Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 27 ಮಾರ್ಚ್ 2021

ಪರಿವಿಡಿ :

 

ಸಾಮಾನ್ಯ ಅಧ್ಯಯನ ಪತ್ರಿಕೆ 1:

 1. ಲಾಚಿತ್ ಬೋರ್ ಫುಕನ್.

 

ಸಾಮಾನ್ಯ ಅಧ್ಯಯನ ಪತ್ರಿಕೆ 2:  

 1. ಚುನಾವಣಾ ಬಾಂಡ್ ಗಳ ಮಾರಾಟಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸರ್ವೋಚ್ಚ ನ್ಯಾಯಾಲಯ.
 2. ಬಿಹಾರ ಪೊಲೀಸ್ ಮಸೂದೆ.
 3. ಸಾಂಪ್ರದಾಯಿಕ ಪ್ರವಾಸಿ ತಾಣಗಳ ಅಭಿವೃದ್ಧಿ ಯೋಜನೆ.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

 1. ಏನಿದು ನಾಸಾ ಮತ್ತು ಇಸ್ರೋದ ಜಂಟಿ ಭೂ-ವೀಕ್ಷಣಾ/ಕಣ್ಗಾವಲು ನಿಸಾರ್ ಯೋಜನೆ?
 2. ಆರ್‌ಒಸಿಗಳನ್ನು ಸಲ್ಲಿಸುವಾಗ ಕ್ರಿಪ್ಟೋಕರೆನ್ಸಿ ಹೋಲ್ಡಿಂಗ್‌ಗಳನ್ನು ಕಡ್ಡಾಯವಾಗಿ ಬಹಿರಂಗಪಡಿಸಲು ಕೇಂದ್ರ ಏಕೆ ಬಯಸಿದೆ?
 3. ಹುಲಿ ಪುನರ್ವಸತಿ/ಸ್ಥಳಾಂತರ ಯೋಜನೆ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

 1. ಶಿಗ್ಮೋ ಎಂದರೇನು ?

 

 


ಸಾಮಾನ್ಯ ಅಧ್ಯಯನ ಪತ್ರಿಕೆ 1:


ವಿಷಯಗಳು: ಆಧುನಿಕ ಭಾರತದ ಇತಿಹಾಸ- ಹದಿನೆಂಟನೇ ಶತಮಾನದ ಮಧ್ಯಭಾಗದಿಂದ ಇಂದಿನವರೆಗಿನ- ಮಹತ್ವದ ಘಟನೆಗಳು, ವ್ಯಕ್ತಿತ್ವಗಳು, ಸಮಸ್ಯೆಗಳು.

ಲಾಚಿತ್ ಬೋರ್ ಫುಕನ್:

(Lachit Borphukan)

ಸಂದರ್ಭ:

ಪ್ರಸ್ತುತ ಅಸ್ಸಾಂನಲ್ಲಿ ನಡೆಯುತ್ತಿರುವ ಚುನಾವಣೆಯ ಸಮಯದಲ್ಲಿ, ಸಾರೈಘಾಟ್ ಕದನದಲ್ಲಿ (1671) ಮೊಘಲರನ್ನು ಸೋಲಿಸಿದ ಅಹೋಮ್ ಜನರಲ್     ಲಾಚಿತ್ ಬೋರ್ ಫುಕನ್ ಅವರ ಹೆಸರನ್ನು ಹೆಚ್ಚಾಗಿ ಉಲ್ಲೇಖಿಸಲಾಗುತ್ತಿದೆ.

 

ಯಾರು ಈ ಲಾಚಿತ್ ಬೋರ್ ಫುಕನ್?

 • ಅವರು ಅಹೋಮ್ ಸಾಮ್ರಾಜ್ಯದಲ್ಲಿ ಜನರಲ್ ಆಗಿದ್ದರು.
 • 1671 ರಲ್ಲಿ ನಡೆದ ಪ್ರಸಿದ್ಧ ಸಾರೈಘಾಟ್ ಯುದ್ಧದಲ್ಲಿ ಅವರು ವಹಿಸಿದ ನಾಯಕತ್ವಕ್ಕೆ ಹೆಸರುವಾಸಿಯಾಗಿದ್ದಾರೆ, ಇದರಲ್ಲಿ ಅವರು ರಾಮ್ಸಿಂಗ್ I ನೇತೃತ್ವದ ಮೊಘಲ್ ಸೈನ್ಯವು ಅಹೋಮ್ ಸಾಮ್ರಾಜ್ಯವನ್ನು ವಶಪಡಿಸಿಕೊಳ್ಳಲು ಮಾಡಿದ ಪ್ರಯತ್ನವನ್ನು ವಿಫಲಗೊಳಿಸಿದರು.
 • ಗುರಹಾಟಿಯ ಬ್ರಹ್ಮಪುತ್ರ ನದಿಯ ದಡದಲ್ಲಿ ಸಾರೈಘಾಟ್ ಕದನ ನಡೆಯಿತು.
 • ರಾಷ್ಟ್ರೀಯ ರಕ್ಷಣಾ ಅಕಾಡೆಮಿ (NDA) 1999 ರಿಂದ ಪ್ರತಿವರ್ಷ ಅತ್ಯುತ್ತಮ ಪಾಸಿಂಗ್ ಔಟ್ ಕೆಡೆಟ್‌ಗಳಿಗೆ ಲಾಚಿತ್ ಬೋರ್ ಫುಕನ್ ಚಿನ್ನದ ಪದಕವನ್ನು ನೀಡುತ್ತಿದೆ.

 

ಹಿನ್ನೆಲೆ:

1671 ರಲ್ಲಿ ನಡೆದ ಸಾರೈಘಾಟ್ ಕದನದ ಕೊನೆಯ ಹಂತದಲ್ಲಿ, ಮೊಘಲರು ಸಾರೈಘಾಟ್‌ನಲ್ಲಿ ನದಿಯ ಮೂಲಕ ಅಸ್ಸಾಮೀಸ್ ಸೈನ್ಯದ ಮೇಲೆ ದಾಳಿ ಮಾಡಿದಾಗ, ಅನೇಕ ಅಸ್ಸಾಮೀಸ್ ಸೈನಿಕರು ತಮ್ಮ ಆತ್ಮಸ್ಥೈರ್ಯವನ್ನು ಕಳೆದುಕೊಳ್ಳಲು ಆರಂಭಿಸಿದರು. ಅಂತಹ ಪರಿಸ್ಥಿತಿಯಲ್ಲಿ, ಅಹೋಮ್ ಸಾಮ್ರಾಜ್ಯದ ಕಮಾಂಡರ್ ಲಚಿತ್ ಎಲ್ಲಾ ಸೈನಿಕರನ್ನು ಕರೆದು ಅವರ ಕೊನೆಯ ಉಸಿರಾಟದವರೆಗೂ ಹೋರಾಡಲು ಪ್ರೇರೇಪಿಸಿದರು, ಇದರ ಪರಿಣಾಮವಾಗಿ ಮೊಘಲರ ಸೋಲಿನೊಂದಿಗೆ ಯುದ್ಧವು ಕೊನೆಗೊಂಡಿತು.

 

 

 


ಸಾಮಾನ್ಯ ಅಧ್ಯಯನ ಪತ್ರಿಕೆ 2:  


ವಿಷಯಗಳು: ಆಡಳಿತ, ಪಾರದರ್ಶಕತೆ ಮತ್ತು ಹೊಣೆಗಾರಿಕೆ, ಇ-ಆಡಳಿತ – ಅನ್ವಯಗಳು, ಮಾದರಿಗಳು, ಯಶಸ್ಸುಗಳು, ಮಿತಿಗಳು ಮತ್ತು ಭವಿಷ್ಯದ ಪ್ರಮುಖ ಅಂಶಗಳು; ನಾಗರಿಕರ ಚಾರ್ಟರ್, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಮತ್ತು ಸಾಂಸ್ಥಿಕ ಮತ್ತು ಇತರ ಕ್ರಮಗಳು.

 

ಚುನಾವಣಾ ಬಾಂಡ್ ಗಳ ಮಾರಾಟಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಸರ್ವೋಚ್ಚ ನ್ಯಾಯಾಲಯ:

 

 

ಸಂದರ್ಭ: ದೇಶದಲ್ಲಿ, ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ, ಅಸ್ಸಾಂ ಮತ್ತು ಪುದುಚೇರಿ ವಿಧಾನಸಭೆಗಳಿಗೆ ನಡೆಯುತ್ತಿರುವ ಚುನಾವಣೆಗಳಿಗೆ ಮುನ್ನ ಹೊಸ ಚುನಾವಣಾ ಬಾಂಡುಗಳನ್ನು ಮಾರಾಟ ಮಾಡುವುದಕ್ಕೆ ತಡೆ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ವರಿಷ್ಠ ನ್ಯಾಯಾಲಯವು ವಜಾಗೊಳಿಸಿದೆ.

 

 • 2017 ರಲ್ಲಿ ಸಲ್ಲಿಸಲಾದ ಚುನಾವಣಾ ಬಾಂಡ್ ಯೋಜನೆಯ ಕುರಿತ ದೊಡ್ಡ ಸಾಂವಿಧಾನಿಕ ಸವಾಲು ಇನ್ನೂ ಬಾಕಿ ಉಳಿದಿರುವುದರಿಂದ, ಈ ಸಮಯದಲ್ಲಿ ಚುನಾವಣಾ ಬಾಂಡ್ ಗಳ ಮಾರಾಟಕ್ಕೆ ತಡೆ ನೀಡಲು ಯಾವುದೇ ನ್ಯಾಯಯುತ ಸಮರ್ಥನೆ ಕಾಣುತ್ತಿಲ್ಲ ಎಂದು ವರಿಷ್ಠ ನ್ಯಾಯಾಲಯವು ಅರ್ಜಿದಾರರಿಗೆ ತಿಳಿಸಿದೆ.

 

ಈಗ ಪರಿಹಾರವಾಗದೆ ಉಳಿದಿರುವ ಸವಾಲು ಯಾವುದು?

ಚುನಾವಣಾ ಬಾಂಡ್ ಯೋಜನೆಯ ಸಾಂವಿಧಾನಿಕತೆಯನ್ನು ಪ್ರಶ್ನಿಸುವುದರ ಹೊರತಾಗಿ, ಎಲ್ಲಾ ರಾಜಕೀಯ ಪಕ್ಷಗಳನ್ನು ಸಾರ್ವಜನಿಕ ಸಂಸ್ಥೆ ಅಥವಾ ಕಚೇರಿಗಳೆಂದು ಘೋಷಿಸುವ ಮೂಲಕ ಅವುಗಳನ್ನು ಮಾಹಿತಿ ಹಕ್ಕು ಕಾಯ್ದೆಯ ವ್ಯಾಪ್ತಿಗೆ ತರಬೇಕು ಮತ್ತು ರಾಜಕೀಯ ಪಕ್ಷಗಳು ತಮ್ಮ ಆದಾಯ ಮತ್ತು ವೆಚ್ಚವನ್ನು ಬಹಿರಂಗಪಡಿಸುವಂತೆ ನ್ಯಾಯಾಲಯವು ಅವುಗಳಿಗೆ ಆದೇಶಿಸಬೇಕೆಂದು ಅರ್ಜಿದಾರರು ನ್ಯಾಯಾಲಯವನ್ನು ಕೋರಿದ್ದರು.

 

ಚುನಾವಣಾ ಬಾಂಡುಗಳು ಎಂದರೇನು?

 • ಈ ಯೋಜನೆಯನ್ನು 2017 ರ ಕೇಂದ್ರ ಬಜೆಟ್ ನಲ್ಲಿ ಘೋಷಿಸಲಾಯಿತು. ಚುನಾವಣಾ ಬಾಂಡ್ (electoral bond) ಯೋಜನೆಯು ಬಡ್ಡಿರಹಿತ ಧಾರಕ ಹಣವನ್ನು (Interest-Free Bearer Instrument) ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ದೇಣಿಗೆ ನೀಡುವ ಆರ್ಥಿಕ ಸಾಧನವಾಗಿದೆ ಅಥವಾ ರಾಜಕೀಯ ಪಕ್ಷಗಳಿಗೆ ಅನಾಮಧೇಯವಾಗಿ ಹಣ ಒದಗಿಸಲು ಬಳಸುವ ಬಡ್ಡಿರಹಿತ ವಿಶೇಷ ಪಾವತಿ ಸಾಧನಗಳಾಗಿವೆ.
 • ಬಾಂಡ್‌ಗಳಲ್ಲಿ ದಾನಿಗಳ ಹೆಸರನ್ನಾಗಲಿ ಪಡೆಯುವವರ ಹೆಸರನ್ನಾಗಲಿ ಉಲ್ಲೇಖಿಸಲಾಗುವ ದಿಲ್ಲ.
 • ಬಾಂಡ್ ಗಳ ರೂಪದಲ್ಲಿ ಆರ್ಥಿಕ ಸಹಾಯ ಪಡೆಯುವವರನ್ನು (ಮುಖ್ಯವಾಗಿ ರಾಜಕೀಯ ಪಕ್ಷ) ಅದರ ಮಾಲೀಕರು ಎಂದು ಭಾವಿಸಲಾಗುತ್ತದೆ.
 • ಈ ಬಾಂಡ್‌ಗಳಿಗೆ 1,000 ರೂ, 10,000 ರೂ, 1 ಲಕ್ಷ, 10 ಲಕ್ಷ ಮತ್ತು 1 ಕೋಟಿ ರೂ.ಗಳಂತೆ ದ್ವಿಗುಣ ರೂಪದಲ್ಲಿ ನೀಡಲಾಗುತ್ತದೆ ಮತ್ತು ಇದಕ್ಕಾಗಿ ಗರಿಷ್ಠ ಮಿತಿಯನ್ನು ನಿಗದಿಪಡಿಸಲಾಗಿಲ್ಲ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್ (SBI) ಮಾತ್ರ ಈ ಬಾಂಡ್ ಗಳನ್ನು ಮಾರಾಟ ಮಾಡಲು ಅಧಿಕಾರ ಹೊಂದಿರುವ ಏಕೈಕ ಬ್ಯಾಂಕ್ ಆಗಿದೆ.
 • ಈ ಬಾಂಡ್‌ಗಳನ್ನು ವಿತರಿಸಲು ಮತ್ತು ಎನ್ ಕ್ಯಾಶ್ ಮಾಡಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಅಧಿಕಾರ ನೀಡಲಾಗಿದೆ.ಈ ಬಾಂಡ್‌ಗಳು ವಿತರಣೆಯ ದಿನಾಂಕದಿಂದ ಹದಿನೈದು ದಿನಗಳವರೆಗೆ ಮಾನ್ಯವಾಗಿರುತ್ತವೆ.
 • ದಾನಿಗಳು ಈ ಬಾಂಡ್ ಗಳನ್ನು ಖರೀದಿಸಿ ರಾಜಕೀಯ ಪಕ್ಷಗಳಿಗೆ ದಾನ ಮಾಡಬಹುದು ಮತ್ತು ದಾನವಾಗಿ ಪಡೆದ ರಾಜಕೀಯ ಪಕ್ಷವು ಅದರ ಅಧಿಕೃತ/ಗೊತ್ತುಪಡಿಸಿದ ಖಾತೆಯ ಮೂಲಕ 15 ದಿನಗಳೊಳಗೆ ಎನ್ ಕ್ಯಾಶ್ ಮಾಡಿಕೊಳ್ಳಬಹುದು ಅಥವಾ ಈ ಬಾಂಡ್‌ಗಳನ್ನು ನಗದೀಕರಿಸಿ ಕೊಳ್ಳಬಹುದಾಗಿದೆ.
 • ಒಬ್ಬ ವ್ಯಕ್ತಿ ಅಥವಾ ಒಂದು ಸಂಸ್ಥೆಯು ಎಷ್ಟು ಬೇಕಾದರೂ ಬಾಂಡ್ ಗಳನ್ನು ಖರೀದಿಸಬಹುದು ಇದಕ್ಕೆ ಯಾವುದೇ ಮಿತಿಯಿಲ್ಲ.
 • ಒಂದು ವೇಳೆ ರಾಜಕೀಯ ಪಕ್ಷವೂ 15 ದಿನಗಳೊಳಗಾಗಿ ಈ ಬಾಂಡುಗಳನ್ನು ನಗದೀಕರಿಸಿ ಕೊಳ್ಳದಿದ್ದರೆ ಭಾರತೀಯ ಸ್ಟೇಟ್ ಬ್ಯಾಂಕ್ ಇವುಗಳನ್ನು ಪ್ರಧಾನಮಂತ್ರಿಗಳ ಪರಿಹಾರ ನಿಧಿಗೆ ಜಮೆ ಮಾಡುತ್ತದೆ.

 

ಚುನಾವಣಾ ಬಾಂಡ್ ಯೋಜನೆಯನ್ನು ಪ್ರಶ್ನಿಸಲು ಇರುವ  ಕಾರಣಗಳು:

 • ಈ ಬಾಂಡ್‌ಗಳ ಮುದ್ರಣ ಮತ್ತು ಮಾರಾಟ ಮತ್ತು ಖರೀದಿಗಾಗಿ ಸೇವೆ ಒದಗಿಸುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಕ್ಕೆ ಕೇಂದ್ರ ಸರ್ಕಾರವು ತೆರಿಗೆ ಪಾವತಿದಾರರ ಹಣದಿಂದ ಸೇವಾ ಶುಲ್ಕವನ್ನು ಪಾವತಿ ಮಾಡುತ್ತದೆ.
 • ಚುನಾವಣಾ ಬಾಂಡ್ ಗಳ ದಾನಿಗಳನ್ನು ಅನಾಮಧೇಯವಾಗಿ ಇರಿಸಲಾಗುತ್ತದೆ.
 • ಹಣಕಾಸು ಕಾಯ್ದೆ 2017 ರ ತಿದ್ದುಪಡಿಯ ಮೂಲಕ, ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ಗಳ ಮೂಲಕ ಪಡೆದ ದೇಣಿಗೆಗಳನ್ನು ಬಹಿರಂಗಪಡಿಸುವುದರಿಂದ ಕೇಂದ್ರ ಸರ್ಕಾರವು ರಾಜಕೀಯ ಪಕ್ಷಗಳಿಗೆ ವಿನಾಯಿತಿ ನೀಡಿದೆ.
 • ಪಾರದರ್ಶಕತೆ ಬಯಸುವ ಕಾರ್ಯಕರ್ತರ ಪ್ರಕಾರ, ಇದು ನಾಗರಿಕರ ತಿಳಿಯುವ ಹಕ್ಕಿನ” (Right to Know) ಉಲ್ಲಂಘನೆಯಾಗಿದೆ ಮತ್ತು ಈ ಪ್ರಾವಧಾನ ವು ರಾಜಕೀಯ ವರ್ಗವನ್ನು ಇನ್ನಷ್ಟು ಜವಾಬ್ದಾರ ರಹಿತರನ್ನಾಗಿ (unaccountable) ಮಾಡುತ್ತದೆ.

 

ಭಾರತೀಯ ಚುನಾವಣಾ ಆಯೋಗದ ನಿಲುವೇನು?

 • ರಾಜಕೀಯ ಪಕ್ಷಗಳು ಈ ರೀತಿಯಾಗಿ ಪಡೆದ ಅನುದಾನವನ್ನು ಬಹಿರಂಗಪಡಿಸುವುದರಿಂದ ವಿನಾಯಿತಿ ನೀಡುವ ಸಲುವಾಗಿ ಪ್ರಜಾ ಪ್ರಾತಿನಿಧ್ಯ ಕಾಯ್ದೆಗೆ’ ತರಲಾದ ತಿದ್ದುಪಡಿಗೆ ಚುನಾವಣಾ ಆಯೋಗವು ಆಕ್ಷೇಪ ವ್ಯಕ್ತಪಡಿಸಿದೆ.
 • ಚುನಾವಣಾ ಬಾಂಡ್‌ಗಳ ಮೂಲಕ ಪಡೆದ ಕೊಡುಗೆಯನ್ನು ವರದಿ ಮಾಡದಿದ್ದಾಗ, ರಾಜಕೀಯ ಪಕ್ಷಗಳ ಅನುದಾನ ವರದಿಗಳನ್ನು ಪರಿಶೀಲಿಸಿದಾಗ ರಾಜಕೀಯ ಪಕ್ಷವು ಪ್ರಜಾ ಪ್ರಾತಿನಿಧ್ಯ ಕಾಯ್ದೆಯ’ ಸೆಕ್ಷನ್ 29 (ಬಿ) ಯನ್ನು ಉಲ್ಲಂಘಿಸುವ ಮೂಲಕ ದೇಣಿಗೆಯನ್ನು ಸ್ವೀಕರಿಸಿದಿಯೇ ಎಂದು ಕಂಡುಹಿಡಿಯಲು ಸಾಧ್ಯವಾಗುವುದಿಲ್ಲ. ಏಕೆಂದರೆ, ‘ಪ್ರಜಾ ಪ್ರಾತಿನಿಧ್ಯ ಕಾಯ್ದೆಯ’ ಸೆಕ್ಷನ್ 29 (ಬಿ) ಯು ರಾಜಕೀಯ ಪಕ್ಷಗಳನ್ನು ಸರ್ಕಾರಿ ಕಂಪನಿಗಳಿಂದ ಮತ್ತು ವಿದೇಶಿ ಮೂಲಗಳಿಂದ ಅನುದಾನ ಪಡೆಯುವುದನ್ನು ನಿಷೇಧಿಸುತ್ತದೆ.  

 


ವಿಷಯಗಳು: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾಗರಿಕ ಸೇವೆಗಳ ಪಾತ್ರ.

ಬಿಹಾರ ಪೊಲೀಸ್ ಮಸೂದೆ:

(The Bihar police Bill)

 

ಸಂದರ್ಭ:

ಬಿಹಾರ ವಿಶೇಷ ಸಶಸ್ತ್ರ ಪೊಲೀಸ್ ಮಸೂದೆ,(Bihar Special Armed Police Bill) 2021 ಅನ್ನು ಇತ್ತೀಚೆಗೆ ಪ್ರತಿಪಕ್ಷಗಳ ಪ್ರತಿಭಟನೆಯ ನಡುವೆ ಅಂಗೀಕರಿಸಲಾಯಿತು.

 

 • ಮಸೂದೆಯು ಸುರಕ್ಷತೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ, ಮತ್ತು ಇದು ಕೆಲವು ನಿರ್ದಿಷ್ಟ ಪ್ರದೇಶಗಳಿಗೆ ಮಾತ್ರ ಅನ್ವಯವಾಗುವುದರಿಂದ ಸೀಮಿತ ವ್ಯಾಪ್ತಿಯನ್ನು ಹೊಂದಿದೆ.

 

ಮಸೂದೆಯ ಪ್ರಮುಖ ಉದ್ದೇಶ:

ಅಭಿವೃದ್ಧಿಯ ಅಗತ್ಯತೆಗಳನ್ನು ಪೂರೈಸಲು ಮತ್ತು ರಾಜ್ಯದ ಹೆಚ್ಚಿನ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು “ಬಿಹಾರ ಮಿಲಿಟರಿ ಪೊಲೀಸರನ್ನು” ಅತ್ಯುತ್ತಮ ತರಬೇತಿ ಪಡೆದ ಮತ್ತು ಸಂಪೂರ್ಣ ಶಸ್ತ್ರಸಜ್ಜಿತ ಮಾನದಂಡಗಳೊಂದಿಗೆ ಬಹು-ವಲಯದ ವಿಶೇಷ ‘ಸಶಸ್ತ್ರ ಪೊಲೀಸ್ ಪಡೆ’ಗಳಾಗಿ ಅಭಿವೃದ್ಧಿಪಡಿಸುವುದು ಈ ಮಸೂದೆಯ ಉದ್ದೇಶವಾಗಿದೆ.

 

ಪ್ರಮುಖ ನಿಬಂಧನೆಗಳು:

 • ಈ ಮಸೂದೆಯಡಿಯಲ್ಲಿ ಬಿಹಾರ ಮಿಲಿಟರಿ ಪೊಲೀಸ್’ ಅನ್ನು ‘ಬಿಹಾರ ವಿಶೇಷ ಸಶಸ್ತ್ರ ಪೊಲೀಸ್’ ಎಂದು ಮರುನಾಮಕರಣ ಮಾಡಲಾಗಿದ್ದು, ಇದಕ್ಕಾಗಿ ‘ಕೇಂದ್ರ ಕೈಗಾರಿಕಾ ಭದ್ರತಾ ಪಡೆ’ (CISF) ಮಾದರಿಯಲ್ಲಿ ಹೆಚ್ಚಿನ ಶಕ್ತಿಯನ್ನು ಒದಗಿಸಲಾಗಿದ್ದು, ‘ಬಿಹಾರ ವಿಶೇಷ ಸಶಸ್ತ್ರ ಪೊಲೀಸ್’ ಪಡೆಯು ರಾಜ್ಯದ ವಾಣಿಜ್ಯ ಮತ್ತು ಕೈಗಾರಿಕಾ ಆಸ್ತಿಗಳನ್ನು ಉತ್ತಮವಾಗಿ ರಕ್ಷಿಸಲು ಸಾಧ್ಯವಾಗುತ್ತದೆ.
 • ‘ಬಿಹಾರ ವಿಶೇಷ ಸಶಸ್ತ್ರ ಪೊಲೀಸ್’ ಪಡೆಯ ಕಾರ್ಯವು ಅಧಿಸೂಚಿತ ಕಾರ್ಯವಿಧಾನದ ಪ್ರಕಾರ ‘ಸಾರ್ವಜನಿಕ ಸುವ್ಯವಸ್ಥೆ ಕಾಪಾಡುವುದು, ಉಗ್ರವಾದವನ್ನು ನಿಭಾಯಿಸುವುದು, ಅಧಿಸೂಚಿತ ಸಂಸ್ಥೆಗಳಿಗೆ ಉತ್ತಮ ಭದ್ರತೆಯನ್ನು ಖಚಿತಪಡಿಸುವುದು’. ಮತ್ತು ಇದಕ್ಕಾಗಿ ಅಧಿಸೂಚಿಸಬಹುದಾದಂತಹ ಇತರ ಕರ್ತವ್ಯಗಳನ್ನು ನಿರ್ವಹಿಸುವುದು ಆಗಿದೆ.
 • ಮಸೂದೆಯಲ್ಲಿ, ‘ವಿಶೇಷ ಸಶಸ್ತ್ರ ಪೊಲೀಸ್ ಅಧಿಕಾರಿಗಳಿಗೆ’ ವಾರಂಟ್ ಇಲ್ಲದೆ ಶೋಧ ಕಾರ್ಯ ಕೈಗೊಳ್ಳಲು ಮತ್ತು ಬಂಧಿಸಲು ಅಧಿಕಾರ ನೀಡಲಾಗಿದೆ.
 • ಸರ್ಕಾರದ ಅನುಮೋದನೆಯ ನಂತರವೇ ನ್ಯಾಯಾಲಯವು ಈ ಅಧಿಕಾರಿಗಳು ಮಾಡಿದ ಕೆಲವು ಅಪರಾಧಗಳನ್ನು ಅರಿತುಕೊಳ್ಳಬಹುದಾಗಿದೆ.

 

ಇದರ ಅವಶ್ಯಕತೆ:

ಕಳೆದ ಒಂದು ದಶಕದಲ್ಲಿ, ಕೇಂದ್ರ ಪಡೆಗಳ ಮೇಲೆ ರಾಜ್ಯದ ಅವಲಂಬನೆ ಹೆಚ್ಚಾಗಿದೆ. ಆದ್ದರಿಂದ ರಾಜ್ಯವು ತನ್ನದೇ ಆದ ಸಂಘಟಿತ ಸಶಸ್ತ್ರ ಪೊಲೀಸ್ ಪಡೆ ಹೊಂದುವುದರಿಂದ ಸರ್ಕಾರದ ವೆಚ್ಚವನ್ನು ಉಳಿಸುತ್ತದೆ ಮತ್ತು ಸ್ಥಳೀಯ ಜನರಿಗೆ ಹೆಚ್ಚಿನ ಉದ್ಯೋಗ ಅವಕಾಶಗಳನ್ನು ಸಹ ಸೃಷ್ಟಿಸುತ್ತದೆ.

 

ಸಂಬಂಧಿತ ಸಮಸ್ಯೆಗಳು ಮತ್ತು ಕಳವಳಗಳು:

 • ಮಸೂದೆ ಕೆಲವು ಸಂದರ್ಭಗಳಲ್ಲಿ ಪೊಲೀಸ್ ಸಿಬ್ಬಂದಿಗೆ ‘ಕಡಿವಾಣವಿಲ್ಲದ ಅಧಿಕಾರ’(absolute powers) ವನ್ನು ಒದಗಿಸುತ್ತದೆ.
 • ಕೆಲವು ಅಪವಾದಗಳನ್ನು ಹೊರತುಪಡಿಸಿ, ವಿಶೇಷ ಸಶಸ್ತ್ರ ಪೊಲೀಸ್ ಅಧಿಕಾರಿ ಗಂಭೀರ ಪ್ರಕರಣದಲ್ಲಿ ಭಾಗಿಯಾಗಿದ್ದರೆ, ನ್ಯಾಯಾಲಯವು ಸರ್ಕಾರದ ಅನುಮತಿಯಿಲ್ಲದೆ ಅದರ ಕುರಿತು ಅರಿತುಕೊಳ್ಳಲು ಸಾಧ್ಯವಿಲ್ಲ ಎಂದು ಕಾಯಿದೆಯ 15ನೆ ಸೆಕ್ಷನ್ ಹೇಳುತ್ತದೆ.
 • ಈ ಮಸೂದೆ ಕೆಲವು ಪ್ರದೇಶಗಳಿಗೆ ಮಾತ್ರ ಅನ್ವಯಿಸುತ್ತದೆ ಎಂದು ಸರ್ಕಾರ ಹೇಳುತ್ತದೆ, ಆದರೆ ಆ ಪ್ರದೇಶಗಳು ಯಾವವು ಎಂದು ನಿರ್ದಿಷ್ಟಪಡಿಸಲಾಗಿಲ್ಲ ಅಥವಾ ಈ ಪ್ರದೇಶಗಳನ್ನು ಯಾವ ಆಧಾರದ ಮೇಲೆ ಗುರುತಿಸಲಾಗುವುದು ಎಂದು ಸ್ಪಷ್ಟಪಡಿಸಿಲ್ಲ.

 


ವಿಷಯಗಳು : ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಸಾಂಪ್ರದಾಯಿಕ ಪ್ರವಾಸಿ ತಾಣಗಳ ಅಭಿವೃದ್ಧಿ ಯೋಜನೆ:

(Development of Iconic Tourist Destinations Scheme)

 

ಸಂದರ್ಭ:

ಮಧ್ಯಪ್ರದೇಶ ಪ್ರವಾಸೋದ್ಯಮ ಮತ್ತು ‘ಭಾರತ ಸಮಾವೇಶ ಪ್ರಚಾರ ಮಂಡಳಿಯ’ (INDIA CONVENTION PROMOTION BUREAU) ಸಹಯೋಗದೊಂದಿಗೆ ದೇಶದ ಪ್ರವಾಸೋದ್ಯಮ ಸಚಿವಾಲಯವು ಮಧ್ಯಪ್ರದೇಶದ ಖಜುರಾಹೊದಲ್ಲಿ ಮೈಸ್ ರೋಡ್ ಶೋ  (‘MICE’ ಎಂದರೆ: MICE ಎಂದರೆ Meetings (ಸಭೆಗಳು), Incentives (ಪ್ರೋತ್ಸಾಹಕಗಳು), Conferences(ಸಮಾವೇಶಗಳು ) ಮತ್ತು Exhibition (ಪ್ರದರ್ಶನ)) ಮೀಟ್ ಇನ್ ಇಂಡಿಯಾಕಾರ್ಯಕ್ರಮವನ್ನು ಆಯೋಜಿಸುತ್ತಿದೆ.  

 

ಈ ಯೋಜನೆಯ ಕುರಿತು:

 • ದೇಶದಲ್ಲಿ ಸಮಗ್ರ ವಿಧಾನವನ್ನು ಅಳವಡಿಸಿಕೊಂಡು ಗುರುತಿಸಲ್ಪಟ್ಟ ಅಪ್ರತಿಮ ಪ್ರವಾಸಿ ತಾಣಗಳ ಅಭಿವೃದ್ಧಿಗಾಗಿ ಇರುವ ಇದು ಕೇಂದ್ರ ಪುರಸ್ಕೃತ ಯೋಜನೆಯಾಗಿದೆ.
 • ಈ ಯೋಜನೆಯು ಭಾರತದಲ್ಲಿ ಪ್ರವಾಸೋದ್ಯಮದ ಒಳಹರಿವನ್ನು ಹೆಚ್ಚಿಸಲು ಮತ್ತು ಇತರ ಪ್ರವಾಸಿ ತಾಣಗಳಿಗೆ ಮಾದರಿಯಾಗಿ ಕಾರ್ಯನಿರ್ವಹಿಸುವ ಗುರಿಯನ್ನು ಹೊಂದಿದೆ.
 • ಈ ಯೋಜನೆಗೆ ನೋಡಲ್ ಸಂಸ್ಥೆ ಪ್ರವಾಸೋದ್ಯಮ ಸಚಿವಾಲಯ ವಾಗಿದ್ದು, ನಾಗರಿಕ ವಿಮಾನಯಾನ ಸಚಿವಾಲಯ, ರೈಲ್ವೆ ಇತ್ಯಾದಿ ಸಚಿವಾಲಯಗಳನ್ನು ಸಹ ಒಳಗೊಂಡಿದೆ.

 

ಖುಜರಾಹೋ ದೇವಾಲಯಗಳ ಕುರಿತು:

 • ಖಜುರಾಹೊ ದೇವಾಲಯಗಳು ದೇಶದ ಅತ್ಯಂತ ಸುಂದರವಾದ ಮಧ್ಯಕಾಲೀನ ಸ್ಮಾರಕಗಳಾಗಿವೆ. ಈ ದೇವಾಲಯಗಳನ್ನು ಕ್ರಿ.ಶ 900 ಮತ್ತು 1130 ರ ನಡುವೆ ಚಂದೇಲಾ ದೊರೆಗಳು ನಿರ್ಮಿಸಿದ್ದಾರೆ.
 • ಈ ದೇವಾಲಯಗಳು ಕಾಮಪ್ರಚೋದಕ ಶಿಲ್ಪಗಳಿಗೆ ವಿಶ್ವಪ್ರಸಿದ್ಧವಾಗಿವೆ. ಖಜುರಾಹೊ ದೇವಾಲಯಗಳ ಬಗ್ಗೆ ಮೊದಲ ಲಿಖಿತ ಉಲ್ಲೇಖವು ಕ್ರಿ.ಶ 1022 ರಲ್ಲಿ ಅಬು ರಿಹಾನ್ ಅಲ್-ಬಿರುನಿ ಮತ್ತು ಕ್ರಿ.ಶ 1335 ರಲ್ಲಿ ಅರಬ್ ಪ್ರವಾಸಿ ಇಬ್ನ್ ಬಟುಟಾ ಅವರ ಬರವಣಿಗೆಗಳಲ್ಲಿ ಕಂಡುಬರುತ್ತದೆ.
 • ಖಜುರಾಹೊ ದೇವಾಲಯಗಳ ಸಮೂಹಗಳನ್ನು ಏಕಕಾಲದಲ್ಲಿ ನಿರ್ಮಿಸಲಾಯಿತು, ಆದರೆ ಈ ದೇವಾಲಯಗಳನ್ನು ಹಿಂದೂ ಮತ್ತು ಜೈನ ಎಂಬ ಎರಡು ಧರ್ಮಗಳಿಗೆ ಸಮರ್ಪಿಸಲಾಯಿತು, ಇದು ಈ ಪ್ರದೇಶದ ಹಿಂದೂಗಳು ಮತ್ತು ಜೈನರಲ್ಲಿ ಇರುವ ವೈವಿಧ್ಯಮಯ ಧಾರ್ಮಿಕ ದೃಷ್ಟಿಕೋನಗಳನ್ನು ಸ್ವೀಕರಿಸುವ ಮತ್ತು ಗೌರವಿಸುವ ಸಂಪ್ರದಾಯವನ್ನು ಸೂಚಿಸುತ್ತದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ 3:


ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ಜಾಗೃತಿ.

 

ಏನಿದು ನಾಸಾ ಮತ್ತು ಇಸ್ರೋದ ಜಂಟಿ ಭೂ- ವೀಕ್ಷಣಾ/ ಕಣ್ಗಾವಲು ನಿಸಾರ್ ಯೋಜನೆ?

(What is NISAR, the joint Earth-Observing mission of NASA and ISRO?)

 

ಸಂದರ್ಭ:

ನಾಸಾ ಮತ್ತು ಇಸ್ರೋ ಜಂಟಿಯಾಗಿ ನಿಸಾರ್ (NASA-ISRO Synthetic Aperture Radar satellite -NISAR) ಎಂಬ ಉಪಗ್ರಹವನ್ನು ಅಭಿವೃದ್ಧಿಪಡಿಸಲು ಸಹಕಾರದಿಂದ ಕೆಲಸ ಮಾಡುತ್ತಿವೆ.

 

ನಿಸಾರ್ ಕುರಿತು:

 • 2022 ರಲ್ಲಿ ಭಾರತದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಧ್ರುವೀಯ ಕಕ್ಷೆಗೆ (near-polar orbit) ಈ ಉಪಗ್ರಹವನ್ನು ಉಡಾಯಿಸಲಾಗುವುದು.
 • ಈ ಉಪಗ್ರಹವು ತನ್ನ ಮೂರು ವರ್ಷಗಳ ಕಾರ್ಯಾಚರಣೆಯಲ್ಲಿ ಪ್ರತಿ 12 ದಿನಗಳಿಗೊಮ್ಮೆ ಇಡೀ ಭೂ ಗ್ರಹವನ್ನು ನಿಕಟವಾಗಿ ಸ್ಕ್ಯಾನ್ ಮಾಡುತ್ತದೆ. ಭೂಮಿಯ ಮೇಲಿನ ಭೂಮಿ/ನೆಲ, ಐಸ್ ಶೀಟ್‌ಗಳು ಮತ್ತು ಸಮುದ್ರದ ಮಂಜುಗಡ್ಡೆಯನ್ನು ಚಿತ್ರಿಸುವ ಮೂಲಕ ಉಪಗ್ರಹವು ತನ್ನ ಕಾರ್ಯಾಚರಣೆಯ ಸಮಯದಲ್ಲಿ ಗ್ರಹದ ‘ಅಭೂತಪೂರ್ವ’ ನೋಟವನ್ನು ಒದಗಿಸುತ್ತದೆ.
 • ಈ ಉಪಗ್ರಹವು ಟೆನಿಸ್ ಕೋರ್ಟ್‌ನ ಅರ್ಧದಷ್ಟು ಗಾತ್ರದ ಯಾವುದೇ ಪ್ರದೇಶದಲ್ಲಿನ ಗ್ರಹದ ಮೇಲ್ಮೈ ನಲ್ಲಿನ ಯಾವುದೇ ಚಟುವಟಿಕೆಯನ್ನು 0.4 ಇಂಚುಗಳಷ್ಟು ಚಿಕ್ಕದಾಗಿದ್ದರೂ ಪತ್ತೆ ಮಾಡುತ್ತದೆ.
 • ನಾಸಾ ಈ ಉಪಗ್ರಹಕ್ಕಾಗಿ ಒಂದು ರಾಡಾರ್, ವಿಜ್ಞಾನ ದತ್ತಾಂಶಕ್ಕಾಗಿ ಹೆಚ್ಚಿನ ದರದ ಸಂವಹನ ಉಪವ್ಯವಸ್ಥೆ, ಜಿಪಿಎಸ್ ರಿಸೀವರ್ ಮತ್ತು ಪೇಲೋಡ್ ಡೇಟಾ ಉಪವ್ಯವಸ್ಥೆಯನ್ನು ಒದಗಿಸುತ್ತದೆ.
 • ಇಸ್ರೋ ಬಾಹ್ಯಾಕಾಶ ನೌಕೆ ಬಸ್ಸುಗಳು, ಇತರ ರೀತಿಯ ರಾಡಾರ್‌ಗಳು (ಎಸ್-ಬ್ಯಾಂಡ್ ರಾಡಾರ್‌ಗಳು), ಉಡಾವಣಾ ವಾಹನಗಳು ಮತ್ತು ಉಡಾವಣಾ ಸೇವೆಗಳನ್ನು ಒದಗಿಸುತ್ತದೆ.
 • ನಿಸಾರ್ ಉಪಗ್ರಹವು ನಾಸಾ ಆರಂಭ ಮಾಡಿದ ಅತಿದೊಡ್ಡ ಪ್ರತಿಫಲಕ ಆಂಟೆನಾವನ್ನು ಹೊಂದಿರುತ್ತದೆ, ಮತ್ತು ಇದರ ಮುಖ್ಯ ಉದ್ದೇಶ ಭೂಮಿಯ ಮೇಲ್ಮೈಯಲ್ಲಿ ಸೂಕ್ಷ್ಮ ಬದಲಾವಣೆಗಳನ್ನು ಮೇಲ್ವಿಚಾರಣೆ ಮಾಡುವುದು, ಜ್ವಾಲಾಮುಖಿ ಸ್ಫೋಟಗಳ ಬಗ್ಗೆ ಎಚ್ಚರಿಕೆ ಸಂಕೇತಗಳನ್ನು ಕಳುಹಿಸುವುದು, ಅಂತರ್ಜಲ ಸರಬರಾಜನ್ನು ಮೇಲ್ವಿಚಾರಣೆ ಮಾಡುವುದು, ಐಸ್ ಶೀಟ್‌ಗಳ ಕರಗುವಿಕೆಯ ದರವನ್ನು ಪತ್ತೆ ಹಚ್ಚಲು ಸಹಾಯ ಮಾಡುವುದು ಇತ್ಯಾದಿಗಳು ಇದರ ಪ್ರಮುಖ ಗುರಿಗಳಾಗಿವೆ.

 

ಸಿಂಥೆಟಿಕ್ ಅಪರ್ಚರ್ ರಾಡಾರ್:

 • ನಿಸಾರ್ (NISAR) ಎಂಬುದು ನಾಸಾ-ಇಸ್ರೋ ಸಿಂಥೆಟಿಕ್ ಅಪರ್ಚರ್ ರಾಡಾರ್ ನ [NASA-ISRO Synthetic Aperture Radar satellite (SAR)] ಸಂಕ್ಷಿಪ್ತ ರೂಪವಾಗಿದೆ. ಭೂಮಿಯ ಮೇಲ್ಮೈಯಲ್ಲಿನ ಬದಲಾವಣೆಗಳನ್ನು ಅಳೆಯಲು ನಾಸಾ ಬಳಸುವ ಸಂಶ್ಲೇಷಿತ ದ್ಯುತಿ ರಂಧ್ರ ರೆಡಾರ್ ಅನ್ನು ಇಲ್ಲಿ SAR (ಸಿಂಥೆಟಿಕ್ ಅಪರ್ಚರ್ ರಾಡಾರ್) ಎಂಬುದು ಸೂಚಿಸುತ್ತದೆ.
 • ಸಿಂಥೆಟಿಕ್ ಅಪರ್ಚರ್ ರೇಡಾರ್ (SAR) ಮುಖ್ಯವಾಗಿ ಹೆಚ್ಚಿನ ರೆಸಲ್ಯೂಶನ್ ಚಿತ್ರಗಳನ್ನು ಸೆರೆಹಿಡಿಯುವ ತಂತ್ರವನ್ನು ಸೂಚಿಸುತ್ತದೆ. ಹೆಚ್ಚಿನ ನಿಖರತೆಯಿಂದಾಗಿ, ಇದು ರಾಡಾರ್, ಮೋಡಗಳು ಮತ್ತು ಕತ್ತಲೆಯನ್ನು ಸಹ ಭೇದಿಸುತ್ತದೆ, ಅಂದರೆ ಇದು ಹಗಲು ರಾತ್ರಿ ಎನ್ನದೆ ಯಾವುದೇ ಋತುವಿನಲ್ಲೂ  ಅಥವಾ ಯಾವುದೇ ಹವಾಮಾನ ಪರಿಸ್ಥಿತಿಯಲ್ಲೂ ಕೂಡ  ಡೇಟಾವನ್ನು ಸಂಗ್ರಹಿಸುತ್ತದೆ.

 

 


 

ವಿಷಯಗಳು: ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ, ಕಂಪ್ಯೂಟರ್, ರೊಬೊಟಿಕ್ಸ್, ನ್ಯಾನೊ-ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ವಿಷಯಗಳಿಗೆ ಸಂಬಂಧಿಸಿದಂತೆ ಜಾಗೃತಿ.

ಆರ್‌ಒಸಿಗಳನ್ನು ಸಲ್ಲಿಸುವಾಗ ಕ್ರಿಪ್ಟೋಕರೆನ್ಸಿ ಹೋಲ್ಡಿಂಗ್‌ಗಳನ್ನು ಕಡ್ಡಾಯವಾಗಿ ಬಹಿರಂಗಪಡಿಸಲು ಕೇಂದ್ರ ಏಕೆ ಬಯಸಿದೆ?

(Why Centre wants cryptocurrency holdings mandatorily disclosed in RoC filings?)

 

 

ಸಂದರ್ಭ:

ಇತ್ತೀಚೆಗೆ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಪ್ರಕಟಣೆಯ ಪ್ರಕಾರ, ಕಂಪನಿಗಳು ತಮ್ಮ ಹಣಕಾಸಿನ ಹೇಳಿಕೆಗಳನ್ನು ಕಂಪನಿಗಳ ರಿಜಿಸ್ಟ್ರಾರ್ (Registrar of Companies– RoC) ಗೆ ಸಲ್ಲಿಸುವಾಗ ಕ್ರಿಪ್ಟೋಕರೆನ್ಸಿಗಳು ಅಥವಾ ವರ್ಚುವಲ್ ಕರೆನ್ಸಿಗಳಿಗೆ ಸಂಬಂಧಿಸಿದ ಸ್ವತ್ತುಗಳು ಅಥವಾ ವ್ಯವಹಾರಗಳನ್ನು ಬಹಿರಂಗಪಡಿಸುವುದು ಕಡ್ಡಾಯವಾಗಿರುತ್ತದೆ.

 

ಈ ಸೇರ್ಪಡೆಯು ಏನನ್ನು ಸೂಚಿಸುತ್ತದೆ?

ಭಾರತದಲ್ಲಿ ಕ್ರಿಪ್ಟೋ ಸ್ವತ್ತುಗಳನ್ನು ನಿಯಂತ್ರಿಸುವಲ್ಲಿ ಇದು ಒಂದು ಪ್ರಮುಖ ಹೆಜ್ಜೆಯಾಗಿದೆ ಮತ್ತು ಇದು ಕ್ರಿಪ್ಟೋಕರೆನ್ಸಿಯಲ್ಲಿನ ಹೂಡಿಕೆಗಳನ್ನು ವರದಿ ಮಾಡುವಲ್ಲಿ / ಸಲ್ಲಿಸುವಲ್ಲಿ ಸಾಕಷ್ಟು ಪಾರದರ್ಶಕತೆಯನ್ನು ತರುತ್ತದೆ. ಇಲ್ಲಿಯವರೆಗೆ, ಕ್ರಿಪ್ಟೋಕರೆನ್ಸಿಗಳನ್ನು ನಿಷೇಧಿಸಲು ಸರ್ಕಾರ ಯೋಜಿಸುತ್ತಿತ್ತು.

 

ಕ್ರಿಪ್ಟೋಕರೆನ್ಸಿ ಎಂದರೇನು?

ಕ್ರಿಪ್ಟೋಕರೆನ್ಸಿಗಳು ಒಂದು ರೀತಿಯ ಡಿಜಿಟಲ್ ಕರೆನ್ಸಿಯಾಗಿದ್ದು, ಇದನ್ನು ಕ್ರಿಪ್ಟೋಗ್ರಫಿ ನಿಯಮಗಳ ಆಧಾರದ ಮೇಲೆ ನಿರ್ವಹಿಸಲಾಗುತ್ತದೆ ಮತ್ತು ರಚಿಸಲಾಗುತ್ತದೆ. ಕ್ರಿಪ್ಟೋಗ್ರಫಿ ಎನ್ನುವುದು ಕೋಡಿಂಗ್ ಭಾಷೆಯನ್ನು ಡಿ ಕೋಡಿಂಗ್ ಮಾಡುವ ಅಥವಾ ಪರಿಹರಿಸುವ ಕಲೆ. ಇದು ಎಲೆಕ್ಟ್ರಾನಿಕ್ ನಗದು ವ್ಯವಸ್ಥೆಯಾಗಿದ್ದು, ಇದರಲ್ಲಿ ಯಾವುದೇ ಹಣಕಾಸು ಸಂಸ್ಥೆಯ ಮಧ್ಯಸ್ಥಿಕೆ ಇಲ್ಲದೆ ಒಂದು ಪಕ್ಷವು ಇನ್ನೊಂದು ಪಕ್ಷಕ್ಕೆ ಆನ್‌ಲೈನ್ ಪಾವತಿ ಮಾಡುತ್ತದೆ ಅಂದರೆ ಇದು ಕೇಂದ್ರ ಬ್ಯಾಂಕಿನ ಅಧೀನಕ್ಕೊಳಪಡದೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತದೆ.

 

 

ಉದಾಹರಣೆಗಳು: ಬಿಟ್‌ಕಾಯಿನ್, ಎಥೆರಿಯಮ್ (Ethereum) ಇತ್ಯಾದಿಗಳು.

 


ವಿಷಯಗಳು: ಸಂರಕ್ಷಣೆ, ಪರಿಸರ ಮಾಲಿನ್ಯ ಮತ್ತು ಅವನತಿ, ಪರಿಸರ ಪ್ರಭಾವದ ಮೌಲ್ಯಮಾಪನ.

 

ಹುಲಿ ಪುನರ್ವಸತಿ / ಸ್ಥಳಾಂತರ ಯೋಜನೆ:

 (Tiger Relocation Project)

 

ಸಂದರ್ಭ:

ಭಾರತದಲ್ಲಿ ಮೊದಲ ಅಂತರ್-ರಾಜ್ಯ ‘ಹುಲಿ ಸ್ಥಳಾಂತರ ಯೋಜನೆ’ ಯನ್ನು 2018 ರಲ್ಲಿ ಪ್ರಾರಂಭಿಸಲಾಯಿತು, ಇದರ ಅಡಿಯಲ್ಲಿ ಮಧ್ಯಪ್ರದೇಶದ “ಕನ್ಹಾ ಹುಲಿ ಸಂರಕ್ಷಿತ / ಮೀಸಲು ಪ್ರದೇಶ” ದಿಂದ (Kanha Tiger Reserve) ‘ಮಹಾವೀರ್ಎಂಬ ಗಂಡು ಹುಲಿ ಮತ್ತು ಮಧ್ಯಪ್ರದೇಶದ ‘ಬಾಂಧವ್‌ಗಡ್ ಟೈಗರ್ ರಿಸರ್ವ್’ ನಿಂದ ಸುಂದರಿ ಎಂಬ  ಒಂದು ಹೆಣ್ಣು ಹುಲಿಯನ್ನು  ಒಡಿಶಾ ರಾಜ್ಯದಲ್ಲಿ ಹುಲಿಗಳ ಸಂಖ್ಯೆಯನ್ನು ಹೆಚ್ಚಿಸುವ ಉದ್ದೇಶದಿಂದ ಒಡಿಶಾದ ಸತ್ಕೋಶಿಯ ಹುಲಿ ಅಭಯಾರಣ್ಯಕ್ಕೆ ಸ್ಥಳಾಂತರಿಸಲಾಯಿತು.

 

ಇದರ ಅವಶ್ಯಕತೆ:

ಈ ಪುನರ್ವಸತಿಯ ಉದ್ದೇಶವು ಎರಡು ಉದ್ದೇಶಗಳನ್ನು ಪೂರೈಸುವುದಾಗಿದೆ:

 

 • ಹೆಚ್ಚಿನ ಸಂಖ್ಯೆಯಲ್ಲಿ ಹುಲಿಗಳು ಇರುವ ಪ್ರದೇಶಗಳಿಂದ, ಹುಲಿಗಳ ಸಂಖ್ಯೆಯನ್ನು ಕಡಿಮೆ ಮಾಡುವುದು, ಆಮೂಲಕ ಹುಲಿಗಳ ಆವಾಸಸ್ಥಾನದ ಗಡಿ ವಿವಾದಗಳನ್ನು (reduce territorial disputes) ಕಡಿಮೆ ಮಾಡುವುದು.
 • ವಿವಿಧ ಕಾರಣಗಳಿಂದ ಹುಲಿಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾದ ಪ್ರದೇಶಗಳಲ್ಲಿ ಹುಲಿಗಳ ಸಂಖ್ಯೆಯನ್ನು ಹೆಚ್ಚಿಸಲು ಇದನ್ನು ಮತ್ತೆ ಪರಿಚಯಿಸುವುದು.

ಸುದ್ದಿಯಲ್ಲಿರಲು ಕಾರಣ?

ಇತ್ತೀಚೆಗೆ, ಹೆಣ್ಣು ಹುಲಿ ಸುಂದರಿಯನ್ನು ಮಧ್ಯಪ್ರದೇಶಕ್ಕೆ ಮರಳಿ ಸ್ಥಳಾಂತರಿಸಲಾಗಿದೆ . ಅಭಯಾರಣ್ಯದ ಅಂಚಿನಲ್ಲಿ ವಾಸಿಸುವ ಗ್ರಾಮಸ್ಥರ ತೀವ್ರ ವಿರೋಧದಿಂದಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.

 

ಸತ್ಕೋಶಿಯ ಹುಲಿ ಮೀಸಲು ಪ್ರದೇಶ ಎಂದರೇನು ಮತ್ತು ಅದನ್ನೇ ಏಕೆ ಆಯ್ಕೆ ಮಾಡಲಾಯಿತು?

 • ಇದು ಒಡಿಶಾದಲ್ಲಿದೆ.
 • ಸತ್ಕೋಶಿಯ ಮೀಸಲು ಅರಣ್ಯ ಪ್ರದೇಶಗಳ ಅಡಿಯಲ್ಲಿ ಬರುತ್ತದೆ, ಇದು ಹುಲಿಗಳ ಸಂಖ್ಯೆಯನ್ನು ಹೆಚ್ಚಿಸುವ ಸಾಮರ್ಥ್ಯವನ್ನು ಹೊಂದಿದೆ.
 • ಇದನ್ನು 2007 ರಲ್ಲಿ ಹುಲಿ ಮೀಸಲು ಪ್ರದೇಶವೆಂದು ಘೋಷಿಸಲಾಯಿತು, ಆ ಸಮಯದಲ್ಲಿ ಅಲ್ಲಿನ ಹುಲಿಗಳ ಸಂಖ್ಯೆ 12 ಆಗಿದ್ದು, ಅದು 2018 ರಲ್ಲಿ ಕೇವಲ ಎರಡಕ್ಕೆ ಇಳಿದಿದೆ.
 • ಈ ಪುನರ್ವಸತಿಯ ಉದ್ದೇಶ ಮೀಸಲು ಪ್ರದೇಶಗಳಲ್ಲಿ ಹುಲಿಗಳ ಸಂಖ್ಯೆಯನ್ನು ಹೆಚ್ಚಿಸುವುದಾಗಿದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

ಶಿಗ್ಮೋ ಎಂದರೇನು?

(What is Shigmo?)

 

ಸಂದರ್ಭ:

ಶಿಗ್ಮೋ ಗೋವಾದ ಬುಡಕಟ್ಟು ಸಮುದಾಯಗಳು ಆಚರಿಸುವ ‘ಭತ್ತದ, ಶ್ರೀಮಂತ, ಭತ್ತದ ಸುಗ್ಗಿಯ’ ಆಚರಣೆಯಾಗಿದೆ. ಇದು ಗೋವಾದ ಸಂಸ್ಕೃತಿ ಮತ್ತು ಸಂಪ್ರದಾಯಗಳಲ್ಲಿ ಬೇರೂರಿರುವ ಬಣ್ಣ, ಹಾಡು ಮತ್ತು ನೃತ್ಯಗಳಿಂದ ತುಂಬಿದ ರೋಮಾಂಚಕ ಆಚರಣೆಯಾಗಿದೆ.

 • ಕುನ್ಬಿಗಳು, ಗೌಡ ಮತ್ತು ವೆಲಿಪ್ ಸೇರಿದಂತೆ ವಿವಿಧ ಕೃಷಿ ಸಮುದಾಯಗಳು ಈ ಹಬ್ಬವನ್ನು ಆಚರಿಸುತ್ತವೆ, ಇದು ವಸಂತಕಾಲದ ಆರಂಭವನ್ನೂ ಸಹ ಸೂಚಿಸುತ್ತದೆ.
 • ಈ ಉತ್ಸವದಲ್ಲಿ ಭಾಗವಹಿಸುವ ಸಮುದಾಯಗಳಿಂದ ಘೋಡೆ ಮೋಡಿನಿ( Ghode modini ) ಕುದುರೆ ಸವಾರಿ ಯೋಧರ ನೃತ್ಯ), ಗೊಫಾ ಮತ್ತು ಫುಗಾಡಿ ಎಂಬ ಮುಂತಾದ ಜಾನಪದ ನೃತ್ಯಗಳನ್ನು ಪ್ರದರ್ಶಿಸಲಾಗುತ್ತದೆ.

 

 

 


Join our Official Telegram Channel HERE for Motivation and Fast Updates

Subscribe to our YouTube Channel HERE to watch Motivational and New analysis videos