Print Friendly, PDF & Email

[ ದೈನಂದಿನ ಪ್ರಚಲಿತ ಘಟನೆಗಳು ] ದಿನಾಂಕ – 18 ಮಾರ್ಚ್ 2021

 

ಪರಿವಿಡಿ :

 ಸಾಮಾನ್ಯ ಅಧ್ಯಯನ ಪತ್ರಿಕೆ 2:

1. ಲೋಕಸಭೆಯ ಅನುಮೋದನೆ ಪಡೆದ (ಧನ) ವಿನಿಯೋಗ ಮಸೂದೆ.

2. ಅಮಿಕಸ್ ಕ್ಯೂರಿಯು ನ್ಯಾಯಾಲಯಕ್ಕೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಗುರುತಿಸಿ: ವರಿಷ್ಠ ನ್ಯಾಯಾಲಯಕ್ಕೆ ತಿಳಿಸಿದ ಸಾಲಿಸಿಟರ್ ಜನರಲ್.

3. MMDR ತಿದ್ದುಪಡಿ ಮಸೂದೆ, 2021.

 

ಸಾಮಾನ್ಯ ಅಧ್ಯಯನ ಪತ್ರಿಕೆ 3:

1. ಸಾರ್ವತ್ರಿಕ ಮೂಲ ಆದಾಯ.

2. ರೈಲ್ವೆ ಇಲಾಖೆಯನ್ನು ಖಾಸಗೀಕರಣಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷಗಳು.

 

ಸಾಮಾನ್ಯ ಅಧ್ಯಯನ ಪತ್ರಿಕೆ 4:

1. ಪೊಲೀಸರ ಮೇಲೆ ನಿಗಾವಹಿಸುವರು / ತನಿಖೆ ಮಾಡುವವರು ಯಾರು? ಎಂದು ಕೇಳಿದ ಹರಿಯಾಣ ನ್ಯಾಯಾಲಯ.

 

ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:

1. ಕೇಂದ್ರ ಮೋಟಾರು ವಾಹನಗಳು (ಐದನೇ ತಿದ್ದುಪಡಿ) ನಿಯಮಗಳು, 2021.

 


ಸಾಮಾನ್ಯ ಅಧ್ಯಯನ ಪತ್ರಿಕೆ – 2


 

ವಿಷಯಗಳು: ಭಾರತೀಯ ಸಂವಿಧಾನ- ಐತಿಹಾಸಿಕ ಆಧಾರಗಳು, ವಿಕಸನ, ವೈಶಿಷ್ಟ್ಯಗಳು, ತಿದ್ದುಪಡಿಗಳು, ಮಹತ್ವದ ನಿಬಂಧನೆಗಳು ಮತ್ತು ಮೂಲ ರಚನೆ.

ಲೋಕಸಭೆಯ ಅನುಮೋದನೆ ಪಡೆದ (ಧನ) ವಿನಿಯೋಗ ಮಸೂದೆ.


(Appropriation Bill gets the nod of Lok Sabha)

ಸಂದರ್ಭ:

ಇತ್ತೀಚೆಗೆ, ಲೋಕಸಭೆಯಿಂದ  (ಧನ) ವಿನಿಯೋಗ  ಮಸೂದೆಯನ್ನು  (Appropriation Bill)  ಅಂಗೀಕರಿಸಲಾಗಿದ್ದು, ಕೇಂದ್ರ ಸರ್ಕಾರವು ತನ್ನ ಕಾರ್ಯಾಚರಣೆಯ ಅಗತ್ಯತೆಗಳು ಮತ್ತು ವಿವಿಧ ಕಾರ್ಯಕ್ರಮಗಳ ಅನುಷ್ಠಾನದ ಅಗತ್ಯತೆಗಳನ್ನು ಪೂರೈಸಲು ಕೇಂದ್ರ ಸರ್ಕಾರಕ್ಕೆ ಭಾರತದ ಸಂಚಿತ ನಿಧಿಯಿಂದ ಹಣವನ್ನು ಹಿಂಪಡೆಯಲು ಅವಕಾಶ ಮಾಡಿಕೊಟ್ಟಿದೆ.

 • ಲೋಕಸಭಾ ಸ್ಪೀಕರ್ ಓಂ ಬಿರ್ಲಾ ,ಮಸೂದೆಯನ್ನು ಗಿಲ್ಲೊಟಿನ್ (Guillotine) ಪ್ರಕ್ರಿಯೆಯ ಅಡಿಯಲ್ಲಿ ವರ್ಗೀಕರಿಸಿದ ನಂತರ ಅಂಗೀಕರಿಸಿದರು. ‘ಗಿಲ್ಲೊಟಿನ್’ ಎನ್ನುವುದು, ಸದನದಲ್ಲಿ ಚರ್ಚೆಯಿಲ್ಲದೆ ಬಾಕಿ ಇರುವ ಅನುದಾನದ ಮೇಲಿನ ಬೇಡಿಕೆಗಳನ್ನು ಶೀಘ್ರವಾಗಿ ಅಂಗೀಕರಿಸುವ ಶಾಸಕಾಂಗದ ಪ್ರಕ್ರಿಯೆಯಾಗಿದೆ.

ವಿನಿಯೋಗ ಮಸೂದೆ ಎಂದರೇನು?

 • ವಿನಿಯೋಜನೆ/ ವಿನಿಯೋಗ ಮಸೂದೆ ಒಂದು ಹಣದ ಮಸೂದೆಯಾಗಿದ್ದು, ಅದರ ಮೂಲಕ ಹಣಕಾಸಿನ ವರ್ಷದ ಅವಧಿಯಲ್ಲಿ ಸರ್ಕಾರವು ತನ್ನ ವೆಚ್ಚಗಳನ್ನು ಪೂರೈಸಲು ಭಾರತದ ಸಂಚಿತ ನಿಧಿಯಿಂದ ಹಣವನ್ನು ಹಿಂಪಡೆಯಲು ಸರ್ಕಾರಕ್ಕೆ ಅನುಮತಿ ನೀಡಲಾಗುತ್ತದೆ.
 • ಸಂವಿಧಾನದ 114 ನೇ ವಿಧಿ ಪ್ರಕಾರ – ಸಂಸತ್ತಿನಿಂದ ಅನುಮೋದನೆ ಪಡೆದ ನಂತರವೇ ಸರ್ಕಾರವು ಏಕೀಕೃತ ಅಥವಾ ಭಾರತದ ಸಂಚಿತ ನಿಧಿಯಿಂದ ಹಣವನ್ನು ಹಿಂಪಡೆಯಬಹುದು.
 • ಸರಳವಾಗಿ ಹೇಳುವುದಾದರೆ, ಹಣಕಾಸು ಮಸೂದೆ ಸರ್ಕಾರದ ಖರ್ಚಿಗೆ ಹಣಕಾಸು ಒದಗಿಸುವ ನಿಬಂಧನೆಗಳನ್ನು ಮಾಡುತ್ತದೆ ಮತ್ತು ವಿನಿಯೋಗ ವಸುದೇವ್ ಹಣವನ್ನು ಹಿಂಪಡೆಯುವ ಮೊತ್ತ ಮತ್ತು ಉದ್ದೇಶಗಳನ್ನು ಸೂಚಿಸುತ್ತದೆ.

ಅನುಸರಿಸುವ ಕಾರ್ಯವಿಧಾನ:

 • ಬಜೆಟ್ ಪ್ರಸ್ತಾಪಗಳು ಮತ್ತು ಅನುದಾನದ ಬೇಡಿಕೆಯ ಮೇಲಿನ ಮತದಾನದ ಕುರಿತು ಚರ್ಚಿಸಿದ ನಂತರ, ಹಂಚಿಕೆ ಮಸೂದೆಯನ್ನು ಸರ್ಕಾರವು ಸಂಸತ್ತಿನ ಕೆಳಮನೆಯಲ್ಲಿ ಪರಿಚಯಿಸುತ್ತದೆ.
 • ವಿನಿಯೋಜನೆ ಮಸೂದೆಯನ್ನು ಮೊದಲು ಲೋಕಸಭೆ ಅಂಗೀಕರಿಸಿ ನಂತರ ರಾಜ್ಯಸಭೆಗೆ ಕಳುಹಿಸುತ್ತದೆ.
 • ವಿನಿಯೋಜನೆ ಮಸೂದೆಗೆ ತಿದ್ದುಪಡಿಗಳನ್ನು ಶಿಫಾರಸು ಮಾಡುವ ಅಧಿಕಾರ ರಾಜ್ಯಸಭೆಗೆ ಇದೆ. ಆದರೆ, ಲೋಕಸಭೆಯು ಸಂಸತ್ತಿನ ಮೇಲ್ಮನೆ ಮಾಡಿದ ಶಿಫಾರಸುಗಳನ್ನು ಸ್ವೀಕರಿಸುವ ಅಥವಾ ತಿರಸ್ಕರಿಸುವ ಅಧಿಕಾರ ಹೊಂದಿದೆ.
 • ವಿನಿಯೋಗ ಮಸೂದೆಯ ವಿಶಿಷ್ಟ ಲಕ್ಷಣವೆಂದರೆ ಅದರ ಸ್ವಯಂಚಾಲಿತ-ರದ್ದುಗೊಳಿಸುವ ಷರತ್ತು, ಅದರ ಅಡಿಯಲ್ಲಿ ಮಸೂದೆಯು ತನ್ನ ಶಾಸನಬದ್ಧ ಉದ್ದೇಶವನ್ನು ಪೂರೈಸಿದ ನಂತರ ಸ್ವಯಂಚಾಲಿತವಾಗಿ ರದ್ದುಗೊಳ್ಳುತ್ತದೆ.

ಒಂದು ವೇಳೆ ಮಸೂದೆಗೆ ಸೋಲಾದರೆ ಏನಾಗುತ್ತದೆ?

ಭಾರತವು ವೆಸ್ಟ್ಮಿನಿಸ್ಟರ್ ಮಾದರಿಯ ಸಂಸದೀಯ ಪ್ರಜಾಪ್ರಭುತ್ವವನ್ನು ಹೊಂದಿರುವುದರಿಂದ, ಇದರ ಅಡಿಯಲ್ಲಿ, ಸಂಸತ್ತಿನ ಮತದಾನದಲ್ಲಿ ವಿನಿಯೋಗ ಮಸೂದೆ (ಮತ್ತು ಹಣಕಾಸು ಮಸೂದೆ) ಸೋಲಿಸಲ್ಪಟ್ಟ ನಂತರ ಸರ್ಕಾರವು ರಾಜೀನಾಮೆ ನೀಡಬೇಕಾಗುತ್ತದೆ ಅಥವಾ ಸಾರ್ವತ್ರಿಕ ಚುನಾವಣೆಗಳು ನಡೆಯುತ್ತವೆ. ಆದಾಗ್ಯೂ, ಇದು ಭಾರತದಲ್ಲಿ ಇಲ್ಲಿಯವರೆಗೆ ಸಂಭವಿಸಿಲ್ಲ.

ಚರ್ಚೆಯ ವ್ಯಾಪ್ತಿ:

 • ಮಸೂದೆಯ ಮೇಲಿನ ಚರ್ಚೆಯ ವ್ಯಾಪ್ತಿಯು ಸಾರ್ವಜನಿಕ ಪ್ರಾಮುಖ್ಯತೆ ಅಥವಾ ಅದರ ಅಡಿಯಲ್ಲಿ ಬರುವ ಅನುದಾನಗಳಲ್ಲಿರುವ ಆಡಳಿತಾತ್ಮಕ ನೀತಿಗೆ ಸೀಮಿತವಾಗಿದೆ ಮತ್ತು ಅನುದಾನದ ಬೇಡಿಕೆಗಳ ಬಗ್ಗೆ ಚರ್ಚೆಯ ಸಮಯದಲ್ಲಿ ಈ ಹಿಂದೆ ಸಂಗ್ರಹಿಸಲಾಗಿಲ್ಲ.
 • ಲೋಕಸಭೆಯ ಸ್ಪೀಕರ್ ಅವರು ಚರ್ಚೆಯಲ್ಲಿ ಭಾಗವಹಿಸಲು ಇಚ್ಚಿಸುವ ಸದಸ್ಯರನ್ನು ಅವರು ತಿಳಿಯಲು ಉದ್ದೇಶಿಸಿರುವ ವಿಷಯಗಳ ಬಗ್ಗೆ ಮುಂಚಿತವಾಗಿ ತಿಳಿಸಲು ಕೇಳಬಹುದು, ಮತ್ತು ಅವರ ಅಭಿಪ್ರಾಯದಲ್ಲಿ, ಅನುದಾನದ ಬೇಡಿಕೆಗಳ ಸಮಯದಲ್ಲಿ ಚರ್ಚಿಸಲಾದ ವಿಷಯಗಳ ಪುನರಾವರ್ತನೆ ಕಂಡುಬಂದರೆ  ಸಭಾಪತಿಗಳು ತಮ್ಮ ಅನುಮತಿಯನ್ನು ತಡೆಹಿಡಿಯಬಹುದು.

 

ವಿಷಯಗಳು: ಸರ್ಕಾರದ ವಿವಿಧ ಅಂಗಗಳ ನಡುವೆ ಅಧಿಕಾರ ವಿಭಜನೆ ವಿವಾದ ಪರಿಹಾರ ಕಾರ್ಯವಿಧಾನಗಳು ಮತ್ತು ಸಂಸ್ಥೆಗಳು.

ಅಮಿಕಸ್ ಕ್ಯೂರಿಯು ನ್ಯಾಯಾಲಯಕ್ಕೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ಗುರುತಿಸಿ: ವರಿಷ್ಠ ನ್ಯಾಯಾಲಯಕ್ಕೆ ತಿಳಿಸಿದ ಸಾಲಿಸಿಟರ್ ಜನರಲ್:


(Demarcate how amicus curiae can help: SG tells top court)

 ಸಂದರ್ಭ:

ವಿವಿಧ ಪ್ರಕರಣಗಳಲ್ಲಿ, ವಿಶೇಷವಾಗಿ ಸೂಕ್ಷ್ಮ ಪ್ರಕರಣಗಳಲ್ಲಿ ನ್ಯಾಯಾಲಯದ ಸ್ನೇಹಿತ’ ಅಂದರೆ ‘amicus curiae’ ಎಂದು ನೇಮಕಗೊಂಡಿರುವ ವಕೀಲರನ್ನು ನಿಯಂತ್ರಿಸಲು ಮಾರ್ಗಸೂಚಿಗಳನ್ನು ರೂಪಿಸುವಂತೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಸುಪ್ರೀಂ ಕೋರ್ಟ್ ಅನ್ನು ಒತ್ತಾಯಿಸಿದ್ದಾರೆ.

ಮಾರ್ಗಸೂಚಿಗಳ ಅವಶ್ಯಕತೆ:

 • ನ್ಯಾಯಾಲಯದಿಂದ ನೇಮಿಸಲ್ಪಟ್ಟ ‘ಅಮಿಕಸ್ ಕ್ಯೂರಿ’ ತನ್ನ ನಿಯೋಜಿತ ಪಾತ್ರದಿಂದ ಆಚೆ ಹೆಜ್ಜೆ ಹಾಕುತ್ತಿದ್ದಾರೆ. ಸಿಬಿಐನಂತಹ ಸಂಸ್ಥೆಗಳ ‘ಕಾರ್ಯನಿರ್ವಹಣೆಯಲ್ಲಿ’ ಅವರು ಹಸ್ತಕ್ಷೇಪ ಮಾಡುತ್ತಾರೆ.
 • ಕೆಲವು ಸಂದರ್ಭಗಳಲ್ಲಿ, ಅವರು ಆಡಳಿತವನ್ನು ಸ್ವಂತವಾಗಿ ನಡೆಸುತ್ತಾರೆ ಅಥವಾ ಕಾರ್ಯನಿರ್ವಾಹಕರನ್ನು ನಿರ್ದೇಶಿಸುತ್ತಾರೆ.

ಅಮಿಕಸ್ ಕ್ಯೂರಿ ಎಂದರೆ ಯಾರು?

ಅಮಿಕಸ್ ಕ್ಯೂರಿಯ ಅಕ್ಷರಶಃ ಅರ್ಥ ‘ನ್ಯಾಯಾಲಯದ ಸ್ನೇಹಿತ’ ಎಂದರ್ಥ, ಮತ್ತು ನಿರ್ದಿಷ್ಟ ಕಾನೂನು ಮಾಹಿತಿಯ ಅಗತ್ಯವಿರುವ ಪ್ರಕರಣಗಳ ವಿಚಾರಣೆಗೆ ಸಹಾಯ ಮಾಡಲು  ನ್ಯಾಯಾಲಯದಿಂದ ನೇಮಿಸಲ್ಪಟ್ಟ ತಟಸ್ಥ ಅಥವಾ ಸಂಪೂರ್ಣ ವಕೀಲ.

‘ಅಮಿಕಸ್ ಕ್ಯೂರಿ’ ಪ್ರಮುಖ ಪ್ರಕರಣಗಳಲ್ಲಿ ತೀರ್ಪು ನೀಡಲು ನ್ಯಾಯಾಲಯಕ್ಕೆ ಸಹಾಯ ಮಾಡಲು ನೇಮಕಗೊಂಡ ವಕೀಲರು.

ಅಮಿಕಸ್ ಕ್ಯೂರಿಯ ಪಾತ್ರಗಳು ಮತ್ತು ಕರ್ತವ್ಯಗಳು:

 •  ಭಾರತದಲ್ಲಿ, ಜೈಲಿನಲ್ಲಿರುವ ಕಾರಣದಿಂದ ಅಥವಾ ಇನ್ನಾವುದೇ ಕ್ರಿಮಿನಲ್ ಪ್ರಕರಣದಲ್ಲಿ ಸಿಕ್ಕಿಬಿದ್ದ ಕಾರಣ, ಆರೋಪಿಯು ತನ್ನನ್ನು ಸಮರ್ಥಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮತ್ತು ಈ ನಿಟ್ಟಿನಲ್ಲಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದರೆ, ಆರೋಪಿಗಳಿಗೆ ರಕ್ಷಣೆ ಒದಗಿಸಲು ಮತ್ತು  ಅವರ ಪರವಾಗಿ ಸಮರ್ಥವಾಗಿ ವಾದ ಮಂಡಿಸಲು  ‘ಅಮಿಕಸ್ ಕ್ಯೂರಿ’ ಯಾಗಿ ವಕೀಲರನ್ನು  ನ್ಯಾಯಾಲಯವು  ನೇಮಕ ಮಾಡುತ್ತದೆ.
 • ಸಿವಿಲ್ ಪ್ರಕರಣಗಳಲ್ಲಿಯೂ ಸಹ, ಆರೋಪಿಯು ತನ್ನ ಸ್ವಂತ ವಕೀಲರನ್ನು ಪಡೆಯಲು ಸಾಧ್ಯವಾಗದಿದ್ದಲ್ಲಿ ನ್ಯಾಯಾಲಯವು ಅಗತ್ಯವೆಂದು ಭಾವಿಸಿದರೆ, ವಕೀಲರನ್ನು ‘ಅಮಿಕಸ್ ಕ್ಯೂರಿ’ ಎಂದು ನೇಮಿಸಬಹುದು.
 • ನ್ಯಾಯಾಲಯವು, ಸಾರ್ವಜನಿಕ ಪ್ರಾಮುಖ್ಯತೆಯ ಅಥವಾ ಯಾವುದೇ ಸಾರ್ವಜನಿಕ ಹಿತಾಸಕ್ತಿಗೆ ಸಂಬಂಧಿಸಿದ ವಿಷಯಗಳಲ್ಲಿ ‘ಅಮಿಕಸ್ ಕ್ಯೂರಿ’ ಯನ್ನು ನೇಮಿಸಬಹುದು.

 

ವಿಷಯಗಳು : ಸರ್ಕಾರದ ನೀತಿಗಳು ಮತ್ತು ವಿವಿಧ ಕ್ಷೇತ್ರಗಳಲ್ಲಿನ ಅಭಿವೃದ್ಧಿಗೆ ಸಂಬಂಧಿಸಿದ ಅಡಚಣೆಗಳು ಮತ್ತು ಅವುಗಳ ವಿನ್ಯಾಸ ಮತ್ತು ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳು.

MMDR ತಿದ್ದುಪಡಿ ಮಸೂದೆ, 2021:


(MMDR Amendment Bill, 2021)

ಸಂದರ್ಭ:

ಇತ್ತೀಚೆಗೆ, ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ತಿದ್ದುಪಡಿ ಮಸೂದೆ, 2021  (Mines and Minerals (Development and Regulation) Amendment Bill), 2021  ಅನ್ನು ಲೋಕಸಭೆಯಲ್ಲಿ ಮಂಡಿಸಲಾಯಿತು.

ಈ ಮಸೂದೆಯಲ್ಲಿ, ಗಣಿ ಮತ್ತು ಖನಿಜಗಳ (ಅಭಿವೃದ್ಧಿ ಮತ್ತು ನಿಯಂತ್ರಣ) ಕಾಯ್ದೆ, 1957 ಅನ್ನು ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ.

ಮಸೂದೆಯ ಪ್ರಮುಖ ಲಕ್ಷಣಗಳು:

ಖನಿಜಗಳ ಅಂತಿಮ ಬಳಕೆಯ ಮೇಲಿನ ನಿರ್ಬಂಧವನ್ನು ತೆಗೆದುಹಾಕುವುದು: ಯಾವುದೇ ನಿರ್ದಿಷ್ಟ  ಬಳಕೆಯ ಅಂತಿಮ ಬಳಕೆಗಾಗಿ ಯಾವುದೇ ಗಣಿ ಕಾಯ್ದಿರಿಸಬಾರದು ಎಂದು ಮಸೂದೆ ತಿಳಿಸುತ್ತದೆ.

ಸ್ವ-ಸಹಾಯ ಖಾಸಗಿ ಗಣಿಗಳಿಂದ ಖನಿಜಗಳ ಮಾರಾಟ: ಮಸೂದೆಯು ತನ್ನ ವಾರ್ಷಿಕ ಖನಿಜ ಉತ್ಪಾದನೆಯ 50% ವರೆಗೂ ಸ್ವಂತ ಅಗತ್ಯಗಳನ್ನು ಪೂರೈಸಿದ ನಂತರ ಖಾಸಗಿ ಗಣಿಗಳಿಂದ (captive mines) ಪರಮಾಣು ಖನಿಜಗಳನ್ನು ಹೊರತುಪಡಿಸಿ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಬಹುದು ಎಂದು ಒದಗಿಸುತ್ತದೆ . ಕೇಂದ್ರ ಸರ್ಕಾರವು ಅಧಿಸೂಚನೆಯ ಮೂಲಕ ಈ ಮಿತಿಯನ್ನು ಹೆಚ್ಚಿಸಬಹುದು.

ಕೆಲವು ಸಂದರ್ಭಗಳಲ್ಲಿ ಕೇಂದ್ರ ಸರ್ಕಾರದಿಂದ ಹರಾಜು: ಕೇಂದ್ರ ಸರ್ಕಾರಕ್ಕೆ, ರಾಜ್ಯ ಸರ್ಕಾರದೊಂದಿಗೆ ಸಮಾಲೋಚಿಸಿ ಹರಾಜು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಸಮಯವನ್ನು ನಿಗದಿಪಡಿಸಲು ಮಸೂದೆಯು ಅಧಿಕಾರ ನೀಡುತ್ತದೆ. ಈ ಅವಧಿಯಲ್ಲಿ ಹರಾಜು ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗದಿದ್ದರೆ, ಕೇಂದ್ರ ಸರ್ಕಾರವು ಹರಾಜನ್ನು ನಡೆಸಬಹುದು.

ಶಾಸನಬದ್ಧ ಅನುಮೋದನೆಯ ವರ್ಗಾವಣೆ: ಹೊಸ ಗುತ್ತಿಗೆದಾರರಿಗೆ ನಿಗದಿಪಡಿಸಿದ ಗುತ್ತಿಗೆ ಅವಧಿಯುದ್ದಕ್ಕೂ ವರ್ಗಾವಣೆಗೊಂಡ ಶಾಸನಬದ್ಧ ಅನುಮೋದನೆಯು ಮಾನ್ಯವಾಗಿ ಉಳಿಯುತ್ತದೆ ಎಂದು ಮಸೂದೆ ತಿಳಿಸುತ್ತದೆ.

ಗುತ್ತಿಗೆ ಅವಧಿ ಮೀರಿದ ಗಣಿಗಳ ಹಂಚಿಕೆ: ಮಸೂದೆಯ ಪ್ರಕಾರ, ಗುತ್ತಿಗೆ ಅವಧಿ ಮುಗಿದ ಗಣಿಗಳನ್ನು (ಲಿಗ್ನೈಟ್, ಕಲ್ಲಿದ್ದಲು ಮತ್ತು ಪರಮಾಣು ಖನಿಜಗಳನ್ನು ಹೊರತುಪಡಿಸಿ) ಕೆಲವು ಸಂದರ್ಭಗಳಲ್ಲಿ ಸರ್ಕಾರಿ ಕಂಪನಿಗೆ ಹಂಚಿಕೆ ಮಾಡಬಹುದು. ಅಂತಹ ಗಣಿಗಳಿಗೆ ರಾಜ್ಯ ಸರ್ಕಾರವು 10 ವರ್ಷಗಳ ಕಾಲ ಗುತ್ತಿಗೆ ನೀಡಬಹುದು ಅಥವಾ ಹೊಸ ಗುತ್ತಿಗೆದಾರರನ್ನು ಆಯ್ಕೆ ಮಾಡುವವರೆಗೆ, ಯಾವುದು ಮೊದಲಿನದೊ ಅದಕ್ಕೆ ಗುತ್ತಿಗೆ ನೀಡಬಹುದು.

ಮಹತ್ವ:

 • ಈ ತಿದ್ದುಪಡಿಗಳು ಯೋಜನೆಗಳ ಅನುಷ್ಠಾನ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ, ವ್ಯಾಪಾರ ಮಾಡಲು ಸುಲಭವಾಗುತ್ತದೆ, ಪ್ರಕ್ರಿಯೆಯನ್ನು ಸರಳಗೊಳಿಸುತ್ತದೆ ಮತ್ತು ಖನಿಜಗಳು ಇರುವ ಪ್ರದೇಶಗಳಲ್ಲಿನ ಎಲ್ಲಾ ಪಕ್ಷಗಳಿಗೆ ಪ್ರಯೋಜನವನ್ನು ನೀಡುತ್ತದೆ.
 • ಇದು ದಕ್ಷ ಇಂಧನ ಮಾರುಕಟ್ಟೆಯನ್ನು ಸೃಷ್ಟಿಸುತ್ತದೆ ಮತ್ತು ಸ್ಪರ್ಧೆಯನ್ನು ಹೆಚ್ಚಿಸುತ್ತದೆ ಮತ್ತು ಕಲ್ಲಿದ್ದಲು ಆಮದನ್ನು ಕಡಿಮೆ ಮಾಡುತ್ತದೆ.

ಭಾರತ ಕಳೆದ ವರ್ಷ 235 ದಶಲಕ್ಷ ಟನ್ ಕಲ್ಲಿದ್ದಲನ್ನು ಆಮದು ಮಾಡಿಕೊಂಡಿದ್ದು, ಅದರಲ್ಲಿ 1,71,000 ಕೋಟಿ ರೂ. ಮೌಲ್ಯದ 135 ದಶಲಕ್ಷ ಟನ್(m.t) ಕಲ್ಲಿದ್ದಲನ್ನು ದೇಶೀಯ ಮೀಸಲುಗಳಿಂದ ಪೂರೈಸಬಹುದಾಗಿದೆ.

 • ಇದು ಕಲ್ಲಿದ್ದಲು ಕ್ಷೇತ್ರದಲ್ಲಿ ಕೋಲ್ ಇಂಡಿಯಾ ಲಿಮಿಟೆಡ್‌ನ ಏಕಸ್ವಾಮ್ಯದ ಅಂತ್ಯಕ್ಕೆ ಕಾರಣವಾಗಬಹುದು.
 • ಭೂಗತ ಗಣಿಗಾರಿಕೆಗಾಗಿ ವಿಶ್ವದಾದ್ಯಂತ ಗಣಿ ಮಾಲೀಕರು ಬಳಸುತ್ತಿರುವ ಹೆಚ್ಚು ನವೀನ ತಂತ್ರಜ್ಞಾನದ ಪ್ರವೇಶವನ್ನು ಪಡೆಯಲು ಇದು ಭಾರತಕ್ಕೆ ಸಹಾಯ ಮಾಡುತ್ತದೆ.

 


ಸಾಮಾನ್ಯ ಅಧ್ಯಯನ ಪತ್ರಿಕೆ – 3


 

ವಿಷಯಗಳು: ಭಾರತೀಯ ಆರ್ಥಿಕತೆ ಮತ್ತು ಯೋಜನೆ, ಸಂಪನ್ಮೂಲಗಳ ಕ್ರೋಡೀಕರಣ, ಪ್ರಗತಿ, ಅಭಿವೃದ್ಧಿ ಮತ್ತು ಉದ್ಯೋಗಕ್ಕೆ ಸಂಬಂಧಿಸಿದ ಸಮಸ್ಯೆಗಳು.

ಸಾರ್ವತ್ರಿಕ ಮೂಲ ಆದಾಯ:


(Universal basic income)

 ಸಂದರ್ಭ:

ಇತ್ತೀಚೆಗೆ, ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯನ್ನು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು 2021 ರ  ವಿಧಾನಸಭಾ ಚುನಾವಣೆಯ ಸಮಯದಲ್ಲಿ ಬಿಡುಗಡೆ ಮಾಡಿದ್ದಾರೆ.

 • ಚುನಾವಣಾ ಪ್ರಣಾಳಿಕೆಯು ಇತರ ವಿಷಯಗಳ ಜೊತೆಗೆ,  ಪ್ರತಿ ಕುಟುಂಬಕ್ಕೆ ‘ಸಾರ್ವತ್ರಿಕ ಮೂಲ ಆದಾಯ’ ದ(UBI) ಭರವಸೆ ನೀಡುತ್ತದೆ.

ಈ ಪ್ರಕಟಣೆಯಂತೆ:

 • ಆದಾಯ ಯೋಜನೆಯಡಿ, ಸಾಮಾನ್ಯ ವರ್ಗಕ್ಕೆ ಸೇರುವ ಎಲ್ಲಾ 1.6 ಕೋಟಿ ಕುಟುಂಬಗಳಿಗೆ ತಿಂಗಳಿಗೆ 500 ರೂ. ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕುಟುಂಬಗಳಿಗೆ ತಿಂಗಳಿಗೆ 1,000 ರೂ. ನೀಡಲಾಗುವುದು.
 • ಈ ಮೊತ್ತವನ್ನು ನೇರವಾಗಿ ಕುಟುಂಬದ ಮಹಿಳಾ ಮುಖ್ಯಸ್ಥರ ಹೆಸರಿನಲ್ಲಿ ವರ್ಗಾಯಿಸಲಾಗುತ್ತದೆ.

ಏನಿದು ಸಾರ್ವತ್ರಿಕ ಮೂಲ ಆದಾಯ?

 • ಸಾರ್ವತ್ರಿಕ ಮೂಲ ಆದಾಯ (UBI) ಎಂದರೆ, ಒಂದು ಭೌಗೋಳಿಕ ಪ್ರದೇಶ ( ಒಂದು ದೇಶದ ಅಥವಾ/ ರಾಜ್ಯದ) ಎಲ್ಲಾ ನಾಗರಿಕರಿಗೆ ಆದಾಯ, ಸಾಮಾಜಿಕ ಸ್ಥಾನಮಾನ ಅಥವಾ ಉದ್ಯೋಗದ ಸ್ಥಿತಿಯನ್ನು ಪರಿಗಣಿಸದೆ ಬೇಷರತ್ತಾಗಿ ಒಂದು ನಿರ್ದಿಷ್ಟ ಮೊತ್ತದ  ಹಣವನ್ನು ಒದಗಿಸುವ ಕಾರ್ಯಕ್ರಮವಾಗಿದೆ.
 • ‘ಸಾರ್ವತ್ರಿಕ ಮೂಲ ಆದಾಯ’ ಎಂಬ ಪರಿಕಲ್ಪನೆಯ ಹಿಂದಿನ ಮುಖ್ಯ ಆಲೋಚನೆಯೆಂದರೆ ಬಡತನವನ್ನು ಕಡಿಮೆ ಮಾಡುವುದು ಅಥವಾ ತಡೆಗಟ್ಟುವುದು ಮತ್ತು ನಾಗರಿಕರಲ್ಲಿ ಸಮಾನತೆಯನ್ನು ಹೆಚ್ಚಿಸುವುದು.
 •  ಸಾರ್ವತ್ರಿಕ ಮೂಲ ಆದಾಯ ಕಲ್ಪನೆಯ ಹಿಂದಿನ ಮೂಲ ತತ್ವವೆಂದರೆ, ಎಲ್ಲಾ ನಾಗರಿಕರು, ತಮ್ಮ ಹುಟ್ಟಿದ ಸಂದರ್ಭಗಳನ್ನು ಲೆಕ್ಕಿಸದೆ, ವಾಸಯೋಗ್ಯ ಆದಾಯಕ್ಕೆ ಅರ್ಹರಾಗಿದ್ದಾರೆ.

 ಯುಬಿಐ ನ ಪ್ರಮುಖ ಅಂಶಗಳು

 •  ಸಾರ್ವತ್ರಿಕತೆ (ಎಲ್ಲಾ ನಾಗರಿಕರು ಒಳಗೊಂಡಿದ್ದಾರೆ).
 • ಬೇಷರತ್ತಾದ (ಯಾವುದೇ ಪೂರ್ವಭಾವಿ ಷರತ್ತು ಇಲ್ಲ).
 • ಆವರ್ತಕ (ನಿಯಮಿತ ಮಧ್ಯಂತರಗಳಲ್ಲಿ ಆವರ್ತಕ ಪಾವತಿಗಳು).
 • ನಗದು ರೂಪದಲ್ಲಿ ಪಾವತಿ (ಆಹಾರ ಚೀಟಿ ಅಥವಾ ಸೇವಾ ಕೂಪನ್ ಗಳಿಲ್ಲ).

ಸಾರ್ವತ್ರಿಕ ಮೂಲ ಆದಾಯದ ಲಾಭಗಳು (UBI):

 • ನಾಗರಿಕರು ಸುರಕ್ಷಿತ ಆದಾಯವನ್ನು ಪಡೆಯುತ್ತಾರೆ.
 • ಸಮಾಜದಲ್ಲಿ ಬಡತನ ಮತ್ತು ಆದಾಯ-ಅಸಮಾನತೆ ಕಡಿಮೆಯಾಗುತ್ತದೆ.
 • ಬಡ ಜನರ ಕೊಳ್ಳುವ ಶಕ್ತಿ ಹೆಚ್ಚಾಗುತ್ತದೆ, ಇದು ಅಂತಿಮವಾಗಿ ಒಟ್ಟು ಬೇಡಿಕೆಯ ಹೆಚ್ಚಳಕ್ಕೆ ಕಾರಣವಾಗುತ್ತದೆ.
 • ಕಾರ್ಯಗತಗೊಳಿಸಲು ಸುಲಭ ಏಕೆಂದರೆ ಅದು ಫಲಾನುಭವಿಯನ್ನು ಯಾವುದೇ ರೀತಿಯಲ್ಲಿ ಗುರುತಿಸುವುದನ್ನು ಒಳಗೊಂಡಿರುವುದಿಲ್ಲ.
 • ಅದರ ಅನುಷ್ಠಾನವು ತುಂಬಾ ಸರಳವಾಗಿದೆ ಏಕೆಂದರೆ ಸರ್ಕಾರದ ಹಣದ ಪೋಲು ಕಡಿಮೆಯಾಗುತ್ತದೆ.

ಈ ಕಲ್ಪನೆಯ ಬೆಂಬಲಿಗರು:

 • ಯುನಿವರ್ಸಲ್ ಬೇಸಿಕ್ ಇಂಕಮ್ (UBI) ಎಂಬ ಪರಿಕಲ್ಪನೆಯನ್ನು ಭಾರತದ ಆರ್ಥಿಕ ಸಮೀಕ್ಷೆಯಲ್ಲಿ 2016-17ರಲ್ಲಿ ಪ್ರತಿಪಾದಿಸಲಾಗಿದೆ, ಆರ್ಥಿಕ ಸಮೀಕ್ಷೆಯು UBI ಅನ್ನು ಬಡತನವನ್ನು ಕಡಿಮೆ ಮಾಡಲು ಬಿಡುಗಡೆ ಮಾಡಿದ ವಿವಿಧ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಪರ್ಯಾಯವಾಗಿ ಉಲ್ಲೇಖಿಸಿದೆ.
 • ಯುಬಿಐ ಕಾರ್ಯಕ್ರಮದ ಇತರ ಬೆಂಬಲಿಗರಲ್ಲಿ ಅರ್ಥಶಾಸ್ತ್ರ ನೊಬೆಲ್ ಪ್ರಶಸ್ತಿ ವಿಜೇತ ಪೀಟರ್ ಡೈಮಂಡ್ ಮತ್ತು ಕ್ರಿಸ್ಟೋಫರ್ ಪಿಸರೈಡ್ಸ್, ತಂತ್ರಜ್ಞಾನ ಕ್ಷೇತ್ರದ ದೈತ್ಯರಾದ ಮಾರ್ಕ್ ಜುಕರ್‌ಬರ್ಗ್ ಮತ್ತು ಎಲೋನ್ ಮಸ್ಕ್ ಸೇರಿದ್ದಾರೆ.

ಸಾರ್ವತ್ರಿಕ ಮೂಲ ಆದಾಯವನ್ನು ಭಾರತದಲ್ಲಿ ಅನುಷ್ಠಾನಗೊಳಿಸುವಲ್ಲಿ ಇರುವ ಸವಾಲುಗಳು:

 • ಭಾರತದಲ್ಲಿ ‘ಸಾರ್ವತ್ರಿಕ ಮೂಲ ಆದಾಯ’ದ ಅನುಷ್ಠಾನದಲ್ಲಿನ ಭಾರಿ ವೆಚ್ಚವು ,ರಾಜಕೀಯ ಇಚ್ಛಾಶಕ್ತಿಯ ಕೊರತೆಗೆ, ಕಾರಣವಾಗುವ ಮೂಲಕ ಈ ಕಾರ್ಯಕ್ರಮದ ಅನುಷ್ಠಾನಕ್ಕೆ ಪ್ರಮುಖ ಸವಾಲಾಗಿದೆ.
 • ಸಾರ್ವತ್ರಿಕ ಮೂಲ ಆದಾಯದ ಪರಿಚಯದೊಂದಿಗೆ, ಜನರಿಗೆ ನೀಡಲಾಗುವ ಒಂದು ನಿರ್ದಿಷ್ಟ ಬೇಷರತ್ತಾದ ಆದಾಯವು ಅವರನ್ನು ಸೋಮಾರಿಯನ್ನಾಗಿ ಮಾಡುವ ಸಾಧ್ಯತೆಯಿದೆ ಮತ್ತು ಅವರು ಕೆಲಸ ಮಾಡದಿರಲು ಒಗ್ಗಿಕೊಳ್ಳಬಹುದು. ಸರಳವಾಗಿ ಹೇಳುವುದಾದರೆ ಭಾರತದಂತಹ ದೇಶಕ್ಕೆ ಈ ಮಾದರಿಯು ಕಷ್ಟಸಾಧ್ಯವಾದುದು.

 

ವಿಷಯಗಳು: ಮೂಲಸೌಕರ್ಯ: ಇಂಧನ, ಬಂದರುಗಳು, ರಸ್ತೆಗಳು, ವಿಮಾನ ನಿಲ್ದಾಣಗಳು, ರೈಲ್ವೆ ಇತ್ಯಾದಿ.

ರೈಲ್ವೆ ಇಲಾಖೆಯನ್ನು ಖಾಸಗೀಕರಣಗೊಳಿಸುವುದಕ್ಕೆ ವಿರೋಧ ವ್ಯಕ್ತಪಡಿಸಿದ ಪ್ರತಿಪಕ್ಷಗಳು:


(Don’t privatise Railways, says Opposition)

ಸಂದರ್ಭ:

ಕಳೆದ ಏಳು ವರ್ಷಗಳಲ್ಲಿ ರೈಲ್ವೆಯನ್ನು ‘ಖಾಸಗೀಕರಣಗೊಳಿಸಲು’ ಎಲ್ಲ ಪ್ರಯತ್ನಗಳನ್ನು ಮಾಡಿದ್ದಕ್ಕಾಗಿ ಮೋದಿ ಸರ್ಕಾರವನ್ನು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿವೆ.

ಕಳವಳಗಳು:

 • ವಿವಿಧ ರೈಲ್ವೆ ಮೂಲಸೌಕರ್ಯಗಳನ್ನು ಖಾಸಗೀಕರಣಗೊಳಿಸುವುದರಿಂದ ಕಾರ್ಪೊರೇಟ್‌ಗಳಿಗೆ ಮಾತ್ರ ಲಾಭವಾಗುತ್ತದೆ ಮತ್ತು ರೈಲ್ವೆಗೆ ಆದಾಯ ನಷ್ಟವಾಗುತ್ತದೆ ಎಂದು ವಿರೋಧ ಪಕ್ಷದ ನಾಯಕರು ಹೇಳುತ್ತಾರೆ.
 • ಇದರೊಂದಿಗೆ ರೈಲ್ವೆ ಸಹ ಏರ್ ಇಂಡಿಯಾ ಮತ್ತು ಇಂಡಿಯನ್ ಏರ್‌ಲೈನ್ಸ್‌ನಂತಹ ಪರಿಸ್ಥಿತಿಯನ್ನು ತಲುಪಲಿದೆ. ರೈಲ್ವೆಯ ಖಾಸಗೀಕರಣವು ದರಗಳ ಹೆಚ್ಚಳ ಎಂದರ್ಥವಾಗಿದೆ, ಎಂಬುದು ವಿರೋಧ ಪಕ್ಷಗಳ ನಿಲುವು.
 • ಇದಲ್ಲದೆ, ಖಾಸಗೀಕರಣವು ಯಾವಾಗಲೂ ದಕ್ಷತೆಯ ಸುಧಾರಣೆ ಎಂದರ್ಥವಲ್ಲ. ಸುಮಾರು ಎರಡು ದಶಕಗಳ ಹಿಂದೆ ಅಡುಗೆ ಸೇವೆಗಳನ್ನು (the catering services) ಖಾಸಗೀಕರಣಗೊಳಿಸಲಾಯಿತು, ಆದರೆ ಪ್ರಯಾಣಿಕರಿಂದ ಈ ಬಗ್ಗೆ ಇನ್ನೂ ದೂರುಗಳು ಬರುತ್ತಲೇ ಇವೆ.

ಬಿಬೆಕ್ ದೆಬ್ರಾಯ್ ಸಮಿತಿಯ ಶಿಫಾರಸುಗಳು:

ಭಾರತೀಯ ರೈಲ್ವೆಗೆ ಸಂಪನ್ಮೂಲಗಳನ್ನು ಸಂಗ್ರಹಿಸಲು ಮತ್ತು ರೈಲ್ವೆ ಮಂಡಳಿಯನ್ನು ಪುನರ್ರಚಿಸಲು ಮಾರ್ಗಗಳನ್ನು ಸೂಚಿಸಲು ಬಿಬೆಕ್ ಡೆಬ್ರಾಯ್ ಸಮಿತಿಯನ್ನು ರಚಿಸಲಾಯಿತು.ಈ ಸಮಿತಿಯು ರೋಲಿಂಗ್ ಸ್ಟಾಕ್ ಅಂದರೆ ವ್ಯಾಗನ್ ಮತ್ತು ಬೋಗಿಗಳನ್ನು ಖಾಸಗೀಕರಣಗೊಳಿಸಲು ಶಿಫಾರಸು ಮಾಡಿದೆ.

ರೈಲ್ವೆ ಖಾಸಗೀಕರಣ:

ಪರವಾಗಿರುವವರು:

ಸುಧಾರಿತ ಮೂಲಸೌಕರ್ಯ: ರೈಲ್ವೆ ಖಾಸಗೀಕರಣವು ಉತ್ತಮ ಮೂಲಸೌಕರ್ಯವನ್ನು ಸೃಷ್ಟಿಸುತ್ತದೆ, ಇದು ಪ್ರಯಾಣಿಕರಿಗೆ ಉತ್ತಮ ಸೌಲಭ್ಯಗಳನ್ನು ಒದಗಿಸುತ್ತದೆ.

ಸೇವೆಯ ಗುಣಮಟ್ಟವನ್ನು ಹೆಚ್ಚಿನ ದರಗಳೊಂದಿಗೆ ಸಮತೋಲನ ಗೊಳಿಸುವುದು: ಈ ಕ್ರಮವು ಸ್ಪರ್ಧೆಯನ್ನು ಹೆಚ್ಚಿಸುತ್ತದೆ ಮತ್ತು ಒಟ್ಟಾರೆ ಸೇವೆಗಳ ಗುಣಮಟ್ಟವನ್ನು ಸುಧಾರಿಸುತ್ತದೆ.

ಅಪಘಾತಗಳಲ್ಲಿನ ಕಡಿತ: ಖಾಸಗಿ ಮಾಲೀಕತ್ವದಲ್ಲಿ ನಿರ್ವಹಣೆ ಉತ್ತಮವಾಗಿರುತ್ತದೆ. ಖಾಸಗೀಕರಣದ ಪ್ರತಿಪಾದಕರು ಇದು ಅಪಘಾತಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ, ಇದರ ಪರಿಣಾಮವಾಗಿ ಸುರಕ್ಷಿತ ಪ್ರಯಾಣ ಮತ್ತು ದೀರ್ಘಾವಧಿಯಲ್ಲಿ ಹೆಚ್ಚಿನ ವಿತ್ತೀಯ ಉಳಿತಾಯವಾಗುತ್ತದೆ, ಎಂದು ಭಾವಿಸುತ್ತಾರೆ.

ವಿರೋಧಿ ವಾದಗಳು:

ಲಾಭದಾಯಕ ಪ್ರದೇಶಗಳಿಗೆ ಸೀಮಿತ ವಿಸ್ತರಣೆ:

ಭಾರತೀಯ ರೈಲ್ವೆ ಸರ್ಕಾರಿ ಒಡೆತನದಲ್ಲಿರುವುದರ ಒಂದು ಪ್ರಯೋಜನವೆಂದರೆ ಅದು ಲಾಭದಾಯಕತೆಯನ್ನು ಲೆಕ್ಕಿಸದೆ ರಾಷ್ಟ್ರವ್ಯಾಪಿ ಸಂಪರ್ಕವನ್ನು ಒದಗಿಸುತ್ತದೆ. ಖಾಸಗೀಕರಣದಿಂದ ಇದು ಸಾಧ್ಯವಾಗುವುದಿಲ್ಲ ಏಕೆಂದರೆ ಅದು ಕಡಿಮೆ ಜನಪ್ರಿಯವಾಗಿರುವ ಮಾರ್ಗಗಳನ್ನು ತೆಗೆದುಹಾಕುತ್ತದೆ, ಹೀಗಾಗಿ ಸಂಪರ್ಕದ ಮೇಲೆ ಋಣಾತ್ಮಕ ಪರಿಣಾಮ ಬೀರುತ್ತದೆ. ವಾಸ್ತವವಾಗಿ, ಇದು ದೇಶದ ಕೆಲವು ಭಾಗಗಳನ್ನು ಹೆಚ್ಚು ಪ್ರವೇಶಿಸಲಾಗುವುದಿಲ್ಲ ಮತ್ತು ಖಾಸಗೀಕರಣವು ಈ ಪ್ರದೇಶಗಳನ್ನು ಅಭಿವೃದ್ಧಿಯ ಪ್ರಕ್ರಿಯೆಯಿಂದ ಹೊರಗಿಡುತ್ತದೆ.

ದರಗಳು: ಖಾಸಗಿ ಉದ್ಯಮಗಳು ನೇರವಾಗಿ ಲಾಭ ಆಧಾರಿತವಾಗಿವೆ. ಆದ್ದರಿಂದ, ಭಾರತೀಯ ರೈಲ್ವೆಯಲ್ಲಿ ಲಾಭ ಗಳಿಸಲು ಸುಲಭವಾದ ಮಾರ್ಗವೆಂದರೆ ದರಗಳನ್ನು ಹೆಚ್ಚಿಸುವುದು ಎಂದು ಭಾವಿಸುವುದು ಸಹಜ. ಆದ್ದರಿಂದ, ರೈಲು ಸೇವೆ ಕಡಿಮೆ ಆದಾಯದವರಿಗೆ ತಲುಪಲು ಸಾಧ್ಯವಿಲ್ಲ. ಹೀಗಾಗಿ, ಇದು ಭಾರತೀಯ ರೈಲ್ವೆಯ ಲಾಭದ ಲೆಕ್ಕಾಚಾರವನ್ನು ಇಡದೆ ದೇಶದ ಸಮಸ್ತ ಜನತೆಗೆ ಸೇವೆ ಸಲ್ಲಿಸುವ ಇಲಾಖೆಯ ಸಂಪೂರ್ಣ ಉದ್ದೇಶವನ್ನು ಸೋಲಿಸುತ್ತದೆ.

ಹೊಣೆಗಾರಿಕೆ: ಖಾಸಗಿ ಕಂಪನಿಗಳು ವ್ಯವಹಾರಿಕ ನಡೆಯನ್ನು ಊಹಿಸಲು ಅಸಾಧ್ಯವಾದವುಗಳು.ತಮ್ಮ ಆಡಳಿತ ರಹಸ್ಯಗಳನ್ನು ಬಾಹ್ಯ ಜಗತ್ತಿನೊಂದಿಗೆ ವಿವರವಾಗಿ ಹಂಚಿಕೊಳ್ಳುವುದಿಲ್ಲ. ಅಂತಹ ಸನ್ನಿವೇಶದಲ್ಲಿ, ಒಂದು ನಿರ್ದಿಷ್ಟ ಘಟಕದ ಮೇಲೆ ಹೊಣೆಗಾರಿಕೆಯನ್ನು ಗುರುತಿಸುವುದು ಕಷ್ಟಕರವಾದುದು.

 


ಸಾಮಾನ್ಯ ಅಧ್ಯಯನ ಪತ್ರಿಕೆ – 4


 

ವಿಷಯಗಳು: ಸಾರ್ವಜನಿಕ /ನಾಗರಿಕ ಸೇವಾ ಮೌಲ್ಯಗಳು ಸಾರ್ವಜನಿಕ ಆಡಳಿತದಲ್ಲಿ ನೈತಿಕತೆ: ಸ್ಥಿತಿ ಮತ್ತು ಸಮಸ್ಯೆಗಳು; ನೈತಿಕ ಕಾಳಜಿ ಮತ್ತು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳಲ್ಲಿ ಸಂದಿಗ್ಧತೆಗಳು;ನೈತಿಕ ಮಾರ್ಗದರ್ಶನದ ಮೂಲಗಳಾಗಿ ಕಾನೂನುಗಳು, ನೀತಿಗಳು, ನಿಯಮಗಳು ಮತ್ತು ಆತ್ಮಸಾಕ್ಷಿ;ಹೊಣೆಗಾರಿಕೆ ಮತ್ತು ನೈತಿಕ ಆಡಳಿತ;ಆಡಳಿತದಲ್ಲಿ ನೈತಿಕ ಮೌಲ್ಯಗಳನ್ನು ಬಲಪಡಿಸುವುದು; ಅಂತರರಾಷ್ಟ್ರೀಯ ಸಂಬಂಧಗಳು ಮತ್ತು ಧನಸಹಾಯ ನೀಡಿಕೆಯಲ್ಲಿ ನೈತಿಕ ಸಮಸ್ಯೆಗಳು; ಸಾಂಸ್ಥಿಕ ಆಡಳಿತ.

ಪೊಲೀಸರ ಮೇಲೆ ನಿಗಾವಹಿಸುವರು / ತನಿಖೆ ಮಾಡುವವರು ಯಾರು? ಎಂದು ಕೇಳಿದ ಹರಿಯಾಣ ನ್ಯಾಯಾಲಯ:


(Who will police the police, asks Haryana court)

 ಸಂದರ್ಭ:

ಇತ್ತೀಚೆಗೆ, ಹರಿಯಾಣ ನ್ಯಾಯಾಲಯವು ಬೈಸಿಕಲ್ ಕಳ್ಳತನದ ಪ್ರಕರಣದಲ್ಲಿ ತೊಳೆಯುವ ವ್ಯಕ್ತಿಯನ್ನು ಖುಲಾಸೆಗೊಳಿಸಿದೆ ಮತ್ತು ಪೊಲೀಸರ ಈ ನಿರ್ಲಕ್ಷ್ಯ ತನಿಖೆ’ಯು ನ್ಯಾಯಾಲಯದ ಆತ್ಮಸಾಕ್ಷಿಯನ್ನು ಬೆಚ್ಚಿಬೀಳಿಸಿದೆ ಎಂದು ಹೇಳಿದೆ.

 • ಅದೇ ಸಮಯದಲ್ಲಿ, ತಪ್ಪಿತಸ್ಥ ಪೊಲೀಸರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ನ್ಯಾಯಾಲಯವು ಶಿಫಾರಸು ಮಾಡಿದೆ.

ಏನಿದು ಪ್ರಕರಣ?

ಬೈಸಿಕಲ್ ಕಳ್ಳತನ ಪ್ರಕರಣವೊಂದರಲ್ಲಿ, ಪೊಲೀಸ್ ಅಧಿಕಾರಿಯೊಬ್ಬರು ಇಡೀ ಪೊಲೀಸ್ ವ್ಯವಸ್ಥೆಯನ್ನು ಮತ್ತು ತನಿಖಾಧಿಕಾರಿಗಳನ್ನು ಕೌಶಲ್ಯದಿಂದ ಬಳಸಿಕೊಂಡರು ಮತ್ತು ಮುಗ್ಧ ವ್ಯಕ್ತಿಯ ವಿರುದ್ಧ ತನ್ನ ವೈಯಕ್ತಿಕ ದ್ವೇಷವನ್ನು ತೀರಿಸಿಕೊಳ್ಳಲು ಪ್ರಯತ್ನಿಸಿದರು.

ಕಾಳಜಿಯ ವಿಷಯವೇನು?

ಇದು ‘ಸಂಪೂರ್ಣ ದುಷ್ಟ ಉದ್ದೇಶ’ ಮತ್ತು ‘ನಿರ್ಲಕ್ಷ್ಯದ ತನಿಖೆ’ಗೆ ಉದಾಹರಣೆಯಾಗಿದೆ, ಸಂಬಂಧಪಟ್ಟ ಪೊಲೀಸ್ ಅಧಿಕಾರಿಗಳ ಸಹೋದ್ಯೋಗಿಯ ವಿರುದ್ಧ ಧೈರ್ಯದಿಂದ ದೂರು ದಾಖಲಿಸಿ ನ್ಯಾಯಾಲಯದಲ್ಲಿ ಆ ಅಧಿಕಾರಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾದ ಆ ವ್ಯಕ್ತಿ ಮಾಡಿದ ಈ  ಸರಳ ಕಾರ್ಯಕ್ಕಾಗಿ ಕೆಲವು ಪೊಲೀಸ್ ಅಧಿಕಾರಿಗಳು ಆ ಮುಗ್ಧ ವ್ಯಕ್ತಿಗೆ ಕಿರುಕುಳವನ್ನು ನೀಡಲು ತಮ್ಮ ಅಧಿಕಾರವನ್ನು ದುರುಪಯೋಗಪಡಿಸಿಕೊಂಡರು.

 • ಈ ಪ್ರಕರಣದಿಂದಾಗಿ, ಸಮಾಜ ಮತ್ತು ಕಾನೂನಿನ ರಕ್ಷಕರಾದ ಪೊಲೀಸರೇ ಇಂತಹ ಅಕ್ರಮ ಕೆಲಸಗಳನ್ನು ಮಾಡಿದರೆ, ಪೊಲೀಸರನ್ನು ಯಾರು ತನಿಖೆ ಮಾಡುತ್ತಾರೆ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಒಟ್ಟಿನಲ್ಲಿ ಬೆಕ್ಕಿಗೆ ಗಂಟೆ ಕಟ್ಟುವವರಾರು ಎಂಬಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ನ್ಯಾಯಾಲಯವು ಖೇದ ವ್ಯಕ್ತಪಡಿಸಿದೆ.

 


ಪೂರ್ವಭಾವಿ ಪರೀಕ್ಷೆಗೆ ಸಂಬಂಧಿಸಿದ ವಿದ್ಯಮಾನಗಳು:


ಕೇಂದ್ರ ಮೋಟಾರು ವಾಹನಗಳು (ಐದನೇ ತಿದ್ದುಪಡಿ) ನಿಯಮಗಳು, 2021:

ಸಂದರ್ಭ: ಇತ್ತೀಚಿಗೆ ಬಿಡುಗಡೆಗೊಳಿಸಲಾಗಿದೆ.

ಈ ನಿಯಮಗಳ ಪ್ರಕಾರ:

 • ವಾಹನಗಳಲ್ಲಿನ ದೋಷಗಳನ್ನು ಸ್ವಯಂಪ್ರೇರಣೆಯಿಂದ ಬಹಿರಂಗಪಡಿಸಲು ವಿಫಲವಾದ ಕಾರಣ ಏಪ್ರಿಲ್ 1 ರಿಂದ ವಾಹನ ತಯಾರಕರು 1 ಕೋಟಿ ರೂಪಾಯಿಗಳವರೆಗೆ ದಂಡವನ್ನು ಎದುರಿಸಬೇಕಾಗಬಹುದು.
 • ಆರು ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಹಿಂತೆಗೆದುಕೊಳ್ಳುವುದು, ಒಂದು ಲಕ್ಷಕ್ಕೂ ಹೆಚ್ಚು ನಾಲ್ಕು ಚಕ್ರಗಳು ಮತ್ತು ಮೂರು ಲಕ್ಷಕ್ಕೂ ಹೆಚ್ಚು ತ್ರಿಚಕ್ರ ವಾಹನಗಳು ಮತ್ತು ಚತುರ್ಭುಜ (quadricycles) ವಾಹನಗಳನ್ನು ಹಿಂದೆ ಪಡೆಯುವುದರಿಂದ 1 ಕೋಟಿ ರೂ. ವರೆಗೆ ದಂಡ ವಿಧಿಸಲಾಗುತ್ತದೆ.
 • 6,000 ದ್ವಿಚಕ್ರ ವಾಹನಗಳನ್ನು ಹಿಂಪಡೆಯಲು, ತಯಾರಕರು 10 ಲಕ್ಷ ರೂ.ವರೆಗೆ ಪಾವತಿಸಬೇಕಾಗುತ್ತದೆ.
 • ವಾರ್ಷಿಕವಾಗಿ 3,000 ಯುನಿಟ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡುವ ಸಂದರ್ಭದಲ್ಲಿ 20% ವಾಹನ ಮಾಲೀಕರು ಒಂದೇ ರೀತಿಯ ಸಮಸ್ಯೆಯನ್ನು ವರದಿ ಮಾಡಿದರೆ, ಎಲ್ಲಾ ವಾಹನಗಳನ್ನು ಹಿಂಪಡೆಯಲು ಸರ್ಕಾರ ಆದೇಶಿಸುತ್ತದೆ.
 • 6,000 ಯುನಿಟ್‌ಗಳ ವಾರ್ಷಿಕ ಮಾರಾಟ ಹೊಂದಿರುವ ವಾಹನಗಳ ಸಂದರ್ಭದಲ್ಲಿ, ಮಾರಾಟವಾದ ಒಟ್ಟು ವಾಹನಗಳಲ್ಲಿ 11% ರಿಂದ 30% ರಷ್ಟು ಒಂದೇ ರೀತಿಯ ದೂರು ಕಂಡುಬಂದರೆ, ಎಲ್ಲಾ ವಾಹನಗಳನ್ನು ಹಿಂಪಡೆಯಬೇಕಾಗುತ್ತದೆ.
 • ಪ್ರಯಾಣಿಕರ ಬಸ್ಸುಗಳು ಮತ್ತು ಟ್ರಕ್‌ಗಳಿಗೆ, ಈ ಸಂದರ್ಭದಲ್ಲಿ ವಾರ್ಷಿಕ ಮಾರಾಟದ 3% ಮಿತಿಯನ್ನು ನಿಗದಿಪಡಿಸಲಾಗಿದೆ.

 • Join our Official Telegram Channel HERE for Motivation and Fast Updates
 • Subscribe to our YouTube Channel HERE to watch Motivational and New analysis videos