Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 26 ಮಾರ್ಚ್ 2021

ಪರಿವಿಡಿ :

 ಸಾಮಾನ್ಯ ಅಧ್ಯಯನ ಪತ್ರಿಕೆ 2:  

1. ಅಧಿವೇಶನದ ಮುಕ್ತಾಯ.

2. ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಸಲಹೆ ನೀಡಿದ ಸುಪ್ರೀಂ ಕೋರ್ಟ್.

3. ಅಂಚೆ ಮತಪತ್ರಗಳು ಎಂದರೇನು?

4. ಆರ್ ಟಿ – ಪಿ ಸಿ ಆರ್.

5. ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳ ಕಾರ್ಮಿಕರಿಗಾಗಿ ರಾಜ್ಯ ಕಲ್ಯಾಣ ಮಂಡಳಿಗಳು (BOCW).

6. ದಕ್ಷಿಣ ಚೀನಾ ಸಮುದ್ರ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಸೂಯೆಜ್ ಕಾಲುವೆ.

2. ಕೇಂದ್ರ ಸರ್ಕಾರದ ಪರಿಶೀಲನಾ ಕೇಂದ್ರ (CSC).

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯಗಳು: ಸಂಸತ್ತು ಮತ್ತು ರಾಜ್ಯ ಶಾಸಕಾಂಗಗಳು – ರಚನೆ, ಕಾರ್ಯವೈಖರಿ, ವ್ಯವಹಾರದ ನಡಾವಳಿಗಳು, ಅಧಿಕಾರಗಳು ಮತ್ತು ಸವಲತ್ತುಗಳು ಮತ್ತು ಇವುಗಳಿಂದ ಉಂಟಾಗುವ ಸಮಸ್ಯೆಗಳು.

ಅಧಿವೇಶನದ ಮುಕ್ತಾಯ:


(Termination of Session)

 ಅಸ್ತಿತ್ವದಲ್ಲಿರುವ ಸಂಸತ್ತಿನ ಅಧಿವೇಶನವನ್ನು ‘ಮುಂದೂಡಿಕೆ’(Adjournment), ಅನಿರ್ದಿಷ್ಟ ಅವಧಿಯವರೆಗೆ ಮುಂದೂಡಿಕೆ,(Adjournment Sine Die) ಪ್ರೋರೋಗೇಶನ್ (Prorogation), ವಿಸರ್ಜನೆ (Dissolution) (ಲೋಕಸಭೆಯ ಸಂದರ್ಭದಲ್ಲಿ) ಮಾಡುವ ಮೂಲಕ ಕೊನೆಗೊಳಿಸಬಹುದು.

ಮುಂದೂಡಿಕೆ’ (Adjournment): ಇದರ ಅಡಿಯಲ್ಲಿ, ಸದನದ ಅಧಿವೇಶನದ ಕಾರ್ಯಗಳನ್ನು ನಿಗದಿತ ಸಮಯಕ್ಕೆ ಸ್ಥಗಿತಗೊಳಿಸಲಾಗುತ್ತದೆ.ಇದರ ಅಡಿಯಲ್ಲಿ, ಅಮಾನತುಗೊಳಿಸುವ ಅವಧಿಯು ಕೆಲವು ಗಂಟೆಗಳು, ದಿನಗಳು ಅಥವಾ ವಾರಗಳವರೆಗೆ ಇರಬಹುದು.

ಅನಿರ್ದಿಷ್ಟ ಅವಧಿಯವರೆಗೆ ಮುಂದೂಡಿಕೆ, (Adjournment Sine Die): ಇದರರ್ಥ ಸದನದ ಸಭೆಯನ್ನು ಅನಿರ್ದಿಷ್ಟವಾಗಿ ಮುಕ್ತಾಯಗೊಳಿಸುವುದು. ಬೇರೆ ರೀತಿಯಲ್ಲಿ ಹೇಳುವುದಾದರೆ, ಅಧಿವೇಶನದ ಮರು-ಸಮಾವೇಶಕ್ಕೆ ದಿನಾಂಕವನ್ನು ನಿಗದಿಪಡಿಸದೆ ಸದನವನ್ನು ಮುಂದೂಡಲಾಗುವುದು.

 • ಮುಂದೂಡಿಕೆ’ ಮತ್ತು ‘ಅನಿರ್ದಿಷ್ಟವಾಗಿ ಮುಂದೂಡಿಕೆ’ ಯನ್ನು ಘೋಷಿಸುವ ಅಧಿಕಾರವು ಸದನದ ಪ್ರಧಾನ ಅಧಿಕಾರಿ (ಲೋಕಸಭಾ ಸ್ಪೀಕರ್ ಅಥವಾ ರಾಜ್ಯಸಭೆಯ ಅಧ್ಯಕ್ಷರು) ಯವರ ಕೈಲಿದೆ.

ಪ್ರೋರೋಗೇಶನ್ (Prorogation): ಅಧಿವೇಶನದ ಕಾರ್ಯಗಳು ಪೂರ್ಣಗೊಂಡ ನಂತರ, ರಾಷ್ಟ್ರಪತಿಗಳು ಅಧಿವೇಶನದ ಮುಂದೂಡಿಕೆಗೆ ಅಧಿಸೂಚನೆ ಹೊರಡಿಸುತ್ತಾರೆ ಮತ್ತು ಅದರ ನಂತರ ಸಭಾಪತಿಗಳು ಸದನವನ್ನು ಅನಿರ್ದಿಷ್ಟ ಅವಧಿಗೆ ಮುಂದೂಡುವುದನ್ನು ಪ್ರಕಟಿಸುತ್ತಾರೆ. ಅಧಿವೇಶನ ನಡೆಯುತ್ತಿರುವಾಗಲೂ ರಾಷ್ಟ್ರಪತಿಗಳು ಸದನವನ್ನು ಮುಂದೂಡಬಹುದು.

ವಿಸರ್ಜನೆ (Dissolution) : ಸದನದ ವಿಸರ್ಜನೆಯು ಜನರ ಸದನವಾದ ಲೋಕಸಭೆಗೆ ಮಾತ್ರ ಅನ್ವಯಿಸುತ್ತದೆ. ರಾಜ್ಯಸಭೆಯು ಶಾಶ್ವತ ಮನೆ/ಸದನ ವಾಗಿರುವುದರಿಂದ, ವಿಸರ್ಜನೆಯ ನಿಬಂಧನೆಯು ಅದಕ್ಕೆ ಅನ್ವಯಿಸುವುದಿಲ್ಲ.

 • ಅಸ್ತಿತ್ವದಲ್ಲಿರುವ ಸದನದ ಅಧಿಕಾರ ಅವಧಿಯು ವಿಸರ್ಜನೆಯ ಘೋಷಣೆಯ ನಂತರ ಕೊನೆಗೊಳ್ಳುತ್ತದೆ ಮತ್ತು ಸಾರ್ವತ್ರಿಕ ಚುನಾವಣೆಗಳು ನಡೆದ ನಂತರ ಹೊಸ ಸದನವು ರಚನೆಯಾಗುತ್ತದೆ.
 • ಲೋಕಸಭೆಯನ್ನು ವಿಸರ್ಜಿಸುವ ಅಧಿಕಾರ ರಾಷ್ಟ್ರಪತಿಯವರಿಗೆ ಇದೆ.

ಸಂದರ್ಭ:

ಇತ್ತೀಚೆಗೆ, ಪಶ್ಚಿಮ ಬಂಗಾಳ, ತಮಿಳುನಾಡು, ಅಸ್ಸಾಂ, ಪುದುಚೇರಿ ಮತ್ತು ಕೇರಳದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು, ಈ ರಾಜ್ಯಗಳ ಸಂಸದರು ಬಜೆಟ್ ಅಧಿವೇಶನದ ಎರಡನೇ ಭಾಗವನ್ನು ಮೊಟಕುಗೊಳಿಸುವಂತೆ ಮಾಡಿದ ಮನವಿಗಳನ್ನು ಗಮನದಲ್ಲಿಟ್ಟುಕೊಂಡು ಸಂಸತ್ತಿನ ಉಭಯ ಸದನಗಳ ಕಲಾಪವನ್ನು ನಿಗದಿತ ಎರಡು ವಾರಗಳ ಮೊದಲೇ ಅನಿರ್ದಿಷ್ಟವಾಗಿ ಮುಂದೂಡಲಾಯಿತು.

 

ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.

ಹೈಕೋರ್ಟ್‌ಗಳಲ್ಲಿ  ಬಾಕಿ ಉಳಿದಿರುವ ಪ್ರಕರಣಗಳನ್ನು ಇತ್ಯರ್ಥಗೊಳಿಸಲು ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಸಲಹೆ ನೀಡಿದ ಸುಪ್ರೀಂ ಕೋರ್ಟ್:


(SC suggests posting retired judges to clear backlog in HCs)

ಸಂದರ್ಭ:

ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ನಿವೃತ್ತ ನ್ಯಾಯಾಧೀಶರನ್ನು ನೇಮಕ ಮಾಡುವಂತೆ ಸುಪ್ರೀಂ ಕೋರ್ಟ್ ಒತ್ತಾಯಿಸಿದೆ.

 • ನಿವೃತ್ತ ನ್ಯಾಯಾಧೀಶರನ್ನು ನಿರ್ದಿಷ್ಟ ವಿವಾದದ ಕ್ಷೇತ್ರಗಳಲ್ಲಿನ ಪರಿಣತಿಯ ಆಧಾರದ ಮೇಲೆ ಆಯ್ಕೆ ಮಾಡಬಹುದು ಮತ್ತು ಕಾನೂನಿನ ಆ ಕ್ಷೇತ್ರದಲ್ಲಿ ಬಾಕಿ ಇರುವ ಪ್ರಕರಣಗಳು ಇತ್ಯರ್ಥವಾದ ನಂತರ ಅವರನ್ನು ನಿವೃತ್ತಿ ಮಾಡಬಹುದು ಎಂದು ನ್ಯಾಯಾಲಯ ಹೇಳಿದೆ.

ಈ ನಿಟ್ಟಿನಲ್ಲಿನ ಸಾಂವಿಧಾನಿಕ ನಿಬಂಧನೆಗಳು:

ಸಂವಿಧಾನದ 224 ಎ ವಿಧಿಯ ಅಡಿಯಲ್ಲಿ, ತಾತ್ಕಾಲಿಕ ನ್ಯಾಯಾಧೀಶರ (ad-hoc judges) ನೇಮಕಾತಿಗಾಗಿ ಸಂವಿಧಾನದಲ್ಲಿ ನಿಬಂಧನೆಗಳನ್ನು ಒದಗಿಸಲಾಗಿದೆ.

ಅನುಸರಿಸಬೇಕಾದ ಕಾರ್ಯವಿಧಾನ:

 • ಲೇಖನದ ಪ್ರಕಾರ, ಒಂದು ರಾಜ್ಯದ ಹೈಕೋರ್ಟ್‌ನ ಮುಖ್ಯ ನ್ಯಾಯಾಧೀಶರು, ಯಾವುದೇ ಸಮಯದಲ್ಲಿ, ಅಧ್ಯಕ್ಷರ ಪೂರ್ವಾನುಮತಿಯೊಂದಿಗೆ, ಅದೇ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಅಥವಾ ಯಾವುದೇ ಹೈಕೋರ್ಟ್ ನಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ ಯಾವುದೇ ವ್ಯಕ್ತಿಗೆ (ನಿವೃತ್ತ ನ್ಯಾಯಾಧೀಶರಿಗೆ) ಆ ರಾಜ್ಯದ ಹೈಕೋರ್ಟ್‌ನಲ್ಲಿ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಬೇಕೆಂದು  ವಿನಂತಿಸಬಹುದು.
 • ಅಂತಹ ನ್ಯಾಯಾಧೀಶರು ರಾಷ್ಟ್ರಪತಿಗಳು ನಿರ್ಧರಿಸುವಂತಹ ಭತ್ಯೆಗಳನ್ನು ಪಡೆಯಲು ಅರ್ಹರಾಗಿರುತ್ತಾರೆ. ಅಲ್ಲದೆ, ಅವರು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರ ಎಲ್ಲ ನ್ಯಾಯವ್ಯಾಪ್ತಿ, ಅಧಿಕಾರ ಮತ್ತು ಸವಲತ್ತುಗಳನ್ನು ಸಹ ಅನುಭವಿಸುತ್ತಾರೆ. ಆದರೆ, ಅವರನ್ನು ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶರು ಎಂದು ಪರಿಗಣಿಸಲಾಗುವುದಿಲ್ಲ.

 

ವಿಷಯಗಳು: ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಪ್ರಮುಖ ಲಕ್ಷಣಗಳು.

ಅಂಚೆ ಮತಪತ್ರಗಳು ಎಂದರೇನು?


(What are postal ballots?)

ಸಂದರ್ಭ:

ತಮಿಳುನಾಡಿನ ವಿವಿಧ ವಿಧಾನಸಭಾ ಕ್ಷೇತ್ರಗಳಲ್ಲಿ 80 ವರ್ಷಕ್ಕಿಂತ ಮೇಲ್ಪಟ್ಟ ಮತದಾರರಿಗೆ ಅಂಚೆ ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ.

 • ಅಂಚೆ ಮೂಲಕ ಮತಪತ್ರಗಳನ್ನು ಚಲಾಯಿಸಲು ಅಥವಾ ಮತದಾನ ಮಾಡಲು ರಾಜ್ಯದ ಸಾರ್ವಜನಿಕ ವಲಯದ ಕೆಲವು ವರ್ಗಗಳಿಗೆ ಅವಕಾಶ ನೀಡಿರುವುದು ಇದೇ ಮೊದಲು. ಈ ಮೊದಲು, ಸೇವಾ ನಿರತ ಮತದಾರರಿಗೆ ಮತ್ತು ಚುನಾವಣಾ ಕಾರ್ಯಕ್ಕಾಗಿ ನಿಯೋಜನೆಗೊಂಡವರಿಗೆ ಮಾತ್ರ ಈ ಸೌಲಭ್ಯವನ್ನು ಬಳಸಿಕೊಳ್ಳಲು ಅನುಮತಿಸಲಾಗಿತ್ತು.

ಅಂಚೆ ಮತದಾನ ಎಂದರೇನು?

ನಿರ್ಬಂಧಿತ ಮತದಾರ ವರ್ಗವು ಮಾತ್ರ ಅಂಚೆ ಮತದಾನವನ್ನು ಮಾಡಬಹುದು. ಈ ಸೌಲಭ್ಯದ ಮೂಲಕ, ಮತದಾರನು ತನ್ನ ಆದ್ಯತೆಯನ್ನು ಮತಪತ್ರದಲ್ಲಿ ದೂರದಿಂದಲೇ ದಾಖಲಿಸುವ ಮೂಲಕ ಮತ್ತು ಅದನ್ನು ಮತ ಎಣಿಕೆ ನಡೆಯುವ ಮೊದಲು ಚುನಾವಣಾ ಅಧಿಕಾರಿಗೆ ಮರಳಿ ಕಳುಹಿಸುವ ಮೂಲಕ ಮತ ಚಲಾಯಿಸಬಹುದು.

 ಈ ಅಂಚೆ ಮತದಾನ ಸೌಲಭ್ಯವನ್ನು ಬೇರೆ ಯಾರು ಪಡೆಯಬಹುದು?

ಸೇನೆ, ನೌಕಾಪಡೆ ಮತ್ತು ವಾಯುಪಡೆಯಂತಹ ಸಶಸ್ತ್ರ ಪಡೆಗಳ ಸದಸ್ಯರು, ರಾಜ್ಯವೊಂದರ ಸಶಸ್ತ್ರ ಪೊಲೀಸ್ ಪಡೆಯ ಸದಸ್ಯರು (ರಾಜ್ಯದ ಹೊರಗೆ ಸೇವೆ ಸಲ್ಲಿಸುತ್ತಿದ್ದರೆ), ಭಾರತದ ಹೊರಗೆ ಸೇವಾನಿರತ  ಸರ್ಕಾರಿ ನೌಕರರು ಮತ್ತು ಅವರ ಸಂಗಾತಿಗಳು ಅಂಚೆ ಮೂಲಕ ಮಾತ್ರ ಮತ ಚಲಾಯಿಸಲು ಅರ್ಹರಾಗಿದ್ದಾರೆ.

ಮೇಲೆ ತಿಳಿಸಲಾದ ಮತದಾರರ ವರ್ಗಕ್ಕೆ ನೀಡಲಾದ ವಿನಾಯಿತಿಯನ್ನು 1951 ರ ಪ್ರಜಾ ಪ್ರಾತಿನಿಧ್ಯ ಕಾಯ್ದೆಯ ಸೆಕ್ಷನ್ 60 ರ ಅಡಿಯಲ್ಲಿ ಒದಗಿಸಲಾಗಿದೆ.  

 ಪ್ರಜಾ ಪ್ರಾತಿನಿಧ್ಯ ಕಾಯ್ದೆ,1951:

ಈ ಕಾಯಿದೆಯು ಭಾರತದಲ್ಲಿ ಚುನಾವಣೆಗಳ ನೈಜ ನಡವಳಿಕೆಯನ್ನು ಒದಗಿಸುತ್ತದೆ. ಇದು ಈ ಕೆಳಗಿನ ವಿಷಯಗಳೊಂದಿಗೆ ವ್ಯವಹರಿಸುತ್ತದೆ:

 • ಸಂಸತ್ತಿನ ಉಭಯ ಸದನಗಳು ಮತ್ತು ರಾಜ್ಯ ವಿಧಾನಸಭೆಗಳ ಸದಸ್ಯರ ಅರ್ಹತೆ ಮತ್ತು ಅನರ್ಹತೆಯಂತಹ ವಿವರಗಳು,
 • ಚುನಾವಣೆ ನಡೆಸಲು ಬೇಕಿರುವ ಆಡಳಿತ ಯಂತ್ರವನ್ನು ಸಜ್ಜುಗೊಳಿಸುವುದು.
 • ರಾಜಕೀಯ ಪಕ್ಷಗಳ ನೋಂದಣಿ,
 • ಚುನಾವಣೆಗಳನ್ನು ನಡೆಸುವುದು,
 • ಚುನಾವಣಾ ತಕರಾರುಗಳು,
 • ಭ್ರಷ್ಟ ಅಭ್ಯಾಸಗಳು ಮತ್ತು ಚುನಾವಣಾ ಅಪರಾಧಗಳು, ಮತ್ತು
 • ಉಪಚುನಾವಣೆಗಳು.

 

ವಿಷಯಗಳು: ಆರೋಗ್ಯ, ಶಿಕ್ಷಣ ಮತ್ತು ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ಸಾಮಾಜಿಕ ವಲಯ/ ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳು.

ಆರ್ ಟಿ – ಪಿ ಸಿ ಆರ್:


(RT-PCR)

ಸಂದರ್ಭ:

ಇತ್ತೀಚಿನ ಕರ್ನಾಟಕ ಸರ್ಕಾರದ ಆದೇಶದ ಪ್ರಕಾರ, ಬೆಂಗಳೂರಿಗೆ ಯಾವುದೇ ರಾಜ್ಯದಿಂದ ಬರುವ ಪ್ರಯಾಣಿಕರು ‘ಆರ್‌ಟಿ-ಪಿಸಿಆರ್ ಪರೀಕ್ಷೆಯ’ ನಕಾರಾತ್ಮಕ ವರದಿಯನ್ನು ಹೊಂದಿರಬೇಕು.

 ಕೋವಿಡ್ -19 ಅನ್ನು ಕಂಡುಹಿಡಿಯಲು ಆರ್ಟಿ-ಪಿಸಿಆರ್ ಅನ್ನು ಹೇಗೆ ಬಳಸಲಾಗುತ್ತದೆ?

 • COVID-19 ರೋಗವು SARS-COV-2 ಎಂಬ ವೈರಸ್ ಸೋಂಕಿನಿಂದ ಉಂಟಾಗುತ್ತದೆ. ಇದು RNA ವೈರಸ್‌, ಅಂದರೆ ಇದು ಬದುಕುಳಿಯುವುದು ಅಷ್ಟೇ ಅಲ್ಲದೆ ದ್ವಿಗುಣಗೂಳ್ಳಲು ಕೂಡ ಆರೋಗ್ಯಕರ ಕೋಶದಲ್ಲಿ ಒಳನುಸುಳುತ್ತದೆ.
 • ಆದ್ದರಿಂದ, SARS-CoV-2 RNA ಅನ್ನು ಕಂಡುಹಿಡಿಯಲು RT-PCR ಪರೀಕ್ಷೆಯನ್ನು ನಡೆಸಲಾಗುತ್ತದೆ. ಇದರಲ್ಲಿ, ವೈರಸ್ ಅನ್ನು ಪತ್ತೆಹಚ್ಚಲು ‘ರಿವರ್ಸ್ ಟ್ರಾನ್ಸ್ಕ್ರಿಪ್ಷನ್’ ಎಂಬ ಪ್ರಕ್ರಿಯೆಯ ಮೂಲಕ RNA ಅನ್ನು DNA ಆಗಿ ಪರಿವರ್ತಿಸಲಾಗುತ್ತದೆ.

 RT-PCR ಪರೀಕ್ಷೆಯನ್ನು ಹೇಗೆ ನಡೆಸಲಾಗುತ್ತದೆ?

 • ಸಾಮಾನ್ಯವಾಗಿ, ಸೋಂಕಿನ ತೀವ್ರ ಹಂತದಲ್ಲಿ SARS-CoV-2 RNA ವೈರಸ್ ಅನ್ನು ಉಸಿರಾಟದ ಮಾದರಿಗಳಲ್ಲಿ ಕಂಡುಹಿಡಿಯಬಹುದು.
 • ಇದಕ್ಕಾಗಿ, ಮೇಲಿನ ಮತ್ತು ಕೆಳಗಿನ ಉಸಿರಾಟದ ಮಾದರಿಗಳನ್ನು (ಮೂಗಿನ ಮತ್ತು ಮೂಗಿನ-ನಾಸೊಫಾರ್ಂಜಿಯಲ್ ನಂತಹ) (ಗಂಟಲ ಕುಳಿನ ಮೇಲಿನ ಭಾಗಕ್ಕೆ ಸಂಬಂಧಿಸಿದ ಮೃದು ಅಂಗುಳಿನ ಮೇಲಿರುವ ಮೂಗಿನ ಕುಹರ ದೊಂದಿಗೆ ಸಂಪರ್ಕ ಹೊಂದಿದ) ಸಂಗ್ರಹಿಸಲಾಗುತ್ತದೆ.
 • ಈ ಮಾದರಿಗಳನ್ನು ಹಲವಾರು ರಾಸಾಯನಿಕ ದ್ರಾವಣಗಳಿಂದ ಸಂಸ್ಕರಿಸಲಾಗುತ್ತದೆ,ಅದು ಪ್ರೋಟೀನ್ ಮತ್ತು ಕೊಬ್ಬಿನಂತಹ ವಸ್ತುಗಳನ್ನು ತೆಗೆದುಹಾಕುತ್ತದೆ, ನಂತರ ಮಾದರಿಯಲ್ಲಿರುವ RNA ಯನ್ನು ಪ್ರತ್ಯೇಕಿಸುತ್ತದೆ.
 • ನೈಜ-ಸಮಯದ ಆರ್‌ಟಿ-ಪಿಸಿಆರ್ ಸೆಟಪ್ (Real-time RT-PCR setup) ಸಾಮಾನ್ಯವಾಗಿ 35 ಚಕ್ರಗಳಿಗೆ ಒಳಗಾಗುತ್ತದೆ, ಅಂದರೆ, ಪ್ರಕ್ರಿಯೆಯ ಅಂತ್ಯದ ವೇಳೆಗೆ, ವೈರಸ್‌ನ DNA ವಿಭಾಗಗಳ ಸುಮಾರು 35 ಬಿಲಿಯನ್ ಹೊಸ ಪ್ರತಿಗಳು ಮಾದರಿಯಲ್ಲಿನ ವೈರಸ್‌ನ ಪ್ರತಿಯೊಂದು ಎಳೆಯಿಂದ ಉತ್ಪತ್ತಿಯಾಗುತ್ತವೆ / ರಚನೆಯಾಗುತ್ತವೆ.
 • ವೈರಲ್ ಡಿಎನ್‌ಎ ತುಣುಕುಗಳ ಹೊಸ ಪ್ರತಿಗಳು ಉತ್ಪತ್ತಿಯಾಗುತ್ತಿದ್ದಂತೆ, ಮಾರ್ಕರ್ ಲೇಬಲ್ ಗಳು ಡಿಎನ್ಎ ಎಳೆಗಳಿಗೆ ಲಗತ್ತಿಸುತ್ತವೆ ನಂತರ ಪ್ರತಿಯೊಂದನ್ನೂ ಪ್ರತಿದೀಪಕ ಬಣ್ಣದಿಂದ ಗುರುತಿಸಿ ಬಿಡುಗಡೆ ಮಾಡಲಾಗುತ್ತದೆ, ಇದನ್ನು ಯಂತ್ರಕ್ಕೆ ಸಂಪರ್ಕಗೊಂಡ ಕಂಪ್ಯೂಟರ್‌ನಿಂದ ನೈಜ ಸಮಯದಲ್ಲಿ ಅಳೆಯಲಾಗುತ್ತದೆ. ಪ್ರತಿ ಚಕ್ರದ ನಂತರ, ಕಂಪ್ಯೂಟರ್ ಮಾದರಿಯಲ್ಲಿನ ಪ್ರತಿದೀಪಕ ಪ್ರಮಾಣವನ್ನು ಪತ್ತೆ ಮಾಡುತ್ತದೆ. ಪ್ರತಿದೀಪಕ ಪರಿಮಾಣವು ಒಂದು ನಿರ್ದಿಷ್ಟ ಮಟ್ಟವನ್ನು ಮೀರಿದಾಗ, ಮಾದರಿಯಲ್ಲಿ ವೈರಸ್ ನ ಇರುವಿಕೆಯನ್ನು ದೃಢೀಕರಿಸಲಾಗುತ್ತದೆ.

 

ವಿಷಯಗಳು: ಕೇಂದ್ರ ಮತ್ತು ರಾಜ್ಯಗಳಿಂದ  ದುರ್ಬಲ ವರ್ಗದ ಜನಸಮುದಾಯದವರಿಗೆ ಇರುವ ಕಲ್ಯಾಣ ಯೋಜನೆಗಳು.

ಕಟ್ಟಡ ಮತ್ತು ಇತರ ನಿರ್ಮಾಣ ಕಾಮಗಾರಿಗಳ ಕಾರ್ಮಿಕರ ರಾಜ್ಯ ಕಲ್ಯಾಣ ಮಂಡಳಿಗಳು (BOCW):


(State welfare boards for building and other construction workers (BOCW)

 ಸಂದರ್ಭ:

ಕೇಂದ್ರ ಸರ್ಕಾರವು ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ರಾಜ್ಯ ಕಲ್ಯಾಣ ಮಂಡಳಿಗಳು’ ( BOCW) ಕಾರ್ಮಿಕರಿಗೆ, ಗೃಹಬಳಕೆಯ ಸರಕುಗಳನ್ನು ಮತ್ತು ಇತರ ವಸ್ತುಗಳನ್ನು ವಿತರಿಸುವುದನ್ನು ನಿಷೇಧಿಸಿದೆ ಅದರ ಬದಲಿಗೆ ಕಾರ್ಮಿಕರ ಬ್ಯಾಂಕ್ ಖಾತೆಗಳಿಗೆ ವಿತ್ತೀಯ/ಹಣಕಾಸು ಸಹಾಯವನ್ನು ವರ್ಗಾಯಿಸುವ ಪ್ರಕ್ರಿಯೆಯನ್ನು ಮುಂದುವರಿಸಲು ಆದೇಶಿಸಿದೆ.

 • ನಿರ್ಮಾಣ ಕಾರ್ಯಚಟುವಟಿಕೆಗಳಿಂದ ರಾಜ್ಯಗಳು ಸಂಗ್ರಹಿಸಿದ ‘ಸೆಸ್’ನಿಂದ ಕಾರ್ಮಿಕರಿಗಾಗಿ ಕಲ್ಯಾಣ ಚಟುವಟಿಕೆಗಳನ್ನು ಜಾರಿಗೆ ತರುವುದು BOCW ಮಂಡಳಿಗಳ ಉದ್ದೇಶವಾಗಿದೆ.

ಹಿನ್ನೆಲೆ:

ಭಾರತದಲ್ಲಿ, ‘ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರು’ (BOCW) ಅಸಂಘಟಿತ ವಲಯದ ಕಾರ್ಮಿಕರಲ್ಲಿ ಅತ್ಯಂತ ದುರ್ಬಲ ವಿಭಾಗವಾಗಿದೆ. ಅವರು ಅತ್ಯಂತ ಕಳಪೆ ಪರಿಸ್ಥಿತಿಗಳಲ್ಲಿ ಕೆಲಸ ಮಾಡುತ್ತಾರೆ ಮತ್ತು ಅವರ ಭವಿಷ್ಯವು ಅನಿಶ್ಚಿತವಾಗಿರುತ್ತದೆ. ಈ ಗುಂಪಿನ ಹೆಚ್ಚಿನ ಕಾರ್ಮಿಕರು ವಿವಿಧ ರಾಜ್ಯಗಳಲ್ಲಿ ವಲಸೆ ಕಾರ್ಮಿಕರಾಗಿ ತಮ್ಮ ಮೂಲ ಸ್ಥಳಗಳಿಂದ ದೂರವಿದ್ದು ಕೆಲಸ ಮಾಡುತ್ತಿರುತ್ತಾರೆ. ರಾಷ್ಟ್ರ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸುವ ಅವರು, ತಮ್ಮನ್ನು ತಾವು ಸಮಾಜದ ಅಂಚಿನಲ್ಲಿ ಕಂಡುಕೊಳ್ಳುತ್ತಾರೆ.

ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಾಯ್ದೆ,1996:

 • ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಉದ್ಯೋಗ ಮತ್ತು ಸೇವಾ ಪರಿಸ್ಥಿತಿಗಳನ್ನು ನಿಯಂತ್ರಿಸಲು ಮತ್ತು ಅವರಿಗೆ ಸುರಕ್ಷತೆ, ಆರೋಗ್ಯ ಮತ್ತು ಕಲ್ಯಾಣ ಕ್ರಮಗಳನ್ನು ಒದಗಿಸಲು ಈ ಶಾಸನವನ್ನು ಜಾರಿಗೆ ತರಲಾಯಿತು.
 • ಈ ಕಾಯ್ದೆಯಡಿ ರಾಜ್ಯ ಕಲ್ಯಾಣ ಮಂಡಳಿಗಳ ಮೂಲಕ ನಿರ್ಮಾಣ ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ವಿನ್ಯಾಸಗೊಳಿಸುವ ಮತ್ತು ಅನುಷ್ಠಾನಗೊಳಿಸುವ ಜವಾಬ್ದಾರಿಯನ್ನು ರಾಜ್ಯ ಸರ್ಕಾರಗಳಿಗೆ ವಹಿಸಲಾಗಿದೆ.
 • ಈ ಕಾನೂನಿನ ಪ್ರಕಾರ, ನಿರ್ಮಾಣ ವೆಚ್ಚದ ಮೇಲೆ 1% ಸೆಸ್‌ನೊಂದಿಗೆ ನಿಧಿಯನ್ನು ರಚಿಸಲಾಗುತ್ತದೆ. ಈ ಸೆಸ್ ಅನ್ನು ರಾಜ್ಯ ಸರ್ಕಾರಗಳು ವಿಧಿಸಿ ಸಂಗ್ರಹಿಸಿ ಕಲ್ಯಾಣ ನಿಧಿಗೆ ಕಳುಹಿಸುತ್ತವೆ.

ಸೆಸ್’ (ಉಪ-ತೆರಿಗೆ) ಎಂದರೇನು?

 • ತೆರಿಗೆಗೆ ಒಳಪಡುವ ಆದಾಯದ ಬದಲು ಪಾವತಿಸಬೇಕಾದ ತೆರಿಗೆಯ ಮೇಲೆ ಸೆಸ್ ವಿಧಿಸಲಾಗುತ್ತದೆ. ಒಂದು ಅರ್ಥದಲ್ಲಿ, ತೆರಿಗೆ ಪಾವತಿದಾರರಿಗೆ ಈ ಸೆಸ್ , ತೆರಿಗೆ ಮೇಲಿನ ಹೆಚ್ಚುವರಿ ಶುಲ್ಕಕ್ಕೆ ಸಮಾನವಾಗಿರುತ್ತದೆ.
 •  ಇದು ಒಂದು ಸೇವೆ ಅಥವಾ ವಲಯದ ಅಭಿವೃದ್ಧಿ ಅಥವಾ ಕಲ್ಯಾಣಕ್ಕಾಗಿ ಸರ್ಕಾರವು ವಿಧಿಸುವ ಅಥವಾ ಸಂಗ್ರಹಿಸುವ ತೆರಿಗೆಯ ಒಂದು ರೂಪವಾಗಿದೆ.
 • ನೇರ ಮತ್ತು ಪರೋಕ್ಷ ತೆರಿಗೆಗಳ ಮೇಲೆ ಸೆಸ್ ವಿಧಿಸಬಹುದು. ಆದಾಯ ತೆರಿಗೆ, ನಿಗಮ ತೆರಿಗೆ ಮತ್ತು ಪರೋಕ್ಷ ತೆರಿಗೆಗಳಿಂದ ಪಡೆದ ಆದಾಯವನ್ನು ವಿವಿಧ ಉದ್ದೇಶಗಳಿಗಾಗಿ ಹಂಚಿಕೆ ಮಾಡಬಹುದು.
 • ಎಲ್ಲಾ ತೆರಿಗೆಗಳು ಮತ್ತು ಸೆಸ್‌ಗಳಿಂದ ಬರುವ ಆದಾಯವನ್ನು ಭಾರತ ಸರ್ಕಾರದ ಖಾತೆಯಾದ ಭಾರತದ ಸಂಚಿತ ನಿಧಿಯಲ್ಲಿConsolidated Fund of India (CFI) ಜಮೆ ಮಾಡಲಾಗುತ್ತದೆ.

 

ವಿಷಯಗಳು:ಅನಿವಾಸಿ ಭಾರತೀಯರು ಮತ್ತು ಭಾರತದ ಹಿತಾಸಕ್ತಿಗಳ ಮೇಲೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ದೇಶಗಳ ನೀತಿಗಳು ಮತ್ತು ರಾಜಕೀಯದ ಪರಿಣಾಮಗಳು.

ದಕ್ಷಿಣ ಚೀನಾ ಸಮುದ್ರ:


(South China Sea)

ಸಂದರ್ಭ:

ವಿವಾದಾತ್ಮಕ  ರೀಫ್ರೀಡ್ ದಂಡೆಯ ಬಳಿ ( reef- Reed Bank)  ನಿಲ್ಲಿಸಲಾಗಿರುವ ಚೀನೀ ದೋಣಿಗಳ ಸಮೂಹದ ಬಗ್ಗೆ ಹೆಚ್ಚುತ್ತಿರುವ ರಾಜತಾಂತ್ರಿಕ ವಿವಾದದ ಮಧ್ಯೆ ಇತ್ತೀಚೆಗೆ, ಫಿಲಿಪೈನ್ಸ್ ಸೈನ್ಯವು ಹೆಚ್ಚಿನ ಸಂಖ್ಯೆಯಲ್ಲಿ ನೌಕಾ ಪಡೆಯ ಹಡಗುಗಳನ್ನು ದಕ್ಷಿಣ ಚೀನಾ ಸಮುದ್ರದಲ್ಲಿ ನಿಯೋಜಿಸಲು ಆದೇಶಿಸಿದೆ.

ದಕ್ಷಿಣ ಚೀನಾ ಸಮುದ್ರದ ವಿವಾದದ ಕುರಿತು:

ದಕ್ಷಿಣ ಚೀನಾ ಸಮುದ್ರ ಮತ್ತು ಈ ಪ್ರದೇಶದಲ್ಲಿ ನೆಲೆಗೊಂಡಿರುವ ಇತರ ದೇಶಗಳೊಂದಿಗೆ ಚೀನಾದ ಗಡಿ ಮತ್ತು ಕಡಲ ವಿವಾದವು ಕಡಲ ಪ್ರದೇಶಗಳ ಮೇಲೆ ಚೀನಾ ತನ್ನ ಸಾರ್ವಭೌಮತ್ವವನ್ನು ಸ್ಥಾಪಿಸುವುದಕ್ಕೆ ಸಂಬಂಧಿಸಿದೆ.

 • ಈ ಪ್ರದೇಶವು ‘ಪ್ಯಾರಾಸೆಲ್ ದ್ವೀಪಗಳು’ (Paracels Islands) ಮತ್ತು ‘ಸ್ಪ್ರಾಟ್ಲಿ ದ್ವೀಪಗಳು’ (Spratley Islands) ಎಂಬ ಎರಡು ದ್ವೀಪ ಸರಣಿಗಳನ್ನು ಒಳಗೊಂಡಿದೆ, ದ್ವೀಪಗಳು ಅನೇಕ ದೇಶಗಳ ಕಡಲ ಗಡಿಯಲ್ಲಿ ಹರಡಿಕೊಂಡಿವೆ, ಇದು ಈ ಪ್ರದೇಶದಲ್ಲಿನ ವಿವಾದಕ್ಕೆ ಪ್ರಮುಖ ಕಾರಣವಾಗಿದೆ.
 • ಸಂಪೂರ್ಣ ಅಭಿವೃದ್ಧಿ ಹೊಂದಿದ ದ್ವೀಪಗಳ ಜೊತೆಗೆ, ಡಜನ್ ಗಟ್ಟಲೆ ಬಂಡೆಗಳು, ಅಟಾಲ್ಗಳು, ಮರಳು ತೀರಗಳು ಮತ್ತು ಸ್ಕಾರ್ಬರೋ ಶೋಲ್‌ನಂತಹ (Scarborough Shoal) ಬಂಡೆಗಳು ಸಹ ವಿವಾದಕ್ಕೆ ಕಾರಣವಾಗಿವೆ.
 • ದಕ್ಷಿಣ ಚೀನಾ ಸಮುದ್ರದ ಬಹುಪಾಲು ಪ್ರದೇಶದ ಮೇಲೆ ತನ್ನ ಐತಿಹಾಸಿಕ ಹಕ್ಕುಗಳನ್ನು ಸಾಧಿಸಲು ಬೀಜಿಂಗ್ ಸಾಮಾನ್ಯವಾಗಿ 9 ಡ್ಯಾಶ್ ಲೈನ್ ಎಂಬ ವಿಚಾರವನ್ನು ಪ್ರಚೋದಿಸುತ್ತದೆ, ಅದೇ ರೀತಿ ಈ ಸಮುದ್ರದ ಕೆಲವು ಭಾಗಗಳ ಮೇಲೆ ತೈವಾನ್ ಮಲೇಷ್ಯಾ ಫಿಲಿಫೈನ್ಸ್ ಮತ್ತು ಬ್ರೂನೈ ದೇಶಗಳು ಸಹ ಸಹ ತಮ್ಮ ತಮ್ಮ ಹಕ್ಕುಗಳನ್ನು ಪ್ರತಿಪಾದಿಸುತ್ತವೆ.
 • ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾದ ಹಕ್ಕನ್ನು ಆಧಾರರಹಿತವೆಂದು ಹೇಳಿದ ಅಂತರರಾಷ್ಟ್ರೀಯ ನ್ಯಾಯಮಂಡಳಿಯ 2016 ರ ನಿರ್ಧಾರವನ್ನು ಚೀನಾ ನಿರ್ಲಕ್ಷಿಸಿದೆ.

ಪ್ರತಿಯೊಂದು ದೇಶಗಳ ಪ್ರತಿಪಾದನೆ ಏನಿದೆ?

ಚೀನಾ:  

ಚೀನಾ ಈ ಪ್ರದೇಶದ ಅತಿದೊಡ್ಡ ವಲಯದ ಮೇಲೆ  ಹಕ್ಕನ್ನು ಸಾಧಿಸುತ್ತದೆ, ಅದರ ಹಕ್ಕಿನ ಆಧಾರವೆಂದರೆ ‘ನೈನ್-ಡ್ಯಾಶ್ ಲೈನ್’, ಇದು ಚೀನಾದ ಹೈನಾನ್ ಪ್ರಾಂತ್ಯದ ದಕ್ಷಿಣದ ಬಿಂದುವಿನಿಂದ ಹುಟ್ಟಿಕೊಂಡಿದೆ ಮತ್ತು ದಕ್ಷಿಣ ಮತ್ತು ಪೂರ್ವಕ್ಕೆ ನೂರಾರು ಮೈಲುಗಳಷ್ಟು ವಿಸ್ತಾರವಾಗಿ ಹರಡಿದೆ.

ವಿಯೆಟ್ನಾಂ:

ವಿಯೆಟ್ನಾಂ ಚೀನಾದೊಂದಿಗೆ ಹಳೆಯ ಐತಿಹಾಸಿಕ ವಿವಾದವನ್ನು ಹೊಂದಿದೆ. ಇದರ ಪ್ರಕಾರ, 1940 ರ ಮೊದಲು ಚೀನಾ ಈ ದ್ವೀಪಗಳ ಮೇಲೆ ಎಂದಿಗೂ ಸಾರ್ವಭೌಮತ್ವವನ್ನು ಪ್ರತಿಪಾದಿಸಿಲ್ಲ, ಮತ್ತು 17 ನೇ ಶತಮಾನದಿಂದ ‘ಪಾರ್ಸೆಲ್ ದ್ವೀಪಗಳು’ ಮತ್ತು ‘ಸ್ಪ್ರಾಟ್ಲಿ ದ್ವೀಪಗಳು’ ವಿಯೆಟ್ನಾಂನಿಂದ ಆಳಲ್ಪಟ್ಟವೆ – ಮತ್ತು ಅದನ್ನು ಸಾಬೀತುಪಡಿಸಲು ಅದರ ಹತ್ತಿರ ಸಾಕಷ್ಟು ದಾಖಲೆಗಳಿವೆ.

ಫಿಲಿಪೈನ್ಸ್:

ಫಿಲಿಪೈನ್ಸ್ ಮತ್ತು ಚೀನಾ ಎರಡೂ ಸ್ಕಾರ್ಬರೋ ಶೋಲ್  ಮೇಲೆ ತಮ್ಮ ಅಧಿಕಾರವನ್ನು ಪ್ರತಿಪಾದಿಸುತ್ತವೆ (ಇದನ್ನು ಚೀನಾದಲ್ಲಿ ಹುವಾಂಗ್ಯಾನ್ ದ್ವೀಪ ಎಂದು ಕರೆಯಲಾಗುತ್ತದೆ). ಇದು ಫಿಲಿಪೈನ್ಸ್‌ನಿಂದ 100 ಮೈಲಿ ಗಿಂತಲೂ ತುಸು ಹೆಚ್ಚು (160Kms) ಮತ್ತು ಚೀನಾದಿಂದ 500 ಮೈಲಿ ದೂರದಲ್ಲಿದೆ.

ಮಲೇಶಿಯಾ ಮತ್ತು ಬ್ರುನೈ:

ಈ ದೇಶಗಳು ದಕ್ಷಿಣ ಚೀನಾ ಸಮುದ್ರದಲ್ಲಿನ ಪ್ರದೇಶಗಳು ತಮ್ಮ ನ್ಯಾಯವ್ಯಾಪ್ತಿ / ಬಾಹ್ಯ ಆರ್ಥಿಕ ವಲಯಗಳ ವ್ಯಾಪ್ತಿಗೆ ಬರುತ್ತವೆ ಎಂದು ವಿಶ್ವಸಂಸ್ಥೆಯ ಸಮುದ್ರ ಕಾನೂನು (United Nations Convention on the Law of the Sea- UNCLOS) ಮೂಲಕ ಪ್ರತಿಪಾದಿಸುತ್ತವೆ.

ಯಾವುದೇ ವಿವಾದಿತ ದ್ವೀಪದ ಮೇಲೆ ಬ್ರೂನಿ ಅಧಿಕಾರ ವ್ಯಾಪ್ತಿಯನ್ನು ಹೊಂದಿಲ್ಲವಾದರೂ, ಮಲೇಷ್ಯಾ ‘ಸ್ಪ್ರಾಟ್ಲಿ ದ್ವೀಪ’ಗಳಲ್ಲಿನ  ಒಂದು ಸಣ್ಣ ಭಾಗದ ಮೇಲೆ ಹಕ್ಕನ್ನು ಪ್ರತಿಪಾದಿಸುತ್ತದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಸೂಯೆಜ್ ಕಾಲುವೆ: (Suez Canal)

 ಸುದ್ದಿಯಲ್ಲಿರಲು ಕಾರಣ?

ಇತ್ತೀಚೆಗೆ, ಕೆಟ್ಟ ಹವಾಮಾನದಿಂದ ಉಂಟಾದ ಅಪಘಾತದಿಂದಾಗಿ ಎವರ್ ಗಿವನ್’ ಎಂಬ ದೊಡ್ಡ ಸರಕು ಹಡಗು ಸೂಯೆಜ್ ಕಾಲುವೆಯ ದಕ್ಷಿಣ ತುದಿಯಲ್ಲಿ ಸಿಲುಕಿಕೊಂಡಿದೆ. ಈ ಕಾರಣದಿಂದಾಗಿ, ಈ ಪ್ರಮುಖ ಅಂತರರಾಷ್ಟ್ರೀಯ ವ್ಯಾಪಾರ ಮಾರ್ಗದ ಎರಡೂ ತುದಿಗಳಲ್ಲಿ ದೊಡ್ಡ ಪ್ರಮಾಣದ ಹಡಗುಗಳ ದಟ್ಟಣೆಗೆ ಕಾರಣವಾಗಿದೆ.

ಪ್ರಮುಖ ಅಂಶಗಳು:

 •  ಸೂಯೆಜ್ ಕಾಲುವೆ ಕೃತಕ ಸಮುದ್ರಮಟ್ಟದ ಜಲಮಾರ್ಗವಾಗಿದ್ದು, ಮೆಡಿಟರೇನಿಯನ್ ಸಮುದ್ರ ಮತ್ತು ಈಜಿಪ್ಟ್‌ನ ಕೆಂಪು ಸಮುದ್ರವನ್ನು ಸಂಪರ್ಕಿಸುವ ಸೂಯೆಜ್ ಭೂ-ಕಂಠವು (Isthmus of Suez) ಉತ್ತರದಿಂದ ದಕ್ಷಿಣಕ್ಕೆ ಹರಡಿದೆ.
 • ಈ ಕಾಲುವೆ ಆಫ್ರಿಕ ಖಂಡವನ್ನು ಏಷ್ಯಾ ಖಂಡದಿಂದ ಬೇರ್ಪಡಿಸುತ್ತದೆ.
 • ಈ ಕಾಲುವೆಯು ಭಾರತೀಯ ಮತ್ತು ಪಶ್ಚಿಮ ಪೆಸಿಫಿಕ್ ಮಹಾಸಾಗರ ಪ್ರದೇಶಗಳ ನಡುವೆ ಮತ್ತು ಯುರೋಪಿನ ನಡುವಿನ ಕನಿಷ್ಠ ದೂರದ ಸಮುದ್ರ ಮಾರ್ಗವಾಗಿದೆ.
 • ಇದು ವಿಶ್ವದಲ್ಲೇ ಹೆಚ್ಚು ಬಳಕೆಯಾಗುವ ಹಡಗು ಮಾರ್ಗಗಳಲ್ಲಿ ಒಂದಾಗಿದೆ. ಪರಿಮಾಣದ ಪ್ರಕಾರ, ಒಟ್ಟು ವಿಶ್ವ ವ್ಯಾಪಾರದ 12% ಕ್ಕಿಂತ ಹೆಚ್ಚು ವ್ಯಾಪಾರವನ್ನು ಈ ಮಾರ್ಗದ ಮೂಲಕ ಮಾಡಲಾಗುತ್ತದೆ.

ಕೇಂದ್ರ ಸರ್ಕಾರದ ಪರಿಶೀಲನಾ ಕೇಂದ್ರ (CSC):

(Central Scrutiny Centre)

 •  ‘ಸ್ಟ್ರೈಟ್ ಥ್ರೂ ಪ್ರಕ್ರಿಯೆ’ ಅಡಿಯಲ್ಲಿ ಬಳಕೆದಾರರು ಸಲ್ಲಿಸುವ ದಾಖಲಾತಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುವುದು ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯದ ಒಂದು ಉಪಕ್ರಮವಾಗಿದೆ.
 • ದತ್ತಾಂಶ ಗುಣಮಟ್ಟದಲ್ಲಿ ಯಾವುದೇ ರಾಜಿ ಇಲ್ಲ ಮತ್ತು ದೋಷರಹಿತವಾಗಿ/ನ್ಯೂನ್ಯತೆಗಳಿಂದ ಮುಕ್ತವಾಗಿ ಉಳಿಯುವುದನ್ನು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ.
 • CSC ಪ್ರಾಥಮಿಕವಾಗಿ ಬಳಕೆದಾರರು ಸ್ಟ್ರೈಟ್ ಥ್ರೂ ಪ್ರಕ್ರಿಯೆಯ ಅಡಿಯಲ್ಲಿ ಸಲ್ಲಿಸಿದ ಫೈಲಿಂಗ್‌ಗಳನ್ನು ಸೂಕ್ಷ್ಮವಾಗಿ ಪರಿಶೀಲಿಸುತ್ತದೆ, ಡೇಟಾ ಗುಣಮಟ್ಟದ ಸಮಸ್ಯೆಗಳು ಮತ್ತು ಅಕ್ರಮಗಳನ್ನು ಗುರುತಿಸುತ್ತದೆ, ಅದನ್ನು ಸಂಬಂಧಪಟ್ಟ ಕಂಪನಿಗಳ ರಿಜಿಸ್ಟ್ರಾರ್‌ಗೆ ವರದಿ ಮಾಡುತ್ತದೆ, ಇದರಿಂದಾಗಿ ಡೇಟಾದ ಸತ್ಯಾಸತ್ಯತೆ ಮತ್ತು ನಿಖರತೆಯನ್ನು ಪುನಃಸ್ಥಾಪಿಸಲು ಸರಿಪಡಿಸುವ ಕ್ರಮಗಳನ್ನು ಕೈಗೊಳ್ಳಬಹುದು. ಮತ್ತು ಅದನ್ನು ಅಗತ್ಯವಿದ್ದಾಗ ಮತ್ತು ಇತರ ನಿಯಂತ್ರಕರೊಂದಿಗೆ ಹಂಚಿಕೊಳ್ಳಬಹುದು.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos