Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 7ನೇ ಏಪ್ರಿಲ್ 2021

 

ಪರಿವಿಡಿ :

ಸಾಮಾನ್ಯ ಅಧ್ಯಯನ ಪತ್ರಿಕೆ 1:

1. ಶಾಖ ಅಲೆ/ ಬಿಸಿ ಗಾಳಿ ಎಂದರೇನು?

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ವಿಜಿಲೆನ್ಸ್ ಅಧಿಕಾರಿಗಳ ವರ್ಗಾವಣೆಯನ್ನು ಪ್ರತಿ 3 ವರ್ಷಗಳಿಗೊಮ್ಮೆ ಮಾಡಲಾಗುವುದು.

2. ರಾಷ್ಟ್ರೀಯ ವಲಸೆ ಕಾರ್ಮಿಕರ ಕರಡು ನೀತಿ.

3. ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಘಟನೆ.(NATO)

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಸುಸ್ಥಿರ ಪ್ಲಾಸ್ಮಾ.

2. ಬಾಹ್ಯಾಕಾಶ ಅವಶೇಷಗಳು.

 

ಪೂರ್ವಭಾವಿ ಪರೀಕ್ಷೆಯ ಸಂಬಂಧಿಸಿದ ವಿದ್ಯಮಾನಗಳು:

1. ಸಂಚಾರಿ ಲ್ಯಾಬ್.

2. ವೊಲ್ಫ್-ರಾಯೆಟ್ ನಕ್ಷತ್ರಗಳು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 1


 

ವಿಷಯಗಳು:ಭೂಕಂಪಗಳು, ಸುನಾಮಿ, ಜ್ವಾಲಾಮುಖಿ ಚಟುವಟಿಕೆ, ಚಂಡಮಾರುತ ಮುಂತಾದ ಪ್ರಮುಖ ಭೌಗೋಳಿಕ ವಿದ್ಯಮಾನಗಳು.

 ಶಾಖ ಅಲೆ/ ಬಿಸಿ ಗಾಳಿ/ ಹೀಟ್ ವೇವ್ ಎಂದರೇನು?


(What are heat waves?) 

ಸಂದರ್ಭ:

ಭಾರತೀಯ ಹವಾಮಾನ ಇಲಾಖೆಯ (India Meteorological Department -IMD) ರಾಷ್ಟ್ರೀಯ ಹವಾಮಾನ ಮುನ್ಸೂಚನೆ ಕೇಂದ್ರದ ಪ್ರಕಾರ, ರಾಜಸ್ಥಾನ, ವಿದರ್ಭ ಮತ್ತು ತಮಿಳುನಾಡಿನ ಒಳಭಾಗದ ಪ್ರದೇಶಗಳ  ಪ್ರತ್ಯೇಕವಾದ ಸ್ಥಳಗಳಲ್ಲಿ ಶಾಖ ತರಂಗ / ಬಿಸಿಗಾಳಿಯ ಪರಿಸ್ಥಿತಿಗಳು ಕಂಡುಬರುವ ಸಾಧ್ಯತೆ ಇದೆ.

 • ಇತ್ತೀಚೆಗೆ ಹೆಚ್ಚಿನ ಪ್ರದೇಶಗಳಲ್ಲಿ, 40 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿನ ತಾಪಮಾನ ದಾಖಲಾದ ನಂತರ ಈ ಎಚ್ಚರಿಕೆಯನ್ನು ನೀಡಲಾಗಿದೆ.

ಬಿಸಿಗಾಳಿ ಎಂದರೇನು?

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಮೈದಾನ ಅಥವಾ ಬಯಲು ಸೀಮೆಗಳಲ್ಲಿ ಗರಿಷ್ಠ ತಾಪಮಾನವು ಕನಿಷ್ಠಪಕ್ಷ 40 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಾಗಿ, ಕರಾವಳಿ ಪ್ರದೇಶಗಳಲ್ಲಿ 37 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಾಗಿ ಮತ್ತು ಗುಡ್ಡಗಾಡು/ಪರ್ವತ ಪ್ರದೇಶಗಳಲ್ಲಿ ಕನಿಷ್ಠ 30 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚಿನ ತಾಪಮಾನವು ದಾಖಲಾಗಿದ್ದರೆ ಅದನ್ನು ಬಿಸಿಗಾಳಿ ಅಥವಾ ಶಾಖ ಅಲೆಗಳು ಎಂದು ಪರಿಗಣಿಸಲಾಗುತ್ತದೆ.

 ಬಿಸಿಗಾಳಿಯನ್ನು ನಿರ್ಧರಿಸುವ ಮಾನದಂಡಗಳು ಯಾವುವು?

ತಾಪಮಾನದಲ್ಲಿ, ಸಾಮಾನ್ಯ ತಾಪಮಾನಕ್ಕಿಂತ 4.5 ರಿಂದ 6.4 ಡಿಗ್ರಿ ಸೆಲ್ಸಿಯಸ್ ನಷ್ಟು ಉಷ್ಣತೆಯಲ್ಲಿ ಹೆಚ್ಚಳವಾದರೆ ಅದನ್ನು ಬಿಸಿಗಾಳಿ ಎಂದು ಮತ್ತು ಉಷ್ಣತೆಯಲ್ಲಿನ / ತಾಪಮಾನದಲ್ಲಿನ ಹೆಚ್ಚಳವು 6.4 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದಾಗ ಅದನ್ನು ತೀವ್ರವಾದ ಶಾಖದ ಅಲೆ/ ತೀವ್ರವಾದ ಬಿಸಿಗಾಳಿಯ ಪರಿಸ್ಥಿತಿ ಎಂದು ಘೋಷಿಸಲಾಗುತ್ತದೆ.

 • ಮೈದಾನ ಅಥವಾ ಬಯಲು ಪ್ರದೇಶಗಳಲ್ಲಿ, ವಾಸ್ತವಿಕ ಗರಿಷ್ಠ ತಾಪಮಾನದ ಆಧಾರದ ಮೇಲೆ, ನಿಜವಾದ ಗರಿಷ್ಠ ತಾಪಮಾನವು 45 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಾದಾಗ ಅದನ್ನು ಬಿಸಿಗಾಳಿಯೆಂದು ಮತ್ತು 47 ಡಿಗ್ರಿ ಸೆಲ್ಸಿಯಸ್‌ಗಿಂತ ಅಧಿಕವಾದಾಗ ತೀವ್ರವಾದ ಬಿಸಿಗಾಳಿಯ ಪರಿಸ್ಥಿತಿ ಎಂದು ಭಾರತೀಯ ಹವಾಮಾನ ಇಲಾಖೆಯು (IMD) ಪರಿಗಣಿಸುತ್ತದೆ.

ಭಾರತವು ಹೆಚ್ಚಿನ ಬಿಸಿಗಾಳಿಯ ಪರಿಸ್ಥಿತಿಗಳನ್ನು ಅನುಭವಿಸಲು ಕಾರಣಗಳು:

 • ನಗರ ಪ್ರದೇಶಗಳಲ್ಲಿ ಸುಸಜ್ಜಿತ ಮತ್ತು ಕಾಂಕ್ರೀಟ್ ಮೇಲ್ಮೈಗಳ ವರ್ಧಿತ ಪರಿಣಾಮ ಮತ್ತು ಮರದ ಹೊದಿಕೆಯ ಕೊರತೆ.
 • ನಗರ ಶಾಖ ದ್ವೀಪದ ಪರಿಣಾಮಗಳಿಂದಾಗಿ ಸುತ್ತಮುತ್ತಲಿನ ತಾಪಮಾನವು ನಿಜವಾದ ತಾಪಮಾನಕ್ಕಿಂತ 3 ರಿಂದ 4 ಡಿಗ್ರಿಗಳಷ್ಟು ಹೆಚ್ಚು ಅನುಭವಿಸಬಹುದು.
 • ಕಳೆದ 100 ವರ್ಷಗಳಲ್ಲಿ ಜಾಗತಿಕವಾಗಿ ತಾಪಮಾನದಲ್ಲಿ ಸರಾಸರಿ 0.8 ಡಿಗ್ರಿಗಳಷ್ಟು ಏರಿಕೆಯಾಗಿರುವುದರಿಂದ ಹೆಚ್ಚಿನ ಶಾಖದ ಅಲೆಗಳನ್ನು ನಿರೀಕ್ಷಿಸಲಾಗಿದೆ. ರಾತ್ರಿಯ ಸಮಯದ ತಾಪಮಾನವೂ ಹೆಚ್ಚುತ್ತಿದೆ.
 • ಹವಾಮಾನ ಬದಲಾವಣೆಯಿಂದಾಗಿ ದೈನಂದಿನ ಗರಿಷ್ಠ ಮತ್ತು ದೀರ್ಘ ಅವಧಿಯ ತಾಪಮಾನದಿಂದಾಗಿ, ಹೆಚ್ಚು ತೀವ್ರವಾದ ಬೇಸಿಗೆ ಅಲೆಗಳ ಆವರ್ತನವು ಜಾಗತಿಕವಾಗಿ ಹೆಚ್ಚಾಗಿ ಹಾಗೂ ನಿರಂತರವಾಗಿ ಕಂಡುಬರುತ್ತಿದೆ.
 • ಮಧ್ಯಮ-ಗರಿಷ್ಠ ಶಾಖ ತರಂಗ ವಲಯದಲ್ಲಿ ನೇರಳಾತೀತ (UV) ಕಿರಣಗಳ ಹೆಚ್ಚಿನ ತೀವ್ರತೆ.
 • ಅಸಾಧಾರಣ ಶಾಖದ ಒತ್ತಡ ಮತ್ತು ಪ್ರಧಾನವಾಗಿ ಗ್ರಾಮೀಣ ಜನಸಂಖ್ಯೆಯ ಸಂಯೋಜನೆಯು ಭಾರತವನ್ನು ಶಾಖದ ಅಲೆಗಳಿಗೆ/ ಬಿಸಿಗಾಳಿಗೆ ಅತಿ ಹೆಚ್ಚು ಗುರಿಯಾಗಿಸುತ್ತದೆ.

ಭಾರತದ ಮುಂದಿರುವ ದಾರಿ- ಭಾರತವು ಬಿಸಿಗಾಳಿ ಪರಿಸ್ಥಿತಿಯನ್ನು ಹೇಗೆ ನಿಭಾಯಿಸಬೇಕು?

 • ಹವಾಮಾನ ದತ್ತಾಂಶಗಳ ಸರಿಯಾದ ಟ್ರ್ಯಾಕಿಂಗ್ ಮೂಲಕ ಶಾಖದ ಹಾಟ್-ಸ್ಪಾಟ್‌ಗಳನ್ನು(heat-hot-spots) ಗುರುತಿಸುವುದು ಮತ್ತು ಆಯಕಟ್ಟಿನ ಅಂತರ-ಏಜೆನ್ಸಿ ಸಮನ್ವಯದೊಂದಿಗೆ ದುರ್ಬಲ ಗುಂಪುಗಳನ್ನು ಗುರಿಯಾಗಿಸಿಕೊಂಡು ಸ್ಥಳೀಯ ಶಾಖ ಕ್ರಿಯಾ ಯೋಜನೆಗಳ ಸಮಯೋಚಿತ ಅಭಿವೃದ್ಧಿ ಮತ್ತು ಅನುಷ್ಠಾನವನ್ನು ಉತ್ತೇಜಿಸುವುದು.
 • ಹವಾಮಾನ ಪರಿಸ್ಥಿತಿಗಳಿಗೆ ಸಂಬಂಧಿಸಿದಂತೆ ಕಾರ್ಮಿಕರ ಸುರಕ್ಷತೆಗಾಗಿ ಅಸ್ತಿತ್ವದಲ್ಲಿರುವ ಔದ್ಯೋಗಿಕ ಆರೋಗ್ಯ ಮಾನದಂಡಗಳು, ಕಾರ್ಮಿಕ ಕಾನೂನುಗಳು ಮತ್ತು ವಲಯದ ನಿಯಮಗಳ ವಿಮರ್ಶೆ ಮಾಡುವುದು.
 • ಆರೋಗ್ಯ, ನೀರು ಮತ್ತು ವಿದ್ಯುತ್ ಎಂಬ ಮೂರು ಕ್ಷೇತ್ರಗಳಲ್ಲಿ ನೀತಿ ಹಸ್ತಕ್ಷೇಪ ಮತ್ತು ಸಮನ್ವಯ ಅಗತ್ಯ.
 • ಮನೆಯೊಳಗೆ ಉಳಿಯುವುದು ಮತ್ತು ಆರಾಮದಾಯಕವಾದ ಬಟ್ಟೆಗಳನ್ನು ಧರಿಸುವುದು ಸೇರಿದಂತೆ ಅನೇಕ ಸಾಂಪ್ರದಾಯಿಕ ಅಳವಡಿಕೆ ವಿಧಾನಗಳನ್ನು ಉತ್ತೇಜಿಸುವುದು.
 • ಸರಳ ವಿನ್ಯಾಸದ ವೈಶಿಷ್ಟಪೂರ್ಣ ನೆರಳಿನ ಕಿಟಕಿಗಳು, ಭೂಗತ ನೀರು ಸಂಗ್ರಹ ಟ್ಯಾಂಕ್‌ಗಳು ಮತ್ತು ಶಾಖ – ನಿರೋಧಕ ವಸತಿ ಸಾಮಗ್ರಿಗಳನ್ನು ಪರಿಚಯಿಸುವುದು
 • ಸ್ಥಳೀಯ ಶಾಖ ಕ್ರಿಯಾ ಯೋಜನೆಗಳ (Heat Action Plan) ಮುಂಗಡ ಅನುಷ್ಠಾನ, ಜೊತೆಗೆ ಪರಿಣಾಮಕಾರಿ ಅಂತರ-ಏಜೆನ್ಸಿ ಸಮನ್ವಯವು ಒಂದು ಪ್ರಮುಖ ಪ್ರತಿಕ್ರಿಯೆಯಾಗಿದ್ದು, ದುರ್ಬಲ ಗುಂಪುಗಳನ್ನು ರಕ್ಷಿಸಲು ಸರ್ಕಾರವು ಸ್ಥಳೀಯ ಮಟ್ಟದಲ್ಲಿ ನಿಯೋಜಿಸಬಹುದು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 2


 

ವಿಷಯಗಳು: ಶಾಸನಬದ್ಧ ನಿಯಂತ್ರಕ ಮತ್ತು ವಿವಿಧ ಅರೆ- ನ್ಯಾಯಿಕ ಸಂಸ್ಥೆಗಳು.

ವಿಜಿಲೆನ್ಸ್ ಅಧಿಕಾರಿಗಳ ವರ್ಗಾವಣೆಯನ್ನು ಪ್ರತಿ 3 ವರ್ಷಗಳಿಗೊಮ್ಮೆ ಮಾಡಲಾಗುವುದು:


(Vigilance officers to be transferred every 3 years)

 ಸಂದರ್ಭ:

ಕೇಂದ್ರ ವಿಜಿಲೆನ್ಸ್ ಆಯೋಗ / ಕೇಂದ್ರ ವಿಚಕ್ಷಣಾ ಆಯೋಗವು  (Central Vigilance Commission -CVC) ಸರ್ಕಾರಿ ಸಂಸ್ಥೆಗಳ ವಿಜಿಲೆನ್ಸ್ ಘಟಕಗಳಲ್ಲಿ ನೇಮಕಗೊಂಡ ಅಧಿಕಾರಿಗಳ ವರ್ಗಾವಣೆ ಮತ್ತು ಸ್ಥಳನಿಯುಕ್ತಿ (  the transfer and posting ) ಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪರಿಷ್ಕರಿಸಿದೆ.

ಇತ್ತೀಚಿನ ಮಾರ್ಗಸೂಚಿಗಳ ಪ್ರಕಾರ:

 •  ಸಿಬ್ಬಂದಿಗೆ, ಸತತ ಎರಡು ‘ಪೋಸ್ಟಿಂಗ್’ (ಸ್ಥಳ ನಿಯುಕ್ತಿಗಳನ್ನು)ಗಳನ್ನು ವಿಜಿಲೆನ್ಸ್ ಘಟಕಗಳ, ವಿವಿಧ ಸ್ಥಳಗಳಲ್ಲಿ ನೀಡಬಹುದು, ಪ್ರತಿಯೊಂದೂ ನಿಯುಕ್ತಿಯು ಗರಿಷ್ಠ ಮೂರು ವರ್ಷಗಳ ಅವಧಿಯನ್ನು ಹೊಂದಿರುತ್ತದೆ.
 • ಯಾವುದೇ ಒಂದು ಸ್ಥಳದಲ್ಲಿ ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಕೆಲಸ ಮಾಡಿದ ಸಿಬ್ಬಂದಿಯನ್ನು ಹಂತ ಹಂತವಾಗಿ ವರ್ಗಾಯಿಸಬೇಕು, ಗರಿಷ್ಠ ಅವಧಿಗೆ ಸೇವೆಸಲ್ಲಿಸಿದ ಸಿಬ್ಬಂದಿಗೆ ಆದ್ಯತೆ ನೀಡಬೇಕು.
 • ಐದು ವರ್ಷಗಳಿಗಿಂತ ಹೆಚ್ಚು ಕಾಲ ಯಾವುದೇ ಒಂದು ಸ್ಥಳದಲ್ಲಿ ಬೀಡುಬಿಟ್ಟಿರುವ ಸಿಬ್ಬಂದಿಯನ್ನು ಉನ್ನತ ಆದ್ಯತೆಯ ಆಧಾರದ ಮೇಲೆ ವರ್ಗಾಯಿಸಬೇಕು.
 • ಒಬ್ಬ ವ್ಯಕ್ತಿಯು ಮೂರು ವರ್ಷಗಳಿಗಿಂತ ಹೆಚ್ಚು ಕಾಲ ಒಂದೇ ಸ್ಥಳದಲ್ಲಿ ಸೇವೆ ಸಲ್ಲಿಸಿದ್ದರೆ, ಮುಂದಿನ ಸ್ಥಳದಲ್ಲಿ ಅವನ/ಆಕೆಯ ಅಧಿಕಾರಾವಧಿಯನ್ನು ಸೀಮಿತಗೊಳಿಸಲಾಗುತ್ತದೆ. ಅಂದರೆ, ಎರಡೂ ಸ್ಥಳಗಳಲ್ಲಿ ಓರ್ವ ಸಿಬ್ಬಂದಿಯು ಸೇವೆ ಸಲ್ಲಿಸಿದ ಒಟ್ಟು ಅಧಿಕಾರಾವಧಿಯು ಆರು ವರ್ಷಗಳು ಮೀರದಂತೆ ಖಚಿತಪಡಿಸಿಕೊಳ್ಳಲಾಗುತ್ತದೆ.
 • ವಿಜಿಲೆನ್ಸ್ ಘಟಕದಿಂದ ವರ್ಗಾವಣೆಯಾದ ನಂತರ, ಮತ್ತೆ ಇದೇ ‘ಘಟಕ’ಕ್ಕೆ ಮರು-ಪೋಸ್ಟ್ ಮಾಡುವುದನ್ನು ಪರಿಗಣಿಸುವ ಮೊದಲು ಸಿಬ್ಬಂದಿ ಮೂರು ವರ್ಷಗಳ ಕೂಲಿಂಗ್-ಆಫ್ (cooling off) ಅವಧಿಯನ್ನು ಪೂರ್ಣಗೊಳಿಸುವುದು ಕಡ್ಡಾಯವಾಗಿದೆ.

ಇದರ ಅಗತ್ಯತೆ:

 • ವಿಜಿಲೆನ್ಸ್ ಇಲಾಖೆಯಲ್ಲಿ ಅಧಿಕಾರಿಯನ್ನು ದೀರ್ಘಕಾಲದವರೆಗೆ ಪೋಸ್ಟ್ ಮಾಡುವುದರಿಂದ, ಅನಗತ್ಯ ದೂರುಗಳು ಅಥವಾ ಆರೋಪಗಳ ಹೆಚ್ಚಳಕ್ಕೆ ಕಾರಣವಾಗುವುದರ ಜೊತೆಗೆ ಪಟ್ಟಭದ್ರ ಹಿತಾಸಕ್ತಿಗಳನ್ನು ಬೆಳೆಸುವ ಸಾಧ್ಯತೆಯಿರುತ್ತದೆ.

ಕೇಂದ್ರ ವಿಜಿಲೆನ್ಸ್ ಆಯೋಗದ ಕುರಿತು:

 • ಫೆಬ್ರವರಿ 1964 ರಲ್ಲಿ, ‘ಕೇಂದ್ರ ವಿಚಕ್ಷಣ ಆಯೋಗವನ್ನು- (Central Vigilance Commission -CVC) ಶ್ರೀ.ಸಂತಾನಂ ನೇತೃತ್ವದ ಭ್ರಷ್ಟಾಚಾರ ನಿಗ್ರಹ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಸರ್ಕಾರ ಸ್ಥಾಪಿಸಿತು.
 • 2003 ರಲ್ಲಿ, ‘ಕೇಂದ್ರ ವಿಜಿಲೆನ್ಸ್ ಆಯೋಗ ಕಾಯ್ದೆ’ ಯನ್ನು ಸಂಸತ್ತು ಅಂಗೀಕರಿಸಿತು, ಅದರ ಅಡಿಯಲ್ಲಿ ಕೇಂದ್ರ ವಿಚಕ್ಷಣ ಆಯೋಗ’ಕ್ಕೆ ಶಾಸನಬದ್ಧ ಸ್ಥಾನಮಾನವನ್ನು ನೀಡಲಾಯಿತು.
 • ‘ಕೇಂದ್ರ ವಿಜಿಲೆನ್ಸ್ ಆಯೋಗ’ವು, (CVC) ಯಾವುದೇ ಸಚಿವಾಲಯ ಅಥವಾ ಇಲಾಖೆಯಡಿ ಕಾರ್ಯನಿರ್ವಹಿಸುವುದಿಲ್ಲ. ಬದಲಾಗಿ, ಇದು ಸ್ವತಂತ್ರ ಸಂಸ್ಥೆಯಾಗಿದ್ದು, ಸಂಸತ್ತಿಗೆ ಮಾತ್ರ ಜವಾಬ್ದಾರವಾಗಿದೆ.
 • ಅದು ತನ್ನ ವರದಿಯನ್ನು ನೇರವಾಗಿ ಭಾರತದ ರಾಷ್ಟ್ರಪತಿಗಳಿಗೆ’ ಸಲ್ಲಿಸುತ್ತದೆ.
 • ‘ಕೇಂದ್ರ ವಿಜಿಲೆನ್ಸ್ ಆಯೋಗ’ ಭ್ರಷ್ಟಾಚಾರ ಅಥವಾ ಅಧಿಕಾರದ ದುರುಪಯೋಗಕ್ಕೆ ಸಂಬಂಧಿಸಿದ ದೂರುಗಳನ್ನು ತನಿಖೆ ಮಾಡುತ್ತದೆ ಮತ್ತು ಅವುಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಲು ಶಿಫಾರಸು ಮಾಡುತ್ತದೆ.

 ಕೇಂದ್ರ ವಿಜಿಲೆನ್ಸ್ ಆಯೋಗಕ್ಕೆ ಯಾರು ದೂರು ನೀಡಬಹುದು?

 • ಕೇಂದ್ರ ಸರ್ಕಾರ.
 • ಲೋಕಪಾಲ್.
 • ಭ್ರಷ್ಟಾಚಾರ ಹಾಗೂ ಅಕ್ರಮಗಳ ಕುರಿತು ಶಿಳ್ಳೆ ಹೊಡೆಯುವವರು. (Whistle blowers).

 

ವಿಷಯಗಳು: ಕೇಂದ್ರ ಮತ್ತು ರಾಜ್ಯಗಳಿಂದ  ದುರ್ಬಲ ವರ್ಗದ ಜನಸಮುದಾಯದವರಿಗೆ ಇರುವ ಕಲ್ಯಾಣ ಯೋಜನೆಗಳು ಮತ್ತು ಈ ಯೋಜನೆಗಳ ಕಾರ್ಯಕ್ಷಮತೆ; ಕಾರ್ಯವಿಧಾನಗಳು,ಕಾನೂನುಗಳು, ಸಂಸ್ಥೆಗಳು ಮತ್ತು ಈ ದುರ್ಬಲ ವಿಭಾಗಗಳ ರಕ್ಷಣೆ ಮತ್ತು ಸುಧಾರಣೆಗಾಗಿ ರಚಿಸಲಾದ ಸಂಸ್ಥೆಗಳು.

ರಾಷ್ಟ್ರೀಯ ವಲಸೆ ಕಾರ್ಮಿಕ ಕರಡು ನೀತಿ:


(Draft National Migrant Labour Policy)

ಸಂದರ್ಭ:

ಇತ್ತೀಚೆಗೆ, ನೀತಿ ಆಯೋಗವು, ಕಾರ್ಯನಿರತ ಅಧಿಕಾರಿಗಳ ಉಪಗುಂಪು  ಮತ್ತು ನಾಗರಿಕ ಸಮಾಜದ ಸದಸ್ಯರ ಸಹಯೋಗದೊಂದಿಗೆ ‘ರಾಷ್ಟ್ರೀಯ ವಲಸೆ ಕಾರ್ಮಿಕ ನೀತಿ’ ಯ ಕರಡನ್ನು ಸಿದ್ಧಪಡಿಸಿದೆ.

 • ಈ ನೀತಿಯು ವಲಸೆ ಕಾರ್ಮಿಕರು ಆರ್ಥಿಕತೆಗೆ ನೀಡಿದ ಕೊಡುಗೆಯನ್ನು ಗುರುತಿಸುವ ಮತ್ತು ಅವರ ಪ್ರಯತ್ನಗಳಲ್ಲಿ ಅವರನ್ನು ಬೆಂಬಲಿಸುವ ಉದ್ದೇಶಗಳ ಸ್ಪಷ್ಟ ಅಭಿವ್ಯಕ್ತಿಯಾಗಿದೆ.

ಕರಡು ನೀತಿಯ ಮುಖ್ಯಾಂಶಗಳು- ಪ್ರಮುಖ ಶಿಫಾರಸುಗಳು:

 • ವಲಸೆಯನ್ನು ಸುಗಮಗೊಳಿಸುವುದು: ‘ವಲಸೆ’ ಯನ್ನು ಅಭಿವೃದ್ಧಿಯ ಅವಿಭಾಜ್ಯ ಅಂಗವಾಗಿ ಸ್ವೀಕರಿಸಬೇಕು ಮತ್ತು ಸರ್ಕಾರದ ನೀತಿಗಳಿಂದ ಅಡ್ಡಿಯಾಗುವ ಬದಲು ಆಂತರಿಕ ವಲಸೆಗೆ ಅನುಕೂಲವಾಗುವಂತಿರಬೇಕು.
 • ವೇತನ ಹೆಚ್ಚಳ: ವಲಸೆ ಕಾರ್ಮಿಕರ ಮೂಲ ರಾಜ್ಯಗಳು ಬುಡಕಟ್ಟು ಜನಾಂಗದವರ ಸ್ಥಳೀಯ ಜೀವನೋಪಾಯದಲ್ಲಿ ಗಮನಾರ್ಹ ಬದಲಾವಣೆಗಳನ್ನು ತರಲು ಕನಿಷ್ಠ ವೇತನವನ್ನು ಹೆಚ್ಚಿಸುವಂತೆ ಈ ಕರಡು ಆಗ್ರಹಿಸುತ್ತದೆ, ಆ ಮೂಲಕ ವಲಸೆಯನ್ನು ಸ್ವಲ್ಪ ಮಟ್ಟಿಗೆ ನಿರ್ಬಂಧಿಸಬಹುದಾಗಿದೆ.
 • ಕೇಂದ್ರ ದತ್ತಸಂಚಯ: ಉದ್ಯೋಗದಾತರಿಗೆ “ಬೇಡಿಕೆ ಮತ್ತು ಪೂರೈಕೆಯ ನಡುವಿನ ಅಂತರವನ್ನು ಕಡಿಮೆ ಮಾಡಲು” ಮತ್ತು “ಸಾಮಾಜಿಕ ಕಲ್ಯಾಣ ಯೋಜನೆಗಳ ಗರಿಷ್ಠ ಲಾಭ” ವನ್ನು ಖಚಿತಪಡಿಸಿಕೊಳ್ಳಲು ಕೇಂದ್ರ ದತ್ತಸಂಚಯವನ್ನು ರಚಿಸಬೇಕು.
 • ಕುಂದುಕೊರತೆ ನಿವಾರಣಾ ಕೋಶ: ‘ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ- NALSA’ ಮತ್ತು ‘ಕಾರ್ಮಿಕ ಸಚಿವಾಲಯವು’ ‘ಕುಂದುಕೊರತೆ ನಿವಾರಣಾ ಕೋಶಗಳನ್ನು’ ಸ್ಥಾಪಿಸಬೇಕು ಮತ್ತು ವಲಸೆ ಕಾರ್ಮಿಕರಿಗೆ ಸಂಬಂಧಿಸಿದಂತೆ, ಕಳ್ಳಸಾಗಣೆ, ಕನಿಷ್ಠ ವೇತನ ಉಲ್ಲಂಘನೆ ಮತ್ತು ಕೆಲಸದ ಸ್ಥಳದಲ್ಲಿ ದುಷ್ಕೃತ್ಯ ಮತ್ತು ಅಪಘಾತಗಳಿಗೆ ‘ತ್ವರಿತ ಕಾನೂನು ಪ್ರತಿಕ್ರಿಯೆಗಳನ್ನು’ ಒದಗಿಸಬೇಕು.
 • ಹೊಸ ರಾಷ್ಟ್ರೀಯ ವಲಸೆ ನೀತಿ ಮತ್ತು ಇತರ ಸಚಿವಾಲಯಗಳೊಂದಿಗೆ ಸಮನ್ವಯದಿಂದ ಕೆಲಸ ಮಾಡಲು ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಅಡಿಯಲ್ಲಿ ವಿಶೇಷ ಘಟಕವನ್ನು ರಚಿಸುವ ಪ್ರಸ್ತಾಪವನ್ನು ಈ ಕರಡು ಹೊಂದಿದೆ.

ಉದ್ದೇಶಿತ ನೀತಿಯ ತೊಂದರೆಗಳು ಯಾವವು?

 • ನೇಮಕಾತಿ ಮತ್ತು ನಿಯೋಜನೆಯ ರಾಜಕೀಯ ಆರ್ಥಿಕತೆಗೆ ಸಂಬಂಧಿಸಿದ ಕಾರ್ಮಿಕ ಕಾನೂನುಗಳ ಕಳಪೆ ಅನುಷ್ಠಾನಕ್ಕೆ ಸಂಬಂಧಿಸಿದ ಕಾರಣಗಳನ್ನು ಈ ನೀತಿಯು ಆಳವಾಗಿ ಪರಿಶೀಲಿಸುವುದಿಲ್ಲ.
 • ಈ ಡಾಕ್ಯುಮೆಂಟ್, ಅನ್ಯಾಯದ ನೇಮಕ ಪದ್ಧತಿಗಳನ್ನು ಉಲ್ಲೇಖಿಸುತ್ತದೆ, ಆದರೆ ವ್ಯವಸ್ಥೆಯು ಏಕೆ ಮುಂದುವರಿಯುತ್ತದೆ ಮತ್ತು ವ್ಯವಹಾರಗಳು ಮತ್ತು ಉದ್ಯಮಗಳ ಉದ್ಯೋಗ ರಚನೆಗಳಿಂದ ಅದನ್ನು ಹೇಗೆ ಸಕ್ರಿಯಗೊಳಿಸಲಾಗುತ್ತದೆ ಎಂಬುದರ ಬಗ್ಗೆ ಯಾವುದೇ ವಿಶ್ಲೇಷಣೆ ಇಲ್ಲ.
 • ಇದು ಉದ್ಯೋಗದ ಸ್ಥಳದಲ್ಲಿ ಲಿಂಗ ಅಸಮಾನತೆಯ ಸಮಸ್ಯೆಯನ್ನು ಪರಿಹರಿಸುವುದಿಲ್ಲ.

ಹಿನ್ನೆಲೆ:

ವಲಸೆಯ ಬಗ್ಗೆ ಸರ್ಕಾರದ ಇತ್ತೀಚಿನ ದತ್ತಾಂಶವನ್ನು 2011 ರ ಜನಗಣತಿಯಿಂದ ತೆಗೆದುಕೊಳ್ಳಲಾಗಿದೆ. ಜನಗಣತಿಯ ಪ್ರಕಾರ, 2011 ರಲ್ಲಿ ಭಾರತವು 45.6 ಕೋಟಿ (ಒಟ್ಟು ಜನಸಂಖ್ಯೆಯ 38 ಪ್ರತಿಶತ) ವಲಸಿಗರನ್ನು ಹೊಂದಿತ್ತು. ಆದರೆ 2001 ರಲ್ಲಿ ವಲಸೆ ಬಂದವರ ಸಂಖ್ಯೆ 31.5 ಕೋಟಿ (ಜನಸಂಖ್ಯೆಯ 31%).

  

ವಿಷಯಗಳು: ಪ್ರಮುಖ ಅಂತರರಾಷ್ಟ್ರೀಯ ಸಂಸ್ಥೆಗಳು, ಏಜೆನ್ಸಿಗಳು ಮತ್ತು ವೇದಿಕೆಗಳು, ಅವುಗಳ ರಚನೆ, ಮತ್ತು ಆದೇಶ.

ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಘಟನೆ(NATO):


(North Atlantic Treaty Organization)

ಸಂದರ್ಭ:

ರಷ್ಯಾ ಪರ ಒಲವಿರುವ ಪ್ರತ್ಯೇಕತಾವಾದಿಗಳೊಂದಿಗಿನ ಹೋರಾಟವನ್ನು ಕೊನೆಗೊಳಿಸಲು ನ್ಯಾಟೋ ಮೈತ್ರಿಕೂಟದಲ್ಲಿ  ತನ್ನ ದೇಶಕ್ಕೆ ಆದಷ್ಟು ಬೇಗ ಸದಸ್ಯತ್ವವನ್ನು ನೀಡುವುದೊಂದೇ ಉಳಿದಿರುವ ಏಕೈಕ ಮಾರ್ಗ ಎಂದು ಉಕ್ರೇನಿಯನ್ ಅಧ್ಯಕ್ಷ ವೊಲೊಡಿಮೈರ್ ಜೆಲೆನ್ಸ್ಕಿ (Volodymyr Zelensky) ಹೇಳಿದ್ದಾರೆ. ಆ ಮೂಲಕ NATO ಸಂಘಟನೆಯು ತನ್ನ ದೇಶಕ್ಕೆ ತ್ವರಿತವಾಗಿ ಸದಸ್ಯತ್ವವನ್ನು ನೀಡಬೇಕೆಂದು ಆಗ್ರಹಿಸಿದ್ದಾರೆ.

ಹಿನ್ನೆಲೆ:

ಪೂರ್ವ ಉಕ್ರೇನ್‌ನಲ್ಲಿ ಪ್ರಮುಖವಾಗಿ ಸಂಘರ್ಷವು ಉಲ್ಬಣಗೊಳ್ಳುವ ಭೀತಿ ಹೆಚ್ಚುತ್ತಿದೆ, ಅಲ್ಲಿ ಉಕ್ರೇನ್ ನ ಸರ್ಕಾರಿ ಪಡೆಗಳು ಮುಖ್ಯವಾಗಿ ರಷ್ಯನ್ ಭಾಷೆ ಮಾತನಾಡುವ ಡಾನ್‌ಬಾಸ್ ಪ್ರದೇಶದಲ್ಲಿನ ಪ್ರತ್ಯೇಕತಾವಾದಿಗಳ ವಿರುದ್ಧ 2014 ರಿಂದ ಹೋರಾಡುತ್ತಿವೆ. ಕ್ರಿಮಿಯನ್ ಪರ್ಯಾಯ ದ್ವೀಪವನ್ನು ಮಾಸ್ಕೋ 2014 ರಲ್ಲಿ ಸ್ವಾಧೀನಪಡಿಸಿಕೊಂಡಿತು.

ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಘಟನೆ-NATO ಕುರಿತು:

 • ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಘಟನೆ- NATO ಒಂದು ಅಂತರ್ ಸರ್ಕಾರಿ ಮಿಲಿಟರಿ ಮೈತ್ರಿಕೂಟವಾಗಿದೆ.
 •  ಇದನ್ನು ವಾಷಿಂಗ್ಟನ್ ಒಪ್ಪಂದದ ಮೂಲಕ ಏಪ್ರಿಲ್ 4, 1949 ರಂದು ಸ್ಥಾಪಿಸಲಾಯಿತು.
 • ಪ್ರಧಾನ ಕಚೇರಿ – ಬ್ರಸೆಲ್ಸ್, ಬೆಲ್ಜಿಯಂ.
 • ಮೈತ್ರಿಕೂಟದ ಕಮಾಂಡ್ ಕಾರ್ಯಾಚರಣೆಗಳ ಪ್ರಧಾನ ಕಚೇರಿ – ಮೊನ್ಸ್, ಬೆಲ್ಜಿಯಂ.

 NATO ಮಹತ್ವ:

ನ್ಯಾಟೋ ಒಂದು ಸಾಮೂಹಿಕ ರಕ್ಷಣಾ ವ್ಯವಸ್ಥೆಯನ್ನು ರೂಪಿಸುತ್ತದೆ, ಅದರ ಅಡಿಯಲ್ಲಿ ಅದರ ಸ್ವತಂತ್ರ ಸದಸ್ಯ ರಾಷ್ಟ್ರಗಳು ಯಾವುದೇ ಬಾಹ್ಯ ಆಕ್ರಮಣದ ಸಂದರ್ಭದಲ್ಲಿ ಸಾಮೂಹಿಕ ರಕ್ಷಣೆಯನ್ನು ಒದಗಿಸಲು ಸಿದ್ಧವಾಗಿವೆ.

ಸಂರಚನೆ:

ಉತ್ತರ ಅಟ್ಲಾಂಟಿಕ್ ಒಪ್ಪಂದ ಸಂಘಟನೆ (NATO) ಯು 12 ಮೂಲ ಸ್ಥಾಪಕ ಸದಸ್ಯ ದೇಶಗಳಿಂದ ಸ್ಥಾಪಿತವಾಯಿತು, ಪ್ರಸ್ತುತ ಅದರ ಸದಸ್ಯತ್ವ 30 ಕ್ಕೆ ಹೆಚ್ಚಳಗೊಂಡಿದೆ. ಈ ಗುಂಪಿಗೆ ಸೇರ್ಪಡೆಗೊಂಡ ಇತ್ತೀಚಿನ ದೇಶ ಉತ್ತರ ಮ್ಯಾಸಿಡೋನಿಯಾ, ಇದನ್ನು ಮಾರ್ಚ್ 27, 2020 ರಂದು ನ್ಯಾಟೋದಲ್ಲಿ ಅಧಿಕೃತವಾಗಿ ಸೇರ್ಪಡೆಗೊಳಿಸಲಾಯಿತು.

ನ್ಯಾಟೋ ಸದಸ್ಯತ್ವವು ‘ಈ ಒಪ್ಪಂದದ ತತ್ವಗಳನ್ನು ಮತ್ತಷ್ಟು ಹೆಚ್ಚಿಸುವ, ಗೌರವಿಸುವ ಮತ್ತು ಉತ್ತರ ಅಟ್ಲಾಂಟಿಕ್ ಪ್ರದೇಶದ ಸುರಕ್ಷತೆಗೆ ಕೊಡುಗೆ ನೀಡುವ ಯಾವುದೇ ಯುರೋಪಿಯನ್ ದೇಶಕ್ಕೆ’ ಮುಕ್ತವಾಗಿದೆ.

ಉದ್ದೇಶಗಳು:

ರಾಜಕೀಯ – ನ್ಯಾಟೋ ಪ್ರಜಾಪ್ರಭುತ್ವ ಮೌಲ್ಯಗಳನ್ನು ಉತ್ತೇಜಿಸುತ್ತದೆ ಮತ್ತು ಸಮಸ್ಯೆಗಳನ್ನು ಪರಿಹರಿಸಲು, ಪರಸ್ಪರ ನಂಬಿಕೆಯನ್ನು ಬೆಳೆಸಲು ಮತ್ತು ದೀರ್ಘಾವಧಿಯಲ್ಲಿ ಸಂಘರ್ಷವನ್ನು ತಡೆಗಟ್ಟಲು ರಕ್ಷಣಾ ಮತ್ತು ಸುರಕ್ಷತೆಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಮಾಲೋಚಿಸಲು ಮತ್ತು ಸಹಕರಿಸಲು ಸದಸ್ಯ ರಾಷ್ಟ್ರಗಳಿಗೆ ಅನುವು ಮಾಡಿಕೊಡುತ್ತದೆ.

ಮಿಲಿಟರಿ – ವಿವಾದಗಳನ್ನು ಶಾಂತಿಯುತವಾಗಿ ಪರಿಹರಿಸಲು ನ್ಯಾಟೋ ಬದ್ಧವಾಗಿದೆ. ರಾಜತಾಂತ್ರಿಕ ಪ್ರಯತ್ನಗಳು ವಿಫಲವಾದರೆ, ಬಿಕ್ಕಟ್ಟು-ನಿರ್ವಹಣಾ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಅದು ಮಿಲಿಟರಿ ಶಕ್ತಿಯನ್ನು ಹೊಂದಿದೆ. ಈ ಪ್ರಕ್ರಿಯೆಗಳನ್ನು ನ್ಯಾಟೋದ ಸಂಸ್ಥಾಪಕ ಒಪ್ಪಂದದ (ವಾಷಿಂಗ್ಟನ್ ಒಪ್ಪಂದ) ಸಾಮೂಹಿಕ ರಕ್ಷಣಾ ಷರತ್ತು (ವಿಧಿ 5) ಅಥವಾ ವಿಶ್ವಸಂಸ್ಥೆಯ ಆದೇಶದ ಅಡಿಯಲ್ಲಿ ಏಕಾಂಗಿಯಾಗಿ ಅಥವಾ ಇತರ ದೇಶಗಳು ಮತ್ತು ಅಂತರಾಷ್ಟ್ರೀಯ ಸಂಘಟನೆಗಳ ಸಹಕಾರದೊಂದಿಗೆ ಜಾರಿಗೆ ತರಲಾಗುವುದು.

 


ಸಾಮಾನ್ಯ ಅಧ್ಯಯನ ಪತ್ರಿಕೆ : 3


 

ವಿಷಯಗಳು: ವಿಜ್ಞಾನ ಮತ್ತು ತಂತ್ರಜ್ಞಾನ- ಬೆಳವಣಿಗೆಗಳು ಮತ್ತು ಅವುಗಳ ಅನ್ವಯಗಳು ಮತ್ತು ದೈನಂದಿನ ಜೀವನದಲ್ಲಿ ಅವುಗಳ ಪರಿಣಾಮಗಳು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಭಾರತೀಯರ ಸಾಧನೆಗಳು;ತಂತ್ರಜ್ಞಾನದ ದೇಸೀಕರಣ ಮತ್ತು ಹೊಸ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸುವುದು.

ಸುಸ್ಥಿರ ಪ್ಲಾಸ್ಮಾ / ಕನ್ವೆಲೆಸೆಂಟ್ ಪ್ಲಾಸ್ಮಾ:


(Convalescent plasma)

ಸಂದರ್ಭ:

ಹರಿಯಾಣದ, ಗುರುಗ್ರಾಮದಲ್ಲಿ ಕಳೆದ ಒಂದು ವಾರದಿಂದ COVID-19 ಪ್ರಕರಣಗಳಲ್ಲಿನ ಹಠಾತ್ ಏರಿಕೆಯಿಂದಾಗಿ ಸುಸ್ಥಿರ/ಆರೋಗ್ಯ ಪ್ರಯೋಜನಕಾರಿ ಪ್ಲಾಸ್ಮಾದ (Convalescent plasma) ಬೇಡಿಕೆಯು ನಿರಂತರವಾಗಿ ಹೆಚ್ಚುತ್ತಿದೆ.

 • ಆದರೆ, ವಿಶೇಷವಾಗಿ ಜನರು ಪ್ಲಾಸ್ಮಾವನ್ನು ದಾನ ಮಾಡಲು ಮುಂದೆ ಬರಲು ಇಷ್ಟಪಡುತ್ತಿಲ್ಲವಾದ್ದರಿಂದ ಪೂರೈಕೆ ಮತ್ತು ಬೇಡಿಕೆಯ ನಡುವೆ ತುಂಬಾ ಅಂತರ ಉಂಟಾಗುತ್ತಿದೆ.

ಸವಾಲುಗಳು:

ಲಸಿಕೆ ಹಾಕಿಸಿಕೊಂಡವರು ಪ್ಲಾಸ್ಮಾ ದಾನ ಮಾಡಲು ಅರ್ಹರಲ್ಲದ ಕಾರಣ ಈಗ ದಾನಿಗಳನ್ನು ಹುಡುಕುವುದು  ಕಷ್ಟಕರವಾಗಿದೆ ಇದರಿಂದಾಗಿ ಪ್ಲಾಸ್ಮಾದ ಪೂರೈಕೆ ಮತ್ತು ಬೇಡಿಕೆಯ ನಡುವಿನ ಅಂತರ ಅಥವಾ ಅಸಮತೋಲನವು ಮತ್ತಷ್ಟು ಹೆಚ್ಚಿದೆ.

ಪ್ಲಾಸ್ಮ ಚಿಕಿತ್ಸೆ ಎಂದರೇನು?

ಪ್ಲಾಸ್ಮಾ ರಕ್ತದ ದ್ರವ ಭಾಗವಾಗಿದೆ. ಸೋಂಕಿನಿಂದ ಚೇತರಿಸಿಕೊಳ್ಳುತ್ತಿರುವ ರೋಗಿಗಳ ರಕ್ತದಿಂದ ಹೊರತೆಗೆಯಲಾದ ಕನ್ವೆಲೆಸೆಂಟ್ ಪ್ಲಾಸ್ಮಾ (Convalescent plasma), ಸೋಂಕಿನ ವಿರುದ್ಧ ಹೋರಾಡುವ ಪ್ರತಿಕಾಯಗಳ ಮೂಲವಾಗಿದೆ. ಸೋಂಕಿನಿಂದ ಬಾಧಿತರಾದ ಇತರ  ರೋಗಿಗಳನ್ನು ಗುಣಪಡಿಸಲು ಈ ಚಿಕಿತ್ಸೆಯಲ್ಲಿ ಕನ್ವಲ್ಸೆಂಟ್ ಪ್ಲಾಸ್ಮಾವನ್ನು ಬಳಸಲಾಗುತ್ತದೆ.

 • ಈ ಚಿಕಿತ್ಸೆಯು ಕೋವಿಡ್ -19 ಚಿಕಿತ್ಸೆಗಾಗಿ ಲಭ್ಯವಿರುವ ಆಯ್ಕೆಗಳಲ್ಲಿ ಒಂದಾಗಿದೆ. ಇದಕ್ಕೆ ಪ್ಲಾಸ್ಮಾ ದಾನಿಗಳು ಕೋವಿಡ್ -19 ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂಬ ದಾಖಲೆ ಹೊಂದಿರುವುದು ಅಗತ್ಯವಾಗಿರುತ್ತದೆ ಮತ್ತು ಸೋಂಕಿನ ಅಂತಿಮ ರೋಗಲಕ್ಷಣಗಳಿಂದ ಚೇತರಿಸಿಕೊಂಡ ನಂತರ 28 ದಿನಗಳವರೆಗೆ ಆರೋಗ್ಯವಾಗಿರಬೇಕು ಎಂಬುದು ಅತ್ಯಗತ್ಯವಾಗಿದೆ.

 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಜಾಗೃತಿ.

ಬಾಹ್ಯಾಕಾಶ ಅವಶೇಷಗಳು:


(Space debris)

ಸಂದರ್ಭ:

ಬಾಹ್ಯಾಕಾಶ ಭಗ್ನಾವಶೇಷಗಳಿಂದ ಉಂಟಾಗುವ ಘರ್ಷಣೆಯನ್ನು  ಊಹಿಸುವ ವಿಧಾನವನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ದೆಹಲಿಯ ಇಂದ್ರಪ್ರಸ್ಥ ಮಾಹಿತಿ ತಂತ್ರಜ್ಞಾನ ಸಂಸ್ಥೆ ಯು (Indraprastha Institute of Information Technology -IIIT) ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯು (DST) ಅನುಷ್ಠಾನ ಗೊಳಿಸಿರುವ ನ್ಯಾಷನಲ್ ಸೂಪರ್ ಕಂಪ್ಯೂಟಿಂಗ್ ಮಿಷನ್ (the National Super Computing Mission -NSM) ನಿಂದ ಸಂಶೋಧನಾ ಧನಸಹಾಯವನ್ನು ಪಡೆದಿದೆ.

ಬಾಹ್ಯಾಕಾಶ ಪರಿಸ್ಥಿತಿ ಜಾಗೃತಿಗಾಗಿ ರೆಸಿಡೆಂಟ್ ಸ್ಪೇಸ್ ಆಬ್ಜೆಕ್ಟ್‌ಗಳ ಆರ್ಬಿಟ್ ಕಂಪ್ಯೂಟೇಶನ್’ ಎಂಬ ಹೆಸರಿನ ಯೋಜನೆಯನ್ನು ಎರಡು ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು.

ಬಾಹ್ಯಾಕಾಶ ತ್ಯಾಜ್ಯ’ ಎಂದರೇನು?

ಬಾಹ್ಯಾಕಾಶ ಶಿಲಾಖಂಡರಾಶಿಗಳು ಬಾಹ್ಯಾಕಾಶದಲ್ಲಿ ಇರುವ ತಂತ್ರಜ್ಞಾನಗಳಿಗೆ ಜಾಗತಿಕ ಬೆದರಿಕೆಯನ್ನುಂಟುಮಾಡುತ್ತದೆ, ಬಾಹ್ಯಾಕಾಶ ಶಿಲಾಖಂಡರಾಶಿಗಳು, ಸಂವಹನ, ಸಾರಿಗೆ, ಹವಾಮಾನ ಮತ್ತು ಹವಾಮಾನ ಮೇಲ್ವಿಚಾರಣೆ, ದೂರಸ್ಥ ಸಂವೇದನೆ(remote sensing) ಮುಂತಾದ ನಿರ್ಣಾಯಕ ಕಾರ್ಯಗಳನ್ನು ನಿರ್ವಹಿಸಲು ಬೆಂಬಲಿಸುತ್ತದೆ.

 • ರಾಷ್ಟ್ರೀಯ ಭದ್ರತೆಯ ದೃಷ್ಟಿಕೋನದಿಂದ, ಮತ್ತು ಭಾರತೀಯ ಮೂಲದ ಸಾರ್ವಜನಿಕ ಮತ್ತು ಖಾಸಗಿ ಆಸ್ತಿಯ ರಕ್ಷಣೆಗಾಗಿ, ಈ ಬಾಹ್ಯಾಕಾಶ ವಸ್ತುಗಳೊಂದಿಗೆ ಘರ್ಷಣೆಯ ಸಂಭವನೀಯತೆಯನ್ನು ಅಂದಾಜು ಮಾಡುವುದು ಬಹಳ ಮುಖ್ಯ.

ಬಾಹ್ಯಾಕಾಶದಲ್ಲಿನ ಭಗ್ನಾವಶೇಷಗಳ ಪ್ರಮಾಣ:

ಪ್ರಸ್ತುತ ಸಂವೇದಕ ತಂತ್ರಜ್ಞಾನವು ಸಣ್ಣ-ಗಾತ್ರದ ವಸ್ತುಗಳನ್ನು ಕಂಡುಹಿಡಿಯುವ ಸಾಮರ್ಥ್ಯವನ್ನು ಹೊಂದಿರದ ಕಾರಣ, ಅದು ಒದಗಿಸಿದ ಮಾಹಿತಿಯ ಆಧಾರದ ಮೇಲೆ, ಬಾಹ್ಯಾಕಾಶ ಭಗ್ನಾವಶೇಷವು 500,000 ರಿಂದ ಒಂದು ಮಿಲಿಯನ್ ತುಣುಕುಗಳು / ಪರಿಮಾಣವನ್ನು ಒಳಗೊಂಡಿದೆ ಎಂದು ನಂಬಲಾಗಿದೆ.

ಈ ಎಲ್ಲಾ ಬಾಹ್ಯಾಕಾಶ ಅವಶೇಷಗಳು 17,500 mph (28,162 kmph) ವೇಗದಲ್ಲಿ ಸುತ್ತುತ್ತಿದ್ದು, ಉಪಗ್ರಹ ಅಥವಾ ಬಾಹ್ಯಾಕಾಶ ನೌಕೆಗೆ ಹಾನಿ ಉಂಟು ಮಾಡಲು ಕಕ್ಷೆಯ ಅವಶೇಷಗಳ ಒಂದು ಸಣ್ಣ ತುಂಡು ಸಹ ಸಾಕು.

ಈ ಯೋಜನೆ ಮಹತ್ವ:

ಈ ಯೋಜನೆಯ ಫಲಿತಾಂಶವು, ಕ್ರಿಯಾತ್ಮಕವಾಗಿ ಸ್ನೇಹಪರ, ಸ್ಕೇಲೆಬಲ್, ಪಾರದರ್ಶಕ ಮತ್ತು ಸ್ಥಳೀಯವಾಗಿ ನಿರ್ಮಿಸಲಾದ ಘರ್ಷಣೆ ಸಂಭವನೀಯ ಪರಿಹಾರವನ್ನು ವಿನ್ಯಾಸಗೊಳಿಸುವ ಮೂಲಕ, ಸುಮಾರು $ 7 ಬಿಲಿಯನ್ (51,334 ಕೋಟಿ ರೂ.) ಮೊತ್ತದ ಭಾರತೀಯ ಬಾಹ್ಯಾಕಾಶ ಕ್ಷೇತ್ರವನ್ನು ನೇರವಾಗಿ ಬೆಂಬಲಿಸುತ್ತದೆ

ನೇತ್ರ (NETRA)

ಕಳೆದ ಡಿಸೆಂಬರ್‌ನಲ್ಲಿ ಇಸ್ರೋ ತನ್ನ ಬಾಹ್ಯಾಕಾಶ ಸ್ವತ್ತುಗಳನ್ನು ಬಾಹ್ಯಾಕಾಶ ಅವಶೇಷಗಳಿಂದ ರಕ್ಷಿಸಲು ನೇತ್ರ’ (NETRA) ಎಂಬ ಹೆಸರಿನ ‘ಬಾಹ್ಯಾಕಾಶ ಪರಿಸ್ಥಿತಿ ಜಾಗೃತಿ’ (Space Situational Awareness -SSA) ನಿಯಂತ್ರಣ ಕೇಂದ್ರವನ್ನು ಬೆಂಗಳೂರಿನಲ್ಲಿ ಸ್ಥಾಪಿಸಿತು.

 • ರಾಷ್ಟ್ರೀಯ ಬಾಹ್ಯಾಕಾಶ ಸ್ವತ್ತುಗಳ ಮೇಲ್ವಿಚಾರಣೆ, ಟ್ರ್ಯಾಕಿಂಗ್ ಮತ್ತು ರಕ್ಷಣೆ ಒದಗಿಸುವುದು ಮತ್ತು ಎಲ್ಲಾ ಎಸ್‌ಎಸ್‌ಎ ಚಟುವಟಿಕೆಗಳ ಕೇಂದ್ರವಾಗಿ ಕಾರ್ಯನಿರ್ವಹಿಸುವುದು ‘ನೇತ್ರ’ದ ಮುಖ್ಯ ಉದ್ದೇಶವಾಗಿದೆ.
 • ಯು.ಎಸ್.ಎ, ರಷ್ಯಾ ಮತ್ತು ಯುರೋಪ್ ಗಳು ಮಾತ್ರ ಬಾಹ್ಯಾಕಾಶ ವಸ್ತುಗಳನ್ನು ಪತ್ತೆಹಚ್ಚುವುದು ಮತ್ತು ಘರ್ಷಣೆ ಎಚ್ಚರಿಕೆಗಳನ್ನು ಹಂಚಿಕೊಳ್ಳುವ ಏಕರೀತಿಯ ಸೌಲಭ್ಯಗಳನ್ನು ಹೊಂದಿವೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಸಂಚಾರಿ ಲ್ಯಾಬ್/ಪ್ರಯೋಗಾಲಯ:

(Lab on wheels)

ಸಂಚಾರಿ ಲ್ಯಾಬ್, ಇದು ದೆಹಲಿ ಟೆಕ್ನಾಲಜಿಕಲ್ ಯೂನಿವರ್ಸಿಟಿಯ (Delhi Technological University’s -DTU) ಶಿಕ್ಷಣವು ನಿಮ್ಮನ್ನು ತಲುಪುತ್ತದೆ (Education Reaches You) ಯೋಜನೆಯ ಒಂದು ಭಾಗವಾಗಿದೆ.

 • ಸಂಚಾರಿ ಲ್ಯಾಬ್/ಪ್ರಯೋಗಾಲಯ ವು ಒಂದು ಅಗತ್ಯಕ್ಕೆ ತಕ್ಕಂತೆ ಮಾರ್ಪಡಿಸಿದ ಬಸ್ ಆಗಿದ್ದು, ಇದು, 17 ಕಂಪ್ಯೂಟರ್‌ಗಳು, ಎರಡು ದೂರದರ್ಶನಗಳು (TVs), ಒಂದು 3 ಡಿ ಪ್ರಿಂಟರ್, ಕ್ಯಾಮೆರಾಗಳು ಮತ್ತು ಸಾಮಾನ್ಯ ಪ್ರಿಂಟರ್ ಅನ್ನು ಹೊಂದಿದ್ದು ನಗರದಾದ್ಯಂತ ಶೈಕ್ಷಣಿಕ ಉಪನ್ಯಾಸಗಳು, ಟ್ಯುಟೋರಿಯಲ್ಗಳನ್ನು ನೀಡಲು ಮತ್ತು ಗಣಿತ, ವಿಜ್ಞಾನ ಮತ್ತು ಸುಧಾರಿತ ತಂತ್ರಜ್ಞಾನದ ವಿಷಯಗಳಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಕಲಿಸಲು ವಿದ್ಯಾರ್ಥಿಗಳನ್ನು ತಲುಪುವ ಮೂಲಕ ಮಾರ್ಗದರ್ಶನ ನೀಡುವ ಕಾರ್ಯಕ್ರಮದ ಭಾಗವಾಗಿ ಪರ್ಯಟನೆ ಮಾಡುತ್ತದೆ.
 • ಈ ಲ್ಯಾಬ್ ದೆಹಲಿಯ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಮತ್ತು ಸವಲತ್ತು ವಂಚಿತ/ ಅವಕಾಶ ವಂಚಿತ ಮಕ್ಕಳಿಗೆ ವಿಜ್ಞಾನ ಶಿಕ್ಷಣವನ್ನು ನೀಡಲಿದೆ.

 ವೊಲ್ಫ್-ರಾಯೆಟ್ ನಕ್ಷತ್ರಗಳು:

(Wolf-Rayet stars)

 ಭಾರತೀಯ ಖಗೋಳಶಾಸ್ತ್ರಜ್ಞರು ವುಲ್ಫ್-ರಯೆಟ್ ನಕ್ಷತ್ರಗಳಲ್ಲಿ ಅಪರೂಪದ ಸೂಪರ್ನೋವಾ ಸ್ಫೋಟವನ್ನು ಪತ್ತೆ ಮಾಡಿದ್ದಾರೆ.

 • ಅಪರೂಪದ ವುಲ್ಫ್-ರೇಯೆಟ್ ನಕ್ಷತ್ರಗಳು ಸೂರ್ಯನಿಗಿಂತ ಸಾವಿರ ಪಟ್ಟು ಹೆಚ್ಚು ಪ್ರಕಾಶಮಾನವಾದ ವಸ್ತು ಗಳಾಗಿವೆ.
 • ಅವು ಅಯಾನೀಕೃತ ಹೀಲಿಯಂ ಮತ್ತು ಹೆಚ್ಚು ಅಯಾನೀಕೃತ ಸಾರಜನಕ ಅಥವಾ ಇಂಗಾಲದ ಪ್ರಮುಖ ವಿಶಾಲ ಹೊರಸೂಸುವ ರೇಖೆಗಳನ್ನು ತೋರಿಸುವ ಅಸಾಮಾನ್ಯ ವರ್ಣಪಟಲವನ್ನು ಹೊಂದಿರುವ ವೈವಿಧ್ಯಮಯ ನಕ್ಷತ್ರಗಳ ಗುಂಪಾಗಿವೆ.
 • ವುಲ್ಫ್-ರೇಯೆಟ್ ನಕ್ಷತ್ರಗಳ ಮೇಲ್ಮೈ ತಾಪಮಾನವು ಮನುಕುಲಕ್ಕೆ ತಿಳಿದಿರುವಂತೆ, 30,000 K ಯಿಂದ ಸುಮಾರು 210,000 K ವರೆಗೆ ಇರುತ್ತದೆ, ಇವು ಇತರ ಎಲ್ಲ ರೀತಿಯ ನಕ್ಷತ್ರಗಳಿಗಿಂತ ಬಿಸಿಯಾಗಿರುತ್ತವೆ.
 • ಈ ಹಿಂದೆ ಅವುಗಳನ್ನು ಡಬ್ಲ್ಯೂ-ಪ್ರಕಾರದ ನಕ್ಷತ್ರಗಳು (W-type stars) ಎಂದು ಕರೆಯಲಾಗುತ್ತಿತ್ತು.


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos