ಪರಿವಿಡಿ :
ಸಾಮಾನ್ಯ ಅಧ್ಯಯನ ಪತ್ರಿಕೆ 2:
1. ತಾತ್ಕಾಲಿಕ ನ್ಯಾಯಾಧೀಶರ ನೇಮಕ.
2. ಜಮ್ಮು & ಕಾಶ್ಮೀರದ ದರ್ಬಾರ್ ವರ್ಗಾವಣೆ ಎಂದರೇನು?
3. ಸಾರ್ಥಕ್ (SARTHAQ)
4. B.1.617 ಎಂದು ಹೆಸರಿಸಲ್ಪಟ್ಟ ‘ಎರಡು ಬಾರಿ ರೂಪಾಂತರಗೊಂಡ’ ವೈರಸ್ ತಳಿ.
5. ಆಫ್ರಿಕನ್ ಹಂದಿ ಜ್ವರ.
ಸಾಮಾನ್ಯ ಅಧ್ಯಯನ ಪತ್ರಿಕೆ 3:
1. ನಬಾರ್ಡ್‌ಗೆ ಹೊಸದಾಗಿ 50,000 ಕೋಟಿ ರೂಪಾಯಿಗಳ ನೆರವು ನೀಡಿದ,
2. ಸೌರಶಕ್ತಿ ವಲಯಕ್ಕೆ ಪ್ರೋತ್ಸಾಹಧನ.
3. ನಾಗರಿಕ ರಕ್ಷಣಾ ಸ್ವಯಂಸೇವಕರು.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
1. ಹಾಂಗ್ ಕಾಂಗ್‌ನಿಂದ ವಲಸೆ ಬಂದವರಿಗೆ ನಿಧಿ ಸ್ಥಾಪಿಸಲು ನಿರ್ಧರಿಸಿದ ಯುನೈಟೆಡ್ ಕಿಂಗ್ಡಮ್.
2. ಜ್ಞಾನವಾಪಿ ಮಸೀದಿ.
ಸಾಮಾನ್ಯ ಅಧ್ಯಯನ ಪತ್ರಿಕೆ : 2
ವಿಷಯಗಳು: ವಿವಿಧ ಸಾಂವಿಧಾನಿಕ ಹುದ್ದೆಗಳಿಗೆ ನೇಮಕಾತಿ,ವಿವಿಧ ಸಾಂವಿಧಾನಿಕ ಸಂಸ್ಥೆಗಳ ಅಧಿಕಾರಗಳು, ಕಾರ್ಯಗಳು ಮತ್ತು ಜವಾಬ್ದಾರಿಗಳು.
ತಾತ್ಕಾಲಿಕ ನ್ಯಾಯಾಧೀಶರ ನೇಮಕ:
(Appointment of ad hoc judges)
ಸಂದರ್ಭ:
ಇತ್ತೀಚೆಗೆ, ಸುಪ್ರೀಂ ಕೋರ್ಟ್ ‘ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ನಿವೃತ್ತ ನ್ಯಾಯಾಧೀಶರನ್ನು ತಾತ್ಕಾಲಿಕ ಆಧಾರದ ಮೇಲೆ ನೇಮಿಸುವ ಯೋಜನೆಯು’ ನಿಯಮಿತ ನ್ಯಾಯಾಧೀಶರ ನೇಮಕಾತಿ ಪ್ರಕ್ರಿಯೆಯನ್ನು ನಿಲ್ಲಿಸಲು ಅಥವಾ ವಿಳಂಬ ಗೊಳಿಸಲು ಒಂದು ನೆಪವಾಗಬಾರದು ಎಂದು ಸೂಚಿಸಿದೆ.
ಇದರ ಅಗತ್ಯತೆ:
ಹೈಕೋರ್ಟ್‌ಗಳಲ್ಲಿ, ಏಪ್ರಿಲ್ 1 ರಂತೆ ನ್ಯಾಯಾಧೀಶರ ಒಟ್ಟು ಅನುಮೋದಿತ ಹುದ್ದೆಗಳು 1,080 ಇದ್ದರೆ, ನಿಯಮಿತ ನ್ಯಾಯಾಧೀಶರ 411 ಹುದ್ದೆಗಳು ಖಾಲಿ ಇವೆ. ಪ್ರಸ್ತುತ ಹೈಕೋರ್ಟ್‌ಗಳಲ್ಲಿ ಒಟ್ಟು 669 ನ್ಯಾಯಾಧೀಶರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ವರಿಷ್ಠ ನ್ಯಾಯಾಲಯವು ಮಾಡಿದ ಅವಲೋಕನ:
ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ತಮ್ಮ ನ್ಯಾಯಾಲಯಗಳಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆಯನ್ನು ನೋಡಿಕೊಂಡು ಆಯಾ ಹೈಕೋರ್ಟ್‌ಗಳಲ್ಲಿ ನ್ಯಾಯಾಂಗದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಪ್ರಯತ್ನಕ್ಕೆ ವಿಶೇಷ ಅಡಚಣೆಗಳ ಸಂದರ್ಭದಲ್ಲಿ ಮಾತ್ರ ‘ತಾತ್ಕಾಲಿಕ ನ್ಯಾಯಾಧೀಶರನ್ನು’ ನೇಮಿಸಬೇಕು. ನಿಯಮಿತ ಶಿಫಾರಸುಗಳ ಬದಲಿಗೆ, ಮುಂಚಿತವಾಗಿ ತಾತ್ಕಾಲಿಕ ನ್ಯಾಯಾಧೀಶರನ್ನು ನೇಮಿಸಬಾರದು.
ಈ ಹೊತ್ತಿನ ಬೇಡಿಕೆ:
‘ತಾತ್ಕಾಲಿಕ ನ್ಯಾಯಾಧೀಶರ’ ನೇಮಕಾತಿ ಪ್ರಕ್ರಿಯೆಯನ್ನು ಮುಖ್ಯ ನ್ಯಾಯಾಧೀಶರು ಯಾವಾಗ ಪ್ರಾರಂಭಿಸಬೇಕು; ಅಂತಹ ನೇಮಕಾತಿಗಳಿಗಾಗಿ ಬಾಕಿ ಇರುವ ಪ್ರಕರಣಗಳ ಗಡಿರೇಖೆ; ತಾತ್ಕಾಲಿಕ ನ್ಯಾಯಾಧೀಶರ ಅಧಿಕಾರಾವಧಿ ಎಷ್ಟಿರಬೇಕು ಮತ್ತು ಭತ್ಯೆ ಇತ್ಯಾದಿಗಳ ವಿವರಗಳನ್ನು ಒಳಗೊಂಡಿರುವ, ಒಂದು ಕಾರ್ಯವಿಧಾನವನ್ನು ಜಾರಿಗೆ ತರಬೇಕು.
ಈ ನಿಟ್ಟಿನಲ್ಲಿನ ಸಾಂವಿಧಾನಿಕ ನಿಬಂಧನೆಗಳು:
ಸಂವಿಧಾನದ 224 ಎ ವಿಧಿಯ ಅಡಿಯಲ್ಲಿ, ತಾತ್ಕಾಲಿಕ ನ್ಯಾಯಾಧೀಶರ (ad-hoc judges) ನೇಮಕಾತಿಗಾಗಿ ಸಂವಿಧಾನದಲ್ಲಿ ನಿಬಂಧನೆಗಳನ್ನು ಒದಗಿಸಲಾಗಿದೆ.
ಅನುಸರಿಸಬೇಕಾದ ಕಾರ್ಯವಿಧಾನ:
- ಲೇಖನದ ಪ್ರಕಾರ, ಒಂದು ರಾಜ್ಯದ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು, ಯಾವುದೇ ಸಮಯದಲ್ಲಿ, ಅಧ್ಯಕ್ಷರ ಪೂರ್ವಾನುಮತಿಯೊಂದಿಗೆ, ಅದೇ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಅಥವಾ ಯಾವುದೇ ಹೈಕೋರ್ಟ್ ನಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ ಯಾವುದೇ ವ್ಯಕ್ತಿಗೆ (ನಿವೃತ್ತ ನ್ಯಾಯಾಧೀಶರಿಗೆ) ಆ ರಾಜ್ಯದ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಬೇಕೆಂದು ವಿನಂತಿಸಬಹುದು.
- ಅಂತಹ ನ್ಯಾಯಾಧೀಶರು ರಾಷ್ಟ್ರಪತಿಗಳು ನಿರ್ಧರಿಸುವಂತಹ ಭತ್ಯೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಅಲ್ಲದೆ, ಅವರು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ಎಲ್ಲ ನ್ಯಾಯವ್ಯಾಪ್ತಿ, ಅಧಿಕಾರ ಮತ್ತು ಸವಲತ್ತುಗಳನ್ನು ಸಹ ಅನುಭವಿಸುತ್ತಾರೆ. ಆದರೆ, ಅವರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ಎಂದು ಪರಿಗಣಿಸಲಾಗುವುದಿಲ್ಲ.
ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.
ಜಮ್ಮು & ಕಾಶ್ಮೀರದ ದರ್ಬಾರ್ ವರ್ಗಾವಣೆ ಎಂದರೇನು?
ಸಂದರ್ಭ:
ಈ ವರ್ಷ, ಸುಮಾರು ನೂರ ಐವತ್ತು ವರ್ಷಗಳಿಂದ (ಒಂದೂವರೆ ಶತಮಾನ) ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆಯುತ್ತಿರುವ ದರ್ಬಾರ್ ವರ್ಗಾವಣೆ ಸಂಪ್ರದಾಯವು ಮುರಿಯಲಿದೆ. ಈ ವರ್ಷ, ಬೇಸಿಗೆಯಲ್ಲಿ ‘ದರ್ಬಾರ್ ಸ್ಥಳಾಂತರ’ದ ಸಮಯದಲ್ಲಿ ಕೇವಲ “ಸೂಕ್ಷ್ಮ ದಾಖಲೆಗಳನ್ನು” ಜಮ್ಮುವಿನಿಂದ ಶ್ರೀನಗರಕ್ಕೆ ಸ್ಥಳಾಂತರಿಸಲಾಗುತ್ತಿದೆ, ಆದರೆ ಮುಂಚಿನ ವರ್ಷಗಳಲ್ಲಿ, ಈ ದರ್ಬಾರ್ ಸ್ಥಳಾಂತರ ಪ್ರಕ್ರಿಯೆಯಲ್ಲಿ ಸಂಪೂರ್ಣ ಆಡಳಿತ ಮತ್ತು ದಾಖಲೆಗಳನ್ನು ವರ್ಗಾಯಿಸಲಾಗುತ್ತಿತ್ತು.
ದರ್ಬಾರ್ ಸ್ಥಳಾಂತರ/ಮೂವ್ ಎಂದರೇನು?
- ಇದು ಒಂದು ಶತಮಾನದಷ್ಟು ಹಳೆಯದಾದ ಅಭ್ಯಾಸವಾಗಿದ್ದು, ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯದ ಎರಡು ರಾಜಧಾನಿಗಳಾದ ಶ್ರೀನಗರ ಮತ್ತು ಜಮ್ಮು ಗಳಲ್ಲಿ ಸರ್ಕಾರವು ತಲಾ ಆರು ತಿಂಗಳು ಕಾರ್ಯ ನಿರ್ವಹಿಸುತ್ತಿತ್ತು.
- ವರದಿಗಳ ಪ್ರಕಾರ, ಈ ಸಂಪ್ರದಾಯವನ್ನು 19 ನೇ ಶತಮಾನದ ಉತ್ತರಾರ್ಧದಲ್ಲಿ ಜಮ್ಮು ಮತ್ತು ಕಾಶ್ಮೀರದ ಡೋಗ್ರಾ ದೊರೆ ಮಹಾರಾಜ ರಣಬೀರ್ ಸಿಂಗ್ ಪ್ರಾರಂಭಿಸಿದರು.
- ಹಿಂದಿನ ಡೋಗ್ರಾ ಆಡಳಿತಗಾರರು ರಾಜ್ಯವನ್ನು ಕಾಶ್ಮೀರದ ನೆರೆಯ ಲಡಾಖ್‌ಗೆ ವಿಸ್ತರಣೆ ಮಾಡಿದ್ದರಿಂದ, ಆಡಳಿತವನ್ನು ಕಾಶ್ಮೀರದ ಜನರ ಮನೆ ಬಾಗಿಲಿಗೆ ಕೊಂಡೊಯ್ಯಲು ‘ದರ್ಬಾರ್ ವರ್ಗಾವಣೆ’ ಯನ್ನು ಪ್ರಾರಂಭಿಸಲಾಯಿತು.
- ಈ ಸಂಪ್ರದಾಯವು ಜಮ್ಮು, ಕಾಶ್ಮೀರ ಮತ್ತು ಲಡಾಖ್ ಜನರ ನಡುವಿನ ಸಂಪರ್ಕ ಮತ್ತು ಬಾಂಧವ್ಯವನ್ನು ಸದೃಢಗೊಳಿಸಲು ಸಹಕಾರಿಯಾಯಿತು.
ಈ ಸಂಪ್ರದಾಯಕ್ಕೆ ಸಂಬಂಧಿಸಿದ ಟೀಕೆಗಳು:
- ‘ದರ್ಬಾರ್ ವರ್ಗಾವಣೆ’ ಪ್ರಕ್ರಿಯೆಯಲ್ಲಿನ ಈ ವ್ಯರ್ಥ ಮತ್ತು ಅನಗತ್ಯ ಚಟುವಟಿಕೆಯು ಸಮಯ, ಶ್ರಮ ಮತ್ತು ಶಕ್ತಿಯನ್ನು ವ್ಯರ್ಥ ಮಾಡಲು ಕಾರಣವಾಗುತ್ತದೆ.
- ಇದು ಭದ್ರತಾ ಪಡೆಗಳ ಮೇಲೆ ವಿಧಿಸಲಾದ ಅನವಶ್ಯಕ ಹೊರೆಯಾಗಿದೆ. ಇದು ಕೆಲಸದ ಅಸಮರ್ಥತೆಯ ಬೆಳವಣಿಗೆಗೆ ಕಾರಣವಾಗುತ್ತದೆ, ಇದರ ಪರಿಣಾಮವಾಗಿ ಆಡಳಿತದ ನಿಷ್ಕ್ರಿಯತೆ ಯಂತಹ ಪರಿಸ್ಥಿತಿ ಉಂಟಾಗುತ್ತದೆ.
- ಇದು ನ್ಯಾಯಾಂಗ ವ್ಯವಸ್ಥೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಮತ್ತು ನ್ಯಾಯಾಂಗ ಆಡಳಿತಕ್ಕೆ ತಡೆಗೋಡೆ ಸೃಷ್ಟಿಸುತ್ತದೆ.
- ಈ ಪ್ರಕ್ರಿಯೆಯು ನ್ಯಾಯ ವಿತರಣೆಯಲ್ಲಿ ವಿಳಂಬವನ್ನು ಉಂಟುಮಾಡುತ್ತದೆ, ಏಕೆಂದರೆ ಒಂದು ಪ್ರದೇಶದಲ್ಲಿನ, ಅರ್ಜಿದಾರರಿಗೆ, ಸರ್ಕಾರದ ದಾಖಲೆಗಳು ಏಕಕಾಲಕ್ಕೆ ಆರು ತಿಂಗಳುಗಳ ಕಾಲ ಲಭ್ಯವಿರುವುದಿಲ್ಲ. ಇದೊಂದು ಸಮಸ್ಯೆಯಾಗಿದೆ.
- ಸರ್ಕಾರಿ ದಾಖಲೆಗಳು ಮತ್ತು ಪ್ರಮುಖ ಮತ್ತು ಸೂಕ್ಷ್ಮ ಸ್ವಭಾವದ ಸಂಪನ್ಮೂಲಗಳನ್ನು ಕೇಂದ್ರಾಡಳಿತ ಪ್ರದೇಶಕ್ಕೆ ಸಾಗಿಸುವ ಪ್ರಕ್ರಿಯೆಯಲ್ಲಿ ಸಾಕಷ್ಟು ಅಪಾಯವಿದೆ. ಇವುಗಳನ್ನು ಕಬ್ಬಿಣದ ಟ್ರಂಕುಗಳಲ್ಲಿ ತುಂಬಲಾಗುತ್ತದೆ, ಜಮ್ಮುವಿನಿಂದ ಸುಮಾರು 300 ಕಿ.ಮೀ ದೂರದಲ್ಲಿರುವ ಶ್ರೀನಗರಕ್ಕೆ ಬಾಡಿಗೆ ಟ್ರಕ್‌ಗಳಲ್ಲಿ ಈ ಅಮೂಲ್ಯ ದಾಖಲೆಗಳನ್ನು ಸಾಗಿಸಲಾಗುತ್ತದೆ, ಈ ಸಾಗಣೆ ಪ್ರಕ್ರಿಯೆಯನ್ನು ವರ್ಷಕ್ಕೆ ಎರಡು ಬಾರಿ ಕೈಗೊಳ್ಳಲಾಗುತ್ತದೆ.
ಈ ಕುರಿತು ಹೈಕೋರ್ಟ್‌ನ ಅಭಿಪ್ರಾಯ:
- ಕಳೆದ ವರ್ಷ, ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್, ‘ದರ್ಬಾರ್ ವರ್ಗಾವಣೆ’ ಅಥವಾ ‘ದರ್ಬಾರ್ ಮೂವ್’ ಸಂಪ್ರದಾಯಕ್ಕೆ ಯಾವುದೇ ಕಾನೂನು ಸಮರ್ಥನೆ ಅಥವಾ ಸಾಂವಿಧಾನಿಕ ಆಧಾರಗಳಿಲ್ಲ ಎಂದು ಅಭಿಪ್ರಾಯಪಟ್ಟಿದೆ.
- ನ್ಯಾಯಾಲಯದ ವಿಭಾಗಿಯ ನ್ಯಾಯಪೀಠವು ಈ ಸಂಪ್ರದಾಯವನ್ನು ಅನಗತ್ಯ ಮತ್ತು ಅಸಮರ್ಥ ಚಟುವಟಿಕೆಗಾಗಿ ಅಪಾರ ಪ್ರಮಾಣದ ಸಮಯ, ಶ್ರಮ ಹಾಗೂ ಶಕ್ತಿಯ ವ್ಯರ್ಥಕ್ಕೆ ಕಾರಣವಾಗುತ್ತದೆ ಎಂದು ಗಮನಿಸಿದೆ, ಅಲ್ಲದೆ ಕೇಂದ್ರಾಡಳಿತ ಪ್ರದೇಶವು ತನ್ನ ಜನರಿಗೆ ಮೂಲಭೂತ ಅಗತ್ಯಗಳನ್ನು ಸಹ ಒದಗಿಸಲು ಸಾಧ್ಯವಾಗದಿರುವ ಈ ಸಮಯದಲ್ಲಿ, ರಾಜ್ಯದ ಅಮೂಲ್ಯವಾದ ಸಂಪನ್ಮೂಲಗಳನ್ನು (ಆರ್ಥಿಕ ಮತ್ತು ಭೌತಿಕ) ಸಂಪೂರ್ಣವಾಗಿ ಅನಿವಾರ್ಯವಲ್ಲದ ಕಾರ್ಯಗಳಿಗಾಗಿ ವ್ಯಯ ಮಾಡಲು ಸಾಧ್ಯವಿಲ್ಲ ಎಂದು ಹೇಳಿದೆ.
- ಈ ಸಂಪ್ರದಾಯವನ್ನು ತರ್ಕಬದ್ಧವಾಗಿ ಬದಲಾಯಿಸಿದ ಸಂದರ್ಭದಲ್ಲಿ, ಉಳಿತಾಯವಾಗುವ ಸಂಪನ್ಮೂಲಗಳು ಮತ್ತು ಸಮಯವನ್ನು ಕೇಂದ್ರಾಡಳಿತ ಪ್ರದೇಶದ ಕಲ್ಯಾಣ ಮತ್ತು ಅಭಿವೃದ್ಧಿಗೆ ಬಳಸಬಹುದು ಎಂದು ನ್ಯಾಯಾಲಯ ಶಿಫಾರಸು ಮಾಡಿದೆ; ಮತ್ತು ಈ ಕ್ರಮದ ಮೂಲಕ ಆದ ಹಣದ ಉಳಿತಾಯವನ್ನು ಕೋವಿಡ್‌ಗೆ ಸಂಬಂಧಿಸಿದ ಆಹಾರ ಕೊರತೆ, ನಿರುದ್ಯೋಗ ಮತ್ತು ಆರೋಗ್ಯ ರಕ್ಷಣೆಯಂತಹ ಸಮಸ್ಯೆಗಳನ್ನು ಪರಿಹರಿಸಲು ಸಹ ಬಳಸಬಹುದು ಎಂದು ನ್ಯಾಯಾಲಯವು ತಿಳಿಸಿದೆ.
ವಿಷಯಗಳು: ಆರೋಗ್ಯ, ಶಿಕ್ಷಣ ಮತ್ತು ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ಸಾಮಾಜಿಕ ವಲಯ/ ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳು.
ಸಾರ್ಥಕ್:
(SARTHAQ)
ಸಂದರ್ಭ:
ಇತ್ತೀಚೆಗೆ, ‘ಸರ್ಥಾಕ್’ (SARTHAQ) ಎಂಬ ಹೆಸರಿನ ಶಾಲಾ ಶಿಕ್ಷಣಕ್ಕಾಗಿ ‘ಸೂಚನಾ ಮತ್ತು ಸೂಚಕ ಅನುಷ್ಠಾನ ಯೋಜನೆ’ ಯನ್ನು ಶಿಕ್ಷಣ ಸಚಿವರು ಬಿಡುಗಡೆ ಮಾಡಿದ್ದಾರೆ.
ಗುಣಮಟ್ಟದ ಶಿಕ್ಷಣದ ಮೂಲಕ ‘ವಿದ್ಯಾರ್ಥಿಗಳು’ ಮತ್ತು ‘ಶಿಕ್ಷಕರ’ ಸಮಗ್ರ ಪ್ರಗತಿ ಎಂದರೇನು? (What is ‘Students’ and Teachers’ Holistic Advancement through Quality Education or SARTHAQ?)
- ಈ ಯೋಜನೆಯನ್ನು ರಾಷ್ಟ್ರೀಯ ಶಿಕ್ಷಣ ನೀತಿ (NEP) -2020 ರ ಗುರಿ ಮತ್ತು ಉದ್ದೇಶಗಳಿಗೆ ಅನುಗುಣವಾಗಿ ಪ್ರಾರಂಭಿಸಲಾಗಿದೆ ಮತ್ತು ಈ ಕಾರ್ಯದಲ್ಲಿ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸಹಾಯ ಮಾಡಲಾಗುತ್ತದೆ.
- ಈ ಕಾರ್ಯಕ್ರಮದ ಉದ್ದೇಶವು ಪ್ರಾಥಮಿಕ ಮತ್ತು ದ್ವಿತೀಯ ಹಂತದ ವಿದ್ಯಾರ್ಥಿಗಳ (students at the primary and secondary level) ಸರ್ವತೋಮುಖ ಅಭಿವೃದ್ಧಿಯನ್ನು ಸಾಧಿಸುವುದಾಗಿದೆ.
- ಈ ಕಾರ್ಯಕ್ರಮವು ವಿದ್ಯಾರ್ಥಿಗಳಿಗೆ ಮತ್ತು ಶಿಕ್ಷಕರಿಗೆ ಸುರಕ್ಷಿತ, ಅಂತರ್ಗತ ಮತ್ತು ಅನುಕೂಲಕರ ಕಲಿಕಾ ವಾತಾವರಣವನ್ನು ಸಹ ಸೃಷ್ಟಿಸುತ್ತದೆ.
- ಗುರಿಗಳು, ಫಲಿತಾಂಶಗಳು ಮತ್ತು ಸಮಯದ ಚೌಕಟ್ಟಿನ ಸ್ಪಷ್ಟ ರೂಪರೇಖೆಯನ್ನು ಪ್ರಸ್ತುತಪಡಿಸುವ ರೀತಿಯಲ್ಲಿ ಚಟುವಟಿಕೆಗಳನ್ನು ವ್ಯಾಖ್ಯಾನಿಸುವುದು SARTHAQ ನ ಮುಖ್ಯ ಉದ್ದೇಶವಾಗಿದೆ. ಅಂದರೆ, ಇದು NEPಯ ಶಿಫಾರಸನ್ನು 297 ಕ್ರಿಯಾ ಯೋಜನೆಗಳೊಂದಿಗೆ ಜವಾಬ್ದಾರಿಯುತ ಏಜೆನ್ಸಿಗಳು, ಟೈಮ್‌ಲೈನ್‌ಗಳು ಮತ್ತು ಈ ಕ್ರಿಯೆಗಳ 304 ಫಲಿತಾಂಶಗಳೊಂದಿಗೆ ಸಂಯೋಜಿಸುತ್ತದೆ.
ರಾಷ್ಟ್ರೀಯ ಶಿಕ್ಷಣ ನೀತಿ -2020 ಅನ್ನು ಈ ಕೆಳಗಿನ ಉದ್ದೇಶಗಳನ್ನು ಪೂರೈಸಲು ಈ ಯೋಜನೆಯನ್ನು ಜಾರಿಗೊಳಿಸಲಾಗುತ್ತಿದೆ:
- ಇದು ಹೊಸ ರಾಷ್ಟ್ರೀಯ ಮತ್ತು ರಾಜ್ಯ ಪಠ್ಯಕ್ರಮದ ಚೌಕಟ್ಟು, ಬಾಲ್ಯದ ಆರೈಕೆ ಮತ್ತು ಶಾಲಾ ಶಿಕ್ಷಣಕ್ಕಾಗಿ ಪಠ್ಯಕ್ರಮ ಸುಧಾರಣೆಗಳಿಗೆ ದಾರಿ ಮಾಡಿಕೊಡುತ್ತದೆ
- ಕಾರ್ಯಕ್ರಮವು ಎಲ್ಲಾ ಹಂತಗಳಲ್ಲಿ ಮಕ್ಕಳ ಒಟ್ಟು ದಾಖಲಾತಿ ಅನುಪಾತ, ನಿವ್ವಳ ದಾಖಲಾತಿ ಅನುಪಾತದ ಸುಧಾರಣೆ ಮತ್ತು ಶಾಲೆಬಿಟ್ಟ ಮತ್ತು ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ.
- ಇದು ಗ್ರೇಡ್ 3 ರವರೆಗೆ ಗುಣಮಟ್ಟದ ECCE ಮತ್ತು ‘ಮೂಲಭೂತ ಸಾಕ್ಷರತೆ ಮತ್ತು ಸಂಖ್ಯಾಶಾಸ್ತ್ರದ ಸಾರ್ವತ್ರಿಕ ಸ್ವಾಧೀನಕ್ಕೆ’ ಪ್ರವೇಶವನ್ನು ಒದಗಿಸುತ್ತದೆ.
- ಇದು ವೃತ್ತಿಪರ ಶಿಕ್ಷಣ, ಕ್ರೀಡೆ, ಕಲೆ, ಭಾರತದ ಜ್ಞಾನ, 21 ನೇ ಶತಮಾನದ ಕೌಶಲ್ಯಗಳು, ಪೌರತ್ವದ ಮೌಲ್ಯ ಮತ್ತು ಪರಿಸರ ಸಂರಕ್ಷಣೆಯ ಅರಿವು ಇತ್ಯಾದಿಗಳನ್ನು ಪಠ್ಯಕ್ರಮದಲ್ಲಿ ಎಲ್ಲಾ ಹಂತಗಳಲ್ಲಿ ಪರಿಚಯಿಸುತ್ತದೆ.
- ಇದು ಪ್ರಾಯೋಗಿಕ ಕಲಿಕೆಯ ಮೇಲೆ ಗಮನ ಕೇಂದ್ರೀಕರಿಸುತ್ತದೆ.
- ಇದು ಶಿಕ್ಷಕರ ಶಿಕ್ಷಣ ಕಾರ್ಯಕ್ರಮಗಳ ಗುಣಮಟ್ಟವನ್ನೂ ಸುಧಾರಿಸುತ್ತದೆ.
ವಿಷಯಗಳು: ಆರೋಗ್ಯ, ಶಿಕ್ಷಣ ಮತ್ತು ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ಸಾಮಾಜಿಕ ವಲಯ/ ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳು.
B.1.617 ಎಂದು ಹೆಸರಿಸಲ್ಪಟ್ಟ ‘ಎರಡು ಬಾರಿ ರೂಪಾಂತರಗೊಂಡ’ ವೈರಸ್ ತಳಿ.
(‘Double mutant’ strain named B.1.617)
ಸಂದರ್ಭ:
ಭಾರತದಲ್ಲಿ ಸಾಂಕ್ರಾಮಿಕ ರೋಗದ ಹರಡುವಿಕೆಯ ಮೇಲೆ ಪ್ರಭಾವ ಬೀರುವ ವೈರಸ್ ಎಂದು ಕಳೆದ ತಿಂಗಳು ವಿಜ್ಞಾನಿಗಳು ಗುರುತಿಸಿದ್ದ “ಎರಡು ಬಾರಿ ರೂಪಾಂತರಗೊಂಡ” ವೈರಸ್ ಅನ್ನು ಔಪಚಾರಿಕವಾಗಿ B.1.617’ ಎಂದು ಹೆಸರಿಸಲಾಗಿದೆ.
ಭಾರತದಲ್ಲಿ ವೈರಸ್ ನ ಈ ‘ರೂಪಾಂತರ’ವು ಸಾಮಾನ್ಯವಾಗಿದೆ – ಆದರೂ ಪ್ರತಿ ರಾಜ್ಯದಲ್ಲೂ ಇದರ ಹರಡುವಿಕೆಯ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲ. ಆದರೆ ಕೆಲವು ವ್ಯಾಖ್ಯಾನಿಸಬಲ್ಲ ರೂಪಾಂತರಗಳನ್ನು (Mutations) ಹೊಂದಿವೆ, ಅವುಗಳನ್ನು E484Q ಮತ್ತು L425R ಎಂದು ಕರೆಯಲಾಗುತ್ತದೆ, ಇವು ವೈರಸ್ ಅನ್ನು ಹೆಚ್ಚು ಸಾಂಕ್ರಾಮಿಕವಾಗಿಸುತ್ತವೆ ಮತ್ತು ಪ್ರತಿಕಾಯಗಳಿಂದ ತಪ್ಪಿಸಿಕೊಳ್ಳುವ ಸಾಮರ್ಥ್ಯವನ್ನು ಹೊಂದಿವೆ.
ಪ್ರಸ್ತುತದ ಕಾಳಜಿಯ ವಿಷಯವೇನು?
ಕೆಲವು ಅಧ್ಯಯನಗಳು ಈ ರೂಪಾಂತರಗಳು ಕರೋನವೈರಸ್ ಅನ್ನು ಟಿ ಕೋಶಗಳಿಗೆ (T cells) ರೋಗನಿರೋಧಕವಾಗುವಂತೆ ಮಾಡುತ್ತದೆ ಎಂದು ಸೂಚಿಸುತ್ತವೆ. ‘ಟಿ ಕೋಶಗಳು’ ವೈರಸ್ ಸೋಂಕಿತ ಕೋಶಗಳನ್ನು ಗುರಿಯಾಗಿಸಲು ಮತ್ತು ನಾಶಮಾಡಲು ಅಗತ್ಯವಿರುವ ಒಂದು ರೀತಿಯ ಜೀವಕೋಶಗಳ ವರ್ಗಗಳಾಗಿವೆ.
‘ವೈರಸ್ ಗಳು ಏಕೆ ರೂಪಾಂತರ’ಗೊಳ್ಳುತ್ತವೆ?
- ಈ ರೂಪಾಂತರವು ಕೇವಲ ವ್ಯತ್ಯಾಸವನ್ನು ಸೂಚಿಸುತ್ತದೆ: ಜೀನೋಮ್ ನಲ್ಲಿ ಅಕ್ಷರ ಬದಲಾವಣೆ/ ಜೀನೋಮ್‌ನ ರಚನೆಯಲ್ಲಿ ಬದಲಾವಣೆ.
- ವೈರಸ್ ನಲ್ಲಿನ ರೂಪಾಂತರವು ಅದರ ನೈಸರ್ಗಿಕ ವಿಕಾಸದ ಭಾಗವಾಗಿದೆ.
- ಲಕ್ಷಾಂತರ ಜನರು ಸೋಂಕಿಗೆ ಒಳಗಾದ ನಂತರ, ವೈರಸ್ ಮೇಲೆ ಒತ್ತಡ ಹೆಚ್ಚಾಗುತ್ತದೆ.
SARS-CoV-2 ರ ಸಂದರ್ಭದಲ್ಲಿ: ಇದು ರಿಬೊನ್ಯೂಕ್ಲಿಯಿಕ್ ಆಮ್ಲ (RNA) ವೈರಸ್, ಮತ್ತು ಅದರಲ್ಲಿನ ರೂಪಾಂತರವು ಅದರ ಅಣುಗಳ ಕ್ರಮದಲ್ಲಿ ಬದಲಾವಣೆಯನ್ನು ಸೂಚಿಸುತ್ತದೆ.
- RNA ವೈರಸ್‌ನಲ್ಲಿನ ರೂಪಾಂತರವು ಸಾಮಾನ್ಯವಾಗಿ ವೈರಸ್ ತನ್ನ ಪ್ರತಿಕೃತಿಗಳನ್ನು ಮಾಡುವಾಗ ತಪ್ಪು ಮಾಡಿದ ಸಂದರ್ಭದಲ್ಲಿ ಸಂಭವಿಸುತ್ತದೆ.
ವಿಷಯಗಳು: ಆರೋಗ್ಯ, ಶಿಕ್ಷಣ ಮತ್ತು ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ಸಾಮಾಜಿಕ ವಲಯ/ ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳು.
ಆಫ್ರಿಕನ್ ಹಂದಿ ಜ್ವರ:
(African swine fever)
ಸಂದರ್ಭ:
ಮಿಜೋರಾಂನ ಲುಂಗ್ಲೆ (Lunglei) ಜಿಲ್ಲೆಯಲ್ಲಿ ಆಫ್ರಿಕನ್ ಹಂದಿ ಜ್ವರವು- (African swine fever -ASF) ಏಕಾಏಕಿ 276 ಸಾಕು ಹಂದಿಗಳ ಸಾವಿಗೆ ಕಾರಣವಾಗಿದೆ.
ತಡೆಗಟ್ಟುವ ಕ್ರಮಗಳ ಭಾಗವಾಗಿ, ಪೀಡಿತ ಪ್ರದೇಶ ಮತ್ತು ಜಿಲ್ಲೆಯಿಂದ ಹಂದಿಗಳ ಖರೀದಿ ಮತ್ತು ಸರಬರಾಜನ್ನು ಸ್ಥಳೀಯ ಅಧಿಕಾರಿಗಳು ನಿಷೇಧಿಸಿದ್ದಾರೆ.
ಆಫ್ರಿಕನ್ ಹಂದಿ ಜ್ವರದ ಕುರಿತು:
- ASF ಹೆಚ್ಚು ಸಾಂಕ್ರಾಮಿಕ ಮತ್ತು ಮಾರಕ ಪ್ರಾಣಿಗಳ ಕಾಯಿಲೆಯಾಗಿದ್ದು ಅದು ಸಾಕು ಮತ್ತು ಕಾಡು ಹಂದಿಗಳಿಗೆ ಸೋಂಕು ತರುತ್ತದೆ. ಹಂದಿಗಳು ಅದರ ಸೋಂಕಿನಿಂದಾಗಿ ಒಂದು ರೀತಿಯ ತೀವ್ರವಾದ ರಕ್ತಸ್ರಾವದ ಜ್ವರದಿಂದ (Hemorrhagic Fever) ಬಳಲುತ್ತವೆ.
- ಇದನ್ನು 1920 ರಲ್ಲಿ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಹಚ್ಚಲಾಯಿತು.
- ಈ ರೋಗದಲ್ಲಿನ ಸಾವಿನ ಪ್ರಮಾಣವು ಶೇಕಡಾ 100 ರ ಹತ್ತಿರದಲ್ಲಿದೆ, ಮತ್ತು ಜ್ವರಕ್ಕೆ ಯಾವುದೇ ಚಿಕಿತ್ಸೆ ಇಲ್ಲದಿರುವುದರಿಂದ, ಪ್ರಾಣಿಗಳನ್ನು ಕೊಲ್ಲುವುದು ಸೋಂಕಿನ ಹರಡುವಿಕೆಯನ್ನು ತಡೆಯುವ ಏಕೈಕ ಮಾರ್ಗವಾಗಿದೆ.
- ಆಫ್ರಿಕನ್ ಹಂದಿ ಜ್ವರವು ಮನುಷ್ಯರಿಗೆ ಅಪಾಯವನ್ನುಂಟು ಮಾಡುವುದಿಲ್ಲ, ಏಕೆಂದರೆ ಇದು ಪ್ರಾಣಿಗಳಿಂದ ಪ್ರಾಣಿಗಳಿಗೆ ಮಾತ್ರ ಹರಡುತ್ತದೆ.
- FAO ಪ್ರಕಾರ, ಈ ರೋಗವು ಹೆಚ್ಚು ಸಾಂಕ್ರಾಮಿಕವಾಗಿದೆ ಮತ್ತು ಅದರ ಗಡಿಯಾಚೆಗಿನ ಸಾಂಕ್ರಾಮಿಕತೆಯ ಸಾಮರ್ಥ್ಯವು ಈ ಪ್ರದೇಶದ ಎಲ್ಲಾ ದೇಶಗಳನ್ನು ಅಪಾಯಕ್ಕೆ ಸಿಲುಕಿಸಿದೆ, ರೋಗದ ಭೀತಿಯು ಮತ್ತೊಮ್ಮೆ ಆಫ್ರಿಕಾದಿಂದ ಹೊರಗಿನ ದೇಶಗಳನ್ನು ತಲುಪಿದೆ. ಈ ರೋಗವು ಜಾಗತಿಕ ಆಹಾರ ಸುರಕ್ಷತೆ ಮತ್ತು ಮನೆಯ ಆದಾಯಕ್ಕೆ ಗಮನಾರ್ಹ ಅಪಾಯವನ್ನುಂಟುಮಾಡುತ್ತದೆ.
ಸಾಮಾನ್ಯ ಅಧ್ಯಯನ ಪತ್ರಿಕೆ : 3
ವಿಷಯಗಳು: ಅಂತರ್ಗತ ಅಭಿವೃದ್ಧಿ ಮತ್ತು ಅದರಿಂದ ಉಂಟಾಗುವ ಸಮಸ್ಯೆಗಳು.
ನಬಾರ್ಡ್‌ಗೆ ಹೊಸದಾಗಿ 50,000 ಕೋಟಿ ರೂಪಾಯಿಗಳ ನೆರವು ನೀಡಿದ,RBI:
(RBI extends fresh support of ₹50,000 cr. To NABARD)
ಸಂದರ್ಭ:
ಇತ್ತೀಚೆಗೆ, ಸಾಂಕ್ರಾಮಿಕ ರೋಗದ ಪರಿಣಾಮವನ್ನು ತಗ್ಗಿಸಲು ಮತ್ತು ಆರ್ಥಿಕ ಪುನರುಜ್ಜೀವನಕ್ಕೆ ಸಹಾಯ ಮಾಡಲು 2022 ರ ಆರ್ಥಿಕ ವರ್ಷದಲ್ಲಿ ಹೊಸ ಸಾಲಗಳ ರೂಪದಲ್ಲಿ ಅಖಿಲ ಭಾರತ ಹಣಕಾಸು ಸಂಸ್ಥೆಗಳಿಗೆ 50,000 ಕೋಟಿ ರೂ.ಗಳ ನೆರವು ನೀಡಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಒಪ್ಪಿದೆ.
ವಿವರಗಳು:
- ಅದರಂತೆ, ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು, ಗ್ರಾಮೀಣ ಕೃಷಿಯೇತರ ವಲಯ ಮತ್ತು ಬ್ಯಾಂಕೇತರ ಹಣಕಾಸು ಕಂಪನಿಗಳು-ಸೂಕ್ಷ್ಮ ಹಣಕಾಸು ಸಂಸ್ಥೆಗಳು (Special Liquidity Facility– SLF)) ಬೆಂಬಲಿಸಲು ‘ನಬಾರ್ಡ್’ (NABARD) ಗೆ ಒಂದು ವರ್ಷಕ್ಕೆ 25,000 ಕೋಟಿ ರೂ. ಗಳ ವಿಶೇಷ ದ್ರವ್ಯತೆ ಸೌಲಭ್ಯ ನೀಡಲಾಗುವುದು.
- ವಸತಿ ಕ್ಷೇತ್ರಕ್ಕೆ ನೆರವು ನೀಡಲು, ರಾಷ್ಟ್ರೀಯ ವಸತಿ ಬ್ಯಾಂಕ್‌ಗೆ ಒಂದು ವರ್ಷಕ್ಕೆ 10,000 ಕೋಟಿ ರೂ.ಗಳ ವಿಶೇಷ ದ್ರವ್ಯತೆ ಸೌಲಭ್ಯವನ್ನು (SLF) ನೀಡಲಾಗುವುದು.
- ‘ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ’ (MSME) ಧನಸಹಾಯಕ್ಕಾಗಿ ಈ ಸೌಲಭ್ಯದಡಿ SIDBI ಗೆ ₹ 15,000 ಕೋಟಿ ನೀಡಲಾಗುವುದು.
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ನಬಾರ್ಡ್) ಬಗ್ಗೆ:
- ನಬಾರ್ಡ್ ಒಂದು ಅತ್ಯುನ್ನತ ಅಭಿವೃದ್ಧಿ ಮತ್ತು ವಿಶೇಷ ಬ್ಯಾಂಕ್ ಆಗಿದ್ದು, ಇದನ್ನು ಜುಲೈ 12, 1982 ರಂದು ಸಂಸತ್ತು ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಕಾಯ್ದೆಯ ಮೂಲಕ ಸ್ಥಾಪಿಸಿತು.
- ಕೃಷಿ ಮತ್ತು ಗ್ರಾಮೀಣ ಕೃಷಿಯೇತರ ಕ್ಷೇತ್ರಗಳನ್ನು ಉನ್ನತೀಕರಿಸಲು ಸಾಲದ ಹರಿವನ್ನು ಹೆಚ್ಚಿಸುವ ಮೂಲಕ ಗ್ರಾಮೀಣ ಭಾರತವನ್ನು ಉನ್ನತೀಕರಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
- ಶ್ರೀಶಿವರಾಮನ್ ಅವರ ಅಧ್ಯಕ್ಷತೆಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ರಚಿಸಿದ ಸಮಿತಿಯ ಶಿಫಾರಸುಗಳನ್ನು ಆಧರಿಸಿ ಇದನ್ನು ಸ್ಥಾಪಿಸಲಾಯಿತು.
- ನಬಾರ್ಡ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಅಡಿಯಲ್ಲಿರುವ, ಕೃಷಿ ಸಾಲ ಇಲಾಖೆ (Agricultural Credit Department- ACD) ಮತ್ತು ಗ್ರಾಮೀಣ ಯೋಜನೆ ಮತ್ತು ಕ್ರೆಡಿಟ್ ಸೆಲ್ (Rural Planning and Credit Cell – RPCC) ಮತ್ತು ಕೃಷಿ ಮರುಹಣಕಾಸು ಮತ್ತು ಅಭಿವೃದ್ಧಿ ನಿಗಮ (Agricultural Refinance and Development Corporation – ARDC) ಅನ್ನು ಬದಲಾಯಿಸಿದೆ.
- ನಬಾರ್ಡ್ “ಭಾರತದ ಗ್ರಾಮೀಣ ಪ್ರದೇಶಗಳಲ್ಲಿನ ಕೃಷಿ ಮತ್ತು ಇತರ ಆರ್ಥಿಕ ಚಟುವಟಿಕೆಗಳಿಗೆ ಸಾಲ ಕ್ಷೇತ್ರದಲ್ಲಿ ನೀತಿ, ಯೋಜನೆ ಮತ್ತು ಕಾರ್ಯಾಚರಣೆಗೆ ಸಂಬಂಧಿಸಿದ ವಿಷಯಗಳಲ್ಲಿ” ಅಧಿಕೃತ ಸಂಸ್ಥೆಯಾಗಿದೆ.
ಪ್ರಮುಖ ಕಾರ್ಯಗಳು:
- ಇದು ಗ್ರಾಮೀಣ ಮೂಲಸೌಕರ್ಯಗಳ ನಿರ್ಮಾಣಕ್ಕೆ ಮರು ಹಣಕಾಸು ಬೆಂಬಲವನ್ನು ನೀಡುತ್ತದೆ.
- ನಿಗದಿತ ಗುರಿಗಳನ್ನು ಸಾಧಿಸುವಲ್ಲಿ ಬ್ಯಾಂಕಿಂಗ್ ಉದ್ಯಮಕ್ಕೆ ಮಾರ್ಗದರ್ಶನ ಮತ್ತು ಪ್ರೇರಣೆ ನೀಡಲು ಇದು ಜಿಲ್ಲಾ ಮಟ್ಟದ ಸಾಲ ಯೋಜನೆಗಳನ್ನು(district level credit plans) ಸಿದ್ಧಪಡಿಸುತ್ತದೆ.
- ಇದು ಸಹಕಾರಿ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳನ್ನು (RRB) ಮೇಲ್ವಿಚಾರಣೆ ಮಾಡುತ್ತದೆ ಮತ್ತು ಉತ್ತಮ ಬ್ಯಾಂಕಿಂಗ್ ಅಭ್ಯಾಸಗಳನ್ನು ಅಭಿವೃದ್ಧಿಪಡಿಸಲು ಮತ್ತು ಅವುಗಳನ್ನು ಕೋರ್ ಬ್ಯಾಂಕಿಂಗ್ ಪರಿಹಾರ ವೇದಿಕೆಗೆ (Core Banking Solution- CBS) ಸಂಯೋಜಿಸಲು ಸಹಕರಿಸುತ್ತದೆ.
- ಇದು ಕರಕುಶಲ ಕುಶಲಕರ್ಮಿಗಳಿಗೆ ತರಬೇತಿಯನ್ನು ನೀಡುತ್ತದೆ ಮತ್ತು ಈ ವಸ್ತುಗಳ ಪ್ರದರ್ಶನಕ್ಕಾಗಿ ಮಾರ್ಕೆಟಿಂಗ್ ವೇದಿಕೆಯನ್ನು (Marketing platform) ಅನ್ನು ಅಭಿವೃದ್ಧಿಪಡಿಸಲು ಅವರಿಗೆ ಸಹಾಯ ಮಾಡುತ್ತದೆ.
ವಿಷಯಗಳು: ಮೂಲಸೌಕರ್ಯ: ಇಂಧನ, ಬಂದರುಗಳು, ರಸ್ತೆಗಳು, ವಿಮಾನ ನಿಲ್ದಾಣಗಳು, ರೈಲ್ವೆ ಇತ್ಯಾದಿ.
‘ಸೌರಶಕ್ತಿ ವಲಯ’ಕ್ಕೆ ಪ್ರೋತ್ಸಾಹ ಧನ:
(Incentives for solar energy sector)
ಸಂದರ್ಭ:
ಇತ್ತೀಚೆಗೆ, ಕೇಂದ್ರ ಕ್ಯಾಬಿನೆಟ್ ಎರಡು ಉತ್ಪಾದನಾ-ಸಂಬಂಧಿತ ಪ್ರೋತ್ಸಾಹಕ ಯೋಜನೆಗಳಿಗೆ (PLI) ಅನುಮೋದನೆ ನೀಡಿದೆ: (Production-Linked Incentive scheme: PLI scheme).
- ಬಿಳಿ/ಐಷಾರಾಮಿ ಸರಕುಗಳು (ಹವಾನಿಯಂತ್ರಣಗಳು ಮತ್ತು ಎಲ್ಇಡಿ ದೀಪಗಳು) [White goods (air-conditioners and LED lights)].
- ಹೆಚ್ಚಿನ ದಕ್ಷತೆಯ ಸೌರ ದ್ಯುತಿವಿದ್ಯುಜ್ಜನಕ ಮಾಡ್ಯೂಲ್.
PLI ಯೋಜನೆಯ ಕುರಿತು:
- ವಲಯ ಆಧಾರಿತ ಅಸಮರ್ಥತೆಗಳನ್ನು ತೆಗೆದುಹಾಕುವುದು, ದೊಡ್ಡ ಪ್ರಮಾಣದ ಆರ್ಥಿಕತೆಯನ್ನು ನಿರ್ಮಿಸುವುದು ಮತ್ತು ದಕ್ಷತೆಯನ್ನು ಖಾತರಿಪಡಿಸುವ ಮೂಲಕ ಭಾರತದಲ್ಲಿನ ಉತ್ಪಾದನೆಯನ್ನು ಜಾಗತಿಕವಾಗಿ ಸ್ಪರ್ಧಾತ್ಮಕಗೊಳಿಸುವುದು PLI ಯೋಜನೆಯ ಮುಖ್ಯ ಉದ್ದೇಶವಾಗಿದೆ.
- ಇದರ ವಿನ್ಯಾಸವನ್ನು, ಭಾರತದಲ್ಲಿ ಸಂಪೂರ್ಣ ಘಟಕಗಳ ಪರಿಸರ ವ್ಯವಸ್ಥೆಯನ್ನು ಗಮನದಲ್ಲಿಟ್ಟುಕೊಂಡು ವಿನ್ಯಾಸಗೊಳಿಸಲಾಗಿದೆ, ಇದರಿಂದಾಗಿ ಭಾರತವನ್ನು ಜಾಗತಿಕ ಪೂರೈಕೆ-ಸರಪಳಿಯ ಪ್ರಮುಖ ಭಾಗವಾಗಿಸಬಹುದು.
- ಈ ಯೋಜನೆಯಡಿ, ಮುಂದಿನ ಐದು ವರ್ಷಗಳ ಕಾಲ ಭಾರತದಲ್ಲಿ ತಯಾರಾದ ಸರಕುಗಳ ಹೆಚ್ಚುತ್ತಿರುವ ಮಾರಾಟಕ್ಕೆ 4 ರಿಂದ 6 ಪ್ರತಿಶತದವರೆಗೆ ಪ್ರೋತ್ಸಾಹ ಧನ ನೀಡಲಾಗುವುದು.
- ಈ ಯೋಜನೆಯು ಜಾಗತಿಕ ಹೂಡಿಕೆಯನ್ನು ಆಕರ್ಷಿಸುತ್ತದೆ, ದೊಡ್ಡ ಪ್ರಮಾಣದ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ರಫ್ತುಗಳನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.
ಪ್ರಯೋಜನಗಳು:
- ಸಂಯೋಜಿತ ಸೌರ PV ಉತ್ಪಾದನಾ ಘಟಕಗಳ ಸಾಮರ್ಥ್ಯ 10,000 ಮೆಗಾವ್ಯಾಟ್ ಹೆಚ್ಚಾಗುತ್ತದೆ.
- ಸೌರ PV ಉತ್ಪಾದನಾ ಯೋಜನೆಗಳಲ್ಲಿ, 17,200 ಕೋಟಿ ರೂ. ಗಳ ನೇರ ಹೂಡಿಕೆ.
- ಸಾಮಗ್ರಿಗಳ ಸಮತೋಲನಕ್ಕಾಗಿ (Balance of Materials) ಐದು ವರ್ಷಗಳಲ್ಲಿ 17,500 ಕೋಟಿ ರೂ.ಗಳ ಬೇಡಿಕೆ.
- ಸುಮಾರು 30,000 ಜನರಿಗೆ ನೇರ ಉದ್ಯೋಗ ಮತ್ತು 1,20,000 ಜನರಿಗೆ ಪರೋಕ್ಷ ಉದ್ಯೋಗ ಸಿಗಲಿದೆ.
- ಪ್ರತಿವರ್ಷ ಸುಮಾರು 17,500 ಕೋಟಿ ರೂಪಾಯಿಗಳಷ್ಟು ಆಮದು ಉಳಿತಾಯ.
- ಹೆಚ್ಚಿನ ದಕ್ಷತೆಯ ಸೌರ ಪಿವಿ ಮಾಡ್ಯೂಲ್‌ಗಳನ್ನು ಪಡೆಯಲು ಸಂಶೋಧನೆ ಮತ್ತು ಅಭಿವೃದ್ಧಿಗೆ ಪ್ರಚೋದನೆ.
ವಿಷಯಗಳು: ಆಂತರಿಕ ಭದ್ರತೆಗೆ ಸವಾಲನ್ನು ಒಡ್ಡುವ ಸರ್ಕಾರ ವಿರೋಧಿ ಅಂಶಗಳ ಪಾತ್ರ.
ನಾಗರಿಕ ರಕ್ಷಣಾ ಸ್ವಯಂಸೇವಕರು:
(Civil defence volunteers)
ಸಂದರ್ಭ:
ದೆಹಲಿ ಪೊಲೀಸರು ಇತ್ತೀಚೆಗೆ ಒಂದು ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ‘ದೆಹಲಿ ಸಿವಿಲ್ ಡಿಫೆನ್ಸ್’ (DCD) ಸ್ವಯಂಸೇವಕರು ಎಂದೂ ಕರೆಯಲ್ಪಡುವ ‘ನಾಗರಿಕ ಭದ್ರತಾ ಸಿಬ್ಬಂದಿಗಳು’ ಪೊಲೀಸ್ ಬ್ಯಾರಿಕೇಡ್‌ಗಳನ್ನು ಬಳಸುವುದನ್ನು ತಡೆಯಲು ಮತ್ತು ಕೋವಿಡ್ -19 ಮಾರ್ಗದರ್ಶಿ ಸೂತ್ರಗಳ ಉಲ್ಲಂಘನೆಗಳಿಗಾಗಿ ಜನರನ್ನು (ಮುಖಗವಸನ್ನು ಧರಿಸದೆ ಇರುವುದು) ವಿಚಾರಣೆಗೆ ಒಳಪಡಿಸುವ ಅಧಿಕಾರ ಹೊಂದಿಲ್ಲ ಎಂದು ಹೇಳಿದೆ.
ಏನಿದು ಸಮಸ್ಯೆ?
- ಇತ್ತೀಚಿನ ದಿನಗಳಲ್ಲಿ, ರಾಷ್ಟ್ರ ರಾಜಧಾನಿಯಲ್ಲಿ ನಾಗರಿಕ ಭದ್ರತಾ ಸ್ವಯಂಸೇವಕರ ಪಾತ್ರವು ತೀವ್ರ ಪರಿಶೀಲನೆಗೆ ಒಳಪಟ್ಟಿದೆ, ಸಾಂಕ್ರಾಮಿಕ ಸಮಯದಲ್ಲಿ ಅವರು ಮಾಡಿದ ಕೆಲಸಕ್ಕೆ ಪ್ರಶಂಸೆ ಮಾಡುವುದರಿಂದ ಹಿಡಿದು ದೌರ್ಜನ್ಯದ ಆರೋಪಗಳನ್ನು ಎದುರಿಸುವವರೆಗೆ.
- ಇತ್ತೀಚೆಗೆ, ಅಂತಹ ಒಂದು ಘಟನೆಯು ಐಐಟಿ-ದೆಹಲಿ ಬಳಿ ನಾಗರಿಕ ರಕ್ಷಣಾ ಸಿಬ್ಬಂದಿ ಮತ್ತು ಸಾರ್ವಜನಿಕರ ನಡುವಿನ ವಿವಾದವು ಸಂಪೂರ್ಣ ಮುಷ್ಟಿ ಕಾಳಗವಾಗಿ ಮಾರ್ಪಟ್ಟಿದೆ.
ಹಾಗಾದರೆ, ಈ ‘ನಾಗರಿಕ ರಕ್ಷಣಾ ಸ್ವಯಂಸೇವಕರು’ ಯಾರು?
- ದೆಹಲಿಯ ‘ಸಿವಿಲ್ ಡಿಫೆನ್ಸ್ ಸ್ವಯಂಸೇವಕರು’ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಕೆಲಸ ಮಾಡುವ ಪುರುಷರು ಮತ್ತು ಮಹಿಳೆಯರು.
- ಜಿಲ್ಲಾಧಿಕಾರಿಗಳು ಈ ಕುರಿತು ವರದಿಗಳನ್ನು ಸಲ್ಲಿಸುವ ವಿಭಾಗೀಯ ಆಯುಕ್ತರ ಬಳಿ ನಾಗರಿಕ ಸಂರಕ್ಷಣಾ ಸ್ವಯಂಸೇವಕರ ಕುರಿತ ಉನ್ನತ ಆಜ್ಞೆಯು ಇದೆ.
- ನಾಗರಿಕ ಸಂರಕ್ಷಣಾ ಸ್ವಯಂಸೇವಕರು ‘ನಾಗರಿಕ ಸಂರಕ್ಷಣಾ ಕಾಯ್ದೆ, 1968’ ಅಡಿಯಲ್ಲಿ ಕೆಲಸ ಮಾಡುತ್ತಾರೆ.
ನಾಗರಿಕ ರಕ್ಷಣೆ ಎಂದರೇನು?
- ಸಿವಿಲ್ ಡಿಫೆನ್ಸ್ ಆಕ್ಟ್, 1968 ರ ಪ್ರಕಾರ, ‘ಸಿವಿಲ್ ಡಿಫೆನ್ಸ್’ ಅನ್ನು ಈ ಮುಂದಿನಂತೆ ವ್ಯಾಖ್ಯಾನಿಸಲಾಗಿದೆ, ಅಂದರೆ, ಇದರ ಮೂಲಕ ಭಾರತದಲ್ಲಿ ಯಾವುದೇ ವ್ಯತಿರಿಕ್ತ ದಾಳಿಯ ಸಂದರ್ಭದಲ್ಲಿ, ವ್ಯಕ್ತಿಗಳು, ಆಸ್ತಿ ಮತ್ತು ಸ್ಥಳಗಳನ್ನು ದಾಳಿಯಿಂದ ರಕ್ಷಿಸಲಾಗುತ್ತದೆ, ಆದರೆ ಯಾವುದೇ ನೈಜ ಮುಖಾಮುಖಿ ನಡೆಯುವುದಿಲ್ಲ ”.
- 2010 ರ ಕಾಯಿದೆಯ ತಿದ್ದುಪಡಿಯೊಂದಿಗೆ, ‘ವಿಪತ್ತು ನಿರ್ವಹಣೆ’ ಯನ್ನು ಅದರ ಜವಾಬ್ದಾರಿಗಳಲ್ಲಿ ಒಂದು ಎಂದು ಸೇರಿಸಿಕೊಳ್ಳಲಾಗಿದ್ದು, ‘ನಾಗರಿಕ ರಕ್ಷಣಾ’ ವ್ಯಾಖ್ಯಾನವನ್ನು ವಿಸ್ತರಿಸಿದೆ.
‘ಸ್ವಯಂ ಸೇವಕರ’ ಮೂಲ ಪಾತ್ರ:
- ಸ್ಥಳೀಯ ಆಡಳಿತಕ್ಕೆ ಸಹಾಯ ಮಾಡುವುದು. ಸಾಂಕ್ರಾಮಿಕ ಸಮಯದಲ್ಲಿ, ಸ್ವಯಂಸೇವಕರು ಹಾಟ್‌ಸ್ಪಾಟ್ ತನಿಖೆಯಲ್ಲಿ ಭಾಗವಹಿಸುವ ಮೂಲಕ ಮತ್ತು ಅಗತ್ಯವಿರುವವರಿಗೆ ಆಹಾರವನ್ನು ವಿತರಿಸುವ ಮೂಲಕ ಕೋವಿಡ್-19 ಮುಂಚೂಣಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದಾರೆ.
- ಇತ್ತೀಚಿನ ತಿಂಗಳುಗಳಲ್ಲಿ, ಮಾರುಕಟ್ಟೆಗಳು ಮತ್ತು ಇತರ ಜನದಟ್ಟಣೆ ಇರುವ ಸ್ಥಳಗಳಲ್ಲಿ ಮತ್ತು ರೋಗನಿರೋಧಕ ಲಸಿಕೆ ನೀಡುವ ಕೇಂದ್ರಗಳಲ್ಲಿ (vaccination sites) ಸಾಮಾಜಿಕ ಅಂತರವನ್ನು ಖಚಿತಪಡಿಸಿಕೊಳ್ಳಲು ‘ದೆಹಲಿ ಸಿವಿಲ್ ಡಿಫೆನ್ಸ್’ ಸ್ವಯಂಸೇವಕರನ್ನು ನಿಯೋಜಿಸಲಾಗಿದೆ.
ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:
ಹಾಂಗ್ ಕಾಂಗ್‌ನಿಂದ ವಲಸೆ ಬಂದವರಿಗೆ ನಿಧಿ ಸ್ಥಾಪಿಸಲು ನಿರ್ಧರಿಸಿದ ಯುನೈಟೆಡ್ ಕಿಂಗ್ಡಮ್:
- ತನ್ನ ಹಿಂದಿನ ವಸಾಹತು ‘ಹಾಂಗ್ ಕಾಂಗ್’ನಲ್ಲಿ ಹೆಚ್ಚುತ್ತಿರುವ ರಾಜಕೀಯ ದಬ್ಬಾಳಿಕೆಯಿಂದ ತಪ್ಪಿಸಿಕೊಂಡು ಹಾಂಕಾಂಗ್‌ನಿಂದ ವಲಸೆ ಬಂದವರಿಗೆ ದೇಶದಲ್ಲಿ ನೆಲೆಸಲು ಸಹಾಯ ಮಾಡಲು, ಬ್ರಿಟಿಷ್ ಸರ್ಕಾರವು € 43 ಮಿಲಿಯನ್ ($ 59 ಮಿಲಿಯನ್) ಮೊತ್ತದ ನಿಧಿಯನ್ನು ಸ್ಥಾಪಿಸುತ್ತಿದೆ.
- ಬ್ರಿಟಿಷ್ ರಾಷ್ಟ್ರೀಯ (ಸಾಗರೋತ್ತರ) ಪಾಸ್‌ಪೋರ್ಟ್ ಗಳನ್ನು ಹೊಂದಿರುವ ಹಾಂಗ್ ಕಾಂಗ್‌ನ 7.4 ಮಿಲಿಯನ್ ಜನಸಂಖ್ಯೆಯಲ್ಲಿ 5 ಮಿಲಿಯನ್ ಜನರಿಗೆ ಮುಕ್ತವಾಗಿ ಕೆಲಸ ಮಾಡಲು, ವಾಸಿಸಲು ಮತ್ತು ಸಂಭಾವ್ಯ ಪೌರತ್ವವನ್ನು ನೀಡಲು ವಿಶೇಷ ವೀಸಾಗಳ ಕುರಿತು ಪ್ರಸ್ತಾಪಿಸಲಾಗಿದೆ.
ಜ್ಞಾನವಾಪಿ ಮಸೀದಿ.
(Gyanvapi Mosque)
ಕಾಶಿ ವಿಶ್ವನಾಥ ದೇವಾಲಯದ ಪಕ್ಕದಲ್ಲಿರುವ ‘ಜ್ಞಾನವಾಪಿ ಮಸೀದಿ’ಯ ಸಮೀಕ್ಷೆ ನಡೆಸುವಂತೆ ವಾರಣಾಸಿಯ ಸ್ಥಳೀಯ ನ್ಯಾಯಾಲಯವು ಭಾರತೀಯ ಪುರಾತತ್ವ ಸರ್ವೇಕ್ಷಣಾ ಮಂಡಳಿಗೆ (ASI) ನಿರ್ದೇಶನ ನೀಡಿದೆ. ಇದರಿಂದ ಅಸ್ತಿತ್ವದಲ್ಲಿರುವ ಕಟ್ಟಡವು ಒಂದು ರೀತಿಯ ‘ಅತಿಶಯೋಕ್ತಿಯ ಹೇರಿಕೆ’, ‘ಬದಲಾವಣೆ’ ಅಥವಾ ‘ಸೇರ್ಪಡೆ’ ಅಥವಾ ಯಾವುದೇ ಧಾರ್ಮಿಕ ಕಟ್ಟಡದ ಮೇಲಣ ರಚನಾತ್ಮಕ ಅತಿಕ್ರಮಣವಾಗಿದೆಯೆ ಎಂದು ಕಂಡುಹಿಡಿಯಲಾಗುತ್ತದೆ.
ಏನಿದು ಪ್ರಕರಣ?
ಮೊಘಲ್ ಚಕ್ರವರ್ತಿ ಔರಂಗಜೇಬ ಮಸೀದಿ ನಿರ್ಮಿಸಲು ಹಳೆಯ ಕಾಶಿ ವಿಶ್ವನಾಥ ದೇವಾಲಯದ ಭಾಗಗಳನ್ನು ನೆಲಸಮ ಮಾಡಿದ್ದಾರೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಇದರಲ್ಲಿ ‘ಜ್ಞಾನವಪಿ ಮಸೀದಿ’ ನಿರ್ಮಿಸಲಾಗಿರುವ ಭೂಮಿಯನ್ನು ಹಿಂದೂಗಳಿಗೆ ಹಸ್ತಾಂತರಿಸುವಂತೆ ಒತ್ತಾಯಿಸಲಾಗಿದೆ. ಈ ಅರ್ಜಿಯ ಆಧಾರದ ಮೇಲೆ ನ್ಯಾಯಾಲಯ ಈ ಆದೇಶವನ್ನು ಹೊರಡಿಸಿದೆ.
- Join our Official Telegram Channel HERE for Motivation and Fast Updates
- Subscribe to our YouTube Channel HERE to watch Motivational and New analysis videos