Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 29 & 30 ಮಾರ್ಚ್ 2021

 

ಪರಿವಿಡಿ :

 

ಸಾಮಾನ್ಯ ಅಧ್ಯಯನ ಪತ್ರಿಕೆ 2:

  • ಸಂತೋಷದ ಪಠ್ಯಕ್ರಮ.
  • ವಿಶಿಷ್ಟ ಭೂಪ್ರದೇಶ ಗುರುತು ಸಂಖ್ಯೆ (ULPIN) ಯೋಜನೆ.
  • NRC ಅಡಿಯಲ್ಲಿ ಹಕ್ಕು ನಿರಾಕರಣೆ ಸ್ಲೀಪ್ ಗಳನ್ನು ಶೀಘ್ರದಲ್ಲಿ ನೀಡಲಾಗುವುದು.

 

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

  • ಎಂಟು ಚಂಡಮಾರುತಗಳಿಂದಾಗಿ ₹ 31,945 ಕೋಟಿ ಮೌಲ್ಯದ ನಷ್ಟವನ್ನು ಅನುಭವಿಸಿದ ಒಡಿಶಾ.
  • ಹಲ್ಲೆ ಪ್ರಕರಣದ ಆರೋಪಿಗೆ ವ್ಯಸನ ಮುಕ್ತಿ ಕೇಂದ್ರದಲ್ಲಿ ಸಮುದಾಯ ಸೇವೆ ಮಾಡುವಂತೆ ಆದೇಶಿಸಿದ ಹೈಕೋರ್ಟ್.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

  • ಪ್ಯಾಟ್ರಿಸಿಯಾ ಮೌಂಟ್ ಬ್ಯಾಟನ್.
  • ಗಿಗಾ ಮೆಶ್.

 

 


ಸಾಮಾನ್ಯ ಅಧ್ಯಯನ ಪತ್ರಿಕೆ 2:


 

ವಿಷಯಗಳು: ಆರೋಗ್ಯ, ಶಿಕ್ಷಣ ಮತ್ತು ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ಸಾಮಾಜಿಕ ವಲಯ/ ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳು.

 

ಸಂತೋಷದ ಪಠ್ಯಕ್ರಮ:

(Happiness Curriculum)

 

 

ಸಂದರ್ಭ:

ಈ ಶೈಕ್ಷಣಿಕ ವರ್ಷದಿಂದ ಉತ್ತರ ಪ್ರದೇಶ ಸರ್ಕಾರವು ಪ್ರಾಯೋಗಿಕ ಯೋಜನೆಯಾಗಿ ‘ಸಂತೋಷ ಪಠ್ಯಕ್ರಮ’ ವನ್ನು ಪರಿಚಯಿಸುವ ಸಾಧ್ಯತೆಯಿದೆ.

ಸಾಕ್ಷಾತ್ಕಾರ ಪಠ್ಯಕ್ರಮ’ / ಅರಿವಿನ ಪಠ್ಯಕ್ರಮ (Realisation Curriculum) ಎಂದು ಕರೆಯಲ್ಪಡುವ, ಇದನ್ನು ಈ ಶೈಕ್ಷಣಿಕ ವರ್ಷದಿಂದ  ಮಥುರಾದ ಶಾಲೆಗಳಲ್ಲಿ ಪ್ರಾರಂಭಿಸಲಾಗುವುದು.

 

ಉದ್ದೇಶಗಳು:

ಉತ್ತರಪ್ರದೇಶದ  ಶಾಲಾ ಪಠ್ಯಕ್ರಮದಲ್ಲಿ ಇದನ್ನು ಆರಂಭಿಸುವುದರ ಹಿಂದಿನ ಉದ್ದೇಶವು ವಿದ್ಯಾರ್ಥಿಗಳು ಅರ್ಥಪೂರ್ಣ ಮತ್ತು ಪ್ರತಿಫಲಿತ ಕಥೆಗಳನ್ನು ಕೇಳುವ ಮೂಲಕ ಮತ್ತು ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸುಸ್ಥಿರ ಸಂತೋಷದ ಪ್ರಯಾಣದಲ್ಲಿ ಮುಂದುವರೆಯುವಂತಾಗಲು ವಿದ್ಯಾರ್ಥಿಗಳನ್ನು ಬೆಂಬಲಿಸುವುದಾಗಿದೆ.

 

ಸಂತೋಷದ ಪಠ್ಯಕ್ರಮ ಎಂದರೇನು?

ಸಂತೋಷದ ಪಠ್ಯಕ್ರಮವನ್ನು ಮೊದಲ ಬಾರಿಗೆ ದೆಹಲಿ ಸರ್ಕಾರವು 2018 ರಲ್ಲಿ ಪರಿಚಯಿಸಿತು.

  • ಈ ಪಠ್ಯಕ್ರಮವು ಶಾಲೆಗಳಿಗೆ ಅರಿವು, ಭಾಷೆ, ಸಾಕ್ಷರತೆ, ಸಂಖ್ಯಾಶಾಸ್ತ್ರ ಮತ್ತು ಕಲೆಗಳ ಅಭಿವೃದ್ಧಿಯ ಜೊತೆಗೆ ವಿದ್ಯಾರ್ಥಿಗಳ ಕಲ್ಯಾಣ ಮತ್ತು ಸಂತೋಷವನ್ನು ಉತ್ತೇಜಿಸುವಂತೆ ತಿಳಿಸುತ್ತದೆ.

 

ಪಠ್ಯಕ್ರಮವನ್ನು ಹೇಗೆ ಅನುಷ್ಠಾನ  ಗೊಳಿಸಲಾಗುತ್ತದೆ?

ನರ್ಸರಿಯಿಂದ ಎಂಟನೇ ತರಗತಿಯ ವರೆಗಿನ ವಿದ್ಯಾರ್ಥಿಗಳಿಗೆ ಈ ಪಠ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ.

ಗುಂಪು 1: ನರ್ಸರಿ ಮತ್ತು ಕೆ ಜಿ ವಿದ್ಯಾರ್ಥಿಗಳನ್ನು ಒಳಗೊಂಡಿರುತ್ತದೆ, ಅವರಿಗೆ ಎರಡು ವಾರಗಳಿಗೆ ಒಮ್ಮೆ  ತರಗತಿಗಳನ್ನು ನಡೆಸಲಾಗುತ್ತದೆ (ಒಂದು ತರಗತಿಯ ಅವಧಿಯು ತಲಾ 45 ನಿಮಿಷಗಳು ಇದ್ದು, ಇದನ್ನು ಶಿಕ್ಷಕರು ಮೇಲ್ವಿಚಾರಣೆ ಮಾಡುತ್ತಾರೆ) ಸಾವಧಾನತೆ ಅಥವಾ ಮೆದುಳಿನ ಕಾರ್ಯಕ್ಷಮತೆ ಚುರುಕುಗೊಳಿಸುವ ಚಟುವಟಿಕೆಗಳು ಮತ್ತು ಅಭ್ಯಾಸವನ್ನು ಒಳಗೊಂಡಿರುತ್ತದೆ.

1-2 ನೇ ತರಗತಿಯ  ಮಕ್ಕಳು ವಾರದ ದಿನಗಳಲ್ಲಿ ತರಗತಿಗಳಿಗೆ ಹಾಜರಾಗುತ್ತಾರೆ, ಇದರಲ್ಲಿ ಪ್ರತಿಫಲಿತ ಪ್ರಶ್ನೆಗಳನ್ನು ಚರ್ಚಿಸುವುದರ  ಜೊತೆಗೆ ಮೆದುಳಿನ ಕಾರ್ಯಕ್ಷಮತೆ ಚುರುಕುಗೊಳಿಸುವ  ಚಟುವಟಿಕೆಗಳು ಮತ್ತು ಅಭ್ಯಾಸಗಳನ್ನು ಒಳಗೊಂಡಿರುತ್ತದೆ.

ಎರಡನೆಯ ಗುಂಪು 3 ರಿಂದ 5ನೇ ತರಗತಿಗಳ ವಿದ್ಯಾರ್ಥಿಗಳನ್ನು ಒಳಗೊಂಡಿದ್ದರೆ ಮತ್ತು ಮೂರನೆಯ ಗುಂಪು 6ರಿಂದ 8ನೇ ತರಗತಿಗಳ ವಿದ್ಯಾರ್ಥಿಗಳನ್ನು ಒಳಗೊಂಡಿರುತ್ತದೆ, ಅವರು ಮೇಲೆ ತಿಳಿಸಿದ ಚಟುವಟಿಕೆಗಳಿಗೆ ಹೆಚ್ಚುವರಿಯಾಗಿ, ಸ್ವಯಂ ಅಭಿವ್ಯಕ್ತಿಯಲ್ಲಿ ಪಾಲ್ಗೊಳ್ಳುತ್ತಾರೆ ಮತ್ತು ಅವರ ನಡವಳಿಕೆಯ ಬದಲಾವಣೆಗಳನ್ನು ಪ್ರತಿಬಿಂಬಿಸುತ್ತಾರೆ.

ಈ ಪಠ್ಯಕ್ರಮದ ಕಲಿಕೆಯ ಫಲಿತಾಂಶಗಳನ್ನು ನಾಲ್ಕು ವಿಭಾಗಗಳಲ್ಲಿ ವಿಂಗಡಿಸಲಾಗಿದೆ:

  • ಬುದ್ದಿವಂತಿಕೆ / ಸಮಂಜಸವಾಗಿ ತರ್ಕಬದ್ಧವಾದ ಮತ್ತು ಗಮನ ಸೆಳೆಯುವುದು (ಸ್ವಯಂ-ತಿಳುವಳಿಕೆ ಮಟ್ಟವನ್ನು ಹೆಚ್ಚಿಸುವುದು, ಸಕ್ರಿಯ ಆಲಿಸುವಿಕೆಯನ್ನು ಅಭಿವೃದ್ಧಿಪಡಿಸುವುದು, ವಾಸ್ತವದಲ್ಲಿ ಉಳಿಯುವುದು).
  • ವಿಮರ್ಶಾತ್ಮಕವಾಗಿ ಚಿಂತನೆ ಮಾಡುವುದು ಮತ್ತು ಜ್ಞಾನಶಾಸ್ತ್ರವನ್ನು ಅಭಿವೃದ್ಧಿಪಡಿಸುವುದು (ಒಬ್ಬರ ಸ್ವಂತ ಆಲೋಚನೆಗಳು ಮತ್ತು ನಡವಳಿಕೆಗಳನ್ನು ಪ್ರತಿಬಿಂಬಿಸಲು ಬಲವಾದ ಸಾಮರ್ಥ್ಯಗಳನ್ನು ಅಭಿವೃದ್ಧಿಪಡಿಸುವುದು, ರೂಢಿಗತ ಮತ್ತು ಊಹೆಗಳನ್ನು ಮೀರಿ ಆಲೋಚಿಸುವುದು).
  • ಸಮಾಜೋ-ಭಾವನಾತ್ಮಕ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು (ಪರಾನುಭೂತಿಯನ್ನು ತೋರಿಸುವುದು, ಆತಂಕ ಮತ್ತು ಒತ್ತಡವನ್ನು ನಿಭಾಯಿಸುವುದು.
  • ಉತ್ತಮ ಸಂವಹನ ಕೌಶಲ್ಯಗಳನ್ನು ಅಭಿವೃದ್ಧಿಪಡಿಸುವುದು ಮತ್ತು ಆತ್ಮವಿಶ್ವಾಸಪೂರ್ಣ ಮತ್ತು ಆಹ್ಲಾದಕರ/ಸಂತೃಪ್ತ / ಹರ್ಷ ಚಿತ್ತದ ವ್ಯಕ್ತಿತ್ವವನ್ನು ಬೆಳೆಸುವುದು (ದೈನಂದಿನ ಜೀವನದಲ್ಲಿ ಆತ್ಮ ವಿಶ್ವಾಸವನ್ನು ಪ್ರತಿಬಿಂಬಿಸುವ ಸಮತೋಲಿತ ದೃಷ್ಟಿಕೋನವನ್ನು ಅಭಿವೃದ್ಧಿಪಡಿಸುವುದು, ಜವಾಬ್ದಾರಿಯುತವಾಗಿರುವುದು ಮತ್ತು ಸ್ವಚ್ಛತೆ, ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿಯನ್ನು ಪ್ರತಿಬಿಂಬಿಸುವುದು).

 

ಮೌಲ್ಯಮಾಪನ ಪ್ರಕ್ರಿಯೆಯನ್ನು ಹೇಗೆ ನಡೆಸಲಾಗುತ್ತದೆ?

ಮೌಲ್ಯಮಾಪನಕ್ಕಾಗಿ, ಯಾವುದೇ ಪರೀಕ್ಷೆಗಳನ್ನು ನಡೆಸಲಾಗುವುದಿಲ್ಲ, ಹಾಗೂ ಅಂಕಗಳನ್ನು ನೀಡಲಾಗುವುದಿಲ್ಲ. ಈ ಪಠ್ಯಕ್ರಮದ ಅಡಿಯಲ್ಲಿನ ಮೌಲ್ಯಮಾಪನವು ಗುಣಾತ್ಮಕವಾಗಿದ್ದು, “ಫಲಿತಾಂಶಕ್ಕಿಂತ ಪ್ರಕ್ರಿಯೆ” ಯ ಮೇಲೆ ಕೇಂದ್ರೀಕೃತವಾಗಿರುತ್ತದೆ ಮತ್ತು ಪ್ರತಿ ವಿದ್ಯಾರ್ಥಿಯ ಶೈಕ್ಷಣಿಕ ಜೀವನದ ಪ್ರಯಾಣವು ಅನನ್ಯ ಮತ್ತು ವಿಭಿನ್ನವಾಗಿದೆ ಎಂಬುದನ್ನು ಗಮನದಲ್ಲಿಟ್ಟು ಮುಂದುವರೆಯಲಾಗುವುದು.

 

 

 

 

ವಿಷಯಗಳು: ಸರಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ವಿಶಿಷ್ಟ ಭೂಪ್ರದೇಶ ಗುರುತು ಸಂಖ್ಯೆ (ULPIN) ಯೋಜನೆ:

(Unique Land Parcel Identification Number (ULPIN) scheme)

 

 

ಸಂದರ್ಭ:

ಈ ವರ್ಷ, ವಿಶಿಷ್ಟ ಭೂಪ್ರದೇಶ ಗುರುತು ಸಂಖ್ಯೆ (ULPIN) ಯೋಜನೆಯನ್ನು 10 ರಾಜ್ಯಗಳಲ್ಲಿ ಪ್ರಾರಂಭಿಸಲಾಗಿದ್ದು, ಇದನ್ನು 2022 ರ ಮಾರ್ಚ್ ವೇಳೆಗೆ ದೇಶಾದ್ಯಂತ ಜಾರಿಗೊಳಿಸಲಾಗುವುದು.

  • 2008 ರಲ್ಲಿ ಪ್ರಾರಂಭವಾಗಿ ಹಲವಾರು ಬಾರಿ ವಿಸ್ತರಿಸಲಾದ ಡಿಜಿಟಲ್ ಇಂಡಿಯಾ ಭೂ ದಾಖಲೆಗಳ ಆಧುನೀಕರಣ ಕಾರ್ಯಕ್ರಮದ (the Digital India Land Records Modernisation Programme (DILRMP) ಭಾಗವಾಗಿ ಸಂಸದೀಯ ಸ್ಥಾಯಿ ಸಮಿತಿಯು ಲೋಕಸಭೆಗೆ ಸಲ್ಲಿಸಿದ ವರದಿಯ ಅನ್ವಯ ಈ ಯೋಜನೆಯನ್ನು ರೂಪಿಸಲಾಗಿದೆ.

 

 

 

ಈ ಯೋಜನೆಯ ಕುರಿತು:

  • ಈ ಯೋಜನೆಯಡಿ, ದೇಶದ ಪ್ರತಿಯೊಂದು ಜಮೀನಿನ ತುಣುಕುಗಳಿಗೆ ಅಥವಾ ಭೂ ಭಾಗಗಳಿಗೆ 14-ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆಯನ್ನು ನೀಡಲಾಗುತ್ತದೆ.
  • ಇದನ್ನು ಭೂಮಿಗೆ ನೀಡಲಾದ ಆಧಾರ್” (the Aadhaar for land) ಎಂದು ಪರಿಗಣಿಸಲಾಗುತ್ತಿದೆ – ಇದು ಸಮೀಕ್ಷೆಗೆ ಒಳಪಟ್ಟ ಭೂಮಿಯ ಪ್ರತಿಯೊಂದು ಭಾಗವನ್ನು ಅನನ್ಯವಾಗಿ ಗುರುತಿಸುತ್ತದೆ ಮತ್ತು ಭೂ ವಂಚನೆಯನ್ನು ತಡೆಯುತ್ತದೆ, ವಿಶೇಷವಾಗಿ ವಿವಾದಾಸ್ಪದ ಮತ್ತು ಹಳೆಯ ಭೂದಾಖಲೆಗಳನ್ನು ಹೊಂದಿರುವ ಗ್ರಾಮೀಣ ಭಾರತದಲ್ಲಿ, ಭೂ ದಾಖಲೆಗಳ ವಂಚನೆಯನ್ನು ಆಮೂಲಾಗ್ರವಾಗಿ ತಡೆಗಟ್ಟುತ್ತದೆ.
  • ಈ ಗುರುತಿಸುವಿಕೆಯು ಭೂ ಭಾಗದ ಅಥವಾ ಜಮೀನಿನ ತುಣುಕಿನ ರೇಖಾಂಶ ಮತ್ತು ಅಕ್ಷಾಂಶವನ್ನು ಆಧರಿಸಿರುತ್ತದೆ ಮತ್ತು ಇದು ವಿವರವಾದ ಸಮೀಕ್ಷೆಗಳು ಮತ್ತು ಭೌಗೋಳಿಕ-ಉಲ್ಲೇಖಿತ ಕ್ಯಾಡಾಸ್ಟ್ರಲ್ ನಕ್ಷೆಗಳ (cadastral maps) (ವಿಶೇಷವಾಗಿ ತೆರಿಗೆ ವಿಧಿಸಲು ಭೂಮಿಯ ವ್ಯಾಪ್ತಿ, ಮೌಲ್ಯ ಮತ್ತು ಮಾಲೀಕತ್ವವನ್ನು ತೋರಿಸುವ) ಮೇಲೆ ಅವಲಂಬಿತವಾಗಿರುತ್ತದೆ.

 

ಪ್ರಯೋಜನಗಳು:

ವಿಶಿಷ್ಟ ಭೂಪ್ರದೇಶ ಗುರುತು ಸಂಖ್ಯೆ ULPIN ನ ಪ್ರಯೋಜನಗಳು ಬಹುಸಂಖ್ಯೆಯವು. ಮಾಹಿತಿಯ ಏಕೈಕ ಮೂಲವು ಮಾಲೀಕತ್ವವನ್ನು ದೃಢಿಕರಿಸಬಲ್ಲದು ಮತ್ತು ಅದು ಸಂಶಯಾಸ್ಪದ ಮಾಲೀಕತ್ವವನ್ನು ಕೊನೆಗೊಳಿಸಬಹುದು. ಇದು ಸರ್ಕಾರಿ ಭೂಮಿಯನ್ನು ಸುಲಭವಾಗಿ ಗುರುತಿಸಲು ಸಹಾಯ ಮಾಡುತ್ತದೆ ಮತ್ತು ಭೂಮಿಯನ್ನು ಕಳಪೆ ಭೂ ವ್ಯವಹಾರದಿಂದ ರಕ್ಷಿಸುತ್ತದೆ.

 

 

ವಿಷಯಗಳು: ಸರಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

 

NRC ಅಡಿಯಲ್ಲಿ ಹಕ್ಕು ನಿರಾಕರಣೆ ಸ್ಲೀಪ್ ಗಳನ್ನು ಶೀಘ್ರದಲ್ಲಿ ನೀಡಲಾಗುವುದು:

(NRC rejection slips to be issued soon)

 

 

ಸಂದರ್ಭ:

ಇತ್ತೀಚೆಗೆ, ಕೇಂದ್ರ ಸರ್ಕಾರ ಅಸ್ಸಾಂ ಸರ್ಕಾರಕ್ಕೆ,  2019 ರಲ್ಲಿ ಪ್ರಕಟವಾದ ಅಂತಿಮ ರಾಷ್ಟ್ರೀಯ ನಾಗರಿಕ ನೋಂದಣಿಯಲ್ಲಿ (NRC) ಸೇರ್ಪಡೆಗೊಳ್ಳದೆ ಹೊರಗುಳಿದವರಿಗೆ ತಕ್ಷಣವೇ ನಿರಾಕರಣೆ ಸ್ಲಿಪ್‌ಗಳನ್ನು (rejection slips) ನೀಡುವಂತೆ ತಿಳಿಸಿದೆ.

 

ಹಿನ್ನೆಲೆ:

ಅಸ್ಸಾಂ ರಾಜ್ಯದ ಒಟ್ಟು 3.30 ಕೋಟಿ ಅರ್ಜಿದಾರರಲ್ಲಿ 19 ಲಕ್ಷ ಅರ್ಜಿದಾರರು ರಾಷ್ಟ್ರೀಯ ನಾಗರಿಕ ನೋಂದಣಿಯ (NRC) ಅಂತಿಮ ಪಟ್ಟಿಯಿಂದ ಹೊರಗುಳಿದಿದ್ದಾರೆ. ಈ ‘ರಾಷ್ಟ್ರೀಯ ನಾಗರಿಕ ನೋಂದಣಿ’ ತಯಾರಿಸಲು ಐದು ವರ್ಷಗಳ ಸಮಯ ಮತ್ತು 1,220 ಕೋಟಿ ರೂ.ಗಳ ವೆಚ್ಚ ತಗುಲಿದೆ.

 

ರಾಷ್ಟ್ರೀಯ ನಾಗರಿಕ ನೋಂದಣಿಯ ಕುರಿತು:

  • ರಾಷ್ಟ್ರೀಯ ನಾಗರಿಕ ನೋಂದಣಿ (NRC) ಮುಖ್ಯವಾಗಿ  ಭಾರತೀಯ ನಾಗರಿಕರ ಅಧಿಕೃತ ದಾಖಲೆಯಾಗಿದೆ. ‘ಪೌರತ್ವ ಕಾಯ್ದೆ, 1955 ರ ಪ್ರಕಾರ, ಭಾರತದ ನಾಗರಿಕರಾಗಿ ಅರ್ಹತೆ ಪಡೆದ ಎಲ್ಲ ವ್ಯಕ್ತಿಗಳ  ಜನಸಂಖ್ಯಾ ವಿವರಗಳನ್ನು ಇದು ಒಳಗೊಂಡಿದೆ.
  • 1951 ರ ಜನಗಣತಿಯ ನಂತರ ಈ ರಿಜಿಸ್ಟರ್ ಅನ್ನು ಮೊದಲು ತಯಾರಿಸಲಾಯಿತು. ಇದರ ನಂತರ, ಇದನ್ನು ನವೀಕರಿಸಲಾಗಿರಲಿಲ್ಲ. ಆದರೆ ಇತ್ತೀಚೆಗೆ ಇದನ್ನು ನವೀಕರಿಸಲಾಗಿದೆ.
  • ಇಲ್ಲಿಯವರೆಗೆ, ಅಸ್ಸಾಂ ರಾಜ್ಯಕ್ಕೆ ಮಾತ್ರ ಅಂತಹ ಡೇಟಾಬೇಸ್ ಸಿದ್ಧಪಡಿಸಿ ನಿರ್ವಹಿಸಲಾಗಿದೆ.

 

 

ಅಸ್ಸಾಂನಲ್ಲಿ ‘ರಾಷ್ಟ್ರೀಯ ನಾಗರಿಕ ನೋಂದಣಿ’ ನವೀಕರಿಸಲು ಕಾರಣಗಳೇನು?

2014 ರಲ್ಲಿ, ಸುಪ್ರೀಂ ಕೋರ್ಟ್, ಪೌರತ್ವ ಕಾಯ್ದೆ, 1955 ಮತ್ತು ಪೌರತ್ವ ನಿಯಮಗಳು, 2003 ರ ಪ್ರಕಾರ, ಅಸ್ಸಾಂನ ಎಲ್ಲಾ ಭಾಗಗಳಲ್ಲಿ ‘ರಾಷ್ಟ್ರೀಯ ನಾಗರಿಕ ನೋಂದಣಿ’ ಪ್ರಕ್ರಿಯೆಯನ್ನು ನವೀಕರಿಸಲು ಆದೇಶಿಸಿತು. ಈ ಪ್ರಕ್ರಿಯೆಯು ಅಧಿಕೃತವಾಗಿ 2015 ರಲ್ಲಿ ಪ್ರಾರಂಭವಾಯಿತು.

 

 


ಸಾಮಾನ್ಯ ಅಧ್ಯಯನ ಪತ್ರಿಕೆ 3:


 

ವಿಷಯಗಳು: ವಿಪತ್ತು ನಿರ್ವಹಣೆ.

ಎಂಟು ಚಂಡಮಾರುತಗಳಿಂದಾಗಿ ₹ 31,945 ಕೋಟಿ ಮೌಲ್ಯದ ನಷ್ಟವನ್ನು ಅನುಭವಿಸಿದ ಒಡಿಶಾ:

(Odisha suffered losses worth ₹31,945 cr. In eight cyclones)

 

 

ಸಂದರ್ಭ:

1999 ರ ಸೂಪರ್ ಚಂಡಮಾರುತ ಅಪ್ಪಳಿಸಿದ ನಂತರ ಬಂದ ಎಂಟು ವಿಭಿನ್ನ ಚಂಡಮಾರುತಗಳಿಂದಾಗಿ ಒಡಿಶಾ ಸರ್ಕಾರವು ಒಟ್ಟು 31,945.80 ಕೋಟಿ ರೂ.ಮೌಲ್ಯದ ನಷ್ಟವನ್ನು ಅನುಭವಿಸಿದೆ, ಆದರೆ ರಾಜ್ಯವು ಕೇಂದ್ರ ಸರ್ಕಾರದಿಂದ ಒಟ್ಟು ನಷ್ಟದ ಆರನೇ ಒಂದು ಭಾಗದಷ್ಟು ಮಾತ್ರ ಪಡೆದುಕೊಂಡಿದೆ.

 

ಈ ಚಂಡಮಾರುತಗಳು ಯಾವುವು ಎಂದರೆ:

ಫೈಲಿನ್ (2013), ಹುಡ್ ಹುಡ್ (2014), ತಿತ್ಲಿ, ಫೆಥೈ ಮತ್ತು ಡಾಯೆ (DAYE) (2018), ಬಲ್ಬುಲ್ ಮತ್ತು ಫನಿ (2019) ಮತ್ತು ಅಂಫನ್ (2020).

 

ಚಂಡಮಾರುತಗಳು’ ಎಂದರೇನು?

ಉಷ್ಣವಲಯದ ಚಂಡಮಾರುತಗಳು ವಿಶಾಲವಾದ ಗಾಳಿಯ ವ್ಯವಸ್ಥೆಯಾಗಿದ್ದು, ಇದರಲ್ಲಿ ಗಾಳಿಯು ಕಡಿಮೆ ವಾಯು ಒತ್ತಡದ ಕೇಂದ್ರದ ಸುತ್ತ ಸುತ್ತುತ್ತದೆ, ಗಾಳಿಯ ದಿಕ್ಕು, ಸಮಭಾಜಕದ ಉತ್ತರಕ್ಕೆ ಅಪ್ರದಕ್ಷಿಣಾಕಾರವಾಗಿ (counter-clockwise) ಮತ್ತು ಸಮಭಾಜಕದ ದಕ್ಷಿಣಕ್ಕೆ ಪ್ರದಕ್ಷಿಣಾಕಾರವಾಗಿ (clockwise) ಇರುತ್ತದೆ.

 

ಚಂಡಮಾರುತಗಳ ರಚನೆ:

  • ಚಂಡಮಾರುತಗಳ ಮೂಲವು ಕಡಿಮೆ ವಾಯು ಒತ್ತಡದ ವ್ಯವಸ್ಥೆಯ ರಚನೆಯಾಗಿದ್ದು ಮತ್ತು ಅದರ ಸುತ್ತಲೂ ಗಾಳಿಯು ವೇಗವಾಗಿ ಬೀಸುತ್ತದೆ.
  • ಗಾಳಿಯ ವೇಗ, ದಿಕ್ಕು, ತಾಪಮಾನ ಮತ್ತು ತೇವಾಂಶದಂತಹ ಅಂಶಗಳು ಚಂಡಮಾರುತಗಳ ಬೆಳವಣಿಗೆಗೆ ಸಹಕಾರಿಯಾಗಿದೆ.
  • ಮೋಡಗಳು ರೂಪುಗೊಳ್ಳುವ ಮೊದಲು, ನೀರು ವಾತಾವರಣದಿಂದ ಶಾಖವನ್ನು ಪಡೆಯುತ್ತದೆ ಮತ್ತು ನೀರಿನ ಆವಿಯಾಗಿ ಪರಿವರ್ತಿಸುತ್ತದೆ. ನೀರಿನ ಆವಿ ಮಳೆಯ ರೂಪದಲ್ಲಿ ದ್ರವ ರೂಪಕ್ಕೆ ಬದಲಾಗುತ್ತದೆ ಮತ್ತು ಈ ಪ್ರಕ್ರಿಯೆಯಲ್ಲಿ ಶಾಖವು ವಾತಾವರಣಕ್ಕೆ ಬಿಡುಗಡೆಯಾಗುತ್ತದೆ.
  • ವಾತಾವರಣಕ್ಕೆ ಬಿಡುಗಡೆಯಾಗುವ ಈ ಶಾಖವು ಸುತ್ತಮುತ್ತಲಿನ ಗಾಳಿಯನ್ನು ಬಿಸಿಮಾಡುತ್ತದೆ. ಈ ಗಾಳಿಯು ಬಿಸಿಮಾಡುವ ಮೂಲಕ ಮತ್ತು ಕಡಿಮೆ ಒತ್ತಡವನ್ನು ರೂಪಿಸುವ ಮೂಲಕ ಮೇಲೆ ಏರುತ್ತದೆ. ಇದರ ಪರಿಣಾಮವಾಗಿ, ಗಾಳಿಯು ಕಡಿಮೆ ಒತ್ತಡದ ಕೇಂದ್ರದ ಕಡೆಗೆ ತೀವ್ರವಾಗಿ ಧಾವಿಸುತ್ತದೆ ಮತ್ತು ಇದರಿಂದಾಗಿ ಚಂಡಮಾರುತವು ರೂಪುಗೊಳ್ಳುತ್ತದೆ. ಈ ಪ್ರಕ್ರಿಯೆಯು ನಿರಂತರವಾಗಿ ಪುನರಾವರ್ತನೆಗೊಳ್ಳುತ್ತದೆ.

 

 

 

ವಿಷಯಗಳು:ಆಂತರಿಕ ಭದ್ರತೆಗೆ ಸವಾಲನ್ನು ಒಡ್ಡುವ ಆಡಳಿತ ವಿರೋಧಿ ಅಂಶಗಳ ಪಾತ್ರ.

 

ಏನಿದು ಗ್ರೇಟರ್ ಟಿಪ್ರಾಲ್ಯಾಂಡ್ ಬೇಡಿಕೆ ?

(What is the Greater Tipraland demand?)

 

ಸಂದರ್ಭ:

ತ್ರಿಪುರ ಬುಡಕಟ್ಟು ಪ್ರದೇಶ ಸ್ವಾಯತ್ತ ಜಿಲ್ಲಾ ಮಂಡಳಿಯ (Tripura Tribal Areas Autonomous District Council-  TTAADC) ಚುನಾವಣಾ ಪ್ರಚಾರದಲ್ಲಿ ‘ಗ್ರೇಟರ್ ಟಿಪ್ರಾಲ್ಯಾಂಡ್ (Greater Tipraland) ಬೇಡಿಕೆಯು ಪ್ರಮುಖ ವಿಷಯವಾಗಿದೆ.

 

 

 

ಏನಿದು ಗ್ರೇಟರ್ ಟಿಪ್ರಾಲ್ಯಾಂಡ್?

 

‘ಗ್ರೇಟರ್ ಟಿಪ್ರಾಲ್ಯಾಂಡ್’, ಮೂಲತಃ ಆಡಳಿತಾರೂಢ ಪಾಲುದಾರ ಬುಡಕಟ್ಟು ಪಕ್ಷ – ತ್ರಿಪುರದ ಸ್ಥಳೀಯ ಬುಡಕಟ್ಟು ಜನಾಂಗದವರಿಗೆ ಪ್ರತ್ಯೇಕ ರಾಜ್ಯವನ್ನು ರಚಿಸಲು ಯತ್ನಿಸುವ ಸ್ಥಳೀಯ ಪೀಪಲ್ಸ್ ಫ್ರಂಟ್ ಆಫ್ ತ್ರಿಪುರ ವು (IPFT) ‘ಟಿಪ್ರಾಲ್ಯಾಂಡ್’ ಬೇಡಿಕೆಯ ವಿಸ್ತರಣೆಯಾಗಿದೆ.

  • ಈ ಹೊಸ ಬೇಡಿಕೆಯಲ್ಲಿ, ಸ್ಥಳೀಯ ಪ್ರದೇಶಗಳಲ್ಲಿ ಅಥವಾ ಹಳ್ಳಿಗಳಲ್ಲಿ ವಾಸಿಸುವ ಹಾಗೂ ‘ತ್ರಿಪುರ ಬುಡಕಟ್ಟು ಪ್ರದೇಶ ಸ್ವಾಯತ್ತ ಜಿಲ್ಲಾ ಮಂಡಳಿ’ (TTAADC) ಯ ಹೊರಗಿನ ಪ್ರತಿಯೊಬ್ಬ ಬುಡಕಟ್ಟು ಜನಾಂಗದವರನ್ನು ಉದ್ದೇಶಿತ ಮಾದರಿಯಲ್ಲಿ ಸೇರಿಸಲು ಪ್ರಯತ್ನಿಸಲಾಗುತ್ತಿದೆ.
  • ಆದಾಗ್ಯೂ, ಈ ಕಲ್ಪನೆಯು ತ್ರಿಪುರದ ಬುಡಕಟ್ಟು ಕೌನ್ಸಿಲ್ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿಲ್ಲ, ಆದರೆ ಭಾರತದ ವಿವಿಧ ರಾಜ್ಯಗಳಾದ ಅಸ್ಸಾಂ, ಮಿಜೋರಾಂ ಇತ್ಯಾದಿಗಳಲ್ಲಿ ವಾಸಿಸುವ, ಹಾಗೂ ಬಂಡಾರ್ಬನ್, ಚಿತ್ತಗಾಂಗ್, ಖಾಗ್ರಾಚಾರಿ ಯನ್ನು ಒಳಗೊಂಡ ಬಾಂಗ್ಲಾದೇಶದ ಇತರ ಗಡಿ ಪ್ರದೇಶಗಳಲ್ಲಿ ವಾಸಿಸುತ್ತಿರುವ ತ್ರಿಪುರೈಸ್‌ನ ‘ತಿಪ್ರಸಾ’ (Tiprasa) ಗಳನ್ನೂ ಕೂಡ ಸೇರಿಸಲು ಪ್ರಯತ್ನಿಸುತ್ತದೆ.

 

ಏನಿದು ಸಮಸ್ಯೆ?

ತ್ರಿಪುರದಲ್ಲಿ ಎನ್‌ಆರ್‌ಸಿಯನ್ನು ಪರಿಷ್ಕರಿಸುವ ಬೇಡಿಕೆ ಈಡೇರಿಲ್ಲ ಮತ್ತು ಹಿಂದೆ ಸಂಭವಿಸಿದ CAA ಕುರಿತ ವಿರೋಧವು ‘ಗ್ರೇಟರ್ ಟಿಪ್ರಾಲ್ಯಾಂಡ್’ ಬೇಡಿಕೆಗೆ ಕಾರಣವಾಗಿದೆ ಎಂದು ಪ್ರಾದೇಶಿಕ ರಾಜಕೀಯ ಪಕ್ಷಗಳು ಹೇಳುತ್ತವೆ.

 

 


ಸಾಮಾನ್ಯ ಅಧ್ಯಯನ ಪತ್ರಿಕೆ 4:


ವಿಷಯಗಳು: ಖಾಸಗಿ ಮತ್ತು ಸಾರ್ವಜನಿಕ ಸಂಬಂಧಗಳಲ್ಲಿ ನೈತಿಕತೆ.

ಜೈಲ್ ರೇಡಿಯೋ:

(Jail Radio)

 

 

ಸಂದರ್ಭ:

  • ಇತ್ತೀಚೆಗೆ, ‘ಜೈಲ್ ರೇಡಿಯೋ’ ಯೋಜನೆಯನ್ನು ‘ಟಿಂಕಾ ಟಿಂಕಾ’ ಪ್ರತಿಷ್ಠಾನವು ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಹರಿಯಾಣದ ಜೈಲುಗಳಲ್ಲಿ ಪ್ರಾರಂಭಿಸಿದೆ.
  • ಜೈಲು ರೇಡಿಯೋ ಎನ್ನುವುದು ಕೈದಿಗಳು ನಡೆಸುವ ಆಂತರಿಕ ಪ್ರಸ್ತುತಿಯಾಗಿದೆ. ಇದರ ಅಡಿಯಲ್ಲಿ, ಜೈಲಿನ ಆವರಣದ ಒಳಗಿನ ಸ್ಟುಡಿಯೊದಿಂದ ರೇಡಿಯೊ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತದೆ ಮತ್ತು ಸ್ಪೀಕರ್‌ಗಳ ಮೂಲಕ ಬ್ಯಾರಕ್‌ಗಳಲ್ಲಿನ ಕೈದಿಗಳಿಗೆ ತಲುಪಿಸಲಾಗುತ್ತದೆ.
  • ಕೈದಿಗಳಿಗೆ ಅರ್ಥಪೂರ್ಣವಾದ ಸಂಬಂಧವನ್ನು ಹೊಂದಲು ಅವಕಾಶವನ್ನು ನೀಡುವ ಮೂಲಕ ಅವರ ಸೃಜನಶೀಲತೆಯನ್ನು ಹೊರತರುವುದು ಈ ಯೋಜನೆಯ ಉದ್ದೇಶವಾಗಿದೆ.

 

ಈ ಉಪಕ್ರಮದ ಅಗತ್ಯ ಮತ್ತು ಪ್ರಾಮುಖ್ಯತೆ:

ಈ ಕೈದಿಗಳು ಒಂದು ದಿನ ಸಮಾಜಕ್ಕೆ ಮರಳಬೇಕಾಗುತ್ತದೆ. ಆದ್ದರಿಂದ, ಅವರಿಗೆ ಅರ್ಥಪೂರ್ಣ ಬೆಂಬಲ ಒದಗಿಸುವುದು ಮುಖ್ಯ. ಈ ಕೈದಿಗಳಲ್ಲಿ ಹಲವರು ಹಿಂದೆ ಏನಾಯಿತು ಎಂದು ವಿಷಾದಿಸುತ್ತಾರೆ ಮತ್ತು ಇದಕ್ಕಾಗಿ ಪಶ್ಚಾತಾಪವನ್ನು ಪಡುತ್ತಾರೆ. ಅಂತವರುಗಳಿಗೆ ಚಿಕಿತ್ಸೆಯ ಅಗತ್ಯವಿರುತ್ತದೆ.

 

 

ವಿಷಯಗಳು: ಖಾಸಗಿ ಮತ್ತು ಸಾರ್ವಜನಿಕ ಸಂಬಂಧಗಳಲ್ಲಿ ನೈತಿಕತೆ.

 

ಹಲ್ಲೆ ಪ್ರಕರಣದ ಆರೋಪಿಗೆ ವ್ಯಸನಮುಕ್ತಿ ಕೇಂದ್ರದಲ್ಲಿ ಸಮುದಾಯ ಸೇವೆ ಮಾಡುವಂತೆ ಆದೇಶಿಸಿದ ಹೈಕೋರ್ಟ್:

(HC orders assault case accused to do community service at de-addiction centre)

 

 

ಸಂದರ್ಭ:

PVR ಕಾಂಪ್ಲೆಕ್ಸ್‌ನಲ್ಲಿ ಮಹಿಳೆಯ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿದ ಆರೋಪ ಹೊತ್ತಿರುವ ವ್ಯಕ್ತಿಗೆ, ಈ ಪ್ರಕರಣವನ್ನು ಮುಂದುವರಿಸಲು ಪ್ರಕರಣದ ಸಂತ್ರಸ್ತೆಯು ನಿರಾಕರಿಸಿದ ಹಿನ್ನೆಲೆಯಲ್ಲಿ ವ್ಯಸನ ಮುಕ್ತಿ ಕೇಂದ್ರದಲ್ಲಿ (de-addiction centre) ಒಂದು ತಿಂಗಳ ಸಮುದಾಯ ಸೇವೆ ಮಾಡಲು ದೆಹಲಿ ಹೈಕೋರ್ಟ್ ಆದೇಶಿಸಿದೆ.

 

ಏನಿದು ಸಮಸ್ಯೆ?

ಈ ಪ್ರಸ್ತುತ ಪ್ರಕರಣದಲ್ಲಿ ಸಂತ್ರಸ್ತಯೆ ಅಂತಿಮವಾಗಿ ಬಳಲುತ್ತಿದ್ದಾರೆ. ಆರೋಪಿ ಅರ್ಜಿದಾರರು ಅನ್ಯಾಯಕ್ಕೊಳಗಾದ ಮಹಿಳೆಗೆ ಕಿರುಕುಳ ನೀಡುತ್ತಲೇ ಇರುತ್ತಾರೆ ಮತ್ತು ಅರ್ಜಿದಾರರ ವಿರುದ್ಧ ಪ್ರಾರಂಭಿಸಲಾದ ವಿಚಾರಣೆಯಲ್ಲಿ ಆಕೆಗೆ ಮತ್ತಷ್ಟು ಕಿರುಕುಳ ನೀಡಲಾಗುತ್ತಿದೆ.

 

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

 

ಪ್ಯಾಟ್ರಿಸಿಯಾ ಮೌಂಟ್ ಬ್ಯಾಟನ್:

 

  • ಪ್ಯಾಟ್ರಿಸಿಯಾ ಎಡ್ವಿನಾ ವಿಕ್ಟೋರಿಯಾ ಮೌಂಟ್ ಬ್ಯಾಟನ್ ಬರ್ಮಾದ ಎರಡನೇ ಕೌಂಟೆಸ್ ಮೌಂಟ್ ಬ್ಯಾಟನ್ ಆಗಿದ್ದರು ಮತ್ತು ಅವರು ವಿಕ್ಟೋರಿಯಾ ರಾಣಿಯ ಮೊಮ್ಮಗಳು ಮತ್ತು ಬ್ರಿಟನ್ನ ರಾಣಿ ಎಲಿಜಬೆತ್ II ರ 99 ವರ್ಷದ ಪತಿ ಪ್ರಿನ್ಸ್ ಫಿಲಿಪ್ ಅವರ ಸೋದರಸಂಬಂಧಿ ಕೂಡ ಆಗಿದ್ದು ಅವರು ಬ್ರಿಟನ್ ರಾಜಮನೆತನದೊಂದಿಗೆ ಬಲವಾದ ಸಂಬಂಧವನ್ನು ಹೊಂದಿದ್ದರು.
  • ಅವರು ಭಾರತದ ಕೊನೆಯ ವೈಸರಾಯ ಆದ ಲಾರ್ಡ್ ಲೂಯಿಸ್ ಮೌಂಟ್ ಬ್ಯಾಟನ್ ಅವರ ಹಿರಿಯ ಮಗಳು.

ಸುದ್ದಿಯಲ್ಲಿರುವ ಕಾರಣ?

ಪ್ಯಾಟ್ರಿಸಿಯಾ ಮೌಂಟ್ ಬ್ಯಾಟನ್‌ರ ವೈಯಕ್ತಿಕ ಸಂಗ್ರಹದಿಂದ 350 ಕ್ಕೂ ಹೆಚ್ಚು ವಸ್ತುಗಳನ್ನು ಲಂಡನ್‌ನಲ್ಲಿ ಹರಾಜು ಮಾಡಲಾಯಿತು. ಈ ವಸ್ತುಗಳಲ್ಲಿ ಭಾರತದಿಂದ  ಪಡೆದ ಜೈಪುರದ ವಜ್ರದ ಕಂಕಣ ಮತ್ತು ರತ್ನ-ಹೊದಿಕೆಯ ಅಲಂಕಾರಿಕ ಆನೆಗಳು ಸೇರಿವೆ. ಲಂಡನ್‌ನ ಸೋಥೆಬಿ  ಯಲ್ಲಿ ನಡೆದ ಹರಾಜಿನಲ್ಲಿ  ಈ ವಸ್ತುಗಳು 5 .6 ದಶಲಕ್ಷ ಯುರೋ ಗಳಿಗಿಂತ  ಹೆಚ್ಚಿನ ಮೊತ್ತವನ್ನು ಗಳಿಸಿದವು.

 

ಗಿಗಾ ಮೆಶ್:

(Giga Mesh)

 

  • ಇದು ಗ್ರಾಮೀಣ ಪ್ರದೇಶದಲ್ಲಿ ಕಡಿಮೆ ಬೆಲೆಯ ಇಂಟರ್‌ನೆಟ್‌ಗಾಗಿ ಒಂದು ಉತ್ಪನ್ನವಾಗಿದೆ.
  • ಇದನ್ನು ಮಹಿಳೆಯರ ನೇತೃತ್ವದ ಸ್ಟಾರ್ಟಪ್ ‘ಆಸ್ಟ್ರೋಮ್’ ಅಭಿವೃದ್ಧಿಪಡಿಸಿದೆ.
  • ಗಿಗಾ ಮೆಶ್ ಎಂದು ಕರೆಯಲ್ಪಡುವ ಈ ವೈರ್‌ಲೆಸ್ (ನಿಸ್ತಂತು ಉತ್ಪನ್ನ) ಉತ್ಪನ್ನವು ಟೆಲಿಕಾಂ ಆಪರೇಟರ್‌ಗಳಿಗೆ ಗುಣಮಟ್ಟದ, ಹೆಚ್ಚಿನ ವೇಗದ ಗ್ರಾಮೀಣ ದೂರಸಂಪರ್ಕ ಮೂಲಸೌಕರ್ಯವನ್ನು 5 ಪಟ್ಟು ಕಡಿಮೆ ವೆಚ್ಚದಲ್ಲಿ ನಿಯೋಜಿಸಲು ಅನುವು ಮಾಡಿಕೊಡುತ್ತದೆ.

 

 


Join our Official Telegram Channel HERE for Motivation and Fast Updates

Subscribe to our YouTube Channel HERE to watch Motivational and New analysis videos