅದರಿಂದ ಉದ್ಭವಿಸುವ ಸಮಸ್ಯೆಗಳು.

‘ಆನ್ ಟ್ಯಾಪ್’ ಪರವಾನಗಿ ಪಡೆಯಲು ಆರ್‌ಬಿಐ ಮುಂದೆ ಅರ್ಜಿ:


(RBI gets applications for ‘on tap’ licences)

 

ಸಂದರ್ಭ:

‘ಆನ್-ಟ್ಯಾಪ್’ ಸಾರ್ವತ್ರಿಕ ಖಾಸಗಿ ಬ್ಯಾಂಕ್ ಪರವಾನಗಿ ಮತ್ತು ‘ಸಣ್ಣ ಹಣಕಾಸು ಬ್ಯಾಂಕ್’ ಪರವಾನಗಿಗಳಿಗಾಗಿ ರಿಸರ್ವ್ ಬ್ಯಾಂಕ್ ತಲಾ ನಾಲ್ಕು ಅರ್ಜಿಗಳನ್ನು ಸ್ವೀಕರಿಸಿದೆ.

 • ಈ ಪ್ರಕ್ರಿಯೆಯು ಅಂತಹ ಪರವಾನಗಿಗಳಿಗಾಗಿ RBI ಆಗಸ್ಟ್ 2016 ಮತ್ತು ಡಿಸೆಂಬರ್ 2019 ರಲ್ಲಿ ನೀಡಿರುವ ಮಾರ್ಗಸೂಚಿಗಳ ಒಂದು ಭಾಗವಾಗಿದೆ.

 

ಯಾರು ಅರ್ಜಿ ಸಲ್ಲಿಸಬಹುದು?

ಆಗಸ್ಟ್ 2016 ರಲ್ಲಿ ಕೇಂದ್ರ ಬ್ಯಾಂಕ್ ಹೊರಡಿಸಿದ ಮಾರ್ಗಸೂಚಿಗಳ ಪ್ರಕಾರ:

 ಯುನಿವರ್ಸಲ್ ಬ್ಯಾಂಕ್ ಪರವಾನಗಿ’ ಬಯಸುವ ಅರ್ಹ ಘಟಕಗಳು ಈ ಕೆಳಗಿನ ಷರತ್ತುಗಳನ್ನು ಪೂರೈಸುವ ಅಗತ್ಯವಿದೆ:

 • ಅರ್ಜಿದಾರರು / ಘಟಕಗಳು ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ಹಿರಿಯ ಹುದ್ದೆಯಲ್ಲಿ ಕೆಲಸ ಮಾಡಿದ ಕನಿಷ್ಠ 10 ವರ್ಷಗಳ ಅನುಭವ ಹೊಂದಿರಬೇಕು. ‘ಪರವಾನಗಿ’ ಬಯಸುವ ಖಾಸಗಿ ಕಂಪನಿಗಳು ಅಥವಾ ಗುಂಪುಗಳು ಕನಿಷ್ಠ 10 ವರ್ಷಗಳ ಯಶಸ್ವಿ ಬ್ಯಾಂಕಿಂಗ್ ದಾಖಲೆಯನ್ನು ಹೊಂದಿರಬೇಕು.
 • ಈ ರೀತಿಯ ಪರವಾನಗಿಗಾಗಿ ಅರ್ಜಿ ಸಲ್ಲಿಸುವ ಗುಂಪುಗಳು ಅಥವಾ ಕಂಪನಿಗಳು 5,000 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಆಸ್ತಿಯನ್ನು ಹೊಂದಿರಬೇಕು ಮತ್ತು ಈ ಸ್ವತ್ತುಗಳ ಒಟ್ಟು ಮೊತ್ತದಲ್ಲಿ ಹಣಕಾಸೇತರ ವ್ಯವಹಾರಗಳು 40% ಅಥವಾ ಅದಕ್ಕಿಂತ ಹೆಚ್ಚಿನದಾಗಿ ಇರಬಾರದು.

 

ಸಣ್ಣ ಹಣಕಾಸು ಬ್ಯಾಂಕ್ ಪರವಾನಗಿ’ಗಾಗಿ ಅರ್ಜಿ ಸಲ್ಲಿಸಲು ಅರ್ಹತೆ:

 • ಅರ್ಜಿದಾರರು ಬ್ಯಾಂಕಿಂಗ್ ಮತ್ತು ಹಣಕಾಸು ಕ್ಷೇತ್ರದಲ್ಲಿ ಹಿರಿಯ ಹುದ್ದೆಗಳಲ್ಲಿ ಕೆಲಸ ಮಾಡಿರುವ ಕುರಿತು ಕನಿಷ್ಠ 10 ವರ್ಷಗಳ ಅನುಭವ ಹೊಂದಿರಬೇಕು.
 • ಈ ಪರವಾನಗಿಗಳಿಗಾಗಿ ಅರ್ಜಿ ಸಲ್ಲಿಸುವ ಗುಂಪುಗಳು, ಕಂಪನಿಗಳು, ಅಸ್ತಿತ್ವದಲ್ಲಿರುವ ಪಾವತಿ ಬ್ಯಾಂಕುಗಳು, ಬ್ಯಾಂಕೇತರ ಹಣಕಾಸು ಕಂಪನಿಗಳು, ಕಿರುಬಂಡವಾಳ ಕಂಪನಿಗಳು, ಸ್ಥಳೀಯ ಪ್ರದೇಶ ಬ್ಯಾಂಕುಗಳು ಮತ್ತು ಸಹಕಾರಿ ಬ್ಯಾಂಕುಗಳು ಕನಿಷ್ಠ ಐದು ವರ್ಷಗಳ ಯಶಸ್ವಿ ದಾಖಲೆಯನ್ನು ಹೊಂದಿರಬೇಕು.

 

ಹಿನ್ನೆಲೆ:

ಏಪ್ರಿಲ್ 2014 ರಲ್ಲಿ, ಸಾರ್ವತ್ರಿಕ ಬ್ಯಾಂಕಿಂಗ್ ಕಾರ್ಯಾಚರಣೆಯನ್ನು ಪ್ರಾರಂಭಿಸಲು ‘ಬಂಧನ್ ಬ್ಯಾಂಕ್’ ಲಿಮಿಟೆಡ್ ಮತ್ತು ‘IDFC ಬ್ಯಾಂಕ್’ ಗೆ ಆರ್‌ಬಿಐ ತಾತ್ವಿಕವಾಗಿ ಅನುಮೋದನೆ ನೀಡಿತು. IDFC ಬ್ಯಾಂಕ್ ಆ ನಂತರ Capital First Limited ನೊಂದಿಗೆ ವಿಲೀನಗೊಂಡು IDFC ಫಸ್ಟ್ ಬ್ಯಾಂಕ್ ಆಗಿ ಮಾರ್ಪಟ್ಟಿತು.

 

ವಿಷಯಗಳು: ವಿಜ್ಞಾನ ಮತ್ತು ತಂತ್ರಜ್ಞಾನ- ಬೆಳವಣಿಗೆಗಳು ಮತ್ತು ಅವುಗಳ ಅನ್ವಯಗಳು ಮತ್ತು ದೈನಂದಿನ ಜೀವನದಲ್ಲಿ ಅವುಗಳ ಪರಿಣಾಮಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು;ತಂತ್ರಜ್ಞಾನದ ದೇಸೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು.

ಯುರೇನಿಯಂ ಅನ್ನು 60% ವರೆಗೆ ಸಮೃದ್ಧಗೊಳಿಸಲು ಪ್ರಾರಂಭಿಸಿರುವುದಾಗಿ ತಿಳಿಸಿದ ಇರಾನ್:


(Iran says it has started enriching uranium to 60%)

 

ಸಂದರ್ಭ:

ಇರಾನ್ ಯುರೇನಿಯಂ ಸರಬರಾಜನ್ನು ಶೇಕಡಾ 60 ರಷ್ಟು ಶುದ್ಧತೆಗೆ ಹೆಚ್ಚಿಸಲು ಪ್ರಾರಂಭಿಸಿದೆ, ಆ ಮೂಲಕ ಪರಮಾಣು ಶಸ್ತ್ರಾಸ್ತ್ರಗಳನ್ನು ತಯಾರಿಸಲು ಬೇಕಾದ ಶುದ್ಧತೆಯ ಮಟ್ಟದ ಮಿತಿಗೆ ಇರಾನ್ ಮೊದಲ ಬಾರಿಗೆ ತಲುಪಿದೆ. ಕಾರಣ ಕಳೆದ ವಾರ ತನ್ನ ಪರಮಾಣು ತಾಣವೊಂದರಲ್ಲಿ ನಡೆದ ವಿಧ್ವಂಸಕ ಕೃತ್ಯಕ್ಕೆ ಪ್ರತಿಕ್ರಿಯೆಯಾಗಿ ಇರಾನ್ ಈ ಕ್ರಮ ಕೈಗೊಂಡಿರುವುದಾಗಿ ಹೇಳಿದೆ. ಅಲ್ಲದೇ ಅದು ಈ ದುಷ್ಕೃತ್ಯದ ಹಿಂದೆ ಇಸ್ರೇಲ್ ನ ಕೈವಾಡವಿದೆ ಎಂದು ಆರೋಪಿಸಿದೆ.

 

ಯುರೇನಿಯಂ ಪುಷ್ಟೀಕರಣದ ಗುರಿ ಏನು?

ಅಪರೂಪದ ವಿಕಿರಣಶೀಲ ಐಸೊಟೋಪ್ ಆದ ‘U -235’ ಯುರೇನಿಯಂನಲ್ಲಿ ಕಂಡುಬರುತ್ತದೆ, ಇದನ್ನು ಕಡಿಮೆ ಪುಷ್ಟೀಕರಣ ಮಟ್ಟದಲ್ಲಿ ಪರಮಾಣು ರಿಯಾಕ್ಟರ್‌ಗಳಿಗೆ ಇಂಧನವಾಗಿ ಮತ್ತು ಹೆಚ್ಚಿನ ಪುಷ್ಟೀಕರಣ ಮಟ್ಟದಲ್ಲಿ ಪರಮಾಣು ಬಾಂಬ್‌ಗಳಿಗೆ ಇಂಧನವಾಗಿ ಬಳಸಬಹುದು.

 • ಯುರೇನಿಯಂ ಪುಷ್ಟೀಕರಣವು U-235 ರ ಶೇಕಡಾವಾರು ಮಟ್ಟವನ್ನು ಹೆಚ್ಚಿಸಲು ಉದ್ದೇಶಿಸಿದೆ, ಸಾಮಾನ್ಯವಾಗಿ ಇದನ್ನು ಕೇಂದ್ರಾಪಗಾಮಿಗಳ ಮೂಲಕ ಮಾಡಲಾಗುತ್ತದೆ. ಕೇಂದ್ರಾಪಗಾಮಿಗಳು (Centrifuges) ಒಂದು ರೀತಿಯ ಸಂಸ್ಕರಿಸದ ಯುರೇನಿಯಂ ಅನ್ನು ಹೆಚ್ಚಿನ ವೇಗದಲ್ಲಿ ತಿರುಗಿಸುವ ಯಂತ್ರಗಳಾಗಿವೆ.

 

ಪ್ರಸ್ತುತ ಇರಾನ್ ಹೊಂದಿರುವ ಸಮೃದ್ಧಿಕರಿಸಿದ ಯುರೇನಿಯಂ ಪ್ರಮಾಣ ಎಷ್ಟು?

ವಿಶ್ವಸಂಸ್ಥೆಯ ಪರಮಾಣು-ಮೇಲ್ವಿಚಾರಣಾ ಅಂಗವಾದ ಅಂತರಾಷ್ಟ್ರೀಯ ಅಣುಶಕ್ತಿ ಇಂಧನ ಸಂಸ್ಥೆಯ (the International Atomic Energy Agency) ಪ್ರಕಾರ, ಫೆಬ್ರವರಿ ತಿಂಗಳ ವೇಳೆಗೆ ಇರಾನ್ 2,967.8 ಕಿಲೋಗ್ರಾಂಗಳಷ್ಟು ಯುರೇನಿಯಂ ಅನ್ನು ಸಂಗ್ರಹಿಸಿದೆ. ಇದು ಪರಮಾಣು ಒಪ್ಪಂದದ ಅಡಿಯಲ್ಲಿ ನಿಗದಿಪಡಿಸಿದ ಮಿತಿಯ ಸುಮಾರು 14 ಪಟ್ಟು ಹೆಚ್ಚಿಗೆ ಇರುತ್ತದೆ, ಮತ್ತು ಅದನ್ನು ಶಸ್ತ್ರಾಸ್ತ್ರ ದರ್ಜೆಗೆ ಪರಿಷ್ಕರಿಸಿದರೆ, ಮೂರು ಪರಮಾಣು ಬಾಂಬುಗಳನ್ನು ನಿರ್ಮಿಸಲು ಸಾಕಾಗುವಷ್ಟು ಆಗಿರುತ್ತದೆ.

ಅಲ್ಲದೆ, ಈ ದಾಸ್ತಾನು,20 ಪ್ರತಿಶತದವರೆಗೆ ಪುಷ್ಟೀಕರಿಸಿದ, 17.6 ಕೆಜಿ ಯಷ್ಟು ಯುರೇನಿಯಂ ಅನ್ನು ಹೊಂದಿದೆ. ಆದರೂ, ಈ ರೀತಿ ಮಾಡುವುದನ್ನು ಪರಮಾಣು ಒಪ್ಪಂದದಡಿ 2030 ರ ವರೆಗೆ ನಿಷೇಧಿಸಲಾಗಿದೆ.

 

ಪ್ರಸ್ತುತ, ಇರಾನ್ ಅತಿ ಹೆಚ್ಚು ಸಮೃದ್ಧ ಯುರೇನಿಯಂ ಅನ್ನು ಹೊಂದಿರಲು ಕಾರಣವೇನು?

 ಅಧ್ಯಕ್ಷ ಡೊನಾಲ್ಡ್ ಜೆ. ಟ್ರಂಪ್ ಅವರು 2018 ರಲ್ಲಿ ಇರಾನ್ ನೊಂದಿಗಿನ (ಜಂಟಿ ಸಮಗ್ರ ಕ್ರಿಯಾಯೋಜನೆ- JCPOA) ಒಪ್ಪಂದವನ್ನು ರದ್ದುಗೊಳಿಸಿದ ನಂತರ ಮತ್ತು ಇರಾನ್ ಮೇಲೆ ಆರ್ಥಿಕ ನಿರ್ಬಂಧಗಳು ಮತ್ತು ಇತರ ದಂಡನೆ ಗಳನ್ನು ವಿಧಿಸಿದ ನಂತರ, ಪ್ರತೀಕಾರದ ಕ್ರಮವಾಗಿ ಇರಾನ್ ಈ ಒಪ್ಪಂದದಿಂದ ಹಿಂದೆ ಸರಿಯಿತು – ಉದಾಹರಣೆಗೆ ಯುರೇನಿಯಂ ಪೂರೈಕೆಯಲ್ಲಿ 3.67 ಪ್ರತಿಶತದಷ್ಟು ಹೆಚ್ಚಳ ಮಾಡಿತು, ಯುರೇನಿಯಂ ಶುದ್ಧತೆಯ ಮಟ್ಟವನ್ನು ಶೇಕಡಾ 20 ರಷ್ಟು ಹೆಚ್ಚಿಸಿತು ಮತ್ತು ಕೆಲವು ಪರಮಾಣು ತಾಣಗಳಿಗೆ ಅಂತರರಾಷ್ಟ್ರೀಯ ತನಿಖಾಧಿಕಾರಿಗಳ ಪ್ರವೇಶವನ್ನು ನಿರ್ಬಂಧಿಸಿತು. ಆದಾಗ್ಯೂ, ಆಶ್ಚರ್ಯದ ವಿಷಯವೆಂದರೆ ಇರಾನ್ ಈ ಎಲ್ಲಾ ಕ್ರಿಯೆಗಳನ್ನು ಸುಲಭವಾಗಿ ರದ್ದುಗೊಳಿಸಬಹುದಾದ ಕ್ರಮಗಳು ಎಂದು ಬಣ್ಣಿಸಿದೆ.

 

ಪ್ರಸ್ತುತದ ಚಿಂತೆಯ ವಿಷಯವೇನು?

60 ಪ್ರತಿಶತದಷ್ಟು ಪುಷ್ಟೀಕರಣದ ಮಟ್ಟವು ವಿಶೇಷವಾಗಿ ಅಪಾಯಕಾರಿಯಾಗಿಸುವ ಸಂಗತಿ ಎಂದರೆ ‘ಪುಷ್ಟೀಕರಣದ ಟ್ರಿಕಿ ಪ್ರಕ್ರಿಯೆ’, ಇದರ ಅಡಿಯಲ್ಲಿ ಶುದ್ಧತೆಯ ಮಟ್ಟವು ಹೆಚ್ಚಾದಂತೆ, ಪುಷ್ಟೀಕರಣ ಪ್ರಕ್ರಿಯೆಯು ಸುಲಭವಾಗುತ್ತದೆ ಮತ್ತು ಅದಕ್ಕೆ ಅಗತ್ಯವಾದ ಕೇಂದ್ರಾಪಗಾಮಿಗಳ ಸಂಖ್ಯೆಯೂ ಕಡಿಮೆಯಾಗುತ್ತದೆ. ಬೇರೆ ರೀತಿಯಲ್ಲಿ ಹೇಳುವುದಾದರೆ, 90 ಪ್ರತಿಶತ ಶುದ್ಧತೆಯನ್ನು ಪಡೆಯುವುದು 20 ಪ್ರತಿಶತ ಶುದ್ಧತೆಯ ಮಟ್ಟದಿಂದ ಪುಷ್ಟೀಕರಣವನ್ನು ಪ್ರಾರಂಭಿಸುವುದಕ್ಕಿಂತ ಸುಲಭ, ಮತ್ತು 60 ಪ್ರತಿಶತ ಶುದ್ಧತೆಯ ಮಟ್ಟದಲ್ಲಿ ಪ್ರಾರಂಭಿಸುವುದಕ್ಕಿಂತಲೂ ಸುಲಭವಾಗಿದೆ.

centrifuge

 

 

ವಿಷಯಗಳು: ವಿಜ್ಞಾನ ಮತ್ತು ತಂತ್ರಜ್ಞಾನ- ಬೆಳವಣಿಗೆಗಳು ಮತ್ತು ಅವುಗಳ ಅನ್ವಯಗಳು ಮತ್ತು ದೈನಂದಿನ ಜೀವನದಲ್ಲಿ ಅವುಗಳ ಪರಿಣಾಮಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು;ತಂತ್ರಜ್ಞಾನದ ದೇಸೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು.

99% ರಷ್ಟು ಸೂರ್ಯನ ಬೆಳಕನ್ನು ಪ್ರತಿಬಿಂಬಿಸಬಲ್ಲ ಸಾಮರ್ಥ್ಯ ಹೊಂದಿರುವ ‘ಇದುವರೆಗಿನ ಅತ್ಯಂತ ಬಿಳಿ ಬಣ್ಣ’:


(‘Whitest ever’ paint that can reflect 99 per cent of sunlight)

 

ಸಂದರ್ಭ:

ಇತ್ತೀಚೆಗೆ 99 ಪ್ರತಿಶತದಷ್ಟು ಸೂರ್ಯನ ಬೆಳಕನ್ನು ಪ್ರತಿಬಿಂಬಿಸುವ ಸಾಮರ್ಥ್ಯವಿರುವ ಬಿಳಿಯ ಬಣ್ಣವನ್ನು ಅಮೆರಿಕದ ಎಂಜಿನಿಯರ್‌ಗಳು ತಯಾರಿಸಿದ್ದಾರೆ, ಇದು ಇದುವರೆಗಿನ ಅತ್ಯಂತ ಬಿಳಿ ಬಣ್ಣ ಎಂದು ಅವರು ಬಣ್ಣಿಸುತ್ತಿದ್ದಾರೆ.

 

ಅದನ್ನು ಹೇಗೆ ತಯಾರಿಸಲಾಯಿತು?

ಅಲ್ಟ್ರಾ-ವೈಟ್ ಪೇಂಟ್ ಅನ್ನು ಬೇರಿಯಮ್ ಸಲ್ಫೇಟ್ ನಿಂದ ತಯಾರಿಸಲಾಗುತ್ತದೆ, ಇದು ಇನ್ನಷ್ಟು ಬಿಳಿ ಮಾಡುತ್ತದೆ.

 • ಈ ಬಣ್ಣವು ರಾತ್ರಿಯಲ್ಲಿ ಹೊರಾಂಗಣ ಮೇಲ್ಮೈಗಳ ತಾಪಮಾನವನ್ನು ಸುತ್ತಮುತ್ತಲಿನ ತಾಪಮಾನ ಕ್ಕಿಂತ 19 ಡಿಗ್ರಿ ಫ್ಯಾರನ್‌ಹೀಟ್‌ ವರೆಗೆ ತಂಪಾಗಿ ಇಡಬಲ್ಲದು ಮತ್ತು ಮಧ್ಯಾಹ್ನ ಪ್ರಕಾರವಾದ ಸೂರ್ಯನ ಬೆಳಕಿನಲ್ಲಿ, ಈ ಬಣ್ಣವು ಸುತ್ತಮುತ್ತಲಿನ ಮೇಲ್ಮೈಗಳಿಗಿಂತ 8 ಡಿಗ್ರಿ ಫ್ಯಾರನ್‌ಹೀಟ್‌ ವರೆಗೆ ತನ್ನ ಆವರಣವನ್ನು ತಂಪಾಗಿರಿಸುತ್ತದೆ.
 • ಈ ಬಣ್ಣವು ವೆಂಟಾಬ್ಲಾಕ್’ (Vantablack) ಎಂದು ಕರೆಯಲ್ಪಡುವ ಅತ್ಯಂತ ಕಡುಗಪ್ಪು ಬಣ್ಣಕ್ಕೆ ಸಮನಾಗಿರಬಹುದು. ವಂಟಾಬ್ಲಾಕ್ 99.9 ಪ್ರತಿಶತದಷ್ಟು ಗೋಚರ ಬೆಳಕನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ.

 

ವಿಷಯಗಳು: ಸಂವಹನ ನೆಟ್‌ವರ್ಕ್‌ಗಳ ಮೂಲಕ ಆಂತರಿಕ ಭದ್ರತೆಗೆ ಸವಾಲುಗಳು, ಆಂತರಿಕ ಭದ್ರತಾ ಸವಾಲುಗಳಲ್ಲಿ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳ ಪಾತ್ರ, ಸೈಬರ್ ಸುರಕ್ಷತೆಯ ಮೂಲಗಳು; ಅಕ್ರಮ ಹಣ ವರ್ಗಾವಣೆ ಮತ್ತು ಅದರ ತಡೆಗಟ್ಟುವಿಕೆ.

ನೀರವ್ ಮೋದಿಯವರನ್ನು ಹಸ್ತಾಂತರಿಸಲು ಒಪ್ಪಿದ ಯುನೈಟೆಡ್ ಕಿಂಗ್ಡಮ್:


(U.K. nod for extradition of Nirav Modi)

ಸಂದರ್ಭ:

13,758 ಕೋಟಿ ರೂ.ಗಳ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ವಜ್ರದ ವ್ಯಾಪಾರಿ ನೀರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಯುನೈಟೆಡ್ ಕಿಂಗ್‌ಡಂನ ಗೃಹ ಇಲಾಖೆ ಅನುಮೋದನೆ ನೀಡಿದೆ.

 • ಲಂಡನ್‌ನ ವೆಸ್ಟ್‌ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ನೀರವ್ ಮೋದಿ ವಿರುದ್ಧ ಪ್ರೈಮಾ ಫೇಸಿ ಪ್ರಕರಣದ ತೀರ್ಪು ನೀಡಿದ ಎರಡು ತಿಂಗಳ ನಂತರ ಹಸ್ತಾಂತರಕ್ಕೆ ಅನುಮೋದನೆ ನೀಡಲಾಗಿದೆ.

 

ಮುಂದಿನ ನಡೆ ಏನು?

 • ‘ರಾಜ್ಯ ಕಾರ್ಯದರ್ಶಿ’ ಅವರ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು 14 ದಿನಗಳ ಒಳಗೆ ಯುನೈಟೆಡ್ ಕಿಂಗ್‌ಡಂನ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಆರೋಪಿಗಳಿಗೆ ಕಾನೂನು ಮಾರ್ಗವಿದೆ.
 • ಯಾವುದೇ ಮೇಲ್ಮನವಿ ಸಲ್ಲಿಸದಿದ್ದರೆ, ರಾಜ್ಯ ಕಾರ್ಯದರ್ಶಿಯಿಂದ ಹಸ್ತಾಂತರಿಸುವ ಆದೇಶ ನೀಡಿದ 28 ದಿನಗಳಲ್ಲಿ ವಿನಂತಿಸಿದ ವ್ಯಕ್ತಿಯನ್ನು ಹಸ್ತಾಂತರಿಸಲಾಗುತ್ತದೆ. (ಯಾವುದೇ ಮೇಲ್ಮನವಿಗೆ ಒಳಪಟ್ಟು).

 

ಪರಾರಿಯಾದ ಆರ್ಥಿಕ ಅಪರಾಧಿ:

(Fugitive economic offender)

ಡಿಸೆಂಬರ್ 2019 ರಲ್ಲಿ, ವಿಶೇಷ ನ್ಯಾಯಾಲಯವು ಜಾರಿ ನಿರ್ದೇಶನಾಲಯದ ಮನವಿಯ ಮೇರೆಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಗೆ $ 2 ಬಿಲಿಯನ್ ವಂಚಿಸಿದ ಪ್ರಕರಣದಲ್ಲಿ ವಜ್ರ ವ್ಯಾಪಾರಿ ನೀರವ್ ಮೋದಿಯವರನ್ನು ಪರಾರಿಯಾದ ಆರ್ಥಿಕ ಅಪರಾಧಿ (fugitive economic offender) ಎಂದು ಘೋಷಿಸಲಾಯಿತು.

 

ಪರಾರಿಯಾದ ಆರ್ಥಿಕ ಅಪರಾಧಿ – ವ್ಯಾಖ್ಯಾನ:

ಕನಿಷ್ಠ 100 ಕೋಟಿ ರೂಪಾಯಿಗಳು ಅಥವಾ ಅದಕ್ಕಿಂತ ಹೆಚ್ಚಿನ ಆರ್ಥಿಕ ಅಪರಾಧದಲ್ಲಿ ಭಾಗಿಯಾಗಿದ್ದಕ್ಕಾಗಿ ಯಾವುದೇ ವ್ಯಕ್ತಿಯ ವಿರುದ್ಧ ಬಂಧನ ವಾರೆಂಟ್ ಹೊರಡಿಸಲಾಗಿದ್ದರೆ ಮತ್ತು ಆ ವ್ಯಕ್ತಿ ಕಾನೂನು ಕ್ರಮದಿಂದ ತಪ್ಪಿಸಿಕೊಳ್ಳಲು ಭಾರತದಿಂದ ಪಲಾಯನ ಮಾಡಿದ್ದರೆ ಆತನನ್ನು ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಿಸಬಹುದು.

 

ಪ್ರಕ್ರಿಯೆ / ವಿಧಾನ:

 • ಅಕ್ರಮ ಹಣ ವರ್ಗಾವಣೆತಡೆ ಕಾಯ್ದೆಯ ( Money-Laundering Act) ಅಡಿಯಲ್ಲಿ ಅರ್ಜಿಯಲ್ಲಿ ವಶಪಡಿಸಿಕೊಳ್ಳಬೇಕಾದ ಸ್ವತ್ತುಗಳ ವಿವರಗಳು ಮತ್ತು ವ್ಯಕ್ತಿಯ ಇರುವಿಕೆಗೆ ಸಂಬಂಧಿಸಿದ ಇತರ ಮಾಹಿತಿಗಳನ್ನು ಒಳಗೊಂಡಿರುವ ತನಿಖಾ ಸಂಸ್ಥೆಗಳು ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಬೇಕಾಗುತ್ತದೆ.
 • ತರುವಾಯ, ವಿಶೇಷ ನ್ಯಾಯಾಲಯದಿಂದ, ಗೊತ್ತುಪಡಿಸಿದ ಸ್ಥಳದಲ್ಲಿ ಹಾಜರಾಗುವಂತೆ ಆ ವ್ಯಕ್ತಿಗೆ ನೋಟಿಸ್ ನೀಡಲಾಗುತ್ತದೆ. ಹಾಜರಾಗಲು, ನೋಟಿಸ್ ನೀಡಿದ ಕನಿಷ್ಠ ಆರು ವಾರಗಳ ನಂತರ ದಿನಾಂಕವನ್ನು ನಿಗದಿಪಡಿಸಲಾಗಿದೆ.
 • ಆ ವ್ಯಕ್ತಿಯು ಗೊತ್ತುಪಡಿಸಿದ ಸ್ಥಳ ಮತ್ತು ದಿನಾಂಕದಂದು ಕಾಣಿಸಿಕೊಂಡರೆ, ಮುಂದಿನ ಪ್ರಕ್ರಿಯೆಗಳನ್ನು ಕೊನೆಗೊಳಿಸಲಾಗುತ್ತದೆ. ಇಲ್ಲದಿದ್ದರೆ, ತನಿಖಾ ಸಂಸ್ಥೆಗಳು ಪ್ರಸ್ತುತಪಡಿಸಿದ ಸಾಕ್ಷ್ಯಗಳ ಆಧಾರದ ಮೇಲೆ ವ್ಯಕ್ತಿಯನ್ನು ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಿಸಲಾಗುತ್ತದೆ.
 • ಪರಾರಿಯಾದ ಆರ್ಥಿಕ ಅಪರಾಧಿಗಳ ಕಾಯ್ದೆ, 2018 ರ ಪ್ರಕಾರ, ಪರಾರಿಯಾದ ಆರ್ಥಿಕ ಅಪರಾಧಿ ಎಂದು ಘೋಷಿಸಲ್ಪಟ್ಟ ವ್ಯಕ್ತಿಯು ಅಂತಹ ಘೋಷಣೆ ಮಾಡಿದ 30 ದಿನಗಳೊಳಗೆ ಅದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಬಹುದು.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಈಟ್ ಸ್ಮಾರ್ಟ್ ಸಿಟಿಸ್ ಚಾಲೆಂಜ್:

(EatSmart Cities Challenge)

 •  ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಪ್ರಾರಂಭಿಸಿದೆ.
 •  ಈಟ್ ಸ್ಮಾರ್ಟ್ ಸಿಟೀಸ್ ಚಾಲೆಂಜ್ ಅನ್ನು ಈಟ್ ರೈಟ್ ಇಂಡಿಯಾ (Eat Right India) ಅಡಿಯಲ್ಲಿ ವಿವಿಧ ಉಪಕ್ರಮಗಳನ್ನು ಅಳವಡಿಸಿಕೊಳ್ಳುವ ಮತ್ತು ಹೆಚ್ಚಿಸುವ ಪ್ರಯತ್ನಗಳನ್ನು ಗುರುತಿಸಲು ನಗರಗಳ ನಡುವಿನ ಸ್ಪರ್ಧೆಯಾಗಿ ಈ ಸವಾಲನ್ನು ಕಲ್ಪಿಸಲಾಗಿದೆ.
 • ಈ ವಿಶಿಷ್ಟ ಸವಾಲು, ಸ್ಮಾರ್ಟ್ ಸಿಟೀಸ್ ಮಿಷನ್‌ನ ಸಹಭಾಗಿತ್ವದಲ್ಲಿ, ಸರಿಯಾದ ಆಹಾರ ಪದ್ಧತಿ ಮತ್ತು ಅಭ್ಯಾಸಗಳ ವಾತಾವರಣವನ್ನು ಸೃಷ್ಟಿಸುತ್ತದೆ, ಆಹಾರ ಸುರಕ್ಷತೆ ಮತ್ತು ನಿಯಂತ್ರಕ ವಾತಾವರಣವನ್ನು ಬಲಪಡಿಸುತ್ತದೆ, ಗ್ರಾಹಕರಲ್ಲಿ ಜಾಗೃತಿ ಮೂಡಿಸುತ್ತದೆ ಮತ್ತು ಭಾರತದ ಪ್ರಮುಖ ನಗರಗಳಲ್ಲಿ ಉತ್ತಮ ಆಹಾರ ಆಯ್ಕೆಗಳನ್ನು ಮಾಡಲು ಗ್ರಾಹಕರನ್ನು ಒತ್ತಾಯಿಸುತ್ತದೆ.
 • ಈ ಸವಾಲು ಎಲ್ಲಾ ಸ್ಮಾರ್ಟ್ ನಗರಗಳು, ರಾಜ್ಯಗಳ ರಾಜಧಾನಿ / ಕೇಂದ್ರಾಡಳಿತ ಪ್ರದೇಶಗಳು ಮತ್ತು 5 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ನಗರಗಳಿಗೆ ಮುಕ್ತವಾಗಿದೆ.

ಎಲ್ಲರಿಗೂ ಸಾರಿಗೆ (ಟಿ 4 ಆಲ್) ಸವಾಲು:

(Transport 4 All (T4All) Challenge)

 •  ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸಾರಿಗೆ ಮತ್ತು ಅಭಿವೃದ್ಧಿ ನೀತಿ ಸಂಸ್ಥೆ (ITDP) ಯ ಸಹಯೋಗದೊಂದಿಗೆ ಪ್ರಾರಂಭಿಸಿದೆ.
 •  ಎಲ್ಲಾ ನಾಗರಿಕರ ಅಗತ್ಯಗಳನ್ನು ಉತ್ತಮವಾಗಿ ಪೂರೈಸಲು ಸಾರ್ವಜನಿಕ ಸಾರಿಗೆಯನ್ನು ಸುಧಾರಿಸುವ ಪರಿಹಾರವನ್ನು ಅಭಿವೃದ್ಧಿಪಡಿಸಲು ನಗರಗಳು, ನಾಗರಿಕ ಗುಂಪುಗಳು ಮತ್ತು ಸ್ಟಾರ್ಟ್ ಅಪ್‌ಗಳನ್ನು ಒಟ್ಟುಗೂಡಿಸುವುದು ಈ ಸವಾಲಿನ ಉದ್ದೇಶವಾಗಿದೆ.
 • ಎಲ್ಲಾ ಸ್ಮಾರ್ಟ್ ಸಿಟೀಸ್ ಮಿಷನ್ ನಗರಗಳು, ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ (UTs) ರಾಜಧಾನಿಗಳು ಮತ್ತು 5 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆ ಹೊಂದಿರುವ ಎಲ್ಲಾ ನಗರಗಳು ಈ ಸವಾಲಿಗೆ ಅರ್ಹವಾಗಿವೆ.

ಲಿಂಗ ಸಂವಾದ:

(Gender Samvaad)

 ಲಿಂಗ ಸಂವಾದ ಕಾರ್ಯಕ್ರಮವನ್ನು ಗ್ರಾಮೀಣಾಭಿವೃದ್ಧಿ ಸಚಿವಾಲಯವು ಪ್ರಾರಂಭಿಸಿದೆ.

 • ಈ ಕಾರ್ಯಕ್ರಮವು ದೀನ ದಯಾಳ್ ಅಂತ್ಯೋದಯ ಯೋಜನೆ – ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (DAY-NRLM) ಮತ್ತು ಈ ಪ್ರಯತ್ನದಿಂದ ಹೊರಹೊಮ್ಮುವ ಅನುಭವಗಳನ್ನು ಹಂಚಿಕೊಳ್ಳಲು ಒಂದು ಸಾಮಾನ್ಯ ವೇದಿಕೆಯನ್ನು ರಚಿಸಲು’ ಆರ್ಥಿಕತೆಯಲ್ಲಿ ಮಹಿಳೆಯರು ಮತ್ತು ಬಾಲಿಕೆಯರನ್ನು ಸಬಲೀಕರಣಗೊಳಿಸಲು ಅಗತ್ಯ ಕ್ರಮಗಳು ‘(IWWAGE) ಅಡಿಯಲ್ಲಿ ಜಂಟಿಯಾಗಿ ನಡೆಯುತ್ತಿರುವ ಪ್ರಯತ್ನಗಳ ಒಂದು ಭಾಗವಾಗಿದೆ.
 • ದೇಶಾದ್ಯಂತ DAY-NRLM ಅಡಿಯಲ್ಲಿ ಲಿಂಗ ಸಂಬಂಧಿತ ಪ್ರಯತ್ನಗಳ ಮೂಲಕ ಲಿಂಗ ಜಾಗೃತಿ ಮೂಡಿಸುವುದು, ಉತ್ತಮ ಅಭ್ಯಾಸಗಳನ್ನು ತಿಳಿದುಕೊಳ್ಳುವುದು ಮತ್ತು ರಾಜ್ಯಗಳ ಮತ್ತು ತಳಮಟ್ಟದಲ್ಲಿನ ಧ್ವನಿಗಳನ್ನು ಆಲಿಸುವ ಉದ್ದೇಶದಿಂದ ಈ ಪ್ರಯತ್ನವನ್ನು ಪ್ರಾರಂಭಿಸಲಾಗುತ್ತಿದೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos