Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 25 ಮಾರ್ಚ್ 2021

 

ಪರಿವಿಡಿ :

 ಸಾಮಾನ್ಯ ಅಧ್ಯಯನ ಪತ್ರಿಕೆ 2:  

1. ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಕೈಗೊಳ್ಳಲು ಒಪ್ಪಿಗೆ ನಿರಾಕರಿಸಿದ ಅಟಾರ್ನಿ ಜನರಲ್.

2. ಭಾರತದ ಮುಖ್ಯ ನ್ಯಾಯಾಧೀಶರನ್ನು ಸುಪ್ರೀಂ ಕೋರ್ಟ್ ಹೇಗೆ ಆಯ್ಕೆ ಮಾಡುತ್ತದೆ?

3. ಗ್ರಾಹಕ ಸಂರಕ್ಷಣೆ (ಇ-ಕಾಮರ್ಸ್) ನಿಯಮಗಳು, 2020.

4. ಭಾರತದ ಸಂಸ್ಥೆಯ ಮೂಲಕ ಸರಕುಗಳನ್ನು ಮಾರಾಟ ಮಾಡಿದರೆ ಡಿಜಿಟಲ್ ತೆರಿಗೆ ವಿಧಿಸುವಂತಿಲ್ಲ.

5. ಎರಡು ಬಾರಿ ರೂಪಾಂತರಿತ ’ವೈರಸ್ ಪತ್ತೆ.

6. ಅಲೈಡ್ ಮತ್ತು ಆರೋಗ್ಯ ವೃತ್ತಿಪರರ ಮಸೂದೆ, 2021 ರ ರಾಷ್ಟ್ರೀಯ ಆಯೋಗ.

7. ಮೌಲ್ಯಮಾಪನ ಚೌಕಟ್ಟನ್ನು ಹೊರತಂದ CBSE.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಗ್ರಾಮ ಉಜಾಲಾ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಪಾಕಲ್ ದುಲ್ ಜಲ ವಿದ್ಯುತ್ ಯೋಜನೆ.

2. ಟುಲಿಪ್ ಉದ್ಯಾನವನಗಳು.

3. ತರಬೇತಿ ಮತ್ತು ಸಂಶೋಧನೆಗಾಗಿ ವಿಶ್ವಸಂಸ್ಥೆಯ ಅಂಗ ಸಂಸ್ಥೆ (UNTIR).

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯಗಳು:ಭಾರತೀಯ ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಕೈಗೊಳ್ಳಲು ಒಪ್ಪಿಗೆ ನಿರಾಕರಿಸಿದ ಅಟಾರ್ನಿ ಜನರಲ್:


(A-G says no to contempt proceedings)

 ಸಂದರ್ಭ:

ಭಾರತದ ಅಟಾರ್ನಿ ಜನರಲ್ ಕೆ.ಕೆ. ಅವರು ಸಂದರ್ಶನವೊಂದರಲ್ಲಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ನ್ಯಾಯಾಂಗದ ಘನತೆಗೆ ಚ್ಯುತಿ ಮಾಡಿದ್ದಾರೆ ಎಂಬ ಮನವಿಯ ಆಧಾರದ ಮೇಲೆ ಅವರ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳವ ಒಪ್ಪಿಗೆ ನೀಡಲು ನಿರಾಕರಿಸಿದ್ದಾರೆ.

 • ಅಲ್ಲದೆ, ರಾಹುಲ್ ಗಾಂಧಿಯವರು ಸುಪ್ರೀಂ ಕೋರ್ಟ್ ಅಥವಾ ಅದರ ನ್ಯಾಯಾಧೀಶರ ಬಗ್ಗೆ ಯಾವುದೇ ನಿರ್ದಿಷ್ಟ ಉಲ್ಲೇಖಗಳನ್ನು ಮಾಡಿಲ್ಲ ಎಂದು ಅಟಾರ್ನಿ ಜನರಲ್ ಹೇಳಿದ್ದಾರೆ.

ಏನದು ನ್ಯಾಯಾಂಗ ನಿಂದನೆ ಕಾನೂನು?

ನ್ಯಾಯಾಲಯಗಳ ನಿಂದನೆ ಕಾಯ್ದೆ 1971 ನಾಗರಿಕ ಮತ್ತು ಕ್ರಿಮಿನಲ್ ತಿರಸ್ಕಾರವನ್ನು ವ್ಯಾಖ್ಯಾನಿಸುತ್ತದೆ, ಮತ್ತು ನ್ಯಾಯಾಲಯಗಳು ನಿಂದನೆ ಮಾಡಿದ್ದಕ್ಕೆ ಶಿಕ್ಷೆ ವಿಧಿಸುವ ಅಧಿಕಾರಗಳು ಮತ್ತು ಕಾರ್ಯವಿಧಾನಗಳನ್ನು ಮತ್ತು ನ್ಯಾಯಾಲಯಗಳ ಘನತೆಗೆ ಧಕ್ಕೆ ತಂದ ಅಪರಾಧಕ್ಕೆ ಶಿಕ್ಷೆಯನ್ನು ವಿಧಿಸಬಹುದು.

 • ನ್ಯಾಯಾಲಯದ ನಿಂದನೆಯು ನ್ಯಾಯಾಲಯದ ಅಧಿಕಾರ ಮತ್ತು ನ್ಯಾಯ ಮತ್ತು ಘನತೆಯನ್ನು ವಿರೋಧಿಸುವ ಅಥವಾ ಧಿಕ್ಕರಿಸುವ ವರ್ತನೆಯ ರೂಪದಲ್ಲಿ ನ್ಯಾಯಾಲಯ ಮತ್ತು ಅದರ ನ್ಯಾಯಿಕ ಅಧಿಕಾರಿಗಳಿಗೆ ಅವಿಧೇಯತೆ ಅಥವಾ ಅಗೌರವ ತೋರುವ ಅಪರಾಧವಾಗಿದೆ.

ನ್ಯಾಯಾಂಗ ನಿಂದನೆಯ ಪ್ರಕ್ರಿಯೆಯನ್ನು ಆರಂಭಿಸಲು ಅಟಾರ್ನಿ ಜನರಲ್ ರವರ ಒಪ್ಪಿಗೆ ಏಕೆ ಬೇಕು?

ದೂರಿನ ತಿರುಳನ್ನು ತಿಳಿದುಕೊಳ್ಳುವ ಮೊದಲು ಅಟಾರ್ನಿ ಜನರಲ್ ಒಪ್ಪಿಗೆ ಪಡೆಯುವ ಹಿಂದಿನ ಉದ್ದೇಶವೆಂದರೆ ನ್ಯಾಯಾಲಯದ ಸಮಯವನ್ನು ಉಳಿಸುವುದು.

 • ಕ್ಷುಲ್ಲಕ ಅರ್ಜಿಗಳನ್ನು ಸಲ್ಲಿಸಿದರೆ ನ್ಯಾಯಾಂಗದ ಸಮಯವನ್ನು ಹಾಳುಮಾಡಲಾಗುತ್ತದೆ ಮತ್ತು ನ್ಯಾಯಾಲಯವು ಅಂತಹ ಅರ್ಜಿಗಳ ವಿಚಾರಣೆ ಮಾಡುವ ಮೊದಲ ವೇದಿಕೆಯಾಗಿದೆ.
 • A-G ಯವರ ಒಪ್ಪಿಗೆಯನ್ನು ಕ್ಷುಲ್ಲಕ ಅರ್ಜಿಗಳ ವಿರುದ್ಧದ ರಕ್ಷಣೆ ಎಂದು ಅರ್ಥೈಸಲಾಗುತ್ತದೆ, ಏಕೆಂದರೆ A-G, ನ್ಯಾಯಾಲಯದ ಅಧಿಕಾರಿಯಾಗಿ, ನೀಡಲಾದ ದೂರು ನಿಜಕ್ಕೂ ಮಾನ್ಯವಾಗಿದೆಯೇ ಎಂದು ಸ್ವತಂತ್ರವಾಗಿ ನಿರ್ಧರಿಸುತ್ತಾರೆ.

 ಯಾವ ಸಂದರ್ಭಗಳಲ್ಲಿ ಅಟಾರ್ನಿ ಜನರಲ್ ರವರ ಒಪ್ಪಿಗೆಯ ಅಗತ್ಯವಿಲ್ಲ?

ಒಬ್ಬ ಖಾಸಗಿ ನಾಗರಿಕನು ಇನ್ನೋರ್ವ ವ್ಯಕ್ತಿಯ ವಿರುದ್ಧ ನ್ಯಾಯಾಂಗ ನಿಂದನೆಯ ಪ್ರಕರಣವನ್ನು ಪ್ರಾರಂಭಿಸಲು ಬಯಸಿದಾಗ   A-G ಒಪ್ಪಿಗೆ ಪಡೆಯುವುದು ಕಡ್ಡಾಯವಾಗಿದೆ.

ಆದಾಗ್ಯೂ, ನ್ಯಾಯಾಲಯವು ಸ್ವತಃ ನ್ಯಾಯಾಂಗ ನಿಂದನೆಯ ಪ್ರಕರಣವನ್ನು ಆರಂಭಿಸಿದರೆ ಎಜಿಯ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ.

 • ಏಕೆಂದರೆ ನ್ಯಾಯಾಲಯವು ನ್ಯಾಯಾಂಗದ ನಿಂದನೆ ಗಾಗಿ ಶಿಕ್ಷೆ ವಿಧಿಸಲು ಸಂವಿಧಾನ ದತ್ತವಾಗಿ ನೀಡಲಾಗಿರುವ ತನ್ನ ಅಂತರ್ಗತ ಅಧಿಕಾರವನ್ನು ಚಲಾಯಿಸುತ್ತಿದೆ ಮತ್ತು ಅಂತಹ ಸಾಂವಿಧಾನಿಕ ಅಧಿಕಾರಗಳನ್ನು ನಿರ್ಬಂಧಿಸಲಾಗುವುದಿಲ್ಲ ಏಕೆಂದರೆ A-G ಒಪ್ಪಿಗೆ ನೀಡಲು ನಿರಾಕರಿಸಿದರೆ ಎಂಬ ಅಂಶವನ್ನು ದೃಷ್ಟಿಯಲ್ಲಿಟ್ಟುಕೊಂಡು ಈ ಸಾಂವಿಧಾನಿಕ ಪ್ರಾವಧಾನವನ್ನು ನೀಡಲಾಗಿದೆ.

ಒಂದು ವೇಳೆ ಅಟಾರ್ನಿ ಜನರಲ್ ಒಪ್ಪಿಗೆ ನೀಡುವುದನ್ನು ನಿರಾಕರಿಸಿದರೆ ಆಗುವ ಪರಿಣಾಮವೇನು?

AG ಒಪ್ಪಿಗೆಯನ್ನು ನಿರಾಕರಿಸಿದರೆ, ವಿಷಯವು ಅಲ್ಲಿಯೇ ಕೊನೆಗೊಳ್ಳುತ್ತದೆ.

 • ಆದಾಗ್ಯೂ, ದೂರುದಾರರು ಪ್ರತ್ಯೇಕವಾಗಿ ಈ ವಿಷಯವನ್ನು ನ್ಯಾಯಾಲಯದ ಗಮನಕ್ಕೆ ತರಬಹುದು ಮತ್ತು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಳ್ಳುವಂತೆ ನ್ಯಾಯಾಲಯವನ್ನು ಒತ್ತಾಯಿಸಬಹುದು.
 • ಸಂವಿಧಾನದ 129 ನೇ ವಿಧಿಯು ಸುಪ್ರೀಂ ಕೋರ್ಟ್‌ಗೆ ಸ್ವಂತವಾಗಿ ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ಪ್ರಾರಂಭಿಸುವ ಅಧಿಕಾರವನ್ನು ನೀಡುತ್ತದೆ, ಈ ಪ್ರಕ್ರಿಯೆಯು AG ಅಥವಾ AG ಯ ಒಪ್ಪಿಗೆಯೊಂದಿಗೆ ಅದರ ಮುಂದೆ ತರುವ ನಿರ್ಣಯದಿಂದ ಸ್ವತಂತ್ರವಾಗಿದೆ.

 

ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.

ಭಾರತದ ಮುಖ್ಯ ನ್ಯಾಯಾಧೀಶರನ್ನು ಸುಪ್ರೀಂ ಕೋರ್ಟ್ ಹೇಗೆ ಆಯ್ಕೆ ಮಾಡುತ್ತದೆ?


(How Supreme Court chooses the Chief Justice of India?)

ಸಂದರ್ಭ:

ಭಾರತದ ಮುಖ್ಯ ನ್ಯಾಯಮೂರ್ತಿ ಶರದ್ .ಅರವಿಂದ್. ಬೊಬ್ಡೆ ಅವರು ಸುಪ್ರೀಂ ಕೋರ್ಟ್‌ನ ಹಿರಿಯ-ನ್ಯಾಯಾಧೀಶರಾದ ನ್ಯಾಯಮೂರ್ತಿ ಎನ್.ವಿ.ರಮಣ ಅವರನ್ನು ಮುಂದಿನ ಉನ್ನತ ನ್ಯಾಯಾಧೀಶರನ್ನಾಗಿ ನೇಮಕ ಮಾಡುವಂತೆ ಶಿಫಾರಸು ಮಾಡಿದ್ದಾರೆ.

 • ನ್ಯಾಯಮೂರ್ತಿ ರಮಣ ಅವರು ಭಾರತದ 48 ನೇ ಮುಖ್ಯ ನ್ಯಾಯಮೂರ್ತಿಯಾಗಿ ಏಪ್ರಿಲ್ 24 ರಿಂದ ಅಧಿಕಾರ ವಹಿಸಿಕೊಳ್ಳಲಿದ್ದಾರೆ.

 CJI ನೇಮಕ:

 • ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಸಾಂಪ್ರದಾಯಿಕವಾಗಿ ವರಿಷ್ಠ ನ್ಯಾಯಾಲಯದಲ್ಲಿ ಸೇವೆ ಮುಗಿಸಿ ಹೊರಹೋಗುವ ಮುಖ್ಯ ನ್ಯಾಯಾಧೀಶರು ಅವರ (ಅಥವಾ ಅವಳ) ನಿವೃತ್ತಿಯ ದಿನದಂದು ನೇಮಕ ಮಾಡುತ್ತಾರೆ.
 • ಸಂಪ್ರದಾಯದ ಪ್ರಕಾರ, ಹೊರಹೋಗುವ ಮುಖ್ಯ ನ್ಯಾಯಮೂರ್ತಿ ಸುಪ್ರೀಂಕೋರ್ಟ್ ನಲ್ಲಿನ ಅತ್ಯಂತ ಹಿರಿಯ ನ್ಯಾಯಾಧೀಶರನ್ನು ಆಯ್ಕೆ ಮಾಡುತ್ತಾರೆ.

ಸುಪ್ರೀಂ ಕೋರ್ಟ್‌ನಲ್ಲಿ ಹಿರಿತನವನ್ನು ವಯಸ್ಸಿನಿಂದಲ್ಲದೆ ಈ ಕೆಳಗಿನ ಅಂಶಗಳಿಂದ ನಿರ್ಧರಿಸಲಾಗುತ್ತದೆ, ಅವುಗಳು:

 • ನ್ಯಾಯಾಧೀಶನು/ಳು ಸುಪ್ರೀಂ ಕೋರ್ಟ್‌ಗೆ ನೇಮಕಗೊಂಡ ದಿನಾಂಕ.
 • ಇಬ್ಬರು ನ್ಯಾಯಾಧೀಶರನ್ನು ಒಂದೇ ದಿನ ಸುಪ್ರೀಂ ಕೋರ್ಟ್‌ಗೆ ಬಡ್ತಿಗೊಂಡರೆ:
 • ನ್ಯಾಯಾಧೀಶರಾಗಿ ಮೊದಲು ಪ್ರಮಾಣವಚನ ಸ್ವೀಕರಿಸಿದವರು ಇನ್ನೊಬ್ಬರನ್ನು ಮುಂಬಡ್ತಿಯಲ್ಲಿ ಹಿಂದಕ್ಕೆ ತಳ್ಳುತ್ತಾರೆ.
 • ಇಬ್ಬರೂ ಒಂದೇ ದಿನ ನ್ಯಾಯಾಧೀಶರಾಗಿ ಪ್ರಮಾಣವಚನ ಸ್ವೀಕರಿಸಿದರೆ, ಹೈಕೋರ್ಟ್ ನಲ್ಲಿ ಹೆಚ್ಚು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದವರು ಹಿರಿತನದ ವಿಷಯದಲ್ಲಿ ‘ಗೆಲ್ಲುತ್ತಾರೆ’.
 • ನ್ಯಾಯಪೀಠದಿಂದ ನೇಮಕಗೊಂಡವರು ಬಾರ್‌ ಕೌನ್ಸಿಲ್ ನಿಂದ ನೇಮಕಗೊಳ್ಳುವವನನ್ನು ಹಿರಿತನದಲ್ಲಿ ‘ಟ್ರಂಪ್’ ಮಾಡುತ್ತಾರೆ.

ಈ ರೀತಿಯ ನೇಮಕಾತಿಯು ಸಂವಿಧಾನದ ಒಂದು ಭಾಗವೇ?

ಸಿಜೆಐ ನೇಮಕಕ್ಕೆ ಸಂಬಂಧಿಸಿದಂತೆ ಯಾವುದೇ ಮಾನದಂಡಗಳು ಮತ್ತು ಕಾರ್ಯವಿಧಾನಗಳನ್ನು ಭಾರತದ ಸಂವಿಧಾನವು ಹೊಂದಿಲ್ಲ. ಭಾರತೀಯ ಸಂವಿಧಾನದ 124 (1) ನೇ ವಿಧಿಯು “ಭಾರತದ ಮುಖ್ಯ ನ್ಯಾಯಾಧೀಶರನ್ನು ಒಳಗೊಂಡ ಭಾರತದ ಸುಪ್ರೀಂ ಕೋರ್ಟ್ ಇರಬೇಕು” ಎಂದು ಹೇಳುತ್ತದೆ.

 • ಈ ಕುರಿತು ಅತ್ಯಂತ ಹತ್ತಿರದ ಉಲ್ಲೇಖವು ಸಂವಿಧಾನದ 126 ನೇ ವಿಧಿಯಲ್ಲಿದೆ, ಇದು ಹಂಗಾಮಿ CJI ನೇಮಕಕ್ಕೆ ಸಂಬಂಧಿಸಿದೆ.
 • ಸಾಂವಿಧಾನಿಕ ನಿಬಂಧನೆಯ ಅನುಪಸ್ಥಿತಿಯಲ್ಲಿ, ಈ ಕಾರ್ಯವಿಧಾನವು ರೂಢಿ ಮತ್ತು ಸಂಪ್ರದಾಯವನ್ನು ಅವಲಂಬಿಸಿದೆ.

ಈ ಕುರಿತ ಕಾರ್ಯವಿಧಾನ ಏನು?

ಮುಂದಿನ ಸಿಜೆಐ ಅನ್ನು ನೇಮಿಸುವ ವಿಧಾನವನ್ನು ಸರ್ಕಾರ ಮತ್ತು ನ್ಯಾಯಾಂಗದ ನಡುವಿನ ಜ್ಞಾಪಕ ಪತ್ರದಲ್ಲಿ (Memorandum of Procedure (MoP) ನೀಡಲಾಗಿದೆ:

 • ಕಾನೂನು ಸಚಿವರು, ಪ್ರಸ್ತುತ ಸಿಜೆಐ ನಿವೃತ್ತಿಯ ದಿನಾಂಕಕ್ಕೆ ಹತ್ತಿರದಲ್ಲಿರುವಂತೆ ‘ಸೂಕ್ತ ಸಮಯದಲ್ಲಿ’, ಮುಂದಿನ ಮುಖ್ಯನ್ಯಾಯಮೂರ್ತಿ ಅವರ ನೇಮಕದ ಕುರಿತು ಅಧಿಕಾರದಿಂದ ಹೊರಹೋಗುವ CJI ರವರ ಶಿಫಾರಸನ್ನು ಕೋರುವ ಮೂಲಕ ನೂತನ ಸಿಜೆಐ ನೇಮಕ ಪ್ರಕ್ರಿಯೆಯನ್ನು ಆರಂಭಿಸುತ್ತಾರೆ.
 • ಸಿಜೆಐ ತನ್ನ ಶಿಫಾರಸನ್ನು ಕಾನೂನು ಸಚಿವಾಲಯಕ್ಕೆ ಕಳುಹಿಸುತ್ತಾರೆ; ಮತ್ತು ಯಾವುದೇ ಸಂಶಯ ಅಥವಾ ಚಿಂತೆಯ ಸಂದರ್ಭದಲ್ಲಿ, ಸಂಬಂಧಿಸಿದ ನ್ಯಾಯಾಧೀಶರನ್ನು ಉನ್ನತ ಹುದ್ದೆಗೆ ಬಡ್ತಿ ನೀಡುವ ವಿಷಯದ ಬಗ್ಗೆ ಮುಖ್ಯ ನ್ಯಾಯಮೂರ್ತಿಗಳು ಕಾಲೇಜಿಯಮ್ ಅನ್ನು ಸಂಪರ್ಕಿಸಬಹುದು.
 • ಸಿಜೆಐನಿಂದ ಶಿಫಾರಸು ಪಡೆದ ನಂತರ, ಕಾನೂನು ಸಚಿವರು ಅದನ್ನು ಪ್ರಧಾನ ಮಂತ್ರಿಗೆ ರವಾನಿಸುತ್ತಾರೆ, ನಂತರ ಪ್ರಧಾನ ಮಂತ್ರಿಗಳು ರಾಷ್ಟ್ರಪತಿಗೆ ಈ ಕುರಿತು ಸಲಹೆ ನೀಡುತ್ತಾರೆ.
 • ಅಧ್ಯಕ್ಷರು ಹೊಸ ಮುಖ್ಯ ನ್ಯಾಯಮೂರ್ತಿಗಳಿಗೆ ಪ್ರಮಾಣವಚನ ಮತ್ತು ಗೌಪ್ಯತೆಯ ವಿಧಿಯನ್ನು ಬೋಧಿಸುತ್ತಾರೆ.

ವರಿಷ್ಠ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳು ಮತ್ತು ಇತರೆ ನ್ಯಾಯಾಧೀಶರ  ನೇಮಕ ದಲ್ಲಿನ- ಪ್ರಮುಖ ವ್ಯತ್ಯಾಸ:

ಈ ಮೊದಲು, CJI (ಅಥವಾ ಕೊಲಿಜಿಯಂ) ನ ಶಿಫಾರಸನ್ನು ಮರುಪರಿಶೀಲನೆಗಾಗಿ ಸರ್ಕಾರವು ಮರಳಿ ಅವರಿಗೆ ಕಳುಹಿಸಲು ಸಾಧ್ಯವಿರಲಿಲ್ಲ; ಆದರೆ ಪ್ರಸ್ತುತದಲ್ಲಿ, ಸರ್ಕಾರವು ಹಾಗೆ ಮಾಡಬಹುದು. ಕೊನೆಗೆ, ಕೊಲಿಜಿಯಂ ಆ ಹೆಸರುಗಳನ್ನು ಪುನರುಚ್ಚರಿಸಿದರೆ, ಸರ್ಕಾರವು ಈ ಶಿಫಾರಸ್ಸಿಗೆ ಆಕ್ಷೇಪಿಸಲು ಸಾಧ್ಯವಿಲ್ಲ ಹಾಗೂ ಕೊಲಿಜಿಯಂ ನ ಶಿಫಾರಸ್ಸಿಗೆ ಅನುಗುಣವಾಗಿ ನೇಮಕಾತಿ ಮಾಡಬೇಕಾಗುತ್ತದೆ.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಗ್ರಾಹಕ ಸಂರಕ್ಷಣೆ (ಇ-ಕಾಮರ್ಸ್) ನಿಯಮಗಳು, 2020:


(Consumer Protection (E-Commerce) Rules, 2020)

ಸಂದರ್ಭ:

ಸಂಸದೀಯ ಸಮಿತಿಯು ‘ಗ್ರಾಹಕ ಸಂರಕ್ಷಣೆ (ಇ-ಕಾಮರ್ಸ್) ನಿಯಮಗಳು, 2020’ ಕುರಿತು ತನ್ನ ವರದಿಯನ್ನು ಸಲ್ಲಿಸಿದೆ.

ಪ್ರಮುಖ ಶಿಫಾರಸುಗಳು:

 • ಅನ್ಯಾಯದ’ / ಮೋಸದ ವ್ಯಾಪಾರ ಅಭ್ಯಾಸ ಯಾವುದು ಎಂಬುದರ ಕುರಿತು ಸರ್ಕಾರವು ಹೆಚ್ಚು ಸ್ಪಷ್ಟವಾದ ವ್ಯಾಖ್ಯಾನವನ್ನು ನೀಡಬೇಕು.
 • ಸಮಸ್ಯೆಯನ್ನು ನಿಭಾಯಿಸಲು ಸರ್ಕಾರವು ಪ್ರಾಯೋಗಿಕ ಕಾನೂನು ಪರಿಹಾರವನ್ನು ಒದಗಿಸಬೇಕು.
 • ಇ-ಕಾಮರ್ಸ್ ಸಂಸ್ಥೆಗಳು ವಿಧಿಸುವ ವಿತರಣಾ ಶುಲ್ಕಗಳಿಗೆ / ಸರಬರಾಜು ಶುಲ್ಕ ಗಳಿಗೆ(delivery charges)ಮಿತಿಯನ್ನು ನಿಗದಿಪಡಿಸಬೇಕು.
 • ತಪ್ಪು ಮಾಹಿತಿಗೆ ಸಂಬಂಧಿಸಿದ ನಿಯಮಗಳ ಉಲ್ಲಂಘನೆಗಾಗಿ ದಂಡ ವಿಧಿಸಲು ಅವಕಾಶ ನೀಡುವುದು.
 • ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯವು ಮಾರುಕಟ್ಟೆಯ ಘಟಕಗಳಿಂದ ವಿಧಿಸಲಾಗುವ ವಿತರಣಾ ಶುಲ್ಕಗಳನ್ನು ನಿಗದಿಪಡಿಸಲು ವಿಶಾಲವಾದ ಮಾರ್ಗಸೂಚಿಗಳನ್ನು ನೀಡಬೇಕು ಮತ್ತು ಸೇವೆಯ ಬೇಡಿಕೆಯ ಗರಿಷ್ಠ ಸಮಯದಲ್ಲಿ (peak hours of service) ವಿತರಣಾ ಶುಲ್ಕದ ಗರಿಷ್ಠ ಮಿತಿಗಳನ್ನು ನಿಗದಿಪಡಿಸಬೇಕು.
 • ಹೆಚ್ಚುವರಿ ಶುಲ್ಕಗಳಿಂದಾಗಿ ಉತ್ಪನ್ನದ ಅಂತಿಮ ಬೆಲೆಯು ಹೆಚ್ಚಾಗುವ ವಿದ್ಯಮಾನವಾದ  ಡ್ರಿಪ್ ಪ್ರೈಸಿಂಗ್ (drip pricing ) ಅನ್ನು ಸಚಿವಾಲಯವು ಸ್ಪಷ್ಟವಾಗಿ ವ್ಯಾಖ್ಯಾನಿಸಬೇಕು ಮತ್ತು ಅದರ ಉಲ್ಲಂಘನೆಗಾಗಿ ದಂಡ ವಿಧಿಸುವಿಕೆಯನ್ನು ಸೇರಿಸುವ ಮೂಲಕ ಗ್ರಾಹಕರನ್ನು ಇದರ ವಿರುದ್ಧ ರಕ್ಷಿಸಬೇಕು.

ಏನಿದು ಸಮಸ್ಯೆ?

 • ಇ-ಕಾಮರ್ಸ್ ಉದ್ಯಮಗಳು ಅನೇಕ ಪ್ರಯೋಜನಗಳನ್ನು ನೀಡುತ್ತವೆಯಾದರೂ, ಈ ಕ್ಷೇತ್ರದ ಅಭಿವೃದ್ಧಿಯು ಗ್ರಾಹಕರನ್ನು ಹೊಸ ರೀತಿಯ ಅನ್ಯಾಯದ ಅಥವಾ ಮೋಸದ ವ್ಯಾಪಾರ ಅಭ್ಯಾಸಗಳು, ಗೌಪ್ಯತೆ ಉಲ್ಲಂಘನೆ ಮತ್ತು ನಿರ್ಲಕ್ಷಿಸಲ್ಪಟ್ಟ ಕುಂದುಕೊರತೆಗಳ ಸಮಸ್ಯೆಗಳಿಗೆ (unattended grievances) ಗುರಿಯಾಗಿಸಿದೆ.
 • ಪೂರ್ವನಿರ್ಧಾರಿತವಾಗಿ ಬೆಲೆ ನಿಗದಿಪಡಿಸುವುದು ಅಂತಹ ಒಂದು ಸಮಸ್ಯೆಯಾಗಿದ್ದು ಇದು ಸ್ಪರ್ಧೆಯನ್ನು ತೊಡೆದುಹಾಕಲು ಸಹ ಕಾರಣವಾಗಬಹುದು ಮತ್ತು ಈ ರೀತಿಯ ವ್ಯಾಪಾರವು ದೀರ್ಘಾವಧಿಯಲ್ಲಿ ಗ್ರಾಹಕರಿಗೆ ಹಾನಿಕಾರಕವೆಂದು ಸಾಬೀತುಪಡಿಸುತ್ತದೆ.
 •  ಪೂರ್ವನಿರ್ಧಾರಿತ ಬೆಲೆ ಎನ್ನುವುದು ಕೆಲವು ಮಾರುಕಟ್ಟೆ ದೈತ್ಯರ ಅಲ್ಪಾವಧಿಯ ಕಾರ್ಯತಂತ್ರವಾಗಿದ್ದು, ಅಲ್ಪಾವಧಿಯ ನಷ್ಟವನ್ನು ಸಹಿಸಿಕೊಳ್ಳಲು ಮತ್ತು ಅವರ ಉತ್ಪನ್ನಗಳ ಬೆಲೆಯನ್ನು ಸರಾಸರಿ ವೇರಿಯಬಲ್ ವೆಚ್ಚಕ್ಕಿಂತ ಕಡಿಮೆ ಮಾಡುವ ಮೂಲಕ ದೀರ್ಘಕಾಲದ ಲಾಭದ ಯೋಜನೆಗಳನ್ನು ಅಳವಡಿಸಿಕೊಳ್ಳುವುದಾಗಿದೆ.
 • ಇದು ಮಾರುಕಟ್ಟೆಯಿಂದ ಸ್ಪರ್ಧೆಯನ್ನು ಅಳಿಸಿಹಾಕಲು ಕಾರಣವಾಗಬಹುದು ಮತ್ತು ದೀರ್ಘಾವಧಿಯಲ್ಲಿ ಗ್ರಾಹಕರಿಗೆ ಹಾನಿಕರವಾಗಬಹುದು.

ಇತ್ತೀಚಿಗೆ ರೂಪಿಸಲಾದ ನಿಯಮಗಳು ಏನನ್ನು ಸ್ಪಷ್ಟಪಡಿಸುತ್ತವೆ?

 • ಗ್ರಾಹಕ ಸಂರಕ್ಷಣೆ (ಇ-ಕಾಮರ್ಸ್) ನಿಯಮಗಳು, 2020, ಅನ್ನು ಜುಲೈ 23 ರಂದು ಅಧಿಸೂಚಿಸಲಾಗಿದೆ, ಡಿಜಿಟಲ್ ಅಥವಾ ಎಲೆಕ್ಟ್ರಾನಿಕ್ ನೆಟ್‌ವರ್ಕ್‌ನಲ್ಲಿ ಮಾರಾಟವಾಗುವ ಎಲ್ಲಾ ವಾಣಿಜ್ಯ ವಹಿವಾಟುಗಳನ್ನು ಇದು ನಿಯಂತ್ರಿಸುತ್ತದೆ.
 • ಇ-ವಾಣಿಜ್ಯ ನಿಯಮಗಳು ಪ್ರಸ್ತುತ ಮಾರುಕಟ್ಟೆ ಸ್ಥಳ ಮಾದರಿ ಮತ್ತು ದಾಸ್ತಾನು ಆಧಾರಿತ ಮಾದರಿ ಎಂಬ ಎರಡು ಇ-ಕಾಮರ್ಸ್ ವ್ಯವಹಾರ ಮಾದರಿಗಳನ್ನು ಗುರುತಿಸುತ್ತವೆ.
 • ಈ ನಿಯಮಗಳು ಮಾರುಕಟ್ಟೆ ಮತ್ತು ದಾಸ್ತಾನು ಆಧಾರಿತ ಘಟಕಗಳಿಗೆ ಪ್ರತ್ಯೇಕ ನಿರ್ದಿಷ್ಟ ನಿಬಂಧನೆಗಳನ್ನು ವಿಧಿಸಿವೆ.
 • ಇ-ಕಾಮರ್ಸ್ ನಿಯಮಗಳು ರಿಟರ್ನ್, ಮರುಪಾವತಿ, ವಿನಿಮಯ, ವ್ಯಾರೆಂಟಿ ಮತ್ತು ಗ್ಯಾರೆಂಟಿ, ಮಾರಾಟವಾಗುವ ಸರಕುಗಳನ್ನು ಗ್ರಾಹಕರಿಗೆ ತಲುಪಿಸುವುದು ಅಥವಾ ಸೇವೆಗಳ ವಿತರಣೆ ಮತ್ತು ಸಾಗಣೆ,  ಉತ್ಪನ್ನಗಳು ತಯಾರಾದ ಮೂಲ ದೇಶ ಸೇರಿದಂತೆ ಎಲ್ಲಾ ಮಾಹಿತಿಯನ್ನು ವೇದಿಕೆಯಲ್ಲಿ ಒದಗಿಸಬೇಕು ಎಂದು ತಿಳಿಸುತ್ತವೆ.
 • ಅಂತಹ ವಿವರಗಳು ಗ್ರಾಹಕರಿಗೆ ವಿವೇಕಯುತ ನಿರ್ಧಾರ ತೆಗೆದುಕೊಳ್ಳಲು ಅನುವು ಮಾಡಿಕೊಡುತ್ತದೆ.

ವಿಶೇಷ ಸೂಚನೆ :

 • ಗ್ರಾಹಕ ಸಂರಕ್ಷಣೆ (ಇ-ಕಾಮರ್ಸ್) ನಿಯಮಗಳು, 2020 ಅನ್ನು ಹೊಸ ಗ್ರಾಹಕ ಸಂರಕ್ಷಣಾ ಕಾಯ್ದೆ, 2019 ರ ಅಡಿಯಲ್ಲಿ ಅಧಿಸೂಚಿಸಲಾಗಿದೆ.
 • ಗ್ರಾಹಕ ಸಂರಕ್ಷಣೆ (ಇ-ಕಾಮರ್ಸ್) ನಿಯಮಗಳು, 2020- ಸಲಹಾತ್ಮಕ ರೂಪದಲ್ಲಿರದೆ ಕಡ್ಡಾಯವಾಗಿದೆ.

 

ವಿಷಯಗಳು: ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

ಭಾರತದ ಸಂಸ್ಥೆಯ ಮೂಲಕ ಸರಕುಗಳನ್ನು ಮಾರಾಟ ಮಾಡಿದರೆ ಡಿಜಿಟಲ್ ತೆರಿಗೆ ವಿಧಿಸುವಂತಿಲ್ಲ:


(No digital tax if goods sold via India arm)

ಸಂದರ್ಭ:

ಹಣಕಾಸು ಮಸೂದೆ 2021 ರ ತಿದ್ದುಪಡಿಯ ಮೂಲಕ, ವಿದೇಶಿ ಇ-ಕಾಮರ್ಸ್ ವೇದಿಕೆಗಳು ಅಥವಾ ಕಡಲಾಚೆಯ ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳು ಭಾರತದಲ್ಲಿ  ಶಾಶ್ವತ ಅಂಗ ಸಂಸ್ಥೆಯನ್ನು ಹೊಂದಿದ್ದರೆ ಅಥವಾ ಅವರು ಇಲ್ಲಿ ಯಾವುದೇ ಆದಾಯ ತೆರಿಗೆಯನ್ನು ಪಾವತಿ ಮಾಡುತ್ತಿದ್ದರೆ ಶೇಕಡಾ 2 ರಷ್ಟು ಸಮೀಕರಣ (equalisation levy) ತೆರಿಗೆಯನ್ನು ಪಾವತಿಸಬೇಕಾಗಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಆದಾಗ್ಯೂ, ಯಾವುದೇ ತೆರಿಗೆ ಪಾವತಿಸದ ವಿದೇಶಿ ಸಂಸ್ಥೆಗಳು ಈ ತೆರಿಗೆಯನ್ನು ಪಾವತಿಸಬೇಕಾಗುತ್ತದೆ.  

 ಡಿಜಿಟಲ್ ತೆರಿಗೆಯನ್ನು ಯಾರು ಪಾವತಿಸಬೇಕು?

ಏಪ್ರಿಲ್ 2020 ರಲ್ಲಿ ಪರಿಚಯಿಸಲಾದ ಡಿಜಿಟಲ್ ತೆರಿಗೆ ಯು, ವಾರ್ಷಿಕ 2 ಕೋಟಿ ರೂ.ಗಿಂತ ಹೆಚ್ಚಿನ ಆದಾಯವನ್ನು ಹೊಂದಿರುವ ಮತ್ತು ಭಾರತೀಯರಿಗೆ ಸರಕು ಮತ್ತು ಸೇವೆಗಳ ಆನ್‌ಲೈನ್ ಮಾರಾಟವನ್ನು ಒದಗಿಸುವ ಅನಿವಾಸಿ ಕಂಪನಿಗಳಿಗೆ ಮಾತ್ರ ಅನ್ವಯಿಸುತ್ತದೆ.

ಭಾರತದಲ್ಲಿ “ಈಕ್ವಲೈಸೇಶನ್ ಲೆವಿ”/ಸಮೀಕರಣ ತೆರಿಗೆ:

ಇದು ವಿದೇಶಿ ಡಿಜಿಟಲ್ ಕಂಪನಿಗಳನ್ನು ಗುರಿಯಾಗಿಟ್ಟುಕೊಂಡು ವಿಧಿಸುವ ತೆರಿಗೆಯಾಗಿದ್ದು, ಇದನ್ನು 2016 ರಿಂದ ವಿಧಿಸಲಾಗುತ್ತಿದೆ.

 • ಏಪ್ರಿಲ್ 1, 2020 ರಿಂದ ಜಾರಿಗೆ ಬಂದಿರುವ ಹೊಸ ತಿದ್ದುಪಡಿಯು, ಆನ್‌ಲೈನ್ ಜಾಹೀರಾತಿನಿಂದ ಭಾರತದಲ್ಲಿ ಮಾಡಿದ ಎಲ್ಲಾ ಆನ್‌ಲೈನ್ ವಾಣಿಜ್ಯ ಚಟುವಟಿಕೆಗಳಿಗೆ ಸಮೀಕರಣದ ತೆರಿಗೆಯನ್ನು ವಿಸ್ತರಿಸುತ್ತದೆ, ಭಾರತದಲ್ಲಿ ತೆರಿಗೆ ವಿಧಿಸಲಾಗದ ವ್ಯವಹಾರಗಳಿಗೆ ಅದರ ಆದಾಯದ ಮೇಲೆ 2% ತೆರಿಗೆಯನ್ನು ಅನ್ವಯಿಸಲಾಗುತ್ತದೆ.
 • ನಿರ್ದಿಷ್ಟವಾಗಿ ಹೇಳುವುದಾದರೆ, ಸರಬರಾಜು ಅಥವಾ ಸೇವೆಗಳಿಗಾಗಿ ಇ-ಕಾಮರ್ಸ್ ಆಪರೇಟರ್ ಸ್ವೀಕರಿಸುವ ಪರಿಗಣನೆಗೆ ಇದನ್ನು ವಿಧಿಸಲಾಗುತ್ತದೆ ಅಥವಾ ಸರಬರಾಜು ಅಥವಾ ಸೇವೆಯ ಅನುಕೂಲಕ್ಕಾಗಿ – ಭಾರತದಲ್ಲಿ ವಾಸಿಸುವ ವ್ಯಕ್ತಿ, ಭಾರತದಲ್ಲಿ ವಾಸಿಸುವ ವ್ಯಕ್ತಿಯಿಂದ ಸಂಗ್ರಹಿಸಿದ ದತ್ತಾಂಶದ ಮಾರಾಟದಂತಹ ನಿರ್ದಿಷ್ಟ ಸಂದರ್ಭಗಳಲ್ಲಿ ಅನಿವಾಸಿ ವ್ಯಕ್ತಿ ಮತ್ತು ಭಾರತದಲ್ಲಿರುವ ಐಪಿ ವಿಳಾಸದ ಮೂಲಕ ಸರಕು ಅಥವಾ ಸೇವೆಗಳನ್ನು ಖರೀದಿಸುವ ವ್ಯಕ್ತಿ.

ದಯವಿಟ್ಟು ಗಮನಿಸಿ:

GAFA tax- ಗೂಗಲ್, ಆಪಲ್, ಫೇಸ್‌ಬುಕ್, ಅಮೆಜಾನ್ ಹೆಸರಿನ GAFA ತೆರಿಗೆ  ದೊಡ್ಡ ತಂತ್ರಜ್ಞಾನ ಮತ್ತು ಅಂತರ್ಜಾಲ ಕಂಪನಿಗಳ ಮೇಲೆ ವಿಧಿಸಲು ಉದ್ದೇಶಿಸಿರುವ ಡಿಜಿಟಲ್ ತೆರಿಗೆಯಾಗಿದೆ. ಈ GAFA ತೆರಿಗೆಯನ್ನು ಪರಿಚಯಿಸಲು ಫ್ರಾನ್ಸ್ ನಿರ್ಧರಿಸಿದೆ,        (ಈ ಮೇಲ್ಕಂಡ ಕಂಪನಿಗಳ ಡಿಜಿಟಲ್ ಚಟುವಟಿಕೆಗಳಿಂದ ಬರುವ ಆದಾಯದ ಮೇಲೆ 3% ತೆರಿಗೆ).

 

ವಿಷಯಗಳು: ಆರೋಗ್ಯ, ಶಿಕ್ಷಣ ಮತ್ತು ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ಸಾಮಾಜಿಕ ವಲಯ/ ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳು.

ಎರಡು ಬಾರಿ ರೂಪಾಂತರಿತ ’ವೈರಸ್  ಪತ್ತೆ:


(‘Double mutant’ virus variant found)

 ಸಂದರ್ಭ:

ಇಂಡಿಯನ್ SARS-CoV-2 ಕನ್ಸೋರ್ಟಿಯಂ ಆನ್ ಜೀನೋಮಿಕ್ಸ್ (INSACOG) ಎಂದು ಕರೆಯಲ್ಪಡುವ ದೇಶಾದ್ಯಂತ 10 ಪ್ರಯೋಗಾಲಯಗಳ ಒಕ್ಕೂಟದಿಂದ ವೈರಸ್ ಮಾದರಿಗಳ ಒಂದು ವಿಭಾಗದ ಜೀನೋಮ್ ಅನುಕ್ರಮವು ಒಂದು ವಿಶಿಷ್ಟವಾದ “ಎರಡು ಬಾರಿ ರೂಪಾಂತರಿತ” ಕೊರೊನಾವೈರಸ್ ನ ರೂಪಾಂತರವನ್ನು ಬಹಿರಂಗಪಡಿಸಿದೆ – ಈ ರೂಪಾಂತರಗಳ  ಸಂಯೋಜನೆಯೊಂದಿಗೆ ಇದು ಪ್ರಪಂಚದ ಬೇರೆಲ್ಲಿಯೂ ಕಾಣಸಿಗದ ರೂಪಾಂತರಗಳ ಸಂಯೋಜನೆಯಾಗಿದೆ.

ಎರಡು ಬಾರಿ ರೂಪಾಂತರಗೊಂಡಿರುವ ಕೊರೊನಾವೈರಸ್ ನ ಹೊಸ ರೂಪಾಂತರವು ಮಹಾರಾಷ್ಟ್ರದ ಕನಿಷ್ಠ 200 ವೈರಸ್ ಮಾದರಿಗಳಲ್ಲಿ ಮತ್ತು ದೆಹಲಿ, ಪಂಜಾಬ್ ಮತ್ತು ಗುಜರಾತಿನಿಂದ ಸಾಕಷ್ಟು ಪ್ರಕರಣಗಳು ಕಂಡುಬಂದಿದೆ.

ಕಳವಳದ ವಿಷಯವೇನು?

ವೈರಸ್ನಲ್ಲಿನ ರೂಪಾಂತರಗಳು ಆಶ್ಚರ್ಯಕರ ವಿಷಯವೇನಲ್ಲ ಆದರೆ ವ್ಯಕ್ತಿಯ ದೇಹದಲ್ಲಿರುವ ರೋಗನಿರೋಧಕ ಶಕ್ತಿಗೂ ಈ ವೈರಸ್ ಮಣಿಯುವುದಿಲ್ಲ. ಅಲ್ಲದೆ ರೋಗನಿರೋಧಕ ಶಕ್ತಿಯು ಹೆಚ್ಚು ನಿಷ್ಕ್ರಿಯಗೊಳ್ಳಲು ಸಹ ರೂಪಾಂತರಗೊಂಡ ವೈರಸ್ ಕಾರಣವಾಗುವುದು. ಆ ಮೂಲಕ ರೋಗದ ತೀವ್ರತೆಯಲ್ಲಿ ಹೆಚ್ಚಳಕ್ಕೆ ಕಾರಣವಾಗಿರುವುದು ಚಿಂತೆಯ ವಿಷಯವಾಗಿದೆ.

ವೈರಸ್‌ ಗಳು ಏಕೆ ರೂಪಾಂತರಗೊಳ್ಳುತ್ತವೆ?

 • ರೂಪಾಂತರವು ಕೇವಲ ವ್ಯತ್ಯಾಸವನ್ನು ಸೂಚಿಸುತ್ತದೆ: ಜೀನೋಮ್ ನಲ್ಲಿ ಅಕ್ಷರ ಬದಲಾವಣೆ/ ಜೀನೋಮ್‌ನ ರಚನೆಯಲ್ಲಿ ಬದಲಾವಣೆ.
 • ವೈರಸ್ ನಲ್ಲಿನ ರೂಪಾಂತರವು ಅದರ ನೈಸರ್ಗಿಕ ವಿಕಾಸದ ಭಾಗವಾಗಿದೆ.
 • ಲಕ್ಷಾಂತರ ಜನರು ಸೋಂಕಿಗೆ ಒಳಗಾದ ನಂತರ, ವೈರಸ್ ಮೇಲೆ ಒತ್ತಡ ಹೆಚ್ಚಾಗುತ್ತದೆ.

SARS-CoV-2 ರ ಸಂದರ್ಭದಲ್ಲಿ: ಇದು ರಿಬೊನ್ಯೂಕ್ಲಿಯಿಕ್ ಆಮ್ಲ (RNA) ವೈರಸ್, ಮತ್ತು ಅದರಲ್ಲಿನ ರೂಪಾಂತರವು ಅದರ ಅಣುಗಳ ಕ್ರಮದಲ್ಲಿ ಬದಲಾವಣೆಯನ್ನು ಸೂಚಿಸುತ್ತದೆ.

 • RNA ವೈರಸ್‌ನಲ್ಲಿನ ರೂಪಾಂತರವು ಸಾಮಾನ್ಯವಾಗಿ ವೈರಸ್‌ ತನ್ನ ಪ್ರತಿಕೃತಿಗಳನ್ನು ಮಾಡುವಾಗ ತಪ್ಪು ಮಾಡಿದ ಸಂದರ್ಭದಲ್ಲಿ ಸಂಭವಿಸುತ್ತದೆ.

 

ವಿಷಯಗಳು: ಆರೋಗ್ಯ, ಶಿಕ್ಷಣ ಮತ್ತು ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ಸಾಮಾಜಿಕ ವಲಯ/ ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳು.

ಅಲೈಡ್ ಮತ್ತು ಆರೋಗ್ಯ ವೃತ್ತಿಪರರ ಮಸೂದೆ, 2021 ರ ರಾಷ್ಟ್ರೀಯ ಆಯೋಗ:


(National Commission for Allied and Healthcare Professionals Bill, 2021)

ಸ೦ದರ್ಭ:

ಅಲೈಡ್ ಮತ್ತು ಆರೋಗ್ಯ ವೃತ್ತಿಪರರ ಅಭ್ಯಾಸವನ್ನು / ಸೇವೆಯನ್ನು ನಿಯಂತ್ರಿಸಲು ಸಂಸತ್ತು ಅಲೈಡ್ ಮತ್ತು ಆರೋಗ್ಯ ವೃತ್ತಿಪರರ ಮಸೂದೆ ಯನ್ನು ಅಂಗೀಕರಿಸಿದೆ.

ಮಸೂದೆಯ ಪ್ರಮುಖ ಲಕ್ಷಣಗಳು:

 • ಅಲೈಡ್ ಮತ್ತು ಆರೋಗ್ಯ ವೃತ್ತಿಪರರ ಶಿಕ್ಷಣ ಮತ್ತು ಅಭ್ಯಾಸವನ್ನು / ಸೇವೆ / ಕಾರ್ಯವನ್ನು ನಿಯಂತ್ರಿಸಲು ಮತ್ತು ಪ್ರಮಾಣೀಕರಿಸಲು ಅಲೈಡ್ ಮತ್ತು ಹೆಲ್ತ್‌ಕೇರ್ ವೃತ್ತಿಪರರಿಗಾಗಿ ರಾಷ್ಟ್ರೀಯ ಆಯೋಗವನ್ನು ರಚಿಸಲು ಮಸೂದೆ ಪ್ರಯತ್ನಿಸುತ್ತದೆ.
 • ಪ್ರಸ್ತಾವಿತ ರಾಷ್ಟ್ರೀಯ ಆಯೋಗದ ಕಾರ್ಯಗಳು ಶಿಕ್ಷಣ ಮತ್ತು ಅಭ್ಯಾಸದ ಮಾನದಂಡಗಳನ್ನು ರೂಪಿಸುವುದು, ಎಲ್ಲಾ ನೋಂದಾಯಿತ ವೃತ್ತಿಪರರ ಆನ್‌ಲೈನ್ ಕೇಂದ್ರ ನೋಂದಣಿಯನ್ನು ರಚಿಸುವುದು ಮತ್ತು ನಿರ್ವಹಿಸುವುದು, ಶಿಕ್ಷಣದ ಮೂಲ ಮಾನದಂಡಗಳನ್ನು ಒದಗಿಸುವುದು ಮತ್ತು ಏಕರೂಪದ ಪ್ರವೇಶ ಮತ್ತು ನಿರ್ಗಮನ ಪರೀಕ್ಷೆಯನ್ನು ಒದಗಿಸುವುದು.
 • ಕಾನೂನಿನ ಅಡಿಯಲ್ಲಿ, ಅರ್ಹತೆ ಹೊಂದಿದ ಅಲೈಡ್ ಮತ್ತು ಹೆಲ್ತ್‌ಕೇರ್ ಪ್ರಾಕ್ಟೀಷನರ್‌ ಆಗಿ ರಾಜ್ಯ ರಿಜಿಸ್ಟರ್ ಅಥವಾ ರಾಷ್ಟ್ರೀಯ ರಿಜಿಸ್ಟರ್‌ನಲ್ಲಿ ದಾಖಲಾದವರಿಗೆ ಮಾತ್ರ ಅಲೈಡ್ ಮತ್ತು ಆರೋಗ್ಯ ವೃತ್ತಿಪರವಾಗಿ ಅಭ್ಯಾಸ ಅಥವಾ ಸೇವೆ ಮಾಡಲು ಅವಕಾಶ ನೀಡಲಾಗುತ್ತದೆ.

ವ್ಯಾಖ್ಯಾನಗಳು:

 • ಮಸೂದೆಯು, ‘ಅಲೈಡ್ ಹೆಲ್ತ್ ಪ್ರೊಫೆಷನಲ್’ ಅನ್ನು ಯಾವುದೇ ರೋಗ, ಕಾಯಿಲೆ, ಗಾಯ ಅಥವಾ ದೌರ್ಬಲ್ಯದ ರೋಗನಿರ್ಣಯ ಮತ್ತು ಚಿಕಿತ್ಸೆಯನ್ನು ಬೆಂಬಲಿಸಲು ತರಬೇತಿ ಪಡೆದ ಸಹಾಯಕ, ತಂತ್ರಜ್ಞ ಅಥವಾ ಪರಿಣತ ಎಂದು ವ್ಯಾಖ್ಯಾನಿಸುತ್ತದೆ.ಅಂತಹ ವೃತ್ತಿಪರರು ಈ ಮಸೂದೆಯಡಿಯಲ್ಲಿ ಡಿಪ್ಲೊಮಾ ಅಥವಾ ಪದವಿ ಪಡೆದಿರಬೇಕು.
 • ‘ಆರೋಗ್ಯ ವೃತ್ತಿಪರ’ ಎಂದರೆ, ವಿಜ್ಞಾನಿ, ಚಿಕಿತ್ಸಕ, ಅಥವಾ ರೋಗತಡೆಗಟ್ಟುವವ, ರೋಗನಿರೋಧಕ, ಪುನರ್ವಸತಿ, ಚಿಕಿತ್ಸಕ, ಅಥವಾ ಆರೋಗ್ಯ ಸೇವೆಗಳನ್ನು ಪ್ರಚಾರ ಮಾಡುವ,ಅಧ್ಯಯನ ಮಾಡುವ, ಸಲಹೆ ನೀಡುವ, ಸಂಶೋಧಿಸುವ, ಮೇಲ್ವಿಚಾರಣೆ ಮಾಡುವ ಯಾವುದೇ ವೃತ್ತಿಪರರನ್ನು ಒಳಗೊಂಡಿದೆ.ಅಂತಹ ವೃತ್ತಿಪರರು ಈ ಮಸೂದೆಯ ಪ್ರಕಾರ ಪದವಿ ಪಡೆದಿರಬೇಕು.
 • ಮಸೂದೆಯಲ್ಲಿ ಉಲ್ಲೇಖಿಸಲಾದ ಅಲೈಡ್ ಮತ್ತು ಹೆಲ್ತ್‌ಕೇರ್ ವೃತ್ತಿಗಳಲ್ಲಿ, ಜೀವ ವಿಜ್ಞಾನ, ಆಘಾತ ಮತ್ತು ಸುಟ್ಟಗಾಯಗಳ ಆರೈಕೆ, ಶಸ್ತ್ರಚಿಕಿತ್ಸಾ ಮತ್ತು ಅರಿವಳಿಕೆ ಸಂಬಂಧಿತ ತಂತ್ರಜ್ಞಾನ, ಭೌತಚಿಕಿತ್ಸಕರು ಮತ್ತು ಪೌಷ್ಠಿಕಾಂಶ ವಿಜ್ಞಾನದಲ್ಲಿ ಕೆಲಸ ಮಾಡುವ ವೃತ್ತಿಪರರು ಸೇರಿದ್ದಾರೆ.

 ಮಹತ್ಪ:

 • ಈ ಕಾಯ್ದೆಯು ಅಲೈಡ್ ಮತ್ತು ಆರೋಗ್ಯ ವೃತ್ತಿಪರರಿಗೆ ಉದ್ಯೋಗಾವಕಾಶಗಳನ್ನು ಹೆಚ್ಚಿಸುತ್ತದೆ ಮತ್ತು ಅವರ ಅಮೂಲ್ಯವಾದ ಸೇವಾಕಾರ್ಯಗಳಿಗೆ ಘನತೆಯನ್ನು ತುಂದುಕೊಡುತ್ತದೆ.
 • ಅಲ್ಲದೆ, ಅರ್ಹ ಆರೋಗ್ಯ ವೃತ್ತಿಪರರಿಗೆ ಅಪಾರ ಬೇಡಿಕೆಯಿದೆ ಮತ್ತು ಈ ಕಾಯ್ದೆಯು ಜನರಿಗೆ ಕೈಗೆಟುಕುವ ಆರೋಗ್ಯ ಸೇವೆ ಒದಗಿಸಲು ಅಗತ್ಯವಾದ ಕ್ರಮಗಳನ್ನು ಕೈಗೊಳ್ಳುತ್ತದೆ.

 

ವಿಷಯಗಳು: ಆರೋಗ್ಯ, ಶಿಕ್ಷಣ ಮತ್ತು ಮಾನವ ಸಂಪನ್ಮೂಲಕ್ಕೆ ಸಂಬಂಧಿಸಿದ ಸಾಮಾಜಿಕ ವಲಯ/ ಸೇವೆಗಳ ಅಭಿವೃದ್ಧಿ ಮತ್ತು ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳು.

ಮೌಲ್ಯಮಾಪನ ಚೌಕಟ್ಟನ್ನು ಹೊರತಂದ CBSE:


(CBSE rolls out assessment framework)

ಸಂದರ್ಭ:

ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿಯು(The Central Board of Secondary Education ) ಬ್ರಿಟಿಷ್ ಕೌನ್ಸಿಲ್ ಸಹಯೋಗದೊಂದಿಗೆ 6-10 ತರಗತಿಗಳ ವಿದ್ಯಾರ್ಥಿಗಳಿಗೆ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನದ ವಿಷಯಗಳಲ್ಲಿ  ಸಾಮರ್ಥ್ಯ ಆಧಾರಿತ ಹೊಸ ಮೌಲ್ಯಮಾಪನ ಚೌಕಟ್ಟನ್ನು ರೂಪಿಸಿದೆ.

 • ಮೌಲ್ಯಮಾಪನಗಳಲ್ಲಿ ಜಾಗತಿಕ ಗುಣಮಟ್ಟವನ್ನು ಸಾಧಿಸುವ ರಾಷ್ಟ್ರೀಯ ಶಿಕ್ಷಣ ನೀತಿಯ ದೃಷ್ಟಿಗೆ ಇದು ಅನುಗುಣವಾಗಿದೆ.

ಪ್ರಮುಖ ಅಂಶಗಳು:

 • ಈ ಮೌಲ್ಯಮಾಪನ ಚೌಕಟ್ಟು “ಅಸ್ತಿತ್ವದಲ್ಲಿರುವ ಯಾಂತ್ರಿಕವಾದ ಕಲಿಕಾ ಮಾದರಿಯನ್ನು ಬದಲಾಯಿಸುತ್ತದೆ ಮತ್ತು ದಿನನಿತ್ಯದ ಸಮಸ್ಯೆಗಳನ್ನು ಪರಿಹರಿಸಲು ಅಗತ್ಯವಿರುವ ಅವರ ಸಾಮರ್ಥ್ಯಗಳ ಆಧಾರದ ಮೇಲೆ ವಿದ್ಯಾರ್ಥಿಗಳನ್ನು ನಿರ್ಣಯಿಸುವುದರ ಮೇಲೆ ಕೇಂದ್ರೀಕರಿಸುತ್ತದೆ.”
 • ವ್ಯವಸ್ಥೆಯಡಿಯಲ್ಲಿ, ಪಠ್ಯದ ಭಾಗಗಳನ್ನು ಕಂಠಪಾಠ ಮಾಡುವ ಸಾಮರ್ಥ್ಯಕ್ಕಿಂತ ಹೆಚ್ಚಾಗಿ ಈ ವಿಷಯಗಳಲ್ಲಿ ವಿದ್ಯಾರ್ಥಿಗಳ ನೈಜ ಸಾಮರ್ಥ್ಯವನ್ನು ಪರೀಕ್ಷಿಸುವ ಪ್ರಶ್ನೆ ಪತ್ರಿಕೆಗಳು ಮತ್ತು ಇತರ ಮೌಲ್ಯಮಾಪನ ವಿಧಾನಗಳನ್ನು ರಚಿಸಲು ಶಿಕ್ಷಕರಿಗೆ ತರಬೇತಿ ನೀಡಲಾಗುವುದು.
 • ಮೊದಲ ಹಂತದಲ್ಲಿ ಆಯ್ದ ಕೇಂದ್ರೀಯ ವಿದ್ಯಾಲಯಗಳು ಮತ್ತು ನವೋದಯ ವಿದ್ಯಾಲಯಗಳು, ಚಂಡೀಗಡದ CBSE ಶಾಲೆಗಳು ಮತ್ತು ಕೆಲವು ಖಾಸಗಿ ಶಾಲೆಗಳಲ್ಲಿ ಚೌಕಟ್ಟನ್ನು ಜಾರಿಗೊಳಿಸಲಾಗುವುದು.
 • 32 ಲಕ್ಷ ಶಿಕ್ಷಕರು ಮತ್ತು ಎರಡು ಕೋಟಿ ವಿದ್ಯಾರ್ಥಿಗಳು ಒಳಗೊಂಡಂತೆ 2024 ರ ವೇಳೆಗೆ ಇದನ್ನು ದೇಶಾದ್ಯಂತ 25 ಸಾವಿರ CBSE ಶಾಲೆಗಳಲ್ಲಿ ಜಾರಿಗೆ ತರಲಾಗುವುದು.

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯಗಳು: ಮೂಲಸೌಕರ್ಯ-ಇಂಧನ.

 ಗ್ರಾಮ ಉಜಾಲಾ:


(GRAM UJALA)

 ಸಂದರ್ಭ:

ಇದನ್ನು,ಇತ್ತೀಚೆಗೆ ಪ್ರಾರಂಭಿಸಲಾಗಿದೆ.

ಈ ಕಾರ್ಯಕ್ರಮದಡಿಯಲ್ಲಿ ಎನರ್ಜಿ ಎಫಿಷಿಯೆನ್ಸಿ ಸರ್ವೀಸಸ್ ಲಿಮಿಟೆಡ್ (EESL) ನ ಸಂಪೂರ್ಣ ಸ್ವಾಮ್ಯದ ಅಂಗಸಂಸ್ಥೆಯಾದ ಕನ್ವರ್ಜೆನ್ಸ್ ಎನರ್ಜಿ ಸರ್ವೀಸಸ್ ಲಿಮಿಟೆಡ್ (CESL) ಗ್ರಾಮೀಣ ಪ್ರದೇಶಗಳಲ್ಲಿ  ಉತ್ತಮ ಗುಣಮಟ್ಟದ LED ಬಲ್ಬ್ಗಳನ್ನು, ಪ್ರತಿ ಬಲ್ಬ್ಗೆ 10 ರೂಪಾಯಿಯಂತೆ ಕೈಗೆಟುಕುವ ದರದಲ್ಲಿ ವಿತರಿಸಲಿದೆ.

ಅನುಷ್ಠಾನ:

ಉಷ್ಣತೆಯ ಮೂಲಕ ಪ್ರಕಾಶಮಾನವಾದ ಬೆಳಕನ್ನು ನೀಡುವ ಬಲ್ಬುಗಳನ್ನು ಗ್ರಾಹಕರಿಗೆ ಮೂರು ವರ್ಷಗಳ ಖಾತರಿಯೊಂದಿಗೆ 7 ವ್ಯಾಟ್ ಮತ್ತು 12-ವ್ಯಾಟ್ ನ LED ಬಲ್ಬ್ ಗಳನ್ನು ನೀಡಲಾಗುವುದು.

 • ಪ್ರತಿ ಮನೆಗೂ 5 ಎಲ್‌ಇಡಿ ಬಲ್ಬ್ ಗಳನ್ನು ನೀಡಲಾಗುತ್ತದೆ.
 •  ಈ ಉಪಕರಣದಡಿಯಲ್ಲಿ ಭಾಗವಹಿಸುವ ಗ್ರಾಮೀಣ ಕುಟುಂಬಗಳ ಮನೆಗಳಲ್ಲಿ ವಿದ್ಯುತ್ ಬಳಕೆಯ ಮಿತಿಯನ್ನು ಅಳೆಯಲು ಮೀಟರ್ ಅಳವಡಿಸಲಾಗುತ್ತದೆ.

ಧನಸಹಾಯ:

 • ಇದು ಭಾರತದಲ್ಲಿ ಇಂತಹ ಮೊದಲ ಕಾರ್ಯಕ್ರಮವಾಗಿದ್ದು, ಈ ಕಾರ್ಯಕ್ರಮಕ್ಕೆ ಸಂಪೂರ್ಣವಾಗಿ ಕಾರ್ಬನ್ ಕ್ರೆಡಿಟ್ ಮೂಲಕ ಹಣಕಾಸು ಒದಗಿಸಲಾಗುವುದು.
 • ಕಾರ್ಬನ್ ಕ್ರೆಡಿಟ್ ನಿಂದ ಗಳಿಸಿದ ಆದಾಯದಲ್ಲಿ ರೂ. 60 ಅನ್ನು ಪ್ರತಿ ಬಲ್ಬ್ ಗೆ ನೀಡಿದರೆ, ಉಳಿದ ರೂ. 10 ಅನ್ನು ಗ್ರಾಮೀಣ ಗ್ರಾಹಕರು ಪಾವತಿಸಬೇಕಾಗುತ್ತದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಪಾಕಲ್ ದುಲ್ ಜಲ ವಿದ್ಯುತ್ ಯೋಜನೆ:

(Pakal Dul Hydro Electric Project)

ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯಲ್ಲಿ ಚೆನಾಬ್ ನದಿಯ ಉಪನದಿಯಾದ ಮಾರುಸೂದರ್ ನದಿಗೆ  1,000 ಮೆಗಾವ್ಯಾಟ್ ಸಾಮರ್ಥ್ಯದ ಪಾಕಲ್ ದುಲ್ ಜಲ ವಿದ್ಯುತ್ ಯೋಜನೆಯನ್ನು ಪ್ರಸ್ತಾಪಿಸಲಾಗಿದೆ.

ಟುಲಿಪ್ ಉದ್ಯಾನವನಗಳು:

(Tulip gardens)

 • ಭಾರತದ ಜಮ್ಮು-ಕಾಶ್ಮೀರದ ಶ್ರೀನಗರದಲ್ಲಿರುವ ಈ ಟುಲಿಪ್ ಉದ್ಯಾನವನವನ್ನು ಇಂದಿರಾಗಾಂಧಿ ಸ್ಮಾರಕ ಟುಲಿಪ್ ಉದ್ಯಾನವನ ಎಂದು ಕರೆಯಲಾಗುತ್ತದೆ.
 • ಸುಮಾರು 30 ಹೆಕ್ಟೇರ್ (74 ಎಕರೆ) ಪ್ರದೇಶದಲ್ಲಿ ಹರಡಿರುವ ಈ ಉದ್ಯಾನವನವು ಏಷ್ಯಾದ ಅತಿದೊಡ್ಡ ಟುಲಿಪ್ ಉದ್ಯಾನವಾಗಿದೆ.
 • ಉದ್ಯಾನವು ಜಬರ್ವಾನ್ ಶ್ರೇಣಿಯ ಪಾದಬೆಟ್ಟೆ ಗಳಲ್ಲಿದೆ.

ತರಬೇತಿ ಮತ್ತು ಸಂಶೋಧನೆಗಾಗಿ ವಿಶ್ವಸಂಸ್ಥೆಯ ಅಂಗ ಸಂಸ್ಥೆ (UNTIR).

UN Institute for Training & Research (UNITAR)

 •  ಇದು ವಿಶ್ವಸಂಸ್ಥೆಯ ಆಡಳಿತದ, ಸಂಪೂರ್ಣವಾಗಿ ತರಬೇತಿಗೆ ಮೀಸಲಾದ ಅಂಗವಾಗಿದೆ.
 • ಪ್ರಧಾನ ಕಚೇರಿ, ಸ್ವಿಟ್ಜರ್ಲೆಂಡ್ ನ ಜಿನೀವಾ ದಲ್ಲಿದೆ.
 • ಇದನ್ನು 1963 ರಲ್ಲಿ, ಹೊಸದಾಗಿ ಸ್ವತಂತ್ರವಾದ ಹಾಗೂ ವಿಶ್ವಸಂಸ್ಥೆಯ ಸದಸ್ಯತ್ವ ಪಡೆದ ರಾಷ್ಟ್ರಗಳಿಂದ ಬರುವ ಯುವ ರಾಜತಾಂತ್ರಿಕರಿಗೆ ರಾಜತಾಂತ್ರಿಕ ಪರಿಸರದ ಮೂಲಕ ವ್ಯವಹಾರ ಮಾಡಲು ಅಗತ್ಯವಾದ ಜ್ಞಾನ ಮತ್ತು ಕೌಶಲ್ಯಗಳೊಂದಿಗೆ ತರಬೇತಿ ನೀಡುವ ಮೂಲಕ ಸಜ್ಜುಗೊಳಿಸಲು ಇದನ್ನು ರಚಿಸಲಾಗಿದೆ.
 • ಸಾರ್ವಜನಿಕ ಸಾಲ ನಿರ್ವಹಣೆ, ಹಣಕಾಸು ಮತ್ತು ವ್ಯಾಪಾರ ಮತ್ತು ಅದರ ಕುರಿತಾದ ಕೋರ್ಸ್‌ಗಳ/ಯೋಜನೆಗಳ ಮೂಲಕ ಹಣಕಾಸು ಸಚಿವರಿಗೆ ಈ ಸಂಸ್ಥೆ ಸಹಾಯ ಮಾಡುತ್ತದೆ ಮತ್ತು ಇದು ಸರ್ಕಾರಿ ಅಧಿಕಾರಿಗಳಿಗೆ ಶಾಂತಿಪಾಲನೆ ಮತ್ತು ಸಂಘರ್ಷ ತಡೆಗಟ್ಟುವಿಕೆಯ ತರಬೇತಿಯನ್ನು ಸಹ ನೀಡುತ್ತದೆ.
 • ಕಾರ್ಯಾಚರಣೆಯ ಉಪಗ್ರಹ ಅನ್ವಯಿಕೆಗಳ (operational satellite applications (UNOSAT) ಕಾರ್ಯಕ್ರಮದ ಮೂಲಕ, ಈ ಸಂಸ್ಥೆಯು ಉಪಗ್ರಹ ಚಿತ್ರಣ ಮತ್ತು ವಿಶ್ಲೇಷಣೆಯನ್ನು ಒದಗಿಸುತ್ತದೆ.
 • 2003 ರಿಂದ, UNITAR ಸಂಕೀರ್ಣ ಸಾರ್ವಜನಿಕ ನೀತಿಗಳೊಂದಿಗೆ ವ್ಯವಹರಿಸುವ ಸ್ಥಳೀಯ ಮತ್ತು ಪ್ರಾದೇಶಿಕ ನಾಯಕರನ್ನು ಬೆಂಬಲಿಸುವ ಕೋರ್ಸ್‌ / ಯೋಜನೆಗಳನ್ನು ಒದಗಿಸುತ್ತದೆ.


 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos